ಕಾಲಚಕ್ರ
⛲⛲⛲⛲⛲⛲⛲ ಕಾಲಚಕ್ರ ⛲⛲⛲⛲⛲⛲⛲ ಹಮೀದಾಕ.... ಹಮೀದಾಕ.... ಎಂದು ಕರೆಯುತ್ತಿರುವ ಧ್ವನಿ ಕೇಳಿ ಒಳಗಿರುವ ಆಮೀನಾದ ಮೆಲ್ಲನೆ ಬಾಗಿಲ ಬಳಿ ಬಂದರು. ಬಾಗಿಲ ಸಂಧಿಯಿಂದ ಇಣುಕಿ ನೋಡಿದಾಗ ದಲ್ಲಾಳಿ ಯಾಕೂಬಾಕರು ನಿಂತಿರುವುದು ಕಂಡಿತು. "ಅರೆ ಯಾಕುಬಾಕ, ಏನು ಸಮಾಚಾರ? ಹಮೀದಾಕ ಮನೆಯಲ್ಲಿ ಇಲ್ಲ.. ಅವರು ಕೆಲಸದ ನಿಮಿತ್ತ ಹೊರ ಹೋಗಿದ್ದಾರೆ ನೀವು ಒಳಬನ್ನಿ ಎಂದು ಆಮೀನಾದ ಅವರನ್ನು ಒಳಗೆ ಕರೆದರು. ಕುಶಲೋಪರಿ ಮಾತಾಡುತ್ತಾ ಯಾಕೂಬಾಕನವರು ನೇರ ವಿಷಯಕ್ಕೆ ಬಂದರು... ಹಮೀದಾಕನವರು ನನ್ನಲ್ಲಿ ಒಂದು ಸಹಾಯ ಕೇಳಿದ್ದರು. ಅಂತಹ ಒಳ್ಳೆಯ ಮನುಷ್ಯನಿಗೆ ಒಂದು ಉಪಕಾರ ಮಾಡಲು ಆಗಲಿಲ್ಲವಲ್ಲ ಎಂಬ ಕೊರಗು ಕಾಡುತ್ತಿತ್ತು... ಆದರೆ ಅಲ್ಲಾಹನು ಪರಮ ದಯಾಮಯನು... ಅದಕ್ಕೊಂದು ಒಳ್ಳೆಯ ಸಂದರ್ಭ ಒದಗಿಸಿದ್ದಾನೆ ಎಂದು ಮಂದಹಾಸ ಬೀರಿದರು... ಅವರ ಒಗಟು ಮಾತಿನ ಮರ್ಮ ತಿಳಿಯದ ಆಮೀನಾದ " ಏನು ಕಾಕ , ನನಗೊಂದೂ ಅರ್ಥವಾಗುತ್ತಿಲ್ಲ... ಏನು ಸ್ವಲ್ಪ ಬಿಡಿಸಿ ಹೇಳಿ "ಎಂದರು... ಅವರ ಮನಸ್ಥಿತಿ ಅರಿತ ಯಾಕುಬಾಕ " ಏನಿಲ್ಲ ಆಮೀನಾದ, ನಮ್ಮ ನಸೀಮಾಳಿಗೆ ಒಂದು ಒಳ್ಳೆಯ ಸಂಬಂಧ ಹಿಡಿದು ಕೊಂಡು ಬಂದಿದ್ದೇನೆ... ಹುಡುಗ ಗುಣದಲ್ಲೂ , ರೂಪದಲ್ಲೂ ಅಪರಂಜಿಯಂತಿರುವನು.... ತನ್ನದೇ ಆದ ಸ್ವಂತ ಉದ್ಯೋಗ ಹೊಂದಿರುವನು.... ಅದನ್ನೇ ಹೇಳಲೆಂದೆ ಬಂದೆ.. ಆದರೆ ಹಮೀದಾಕ ಇಲ್ಲವಲ್ಲ, ಅವರು...