ಕುಂಞಾಲಿ ಮರಕ್ಕಾರ್(ಅರಬ್ಬಿ ಸಮುದ್ರದ ರಕ್ತಸಾಕ್ಷಿ)
بِسْمِ اللهِ الرَّحْمَٰنِ الرَّحِيم ಅರಬ್ಬಿ ಸಮುದ್ರದ ರಕ್ತಸಾಕ್ಷಿ (ಕುಂಞಾಲಿ ಮರಕ್ಕಾರ್) ✒ಹನೀಫ್ ಮುಹಬ್ಬತ್ ಪೊನ್ನಾನಿ ಈ ಹೆಸರು ಕೇಳದವರು ವಿರಳ.ಸ್ವಹಾಬಿಗಳ ಪಾದಸ್ಪರ್ಶದಿಂದ ಪುಳಕಿತಗೊಂಡ ಮಣ್ಣು. ಚರಿತ್ರೆ ಪುಟಗಳಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಠಿಸಿದ ಸುಂದರವಾದ ತಾಣ. ಸಣ್ಣ ಮಕ್ಕಾ ಎಂಬ ಹೆಸರಿನಲ್ಲಿ ಗುರುತಿಸಲ್ಪಡುವ ಪ್ರದೇಶ. ಅಲ್ಲಿಂದ ಮುಂದಕ್ಕೆ ಸಂಚರಿಸಿದರೆ ಕಾಣ ಸಿಗುವ ವರ್ಣರಂಜಿತ ಪ್ರದೇಶವಾಗಿದೆ ವೆಲಿಯಂಗೋಡು ಈ ಹೆಸರು ಕೇಳುವಾಗ ನಮ್ಮೆಲ್ಲರ ಮನಸಲ್ಲಿ ಉದಯಿಸಿ ಬರುವ ಹೆಸರು,ತನ್ನ ಜೀವಿತ ಕಾಲದಲ್ಲೇ ಪ್ರವಾದಿ ಪೈಗಂಬರ್ (ಸ.ಅ) ರ ಅಸ್ತಲಘಾವ ನಡೆಸಿದ ಮಹಾನ್ ಪಂಡಿತ ಇದೀಗ ಅದೇ ಊರಿನಲ್ಲಿ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ಮಹಾನರಾದ ಉಮ್ಮರ್ ಖಾಝಿ ವೆಲಿಯಂಗೋಡು ರವರನ್ನು ಸ್ಮರಿಸುತ್ತಾ.... ಅವರು ಅಂತ್ಯ ವಿಶ್ರಾಂತಿ ಹೊಂದಿರುವ ಸ್ಥಳದಿಂದ ಸ್ವಲ್ಪ ಮುಂದಕ್ಕೆ ಚಲಿಸಿದರೆ ಕಾಣುವ ಸಣ್ಣ ಗುಡಿಸಲು. ಸುಪ್ರಸಿದ್ಧ ಮಾನತ್ತ್ ಪರಂಪರೆಗೆ ಒಳಪಟ್ಟ ಅಬ್ದುಲ್ಲಾ ಆಮಿನಾ ದಂಪತಿಗಳು ವಾಸಿಸುವ ಆ ಮನೆ. ಅತ್ಯಂತ ಸುಂದರವಾದ ಅವರ ದಾಂಪತ್ಯದಲ್ಲಿ ಅವರಿಗೆ ಅಲ್ಲಾಹನು ಒಂದು ಗಂಡು ಮಗುವನ್ನು ಕರುಣಿಸಿದನು. ಅಬ್ದುಲ್ಲಾರವರು ಊರಿನವರ ಹಿರಿಮೆಗೆ ಪಾತ್ರರಾಗಿದ...