ಮುಗ್ಧ ಮನಸ್ಸುಗಳ ಮಧುರ ಯಾತ್ರೆ

ಮುಗ್ಧ ಮನಸ್ಸುಗಳ ಮಧುರ ಯಾತ್ರೆ



     ಏನೋ ಅಶ್ಫಾಕ್ …. ಏನೊಂದೂ ಮಾತನಾಡದೆ, ಎಲ್ಲಿಗೆಂದೂ ಹೇಳದೆ ನೇರವಾಗಿ ನನ್ನನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀಯಾ ಹೇಳು ?  ಆಗದಿಂದಲೂ ಕೇಳುತ್ತಿದ್ದೇನೆ ನಾನು … ಎನ್ನೋ ಗೆಳೆಯ ನೌಫಲ್ ಮಾತಿಗೆ ಮೊದಲು ಏನೊಂದೂ ಪ್ರತಿಕ್ರಿಯೆ ನೀಡದೆ ಸುಮ್ಮನಾದನು  ಅಶ್ಫಾಕ್.

  ಯಾಕೋ ಹೆಚ್ಚಿಗೆ ಸತಾಯಿಸುವುದು ಬೇಡ ಎಂದು ಎನಿಸಿ ತನ್ನ ಗೆಳೆಯನ ಬಳಿ

” ಏನಿಲ್ಲ ನೌಫಲ್… ಬಹುಶಃ ಇದೇ ನಮ್ಮ ಕೊನೆಯ ಭೇಟಿ ಎಂದು ನನಗೆ ಅನಿಸುತ್ತದೆ. ಯಾಕೆಂದರೆ ನಾವು ಈ ಊರನ್ನು ಬಿಡುತ್ತಾ ಇದ್ದ್ದೇವೆ……”

ಗೆಳೆಯನ ಮಾತು ಕೇಳಿ ನೌಫಲಿಗೆ ಒಮ್ಮೆಲೇ ಆಶ್ಚರ್ಯ ಆಯಿತು.

“ಏನು ಹೇಳುತ್ತಾ ಇದ್ದೀಯಾ ನೀನು ? ಊರು ಬಿಡುತ್ತಾ ಇದ್ದೀರಾ ? ಯಾಕೆ ? ಇಲ್ಲಿ ಎಲ್ಲವೂ ಸರಿಯಾಗಿಯೇ ಇದೆಯಲ್ಲ. ಒಮ್ಮೆಲೇ ಏಕೆ ಈ ನಿರ್ಧಾರ ? ” ಎಂದು ತನ್ನ ಗೆಳೆಯನ ಬಳಿ ಒಂದೇ ಉಸಿರಿಗೆ ಪ್ರಶ್ನಿಸಿದನು ನೌಫಲ್.

“ಅದೂ…. ನನ್ನ ಅಪ್ಪ ತನ್ನ ಗೆಳೆಯನ ಜೊತೆ ಬಾಂಬೆಯಲ್ಲಿ ಹೊಸ ವ್ಯವಹಾರ ಪ್ರಾರಂಭಿಸಿದ್ದಾರೆ. ಹಾಗಾಗಿ ನಾವು ಕುಟುಂಬ ಸಮೇತ ಅಲ್ಲಿಗೆ ಹೋಗುವ ನಿರ್ಧಾರ ಮಾಡಿದೆವು.”

ಅಶ್ಫಾಕ್ ಮಾತು ಕೇಳಿದಾಗ ನೌಫಲ್ ಮುಖದಲ್ಲಿ ದುಃಖದ ಛಾಯೆಯೊಂದು ಮೂಡಿತು.

  ” ಅಂದರೆ ಅಷ್ಟು ದೂರ ಹೋದಮೇಲೆ ನೀನು ನನ್ನನ್ನು ಮರೆತಂತೆ ಅಲ್ವಾ ? “

” ಇಲ್ಲಾ ನೌಫಲ್…. ಮರೆಯೋದಿಕ್ಕೆ ಏನದು ಹೇಳು ? ನಾನು ನಿನಗೆ ಕರೆ ಮಾಡುತ್ತಾ ಇರುತ್ತೇನೆ. ನಿನ್ನದು ಕಲಿತು ಎಲ್ಲಾ ಆದ ನಂತರ ನೀನು ಕೂಡ ಕೆಲಸ ಹುಡುಕಿಕೊಂಡು ಅಲ್ಲಿಗೆ ಬಾ.. ಆಗ ನಾವು ಒಟ್ಟಿಗೆ ಇರಬಹುದಲ್ವಾ? “

ಅಶ್ಫಾಕ್ ಹೇಳಿದುದನ್ನು ಕೇಳಿ ಈಗ ನೌಫಲ್ ಮನಸ್ಸಿಗೆ ಸ್ವಲ್ಪ ಸಮಾಧಾನ ಆಯಿತು.  ಆದರೂ ಆತನ ಮನದಲ್ಲಿ ಇದ್ದ ಸಂಶಯ ಇನ್ನೂ ನಿವಾರಣೆ ಆದಂತೆ ಇರಲಿಲ್ಲ. ಆತ ತನ್ನ ಮಾತನ್ನು ಮುಂದುವರಿಸಿದವನೇ

” ಅದು ಸರಿ, ಆದರೆ ಈಗ ಎಲ್ಲಿಗೆ ಹೋಗುತ್ತಾ ಇದ್ದೀಯಾ? ಅದೂ ನನ್ನನ್ನು ಜೊತೆಯಲ್ಲಿ ಕರೆದುಕೊಂಡು?” ಎಂದು ಕೇಳಿದನು.

   “ಅದೂ… ನಾನು ಬಾಂಬೆಗೆ ಹೋಗುವ ಮೊದಲು ಊರಿನಲ್ಲಿ ಮಾಡಬೇಕಾದ ಮುಖ್ಯ ಕೆಲಸವೊಂದು ಇದೆ. ಅದನ್ನು ಮಾಡಲು  ಹೊರಟಿದ್ದೇನೆ. “

” ಏನೋ ಅಂತಹ ಮುಖ್ಯ ಕೆಲಸ ?”

” ನಿನ್ನನ್ನ ಜೊತೆಗೆ ಕರೆದುಕೊಂಡು ಹೋಗುತ್ತಿದ್ದೇನೆ ಅಲ್ವಾ ? ಅಲ್ಲೇ ನೋಡುವಿಯಂತೆ. ಅದುವರೆಗೂ ನನ್ನಲ್ಲಿ ಏನೂ ಕೇಳಬೇಡ” ಎಂದು ಗೆಳೆಯನಿಗೆ ಹೇಳಿದನು ಅಶ್ಫಾಕ್.

ಅರೇ ಮುಂಬೈ ಹೋಗುವ ಮೊದಲು ಅಷ್ಟು ಅರ್ಜೆಂಟ್ ಆಗಿ ಇಲ್ಲಿ ಮಾಡುವ ಕೆಲಸವಾದರೂ ಏನಿದೆ ಈತನಿಗೆ ? ನೌಫಲ್ ಮನಸು ಯೋಚಿಸುತ್ತಿತ್ತು.

ಅಶ್ಫಾಕ್ ತನ್ನ ಗೆಳೆಯ ನೌಫಲ್ ಬಳಿ ತಾವು ಬಾಂಬೆಗೆ ತೆರಳುವುದಾಗಿಯೂ ಅದಕ್ಕಿಂತಲೂ ಮುಂಚೆ ತನಗೆ ಒಂದು ಮುಖ್ಯವಾದ ಕೆಲಸ ಮಾಡಲು ಇದೆ ಎಂಬುದಾಗಿಯೂ ಹೇಳಿದನು.

ಬೈಕ್ ಮುಂದೆ ಸಾಗುತಲಿತ್ತು. ಕಿರಿದಾದ ಓಣಿಯಲ್ಲಿ ಸಾಗುತ್ತಾ ಒಂದು ಹೆಂಚಿನ ಮನೆಯ ಮುಂದೆ ನಿಂತಿತು.

ಅರೇ ನಫೀಸಾದರ ಮನೆ… ಇವನು ಯಾಕೆ ಇಲ್ಲಿಗೆ ಬಂದಿದ್ದಾನೆ? ಇಲ್ಲಿ ಇವನಿಗೇನು ಇಂತಹ ಮುಖ್ಯವಾದ ಕೆಲಸ ನೌಫಲ್ ಮನಸ್ಸು ಯೋಚಿಸುತ್ತಿತ್ತು.

“ಏನು ಯೋಚಿಸುತ್ತಾ ಇದ್ದೀಯಾ ? ಬಾ ಮುಂದೆ ಹೋಗೋಣ..” ಅಶ್ಫಾಕ್ ಮಾತುಗಳು ನೌಫಲ್ ಯೋಚನೆಗೆ ಕಡಿವಾಣ ಹಾಕಿದವು.

“ಅಲ್ಲಾ ನೀನು ಮುಖ್ಯವಾದ ವಿಚಾರ ಅನ್ನುವಾಗ ನಾನು ಏನೋ ಅಂದುಕೊಂಡೆ. ಇಲ್ಲಿ ನಿನಗೇನು ಅಂತಹ ಮುಖ್ಯವಾದ ಕೆಲಸ ಹೇಳು ?”

ಗೆಳೆಯನ ಪ್ರಶ್ನೆಗೆ ಅಶ್ಫಾಕ್ ಬರೀ ಮುಗುಳ್ನಕ್ಕು ಪ್ರತಿಕ್ರಿಯೆ ನೀಡಿದನು.

ಮನೆಯ ಮುಂದೆ ಬೈಕ್ ನಿಂತಂತಹ ಸದ್ದು ಕೇಳಿ ನಫೀಸಾದ ಹೊರಗೆ ಬಂದರು. ಎದುರಿಗೆ ಬರುತ್ತಿದ್ದ ಅಶ್ಫಾಕ್ ಕಂಡು ಅವರ ಮುಖದಲ್ಲಿ ಸಂತಸದ ಅಲೆಯೊಂದು ಮೂಡಿತು.

ಏನಮ್ಮಾ ಹಾಗೇ ನೋಡುತ್ತಾ ನಿಂತುಬಿಟ್ರಿ? ಒಳಗೆ ಕರೆಯೋದಿಲ್ಲವೇ ? ಅಶ್ಫಾಕ್ ತಾನಾಗಿಯೇ ಕೇಳಿದಾಗ

“ಅಯ್ಯೋ ನಿನ್ನ ನೋಡಿದ ಸಂತಸದಲ್ಲಿ ಎಲ್ಲಾ ಮರೆತು ಬಿಟ್ಟೆ ಮಗನೇ.. ಏನು ತುಂಬಾ ದಿನಗಳೇ ಕಳೆದು ಹೋದವು ಈ ಕಡೆ ಬಾರದೆ.. ನಮ್ಮನ್ನೆಲ್ಲಾ ಮರೆತು ಬಿಟ್ಟಿದ್ದೀಯೋ ಅಂದುಕೊಂಡೆ.”

” ಅಯ್ಯೋ ಏನು ಮಾತೂಂತ ಹೇಳುತ್ತಾ ಇದ್ದೀರಾ ಅಮ್ಮಾ…. ನಿಮ್ಮನ್ನು ಯಾವತ್ತಾದರೂ ಮರೆಯುವುದು ಉಂಟೇ…. ಎಷ್ಟಾದರೂ ನನಗೆ ತುತ್ತು ಹಾಕಿ ಬೆಳೆಸಿದವರಲ್ಲವೇ ನೀವು…?”

” ಅಯ್ಯೋ ಬಿಡ್ತು ಅನ್ನು… ಯಾವಾಗಲಾದರೂ ಒಮ್ಮೆ ಬಂದು ಈ ಪಾಪದವಳ ಮನೆಯಲ್ಲಿ ಏನಾದರೂ ಇದ್ದುದನ್ನು ತಿಂದಿದ್ದೀಯಾ… ಅಷ್ಟಕ್ಕೇ ಬೆಳೆಸಿದ್ದೀರಿ ಅಂದರೆ ಆಗುತ್ತದೆಯೇ ಹೇಳು. ಅದೂ ನಿನಗೆ ಕೊಡಲು ಇಲ್ಲಿ ಇರುವುದಾದರೂ ಏನು ? “

” ಅಮ್ಮಾ ನೀವು ಹಾಗೆ ಹೇಳಲೇ ಬೇಡಿ… ನಿಮ್ಮ ಮನೆಯ ಗಂಜಿ ಚಟ್ನಿ ಯಲ್ಲಿ ಇರುವ ರುಚಿ ನಮ್ಮ ಮನೆಯ ಬಿರಿಯಾನಿಯಲ್ಲೂ ಇರುವುದಿಲ್ಲ. ಹಾಗಲ್ವಾ… ಇಲ್ಲಿ ಬಂದರೆ ನಾನು ತಿಂದೇ ಹೋಗುತ್ತಿದುದು. ಆದರೆ ಇನ್ನು ನಾನು ಏನು ಮಾಡಲಿ ಹೇಳಿ? “

” ಏನು ಮಾಡುವುದು ಎಂದು ಕೇಳುವುದು ಯಾಕೆ? ನಿನಗೆ ಯಾವಾಗ ತಿನ್ನಲು ಮನಸು ಆಗುತ್ತದೆಯೋ ಆಗ ಇಲ್ಲಿ ಬಾ ಮಗನೇ…. ನನಗಿಲ್ಲದಿದ್ದರೂ ಪರವಾಗಿಲ್ಲ ಆದರೆ ನಿನಗೆ ನಾನು ಕೊಡದೆ ಇರಲಾರೆ. “

” ಹಾಗಲ್ಲಮ್ಮ… ನಾವು ಈ ಊರನ್ನು ಬಿಡುತ್ತಾ ಇದ್ದೇವೆ. ನಾವು ಬಾಂಬೆಗೆ ಹೋಗುತ್ತಾ ಇದ್ದೇವೆ” ಎಂದು ಹೇಳಿ ಅಶ್ಫಾಕ್ ಒಂದು ಕ್ಷಣ ಸುಮ್ಮನಾದನು.

ಅವನ ಮಾತು ಕೇಳಿ ನಫೀಸಾದರಿಗೆ ದುಃಖವಾಯಿತು. “ಅಂದರೆ ಇನ್ನು ನೀನು ನನ್ನನ್ನು ಮರೆತಂತೆ ಅಲ್ವಾ ? ಎಂದು ದುಃಖದಿಂದಲೇ ಕೇಳಿದರು.
 
“ಇಲ್ಲಾ ಅಮ್ಮ … ನನ್ನ ಕಾಲ ಮೇಲೆ ನಾನು ನಿಂತ ಮೇಲೆ ನಾನು ಖಂಡಿತ ಇಲ್ಲಿಗೆ ಬರುತ್ತೇನೆ. ಅದುವರೆಗೂ ನಾನು ನಿಮಗೆ ಕರೆ ಮಾಡುತ್ತಾ ಇರುತ್ತೇನೆ. ಆದರೆ ಹೋಗುವುದಕ್ಕಿಂತ ಮುಂಚೆ ನಿಮ್ಮಲ್ಲಿ ನಾನು ಒಂದು ಮಾತು ಹೇಳೋಣ ಎಂದು ಕೊಂಡೇ ಇಲ್ಲಿಗೆ ಬಂದೆ. ಆ ಮಾತನ್ನು ತಪ್ಪಿಯೂ ಕೂಡ ಯಾವತ್ತೂ ನೀವು ಮರೆಯಬಾರದು ಸರೀನಾ? “

ಆತನ ಮಾತು ಕೇಳಿ ನಫೀಸಾದರಿಗೆ ಆಶ್ಚರ್ಯ ಆಯಿತು. ಏನು ಎಂಬಂತೆ ಅವನ ಮುಖ ನೋಡಿದರು.

ಅಶ್ಫಾಕ್ ಹೇಳಬೇಕು ಎಂದು ಬಾಯಿ ತೆರೆಯುವಷ್ಟರಲ್ಲಿ ಕಾಲ ಹೆಜ್ಜೆಯ ಸದ್ದು ಆತನ ಕಿವಿಗೆ ಕೇಳಿಸಿದವು.

ತಾನು ಬಾಂಬೆಗೆ ತೆರಳುವುದಾಗಿ ಅಶ್ಫಾಕ್ ನಫೀಸಾದರ ಬಳಿ ಹೇಳಿದನು. ಹೋಗುವ ಮುಂಚೆ ನಿಮ್ಮಲ್ಲಿ ಒಂದು ಮಾತು ಹೇಳಲಿಕ್ಕೆ ಇದೆ ಎಂದನು. ಅಷ್ಟರಲ್ಲಿ ಕಾಲ ಹೆಜ್ಜೆಯ ಸದ್ದು ಕೇಳಿಸಿತು.

ಅಶ್ಫಾಕ್ ತಿರುಗಿ ನೋಡುವಾಗ ರುಬೀನಾ ಅಲ್ಲಿ ನಿಂತಿರುವುದು ಕಾಣಿಸಿತು. ಅಶ್ಫಾಕ್ ನೋಡಿ ಖುಷಿಯಿಂದ ” ಅರೇ ಅಶ್ಫಾಕ್ ಯಾವಾಗ ಬಂದೆ ? ” ಏಂದು ಕೇಳಿದಳು.

ಆಕೆಯ ಮಾತುಗಳನ್ನು ಕೇಳಿದವರೇ ನಫೀಸಾದ ” ಅರೇ ರುಬೀನಾ , ಏನು ಹಾಗೆ ಏಕವಚನದಲ್ಲಿ ಕರೆದು ಮಾತನಾಡಿಸುತ್ತಾ ಇದ್ದೀಯಾ ? ವಯಸ್ಸಿನಲ್ಲಿ ನಿನಗಿಂತ ಆತ ದೊಡ್ಡವನು” ಎಂದು ತಿಳಿ ಹೇಳಿದರು.

ನಫೀಸಾದರ ಮಾತಿಗೆ ಪ್ರತಿಕ್ರಿಯಿಸುತ್ತಾ ಅಶ್ಫಾಕ್

” ಹೇಯ್ ಹಾಗೇನಿಲ್ಲ… ಆಕೆಗಾದರೋ ಪರಿಚಯ ಇರುವುದರಿಂದ ಹಾಗೆ ಕೇಳಿದಳು ” ಎಂದು ನುಡಿದನು.

” ಅದು ಸರಿ , ನೀನು ಏನೋ ಹೇಳಬೇಕು ಎಂದು ಇದ್ದೆಯಲ್ಲಾ? ಏನದು ಹೇಳು?”
ಎಂದು ನಫೀಸಾದ ಅಶ್ಫಾಕಿಗೆ ನೆನಪಿಸಿದರು.

ರುಬೀನಾ ಇನ್ನೂ ಅಲ್ಲೇ ಇರುವುದನ್ನು ನೋಡಿದ ಅಶ್ಫಾಕ್ ತಾನು ಬಂದ ಕಾರ್ಯವನ್ನು ಹೇಳಲು ಇಚ್ಛಿಸದೆ

” ಏನಿಲ್ಲ ಅಮ್ಮಾ…. ನನ್ನನ್ನು ನೀವು ಮರೀಬೇಡಿ “ಅಂತ ಹೇಳಲು ಬಂದೆ ಎಂದನು.

” ಅಯ್ಯೋ ಮಗನೇ ಏನು ಮಾತೂಂತ ಹೇಳುತ್ತಾ ಇದ್ದೀಯಾ? ನೀನೆಲ್ಲಾದರೂ ಅಷ್ಟು ದೂರ ಹೋದಮೇಲೆ ನಮ್ಮನ್ನೆಲ್ಲಾ ಮರೀಬೇಕು ಹೊರತು ನಾನು ಯಾವತ್ತೂ ನಿನ್ನನ್ನು ಮರೆಯೋಕೆ ಸಾಧ್ಯವೇ ಇಲ್ಲ” ಎಂದು ಹೇಳುವಾಗ ನಫೀಸಾದರ ಧ್ವನಿ ಗದ್ಗದಿತವಾಯಿತು.

ಅಶ್ಫಾಕಿಗೂ ಇನ್ನೂ ಹೆಚ್ಚು ಹೊತ್ತು ಅಲ್ಲಿ ನಿಲ್ಲುವುದು ಸರಿಯಲ್ಲ ಎಂದೆನಿಸಿ ಅಲ್ಲಿಂದ ಹೊರಡಿದನು.

ಅವನ ಬೈಕ್ ಮರೆಯಾಗುವ ತನಕ ನೋಡಿದವರೇ ನಫೀಸಾದ ನಂತರ ಒಳಗೆ ನಡೆದರು.

” ಏನೋ ಮುಖ್ಯವಾದ ಕೆಲಸ ಇದೆಯೆಂದು ಅಲ್ಲಿಗೆ ತೆರಳಿದೆ ಅಲ್ವಾ ? ಹೋದ ಕೆಲಸ ಆಯಿತಾ ? ” ಗೆಳೆಯ ನೌಫಲ್ ಅಶ್ಫಾಕಿನೊಟ್ಟಿಗೆ ಕೇಳಿದನು.

” ಇಲ್ಲಾ ಕಣೋ… ನಡೆಯುವುದರಲ್ಲಿ ಇತ್ತು. ಆದರೆ ಅಷ್ಟರಲ್ಲಿ ಹಾಳಾಯಿತು.”

” ಏನೋ ಒಗಟೊಗಟಾಗಿ ಮಾತನಾಡುತ್ತಾ ಇದ್ದೀಯಾ ? ಸ್ವಲ್ಪ ಬಿಡಿಸಿ ಹೇಳಬಾರದೇ ? ನನಗಂತೂ ತಲೆ ಬುರುಡೆ ಒಂದೂ ಅರ್ಥವಾಗುತ್ತಿಲ್ಲ. “

” ಹೇಯ್ ಹಾಗೇನಿಲ್ಲ ಕಣೋ… ಮನಸ್ಸಿನಲ್ಲಿ ಒಂದು ಆಸೆ ಇದೆ. ಅದೇನೆಂದರೆ ನಾನು ಮದುವೆಯಾಗುವುದಾದರೆ ಅದು ರುಬೀನಾಳನ್ನೇ ಆಗಬೇಕು ಎಂದು. ಹಾಗೆ ಈಗ ಊರು ಬಿಡುತ್ತಾ ಇದ್ದೇನಲ್ಲ. ಇನ್ನೆಲ್ಲಾದರೂ ಆಕೆ ದೊಡ್ಡವಳಾದ ನಂತರ ಯಾವುದಾದರೂ ಸಂಬಂಧ ಬಂದಿದೆ ಎಂದು ಅವರು ಮದುವೆ ಮಾಡುವುದು ಬೇಡ ಎಂದು ಮೊದಲೇ ಹೇಳಿ ಇಡೋಣ ಎಂದುಕೊಂಡೆ. ಆದರೆ ಹೇಳಬೇಕು ಎಂದು ಎನಿಸುವಷ್ಟರಲ್ಲಿ ಆಕೆಯೇ ಅಲ್ಲಿಗೆ ಬಂದಳು. ಇನ್ನು ಆಕೆ ಏನು ಎನಿಸುವಳು ? ಈತ ತನ್ನಲ್ಲಿ ಇದುವರೆಗೂ ಮಾತನಾಡಿದ್ದು ಇದಕ್ಕಾಗಿಯೇ ಎಂದೆನಿಸಿ ಕೊಳ್ಳಲಿಕ್ಕೆ ಇಲ್ಲವೇ ? ಅಲ್ಲದೇ ಆಕೆ ಸಣ್ಣ ಹುಡುಗಿ ಬೇರೆ … ಯಾಕೋ ಸರಿ ಎನಿಸಲಿಲ್ಲ. ಹಾಗಾಗಿ ನಾನು ಈಗ ನಿನ್ನಲ್ಲಿ ಈ ವಿಚಾರ ಹೇಳುತ್ತಿದ್ದೇನೆ. ಸಮಯ , ಸಂದರ್ಭ ಸಿಕ್ಕಿದಾಗ ನೀನು ಅವರಲ್ಲಿ ಈ ಮಾತು ತಿಳಿಸಬೇಕು. ನಾನು ಹೇಳಿದೆ ಎಂದು ಹೇಳಬೇಕು. ಈಗ ಈ ವಿಚಾರ ನನ್ನ ಬಿಟ್ಟು ತಿಳಿದಿರುವುದು ನಿನಗೆ ಮಾತ್ರ. ಹಾಗಾಗಿ ನಾನು ನಿನ್ನನ್ನೇ ನಂಬಿದ್ದೇನೆ. ಈ ವಿಷಯ ಅವರಿಗೆ ತಿಳಿಸುತ್ತೀಯಾ ತಾನೆ ? ” ಎಂದು ಕೇಳಿ ಅಶ್ಫಾಕ್ ನೌಫಲ್ ಮುಖ ನೋಡಿದನು.

ಅಶ್ಫಾಕ್ ಮಾತು ಕೇಳಿದ ನೌಫಲಿಗೆ ಆಶ್ಚರ್ಯ ಆಗಿತ್ತು. ಇಷ್ಟೊಂದು ದೊಡ್ಡ ಶ್ರೀಮಂತ ಈ ಪಾಪದ ಹೆಣ್ಣನ್ನು ಮದುವೆ ಆಗುವುದು ಹೌದೇ ? ಒಂದು ವೇಳೆ ಆಗುವುದಿದ್ದರೂ ಈತನ ತಂದೆ ತಾಯಿ ಒಪ್ಪುವರೇ? ಈತ ಈಗ ಏನೋ ಧೈರ್ಯದಿಂದ ಈ ಮಾತು ಹೇಳುತ್ತಿದ್ದಾನೆ ಎಂದಾದರೂ ಬಾಂಬೆಗೆ ಹೋದ ಮೇಲೆ ತನ್ನ ಮನಸು ಬದಲಾಯಿಸಿದರೇ ? ನಾನು ಅವರಲ್ಲಿ ಸುಳ್ಳು ಹೇಳಿದಂತೆ ಆಗುವುದಿಲ್ಲವಾ ? ಅವರ ಆಶಾ ಗೋಪುರವನ್ನು ನುಚ್ಚು ನೂರು ಮಾಡಿದಂತೆ ಆಗುವುದಿಲ್ಲವಾ ? ಎಂಬೆಲ್ಲಾ ಪ್ರಶ್ನೆಗಳು ನೌಫಲ್ ತಲೆಯಲ್ಲಿ ಓಡಾಡುತ್ತಿದ್ಧವು.

ಅಶ್ಫಾಕ್ ತನ್ನಲ್ಲಿ ಹೇಳಿದ ಮಾತು ಕೇಳಿ ನೌಫಲಿಗೆ ಆಘಾತವಾಗಿತ್ತು. ತಾನು ಯಾವುದೋ ಇಕ್ಕಟ್ಟಿಗೆ ಸಿಲುಕಿದೆ ಎಂದು ಅವನ ಮನಸ್ಸು ಯೋಚಿಸುತ್ತಿತ್ತು.

ತನ್ನ ಮಾತಿಗೆ ತನ್ನ ಗೆಳೆಯ ಏನೊಂದೂ ಪ್ರತಿಕ್ರಿಯಿಸಿದನ್ನು ನೋಡಿದ ಅಶ್ಫಾಕ್

” ಯಾಕೋ ಏನೋ ಹಾಗೆ ಯೋಚಿಸುತ್ತಲೇ ಇದ್ದೀಯಾ ? ಹೇಳಲು ನಿನಗೆ ಮನಸಿಲ್ಲವೇ? ಮೊದಲ ಬಾರಿಗೆ ನಿನ್ನಿಂದ ಒಂದು ಸಹಾಯ ಕೇಳುತ್ತಿದ್ದೇನೆ. ಅದಕ್ಕೆ ಈ ರೀತಿ ಯೋಚಿಸಿದರೆ ಹೇಗೆ ? ಮಾಡಲು ಮನಸ್ಸು ಇಲ್ಲದಿದ್ದರೆ ಹೇಳಿಬಿಡು. ಸಮಯ , ಸಂದರ್ಭ ಬಂದಾಗ ನಾನೇ ಹೇಳಿಬಿಡುತ್ತೇನೆ ” ಎಂದು ಹೇಳಿದನು.

” ಇಲ್ಲಾ ಕಣೋ, ಎಲ್ಲಾದರೂ ನೀನು ಬಾಂಬೆಗೆ ಹೋದ ನಂತರ ಅಲ್ಲಿಯ ಜೀವನಕ್ಕೆ ಒಗ್ಗಿದ ನಂತರ ನೀನು ಬದಲಾದರೇ? ಸುಮ್ಮನೆ ಯಾಕೆ ಅವರ ಮನಸ್ಸಿನಲ್ಲೊಂದು ಆಸೆ ಮೂಡಿಸುವುದು ಹೇಳು ? ಹಾಗಾಗಿ ಹೇಳುವುದೋ ಬೇಡವೋ ಎಂದು ಯೋಚಿಸುತ್ತಿದ್ದೆ.”

” ಒಂದು ಗೆಳೆಯನಾಗಿ ನನ್ನನ್ನು ನೀನು ಅರ್ಥ ಮಾಡಿದ್ದು ಇಷ್ಟೇನಾ ? ಆಕೆ ಪುಟ್ಟ ಪುಟ್ಟ ಹೆಜ್ಜೆ ಇಡುವಾಗಲೇ ನಾನು ಆಕೆಯನ್ನು ಕಂಡಿದ್ದೇನೆ. ಯಾಕೋ ಗೊತ್ತಿಲ್ಲಾ ಮನಸ್ಸಿಗೆ ಆಕೆ ತುಂಬಾ ಹತ್ತಿರವಾಗಿದ್ದಳು. ಮರೆಯಲು ನನಗೆ ಆಕೆಯ ಮೇಲೆ ಇರುವುದು ವ್ಯಾಮೋಹ ಅಲ್ಲ. ಹಾಗಾಗಿ ಎಂದಿಗೂ ನಾನು ಆಕೆಯನ್ನು ಮರೆಯಲು ಸಾಧ್ಯವಿಲ್ಲ. ಸರಿ ಬಿಡು , ನೀನು ಹೇಳಬೇಡ.. ಸಮಯ ಬಂದಾಗ ನಾನೇ ಊರಿಗೆ ಬರುತ್ತೇನೆ ಸರಿಯಾ ? “

ಅಶ್ಫಾಕ್ ಆ ರೀತಿ ಹೇಳಿದರೂ ಆತನ ಮುಖ ಕಳೆಗುಂದಿರುವುದನ್ನು ನೌಫಲ್ ಗಮನಿಸಿದನು.

ಅರೇ ತನ್ನ ಗೆಳೆಯ ಇದುವರೆಗೂ ತನ್ನಿಂದ ಏನೂ ಕೇಳಿಲ್ಲ. ಈಗ ಏನೋ ಕೇಳುತ್ತಿದ್ದಾನೆ ಎಂದರೆ ನಾನು ಉಪಕಾರ ಮಾಡಬಙಕಲ್ಲವೇ ? ಇಲ್ಲದಿದ್ದಲ್ಲಿ ನಾನು ಯಾವ ಸೀಮೆಯ ಗೆಳೆಯ. ಆತ ಮಾತಿಗೆ ತಪ್ಪಲಿಕಿಲ್ಲ. ನಾನೇ ಸಮಯ ಬಂದಾಗ ಹೇಳಿಬಿಡುತ್ತೇನೆ ಎಂದು ಮನಸ್ಸಿನಲ್ಲೇ ಯೋಚಿಸಿದವನೇ..

” ಸರಿ ಕಣೋ, ನಾನೇ ಹೇಳಿಬಿಡುತ್ತೇನೆ . ನೀನು ಧೈರ್ಯದಿಂದ ಇರು. ಈಗಲಾದರೂ ಖುಷಿಯಾಯಾತ ? ” ಎಂದು ಗೆಳೆಯನಲ್ಲಿ ಕೇಳಿದನು‌

ಆತನ ಮಾತು ಕೇಳಿ ಅಶ್ಫಾಕಿಗೆ ಖುಷಿಯಾಯಿತು. ಖುಷಿಯಿಂದ ತನ್ನ ಗೆಳೆಯನನ್ನು ತಬ್ಬಿದನು.

ಅಂದು ರಾತ್ರಿ ಅಶ್ಫಾಕ್ ಹಾಗೂ ಕುಟುಂಬ ಬಾಂಬೆಗೆ ತೆರಳಿದರು. ಬದುಕಿನ ಹೊಸ ಅಧ್ಯಾಯವೊಂದು ಅಲ್ಲಿಂದ ಪ್ರಾರಂಭ ಆಗುವುದರಲ್ಲಿ ಇತ್ತು.

ದಿನಗಳು ಉರುಳುತ್ತಿದ್ದವು. ನೌಫಲ್ ತನ್ನ ಗೆಳೆಯನಿಗೆ ಕೊಟ್ಟ ಮಾತಿನಂತೆ ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದನು. ಆದರೆ ಅದಕ್ಕಾಗಿ ಸೂಕ್ತ ಸಮಯವೇ ದೊರಕಿರಲಿಲ್ಲ.

ಅದೊಂದು ದಿನ ಹೇಗೋ ಕಷ್ಟಪಟ್ಟು ಆತ ನಫೀಸಾದರಲ್ಲಿ ಈ ವಿಷಯ ಹೇಳಿದನು. ಅವರು ಆತನ ಮುಖ ನೋಡಿ ಮುಗುಳ್ನಕ್ಕರು.

” ಅಲ್ಲಾ ನೌಫಲ್, ನಿನಗೆ ಹುಚ್ಚಾಟಿಕೆ ಆಡಲು ಬೇರೆ ಯಾರೂ ಸಿಗಲಿಲ್ಲವೇ ? ನಂಬುವಂತಹ ಮಾತು ಆದರೆ ನಾನು ನಂಬುತ್ತಿದ್ದೆ. ಆದರೆ ಇದನ್ನು ನಾನು ನಂಬುವುದಾದರೂ ಹೇಗೆ ಹೇಳು ? ಒಂದು ವೇಳೆ ಆತನಿಗೆ ಆ ಮಾತು ಹೇಳಬೇಕು ಎಂದಿದ್ದಲ್ಲಿ ನಿನ್ನ ಬಳಿ ಯಾಕೆ ಹೇಳಬೇಕು ? ನಮ್ಮ ಬಳಿಯೇ ‌ಹೇಳಬಹುದಿತ್ತಲ್ವಾ? “

ನಫೀಸಾದ ಪ್ರಶ್ನೆಗಳ ಸುರಿಮಳೆಯೇ ಸುರಿಸಿದರು.

” ಹ್ಞಾಂ…. ನಾನು ಅಂದುಕೊಂಡೆ ನೀವು ಇದೇ ರೀತಿ ಕೇಳಬಹುದು ಎಂದು. ಸರಿ ಒಂದು ನಿಮಿಷ ನಿಲ್ಲಿ… ನಿಮ್ಮ ಎದುರಿನಲ್ಲಿಯೇ ನಾನು ಆತನಿಗೆ ಕರೆ ಮಾಡುತ್ತೇನೆ..” ಎಂದ ನೌಫಲ್ ನಂಬರ್ ಡಯಲ್ ಮಾಡತೊಡಗಿದನು.

ಫೋನ್ ರಿಂಗಣಿಸುತ್ತಿತ್ತು….. ಆದರೆ ಆ ಕಡೆಯಿಂದ ಕರೆ ರಿಸೀವ್ ಮಾಡುತ್ತಲೇ ಇರಲಿಲ್ಲ. ನೌಫಲ್ ಪೆಚ್ಚು ಮೋರೆ ಹಾಕಿಕೊಂಡು ನಫೀಸಾದರ ಮುಖ ನೋಡಿದನು.

ಕೊನೆಯ ಪ್ರಯತ್ನ ಎಂಬಂತೆ ನೌಫಲ್ ಮತ್ತೆ ಕರೆ ಮಾಡಿದನು. ಅಷ್ಟರಲ್ಲಿ ಕರೆ ರಿಸೀವ್ ಆಯಿತು.

ನೌಫಲ್ ತನ್ನ ಮೊಬೈಲ್ ಅನ್ನು ಲೌಡ್ ಸ್ಪೀಕರ್ ಅಲ್ಲಿ ಇಟ್ಟವನೇ

” ಏನೋ ಅಶ್ಫಾಕ್, ಆಗದಿಂದ ಕರೆ ಮಾಡುತ್ತಾ ಇದ್ದೇನೆ . ಯಾಕೆ ನೀನು ಕರೆ ರಿಸೀವ್ ಮಾಡುತ್ತಾ ಇಲ್ಲ ? ನೋಡು ನಾನು ನಫೀಸಾದರ ಮನೆಯಲ್ಲಿ ಇದ್ದೇನೆ. ನೀನು ರುಬೀನಾಳನ್ನು ಮದುವೆಯಾಗಬೇಕು ಎಂದು ಹೇಳಿದ ವಿಚಾರವನ್ನು ನಾನು ಅವರಿಗೆ ತಿಳಿಸಿದೆ. ಆದರೆ ಯಾಕೋ ಅವರು ನಂಬುತ್ತಲೇ ಇಲ್ಲ. ಈಗ ನೀನೇ ನಿನ್ನ ಬಾಯಾರೆ ಹೇಳಿಬಿಡು ” ಎಂದು ಒಂದೇ ಸಮನೆ ಹೇಳಿದನು.

” ಹಲೋ, ಇದು ನಾನು ಅಶ್ಫಾಕ್ ಅಲ್ಲ. ಆತ ತನ್ನ ಮೊಬೈಲ್ ಇಲ್ಲಿ ಬಿಟ್ಟು ಹೊರಗೆ ಆಟ ಆಡಲು ತೆರಳಿದ್ದಾನೆ. ” ಆ ಕಡೆಯಿಂದ ಯಾವುದೋ ಹೆಂಗಸಿನ ಧ್ವನಿ ಕೇಳಿ ಬಂತು.

” ಓಹ್ ಹೌದಾ, ಬಂದ ತಕ್ಷಣ ತುಂಬಾ ಅರ್ಜೆಂಟಾಗಿ ಕರೆ ಮಾಡಲು ಹೇಳುತ್ತೀರಾ ? “

“ಹೇಳುವುದೇನೋ ಸರಿ… ಆದರೆ ಆತ ಅದು ಯಾವುದೋ ಹುಡುಗಿಯನ್ನು ಮದುವೆ ಆಗುತ್ತಾನೆ ಎಂದೆಲ್ಲಾ ಹೇಳಿದೆ ಅಲ್ಲಾ ಅದು ಶುದ್ಧ ಸುಳ್ಳು. ಆತ ಹಾಗೆ ಕಂಡ ಕಂಡವರಲ್ಲಿ ಆ ಮಾತನ್ನು ಹೇಳಿ ಯಾವುದಾದರೂ ಹೆಣ್ಣನ್ನು ತನ್ನ ಬುಟ್ಟಿಗೆ ಬೀಳಿಸುತ್ತಾನೆ. ಅದನ್ನೆಲ್ಲಾ ನೀವು ನಂಬುತ್ತೀರಿ ಅಲ್ವಾ ? ಆತನ ಮದುವೆ ನನ್ನ ಜೊತೆ ನಿಶ್ಚಯವಾಗಿದೆ. ಇನ್ನೂ ಕೆಲವು ಹುಡುಗಿಯರು ಆತನ ದುಡ್ಡು ಕಂಡು ಮರುಳಾಗಿ ಆತನ ಜೊತೆಯೇ ಮದುವೆಯಾಗಬೇಕು ಎಂದು ಕನಸು ಕಾಣುತ್ತಾ ಇರುತ್ತಾರೆ. ಅವರಿಗೆ ಅಷ್ಟು ಕೂಡ ಕಾಮನ್ ಸೆನ್ಸ್ ಇಲ್ವಾ…….”

ಆಕೆ ತನ್ನ ಮಾತನ್ನು ಮುಂದುವರೆಸುತ್ತಾ ಇದ್ದಳು. ಕೇಳಲಾಗದೆ ನೌಫಲ್ ಕರೆ ಕಟ್ ಮಾಡಿದನು.

ಕಟ್ ಮಾಡಿದವನೇ ಮೆಲ್ಲನೆ ನಫೀಸಾದರ ಮುಖ ನೋಡಿದನು. ಅವರ ಕಂಗಳಲ್ಲಿ ನೀರು ತುಂಬಿ ತುಳುಕಿಡುತ್ತಿತ್ತು. ಆ ಹೆಣ್ಣಿನ ಮಾತು ಅವರನ್ನು ಅಷ್ಟೊಂದು ದುಃಖಕ್ಕೀಡು ಮಾಡಿಸಿದ್ದವು.

ನೌಫಲ್ ಅವರಲ್ಲಿ ಏನೊಂದೂ ಮಾತನಾಡುವ ಮುನ್ನ

” ದಯವಿಟ್ಟು ಏನೊಂದೂ ಹೇಳಬೇಡ ನೌಫಲ್ … ಹೇಳಲು ಕೇಳಲು ಏನೂ ಉಳಿದಿಲ್ಲ. ಎಲ್ಲವನ್ನೂ ನಾನು ನನ್ನ ಕಿವಿಯಾರೆ ಕೇಳಿಸಿಕೊಂಡೆ.”

ಧ್ವನಿ ಕೇಳಿ ಬಂದ ಕಡೆ ತಿರುಗಿ ನೋಡಿದನು ನೌಫಲ್. ರುಬೀನಾ ಅಲ್ಲಿ ನಿಂತಿದ್ದಳು.

” ಇಲ್ಲ ರುಬೀನಾ , ನೀನು ನಿನ್ನ ಕಿವಿಯಾರೆ ಕೇಳಿಸಿದ್ದು ಯಾವುದೂ ನಿಜವಲ್ಲ. ಇದರಲ್ಲಿ ಏನೋ ಸಂಚು ಇದೆ. ನನಗೂ ಇದು ಅರ್ಥ ಆಗುತ್ತಿಲ್ಲ. ಆದರೆ ಅಶ್ಫಾಕ್ ಅಂತಹ ಹುಡುಗನಲ್ಲ. ಆ ರೀತಿ ನಿನ್ಞ ಬಾಳನ್ನು ಹಾಳು ಮಾಡಬೇಕು ಎನ್ನುವ ಯಾವ ಉದ್ದೇಶವೂ ಆತನಿಗೆ ಇಲ್ಲ.” ಎಂದು ನೌಫಲ್ ಆಕೆಗೆ ಸಮಜಾಯಿಷಿ ನೀಡಲು ನೋಡಿದನು.

” ಇಲ್ಲಾ ನೌಫಲ್… ಆ ಹುಡುಗಿ ಯಾಕಾಗಿ ಸುಳ್ಳು ಹೇಳಬೇಕು ಹೇಳು ? ಆಕೆಗೆ ಅದರಿಂದ ಏನು ಲಾಭ? ನೀನು ಹೇಳಿದ ಮಾತಿಗಾಗಿ ನನಗೆ ದುಃಖ ಆಗುತ್ತಿಲ್ಲ. ಅಶ್ಫಾಕ್ ಯಾಕೆ ನನ್ನ ಜೀವನದ ಜತೆ ಚೆಲ್ಲಾಟ ಆಡಲು ನೋಡಿದ ? ನಾನು ಅಂತಹದ್ದು ಏನು ಮಾಡಿದ್ದೇನೆ ಆತನಿಗೆ ? ನನ್ನ ಅಮ್ಮ ಅಷ್ಟೊಂದು ಪ್ರೀತಿಯಿಂದ ಆತನ ಉಪಚಾರ ಮಾಡುತ್ತಿದ್ಧದ್ದು ಆತನಿಗೆ ಮರೆತು ಹೋಯಿತೇ ? ಮರೆತು ಹೋಗದೆ ಇರುವುದಾದರೂ ಹೇಗೆ ಹೇಳು ? ಆತನೀಗ ಇರುವುದು ಮುಂಬೈ ಅಂತಹ ಮಹಾ ನಗರದಲ್ಲಿ ಅಲ್ಲವಾ? ಇಲ್ಲಿಂದ ಹೋಗಿ ಹಲವು ವರ್ಷಗಳು ಆಯಿತು ಅಲ್ವಾ ? ನನ್ನ ಅಮ್ಮ ಮಾಡಿದ ಉಪಚಾರದ ಋಣ ಹೀಗೆ ತೀರಿಸಬೇಕು ಎಂದು ಬಯಸಿದನೇ ? ” ಅಷ್ಟು ಕೇಳಬೇಕಾದರೆ ಆಕೆಯ ಧ್ವನಿ ಗದ್ಗದಿತವಾಯಿತು.

” ಇಲ್ಲಾ ರುಬೀನಾ… ಅಶ್ಫಾಕ್ ಅನ್ನು ಇಷ್ಟು ವರ್ಷಗಳ ಕಾಲ ನೀನು ನೋಡಿದ್ದೀಯಲ್ಲ.. ಇಷ್ಟೇನಾ ನೀನು ಅರ್ಥ ಮಾಡಿದ್ದು ? “

” ನಾನು ಕಂಡಿದ್ದು ಹಲವು ವರ್ಷಗಳ ಮೊದಲು ಅವನನ್ನು. ಇಂದು ಆತ ಬದಲಾಗಿಲ್ಲ ಅನ್ನುವುದಕ್ಕೆ ಏನು ಗ್ಯಾರಂಟಿ. ಆ ಹುಡುಗಿ ಜೊತೆ ಆತನ ನಿಶ್ಚಿತಾರ್ಥ ಆಗಿದೆ. ಅಲ್ಲದೆ ಆಕೆ ಹೇಳಿದ ಮಾತು ನೀನು ಕೇಳಿಸಿದೆಯಾ ? ಬಡ ಹೆಣ್ಣು ಮಕ್ಕಳು ಆತನ ಆಸ್ತಿಗಾಗಿ ಆತನನ್ನು ಒಳ ಹಾಕಲು ನೋಡುತ್ತಾರೆ ಎಂದು. ಯಾವಾಗ ನಾನು ಆ ರೀತಿ ಮಾಡಿದ್ದೇನೆ ಹೇಳು ? ಎಂದಾದರೂ ಆತನ ಜತೆ ನನ್ನ ಮದುವೆ ಆಗುವ ಕನಸು ನಾನು ಕಂಡಿದ್ದೇನೆಯೇ ? ಹೇಳು ನೀನು ? ಆ ಮಾತು ನನ್ನ ಮನಸ್ಸನ್ನು ಅದೆಷ್ಟು ಘಾಸಿಗೊಳಿಸಿದೇ ನನಗೆಯೇ ಗೊತ್ತು. ನಿನ್ನ ಗೆಳೆಯ ಕರೆ ಮಾಡಿದರೆ ಈ ಮಾತನ್ನು ಆತನಿಗೆ ತಿಳಿಸಿಬಿಡು. ಇನ್ನೆಂದಿಗೂ ನಾನು ಆತನ ಮುಖವನ್ನು ನೋಡಲಾರೆ. ನಾನು ಆತನನ್ನು ದ್ವೇಷಿಸುತ್ತಾ ಇದ್ದೇನೆ ..”ಎಂದು ಹೇಳಿ ರುಬೀನಾ ಒಳನಡೆದಳು.

ನಫೀಸಾದ ಮತ್ತೇನೂ ಮಾತನಾಡಲಿಲ್ಲ. ನೌಫಲ್ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಅಲ್ಲಿಂದ ಹೊರ ನಡೆದನು.

ದಾರಿಯಲ್ಲಿ ಮತ್ತೆ ಬರುತ್ತಿರಬೇಕಾದರೆ ಆತನ ಮೊಬೈಲ್ ರಿಂಗಣಿಸತೊಡಗಿತು‌. ಯಾರು ಎಂದು ನೋಡಿದಾಗ ಅಶ್ಫಾಕ್ ನಂಬರ್ ಕಾಣಿಸಿತು.

ಬೈಕ್ ಬದಿಯಲ್ಲಿ ನಿಲ್ಲಿಸಿದವನೇ ಕರೆ ರಿಸೀವ್ ಮಾಡಿದನು.

” ಹ್ಞಾಂ ನೌಫಲ್ ಎಲ್ಲಿದ್ದೀಯಾ ನೀನು ? ನಫೀಸಾದರ ಮನೆಗೆ ಹೋಗುತ್ತೇನೆ ಎಂದು ಹೇಳಿ ಸುದ್ದಿಯೇ ಇಲ್ಲ ನಿನ್ನದು. ಏನಾಯಿತು ? ನೀನು ಅಲ್ಲಿಗೆ ಹೋದೆಯಾ ? ಅಶ್ಫಾಕ್ ತನ್ನ ಗೆಳೆಯನ ಬಳಿ ಕೇಳಿದನು.

” ಹ್ಞೂಂ ಹೋಗಿದ್ದೆ. ಆದರೆ ಎಲ್ಲಾ ಹಾಳಾಗಿ ಹೋಯಿತು….. “

ನೌಫಲ್ ಮಾತುಗಳು ಅಶ್ಫಾಕಿಗೆ ಅರ್ಥ ಆಗಲಿಲ್ಲ.

” ಏನು ಹಾಳಾಯಿತು ? ಸ್ವಲ್ಪ ಬಿಡಿಸಿ ಹೇಳು ? ಎಂದು ಅಶ್ಫಾಕ್ ಹೇಳಿದಾಗ ನೌಫಲ್ ನಡೆದ ಎಲ್ಲಾ ವಿಷಯವನ್ನು ಹೇಳಿದನು.

“ಏನು ಹೇಳುತ್ತಾ ಇದ್ದೀಯಾ ನೌಫಲ್ ನೀನು? ನಾನು ಏನೂಂತ ನಿನಗೆ ಗೊತ್ತಿಲ್ಲವೇನು ? ನಿನ್ನ ಜೊತೆ ಮಾತನಾಡಿದ್ದು ನನ್ನ ಅತ್ತೆಯ ಮಗಳು ಆಗಿರಬೇಕು . ಅವರಿಗಾದರೋ ಆಕೆಯನ್ನು ನನಗೆ ಕೊಟ್ಟು ಮದುವೆ ಮಾಡಬೇಕು ಎಂದು ಆಸೆ. ಆದರೆ ಅವರು ಆಸೆ ಪಟ್ಟಿದ್ದಾರೆ ಎಂದು ನಾನು ಒಪ್ಪಬೇಡವೇ ? ಆಕೆಯ ಮಾತು ಕೇಳಿ ನೀನು ನನ್ನನ್ನು ಸಂಶಯ ಪಡುತ್ತೀಯಲ್ಲ ಇದು ಸರಿಯಾ ? ಹೆಣ್ಣು ಮಕ್ಕಳ ಬಾಳಿನಲಿ ಚೆಲ್ಲಾಟ ಆಡುವವನು ನಾನಾದರೆ ನನಗೇನು ಆಕೆ ಈ ಪ್ರಪಂಚದಲ್ಲಿ ಒಬ್ಬಳೇ ಹುಡುಗಿಯೇ ? ಬೇರೆ ಯಾರು ಸಿಗುವುದಿಲ್ಲವೇ? ಇರಲಿ ನಾನು ಅಂತಹವನೇ ಎಂದು ಇಟ್ಟು ಕೊಳ್ಳು. ನನ್ನ ಜೊತೆ ನಡೆದಂತಹ ನಿಶ್ಚಿತಾರ್ಥ ಏಕೆ ಆಕೆ ಮುರಿದುಕೊಳ್ಳಲಿಲ್ಲ? ಇದೆಲ್ಲ ಒಂದು ವಿಷಯಾನ ಹೇಳು ನೀನು… ನೀನೇ ಒಮ್ಮೆ ಯೋಚಿಸಿ ನೋಡು…”

ಅಶ್ಫಾಕ್ ಮಾತು ಕೇಳಿದ ನೌಫಲಿಗೆ ಆತ ಹೇಳುವುದು ನಿಜ ಎಂದೆನಿಸಿತು‌. ಅರೇ ! ಯಾರದೋ ಮಾತು ಕೇಳಿ ನನ್ನ ಗೆಳೆಯನ ಮೇಲೆಯೇ ಸಂಶಯ ಪಟ್ಟೆನಲ್ಲ ಎಂದು ಆತನಿಗೆ ತನ್ನ ಮೇಲೆಯೇ ಹೇಸಿಗೆ ಎನಿಸತೊಡಗಿತು.

” ಹೌದು ಅಶ್ಫಾಕ್, ನೀನು ಹೇಳುವುದು ನಿಜ. ನಾನೇನೋ ನಂಬುತ್ತೇನೆ. ಆದರೆ ರುಬೀನಾ… ಆಕೆ ನಿನ್ನನ್ನು ದ್ವೇಷಿಸುತ್ತಾಳೆ. ಈಗ ಏನೋ ಮಾಡುತ್ತೀಯಾ ? “

” ನೀನು ಆಕೆಯ ಬಳಿ ನಾನು ಹೇಳಿದ ವಿಷಯ ಹೇಳು. ಆಗ ಆಕೆಗೆ ಖಂಡಿತವಾಗಿಯೂ ಅರ್ಥ ಆಗುತ್ತದೆ..” ಎಂದು ಅಶ್ಫಾಕ್ ನೌಫಲಿಗೆ ದುಂಬಾಲು ಬಿದ್ದನು.

” ಇಲ್ಲಾ ಅಶ್ಫಾಕ್ , ಇದುವರೆಗೂ ನೀನು ಹೇಳಿದ್ದು ಕೇಳಿಸಿದೆ. ಇನ್ನು ಕೇಳಿಸಿಕೊಳ್ಳುವುದಿಲ್ಲ. ನನಗೆ ಅವರ ಬಳಿ ಮತ್ತೊಮ್ಮೆ ಹೋಗಲು ಸಾಧ್ಯವಿಲ್ಲ. ಖಂಡಿತವಾಗಿಯೂ ಚಪ್ಪಲಿಯಲ್ಲಿ ಹೊಡೆದು ನನ್ನನ್ನು ಕಳುಹಿಸುವರು.”
ಎಂದು ನೌಫಲ್ ಖಡಾಖಂಡಿತವಾಗಿ ಹೇಳಿದಾಗ ಅಶ್ಫಾಕಿಗೆ ಏನು ಮಾಡುವುದು ಎಂದು ದಿಕ್ಕೇ ತೋಚಲಿಲ್ಲ.

ಕೆಲವು ಹೊತ್ತು ಯೋಚಿಸಿದ ಅಶ್ಫಾಕ್ ಗೆಳೆಯನ ಬಳಿ ಮತ್ತೆ ಒಂದು ಹೊಸ ವಿಚಾರವನ್ನು ಹೇಳಿದನು. ಆ ವಿಚಾರ ಕೇಳಿದ ನೌಫಲ್ ಸರಿ ಎಂದು ಹೇಳಿ ಕರೆ ಕಟ್ ಮಾಡಿದನು. **********"********

ಇತ್ತ ರುಬೀನಾಳ ಮನಸ್ಸಿನಲ್ಲಿ ಪದೇ ಪದೇ ಅದೇ ಮಾತುಗಳು ರಿಂಗಣಿಸುತ್ತಿದ್ಧವು.

” ಛೇ ಅಶ್ಫಾಕ್ ಯಾಕೆ ಈ ರೀತಿಯಾದ ? ಹಲವು ವರ್ಷಗಳ ಮೊದಲು ನಾನು ಆತನನ್ನು ಈ ಊರಿನಲ್ಲಿ ಕಾಣುತ್ತಿದ್ದಾಗ ಆತ ಈ ರೀತಿ ಇರಲಿಲ್ಲ. ನನ್ನ ಜೊತೆ ಇರಲಿ ಅಥವಾ ಯಾವುದೇ ಹುಡುಗಿಯ ಜೊತೆ ಮಿತಿಮೀರಿ ಮಾತನಾಡುವುದನ್ನು ನಾನು ಕಂಡೇ ಇರಲಿಲ್ಲ. ಆದರೆ ಈಗ ಹುಡುಗರ ಬಾಳಿನಲ್ಲಿ ಚೆಲ್ಲಾಟ ಆಡುತ್ತಾ ಇದ್ದಾನಂತೆ… ಸಿಟಿಯ ಬದುಕು ಆತನನ್ನು ಅಷ್ಟೊಂದು ಬದಲಾಯಿಸಿತೇ ?
ಆಕೆಯ ಮನಸ್ಸು ಯೋಚಿಸುತ್ತಲೇ ಇತ್ತು. ಅಷ್ಟರಲ್ಲಿ ನಫೀಸಾದ ಒಳಬಂದರು. ಮಗಳ ಮೌನ ಯಾಕೆ ಎಂದು ಅರ್ಥ ಆಗಿತ್ತು ಅವರಿಗೆ. ಆದರೆ ಆಕೆಗೆ ಸಮಾಧಾನ ಹೇಳುವ ಪರಿಸ್ಥಿತಿಯಲ್ಲಾಗಲೀ, ಆಕೆಯನ್ನು ಸಂತೈಸುವಲ್ಲಾಗಲಿ ಅವರಿಂದ ಸಾಧ್ಯ ಇರಲಿಲ್ಲ . ಏಕೆಂದರೆ ಅವರೇ ಇನ್ನು ಆ ಆಘಾತದಿಂದ ಹೊರ ಬಂದಿರಲಿಲ್ಲ. ಮಗಳ ಬಳಿ ಮಾತನಾಡಬೇಕು ಎನ್ನುವಷ್ಟರಲ್ಲಿ ಕರೆಗಂಟೆ ಬಾರಿಸಿತು. ರುಬೀನಾ ಅಮ್ಮನ ಮುಖ ನೋಡಿದಳು.

” ಅಮ್ಮಾ, ಆತ ಮತ್ತೆ ಬಂದಿದ್ದಾನೆ ಎಂದು ಕಾಣಿಸುತ್ತದೆ. ಈ ಸಾರಿ ನಾನು ಆತನಿಗೆ ಬುದ್ಧಿ ಕಲಿಸುತ್ತೇನೆ” ಎಂದು ಸಿಟ್ಟಿನಿಂದ ರುಬೀನಾ ಬಾಗಿಲು ತೆರೆಯಲು ಹೋದಳು.ಆದರೆ ಬಾಗಿಲು ತೆರೆದವಳಿಗೆ ಆಶ್ಚರ್ಯ ಕಾದಿತ್ತು.

ಆಚೆ ಕಡೆಯಿಂದ ಒಳಬಂದ ಮುಕ್ತಾರ್ ” ಹ್ಞೂಂ ನಾನೇ ಮತ್ತೆ.. ನೀವು ಯಾರು ಅಂತ ಅಂದುಕೊಂಡ್ರಿ?” ಎಂದು ಕೇಳಿದನು.

” ಹಾಗಲ್ಲ ಕಣೋ, ನೀನು ಬರುವಾಗ ಯಾವತ್ತೂ ಸ್ವಲ್ಪ ತಡ ಆಗುತ್ತದಲ್ವಾ ? ಹಾಗೇ ಯಾರಾಗಿರಬಹುದು ಎಂದು ಅಂದುಕೊಂಡೆ ಎಂದು ರುಬೀನಾ ತನ್ನ ಅಣ್ಣನ ಬಳಿ ನಿಜ ಹೇಳಲು ಇಚ್ಛಿಸದೆ ಸುಳ್ಳನ್ನು ಹೇಳಿದಳು.

” ಓಹ್ ಗೊತ್ತಾಯಿತು…. ನೀವು ಆತ ಎಂದು ಎನಿಸಿದಿರಾ? ” ಎಂದು ಮುಕ್ತಾರ್ ಕೇಳಿದಾಗ ರುಬೀನಾಳಿಗೆ ಆಶ್ಚರ್ಯ ಆಯಿತು.

ಅರೇ ಈತನಿಗೆ ಹೇಗೆ ಗೊತ್ತಾಯಿತು ? ಯಾರು ತಿಳಿಸಿದರು ? ಎಂದು ಮನಸ್ಸಿನಲ್ಲೇ ಯೋಚಿಸುತ್ತಿದ್ದಳು.

” ಆತ ಇಲ್ಲಿ ಬರುವುದಾದರೂ ಯಾತಕ್ಕಾಗಿ ? ಆತನಿಗೆ ಅಲ್ಲಿ ಸುಂದರಿಯಾದ ಹೆಂಡತಿ ಇರುವಾಗ ಇಲ್ಲಿ ಬರುವುದಾದರೂ ಯಾತಕ್ಕಾಗಿ? ತನ್ನ ಹೆಂಡತಿ ,ಮಕ್ಕಳು ಇಲ್ಲಿ ಇದ್ದಾರೆ ಅನ್ನೋ ನೆನಪಾದರೂ ಆತನಿಗೆ ಇದೆಯಾ? ” ಅಷ್ಟು ಹೇಳಬೇಕಾದರೆ ಮುಕ್ತಾರ್ ಮುಖ ರೋಷದಿಂದ ಕುದಿಯುತ್ತಾ ಇತ್ತು.

ತನ್ನ ಅಣ್ಣ ನೌಫಲ್ ಬಗ್ಗೆ ಅಲ್ಲ ಮಾತನಾಡುತ್ತಿರುವುದು. ಈತ ನಾವು ಅಪ್ಪ ಬಂದದ್ದು ಎಂದುಕೊಂಡಿದ್ದೇವೆ ಎಂದು ಎನಿಸಿದ್ದಾನೆ ಎಂದು ಆಕೆಗೆ ತಿಳಿಯಿತು.

” ಯಾಕೆ ಅಣ್ಣಾ ಹಾಗೆ ಅಪ್ಪನನ್ನು ಏಕವಚನದಲ್ಲಿ ಕರೆದು ಮಾತನಾಡಿಸುತ್ತಾ ಇದ್ದೀಯಾ ? ಸರಿ ಅಲ್ಲ ಕಣೋ ಅದು… ” ರುಬೀನಾ ತನ್ನ ಅಣ್ಣನಿಗೆ ಬುದ್ಧಿವಾದ ಹೇಳಿದಳು.

” ಅಪ್ಪ ಅಪ್ಪನ ರೀತಿಯಲ್ಲಿ ಇದ್ದರೆ ಬಾಯಿ ತುಂಬಾ ಅಪ್ಪಾ ಅಂತ ಕರಿಯಬಹುದು. ಆದರೆ ಅವರನ್ನು ಕರಿಯಬೇಕಾದ ಯೋಗ್ಯತೆ ಅವರು ಕಳೆದುಕೊಂಡಿದ್ದಾರೆ ರುಬೀನಾ.”

” ಹಾಗೆಲ್ಲ ಹೇಳಬೇಡ ಮಗನೇ… ನಿನ್ನ ಹುಟ್ಟಿಸಿದ ತಂದೆ ಕಣೋ ಅವರು. ಅವರು ಹೇಗೆ ಬೇಕಾದರೂ ಇರಲಿ . ಆದರೆ ನಾವು ಅವರಿಗೆ ಕೊಡಬೇಕಾದ ಬೆಲೆ ಕೊಡಬೇಕು.”

“ಅಮ್ಮಾ , ನೀನು ಮತ್ತೆ ರುಬೀನಾ ಆ ಮನುಷ್ಯನಿಗೆ ಬೆಲೆ ಕೊಡುವುದಿದ್ದರೆ ಕೊಡಿ. ಆದರೆ ನಾನು ಮಾತ್ರ ಕೊಡುವುದಿಲ್ಲ. ಯಾಕೆಂದರೆ ಎಂದಾದರೂ ಆತ ತಂದೆ ಎನ್ನುವ ಸ್ಥಾನವನ್ನು ನಿಭಾಯಿಸಿದ್ದಾನ? ಎಂದಾದರೂ ನಮ್ಮನ್ನು ಕಷ್ಟಪಟ್ಟು ಸಾಕಿ ಸಲಹಿದ್ದಾನ? ಎಂದಾದರೂ ನಿನ್ನನ್ನು ಬಾಯಿ ತುಂಬಾ ತನ್ನ ಪತ್ನಿ ಅಂತ ಕರೆದು ಪ್ರೀತಿಸಿದ್ದಾನ? ಇಲ್ಲ ಅಲ್ವಾ ಅಮ್ಮಾ… ಎಲ್ಲಾ ತಂದೆಯಂದಿರು ತಮ್ಮ ಮಕ್ಕಳನ್ನು ಪ್ರೀತಿಸುವುದನ್ನು ನೋಡಿದಾಗ ನಾನು ಆಸೆ ಪಟ್ಟಿದ್ದೇನೆ. ನಮ್ಮ ತಂದೆ ನಮಗಾಗಿ ಹೀಗೆ ಮಾಡಿದರೆ ಎಂದು . ಇಲ್ಲ ಆತ ಮಾಡಲೇ ಇಲ್ಲ. ಸುಂದರವಾದ ಪತ್ನಿ ಸಿಕ್ಕಳು ಎಂದು ನಮ್ಮನ್ನು ಮರೆತ. ಆಕೆಯ ಮಕ್ಕಳನ್ನು ಬೆಟ್ಟದಷ್ಟು ಪ್ರೀತಿಸುತ್ತಾನೆ. ಆದರೆ ನಾವು ತಂದೆಯಿದ್ದೂ ಅನಾಥರಂತೆ ಇದ್ದೇವೆ. ಅದಲ್ಲದೆ ನೀನು ಇಷ್ಟು ಕಷ್ಟಪಟ್ಟು ಸಾಕಿ ಸಲಹಿ ನಮ್ಮನ್ನು ಬೆಳೆಸುವಾಗ ಒಂದು ದಿನವಾದರೂ ನಿನ್ನ ಕಷ್ಟದಲ್ಲಿ ಭಾಗಿಯಾಗಿದ್ದಾನ? ಇಲ್ಲವಲ್ಲ. ಯಾವಾಗಲಾದರೂ ಮನಸ್ಸಿಗೆ ಇಷ್ಟವಾದರೆ ಅತಿಥಿಯಂತೆ ಬಂದು ಹೋಗುತ್ತಾನೆ ಅಷ್ಟೇ.ಆತ ಯಾವಾಗ ನಮ್ಮನ್ನು ನಿಜವಾಗಿಯೂ ಪ್ರೀತಿಸುತ್ತಾನೆ ಅಂದೇ ನಾನು ಕೂಡ ನಿಜವಾಗಿಯೂ ಆತನನ್ನು ಅಪ್ಪಾ ಎಂದು ಬಾಯಿ ತುಂಬಾ ಕರೆಯುತ್ತೇನೆ. ಎಂದು ಹೇಳುತ್ತಾ ಮುಕ್ತಾರ್ ಒಮ್ಮೆ ತನ್ನ ಮಾತು ನಿಲ್ಲಿಸಿದನು.

ನಂತರ ಮಾತು ಮುಂದುವರಿಸಿದವನೇ……..

” ಅದು ಸರಿ, ಇವತ್ತು ಯಾಕೆ ಆತ ಬರುತ್ತೇನೆಂದು ಹೇಳಿದ್ದ? ನೀವು ಯಾಕೆ ಆತನಿಗಾಗಿ ಕಾಯುತ್ತಾ ಇದ್ದೀರಿ? ಎಂದು ಒಮ್ಮೆಲೇ ನೆನಪಾದವರಂತೆ ಪ್ರಶ್ನಿಸಿದ.

ಈಗ ತಾಯಿ, ಮಗಳು ತಮ್ಮ ತಮ್ಮ ಮುಖ ನೋಡಿಕೊಂಡರು. ನೌಫಲ್ ಬಂದ ವಿಚಾರ ಆತನಲ್ಲಿ ಹೇಳುವುದೋ , ಬೇಡವೋ ಎಂಬ ದ್ವಂದ್ವ ಪರಿಸ್ಥಿತಿ ಅವರಿಗುಂಟಾಯಿತು. ಮೊದಲೇ ಆತ ಅತೀವ ಕೋಪದಲ್ಲಿ ಇದ್ದಾನೆ. ಇನ್ನು ಈ ವಿಚಾರ ಹೇಳಿದರೆ ಖಂಡಿತವಾಗಿಯೂ ಈಗಲೇ ನೌಫಲ್ ಬಳಿ ಹೋಗಿ ಜಗಳಕ್ಕೆ ಇಳಿಯಬಹುದು ಎಂದೆನಿಸಿತು ಅವರಿಗೆ. ಆದರೆ ಹೇಳದೆ ಇದ್ದಲ್ಲಿ ಮುಚ್ಚಿಟ್ಟಂತೆ ಆಗುವುದಿಲ್ಲವಾ ಎಂದೆನಿಸಿ ನಫೀಸಾದರೆ ಮೆಲ್ಲನೆ

” ಅದೂ ಮಗನೇ ನಾವು ನಿನ್ನ ಅಪ್ಪನಿಗಾಗಿ ಕಾದಿದ್ದು ಅಲ್ಲ. ನೌಫಲ್ ಬಂದು ಹೋಗಿದ್ದ. ಆತನೇ ಮತ್ತೆ ಬಂದನೋ ಎಂದೆನಿಸಿತು. ಹಾಗೇ ನಾವು ಆತ ಎಂದುಕೊಂಡೆವು ” ಎಂದು ಹೇಳಿ ಮಗನ ಮುಖ ನೋಡಿದರು.

” ನೌಫಲಾ ? ಆತ ಯಾಕೆ ಬಂದಿದ್ದ ಇಲ್ಲಿಗೆ ? ಮುಕ್ತಾರ್ ಆಶ್ಚರ್ಯದಿಂದ ಕೇಳಿದ.

ನಫೀಸಾದ ಹೇಳಬೇಕು ಎಂದು ಬಾಯಿ ತೆರೆಯುವಷ್ಟರಲ್ಲಿ
ಮುಕ್ತಾರ್ ಮೊಬೈಲ್ ರಿಂಗಣಿಸತೊಡಗಿತು‌.

ಆತ ಕರೆ ರಿಸೀವ್ ಮಾಡಿದವನೇ ಆ ಕಡೆಯ ಮಾತು ಕೇಳಿ ಆಘಾತಗೊಂಡಂತಾದನು

ಅಮ್ಮಾ ತಾತನಿಗೆ ಹುಷಾರಿಲ್ಲದ್ದು ಸ್ವಲ್ಪ ಜೋರಾಗಿಯೇ ಇದೆಯಂತೆ. ಹಾಗಾಗಿ ನಾವು ಈಗ ಹೋಗಬೇಕು ? ಏನು ಮಾಡುವುದು ? ನೀನು ಹೇಗೆ ಹೇಳುತ್ತೀಯೋ ಹಾಗೆ ಎಂದನು.

“ಅರೇ ಹೌದಾ?” ಎಂದು ಕೇಳಿದ ನಫೀಸಾದರ ಮುಖದಲ್ಲಿ ಆತಂಕದ ಛಾಯೆ ಎದ್ದು ಕಾಣುತ್ತಿತ್ತು.

ಮತ್ತೇನೊಂದನ್ನೂ ಯೋಚಿಸದೇ ಅವರು ಹೊರಡಲು ಅನುವಾದರು.

ಹೋಗುವುದೇನೋ ಸರಿ ….. ಆದರೆ ಈಗ ಬೈಕಿನಲ್ಲಿ ಹೋಗಬೇಕಷ್ಟೇ. ಬಸ್ಸಿಗೆಲ್ಲಾ ಕಾಯುತ್ತಾ ನಿಂತರೆ ಸಮಯ ಸಾಲದು. ಗಾಡಿ ಮಾಡಿ ಹೋಗೋಣ ಎಂದರೆ ತುಂಬಾ ಕಷ್ಟ… ಏನು ಮಾಡುವುದು? ಮುಕ್ತಾರ್ ಅಮ್ಮನ ಮುಂದೆ ತನ್ನ ಮನದಲ್ಲಿ ಇದ್ದ ಪ್ರಶ್ನೆಯನ್ನು ಮುಂದಿಟ್ಟನು.

ಈಗ ಯೋಚಿಸುವ ಸರದಿ ನಫೀಸಾದರದ್ದು ಆಗಿತ್ತು. ಸ್ವಲ್ಪ ಹೊತ್ತು ಯೋಚಿಸಿದವರೇ

” ಮುಕ್ತಾರ್ ಒಂದು ವೇಳೆ ಅಪ್ಪ ಹುಷಾರಾದರೆ ನಾವು ಇವತ್ತೇ ಹಿಂದಿರುಗಿ ಬರೋಣ. ಇಲ್ಲಾ ಅಂದರೆ ನನ್ನನ್ನು ಮಾಡಿ ನೀನು ಹಿಂದಿರುಗಿ ಬಂದು ಬಿಡು. ಅಲ್ಲಿವರೆಗೂ ರುಬೀನಾ ಅವಳ ಅಪ್ಪನ ಮನೆಯಲ್ಲಿ ಇರಲಿ ಆಗದೇ ? ಎಂದು ಪ್ರಶ್ನಿಸಿದರು.

ಅಮ್ಮನ ಮಾತು ಕೇಳಿದ ತಕ್ಷಣ ಮುಕ್ತಾರ್ ಮುಖ ಕೋಪದಿಂದ ಕುದಿಯತೊಡಗಿತು.

“ಬೇಡ ನೀವಿಬ್ಬರೂ ಇಲ್ಲೇ ನಿಲ್ಲಿ. ನಾನೇ ಹೋಗಿ ಅಜ್ಜನ ಆರೋಗ್ಯ ವಿಚಾರಿಸಿಕೊಂಡು ಬರುತ್ತೇನೆ . ಅವಳನ್ನು ಆತನ ಮನೆಯಲ್ಲಿ ಬಿಡಲು ನನಗೆ ಮನಸಿಲ್ಲ ಅಮ್ಮಾ… ಆತನ ಪತ್ನಿಯ ಮೇಲೆ ನನಗೆ ಒಂದು ಚೂರು ಕೂಡ ವಿಶ್ವಾಸ ಇಲ್ಲ. ನೀವಾದರೋ ಮನೆಯಲ್ಲೇ ಇರುತ್ತೀರಿ. ಏನೊಂದೂ ವಿಷಯ ತಿಳಿಯುವುದಿಲ್ಲ. ನನಗೆ ಇಷ್ಟವಿಲ್ಲ. ಹೇಳಿ ಈಗ ಏನು ಮಾಡುತ್ತೀರಿ? “ಎಂದು ತಾಯಿಯ ಮುಖ ನೋಡಿದನು.

ನಫೀಸಾದರಿಗೆ ಏನು ಹೇಳಬೇಕು ಎಂದೇ ತೋಚಲಿಲ್ಲ. ಒಂದು ಕಡೆ ತನ್ನ ತಂದೆಯ ಆರೋಗ್ಯ ಅಷ್ಟು ಚೆನ್ನಾಗಿಲ್ಲ ಎಂದು ತಿಳಿದ ಮೇಲೆ ಯಾಕೋ ಹೋಗದಿದ್ದರೆ ಮನಸು ಕೇಳುವುದಿಲ್ಲ.ಆದರೆ ಮಗಳನ್ನು ಕರೆದುಕೊಂಡು ಹೋಗುವ ಹಾಗಿಲ್ಲ. ಆಕೆಯ ತಂದೆಯ ಮನೆಯಲ್ಲಿ ಬಿಡಲು ಈ ಮಗ ಕೇಳುವುದಿಲ್ಲ. ಇದಕ್ಕೇ ಇಷ್ಟು ಕೋಪ ಮಾಡುತ್ತಿದ್ದಾನೆ. ಇನ್ನು ಅಶ್ಫಾಕ್ ವಿಚಾರ ಹೇಳಿದರೆ ಎಷ್ಟು ಕೋಪ ಮಾಡಲಿಕಿಲ್ಲ. ಅವರ ಮನಸ್ಸು ಯೋಚಿಸುತ್ತಲೇ ಇತ್ತು.

ಅಮ್ಮ ಇನ್ನೂ ಯೋಚಿಸುತ್ತಲೇ ಇರುವುದನ್ನು ನೋಡಿದ ಮುಕ್ತಾರ್

” ಅಮ್ಮಾ ಯೋಚಿಸಲು ಸಮಯ ಇಲ್ಲ ಅಮ್ಮಾ… ಬೇಗನೇ ಏನಾದರೂ ಒಂದು ನಿರ್ಧಾರಕ್ಕೆ ಬರುವುದು ಒಳ್ಳೆಯದು” ಎಂದು ಹೇಳಿದನು.

” ಮುಕ್ತಾರ್ ಹೇಗಿದ್ದರೂ ನನ್ನನ್ನು ಮಾಡಿ ಒಂದು ವೇಳೆ ನೀನು ಬಂದರೂ ಬರಬಹುದಲ್ವಾ ? ಅಲ್ಲಿವರೆಗೆ ರುಬೀನಾ ಆಮೀನಾದರ ಮನೆಯಲ್ಲಿ ಕುಳಿತುಕೊಳ್ಳಲಿ. ಅಲ್ಲಿ ಗಂಡಸರು ಅಂತ ಯಾರೂ ಇಲ್ಲ. ಅವರು ಮತ್ತೆ ಅವರ ಹೆಣ್ಣು ಮಕ್ಕಳು ಇದ್ದಾರೆ. ಆಮೀನಾದ ಏನೂ ಬೇಡ ಅನ್ನಲಿಕ್ಕಿಲ್ಲ. ಸರಿಯಾ ಹೇಳು ಎಂದು ಕೇಳಿದಾಗ ಮುಕ್ತಾರ್ ಹಾಗೂ ರುಬೀನಾ ತಮ್ಮ ಒಪ್ಪಿಗೆ ಸೂಚಿಸಿದರು.

ಅದರಂತೆಯೇ ಮುಕ್ತಾರ್ ಹಾಗೂ ನಫೀಸಾದ ಹೊರಡಲು ಅನುವಾದರು. ಹೋಗುವ ಮುಂಚೆ ರುಬೀನಾಳನ್ನು ಕರೆದುಕೊಂಡು ಹೋಗಿ ಆಮೀನಾದರ ಬಳಿ ಮಾಡಿ ಬಂದರು. ಅವರ ಬಳಿ ವಿಷಯವನ್ನು ಎಲ್ಲಾ ವಿವರಿಸಿ ಹೇಳಿದರು. ಆಮೀನಾದ ಖುಷಿಯಿಂದಲೇ ಅದಕ್ಕೆ ಒಪ್ಪಿಗೆ ಸೂಚಿಸಿದರು. ಅದಕ್ಕೇನಂತೆ ನೀವು ನಿಶ್ಚಿಂತೆಯಿಂದ ಹೋಗಿ ಬನ್ನಿ. ಆಕೆ ಇಲ್ಲೇ ಇರಲಿ ಎಂದು ಆರಾಮವಾಗಿ ಹೇಳಿದರು. ಅವರು ಅಷ್ಟು ಹೇಳಿದ ಮೇಲೆ ಮುಗಿಯಿತು ಅಲ್ವಾ ಎಂದು ಮುಕ್ತಾರ್ ಹಾಗೂ ನಫೀಸಾದ ನಿಶ್ಚಿಂತೆಯಿಂದ ಹೊರಡಿದರು. ಅವರು ಹೋದತ್ತಲೇ ನೋಡಿದ ರುಬೀನಾ ಮತ್ತೆ ಒಳನಡೆದಳು. ಆಮೀನಾದರ ಮಕ್ಕಳು ಅವಳ ಗೆಳತಿಯರೇ ಆದುದರಿಂದ ಆಕೆಗೆ ಅಲ್ಲಿ ಕುಳಿತು ಕೊಳ್ಳಲು ಸಂಕೋಚವೆನಿಸಲಿಲ್ಲ.

ಬೈಕಿನಲ್ಲಿ ಹೋಗಬೇಕಾದರೆ ಮುಕ್ತಾರಿಗೆ ಒಮ್ಮೆಲೇ ತನ್ನ ತಾಯಿ ನೌಫಲ್ ಬಂದ ವಿಚಾರ ಹೇಳಿದ್ದು ನೆನಪಾಯಿತು. ಆತ ತಾಯಿಯಲ್ಲೇ ನೇರವಾಗಿ ಕೇಳಿಬಿಟ್ಟನು. ನಫೀಸಾದ ಎಲ್ಲಾ ವಿಚಾರಗಳನ್ನು ಮಗನಲ್ಲಿ ಹೇಳಿಬಿಟ್ಟರು.

” ಅಮ್ಮಾ ಹಲವು ವರ್ಷಗಳ ಹಿಂದೆ ನಾವು ಅಶ್ಫಾಕ್ ಅನ್ನು ನೋಡಿದ್ದು. ಈಗ ನೋಡದೆ ಅದೆಷ್ಟು ವರ್ಷಗಳು ಸಂದವು. ಅಮ್ಮಾ ಆತ ಆಟ ಆಡಿಸುತ್ತಿಲ್ಲ ಎಂದು ನನಗೆ ಅನಿಸುತ್ತದೆ. ಯಾಕೆಂದರೆ ಇಷ್ಟು ವರ್ಷಗಳ ನಂತರವೂ ಆತನಿಗೆ ಈ ಊರಿನಲ್ಲಿ ಇರುವ ಅಷ್ಟೂ ಹುಡುಗಿಯರನ್ನು ಬಿಟ್ಟು ರುಬೀನಾಳ ನೆನಪಿದೆ ಎಂದರೆ ಅದು ನಿಜವಾದ ಪ್ರೀತಿಯೇ ಇರಬೇಕು. ಆತ ರುಬೀನಾಳನ್ನು ಮದುವೆಯಾಗುವ ಬಯಕೆ ಹೊಂದಿದ್ದಾನೆ ಎಂದು ಹಲವು ವರ್ಷಗಳ ಮೊದಲೇ ನನಗೆ ತಿಳಿದಿತ್ತು. ಆದರೆ ಇದರಲ್ಲಿ ಈಗ ಏನೋ ಮೋಸದ ಆಟ ಇದೆ ಎಂದು ನನಗೆ ಅನಿಸುತ್ತದೆ. ಏನಿದ್ದರೂ ನೋಡೋಣ ಬಿಡುವು ಮಾಡಿಕೊಂಡು ನೌಫಲಿಗೆ ನಾನೇ ಕರೆ ಮಾಡುತ್ತೇನೆ ಎಂದು ಹೇಳಿದನು.

ಈಗ ನಫೀಸಾದರ ಮನಸ್ಸಿಗೆ ಒಂದಿಷ್ಟು ಸಮಾಧಾನ ದೊರಕಿತು.

ಆದರೆ ರುಬೀನಾಳ ಮನದಲ್ಲಿ ಇದೇ ವಿಚಾರ ಕೊರೆಯುತ್ತಿತ್ತು. ಒಂದು ಕ್ಷಣಕ್ಕಾದರೂ ಅಶ್ಫಾಕ್ ಯಾಕೆ ಈ ರೀತಿ ಆದ ಎಂಬುದೇ ಆಕೆಯ ಮುಂದಿದ್ದ ದೊಡ್ಡ ಪ್ರಶ್ನೆಯಾಗಿತ್ತು.

ಇತ್ತ ನೌಫಲ್ ಅಶ್ಫಾಕ್ ಹೇಳಿದ ಯೋಜನೆಯಂತೆ ತಕ್ಕ ಸಮಯಕ್ಕಾಗಿ ಕಾಯುತ್ತಿದ್ದನು.


ಮುಕ್ತಾರ್ ಹಾಗೂ ನಫೀಸಾದ ಅಜ್ಜನ ಮನೆ ತಲುಪಿದ್ದೇ ತಡ ಅವರು ಯೋಚಿಸಿದಕ್ಕಿಂತ ಪರಿಸ್ಥಿತಿ ಭಿನ್ನವಾಗಿತ್ತು. ಅವರು ಅದಾಗಲೇ ಅಜ್ಜನನ್ನು ಕರೆದುಕೊಂಡು ಹಾಸ್ಪಿಟಲ್ ಹೋಗಿದ್ದರು. ಇನ್ನು ಏನು ಮಾಡುವುದು ಎಂದು ಪ್ರಶ್ನಾರ್ಥಕವಾಗಿ ನಫೀಸಾದ ಮಗನ ಮುಖ ನೋಡಿದರು.

ಅಮ್ಮನ ನೋಟವನ್ನು ಅರ್ಥೈಸಿದ ಮಗ

” ಅಮ್ಮಾ ಬರಲು ಹೇಗೂ ಬಂದಾಗಿದೆ. ಅಜ್ಜನನ್ನು ನೋಡದೆ ಹೋಗುವುದು ಸರಿಯಲ್ಲ. ಸ್ವಲ್ಪ ಹೊತ್ತು ಇಲ್ಲಿ ನಿಂತು ಕಾಯೋಣ. ಅಷ್ಟರಲ್ಲಿ ನಾನು ರುಬೀನಾಳಿಗೆ ಕರೆ ಮಾಡಿ ತಿಳಿಸುತ್ತೇನೆ ಎಂದನು. ಅದರಂತೆ ಆಮೀನಾದರಿಗೆ ಕರೆ ಮಾಡಿದನು.

ಆಮೀನಾದ ಕರೆ ರಿಸೀವ್ ಮಾಡಿದವರೇ ರುಬೀನಾಳ ಕೈಯಲ್ಲಿ ಫೋನ್ ನೀಡಿದರು. ಮುಕ್ತಾರ್ ಪರಿಸ್ಥಿತಿಯನ್ನು ರುಬೀನಾಳಲ್ಲಿ ವಿವರಿಸಿದವನೇ ಸ್ವಲ್ಪ ಹೊತ್ತು ನೀನು ಆಮೀನಾದರ ಮನೆಯಲ್ಲಿ ನಿಲ್ಲು ಎಂದನು.

“ಪರವಾಗಿಲ್ಲ ಅಣ್ಣಾ.. ನಾನಿಲ್ಲಿ ಚೆನ್ನಾಗಿದ್ದೇನೆ. ನನ್ನ ಬಗ್ಗೆ ನೀವು ಯೋಚನೆ ಮಾಡಬೇಡಿ ” ಎಂದು ರುಬೀನಾ ಭರವಸೆಯ ಮಾತುಗಳನ್ನು ಹೇಳಿದಾಗ ಮುಕ್ತಾರ್ ಮನಸ್ಸಿಗೆ ನೆಮ್ಮದಿಯಾಯಿತು.

” ಒಂದು ವೇಳೆ ಅಜ್ಜನನ್ನು ಅಡ್ಮಿಟ್ ಮಾಡಿದರೆ ನಾನು ನಾಳೆ ಅಲ್ಲಿಗೆ ಬಂದು ನಿನ್ನನ್ನು ಕರೆದುಕೊಂಡು ಹೋಗುತ್ತೇನೆ” ಎಂದು ರುಬೀನಾಳಲ್ಲಿ ಹೇಳಿ ಕರೆ ಕಟ್ ಮಾಡಿದನು.

ಕರೆ ಕಟ್ ಆದ ನಂತರ ರುಬೀನಾ ಆಮೀನಾದರ ಕೈಯಲ್ಲಿ ಮೊಬೈಲ್ ಕೊಟ್ಟಳು.ಮುಕ್ತಾರ್ ಹೇಳಿದ ವಿಚಾರಗಳನ್ನು ಹೇಳಿದಳು. ಆಮೀನಾ ಅವರು ಅಜ್ಜನ ಆರೋಗ್ಯಕ್ಕೆ ಆಗಿ ದುಆ ಮಾಡಿದರು.

ಅಂದಿನ ಸಮಯ ಅದು ಹೇಗೆ ಹೋಯಿತೋ ಗೊತ್ತೇ ಆಗಲಿಲ್ಲ ರುಬೀನಾಳಿಗೆ. ಸಂಜೆ ಹೊತ್ತಿಗೆ ಯಾರೋ ತನ್ನ ಮನೆಯ ಬಾಗಿಲ ಬಳಿ ಬಂದು ತನ್ನ ಅಮ್ಮನ ಹೆಸರು ಎತ್ತಿ ಕರೆಯುವುದು ಕೇಳಿಸಿತು. ಅರೇ ಯಾರಿದು ಈಗ ಬಂದು ತನ್ನ ಅಮ್ಮನ ಹೆಸರನ್ನು ಎತ್ತಿ ಕರೆಯುತ್ತಾ ಇದ್ದಾರೆ ಎಂದು ಮೆಲ್ಲಗೆ ಆಶ್ಚರ್ಯದಿಂದ ಆಮೀನಾದರವರ ಮನೆಯ ಕಿಟಕಿಯಿಂದ ಹೊರಗೆ ಇಣುಕಿ ನೋಡಿದಳು. ಆ ವ್ಯಕ್ತಿಯ ನೋಡಿ ಅವಳಿಗೆ ಮತ್ತೂ ಆಶ್ಚರ್ಯ ಆಯಿತು. ಅರೇ ಯಾವತ್ತೂ ಬಾರದ ಇವರು ಇವತ್ತೇಕೆ ಬಂದಿದ್ದಾರೆ? ಅದೂ ಅಲ್ಲದೆ ಈಗ ಅಮ್ಮ ಕೂಡ ಮನೆಯಲ್ಲಿ ಇಲ್ಲ. ಏನು ಮಾಡಲಿ? ಹೊರಗೆ ಹೋಗಿ ಅಮ್ಮ ಇಲ್ಲ ಎಂದು ಹೇಳಲೇ ? ಅಥವಾ ಕರೆದು ಕರೆದು ಯಾರೂ ಇಲ್ಲ ಎಂದು ತಿಳಿದು ಹಿಂದೆ ಹೋಗುವಾರೆ? ಎಂದೆಲ್ಲಾ ಆಕೆಯ ಮನಸ್ಸು ಯೋಚಿಸುತ್ತಿತ್ತು.

ಬೇಡ ತಿಳಿದೂ….ತಿಳಿದೂ ಸತಾಯಿಸುವುದು ಸರಿಯಲ್ಲ ಎಂದು ಎನಿಸಿದ ರುಬೀನಾ ಮೆಲ್ಲಗೆ ಹೊರಗೆ ಹೋದಳು.

ಹತ್ತಿರ ಹೋದವಳೇ ಮೆಲು ಧ್ವನಿಯಲ್ಲಿ ಅಪ್ಪಾ ಎಂದು ಕರೆದಳು.

ಈಕೆ ಕರೆದ ಧ್ವನಿ ಕೇಳಿ ಆ ವ್ಯಕ್ತಿ ಹಿಂದಿರುಗಿ ಈಕೆಯತ್ತ ನೋಡಿದರು.

” ಎಲ್ಲಿ ನಿನ್ನ ಅಮ್ಮಾ…? ಆಗದಿಂದಲೂ ಕರೆಯುತ್ತಿದ್ದೇನೆ . ಕೇಳಿಸುತ್ತಾ ಇಲ್ವಾ ? ಒಂದು ಮಾತು ಕೂಡ ಆಡುತ್ತಿಲ್ಲ. ಏನು ಇಲ್ಲಿ ಭಿಕ್ಷೆ ಬೇಡಲು ಬಂದು ನಿಂತಿದ್ದೇನೆ ಎಂದು ಎನಿಸಿದ್ದೀರಾ ಹೇಗೆ ? ಅವರು ಗಡುಸಾದ ಧ್ವನಿಯಲ್ಲೇ ಕೇಳಿದರು.

ಮುಕ್ತಾರ್ ಸುಮ್ಮನೆ ಅಲ್ಲ ಇವರನ್ನು ದ್ವೇಷಿಸುವುದು. ಇವರ ಈ ಬುದ್ಧಿಗಾಗಿಯೇ. ಯಾವಾಗಲಾದರೂ ಒಮ್ಮೆ ಸಿಗುವಾಗ ಒಂದು ಪ್ರೀತಿಯಲ್ಲಿ ಎರಡು ಮಾತನಾಡಿದರೆ ಅದೇನಾಗುತ್ತದೆ ಇವರಿಗೆ. ಯಾವುದಕ್ಕೂ ನಮಗೆ ಆ ಭಾಗ್ಯ ಇಲ್ಲ ಎಂದು ಮನಸ್ಸಿನಲ್ಲೇ ಯೋಚಿಸುತ್ತಾ ಇರುತ್ತಾಳೆ.

“ಏನು ಗೊಂಬೆ ಥರ ಹಾಗೇ ನಿಂತಿದ್ದೀಯಾ? ಏನು ಬಾಯಿ ಬರೋದಿಲ್ಲವೇನು ಮಾತನಾಡೋದಿಕ್ಕೆ?” ಎಂಬ ಅವರ ಧ್ವನಿಯು ಆಕೆಯನ್ನು ಯೋಚನಾ ಲಹರಿಯಿಂದ ಹೊರಬರುವಂತೆ ಮಾಡಿತು.

” ಅಮ್ಮ ಇಲ್ಲ. ಅಜ್ಜನಿಗೆ ಉಷಾರಿಲ್ಲ ಎಂದು ವಿಷಯ ತಿಳಿದು ಮುಕ್ತಾರ್ ಹಾಗೂ ಅಮ್ಮ ಊರಿಗೆ ಹೋಗಿದ್ದಾರೆ. ಆದರೆ ಅಜ್ಜನನ್ನು ಹಾಸ್ಪಿಟಲ್ ಕರೆದುಕೊಂಡು ಹೋಗಿದ್ದಾರೆ ಎಂದು ಅಲ್ಲೇ ಉಳಿದುಕೊಂಡಿದ್ದಾರೆ. “

” ಹೋಗುವಾಗ ಒಂದು ಮಾತು ಪತಿಯ ಬಳಿ ಹೇಳಬೇಕು ಎನ್ನೋ ಪ್ರಜ್ಞೆ ಇಲ್ಲಾ ಅವಳಿಗೆ?”

ತನ್ನ ತಂದೆಯ ಪ್ರಶ್ನೆ ಆಕೆಯನ್ನು ಆಶ್ಚರ್ಯಕ್ಕೀಡು ಉಂಟು ಮಾಡಿತು.

ಯಾವುದೇ ಕಷ್ಟ – ಸುಖದಲ್ಲೂ ನಮ್ಮನ್ನು ನೋಡಲು ಬರುವುದಿಲ್ಲ. ಒಂದು ಹೊತ್ತಿನ ತುತ್ತು ತನ್ನ ಹೆಂಡತಿ , ಮಕ್ಕಳು ತಿಂದಿದ್ದಾರ ಎಂದು ನೋಡಲು ಬಾರದ ಇವರು ಈಗ ಹೀಗೆ ಕೇಳುತ್ತಾ ಇದ್ದಾರಲ್ಲ ಎಂದು. ಆದರೂ ಆಕೆ ಏನೂ ಮಾತನಾಡಲಿಲ್ಲ. ಅವರೊಂದಿಗೆ ಮಾತನಾಡಿದರೆ ತನ್ನ ಸಮಯವೇ ವ್ಯರ್ಥ ಎಂದು ಆಕೆಗೆ ತಿಳಿದಿತ್ತು.

“ಸರಿ ನೀನೊಬ್ಬಳೇ ಏನು ಮಾಡುತ್ತೀಯಾ ? ಎಲ್ಲಿ ಕೂರುತ್ತೀಯಾ?”

” ನಾನು ಆಮೀನಾದರ ಮನೆಯಲ್ಲಿ ಇದ್ದೇನೆ. ಇವತ್ತು ರಾತ್ರಿ ಇಲ್ಲೇ ಇರುತ್ತೇನೆ. ನಾಳೆ ಅವರಿಗೆ ಬರಲು ಅಸಾಧ್ಯ ಆದರೆ ಮುಕ್ತಾರ್ ಬಂದು ನನ್ನನ್ನು ಕರೆದುಕೊಂಡು ಹೋಗುವನು.”

” ಏನು ನೀನು ಕಂಡವರ ಮನೆಯಲ್ಲಿ ಉಳಿದುಕೊಳ್ಳುತ್ತೀಯಾ ? ಏನು ನಿನ್ನ ಅಪ್ಪನಾದ ನಾನು ಸತ್ತಿದ್ದೇನೆ ಎಂದುಕೊಂಡಿದ್ದೀಯಾ ಹೇಗೆ?ಕಂಡ ಕಂಡವರ ಮನೆಯಲ್ಲಿ ಉಳಿದುಕೊಳ್ಳಲು ನಾಚಿಕೆ ಆಗೋದಿಲ್ಲವೇ ನಿನಗೆ. ನಡಿ ಮನೆಗೆ ಹೋಗೋಣ “ಎಂದು ಗದರಿಸಿದಂತೆಯೇ ಹೇಳಿದರು.

ತನ್ನ ತಂದೆಯ ಮಾತು ಕೇಳಿ ರುಬೀನಾ ಆಘಾತಕ್ಕೆ ಒಳಗಾದಳು. ಏನು ಇವರ ಮನೆಗೆ ಹೋಗಬೇಕಾ? ಒಳ್ಳೆಯ ಇಕ್ಕಟ್ಟಿಗೆ ಸಿಲುಕಿದೆ ಅಲ್ಲವೇ ಎಂದು ಅವಳ ಮನಸು ಯೋಚಿಸುತ್ತಿತ್ತು.

ಆಮೀನಾದರ ಮನೆಯಲ್ಲಿ ಇದ್ದ ರುಬೀನಾಳಿಗೆ ತನ್ನ ಮನೆಯ ಬಳಿ ಯಾರೋ ಬಂದಂತಾಗುತ್ತದೆ. ಹೊರಗೆ ಹೋಗಿ ನೋಡಿದರೆ ಆಕೆಯ ತಂದೆ. ತನ್ನೊಂದಿಗೆ ಬಾ ಎಂದು ಆಕೆಯೊಂದಿಗೆ ಆಜ್ಞಾಪಿಸಿದರು.

ಬಾ ಹೊರಡು…. ಮನೆಗೆ ಹೋಗೋಣ. ನಿನ್ನ ಅಮ್ಮನ ಅಹಂಕಾರ ನೋಡು. ಆಕೆ ಬೇಕೆಂದೇ ನಿನ್ನನ್ನು ಇಲ್ಲಿ ಬಿಟ್ಟು ಹೋಗಿದ್ದಾಳೆ. ಊರವರು ಏನು ಹೇಳಲಿಕ್ಕಿಲ್ಲ. ತಂದೆ ಅನ್ನುವವನು ಊರಿನಲ್ಲಿ ಇದ್ದಾನೆ. ಯಾರು ಯಾರ ಮನೆಯಲ್ಲಿ ಮದುವೆ ಪ್ರಾಯಕ್ಕೆ ಬಂದ ಹುಡುಗಿಯನ್ನು ಬಿಟ್ಟು ಹೋಗಿದ್ದಾರೆ ಎನ್ನಲಿಕ್ಕಿಲ್ಲವೇ ?ಎನ್ನುವ ತಂದೆಯ ಮಾತು ರುಬೀನಾಳನ್ನು ಆಶ್ಚರ್ಯಕ್ಕೀಡು ಉಂಟು ಮಾಡಿತು.

ತನ್ನ ಹೆಂಡತಿ ಮಕ್ಕಳನ್ನು ಬೀದಿಯಲ್ಲಿ ಬಿಟ್ಟು ಯಾರದೋ ಹಿಂದೆ ಹೋಗುವಾಗ ಊರವರು ಯೋಚಿಸಲಿಲ್ಲವೇ ? ಆಗ ಇರದ ಊರವರ ಚಿಂತೆ ಈಗ ಏಕೆ? ಒಂದು ದಿನವಾದರೂ ತನ್ನ ಮಕ್ಕಳು ಹಸಿವೆಯಿಂದ ಬಳಲುತ್ತಿದ್ದಾರ ಎಂದು ನೋಡಲು ಬಾರದವರಿಗೆ ಈಗ ಈ ಚಿಂತೆ? ಇದೂ ಒಂದು ವಿಚಿತ್ರವೇ ಸರಿ ಎಂದು ಆಕೆಯ ಮನಸ್ಸು ಹತ್ತಾರು ಯೋಚಿಸುತ್ತಿತ್ತು.

” ಏನು ಯೋಚಿಸುತ್ತಾ ಇದ್ದೀಯಾ? ನನ್ನ ಬಳಿ ಅಷ್ಟೊಂದು ಸಮಯ ಇಲ್ಲ. ಹೋಗು ಬೇಗ ಬುರ್ಖಾ ಧರಿಸಿ ಬಾ… ” ಈಗ ಅವರ ಮಾತಿನಲ್ಲಿ ಆಜ್ಞೆ ಇತ್ತು.

” ಇಲ್ಲಾ ಅಪ್ಪಾ… ಮುಕ್ತಾರಿಗೆ ನಾನು ಅಲ್ಲಿ ಬರುವುದು ಸರಿ ಕಾಣಿಸೋದಿಲ್ಲ. ನಾನು ಬರುವುದಿಲ್ಲ. ನಾಳೆ ಬೆಳಿಗ್ಗೆ ಆತ ನನ್ನನ್ನು ಕರೆದುಕೊಂಡು ಹೋಗುತ್ತಾನೆ. ಹಾಗಾಗಿ ಇವತ್ತೊಂದು ದಿವಸ ನಾನು ಇಲ್ಲಿ ಇರುತ್ತೇನೆ.”

ಅಷ್ಟರಲ್ಲಿ ಅವರ ಕಣ್ಣು ಕೋಪದಿಂದ ಕೆಂಡಾಮಂಡಲ ಆಯಿತು.

” ಒಂದು ತಂದೆಯ ಮಾತಿಗೆ ಹೇಗೆ ಬೆಲೆ ಕೊಡಬೇಕು ಎಂದು ನಿನಗೆ ನಿನ್ನ ಅಮ್ಮ ಕಲಿಸಿಲ್ಲವೇ ? ಕಲಿಸುವುದಾದರೂ ಹೇಗೆ? ಸ್ವತಃ ಆಕೆಗೆ ಬುದ್ಧಿ ಇದ್ದರೆ ತಾನೇ ? “

ತನ್ನ ಅಮ್ಮನ ಬಗ್ಗೆ ಆ ರೀತಿ ಹೇಳುವುದನ್ನು ಆಕೆಗೆ ಕೇಳಲಾಗಲಿಲ್ಲ. “ದಯವಿಟ್ಟು ಅಪ್ಪಾ ಇಲ್ಲದ ಮಾತೆಲ್ಲ ನೀವು ಹೇಳಬೇಡಿ. ಅಮ್ಮನ ಬಗ್ಗೆ ಇಲ್ಲಸಲ್ಲದನ್ನು ಹೇಳುವುದು ನನ್ನಿಂದ ಕೇಳಿಸಲು ಆಗುವುದಿಲ್ಲ.ನಿಮಗೇನು ನಾನೀಗ ನಿಮ್ಮ ಮನೆಗೆ ಬರಬೇಕು ತಾನೇ.. ಸರಿ ಬರುತ್ತೇನೆ ನಿಲ್ಲಿ” ಎಂದು ನುಡಿದವಳೇ ಆಮೀನಾದರ ಮನೆಯ ಒಳ ಹೊಕ್ಕಳು.

ಆಮೀನಾದರಿಗೆ ಈಕೆಯ ಬಾಡಿದ ಮುಖ ನೋಡಿ ಏನೋ ವಿಷಯ ಇದೆ ಎಂದೆನಿಸಿತು. ಅವರು ರುಬೀನಾಳಲ್ಲಿ ವಿಷಯ ಕೇಳಿದರು. ರುಬೀನಾ ಅವರಲ್ಲಿ ವಿಷಯ ತಿಳಿಸಿದರು.

ಅವರಿಗೆ ಆಘಾತವಾಯಿತು. ಅರೇ ಹಾಗಾದರೆ ನೀನು ಹೋಗುತ್ತೀಯಾ.. ಮುಕ್ತಾರ್ ಹಾಗೂ ನಿನ್ನಮ್ಮ ನಿನ್ನ ಜವಾಬ್ದಾರಿ ನಮಗೆ ಒಪ್ಪಿಸಿ ಹೋಗಿದಾರಲ್ಲ? ಏನು ಮಾಡುವುದು ಹೇಳು? ಈಗ ನೀನು ಹೋದರೆ ಹೇಗೆ? ಆಮೀನಾದ ಆತಂಕದಿಂದಲೇ ಕೇಳಿದರು.

“ಅರೇ ಆಮೀನಾದ ನೀವು ಆತಂಕ ಪಡಬೇಡಿ. ಅವರ ಬಾಯಿಂದ ನಿಮಗೂ ಬೈಗುಳ ಸಿಗುವುದು ನನಗೆ ಇಷ್ಟ ಇಲ್ಲ.ನನಗೊಂದು ಉಪಕಾರ ಮಾಡುತ್ತೀರಾ ?ಎಂದು ನಯವಾಗಿಯೇ ಆಮಿನಾದರಲ್ಲಿ ರುಬೀನಾ ಕೇಳಿದಳು.

“ಅರೇ ಬಿಡ್ತು ಅನ್ನು. ಉಪಕಾರ ಮಾಡುತ್ತೀರಾ ಎಂದು ಕೇಳುವುದು ಯಾಕೆ? ಮಾಡುತ್ತೇನೆ ಹೇಳು ಏನು?”

ನನಗೆ ನಿಮ್ಮ ಮೊಬೈಲಿನಿಂದ ಮುಕ್ತಾರಿಗೆ ಒಮ್ಮೆ ಕರೆ ಮಾಡಿ ಕೊಡಿ. ನಾನು ಆತನಲ್ಲಿ ಮಾತನಾಡಿ ಹೇಳುತ್ತೇನೆ ವಿಷಯವನ್ನು. ಆತ ಏನಾದರು ಪರಿಹಾರ ಕಂಡು ಹಿಡಿಯುವನು.”

ಈ ರೀತಿ ರುಬೀನಾ ಹೇಳಿದಾಗ ಆಮೀನಾದ ತನ್ನ ಮೊಬೈಲ್ ತೆಗೆದು ಕೊಟ್ಟರು. ಆಕೆ ಮುಕ್ತಾರ್ ನಂಬರಿಗೆ ಡಯಲ್ ಮಾಡತೊಡಗಿದಳು. ಎಷ್ಟೇ ಕರೆ ಮಾಡಿದರೂ ಮುಕ್ತಾರ್ ತೆಗೆಯುತ್ತಲೇ ಇರಲಿಲ್ಲ. ರುಬೀನಾಳ ಹೃದಯ ಬಡಿತ ಜೋರಾಯಿತು.

“ಅರೇ ಮುಕ್ತಾರ್ , ಕಾಲ್ ತೆಗೆಯೋ ಪ್ಲೀಸ್…. ನಾನು ಎಂತಹ ಸಂದಿಗ್ಧ ಸ್ಥಿತಿಯಲ್ಲಿ ಸಿಕ್ಕಿಬಿದ್ದಿದ್ದೇನೆ ಎಂದು ನಿಮಗೆ ತಿಳಿದಿರಲಿಕ್ಕಿಲ್ಲ. ಉಫ್!!! ನಾನೇನು ಮಾಡಲಿ? ಯಾ ಅಲ್ಲಾಹ್… ಇದೆಂಥಾ ಪರೀಕ್ಷೆ ? ನಾನು ಇದರಿಂದ ಪಾರಾಗುವುದಾದರೂ ಹೇಗೆ ? ಎಂದು ಆಕೆ ತನ್ನ ಮನದಲ್ಲಿಯೇ ಯೋಚಿಸುತ್ತಾ ಇದ್ದಳು.

” ಏನು ಮಾಡುತ್ತಾ ಇದ್ದೀಯಾ ? ಹೊರಡಲಿಲ್ಲವೇ ನೀನು? ಎಷ್ಟು ಹೊತ್ತು ಕಾಯಲಿ ನಾನಿಲ್ಲಿ? ನನ್ನಲ್ಲಿ ಅಷ್ಟು ಸಮಯ ಇಲ್ಲ. ಬೇಗ ಬಾ ” ಎಂದು ತನ್ನ ತಂದೆಯ ಮಾತು ಕೇಳಿ ಬಂದಾಗ ಆಕೆ ಇನ್ನು ತನಗಾವುದೇ ದಾರಿ ಇಲ್ಲ ಎಂದು ತಿಳಿದು ತನ್ನ ತಂದೆಯ ಜೊತೆ ಹೋಗಲು ಹೊರಗೆ ಹೆಜ್ಜೆ ಹಾಕಿದಳು.

ಮುಕ್ತಾರಿಗೆ ಅದೆಷ್ಟು ಕರೆ ಮಾಡಿದರೂ ಆತ ಸ್ವೀಕರಿಸುತ್ತಾ ಇರಲಿಲ್ಲ. ಇನ್ನು ತನಗೆ ಬೇರೆ ವಿಧಿಯೇ ಇಲ್ಲ ಎಂದು ತಿಳಿದ ರುಬೀನಾ ತನ್ನ ತಂದೆಯೊಂದಿಗೆ ಹೊರಡಲು ಸಿದ್ದಳಾಗುತ್ತಾಳೆ.
ಯಾಕೋ ತಿಳಿಯದೆ ಆಕೆಯ ಕಣ್ಣುಗಳಿಂದ ಅಶ್ರುಧಾರೆ ಇಳಿಯುತ್ತಿತ್ತು.
ಆಮೀನಾದರಿಗೆ ಹಾಗೂ ಅವರ ಮಕ್ಕಳಿಗೆ ಆಕೆಯನ್ನು ನೋಡಿ ಅತೀವ ದುಃಖವಾಯಿತು. ಆದರೆ ಏನೂ ಮಾಡುವ ಪರಿಸ್ಥಿತಿ ಅವರದಾಗಿರಲಿಲ್ಲ.

ನಾನು ತಂದೆಯೊಂದಿಗೆ ಹೋಗುತ್ತೇನೆ. ದಯವಿಟ್ಟು ಮುಕ್ತಾರ್ ಕರೆ ಮಾಡಿದರೆ ವಿಷಯ ತಿಳಿಸಿ. ನನಗೆ ಅಲ್ಲಿಂದ ಕರೆ ಮಾಡಲು ಸಾಧ್ಯವಾಗುತ್ತದೋ ಇಲ್ಲವೋ ಅದೇ ಚಿಂತೆ. ಸರಿ ಏನಾದರೂ ಆಗಲಿ ಇವತ್ತೊಂದು ರಾತ್ರಿ ಹೇಗಾದರೂ ಕಳೆದು ಬಿಡುತ್ತೇನೆ. ಸರಿ ಬರುತ್ತೇನೆ ಎಂದು ಹೇಳಿ ಅವರ ಮನೆಯಿಂದ ಹೊರಗೆ ಹೋದಳು.
ಆಕೆ ಕಣ್ಣಿನಿಂದ ಮರೆಯಾಗುವ ತನಕ ಆಮೀನಾದ ಹಾಗೂ ಮಕ್ಕಳು ನೋಡಿದರು. ಮತ್ತೆ ಒಳಗೆ ಬಂದರು.

ಅಷ್ಟರಲ್ಲಿ ಅವರ ಕಣ್ಣಿಗೆ ಅವರ ಮೊಬೈಲ್ ಕಾಣಿಸಿತು. ತನ್ನ ಮಕ್ಕಳೊಂದಿಗೆ ಮತ್ತೊಮ್ಮೆ ಮುಕ್ತಾರ್ ನಂಬರ್ ಒತ್ತಿ ಕೊಡುವಂತೆ ಹೇಳಿದರು.
ಅವರ ಮಕ್ಕಳು ಅವರು ಹೇಳಿದಂತೆ ಮುಕ್ತಾರ್ ನಂಬರ್ ಒತ್ತಿ ಕೊಟ್ಟರು.
ತುಂಬಾ ಹೊತ್ತು ಫೋನ್ ರಿಂಗ್ ಆದ ನಂತರ ಆ ಕಡೆಯಿಂದ ಕರೆ ಸ್ವೀಕರಿಸುವುದು ಕೇಳಿತು. ಆಮೀನಾದ ತಕ್ಷಣ ಆ ಧ್ವನಿ ನಫೀಸಾದರೆಂದು ಪತ್ತೆ ಹಚ್ಚಿದರು.

ಸಲಾಂ ಹೇಳುತ್ತಾ ಆಮೀನಾದ ಮಾತನಾಡಲು ಪ್ರಾರಂಭಿಸಿದರು.
” ಅಲ್ಲಾ ನಫೀಸಾ…. ಆಗದಿಂದ ಮುಕ್ತಾರಿಗೆ ಕರೆ ಮಾಡುತ್ತಾ ಇದ್ದೇವೆ. ಯಾಕೆ ಮುಕ್ತಾರ್ ಕರೆ ಸ್ವೀಕರಿಸುತ್ತಾ ಇಲ್ಲ. ಆ ಹುಡುಗಿ ನೋಡಿ ,ನೋಡಿ ಕೊನೆಗೆ ಹೋದಳು.”
” ಮುಕ್ತಾರ್ ಇಲ್ಲ ಆಮೀನಾ… ಅವನು ಅವನ ಮಾವನ ಜೊತೆ ನನ್ನ ತಂದೆಯೊಡನೆ ನಿಲ್ಲಲೆಂದು ಹಾಸ್ಪಿಟಲ್ ಹೋಗಿದ್ದಾನೆ. ಹೋಗುವಾಗ ಮರೆತು ಮೊಬೈಲ್ ಬಿಟ್ಟು ಹೋಗಿದ್ದಾನೆ. ಏನು ವಿಷಯ ? ಏನಾಯಿತು? ” ಆತಂಕದಿಂದಲೇ ಕೇಳಿದರು ನಫೀಸಾದ.

” ಏನಿಲ್ಲ ನಫೀಸಾ…. ನಿನ್ನ ಗಂಡ ನಿಮ್ಮ ಮನೆಯ ಹತ್ತಿರ ಬಂದಿದ್ದರು. ನೀನು ಇಲ್ಲದ್ದನ್ನು ನೋಡಿ ರುಬೀನಾಳನ್ನು ಅವರ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಆಕೆಗೆ ಹೋಗಲೇ ಮನಸ್ಸಿರಲಿಲ್ಲ. ಆದರೆ ನಿನ್ನ ಗಂಡ ಬಲವಂತವಾಗಿ ಆಕೆಯನ್ನು ಕರೆದುಕೊಂಡು ಹೋದರು. “
ಆಮೀನರ ಮಾತು ಕೇಳಿ ಆಕಾಶವೇ ಕಳಚಿ ಬಿದ್ದಂತಾಯಿತು ನಫೀಸಾದರಿಗೆ.
” ಅಯ್ಯೋ ಏನು ಹೇಳುತ್ತಾ ಇದ್ದೀಯಾ ? ಒಂದು ವೇಳೆ ಮುಕ್ತಾರಿಗೆ ಈ ವಿಷಯ ತಿಳಿದರೆ ಆತ ದೊಡ್ಡ ಗಲಾಟೆಯೇ ಮಾಡಬಹುದು. ಯಾ ಅಲ್ಲಾಹ್!!!!!! ನಾನೇನು ಮಾಡಲಿ ಈಗ? ಒಂದು ವೇಳೆ ನಾಳೆ ಆತ ಅಲ್ಲಿಗೆ ಬಂದರೂ ಬರಬಹುದು. ಎಂತಹ ಪರಿಸ್ಥಿತಿ ಇದು.”

ಅವರ ಮಾತಿನಲ್ಲಿ ಇದ್ದ ಆತಂಕ ಗಮನಿಸಿದ ಆಮೀನಾದರಿಗೆ ದುಃಖ ಆಯಿತು.
ಅವಳು ಹೇಳೋಣ ಎಂದು ಅದೆಷ್ಟು ಕರೆ ಮಾಡಿದರೂ ನೀವು ರಿಸೀವ್ ಮಾಡಿಲ್ಲ ನಫೀಸಾ. ಹಾಗಾಗಿ ಆಕೆ ಹಾಗೆಯೇ ಹೋದಳು. ಇರಲಿ ಬಿಡಿ ನಫೀಸಾ … ಒಂದು ದಿನದ ವಿಷಯ ತಾನೇ … ನಾಳೆ ಮುಕ್ತಾರ್ ಬಂದರೆ ಹೇಗೂ ವಿಷಯ ತಿಳಿಯುತ್ತದೆ . ಅಲ್ಲಿಂದ ಕರೆದುಕೊಂಡು ಬಂದರಾಯಿತು. ಆಕೆ ಅವಳಾಗಿಯೇ ಹೋದದ್ದು ಅಲ್ಲ ಅಲ್ವಾ ಎಂದು ಆಮೀನಾ ನಫೀಸಾದರನ್ನು ಸಮಾಧಾನ ಪಡಿಸಿದರು.

” ಅರೇ ಆಮೀನಾ… ನನ್ನ ಚಿಂತೆ ಅದಲ್ಲ. ಆಕೆಯ ತಂದೆ ಜೊತೆ ಇದ್ದರೆ ನನಗೇನು ಅಭ್ಯಂತರ ಹೇಳಿ? ಆದರೆ ಅವರ ಪತ್ನಿಗೆ ನಮ್ಮನ್ನು ಕಂಡರೆ ಆಗಲ್ಲ. ಆದಷ್ಟು ಆಕೆ ಅವರನ್ನು ನಮ್ಮಿಂದ ದೂರ ಮಾಡಿಸುವುದು ತಿಳಿದೇ ಇದೆ. ಅದಲ್ಲದೆ ಆಕೆಯ ತಮ್ಮನೊಬ್ಬ ಕೆಲವೊಮ್ಮೆ ಆಕೆಯ ಮನೆಗೆ ಬರುತ್ತಾನಂತೆ. ಆತನ ವ್ಯಕ್ತಿತ್ವ ಸರಿ ಇಲ್ಲ. ಆತನು ಅಲ್ಲಾಹನನ್ನು ಮರೆತು ದಿನ ಕಳೆಯುತ್ತಾನೆ. ಆತನಿಗೆ ಇಲ್ಲದ ದುಶ್ಚಟಗಳು ಇಲ್ಲ ಎಂದು ಮುಕ್ತಾರ್ ಹೇಳಿದ ನೆನಪು. ಹಾಗಾಗಿ ನನಗೆ ಭಯ ಆಗುತ್ತಿದೆ ಎಂದು ನಫೀಸಾದ ಹೇಳಿದಾಗ ಆಮೀನಾದರಿಗೆ ಅಯ್ಯೋ ಪಾಪ ಎಂದು ಎನಿಸಿತು. ಆದರೂ ಏನಾಗಲಿಕಿಲ್ಲ ಎಂದು ಅವರಿಗೆ ಭರವಸೆಯ ಮಾತುಗಳನ್ನು ಹೇಳಿ ಸಮಾಧಾನ ಮಾಡಿ ಕರೆ ಕಟ್ ಮಾಡಿದರು.
ನಫೀಸಾದರಿಗೆ ತನ್ನ ಮಗಳದೇ ಯೋಚನೆ ಆಗಿತ್ತು. ಅಯ್ಯೋ ದೇವರೇ ನನ್ನ ಮಗಳು ಅಲ್ಲಿ ಕ್ಷೇಮವಾಗಿ ಇರಲಿ ಎಂದು ಮನದಲ್ಲಿಯೇ ಲೋಕದ ಅಧಿಪತಿಯೊಂದಿಗೆ ಬೇಡಿಕೊಂಡರು.

ಒಂದೇ ಸಮನೆ ರಿಂಗ್ ಆಗುತ್ತಿದುದನ್ನು ನೋಡಿದ ನೌಫಲ್ ತನ್ನ ಮೊಬೈಲ್ ರಿಸೀವ್ ಮಾಡಿದನು.
ಆ ಕಡೆಯಿಂದ ಅಶ್ಫಾಕ್ ಧ್ವನಿ ಕೇಳಿಸಿತು.
” ನೌಫಲ್ ನಾನು ಮೊನ್ನೆ ನಿನ್ನೊಂದಿಗೆ ಹೇಳಿದ ಆ ಯೋಜನೆ ನೆನಪಿದೆ ತಾನೇ… ಆಕೆ ಇಂದು ಇಲ್ಲಿಗೆ ಬಂದಿದ್ದಾಳೆ. ನೀನು ನಾಳೆ ಬೆಳಿಗ್ಗೆ ರುಬೀನಾಳ ಮನೆಗೆ ಹೋಗಬೇಕು. ಹೋದ ನಂತರ ನಾನು ಆಕೆಯಿಂದಲೇ ಅವರಿಗೆ ಕರೆ ಮಾಡಿಸಿ ನಿಜ ವೃತ್ತಾಂತ ತಿಳಿಸುತ್ತೇನೆ ಸರಿಯಾ? ಆದರೆ ನೀನು ನಾನು ಹೇಳಿದ ಸಮಯಕ್ಕೆ ಸರಿಯಾಗಿ ಹೋಗಬೇಕು ಸರೀನಾ? ” ಎಂದು ಕೇಳಿದಾಗ ನೌಫಲ್ ಸರಿ ಎಂದು ಹೇಳಿ ಕರೆ ಕಟ್ ಮಾಡಿದನು.
ಇತ್ತ ಅಶ್ಫಾಕ್ ತನ್ನ ಮನದಲ್ಲಿಯೇ ರುಬೀನಾ ನೀನು ಸಣ್ಣವಳಿರುವಾಗ ನಾನು ನಿನ್ನನ್ನು ನೋಡಿದ್ದು. ಈಗ ನೀನು ಹೇಗಿದ್ದೀಯೋ ನಾನರಿಯೆ… ಇನ್ನು ಸಮಯ ಕಳೆಯಲು ಬಿಡಬಾರದು . ಆದಷ್ಟು ಬೇಗ ಮದುವೆಯಾಗಬೇಕು…. ಎಂದು ಯೋಚಿಸುತ್ತಲೇ ಇದ್ದನು…

ತನ್ನ ಮನೆಯ ಕರೆಗಂಟೆ ಬಾರಿಸುತ್ತಿದ್ದನ್ನು ಕೇಳಿದ ಆಬಿದ ಒಳಗೆ ಕೆಲಸದಲ್ಲಿ ಇದ್ದವಳು ನಗುಮುಖದಿಂದಲೇ ಬಾಗಿಲು ತೆರೆಯಲು ಬಂದಳು.

ಆದರೆ ಬಾಗಿಲು ತೆರೆದವಳಿಗೆ ಆಶ್ಚರ್ಯ ಕಾದಿತ್ತು. ತನ್ನ ಪತಿಯ ಜೊತೆ ಅವರ ಮಗಳು ಕೂಡ ಬಂದಿರುವುದು ಅವರಿಗೆ ಇಷ್ಟ ಆಗಲಿಲ್ಲ.

ಆದರೆ ಏನೂ ಮಾತನಾಡದೆ ಒಳಗೆ ನಡೆದಳು.

" ಅರೇ ಆಬಿದ ಇಲ್ಲಿ ನೋಡು ನನ್ನ ಮಗಳು ಬಂದಿದ್ದಾಳೆ. ಆಕೆಗೆ ಏನಾದರೂ ಕುಡಿಯಲು ಮಾಡಿಕೊಂಡು ಬಾ " ಎಂದು ಹಸನ್ ತನ್ನ ಪತ್ನಿ ಆಬಿದಾಳಲ್ಲಿ ಹೇಳಿದರು.

"ಕರೆದುಕೊಂಡು ಬಂದವಳು ಯಾರು ನಾನಾ? ಅಲ್ಲ ನಾನೇನಾದರೂ ಕರೆದುಕೊಂಡು ಬರಲು ಹೇಳಿದೆನಾ? ಇಲ್ಲ ತಾನೇ .... ಹಾಗಿದ್ದ ಮೇಲೆ ನೀವೇ ಕುಡಿಯಲು ಮಾಡಿ ಕೊಡಿ" ಎಂದು ಆಕೆ ಸಿಟ್ಟಿನಿಂದ ಪ್ರತ್ಯುತ್ತರ ನೀಡಿದಳು.

" ಏನೇ ಹಾಗೇ ಹೇಳುತ್ತಾ ಇದ್ದೀಯಾ ? ಬಂದ ನೆಂಟರ ಮುಂದೆ ಹಾಗೆಯಾ ಮಾತನಾಡುವುದು? "

" ಏನು ನೆಂಟರು? ಯಾರು ನೆಂಟರು? ಮನೆ ಕೆಲಸಕ್ಕೆ ಜನ ಬಂದಿದ್ದರೆ ಅವರಿಗಾದರೂ ಮಾಡಿ ಕೊಡುತ್ತಿದ್ದೆ. ಆದರೆ ಈ ಬಿಕನಾಸಿಗಳಿಗೆ ಮಾಡಿ ಕೊಡುವುದಿಲ್ಲ. ಕರೆದುಕೊಂಡು ಬಂದ ಕರ್ಮಕ್ಕೆ ಇವತ್ತೊಂದು ದಿನ ಇಲ್ಲಿರಲಿ. ನಾಳೆ ಎಲ್ಲಿಂದ ಕರೆದುಕೊಂಡು ಬಂದಿದ್ದೀರೋ ಅಲ್ಲಿಗೆ ಮಾಡಿ ಬನ್ನಿ ಸರೀನಾ...." 

ರುಬೀನಾಳಿಗೆ ಅವರ ಮಾತು ಕೇಳಿ ಒಂದು ರೀತಿ ಆಯಿತು. ಮೊದಲೇ ಆಕೆಗೆ ಬರಲು ಮನಸ್ಸಿರಲಿಲ್ಲ. ಹೇಗೂ ಬಂದಿದ್ದು ಆಯಿತು. ಬಂದ ನಂತರ ಈ ಎಲ್ಲಾ ಮಾತುಗಳನ್ನು ಕೇಳಬೇಕಲ್ವಾ? ಆಕೆಗೆ ಏನೋ ಒಂದು ಮನಸಿಗೆ ಅಸಮಾಧಾನ ಆಯಿತು. ಆದರೆ ಏನೊಂದೂ ಹೇಳಲು ಆಕೆಗೆ ಗೊತ್ತಿರಲಿಲ್ಲ.

ಹಸನ್ ತಾವೇ ಅಡುಗೆ ಕೋಣೆಗೆ ಹೋಗಿ ಮಗಳಿಗೆ ಶರ್ಬತ್ ಮಾಡಿ ತಂದು ಕೊಟ್ಟರು. ಅವರ ಪತ್ನಿ ಇನ್ನೂ ಕೂಡ ಉರಿಗಣ್ಣಿನಿಂದಲೇ ಆಕೆಯನ್ನು ನೋಡುತ್ತಿದ್ದಳು. ಅವರ ಆ ನೋಟಕ್ಕೆ ಆಕೆಗೆ ಆ ಶರ್ಬತ್ ಕುಡಿಯಲೇ ಮನಸು ಬರಲಿಲ್ಲ. 

ಒಲ್ಲದ ಮನಸ್ಸಿನಿಂದ ಅದನ್ನು ತನ್ನ ತಂದೆಗೆ ಹಿಂದಿರುಗಿಸಿದಳು. ಅಲ್ಲಿ ಇದ್ದ ಪ್ರತಿ ಒಂದು ನಿಮಿಷ ಆಕೆಗೆ ಒಂದೊಂದು ಗಂಟೆಯ ರೀತಿ ಓಡುತ್ತಿತ್ತು. ಸ್ವಲ್ಪ ಹೊತ್ತಿನ ನಂತರ ಏನೋ ಯೋಚಿಸಿದವಳೇ ತನ್ನ ತಂದೆಯ ಬಳಿ ಮೊಬೈಲ್ ಕೇಳಿದಳು.

ಏನೋ ಏನೊಂದೂ ಮಾತನಾಡದೆ ಅವರು ಆಕೆಗೆ ತನ್ನ ಮೊಬೈಲ್ ಕೊಟ್ಟರು. ತಕ್ಷಣ ಆಕೆ ಮುಕ್ತಾರ್ ನಂಬರಿಗೆ ಕರೆ ಮಾಡಿದಳು. ಆ ಕಡೆಯಿಂದ ನಫೀಸಾದರ ಧ್ವನಿ ಕೇಳಿಸಿತು. ಆಕೆಗೆ ಧ್ವನಿಯೇ ಬರಲಿಲ್ಲ. ಆಕೆಗೆ ಅಳುವೇ ಬಂದು ಬಿಟ್ಟಿತು.ತಕ್ಷಣವೇ ತನ್ನ ಮಗಳ ಕರೆ ಎಂದು ಅವರು ಅರ್ಥೈಸಿದರು. "ಅರೇ ಯಾಕೆ ಅಳುತ್ತಾ ಇದ್ದೀಯಾ ಮಗಳೇ ? ಅಲ್ಲೇನಾದರೂ ಕಷ್ಟ ಇದೆಯಾ ? ಏನಾಯಿತು ಮಗಳೇ? " ಎಂದು ನಫೀಸಾದ ನೊಂದ ಧ್ವನಿಯಲ್ಲಿ ಕೇಳಿದರು.

ಅಮ್ಮನ ಮನಸ್ಸಿಗೆ ನೋವು ಕೊಡುವುದು ಬೇಡ ಎಂದು ಎನಿಸಿದ ರುಬೀನಾ " ಇಲ್ಲ ಅಮ್ಮಾ... ನನಗೇನು ಇಲ್ಲಿ ತೊಂದರೆ ಇಲ್ಲ. ನಾನು ಕ್ಷೇಮವಾಗಿ ಇದ್ದೇನೆ. ಯಾಕೋ ನಿಮ್ಮ ಧ್ವನಿ ಕೇಳಿ ಅಳು ಬಂತು ಅಷ್ಟೇ" ಎಂದು ಕಣ್ಣು ಒರೆಸಿಕೊಂಡಳು.

ನಂತರ ತನ್ನ ಮಾತು ಮುಂದುವರೆಸುತ್ತಾ " ಅಮ್ಮಾ ಮುಕ್ತಾರ್ ಎಲ್ಲಿ ? ಎಂದು ಕೇಳಿದಳು.

" ಮುಕ್ತಾರ್ ತಾತನ ಜೊತೆ ಆಸ್ಪತ್ರೆಗೆ ಹೋಗಿದ್ದಾನೆ. ಹೋಗಬೇಕಾದರೆ ಈ ಮೊಬೈಲ್ ಮರೆತು ಹೋಗಿದ್ದಾನೆ. ನಾಳೆ ಬಂದರೆ ಒಂದೋ ನಾವು ಬರುತ್ತೇವೆ. ಇಲ್ಲದಿದ್ದರೆ ಆತನನ್ನು ಕಳುಹಿಸುತ್ತೇನೆ ಸರಿಯಾ ಎಂದು ಹೇಳಿದರು.

" ಹ್ಞಾಂ ಸರಿ ಅಮ್ಮ"

" ರುಬೀನಾ ಅಲ್ಲಿ ಈಗ ಯಾರು ಯಾರು ಇದ್ದಾರೆ? ಮಗಳೊಂದಿಗೆ ಕೇಳಿದರು ನಫೀಸಾದ.

" ಯಾರೂ ಇಲ್ಲಮ್ಮ... ತಂದೆ ಹಾಗೂ ಚಿಕ್ಕಮ್ಮ ಇದ್ದಾರೆ ಅಷ್ಟೇ. ಮಕ್ಕಳನ್ನು ಕಾಣಿಸುತ್ತಾ ಇಲ್ಲ. ಒಂದೋ ಮದ್ರಸಾಕ್ಕೆ ಹೋಗಿರಬೇಕು." 

ಮಗಳ ಮಾತು ಕೇಳಿ ನಫೀಸಾದರಿಗೆ ಸಮಾಧಾನ ಆಯಿತು.

ಅಂದರೆ ಆಕೆಯ ತಮ್ಮ ಮನೆಯಲ್ಲಿ ಇಲ್ಲ ಅಲ್ವಾ...ಒಂದು ಆತಂಕ ಕಡಿಮೆ ಆಯಿತು. ಇನ್ನು ಆಕೆಯನ್ನು ನಾಳೆ ಕರೆದುಕೊಂಡು ಬರಲು ಮುಕ್ತಾರ್ ಬಳಿ ಹೇಳಬೇಕು ಎಂದು ಮನಸ್ಸಿನಲ್ಲೇ ಯೋಚಿಸಿದರು.

ಸರಿ, ಜಾಗ್ರತೆ ಮಾಡಿಕೊಳ್ಳು ಎಂದು ಹೇಳುತ್ತಾ ಕರೆ ಕಟ್ ಮಾಡಿದರು. ಕರೆ ಕಟ್ ಆದ ಕೂಡಲೇ ರುಬೀನಾ ಮೊಬೈಲ್ ಅಲ್ಲಿದ್ದ ನಂಬರ್ ಡಿಲೀಟ್ ಮಾಡಿ ತಂದೆಗೆ ಹೋಗಿ ಕೊಟ್ಟು ಬಿಟ್ಟಳು. ಆ ಮನೆಯೊಳಗೆ ಎಲ್ಲಿ ಹೋಗಬೇಕು ಎಂದು ತೋಚದೆ ಸೋಫಾದ ಒಂದು ಮೂಲೆಯಲ್ಲಿ ಕುಳಿತುಕೊಂಡಳು. ಆಕೆಯ ತಂದೆ ಅದಾಗಲೇ ಸ್ನಾನ ಮಾಡಲು ಎಂದು ಒಳಗೆ ಸ್ನಾನದ ಕೊಠಡಿಗೆ ಹೋಗಿದ್ದರು.

ಅಷ್ಟರಲ್ಲಿ ಕರೆಗಂಟೆ ಬಾರಿಸತೊಡಗಿತು.

ತನಗೆ ಯಾಕೆ ಬಾಗಿಲು ತೆಗೆಯುವ ಕೆಲಸ? ತನ್ನ ಚಿಕ್ಕಮ್ಮ ತೆಗೆಯುವರು ಎಂದು ರುಬೀನಾ ಸುಮ್ಮನಾಗಿದ್ದಳು. ಅಷ್ಟರಲ್ಲಿ ಒಳಗಿಂದ ಜೋರಾಗಿ ಬೈಯ್ಯುವುದು ಆಕೆಗೆ ಕೇಳಿಸಿತು.

" ಅರೇ ಏನು ದೊಡ್ಡ ಮಹಾರಾಣಿ ರೀತಿ ಕೂತಿದ್ದೀಯಾ ? ಒಂದು ಬಾಗಿಲ ಬೆಲ್ ಬಾರಿಸುವುದು ನಿನ್ನ ಕಿವಿಗೆ ಕೇಳಿಸುದಿಲ್ಲವೇ ? ನಾನಿಲ್ಲಿ ಕೆಲಸದಲ್ಲಿ ಇರುವುದು ನಿನ್ನ ಕಣ್ಣಿಗೆ ಕಾಣಿಸೋದಿಲ್ವ? ಹೋಗು ಬಾಗಿಲು ತೆರೆ ಹೋಗು.. ಎಂಬ ಆಜ್ಞೆಯ ಧ್ವನಿಯು ಆಕೆಗೆ ಕೇಳಿಸಿತು.

ಅವರ ಮಾತಿಗೆ ಏನೊಂದೂ ಪ್ರತ್ಯುತ್ತರ ನೀಡದೆ ರುಬೀನಾ ಬಾಗಿಲು ತೆರೆಯಲು ಹೋದಳು. ಬಾಗಿಲು ತೆರೆದವಳೇ ಯಾರೋ ಅಪರಿಚಿತ ಹುಡುಗ ನಿಂತಿರುವುದು ನೋಡಿ ಅವಕ್ಕಾದಳು.

ರುಬೀನಾ ತನ್ನ ತಂದೆಯ ಮನೆಯಲ್ಲಿ ಇದ್ದಳು. ಅಷ್ಟರಲ್ಲಿ ಯಾರೋ ಮನೆಯ ಕದವನ್ನು ತಟ್ಟಿದರು. ತನ್ನ ಚಿಕ್ಕಮ್ಮನ ಮಾತು ಕೇಳಿ ಕದ ತೆರೆಯಲು ಹೋದ ಆಕೆ ಅಪರಿಚಿತ ವ್ಯಕ್ತಿಯ ಮುಖ ಕಂಡು ಅವಕ್ಕಾದಳು.

ಆತ ಈಕೆಯನ್ನೇ ನುಂಗುವವರ ರೀತಿಯಲ್ಲಿ ದಿಟ್ಟಿಸುತ್ತಾ ಇರುವುದನ್ನು ನೋಡಿದ  ರುಬೀನಾ ಸೀದಾ ಒಳಗೆ ನಡೆದಳು.

ಅರೇ ಇದು ಯಾರು ದಂತದ ಗೊಂಬೆ ನಮ್ಮ ಮನೆಯಲ್ಲಿ? ಇದುವರೆಗೂ ಇಷ್ಟೊಂದು  ಸುಂದರಿಯನ್ನು ನೋಡಿಯೇ ಇಲ್ಲ. ಒಳ್ಳೆಯ ದಿವಸ ನಾನು ಈ ಮನೆಗೆ ಬಂದಿದ್ದೇನೆ. ಯಾವುದಕ್ಕೂ ಮೊದಲು ಅಕ್ಕನ ಬಳಿ ಆಕೆ ಯಾರು ಎಂದು ವಿಚಾರಿಸೋಣ ಎಂದು ಆಲೋಚಿಸಿದವನೇ  ಹಕೀಮ್ ನೇರವಾಗಿ ಆಬಿದಾ ಎಂದು ಕರೆಯುತ್ತಾ ಅಡಿಗೆ ಮನೆಯತ್ತ ಹೆಜ್ಜೆ ಹಾಕಿದನು.

" ಅರೇ ಹಕೀಮ್ ನೀನಾ ಬಂದಿದ್ದು ? ಸ್ವಲ್ಪ ಕೆಲಸ ಇತ್ತು. ಹಾಗೆ ನಾನು ಹೊರಗೆ ಬಂದಿಲ್ಲ" ಎಂದು ಆಬಿದಾ ತಮ್ಮನೊಡನೆ ಹೇಳಿದಳು.

ತಾನು ತಂದ ದೊಡ್ಡ ತಿಂಡಿಯ ಕಟ್ಟನ್ನು ಆಬಿದಾಳ ಕೈಗೆ ಕೊಟ್ಟು " ಯಾರದು ಆ ಹುಡುಗಿ? ಇದುವರೆಗೂ ನಾನು ಕಂಡೇ ಇಲ್ಲ!! ಎಂದು ಕೇಳಿದನು.

" ಅದೂ ನಿನ್ನ ಭಾವನ ಮೊದಲ ಪತ್ನಿ ಇಲ್ಲವೇ? ಅವರ ಮಗಳು. ಅವರು ಯಾರೂ ಮನೆಯಲ್ಲಿ ಇಲ್ಲಾ ಅಂತೆ ಅದಕ್ಕೆ ಇಲ್ಲಿಗೆ ಒಂದು ದಿನದ ಮಟ್ಟಿಗೆ ಕರೆದುಕೊಂಡು ಬಂದಿದ್ದಾರೆ.  ನನಗೆ ಸಿಟ್ಟು ಬಂತು. ಅವರು ಏನಾದರೂ ಮಾಡುತ್ತಾರೆ. ಹೋಗುವಾಗ ಏನು ಇವರಲ್ಲಿ ಕೇಳಿ ಹೋದರೆ ?ಮತ್ಯಾಕೆ ಇವರಿಗೆ ಅವರನ್ನು ಇಲ್ಲಿ ಕರೆದುಕೊಂಡು ಬರುವ ಉಸಾಬರಿ ? ಎಂದು ಆಬಿದ ಸಿಟ್ಟಿನಲ್ಲಿಯೇ ಹೇಳಿದಳು.

ಹ್ಞೂಂ ಎಂದಷ್ಟೇ ಪಿಸುಗುಟ್ಟಿದ ಹಕೀಮ್.

ಆದರೆ ಮನಸ್ಸಿನಲ್ಲಿ ಆತನಿಗೆ ತುಂಬಾ ಖುಷಿ ಆಗುತ್ತಿತ್ತು. ಆಕೆಯನ್ನು ಭಾವ ಇಲ್ಲಿಗೆ ಕರೆದುಕೊಂಡು ಬಂದಿದ್ದು ಒಳ್ಳೆಯದೇ ಆಯಿತು. ಅಷ್ಟೊಂದು ಚಂದದ ಗೊಂಬೆಯನ್ನು ನೋಡುವ ಭಾಗ್ಯವಾದರೂ ನನಗೆ ಸಿಕ್ಕಿತ್ತಲ್ವಾ? ಹೇಗಾದರೂ ಮಾಡಿ ಅವಳನ್ನು ನನ್ನ ವಶ ಮಾಡಿಕೊಳ್ಳಬೇಕು. ಹೇಗೆ ? ಎಲ್ಲಿರುವಳು ಆಕೆ  ಈಗ? ಯಾಲ ಕೋಣೆಯಲ್ಲಿ ಇದ್ದಾಳೆ? ಬರುವುದು ಕೂಡ ಇಲ್ಲ ಎಂದೆಲ್ಲಾ ಯೋಚಿಸುತ್ತಾ ಇದ್ದನು.

ಅಷ್ಟರಲ್ಲಿ  ಹಸನ್ ಸ್ನಾನ ಮಾಡಿ ಹೊರಬಂದರು. ಹಕೀಮ್ ಕಂಡವರೇ ಆತನನ್ನು ಮಾತನಾಡಿಸುತ್ತಾ ಕುಳಿತರು. ಹಕೀಮ್ ಅವರೊಂದಿಗೆ ಮಾತನಾಡುತ್ತಾ ಇದ್ಧರೂ ಕೂಡ ಆತನ ಮನಸ್ಸೆಲ್ಲಾ ರುಬೀನಾಳೆ ತುಂಬಿಕೊಂಡಿದ್ದಳು.  ಆಕೆ ಎದುರು ಬಾರದೆ ಇರುವುದನ್ನು ನೋಡಿದ ಆತನ ಮನಸ್ಸೊಳಗೆ ಏನೆಲ್ಲಾ ಸಂಕಟ ಆಗುತ್ತಿತ್ತು.

ಅಷ್ಟರಲ್ಲಿ ಒಳಬಂದ ಆಬಿದಾ ತನ್ನ ಗಂಡನ ಜೊತೆ ತಮ್ಮ ಬಂದುದಕ್ಕಾಗಿ ಕೋಳಿ ತರಬೇಕು ಎಂದು ಹೇಳಿದಳು. ಹಾಗಾಗಿ ಹಸನ್ ತನ್ನ ಮನೆಯಿಂದ ಹೊರಗೆ ಹೋದರು.

 ಅರೇ ಈ ಹುಡುಗಿಯಾದರೋ ಎಲ್ಲಿ ಇದ್ದಾಳೆ? ಒಂದು ಕ್ಷಣ ಮಿಂಚಿನಂತೆ ಬಂದು ಹೋದಳಲ್ವಾ? ಆದರೆ ಈಗ ಕಾಣಿಸುತ್ತನೇ ಇಲ್ಲ ಎಂದು ಚಡಪಡಿಸುತ್ತಿದ್ದನು.

ಅಷ್ಟರಲ್ಲಿ ಆತನ ಮೊಬೈಲ್ ರಿಂಗ್ ಆಗಲು ಫ್ರಾರಂಭಿಸಿತು. 

ಮೊಬೈಲ್ ತೆಗೆದು ಮಾತನಾಡಲು ಪ್ರಾರಂಭಿಸಿದನು.

" ಅರೇ ಹಕೀಮ್ ಎಲ್ಲಿ ಇದ್ದೀಯಾ? ಮ್ಯಾಚ್ ಇದೆ ಬರೋದಿಲ್ಲವೇನು? ನಿನ್ನನ್ನು ಕಾಣಿಸುತ್ತಾ ಇಲ್ಲ . ಅದಕ್ಕೆ ಕರೆ ಮಾಡಿದೆ."

ಆತನ ಮಾತಿಗೆ ಪ್ರತ್ಯುತ್ತರ ‌ನೀಡುತ್ತಾ ಹಕೀಮ್ " ಇಲ್ಲಾ ಕಣೋ ನಾನು ಇವತ್ತು ಬರೋದಿಲ್ಲ" ಎಂದು ಹೇಳಿದನು.

ಏನೋ ? ಏನು ಹೇಳುತ್ತಾ ಇದ್ದೀಯಾ? ಮ್ಯಾಚ್ ಅಂದ ತಕ್ಷಣ ಜೀವ ಬಿಟ್ಟ ಬರುತ್ತಿದ್ದೆ. ಆದರೆ ಇವತ್ತು ಯಾಕೆ ಹೀಗೆ ಹೇಳುತ್ತಾ ಇದ್ದೀಯಾ? ಏನು ವಿಷಯ? ಏನಾದರೂ ಮುಖ್ಯ ಕೆಲಸವಿದೆಯೇ ಎಂದು ಗೆಳೆಯ ಸತಾಯಿಸಿದಾಗ 

" ಹಾಗೇನೂ ಇಲ್ಲ ಕಣೋ..... ನಾನು ಅಕ್ಕನ ಮನೆಯಲ್ಲಿ ಇದ್ದೇನೆ. ಇಲ್ಲಿ ಭಾವನ ಮೊದಲ ಪತ್ನಿಯ ಮಗಳನ್ನು ನಾನು ನೋಡಿದೆ ಕಣೋ... ಮೊದಲ ನೋಟಕ್ಕೆ ನಾನು ಆಕೆಗೆ ಶರಣಾದೆ. ಹೇಗಾದರೂ ಮಾಡಿ ಆಕೆಯನ್ನು ನನ್ನವಳಾಗಿ ಮಾಡಬೇಕು. ನನ್ನ ತಲೆಯಲ್ಲಿ ಇದೇ ತುಂಬಿಕೊಂಡಿದೆ. ಹಾಗಾಗಿ ಇವತ್ತು ನಾನು ಎಲ್ಲಿಗೂ ಬರುವುದಿಲ್ಲ. "

" ಆಕೆಯೊಡನೆ ನಾಳೆ ಕೂಡ ಮಾತನಾಡಬಹುದಲ್ವಾ?"

" ಇಲ್ಲಾ ಕಣೋ.... ನಾಳೆ ಬೆಳಗ್ಗೆ ಆಕೆಯನ್ನು ಕರೆದುಕೊಂಡು ಆಕೆಯ ಅಣ್ಣ ಹೋಗುತ್ತಾನೆ. ಅದರ ಮೊದಲಾಗಿ ಕೆಲಸ ಆಗಬೇಕು. ನಾನು ಇಂದೇ ಆಕೆಯ ಬಳಿ ಈ ವಿಷಯ ತಿಳಿಸಬೇಕು."

" ಓಹೋ !!!!!! ಹಾಗಾ ವಿಷಯ. ಸರಿ, ವಿಷಯ ಆದಮೇಲೆ ನಮಗೆ ಕರೆ ಮಾಡಿ ತಿಳಿಸಲು ಮರೆಯದಿರು.. ಸರೀನಾ " ಎಂದು ಹೇಳಿ ಆತನ ಗೆಳೆಯ ಕರೆ ಕಟ್ ಮಾಡಿದನು.

ಏನು ಮಾಡುವುದು? ನನ್ನ ಹೃದಯವು ಆಕೆಗಾಗಿಯೇ ಮಿಡಿಯುತ್ತಿದೆ. ಆಕೆಯನ್ನು ಯಾವುದೇ ಕಾರಣಕ್ಕೂ ಯಾರಿಗೂ ಬಿಟ್ಟು ಕೊಡಬಾರದು. ಈ ವಿಷಯವನ್ನು ಆಕೆಯಲ್ಲಿ ಹೇಳಬೇಕು. ಒಂದು ವೇಳೆ ಆಕೆ ಒಪ್ಪದಿದ್ದಲ್ಲಿ? ಒಪ್ಪದೇ ಇದ್ದಲ್ಲಿ ಆಗ ನಾನು ಮಾಡುವ ಕಥೆಯೇ ಬೇರೆ. ನೋಡೋಣ ಒಪ್ಪದೆ ಏನು ಮಾಡುತ್ತಾಳೆ ಎಂದು. ಒಪ್ಪದಿದ್ದಲ್ಲಿ ನಾನು ಆಕೆಯನ್ನು ಒಪ್ಪಿಸುತ್ತೇನೆ. ಅದರ ದಾರಿ ನನಗೆ ಗೊತ್ತು ಎಂದು ಆಲೋಚಿಸುತ್ತಾ ವ್ಯಂಗ್ಯ ನಗೆ ಬೀರಿದನು.

ಇನ್ನು ಆಕೆಯನ್ನು ಕಾದರೆ ಆಗಲಿಕ್ಕಿಲ್ಲ. ನಾನೇ ಆಕೆಯ ಕೋಣೆಯೊಳಗೆ ಹೋಗುತ್ತೇನೆ ಎಂದು ಎನಿಸಿದವನೇ ರುಬೀನಾ ಇದ್ದ ಕೋಣೆಯೊಳಗೆ ಹೋಗಲು ಅನುವಾದನು.

ಮೆಲ್ಲನೆ ಕಳ್ಳ ಹೆಜ್ಜೆ ಇಡುತ್ತಾ ಆತ ಆಕೆ ಇದ್ದ ರೂಮಿನ ಬಳಿ ಹೋಗುತ್ತಾನೆ‌. ಮೆಲ್ಲನೆ ಹೋದವನಿಗೆ ಆಕೆ ಆ ರೂಮಿನಲ್ಲಿ ಇರುವುದು ಕಾಣಿಸುತ್ತದೆ.

ತಟ್ಟನೆ ಯಾರೋ ತಾನು ಇದ್ದ ರೂಮಿನ ಬಳಿ ಯಾರೋ ಬಂದಂತೆ ಆದಾಗ ರುಬೀನಾ ಬಾಗಿಲತ್ತ ನೋಡುತ್ತಾಳೆ ಅಲ್ಲಿ ಇದ್ದ ಹಕೀಮ್ ಅನ್ನು ಕಂಡು ಆಕೆಗೆ ಆಶ್ಚರ್ಯ ಆಗುತ್ತದೆ. ಅಷ್ಟರಲ್ಲಿ ಹಕೀಮ್ ನೇರವಾಗಿ ಆಕೆಯ ಕೋಣೆಯೊಳಗೆ ಪ್ರವೇಶಿಸಿ ಬಿಡುತ್ತಾನೆ. ಕೂತಿದ್ದ ರುಬೀನಾ ಆತ ಬಂದುದಕ್ಕಾಗಿ ಎದ್ದು ಹೊರಹೋಗಲು ಅಣಿಯಾಗುತ್ತಾಳೆ.

ಆಗ ಆತ ಆಕೆ ಹೋಗದಂತೆ ಬಾಗಿಲಿಗೆ ಅಡ್ಡವಾಗಿ ನಿಲ್ಲುತ್ತಾನೆ. ರುಬೀನಾಳಿಗೆ ಆತಂಕ ಉಂಟಾಗುತ್ತದೆ.

" ಹೊರಗೆ ಹೋಗಬೇಡ ನನಗೆ ನಿನ್ನಲ್ಲಿ ಮಾತನಾಡಲು ಇದೆ "ಎಂದು ಆಜ್ಞೆ ಮಾಡಿದನು.

ರುಬೀನಾ ಏನು ಎಂಬಂತೆ ಅವನ ಮುಖ ನೋಡಿದಳು.

" ನೋಡು ಯಾಕೋ ಏನೋ ಗೊತ್ತಿಲ್ಲ.ನಿನ್ನನ್ನು ಕಂಡ ಕ್ಷಣದಿಂದ ನಾನು ನನ್ನನ್ನೇ ಮರೆತಿದ್ದೇನೆ. ನನಗೆ ನೀನು ಅಷ್ಟೊಂದು ಇಷ್ಟ ಆಗಿದ್ದೀಯಾ ? ನೋಡು ನೀನು ಕೂಡ ನನ್ನನ್ನು ಇಷ್ಟಪಡಬೇಕು ಅಷ್ಟೇ. ಇಲ್ಲಾ ಅಂದರೆ ಬಲವಂತದಿಂದಾದರೂ ಸರಿ ನಿನ್ನನ್ನು ನನ್ನವಳನ್ನಾಗಿ ಮಾಡಿ ಬಿಡುತ್ತೇನೆ. ಆಮೇಲೆ ನಾನು ಕೂಡ ನೋಡುತ್ತೇನೆ. ಯಾವನು ನಿನ್ನನ್ನು ಮದುವೆಯಾಗುತ್ತಾನೆ ಎಂದು?"

ಆತನ ಮಾತುಗಳು ಕೇಳಿ ರುಬೀನಾಳಿಗೆ ಕೈ ಕಾಲು ನಡುಗಲು ಫ್ರಾರಂಭಗೊಂಡವು. ಅರೇ ಏನಿದು ಈತ ಹೇಳುತ್ತಿದ್ದಾನೆ? ಯಾಕೋ ಈತನ ಮುಖಭಾವ ಸರಿಯಾಗಿಲ್ಲ. ನನ್ನನ್ನು ಏನಾದರೂ ಮಾಡುವನೋ ಹೇಗೆ ? ಯೋಚಿಸಿಯೇ ಆಕೆಗೆ ಬೆವರತೊಡಗಿತು.

" ನೋಡಿ, ನೀವು ಅಂದುಕೊಂಡಂತೆ ಇರುವ ಹೆಣ್ಣು ನಾನಲ್ಲ. ನನಗೆ ಅದರಲ್ಲಿ ಯಾವ ವ್ಯಾಮೋಹವು ಇಲ್ಲ. ತಂದೆ - ತಾಯಿ ನೋಡಿದ ಹುಡುಗನೊಂದಿಗೆ ನಾನು ಮದುವೆ ಆಗಬೇಕು ಎಂದಿದ್ದೇನೆ. ದಯವಿಟ್ಟು ನನ್ನ ವಿಷಯಕ್ಕೆ ಬರಬೇಡಿ. ನಾನು ಇವತ್ತೊಂದು ದಿನ ಇಲ್ಲಿದ್ದು ನಾಳೆ ಹೋಗುತ್ತೇನೆ. ಅಷ್ಟು ಹೊತ್ತು ನನ್ನನ್ನು ನನ್ನ ಪಾಡಿಗೆ ಬಿಟ್ಟು ಬಿಡಿ" ಎಂದು ಕೈ ಮುಗಿದು ಕೇಳಿಕೊಂಡಳು.

ಓ ಹೆಣ್ಣೇ ನೀನೆ ನನ್ನ ಹೃದಯ ತುಂಬಾ ತುಂಬಿರುವಾಗ ನಿನ್ನ ಬಿಡುವ ಮಾತೇ ಇಲ್ಲ.ಅದೆಷ್ಟು ಕಷ್ಟಪಟ್ಟರೂ ಸರಿ. ನಿನ್ನನ್ನು ನನ್ನವಳನ್ನಾಗಿ ಮಾಡಿಯೇ ನಾನು ಸಿದ್ದ ಎಂದು ಮನಸ್ಸಿನಲ್ಲೇ ಯೋಚಿಸುತ್ತಾ ಇದ್ದನು.

" ಅರೇ ನೀನೇನು ಮಾಡುತ್ತಾ ಇದ್ದೀಯಾ ಅಲ್ಲಿ " ಆಬಿದಾಳ ಧ್ವನಿ ಕೇಳಿಬಂದಾಗ ಎಚ್ಚೆತ್ತುಕೊಂಡನು ಹಕೀಮ್.

"ಅಲ್ಲಾ ಅಕ್ಕಾ... ನನ್ನ ಪಾಡಿಗೆ ನಾನು ಅಲ್ಲಿ ಕುಳಿತಿದ್ದೆ. ಒಂದು ಚೂರು ಇಲ್ಲಿ ಬನ್ನಿ ಎಂದು ಈಕೆ ನನ್ನನ್ನು ಕರೆದಳು. ಏನೋ ಕರೆಯುತ್ತಿದ್ದಾಳಲ್ಲವಾ ಅಂತ ನಿಜವಾಗಿಯೂ ಆಕೆಯ ಬಳಿ ಬಂದರೆ ನೋಡು ಆಕೆ ಹೇಳುವ ಮಾತು ? ಅಯ್ಯಯ್ಯೋ !! ನನಗಂತೂ ಹೇಳಲಾಗದು. ನನಗೆ ನಾಚಿಕೆ ಆಗುತ್ತಾ ಇದೆ."

ಹಕೀಮ್ ತನ್ನ ಮಾತಿನ ವರಸೆಯನ್ನೇ ಬದಲಾಯಿಸಿದನು.

" ಏನೋ , ಏನು ಹೇಳಿದಳು ಆಕೆ ? " ಆಬಿದಾ ಸಿಟ್ಟಿನಿಂದಲೇ ಕೇಳಿದಳು.

ಏನಿಲ್ಲಾ ನಾನು ನಿನ್ನನ್ನು ಪ್ರೀತಿಸುತ್ತಾ ಇದ್ದೇನೆ ಎನ್ನುತ್ತಿದ್ದಾಳೆ ಈಕೆ. ಅಲ್ಲ ಒಬ್ಬ ಸುಂದರವಾದ ಹುಡುಗ ಈ ಭೂಮಿಯ ಮೇಲೆ ಬದುಕಲೂ ಇಲ್ಲದಂತಾಗಿದೆ. ನೋಡು ಎಷ್ಟು ಧೈರ್ಯ ಈಕೆಗೆ.

ಹಕೀಮ್ ಮಾತು ಕೇಳಿ ಆಬಿದಾಳ ಮುಖ ಕೋಪದಿಂದ ಕೆಂಡಾಮಂಡಲ ಆದವು.

" ಏನೇ ಮನೆಹಾಳಿ, ನೀನು ಇಲ್ಲಿ ಬಂದಾಗಲೇ ಅಂದುಕೊಂಡೆ ಏನೋ ದೊಡ್ಡ ಯೋಜನೆ ಇಟ್ಟುಕೊಂಡು ಬಂದಿದ್ದೀಯಾ ಎಂದು. ಆದರೆ ಇಷ್ಟೊಂದು ಕೆಟ್ಟ ಆಲೋಚನೆ ಮಾಡುತ್ತೀಯಾ ಎಂದುಕೊಂಡಿರಲಿಲ್ಲ. ನಿಲ್ಲು ನಿನ್ನ ತಂದೆ ಬರಲಿ . ಏನು ವಿಷಯ ಎಂದು ಇತ್ಯರ್ಥಪಡಿಸಲು."

" ಇಲ್ಲಾ ಚಿಕ್ಕಮ್ಮ , ನಿಮ್ಮ ತಮ್ಮ ಅವರಾಗಿಯೇ ನನ್ನ ಕೋಣೆಯ ಬಳಿ ಬಂದರು. ಅವರಾಗಿಯೇ ಪ್ರೀತಿ, ಪ್ರೇಮ ಎಂದು ಏನೇನೋ ಮಾತನಾಡಿದರು. ಅದು ಬಿಟ್ಟರೆ ನನಗೇನೂ ಗೊತ್ತಿಲ್ಲ. ಮತ್ತೆ ನಾನು ಏನೂ ಯೋಜನೆ ಹಾಕಿ ಇಲ್ಲಿಗೆ ಬಂದಿಲ್ಲ. ನನ್ನ ತಂದೆ ಬಲವಂತವಾಗಿ ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ ಎಂದು ರುಬೀನಾ ತಾನು ನಡುವೆ ಬಾಯಿ ಹಾಕಿ ಹೇಳಿದಳು.

" ಹ್ಞಾಂ ಗೊತ್ತಿದೆಯೇ... ಮುಚ್ಚು ಸಾಕು. ನೀನೇನು ವಿಶ್ವ ಸುಂದರಿ ಅಲ್ವಾ? ನಿನ್ನ ನೋಡಿ ನನ್ನ ತಮ್ಮ ಪ್ರೀತಿ, ಪ್ರೇಮ ಎಂದು ಮಾತನಾಡಲು. ನಾಲಿಗೆ ಇದೆ ಎಂದು ಏನೇನೋ ಮಾತನಾಡಬೇಡ. ನನ್ನ ತಮ್ಮನನ್ನು ನಿನ್ನ ಬಲೆಗೆ ಹಾಕಬೇಕು ಎಂದು ಇದ್ದೀಯಲ್ಲ. ನಿನ್ನ ಮನೆ ಹಾಳು ಬುದ್ದಿ ಎಲ್ಲಾ ನನಗೆ ತಿಳಿದಿದೆ ಆಯ್ತಾ"

ಆಕೆ ಮಾತು ಮುಂದುವರಿಸುತ್ತಾ ಇದ್ದಳು. ರುಬೀನಾಳ ಕಣ್ಣಿನಿಂದ ನೀರು ಧಾರಾಕಾರವಾಗಿ ಸುರಿಯುತ್ತಿತ್ತು... ಇದನ್ನೆಲ್ಲ ಗಮನಿಸಿದ ಹಕೀಮ್ 

ಹೆಣ್ಣೇ, ನಿನ್ನಲ್ಲಿ ನಾನು ಮೊದಲೇ ಹೇಳಲಿಲ್ಲವೇ ಎಂದು ಮನಸ್ಸಿನಲ್ಲೇ ಯೋಚಿಸುತ್ತಾ ಇದ್ದನು.

ಅಷ್ಟರಲ್ಲಿ " ಏನಿದು ? ಇಲ್ಲಿ ಏನು ನಡೆಯುತ್ತಾ ಇದೆ? ಎಂದು ಶಬ್ಧ ವೊಂದು ಕೇಳಿ ಬಂದಿತು.

*ಹಕೀಮ್ ರುಬೀನಾ ಇದ್ದ ಕೋಣೆಯೊಳಗೆ ಹೋಗಿ ತಾನು ನಿನ್ನನ್ನು ಇಷ್ಟಪಟ್ಟಿರುವೆ ಎಂದು ಹೇಳುತ್ತಾನೆ. ಆದರೆ ರುಬೀನಾ ಇದನ್ನು ತಿರಸ್ಕಾರ ಮಾಡುತ್ತಾಳೆ. ಅಷ್ಟರಲ್ಲಿ ಅಲ್ಲಿ ಬಂದ ಆಬಿದಾಳೊಂದಿಗೆ ಹಕೀಮ್ ಸುಳ್ಳು ಹೇಳುತ್ತಾನೆ. ಆಗ ಅಲ್ಲಿ ಇಲ್ಲಿ ಏನಾಗುತ್ತಿದೆ ಎಂಬ ಧ್ವನಿಯೊಂದು ಕೇಳಿ ಬರುತ್ತದೆ.*

ಎಲ್ಲರೂ ಧ್ವನಿ ಕೇಳಿದತ್ತ ತಿರುಗಿದರು.

ಕೋಳಿಗೆಂದು ಹೋಗಿದ್ದ ಹಸನ್ ಹಿಂದೆ ತಿರುಗಿ ಬಂದಿದ್ದರು. ಅಲ್ಲಿನ ಬೊಬ್ಬೆ ಕೇಳಿ ಹಾಗೆ ಕೇಳಿದ್ದರು.

" ಏನು ಹಾಗೆ ಕೇಳುತ್ತಾ ಇದ್ದೀರಾ? ನಿಮ್ಮ ಮಗಳು ಮಾಡಿದ ಮಹಾ ಘನಂದಾರಿ ಕೆಲಸ ನೋಡಿ. ಆಕೆಗೆ ಪ್ರೀತಿ, ಪ್ರೇಮ ಎಂದು ಅಷ್ಟೊಂದು ವ್ಯಾಮೋಹ ಇದ್ದರೆ ಯಾರನ್ನಾದರೂ ಮದುವೆಯಾಗಲಿ. ಅದು ಬಿಟ್ಟು ನನ್ನ ತಮ್ಮನನ್ನು ಬುಟ್ಟಿಗೆ ಹಾಕಲು ನೋಡುತ್ತಿದ್ದಾಳೆ. ಕಂಡ ಹಾಗೆ ಅಲ್ಲ ಇವಳು. ಭಯಂಕರ ಕಿಲಾಡಿ ರೀ..." ಆಬಿದಾ ಪತಿಯ ಬಳಿ ರುಬೀನಾಳ  ಬಗ್ಗೆ ಹೇಳಿದಳು.

ಅವರು ರುಬೀನಾಳ ಮುಖ ನೋಡಿದರು. ರುಬೀನಾ ಅವರತ್ತ ನೋಡಿ ಇಲ್ಲ ಎಂದು ತಲೆಯಾಡಿಸಿದಳು.

" ಇದರಲ್ಲಿ ನಿನ್ನ ತಪ್ಪೇನು ಇಲ್ಲ ಎಂದು ನನಗೆ ತಿಳಿದಿದೆ ರುಬೀನಾ... ಆದರೆ ನಿನ್ನ ಅಮ್ಮನ ತಪ್ಪಿದೆ. ನಿನ್ನ ಅಮ್ಮ ನಿನ್ನನ್ನು ಬೆಳೆಸಿದ ರೀತಿ ಹಾಗಿದೆ. ಅದಕ್ಕೆ ನಾವು ನಿನ್ನನ್ನು ಬೈದು ಏನೂ ಪ್ರಯೋಜನವಿಲ್ಲ. ಎಲ್ಲಾ ತಪ್ಪು ನಿನ್ನ ಅಮ್ಮನದೇ " ಎಂದು ಹೇಳಿ ಸೀದಾ ಒಳಹೋದರು.

ರುಬೀನಾಳಿಗೆ ಅವರ ಮಾತು ಕೇಳಲಾಗಲಿಲ್ಲ. 

ಇಲ್ಲಿ ತಪ್ಪು ನನ್ನದೂ ಇಲ್ಲ , ನನ್ನ ಅಮ್ಮನದೂ ಇಲ್ಲ. ಆದರೆ ನಮ್ಮನ್ನು ಬಲಿಪಶು ಮಾಡಿದ್ದಾರೆ ಇವರು. ಎನಿಸುವಾಗಲೇ ಅಳು ಒತ್ತರಿಸಿ ಬರುತ್ತಿತ್ತು ಆಕೆಗೆ.

ಆಬಿದಾ ಮುಂದೇನು ಹೇಳದೆ ತನ್ನ ಪತಿಯನ್ನು ಹಿಂಬಾಲಿಸಿದರು.

ಆಬಿದಾ ಆಚೆ ಹೋದ ನಂತರ  ಹಕೀಮ್ ಆಕೆಯ ಬಳಿ

" ನಾನು ಹೇಳಲಿಲ್ಲವೇ.... ನಾನು ಹೇಳಿದ ಹಾಗೆ ಮರ್ಯಾದೆಯಿಂದ ಕೇಳು. ಆದರೆ ನೀನು ಕೇಳಲಿಲ್ಲ. ನೋಡು 5  ನಿಮಿಷದಲ್ಲಿ ಏನಾಯಿತು ಎಂದು. ಇನ್ನು ಕೇವಲ ಒಂದು ಗಂಟೆ ಸಮಯ ಕೊಡುತ್ತಿದ್ದೇನೆ. ಅದರೊಳಗೆ ನೀನು ಹೋಗಿ ನಿನ್ನ ಅಪ್ಪನ ಬಳಿ , ನಾನು ಆತನನ್ನು ಮದುವೆಯಾಗಲು ಬಯಸಿದ್ದೇನೆ ಎಂದು ಹೇಳಬೇಕು. ಆಗ ನಾನು ಅಲ್ಲಿಗೆ ಬಂದು ಒಂದು ಹೆಣ್ಣಿನ ಮನಸ್ಸನ್ನು ನೋಯಿಸಲು ನನಗೆ ಸಾಧ್ಯವಿಲ್ಲ..ನಾನು ಆಕೆಯನ್ನು ಮದುವೆ ಆಗುತ್ತೇನೆ ಎಂದು ಒಪ್ಪಿಗೆ ಕೊಡುತ್ತೇನೆ. ಒಂದು ವೇಳೆ ನೀನು ಅದನ್ನು ಕೇಳಲಿಲ್ಲ ಎಂದಲ್ಲಿ ನಿನ್ನನ್ನು ಏನು ಮಾಡುತ್ತೇನೆ ನೋಡುತ್ತಾ ಇರು ಎಂದು ಆದೇಶ ನೀಡಿ ಹಕೀಮ್ ಅಲ್ಲಿಂದ ಹೊರ ನಡೆದನು.

ಭಾರವಾದ ಮನಸ್ಸಿನಿಂದಲೇ ರುಬೀನಾ ಮಂಚದ ಮೂಲೆಯಲ್ಲಿ ಹೋಗಿ ಕುಳಿತಳು. ಆಕೆಯ ಮನಸ್ಸು ನೂರೊಂದು ಯೋಚಿಸುತ್ತಿತ್ತು.

" ಅರೇ ಒಂದೇ ದಿನದಲ್ಲಿ ನನ್ನ ಬದುಕಿನಲ್ಲಿ ಇದೇನಾಗುತ್ತಿದೆ? ಒಂದು ಕಡೆ ಅಶ್ಫಾಕ್.... ಹಲವು ವರ್ಷಗಳ ಹಿಂದೆ ಕಂಡ ಮುಖ... ಇಂದಿಗೆ ಹೇಗಿದ್ದಾನೆ ಎಂದೇ ತಿಳಿದಿಲ್ಲ. ಆತನಿಗೆ ನನ್ನ ಮೇಲೆ ಪ್ರೀತಿ ಪ್ರೇಮ ಎಂದೆಲ್ಲಾ ನಾಟಕ ಆಡಿಸಿದ. ಆತನಿಗೆ ನನ್ನ ಆಟ ಆಡಿಸಬೇಕು ಎಂಬ ಇರಾದೆ ಇತ್ತು. ಆ ಹುಡುಗಿಯ ಮೂಲಕ ಅದು ಗೊತ್ತಾಯಿತು. ಈಗ ನೋಡಿದರೆ ಇದು ಗಂಟಲಿನಲ್ಲಿ ಸಿಕ್ಕಿಕೊಂಡಂತೆ ಇದೆ. ಅತ್ತ ನುಂಗಲೂ ಸಾಧ್ಯವಿಲ್ಲ, ಇತ್ತ ಉಗುಳಲೂ ಸಾಧ್ಯವಿಲ್ಲ. ಈತ ಯಾರೆಂದೇ ನನಗೆ ತಿಳಿದಿಲ್ಲ. ಈತನನ್ನು ನಾನು ಪ್ರೀತಿಸಬೇಕು ಅಂತೆ. ಅದಲ್ಲದಿದ್ದಲ್ಲಿ ನನ್ನ ತಂದೆಯೊಡನೆ ನಾನೇ ಮದುವೆ ವಿಚಾರ ಮಾತನಾಡಬೇಕಂತೆ. ಇದು ಒಳ್ಳೆಯ ಆಪತ್ತಿನಲ್ಲಿ ಸಿಲುಕಿಕೊಂಡ ಹಾಗೆ ಆಯಿತು. ಇನ್ನು ಇದರಿಂದ ಹೊರಬರುವುದಾದರೂ ಹೇಗೆ? ಆಕೆಯ ಮನಸ್ಸು ಹತ್ತಾರು ಯೋಚಿಸುತ್ತಿತ್ತು. 

ಹಕೀಮ್ ತನ್ನ ರೂಮಿನಲ್ಲಿ ಚಡಪಡಿಸುತ್ತಿದ್ದನು. ಆತನಿಗೆ ಒಂದೊಂದು ನಿಮಿಷವೂ ಒಂದೊಂದು ಯುಗದಂತೆ ಸಾಗುತ್ತಿತ್ತು. ಯಾವಾಗ ಒಂದು ಗಂಟೆ ಆಗಲಿಲ್ಲ ಎಂದು ಚಡಪಡಿಸುತ್ತಿದ್ದನು.

ಅಷ್ಟರಲ್ಲಿ ಆತನ ಮೊಬೈಲ್ ರಿಂಗಣಿಸತೊಡಗಿತು‌.  ತೆಗೆದು ನೋಡಿದಾಗ ತನ್ನ ಗೆಳೆಯ ಕರೆ ಮಾಡಿದ್ದು ಕಾಣಿಸಿತು.

" ಅರೇ ಏನಾಯಿತು ಹಕೀಮ್.. ಆ ಹುಡುಗಿ ಒಪ್ಪಿದಳಾ? " ಅತ್ತ ಕಡೆಯಿಂದ ತನ್ನ ಗೆಳೆಯನ ಧ್ವನಿ ಕೇಳಿಸಿತು.

" ಇಲ್ಲಾ ಕಣೋ ಕರೀಮ್... ಅದು ಒಳ್ಳೆಯ ವಿಚಿತ್ರ ಹೆಣ್ಣು ಕಣೋ... ಯಾವುದಕ್ಕೂ ಒಳ್ಳೆಯದರಲ್ಲಿ ಒಪ್ಪುತ್ತಿಲ್ಲ. ನಾನೇನು ಮಾಡಿದೆ ಗೊತ್ತಾ ಎಂದು ಮಾಡಿದ ಎಲ್ಲಾ ವಿಚಾರಗಳನ್ನು ತಿಳಿಸಿದನು.

ಇದನ್ನು ಕೇಳಿದ ಆತ " ಅರೇ ಈಗ ಒಂದು ಗಂಟೆ ಆಗಲು ಇನ್ನೆಷ್ಟು ಸಮಯವಿದೆ? ಮುಂದೆ ಏನು ಮಾಡಬೇಕು ಎಂದು ಇದ್ದೀಯಾ? ನಿನ್ನ ತಲೆಯನ್ನು ಮೆಚ್ಚಬೇಕಾದುದೇ... ಯಾಕೆಂದರೆ ಆಕೆ ಆಗಿಯೇ ಬಂದು ಹೇಳಲಿ ಎಂದು ನೀನು ಮಾಡಿದ ಉಪಾಯ ಚೆನ್ನಾಗಿದೆ.." ಎಂದು ಹೇಳಿ ಆತನ ಗೆಳೆಯ ನಗಾಡಲು ಪ್ರಾರಂಭಿಸಿದನು.

 "ಹೌದು ಕಣೋ... ಇನ್ನು ಹದಿನೈದು ನಿಮಿಷಗಳು ಬಾಕಿ ಇವೆ.  ಅಷ್ಟರಲ್ಲಿ ಆಕೆ ಏನು ಮಾಡುತ್ತಾಳೆ ನೋಡಬೇಕು. ಹೇಳಿದರೆ ಸರಿ... ಇಲ್ಲಾ ಅಂದರೆ ಬೇರೆ ಏನಾದರೂ ಯೋಜನೆ ಮಾಡಬೇಕು. ನೋಡೋಣ ಏನು ಮಾಡುವುದು ಎಂದು... "

" ಸರಿ... ಏನಾದರೂ ಸಹಾಯ ಬೇಕಿದ್ದಲ್ಲಿ ಕರೆ ಮಾಡು" ಎಂದು ಹೇಳಿ ಕರೆ ಕಟ್ ಮಾಡಿದನು.

ಹಕೀಮ್ ಗಡಿಯಾರದತ್ತಲೇ ನೋಡುತ್ತಿದ್ದನು. ಆತ ಹೇಳಿದ ಸಮಯ ಆಗಿತ್ತು. ರುಬೀನಾ ಇದ್ದ ಕೋಣೆಯತ್ತಲೇ ಆತನ ದೃಷ್ಟಿ ನೆಟ್ಟಿತ್ತು.

ಅಷ್ಟರಲ್ಲಿ ರುಬೀನಾ ತನ್ನ ಕೋಣೆಯಿಂದ ಹೊರಗೆ ಬಂದಳು.

ನೇರವಾಗಿ ತನ್ನ ತಂದೆ ಇದ್ದತ್ತ ಹೆಜ್ಜೆ ಹಾಕಿದಳು. ಇದನ್ನ ನೋಡಿದ ಹಕೀಮ್ ಮನದಲ್ಲಿ ಸಂತಸದ ಅಲೆಯೊಂದು ‌ತೇಲಿ ಬಂದಿತು.

ರುಬೀನಾ ನೇರವಾಗಿ ತನ್ನ ತಂದೆಯ ಬಳಿ ಹೋಗುತ್ತಿದ್ದಳು. ಹಕೀಮ್ ಇದನ್ನು ಗಮನಿಸುತ್ತಿದ್ದನು.

ಆಕೆ ತನ್ನ ತಂದೆಯ ಬಳಿ ಅದೇನೋ ಗುಸು ಗುಸು ಮಾತನಾಡುತ್ತಿದ್ರಳು. ಹಕೀಮಿಗೆ ಏನೊಂದೂ ಅರ್ಥ ಆಗುತ್ತಿರಲಿಲ್ಲ.

ಹಸನ್ ಅವರು ತಲೆ ಅಲ್ಲಾಡಿಸಿ ನಿರಾಕರಿಸುವುದು ಕಂಡು ಬಂತು. ಅಂದರೆ ಭಾವ ಒಪ್ಪಿಗೆ ಕೊಡುತ್ತಾ ಇಲ್ವಾ ಹೇಗೆ ಮನಸ್ಸಿನಲ್ಲೇ ಯೋಚಿಸಿದನು.

ನೋಡೋಣ ಹತ್ತಿರ ಹೋಗಿಯೇ ವಿಷಯ ಅರಿಯೋಣ ಎಂದು ಕೊಂಡು ಹತ್ತಿರ ಹೋದನು.

 " ಏನು ಭಾವ ಏನು ಸಮಾಚಾರ? ಏನೋ ದೊಡ್ಡ ವಿಷಯ ಇದ್ದ ಹಾಗೆ ಇದೆ " ಎಂದು ಕೇಳಿದನು.

"ಹಾಗೇನಿಲ್ಲ ಆಕೆಯ ಅಮ್ಮನ ಜೊತೆ ಮಾತನಾಡಲು ಎಂದು ಮೊಬೈಲ್ ಕೇಳಿದಳು. ನಾನು ಕೊಡಲು ನಿರಾಕರಿಸಿದೆ. ಇನ್ನು ಇಲ್ಲಿ ನಡೆದ ರಾದ್ಧಾಂತ ಯಾಕೆ ಅವರಿಗೆ ತಿಳಿಯುವುದು. ಹೇಗಿದ್ದರೂ ನಾಳೆ ಬೆಳಗ್ಗೆ ಹೋಗುತ್ತಾಳೆ ಅಲ್ವಾ ? ಅಷ್ಟೇ... ಮತ್ತಿನ್ನೇನು ಇಲ್ಲ."

ಹಕೀಮಿಗೆ ನಿರಾಸೆ ಆಯಿತು. ನಾನೇನೋ ಇವಳು ನನ್ನ ಬಗ್ಗೆ ಮಾತನಾಡುತ್ತಾಳೆ ಎಂದು ಕೊಂಡರೆ ಈಕೆ ಇನ್ನೂ ಮಾತನಾಡಲಿಲ್ಲ ಅಲ್ಲವೇ... ಸಿಟ್ಟಿನಿಂದ ಆತ ಆಕೆಯ ಮುಖದತ್ತ ನೋಡಿದನು. ಆಕೆ ಈತನತ್ತ ನೋಡದೆ ಎಲ್ಲೋ ನೋಡುತ್ತಿದ್ದಳು.

 ಹಕೀಮ್ ಸಿಟ್ಟಿನಿಂದ ತನ್ನ ಹಲ್ಲು ಕಡಿಯುತ್ತಾ ಸೀದಾ ಹೊರಗೆ ಬಂದನು.

ಅಂದರೆ ತಾನು ನಿರೀಕ್ಷಿಸಿದ್ದು ಎಲ್ಲಾ ಸುಳ್ಳಾಯಿತು. ಈ ಹೆಣ್ಣಿನ ಧೈರ್ಯ ಮೆಚ್ಚಬೇಕಾದುದೇ. ಈಗ ನಾನು ಏನು ಮಾಡಬೇಕು ಎಂದು ಯೋಚಿಸುತ್ತಲೇ ತನ್ನ ಗೆಳೆಯನಿಗೆ ಕರೆ ಮಾಡಿದನು.

ಈತನ ವಿಚಾರ ಕೇಳಿದ ಗೆಳೆಯ " ನೀನು ಅವಳನ್ನು ಕರೆದುಕೊಂಡು ದೂರದ ಊರಿಗೆ ಹೋಗೋ ... ಅಲ್ಲಿ ಆಕೆಯನ್ನು ಮದುವೆಯಾಗು. ನಂತರ ಹೇಗೆ ಆಕೆ ಒಪ್ಪದೆ ಇರುತ್ತಾಳೆ ನೋಡೋಣ" ಎಂದು ಆತ ಸಲಹೆ ನೀಡಿದನು.

" ಏನು ಹೇಳುತ್ತಾ ಇದ್ದೀಯಾ ಕರೀಮ್? ಹೇಗೆ ಆಕೆಯನ್ನು ದೂರದ ಊರಿಗೆ ಕರೆದುಕೊಂಡು ಹೋಗುವುದು?"

" ನೋಡು ಹೇಗಾದರೂ ಮಾಡಿ ಆಕೆಯನ್ನು ಮನೆಯಿಂದ ಹೊರಗೆ ನೀನು ಕರೆದುಕೊಂಡು ಬರಬೇಕು. ನಂತರ ನಾವು ಕಾರು ತರುತ್ತೇವೆ. ಅದರಲ್ಲಿ ಕುಳಿತು ಬಾಂಬೆಯತ್ತ ಹೋಗೋಣ ಸರಿಯಾ? ಮದುವೆ ಎಲ್ಲಾ ಮುಗಿದು ನಂತರ ಊರಿಗೆ ಬಂದರಾಯಿತು. "

ಗೆಳೆಯನ ಮಾತು ಯಾಕೋ ಹಕೀಮಿಗೆ ಸರಿ ಎನಿಸಿತು..

" ಸರಿ ಕಣೋ..... ನಿನ್ನ ವಿಚಾರದಂತೆ ಆಗಲಿ. ನೋಡೋಣ... ಆದರೆ ಮನೆಯವರಿಗೆ ಎಚ್ಚರ ಆಗುವುದಿಲ್ಲವೇನೋ...."

" ಅದು ನೀನು ಜಾಗ್ರತೆ ವಹಿಸಬೇಕು. ಮೊದಲೇ ಆಕೆಯ ಬಾಯಿಗೆ ಗಟ್ಟಿಯಾಗಿ ಕೈ ಹಿಡಿ... ಹೊರಗೆ ಕರೆದುಕೊಂಡು ಬಾ... ಅಷ್ಟರಲ್ಲಿ ನಾವು ಅಲ್ಲಿ ಸಿದ್ದರಾಗಿ ಇರುತ್ತೇವೆ."

 " ಸರಿ ಕಣೋ.... ನೋಡೋಣ... ಆಕೆ ಕೋಣೆಯೊಳಗೆ ಮಲಗಿದರೆ ಖಂಡಿತವಾಗಿಯೂ ಬಾಗಿಲ ಚಿಲಕ ಹಾಕಿ ಮಲಗುತ್ತಾಳೆ. ಅದಕ್ಕಾಗಿ ಆಕೆಯನ್ನು ಹೊರಗಡೆ ಚಾವಡಿಯಲ್ಲಿ ಮಲಗಿಸುವಂತೆ ಮಾಡಬೇಕು. ಹ್ಞೂಂ ನೀವು ಕಾರು ತನ್ನಿ... ಉಳಿದಿದ್ದನ್ನು ನಾನು ನೋಡುತ್ತೇನೆ ಎಂದು ಹೇಳಿ ಹಕೀಮ್ ಕರೆ ಕಟ್ ಮಾಡಿದನು.

ಅಷ್ಟರಲ್ಲಿ ಆಬಿದಾ ಎಲ್ಲರನ್ನೂ ಊಟ ಮಾಡಲು ಕರೆದಳು. ತನ್ನ ಬೆನ್ನ ಹಿಂದೆ ಇಷ್ಟೊಂದು ದೊಡ್ಡ ಷಡ್ಯಂತ್ರ ಇದೆ ಎಂದು ತಿಳಿಯದ ರುಬೀನಾ ಅಡುಗೆ ಕೋಣೆಯ ಮೂಲೆಯಲ್ಲಿ ಊಟ ಮಾಡಿ ಕೈ ತೊಳೆದು ಮಲಗಲೆಂದು ತಾನಿದ್ದ ಕೋಣೆಯತ್ತಲೇ ನಡೆದಳು.

" ಅಲ್ಲಾ ಅಕ್ಕ... ನಿನಗೆ ಗೊತ್ತಿಲ್ವಾ... ನನಗೆ ಆ ಕೋಣೆಯಲ್ಲದೆ ನಿದ್ರೆ ಬರೋದಿಲ್ಲ. ನೀನಾದರೋ ಆಕೆಯನ್ನು ಅಲ್ಲೇ ಮಲಗಿಸುವ ಯತ್ನದಲ್ಲಿ ಇದ್ದೀಯಾ.. ಮತ್ತೆ ನಾನೆಲ್ಲಿ ಮಲಗಲಿ ಹೇಳು " ಎಂದು ಆಬಿದಾಳ ಕಿವಿಗೆ ಊದಿದನು.

ತಮ್ಮ ಹೇಳಿದ್ದೇ ಸರಿ ಎಂದು ಎನಿಸಿದ ಆಬಿದಾ.....
ರುಬೀನಾಳ ಬಳಿ ಹೋಗಿ ಹೊರಗೆ ಚಾವಡಿಯಲ್ಲಿ ಮಲಗು ಎಂದು ಹೇಳಿದಳು. ಅದನ್ನು ಕೇಳಿದ ರುಬೀನಾಳಿಗೆ ಆಘಾತವಾದರೆ ಹಕೀಮ್ ಮುಖದಲ್ಲಿ ವ್ಯಂಗ್ಯ ನಗೆಯೊಂದು ಮೂಡಿತು.

ತನ್ನನ್ನು ಹೊರಗೆ ಚಾವಡಿಯಲ್ಲಿ ಮಲಗಲು ಚಿಕ್ಕಮ್ಮ ಹೇಳಿದಾಗ ಸುರಯ್ಯಾಳಿಗೆ ಆಘಾತವಾಯಿತು.

" ಅಲ್ಲಾ ಚಿಕ್ಕಮ್ಮ... ಅದೂ ಒಂದು ಹೆಣ್ಣಾಗಿ, ಅಲ್ಲದೇ ಪರಪುರುಷರು ಮನೆಯಲ್ಲಿ ಇರುವಾಗ ಹೇಗೆ ನಾನು ಹೊರಗೆ ಮಲಗಲಿ ಹೇಳಿ ನೀವೇ !" ಎಂದು ನೊಂದ ಧ್ವನಿಯಲ್ಲಿ ರುಬೀನಾ ಹೇಳಿದಳು. 

" ಏನು ನೀನು ದೊಡ್ಡ ರಾಣಿ ಅಲ್ವಾ? ನಿನ್ನನ್ನು ಯಾರಾದರೂ ಎತ್ತಿಕೊಂಡು ಹೋಗುತ್ತಾರೆ ಅಲ್ವಾ? ಭಿಕಾರಿಗಳಾದರೂ ಅಹಂಕಾರ ಎಷ್ಟು ಇದೆ ನೋಡು. ಬೇಕಿದ್ದಲ್ಲಿ ಹೊರಗಡೆ ಮಲಗು. ನನ್ನ ತಮ್ಮ ಯಾವತ್ತೂ ಬಂದರೆ ಅದೇ ಕೋಣೆಯೊಳಗೆ ಮಲಗುವುದು. ನೀನು ಇವತ್ತು ಹೊಸದಾಗಿ ಬಂದಿದ್ದೀಯಾ ಎಂದರೆ. ಹೋಗು ಹೋಗು ಮಲಗಿಕೋ... ನನಗೆ ಕೆಲಸ ಮಾಡಿ ಸುಸ್ತಾಗಿದೆ. ನಿನ್ನ ಹಾಗೆ ಸುಮ್ಮನೆ ಕುಳಿತಿಲ್ಲ ಎಂದು ಹೇಳಿದವಳೇ ಆಬಿದಾ ಸೀದಾ ತನ್ನ ಕೋಣೆಯತ್ತ ನಡೆದಳು.

ಹಸನ್ ಅವರಿಗೆ ಇದು ಯಾವ ವಿಚಾರವೂ ತಿಳಿದಿರಲಿಲ್ಲ.ಅವರಿಗೆ ಅದಾಗಲೇ ಗಾಢವಾದ ನಿದ್ರೆಗೆ ಜಾರಿದ್ದರು.

ರುಬೀನಾಳ ಮನಸ್ಸಿನಲ್ಲಿ ಅದಾಗಲೇ ಭಯ ಆವರಿಸಿತ್ತು. ಇದೆಲ್ಲವೂ ಹಕೀಮನದೇ ದುರಾಲೋಚನೆ ಎಂದು ಆಕೆಗೆ ತಿಳಿದಿತ್ತು. ಆದರೆ ಏನು ಮಾಡುವುದು. ಯಾ ದೇವನೇ !!! ಕರುಣಾನಿಧಿಯೇ ಇದು ಎಂತಹ ಅಗ್ನಿ ಪರೀಕ್ಷೆ! ಹೇಗೆ ನಾನು ಇದರಿಂದ ಪಾರಾಗಲಿ? ನೀನು ನನ್ನ ಬದುಕಿನಲ್ಲಿ ಎನೆಂದು ಬರೆದಿದ್ದೀಯಾ ? ಏನಾದರೂ ಆಗಲಿ ... ನೀನು ನನ್ನ ಕೈ ಬಿಡಲಿಕಿಲ್ಲ ಎಂದವಳೇ ತನ್ನ ಹಾಸಿಗೆ ಚಾಚಿ ರೂಮಿನಲ್ಲಿ ಮಲಗಿದಳು.

ಹಕೀಮ್ ಏನೂ ತಿಳಿಯದವರಂತೆ ತನ್ನ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡನು. ಅಲ್ಲಿಂದಲೇ ತನ್ನ ಗೆಳೆಯನಿಗೆ ಕರೆ ಮಾಡಿದನು.

" ಹಲೋ ಕರೀಮ್... ನನ್ನ ಮೊದಲನೆಯ ಯೋಜನೆ ಯಶಸ್ವಿಯಾಗಿದೆ. ಇನ್ನೇನಿದ್ದರೂ ಎರಡನೆಯ ಹೆಜ್ಜೆ. ನೀವು ಕಾರು ತೆಗೆದುಕೊಂಡು ಬರುತ್ತೀರಲ್ವಾ?"

" ಹ್ಞಾಂ ಸರಿ... ನಾವು ಯಾವ ಹೊತ್ತಿಗೆ ಬರಬೇಕು? "

" ಈಗ ಬೇಡ... ಒಂದು ಒಂದು ಗಂಟೆ ಆಗುವಾಗ ಬನ್ನಿ. ಆಗ ಎಲ್ಲರೂ ಗಾಢವಾದ ನಿದ್ರೆಗೆ ಜಾರಿರುತ್ತಾರೆ. ಸರಿಯಾ ? "

" ಹ್ಞಾಂ... ಸರಿ ಕಣೋ... ಮತ್ತೇನಾದರೂ ಹೇಳಲಿದ್ದರೆ ಕರೆ ಮಾಡು. ನಾನು ಮತ್ತು ಅಝೀಝ್ ಕಾರು ತೆಗೆದುಕೊಂಡು ಬರುತ್ತೇವೆ ಎಂದು ಹೇಳಿ ಆತ ಕರೆ ಕಟ್ ಮಾಡಿದನು.

ಯಾವಾಗ ಒಂದು ಗಂಟೆ ಆಗುವುದೋ ಎಂದು ಕಾಯುತ್ತಾ ನಿಂತಿದ್ದನು.

ಇತ್ತ ರುಬೀನಾಳಿಗೆ ನಿದ್ದೆಯೇ ಹತ್ತಿರಲಿಲ್ಲ.. ಯಾವಾಗ ಏನಾಗುತ್ತದೋ ? ಹಕೀಮ್ ಏನು ಯೋಜನೆ ಹಾಕಿದ್ದಾನೋ ಎಂದು ಎನಿಸಿಯೇ ಎದೆ ಢವ ಢವ ಎಂದು ಬಡಿಯುತ್ತಿತ್ತು.

ಹಕೀಮ್ ಕಾಯುತ್ತಿದ್ದಂತೆಯೇ ಗಂಟೆ ಒಂದಕ್ಕೆ ಸಮೀಪಿಸುತ್ತಿತ್ತು. ಅಷ್ಟರಲ್ಲಿ ಕರೀಮ್ ನಾವು ಕಾರು ತಂದಿದ್ದೇವೆ ಎಂಬುದಾಗಿ ಕರೆ ಕೂಡ ಮಾಡಿದನು.

ಹಕೀಮ್ ಎದ್ದವನೇ ಮೆಲ್ಲನೆ ಹೋಗಿ ತನ್ನ ಅಕ್ಕ ಹಾಗೂ ಭಾವ ಮಲಗಿದ್ದ ಕೋಣೆಯ ಬಾಗಿಲನ್ನು ಮೆಲ್ಲನೆ ಲಾಕ್ ಮಾಡಿದನು.

ನಂತರ ಮೆಲ್ಲನೆ ಕಳ್ಳ ಹೆಜ್ಜೆ ಇಡುತ್ತಾ ರುಬೀನಾ ಮಲಗಿದಲ್ಲಿಗೆ ಬಂದನು.

ತನ್ನ ಬಳಿ ಯಾರೋ ಬಂದಂತಾದಾಗ ರುಬೀನಾ ಒಮ್ಮೆಲೇ ಎದ್ದು ಕುಳಿತಳು.

ಆಕೆಗೆ ಆ ಕತ್ತಲಲ್ಲಿಯೂ ಇದು ಹಕೀಮ್ ಬಂದಿರುವುದು ಎಂದು ತಿಳಿಯಿತು. ಆಕೆ ಇನ್ನೇನು ಬೊಬ್ಬೆ ಹೊಡೆಯಬೇಕು ಎನ್ನುವಷ್ಟರಲ್ಲಿ ಆತ ಆಕೆಯ ಬಾಯಿಯನ್ನು ಗಟ್ಟಿಯಾಗಿ ಮುಚ್ಚಿದನು.

ಯಾರೋ ತನ್ನ ಬಳಿ ಬಂದಂತೆ ಆದಾಗ ರುಬೀನಾ ಎದ್ದು ಕುಳಿತಳು. ಅದು ಹಕೀಮ್ ಎಂದು ಆಕೆಗೆ ತಿಳಿಯಿತು. ಆಕೆ ಬೊಬ್ಬೆ ಹೊಡೆಯುವಷ್ಟರಲ್ಲಿ ಆತನ ಬಲಿಷ್ಟವಾದ ಕೈಗಳು ಆಕೆಯ ಬಾಯಿಯನ್ನು ಗಟ್ಟಿಯಾಗಿ ಮುಚ್ಚಿದವು. ಆಕೆಗೆ ಉಸಿರುಗಟ್ಟಿದಂತಾಗುತ್ತಿತ್ತು.

ಆಕೆ ಅದೆಷ್ಟೋ ಕೊಸರಾಡಿದಳು. ಆದರೆ ಆತನ ಬಂಧನದಿಂದ ತಪ್ಪಿಸಲು ಆಗಲೇ ಇಲ್ಲ. ಆಯಿತು , ನನ್ನ ಜೀವನ ಇಲ್ಲಿಗೇ ಮುಗಿಯಿತು ಎಂದು ಆಕೆ ಅಂದುಕೊಂಡಳು. ಈ ಹುಚ್ಚ ನನ್ನ ಜೀವನವನ್ನು ಸರ್ವ ನಾಶ ಮಾಡುತ್ತಾನೆ ಅಂದುಕೊಂಡಳು.

ಆತ ಮೆಲ್ಲನೇ ಬಾಗಿಲ ಬಳಿ ಹೋದನು. ಬಾಗಿಲು ತೆರೆದು ಹೊರಗೆ ಹೋದನು.

ಅಷ್ಟರಲ್ಲಿ ರುಬೀನಾಳಿಗೆ ಅಲ್ಲೇ ಹೊರಗೆ ಇದ್ದ ಗಾಜಿನ ಬಾಟಲ್ ಒಂದು ಕಾಣಿಸಿತು. ಹೇಗೋ ಕೊಸರಾಡಿ ಆತನಿಗೆ ತಿಳಿಯದಂತೆ ಆ ಬಾಟಲ್ ತೆಗೆದಳು.

ತನ್ನೆಲ್ಲಾ ಶಕ್ತಿಯನ್ನು ಬಳಸಿಕೊಂಡು ಆತನ ಕಾಲಿಗೆ ಅದರಿಂದ ಚುಚ್ಚಿದಳು.

ಆತ ನೋವಿನಿಂದ ಹೊರಳಾಡಿದನು. ನೋವು ಸಹಿಸಲಾರದೆ ಆತ ತನ್ನ ಕೈಯ ಹಿಡಿತ ಸಡಿಲಗೊಳಿಸಿದನು.ಅದನ್ನೇ ಪ್ರಯೋಜನವಾಗಿ ತೆಗೆದ ರುಬೀನಾ ಆಕೆಯ ಹಿಡಿತದಿಂದ ತಪ್ಪಿಸಿ ಓಡತೊಡಗಿದಳು.

ಆದರೆ ಆಕೆಗೇನು ಗೊತ್ತು ? ಆತನ ಹೊರತು ಮತ್ತೆ ಇಬ್ಬರು ಅಲ್ಲಿ ಇರುವರು ಎಂದು.

ಕರೀಮ್ ಆಗಲೇ ಓಡಿಕೊಂಡು ಹಕೀಮ್ ಬಳಿ ಬಂದನು.

" ಅರೇ ನನ್ನನ್ನು ಹಿಡಿಯಬೇಡ. ಓಡಿ ಹೋಗಿ ಆಕೆಯನ್ನು ಹಿಡಿಯಿರಿ. ಆಕೆಯನ್ನು ಕರೆದುಕೊಂಡು ಸೀದಾ ಬಾಂಬೆಗೆ ಹೋಗಿರಿ. ನಾನು ಬೇರೆ ಒಂದು ಯೋಜನೆ ಮೊದಲೇ ಮಾಡಿದ್ದೆ. ಅದು ಯಶಸ್ವಿಯಾದ ತಕ್ಷಣ ಅಲ್ಲಿಗೆ ಬರುತ್ತೇನೆ. ಅದುವರೆಗೂ ಆಕೆಗೆ ಏನೊಂದೂ ತೊಂದರೆ ನೀಡಬಾರದು. ಸರಿ ನೀವು ಹೊರಡಿ.... ನಾನು ಕರೆ ಮಾಡುತ್ತೇನೆ ಸರಿಯಾ?.... ಎಂದು ಅವರನ್ನು ಅಲ್ಲಿಂದ ಕಳುಹಿಸಿದನು.

ಅಷ್ಟರಲ್ಲಿ ಅಝೀಝ್ ಆಕೆಯನ್ನು ಹಿಡಿದಿದ್ದನು. ಕರೀಂ ಓಡಿಹೋದವನೇ ಆತನ ಬಳಿ ಹಕೀಮ್ ಹೇಳಿದ ವಿಚಾರಗಳನ್ನು ಹೇಳಿದನು. ಅಝೀಝ್ ಸರಿ ಎಂದು ಒಪ್ಪಿಗೆ ನೀಡಿದವನೇ ಆಕೆಯನ್ನು ಕಾರಿನಲ್ಲಿ ಕುಳ್ಳಿರಿಸಿದನು.

" ನೋಡು ಹುಡುಗಿ... ನಮ್ಮ ಗೆಳೆಯ ನಿನ್ನನ್ನು ಇಷ್ಟಪಟ್ಟಿದ್ದಾನೆ. ನೀನು ಅದನ್ನು ಒಳ್ಳೆಯದರಲ್ಲಿ ಒಪ್ಪಿದರೆ ಆಗುತ್ತಿರಲಿಲ್ಲವೇ.. ಇಷ್ಟೆಲ್ಲಾ ರಾದ್ಧಾಂತ ಆಗಲು ಇತ್ತಾ? ಈಗ ನೋಡು. ನಾವು ನಿನಗೆ ಏನೂ ಮಾಡುವುದಿಲ್ಲ.. ಹೆದರಬೇಡ... ನಾವು ಹೇಳಿದಂತೆ ಕೇಳು ಎಂದು ಆಕೆಗೆ ಆಜ್ಞೆ ನೀಡಿದರು.

ದಯವಿಟ್ಟು ನನ್ನನ್ನು ನನ್ನ ಪಾಡಿಗೆ ಬಿಟ್ಟು ಬಿಡಿ. ನಾನು ನಿಮಗೆ ಮಾಡಿರುವ ಅನ್ಯಾಯ ಆದರೂ ಏನು? ನನ್ನನ್ನು ನಿಮ್ಮ ತಂಗಿ ಅಂತ ತಿಳಿದು ಬಿಟ್ಟು ಬಿಡಿ ಎಂದು ಆಕೆ ಗೋಗರಿಯುತ್ತಲೇ ಇದ್ದಳು.

" ನೋಡು , ನಾವು ನಿಮಗೇನೂ ಮಾಡುವುದಿಲ್ಲ. ನಮ್ಮ ಗೆಳೆಯನ ಇಚ್ಛೆಯಂತೆ ನಿನ್ನನ್ನು ಕರೆದುಕೊಂಡು ಹೋಗುತ್ತಿದ್ದೇವೆ ಅಷ್ಟೇ..."

ತಾನು ಎಷ್ಟು ಕೇಳಿದರೂ, ಗೋಗರೆದರೂ ಇವರು ಬಿಡುವುದಿಲ್ಲ ಎಂದು ಸುರಯ್ಯಾಳಿಗೆ ಅರ್ಥವಾಯಿತು. ಓ ದೇವನೇ ನೀನೆ ನನಗೆ ದಾರಿ ತೋರಿಸಬೇಕು ಎಂದು ಮನದಲ್ಲಿಯೇ ಬೇಡಿದಳು.

 ಇತ್ತ ಹಕೀಮ್ ಮೆಲ್ಲನೆ ತನ್ನ ಅಕ್ಕ ಮಲಗಿದ್ದ ರೂಮಿನ ಬಾಗಿಲನ್ನು ತೆರೆದನು. 

ಮೆಲ್ಲನೆ ಹೊರಬಂದು ಜೋರಾಗಿ ಬೊಬ್ಬಿಡಲು ಫ್ರಾರಂಭಿಸದನು.

ಆತನ ಬೊಬ್ಬೆ ಕೇಳಿ ಮನೆಮಂದಿಯೆಲ್ಲ ಎದ್ದು ಬಂದರು.

" ಏನೋ ಹಕೀಮ್ ? ಯಾಕೆ ಅಷ್ಟು ಬೊಬ್ಬೆ ಹೊಡೆಯುತ್ತಾ ಇದ್ದೀಯಾ ? ಹಸನ್ ನಿದ್ದೆಯಿಂದ ಎದ್ದು ಬಂದವರೇ ಕೇಳಿದರು.

" ಭಾವ ನಾನು ನೀರು ಕುಡಿಯಲು ಎಂದು ಎದ್ದು ಬಂದಾಗ ನಿಮ್ಮ ಮಗಳು ಬಾಗಿಲ ಬಳಿ ಯಾರದೋ ಜತೆ ಮಾತನಾಡುವುದು ಕಾಣಿಸಿತು. ಯಾರು ಎಂದು ವಿಚಾರಿಸಲು ಬಂದಾಗ ನೋಡಿ ಇಲ್ಲಿ ನನಗೆ ಬಾಟಲಿಯಿಂದ ಹೊಡೆದು ಆತನ ಜೊತೆ ಓಡಿಬಿಟ್ಟಳು.

ಆತನ ಮಾತು ಕೇಳಿ ಹಸನ್ ದಂಗಾದರು.
ಹಸನ್ ಅವರಿಗೆ ಹಕೀಮ್ ಮಾತುಗಳನ್ನು ನಂಬಲೇ ಆಗಲಿಲ್ಲ.

" ಏನೋ, ಏನು ಹೇಳುತ್ತಾ ಇದ್ದೀಯಾ? ಯಾರ ಜೊತೆ ಓಡಿ ಹೋದಳು? "

" ಅದೂ ನನಗೂ ಗೊತ್ತಿಲ್ಲ... ಹೋದದ್ದು ನಾನು ನೋಡಿದೆ. ತಡೆಯಲು ಎಂದು ಹೋದಾಗ ನೋಡಿ ನನ್ನ ಕಾಲಿಗೆನೇ ಹೊಡೆದು ಹೋಗಿದ್ದಾಳೆ."

ಅಷ್ಟರಲ್ಲಿ ಆಬಿದಾ ಒಂದು ಬಟ್ಟೆ ತಂದು ತಮ್ಮನ ಕಾಲಿಗೆ ಕಟ್ಟತೊಡಗಿದಳು.

" ಓಡಿ ಹೋಗುವುದಿದ್ದರೆ ಓಡಿ ಹೋಗುತ್ತಿದ್ದಳು. ನಿನಗ್ಯಾಕೋ ತಡೆಯುವ ಉಸಾಬರಿ? ನೋಡು ಕಣ್ಣಿನಲ್ಲಿ ರಕ್ತ ಇಲ್ಲದವರ ರೀತಿಯಲ್ಲಿ ಹೊಡೆದಿದ್ದಾಳೆ. ಬೇಡ ಬೇಡ ಎಂದರೂ ಆಕೆಯನ್ನು ಮನೆಗೆ ಕರೆದುಕೊಂಡು ಬಂದಿರಿ. ಓಡು ಹೋಗುವುದಿದ್ದರೆ ಎಲ್ಲಿಂದಾದರೂ ಓಡಿ ಹೋಗುತ್ತಿದ್ದಳು. ಇಲ್ಲಿಗೆ ಯಾಕೆ ಕರೆದುಕೊಂಡು ಬಂದ್ರಿ? ಈಗ ಊರಿನವರಿಗೆ ಏನೂಂತ ಹೇಳುತ್ತೀರಾ? "

ಆಬಿದಾ ತನ್ನ ಮಾತು ಮುಂದುವರೆಸುತ್ತಾ ಇದ್ದಳು. ಹಸನ್ ಆತಂಕದಲ್ಲಿ ಇದ್ದರು.
" ಅಯ್ಯೋ ಛೇ ! ಈ ಹುಡುಗಿ ಈ ರೀತಿ ಮಾಡುತ್ತಾಳೆ ಎಂದು ತಿಳಿದಿರಲಿಲ್ಲ. ಈಗ ಮುಕ್ತಾರ್ ಬಂದರೆ ನಾನು ಏನು ಹೇಳಲಿ? " 
ಅವರ ಆತಂಕ ಅದನ್ನು ಎನಿಸಿಯೇ ದುಗುಡವಾಗಿತ್ತು.

ಅಷ್ಟರಲ್ಲಿ ಹತ್ತಿರದ ಮನೆಯವರು ದಡಬಡ ಶಬ್ದ ಕೇಳಿ ಬಂದರು. ವಿಷಯ ಕಾಲ್ಗಿಚ್ಚಿನಂತೆ ಊರಿಡೀ ಹರಡಿತು.

ಅರೇ ನಫೀಸಾದರ ಮಗಳು ಯಾರದೋ ಜೊತೆ ಓಡಿ ಹೋಗಿದ್ದಾಳಂತೆ. ಜನರು ಒಬ್ಬೊಬ್ಬರಾಗಿ ಒಂದೊಂದು ಮಾತು ಆಡಲು ಪ್ರಾರಂಭಿಸಿದರು.  

" ಛೇ! ಒಳ್ಳೆಯ ಹುಡುಗಿ ಎಂದು ಎನಿಸಿದ್ದೆವು. ಆಕೆ ಈ ರೀತಿ ಮಾಡುತ್ತಾಳೆ ಎಂದು ಎನಿಸಿರಲಿಲ್ಲ" ಎಂದು ಹೇಳುತ್ತಿದ್ದರು.

ಇದನ್ನೆಲ್ಲ ನೋಡುತ್ತಿದ್ದ ಹಕೀಮ್ ಮುಖದಲ್ಲಿ ಮಂದಹಾಸ ಮೂಡಿತ್ತು. ಕೊನೆಗೂ ತನ್ನ ಯೋಜನೆ ಸಫಲಗೊಂಡಿತು ಎಂದು ಆತ ಭಾವಿಸಿದನು.

     *****************
  ಅರೇ ಇಷ್ಟೊಂದು ಬೆಳಿಗ್ಗೆ ಯಾರು ಕರೆ ಮಾಡುತ್ತಿದ್ದಾರೆ ಎಂದು ನೌಫಲ್ ತನ್ನ ಮೊಬೈಲ್ ನೋಡಿದನು.

ಅರೇ ಈ ಅಶ್ಫಾಕ್ ತನ್ನನ್ನು ಮಲಗಲೂ ಬಿಡುವುದಿಲ್ಲ ಎಂದು ಎನಿಸಿದವನೇ 

 " ಏನೋ ಬೆಳ್ಳಂಬೆಳಗ್ಗೆ ಕರೆ ಮಾಡುತ್ತಾ ಇದ್ದೀಯಾ? ಎಂದು ಕೇಳಿದನು.

" ಏನಿಲ್ಲ ಕಣೋ, ನೀನು ಇವತ್ತು ರುಬೀನಾಳ ಮನೆಗೆ ಹೋಗುತ್ತೀಯಲ್ವ? ಅವಳಿಗೆ ಎಲ್ಲಾ ವಿಚಾರಗಳನ್ನು ತಿಳಿಸುತ್ತೀಯಾ ಅಲ್ವಾ? " ಎಂದು ಅಶ್ಫಾಕ್ ಕೇಳಿದನು.

" ಅಯ್ಯೋ ! ಕೇಳುತ್ತೇನೆ ಮಾರಾಯಾ!!! ನಿನ್ನ ದಮ್ಮಯ್ಯ ಅನ್ನತ್ತೇನೆ. ಇನ್ನೊಂದು ಸಲ ಕರೆ ಮಾಡಬೇಡ ."

" ನಿನಗೇನು ಗೊತ್ತು? ನನ್ನ ಭಾವನೆಗಳು. ನಾನು ಆಕೆಯನ್ನು ಎಷ್ಟು ವರ್ಷಗಳ ಹಿಂದೆ ನೋಡಿರುವುದು. ಇಂದಿಗೂ ಆಕೆ ಹೇಗಿದ್ದಾಳೆ ಎಂಬುದೇ ನನಗೆ ತಿಳಿದಿಲ್ಲ. ಆದರೂ ನನ್ನ ಭಾವನೆಗಳು ಇಂದಿಗೂ ಜೀವಂತವಾಗಿಯೇ ಇದೆ. ಏನೋ ಒಂದು ಕಳೆದುಕೊಂಡ ದುಃಖ ನನಗೆ ಆಗುತ್ತಿದೆ. ಎಲ್ಲಾ ವಿಚಾರಗಳನ್ನು ಸರಿಯಾಗಿ ತಿಳಿ ಹೇಳಿದ ನಂತರ ಎಲ್ಲಾ ಸರಿಯಾಗಬಹುದಲ್ವಾ ? ಅದೇ ಒಂದು ಆಸೆ ಕಣೋ ಮನದಲ್ಲಿ... ಅದಕ್ಕೆ ನೋಡು ಬೆಳಿಗ್ಗೆಯೇ ನಿನಗೆ ಕರೆ ಮಾಡಿದ್ದು.."

" ಹ್ಞಾಂ... ಸರಿ, ಅವರ ಮನೆಗೆ ಹೋಗುತ್ತೇನೆ ಕಣೋ.. ಆದರೆ ಈಗ ಅಲ್ಲ . ಮತ್ತೆ ಹೋಗುತ್ತೇನೆ ಸರಿಯಾ ? "

" ಹ್ಞಾಂ ಸರಿ ಕಣೋ... ಈಗ ನನಗೆ ನನ್ನ ಗೆಳೆಯನನ್ನು ಕರೆದುಕೊಂಡು ಬರಲು ಇದೆ. ಸರಿ ಮತ್ತೆ ಮಾಡುತ್ತೇನೆ " ಎಂದು ಅಶ್ಫಾಕ್ ಕರೆ ಕಟ್ ಮಾಡಿದನು.

ಕರೆ ಕಟ್ ಮಾಡಿ ಕೆಳಗಿಡುವಷ್ಟರಲ್ಲಿ ಮತ್ತೆ ನೌಫಲ್ ಮೊಬೈಲ್ ರಿಂಗಣಿಸಿತು. ಅರೇ ಮತ್ತೆ ಯಾರು ಎಂದು ತೆಗೆದು ನೋಡುವಾಗ ತನ್ನ ಗೆಳೆಯ ಜಾಬಿರ್.

ಅರೇ ಇವನ್ಯಾಕೆ ಈ ಹೊತ್ತಿನಲ್ಲಿ ಕರೆ ಮಾಡಿದ ಎಂದುಕೊಂಡು ಕರೆ ರಿಸೀವ್ ಮಾಡಿದನು.

" ಹ್ಞಾಂ... ಏನೋ ವಿಷಯ ? "

" ನಿನಗಿನ್ನೂ ವಿಷಯ ತಿಳಿದಿಲ್ವಾ? ಮುಕ್ತಾರ್ ತಂಗಿ ರುಬೀನಾ ಯಾವನದೋ ಜೊತೆ ಓಡಿಹೋಗಿದ್ದಾಳಂತೆ."

ಜಾಬಿರ್ ಮಾತು ಕೇಳಿ ನೌಫಲಿಗೆ ಆಘಾತವಾಯಿತು.
ಏನೋ ನೀನು ಏನು ಹೇಳುತ್ತಾ ಇದ್ದೀಯಾ ? ನೀನು ತಮಾಷೆ ಮಾಡುತ್ತಾ ಇಲ್ಲಾ ತಾನೆ?"
ಇಲ್ಲಾ ಕಣೋ ಎಂದು ಹೇಳಿ ಆದಂತಹ ವೃತ್ತಾಂತ ತಿಳಿಸಿದನು.
ಇದನ್ನು ಕೇಳಿದ ನೌಫಲಿಗೆ ಸಿಡಿಲೆರಗಿದಂತಾಯಿತು.

ಅಶ್ಫಾಕ್ ತನ್ನ ಗಾಡಿ ಓಡಿಸುತಲಿದ್ದನು. ತನ್ನ ಗೆಳೆಯನನ್ನು ಕರೆದುಕೊಂಡು ಬರಲು ಎಂದು ಹೋಗುತ್ತಿದ್ದನು. ಅಷ್ಟರಲ್ಲಿ ಆತನ ಮೊಬೈಲ್ ರಿಂಗಣಿಸಿತು. ಸ್ಕ್ರೀನ್ ಮೇಲೆ ನೌಫಲ್ ನಂಬರ್ ಕಾಣಿಸುತಿತ್ತು.

" ಹಲೋ , ಹ್ಞಾಂ ಹೇಳೋ... ನಾನು ಕರೆ ಮಾಡಿದರೆ ಯಾಕೋ ಇಷ್ಟು ಬೇಗ ಮಾಡಿದಿ ಎಂದು ಕೇಳಿದ್ಯಾ.. ಈಗ ನೀನೇ ಮಾಡುತ್ತಾ ಇದ್ದೀಯಲ್ಲ ? ಏನು ಸಮಾಚಾರ ? 

ಎಂದು ಕರೆ ರಿಸೀವ್ ಮಾಡಿದವನೇ ಕೇಳಿದನು.

ನೌಫಲಿಗೆ ಏನೋ ದಿಗಿಲು.. ಹೇಗೆ ಹೇಳಲಿ ನಾನು ಎಂದು? ಹೇಗಾದರೂ ಮಾಡಿ ಹೇಳಲೇ ಬೇಕಲ್ಲವೇ ಎಂದುಕೊಂಡವನು..

" ಅಶ್ಫಾಕ್.. ಅದೂ ಅದೂ... "

" ಏನೋ ? ಯಾಕೆ ಹೀಗೆ ರಾಗ ಎಳೆಯುತ್ತಾ ಇದ್ದೀಯಾ? ಒಮ್ಮೆ ಹೇಳಿ ಬಿಡು "

 " ಹೇಗೆ ಹೇಳಬೇಕೋ ಅಂತ ಗೊತ್ತಾಗುತ್ತ ಇಲ್ಲಾ ಅಶ್ಫಾಕ್ .. ಹೇಳಿದರೆ ಸಹಿಸುವ ಶಕ್ತಿ ನಿನ್ನಲ್ಲಿ ಇದೆಯೇ ಎಂದು ಕೂಡ ನನಗೆ ತಿಳಿದಿಲ್ಲ. "

" ಏನಾಯಿತೋ ? ಯಾಕೆ ಹಾಗೆ ಹೇಳುತ್ತಾ ಇದ್ದೀಯಾ ? " ಆತಂಕದಿಂದಲೇ ಕೇಳಿದನು ಅಶ್ಫಾಕ್.

" ಅಶ್ಫಾಕ್ ಈಗ ತಾನೇ ನನ್ನ ಗೆಳೆಯ ಜಾಬಿರ್ ಕರೆ ಮಾಡಿದ. ಆತ ಹೇಳಿದ ವಿಷಯ ನನಗೆ ನಂಬಲೇ ಅಸಾಧ್ಯ ಆಯಿತು. ಆದರೆ ನಂಬಲೇ ಬೇಕು. ನೀನು ಕೂಡ ಹಾಗೆ ಅಶ್ಫಾಕ್ ಈ ವಿಷಯವನ್ನು ನಂಬಲೇ ಬೇಕು."

" ಏನು ಒಗಟಿನ ರೀತಿಯಲ್ಲಿ ಮಾತನಾಡುತ್ತಾ ಇದ್ದೀಯಾ? ನನಗೊಂದೂ ಅರ್ಥ ಆಗುತ್ತಿಲ್ಲ. ಸ್ವಲ್ಪ ಬಿಡಿಸಿ ಹೇಳು."

" ಏನಿಲ್ಲ ಅಶ್ಫಾಕ್... ನಿನ್ನೆ ರಾತ್ರಿ ರುಬೀನಾ ಯಾರದೋ ಜೊತೆ ಓಡಿ ಹೋಗಿದ್ದಾಳಂತೆ. "

ಅಶ್ಫಾಕಿಗೆ ಆ ಮಾತು ಕೇಳಿ ಸಿಡಿಲೆರಗಿದಂತಾಯಿತು. ಒಮ್ಮೆಲೆ ಆತನ ನಿಯಂತ್ರಣಕ್ಕೆ ಆತನ ಕಾರು ಸಿಗದೆ ರಸ್ತೆ ದಾಟಲು ಪ್ರಯತ್ನಿಸುತ್ತಿದ್ದ ಆ ಹೆಣ್ಣಿಗೆ ಗುದ್ದಿಯೇ ಬಿಟ್ಟನು.

ಗುದ್ದಿದ ನಂತರ ಒಮ್ಮೆಲೇ ಎಚ್ಚರಗೊಂಡಂತಾದನು.

 ಆ ಹೆಣ್ಣು ಈತ ಗುದ್ದಿದ ರಭಸಕ್ಕೆ ಮಾರುದ್ದ ಹೋಗಿ ಬಿದ್ದು ಬಿಟ್ಟಳು. ಅಯ್ಯೋ ಎಂತಹ ಪ್ರಮಾದವಾಯಿತು. ಮನಸ್ಸಿಗೆ ಆದ ಗಾಯದಲ್ಲಿ ಯಾರದೋ ಜೀವಕ್ಕೆ ಆಪತ್ತು ತಂದೆನಲ್ಲ ? ಏನು ಮಾಡುವುದು ಈಗ ಎಂದು ಯೋಚಿಸಿದವನೇ ಮೆಲ್ಲನೆ ಗಾಡಿಯಿಂದ ಕೆಳಗೆ ಇಳಿದನು.

ಅಷ್ಟರಲ್ಲಿ ವಾಕಿಂಗ್ ಮಾಡಲು ಎಂದು ಹೋಗುತ್ತಿದ್ದ ಜನಸ್ತೋಮ ಅಲ್ಲಿ ಸೇರಿತು.

ನೆರೆದವರು ಅಶ್ಫಾಕಿಗೆ ಬಯ್ಯಲು ಪ್ರಾರಂಭಿಸಿದರು.

" ಏನು ಯಾವ ಲೋಕದಲ್ಲಿ ಇದ್ದೀಯಾ? ಅಷ್ಟು ಕೂಡ ಕಣ್ಣು ಕಾಣೋದಿಲ್ಲವೇನು? " ಎಂದೆಲ್ಲಾ ಕೇಳಲು ಪ್ರಾರಂಭಿಸಿದರು.

ಅಷ್ಟರಲ್ಲಿ ಯಾರೋ ಒಬ್ಬರು ಈಗ ಮಾತನಾಡಿ ಪ್ರಯೋಜನವಿಲ್ಲ. ಆಕೆ ಇನ್ನೂ ಜೀವಂತವಾಗಿದ್ದಾಳೆ. ಮೊದಲು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಹೇಳಿದರು.

ತನ್ನಿಂದ ಆದ ಪ್ರಮಾದ ತಾನೇ ಸರಿ ಮಾಡಬೇಕು ಎಂದು ಎನಿಸಿದ ಅಶ್ಫಾಕ್ ಆ ಹುಡುಗಿಯನ್ನು ಎತ್ತಿಕೊಂಡು ಬಂದು ತನ್ನ ಕಾರಿನಲ್ಲಿ ಮಲಗಿಸಿದನು.

ಕಾರನ್ನು ವೇಗವಾಗಿ ಆಸ್ಪತ್ರೆಯತ್ತ ಕೊಂಡೊಯ್ದನು‌.
ಇಷ್ಟೆಲ್ಲಾ ಆದರೂ ಆತನ ತಲೆಯಲ್ಲಿ ರುಬೀನಾಳದೆ ವಿಚಾರ ತಿರುಗಾಡುತ್ತಿತ್ತು. ಅದೇ ರುಬೀನಾ ತನ್ನ ಕಾರಿನಲ್ಲಿ ಇರುವುದು ಎಂದು ಆತ ತಿಳಿಯದಾಗಿದ್ದನು....

ತನ್ನ ಕಾರಿನಲ್ಲಿ ಇರುವುದು ರುಬೀನಾ ಎಂದು ತಿಳಿಯದ ಅಶ್ಫಾಕ್ ಕಾರನ್ನು ಆಸ್ಪತ್ರೆಯತ್ತ ಚಲಾಯಿಸುತ್ತಲೇ ಇದ್ದನು.

ಆತನ ತಲೆಯ ತುಂಬಾ ರುಬೀನಾಳ ವಿಚಾರವೇ ತುಂಬಿತ್ತು.

ಒಮ್ಮೆ ನಡೆದ ಅವಘಡ ಸಾಕು, ಇನ್ನು ಮಾಡೋದು ಬೇಡ ಎಂದೆನಿಸಿ ತನ್ನ ತಲೆಯಲ್ಲಿ ಇದ್ದ ಯೋಚನೆಯನ್ನು ಬೇರೆಡೆಗೆ ಕೊಂಡೊಯ್ಯಲು ನಿರ್ಧರಿಸಿದನು.

ಹಾಸ್ಪಿಟಲ್ ಕೊಂಡು ಹೋದ ತಕ್ಷಣ ಆಕೆಯನ್ನು ತೀವ್ರ ನಿಗಾ ಘಟಕಕ್ಕೆ ತೆಗೆದುಕೊಂಡು ಹೋದರು.

ತಕ್ಷಣ ಹೊರಬಂದ ಸಿಸ್ಟರ್ " ಪೇಷೆಂಟ್ ಮನೆಯವರು ಯಾರಿದ್ದೀರಿ? ತಕ್ಷಣ ಆಪರೇಷನ್ ಆಗಬೇಕಾಗಿದೆ. ಇಲ್ಲೊಂದು ಸಹಿ ಹಾಕಿ ಮತ್ತೆ ಹಣದ ವ್ಯವಸ್ಥೆ ಮಾಡಿ ಎಂದು ಹೇಳಿದನು.

ನಡುಗುವ ಕೈಗಳಿಂದ ಅಶ್ಫಾಕ್ ಸಹಿ ಹಾಕಿದನು. ಹಣದ ವ್ಯವಸ್ಥೆಗೆ ಏನು ಮಾಡುವುದು? ತಂದೆಗೆ ಕರೆ ಮಾಡಿ ವಿಷಯ ಹೇಳಬೇಕು ಅಷ್ಟೇ ಎಂದು ತಂದೆಗೆ ಕರೆ ಮಾಡಿದನು.

     ******************

ಬೆಳಗಿನ ಜಾವ ಎಂದಿನಂತೆ ನಫೀಸಾದ ಎದ್ದು ನಮಾಝ್ ಮಾಡಿ ಮನೆಯ ಅಲ್ಪ ಸ್ವಲ್ಪ ಕೆಲಸ ಮಾಡಲು ತೊಡಗಿದರು.

ಅಷ್ಟರಲ್ಲಿ ಮುಕ್ತಾರ್ ಮೊಬೈಲ್ ರಿಂಗಣಿಸಲು ಪ್ರಾರಂಭಿಸಿತು.

ಅರೇ ಈ ಹುಡುಗ ಒಂದು ಮೊಬೈಲ್ ಬಿಟ್ಟು ಹೋಗಿ ನನಗೆ ಎಷ್ಟೊಂದು ಕಷ್ಟ ಎಂದು ಎನಿಸುತ್ತಲೇ ಮೊಬೈಲ್ ತೆಗೆದರು.

" ಹಲೋ ನಫೀಸಾದ ಇದು ನಾನು ಆಮೀನಾ... ನೀವು ಎಲ್ಲಿದ್ದೀರಾ? ಅರ್ಜೆಂಟಾಗಿ ನೀವು ಮತ್ತು ನಿಮ್ಮ ಮಗನು ಇಲ್ಲಿಗೆ ಬನ್ನಿರಿ".

" ಯಾಕೆ ಆಮೀನಾ? ಏನಾಯಿತು ? ಯಾಕೆ ಅಷ್ಟು ಅರ್ಜೆಂಟ್ ಆಗಿ ಕರೆಯುತ್ತಾ ಇದ್ದೀಯಾ?" ಆತಂಕದಿಂದಲೇ ಕೇಳಿದರು ನಫೀಸಾ..

"ಹ್ಞಾಂ... ಅದು ಫೋನಿನಲ್ಲಿ ಹೇಳುವ ವಿಚಾರ ಅಲ್ಲ. ನೀವು ಮನೆಗೆ ಬನ್ನಿ ಆಮೇಲೆ ನಾನು ಹೇಳುತ್ತೇನೆ. ಆದರೆ ಆದಷ್ಟು ಬೇಗ ಬನ್ನಿ" ಎಂದರು ಆಮಿನಾ.

" ಇಲ್ಲ ಆಮೀನಾ ಪರ್ವಾಗಿಲ್ಲ. ನೀನು ಹೇಳು ಏನು ವಿಚಾರ?"

" ಅದೂ... ನಮ್ಮ ರುಬೀನಾ ರಾತ್ರೆಯಿಂದ ಕಾಣೆಯಾಗಿದ್ದಾಳೆ. ಯಾರದೋ ಜೊತೆ ಓಡಿ ಹೋಗಿದ್ದಾಳೆ ಎಂದು ವಿಷಯ. "

"ಯಾ ಅಲ್ಲಾಹ್ !!!! ಏನಿದು ನಾನು ಕೇಳುತ್ತಿರುವುದು? ಇಲ್ಲ ಆಮೀನಾ ನನ್ನ ರುಬೀನಾ ಅಂತವಳು ಅಲ್ಲ. ಆಕೆ ಯಾರ ಜೊತೆಯೂ ಹೋಗಲಾರಳು. ಇಲ್ಲ ಈ ಮಾತು ನಾನು ನಂಬೋದಿಲ್ಲ..."
ನಫೀಸಾದ ಅಷ್ಟು ಹೇಳಬೇಕಾದರೆ ಯಾರ? ಏನು ನಂಬೋದಿಲ್ಲ ಎನ್ನುವ ಧ್ವನಿ ಕೇಳಿ ಬಂತು.

ಧ್ವನಿ ಕೇಳಿಬಂದತ್ತ ನೋಡಿದ ನಫೀಸಾದ ದಿಗ್ಭ್ರಮೆಗೆ ಒಳಗಾದರು.

ನಫೀಸಾದ ಧ್ವನಿ ಕೇಳಿಬಂದತ್ತ ತಿರುಗಿ ನೋಡಿದರು. ಮುಕ್ತಾರ್ ಅಲ್ಲಿ ನಿಂತಿದ್ದನು.
ಅರೇ ಅಲ್ಲಾಹ್! ಈತ ಇಷ್ಟು ಬೇಗನೆ ಬರಬೇಕೇ? ಎಂದು ಮನಸ್ಸಿನಲ್ಲೇ ಯೋಚಿಸುತ್ತಾ
" ಯಾರದೂ ಇಲ್ಲ ಮುಕ್ತಾರ್, ಆಮೀನಾದ ಕರೆ ಮಾಡಿದ್ದರು."

" ಇಷ್ಟು ಹೊತ್ತಿನಲ್ಲಿ ಯಾಕೆ ಕರೆ ಮಾಡಿದರು? ರುಬೀನಾಳಿಗೆ ನಾವು ಹೋಗುತ್ತೇವೋ ಇಲ್ಲವೋ ಎಂದು ಸಂಶಯ ಆಯಿತೋ ಏನೋ? ಅವಳು ಅಲ್ಲಿರಬೇಕಾದರೆ ಅವರು ಯಾಕೆ ಕರೆ ಮಾಡಿದರು ? ನೋಡುವಾ ನಾನು ಆಕೆಯಲ್ಲಿ ಮಾತನಾಡುತ್ತೇನೆ ಎಂದು ಹೇಳಿ ಮೊಬೈಲ್ ತೆಗೆದುಕೊಂಡನು.
 " ಹ್ಞಾಂ... ಆಮೀನಾದ ರುಬೀನಾ ಎಲ್ಲಿದ್ದಾಳೆ? ಆಕೆಯಲ್ಲಿ ಫೋನ್ ಕೊಡಿ " ಎಂದಾಗ ಆಮೀನಾದರಿಗೆ ಆತಂಕವಾಯಿತು.

" ಅದೂ ಮುಕ್ತಾರ್ ನಿನ್ನೆ ರಾತ್ರಿ ನಿನ್ನ ತಂದೆ ಆಕೆಯನ್ನು ಅವರ ಮನೆಗೆ ಕರೊದೊಯ್ದಿದ್ದರು. ಆಕೆಗೆ ಹೋಗಲು ಮನಸ್ಸೇ ಇರಲಿಲ್ಲ. ಹೋಗುವ ಮುಂಚೆ ಆಕೆ ನಿನಗೆ ಕರೆ ಮಾಡಿದ್ದಳು. ಆದರೆ ನೀನು ಕರೆ ತೆಗದಿರಲಿಲ್ಲ."
ಅಷ್ಟು ಕೇಳಬೇಕಾದರೆ ಆತನ ಮುಖ ಕೋಪದಿಂದ ಕುದಿಯತೊಡಗಿತು.

" ಏನು ಹೇಳುತ್ತಿದ್ದೀರಾ ಆಮೀನಾದ ನೀವು. ಛೇ !! ನಾನು ಆಕೆಯನ್ನು ಅಲ್ಲಿ ನಿಲ್ಲಿಸಿದ್ದೇ ತಪ್ಪಾಯಿತು. ನಾವು ಈಗಲೇ ಅಲ್ಲಿಗೆ ಬರುತ್ತೇವೆ. ಆಕೆಯನ್ನು ಮೊದಲು ಅಲ್ಲಿಂದ ಕರೆದುಕೊಂಡು ಬರಬೇಕು."

" ಆದರೆ ಮುಕ್ತಾರ್ ಆಕೆ ಅಲ್ಲಿ ಇಲ್ಲವಂತೆ...." ನಡುಗುವ ಧ್ವನಿಯಲ್ಲಿ ಹೇಳಿದರು ಆಮೀನಾದ.
" ಇಲ್ಲ ಅಂದರೆ ಏನು ಅರ್ಥ ? ಎಲ್ಲಿದ್ದಾಳೆ ಮತ್ತೆ ?"
" ರುಬೀನಾ ನಿನ್ನೆ ಅರ್ಧ ಗಂಟೆ ರಾತ್ರಿಗೆ ಮನೆಬಿಟ್ಟು ಯಾವನದೋ ಜೊತೆ ಓಡಿ ಹೋಗಿದ್ದಾಳಂತೆ. ಹೋಗಬೇಕಾದರೆ ಆಬಿದಾಳ ತಮ್ಮ ಹಕೀಮಿಗೆ ಹೊಡೆದು ಹೋಗಿದ್ದಾಳಂತೆ. ಹಾಗಂತ ಊರಿಡಿ ವಿಷಯ ಹಬ್ಬಿದೆ."

" ಏನು ಓಡಿ ಹೋಗುವುದಾ ಸಾಧ್ಯವಿಲ್ಲ.. ಆಕೆ ನನ್ನ ತಂಗಿ. ಅಂತಹ ಕೆಲಸ ಆಕೆಯ ಜೀವಮಾನದಲ್ಲಿ ಮಾಡಲಾರಳು. ನಾನು ಈಗಲೇ ಅಲ್ಲಿಗೆ ಬರುತ್ತೇನೆ. ಇದರಲ್ಲಿ ಹಕೀಮನದೇ ಕುತಂತ್ರ ಇದೆ ಎಂದು ನನಗೆ ಅನಿಸುತ್ತದೆ ಎಂದು ಹೇಳಿ ಕರೆ ಕಟ್ ಮಾಡಿ
ಅಮ್ಮಾ ನಡಿ ನಾವು ಹೋಗೋಣ ಎಂದು ನಫೀಸಾದರನ್ನು ಹೊರಡಲು ಹೇಳಿದನು.

     ******************
  ಹಕೀಮ್ ಖುಷಿಯಿಂದ ತೇಲಾಡುತ್ತಿದ್ದನು. ತನ್ನ ಪ್ರಯತ್ನ ಸಫಲ ಆಯಿತು ಎಂದು ಖುಷಿಪಡುತ್ತಿದ್ದನು.
 ಅಷ್ಟರಲ್ಲಿ ಆತನ ಮೊಬೈಲ್ ರಿಂಗಣಿಸಿತು . ತೆಗೆದು ನೋಡಿದಾಗ ಕರೀಮನ ನಂಬರ್.

ಅರೇ ಯಾಕೆ ಮಾಡಿದರು? ಯಾರಿಗಾದರೂ ನನ್ನ ಮೇಲೆ ಅನುಮಾನ ಮೂಡಬಹುದು ಎಂದು ಎನಿಸಿದವನೇ ಕರೆ ರಿಸೀವ್ ಮಾಡಿ ಮೆಲ್ಲನೆ ಮಾತನಾಡಲು ಪ್ರಾರಂಭಿಸಿದನು.
" ಏನೋ, ಏನಾಯಿತೋ? ಹೇಳು? ಎಂದು ಕೇಳಿದನು.
" ಹಕೀಮ್ ನಾವು ಚಹಾ ಕುಡಿಯಲು ಎಂದು ಕೆಳಗೆ ಇಳಿದಾಗ.. ಆಕೆ ತಪ್ಪಿಸಿಕೊಂಡಳು. ಇಡೀ ಹುಡುಕಾಡುತ್ತಿದ್ದೇವೆ. ಎಲ್ಲಿಯೂ ಕಾಣಿಸುತಿಲ್ಲ. ಅಷ್ಟು ಸ್ವಲ್ಪ ಸಮಯದಲ್ಲಿ ಈ ಗೊತ್ತು ಪರಿಚಯ ಇರದ ಊರಿನಲ್ಲಿ ಆಕೆ ಎಲ್ಲಿದ್ದಾಳೆ ಎಂಬುದೇ ತಿಳಿದಿಲ್ಲ ಎಂದು ಕರೀಂ ಹೇಳಿದನು.
   " ಏನು ಹೇಳುತ್ತಾ ಇದ್ದೀಯಾ ಕರೀಮ್.... ಎಲ್ಲಿ ಹೋದಳು? ಸರಿಯಾಗಿ ಹುಡುಕಿ ಕೊಂಡು ಬನ್ನಿ" ಎಂದು ಸಿಟ್ಟಿನಿಂದಲೇ ನುಡಿದನು.
" ಹುಡುಕುತ್ತಾ ಇದ್ದೇವೆ ಯಾವ ಕಡೆ ಹೊರಟಳು ಗೊತ್ತಾಗುತ್ತಾ ಇಲ್ಲ.."

ಅವರ ಮಾತನ್ನು ಅರ್ಧದಲ್ಲೇ ತುಂಡರಿಸಿದ ಹಕೀಮ್ " ಹೋಗಲು ಆಕೆಯ ಬಳಿ ಹಣವೇನೂ ಇಲ್ಲ. ಮುಂಬೈ ಬಾಷೆ ಬೇರೆ ಆಕೆಗೆ ಬರೋದಿಲ್ಲ. ಇದೆಲ್ಲದರ ಹೊರತಾಗಿ ಎಲ್ಲಿಗೆ ಹೋಗಿರುತ್ತಾಳೆ ಹೇಳು? ಸರಿಯಾಗಿ ಹುಡುಕಿ... " ಅಷ್ಟು ಹೇಳುವಷ್ಟರಲ್ಲಿ ಆತನಿಗೆ ತನ್ನ ಹಿಂದೆ ಯಾರದೋ ನೆರಳು ಗೋಚರಿಸಿತು.

ಹಕೀಮಿಗೆ ಯಾರದೋ ನೆರಳು ತನ್ನ ಹಿಂದೆ ಗೋಚರಿಸಿದಂತಾಯಿತು.
ಯಾರು ಎಂದು ಹಿಂತಿರುಗಿ ನೋಡಬೇಕಾದರೆ ಆಬಿದಾ ಹಾಗೂ ಹಸನ್ ಅಲ್ಲಿ ನಿಂತಿದ್ದರು.
" ನೀನು ಯಾರ ಜೊತೆ ಮಾತನಾಡುತ್ತಿ ದ್ದಿ ? "ಎಂದು ಹಸನ್ ಕೇಳಿದರು.
" ಅದೂ ನನ್ನ ಗೆಳೆಯರ ಜೊತೆ ಮಾತನಾಡುತ್ತಿದ್ದೆ. ಆಕೆ ಎಲ್ಲಿ ಹೋಗಿದ್ದಾಳೆ? ಎಲ್ಲಿಯಾದರೂ ಇದ್ದಾಳ ಎಂದು ಹುಡುಕಲು ಹೇಳುತ್ತಿದ್ದೆ."
" ಅಯ್ಯೋ ಹಕೀಮ್, ಹೋಗುವವಳು ಹೇಗೋ ಹೋಗಿದ್ದಾಳೆ. ಅದೂ ಅಲ್ಲದೆ ನಿನ್ನ ಮೇಲೆ ಕೈ ಮಾಡಿ ಹೋಗಿದ್ದಾಳೆ. ಅವಳ ಮೇಲೆ ನೀನೇಕೆ ಇಷ್ಟು ಕಾಳಜಿ ವಹಿಸುತ್ತೀಯಾ ? ಎಂದು ಆಬಿದಾ ತಮ್ಮನ ಮೇಲೆ ಕನಿಕರದಿಂದ ಹೇಳಿದಳು.

" ಏನಕ್ಕಾ ಏನೂಂತ ಮಾತು ಹೇಳುತ್ತಾ ಇದ್ದೀಯಾ ? ಆಕೆ ನನಗೆ ಏನಾದರೂ ಮಾಡಿರಬಹುದು... ಆದರೆ ಎಷ್ಟಾದರೂ ಆಕೆ ಭಾವನ ಮಗಳು ಅಲ್ಲವೇ? ಹಾಗಿರುವಾಗ ನಮ್ಮ ಮನೆಯ ಮಗಳಂತೆ. ಅದಕ್ಕೋಸ್ಕರ ಹುಡುಕಲು ಹೇಳುತ್ತಿದ್ದೆ. ಇನ್ನು ಆಕೆ ಊರಿಗೆ ಬಂದರೂ ಯಾರು ಆಕೆಯನ್ನು ಮದುವೆ ಆಗುತ್ತಾರೆ? ಹೇಳಿ..."
ಆತನ ಮೋಸದ ಮಾತುಗಳನ್ನು ಅರಿಯದ ಹಸನ್ ಆತನ ಮಾತುಗಳನ್ನು ನಿಜ ಎಂದುಕೊಂಡರು.

" ನೋಡಿ ರೀ ನನ್ನ ತಮ್ಮ ಎಷ್ಟೊಂದು ಒಳ್ಳೆಯವನು. ಆಕೆ ನಿಮ್ಮ ಮಗಳಾದರೂ ಎಷ್ಟೊಂದು ಯೋಚನೆ ಇದೆ ಆತನಿಗೆ ಆಕೆಯ ಮೇಲೆ. ನೀನು ಸುಮ್ಮನಿರು ಹಕೀಮ್. ಹೋದವಳಿಗೆ ಇಲ್ಲದ ಆಲೋಚನೆ ನಿನಗೆ ಏತಕೆ ? ಏನು ಬೇಕಾದರೂ ಮಾಡುತ್ತಾ ಇರಲಿ.. ನೀನು ಹುಡುಕಲು ಹೇಳಿದ್ದು ಸಾಕು.. ಇನ್ನೂ ಸುಮ್ಮನೆ ನಿನ್ನ ಸಮಯ ಹಾಳು ಮಾಡಬೇಡ. ರಾತ್ರಿ ನಿದ್ದೆ ಕಳೆದಿದ್ದೀಯಾ... ಹೋಗಿ ಮಲಗು" ಎಂದು ಆಬಿದಾ ತಮ್ಮನನ್ನು ಒಳಗೆ ಕಳುಹಿಸಿ ತಾನೂ ಒಳಗೆ ಹೋದಳು.

 ಒಳಗೆ ಹೋದವನ ತಲೆಯಲ್ಲಿ ಆತಂಕ ತುಂಬಿತು. ಛೇ ಈ ಅಝೀಝ್, ಕರೀಂ ಮಾಡಿದ ಕೆಲಸವಾದರೂ ಏನು? ಒಂದು ಹುಡುಗಿಯನ್ನು ಸಂಭಾಳಿಸಲು ಅವರಿಂದ ಆಗಲಿಲ್ಲ. ಎಲ್ಲಿರುವಳು? ಆ ಊರು ಆಕೆಗಂತೂ ಪರಿಚಯ ಇಲ್ಲ. ಆಕೆಗೆ ಪರಿಚಯ ಮಾಡಲು ಆಕೆಗೆ ಪರಿಚಯಸ್ಥರೂ ಇಲ್ಲ. ಮತ್ತೆಲ್ಲಿ ಹೋಗಲು ಸಾಧ್ಯ?
ಯೋಚಿಸುತ್ತಾ ಆತನ ತಲೆ ಹುಣ್ಣಾಗಿತ್ತು.

      *******************

   ಅಶ್ಫಾಕ್ ತನ್ನ ತಂದೆಗೆ ಕರೆ ಮಾಡಿದ್ದನು. ಅವರು ತನ್ನ ಎಲ್ಲ ಕೆಲಸ ಬಿಟ್ಟು ಆಸ್ಪತ್ರೆಗೆ ಬಂದಿದ್ದರು.
" ಏನು ಮಗನೇ? ಏನಿದು ನಿನ್ನ ಅವಾಂತರ? ಏನಾಗಿತ್ತು ನಿನಗೆ? "
ಎಂದು ಮಗನನ್ನು ಕೇಳಿದರು.
" ಏನಿಲ್ಲಪ್ಪಾ .. ಹೇಗಾಯಿತು ಎಂದೇ ತಿಳಿಯಲಿಲ್ಲ."
" ಸರಿ ಬಿಡು.. ಈಗ ಆಗಿದ್ದು ಆಗೋಯ್ತಲ್ಲ... ಜೀವಕ್ಕೇನೂ ಅಪಾಯ ಇಲ್ಲ ತಾನೇ ? "
" ಗೊತ್ತಿಲ್ಲ.. ಹಣದ ವ್ಯವಸ್ಥೆ ಮಾಡಿ ಎಂದು ಡಾಕ್ಟರ್ ಹೇಳಿದ್ರು. ಆಮೇಲೆ ಏನೂ ತಿಳಿದಿಲ್ಲ. ಹೆಚ್ಚಿನಾಂಶ ಸರ್ಜರಿ ಮಾಡುತ್ತಾ ಇರಬೇಕು."
" ಆಕೆಯ ಕಡೆಯವರು ಯಾರಾದರೂ ಬಂದಿದ್ದಾರೆಯೇ ? "
" ಇಲ್ಲಾ ಅಪ್ಪಾ... ನನ್ನ ಕಾರಿಗೆ ಸಿಗಬೇಕಾದರೆ ಆಕೆ ಒಬ್ಬಳೇ ಇದ್ದಳು. ಆಕೆಯ ಕೈಯಲ್ಲಿ ಮೊಬೈಲ್ ಅಥವಾ ಬ್ಯಾಗ್ ಏನೂ ಇರಲಿಲ್ಲ.. ಆಕೆಗೆ ಎಚ್ಚರ ಬಂದ ನಂತರವಷ್ಟೇ ಕೇಳಬೇಕು.
ಅವನ ಮಾತು ಕೇಳುವಾಗ ಅವನ ತಂದೆ ಮುಹಮ್ಮದ್ ಹಾಜಿಗೆ ಆಘಾತವಾಯಿತು.

 ಈ ಬೆಳಿಗ್ಗೆ ಈ ಹುಡುಗಿ ಕೈಯಲ್ಲಿ ಮೊಬೈಲ್ ಕೂಡ ಇಲ್ಲದೆ ಎಲ್ಲಿಗೆ ಹೋಗುತ್ತಿದ್ದಳು. ಈಗ ಮನೆಯವರಿಗೆ ತಿಳಿದರೆ ಕಂಪ್ಲೇಂಟ್ ಎಲ್ಲ ಕೊಟ್ಟರೆ ಕಷ್ಟ. ಏನು ಮಾಡುವುದು ಎಂದು ಯೋಚಿಸುತ್ತಾ ಇದ್ದರು.

 ಅಷ್ಟರಲ್ಲಿ ಆಪರೇಷನ್ ರೂಮಿನಿಂದ ಡಾಕ್ಟರ್ ಹೊರಗೆ ಬಂದರು. 
ಮುಹಮ್ಮದ್ ಹಾಜಿ ಡಾಕ್ಟರ್ ಬಳಿ ಮಾತನಾಡಿದರು.
"ಜೀವಕ್ಕೇನೂ ಅಪಾಯ ಇಲ್ಲ. ಆದರೆ ತಲೆಗೆ ಬಲವಾಗಿ ಪೆಟ್ಟು ಬಿದ್ದುದರಿಂದ ನೆನಪಿನ ಶಕ್ತಿ ಕಳೆದುಕೊಳ್ಳುವ ಸಾಧ್ಯತೆ ಇದೆ."

ಡಾಕ್ಟರ್ ಮಾತು ಕೇಳಿದ ಮುಹಮ್ಮದ್ ಹಾಜಿ ಹಾಗೂ ಅಶ್ಫಾಕ್ ಗಾಬರಿಗೊಂಡರು.

ಅರೇ ಮೊದಲೇ ಹುಡುಗಿ ಯಾರು ಏನು ಎಂದು ತಿಳಿದಿಲ್ಲ. ಮತ್ತೆ ಜ್ಞಾಪಕ ಶಕ್ತಿ ಕಳೆದರೆ ಏನು ಮಾಡುವುದು?
ಅವರಿಗೆ ಎನಿಸಿದಾಗಲೇ ಆತಂಕವಾಯಿತು
ಮುಹಮ್ಮದ್ ಹಾಜಿ ತನ್ನ ಡ್ರೈವರ್ ಕರೆದು ಹೇಳಿದರು " ನೀನು ಆಕ್ಸಿಡೆಂಟ್ ಆದ ಜಾಗದಲ್ಲಿ ಹೋಗಿ ನೋಡು. ಏನಾದರೂ ಸುಳಿವು ಸಿಗಬಹುದು"

ಅದರಂತೆ ಡ್ರೈವರ್ ಆ ಜಾಗದಲ್ಲಿ ಏನಾದರೂ ಇದೆಯೇ ಎಂದು ನೋಡಲು ಹೋದನು. ಆತನಿಗೆ ಅಲ್ಲಿ ಅಂತಹ ಸುಳಿವು ಏನೂ ಸಿಗಲಿಲ್ಲ.
 ಆತ ಮುಹಮ್ಮದ್ ಹಾಜಿಗೆ ಮತ್ತೆ ಕರೆ ಮಾಡಿದನು.
" ಇಲ್ಲಾ... ಇಲ್ಲಿ ಅಂತಹ ಸುಳಿವು ಏನೂ ಸಿಗಲಿಲ್ಲ. ಅದರಂತೆ ಇಲ್ಲಿ ಯಾವ ಹುಡುಗಿಯೂ ನಾಪತ್ತೆಯಾದ ಪ್ರಕರಣ ಬೆಳಕಿಗೆ ಬಂದಿಲ್ಲ. "

ಡ್ರೈವರ್ ಹೇಳಿದ ಮಾತು ಕೇಳಿ ಮುಹಮ್ಮದ್ ಹಾಜಿಯವರಿಗೆ ಆಶ್ಚರ್ಯ ಆಯಿತು.
ತಲೆಗೆ ಏಟು ಕೂಡ ಬಿದ್ದಿದೆ. ಎಲ್ಲಿಯವಳು ಎಂದು ಕಂಡುಹಿಡಿಯುವ ತನಕ ಏನು ಮಾಡೋದು? ಪೋಲೀಸ್ ಕೇಸು ಎಲ್ಲಾ ಮಾಡಿದರೆ ತುಂಬಾ ಕಷ್ಟ. ಮೊದಲೇ ಯಾರು ಏನು ಎಂದು ಎಲ್ಲಾ ಮರೆತಿರುವ ಆ ಹುಡುಗಿಗೆ ಯಾರಾದರೂ ಬಂದು ನಮ್ಮ ಮನೆಯವರು ಎಂದು ಹೇಳಿದರೆ ನಾವು ನಂಬುವುದಾದರೂ ಹೇಗೆ? ಬೇಡ ಆಕೆಯ ಜೀವನದ ಜತೆ ಆಟ ಆಡುವುದು ಬೇಡ"
ಮುಹಮ್ಮದ್ ಹಾಜಿಯ ಮನಸ್ಸು ಆಲೋಚಿಸುತ್ತಲೇ ಇತ್ತು. 

ತಂದೆ ಏನೋ ಯೋಚಿಸುತ್ತ ಇರುವುದನ್ನು ನೋಡಿದ ಅಶ್ಫಾಕ್ ತಂದೆಯ ಬಳಿ ಹೋದನು.

" ಕ್ಷಮೆ ಇರಲಿ ಅಪ್ಪಾ... ನನ್ನಿಂದಾಗಿ ನಿಮಗೆ ಆತಂಕ ಹೆಚ್ಚಾಗಿದೆ. ನಿಮ್ಮ ಆತಂಕಕ್ಕೆ ನಾನು ಕಾರಣನಾದೆ ಅಲ್ವಾ?" ಹೇಳಬೇಕಾದರೆ ಆತನಿಗೆ ದುಃಖ ಆಯಿತು.

" ಇಲ್ಲಾ ಮಗನೇ ತಪ್ಪು ಎಲ್ಲರಿಂದ ನಡೆಯುತ್ತದೆ. ಆದರೆ ಅದರಿಂದ ಇನ್ನೊಬ್ಬರ ಬಾಳು ಹಾಳಾಗಬಾರದು. ಈಗ ನಾನು ಆ ಹುಡುಗಿಯ ಮುಂದಿನ ಬಾಳಿನ ಬಗ್ಗೆ ಯೋಚಿಸುತ್ತಾ ಇದ್ದೇನೆ. " ಎಂದು ಮಗನ ಬಳಿ ಮುಹಮ್ಮದ್ ಹಾಜಿ ಹೇಳಿದರು.

ಮತ್ತೆ ಮಾತು ಮುಂದುವರೆಸುತ್ತಾ " ನೀನೇನು ಆತಂಕ ಪಡಬೇಡ. ಆ ಹುಡುಗಿಗೆ ಮೊದಲು ಪ್ರಜ್ಞೆ ಬರಲಿ. ನಂತರ ಮುಂದಿನದನ್ನು ನೋಡೋಣ.

ಅಪ್ಪನ ಮಾತು ಕೇಳಿ ಮನಸಿಗೆ ಸ್ವಲ್ಪ ಸಮಾಧಾನ ಆಯಿತು.
 ಯಾ ಅಲ್ಲಾಹನೇ ಏನು ಇದು? ಪ್ರಾಣಕ್ಕಿಂತ ಹೆಚ್ಚಾಗಿ ಇಷ್ಟಪಟ್ಟಿದ್ದ ಹುಡುಗಿ ಬೇರೊಬ್ಬನ ಜೊತೆ ಓಡಿ ಹೋದರೆ ಇನ್ನೊಂದು ಹುಡುಗಿಯ ಜೀವನ ನನ್ನಿಂದಾಗಿ ಆಪತ್ತಿನಲ್ಲಿದೆ. ಏನು ಮಾಡಲಿ ನಾನು? ಓ ರುಬೀನಾ ನೀನು ಏಕೆ ಈ ರೀತಿ ಮಾಡಿದೆ ಹೇಳು? ಯೋಚಿಸಿ, ಯೋಚಿಸಿ ಆತನ ತಲೆ ಹುಣ್ಣಾಗಿತ್ತು.

      ****************
   ಮುಕ್ತಾರ್ ಆತನ ಅಮ್ಮನನ್ನು ಕರೆದುಕೊಂಡು ಊರಿಗೆ ಬರುತ್ತಿದ್ದಾನಂತೆ. ಖಂಡಿತವಾಗಿಯೂ ಆತ ಇಲ್ಲಿಗೆ ಬಾರದೆ ಇರಲಾರ. ಹೇಗೆ ಆತನ ಕೋಪವನ್ನು ಎದುರಿಸುವುದು? "

ಹಸನ್ ಆಬಿದಾಳಲ್ಲಿ ಕೇಳುವುದು ಒಳಗಿದ್ದ ಹಕೀಮಿಗೆ ಕೇಳಿಸುತ್ತಿದ್ದವು.
" ಬಂದರೆ ಬರಲಿ ನೀವು ಯಾಕೆ ಹೆದರುತ್ತೀರಾ? ಏನು ನಾವು ಆಕೆಯನ್ನು ಓಡಿಸಿದ್ದಾ? ಆಕೆಯಾಗಿಯೇ ಹೋಗಿದ್ದಲ್ವಾ? ಎಂದು ಆಬಿದಾಳು ಹೇಳುವುದು ಕೇಳಿಸಿತು."
ಅಂದರೆ ಮುಕ್ತಾರ್ ಬರುತ್ತಿದ್ದಾನೆ ಆತ ಬಾರದಂತೆ ಮಾಡಬೇಕು? ಹೇಗೆ ಎಂದು ತನ್ನ ಮನದಲ್ಲಿಯೇ ಯೋಜನೆ ಹಾಕಲು ಪ್ರಾರಂಭಿಸಿದನು ಹಕೀಮ್.

ಮುಕ್ತಾರ್ ತನ್ನ ಅಕ್ಕನ ಮನೆಗೆ ಬರುವ ವಿಷಯ ತಿಳಿದ ಹಕೀಮ್ ತಕ್ಷಣ ಒಂದು ಯೋಜನೆ ಹಾಕಿದನು.

ತಕ್ಷಣ ಆತ ಅಝೀಝಿಗೆ ಕರೆ ಮಾಡಿದನು.
" ನೋಡು ಅಝೀಝ್ ಆ ಮುಕ್ತಾರ್ ಇಲ್ಲಿ ಬರುತ್ತಾನಂತೆ. ಆತ ಬರುವ ಮುಂಚೆ ನಾನೊಂದು ಪ್ಲಾನ್ ಮಾಡಿದ್ದೇನೆ. " 
 " ಏನು ಪ್ಲಾನ್ ಹೇಳು ?"
" ನೋಡು ನಿನಗೆ ಹೆಣ್ಣುಮಕ್ಕಳು ಮಾತನಾಡುವ ರೀತಿ ಮಾತನಾಡಲು ಬರುತ್ತದೆ ಅಲ್ವಾ ಅಂತೆಯೇ ನೀನು ಮಾತನಾಡಬೇಕು."
" ಯಾರ ಜೊತೆ ? "
" ಆ ಮುಕ್ತಾರ್ ಜೊತೆ. ನೀನು ರುಬೀನಾಳ ಧ್ವನಿ ಕೇಳಿದ್ದೀಯಲ್ಲ ಅದರಂತೆ ಮಾತನಾಡಬೇಕು ಸರೀನಾ? "
" ಯಾಕೋ ಇದು ರಿಸ್ಕ್ ಅಂತ ಅನಿಸಲ್ವಾ? ಆತನಿಗೆ ಗೊತ್ತಾಗಬಹುದು ಅಲ್ವಾ? "
" ಇಲ್ಲ, ಆತನಿಗೆ ಈಗ ಒಂದು ಕಡೆ ಆತಂಕ ಹೆಚ್ಚಾಗಿದ್ದರೆ, ಇನ್ನೊಂದು ಕಡೆ ಸಿಟ್ಟು ಕೂಡ ಅಧಿಕವಾಗಿದೆ. ಅಂತಹ ಸಮಯದಲ್ಲಿ ಮನುಷ್ಯ ಯಾವುದನ್ನೂ ಆಲೋಚಿಸುವ ಸ್ಥಿತಿಯಲ್ಲಿ ಇರುವುದಿಲ್ಲ. . ತಾನು ಕೇಳಿದ್ದನ್ನೇ ನಿಜ ಅಂದುಕೊಳ್ಳುತ್ತಾರೆ."

 " ಹಾಗಾದರೆ ನಾನು ಈಗ ಏನು ಮಾಡಬೇಕು ?"
" ನೀನು ಆತನಿಗೆ ಕರೆ ಮಾಡು.. ಕರೆ ಮಾಡಿ ಆತನೊಂದಿಗೆ ಮಾತನಾಡು. ನೋಡೋಣ ಮುಂದೆ ಏನಾಗುತ್ತದೆ ಎಂದು ಸರೀನಾ?"
ಎಂದು ಹಕೀಮ್ ಕೇಳಿದಾಗ ಅಝೀಝ್ ಒಪ್ಪಿದನು.
ಅದರಂತೆ ನಂಬರ್ ಪಡೆದು ಆತ ಮುಕ್ತಾರ್ ನಂಬರಿಗೆ ಡಯಲ್ ಮಾಡಿದನು.
 ಬೈಕಿನಲ್ಲಿ ಬರುತ್ತಿದ್ಧ ಮುಕ್ತಾರ್ ಬೈಕ್ ಸೈಡಿನಲ್ಲಿ ನಿಲ್ಲಿಸಿದನು.

" ಹಲೋ ಮುಕ್ತಾರ್, ಇದು ನಾನು ರುಬೀನಾ... ನೋಡು ನಾನು ಯಾರ ಬಲವಂತದಿಂದ ಇಲ್ಲಿಗೆ ಬಂದಿಲ್ಲ. ನಾನು ಒಬ್ಬ ಹುಡುಗನನ್ನು ಅತಿಯಾಗಿ ಪ್ರೀತಿಸುತ್ತಿದ್ದೆ. ಆದರೆ ನಿಮ್ಮಲ್ಲಿ ಹೇಳುವ ಧೈರ್ಯ ಇರಲಿಲ್ಲ. ಹೇಳಿದರೆ ನೀವು ಒಪ್ಪುತ್ತಲೂ ಇರಲಿಲ್ಲ.ಅದಕ್ಕೆ ಎಲ್ಲವನ್ನೂ ಬಿಟ್ಟು ಓಡಿ ಬಂದೆ. ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ. ನನ್ನನ್ನು ಖುಷಿಯಿಂದ ಜೀವಿಸಲು ಬಿಡಿ " ಎಂದು ಮುಕ್ತಾರ್ ಬೇರೆ ಮಾತನಾಡುವ ಮುಂಚೆಯೇ ಕರೆ ಕಟ್ ಆಯಿತು.

ಮುಕ್ತಾರ್ ಮತ್ತೆ ಕರೆ ಮಾಡಿದಾಗ ಆ ನಂಬರ್ ಸ್ವಿಚ್ಡ್ ಆಫ್ ಬರುತ್ತಿತ್ತು.

" ಯಾರದು ಮಗನೇ ಫೋನ್? " ಹಿಂದೆ ಕೂತಿದ್ದ ನಫೀಸಾದ ಕೇಳಿದರು.

" ನಿನ್ನ ಮಗಳದು ಅಮ್ಮಾ..." ಎಂದು ಆತ ಫೋನಿನಲ್ಲಿ ಏನೆಲ್ಲಾ ಕೇಳಿಸಿದ್ದಾನೆ ಅದೆಲ್ಲವನ್ನು ಅಮ್ಮನಲ್ಲಿ ಹೇಳಿದ. 

" ಏನು ಹೇಳುತ್ತಾ ಇದ್ದೀಯಾ ಮುಕ್ತಾರ್ ನಾನಿದನ್ನು ನಂಬಲಾರೆ" ಎಂದರು ನಫೀಸಾದ.
      *****************
ಮುಹಮ್ಮದ್ ಹಾಜಿ ಮತ್ತು ಅಶ್ಫಾಕ್ ಆಸ್ಪತ್ರೆಯಲ್ಲಿ ಕುಳಿತು ಕಾಯುತ್ತಾ ಇದ್ದರು.
ಅಷ್ಟರಲ್ಲಿ ಹೊರಬಂದ ಡಾಕ್ಟರ್ ನಿಮ್ಮ ಪೇಷಂಟಿಗೆ ಪ್ರಜ್ಞೆ ಬಂದಿದೆ ಎಂದರು.

ಮುಹಮ್ಮದ್ ಹಾಜಿ ಹಾಗೂ ಅಶ್ಫಾಕ್ ಒಳಗೆ ಹೋದರು. ಯಾಕೋ ಅಶ್ಫಾಕಿಗೆ ಆ ಮುಖವನ್ನು ನೋಡುವಾಗ ತನ್ನ ಮೈಯಿಡೀ ಮಿಂಚು ಸಂಚಾರವಾದಂತಾಯಿತು.

ಅರೇ ಯಾಕೆ ಈ ರೀತಿ ಆಗುತ್ತಿದೆ. ಈ ಮುಗ್ದ ಮುಖವನ್ನು ನಾನು ಈ ಮುಂದೆ ನೋಡಿಲ್ಲ. ಛೇ! ಅನ್ಯಾಯವಾಗಿ ರುಬೀನಾಳನ್ನು ಎನಿಸಿ ಈ ಹೆಣ್ಣಿನ ಬದುಕಿನಲ್ಲಿ ಚೆಲ್ಲಾಟ ಆಡಿದೆನಲ್ಲಾ... ನೆನೆದು ಭಾವುಕನಾದನು.

ಮುಹಮ್ಮದ್ ಹಾಜಿ ಆಕೆಯ ಹತ್ತಿರ ನಡೆದರು.
"ಮಗಳೇ ...."ಎಂದು ಪ್ರೀತಿಯಿಂದ ಕರೆದರು
ಆಕೆ ಯಾರದೋ ಅಪರಿಚಿತರಂತೆ ಅವರನ್ನು ನೋಡಿಟ್ಟಳು.
" ಯಾರು ನಾನು ? ನನಗೆ ಒಂದೂ ನೆನಪಾಗುತ್ತ ಇಲ್ಲವಲ್ಲ" ಆಕೆ ಆತಂಕದಿಂದಲೇ ನುಡಿದರು.

ಮುಹಮ್ಮದ್ ಹಾಜಿ ಡಾಕ್ಟರ್ ಮುಖ ನೋಡಿದರು. ಡಾಕ್ಟರ್ ಆ ಮೊದಲೇ ಅವರಿಗೆ ಎಲ್ಲಾ ವಿಷಯ ತಿಳಿ ಹೇಳಿದ್ದರು.
" ಹ್ಞಾಂ ನೀನು ನನ್ನ ಮನೆಯ ಸೊಸೆಯಾಗಲಿರುವ ಹುಡುಗಿ.. ನೋಡು ನಿನ್ನ ಮದುವೆಯಾಗಲಿರುವ ಗಂಡು ಎಂದು ಅಶ್ಫಾಕಿನನ್ನು ತೋರಿಸಿದರು.

ಇದನ್ನು ಕೇಳಿದ ಅಶ್ಫಾಕಿಗೆ ತಲೆಗೆ ಹೊಡೆದಂತಾಯಿತು. ಆತ ಮಾತನಾಡುವ ಮುನ್ನವೇ ಆತನ ತಂದೆ ಮಾತನಾಡಬೇಡ ಎಂದು ಸಂಜ್ಞೆ ಮಾಡಿದರು.
ಅರೇ ಅಪ್ಪಾ... ಇದೇನು ನೀವು ಹೇಳುವುದು. ನನ್ನ ಬದುಕಿನಲ್ಲಿ ರುಬೀನಾಳಿಗೆ ಮಾತ್ರ ಜಾಗವಿತ್ತು. ಆಕೆಯೇ ಇಲ್ಲ ಅಂದ ಮೇಲೆ ನಾನು ಯಾವ ಹೆಣ್ಣನ್ನೂ ಮದುವೆಯಾಗಲಾರೆ " ಎಂದು ತನ್ನ ಮನಸ್ಸಿನಲ್ಲೇ ಅಶ್ಫಾಕ್ ಅಂದುಕೊಂಡನು.
"ಅಯ್ಯೋ ಇಲ್ಲಾ ನನಗೆ ಏನೂ ನೆನಪಾಗುತ್ತಾ ಇಲ್ಲ. ಹಾಗಿದ್ದಲ್ಲಿ ನನಗೆ ಹೆತ್ತವರು, ಒಡಹುಟ್ಟಿದವರು ಯಾರೂ ಇಲ್ವಾ? " ಪ್ರಶ್ನಿಸಿದಳು ರುಬೀನಾ.

" ಇಲ್ಲಾಮ್ಮ, ನಿನಗೆ ನಾವೇ ಎಲ್ಲಾ... ನೀನು ನಮ್ಮ ಮನೆಯಲ್ಲಿಯೇ ಬೆಳೆದು ದೊಡ್ಡವಳಾದದ್ದು. "
" ಹಾಗಾದರೆ ನನ್ನ ಹೆಸರು ಏನು? ನಾನು ಯಾಕೆ ಆಸ್ಪತ್ರೆಗೆ ಬಂದಿದ್ದೇನೆ? "
 ನಿನ್ನ ಹೆಸರು ಮಶೂದ. ಅದೂ ನಿನ್ನೆ ನೀನು ಮಹಡಿಯಿಂದ ಬಿದ್ದು ಸಣ್ಣ ಗಾಯವಾಯಿತು. ಹಾಗೆ ನಿನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇವೆ."

" ಆದರೂ ನನಗ್ಯಾಕೋ ಏನೂ ನೆನಪಾಗುತ್ತಾ ಇಲ್ಲ.."
 ಮಹಡಿಯಿಂದ ಬಿದ್ದು ನಿನ್ನ ಜ್ಞಾಪಕ ಶಕ್ತಿ ಒಂದು ಚೂರು ಕಳೆದಿದೆ ಅಷ್ಟೇ... ಕ್ರಮೇಣ ಸರಿಯಾಗಬಹುದು ..."
" ಸರಿ ಮಶೂದ ನೀನು ಏನೂ ಆತಂಕ ಪಡಲು ಹೋಗಬೇಡ. ನಾವಿದ್ದೇವೆ ನಿನ್ನ ಜೊತೆ. ನೀನು ರೆಸ್ಟ್ ತೆಗೆದುಕೊಳ್ಳು." ಎಂದು ಹೇಳಿ ಮುಹಮ್ಮದ್ ಹಾಜಿ ಹೊರನಡೆದರು.

ಅಶ್ಫಾಕ್ ಒಮ್ಮೆ ಮಶೂದಳ ಮುಖ ನೋಡಿ ತಂದೆಯ ಬೆನ್ನ ಹಿಂದೆಯೇ ನಡೆದನು.
" ಅಪ್ಪಾ ಯಾಕೆ ನೀವು ಸುಳ್ಳು ಹೇಳಿದಿರಿ? ಅದೂ ಕೂಡ ಅಷ್ಟೊಂದು ದೊಡ್ಡ ಸುಳ್ಳು. "
" ನಾನು ಹೇಳಿದುದರಲ್ಲಿ ಒಂದು ಬಲವಂತವಾದ ಕಾರಣ ಇದೆ ಮಗನೇ... ನಿನ್ನಿಂದ ತಪ್ಪಾಗಿದೆ. ನೀನೇ ಅದನ್ನು ಸುಧಾರಿಸಬೇಕು."
"ಕಾರಣವಾ? ಏನು ಕಾರಣ ಅಪ್ಪಾ.... ನನ್ನಿಂದ ತಪ್ಪಾಗಿದೆ ನಿಜ. ಆದರೆ ಅದಕ್ಕೋಸ್ಕರ ಗುರುತು , ಪರಿಚಯ ಇಲ್ಲದವಳು ನನ್ನ ಪತ್ನಿ ಎಂದರೆ ಹೇಗೆ?"ಎಂದು ದುಃಖದಿಂದಲೇ ಕೇಳಿದನು ಅಶ್ಫಾಕ್.

ತನ್ನ ಅಪ್ಪ ಆ ರೀತಿ ಹೇಳಿದ್ದು ಅಶ್ಫಾಕಿಗೆ ಆಶ್ಚರ್ಯ ಆಯಿತು.
ಹೊರಬಂದ ಆತ " ಯಾಕೆ ಅಪ್ಪಾ ಈ ರೀತಿ ಕೇಳಿದ್ದು ? " ಎಂದು ಹೇಳಿದ.

" ಮತ್ತೆ ಆ ರೀತಿ ಹೇಳದೆ ನಾನೇನು ಮಾಡಲಿ? ಆಕೆ ಎಲ್ಲಿಯವಳು ಎಂದು ಯಾರಿಗೂ ತಿಳಿದಿಲ್ಲ. ಒಂದು ವೇಳೆ ಆಕೆ ಏನಾದರೂ ಈ ರೀತಿ ಜ್ಞಾಪಕ ಶಕ್ತಿ ಕಳೆದುಕೊಂಡಿದ್ದಾಳೆ  ಎಂದು ತಿಳಿದರೆ ಆಕೆಗೆ ಪರಿಚಯ ಇಲ್ಲದವರೂ ಕೂಡ ಆಕೆಯ ಪರಿಚಯ ಎಂದು ಹೇಳಿಕೊಂಡು ಬರಬಹುದು. ಅದಲ್ಲದೆ ಆಕೆ ಈ ಊರಿನವಳಲ್ಲ."

" ಅದು ಹೇಗೆ ಹೇಳುತ್ತೀರಾ ಅಪ್ಪಾ ನೀವು? "
" ಯಾಕೆಂದರೆ ನಾನು ಆಕೆಯ ಮಾತಿನ ಶೈಲಿಯನ್ನು ಗಮನಿಸಿದೆ. ಆಕೆಯ ಭಾಷೆಯ ಶೈಲಿ ಇಲ್ಲಿಯ ರೀತಿ ಇಲ್ಲ. ಎಲ್ಲೋ ಕಲಿತ ಹಾಗಿದೆ. ಹಾಗಿರುವಾಗ ಆಕೆಯ ನಿಜವಾದ ಹೆತ್ತವರು ಸಿಗುವ ತನಕ ಆಕೆ ನಮ್ಮ ಮನೆಯಲ್ಲಿ ಇರಲಿ.

" ಹಾಗೇ ಮಗಳಾಗಿಯೇ ಇರಬಹುದಿತ್ತು ಅಲ್ವಾ? ನನ್ನ ಪತ್ನಿಯಾಗಿ ಯಾಕೆ?"
 ಯಾಕೆಂದರೆ ತಪ್ಪು ನಡೆದಿರೋದು ನಿನ್ನಿಂದ. ನಾಳೆಯ ದಿನ ಯಾರೂ ಆಕೆಯನ್ನು ಮದುವೆಯಾಗಲು ಮುಂದೆ ಬಾರದಿದ್ದರೆ ಆಗ ನೀನೇ ಆಕೆಯನ್ನು ಮದುವೆಯಾಗಬೇಕು.

ತಂದೆಯ ಮಾತು ಕೇಳಿ ಒಮ್ಮೆಲೇ ಆಘಾತಗೊಂಡನು.
ಅಲ್ಲಾ ಏನಾಗುತ್ತಿದೆ ನನ್ನ ಬದುಕಿನಲ್ಲಿ? ಸ್ವತಃ ತಾನು ಯಾರು ಎಂದು ತಿಳಿಯದ ಈ ಮಶೂದಳನ್ನು ನಾನು ಮದುವೆಯಾಗಬೇಕೇ? ಸಣ್ಣಂದರಿಂದಲೇ ಇವಳೇ ನನ್ನ ಪತ್ನಿ ಎಂದು ಕನಸು ಕಾಣುತ್ತಿದ್ದ ಆ ಹುಡುಗಿಯನ್ನು ಮರೆಯಬೇಕೇ ? ಮರೆಯಲೇಬೇಕಲ್ಲವೇ ಯಾಕೆಂದರೆ ಆಕೆ ಅದೀಗಾಗಲೇ ಯಾರದೋ ಜೊತೆ ಓಡಿ ಆಗಿದೆ. ವಿಷಯ ಏನಾಯಿತು ಎಂದು ಒಮ್ಮೆ ನೌಫಲ್ ಬಳಿ ಕೇಳೋಣ ಎಂದು ನೌಫಲ್ ನಂಬರ್ ಒತ್ತಿದನು.
" ಹ್ಞಾಂ ನೌಫಲ್, ವಿಷಯ ಏನಾಯಿತೋ ?  ಏನಾದರೂ ಸುಳಿವು ಸಿಕ್ಕಿತಾ ? "

" ಏನೋ ಅಶ್ಫಾಕ್ ನೀನು ಇನ್ನೂ ಆ ಹೆಣ್ಣಿನ ಗುಂಗಿನಲ್ಲಿ ಇದ್ದೀಯಾ ?ಆ ಹೆಣ್ಣು ನಿನ್ನನ್ನು ಮರೆತು ಅದೀಗಾಗಲೇ ಎಷ್ಟು ದೂರ ಆತನ ಜೊತೆ ಹೋಗಿದ್ದಾಳೆ ಏನೋ? ..."
" ಇಲ್ಲ ಕಣೋ.. ಅದು ನಿಜ ಆಗಿರಲಿಕ್ಕಿಲ್ಲ. ಯಾರೋ ಯಾಮಾರಿಸಿದ್ದು ಆಗಿರಬಹುದು. ಯಾಕೋ ನನ್ನ ಮನಸ್ಸು ಒಪ್ಪುತ್ತಿಲ್ಲ ಕಣೋ ಈ ವಿಚಾರ ? "

" ಇಲ್ಲಾ ಅಂದ್ರೆ ಹೇಳಬಹುದಿತ್ತೋ ಏನೋ , ಆದರೆ ಈಗ ಏನೆಂದರೆ ಆಕೆಯೇ ಖುದ್ದಾಗಿ ಮುಕ್ತಾರಿಗೆ ಕರೆ ಮಾಡಿದ್ದಾಳಂತೆ. ತಾನು ಹೋಗಿದ್ದೇನೆ ಎಂದು. ಹಾಗಿರುವಾಗ ಏನು ಮಾಡುವುದು ನಂಬದೆ ಹೇಳು ? "
ಅಶ್ಫಾಕಿಗೆ ತಾನು ನಿಂತ ನೆಲವೇ ಕುಸಿದಂತಾಯಿತು. ಉಳಿದಿದ್ದ ಭರವಸೆಯೂ ನಂದಿ ಹೋದಂತಾಯಿತು.

ಅಷ್ಟೊತ್ತಿಗೆ ನೌಫಲ್ ಮಾತು ಮುಂದುವರಿಸಿದವನೇ 
" ಅದಿರಲಿ ಯಾಕೆ ಇಷ್ಟು ಹೊತ್ತು ಸುದ್ದಿ ಇರಲಿಲ್ಲ?.." ಎಂದು ಕೇಳಿದನು.
ಅಶ್ಫಾಕ್ ತನ್ನಿಂದ ಆದ ಅವಾಂತರಗಳನ್ನು ಹೇಳಲು ಪ್ರಾರಂಭಿಸಿದನು. ಅಷ್ಟರಲ್ಲಿ ನೆಟ್ವರ್ಕ್ ಇಲ್ಲದೆ ಆ ಕಡೆಯಿಂದ ಕರೆ ಕಟ್ ಆಯಿತು. 

ಮತ್ತೆ ಕರೆ ಮಾಡಿದಾಗ ಕಾಲ್ ಸಿಗದೇ ಇದ್ದಾಗ ಅಶ್ಫಾಕ್ ಸೀದಾ ಮಶೂದ ಇದ್ದ ಕೋಣೆಯೊಳಗೆ ಹೋದನು.
ಆಕೆ ಒರಗಿಕೊಂಡು ಏನೋ ಚಿಂತಿಸುತ್ತಿದ್ದಳು. ಯಾರೋ ಬಂದಂತಾದಾಗ ಒಮ್ಮೆಲೇ ಭಯಗೊಂಡಂತೆ ಆದಳು.

   *******************
     ಹಕೀಮ್ ಮೊಬೈಲ್ ಒಂದೇ ಸಮನೆ ರಿಂಗಣಿಸುತ್ತಿತ್ತು. 
ಮೊಬೈಲ್ ತೆಗೆದವನೇ " ಹ್ಞೂಂ ಹೇಳು ಕರೀಂ "..ಎಂದನು.
" ಏನಾಯಿತು ನಿನ್ನ ಐಡಿಯಾ? ಆತ ನಂಬಿದ್ದಾನ? "
" ಹ್ಞಾಂ ನಂಬಿದ್ದಾನೆ. ಆತ ಇಲ್ಲಿ ಬರಲಿಲ್ಲ ಕೇಳಲು. ಬರುವುದಾದರೂ ಯಾವ ಮುಖ ಇಟ್ಟುಕೊಂಡು ಬರುತ್ತಾನೆ? " ಎಂದು ಹೇಳಿ ನಕ್ಕನು.

" ಅದಲ್ಲ ವಿಚಾರ ... ನಿನ್ನ ಬಳಿ ಮುಖ್ಯ ಸಮಾಚಾರ ಹೇಳಲು ಇದೆ."
" ಮುಖ್ಯ ಸಮಾಚಾರವಾ ಏನದು?"
ಕರೀಂ ಮಾತನಾಡುತ್ತಾ ಹಕೀಮ್ ಬಳಿ  " ಬೆಳಿಗ್ಗೆ ಇಲ್ಲಿ ಒಂದು ಆಕ್ಸಿಡೆಂಟ್ ಆಗಿದೆ. ಯಾಕೆ ಅದು ರುಬೀನಾಳೇ ಆಗಿರಬಾರದು? " ಎಂದು ಕೇಳಿದನು.
ಹಕೀಮಿಗೆ ಆಶ್ಚರ್ಯ ಆಯಿತು.  ಅರೇ ಏನು ಹೇಳುತ್ತಾ ಇದ್ದೀಯಾ ? ನೀನು?

" ಹ್ಞಾಂ, ನಾವು ಇಲ್ಲಿ ಓಣಿಯೊಳಗೆ ಒಂದು ದಾರಿ ಹೋಗಿತ್ತು. ಅದರಲ್ಲಿ ಸೀದಾ ಬಂದೆವು. ಬಂದು ನೋಡಬೇಕಾದರೆ ಅದು ಹೈವೇಗೆ ಸಂಪರ್ಕ ಹೊಂದಿತ್ತು. ಅಲ್ಲಿ ವಿಚಾರಿಸಿದಾಗ ಬೆಳಗ್ಗಿನ ಜಾವ ಅಲ್ಲೊಂದು ಆಕ್ಸಿಡೆಂಟ್  ಆಗಿದೆ. ಆತನೇ ಖುದ್ದು ಹಾಸ್ಪಿಟಲ್ ತೆಗೆದುಕೊಂಡು ಹೋಗಿದ್ದಾನೆ ಎಂದು ಹೇಳಿದರು. ಯಾಕೋ ರುಬೀನಾಳೆ ಆ ಗಲ್ಲಿಯಿಂದಾಗಿ ಬಂದಿರಬೇಕು ಎಂದು ಎನಿಸಿತು.

" ಹೌದಾ ಹಾಗಿದ್ದರೆ ಎಲ್ಲಾ ಹಾಸ್ಪಿಟಲ್ ಅಲ್ಲಿ ಹುಡುಕಾಡಿ ನೋಡಿ. ನಾವೇ ಆಕೆಯ ಕಡೆಯವರು ಎಂದು ಹೇಳಿ. ಒಳ್ಳೆಯದರಲಿ ಹೇಳಿದಾಗ ಆಕೆ ಕೇಳಲಿಲ್ಲ ಅಲ್ಲವೇ ? ಇಷ್ಟೊಂದು ಆಟ ಆಡಿಸಿದಳಲ್ಲಾ.. ಇನ್ನು ನಾನು ಆಕೆ ಕೈಗೆ ಸಿಕ್ಕರೆ ಸುಮ್ಮನೆ ಬಿಡುವುದಿಲ್ಲ."
" ಏನು ಮಾಡಬೇಕು ಎಂದು ಇದ್ದೀಯಾ ? "

" ಇದುವರೆಗೂ ಆಕೆಯನ್ನು ಮದುವೆಯಾಗಬೇಕು ಎಂದು ಇದ್ದೆ. ಆದರೆ ಇನ್ನು ಮುಂದೆ ಹಾಗಲ್ಲ. ಆಕೆಯ ಜೀವನವನ್ನು ಸರ್ವ ನಾಶ ಮಾಡುತ್ತೆನೆ. ಅತ್ತ ಬದುಕಲೂ ಬಾರದು, ಇತ್ತ ಸಾಯಲೂ ಬಾರದು. ಅಷ್ಟು ಕಾಟ ಕೊಟ್ಟಳಲ್ಲ.  ಆಕೆಯನ್ನು ಹಾಗೇ ಮಾಡಬೇಕು."

" ಸರಿ, ನಾವೀಗ ಆಕೆಯನ್ನು ಯಾವ ಆಸ್ಪತ್ರೆಯಲ್ಲಿ ಇದ್ದಾಳೆ ಎಂದು ಕಂಡುಹಿಡಿಯುತ್ತೇವೆ. ಖಂಡಿತವಾಗಿಯೂ ಇಲ್ಲೇ ಪಕ್ಕದಲ್ಲಿ ಇರಬೇಕು ಆಕೆ. ತುಂಬಾ ದೂರದ ಆಸ್ಪತ್ರೆಗೆ ಹೋಗಿರಲಿಕಿಲ್ಲ "ಎಂದು ಹೇಳಿ ಕರೆ ಕಟ್ ಮಾಡಿದನು.

    *****************
     ಅಶ್ಫಾಕ್ ಮಶೂದ ಇದ್ದ ರೂಮಿನೊಳಗೆ ಶತಪತ ಹಾಕುತ್ತಿದ್ದನು.  

ತಲೆಯ ತುಂಬಾ ರುಬೀನಾಳದೆ ವಿಚಾರ. ಆಕೆ ಕರೆ ಮಾಡಿದ್ದು ನಿಜ ಇರಬಹುದಾ? ಯಾರ ಜೊತೆ ಹೋಗಿರಬಹುದು ಎಂದೆಲ್ಲಾ ಯೋಚಿಸುತ್ತಾ ಇದ್ದನು. 
ಮಶೂದ ಆತನನ್ನು ನೋಡಿ " ಯಾಕೆ ಹೀಗೆ ಆತಂಕ ಪಡುತ್ತಾ ಇದ್ದೀರಾ ? ಎಂದು ಕೇಳಿದಳು.

" ನಿನಗೇಕೆ ಅದೆಲ್ಲ ಅಧಿಕ ಪ್ರಸಂಗ? ನೀನು ಯಾರು ಅದು ಕೇಳಲು? ನೋಡು ನಮ್ಮ ಅಪ್ಪನಿಗೆ ಮಾತ್ರ ನಿನ್ನನ್ನು ಸೊಸೆ ಮಾಡಿಕೊಳ್ಳಲು ಮನಸು ಇರುವುದು. ನನಗೇನೂ ನಿನ್ನ ಮದುವೆ ಆಗುವ ಮನಸು ಇಲ್ಲ ಎಂದು ಹೇಳುವ ಎಂದುಕೊಂಡನು.

ಆದರೆ ಯಾಕೆ ಮತ್ತೆ ಅಪಾಯ ಆದರೆ ಅದಕ್ಕೆ ನನ್ನ ತಂದೆ ಖಂಡಿತವಾಗಿಯೂ ಮತ್ತೇನಾದರೂ ಯೋಚಿಸಿಯೇ ಶಿಕ್ಷೆ ಕೊಡುತ್ತಾರೆ ಎಂದು ಸುಮ್ಮನಾದನು.
" ಏನಿಲ್ಲ...  ಹಾಗೇ ಸುಮ್ಮನೆ ಯೋಚಿಸುತ್ತಾ ಇದ್ದೆ."

" ನೀವು ಯೋಚಿಸುವ ರೀತಿ ನೋಡಿದರೆ  ನಿಮಗೆ ನನ್ನನ್ನು ಮದುವೆಯಾಗಲು ಇಷ್ಟವಿಲ್ಲ. ನೀವು ಯಾರನ್ನೋ ಪ್ರೀತಿಸುತ್ತಿದ್ದೀರಾ ಅನ್ನುವಂತಿದೆ. ಆದರೆ ಹಾಳಾದ ಮರೆವು ನೋಡಿ ಏನನ್ನೂ ನೆನಪಿಗೆ ತರಿಸುತ್ತಿಲ್ಲ. "

" ಹಾಗೇನಿಲ್ಲ ನಿನ್ನ ಪಾಡಿಗೆ ನೀನು ಇದ್ದು ಬಿಡು. ನನ್ನ ವಿಷಯದಲ್ಲಿ ಮೂಗು ತೂರಿಸಲು ಬರಬೇಡ " ಎಂದನು.

ಆತನ ಧ್ವನಿಯಲ್ಲಿ ವ್ಯತ್ಯಾಸ ಆದುದನ್ನು  ನೋಡಿದ ಮಶೂದ ಮತ್ತೇನು ಹೇಳಲಿಲ್ಲ.
ಒಂದಂತೂ ಆಕೆಗೆ ದೃಢವಾಯಿತು. ಈತನಿಗೆ ಏನೋ ನನ್ನ ಮೇಲೆ ಕೋಪ ಇರಬೇಕು. ಅಥವೋ ಅಪ್ಪನ ಬಲವಂತಕ್ಕೆ ನನ್ನನ್ನು ಮದುವೆಯಾಗುತ್ತಾ ಇದ್ದಾನ ಹೇಗೋ...?   ಎಂದು ಯೋಚಿಸುತ್ತಲೇ ಇದ್ದಳು.

ಅಷ್ಟರಲ್ಲಿ ಅವಳ ದೃಷ್ಟಿ ಎದುರಿನ ಕೋಣೆಯ ಮುಂದೆ ಅಲೆದಾಡುತ್ತಿದ್ದ ಆ ಎರಡು ಮನುಷ್ಯ ಆಕೃತಿಗಳತ್ತ ಚಲಿಸಿತು. ಯಾಕೋ ಅವಳ ತಲೆಯ ತುಂಬಾ ಚಿತ್ರ - ವಿಚಿತ್ರ ರೂಪ ಪಡೆದು ಕೊಂಡಂತಾಯಿತು. ಇವರನ್ನ ನೋಡಿದ್ದೇನೆ, ನೋಡಿದ್ದೇನೆ ಎಂದು ಕೊಂಡಂತಾಯಿತು. ಅಷ್ಟರಲ್ಲಿ ಅವಳ ಮನಸ್ಸಿನಲ್ಲಿ ಆ ಚಿತ್ರಣವು ಸ್ಪಷ್ಟವಾಯಿತು.

ರುಬೀನಾ ಯಾರದೋ ಜೊತೆ ಓಡಿ ಹೋಗಿದ್ದಾಳೆ . ಮುಕ್ತಾರಿಗೆ ತಿಳಿಸಿದ್ದಾಳಂತೆ ಈ ಮಾತು ಅಶ್ಫಾಕ್ ಬಾತಿಶಿಗೆ ಹೇಳುವುದನ್ನು ರುಬೀನಾ ಕೇಳಿ ಇವರು ತನ್ನ ಬಗ್ಗೆಯೇ ಮಾತನಾಡುತ್ತಾ ಇದ್ದಾರೆ ಎಂದು ಅವಳಿಗೆ ಅನಿಸಿತು.

ಅಂದರೆ ಇದೆಲ್ಲವೂ ಹಕೀಮನದೇ ಯೋಜನೆ. ಆತನೇ ತನ್ನ ಮನೆಗೆ ಯಾರಿಂದಲಾದರೂ ಕರೆ ಮಾಡಿಸಿರಬಹುದು.
ನನ್ನ ಆಲೋಚನೆಯಂತೆಯೇ ಈತ ಅದೇ ಅಶ್ಫಾಕ್. ಅಂದರೆ ಆತ ನನ್ನನ್ನು ಪ್ರೀತಿಸುತ್ತಾ ಇದ್ದಾನೆಯೇ. ಮತ್ತೆ ಆ ಹುಡುಗಿ ಕರೆ ಮಾಡಿ ತಿಳಿಸಿದ್ದು. ಅಯ್ಯೋ ಎಲ್ಲವೂ ಗೊಂದಲಮಯವಾಗಿದೆ.
ನಾನೇ ರುಬೀನಾ ಅಂತ ಅವನಲ್ಲಿ ಈಗ ಹೇಳಿದರೆ ಅವನು ಖಂಡಿತವಾಗಿಯೂ ನಂಬಲಾರ. ಯಾಕೆಂದರೆ ನಾನು ಆತ ಆಡಿದ ಮಾತುಕತೆ ಕೇಳಿಸಿ ಹಾಗೆ ಹೇಳಿದ್ದು ಎಂದು ಆತ ಅಂದುಕೊಳ್ಳುವನು.

ಅತ್ತ ಮುಕ್ತಾರ್ ಬಳಿ ಕರೆ ಮಾಡಿ ಹೇಳಿದರೆ ಓಡಿ ಹೋದವನು ಕೈ ಕೊಟ್ಟನೋ ಹೇಗೆ. ಅದಕ್ಕೆ ಕರೆ ಮಾಡಿದಳು ಅಂದುಕೊಳ್ಳುವರು. ಒಟ್ಟಿನಲ್ಲಿ ಬದುಕು ಅನ್ನುವುದು ಜಟಕಾ ಬಂಡಿ ರೀತಿಯೇ ಆಗಿದೆ.

" ಹೇಯ್ ಓಡಿಹೋದವಳ ಬಗ್ಗೆ ನೀನು ಯಾಕೆ ಯೋಚನೆ ಮಾಡುತ್ತೀಯಾ? ಆಕೆ ಓಡಿ ಹೋಗಿ ಆಗಿದೆ. ಆಕೆಗೆ ನಿನ್ನ ಬಗ್ಗೆ ಒಂಚೂರೂ ಕನಿಕರ ಇಲ್ಲ. ಅಂದಮೇಲೆ ನೀನು ಯಾಕೆ ಆ ಹುಡುಗಿಯ ಬಗ್ಗೆ ಯೋಚಿಸುತ್ತೀಯಾ?"
ಅಷ್ಟರಲ್ಲಿ ಬಾಶಿತ್ ಗಮನ ರುಬೀನಾ ಮೇಲೆ ಹೊರಳಿತು. ಅದನ್ನು ಗಮನಿಸಿದ ರುಬೀನಾ ತಾನು ಕಿವಿಗೊಡುತ್ತಾ ಇದ್ದೆನೆಂದು ಎನಿಸುವುದು ಬೇಡ ಎಂದು ಮಲಗಿದ ಹಾಗೆ ಮಾಡಿದಳು.
ಆಕೆ ನಿದ್ದೆ ಮಾಡಿದ್ದಾಳೆ ಎಂದು ಎನಿಸಿದ ಬಾಶಿತ್ ಈ ಹುಡುಗಿಯ ವಿಚಾರ ಏನು ಎಂದು ಕೇಳಿದನು.

" ನಿನ್ನನ್ನು ಕರೆದುಕೊಂಡು ಬರಲು ಎಂದು ಬೆಳಿಗ್ಗೆ ರೈಲ್ವೆ ಸ್ಟೇಷನ್ ಬಳಿ ಬರುತ್ತಿದ್ದೆ. ಅಷ್ಟರಲ್ಲಿ ನೌಫಲ್ ಕರೆ ಮಾಡಿದ. ರುಬೀನಾ ಓಡಿ ಹೋಗಿದ್ದಾಳೆ ಅನ್ನೋ ವಿಚಾರವನ್ನು ಹೇಳಿದ. ನನಗೆ ಆದ ಆತಂಕದಲ್ಲಿ ಗಾಡಿಯ ಕಂಟ್ರೋಲ್ ಸಿಗದೆ ಈ ಹುಡುಗಿಗೆ ತಾಗಿಸಿದೆ. ಅದರಿಂದ ಆಕೆಗೆ ಬಲವಂತವಾದ ಪೆಟ್ಟು ಬಿದ್ದು ಆಕೆ ನೆನಪಿನ ಶಕ್ತಿ ಕಳೆದುಕೊಂಡಿದ್ದಾಳೆ. ಇನ್ನು ಇದು ನಾನೇ ಮಾಡಿದ ತಪ್ಪು ಎಂದು ಎನಿಸಿದ ನನ್ನ ತಂದೆ ನನ್ನಿಂದಲೇ ಸರಿಯಾಗಬೇಕು ಎಂದು ಆಕೆಗೆ ಆಕೆಯ ಹೆಸರು ಮಶೂದ ಹಾಗೂ ಆಕೆ ನನ್ನ ಮದುವೆಯಾಗುವ ಹೆಣ್ಣು ಎಂದು ಸುಳ್ಳು ಹೇಳಿದ್ದಾರೆ. ಆಕೆ ಎಲ್ಲಿಯವಳು ಎಂದು ಗೊತ್ತಿಲ್ಲ. ಒಟ್ಟಿನಲ್ಲಿ ಎಲ್ಲವೂ, ಏನೋ ಆಗುತ್ತಿದೆ ನನ್ನ ಬದುಕಿನಲ್ಲಿ."

" ಅರೇ ನೀನೇನು ಆತಂಕ ಪಡಬೇಡ. ಆಕೆ ನೆನಪು ಶಕ್ತಿ ಬರುವತನಕ. ಮತ್ತೆ ಎಲ್ಲಾ ಸರಿಯಾಗಬಹುದು. ಆಕೆಯನ್ನೊಮ್ಮೆ ನೋಡು ಆಕೆ ತುಂಬಾ ಸುಂದರಿಯಾಗಿದ್ದಾಳೆ. ಹೊರಗೆ ಹಾಗೇ ಬಿಟ್ಟರೆ ತುಂಬಾ ಡೇಂಜರ್. ನೋಡೋಣ... ಆಕೆಗೆ ನೆನಪಿನ ಶಕ್ತಿ ಬಂದಮೇಲೆ ಕೇಳೋಣ . ಆಮೇಲೆ ಆಕೆಯನ್ನು ಅಲ್ಲಿಗೆ ತಲುಪಿಸೋಣ "ಎಂದು ಬಾತಿಶ್ ಸಮಾಧಾನ ಹೇಳಿದಾಗ ಒಂದು ಚೂರು ಮನಸಿಗೆ ಸಮಾಧಾನ ಆಯಿತು ಅಶ್ಫಾಕಿಗೆ.
ಇದನ್ನೆಲ್ಲ ಆಲಿಸುತ್ತಿದ್ದ ರುಬೀನಾಳಿಗೆ ಈಗ ಎಲ್ಲಾ ಸಮಸ್ಯೆ ಅರ್ಥ ಆದಂತಾಯಿತು.

ಅಂದರೆ ಎಲ್ಲಾ ಸಮಸ್ಯೆಗಳಿಗೂ ಕಾರಣ ಹಕೀಮ್. ಆತನಿಂದಲೇ ಇಷ್ಟೆಲ್ಲಾ ಅನಾಹುತ ಆಯಿತು. ಯಾಕೋ ಮೊದಲ ಬಾರಿ ಅಶ್ಫಾಕ್ ಬಗ್ಗೆ ತಪ್ಪು ಭಾವಿಸಿದಕ್ಕಾಗಿ ಬೇಜಾರಾಯಿತು. ಎಲ್ಲಾ ಸರಿಯಾಗಿದ್ದರೆ ಇಷ್ಟು ಹೊತ್ತಿಗೆ ಮನೆಯವರು ಒಪ್ಪಿ ನಮ್ಮ ಮದುವೆ ಆಗಿಬಿಡುತ್ತಿತ್ತೋ ಏನೋ ? ಆದರೆ ಈಗ ತಾನು ಆತನ ಇಷ್ಟೊಂದು ಹತ್ತಿರ ಇದ್ದರೂ ತಾನು ರುಬೀನಾ ಎಂದು ಹೇಳುವ ಹಾಗೆ ಇಲ್ಲ . ಉಫ್!!!! ಎಂತಹ ಪರಿಸ್ಥಿತಿ.
ಅಷ್ಟರಲ್ಲಿ ಬಾತಿಶ್ ತನ್ನ ಗೆಳೆಯನಿಗೆ ವಿದಾಯ ಹೇಳಿದನು. 
ಅಷ್ಟರಲ್ಲಿ ಮುಹಮ್ಮದ್ ಹಾಜಿ ಮತ್ತು ಅವರ ಪತ್ನಿ ಮರಿಯಮ್ ಅವರಿದ್ದ ಕೋಣೆಯೊಳಗೆ ಬಂದರು. ಬಂದವರೇ 

 " ನಾನೊಂದು ಮಹತ್ವದ ತೀರ್ಮಾನ ತೆಗೆದುಕೊಂಡಿದ್ದೇನೆ. ಅದನ್ನು ನಿನ್ನ ಬಳಿ ಹೇಳಲು ಬಂದಿರೋದು ಎಂದರು."
ಏನು ಎಂಬಂತೆ ಅವರ ಮುಖ ನೋಡಿದನು ಅಶ್ಫಾಕ್.

ಮುಹಮ್ಮದ್ ಹಾಜಿ ಹಾಗೂ ಮರಿಯಮ್ ಅವರು ಬಂದು ತಾವು ಮಹತ್ವದ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಹೇಳಿದರು.

ನಿದ್ದೆ ಮಾಡಿದ ಹಾಗೆ ನಟನೆ ಮಾಡುತ್ತಿದ್ದ ರುಬೀನಾ ಕಣ್ಣು ತೆರೆಯಲಿಲ್ಲ. ಕಣ್ಣು ತೆರೆದರೆ ತಾನು ನಾಟಕ ಮಾಡುತ್ತಿದ್ದೆ ಎಂದು ಅಶ್ಫಾಕಿಗೆ ಅನಿಸುತ್ತದೆ ಎಂದು ಸುಮ್ಮನೆ ಮಲಗಿದ ಹಾಗೆಯೇ ಮಾಡಿದಳು.  ಮುಹಮ್ಮದ್ ಹಾಜಿ ಆಕೆ ಮಲಗಿದ್ದಾಳೆ ಎಂದೇ ಭಾವಿಸಿದರು.

" ಏನಿಲ್ಲ ಅಶ್ಫಾಕ್, ಇನ್ನೊಂದು ವಾರದಲ್ಲಿ ಆಕೆ ಸ್ವಲ್ಪ ಗುಣಮುಖಳಾಗಬಹುದು. ಆಕೆಯ ಡಿಸ್ಚಾರ್ಜ್ ಆದ ನಂತರ ನಮ್ಮ ಮನೆಗೆ ಕರೆದುಕೊಂಡು ಹೋಗೋಣ . ಆಕೆಯ ನೆನಪಿನ ಶಕ್ತಿ ಬಂದ ತಕ್ಷಣ ಆಕೆಯವರ ಬಳಿ ಸೇರಿಸೋಣ ಎಂದರು.

ಅಶ್ಫಾಕ್ ಒಲ್ಲದ ಮನಸ್ಸಿನಿಂದ ಹ್ಞೂಂ ಗುಟ್ಟಿದನು. ಆತನಿಗೆ ಒಮ್ಮೆ ಈಕೆಗೆ ನೆನಪಿನ ಶಕ್ತಿ ಬಂದು ತನ್ನ ಬದುಕಿನಿಂದ ಸರಿದರೆ ಸಾಕು ಎಂದು ಆಗುತ್ತಿತ್ತು.

ಮಲಗಿದಲ್ಲಿದ್ದ ರುಬೀನಾಳಿಗೆ ಈ ಮಾತು ಖುಷಿ ಎನಿಸುತ್ತಿತ್ತು. ತನ್ನ ಬಳಿ ಇನ್ನೂ ಸಮಯವಿದೆ. ಅದರೊಳಗಾಗಿ ನಾನು ಮುಕ್ತಾರಿಗೆ ವಾಸ್ತವಾಂಶದ ಅರಿವು ಮಾಡಿಕೊಡಬೇಕು. ಇವರ ಮನೆಯ ಒಳಗಿದ್ದರೆ ಯಾವುದೇ ಕಾರಣಕ್ಕೂ ಹಕೀಮಿನ ಜನರಿಗೆ ನನ್ನ ಬಗ್ಗೆ ವಿಷಯ ಸಿಗಲಿಕ್ಕಿಲ್ಲ ಎಂದು ಮನಸ್ಸಿನಲ್ಲೇ ಯೋಚಿಸಿದಳು.
ದಿನಗಳು ಉರುಳುತ್ತಿತ್ತು.

   ನಫೀಸಾದ ಮಗಳ ಯೋಚನೆಯಿಂದ ಕಂಗೆಟ್ಟು ಹೋಗಿದ್ದರು. ಅನ್ನ - ನೀರು ಯಾವುದೂ ಅವರ ಹೊಟ್ಟೆಗೆ ಸೇರುತ್ತಿರಲಿಲ್ಲ. ಪ್ರೀತಿಯಿಂದ ಕಷ್ಟಪಟ್ಟು ಬೆಳೆಸಿದ ಮಗಳು ಇಂದು  ಹೇಳದೆ , ಕೇಳದೆ ಓಡಿಹೋದಳಲ್ಲ ಎಂದು ಅವರಿಗೆ ಅದೇ ವ್ಯಥೆ ಆಗಿತ್ತು.

ಇತ್ತ ಮುಕ್ತಾರ್ ಕೂಡ ಕೆಲಸ ಬಿಟ್ಟು ನೇರ ಮನೆಗೆ ಬರುತ್ತಿದ್ದನು. ಯಾರ ಬಳಿಯಾದರೂ  ಮಾತನಾಡುತ್ತಾ ನಿಂತರೆ ಅವರು ತನ್ನ ತಂಗಿಯ ಬಗ್ಗೆ ಆಡುವ ಅಸಹ್ಯ ಮಾತುಗಳನ್ನು ಆತ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ.

ನಫೀಸಾದ ಏನಾದರೂ ಮಗಳ ಸುದ್ದಿ ಇದೆಯೇನೋ ಎಂದು ಕೇಳಿದರೆ " ಆಕೆಯ ಸುದ್ದಿ ಈ ಮನೆಯಲ್ಲಿ ತೆಗೆಯಬಾರದು" ಎಂದು  ಕಟ್ಟು ನಿಟ್ಟಿನ ಆದೇಶ ನೀಡಿದ್ದನು.

ಆಕೆ ತನ್ನ ತಂದೆಯ ಬುದ್ಧಿ ತೋರಿದಳು. ಅವರು ಹೆಂಡತಿ ಮತ್ತು ಮಕ್ಕಳನ್ನು ತೊರೆದು ಬೇರೆ ಹೆಣ್ಣಿನ ಜೊತೆ ಹೋಗಲಿಲ್ಲವೇ?  ಹಾಗೆಯೇ ಇವಳೂ ಕೂಡ ಯಾವನದೋ ಜೊತೆ ಓಡಿಹೋಗಿದ್ದಾಳೆ. ಇನ್ನು ಅವಳು ಈ ಮನೆಯ  ಮೆಟ್ಟಿಲು ಹತ್ತಬಾರದು ಎಂದು ತನ್ನ ಅಮ್ಮನ ಬಳಿ ಹೇಳುತ್ತಿದ್ದನು.

ಇನ್ನು ಅಝೀಝ್, ಕರೀಮ್ ಬಿಟ್ಟರೆ ಆಗಲಿಕ್ಕಿಲ್ಲ... ತಾನೇ ಹೋಗಿ ಕೆಲಸ ಸಾಧಿಸಬೇಕು ಎಂದು ಹಕೀಮ್ ಬಾಂಬೆಗೆ ಹೋಗಲು ಸಿಧ್ಧನಾಗಿದ್ದನು. ಯಾಕೋ ಅವನ ಕಾಲಿನಲ್ಲಿ ಸಣ್ಣ ನೋವು  ಕಾಣಿಸುತ್ತಿತ್ತು.

ದಿನಗಳು ಉರುಳಿದಂತೆ  ರುಬೀನಾಳ ಡಿಸ್ಚಾರ್ಜ್ ಆಯಿತು. ಆಕೆಯನ್ನು ಮುಹಮ್ಮದ್ ಹಾಜಿಯವರ ಮನೆಗೆ ಕರೆದುಕೊಂಡು ಹೋಗಲಾಯಿತು.

ಅವಳು ಆ ಮನೆಯನ್ನು ನೋಡಿ ಆಶ್ಚರ್ಯಗೊಂಡಳು. ಅತ್ಯಂತ ದೊಡ್ಡ ಬಂಗಲೆಯಂತಹ ಮನೆ. ಯಾವ ಅರಮನೆಗೂ ಕಡಿಮೆ ಇರಲಿಲ್ಲ. ಪ್ರತಿಯೊಂದಕ್ಕೂ ಆಳು - ಕಾಳುಗಳು ಇದ್ದರು. ಇಷ್ಟೊಂದು ದೊಡ್ಡ ಶ್ರೀಮಂತ ಮನೆತನದವನು ನನ್ನಂತಹ ಸಾಧಾರಣ ಹುಡುಗಿಯನ್ನು ಮದುವೆಯಾಗಲು ಬಯಸಿದ್ದಾನಲ್ಲ ಎಂದೆನಿಸಿತು. ಒಳ ಹೋದೊಡನೆ ಆಕೆಗೆ ಆಕೆಯ ರೂಮ್ ತೋರಿಸಲಾಯಿತು. ಆಕೆ ಅದರೊಳಗೆ ಹೋದಳು. ಸ್ವಲ್ಪ ಹೊತ್ತು ಎಲ್ಲಾ ನೋಡುತ್ತಿರಬೇಕಾದರೆ ರೂಮಿನ ಬಾಗಿಲು ಬಡಿಯಿತು.

ಯಾರಾಗಿರಬಹುದು ಎಂದು ಹೋಗಿ ತೆರೆದಳು.
ನೋಡಿದರೆ ಓರ್ವ ಸುಂದರಿಯಾದ ಯುವತಿ ನಿಂತಿದ್ದಳು. ಈಕೆ ಬಾಗಿಲು ತೆರೆದೊಡನೆ " ನನಗೆ ನಿನ್ನಲ್ಲಿ ಮಾತನಾಡಲಿಕ್ಕೆ ಇದೆ " ಎಂದಳು.
ರುಬೀನಾ ಏನು ಎಂಬಂತೆ ಆಕೆಯ ಮುಖ ನೋಡಿದಳು.
" ನೋಡು ನೀನು ಮಶುದವೋ ಅಥವಾ ಇನ್ಯಾರೋ ನನಗೆ ಗೊತ್ತಿಲ್ಲ. ನೀನು ಯಾಕಾಗಿ ಅಶ್ಫಾಕ್ ಕಾರಿಗೆ ಅಡ್ಡ ಬಂದೆ ಎಂದೂ ನನಗೆ ಗೊತ್ತಿಲ್ಲ. ಅದರಿಂದ ನನ್ನ ಮಾವ ನಿನ್ನ ಮದುವೆ ಅಶ್ಫಾಕ್ ಜೊತೆ ಮಾಡಲಿ ಎಂದು ಆಸೆ ಅಲ್ವಾ ನಿನಗೆ?"

" ಏನು ಹೇಳುತ್ತಿದ್ದೀರಾ ನೀವು? ನಾನು ಯಾರ ಕಾರಿಗೆ ಗುದ್ದಿದೆ? ನನಗೆ ಒಂದೂ ನೆನಪಿಲ್ಲ. ನಾನು ಮಹಡಿಯಿಂದ ಕೆಳಗೆ ಬಿದ್ದದ್ದು ಅಂತ ಮಾವ ಹೇಳಿದರು. ಮತ್ತೆ ನನಗೆ ನೀವು ಯಾರೂಂತಲೇ ಗೊತ್ತಿಲ್ಲ "

" ನೋಡು... ಅವರು ನಿನ್ನಲ್ಲಿ ಏನು ಸುಳ್ಳು ಹೇಳಿದ್ದಾರೆ ನನಗೆ ಗೊತ್ತಿಲ್ಲ. ಆದರೆ ನೋಡು ಅಶ್ಫಾಕ್ ಎಂದೆಂದಿಗೂ ನನ್ನವನೇ.. ಸಣ್ಢವಳು ಇರುವಾಗದಿಂದಲೂ ಆತನ ಮದುವೆ ಆಗುವ ಕನಸು ಕಂಡಿದ್ದೇನೆ. ಇನ್ನು ನೀನು ಅದಕ್ಕೆ ಅಡ್ಡಿ ಬರಬಾರದು. ಅಡ್ಡಿ ಬಂದರೆ ನಿನ್ನನ್ನು ನಾನು ಉಳಿಸಲ್ಲ."

" ಏನು ಮಾಡುತ್ತೀಯಾ ಹೇಳು? ಒಂದು ಸಲ ಆತನ ಬದುಕಿನಿಂದ ಒಬ್ಬಳನ್ನು ದೂರ ಮಾಡಿದ್ದು ನೀನೇನಾ? " ಕೇಳಿ ಆಗಿತ್ತು ರುಬೀನಾಳಿಗೆ..
ಏನು ಹೇಳುತ್ತಾ ಇದ್ದೀಯಾ ? ಯಾರನ್ನು ದೂರ ಮಾಡಿದ್ದೇನೆ. ದೂರ ಮಾಡಿದ್ದಾದರೂ ನಿನಗೆ ಹೇಗೆ ಗೊತ್ತು? ಆಕೆ ಆಶ್ಚರ್ಯದಿಂದ ಕೇಳಿದಳು.

" ಇಲ್ಲಾ ನಿನ್ನ ನೋಡುವಾಗ ನನಗೆ ಹಾಗೆ ಅನಿಸಿತು."
" ಇಲ್ಲಾ ನೀನು ಏನೋ ನಾಟಕ ಮಾಡುತ್ತಿದ್ದೀಯಾ ? ಬೇಕೆಂದೇ ಅಶ್ಫಾಕ್ ಗಾಡಿಗೆ ನೀನು ತಾಗಿದ್ದೀಯೋ ಹೇಗೆ? ನಿನ್ನ ನೆನಪಿನ ಶಕ್ತಿ ಕಳೆದುಕೊಂಡಿಲ್ಲ ನೀನು. ನೀನು ಆ ರೀತಿಯಾಗಿ ನಾಟಕ ಮಾಡುತ್ತಾ ಇದ್ದೀಯಾ ಹೇಗೆ ? " ಆಕೆ ಸಂದೇಹದಿಂದಲೇ ಕೇಳಿದಳು.

 " ಹ್ಞಾಂ , ನೀನು ಹಾಗೆ ಎನಿಸುವುದಾದರೆ ಹಾಗೆ ಇರಲಿ, ಆದರೆ ನನಗೆ ನಿನ್ನ ವಿಚಾರನೂ ತಿಳಿದಿಲ್ಲ.. ನಿನ್ನ ಪ್ರೀತಿಯ ವಿಚಾರನೂ ತಿಳಿದಿಲ್ಲ. ಆದರೆ ಅಶ್ಫಾಕ್ ವಿಚಾರದಲ್ಲಿ ನೀನು ನಮ್ಮ ಮಧ್ಯೆ ಬರುತ್ತಿದ್ದೀಯಾ..
ಅಷ್ಟು ಹೇಳಬೇಕಾದರೆ ಆಕೆಗೆ ಸಿಟ್ಟು ಬಂತು.

ನೋಡು ನಿನ್ನನ್ನು ಹೇಗೆ ಆತನ ಬದುಕಿನಿಂದ ಓಡಿಸುತ್ತೇನೆ. ನಿನ್ನ ನಾಟಕ ಎಲ್ಲರ ಎದುರು ಬಯಲು ಮಾಡುತ್ತೇನೆ . ದುಡುಕಿನಿಂದಲೇ ಹೇಳಿ ಸೀದಾ ಅಶ್ಫಾಕ್ ಕೋಣೆಗೆ ಹೋದಳು ಇಶ್ರತ್.

ರುಬೀನಾಳ ಮುಖದಲ್ಲಿ ಮಂದಹಾಸ ಒಂದು ಮೂಡಿ ಮಾಯವಾಯಿತು. ಯಾ ಅಲ್ಲಾಹನೇ , ಎಲ್ಲ ಸಮಸ್ಯೆಗಳನ್ನೂ ಎದುರಿಸುವ ಧೈರ್ಯ ನನಗೆ ನೀಡು ಎಂದು ಬೇಡಿದಳು.
ಒಂದಲ್ಲ ಒಂದು ದಿನ ನನ್ನ ಸತ್ಯ ಎಲ್ಲರ ಮುಂದೆ ಬಯಲು ಆಗುತ್ತದೆ. ಅದರೊಳಗಾಗಿ ನಾನು ಮುಕ್ತಾರಿಗೆ ವಾಸ್ತವಾಂಶದ ಅರಿವು ಮಾಡಬೇಕು. ಆದರೆ ಹೇಗೆ ? ಆತ ನಂಬುವನಾ? ಎಲ್ಲ ಸತ್ಯ ತಿಳಿದಿರೋದು ಹಕೀಮಿಗೆ ಮಾತ್ರ. ಆತನಾದರೂ ಖಂಡಿತವಾಗಿಯೂ ಬಾಯಿ ಬಿಡಲಿಕ್ಕಿಲ್ಲ. ಇನ್ನು ಅಶ್ಫಾಕ್ ಬಳಿ ಹೇಳಿ ಪ್ರಯೋಜನವಿಲ್ಲ. ಆತನಿಗೆ ಕೇಳುವ ತಾಳ್ಮೆ ಇರಲಿಕ್ಕಿಲ್ಲ. ಎಷ್ಟು ದಿನ ನಾನು ನೆನಪಿನ ಶಕ್ತಿ ಕಳೆದುಕೊಂಡವರ ಹಾಗೆ ನಟಿಸುವುದು ಯಾ ಅಲ್ಲಾಹ್! ಎಲ್ಲದಕ್ಕೂ ಒಂದು ಅಂತ್ಯ ತೋರಿಸು ಎಂದು ಪ್ರಾರ್ಥಿಸಿದಳು.

ಅಷ್ಟರಲ್ಲಿ ಕೆಳಗಿನಿಂದ ಮರಿಯಮ್ ಅವರು ಕರೆಯುವುದು ಕೇಳಿಸಿತು. ಏನು ಎಂದು ನೋಡಲು ಆಕೆ ಕೆಳಗೆ ಹೋದಳು. ಅಶ್ಫಾಕ್ ಹಾಗೂ ಇಶ್ರತ್ ಅಲ್ಲಿ ಮುಂಚೆಯೇ ಬಂದು ನಿಂತಿದ್ದರು.
 ಅರೇ ಏನಾಯಿತು ? ಈ ಹುಡುಗಿ ಏನಾದರೂ ಹೇಳಿದಳಾ ಹೇಗೆ ? "ಎಂದು ಆತಂಕಪಟ್ಟಳು ರುಬೀನಾ.
ಅವರ ಹತ್ತಿರ ಹೋಗಿ ವಿನಯದಿಂದ " ಏನು ಆಂಟಿ ? " ಎಂದು ಕೇಳಿದಳು.
" ಏನಿಲ್ಲ ಮಶೂದ .. ನಿನ್ನ ಡ್ರೆಸ್ ಎಲ್ಲಾ ಇಲ್ಲವಲ್ಲ. ಹಾಗೆ ಹೋಗಿ ಇಶ್ರತ್ ಜೊತೆ ಶಾಪಿಂಗ್ ಮಾಡು ಎಂದು ಹೇಳಲು ಕರೆದೆ ಎಂದರು ಅವರು.

ರುಬೀನಾಳ ಮನಸ್ಸಿಗೆ ಈಗ ಸಮಾಧಾನ ಆಗಿತ್ತು. ಅಂದರೆ ತನ್ನ ಬಗ್ಗೆ ಏನೂ ಹೇಳಲಿಲ್ಲ ಅಲ್ವಾ ಈ ಹುಡುಗಿ.
"ಆದರೆ ಆಂಟಿ ನನ್ನ ಇದ್ದ ಡ್ರೆಸ್ ಎಲ್ಲಾ ಏನಾಗಿದೆ? " ಎಂದು ಸುಮ್ಮನೆ ಗೊತ್ತಿಲ್ದ ರೀತಿಯಲ್ಲಿ ಕೇಳಿದಳು.
" ಅದೂ ಎಲ್ಲಾ ಹಳೆಯದಾಗಿದೆ . ಬೇಡ ಎಂದು ನಾನು ಬೇರೆಯವರಿಗೆ ಕೊಟ್ಟಿದ್ದೇನೆ. ಈಗ ಹೊಸದನ್ನು ತೆಗೆಯಿರಿ ಸರೀನಾ" ಎಂದು ಹೇಳಿದರು.

ಹ್ಞಾಂ ಸರಿ ಎಂದು ಒಪ್ಪಿಗೆ ನೀಡಿದಳು ರುಬೀನಾ.
" ಅಶ್ಫಾಕ್ ಇವರನ್ನು ಕರೆದುಕೊಂಡು ಹೋಗು " ಎಂದು ಮಗನಲ್ಲಿ ಹೇಳಿದರು‌.
" ನಾನು ಹೋಗುವುದಿಲ್ಲ. ಡ್ರೈವರ್ ಜೊತೆ ಹೋಗಲಿ. ನನಗೆ ಹೋಗೋದಿಕ್ಕೆ ಮನಸು ಇಲ್ಲ."
ಅಂದರೆ ಅಶ್ಫಾಕಿಗೆ ಇಶ್ರತಿನತ್ತ ಯಾವ ಆಸಕ್ತಿಯೂ ಇಲ್ಲ. ಈಕೆಯೇ ಸುಮ್ಮನೆ ಆತನ ಬಗ್ಗೆ ಆಕರ್ಷಣೆ ಹೊಂದಿದ್ದಾಳೆ ಎನಿಸದೇ ಇರಲಿಲ್ಲ ರುಬೀನಾಳಿಗೆ.

" ನೀನು ಹೋಗಲ್ಲ ಅಂದರೆ ಹೇಗೆ ಅಶ್ಫಾಕ್ ? ಅವರಿಬ್ಬರೂ ಡ್ರೈವರ್ ಜೊತೆ ಹೋಗುವುದು ಹೇಗೆ? ನೀನೇ ಕರೆದುಕೊಂಡು ಹೋಗಿ ಬಾ ಎಂದು ಮರಿಯಮ್ ಆಜ್ಞೆ ನೀಡಿದರು.
ಅದರಂತೆ ಅವನು ಇಬ್ಬರನ್ನೂ ಕರೆದುಕೊಂಡು ಶಾಪಿಂಗ್ ಮಾಲಿನತ್ತ ಹೋದನು.

ಶಾಪಿಂಗ್ ಎಲ್ಲಾ ಮಾಡಿ, ಕಾರಿನಲ್ಲಿ ಬರಬೇಕಾದರೆ ಸಿಗ್ನಲ್ ಬಿದ್ದಲ್ಲಿ ಕಾರು ನಿಂತಿತು. ರುಬೀನಾ ಹೊರಗಿನ ದೃಶ್ಯ ನೋಡುತ್ತಿದ್ದಳು. ತಕ್ಷಣ ಆ ದೃಶ್ಯ ನೋಡಿದವಳೇ ಆಘಾತಕ್ಕೆ ಒಳಗಾದಳು.
ಹಕೀಮ್ ಹಾಗೂ ಸಹಚರರು ತಾನು ಇದ್ದ ಕಾರಿನ ಬಳಿಯ ರಿಕ್ಷಾದಲ್ಲಿ ಇದ್ದರು. 
ಅಯ್ಯೋ, ಆತನೀಗ ನೋಡಿದರೆ ಹೋಯಿತೇ ನನ್ನ ಬದುಕು ಎಂದು ಆಕೆ ಎನಿಸಿದಳು. 

ಅರೇ ಏನು ಮಾಡುವುದು? ಆತ ನನ್ನ ನೋಡಿದರೆ ನನ್ನ ಹಿಂಬಾಲಿಸಿ ಕೊಂಡು ಬರುತ್ತಾನೆ ಖಂಡಿತ. ಮತ್ತೆ ನನ್ನ ಮನೆಯವರು ಎಂದು ನಾಟಕ ಮಾಡಿದರೆ ಹೋಯಿತು ನನ್ನ ಬದುಕು ಅಷ್ಟೇ.ಅಲ್ಲಾ ಎಂದು ಹೇಳಲು ಆಗುವುದಿಲ್ಲ. ಏನು ಮಾಡುವುದು?"
ರುಬೀನಾ ಒಮ್ಮೆ ಅಶ್ಫಾಕ್ ಬಳಿ ಹಾಗೂ ಒಮ್ಮೆ ಇಶ್ರತಿನಾಚೆಗೆ ನೋಡಿದಳು. ಅವರು ಅವರಷ್ಟಕ್ಕೆ ಇದ್ದರು. ಯಾರೂ ಕೂಡ ಈಕೆಯನ್ನು ಗಮನಿಸುತ್ತಾ ಇರಲಿಲ್ಲ.

ಮೆಲ್ಲನೆ ಇದೇ ಸಮಯವನ್ನು ಬಳಸಿಕೊಂಡ ಆಕೆ ತಾನು ಕೆಳಗಾಗಿ ಕಾಣದಂತೆ ಕುಳಿತಳು. ಯಾಕೋ ಅವಳ ಕೈ ಕಾಲು ಇಡೀ ಬೆವೆತು ಹೋಗಿತ್ತು. ಓ ದೇವನೇ ತಪ್ಪಿಯೂ ಕೂಡ ಆಚೆ ಈತ ನೋಡದಿರಲಿ ಎಂದು ಮನಸ್ಸಿನಲ್ಲೇ ಪ್ರಾರ್ಥಿಸುತ್ತಿದ್ದಳು. ಅಷ್ಟರಲ್ಲಿ ಗಾಡಿಗಳು ಚಲಿಸಲು ಫ್ರಾರಂಭಿಸಿದವು. ಆಗ ಆಕೆ ಮೆಲ್ಲಗೆ ಇಣುಕಿ ನೋಡಿದಳು. ಆತನಿದ್ದ ರಿಕ್ಷಾ ಕಾಣುತ್ತಲೇ ಇರಲಿಲ್ಲ. ಈ ನಡುವೆಯಲ್ಲಿ ಆಕೆ ತನ್ನನ್ನು ಇಶ್ರತ್ ಹಾಗೂ ಅಶ್ಫಾಕ್ ಗಮನಿಸುತ್ತಾ ಇದ್ದಾರೆ ಎಂಬುದನ್ನು ನೋಡಿರಲಿಲ್ಲ.
ಮನೆಗೆ ಮುಟ್ಟಿದ ಕೂಡಲೇ ಇಶ್ರತ್ ಜೋರಾಗಿ ಮರಿಯಮ್ ಅತ್ತೆ ಹೊರಬನ್ನಿ ಎಂದು ಕರೆದಳು.

ಏನಾಯಿತು ಎಂದು ಅವರು ಕೇಳಿಕೊಂಡು ಹೊರಗೆ ಬಂದರು.
" ಈಕೆಗೆ ನೆನಪಿನ ಶಕ್ತಿ ಹೋಗಿಲ್ಲ. ಈಕೆ ಏನೋ ನಾಟಕ ಆಡುತ್ತಿದ್ದಾಳೆ " ಎಂದು ಹೇಳಿದಳು.
ಮರಿಯಮ್ ಅವರು ಆಘಾತದಿಂದ ರುಬೀನಾಳತ್ತ ನೋಡಿದರು.

" ಹೌದಾ ಮಶೂದ ನಿಜ ಹೇಳು ? ಏನು ಈಕೆ ಹೇಳುತ್ತಿರೋದು ?
"ಏನು ಆಂಟಿ , ಈಕೆ ನನಗೆ ಏನು ಹೇಳುತ್ತಾ ಇದ್ದಾಳೆಂದೆ ನನಗೆ ತಿಳಿದಿಲ್ಲ. ಯಾವ ನೆನಪಿನ ಶಕ್ತಿ ? ನನಗೇನಾದರೂ ನೆನಪಿಗೆ ಬಾರುತ್ತಿಲ್ಲ ಅನ್ನೋದೆ ನನಗೆ ದೊಡ್ಡ ಸಮಸ್ಯೆ. ನೀವು ಏನು ಹೇಳಿದ್ದೀರೋ ಅದೆ ನನ್ನ ನಿಜ ಅಲ್ವಾ ? ಇನ್ನೇನಾದರೂ ನಿಜ ಇದೆಯಾ ? "
" ನೋಡು ಮಶೂದ ಅತೀ ಬುದ್ದಿವಂತಿಕೆಯಿಂದ ನಟಿಸಬೇಡ. ನಿನ್ನ ನಿಜಾಂಶ ಹೇಳಿ ಬಿಡು. ಅಶ್ಫಾಕ್ ಮದುವೆಯಾಗಿ ಆತನ ಆಸ್ತಿ ಕಬಳಿಸೋಕೆ ತಾನೆ ನೀನು ಬಂದಿರೋದು ?" ಎಂದು ಇಶ್ರತ್ ಬೊಬ್ಬಿಡುತ್ತಾ ಹೇಳಿದಳು.
" ನನಗೆ ನೀವೇ ತಾನೇ ಹೇಳಿರೋದು , ನಾನು ಅಶ್ಫಾಕ್ ಮದುವೆಯಾಗಬೇಕಾದ ಹುಡುಗಿ ಎಂದು ? ಮತ್ತೆ ನಾನು ಯಾಕೆ ಆಸ್ತಿ ಕಬಳಿಸುತ್ತೇನೆ ? ಎಲ್ಲಾ ಮಾತು ನೀವೇ ಹೇಳಿ ಈಗ ನನ್ನನ್ನು ಅಪರಾಧಿಯನ್ನಾಗಿ ಮಾಡಿದರೆ ಹೇಗೆ? " 
" ನೀನು ಕಾರಿನಲ್ಲಿ ಬರಬೇಕಾದರೆ ಬೆವರುತ್ತಿದ್ದೆ. ಏನೋ ನೋಡಿ ಹೆದರುತ್ತಿದ್ದೆ ಯಾಕೆ ಹೇಳು?"
ಈಗ ಇಶ್ರತ್ ಮಾತು ಕೇಳಿ ಮರಿಯಮ್ ಅವರು ನಗಾಡಲು ಪ್ರಾರಂಭಿಸಿದರು.

ಈಗ ಆಶ್ಚರ್ಯಗೊಳ್ಳುವ ಸರದಿ ಇಶ್ರತಳದಾಗಿತ್ತು.
" ಅಲ್ಲಾ ಆಂಟಿ ನೀವು ಯಾಕೆ ನಗಾಡುತ್ತಾ ಇದ್ದೀರಾ? ನಂಗೆ ಗೊತ್ತಾಗುತ್ತಾ ಇಲ್ಲವಲ್ಲ? ಆಕೆ ಸಹಜವಾಗಿಯೇ ಕೇಳಿದಳು.
 ಅಲ್ಲದೆ ಮತ್ತಿನ್ನೇನು? ಕಾರಿನಲ್ಲಿ ಬೆವರಿದಳು ಅಂದರೆ ನೆನಪಿನ ಶಕ್ತಿ ಕಳೆದಿಲ್ಲ ಎಂದು ಅರ್ಥವಾ? ನಾನು ಏನೋ ಅಂದುಕೊಂಡೆ. ಹೋಗು ಮಶೂದ ನೀನು ದಣಿದು ಬಂದಿದ್ದೀಯಾ ರೆಸ್ಟ್ ತೆಗೆದುಕೊಳ್ಳು ಹೋಗು " ಎಂದು ಆಕೆಯನ್ನು ಮೇಲೆ ಕಳುಹಿಸಿದರು.

ಆಕೆ ಮೇಲೆ ಹೋದ ನಂತರ " ಅಲ್ಲಾ ಇಶ್ರತ್ ಯಾರ ಎದುರು ಹೇಗೆ ಮಾತನಾಡಬೇಕು ಎಂಬ ಪರಿಕಲ್ಪನೆ ನಿನಗೆ ಇಲ್ಲ ಅಲ್ವಾ. ಆಕೆ ಕಾರು ಗುದ್ದಿ ಆಕ್ಸಿಡೆಂಟ್ ಆಗಿ ಜೀವಾಪಯದಿಂದ ಪಾರಾದವಳು. ಹಾಗಿರಬೇಕಾದರೆ ನೀನು ಆಕೆ ಕಾರಿನಲ್ಲಿ ಬೆವರಿದಳು ಅಂದರೆ ಅರ್ಥ ಏನು? ಎಲ್ಲೋ ಆಕೆಗೆ ಅದೇ ಹೆದರಿಕೆ ಇರಬೇಕು ಎಂದು . ಇನ್ನು ಆಕೆಯ ಎದುರಿನಲ್ಲಿ ಇಲ್ಲ ಸಲ್ಲದ ಮಾತು ಹೇಳಬೇಡ. ಆಕೆ ಗುಣಮುಖವಾಗುವುದು ನಮಗೆ ಮುಖ್ಯ. ಅಲ್ಲಿಯವರೆಗೂ ನಾವು ಆಕೆಯನ್ನು ಚೆನ್ನಾಗಿ ನೋಡಬೇಕು.
ಆ ರೀತಿ ಹೇಳಿ ಅವರು ಒಳ ನಡೆದರು.
ಆಕೆ ಅಶ್ಫಾಕಿನ ಮುಖ ನೋಡಿದಳು.

" ನೋಡು ಅಶ್ಫಾಕ್, ಅತ್ತೆ ಯಾಕೆ ಅವಳ ಪರವಹಿಸಿ ಮಾತನಾಡುತ್ತಾರೋ ನಾನರಿಯೆ? ನೀನಾದರೂ ಗಮನಿಸಿದ್ದೀಯೋ ಇಲ್ಲವೋ ಹೇಳು? "

" ನನಗೊತ್ತಿಲ್ಲ ಇಶ್ರತ್. ಆಕೆ ಬೆವರಿದ್ದು, ಹೆದರಿದ್ದು ನಾನು ನೋಡಿದ್ದೇನೆ. ಆದರೆ ಅಮ್ಮ ಹೇಳಿದ್ದು ನಿಜ ಇರಬಹುದು ಅಲ್ವಾ? ಯಾಕೆ ಎಲ್ಲವನ್ನೂ ಋಣಾತ್ಮಕವಾಗಿ ಯೋಚಿಸುತ್ತೀಯಾ ? " ಹೇಳು ಎಂದು ಅಶ್ಫಾಕ್ ಇಶ್ರತಿಗೆ ಹೇಳಿದನು.
ಯಾಕೆಂದರೆ ಆಕೆ ನಿನ್ನ ಬದುಕಿನಲ್ಲಿ ಬರುವುದು ನನಗೆ ಇಷ್ಟವಿಲ್ಲ. ನಿನ್ನ ಬದುಕಿನಲ್ಲಿ ನನ್ನ ಹೆಸರು ಮಾತ್ರ ಇರಬೇಕು."ಈ ರೀತಿ ಹೇಳಲು ಆಕೆಯ ಮನಸು ಬಯಸುತ್ತಿತ್ತು. ಆದರೆ ಹೇಳಲು ಆಕೆಗೆ ಭಯವಾಗುತ್ತಿತ್ತು.

ಹೇಗೆ ಹೇಳಲಿ ನಾನು ನಿನಗೆ ಈ ಮಾತನ್ನು ? ಎಂದು ಯೋಚಿಸಿದವಳೇ 
" ಏನಿಲ್ಲ, ನನಗೆ ಆಕೆಯ ಮೇಲೆ ಸಂದೇಹ ಇದೆ. ಆಕೆಯ ನೆನಪಿನ ಶಕ್ತಿ ಕಳೆದಿಲ್ಲ ಎಂದು ಹೇಳಿದಳು.
"ಅದಕ್ಕೆ ನಿನ್ನ ಬಳಿ ಏನಾದರೂ ಪುರಾವೆ ಇದೆಯೇ ಹೇಳು?" ಅಶ್ಫಾಕ್ ನೇರವಾಗಿ ಕೇಳಿದ.

" ಇಲ್ಲಾ , ಆದರೆ ನಾನು ತೋರಿಸುತ್ತೇನೆ ಪುರಾವೆ. ನೀವು ನೋಡುತ್ತಾ ಇರಿ ಎಂದು ಹೇಳಿ ಸೀದಾ ಒಳನಡೆದಳು.
ಅಶ್ಫಾಕ್ ತನ್ನ ರೂಮಿನತ್ತ ನಡೆಯತೊಡಗಿದ. ಆತನಿಗೆ ಸುರಯ್ಯಾಳ ಕೋಣೆಯ ಕದಗಳು ತೆರೆದಿರುವುದು ಕಂಡವು. ಆಕೆ ಏನೋ ಆಲೋಚನೆಯಲ್ಲಿ ತೊಡಗಿರುವ ಹಾಗೆ ಕಂಡಿತು.

ಆಕೆಯ ಬಳಿ ತನಗೆ ಮುಖ್ಯವಾದ ವಿಚಾರ ಮಾತನಾಡಲು ಇದೆ ಎಂದು ಭಾವಿಸಿದವನೇ ಮೆಲ್ಲನೆ ಕೆಮ್ಮಿದ ಶಬ್ದ ಮಾಡಿದನು. ಶಬ್ದ ಕೇಳಿ ಬಂದತ್ತ ರುಬೀನಾ ತಿರುಗಿ ನೋಡಿದಳು. ಅಲ್ಲಿ ಅಶ್ಫಾಕ್ ನಿಂತಿದ್ದ. ಏನು ಎಂಬಂತೆ ಆಕೆಯ ಮುಖ ನೋಡಿದಳು. 
ನನಗೆ ನಿನ್ನ ಬಳಿ ಮುಖ್ಯ ವಿಚಾರ ಮಾತನಾಡಲು ಇದೆ ಸ್ವಲ್ಪ ಹೊರಬರುತ್ತೀಯಾ ಎಂದು ಕರೆದನು.

 ರುಬೀನಾ ಎದ್ದು ಹೊರಗಡೆ ಹೋದಳು.
"ಏನು ಹೇಳು? ಏನು ವಿಷಯ? ಕಾರಿನಲ್ಲಿ ನಾನು ಹೆದರಿದ ವಿಷಯದಲ್ಲಿ ನಿನಗೂ ಕೂಡ ಸಂಶಯ ಇದೆಯಾ? "
" ಇಲ್ಲ ಮಶೂದ... ನನಗೆ ನಿನ್ನಲ್ಲಿ ಒಂದು ನಿಜ ವಿಚಾರ ಹೇಳಲು ಇದೆ. ಅದನ್ನು ಕೇಳಿ ನೀನು ಹೆದರಬಾರದು ಸರೀನಾ? ಎಂದು ಕೇಳಿದನು‌.

" ಹ್ಞಾಂ ಹೇಳು, ಏನು ವಿಚಾರ? ನೀನೇನು ಹೆದರಬೇಡ. ನಾನು ಗಾಬರಿಗೊಳ್ಳುವುದಿಲ್ಲ."
" ಅದೂ....... ಏನೆಂದರೆ ನೀನು ನಿಜವಾಗಿಯೂ ಮಶೂದ ಅಲ್ಲ."
ರುಬೀನಾ ಸುಮ್ಮನೆ ಗಾಬರಿಗೊಂಡವಳಂತೆ ನಟಿಸಿದಳು.

" ನಾನು ಮಶೂದ ಅಲ್ವಾ? ಏನು ಹೇಳುತ್ತಾ ಇದ್ದೀಯಾ? ಅಲ್ಲಿ ಆಕೆಯೊಬ್ಬಳು ನಾನು ನಾಟಕ ಮಾಡುತ್ತೇನೆ ಎನ್ನುತ್ತಿದ್ದಾಳೆ. ಇಲ್ಲಿ ನೀವು ನೋಡಿದರೆ ಹೀಗೆ ಹೇಳುತ್ತಾ ಇದ್ದೀರಲ್ಲ? ಏನು ವಿಷಯ? ನನಗೆ ಒಂದೂ ಅರ್ಥವಾಗುತ್ತಿಲ್ಲ."
" ನಾನು ಬಿಡಿಸಿ ಹೇಳುತ್ತೇನೆ. ಸರಿಯಾಗಿ ಕೇಳು." ಎಂದವನೇ ಅಶ್ಫಾಕ್ ಆಕೆಯಲ್ಲಿ ವಿಷಯ ಹೇಳತೊಡಗಿದ.

ತಾನು ತನ್ನ ಗೆಳೆಯನನ್ನು ಕರೆಯಲು ಹೋಗಿದ್ದು, ಹೋಗಬೇಕಾದರೆ ತನ್ನ ಕಾರಿನ ಎದುರಿಗೆ ಸಿಕ್ಕಿ ಆಕೆಯ ಆಕ್ಸಿಡೆಂಟ್ ಆಗಿದ್ದು. ಆಮೇಲೆ ಡಾಕ್ಟರ್ ಆಕೆಯ ನೆನಪಿನ ಶಕ್ತಿ ಹೋಗಿದೆ ಎಂದಿದ್ದು. ತನ್ನ ತಂದೆ ಬಂದು ಆಕೆಯೊಂದಿಗೆ ನಿನ್ನ ಹೆಸರು ಮಶೂದ ಎಂದಿದ್ದು ಹಾಗೂ ನಾನು ಮಾಡಿದ ತಪ್ಪನ್ನು ಸುಧಾರಿಸಲಿಕ್ಕಾಗಿ ನಿನ್ನನ್ನು ನನ್ನನ್ನು ಮದುವೆಯಾಗುವ ಹೆಣ್ಣು ಎಂದಿದ್ದು.... ಇದೆಲ್ಲವೂ ನಡೆದಂತಹ ದುರಂತ ಎಂದು ಹೇಳಿದನು.

   ರುಬೀನಾಳಿಗೆ ಏನು ಹೇಳಬೇಕು ಎಂದು ತೋಚಿಲ್ಲ.
" ಹಾಗಾದರೆ ನಾನು ಯಾರು ಎಂದು ನಿಮಗೆ ಗೊತ್ತಿಲ್ಲವಾ?"
 ಇಲ್ಲ ಮಶೂದ.. ನನ್ನಿಂದ ತಪ್ಪು ನಡೆದಿದ್ದು ಸಹಜ. ಆದರೆ ಆ ತಪ್ಪು ನಾನು ಬೇಕೆಂದು ಮಾಡಿಲ್ಲ. ಯಾಕೋ ತಿಳಿಯದೆ ನಡೆದು ಹೋಯಿತು. ಆದರೆ ಅದಕ್ಕೋಸ್ಕರ ನೀನು ನಾನು ಜೀವನ ಪರ್ಯಂತ ಶಿಕ್ಷೆ ಅನುಭವಿಸುವುದು ಯಾಕೆ? ಕೇಳಿದನು ಅಶ್ಫಾಕ್.

" ಜೀವನ ಪರ್ಯಂತ ಶಿಕ್ಷೆಯಾ ? ನಾನಾದರೆ ಹೌದು ... ನನ್ನವರು ಯಾರು ಎಂದು ತಿಳಿಯದೆ ಶಿಕ್ಷೆ ಅನುಭವಿಸುತ್ತಾ ಇದ್ದೇನೆ. ನಿಮಗೆ ಏನಾಯಿತು ? ನಾನು ಇಲ್ಲಿ ಇರುವುದರಿಂದ ತೊಂದರೆ ಇದೆಯಾ ? ರುಬೀನಾ ಸಹಜವಾಗಿಯೇ ಕೇಳಿದಳು.

" ಇಲ್ಲ .. ಅದರಿಂದ ಯಾಕೆ ನಮಗೆ ತೊಂದರೆ. ನಿನ್ನ ನೆನಪಿನ ಶಕ್ತಿ ಬರುವವರೆಗೆ ನೀನು ಇಲ್ಲಿ ಆರಾಮವಾಗಿರು."
" ಮತ್ತೆ ಏನು ಸಮಸ್ಯೆ ?"
" ನಿನಗೆ ನೆನಪಿನ ಶಕ್ತಿ ಬರಲಿಲ್ಲ ಅಂದರೆ ನನ್ನ ತಂದೆ ನಿನ್ನ ಜೊತೆ ನನ್ನ ಮದುವೆ ಮಾಡಿಸುವರು. ಅದು ನನಗೆ ಇಷ್ಟ ಇಲ್ಲ . ಯಾಕೆಂದರೆ ಎಂದು ಹೇಳುತ್ತಾ ಅಶ್ಫಾಕ್ ತನ್ನ ಮಾತನ್ನು ಅರ್ಧದಲ್ಲೇ ನಿಲ್ಲಿಸಿದನು.

" ನನಗೆ ಅರ್ಥ ಆಗುತ್ತೆ. ಹಿಂದೆ ಮುಂದೆ ಗೊತ್ತಿಲ್ಲದ ಹುಡುಗಿ ಜೊತೆ ಯಾರೂ ಮದುವೆಯಾಗಲೂ ಒಪ್ಪುವುದಿಲ್ಲ. ಅದು ಸಹಜ ತಾನೇ? " ರುಬೀನಾ ತಾನೇ ಆಕೆಯ ಮಾತನ್ನು ಮುಂದುವರಿಸಿದಳು.
" ಅಲ್ಲಾ ಮಶೂದ... ಅದಲ್ಲ ಕಾರಣ.. ನಾನು ಒಂದು ಹುಡುಗಿಯನ್ನು ನನ್ನ ಜೀವಕ್ಕಿಂತಲೂ ಹೆಚ್ಚಾಗಿ ಇಷ್ಟಪಟ್ಟಿದ್ದೇನೆ. ಅವಳೊಡನೆ ಮದುವೆ ಆಗಬೇಕು ಎಂದು ಆಸೆಯೂ ಕಂಡಿದ್ದೆ. "

" ಹಾಗಿದ್ದಲ್ಲಿ ನಿಮ್ಮ ತಂದೆಯ ಜೊತೆ ಹೇಳಬಹುದಲ್ವಾ? ಯಾಕೆ ಹೇಳಲಿಲ್ಲಾ ನೀವು ? ಆ ಹೆಣ್ಣು ಯಾರು ಎಂದು ಕೇಳಬಹುದಾ? "ತಿಳಿದೂ ಕೂಡ ರುಬೀನಾ ಪ್ರಶ್ನಿಸಿದಳು.

" ತಂದೆಯೊಡನೆ ಹೇಳಬಹುದಿತ್ತು. ಆದರೆ ಮೊದಲು ಆಕೆ ಹಾಗೂ ಆಕೆಯ ಮನೆಯವರೊಡನೆ ಮಾತನಾಡೋಣ ಎಂದುಕೊಂಡೆ. ಆದರೆ ಆಕೆ ಬೇರೆ ಯಾರನ್ನೋ ಪ್ರೀತಿಸಿ ಆತನ ಜೊತೆ ರಾತ್ರೋ ರಾತ್ರಿ ಓಡಿ ಹೋಗಿದ್ದಾಳೆ. ನಾನು ಆಕೆಯನ್ನು ಅಪರಂಜಿ ಎಂದುಕೊಂಡಿದ್ದೆ. ಆದರೆ ಇಲ್ಲಾ , ಆಕೆ ಎಲ್ಲಾ ನಿರೀಕ್ಷೆ ಸುಳ್ಳು ಮಾಡಿದಳು."

ಹೇಳಬೇಕಾದರೆ ಆತನ ಮುಖದಲ್ಲಿ ವ್ಯಕ್ತವಾಗುತ್ತಿದ್ದ ಪ್ರೀತಿ , ದುಃಖ ಎಲ್ಲವನ್ನೂ ಆಕೆ ಅರ್ಥ ಮಾಡಿಕೊಂಡಳು. ಆದರೆ ತಾನು ಇರುವ ಸ್ಥಿತಿಗೆ ಆಕೆ ಮರುಕಪಟ್ಟಳು.

ತಾನು ರುಬೀನಾ ಎಂದರೆ ಈತ ಖಂಡಿತವಾಗಿಯೂ ನಂಬಲಿಕ್ಕೆ ಇಲ್ಲ. ಅಲ್ಲದೆ ಇದುವರೆಗೂ ಇಲ್ಲದ ನೆನಪಿನ ಶಕ್ತಿ ಈಗ ಎಲ್ಲಿಂದ ಬಂತು ಎಂದು ಆಲೋಚಿಸುವನು. ತಾನೋರ್ವ ಮೋಸಗಾತಿ ಎಂದು ಆತ ಭಾವಿಸುವನು. ಅಲ್ಲದೇ ರುಬೀನಾ ಓಡಿ ಹೋಗಿದ್ದಾಳೆ ಎಂದೇ ಆತ ಭಾವಿಸಿದ್ದಾನೆ. ನಾನೇನು ಮಾಡಲಿ ನಿಜ ಹೇಳಲೋ ಬೇಡವೋ ? ಎಂಬ ಸಂದಿಗ್ಧ ಪರಿಸ್ಥಿತಿ ಆಕೆಗೆ ಉಂಟಾಯಿತು. 
"ಅಶ್ಫಾಕ್ ನೀವು ತಪ್ಪು ತಿಳಿಯಲಿಲ್ಲ ಎಂದರೆ ಒಂದು ಮಾತು. ಅದು ರುಬೀನಾ ನಾನೆ....."ಎಂದು ಹೇಳುವಷ್ಟರಲ್ಲಿ ಹೂದಾನಿ ಕೆಳಗೆ ಬಿದ್ದು ಒಡೆದ ಶಬ್ದ ಕೇಳಿತು. ಯಾರು ಎಂದು ಅವರು ಇಬ್ಬರೂ ತಿರುಗಿ ನೋಡಿದರೆ ಅಲ್ಲಿ ಇಶ್ರತ್ ನಿಂತಿದ್ದಳು.
ಅಶ್ಫಾಕ್ ಮುಖದಲ್ಲಿ ಸಿಟ್ಟು ಎದ್ದು ಕಾಣುತ್ತಿತ್ತು.
" ಇನ್ನೊಬ್ಬರ ನಡುವೆ ಮೂಗು ತೂರಿಸುವ ಬುದ್ಧಿ ನೀನು ಬಿಡಲಿಲ್ಲ ಅಲ್ಲವೇ? " ಸಿಟ್ಟಿನಿಂದ ಕೇಳಿದನು.
" ಏನು ಮೂಗು ತೂರಿಸುವುದು? ಯಾರು ಹೇಳಿದ್ದು ? ನಾನು ಇಲ್ಲಿ ಅನಿರೀಕ್ಷಿತವಾಗಿ ಬಂದದ್ದು. ನೀನು ಎನಿಸಿದ ಹಾಗೆ ಏನೂ ಇಲ್ಲ ."
" ಹೂದಾನಿ ಬಿದ್ದ ರೀತಿಗೆ ಗೊತ್ತಾಯಿತು. ನೀನು ನಮ್ಮ ವಿಷಯ ಕದ್ದು ಆಲಿಸುತ್ತಿದ್ದೆ. ನಿನಗೆ ಇದರಲ್ಲೇನು ಲಾಭ ಇದೆ ಹೇಳು ?"
 " ಹೌದು... ನಾನು ನಿಮ್ಮ ವಿಷಯವನ್ನು ಕದ್ದು ಆಲಿಸುತ್ತಿದ್ದೆ. ಏನಾಯಿತೀಗ ? "
" ಅದು ಒಳ್ಳೆಯ ಬುದ್ದಿ ಅಲ್ಲ. ಆ ರೀತಿ ಕದ್ದು ಆಲಿಸುವುದು. ಯಾಕೆ ಈ ರೀತಿ ನನ್ನ ಬದುಕಿನಲ್ಲಿ ಆಡುತ್ತೀಯಾ ಹೇಳು ? "
" ನಿನ್ನ ಬದುಕಿನಲ್ಲಿ ಏನು ಆಟ ಆಡಿದೆ ನಾನು ಹೇಳು ?
" ನೀನು ನನ್ನ ರುಬೀನಾಳೊಂದಿಗೆ ನಾನೊಬ್ಬ ಮೋಸಗಾರ, ಹುಡುಗಿಯರನ್ನು ತನ್ನ ಬಲೆಗೆ ಬೀಳಿಸುವವ ಎಂದೆಲ್ಲಾ ಹೇಳಲಿಲ್ಲವೇ ? ಅಲ್ಲದೆ ನನ್ನ ನಿನ್ನ ನಿಶ್ಚಿತಾರ್ಥ ಆಗಲಿದೆ ಎಂದು ಯಾಕೆ ಸುಳ್ಳು ಹೇಳಿದೆ ?

ಅಶ್ಫಾಕ್ ಆಡಿದ ಮಾತು ಕೇಳಿ ರುಬೀನಾಳಿಗೆ ಆಶ್ಚರ್ಯ ಆಯಿತು. ಅಂದರೆ ನೌಫಲ್ ಜೊತೆ ಫೋನಿನಲ್ಲಿ ಮಾತನಾಡಿದ ಹುಡುಗಿ ಇವಳೇ. ಅರೇ ನಾನು ಎಷ್ಟೊಂದು ಬೈದುಬಿಟ್ಟೆ. ಎಷ್ಟೊಂದು ಅನುಮಾನ ಪಟ್ಟೆ. ಛೇ!! ಎಂತೆಲ್ಲಾ ಅನಾಹುತ ಆಯಿತು ನನ್ನ ಬಾಳಿನಲ್ಲಿ. 

" ಹ್ಞಾಂ ಹೌದು ಹೇಳಿದೆ. ಆ ದರಿದ್ರದವಳನ್ನು ಮದುವೆಯಾಗಲು ಹೊರಡಿದ್ದೀಯಲ್ಲ. ನಿನಗೊತ್ತಿಲ್ವ ನನಗೆ ನೀನು ಎಂದರೆ ಎಷ್ಟು ಇಷ್ಟ ಎಂದು? ನನ್ನನ್ನು ಬಿಟ್ಟು ನೀನು ಇನ್ನು ಯಾರನ್ನೂ ಮದುವೆ ಆಗಬಾರದು.
ಇಶ್ರತ್ ಮಾತುಗಳು ರುಬೀನಾಳನ್ನು ಯೋಚನಾ ಲಹರಿಯಿಂದ ಹೊರಬರುವಂತೆ ಮಾಡಿದವು.ಆಕೆಯ ಮಾತುಗಳು ಅಶ್ಫಾಕ್ ಅನ್ನು ಮತ್ತಷ್ಟು ನೋವಿಗೆ ಒಳಪಡಿಸಿದವು.

" ನೋಡು ಆಕೆಯ ಬಗ್ಗೆ ಮಾತನಾಡಲು ನಿನಗೆ ಹಕ್ಕಿಲ್ಲ. ಪಾಪದವರಾದರೂ ನಿನ್ನ ಮನಸ್ಸಿಗಿಂತ ಆಕೆಯ ಮನಸು ಒಳ್ಳೆಯದಿದೆ."ಅಶ್ಫಾಕ್ ಮಾತು ಕೇಳಿ ರುಬೀನಾಳು ಆಶ್ಚರ್ಯಗೊಂಡಳು. 

ಅರೇ ಈತ ಅದೆಷ್ಟು ಅಗಾಧವಾಗಿ ನನ್ನ ಇಷ್ಟಪಡುತ್ತದ್ದಾನೆ. ಈತನ ಮನಸಿನಲ್ಲಿ ಯಾವುದೇ ಕಳಂಕವಿಲ್ಲ. ತಾನು ಈತನನ್ನು ಎಷ್ಟು ಸಂದೇಹಪಟ್ಟೆ ಎಂದು ಎನಿಸಿಯೇ ಆಕೆಯ ಮನಸ್ಸಿಗೆ ದುಃಖ ಆಯಿತು.
 " ಹ್ಞಾಂ ಹೌದು. ಆಕೆಯ ಮನಸು ಒಳ್ಳೆಯದಾದರಿಂದ ಅಲ್ಲವೇ ಆಕೆ ಯಾರದೋ ಜೊತೆ ಓಡಿಹೋದದ್ದು. ಅಂತಹ ಚಾರಿತ್ರ್ಯ ಹೀನಳ ಹಿಂದೆ ನೀನು ಯಾಕೆ ಬಿದ್ದಿದ್ದೀಯಾ ?

ಇಶ್ರತಳ ಮಾತುಗಳು ರುಬೀನಾಳ ಮನಸಿಗೆ ನಾಟಿದವು. 

ಅರೇ ನಾನು ಯಾರು ಎಂದು ತಿಳಿಯದ ಹೆಣ್ಣು ನನ್ನನ್ನು ಚಾರಿತ್ರ್ಯ ಹೀನ ಎಂದು ಹೇಳುತ್ತಾಳೆ. ಹಾಗಿದ್ದಲ್ಲಿ ಊರಿನಲ್ಲಿ ನನ್ನ ಬಗ್ಗೆ ಜನ ಏನೆಲ್ಲಾ ಮಾತನಾಡುತ್ತಿರುವರು ? ಮುಕ್ತಾರ್ ಹಾಗೂ ಅಮ್ಮ ಈ ಮಾತನೆಲ್ಲ ಕೇಳಿಸಿಕೊಳ್ಳಬೇಕಲ್ಲವೇ? ಅವರ ಪರಿಸ್ಥಿತಿ ಹೇಗಿರಬಹುದು ? ಎನಿಸಿಯೇ ಆಕೆ ದುಃಖ ತಪ್ತಳಾದಳು. ನನ್ನದಲ್ಲದ ತಪ್ಪಿಗೆ ಅದೆಷ್ಟು ನಾನು ಅನುಭವಿಸಬೇಕೋ? ನನ್ನವರು ಅನುಭವಿಸಬೇಕೋ ? ಅಲ್ಲದೆ ಈ ಅಶ್ಫಾಕ್ ಅದೆಷ್ಟು ಯಾತನೆ ಅನುಭವಿಸುತ್ತಿದ್ದಾನೆ. ನಾನು ಹೇಳಲಾ ? ಹೇಳಿದರೆ ನಂಬುವರಾ ? ಯೋಚಿಸುತ್ತಲೇ ಇದ್ದಳು ರುಬೀನಾ.

 " ನೋಡು ಇಶ್ರತ್ ಇದು ನಿನಗೆ ಸಂಬಂಧ ಪಟ್ಟ ವಿಷಯ ಅಲ್ಲ. ಆಕೆ ಓಡಿ ಹೋಗಿದ್ಧಾಳೋ, ಇಲ್ಲವೋ ನೀನು ನೋಡಿದ್ದೀಯಾ ? ಮತ್ತೆ ಯಾಕೆ ಆ ರೀತಿ ಆಡುತ್ತೀಯಾ ಹೇಳು ?"

" ನೀನೆ ಈ ಮಶೂದಳೊಂದಿಗೆ ಕೇಳಿದೆ ಅಲ್ಲವೇ... ಅದೆಲ್ಲ ಬಿಡು, ನೀನು ತನಗೊಬ್ಬಳು ಪ್ರೇಮಿ ಇದ್ದಾಳೆ ಎಂದೆ ಆದರೆ ಅದು ಯಾರು ಎಂದು ಹೇಳಲಿಲ್ಲ. ಆದರೂ ಈಕೆ ರುಬೀನಾ ಎನ್ನುವ ಹೆಸರು ಹೇಳಿದಳು. ಹೇಗೆ ಅದು ? ಎನ್ನುವ ಪ್ರಶ್ನೆ ರುಬೀನಾಳಲ್ಲಿ ಇಶ್ರತ್ ಕೇಳಿದಳು.

ರುಬೀನಾಳಿಗೆ ಒಮ್ಮೆಲೇ ತಲೆಗೆ ಹೊಡೆದ ಹಾಗಾಯಿತು. ಅರೇ ಎಂತಹ ಅಚಾತುರ್ಯ ಆಯಿತು ನನ್ನ ಕೈಯಿಂದ ಎಂದು ಎನಿಸಿದಳು. ಬದುಕಿನಲ್ಲಿ
ಹೇಗಾದರೂ ಇದನ್ನು ತಿರುಗಿಸಬೇಕು ಎಂದವಳೇ
" ಅಶ್ಫಾಕ್ ಅವತ್ತು ನಿನ್ನ ಗೆಳೆಯ ಹಾಗೂ ನೀನು ಮಾತನಾಡುವಾಗ ರುಬೀನಾ... ರುಬೀನಾ... ಅನ್ನುವುದು ಕೇಳಿಸುತ್ತಿತ್ತು. ಆದರೆ ಏನೊಂದೂ ಅರ್ಥ ಆಗಿರಲಿಲ್ಲ. ಆದರೆ ಇಂದು ಅದು ನಿನ್ನ ಹೆಣ್ಣಿನ ಹೆಸರು ಆಗಿರಬಹುದು ಎಂದು ಎನಿಸಿದೆ.
ಆ ರೀತಿ ಹೇಳಿ ಅಶ್ಫಾಕ್ ಮುಖ ನೋಡಿದಳು. ಅವನು ಅದನ್ನು ನಂಬಿದ ರೀತಿ ಇತ್ತು.
ಅವನು ಅಲ್ಲಿಂದ ಹೊರಡಲು ಅನುವಾದನು. ಅಷ್ಟರಲ್ಲಿ ರುಬೀನಾ ಆತನನ್ನು " ಅಶ್ಫಾಕ್ ಒಂದು ನಿಮಿಷ ಎಂದು ಕರೆಯುತ್ತಾಳೆ.

ಅಶ್ಫಾಕ್ ಏನು ಎಂಬಂತೆ ಆಕೆಯ ಮುಖ ನೋಡುತ್ತಾನೆ.
"ಯಾವುದೇ ವಿಷಯ ಇರಲಿ ನಾವು ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಬೇಕು. ನೀನು ರುಬೀನಾ ಓಡಿ ಹೋಗಿದ್ದೀಯಾ ಎಂದು ಬೇರೆಯವರು ಹೇಳಿದನನ್ನ ಮಾತು ಮಾತ್ರ ನಂಬಿದ್ದೀಯಾ. ಆದರೆ ಆಕೆಯ ಪರಿಸ್ಥಿತಿ ಬೇರೆ ಏನಾದರೂ ಇರಬಹುದಲ್ವಾ? ಯಾಕೆ ನಾವು ಪಾಸಿಟಿವ್ ಆಗಿ ಯೋಚನೆ ಮಾಡಬಾರದು? " ಎಂದು ಅಶ್ಫಾಕ್ ಬಳಿ ಕೇಳಿದಳು.ಆಕೆಯ ಮಾತು ಕೇಳಿದ ಇಶ್ರತಿಗೆ ಸಿಟ್ಟು ಬಂತು. 

" ಊರಿನವರು ನೋಡದೆ ಸುಳ್ಳು ಹೇಳುತ್ತಾರ? ಆಕೆ ಓಡಿ ಹೋಗದೆ ಇದ್ದಲ್ಲಿ ಆಕೆ ಎಲ್ಲಿದ್ದಾಳೆ? ಮನೆಯಲ್ಲಿಯೇ ಇರಬೇಕಿತ್ತಲ್ವ? ಯಾಕೆ ಮನೆಯಲ್ಲಿ ಇಲ್ಲ ಅವಳು? ಹೇಳು? ಎಂದು ಪ್ರಶ್ನಿಸಿದಳು.
" ಅಶ್ಫಾಕ್ ನನ್ನ ಮನಸು ಹೇಳುತ್ತಿದೆ. ಆಕೆ ಯಾವುದೋ ಕಷ್ಟದಲ್ಲಿ ಸಿಲುಕಿದ್ದಾಳೆ ಎಂದು. ಇಲ್ಲದಿದ್ದಲ್ಲಿ ಏನೋ ಆಪತ್ತು ಆಕೆಗೆ ಎದುರಾಗಿರಬಹುದು." ರುಬೀನಾ ಅಶ್ಫಾಕ್ ಅರ್ಥೈಸಲಿ ಎಂದು ಹೇಳಿದಳು.

" ವಿಪತ್ತು ಎದುರಾದವರು ತನ್ನ ಅಣ್ಣನಿಗೆ ಕರೆ ಮಾಡಿ ನಾನು ಓಡಿ ಹೋಗಿದ್ದೇನೆ ಎನ್ನುವುದಿಲ್ಲ" ಇಶ್ರತ್ ಗಂತೂ ಆತ ಆಕೆಯನ್ನು ಸಂಪೂರ್ಣ ಮರೆಯಲಿ ಎಂದು ಇತ್ತು.
"ನೀವಿಬ್ಬರೂ ಸ್ವಲ್ಪ ನಿಲ್ಲಿಸುತ್ತೀರಾ?. ಆಕೆಯ ವಿಚಾರ ಅದು ನನ್ನ ಸ್ವಂತ. ಮಶೂದ ನನ್ನ ಮನಸು ಕೂಡ ಯಾಕೋ ನೀನು ಹೇಳಿದಂತೆ ಆದರೆ ಎಷ್ಟು ಒಳ್ಳೆಯದಿತ್ತು ಎಂದು ಬಯಸುತ್ತಿದೆ. ಆದರೆ ಅದು ನಿಜವಲ್ಲ ಎಂದು ನನಗೆ ತಿಳಿದಿದೆ. ಹಾಗಾಗಿ ಈ ವಿಷಯದಲ್ಲಿ ನಿಮಗೆ ವಾದ ಬೇಡ. ದಯವಿಟ್ಟು ನನ್ನ ಬದುಕಿನಲ್ಲಿ ಪ್ರವೇಶಿಸಲು ನೋಡಬೇಡಿ ಎಂದು ಕೈ ಮುಗಿದನು.ರುಬೀನಾ ಮತ್ತಿನ್ನೇನನ್ನು ಹೇಳಲಿಲ್ಲ. 
ಅಶ್ಫಾಕ್ ಅಲ್ಲಿಂದ ಹೊರನಡೆದನು.

ಯಾಕೋ ರುಬೀನಾಳಿಗೆ ಆತನನ್ನು ನೋಡುವಾಗ ಸಂಕಟ ಎನಿಸುತ್ತಿತ್ತು. ನನಗೆ ಆತನಲ್ಲಿ ಎಂತಹ ಭಾವನೆಯೂ ಇರಲಿಲ್ಲ. ಆದರೆ ಈತ ನನ್ನನ್ನು ಬೆಟ್ಟದಷ್ಟು ಇಷ್ಟ ಪಡುತ್ತಾನೆ ಅಲ್ವಾ? ತಾನು ಯಾಕೆ ಬದಲಾಗುತ್ತಿದ್ದೇನೆ? ತನಗೆ ಯಾಕೆ ಆತನಲ್ಲಿ ಇಷ್ಟೊಂದು ಕಾಳಜಿ? ಎಲ್ಲಾದರೂ ನಾನು ಕೂಡ? ಇಲ್ಲ ಸಾಧ್ಯವಿಲ್ಲ... ನಾನು ಯಾರ ಪ್ರೀತಿ, ಪ್ರೇಮದ ಬಲೆಗೆ ಬೀಳುವವಳು ಅಲ್ಲ. ಆದರೆ ಆತನ ಬಗೆಗೆ ಅನುಕಂಪ ಅಂತೂ ಇದೆ.
ಅಷ್ಟರಲ್ಲಿ ಕೈಯಲ್ಲಿ ಚಿಟಿಕೆ ಹೊಡೆದ ಶಬ್ದ ಕೇಳಿ ರುಬೀನಾ ತನ್ನ ಯೋಚನಾ ಲಹರಿಯಿಂದ ಹೊರಬಂದಳು.

" ನೋಡು ಹೇಗೆ ಅವನನ್ನು ಬುಟ್ಟಿಗೆ ಹಾಕಬೇಕು ಎಂದು ಯೋಚಿಸುತ್ತಾ ಇದ್ದೀಯಾ ? ನಾನು ಇರುವವರೆಗೂ ಅದು ಸಾಧ್ಯವಿಲ್ಲ. ಆ ರುಬೀನಾಳನ್ನು ಆತನ ಬದುಕಿನಿಂದ ಹೊರ ದಬ್ಬಿ ಆಯಿತು. ಇನ್ನು ನೀನು , ನಿನ್ನನ್ನು ಈ ಮನೆಯಿಂದಲೇ ಹೊರ ಹಾಕುತ್ತೇನೆ ನೋಡು. ಆಮೇಲೆ ಆತನ ಪಟ್ಟದ ರಾಣಿ ನಾನೇ ಎಂದು ಇಶ್ರತ್ ಹೇಳಿದಳು.
ರುಬೀನಾ ಆಕೆ ಹೇಳಿದ್ದು ಕೇಳಿಸಿಯೂ ಕೇಳಿಸದವರಂತೆ ಅಲ್ಲಿಂದ ನಡೆದಳು.

ನಾನು ರುಬೀನಾಳನ್ನು ಸಂಪೂರ್ಣವಾಗಿ ಮರೆಯುವಂತೆ ಮಾಡಿದರೆ ಈ ಹುಡುಗಿ ಮತ್ತೆ ಮತ್ತೆ ನೆನಪಿಸುತ್ತಾಳೆ. ಆಕೆಯ ಪರವಾಗಿ ಮಾತನಾಡುತ್ತಾಳೆ. ಈಕೆಯ ಹಾಗೂ ಅಶ್ಫಾಕ್ ನಡುವೆ ಹೇಗಾದರೂ ದ್ವೇಷದ ಕಿಡಿ ಹಚ್ಚಬೇಕು ಹೇಗೆ ಎಂದು ಇಶ್ರತ್ ಆಲೋಚಿಸತೊಡಗಿದಳು.

ರುಬೀನಾ ತನ್ನ ಕೋಣೆಗೆ ಹೋಗಿ ಇದೇ ವಿಚಾರದಲ್ಲಿ ಆಲೋಚಿಸುತ್ತಾ ಇದ್ದಳು. ತನ್ನ ಬದುಕು ಮುಂದಿನಂತೆ ಆಗಬೇಕು. ತಾನು ಹೀಗೆ ಇದ್ದರೆ ಶಾಶ್ವತವಾಗಿ ತನ್ನ ಬದುಕನ್ನು ಕಳೆದುಕೊಳ್ಳಬೇಕಾಗಿ ಬರುವುದು. ತಾನು ದೃಢವಾದ ನಿರ್ಧಾರ ತೆಗೆದುಕೊಳ್ಳಲೇ ಬೇಕು. ಏನೇ ಆಗಲಿ ಇಂದು ರಾತ್ರಿ ತಾನು ಮುಕ್ತಾರಿಗೆ ಕರೆ ಮಾಡಿಯೇ ಮಾಡುತ್ತೇನೆ. ಆತನಿಗೆ ನೈಜ ವಿಷಯ ಎಲ್ಲಾ ಹೇಳುತ್ತೇನೆ ಎಂದು ಮನಸ್ಸಿನಲ್ಲೇ ಯೋಚಿಸಿದಳು.
ಆ ರಾತ್ರಿ ಎಲ್ಲರೂ ಮಲಗಿದ ನಂತರ ಲ್ಯಾಂಡ್ ಲೈನ್ ಫೋನ್ ಮೂಲಕ ಮುಕ್ತಾರ್ ನಂಬರ್ ಡಯಲ್ ಮಾಡಿದಳು.

ಅತ್ತ ಕಡೆಯಿಂದ ಸ್ವಿಚ್ಡ್ ಆಫ್ ಎಂದು ಬರುತ್ತಿತ್ತು. ಆಕೆ ಮತ್ತೆ, ಮತ್ತೆ ಕರೆ ಮಾಡಿದಳು. ಆ ಕಡೆಯಿಂದ ಅದೇ ಹೇಳುತ್ತಿತ್ತು.
ಪಾಪ ಆಕೆಗೇನು ಗೊತ್ತಿತ್ತು? ಕರೆ ಮಾಡುವವರ ಕಾಟ ತಾಳಲಾರದೆ ಮುಕ್ತಾರ್ ನಂಬರ್ ಬದಲಾಯಿಸಿದ್ದನು.
ಅದನ್ನು ತಿಳಿಯದ ರುಬೀನಾ ಮತ್ತೆ, ಮತ್ತೆ ಆತನಿಗೆ ಪ್ರಯತ್ನಿಸುತ್ತಾ ಇದ್ದಳು.

ಕೊನೆಗೆ ತನ್ನ ಪ್ರಯತ್ನ ವ್ಯರ್ಥ ಎಂದೆನಿಸಿದ  ಆಕೆ ಫೋನ್ ಕೆಳಗಿಟ್ಟು ರೂಮಿಗೆ ನಡೆದಳು.
ಯಾಕೋ ಮನಸ್ಸು ತುಂಬಾ ಭಾರ ಎಂದೆನಿಸುತ್ತಿತ್ತು. ಇದ್ದ ಒಂದು ಅವಕಾಶವನ್ನು ತಾನು ಕಳೆದುಕೊಂಡೆ. ಇನ್ನು ನನಗೆ ಯಾರು ಗತಿ? ಯಾಕೋ ಆಕೆಗೆ ಯೋಚಿಸುತ್ತಾ ಅಳು ಬರುತ್ತಿತ್ತು.ತಕ್ಷಣ ಆಕೆಗೆ ಒಂದು ಯೋಚನೆ ತಲೆಗೆ ಹೋಯಿತು. ಹೌದು.... ಸರಿ, ಹಾಗೆ ಮಾಡಿದರೆ ಹೇಗೆ ಎಂದು ಯೋಚಿಸಿದಳು.

ಅಶ್ಫಾಕ್ ಹಾಗೂ ನೌಫಲಿಗೆ ಖಂಡಿತವಾಗಿಯೂ ಒಬ್ಬರ ಸಂಪರ್ಕ ಇನ್ನೊಬ್ಬರಿಗೆ ಇದೆ. ಹೀಗಿರುವಾಗ ತಾನು ಆತನ ನಂಬರ್ ಅಶ್ಫಾಕ್ ಮೊಬೈಲಿನಿಂದ ತೆಗೆಯಬೇಕು ಎಂದು  ಯೋಚಿಸಿದಳು.
ಆದರೆ ತೆಗೆಯುವುದು ಹೇಗೆ? ಬೇಡ ಈಗ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ. ನಾಳೆ ಯೋಚಿಸಿದರಾಯಿತು ಎಂದು ನಿದ್ದೆಗೆ ಶರಣಾದಳು.

   ******************
ಮರುದಿನ ಬೆಳಿಗ್ಗೆ ಇಶ್ರತ್ ತನ್ನ ಕಾಲೇಜಿನಲ್ಲಿ ಫ್ರೆಂಡ್ಸ್ ಜೊತೆ ಕುಳಿತಿದ್ದಳು. ಯಾಕೋ ಆಕೆಯ ಮುಖ ಬಾಡಿ ಹೋಗಿತ್ತು. ಆಕೆಯ ಫ್ರೆಂಡ್ಸ್ ಇದನ್ನು ಗಮನಿಸಿದರು.

ಏನೇ ಡಲ್ ಆಗಿದ್ದೀಯಾ ಒಬ್ಬಳು ಗೆಳತಿ ಕೇಳಿಯೇ ಬಿಟ್ಟಳು.ಏನಿಲ್ಲ ಕಣೆ, ಅದೇ ಅಶ್ಫಾಕ್ ವಿಚಾರ. ಅದೇ ಯೋಚನೆ ಮಾಡುತ್ತಾ ಇದ್ದೇನೆ."" ಅಯ್ಯೋ ನಿನಗೆ ಅವನು ಅದೇನು ಮೋಡಿ ಮಾಡಿದ್ದಾನೋ? ಸದಾ ಅವನದೇ ಧ್ಯಾನದಲ್ಲಿ ಮುಳುಗಿರುತ್ತಿಯಲ್ವಾ? "
" ಮೋಡಿ ಅಲ್ಲ ಕಣೇ.... ನಾನು ಅವನು ನನ್ನವನಾಗಬೇಕು ಎಂದು ಶತಪ್ರಯತ್ನ ಮಾಡಿದರೂ ಆತ ನನ್ನಿಂದ ಮಾರುದ್ದ ದೂರ ಹೋಗಿ ಬಿಡುತ್ತಾನೆ."

" ಅಲ್ಲಾ ಕಣೇ, ನಾನು ಕೇಳುವುದು ಏನೆಂದರೆ ನೀನು ಇಷ್ಟೊಂದು ಸುಂದರಿಯಾಗಿದ್ದೀಯಾ . ಅವನು ಅದೆಂತಹ ಗಂಡೆ ನಿನ್ನನ್ನು ನೋಡದವನು?"
 ನನ್ನನ್ನು ಬಿಡು, ನೀನು ಆ ಮಶೂದಳನ್ನು ನೋಡಿದರೆ... ಆಕೆ ದಂತದ ಗೊಂಬೆಯಂತಿದ್ದಾಳೆ. ಆತ ಆಕೆಯನ್ನೇ ನೋಡುವುದಿಲ್ಲ. ಆತನ ತಲೆಯ ತುಂಬಾ ರುಬೀನಾಳೆ ತುಂಬಿದ್ದಾಳೆ. "
" ಆದರೆ ಆಕೆ ಯಾರದೋ ಜೊತೆ ಓಡಿಹೋದದ್ದು ನೀನು ಹೇಳಿದೆ ಅಲ್ವಾ ? "

" ಅಲ್ಲೇ ಇರುವುದು ಸಮಸ್ಯೆ ಕಣೇ.. ಅವಳು ಓಡಿಹೋದರೂ ಕೂಡ ಆತ ಆಕೆಯನ್ನು ಮರೆಯುತಿಲ್ಲ.  ಅದಲ್ಲದೆ ಆ ಮಶೂದ ಕೂಡ ಆಕೆಯ ಪರ ವಹಿಸಿ ಮಾತನಾಡುತ್ತಾಳೆ. ಆಕೆಯನ್ನು ಹೇಗಾದರೂ ಮಾಡಿ ಹೊರಹಾಕಬೇಕು. ಅದೇ ಯೋಚಿಸುತ್ತಾ ಇದ್ದೆ. ಏನು ಮಾಡುವುದು?" ನೋಡು ಹೇಗೂ ಆಕೆ ನೆನಪಿನ ಶಕ್ತಿ ಕಳೆದುಕೊಂಡಿದ್ದಾಳೆ. ಆಕೆಯನ್ನು ನೀನು ಹುಚ್ಚಿ ಎಂದು ಸಾಬೀತು ಪಡಿಸಿದರೆ ಹೇಗೆ? ಅಥವಾ ಆಕೆಯ ವ್ಯಕ್ತಿತ್ವ ಸರಿ ಇಲ್ಲ ಎಂದು ಸಾಬೀತು ಪಡಿಸಬೇಕು. ಹಾಗಾದರೆ ಆಕೆಯನ್ನು ಮನೆಯಿಂದ ಹೊರ ಹಾಕುವುದಂತೂ ನಿಜ " ಎಂದು ಇಶ್ರತ್ ಗೆಳತಿಯೊಬ್ಬಳು ಸಲಹೆ ಕೊಟ್ಟಳು.

ಇಶ್ರತಿಗೆ ಆಕೆಯ ಸಲಹೆ ತುಂಬಾ ಇಷ್ಟ ಆಯಿತು. ಇದನ್ನು ಈಗಲೇ ಕಾರ್ಯ ರೂಪಕ್ಕೆ ತರಬೇಕು ಎಂದು ಆಕೆ ಆಲೋಚಿಸಿದಳು.ಹೇಯ್ ಮಶೂದ , ನೋಡುತ್ತಾ ಇರು. ನಿನ್ನನ್ನು ಆ ಮನೆಯಿಂದ ಹೇಗೆ ಒದ್ದು ಓಡಿಸುತ್ತೇನೆ ಎಂದು ?  ಎಂದು ಮನಸ್ಸಿನಲ್ಲೇ ಯೋಚಿಸಿದ ಇಶ್ರತ್ ತನ್ನ ಗೆಳತಿಯರತ್ತ ನೋಡಿ ಮಂದಹಾಸ ಬೀರಿದಳು.

 ಇಶ್ರತ್ ಹಾಗೂ ಗೆಳತಿಯರು ರುಬೀನಾಳನ್ನು ಹೇಗೆ ಮನೆಯಿಂದ ಹೊರ ಹಾಕುವುದು ಎಂದು ಯೋಚಿಸುತ್ತಾ ಇದ್ದರು.

 ಆಗಲೇ ಅವರಿಗೆ ಯೋಜನೆಯೂ ಸಿಕ್ಕಿತು. ಅದನ್ನು ಕಾರ್ಯ ರೂಪಕ್ಕೆ ತರುವುದಾಗಿ ಅವರು ನಿರ್ಧರಿಸಿದರು.
ಮಾಡಿದ ಯೋಜನೆಯಂತೆ ಮರುದಿನ ಸಂಜೆ ಆಕೆಯ ಗೆಳೆಯರಾದ ಶಾಕಿರ್ ಹಾಗೂ ತಮೀಮ್ ಅಶ್ಫಾಕ್ ಮನೆಗೆ ಬಂದರು.

ಇಶ್ರತ್ ಅವರಿಗೆ ಅಶ್ಫಾಕ್ ಮನೆಯಲ್ಲಿ ಇದ್ದ ಸಮಯಕ್ಕೆ ಬರುವಂತೆ ಸುಳಿವು ನೀಡಿದ್ದಳು. ಅದರಂತೆ ಅವರು ಬಂದಿದ್ದರು.
ಅವರೂ ಬಂದೊಡನೆ ಇಶ್ರತ್ ಅವರೊಡನೆ ಕುಳಿತುಕೊಳ್ಳಲು ಹೇಳಿದಳು.  ಒಳಗೆ ಹೋದವಳೇ 
" ಮಶೂದ ನೋಡು, ನನ್ನ ಗೆಳೆಯರು ಬಂದಿದ್ದಾರೆ. ಅವರಿಗೆ ಏನೂ ಕೊಟ್ಟಿಲ್ಲ. ಕುಡಿಯಲು 2 ಗ್ಲಾಸ್ ಜ್ಯೂಸ್ ಮಾಡಿಕೊಂಡು ಬಾ " ಎಂದು ಇಶ್ರತ್ ಆಜ್ಞೆ ನೀಡಿದಳು.

" ಅರೇ ಮನೆಯಲ್ಲಿ ಇಷ್ಟೊಂದು ಕೆಲಸಗಾರರು ಇರುವಾಗ ನಾನು ಯಾಕೆ ? ಅಲ್ಲದೆ ಅವರು ಹುಡುಗರು. ನನಗೆ ಸರಿಯಾಗುವುದಿಲ್ಲ " ಎಂದು  ರುಬೀನಾ ಹೇಳಿದಳು.
ಆಕೆ ತನ್ನ ಆಜ್ಞೆ ತಿರಸ್ಕರಿಸಿದ್ದು ನೋಡಿ ಇಶ್ರತಳಿಗೆ ಸಿಟ್ಟು ಬಂತು.
" ನೀನೇನು ಈ ಮನೆಯವಳು ಅಲ್ಲ ತಾನೇ ? ನಾನು ಹೇಳಿದಷ್ಟು ಮಾಡು. ಇಲ್ಲಾ ಅಂದರೆ ನಾನು ಈ ಮನೆಯಿಂದಲೇ ಹೊರ ಹಾಕಿಸುತ್ತೇನೆ."

ಈಗ ಯಾಕೋ ರುಬೀನಾಳಿಗೆ ಒಂದು ಭಯ ಕಾಡತೊಡಗಿತು. ದೇವರು ತನಗೊಂದು ಒಳ್ಳೆಯ ದಾರಿ ತೋರಿಸುವವರೆಗೆ ಈ ಮನೆಯೇ ನನಗೆ ಅತ್ಯಂತ ಒಳ್ಳೆಯ ಜಾಗ. ಇಲ್ಲಿಂದ ಹೊರ ಹೋದರೆ ಖಂಡಿತವಾಗಿಯೂ ನಾನು ಆ ಹಕೀಮ್ ಕೈಗೆ ಸಿಗುತ್ತೇನೆ. ಈಕೆ ಏನೂ ಮಾಡಲು ಹೇಸುವವಳು ಅಲ್ಲ. ಅದುವರೆಗೆ ಈಕೆ ಹೇಳಿದ ಹಾಗೆ ಕೇಳಿದರೆ ಒಳ್ಳೆಯದು ಎಂದು ರುಬೀನಾ ಜ್ಯೂಸ್ ಮಾಡಿಕೊಂಡು ಬರಲು ಹೋದಳು.

"ನೋಡಿ , ಆಕೆ  ಜ್ಯೂಸ್ ಮಾಡಿಕೊಂಡು ಬರಲು ಹೋಗಿದ್ದಾಳೆ. ಅಶ್ಫಾಕ್ ಬರುವ ತನಕ ಆಕೆಯನ್ನು ನಿಲ್ಲಿಸಬೇಕು. ನಾನು ಅವನನ್ನು ಕರೆದುಕೊಂಡು ಬರುತ್ತೇನೆ ಎಂದು ಹೇಳಿ ಹೋದಳು.
ಇಶ್ರತ್ ತನ್ನ ಬೆನ್ನ ಹಿಂದೆ ಯೋಜನೆ ಮಾಡುತ್ತಿದ್ದಾನೆ ಎಂದು ತಿಳಿಯದ  ರುಬೀನಾ ಜ್ಯೂಸ್ ಮಾಡಿಕೊಂಡು ಬಂದು ಅವರಿಗೆ ನೀಡಿದಳು.
ಅವರಿಗೆ ರುಬೀನಾಳ ಸೌಂದರ್ಯ ಕಂಡು ತಮ್ಮನ್ನೇ ತಾವು ಮರೆತಂತೆ ಆಯಿತು. ಆದರೂ ತಮ್ಮನ್ನೇ ಸುಧಾರಿಸಿಕೊಂಡು

 " ಹಾಯ್.... " ಎಂದು ಮಾತಿಗಿಳಿದರು.
ಅವರಲ್ಲಿ ಮಾತನಾಡಲು ಇಚ್ಚಿಸದ ರುಬೀನಾ ಹಿಂದೆ ತಿರುಗಿ ಹೋಗಲು ಅನುವಾದಳು.
ಅಷ್ಟರಲ್ಲಿ ಶಾಕಿರ್ ಅವಳನ್ನು ಕರೆದವನೇ " ಅರೇ ಮಶೂದ ಅವರೇ ಏನಾಯಿತು ? ನಾವು ಮಾತನಾಡಿದಕ್ಕೆ ಒಂದು ಪ್ರತಿಕ್ರಿಯೆ ಇಲ್ಲ. ಸೌಂದರ್ಯ ಇದೆ ಎಂದು ಜಂಭ ಇರಬೇಕಲ್ವಾ" ಎಂದನು.
" ಅರೇ ಹಾಗೇನಿಲ್ಲ. ನಿಮ್ಮ ಪರಿಚಯ ನನಗೆ ಇಲ್ಲ. ಸುಮ್ಮನೆ ಏಕೆ ಮಾತುಕತೆ ಎಂದು ಸುಮ್ಮನಾದೆ." 

" ನಿಮಗೆ ನಮ್ಮ ಪರಿಚಯ ಇಲ್ಲದಿರಬಹುದು. ಆದರೆ ನಮಗೆ ಇಶ್ರತ್ ಎಲ್ಲಾ ಹೇಳಿದ್ದಾಳೆ. ನಿಮ್ಮ ಬಗ್ಗೆ ನಮಗೆ ಅಯ್ಯೋ ಪಾಪ ಎನಿಸುತ್ತಿದೆ."
" ಏನು ಮಾಡುವುದು? ಎಲ್ಲರ ಬದುಕಿನಲ್ಲೂ ಆ ದೇವರು ಏನು ಬರೆದಿದ್ದಾನೆಯೋ  ಅದೇ ನಡೆಯುತ್ತದೆ. ನನ್ನ ಬದುಕಿನಲ್ಲಿ ಅದೇ ಆಗುತ್ತಿದೆ. "

" ಅದೂ ಹೌದು ಎನ್ನಿ. ಆದರೆ ನಿಮಗೇನೂ ಜ್ಞಾಪಕ ಬರುತಿಲ್ವಾ.. ನಿಮ್ಮ ಕುಟುಂಬ , ತಂದೆ- ತಾಯಿ ಯಾವುದೂ ಕೂಡ."
" ಇಲ್ಲಾ.... ಏನು ಕೂಡ ಇಲ್ಲ...."
ಅವರು ಆಕೆಯನ್ನು ಹೀಗೆ ಮಾತನಾಡಿಸುತ್ತಾ ಇದ್ದರು.
ಇಶ್ರತ್ ಸೀದಾ ಅಶ್ಫಾಕ್ ಕೋಣೆಗೆ ತೆರಳಿದಳು.
 ಅರೇ ಅಶ್ಫಾಕ್ ನನ್ನ ಕ್ಲಾಸ್ಮೇಟ್ಸ್ ಬಂದಿದಾರೆ. ಜಸ್ಟ್ ಬಂದು ಮಾತನಾಡಿಸು "ಎಂದು ಕರೆದಳು.
ತನ್ನ ಲ್ಯಾಪ್ ಟಾಪ್ ಅಲ್ಲಿ ಕೆಲಸ ಮಾಡುತ್ತಿದ್ದ ಅಶ್ಫಾಕ್ ಅದನ್ನು ಬದಿಗಿಟ್ಟು ಅವರೊಂದಿಗೆ ಮಾತನಾಡಲು ಎಂದು ಬಂದನು.

ಮೇಲಿನಿಂದ ಕೆಳಕ್ಕೆ ಇಳಿದು ಬರಬೇಕಾದರೆ ಆತನಿಗೆ ರುಬೀನಾ ಅವರೊಂದಿಗೆ ಮಾತನಾಡುವುದು ಕಾಣಿಸಿತು. ಅಶ್ಫಾಕ್ ಬರುವುದನ್ನು ಗಮನಿಸಿದ ಅವರು ಅವಳೊಂದಿಗೆ ನಗಾಡಿಕೊಂಡು ಮಾತನಾಡಿದ ಹಾಗೆ ಮಾಡಿದರು. ರುಬೀನಾ ಬೆನ್ನು ತಿರುಗಿಸಿ ನಿಂತಿದ್ದರಿಂದ ಆಕೆಗೆ ಇದರ ಅರಿವಿಯೇ ಇರಲಿಲ್ಲ.

 " ಅಲ್ಲಾ ಅಶ್ಫಾಕ್ ಈ ಹುಡುಗಿಗೆ ಮಾನ ಮರ್ಯಾದೆ ಏನೂ ಇಲ್ವಾ? ಜ್ಞಾಪಕ ಶಕ್ತಿ ಇಲ್ಲ ಎಂದುಕೊಂಡು ಸಿಕ್ಕವರಲ್ಲಿ ಮಾತನಾಡುವುದಾ? ಅದು ಕೂಡ ಒಳ್ಳೆ ಪರಿಚಯ ಇದ್ದವರ ರೀತಿ. ಶಿಟ್... ನನಗಂತೂ ಇದೆಲ್ಲಾ ನೋಡಲಾಗದು " ಎಂದು ಹೇಳಿ ಉರಿಯುವ ಬೆಂಕಿಗೆ ತುಪ್ಪ ಸುರಿದಳು. 

 " ಅಲ್ಲಾ ಅಶ್ಫಾಕ್ ಈ ಹುಡುಗಿಗೆ ಮಾನ ಮರ್ಯಾದೆ ಏನೂ ಇಲ್ವಾ? ಜ್ಞಾಪಕ ಶಕ್ತಿ ಇಲ್ಲ ಎಂದುಕೊಂಡು ಸಿಕ್ಕವರಲ್ಲಿ ಮಾತನಾಡುವುದಾ? ಅದು ಕೂಡ ಒಳ್ಳೆ ಪರಿಚಯ ಇದ್ದವರ ರೀತಿ. ಶಿಟ್... ನನಗಂತೂ ಇದೆಲ್ಲಾ ನೋಡಲಾಗದು " ಎಂದು ಹೇಳಿ ಉರಿಯುವ ಬೆಂಕಿಗೆ ಇಶ್ರತ್ ತುಪ್ಪ ಸುರಿದಳು

     ಮಶೂದ ಇಶ್ರತ್'ನ ಗೆಳೆಯರೊಂದಿಗೆ ಮಾತನಾಡುವಂತಹ ಸಂದರ್ಭದಲ್ಲಿ ಇಶ್ರತ್ ಅಶ್ಫಾಕ್'ನನ್ನು ಕರೆದುಕೊಂಡು ಕೆಳಗೆ ಬರುತ್ತಾಳೆ.

ಅಶ್ಫಾಕ್, ಮಶೂದ ಅವರೊಂದಿಗೆ ಮಾತನಾಡುವುದನ್ನು ನೋಡುತ್ತಾನೆ.ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಇಶ್ರತ್ ಏನೆಲ್ಲಾ ಹೇಳಿ ಕೊಡುತ್ತಾಳೆ ಆತನ ಬಳಿ. 

  ಆತನ ಮಂದೆ ಬಂದವನೆ!,
 ಮಶೂದ ಇಲ್ಲಿ ಯಾಕೆ ನಿಂತಿದ್ದಿಯಾ!?ಏನು ಪರಿಚಯ ಇದೆ ನಿನಗೆ? ಯಾಕೆ ಮಾತನಾಡುತ್ತಿಯಾ ಇವರ ಜೊತೆ ?ಎಂದು ಕೇಳುತ್ತಾನೆ.

"ಅದೂ.....ಇಶ್ರತ್ ನನ್ನ ಬಳಿ....." ಎಂದು ಮಶೂದ, ಇಶ್ರತ್ ತನ್ನೊಡನೆ ಜ್ಯೂಸ್ ಮಾಡಿಕೊಂಡು ಬರಲು ಹೇಳಿದ ವಿಚಾರವನ್ನು ಹೇಳಲು ಬಾಯಿ ತೆರೆಯುತ್ತಾಳೆ.

 ಇಶ್ರತ್'ಗೆ ಇದು ಗೊತ್ತಾಗುತ್ತದೆ.
ತನ್ನ ಬಂಡವಾಳ ಬಯಲಾಗುತ್ತದೆ ಎಂದು ಅರಿತ ಇಶ್ರತ್,

"ಏನು? ಏನು ಇಶ್ರತ್ ಅಂತ ಹೇಳುತ್ತಿಯಾ?
ಇಶ್ರತಿನ ಪ್ರೆಂಡ್ ಆದರೆ ನಿನಗೂ ಗೆಳೆಯರೇ ಅವರು,? 
ಅವರೊಂದಿಗೆ ನೀನು ಮಾತನಾಡಬೇಕೆಂದುಂಟೆ.!?
ಯಾರ ಗೆಳೆಯರಾದರು ಮಾತನಾಡುವುದು ಹೇಗೆ ? ಎಂತಹ ಹೆಣ್ಣು ನೀನು?"
ಎಂದು ಕೇಳುತ್ತಾಳೆ.ಅಷ್ಟರಲ್ಲಿ ಅಶ್ಫಾಕ್ ಸಿಟ್ಟಿನಿಂದ, ಮಶೂದಳ ಬಳಿ ಒಳಗೆ ಹೋಗು ಎಂದು ಆಜ್ಞೆ ಕೊಡುತ್ತಾನೆ.

ಮಶೂದ.,
"ಅಲ್ಲ ಅಶ್ಫಾಕ್ ನನ್ನ ಮಾತು ಒಂದು ನಿಮಿಷ ಕೇಳು, "ಎಂದು ಹೇಳಲು ಹೋಗುತ್ತಾಳೆ.
ಆದರೆ ಅಶ್ಫಾಕ್ "ಏನೂ ಕೇಳಲು ಹೇಳಲು ಉಳಿದಿಲ್ಲ.
ನಿನ್ನ ಕೆಲಸ ಎಷ್ಟಿದೆ ಅಷ್ಟು ಮಾಡಿದರೆ ಸಾಕು. 
ಯಾರು ಬಂದರೇ ಹೋದರೇ ಅವರ 
ಬಳಿ ಮಾತನಾಡಬೇಕೆಂದಿಲ್ಲ" ಎಂದು ಹೇಳುತ್ತಾನೆ‌
 
ಆಗ ಮಶೂದಳಿಗೆ ತಿಳಿಯುತ್ತದೆ. ಓ ಇದರಲ್ಲಿ ಇಶ್ರತ್'ದೆ ಏನೋ ಒಂದು ಪಾತ್ರ ಇದೆ. ಬೇಕೇ ಎಂದು ನನ್ನನ್ನು ಈ ಗುಂಡಿಗೆ ತಳ್ಳಿದ್ದಾಳೆ ಎಂದು.

ಆದರೆ ಆಕೆ ಏನೂ ಮಾಡುವ ಪರಿಸ್ಥಿತಿಯಲ್ಲಿ ಇಲ್ಲ. ಯಾಕೆಂದರೆ ಅಶ್ಫಾಕ್'ನೊಡನೆ ನಾನು ಹೇಳಲು ಬಾಯಿ ತೆರೆದಾಗಲೇ ಅಶ್ಫಾಕ್ ಬಾಯಿ ಮುಚ್ಚಿ ಹೋಗು ಎಂದು ಆಜ್ಞೆ ನೀಡಿ ಆಗಿದೆ ಎಂದು ಹೇಳಿ ಸುಮ್ಮನಾಗಿ ಸೀದಾ ಒಳಗೆ ನಡೆಯುತ್ತಾಳೆ.

ಇಶ್ರತ್'ಗೆ ಒಳಗೊಳಗೆ ತುಂಬಾ ಖುಷಿಯಾಗುತ್ತೆ. ಏನಿದ್ದರೂ ನನ್ನ ಮೊದಲ ಪ್ರಯತ್ನ ಅರ್ಧಕ್ಕೆ ಸಫಲ ಆಯಿತು. ಇನ್ನರ್ಧ ಅಶ್ಫಾಕ್ ಮನದಲ್ಲಿ ಆಕೆಯ ಬಗ್ಗೆ ಕಳಂಕವನ್ನು ತುಂಬುವುದು ಎಂದು ಯೋಚಿಸುತ್ತಾ ಮನದಲ್ಲಿಯೇ ಖುಷಿ 
ಪಡುತ್ತಾಳೆ.

ಅಶ್ಫಾಕ್, ಶಾಕಿರ್ ಮತ್ತು ತಮೀಮ್ ರೊಂದಿಗೆ ಕ್ಷೇಮ ಸಮಾಚಾರ ಮಾತನಾಡಿ ನಂತರ ಅವರನ್ನು ಬೀಳ್ಕೊಡುತ್ತಾನೆ.ಅವರು ಹೋದದ್ದೆ ತಡ ಇಶ್ರತ್ ಅಶ್ಫಾಕ್'ನೊಂದಿಗೆ,

"ಅಲ್ಲ ಅಶ್ಫಾಕ್ ನೋಡು ನೀನು ಏನು ಮಾಡಿದ್ದಿಯಾ ಸರಿ ಮಾಡಿದ್ದಿಯಾ. 
ಆಕೆಗೆ ಹಾಗೆ ಆಗಬೇಕು. 
ಎಂತ ಒಂದು ಹೆಣ್ಣು ಆಕೆ ನೋಡು. ಯಾರು ಎಂದು ಪರಿಚಯ ಇಲ್ಲ ,ಮಾತಿಗೆ ಇಳಿದಿದ್ದಾಳೆ!
ಹೀಗೆ ಮಾಡಿದರೆ ಹೇಗೆ...? ಬುದ್ಧಿಶಕ್ತಿ ಇಲ್ಲ ಹೌದು,
 ನೆನಪು ಶಕ್ತಿ ಇಲ್ಲ ಹೌದು.
ಆದರೆ ಬಂದವರೊಡನೆ ಮಾತನಾಡಬಾರದು ಎಂಬಂತಹ ಸಾಮಾನ್ಯ ಜ್ಞಾನ ಕೂಡ ಆಕೆಗೂ ಇಲ್ಲವಾ!!!" ಎಂದು ಪ್ರಶ್ನಿಸುತ್ತಾಳೆ.ಅಶ್ಫಾಕ್ ಒಂದು ಸಲ ಏನೋ ಯೋಚಿಸುತ್ತಾನೆ.ನಂತರ ಇಶ್ರತ್ ನ ಬಳಿ,

 "ನೋಡು ಆಕೆಗೆ ನಿಜವಾಗಿಯೂ ಏನೂ ಎಂದು ಈ ಸಮಯದಲ್ಲಿ ಗೊತ್ತಾಗುವುದಿಲ್ಲ... 
ಹೇಗಿರಬೇಕು, ಏನು ಮಾಡಬೇಕುಎಂದು ತಿಳಿಯುವುದಿಲ್ಲ.
ಹಾಗಿರುವಾಗ ನಾವು ಅವಳನ್ನು ಏನೂ ಹೇಳಿ ಪ್ರಯೋಜನವಿಲ್ಲ.
ನಿಜ ಎಂದರೆ ಯಾರೋ ನಮ್ಮ ಸಂಬಂಧಿಕರೆಂದು ಅರಿತು ಮಾತನಾಡಿರಬಹುದಲ್ಲವೇ?.
ಹಾಗಿರುವಾಗ ನಾವು ಆಕೆಯ ಹಿಂದಿನಿಂದ ಕೆಟ್ಟದಾಗಿ ಹೇಳಬಾರದು."ಇಶ್ರತಿಗೆ ಅದು ಇಷ್ಟಾವಾಗುವುದಿಲ್ಲ.
ಆಕೆ ಏನೋ ಹೇಳಲು ಬಾಯಿ ತೆರೆಯುತ್ತಾಳೆ. 

ಅಷ್ಟರಲ್ಲಿ ಅಶ್ಫಾಕ್ "ಬೇಡ ಇದರ ಬಗ್ಗೆ ಮಾತು ಮುಂದುವರಿಸಲು ನನಗೆ ಇಷ್ಟವಿಲ್ಲ.ಆಕೆಯಿಂದ ಏನೋ ತಪ್ಪಾಗಿ ಹೋಗಿದೆ.
ಇರಲಿ ಬಿಡು ಆಕೆ ಇನ್ನೂ ಮುಂದೆ ಹಾಗೆ ಮಾಡಲಿಕ್ಕಿಲ್ಲ.
ಈಗ ನಾನು ಹೇಳಿದೆ ಅಲ್ವ
ಆಕೆಗೆ ಅರ್ಥ ಆಗಿರಬಹುದು" ಎಂದು ಇಶ್ರತ್ ಬಳಿ ಹೇಳುತ್ತಾನೆ.ಅಷ್ಟು ಹೇಳಿ ಅಶ್ಫಾಕ್ ತನ್ನ ರೂಮಿನ ಕಡೆಗೆ ನಡೆಯುತ್ತಾನೆ. 
ಅಶ್ಫಾಕ್ ಹೋದ ಮೇಲೆ ಇಶ್ರತಿಗೆ ಸಿಟ್ಟು ಬರುತ್ತದೆ.

 ಅಯ್ಯೋ ನನ್ನ ಅರ್ಧ ಪ್ಲಾನ್ ಸಕ್ಸೆಸ್ ಆಗಿತ್ತು. ಅಷ್ಟರಲ್ಲಿ ಇನ್ನೂ ಅರ್ಧ ಫೇಲ್ ಆಗಬೇಕೆ?ಅಶ್ಫಾಕ್ ನಿನಗೆ ಅಷ್ಟೊಂದು ತಲೆ ಇಲ್ಲವೇ?
ಯಾಕೆ ನಿನಗೆ ಸಿಟ್ಟು ಬರುವುದಿಲ್ಲವೇ?
ಆಕೆಗೆ ಬಾಯಿಗೆ ಬಂದ ಹಾಗೆ ಬಯ್ಯಬೇಕೆಂದು ನಾನು ಇಷ್ಟೆಲ್ಲ ಪ್ಲಾನ್ ಮಾಡಿದರೆ ನೀನು ಆಕೆಯ ಪರವಾಗಿ ಮಾತನಾಡುತ್ತಿಯಲ್ಲ. 
ಏನಾಗಿದೆ ನಿನಗೆ ಎಂದು ಮನದಲ್ಲಿ ಯೋಚಿಸುತ್ತಾಳೆ. 
 
 ನೋಡೋಣ ಬಿಡುವುದಿಲ್ಲ ನಿನ್ನನು ಮಶೂದ, 
ಇನ್ನು ಮುಂದೆ ನೋಡೋಣ
ಯಾವುದಾದರೂ ಬೇರೆ ಪ್ಲಾನ್ ಮಾಡಿ ಈ ಮನೆಯಿಂದ ಹೋರದಬ್ಬುವುದಂತು ಗ್ಯಾರಂಟಿ ಎಂದು ಮನದಲ್ಲಿ ಶಪಥ ಮಾಡಿಕೊಳ್ಳುತ್ತಾಳೆ.
ಇತ್ತ ತನ್ನ ಕೊಣೆಗೆ ಬಂದ ರುಬೀನಾಳಿಗೆ ತುಂಬಾ ದುಃಖವಾಗುತ್ತದೆ.
    ಯಾಕೆ ಇಷ್ಟೊಂದು ಜೊರಾಗಿ ಅಶ್ಫಾಕ್ ಮಾತನಾಡಿದನು.
ನನ್ನ ತಪ್ಪು ಇದರಲ್ಲಿ ಏನಿದೆ..!
ಅವರು ತಾನೇ ನನ್ನನ್ನು ಮಾತನಾಡಿಸಿದ್ದು ನಾನು ಅಲ್ಲವಲ್ಲ,! 
ಒಂದು ನಿಮಿಷ ನನ್ನ ಮಾತು ಆತನಿಗೆ ಕೇಳಬಹುದಿತ್ತಲ್ಲ ಎಂದು ಯೋಚಿಸುತ್ತಾಳೆ.
ಆದರೆ ಆಕೆಗೆ ಗೊತ್ತಾಗುತ್ತದೆ.
ಇದರೆಲ್ಲೆಲ್ಲ ಇಶ್ರತ್'ನ ಕೈವಾಡ ಇದೆ. 
ಬೇಕುಂತಲೇ ನನ್ನ ಬಳಿ ಜ್ಯೂಸ್ ಮಾಡಿಸಿ ಅವರೊಡನೆ ಮಾತನಾಡಲು ಹೇಳಿರಬಹುದು.

       ಇಶ್ರತ್ ನನ್ನ ಬಳಿ ಹೇಳಿದ ಹಾಗೆ ಅವಳಿಗೆ ನನ್ನನ್ನು ಮನೆಯಿಂದ ಹೊರದಬ್ಬ ಬೇಕೆಂದು ತುಂಬಾ ಬಯಕೆ ಇದೆ.
ಖಂಡಿತ ಅವಳು ಏನಾದರೂ ಒಂದು ದಾರಿ ಹುಡುಕುತ್ತ ಇರುತ್ತಾಳೆ. 
ನಾನು ಅದಕ್ಕೆ ಅವಕಾಶ ಕೊಡಬಾರದು ಹೇಗಾದರೂ ಅವಳು ಏನೂ ಪ್ಲಾನ್ ಮಾಡುತ್ತಾಳೋ ಅದನ್ನು ಜಾಗೃತೆ ವಹಿಸಬೇಕು,ನೋಡುತ್ತಾ ಇರಬೇಕು ಎಂದು ಯೋಚಿಸುತ್ತಾ ಇರುತ್ತಾಳೆ.

ಅಷ್ಟರಲ್ಲಿ ಆಕೆಗೆ ಒಮ್ಮೆಲೆ ನಾ
ತಾನು ನೌಫಲ್ ನಂಬರ್ ತೆಗೆದುಕೊಳ್ಳಬೇಕು ಎಂದು ಯೋಚಿಸಿದ್ದು ನೆನಪಾಗುತ್ತದೆ.
ನಾನು ಹೇಗಾದರು ಮಾಡಿ ಅಶ್ಫಾಕ್ ನ ಕೊಣೆಯ ಒಳಗೆ ಹೋಗಿ ಆತನ ಮೊಬೈಲ್ ನಲ್ಲಿ ನೌಫಲ್ ನ ನಂಬರ್ ನೋಡಬೇಕು. 
ನೌಫಲ್'ಗೆ ಕರೆ ಮಾಡಿ ಮುಕ್ತಾರ್ ನಲ್ಲಿ ಮಾತನಾಡಲು ಹೇಳಿದರೆ ಎಲ್ಲ ಸರಿ ಹಾಕಬಹುದಲ್ಲವೇ ನನ್ನ ಬದುಕಿನ ಪಯಣ ಅಲ್ಲಿಗೆ ಸರಿಯಾಗಿ ಹೋಗಬಹುದಲ್ಲವೇ. 
ನನ್ನ ಮನೆಗೆ ನಾನು ತಲುಪ ಬಹುದಲ್ಲವೇ 
ಎಂದು ಯೋಚಿಸುತ್ತಾಳೆ. 
ನೋಡೋಣ 
ಅಶ್ಫಾಕ್ ಯಾವ ಗಳಿಗೆ ತನ್ನ ಮೊಬೈಲ್ ಕೆಳಗೆ ಇಟ್ಟು ಎಲ್ಲಾದರೂ ಹೋಗುತ್ತಾನ!?ಅವಕಾಶಕ್ಕಾಗಿ ಕಾಯುತ್ತ ಇರಬೇಕು ಎಂದು ಯೋಚಿಸುತ್ತಾ ಇರುತ್ತಾಳೆ.

ಇತ್ತ ತನ್ನ ಕೊಣೆಗೆ ಒಳಗೆ ಹೋದ ಅಶ್ಫಾಕ್ ತಾನು ಮಶೂದಳಿಗೆ ಬೈದದನ್ನು ಯೋಚಿಸುತ್ತ. 
ಅರೆ ನನಗೆ ಏನಾಗಿದೆ ನಾನು ಯಾಕೆ ಅವಳಿಗೆ ಅಷ್ಟೊಂದು ಬೈಯೋಕ್ಕೆ ಹೋದೆ. 
ಇಷ್ಟು ಕೋಪ ಯಾವತ್ತು ನನಗೆ ಬಂದಿಲ್ಲ 
 ಇವತ್ತು ಯಾಕೆ ಇಷ್ಟು ಕೋಪ ಬಂತು. ಯಾಕೆ ಅವಳನ್ನು ಆ ರೀತಿಯಲ್ಲಿ ಹೇಳಿದೆ. 
ಆಕೆ ಮಾಡಿದರಲ್ಲಿ ಏನು ತಪ್ಪು ಇದೆ.? 
ಇಶ್ರತ್ ನ ಗೆಳೆಯರು ಆಕೆಯನ್ನು ಮಾತನಾಡಿಸಿರಲೂಬಹುದು. ಅದಕೋಸ್ಕರ ಆಕೆ ಮಾತನಾಡಿದ್ದು ಇರಬಹುದು.
ಆದರೆ ನಾನು ಏನೊಂದೂದು ಅರ್ಥೈಸದೆ ಅವಳಿಗೆ ಸಿಟ್ಟಿನಿಂದ ಬೈದೆ.. 
ಎಷ್ಟು ನೊಂದಿರಬಹುದು ಆ ಹೆಣ್ಣು ....
ನನಗೆ ಏನಾಗಿದೆ ನಾನು ಯಾಕೆ ಅವಳನ್ನು ಬೈಯಲು ಹೋದೆ. 
ನನ್ನ ಮನಸ್ಸು ಯಾಕೆ ವಿಚಲಿತವಾಗುತ್ತಿದೆ.
ಏನು ನನಗೆ ಅರ್ಥವಾಗುತ್ತಿಲ್ಲವಲ್ಲ. ಅದೇ ಇಶ್ರತ್ ಅವರ ಬಳಿ ಮಾತನಾಡುವಾಗ ನಾನು ಇಶ್ರತ್ ಗೆ ಏನೆಂದು ಬೈಯಲಿಲ್ಲ, ಏನೊಂದೂ ಹೇಳಲಿಲ್ಲ. 
ಯಾಕೆ ಇಶ್ರತ್ ಗೂ ಅವರು ಅನ್ಯ ಪುರುಷರು ತಾನೇ..!

ಇಶ್ರತ್ ನನ್ನ ಕಣ್ಣು ಎದುರಲ್ಲೇ ಅವರೊಂದಿಗೆ ಅಷ್ಟು ಹೊತ್ತು ಮಾತನಾಡಿದಲು.
 ನಾನು ನೋಡುತ್ತ ಅವರ ಮಾತು ಕೇಳುತ್ತಾ ನಗಾಡುತ್ತ ನಿಂತು ಬಿಟ್ಟೆ. ಅದು ಅಲ್ಲದೇ ಇಶ್ರತ್ ಗೆ ನೀನು ಮಾತನಾಡಬೇಡ ನಿನ್ನ ಕೊಣೆಗೆ ನಡಿ ಏನೆಂದು ಹೇಳಲಿಲ್ಲ.ಆದರೆ ಅದೇ ಜಾಗದಲ್ಲಿ ಇದ್ದ ಮಶೂದಳಿಗೆ ನಾನು ತಕ್ಷಣ ನಡಿ ಎಂದು ಆಜ್ಞೆ ಮಾಡಿದೆ.

 ಏನು ಇದರಲ್ಲಿ ವ್ಯತ್ಯಾಸ ಇದೆ? ನನಗಂತೂ ತಲೆಗೆ ಹೋಗುತ್ತನೇ ಇಲ್ಲ,ಅರ್ಥ ಆಗುತ್ತನೆ ಇಲ್ಲ ಏನಾಗುತ್ತಿದೆ...?ಒಂದು ವೇಳೆ ನಾನು ಎಲ್ಲಾದರು ಮಶೂದಳೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದೇನಾ.?
ಅಯ್ಯೋ ಏನಾಗುತ್ತಿದೆ ನನ್ನ ಬಾಳಿನಲ್ಲಿ? ರುಬೀನಾಳನ್ನು ಬಿಟ್ಟು ನಾನು ಯಾರನ್ನು ಪ್ರೀತಿಸಲಾರೇ, ಯಾರನ್ನು ಮದುವೆಯಾಗಲಾರೆ ಎಂದು ಎನಿಸಿದ್ದೆ. ಆದರೆ ಮನಸ್ಸು ಬೇಡವೆಂದರು ಮಶೂದ ಈ ರೀತಿ ಮಾತನಾಡಿದ್ದಾಳೆ ಎನ್ನುವಾಗ ನನಗೆ ಎಂದು ನನ್ನಲ್ಲೇ ಅಸೂಯೆ ಆಗುತ್ತಿದೆ.
 ಯಾಕೆ ಮಾತನಾಡಿದಳೆಂದು ಸಿಟ್ಟು ಬರುತ್ತಿದೆ. ಇವೆಲ್ಲವೂ ಪ್ರೀತಿಯ ಸಂಕೇತವೆನೋ ಹೇಗೆ? ಅರ್ಥ ಆಗುತ್ತಿಲ್ಲ ಒಂದು, ಎಂದು ಯೋಚಿಸುತ್ತಾ ತನ್ನ ಕೊಠಡಿಯಲ್ಲಿ ಹಾಗೆಯೇ ಕುಳಿತನು.
ಮಶೂದಳಿಗೆ ಬೈದ ಕ್ಷಣದಿಂದ ಅಶ್ಫಾಕ್ ಅದನ್ನೇ ಯೋಚಿಸುತ್ತಾ ಇರುತ್ತಾನೆ.
ತಾನು ಯಾಕೆ ಅವಳನ್ನು ಬೈದೆ? 
ಏನಾಗಿದೆ ನನಗೆ? ಎಲ್ಲಿಯಾದರೂ ನಾನು ಆಕೆಯೊಂದಿಗೆ ಪ್ರೀತಿಯೊಳಗೆ ಬಿದ್ದಿದ್ದೇನಾ ಎಂದು ತನ್ನಲ್ಲೇ ಯೋಚಿಸುತ್ತಾನೆ.
ಇಲ್ಲ ಸಾಧ್ಯವಿಲ್ಲ!! ನಾನು ಆಕೆಯನ್ನು ಪ್ರೀತಿಸಲು ಸಾಧ್ಯವಿಲ್ಲ.
ಯಾಕೆಂದರೆ ನನ್ನ ಮನಸ್ಸಿನಲ್ಲಿ ತುಂಬಾ ರುಬೀನಾಳೆ ಇದ್ದಾಳೆ.
ಹಾಗಿರುವಾಗ ಅಲ್ಲಿ ಬೇರೆ ಯಾರಿಗೂ ಸ್ಥಾನ ಇಲ್ಲ.
ಒಟ್ಟಿನಲ್ಲಿ ಅಶ್ಫಾಕ್ ನ ಮನಸ್ಸು ಸ್ಥಿತಿ ದ್ವಂದ್ವವಾಗಿರುತ್ತದೆ. ಆತನಿಗೆ ತಿಳಿಯದೆ ಆತನ ಮನಸ್ಸು ಮಶೂದಳ ಬಗ್ಗೆ ಯೋಚಿಸಲು ಪ್ರಾರಂಭಿಸುತ್ತದೆ.

ಬೇಡ, ಆಕೆಗೆ ಈಗ ನೆನಪಿನ ಶಕ್ತಿ ಇಲ್ಲ. ಆಕೆಗೂ ಬಂಧು ಬಳಗದವರು ಇರಬಹುದಲ್ಲವೇ...
ಆಕೆಗೆ ನೆನಪಿನ ಶಕ್ತಿ ಬಂದ ಮೇಲೆ ಆಕೆ ನನ್ನನ್ನು ತೊರೆದು ಖಂಡಿತವಾಗಿಯೂ ಹೋಗುವಳು.
ರುಬೀನಾಳು ನನ್ನನ್ನು ತೊರೆದು ಯಾವನೋ ಜೊತೆ ಓಡಿ ಹೋಗಿದ್ದಾಳೆ. ಈಕೆಗೂ ನೆನಪಿನ ಶಕ್ತಿ ಬಂದ ಕೂಡಲೇ ಈಕೆಯೂ ಇಲ್ಲಿಂದ ಹೊರಡುತ್ತಾಳೆ.
ಮತ್ತೆ ಬದುಕು ನನ್ನದು ಪುನಃ ಅಯೋಮಯ ಎಂದು ಎನಿಸಬಾರದು. 
ಹಾಗಾಗಿ ಯಾವುದೇ ಕ್ಷಣವಾಗಲಿ ಏನೇ ಆಗಲಿ ಈಕೆಯನ್ನು ನಾನು ಪ್ರೀತಿಸುದಿಲ್ಲ. ಈಕೆಯೊಂದಿಗೆ ನಾನು ಪ್ರೀತಿಯ ಬಲೆಗೆ ಬೀಳುವುದಿಲ್ಲ. ಎಂದು ಅಶ್ಫಾಕ್ ಮನಸ್ಸು ಯೋಚಿಸುತ್ತದೆ.
ಅಂದು ರಾತ್ರಿ ಇಶ್ರತ್ ನ ಮೊಬೈಲ್ ರಿಂಗಣಿಸುತ್ತದೆ. 

ಯಾರೋ ಎಂದು ತೆಗೆದು ನೋಡಿದರೆ ತನ್ನ ಗೆಳತಿ ಶಮೀಮ ಕರೆ ಮಾಡಿರುತ್ತಾಳೆ.
"ಏನಾಯಿತು ಇಶ್ರತ್? ಏನು ನಿನ್ನ ಸುದ್ದಿ ಇಲ್ಲ? ನೀನು ಮಾಡಿದ ಪ್ಲಾನ್ ಏನಾಯಿತು? ಸಕ್ಸೆಸ್ ಆಯಿತಾ" ಎಂದು ಶಮೀಮಾ ಕೇಳುತ್ತಾಳೆ.
      "ಏನು ಪ್ಲಾನ್ ಏನೋ ಗೊತ್ತಿಲ್ಲ ಕಣೆ...,
ನಾನೇನೋ ಪ್ಲಾನ್ ಮಾಡಿದೆ ದೊಡ್ಡದಾಗಿ....
ಅವನ ಬಳಿ ಅವಳ ಬುದ್ಧಿ ಸರಿ ಇಲ್ಲ ಎಂದು ಹೇಳಿದರೆ, ಅವನು ನನಗೇ ಬುದ್ಧಿ ಹೇಳಲು ಬರುತ್ತಾನೆ.
ಎಲ್ಲಾ ಫೇಲ್ ಆಯಿತು ಕಣೆ
ಎನೂ ಸಕ್ಸೆಸ್ ಆಗಿಲ್ಲ "ಎಂದು ಇಶ್ರತ್ ದುಃಖದಿಂದ ಗೆಳತಿಯ ಬಳಿ ಹೇಳುತ್ತಾಳೆ.

"ಆಕೆಯ ವ್ಯಕ್ತಿತ್ವ ಸರಿ ಇಲ್ಲ. ಆಕೆ ಚಾರಿತ್ರ್ಯ ಹೀನಳು ಎಂದು ಹೇಳಲು ಹೋದರೆ ನನಗೆಯೇ ಬುದ್ಧಿ ಹೇಳಿದ ಅಶ್ಫಾಕ್.
ಆಕೆಗೆ ನೆನಪಿನ ಶಕ್ತಿ ಇಲ್ಲ ಹಾಗೇ ಹೀಗೆಂದು. 
ಅದು ಬಿಟ್ಟು ಆಕೆಯ ಮೇಲೆ ಆತನಿಗೇ ಸಿಟ್ಟು ಬಂದಿಲ್ಲ.
ಏನು ಮಾಡುವುದು ಹೇಳು
ಎಲ್ಲ ಪೇಲ್ ಆಯಿತು."
ಓ...! ಶಿಟ್.. ಹೌದ ಹಾಗಿದ್ದಲ್ಲಿ ಇನ್ನೇನು ಮಾಡುವುದು ಹೇಳು...? ಎಂದು ಶಮೀಮ ಕೇಳಿದಳು.
ತನ್ನ ಗೆಳತಿಯ ಮಾತಿಗೆ ಪ್ರತಿಕ್ರಿಯಿಸುತ್ತ ಇಶ್ರತ್"ಇನ್ನೇನೂ ಮಾಡಬೇಕು ಹೇಳು. ಏನಾದರೂ ಬೇರೆ ಯೋಚನೆ ಮಾಡಬೇಕಷ್ಟೇ... ಮನೆಯಿಂದ ಹೊರಗೆ ಹಾಕಲು ನೋಡಿದರೆ ಆತ ಇನ್ನೂ ಆಕೆಯ ಬಗ್ಗೆ ಹೆಚ್ಚೇ ಅನುಕಂಪ ತೋರಿದ ಹಾಗೆಯೇ ಕಾಣುತ್ತದೆ ನನಗೆ.
ಇನ್ನೇನು ಮನೆಯಿಂದ ಹೊರಗೆ ಹಾಕುವಂತಹ ಸಕತ್ ಐಡಿಯಾ ಒಂದು ಮಾಡಬೇಕು. ಏನು ಮಾಡುವುದು ಹೇಳಿಕೊಡು. ನಿನ್ನ ತಲೆಯಲ್ಲಿ ಏನಾದರೂ ಇದೆಯಾ...? ಎಂದು ತನ್ನ ಗೆಳತಿಯಲ್ಲಿ ಕೇಳಿದಳು.
ಸ್ವಲ್ಪ ಹೊತ್ತು ಯೋಚಿಸಿದವಳೇ ಶಮೀಮ

"ಹಾ... ಇದೆ, ಒಂದು ಪ್ಲಾನ್ ಇದೆ ಹೇಳುತ್ತೇನೆ ನೋಡು.
ಸರಿಯಾಗಿ ಕೇಳಿಸಿಕೊ ಎಂದು ವಿವರವಾಗಿ ವಿವರಿಸಿದಳು.
 ಆಕೆಯ ವಿವರಣೆಯನ್ನು ಕೇಳಿದ ನಂತರ ಇಶ್ರತ್ ತನ್ನ ತಲೆ ಆಡಿಸುತ್ತ... ಫೋನಿನಲ್ಲಿಯೇ "ಹ್ಹಾ ಸರಿ ಕಣೆ. ಇದು ತುಂಬಾ ಒಳ್ಳೆಯದುಂಟು. ಇವತ್ತಿಗೆ ಬಿಡು ನಾಳೆ ಖಂಡಿತ ಇದನ್ನು ಮಾಡಿಯೇ ಮಾಡುತ್ತೇನೆ ಎಂದು ಹೇಳುತ್ತಾಳೆ."ಶಮೀಮ ಸರಿ ಎಂದು ಹೇಳುತ್ತಾ "ಆಲ್ ದಿ ಬೆಸ್ಟ್" ಎಂದು ಕರೆಯನ್ನು ಕಟ್ ಮಾಡುತ್ತಾಳೆ.

    ಮರುದಿನ ರಾತ್ರಿಯ ಸಮಯ ಎಲ್ಲರೂ ತಮ್ಮ ದೈನಂದಿನ ಕಾರ್ಯ ಕೆಲಸಗಳನ್ನು ಮುಗಿಸಿ ತಮ್ಮ ತಮ್ಮ ಕೋಣೆಗೆ ಮಲಗಲು ಎಂದು ಹೋಗಿರುತ್ತಾರೆ. ರುಬೀನಾಳಿಗೆ ಇನ್ನೂ ನಿದ್ರೆ ಹತ್ತಿರುವುದಿಲ್ಲ. 
ಒಂದು 12 ಗಂಟೆ ಆಗಿರಬಹುದು. ಆಕೆಯ ರೂಮಿನ ಎದುರು ಏನೋ ಒಂದು ಶಬ್ದ ಕೇಳಿ ಬರುತ್ತದೆ. ಆಕೆಗೆ ಭಯವಾಗಲು ತೊಡಗುತ್ತದೆ. ಏನಿದು ಶಬ್ದ? ನನ್ನ ರೂಮಿನ ಎದುರು ಇಷ್ಟು ಹೊತ್ತಿನ ರಾತ್ರಿಯಲ್ಲಿ ಎಂದು ಎದ್ದು ಮೆಲ್ಲನೆ ಲೈಟನ್ನು ಹಾಕುತ್ತಾಳೆ.

ತನ್ನ ನಡಗುವ ಕೈಯಿಂದಲೇ ಮೆಲ್ಲನೆ ಬಾಗಿಲನ್ನು ತೆಗೆಯುತ್ತಾಳೆ. ತೆಗೆದು ನೋಡಿದರೆ ಏನೂ ಕಾಣುವುದಿಲ್ಲ. ಆಚೆ ಈಚೆ ತಿರುಗಿ ನೋಡುತ್ತಾಳೆ ಆದರೂ ಏನು ಕಾಣುವುದಿಲ್ಲ. ಏನು? ಏನಿದು ಶಬ್ದ ? ಎಲ್ಲಿಂದ ಬಂತು ಎಂದು ಮೆಲ್ಲನೆ ಹೊರಗೆ ಬಂದು ಕೆಳಗೆ ನೋಡುತ್ತಾಳೆ. ನೋಡಬೇಕಾದರೆ,
ಇಶ್ರತ್ ತನ್ನ ಬ್ಯಾಗನ್ನು ತೆಗೆದುಕೊಂಡು ಮೆಲ್ಲನೆ ಮುಂದಿನ ಬಾಗಿಲ ಬಳಿ ಹೋಗುವುದು ರುಬೀನಾಳಿಗೆ ಕಾಣಿಸುತ್ತದೆ 

ಅರೆ!!! ಈ
ಹುಡುಗಿಗೆ ಏನಾಗಿದೆ? ಈ ಮಧ್ಯರಾತ್ರಿಯಲ್ಲಿ ಬ್ಯಾಗ್ ತೆಗೆದುಕೊಂಡು ಎಲ್ಲಿಗೆ
ಹೋಗುತ್ತಿದ್ದಾಳೆ? ಇಷ್ಟೊಂದು ರಾತ್ರಿಗೆ ಯಾಕೆ ಏನಾಯಿತು ಎಂದು ನೋಡೋಣ ಎಂದು ರುಬೀನಾ ಮೆಲ್ಲನೆ ಇಶ್ರತ್ ನನ್ನು ಹಿಂಬಾಲಿಸುತ್ತಾ ಹೋಗುತ್ತಾಳೆ. 
ಆಕೆ ಮೈನ್ ಡೋರ್ ನಿಂದ ಹೊರಗೆ ಹೋದವಳೇ ಯಾರದೋ ಕಾರ್ ಹತ್ತಿ ಕೊಂಡು ಕುಳಿತು ಕೊಳ್ಳುತ್ತಾಳೆ.

 ರುಬೀನಾಗೆ ಒಮ್ಮೆಲೇ ಆಘಾತವಾಗುತ್ತದೆ. 
ಅರೇ ಈಕೆ ಯಾರದೋ ಜೊತೆ ಓಡಿ ಹೋಗಲು ಯತ್ನಿಸುತ್ತಿದ್ದಾಳೋ ಹೇಗೆ? ಕಾರಿನಲ್ಲಿ ಒಂದು ಗಂಡಸಿನ ಜೊತೆ ಕುಳಿತುಕೊಂಡಿದ್ದಾಳೆ. ಅದೂ ಕೂಡ ಈ ಮಧ್ಯ ರಾತ್ರಿಯಲ್ಲಿ. ಏನು ಮಾಡುವುದು? ಈಕೆಯನ್ನು ತಡೆಯಬೇಕು.
ನಾನು ಹೇಳಿದರೆ ಖಂಡಿತ ಕೇಳುವುದಿಲ್ಲ ಏನು ಮಾಡಲಿ ಎಂದು ಹಾಗೆಯೇ ಓಡಿ ಬಂದು ಅವಳು ಸೀದಾ ಅಶ್ಫಾಕ್'ನ ರೂಮಿನತ್ತ ಓಡುತ್ತಾಳೆ. 
ಆತನ ಬಳಿ ಹೇಳಬೇಕು ಎಂದು ಆತನ ಬಾಗಿಲನ್ನು ಬಲವಾಗಿ ಬಡಿಯುತ್ತಾಳೆ.

ಇತ್ತ ಕಾರಿನಲ್ಲಿ ಕುಳಿತ ಇಶ್ರತ್, ಶಾಕಿರ್'ನೊಂದಿಗೆ "ಈ ಪ್ಲಾನ್ ಸಕ್ಸೆಸ್ ಆಗುತ್ತೆ ಖಂಡಿತ. ಆಕೆ ಹೋದದ್ದು ನೀ ನೋಡಿದ್ದಿಯಲ್ಲ, ಈಗ ಖಂಡಿತವಾಗಿಯೂ ಆಕೆ ಅಶ್ಫಾಕ್ ರೂಮಿನೊಳಗೆ ಹೋಗುತ್ತಾಳೆ. ಅಶ್ಫಾಕ್ ಹೊರ ಬರುವುದರ ಒಳಗಾಗಿ ನಾನು ಮನೆಯ ಒಳಗೆ ಸೇರಿಕೊಳ್ಳಬೇಕು "ಎಂದು ಹೇಳಿ ಆತನ ಕಾರಿನಿಂದ ಇಳಿಯುತ್ತಾಳೆ. 

"ನೀನು ಬೇಗನೆ ಕಾರು ತೆಗೆದುಕೊಂಡು ಹೋಗು ಇಲ್ಲದಿದ್ದಲ್ಲಿ ಅವರು ಹೊರಗೆ ಬಂದರೆ ನಿನ್ನನ್ನು ನೋಡಿಯಾರು ಎಂದು ಹೇಳಿ ಕಾರಿನ ಡೋರ್ ಹಾಕಿ ಮೆಲ್ಲನೆ ಹೆಜ್ಜೆ ಇಟ್ಟುಕೊಂಡು ರುಬೀನಾ ನೋಡದಂತೆ ಒಳಗೆ ಬಂದು ಸೇರಿ ತನ್ನ ಕೊಣೆಯ ಒಳಗೆ ಮಲಗುತ್ತಾಳೆ. 

ಇದು ಇಶ್ರತ್'ನ ಒಂದು ಪ್ಲಾನ್ ಎಂದು ತಿಳಿಯದ ರುಬೀನಾ, ಅಶ್ಫಾಕ್,ನ ರೂಮಿನ ಬಾಗಿಲನ್ನು ಇನ್ನೂ ಚೊರಾಗಿ ಬಡಿಯುತ್ತಾಳೆ. ಗಾಢವಾದ ನಿದ್ರೆಯಲ್ಲಿ ಇದ್ದ ಅಶ್ಫಾಕ್' ನಿಗೆ ತನ್ನ ರೂಮಿನ ಬಾಗಿಲನ್ನು ಯಾರೋ ಬಡಿಯುತ್ತಿರುವ ಶಬ್ದ ಕೇಳಿ ಎಚ್ಚರಗೊಂಡು ಹೊರಗೆ ಬಂದು ನೋಡುತ್ತಾನೆ. ಎದುರಿನಲ್ಲಿ ಮಶೂದ ನಿಂತಿರುತ್ತಾಳೆ.
ಒಮ್ಮೆ ತನ್ನ ಮೊಬೈಲ್ ನಲ್ಲಿ ಗಂಟೆಯನ್ನು ನೊಡುತ್ತಾನೆ. 
ಅರೆ!! ಈ ಅರ್ಧ ರಾತ್ರಿಯಲ್ಲಿ ಇವಳು ಯಾಕೆ ನನ್ನ ರೂಮಿನ ಬಳಿ ಬಂದಿದ್ದಾಳೆ ಎನಿಸಿ... ಆಕೆಯೊಡನೆಯೇ ಕೇಳುತ್ತಾನೆ. 

 ಅರೇ.. ಮಶೂದ ಏನಾಯಿತು? ಏನಾದರೂ ಗಾಬರಿ ಆಗುವಂತಹ ವಿಚಾರವಾಯಿತೆ...!?
 ಯಾಕೆ ಈ ಅರ್ಧ ರಾತ್ರಿಯಲ್ಲಿ ನನ್ನ ರೂಮಿನ ಬಳಿಗೆ ಬಂದಿದ್ದಿಯಾ...!
ಅದೂ.... ಅದೂ ‌‌...... "
ಏನು ? ಏನಾಯಿತು ? ಹೇಳು ಮಶೂದ"
ಅಶ್ಫಾಕ್.., ಇಶ್ರತ್ ಇದ್ದಾಳಲ್ಲ.. ಆಕೆ ಯಾರದೋ ಜೊತೆ ಓಡಿ ಹೋಗಿದ್ದಾಳೆ. ನಾನು ನನ್ನ ಕಣ್ಣಾರೆ ಕಂಡೆ. ನೀನು ಬಾ ನೋಡು. ನೀನು ಬಂದು ತಡಿ, ಆಕೆಯನ್ನು ಹೋಗಲು ಬಿಡಬೇಡ " ಎಂದು ರುಬೀನಾ ಅಶ್ಫಾಕ್ ನೊಡನೆ ಹೇಳುತ್ತಾಳೆ.
 
"ಅರೆ, ಏನಾಗಿದೆ ಮಶೂದ ನಿನಗೆ? ಏನಾದರೂ ಕೆಟ್ಟ ಕನಸು ಕಂಡಿದ್ದೀಯಾ...? ಇಶ್ರತ್....,...ಹ್ಹ...ಹ್ಹ....ಇಶ್ರತ್ ಯಾರ ಜೊತೆ ಓಡಿ ಹೋಗುವಂತಹ ಹೆಣ್ಣು ಅಲ್ಲ. ಆಕೆ ಬೆಳಿಗ್ಗೆ ಬೇಕಾದರು ಎದ್ದು ಹೋಗವಳು. ಅಂತಹ ಒಂದು ಹೆಣ್ಣು., ಆಕೆ ಯಾಕೆ ಮಧ್ಯರಾತ್ರಿ ಯಾರದೋ ಜೊತೆ ಓಡುತ್ತಾಳೆ? "

"ಇಲ್ಲ ಅಶ್ಫಾಕ್ ನಾನು ಯಾಕೆ ಸುಳ್ಳು ಹೇಳುತ್ತೇನೆ...? ನಾನು ಮಲಗಿರಬೇಕಾದರೆ ನನ್ನ ರೂಮಿನ ಮುಂದೆ ಏನೋ ದೊಡ್ಡದಾಗಿ ಶಬ್ದ ಆಯಿತು. ಏನೆಂದು ನೋಡಲು ಹೊರಗೆ ಬಾಗಿಲು ತೆಗೆದು ಹೋದಾಗ ಆಕೆ ಬ್ಯಾಗ್ ತೆಗೆದುಕೊಂಡು ಹೊರಗೆ ಹೋಗುವುದು ಕಾಣಿಸಿತು. ಆಕೆ ಮೈನ್ ಡೋರ್ ತೆಗೆದು ಹೊರಗೆ ಯಾರದೋ ಕಾರಿನಲ್ಲಿ ಕುಳಿತಳು. ನಾನು ಅದನ್ನು ನೋಡಿ ನಿನ್ನಲ್ಲಿ ಹೇಳಲು ಓಡಿ ಕೊಂಡು ಬಂದೆ."
ಅಷ್ಟರಲ್ಲಿ ಆಕೆಯ ಮಾತನ್ನು ಅರ್ಧದಲ್ಲೇ ತುಂಡರಿಸಿದ ಅಶ್ಫಾಕ್

"ಮಶೂದ... ಮಶೂದ.. ಅರ್ಥ ಮಾಡಿಕೊಳ್ಳು. ಇದು ಮಧ್ಯ ರಾತ್ರಿ ,ನಿನಗೆ ಏನೋ ಕೆಟ್ಟ ಕನಸು ಕಂಡಿರಬೇಕು "ಎಂದು ಹೇಳಿ ಅಶ್ಫಾಕ್ ನಗುತ್ತಾನೆ.  
ನಂತರ ಮಾತು ಮುಂದುವರೆಸುತ್ತಾ
 "ನೋಡು ಒಮ್ಮೆ ಮುಖ ಎಲ್ಲ ತೊಳೆದು ಸರಿಯಾಗಿ ಹೋಗಿ ನಿದ್ದೆ ಮಾಡು. ಸರಿಯಾಗಿ ನಿದ್ದೆ ಬೀಳುತ್ತದೆ. ಈ ರೀತಿ ಕನಸು ಎಲ್ಲಾ ಕಾಣುವುದಿಲ್ಲ. ಯಾವುದೋ ಕನಸು ಕಂಡು ನೀನು ಹೆದರಿ ಇರಬೇಕು. ಅದಕ್ಕೆ ಬಂದು ನನ್ನನ್ನು ಎಬ್ಬಿಸಿದ್ದಿಯಾ. ನೋಡು ನನ್ನ ನಿದ್ರೆಯು ಹಾಳಾಯಿತು, ನಿನ್ನ ನಿದ್ರೆಯು ಹಾಳಾಗಿದೆ... ಸುಮ್ಮನೆ ಏನು ಆಲೋಚನೆ ಮಾಡಬೇಡ. ಇಶ್ರತ್ ಇಲ್ಲಿ ಕೆಳಗೆ ಅವಳ ರೂಮಿನಲ್ಲಿ ಮಲಗಿರಬೇಕು. ಹೋಗಿ ನೋಡು ಬೇಕಾದರೆ".
"ಇಲ್ಲಾ ಅಶ್ಫಾಕ್, ನನಗೆ ಸುಳ್ಳು ಹೇಳಿ ಏನಾಗಬೇಕು ಹೇಳು? ನಾನು ನನ್ನ ಕಣ್ಣಾರೆ ಕಂಡಿದ್ದೇನೆ. ಕಂಡಿದ್ದನ್ನು ಹೇಳುತ್ತಾ ಇದ್ದೇನೆ. ಸುಳ್ಳು ಹೇಳಿ ನನಗೆ ನಿನ್ನ ಬಳಿ ಏನಾಗಬೇಕಾಗಿದೆ? ಆಗಬೇಕಾಗಿದ್ದು ಏನು ಇಲ್ಲವಲ್ಲ. ಹಾಗೆಯೂ ನಿನಗೆ ನನ್ನ ಮೇಲೆ ನಂಬಿಕೆ ಇಲ್ಲ ಎಂದಲ್ಲಿ ನೀನು ಒಮ್ಮೆ ಬೇಕಾದರೆ ಇಶ್ರತ್ ನ ರೂಮಿನ ಬಳಿ ನೋಡು. ಆಕೆ ಹೋದದ್ದು ಆಗ ನಿನಗೇ ತಿಳಿಯುತ್ತದೆ" ಎಂದು ರುಬೀನಾ ಹೇಳುತ್ತಾಳೆ. 
ಅಷ್ಟರಲ್ಲಿ ದಡಬಡ ಶಬ್ದ ಕೇಳಿ ಮುಹಮ್ಮದ್ ಹಾಜಿ ಮತ್ತು ಮರಿಯಮ್ಮರವರು ಹೊರಗೆ ಬರುತ್ತಾರೆ. ಅಶ್ಫಾಕ್'ನ ರೂಮಿನ ಬಳಿ ಇದ್ದ ಮಶೂದಳನ್ನು ಕಂಡು ಕೆಳಗೆಯಿಂದಲೇ ಮೇಲೆಗೆ ನೋಡುತ್ತಾರೆ.

" ಏನಾಯಿತು.. ಏನಾಯಿತು.. ಮಶೂದ ಈ ಅರ್ಧ ರಾತ್ರಿಯಲ್ಲಿ ಏಕೆ ನಿನ್ನ ಕೋಣೆಯಲ್ಲಿ ಇದ್ದಾಳೆ? "ಎಂದು ಅಲ್ಲಿಂದಲೇ ಕೇಳುತ್ತಾರೆ.
"ಅಂಕಲ್ ಅದು ಏನೂ ಇಲ್ಲ. ಇಶ್ರತ್... ಇಶ್ರತ್..." ಎಂದು ರುಬೀನಾ ತೊದಲುತ್ತಾಳೆ.
ಆಗ ಮುಹಮ್ಮದ್ ಹಾಜಿಗೆ ಹೆದರಿಕೆ ಆಗುತ್ತದೆ.
 "ಏನಾಯಿತು? ನಮ್ಮ ಇಶ್ರತ್ ಗೆ ಏನಾಯಿತು?" ಹೇಳು ಮಶೂದ ಎಂದು ಹೇಳುತ್ತಾರೆ.

"ಇಲ್ಲ ಅಂಕಲ್ ,ಅವಳು ಯಾರದೋ ಜೊತೆ ಓಡಿ ಹೋಗಿದ್ದಾಳೆ. ನಾನು ನನ್ನ ಕಣ್ಣಾರೆ ಕಂಡಿದ್ದೇನೆ. ಈ ಅಶ್ಫಾಕ್ ನನ್ನ ಮಾತನ್ನೇ ಕೇಳುತ್ತಿಲ್ಲ.ನೀವಾದರೂ ಕೇಳಿ ಒಮ್ಮೆ "ಎಂದು ಹೇಳುತ್ತಾಳೆ. 
ಮುಹಮ್ಮದ್ ಹಾಜಿಗೂ ಆಕೆಯ ಮಾತು ಕೇಳಿ ನಗು ಬರುತ್ತದೆ.
ಅಯ್ಯೋ ಇದು ನಂಬುವ ಮಾತೆ...?"

"ಆಕೆ ಯಾಕೆ ಓಡುತ್ತಾಳೆ ಹೇಳು. ಆಕೆ ಎಲ್ಲೂ ಓಡಿ ಇರಲಿಕ್ಕಿಲ್ಲ, ಇದೆಲ್ಲ ನಿನ್ನ ಭ್ರಮೆ, ಹೋಗಿ ಮಲಗಿಕೊ, ಎಲ್ಲರ ನಿದ್ರೆಯು ನಿನ್ನಿಂದ ಹಾಳಯಿತಲ್ಲ "ಎಂದು ಹೇಳುತ್ತಾರೆ.

"ಇಲ್ಲ ಅಂಕಲ್ ನಾನು ಸುಳ್ಳು ಹೇಳುತ್ತ ಇಲ್ಲ. ಯಾಕೆ ಸುಳ್ಳು ಹೇಳಬೇಕು ಹೇಳಿ...? ಬನ್ನಿ ನೀವೇ ಚೆಕ್ ಮಾಡಿ ನೋಡೋಣ ಎಂದು ಮೈನ್ ಡೋರ್ ಬಳಿ ಅವರನ್ನು ಕರೆದುಕೊಂಡು ಹೋಗುತ್ತಾಳೆ.
ನೋಡುವಾಗ ಮೈನ್ ಡೋರ್ ಹಾಕಿತ್ತು. 
ಅರೇ ಈಗ ತಾನೇ ಈ ಬಾಗಿಲು ತೆರೆದಿತ್ತಲ್ಲ...!"

 ಇಲ್ಲಿ ಈ ಬಾಗಿಲು ಒಪನ್ ಮಾಡಿ ಇಶ್ರತ್ ಹೋಗಿದ್ದಾಳಲ್ಲ.!
ಎಂದು ಅವರೊಡನೆ ರುಬೀನಾ ಹೇಳುತ್ತಾಳೆ. 

'ನೋಡು ಮಶೂದ ನಾನು ಆಗಲೇ ಹೇಳಿದೆನಲ್ಲ ನಿನಗೆ ಇದು ಕನಸು ಕಂಡಿದ್ದೆ ಎಂದು ಸುಮ್ಮನೆ ಹೋಗಿ ಮಲಗು. 

 "ಇಲ್ಲ ಅಶ್ಫಾಕ್ ನಾನು ಕಂಡಿದ್ದೇನೆ. ನಾನು ಖಂಡಿತವಾಗಿಯೂ ಕಂಡಿದ್ದೇನೆ. ಇಲ್ಲಿಂದಲೇ ಅಕೆ ಹೋಗಿರೋದು. ನಿಲ್ಲು ಬಾಗಿಲು ತೆಗಿ,ಹೊರಗೆ ಕಾರು ಕೂಡ ನಿಂತಿದೆ "ಎಂದು ಆಕೆಯು ಬಾಗಿಲನ್ನು ತೆರೆಯುತ್ತಾಳೆ. ಆಕೆಗೆ ಆಶ್ಚರ್ಯ ಆಗುತ್ತದೆ.ಅಲ್ಲಿ ಯಾವುದೇ ಕಾರು ನಿಂತಿರುವುದಿಲ್ಲ.
ಅರೇ ಏನಾಗಿದೆ ಇಲ್ಲಿ ಆಗ ಮೂರು ನಿಮಿಷದ ಮುಂಚೆ ಕಾರು ನಿಂತಿತ್ತಲ್ಲ...! ಆಕೆಯು ಇಲ್ಲಿ ಇದ್ದಳಲ್ವಾ.. ಎಲ್ಲಿ ಹೋಯಿತು ಕಾರು...! ಆಕೆಯು ಹೋದಳು ಎಂದು ರುಬೀನಾ ತನ್ನಲ್ಲಿ ಹೇಳಿ ಕೊಳ್ಳುತ್ತಾಳೆ.

 ಆಕೆಯ ಮುಖ ನೋಡಿ ಮುಹಮ್ಮದ್ ಹಾಜಿ ಮತ್ತು ಅಶ್ಫಾಕ್ ನಗಾಡುತ್ತಾರೆ.

 "ಏನಾಗಿದೆ ನಿನಗೆ ಇಷ್ಟೆಲ್ಲಾ ಕನಸಿಗೆ ಭಯ ಬೀಳುತ್ತಾ ಇದ್ದಿಯಾ..  
ಆಕೆ ಎಲ್ಲೂ ಹೋಗಿಲ್ಲ ಆಕೆ ಇಲ್ಲೇ ಇದ್ದಾಳೆ. ನೀನು ಸುಮ್ಮನೇ ಯಾಕೆ ಗಾಬರಿಗೊಳ್ಳುತ್ತಿ. ಮಲಗು ಹೋಗು ಹೇಳುತ್ತಾ ಇದ್ದೇವೆಯಲ್ಲ ನಾವು. 
ನೀನು ಹೋಗಿ ಮಲಗು ಆಗ ನಿನಗೆ ಸರಿಯಾಗಿ ನಿದ್ರೆ ಬರುತ್ತದೆ. ನಿದ್ದೆ ಬಾರದೆ ಏನೆಲ್ಲ ಕನಸು ಕಾಣುತಲಿದ್ದೀಯಾ" ಎಂದು ಹೇಳಿದರು.

"ಸರಿ, ನೀವು ನನ್ನ ಮಾತನ್ನು ನಂಬುತ್ತಾ ಇಲ್ಲವಲ್ಲ. ಹಾಗಾದರೆ ಇಶ್ರತ್ ಕೊಣೆಯತ್ತ ಬನ್ನಿ. ಅಲ್ಲಿಯೇ ನೋಡೋಣ ಆಕೆ ಇದ್ದಾಳ ಎಂದು" ರುಬೀನಾ ಅವರೊಡನೆ ಹೇಳುತ್ತಾಳೆ.
ಹ್ಞೂಂ ಸರಿ, ನಿನಗೆ ಅದರಿಂದ ಸಮಾಧಾನ ಸಿಗುವುದಾದರೆ ಹಾಗೆ ಆಗಲಿ.
ಇಶ್ರತ್'ನ ಕೊಣೆಯ ಬಳಿ ಹೋಗಿ ನೋಡೋಣ. ಅಲ್ಲಿ ಆಕೆ ಇಲ್ಲದಿದ್ದಲ್ಲಿ ಆಕೆ ಓಡಿ ಹೋಗಿದ್ದಾಳೆ ಎಂದು ಅರ್ಥ. ಅಲ್ಲಿ ಆಕೆ ಇದ್ದರೆ ನಿನಗೆ ಏನೋ ಕೆಟ್ಟ ಕನಸು ಬಿದ್ದಿದೆ ಎಂದು ಅರ್ಥ ಎಂದು ಅಶ್ಫಾಕ್ ರುಬೀನಳೊಂದಿಗೆ ಹೇಳಿದನು.

 ರುಬೀನಾ ಅದಕ್ಕೆ ತಲೆಯಾಡಿಸಿ ಸರಿ ನಾನು ಯಾವುದೇ ಕನಸು ಕಂಡಿಲ್ಲ ನಾನು ಕಣ್ಣಾರೆ ಕಂಡಿದ್ದಾನೆ ಹೇಳಿದ್ದು ನನಗೆ ನೂರು ಪರ್ಸೆಂಟ್ ನಂಬಿಕೆ ಇದೆ. ಹಾಗಾಗಿ ಅಕೆಯ ಕೊಣೆಯ ಬಳಿ ಹೋಗೋಣ ಎಂದು ಆಕೆಯ ಕೊಠಡಿಯತ್ತ ಹೆಜ್ಜೆ ಹಾಕಿದರು

  ರುಬೀನಾಳ ಮಾತು ಕೇಳಿ ಅವರೆಲ್ಲರೂ ಇಶ್ರತ್ ನ ಕೊಣೆಯತ್ತ ನಡೆಯುತ್ತಾರೆ.
 ಕೊಣೆಯ ಬಾಗಿಲನ್ನು ಬಲವಾಗಿ ಬಡಿಯುತ್ತಾರೆ. 
ಸ್ವಲ್ಪ ಹೊತ್ತು ಬಾಗಿಲು ತೆಗೆಯುವುದಿಲ್ಲ. ಮತ್ತೆ ಕೆಲವೇ ಕ್ಷಣಗಳಲ್ಲಿ ಬಾಗಿಲು ತೆಗೆದು ಇಶ್ರತ್ ಹೊರ ಬರುತ್ತಾಳೆ.

 ಬಂದ ಬಳಿಕ ಆಶ್ಚರ್ಯದಿಂದ ಇವರ ಮುಖವನ್ನು ನೋಡುತ್ತಾಳೆ."ಅರೇ.. ನೀವೇನು ಇಲ್ಲಿ ಬಂದಿದ್ದಿರಾ ?ಏನಾಯಿತು? ಯಾಕೆ ಎಲ್ಲರೂ ಒಟ್ಟಾಗಿ ಬಂದಿದ್ದೀರಿ?" ಎಂದು ಅವರನ್ನು ಕೇಳುತ್ತಾಳೆ.

 ಇಶ್ರತ್ ತನ್ನ ಕೋಣೆಯಲ್ಲಿ ಇದ್ದಾಳೆ ಅಲ್ವಾ ಎಂದು ಮುಹಮ್ಮದ್ ಹಾಜಿ ಹಾಗೂ ಮರಿಯಮ್'ರವರಿಗೆ ಸಮಾಧಾನವಾಗುತ್ತದೆ .  ಆದರೂ ಇಶ್ರತಿನ ಪ್ರಶ್ನೆಗೆ ಅವರು ನಿಜ ಹೇಳಲು ಇಚ್ಚಿಸುವುದಿಲ್ಲ.

"ಏನಿಲ್ಲ ಇಶ್ರತ್, ಇಲ್ಲಿ ಏನೋ ಶಬ್ದ ಕೇಳಿ ಬಂತು ಹಾಗಾಗಿ ನೋಡಲು ಎಂದು ಬಂದೆವು. ಹಾಗೆ ನಿನ್ನ ರೂಮಿನ ಬಾಗಿಲನ್ನು ತಟ್ಟಿದೆವು ಅಷ್ಟೇ .ಮತ್ತೇನು ಇಲ್ಲ. ಸರೀ ನೀನು ಹೋಗಿ ಮಲಗು" ಎಂದು ಹೇಳುತ್ತಾರೆ.

 ಆಗ ಇಶ್ರತ್ " ಇಲ್ಲ ನೀವೆಲ್ಲರು ಶಬ್ದ ಕೇಳಿ ಬಂದಿರಲು ಸಾಧ್ಯವಿಲ್ಲ.ಯಾಕೆಂದರೆ 
ನನಗೂ ಆ ಶಬ್ದ ಕೇಳಬೇಕಲ್ಲ...? ನನಗೆ ಕೇಳಲಿಲ್ಲ ಅಂದ ಮೇಲೆ ನಿಮಗೂ ಎಲ್ಲರಿಗೂ ಹೇಗೆ ಆ ಶಬ್ದ ಕೇಳಿ ಬಂತು ? ನೀವು ಬಂದಿರುವ ಹಿಂದೆ ಏನೋ ಕಾರಣ ಇದೆ. ಏನೆಂದು ಹೇಳಿ ಮಾವ "ಎಂದು ಮುಹಮ್ಮದ್ ಹಾಜಿರವರ ಬಳಿ ಹೇಳುತ್ತಾಳೆ.
ಅವರ ಬಾಯಿಂದ ನಿಜ ಬರಲಿ ಆಗಲೇ ತನ್ನ ಪ್ಲಾನ್ ಸಕ್ಸೆಸ್ ಆಗುತ್ತದೆ ಎಂದು ಇಶ್ರತ್ ಭಾವಿಸುತ್ತಾಳೆ.
ಆದರೂ ಮುಹಮ್ಮದ್ ಅವರು ಆಕೆಯೊಂದಿಗೆ ನಿಜ ಹೇಳುವುದಿಲ್ಲ. 

ಅಷ್ಟರಲ್ಲಿ ರುಬೀನಾ ಬಾಯಿ ತೆರೆದವಳೇ "ಇಶ್ರತ್ ನೀನು ನಿಜ ಹೇಳು, ನೀನು ಈಗ ಯಾರದೋ ಕಾರಿನಲ್ಲಿ ಹೊರಗೆ ಕುಳಿತಿದ್ದೀಯಲ್ಲ? ನೀನು ಯಾರದೋ ಜೊತೆ ಬ್ಯಾಗ್ ತೆಗೆದುಕೊಂಡು ಓಡಿ ಹೋಗಲು ಪ್ರಯತ್ನಿಸುತ್ತಿದ್ದಿಯಲ್ಲ..ಅದು ಹೇಗೆ ನೀನು ಒಳಗೆ ಬಂದೆ ಇಷ್ಟು ಬೇಗ?ನಾನು ನನ್ನ ಕಣ್ಣಾರೆ ನೋಡಿದ್ದೇನೆ, ನೀನು ಹೊರಗೆ ಹೋದದ್ದು, ಮೈನ್ ಡೋರ್ ತೆಗೆದದ್ದು, ಆ ನಂತರ ಕಾರಿನಲ್ಲಿ ಕುಳಿತ್ತದ್ದು ಎಲ್ಲವನ್ನು ನೊಡಿದ್ದೇನೆ...ಆದರೆ ಈಗ ನೀನು ಇಲ್ಲಿದ್ದಿಯಾ....!
ಏನಾಯಿತು..,? ಅದು ಹೇಗೆ ಸಾಧ್ಯ ಹೇಳು" ಎಂದಳು....

"ಅರೇ... !ಏನೂಂತ ಮಾತನಾಡ್ತಿಯಾ.. ನಿನಗೇನು ತಲೆ ಸರಿ ಇದೆಯ ಇಲ್ಲವಾ ಏನು?ನಾನು ಹೊರಗೆ ಹೋಗಿದ್ದೇನಾ...? ನಾನು ಯಾಕೆ ಈ ಅರ್ಧ ರಾತ್ರಿಯಲ್ಲಿ ಹೊರಗೆ ಹೊಗುತ್ತೇನೆ!?
 ನನಗೆ ಏನೂ ಮಾನ ಮರ್ಯಾದೆ ಇಲ್ಲ ಅಂದುಕೊಂಡಿದ್ದೀಯಾ ?ಅರ್ಧ ರಾತ್ರಿಯಲ್ಲಿ ಹೊರಗೆ ಹೋಗೋಕೆ...?! ನಾನು ಸರಿಯಾಗಿ ಇದ್ದೇನೆ.. ಇನ್ನೂ ಏನೇನೋ ಹೇಳಬೇಡ.. ಇಲ್ಲದ ಕಥೆ ಕಟ್ಟಿ ನನ್ನ ಬಗ್ಗೆ ಕೆಟ್ಟ ನಡೆತೆಯವಳು ಎಂದು ಸಾಬೀತು ಪಡಿಸಲು ಹೊರಟಿದ್ದೀಯಾ ಹೇಗೆ?" ಎಂದು ಇಶ್ರತ್ ಸಿಟ್ಟಿನಲ್ಲಿ ರುಬೀನಾ ಬಳಿ ಕೇಳುತ್ತಾಳೆ.

"ಇಲ್ಲ ಇಶ್ರತ್, ನಾನೇಕೆ ಸುಳ್ಳು ಹೇಳಬೇಕು?. 
ನನಗೆ ಏನಾಗಿದೆ ನಿನ್ನನ್ನು ಆ ರೀತಿ ಕೆಟ್ಟವಳುಎಂದು ಸಾಬೀತು ಪಡಿಸಿ?
ನಾನು ನನ್ನ ಕಣ್ಣಾರೆ ಕಂಡಿದ್ದನ್ನು ಹೇಳಿದ್ದೇನ ಅಷ್ಟೇ.. 
ನೀನು ಹೋದದನ್ನು ನಾನು ಕಂಡಿದ್ದೇನೆ.."ಎಂದು ರುಬೀನಾ ತನ್ನ ಮಾತನ್ನು ಮುಂದುವರಿಸಿದಳು.

"ಅಯ್ಯೋ.. ಅಂಕಲ್, ಅಶ್ಫಾಕ್.... ನೀವು ನನ್ನ ಮಾತನ್ನು ನಂಬಿ ನಿಜವಾಗಿಯು ನಾನು ಕಣ್ಣಾರೆ ಕಂಡಿದ್ದೇನೆ.. ಅಥವಾ ಅದರಲ್ಲಿ ಈಕೆಯದೆ ಏನೋ ಸಂಚು ಇದೆ. ಬೇಕೂಂತಲೇ ಹೊರ ಹೋಗಿ ನನ್ನನ್ನು ಮಂಗ ಮಾಡಿರಲು ಬಹುದು."

"ನಿನ್ನನ್ನು ಮಂಗ ಮಾಡುವುದ..,? 
ನಿನ್ನನ್ನು ಮಂಗ ಮಾಡಿ ನನಗೆ ಏನೂ ಆಗಬೇಕಿದೆ? ಇನ್ನೇನು ಇಲ್ಲದ ಕಥೆ ಹೇಳಬೇಡ..
 ಇಲ್ಲದ ಕಥೆ ಹೇಳಿ ಅಶ್ಫಾಕ್ ಮತ್ತು ಮಾವನನ್ನು ನಂಬಿಸಬೇಡ... 
ನಿನ್ನನ್ನು ಮಂಗ ಮಾಡಿ ನನಗೆ ಆಗಬೇಕದದ್ದು ಏನು ಹೇಳು?
ನೀನು ಯಾಕೆ ನನ್ನ ಬಗ್ಗೆ ಇಲ್ಲ ಸಲ್ಲದನ್ನು ಹೇಳುತ್ತಿದ್ದಿಯ... ಎಂದು ಇಶ್ರತ್ ಸಿಟ್ಟಿನಲ್ಲಿ ಇರುವಂತೆ ನಾಟಕ ಮಾಡಿ ಕೇಳುತ್ತಾಳೆ.
"ಅರೇ... ನೀವು ಇಬ್ಬರು ಸ್ವಲ್ಪ ಬಾಯಿ ಮುಚ್ಚುತ್ತೀರಾ?" ಎಂದು ಮಧ್ಯೆ ಬಾಯಿ ಹಾಕಿದ ಅಶ್ಫಾಕ್.

"ನೀವು ಸ್ವಲ್ಪ ಬಾಯಿ ಮುಚ್ಚಿಕೊಂಡು ನೀನು ನಿನ್ನ ರೂಮಿಗೆ ಹೋಗು ಇಶ್ರತ್... ಮಶೂದ.... ನೀನು ನಿನ್ನ ರೂಮಿಗೆ ಹೋಗಿ ಮಲಗಿಕೋ. ಇದೆಲ್ಲ ಕೆಟ್ಟ ಕನಸು ಆಗಿರಬಹುದು ಎಂದು ಹೇಳಿ ಮಲಗಿಕೋ "ಎಂದು ಆಜ್ಞೆ ನೀಡಿದನು.

"ಏನು ಹೇಳುತ್ತಿಯಾ ಅಶ್ಫಾಕ್ ನೀನು? ಈಕೆ ಅಷ್ಟೊಂದು ಅಪವಾದ ನನ್ನ ಮೇಲೆ ಹೊರಿಸಿದ್ದಾಳೆ...? ನನ್ನನ್ನು ಅಷ್ಟು ಸುಲಭವಾಗಿ ಮರೆತು ಮಲಗಿಕೋ ಎಂದು ಹೇಳುತ್ತಿದ್ದೀಯಾ...?
ಯಾಕೆ ಇನ್ನೂ ಈ ಹುಚ್ಚಿಯನ್ನು ಮನೆಯಲ್ಲಿ ಇಟ್ಟುಕೊಂಡಿದ್ದಿರಾ?
ಮೊದಲು ಎಲ್ಲಿಯಾದರು ತೋರಿಸಿ, ಮೊದಲು ಸರಿಯಾದ ಚಿಕಿತ್ಸೆ ಕೊಡಿಸಿ. ನಾಳೆ ನಿಮ್ಮ ಬಗ್ಗೆ ಏನೆಲ್ಲಾ ಅಪವಾದ ಹೊರಿಸುವುದಿಲ್ಲ ಅನ್ನುದಕ್ಕೆ ಏನೂ ಗ್ಯಾರಂಟಿ? ಈಕೆ ಸಂಪೂರ್ಣ ಹುಚ್ಚಿ ಆಗಿದ್ದಾಳೆ. ಈ ಹುಚ್ಚಿಯನ್ನು ಯಾಕೆ ಮನೆಯಲ್ಲಿ ಇಟ್ಟು ಕೊಂಡಿದ್ದೀರಾ...? 
ಮೊದಲು ಹೊರಗೆ ಒದ್ದು ಓಡಿಸಿ "ಎಂದು ಇಶ್ರತ್ ಹೇಳುತ್ತಾಳೆ.

ಆಗ ಮುಹಮ್ಮದ್ ಹಾಜಿಯವರು "ಇಶ್ರತ್ ಬಾಯಿಗೆ ಬಂದಂತೆ ಮಾತನಾಡಬೇಡ. ಈಗ ಆಕೆ ಈ ಮನೆಯ ಒಬ್ಬ ಸದಸ್ಯೆ. ಆಕೆಯನ್ನು ನೋಡಬೇಕಾದದ್ದು ನಮ್ಮ ಕರ್ತವ್ಯ. ಏನಿದ್ದರು ನಮ್ಮ ಮಗನಿಂದಲೇ ಆಕೆಗೆ ಈ ಅವಸ್ಥೆ ಎದುರಾಗಿದ್ದು ಅನ್ನುವುದನ್ನು ಮರೆಯಬೇಡ. ಆಕೆಗೂ ಕುಟುಂಬದವರು ಇರಬಹುದು. ಆಕೆಯನ್ನು ಮನೆಯಿಂದ ಹೊರಗೇನು ನಾನು ಹಾಕುವುದಿಲ್ಲ. ಅದರ ಬಗ್ಗೆ ನೀನು ತಲೆ ಬಿಸಿ ಮಾಡಬೇಡ "ಎಂದು ಸಿಟ್ಟಿನಲ್ಲಿ ಹೇಳುತ್ತಾರೆ.

 "ಹ್ಹಾ.. ಮಾವ ನಿಮಗೆ ಸಿಟ್ಟು ಬರುತ್ತದೆ.ಬರದೇ ಏನಿಲ್ಲ.ಆದರೆ ನನ್ನನ್ನು ಈ ರಾತ್ರಿಯಲ್ಲಿ ಓಡಿಹೋಗಿದ್ದಾಳೆ ಎಂದು ಈಗ ನಿಮ್ಮ ಎದುರಿಗೆ ಹೇಳಿದವಳು ನಾಳೆ ಕಂಡವರ ಎದುರು ಆಕೆ ಮಧ್ಯರಾತ್ರಿ ಯಾರದೋ ಜೊತೆ ಓಡಿ ಹೋಗಿದ್ದಾಳೆ ಎಂದು ಹೇಳಿದರೆ ನನ್ನ ಭವಿಷ್ಯ ಏನಾಗಬಹುದು ಚಿಂತಿಸಿ ನೋಡಿ...!ಈಕೆ ಈ ರೀತಿ ಮಾಡುತ್ತಲೇ ಇದ್ದರೆ ಏನಾಗಬಹುದು ನಮ್ಮ ಅವಸ್ಥೆ.. ನೋಡಿ..,
ನಾನು ಮನೆಯಿಂದ ಓಡಿಸಿ ಎಂದು ಹೇಳುತ್ತಿಲ್ಲ...
 ಆದರೆ ಆಸ್ಪತ್ರೆಗೆ ಸೇರಿಸಿ ಸರಿ ಆಗುವ ತನಕ ಅಲ್ಲಿರಿಸಬಹುದಲ್ಲ. 
ಸರಿಯಾದ ನಂತರ ಆಕೆಗೂ ತನ್ನ ಕುಟುಂಬದವರು ಯಾರು ಏನು ಎಂದು ತಿಳಿಯಬಹುದಿತ್ತಲ್ಲ. ಸುಲಭವಾಗಿ ಆಕೆಯ ಮನೆಗೆ ತಲುಪಬಹುದಲ್ಲ. ಅಷ್ಟೇ ನಾನು ಹೇಳುತ್ತಿರುವುದು. ಅರ್ಥ ಮಾಡಿಕೊಳ್ಳಿ"
ಎಂದು ಹೇಳುತ್ತಾಳೆ...
ರುಬೀನಾಳಿಗೆ ಈಗ ಎಲ್ಲಾವು ಅರ್ಥ ಆಗುತ್ತದೆ. ಓಹ್ ಇದೆಲ್ಲಾ ಈಕೆಯ ಸಂಚು ತಾನು ಆಕೆಯ ಬಲೆಯ ಒಳಗೆ ಬೀಳಬಾರದು ಎಂದೆನಿಸಿದಷ್ಟೇ ಆಕೆಯ ಬಲೆ ಒಳಗೆ ಮತ್ತೆ ಮತ್ತೆ ಬೀಳುತ್ತಾ ಇದ್ದೇನೆ. 

ಈಕೆ ಈಗ ನನ್ನನ್ನು ಮನೆಯಿಂದ ಓಡಿಸಲು ಈ ರೀತಿಯಾಗಿ ನಾಟಕವಾಡುತ್ತಿದ್ದಾಳೆ... ತಾನು ಹುಚ್ಚಿ ಎಂದು ಮನೆಯವರಲ್ಲಿ ಸಾಬೀತು ಪಡಿಸಿ ನನ್ನನ್ನು ಆಸ್ಪತ್ರೆಗೆ ಸೇರಿಸಬೇಕೆಂಬುದೇ ಈಕೆಯ ಆಶಯ..

ಅಯ್ಯೋ ನಾನು ಎಂತಹ ಪೆದ್ದಿ ಆಕೆಯ ಬಲೆಯ ಒಳಗೆ ಬೀಳಬಾರದೆಂದು ಕೊಂಡರೂ ಮತ್ತೇ ಬಿದ್ದೇಯಲ್ಲ... 
ಈಗ ಏನು ಮಾಡುವುದು ಆಸ್ಪತ್ರೆಗೆ ಸೇರಿಸುತ್ತಾರೆಯೇ ಹೇಗೆ..! 
ಎಂದು ರುಬೀನಾ ತನ್ನ ಮನಸ್ಸಿನಲ್ಲಿ ಯೋಚಿಸುತ್ತಲಿದ್ದಳು.

 "ಇಲ್ಲ.., ಆಕೆಯನ್ನು ಎಲ್ಲಿಗೂ ಆಸ್ಪತ್ರೆಗೆ ಸೇರಿಸಬೇಡಿ ಅಪ್ಪ. ಆಕೆಗೆ ಚಿಕಿತ್ಸೆ ಕೊಡಿಸುವುದಿದ್ದಲ್ಲಿ, ಡಾಕ್ಟರ್'ನ್ನು ಮನೆಗೆ ಕರೆದು ಕೊಂಡು ಬನ್ನಿ.ಮನೋವೈದ್ಯರಿಗೆನೇ ತೋರಿಸೋಣ. ಚಿಕಿತ್ಸೆ ಮನೆಯಲ್ಲಿಯೇ ಮುಂದುವರಿಯಲಿ..
ಆಕೆಯು ಗುಣಮುಖವಾಗುವವರೆಗೂ ಜವಾಬ್ದಾರಿ ನಮ್ಮದು. ಹಾಗಾಗಿ ಎಲ್ಲಿಗೆಯೂ ಆಕೆಯನ್ನು ಹೊರಗೆ ಬಿಡುವುದು ಬೇಡ ಎಂಬುವುದು ನನ್ನ ಅನಿಸಿಕೆ. ನಿಮ್ಮ ಅಭಿಪ್ರಾಯ ಏನು ಹೇಳಿ ಅಪ್ಪ?"ಎಂದು ಅಶ್ಫಾಕ್ ಮುಹಮ್ಮದ್ ಹಾಜಿಯವರ ಬಳಿ ಹೇಳುತ್ತಾನೆ.
ಮುಹಮ್ಮದ್ ಹಾಜಿಗೆ ತನ್ನ ಮಗನ ಮಾತು ಕೇಳಿ ಖುಷಿಯಾಗುತ್ತದೆ.

"ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದಿಯ ಮಗನೇ.. ಬೇಶ್.. ಹ್ಞೂಂ ಸರಿ...ಆಕೆ ಗುಣಮುಖವಾಗುವ ತನಕ ಇಲ್ಲೇ ಇರಲಿ...ಎಂದು ಮಗನ ಬಳಿ ಹೇಳಿದರು.

ಅವರ ಮಾತು ಕೇಳಿ ಖುಷಿಗೊಂಡ ರುಬೀನಾ.."ತುಂಬಾ 
ಧನ್ಯವಾದಗಳು ಅಂಕಲ್.. ನಾನು ಗುಣಮುಖವಾಗುವವರೆಗೂ ಇಲ್ಲಿ ಇರುತ್ತೇನೆ. ನಂತರ ನಿಮಗೆ ಯಾರಿಗೂ ಕಾಟ ಕೊಡುವುದಿಲ್ಲ . ನನ್ನಿಂದ ಏನಾದರೂ ತಪ್ಪು ಆಗಿದ್ದರೆ ಕ್ಷಮಿಸಿಬಿಡಿ "ಎಂದು ಕ್ಷಮೆಯನ್ನು ಕೇಳುತ್ತಾಳೆ.

"ಅರೇ..! ಕ್ಷಮೆ ಕೇಳುವುದೇನು ಬೇಡ. ಯಾಕಾಗಿ ನೀನು ಕ್ಷಮೇ ಕೇಳುತ್ತೀಯ.. ನಿನ್ನ ತಪ್ಪೇನಿಲ್ಲ ಮಗಳೇ... ಇದರಲ್ಲಿ ನಮ್ಮದೇ ತಪ್ಪು, ನನ್ನ ಮಗನಿಂದಾಗಿ ಎಲ್ಲಾ ನಿನ್ನ ಅವಸ್ಥೆ ಹೀಗೆ ಆದದ್ದು.ಹೋಗು ಮಲಗಿಕೋ ಏನು ಆಲೋಚನೆ ಮಾಡಬೇಡ. 
ನಿನ್ನನ್ನು ಒಳ್ಳೆಯ ಡಾಕ್ಟರ್'ಗೆ ತೋರಿಸುತ್ತೇವೆ.
ನಿನ್ನನ್ನು ಮೊದಲಿನ ಹಾಗೆ ಮಾಡುತ್ತೇನೆ. 
ಅಲ್ಲಿಯವರೆಗು ನೀನು ಈ ಮನೆಯಲ್ಲಿ ಇರಬಹುದು."
ಎಂದು ಹೇಳಿ ಆಕೆಯನ್ನು, ಆಕೆಯ ಕೊಣೆಯತ್ತ ಕಳಿಸುತ್ತಾರೆ. 
ಆಗ ಅಶ್ಫಾಕ್ "ಒಂದು ನಿಮಿಷ ನಿಲ್ಲು ಮಶೂದ ನನಗೆ ನಿನ್ನ ಬಳಿ ಮುಖ್ಯವಾದ ವಿಚಾರ ಒಂದು ಹೇಳಲಿಕ್ಕಿದೆ" ಎಂದು ಹೇಳುತ್ತಾನೆ....

ಮುಹಮ್ಮದ್ ಹಾಜಿಯವರ ಮಾತು ಕೇಳಿ ರುಬೀನಾ ತನ್ನ ಕೋಣೆಗೆ ತೆರಳಲು ಸಿದ್ದಲಾಗುತ್ತಾಳೆ.
ಅಷ್ಟರಲ್ಲಿ ಅಶ್ಫಾಕ್ "ಮಶೂದ ಒಂದು ನಿಮಿಷ ನಿಲ್ಲು "ಎಂದು ಆಕೆಯನ್ನು ಕರೆಯುತ್ತಾನೆ.ರುಬೀನಾ ಏನು ಎಂಬಂತೆ ಆತನ ಮುಖವನ್ನು ನೋಡುತ್ತಾಳೆ.

"ನನಗೆ ನಿನ್ನಲ್ಲಿ  ಸ್ವಲ್ಪ ಮುಖ್ಯವಾದ ವಿಚಾರ ಹೇಳಲಿಕ್ಕಿದೆ. 
ಹಾಗೆ ನಾನು ನಿನ್ನನ್ನು ನಿಲ್ಲಲು ಹೇಳಿದ್ದೆಂದು" ಅಶ್ಫಾಕ್ ನುಡಿಯುತ್ತಾನೆ...ಏನು ಎಂಬಂತೆ ರುಬೀನಾ ಆತನ ಮುಖ ನೋಡುತ್ತಾಳೆ..

"ನೀನು ಈಗ ಇರುವ ಸ್ಥಿತಿ ಹೇಗಿದೆಂದು ನನಗೆ ತಿಳಿದಿಲ್ಲ ಮಶೂದ. ನೀನು ಮುಂದೆ ಹೇಗೆ ಆಗುವೆ ಎಂಬುದನ್ನು ಕೂಡ   ನಾನು ತಿಳಿದಿಲ್ಲ.
ಆದರೆ ನನ್ನ ಅಪ್ಪ ಅಂದು ನಿನ್ನ ಮದುವೆ ಆಗು ಎಂದು ಹೇಳಿದಾಗ ನಾನೇ ಬೇಡ ಎಂದು ನಿನ್ನನ್ನು ತಿರಸ್ಕರಿಸಿದ್ದೆ.
ಆದರೆ ಇಂದು ಮನಸ್ಸು ಯಾಕೋ ಗೊತ್ತಿಲ್ಲ ಮಶೂದ.. ಬೇಡ ಬೇಡ ಎಂದರೂ ಯಾಕೋ ನೀನೇ ನನ್ನ ಬಾಳಸಂಗಾತಿ ಆಗಬೇಕೆಂದು ನನ್ನ ಮನಸ್ಸು ಬಯಸುತ್ತಿದೆ. ಅದನ್ನು ಎಲ್ಲರ ಮುಂದೆ ಹೇಳಲೆಂದು ನಿಲ್ಲಲು ಹೇಳಿದೆ" ಎಂದು ಹೇಳಿದ.

ಅಷ್ಟರಲ್ಲಿ ಮುಹಮ್ಮದ್ ಹಾಜಿಯವರಿಗೆ ಖುಷಿ ಆಯ್ತು. ಆದರೂ ಎಲ್ಲೋ ಒಂದು ಆತಂಕ... 

"ಅಶ್ಫಾಕ್ ಮಗನೇ...; ಆಕೆಯ ಪರಿಸ್ಥಿತಿ ನಮಗೆ ಗೊತ್ತಿಲ್ಲ. ಎಲ್ಲಿಯಾದರೂ ಆಕೆಗೆ ಯಾವುದಾದರೂ ವರ ನಿಗದಿ ಯಾಗಿದ್ದರೆ ಏನು ಮಾಡುವುದು?  ದುಡುಕಿ ನೀನು ಯಾವ ನಿರ್ಧಾರ ತೆಗೆದುಕೊಳ್ಳಬೇಡ "ಎಂದರು. ಮತ್ತೆ ಮುಂದುವರೆಸುತ್ತಾ
"ನಾನೇನು ಅಂದು ನೀನು ಮಾಡಿದ ತಪ್ಪಿಗೆ ಪ್ರಾಯಶ್ಚಿತಪಡಬೇಕೆಂದು ಆ ರೀತಿ ಹೇಳಿದೆ. ಆದರೆ ಇಂದು ನೀನು ಈ ಮಾತು ಹೇಳುವುದರಲ್ಲಿ ನನಗೇನೂ ಬೇಸರವಿಲ್ಲ. 
ಮಶೂದ ಒಳ್ಳೆಯ ಹುಡುಗಿಯೇ, ಒಳ್ಳೆಯ ಹೆಣ್ಣೇ... 

ಆದರೆ..., 
ಎಲ್ಲಿಯಾದರೂ ಅವಳ ಕುಟುಂಬದವರು ಇದ್ದರೆ? ಒಂದು ವೇಳೆ ಆಕೆಗೆ ಮದುವೆಯಾಗಿದ್ದರೆ?  ಅದಕ್ಕೆ ನಾನು ಹೇಳುತ್ತಾ ಇದ್ದೇ

ಎಂದು ಮುಹಮ್ಮದ್ ಹಾಜಿಯವರು ರುಬೀನಾಳ ಮುಖವನ್ನ ನೋಡಿದರು. ಇದನ್ನೆಲ್ಲಾ ಕೇಳಿದ ರುಬೀನಾ ತನ್ನ ಮುಖದಲ್ಲಿ ವ್ಯಂಗ್ಯನಗೆಯನ್ನು ತೋರಿದಳು.ಅಶ್ಫಾಕ್ ಯಾಕೆ ಎಂಬಂತೆ ಪ್ರಶ್ನಾರ್ಥಕವಾಗಿ ಆಕೆಯ ಮುಖವನ್ನು ನೋಡುತ್ತಾನೆ.

"ಅಲ್ಲ ಅಶ್ಫಾಕ್... ಮೊನ್ನೆಯವರೆಗೂ ನಿನ್ನ ಮನದಲ್ಲಿ ರುಬೀನಾಳೆ ತುಂಬಿದ್ದಳು. ರುಬೀನಾಳೆ ನಿನ್ನ ಜೀವನದ ಒಡನಾಡಿಯಾಗಿದ್ದಳು. ನಿನ್ನ ಜೀವನದ ಪ್ರತಿಯೊಂದು ಕನಸು ಪ್ರತಿಯೊಂದು ಹೆಜ್ಜೆಯು ರುಬೀನಾಳೆ ಆಗಿದ್ದಳು. ಅದು ಹೇಗೆ ಆಕೆಯನ್ನು ಮರೆತು ಈಗ ನನ್ನನ್ನು ಮದುವೆ ಆಗುತ್ತೇನೆಂದು ಅಷ್ಟು ಸುಲಭವಾಗಿ ಹೇಳುತ್ತಿದ್ದಿಯಾ..? 
ನನ್ನನ್ನು ಬಾಳಸಂಗಾತಿಯಾಗಿ ಮಾಡಬೇಕೆಂದು ಬಯಸುತ್ತಿದ್ದೇನೆಂದು ಹೇಳುತ್ತಿದ್ದೀಯಾ.! ಇನ್ನೂ ನಾಳೆ ಬೇರೆ ಇನ್ಯಾವುದೋ ಹುಡುಗಿ ಸಿಕ್ಕರೆ ನನ್ನನ್ನು ಬಿಟ್ಟು ಆಕೆಯನ್ನು ಬಾಳಸಂಗಾತಿಯಾಗಿ ಮಾಡಬೇಕೆಂದು ಬಯಸುದ್ದಿಲ್ಲವೇ ಹೇಳು ?ಎಂದು ರುಬೀನಾ ಕೇಳಿದಳು.

 ಇಲ್ಲ ಮಶೂದ, ನನ್ನ ಪ್ರೀತಿ ಹಾಲಿನಷ್ಟೇ ಶುದ್ಧವಾಗಿದೆ. ಜೇನಿನಷ್ಟೇ  ಸಿಹಿಯಾಗಿದೆ ಅದರಲ್ಲಿ ಯಾವ ಕಲ್ಮಷವಿಲ್ಲ. ನಾನು ನನ್ನ ಅಂತರಾಳದಿಂದ ನಿನ್ನನ್ನು ಇಷ್ಟಪಡುವತ್ತಾ ಇದ್ದೇನೆ. ರುಬೀನಾ ನನ್ನ ಬಾಳಿನಲ್ಲಿ ನಡೆದಂತಹ ಒಂದು ಕೆಟ್ಟ ದುರಂತ ಎಂದು ನಾನು ಭಾವಿಸುತ್ತೇನೆ. ಆಕೆಯನ್ನು ನಾನು ಪ್ರೀತಿಸಿದ್ದು ನಿಜ, ಆದರೆ ಆಕೆಯು ನನ್ನನ್ನು ಎಂದಿಗೂ ಪ್ರೀತಿಸಿರಲಿಲ್ಲ. ಆಕೆ ನನ್ನನ್ನು ಮರೆತು ಯಾವನದೋ ಜೊತೆ ಓಡಿ ಹೋಗಿದ್ದಾಳೆ. ಮೊನ್ನೆವರೆಗೂ ನಾನು ಆಕೆಯ ನೆನಪಲ್ಲೇ ಕಾಲ ಕಳೆಯುತ್ತಿದ್ದೆ. ಯಾವಾಗ ನೀನು ನನ್ನ ಹೃದಯದ ಒಳಗೆ ಲಗ್ಗೆ  ಇಟ್ಟೆ ಎಂದು ನನಗೆ ತಿಳಿಯದಾಗಿದೆ...
ಆದರೂ ಒಂದು ಮಾತಂತೂ ನಿಜ. ನಾನು ನಿನ್ನನ್ನು ನಿಜವಾಗಿಯೂ ನನ್ನ ಅಂತರಾಳದಿಂದ ಪ್ರೀತಿಸುತ್ತಾ ಇದ್ದೇನೆ."

ಅಷ್ಟರಲ್ಲಿ 
"ಏನೂ ಅಶ್ಫಾಕ್?  ಏನೋ ಹೇಳಬೇಕೆಂದು ನನ್ನನ್ನು ನಿಲ್ಲಿಸಿದ್ದಿಯ. ಆದರೆ ಏನೂ ಹೇಳದೆ ನಿನ್ನದೇ ಲೋಕದಲ್ಲಿ ಮುಳುಗಿ ಹೋಗಿದ್ದೀಯಾ" ಅನ್ನುವ  ರುಬೀನಾಳ ಮಾತು ಒಮ್ಮೆಲೇ ಅಶ್ಫಾಕ್ನನ್ನು ತನ್ನ ಯೋಚನಾ ಲಹರಿಯಿಂದ ಹೊರ ಬರಿಸಿತು.
ಅರೇ ಇಷ್ಟರ ತನಕ ಹಾಗಾದರೆ ನಾನು ಏನು ಹೇಳಲಿಲ್ಲವ..?ಎಲ್ಲಾ  ಬರೇ ಯೋಚಿಸಿದ್ದ  ಎಂದು ಆತನ ಮನಸ್ಸು ತನ್ನಲ್ಲೇ ಪ್ರಶ್ನಿಸಿತು...

ಹೇಳಬೇಕೋ ಬೇಡವೋ ಅನ್ನುವ ದ್ವಂದ್ವದಲ್ಲಿ
ಹೇಳಲೆಂದು ಬಾಯಿ ತೆರೆದವನು ಬೇಡ ಎಂದು ಸುಮ್ಮನಾದನು. 
ಒಂದು ವೇಳೆ ನಾನು  ಆಕೆಯೊಂದಿಗೆಹೇಳಿದರೆ, ಆಕೆ ರುಬೀನಾಳ ವಿಚಾರ ತೆಗೆಯಬಹುದು. 
ತನ್ನ ಪ್ರೀತಿ ಸುಳ್ಳು ಎಂದು ಆಕೆ ಹೇಳಬಹುದು. 
     ಅದರಿಂದ ನಾನು ಆಕೆಯಲ್ಲಿ ಹೇಳದೆ ಇರುವುದು ಉತ್ತಮ ಎಂದು ಯೋಚಿಸಿದನು.

"ಏನಿಲ್ಲ ಮಶೂದ.. ಜಾಗ್ರತೆ ಮಾಡಿಕೋ, ಯಾವುದೇ ಒಂದು ಮಾತಾಗಲಿ ಯೋಚಿಸಿ ಹೇಳಬೇಕು.ಮುಂದೆ  ದುಡುಕಿ ಇಂತಹ ಮಾತುಗಳನ್ನು ಹೇಳಬೇಡ. ಇನ್ನು ಮುಂದೆ ಆಲೋಚಿಸದೆ ಏನೂ ಮಾತನಾಡಬೇಡ. 
ನಮ್ಮ ಕುಟುಂಬದ ವಿಷಯ ಆದ್ದರಿಂದ ಪರವಾಗಿಲ್ಲ. ಯಾರ ಎದುರಲ್ಲಿ ಈ ರೀತಿಯಾದರೆ ನಿನ್ನ ಬಗ್ಗೆ ಅವರು ಏನೆಲ್ಲ ಹೇಳುವರು.
ಅದು ನಮ್ಮಿಂದ ಸಹಿಸಲು ಆಗದು.ಹಾಗಾಗಿ ನಿನ್ನ ಜಾಗ್ರತೆ ನೀನು ವಹಿಸು" ಎಂದು ಮಶೂದಳಲ್ಲಿ ಹೇಳಿದನು. 

ಆಕೆ ತಲೆಯಾಡಿಸುತ್ತಾ...! 
"ಸರಿ ಅಶ್ಫಾಕ್, 
ಇಂದು ನೀವು ನನ್ನನ್ನು ನಂಬುತ್ತಿಲ್ಲ ಆದರೆ ನಂಬುವಂತಹ  ಗಳಿಗೆ ಬಂದೇ ಬರಬಹುದು. ಯಾಕೆಂದರೆ ನಾನು ಸುಳ್ಳು ಹೇಳಲಿಲ್ಲ. ನನ್ನ ನೆನಪಿನ ಶಕ್ತಿ ಹೋಗಿದೆಯೇ ಇಲ್ಲವೋ ಎಂದು ನನಗೆ ತಿಳಿದಿಲ್ಲ. ಆದರೆ ನಾನು ಕಣ್ಣಾರೆ ಕಂಡಿದ್ದಂತು ನಿಜ. ಇಶ್ರತ್ ನನ್ನನ್ನು ಆಟವಾಡಿಸುತ್ತಾ ಇದ್ದಾಳೆಯೋ  ಏನೋ ನನಗೆ ತಿಳಿದಿಲ್ಲ. ಆದರೆ ನೀವು ಯಾರು ನನ್ನನ್ನು ನಂಬೊ ಸ್ಥಿತಿಯಲ್ಲಿ ಇಲ್ಲ. ನಂಬೋದು ಬೇಡ ಮುಂದೊಂದು ದಿನ ನಿಮಗೆ ತಿಳಿಯಬಹುದು. ಆ ದಿನ ನೀವು ಹೌದು ಎಂದು ಎಲ್ಲಾ ಈಕೆ ಮಾಡಿದ್ದಾಳೆಂದು ಒಪ್ಪುವಿರಿ. ಆ ದಿನಕ್ಕೋಸ್ಕರ ನಾನು ಕಾಯುತ್ತ ಇರುತ್ತೇನೆ "ಎಂದು ಹೇಳಿ ತನ್ನ ಕೊಣೆಯತ್ತ ಹೋದಳು.

"ಅರೇ ನೋಡು !!ಆ ಬಿಕಾರಿಯ ಮಾತು ಕೇಳಿದಿಯಾ?
ಏನು ನಾನು ಆಕೆಯನ್ನು ಆಟ ಆಡಿಸುತ್ತೇನಂತೆ.ನನ್ನನ್ನೇ ರಾತ್ರಿ ಯಾರದೋ ಜೊತೆ ಓಡಿ ಹೋಗಿದ್ದಾಳೆ ಎಂದು  ಹೇಳಿ ಈಗ ನನ್ನನ್ನೇ ದೂರುತ್ತಾ ಇದ್ದಾಳೆ. ಅಲ್ಲ ನನಗೆ ಏನು ಮಾಡಲು ಬೇರೆ ಕೆಲಸ ಇಲ್ಲವೇ? ಇವಳನ್ನು ಮಂಗ ಮಾಡಲು? ಈಕೆಯ  ಮಾತು ಕೇಳಿ ನೀವಾದಲ್ಲಿಉಳಿಸಿದ್ದೀರಿ ಮನೆಯಲ್ಲಿ.ನಾನಾದರೆ ಕತ್ತು ಹಿಡಿದು ಹೊರದಬ್ಬುತ್ತಿದ್ದೆ.
ನಿಜವಾಗಿಯೂ ಎಂತಹ ಕೆಟ್ಟ ಹುಡುಗಿಯಾ,ಯಾರಿಗೆ ಗೊತ್ತು? ಎಂದು ಗೊಣಗುತ್ತಾಇಶ್ರತ್ ತನ್ನ ರೂಮಿನ ಒಳಗೆ ಹೋಗಿ ತನ್ನ ರೂಮಿನ ಬಾಗಿಲನ್ನು ಹಾಕುತ್ತಾಳೆ...

 ತಾನು ಆ ರೀತಿ ಹೇಳಿದ ನಂತರ ಅವರ ನಿರ್ಧಾರ ಏನಾದರೂ ಬದಲಾಗುವುದೋ ಎಂದು ಮೆಲ್ಲನೆ ಬಾಗಿಲ ಸಂದಿಯಲ್ಲಿ ಇಣುಕಿ ನೋಡುತ್ತಾಳೆ. ಅವರು ಮೂವರು ತಮ್ಮ ತಮ್ಮಲ್ಲೇ ಮಾತನಾಡಿ ಚರ್ಚಿಸುವುದು ಆಕೆಯ ಗಮನಕ್ಕೆ ಬರುತ್ತದೆ.

ಮಶೂದ ನಿನ್ನ ಕಥೆ ಮುಗಿಯಿತು ಎಂದು ತನ್ನ ಮನಸ್ಸಿನಲ್ಲೇ ಯೋಚಿಸುತ್ತಾ ಖುಷಿ ಪಡುತ್ತಾಳೆ.ಆ  ದಿನ ರಾತ್ರಿ ಅದೇ ಖುಷಿಯಲ್ಲಿ ಮಲಗುತ್ತಾಳೆ.

ಬೆಳ್ಳಿಗೆ ಎದ್ದು ತಿಂಡಿ ತಿನ್ನಬೇಕಾದರೆ ಮಶೂದ ಇನ್ನೂ ಅಲ್ಲೇ ಇರುವುದು  ಆಕೆಗೆ ಕಾಣುತ್ತದೆ.
ಅಂದರೆ ಇವಳು ಇನ್ನೂ ಇಲ್ಲೇ ಇದ್ದಾಳ?
ಇವಳನ್ನುಇನ್ನೂ ತೊಲಗಿಸಿಲ್ಲವ ಇಲ್ಲಿಂದ?
ಮತ್ತೆ ಇವರು  ರಾತ್ರಿ ಮಾತನಾಡುತ್ತಾ ಇದ್ದದ್ದು  ಏನು? ಎಂದು ಯೋಚಿಸಿ ನೇರವಾಗಿ ಮುಹಮ್ಮದ್ ಹಾಜಿ ರವರ ಬಳಿ ಕೇಳುತ್ತಾಳೆ.

"ಅಲ್ಲ ಮಾವ, ನಾನು ರಾತ್ರಿ ಒಳಗೆ ಹೋದ ನಂತರ ನೀವು ಏನಾ ಗುಸುಪಿಸು ಮಾತನಾಡುವುದು ಕೇಳಿ ಬರುತಿತ್ತು. ನೀವೇನು ಚರ್ಚೆ ಮಾಡುತ್ತಿದ್ದಿದ್ದು? ನಾನೇನೋ ಅಂದುಕೊಂಡೆ ನೀವು 2ಮಶೂದಳನ್ನು ಆಸ್ಪತ್ರೆಗೆ ಸೇರಿಸುವ ವಿಚಾರ ಮಾತನಾಡುತ್ತಿರಿ ಎಂದು" ಎಂದು ಕೇಳಿದಳು.ಆಕೆಯ ಮಾತುಗಳಿಗೆ ಪ್ರತಿಕ್ರಿಯೆ ನೀಡುತ್ತಾ ಮುಹಮ್ಮದ್ ಹಾಜಿಯವರು..

"ಹೇ..! ಇಲ್ಲಮ್ಮಾ,  ನೀನು ಯಾಕೆ ಆ ರೀತಿ ಯೋಚಿಸಿದಿ?
ನಾವು ಮಾತನಾಡಿದಂತು ಸತ್ಯ. 
ಆದರೆ ನಾವು ಅವಳನ್ನು ಯಾವ ಡಾಕ್ಟರ್'ಗೆ ತೋರಿಸಬೇಕು ಏನು ಮಾಡುವುದು, ಏನು ?ಹೇಗೆ?  ಎಂದು ಮಾತನಾಡಿದ್ದು.
ಅದು ಬಿಟ್ಟು ಆಸ್ಪತ್ರೆ ಗೆ ಸೇರಿಸುವ ವಿಚಾರ ಮಾತನಾಡಿಲ್ಲ "ಎಂದು ಹೇಳುತ್ತಾರೆ.
ಇದನ್ನು ಕೇಳಿದ ಇಶ್ರತಿಗೆ ಒಳಗಿಂದೊಳಗೆ ಕೋಪ ಬರುತ್ತದೆ. ಆದರೂ ಅದನ್ನು ತೋರ್ಪಡಿಸಲಿಲ್ಲ.

ಅಯ್ಯೋ ಆಕೆ ಏನೋ ಇವರಿಗೆ ಮಾಯೆ ಮಾಡಿದಳೋ?. ಏನು ಜಾದು ಮಾಡಿದಳೋ.? ಇವರು ಅವಳನ್ನು ಮನೆಯಿಂದ ಹೊರಗೆ ಕಳಿಸುವ ವಿಚಾರ ಎತ್ತುತ್ತಿಲ್ಲ. ಇನ್ನು ನಾನು ಏನು ಮಾಡಲಿ ಆಕೆಯನ್ನು ಮನೆಯಿಂದ ಹೊರಗೆ ಕಳಿಸಲು ಎಂದು ತನ್ನಲ್ಲೇ ಯೋಚಿಸುತ್ತಾಳೆ. ತನ್ನ ತಿಂಡಿಯನ್ನು ತಿಂದು ಬೇಗನೆ ರೆಡಿಯಾಗಿ ಕಾಲೇಜಿಗೆ ತೆರಳಿದಳು.

ಆಕೆಯ ಗೆಳಯ ಗೆಳತಿಯರು ಅದಾಗಲೇ ಆಕೆಗಾಗಿ ಕಾಯುತ್ತ ಇದ್ದರು. 
ಏನಾಯಿತೇ ನಿನ್ನೆಯ ಪ್ಲಾನ್ ಆದರು ಸಕ್ಸಸ್ ಆಯ್ತಾ...?
 ಆಕೆಯನ್ನು ಮನೆಯಿಂದ ಹೊರ ದಬ್ಬಿದ್ದಾರ..?
ಅಯ್ಯೋ ಹುಚ್ಚಿ ಎಂದು ಮನೆಯಿಂದ ಹೊರ ದಬ್ಬಿರಬಹುದಲ್ವಾ" ಎಂದು ಹೇಳಿ ಎಲ್ಲಾ ನಗಾಡಿದರು.ಇಶ್ರತ್ ಗೆ ಸಿಟ್ಟು ಬಂತು.
"ಒಂದು ನಿಮಿಷ ನಿಲ್ಲಿಸ್ತಿರಾ ಎಂದು ಕೋಪದಿದಂಲೇ" ಕೇಳಿದಳು.

 ಅವರೆಲ್ಲರೂ ಆಶ್ಚರ್ಯ ದಿಂದ ಆಕೆಯ ಮುಖ ವನ್ನು ನೋಡಿದರು.ಏನೇ.. ಏನಾಯಿತು...!? 
ನೀನು ಯಾಕೆ ಹಾಗೆ ಕೋಪದಿಂದ ಮಾತನಾಡುತ ಇದ್ದೀಯ? " ಎಂದು ಕೇಳಿದರು.

"ಇಲ್ಲಾ ಕಣೇ.. ಎಲ್ಲಾ ಫೇಲ್ ಎಂದು ಹೇಳಿದಳು.ಏನೋ ಅರ್ಧದಲ್ಲೇ  ಸಕ್ಸಸ್ ಆಗಬೇಕು ಎನ್ನುವಾಗಲೇ ಇನ್ನೂ ಅರ್ಧದಲೇ ಫೇಲ್ ಆಗುತ್ತದೆ. 
ಆಕೆ ಏನೂ ಮೋಡಿ ಮಾಡಿದ್ದಾಳೋ ಏನೋ ನನಗಂತೂ ಗೊತ್ತಿಲ್ಲ. 
ಆಕೆ ಹುಷಾರಾಗಿಲ್ಲ ಎಂದು ಆಕೆಗೆ ಮನೆಯಲ್ಲೇ ಚಿಕಿತ್ಸೆ ಕೊಡಿಸೋಣ ಎಂದು ಅವರು ನಿರ್ಧರಿಸಿದ್ದಾರೆ. 
ಅದು ಬಿಟ್ಟು ಆಕೆಯನ್ನು ಮನೆಯಿಂದ ಹೊರಗೆ ಹಾಕುವ ಮಾತೆ ಎತ್ತುತ್ತಾ ಇಲ್ಲಾ..
ಅದೂ ಅಲ್ಲದೆ ಆ ಅಶ್ಫಾಕ್ ಆಕೆಯೊಂದಿಗೆ ಜಾಗ್ರತೆ ವಹಿಸು,
ಇನ್ನೂ ಮುಂದೆ ಹೀಗೆ ಮಾಡಬೇಡ. ಹಾಗೆ ಹೀಗೆ ಎಂದು ಎಷ್ಟು ಚೆನ್ನಾಗಿ  ಹೇಳುತ್ತಿದ್ದ ಗೊತ್ತುಂಟಾ. 
ನನಗೆ ಇದನ್ನೆಲ್ಲಾ ನೋಡುವಾಗ ಹೇಗೆ ಆಗಬೇಡ ಹೇಳಿ ನೀವೇ" ಎಂದು ಹೇಳಿದಳು.ಅವರಿಗೆ ಆಕೆಯ ಮಾತು ಕೇಳುವಾಗ ಅಯ್ಯೋ ಪಾಪ ಎಂದು ಎಣಿಸಿತು.

"ಹಾಗಿದ್ದಲ್ಲಿ ಇನ್ನು ಮುಂದೆ ಏನು ಮಾಡುವುದು ಎಷ್ಟೊಂದು ಯೋಚನೆಗಳೆಲ್ಲ ಮಾಡಿದೆವು. 
 ಎಲ್ಲವು ತಲೆ ಕೆಳಗೆ ಅಯ್ತಲ್ಲ
ಇನ್ನೂ ಮಾಡುದಾದರೂ ಏನು?" ಎಂದು ಕೇಳಿದರು. 

"ನೋಡೋಣ, ಮಾಡಬೇಕು. ಏನಾದರು ಮಾಡಬೇಕು.ಒಂದು ಒಳ್ಳೆಯ ಆಲೋಚನೆ ಮಾಡಿಕೊಂಡೇ ಬಂದಿದ್ದೇನೆ. ಅದರಿಂದ ತಪ್ಪಿಸಲು ಆಕೆಗೆ ಯಾವುದೇ ದಾರಿಗಳಿಲ್ಲ" ಎಂದು ಇಶ್ರತ್ ಹೇಳುತ್ತಾಳೆ. 
"ಏನದು ?"ಎಂದು ಆಕೆಯ ಗೆಳತಿಯರು ಕೇಳಿದರು.
 "ಈಗ ಹೇಳುವುದಿಲ್ಲ..  ಸಮಯ ಬರಲಿ ಆಗ ನಾನೇ ಹೇಳುತ್ತೇನೆ" ಎಂದಳು.ಇಶ್ರತ್  ಸಮಯ ಬಂದಾಗ ಹೇಳುತ್ತೇನೆ ಎಂದಾಗ 
ಆಕೆಯ ಗೆಳತಿಯರಿಗೆ ಅದು ಏನು ಎಂಬ ಕುತೂಹಲ ತಡೆಯಲು ಆಗಲಿಲ್ಲ. 

"ಹೇ.. ಪ್ಲೀಸ್ ಹೇಳೆ...ಈಗಲೇ ಹೇಳು ,ನಾವೆಲ್ಲ ನಿನ್ನ ಗೆಳತಿಯರು ಅಲ್ವಾ ?ನಿನ್ನ ಎಲ್ಲಾ ಕಷ್ಟದಲ್ಲು ಸುಖದಲ್ಲು ನಾವೇ ಜೊತೆಯಾಗಿ ಇರುತ್ತೇವೆಲ್ಲ ? ಹಾಗಿದ್ದ ಮೇಲೆ ನಮ್ಮೊಂದಿಗೆ ಹೇಳಲು ಏನು...? 
ಹೇಳಿಬಿಡು ಪ್ಲೀಸ್ ....ಅಂತ ಆಕೆಯನ್ನು ಬೇಡಿಕೊಳ್ಳುತಾರೆ. ಆಗ ಇಶ್ರತ್ ತನ್ನ ನಗುಮುಖದಿಂದ

 "ಅದು ಬೇರೆ ಏನು ಅಲ್ಲಾ ಕಣ್ರೇ.. *ರೆಡಿ ಮೇಡ್ ಗಂಡ* ಆಕೆಗೊದು ರೆಡಿಮೇಡ್ ಗಂಡನನ್ನು ಈಗ ಕಂಡು ಹಿಡಿಯಬೇಕು "ಎಂದು ಹೇಳಿ ಅವರ ಮುಖವನ್ನು ನೋಡುತ್ತಾಳೆ.ಆಕೆಯ ಮಾತುಗಳು  ಅವರಿಗೆ ಅರ್ಥ ಆಗುವುದಿಲ್ಲ.ರೆಡಿಮೇಡ್ ಗಂಡನ ಹಾಗಂದ್ರೆ ಏನೇ..?ಸರಿಯಾಗಿ ಸ್ವಲ್ಪ ಬಿಡಿಸಿ ಹೇಳಬಾರದೆ ? ಎಂದು ಆಕೆಯ ಗೆಳತಿ  ಪರ್ವೀನ್ ಕೇಳಿದಾಗ.. 

"ಅಯ್ಯೋ  ಅಷ್ಟು ಕೂಡ  ಗೊತ್ತಾಗೋದಿಲ್ಲವೇ?ರೆಡಿಮೇಡ್ ಗಂಡ ಅಂದರೆ ಈಗ ಯಾರಾದರೂ ಒಬ್ಬ ವಕ್ತಿಯನ್ನು ಪತ್ತೆ ಹಚ್ಚಬೇಕು. ಆತನಿಗೆ ಸ್ವಲ್ಪ ದುಡ್ಡು ಕೊಟ್ಟು ಆತನೊಂದಿಗೆ ಆಕೆಯ ಗಂಡನ ಹಾಗೆ ನಟಿಸುವಂತೆ ಮಾಡಬೇಕು. 
ಆಗ ಅಶ್ಫಾಕ್ ಮನೆಯವರು ಇದನ್ನು ನಂಬಲೇ ಬೇಕಾಗುತ್ತದೆ. 
ಅವನನ್ನು ಅಶ್ಫಾಕ್ ಮನೆಗೆ ಕರೆದು ಕೊಂಡು ಹೋಗಿ ಆತ ನಾನೇ ಮಶೂದಳ ಗಂಡ ಎಂದು ಹೇಳುವಂತೆ ಮಾಡಿದ್ರೆ ಖಂಡಿತಾ ಅಶ್ಫಾಕ್ ಮನೆಯವರು ನಿಜ ಎಂದು ನಂಬಬಹುದು. ಆಗ ಆಕೆಯನ್ನು ಮನೆಯಿಂದ ಹೊರಗೆ ಕಳುಹಿಸಲೇಬೇಕಲ್ವಾ..! 
ಹೇಗಿದೆ ನನ್ನ ಪ್ಲಾನ್?ಎಂದು ಹೇಳಿ  ಅವರ ಮುಖವನ್ನು ನೋಡಿದಳು.

ಇಶ್ರತ್ ತನ್ನ ಮಾತು ಮುಂದುವರೆಸುತ್ತಾ
"ಈಗ ನನಗೆ ಎಲ್ಲಿಂದಾದರು  ಒಂದು ಹುಡುಗನನ್ನು ಹುಡುಕಿ ತರಬೇಕು.ಆತನಿಗೆ ಬಾಡಿಗೆ ದುಡ್ಡು ಕೊಟ್ಟಾದರೂ ಸರಿ. ಆತನು ತಾನೇ ಮಶೂದಳ ಗಂಡ ಎಂದು ಹೇಳುವ ಹಾಗೆ ಮಾಡಬೇಕು. ಶಾಕಿರ್ ಪ್ಲೀಸ್ ನಿನ್ನ ಗೆಳಯರ ಬಳಗದಲ್ಲಿ  ಯಾರಾದರೂ ಇದ್ದರು  ದಯವಿಟ್ಟು ಹೇಳು.
ಮಾತ್ರ ಆಶ್ಫಾಕ್ ಅವರು ನಂಬುವ ಹಾಗೇ ಇರಬೇಕು. 
 ನಂತರ ಅವರು ಮತ್ತೆ ಆಕೆಯನ್ನು ಎಲ್ಲಿ ಬಿಟ್ಟರು ಸರಿ.. 
ಒಮ್ಮೆ ಆಕೆ ಅಲ್ಲಿಂದ ಆಚೆ ತೊಲಗಬೇಕು ಅಷ್ಟೇ.
ದಯವಿಟ್ಟು ನನಗೆ ಒಂದು ಉಪಕಾರ ಮಾಡು" ಎಂದು ಹೇಳುತ್ತಾಳೆ.

ಶಾಕಿರ್ ಸ್ವಲ್ಪ ಹೊತ್ತು ಆಲೋಚಿಸುತ್ತಾನೆ. ನಂತರ ಮಾತು ಮುಂದುವರಿಸುತ್ತಾ " ಇಶ್ರತ್, ನೀನು ಕೇಳಿದ್ದು ಎಂದಾದರೂ ಇಲ್ಲ ಎಂದು ಹೇಳಿದ್ದೇನಾ? 
ಗೆಳತಿ ಎಂದ ಮೇಲೆ ಎಲ್ಲಾ ಮಾಡಲೇಬೇಕಲ್ವಾ ಹೇಳು. ನೋಡೋಣ, 
ನನ್ನ ಪರಿಚಯದಲ್ಲಿ ಯಾರೂ  ಇಲ್ಲ.ಆದರೆ ಪರಿಚಯದವರೊಡನೆ ಕೇಳಿ ನೋಡುತ್ತೇನೆ... ಸರಿಯಾ?
ಅಂತಹವರು ಯಾರಾದರು ಇದ್ದರೆ ಖಂಡಿತವಾಗಿ ಹುಡುಕಿಕೊಂಡು ಬರುತ್ತೇನೆ. ನೋಡೋಣ, ಅಮೇಲೆ ನಿನ್ನ ಈ ಪ್ಲಾನ್ ಖಂಡಿತವಾಗಿಯು ಸಕ್ಸೆಸ್ ಆಗಿಯೇ ಆಗುವುದು.
 ಹಾಗಂತ ನಂಬಿಕೆ ಇದೆ ನನಗೆ ಎಂದು ಹೇಳುತ್ತಾನೆ.

ಅವರೆಲ್ಲರೂ ತಮ್ಮ ತಮ್ಮ ಮಾತುಕತೆ ಮುಗಿಸಿ ಕ್ಲಾಸ್ ರೂಂ ಗೆ ತೆರಳುತ್ತಾರೆ.

*************************

ಹಕೀಂ ತನ್ನ ಕೋಣೆಯಲ್ಲಿ ಶತಪತ ಹಾಕಿಕೊಂಡು ತಿರುಗುತ್ತಾ ಇರುತ್ತಾನೆ.

ಆತನ ಮುಖದಲ್ಲಿ ಆತಂಕದ ಛಾಯೆ ಒಂದು ಕಡೆ ಎದ್ದು ಕಂಡು ಬಂದಲ್ಲಿ,ಇನ್ನೊಂದು ಕಡೆ ಕೋಪದ ಛಾಯೆ ಇರುತ್ತದೆ.ಒಟ್ಟಿನಲ್ಲಿ ಆತ ತನ್ನ ಕೋಪವನ್ನು ತನ್ನ ಕೈಯಲ್ಲಿ ಹೊಡೆದು ತೀರಿಸುತ್ತಾ  ಇರುತ್ತಾನೆ.

ಅಷ್ಟರಲ್ಲಿ ಮಾತನಾಡಿದವನೇ ಕರೀಂ" ಈ ರೀತಿ ಮಾಡಿಕೊಂಡು ಕೋಣೆಯ ಒಳಗೆ ಇದ್ದರೆ ಹೇಗೆ ಹಕೀಮ್? ಇಷ್ಟು ದಿನ ನಾವು ಹುಡುಕಿ ಆಯಿತು. ಆದರೂ ಆಕೆ ಕಣ್ಣಿಗೆ ಇನ್ನೂ ಬಿದ್ದಿಲ್ಲ. ಏನು ಮಾಡುದು ಹೇಳು? ಆಕೆಯನ್ನು ಹುಡುಕದ  ಒಂದೂ ಆಸ್ಪತ್ರೆ ಇಲ್ಲ . ಮತ್ತೆ ಏನು ಮಾಡುದು ಹೇಳು? ನೀನು ರೀತಿ ಕೋಪಿಸಿಗೊಂಡರೆ ಆಗುತ್ತಾ ನೀನೇ ಹೇಳು. ನೀನು ಈ ರೀತಿ ಕೋಪಿಸಿಕೊಂಡರೆ ಆಕೆ ಸಿಗುತ್ತಾಳ ಹೇಳು" ಎಂದು ಕೇಳಿದನು.
ಆತನ ಮಾತಿಗೆ ಪ್ರತಿಕ್ರಿಯಿಸುತ್ತಾ  ಹಕೀಮ್ 

"ಏನು ಮಾಡಲಿ ನೀನೇ ಹೇಳು ಕರೀಂ? ನನಗೆ ಆಕೆ ಬೇಕು. ಇಷ್ಟೊಂದು ಸತಾಯಿಸಿದಳಲ್ಲ ಆಕೆ ನನ್ನನ್ನು.  ಆಕೆಯನ್ನು ಇನ್ನೂ ಹೇಗೆ ಸುಮ್ಮನೆ ಬಿಡುವುದು ಹೇಳು.? 
ಆಕೆಯನ್ನು ಸುಮ್ಮನೆ ಬಿಡುವ ಮಾತೆ ಇಲ್ಲಾ. ಆಕೆ ನನಗೆ ಬೇಕು ಎಂದು ಇಷ್ಟೊಂದು ಕಷ್ಟ ಪಟ್ಟು ಇಲ್ಲಿಯವರೆಗೆ ತಂದೆ..
ಇಲ್ಲಿಗೆ ತಂದು ನಿಮ್ಮ ಒಂದೇ ಒಂದು ಬೇಜವಾಬ್ದಾರಿಯಿಂದ ಆಕೆ ನನ್ನಿಂದ ತಪ್ಪಿಸಿ ಹೋಗುವಂತಾಯಿತು. ಈಗ ಏನು ಮಾಡುವುದು ಎಂದು ಕೇಳಿದರೆ ಆಗುತ್ತಾ?" ಎಂದು ಕೇಳಿದನು.

ಅವರಿಬ್ಬರ ಮಾತನ್ನು ಆಲಿಸುತಿದ್ದ ಅಝೀಝ್ ಅದುವರೆಗೆ ಸುಮ್ಮನೆ ಇದ್ದನು. ನಂತರ ತನ್ನ ಮಾತನ್ನು ಮುಂದುವರಿಸಿದವನೇ,  ಅದಕ್ಕೆ ಪ್ರತಿಕ್ರಿಯಸುತ್ತಾ, "ನೋಡಿ ನಾವು ಇದುವರೆಗೂ ಹುಡುಕಾಡಿದ್ದೇವೆ, ಆದರೆ ನಾವು ಹುಡುಕಾಡಿದ ರೀತಿಯಾದರು ಹೇಗೆ..? ಬರೀ ಆಟೋಗಳಲ್ಲಿ ಓಡಾಡಿ ಎಲ್ಲಿಯಾದರೂ ಗಲ್ಲಿಗಲ್ಲಿ ಗಳಲ್ಲಿ ಅವಳು ಕಾಣುತ್ತಾಳೆಯೇ ಎಂದು ಅಥವಾ ಆಸ್ಪತ್ರೆ ಗಳಲ್ಲಿ ಹೋಗಿ ಯಾವುದಾದರೂ ಬೆಡ್ ನಲ್ಲಿ ಆಕೆ ಮಲಗಿದ್ದಾಳ ಎಂದು ಹೊರತು ಆಕೆಯ ಭಾವ ಚಿತ್ರ ನಮ್ಮಲ್ಲಿ ಇದೆಯೇ..?
   ಇಲ್ಲವಲ್ಲ...!
ಆಕೆಯ ಒಂದೇ ಒಂದು ಭಾವ ಚಿತ್ರ ನಮ್ಮಲಿ ಇರಲ್ಲಿಲ್ಲ... ಮತ್ತೆ ಹೇಗೆ ನಾವು ಅವಳನ್ನು ಪತ್ತೆ ಹಚ್ಚಲು ಸಾಧ್ಯ?
ನಮ್ಮಲ್ಲಿ ಆಕೆಯ ಒಂದು ಭಾವ ಚಿತ್ರ ಇದ್ದಿದರೆ ಯಾರಿಗಾದರೂ ತೋರಿಸಿ ಇಂತಹ ಹುಡುಗಿಯನ್ನು ನೋಡಿದ್ದೀರಾ ಎಂದು ಕೇಳಿದಿದ್ದಲ್ಲಿ, ನೋಡಿದವರು ಹಾ ನೋಡಿದ್ದೇವೆ. ಈಕೆ ಇಂತಹ ಸ್ಥಳದಲ್ಲಿ ಇದ್ದಾಳೆ ಎಂದು ಹೇಳಿದರೆ ನಮಗೆ ಹುಡುಕಲು ಸುಲಭವಾಗುತ್ತಿತು. ಅದು ಬಿಟ್ಟು ಹೀಗೇಂತ ಎಷ್ಟು ದಿವಸ ಹುಡುಕುವುದು ?"ಎಂದು ಕೇಳಿದನು.

ಆತನ ಮಾತು ಕೇಳಿದಾಗ ಸರಿ ಎಂದು ಇಬ್ಬರಿಗೂ ಅನಿಸಿತು.."ಆಕೆಯ ಭಾವ ಚಿತ್ರ ಇದ್ದಿದರೆ ಈಗ ನಮಗೆ ಸುಲಭ ವಾಗುತ್ತಿತು. ಆದರೆ ಆಕೆ ಇಲ್ಲಾ ಇನ್ನೂ ಎಲ್ಲಿಂದ ಆಕೆಯ ಭಾವಚಿತ್ರ ತೆಗಿಯುದಾದರೂ ಹೇಗೆ? ಅವತ್ತೇ ಒಂದು ಭಾವ ಚಿತ್ರ ತೆಗಿದಿಡಬೇಕಿತ್ತು ಎಂದು ಕರೀಂ ಹೇಳಿದನು.ಸ್ವಲ್ಪ ಹೊತ್ತು ಆಲೋಚಿಸಿದವನೇ ಹಕೀಮ್..!!!
ಹೀಗೆ ಮಾಡಿದರೆ ಹೇಗೆ ? "
ಎಂದು  ಕೇಳಿ ಗೆಳೆಯರ ಮುಖದತ್ತ ನೋಡುತ್ತಾನೆ.

ಅವರು ಏನು ಎಂಬಂತೆ ಆತನ ಬಳಿ ಕೇಳಿದರು.

 " ರುಬೀನಾಳ ಮನೆಯಲ್ಲಿ ಮುಕ್ತಾರ್ ಇಲ್ಲದ ಸಂದರ್ಭ ನೋಡಿ ನಮ್ಮ ಗೆಳೆಯ ಸಿದ್ಧೀಕನನ್ನು  ಅಲ್ಲಿಗೆ ಕಳುಹಿಸಬೇಕು.  ನಂತರ, ಆಧಾರ್ ಕಾರ್ಡ್ ಗೆ ಫೋಟೋ ಕೇಳಲು ಬಂದಿದ್ದೇವೆ ಎಂದು ಹೇಳಿ ಅವಳ ಅಮ್ಮನನ್ನು ಮಂಗ ಮಾಡಿ ಹೇಗಾದರು ಆಕೆಯ  ಫೋಟೋ ಕಲೆಕ್ಟ್ ಮಾಡಬೇಕು. ಆಗ ನಮಗೆ ಫೋಟೋ ಸಿಗುತ್ತದಲ್ಲವೇ...?
ಹೇಗಿದೆ ನನ್ನ ಐಡಿಯಾ? ಹೇಳಿ ಏನು ಹೇಳುತೀರಾ? ಎಂದು ಕೇಳಿ ಹಕೀಮ್ ಗೆಳಯರ ಮುಖದತ್ತ ನೋಡಿದನು.

 ಹಕೀಮ್, ಅಝೀಝ್ ಹಾಗೂ ಕರೀಂರೊಂದಿಗೆ ಸೇರಿ ರುಬೀನಾಳ ಭಾವ ಚಿತ್ರವನ್ನು ಕಲಕ್ಟ್ ಮಾಡಬೇಕು.ನಂತರ ಅದರ ಮೂಲಕ ಆಕೆಯನ್ನು ಹುಡುಕಬೇಕು ಎಂದು ಯೋಜನೆನಯನ್ನು ಹಾಕುತ್ತಾನೆ.ಅದರಂತೆ ಹಕೀಮ್ ತನ್ನ ಗೆಳೆಯ ಸಿದ್ದೀಕ್'ನಿಗೆ ಕರೆಮಾಡುತ್ತಾನೆ.
ಕರೆ ರಿಸೀವ್ ಮಾಡಿದವನೇ ಸಿದ್ದೀಕ್ ಏನು? ಎಂದು ಕೇಳುತ್ತಾನೆ.

"ಹಲೋ.. ಸಿದ್ಧಿಕ್, ನೋಡು ಅರ್ಜೆಂಟ್ ಆಗಿ ರುಬೀನಾಳ ಭಾವ ಚಿತ್ರ ಬೇಕ. ಮುಕ್ತಾರ್ ಇಲ್ಲದಂತಹ ಸಂದರ್ಭದಲ್ಲಿ ಆಕೆಯ ಮನೆಗೆ ಹೋಗಿ ಆಧಾರ್ ಕಾರ್ಡ್'ನ ಏನಾದರು ವಿಷಯ ಹೇಳಿ ಆಕೆಯ ಫೋಟೋವನ್ನ ಆಕೆಯ ಅಮ್ಮನಿಂದ ಕಲೆಕ್ಟ್ ಮಾಡಬೇಕು" ಎಂದು ಹಕೀಮ್ ಆಗ ಸಿದ್ದಿಕ್ ಗೆ ಆಶ್ಚರ್ಯ ವಾಯಿತು...!!!!!"ಸರಿಯಾಗಿ ವಿಷಯ ಏನು ಎಂದು ಹೇಳು "ಎಂದು ಹೇಳುತ್ತಾನೆ.

"ನೋಡು ಸಿದ್ದೀಕ್ ರುಬೀನಾಳನ್ನು ಅವರು ಬಾಂಬೆ ತನಕ ಕರೆದುಕೊಂಡು ಬಂದಿದ್ದರಲ್ಲ .ಅವರ ಕೈಯಿಂದ ಆಕೆ ಅರ್ಧದಲ್ಲೇ ತಪ್ಪಿಸಿದ್ದಾಳೆ. ಇಡೀ ಬಾಂಬೆಯಲ್ಲಿ ಹುಡುಕಿದರು ಆಕೆ ನಮ್ಮ ಕೈಗೆ ಸಿಗುತ್ತಿಲ್ಲ. ಹಾಗಾಗಿ ಈಗ ಆಕೆಯ ಫೋಟೋ ಇದ್ದರೆ ಯಾರಾದರೂ ಪರಿಚಿತರು ಆಕೆಯನ್ನು ಎಲ್ಲಿದ್ದಾಳೆ ಎಂದು ಹೇಳಬಹುದಲ್ವಾ?
ಅದಕೋಸ್ಕರ ನಮಗೆ ಆಕೆಯ ಫೋಟೋ ಅರ್ಜೆಂಟ್ ಆಗಿ ಬೇಕು. ಅದಕ್ಕೆ ಈ ಕೆಲಸವನ್ನು ನಿನಗೆ ಒಪ್ಪಿಸುತ್ತೇನೆ ನೀನು ಸರಿಯಾಗಿ ಮಾಡುತ್ತೀಯ ಎಂಬ ನಂಬಿಕೆ ನನಗೆ ಇದೆ" ಎಂದು ಹಕೀಮ್ ಹೇಳಿದಾಗ ಸಿದ್ದೀಕ್ ಸರಿ ಎಂದು ಕರೆ ಕಟ್ ಮಾಡುತ್ತಾನೆ.ಅದರಂತೆ ಸಿದ್ದಿಕ್ ಕೆಲ ನಿಮಿಷಗಳ ನಂತರ ಮುಕ್ತಾರ್ ಇಲ್ಲದಂತಹ ಸಂದರ್ಭದಲ್ಲಿ ಮೆಲ್ಲನೆ ನೆಫೀಸಾದರ ಮನೆಗೆ ಹೋಗುತ್ತಾನೆ.ನೆಫೀಸದರು ಯಾರು ಬಂದದ್ದು ಎಂದು ಇಣುಕಿ ನೋಡುತ್ತಾರೆ. ಅಪರಿಚಿತ ಹುಡುಗನನ್ನು ಕಂಡು ಏನು ಎಂದು ಕೇಳುತ್ತಾರೆ.

"ನೋಡಿ ಅಮ್ಮಾವ್ರೇ, ನಾವು ಆಧಾರ್ ಕಾರ್ಡ್ ಆಫೀಸ್ ನಿಂದ ಬಂದಿದ್ದಿವೆ. ನಮಗೆ ಅರ್ಜೆಂಟ್ ಆಗಿ ನಿಮ್ಮ ಮನೆಯವರ ಫೋಟೋ ವಿಷಯ ಎಲ್ಲಾ ಬೇಕು. ಅದಕೋಸ್ಕರ ಈಗ ನೀವು ನಮಗೆ ಮನೆಯವರ ವಿಷಯ ಪರಿಚಯ ಹೇಳಿ ಮತ್ತು ಅವರವರ ಒಂದು ಫೋಟೋ ಕೊಡಿ "ಎಂದು ಹೇಳುತ್ತಾನೆ.

ಪಾಪ ನಿಜ ವಿಚಾರ ಏನು ಎಂದು ತಿಳಿಯದ ನಫೀಸಾದರು ಇದನ್ನೇ ನಿಜ ನಂಬಿಕೊಂಡು ಬಂದು, ಮುಕ್ತಾರ್ ಹಾಗೂ ಅವರ ಫೋಟೋ ಕೊಡುತ್ತಾರೆ."ಅರೇ ಈ ಮನೆಯಲ್ಲಿ ನೀವು ಇಬ್ಬರೇ ಇರುವುದೇ..? "ಎಂದು ಸಿದ್ದಿಕ್ ಕೇಳುತ್ತಾನೆ."ಹ್ಞಾಂ.... ನಾವು ಇಬ್ಬರೇ ಇರುವುದು" ಎಂದು ನಫೀಸಾದ ಹೇಳಿದಾಗ

"ನಿಮ್ಮ ರೇಷನ್ ಕಾರ್ಡ್ ಒಮ್ಮೆ ಕೊಡಿ ನೋಡೋಣ "ಎಂದು ಸಿದ್ದೀಕ್ ಕೇಳುತ್ತಾನೆ.ನೆಫೀಸಾದ ಹಿಂಜರಿಕೆಯಿಂದ ರೇಷನ್ ಕಾರ್ಡ್ ಮೆಲ್ಲನೆ ಕೊಡುತ್ತಾರೆ. ಅದನ್ನು ನೋಡಿದವನೇ ಸಿದ್ದೀಕ್ "ಇದರಲ್ಲಿ ಇನ್ನೊಂದು ಹೆಸರು ಇದೆಯಲ್ಲಾ 
ರುಬಿನ ಎಂದು ಹೇಳಿ.?
ಆಕೆ ಎಲ್ಲಿದಾಳೆ ?ಎಂದು ಕೇಳುತ್ತಾನೆ.

 ಆಕೆ ನನ್ನ ಮಗಳು, ಆಕೆ ಈಗ ಇಲ್ಲಿ ಇಲ್ಲಾ. ನಾನು ಮತ್ತು ನನ್ನ ಮಗ ಮಾತ್ರ ಇಲ್ಲಿ ಇರುವುದು ಎಂದು ಹೇಳುತ್ತಾರೆ."ಆಕೆ ಇಲ್ಲಿ ಇಲ್ಲಾ ಅಂದ್ರೆ ಹೇಗೆ ಆಕೆ ಮದುವೆ ಆಗಿ ಹೋಗಿದ್ದಾಳ? ಎಂದು ಸಿದ್ದೀಕ್ ಬೇಕು ಅಂತಾನೆ ಕೇಳುತ್ತಾನೆ.

"ಇಲ್ಲಾ ಮದುವೆ ಆಗಿ ಹೋಗಿಲ್ಲ ಆದರೆ ಆಕೆ ಇಲ್ಲಿ ಇಲ್ಲ ಬೇರೆ ಊರಿಗೆ ಹೋಗಿದ್ದಾಳೆ" ಎಂದು ನಫೀಸಾದ ಸುಳ್ಳು ಹೇಳುತ್ತಾರೆ."ಸರಿ ಬೇರೆ ಊರಿಗೆ ತಾನೇ ಹೋಗಿದ್ದು. ಆಕೆಯ ಭಾವ ಚಿತ್ರ ಬೇಕು. ಏಕೆಂದರೆ ನಮ್ಮ ಲಿಸ್ಟ್ ನಲ್ಲಿ ಆಕೆ ಹೆಸರು ಇದೆ ಅಲ್ವಾ.., ಹಾಗಾಗಿ ಆಕೆಯ ಫೋಟೋ ಇದ್ದರೆ ಕೊಡಿ "ಎಂದು ಹೇಳುತ್ತಾನೆ. 

ನೆಫೀಸಾದರವರು ತನ್ನ ಕಬಾರ್ಡಿ ನ ಒಳಗೆ ಇಟ್ಟಿದ್ದ ರುಬೀನಾಳ ಫೋಟೋ ತಂದು ಆತನ ಕೈಯಲ್ಲಿ ಕೊಡುತ್ತಾರೆ. ತಾನು ಬಂದ ಕಾರ್ಯ ಆಯಿತು ಎಂದು ಭಾವಿಸಿದ ಸಿದ್ದೀಕ್ "ಸರಿ ನಾವು ಇನ್ನು ಬರುತ್ತೇವೆ" ಎಂದು ಅಲ್ಲಿಂದ ಹೊರಡುತ್ತಾನೆ.ಹೊರಗೆ ಬಂದವನೇ...ರುಬಿನಾಳ ಚಿತ್ರವನ್ನು ತನ್ನ ಕ್ಯಾಮೆರಾ ದಲ್ಲಿ ತೆಗೆದು ಅದನ್ನು ವಾಟ್ಸಾಪ್ ಮೂಲಕ ಹಕೀಮ್ ನ ಮೊಬೈಲ್ ಗೆ ಕಳುಹಿಸುತ್ತಾನೆ.

ತನ್ನ ಮೊಬೈಲಿಗೆ ಮೆಸೇಜ್ ಬಂದೊಡನೆ ಹಕೀಂ ಅದನ್ನು ತೆರೆದು ನೋಡುತ್ತಾನೆ... 
ತೆರೆದು ನೋಡಿದಾಗ ಸಿದ್ಧೀಕ್ ರುಬೀನಾಳ ಭಾವಚಿತ್ರವನ್ನು ಕಳುಹಿಸಿದ್ದು ಕಾಣಿಸುತ್ತದೆ. ಅದನ್ನು ನೋಡಿದವನೇ
 ಖುಷಿಯಲ್ಲಿ ತೇಲಾಡುತ್ತಾನೆ. 
ಅರೇ ರುಬೀನಾ ಇನ್ನು ನಿನ್ನಿಂದ ನನ್ನನ್ನು ದೂರ ಮಾಡುವವರು ಯಾರು ಇಲ್ಲ.. ನೀನು ಇನ್ನು ಸಿಗದೇ ಎಲ್ಲಿಗೆ ಹೋಗುತ್ತಿಯಾ ನಾನು ನೋಡುತ್ತೇನೆ ...ಎಂದು ತನ್ನಷ್ಟಕ್ಕೆ ತಾನು ಹೇಳಿಕೊಳ್ಳುತ್ತಾನೆ..

 ಆತ ಗೆಳೆಯರ ಮುಖದತ್ತ ನೋಡುತ್ತಾನೆ."ನೋಡಿ, ಆಕೆಯ ಫೋಟೋ ಸಿಕ್ಕಿತು. ಇನ್ನುಮುಂದೆ ಏನು ಮಾಡೋಣ? ಎಲ್ಲಿ ಆಕೆಯನ್ನು ಹುಡುಕೋಣ.? ಒಟ್ಟಿಗೆ ಹುಡುಕುವುದು ಬೇಡ.
ಮೂವರು ಬೇರೆ ಬೇರೆ ಸ್ಥಳದಲ್ಲಿ ಹುಡುಕೋಣ" ಎಂದು ಹಕೀಮ್ ಹೇಳುತ್ತಾನೆ.

     ಅದಕ್ಕೆ ಅವರು ಸರಿ ನಾವು ಹಾಸ್ಪಿಟಲ್ ಬಳಿ ಹೋಗುತ್ತೇವೆ. ನೀನು ಹೋಟೆಲ್ , ರೆಸ್ಟೋರೆಂಟ್ ಆ ರೀತಿ ಅಂತಹ ಏರಿಯಾ ಗಳಲ್ಲಿ ಹುಡುಕು.
ಎಲ್ಲಿಯಾದರೂ ಯಾರಾದರೂ ಕಂಡವರು ಸಿಕ್ಕೇ ಸಿಗುತ್ತಾರೆ ಎಂದು ಹೇಳುತ್ತಾರೆ.ಗೆಳೆಯರ ಮಾತಿಗೆ ಒಪ್ಪಿದಂತಹ ಹಕೀಮ್ ಅವರ ಮೊಬೈಲ್ ಗೆ ಆಕೆಯ ಫೋಟೋವನ್ನು ಕಳುಹಿಸುತ್ತಾನೆ.ಅಲ್ಲಿಂದ ಅವರು ಒಬ್ಬೊಬ್ಬರಾಗಿ ತೆರಳುತ್ತಾರೆ.

***********************

ಎರಡು ದಿನಗಳ ನಂತರ

ಇಶ್ರತಿನ ಮೊಬೈಲ್ ರಿಂಗಣಿಸುತ್ತದೆ.

 ಮನೆಯಲ್ಲೇ ಇದ್ದ ಇಶ್ರತ್ 
ಯಾರ ಕಾಲ್ ಎಂದು ಮೊಬೈಲ್ ತೆಗೆದು ನೋಡುತ್ತಾಳೆ. ಸ್ಕ್ರೀನ್ ಮೇಲೆ ಶಾಕಿರ್ ನ ನಂಬರ್ ಕಾಣಿಸುತ್ತದೆ. ಇಶ್ರತ್ ಗೆ ಖುಷಿಯಿಂದ ತೇಲಾಡುವಂತಾಗುತ್ತದೆ. ಖುಷಿಯಿಂದ ಫೋನ್ ತೆಗೆದವಳೇ
ಹಾ.. ಶಾಕಿರ್ ಹೇಳು.. ಏನಾಯಿತು? ಏನಾದರು ವಿಶೇಷ ಉಂಟಾ.? ಕಾಲ್ ಮಾಡಿದ್ದೀಯಾ ಒಂದೇ ಉಸಿರಿಗೆ ಕೇಳಿದಳು...!!

ಆಕೆಯ ಮಾತನ್ನು ಅರ್ಧದಲ್ಲೇ ತಡೆದವನೇ ಶಾಕಿರ್..!!!"ಅಯ್ಯೋ ಯಾಕೆ ಈ ರೀತಿ ಒಂದೇ ಉಸಿರಿಗೆ ಮಾತನಾಡುತ್ತೀಯಾ ಇಶ್ರತ್.!! ಸ್ವಲ್ಪ ನಿಲ್ಲು, ಸಮಾಧಾನ... ಸಮಾಧಾನವಾಗಿ ಮಾತನಾಡು ಸರಿಯಾ" ಎಂದು ಹೇಳಿದನು.

 "ಹ್ಞಾಂ...ನೀನು ಕರೆ ಮಾಡಿದ್ದೀಯಾ ನೋಡು ಆ ಖುಷಿಯಲ್ಲಿ ಒಂದೇ ಉಸಿರಿಗೆ ಮಾತನಾಡುವಂತಯಿತು" ಎಂದು ಇಶ್ರತ್ ಶಾಕಿರ್ ಬಳಿ ಹೇಳಿದಳು.."ನಂತರ ಮಾತು ಮುಂದುವರಿಸಿದವಳೇ
" ಏನಾಯಿತು ಯಾರಾದರೂ ಸಿಕ್ಕರ ಅಂತಹ ವ್ಯಕ್ತಿಗಳು? ಅದಕ್ಕೆ ತಾನೇ ಕಾಲ್ ಮಾಡಿದ್ದಿಯ?" ಎಂದು ಕೇಳುತ್ತಾಳೆ.

 "ಹ್ಞಾಂ....ಹೌದು ಒಬ್ಬ ವ್ಯಕ್ತಿ ಸಿಕ್ಕಿದ್ದಾನೆ.. 
ಆತನ ಬಳಿ ನಿನ್ನ ಕಂಡೀಷನ್ ಎಲ್ಲಾ ಹೇಳಿದ್ದೇನೆ. ಆತ ಸರಿ ಎಂದು ಒಪ್ಪಿದ್ದಾನೆ. ಇಂತಿಷ್ಟು ದುಡ್ಡು ಬೇಕು ಅಂತಾನೂ ಹೇಳುತ್ತಿದ್ದಾನೆ.
ಆತನು ಒಳ್ಳೆಯ ನಟನೆ ಮಾಡಬಲ್ಲ ಎಂದು ನನಗೆ ಅನಿಸುತ್ತದೆ.
 ಏನಾದರು ನೀನು ಒಮ್ಮೆ ನೋಡಬೇಕೆಲ್ವಾ ಹೇಳು" ಎಂದು ಶಾಕಿರ್ ಇಶ್ರತ್ ಬಳಿ ಹೇಳುತ್ತಾನೆ.

"ಸರಿ ನಾನು ನೋಡಬೇಕು ಒಮ್ಮೆ ಆತ ಹೇಗೆ ನಟನೆ ಮಾಡುತ್ತಾನೆ ಎಂದು. ನೋಡಲೇಬೇಕು ಅಲ್ಲವಾ..
ಹಾಗೇ ಸುಮ್ಮನೆ ಕರೆದುಕೊಂಡು ಹೋದರೆ ಅಶ್ಫಾಕ್ ಹಾಗೂ ಮಾವನಿಗೆ ಖಂಡಿತಾ ಸಂದೇಹ ಬಂದೇ ಬರುತ್ತದೆ. ಸಂದೇಹ ಬರದಂತೆ ನಟನೆ ಮಾಡಿ ತೋರಿಸಬೇಕು. ಅದಕ್ಕೆ ಒಮ್ಮೆ ನಾನು ಆತನ ನಟನೆಯನ್ನು ನೋಡಬೇಕು ಅಲ್ವಾ ಏನು ಮಾಡುವುದು ಹೇಳು ?ಎಂದು ಶಾಕಿರ್ ಬಳಿ ಕೇಳುತ್ತಾಳೆ."ನೋಡು ನಾನು ಸಂಜೆ ಇಂತಿತಹ ರೆಸ್ಟೋರೆಂಟ್ ಲ್ಲಿ ನಿನಗೆ ಸಿಗುತ್ತೇನೆ ಅಲ್ಲಿಗೆ ಆತನನನ್ನು ಕರೆದುಕೊಂಡು ಬರುತ್ತೇನೆ.. ನೀನು ಸಂಜೆಯ ಸಮಯ ನಾಲ್ಕಕ್ಕೆ ಸರಿಯಾಗಿ ಅಲ್ಲಿಗೆ ಬಾ..ಬಂದು ನೀನು ಅಲ್ಲಿಯೇ ಆತನನ್ನು ಕಾಣುವೆಯಂತೆ ಹೇಗಿದೆ ಹೇಳು? ಸರಿ ತಾನೇ? "ಎಂದು ಶಾಕಿರ್ ಕೇಳುತ್ತಾನೆ.

ಅದಕ್ಕೆ ಇಶ್ರತ್ ತನ್ನ ತಲೆಯನ್ನು ಆಡಿಸುತ್ತಾ
"ಸರಿ ಯಾವ ರೆಸ್ಟೋರೆಂಟ್ ಎಲ್ಲಿ ಬರಬೇಕು ಹೇಳು. ನಾನು ಸರಿಯಾಗಿ ಸಂಜೆ ನಾಲ್ಕು ಗಂಟೆಗೆ ಅಲ್ಲಿಗೆ ಬರುತ್ತೇನೆ" ಎಂದು ಹೇಳಿ ತನ್ನ ಕರೆಯನ್ನು ಕಟ್ ಮಾಡುತ್ತಾಳೆ..ಕಟ್ ಮಾಡಿದವಳೇ ಖುಷಿಯಿಂದ ಕುಣಿದು ಕುಪ್ಪಳಿಸುತ್ತಾಳೆ.

 ಅರೇ ಇದು ಆದರೂ ಸಕ್ಸಸ್ ಆದರೆ ಸಾಕು ಈ ಪೀಡೆ ಮನೆಯಿಂದ ತೊಲಗಿದಂತೆ ಎಂದು ಹೇಳಿ ಅಲ್ಲಿಗೆ ಹೋಗಲು ಸಂಜೆ ಯಾವಾಗ ಆಗುತ್ತದೆ ಎಂದು ಆತುರದಿಂದ ಕಾಯುತ್ತಾ ಕುಳಿತು ಕೊಳ್ಳುತ್ತಾಳೆ
ಶಾಕಿರ್ ಹೇಳಿದ ಮಾತಿನಂತೆ ಇಶ್ರತ್ ಸಂಜೆ 4ಗಂಟೆಗೆ ಸರಿಯಾಗಿ ಆತ ಹೇಳಿದ ರೆಸ್ಟೋರೆಂಟ್'ಗೆ ಹೋಗುತ್ತಾಳೆ.

ರೆಸ್ಟೋರೆಂಟ್ ಒಳಗೆ ಹೋಗುವಾಗ ಹೋಗುವ ರಭಸದಲ್ಲಿ ಎದುರಿಗೆ ಬರುತ್ತಿದ್ದ ವ್ಯಕ್ತಿಯನ್ನು ನೋಡದೆ ಆತನಿಗೆ ಡಿಕ್ಕಿ ಹೊಡೆಯುತ್ತಾಳೆ. ಡಿಕ್ಕಿ
 ಹೊಡೆದುದರ ಪರಿಣಾಮವಾಗಿ ಆತನ ಮೊಬೈಲ್ ಕೆಳಗೆ ಬೀಳುತ್ತದೆ. ಆತನು ಕೂಡ ತಾನು ಬರುವ ರಭಸದಲ್ಲಿ ಇದ್ದುದರಿಂದ ಇಶ್ರತ್ ನನ್ನು ಗಮನಿಸಿರುದಿಲ್ಲ.
ಇಶ್ರತ್ ಆತನನ್ನು ನೋಡಿ " ಐ ಆಮ್ ಸ್ವಾರಿ ನಾನು ಯಾವುದೊ ಯೋಚನೆಯಲ್ಲಿ ಇದ್ದೆ. ಹಾಗಾಗಿ ನಿಮ್ಮನ್ನು ನೋಡಲಿಲ್ಲ. ನಿಮ್ಮನು ನೋಡದೆ ನಿಮಗೆ ಡಿಕ್ಕಿ ಹೊಡೆಯುವಂತಾಯಿತು" ಈ ರೀತಿಯಾಗಿ ಆತನ ಬಳಿ ಕ್ಷಮಾಪಣೆಯನ್ನು ಕೇಳುತ್ತಾಳೆ. ಅದಕ್ಕೆ ಆತನು "ಇರಲಿ ಪರವಾಗಿಲ್ಲ.. ನಾನು ಕೂಡ ಯಾವುದೋ ಯೋಚನೆಯಲ್ಲಿ ಇದ್ದೆ. ಹಾಗಾಗಿ ನಾನು ಕೂಡ ನೀವು ಬರುದನ್ನು ನೋಡಿರಲಿಲ್ಲ. ಇದರಲ್ಲಿ ಇಬ್ಬರದ್ದು ತಪ್ಪು ಇದೆ ಎಂದು ಹೇಳುತ್ತಾನೆ. 

ಅಷ್ಟರಲ್ಲಿ ಆತನು ತನ್ನ ಮೊಬೈಲ್ ಎಲ್ಲಿ ಬಿದ್ದಿದೆ ಎಂದು ಹುಡುಕುತ್ತಾನೆ. ಅದುಇಶ್ರತಿನ ಕಾಲಿನ ಅಡಿಯಲ್ಲಿ ಬಿದ್ದಿರುತ್ತದೆ.
 ಅದನ್ನು ಗಮನಿಸಿದ ಇಶ್ರತ್ "ನಾನೆ ತೆಗೆದು ಕೊಡುತ್ತೇನೆ ನಿಲ್ಲಿ" ಎಂದು ಮೊಬೈಲ್ ತೆಗೆಯಲು ಬಗ್ಗುತ್ತಾಳೆ. ಮೊಬೈಲ್ ತೆಗೆದವಳೇ ಅದರಲ್ಲಿ ಇದ್ದ ಫೋಟೋ ವನ್ನು ಕಂಡು ಬೆರೆಗಾಗುತ್ತಾಳೆ. ಒಮ್ಮೆಲೇ ಆಕೆಯ ಬಾಯಿಂದ ಮಶೂದ ಎನ್ನುವ ಹೆಸರು ಹೊರಗೆ ಬರುತ್ತದೆ.

ಆಕೆ ಒಮ್ಮೆಲೇ ಆಶ್ಚರ್ಯದಿಂದ ಮಶೂದ ಎನ್ನುವ ಹೆಸರನ್ನು ತನ್ನ ಬಾಯಿಯಿಂದ ಹೇಳುತ್ತಾಳೆ.ಅರೇ ಮಶೂದಳ ಫೋಟೋ ಹೇಗೆ ಇವನ ಮೊಬೈಲಿನಲ್ಲಿ ಎಂದು ಆಕೆಗೆ ಆಶ್ಚರ್ಯ ಆಗುತ್ತದೆ.

ಆಕೆ ಆ ಅಪರಿಚಿತನಿಗೆ ಮೊಬೈಲನ್ನು ಕೊಡುತ್ತಾ ಸ್ಕ್ರೀನ್ ಮೇಲೆ ಇದ್ದ ಫೋಟೊ ತೋರಿಸಿ "ಇವಳ ಪರಿಚಯ ನಿಮಗೆ ಇದೆಯಾ? ನಿಮಗೆ ಹೇಗೆ ಇವಳ ಪರಿಚಯ ಇರುವುದು ಎಂದು ಕೇಳುತ್ತಾಳೆ?"
ಆಗ ಹಕೀಮ್ ಗೆ ಆಶ್ಚರ್ಯವಾಗುತ್ತದೆ!!!!

ಅರೆ ಕೊನೆಗೆ ಈಕೆಗಾದರು ರುಬೀನಾಳ ಪರಿಚಯ ಇದೆಯಾ? ಯಾಕೆ ಈಕೆ ಕೇಳುತ್ತಿದ್ದಾಳೆ ಎಂದು ನೋಡೋಣ ಎಂದು ಮನಸ್ಸಿನಲ್ಲೇ ಯೋಚಿಸುತ್ತಾ
"ಹ್ಞಾಂ ‌‌..ಇದೆ. ಈಕೆಗಾಗಿ ನಾನು ಹಗಲು ರಾತ್ರಿ ಎನ್ನದೆ ಹುಡುಕುತ್ತಿದ್ದೇನೆ. ಇವಳಿಗೋಸ್ಕರ ಹುಡುಕಾಡದ ಸ್ಥಳವಿಲ್ಲ.ನಿಮಗೆ ಗೊತ್ತುಂಟ ಎಲ್ಲಿ ಇದ್ದಾಳೆ? ಎಂದು ಕೇಳುತ್ತಾನೆ.

"ಹಾ.. ಗೊತ್ತಿದೆ .ಈಕೆ ನನ್ನ ಮಾವನ ಮನೆಯಲ್ಲಿ ಇದ್ದಾಳೆ. ಕೆಲವು ದಿವಸಗಳ ಹಿಂದೆ ಆದಂತಹ ಅಪಘಾತದಲ್ಲಿ ಈಕೆ ನೆನಪಿನ ಶಕ್ತಿ ಕಳೆದು ಕೊಂಡಿದ್ದಾಳೆ.. 
ನನ್ನ ಮಾವನ ಮಗ ಗೊತ್ತಿಲ್ಲದೆ ಎದುರಿಗೆ ಬಂದಂತಹ ಈಕೆಗೆ ತನ್ನ ಕಾರನ್ನು ಗುದ್ದಿ ಅಪಘಾತ ಮಾಡಿದನು. ಆ ಅಪಘಾತದಲ್ಲಿ ಈಕೆ ನೆನಪಿನ ಶಕ್ತಿಯನ್ನು ಕಳೆದು ಕೊಡಿದ್ದಾಳೆ. ಈಕೆ ಸರಿಯಾಗುವವರೆಗೂ ನಮ್ಮ ಮನೆಯಲ್ಲೇ ಇರಲಿ ಎಂದು ಹೇಳಿ ಮಾವ ನಮ್ಮ ಮನೆಗೆ ಕರೆದುಕೊಂಡು ಬಂದಿದ್ದಾರೆ.
ಆದರೆ ಈಕೆಯ ಕುಟುಂಬದವರು ಅಲ್ಲಿಗೆ ಹುಡುಕಿಕೊಂಡು ಬರಲಿಲ್ಲ. ಮತ್ತು ಈಕೆಗೆ ತನ್ನ ಕುಟುಂಬದವರು ಯಾರು ಎಂದು ತಿಳಿದಿಲ್ಲ ಎಂದು ವಿವರಿಸಿದಳು.

 ಆಕೆಯ ಮಾತು ಕೇಳುವಾಗ ಹಕೀಮ್ ಗೆ ಖುಷಿ ಆಗುತ್ತದೆ.ಅಂದರೆ ರುಬೀನಾಳಿಗೆ ಈಗ ನೆನಪಿನ ಶಕ್ತಿ ಯಾವುದೂ ಇಲ್ಲ.
ಈಗ ನಾನು ಆಕೆಯ ಗಂಡ ಎಂದು ಹೇಳಿದರರೂ ಆಕೆಗೆ ಗೊತ್ತಾಗಲಿಕಿಲ್ಲ . ಒಳ್ಳೆಯದಾಯ್ತು ಇದು ದೇವರು ಆಕೆಗೆ ಕೊಟ್ಟಂತಹ ಶಿಕ್ಷೆ. ನನ್ನಿಂದ ತಪ್ಪಿಸಲು ನೋಡಿದಳಲ್ಲ ಮತ್ತೆ ಬಂದು ನನ್ನ ಕಾಲಡಿಗೆ ಬಿದ್ದಳು ಎಂದು ಹಕೀಮ್ ಯೋಚಿಸುತಾನೆ. ಆ ರೀತಿ ಯೋಚಿಸಿದವನೇ

"ಹೌದ...ನಿಮ್ಮಿಂದ ತುಂಬಾ ಉಪಕಾರ ಆಯಿತು. ನಿಮ್ಮ ಉಪಕಾರ ಹೇಗೆ ಮರೆಯಲಿ ನನ್ನ ಹೆಂಡತಿಯನ್ನು ಇಷ್ಟು ದಿವಸ ಒಳ್ಳೆಯ ರೀತಿಯಿಂದ ನೋಡಿದಿರಲ್ಲ. ನನಗೆ ಆಕೆಯನ್ನು ನೋಡಬೇಕು..
ಇಷ್ಟು ದಿವಸದಿಂದ ನಾನು ಆಕೆಗಾಗಿ ಪರಿತಪಿಸುತ್ತಿರುವೆ ನಿಮಗೆ ಗೊತ್ತುಂಟೇ.? ಎಂದು ಕೇಳಿದನು..! 
"ಅಂದರೆ ಆಕೆ ನಿಮ್ಮ ಹೆಂಡತಿಯಾ?
ಆಕೆಗೆ ಮದುವೆ ಆಗಿದೆಯಾ.? ಎಂದು ಆಶ್ಚರ್ಯ ದಿಂದ ಇಶ್ರತ್ ಆತನತ್ತ ಕೇಳಿದಳು.

 "ಹೌದು.. ಆಕೆ ನನ್ನ ಹೆಂಡತಿ ಆಕೆಯ ಹೆಸರು ಕೈರುನ್ನೀಸ್ಸಾ ಅಂತ. ನಮ್ಮ ಮದುವೆ ಒಂದು ವರ್ಷದ ಹಿಂದೆ ಆಗಿತ್ತು. ನಾವು ಕಾರಲ್ಲಿ ಒಟ್ಟಿಗೆ ಸುತ್ತಾಡಲು ಬಂದಾಗ ನಾವು ಚಹಾ ಕುಡಿಯಲು ಎಂದು ಕಾರಿನಿಂದ ಇಳಿದೆವು...ಆಗ ಈಕೆ ಆಚೆ ಸ್ವಲ್ಪ ಸುತ್ತಾಡಿ ನೋಡಿ ಕೊಂಡು ಬರುತ್ತೇನೆ ಎಂದು ಕೆಳಗೆ ಇಳಿದವಳು ಆಮೇಲೆ ಎಲ್ಲಿ ಹೋದಳು ಎಂದು ನಮಗೆ ತಿಳಿಯಲೆ ಇಲ್ಲ. ಈಕೆಗಾಗಿ ಹುಡುಕಾಡದ ಸ್ಥಳ ಇಲ್ಲ.. ಈಕೆಗಾಗಿ ಹುಡುಕಾದಾಗ ಜಾಗ ಇಲ್ಲ. ಇಷ್ಟು ದಿವಸ ಈಕೆಗಾಗಿ ಅಲೆದಾಡುತ್ತಿದ್ದೇನೆ.
ಇವತ್ತು ನಿಮ್ಮಿಂದಾಗಿ ಈಕೆ ದೊರೆಯುವಂತಯ್ತು.
ಹೋಗೋಣ ಬನ್ನಿ ಎಲ್ಲಿದ್ದಾಳೆ. ಈಕೆ ನಾನು ಈಗಲೇ ಕರೆದುಕೊಂಡು ಹೋಗುತ್ತೇನೆ ನನ್ನ ಮನೆಗೆ "ಎಂದು ಹಕೀಮ್ ಸುಳ್ಳು ಕಥೆ ಹೇಳುತ್ತಾನೆ.

ಅಷ್ಟರಲ್ಲಿ ಶಾಕಿರ್ ಅಲ್ಲಿಗೆ ಬರುತ್ತಾನೆ. ಶಾಕಿರ್ ಬಂದವನೇ "ಅರೆ ಇಶ್ರತ್, ನಿನ್ನ ಹತ್ತಿರ 4ಗಂಟೆ ಒಳಗೆ ಬಾ ಎಂದರೆ ನೀನು ಹೊರಗೆ ನಿಂತು ಯಾರದೋ ಜೊತೆ ಮಾತನಾಡುತ್ತಿದ್ದೀಯಲ್ಲ.
ಆತ ನಿನಗಾಗಿ ಆಗದಿಂದ ಕಾಯುತ್ತಾ ಇದ್ದಾನೆ "ಎಂದು ಆತನತ್ತ ಬೆರಳು ಮಾಡಿ ತೋರಿಸುತ್ತಾನೆ. 

"ನಿಲ್ಲು ಒಂದು ನಿಮಿಷ ಶಾಕಿರ್ . ಮುಖ್ಯವಾದ ವಿಚಾರ ಉಂಟು. ಆತನನ್ನು ಮನೆಗೆ ಕಳುಹಿಸು. ನಿನ್ನಲಿ ಮುಖ್ಯವಾದ ವಿಚಾರ ಹೇಳಲಿಕ್ಕಿದೆ. ಅದನ್ನು ನಾನು ಮತ್ತೆ ಹೇಳುತ್ತೇನೆ.
ಈಗ ಮೊದಲು ನೀನು ಆತನನ್ನು ಮನೆಗೆ ಕಳುಹಿಸುಬಿಡು. ಇನ್ನು ಆತನ ಅವಶ್ಯಕತೆ ನಮಗೆ ಇಲ್ಲ.
ಆತನ ಬಳಿ ಹೇಳಿಬಿಡು "ಎಂದು ಹೇಳುತ್ತಾಳೆ.

"ಅರೆ, ಏನಾಯಿತು ಯಾಕೆ.? ಯಾಕೆ ಆತನ ಅವಶ್ಯಕತೆ ಇಲ್ಲ ಎಂದು ಹೇಳುತ್ತೀಯ.? 
 ಇಷ್ಟೆಲ್ಲಾ ಹೇಳಿ ಒಪ್ಪಿಸಿ ಆತನನ್ನು ಕರೆ ತಂದಿದ್ದೇನೆ" ಎನ್ನುವ ಶಾಕಿರ್ ಪ್ರಶ್ನೆಗೆ ಇಶ್ರತ್ ಕಣ್ಣಿನಲ್ಲೇ ಸಂಜ್ಞೆ ಮಾಡುತ್ತ ಮಾತಾಡಬೇಡ ಮತ್ತೆ ಹೇಳುತ್ತೇನೆ ಎಂದು ಆತಾನಿಗೆ ಕಣ್ಣು ಸನ್ನೆಯ ಮೂಲಕವೇ ತಿಳಿಸುತ್ತಾಳೆ.

ಸರಿ ಎಂದು ತಲೆಯಾಡಿಸುತ್ತಾ ಶಾಕಿರ್ ಹೋಗಿ ಕರೆತಂದಿದ್ದಂತಹ ವ್ಯಕ್ತಿಯ ಬಳಿ "ನೀನು ಮನೆಗೆ ಹೋಗು , ಇನ್ನು ನಿನ್ನ ಅಗತ್ಯ ಇಲ್ಲ "ಎಂದು ಹೇಳುತ್ತಾನೆ.ಆತ ಸಿಟ್ಟಿನಿಂದ "ಯಾಕೆ ಮತ್ತೆ ಇಷ್ಟು ದೂರ ಕರೆದುಕೊಂಡು ಬಂದಿರಿ? ಅದು ಅಲ್ಲದೆ ಹಣದ ಆಮಿಷ ತೋರಿಸಿದ್ದು ಯಾಕೆ? ಎಂದು ಕೇಳುತ್ತಾನೆ.
"ಯಾಕೋ ಗೊತ್ತಿಲ್ಲ,ಅವಶ್ಯಕತೆ ಇಲ್ಲ ಎಂದು ಆಕೆ ಹೇಳಿದ್ದಾಳೆ. ಅಂದ ಮೇಲೆ ಅವಶ್ಯಕತೆ ಇಲ್ಲ" ಎಂದು ಶಾಕಿರ್ ಕೂಡ ಸಿಟ್ಟಿನಿಂದ ಹೇಳುತ್ತಾನೆ.

ಬಂದಂತಹ ವ್ಯಕ್ತಿ ಇಶ್ರತ್ನತ್ತ ನೋಡುತ್ತಾನೆ.
ಅಲ್ಲೇ ಇದ್ದ ಅಪರಿಚಿತ ವ್ಯಕ್ತಿಯನ್ನು ನೋಡಿ "ಓಹೋ, ಇವರು ಇದಾಗಲೇ ಬೇರೆಯವರಿಗೆ ದುಡ್ಡು ಕೊಟ್ಟು ವ್ಯವಸ್ಥೆ ಮಾಡಿದ್ದಾರೆ ಎಂದು ಕಾಣುತ್ತದೆ. ಕಲಿಸುತ್ತೇನೆ ಬುದ್ದಿ ಇವರಿಗೆ. ನನಗೆ ಮೋಸ ಮಾಡಿ ಬೇರೆಯವರನ್ನು ಇದಕ್ಕಾಗಿ ಒಪ್ಪಿಸಿದ್ದಳಲ್ಲ‌. ಈಕೆಗೆ ಬುದ್ದಿ ಕಲಿಸುತ್ತೆನೆ ಎಂದು ಮನದಲ್ಲಿ ಯೋಚಿಸುತ್ತಾ ಬಂದ ದಾರಿಗೆ ಸುಂಕ ಇಲ್ಲ ಎಬಂತೆ ಹಿಂದೆ ಹೋಗುತ್ತಾನೆ.ಇಶ್ರತ್ ಹಕೀಮಿನೊಂದಿಗೆ "ಮನೆಗೆ ಬನ್ನಿ ನಾವು ಮನೆಗೆ ಹೋಗೋಣ . ಆಕೆ ನಮ್ಮ ಮನೆಯಲ್ಲಿ ಇದ್ದಾಳೆ "ಎಂದು ಹೇಳಿ ತನ್ನ ಮನೆಗೆ ಕರೆದುಕೊಂಡು ಹೋಗುತ್ತಾಳೆ.
ಅಷ್ಟರಲಿ ಅಲ್ಲಿ ಬಂದ ಶಾಕಿರ್'ನನ್ನು ನೋಡಿ ಹಕೀಮನ ಬಳಿ
ನೀವು ಕಾರಿನಲ್ಲಿ ಕೂತುಕೊಳ್ಳಿ ನಾನು ಈತನ ಬಳಿ ಮಾತನಾಡಿ ಬರುತ್ತೇನೆ ಎಂದು ಹೇಳುತ್ತಾಳೆ.ಹಕೀಮ್ ತನ್ನ ತಲೆಯಾಡಿಸಿ ಸರಿ ಎಂದು ಹೋಗಿ ಕಾರಿನಲ್ಲಿ ಕುಳಿತು ಕೊಳ್ಳುತಾನೇ

"ಏನು ವಿಷಯ ಇಶ್ರತ್ ನಿನ್ನದು? ಆತನನ್ನು ಬರಲು ಹೇಳಿ ಕೊನೆಗೆ ನೀನೇ
ಆತನನ್ನು ಹೋಗಲು ಹೇಳಿದೆಯಲ್ಲ .ಎಷ್ಟು ಕಷ್ಟ ಪಟ್ಟು ನಾನು ನಿನಗಾಗಿ ಹುಡುಕಿದೆ ಗೊತ್ತುಂಟ..? 
ಇಲ್ಲಿ ನೀನು ನೋಡಿದರೆ ಅರ್ಧದಲ್ಲಿ ಆತನನು ಕೈ ಬಿಟ್ಟೆಯಲ್ಲಾ? 
ಏನಾಯಿತು ಅಂತಹದು?ಅಲ್ಲದೇ ಇದು ಯಾರು ಅಪರಿಚಿತ ವ್ಯಕ್ತಿ ?"ಎಂದು ಶಾಕಿರ್ ಕೇಳುತ್ತಾನೆ."ನೋಡು ಶಾಕಿರ್ ನಾನು ಇಷ್ಟೆಲ್ಲಾ ಕಷ್ಟ ಪಟ್ಟೆಯಲ್ಲ.. ನನ್ನ ಎಲ್ಲಾ ಕಷ್ಟಗಳಿಗೂ ಕೊನೆಗೂ ಫಲ ಸಿಕ್ಕಿದೆ" ಎಂದು ಇಶ್ರತ್ ಹೇಳುತ್ತಾಳೆ

ಆಕೆಯ ಮಾತು ಶಾಕಿರ್'ಗೆ ಒಂದೂ ಅರ್ಥವಾಗುದಿಲ್ಲ."ಏನು ಕಷ್ಟ? ಏನು ಫಲ? ಸರಿ ಬಿಡಿಸಿ ಹೇಳು "ಎಂದು ಇಶ್ರತಿನ ಬಳಿ ಹೇಳುತ್ತಾನೆ.
ಅದಕ್ಕೆ ಪ್ರತಿಕ್ರಿಯಿಸುತ್ತಾ ಇಶ್ರತ್

"ನೋಡು ನಾನು ನಿನ್ನಲ್ಲಿ ಆಕೆಗಾಗಿ ಒಂದು ಗಂಡುವನ್ನು ಹುಡುಕಲು ಹೇಳಿದ್ದೆ.
ಆದರೆ ಆತನ ಗಂಡ ನಿಜವಾಗಿಯೂ ನನ್ನ ಎದುರಿಗೆ ಬಂದಿದ್ದಾನೆ.
ನೋಡು ಆ ಕಾರಿನಲ್ಲಿ ಕುಳಿತಿದ್ದಾನೆಯಲ್ಲ ಅದು ಆಕೆಯ ಗಂಡ ಎಂದು ಹೇಳಿ ನಡೆದ ವಿಷಯವನ್ನು ವಿವರಿಸಿದಳು.

"ಹೌದಾ ನಿಜ ಹೇಳುತ್ತಾ ಇದ್ದಿಯಾ ನನಗೆ ನಂಬೋಕೆ ಆಗುತ್ತಾ ಇಲ್ಲ!ಎಲ್ಲಿ ಸಿಕ್ಕಿದ ನಿನಗೆ ಆಕೆಯ ಗಂಡ?
ಒಳ್ಳೆಯದು ಆಯ್ತಲ್ಲ. ನೀನು ಇದುವರೆಗೆ ಬಂದ ಕಷ್ಟಕ್ಕೆ ಪ್ರತಿಫಲ ಸಿಕ್ಕಿತು. ಈಗ ನನಗೆ ಎಲ್ಲಾ ಅರ್ಥ ಆಯಿತು.ಸರಿ, ಆತನನ್ನು ಕರೆದುಕೊಂಡು ಆದಷ್ಟು ಬೇಗ ಮನೆಗೆ ಹೋಗು. ಸರಿಯಾ ಎಂದು ಹೇಳಿ ಆಕೆಗೆ ವಿದಾಯ ಹೇಳಿ ಶಾಕಿರ್ ಅಲ್ಲಿಂದ ತೆರಳಿದನು.

ಇಶ್ರತ್ ಕಾರಿನಲ್ಲಿ ಕುಳಿತು ಕೊಂಡು ಸೀದಾ ಹಕೀಮ್'ನನ್ನು ಅಶ್ಫಾಕ್ ಮನೆಗೆ ಕರೆದುಕೊಂಡು ಬಂದಳು.
ಒಳಗೆ ಬಂದವಳೇ "ಮಾವ ಅಶ್ಫಾಕ್ ಹೊರಗೆ ಬನ್ನಿ...ಹೊರಗೆ ಬನ್ನಿ ನೋಡಿ, ಯಾರು ಬಂದಿದ್ದಾರೆ "ಎಂದು ಜೋರಾಗಿ ಕರೆಯುತ್ತಾಳೆ.ಆಕೆಯ ಬೊಬ್ಬೆ ನೋಡಿ ಏನಾಯಿತು ಎಂದು ಹೆದರಿ ಅಶ್ಫಾಕ್ ಹಾಗೂ ಮುಹಮ್ಮದ್ ಹಾಜಿ ಹೊರಗೆ ಬರುತ್ತಾರೆ.

"ಏನಾಯಿತು ಇಶ್ರತ್, ಇಷ್ಟು ಜೋರಾಗಿ ಬೊಬ್ಬೆ ಹೊಡೆಯುತ್ತಿದ್ದಿ?ಏನಾಯಿತು ಯಾಕೆ ಬೊಬ್ಬೆ ಹೊಡೆಯುತ್ತ ಇದ್ದಿಯಾ?
ನಿನಗೆ ಏನಾದರು ಆಯ್ತಾ?" ಎಂದು ಆತಂಕದಲ್ಲಿ ಮುಹಮ್ಮದ್ ಹಾಜಿ ಕೇಳಿದರು..."ಅರೆ, ನನಗೆ ಏನು ಆಗಿಲ್ಲ ಮಾವ.ಏನು ಹೆದರ ಬೇಡಿ.
ನೋಡಿ ಇಲ್ಲಿ ಯಾರು ಬಂದಿದ್ದಾರೆ ಎಂದು ಇಶ್ರತ್ ಹಕೀಮ್'ನತ್ತ ಕೈ ತೋರಿಸಿ ಕೇಳುತ್ತಾಳೆ.

ಮುಹಮ್ಮದ್ ಹಾಜಿ ಹಾಗೂ ಅಶ್ಫಾಕ್ ಆತನ್ನನು ನೋಡುತ್ತಾರೆ.
ಅವರಿಗೆ ಯಾರು ಎಂದು ಪರಿಚಯ ಸಿಗುವುದಿಲ್ಲ.
"ಅರೆ, ಯಾರು ಇದು? ಯಾರಾದರೂ ನಿನ್ನ ಗೆಳೆಯರೇ!?
ನಮಗೆ ಹೇಗೆ ಪರಿಚಯ ಹೇಳು...?
ನಾವು ಈತನ್ನನು ಮೊದಲ ಬಾರಿಗೆ ನೋಡುತ್ತಾ ಇದ್ದೇವೆ.
ಯಾರು ಈತ "ಎಂದುಅಶ್ಫಾಕ್ ಕೇಳುತ್ತಾನೆ.

ಅದಕ್ಕೆ ಪ್ರತಿಕ್ರಿಯಿಸಿದ ಇಶ್ರತ್ "ಇದು ನಮ್ಮ ಮನೆಯಲ್ಲಿ ಇದ್ದಾಳೆ ಅಲ್ವಾ ಮಶೂದ ಅವಳ ಗಂಡ ಆಕೆಯ ಹೆಸರು ಮಶೂದ ಅಲ್ಲಾ. ಆಕೆಯ ಹೆಸರು ಕೈರುನ್ನಿಸ್ಸಾ ಅಂತ ಹೇಳಿದಳು..
ಈತ ಇಡೀ ಬಾಂಬೆಯಲ್ಲಿ ಎಲ್ಲಾ ಮಶೂದಳಿಗಾಗಿ ಹುಡುಕಾಡುತ್ತಿದ್ದ.ಅಷ್ಟರಲ್ಲಿ ನಾನು ಒಂದು ರೆಸ್ಟೋರೆಂಟಲ್ಲಿ ಈತನ ಮೊಬೈಲ್ ನಲ್ಲಿ ಆಕೆಯ ಫೋಟೊವನ್ನು ನೋಡಿದೆ. ನಾನು ಕೇಳಿದಾಗ ಆಕೆಯ ಗಂಡ ಎಂದು ತಿಳಿಯಿತು. ಆಕೆ ನಮ್ಮ ಮನೆಯಲ್ಲಿಯೇ ಇದ್ದಾಳೆ ಎಂದು ನೇರವಾಗಿ ಇಲ್ಲಿಗೆ ಕರೆದುಕೊಂಡು ಬಂದೇ ಎಂದು ಹೇಳುತ್ತಾಳೆ..

ಮುಹಮ್ಮದ್ ಹಾಜಿಗೆ ಒಮ್ಮೆಲೇ ಖುಷಿಯಾಗುತ್ತದೆ.
"ಅರೆ ಹೌದ! ಒಳ್ಳೇದೇ ಆಯಿತು ಇಷ್ಟು ದಿವಸದ ನಂತರ ಆದರೂ ಆಕೆಯ ಗಂಡ ಸಿಕ್ಕಿದ್ದಾನೆ ಎಂದು ಅವರು ಖುಷಿ ಪಟ್ಟರೆ,
ಇತ್ತ ಅಶ್ಫಾಕ್ ಗೆ ನಂಬಲಾಗದ ಸ್ಥಿತಿ ಆಗಿತ್ತು.

ಅಯ್ಯೋ ಈ ವಿಷಯ ತಿಳಿಯದೇ ಆಕೆಯನ್ನು ಪ್ರೀತಿಸಿ ಬಿಟ್ಟೆ... ಇನ್ನು ಆಕೆಯನ್ನು ಮರಿಯೋದು ಉಂಟೇ...?
ಹೇಗೆ ಮರೆಯಲಿ ನಾನು? ಅಯ್ಯೋ ಆಕೆಗೆ ಮದುವೆ ಆಗಿದೆ ಎಂಬ ವಿಚಾರ ನನಗೇ ತಿಳಿಯದೆ ಆಯ್ತಲ್ಲವೇ ಎಂದು ದುಃಖಪಡುತ್ತಾನೆ.
ಆದರು ಈ ವಿಷಯವನ್ನು ನಾನು ಒಪ್ಪಲೇಬೇಕಲ್ಲ ಎಂದು ಹೇಳಿ ನಡೆದುದ್ದೆಲ್ಲ ಒಂದು ಕೆಟ್ಟ ಕನಸು ಎಂದು ಹೇಳಿ ಮರೆತು ಬಿಡೋಣ ಎಂದು ನಿರ್ಧರಿಸುತ್ತಾನೆ.

ಅಷ್ಟರಲ್ಲಿ ಇಶ್ರತ್, 
"ಅಶ್ಫಾಕ್ ಏನು ಯೋಚನೇ ಮಾಡುತ್ತಾ ಇದ್ದಿಯಾ? ಯಾವುದೊ ಲೋಕಕ್ಕೆ ಹೋಗಿದ್ದೀಯ?
ಬೇಗ ಮಶೂದಳನ್ನು ಕರಿ ಆಕೆಗೂ ಖುಷಿಯಾಗಲಿ "ಎಂದು ಹೇಳುತ್ತಾಳೆ.
ಅಷ್ಟರಲ್ಲಿ ಅಶ್ಫಾಕ್ ಹೋಗಿ ಮಶೂದಳನ್ನು ಕರೆದು ಕೊಂಡು ಹೊರಗೆ ಬರುತ್ತಾನೆ..

ಹೊರಗೆ ಬಂದ ರುಬೀನಾಳ ಗಮನ ಹಕೀಮ್ ನತ್ತ ಬೀಳುತ್ತದೆ. ಹಕೀಮ್ ನನ್ನು ನೋಡಿದ ರುಬೀನಾಳಿಗೆ ಆಶ್ಚರ್ಯವಾಗುತ್ತದೆ. ಮರಳಿ ಹುಲಿಯ ಬಾಯಿಗೆ ಸಿಲುಕಿದೆನಾ ಎಂದು ಆಕೆ ಗಾಬರಿಪಡುತ್ತಾಳೆ.

ಅಷ್ಟರಲ್ಲಿ ರುಬೀನಾಳನ್ನು ನೋಡಿದ ಮುಹಮ್ಮದ್ ಹಾಜಿಯವರು "ಅರೆ ಮಗಳೇ ಮಶೂದ, ಬಂದೆಯಾ ನೀನು? ನೋಡು ಇಷ್ಟು ದಿವಸ ನೀನು ಕಷ್ಟ ಪಟ್ಟೆಯಲ್ಲ ನಿನ್ನ ಕಷ್ಟಕ್ಕೆ ದೇವರು ಫಲ ನೀಡಿದ. ನಿನ್ನ ಕಷ್ಟಕ್ಕೆ ಪರಿಹಾರ ಇದು ನೋಡು. ನಿನ್ನ ಪತಿಯು ನಿನ್ನನು ತಾನಾಗೇ ಹುಡುಕಿ ಕೊಂಡು ಬಂದಿದ್ದಾನೆ "ಎಂದು ಮಶೂದಳ ಬಳಿ ಹೇಳಿದರು.

ರುಬೀನಾಳ ಕೈ ಕಾಲುಗಳು ಹೆದರಿ ನಡುಗಲು ಪ್ರಾರಂಭಿಸುತ್ತವೆ.ಅರೆ ಈತ ನನ್ನನ್ನು ತನ್ನ ಪತಿ ಎಂದು ಹೇಳಿದ್ದಾನಾ. ಈತನಿಂದ ನಾನು ತಪ್ಪಿಸುದಾದರೂ ಹೇಗೆ ಎಂದು ಯೋಚಿಸಿ ಹೆದರಲು ತೊಡಗುತ್ತಾಳೆ.

ಅಷ್ಟರಲ್ಲಿ ಹಕೀಮ್ ಹತ್ತಿರ ಬಂದವನೇ..
"ಅರೆ ಕೈರುನ್ನಿಸ ಎಲ್ಲಿದ್ದೆ ನೀನು? ನೋಡು ನಿನಗಾಗಿ ಹುಡುಕಾಡದ ಜಾಗ ಇಲ್ಲ. ನಿನಗಾಗಿ ಹಗಲು ರಾತ್ರಿ ಎನ್ನದೆ ಹುಡುಕಾಡಿದ್ದೇವೆ. ನೀನು ಇಲ್ಲದೆ ಸರಿಯಾದ ನಿದ್ರೆಯು ಇಲ್ಲ. ಸರಿಯಾದ ಊಟವು ಹೊಟ್ಟೆಗೆ ಇಲ್ಲ. ನೀನು ಸಿಗಬೇಕೆಂದು ಅದೆಷ್ಟು ಕಷ್ಟ ಪಟ್ಟೆ ನಿನಗೆ ಗೊತ್ತುoಟಾ..!" ಎಂದು ಅವಳು ಮಾತ್ರ ಕಾಣುವಂತೆ ವ್ಯಂಗೆ ನಗೆಯನ್ನು ಬೀರಿದನು.ಆ ನಗೆಯನ್ನು ನೋಡುವಾಗ ರುಬೀನಾಳಿಗೆ ಏನು ಮಾಡುವುದೆಂದು ತೋಚಲೇ ಇಲ್ಲ.ಅಷ್ಟರಲ್ಲಿ ಆತ ತನ್ನ ಬಿಗಿ ಹಿಡಿತದಿಂದ ಅವಳ ಕೈಯನ್ನು ಹಿಡಿದುಕೊಂಡನು.

"ನಡಿ ಇನ್ನಾದರೂ ಮನೆಗೆ ಹೋಗೋಣ' ಒಟ್ಟಿಗೆ ಜೀವನ ನಡೆಸೋಣ. ನಿನ್ನ ನೆನಪಿನ ಶಕ್ತಿ ಹೋಗಿದೆ ಎಂದು ನನಗೆ ತಿಳಿಸಿದ್ದಾರೆ. ನಿನಗೆ ಕಷ್ಟವಾಗಬಹುದು ನಾನು ಮದ್ದು ಮಾಡುತ್ತೇನೆ ಕೆಲವೇ ಕೆಲ ದಿವಸದಲ್ಲಿ ನಿನ್ನ ನೆನಪಿನ ಶಕ್ತಿಯು ಮರಳಿ ಬರಬುಹುದು" ಎಂದು ಆತ ಹೇಳುತ್ತಾನೆ.

ಹಕೀಂನ ಮನದಲ್ಲಿ ಬೇರೆನೆ ವಿಚಾರ ಹೊಳೆದಾಡುತ್ತಿರುತ್ತದೆ.
ಅರೇ ನಾನು ಯಾಕೆ ಮದ್ದು ಮಾಡಬೇಕು. ನಿನ್ನ ನೆನಪಿನ ಶಕ್ತಿ ಹೋಗಿದ್ದು ಒಳ್ಳೆಯದೇ ಆಯಿತು.
ನಿನ್ನ ನೆನಪಿನ ಶಕ್ತಿ ಹೋದದ್ದರಿಂದ ನೀನು, ನಾನೇ ನಿನ್ನ ಗಂಡ ಎಂದು ನಂಬಬಹುದು.
ನಿನಗೆ ನೆನಪಿನ ಶಕ್ತಿ ಬಂದ ಮೇಲೆ ನೀನು ರುಬೀನಾ ಮತ್ತು ನಾನು ಹಕೀಂ ಹಾಗೂ ನಾನು ನಿನ್ನ ಗಂಡನಲ್ಲ ಎಂದು ತಿಳಿಯುತ್ತದೆ. ಆದುದರಿಂದ ನೀನು ಈಗ ಇದ್ದ ಸ್ಥಿತಿಯಲ್ಲಿಯೇ ಇದ್ದರೆ ಅದೇ ನನಗೆ ಒಳ್ಳೆಯದು.

ಆತ ಆಕೆಯನ್ನು ಮತ್ತಷ್ಟು ಬಿಗಿಯಾಗಿ ಹಿಡಿದುಕೊಂಡು "ಬಾ ಹೋಗೋಣ ,ಇಷ್ಟು ದಿವಸ ಇಲ್ಲಿ ನಿಂತೆಯಲ್ಲ ಸಾಕು. ಇನ್ನು ನಮ್ಮ ಮನೆಗೆ ಹೋಗೋಣ. ಮುಂದಿನಂತೆ ನಮ್ಮ ಜೀವನವನ್ನು ನಡೆಸೋಣ. ಬಾ ನಿನ್ನ ಬ್ಯಾಗನ್ನು ತೆಗೆದುಕೊಂಡು ಬಾ ಎಂದು ಹೇಳುತ್ತಾನೆ.ರುಬೀನಾ ಆತನ ಕೈಯಿಂದ ತನ್ನ ಕೈಯನ್ನು ಬಿಡಿಸಲು ಹರರಸಾಹಸ ಪಡುತ್ತಾಳೆ. ಕೊನೆಗೂ ಕೈ ಬಿಡಿಸಿದವಳೇ ಅಶ್ಫಾಕ್'ನ ಬಳಿ ಓಡುತ್ತಾಳೆ. 

"ಅಶ್ಫಾಕ್ ಇದುವರೆಗೆ ನಿನ್ನಿಂದ ನಾನು ಏನನ್ನು ಕೇಳಿಲ್ಲ. ಈಗ ಕೇಳುತ್ತಾ ಇದ್ದೇನೆ. ದಯವಿಟ್ಟು ಈತನ ಜೊತೆ ನನ್ನನು ಕಳಿಸಬೇಡ. ನನ್ನ ಬದುಕನ್ನು ಮತ್ತೆ ನರಕದ ಕೂಪಕ್ಕೆ ತಳ್ಳ ಬೇಡ "ಎಂದು ವಿನಂತಿಸುತ್ತಾಳೆ.ಅಶ್ಫಾಕ್'ಗೆ ಆಶ್ಚರ್ಯ ಆಗುತ್ತದೆ.

"ಹೇ ಮಶೂದ, ಏನು ಹೇಳುತ್ತ ಇದ್ದೀಯಾ ನೀನು? ಈತ ನಿನ್ನ ಗಂಡ.ಮಶೂದ ನೀನು ಹೋಗಲೇ ಬೇಕು. ನಾವು ಬೇಡ ಅಂದರು ನೀನು ಈತನ ಜೊತೆ ಹೋಗಲೇ ಬೇಕು. ನಿನ್ನನು ತಡೆಯುವ ಅಧಿಕಾರ ನಮಗೆ ಇಲ್ಲ ಮಶೂದ.
ಈತನ ಜೊತೆ ಹೊರಡಲೇ ಬೇಕಲ್ಲ. ಈತ ನಿನ್ನ ಗಂಡನಲ್ಲವೇ. ಇತನ ಜೊತೆ ಹೋಗು" ಎಂದುಅಶ್ಫಾಕ್ ಹೇಳಿದನು.

"ಇಲ್ಲಾ ಅಶ್ಫಾಕ್, ನೀನು ಈತನ ಮಾತನ್ನು ನಂಬಬೇಡ. ಈತನು ನನ್ನ ಗಂಡನಲ್ಲ. ನನಗೆ ಖಂಡಿತವಾಗಿಯು ಈತ ನನ್ನ ಗಂಡ ಎಂದು ಅನಿಸುತ್ತಿಲ್ಲ. ನನ್ನ ಗಂಡ ಎಂದರೆ ನನಗು ಭಾವನೆ ಇರುದಿಲ್ಲವಾ ಹೇಳು.?
ನನಗೆ ಯಾವ ಮದುವೆಯು ಆಗಿಲ್ಲ.ನನ್ನ ಗಂಡ ಎಂದು ಯಾರು ಇಲ್ಲಾ ನನ್ನ ಜೀವನದಲ್ಲಿ. ಅಷ್ಟು ನನಗೆ ತಿಳಿಯುವುದಿಲ್ಲವೇ ಹೇಳು" ಎಂದು ಅಶ್ಫಾಕ್,ನ ಬಳಿ ಹೇಳಿದಳು.

ಅದಕ್ಕೆ ಪ್ರತಿಯಾಗಿ ಅಶ್ಫಾಕ್, "ಅರೆ ನೀನು ಹೇಗೆ ಹೇಳುತ್ತೀಯ? ನಿನಗೆ ನೆನಪಿನ ಶಕ್ತಿ ಹೋಗಿದೆ. ಮತ್ತೆ ಈತನೊಂದಿಗೆ ಬಾಳು ನಡೆಸಿದರೆ ಖಂಡಿತಾವಾಗಿಯೂ ನಿನಗೆ ಮುಂದಿನದ್ದು ನೆನಪಿಗೆ ಬರುತ್ತದೆ. ಅವಾಗ ನಿನಗೆ ಈತ 

ನಿನ್ನ ಪತಿ ಎಂದು ಖಂಡಿತ ನೆನಪು ಆಗುವುದು. ಮತ್ತೆ ನಿನ್ನ ಜೀವನ ಸುಖಕರವಾಗಿ ನಡೆಯುವುದು. ನೀನು ಅರ್ಥ ಮಾಡಿಕೋ" ಎಂದು ಅಶ್ಫಾಕ್ ರುಬೀನಾಳಿಗೆ ತಿಳಿ ಹೇಳಿದನು.ಆಗ ರುಬೀನ ಅಶ್ಫಾಕ್'ನೊಂದಿಗೆ

"ಅಶ್ಫಾಕ್ ನೋಡು, ಒಂದು ಪತಿ ಅಂದರೆ ಆತನೊಂದಿಗೆ ಬಾಹ್ಯ ಸಂಬಂಧ ಹೊರತುಆಂತರಿಕ ಸಂಬಂಧ ಎನ್ನುವುದು ಕೂಡ ಇರುತ್ತದೆ. ಆತ ಹೇಗೆ ಇರಲಿ ಎಲ್ಲೇ ಇರಲಿ ಅವನ ಒಂದು ನೋಟದಿಂದ ಆಗಲಿ ಆತನ ಹಿಡಿತದಿಂದಾಗಲಿ ಅಥವಾ ಆತನ ಸ್ಪರ್ಶದಿಂದಾಗಲಿ ನಮಗೆ ತಿಳಿಯುತ್ತದೆ. ಆದರೆ ಈತ ಯಾರೋ ಅಪರಿಚಿತ ಎಂಬ ಭಾವನೆ ನನಗೆ ಆಗುತ್ತಿದೆ. ಖಂಡಿತವಾಗಿಯೂ ಈತ ನನ್ನ ಪತಿಯಾಗಿರಲು ಸಾಧ್ಯವಿಲ್ಲ. ದಯವಿಟ್ಟು ಇತನ ಕಪಿ ಮುಷ್ಟಿಯಿಂದ ನಿನಗೆ ಮಾತ್ರ ನನ್ನ ಬಿಡಿಸಲು ಸಾಧ್ಯ ಅಶ್ಫಾಕ್ ಅರ್ಥ ಮಾಡಿಕೋ ನನ್ನ" ಎಂದು ರುಬೀನಾ ಗೋಗರೆದಳು.

ಯಾಕೋ ಅಶ್ಫಾಕ್ ಗೆ ತಿಳಿಯದೆ ಆತನ ಕಣ್ಣ್ ಗಳಿಂದ ಕಂಬನಿ ಜಾರಿತು.. ಅರೆ ಈಕೆಯನ್ನು ನಾನು ಹೇಗೆ ಸಂತೈಸಲಿ ಎಂದು ತಿಳಿಯದೆ ತಂದೆಯ ಮುಖವನ್ನು ನೋಡಿದನು.ಆಗ
ಮುಹಮ್ಮದ್ ಹಾಜಿಯವರು ರುಬೀನಾಳ ಬಳಿ ಬಂದರು .

 "ಮಶೂದ ನೋಡಮ್ಮ, ಮೊದಲು ನಿನಗೆ ನಮ್ಮ ಪರಿಚಯ ಕೂಡ ಇರಲಿಲ್ಲ. ಆದರೆ ದಿನ ಕಳೆದಂತೆ ನಮ್ಮವರೊಂದಿಗೆ ಎಷ್ಟು ಹೊಂದಾಣಿಕೆಯಿಂದ ನೀನು ದಿನ ಕಳೆಯಲಿಲ್ಲವೇ,.?
ನೋಡು ಇದೀಗ ನಿನ್ನ ಪತಿ ಬಂದರು ನಿನಗೆ ನಮ್ಮ ಬಿಟ್ಟು ಇರಲು ಆಗದಷ್ಟು ವ್ಯಥೆ ಆಗುತ್ತಿದೆ.
ಹಾಗೆ ನೋಡು, ನೀನು ಆತನೊಂದಿಗೆ ದಿನ ಕಳೆದ ಮೇಲೆ ನಿನಗೆ ನಮ್ಮ ನೆನಪೇ ಇರಲಿಕ್ಕೆ ಇಲ್ಲ.
ಪತಿಯೇ ಎಲ್ಲಾ, , ಪತಿಯೊಂದಿಗೆ ಜೀವನ ನಡೆಸುದು ಮುಖ್ಯ. ಪತಿಯೊಂದಿಗಿನ ಜೀವನ ಶಾಶ್ವತ. ನಮ್ಮ ಮನೆಯಲ್ಲಿ ನೀನು ಎಷ್ಟು ದಿವಸ ಎಂದು ಇರಬಹುದು ಹೇಳು? ಹಾಗಾಗಿ ಪತಿಯೊಂದಿಗೆ ನೀನು ಹೊರಡು" ಎಂದು ಹೇಳುತ್ತಾರೆ.

ಅಷ್ಟೆಲ್ಲಾ ಹೊತ್ತು ನೋಡಿದ ಹಕೀಮ್ "ಹೋಗು ನನಗೆ ತಡ ಆಯಿತು.ನಿನ್ನ ಬ್ಯಾಗ್ ಎಲ್ಲಾ ತೆಗೆದು ಕೊಂಡು ಬಾ" ಎಂದು ಆಜ್ಞೆ ನೀಡುತ್ತಾನೆ..
ಆತನ ಆಜ್ಞೆ ಕೇಳಿದೆ ತಡ ಇಶ್ರತ್ ಬೇಗನೆ ಹೋಗಿ ಆಕೆಯ ಬ್ಯಾಗ್ ಗಳನ್ನು ರೆಡಿ ಮಾಡಿಸಿ ಕೊಂಡು ಬರುತ್ತಾಳೆ.ಅವರು ಇಬ್ಬರು ಅಲ್ಲಿಂದ ಹೋಗಲು ಸಿದ್ದರಾಗುತ್ತಾರೆ.

ರುಬೀನಳಿಗೆ ತನ್ನ ಕಣ್ಣುಗಳ ಮುಂದೆ ಪರದೆ ಕಟ್ಟಿದಂತೆ ಆಗುತ್ತದೆ. ಅಯ್ಯೋ ನನ್ನ ಮುಂದಿನ ಬದುಕು ಏನು..?
ಯಾವಾಗಲಾದರೂ ಹೇಗಾದರೂ ಮುಕ್ತಾರ್ ನ ಸಂಪರ್ಕ ಮಾಡಿ ಇಲ್ಲಿಂದ ಹೋಗಿ ತನ್ನ ಮನೆಯನ್ನು ಸೇರಬೇಕು ಎನಿಸಿಕೊಂಡಿದ್ದೆ. ಆದರೆ ಎಲ್ಲವು ತಲೆ ಕೆಳಗೆ ಆಯಿತು ಅಲ್ಲಾ.. ಬಂದೂ ಬಂದು ಈತನ ಕೈಗೆ ಸಿಕ್ಕಿಕೊಂಡೆನಲ್ಲ. ಈತನ ಕೈನಿಂದ ನಾನು ಪಾರಾಗುವ ದಾರಿಯೇ ಇಲ್ಲ ಎಂದು ನನಗೆ ಅನಿಸುತ್ತದೆ.ಎಂದು ಆಕೆಯ ಮನಸ್ಸು ಯೋಚಿಸುತ್ತಾ ಈತ್ತು. ಅಯ್ಯೋ ದೇವನೇ ಯಾಕೆ ನನ್ನ ಬದುಕಿನಲ್ಲಿ ಇಂತಹ ಆಟ ಆಡುತ್ತಾ ಇದ್ದಿಯಾ? ನಾನು ಮಾಡಿದ ಅನ್ಯಾಯವಾದರೂ ಏನು,ಹೇಳು...!?
 ಒಮ್ಮೆ ಈತನ ಕೈಯಿಂದ ಹೇಗೋ ಪಾರಾಗಿ ಬಂದೆ. ಬಂದು ಅತ್ಯಂತ ಸುರಕ್ಷಿತವಾಗಿದ್ದೆನೇ ಎಂದು ಎನಿಸುವ ವೇಳೆ ಮತ್ತೆ ಈತನ ಬದುಕಿನಲ್ಲಿ ಪ್ರವೇಶ ಮಾಡಿಸಿದೆಯೆಲ್ಲಾ .ಈತನ ಕೈಯಿಂದ ಪಾರಾಗಲು ಏನಾದರು ದಾರಿಯನ್ನು ತೋರಿಸು, ಓ ದೇವನೇ ನೀ ಅಲ್ಲದೆ ನನಗೆ ಬೇರೆ ಯಾರು ಇಲ್ಲ. ಎಂದು ಆಕೆ ಮನದಲ್ಲಿಯೇ ದೇವರ ಬಳಿ ಪ್ರಾರ್ಥಿಸಲು ತೊಡಗುತ್ತಾಳೆ.ಅಷ್ಟರಲ್ಲಿ ಮಶೂದ ಒಂದು ನಿಮಿಷ ನಿಲ್ಲು ಎಂದು ಅಶ್ಫಾಕ್ ಹೇಳುವುದು ಕೇಳುತ್ತದೆ.

ರುಬೀನಾಳಿಗೆ ಖುಷಿ ಆಗುತ್ತದೆ. ನನ್ನನು ನಿಲ್ಲಲು ಹೇಳುತ್ತಾನ ಏನು. ಅದಕೋಸ್ಕರ ನಿಲ್ಲಲು ಹೇಳಿದಾನ ಹೇಗೆ!!? ಎಂದು ಖುಷಿಯಿಂದ ಹಿಂದೆ ತಿರುಗಿ ನೋಡುತ್ತಾಳೆ. ಆತ ತನ್ನ ಕೈಯನ್ನು ಕಟ್ಟಿ ಕೊಂಡು "ನನ್ನನು ಕ್ಷಮಿಸು ಮಶೂದ..." ಎಂದು ಕೇಳುತ್ತಾನೆ.. ರುಬೀನಾ ಏನು ಎಂಬಂತೆ ಅರ್ಥವಾಗದೆ ಆತನ ಮುಖವನ್ನು ನೋಡುತ್ತಾಳೆ.

"ಏನು ಅಶ್ಫಾಕ್ ಏನು ಹೇಳುತ್ತಾ ಇದ್ದಿಯಾ,? ಯಾಕೆ ನೀನು ನನ್ನ ಬಳಿ ಕ್ಷಮೆ ಕೇಳುತ್ತಾ ಇದ್ದಿಯಾ!? 
ನೀವು ಇದು ವರೆಗೂ ನನ್ನನು ಒಳ್ಳೆಯ ರೀತಿಯಿಂದ ನೋಡಿದ್ದೀರಿ, ಉಪಚರಿಸಿದ್ದೀರಿ, ನಾನು ಯಾರು ಅಂತ ತಿಳಿಯದಂತಹ ಸಂದರ್ಭದಲ್ಲೂ ಮನೆಯ ಮಗಳಂತೆ ನೀವು ನನ್ನನು ಕಾಪಾಡಿಕೊಂಡು ಬಂದಿದ್ದೀರಿ. ಅಂಥವನು ಇಂದು ನೀನು ಯಾಕೆ ನನ್ನ ಬಳಿ ಕ್ಷಮೆ ಕೆಳುತ್ತೀಯ?ನೀವು ಯಾವತ್ತು ನನ್ನ ಬಳಿ ಕ್ಷಮೆ ಕೇಳಬೇಡಿ."

"ಹಾಗಲ್ಲ ಮಶೂದ ನಾನು ತಪ್ಪು ಮಾಡಿಬಿಟ್ಟೆ, ನಾನು ದೊಡ್ಡ ತಪ್ಪು ಮಾಡಿಬಿಟ್ಟೆ. ಅದಕೋಸ್ಕರ ನಿನ್ನ ಬಳಿ ಕ್ಷಮೆ ಕೇಳುತ್ತಾ ಇದ್ದೇನೆ.""ಏನು ಹೇಳುತ್ತಾ ಇದ್ದಿಯಾ ಅಶ್ಫಾಕ್ ನನಗಂತೂ ಅರ್ಥವಾಗುತ್ತ ಇಲ್ಲ, ಏನು ತಪ್ಪು ಮಾಡಿದ್ದೀಯಾ? ಎಂತಹ ತಪ್ಪು? ಯಾವತ್ತು ಅಶ್ಫಾಕ್..,?

"ನನಗೆ ಗೊತ್ತಿಲ್ಲ ಮಶೂದ ಯಾವ ಗಳಿಗೆಯಿಂದ ನನ್ನ ಹೃದಯವು ನಿನಗಾಗಿ ಬಡಿದುಕೊಳ್ಳಲು ಪ್ರಾರಂಭಿಸುತ್ತು ಎಂದು ನಾನು ತಿಳಿಯದೆ ಆದೆ.ನಿಜವಾಗಿಯೂ ನಿನಗೆ ಮದುವೆ ಆಗಿದೆ ಎಂದು ತಿಳಿದಿರಲ್ಲಿಲ್ಲ.ನೀನು ಇನ್ನು ಕನ್ಯೆ ಎಂದು ಅರಿತು ನಾನು ನಿನ್ನನು ಪ್ರೀತಿಸಲು ಪ್ರಾರಂಭಿಸಿದೆ. ಆದರೆ ಅದನ್ನು ಹೇಳದೆ ನನ್ನ ಮನಸಿನಲ್ಲಿ ಹಾಗೆ ಮುಚ್ಚಿಟ್ಟು ಕೊಂಡೆ. ಇಂದು ನಾನು ನಿನ್ನ ಬಳಿ ಹೇಳಿ ಬಿಟ್ಟೆ.. ಯಾಕೆಂದರೆ ನೀನು ಒಂದು ಮದುವೆ ಆದ ಹುಡುಗಿ.ನಿನ್ನನು ನಾನು ಮನಸಿನಲ್ಲಿ ಇಷ್ಟ ಪಟ್ಟೆ ,ಅದು ನನ್ನ ತಪ್ಪು. ಅದಕ್ಕೋಸ್ಕರ ನನ್ನನು ಕ್ಷಮಿಸು ಎಂದು ಅಶ್ಫಾಕ್ ಹೇಳುತ್ತಾನೆ.

ಆತನ ಮಾತು ಕೇಳಿ ರುಬೀನಾ ಹುಸಿನಗೆ ನಕ್ಕಳು.
"ಅಶ್ಫಾಕ್ ನೀನು ಇಲ್ಲಿಯಾದರೂ ನನ್ನನು ಅರ್ಥ ಮಾಡಿಕೊಂಡು ನೀನು ನನ್ನ ಬಳಿ ಕ್ಷಮೆ ಕೇಳುತ್ತೀಯ ಅಂದು ಕೊಂಡೆ,. ಇಲ್ಲ ನೀನು ಬೇರೆ ಯಾವುದೋ  ಲೋಕದಲ್ಲಿ ಮುಳುಗಿದ್ದೀಯಾ.. ನಿನಗೆ ನಿಜವಾಗಿಯೂ ಪ್ರೀತಿ ಎನ್ನುದು ಇದ್ದರೆ  ನೀನು ಅರ್ಥ ಮಾಡಿಕೊಳ್ಳುತ್ತಿದ್ದೆ. ನಿನಗೆ ಎಲ್ಲವು ಇಂದು ಅರ್ಥವಾಗುತ್ತಿತ್ತು. ನನ್ನ ಕಣ್ಣುಗಳು ಹೇಳುತ್ತಿದೆ ನನ್ನ ವೇದನೆ ಏನೆಂದು ನನ್ನ ನೋವು ಏನೆಂದು ಆದರೆ ಅದು ಯಾವುದೂ  ನಿನಗೆ ಒಂದು ಅರ್ಥ ವಾಗುತ್ತಿಲ್ಲ.ಪ್ರೀತಿ ಎಂದರೆ ಏನು ಅಶ್ಫಾಕ್? . ಪ್ರೀತಿ ಎಂದರೆ ಕೇವಲ ಹೃದಯದಲ್ಲಿ ಇರುವ ಒಂದು ಭಾವನೆ ಅಲ್ಲ. ಯಾರನ್ನು ನೋಡಿದಾಗ ಒಹ್ ಪ್ರೀತಿ ಹುಟ್ಟಿತು ನನಗೆ ಎನ್ನಲು ಅದೇನು ಆಟದ ವಸ್ತು ಅಲ್ಲ. ಅದು ಮನಸಿನ ಭಾವನೆಗಳು ಹೃದಯದ್ಲಲಿ ಅರಳಿ ಹೂ ಆಗಬೇಕು, ಒಬ್ಬರ ಭಾವನೆಗಳು,  ಒಬ್ಬರ ಕಷ್ಟ ಏನು ಎಂದು ಅರ್ಥೈಸಬೇಕು. ನಿನಗೆ ನನ್ನ ಮೇಲೆ ಪ್ರೀತಿ ಎಂಬುದು ಇದ್ದಿದರೆ ನಾನು ಇಂದು ಯಾವ ಪರಿಸ್ಥಿತಿಯಲ್ಲಿದ್ದೆ ಎಂದು ನೀನು ಅರ್ಥ ಮಾಡಿಕೊಳ್ಳುತ್ತಿದ್ದೆ.
ಅಂದು ನಿನ್ನ ತಂದೆ ನನ್ನನು ಮದುವೆಯಾಗಲು ಹೇಳಿದಾಗ ನೀನೇ ತಾನೇ ನನ್ನ ಬಳಿ ಬಂದು ನಿನ್ನನು ಮದುವೆಯಗಲು ಸಾಧ್ಯವಿಲ್ಲ, ನಾನು ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿದ್ದು.
ಆಕೆಯನ್ನು ಅಷ್ಟು ಬೇಗ ಮರೆತು ಬಿಟ್ಟೆಯಾ ಅಶ್ಫಾಕ್,!?
ಇಲ್ಲ ನಿನಗೆ ನನ್ನ ಮೇಲೆ ಆದದ್ದು ಆಕರ್ಷಣೆ ಮಾತ್ರ ಅದು ಪ್ರೀತಿ ಅಲ್ಲ. ಅದನ್ನು ಮರೆತು ಬಿಡು. ಸರಿ ನೀವು ಎನಿಸಿದಂತೆ ಈತ ನನ್ನ ಪತಿ ಎಂದು ಈತನ ಬಳಿ ಹೋಗುತ್ತೇನೆ.ಆದರೆ ಒಂದು ಅಂತು ಸತ್ಯ ಈತ ನನ್ನ ಪತಿ ಮಾತ್ರ ನಿಜವಾಗಿಯೂ ಅಲ್ಲ" ಎಂದವಳೇ ಮುಂದಡಿ  ಹೆಜ್ಜೆ ಇಡಲು ಹೋದಳು.

"ಇಲ್ಲ ಮಶೂದ, ಹೌದು, ನಾನು ಹಿಂದೊಂದು ಹೆಣ್ಣಿನ ವಿಚಾರ ಹೇಳಿದ್ದು ಹೌದು., ಆದರೆ ನನಗೆ ಈಗ ಇರುವುದು ನಿನ್ನ ಮೇಲೆ ನಿಜವಾದ ಪ್ರೀತಿ ಹೊರತಾಗಿ ಆಕರ್ಷಣೆ ಅಲ್ಲ. ಅದಕೋಸ್ಕರ ಕ್ಷಮೆ ಕೇಳುತ್ತೇನೆ. ತಪ್ಪಾಯಿತು ನನ್ನಿಂದ ದಯವಿಟ್ಟು ಕ್ಷಮಿಸು" ಎಂದು ಅಶ್ಫಾಕ್ ಹೇಳುತ್ತಾನೆ. ಅದುವರೆಗೂ ಇದನ್ನೆಲ್ಲ ಆಲಿಸುತ್ತಿದ್ದ ಹಕೀಮ್ ಗೆ ಸಿಟ್ಟು ಬರುತ್ತದೆ.

 "ಏನು  ನನ್ನ ಹೆಂಡತಿಯೊಡನೆ ಪ್ರೀತಿ ಪ್ರೇಮ ಎಂದೆಲ್ಲ ಬೊಗಳುತ್ತ ಇದ್ದೀಯಲ್ಲ, ನನ್ನ ಎದುರೇ ಬೊಗಳಲು ಎಷ್ಟು ಧ್ಯರ್ಯ ಬೇಕು ನಿನಗೆ ಎಂದು ಹೇಳಿ ಆತನಿಗೆ ಎರಡು ಬಾರಿಸಲು ಎಂದು ಮುಂದೆ ಹೋದನು.

ಅಷ್ಟರಲ್ಲಿ ಆತನ ಕೈಯನ್ನು ಹಿಡಿದವಳೇ ರುಬಿನಾ
"ಹಕೀಮ್ ಜಾಗ್ರತೆ ಆತನಿಗೆ ಒಂದು ಪೆಟ್ಟು ಬಿದ್ದರೆ ನಿನ್ನ ಜೊತೆ ನಾನು ಬರುವುದಿಲ್ಲ..
ನಿನಗೇನು ನಾನು ನಿನ್ನೊಂದಿಗೆ ಬರಬೇಕು ತಾನೇ? ಸರಿ ನಡೆ, ಆದರೆ ಅವರಿಗೆ ಅನ್ಯಾಯ ಮಾಡಬೇಡ ಎಂದು ಹೇಳಿದಳು.

ಹಕೀಮ್ ಆಶ್ಚರ್ಯದಿಂದ ರುಬೀನಾಳತ್ತ ನೋಡಿದ
ಅರೆ ಈಕೆ ನನ್ನ ಹೆಸರನ್ನು ಕರೆಯುತ್ತಾ ಇದ್ದಾಳೆ. ಅಂದರೆ ಈಕೆಗೆ ಎಲ್ಲ ನೆನಪಿದೆಯೇ ಎಂದು ಆತನಿಗೆ ಆಯಿತು  ಹಕೀಮ್ ಏನೊಂದೂ  ಅರ್ಥವಾಗದೆ ಆಶ್ಚರ್ಯದಿಂದ ಆಕೆಯ ಮುಖವನ್ನು ನೋಡುತ್ತಾನೆ.

ಅರೆ ಈಕೆ ನನ್ನನ್ನು ಹಕೀಮ್ ಎಂದು ಕರೆದಳ!
ನನ್ನ ನಿಜವಾದ ಹೆಸರು ಈಕೆಗೆ ಗೊತ್ತಿದೆ ಅಂದ ಮೇಲೆ ಈಕೆಗೆ ನೆನಪಿನ ಶಕ್ತಿ ಇದೆ ಎಂದರ್ಥ. ಅಂದ ಮೇಲೆ ಇವಳು ಯಾಕೆ ಹೀಗೆ ನಾಟಕ ಮಾಡಿದಳು?
 ಯಾತಕ್ಕಾಗಿ? ನನ್ನ ಕೈಯಿಂದ ರಕ್ಷಿಸಲು ಈಕೆ ಇಲ್ಲಿ ಉಳಿದುಕೊಳ್ಳಲು ಹೀಗೆ ಹೇಳಿರಬಹುದು. ನನಗೇನು? ನನಗೆ ಒಟ್ಟಾರೆಯಾಗಿ ಈಕೆ ನನ್ನ ಪತ್ನಿಯಾಗಿ ಬರಬೇಕು. ಈಗ ಎಲ್ಲರ ಎದುರು ಅಂತು ಈಗ ಇವಳು ನಾನೇ ರುಬೀನಾ ಎಂದು ಹೇಳಲಾರಲು. ಅದರ ಮೊದಲು ನಾನು ಇಲ್ಲಿಂದ ಕದಲ ಬೇಕು ಎಂದು ಎನಿಸಿದವನೇ ಹಕೀಮ್..

"ನಿನ್ನನ್ನು ಆತ ಪ್ರೀತಿಸುತ್ತೇನೆ ಎಂದು ಹೇಳಿದಾಗ ನನಗೆ ತಡೆಯಲು ಆಗಲಿಲ್ಲ ಅದಕ್ಕೆ ಆತನಿಗೆ ಹೊಡೆಯಲು ಎಂದು ಹೋದೆ.. ನನ್ನನು ಕ್ಷಮಿಸು, ನಾವು ಇನ್ನು ಇಲ್ಲಿಂದ ಹೋಗೋಣ ಎಂದು ಹೇಳುತ್ತಾನೆ.

ರುಬೀನಾಳಿಗೆ ಹಕೀಮ್ ಎಂದು ಹೆಸರು ಕರೆದು ಆಗಿರುತ್ತದೆ. ಆದರೆ ಆಕೆಯ ಮನದಲ್ಲಿ ಸಣ್ಣ ಭಯವು ಮೊಳಕೆಯೊಡಯಲು ಪ್ರಾರಂಭವಾಗುತ್ತದೆ.
ಅರೆ ನಾನು ತಪ್ಪಿ ನನ್ನ ಬಾಯಿಯಿಂದ ಹಕೀಮ್ ಎಂಬ ಹೆಸರು ಕರೆದು ಈಗ ಖಂಡಿತ ಹಕೀಮ್'ಗೆ ನಾನು ಮಾಡುತ್ತಿರುವುದು ಎಲ್ಲಾ ನಾಟಕ ಎಂದು ತಿಳಿಯಬಹುದು. ಅರೆ ನನ್ನ ಬಾಯಿಯಿಂದ ಹೇಗೆ ಈ ಹೆಸರು ತಪ್ಪಿ ಬಂತು. ಇಲ್ಲಿ ಯಾರಿಗಾದರೂ ಗೊತ್ತಾಯಿತೆ ಎಂದು ತನ್ನ ಸುತ್ತ ನಿಂತಿದ್ದವರ ಬಳಿ ನೋಡುತ್ತಾಳೆ.
ಅವರು ಯಾರು ಅದರ ಗೋಜಿಗೆ ಹೋಗದಂತೆ ಇರುತ್ತಾರೆ. ಆದರೆ ಅಶ್ಫಾಕ್ ಮಾತ್ರ ಯಾಕೋ ರುಬೀನಾಳತ್ತ ಏನೋ ಅನುಮಾನ ಇದ್ದವರಂತೆ ನೋಡುತ್ತಾನೆ.ಒಂದೆಡೆಯಲಿ ಹಕೀಮ್ ನನ್ನನು ಕರೆಯುತ್ತಾ ಇದ್ದಾನೆ.
ಏನು ಮಾಡಲಿ ತಾನು ಹೋದರೆ ನನ್ನ ಬದುಕೇ ಹೋದಂತೆ.. ಓಹ್ ದೇವರೇ ಒಂದು ದಾರಿ ತೋರಿಸು ಎಂದು ಆಕೆ ದೇವರಲ್ಲಿ ಪ್ರಾಥಿಸುತ್ತಾ ಇರುತ್ತಾಳೆ.

ಅಷ್ಟರಲ್ಲಿ ಹಕೀಮ್ "ಸರಿ ಧನ್ಯವಾದಗಳು.
ಇದು ವರೆಗೆ ನನ್ನ ಹೆಂಡತಿಯನ್ನು ಪ್ರೀತಿಯಿಂದ ನೋಡಿಕೊಂಡಿರಿ. ಇನ್ನು ಮುಂದೆ ನಿಮಗೆ ಕಷ್ಟ ಕೊಡುವುದಿಲ್ಲ. ನಾನು ಈಕೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಆಕೆಯ ನೆನಪಿನ ಶಕ್ತಿ ಬರುವವರೆಗೂ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತೇನೆ" ಎಂದು ಹೇಳಿ ಆಕೆಯನ್ನು ಕರೆದು ಸರಿ ಬಾ ಹೋಗೋಣ ಎಂದು ಹೇಳಿ ತಿರುಗಿ ಒಂದು ಹೆಜ್ಜೆ ಮುಂದೆ ಇಡುತ್ತಾನೆ.

ಇನ್ನೇನೂ ಮುಂದೆ ಹೋಗಬೇಕು ಅನ್ನುವಷ್ಟರಲ್ಲಿ ಒಬ್ಬ ಅಪರಿಚಿತ ವ್ಯಕ್ತಿ ಒಳಗೆ ಬರುತ್ತಾನೆ.
 ಬಂದವನೇ....ಹಕೀಮ್'ನ ಬಳಿ ಬಂದು 
"ಓಹೋ, ನಾನು ಎನಿಸಿದೆ ನನಗೆ ನೀಡಿದಂತಹ ಕೆಲಸವನ್ನು ಯಾಕಾಗಿ ತಿರಸ್ಕರಿಸಿದರು ಎಂದು! ಇದಕ್ಕೆ ಕಾರಣ ನೀನಾ? ನನಗಿಂತ ಕಡಿಮೆ ದುಡ್ಡಿಗೆ ಒಪ್ಪಿ ಕೊಂಡಿರಬೇಕಲ್ವಾ, ಹಾಗೆ ನನ್ನನು ತಿರಸ್ಕರಿಸಿ ನಿನ್ನನು ಆ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ" ಎಂದು ಹೇಳಿದನು..." 

ಹಕೀಮ್ ಏನೊಂದು ಅರ್ಥವಾಗದೆ," ಏನು..? ಏನು ಹೇಳುತ್ತಾ ಇದ್ದಿಯಾ? ತಿರಾಸ್ಕರ, ಆಯ್ಕೆ ಎಲ್ಲಾ..!? ಬಿಡಿಸಿ ಹೇಳು ನನಗೊಂದು ಅರ್ಥವಾಗುತ್ತಿಲ್ಲ."
"ಅರೆ..ರೇ.. ಸಾಹೇಬರಿಗೆ ಬಿಡಿಸಿ ಬೇರೆ ಹೇಳಬೇಕೇ..!!?
ಚೆನ್ನಾಗಿಗೊತ್ತಿದೆ. ನಾನು ಸ್ವಲ್ಪ ದುಡ್ಡು ಜಾಸ್ತಿ ಕೇಳಿದೆ ಅಂತ ಹೇಳಿ ನೀನು ಕಡಿಮೆ ಕೇಳಿದೆ ಅಂತ ಹೇಳಿ ನಿನ್ನನು ಆಯ್ಕೆ ಮಾಡಿದಾರೆಲ್ವಾ.ನಾನು ದುಡ್ಡು ಜಾಸ್ತಿ ಮಾಡಿದೆ ಅಂತ ಹೇಳಿ ನನ್ನನು ತಿರಸ್ಕರಿಸಿದ್ದಾರೆ. ಎಲ್ಲವು ತಿಳಿದು ತಿಳಿಯದವರಂತೆ ನಾಟಕ ಮಾಡಬೇಡ. ನಾನು ನಾಟಕದವನೇ , ನನಗೂ ನಾಟಕ ಮಾಡಲು ಬರುತ್ತದೆ. ಯಾರು ಎಂಥವರು ಹೇಗೆ ನಾಟಕ ಮಾಡುತ್ತಾರೆ ಎಂದು ಕೂಡ ಗೊತ್ತಿದೆ. ನಿನ್ನನು ಆ ಹುಡುಗಿಯೊಂದಿಗೆ ನೋಡುವಾಗಲೇ ತಿಳಿದುಕೊಂಡೆ ನನ್ನ ತಿರಸ್ಕರಿಸಲು ನೀನೇ ಕಾರಣ ಎಂದು" ಬಂದ ವ್ಯಕ್ತಿ ಹೇಳುತ್ತಾನೆ.

 ಹಕೀಮ್ ಗೆ ಒಂದೂ ಕೂಡ ಅರ್ಥವಾಗುವುದಿಲ್ಲ. ಆದರೆ ಇಶ್ರತ್ ಗೆ ಎಲ್ಲವು ಅರ್ಥವಾಗುತ್ತದೆ, 
ಅಯ್ಯೋ ಶಾಕಿರ್ ಕರೆದುಕೊಂಡು ಬಂದ ಹುಡುಗನಲ್ಲ ಈತ. ಈಗ ಈತ ಬಾಯಿ ಬಿಟ್ಟರೆ ನನ್ನ ಬಂಡವಾಳ ಬಯಲು ಆಗುತ್ತದೆ. ಈತನನ್ನು ಮೊದಲು ಇಲ್ಲಿಂದ ಕಳುಹಿಸಬೇಕು. ಏನು ಮಾಡುವುದು? ಇಲ್ಲದಿದ್ದರೆ ಈಗ ಈತ ಎಲ್ಲವನ್ನು ಹೇಳಿ ಬಿಡುತ್ತಾನೆ ಎಂದು ಮನಸಿನಲ್ಲಿ ಯೋಚಿಸುತ್ತಾ...

"ಅಲ್ಲಾ ಏನು ಆಗುತ್ತಿದ್ದೆ ಇಲ್ಲಿ? ಯಾರೋ ಯಾರೋ ಬಂದು ಏನೋ ಏನೋ ಹೇಳುತ್ತಿದ್ದಾರೆ. ಒಬ್ಬ ನನ್ನ ಪತ್ನಿ ಎಂದು ಹೇಳುತ್ತಿದ್ದಾನೆ, ಇನ್ನೊಬ್ಬನು ನಾನು ಪ್ರೀತಿಸುತ್ತಿದ್ದೇನೆ ಎಂದೂ ಮತ್ತೊಬ್ಬ ಏನೋ ಆಯ್ಕೆ ತಿರಸ್ಕಾರ ಎಂದು ಮಾತನಾಡುತ್ತಾನೆ.ಅಲ್ಲಾ ಮಾವ ಇದು ಮನೆಯಾ ಅಲ್ಲಾ ಛತ್ರನ? ಕಂಡ ಕಂಡವರು ಬರುತ್ತಾ ಇದ್ದಾರೆ ಅಲ್ವಾ. ಎಲ್ಲರನ್ನು ಒಮ್ಮೆ ಹೊರಗೆ ಕಳುಹಿಸಿ ಬಾಗಿಲು ಹಾಕಿ ನಾವು ನೆಮ್ಮದಿಯಿಂದ ಇರೋಣ" ಎಂದು ಹೇಳುತ್ತಾಳೆ.

ಆಕೆಯ ಮಾತನ್ನು ಕೇಳಿದ ಬಂದ ಅಪರಿಚಿತ ವ್ಯಕ್ತಿ " ಓಹೋ ಬಾಗಿಲು ಹಾಕೋ ಮೊದಲು ನನ್ನ ದುಡ್ಡು ನನಗೆ ಕೊಡು. ನೀನೇ ಅಲ್ವಾ ಇದಕ್ಕೆಲ್ಲ ಕಾರಣ. ಮೊದಲು ನನ್ನ ದುಡ್ಡು ಕೊಡು ಆಮೇಲೆ ಬಾಗಿಲು ಹಾಕುವೆಂತೆ. ಮತ್ತೆ ನಾನು ಹೋಗುತ್ತೇನೆ" ಎಂದು ಹೇಳುತ್ತಾನೆ.
ಅದಕ್ಕೆ ಅಶ್ಫಾಕ್ "ಏನು ದುಡ್ಡು? ಆಕೆ ನಿನಗೆ ಯಾಕೆ ದುಡ್ಡು ಕೊಡಬೇಕು,?ನೀನು ಏನು ಹೇಳುತ್ತಾ ಇದ್ದಿಯಾ? ಬಿಡಿಸಿ ಹೇಳು "ಎಂದು ಕೇಳುತ್ತಾನೆ. 

 ಆಗ ಬಂದ ಅಪರಿಚಿತ ವ್ಯಕ್ತಿ, "ನೋಡಿ ಸರ್ ಇಂದು ಬೆಳಿಗ್ಗೆ ಒಬ್ಬ ವ್ಯಕ್ತಿ ನನ್ನ ಬಳಿ ಬಂದು ಒಂದು ಹುಡಿಗಿಯ ಗಂಡನಾಗಿ ನಟನೆ ಮಾಡು. ನಿನಗೆಷ್ಟು ದುಡ್ಡು ಬೇಕೋ ಅಷ್ಟು ಕೊಡುತ್ತೇವೆ ಎಂದು ಹೇಳಿದನು. ನಾನು ಸರಿ ಎಂದು ಹೇಳಿದ್ದೆ. ದುಡ್ಡು ಸಿಗುವಾಗ ಯಾರಾದರೂ ಬೇಡ ಅನ್ನುತ್ತಾರೆಯೇ? ನಾನು ಇಂತಿಷ್ಟು ದುಡ್ಡು ಬೇಕು ಎಂದು ಹೇಳಿದ್ದೆ. ಆ ವ್ಯಕ್ತಿ ಸರಿ ಎಂದು ಒಪ್ಪಿತು. ನಂತರ ನಿನ್ನ ಒಂದು ಮೇಡಂ ಜೊತೆ ಕರೆದು ಕೊಂಡು ಹೋಗುತ್ತೇನೆ ಎಂದು ನನ್ನನ್ನು ಕರೆದುಕೊಂಡು ಬಂದರು.. ಅಲ್ಲಿ ಈ ನಿಂತಿದ್ದಾನಲ್ಲ ಆ ವ್ಯಕ್ತಿ ಮತ್ತು ಇಲ್ಲಿ ಕಾಣುತ್ತಾರಲ್ಲ ಆ ಮೇಡಂ ಒಟ್ಟಿಗೆ ಮಾತನಾಡುತ್ತಾ ಇದ್ದರು "ಎಂದು ಇಶ್ರತ್ ಹಾಗೂ ಹಕೀಮನತ್ತ ಬೆರಳು ತೋರಿಸಿ ಹೇಳಿದನು.
ನಂತರ ತನ್ನ ಮಾತನ್ನು ಮುಂದುವರೆಸುತ್ತಾ
"ಆಗ ನನ್ನನು ಕರೆದುಕೊಂಡು ಬಂದ ವ್ಯಕ್ತಿ ಈ ಮ್ಯಾಡಮ್ ಬಳಿ ಹೋಗಿ ಈ ವ್ಯಕ್ತಿ ಬಂದಿದಾನೆ ಎಂದಾಗ ಅವರು ಬೇಡ ನಮಗೆ ಜನ ಸಿಕ್ಕಿದ್ದಾರೆ ಎಂದು ನನ್ನನು ಹಿಂದೆ ಕಳುಹಿಸಿದರು. ಇವನು ಕಡಿಮೆ ದುಡ್ಡಿಗೆ ಒಪ್ಪಿದ್ದಾನೆ ಎಂದು ಹೇಳಿ ಇತನನ್ನು ಗಂಡ ಎಂದು ನಟನೆ ಮಾಡಲು ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ" ಎಂದು ಹೇಳಿತ್ತಾನೆ.

ಆಗ ಇಶ್ರತ್ " ಏನೋ ಏನು ಬೊಗಳುತ್ತಾ ಇದ್ದೀಯಾ? ನನಗೆ ನೀನು ಯಾರೂಂತಲೇ ತಿಳಿದಿಲ್ಲ. ಸುಮ್ಮನೆ ಇಲ್ಲದನ್ನು ಹೇಳಿದರೆ ಚೆನ್ನಾಗಿ ಇರೋದಿಲ್ಲ " ಎಂದಳು.

ಅಶ್ಫಾಕ್ ಸಿಟ್ಟಿನಿಂದ ಇಶ್ರತ್ ನತ್ತ ನೋಡುತ್ತಾನೆ.ಇದನ್ನು ಗಮನಿಸಿದವಳೆ ಇಶ್ರ
ಅಯ್ಯೋ ಅಶ್ಫಾಕ್ ನೀನು ಯಾಕೆ ಆ ರೀತಿ ನನ್ನನ್ನು ನೋಡುತ್ತಾ ಇದ್ದಿಯಾ? ಇವನು ಯಾರು ಅಂತ ನನಗೆ ಪರಿಚಯ ಇಲ್ಲಾ. ಸುಮ್ಮನೆ ಏನೋ ಹೇಳುತ್ತಾ ಇದ್ದಾನೆ.ಒಂದಾ ಇದು ಈ ಮನೆಹಾಳಿಯದೆ ಕೆಲಸ. ಇಲ್ಲಿ ಇರಬೇಕು ಎಂದು ಏನೋ ತಂತ್ರ ಮಾಡಿದ್ದಾಳೆ. ಈತನನ್ನು ಎಲ್ಲಿಂದಲೋ ಕರೆದುಕೊಂಡು ಬಂದಿದ್ದಾಳೆ. ಅಲ್ವಾ ಹೇಳೇ ನೀನು ನಿಜ ಹೇಳು ಎಂದು 
ರುಬೀನಾಳತ್ತಾ ಕೇಳುತ್ತಾಳೆ.

ರುಬೀನಾಳ ಕಣ್ಣುಗಳಲಿ ಅದಾಗಲೇ ನೀರು ತುಂಬಿರುತ್ತದೆ" ಅಯ್ಯೋ ನನ್ನ ಬದುಕಿನಲ್ಲಿ ಏನು ಆಗುತ್ತಿದೆ ?ಈ ರೀತಿ ಎಲ್ಲಾ ಇಶ್ರತ್ ನನ್ನನು ಈ ಮನೆಯಿಂದ ಓಡಿಸಲು ನಾಟಕವಾಡಿದ₹₹ಳಲ್ಲ. ಒಂದು ವೇಳೆ ಈತ ನನ್ನನ್ನು ಕರೆದುಕೊಂಡು ಹೋದರೆ ಏನಾಗುತ್ತಿತೋ ಏನೋ ಎಂದು ಎನಿಸಿ ಆಕೆಗೆ ಅಳು ಬರುತ್ತಿತ್ತು.

"ಇಲ್ಲ ಅಶ್ಫಾಕ್ ನಾನು ಯಾಕೆ ಆ ರೀತಿ ಮಾಡಲಿ ಹೇಳು.
ಒಂದು ವೇಳೆ ಈತ ನನ್ನ ಗಂಡ ಎಂದು ನಾಟಕ ಆಡಿಸಿ ಕರೆದುಕೊಂಡು ಬಂದಿದ್ದರೆ ಈತನ ಬಳಿ ನಾನು ಎಲ್ಲಿಗೆ ಅಂತ ಹೋಗಲಿ ಹೇಳು? ನಿಜವಾಗಿಯೂ ಇವರು ಇಬ್ಬರು ನನ್ನ ಪತಿಯಂದಿರು ಅಲ್ಲ. ಅರ್ಥ ಮಾಡಿಕೊಳ್ಳಿ. ದಯವಿಟ್ಟು ಇದರಲ್ಲಿ ಏನೋ ತಂತ್ರ ಇದೆ ಎಂದು ರುಬೀನಾ ಕೈ ಮುಗಿದು ಅಶ್ಫಾಕ್ ನ ಬಳಿ ವಿನಂತಿಸಿದಳು.ಅಶ್ಫಾಕ್'ಕಿಗೂ ಇದು ಎಲ್ಲಾ ಗೊಂದಲಮಯ ಎನಿಸಿತು. ಆತ ಮುಂದೆ ಬಂದವನೇ ಅಪರಿಚಿತ ವ್ಯಕ್ತಿಯ ಕ್ವಾಲಾರ್ ಪಟ್ಟಿ ಹಿಡಿದು ಕೇಳುತ್ತಾನೆ"ನಿಜ ಬೊಗಳು ಏನು ವಿಷಯ? ನೀನು ಹೇಳಿದ್ದೆಲ್ಲ ಸತ್ಯನ ಎಂದು ಕೇಳುತ್ತಾನೆ.

"ಹೌದು ಸರ್, ಹೇಳಿದ್ದೆಲ್ಲ ಸತ್ಯ ನನ್ನಿಂದ ತಪ್ಪು ಆಗಿದೆ. ದುಡ್ಡಿನ ಅವಶ್ಯಕೋಸ್ಕರ ನಾನು ಇಂತಹ ಕೆಲಸ ಮಾಡಲು ಒಪ್ಪಿದೆ. ಇನ್ನು ಮುಂದೆ ಇಂತಹ ನೀಚ ಕೃತ್ಯಕ್ಕೆ ನಾನು ಇಳಿಯುದಿಲ್ಲ. ನನ್ನಿಂದ ಆದಷ್ಟು ಒಳ್ಳೆಯ ಕೆಲಸ ಆಗಲಿ ಎಂದು ಹೇಳಿ ಈ ಸತ್ಯವನ್ನು ನಿಮ್ಮ ಮುಂದೆ ಇಡಲು ಬಂದಿದ್ದೇನೆ. ಆ ಹೆಣ್ಣನು ಆ ವ್ಯಕ್ತಿ ಜೊತೆ ಕಳುಹಿಸಬೇಡಿ" ಎಂದು ತಾನು ಮಾಡಿದ ತಪ್ಪನ್ನು ಒಪ್ಪಿದನು.

"ನೀನು ಮಾಡಿದಂತಹ ತಪ್ಪಿಗೆ ಏನು ಮಾಡಬೇಕಂತ ಹೇಳು? ಎಂದು ಅಶ್ಫಾಕ್ ಸಿಟ್ಟಿನಿಂದ ಆತನತ್ತ ಕೇಳುತ್ತಾನೆ. ದುಡ್ಡು ಸಿಗುತ್ತದೆ ಎಂದು ಏನು ಬೇಕಾದರೂ ಮಾಡುವೆಯಾ? ಒಂದು ಹೆಣ್ಣಿನ ಬಾಳು ಹಾಳು ಮಾಡುವೆಯ? ಛೆ..!ನಿನ್ನಂಥವರು ಈ ಜಗತ್ತಿನಲ್ಲಿ ಜೀವಿಸಬೇಕಾ...!
ಅದಲ್ಲದೆ ನಿನ್ನಲ್ಲಿ ಅಲ್ಲಾ ನಾನು ಕೇಳಬೇಕಾದದ್ದು, ಕೇಳಬೇಕಾಗಿರುದು ಇವಳಲ್ಲಿ" ಎಂದು ಇಶ್ರತ್ ನ ಬಳಿ ಬರುತ್ತಾನೆ.

"ಇಶ್ರತ್ ನೋಡು ನಿನ್ನ ಬಂಡವಾಳ ಎಲ್ಲಾ ಬಯಲು ಆಗಿದೆ. ನೀನು ಆಡಿದ್ದೆಲ್ಲ ಇದುವರೆಗೂ ನಾಟಕ ಎಂದು ಅನಿಸುತ್ತಿದೆ. ನಾವು ಎಲ್ಲದರಲ್ಲೂ ಮಶೂದಳನೇ ತಪ್ಪು ಎಂದು ಎನಿಸುತ್ತ ಬಂದಿದ್ದೇವೆ. ಈಗಲಾದರೂ ನಿಜ ಹೇಳು, ನಿಜ ಹೇಳಿದರೆ ನಮ್ಮ ಸಂಬಂಧ ಉಳಿಯಬಹುದು. ಸುಳ್ಳು ಹೇಳಿದರೆ ಇಲ್ಲಿ ಏನು ನಡೆಯಲಿಕ್ಕೆ ಇಲ್ಲಾ.ಸತ್ಯವನ್ನು ಹೇಳು "ಎಂದು ಹೇಳುತ್ತಾನೆ.ಇಶ್ರತ್ ತನಗೆ ಬೇರೆ ದಾರಿ ಇಲ್ಲದೆ ಅಶ್ಫಾಕ್ ನತ್ತ ನೋಡಿ "ಅದೂ....ಅಶ್ಫಾಕ್ ನಾನು ಮಾಡಿದಂತೂ ನಿಜ, ಆದರೆ ಸತ್ಯವಾಗಿಯೂ ಈ ಬಂದಿರುವಂತಹ ವ್ಯಕ್ತಿ ಈಕೆಯ ನಿಜವಾದ ಗಂಡ.

ಆಕೆಯ ಮಾತನ್ನು ಅರ್ಧದಲ್ಲೇ ತಡೆಯುತ್ತ ಅಶ್ಫಾಕ್ " ನನಗೆ ಅದೆಲ್ಲ ಬೇಕಾಗಿಲ್ಲ .ಈಗ ನಾನು ಕೇಳುತ್ತಿರುದು ನೀನು ಮಾಡಿದುದ್ದಾದರೂ ಯಾತಕ್ಕಾಗಿ! ಯಾಕೆ ಮಶೂದಳನ್ನು ಈ ಮನೆಯಿಂದ ಹೊರಗೆ ಹಾಕ ಬೇಕೆಂದು ಎನಿಸಿದೆ ?ಯಾತಕ್ಕಾಗಿ ಬಾಡಿಗೆ ಗಂಡನನ್ನು ಮಾಡಬೇಕೆಂದು ಎನಿಸಿದೆ? ನಿನ್ನ ಹಾಗೆ ಆಕೆ ಒಂದು ಹೆಣ್ಣಲ್ಲವೇ? ನಿನಗೆ ಇಂತಹ ಸ್ಥಿತಿ ಬಂದಿದ್ದರೆ ಏನಾಗುತ್ತಿತು ಎಂದು ಒಮ್ಮೆ ಯೋಚಿಸು. ಈಗ ಇದೆಲ್ಲದಕ್ಕೆ ನನಗೆ ಉತ್ತರ ಹೇಳು.? ನೀನು ಮಾಡಿದಾದರೂ ಯಾತಕ್ಕೆ?" ಎಂದು ಸಿಟ್ಟಿನಿಂದ ಕೇಳುತ್ತಾನೆ.

ಅದಕ್ಕೆ ಇಶ್ರತ್ "ಇಲ್ಲಾ ಅಶ್ಫಾಕ್ ನೀನು ಮಶೂದಳನ್ನು ಪ್ರೀತಿಸಲು ಪ್ರಾರಂಭಿಸಿದೆ ಎಂದು ನನಗೆ ತಿಳಿದಿದೆ. ಈ ಪ್ರಪಂಚದಲ್ಲಿ ನನ್ನನು ಬಿಟ್ಟು ಬೇರೆ ಯಾರನ್ನು ನೋಡಬಾರದು. ನೀನು ನನ್ನನು ಮದುವೆಯಾಗಬೇಕು, ನನಗೆ ನಿನ್ನ ಮೇಲೆ ಬೆಟ್ಟದಷ್ಟು ಪ್ರೀತಿ ಇದೆ. ನೀನು ನನ್ನನ್ನು ಬಿಟ್ಟು ಬೇರೆಯವರನ್ನು ಆಗುವುದು ನನಗೆ ಇಷ್ಟ ಇಲ್ಲ‌ ಅದಕೋಸ್ಕರ ಮನೆಯಿಂದ ಆಚೆ ಹಾಕಬೇಕು ಎಂದು ನಾನು ಈ ಎಲ್ಲಾ ನಾಟಕ ಆಡಿದೆ. ಆದರೆ ಈತ ನಿಜವಾದ ಗಂಡ" ಎಂದು ಹಕೀಮನನ್ನು ತೋರಿಸಿ ಹೇಳಿದಳು.

"ನೀನು ನನ್ನ ಪ್ರೀತಿಸಿದ್ದೀಯ ಎಂದ ಮಾತ್ರಕ್ಕೆ ನಾನು ನಿನ್ನ ಪ್ರೀತಿಸುತ್ತೇನೆ ಅಂದು ಕೊಂಡಿದ್ದಿಯ? ನಾನು ನಿನ್ನನ್ನು ಮದುವೆ ಆಗಬೇಕು ಎಂದುಕೊಂಡಿದ್ದೀಯಾ? ಛೆ..!!ಒಂದು ಪ್ರೀತಿ ಇದಕ್ಕೆ ಯಾರಾದರೂ ಪ್ರೀತಿ ಅನ್ನುತ್ತಾರ? ಒಂದು ಹೆಣ್ಣಿನ ಬಾಳಿನಲ್ಲಿ ಆಟವಾಡುವವರನ್ನು ಯಾರಾದರೂ ಮದುವೆ ಆಗಲು ಇಚ್ಛೆಸುವರ ಹೇಳು.. ನಿನ್ನಂಥವಳನ್ನು ನಾನು ಎಂತೂ ಮದುವೆ ಆಗುವುದಿಲ್ಲ "ಎಂದು ಸಿಟ್ಟಿನಲ್ಲಿ ಹೇಳುತ್ತಾನೆ.
ಹಾಗೆ ಹೇಳಿ ಹಕೀಮ್ ನ ಬಳಿ ಬಂದು "ಅಣ್ಣ ನೀನು ಯಾರು ದಯವಿಟ್ಟು ಹೇಳು ? ಅವರಂತೆ ನೀವು ಕೂಡ ಸತ್ಯ ಹೇಳಿ ಎಂದು ಹೇಳುತ್ತಾನೆ.

ಅದಕ್ಕೆ ಪ್ರತ್ಯುತ್ತರವಾಗಿ ಹಕೀಮ್ "ಅವರ ವಿಷಯ ನನಗೆ ಗೊತ್ತಿಲ್ಲ, ಈಕೆಯಂತು ನನ್ನ ಪತ್ನಿ ನಾನು ಈಕೆಗಾಗಿ ಇಡೀ ಊರೂರು ಹುಡುಕಾಡುತ್ತಿದ್ದೆ. ಇದು ನೋಡಿ ನನ್ನ ಮೊಬೈಲ್ ನಲ್ಲಿ ಈಕೆಯ ಮುಂಚಿನದೆ ಫೋಟೋ ಇದೆ. ನೋಡಿ ಬೇಕಿದ್ದಲ್ಲಿ. ಹಾಗಿರುವಾಗ ನಾನು ಒಂದು ರೆಸ್ಟೋರೆಂಟ್ ನಲ್ಲಿ ಹುಡುಕಾಡಬೇಕಿದ್ದಲ್ಲಿ ಈ ಹುಡಿಗಿ ಸಿಕ್ಕಿದಳು.. ಅಚಾನಕ್ಕಾಗಿ ನನ್ನ ಮೊಬೈಲ್ ಕೆಳಗೆ ಬಿದ್ದ ತಕ್ಷಣ ಎತ್ತಿ ಕೊಂಡವಳೇ ಇದರಲಿದ್ದ ನನ್ನ ಹೆಂಡತಿಯ ಫೋಟೋವನ್ನು ನೋಡಿ ಈಕೆ ನಮ್ಮ ಮನೆಯಲ್ಲಿ ಇದ್ದಾಳೆ ಎಂದು ನನ್ನನು ಇಲ್ಲಿಗೆ ಕರೆದುಕೊಂಡು ಬಂದಿದ್ದಾಳೆ. ಮತ್ತು ಈಕೆ ಬಾಡಿಗೆ ಗಂಡನನ್ನು ಹುಡುಕಿದ್ದು ಈಕೆಯನ್ನು ಮನೆಯಿಂದ ಹೊರಗೆ ಹಾಕಲು ಯೋಚಿಸಿದ್ದು ಅದೆಲ್ಲ ನನಗೆ ಗೊತ್ತಿಲ್ಲ. ಈಗ ನಮಗೆ ಅದೆಲ್ಲ ವಿಚಾರಿಸುವಂತ ಸಮಯವು ಇಲ್ಲ, ಏನು ಆಗಿದೆ ಇಲ್ಲಿಗೆ ಮುಗಿದಿದೆ. ಇನ್ನು ನನ್ನ ಪತ್ನಿಯನ್ನು ನಾನು ಕರೆದುಕೊಂಡು ಹೋಗುತ್ತೇನೆ" ಎಂದ ಹಕೀಮ್ ಆಕೆಯನ್ನು ಕರೆದುಕೊಂಡು ಹೋಗಲು ಸಿದ್ದನಾಗುತ್ತಾನೆ.ಅಷ್ಟರಲ್ಲಿ ಹಿಂದಿನಿಂದ ಒಂದು ಧ್ವನಿ ಕೇಳುತ್ತದೆ. ಇದೆಲ್ಲವೂ ಶುದ್ಧ ಸುಳ್ಳು ಈಕೆ ಮಶೂದಳು ಅಲ್ಲಾ ಇತನ ಪತ್ನಿ ಕೈರುನ್ನಿಸವು ಅಲ್ಲಾ ಬದಲಾಗಿ ಈಕೆಯ ಹೆಸರು ರುಬೀನಾ

ಈಕೆ ಅದೇ ರುಬೀನಾ, ತನ್ನ ತಾಯಿ ಅಣ್ಣನನ್ನು ಬಿಟ್ಟು ಅರ್ಧ ರಾತ್ರಿಯಲ್ಲಿ ಯಾವನದೋ ಜೊತೆ ಓಡಿ ಬಂದಳು ಅಲ್ಲಾ ಈಕೆ ಆ ರುಬೀನಾ ಎಂಬ ಧ್ವನಿ ಕೇಳಿಸುತ್ತದೆ.ರುಬೀನಾ ಯಾರು ಇದು ತನ್ನ ಬಗ್ಗೆ ಈ ರೀತಿ ಹೇಳುತ್ತಿದ್ದಾರೆ ಎಂದು ಆಶ್ಚರ್ಯದಿಂದ ಹಿಂದೆ ತಿರುಗಿ ನೋಡುತ್ತಾಳೆ.

ರುಬಿನಾ ಆಶ್ಚರ್ಯದಿಂದ ತಿರುಗಿ ನೋಡಿದಳು.ನೋಡಿದಾಗ ಅಲ್ಲಿ ನೌಫಲ್ ನಿಂತಿದ್ದನು. ಅವಳಿಗೆ ಅರಿವು ಇಲ್ಲದಂತೆ ಅವಳ ಬಾಯಿಯಿಂದ "ನೌಫಲ್ ನೀನಾ! ನೀನು ಯಾವಾಗ ಬಂದೇ? ಎಂಬ ಪ್ರಶ್ನೆಯು ಬಂದಿತು. ಅಶ್ಫಾಕ್ ಆಶ್ಚರ್ಯದಿಂದ ರುಬೀನಾಳತ್ತ ನೋಡುತ್ತಾನೆ.

ರುಬೀನಾಳ ಮಾತಿಗೆ ಪ್ರತ್ಯುತ್ತರ ಕೊಡುತ್ತಾ ನೌಫಲ್ "ಇದೋ ರುಬೀನಾ ಈಗಷ್ಟೆ ಬಂದೇ. ನಿಮ್ಮ ಮಾತೆಲ್ಲ ಕೇಳಿಸಿ ಕೊಂಡೆ. ಇವರಲ್ಲರೂ ಇಷ್ಟೆಲ್ಲಾ ಹೇಳುತ್ತಾ ಇದ್ದಾರೆ. ಇವಳು ಮಶೂದ ಮತೊಬ್ಬ ನೀನು ಕೈರುನ್ನಿಸ ಹೇಳುತ್ತಿದ್ದರೂ ಸುಮ್ಮನೆ ಇದ್ದೆಯಲ್ಲ ಆಗಲೇ ಬಂದೇ. ನಿನ್ನ ನಾಟಕ ಎಲ್ಲರ ಎದುರಲ್ಲಿ ತಿಳಿಸಲೆಂದೆ ನಾನು ಬಂದಿದಿದ್ದು ಅದೇ ಸಮಯಕ್ಕೆ ಒಳ್ಳೆಯದೇ ಅಯ್ತು. ನಿನ್ನ ನಾಟಕ ಎಲ್ಲರ ಎದುರಲ್ಲಿ ಬಯಲು ಆಯಿತು.
ಎಲ್ಲಿದ್ದಾನೆ, ಯಾವನ ಜೊತೆ ಓಡಿ ಬಂದಿದ್ದು ನೀನು?
ಹಾ..ಹೇಗೋ ಓಡಿ ಬಂದಿದ್ದೀಯಾ ಬಂದು ಅಶ್ಫಾಕ್ ನ ಮನೆಯಲ್ಲಿ ಸೇರಿಕೊಂಡಿದ್ದೀಯಲ್ಲ ನಾಚಿಕೆ ಇಲ್ಲವ ನಿನಗೆ? ಯಾವನು ನಿನ್ನ ಮೇಲೆ ಜೀವವೇ ಇಟ್ಟುಕೊಂಡಿದ್ದನೋ, ರಾತ್ರಿ ಹಗಲು ನಿನ್ನ ಬಗ್ಗೆ ಯೋಚಿಸುತ್ತಿದ್ದನೋ ,ಆತನ ಮನೆಯಲ್ಲಿ ಬಂದು ಸೇರಿದ್ದೀಯಲ್ಲ...!!!
ಏನೋ ನಿನ್ನ ಗೆಳಯ ಅರ್ಧಕ್ಕೆ ಬಿಟ್ಟು ಹೋದನೆ..?
ಎಲ್ಲಿದಾನೆ ಆತ ? "ಎಂಬುದು ಪ್ರಶ್ನಿಸಲು ಪ್ರಾರಂಭಿಸುತ್ತಾನೆ.
ಅಶ್ಫಾಕ್ ಗೆ ಆಶ್ಚರ್ಯದಲ್ಲಿ ತನ್ನ ಕಿವಿಗಳನ್ನು ತನಗೆ ನಂಬಲಿಕ್ಕೆ ಆಗುವದಿಲ್ಲ.!!!

ಈಕೆ ರುಬೀನಾಳೇ? ನೌಫಲ್ ರುಬೀನಾಳ್ಳನ್ನು ನೋಡಿದ್ದಾನೆ ಆತನು ಎಂದು ಸುಳ್ಳು ಹೇಳಲಿಕ್ಕೆ ಇಲ್ಲ. ಈಕೆ ರುಬೀನಾಳೆ, ಅದಲ್ಲದೆ ಈಕೆಯ ಬಾಯಿಂದ ನೌಫಲ್ ನ ಹೆಸರು ಬಂದಿದೆ.!!!
ಹೇಗೆ ಈಕೆ ಯೋಚನೆ ಶಕ್ತಿಯನ್ನು ಕಳೆದುಕೊಂಡಿದ್ದಳಲ್ಲೆವೆ. ಮತ್ತೆ ನೌಫಲ್ ಹೆಸರು ಈಕೆಗೆ ಜ್ಞಾಪಕ ಬಂದದ್ದರು ಹೇಗೆ ಎಂದು ತನ್ನಲೇ ಅಲೋಚಿಸುತ್ತಾನೆ..

ನೌಫಲ್ ಮಾತು ನಿಲ್ಲಿಸಿದ ಕೂಡಲೇ ರುಬೀನಾ 
"ಏನು ಹೇಳುತ್ತಾ ಇದ್ದಿಯಾ ನೌಫಲ್? ಓಡಿ ಬಂದಿದ್ದೇನ? ಯಾರ ಜೊತೆ ಓಡಿ ಬಂದಿದ್ದೇನೆ? ನೀನು ಕಂಡಿದ್ದೀಯ ನಾನು ಓಡಿ ಬಂದದ್ದು? ನಿನಗೆ ಏನು ಅನಿಸುತ್ತದೆ ನಾನು ಅಂತಹ ಹುಡುಗಿ ಎಂದು ಅನಿಸುತ್ತದೆಯೇ? ನಾನು ಯಾರ ಜೊತೆಗೂ ಓಡಿ ಬಂದಿಲ್ಲ. ನನ್ನ ಬದುಕಿನ ನಡೆದಂತಹ ವಿಧಿಯೇ ಬೇರೆ. ಅದೆಲ್ಲವೂ ನೀವು ಅರ್ಥ ಮಾಡದೇ ಕೊಂಡಿರಿ.ನೀನು ಅರ್ಥ ಮಾಡದೇ ಏನೋನೋ ಬಾಯಿಗೆ ಬಂದಿದ್ದು ಆ ರೀತಿ ಎಲ್ಲಾ ಹೇಳ ಬೇಡ. ಹ್ಞಾಂ ಇವರೆಲ್ಲ ಮಾತಾಡುವಾಗ ಸುಮ್ಮನೆ ನಿಂತಿದ್ದೆ. ಯಾಕೆ ಗೊತ್ತೆ..? ನನ್ನ ಕೈಯಲ್ಲಿ ಏನು ಮಾಡಲು ಸಾಧ್ಯ ಇರಲಿಲ್ಲ.ಪ್ರತಿ ದಿನ ಪ್ರತಿ ರಾತ್ರಿ ಹಗಲು ಎನ್ನದೆ ನಾನು ಕಷ್ಟಪಡುತ್ತಿದ್ದೇನೆ.ನನ್ನ ಮನಸಿನ ವೇದನೆಯನ್ನು ಅರ್ಥೈಸುವವರು ಯಾರು ಇಲ್ಲ. ನನಗೆ ಯಾವುದೇ ದಾರಿ ಇಲ್ಲ. ಇಲ್ಲಿ ನನ್ನನು ನಂಬುವವರು ಯಾರು ಇಲ್ಲ.ಇನ್ನು ಹೇಗೆ ನಾನು ನಿಜ ಹೇಳುವುದು ಹೇಳು?" ಎಂದು ನೌಫಲ್' ಬಳಿ ಪ್ರಶ್ನಿಸುತ್ತಾಳೆ..

ಅಷ್ಟರಲ್ಲಿ ಅಶ್ಫಾಕ್ ಎದುರಿಗೆ ಬಂದವನೇ,
"ನೀನು ರುಬೀನಾಳ, ಈ ಒಂದು ಮಾತುಗಳಿಗೆ ಉತ್ತರ ಸರಿ ಹೇಳು? ಸತ್ಯ ಹೇಳು.
ನೀನು ರುಬೀನಾಳು ಹೌದ? ನೀನು ಅದೇ ರುಬೀನಾಳ ಯಾವ ರುಬೀನಾಳನ್ನು ನಾನು ನನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದೇನೋ ಆ ರುಬೀನಾಳ ಹೇಳು? ಸತ್ಯ ಹೇಳು,."ಎಂದು ಕೇಳುತ್ತಾನೆ!!!!!!

ರುಬೀನಾಳಿಗೆ ಏನು ಹೇಳಲು ಆಗುವುದಿಲ್ಲ ಒಂದು ಕ್ಷಣ ಆತನ ಕಣ್ಣುಗಳನ್ನೇ ದಿಟ್ಟಿಸಿ ನೋಡುತ್ತಾಳೆ. ಸುಳ್ಳು ಹೇಳಲು ಮನಸ್ಸು ಬರುದಿಲ್ಲ,
"ಹಾ.. ಅಶ್ಫಾಕ್ ನಾನು ಅದೇ ರುಬೀನಾ.ನೀನು ಕರೆಮಾಡಿ ತಾನು ಮದುವೆ ಆಗಲು ಬಯಸುತ್ತೇನೆ ಎಂದು ಹೇಳಿದ್ದೀಯಾ ಅದೇ ರುಬೀನಾ..."

"ಹಾಗಿದ್ದ ಮೇಲೆ ನೀನು ಏಕೆ ಸುಳ್ಳು ಹೇಳಿದೆ? ಯಾತಕ್ಕಾಗಿ ಮಶೂದ ಎಂದು ನಾವು ಹೇಳಿದಾಗ ನೀನು ನಿನ್ನ ನಿಜ ನಾಮ ಹೇಳಲಿಲ್ಲ?ಇಷ್ಟು ದಿವಸ ಯಾತಕ್ಕಾಗಿ ನೀನು ನೆನಪಿನ ಶಕ್ತಿ ಇಲ್ಲದವರಗೆ ನಮ್ಮ ನಡುವಲ್ಲಿ ನಟಿಸಿದೆ ಹೇಳು? ಎಲ್ಲದಕ್ಕೂ ಉತ್ತರ ಹೇಳು? ನಿನಗೆ ನನ್ನ ಭಾವನೆಗಳ ಜೊತೆಗೆ ಆಟ ಆಡುವಂತ ಅಯಿತಲ್ಲ?" ಅಶ್ಫಾಕ್ ದುಃಖದಲ್ಲಿ ಕೇಳುತ್ತಾನೆ..!
"ಹೇಗೆ ಹೇಳಲಿ ಅಶ್ಫಾಕ್ ನಾನು ನಾನೇ ರುಬೀನಾ ಎಂದು? ಹೇಳಿದರೆ ನೀನು ನಂಬುತ್ತೇದ್ದಿಯೇ.? ನೀನೇ ನನ್ನ ಬಳಿ ಮೊದಲು ಸಿಕ್ಕಿದಾಗಲೇ ರುಬೀನಾಳ ಪ್ರಸ್ತಾಪ ಇಟ್ಟಿದ್ದೆ. ಮತ್ತೆ ನಾನೇ ಆ ರುಬೀನಾ ಎಂದು ಒಂದು ವೇಳೆ ನಿನ್ನ ಬಳಿ ಹೇಳಿದ್ದರೆ ನೀನು ನಾನು ಸುಳ್ಳು ಹೇಳುತ್ತ ಇದ್ದೇನೆ, ನಿನಗೆ ನಾನು ಮೋಸ ಮಾಡುತ್ತಾ ಇದ್ದೇನೆ ಎಂದು ನೀನು ತಿಳಿದು ಕೊಳ್ಳುತ್ತಾ ಇರಲಿಲ್ಲವೇ? ಅದಕೋಸ್ಕರ ನಾನು ನನ್ನಲ್ಲಿಯೇ ಬಚ್ಚಿ ಇಟ್ಟು ಕೊಂಡೆ.ಪ್ರತಿ ಸಮಯವು ನೀನು ರುಬೀನಾಳ ಬಗ್ಗೆ ಮಾತನಾಡುವಾಗ ನಾನೇ ಆ ರುಬೀನಾ ಎಂದು ಹೇಳಬೇಕೆಂದು ಆಗುತ್ತಿತ್ತು. ನನ್ನ ಪರಿಸ್ಥಿತಿ ನಿನಗೆ ಗೊತ್ತಲ್ಲ ಹೇಳಿದರೆ ಎಲ್ಲವು ಇಕ್ಕಟಿನಲ್ಲಿ ಸಿಕ್ಕಿ ಕೊಳ್ಳುವಂತಗುತ್ತಿತ್ತು. ನಿನ್ನ ಸ್ನೇಹ ಕಳೆದುಕೊಳ್ಳಬೇಕಾಗಿ ಬರುತಿತತ್ತೋ ಎಂದು ನಾನು ಯೋಚಿಸುತಿದ್ದೆ.ಒಂದು ವೇಳೆ ನಾನು ರುಬೀನಾ ಎಂದು ಹೇಳಿದರು ನೀನು ನಂಬುವ ಸ್ಥಿತಿಯಲ್ಲಿ ಇರಲಿಲ್ಲ ಅಶ್ಫಾಕ್.
ನೀನು ಎನಿಸುತ್ತಿದ್ದೆ ಎಲ್ಲಿ ನಿನ್ನ ಪ್ರೀತಿ ಗಳಿಸಲು ಅಥವಾ ನಿನ್ನನು ಮದುವೆಯಾಗಲು .ನಾನು ನಾನೇ ರುಬೀನಾ ಹೇಳುತ್ತಿದ್ದೇನೆ ಎಂದು, ಅದಕೋಸ್ಕರ ನಾನು ಹೇಳಲಿಲ್ಲ .ಅದು ಬಿಟ್ಟರೆ ನನ್ನ ಮನಸಿನಲ್ಲಿ ಯಾವುದೇ ವಂಚನೆ ಮಾಡಲೋ ,ಮೋಸ ಮಾಡುವಂತಹ ಇರಾದೆ ಇಲ್ಲ."

" ಸರಿ ನಿನಗೇ ನೀನು ರುಬೀನಾ ಎಂದು ಹೇಳೋದು ಬೇಡವಾಗಿತ್ತು ನಿಜ ಒಪ್ಪಿಕೊಳ್ಳುತ್ತೇನೆ. ಆದರೆ ನಿನಗೆ ನೆನಪಿನ ಶಕ್ತಿ ಇಲ್ಲ ಎಂದು ನಟನೆ ಮಾಡುವ ಅಗತ್ಯ ಏನು ಇತ್ತು ಹೇಳು? ನಿನಗೆ ಎಲ್ಲಾ ನಿಜ ಹೇಳಿದರೆ ಆಗುತ್ತಿರಲಿಲ್ಲವೇ, ನನಗೆ ನೆನಪಿನ ಶಕ್ತಿ ಇದೆ ಎಂದು ಹೇಳಿದರೆ ಆಗುತ್ತಿರಲಿಲ್ಲವೇ? ಯಾಕೇ ಸುಮ್ಮನೆ ನೆನಪಿನ ಶಕ್ತಿ ಇಲ್ಲದವರಂತೆ ನಟಿಸಿದೆ "ಎಂದು ಅಶ್ಫಾಕ್ ಕೇಳಿದನು.

ಅಷ್ಟರಲ್ಲಿ ನಡು ಬಾಯಿ ಹಾಕಿದವಳೇ ಇಶ್ರತ್ " ನೋಡು ಆಕೆ ಇನ್ನು ಒಳ್ಳೆಯವಳು ಎಂದು ಹೇಳುತ್ತಿ ‌ನಿನಗೆ ಎಷ್ಟು ಹೇಳಿದರು ಅರ್ಥ ಆಗುವುದಿಲ್ಲ ಅಶ್ಫಾಕ್. ಆಕೆ ಒಳ್ಳೆಯವಳು ಆಗಿದ್ದರೆ ನಿಜ ಹೇಳುತ್ತಿದ್ದಳು. ಆದರೆ ನಿನ್ನ ಆಸ್ತಿ, ನಿನ್ನ ಕಾರು, ಬಂಗಲೆ ಎಲ್ಲಾ ನೋಡಿ ಇಲ್ಲಿ ಇರಲು ಮನಸಾಗಿ ಹೇಗೆ ತಾನೇ ನಿಜ ಹೇಳುತ್ತಾಳೆ "ಎಂದು ಕೇಳುತ್ತಾಳೆ.

 ರುಬೀನಾ ಸಿಟ್ಟಿನಿಂದ ಇಶ್ರತ್ ನತ್ತ ನೋಡುತ್ತಾಳೆ . 
   " ನೋಡಿ ನನಗೆ ಆಸ್ತಿಯಲ್ಲಾ ಗಲಿ ಅಂತಸ್ತಲ್ಲು ಆಗಲಿ ಯಾವುದೇ ವ್ಯಾಮೋಹ ಇಲ್ಲ ಇಶ್ರತ್. ಹಾಗಿದ್ದಲ್ಲಿ ಅಶ್ಫಾಕ್ ನನ್ನನು ಅವತ್ತು ಮದುವೆಯಗಲು ಕೇಳಿದಾಗಲೇ ನಾನು ಒಪ್ಪಿಕೊಳ್ಳುತ್ತಿದ್ದೆ . ನಾನು ವ್ಯಕ್ತಿತ್ವಕ್ಕೆ ಪ್ರಾಮುಖ್ಯತೆ ಕೊಡುತ್ತೇನೆ ಹೊರತು ಆಸ್ತಿ ಅಂತಸ್ತಿಗಲ್ಲ .ಅಂದು ಅಶ್ಫಾಕ್ ಗೆ ಕರೆ ಮಾಡಿದಾಗ ಯಾವುದೋ ಹೆಣ್ಣು ಆಕೆಯ ಬಗ್ಗೆ ಕೆಟ್ಟದಾಗಿ ಮಾತನಾಡಿದಳು .ನನಗೆ ಸಂದೇಹ ಇದೆ ಅದು ನೀನೇ ಇರಬೇಕು ಎಂದು. ಹಾಗೆ ಅಶ್ಫಾಕ್ ಕೆಟ್ಟವನು ಎಂದು ಭಾವಿಸಿದ್ದೆ.

ಅಷ್ಟರಲ್ಲಿ ಬಾಯಿ ಹಾಕಿದವನೇ ಅಶ್ಫಾಕ್
"ಇಶ್ರತ್ ,ನಿನಗೆ ಅದೆಲ್ಲ ಬೇಕಾಗಿಲ್ಲ.ಇದು ನಮ್ಮಿಬ್ಬರ ನಡುವಿನ ವಿಷಯ. ನೀನು ಮೂಗು ತೋರಿಸುವ ಆವಶ್ಯಕತೆಯೇ ಇಲ್ಲ "ಎಂದು ಹೇಳುತ್ತಾನೆ.
"ಹ್ಞಾಂ.. ನಿನಲ್ಲಿ ಕೇಳಬೇಕೆಂದು ಇದ್ದೆ. ಅಂದು ನೀನು ಅವರಿಗೆ ಕರೆ ಮಾಡಿದ್ದಲ್ವಾ ನನ್ನ ವ್ಯಕ್ತಿತ್ವದ ಬಗ್ಗೆ ಕೆಟ್ಟದಾಗಿ ಏನೆಲ್ಲಾ ಹೇಳಿದೆ ಅಲ್ವಾ? ಈಗ ಅವಳಿಗೆ ತಿಳಿಯಿತು ಅಲ್ವಾ ನಿನ್ನ ವ್ಯಕ್ತಿತ್ವ ಎಂತಹದ್ದು ಎಂದು. ಹಾಗಾಗಿ ನನಗೆ ಅದನ್ನು ಕೇಳಬೇಕಾದ ಅವಶ್ಯಕತೆ ಇಲ್ಲ‌. ಆದರೆ ಮಶೂದ... ಓಹ್ ಸ್ವಾರಿ ರುಬೀನಾ, ಅಂದು ರಾತ್ರಿ ಏನಾಯಿತು ಅದನ್ನು ನನಗೆ ಮೊದಲು ಹೇಳು ಮತ್ತೆ ಎಲ್ಲಾ ಮಾತನಾಡು" ಎಂದು ರುಬೀನಾಳ್ಳತ್ತಾ ಕೇಳುತ್ತಾನೆ.

 "ಹೇಳುತ್ತೇನೆ ಅಶ್ಫಾಕ್, ಇಂದು ನಿಮಗೆ ಇರುವಂತಹ ಸಂದೇಹವನ್ನು ಎಲ್ಲಾ ನಿವಾರಿಸುತ್ತೇನೆ. ಅವತ್ತು ರಾತ್ರಿ ಏನೂ ನಡೆಯಿತ್ತು ಗೊತ್ತಿದೆಯಾ ಎಂದು ಹೇಳಿ ರುಬೀನಾ ಹೇಳಲು ಪ್ರಾರಂಭಿಸಿದಳು.ಹಕೀಮನ ಕೈ ಕಾಲುಗಳು ನಡುಗಲು ಪ್ರಾರಂಭಿಸಿದವು. 

ಆ ದಿನ ಅಶ್ಫಾಕ್ ಕರೆ ಮಾಡಿದ ದಿನ. ಯಾವೊದೋ ಹುಡುಗಿ ಸುಳ್ಳು ಹೇಳಿದಾಗ ನಿಜ ಎಂದು ನಂಬಿದ ರುಬೀನಾ, ನೌಫಲ್ ನನ್ನು ಬೈದು ಕಳುಹಿಸಿದಳು.
ಅಷ್ಟರ ಹೊತ್ತಿಗೆ ನನ್ನ ಅಜ್ಜನ ಮನೆಯಿಂದ ಕರೆ ಬಂದಿತ್ತು. ಅಜ್ಜನಿಗೆ ಹುಷಾರಿಲ್ಲ ಎಂದು ಅಮ್ಮ ಹಾಗೂ ಮುಕ್ತರ್ ಅಲ್ಲಿಗೆ ತೆರಳಿದರು. ನಾನು ಪಕ್ಕದ ಮನೆಯ ಆಮೀನಾದರ ಮನೆಯಲ್ಲಿ ಇದ್ದೆ.

ಅಷ್ಟು ಹೊತ್ತಿಗೆ ನನ್ನ ತಂದೆ ರಾತ್ರಿ ಹೊತ್ತು ಬಂದವರೇ,
ಯಾಕೆ ಕಂಡವರ ಮನೆಯಲ್ಲಿ ಇರುತ್ತಿಯಾ ಎಂದು ನನ್ನ ಮಲತಾಯಿಯ ಮನೆಗೆ ಕರೆದುಕೊಂಡು ಹೋದರು.

ಅಲ್ಲಿ ನಾನು ನನ್ನಷ್ಟಕ್ಕೆ ಇದ್ದೆ. ಅಂದು ರಾತ್ರಿಗೆ ಬಂದವನೇ ಇಲ್ಲಿ ನಿಂತಿದ್ದಾನಲ್ಲ ಈ ಹಕೀಮ್ ಬಂದವನೇ ನನ್ನ ರೂಮಿಗೆ ಬಂದು ನೀನು ನನ್ನನ್ನು ಪ್ರೀತಿಸಬೇಕು ಎಂದು ಹೇಳಿದ. ಆದರೆ ಪ್ರೀತಿ ,ಪ್ರೇಮ ಎಂಬುವುದು ನನಗೆ ಇಷ್ಟವಿಲ್ಲದ ಕಾರಣ ನಾನು ಆತನ ಬಳಿ ನಯವಾಗಿ ತಿರಸ್ಕರಿಸಿದೆ. ಅದನ್ನು ಆತ ದ್ವೇಷದ ಹಾಗೆ ಮನಸಿನಲ್ಲಿ ಹಚ್ಚಿ ಕೊಂಡ‌. ನಂತರ ನನ್ನ ಬಳಿ ಬಂದವನೇ ನೀನು ಒಂದು ಗಂಟೆ ಒಳಗಾಗಿ ನನ್ನನು ಪ್ರೀತಿಸುತ್ತೆನೆ ಎಂದು ಒಪ್ಪಬೇಕು‌ನಿನ್ನ ಅಪ್ಪನ ಬಳಿ ಹೋಗಿ ನಾನು ಆತನನ್ನೇ ಮದುವೆ ಆಗುತ್ತೇನೆ ಎಂದು ಹೇಳಬೇಕು ಎಂದು ಹೇಳಿದ. ಆದರೆ ನನಗೆ ಎಷ್ಟೇ ಆತ ಬೆದರಿಕೆ ಹಾಕಿದರೂ ಕೂಡ ನಾನು ಹೇಳಲಿಲ್ಲ. ಅದಕ್ಕಾಗಿ ಆತ ನನ್ನ ಮೇಲೆ ಹಗೆ ಸಾಧಿಸಬೇಕೆಂದು ಕೊಂಡ‌. ಅದಕಾಗಿ ಸಂಚು ರೂಪಿಸಿದ.
ಅಂದು ರಾತ್ರಿ ಕೋಣೆಯಲ್ಲಿ ಮಲಗಬೇಕಾದ ನನ್ನನ್ನು ಚಾವಡಿಯಲ್ಲಿ ಮಲಗುವಂತೆ ಮಾಡಿದ. ಅನಂತರ ರಾತ್ರಿ ಹೊತ್ತು ಆತನ ಗೆಳೆಯರಿಗೆ ಕರೆ ಮಾಡಿ ನನ್ನನ್ನು ಕರೆದುಕೊಂಡು ಅಲ್ಲಿಂದ ತಪ್ಪಿಸಬೇಕೆಂದು ಪ್ರಯತ್ನಿಸಿದ.ಆದರೆ ವಿಧಿಯ ಬರಹ ಬೇರೇಯೇ ಆಗಿತ್ತು. ನನ್ನ ಆತ ಹಿಡಿದುಕೊಂಡು ಹೋಗಬೇಕಾದರೆ ನನ್ನ ಕೈಗೆ ಸಿಕ್ಕಿದ ಬಾಟಲ್ ನ್ನು ಎತ್ತಿ ಕೊಂಡು ಆತನ ಕಾಲಿಗೆ ಬಲವಾಗಿ ಹೊಡೆದು ನಾನು ಅಲ್ಲಿಂದ ಓಡಲು ಪ್ರಯತ್ನಿಸಿದೆ. ನಿಮಗೆ ಸಂದೇಹ ಇದ್ದಲಿ ಆತನ ಕಾಲು ನೋಡಿ. ಇಂದಿಗೂ ಆ ಗಾಯ ಇರಬಹುದು, ಅಥವಾ ಒಣಗಿದ ಕಲೆಯಾದರು ಇರಬಹುದು.
ಆದರೆ ಓಡಿ ಹೋಗಬೇಕು ಎನ್ನುವಷ್ಟರಲ್ಲಿ ಆತನ ಗೆಳೆಯರು ನನ್ನನ್ನು ಹಿಡಿದುಕೊಂಡರು. ಹಿಡಿದುಕೊಂಡವರೆ ನನ್ನನ್ನು ಕಾರಿನ ಒಳಗೆ ದಬ್ಬಿದರು. ಅಷ್ಟರಲ್ಲಿ ಹಕೀಮ್ ತನ್ನ ಪ್ಲಾನನ್ನು ಬದಲಾಯಿಸಿದ. ಅವರ ಬಳಿ ನನ್ನನ್ನು ಕರೆದುಕೊಂಡು ಹೋಗುವಂತೆ ಹೇಳಿದ.ಹಾಗೆ ಅವರು ಇಬ್ಬರು ಕರೆದುಕೊಂಡು ಕೊಂಡು ಬಂದರು. ನಂತರ ಊರಿನಲ್ಲಿ ಏನುವಿಷಯ ಆಗಿದೆ ಎಂದು ನನಗೆ ತಿಳಿದಿಲ್ಲ. ನಾನು ಬೆಳಗಿನ ಜಾವ ಮುಂಬೈ ತಲುಪಿದ್ದೆ. ಇವರು ಟೀ ಕುಡಿಯಲು ಎಂದು ತಮ್ಮ ಕಾರನ್ನು ನಿಲ್ಲಿಸಿದ್ದರು.
ಇದೆ ಸೂಕ್ತ ಸಮಯ ಎಂದು ನನಗೆ ಅನಿಸಿತು.ಹಾಗಾಗಿ ಅವರು ಟೀ ಕುಡಿಯುವುದರ ಒಳಗಾಗಿ ನಾನು ಕಾರಿನಿಂದ ಇಳಿದೆ. ಕಾರಿನಿಂದ ಇಳಿದವಳೇ ಒಡಲು ಪ್ರಾರಂಭಿಸಿದೆ.
ನಾನು ಗಲ್ಲಿಯೊಂದರಲ್ಲಿ ನುಗ್ಗಿದೆ.
ತಪ್ಪಿಸುವ ಭರದಲ್ಲಿ ನನ್ನ ಕೈಯಲ್ಲಿ ಆಗುವಷ್ಟು ವೇಗದಲ್ಲಿ ಒಡಲು ಪ್ರಾರಂಭಿಸಿದೆ. ನನ್ನ ಎದುರಿಗೆ ಹೈವೇ ಸಿಕ್ಕಿದಾಗ ನನಗೆ ಜೀವ ಸಿಕ್ಕಿದಂತಾಯಿತು.
ಹಾಗೆ ಓಡುವ ರಭಸಕ್ಕೆ ಒಂದು ಕಾರಿಗೆ ಹೋಗಿ ಗುದ್ದಿದೆ. ಅಷ್ಟರಲ್ಲಿ ಏನು ಆಯಿತು ಗೊತ್ತಿಲ್ಲ. ಎಚ್ಚರ ಬಂದಾಗ ನಾನು ಆಸ್ಪತ್ರೆಯಲ್ಲಿ ಇದ್ದೆ."

ಅಷ್ಟರಲ್ಲಿ ಆಕೆಯ ಮಾತು ತಡೆದವನೇ ಅಶ್ಫಾಕ್.,
"ನಿಲ್ಲು, ಅದರ ನಂತರ ನನಗೆ ತಿಳಿದಿದೆ. ನಿನಗೆ ಅಕ್ಸಿಡೆಂಟ್ ಮಾಡಿದವನು ನಾನೇ.ನೀನು ರಕ್ತದ ನಡುವಿನಲ್ಲಿ ಬಿದ್ದಿದ್ದನ್ನು ಕಂಡ ನಿನ್ನನು ಎತ್ತಿ ತಂದು ಆಸ್ಪತ್ರೆಯಲ್ಲಿ ಮಾಡಿದೆನು.
ಆಗ ಡಾಕ್ಟರ್ ಬಂದು ಆಕೆಗೆ ತಲೆಗೆ ಬಲವಾದ ಪೆಟ್ಟು ಬಿದ್ದಿದರಿಂದ ನೆನಪಿನ ಶಕ್ತಿ ಹೋಗಲು ಸಾಧ್ಯವಿದೆ ಎಂದು ಹೇಳಿದರು.
ನಿನಗೆ ಎಚ್ಚರ ಬಂದಾಗ ನೀನು ಯಾರು ಎಂಬುದು ನಿನಗೆ ತಿಳಿದಿರಲಿಲ್ಲ. ಆಗ ನಾವು ನಿನ್ನ ಬಳಿ ನೀನು ಮಶೂದ ಎಂದು ಸುಳ್ಳು ಹೇಳಿದೆವು. ಮತ್ತೆ ನಿನ್ನ ನೆನಪಿನ ಶಕ್ತಿ ಬಂದಿದ್ದು ಯಾವಾಗ? ನೀನು ನಮ್ಮ ಬಳಿ ಮಶೂದ ಎಂದು ನಟಿಸಿದ್ದು ಯಾತಕ್ಕಾಗಿ ?"ಎಂದು ಕೇಳಿದನು.

"ನನಗೆ ತಿಳಿದಿಲ್ಲ? ನಾನು ಆಸ್ಪತ್ರೆಯಲ್ಲಿ ಇದ್ದಾಗ ಮತ್ತೆ ಆ ಎರಡು ಮುಖವು ಗೋಚರವಾದವು.ನಾನು ಎಲ್ಲೋ ಇವರನ್ನು ನೋಡಿದ್ದೇನೆ, ನೋಡಿದ್ದೇನೆ ಎಂದು ನೆನಪು ಆದಾಗ ನನಗೆ ತಿಳಿಯಿತು, ನನ್ನನ್ನು ಕರೆದುಕೊಂಡು ಬಂದದ್ದು ಅವರೇ ಎಂದು. ಆಗ ನನಗೆ ನನ್ನ ನೆನಪಿನ ಶಕ್ತಿ ಬಂದಿದ್ದು. ಅಷ್ಟರಲ್ಲಿ ನೀನು ನಿನ್ನ ಗೆಳೆಯನಲ್ಲಿ ಮಾತನಾಡುದನ್ನು ನಾನು ಕೇಳಿಸಿಕೊಂಡೆ ಆಗ ನನಗೆ ತಿಳಿಯಿತು ನೀನು ಅದೇ ಅಶ್ಫಾಕ್ ಎಂದು.
ನೀನು ನಿನ್ನ ಗೆಳೆಯನ ಬಳಿ ಮಾತನಾಡುವುದನ್ನು ನಾನು ಕೇಳಿಸಿಕೊಂಡೆ. ನಾನು ಪ್ರೀತಿಸುವ ಹುಡುಗಿ ಯಾವನದೋ ಜೊತೆ ಓಡಿ ಹೋಗಿದ್ದಾಳೆ ಎಂದು ನೀನು ಹೇಳುವಾಗ ನನಗೆಲ್ಲಾ ತಿಳಿಯಿತು. ನನ್ನ ಬಗ್ಗೆ ಈ ರೀತಿಯಾಗಿ ಮಾತನಾಡಿರಬಹುದು ಎಂದು ನಾನು ಆಲೋಚಿಸಿದೆ. ನಾನು ಸತ್ಯ ಹೇಳಿದರೆ ಒಂದು ವೇಳೆ ನೀನು ನಂಬಲಿಕೆ ಇರಲಿಲ್ಲ ಎಂದು ನನಗೆ ಗೊತಾಯಿತು. ಅದಕೋಸ್ಕರ ನಾನು ನಿಮ್ಮ ಸುಳ್ಳಿನ ಜೊತೆಯೇ ಬೆರೆತು ಹೋದೆ.

ಆ ಸಮಯದಲ್ಲಿ ನಾನು ನಾನೇ ರುಬೀನಾ ಎಂದಿದ್ದರೆ ನೀನು ಏನೋ ಹೇಳುತ್ತಿದ್ದೆ‌.ಕೋಪದ ರಭಸದಲ್ಲಿ ನನ್ನನ್ನು ಅಲ್ಲಿಂದಲೇ ಏನಾದರೂ ಮಾಡಿ ಬಿಡುತ್ತಿದ್ದೆ. ನನಗೆ ಸತ್ಯ ಹೇಳಲು ಸಮಯಾವಕಾಶ ಬೇಕಿತ್ತು. ಅದಕ್ಕಾಗಿ ನೀವು ನಿಮ್ಮ ಮನೆಗೆ ಕರೆದುಕೊಂಡು ಬಂದಾಗ ನಾನು ಬರುವುದಿಲ್ಲ ಎಂದು ಹೇಳದೆ ನಿಮ್ಮೊಡನೆ ಬಂದೆ. ಅದಕ್ಕಿಂತ ಹೆಚ್ಚಾಗಿ ಈ ಹಕೀಮ್ ಮತ್ತು ಅವನ ಗೆಳಯರ ಕಣ್ಣಿಂದ ನನಗೆ ತಪ್ಪಿಸ ಬೇಕಾಗಿತ್ತು.
ನನಗೆ ಶಾಪಿಂಗ್ ಮಾಡಬೇಕೆಂದು ನೀವು ಅಂದು ನನ್ನ ಕರೆದುಕೊಂಡು ಹೋದಾಗ ಈ ಹಕೀಮ್ ನನ್ನು ನಾನು ಅಲ್ಲಿ ಕಂಡೆ. ಅಂದು ನಿಮಗೆ ನೆನಪು ಇರಬಹುದು ನಾನು ಕಾರಿನಲ್ಲಿ ಗಾಬರಿಯಾಗಿ ಕುಳಿತು ಕೊಂಡಿದ್ದು ಅದು ಹಕೀಮ್ ನನ್ನು ಕಂಡೇ ಆಗಿತ್ತು. ಹಾಗೆ ನಾನು ಇಲ್ಲಿಗೆ ಬಂದಾಗ ನನಗೆ ತಿಳಿಯಿತು ಹೊರಗೆ ಹಕೀಮ್ ನನ್ನನು ಹುಡುಕಾಡುತ್ತಿದ್ದಾನೆ. ನಾನು ಆತನ ಕೈಗೆ ಸಿಗಬಾರದು ಎಂದು. ಅದಕ್ಕಾಗಿ ನಿಮ್ಮ ನಾಟಕದಲ್ಲಿ ನೀವು ನನ್ನನು ಮಶೂದ ಎಂದು ಕರೆದರೂ ನಿಜ ಹೇಳದ್ದು ಆ ಕಾರಣಕ್ಕಾಗಿತ್ತು.

ಈ ನಡುವೆ ಮುಕ್ತಾರೊಡನೆ ನಿಜ ಹೇಳೋಣ ಎಂದು ಮುಕ್ತಾರ್ ಂ ನಂಬರ್ ಗೆ ಸಂಪರ್ಕಿಸ ತೊಡಗಿದೆ. ಆದರೆ ಆತನ ಮೊಬೈಲ್ ಸ್ವಿಚ್ಡ್ ಆಫ್ ಬರುತಿತ್ತು. ಮತ್ತೆ ನಾನು ಏನೂ ಮಾಡಲಿ ಹೇಳು. ನನ್ನ ಮುಂದೆ ಯಾವುದೇ ವಿಧಿ ಇರಲಿಲ್ಲ. ಕೊನೆಗೂ ಈ ರೀತಿ ಬಂದು ನಿಜ ಹೇಳುವಂತೆ ಆಯಿತು;
 "ಈಗ ಹೇಳು ಅಶ್ಫಾಂಕ್ ನನ್ನದು ಏನಾದರು ಇದರಲ್ಲಿ ತಪ್ಪು ಇದೆಯಾ..? ಅಥವಾ ಇನ್ನು ನಿನಗೆ ಏನಾದರು ಸಂದೇಹ ಇದೆಯಾ?"
ನನ್ನ ಸ್ಥಾನದಲ್ಲಿ ಬೇರೆಯಾರಾದರೂ ಹುಡುಗಿ ಇದ್ದರೆ ಇದನ್ನೇ ಮಾಡುತ್ತಿದ್ದಳು. ನನಗೆ ಇದ್ದದ್ದು ನನ್ನ ಪಾವಿತ್ರ್ಯತೆಯನ್ನು ಕಾಪಾಡುವುದು ಹಾಗೂ ಈ ಹಕೀಮ್ ಮತ್ತು ಗೆಳೆಯರಿಂದ ತಪ್ಪಿಸುವುದು. ನಿನ್ನ ಆಸ್ತಿಯಲ್ಲಿ ಆಗಲಿ ನಿನ್ನ ಅಂತಸ್ತುಗಳಲ್ಲಿ ಆಗಲಿ ನನಗೆ ಯಾವುದೇ ವ್ಯಾಮೋಹ ಇದ್ದು ನಾನು ಇಲ್ಲಿ ನಿಂತಿದ್ದು ಅಲ್ಲಾ. ನಂಗೊಂದು ನನ್ನ ಮನೆಗೆ ಮುಟ್ಟುವ ತನಕ ನಿಲ್ಲಲು ಜಾಗ ಬೇಕಾಗಿತ್ತು. ಅದಕೋಸ್ಕರ ನಿನ್ನ ಬಳಸಿ ಕೊಂಡೆ. ಅದರಲ್ಲಿ ನನ್ನ ತಪ್ಪಿದೆ ಎಂದು ನಿನಗೆ ಅನಿಸಿದರೆ ನನ್ನನು ಕ್ಷಮಿಸಿಬಿಡು, ಇನ್ನು ನಿನಗೆ ನಾನು ಮಾಡಿದ್ದು ತಪ್ಪು ಎಂದು ಅನಿಸುತ್ತಿದೆಯಾ ಎಂದು ರುಬೀನಾ ಅಶ್ಫಾಕ್ ನ ಮುಖದತ್ತ ನೋಡಿದಳು.

 


ಲೇಖಕಿ:ಶರೀನ ಸಲೀಂ
NOORUL FALAH ORGANIZATION 

Comments

  1. Bega kadambari complete madi please please please please please please please please please please please please please please please please please please please please please please please please please please please please please please please please please please please please please please please please please please please please please please please..........................................................., 🥰🥰🥰🥰🥰🥰🤗🤗🤗🤗😭🙏🙏🙏🙏🙏🙏🙏🙏🙏🙏🙏🙏🙏

    ReplyDelete
  2. Noor - ul - falah group ge hakistrira please🙏🙏🙏🙏🙏🙏🙏🙏🙏🙏🙏🙏🙏🙏🙏🙏
    Noor - ul - falah nalli
    ಮುಗ್ಧ ಮನಸ್ಸುಗಳ ಮಧುರ ಯಾತ್ರೆ
    Kadambari yalli baru. Billa 😞😞😞😞😔😔😔😟😟😭😭😭😭😭😭😭😭😭😭😭😭😭😭😓😓😭😭😭😭😭😓😓😓😭😓😭😓😭😭😓😓🤤😓😭😭😞😞😞😞😞😞😞😞😞
    Please baruvage madtira ☺
    Please please please please please please please please please please.......................,

    ReplyDelete
  3. Next next next next next next next next next next next next next next next next next next next next next next next next 😡😡😡😡😡😡😡😡😡😡😡😡😡😡😡😡😡😡😡😡🥵🥵🥵

    ReplyDelete
  4. Next................
    Next next next next next🤯 😡😡😡😡😡😡😡😡😡😡😡😡🥵🥵🥵🥵🥵🥵🥵🥵🥵🥵

    ReplyDelete
  5. Next 🤯🤯🤯🤯🤯🤯🤯🤯🤯🤯😡🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵

    ReplyDelete
  6. Next kalisti athava illige end da...

    ReplyDelete
  7. Next next next next 😠😡3😫🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵

    ReplyDelete
  8. Next





    😞😞😞😞😞😞😞😞☹️☹️☹️☹️😥😥😥😥😥😥🤤🤫😭😭😭😭😭😭😭😭😭😭😭😭😭😭😭😭😭😭😭😭😓😓😓😓😓😓😓😓😓😓😓😓😓😓😓😓😓😓😪😪😪😪😪😪😪😨😨😨😨😨😰😰😰😰😰😡😠😠😠😠😠😠😠😠😣😖☹️😩😡😡😡😠😠😠😡😡😡😡😡😡🥵🥵🥵🥵🥵🤬🤬🤬

    ReplyDelete
  9. Next kalistira ilwa.
    Astu antha ata adsti ra......
    ....
    😡😡😡😡😡😡😡😡😡😡😡😡😡😡😡😡😡😡😡😡😡😡😡😡😡😡😡😡😡😡😡😡😡😡😡🤬🤬🤬🤬🥵🥵🥵🥵🥵😠😠😠😭😭😭🤫🙄🙄🙄🥴🥴🥴👿👿👿👿👿👿

    ReplyDelete
  10. 😒😏😫😫🤤🤤🤔🤔👿👿👿👿😈😈👿🎃🎃🎃🎃👀😒😏😏😏😒😏😣😏😒😏😒😏😒😏😏😏😏😏😏😏😏😏😏😒😒😒😒😏😏😒😏😏😏😏😏😒😒😒😒

    ReplyDelete

Post a Comment

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್