ಮೂಸಾ ನಬಿ(ಅ) ಮತ್ತು ಫಿರ್‌ಔನ್


   ಮೂಸಾ ನಬಿ(ಅ) ಮತ್ತು ಫಿರ್'ಔನ್
(ಪೆಟ್ಟಿಗೆಯಲ್ಲಿ ಅದ್ಭುತ
 ಶಿಶು)             

ಬಿಸ್ಮಿಲ್ಲಾಹಿ ರ್ರಹ್ಮಾನಿ ರ್ರಹೀಂ ಅಲ್ ಹಮ್ದುಲಿಲ್ಲಾಹಿ ರಬ್ಬಿಲ್ ಆಲಮೀನ್. ಅಸ್ಸಲಾತು ವಸ್ಸಲಾಮು ಅಲಾ ಸಯ್ಯುದುನಾ ಮುಹಮ್ಮದಿನ್ ವ'ಅಲಾ ಆಲಿಹಿ ವ'ಸಹ್'ಬಿಹಿ ವಸಲ್ಲಮ್*

      ಅದು ಈಜಿಪ್ಟಿನಲ್ಲಿರುವ ದೊಡ್ಡದಾದ ಅರಮನೆ ಅಲ್ಲಿ ಫರೋವ(ಫಿರ್'ಔನ್) ಎಂಬ ಅಕ್ರಮಿ ರಾಜನು ರಾಜಡಳಿತ ನಡೆಸುತ್ತಿದ್ದ. ಅವನ ಏಳು ಮಂದಿ ಹೆಣ್ಣು ಮಕ್ಕಳಿಗೆ ಪಾಂಡು ರೋಗವು ತಗುಲಿತ್ತು. ಇದರಿಂದ ಫರೋವ ತುಂಬಾ ಚಿಂತಿತನಾಗಿದ್ದ.  ಅದೆಷ್ಟೋ ವೈದ್ಯರು ಬಂದು ಚಿಕಿತ್ಸೆ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.  ಮುದ್ದಿನ ಮಕ್ಕಳ ಕಷ್ಟ ಸ್ಥಿತಿ ಕಂಡು ಫರೋವನಿಗೆ   ಚಿಂತೆಯು ಜಾಸ್ತಿಯಾಗತೊಡಗಿತು. ಚಿಂತಾಕ್ರಾಂತನಾಗಿ ಆಸನದಲ್ಲಿ ತಲೆ ತಗ್ಗಿಸಿಕೊಂಡು  ಕುಳಿತಿದ್ದಾಗ ಚಕ್ರವರ್ತಿಯ ಸನ್ನಿಧಿಗೆ ಮಂತ್ರಿ ಹಾಮಾನ್ ಹಾಜರಾದನು. 

    "ಮಹಾ ಪ್ರಭುಗಳೇ!  ತಾವು ಈ ರೀತಿ ಚಿಂತಾಕ್ರಾಂತರಾಗಿ  ಕೂರಲು ಕಾರಣವೇನು?"

      "ನನ್ನ ಮುದ್ದಿನ ಮಕ್ಕಳಿಗೆ ಹಿಡಿದ ಮಾರಕ ರೋಗ ಇದುವರೆಗೂ ಗುಣವಾಗಲಿಲ್ಲ. ಎಷ್ಟೊಂದು ವೈದ್ಯರು ಔಷಧೋಪಚಾರ ಮಾಡಿದರು. ಹೀಗಿರುವಾಗ ಚಿಂತೆ ಹುಟ್ಡದೇ ಇರುತ್ತದೆಯೇ?"

      ಚಕ್ರವರ್ತಿ ಇದು ಹೇಳಿದಾಗ ಮಂತ್ರಿ ಹಾಮಾನ್ ಹೇಳಿದ;   "ಮಹಾಪ್ರಭುಗಳೇ !  ನನಗೊಂದು ವಿಚಾರ ಹೊಳೆಯುತ್ತಿದೆ. ನಾವೊಂದು ಘೋಷಣೆ ಹೊರಡಿಸೋಣ. ರಾಜಕುಮಾರಿಯರ ವ್ಯಾಧಿಯನ್ನು ಗುಣಪಡಿಸುವವರಿಗೆ ಅಪಾರ ಬಹುಮಾನಗಳನ್ನು ಕೊಡಲಾಗುವುದೆಂದು ಡಂಗುರ ಸಾರಿಸೋಣ. ಇದಕ್ಕೆ ಖಂಡಿತ ಫಲ ದೊರೆಯುವುದೆಂದು ನನ್ನ ಅಭಿಪ್ರಾಯ"

      "ಸರಿ, ನಿನ್ನ ಸೂಚನೆ ಒಳ್ಳೆಯದೆಂದು ನನಗನಿಸುತ್ತಿದೆ. ಕೂಡಲೇ ದೇಶವಿಡೀ ಸುದ್ದಿ ಹಬ್ಬಿಸುವ ಏರ್ಪಾಡು ಮಾಡು."

      ಹಾಗೇ, ಹಾಮಾನ್ ಹೇಳಿದ ನಿರ್ದೇಶನದಂತೆ ದೇಶವಿಡೀ ಡಂಗುರ ಸಾರಿದರು. ರಾಜಕುಮಾರಿಯರ ವ್ಯಾಧಿಯನ್ನು ಗುಣಪಡಿಸುವವರಿಗೆ ಅಪಾರ ಬಹುಮಾನಗಳನ್ನು ನೀಡಲಾಗುವುದೆಂದು ದೇಶವಿಡೀ ಹಬ್ಬಿತು. ಇದರಿಂದ ಹಲವಾರು ವೈದ್ಯರುಗಳು ಬಂದು ಚಿಕಿತ್ಸೆ ನಡೆಸಿದರೂ ಏನು ಫಲವಿಲ್ಲದೆ ನಿರಾಶರಾಗಿ ಹೊರಡುತ್ತಿದ್ದರು.

     ಹೀಗಿರುವಾಗ ಫರೋವನ ಬಳಿ ಒಬ್ಬ ವೈದ್ಯನು ಬಂದು ಹೀಗೆಂದು ಹೇಳಿದನು. 

      "ನಾನು ಬಹಳ ದೂರದಿಂದ ಬಂದಿರುವೆನು. ರಾಜಕುಮಾರಿಯರ ಭೀಕರ ಕಾಯಿಲೆಯ ಬಗ್ಗೆ ಕೇಳಿ ತಿಳಿದುಕೊಂಡಿರುವೆನು. ಗುಣಪಡಿಸುವವರಿಗೆ ಅಪಾರ ಬಹುಮಾನಗಳನ್ನು ಹೊರಡಿಸಿದ ಘೋಷಣೆಯನ್ನೂ ಕೇಳಿದ್ದೇನೆ‌. ನಾನು ಅವರಿಗೆ ಚಿಕಿತ್ಸೆಯನ್ನು ಮಾಡುತ್ತೇನೆ."

      "ಹ್ಞೂಂ!  ಬಹಳ ವೈದ್ಯರು ಬಂದು ಚಿಕಿತ್ಸೆ ನಡೆಸಿದರು. ಫಲಕಾರಿಯಾಗಲಿಲ್ಲ. ನನಗೀಗ ಚಿಂತೆಯಾಗಿದೆ. ಇನ್ನು ನೀವು ಏನು ಮಾಡುತ್ತೀರಿ? ಆಗಲಿ, ನಿಮ್ಮದೂ ಒಂದು ಚಿಕಿತ್ಸೆ ಇರಲಿ. ಪರೀಕ್ಷೆ ಮಾಡಿ ನೋಡಿ. ನಾನು ಅನುಮತಿ ಕೊಟ್ಟಿರುತ್ತೇನೆ."

       ರಾಜನ ನಿರಾಶೆ ತುಂಬಿದ ಪ್ರತಿಕ್ರಿಯೆ ಕೇಳಿ ಪರದೇಶಿಯಾದ ಆ ವೈದ್ಯನು ಒಂದು ಕೈ ನೋಡೋಣ ಎಂದು ಸಿದ್ದನಾದನು. ಆತ ಅಂತಃಪುರಕ್ಕೆ ತೆರಳಿ ರಾಜಕುಮಾರಿಯರನ್ನು ಪರೀಕ್ಷೆ ಮಾಡಿದನು. ಹೆಣ್ಣು ಮಕ್ಕಳ ದೇಹವಿಡೀ ಬಿಳಿ ಪಾಂಡು ವ್ಯಾಪಿಸಿತು. ಹಿರಿಯ ಮಗಳಿಗೆ ಅತ್ಯಂತ ಹೆಚ್ಚಾಗಿತ್ತು. ದೇಹದಲ್ಲಿ ಒಂದು ಇಂಚು ಜಾಗ ಕೂಡಾ ಬಾಕಿ ಇಲ್ಲದೆ ಇಡೀ ದೇಹವನ್ನೇ ರೋಗ ವ್ಯಾಪಿಸಿತ್ತು.

      ಇದು ಬರೀ ಮದ್ದಿನಿಂದ ಮಾತ್ರ ವಾಸಿಯಾಗುವ ರೋಗವಲ್ಲವೆನ್ನುವುದು ವೈದ್ಯನಿಗೆ ಗೊತ್ತಾಯಿತು.  ಆತ ಒಂದು ವಿಶೇಷ ಮಂತ್ರ ಮೂಲಿಗೆಯ ವ್ಯವಸ್ಥೆಯನ್ನು ಮಾಡಿದನು. ರಾಜನ ಬಳಿ ಬಂದು ಹೇಳಿದನು;

       "ಮಹಾಪ್ರಭುಗಳೇ!  ಈ ರೋಗವು ಔಷಧಿಯಿಂದ ಗುಣವಾಗುವಂತಹದಲ್ಲ. ಇದಕ್ಕೆ ವಿಶೇಷವಾದ ಒಂದು ಮೂಲಿಗೆ ಬೇಕಾಗುತ್ತದೆ. ಏಳು ದಿವಸಗಳ ಕಾಲ ಇದು ನಡೆಸಬೇಕಾಗಿದೆ. ಏಳು ದಿನಗಳ ಕಾಲ ರಾಜಕುಮಾರಿಯರು ನೈಲ್ ನದಿಯಲ್ಲಿ ದಿನಾಲೂ ಸ್ನಾನ ಮಾಡಬೇಕಾಗಿದೆ."

      ವೈದ್ಯನ ಸೂಚನೆ ಮೇರೆಗೆ ರಾಜಕುಮಾರಿಯರಿಗೆ ನೈಲ್ ನದಿ ತೀರದಲ್ಲಿ ಸ್ನಾನದ ವ್ಯವಸ್ಥೆ ಮಾಡಲಾಯಿತು. ನದಿ ತೀರದಲ್ಲಿ ಪ್ರತ್ಯೇಕವಾಗಿ ಸ್ನಾನಕ್ಕಾಗಿ ಒಂದು ತಾಣವನ್ನು ನಿರ್ಮಿಸಲಾಯಿತು. ನದಿಯ ನೀರು ಒಳ ಹರಿದು ಬರುವಂತೆ ತುಸು  ದೂರಕ್ಕೆ ಒಂದು ವಿಶೇಷ ಕಾಲುವೆ ತೋಡಲಾಯಿತು. ರಾಜಕುಮಾರಿಯರ ನೀರಾಟಕ್ಕೆ ಸಾಕಷ್ಟು ವ್ಯವಸ್ಥೆ ಕಲ್ಪಿಸಲಾಯಿತು. ಒಂದೆರಡು ದಿವಸಗಳಲ್ಲೇ ಈ ಕೆಲಸವೆಲ್ಲ ಪೂರ್ತಿಯಾಯಿತು. ಮೂರನೇಯ ದಿನದಂದೇ ಸ್ನಾನ ಪ್ರಾರಂಭವಾಯಿತು. ರಾಜಕುಮಾರಿಯರು ಅಪಾರ ದಾಸಿಯರ ಬೆಂಗಾವಲಿಯೊಂದಿಗೆ ನದಿ ತೀರಕ್ಕೆ ಹೊರಟು ಸ್ನಾನ ಮಾಡಲು ಶುರು ಮಾಡಿದರು.

       ದಿನ ಕಳೆಯಿತು. ಒಂದು....ಎರಡು.... ಮೂರು.... ಹೀಗೆ ಪ್ರತಿ ದಿನವೂ ಸ್ನಾನ ತಪ್ಪದೇ ಮುಂದುವರಿಯಿತು. ಆದರೆ ರೋಗದಲ್ಲಿ ಯಾವ ಬದಲಾವಣೆಯು ಕಾಣಲಿಲ್ಲ. ಅಷ್ಟೆ ಅಲ್ಲ; ವ್ಯಾಧಿ ಮತ್ತಷ್ಟು ಹೆಚ್ಚುತ್ತಿರುವುದಾಗಿ ಕಾಣಿಸಿತು. ಆರು ದಿವಸಗಳಾದುವು. ರಾಜಪರಿವಾರಕ್ಕೆ ನಿರಾಶೆ ಕವಿಯಿತು. ಈ ವಿಶೇಷ ಮೂಲಿಗೆಯಲ್ಲಿ ರೋಗ ವಾಸಿಯಾಗುವುದೇನೋ ಎಂಬ ಆಸೆ ಚಿಗುರಿತು. ಆದರೆ ಈಗ ಆ ಆಸೆ ಬರೇ ಆಸೆಯಾಗುತ್ತಾ ಬರುತ್ತಿದೆ!

       ಏಳನೇಯ ದಿನ. ಇದು ಕೊನೆಯ ದಿನ. ಪ್ರಾರಂಭಿಸಿದ  'ಮೂಲಿಗೆ'ಯನ್ನು ಅರ್ಧದಲ್ಲಿ ನಿಲ್ಲಿಸುವುದು ಬೇಡವೆಂಬಂತೆ ಒಲ್ಲದ ಮನಸ್ಸಿನಿಂದಲೇ ರಾಜಕುಮಾರಿಯರು ಏಳನೆಯ ದಿನವೂ ಸ್ನಾನಕ್ಕೆ ಹೊರಟರು. ನದಿಗಿಳಿದು ಸ್ನಾನ ಪ್ರಾರಂಭಿಸಿದರು.
 ಏಳನೆಯ ದಿನ. ಇದು ಕೊನೆಯ ದಿನ. ಪ್ರಾರಂಭಿಸಿದ 'ಮೂಲಿಗೆ'ಯ ಅರ್ಧದಲ್ಲಿ ನಿಲ್ಲಿಸುವುದು ಬೇಡವೆಂಬಂತೆ ಒಲ್ಲದ ಮನಸ್ಸಿನಿಂದಲೇ ರಾಜಕುಮಾರಿಯರು ಏಳನೇಯ ದಿನವೂ ಸ್ನಾನಕ್ಕೆ ಹೊರಟರು. ನದಿಗಿಳಿದು ಸ್ನಾನ ಪ್ರಾರಂಭಿಸಿದರು. ಆಗಲೇ......

       ಅಕ್ಕಾ !  ಅತ್ತ ನೋಡು. ಓರ್ವ ಕಿರಿಯವಳು ಹಿರಿಯಕ್ಕನನ್ನು ಕರೆದು ನದಿಯತ್ತ ಬೆರಳು ತೋರಿಸುತ್ತಾ ಹೇಳಿದಳು. ಆಗ ಏಳೂ ಮಂದಿ ಜಿಜ್ಞಾಸೆಯಿಂದ ಅತ್ತ ನೋಡಿದರು. ನೈಲ್ ನದಿಯ ಹರಿವಿನಲ್ಲಿ ಏನೋ ಒಂದು ವಸ್ತು ತೇಲಿ ಬರುತ್ತಿರುವುದು ಕಾಣಿಸುತ್ತಿದೆ. ಅವರು ಸೂಕ್ಷ್ಮವಾಗಿ ನೋಡಿದರು. ಅರೇ!  ಅದೊಂದು ಪೆಟ್ಟಿಗೆ ತಾನೇ !  ಸುಂದರವಾದ ಪೆಟ್ಟಿಗೆ ! ನೀರಿನಲ್ಲಿ ತೇಲಿ ಬರುತ್ತಿರುವ ಪೆಟ್ಟಿಗೆ. ಅದೇನಿರಬಹುದು? ಅದರೊಳಗೇನಿರಬಹುದು? ಆ ಪೆಟ್ಟಿಗೆಯನ್ನು ಹಿಡಿಯಬೇಕೆಂದು ಅವರಿಗೆ ಆಸೆಯಾಯಿತು. ಆದರೆ ಯಾರಿಗೂ ಈಜು ಬರುತ್ತಿಲ್ಲ. ಹೇಗೆ ಪೆಟ್ಟಿಗೆಯನ್ನು ಕೈವಶ ಮಾಡುವುದೆಂದು ಅವರು ಯೋಚಿಸಿದರು. 

      ಒಂದೇ ಕ್ಷಣ. ಹಿರಿಯ ರಾಜಕುಮಾರಿ ಸಕಲ ದೈರ್ಯವನ್ನು ತಂದುಕೊಂಡು ನದಿಗೆ ಹಾರಿಯೇ ಬಿಟ್ಟಳು. ಉಳಿದವರಿಗೆ ಭೀತಿಯೂ  ವಿಸ್ಮಯವೂ ಉಂಟಾಯಿತು. ಈಜು ಬರದಿದ್ದ ಅಕ್ಕ ನದಿಗೆ ಹಾರಿದರೆ ಏನಾದೀತು? ಆದರೆ ಅದ್ಭುತ ಸಂಭವಿಸಿತು. ಹಿರಿಯವಳು ಬಹಳ ನುರಿತ ಈಜುಗಾರ್ತಿಯಂತೆ ಈ ಜುತ್ತಿದ್ದಾಳೆ! ಎಲ್ಲರೂ ಅದ್ಭುತ ಸ್ತಬ್ಧರಾಗಿ ಕಣ್ಣೆವೆಯಿಕ್ಕದೆ ನೋಡುತ್ತಾ ನಿಂತರು. ಅಷ್ಟರಲ್ಲೇ ಆಕೆ ಪೆಟ್ಟಿಗೆಯ ಬಳಿ ತಲುಪಿ ಅದನ್ನು ಹಿಡಿದುಕೊಂಡು ಇತ್ತ ದಡ ಸೇರಿದ್ದಳು.

       ಎಲ್ಲರೂ ಮೇಲುಸಿರು ಬಿಟ್ಟರು. ವಿಸ್ಮಯದಿಂದ ಕಂಗಾಲಾಗಿದ್ದರು. ಪೆಟ್ಟಿಗೆಯ ಒಳಗೆ ಏನಿರಬಹುದು? ಕುಮಾರಿಯರ ಆಗ್ರಹ ನೂರ್ಮಡಿಗೊಂಡಿತು. ಬಹಳ ಕುತೂಹಲದಿಂದ ಏಳೂ ಮಂದಿ ಸೇರಿ ಪೆಟ್ಟಿಗೆಯನ್ನು ತೆರೆದರು. ಅವರ ಹೃದಯಗಳಲ್ಲಿ ಆಹ್ಲಾದದ ಮಿಂಚು ಹೊಳೆಯಿತು. ಅವರೆಲ್ಲರೂ ವಿಸ್ಮಯ, ಕೌತುಕ; ಆನಂದದಲ್ಲಿ ತೇಲಾಡಿದರು. ಪೆಟ್ಟಿಗೆಯೊಳಗೆ ಸುಂದರವಾದ ಮಗು!  ಗಂಡು ಮಗು!  ಚಂದ್ರನಂತೆ ಹೊಳೆಯುತ್ತಿರುವ ಮುಖ. ಮುಖ ಕಮಲದಲ್ಲಿ ಚೇತೋಹಾರಿ ಹೂ ನಗೆ ಸೂಸುತ್ತಿದೆ. ಆಹಾ! ಎಂತಹ ಸೊಬಗು. ಕಸ್ತೂರಿಯ ಪರಿವಶ. ಯಾರು ಕಂಡರೂ ಅದ್ಭುತ ಸ್ತಬ್ಧರಾಗುವಂತಹ ಅದ್ಭುತ ಶಿಶು.

       ಹಿರಿಯ ರಾಜಕುಮಾರಿ ಮಗುವನ್ನು ಕಂಡು ಆಸೆ ತಾಳಲಾರದೆ ಪಕ್ಕನೆ ಮಗುವನ್ನು ಕೈಗೆತ್ತಿಕೊಂಡು ಆ ಮುಖಕ್ಕೆ ಮುತ್ತಿಕ್ಕಿದಳು.  ಏನದ್ಭುತ!  ಚುಂಬಿಸಿದ್ದೇ ತಡ, ಇದುವರೆಗೂ ಅವಳಿಗೆ ತೀರಾ ಚಿಂತೆಗೆ ಕಾರಣವಾಗಿದ್ದ ಪಾಂಡು ರೋಗ ತಕ್ಷಣ ಸಂಪೂರ್ಣ ಗುಣವಾಯಿತು.  ಉಳಿದವರೆಲ್ಲರೂ ಪದೇ ಪದೇ ನೋಡಿದರು. ಹಿರಿಯವಳು ಹಿಂದಿಗಿಂತಲೂ ಹೆಚ್ಚು ಸುರಸುಂದರವಾಗಿ ದೃಢಕಾಯಳಾಗಿ ಆರೋಗ್ಯವತಿಯಾಗಿ ನಿಂತುಕೊಂಡಿದ್ದಾಳೆ. ಅವಳ ಮಾಗದ ಚಿಂತೆಗಳೆಲ್ಲ ಮಾಯವಾಗಿ ಆನಂದೋಲ್ಲಾಸ ಲಾಸ್ಯವಾಡುತ್ತಿದೆ. ಅಷ್ಟರಲ್ಲಿ ಮತ್ತೊಬ್ಬಳು ಮಗುವನ್ನೆತ್ತಿಕೊಂಡು ಚುಂಬಿಸಿದಳು. ಅಷ್ಟರಲ್ಲಿ ಅವಳ ರೋಗವು ಸಂಪೂರ್ಣ ಮಾಯವಾದವು. ಇಷ್ಟಾದಾಗ ನನಗೆ, ನನಗೆ ಎಂದು ಮುಗಿ ಬೀಳುತ್ತಾ ಉಳಿದವರೂ ಮಗುವನ್ನೆತ್ತಿಕೊಂಡು ಮುದ್ದಾಡಿದರು. ಎಲ್ಲರ ವ್ಯಾಧಿ ಸಂಪೂರ್ಣ ಗುಣವಾಗಿತ್ತು. ಎಲ್ಲರೂ ಹಿಂದಿಗಿಂತಲೂ ಹೆಚ್ಚು ಆರೋಗ್ಯವಂತರಾಗಿ ಸುರಚೆಲುವೆಯರಾಗಿ ಮಾರ್ಪಟ್ಟಿದ್ದರು.

      ರಾಜಕುಮಾರಿಯರ ಆನಂದಕ್ಕೆ ಪಾರವಿರಲಿಲ್ಲ. ಬಾನಲ್ಲಿ ತೇಲಾಡುತ್ತಿರುವಂತಹ ಅನುಭವ. ಯಾವತ್ತೂ ಗುಣವಾಗದೆಂದು ಆಸೆಯನ್ನೇ ಕೈ ಬಿಟ್ಟಿದ್ದ ಮಾರಕ ರೋಗವು ಗುಣವಾಗುವುದೆಂದರೆ!  ಅವರಿಗೆ ಆನಂದವನ್ನು ತಡೆದುಕೊಳ್ಳಲಾಗಲಿಲ್ಲ. ಅವರ ಕಣ್ಣುಗಳಲ್ಲಿ ಆನಂದಬಾಷ್ಪ ಸುರಿದುವು. ಅವರು ತನಗರಿವಿಲ್ಲದೆಯೇ ಆನಂದ ನೃತ್ಯವಾಡಿದರು. ಅವರು ತುರಾತುರಿಯಿಂದ ಮಗುವನ್ನೆತ್ತಿಕೊಂಡು ಅರಮನೆಗೆ ಬಂದರು. ಸೀದಾ ಮಗುವನ್ನು ಒಯ್ದದ್ದು ಬೀವಿ ಆಸಿಯಾ(ರ)ರವರ ಭವನಕ್ಕಾಗಿತ್ತು.

ಅವರು ತುರಾತುರಿಯಿಂದ ಮಗುವನ್ನೆತ್ತಿಕೊಂಡು ಅರಮನೆಗೆ ಬಂದರು. ಸೀದಾ ಮಗುವನ್ನು ಒಯ್ದದ್ದು ಬೀವಿ ಆಸಿಯಾ(ರ)ರವರ ಭವನಕ್ಕಾಗಿತ್ತು.

       ಶಶಿಯಂಗಳವಂತಹ ಶೋಭೆ ತುಂಬಿದ ಮುಖ. ಸೌಂದರ್ಯ ತುಂಬಿದ ಕೊಡವಾದ ಒಂದು ಸ್ನೇಹ ಪುತ್ಥಳಿ. ಕುಮಾರಿಯರು ಮಗುವನ್ನು ಆಸಿಯಾ ಬೀವಿಯವರ ಕೈಗೊಪ್ಪಿಸಿದರು. ಬೀವಿಯು ಮಗುವಿನ ಮುಖವನ್ನು ದಿಟ್ಟಿಸಿದರು. ಅವರ ಮನದಲ್ಲಿ ಸ್ನೇಹ, ವಾತ್ಸಲ್ಯದ ಅಲೆಮಾಲೆಗಳೆದ್ದವು. ಆ ಕೋಮಲ ಗಲ್ಲಗಳಲ್ಲಿ ಅವರು ಸ್ನೇಹ ಮುದ್ರೆಗಳನ್ನೊತ್ತಿದರು. ಮಡಿಲಲ್ಲಿ ಮಲಗಿಸಿ ಲಾಲಿಸಿದರು. ಅವರ ಹೃದಯ ವಾತ್ಯವ್ಯದಿಂದ ತುಳುಕಾಡುತ್ತಿತ್ತು. ಶಿಶುವಿನ ಹಣೆಗೆ ಚುಂಬನಗಳನ್ನರ್ಪಿಸುತ್ತಾ ಅವರು ಕೇಳಿದರು;

      "ಈ ಅದ್ಭುತ ಶಿಶು ನಿಮಗೆಲ್ಲಿ ಸಿಕ್ಕಿತು?

      ಬೀವಿಯವರ ಪ್ರಶ್ನೆಗೆ ಉತ್ತರ ಹೇಳಲು ಕುಮಾರಿಯರ ನಡುವೆ ಪೈಪೋಟಿ. ಆವೇಶ. ಆ ಸುಂದರ ಘಟನೆಯನ್ನು ವಿವರಿಸಲು ಪ್ರತಿಯೊಬ್ಬರಿಗೂ ತವಕ. ಅವರು ಎಲ್ಲರೂ ಏಕ ಸ್ವರದಲ್ಲಿ ನಡೆದ ಎಲ್ಲಾ ಘಟನೆಗಳನ್ನೂ ವಿವರಿಸಿದರು. ತಮ್ಮ ಮೈಕೈ ತೋರಿಸುತ್ತಾ ತಮ್ಮ ವಾಸಿಯಾದ ಬಗ್ಗೆ ಹೇಳಿದರು. ಆಗಲೇ ಆಸಿಯಾ ಬೀವಿ(ರ) ಅವರ ದೇಹವನ್ನು ಗಮನಿಸಿದ್ದು. ಮಗುವಿನ ಸೌಂದರ್ಯದಲ್ಲಿ ಅಪ್ರತಿಭರಾಗಿದ್ದ ಅವರಿಗೆ ಅಷ್ಟರವರೆಗೂ ಕುಮಾರಿಯರ ರೋಗ ವಾಸಿಯಾಗಿರುವುದು ಗಮನಕ್ಕೆ ಬಂದಿರಲಿಲ್ಲ. ಅವರು ಚಕಿತರಾದರು. ಮಗು ಸಾಮಾನ್ಯವಲ್ಲವೆಂದು ಖಾತ್ರಿಯಾಗಿತ್ತು.

        ಆಸಿಯಾ ಬೀವಿ(ರ) ಯೋಚಿಸಿದರು. ಈ ಮಗು ಸಾಧಾರಣವಲ್ಲ. ದೈವಾನುಗ್ರಹವಿರುವ ವಿಶೇಷ ಜನ್ಮವಿದು. ಶಿಶುವಾಗಿರುವಾಗಲೇ ಇಂತಹ ಅದ್ಭುತ ಘಟನೆ ತೋರಿಸಿದರೆ ಬೆಳೆದ ಮೇಲೆ ಏನಾಗಬಹುದು? ಈ ಮಗು ನನಗೆ ಬೇಕು. ಇದನ್ನು ನಾನೇ ಸಾಕಬೇಕು. ಅವರು ಕುಮಾರಿಯರಲ್ಲಿ ಹೇಳಿದರು;

       " ಕುಮಾರಿಯರೇ!  ಈ ಮಗು ನನಗೆ ತುಂಬಾ ಇಷ್ಟವಾಗಿದೆ. ನನಗೆ ಮಕ್ಕಳೂ ಇಲ್ಲ. ನೀವು ಇನ್ನೂ ಮದುವೆಯಾಗದ ಕುಮಾರಿಯರು. ದಯವಿಟ್ಟು ಇದನ್ನು ನನಗೆ ಕೊಡುತ್ತೀರಾ?"

       ರಾಜಕುಮಾರಿಯರಿಗೆ ಮಗುವನ್ನು ಕೊಡಲು ಮನಸ್ಸು ಬರಲಿಲ್ಲ. ಆದರೆ ಮಲತಾಯಿ ಆಸಿಯಾ ಬೀವಿ(ರ)ಯವರೆಂದರೆ ಅವರಿಗೆ ಅಚ್ಚುಮೆಚ್ಚು. ಅಪಾರ ಗೌರವ. ಅಂತಹವರು ಅಪೇಕ್ಷಿಸಿದಾಗ ಒಲ್ಲೆ ಎನ್ನಲಾಗದೆ ಶಿಶುವನ್ನು ಒಪ್ಪಿಸಿಬಿಟ್ಟರು.  ಬೀವಿಯವರ ಆನಂದ ವರ್ಣನಾತೀತವಾಯಿತು. ಆದರೆ ಆ ಸಂತೋಷ ಹೆಚ್ಚು ಹೊತ್ತು ನಿಲ್ಲಲಿಲ್ಲ. ಅವರ ಮನದಲ್ಲಿ ನೋವಿನ ಕೀಟ ಕೊರೆಯತೊಡಗಿತು.  ಪತಿ ಫರೋವನ(ಫಿರ್'ಔನ್) ಸ್ಥಾನಭ್ರಷ್ಟಕ್ಕೆ ಕಾರಣವಾಗುವ ಒಂದು ಗಂಡು ಜನಿಸಲಿದೆಯೆಂಬ ಜ್ಯೋತಿಷ್ಯರ ಮಾತು ಕೇಳಿ ದೇಶದಲ್ಲಿಡೀ ಎಲ್ಲೂ ಗಂಡು ಮಕ್ಕಳನ್ನು ಉಳಿಸದೆ ಕೊಲ್ಲಿಸುತ್ತಿದ್ದಾನೆ. ರಾಜಕಿಂಕರರು ಗಂಡು ಮಕ್ಕಳ ಹತ್ಯೆ ಮಾಡುತ್ತಾ ದೇಶದಲ್ಲಿಡೀ ಸುತ್ತುತ್ತಿದ್ದಾರೆ. ಅವರ ಖಡ್ಗಗಳು ಹಸುಳೆಗಳ ರಕ್ತ ಕುಡಿದು ಕೆಂಪಡರಿವೆ. ಬನೂ ಇಸ್ರಾಯೀಲ್ ವಂಶದಲ್ಲಿ ಹುಟ್ಟಿದ ಯಾವುದೇ ಗಂಡು ಶಿಶುವಿಗೆ ಬದುಕಲು ಅವಕಾಶವಿಲ್ಲ. ಇದು ಪತಿ ಫರೋವನ ಕಟ್ಟಾಜ್ಞೆ. ಹಾಗಿರುವಾಗ ತನ್ನ ಅರಮನೆಯಲ್ಲೇ ಗಂಡು ಮಗು ಬೆಳೆಯುವುದನ್ನು ಅವನು ಸಹಿಸುವನೇ?

       ಚಿಂತೆಗಳು ಬೀವಿಯವರನ್ನು ಚಿವುಟಿ ನೋಯಿಸಿದುವು. ಈ ಶಿಶುವನ್ನು ಕೊಲ್ಲಲು ಬಿಡಲಾರೆ. ನನ್ನ ಪ್ರಾಣ ಇರುವವರೆಗೆ ಅದಕ್ಕೆ ಅವಕಾಶ ಕೊಡಲಾರೆ. ಈ ಮಗುವಿನ ನಿಷ್ಕಳಂಕ ಹೂನಗೆ , ಮಂದಹಾಸವು ಮನಸ್ಸಿನ ಸ್ಥಿಮಿತವನ್ನೇ ತಪ್ಪಿಸುತ್ತಿದೆ. ಇಂತಹ ಮಗುವನ್ನು ಬಿಟ್ಟು ಕೊಡುವನೇ? ಬೀವಿ ಪ್ರತಿಜ್ಞೆ ಮಾಡಿದರು. ಅವರು ಆ ಹೂ ಮಗುವನ್ನು ಎದೆಗವಚಿಕೊಂಡರು. ಅಮ್ಮ ಸಿಕ್ಕಿದಂತಹ ಭಾವದಲ್ಲಿ ಶಿಶು ಸಂತೋಷಗೊಂಡಿತು. ಆಸಿಯಾ ಬೀವಿ(ರ) ಫರೋವನ ಮಡದಿ. ರೇಷ್ಮೆಯಂತಹ ಮನಸ್ಸು. ಭೌತಿಕತ್ವದ ಲಹರಿಯಲ್ಲಿ ಅಲ್ಪ ಕೂಡಾ ಮೈ ಮರೆಯದ ಕಳಂಕರಹಿತವಾದ ಸಾತ್ವಿಕೋದಕ ಮನಸ್ಸಿನ ಒಡತಿ. ಸರ್ವಶಕ್ತ ಅಲ್ಲಾಹುವಿನಲ್ಲಿ ಅಚಂಚಲ ವಿಶ್ವಾಸ. ಅಪ್ರತಿಮ ಚೆಲುಮೆ ಬೇರೆ. ಇಂತಹ ಅಮೂಲ್ಯ ಮುತ್ತು ದುಷ್ಟನಾದ ಫರೋವನ ಮಡದಿಯಾದುದು ಹೇಗೆ? ಅದೊಂದು ಚರಿತ್ರೆ.  ದುಷ್ಟರಲ್ಲಿ ದುಷ್ಟನಾದ ಅಹಂಕಾರಿಗಳಲ್ಲಿ ಅಹಂಕಾರಿಯಾದ ಫರೋವನಿಗೆ ಅನೇಕ ಪತ್ನಿಯರಲ್ಲಿ ಒಟ್ಟು 54 ಮಕ್ಕಳಿದ್ದುವು. ಎಲ್ಲವೂ ಹೆಣ್ಣು.ಒಂದೇ ಒಂದು ಗಂಡು ಮಗು ಹುಟ್ಟಲಿಲ್ಲವಲ್ಲಾ ಎಂಬ ಕೊರಗು ಅವನನ್ನು ಕಾಡಿತ್ತು. ನಾನೇ ಮಹಾದೇವನೆಂದು ದರ್ಪ ತೋರಿದ ಆತನಿಗೆ ತನ್ನ ಸ್ವಂತ ಆಗ್ರಹವೊಂದನ್ನು ನೆರವೇರಿಸಲಾಗಲಿಲ್ಲ. ನನಗೊಂದು ಗಂಡು ಮಗು ಆಗಲೇ ಬೇಕು. ಅದು ಅವನ ಅತ್ಯಂತ ದೊಡ್ಡ ಆಗ್ರಹವಾಗಿ ಮಾರ್ಪಟ್ಟಿತು. ದಿನಾಲೂ ಈ ಬಗ್ಗೆ ವ್ಯಾಕುಲಚಿತ್ತನಾಗಿ ಕೂರುತ್ತಿದ್ದನು. ಆದರೆ ಏನು ಕಾರಣವೆಂದು ಯಾರಿಗೂ ಗೊತ್ತಾಗುತ್ತಿರಲಿಲ್ಲ. ಹೀಗಿರಲು ಒಂದು ದಿನ ಪ್ರಧಾನ ಮಂತ್ರಿ ಬಂದು ಹೇಳಿದನು;

       "ಮಹಾಪ್ರಭು!  ತಮ್ಮ ಚಿಂತೆಯೇನು? ತಾವು ಯಾವಾಗಲೂ ಹೀಗೆ ಚಿಂತೆಯಲ್ಲಿರುವುದನ್ನು ಕಾಣುತ್ತಿದ್ದೇನೆ. ತಮಗೆ  ಚಿಂತೆ ಯಾರದ್ದು? ದಯವಿಟ್ಟು ಹೇಳಿ. ನನ್ನಿಂದಾಗುವ ಸಹಾಯವನ್ನು ನಾನು ಮಾಡುತ್ತೇನೆ."

       ಪ್ರಧಾನ ಮಂತ್ರಿ ಇಮ್ರಾನನ ಪ್ರಶ್ನೆ ಕೇಳಿದಾಗ ಫರೋವನು ಒಂದು ನಿಮಿಷ ಮೌನವನ್ನವಲಂಭಿಸಿದನು. ಕಾರ್ಯ ಹೇಳಿದರೆ ನನ್ನ ದೌರ್ಬಲ್ಯವನ್ನು ಪ್ರಧಾನಮಂತ್ರಿ ತಿಳಿಯುತ್ತಾನೆ. ಮಹಾ ದೇವನಿಗೆ ಒಂದು ಸ್ವ ಚಿಂತೆಯನ್ನು ಪರಿಹರಿಸಲಾಗುವುದಿಲ್ಲವೇ? ಎಂಬ ಸಂದೇಹವುಂಟಾದರೆ ತೊಂದರೆ. ಆದರೆ ಇಮ್ರಾನನು ಬಿಡುವ  ಅಂದಾಜು ಇಲ್ಲ. ಆತ ಕೆದಕಿ ಕೇಳಿದಾಗ ನಿರ್ವಾಹವಿಲ್ಲದೆ ಫರೋವ ಹೇಳಿದ;

       "ಪ್ರಧಾನಿಗಳೇ!  ನನ್ನನ್ನು ಕಾಡುತ್ತಿರುವ ಚಿಂತೆ ಬೇರೇನಲ್ಲ. ನನಗೆ 54 ಮಕ್ಕಳಿದ್ದರೂ ನನ್ನ ಉತ್ತರಾಧಿಕಾರಿಯಾಗಿ, ನನ್ನ ವಂಶವನ್ನು ನೆಲೆಗೊಳಿಸುವ, ನನ್ನ ಕೀರ್ತಿಯನ್ನು ಉಳಿಸುವ ಒಂದು ಗಂಡು ಮಗು ಉಂಟಾಗಲಿಲ್ಲ. ಈ ಚಿಂತೆ ನನ್ನನ್ನು ಬೆಂಬಿಡದೇ ಕಾಡುತ್ತಿದೆ."

      "ಅಷ್ಟೇ ತಾನೇ? ಈ ವಿಷಯದಲ್ಲಿ ಇಷ್ಟೊಂದು ಚಿಂತೆ ಅಗತ್ಯವಿಲ್ಲ. ತಾವು ಇನ್ನೊಂದು ಮದುವೆಯಾಗಿರಿ. ಅದರ ಮೂಲಕ ತಮ್ಮ ಚಿಂತೆಗೆ ಪರಿಹಾರವಾಗಬಹುದು. ತಮ್ಮ ಆಸೆಯಂತೆ ಒಂದು  ಗಂಡು ಮಗು ಆಗಬೇಕು."

      "ಮದುವೆ!  ಅದಕ್ಕೆ ಯೋಗ್ಯ ಹೆಣ್ಣು ಇದ್ದಾಳೆಯೇ?"

     ಓಹೋ !  ಧಾರಾಳವಾಗಿ. ಮಹಾ ಚಕ್ರವರ್ತಿಯಾದ ತಮಗೆ ಹೆಣ್ಣಿನ ಕೊರತೆಯೇ!  ನಾನು ಓರ್ವ ಸುರ ಸುಂದರಿಯನ್ನು ತಮಗೆಂದು ಈ ಮೊದಲೇ ನಿಶ್ಚಯಿಸಿದ್ದೇನೆ. ಸಂದರ್ಭ ಬಂದಾಗ ಮಾತಾಡೋಣವೆಂದು ಇದುವರೆಗೂ ಸುಮ್ಮನಿದ್ದೇನೆ."

     "ಬೇಷ್!  ನೀವು ಬಹಳ ಚಾಲು ಮನುಷ್ಯ. ಇಷ್ಟೆಲ್ಲಾ ನೀವು ಆಲೋಚಿಸಿದ್ದೀರಾ. ಹೇಳಿ ಯಾರು ಆ ಹೆಣ್ಣು?

      " ಬೇರೆ ಯಾರು ಅಲ್ಲ. ನನ್ನ ಸಹೋದರ ಪುತ್ರಿ. ಚೆಲುವಿನ ಗಣಿ. ಸೌಂದರ್ಯದಲ್ಲಿ ಅಪ್ರತಿಮಳು. ಮಾತಲ್ಲಿ ಮಲ್ಲಿಗೆ, ಗುಣದಲ್ಲಿ ಗುಲಾಬಿ, ಚೆಲುವಿಗೆ ಸಂಪಿಗೆ, ನಿಲುವಲ್ಲಿ ನಿಲಾಂಬರಿ. ಎಲ್ಲ ವಿಷಯಗಳಲ್ಲೂ ರಾಣಿ ಪಟ್ಟಕ್ಕೆ ಯೋಗ್ಯಳಾದವಳು."
    "ಅವಳ ಹೆಸರೇನು?'
     'ಆಸಿಯಾ'

      'ಆಸಿಯಾ! ಆಹಾ ಎಷ್ಟೊಂದು ಸುಂದರ ಹೆಸರು! ಹೆಸರಿಗೆ ತಕ್ಕ ಅವಳೂ ಮನೋಹರಿಕೆಯಾಗಿರುವಳು. " ಪರೋವನು ಮತ್ತೆ ಏನೂ ಆಲೋಚಿಸಲಿಲ್ಲ. ಕೂಡಲೇ ಏರ್ಪಾಡು ಮಾಡುವಂತೆ ಮಂತ್ರಿ ಇಮ್ರಾನರಲ್ಲಿ ಆಜ್ಞೆ ಕೊಟ್ಟನು.

      ಆಸಿಯಾ(ರ)ರವರ ತಂದೆಗೆ ಈ ಸಂಬಂಧ ಇಷ್ಟವಾಗಲಿಲ್ಲ. ಪೊಗರು, ದೇವನಿಷೇಧ, ಸತ್ಯನಿಷೇಧ, ಕ್ರೌರ್ಯಗಳ ಪರ್ಯಾಯವಾದ ಪರೋವನು ತನ್ನ ಮಗಳಿಗೆ ಗಂಡನಾಗುವುದೇ!  ಛೇ! ಇದೆಂತಹಾ ವಿಧಿ. ಆದರೆ ನಿರಾಕರಿಸುವಂತಿಲ್ಲ. ಇದು ರಾಜಾಜ್ಞೆ. ರಾಜಾಜ್ಞೆ ಮೀರಿದರೆ ಗತಿಯೇನೆಂದು ಗೊತ್ತು. ಅವರು ಒಲ್ಲದ ಮನಸ್ಸಿನಿಂದ ಒಪ್ಪಿಗೆ ಸೂಚಿಸಿದರು.

      ಪಾಪ, ಆಸಿಯಾ(ರ) ಬೀವಿಯವರು ಯಾವತ್ತೂ ಭವ, ಐಶ್ಚರ್ಯವನ್ನು ಬಯಸಿರಲಿಲ್ಲ. ವಸ್ತ್ರ, ಒಡವೆಗಳಿಗೆ ಆಸೆಪಟ್ಟವರಲ್ಲ. ಮನೆ, ಮಾಳಿಗೆಗಳನ್ನು ಬಯಸಿರಲಿಲ್ಲ. ಬಡವನಾಗಿದ್ದರೂ ಪರವಾಗಿಲ್ಲ, ಭಕ್ತನಾದ ಪತಿ ಸಿಗಬೇಕೆಂದು ಆಸೆ ಇಟ್ಟುಕೊಂಡಿದ್ದರು. ಆದರೆ ಈಗ ಏನು ಮಾಡುವುದು. ಕ್ರೌರ್ಯದ ಪ್ರತಿರೂಪವಾದ ಪರೋವ ಚಕ್ರವರ್ತಿಯನ್ನೇ ನನಗೆ ಪತಿಯಾಗಿ ವಿಧಿಸಲಾಯಿತೇ? ಅಲ್ಲಾಹುವಿನ ವಿಧಿಯದು. ಅವನ ವಿಧಿಯೊಳಗೆ ಏನಾದರೂ ರಹಸ್ಯ ಇದ್ದೇ ಇದೆ. ಈ ಮದುವೆಗೆ ಒಪ್ಪಿಕೊಳ್ಳದಿದ್ದರೆ ನನಗೂ ತಂದೆಗೂ ಅಪಾಯ ತಪ್ಪಿದ್ದಲ್ಲ. ಅದುದಾಗಲಿ. ಎಲ್ಲವೂ ಅಲ್ಲಾಹುವಿನ ಇಚ್ಚೆ ಎನ್ನುತ್ತಾ ಆಸಿಯಾ ಬೀವಿ(ರ) ಒಪ್ಪಿಗೆ ಸೂಚಿಸಿದರು.
ಈ ಮದುವೆಗೆ ಒಪ್ಪಿಕೊಳ್ಳದಿದ್ದರೆ ನನಗೂ ನನ್ನ ತಂದೆಗೂ ಅಪಾಯ ತಪ್ಪಿದ್ದಲ್ಲ. ಆದುದಾಗಲಿ. ಎಲ್ಲವೂ ಅಲ್ಲಾಹುವಿನ ಇಚ್ಚೆ ಎನ್ನುತ್ತಾ ಆಸಿಯಾ ಬೀವಿ(ರ) ಒಪ್ಪಿಗೆ ಸೂಚಿಸಿದರು.

        ಚಕ್ರವರ್ತಿ ಫರೋವ ಮತ್ತು ಆಸಿಯಾ ಬೀವಿ(ರ)ಯವರ ಮದುವೆ ನಡೆಯಿತು. ಧನ, ಕನಕ ವಸ್ತು, ಒಡವೆಗಳಲ್ಲಿ ಆಸೆಯನ್ನೇ ಹೊಂದಿರದ ಆ ನಿಷ್ಕಳಂಕ ಕನ್ಯೆ ತಲುಪಿದ್ದು ಎಲ್ಲಿಗೆ?  ಸರ್ವ ಸುಖಗಳೂ ಇರುವ ಭವ್ಯ ಅರಮನೆಗೆ. ಫರೋವನು ಆಸಿಯಾ ಬೀವಿ(ರ)ಗೆಂದು ವಿಶೇಷವಾಗಿ  ಒಂದು ಭವ್ಯ ಅರಮನೆಯನ್ನು ಕಟ್ಟಿಸಿದನು. ದೇಶದ ನಿಪುಣ ಕೆಲಸಗಾರರ, ಕಲಾವಿದರ, ಕೆತ್ತನೆ ಕೆಲಸಗಾರರ ಪ್ರತಿಭೆಗಳನ್ನು ಅದಕ್ಕೆ ಫರೋವನು ಬಳಸಿದ್ದನು.  ಬೆಲೆಬಾಳುವ ಪರವ ದಾನಿಗಳು, ಅಮೂಲ್ಯ ರತ್ನಗಂಬಳಿಗಳು, ಬೆರಗು ಹುಟ್ಟಿಸುವಂತಹ ಚೆಲುವಿನ ಮಂಚಗಳು. ಮೆತ್ತನೆಯ ಹೂ ಮೆತ್ತೆಗಳು ಹೀಗೆ ಸರ್ವ ಆಡಂಬರಗಳೂ ಮೇಳೈಸಿದ ಒಂದು ಸರ್ವಸುಸಜ್ಜಿತ  ಮಹಲ್ಲು. ಪರೋವನು ಆಸಿಯಾ ಬೀವಿ(ರ)ಯನ್ನು ಆ ಮಹಲ್ಲಿನಲ್ಲಿರಿಸಿದನು. ಮನದಲ್ಲಿ ಆಸೆಯ ಮಲ್ಲಿಗೆಗಳನ್ನೂ ಅಂತರ್ಯದಲ್ಲಿ ತವಕಗಳ ರಂಗುರಂಗಿನ ಕಾರಂಜಿಗಳನ್ನೂ ಇಟ್ಟುಕೊಂಡು ಪರೋವನು ಆ ಭವನದತ್ತ ಹೆಜ್ಜೆ ಹಾಕಿದನು. ಆಸಿಯಾ ಬೀವಿ(ರ)ಯನ್ನು ಕೂಡಿಕೊಳ್ಳುವ ಆಸೆ. ಆ ಅನುಪಮ ಚೆಲುವನ್ನು ಮನದಣಿಯೇ ಸವಿಯುವ ತವಕ. ಆ ಕೋಮಲ ದೇಹವನ್ನು ಇಂಚು ಇಂಚಾಗಿ ಅನುಭೋಗಿಸುವ ತುಡಿತ.

       ಮಹಲ್ಲಿಗೆ ತಲುಪಿದ ಪರೋವನು ತನ್ನ ಪ್ರಿಯತಮೆಯನ್ನು ಕರೆದನು. ಮನದಲ್ಲಿ ವಿರಕ್ತಿಯಿದ್ದರೂ ಗಂಡನಾಗಿ ಬಿಟ್ಟಿದ್ದಾನಲ್ಲಾ ಎಂಬ ಭಾವನೆಯಿಂದ ಆಸಿಯಾ ಬೀವಿ(ರ) ಗಂಡನ ಕರೆಗೆ ಓಗೊಟ್ಟು ಅವನ ಹತ್ತಿರ ಬಂದರು. ಬೀವಿಯವರ ಅತುಲ್ಯ ಸೌಂದರ್ಯ ಕಂಡು ಪರೋವನು ಅಪ್ರತಿಭನಾಗಿ ನಿಂತು ಬಿಟ್ಟನು. 'ಹಾ! ಎಂತಹ ಸೌಂದರ್ಯ' ಆತ ತಾನರಿಯದಂತೆಯೇ ಅಂದು ಬಿಟ್ಟನು. ಇಂತಹ  ಚೆಲುಮೆಯನ್ನು ಆತ ಕಾಣುತ್ತಿರುವುದೇ ಇದೇ ಮೊದಲು. ಆ ಹಾಸುಗೆ, ಆ ಹೆಣ್ಣು, ಅವಳ ನುಣ್ಣಗಿನ ತೋಳು, ಮರಳ ರಾಶಿಯಂತಹ ತುಂಬಿದ ಆಸನ, ಅವಳ ಕೆನ್ನೆ, ರೇಶ್ಮೆಯ ಹಾಗೆ ನುಣುಪಾದ ತಲೆಗೂದಲು. ಅವಳಿಂದ ಹೊರಹೊಮ್ಮುತ್ತಿರುವ ಮಾದಕ ಪರಿಮಳ ಎಲ್ಲವೂ ಅವನನ್ನು ಹುಚ್ಚನನ್ನಾಗಿ ಮಾಡಿತು. ಎಲ್ಲ ಬೆಡಗೂ ಆಕೆಯಲ್ಲಿತ್ತು. ಗಂಡಿನ ಮನಸ್ಸು ಸೂರೆಗೊಳ್ಳುವಂತಹ ಶರೀರ. ದೊಡ್ಡ ದೊಡ್ಡ ಸುಂದರ ಕಣ್ಣು. ಗರಿಗರಿಯಾದ ಹುಬ್ಬು, ಪ್ರಮಾಣ ಬದ್ದವಾದ ಎದೆಗುಟ್ಟು, ಏನಿವಳ ಚೆಲುವು, ಏನಿವಳ ಯೌವ್ವನ. ಕೆನ್ನೆಗಳ ಮೇಲೆ ಮೈ ಚಾಚಿ ಮಲಗಿರುವ ಆ ಕಣ್ಣೆವೆಗಳು. ಮಧು ತುಂಬಿದ ಆ ತುಟಿಗಳು, ಪಟ್ಟು ಪಿತಾಂಬರದಲ್ಲಿ ಬೆಡಗಿನಂತೆ ಕಾಣುತ್ತಿರುವ ಯೌವ್ವನಶ್ರೀ. ಮೆಯಲ್ಲಿ ಮಾದಕತೆಯ ಬಿಸುವ . ನುಣ್ಣಲ್ಲ, ಸುಳಿಗುರುಳು, ಬೆಳದಿಂಗಳ ಮೈಯುಕ್ಕಿ ಸುರಿಯುತ್ತಿರುವ ಯೌವ್ವನ. ಪರೋವನಿಗೆ ಈಜಿಪ್ಟಿನ ಸಿಂಹಾಸನ ಸಿಕ್ಕಿದಂತಕ್ಕಿಂತಲೂ ಹೆಚ್ಚಿನ ಮಹದಾನಂದವು  ಈ ಹೆಣ್ಣು ಸಿಕ್ಕಿದುದರಲ್ಲಿ  ಉಂಟಾಯಿತು. ಹತ್ತಿಕ್ಕಲಾರದ ಕಾಮಾತುರದಿಂದ ಆತ ಆ ಕೋಮಲಾಂಗಿಯ ಹತ್ತಿರ ಸರಿದಿದ್ದನು. ಒಂದೇ ಗಾಢಲಿಂಗನದಲ್ಲಿ ಚೆಲುವನ್ನೆಲ್ಲಾ ಹೀರಿ ಕುಡಿಯುವ ತವಕ.

       ಆಸಿಯಾ!  ಧ್ವನಿಗೆ ಸಾಧ್ಯವಿದ್ದಷ್ಟು ಮಧುರ ಬೆರೆಸುವ ಯತ್ನದಲ್ಲಿ ಪರೋವನು ಮಾದಕವಾಗಿ ಕರೆದನು. ಆ ಮಧುರ  ಕನಿಯನ್ನು ಅಪ್ಪಿಕೊಂಡು ವೇಗದಲ್ಲಿ ಸಾವಿರಾರು ಚುಂಬನಗಳನ್ನು ಅರ್ಪಿಸಲು ಆತ ಆಶಿಸಿದನು. ಆತ ಮತ್ತಷ್ಟು ಮುಂದಡಿ ಇಟ್ಟ. ಕಾಮಾತುರತೆಯಲ್ಲಿ ಆತ ಉನ್ಮತ್ತನಾಗಿದ್ದ. ಆದರೆ ಏನದ್ಭುತ! ಏನು ನಿರಾಸೆ!  ಅವನಿಗೆ ಬೀವಿಯ ಮೈ ಮುಟ್ಟಲಾಗಲಿಲ್ಲ! ಹತ್ತಿರ ತಲುಪಿದಂತೆ ಪಾದಗಳು ಕಬ್ಬಿಣದ ಸರಪಳಿಯಲ್ಲಿ ಬಿಗಿದಂತೆ ಭಾಸವಾಯಿತು. ಒಂದು ಹೆಜ್ಜೆ ಮುಂದಿಡಲು ಸಾಧ್ಯವಾಗುತ್ತಿಲ್ಲ. ತೋಳೆತ್ತಿ ಬಿಗಿದಪ್ಪಿ ಕೊಳ್ಳೊಣವೆಂದರೆ ಕೈಗಳು ಮರಗಟ್ಟಿದಂತೆ ಸೆಟೆದು ನಿಂತಿದೆ! ದೇಹದ  ತ್ರಾಣವೆಲ್ಲಾ ಕರಗಿ ಹೋದಂತಹ ಅನುಭವ. ನಾಲಗೆಗೆ ಚಲನ ಶಕ್ತಿ ಇಲ್ಲದಾಗಿದೆ. ಮಾತನಾಡಲಾಗದೆ, ಕದಲಲಾಗದೆ ನಿಂತು ಬಿಟ್ಟನು. ಹಾಗೆ ಎಷ್ಟು ಹೊತ್ತು ನಿಂತನೋ ಅವನಿಗೆ ಗೊತ್ತಿಲ್ಲ. ಕೆಲವು ಹೊತ್ತಿನ ಬಳಿಕ ದೇಹದ ತ್ರಾಣವೆಲ್ಲಾ ಕರಗಿ ದೊಪ್ಪನೆ ಕುಸಿದು ಬಿದ್ದನು!

       ಅಲ್ಲಾಹನೇ ಅತ್ಯಂತ ದೊಡ್ಡವನು‌. ಅವನು ಇಚ್ಚಿಸಿದ್ದೇ ನಡೆಯುವುದು. ಅಲ್ಲಾಹುವಿನ ಇರಾದೆಯಿಲ್ಲದೆ ಬೇರೆ ಯಾರೇ ಆಗಲಿ ಏನಿಚ್ಚಿಸಿದರೂ  ನಡೆಯಲಾರದು. ಅಲ್ಲಾಹುವಿನ ಅಚಂಚಲ ವಿಶ್ವಾಸವಿರುವ , ನಿರ್ಮಲ ಮಾನಸಿಯಾದ ಆ ನಾರಿ ರತ್ನವನ್ನು ಹಿಂಸ್ರಪಶುವಾದ, ದುಷ್ಟತೆಯ ಪ್ರತೀಕವಾದ ಪರೋವನು ಹೊಸಕಿ ಹಾಕಬಾರದೆಂದಾಗಿತ್ತು ಅಲ್ಲಾಹುವಿನ ತೀರ್ಮಾನ. ಆ ತೀರ್ಮಾನ ಪ್ರಕಾರ ಪರೋವನಿಗೆ ಆಸಿಯಾ ಬೀವಿಯವರ ದೇಹವನ್ನು ಮುಟ್ಟಲು ಸಾಧ್ಯವಾಗದೇ ಹೋಯಿತು. ಒಂದು ಬಾರಿಯಲ್ಲ; ಅನೇಕ ಬಾರಿ ಆತ ಪ್ರಯತ್ನಪಟ್ಟ. ಫಲಕಾರಿಯಾಗಲಿಲ್ಲ. ಕೈಗೆ ಸಿಕ್ಕಿದ ಮಂದಾರ ಕುಸುಮವನ್ನು ಅನುಭವಿಸಲಾಗಲಿಲ್ಲವೆಂಬ ತೀವ್ರ ಆಸೆಯಿಂದ, ಹಪಹಪಿಯಿಂದ ಆತ ಸತಪ್ರಯತ್ನ ಮಾಡಿ ನೋಡಿದ. ಸರ್ವ ಶಕ್ತಿಯನ್ನು ಬಳಸಿ ಮುಂದಾಗಲು ನೋಡಿದ. ಆದರೆ ಪ್ರಯತ್ನಪಟ್ಟಂತೆಲ್ಲಾ ಅದೇ ಅನುಭವ. ದೇಹ ಕಲ್ಲಿನಂತಾಗುತ್ತದೆ. ನಾಲಗೆ ಅಡರುತ್ತದೆ. ಕೈಕಾಲುಗಳು ಮರಗಟ್ಟುತ್ತದೆ. ದೇಹ ನಿತ್ರಾಣವಾಗುತ್ತದೆ. ಕಟ್ಟ ಕಡೆಗೆ ಸಂಪೂರ್ಣ ಹತಶನಾದ ಆತ ದೇಹ ಸುಖದ ಆಸೆಯನ್ನೇ ತ್ಯಜಿಸಿದ.  ಆದರೆ ಅನುಭವಿಸಲು ಇಲ್ಲದಿದ್ದರೂ ದೂರದಿಂದ ಚಂದಮಾಮನನ್ನು ನೋಡಿ ಆನಂದಿಸುವ ಮಗುವಿನಂತೆ ದೂರದಿಂದಾದರೂ ನೋಡಿ ಆನಂದ ಪಡಲು ಇರಲಿ ಎಂದು ಬೀವಿಯವರನ್ನು ಹಾಗೆ ಇಟ್ಟು ಬಿಟ್ಟ. ಸೌಕರ್ಯಗಳಲ್ಲಿ ಯಾವ ಕೊರತೆಯನ್ನೂ ಮಾಡಲಿಲ್ಲ‌. ಅಲ್ಲದೆ ಇದು ಹೊರಗೆ ತಿಳಿಸಿದರೆ ಮರ್ಯಾದೆ ಮಾನಗಳೆಲ್ಲಾ ಮೂರಾಬಿಟ್ಟೆಯಾಗುವುದರಿಂದ ಯಾರಿಗೂ ತಿಳಿಸದೆ ಗುಟ್ಟಾಗಿ ಇಟ್ಟ. ದಿನನಿತ್ಯ ಮಹಲ್ಲಿಗೆ ಬಂದು ತುಂಬಾ ಹೊತ್ತು ಬೀವಿಯನ್ನು ನೋಡುತ್ತಾ  ಕಂಡುಕೊಳ್ಳುವನು. ದಿನ ಕಳೆದಂತೆ ಅವನಲ್ಲಿ ಪ್ರೀತಿ ಹೆಚ್ಚಾಯಿತು. ಅನುರಾಗ ಹಿಮ್ಮಡಿಯಾಯಿತು. ಅದರೇನು ಫಲ?  ಗಗನ ಕುಸುಮವನ್ನು ಕಣ್ಣಲ್ಲಿ ಕಂಡು ಆಸ್ವಾದಿಸುವುದೊಂದೇ ಉಳಿದಿದ್ದ ಮಾರ್ಗವಾಗಿತ್ತು.  ಹೀಗಿರಲು...  ದಿನ ಕಳೆದಂತೆ ಅವನಲ್ಲಿ ಪ್ರೀತಿ ಹೆಚ್ಚಾಯಿತು. ಅನುರಾಗ ಹಿಮ್ಮಡಿಯಾಯಿತು. ಅದರೇನು ಫಲ? ಗಗನ ಕುಸುಮವನ್ನು ಕಣ್ಣಲ್ಲಿ ಕಂಡು ಆಸ್ವಾದಿಸುವುದೊಂದೇ ಉಳಿದಿದ್ದ ಮಾರ್ಗವಾಗಿತ್ತು.

      ಹೀಗಿರಲು ಫರೋವನಿಗೆ ಒಂದು ದಿನ ರಾತ್ರಿ ನಿದ್ದೆಯಲ್ಲಿ ಒಂದು ದುಃಸ್ವಪ್ನ ಬಿತ್ತು. ಬೆಳಿಗ್ಗೆ ಪಂಡಿತರನ್ನು ಕರೆಸಿ ವ್ಯಾಖ್ಯಾನ ಕೇಳಿದ. ಪಂಡಿತರ ವ್ಯಾಖ್ಯಾನ ಕೇಳಿದಾಗ ಅವನ ನೆತ್ತಿಗೆಯ ಮೇಲೆ ಸುತ್ತಿಗೆಯಲ್ಲಿ ಬಡಿದಂತಾಗಿತ್ತು. ಬನೂ ಇಸ್ರಾಯೀಲ್ ವಂಶದಲ್ಲಿ ಹುಟ್ಟಲಿರುವ ಒಂದು ಗಂಡು ಮಗುವಿನ ಕಾರಣದಿಂದ ಪರೋವನಿಗೆ ಸರ್ವನಾಶ ಎಂದಾಗಿತ್ತು ಕನಸಿನ ಫಲ!  ದುರಾಕ್ರಮಿಯಾದ  ಪರೋವ ಸೃಷ್ಟಿಕರ್ತನಿಗೆ ಸಡ್ಡು ಹೊಡೆಯುವಂತಹ ಅವಿವೇಕತನ ಪ್ರದರ್ಶಿಸಿದ.  ಬನೂ ಇಸ್ರಾಯೀಲ್ ವಂಶದಲ್ಲಿ ಹುಟ್ಟುವ ಸಕಲ ಗಂಡು ಮಕ್ಕಳನ್ನು ಕೊಲ್ಲುವಂತೆ ಆಜ್ಞೆ ಹೊರಡಿಸಿದ. ಆ ದುಷ್ಕ್ರತ್ಯ ಎಗ್ಗಿಲ್ಲದೆ ಮಂದುವರೆಯಿತು. ಮಾನವ ಇತಿಹಾಸದಲ್ಲೇ ಅತ್ಯಂತ ಧಾರುಣವಾದ ಆ ಮಾರಣ ಹೋಮ ಅವ್ಯಾಹತ ಮುಂದುವರಿಯಿತು. ಎಪ್ಪತ್ತು ಸಾವಿರಕ್ಕೂ ಹೆಚ್ಚಿನ ಗಂಡು ಮರಿಗೂಸುಗಳ ನಿರ್ದಯ ಹತ್ಯೆ ನಡೆಯಿತು. ಕೆಲವು ಬಸುರಿಯರೂ ಕೂಡಾ ಆಹುತಿಯಾದರು. ಇಂತಹ ಸಂದರ್ಭದಲ್ಲಿ ಅಲ್ಲಾಹುವಿನ ಕುದ್ರತ್ ನಡೆದಿತ್ತು. ಪರೋವ ಎಷ್ಟು ಲಾಗ ಹಾಕಿದರೇನು? ಅಲ್ಲಾಹು ಇಚ್ಚಿಸಿದ್ದು ಆಗಿಹೋಗಿತ್ತು. ಅವನ ದೇಶದಲ್ಲೇ ಅವನ ಕಿರಾತ ಕಿಂಕರರು ತಪಾಸಣೆ ನಡೆಸುತ್ತಿರುವಂತೆಯೇ ಅವರ ಯಾರದೇ ಕಣ್ಣಿಗೆ ಬೀಳದಂತೆ ಅದ್ಭುತಕರವಾಗಿ ಪರೋವನ ನಾಶಕ್ಕೆ ಕಾರಣವಾಗುವ ಗಂಡು ಶಿಶು ಜನ್ಮವೆತ್ತಿತ್ತು. ಅಷ್ಟೇ ಅಲ್ಲ, ಅಲ್ಲಾಹುವಿನ ಅನಂತ ತಂತ್ರದ ಪ್ರಕಾರ ಫರೋವನ ಆರೈಕೆಯಲ್ಲೇ ಬೆಳೆಯುವಂತೆ ಮಾಡಿದನು. ಯಾವ ದುರಾಕ್ರಮಿಯೂ ತನಗೆದುರಾಗುವ ಭಯದಿಂದ ಎಪ್ಪತ್ತು ಸಾವಿರ ಗಂಡು ಶಿಶುಗಳನ್ನು ಹತ್ಯೆ ಮಾಡಿಸಿದನೋ ಅದೇ ದುರಾಕ್ರಮಿಯ ಪಾಲನೆಯಲ್ಲಿ ಅವನ ನಾಶಕ್ಕೆ ಕಾರಣವಾಗುವ ಮಗು ಬೆಳೆಯುವಂತಹ ಅದ್ಭುತ ಚಮತ್ಕಾರ! ಅಲ್ಲಾಹುವಿನ ವಿಧಿಲೀಲೆ!

      ನೈಲ್ ನದಿಯಲ್ಲಿ ಪರೋವನ ಹೆಣ್ಣು ಮಕ್ಕಳಿಗೆ ಪೆಟ್ಟಿಗೆಯಲ್ಲಿ ಸಿಕ್ಕಿದ ಮಗು ಅದುವೇ ಆಗಿತ್ತು. ಹೆಸರು ಮೂಸಾ ಎಂದಾಗಿತ್ತು. ಮೂಸಾ ಎಂಬ ಆ ಶಿಶುವಿನ ತಾಯಿ ಅಲ್ಲಾಹುವಿನ ಆದೇಶದ ಮೇರೆಗೆ ಪೆಟ್ಟಿಗೆಯೊಳಗೆ ಹಾಕಿ ನೈಲ್ ನದಿಯಲ್ಲಿ  ತೇಲಿ ಬಿಟ್ಟಿದ್ದರು! ಅದು ತಲುಪಿದ್ದು ಫರೋವನ ಆಸ್ಥಾನಕ್ಕೆ. ಆತನ ಮುದ್ದಿನ ರಾಣಿ ಆಸಿಯಾ ಬೀವಿ(ರ)ಯವರ ಕೈಗೆ. ಇದೀಗ ಆ ಮಗು ಆಸಿಯಾ ಬೀವಿ(ರ)ಯವರ ಮನಸೊರೆಗೊಂಡಿದೆ. ಮಗುವನ್ನು ಪ್ರಾಣತೆತ್ತಾದರೂ ಉಳಿಸಬೇಕೆಂಬ  ವಾಂಛೆ ಬಲಿತಿದೆ. ಫರೋವನಿಗೆ ತನ್ನಿಂದಾಗುವ ಅಗಾಧ ಪ್ರೇಮವನ್ನು ಇದಕ್ಕೆ ಬಳಸಬೇಕೆಂಬ ಕಲ್ಪನೆ ಮನದಲ್ಲಿ ಗರಿಕೆದರಿದೆ.

       ಆಸಿಯಾ ಬೀವಿ(ರ)ಯವರು ಮಗುವನ್ನು ಕೂರಿಸಿ ಲಾಲಿಸಿದರು. ರಮಿಸಿದರು. ಏನೋ ಒಂದು ಅಭೌಮ ಪ್ರಕಾಶವು ಮಗುವಿನ ಕಣ್ಣುಗಳಲ್ಲಿ ಲಾಸ್ಯವಾಡುತ್ತಿರುವುದನ್ನು ಅವರು ಕಂಡರು. ಆ ಮುಖದಲ್ಲಿ ಏನೋ ಒಂದು ವಿಸ್ಮಯಕಾರಕ ತೇಜಸ್ಸು ತುಂಬಿ ತುಳುಕಾಡುತ್ತಿತ್ತು. ಅವರ ಮನದಂತರ್ಯದಲ್ಲಿ ಸ್ನೇಹ ವಾತ್ಸಲ್ಯಗಳ ಎದ್ದರೆಗಳು ಎದ್ದುವು. 'ಈ ಕಂದನನ್ನು ನಾನು ಸಾಕುತ್ತೇನೆ' ಎಂದು ಅವರು ಬಾಯಿ ತುಂಬಾ ಹೇಳಿದರು.

      ಎಂದಿನಂತೆ ಅಂದೂ ಫರೋವನು ಆಸಿಯಾ ಬೀವಿ(ರ)ಯವರ ಮಂದಿರಕ್ಕೆ ಬಂದನು. ಯಾವುದೇ ಗಂಡು ಮಗುವನ್ನು ಅವನಿಗೆ ಕಂಡರಾಗುವುದಿಲ್ಲ. ಅಂತಹ  ದುಷ್ಟ ಬರುತ್ತಿರುವುದು ಬೀವಿಯವರಿಗೆ ಗೊತ್ತಾಯಿತು. ಬೀವಿಗೆ ಆತಂಕವಾಯಿತು. ಎದೆ ಡವಗುಟ್ಟತೊಡಗಿತು. ಮೈಜುಮ್ಮೆನ್ನತೊಡಗಿತು. ಅಯ್ಯೋ!  ನಾನೇನು ಮಾಡಲಿ. ಅಲ್ಲಾಹ್! ನೀನೇ ರಕ್ಷಿಸು. ದುಷ್ಟ ಬರುತ್ತಿದ್ದಾನೆ. ಈ ಕೋಮಲ ಮರಿಗೂಸಿನ ಅವಸ್ಥೆ!  ಅಲ್ಲಾಹ್ ಎಂತಹ ಕೂಸು. ದುಷ್ಟನು ಇದನ್ನು  ಏನು ಮಾಡುತ್ತಾನೋ!  ಅವರು ಮನನೊಂದು ಅತ್ತುಬಿಟ್ಟರು. ಅಳು ಕಂಡಾಗ ದಾಸಿ ಕೇಳಿದಳು;  "ಮಹಾರಾಣಿಯವರೇ, ಯಾಕೆ ಅಳುತ್ತಿದ್ದೀರಿ."

      ಚಕ್ರವರ್ತಿ ಬರುತ್ತಿದ್ದಾರೆ. ಈ ಮಗುವನ್ನು ಏನು ಮಾಡುತ್ತಾರೇನೋ ಎಂದು ಹೆದರಿ ಅಳುತ್ತಿದ್ದೇನೆ. ಇದಕ್ಕೆ ಏನಾದರೂ ಪರಿಹಾರೋಪಾಯ ನಿನ್ನಲ್ಲಿದೆಯಾ?

      ದಾಸಿ ಕೆಲವು ಕ್ಷಣ ಮೂಕಳಾದಳು. ಆಮೇಲೆ ಹೇಳಿದಳು;
ಚಕ್ರವರ್ತಿ ಬರುತ್ತಿದ್ದಾರೆ. ಈ ಮಗುವನ್ನು ಏನು  ಮಾಡುತ್ತಾರೇನೋ ಎಂದು ಹೆದರಿ ಅಳುತ್ತಿದ್ದೇನೆ. ಇದಕ್ಕೆ ಏನಾದರೂ ಪರಿಹಾರೋಪಾಯ ನಿನ್ನಲ್ಲಿದೆಯ?

        ದಾಸಿ ಕೆಲವು ಕ್ಷಣ ಮೂಕಳಾದಳು. ಆಮೇಲೆ ಹೇಳಿದಳು;   "ಅವರಿಗೆ ಕಾಣದಂತೆ ಅಡಗಿಸಿಡಬಹುದೇನೋ ಎಂದು ಯೋಚಿಸಿದೆ. ಆದರೆ ಅದು ನಡೆಯುವ ವಿಷಯವಲ್ಲ. ಬೆಳೆಯುತ್ತಿರುವ ಒಂದು ಮಗುವನ್ನು ಎಷ್ಟು ಕಾಲ ಅಡಗಿಸಿಡಬಹುದು. ಒಂದು ದಿನ ಕಾಣದೆ ಇರುತ್ತದೆಯೇ?  ಆಗ ಕಂಡರೆ ಎರಡು ಅಪರಾಧಗಳು ಆಗುತ್ತದೆ. ಒಂದು, ಗಂಡು ಮಗುವನ್ನು ಸಾಕಿದ್ದು, ಮತ್ತೊಂದು ರಾಜ, ಪತಿದ್ರೋಹ ಮಾಡಿದ್ದು.

      " ಹಾಗಾದರೆ ನಾನೇನು ಮಾಡಲೆಂದು ನೀನು ಹೇಳುತ್ತಿದ್ದೀಯಾ?"  ಆಸಿಯಾ ಬೀವಿ(ರ) ತಾಳ್ಮೆಗೆಡುತ್ತಾ ಕೇಳಿದಳು.
       
         "ಮಗುವನ್ನು ಈಗಲೇ ತೋರಿಸಿ ಬಿಡು. ಇದನ್ನು ನಾನು ಸಾಕುತ್ತೇನೆ ಎಂದು ಹೇಳಿರಿ. ತಮ್ಮ ಮಾತಿಗೆ ಅವರು ಎದುರಾಡಲಾರರು. ಅವರು ಎಷ್ಟೇ ಕ್ರೂರಿಯಾಗಿದ್ದರೂ ತಮ್ಮೆದುರಿಗೆ ಮೃದುವಾಗುತ್ತಾರೆ."

     ಅಷ್ಟರಲ್ಲಿ ಫರೋವನು ಅಲ್ಲಿಗೆ ತಲುಪಿದ್ದನು. ಆ ಮೊದಲೇ ಅವನಿಗೆ ಮಗುವಿನ ವಿಚಾರ ತಿಳಿದಿತ್ತು. ಹೆಣ್ಣು ಮಕ್ಕಳ ಗುಣಮುಖವಾದ ಸುದ್ದಿ ಅರಮನೆಯಿಡೀ ಹರಡಿದಾಗ ಅದರ ಕಾರಣ ತಿಳಿಯದಿರುತ್ತದೆಯೇ? ಫರೋವನಿಗೆ ಅತ್ಯಂತ ಸಂತೋಷವಾಗಿದ್ದರೂ ಮಗುವಿನ ಬಗ್ಗೆ ಆತಂಕ ಹುಟ್ಟಿತ್ತು. ನನ್ನ ವಿರೋಧಿ ಮಗು ಇದೇ ಯಾಕಾಗಿರಬಾರದು ಎಂದು ಚಿಂತೆ ಹತ್ತಿತ್ತು. ಏನೋ ಒಂದು ಅಭೌತಿಕ ಶಕ್ತಿಯಿಂದ ಈ ಮಗುವೇ ನನ್ನ ವಿರೋಧಿ ಯಾಕಾಗಿರಬಾರದು? ಹೀಗೆಂದು ಚಿಂತಿಸುತ್ತಾ ಮಗುವನ್ನು ನೋಡಲೆಂದೇ ಆತ ಬಂದಿದ್ದನು.

       ಸೊಂಟದಲ್ಲಿ ಒರೆಯೊಳಗೆ ಮುಚ್ಚಿಟ್ಟ ಖಡ್ಗ ನೇತಾಡುತ್ತಿತ್ತು. ಆತ ಸಿದ್ದವಾಗಿಯೇ ಬಂದಿದ್ದನು. ಮನದಲ್ಲಿ ನಾನಾ ವಿಧ ತಾಕಲಾಟಗಳು ಇದ್ದುವು. ಮಗುವಿನೊಂದಿಗೆ ಆಸಿಯಾರಿಗೆ ತೀವ್ರ ಮಮತೆ ಹುಟ್ಟಿದೆ ಎಂದು ಅವನಿಗೆ ತಿಳಿದಿತ್ತು. ಹಾಗಾದರೆ ಮಗುವನ್ನು ಕೊಂದರೆ ಆಸಿಯಾಳಿಗೆ ದುಃಖವಾಗುತ್ತದೆ. ಅವಳಿಗೆ ದುಃಖವಾಗುವುದೆಂದು ಶತ್ರುವನ್ನು ಮನೆಯೊಳಗೆ ಸಾಕುವುದೇ? ಇದಾಗಿತ್ತು ಅವನ ಪೀಕಲಾಟ.

      ಆದರೆ ಬೀವಿಯವರ ಮಡಿಲಲ್ಲಿದ್ದ ಮಗುವನ್ನು ಕಂಡಾಕ್ಷಣ ಆತನು ತಬ್ಬಿಬ್ಬಾದನು. ಕೆಲವು ಕ್ಷಣಗಳ ಕಾಲ ಮಾತೇ ಹೊರಡದಂತೆ ದಂಗಾದನು. ಮಗುವಿನ ಅಸಾದೃಶ ಸೊಗಸು ಕಂಡು ಅಪ್ರತಿಭನಾದನು. ಆಸಿಯಾ ಬೀವಿ(ರ) ಗರಬಡಿದವರಂತೆ ನಿಂತುಕೊಂಡಿದ್ದರು. ಕೈಯ್ಯಲ್ಲಿ ಮಗುವಿತ್ತು. ಅವರು ತಣ್ಣಗೆ ಕಂಪಿಸುತ್ತಿದ್ದರು.

        ಕೆಲವೇ ಕ್ಷಣಗಳಲ್ಲಿ ಫರೋವನ ಮುಖಭಾವ ಬದಲಾಯಿತು. ನನ್ನ ಶತ್ರು ಇದೇ ಮಗು. ಯಾವ ಸಂದೇಹವೂ ಇಲ್ಲ. ಇದನ್ನು ಉಳಿಸಿದರೆ ನನ್ನ ಇದುವರೆಗೆ ಪ್ರಯತ್ನ ಹೊಳೆಯಲ್ಲಿ ಹಿಂಡಿದ ಹುಣಸೆಯಂತಾದೀತು. ನನ್ನ ಅರಮನೆಯಲ್ಲೇ ಈ ಮಗುವನ್ನು ಬೆಳೆಯಗೊಡುವುದು ಬಲು ದೊಡ್ಡ ಗಾಂಪತನವಾದೀತು. ಇಲ್ಲ, ಇಲ್ಲ. ಈ ಮಗುವನ್ನು ಉಳಿಯಗೊಡಲಾರೆ. ಅವನ ಸಿಟ್ಟು ನೆತ್ತಿಗೇರಿತು. ಸೊಂಟಕ್ಕೆ ಕೈ ಹಾಕಿ ಅಲ್ಲಿ ಒರೆಯೊಳಗಿದ್ದ ಖಡ್ಗವನ್ನು ರಪ್ಪಕ್ಕೆಂದು ಸೆಳೆದನು. ಕಣ್ಣು ಉರುಳುತ್ತಾ ಮುಖದಲ್ಲಿ ಕ್ರೂರಭಾವ ತೋರಿಸುತ್ತಾ ಮುಂದಡಿಯಿಟ್ಟನು.
ಅವನ ಸಿಟ್ಟು ನೆತ್ತಿಗೇರಿತು. ಸೊಂಟಕ್ಕೆ ಕೈ ಹಾಕಿ ಅಲ್ಲಿ ಒರೆಯೊಳಗಿದ್ದ ಖಡ್ಗವನ್ನು ರಪ್ಪಕ್ಕೆಂದು ಸೆಳೆದನು. ಕಣ್ಣು ಉರುಳುತ್ತಾ ಮುಖದಲ್ಲಿ ಕ್ರೂರಭಾವ ತೋರಿಸುತ್ತಾ ಮುಂದಡಿಯಿಟ್ಟನು.

        ಆಸಿಯಾ ಬೀವಿ(ರ)ಯವರ ಜಂಘಾಬಲವೇ ಹುದುಗಿ ಹೋಯಿತು. ಕ್ರೂರ ವನ್ಯ ಮೃಗಕ್ಕೂ ಕ್ರೂರಿಯಾದ ಹಿಂಸ್ರ ಪಶು ಕಿರಾತನ ಕೈಯ್ಯಲ್ಲಿ ಖಡ್ಗ.  ಅವನ ಎದುರಿಗೆ ನಿಂತಿರುವ ಅಬಲೆ  ಹೆಣ್ಣಿನ ಕೈಯ್ಯಲ್ಲಿ ಮರಿಗೂಸು. ಎಪ್ಪತ್ತು ಸಾವಿರ ಮಕ್ಕಳನ್ನೂ ಕೊಲ್ಲಿಸಿದ ರಾಕ್ಷಸನಿಗೆ ಇದೊಂದನ್ನು ಹೊಸಕಿ ಹಾಕುವುದು ಏನು ವಿಷಯ!  ಆದರೆ ಅಲ್ಲಾಹುವಿನ ವಿಧಿಯನ್ನು ತಡೆಯುವವರು ಯಾರು? ಅವನ ವಿಧಿ ಮಗುವನ್ನು ಉಳಿಸುವುದಾಗಿತ್ತು. ಅದೇ ಮಗುವಿನಿಂದಲೇ ಆ ದುಷ್ಟನನ್ನು ನಿಗ್ರಹಿಸುವುದಾಗಿತ್ತು. ದುರುಳನ ಅಂತ್ಯವನ್ನು ಆ ಮಗುವಿನ ಕೈಯ್ಯಲ್ಲೇ ಅಲ್ಲಾಹನು ನಿಗಧಿಪಡಿಸಿದ್ದನು. ಹೀಗಿರುವಾಗ ಒಬ್ಬನಲ್ಲ, ಸಾವಿರ ಫರೋವನು ಖಡ್ಗ ಹಿಡಿದುಕೊಂಡು ಬಂದರೂ ಮಗುವನ್ನು ಕೊಲ್ಲಲಾದೀತೇ? ಸಾಧ್ಯವಿಲ್ಲ. ಅಲ್ಲೂ ಹಾಗೇ ಆಯಿತು. ನಿಯಂತ್ರಣ ತಪ್ಪಿ ಪರಿಸರ ಪ್ರಜ್ಞೆಯನ್ನೇ ಮರೆತು ನಾನೇನು  ಮಾಡುತ್ತೇನೆ ಎಂದು ಅರಿವಿಲ್ಲದೆ ಆಸಿಯಾ ಬೀವಿ(ರ)ಯವರು ಚಂಗನೆ ಮುಂದಕ್ಕೆ ನೆಗೆದು ಫರೋವನ ಕೈಯ್ಯನ್ನು ಬಲವಾಗಿ ಹಿಡಿದು ಬಿಟ್ಟರು. ಮದುವೆಯಾದ ಬಳಿಕ ನಡೆದ ಮೊಟ್ಟ ಮೊದಲ ಸ್ಪರ್ಶ. ಫರೋವನ ಕೈಯ್ಯಲ್ಲಿ ಮಿಂಚು ಹರಿಯಿತು. ಆ ಮಾದಕ ಸ್ಪರ್ಶದ ಸೆಲೆಯಲ್ಲಿ ಅವನ ಸಿಟ್ಟೆಲ್ಲಾ ಜರ್ರನೆ ಇಳಿಯಿತು. ಅವನ ಕರುಳಲ್ಲಿ ಸಾವಿರಾರು ಅನುಭೂತಿಗಳು ತುಳುಕಾಡಿದುವು. ಅವನ ಮನವರಳಿ ಮಲ್ಲಿಗೆಯಾಯಿತು.

      ಅವನು ಶಾಂತನಾಗುತ್ತಿದ್ದಂತೆ ಆಸಿಯಾ ಬೀವಿ(ರ) ಕೇಳಿದರು;
    "ನೀವು ಈಗ ಮಾಡಿದ್ದೇನು? ಏನು ಮಾಡಬೇಕೆಂಬ ಉದ್ದೇಶದಿಂದ ಖಡ್ಗ ಹಿಡಿದುಕೊಂಡು ಮುಂದೆ ಬಂದಿರಿ? ಈ ಮಗುವನ್ನೊಮ್ಮೆ ದಿಟ್ಟಿಸಿ ನೋಡಿರಿ. ಎಂತಹ ಚೆಲುವು, ಎಂತಹ ನಿಷ್ಕಳಂಕತೆ, ಎಂತಹ ಕೋಮಲತೆ. ಇಂತಹ ಮಗುವನ್ನು ಕೊಲ್ಲುವ  ಮನಸ್ಸಾದರೂ ನಿಮಗೆ ಹೇಗೆ ಬಂತು?"

     "ಪ್ರಿಯೇ! ಇದು ದಯೇ, ಕರುಣೆ, ದಾಕ್ಷಿಣ್ಯದ ಪ್ರಶ್ನೆಯಲ್ಲ. ಇದು ನನ್ನ ಜೀವನ್ಮರಣದ ಪ್ರಶ್ನೆ. ನನ್ನ ನಿಗ್ರಹಕ್ಕೆ ಒಂದು ಮಗು ಹುಟ್ಟಲಿದೆಯೆಂದು ಈ ಮೊದಲೇ ಸೂಚನೆ ಸಿಕ್ಕಿದೆ. ಆ ಮಗುವೇ ಇದಾಗಿರಬಹುದು!"

       ಛೇ!  ಏನು ಹೇಳುತ್ತಿದ್ದೀರಾ. ಯಾವ ಆಧಾರದಲ್ಲಿ ಅದುವೇ ಈ ಮಗು ಎಂದು ಹೇಳುತ್ತಿದ್ದೀರಿ? ಇದು ಖಂಡಿತಾ ನಿಮ್ಮ ಶತ್ರುವಾಗಲಾರದು. ಶತ್ರುವಾಗಿದ್ದರೆ ನಿಮ್ಮ ಹೆಣ್ಣು ಮಕ್ಕಳ ರೋಗ ವಾಸಿಯಾಗುತ್ತಿತ್ತೇ?  ಮಗು ಕೈಗೆ ಸಿಕ್ಕಿದ ಕೂಡಲೇ ಎಷ್ಟೊಂದು ಫಲ ಕಂಡು ಬಂತು. ಯಾವ ವೈದ್ಯರಿಗೂ ಗುಣಪಡಿಸಲಾಗದೆ ನಿಮ್ಮನ್ನು ತೀವ್ರ ಚಿಂತೆಯಲ್ಲಿ ಮುಳುಗಿಸಿದ ನಿಮ್ಮ ಏಳು ಹೆಣ್ಣು ಮಕ್ಕಳ ಮಾರಕ ಕಾಯಿಲೆಯು ಈ ಮಗುವಿನ ದಿಸೆಯಿಂದ ಗುಣವಾಗಿ ನಿಮ್ಮ ಚಿಂತೆ ಮಾಯವಾಗಿದೆ. ಇಂತಹ ಮಗುವನ್ನು ಶತ್ರುವೆಂದು ಯಾವ ನಾಲಗೆಯಲ್ಲಿ ಹೇಳುತ್ತಿರುವಿರೀ? ಹಾಗೆ ಹೇಳಲು ನಿಮಗೆ ಮನಸ್ಸಾದರೂ ಹೇಗೆ ಬಂತು? ಇದು ಖಂಡಿತಾ ನಿಮ್ಮ ಶತ್ರುವಲ್ಲ. ಇದರಿಂದ ನಮಗೆ ಬಹಳ ಪ್ರಯೋಜನವಿದೆ. ಈ ಮಗುವನ್ನು ನಾನು ಸಾಕುತ್ತೇನೆ. ನೀವು ದಯವಿಟ್ಟು ನನಗೆ ಅನುಮತಿ ಕೊಡಿ.

     ಆಸಿಯಾ ಬೀವಿ(ರ)ಯವರ ಅಪೇಕ್ಷೆಯ ಮುಂದೆ ಫರೋವ ತಣ್ಣಗಾದ. ಅವರ ಮೇಲೆ ಅವನಿಗಿದ್ದ ಅಮರ ಪ್ರೇಮವು ಒಂದು ಮಹದುಪಕಾರವನ್ನು ಮಾಡಿತು. ತನ್ನ ಮನದನ್ನೆ , ಕನಸಿನ ರಾಣಿ, ಮುದ್ದಿನ ಮಡದಿ, ಸುರಲೋಕ ಸುಂದರಿಯಾದ ಈಕೆಯ ಅಪೇಕ್ಷೆಯನ್ನು ತಳ್ಳಿ ಹಾಕಿ ಮಗುವನ್ನು ಕೊಂದು ಇವಳ ಮನಸ್ಸನ್ನು ಯಾಕೆ ನೋಯಿಸಬೇಕು ಎಂದು ಅವನು ನೆನಸಿದನು.

     "ಆಗಲಿ ಪ್ರಿಯೇ, ನಿನ್ನ ಹೂ ಮನಸ್ಸಿಗೆ ನೋವುಂಟು ಮಾಡಲು ನನಗೆ ಇಷ್ಟವಿಲ್ಲ. ನೀನಲ್ಲದೆ ಬೇರೆ ಯಾರು ಅಪೇಕ್ಷಿಸಿದರೂ ಕೊಲ್ಲದೆ ಬಿಡುತ್ತಿರಲಿಲ್ಲ. ನಿನ್ನ ಇಷ್ಟಕ್ಕಾಗಿ ಮಾತ್ರ ಕೊಲ್ಲದೆ ಬಿಡುತ್ತಿದ್ದೇನೆ. ಪ್ರಿಯೇ, ಮಗುವನ್ನು ಸಾಕಿ ಸಲಹು. ಆದರೆ ಒಂದು ಮಾತು. ಯಾವುದೇ ಸಂದರ್ಭದಲ್ಲಿ ಈ ಮಗು ನನ್ನ ಶತ್ರುವೆಂಬ ಅನುಮಾನ ಬಂದಲ್ಲಿ ನಾನು ಸುಮ್ಮನಿರಲಾರೆ. ಆಗ ನಿನ್ನ ಪ್ರೀತಿಯನ್ನೂ, ಪ್ರೇಮವನ್ನೂ ನಾನು ಆಶಿಸಲಾರೆ."

      ಪ್ರೀಯರೇ! ದಯವಿಟ್ಟು ತಾವು ತಪ್ಪು ತಿಳುಕೊಳ್ಳಬೇಡಿ. ಈ ಮಗು ನಮಗೆ ಯಾವತ್ತೂ ವಿರೋಧಿಯಾಗದು. ಇದು ನಮ್ಮ ಭಾಗ್ಯ ನಿಧಿ. ತಮ್ಮ ಚಿಂತೆಯನ್ನು ಬಿಡಿಸಿದ ಶಿಶು. ರಾಜಕುಮಾರಿಯರ ಭೀಕರ ಕಾಯಿಲೆಯನ್ನು ಗುಣಪಡಿಸಿದ ಸೌಭಾಗ್ಯ ನಿಧಿಯಿದು. ಇದು ಸಿಕ್ಕಿದ್ದು ನಮ್ಮ ಮಹಾ ಭಾಗ್ಯ. ಹೀಗೆನ್ನುತ್ತಾ ಅವರು ಮಗುವನ್ನು  ಎದೆಗವಚಿಕೊಂಡರು. ಫರೋವನು ತುಸು ಹೊತ್ತು ಆ ದೃಶ್ಯವನ್ನು ನೋಡುತ್ತಾ ನಿಂತನು. ಆಮೇಲೆ ನಿಧಾನವಾಗಿ ತನ್ನ ಅರಮನೆಯತ್ತ ಹೆಜ್ಜೆ ಹಾಕಿದನು.

     ಕೋಮಲ ಮರಿಗೂಸನ್ನು ಆಸಿಯಾ ಬೀವಿ(ರ) ಪ್ರಾಣದಂತೆ ಕಾಪಾಡಿಕೊಂಡು ಬರತೊಡಗಿದರು. ಮಗುವಿನ ಮಧುರ ಮನೋಹರವಾದ  ಹೂ ನಗೆಯಲ್ಲಿ ಬೀವಿ ಅನುಭೂತಿ ಪಡೆದರು. ಎಪ್ಪತ್ತು ಸಾವಿರ ಶಿಶುಗಳನ್ನು ಹೊಸಕಿ ನೆತ್ತರೋಕುಳಿ ಹರಿಸಿದ ಪತಿ ಫರೋವನು ಈ ಒಂದು ಮಗುವನ್ನು ಕೊಲ್ಲದೆ ಬಿಟ್ಟದನ್ನು ಆಗಾಗ ನೆನಸುತ್ತಾ ಅತಿಯಾದ ಆನಂದ ಪಡುತ್ತಿದ್ದರು.  ಮಗುವಿಗೆ ಎದೆ ಹಾಲುಣಿಸಲು ಯಾರು ಬರಬೇಕೆನ್ನುವ ಸಮಸ್ಯೆ ತಲೆದೂರಿತು. ಮಗುವಿಗೆ ಎದೆ ಹಾಲುಣಿಸುವುದು ಯಾರು? ಇದಾಗಿತ್ತು ಬೀವಿಯ ಚಿಂತೆ. ಮಗುವಿಗೆ ಮೊಲೆಹಾಲುಣಿಸುವ ಯೋಗ್ಯ ಸ್ತ್ರೀಯ ಅನ್ವೇಷಣೆ  ಶುರುವಾಯಿತು. ಬೀವಿಯ ಆದೇಶದ  ಮೇರೆಗೆ ದಾಸಿಯರು ನಾನಾ ಕಡೆ ಅನ್ವೇಷಣೆ ಪ್ರಾರಂಭಿಸಿದರು. ಈ ಅನ್ವೇಷಣೆಯ ಫಲವಾಗಿ ನಾನಾ ಕಡೆಗಳಿಂದ ಹಲವು ಸ್ತ್ರೀಯರು ಮುಂದೆ ಬಂದರು. ಆದರೆ ಮಗು ಯಾರ ಮೊಲೆಯನ್ನೂ ಕುಡಿಯಲಿಲ್ಲ. ಆಸಿಯಾ ಬೀವಿ(ರ)ಗೆ ಚಿಂತೆಯಾಯಿತು. ಎದೆ ಹಾಲುಣ್ಣದೆ ಮಗುವಿನ ಆರೈಕೆ ಕಷ್ಟ. ಯಾರ ಹಾಲನ್ನು ಮುಟ್ಟದಿರಲು ಕಾರಣವೇನಿರಬಹುದು.?   ಬಹುಶಃ ವಿಶೇಷ ಮಗುವಾಗುವಾಗ ಇದಕ್ಕೆ ಯೋಗ್ಯ ಮಹಿಳೆ ಸಿಗಲಿಲ್ಲವೆಂದು ಕಾಣುತ್ತದೆ. ದೇಶದ ಎಲ್ಲಾದರೂ ಒಂದು ಕಡೆ ಓರ್ವ ಸ್ತ್ರೀಯಾದರೂ ಸಿಗದೆ ಇರಲಾರರು. ಹಾಗೆಂದು ಬೀವಿಯವರು ಭಟರನ್ನು ಕರೆಸಿ ದೇಶವಿಡೀ ಡಂಗುರ ಹೊಡೆಯುವಂತೆ ಆದೇಶವಿತ್ತರು.

     ರಾಣಿಯ ಆದೇಶದಂತೆ ನೂರಾರು ಭಟರು ದೇಶದ ಉದ್ದಗಲ ಸಂಚರಿಸಿ ಸುದ್ದಿ ಹಬ್ಬಿಸಿದರು.  ಅರಮನೆಯಲ್ಲಿರುವ ಒಂದು ಮಗುವಿಗೆ ಎದೆಹಾಲುಣಿಸುವ ಒಂದು ಯೋಗ್ಯ ಸ್ತ್ರೀಯೊಬ್ಬಳ ಅಗತ್ಯವಿದೆಯೆಂದೂ ಸೂಕ್ತ ಸಂಭಾವನೆ ಮತ್ತು ಬಹುಮಾನಗಳನ್ನು ಕೊಡಲಾಗುವುದೆಂದೂ ಸಾರಲಾಯಿತು. ಈ ಪ್ರಕಾರ ಮತ್ತೂ ಅನೇಕ ಹೆಂಗಸರು ಅರಮನೆ ಸೇರಿದರು. ಆದರೆ ಮಗು ಯಾರ ಮೊಲೆಹಾಲನ್ನು ಕುಡಿಯಲೇ ಇಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ಮೊಲೆಹಾಲುಣ್ಣುವ ಲಕ್ಷಣವೇ ಇಲ್ಲ.

       ಹೀಗಿರಲು ಓರ್ವ ಮಹಿಳೆ ಅತ್ತ ಬಂದರು. ಗೌರವ ಭಾವ ಸ್ಪುರಿಸುವ ಮುಖ, ನಡತೆ, ಹಾವಭಾವ ಕಾಣುವಾಗಲೇ ಓರ್ವ ಮರ್ಯಾದಸ್ಥ ಕುಟುಂಬದ  ಸುಶೀಲೆ ಹೆಣ್ಣೆಂದು ಗೊತ್ತಾಗುತ್ತಿತ್ತು. ಶಾಂತಚಿತ್ತ ಮುಖದೊಂದಿಗೆ ಬಹಳ ವಿನಯದಿಂದ ಆ ಹೆಂಗಸು ಬಂದು ಮಗುವನ್ನು ನೋಡಿದರು‌.  ಮಗು ಅಳುತ್ತಿತ್ತು. ಎದೆ ಹಾಲು ಸಿಗದೇ ಹಸಿವಾಗಿದೆಯೇನೋ

     ಆಸಿಯಾ ಬೀವಿ(ರ)ಗೂ ಆ ಹೆಂಗಸಿನಲ್ಲಿ ಒಂದು ವಿಶೇಷ ಆಕರ್ಷಣೆ ಕಂಡಿತು. ಉಳಿದ ಎಲ್ಲಾ ಹೆಂಗಸರ ನಡುವೆ ಆಕೆಯನ್ನು ಅವರು ವಿಶೇಷ ಗಮನಿಸಿದರು. ಈ ಹೆಂಗಸಿನ ಹಾಲನ್ನು ಮಗು ಖಂಡಿತಾ ಕುಡಿಯುವುದೆಂದು ಅದೇಕೋ ಅವರ ಮನಸ್ಸು ತರ್ಕಿಸಿತು. ಅವರು ಕೇಳಿದರು.

     'ನೀವು ಮಗುವಿಗೆ ಎದೆಹಾಲು ಕೊಡುವ ಉದ್ದೇಶದಿಂದ ಬಂದಿದ್ದೀರಾ?

     'ಹೌದು ಮಹಾರಾಣಿಯವರೇ'

     'ನೀವು ಎಲ್ಲಿಯವರು?  ಯಾವ ಕುಟುಂಬದವರು?'

    'ನನ್ನ ವಂಶವೂ ಅಲ್ಲಾಹುವಿನ ಆಪ್ತ ಮಿತ್ರರಾದ ಪ್ರವಾದಿ ಇಬ್ರಾಹೀಂ(ಅ) ನೆಬಿಯವರ ಪರಂಪರೆಯಾಗಿದೆ. ಆ ಕುಟುಂಬದ ಓರ್ವ ಬಡ, ಸಾಧು ಮಹಿಳೆ ನಾನು'

     ಸರಿ. ಹಾಗಾದರೆ ನೀವು ಒಮ್ಮೆ ಪ್ರಯತ್ನಿಸಿ ನೋಡಿ. ಮಗು ಯಾರ ಮೊಲೆಯನ್ನೂ ಮುಟ್ಟುತ್ತಿಲ್ಲ. ನಿಮ್ಮ ಪ್ರಯತ್ನ ಸಫಲವಾಗುವುದೇನೋ ನೋಡೋಣ.

     ಆ ಹೆಂಗಸು ಮಗುವನ್ನು ಕೈಗೆತ್ತಿಕೊಂಡು ಎದೆಗವಚಿಕೊಂಡರು. ಅವರ ಕಣ್ಣುಗಳು ತೇವಗೊಂಡವು. ಗಂಟಲು ಉಕ್ಕಿ ಬಂತು. ಮೈಕೈಯೆಲ್ಲಾ ರೋಮಾಂಚನಗೊಂಡವು. ಏನೋ ಒಂದು ವಿಶೇಷ ಭಾವನೆ ಅವರಲ್ಲಿ ಕಂಡಿತು. ಕಣ್ಣುಗಳಲ್ಲಿ ಧಾರೆಧಾರೆಯಾಗಿ ನೀರು ಸುರಿಯಿತು. ಉಕ್ಕಿ ಬರುತ್ತಿರುವ ಅಳುವನ್ನು ಅದುಮಲು ಪಾಡು ಪಡುವಂತೆ ಕಂಡರು. ಆಸಿಯಾ ಬೀವಿ(ರ)ಗೂ ಅಲ್ಲಿನವರಿಗೆಲ್ಲಾ ಇದು ಕಂಡಾಗ ಆಶ್ಚರ್ಯವಾಯಿತು. ಈಕೆಗೆ ಯಾಕೆ ಹೀಗಾಯಿತು. ಮಗುವನ್ನು ಕಂಡು ಯಾಕೆ ಅಳುತ್ತಿದ್ದಾರೆ? ಅವರಿಗೆ ಏನೂ ಅರ್ಥವಾಗಲಿಲ್ಲ. ಆ ಹೆಂಗಸು ಮಗುವನ್ನು ಕೈಗೆತ್ತಿಕೊಂಡಾಗಲೇ ಮಗು ಅಳು ನಿಲ್ಲಿಸಿ ಮಂದಹಾಸ ಬೀರತೊಡಗಿತು.
ಆ ಹೆಂಗಸು ಮಗುವನ್ನು ಕೈಗೆತ್ತಿಕೊಂಡಾಗಲೇ ಮಗು ಅಳು ನಿಲ್ಲಿಸಿ ಮಂದಹಾಸ ಬೀರತೊಡಗಿತು. ಮಗು ಎರಡೂ ಕಣ್ಣುಗಳನ್ನು ಅರಳಿಸಿ ಹೆಂಗಸಿನ ಮುಖವನ್ನೇ ದಿಟ್ಟಿಸಿ ನೋಡಿತು. ಹೆಂಗಸು ಕೂಡಾ ತುಂಬಾ ಹೊತ್ತು ಮಗುವಿನ ಕಣ್ಣುಗಳನ್ನೇ ದಿಟ್ಟಿಸಿದರು. ಆ ನಾಲ್ಕು ಕಣ್ಣುಗಳು ಪರಸ್ಪರ ತದೇಕ ಚಿತ್ತದಿಂದ ತುಂಬಾ ಹೊತ್ತು ನೋಡಿಕೊಂಡವು. ಕಣ್ಣಿನ ಭಾಷೆಯಲ್ಲೇ ಅವುಗಳ ನಡುವೆ ಅನೇಕ ವಿಚಾರ ವಿನಿಮಯಗಳು ನಡೆದುವು. ವಾತ್ಸಲ್ಯಮಯ ತಾಯಿ ಮಗುವಿನ ವಿಚಾರ ವಿನಿಮಯ.  ಮಗು! ನನ್ನಿಂದಗಲಿ ನೀನು ಈಗಲಾದರೂ ಸಿಕ್ಕಿದೆಯಲ್ಲಾ!   "ನೈಲ್ ನದಿಯಲ್ಲಿ ತೇಲಿ ಬಿಡು. ನಿನ್ನ ಮಗುವನ್ನು ನಿನಗೆ ಮರಳಿಯೊಪ್ಪಿಸುತ್ತೇನೆ."  ಎಂದು ನನ್ನಲ್ಲಿ ಅಲ್ಲಾಹು ನೀಡಿದ ಭರವಸೆಯನ್ನು ಅವನು ಈಗ ನೆರವೇರಿಸಿದ್ದಾನೆ. ನನ್ನ ಮುದ್ದಿನ ಕಂದಾ!  ನಿನ್ನನ್ನು ನದಿಯಲ್ಲಿ ತೇಲಿಬಿಟ್ಟ ಬಳಿಕ ಇದುವರೆಗೂ ನಿನ್ನ ಚಿಂತೆಯಲ್ಲಿಯೇ ಇದ್ದೆ. ನಿನ್ನ ಈ ಮುಖವನ್ನು  ಯಾವತ್ತು ಕಾಣುವೆನೋ ಎಂಬ ತವಕದಲ್ಲಿ ಇದ್ದೆ.  ಅಲ್ ಹಮ್ದುಲಿಲ್ಲಾಹ್..... ಅಲ್ಲಾಹುವಿನ ಅನುಗ್ರಹದಿಂದ ಈ ಶುಭ ಘಳಿಗೆ ಈಗ ಬಂತು ಎಂಬ ಮಾತನ್ನು ಹೆಂಗಸಿನ ಕಣ್ಣು ಕಣ್ಣಭಾಷೆಯಲ್ಲಿಯೇ ಹೇಳುತ್ತಿರುವಾಗ ಮಗುವಿನ ಕಣ್ಣ ಭಾಷೆಯಲ್ಲೂ , "ಅಮ್ಮ, ಕೊನೆಗೂ ನನಗೆ ನೀವು ಸಿಕ್ಕಿದಿರಲ್ಲಾ. ನಾನು ಬೇರೆ ಯಾರ ಮೊಲೆಯನ್ನೂ ಮುಟ್ಟಲಿಲ್ಲ. ಅಮ್ಮನ ಎದೆಯ ಅಮೃತವನ್ನೇ ಕುಡಿಯಬೇಕೆಂದು ಹಟ ಹಿಡಿದೆ. ಅಲ್ಲಾಹು ನನಗೆ ನಿಮ್ಮನ್ನು ಕೊಟ್ಟ."

     ಅಲ್ಲಿ ನಡೆದುದು ಕೆಲವು ಕಾಲ ಅಗಲಿದ ತಾಯಿ ಮಗುವಿನ ಪುನರ್ಮಿಲನವಾಗಿತ್ತು. ಅದೊಂದು ಅಪೂರ್ವ ಘಳಿಗೆಯಾಗಿತ್ತು. ಆದರೆ ಅಲ್ಲಿನವರಿಗೆ ಯಾರಿಗೂ ಇದರ ಸುಳಿವೇ ಹತ್ತಿರಲಿಲ್ಲ. ಯಾರದೋ ಮಗು, ಯಾರೋ ಒಬ್ಬ ಹೆಂಗಸು ಎಂದೇ ಅವರು ಭಾವಿಸಿದ್ದರು.

     ಹೆಂಗಸು ಮಗುವಿಗೆ ಬಾಯೊಳಗೆ ತನ್ನ ಮೊಲೆಯನ್ನು ಇಟ್ಟು ಕೊಟ್ಟ ತಕ್ಷಣ ಮಗು ಸಂತಸದಿಂದ ಚೀಪಿ ಹಾಲು ಕುಡಿಯತೊಡಗಿತು. ಆಸಿಯಾ ಬೀವಿ(ರ)ಯ ಮುಖ ಪ್ರಪುಲ್ಲವಾಯಿತು. ಮನಸ್ಸು ಕುಳಿರ್ಗೊಂಡಿತು. ಮಗು ಚೆನ್ನಾಗಿ ಹಾಲು ಕುಡಿದ ಅನಂತರ ಆನಂದದಿಂದ ಆಸಿಯಾ ಬೀವಿ(ರ)ಯವರು ಮಹಿಳೆಯನ್ನು ಹತ್ತಿರ ಕರೆದು ಗೌರವಿಸಿ ಆಲಿಂಗನ ಮಾಡಿಕೊಂಡು  ಕೇಳಿದರು.  "ನೀವು ನಮ್ಮ ಮಗುವಿನ ಪ್ರಾಣ ಉಳಿಸಬೇಕು. ನೀವು ಇಲ್ಲೇ ವಾಸವಾಗಿ ಮಗುವಿಗೆ ಹಾಲುಣಿಸಿರಿ. ನಿಮಗೆ ಎಷ್ಟು ವೇತನ ಬೇಕೋ ಹೇಳಿ. ಬೇರೆ ಏನೂ ಕೆಲಸ ಮಾಡಬೇಕಾಗಿಲ್ಲ. ನಿಮಗೆ ಬೇಕಾದ ಸವಲತ್ತುಗಳನ್ನೆಲ್ಲಾ  ನಾನು ಒದಗಿಸಿ ಕೊಡುತ್ತೇನೆ."

     ರಾಣಿಯವರೇ!  ನನಗೆ ವೇತನ ಬೇಕಾಗಿಲ್ಲ. ಸವಲತ್ತುಗಳು ಬೇಕಾಗಿಲ್ಲ. ನಾನು ಅತ್ಯಂತ ಸರಳವಾಗಿ ಬದುಕುವವಳು. ಧನ ಕನಕ ವಸ್ತು ಒಡವೆಗಳಲ್ಲಿ ನನಗೆ ಆಸಕ್ತಿ ಇಲ್ಲ. ಆದರೆ ಇಲ್ಲೇ ನೆಲೆಸಿ ಹಾಲುಣಿಸಲು ನನಗೆ ಸಾಧ್ಯವಿಲ್ಲ. ಮನೆಯಲ್ಲಿ‌ಒಂದು ಮಗುವಿದೆ.

     ಮಗುವಿದ್ದರೇನು? ಮಗುವನ್ನೂ ಇಲ್ಲೆ ಇರಿಸಿ. ಇಲ್ಲಿ ಈ ಭವ್ಯ ಅರಮನೆ ಜನವಿಲ್ಲದೆ ಖಾಲಿ ಬಿದ್ದಿದೆಯಲ್ಲ.!

     ಹಾಗಲ್ಲ ಮಹಾರಾಣಿಯವರೇ!  ನನ್ನ ಮಗುವನ್ನು ಅರಮನೆಯಲ್ಲಿ ಬೆಳೆಸುವುದು ನನಗಿಷ್ಟವಿಲ್ಲ. ನಾನೊಂದು ವಿಷಯ ಹೇಳುತ್ತೇನೆ. ಈ ಮಗುವನ್ನು ನನ್ನ ಮನೆಗೊಯ್ಯುತ್ತೇನೆ. ಅಲ್ಲಿ ಮುದ್ದಿನಿಂದ ಸಾಕುತ್ತೇನೆ.

     ಅಯ್ಯೋ!  ಅದು ಸಾಧ್ಯವಿಲ್ಲ. ಮಗುವನ್ನು ಬಿಟ್ಟಿರಲು ನನ್ನಿಂದ ಸಾಧ್ಯವಿಲ್ಲ. ಒಂದು ಕ್ಷಣವೂ ಮಗು ನನ್ನ ಕಣ್ಣಿಂದ ಮರೆಯಾಗುವುದನ್ನು ನಾನು ಇಷ್ಟಪಡಲಾರೆ.

     ಹಾಗಾದರೆ ಬಹಳ ಕಷ್ಟ. ನನಗೆ ಇಲ್ಲಿರಲು ಸಾಧ್ಯವಿಲ್ಲ. ಮಗುವಿನ ಮೇಲೆ ನಿಮಗೆ ನಿಜವಾದ   ಪ್ರೀತಿ ಇದ್ದರೆ ನನಗೆ ಒಪ್ಪಿಸಿ ಬಿಡಿರಿ. ಬೇರೆ ಯಾರ ಹೆಂಗಸರ ಮೊಲೆಯನ್ನೂ ಕುಡಿಯದ ಮಗು ತೊಂದರೆಗೀಡಾದೀತು. ನಾನು ಆಗಾಗ ಮಗುವನ್ನು ಇಲ್ಲಿಗೆ ತರುತ್ತೇನೆ. ನಿಮಗೂ ನನ್ನ ಮನೆಗೆ ಆಗಾಗ ಬಂದು ಹೋಗುತ್ತಾ ಇರಬಹುದು. 

     ಆಸಿಯಾ ಬೀವಿ(ರ) ಬೇರೆ ನಿರ್ವಾಹವಿಲ್ಲದೆ ಒಪ್ಪಿಕೊಂಡರು. ಆಗಲಿ. ಹಾಗೆಯೇ ಆಗಲಿ. ಎರಡು, ಮೂರು ದಿನಗಳಿಗೊಮ್ಮೆ ನೀವು ಮಗುವನ್ನು ಇಲ್ಲಿಗೆ ಕರೆತರಲೇಬೇಕು. ನಿಮಗೆ ಮನೆಯಲ್ಲಿ ಎಲ್ಲ ಏರ್ಪಾಡುಗಳನ್ನು ಮಾಡುತ್ತೇನೆ. ಬೇಕಾದರೆ ನಿಮ್ಮ ಮನೆಯನ್ನೇ ಅರಮನೆಯಂತೆ ಕಟ್ಟಿಸಿಕೊಡುತ್ತೇನೆ.

     ಬೇಡ ತಾಯಿ, ಅಂತಹದ್ದೇನೂ ಬೇಡ. ನನ್ನ ಗುಡಿಸಲೇ ನನಗೆ ಅರಮನೆ. ಇಹಲೋಕದಲ್ಲಿ ನನಗೆ ಅಷ್ಟೇ ಸಾಕು.

     ನೀವು ಬಹಳ ಉದಾತ್ತ ಹೆಂಗಸು. ನಿಜವಾಗಿಯೂ ನಿಮ್ಮಂತಹ ಹೆಂಗಸರನ್ನು ನಾನು ಇದುವರೆಗೂ ಕಂಡಿಲ್ಲ. ಅದಿರಲಿ, ನಿಮಗೆ ವೇತನ ಎಷ್ಟು ಕೊಡಬೇಕೆಂದು ಹೇಳಿ.

     ನಿಮ್ಮೊಂದಿಗೆ ಗುಟ್ಟಾಗಿ ನಾನು ಮಾತನಾಡಲು ಇಚ್ಚಿಸುತ್ತಿದ್ದೇನೆ. ಇನ್ನು ಮುಂದಿನ ಮಾತು ಇಲ್ಲಿ ಯಾರಿಗೂ ಕೇಳಿಸಬಾರದು.

   ಅಷ್ಟಾದಾಗ ಆಸಿಯಾ ಬೀವಿ(ರ) ಯವರು ಸ್ತ್ರೀಯನ್ನು ಅಂತಃಪುರಕ್ಕೆ ಕರೆದೊಯ್ದರು. ಅಲ್ಲಿ ಅವರಿಬ್ಬರ ಮಾತುಕತೆ ಹೀಗೆ ಮುಂದುವರಿಯಿತು.

   ನಿಮ್ಮೊಂದಿಗೆ ಗುಟ್ಟಾಗಿ ನಾನು ಮಾತನಾಡಲು ಇಚ್ಚಿಸುತ್ತಿದ್ದೇನೆ. ಇನ್ನು ಮುಂದಿನ ಮಾತು ಇಲ್ಲಿ ಯಾರಿಗೂ ಕೇಳಿಸಬಾರದು.
    ಅಷ್ಟಾದಾಗ ಆಸಿಯಾ ಬೀವಿ(ರ)ಯವರು ಸ್ತ್ರೀಯನ್ನು ಅಂತಃಪುರಕ್ಕೆ ಕರೆದೊಯ್ದರು. ಅಲ್ಲಿ ಅವರಿಬ್ಬರ ಮಾತುಕತೆ ಹೀಗೆ ಮುಂದುವರೆಯುತು.

    "ನಿಮಗೆ ವೇತನ ಎಷ್ಟು ಬೇಕು ಹೇಳಿ"

   "ನನಗೆ ವೇತನವೇ ಬೇಡ"

    "ಅರೆ ಅದೇಕೆ ನೀವು ಹಾಗೆ ಹೇಳುತ್ತಿದ್ದೀರಿ."

     ಓರ್ವ ಹೆತ್ತ ತಾಯಿ ತನ್ನ ಕರುಳಕುಡಿಗೆ ಮೊಲೆಯುಣಿಸುವುದಕ್ಕೆ ವೇತನ ಪಡೆಯುವುದೇ!  ಮಗು ಬಿಡುಗಣ್ಣು ಅರಳಿಸುತ್ತಾ ನಿರ್ಮಲವಾಗಿ ತಾಯಿ ಮೊಗವನ್ನೇ ನೋಡುತ್ತಾ ಚಿಗುರು ಕೈ ಕಾಲುಗಳನ್ನು ಅಲುಗಾಡಿಸುತ್ತಾ ಮೊಲೆ ಕುಡಿಯುವ ದೃಶ್ಯ ಓರ್ವ ತಾಯಿಗೆ ಈ ಜಗತ್ತಿನಲ್ಲೇ ಅತ್ಯಂತ ಅನುಪಮವಾದ  ಸುಂದರ ದೃಶ್ಯ. ಇದುವೇ ಅಮೂಲ್ಯ ವೇತನ. ಇಂತಹ ವೇತನ ಇರುವಾಗ ಬೇರೆ ವೇತನ ಯಾಕೆ ಬೇಕು?

     "ಏನು, ಏನಂದಿರಿ? ನೀವು ಮಗುವಿನ ಹೆತ್ತ ತಾಯಿಯೇ?"

     ಹೌದು ಮಹಾರಾಣಿಯವರೇ, ನಾನೇ ಆ ಮಗುವಿನ ತಾಯಿ. ಹೀಗೆನ್ನುತ್ತಾ ಮೂಸಾ ನಬಿಯವರ ತಾಯಿಯಾದ ಧನ್ಯ ಮಹಾ ಮಹಿಳೆ ನಡೆದುದೆಲ್ಲವನ್ನೂ ಒಂದೂ ತಪ್ಪದೆ ವಿವರಿಸಿದರು. ಈ ವಿಷಯ ಯಾರಿಗೂ ಗೊತ್ತಾಗಬಾರದೆಂದು ಹೇಳಿದರು. ಆಸಿಯಾ ಬೀವಿ(ರ)ಗೆ ವಿಸ್ಮಯವಾಯಿತು. ಅಷ್ಟೇ ಅಲ್ಲ!  ಮಗು ಕೊನೆಗೆ ಅಮ್ಮನ ಕೈಗೇ ಸಿಕ್ಕಿದ್ದು ಅವರಿಗೆ ಬಹಳ ಸಂತೋಷವಾಯಿತು. 

      ಆಗಲಿ, ಇನ್ನು ನನಗೆ ಯಾವ ಚಿಂತೆಯೂ ಇಲ್ಲ. ಇದೆಲ್ಲಾ ಅಲ್ಲಾಹುವಿನ ಮಹಿಮೆ. ನೀವು ಮಗುವನ್ನು ಒಯ್ಯಿರಿ. ಮೊಲೆಹಾಲು ಬಿಡುವ ತನಕ ಮಾತ್ರ ನಿಮ್ಮಲ್ಲಿರಲಿ. ಆ ಮೇಲೆ ಮಗು ಇಲ್ಲೇ ಬೆಳೆಯಲಿ. 

    "ಅಲ್ಲಾಹುವಿನ ಇಚ್ಚೆ ಹಾಗಿದ್ದರೆ ಹಾಗೇ ಆಗಲಿ".

     ಆ ಮಹಾ ಮಹಿಳೆ ತನ್ನ ಮಗುವನ್ನೆತ್ತಿಕೊಂಡರು. ಅವರ ಮನೆ ಅರಮನೆಗಿಂತ ಹೆಚ್ಚೇನೂ ದೂರವಿಲ್ಲ. ಕೆಲವೇ ಮೈಲುಗಳಷ್ಟು ದೂರವಿತ್ತು. ಪರೋವನು ಮಗುವನ್ನು ಒಯ್ಯಲು ಅನುಮತಿಯಿತ್ತು ಬೇಡ ಬೇಡವೆನ್ನುತ್ತಿದ್ದಂತೆ ಮಗುವಿನ ಆರೈಕೆಗೆ ಸಾಕಷ್ಟು ಧನ ಕನಕಗಳನ್ನು ಕೊಟ್ಟನು. ಆಸಿಯಾ ಬೀವಿ(ರ)ಯವರು ತನ್ನದೇ ಆದ ಅಮೂಲ್ಯ ಪಾರಿತೋಷಕವನ್ನು ಕೊಟ್ಟರು. ಆ ಮಹಾ ಮಹಿಳೆ ಮಗುವನ್ನೆತ್ತಿಕೊಂಡು ಮನೆಯ ಕಡೆ ಹೆಜ್ಜೆ ಹಾಕಿದರು.

     ಆಸಿಯಾ ಬೀವಿಗೆ(ರ) ಮಗುವನ್ನು  ಕಾಣದಾದಾಗ ಉಂಟಾದ  ವಿಷಮ ಸ್ವಲ್ಪವೇನಲ್ಲ. ಆ ಚಂದ್ರಮುಖಿ ಮಗುವಿನೊಂದಿಗೆ ಮನಸ್ಸಲ್ಲಿ ಸ್ನೇಹ ಅಷ್ಟೊಂದು ಆಳದಲ್ಲಿ ಗಾಢವಾಗಿತ್ತು. ವಿರಹ ಅವರಿಗೆ ತಡೆದುಕೊಳ್ಳಲಾಗಲಿಲ್ಲ. ಅವರು ಆಗಾಗ ಮಗುವನ್ನು ಕರೆತಂದರು. ಮಗುವನ್ನು ಕಂಡ ಕೂಡಲೇ ಅವರ ಎಲ್ಲಾ ಮನಕ್ಲೇಷಗಳು ಮಾಯವಾಗುತ್ತಿದ್ದುವು.  ಆ ಮೊಗದಲ್ಲಿ ಪ್ರಫುಲ್ಲತೆ ನೃತ್ಯವಾಡುವುದು, ಅವರ ಮ್ಲಾನವದನವು ಪ್ರಸನ್ನವಾಗುವುದು. ಮಗುವಿಗೆ ಲಾಲಿ ಹಾಡುತ್ತಾ ಹೊತ್ತು ಕಳೆಯುವುದೇ ಗೊತ್ತಾಗುತ್ತಿರಲಿಲ್ಲ. ಈಗೀಗ ಪರೋವನಿಗೂ ಮಗುವಿನಲ್ಲಿ ವಿಶೇಷ ಒಲವು ಮೂಡತೊಡಗಿತು. ಆಸಿಯಾ ಬೀವಿಯ(ರ) ಅರಮನೆಗೆ ಮಗುವನ್ನು ತಂದಿರುವ ಸುದ್ದಿ ತಿಳಿದರೆ ಅವನೂ ಧಾವಿಸಿ ಬರುವನು. ಮಗುವಿನೊಂದಿಗೆ ಆಟ ಆಡುವನು. ಅವನಿಗೆ ಎಲ್ಲಿಲ್ಲದ ಖುಷಿ ತರುತ್ತಿತ್ತು. ರಾಜ್ಯಭಾರದ ಎಲ್ಲಾ ಒತ್ತಡಗಳ ಬಿಸಿ ಮಗುವಿನ ಮುಖ ಕಾಣುವಾಗ ತಣ್ಣಗಾಗಿ ಮನಸ್ಸಿಗೆ ಶಾಂತಿ ಸಿಗುತ್ತಿತ್ತು.

      ಹೀಗಿರಲು ಒಂದು ದಿನ ಮಗುವನ್ನು ಅರಮನೆಗೆ ಕರೆತರಲಾಗಿತ್ತು. ಬೀವಿಯವರು ಮಗುವನ್ನು ಆಟ ಆಡಿಸುತ್ತಿರುವಾಗ ಪರೋವನು ಅಲ್ಲಿಗೆ ಬಂದನು.....
 ಹೀಗಿರಲು ಒಂದು ದಿನ ಮಗುವನ್ನು ಅರಮನೆಗೆ ಕರೆತರಲಾಗಿತ್ತು. ಬೀವಿಯವರು ಮಗುವನ್ನು ಆಟ ಆಡಿಸುತ್ತಿರುವಾಗ ಪರೋವನು ಅಲ್ಲಿಗೆ ಬಂದು, ಆಮೇಲೆ ಅವರಿಬ್ಬರೂ ಸೇರಿ ಆಟವಾಡಿಸಿದರು. ನೋಡಿ ಮಗುವಿನ ನಗುಮುಖ ಎಷ್ಟು ಸುಂದರ! ಅವನ ತುಟಿ ನೋಡಿ ಎಷ್ಟು ಅಂದ. ಆಸಿಯಾ ಬೀವಿ(ರ) ಮಗುವಿನ ತಾರೀಫ್ ಮಾಡುತ್ತಿದ್ದರು. ಮಗುವು ನಾನಾ ವಿಧ ಚೇಷ್ಟೆಗಳನ್ನು  ಮಾಡುತ್ತಾ ಅವರಿಬ್ಬರ ಮನ ತಣಿಸಿತು. ಪರೋವನು ಕೊಂಡಾಟದಿಂದ ಮಗುವನ್ನು ಎತ್ತಿ ತೊಡೆಯ ಮೇಲೆ ಕುಳ್ಳಿರಿಸಿ ಆಟವಾಡಿಸತೊಡಗಿದನು. ಅಷ್ಟರಲ್ಲಿ ಮಗುವು ರಪಕ್ಕನೆ ಪರೋವನ ಗಡ್ಡ ಹಿಡಿದು ಅವನ ಕೆನ್ನೆಗೆ ರಪಕ್ಕನೆ ಒಂದು ಏಟು ಬಾರಿಸಿ ಬಿಟ್ಟಿತು. ಅವನ ಗಡ್ಡವನ್ನು ರಭಸದಿಂದ ಎಳೆಯಿತು. ಕೆಲವು ರೋಮಗಳು ಮಗುವಿನ ಕೈಯ್ಯಲ್ಲಿ ಬಂದುವು. ಪೆಟ್ಟಿನ ಆಘಾತ ಬಹಳ ಜೋರಾಗಿತ್ತು.

      ಅದೊಂದು ಪುಟ್ಟ ಮಗುವಿನ ಎಳೆಕೈಯ್ಯಲ್ಲಿ ಕೊಟ್ಟಂತಹ ಪೆಟ್ಟಾಗಿ ಅವನಿಗೆ ತೋರಲಿಲ್ಲ. ಬಲಿಷ್ಟವಾದ ಕಟ್ಟು ಮಸ್ತಿನ ಸಿಪಾಯಿಯೊಬ್ಬನ ಉಕ್ಕಿನ ಮುಷ್ಟಿಯಿಂದ ಕೊಟ್ಟ ಪ್ರಹರದಂತೆ ಭಾಸವಾಯಿತು. ಚಟಾರನೆ ಎಲ್ಲಿಂದ ಬಿದ್ದದ್ದೆಂದು ಒಂದು ಕ್ಷಣ ಗೊತ್ತಾಗಲೇ ಇಲ್ಲ. ಅಷ್ಟಾದಾಗ ಅವನ ಭಾವ ಬದಲಾಯಿತು. ಮುಖದಲ್ಲಿ ದ್ವೇಷ ಉಕ್ಕೇರಿತು. ಕಣ್ಣುಗಳು ಕೆಂಪಡರಿತು. ಸಿಟ್ಟಿನಿಂದ ಕಿಡಿಕಿಡಿಯಾದ ಆತ ಲೋ!  ಬೇಕೂಪ!  ನನಗೆ ಹೊಡೆದೆಯೇನೋ!  ನೀನೇ ನನ್ನ  ಶತ್ರು.  ನನ್ನ ಶತ್ರುವನ್ನು ನಾನೇ ಸಾಕುವ ಮೂರ್ಖತನ ಇನ್ನು ಮಾಡಲಾರೆ. ಹೀಗೆನ್ನುತ್ತಾ ಸರಕ್ಕನೆ ಖಡ್ಗವನ್ನು ಸೆಳೆದನು. ಆಸಿಯಾ ಬೀವಿ(ರ) ಹೌಹಾರಿ ಚೇರಿ ಕೊಳ್ಳುತ್ತಾ ಪಕ್ಕನೆ ಧಾವಿಸಿ ಅವನ ಕೈ ಹಿಡಿದು ತಡೆದರು. ಅಷ್ಟರಲ್ಲಿ ಪರೋವನು ಆರ್ಭಟಿಸುತ್ತಾ, ಬಿಡೇ, ಇನ್ನು ನಿನ್ನ ಭಿನ್ನಾಹಗಳೆಲ್ಲಾ ನನ್ನಲ್ಲಿ ನಡೆಯದು. ನನಗೆ ನನ್ನ ಅಧಿಕಾರ, ಜೀವ ಮುಖ್ಯ. ಅದರ ಮುಂದೆ ನಿನ್ನ ಒಲವು, ಪ್ರೀತಿ ಏನೂ ಅಲ್ಲ. ನಾನು ಆಗಲೇ ಹೇಳಿದೆ. ನೀನು ಕೇಳಲಿಲ್ಲ. ಇವನು ನನ್ನ ಶತ್ರುವೆನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ. ಇವನನ್ನು ಕೊಂದೇ ಹಾಕುತ್ತೇನೆ. ನಿನ್ನ ಯಾವ ಮಾತನ್ನೂ ನಾನು ಕೇಳಲಾರೆ.

      ಆಸಿಯಾ ಬೀವಿ(ರ)ಯವರು ಅತ್ತರು. ಅವರ ಕಣ್ಣೀರು ಧಾರೆಧಾರೆಯಾಗಿ ಪ್ರವಹಿಸಿತು. ಈ ಸಲ ಮಗುವನ್ನು ಉಳಿಸಲು ಸಾಧ್ಯವೇ ಇಲ್ಲವೇನೋ ಎಂದವರು ಭೀತಿಪಟ್ಟರು. ಅವರು ಅಳುತ್ತಾ ಅಂಗಲಾಚಿದರು.

      "ಪ್ರಿಯರೇ!  ನೀವು ಸ್ವಲ್ಪ ತಾಳ್ಮೆ ವಹಿಸಿರಿ. ಪುಟ್ಟ ಮಗು. ಹಾಲುಕೂಸು. ಅದಕ್ಕೇನು ಗೊತ್ತು. ಕೇವಲ ಮಕ್ಕಳಾಟಿಕೆ ಅಷ್ಟೇ. ಇಷ್ಟಕ್ಕೆ ನೀವು ಯಾಕೆ ಈ ರೀತಿ ಕೋಪಿಸಿಕೊಳ್ಳುತ್ತೀರಿ. ಈ ಮಗು ನನ್ನ ಪ್ರಾಣ. ನೀವು ನನ್ನ ಪ್ರಾಣವನ್ನೇ ಸಂಹರಿಸುತ್ತೀರಾ?"

      ಇದು ಕೇಳಿದಾಗ ಅವನು ಸ್ವಲ್ಪ ಮೆತ್ತಗಾದ. ಆಸಿಯಾ ಬೀವಿ(ರ)ಯವರ ಮಾದಕ ಸಾನಿಧ್ಯವು ಅವನಲ್ಲಿ ಪುಳಕವನ್ನುಂಟು ಮಾಡಿತು.  ಪ್ರಿಯರೇ,!  ಎಂದು ಕರೆದಾಗ ಅವನ ಅರ್ಧ ಸಿಟ್ಟು ಇಳಿದಿತ್ತು.ಅವನ ವಿವೇಕ ನಿಯಂತ್ರಣಕ್ಕೆ ಬಂದಿತ್ತು. ಅವನು ಆಸಿಯಾ ಬೀವಿಯನ್ನೇ(ರ) ದಿಟ್ಟಿಸಿ ನೋಡುತ್ತಾ ಅವಳ ಮಾತನ್ನು ಕೇಳಿದ. ಆಸಿಯಾ ಬೀವಿ(ರ) ಮುಂದುವರೆಸಿದರು.  "ನೋಡಿ ಪುಟ್ಟ ಮಗು, ವಿವೇಕವಿಲ್ಲದ ಹಸುಳೆ, ಅದಕ್ಕೆ ಇನ್ನೂ ವಿವೇಚನೆ ಬಂದಿಲ್ಲ."

      "ಯಾರು ಹೇಳಿದ್ದು ವಿವೇಚನೆ ಬಂದಿಲ್ಲವೆಂದು? ವಿವೇಚನೆಯಿಲ್ಲದೆ ಆ ರೀತಿ ಹೊಡೆಯುತ್ತದಾ? ಎಂತಹಾ ಪೆಟ್ಟು ಗೊತ್ತಾ?  ಆ ಪೆಟ್ಟು ನಿನಗೆ ಬಿದ್ದಿದ್ದರೆ ಕೊಲ್ಲಲು ನೀನೇ ಹೇಳುತ್ತಿದ್ದೆ." ಅವನಿಗೆ ಪುನಃ ಸಿಟ್ಟು ಹೇರತೊಡಗಿತು. ಗಾಬರಿಗೊಂಡ ಬೀವಿ ಹೇಳಿದರು.

      "ಛೆ, ಛೇ!  ಈ ಹಸುಳೆಗೆ ವಿವೇಚನೆ ಬಂದಿದೆಯೆಂದು ಬಗೆದಿದ್ದೀರಾ? ನಾನು ನಿಮಗೆ ಮಗುವಿಗೆ ವಿವೇಚನೆ ಬಂದಿಲ್ಲವೆಂದು ತೋರಿಸಿಕೊಡುತ್ತೇನೆ. ನಾವೊಂದು ಪರೀಕ್ಷೆ ನಡೆಸೋಣ"

    'ಏನದು ನಿನ್ನ ಪರೀಕ್ಷೆ?

    'ಈ ಮಗುವಿಗೆ ವಿವೇಚನಾ ಜ್ಞಾನ ಬಂದಿದ್ದರಿಂದಲೇ ನಿಮಗೆ  ಹೊಡೆದನೆಂದು ಹೇಳುತ್ತಿದ್ದೀರಲ್ಲಾ?  ಮಗುವಿಗೆ ವಿವೇಚನೆ ಬಂದಿದೆಯೇ ಇಲ್ಲವೋ ಎಂದು ನಾವು ಪರೀಕ್ಷಿಸೋಣ. ಈ ಪರೀಕ್ಷೆಯಲ್ಲಿ ನಿಮಗೆ ನನ್ನ ಮಾತು ಪೂರ್ಣ ಅರ್ಥವಾಗುತ್ತದೆ.

     ಆಗಲಿ. ಏನದು ನಿನ್ನ ಪರೀಕ್ಷೆ. ನಡೆಯಲಿ ನೋಡೋಣ....
 'ಈ ಮಗುವಿಗೆ ವಿವೇಚನಾ ಜ್ಞಾನ ಬಂದಿದ್ದರಿಂದಲೇ ನಿಮಗೆ ಹೊಡೆದನೆಂದು ಹೇಳುತ್ತಿದ್ದೀರಲ್ಲಾ? ಮಗುವಿಗೆ ವಿವೇಚನೆ ಬಂದಿದೆಯೇ ಇಲ್ಲವೋ ಎಂದು ನಾವು ಪರೀಕ್ಷಿಸೋಣ. ಈ ಪರೀಕ್ಷೆಯಲ್ಲಿ ನಿಮಗೆ ನನ್ನ ಮಾತು ಪೂರ್ಣ ಅರ್ಥವಾಗುತ್ತದೆ.

      ಆಗಲಿ. ಏನದು ನಿನ್ನ ಪರೀಕ್ಷೆ. ನಡೆಯಲಿ ನೋಡೋಣ. ಬೀವಿಯವರು ದಾಸಿಯರನ್ನು ಕರೆದು ಒಂದು ತಟ್ಟೆಯಲ್ಲಿ ಸ್ವಲ್ಪ ಬೆಂಕಿ ಕೆಂಡಗಳನ್ನೂ ಇನ್ನೊಂದು ತಟ್ಟೆಯಲ್ಲಿ ಸ್ವಲ್ಪ ಒಡವೆಗಳನ್ನೂ  ಇಟ್ಟುಕೊಂಡು ಇಲ್ಲಿಗೆ ತನ್ನಿರಿ ಎಂದು ಹೇಳಿದರು. ಕೂಡಲೇ ದಾಸಿಯರು ಒಂದು ತಟ್ಟೆಯಲ್ಲಿ ಕೆಂಡಗಳನ್ನೂ ಮತ್ತೊಂದು ತಟ್ಟೆಯಲ್ಲಿ ಚಿನ್ನವನ್ನೂ ಹಾಕಿಕೊಂಡು ಬಂದರು. ಬೀವಿಯು ಅವೆರಡನ್ನೂ  ಮಗುವಿನ ಎದುರಿಗೆ ಇಟ್ಟು ದೂರ ಸರಿಯುತ್ತಾ ಹೇಳಿದರು. ನೋಡಿ ಈ ಮಗುವಿಗೆ ವಿವೇಚನೆ ಬಂದಿದೆಯೆಂದು ಹೇಳುತ್ತಿದ್ದೀರಲ್ಲಾ? ವಿವೇಚನೆಯಿದ್ದರೆ ಚಿನ್ನಕ್ಕೆ ಕೈ ಹಾಕುವುದು. ವಿವೇಚನೆ ಇಲ್ಲದಿದ್ದರೆ ಕೆಂಡಕ್ಕೆ ಕೈ ಹಾಕುವುದು.

     ಪರೋವ ಮತ್ತು ಆಸಿಯಾ ಬೀವಿ(ರ) ಮಗುವನ್ನು ಬಿಟ್ಟು ತುಸು ದೂರ ನಿಂತರು. ಮಗು ಅಂಬೆಗಾಲಿಟ್ಟು ನಡೆಯುತ್ತಾ ಮುಂದೆ ಸಾಗಿತು. ಅಷ್ಟರಲ್ಲಿ ಪರೋವ ಹೇಳಿದನು. ಆಸಿಯಾ! ನಿನ್ನ ಪರೀಕ್ಷೆ ಚೆನ್ನಾಗಿದೆ. ಆದರೆ ಈ ಪರೀಕ್ಷೆಯಲ್ಲಿ ಮಗು ಸೋತರೆ ನನು ಅವನನ್ನು ಕೊಲ್ಲದೆ ಬಿಡಲಾರೆ. ಹ್ಞಾಂ!  ಇದನ್ನು ನಾನು ಮೊದಲೇ ಹೇಳುತ್ತೇನೆ.'

      ಆಸಿಯಾ ಬೀವಿ(ರ) ಏದುಸಿರು ಬಿಟ್ಟರು. ಅವರ ಎದೆ ಡವಗುಟ್ಟತೊಡಗಿತು. ಅಲ್ಲಾಹ್, ಈ ಪರೀಕ್ಷೆ ಮಗುವಿನ ಜೀವದ ಮೇಲೆ ಪಣವಾಯಿತೇ? ನಾಥನೇ! ನೀನೇ ರಕ್ಷಕನು. ಮಗುವನ್ನು ಉಳಿಸು. ಇದುವರೆಗೆ ಈ ದುಷ್ಟನ ಕೈಯಿಂದ ರಕ್ಷಿಸಿದ ನೀನು ಇನ್ನು ಕೈ ಬಿಡಬಾರದು ಓ ಜಗದ್ರಕ್ಷಕನೇ!'  ಬೀವಿ ಅಂತಕರಣದಲ್ಲಿ ದಯನೀಯವಾಗಿ ಪ್ರಾರ್ಥಿಸುತ್ತಾ ಹಾಗೇ ಆಗಲಿ ಎಂದರು. ಅವರ ಗಂಟಲು ಕಟ್ಟಿ ಬಂದಿತ್ತು.

     ಮಗು ಸೀದಾ ಹೋಗಿ ಚಿನ್ನದ ತಟ್ಟೆಗೆ ಕೈ ಹಾಕುವ ಅಂದಾಜು ಕಂಡಿತು. ಬೀವಿಯವರ ಎದೆ ಧಸಕ್ಕೆಂದಿತು. ಈ ಪರೀಕ್ಷೆ ನಾನು ಮಾಡಬಾರದಿತ್ತು ಎಂದೆನಿಸಿತು. ದಾಸಿಯರೂ ಕೂಡಾ ಹೌಹಾರಿದರು. ಅವರ ಕಣ್ಣೆದುರಿಗೆ ಹಸುಳೆಯ ಕ್ರೂರ ಹತ್ಯೆ ನಡೆಯುವುದನ್ನು  ಅವರು ಕಲ್ಪಿಸಲಾಗದೆ ಮುಖ ಮುಚ್ಚಿಕೊಂಡರು. ಬೀವಿ ದುಗುಡದಿಂದ ಕಣ್ಣೀರಿಳಿಸಿದರು. ಪರೋವನು ಸೊಂಟದ ಮೇಲೆ ಎರಡೂ ಕೈಗಳನ್ನು ಇಟ್ಟುಕೊಂಡು ವಿಜಯ ಭಾವದಲ್ಲಿ ನೋಡತೊಡಗಿದನು. ಬೀವಿಯವರು ಮನನೊಂದು ಮತ್ತೊಮ್ಮೆ ಪ್ರಾರ್ಥನಾ ನಿರತರಾದರು. ಅಲ್ಲಾಹ್ ಕಾಪಾಡು ಎಂದು ಅವರ ಮನದಾಳವು ಮೊರೆಯಿಟ್ಟಿತು. ಅಷ್ಟೇ ತಡ! ಮಗು ಇದ್ದಕ್ಕಿದ್ದಂತೆ ಚಿನ್ನದ ತಟ್ಟೆಯಿಂದ ಕೆಂಡದ ತಟ್ಟೆಯ ಕಡೆ ತಿರುಗಿತು. ಸೀದಾ ಹೋಗಿ ಒಂದು ಕೆಂಡವನ್ನು ಕೈಗೆತ್ತಿಕೊಂಡು ಪಕ್ಕನೆ  ಬಾಯಿಗೆ ಹಾಕಿಕೊಂಡಿತು. ಕೈ ಬಾಯಿಗೆ ಬಿಸಿ ತಾಗಿದಾಗ ಬೋರಿಟ್ಟು ಅಳತೊಡಗಿತು. ಬೀವಿಯವರು ಚಂಗನೆ ಒಂದೇ ನೆಗೆತಕ್ಕೆ ಧಾವಿಸಿ ಹೋಗಿ ಮಗುವಿನ ಕೈಯಿಂದ ಕೆಂಡವನ್ನು ತೆಗೆದು ಬಿಸಾಡಿದರು. ಪರೋವ ತಲೆ ತಗ್ಗಿಸಿ ನಿಂತಿದ್ದನು. ಬೀವಿಗೆ ಸಿಟ್ಟು ಬಂತು. ನೋಡಿ ಇದು ನಿಮ್ಮ ಮನುಷ್ಯತ್ವವಲ್ಲ. ಪಾಪ ಮಗುವಿಗೆ ಎಷ್ಟು ನೋವಾಯಿತು. ಈ ಹಾಲು ಮಗುವಿಗೆ ಇಂತಹ ಶಿಕ್ಷೆ ಕೊಡುವಂತಾಗಲು ನೀವೇ ಕಾರಣರು. ಮಗುವಿಗೆ ಬುದ್ದಿ ಇರಲೇಬೇಕೆಂದು ಸುಮ್ಮನೆ ಎಗರದಿರಿ. ಬೆಂಕಿಯ ಕೆಂಡವನ್ನು ಕೈಗೆತ್ತಿಕೊಂಡು ಬಾಯಿಗೆ ಹಾಕಿದ ಹಸುಳೆಗೆ ವಿವೇಚನೆಯಿದೆಯೆಂದು ನೀವು ಹೇಳುತ್ತೀರಾ?

      ಪರೋವ ಸಂಪೂರ್ಣ ತಣ್ಣಗಾದ. ಪ್ರಿಯೇ, ಕ್ಷಮಿಸು. ವಿವೇಕ ಬಿಟ್ಟು ವರ್ತಿಸಿಬಿಟ್ಟೆ, ಇನ್ನು ಮುಂದೆ ಯಾವತ್ತೂ ಈ ಮಗುವಿನ ವಿಷಯದಲ್ಲಿ ಹೀಗೆ ಮಾಡಲಾರೆ. ಇನ್ನು ಮುಂದೆ ಇವನು ನನ್ನ ಮಗು. ನನ್ನ ಕಣ್ಮಣಿ.

     ಇತ್ತ ಬೀವಿಗೆ ಸಂತೋಷವಾಯಿತು. ಅವರು ಅಳುತ್ತಿದ್ದ ಮಗುವನ್ನು ಎದೆಗವಚಿಕೊಂಡು ಲಾಲಿಸಿದರು. ಮಗುವಿನ ಅಳು ನಿಂತಿತು. ಪರೋವನು ಅಲ್ಲಿಂದ ಜಾಗ ಖಾಲಿ ಮಾಡಿದನು.

      ಬೀವಿವರ್ಯರ ಕರುಳಲ್ಲಿ ಮಗುವಿನ ಬಗ್ಗೆ  ಮಮತೆ ಗಾಢವಾಗಿ ಬೇರೂರಿತು. ಮಗು ಬೆಳೆದಂತೆ ಬಹಳ ತುಂಟನಾಗಿ ಉತ್ಸಾಹದ  ಚೆಲುಮೆಯಾಗಿ ಬೆಳೆಯುತ್ತಿತ್ತು. ಮಗುವಿನ ತೊದಲು ನುಡಿ, ಪಿಚ್ಚೆ ಪಿಚ್ಚೆ ನಡೆತ, ಕಿಲ ಕಿಲ ನಗು ಅವರ ಹೃನ್ಮನಗಳಿಗೆ ಹಾಲ್ಜೇನು ಸುರಿಯುತ್ತಿತ್ತು. ಕಣ್ಣಿಗೆ ತಂಪರೆಯುತ್ತಿತ್ತು. ಮಗುವಿನ ವರ್ತನೆ ಕಾಣುವಾಗ ನಿಜವಾಗಿಯೂ ಎಲ್ಲವೂ ಫಿರ್'ಔನ್ ಗೆ ವಿರುದ್ಧವಾಗಿಯೇ ಇತ್ತು. ನಾನೇ ಮಹಾದೇವನೆಂದು ಪ್ರಜೆಗಳಿಂದ ಬಲವಂತವಾಗಿ ಕರೆಸಿಕೊಂಡು ಪೂಜೆ ಮಾಡಿಸಿಕೊಳ್ಳುತ್ತಿದ್ದ ಮಹಾ ಅವಿವೇಕಿ ಅವನು. ಅವನನ್ನು ದೇವನೆಂದು ಒಪ್ಪಿಕೊಳ್ಳದವರಿಗೆ ಮರಣ ಶಿಕ್ಷೆಯೇ ಗತಿಯಾಗುತ್ತಿತ್ತು. ಆದರೆ ಇದೊಂದೂ ತಿಳಿಯದ ಮಗು ಮೂಸಾ(ಅ) ತನ್ನ ಬಾಲ್ಯ ಸಹಜ ವಿಕ್ರಿಯಗಳಿಂದಲೇ ಬೆಳೆದು ಬರುತ್ತಿತ್ತು. ಅವನ ಪ್ರತಿಯೊಂದು ತುಂಟತನವು ಫಿರ್'ಔನ್'ನ ತತ್ವಕ್ಕೆ ವಿರುದ್ಧವಾಗಿತ್ತು. ಕೆಲವೊಮ್ಮೆ ಫಿರ್'ಔನ್ ಹೇಳುತ್ತಿದ್ದನು.

      "ಆಸಿಯಾ ನಿನ್ನ ಮಗುವಿನ ವಿಕೃತಿ ವಿಪರೀತವಾಗುತ್ತಿದೆ."

    "ಯಾಕೆ ಹಾಗೆ ಹೇಳುತ್ತಿದ್ದೀರಿ."

     "ಅವನು ಒಂದು ಹುಂಜ ಕೋಳಿ ಕೂಗುವಾಗ 'ನೀನು ಹೇಳಿದ್ದು ಸತ್ಯ' ಎನ್ನುತ್ತಿದ್ದಾನೆ."

    "ಯಾಕೆ ಹಾಗೆ ಹೇಳುತ್ತಾನೆ?"

    "ಓಹೋ!  ನಿನಗೆ ಗೊತ್ತಿಲ್ಲ. ಹುಂಜ ಕೂಗುವುದರ ಅರ್ಥ 'ಅಲ್ಲಾಹನು ಅತ್ಯಂತ ದೊಡ್ಡವನು'  ಎಂದಾಗಿದೆಯಂತೆ. ಹಾಗೆಂದು ಹಿಂದಿನ ಕಾಲದ ಕೆಲವು ಸನಾತನ ಏಕದೇವ ಸಿದ್ಧಾಂತದ ದಾರ್ಶನಿಕರು ಹೇಳಿದ್ದಾರೆ. ಅದು ಈ ಮಗುವಿಗೆ ಹೇಗೆ ಗೊತ್ತು?  ನಾನರಿಯೇ. ಅಂತೂ ಹುಂಜ ಕೋಳಿ ಕೂಗಿದಾಗ ಇವನು 'ನೀನು ಹೇಳಿದ್ದು ಸತ್ಯ ಎನ್ನುತ್ತಿದ್ದಾನೆ."

     ಹೀಗೆ ಕಾಲ ಮುಂದುವರಿಯಿತು. ಮಗುವು ಮೊಲೆ ಕುಡಿಯುವುದು ಬಿಟ್ಟು ನಂತರ ಅರಮನೆಯಲ್ಲೇ ಬೆಳೆಯತೊಡಗಿತು. ಮಗುವು ಸುಖ ಸಂತೋಷದಿಂದ ಜೀವಿಸಿತು. ಎಲ್ಲರೂ ಮಗುವನ್ನು ಫಿರ್'ಔನ್'ನ ಪುತ್ರ ಎಂದೇ ಕರೆಯುತ್ತಿದ್ದರು. ರಾಜಕುಮಾರನ ಸತತ ಗೌರವಾದರಗಳೂ ಪರಿಗಣನೆಯೂ ಸವಲತ್ತುಗಳೂ ಬಾಲಕನಿಗೆ ದೊರೆತ್ತಿತ್ತು. ಬಾಲಕನಲ್ಲಿ ಅನೇಕ ಅಸಾಮಾನ್ಯ ಘಟನೆಗಳನ್ನು ಫಿರ್'ಔನ್ ಗಮನಿಸುತ್ತಿದ್ದನು. ಅಸಾಮಾನ್ಯ ಘಟನೆ ಕಂಡಾಗಲೆಲ್ಲಾ ಅವನಿಗೆ ದಿಗಿಲಗುತ್ತಿತ್ತು. ಚಿಂತೆ ಹತ್ತುತ್ತಿತ್ತು. ಇದೇ ಮಗು ನನ್ನ ಶತ್ರು ಯಾಕಾಗಿರಬಾರದು ಎಂದು ವ್ಯಾಕುಲ ಪಡುತ್ತಿದ್ದನು. ಒಂದು ದಿನ ಒಂದು ಹುಂಜ ಕೋಳಿ ಕೂಗಿದಾಗ ಮಗುವು 'ನೀನು ಕೋಳಿಯನ್ನು ಇನ್ನೊಮ್ಮೆ ಹಾಗೆ ಹೇಳಿಸು. ನೋಡೋಣ'  ಎಂದನು. ಮಗು ಕೂಡಲೇ ಕೋಳಿಯೊಂದಿಗೆ ಇನ್ನೊಮ್ಮೆ ಹೇಳು ಎಂದಿತು. ಕೂಡಲೇ ಕೋಳಿ ಮತ್ತೊಮ್ಮೆ ಕೂಗಿತು. ಇದರ ಅರ್ಥ ಏನೆಂದು ಫಿರ್'ಔನ್ ಕೇಳಿದಾಗ ಅಲ್ಲಾಹನೇ ಅತ್ಯಂತ ದೊಡ್ಡವನು ಎಂದು ಹೇಳುತ್ತಿದೆ'  ಎಂದಿತು.

    "ಇದೊಂದನ್ನೇ ಹೇಳುವುದಾ?  ಕೋಳಿ ಬೇರೆಯೇನನ್ನೂ ಹೇಳುವುದಿಲ್ಲವಾ?

      " ಬೇರೆ ಮಾತನ್ನೂ ಹೇಳುತ್ತದೆ. ಈಗ ನೋಡಿ ಕೋಳಿ ಬೇರೆ ಮಾತನ್ನು ಹೇಳುತ್ತದೆ ಎನ್ನುತ್ತಾ ಮಗುವು ಕೋಳಿಗೆ ಸಂಜ್ಞೆ ಮಾಡಿತು. ಆಗ ಕೋಳಿ ಬೇರೊಂದು ಶೈಲಿಯಲ್ಲಿ ಕೂಗಿತು. ಏನಿದರ ಅರ್ಥವೆಂದು ಫಿರ್'ಔನ್ ಕೇಳಿದನು.

    "ಇದರ ಅರ್ಥವೇನೆಂದರೆ ನೀನು ಧಿಕ್ಕಾರಿ ಎಂದಾಗಿದೆ."

     "ಲೋ ದುರುಳ!  ಎನ್ನುತ್ತಾ ಫಿರ್'ಔನ್ ಜಗ್ಗನೆ ಎದ್ದನು. ಈ ಕೋಳಿಗೂ ಇಷ್ಟು ಅಹಂಕಾರವಾ? ನನ್ನನ್ನು ಧಿಕ್ಕಾರಿ ಎಂದು ಕರೆಯುವುದಾ? ನಿನ್ನ....ನಿನ್ನ....ಎಂದು ಹಲ್ಲು ಕಡಿಯುತ್ತಾ ಫಿರ್'ಔನ್ ಧಾವಿಸಿ ಹೋಗಿ ಖಡ್ಗ ಬೀಸಿ ಕೋಳಿಯನ್ನು ಕಡಿದು ಕೊಂದು ಹಾಕಿದನು. ಆದರೆ ಮಗು ಮೂಸಾರವರು ಕೂಡಲೇ ಕೋಳಿಯನ್ನು ಮತ್ತೆ ಬದುಕಿಸಿ ಬಿಟ್ಟರು! ಇದು ಕಂಡಾಗ ಅದ್ಭುತ ಸ್ತಬ್ಭನಾದ ಫಿರ್'ಔನ್ ಗರ ಬಡಿದಂತೆ ಕುಳಿತು ಬಿಟ್ಟನು. 

     ಈ ವಿಷಯ ತಿಳಿದಾಗ ಬೀವಿಗಾದ ಸಂತೋಷ ಅಷ್ಟಿಷ್ಟಲ್ಲ. ಈ ಮಗು ಓರ್ವ ಮಹಾತ್ಮನಾಗುವುದರಲ್ಲಿ ಸಂಶಯವೇ ಇಲ್ಲ. ಈ ಹಿಂಸ್ರಾ ಪಶುವಾದ ಫಿರ್'ಔನ್'ನ ನಿಗ್ರಹಕ್ಕೆ ಹುಟ್ಟಿದ ಮಗು ಇದುವೇ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಈ ದುಷ್ಟನನ್ನು ನಂಬಲಾಗುವುದಿಲ್ಲ. ಯಾವಾಗ ಏನು ಮಾಡುತ್ತಾನೆಂದು ಹೇಳಲಾಗುವುದಿಲ್ಲ. ಬೀವಿಯವರು ಮನದಲ್ಲೇ ದಿಗಿಲುಗೊಂಡರು.
  ಈ ಮಗು ಓರ್ವ ಮಹಾತ್ಮನಾಗುವುದರಲ್ಲಿ ಸಂಶಯವೇ ಇಲ್ಲ. ಈ ಹಿಂಸ್ರಾ ಪಶುವಾದ ಫಿರ್'ಔನ್'ನ ನಿಗ್ರಹಕ್ಕೆ ಹುಟ್ಟಿದ ಮಗು ಇದುವೇ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಈ ದುಷ್ಟನನ್ನು ನಂಬಲಾಗುವುದಿಲ್ಲ. ಯಾವಾಗ ಏನು ಮಾಡುತ್ತಾನೆಂದು ಹೇಳಲಾಗುವುದಿಲ್ಲ. ಬೀವಿಯವರು ಮನದಲ್ಲೇ ದಿಗಿಲುಗೊಂಡರು. 

       ಹೀಗಿದ್ದರೂ ಫಿರ್'ಔನ್ (ಫರೋವನಿಗೆ) ಮೂಸಾರಲ್ಲಿ ಬಹಳ ಅಕ್ಕರೆ. ಅವನ ಮೇಲೆ ಎಲ್ಲಿಲ್ಲದ ಪ್ರೀತಿ. ಊಟ ಮಾಡುವಾಗಲೂ ಜೊತೆಗೇ ಕೂರುತ್ತಿದ್ದರು. ಮೂಸಾ(ಅ)ರವರು ಇಲ್ಲದೆ ಫಿರ್'ಔನ್ ಊಟ ಮಾಡುತ್ತಿರಲಿಲ್ಲ. ಹೀಗೆ ಒಂದು ದಿನ ಫಿರ್'ಔನ್ ಮತ್ತು ಮೂಸಾ(ಅ)ರವರು ಒಟ್ಟಿಗೆ ಉಣ್ಣುತ್ತಾ ಇದ್ದರು. ಕರಿದ ಪಾಕ ಮಾಡಿದ ಆಡಿನ ಮಾಂಸವನ್ನು ತಂದಿಡಲಾಗಿತ್ತು. ಈ ಆಡು ಜೀವತಳೆದು ಎದ್ದು ಹೋದರೆ ಹೇಗಿರಬಹುದು ಎಂದರು ಮೂಸಾ (ಅ)ರವರು.

      ಲೋ, ಏನು ಹೇಳುತ್ತಾ ಇದ್ದಿಯಾ ನೀನು?'  ಕರಿದ ಆಡು ಜೀವ ತಾಳುವುದೇ? ನೀನೊಬ್ಬ ಮುರ್ಖ"  ಎಂದನು  ಫಿರ್'ಔನ್

     "ನನ್ನ ಪ್ರಭುವಿಗೆ ಅದು ಪ್ರಯಾಸವಲ್ಲ"  ಎಂದರು ಮೂಸಾ(ಅ)

 ‌    "ಹಾಗಾದರೆ ಅದು ಕಾಣಲಿ ನೋಡೋಣ"

    ಒಂದು ಕ್ಷಣ. ಮೂಸಾ(ಅ)ರವರು ಏನೋ ಮೆಲ್ಲಗೆ ಹೇಳಿದರು. ಅಷ್ಟರಲ್ಲಿ ತಟ್ಟೆಯಲ್ಲಿ ಕರಿದು ಇರಿಸಲಾಗಿದ್ದ ಆಡು ಜೀವ ತಾಳಿ ಎದ್ದು ಓಡಿ ಹೋಯಿತು. ಫಿರ್'ಔನ್'ಗೆ ತನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ. ಈ ಮಗುವಿಗೆ ಏನೋ ಒಂದು ಅದ್ಭುತ ವಿದ್ಯೆ ಇದೆಯೆಂದು ಅವನು ಬಗೆದನು‌. ಆದರೆ ಆಸಿಯಾ ಬೀವಿ(ರ)ಗೆ ಅಂತಹ ನಂಬಿಕೆಯಿರಲಿಲ್ಲ. ಇದು ವಿದ್ಯೆಯಲ್ಲ. ಅಲ್ಲಾಹುವಿನ ಕಡೆಯಿಂದ ದೊರಕಿದ ಶಕ್ತಿ ಈ ಮೂಸಾ ಮುಂದೆ ಪ್ರವಾದಿ ಆಗುವುದು ಖಂಡಿತ ಎಂದು ಬಗೆದರು.

     ಒಂದು ದಿನ ಬೀವಿಯವರು ಚಿಂತಾಕ್ರಾಂತರಾಗಿದ್ದರು. ಬಹಳ ಹೊತ್ತಾದರೂ ಮೂಸಾ ಬಂದಿರಲಿಲ್ಲ. ಅವರು ಅತ್ತಿತ್ತ ಶತಪಥ ಹಾಕುತ್ತಾ ಮೂಸಾರವರ ಬರವನ್ನೇ ಅಸಹನೆಯಿಂದ ನಿರೀಕ್ಷಿಸುತ್ತಿದ್ದರು. ನನ್ನ ಮಗುವಿಗೆ ಏನಾಯಿತು?  ಎಲ್ಲಿ ಹೋಗಿದ್ದಾನೆ? ಯಾಕೆ ಇಷ್ಟು ಹೊತ್ತು ಬರಲಿಲ್ಲ?

      ಅಷ್ಟರಲ್ಲಿ ಮೂಸಾರವರು ಏದುಸಿರು ಬಿಡುತ್ತಾ ಓಡೋಡಿ ಬರುತ್ತಿರುವುದು ಕಾಣಿಸಿತು. ಅಲ್ಲಿಗೆ ತಲುಪಿದ  ಕೂಡಲೇ ಕುತೂಹಲ ಮತ್ತು ವಿಸ್ಮಯದಿಂದ ಬೀವಿ ಕೇಳಿದರು.

      "ಮಗೂ ಎಲ್ಲಿ ಹೋಗಿದ್ದೇ? ಯಾಕಿಷ್ಟು ಹೊತ್ತಾಯಿತು?"

      ಮೂಸಾರವರು ನಡೆದ ಘಟನೆಯನ್ನು ವಿವರಿಸಿದರು.

      "ಉಮ್ಮಾ, ನಾನು ಮತ್ತು ಫಿರ್'ಔನ್ ಒಟ್ಟಿಗೆ ಕೂತುಕೊಂಡು  ಮಾತಾಡುತ್ತಿದ್ದೆವು. ಮಾತಿನ ಮಧ್ಯೆ ಏನೋ ಅಸಮಾಧಾನ ಉಂಟಾದಾಗ ಫಿರ್'ಔನ್ ನನಗೆ ಚಿವುಟಿದನು. ನಾನು ಕೂಡಲೇ ಎದ್ದು ಆತ ಕುಳಿತಿದ್ದ ಮಂಚದ ಒಂದು ಕಾಲಿಗೆ ನನ್ನ ಕಾಲಿಂದ ಒದ್ದು ಬಿಟ್ಟೆನು. ಅಷ್ಟರಲ್ಲಿ ಮಂಚದ ನಾಲ್ಕೂ ಕಾಲುಗಳು ಮರಿದು ಮಂಚವು ನೆಲಕಚ್ಚಿತು. ಅದರ ಮೇಲಿದ್ದ ಫಿರ್'ಔನ್ ಕೆಳಗುರುಳಿದನು. ಅವನ ಮೈ ಮೇಲೆ ಕೆಲವು ಕಡೆ ಸಣ್ಣಪುಟ್ಡ ಗಾಯಗಳಾದವು. ಸಿಟ್ಟು ನೆತ್ತಿಗೇರಿದ ಆತ ಎದ್ದು ನನ್ನತ್ತ ಕೈ ಎತ್ತುತ್ತಾ ಧಾವಿಸಿ ಬಂದನು. ನಾನು ತಪ್ಪಿಸಿಕೊಂಡು ಹೋಗಿ ಮರೆಯಲ್ಲಿ ಅಡಗಿ ಕೂತೆ. ಬಹಳ ಕಡೆ ಅವನು ಹುಡುಕಿದನು. ಸಿಗದಾಗ ಸುಸ್ತಾಗಿ ಹೋಗಿ ಮಲಗಿ ಕೊಂಡಿದ್ದಾನೆ.

      ಅಷ್ಟಾದಾಗ ಫಿರ್'ಔನ್ ಅಲ್ಲಿಗೆ ತಲುಪಿದನು. ಸಿಟ್ಟಿನಿಂದ ಚೀತ್ಕರಿಸುತ್ತಿದ್ದನು. ಹುಂ, ನಾನು ಅನೇಕ ಬಾರಿ ಕ್ಷಮಿಸಿದೆ. ಈ ದುರುಳ ಹುಡುಗನನ್ನು ಇನ್ನು ಬಿಡಲಾರೆ. ಇವನ ವಿಕೃತಿ ಮಿತಿ ಮೀರ ತೊಡಗಿದೆ. ನೋಡು ನನ್ನ ದೇಹದಲ್ಲಿ ಗಾಯ ನೋಡು. ಇವನು ನನ್ನ ಮಂಚವನ್ನು ಒಂದೇ ಒದೆಗೆ ಹುಡಿಗೈದು ನನ್ನನ್ನು ಗಾಯಗೊಳಿಸಿದ್ದಾನೆ. ನಿನ್ನ ಕಾರಣದಿಂದಲೇ ಇವನು ಇಷ್ಟರವರೆಗೆ ಬದುಕಿದ್ದು. ನೀನಲ್ಲದಿದ್ದರೆ ಈಗಾಗಲೇ ಸತ್ತು ಮಣ್ಣಾಗುತ್ತಿದ್ದ ಈ ಮುಠ್ಠಾಳ. ಇನ್ನು ಈ ಕೊಮನನ್ನು  ಸುಮ್ಮನೆ ಬಿಡಲಾರೆ. ನಿನ್ನ ಸಲುಗೆಯಿಂದಲೇ ಇವನು ಇಷ್ಟು ಬೆಳೆದದ್ದು. ಫಿರ್'ಔನ್ ಆಕ್ರೋಶಿಸಿದನು.

      ಬೀವಿಯವರಿಗೆ ಫಿರ್'ಔನ್'ನ ಮಾತು ಕೇಳಿ ಭಯವಾಯಿತು. ನಿಜವಾಗಿಯೂ ಇದೆಲ್ಲ ಯಾಕೆ ನಡೆಯುತ್ತಿದೆ? ಮೂಸಾ ಯಾಕೆ ಈ ರೀತಿ ವಿಕೃತಿ ತೋರಿಸುತ್ತಿದ್ದಾನೆ? ಆದರೆ ನನ್ನ  ಬಳಿಯಾಗಲೀ ಬೇರೆ ಯಾರ ಬಳಿಯಾಗಲೀ ಮೂಸಾ ಏನೂ ತರಕಾರು ಮಾಡುವುದಿಲ್ಲ.  ತಂಟೆಯಿಲ್ಲದೆ ಬಹಳ ನಯನಾಜೂಕಿನಿಂದ ಇರುತ್ತಾನೆ. ಆದರೆ ಫಿರ್'ಔನ್ ಬಳಿ ಮಾತ್ರ ಆತ ವ್ಯಘ್ರನಾಗುತ್ತಾನೆ. ಇದು ನಿಜದಲ್ಲಿ ಮುಂದೆ ಬರಲಿರುವುದರ ಸೂಚನೆ. ಕೂತುಕೊಂಡಿರುವ ಮಂಚವನ್ನೇ ಒಂದೇ ಒದೆತಕ್ಕೆ ಹುಡಿಗಟ್ಟಿ ಕೆಳಗುರುಳಿಸಿದ್ದು ಮುಂದೆ ರಾಜಾಧಿಕಾರದಿಂದಲೇ ಕೆಳಗುರುಳಿಸುವುದರ ಸಂಕೇತವಿರಬಹುದು. ಬೀವಿ ಮನದಲ್ಲಿ ನೆನೆದುಕೊಂಡರು. ಆದರೆ ತೋರ್ಪಡಿಸಿಕೊಳ್ಳದೆ ಫಿರ್'ಔನ್'ನನ್ನು ನಯನಾಜೂಕಿನ ಮಾತುಗಳಿಂದ ಮನವೊಲಿಸಿ ಅವನ ಸಿಟ್ಟನ್ನು ಇಳಿಸಿದರು. ಇದೆಲ್ಲ ಬರೇ ತುಂಟಾಟಿಕೆ ಮಾತ್ರವೆಂದೂ ಅದರಲ್ಲಿ ನೀವು ಯಾವುದೇ ಅರ್ಥ ಹುಡುಕಬಾರದು ಎಂದೂ ಹೇಳಿ ಅವನ ಸಿಟ್ಟು ತಣಿಸಿ ಕಳುಹಿಸಿಕೊಟ್ಟರು.

       ಮುಂದೊಂದು ಸಲವೂ ಇದೇ ರೀತಿ ಮೂಸಾರವರ ಕಾರಣದಿಂದ ಫಿರ್'ಔನ್'ಗೆ ಅಹಸ್ಯ ಸಿಟ್ಟು ಬಂತು. ಮೂಸಾ(ಅ)ರವರು ಆಸಿಯಾ ಬೀವಿಯವರ(ರ) ಬಳಿ ಬಂದು ಅವರ ಹಿಂದೆ ಅಡಗಿ ಕೊಂಡರು. ಫಿರ್'ಔನ್ ಖಡ್ಗ ಹಿಡಿದುಕೊಂಡು ಅತ್ತ ಧಾವಿಸಿ ಬಂದನು. ಈ ಸಲ ನಿನ್ನ ಮಾತನ್ನು ಖಂಡಿತ ಕೇಳಲಾರೆ. ಅವನು ನಿಜವಾಗಿಯೂ ನನ್ನ ಶತ್ರು. ಕೊಂದೇ ಬಿಡುತ್ತೇನೆ ಎಂದು ಆರ್ಭಟಿಸಿದನು. ಬೀವಿಯವರು ಬಹಳ ನಯ ವಿನಯಗಳಿಂದ ಪರಿಪರಿಯಾಗಿ ಬೇಡಿಕೊಂಡರು. ಆದರೆ ಫಿರ್'ಔನ್ 'ನ ಕೋಪ ತಣಿಯಲಿಲ್ಲ. ಇದು ಕಂಡು ದಿಗಿಲಾದ ಬೀವಿಯವರು  ಮೂಸಾ(ಅ)ರನ್ನು ಬರಸೆಳೆದುಕೊಂಡು ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಬಿಡು ಅವನನ್ನು!  ಈಗಲೇ ಕೊಂದು ಹಾಕುತ್ತೇನೆ ಎಂದು ಆರ್ಭಟಿಸುತ್ತಾ ಫಿರ್'ಔನ್ ಖಡ್ಗ ಎತ್ತಿದಾಗ ಬೀವಿಯವರು ಕೆರಳಿದ ಸಿಂಹಿಣಿಯಂತೆ ಹೇಳಿದರು,
    
       "ಮೊದಲು ನನ್ನನ್ನು ಕೊಲ್ಲಿರಿ. ಆಮೇಲೆ ಇವನನ್ನು ಕೊಂದರೆ ಸಾಕು. ನನ್ನ ಪ್ರಾಣ ಇರುವ ತನಕ ಇವನನ್ನು ಕೊಲ್ಲಲು ಬಿಡಲಾರೆ".

      ಬೀವಿಯ ಮಾತು ಕೇಳಿದಾಗ ತಣ್ಣಗಾದ ಫಿರ್'ಔನ್ ಹೊರಟುಹೋದನು.

       ಕಾಲ ಕಳೆಯಿತು. ಮೂಸಾ(ಅ)ರವರಿಗೆ ಇಪ್ಪತ್ತರ ಪ್ರಾಯ. ಮೂಸಾ (ಅ)ರವರು ಎಂದಿನಂತೆ ಊರ ಹೊರಗೆ ಸುತ್ತಾಡುತ್ತಿದ್ದರು. ಕುದುರೆ ಸವಾರಿ ಅವರ ಇಷ್ಟ ಹವ್ಯಾಸವಾಗಿತ್ತು. ಉತ್ತಮ ತರದ ಉಡುಗೆಗಳನ್ನು ಧರಿಸುತ್ತಿದ್ದರು. ಒಂದು ದಿನ ಹೊರಗಡೆ ಕುದುರೆಯ ಮೇಲೆ ಸಂಚರಿಸುತ್ತಾ ಒಂದು ನಿರ್ಜನ ಪ್ರದೇಶಕ್ಕೆ ಒಬ್ಬರೇ ತಲುಪಿದ್ದರು. ಅಲ್ಲಿ ಇಬ್ಬರು ಜಗಳ ಕಾಯುತ್ತಿದ್ದರು. ಹತ್ತಿರ ಹೋಗಿ ನೋಡಿದಾಗ ಒಬ್ಬನು ಫಿರ್'ಔನ್'ನ ಅಡುಗೆಯವನು. ಅವನು ಕಿಬ್ತಿ ವರ್ಗದವನು. ಇನ್ನೊಬ್ಬನು ಇಸ್ರಾಯೀಲನು. ದೊಡ್ಡ ಸೌಧೆಯ ಕಟ್ಟೊಂದನ್ನು ಹೊತ್ತು ಕೊಂಡು ಅರಮನೆಯ ಅಡುಗೆ ಕೋಣೆಗೆ ತಲುಪಿಸುವಂತೆ ಆತ ಇಸ್ರಾಯೀಲನನ್ನು ಬಲವಂತ ಪಡಿಸುತ್ತಿದ್ದನು. ದುರ್ಬಲನಾಗಿದ್ದ ಇಸ್ರಾಯೀಲನಿಗೆ ಅದು ತಾಳಲಾರದ ಹೊರೆಯಾಗಿತ್ತು. ಅಲ್ಲದೆ ಅದು ಅವನ ಕೆಲಸ ಕೂಡಾ ಆಗಿರಲಿಲ್ಲ. ನಿಜದಲ್ಲಿ  ಅದನ್ನು ಹೊತ್ತು ಸಾಗಿಸಬೇಕಾದವನು ಕಿಬ್ತಿಯವನೇ ಆಗಿದ್ದನು. ಆದರೂ ಅಹಂಕಾರದಿಂದ ಅವನು ಇಸ್ರಾಯೀಲನನ್ನು ಬಲವಂತ ಪಡಿಸುತ್ತಿದ್ದನು.

    "ನನ್ನಿಂದ ಸಾಧ್ಯವಿಲ್ಲ. ದಯವಿಟ್ಟು ನನ್ನನ್ನು ಬಿಟ್ಟು ಬಿಡು ಎಂದು ಇಸ್ರಾಯೀಲನು ಅಂಗಲಾಚಿದಾಗ ಆತ ಹೊಡೆಯುತ್ತಿದ್ದನು. ಕಿಬ್ತಿಯ ಅಹಂಕಾರ ಕಂಡು ಮೂಸಾ(ಅ)ರವರಿಗೆ ರೋಸಿ ಹೋಯಿತು. 

     " ಪಾಪ ಬಿಡಿ. ಅವನಿಗೆ ಬೇರೆ ಏನಾದರೂ  ಕೆಲಸವಿರಬಹುದು. ಅವನು ಬರುವುದಿಲ್ಲವೆಂದ ಮೇಲೆ ನೀವು ಒತ್ತಾಯ ಮಾಡುವುದು ಸರಿಯಲ್ಲ. ನೀವು ಬೇರೆ ಯಾರನ್ನಾದರೂ ಕರಕೊಂಡು ಹೋಗಿರಿ."

    "ಬೇರೆ ಜನರನ್ನು ಕರೆಯಬೇಕೋ ಬೇಡವೋ ಎಂದು ತೀರ್ಮಾನಿಸಬೇಕಾದವನು ನಾನು. ಹೆಚ್ಚು ಹೇಳಲಾರೆ. ನೀನೂ ಇವನ ಅಧಮ ಜಾತಿಗೆ ಸೇರಿದವನು. ನಮ್ಮ ಜಗಳಕ್ಕೆ ನೀನು ಮೂಗು ತೂರಿಸಬೇಕಾಗಿಲ್ಲ.

     ಕಿಬ್ತಿಯ ಧಿಕ್ಕಾರದ ಮಾತನ್ನು ಮೂಸಾ(ಅ)ರವರಿಗೆ ಸಹಿಸಲು ಸಾಧ್ಯವಾಗಲಿಲ್ಲ. ಮೂಸಾ(ಅ)ರವರ ನಿಯಂತ್ರಣ ತಪ್ಪಿತು. ಬಲವಾದ ಒಂದು ಏಟನ್ನು ಕಿಬ್ತಿಗೆ ಬಿಗಿದನು. ಕಿಬ್ತಿಯವನು ಆ ಏಟಿಗೆ ತತ್ತರಿಸಿ ನೆಲಕ್ಕುರುಳಿ ಅಲ್ಲೇ ಸತ್ತು ಹೋದನು!

      ಮೂಸಾ(ಅ)ರವರಿಗೆ ಬಹಳ ದುಃಖವಾಯಿತು. ಅವರು ಖೇದ ಪಟ್ಟರು. ಕೊಲ್ಲುವ ಉದ್ದೇಶ ಅವರಿಗೆ ಇದ್ದಿರಲಿಲ್ಲ. ಆದರೆ ಪ್ರಮಾದ ಸಂಭವಿಸಿ ಬಿಟ್ಟಿತು. ಅವರು ಅಲ್ಲಾಹನಲ್ಲಿ ಕ್ಷಮೆ ಕೇಳಿದರು. ಅಲ್ಲಾಹನು ಅವರಿಗೆ ಕ್ಷಮೆ ನೀಡಿದನು. ಇನ್ನು ಉಳಿದಿರುವುದು ಫಿರ್'ಔನ್ ಏನು ಮಾಡುತ್ತಾನೆ ಎಂಬುದು. ಕೊಲೆಯಾದುದು ಅವನ ವರ್ಗದ ಕಿಬ್ತಿ ಮಾತ್ರವಲ್ಲ ಅವನ ಅಡುಗೆಯವನು. ಫಿರ್'ಔನ್ ಸುಮ್ಮನೆ ಬಿಟ್ಟಾನೆ?

     ಆದರೆ ಈ ಸಂಭವ ಅವರಿಬ್ಬರಿಗಲ್ಲದೆ ಬೇರೆ ಯಾರಿಗೂ ಗೊತ್ತಿರಲಿಲ್ಲ. ಅವರಿಬ್ಬರೂ ಸದ್ದಿಲ್ಲದೆ  ಅಲ್ಲಿಂದ ಹೊರಟು ಹೋದರು. ಇಸ್ರಾಯೀಲನು ಅವನ ಮನೆಗೂ, ಮೂಸಾ(ಅ)ರವರು ಅರಮನೆಗೂ ತಲುಪಿದರು.

      ಕಿಬ್ತಿ ಕೊಲೆಯಾಗಿ ಬಿದ್ದಿರುವುದನ್ನು ಯಾರೋ ಕಂಡು ಊರಿಡೀ ಸುದ್ಧಿ ಹರಡಿತು. ಅಪರಾಧ ಪತ್ತೆದಳವೂ ಸ್ಥಳಕ್ಕೆ ಧಾವಿಸಿತು. ಕೊಲೆಯಾದುದು ತನ್ನ ಅಡುಗೆಯವನಾದುದರಿಂದ ಶೀಘ್ರದಲ್ಲೇ ಕೊಲೆಗಾರನ ಬಂಧನ ನಡೆಯಬೇಕೆಂದು ಫಿರ್'ಔನ್'ನನು ಆಕ್ರೋಶಿಸಿದನು.

     ತನಿಖೆ ತೀವ್ರಗೊಂಡಿತು. ಅಪರಾಧ ಪತ್ತೆದಳದವರು ವ್ಯಾಪಕ ಶೋಧ ನಡೆಸಿದರು. ಆದರೆ ಯಾವ ಸುಳಿವೂ ಸಿಗಲಿಲ್ಲ. ಮರುದಿನವೂ ಮೂಸಾ(ಅ)ರವರು ಇನ್ನೊಂದು ಕಡೆ ಸಂಚರಿಸುತ್ತಿದ್ದಾಗ ನಿನ್ನೆಯ ದಿನ ಕಿಬ್ತಿಯೊಂದಿಗೆ ಜಗಳದಲ್ಲಿದ್ದ ಅದೇ ಇಸ್ರಾಯೀಲನು ಇನ್ನೊಬ್ಬನೊಂದಿಗೆ ಜಗಳ ಮಾಡುತ್ತಿರುವುದು ಕಾಣಿಸಿತು. ಒಮ್ಮೆ ಮೂಸಾ(ಅ)ರವರಿಗೆ ಈ ಇಸ್ರಾಯೀಲನು ಓರ್ವ ಜಗಳ ಗಂಟನಿರಬೇಕು. ಇವನು ಎಲ್ಲರೊಂದಿಗೆ ಜಗಳವಾಡುವ ಸ್ವಭಾವದವನಿರಬೇಕು ಎಂದು ಸಂಶಯ ಬಂದು ಇಸ್ರಾಯೀಲನನ್ನು ಗದರಿಸಿದರು.

     ಆದರೆ ಈ ಸಲವೂ ಕಿಬ್ತಿಯದ್ದೆ ತಪ್ಪು ಎಂದು ಗೊತ್ತಾದಾಗ ಕಿಬ್ತಿಯನ್ನು ಹಿಡಿಯಲು ಮುಂದಾದರು ಆದರೆ ಮೂಸಾ(ಅ)ರವರು ನನಗೆ ಹೊಡೆಯಲು ಬರುತ್ತಿದ್ದಾರೆ ಎಂದು ಭಾವಿಸಿಕೊಂಡ ಇಸ್ರಾಯೀಲನು ಮೂಸಾ ನಿನ್ನೆ ಕಿಬ್ತಿಯನ್ನು ಕೊಂದಂತೆ ಇಂದು ನನ್ನನ್ನು ಕೊಲ್ಲಲು ಬರುತ್ತಿರುವೆಯಾ? ಎಂದು ಹೇಳಿ ಬಿಟ್ಟನು. ಕಿಬ್ತಿಯ ಕಿವಿಗೆ ಈ ಮಾತು ಬಿದ್ದದ್ದೇ ತಡ, ಸೀದಾ ಅಲ್ಲಿಂದ ಓಡಿ ಹೋಗಿ ಫಿರ್'ಔನ್'ಗೆ ಸುದ್ಧಿ ತಿಳಿಸಿದನು.

     ನಿನ್ನೆಯ ದಿನ ಕಿಬ್ತಿಯನ್ನು ಕೊಂದುದು ಮೂಸಾ ಎಂಬ ಸುದ್ಧಿ ಕಾಡ್ಗಿಚ್ಚಿನಂತೆ ಹಬ್ಬಿತು. ಫಿರ್'ಔನ್ ಸಿಟ್ಟಿನಿಂದ ಕಿಡಿಕಿಡಿಯಾದನು. ಈ ಮೂಸಾ ತನ್ನ ಶತ್ರು ಎನ್ನುವುದು ಈಗ ಖಾತ್ರಿಯಾಯಿತು. ನನ್ನ ಪಕ್ಷದ ಒಬ್ಬನನ್ನು ಕೊಲೆ ಮಾಡಿದನೆಂದರೆ ಇವನೇ ನನ್ನ ಶತ್ರು. ಇದು ಅವನ ನಿಗ್ರಹಕಾಯದ ಮೊದಲ ಮುಹೂರ್ತ. ಇಲ್ಲ...ಇಲ್ಲ.... ಇವನನ್ನು ಇನ್ನು ಬಿಡಲಾರೆ. ಒಬ್ಬಳು ಆಸಿಯಾಳಲ್ಲ, ಅವಳಂತಹ ಸಾವಿರ ಆಸಿಯಾರು ಬಂದು ಕಾಲಿಗೆರಗಿದರೂ ಬಿಡಲಾರೆ. ಕಟಕಟ ಹಲ್ಲು ಕಡಿದ. ಅವನ ಕಠಿಣ ಮೋರೆಯಲ್ಲಿ ರೌದ್ರವತೆ ತುಂಬಿತ್ತು. ಕಣ್ಣು ಕೆಂಡದುಂಡೆಯಾಗಿ ಜ್ವಲಿಸಿದುವು. ಉಬ್ಬುಗಳು ಮೇಲೆರಿ ಕಡುಕೋಪವನ್ನು ಉಕ್ಕಿಸುತ್ತಿತ್ತು. ಎರಡೂ ಕೈಗಳನ್ನು ಕೂಡಿಸಿ ಮುಷ್ಠಿ ಹಿಡಿದುಕೊಂಡು ಸಿಟ್ಟಿನಿಂದ ಕುದಿಯುತ್ತಿದ್ದನು. ಕೂಡಲೇ ಸಾವಿರಾರು ಭಟರನ್ನು ಛೂ ಬಿಟ್ಟು ಎಲ್ಲಿದ್ದರೂ ಮೂಸಾರನ್ನು ಹಿಡಿದು ಎಳೆದುಕೊಂಡು ಬನ್ನಿ ಎಂದು ಆಜ್ಞೆ ಹೊರಡಿಸಿದನು.
  ನಿನ್ನೆಯ ದಿನ ಕಿಬ್ತಿಯನ್ನು ಕೊಂದುದು ಮೂಸಾ ಎಂಬ ಸುದ್ಧಿ ಕಾಡ್ಗಿಚ್ಚಿನಂತೆ ಹಬ್ಬಿತು. ಫಿರ್'ಔನ್ ಸಿಟ್ಟಿನಿಂದ ಕಿಡಿಕಿಡಿಯಾದನು. ಈ ಮೂಸಾ ತನ್ನ ಶತ್ರು ಎನ್ನುವುದು ಈಗ ಖಾತ್ರಿಯಾಯಿತು. ನನ್ನ ಪಕ್ಷದ ಒಬ್ಬನನ್ನು ಕೊಲೆ ಮಾಡಿದನೆಂದರೆ ಇವನೇ ನನ್ನ ಶತ್ರು. ಇದು ಅವನ ನಿಗ್ರಹಕಾಯದ ಮೊದಲ ಮುಹೂರ್ತ. ಇಲ್ಲ....ಇಲ್ಲ... ಇವನನ್ನು ಇನ್ನು ಬಿಡಲಾರೆ. ಒಬ್ಬಳು ಆಸಿಯಾಳಲ್ಲ, ಅವಳಂತಹ ಸಾವಿರ ಆಸಿಯಾರು ಬಂದು ಕಾಲಿಗೆರಗಿದರೂ ಬಿಡಲಾರೆ. ಕಟಕಟ ಹಲ್ಲು ಕಡಿದ. ಅವನ ಕಠಿಣ ಮೋರೆಯಲ್ಲಿ ರೌದ್ರವತೆ ತುಂಬಿತ್ತು. ಕಣ್ಣು ಕೆಂಡದುಂಡೆಯಾಗಿ ಜ್ವಲಿಸಿದುವು. ಉಬ್ಬುಗಳು ಮೇಲೆರಿ ಕಡುಕೋಪವನ್ನು ಉಕ್ಕಿಸುತ್ತಿತ್ತು.  ಎರಡೂ ಕೈಗಳನ್ನು ಕೂಡಿಸಿ ಮುಷ್ಠಿ ಹಿಡಿದುಕೊಂಡು ಸಿಟ್ಟಿನಿಂದ ಕುದಿಯುತ್ತಿದ್ದನು. ಕೂಡಲೇ ಸಾವಿರಾರು ಭಟರನ್ನು ಛೂ ಬಿಟ್ಟು ಎಲ್ಲಿದ್ದರೂ ಮೂಸಾರನ್ನು  ಹಿಡಿದು ಎಳೆದುಕೊಂಡು ಬನ್ನಿ ಎಂದು ಆಜ್ಞೆ ಹೊರಡಿಸಿದನು.

       ಫಿರ್'ಔನ್'ನ ಸಂಘದಲ್ಲಿದ್ದ ಓರ್ವ ಕಿಬ್ತಿ ಬಹಳ ಉತ್ತಮ ವ್ಯಕ್ತಿಯಾಗಿದ್ದನು. ಫಿರ್'ಔನ್'ನ ಅನ್ಯಾಯಗಳ ಬಗ್ಗೆ ಮನದಲ್ಲೆ ಕೊರಗುತ್ತಾ ಇದ್ದ ಆ ವ್ಯಕ್ತಿ ಸತ್ಯವಿಶ್ವಾಸಿಯಾಗಿದ್ದನು. ಆದರೆ ತನ್ನ ವಿಶ್ವಾಸವನ್ನು ಮರೆ ಮಾಚಿದ್ದನು. ಮೂಸಾ(ಅ)ರವರು ಫಿರ್'ಔನ್'ನ ಅಂತ್ಯಕ್ಕೆ ಬಂದ ಪ್ರವಾದಿ ಎಂದು ಆ ವ್ಯಕ್ತಿಗೆ ವಿಶ್ವಾಸವಿತ್ತು. ಆ ಸಂದರ್ಭವನ್ನೇ ಆತ ಕಾಯುತ್ತಿದ್ದನು. ಅಂತಹ ಮೂಸಾ(ಅ)ರವರು ಇದೀಗ ಫಿರ್'ಔನ್'ನ ಕೈಯ್ಯಲ್ಲಿ ಕೊಲೆಯಾಗುವುದು ಆತನಿಗೆ ಯಾವತ್ತೂ ಇಷ್ಟವಿರುವ ಕಾರ್ಯವಾಗಿರಲಿಲ್ಲ. ಆದ್ದರಿಂದ ಆತ ಸುದ್ದಿಲ್ಲದೆ ಅಲ್ಲಿಂದ ಹೊರಟು ಮೂಸಾ(ಅ)ರವರನ್ನು ಹುಡುಕುತ್ತಾ ನಡೆದನು‌. ಇಬ್ರಾಹಿಂ ನಬಿಯವರ ಧರ್ಮವನ್ನು ಗುಟ್ಟಿನಲ್ಲಿ ಅನುಸರಿಸುತ್ತಿದ್ದ ಆ ವ್ಯಕ್ತಿಯ ಹೆಸರು ಹಿರ್ಕೀಲ್ ಎಂದಾಗಿತ್ತು.

       ವಿಷಯವು ಫಿರ್'ಔನ್'ನಿಗೆ ಮುಟ್ಟಿರುವ ಬಗ್ಗೆ ಮೂಸಾ(ಅ)ರವರಿಗೆ ಸಂಶಯವಿದ್ದಿರಲಿಲ್ಲ. ಕಿಬ್ತಿ ಓಡಿ ಹೋದಾಗಲೇ ಅವರದನ್ನು ಊಹಿಸಿದ್ದರು. ಆದ್ದರಿಂದ  ಅರಮನೆಗೆ ಮರಳದೆ ಜನರ ಕಣ್ತಪ್ಪಿಸಿ ಗುಪ್ತವಾಗಿ ಎಲ್ಲೆಲ್ಲೋ ನಡೆದಾಡಿಕೊಂಡಿದ್ದರು. ಭಾಗ್ಯಕ್ಕೆ ಪ್ರಸ್ತುತ 'ಹಿರ್ಕೀಲ್'  ಎಂಬ ಸಾತ್ವಿಕ ವ್ಯಕ್ತಿಗೆ  ಮೂಸಾರವರು ಕಾಣ ಸಿಕ್ಕಿದರು. ಆ ವ್ಯಕ್ತಿ ಫಿರ್'ಔನ್'ನ ಆಜ್ಞೆ ಹಾಗೂ ರಾಜಭಟರು ಹುಡುಕುತ್ತಿರುವ ವಿಷಯವನ್ನು ತಿಳಿಸಿ ಇನ್ನು ನೀವು ಇಲ್ಲಿರುವುದು ಅಪಾಯ, ಎಲ್ಲಾದರೂ ಹೊರಟು ಹೋಗು ಎಂದನು.

     ಮೂಸಾ(ಅ)ರವರು ಅಲ್ಲಿಂದಲೇ ಮದ್'ಯನ್  ದೇಶಕ್ಕೆ ಹೊರಟರು.  ಬರಿಗೈಯ್ಯಲ್ಲಿದ್ದ, ಯಾತ್ರೆಯ ಸಿದ್ಧತೆ ಏನೂ ಇಲ್ಲದ  ಅವರು ಬಹಳ ಪ್ರಯಾಸದಿಂದ ನಡೆದರು. ಎಲ್ಲೆಲ್ಲೂ ರಾಜ ಭಟರು ತಪಾಸಣೆಯಲ್ಲಿರುದರಿಂದ ಅವರ ಕಣ್ಣು ತಪ್ಪಿಸಿ ನಡೆಯಬೇಕಿತ್ತು. ಹಾಗೆ ಎಂಟು ದಿನಗಳ ಯಾತ್ರೆ ಮಗಿಸಿ ಮದ್'ಯಾನ್'ಗೆ ತಲುಪಿದರು.

     ಇತ್ತ ಆಸಿಯಾ ಬೀವಿ(ರ)ಯವರಿಗೆ ಇದನ್ನು ಸಹಿಸಲು ಹೇಗೆ ಸಾಧ್ಯ? ಅವರ ಮನಸ್ಸು ಕಲಕಿದ ಕೊಳದಂತಾಗಿತ್ತು. ಮನಸ್ಸು ತೀರ ಕಹಿಗೊಂಡಿತ್ತು. ಅಂತಃಕರಣವಿಡೀ ತಲ್ಲಣಗೊಂಡಿತ್ತು. ತನ್ನ ಮುದ್ದಿನ ಕಂದ ಕೊಲೆ ಆರೋಪ ಹೊತ್ತುಕೊಂಡು ನಾಪತ್ತೆಯಾಗಬೇಕಾದ ಪರಿಸ್ಥಿತಿ ಒದಗಿತಲ್ಲ ಎಂಬ ಚಿಂತೆಯು ಅವರನ್ನು ಕೊರೆಯತೊಡಗಿತು. ದಿನಾಲೂ ಈ ಚಿಂತೆಯಿಂದ ಕೊರಗತೊಡಗಿದರು. ಹೆತ್ತ ಕರುಳ ಕುಡಿಯಂತೆ ಮುದ್ದಿನಿಂದ ಸಾಕಿದ ಕಂದನನ್ನು ಉಳಿಸು ಪ್ರಭೂ ಎಂದು ಅವರು ಮನನೊಂದು ಅಲ್ಲಾಹುವಿನಲ್ಲಿ ಪ್ರಾರ್ಥಿಸಿದರು. ಹಾಗೇ ಕಣ್ಣೀರಲ್ಲಿ ಅದ್ದಿದ ನೆನಪುಗಳೊಂದಿಗೆ ಕಂದನನ್ನು ಕಾಣುವ ಶುಭ ನಿರೀಕ್ಷೆಯೊಂದಿಗೆ ದಿನದೂಡಿದರು.

     ಅತ್ತ ಮೂಸಾ ನಬಿ(ಅ)ರವರು ಮದ್'ಯಾನ್ ತಲುಪಿದರು. ಅಲ್ಲೊಂದು ಕಡೆ ಒಂದು ಕೊಳದಿಂದ ಅನೇಕರು ನೀರು ಸೇದಿ ತಮ್ಮ  ಕುರಿಗಳಿಗೆ ಕುಡಿಸುತ್ತಿರುವುದು ಕಾಣಿಸಿತು. ಇಬ್ಬರು ಯುವತಿಯರು ದೂರದಲ್ಲಿ ಒಂದು ಕಡೆ ತಮ್ಮ ಕುರಿಗಳನ್ನು ನಿಲ್ಲಿಸಿಕೊಂಡು ಕಾಯುತ್ತಿರುವುದು ಕಾಣಿಸಿತು. ಅಲ್ಲಿ ಬಾವಿಯ ಬಳಿ ಸ್ತ್ರೀಯರೂ ಪುರುಷರೂ ತಾನು ಮುಂದು ತಾನು ಮುಂದು ಎಂದು ಕೊಂಡು ತುರಾತುರಿಯಿಂದ ನೀರು ಸೇದಿ ಕುಡಿಸುತ್ತಿರುವಾಗ ಇವರಿಬ್ಬರು ಮಾತ್ರ ಶಾಂತರಾಗಿ ಬೇರೆಯೇ ನಿಂತಿದ್ದು ಕಂಡು ಮೂಸಾ(ಅ) ಕುತೂಹಲದಿಂದ ಅವರಲ್ಲಿ ವಿಷಯ ಕೇಳಿದರು‌.

      ನಮ್ಮ ತಂದೆಯವರು ವಯೋವೃದ್ದರು. ಅವರಿಗೆ ಗಂಡು ಮಕ್ಕಳೂ ಇಲ್ಲ. ನಾವೇ ನೀರು ಸೇದಬೇಕು. ಆದರೆ ಜನರ ನಡುವೆ ನೂಕು ನುಗ್ಗಲು ನಡೆಸಲು ನಮಗೆ ಸಂಕೋಚವಾಗುತ್ತದೆ. ಆದ್ದರಿಂದ ಅವರೆಲ್ಲಾ ಹೊರಟು ಹೋದ ಮೇಲೆ ನೀರು ಸೇದುತ್ತೇವೆ ಎಂದರು ಅವರು.

      ಅವರ ಬಗ್ಗೆ ಗೌರವಭಾವ ಮೂಡಿದ ಮೂಸಾ(ಅ)ರವರು ಅವರನ್ನು ಬನ್ನಿ ಎನ್ನುತ್ತಾ ಬಾವಿಯ ಕಡೆಗೆ ಕರೆದೊಯ್ದರು. ಯುವತಿಯರಿಬ್ಬರೂ ತಮ್ಮ ಕುರಿಗಳನ್ನು ಅಟ್ಟಿಸಿಕೊಂಡು ಅವರನ್ನು ಹಿಂಬಾಲಿಸಿದರು. ಮೂಸಾ(ಅ)ರವರು ಬಾವಿಯನ್ನು ನೋಡಿದರು. ಅದಕ್ಕೆ ದೊಡ್ಡದಾದ ಒಂದು ಬಂಡೆಗಲ್ಲು ಮುಚ್ಚಲಾಗಿತ್ತು. ಆದ್ದರಿಂದ ಒಂದಿಷ್ಟು ಇಕ್ಕಟ್ಟಿನ ಭಾಗದಿಂದ ಮಾತ್ರ ನೀರು ಸೇದಬೇಕಿತ್ತು. ಒಬ್ಬೊಬ್ಬರೇ ನೀರು ಸೇದಬೇಕಾದುದರಿಂದ ತುಂಬಾ ವಿಳಂಬವಾಗುತ್ತದೆ. ಆದ್ದರಿಂದ ನೂಕುನುಗ್ಗಲು ನಡೆಯುತ್ತದೆ ಎಂಬುದನ್ನು ಅರ್ಥ ಮಾಡಿಕೊಂಡರು. ಆ ಬಂಡೆಗಲ್ಲನ್ನು ತೆಗೆದರೆ ಏಕ ಕಾಲಕ್ಕೆ ಅನೇಕರಿಗೆ ನೀರು ಸೇದಬಹುದು ಎಂಬುದನ್ನು ಅಂದಾಜಿಸಿಕೊಂಡರು. ಮತ್ತೆ ತಡಮಾಡಲಿಲ್ಲ. ಹತ್ತಿಪ್ಪತ್ತು ಜನರಿಗೂ ಮಿಸುಕಾಡಿಸಲು ಸಾಧ್ಯವಿಲ್ಲದಂತಹ ಆ ಬೃಹದಾಕಾರದ ಬಂಡೆಯನ್ನು ಅವರೊಬ್ಬರೇ ಎಳೆದು ದೂರಕ್ಕೆ ಉರುಳಿಸಿ ಬಿಟ್ಟರು. ಯುವತಿಯರೂ, ಉಳಿದವರೂ ಅದನ್ನು ಕಂಡು ಬೆಕ್ಕಸ ಬೆರಗಾದರು. ಮೂಸಾ(ಅ)ರವರು ಯುವತಿಯ ಕೈಯಿಂದ ಹಗ್ಗ, ಬಕೆಟ್ ಪಡಕೊಂಡು ರಪರಪನೆ ನೀರು ಸೇದಿ ಅವರ ಪಾತ್ರೆಗೆ ಸುರಿದರು.

    ಆಮೇಲೆ ಅಲ್ಲಿಂದ ತುಸು ದೂರಕ್ಕೆ ಹೋಗಿ ಒಂದು ಮರದ ನೆರಳಲ್ಲಿ ಕೂತುಕೊಂಡರು.

     ಎಂಟು ದಿನಗಳ ಯಾತ್ರೆಯ ದಣಿವು ಇತ್ತು‌. ಅಲ್ಲದೆ ತುಂಬಾ ಹಸಿದಿದ್ದರು.

      ಇವತ್ತು ತನ್ನ ಹೆಣ್ಮಕ್ಕಳು ಬೇಗನೆ ಬಂದುದನ್ನು ಕಂಡು ಅವರ ವಯೋವೃದ್ಧ ತಂದೆಯವರು ಕಾರಣವೇನೆಂದು ವಿಚಾರಿಸಿದಾಗ ಯುವತಿಯರು ನಡೆದ ಘಟನೆಯನ್ನೆಲ್ಲಾ ವಿವರಿಸಿದರು.  ಇವತ್ತು ತನ್ನ ಹೆಣ್ಮಕ್ಕಳು ಬೇಗನೆ ಬಂದುದನ್ನು ಕಂಡು ಅವರ ವಯೋವೃದ್ಧ ತಂದೆಯವರು ಕಾರಣವೇನೆಂದು ವಿಚಾರಿಸಿದಾಗ ಯುವತಿಯರು ನಡೆದ ಘಟನೆಯನ್ನೆಲ್ಲಾ ವಿವರಿಸಿದರು.

      ಹಾಗಾದರೆ ಆ ಯುವಕನಿಗೆ ಕೂಲಿ ಕೊಡಬೇಕು. ಅವನನ್ನು ಇಲ್ಲಿಗೆ ಬರ ಹೇಳು ಎಂದು ಓರ್ವ ಮಗಳನ್ನು ಕಳುಹಿಸಿದರು. ಆ ಮಗಳ ಹೆಸರು ಸಫೂರಾ ಎಂದಾಗಿತ್ತು. ಆಕೆ ಹೋಗಿ ಕರೆದಾಗ ಮೂಸಾ(ಅ)ರವರು ಬಂದರು. ದಾರಿ ತೋರಿಸುವ ಸಲುವಾಗಿ ಸಫೂರಾ ಮುಂದಿನಿಂದ ನಡೆದರು. ಆದರೆ ಗಾಳಿ ಬೀಸಿ ಅವಳ ವಸ್ತ್ರ ಹಾರಾಡಿ ಕಾಲಿನ ಭಾಗ ಪ್ರತ್ಯಕ್ಷವಾಗುವುದು ಕಂಡಾಗ ನಾನು ಮುಂದಿನಿಂದ ನಡೆಯುತ್ತೇನೆ. ನೀನು ನನ್ನ ಹಿಂದಿನಿಂದ ಬಾ ಎನ್ನುತ್ತಾ ತಾನು ಮುಂದಿನಿಂದ ನಡೆಯತೊಡಗಿದರು. ಯುವಕನ ಶಕ್ತಿ ಕಂಡು ಆಶ್ಚರ್ಯ ಪಟ್ಟಿದ್ದ ಆಕೆಗೆ ಇದೀಗ ಯುವಕನ ನೈತಿಕ ಪ್ರಜ್ಞೆಯನ್ನು ಕಂಡಾಗ ಇನ್ನಷ್ಟು ಅಭಿಮಾನ ಉಂಟಾಯಿತು.

    ಮೂಸಾ(ಅ)ರವರು ವಯೋವೃದ್ಧರ ಮನೆಗೆ ತಲುಪಿದರು. ಆ ವಯೋವೃದ್ಧರು ಶುಐಬ್ ನಬಿ(ಅ)ರವರು ಎಂದು ಮೂಸಾ(ಅ)ರವರಿಗೆ ಗೊತ್ತಾಯಿತು. ಅವರು ವಿಚಾರಿಸಿದಾಗ ಮೂಸಾ(ಅ)ರವರು ನಡೆದ ವೃತ್ತಾಂತವನ್ನು ಹೇಳಿದರು. ಆಗ ಶುಐಬ್ ನಬಿ(ಅ)ಯವರು ಹೇಳಿದರು

      ಹೆದರಬೇಡ. ಈ ದೇಶವು ಫಿರ್'ಔನ್'ನ ಆಡಳಿತಕ್ಕೆ ಒಳಪಟ್ಟದ್ದಲ್ಲ. ಆದ್ದರಿಂದ ಆ ಅಕ್ರಮಿಗಳ ತೊಂದರೆ ನಿನಗೆ ಇಲ್ಲಿ ತಟ್ಟದು. ಊಟ ತಂದಿತ್ತು ಉಣ್ಣಲು ಹೇಳಿದಾಗ ಮಾಡಿದ ಉಪಕಾರಕ್ಕೆ ಪ್ರತಿಫಲ ಪಡೆಯದ ಕುಟುಂಬದವನು ನಾನು. ಆದ್ದರಿಂದ ಊಟ ಬೇಡ ಎಂದರು ಮೂಸಾ(ಅ)ರವರು. ಆಗ ಶುಐಬ್ ನಬಿಯವರು(ಅ) ಹೇಳಿದರು. 

      ನಮ್ಮದ್ದು ಅತಿಥಿ ಸತ್ಕಾರದ ಕುಟುಂಬ. ಮನೆಗೆ ಬಂದ ಅತಿಥಿಗಳನ್ನು ಬರೀ ಹೊಟ್ಟೆಯಲ್ಲಿ ನಾವು ಕಳುಹಿಸಲಾರೆವು. ಈ ಊಟವು ನಮ್ಮ ಅತಿಥಿ ಸತ್ಕಾರದ ಭಾಗ. ನೀವು ಮಾಡಿದ ಉಪಕಾರಕ್ಕೆ ಪ್ರತಿಫಲವಲ್ಲ. ಅಷ್ಟಾದಾಗ ಮೂಸಾ(ಅ)ರವರು ಊಟಕ್ಕೆ ಕುಳಿತರು. ಅವರಿಬ್ಬರೂ ಅನೇಕ ವಿಷಯಗಳನ್ನು ಮಾತಾಡಿದರು.

      ಇದಾದ ಬಳಿಕ ಮೂಸಾ(ಅ)ರವರನ್ನು ಅಲ್ಲೇ ವಾಸಿಸುವಂತೆ ಶುಐಬ್ ನಬಿ(ಅ) ಹೇಳಿದರು. ಗಂಡು ಮಕ್ಕಳಿರದ ಅವರಿಗೆ ಮೂಸಾ(ಅ) ಆಸರೆಯಾಗಿ ಉಳಿಯುವುದು ತುಂಬ ಒಳ್ಳೆಯದೆಂದು ಅವರಿಗೆ ಅನಿಸಿತು. ಮೂಸಾ(ಅ)ರವರಿಗೂ ಆಶ್ರಯ ಬೇಕಿತ್ತು. ಅದಕ್ಕೆ ಇಷ್ಟು ಸೂಕ್ತ ಸ್ಥಳ ಬೇರಿಲ್ಲ ಎಂದೂ ಅನ್ನಿಸಿತು.

      ಅಲ್ಲದೆ ಅವರ ಶಕ್ತಿ, ನೈತಿಕತೆಯಿಂದ ಪ್ರಭಾವಿತಳಾಗಿದ್ದ ಮಗಳು ಸಫೂರಾ ಕೂಡಾ ಮನೆಯಲ್ಲಿ ಆಶ್ರಯ ಕೊಡುವಂತೆ ಹೇಳಿದ್ದಳು.

      ಹಾಗೆ ಮೂಸಾ(ಅ)ರವರಿಗೆ ಆ ಸಾತ್ವಿಕದ ಮನೆಯಲ್ಲಿ ಆಶ್ರಯ ಸಿಕ್ಕಿತು. ಸ್ವಲ್ಪ ಕಾಲ ಕಳೆದಾಗ ಶುಐಬ್ ನಬಿಯವರು ಸಫೂರಾಳನ್ನು ಮೂಸಾ(ಅ)ರವರಿಗೆ ಮದುವೆ ಮಾಡಿಕೊಟ್ಟರು. ಅದಕ್ಕೆ ಮೂಸಾ(ಅ)ರವರು ಕೊಡಬೇಕಾಗಿದ್ದ ಮಹರ್ ಏನೆಂದರೆ ಎಂಟು ವರ್ಷಗಳ ಕಾಲ ಅವರ ಕುರಿಗಳನ್ನು ಮೇಯಿಸುವುದು. ಹತ್ತು ಭರ್ತಿ ಮಾಡುವುದಾದರೆ ನಿನ್ನಿಷ್ಟ ಎಂದಿದ್ದರು. ಈ ನಿಶ್ಚಯದಲ್ಲಿ ಅವರ ಮದುವೆ ನಡೆದಿತ್ತು.

      ಅದ್ಭುತ ಬೆತ್ತ : ಶುಐಬ್ ನಬಿಯವರ ಬಳಿ ಒಂದು ಅದ್ಭುತ ಬೆತ್ತವಿತ್ತು. ಅದನ್ನು ಅವರಿಗೆ ಜಿಬ್ರೀಲ್(ಅ) ಕೊಟ್ಟದ್ದಾಗಿತ್ತು. ಮೂಸಾ(ಅ)ರವರು ಕುರಿ ಮೇಯಿಸಲು  ಹೊರಟು ನಿಂತಾಗ ಒಳಗಿನಿಂದ ಒಂದು ಬೆತ್ತವನ್ನು ತಂದು ಕೊಡು ಎಂದು ಮಗಳಲ್ಲಿ ಹೇಳಿದಾಗ ಆಕೆ ತಂದು ಕೊಟ್ಟದ್ದು ಆ ಅದ್ಭುತ ಬೆತ್ತವನ್ನಾಗಿತ್ತು.

     ಅದನಲ್ಲ ಅದು ಒಬ್ಬರು ನನಗೆ ಅಮಾನತಾಗಿ ನೀಡಿದ್ದು ಆದ್ದರಿಂದ ಬೇರೆ ಬೆತ್ತ ತಂದುಕೊಡು ಎಂದರು ಶುಐಬ್ ನಬಿ(ಅ).

     ಮಗಳು ಒಳಗೆ ಹೋಗಿ ಆ ಬೆತ್ತವನ್ನು ಅಲ್ಲಿಟ್ಟು ಬೇರೊಂದು ಬೆತ್ತಕ್ಕೆ ಕೈ ಹಾಕಿದಾಗ ಆಕೆಯ ಕೈಗೆ ಈ ಬೆತ್ತವೇ ಬಂದಿತ್ತು. ಅದನ್ನು ತಂದು ತಂದೆಯವರ ಕೈಗಿತ್ತಾಗ ಅವರು ಮಗಳ ಕೈಯಿಂದ ಪಡಕೊಂಡು ಮೂಸಾ(ಅ)ರವರ ಕೈಗೆ ನೀಡಿದರು. ಅದು ಅದೇ ಬೆತ್ತ ಎಂಬುದು ಶುಐಬ್ ನಬಿಯವರ(ಅ) ಗಮನಕ್ಕೆ ಬಂದಿರಲಿಲ್ಲ. ಮಗಳು ಬೇರೆ ಬೆತ್ತ ತಂದಿದ್ದಾಳೆ ಎಂದೇ ಭಾವಿಸಿದ್ದರು‌. ಆದರೆ ಬೆತ್ತದ ಇನ್ನೊಂದು ತುದಿಯನ್ನು ಮೂಸಾ(ಅ)ರವರು ಹಿಡಿದ ತಕ್ಷಣ ಶುಐಬ್ ನಬಿ(ಅ)ರವರಿಗೆ ಇದು ಅದೇ ಬೆತ್ತ ಎಂದು ಗೊತ್ತಾಗಿ,  

      "ಇಲ್ಲ, ಇಲ್ಲ ಈ ಬೆತ್ತವನ್ನು ಈಗ ಕೊಡಲಾಗುವುದಿಲ್ಲ"  ಬೇರೆ ಕೊಡುತ್ತೇನೆ ಎಂದರು.

      ಆದರೆ ಮೂಸಾ(ಅ)ರವರು ಆ ಬೆತ್ತ ಕೈಗೆ ಸ್ಪರ್ಶಿಸಿದಾಗಲೇ ಏನೋ ಒಂದು ಅಪ್ಯಾಯಮಾನ ಅನುಭೂತಿ ಉಂಟಾಗಿತ್ತು. ಆದ್ದರಿಂದ ಕೈ ಬಿಡಲು ಮನಸ್ಸಾಗದೆ ಗಟ್ಟಿಯಾಗಿ ಹಿಡಿದುಕೊಂಡರು. 

       ಬಿಡು, ಬಿಡು, ಎನ್ನುತ್ತಾ ಶುಐಬ್ ನಬಿ(ಅ)ಯವರು ಬೆತ್ತದ ಒಂದು ತುದಿಯಿಂದ ಎಳೆಯುತ್ತಿದ್ದರೆ, ಮೂಸಾ(ಅ)ರವರು ಇನ್ನೊಂದು ತುದಿಯಿಂದ ಹಿಡಿತ ಸಡಿಲಿಸದೆ ಬಲವಾಗಿ ಹಿಡಿದುಕೊಂಡಿದ್ದರು. ಹೀಗೆ ಅವರಿಬ್ಬರೂ ತುಸು ಜಗ್ಗಾಟ ನಡೆದಾಗ ಅಲ್ಲಿಗೆ ಅಪರಿಚಿತ  ವ್ಯಕ್ತಿಯೊಬ್ಬರ ಆಗಮನವಾಯಿತು. 

     ಆ ವ್ಯಕ್ತಿಯು ಅವರಲ್ಲಿ, ನಾನು ಇತ್ಯರ್ಥ ಮಾಡುತ್ತೇನೆ. ಬೆತ್ತವನ್ನು ನೆಲದ ಮೇಲಿಡಿರಿ. ಯಾರಿಗೆ ಎತ್ತಲು ಸಾಧ್ಯವಾಗುತ್ತದೋ ಅವರಿಗೆ ಬೆತ್ತ ಎಂದರು ಆ ವ್ಯಕ್ತಿ. ಆ ವ್ಯಕ್ತಿಯ ತೇಜಸ್ಸಿಗೆ ಪ್ರಭಾವಿತರಾಗಿದ್ದ ಇಬ್ಬರೂ ತಕ್ಷಣ ಬೆತ್ತವನ್ನು ನೆಲಕ್ಕೆ ಹಾಕಿದರು. ಆ ಮೇಲೆ  ಶುಐಬ್ ನಬಿ(ಅ)ಯವರು ಅದನ್ನು ಎತ್ತಲು ಪ್ರಯತ್ನಿಸಿದರು. ಆದರೆ ಸಾಧ್ಯವಾಗಲಿಲ್ಲ. ನಂತರ ಮೂಸಾ(ಅ)ರವರು ಕೈ ಹಾಕಿ ಎತ್ತಿದಾಗ ಬೆತ್ತವು ಅನಾಯಾಸವಾಗಿ ಅವರ ಕೈಗೆ ಬಂದಿತ್ತು. ಅಂತೂ ಸಮಸ್ಯೆ ಇತ್ಯರ್ಥವಾಗಿತ್ತು. ಆ ಬಂದ ವ್ಯಕ್ತಿ ಜಿಬ್ರೀಲ್(ಅ) ಎಂದು ಗೊತ್ತಾದಾಗ ಇದು ಅಲ್ಲಾಹನ ತೀರ್ಮಾನವೆಂದರಿತ ಶುಐಬ್ ನಬಿ(ಅ)ಯವರು ಸಮಾಧಾನ ಪಟ್ಟರು. ಅದ್ಭುತ ಬೆತ್ತ ಮೂಸಾ(ಅ)ರವರ ವಶವಾಯಿತು.

ಮೂಸಾ(ಅ)ರವರು ಕೈ ಹಾಕಿ ಎತ್ತಿದಾಗ ಬೆತ್ತವು ಅನಾಯಾಸವಾಗಿ ಅವರ ಕೈಗೆ ಬಂದಿತ್ತು. ಅಂತೂ ಸಮಸ್ಯೆ ಇತ್ಯರ್ಥವಾಗಿತ್ತು. ಆ ಬಂದ ವ್ಯಕ್ತಿ ಜಿಬ್ರೀಲ್(ಅ) ಎಂದು ಗೊತ್ತಾದಾಗ ಇದು ಅಲ್ಲಾಹನ ತೀರ್ಮಾನವೆಂದರಿತ ಶುಐಬ್ ನಬಿ(ಅ)ಯವರು ಸಮಾಧಾನ ಪಟ್ಟರು. ಅದ್ಭುತ ಬೆತ್ತ ಮೂಸಾ(ಅ)ರವರ ವಶವಾಯಿತು.

       ಅದರ ಉದ್ದ ಮೂಸಾ(ಅ)ರವರ ದೇಹದ ಉದ್ದಕ್ಕೆ ಸಮಾನವಾಗಿತ್ತು. ಬೆತ್ತದ ತುದಿಯಲ್ಲಿ ತಿವಿಯುವಂತಹ ಒಂದು ಕಬ್ಬಿಣದ ಮೊನಚು ಇತ್ತು. ಅಲ್ಲದೆ ನೀರು ಸೇದುವಂತಹ ಒಂದು ದೊಡ್ಡ ಚಮಚವೂ ಇತ್ತು. ಹಾಗೆ ಬೆತ್ತದ ಒಂದು ತುದಿಯಲ್ಲಿ ಎರಡು ಕವಲುಗಳಿದ್ದವು. ಚಮಚದಿಂದ ಎಷ್ಟೇ ಆಳದ ಬಾವಿಯಿಂದಲೂ ನೀರು ಸೇದಲು ಸಾಧ್ಯವಾಗುತ್ತಿತ್ತು. ಬಾವಿಯ ಆಳಕ್ಕೆ ತಕ್ಕ ಬೆತ್ತವು ಉದ್ಧವಾಗುತ್ತಿತ್ತು. ದೊಡ್ಡ ನದಿಯನ್ನು ದಾಟ ಬೇಕಿದ್ದರೆ ಬೆತ್ತವನ್ನು ದಡದಲ್ಲಿ ಇಟ್ಟರೆ ಆಚೆ ದಡಕ್ಕೆ ಮುಟ್ಟುವಷ್ಟು ಉದ್ಧದ ಸೇತುವೆಯಾಗಿ ಪರಿಣಮಿಸುತ್ತಿತ್ತು. ಹೀಗೇ ಹಲವು ಅದ್ಭುತಗಳು ಆ ಬೆತ್ತಕ್ಕೆ ಇದ್ದವು.

      ದಿನಗಳು ಸಾಗಿತ್ತು. ಮೂಸಾ(ಅ)ರವರು ದಿನಾಲೂ ಕುರಿಗಳನ್ನು ಮೇಯಿಸಿ ಬಹಳ ನಿಷ್ಠೆಯಿಂದ ಆ ಮನೆಯ ಓರ್ವ ಸದಸ್ಯನಂತೆ ಆದರು. ಅವರ ಸಾತ್ವಿಕತೆ, ಸದ್ಗುಣಗಳಿಂದ ಮನೆ ಮಂದಿಗೆ ತುಂಬಾ ಅಚ್ಚುಮೆಚ್ಚಿನವರಾದರು. ಶುಐಬ್ ನಬಿ(ಅ)ರವರಿಗೆ ಇವರು ಮುಂದಿನ ಈಜಿಪ್ಟ್‌'ನ ಮಹಾನ್ ಪ್ರವಾದಿಯಾಗಲಿದ್ದಾರೆ ಎಂಬುದು ಅರಿವಾದುದರಿಂದ ಅವರು ಕೂಡಾ ತುಂಬಾ ಗೌರವಾದರಗಳಿಂದ ಕಾಣುತ್ತಿದ್ದರು.

      ಬೆಟ್ಟಗುಡ್ಡಗಳು, ಕಾಡು ಪೊದೆಗಳಿಂದ ತುಂಬಿದ್ದ ಪ್ರದೇಶವಾಗಿತ್ತದು. ಅಲ್ಲೊಂದು ಬೆಟ್ಟದ ಒಂದು ಇಳಕಲ್'ನಲ್ಲಿ ಭಯಾನಕ ಸರ್ಪವೊಂದಿತ್ತು. ಆ ಜಾಗದಲ್ಲಿ ಸಮೃದ್ಧ ಗಿಡ, ಪೊದೆಗಳಿದ್ದವು. ಆದರೆ ಅಲ್ಲಿಗೆ ಕುರಿಗಳನ್ನು ಮೇಯಿಸಲು ಯಾರೂ ಹೋಗುತ್ತಿರಲಿಲ್ಲ. ಆ ಸರ್ಪ ಅನೇಕರನ್ನು ಕಚ್ಚಿ ಸಾಯಿಸಿತ್ತು, ಆದ್ದರಿಂದ ಆ ಇಳಕಲ್'ಗೆ ಹೋಗಬಾರದು ಎಂದು ಶುಐಬ್ ನಬಿ(ಅ)ರವರು ಮೂಸಾ(ಅ)ರವರಿಗೆ ಎಚ್ಚರಿಕೆ ನೀಡಿದ್ದರು. ಒಂದು ದಿನ ಮೂಸಾ(ಅ)ರವರು ಆ ಇಳಕಲ್'ನಲ್ಲಿ ಕುರಿಗಳು ಮೇಯುವ ಸಮೃದ್ಧವಾದ ಪೊದೆಗಳನ್ನು ನೋಡುತ್ತಾ ನಿಂತರು. ಅಲ್ಲಿ ಯಾರೂ ಕುರಿಗಳನ್ನು ಮೇಯಿಸದೆ ಇದ್ದುದರಿಂದ ಸೊಪ್ಪುಸದೆಗಳು ಧಾರಳವಾಗಿ ಸೊಂಪಾಗಿ ಬೆಳದಿದ್ದುವು. ಇಷ್ಟು ಉತ್ತಮ ಜಾಗ ಕುರಿ ಮೇಯಿಸುವವರಿಗೆ ನಷ್ಟವಾಗುವಂತೆ ಮಾಡಿರುವ ಆ ಸರ್ಪ ಎಂತಹದ್ದೆಂದು ನೋಡಿ ಬಿಡೋಣ ಎಂದೆನಿಸಿ ಧೈರ್ಯದಿಂದ ಮೂಸಾ(ಅ)ರವರು ಅಲ್ಲೇ ಕುರಿಗಳನ್ನು ಮೇಯಲು ಬಿಟ್ಟರು. ತನ್ನ ಕೈಯ್ಯಲ್ಲಿರುವ ಬೆತ್ತವು ಅವರಿಗೆ ಬೆಟ್ಟದಲ್ಲಿ ಒರಗಿ ಕೂತುಕೊಳ್ಳಲು ಸಹಾಯಕವಾಗಿತ್ತು. ಒರಗುವಾಗ ಉತ್ತಮ ಆರಾಮಾಸನದಂತೆ ಆ ಬೆತ್ತವು ಪರಿವರ್ತಿತವಾಗುತ್ತಿತ್ತು. ಹಾಗೆ ಅದರಲ್ಲಿ ಒರಗಿ ವಿಶ್ರಾಂತಿ ಪಡೆದ ಮೂಸಾ(ಅ)ರವರಿಗೆ ಅಲ್ಲೇ ನಿದ್ದೆ ಹತ್ತಿತು.

      ತುಂಬಾ ಹೊತ್ತಿನ ನಂತರ ಅವರಿಗೆ ತಟ್ಟನೆ ಎಚ್ಚರವಾಯಿತು. ಎದ್ದು ನೋಡಿದಾಗ ಬೆತ್ತದ ತುದಿಯಲ್ಲಿ ರಕ್ತ ಕಾಣಿಸಿತು. ಗಡ ಬಿಡಿಸಿ ಅತ್ತಿತ್ತ ನೋಡಿದಾಗ ತುಸು ದೂರದಲ್ಲಿ ಆ ಭೀಕರ ಸರ್ಪವು ಸತ್ತು ಬಿದ್ದಿತ್ತು. ಅದು ನಿದ್ದೆಯಲ್ಲಿದ್ದ ಮೂಸಾ(ಅ)ರವರ ಬಳಿಗೆ ಬರುತ್ತಿರುವಾಗ ಬೆತ್ತವು ತಾನಾಗಿಯೇ ಹೋಗಿ ಅದನ್ನು ಹೊಡೆದು ಸಾಯಿಸಿ ಬಂದಿತು.

       ಸರ್ಪವು ಸತ್ತು ಕುರಿಮೇಯಿಸಲು ಆ ಇಳಿಕಲ್'ನಲ್ಲಿ ಅವಕಾಶ ಸಿಕ್ಕಿದಾಗ ಕುರಿ ಕಾಯುವ ಇತರರಿಗೂ ತುಂಬಾ ಸಂತೋಷವಾಯಿತು.

      ಕಾಲ ಕಳೆಯಿತು. ಮೂಸಾ(ಅ)ರವರ ದಿನಚರಿ ಸುಗಮವಾಗಿ ಸಾಗುತ್ತಿತ್ತು. ಈ ನಡುವೆ ಅನೇಕ ಅದ್ಭುತಗಳು ನಡೆದಿದ್ದವು. ಒಂದು ದಿನ ಒಂದು ಕುರಿಯನ್ನು ಹುಲಿ ಹಿಡಿದು ತಿಂದು ಬಿಟ್ಟಿತ್ತು. ಮೂಸಾ(ಅ)ರವರು ಆ ಹುಲಿಯನ್ನು ಹಿಡಿದು ಇದು ಯಾರ ಕುರಿಗಳು ಎಂಬುದು ನಿನಗೆ ಗೊತ್ತಾ? ಇದು ಓರ್ವ ಪ್ರವಾದಿಯ ಕುರಿಗಳು! ಅವರ ಸಂಸಾರ ಜೀವನಕ್ಕೆ ಈ ಕುರಿಗಳಲ್ಲದೆ ಅನ್ಯ ದಾರಿಯಿಲ್ಲ. ಆದ್ದರಿಂದ ನೀನು ಬಲುದೊಡ್ಡ ತಪ್ಪು ಮಾಡಿದೆ ಎಂದನು. ಅಷ್ಟರಲ್ಲಿ ಹುಲಿ ಬಹಳ ವಿನಯ ಭಾವ ತೋರುತ್ತಾ ಅವರ ಕಾಲಿಗೆರಗಿತು. ಗೊತ್ತಿಲ್ಲದೆ ಹಿಡಿದು ಬಿಟ್ಟೆ ‌. ಇನ್ನು ಮುಂದೆ ಖಂಡಿತಾ ಇಲ್ಲಿ ಕುರಿಗಳನ್ನು ಹಿಡಿದು ತಿನ್ನುವುದಿಲ್ಲ ಎಂಬ ಅರ್ಥದಲ್ಲಿ ಅದು ಅಂಗಲಾಚಿತು. ಮೂಸಾ(ಅ)ರವರು ಅದನ್ನು ಬಿಟ್ಟರು.

     ಹತ್ತು ವರ್ಷಗಳು ಪೂರ್ತಿಯಾದವು. ಮೂಸಾ(ಅ)ರವರ ಕರ್ತವ್ಯ ಮುಗಿಯಿತು. ಈ ಮಧ್ಯೆ ಶುಐಬ್ ನಬಿ(ಅ)ರವರ ಕುಟುಂಬದಲ್ಲಿ ಸಮೃದ್ಧಿಯುಂಟಾಗಿತ್ತು. ಕುರಿಗಳು ಹೆಚ್ಚಾಗಿದ್ದವು. ಇದೀಗ ಹತ್ತು ವರ್ಷ ಪೂರೈಸಿದ ಬಳಿಕ ನಾನೊಮ್ಮೆ ಈಜಿಪ್ಟಿಗೆ ಹೋಗುತ್ತೇನೆ. ತಾಯಿಯನ್ನು ನೋಡುವ ಆಸೆ ಎಂದಾಗ ಶುಐಬ್ ನಬಿ(ಅ)ಯವರು ಒಪ್ಪಿಗೆ ಕೊಟ್ಟರು. ಆದರೆ ಮುಂದೆ ಕುರಿಗಳನ್ನು ನೋಡಿಕೊಳ್ಳುವವರು ಯಾರು ಎಂಬ ಅವರ ಮನಸ್ಸಿನ ಕೊರಗನ್ನು ಗ್ರಹಿಸಿಕೊಂಡ ಮೂಸಾ(ಅ)ರವರು ಹೇಳಿದರು.

      ಇನ್ನು ಮುಂದೆ ಕುರಿಗಳ ಮೇಲ್ನೋಟಕ್ಕೆ ನಾನೊಂದು ಚಿರತೆಯನ್ನು ಏರ್ಪಾಡು ಮಾಡಿರುತ್ತೇನೆ. ಅದು ದಿನಾಲೂ ಇಲ್ಲಿಗೆ ಬಂದು ಕುರಿಗಳನ್ನು ಕರೆದೊಯ್ದು ಮೇಯಿಸಿ ಕರೆ ತಂದು ಬಿಡುತ್ತದೆ. 

      ಮೂಸಾ(ಅ)ರವರು ಪತ್ನಿಯನ್ನು ಕರಕೊಂಡು ಈಜಿಪ್ಟ್'ಗೆ ಹೊರಟರು. ಆಗ ಪತ್ನಿ ಬಸುರಿ ಕೂಡಾ.

     ಹಾಗೆ ಮೂಸಾ(ಅ)ರವರು ಮದ್'ಯಾನ್'ನಿಂದ ಈಜಿಪ್ಟಿಗೆ ಸಪತ್ನೀಕರಾಗಿ ಹೊರಟರು. ಮರು ದಿನ ಬೆಳಗ್ಗಾದಾಗ ಶುಐಬ್ ನಬಿ(ಅ)ಯವರ ಅಂಗಳದಲ್ಲಿ ಒಂದು ಚಿರತೆ ಬಂದು ವಿನೀತಭಾವದಿಂದ ಕೂತಿತ್ತು. ಕುರಿಗಳನ್ನು ಬಿಟ್ಟಾಗ ಅವುಗಳನ್ನು ಅದು ಕರೆದೊಯ್ದು ಮೇಯಿಸಿ ಸಂಜೆಯಾದಾಗ ಈ ಕ್ರಮ ದಿನ ನಿತ್ಯ ಮುಂದುವರೆಯಿತು. ಸುಬ್'ಹಾನಲ್ಲಾಹ್.....

 ಮೂಸಾ(ಅ)ರವರು ಮದ್'ಯಾನ್'ನಿಂದ ಈಜಿಪ್ಟ್'ಗೆ ಸಪತ್ನೀಕರಾಗಿ ಹೊರಟರು. ಮರುದಿನ ಬೆಳಗ್ಗಾದಾಗ ಶುಐಬ್ ನಬಿ(ಅ)ಯವರ ಅಂಗಳದಲ್ಲಿ ಒಂದು ಚಿರತೆ ಬಂದು ವಿನೀತಭಾವದಿಂದ ಕೂತಿತ್ತು. ಕುರಿಗಳನ್ನು ಬಿಟ್ಟಾಗ ಅವುಗಳನ್ನು ಅದು ಕರೆದೊಯ್ದು ಮೇಯಿಸಿ ಸಂಜೆಯಾದಾಗ ಈ ಕ್ರಮ ದಿನ ನಿತ್ಯ ಮುಂದುವರೆಯಿತು. ಸುಬ್'ಹಾನಲ್ಲಾಹ್

      ಮೂಸಾ(ಅ)ರವರು ಇತ್ತ ಕೆಲವು ದಿನಗಳ ಯಾತ್ರೆ ಮುಗಿಸಿ ಮದ್'ಯಾನ್ ದೇಶವನ್ನು ದಾಟಿದರು. ಫಿರ್'ಔನ್'ನ ಭಟರ ದೃಷ್ಟಿಗೆ ಬೀಳದಂತೆ ಬಹಳ ಎಚ್ಚರಿಕೆಯಿಂದ ಬಂದಿದ್ದರು. ಆದ್ದರಿಂದ ಸಾರ್ವಜನಿಕರ ರಸ್ತೆಯಲ್ಲಿ ಬಾರದೆ ಗುಡ್ಡ ಬೆಟ್ಟಗಳ ಪ್ರದೇಶಕ್ಕೆ ತಲುಪಿದಾಗ ದಿಕ್ಕು ತಪ್ಪಿತ್ತು. ಇನ್ನು ಯಾವ ದಿಕ್ಕಿಗೆ ಮುಂದುವರಿಯಬೇಕು ಎಂದು ತಿಳಿಯದೆ ಕಂಗಾಲಾದರು. ಅಲ್ಲೇ ಒಂದು ಕಡೆ ಟೆಂಟ್ ಹಾಕಿ ತಂಗಿದರು. 

       ರಾತ್ರಿಯಾಯಿತು. ವಿಪರೀತ ಚಳಿ. ಎಲ್ಲೆಲ್ಲೂ ಹೆಪ್ಪುಗಟ್ಟಿದ ಇರುಳು ಏನೂ ಮಾಡಬೇಕೆಂದು ತೋಚದ ಅವಸ್ಥೆ. ಅಷ್ಟರಲ್ಲಿ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಪರಿಸ್ಥಿತಿ ಗಂಭೀರವಾಯಿತು. ಚಳಿಯಿಂದ ನಡುಗುತ್ತಿದ್ದ ಆಕೆಗೆ ಚಳಿ ಕಾಯಿಸಲು ಬೆಂಕಿ ಹೊತ್ತಿಸೋಣ ಅಂದರೆ ಬೆಂಕಿ ಹೊತ್ತಿಸುವ ಸಲಕರಣೆ ನಷ್ಟವಾಗಿತ್ತು. ಒಟ್ಟಾರೆ ಚಡಪಡಿಸುತ್ತಾ ಇದ್ದಾಗ ತುಸು ದೂರದಿಂದ ಬೆಂಕಿ ಕಾಣಿಸಿತು. ಆ ಕರಾಳ ರಾತ್ರಿಯಲ್ಲಿ ದೂರದಿಂದ ಬೆಂಕಿ ಕಾಣಿಸಿಕೊಂಡಾಗ ಪತ್ನಿಯೊಂದಿಗೆ ಇಲ್ಲೇ ಇರು, ನಾನು ಅಲ್ಲಿಗೆ ಹೋಗಿ ಬೆಂಕಿ ತರುತ್ತೇನೆ. ಅಲ್ಲಿ ಬೆಂಕಿ ಇರುವುದರಿಂದ ಜನರೂ ಇರಬಹುದು. ಅದರಿಂದ ದಿಕ್ಕು ತಿಳಿದುಕೊಳ್ಳಲೂಬಹುದು. ಎನ್ನುತ್ತಾ ಅಲ್ಲಿಂದ ಹೊರಟು ಬೆಂಕಿ ಕಾಣಿಸಿಕೊಂಡ ದಿಕ್ಕಿಗೆ ನಡೆದರು.

       ಬೆಂಕಿ ಕಾಣಿಸಿಕೊಂಡ ಭಾಗಕ್ಕೆ ತಲುಪಿದಾಗ ಅದು ಬೆಂಕಿಯಲ್ಲ, ಒಂದು ಮರವು ಹೊಳೆಯುತ್ತಿರುವುದು ಎಂಬುದು ಅರಿವಾಯಿತು. ಒಲಿವ್ ಮರವೊಂದರಿಂದ ಬೆಳಕು ಕಾಣಿಸುತ್ತಿತ್ತು. ಅಲ್ಲಿಂದಲೇ ಒಂದು ಕರೆ ಕೇಳಿ ಬಂತು.

      ನಿನ್ನ ಚಪ್ಪಲಿಯನ್ನು ಕಳಚಿಡು. ನೀನೀಗ ಪವಿತ್ರವಾದ ತ್ವುವಾ ತಪ್ಪಲಲ್ಲಿರುವೆ. 

      ಮೂಸಾ(ಅ)ರವರು ಚಪ್ಪಲಿ ಕಳಚ್ಚಿಟ್ಟು ಮತ್ತೂ ಮುಂದುವರಿದಾಗ ಮತ್ತೊಮ್ಮೆ ಅಲ್ಲಾಹನ ನುಡಿ ಕೇಳಿ ಬಂತು.

      ಓ ಮೂಸಾ! ಅದೇನು ನಿನ್ನ ಕೈಯ್ಯಲ್ಲಿ ಆಗ ಮೂಸಾ(ಅ) ಹೇಳಿದರು.

     ಇದು ನನ್ನ ಬೆತ್ತ. ಇದರಲ್ಲಿ ನಾನು ಒರಗಿ ಕೂರುತ್ತೇನೆ. ನನ್ನ ಆಡುಗಳಿಗೆ ಎಲೆ ಉದುರಿಸುತ್ತೇನೆ. ಅಲ್ಲದೆ ಇನ್ನೂ ಅನೇಕ ಪ್ರಯೋಜನಗಳು ಇದರಲ್ಲಿವೆ.

     ಆಗ ಅಲ್ಲಾಹನು ಹೇಳಿದನು. ನಿನ್ನ ಆ ಬೆತ್ತವನ್ನು ಕೆಳಗೆ ಹಾಕು.

     ಮೂಸಾ ನಬಿ(ಅ)ಯವರು ಬೆತ್ತವನ್ನು ನೆಲಕ್ಕೆ ಹಾಕಿದರು. ಅಷ್ಟರಲ್ಲಿ ಅದೊಂದು ಘಟ ಸರ್ಪವಾಗಿ ಮಾರ್ಪಟ್ಟು ಬುಸ್ಸೆಂದು ತಲೆಯೆತ್ತಿತ್ತು. ಮೂಸಾ(ಅ) ಹೆದರಿ ಅಲ್ಲಿಂದ ಓಟಕ್ಕಿಟ್ಟರು. ಆಗ ಅಲ್ಲಾಹನು ಹೇಳಿದನು.

      ಮೂಸಾ ಹೆದರದಿರು. ಅದರ ತಲೆಯನ್ನು ಹಿಡಿ. ಅದು ಪುನಃ ಬೆತ್ತವಾಗಿ ಮಾರ್ಪಟ್ಟಿತು!

     ನಿನ್ನನ್ನು ನಾನು ಪ್ರವಾದಿಯಾಗಿ ನಿಯಮಿಸಿದ್ದೇನೆ. ಫಿರ್'ಔನ್ ಮತ್ತು ಅವನ ಕೂಟದವರ ಬಳಿಗೆ ಹೋಗಿ ಅವನನ್ನು ಸತ್ಯದಾರಿಗೆ ಆಮಂತ್ರಿಸಬೇಕು ಎಂದನು ಅಲ್ಲಾಹು.

     ಆಗ ಮೂಸಾ ನಬಿ(ಅ) ಹೇಳಿದರು, ನಾನು ಅದೊಂದು ಕೊಲೆ ಮಾಡಿ ಬಂದಿರುವುದರಿಂದ ಅವರು ನನಗೆ ವಧೆ ಶಿಕ್ಷೆ ನೀಡುವರೆಂದು ಹೆದರಿಕೆಯಾಗುತ್ತಿದೆ ಎಂದಾಗ, 

     ಆ ಬಗ್ಗೆ ಯಾವ ಭಯವೂ ಬೇಡ, ನಿನ್ನನ್ನು ರಕ್ಷಿಸುವುದು ನನ್ನ ಹೊಣೆ ಎಂದು ಅಲ್ಲಾಹನು ಭರವಸೆ ತುಂಬಿದನು. 

     ಆನಂತರ ತಾನೊಬ್ಬನೆ ಫಿರ್'ಔನ್ ಸಂಘವನ್ನು ಎದುರಿಸುವುದಕ್ಕಿಂತ ತನಗೆ ಬಲ ನೀಡಲು ಓರ್ವ ಸಹಾಯಕ ಪ್ರವಾದಿ ಕೂಡಾ ಬೇಕೆಂದು ಅಲ್ಲಾಹನಲ್ಲಿ ಹೇಳುತ್ತಾ ತನ್ನ ಅಣ್ಣ ಹಾರೂನ್(ಅ)ರನ್ನು ಪ್ರವಾದಿ ಮಾಡುವಂತೆ ಕೇಳಿಕೊಂಡಿದ್ದರು. ಅದಕ್ಕೂ ಅಲ್ಲಾಹನು ಉತ್ತರ ಕೊಟ್ಟು ಹಾರೂನ್(ಅ)ರನ್ನೂ ಪ್ರವಾದಿಯಾಗಿ ನಿಯಮಿಸಿದನು. ಫಿರ್'ಔನ್'ನ ಶಿಶು ಹತ್ಯೆಯ ಘೋಷಣೆಗೆ ಮೊದಲು ಜನಿಸಿದವರಾಗಿದ್ದರು ಹಾರೂನ್ ನಬಿ(ಅ)

     ಇತ್ತ ಪತ್ನಿ ಸಫೂರಾ ಆ ಕತ್ತಲು ತುಂಬಿದ ಹಾಗೂ ತೀವ್ರ ಚಳಿಯ ವಾತಾವರಣದಲ್ಲಿ ಹೆರಿಗೆ ನೋವಿನಿಂದ ತತ್ತರಿಸಿದರು. ಬೇಗ ಬರುತ್ತೇನೆ ಎಂದು ಹೋದ ಪತಿಯವರೂ ಬಾರದಿದ್ದಾಗ ಅವರ ಆತಂಕ ಹೆಚ್ಚಾಗಿತ್ತು. ಅಷ್ಟರಲ್ಲಿ ಆ ತಪ್ಪಲಲ್ಲಿ ವಾಸಿಸುತ್ತಿದ್ದ ಜಿನ್ನ್'ಗಳಿಗೆ ವಿಷಯ ಗೊತ್ತಾಯಿತು. ಅವು ಬಂದು ಸಫೂರಾ ಬೀವಿಗೆ ಶುಶ್ರೂಷೆ ನೀಡಿದವು. ಸುಖ ಪ್ರಸವವಾಯಿತು. ನಂತರ ಓರ್ವ ಮಲಕ್ ಮನುಷ್ಯ ರೂಪದಲ್ಲಿ ಬಂದು ತಾಯಿ ಮಗುವನ್ನು ವಾಪಾಸು ಮದ್'ಯನ್'ಗೆ ಕರಕೊಂಡು ಹೋದರು. ಈ ಮಾಹಿತಿಯನ್ನು ಅಲ್ಲಾಹನು ಮೂಸಾ ನಬಿ(ಅ)ಯವರಿಗೆ ತಿಳಿಸಿದ್ದರಿಂದ ಅವರು ನಿಶ್ಚಿಂತರಾಗಿ ಅಲ್ಲಿಂದ ಒಬ್ಬರೇ ಈಜಿಪ್ಟಿನತ್ತ ಪ್ರಯಾಣ ಮುಂದುವರಿಸಿದರು.

     ಹಾರೂನ್ ನಬಿ(ಅ)ಯವರನ್ನು ಪ್ರವಾದಿಯಾಗಿ ಆಯ್ಕೆ ಮಾಡಿದ ತಕ್ಷಣ ಜಿಬ್ರೀಲ್(ಅ)ರು ಹಾರೂನ್ ನಬಿ(ಅ)ಯವರ ಬಳಿ ಬಂದು ವಿಷಯವನ್ನು ತಿಳಿಸಿದರಲ್ಲದೆ ಮೂಸಾ ನಬಿ(ಅ)ರವರು ಬರುತ್ತಿದ್ದಾರೆಂದೂ ಅವರ ಜೊತೆ ಸೇರಿ ದೀನೀ ಭೋಧನೆಗೆ ಇಳಿಯಬೇಕೆಂದೂ ಕರೆಯಿತ್ತರು. ಅನಂತರ ಹಾರೂನ್ ನಬಿ(ಅ)ಯವರನ್ನು ಎತ್ತಿ ಕೊಂಡು ಬಂದು ನೈಲ್ ನದಿ ತೀರದ ಒಂದು ಜಾಗಕ್ಕೆ ಕೊಂಡೊಯ್ದು ತಲುಪಿಸಿದರು.

      ಅಲ್ಲಿಗೆ ಮೂಸಾ ನಬಿ(ಅ)ರವರು ತಲುಪಿದ್ದರು. ಅಲ್ಲಿಂದ ಇಬ್ಬರೂ ತಮ್ಮ ಮನೆಗೆ ತೆರಳಿದರು. ಹತ್ತು ವರ್ಷಗಳ ಅನಂತರ ಮರಳಿ ಬಂದ ಮಗನನ್ನು ಕಂಡಾಗ ಆವೇಶಭರಿತರಾದ ತಾಯಿ ಪ್ರಜ್ಞೆ ತಪ್ಪಿ ಬಿದ್ದರು. ಅವರು ಮರಣ ಹೊಂದಿದರೆಂದು ಭಾವಿಸಿದ ಮಕ್ಕಳಿಬ್ಬರೂ ಅಳತೊಡಗಿದಾಗ ಜಿಬ್ರೀಲ್(ಅ) ಬಂದು "ಮೃತರಾಗಿಲ್ಲ, ಪ್ರಜ್ಞಾಶೂನ್ಯಾರಾದುದು ಮಾತ್ರ. ನಿಮ್ಮ ಕಣ್ಣೀರನ್ನು ಅವರ ಮುಖಕ್ಕೆ ಬೀಳಿಸಿದರೆ ಎಚ್ಚರಗೊಳ್ಳುತ್ತಾರೆ" ಎಂದರು. ಅವರಿಬ್ಬರೂ ಹಾಗೆ ಮಾಡಿದಾಗ ತಾಯಿಗೆ ಎಚ್ಚರವಾಯಿತು. ಮೂಸಾ ನಬಿ(ಅ)ಯವರು ಅದುವರೆಗೆ ನಡೆದ ಎಲ್ಲಾ ಘಟನೆಗಳನ್ನು ತಾಯಿಗೆ ವಿವರಿಸಿದರು.

     ಕೆಲವು ದಿನಗಳ ಕಾಲ ಮೂಸಾ ನಬಿ(ಅ)ಯವರು ರಾತ್ರಿ ಹೊತ್ತಲ್ಲಿ ನಗರ ಮತ್ತು ಫಿರ್'ಔನ್'ನ ಅರಮನೆಯ ಬಳಿಯಲ್ಲಿ ಸುತ್ತಾಡಿ ಪರಿಸ್ಥಿತಿಗಳೆನ್ನೆಲ್ಲಾ ಅವಲೋಕಿಸಿದರು. ಇದಾದ ಬಳಿಕ ಒಂದು ದಿನ ಅಣ್ಣ ಹಾರೂನ್ ನಬಿ(ಅ)ಯವರನ್ನು ಕೂಡಿಕೊಂಡು ಫಿರ್'ಔನ್'ನ ಮುಂದೆ ಹಾಜರಾದರು. ಅವರನ್ನು ಕಂಡ ಕೂಡಲೇ ಫಿರ್'ಔನ್'ಗೆ ಒಮ್ಮೆ ನಡುಕ ಹುಟ್ಟಿತು. ಮೂಸಾ ನಬಿ(ಅ)ಯವರಿಗೆ ಹೊಸ ತೇಜಸ್ಸು ಹಾಗೂ ಗಾಂಭೀರ್ಯ ತುಂಬಿತ್ತು.

     ಮೂಸಾ ನಬಿ(ಅ)ಯವರು ಫಿರ್'ಔನ್'ನಿಗೆ ಉಪದೇಶ ನೀಡಿದರು. ಇಸ್ರಾಯೀಲ್ ವರ್ಗದ ಮೇಲಿನ ದಬ್ಬಾಳಿಕೆ ನಿಲ್ಲಿಸಬೇಕು. ಅವರನ್ನು ನನ್ನ ಜೋತೆ ಕಳುಹಿಸಬೇಕು. ಅವರಿಗೆ ನಾನು ಸ್ವತಂತ್ರ ಜೀವನಕ್ಕೆ ಅವಕಾಶ ಮಾಡಿಕೊಡುತ್ತೇನೆ. ನೀನು ದೇವ ಎಂಬ ವಾದವನ್ನು ಹಿಂತೆಗೆದುಕೊಳ್ಳಬೇಕು. ನಾನು, ನೀನು ಹಾಗೂ ಜಗತ್ತಿನ ಎಲ್ಲರ ಸೃಷ್ಟಿಕರ್ತನಾದ ಅಲ್ಲಾಹು ಒಬ್ಬನೇ ದೇವನಾಗಿದ್ದು ಅವನಿಗೆ ಮಾತ್ರ ಆರಾಧಿಸಬೇಕು.

     ಅದನ್ನು ತಿರಸ್ಕರಿಸುತ್ತಾ ಫಿರ್'ಔನ್ ವಾಗ್ವಾದಕ್ಕಿಳಿದನು. ಆದರೆ ಅವನ ಪ್ರತಿಯೊಂದು ಮಾತಿಗೆ ಮೂಸಾ ನಬಿ(ಅ)ಯವರು ಸವರ್ಪಕ ಉತ್ತರ ನೀಡಿದನು. ಅವನ ಪ್ರತಿವಾದವನ್ನು ಹುಸಿಗೊಳಿಸಿದರು. ಫಿರ್'ಔನ್'ನಿಗೆ ಮರುಮಾತಿಲ್ಲದಾದಾಗ ಸಿಟ್ಟು ಬಂತು. ಅವನು ಎದ್ದು ಬಂದು ಮೂಸಾ ನಬಿ(ಅ)ಯವರನ್ನು ವಧಿಸಲು ಮುಂದಾದನು. ಅಷ್ಟರಲ್ಲಿ ಮೂಸಾ ನಬಿ(ಅ)ಯವರು ಬೆತ್ತವನ್ನು ನೆಲಕ್ಕೆಸೆದರು. ಅದು ಬುಸ್ಸೆಂದು ತಲೆಯೆತ್ತುತ್ತಾ ಘಟ ಸರ್ಪವಾಗಿ ಮಾರ್ಪಟ್ಟಾಗ ಫಿರ್'ಔನ್ ಹೆದರಿ ಹಿಂಜರಿದನು. ಹಾವು ಇನ್ನಷ್ಟು ಭೀಕರ ರೂಪ ತಾಳುತ್ತಾ ಇಡೀ ಅರಮನೆಯನ್ನೇ ನುಂಗುವಷ್ಟು ದೊಡ್ಡದಾಗಿ ಬಾಯಿ ತೆರೆಯಿತು. ಹೆದರಿದ ಫಿರ್'ಔನ್ ಅಂಗಲಾಚಿದನು.

     ನನ್ನ ಪುತ್ರನೇ! ನಿನ್ನನ್ನು ನಾನು ಮುದ್ದಿನಿಂದ ಸಾಕಿಲ್ಲವೇ? ದಯವಿಟ್ಟು ನನ್ನನ್ನು ಉಳಿಸು ಎಂದು ಗೋಗರೆದನು. ಆಗ ಮೂಸಾ ನಬಿ(ಅ)ಯವರು ಸರ್ಪದ ತಲೆಯನ್ನು ಹಿಡಿದರು. ಅದು ಬೆತ್ತವಾಗಿ ಮಾರ್ಪಟ್ಟಿತ್ತು.

      ಫಿರ್'ಔನ್'ಗೆ ಈಗ ಸ್ವಲ್ಪ ಧೈರ್ಯ ಬಂತು. ಅವನು ಇದು ಒಳ್ಳೆಯ ಮಾಯಾಜಾಲ ಎಂದನು. ಆ ಕಾಲದಲ್ಲಿ ಹಗ್ಗ ಮತ್ತು ಬೆತ್ತವನ್ನು ನೆಲಕ್ಕೆಸೆದು ಹಾವಾಗಿ ತೋರಿಸುವ ಜಾದೂ ವಿದ್ಯೆ ಬಹಳ ಪ್ರಚಾರದಲ್ಲಿತ್ತು. ಆ ವಿದ್ಯೆಯಲ್ಲಿ ನಿಪುಣರಾದವರು ತುಂಬಾ ಜನರಿದ್ದರು. ಪ್ರವಾದಿಗಳಿಗೆ ಸಮಾಕಾಲೀನ ಅತ್ಯುನ್ನತ ಭೌತಿಕ ವಿದ್ಯೆಯನ್ನು ಮೀರಿಸುವ ಪವಾಡವನ್ನು ಕೊಡುವುದು ಅಲ್ಲಾಹನ ರೂಢಿ. ಆದ್ದರಿಂದ ಮೂಸಾ ನಬಿ(ಅ)ಯವರಿಗೆ ಬೆತ್ತವನ್ನು ಹಾವಾಗಿಸುವ ಪವಾಡವನ್ನು ನೀಡಿದ್ದು. ಸಮಕಾಲೀನ ಜಾದೂ ಹಾಗೂ ಈ ಪವಾಡ ಬಾಹ್ಯದಲ್ಲಿ ಒಂದೇ ತರ ಇರುವುದರಿಂದ ಈ ಪವಾಡವನ್ನು ಜಾದೂ ಎಂದು ಹೇಳಿದರೆ ಜನರು ಪಕ್ಕನೆ ನಂಬುತ್ತಾರೆ ಎಂದಾಗಿತ್ತು ಫಿರ್'ಔನ್'ನ ಮನದಿಂಗಿತ.

     ಕ್ರಾಂತಿಯ ಕಿಡಿ ಹತ್ತಿತ್ತು. ಈಜಿಪ್ಟಿನ ಪ್ರಧಾನ ನಗರವಿಡೀ ಇದೇ ಸುದ್ಧಿ. ಕ್ರಮೇಣ ದೇಶದ ಉದ್ದಗಲಕ್ಕೂ ಈ ಸುದ್ದಿ ವ್ಯಾಪಿಸಿತು. ಇಸ್ರಾಯೀಲ್ ವರ್ಗದವರು ತಮ್ಮ ವಿಮೋಚಕ ಬಂದುದಕ್ಕಾಗಿ ತುಂಬಾ ಸಂತೋಷಪಟ್ಟರು.

      ದಿನ ನಿತ್ಯ ಹಲವು ಸಂಭವಗಳು ನಡೆದವು. ಮೂಸಾ ನಬಿ(ಅ) ಮತ್ತು ಹಾರೂನ್ ನಬಿ(ಅ)ಯವರು ದಿನಾಲೂ ಜನರಿಗೆ ಬೋಧನೆ ನೀಡತೊಡಗಿದರು. ಫಿರ್'ಔನ್'ನ ಬಳಿಗೂ ದಿನಾಲೂ ಹೋಗಿ ಅವನನ್ನು ಸತ್ಯದ ಹಾದಿಗೆ ಕರೆದರು. ದಿನ ಕಳೆದಂತೆ ದೇಶದ ಇತಿಹಾಸವನ್ನೇ ಬದಲಾಯಿಸುವ ಮಹಾಕ್ರಾಂತಿಯು ಬಲಗೊಳ್ಳುತ್ತಾ ಬಂತು. ಫಿರ್'ಔನ್'ನನು ತನ್ನ ಅಧಿಕಾರ ಉಳಿಸಲು ಪ್ರಯತ್ನಿಸುತ್ತಿದ್ದಾನೆ ಎಂದರಿತ ಮೂಸಾ ನಬಿ(ಅ)ಯವರು "ನೀನು ಸತ್ಯ ಸ್ವೀಕರಿಸಿದರೆ ಅಧಿಕಾರವನ್ನು ನಿನಗೇ ಬಿಟ್ಟು ಕೊಡಲಾಗುವುದು". ಎಂದು ಕೂಡಾ ಹೇಳಿದ್ದರು. ಇದರಿಂದ ಪ್ರಭಾವಿತನಾದ ಫಿರ್'ಔನನು ಇಸ್ಲಾಮ್ ಧರ್ಮ ಸ್ವೀಕರಿಸುವುದೇ ಒಳ್ಳೆಯದು ಎಂದು ಕೂಡಾ ಆಲೋಚಿಸಿದ್ದನು. ಆದರೆ ಮಂತ್ರಿ ಪರಮ ದುಷ್ಟನಾದ ಹಾಮಾನನು ಫಿರ್'ಔನನ ಮನಸ್ಸನ್ನು ಬದಲಾಯಿಸಿ ಬಿಟ್ಟನು. ಆರಾಧ್ಯನಾಗಿದ್ದ ನೀನು ಆರಾಧಕನಾಗುವುದಾ? ಎಂದು ಕೇಳಿದ್ದನು. ಅವನ ಮಾತಿನ ಮೋಡಿಗೆ ಬಲಿ ಬಿದ್ದು ಫಿರ್'ಔನ್ ತನ್ನ ನಿರ್ಧಾರವನ್ನು ಹಿಂತೆಗೆದುಕೊಂಡು ಕುಫ್ರಿಯತ್'ನಲ್ಲೇ ಮುಂದುವರಿದನು.

    ಇಬ್ಬರು ಪ್ರವಾದಿಗಳನ್ನು ಉಪಾಯದಿಂದ ಕೊಲ್ಲುವಂತೆ ಅವನು ಗುಟ್ಟಿನಲ್ಲಿ ಹಾಮಾನ್'ಗೆ ಆದೇಶ ಕೊಟ್ಟನು. ನೇರವಾಗಿ ಎದುರಿಸಲು ಸಾಧ್ಯವಿಲ್ಲ ಎಂಬುದನ್ನು ಆತ ಅರಿತಿದ್ದನು. ಹಾಗೆ ಒಂದು ದಿನ ಪ್ರವಾದಿತ್ವಯರು ಒಂದು ಕಡೆ ನಡೆದುಕೊಂಡು ಹೋಗುತ್ತಿದ್ದಾಗ ಹಾಮಾನನ ನೇತೃತ್ವದಲ್ಲಿ ಫಿರ್'ಔನನಿಗೆ ಪೂಜೆ ಮಾಡುತ್ತಿರುವ ಒಂದು ಗುಂಪನ್ನು ಕಂಡರು. ಇವರು ಇದೇ ರೀತಿ ಅಲ್ಲಾಹನಿಗೆ ಆರಾಧಿಸಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಮೂಸಾ ನಬಿ(ಅ) ಹೇಳಿದಾಗ ಕುಪಿತನಾದ ಹಾಮಾನನು ನಾವು ನಿನ್ನ ಅಲ್ಲಾಹನಿಗೆ ಆರಾಧಿಸುವ ಆಸೆಯನ್ನು ಬಿಟ್ಟು ಬಿಡು. ನೆರೆತ ಕೂದಲನ್ನು ಬಿಳಿ ಮಾಡಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ನಮ್ಮನ್ನು ಪರಿವರ್ತಿಸಲು ನಿನ್ನಿಂದ ಸಾಧ್ಯವಿಲ್ಲ ಎಂದನು. ಆಗ ಮೂಸಾ ನಬಿ(ಅ)ಯವರು ಅಲ್ಲಾಹನಿಗೆ ನೆರೆತ ಕೂದಲನ್ನು ಬಿಳಿ ಮಾಡಲು ಸಾಧ್ಯ ಎನ್ನುತ್ತಾ ಅಲ್ಲಿಂದ ಮುಂದಕ್ಕೆ ಸಾಗಿದರು. ಅವರಿಬ್ಬರನ್ನೂ ಉಪಾಯದಿಂದ ಕೊಲ್ಲಿಸಲು ಇದು ತಕ್ಕ ಸಂದರ್ಭ ಅಂದುಕೊಂಡ ಹಾಮಾನನು ಕೆಲವು ಸೈನಿಕರನ್ನು ಅವರ ಹಿಂದೆ ಕಳುಹಿಸಿದನು.

 ಅವರಿಬ್ಬರನ್ನು ಉಪಾಯದಿಂದ ಕೊಲ್ಲಿಸಲು ಇದು ತಕ್ಕ ಸಂದರ್ಭ ಅಂದುಕೊಂಡ ಹಾಮಾನನು ಕೆಲವು ಸೈನಿಕರನ್ನು ಅವರ ಹಿಂದೆ ಕಳುಹಿಸಿದನು.

     ಸ್ವಲ್ಪ ಹೊತ್ತಿನ ನಂತರ ಜೋರಾಗಿ ಮಳೆ ಗಾಳಿ ಬೀಸಿದ್ದರಿಂದ ಪ್ರವಾದಿಗಳಿಬ್ಬರು ಓರ್ವ ಮುದುಕಿಯ ಮನೆಯಲ್ಲಿ ಆಶ್ರಯ ಪಡೆದರು. ಅವರಿಬ್ಬರೂ ಅಲ್ಲಿ ದಣಿವಾರಿಸಲು ಮಲಗಿದಾಗ ಇಬ್ಬರಿಗೂ ನಿದ್ದೆ ಹತ್ತಿತು. ಇದನ್ನರಿತ ಹಾಮಾನನ ಸೈನಿಕರು ಇದುವೇ ತಕ್ಕ ಸಮಯವೆಂದು ಬಗೆದು ಖಡ್ಗ ಹಿಡಿದುಕೊಂಡು ಅತ್ತ ಸಾಗಿದರು. ಆದರೆ ಅಷ್ಟರಲ್ಲೇ ಮೂಸಾ ನಬಿ(ಅ)ಯವರ ಬೆತ್ತವು ಸರ್ಪವಾಗಿ ಬದಲಾಗಿ ಸೈನಿಕರ ಮೇಲೆ ಆಕ್ರಮಣ ನಡೆಸಿ ಏಳು ಸೈನಿಕರನ್ನು ಕೊಂದು ಹಾಕಿತು. ಉಳಿದವರು ಓಡಿ ಹೋದರು. ಒಮ್ಮೆ ಫಿರ್'ಔನ್'ನನು ಒಂದು ಸಭೆ ನಡೆಸಿ ಪ್ರವಾದಿಗಳಿಬ್ಬರನ್ನು ಹತ್ತಿಕ್ಕಲು ಉಪಾಯವೇನೆಂದು ಸಮಾಲೋಚನೆ ನಡೆಸಿದನು. ಇಬ್ಬರನ್ನೂ ಕೊಲ್ಲುವುದಲ್ಲದೆ ಅನ್ಯಮಾರ್ಗವಿಲ್ಲ. ಎಂಬ ಅಭಿಪ್ರಾಯ ಎದ್ದು ಬಂದಿತು. ಆಗ ಹಿಂದೆ ಮೂಸಾ ನಬಿಯವರಿಗೆ ದೇಶ ಬಿಟ್ಟು ಹೋಗುವಂತೆ ಸಲಹೆ ನೀಡಿದ್ದ "ಹಿರ್ಕೀಲ್" ಎಂಬ ವ್ಯಕ್ತಿ ಅದನ್ನು ಎದುರಿಸಿದರು. ಅವರು ಒಳಗಿಂದೊಳಗೆ ಸತ್ಯವಿಶ್ವಾಸಿಯಾಗಿದ್ದರು. ಅವರು ಹೇಳಿದರು.

      ಅವರನ್ನು ವಧಿಸಿದರೆ ನಮ್ಮ ಕಡೆ ಸತ್ಯ ಇಲ್ಲ ಎಂದು ಪ್ರಜೆಗಳು ಭಾವಿಸುತ್ತಾರೆ. ಆದ್ದರಿಂದ ಪ್ರಜೆಗಳೆಲ್ಲ ಅವರಿಬ್ಬರು ಇಲ್ಲದಿದ್ದರೂ ಅವರ ಧರ್ಮವನ್ನು ಅವಲಂಬಿಸುವ ಅಪಾಯವಿದೆ. ಆದ್ದರಿಂದ ಅವರನ್ನು ತಾತ್ವಿಕವಾಗಿ ಸೋಲಿಸಿ ಪರಾಜಿತಗೊಳಿಸುವುದೇ ಬುದ್ದಿವಂತಿಕೆ. ಅವರ ದೊಡ್ಡ ಶಕ್ತಿಯೆಂದರೆ ಬೆತ್ತವನ್ನು ಹಾವಾಗಿ ಪರಿವರ್ತಿಸುವುದು. ನಾವು ಅದೇ ವಿದ್ಯೆಯಿಂದ ಅವರನ್ನು ಸೋಲಿಸಿದರೆ ಅವರಿಬ್ಬರ ಆಟ ಅಲ್ಲಿಗೆ ಮುಕ್ತಾಯವಾಗುತ್ತದೆ. ನಮ್ಮ ದೇಶದಲ್ಲಿ ಅದೆಷ್ಟು ನಿಪುಣ ಜಾದೂಗಾರರು ಇದ್ದಾರೆ. ಅವರನ್ನು ಕರೆಸಿ ಒಂದು ಸ್ಪರ್ಧೆ ಏರ್ಪಡಿಸೋಣ.

      ವಾಸ್ತವದಲ್ಲಿ ಇದು ಹಿರ್ಕೀಲ್'ರವರ ಉಪಾಯವಾಗಿತ್ತು. ಜಾದೂಗಾರರಿಗೆ ಪವಾಡವನ್ನು ಸೋಲಿಸಲು ಸಾಧ್ಯವಿಲ್ಲ ಎಂಬುದು ಅವರಿಗೆ ಗೊತ್ತಿತ್ತು. ಆದ್ದರಿಂದ ಸಾರ್ವಜನಿಕರೆದುರೇ ಫಿರ್'ಔನ್'ನ ಜಾದೂಗಾರರು ಸೋತು ಜನರಿಗೆ ಸತ್ಯ ಮನವರಿಕೆಯಾಗಲಿ ಎಂದಾಗಿತ್ತು ಅವರ ಇಂಗಿತ. ಅವರ ಈ ಇಂಗಿತವನ್ನು ಅರಿತಿರದ ಫಿರ್'ಔನ್ ಅದಕ್ಕೆ ಒಪ್ಪಿಕೊಂಡನು. ಹಿರ್ಕೀಲ್ ಹೇಳಿದ್ದೇ ಸರಿ ಎಂದನು. ಆಗ ಹಿರ್ಕೀಲ್ ಹೇಳಿದರು.

     ಸ್ಪರ್ಧೆಯು ಸಾರ್ವಜನಿಕರನ್ನು ಒಟ್ಟು ಸೇರಿಸಿ ನಡೆಸಬೇಕು. ಇಡೀ ದೇಶದ ಮೂಲೆ ಮೂಲೆಗೂ ಸುದ್ಧಿ ಹಬ್ಬಿಸಿ ಸಾಧ್ಯವಿದ್ದಷ್ಟು ಜನರನ್ನು ಸೇರಿಸಬೇಕು. ಆಗ ಹೆಚ್ಚಿನ ಜನರಿಗೆ ಇವರಿಬ್ಬರ ಪರಾಜಯವನ್ನು ಕಾಣಲು ಸಾಧ್ಯವಾಗುತ್ತದೆ.

     ಶಹಬಾಸ್! ಒಳ್ಳೆಯ ಅಭಿಪ್ರಾಯ! ಹಾಗೆ ಆಗಲಿ. ಎಲ್ಲಾ ಕಡೆ ಸುದ್ದಿ ಹಬ್ಬಿಸಿರಿ‌. ನಾಳೆಯಿಂದಲೇ ಕಾರ್ಯಕ್ರಮಕ್ಕೆ ಸಿದ್ಧವಾಗಿರಿ ಎಂದನು ಫಿರ್'ಔನ್. ಮೂಸಾ ನಬಿ(ಅ)ಯವರು ಬೋಧನೆಗೆ ಬಂದಾಗ ಅವರಿಗೆ ಸ್ಪರ್ಧೆಯ ತಮ್ಮ ನಿರ್ಧಾರವನ್ನು ತಿಳಿಸಿದಾಗ ಅವರು ಅದಕ್ಕೆ ಒಪ್ಪಿಕೊಂಡರು. ಒಂದು ದಿನ ನಿಗಧಿ ಪಡಿಸಲಾಯಿತು. ವಿಶಾಲವಾದ ಒಂದು ಮೈದಾನವನ್ನು ನಿಗಧಿ ಪಡಿಸಲಾಯಿತು.

    ದೇಶದ ಹೆಸರಾಂತ ಜಾದೂಗಾರರಿಗೆ ಫಿರ್'ಔನ್ ಆಹ್ವಾನ ನೀಡಿದನು. ಗೆದ್ದರೆ ಎಲ್ಲರಿಗೂ ರಾಜ ಸನ್ನಿಧಿಯಲ್ಲಿ ಉನ್ನತ ಹುದ್ದೆ ನೀಡುವ ವಾಗ್ದಾನ ಮಾಡಿದನು.

     ನುರಿತವಾದ ಜಾದೂಗಾರರು ರಾಜಧಾನಿಗೆ ಆಗಮಿಸಿದರು. ನಿಗಧಿತ ದಿನದಂದು ಲಕ್ಷಾಂತರ ಜನರು ಸೇರುವ ಎಲ್ಲಾ ಲಕ್ಷಣಗಳು ಗೋಚರಿಸಿದವು. ಜನರ ಉತ್ಸಾಹ ಮಿತಿಮೀರಿತ್ತು. ಈ ಮಧ್ಯೆ ಅತ್ಯಂತ ನುರಿತವಾದ ಕೆಲವು ಜಾದೂಗಾರರಿಗೆ ಪ್ರವಾದಿಗಳಿಬ್ಬರು ನಿದ್ದೆಯಲ್ಲಿರುವಾಗಲೂ ಅವರ ಬೆತ್ತವು ಅದ್ಭುತ ತೋರುತ್ತದೆ ಎಂಬ ಮಾಹಿತಿ ಸಿಕ್ಕಿತು. ನಿದ್ದೆಯಲ್ಲಿರುವಾಗ ಜಾದೂ ಮಾಡಲು ಸಾಧ್ಯವೇ ಇಲ್ಲ ಎಂಬುದು ಅವರಿಗೆ ಅರಿವು ಇತ್ತು. ಆದ್ದರಿಂದ ಅವರು ಹೆದರಿಕೊಂಡರು. ನಾವು ಜಾದೂ ಸ್ಪರ್ಧೆಗೆ ನಿಲ್ಲುವುದಿಲ್ಲ ಮರಳಿ ಹೋಗುತ್ತೇವೆ ಎಂದಾಗ ಫಿರ್'ಔನ್'ನನು ಕುಪಿತನಾಗಿ ಸ್ಪರ್ಧೆಯಲ್ಲಿ ಭಾಗವಹಿಸದೆ ಹೋಗುವವರಿಗೆ ಮರಣ ದಂಡನೆ ವಿಧಿಸುತ್ತೇನೆ ಎಂದಾಗ ಗತ್ಯಂತರವಿಲ್ಲದೆ ಜಾದೂಗಾರರು ನಿಲ್ಲ ಬೇಕಾಯಿತು.

‌ ಸ್ಪರ್ಧೆಯ ದಿನ ಬಂದೇ ಬಿಟ್ಟಿತು. ವಿಶಾಲವಾದ ಮೈದಾನದಲ್ಲಿ ಲಕ್ಷಾಂತರ ಜನರು ಸೇರಿದ್ದರು. ಸ್ಪರ್ಧೆಗೆ ನಿರ್ಧರಿಸಲಾಗಿದ್ದ ಅಂಕಣದಲ್ಲಿ ಒಂದು ಕಡೆ ನೂರಾರು ಜಾದೂಗಾರರು ಹಗ್ಗ ಮತ್ತು ಬೆತ್ತಗಳನ್ನು ಹಿಡಿದು ನಿಂತರು. ಮತ್ತೊಂದು ಅಂಕಣದಲ್ಲಿ ಮೂಸಾ ನಬಿ(ಅ)ಯವರು ಬೆತ್ತವನ್ನು ಹಿಡಿದುಕೊಂಡು ನಿಂತರು.

    ಮೊದಲು ಹಾಕುವುದು ಯಾರು? ಎಂದು ಕೇಳಿದಾಗ ನೀವೇ ಮೊದಲು ಹಾಕಿರಿ ಎಂದರು ಮೂಸಾ ನಬಿ(ಅ). ಅಷ್ಟರಲ್ಲಿ ಅವರೆಲ್ಲರೂ ಹಗ್ಗ ಮತ್ತು ಬೆತ್ತವನ್ನು ನೆಲಕ್ಕೆಸೆದರು. ತಕ್ಷಣ ಅವೆಲ್ಲ ಹಾವುಗಳಂತೆ ಕಾಣಿಸತೊಡಗಿದವು.

     ಅಷ್ಟರಲ್ಲಿ ಮೂಸಾ ನಬಿ(ಅ)ಯವರು ತನ್ನ ಬೆತ್ತವನ್ನು ನೆಲಕ್ಕೆಸೆದಾಗ ಅದು ಭೀಕರ ಸರ್ಪವಾಗಿ ಮಾರ್ಪಟ್ಟು ಜಾದೂಗಾರರ ಎಲ್ಲಾ ಹಾವುಗಳನ್ನು ಒಂದೊಂದಾಗಿ ನುಂಗತೊಡಗಿತು. ಕೆಲವೇ ಅವಧಿಯೊಳಗೆ ಅವರು ನೆಲಕ್ಕೆ ಹಾಕಿದ್ದ ಒಂದೇ ಒಂದು ಬೆತ್ತವಾಗಲೀ, ಹಗ್ಗವಾಗಲಿ ಅಲ್ಲಿ ಕಾಣಿಸದಂತೆ ಎಲ್ಲವನ್ನೂ ಮೂಸಾ ನಬಿ(ಅ)ಯವರ ಹಾವು ನುಂಗಿ ಹಾಕಿತ್ತು. ಮೂಸಾ ನಬಿ(ಅ)ಯವರು ಅದರ ತಲೆಯ ಮೇಲೆ ಹಿಡಿದಾಗ ಅದು ಪುನಃ ಬೆತ್ತವಾಗಿ ಮಾರ್ಪಟ್ಟಿತು.

 ‌ ‌‌ ಜಾದೂಗಾರರಿಗೆ ಮೂಸಾ ನಬಿ(ಅ)ಯವರನ್ನು ಜಾದೂ ಅಲ್ಲ, ನಿಜವಾದ ಪವಾಡ ಎಂಬುದು ಮನವರಿಕೆಯಾಯಿತು. ಯಾಕೆಂದರೆ ಜಾದುವಿನಲ್ಲಿ ಕೇವಲ ತೋರಿಕೆ ಮಾತ್ರವೇ ಹೊರತು ಅಲ್ಲಿ ನಿಜವಿರುವುದಿಲ್ಲ ಎಂಬುದು ಅವರಿಗೆ ಗೊತ್ತಿತ್ತು. ಒಂದು ವೇಳೆ ಒಂದು ಹಾವು ಇನ್ನೊಂದು ಹಾವನ್ನು ನುಂಗಿದಂತೆ ಜನರ ಕಣ್ಣಿಗೆ ತೋರಿಸಿದರೂ ಅಲ್ಲಿ ವಾಸ್ತವದಲ್ಲಿರುವ ನುಂಗಲ್ಪಟ್ಟ ವಸ್ತು ಹಾಗೇ ಇರುತ್ತದೆ. ಅದು ಮಾಯವಾಗಿರುವುದಿಲ್ಲ. ಆದರೆ ಮೂಸಾ ನಬಿ(ಅ)ಯವರ ಹಾವು ನುಂಗಿದ್ದ ಆ ಜಾದುಗಾರರ ಹಗ್ಗಗಳೂ, ಬೆತ್ತಗಳೂ ಅಲ್ಲಿ ನಾಪತ್ತೆಯಾಗಿದ್ದವು. ಆದ್ದರಿಂದ ಅವುಗಳನ್ನು ಅದು ನಿಜವಾಗಿಯೂ ನುಂಗಿತ್ತು ಎಂಬುದು ಅವರಿಗೆ ಖಚಿತವಾಗಿತ್ತು. ಇಂತಹ ಅದ್ಭುತ ಕೃತ್ಯವು ಜಾದುವಿನಿಂದ ನಡೆಯಲು ಸಾಧ್ಯವಿಲ್ಲ. ಪವಾಡದಿಂದ ಮಾತ್ರ ಸಾಧ್ಯ ಎಂಬುದು ಅವರಿಗೆ ಖಚಿತವಾಯಿತು. ಮತ್ತೆ ಅವರು ತಡ ಮಾಡಲಿಲ್ಲ. ನಾವು ಮೂಸಾ ನಬಿ(ಅ)ಯವರ ಧರ್ಮವನ್ನು ಸ್ವೀಕರಿಸಿದ್ದೇವೆ ಎಂದು ಘೋಷಿಸಿಬಿಟ್ಟರು. ಕುಪಿತನಾದ ಫಿರ್'ಔನ್'ನನು ಅವರಿಗೆ ದಬಾಯಿಸಿದನು. ನನ್ನ ಅನುಮತಿ ಇಲ್ಲದೆಯೇ ಅವನ ಧರ್ಮ ಸೇರಿದ್ದೀರಾ? ಈಗ ಗೊತ್ತಾಯಿತು. ಇದು ನೀವು ಮತ್ತು ಮೂಸಾ ಸೇರಿ ನಡೆಸಿದ ನಾಟಕ. ಮೂಸಾ ನಿಮ್ಮ ಜಾದುವಿನ ಗುರು ಎಂದನು. ಆದರೆ ನವ ಮುಸ್ಲಿಮರು ಜಗ್ಗಲಿಲ್ಲ. ಕೋಪದಿಂದ ಕಿಡಿಕಿಡಿಯಾದ ಫಿರ್'ಔನ್'ನನು ನಿಮ್ಮನ್ನು ಕೈಕಾಲು ಕತ್ತರಿಸಿ ನೇಣು ಹಾಕಿಸುತ್ತೇನೆ ಎಂದು ಆಕ್ರೋಶಿಸಿದನು.

       ಕೋಪದಿಂದ ಕಿಡಿಕಿಡಿಯಾದ ಫಿರ್'ಔನ್'ನನು ನಿಮ್ಮನ್ನು ಕೈಕಾಲು ಕತ್ತರಿಸಿ ನೇಣು ಹಾಕಿಸುತ್ತೇನೆ ಎಂದು ಆಕ್ರೋಶಿಸಿದನು.

      ಆದರೂ ಅವರು ಹೆದರಲಿಲ್ಲ. ನೀನು ಮಾಡುವುದನ್ನು ಮಾಡು. ನೀನು ಎಷ್ಟೇ ಶಿಕ್ಷೆ ಕೊಟ್ಟರೂ ಇಹದಲ್ಲಿ ಮಾತ್ರ. ಪರಲೋಕದಲ್ಲಿ ನಮಗೆ ಅಲ್ಲಾಹು ಪುಣ್ಯ ಕೊಡುವುದನ್ನು ತಡೆಯಲು ನಿನ್ನಿಂದಾಗದು ಎಂದು ಧೈರ್ಯದಿಂದ ಹೇಳಿದರು. ಕೆಲವೇ ಕೆಲವು ಸಮಯದ ಹಿಂದೆ ಕಾಫಿರರೂ ಜಾದೂಗಾರರೂ ಆಗಿದ್ದು ಸತ್ಯದ ವಿರುದ್ಧ ಸ್ಪರ್ಧೆಗೆ ಬಂದಿದ್ದ ಆ ವ್ಯಕ್ತಿಗಳು ಇದೀಗ ಅಷ್ಟು ಬೇಗನೇ ಮಹಾತ್ಮರಾಗಿ ಮಾರ್ಪಟ್ಟದ್ದು ಒಂದು ಐತಿಹಾಸಿಕ ಆಶ್ಚರ್ಯವಾಗಿದೆ.

     ಇದಾದ ನಂತರ ಬನೂ ಇಸ್ರಾಯೀಲರೆಲ್ಲರೂ ಇಸ್ಲಾಮಿಗೆ ಸೇರತೊಡಗಿದರು.ಫಿರ್'ಔನ್ ಅವರನ್ನು ಕ್ರೂರ ಮರ್ದನಕ್ಕೊಳಪಡಿಸುತ್ತಾ ಬಂದನು. ಕೊನೆಗೆ ಅವನ ಅರಮನೆಗೂ ಇಸ್ಲಾಮ್ ಕಾಲಿಟ್ಟಿತು. ಫಿರ್'ಔನ್'ನಿಗೆ ತನ್ನ ಕಾಲಡಿಯ ಮಣ್ಣು ಕೊರೆಯುತ್ತಿರುವ ಅನುಭವ. ಅವನಿಗೆ ನೆಮ್ಮದಿ ಕೆಟ್ಟಿತು. ಹಗಲಿರುಳು ಚಡಪಡಿಸತೊಡಗಿದನು. ಅವನ ವ್ಯಘ್ರತೆ ಜಾಸ್ತಿಯಾಯಿತು. ಹಾಗಾಗಿ ದೌರ್ಜನ್ಯ, ಅಕ್ರಮ, ಅಕೃತ್ಯಗಳೆಲ್ಲವೂ ಮತ್ತಷ್ಟು ಹೆಚ್ಚಿತು. ಹತಾಶೆ, ನಿರಾಸೆಗಳೆಲ್ಲ ಸೇರಿಕೊಂಡಾಗ ಒಂದು ವಿಧ ಹುಚ್ಚನಂತಾದ ಅವನು ಕಂಡಕಂಡವರ ಮೇಲೆ ಹರಿಹಾಯ ತೊಡಗಿದ. ಸಣ್ಣಪುಟ್ಟ ತಪ್ಪು ಕಂಡರೂ ಕಡಿದು ಕೊಲೆ ಮಾಡತೊಡಗಿದ. ಎಲ್ಲರೂ ತನ್ನ ವಿರುದ್ಧ ಸಂಚು ಹೊಡಿ ಮೂಸಾ ನಬಿ(ಅ)ಯವರ ಪಕ್ಷ ವಹಿಸುತ್ತಿದ್ದಾರೆಂದು ಸಂಶಯಪಡತೊಡಗಿದ. ಇಷ್ಟಕ್ಕೆಲ್ಲ ಕಾರಣ ಈ ಆಸಿಯಾ. ಅವಳ ಮೇಲೆ ತಾನಿಟ್ಟ ಪ್ರೇಮವೇ ತನಗೆ ಮುಳುವಾಯಿತೆಂದು ಸಿಟ್ಟಾಗಿ ಬೀವಿಯವರ ಮಹಲ್ಲಿಗೆ ಬರುವುದನ್ನೇ ನಿಲ್ಲಿಸಿದ.

     ಈ ಮಧ್ಯೆ ಆಸಿಯಾ ಬೀವಿ(ರ)ಯವರು ಪುಳಕಗೊಂಡಿದ್ದರು. ತನ್ನ ಸಾಕು ಮಗ, ವಾತ್ಸಲ್ಯ ಪುತ್ರ ಪ್ರವಾದಿಯಾಗಿ ವಾಪಾಸು ಬಂದು ತೀವ್ರ ಚಳವಳಿ ಪ್ರಾರಂಭಿಸಿದ್ದು ಅವರಿಗೆ ಎಲ್ಲಿಲ್ಲದ ಸಂತಸ ತುಂಬಿತ್ತು. ಈ ದುಷ್ಟ ರಾಜನಿಂದ ಈಜಿಪ್ಟಿಗೆ ಮುಕ್ತಿ ದೊರಕುವ ಕಾಲ ಸನ್ನಿಹಿತವಾಯಿತೆಂದು ಅವರು ಅಪಾರ ಸಂತೋಷಗೊಂಡರು. ಅಷ್ಟೇ ಅಲ್ಲ, ಗುಪ್ತವಾಗಿ ಮೂಸಾ ನಬಿ(ಅ)ಯವರ ಪ್ರವಾದಿತ್ವವನ್ನು ಅಂಗೀಕರಿಸಿ ತನ್ನ ವಿಶ್ವಾಸವನ್ನು ಪುಟಕ್ಕಿಟ್ಟು ಮತ್ತಷ್ಟು ಶುದ್ಧಗೊಳಿಸಿದರು.

      ಅಷ್ಟೇ ಅಲ್ಲ. ಫಿರ್'ಔನನ ಕೆಲವು ಮಡದಿಯರ ಪೈಕಿ ಓರ್ವ ಮಡದಿ ಕೂಡಾ ಇಸ್ಲಾಮಿಗೆ ಸೇರಿದರು. ಇದು ಫಿರ್'ಔನ್'ನನಿಗೆ ಬಲುದೊಡ್ಡ ಅಪಮಾನವಾಗಿ ಕಂಡಿತು. ಇಡೀ ದೇಶದ ವಿದ್ಯಮಾನವೇ ತನಗೆದುರಾಗಿ ಹೆಜ್ಜೆ ಹಾಕತೊಡಗಿದಂತಹ ಆ ಪರಿಸ್ಥಿತಿಯಲ್ಲಿ ತನ್ನ ಮಡದಿಯೇ ತನ್ನ ವಿರೋಧಿ ಪಕ್ಷಕ್ಕೆ ಸೇರಿರುವುದನ್ನು ಅವನಿಂದ ಸಹಿಸಲಾಗಲಿಲ್ಲ.

      ಫಿರ್'ಔನ್'ನನು ಆಕೆಯನ್ನು ಕುದಿಯುವ ಎಣ್ಣೆಗೆ ಹಾಕಿ ಕೊಲ್ಲಿಸಿದನು. ದೊಡ್ಡ ಬಾಣಲೆಯಲ್ಲಿ ಕೊತ ಕೊತ ಕುದಿಯುತ್ತಿರುವ ಎಣ್ಣೆ. ಅದರ ಬಳಿ ಕಿಂಕರರು ಕೊಂಡೊಯ್ದು ಕೊನೆಯ ಬಾರಿಗೆ ತಾಕೀತು ಮಾಡಿದರು. ಮೂಸಾರ ಧರ್ಮ ಕೈ ಬಿಡುವುದಾದರೆ ಬಿಟ್ಟು ಬಿಡುವುದಾಗಿ ಹೇಳಿದರು. ಆದರೆ ಆಕೆ ತಯಾರಾಗಲಿಲ್ಲ. ಅವರ ಕೃತ ನಿಶ್ಚಯ ಅಷ್ಟೊಂದು ದೃಢವಾಗಿತ್ತು. ಕಿಂಕರರು ಅವರನ್ನು ಎಣ್ಣೆಗೆ ಎಸೆದರು. ಆಕೆ ಎಣ್ಣೆಯಲ್ಲಿ ಕರಟಿ ಹುತಾತ್ಮರಾದರು. ಶಾಶ್ವತ ಸ್ವರ್ಗ ಪಡೆದರು.

     ಫಿರ್'ಔನನ ಓರ್ವ ದಾಸಿ ಮಾಶಿತಾ ಎಂಬಕೆಯೂ ಮೂಸಾ(ಅ)ರವರ ಪಕ್ಷ ವಹಿಸಿ ಇಸ್ಲಾಮಿಗೆ ಸೇರಿದಾಗ ಫಿರ್'ಔನ್'ನನು ನಾನಾ ರೀತಿಯ ಚಿತ್ರಹಿಂಸೆಗೆ ಗುರಿಪಡಿಸಿದನು. ಆದರೆ ಆಕೆ ಜಗ್ಗಲಿಲ್ಲ. ಕೊನೆಗೆ ಅವರ ಇಬ್ಬರು ಪುಟ್ಟ ಗಂಡು ಮಕ್ಕಳನ್ನು ತಂದು ಅವರಿಬ್ಬರನ್ನೂ ಎದೆಯ ಮೇಲೆ ಮಲಗಿಸಿ ಹರಿತವಾದ ಕತ್ತಿಯಿಂದ ಕತ್ತು ಕೊಯ್ಯಲಾಯಿತು. ಕರುಳ ಕುಡಿಯ ಸುಡುನೆತ್ತರು ಎದೆಯ ಮೇಲೆ ಹರಿಯಿತು. ಶಿಶು ಹೊದ್ದಾಡಿ ಪ್ರಾಣ ಬಿಟ್ಟಿತು. ಆದರೂ ಕೂಡಾ ಮಾಶಿತಾ ಬೀವಿ(ರ)ಯವರು 'ಅಲ್ಲಾಹು ಅಹದ್' ಅಲ್ಲಾಹು ಏಕನು. ಫಿರ್'ಔನ್ ದೇವನಲ್ಲ ಎಂದು ಹೇಳುತ್ತಲೇ ಇದ್ದರು. ಕೊನೆಗೆ ಅಲ್ಲೇ ಆಕೆಯನ್ನೂ ಚಿತ್ರಹಿಂಸೆ ನೀಡಿ ಕೊಲ್ಲಲಾಯಿತು.

     ಫಿರ್'ಔನನಿಗೆ ಇದೆಲ್ಲ ತೀವ್ರ ಚಿತ್ರಹಿಂಸೆಯನ್ನುಂಟು ಮಾಡಿತು. ತನ್ನ ಕಡೆಯವರೂ ತನ್ನ ಆಜ್ಞೆ ಅಕ್ಷರಶಃ ಪಾಲಿಸುತ್ತಿದ್ದರೂ ತನ್ನನ್ನು ದೇವನೆಂದು ಸಾಷ್ಟಾಂಗವೆರಗುತ್ತಿದ್ದವರೂ ಆದ ಅನೇಕ ಜನರು ಇಷ್ಟೊಂದು ಅಗಾಧವಾಗಿ ಎದುರಾಳಿ ಮೂಸಾರವರ ಧರ್ಮವನ್ನು ಅವಲಂಬಿಸುವುದು. ಅವನಿಂದ ಸಹಿಸಲಾಗಲಿಲ್ಲ. ಅವನು ಹುಚ್ಚನಂತಾಗಿದ್ದ. ಅವನ ತಲೆ ಚಿಂತೆಯ ಗೂಡಾಗಿತ್ತು. ನೋವು, ಹತಾಶೆ, ಸಿಟ್ಟುಗಳು ಜಾಸ್ತಿಯಾದುವು.

      ಬೀವಿ ಆಸಿಯಾ(ರ)ರವರು ತನ್ನ ಕಣ್ಣೆದುರಿಗೇ ನಡೆಯುತ್ತಿದ್ದ ಕ್ರೌರ್ಯಗಳೆನ್ನೆಲ್ಲಾ ಕಂಡು ಕಣ್ಣೀರು ಸುರಿಸುತ್ತಿದ್ದರು. ಕೆಲವರನ್ನು ವಿಷದ ಹಾವಿನ ಗೂಡಿಗೆ ತಳ್ಳಿ ಹಾಕಿ ಹಾವುಗಳಿಂದ ಕಚ್ಚಿಸಿ ಕೊಲ್ಲಿಸುವ ಧಾರುಣ ದೃಶ್ಯವು ಅವರ ಎದೆಯನ್ನು ಝಲ್ಲೆನಿಸಿತ್ತು. ದಿನನಿತ್ಯ ಅರಮನೆಯ ಅಂಗಳದಲ್ಲಿ ಮಾರಣಹೋಮ, ಇಸ್ಲಾಮ್ ಧರ್ಮ ಸ್ವೀಕರಿಸಿದವರ ಮೇಲಿನ ಅಮಾನುಷ ಚಿತ್ರಹಿಂಸೆ, ಮಾನವ ಜೀವಗಳ ನರಳಾಟ, ಹೆತ್ತ ತಾಯಂದಿರ ಆಕ್ರಂಧನ, ದಿನನಿತ್ಯ ಇದೇ ದೃಶ್ಯವಾಗಿತ್ತು. ಆದರೆ ಆಸಿಯಾ ಬೀವಿ(ರ)ಯವರಲ್ಲಿ ಬೇರೂರಿದ ಆದರ್ಶಕ್ಕೆ ಮಾತ್ರ ಯಾವ ಒಡಕೂ ತಟ್ಟಿರಲಿಲ್ಲ. ದಿನಾ ದಿನಾ ಹೆಚ್ಚುತ್ತಲೇ ಹೋಯಿತು. ಭೀಭತ್ಸ ಚಿತ್ರಹಿಂಸೆಗಳನ್ನು ಕಂಡಷ್ಟು ಅವರ ವಿಶ್ವಾಸ ಗಾಢವಗುತ್ತಲೇ ಹೋಯಿತು.

      ಕೋಪದಿಂದ ಕಿಡಿಕಿಡಿಯಾದ ಫಿರ್'ಔನ್'ನನು ನಿಮ್ಮನ್ನು ಕೈಕಾಲು ಕತ್ತರಿಸಿ ನೇಣು ಹಾಕಿಸುತ್ತೇನೆ ಎಂದು ಆಕ್ರೋಶಿಸಿದನು.

      ಆದರೂ ಅವರು ಹೆದರಲಿಲ್ಲ. ನೀನು ಮಾಡುವುದನ್ನು ಮಾಡು. ನೀನು ಎಷ್ಟೇ ಶಿಕ್ಷೆ ಕೊಟ್ಟರೂ ಇಹದಲ್ಲಿ ಮಾತ್ರ. ಪರಲೋಕದಲ್ಲಿ ನಮಗೆ ಅಲ್ಲಾಹು ಪುಣ್ಯ ಕೊಡುವುದನ್ನು ತಡೆಯಲು ನಿನ್ನಿಂದಾಗದು ಎಂದು ಧೈರ್ಯದಿಂದ ಹೇಳಿದರು. ಕೆಲವೇ ಕೆಲವು ಸಮಯದ ಹಿಂದೆ ಕಾಫಿರರೂ ಜಾದೂಗಾರರೂ ಆಗಿದ್ದು ಸತ್ಯದ ವಿರುದ್ಧ ಸ್ಪರ್ಧೆಗೆ ಬಂದಿದ್ದ ಆ ವ್ಯಕ್ತಿಗಳು ಇದೀಗ ಅಷ್ಟು ಬೇಗನೇ ಮಹಾತ್ಮರಾಗಿ ಮಾರ್ಪಟ್ಟದ್ದು ಒಂದು ಐತಿಹಾಸಿಕ ಆಶ್ಚರ್ಯವಾಗಿದೆ.

     ಇದಾದ ನಂತರ ಬನೂ ಇಸ್ರಾಯೀಲರೆಲ್ಲರೂ ಇಸ್ಲಾಮಿಗೆ ಸೇರತೊಡಗಿದರು.ಫಿರ್'ಔನ್ ಅವರನ್ನು ಕ್ರೂರ ಮರ್ದನಕ್ಕೊಳಪಡಿಸುತ್ತಾ ಬಂದನು. ಕೊನೆಗೆ ಅವನ ಅರಮನೆಗೂ ಇಸ್ಲಾಮ್ ಕಾಲಿಟ್ಟಿತು. ಫಿರ್'ಔನ್'ನಿಗೆ ತನ್ನ ಕಾಲಡಿಯ ಮಣ್ಣು ಕೊರೆಯುತ್ತಿರುವ ಅನುಭವ. ಅವನಿಗೆ ನೆಮ್ಮದಿ ಕೆಟ್ಟಿತು. ಹಗಲಿರುಳು ಚಡಪಡಿಸತೊಡಗಿದನು. ಅವನ ವ್ಯಘ್ರತೆ ಜಾಸ್ತಿಯಾಯಿತು. ಹಾಗಾಗಿ ದೌರ್ಜನ್ಯ, ಅಕ್ರಮ, ಅಕೃತ್ಯಗಳೆಲ್ಲವೂ ಮತ್ತಷ್ಟು ಹೆಚ್ಚಿತು. ಹತಾಶೆ, ನಿರಾಸೆಗಳೆಲ್ಲ ಸೇರಿಕೊಂಡಾಗ ಒಂದು ವಿಧ ಹುಚ್ಚನಂತಾದ ಅವನು ಕಂಡಕಂಡವರ ಮೇಲೆ ಹರಿಹಾಯ ತೊಡಗಿದ. ಸಣ್ಣಪುಟ್ಟ ತಪ್ಪು ಕಂಡರೂ ಕಡಿದು ಕೊಲೆ ಮಾಡತೊಡಗಿದ. ಎಲ್ಲರೂ ತನ್ನ ವಿರುದ್ಧ ಸಂಚು ಹೊಡಿ ಮೂಸಾ ನಬಿ(ಅ)ಯವರ ಪಕ್ಷ ವಹಿಸುತ್ತಿದ್ದಾರೆಂದು ಸಂಶಯಪಡತೊಡಗಿದ. ಇಷ್ಟಕ್ಕೆಲ್ಲ ಕಾರಣ ಈ ಆಸಿಯಾ. ಅವಳ ಮೇಲೆ ತಾನಿಟ್ಟ ಪ್ರೇಮವೇ ತನಗೆ ಮುಳುವಾಯಿತೆಂದು ಸಿಟ್ಟಾಗಿ ಬೀವಿಯವರ ಮಹಲ್ಲಿಗೆ ಬರುವುದನ್ನೇ ನಿಲ್ಲಿಸಿದ.

     ಈ ಮಧ್ಯೆ ಆಸಿಯಾ ಬೀವಿ(ರ)ಯವರು ಪುಳಕಗೊಂಡಿದ್ದರು. ತನ್ನ ಸಾಕು ಮಗ, ವಾತ್ಸಲ್ಯ ಪುತ್ರ ಪ್ರವಾದಿಯಾಗಿ ವಾಪಾಸು ಬಂದು ತೀವ್ರ ಚಳವಳಿ ಪ್ರಾರಂಭಿಸಿದ್ದು ಅವರಿಗೆ ಎಲ್ಲಿಲ್ಲದ ಸಂತಸ ತುಂಬಿತ್ತು. ಈ ದುಷ್ಟ ರಾಜನಿಂದ ಈಜಿಪ್ಟಿಗೆ ಮುಕ್ತಿ ದೊರಕುವ ಕಾಲ ಸನ್ನಿಹಿತವಾಯಿತೆಂದು ಅವರು ಅಪಾರ ಸಂತೋಷಗೊಂಡರು. ಅಷ್ಟೇ ಅಲ್ಲ, ಗುಪ್ತವಾಗಿ ಮೂಸಾ ನಬಿ(ಅ)ಯವರ ಪ್ರವಾದಿತ್ವವನ್ನು ಅಂಗೀಕರಿಸಿ ತನ್ನ ವಿಶ್ವಾಸವನ್ನು ಪುಟಕ್ಕಿಟ್ಟು ಮತ್ತಷ್ಟು ಶುದ್ಧಗೊಳಿಸಿದರು.

      ಅಷ್ಟೇ ಅಲ್ಲ. ಫಿರ್'ಔನನ ಕೆಲವು ಮಡದಿಯರ ಪೈಕಿ ಓರ್ವ ಮಡದಿ ಕೂಡಾ ಇಸ್ಲಾಮಿಗೆ ಸೇರಿದರು. ಇದು ಫಿರ್'ಔನ್'ನನಿಗೆ ಬಲುದೊಡ್ಡ ಅಪಮಾನವಾಗಿ ಕಂಡಿತು. ಇಡೀ ದೇಶದ ವಿದ್ಯಮಾನವೇ ತನಗೆದುರಾಗಿ ಹೆಜ್ಜೆ ಹಾಕತೊಡಗಿದಂತಹ ಆ ಪರಿಸ್ಥಿತಿಯಲ್ಲಿ ತನ್ನ ಮಡದಿಯೇ ತನ್ನ ವಿರೋಧಿ ಪಕ್ಷಕ್ಕೆ ಸೇರಿರುವುದನ್ನು ಅವನಿಂದ ಸಹಿಸಲಾಗಲಿಲ್ಲ.

      ಫಿರ್'ಔನ್'ನನು ಆಕೆಯನ್ನು ಕುದಿಯುವ ಎಣ್ಣೆಗೆ ಹಾಕಿ ಕೊಲ್ಲಿಸಿದನು. ದೊಡ್ಡ ಬಾಣಲೆಯಲ್ಲಿ ಕೊತ ಕೊತ ಕುದಿಯುತ್ತಿರುವ ಎಣ್ಣೆ. ಅದರ ಬಳಿ ಕಿಂಕರರು ಕೊಂಡೊಯ್ದು ಕೊನೆಯ ಬಾರಿಗೆ ತಾಕೀತು ಮಾಡಿದರು. ಮೂಸಾರ ಧರ್ಮ ಕೈ ಬಿಡುವುದಾದರೆ ಬಿಟ್ಟು ಬಿಡುವುದಾಗಿ ಹೇಳಿದರು. ಆದರೆ ಆಕೆ ತಯಾರಾಗಲಿಲ್ಲ. ಅವರ ಕೃತ ನಿಶ್ಚಯ ಅಷ್ಟೊಂದು ದೃಢವಾಗಿತ್ತು. ಕಿಂಕರರು ಅವರನ್ನು ಎಣ್ಣೆಗೆ ಎಸೆದರು. ಆಕೆ ಎಣ್ಣೆಯಲ್ಲಿ ಕರಟಿ ಹುತಾತ್ಮರಾದರು. ಶಾಶ್ವತ ಸ್ವರ್ಗ ಪಡೆದರು.

     ಫಿರ್'ಔನನ ಓರ್ವ ದಾಸಿ ಮಾಶಿತಾ ಎಂಬಕೆಯೂ ಮೂಸಾ(ಅ)ರವರ ಪಕ್ಷ ವಹಿಸಿ ಇಸ್ಲಾಮಿಗೆ ಸೇರಿದಾಗ ಫಿರ್'ಔನ್'ನನು ನಾನಾ ರೀತಿಯ ಚಿತ್ರಹಿಂಸೆಗೆ ಗುರಿಪಡಿಸಿದನು. ಆದರೆ ಆಕೆ ಜಗ್ಗಲಿಲ್ಲ. ಕೊನೆಗೆ ಅವರ ಇಬ್ಬರು ಪುಟ್ಟ ಗಂಡು ಮಕ್ಕಳನ್ನು ತಂದು ಅವರಿಬ್ಬರನ್ನೂ ಎದೆಯ ಮೇಲೆ ಮಲಗಿಸಿ ಹರಿತವಾದ ಕತ್ತಿಯಿಂದ ಕತ್ತು ಕೊಯ್ಯಲಾಯಿತು. ಕರುಳ ಕುಡಿಯ ಸುಡುನೆತ್ತರು ಎದೆಯ ಮೇಲೆ ಹರಿಯಿತು. ಶಿಶು ಹೊದ್ದಾಡಿ ಪ್ರಾಣ ಬಿಟ್ಟಿತು. ಆದರೂ ಕೂಡಾ ಮಾಶಿತಾ ಬೀವಿ(ರ)ಯವರು 'ಅಲ್ಲಾಹು ಅಹದ್' ಅಲ್ಲಾಹು ಏಕನು. ಫಿರ್'ಔನ್ ದೇವನಲ್ಲ ಎಂದು ಹೇಳುತ್ತಲೇ ಇದ್ದರು. ಕೊನೆಗೆ ಅಲ್ಲೇ ಆಕೆಯನ್ನೂ ಚಿತ್ರಹಿಂಸೆ ನೀಡಿ ಕೊಲ್ಲಲಾಯಿತು.

     ಫಿರ್'ಔನನಿಗೆ ಇದೆಲ್ಲ ತೀವ್ರ ಚಿತ್ರಹಿಂಸೆಯನ್ನುಂಟು ಮಾಡಿತು. ತನ್ನ ಕಡೆಯವರೂ ತನ್ನ ಆಜ್ಞೆ ಅಕ್ಷರಶಃ ಪಾಲಿಸುತ್ತಿದ್ದರೂ ತನ್ನನ್ನು ದೇವನೆಂದು ಸಾಷ್ಟಾಂಗವೆರಗುತ್ತಿದ್ದವರೂ ಆದ ಅನೇಕ ಜನರು ಇಷ್ಟೊಂದು ಅಗಾಧವಾಗಿ ಎದುರಾಳಿ ಮೂಸಾರವರ ಧರ್ಮವನ್ನು ಅವಲಂಬಿಸುವುದು. ಅವನಿಂದ ಸಹಿಸಲಾಗಲಿಲ್ಲ. ಅವನು ಹುಚ್ಚನಂತಾಗಿದ್ದ. ಅವನ ತಲೆ ಚಿಂತೆಯ ಗೂಡಾಗಿತ್ತು. ನೋವು, ಹತಾಶೆ, ಸಿಟ್ಟುಗಳು ಜಾಸ್ತಿಯಾದುವು.

      ಬೀವಿ ಆಸಿಯಾ(ರ)ರವರು ತನ್ನ ಕಣ್ಣೆದುರಿಗೇ ನಡೆಯುತ್ತಿದ್ದ ಕ್ರೌರ್ಯಗಳೆನ್ನೆಲ್ಲಾ ಕಂಡು ಕಣ್ಣೀರು ಸುರಿಸುತ್ತಿದ್ದರು. ಕೆಲವರನ್ನು ವಿಷದ ಹಾವಿನ ಗೂಡಿಗೆ ತಳ್ಳಿ ಹಾಕಿ ಹಾವುಗಳಿಂದ ಕಚ್ಚಿಸಿ ಕೊಲ್ಲಿಸುವ ಧಾರುಣ ದೃಶ್ಯವು ಅವರ ಎದೆಯನ್ನು ಝಲ್ಲೆನಿಸಿತ್ತು. ದಿನನಿತ್ಯ ಅರಮನೆಯ ಅಂಗಳದಲ್ಲಿ ಮಾರಣಹೋಮ, ಇಸ್ಲಾಮ್ ಧರ್ಮ ಸ್ವೀಕರಿಸಿದವರ ಮೇಲಿನ ಅಮಾನುಷ ಚಿತ್ರಹಿಂಸೆ, ಮಾನವ ಜೀವಗಳ ನರಳಾಟ, ಹೆತ್ತ ತಾಯಂದಿರ ಆಕ್ರಂಧನ, ದಿನನಿತ್ಯ ಇದೇ ದೃಶ್ಯವಾಗಿತ್ತು. ಆದರೆ ಆಸಿಯಾ ಬೀವಿ(ರ)ಯವರಲ್ಲಿ ಬೇರೂರಿದ ಆದರ್ಶಕ್ಕೆ ಮಾತ್ರ ಯಾವ ಒಡಕೂ ತಟ್ಟಿರಲಿಲ್ಲ. ದಿನಾ ದಿನಾ ಹೆಚ್ಚುತ್ತಲೇ ಹೋಯಿತು. ಭೀಭತ್ಸ ಚಿತ್ರಹಿಂಸೆಗಳನ್ನು ಕಂಡಷ್ಟು ಅವರ ವಿಶ್ವಾಸ ಗಾಢವಗುತ್ತಲೇ ಹೋಯಿತು. 

      ಅದೋ ಫಿರ್'ಔನ್'ನ ಮಡದಿಯಾಗಿದ್ದ ಓರ್ವಳ ಪವಿತ್ರಾತ್ಮವನ್ನು ಮಲಕುಗಳು ಬಾಣಕ್ಕೇರಿಸುತ್ತಿದ್ದಾರೆ. ಸ್ವರ್ಗದ ಸುಖಕ್ಕೆ  ಆ ಆತ್ಮದ ಯಾತ್ರೆ. ಆಸಿಯಾ ಬೀವಿ(ರ)ಗೆ ತನ್ನ ಅಭೌಮ ದೃಷ್ಟಿಯಿಂದ ಅದು ಕಾಣಿಸುತ್ತಿದೆ. ತನಗೂ ಇಂತಹದೇ ಶಿಕ್ಷೆಯಾಗುವುದು ನಿಜವೆನ್ನುವುದು ಅವರ ಅಂತರ್ಯ ಹೇಳುತ್ತಿತ್ತು. ಆದರೆ ಅವರು ಹೆದರಲಿಲ್ಲ. ಅವರ  ಹೆದರಿಕೆ ಚಿತ್ರಹಿಂಸೆ ತಾಳಲಾರದೆ ಧರ್ಮ ವಿಶ್ವಾಸದಲ್ಲಿ ತನಗೆ ಸಡಿಲು ಬಂದೀತೇ ಎಂದು ಮಾತ್ರವಾಗಿತ್ತು. ಅದಕ್ಕಾಗಿ ಅವರು ಪ್ರಾರ್ಥಿಸುತ್ತಿದ್ದರು. ಅಲ್ಲಾಹ್!  ಯಾವುದೇ ಕಷ್ಟವನ್ನಾದರೂ ನಿನಗಾಗಿ ಸಹಿಸುವ ಕೃತನಿಶ್ಚಯವನ್ನು ನನಗೆ ದಯಪಾಲಿಸು.

     ಫಿರ್'ಔನನು ಆಸಿಯಾ ಬೀವಿ(ರ)ಯವರ ಭವನಕ್ಕೆ ಬಂದನು. ಅವನನ್ನು ಕಂಡಕೂಡಲೇ ರೋಷ ತಾಳಲಾರದೆ ಬೀವಿ ಹೇಳಿದರು,

    "ಎಂತಹ ಹೀನಕೃತ್ಯಗಳನ್ನು ಮಾಡಿದ್ದೀರಿ?  ನಿಮ್ಮ ಸ್ವಂತ ಪತ್ನಿಯನ್ನೂ ಕೂಡಾ ಕ್ರೂರ ಹತ್ಯೆಗೊಳಪಡಿಸಿದ್ದೀರಿ. ಸ್ವಂತ ದಾಸಿಯ ಮಕ್ಕಳನ್ನು ಅವಳ ಎದೆಯ ಮೇಲೆ ಕತ್ತು ಕೊಯ್ದು ಕೊಲ್ಲಿಸಿ ಆಕೆಯನ್ನೂ  ಕೊಲ್ಲಿಸಿದಿರಿ. ನಿಮಗೆ ಮಕ್ಕಳನ್ನು ಹೆತ್ತು, ಹೊತ್ತು ಸಾಕಿದ ಮಡದಿಯನ್ನೇ ಕುದಿಯುವ ಎಣ್ಣೆಗೆ ಹಾಕಿದ್ದೀರಲ್ಲಾ? ಎಂತಹ ಕಠೋರ ಹೃದಯಿಗಳು ನೀವು? ಮನುಷ್ಯರಲ್ಲವೇ?

      " ಆಸಿಯಾ!"  ಫಿರ್'ಔನ್ ಗರ್ಜಿಸಿದ. ಅವನ ಅಟ್ಟಹಾಸದ ಕರೆ ಇಡೀ ಭವನದಲ್ಲಿ ಪ್ರತಿಧ್ವನಿಸಿತು. ಈ ಅಟ್ಟಹಾಸಕ್ಕೆ ಬೀವಿಯವರು ಹೆದರಿ ಬೆದರಿದ ಹುಲ್ಲೆಯಂತಾಗುವರೆಂದು ಅವನು ಭಾವಿಸಿದ್ದನು. ಆದರೆ ಬೀವಿಯವರಲ್ಲಿ ಯಾವ ಭೀತಿಯೂ ಕಾಣಿಸಿಕೊಳ್ಳಲಿಲ್ಲ.

      ಫಿರ್'ಔನ್'ನ ಕಣ್ಣುಗಳು ಕೆಂಡದುಂಡೆಗಳಾದುವು. ಏನು ಹೇಳುತ್ತಾ ಇದ್ದಿಯಾ? ನೀನು ನನಗೆದುರಾಗಿ ಮಾತಾಡಲು ಶುರು ಮಾಡಿದೆಯಾ? ನಾನು ಶಿಕ್ಷೆ ಕೊಡುವುದರಲ್ಲಿ ಏನು ತಪ್ಪಿದೆ? ರಾಜದ್ರೋಹಿಗಳಿಗೆ ಇದುವೇ ಶಿಕ್ಷೆ. ರಾಜ ದ್ರೋಹ ಮಹಾಪರಾಧ. ಅಪರಾಧಿಗಳಿಗೆ ಶಿಕ್ಷೆ ವಿಧಿಸುವುದು ರಾಜ ನೀತಿ",

      "ನಿಮ್ಮ ರಾಜ ನೀತಿಗೆ ಮಣ್ಣು ಹಾಕಿ. ನಾನೇ ದೇವನೆಂದು  ಕರೆಸಿಕೊಳ್ಳುವ ನಿಮ್ಮದೇನು ನೀತಿ?  ಪ್ರಜೆಗಳ ಮೇಲೆ ದೌರ್ಜನ್ಯ ನಡೆಸುವುದು ರಾಜನೀತಿಯೇ? ನಿಮಗೆ ವಿವೇಕವಿಲ್ಲವೇ!  ನೀವೊಬ್ಬ ತಾಯಿ ಹೆತ್ತ ಸಾಮಾನ್ಯ ಮನುಷ್ಯರಲ್ಲವೇ!  ನಿಮ್ಮನ್ನೂ ಎಲ್ಲರನ್ನೂ ಸೃಷ್ಟಿಸಿದ ಅಲ್ಲಾಹು ಇದ್ದಾನೆಂದೂ, ಅವನಿಗೆ ಮಾತ್ರ ಉಪಾಸನೆ ಮಾಡಬೇಕೆಂದೂ ಮೂಸಾ ನಬಿ(ಅ)ಯವರು ಹೇಳುವುದರಲ್ಲಿ ತಪ್ಪೇನಿದೆ?  ಆ ವಿಶ್ವಾಸವನ್ನು ಹೊಂದಿಕೊಂಡು ಪ್ರಜೆಗಳಿಗೂ ಅನುಸರಿಸುವಂತೆ ಹೇಳಿದರೆ ನಿಮಗೂ ಪ್ರಜೆಗಳಿಗೂ ಕ್ಷೇಮವಲ್ಲವೇ?  ನಿಮಗೀಗ ಅಧಿಕಾರವಿದೆ. ಕರುಣೆ ಇಲ್ಲದ ಭಟರಿದ್ದಾರೆ. ನಿರ್ದಯಿ ಸೈನಿಕರಿದ್ದಾರೆ. ಆದರೆ ಇದು ಶಾಶ್ವತ ಎಂದು ಬಗೆಯಬೇಡಿ. ಅಲ್ಲಾಹುವಿನ ಅವಧಿ ಬಂದರೆ ನಿಮ್ಮ ಎಲ್ಲ ಧಿಕ್ಕಾರಗಳು ಕೊನೆಗೊಳ್ಳಲಿದೆ. ನೀವು ಅವನ ಕಠಿಣ ಶಿಕ್ಷೆಗೆ ಗುರಿಯಾಗಲಿರುವಿರಿ. ನೀವು ಚಿತ್ರಹಿಂಸೆ ಕೊಡಿಸಿ ಕೊಲ್ಲಿಸಿದವರೆಲ್ಲ ಶಾಶ್ವತ ಸ್ವರ್ಗದಲ್ಲಿ ಪರಮ ಸುಖ ಅನುಭವಿಸುತ್ತಿರುವಾಗ ನೀವು ನರಕದ ಅಗ್ನಿ ಕುಂಡದಲ್ಲಿ ಶಾಶ್ವತವಾಗಿ ಪರಮ ಶಿಕ್ಷೆ ಅನುಭವಿಸಲಿದ್ದೀರಿ!"

      ಅಷ್ಟಾದಾಗ ಫಿರ್'ಔನನಿಗೆ ಸಂಗತಿ ಗೊತ್ತಾಯಿತು. ತಾನು ಇದುವರೆಗೂ ಅತ್ಯಂತ ಪ್ರೀತಿಯಿಂದ ಅರಗಿಣಿಯಂತೆ ಸಾಕಿದ ಈ ಹೆಣ್ಣು ಕೂಡಾ ನನಗೆ ತಿರುಗಿ ಬಿದ್ದಿದ್ದಾಳೆ. ಇವಳೂ ಕೂಡಾ ನನ್ನ ವೈರಿ ಮೂಸಾನ ಪಕ್ಷ ವಹಿಸಿದ್ದಾಳೆ. ಮೂಸಾನಲ್ಲಿ ಇವಳಿಗೆ ನಂಬಿಕೆ ಗಾಢವಾಗಿದೆಯೆಂದು ಇವಳ ಮಾತಿನಿಂದಲೇ ವ್ಯಕ್ತವಾಗುತ್ತದೆ. ಅವನ ಪಿತ್ತ ನೆತ್ತಿಗೇರತೊಡಗಿತು. ಸಂಯಮ ಕ್ಷೀಣವಾಗತೊಡಗಿತು. ಪ್ರೇಮವು ದ್ವೇಷವಾಗಿ ಬದಲಾಗತೊಡಗಿತು. ಅವನ ಮುಖದಲ್ಲಿ ರೌದ್ರವತೆ ಏರತೊಡಗಿತು. ಇಡೀ ಭವನವೇ ನಡುಗುವಂತೆ ಆಕ್ರೋಶದಿಂದ ಆರ್ಭಟಿಸಿದನು.

     "ಆಸಿಯಾ!!  ನಾಲಗೆ ಬಿಗಿ ಹಿಡಿ. ಯಾರ ಮುಂದೆ ಈ ಮಾತನ್ನು ನೀನು ಹೇಳುತ್ತಿದ್ದಿಯೆಂದು ನಿನಗೆ ಪ್ರಜ್ಞೆ ಇದೆಯಾ?  ನನಗೆ ಅಲ್ಲಾಹು ಶಿಕ್ಷೆ ಕೊಡುವನೆಂದು ಹೇಳುವೆಯಾ? ಯಾರು ಅಂತಹ ಅಲ್ಲಾಹು!  ಅಲ್ಲಾಹು ನಾನೇ!  ನಾನೇ ಜಗತ್ತಿನ ಒಡೆಯ!  ನಾನೇ ಪರಮ ಪ್ರಭು!  ನನ್ನನ್ನು ಶಿಕ್ಷೆಸುವ ಶಕ್ತಿ ಈ ಜಗತ್ತಿನಲ್ಲಿ ಬೇರೆ ಯಾರೂ ಇಲ್ಲ".

      " ಥೂ ನೀಚ!  ನೀನು ಅಲ್ಲಾಹನೇ ನೀನೊಬ್ಬ ಕೇವಲ ಕುನ್ನಿ. ಅಲ್ಲಾಹುವಿನ ಅಪಾರ ಶಿಕ್ಷೆಯ ಮುಂದೆ ನಿನ್ನ ಶಕ್ತಿ ಏನೂ ಅಲ್ಲ".

      "ಲೋ ಅಡಬೆ!  ಮುಚ್ಚು ಬಾಯಿ. ಏನಂದೆ? ನನ್ನನ್ನು ನೀಚನೆಂದು ಕರೆದೆಯ? ಒಂದು ಜಡಿದೆ ಅಂದರೆ ಜಠರ ಬಾಯಿಗೆ ಬರಬೇಕು. ಇದುವರೆಗೂ  ನನ್ನ ಸವಲತ್ತುಗಳನ್ನು ಚೆನ್ನಾಗಿ ಮೇದು ಸೊಕ್ಕೇರಿದೆ ನಿನಗೆ. ನಿನ್ನ ಮೇಲೆ ಪ್ರೇಮದಿಂದ ವರ್ತಿಸಿದೆ. ಇದೇ ನನ್ನ ತಪ್ಪಾಯಿತು. ನೀನು ನೀಚೇ!  ನೀನೇ ನನ್ನ ಮೊದಲ ಶತ್ರು. ಇದುವರೆಗೂ ನೀನಾಡಿದ್ದೆಲ್ಲವೂ ಬರೀ ನಾಟಕ. ನೀನು ನನಗೆ ಅನುಭವಿಸಲಿಕ್ಕೆ ಸಿಗದಿದ್ದರೂ ಚೆಂದದ ಗೊಂಬೆಯಂತೆ ನಿನ್ನನ್ನು ಇಲ್ಲಿ ಇರಿಸಿದೆ. ನನ್ನ ಶತ್ರುವನ್ನು ನೀನೇ ಬೆಳೆಸಿದೆ. ನನಗೆ ರಂಗಿನ ಮಾತನ್ನಾಡಿ ಮೋಸ ಮಾಡಿದೆ. ನಿನ್ನ ಸೊಕ್ಕನ್ನು ಮುರಿಯುತ್ತೇನೆ. ನಿಜ ಬೊಗಳು! ನಿನ್ನ ಮನಸ್ಸಲ್ಲಿ ಏನಿದೆ? ನೀನು ಮಾತು ಮಾತಿಗೆ ಅಲ್ಲಾಹು ಅಲ್ಲಾಹು ಎನ್ನುತ್ತಿದ್ದಿಯಲ್ಲಾ?  ಇದು ನನ್ನ ಶತ್ರು ಮೂಸಾನ ತತ್ವ. ನಿಜವಾಗಿಯೂ ನೀನು ಅದರಲ್ಲಿ ನಂಬಿಕೆ ಇಟ್ಟಿದ್ದೀಯಾ?"

      "ಹೌದು. ನಾನು ನಂಬಿಕೆ ಇಟ್ಟಿದ್ದೇನೆ. ನೀವೂ ಈ ನಂಬಿಕೆ ಇಟ್ಟು  ಮೂಸಾರವರ ಧರ್ಮ ಸ್ವೀಕರಿಸಬೇಕೆಂದು ಕೇಳಿಕೊಳ್ಳುತ್ತಿದ್ದೇನೆ. ಹಾಗಾದರೆ ನಿಮಗೂ ಈ ದೇಶಕ್ಕೂ ಕ್ಷೇಮ. ನನಗೆ ಸತ್ಯ ಮನವರಿಕೆಯಾಗಿದೆ. ನಾನು ಸತ್ಯವನ್ನು ವಲಂಭಿಸಿದ್ದೇನೆ. ನಿಮ್ಮನ್ನು  ದೇವನೆಂದು ನಾನು ಯಾವತ್ತೂ ನಂಬಲಿಲ್ಲ. ನನ್ನ ತಂದೆಯವರ ಪ್ರಾಣ ಉಳಿಸುವ ಒಂದೇ ಒಂದು ಕಾರಣಕ್ಕಾಗಿ ನಿಮ್ಮನ್ನು ಮದುವೆಯಾಗಲು ಒಪ್ಪಿದ್ದೆ. ನೀವು ಮನುಷ್ಯರಲ್ಲ. ಹಿಂಸ್ರಪಶು."

      ಇಷ್ಟಾದಾಗ ಆ ಅಂತಕರಣ ಸತ್ತ ಕಟುಕನ ನಿಯಂತ್ರಣ ತಪ್ಪಿತು. ಆತ ಆಕ್ರೋಶಿಸಿದ.

      ಹೇಯ್ ತಾಟಗಿತ್ತಿ. ಅನಿಷ್ಟಳೇ ಹಡಬೆ ಏನು ಬೊಗಳುತ್ತಿದ್ದಿಯಾ? ನೀನೂ ನನಗೆ ಎದುರಾಳಿಯಾ? ನನ್ನ ಅರಗಿಣಿಯೆಂದು ಪ್ರೀತಿಯಿಂದ ನೋಡಿಕೊಂಡ ನೀನು ನನ್ನ ವಿರೋಧಿ ಪಾಳೆಗೆ ಸೇರಿಕೊಂಡೆಯಾ? ನಿನಗೆ ಕಲಿಸುತ್ತೇನೆ. ಮರ್ಯಾದೆಯಿಂದ ಹೇಳುತ್ತೇನೆ. ಒಳ್ಳೆಯ ಮಾತಿನಿಂದ  ನನ್ನ ಮಾತು ಕೇಳು. ನನ್ನ ವೈರಿಯ ಧರ್ಮ ಬಿಟ್ಟುಬಿಡು. ನನ್ನ ಪಕ್ಷ ವಹಿಸು. ಹಾಗಾದರೆ ನಿನಗೆ ಕ್ಷೇಮ. ಇಲ್ಲವಾದಲ್ಲಿ ನಿನ್ನಂತಹ ಅಡಬೆಗಳಿಗೆ ನಾನು ಯಾವ ಶಿಕ್ಷೆ ಕೊಟ್ಟೆನೆಂದು ನೀನು ಕಣ್ಣಾರೆ ಕಂಡಿರುವೆಯಲ್ಲಾ? ನೀನು ಚಂದದ ಗೊಂಬೆಯೆಂದು ನಿನ್ನನ್ನು ರಮಿಸುತ್ತಾ ನಿನಗೆ ಕ್ಷಮಿಸುವೆ ಎಂದು ಭಾವಿಸಿರುವೆಯಾ? ನನಗೆ ನಿಷ್ಟರಾಗದ ಯಾರೇ ಆದರೂ ಬಿಟ್ಟು ಬಿಡಲಾರೆ.

ನನ್ನ ವೈರಿಯ ಧರ್ಮ ಬಿಟ್ಟುಬಿಡು. ನನ್ನ ಪಕ್ಷ ವಹಿಸು. ಹಾಗಾದರೆ ನಿನಗೆ ಕ್ಷೇಮ. ಇಲ್ಲವಾದಲ್ಲಿ ನಿನ್ನಂತಹ ಅಡಬೆಗಳಿಗೆ ನಾನು ಯಾವ ಶಿಕ್ಷೆ ಕೊಟ್ಟೆನೆಂದು ನೀನೂ ಕಣ್ಣಾರೆ ಕಂಡಿರುವೆಯಲ್ಲಾ? ನೀನು ಚಂದದ ಗೊಂಬೆಯೆಂದು ನಿನ್ನನ್ನು ರಮಿಸುತ್ತಾ ನಿನಗೆ ಕ್ಷಮಿಸುವೆ ಎಂದು ಭಾವಿಸಿರುವೆಯಾ? ನನಗೆ ನಿಷ್ಟರಾಗದ ಯಾರೇ ಆದರೂ ಬಿಟ್ಟು ಬಿಡಲಾರೆ.

       "ಥೂ ನಿನ್ನ ಜನ್ಮಕ್ಕೆ ಬೆಂಕಿ ಹಾಕು. ನಿನ್ನ ಶಿಕ್ಷೆಗೆ ನಾನು ಹೆದರಿಲ್ಲ. ನಿನಗೆ ಎಷ್ಟು ಶಿಕ್ಷೆ ಕೊಡಲು ಸಾಧ್ಯ? ಸಾಯುವ ತನಕ ತಾನೇ? ಸತ್ತ ಮೇಲೆ ಆತ್ಮಕ್ಕೆ ಏನಾದರೂ ಮಾಡಲು ಸಾಧ್ಯವಿದೆಯಾ? ನಾವೆಲ್ಲ ಒಂದಲ್ಲ ಒಂದು ದಿನ ಸಾಯುವವರು. ಆ ಸಾವು ಅಲ್ಲಾಹುವಿನ ಮಾರ್ಗದಲ್ಲಿ ಬರುವುದಾದರೆ ನಾನದನ್ನು ಸಂತೋಷದಿಂದ ಸ್ವಾಗತಿಸುತ್ತೇನೆ. ಅಲ್ಲಾಹುವಿನ ಮಾರ್ಗದಲ್ಲಿ ಶಹೀದ್ ಆಗುವುದನ್ನು ನಾನು ಅಭಿಮಾನದಿಂದ ಸ್ವೀಕರಿಸುತ್ತೇನೆ.

     " ಥೆತ್! ಅನಿಷ್ಟಳೇ. ಬಾಯಿ ಮುಚ್ಚು. ಮಾತು ಮಾತಿಗೂ ಅಲ್ಲಾಹು ಎಂದು ಬೊಗಳುತ್ತಿದ್ದೀಯಲ್ಲಾ? ನೋಡುತ್ತೇನೆ ನಾನು ನಿನ್ನ ಅಲ್ಲಾಹು ನಿನ್ನ ಸಹಾಯಕ್ಕೆ ಹೇಗೆ ಬರುತ್ತಾನೆ ಎಂದು".

      "ಅಲ್ಲಾಹು ನನ್ನ ಸಹಾಯಕ್ಕೆ ಇದ್ದಾನೆ ಎಂದು ನನಗೆ ದೃಢ ನಂಬಿಕೆ ಇದೆ. ಆದರೆ ನಿನ್ನ ಶಿಕ್ಷೆಯಿಂದ ಪಾರುಮಾಡಲು ಅವನು ಸಹಾಯ ಮಾಡುವನೆಂದು ನಾನು ನಂಬುತ್ತಿಲ್ಲ. ಹಾಗೆ ಮಾಡಬೇಕೆಂದೂ ನನಗೆ ಆಸೆಯಿಲ್ಲ. ನಿನ್ನ ಆಡಳಿತದ ಈ ಭೂಮಿ ಮೇಲೆ ವಾಸಿಸುವುದಕ್ಕಿಂತ ನಿನ್ನ ಶಿಕ್ಷೆ ಪಡೆದು ಶಹೀದ್ ಆಗಿ ಪುಣ್ಯರೊಂದಿಗೆ ಅವನ ಬಳಿ ಸೇರುವುದನ್ನೇ ನಾನು ಇಚ್ಚಿಸುತ್ತೇನೆ. ಈ ಇಚ್ಚೆಗೆ ಅಲ್ಲಾಹು ನೆರವಾಗುವನೆಂದು ನನಗೆ ನಂಬಿಕೆ ಇದೆ. ಅದೇ ನನ್ನ ಪ್ರಾರ್ಥನೆ. ನಿನ್ನ ಇಲ್ಲಿನ ಜುಜುಬಿ ಶಿಕ್ಷೆಯಿಂದ ಪಾರುಮಾಡುವುದು ಬಲು ದೊಡ್ಡ ಸಹಾಯವೆಂದು ನಾನು ಭಾವಿಸುತ್ತಿಲ್ಲ. ನಿನ್ನ ಶಿಕ್ಷೆಯ ಮೂಲಕ ನನಗೆ ಹುತಾತ್ಮ ಪದವಿ ಕೊಟ್ಟು ಪರಲೋಕ ಶಾಶ್ವತ ಭಯಾನಕ ಭೀಭತ್ಸ ನರಕ ಶಿಕ್ಷೆಯಿಂದ ಪಾರು ಮಾಡುವುದಾದರೆ ಅದುವೇ ನನಗೆ ದೊಡ್ಡ ಸಹಾಯ. ಈ ಸಹಾಯವನ್ನು ನನಗೆ ಮಾಡು ಎಂದು ನಾನು ಅಲ್ಲಾಹನಲ್ಲಿ ಮೊರೆ ಇಡುತ್ತಿದ್ದೇನೆ."

      "ಮುಚ್ಚೊ ಬಾಯಿ! ಅಲ್ಲಾಹನಂತೆ...... ಅಲ್ಲಾಹು..... ಮಾತುಮಾತಿಗೆ ಅಲ್ಲಾಹು ಎನ್ನುತ್ತಿದ್ದಾಳೆ. ನಾನೇ ನಿನ್ನ ಅಲ್ಲಾಹು. ನಾನೇ ನಿನ್ನ ಪ್ರಭು."

      "ಅಲ್ಲ ನೀನು ನನ್ನ ಪ್ರಭು ಅಲ್ಲ. ನನ್ನ ಪ್ರಭು ಅಲ್ಲಾಹು"

     "ಅಲ್ಲ. ನಾನು ನಿನ್ನ ಪ್ರಭು. ನಾನೇ ನಿನ್ನ ದೇವ. ನಾನೇ ನಿನ್ನ ಒಡೆಯ."

     "ಅಲ್ಲ. ನೀನು ಕಳ್ಳ! ನೀಚ! ಧಿಕ್ಕಾರಿ. ಹುಳು ಮಾನವ. ನೀನು ಸಾಮಾನ್ಯ ಮನುಷ್ಯ. ಓರ್ವ ಹೆಣ್ಣು ಹೆತ್ತ ಮಗ ನೀನು."

      "ಥೂ! ಬಕಮಾರಿ. ನಾನು ನಿನ್ನ ಪ್ರಭು"

     "ಅಲ್ಲ. ನನ್ನ ಪ್ರಭು ಅಲ್ಲಾಹು."

     "ಅಲ್ಲ. ನಿನ್ನ ಮತ್ತು ಸರ್ವ ಸೃಷ್ಟಿಗಳ ಪ್ರಭು ನಾನು. ಇದೆಲ್ಲವೂ ನನ್ನದ್ದೆ."

     "ಅಲ್ಲ. ನೀನು ನೀಚ, ನೀನು ಧಿಕ್ಕಾರಿ, ನೀನು ಸತ್ಯನಿಷೇಧಿ, ನೀನು ಕಡು ಮೂರ್ಖ."

     ಬೀವಿಯವರ ಮಾತು ಅಚಲ ನಿರ್ಧಾರ, ಕೃತನಿಶ್ಚಯ ದೃಢ ಸ್ವರ ಫಿರ್'ಔನ್'ನ ಎದೆಗೆ ಕೊಳ್ಳಿಗಳನ್ನಿಟ್ಟುವು. ಅವನ ನರನಾಡಿಗಳು ಬಿಗಿದುಕೊಂಡವು. ಸಿಟ್ಟಿನಿಂದ ಕಂಠದ ನಾಡಿಗಳು ಮೇಲೆದ್ದು ಕಾಣಿಸಿಕೊಂಡವು. ಮುಖವು ಗಾಳಿ ಬೀಸಿದ ಕೆಂಡದಂತೆ ಕೆಂಪೇರಿ ಬಳಿಕ ಬಿರುಸಾಯಿತು. ಕಣ್ಣುಗಳಲ್ಲಿ ದಳ್ಳುರಿ ಮೂಡಿತು. ನಡೆವ ನೆಲ ನಡುಗುವಂತೆ ರಪರಪ ಕಾಲು ಹಾಕುತ್ತಾ ನಡೆಯುತ್ತಿರುವ ಬೆಂಕಿಯುಂಡೆಯಂತೆ ಆ ರಕ್ಕಸನು ಎಳೆದ ಉಕ್ಕಿನ ತಂತಿಯಂತೆ ಬಿಗಿಯಾದ ಧ್ವನಿಯಲ್ಲಿ ಅಬ್ಬರಿಸಿದ,

       "ಯಾರಲ್ಲಿ? ಲೋ ಬೇಕೂಪಾ ಭಟರೇ! ಬನ್ನಿ ಇಲ್ಲಿ. ಈ ಸೊಕ್ಕಿನ ಹೆಣ್ಣನ್ನು ಹಿಡಿದು ಕಟ್ಟಿರಿ. ಅವಳನ್ನು ಎಳೆದುಕೊಂಡು ಹೋಗಿ ನರಕ ಯಾತನೆ ಕೊಟ್ಟು ಕೊಲ್ಲಿರಿ.

      ರಾಜಭಟರು ಕೆಲವು ಕ್ಷಣ ದಂಗಾದರು. ಅವರು ನಿರ್ದಯಿ ಕಟುಕರೂ ಹೌದು. ಅವರ ಕೈಯ್ಯಲ್ಲಿ ಮುದುಡಿದ ಜೀವಗಳಿಗೆ ಲೆಕ್ಕವಿಲ್ಲ. ಆದರೆ ರಾಜನ ಮುದ್ದಿನ ಅರಗಿಣಿಯಾದ ಮಹಾರಾಣಿಯನ್ನೇ ಶಿಕ್ಷೆಗೆ ಗುರಿಪಡಿಸುವುದೆಂದರೆ ಹೇಗೆ?

       ಅವರು ಕೆಲವು ಕ್ಷಣ ದಂಗುಬಡಿದಂತೆ ಅವಾಕ್ಕಾಗಿ ನಿಂತುಬಿಟ್ಟರು. ಲೋ ಕತ್ತೆ ಬಡವಗಳೇ! ಬಕಮಾರಿಗಳೇ! ಏನು ಬಾಯಿ ಬಿಟ್ಟು ನೋಡುತ್ತಾ ಇದ್ದೀರಾ? ನೀವೂ ಅವಳ ಪಕ್ಷ ಸೇರಿದ್ದೀರಾ? ನಿಮ್ಮ ದೇಹಗಳನ್ನು ಕತ್ತರಿಸಿ ನರಿ ನಾಯಿಗಳಿಗೆ ಎಸೆಯುತ್ತೇನೆ. ಮುಠ್ಠಾಳರು! ನನ್ನ ಅನ್ನ ತಿಂದು ಕೊಬ್ಬಿದ ಅಬ್ಬೆಪಾಲಿಗರು. ಹೂಂ! ಅವಳನ್ನು ಎಳೆದುಕೊಂಡು ಬನ್ನಿರಿ. 

     ಫಿರ್'ಔನ್'ನ ಅಟ್ಟಹಾಸ ಮುಗಿಲು ಮುಟ್ಟಿತು. ಇಡೀ ಅರಮನೆಯೇ ಥರಥರಗುಟ್ಟಿತು. ಭಟರು ಧಾವಿಸಿ ಹೋಗಿ ಆಸಿಯಾ ಬೀವಿ(ರ)ಯನ್ನು ಎಳೆದುಕೊಂಡು ಬಂದರು. ಫಿರ್'ಔನ್ ಅಟ್ಟಹಾಸಗೈದ. ಹೂಂ! ಬಡಿಯಿರಿ ಅವಳಿಗೆ. ಭಟರ ಉಕ್ಕಿನ ಮುಷ್ಠಿಗಳಿಂದ ಏಟುಗಳು ಆ ಕೋಮಲ ದೇಹಕ್ಕೆ ದಬದಬನೆ ಬೀಳತೊಡಗಿತು. ಕೋಮಲ ಹೂವಿನಂತೆ ಆ ದೇಹ ಬಾಡತೊಡಗಿತು. ಫಿರ್'ಔನ್ ಇನ್ನೂ ಬಡಿಯಿರಿ ಎಂದು ಆಕ್ರೋಶಿಸುತ್ತಲೇ ಇದ್ದ. ಭಟರ ಪೆಟ್ಟಿನ ಆಘಾತ ತಾಳಲಾರದೆ ಬೀವಿಯವರು ದೊಪ್ಪನೆ ನೆಲಕ್ಕೆ ಕುಸಿದರು.

       ಹೂಂ! ತುಳಿಯಿರಿ ಆ ಪಾಪಿಗೆ, ದ್ರೋಹಿಗೆ, ಫಿರ್'ಔನ್ ಆಕ್ರೋಶಿಸಿದ. ಭಟರು ತುಳಿಯತೊಡಗಿದರು. ಬೀವಿ ತಣ್ಣಗೆ ನರಳಿದರು. ಹೂಂ! ಅವಳನ್ನು ಅಂಗಾತ ಮಲಗಿಸಿರಿ. ಭಟರು ಅಂಗಾತ ಮಲಗಿಸಿದರು. ನಾಲ್ಕು ಗೂಟಗಳನ್ನು ತನ್ನಿ ಎಂದ ಫಿರ್'ಔನ್. ಭಟರು ಡೇರೆಗೆ ಬಡಿಯುವ ನಾಲ್ಕು ಚೂಪಾದ ಕಬ್ಬಿಣದ ಗೂಟಗಳನ್ನು ತಂದರು. ಒಡೆಯಿರಿ ಅವಳ ಕೈಕಾಲುಗಳು. ಆ ರಾಕ್ಷಸ ಬೊಬ್ಬಿರಿಸಿದ. ಭಟರು ಆ ಕೋಮಲ ಅಂಗೈಗಳಿಗೆ ಕಬ್ಬಿಣದ ಗೂಟವನ್ನಿಟ್ಟು ಸುತ್ತಿಗೆಯಿಂದ ಬಡಿದರು. ಗೂಟದ ಚೂಪಾದ ಮೊನೆ ಅಂಗೈಯನ್ನು ಸೀಳುತ್ತಾ ತೂತು ಮಾಡಿಕೊಂಡು ನೆಲಕ್ಕಿಳಿಯಿತು. ಕೆಂಪು ರಕ್ತವು ಹರಿಯಿತು. ಎರಡೂ ಅಂಗೈಗಳಿಗೆ ಗೂಟ ಬಡಿದರು. ಬೀವಿಯ ಎರಡೂ ಕೈಗಳು ಮಿಸುಕಾಡದಂತೆ ನೆಲಕ್ಕೆ ಆಣಿಯಂತೆ ಬಡಿಯಲಾಯಿತು. ಹೂಂ! ಕಾಲಿಗೂ ಬಡಿಯಿರಿ ಎಂದ ಆ ನರ ರಾಕ್ಷಸ. ಆ ಕೋಮಲವಾದ ಎರಡೂ ಪಾದಗಳನ್ನು ನೆಲಕ್ಕೆ ಒತ್ತಿ ಕಿಂಕರರು ಕಬ್ಬಿಣದ ಗೂಟ ಬಡಿದರು. ಎರಡೂ ಪಾದಗಳು ನೆಲಕ್ಕೆ ಅಂಟಿಕೊಂಡವು. ರಕ್ತ ಧಾರೆಧಾರೆಯಾಗಿ ಹರಿಯಿತು. ಆದರೆ ಬೀವಿಯವರು ವ್ಯಾಕುಲಗೊಳ್ಳಲಿಲ್ಲ.

     ಮನುಷ್ಯನಾದವನು ಸಹಿಸುವುದೇ ಕಷ್ಟವಾಗುವಂತಹ ಅಂತಹ ಭೀಭತ್ಸ ಶಿಕ್ಷೆಯಲ್ಲೂ ಅವರು ಅಲ್ಲಾಹುವೇ ಲೋಕದ ಪ್ರಭು. ಫಿರ್'ಔನ್ ದೇವನಲ್ಲ ಎನ್ನುತ್ತಿದ್ದರು. ಅವರ ಮೊಗದಲ್ಲಿ ಪ್ರಶಾಂತತೆ ಲಾಸ್ಯವಾಡುತ್ತಿತ್ತು. ಅವರ ಸಹನೆಯನ್ನು ಕಂಡವರು ಅದ್ಭುತ ಸ್ತಬ್ಧರಾದರು. ಆದರೆ ಫಿರ್'ಔನನಿಗೆ ಅವರ ಸಹನೆ ಕಂಡಾಗ ಮತ್ತಷ್ಟು ವ್ಯಘ್ರತೆ ಉಂಟಾಯಿತು. ಆಕೆ ಅತ್ತು ಗೋಗರೆದು ಕರುಣಾಕ್ರಂದನ ಮಾಡಬೇಕಿತ್ತೇಂದು ಅವನ ಆಸೆಯಾಗಿತ್ತು. ಆತನ ಆರ್ಭಟದ ಮೇರೆಗೆ ಭಟರು ಬೀವಿಯ ಮೇಲೆ ಪ್ರಹರಗೈದರು. ಮೈ ಮೇಲೆ ಒದ್ದು, ತುಳಿದು ಹೊಡೆದು ಬಡಿದು ಹಿಂಸಿಸಿದರು. ಬೀವಿಯವರ ಬಾಯಿಯಿಂದ ಅಲ್ಲಾಹು ಅಹದ್, ಅಲ್ಲಾಹು ಅಕ್ಬರ್ ಎಂಬ ಮಾತು ಹೊರಡುತ್ತಲೇ ಇತ್ತು.

      ನರಾದಮರ ಭೀಭತ್ಸ ಹಿಂಸೆ ನಿರಂತರ ಸಾಗಿದಾಗ ಬೀವಿಯವರ ಪ್ರಾಣವು ಬಿಡುಗಡೆಯಾಗುವಂತಹ ಹಂತಕ್ಕೆ ತಲುಪಿತ್ತು. ಅವರಿಗೆ ಉಪರಿಲೋಕದ ಅದ್ಭುತ ದೃಶ್ಯಗಳು ಕಾಣತೊಡಗಿದವು, ಮಲಕುಗಳು ಬಂದು ಅವರ ಮೇಲೆ ರೆಕ್ಕೆಗಳಿಂದ ನೆರಳಿಟ್ಟರು. ಅಷ್ಟಾದಾಗ ಬೀವಿಯವರ ನೋವು ಕಡಿಮೆಯಾಯಿತು. ಭೌತಿಕ ಜಗತ್ತಿನ ವ್ಯವಸ್ಥೆಯಿಂದ ಅಭೌತಿಕ ವ್ಯವಸ್ಥೆಯತ್ತ ಪಲ್ಲಟಗೊಂಡ ಅವರ ದೇಹ ಪ್ರಕೃತಿಗೆ ಭೌತಿಕ ನೋವು ಮಾಯವಾಗಿತ್ತು. ಅವರು ಅಲ್ಲಾಹುವಿನಲ್ಲಿ ಪ್ರಾರ್ಥಿಸಿದರು.

      "ನನ್ನ ಪ್ರಭೂ! ನನಗೆ ನಿನ್ನ ಬಳಿ ಸ್ವರ್ಗದಲ್ಲಿ ಒಂದು ಭವನವನ್ನು ನಿರ್ಮಿಸಿಕೊಡು. ಫಿರ್'ಔನ್ ಮತ್ತು ಅವನ ಅಕೃತ್ಯಗಳಿಂದ ನನ್ನನ್ನು ರಕ್ಷಿಸು."

     ದಯಾಮಯನಾದ ಅಲ್ಲಾಹನು ಈ ಪ್ರಾರ್ಥನೆಯನ್ನು ಸ್ವೀಕರಿಸಿದನು. ಅವರಿಗಾಗಿ ಕ್ಷಣದಲ್ಲೇ ವಿಶೇಷವಾದ ಒಂದು ಭವನವನ್ನು ಸೃಷ್ಟಿಸಿದನು. ಮತ್ತು ಅದನ್ನು ಬೀವಿಯವರಿಗೆ ತೋರಿಸಿ ಕೊಟ್ಟನು. ಆಹಾ ಎಂತಹಾ ದೃಶ್ಯ! ಎಂತಹಾ ಮಂದಿರ! ಆ ಸುರಸುಂದರ ಭವನವನ್ನು ಕಂಡಾಗಲೇ ಬೀವಿಯವರ ಎಲ್ಲ ಚಿಂತೆ, ಆಯಾಸ, ಬಳಲಿಕೆ, ನೋವುಗಳು ಕ್ಷಣದಲ್ಲೇ ಮಾಯವಾದುವು. ಅವರ ಆತ್ಮವು ಪರಮಾನಂದದಿಂದ ಉಲ್ಲಸಿತವಾಯಿತು. ಸರ್ವ ದುಃಖಗಳಿಂದೂ ಮಾಯವಾಗಿ ಪರಮೋಲ್ಲಾಸದಿಂದ ತುಳುಕಾಡಿತು. ಹರ್ಷಚಿತ್ತರಾದ ಅವರಿಗೆ ನಗು ಬಂತು. ಆ ತುಟಿಗಳಲ್ಲಿ ಮಂದಹಾಸ ಅರಳಿತು ಹಾಗೂ ಈ ಲೋಕದಿಂದ ಶಾಶ್ವತವಾದ ಪರಲೋಕಕ್ಕೆ ಯಾತ್ರೆಯಾದರು. (ಇನ್ನಾಲಿಲ್ಲಾಹ್) 
   ದಿನ ಕಳೆದಂತೆ ಜನರು ಇಸ್ಲಾಮಿಗೆ ಹೆಚ್ಚೆಚ್ಚಾಗಿ ಬರತೊಡಗಿದರು. ಇದರಿಂದ ಫಿರ್'ಔನನಿಗೆ ತನ್ನ ಕಾಲಡಿಯಿಂದ ಮಣ್ಣು ಸವೆದು ಹೋಗುತ್ತಿರುವಂತೆ ಭಾಸವಾಯಿತು. ಅವನು ನಾನಾವಿಧ ಉಪಾಯಗಳ ಮೂಲಕ ಜನರನ್ನು ತನ್ನ ಧರ್ಮದಲ್ಲಿ ಉಳಿಸಲು ಪ್ರಯತ್ನಿಸಿದನು.

      ಅತ್ಯಂತ ಎತ್ತರ ಹಾಗೂ ಭವ್ಯವಾದ, ಅಷ್ಟೇ ವಿಶಾಲವಾದ ಒಂದು ಕಟ್ಟಡವನ್ನು ಕಟ್ಟಿಸಿದನು. ಓರ್ವ ದೇವನಿಗಲ್ಲದೆ ಮನುಷ್ಯನಿಗೆ ಇಂತಹ ಕಟ್ಟಡ ಕಟ್ಟಿಸಲು ಸಾಧ್ಯವಿಲ್ಲ ಎಂದು ನಂಬಿಸುವುದಾಗಿತ್ತು ಆತನ ಉದ್ದೇಶ. ಏಳು ವರ್ಷಗಳ ಕಾಲ ಲಕ್ಷಾಂತರ ಮಂದಿ ಕೆಲಸ ಮಾಡಿ ಆ ಕಟ್ಟಡವನ್ನು ನಿರ್ಮಾಣ ಮಾಡಿದನು. ಜಗತ್ತಿನಲ್ಲಿ ಇದುವರೆಗೂ ಯಾರೂ ಇಂತಹ ಕಟ್ಟಡ ನಿರ್ಮಿಸಿಲ್ಲ. ಇನ್ನು ಯಾರಿಗೂ ನಿರ್ಮಿಸಲೂ ಸಾಧ್ಯವಿಲ್ಲ. ಇದು ದೇವನಾದವನಿಗೆ ಮಾತ್ರ ಸಾಧ್ಯ ಎಂದು ಜನರಾಡಿಕೊಳ್ಳುವುದು. ಮೂಸಾ ನಬಿ(ಅ)ಯವರ ಗಮನಕ್ಕೆ ಬಂದಾಗ ಅವರಿಗೆ ಕಳವಳವಾಯಿತು. ಆಗ ಜಿಬ್ರೀಲ್(ಅ)ರು ಬಂದು ಅದನ್ನು ನಾನು ಧ್ವಂಸ ಮಾಡುತ್ತೇನೆ ಎಂದು ಹೇಳಿ ಸಮಾಧಾನ ಪಡಿಸಿದರು. ಅಂದೇ ರಾತ್ರಿ ಜಿಬ್ರೀಲ್(ಅ)ರವರು ತನ್ನ ಒಂದು ರೆಕ್ಕೆಯಿಂದ ಕಟ್ಟಡಕ್ಕೆ ಮೆಲ್ಲನೆ ಒಂದೇಟು ಕೊಟ್ಟರು. ಕಟ್ಟಡ ಕಸಿದು ಧೂಳೀ ಪಟವಾಯಿತು. ಅದರೊಳಗಿದ್ದ ಫಿರ್'ಔನ್'ನನ ಸಾವಿರಾರು ಜನರು ಸತ್ತು ಹೋದರು.

   ಪಾಠ ಕಲಿಯದ ಕಿಬ್ತಿಗಳು:ಫಿರ್'ಔನ್ ಮತ್ತು ಕಿಬ್ತಿಗಳು ಇಸ್ರಾಯೀಲರ ಮೇಲೆ ದೌರ್ಜನ್ಯ ಹೆಚ್ಚಿಸಿದರು. ಇನ್ನು ಇಸ್ರಾಯೀಲರು ನಮ್ಮ ಗುಲಾಮಗಿರಿಗೆ ಒಳಗಾಗಲಾರರು ಎಂಬ ಖಚಿತ ಅರಿವು ಅವರ ತಲೆ ಕೆಡಿಸಿ ಬಿಟ್ಟಿತು. ಇಸ್ರಾಯೀಲರು ಎಲ್ಲವನ್ನೂ ಅಲ್ಲಾಹನಿಗಾಗಿ ಸಹಿಸಿದರು. ಈ ಸಹನೆಯಿಂದ ನಿಮಗೆ ಪರಲೋಕದಲ್ಲಿ ಅಪಾರ ಪುಣ್ಯ ಇದೆ ಎಂಬುದನ್ನು ಮೂಸಾ ನಬಿ(ಅ)ಯವರು ಅವರಿಗೆ ಬೋಧಿಸಿದರು. ಮತ್ತೂ ಚಿತ್ರಹಿಂಸೆ ತೀವ್ರವಾದಾಗ ಇಸ್ರಾಯೀಲರು ಏನಾದರೊಂದು ಪರಿಹಾರ ಮಾಡುವಂತೆ ಕೇಳಿಕೊಂಡಾಗ ಮೂಸಾ ನಬಿ(ಅ)ಯವರು ಪ್ರಾರ್ಥಿಸಿದರು. 

      ಅದಕ್ಕೆ ಉತ್ತರವಾಗಿ ಅಲ್ಲಾಹನು ಕಿಬ್ತಿಗಳಿಗೆ ಕೆಲವು ಶಿಕ್ಷೆಗಳನ್ನು ನೀಡಿದನು. ಒಂದು ಜಲಪ್ರವಾಹ ಬಂದು ಕಿಬ್ತಿಗಳ ಮನೆಗಳಿಗೆ ಮಾತ್ರ ನುಗ್ಗಿತು. ಇಸ್ರಾಯೀಲರ ಪೈಕಿ ಯಾರೊಬ್ಬರ ಮನೆಗೂ ನೀರು ನುಗ್ಗಿರಲಿಲ್ಲ. ಕಿಬ್ತಿಗಳ ಮನೆಗಿಂತ ತಗ್ಗಿನಲ್ಲಿರುವ ಇಸ್ರಾಯೀಲರ ಮನೆಗೂ ಕೂಡಾ ನೀರು ನುಗ್ಗದಿರುವಾಗ ಇದು ನಮಗೆ ಶಿಕ್ಷೆ ಎಂಬುದು ಕಿಬ್ತಿಗಳಿಗೆ ಖಚಿತವಾಗಿತ್ತು.
   
    ಅವರು ಮೂಸಾ ನಬಿ(ಅ)ಯವರಲ್ಲಿ ಅಲವತ್ತು ಕೊಂಡರು. ನಮ್ಮ ಈ ಶಿಕ್ಷೆ ನಿವಾರಣೆಯಾದರೆ ನಾವು ಇಸ್ಲಾಮ್ ಸ್ವೀಕರಿಸುತ್ತೇವೆ ಎಂದು ಹೇಳಿದರು. ಮೂಸಾ ನಬಿ(ಅ)ಯವರು ಪ್ರಾರ್ಥಿಸಿದಾಗ ಶಿಕ್ಷೆಗೆ ಪರಿಹಾರ ದೊರೆತಿತ್ತು. ಆದರೆ ಆ ದುಷ್ಟರು ಮಾತು ಪಾಲಿಸಲಿಲ್ಲ. ಇಸ್ಲಾಮ್ ಸ್ವೀಕರಿಸಲಿಲ್ಲ! ನೀರಿನ ಪ್ರವಾಹ ಬಂದುದರಿಂದ ಎಲ್ಲ ಕಡೆ ನೀರಿನ ಸಂಗ್ರಹವಾಗಿ ಆ ವರ್ಷ ಕೃಷಿ ಸಮೃದ್ಧವಾಯಿತು. ಆಗ ಕಿಬ್ತಿಗಳಿಗೆ ಪ್ರವಾಹವು ನಮಗೆ ಅನುಗ್ರಹವಾಗಿತ್ತು ಶಿಕ್ಷೆಯಾಗಿರಲಿಲ್ಲ ಎಂದು ಹೇಳುತ್ತಾ ಮೂಸಾ ನಬಿ(ಅ)ಯವರನ್ನು ಆಕ್ಷೇಪಿಸಿದರು. ಇಸ್ರಾಯೀಲರ ಮೇಲೆ ಮತ್ತೆ ದೌರ್ಜನ್ಯ ಮುಂದುವರಿಸಿದರು. ಆಗ ಅಲ್ಲಾಹನು ಕತ್ತರಿ ಗಿಳಿಗಳ(ಜರಾದ್) ಕೂಟಗಳನ್ನು ಕಳುಹಿಸಿ ಕಿಬ್ತಿಗಳ ಎಲ್ಲಾ ಕೃಷಿಗಳನ್ನು ನಾಶ ಮಾಡಲು ಶುರು ಮಾಡಿದನು. ಇಸ್ರಾಯೀಲರ ಕೃಷಿಗಳಿಗೆ ಹಾನಿ ಮಾಡದೆ ಕಿಬ್ತಿಗಳ ಕೃಷಿಯನ್ನು ಮಾತ್ರ ನಾಶ ಮಾಡುತ್ತಿರುವುದನ್ನು ಕಂಡಾಗ ಇದು ಶಿಕ್ಷೆ ಎಂಬುದು ಅರಿವಾಗಿ ಮೂಸಾ ನಬಿ(ಅ)ಯವರಲ್ಲಿ ಅಲವತ್ತುಕೊಂಡರು. ಇಸ್ಲಾಮಿಗೆ ಸೇರುವುದಾಗಿ ಭರವಸೆ ಕೊಟ್ಟರು‌. ಮೂಸಾ ನಬಿ(ಅ)ಯವರು ಪ್ರಾರ್ಥಿಸಿದಾಗ ಕತ್ತರಿ ಗಿಳಿಗಳು ಹೊರಟು ಹೋದವು. ಆದರೆ ಆ ದುಷ್ಟರು ಮತ್ತೂ ಮಾತಿಗೆ ತಪ್ಪಿದರು.

     ಇದೇ ಪ್ರಕಾರ ಒಂದು ತರ ಹೇನು, ನುಸಿ ಮುಂತಾದವುಗಳ ಭೀಕರ ಹಾವಳಿಯುಂಟಾಯಿತು. ನೀರು ಕುಡಿಯಲು ಕೂಡಾ ಸಾಧ್ಯವಾಗದಂತೆ ಕಪ್ಪೆಗಳ ಹಾವಳಿಯೂ ಉಂಟಾಯಿತು. ಕಿಬ್ತಿಗಳ ಮನೆ ತುಂಬಾ ಕಪ್ಪೆಗಳು. ಎಲ್ಲೆಲ್ಲೂ ಕಪ್ಪೆಗಳ ರಾಶಿ ರಾಶಿ! ಅದೇ ಪ್ರಕಾರ ಮತ್ತೊಮ್ಮೆ ಕಿಬ್ತಿಗಳು ಬಳಸುವ ಎಲ್ಲಾ ನೀರಿನಲ್ಲೂ ರಕ್ತ ಕಾಣಿಸಿಕೊಳ್ಳುವ ಶಿಕ್ಷೆಯೂ ಉಂಟಾಯಿತು. ಅವರ ಬಾವಿಗಳ ನೀರು ತೆಗೆದರೆ ಅದರಲ್ಲಿ ರಕ್ತ. ಆದರೆ ಇಸ್ರಾಯೀಲರ ಬಾವಿಗಳ ನೀರು ಶುದ್ಧ. ಕಿಬ್ತಿಗಳು ಬಂದು ಇಸ್ರಾಯೀಲರ ಬಾವಿಗಳಿಂದ ನೀರು ಸೇದಿ ಅವರ ಪಾತ್ರೆಗೆ ತುಂಬಿದ ತಕ್ಷಣ ಅದೂ ರಕ್ತಮಯ! ಕಿಬ್ತಿಗಳು ದಾಹದಿಂದ ತತ್ತರಿಸಿದರು. ಫಿರ್'ಔನ್ ದಾಹದಿಂದ ಸಂಪೂರ್ಣ ಅವಶನಾಗಿ ಮಲಗಿದ್ದ. ಸೇವಕರು ಎಲೆಗಳ ರಸವನ್ನು ಹಿಂಡಿ ಅವನಿಗೆ ಕುಡಿಯಲು ಕೊಟ್ಟರು. ಆದರೆ ಆತ ಅದನ್ನು ಬಾಯಿಗೆ ಇಡುವಷ್ಟರಲ್ಲಿ ಅದು ರಕ್ತವಾಗಿ ಮಾರ್ಪಟ್ಟಿತು.

ಫಿರ್'ಔನ್ ದಾಹದಿಂದ ಸಂಪೂರ್ಣ ಅವಶನಾಗಿ ಮಲಗಿದ್ದ. ಸೇವಕರು ಎಲೆಗಳ ರಸವನ್ನು ಹಿಂಡಿ ಅವನಿಗೆ ಕುಡಿಯಲು ಕೊಟ್ಟರು. ಆದರೆ ಆತ ಅದನ್ನು ಬಾಯಿಗೆ ಇಡುವಷ್ಟರಲ್ಲಿ ಅದು ರಕ್ತವಾಗಿ ಮಾರ್ಪಟ್ಟಿತು.

     ಈ ಶಿಕ್ಷೆಗಳು ಬಂದಾಗೆಲ್ಲ ಅವರು ಮೂಸಾ ನಬಿ(ಅ)ಯವರ ಬಳಿ ಅಹವಾಲು ಹೇಳುವುದು, ಸತ್ಯ ಸ್ವೀಕರಿಸುತ್ತೇವೆ ಎಂದು ಭರವಸೆ ಕೊಡುವುದು, ಮೂಸಾ ನಬಿ(ಅ)ಯವರು ಪ್ರಾರ್ಥಿಸಿ ಪರಿಹಾರ ಮಾಡುವುದು ಹಾಗೂ ಅವರು ಮಾತಿಗೆ ತಪ್ಪುವುದು ನಡೆಯುತ್ತಲೇ ಇತ್ತು. ಅವರು ಅಷ್ಟು ಬಾರಿ ಮಾತಿಗೆ ತಪ್ಪಿದಾಗಲೂ ಮೂಸಾ ನಬಿ(ಅ)ಯವರು ಮತ್ತೂ ಮತ್ತೂ ಪ್ರಾರ್ಥಿಸಿ ಪರಿಹಾರ ನೀಡುತ್ತಿದ್ದುದು ಅವರು ಸರಿದಾರಿಗೆ ಬರುವುದಾದರೆ ಬರಲಿ ಎಂಬ ಸದುದ್ದೇಶದಿಂದಾಗಿತ್ತು. ಯಾಕೆಂದರೆ ಈ ಶಿಕ್ಷೆಗಳನ್ನೆಲ್ಲಾ ಅಲ್ಲಾಹನು ಅವರಿಗೆ ನೀಡಿದ್ದು ಅವರ ನಾಶಕ್ಕಲ್ಲ ಪಾಠಕ್ಕೆ ಎಂಬುದು ಅವರಿಗೆ ಗೊತ್ತಿತ್ತು. ಆದರೆ ಕಿಬ್ತಿಗಳು ಪಾಠ ಕಲಿಯಲಿಲ್ಲ. ಅವರು ತಮ್ಮ ಕುಫ್ರಿಯತ್'ನಲ್ಲೂ ದೌರ್ಜನ್ಯದಲ್ಲೂ ಮುಂದುವರಿದರು.

       ಕಟ್ಟಕಡೆಗೆ ಅವರಿಗೆ ನೀಡಿದ ಶಿಕ್ಷೆ ಅವರ ಸೊತ್ತುಗಳನ್ನು ಕಲ್ಲು ಮಾಡಿದ್ದು! ಅವರ ಚಿನ್ನ, ಬೆಳ್ಳಿ, ಒಡವೆ, ದುಡ್ಡು ಮಾತ್ರವಲ್ಲ ಆಹಾರ, ವಾಣಿಜ್ಯ ಸರಕುಗಳೂ ಕಲ್ಲಾಗಿ ಮಾರ್ಪಟ್ಟವು. ಆದರೆ ಈ ಬಾರಿ ಮೂಸಾ ನಬಿ(ಅ)ಯವರಲ್ಲಿ ಪ್ರಾರ್ಥಿಸುವಂತೆ ಕೇಳಿಕೊಳ್ಳುವ ಅವಕಾಶ ಅವರಿಗೆ ಇಲ್ಲದಾಯಿತು. ಯಾಕೆಂದರೆ ಕಿಬ್ತಿ ಪುರುಷರ ಅಂತ್ಯ ಸಮೀಪಿಸಿತು. 

       ಅಲ್ಲಾಹನು ಇಸ್ರಾಯೀಲರೆಲ್ಲರೂ ಸುತ್ತಲೂ ರಕ್ತದಿಂದ ದೊಡ್ಡ ಆವರಣ ಹಾಕಿ ಅದರೊಳಗೆ ನಿಲ್ಲಬೇಕೆಂದೂ ಅದರ ಹೊರಗಡೆ ಇರುವವರೆಲ್ಲರೂ ಮಲಕ್'ಗಳ ಖಡ್ಗಕ್ಕೆ ಬಲಿಯಾಗುವರೆಂದೂ ಸಂದೇಶ ಕಳುಹಿಸಿದನು. ಇಸ್ರಾಯೀಲರು ಹಾಗೇ ಮಾಡಿದರು. ರಕ್ತ ವರ್ಣದ ಒಂದು ಪವಾಕೆಯನ್ನು ಅವರಿರುವಲ್ಲಿ ಹಾಕಲಾಗಿತ್ತು. ಅಲ್ಲಿರುವವರನ್ನು ವಧಿಸಬೇಡಿರಿ. ಉಳಿದ ಎಲ್ಲಾ ಪುರುಷರನ್ನೂ ವಧಿಸಿರಿ ಎಂದು ಅಲ್ಲಾಹನು ಮಲಕ್'ಗಳಿಗೆ ಆದೇಶಕೊಟ್ಟನು. ಹಾಗೆಯೇ ಅಂದು ರಾತ್ರಿ ಮಲಕ್'ಗಳು ಬಂದು ಸರ್ವಕಿಬ್ತಿ ಪುರುಷರನ್ನು ಕೊಂದು ಹಾಕಿದರು.

    ಮರುದಿನ ಬೆಳಗಾದಾಗ ಕಿಬ್ತಿ ಪುರುಷರೆಲ್ಲರೂ ಸತ್ತು ಬಿದ್ದಿರುವ ವಾರ್ತೆ ಕೇಳಿ ಫಿರ್'ಔನನು ಕೋಪದಿಂದ ಕಿಡಿಕಿಡಿಯಾದನು. ಅಲ್ಲದೆ ಇಸ್ರಾಯೀಲರು ಮೂಸಾ ನಬಿ(ಅ)ಯವರ ನೇತೃತ್ವದಲ್ಲಿ ಒಂದು ಕಡೆ ಒಟ್ಟಾಗಿದ್ದಾರೆ ಎಂಬ ಸುದ್ಧಿಯೂ ಸಿಕ್ಕಿತು. ಸರ್ವ ಇಸ್ರಾಯೀಲರೂ ಈಜಿಪ್ಟ್ ತೊರೆದು ಕೆಂಪು ಸಮುದ್ರ ದಾಟಿ ಶಾಮ್ ದೇಶಕ್ಕೆ ಹೊರಟು ಹೋಗುತ್ತಾರೆ ಎಂಬ ಮಾಹಿತಿಯೂ ಅವನಿಗೆ ಸಿಕ್ಕಿತು. ಅವರನ್ನು ಹೋಗಲು ಬಿಡಬಾರದು, ಎಲ್ಲರನ್ನೂ ಕೊಂದು ಹಾಕಬೇಕು, ಬನ್ನಿ ಹೋಗೋಣ ಎನ್ನುತ್ತಾ ಸೈನ್ಯ ಸಮೇತ ಫಿರ್'ಔನನು ಹೊರಟನು. ಅವನಿಗೆ ಒಟ್ಟು ಹತ್ತು ಲಕ್ಷ ಸೈನಿಕರಿದ್ದರು. ಅವರೆಲ್ಲರೂ ಸರ್ವ ಸಜ್ಜಿತ ಅಸ್ತ್ರ ಧಾರಿಗಳಾಗಿ ಹೊರಟರು.

      ಫಿರ್'ಔನನು ಸೈನ್ಯ ಸಮೇತ ಹೊರಟ ಸುದ್ಧಿ ತಿಳಿದ ಕೂಡಲೇ ಮೂಸಾ ನಬಿ(ಅ) ಮತ್ತು ಇಸ್ರಾಯೀಲರು ಶಾಮ್ ದೇಶದತ್ತ ಹೊರಟರು. ಆದರೆ ಅವರಿಗೆ ಹೊರಟು ಬರುವ ಸಂದರ್ಭದಲ್ಲಿ ಅನೇಕ ಎರಡು ತೊಡರುಗಳು ಕಾಣಿಸಿದವು. ಇದಕ್ಕೆ ಕಾರಣವೇನಿರಬಹುದು ಎಂದು ಚರ್ಚೆಯಾದಾಗ ಓರ್ವ ವೃದ್ಧರು ಹೇಳಿದರು.

      ಹಿಂದೆ ಯೂಸೂಫ್ ನಬಿ(ಅ)ಯವರು ಮರಣ ಹೊಂದುತ್ತಿರುವಾಗ ನನ್ನ ದೇಶದಿಂದ ಮುಸ್ಲಿಮರು ವಲಸೆ ಹೋಗುವುದಾದರೆ ನನ್ನ ದೇಹವನ್ನು ಜೊತೆಗೆ ಒಯ್ಯಬೇಕು ಎಂದು ವಸಿಯ್ಯತ್ ಮಾಡಿದ್ದರು. ನಾವು ಅವರ ಮೃತ ದೇಹವನ್ನು ಕೊಂಡೊಯ್ಯುವ ಯೋಚನೆ ಮಾಡದೆ ಇದ್ದುದರಿಂದ ಈ ಎರಡು ತೊಡರುಗಳು ಬರುತ್ತಿವೆ.

     ಹಾಗಾದರೆ ಅವರ ಮೃತದೇಹ ಎಲ್ಲಿದೆ ಎಂದು ಮೂಸಾ ನಬಿ(ಅ) ಕೇಳಿದಾಗ ಆ ವೃದ್ಧನು ಅದು ಗೊತ್ತಿರುವುದು ಓರ್ವ ವೃದ್ಧೆಗೆ ಮಾತ್ರ ಎಂದರು. ಆ ವೃದ್ಧೆಯನ್ನು ಕರೆಸಿದಾಗ ನಾನು ತೋರಿಸುತ್ತೇನೆ. ಆದರೆ ನನಗೆ ನಿಮ್ಮ ಜೊತೆಗೆ ಸ್ವರ್ಗದಲ್ಲಿ ಅವಕಾಶ ಕೊಡಬೇಕು ಎಂದು ಕೇಳಿಕೊಂಡಳು. ಜಿಬ್ರೀಲ್(ಅ)ರ ಸೂಚನೆಯ ಮೇರೆಗೆ ಮೂಸಾ ನಬಿ(ಅ)ಯವರು ವೃದ್ಧೆಗೆ ಭರವಸೆ ಕೊಟ್ಟರು. ಆಗ ಮುದುಕಿಯು ಅವಳನ್ನು ನೈಲ್ ನದಿ ತೀರಕ್ಕೆ ಕರೆದೊಯ್ದು ಯೂಸೂಪ್ ನಬಿ(ಅ)ಯವರ ಶರೀರವನ್ನು ದಫನ ಮಾಡಿದ್ದ ಸ್ಥಳವನ್ನು ತೋರಿಸಿ ಕೊಟ್ಟಳು. ಯೂಸೂಫ್ ನಬಿ(ಅ)ಯವರ ಶರೀರವನ್ನು ನೈಲ್ ನದಿಯ ಮಧ್ಯದಲ್ಲಿ ದಫನ ಮಾಡಲಾಗಿತ್ತು. ಅಲ್ಲಿ ನೋಡಿದಾಗ ಸುತ್ತಲೂ ನೀರಿದ್ದರೂ ಕಬ್'ರ್ ಇರುವಲ್ಲಿ ನೀರು ತಾಗದೆ ಒಣಗಿರುವುದು ಕಾಣಿಸಿತು. ಅಲ್ಲಿ ಅಗೆದು ಪೆಟ್ಟಿಗೆಯೊಳಗೆ ಹಾಕಿ ದಫನ ಮಾಡಿದ್ದು ಗಮನಕ್ಕೆ ಬಂತು. ಆ ಪೆಟ್ಟಿಗೆಯನ್ನು ತೆಗೆದು ತಮ್ಮ ಜೊತೆಗೆ ಇಟ್ಟು ಕೊಂಡರು.

     ಹಾಗೆ ಅವರು ಅಲ್ಲಿಂದ ಲಗು ಬಗೆಯಿಂದ ಮುಂದುವರಿದು ಕೆಂಪು ಸಮುದ್ರದ ತೀರಕ್ಕೆ ತಲುಪಿದಾಗ ಬೆಳಗಾಗಿತ್ತು.

      ಅಷ್ಟರಲ್ಲಿ ಹಿಂದಿನಿಂದ ಫಿರ್'ಔನ್ ಮತ್ತು ಸೈನ್ಯ ಧಾವಿಸಿ ಬರುತ್ತಿರುವುದು ಕಾಣಿಸಿತು. ಎದುರಿಗೆ ಕಡಲು ಬೆನ್ನ ಹಿಂದೆ ಶತ್ರು ಸೈನ್ಯ. ಇಸ್ರಾಯೀಲರಿಗೆ ನಿಜಕ್ಕೂ ಭಯವಾಯಿತು. ನಮ್ಮ ಅಂತ್ಯ ಸಮೀಪಿಸಿತೆಂದೇ ಭಾವಿಸಿದರು. ಅಷ್ಟರಲ್ಲಿ ಆ ಅತ್ಯದ್ಭುತ ಪವಾಡ ನಡೆದಿತ್ತು. ಮೂಸಾ ನಬಿ(ಅ)ಯವರು ಬೆತ್ತದಿಂದ ಕಡಲ ನೀರಿಗೆ ಒಂದೇಟು ಕೊಟ್ಟಾಗ ಕಡಲು ಸೀಳಿ ಉದ್ದಕ್ಕೆ ರಸ್ತೆ ಕಾಣಿಸಿಕೊಂಡಿತು. ಅಗಲವಾದ ರಸ್ತೆ. ಎರಡು ಕಡೆಗಳಿಂದ ನೀರು ಮಂಜುಗಡ್ಡೆಯ ಗೋಡೆಯಂತೆ ನಿಂತುಕೊಂಡಿತ್ತು.

       ಮೂಸಾ ನಬಿ(ಅ) ಮತ್ತು ಇಸ್ರಾಯೀಲರು ಆ ರಸ್ತೆಯ ಮೂಲಕ ಹಾದು ಬಂದು ಈಚೆ ದಡ ಸೇರಿದರು. ಅಲ್ಲಿ ನಿಂತು ತಿರುಗಿ ನೋಡುವಾಗ ಫಿರ್'ಔನ್ ಮತ್ತು ಸೈನ್ಯವು ಆಚೆ ದಡದಲ್ಲಿ ನಿಂತು ಆಕ್ರೋಶಿಸುತ್ತಿರುವುದು ಕಾಣಿಸಿತು. ಆ ರಸ್ತೆಗೆ ಇಳಿದು ಆಚೆ ದಡಕ್ಕೆ ಹೋಗಿ ಅವರನ್ನು ಕೊಂದು ಬರೋಣ ಎಂದು ಫಿರ್'ಔನ್ ಹೇಳಿದಾಗ ಹಾಮಾನನು ಹೇಳಿದನು.

     ಬೇಡ. ಇದರಲ್ಲಿ ಮೂಸಾನ ಏನೋ ಮಾಯಾಜಾಲ ಇರಬಹುದು. ಈಗ ಈ ರಸ್ತೆಗೆ ಇಳಿಯುವುದು ಅಪಾಯ.

      ಈ ಮಾತು ಕೇಳಿ ಫಿರ್'ಔನನು ಇಳಿಯಬೇಕೋ ಬೇಡವೋ ಎಂದು ಶಂಕಿಸಿ ನಿಂತನು. ಇತ್ತ ಮೂಸಾ ನಬಿ(ಅ)ಯವರು ಬೆತ್ತವನ್ನು ಮತ್ತೊಮ್ಮೆ ಬಡಿದು ಸಮುದ್ರವನ್ನು ಪೂರ್ವ ಸ್ಥಿತಿಗೆ ಮರಳಿಸುವ ಯೋಚನೆ ಮಾಡಿದನು. ಶತ್ರುಗಳಿಗೆ ಬರಲು ಸಾಧ್ಯವಾಗದಿರಲಿ ಎಂದಾಗಿತ್ತು ಅವರ ಯೋಚನೆ. ಆದರೆ ಹಾಗೆ ಮಾಡದಿರು, ರಸ್ತೆ ಹಾಗೆಯೇ ಇರಲಿ ಎಂದು ಅಲ್ಲಾಹನು ಸಂದೇಶ ಕಳುಹಿಸಿದನು.

     ಇತ್ತ ಜಿಬ್ರೀಲ್(ಅ) ಎಂಬ ಮಲಕ್ ಒಂದು ಸುಂದರವಾದ ಹೆಣ್ಣು ಕುದುರೆಯ ಮೇಲೆ ಮನುಷ್ಯ ರೂಪದಲ್ಲಿ ಫಿರ್'ಔನನ ಕುದುರೆಯ ಎದುರಿನಿಂದ ಹಾದು ಬಂದು ಕಡಲಿನ ರಸ್ತೆಗೆ ಇಳಿದರು. ಇದನ್ನು ಕಂಡಾಗ ಫಿರ್'ಔನನು ಕೂತಿದ್ದ ಗಂಡು ಕುದುರೆ ಅದರ ಬೆನ್ನಿಗೇ ಇಳಿದು ಜಿಬ್ರೀಲ್(ಅ)ರ ಕುದುರೆಯ ಹಿಂದಿನಿಂದ ಓಡತೊಡಗಿತು. ರಾಜ ಇಳಿದ ನಂತರ ನೋಡುದುಂಟೇ ಸೈನಿಕರೂ ಇಳಿದರು. ಹಾಮಾನ್ ಸಮೇತ ಫಿರ್'ಔನನ ಎಲ್ಲಾ ದುಷ್ಟ ಸಂಗಡಿಗರೂ ಇಳಿದರು. ಸರ್ವರೂ ಆ ರಸ್ತೆಯ ಮೂಲಕ ಬಂದು ನಡುಗಡಲಿಗೆ ತಲುಪಿದ್ದೇ ತಡ! ಭೀಕರ ಸದ್ದಿನೊಂದಿಗೆ ಸಮುದ್ರ ಕೂಡಿಕೊಂಡಿತ್ತು!

      ಇತಿಹಾಸದಲ್ಲೇ ಮಹಾಕ್ರೂರಿಯೆನಿಸಿದ್ದ ಫಿರ್'ಔನ್ ಮುಳುಗಿ ಸತ್ತನು. ಅವನ ಕ್ರೌರ್ಯಕ್ಕೆ ಬೆಂಬಲ ನೀಡಿದವರೂ ಅವನ ಹತ್ತು ಲಕ್ಷ ಸೈನಿಕರೂ ಕೂಡಾ ಅಲ್ಲೇ ಜಲ ಸಮಾಧಿಯಾದರು. ಅತ್ತ ದಡದಲ್ಲಿ ಈ ದೃಶ್ಯವನ್ನು ಮೂಸಾ ನಬಿ(ಅ) ಮತ್ತು ಇಸ್ರಾಯೀಲರು ನೋಡುತ್ತಾ ನಿಂತರು. ನೀರಲ್ಲಿ ಮುಳುಗಿ ಉಸಿರುಗಟ್ಟಿ ತನ್ನ ಅಂತ್ಯ ಸಮೀಪಿಸಿತೆಂದು ತಿಳಿದಾಗ ಫಿರ್'ಔನನು "ಓ ಮೂಸಾ, ನಾನು ನಿನ್ನ ಧರ್ಮಕ್ಕೆ ಸೇರಿದ್ದೇನೆ ಎಂದು ಬೊಬ್ಬೆ ಹಾಕಿದನು. ಆದರೆ ಅಲ್ಲಾಹನ ಶಿಕ್ಷೆ ಬಂದ ನಂತರದ ಈಮಾನ್ ಸ್ವೀಕೃತವಲ್ಲ.

   ‌ಸತ್ಯವಿಶ್ವಾಸ ಸ್ವೀಕರಿಸಿ ಶಾಶ್ವತ ಪೂರ್ಣ ಪಡೆಯುವಂತಾಗಲು ಎಲ್ಲಾ ಅವಕಾಶಗಳನ್ನು ಕಾಲವಳಂಬವನ್ನು ಅಲ್ಲಾಹನು ಫಿರ್'ಔನ್ ಮತ್ತು ಸಂಗಡಿಗರಿಗೆ ನೀಡಿದ್ದನು. ಆದರೆ ಸದನ್ನವರು ಸದುಪಯೋಗ ಪಡಿಸಿಕೊಳ್ಳದೆ ಶಾಶ್ವತ ನರಕವಾಸಿಗಳಾಗಿ ಸತ್ತು ಹೋದರು.

      ಇಸ್ರಾಯೀಲರಲ್ಲಿ ಯೂಸ'ಅ್ ಎಂಬ ಸಾತ್ವಿಕರೊಬ್ಬರಿದ್ದರು. ಅವರು ಮುಂದೆ ಪ್ರವಾದಿಯಾಗಿದ್ದಾರೆ‌. ಮೂಸಾ ನಬಿ(ಅ)ಯವರು ಯೂಸ'ಅ(ಅ)ರವರ ನೇತೃತ್ವದಲ್ಲಿ ಒಂದು ತಂಡವನ್ನು ಮರಳಿ ಈಜಿಪ್ಟಿಗೆ ಕಳುಹಿಸಿದರು. ಫಿರ್'ಔನನ ಅರಮನೆಯಲ್ಲಿ ಕೇವಲ ಐದು ಜನ ಮಾತ್ರ ಇದ್ದರು! ಮೂವರು ಸ್ತ್ರೀಯರು, ಇಬ್ಬರು ಪುರುಷರು. ಇಸ್ರಾಯೀಲರ ತಂಡವು ಫಿರ್'ಔನನ ಸಕಲ ಸೊತ್ತುಗಳನ್ನು ವಶಪಡಿಸಿಕೊಂಡಿತು. ಅರಮನೆಯಲ್ಲಿದ್ದ ಇಬ್ಬರು ಪುರುಷರೂ ಸಾತ್ವಿಕರಾಗಿದ್ದರು. ಅವರಲ್ಲಿ ಒಬ್ಬರನ್ನು ಈಜಿಪ್ಟಿನ ಮುಂದಿನ ರಾಜನಾಗಿ ನಿಯಮಿಸಿ ಇಸ್ಲಾಮೀ ನಿಯಮ ಪ್ರಕಾರ ಆಡಳಿತ ಕ್ರಮವನ್ನು ರೂಪಿಸಿ ಯೂಸ'ಅ(ಅ)ರವರ ನೇತೃತ್ವದ ಇಸ್ರಾಈಲರ ತಂಡವು ಅಲ್ಲಿಂದ ಮರಳಿ ಬಂತು. ಇತ್ತ ಮೂಸಾ ನಬಿ(ಅ)ಯವರು ಶಾಮ್ ದೇಶದಲ್ಲಿ ಇಸ್ರಾಈಲರಿಗೆ ನೆಲೆಯೊದಗಿಸಿದರು. ಜೊತೆಗೆ ತಂದಿಟ್ಟ ಯೂಸುಫ್ ನಬಿ(ಅ)ಯವರ ಪವಿತ್ರ ಶರೀರವನ್ನು ದಫನ ಮಾಡಿಸಿದರು.
   
     ಫಿರ್'ಔನ್ ಮೃತ ದೇಹವನ್ನು ಅಲ್ಲಾಹನು ಇದುವರೆಗೂ ಉಳಿಸಿರುತ್ತಾನೆ. ಇನ್ನು ಕಿಯಾಮತ್ ದಿನದವರೆಗೂ ಈ‌ ಭೂಮಿಯಲ್ಲಿ ಉಳಿಸುತ್ತಾನೆ. ಫಿರ್'ಔನನು ಮುಳುಗಿ ಸಾಯುತ್ತಿರುವ ಸಂದರ್ಭದಲ್ಲಿ "ನಿನ್ನ ದೇಹವನ್ನು ಜನರಿಗೆ ಪಾಠವಾಗುವ ಸಲುವಾಗಿ ಉಳಿಸಲಿದ್ದೇನೆ" ಎಂದು ಅಲ್ಲಾಹನು ಹೇಳಿರುವುದಾಗಿ ಕುರ್'ಆನಿನಲ್ಲಿದೆ. ಹಾಗೆ ಹೇಳಿದಂತೆಯೇ ಅವನ ಮೃತ ದೇಹವು ಕೆಂಪು ಸಮುದ್ರದಲ್ಲಿ‌ ಕೊಳೆಯದೆ ಉಳಿದಿತ್ತು. ಸುಮಾರು ನಾಲ್ಕು ಸಾವಿರ ವರ್ಷಗಳ ಅನಂತರ ಫಿರ್'ಔನನ ಮೃತ ದೇಹ ಪತ್ತೆಯಾಗಿದ್ದು ಈಗಲೂ ಈಜಿಪ್ಟಿನ ಒಂದು ಮ್ಯೂಸಿಯಂನಲ್ಲಿ ಜೋಪಾನವಾಗಿಡಲಾಗಿದೆ. ಈಜಿಪ್ಟಿಗೆ ಹೋದವರು ಈಗಲೂ ಆತನ ಕೊಳೆಯದೆ ಬಾಕಿಯಾಗಿರುವ ಮೃತ ಶರೀರವನ್ನು ನೋಡಿ ಬರುವವರನ್ನು ಕಾಣಬಹುದು.

      ದುರಹಂಕಾರದಿಂದ ಮೆರೆದಾಡಿದ, ಹಣಮದ, ಅಧಿಕಾರ ಮದದಿಂದ ಧಿಕ್ಕಾರ ತೋರಿದುದಲ್ಲದೆ ನಾನು ಉನ್ನತ ದೇವ ಎಂದು ಕೂಡಾ ವಾದಿಸಿದ್ದ ಆ ಪರಮ ನೀಚ, ಧಿಕ್ಕಾರಿಯ ಅಂತಿಮ‌ ಅವಸ್ಥೆ ಏನಾಯಿತು ಎಂಬುದು ಒಂದು ಚಿಂತನಾರ್ಹ ಪಾಠವಾಗಿದೆ. ಈಗಲೂ ಅವನ ಜಡವನ್ನು ಮ್ಯೂಝಿಯಂನಲ್ಲಿ ಕಾಣುವಾಗ ಅವನ ಚರಿತ್ರೆ ಗೊತ್ತಿರುವ ಎಲ್ಲರಿಗೂ ಈ ಚಿಂತನೆ ಮೂಡದೆ ಇರುವುದಿಲ್ಲ. ಶಾಶ್ವತ ನೆಲೆ, ಅಧಿಕಾರ ಅಲ್ಲಾಹನಿಗೆ ಮಾತ್ರ. ಅಲ್ಲಾಹನನ್ನು ಅನುಸರಿಸದ, ಧಿಕ್ಕಾರಿಗಳ ಅವಸ್ಥೆ ಏನು ಎಂಬುದನ್ನು ಲೋಕದ ಕೊನೆಯವರೆಗೂ(ಕಿಯಾಮತ್ ದಿನದ ವರೆಗೂ) ಜನರಿಗೆ ಒಂದು ನಿದರ್ಶನವಾಗಿ ಫಿರ್'ಔನನ ಮೃತ ದೇಹವು ನೆಲೆಗೊಂಡಿದೆ. 
 

ಹೇಳಿರಿ, ಹಬೀಬ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಮೇಲೆ ಸ್ವಲಾತ್
ಸ್ವಲ್ಲಲ್ಲಾಹು ಅಲಾ ಸೈಯ್ಯದಿನಾ ಮುಹಮ್ಮದ್

Madeena Munawara Whatsap group

NOORUL FALAH ISLAMIC ORGANISATION

Comments

Popular posts from this blog

ಆರು ಮತ್ತು ಐದು

ನಸೀಹಾಳ ನಸೀಹತ್