Posts

Showing posts from December, 2020

ಬೆನ್ನು ನೋವಿಗೆ

ಬೆನ್ನು ನೋವಿಗೆ ▪️ಶುದ್ಧ ಆಲಿವ್ ಎಣ್ಣೆಯನ್ನು ಕುಡಿಯಬೇಕು. ಹಾಗೂ ಹಚ್ಚಬೇಕು. ▪️ಗಂಡು ಆಡಿನ ಮಾಂಸವನ್ನು ತಿನ್ನಬೇಕು. ಇದು ಇಬ್ನ್ ಅಬ್ಬಾಸ್(ರ)ರವರು ತಿಳಿಸಿದ ಮದ್ದಾಗಿದೆ. ▪️ಬೆನ್ನು ನೋವಿಗೆ ಶುಂಠಿಯ ನೀರಿಗೆ ಸ್ವಲ್ಪ ಶುದ್ಧ ಜೇನುತುಪ್ಪ ಸೇರಿಸಿ ಬಿಡದೆ ಒಂದು ವಾರ ಕಾಲ ಸೇವಿಸಬೇಕು. =============================                          ಸಂಗ್ರಹ:                   ಮನೆ ಮದ್ದುಗಳು               ಸಂ: ✒️ಅಬೂರಿಫಾನ  ============================= ನಿಮ್ಮ ಸುರಕ್ಷತೆಗೆ ಸಾಮಾಜಿಕ ಅಂತರವನ್ನು ಕಾಪಾಡಿ ಮಾಸ್ಕ್ ಉಪಯೋಗಿಸಿ. ಕುರ್‌ಆನ್ ದ್ಸಿಕ್ರ್‌ಗಳು ಪಠಿಸುತ್ತಿರಿ ಪ್ರತೀ ಕ್ಷಣವು ನಾಲಗೆಯೂ ಸ್ವಲಾತನ್ನು ಜಪಿಸುತ್ತಿರಲಿ. اللَّهُمَّ صَلِّ عَلَى سَيِّدِنَا مُحَمَّدٍ النَّبِيِّ الأُمِّيِّ الْحَبِيبِ الْعَالِي الْقَدْرِ الْعَظِيمِ الْجَاهِ وَعَلَى آلِهِ وَصَحْبِهِ وَسَلِّمْ. ============================= ✤𝙇𝙞𝙠𝙚 & 𝙎𝙝𝙖𝙧𝙚✤ ✦𝙋𝙧𝙖𝙮 𝙛𝙤𝙧 𝙪𝙨 ✦ 𝗔𝗥𝗨𝗥 𝗖𝗥𝗘𝗔𝗧𝗜𝗩𝗘 𝗡𝗢𝗢𝗥-𝗨𝗟-𝗙𝗔𝗟𝗔𝗛 💢💢💢💢💢💢

ಮುಗ್ಧ ಮನಸ್ಸುಗಳ ಮಧುರ ಯಾತ್ರೆ

ಮುಗ್ಧ ಮನಸ್ಸುಗಳ ಮಧುರ ಯಾತ್ರೆ      ಏನೋ ಅಶ್ಫಾಕ್ …. ಏನೊಂದೂ ಮಾತನಾಡದೆ, ಎಲ್ಲಿಗೆಂದೂ ಹೇಳದೆ ನೇರವಾಗಿ ನನ್ನನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀಯಾ ಹೇಳು ?  ಆಗದಿಂದಲೂ ಕೇಳುತ್ತಿದ್ದೇನೆ ನಾನು … ಎನ್ನೋ ಗೆಳೆಯ ನೌಫಲ್ ಮಾತಿಗೆ ಮೊದಲು ಏನೊಂದೂ ಪ್ರತಿಕ್ರಿಯೆ ನೀಡದೆ ಸುಮ್ಮನಾದನು  ಅಶ್ಫಾಕ್.   ಯಾಕೋ ಹೆಚ್ಚಿಗೆ ಸತಾಯಿಸುವುದು ಬೇಡ ಎಂದು ಎನಿಸಿ ತನ್ನ ಗೆಳೆಯನ ಬಳಿ ” ಏನಿಲ್ಲ ನೌಫಲ್… ಬಹುಶಃ ಇದೇ ನಮ್ಮ ಕೊನೆಯ ಭೇಟಿ ಎಂದು ನನಗೆ ಅನಿಸುತ್ತದೆ. ಯಾಕೆಂದರೆ ನಾವು ಈ ಊರನ್ನು ಬಿಡುತ್ತಾ ಇದ್ದ್ದೇವೆ……” ಗೆಳೆಯನ ಮಾತು ಕೇಳಿ ನೌಫಲಿಗೆ ಒಮ್ಮೆಲೇ ಆಶ್ಚರ್ಯ ಆಯಿತು. “ಏನು ಹೇಳುತ್ತಾ ಇದ್ದೀಯಾ ನೀನು ? ಊರು ಬಿಡುತ್ತಾ ಇದ್ದೀರಾ ? ಯಾಕೆ ? ಇಲ್ಲಿ ಎಲ್ಲವೂ ಸರಿಯಾಗಿಯೇ ಇದೆಯಲ್ಲ. ಒಮ್ಮೆಲೇ ಏಕೆ ಈ ನಿರ್ಧಾರ ? ” ಎಂದು ತನ್ನ ಗೆಳೆಯನ ಬಳಿ ಒಂದೇ ಉಸಿರಿಗೆ ಪ್ರಶ್ನಿಸಿದನು ನೌಫಲ್. “ಅದೂ…. ನನ್ನ ಅಪ್ಪ ತನ್ನ ಗೆಳೆಯನ ಜೊತೆ ಬಾಂಬೆಯಲ್ಲಿ ಹೊಸ ವ್ಯವಹಾರ ಪ್ರಾರಂಭಿಸಿದ್ದಾರೆ. ಹಾಗಾಗಿ ನಾವು ಕುಟುಂಬ ಸಮೇತ ಅಲ್ಲಿಗೆ ಹೋಗುವ ನಿರ್ಧಾರ ಮಾಡಿದೆವು.” ಅಶ್ಫಾಕ್ ಮಾತು ಕೇಳಿದಾಗ ನೌಫಲ್ ಮುಖದಲ್ಲಿ ದುಃಖದ ಛಾಯೆಯೊಂದು ಮೂಡಿತು.   ” ಅಂದರೆ ಅಷ್ಟು ದೂರ ಹೋದಮೇಲೆ ನೀನು ನನ್ನನ್ನು ಮರೆತಂತೆ ಅಲ್ವಾ ? “ ” ಇಲ್ಲಾ ನೌಫಲ್…. ಮರೆಯೋದಿಕ್ಕೆ ಏನದು ಹೇಳು ? ನಾನು ನಿನಗೆ ಕರೆ ಮಾಡುತ್ತಾ ಇರುತ್ತೇನೆ. ನಿನ್...