ಕುಂಞಾಲಿ ಮರಕ್ಕಾರ್(ಅರಬ್ಬಿ ಸಮುದ್ರದ ರಕ್ತಸಾಕ್ಷಿ)
بِسْمِ اللهِ الرَّحْمَٰنِ الرَّحِيم
ಅರಬ್ಬಿ ಸಮುದ್ರದ ರಕ್ತಸಾಕ್ಷಿ (ಕುಂಞಾಲಿ ಮರಕ್ಕಾರ್)
✒ಹನೀಫ್ ಮುಹಬ್ಬತ್
ಪೊನ್ನಾನಿ ಈ ಹೆಸರು ಕೇಳದವರು ವಿರಳ.ಸ್ವಹಾಬಿಗಳ ಪಾದಸ್ಪರ್ಶದಿಂದ ಪುಳಕಿತಗೊಂಡ ಮಣ್ಣು. ಚರಿತ್ರೆ ಪುಟಗಳಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಠಿಸಿದ ಸುಂದರವಾದ ತಾಣ. ಸಣ್ಣ ಮಕ್ಕಾ ಎಂಬ ಹೆಸರಿನಲ್ಲಿ ಗುರುತಿಸಲ್ಪಡುವ ಪ್ರದೇಶ. ಅಲ್ಲಿಂದ ಮುಂದಕ್ಕೆ ಸಂಚರಿಸಿದರೆ ಕಾಣ ಸಿಗುವ ವರ್ಣರಂಜಿತ ಪ್ರದೇಶವಾಗಿದೆ ವೆಲಿಯಂಗೋಡು
ಈ ಹೆಸರು ಕೇಳುವಾಗ ನಮ್ಮೆಲ್ಲರ ಮನಸಲ್ಲಿ ಉದಯಿಸಿ ಬರುವ ಹೆಸರು,ತನ್ನ ಜೀವಿತ ಕಾಲದಲ್ಲೇ ಪ್ರವಾದಿ ಪೈಗಂಬರ್ (ಸ.ಅ) ರ ಅಸ್ತಲಘಾವ ನಡೆಸಿದ ಮಹಾನ್ ಪಂಡಿತ ಇದೀಗ ಅದೇ ಊರಿನಲ್ಲಿ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ಮಹಾನರಾದ ಉಮ್ಮರ್ ಖಾಝಿ ವೆಲಿಯಂಗೋಡು ರವರನ್ನು ಸ್ಮರಿಸುತ್ತಾ....
ಅವರು ಅಂತ್ಯ ವಿಶ್ರಾಂತಿ ಹೊಂದಿರುವ ಸ್ಥಳದಿಂದ ಸ್ವಲ್ಪ ಮುಂದಕ್ಕೆ ಚಲಿಸಿದರೆ ಕಾಣುವ ಸಣ್ಣ ಗುಡಿಸಲು. ಸುಪ್ರಸಿದ್ಧ ಮಾನತ್ತ್ ಪರಂಪರೆಗೆ ಒಳಪಟ್ಟ ಅಬ್ದುಲ್ಲಾ ಆಮಿನಾ ದಂಪತಿಗಳು ವಾಸಿಸುವ ಆ ಮನೆ.
ಅತ್ಯಂತ ಸುಂದರವಾದ ಅವರ ದಾಂಪತ್ಯದಲ್ಲಿ ಅವರಿಗೆ ಅಲ್ಲಾಹನು ಒಂದು ಗಂಡು ಮಗುವನ್ನು ಕರುಣಿಸಿದನು. ಅಬ್ದುಲ್ಲಾರವರು ಊರಿನವರ ಹಿರಿಮೆಗೆ ಪಾತ್ರರಾಗಿದ್ದ ತನ್ನ ತಂದೆ ಮರಕ್ಕಾರ್ ಎಂಬ ಹೆಸರನ್ನೇ ಆ ಮಗುವಿಗೂ ಇಟ್ಟರು.ಊರಿನವರು ಆ ಮಗುವನ್ನು ಪ್ರೀತಿಯಿಂದ ಕುಂಞಿ ಮರಕ್ಕಾರ್ ಎಂದು ಕರೆಯುತ್ತಿದ್ದರು.
ಅತ್ಯಂತ ಪ್ರೀತಿಯಿಂದ ಲಾಲಿಸಿ ಪ್ರೀತಿಸಿ ತನ್ನ ಮಗುವನ್ನು ಆ ದಂಪತಿಗಳು ಬೆಳೆಸತೊಡಗಿದರು.ಇದ್ದಕ್ಕಿದಂತೆ ಅಬ್ದುಲ್ಲಾರವರಿಗೆ ಏನೋ ಒಂದು ರೀತಿ ಅಸ್ವಸ್ಥತೆ ಕಂಡು ಬಂದು ನೇರ ಹೋಗಿ ಅಲ್ಲಿರುವ ಚಾಪೆಯಲ್ಲಿ ಹೋಗಿ ಮಲಗಿದರು. ನಂತರ ಅಲ್ಲಿಂದ ಅವರಿಗೆ ಎದ್ದೇಳಲು ಸಾದ್ಯವಾಗುತ್ತಿಲ್ಲ.ನನಗೆ ಏನೋ ರೋಗ ಬಾದಿಸಿದೆ ಎಂದು ಖಾತ್ರಿ ಪಡಿಸಿಕೊಂಡರು
ದಿನದಿಂದ ದಿನಕ್ಕೆ ರೋಗವು ಅಧಿಕವಾಗುತ್ತಾ ಹೋಯಿತು ಒಂದೊತ್ತಿನ ಊಟಕ್ಕೂ ಪರದಾಡುವಂತಾಯಿತು. ಹಸಿವಿಗೆ ಬೇರೆ ಯಾವುದೇ ದಾರಿ ಕಾಣದೆ ಆಮಿನರವರು ಬೆಳಗೆದ್ದು ತನ್ನ ಮನೆಯ ಕೆಲಸ ಕಾರ್ಯಗಳನ್ನು ಮುಗಿಸಿ ತನ್ನ ಹಸುಕೂಸನ್ನು ಕಂಕುಳಲೆತ್ತಿಕೊಂಡು ಸುತ್ತಮುತ್ತಲಿನ ಧನಿಕರ ಮನೆಗಳಿಗೆ ತೆರಲಿ ಅಲ್ಪ ಸ್ವಲ್ಪ ಕೆಲಸ ಮಾಡಿ ಬರುವ ವರಮಾನದಿಂದ ಹೊಟ್ಟೆತುಂಬಿಸುತ್ತಿದ್ದರು.
ಆಮಿನಾ ರವರು ದಿನಾಲು ಅಲ್ಲಾಹುವಿನಲ್ಲಿ ಪ್ರಾರ್ಥಿಸುತ್ತಿದ್ದರು ನನ್ನ ಪ್ರಿಯತಮನ ರೋಗ ಸಮನವಾಗಬಹುದು ಎಂಬುವುದು ನನ್ನ ಬರವಸೆ ಇನ್ನು ಸಮನವಾಗದಿದ್ದಲ್ಲಿ ಅವರ ಮರಣವರೆಗೂ ಅವರ ಕೆಲಸಗಳನ್ನು ಮಾಡಿ ತೃಪ್ತಿ ಸಂಪಾದಿಸುವವರ ಸಾಲಲ್ಲಿ ನನ್ನನ್ನು ಸೇರಿಸು.
(ಈ ಒಂದು ಪಾಠ ಎಲ್ಲಾ ಸಹೋದರಿಯರಿಗೂ ಮಾರ್ಗದರ್ಶಕವಾಗಲಿ)
ಕಾಲಚಕ್ರ ಉರುಳುತ್ತಾ ಹೋಯಿತು. ವರ್ಷಗಳು ಮೂರು ಕಳೆಯಿತು. ತನ್ನ ಮಗ ಎದ್ದು ಬಿದ್ದು ನಡೆಯುವುದನ್ನು ಅಬ್ದುಲ್ಲಾರು ಮಲಗಿದ್ದಲ್ಲಿಂದಲೇ ನೋಡುತ್ತಾ ಅವನ ಕೈಹಿಡಿದು ನಡೆಸಲು ನನ್ನಿಂದ ಸಾದ್ಯವಾಗುತ್ತಿಲ್ಲವಲ್ಲ, ಅವನನ್ನು ಎತ್ತಿ ಒಂದು ಮುತ್ತು ಕೊಡಲು ನಾನು ಅಶಕ್ತನಾದೆನಲ್ಲಾ ಕಣ್ಣೀರು ಸುರಿಸುತ್ತಿದ್ದರು.
ಅದೊಂದು ಮಧ್ಯರಾತ್ರಿ ಚಿಮಿನಿ ದೀಪವು ಸ್ವಲ್ಪ ಸ್ವಲ್ಪನೇ ಉರಿಯುತ್ತಿದೆ.ಅಬ್ದುಲ್ಲಾರು ಮಲಗಿದ್ದಲ್ಲಿಂದಲೇ ಏನೇನೋ ಶಬ್ಧ ಹೊರಡಿಸಲು ಶುರುವಿಟ್ಟರು ತಕ್ಷಣ ಎಚ್ಚರವಾದ ಆಮಿನರವರು ಏನಾಯಿತು ನಿಮಗೆ ಎಂದು ಕೇಳಬೇಕಾದರೆ ಅಬ್ದುಲ್ಲಾರವರು ತನ್ನ ಪ್ರಿಯತಮೆಯನ್ನು ಹತ್ತಿರಕ್ಕೆ ಕರೆದು..
ಆಮಿನಾ.. ನಾನಿನ್ನು ಹೆಚ್ಚು ಕಾಲ ಬದುಕಲಾರೆ. ನನ್ನ ಮರಣಾನಂತರ ನೀನು ಇನ್ನೊಂದು ಮದುವೆಗೆ ರೆಡಿಯಾಗದೆ ನಮ್ಮ ಮಗುವನ್ನು ನೀನು ಚೆನ್ನಾಗಿ ನೋಡಿಕೊಳ್ಳಬೇಕು ಅವನನ್ನು ಅಂತ್ಯ ದಿನದವರೆಗೆ ಜನರು ಪ್ರಶಂಸಿಸುವ ದೊಡ್ಡ ಆಲಿಮ್ ಆಗಿ ಬೆಳೆಸಬೇಕು ಎಂಬ ಕಿವಿಮಾತನ್ನು ಹೇಳುತ್ತಾ ಯಾ ಅಲ್ಲಾಹ್ ಎನ್ನುತ್ತಾ ಮಲಗಿದರು.ಅದನ್ನು ಕೇಳಿದ ಆಮಿನಾರವರು ಕಣ್ಣೀರು ಸುರಿಸುತ್ತಾ ತನ್ನ ಪ್ರಿಯತಮನ ಕೈ ಹಿಡಿದು ಇಲ್ಲಾ ನನಗೆ ಇರುಲೋಕದಲ್ಲೂ ನೀವೊಬ್ಬರೆ ಗಂಡ ನಿಮ್ಮ ಸ್ಥಾನ ಬೇರ್ಯಾರಿಗೂ ಬಿಟ್ಟು ಕೊಡಲು ತಯಾರಿಲ್ಲ ಎಂದು ಶಪತ ಮಾಡುತ್ತಾ ಮತ್ತೆ ತನ್ನ ಗಂಡನನ್ನು ಕರೆಯಬೇಕಾದರೆ...
ಇನ್ನೇನೊ ಕೇಳಬೇಕೆಂಬ ಬಯಕೆಯಿಂದ ತನ್ನ ಪ್ರಿಯತಮನನ್ನು ಕರೆಯಬೇಕಾದರೆ ಅವರೇನು ಮಾತಾಡುತ್ತಿಲ್ಲ ಮತ್ತೆ ಮತ್ತೆ ಕರೆದು ನೋಡಿದರು ಯಾವುದೇ ಮರುತ್ತರವಿಲ್ಲ ಅವರ ಕೈ ಕಾಲುಗಳೆಲ್ಲಾ ಅಚಂಚಲವಾಗಿದೆ ಅವರು ಅಲ್ಲಾಹನ ವಿಧಿಗೆ ವಿದೇಯರಾಗಿದ್ದಾರೆ (ಇನ್ನಾಲಿಲ್ಲಾಹಿ ವ ಇನ್ನಾ ಇಲೈಹಿ ರಾಜಿವೂನ್) ಎಂದರಿತ ಆಮಿನಾರವರು ಅವರನ್ನು ತಬ್ಬಿ ಹಿಡಿದು ಜೋರಾಗಿ ಅಳಲಾರಂಭಿಸಿದರು ಆ ಶಬ್ಧ ಕೇಳಿದ ಸುತ್ತಮುತ್ತಲಿನ ಎಲ್ಲರೂ ಬಂದು ಸೇರಿದರು.
ಬೆಳಿಗ್ಗೆಯಾಗುತ್ತಲೇ ದಫನಕ್ಕಾಗಿ ಎಲ್ಲಾ ರೀತಿಯ ತಯಾರು ನಡೆಯತೊಡಗಿತು.ಊರವರು ಸೇರಿ ವೆಲಿಯಂಗೋಡು ಮಕ್ಬರಾದಲ್ಲಿ ಅಬ್ದುಲ್ಲಾರವರನ್ನು ದಫನ ಮಾಡಲಾಯಿತು.
ಆಮಿನಾರವರು ಇದ್ಧಾ ಕುಳಿತರು. ಮೂರು ತಿಂಗಳ ಕಾಲ ತನ್ನ ಪ್ರಿಯತಮನ ಪಾರತ್ರಿಕ ಲೋಕಕ್ಕಾಗಿ ಪ್ರಾರ್ಥಿಸುತ್ತಾ ಕುರ್ಆನ್ ಪಡಿಸುತ್ತಾ ತನ್ನ ಮುರುವರೆ ತಿಂಗಳು ಆ ಸಣ್ಣ ಮನೆಯೊಳಗೆ ತನ್ನ ಮಗುವಿನೊಂದಿಗೆ ಕಳೆದರು. ತನ್ನ ಕುಟುಂಬಸ್ತರು ತಂದು ಕೊಡುತ್ತಿದ್ದ ಆಹಾರವನ್ನು ತನ್ನ ಮಗನಿಗೆ ನೀಡುತ್ತಾ ತಾನು ತಿನ್ನುತ್ತಾ ತನ್ನ ಜೀವನ ಮುಂದುವರೆಸುತ್ತಿದ್ದರು. ಅವರ ಇದ್ಧಾ ಮುಗಿಯಿತು.
ಆಮಿನಾ ಇನ್ನೂ ಯುವತಿ. ಒಂದು ಮಗುವಿನ ತಾಯಿ ಎಂದು ಯಾರು ಹೇಳಲಾರರು.ಆದ್ದರಿಂದಲೇ ಹಲವು ವಿವಾಹ ಅಲೋಚನೆಗಳು ಬರುತ್ತಲೇ ಇತ್ತು. ತನ್ನ ಮಗನಿಗಾಗಿ ಎಲ್ಲವನ್ನೂ ತಡೆಯುತ್ತಿದ್ದರು.
ಹೀಗಿರಲು ಒಂದು ದಿನ ಅವರ ಕುಟುಂಬಸ್ತರಲ್ಲಿ ಒಬ್ಬರು ಆಮಿನಾರವರು ಇದ್ದಾದಲ್ಲಿ ಇದ್ದ ಸಮಯ ಆಹಾರ ಸಮಾಗ್ರಿಗಳನ್ನು ತಂದು ಸಹಾಯ ಮಾಡುತ್ತಿದ್ದವರು ಅಷ್ಟೇ ಮುಂಗೋಪಿಯು ಕೂಡಾ ಅವರು ನೇರ ಆಮಿನಾರವರ ಮನೆಗೆ ಬಂದು ನೋಡು ಆಮಿನ ನಿನಗಾಗಿ ಒಂದು ಒಳ್ಳೆಯ ಸಂಭಂದವನ್ನು ಹುಡುಕಿ ತಂದಿರುವೆನು ನೀನು ಆಲೋಚಿಸು ನಿನ್ನ ಮಗ ಈಗ ಯತೀಂ ಅವನನ್ನು ಇನ್ನು ಸಾಕಲು ನಿನಗೆ ಕಷ್ಟವಾಗಬಹುದು ನೀನು ಇದಕ್ಕೆ ಸಮ್ಮತಿಸುವುದಾದರೆ ಅವರೇ ನಿನ್ನ ಮಗನನ್ನು ಸ್ವಂತ ಮಗನಂತೆ ನೊಡಿಕೊಳ್ಳುವುದಾಗಿ ಬರವಸೆ ನೀಡಿದ್ದಾರೆ ನೀನು ಸಮ್ಮತಿಸುವುದು ನಿನಗೆ ಒಳ್ಳೆಯದು ಇಲ್ಲದಿದ್ದರೆ ನನ್ನ ಸ್ವಭಾವ ನಿನಗೆ ಗೊತ್ತಿದೆಯಲ್ಲಾ ಏನಾದರೂ ತೀರ್ಮಾನಿಸಿ ನಾಳೆ ತಿಳಿಸು ಎಂದು ಬೆದರಿಕೆ ಹಾಕುತ್ತಾ ಹೊರಟರು.
ಅವರ ಬೆದರಿಕೆ ವಾಕ್ಯಗಳು ಮತ್ತೆ ಮತ್ತೆ ಆಮಿನಾರವರ ಕಿವಿಯಲ್ಲಿ ಅಪ್ಪಳಿಸುವಂತೆ ಬಾಸವಾಗುತ್ತಿತ್ತು.
ಆಮಿನಾರವರ ಇಷಾಃ ನಮಾಝ್ ಮುಗಿಸಿ ಎರಡೂ ಕೈಗಳನ್ನು ಮೆಲೆತ್ತಿ ಅಲ್ಲಾಹುವಿನಲ್ಲಿ ಪ್ರಾರ್ಥಿಸತೊಡಗಿದರು. ಆದರೂ ಮನಸ್ಸಿಗೆ ಸಮಾಧಾನವಿಲ್ಲ ಅವರು ಕೂತಲ್ಲಿಂದ ಎದ್ದು ತನ್ನ ನಮಾಝ್ ವಸ್ತ್ರ ಬದಲಾಯಿಸಿ ತನ್ನ ಮಗನನ್ನು ಕಂಕುಲಲ್ಲಿರಿಸಿ ನೇರ ವೆಲಿಂಗೋಡು ಮಕ್ಬರ ಸಮೀಪ ಅಂತ್ಯ ವಿಶ್ರಾಂತಿ ಹೊಂದಿರುವ ತನ್ನ ಪ್ರಿಯತಮನ ಕಬ್ರ್ ಸಮೀಪ ಹೋಗಿ ಅವರಿಗಾಗಿ ಪ್ರಾರ್ಥಿಸಿ ಕಣ್ಣೀರು ಸುರಿಸುತ್ತಾ
"ತಾವು ಯಾಕೆ ನಮ್ಮನ್ನು ಬಿಟ್ಟು ಹೋದಿರಿ ನಾಳೆ ಅವರು ಬಂದು ಕೇಳುವಾಗ ನಾನು ಮದುವೆಯಾಗಲ್ಲ" ಎಂದರೆ ಅವರು ಖಂಡಿತಾ ಕೋಪಗೊಳ್ಳುತ್ತಾರೆ ಅವರ ಪ್ರತಿಕ್ರಿಯೆ ಹೇಗಿರಬಹುದೆಂದು ಊಹಿಸಲು ನನ್ನಿಂದಾಗುತ್ತಿಲ್ಲ ನಾನೇನು ಮಾಡಲಿ ಎಂದು ಹೇಳುತ್ತಾ ಬಿಕ್ಕಿ ಬಿಕ್ಕಿ ಅಳತೊಡಗಿದರು. ಏನೇ ಆಗಲಿ ಇನ್ನು ನನ್ನ ತೀರ್ಮಾನವೇ ಅಂತಿಮ ಎನ್ನುತ್ತಾ ಅಲ್ಲಿಂದ ಹೊರಟರು.
ತಿರುಗಿ ನಡೆದುಕೊಂಡು ಬರಬೇಕಾದರೆ ಮರಣಕ್ಕಿಂತ ಸ್ವಲ್ಪ ಮುಂಚೆ ತನ್ನ ಪ್ರಿಯತಮನು ಆಡಿದ ಮಾತು ತಾನು ನೀಡಿದ ಶಪತ ಎಲ್ಲವೂ ಮತ್ತೆ ಮರುಕಳಿಸತೊಡಗಿತು. ಈಗ ನಾನೊಂದು ತೀರ್ಮಾನಕ್ಕೆ ಬಂದಾಗಿದೆ ಅದರಿಂದ ಯಾವುದೇ ಬದಲಾವಣೆಯಿಲ್ಲ ಎಂದು ಆಲೋಚಿಸುತ್ತಾ ತನ್ನ ಮನೆಗೆ ತಲುಪಿದರು.
ಇಡೀ ನಗರವೇ ನಿದ್ದೆ ಮಂಪರಿನಲ್ಲಿದೆ ಆದರೆ ಆಮಿನಾರವರಿಗೆ ನಿದ್ದೆ ಹತ್ತುತ್ತಿಲ್ಲ ತಾನು ನೀಡಿದ ಶಪತ ನಾನು ಪಾಲಿಸಬೇಕಾ ಅಲ್ಲ ಬೇರೆ ತೀರ್ಮಾನ ಕೈಗೊಳ್ಳಬೇಕಾ ಎಂದು ಆಲೋಚಿಸುತ್ತಾ ನಿದ್ದೆಗೆ ಜಾರಿದರು.
ಸುಬುಹಿ ಬಾಂಗಿಗೆ ಇನ್ನೂ ಸ್ವಲ್ಪ ಹೊತ್ತು ಬಾಕಿಯಿರಬೇಕಾದರೆ ಆಮಿನಾರವರು ಎದ್ದು ತಹಜ್ಜುದ್ ನಮಾಝ್ ನಿರ್ವಹಿಸಿ ಸುಬುಹಿ ಬಾಂಗ್ ಕೇಳಲು ಕಾಯುತ್ತಿದ್ದರೂ ಆಗಲೂ ಮನಸ್ಸಲ್ಲಿ ಏನೋ ಅಚಂಚಲ ನನ್ನ ತೀರ್ಮಾನ ಸರಿಯಾಗಿರಬಹುದೇ..? ಇದರಿಂದ ನನಗೂ ನನ್ನ ಮಗನಿಗೂ ಏನಾದರೂ ತೊಂದರೆಯಾಗಬಹುದೇ...? ಹೀಗೆ ಒಂದರ ಮೇಲೊಂದು ಪ್ರಶ್ನೆಗಳು ಆಮಿನಾರವರ ಮನಸ್ಸಲ್ಲಿ ಉದಯಿಸುತ್ತಲೇ ಇತ್ತು. ಏನೇ ಆಗಲಿ ಇನ್ನು ನನ್ನ ತೀರ್ಮಾನದಲ್ಲಿ ಯಾವುದೇ ಬದಲಾವಣೆ ಇಲ್ಲ ಎನ್ನುತ್ತಾ ಸುಬುಹಿ ನಮಾಝ್ ನಿರ್ವಹಿಸಿ ತನ್ನ ಮನೆಕೆಲಸಕ್ಕಾಗಿ ಶುರುವಿಟ್ಟರು.
ಆಮೀನಾರವರ ಕುಟುಂಬಸ್ತನಾದ ಆತ ಸುಬುಹಿ ನಮಾಝ್ ನಿರ್ವಹಿಸಿ ತನ್ನ ಮನೆಗೆ ತೆರಲುವುದಕ್ಕಿಂತ ಮುಂಚೆ ನೇರ ಆಮೀನಾರವರ ಮನೆಗೆ ಬಂದು.
ಆಮೀನಾ... ಆಮೀನಾ.... ಎಂದು ಕರೆಯಬೇಕಾದರೆ ಏನೋ ಕೆಲಸದಲ್ಲಿದ್ದ ಆಮಿನಾರು ಚಹಾ ತಂದು ಅವರ ಕೈಗಿಟ್ಟರು.
ಆಮಿನಾ ನಿನ್ನಲ್ಲಿ ನಾನು ಒಂದು ಸಂಭಂದದ ಬಗ್ಗೆ ತಿಳಿಸಿದ್ದೆ ಏನಾಯಿತು ನಿನ್ನ ತೀರ್ಮಾನ..
ಅದು....ಅದು....
ಅದು ನನ್ನಿಂದ ಸಾದ್ಯವಿಲ್ಲ. ಇನ್ನೊಂದು ಮದುವೆಗೆ ನಾನು ತಯಾರಿಲ್ಲ ನನ್ನ ಪ್ರಿಯತಮನ ಕೊನೇಯ ವಸಿಯ್ಯತ್ ಕೂಡಾ ಅದಾಗಿತ್ತು ಅದಕ್ಕೆ ನಾನು ಬೇರೆ ಮದುವೆಯಾಗಲ್ಲ ಎಂದು ಶಪತ ಹಾಕಿದ್ದೆ ಅದು ತಪ್ಪಿ ನಡೆಯಲು ನನ್ನಿಂದ ಸಾದ್ಯವಿಲ್ಲ ಎಂದು ಹೇಳುತ್ತಾ ನಿಟ್ಟುಸಿರುಬಿಟ್ಟರು
ಇದನ್ನು ಕೇಳಿದ ಆತ
ನೀನು ನಿನ್ನ ಇಷ್ಟದಂತೆ ನಡಿ ಇನ್ನು ಮುಂದೆ ನಿನಗಾಗಲಿ ನಿನ್ನ ಮಗನಿಗಾಗಲಿ ನನ್ನಿಂದ ಯಾವುದೇ ಸಹಾಯ ಸಿಗಲ್ಲ ಎನ್ನುತ್ತಾ ಕೋಪದಿಂದ ಹೊರಟು ಹೋದರು
ಯಾವುದೇ ಕಲಹ ಮಾಡದೆ ಹೊರಟು ಹೋದರಲ್ವಾ ಎನ್ನುತ್ತಾ ಅಲ್ಲಾಹನಿಗೆ ಶುಕ್ರ್ ಹೇಳುತ್ತಾ ಅಲ್ಲಾಹುವೆ ಯಾರೂ ನನ್ನ ಸಹಾಯಕ್ಕೆ ಬರದಿದ್ದರೂ ನಿನ್ನ ಸಹಾಯ ಎಂದಿಗೂ ಇರಲಿ ಎಂದು ಮನಸಲ್ಲೆ ಪ್ರಾರ್ಥಿಸಿಕೊಂಡರು.
ಕಾಲಚಕ್ರ ಉರುಳುತ್ತಾ ಹೋಯಿತು ಕುಞಾಲಿ ಮರಕ್ಕಾರಿಗೆ ಐದು ವರ್ಷವಾದಾಗ ಮದ್ರಸಕ್ಕೆ ಸೇರಿಸಿದರು. ಎಲ್ಲಾ ವಿಷಯ ಕಲಿಯುವುದರಲ್ಲಿ ಮುಂದಿದ್ದ ಅವರಿನ್ನು ಮದ್ರಸ ಉಸ್ತಾದರೂ ಹೆಚ್ಚಾಗಿ ಪ್ರೀತಿಸುತ್ತಿದ್ದರು.
(ತನ್ನ ಆರನೇ ವಯಸ್ಸಿನಲ್ಲಿ ಖುರ್ಆನ್ ಪರಿಪೂರ್ಣವಾಗಿ ಕಂಠಪಾಠ ಮಾಡಿದರು ಎಂದು ಚರಿತ್ರೆ ಪುಟಗಳಲ್ಲಿ ಕಾಣಬಹುದು)
ದಿನಗಳು ಉರುಳುತ್ತಾ ಹೋಯಿತು ಕುಞಾಲಿ ಮರಕ್ಕಾರ್ ರವರಿಗೆ ಹತ್ತು ವರ್ಷ ತುಂಬಿತು. ಆ ಸಮಯದಲ್ಲಿ ಅಬ್ದುಲ್ಲಾರವರಿಗಿದ್ದ ಅದೇ ರೋಗ ಆಮಿನಾರವರಿಗೂ ಬಾದಿಸತೊಡಗಿತು. ತಿನ್ನಲು ಆಹಾರಕ್ಕಾಗಿ ಪರದಾಡುವಂತಾಯಿತು ಕುಟುಂಬಸ್ತರು ಯಾರೂ ಸಹಾಯಕ್ಕಾಗಿ ಮುಂದಾಗಲಿಲ್ಲ ಅದಕ್ಕೆ ಕಾರಣವು ಇತ್ತು ಆಮಿನಾರಿಗೆ ಮರುಮದುವೆ ಒತ್ತಾಯಿಸಿದಾಗ ಅದನ್ನು ತಿರಸ್ಕರಿಸಿದ್ದು ಎಲ್ಲರನ್ನು ಕೋಪಗೊಳ್ಳುವಂತೆ ಮಾಡಿತ್ತು
ದಿನಗಳು ಉರುಳುತ್ತಾ ಹೋಯಿತು ಕುಞಾಲಿ ಮರಕ್ಕಾರ್ ರವರಿಗೆ ಹತ್ತು ಆಹಾರಕ್ಕಾಗಿ ಪರದಾಡುವಂತಾಯಿತು ಕುಟುಂಬಸ್ತರು ಯಾರೂ ಸಹಾಯಕ್ಕಾಗಿ ಮುಂದಾಗಲಿಲ್ಲ ಅದ.
ಹೀಗಿರಲು ಒಂದು ತನ್ನ ಮಗನಾದ ಮರಕ್ಕಾರವರನ್ನು ಹತ್ತಿರಕ್ಕೆ ಕರೆದು ಮಗನೇ..ಇಷ್ಟರ ತನಕ ನನಗೆ ಆರೋಗ್ಯವಿತ್ತು ನಾನು ದುಡಿದು ನಿನ್ನನ್ನು ಸಾಕಿದೆ ಇನ್ನು ದುಡಿಯುವ ಶಕ್ತಿ ನನ್ನ ಕೈಕಾಲುಗಳಿಗಿಲ್ಲ ನೀನು ಕಲಿತದ್ದು ಸಾಕು ನಾಳೆಯಿಂದ ನೀನು ಮೀನು ಮಾರುವ ಕೆಲಸಕ್ಕೆ ಹೋಗಬೇಕು.ಇದನ್ನು ಕೇಳಿದ ಕುಞಾಲಿ ಮರಕ್ಕಾರ್ ರವರು ತಲೆ ಅಲ್ಲಾಡಿಸುತ್ತಾ ನೇರ ತನ್ನ ಉಸ್ತಾದರ ಬಳಿಗೆ ತೆರಳಿದರು
ಉಸ್ತಾದ್..
ನನ್ನ ಅಮ್ಮನಿಗೆ ಹುಷಾರಿಲ್ಲ ಅವರಿಗೆ ಎದ್ದು ನಡೆದಾಡುವುದಕ್ಕೆ ಆಗುವುದಿಲ್ಲ ಒಂದೊತ್ತಿನ ಊಟಕ್ಕೂ ಗತಿ ಇಲ್ಲದಂತಾಗಿದೆ ಆದ್ದರಿಂದ ನಾಳೆಯಿಂದ ನಾನು ಮದ್ರಸಕ್ಕೆ ಬರುವುದಿಲ್ಲ ವ್ಯಾಪಾರಕ್ಕೆ ತೆರಳಲು ನನ್ನ ಅಮ್ಮ ನಿರ್ದೇಶಿಸಿದ್ದಾರೆ.ಇದನ್ನು ಕೇಳಿದ ಉಸ್ತಾದ್.
ಆಯ್ತು ಮಗನೇ ಎಲ್ಲದಕ್ಕಿಂತಲೂ ಮೊದಲಾಗಿ ಅಮ್ಮನ ಮಾತು ಕೇಳಬೇಕು ನಿನಗೆ ಏಲ್ಲಾ ರೀತಿಯ ಅರಿವು ಕಲಿತಾಗಿದೆ ಅಲ್ಲಾಹು ನಿನ್ನನ್ನು ಅನುಗ್ರಹಿಸಲಿ ಎಂದು ಹೇಳಿ ಕಳುಹಿಸಿದರು.
ಉಸ್ತಾದರ ಆರ್ಶಿವಾದ ಪಡೆದು ಮನೆಗೆ ಹಿಂತಿರುಗಿ ತನ್ನ ಅಮ್ಮನನ್ನು ಶುಶ್ರೂಸೆ ನಡೆಸಿ ಅಮ್ಮನ ಕೈಯಿಂದ ಸ್ವಲ್ಪ ಹಣವನ್ನು ಪಡೆದು ಕೊಂಡು ಕೈಯಲ್ಲಿ ಒಂದು ಬುಟ್ಟಿ ಹಿಡಿದು ನೇರ ಪೊನ್ನಾನಿ ದಕ್ಕೆಗೆ ಹೊರಟರು.
ಅಲ್ಲಿಗೆ ತಲುಪಿದಾಗ....
ತನ್ನ ಒಂದು ಕೈಯಲ್ಲಿ ತಾಯಿ ನೀಡಿದ ಹಣ ಮತ್ತೊಂದು ಕೈಯಲ್ಲಿ ಒಂದು ಬುಟ್ಟಿ ಹಿಡಿದು ಪೊನ್ನಾನಿ ಸಮುದ್ರದ ಕಿನಾರೆಗೆ ಬಂದು ತಲುಪಿದಾಗ ಅಲ್ಲಿ ನೆರೆದಿರುವವರು ಮರಕ್ಕಾರ್ ರವರನ್ನೇ ನೋಡತೊಡಗಿದರು.
ಯಾರು ಈ ಸುಂದರ ಬಾಲಕ.?
ಇವನ್ಯಾಕೆ ಬುಟ್ಟಿ ಹಿಡಿದು ಕೊಂಡು ಇಲ್ಲಿಗೆ ಬಂದಿರಬಹುದು..?
ಎಂದು ಅವರೆಲ್ಲಾ ಆಲೋಚಿಸುತ್ತಿರುವಾಗ ಒಬ್ಬರು ಮರಕ್ಕಾರ್ ರವರನ್ನು ಕರೆದು
ಮಗನೇ.. ಇಲ್ಲಿಗೆ ಬಾ ನಿನಗೆ ಬೇಕಾದ ಮೀನು ನಾನು ಕೊಡುವೆ (ಯಾವುದೇ ದಕ್ಕೆಗೆ ಹೋದರು ಅಲ್ಲಿನ ವ್ಯಾಪಾರಸ್ಥರು ಅವರಿಗೆ ಉಚಿತವಾಗಿ ಮೀನು ಕೊಟ್ಟು ಕಳುಹಿಸುತ್ತಾರೆ ಅದೇ ರೀತಿ ತನ್ನ ಮನೆಗೆ ಬೇಕಾದ ಮೀನು ಕೊಂಡು ಹೋಗಲು ಬಂದಿರಬಹುದೆಂದು ಎಲ್ಲರೂ ಭಾವಿಸಿದ್ದರು)
ಇದನ್ನು ಕೇಳಿದ ಮರಕ್ಕಾರ್ ಇಲ್ಲ ಕಾಕ ನಾನು ಹಾಗೆ ಉಚಿತವಾಗಿ ಮೀನು ಕೊಂಡು ಹೋಗಲು ಬಂದದ್ದಲ್ಲ ನಾನು ಮೀನು ವ್ಯಾಪಾರ ಮಾಡಲು ಬಂದಿರುವೆ ಎಂದಾಗ ಎಲ್ಲರೂ ಅಚ್ಚರಿಗೊಂಡರು.
ಏನಪ್ಪಾ ಹೇಳ್ತಿದ್ದಿಯಾ..?
ಮೀನು ವ್ಯಾಪರನಾ..?
ಇಷ್ಟು ಸಣ್ಣ ವಯಸ್ಸಿನಲ್ಲಿ..?
ಹೌದು...!ನಾನೊಬ್ಬ ಯತೀಂ ನನಗೆ ತಂದೆಯಿಲ್ಲ. ನನ್ನ ತಾಯಿ ರೋಗವತಿ. ಅವರನ್ನು ಸಾಕುವುದು ನನ್ನ ಕರ್ತವ್ಯ ನನಗೆ ಇದಲ್ಲದೆ ಬೇರ್ಯಾವ ದಾರಿ ಕಾಣುತ್ತಿಲ್ಲ..ಎನ್ನುತ್ತಾ ತನ್ನ ಕೈಯಲ್ಲಿದ್ದ ಹಣದಿಂದ ಮೀನು ಖರೀದಿಸಿ ಬುಟ್ಟಿಯಲ್ಲಿ ತುಂಬಿಸಿ ತಲೆ ಮೇಲೆ ಹೊತ್ತು ನಡೆಯತೊಡಗಿದರು.
ಹಳ್ಳಿ ಹಳ್ಳಿಗಳ ಕಾಲುದಾರಿಯಲ್ಲಿ ಕಲ್ಲು ಮುಳ್ಳುಗಳನ್ನು ಮೆಟ್ಟಿ ಮೀನು...ಮೀನು ಬೇಕಾ...?
ಎಂದು ತನ್ನ ಪುಟ್ಟ ಸ್ವರದಿಂದ ಕೂಗುತ್ತಾ ನಡೆಯತೊಡಗಿದರು.
ಮೀನು ಮುಗಿದ ತಕ್ಷಣ ಸಂತೋಷದಿಂದ ಓಡೋಡಿ ಮನೆಗೆ ಬಂದು ವ್ಯಾಪಾರದಲ್ಲಿ ಬಂದ ಲಾಭವನ್ನು ತನ್ನ ತಾಯಿಯ ಕೈಯಲ್ಲಿ ಇಟ್ಟಾಗ ಆ ಹೆತ್ತ ಹೃದಯದ ಸಹನೆಯ ಕಟ್ಟೆ ಒಡೆಯಿತು.
ಕಣ್ಣೀರು ದಾರೆ ದಾರೆಯಾಗಿ ಹರಿಯತೊಡಗಿತು. ಮಲಗಿದ್ದಲ್ಲಿಂದಲೇ ತನ್ನ ಮಗನನ್ನು ಅಪ್ಪಿ ಹಿಡಿದು ಧರ ಧರಾನೇ ಮುತ್ತು ಕೊಟ್ಟರು. ಆಗ ಮರಕ್ಕಾರ್ ರವರು ತಾಯಿಯನ್ನು ಸಮಾಧಾನ ಪಡಿಸುತ್ತಾ ತನ್ನ ಕಾಯಕದಲ್ಲಿ ತೊಡಗಿದರು.
ದಿನಗಳು ಉರುಳುತ್ತಾ ಹೋಯಿತು. ತನ್ನ ವ್ಯಾಪರ ಚೆನ್ನಾಗಿ ನಡೆಯುತ್ತಿತ್ತು. ಕೆಲವು ಮಹಿಳೆಯರು ನಮಗೆ ಯತೀಂ ಹುಡುಗನ ಮೀನು ಸಾಕೆಂದು ಮರಕ್ಕಾರ್ ಬರುವ ದಾರಿಯನ್ನು ಕಾಯುತ್ತಿದ್ದರು.
ಆದರೆ
ಅದೇ ದಾರಿಯಲ್ಲಿ ಮೀನು ಮಾರುವ ವ್ಯಾಪರಸ್ಥರಿಗೆ ಮರಕ್ಕಾರ್ ರವರ ಮೇಲೆ ಹೊಟ್ಟೆಗಿಚ್ಚು ಅಸೂಯೆ ಶುರುವಾಯಿತು. ಅವರು ಮರಕ್ಕಾರ್ ರವರನ್ನು ತರಾಟೆಗೆ ತೆಗೆದುಕೊಂಡರು ಅದು ನಮ್ಮ ವ್ಯಾಪರದ ದಾರಿ ಆ ದಾರಿಯಲ್ಲಿ ಇನ್ನು ವ್ಯಾಪರಕ್ಕಾಗಿ ನೀನು ಬರಬಾರದು ಎಂದು ಬೆದರಿಸಿದರು.
ಪಾಪ...!? ಮರಕ್ಕಾರ್ ಇನ್ನೂ ಸಣ್ಣ ಬಾಲಕ ಅವರ ಬೆದರಿಕೆಗೆ ಹೆದರಿ ಆ ದಾರಿ ಬಿಟ್ಟು ಬೇರೆ ದಾರಿಗಳಲ್ಲಿ ಸಂಚರಿಸತೊಡಗಿದರು. ಹೋದ ಕಡೆಯೆಲ್ಲಾ ಒಬ್ಬೊಬ್ಬರು ಬೆದರಿಸತೊಡಗಿದರು ಮರಕ್ಕಾರ್ ರವರಿಗೆ ದಾರಿ ತೋಚದಾಯಿತು.
ನನ್ನ ವ್ಯಾಪರ ಚೆನ್ನಾಗಿ ನಡೆಯದಿದ್ದರೆ ಊಟಕ್ಕೂ ಗತಿಯಿಲ್ಲ ತಾಯಿಯ ಮದ್ದಿಗೂ ದಾರಿಯಿಲ್ಲ ಎನ್ನುತ್ತಾ ವ್ಯಾಪರಕ್ಕಾಗಿ ಬೇರೊಂದು ದಾರಿ ಹುಡುಕತೊಡಗಿದರು.
ಮರುದಿನ ಮೀನು ತುಂಬಿಸಿಕೊಂಡು ಹಲವು ದಾರಿಗಳ ಮೂಲಕ ನಡೆದಾಡಿದರು. ವ್ಯಾಪರ ಸ್ವಲ್ಪ ಕಡಿಮೆಯಾಗಿತ್ತು. ಬುಟ್ಟಿಯಲ್ಲಿ ಇನ್ನೂ ತುಂಬಾ ಮೀನು ಬಾಕಿ ಇತ್ತು ಹೇಗಾದರೂ ಮೀನು ಮುಗಿಸಬೇಕೆಂಬ ಹಠದಿಂದ ಜೋರಾಗಿ ಮೀನು....ಮೀನೂ....ಎಂದು ಕೂಗುತ್ತಾ ನಡೆದರು
ಆದರೆ ಅವರು ಧ್ವನಿ ಎತ್ತಿ ಹೋಗುತ್ತಿದ್ದದ್ದು ಮಹಾನರಾದ ಶೈಖ್ ಝೈನುದ್ದೀನುಲ್ ಮಖ್ದೂಂ(ಖ.ಸಿ) ತಂಗಳ್ ರವರು ತರಗತಿ ನಡೆಸುತ್ತಿದ್ದ ಪೊನ್ನಾನಿ ಮಸೀದಿಯ ಮುಂಬಾಗದಲ್ಲಾಗಿತ್ತು.
ಈ ಶಬ್ಧ ಕೇಳಿ ಕೋಪಗೊಂಡ ಶೈಖ್ ಮಖ್ದೂಂ (ಖ.ಸಿ) ಅವನನ್ನು ಇಲ್ಲಿಗೆ ಕರೆದುಕೊಂಡು ಬಾ ಎಂದು ಶಿಷ್ಯನನ್ನು ಕಳುಹಿಸಿದರು.
(ಪೊನ್ನಾನಿ ಮಸೀದಿ ಅಂದರೆ ಒಂದೇ ಒಂದು ಮರದಿಂದ ನಿರ್ಮಿಸಿದ ದೊಡ್ಡ ಕರಾಮತ್ ನ ಮಸೀದಿ ಅದರ ಸುತ್ತ ಮುತ್ತ ದ್ವನಿ ಎತ್ತಿ ಮಾತನಾಡುವುದು ಅಂದು ಇಂದು ನಿಷಿದ್ಧವಾಗಿದೆ ಇದರಿಂದಾಗಿದೆ ಶೈಖ್ ಮಖ್ದೂಂ (ಖ.ಸಿ) ತಂಙಳ್ ರವರು ಕೋಪಗೊಳ್ಳಲು ಕಾರಣ)
ಮಖ್ದೂಂ ತಂಙಳ್ ನನ್ನನ್ನು ಕರೆಯುತ್ತಿದ್ದಾರೆ ಎಂದರಿತ ಮರಕ್ಕಾರ್ ರವರು ಹೆದರಿಕೆಯಿಂದ ತಂಙಳ್ ರವರ ಹತ್ತಿರಕ್ಕೆ ಬಂದರು
ದೂರದಿಂದ ಬರುತ್ತಿದ್ದ ಕುಞಾಲಿ ಮರಕ್ಕಾರ್ ರವರನ್ನು ನೋಡಿದ ಮಖ್ದೂಂ ತಂಙಳ್ ರವರು ಮೂಕವಿಸ್ಮಿತರಾಗಿ...
ಕುಂಞಾಲಿ ಮರಕ್ಕಾರ್ ರವರನ್ನು ನೋಡಿದ ಶೈಖ್ ಮಖ್ದೂಂ ತಂಙಳ್ ರವರು ಮೂಕವಿಸ್ಮಿತರಾಗಿ ನೋಡತೊಡಗಿದರು..!
ಏನಿದು ಅದ್ಬುತ..!?
ಯಾರೀ ಬಾಲಕ..!?
ಅವರಿಗೆ ಆಶ್ಚರ್ಯ ತೋರಲು ಕಾರಣವು ಇತ್ತು
ಮಹಾನರಾದ ಕುಂಞಾಲಿ ಮರಕ್ಕಾರ್ ರವರು ನಡೆದು ಕೊಂಡು ಬರಬೇಕಾದರೆ ಅವರು ಮುಂದೆ ನಡೆಯುತ್ತಿದ್ದಾರೆ ಅವರ ತಲೆಯಲ್ಲಿರುವ ಬುಟ್ಟಿ ಹಿಂದಿನಿಂದ ಬರುವುದಾಗಿ ಶೈಖ್ ಮಖ್ದೂಂ ತಂಙಳ್ ರವರು ಕಾಣುತ್ತಾರೆ
ಯಾರು ನೀನು..?
ಇದು ಮಸೀದಿ ಎಂಬ ಜ್ಞಾನವಿಲ್ಲವೇ..?
ಮಸೀದಿಯ ಮುಂಭಾಗದಲ್ಲಿ ಧ್ವನಿ ಎತ್ತಿ ಮಾತನಾಡಬಾರದೆಂಬ ಅರಿವಿಲ್ಲವೇ..?
ಎಂದು ಶೈಖ್ ರವರು ಕೇಳಿದಾಗ..
ಓ ಮಹಾನರೆ ನನಗೆ ಕ್ಷಮಿಸಿ ನಾನೊಬ್ಬ ಯತೀಂ. ನನ್ನ ಹೆಸರು ಮರಕ್ಕಾರ್. ನಾನು ಸಮೀಪದ ವೆಲಿಯಂಗೋಡು ಸ್ವದೇಶಿ. ನನ್ನ ತಂದೆ ಮರಣಹೊಂದಿ ಎಂಟು ವರ್ಷ ಕಳೆಯಿತು. ನನ್ನ ತಾಯಿ ರೋಗಬಾದಿತರಾಗಿ ಮನೆಯಲ್ಲಿದ್ದಾರೆ. ಅವರಿಗೆ ಎದ್ದು ನಡೆಯುವ ಶಕ್ತಿಯಿಲ್ಲ. ನಾನು ಕೆಲವು ದಿನಗಳಿಂದ ಮೀನು ವ್ಯಾಪಾರ ಮಾಡಿ ಬರುವ ವರಮಾನದಿಂದ ನನ್ನ ಮತ್ತು ತಾಯಿಯ ಹೊಟ್ಟೆ ತುಂಬುತ್ತಿದೆ.
ಇವತ್ತು ಈ ಮೀನು ತಲೆಮೇಲೆ ಇಟ್ಟು ತುಂಬಾ ಸಮಯವಾಯಿತು, ಇನ್ನೂ ಮುಗಿದಿಲ್ಲ ಇದು ಹಾಳಾದರೆ ಮತ್ತೆ ಇದನ್ನು ಮಾರಲು ಸಾದ್ಯವಿಲ್ಲ ಇದು ಮಾರಾಟವಾಗದಿದ್ದರೆ ಇಂದು ಹಸಿವೇ ನಮ್ಮ ಗತಿ. ಇದನ್ನು ಬೇಗ ಮುಗಿಸಿ ಮನೆಗೆ ಹೋಗಿ ತಾಯಿಯನ್ನು ಶುಶ್ರೂಸಿಸಬೇಕು.ಆ ಆವೇಶದಿಂದ ನಾನು ಜೋರಾಗಿ ಕರೆಯುತ್ತಾ ನಡೆಯಬೇಕಾದರೆ ನನಗೆ ಮಸೀದಿಯ ನೆನಪು ಬಂದಿಲ್ಲ ಕ್ಷಮಿಸಿ ಶೈಖ್ ರವರೇ..ಎಂದು ಬೇಡಿಕೊಂಡರು.
ಇದನ್ನು ಕೇಳಿದ ಶೈಖ್ ಮಖ್ದೂಂ ತಂಙಳ್ ರವರು ಮರಕ್ಕಾರ್ ರವರನ್ನು ಸಮಾಧಾನ ಪಡಿಸುತ್ತಾ ನಿನ್ನ ಬುಟ್ಟಿಯಲ್ಲಿರುವ ಮೀನಿನ ಬೆಲೆ ಎಷ್ಟೆಂದು ಕೇಳಿದರು ಅದನ್ನು ಸಂಪೂರ್ಣವಾಗಿ ಖರೀದಿಸಿ ಅಲ್ಲಿನ ಮುಹಝ್ಝಿನ್ ರವರನ್ನು ಕರೆದು ಇದನ್ನು ಹತ್ತಿರದ ಮನೆಗಳಿಗೆ ಹಂಚಿ ಬನ್ನಿ ಎಂದು ಹೇಳಿ ಕಳುಹಿಸಿದರು
ನಂತರ ಮರಕ್ಕಾರ್ ರವರನ್ನು ತನ್ನ ಹತ್ತಿರಕ್ಕೆ ಕರೆದು ನೀನು ಈ ವ್ಯಾಪಾರ ಮಾಡಿ ನಡೆದಾಡಬೇಕಾದವನಲ್ಲ. ನೀನೊಬ್ಬ ದೊಡ್ಡ ವಿದ್ವಾಂಸನಾಗಬೇಕಾದವನು, ಆ ಒಂದು ಕಲೆ ನಿನ್ನ ಮುಖದಲ್ಲಿ ನನಗೆ ಕಾಣುತ್ತಿದೆ. ನೀನು ನಾಳೆಯಿಂದ ನನ್ನ ಕ್ಲಾಸಿಗೆ ಬರಬೇಕು. ನಿನ್ನ ತಾಯಿಯ ರೋಗಕ್ಕೆ ಮದ್ದು ನಾನು ನೀಡುವೆ ನಿನ್ನ ತಾಯಿಯ ಆಹಾರ ಅದಕ್ಕೂ ನಾನು ವ್ಯವಸ್ತೆ ಮಾಡುವೆ. ಎನ್ನುತ್ತಾ ಒಂದು ಪಾತ್ರದಲ್ಲಿ ನೀರು ತೆಗೆದು ಮಂತ್ರಿಸಿ ಇದನ್ನು ನೀನು ನಿನ್ನ ತಾಯಿಗೆ ಕುಡಿಯಲು ಕೊಡು ಅವರ ಎಲ್ಲಾ ರೋಗವು ಇದರಿಂದ ಗುಣವಾಗುವುದು ಎಂದು ಹೇಳಿ ಕಳುಹಿಸಿದರು.
ಶೈಖ್ ಮಖ್ದೂಂರು ನೀಡಿದ ನೀರನ್ನು ತನ್ನ ಎರಡು ಕೈಯಲ್ಲಿ ಹಿಡಿದು ಹಿಂತಿರುಗಿದರು (ಮರಕ್ಕಾರ್ ಹಿಂತಿರುಗಿ ಬರಬೇಕಾದರೆ ಶೈಖ್ ರವರು ತನ್ನ ಹತ್ತಿರ ಇದ್ದ ಮುಹಝ್ಝಿನ್ ರವರಲ್ಲಿ ಅವನೊಬ್ಬ ಶಹೀದ್ ಆಗಿ ಮರಣಹೊಂದುವವನಾಗಿದ್ದಾನೆ ಎಂದು ಹೇಳಿದ್ದರು ಎಂದು ಚರಿತ್ರೆ ಪುಟಗಳಲ್ಲಿ ಕಾಣಬಹುದು ಅದು ಅವರ ಕರಾಮತ್ತ್ ಆಗಿತ್ತು)
ತನ್ನ ಮನೆಗೆ ತಲುಪಿ ಆ ನೀರನ್ನು ತಾಯಿಯ ಬಾಯಿಗೆ ಸ್ವಲ್ಪ ಸ್ವಲ್ಪನೇ ಕುಡಿಸುತ್ತಾ ನಡೆದ ವಿವರಗಳನ್ನೆಲ್ಲಾ ವಿವರಿಸತೊಡಗಿದರು. ಇದನ್ನು ಕೇಳುವಾಗ ತಾಯಿಯ ಕಣ್ಣಿನಿಂದ ಕಣ್ಣೀರು ದಾರೆ ದಾರೆಯಾಗಿ ಸುರಿಯತೊಡಗಿತು.
ಇದನ್ನು ಗಮನಿಸಿದ ಮರಕ್ಕಾರ್
ಏನಮ್ಮ ಏನಾಯ್ತು ಯಾಕೆ ಅಳುತ್ತಿದ್ದೀರಾ..!?
ಎಂದು ಕೇಳಿದಾಗ
ಮೋನೇ... ಅಂತ್ಯದಿನದ ವರೇಗೂ ಜನರ ಆದರಿಸುವಂತಹ ದೊಡ್ಡ ಆಲಿಮ್ ನಿನಾಗಬೇಕೆಂಬುವುದು ನಿನ್ನ ತಂದೆಯ ಅಂತ್ಯಾಬಿಲಾಸೆಯೂ ಆಗಿತ್ತು.ಆದರೆ ನಮ್ಮ ಹೊಟ್ಟೆಪಾಡಿಗಾಗಿ ಬೇರೆ ದಾರಿ ಕಾಣದೆ ನಿನ್ನನ್ನು ವ್ಯಾಪರಕ್ಕಾಗಿ ಕಳುಹಿಸಬೇಕಾಯಿತು. ಈಗ ನಿನ್ನ ತಂದೆಯ ಆಸೆ ನೆರವೇರುತ್ತೆ ಅಂದಾಗ ನನಗರಿವಿಲ್ಲದೆ ನನ್ನ ಕಣ್ಣಿಂದ ನೀರು ಬಂತು ಎಂದು ಹೇಳುತ್ತಾ ತನ್ನ ಸೆರಗಿನಿಂದ ಕಣ್ಣೀರು ಒರೆಸಿಕೊಂಡರು.
ಮರುದಿನ ಬೆಳಗ್ಗೆಯಾಗುತ್ತಲೇ ಕುಂಞಾಲಿ ಮರಕ್ಕಾರ್ ಬೇಗನೆ ಎದ್ದು ತನ್ನ ತಾಯಿಯನ್ನು ಎಬ್ಬಿಸಿ (ಶೈಖ್ ಮಖ್ದೂಂ ತಂಙಳ್ ರವರು ನೀಡಿದ ನೀರಿನಿಂದ ಆಮಿನಾರವರು ಸಂಪೂರ್ಣ ಗುಣಮುಖರಾದರು) ತನ್ನ ತಾಯಿಯ ಆಶಿರ್ವಾದ ಪಡೆದು ಸುಬುಹಿ ನಮಾಝಿಗಾಗಿ ನೇರ ಪೊನ್ನಾನಿ ಮಸೀದಿಗೆ ಹೊರಟರು.
ಮಸೀದಿಗೆ ತಲುಪಿ ನಮಾಝ್ ನಿರ್ವಹಿಸಿದ ನಂತರ ನೇರ ಶೈಖ್ ರವರ ಹತ್ತಿರ ಬಂದು ನಿಂತಾಗ ಅಲ್ಲಿದ್ದ ಒಂದು ಪಾತ್ರೆಯನ್ನು ತೆಗೆದು ಮರಕ್ಕಾರ್ ರವರ ಕೈಗೆ ನೀಡಿ (ಶೈಖ್ ಮಖ್ದೂಂ ತಂಙಳ್ ರವರಿಗೆ ಎಲೆ ಅಡಿಕೆ ಜಗಿಯುವ ಹಾವ್ಯಸ ಇತ್ತು.ಹಾಗೆ ರಾತ್ರಿ ಜಗಿದು ಉಗುಳಿದ ಪಾತ್ರೆಯಾಗಿತ್ತು ಅದು)
ಇದನ್ನು ಜನರು ಯಾರೂ ಕಾಣದ ಜಾಗದಲ್ಲಿ ಚೆಲ್ಲಿ ಬಾ ಎಂದು ಕಳುಹಿಸಿದರು.
ಮರಕ್ಕಾರ್ ಆ ಪಾತ್ರೆಯನ್ನು ಕೈಯಲ್ಲಿ ಹಿಡಿದು ಮಸೀದಿಯ ಸುತ್ತಮುತ್ತಾ ನಡೆದಾಡಿದರು ಎಲ್ಲಿ ನೋಡಿದರು ಜನರು ನಡೆದಾಡುವ ಸ್ಥಳ ಜನರು ಕಾಣದ ಸ್ಥಳದಲ್ಲಿ ಇದನ್ನು ಚೆಲ್ಲಲು ಹೇಳಿದ್ದಾರೆ ಎಂದು ಆಲೋಚಿಸುತ್ತಾ ನಡೆಯಬೇಕಾದರೆ...
ಉಸ್ತಾದರು ಹೇಳಿದ ಹಾಗೆ ಇಲ್ಲೆಲ್ಲೂ ಜನರೂ ಕಾಣದ ಸ್ಥಳವಿಲ್ಲ ಎಂದು ಆಲೋಚಿಸುತ್ತಾ ನಡೆಯಬೇಕಾದರೆ ತಕ್ಷಣ ಒಂದು ಉಪಾಯ ಹೊಳೆಯಿತು. ಇನ್ನೇನು ಚಿಂತಿಸದೆ ಕಣ್ಣು ಮುಚ್ಚಿ ಎತ್ತಿ ಕುಡಿದರು (ಅದು ಮರಕ್ಕಾರ್ ರವರ ಬಾಯಿಗೆ ಜೇನಿಗಿಂತಲೂ ಸಿಹಿಯಾಗಿತ್ತು ಎಂದು ಚರಿತ್ರೆಯಲ್ಲಿ ಉಲ್ಲೇಖಿಸಲಾಗಿದೆ)
ನಂತರ ಅದನ್ನು ಸ್ವಚ್ಛಗೊಳಿಸಿ ಮಖ್ದೂಂ ತಂಙಳ್ ರವರ ಮುಂದೆ ಬಂದು ನಿಂತರು.
ತಂಙಳ್ ರವರು ಕೇಳಿದರು
ಹೋ ಚೆಲ್ಲಿದೆಯಾ... ಜನರು ಯಾರೂ ಕಾಣಲ್ಲ ಅಲ್ವಾ....
ಇಲ್ಲ ಖಂಡಿತ ಇಲ್ಲಾ ಯಾವುದೆ ಜನರಿಗೂ ಕಾಣಲು ಸಾದ್ಯವಿಲ್ಲ..
ಅಂತಹ ಜಾಗ ಈ ಪರಿಸರದಲ್ಲಿ ಎಲ್ಲಿದೆ ಎಂದು ತಂಙಳ್ ರವರು ಪ್ರಶ್ನಿಸಿದಾಗ.
ಹೆದರುತ್ತಾ..
ಇಲ್ಲಾ ಶೈಖ್ ರವರೇ ನಾನು ಈ ಮಸೀದಿಯ ಸುತ್ತ ಮುತ್ತ ಎಲ್ಲಿ ನೋಡಿದರು ಉಪೇಕ್ಷಿಸಲು ಸ್ಥಳ ಕಾಣಲಿಲ್ಲ ಆದ್ದರಿಂದ ಅದನ್ನು ನಾನು ಕುಡಿದೆ ಎಂದು ಹೆದರಿಕೆಯಿಂದಲೇ ಹೇಳಿದರು
ಇದನ್ನು ಕೇಳಿದ ಶೈಖ್ ರವರು ಅಲ್ಲಾಹು ನಿನ್ನನ್ನು ಅನುಗ್ರಹಿಸಲಿ ಎಂದು ಬೆನ್ನು ತಟ್ಟಿ ಕಳುಹಿಸಿದರು.
ಕಾಲಚಕ್ರ ಉರುಳುತ್ತಾ ಹೋಯಿತು ಮರಕ್ಕಾರ್ ರವರು ಶೈಖ್ ಝೈನುದ್ದೀನ್ ಮಖ್ದೂಂರ ದರ್ಸಿನಲ್ಲಿ ಉಸ್ತಾದರ ಪ್ರೀತಿಯ ಶಿಷ್ಯನಾಗಿ ಸಹಪಾಠಿಗಳಿಗೆ ಆತ್ಮೀಯ ಗೆಳೆಯನಾಗಿ ಊರವರಿಗೆ ಆದರಿಸುವ ಮುತಅಲ್ಲಿಂ ಆಗಿ ಸುದೀರ್ಘವಾದ ತನ್ನ ಎಂಟು ವರ್ಷಗಳನ್ನು ಪೂರ್ತಿಗೊಳಿಸಿದರು ಆ ಸಮಯದಲ್ಲಿ ತಫ್ಸೀರ್ ಮಿಷ್ಕಾತ್ ಗಳಂತಹ ಕಿತಾಬುಗಳನ್ನು ಓದಿ ಮುಗಿಸಿದರು.
ಅದೊಂದು ದಿನ ತನ್ನ ದರ್ಸಿನ ಬಿಡುವಿನಲ್ಲಿ ತಾಯಿಯನ್ನು ನೋಡಲೆಂದು ಮನೆಗೆ ಬಂದರು
ಆಗ ತಾಯಿ ಮಗನನ್ನು ಹತ್ತಿರ ಕರೆದು
ಮಗನೇ...
ನನಗೆ ನನ್ನ ಸೊಸೆಯನ್ನು ನೋಡುವ ಆಸೆಯಾಗಿದೆ ನನ್ನ ಮರಣಕ್ಕಿಂತ ಮುಂಚೆ ನಿನ್ನ ಮದುವೆಯನ್ನು ಕಣ್ಣಾರೆ ನೋಡಿ ಆನಂದಿಸಬೇಕೆಂಬ ಆಸೆ ಇದೆ ನಿನಗಾಗಿ ನಾನೊಂದು ಹೆಣ್ಣು ಹುಡುಕಲಾ...? ಎಂದು ಕೇಳಿದಾಗ ಮರಕ್ಕಾರ್ ರವರು ಅಮ್ಮಾ ನನಗೆ ಹತ್ತು ನಿಮಿಷ ಸಮಯ ನೀಡು ನನ್ನ ಅಭಿಪ್ರಾಯ ತಿಳಿಸುವೆ ಎಂದಾಗ ಆಮಿನಾರವರು ಹೂಂ ಗುಟ್ಟರು.
ಮಹಾನರಾದ ಕುಞಾಲಿ ಮರಕ್ಕಾರ್ ಮನೆಯಿಂದ ಹೊರಟು ಸ್ವಲ್ಪ ಜೋರಾಗಿ ನಡೆಯತೊಡಗಿದರು ಆಮಿನಾರವರು ಆಲೋಚಿಸತೊಡಗಿದರು..! ಇಷ್ಟೊಂದು ಜೋರಾಗಿ ಎಲ್ಲಿಗೆ ಹೊರಟಿರಬಹುದು.?
ನಾನು ಕೇಳಿದ್ದು ಬೇಸರವಾಗಿರಬಹುದೆ..?
ಆ ಕೋಪದಿಂದ ಹೊರಟದ್ದಾಗಿರಬಹುದೇ..?
ಈಗೆ ಹಲವು ಆಲೋಚನೆಗಳು ಆಮಿನಾರ ಮನಸ್ಸಲ್ಲಿ ಉದಯಿಸತೊಡಗಿತು.
ಮನೆಯಿಂದ ಹೊರಟ ಮರಕ್ಕಾರ್ ನೇರ ಮಹಾನರಾದ ಶೈಖ್ ಝೈನುದ್ದೀನ್ ಮಖ್ದೂಂ ರ ಸನ್ನಿದಿಗೆ ಬಂದು
ನನ್ನ ತಾಯಿ ನನ್ನ ವಿವಾಹದ ಬಗ್ಗೆ ಪ್ರಸ್ತಾಪವಿಟ್ಟಿದ್ದಾರೆ ನಾನು ಏನು ಮರುತ್ತರ ನೀಡಲಿ ನಾನು ಅದಕ್ಕೆ ಸಮ್ಮತಿಸಲೇ...ಎಂದು ಕೇಳಿದಾಗ
ಓ ಮರಕ್ಕಾರ್ ನಿನ್ನ ಸ್ವರ್ಗವು ನಿನ್ನ ತಾಯಿಯ ಪಾದದಲ್ಲಾಗಿದೆ ಅವರ ಮನಸ್ಸು ನೊಯಿಸಿದರೆ ಅಲ್ಲಾಹನು ಮೆಚ್ಚಲ್ಲ.
ಅವರ ಮುಂದೆ ಛೆ ಎಂಬ ಮಾತನ್ನು ಉಚ್ಚರಿಸಬಾರದು. ಇದೆಲ್ಲಾ ನೀನು ಕಲಿತ ವಿಷಯವಲ್ಲವೇ ಮತ್ತೆ ಈ ವಿಷಯ ನನಲ್ಲಿ ಕೇಳುವ ಅಗತ್ಯವೇನಿದೆ.
ಹಾಗಲ್ಲ ಉಸ್ತಾದ್ ನನಗೆ ಎಲ್ಲದಕ್ಕೂ ನಿಮ್ಮ ಆಶಿರ್ವಾದ ಬೇಕು. ಎಂದಾಗ ಅಲ್ಲಾಹು ನಿನ್ನನ್ನು ಅನುಗ್ರಹಿಸಲಿ ಎಂದು ತಲೆ ಮೇಲೆ ಕೈ ಇಟ್ಟು ಮಂತ್ರಿಸಿ ಕಳುಹಿಸಿದರು.
ಹಿಂತಿರುಗಿ ಮನೆಗೆ ತಲುಪಿದ ಮರಕ್ಕಾರ್ ತಾಯಿಯ ಹತ್ತಿರಕ್ಕೆ ಬಂದು ಅಮ್ಮಾ ನನ್ನ ಸಮ್ಮತಿ ಇದೆ ಇಸ್ಲಾಮಿನ ಚೌಕಟ್ಟಿನಲ್ಲಿ ಬೆಳೆದು ಬಂದ ಒಳ್ಳೆಯ ಪರಂಪರೆ ಇರುವ ಹುಡುಗಿಯನ್ನು ಹುಡುಕಿ ಕೊಡಿ ಎಂದು ಹೇಳಿದರು.
ಆಮಿನಾರವರು ಹುಡುಕತೊಡಗಿದರು ಹಣವಂತೆ ಅಥವಾ ಪ್ಯಾಶನ್ ಹುಡುಗಿಯನ್ನಲ್ಲ ಮರಕ್ಕಾರ್ ಹೇಳಿದಂತೆ ಬಡತನದಲ್ಲಿ ಬೆಳೆದು ಬಂದ ದೀನೀ ಭೊದವುಳ್ಳ ಹುಡುಗಿಯನ್ನು ಹುಡುಕುವಲ್ಲಿ ಕೊನೇಗೂ ಸಫಲತೆಯನ್ನು ಕಂಡರು. ಅವಳೇ.. ಅಸ್ಮಾ..
ಅಸ್ಮಾ..ಅತ್ಯಂತ ಸುಂದರಿ.ಒಳ್ಳೆಯ ಕುಟುಂಬ ಪರಂಪರೆಯಲ್ಲಿ ಬೆಳೆದವಳು. ಕುರ್ಆನಿನ ಅಧಿಕ ಭಾಗವು ಕಂಠಪಾಠ ಮಾಡಿದವಳು ಅರಿವಿನ ವಿಚಾರದಲ್ಲಿ ಮರಕ್ಕಾರ್ ರವರೊಂದಿಗೆ ಸರಿಸಾಟಿಹೊಂದುವ ಜೋಡಿ.
ಮರುದಿನ ಬೆಳಗ್ಗೆಯಾಗುತ್ತಲೇ ಮಗನನ್ನು ಹತ್ತಿರಕ್ಕೆ ಕರೆದು ಮಗನೇ ನೀನು ಆಶಿಸಿದಂತೆ ಒಂದು ಹೆಣ್ಣನ್ನು ನಾನು ಹುಡುಕಿರುವೆನು.ನೀನು ಹೋಗಿ ನೋಡಿ ಬರಬೇಕು.ಎಂದಾಗ
ಉಮ್ಮಾ..ನೀವು ನೋಡಿದ ಮೇಲೆ ನಾನು ನೋಡುವ ಅಗತ್ಯವಿಲ್ಲ ಆದರೂ ಪ್ರವಾದಿ (ಸ.ಅ)ರ ಸುನ್ನತಾದ್ದರಿಂದ ನೋಡಿ ಬರುವೆ. ಮಾತ್ರವಲ್ಲ ಅವಳಲ್ಲಿ ನಾನು ಮೂರು ಪ್ರಶ್ನೆ ಕೇಳುವೆ ಅದಕ್ಕೆ ಸರಿಯಾದ ಉತ್ತರ ನೀಡಿದರೆ ಮಾತ್ರ ನಾನು ಈ ಮದುವೆಗೆ ಸಮ್ಮತಿಸುವೆ. ಎಂದಾಗ
ಆಮಿನಾರವರಿಗೆ ಹೆದರಿಕೆ ಹುಟ್ಟಲು ಸುರುವಾಗತೊಡಗಿತು.
ಹೆಣ್ಣು ನೋಡಲು ಹೋಗುವ ದಿನ ನಿಶ್ಚಯವಾಯಿತು.
ಆಮಿನಾರವರ ಎದೆಯಲ್ಲಿ ನಡುಕವು ಶುರುವಾಯಿತು.
ಅಲ್ಲಾಹುವೇ ಎಲ್ಲಾ ನಿನ್ನ ಕೈಯಲ್ಲಿದೆ ಎನ್ನುತ್ತಾ ಮಗನೊಂದಿಗೆ ಹೆಣ್ಣುನೋಡುವ ಸಂಪ್ರದಾಯಕ್ಕೆ ಹೊರಟರು.
(ಇಂದಿನ ಕಾಲದ ಹೆಣ್ಣು ನೋಟವು ಬಹಳ ಅಶ್ಲೀಲಗಳಿಂದ ಕೂಡಿದಾಗಿದ್ದು ಅಂತಹ ಹೆಣ್ಣುನೋಟಕ್ಕೆ ಕಡಿವಾಣ ಹಾಕಬೇಕಾಗಿದೆ.
ಹೆಣ್ಣು ನೋಡುವುದು ಸುನ್ನತಾಗಿರುತ್ತದೆ
ಅಲ್ಲಿ ನೋಡಲು ಇಸ್ಲಾಂ ಅನುಮತಿಸಿದ್ದು ಅವಳ ಕೈ ಮತ್ತು ಮುಖ ಮಾತ್ರ
ಕಾರಣ ಒಂದು ಹೆಣ್ಣಿನ ಮುಖ ನೋಡಿದರೆ ಅವಳ ಸೌಂದರ್ಯವು ಕೈ ನೋಡಿದರೆ ಅವಳ ಸ್ವಭಾವು ಸ್ಪಷ್ಟವಾಗುವುದು ಎಂದು ಇಸ್ಲಾಂ ಕಲ್ಪಿಸಿದೆ.
ಅದು ಮದುವೆಯಾಗುವ ಮದುಮಗನಿಗೆ ಮಾತ್ರ ನೋಡಲು ಅನುಮತಿಯಿರುವುದು.
ಅಲ್ಲದೆ ಅವನೊಂದಿಗೆ ಬಂದ ಸ್ನೇಹಿತರಿಗೆಲ್ಲಾ ಹೆಣ್ಣನ್ನು ತೋರಿಸಿಕೊಡುವುದು ವಿರೋದಿಸಬೇಕು.
ಅದೇ ರೀತಿ ಇಬ್ಬರು ಒಟ್ಟಿಗೆ ನಿಂತು ಫೋಟೋ ಕಿಕ್ಲಿಸಿ ಸಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದು ಕೂಡಾ ಅನಿಸ್ಲಾಮಿಕವಾಗಿದೆ)
ಮರಕ್ಕಾರ್ ಮತ್ತು ಅವರ ತಾಯಿ ಆಮಿನಾರವರು ನಡೆದು ನಡೆದು ಅಸ್ಮಾರವರ ಮನೆಗೆ ತಲುಪಿದರು.
ಅಸ್ಮಾ ಕೈಯಲ್ಲಿ ಚಾಹ ಹಿಡಿದು ನಾಚಿಕೆಯಿಂದ ತಲೆ ತಗ್ಗಿಸಿ ನಿಂತರು
ಮರಕ್ಕಾರ್ ಒಮ್ಮೆ ತಲೆ ಎತ್ತಿ ಅಸ್ಮಾರ ಮುಖನೋಡಿ ನಿನ್ನ ಹೆಸರೇನು.?ನೀನಗೆ ಕುರ್ಆನ್ ಓದಲು ಬರುತ್ತಾ ಯಾವ ಮಾಲೆ ನಿನಗೆ ಕಂಠಪಾಠವಿದೆ ಎಂದೆಲ್ಲಾ ಕೇಳಿದಾಗ ಎಲ್ಲದಕ್ಕೂ ಸತ್ಯವಾದ ಉತ್ತರವನ್ನು ನೀಡಿದರು.
ಮತ್ತೆ ಮರಕ್ಕಾರ್ ನೋಡು ಅಸ್ಮಾ ನಿನಲ್ಲಿ ನನಗೆ ಮೂರು ಪ್ರಶ್ನೆ ಕೇಳಲಿಕ್ಕಿದೆ ಅದಕ್ಕೆ ಸರಿಯಾದ ಉತ್ತರ ನೀಡಿದರೆ ಮಾತ್ರ ಈ ಮದುವೆ ನಡೆಯಬಹುದು.
ಇದನ್ನು ಕೇಳಿದ ಅಸ್ಮಾರ ಮನಸ್ಸಲ್ಲಿ ನಡುಕವುಂಟಾಯಿತು
ಅಸ್ಮಾ ಮನಸ್ಸಲ್ಲೆ ಪ್ರಾರ್ಥಿಸತೊಡಗಿದರು ಇವರೊಬ್ಬರು ದೊಡ್ಡ ವಿಧ್ವಾಂಸ ಅವರ ಪ್ರಶ್ನೆಗೆ ಉತ್ತರಿಸುವ ಶಕ್ತಿ ನೀಡು ಅಲ್ಲಾಹ್..
(ಇಲ್ಲಿ ಮರಕ್ಕಾರ್ ಕೇಳುವ ಪ್ರಶ್ನೆ ನಿಮಗೆಲ್ಲಾ ಅತ್ಯಂತ ಮೃದುವಾಗಿ ತೋಚಬಹುದು ಆದರೆ ಚಿಂತಿಸುವವರಿಗೆ ಹಲವಾರು ಪಾಠಗಳಿವೆ.ದಾಂಪತ್ಯ ಜೀವನದಲ್ಲಿ ಈ ಮೂರು ಕಾರ್ಯವು ಅತ್ಯಂತ ಮಹತ್ವಪೂರ್ಣವಾಗಿದೆ)
ಮರಕ್ಕಾರ್ ಕೇಳತೊಡಗಿದರು.
ಅಸ್ಮಾ
ಒರ್ವ ಮದುಮಗ ರೂಮಿಗೆ ಪ್ರವೇಶಿಸಿ ಮಾತು ಶುರುಮಾಡಿದರೆ ಮದುಮಗಳು ಮೊದಲನೇಯದಾಗಿ ಆಡುವ ಮಾತು ಯಾವುದು..?
ಅಸ್ಮಾ ಆಲೋಚಿಸತೊಡಗಿದಳು. ಅವಳು ಪ್ರಶ್ನೆಯನ್ನು ಇನ್ನೊಮ್ಮೆ ಆವರ್ತಿಸಳು ಹೇಳಿದಾಗ ಮರಕ್ಕಾರ್ ಅದೇ ಪ್ರಶ್ನೆಯನ್ನು ಕೇಳುತ್ತಾರೆ ಆಗ ಅಸ್ಮಾಳು ನಯವಾಗಿ ಉತ್ತರಿಸುತ್ತಾಳೆ
ವ ಅಲೈಕುಂ ಸಲಾಂ
ಮರಕ್ಕಾರ್ ಮಾತು ಮುಂದುವರೆಸುತ್ತಾ ಕೇಳುತ್ತಾರೆ
ಎಷ್ಟು ತುಂಬಿಸಿದರೂ ತುಂಬದ ಪಾತ್ರೆ ಯಾವುದು..?
ಅಸ್ಮಾ ಉತ್ತರಿಸುತ್ತಾಳೆ
ಮನುಷ್ಯನ ಹೊಟ್ಟೆ
ಮರಕ್ಕಾರ್ ಕೊನೆದಾಗಿ ಕೇಳುತ್ತಾರೆ
ನಮಗೆ ಬೇಕೆಂದರೂ ಮತ್ತೆ ಸಿಗದ ವಸ್ತು ಯಾವುದು..?
ಅಸ್ಮಾಳು ನಗುತ್ತಾ ಉತ್ತರಿಸುತ್ತಾಳೆ
ಅದು ಸಮಯ
ಅಸ್ಮಾಳ ಉತ್ತರ ಕೇಳಿ ಮರಕ್ಕಾರ್ ರವರಿಗೆ ಸಂತೋಷವಾಯಿತು ಮದುವೆಯ ದಿನ ನಿಶ್ಚಯವು ಆಯಿತು ಮಗ್ರಿಬ್ ನಮಾಝಿನ ನಂತರ ಮಸೀದಿಯಲ್ಲಿ ನಿಖಾಹ್ ಎಂದು ತೀರ್ಮಾನಿಸಲಾಯಿತು.
ವದುದಕ್ಷಿಣೆಯನ್ನು ತೀರ್ಮಾನಿಸಲಾಯಿತು.
(ಪ್ರವಾದಿ ಪೈಗಂಬರ್(ಸ.ಅ)ರ ಕಾಲದಿಂದ ಚಾಲ್ತಿಯಲ್ಲಿದ್ದ ವದುದಕ್ಷಿಣೆ ಎಂಬ ಸುಂದರ ಪದ್ಧತಿಯನ್ನು ಹೊಸ ತಲೆಮಾರು ವರದಕ್ಷಿಣೆ ಎಂಬ ನೀಚ ಅನಿಷ್ಠ ಪದ್ದತಿ ರೂಡಿ ಮಾಡಿದ್ದು ಖೇದಕರ.
ಇದರಿಂದಾಗಿ ಬೀದಿಗೆ ಬಂದ ಕುಟುಂಬ ಹಲವಾರು.
ಕಣ್ಣೀರಿನಿಂದ ಕೈತೊಳೆಯುವ ಸಹೋದರಿಯರು ನೂರಾರು.
ಸ್ವಂತ ಮದುವೆಯ ಖರ್ಚಿಗೆ ವರದಕ್ಷಿಣೆ ಬೇಡುವ ಬಿಕ್ಷುಕನಿಗೆ ನಿಮ್ಮ ಮಗಳನ್ನು ಕೊನೆತನಕ ನೋಡುವ ಶಕ್ತಿ ಇರಲ್ಲ ಎಂಬುವುದು ನೆನಪಿಸಿಕೊಳ್ಳಿ.)
ದಿನಗಳು ಉರುಳುತ್ತಾ ಹೋಯಿತು ಮದುವೆ ದಿನ ಸಮೀಪವಾಯಿತು.
ಮನೆಯ ಸುತ್ತಲೂ ತೆಂಗಿನ ಗರಿಯಿಂದ ನೇಯ್ದ ಚಪ್ಪರ ಹಾಕಲಾಗಿದೆ.ಸಂಬ್ರಮದ ವಾತಾವರಣ ಸೃಷ್ಠಿಯಾಗಿದೆ. ಹೆಣ್ಣಿನ ಕುಟುಂಬಸ್ಥರು ಹೆಣ್ಣಿನ ಮನೆಯಲ್ಲೂ ಗಂಡಿನ ಕುಟುಂಬಸ್ಥರು ಅಲ್ಲೂ ಸೇರಿದ್ದಾರೆ
ಅಸ್ಮಾಳ ಸ್ನೇಹಿತರು ಅವಳನ್ನು ವಸ್ತ್ರ ದರಿಸುತ್ತಾ ಕೈ ಮೆಹಂದಿ ಹಚ್ಚುತ್ತಾ ತಮಾಷೆಯ ಮಾತುಗಳನ್ನಾಡುತ್ತಾ ನಗಿಸುತ್ತಿದ್ದಾರೆ
ಇತ್ತ ಕಡೆ ಮಸೀದಿಯಲ್ಲಿ ಸ್ವಲ್ಪ ಗಂಡಸರು ಮದುಮಗನಿಗಾಗಿ ಕಾಯುತ್ತಿರಬೇಕಾದರೆ...
ಮಸೀದಿಯಲ್ಲಿ ಎಲ್ಲರೂ ನೆರೆದಿದ್ದಾರೆ. ಮದುಮಗನಿಗಾಗಿ ಕಾಯುತ್ತಿದ್ದಾರೆ. ಅಲ್ಲಿ ನೆರೆದವರಿಗೆ ಊಟದ ವ್ಯವಸ್ಥೆ ಅಲ್ಲೆ ಮಾಡಲಾಗಿದೆ. ಮದುಮಗನಿಗಾಗಿ ಕಾಯುತ್ತಿದ್ದಾರೆ.
ಕೆಲವು ಸ್ನೇಹಿತರು ಸೇರಿ ಮದುಮಗನನ್ನು ಕರೆದುಕೊಂಡು ಬರುತ್ತಾರೆ. ಮದುಮಗನ ಮುಖ ಪಳಪಳ ಹೊಳೆಯುತ್ತಿದೆ. ಅಂದಿನ ರಾತ್ರಿಯ ಪೂರ್ಣ ಚಂದ್ರನು ನಾಚುವಂತಿದೆ.
ಮದುಮಗನಾದ ಮರಕ್ಕಾರ್ ನೇರ ಮಸೀದಿ ಪ್ರವೇಶಿಸಿ ವುಝೂ ಮಾಡಿ ಎರಡು ರಕಅತ್ ನಮಾಝ್ ನಿರ್ವಹಿಸಿ ನಿಖಾಹ್ ಗಾಗಿ ಕುಳಿತರು
ನಿಖಾಹ್ ನೆರವೇರಿತು. ಎಲ್ಲರ ಮುಖದಲ್ಲೂ ಸಂತೋಷದ ಚಾಯೆ. ಅಲ್ಲಿನ ಉಸ್ತುವಾರಿಗಳು ಎಲ್ಲರನ್ನು ಊಟಕ್ಕೆ ಕರೆಯುತ್ತಿದ್ದಾರೆ ಎಲ್ಲರೂ ಹೋಗಿ ಊಟಕ್ಕೆ ಕುಳಿತಿದ್ದಾರೆ ಮರಕ್ಕಾರ್ ರವರನ್ನು ಕೆಲವು ಸ್ನೇಹಿತರು ಸೇರಿ ಊಟಕ್ಕೆ ಕುಳಿಸಿದ್ದಾರೆ ಅಡುಗೆಯವರು ಒಂದೊಂದೇ ಪಾತ್ರದಲ್ಲಿ ಆಹಾರ ಬಡಿಸಲು ಶುರುವಿಟ್ಟಿದ್ದಾರೆ.ಇನ್ನೇನೋ ಊಟದ ಪಾತ್ರಕ್ಕೆ ಕೈ ಹಾಕಬೇಕೆನ್ನುವಷ್ಠರಲ್ಲಿ ದೂರದಿಂದ ಒಂದು ವೃದ್ಧ ಓಡಿ ಬಂದು.
ಓ ಸಹೋದರರೇ.....
:ನಮ್ಮ ಅಲಿಕ್ಕಾರವರ ಮಗಳು ಫಾತಿಮಾಳು ಬಟ್ಟೆ ಹೊಗೆಯುವ ಸಮಯದಲ್ಲಿ ಪಿರಂಗಿಗಳು ಎತ್ತಿಕೊಂಡು ಹೋಗಿದ್ದಾರೆ ಯಾರಾದರೂ ಅವಳನ್ನು ರಕ್ಷಿಸಿ ಎಂದು ಶಬ್ಧವೆತ್ತಿ ಆರ್ಭಟಿಸುತ್ತಾ ಬೇಡಿಕೊಂಡರು.
ಯಾರೂ ಏನೂ ಮಾತಾಡುತ್ತಿಲ್ಲ ಎಲ್ಲರೂ ಮುಖ ಮುಖ ನೋಡುತ್ತಿದ್ದಾರೆ.
ಕೆಲವರು ಕೇಳಿಯೂ ಕೇಳಿಸದಂತೆ ಮತ್ತೆ ಊಟದ ಪಾತ್ರಕ್ಕೆ ಕೈ ಹಾಕಲು ಅನಿಯಾಗುತ್ತಾರೆ.
ಇದನ್ನು ನೋಡಿ ಕಣ್ಣೀರು ಸುರಿಸುತ್ತಾ ಓ ಸಹೋದರರೇ ಇಲ್ಲಿ ಯಾರೂ ಗಂಡಸರು ಇಲ್ಲವೇ ಇದ್ದರೆ ಆ ಹೆಣ್ಣನ್ನು ರಕ್ಷಿಸಲು ಹೋಗಿ ಎಂದು ಕಣ್ಣೀರು ಸುರಿಸತೊಡಗಿದರು
ಇದನ್ನು ಕೇಳಿದ ಮರಕ್ಕಾರ್ ನಾನು ಬರುವೆ ಅವಳನ್ನು ರಕ್ಷಿಸಳು ಎಂದು ಊಟಕ್ಕೆ ಕೂತಲ್ಲಿಂದ ಎದ್ದರು.
ಗೆಳೆಯರೆಲ್ಲಾ ತಡೆದರೂ ಅವರು ಅದಕ್ಕೆ ಕಿವಿಗೊಡದೆ ಅಲ್ಲಿಂದ ಓಡತೊಡಗಿದರು.
ಈ ವಿಷಯ ಅಸ್ಮಾರವರ ಕಿವಿಗೂ ಬಿತ್ತು ಯಾ ಅಲ್ಲಾಹ್ ಎಂದು ಉದ್ಗರಿಸುತ್ತಾ ಅಲ್ಲೆ ಕುಸಿದು ಬಿದ್ದರು.
ಸ್ವಲ್ಪ ಸಮಯದ ನಂತರ ಎಚ್ಚರವಾದಾಗ ನೇರ ತನ್ನ ನಮಾಝಿನ ಮುಸಲ್ಲಾ ತೆಗೆದು ಅಲ್ಲಾಹನಿಗಾಗಿ ಸುಜೂದ್ ನಿರ್ವಹಿಸುತ್ತಾ ತನ್ನ ಪ್ರಿಯತಮನಿಗಾಗಿ ಪ್ರಾರ್ಥಿಸತೊಡಗಿದರು.
ಮದುವೆಯ ಊಟದ ಸ್ಥಳದಿಂದ ಎದ್ದ ಮರಕ್ಕಾರ್ ನೇರ ತನ್ನ ಮನೆಗೆ ತೆರಳಿದರು.
ದೂರದಿಂದ ಓಡಿ ಬರುತ್ತಿರುವ ತನ್ನ ಮಗನನ್ನು ನೋಡಿದ ಆಮಿನಾರವರು ಮರಕ್ಕಾರ್ ರವರ ಹತ್ತಿರಕ್ಕೆ ಬಂದು
ಏನಾಯಿತು ಮೋನೆ..?
ನಿಖಾಹ್ ಮುಗಿಯಿತಾ...?
ನಿನ್ಯಾಕೆ ಒಬ್ಬನೇ ಬಂದಿರುವೆ..?
ಅಸ್ಮಾ ಎಲ್ಲಿ..?
ನಿನ್ನ ಗೆಳೆಯೆರೆಲ್ಲಾ ಎಲ್ಲಿ...?
ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಸುರಿಯತೊಡಗಿದರು.
ಮರಕ್ಕಾರ್ ಸ್ವಲ್ಪ ಸಾವರಿಸಿಕೊಂಡು
ಉಮ್ಮಾ
ನಮ್ಮ ಅಲಿಕ್ಕಾರವರ ಮಗಳು ಫಾತಿಮಾಳನ್ನು ಪಿರಂಗಿಗಳು ಎರಗಿಸಿಕೊಂಡು ಹೋಗಿದ್ದಾರೆ. ಅವಳನ್ನು ರಕ್ಷಿಸಲು ಹೊರಟಿರುವೆ. ನೀವು ಆಶಿರ್ವದಿಸಬೇಕು. ಎಂದು ಹೇಳುತ್ತಾ ನಿಟ್ಟುಸಿರುಬಿಟ್ಟರು.
ಇದನ್ನು ಕೇಳಿದ ಆಮಿನಾರವರು..
ಏನು ಹೇಳ್ತಿದ್ದೀಯಾ ನೀನು ಇವತ್ತು ನಿನ್ನ ಮದುವೆ ಎಂಬ ಪರಿಜ್ಞಾನವಿಲ್ಲವೆ.? ನಿನಗಾಗಿ ಒಂದು ಕಾಯುತ್ತಿದ್ದಾಳೆ ಎಂಬ ನೆನಪಿಲ್ಲವೇ..?
ಇಲ್ಲ ಇದಕ್ಕೆ ಆಶಿರ್ವದಿಸಲು ಸಾದ್ಯವಿಲ್ಲ. ಎಂದು ಹೇಳಿದಾಗ ಇದನ್ನು ಕೇಳಿದ ಮರಕ್ಕಾರ್ ಗರಬಡಿದವರಂತಾದರು
ಉಮ್ಮಾ ಹಾಗೆ ಹೇಳಬೇಡಿ ಇವತ್ತು ನನ್ನ ತಂದೆ ಜೀವಂತ ಇರುತ್ತಿದ್ದರೆ ಆ ಖಡ್ಗವನ್ನು ನನ್ನ ಕೈಗೆ ನೀಡಿ ಹೋಗು ನೀನು ಅವಳನ್ನು ರಕ್ಷಿಸಿಕೊಂಡು ಬಾ ಎಂದು ಹೇಳಿ ಆಶಿರ್ವದಿಸುತ್ತಿದ್ದರು.
ಅಮ್ಮಾ ಆ ಫಾತಿಮಾ ನಿಮ್ಮ ಹೊಟ್ಟೆಯಲ್ಲಿ ಜನಿಸಿದ ಮಗುವಾಗಿರುತ್ತಿದ್ದರೆ ನೀನು ತಡೆಯುತ್ತಿದ್ದೀರಾ.?
ಎಂದೆಲ್ಲಾ ಹೇಳಿ ಮರಕ್ಕಾರ್ ತನ್ನ ತಾಯಿಯ ಮನವೊಳಿಸಲು ಪ್ರಯತ್ನಿಸಿದಾಗ ಆಮಿನಾರವರಿಗೆ ತನ್ನ ಮಗನ ಮುಂದೆ ಸೋಲೊಪ್ಪಿಕೊಡಬೇಕಾಯಿತು.
ದಾರಾಕಾರವಾಗಿ ಸುರಿಯುವ ಕಣ್ಣೀರಿನೊಂದಿಗೆ ಕಳುಹಿಸಿದರು. ಆ ಸಮಯದಲ್ಲಿ ಮರಕ್ಕಾರ್ ತನ್ನ ತಲೆಯಲ್ಲಿದ್ದ ಮುಂಡಾಸು (ತಲೆಕಟ್ಟನ್ನು) ತೆಗೆದು ತಾಯಿಯ ಕೈಯಲ್ಲಿಟ್ಟು
ತನ್ನ ಖಡ್ಗವನ್ನು ಎತ್ತಿಕೊಂಡು ಪೂರ್ಣ ಚಂದ್ರನ ಬೆಳಕಿನಲ್ಲಿ ಅರಬ್ಬಿ ಸಮುದ್ರವನ್ನು ಲಕ್ಷ್ಯವಿಟ್ಟು ಓಡೋಡಿ ಬಂದು ಸಮುದ್ರದ ಕಿನಾರೆಗೆ ತಲುಪಿದರು
ಫಾತಿಮಾಳನ್ನು ಎರಗಿಸಿಕೊಂಡು ಹೋದ ಹಡಗು ಸಮುದ್ರದ ಕಿನಾರೆಯಿಂದ ಸ್ವಲ್ಪ ದೂರದಲ್ಲಿ ನಿಂತಿದೆ ಈಜಿಕೊಂಡು ಹೋಗಲು ಸಾದ್ಯವಿಲ್ಲ ಇನ್ನೇನು ಮಾಡುವುದು ಎಂದು ಆಲೋಚಿಸುತ್ತಿರಬೇಕಾದರೆ ದೂರದಲ್ಲಿ ಒಂದು ದೋಣಿಯ ಮೇಲೆ ಒಬ್ಬರು ಕುಳಿತಿರುವುದನ್ನು ಕಂಡ ಮರಕ್ಕಾರ್ ಮೆಲ್ಲನೆ ಹತ್ತಿರಕ್ಕೆ ಹೋಗತೊಡಗಿದರು.
ಹೋಗುತ್ತಿದ್ದಂತೆ ಅವರ ಮನಸ್ಸಲ್ಲಿ ಕೆಲವೊಂದು ಪ್ರಶ್ನೆಗಳು ಮೂಡತೊಡಗಿತು.
ಯಾರಾಗಿರಬಹುದು ಈ ರಾತ್ರಿಯಲ್ಲಿ ಇಲ್ಲಿ ಕುಳಿತ್ತದ್ದು..?
ಇನ್ನೇನು ಅವರ ಜನವೇ ಆಗಿರಬಹುದಾ...?
ಅವರ ಜನವಾದರೆ ಅವನ ಕೈಯಿಂದಲೇ ನನ್ನ ಮರಣವಾಗುವುದು ಸತ್ಯ..?
ಎಲ್ಲವೂ ಅಲ್ಲಾಹನ ಕೈಯಲ್ಲಿದೆ ಎನ್ನುತ್ತಾ ಹತ್ತಿರಕ್ಕೆ ತಲುಪಿ ಹಿಂದಿನಿಂದ ಅವನನ್ನು ಕರೆದಾಗ...!?
(ಪಿರಂಗಿಗಳು:: ಹಿಂದಿನ ಕಾಲದಲ್ಲಿ ವಿದೇಶದಿಂದ ನಮ್ಮ ದೇಶಕ್ಕೆ ವ್ಯಾಪರಕ್ಕೆಂದು ಬಂದು ನಾವುಗಳು ಬೆಳೆದ ಕರಿಮೆನಸು ತೆಂಗಿನಕಾಯಿ ಮತ್ತಿತ್ತರ ದವಸ ಧಾನ್ಯಗಳನ್ನು ಅರ್ದ ಬೆಲೆ ನೀಡಿ ಖರೀದಿಸಿ ತಮ್ಮ ತಮ್ಮ ರಾಜ್ಯಕ್ಕೆ ಕಳುಹಿಸುತ್ತಿದ್ದರು. ಅದನ್ನು ಯಾರಾದರೂ ಎದುರಿಸಲು ಹೊರಟರೆ ಅವರ ತಲೆ ಕಡಿಯಲು ಹಿಂಜರಿಯುತ್ತಿರಲಿಲ್ಲ.
ಅದೇ ರೀತಿ ನಮ್ಮ ದೇಶದ ಸುಂದರಿಗಳಾದ ಹೆಣ್ಮಕ್ಕಳನ್ನು ಎರಗಿಸಿ ಕೊಂಡುಹೋಗಿ ತಮ್ಮ ಇಂಗಿತಕ್ಕೆ ಬಳಸುತ್ತಿದ್ದರು ಅವರ ಇಂಗಿತಕ್ಕೆ ಒಪ್ಪದಿದ್ದರೆ ಕೊಲ್ಲುತ್ತಿದ್ದರು
ಇವರ ಪ್ರಮುಖ ಆಯುಧ ಪಿರಂಗಿ ಆದುದರಿಂದಲೇ ಇವರನ್ನು ಪಿರಂಗಿಗಳು ಎಂಬ ಹೆಸರಿನಲ್ಲಿ ಚರಿತ್ರೆ ಪುಟಗಳಲ್ಲಿ ಉಲ್ಲೇಖಿಸಲಾಗಿದೆ)
ಕತ್ತಲೆಯಲ್ಲಿ ಒಬ್ಬಂಟಿಗನಾಗಿ ದೊಣಿಯಲ್ಲಿ ಕುಳಿತಿರುವಾಗ ಹಿಂದಿನಿಂದ ಕರೆಯುವುದನ್ನು ಕೇಳಿದ ಆ ವ್ಯಕ್ತಿ ಹೈರಾನಾಗುತ್ತಾ ಹಿಂತಿರುಗಿ ನೋಡಿ
ಓಹೋ.. ಮದುಮಗ
ಯಾಕೆ ಈ ಹೊತ್ತಲ್ಲಿ ಇಲ್ಲಿಗೆ ಬಂದಿರುವೆ....?
ವಿಹಾರಕ್ಕಾ....?
ಹಾಗದರೆ ನಿನ್ನ ಪ್ರಿಯತಮೆಯನ್ನು ಕರೆದುಕೊಂಡು ಬರಬಹುದಿತ್ತಲ್ವಾ..?
ಇದನ್ನು ಕೇಳಿದ ಮರಕ್ಕಾರ್
ಕೋಯ ನೋಡು ಈ ಮಾತನಾಡಲು ಸಮಯವಿಲ್ಲ ತಕ್ಷಣ ನೀನು ದೋಣಿ ಓಡಿಸಿ ನನ್ನನ್ನು ಆ ಕಾಣುವ ಹಡಗಿನ ಹತ್ತಿರಕ್ಕೆ ತಲುಪಿಸು ಎಂದರು.
ಮರಕ್ಕಾರ್ ಜೊತೆಗೆ ಆಡಿ ಕುಣಿದು ಬೆಳೆದ ಒಬ್ಬ ಗೆಳೆಯನಾಗಿದ್ದನು ಈ ಕೋಯ.
ಏನಾಯಿತು ಕುಞಾಲಿ..? ಇಷ್ಟೊಂದು ಗಡಿಬಿಡಿಯಲ್ಲಿ ಹೊರಟಿರುವೇ..?
ಏನು ವಿಷಯ.?ಎಂದು ಕೋಯ ಕೇಳಿದಾಗ ಮರಕ್ಕಾರಿಗೆ ಎಲ್ಲವನ್ನು ವಿವರಿಸಿಕೊಡಬೇಕಾಯಿತು.
ಮರಕ್ಕಾರ್ ರವರ ವಿವರಣೆ ಕೇಳಿದಾಗ ಹೆದರಿದ ಕೋಯ ಅದಕ್ಕೆ ಸಮ್ಮತಿಸಲು ತಯಾರಾಗಲ್ಲಿಲ್ಲ ಆದರೂ ತನ್ನ ಆತ್ಮೀಯ ಗೆಳೆಯನ ಮುಂದೆ ತಲೆಬಾಗಬೇಕಾಯಿತು.
ಹಾಗೆ ಆ ದೋಣಿಯಲ್ಲಿ ಇಬ್ಬರೂ ಹಡಗನ್ನು ಲಕ್ಷ್ಯವಿಟ್ಟು ಹೊರಟರು.
ಹೋಗುವಾಗ ಮರಕ್ಕಾರ್ ಕೋಯನನ್ನು ಉದ್ದೇಶಿಸಿ ಹೇಳಿದರು
ಕೋಯ ನಾನು ಫಾತಿಮಾಳನ್ನು ರಕ್ಷಿಸಿ ನಿನ್ನ ಕೈಯಲ್ಲಿ ನೀಡುವೆನು ನೀನು ಅವಳನ್ನು ಯಾವುದೇ ತೊಂದರೆ ಆಗದಂತೆ ಅವಳ ಮನೆಗೆ ತಲುಪಿಸಬೇಕು.
ಹಾಗಾದರೆ ಕುಂಞಾಲಿ ನೀನು ಬರಲ್ವಾ ನಮ್ಮೊಂದಿಗೆ..
ಇಲ್ಲಾ ನಾನು ಬರಲ್ಲ ನಾನು ಅವರೊಂದಿಗೆ ಹೋರಾಡಿ ಒಂದೋ ಶಹೀದ್ ಆಗಬೇಕು ಇಲ್ಲವಾದರೆ ಅವರನ್ನು ಒದ್ದೊಡಿಸಿ ಮತ್ತೆ ನಾನು ಬರುವೆ. ಎಂದೆಲ್ಲಾ ಮಾತನಾಡುತ್ತಾ ಹಡಗಿನ ಸಮೀಪ ತಲುಪಿದರು.
ದೋಣಿಯು ಹಡಗಿನ ಹತ್ತಿರಕ್ಕೆ ಬಂದು ನಿಂತಿತು.ಆದರೆ ದೊಣಿಯಿಂದ ನೋಡುವಾಗ ಹಡಗು ಬಹಳ ಎತ್ತರದಲ್ಲಿದೆ ಅದಕ್ಕೆ ಹೇಗೆ ಹತ್ತುವುದು ಎಂದು ಆಚೀಚೆ ನೋಡುವಾಗ ಹಡಗಿನ ಒಂದು ಬದಿಯಲ್ಲಿ ಒಂದು ಹಗ್ಗ ನೇತಾಡುತ್ತಿರುವುದನ್ನು ಗಮನಿಸಿದ ಮರಕ್ಕಾರ್ ದೋಣಿಯಿಂದ ನೇರ ಆ ಹಗ್ಗದ ಸಮೀಪಕ್ಕೆ ಹಾರಿ ಹಗ್ಗದ ಸಹಾಯದಿಂದ ಕಷ್ಟಪಟ್ಟು ಹಡಗಿನ ಒಳಗಡೆ ಪ್ರವೇಶಿಸಿದರು.
ಹಡಗಿನ ಒಳಗಡೆ ಪ್ರವೇಶಿಸಿ ನೋಡುವಾಗ ಎಲ್ಲರೂ ಮದ್ಯಪಾನ ಮಾಡಿ ಅದರ ಅಮಲಿನಲ್ಲಿ ಅಲ್ಲಲ್ಲಿ ಬಿದ್ದು ಕೊಂಡಿದ್ದಾರೆ.
ಮರಕ್ಕಾರ್ ಹಡಗಿನಲ್ಲಿ ಸುತ್ತಲೂ ಫಾತಿಮಾಳನ್ನು ಹುಡುಕತೊಡಗಿದರು
ಕೊನೇಗೆ ಒಂದು ಕಂಬಕ್ಕೆ ಕೈಕಾಲುಗಳನ್ನು ಕಟ್ಟಿಹಾಕಿದ ಸ್ಥಿತಿಯಲ್ಲಿ ಫಾತಿಮಾಳನ್ನು ಕಂಡ ಮರಕ್ಕಾರ್ ತಕ್ಷಣ ತನ್ನ ಖಡ್ಗದಿಂದ ಅವರು ಕಟ್ಟಿಹಾಕಿದ ಹಗ್ಗವನ್ನು ಕತ್ತರಿಸಿ ಅವಳನ್ನು ಬಿಡುಗಡೆಗೊಳಿಸಿದರು
ಓಹೋ ಮರಕ್ಕಾರಾ..!?
ಇವತ್ತು ನಿಮ್ಮ ಮದುವೆಯಲ್ಲವೇ..?
ಮದುವೆ ಮುಗಿಯಿತಾ..?
ನಿವ್ಯಾಕೆ ನಿಮ್ಮ ಪ್ರಿಯತಮೆಯನ್ನು ಬಿಟ್ಟು ನನ್ನನ್ನು ರಕ್ಷಿಸಲು ಬಂದಿರುವಿರಿ..?
ಅವರು ನೋಡಿದರೆ ನಿಮ್ಮನ್ನು ಸುಮ್ಮನೆ ಬಿಡಲ್ಲ ಖಂಡಿತವಾಗಿಯೂ ಕೊಲ್ಲುತ್ತಾರೆ ಎಂದು ಫಾತಿಮ ಕೇಳಿದಾಗ
ನೋಡು ಫಾತಿಮಾ....
ನಿನಗೇನು ಸಂಭವಿಸಿಲ್ಲ ಅಲ್ವಾ..?
ಅವರು ನಿನಗೇನೂ ತೊಂದರೆ ನೀಡಿಲ್ಲ ಅಲ್ವಾ..?
ಇಲ್ಲ ಮರಕ್ಕಾರೆ ಅವರ ಇಚ್ಛೆಯನ್ನು ತಡೆದುದಕ್ಕಾಗಿ ನನ್ನನ್ನು ಕಟ್ಟಿ ಹಾಕಿದ್ದಾರೆ.
ಅವರು ಎದ್ದ ನಂತರ ಅವರು ಹೇಳಿದ ಹಾಗೆ ಕೇಳದಿದ್ದರೆ ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ.
ನೋಡು ಫಾತಿಮಾ ಅವರು ನೋಡುವುದಕ್ಕಿಂತ ಮೊದಲು ನೀನು ಇಲ್ಲಿಂದ ಹೊರಡು. ಅಲ್ಲಿರುವ ದೋಣಿಯಲ್ಲಿ ನನ್ನ ಗೆಳೆಯನಿರುವನು ಅವನು ನೀನ್ನನ್ನು ಮನೆಗೆ ತಲುಪಿಸುವನು ಎನ್ನುತಾ ಫಾತಿಮಾಳನ್ನು ಕಷ್ಟದಿಂದಲೇ ದೋಣಿಗೆ ಹಾಕಿ ಕಳುಹಿಸುವಾಗ..
ಫಾತಿಮ ಕೇಳಿದಳು..
ಅಲ್ಲ ಮರಕ್ಕಾರೇ....
ಅಲ್ಲ ಮರಕ್ಕಾರೆ ತಾವು ಬರುವುದಿಲ್ಲವೇ..
ಇಲ್ಲ ಫಾತಿಮಾ ನೀನು ಹೊರಡು. ಇವತ್ತು ನನ್ನ ನಿಖಾಹ್ ಮುಗಿದಿದಾದರೂ ಈ ವರೆಗೂ ಒಂದು ಮಾತು ಕೂಡಾ ನನ್ನ ಪ್ರಿಯತಮೆಯಲ್ಲಿ ಮಾತನಾಡಿಲ್ಲ. ಬರುವಾಗ ಅವಳನ್ನು ಕಂಡು ಮಾತನಾಡುವಷ್ಟು ಸಮಯನೂ ಇರಲಿಲ್ಲ ನೀನು ಹೋಗಿ ಅವಳಲ್ಲಿ ಮಾತನಾಡಿ ನನ್ನದೊಂದು ಸಲಾಂ ಹೇಳು ಎಂದು ಹೇಳಿ ಫಾತಿಮಾಳನ್ನು ಆ ದೋಣಿಯಲ್ಲಿ ಕಳುಹಿಸಿದರು.
ಅವರ ದೋಣಿ ಕಣ್ಣಿನಿಂದ ಮರೆಯಾಗುವವರೆಗೂ ನೋಡಿ ನಿಂತರು.
ಮರಕ್ಕಾರ್ ಮತ್ತೆ ಹಡಗಿನ ಒಳಗಡೆ ಪ್ರವೇಶಿಸಿದರು. ಎಲ್ಲರೂ ಅದೇ ಸ್ಥಿತಿಯಲ್ಲಿದ್ದಾರೆ.ಮರಕ್ಕಾರ್ ಹಡಗಿನ ಒಂದು ಬದಿಯಲ್ಲಿ ನಿಂತು ಜೋರಾಗಿ ಕೂಗಿದರು.
ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್..
ಈ ಶಬ್ಧ ಕೇಳಿದ ಪಿರಂಗಿಗಳಲ್ಲಿ ಕೆಲವರು ಮೆಲ್ಲನೆ ತಲೆ ಎತ್ತಿ ನೋಡಿದರು ಯಾರು ಈ ಹಡಗಿನಲ್ಲಿ ಇಷ್ಟೊಂದು ಧೈರ್ಯದಿಂದ ನಿಂತಿರುವುದು. ಮದ್ಯದ ಅಮಲಿನಲ್ಲಿದ್ದ ಪಿರಂಗಿಗಳಲ್ಲಿ ಕೆಲವರು ಮೆಲ್ಲನೆ ಎದ್ದು ನಿಂತು.
ಯಾರು ನೀನು.?
ಏನಾಗಬೇಕು ನಿನಗೆ..?
ಯಾಕೆ ಇಲ್ಲಿಗೆ ಬಂದಿರುವೆ...?
ಹೀಗೆಲ್ಲಾ ಕೇಳತೊಡಗಿದರು.
ನಾನೊಬ್ಬ ಮಳಯಾಳಿ.
ನನ್ನ ಹೆಸರು ಕುಂಞಾಲಿ.
ನಾನು ಬಂದಿರುವುದು ನಿಮ್ಮನ್ನು ನಿಮ್ಮ ಅಹಂಕಾರವನ್ನು ನೆಲಸಮ ಮಾಡಲು.ಹಲವು ವರ್ಷಗಳಿಂದ ನೀವು ನಮಗೆ ನೀಡಿದ ತಲೆ ನೋವಿಗೆ ಇಂದು ಕೊನೆಯಾಗಬೇಕು.ಎಂದು ಮರಕ್ಕಾರ್ ಹೇಳಿದಾಗ ಹಡಗಿನಲ್ಲಿದ್ದ ಸರ್ವರನ್ನು ಎಬ್ಬಿಸ ತೊಡಗಿದರು.
ಎಲ್ಲರೂ ಎದ್ದು ಬಂದು ಮರಕ್ಕಾರ್ ರವರನ್ನು ಸುತ್ತುವರೆದರು.ಅದರಲ್ಲಿ ಕೆಲವರಿಗೆ ಇನ್ನೂ ನಶೆ ಇಳಿದಿಲ್ಲ ವಾಳುತ್ತಿದ್ಧಾರೆ ಅವರ ಕೈ ಕಾಲುಗಳು ನಡುಗುತ್ತಿದೆ. ಆದರೆ ಮರಕ್ಕಾರ್ ಹೆದರಲಿಲ್ಲ ದೈರ್ಯದಿಂದ ನಿಂತಿದ್ದಾರೆ.
ಸುತ್ತುವರಿದ ಪಿರಂಗಿಗಳಿಂದ ಕೆಲವರು ತಮ್ಮ ಖಡ್ಗವನ್ನು ಝಲಪಿಸುತ್ತಾ ಮರಕ್ಕಾರ್ ರವರ ಮುಂದಕ್ಕೆ ಬಂದಾಗ ಅವರನ್ನು ತಡೆದು ಘೋರ ಯುದ್ಧ ಸುರುವಾಯಿತು. ಮರಕ್ಕಾರ್ ನೂರಕ್ಕೂ ಹೆಚ್ಚು ಪಿರಂಗಿಗಳನ್ನು ತನ್ನ ಖಡ್ಗದಿಂದ ಹೊಡೆದುರುಳಿಸಿದರು.
ಮರಕ್ಕಾರ್ ರವರ ಅಷ್ಟೇ ಧೀರನಾದ ಒಂದು ಯುವಕ ಮರಕ್ಕಾರ್ ರವರೊಂದಿಗೆ ಸೆನೆಸಾಡಲು ಬಂದ ಬಯಂಕರ ಹೋರಾಟ ಖಡ್ಗಗಳು ಠಣ ಠಣ ಶಬ್ದವೆತ್ತುತ್ತಿದೆ ಒಬ್ಬರಿಗೊಬ್ಬರು ಬಿಟ್ಟು ಕೊಡುತ್ತಿಲ್ಲ ಈ ಸಮಯದಲ್ಲಿ ಹಡಗಿನ ನಾವಿಕ ಮರಕ್ಕಾರ್ ರವರ ಹಿಂದಿನಿಂದ ಮೆಲ್ಲನೆ ಬಂದು ಮರಕ್ಕಾರ್ ರವರ ತಲೆಗೆ ಒಂದು ಏಟು ಕೊಟ್ಟನು.
ಆದರೆ ಅದು ಅವನ ಆಯ ತಪ್ಪಿ ಮರಕ್ಕಾರ್ರವರ ಕೈಗೆ ಸಿಕ್ಕಿ ಎಡ ಕೈ ನೆಲಕ್ಕುರುಳಿತು. ತಿರುಗಿನಿಂತ ಮರಕ್ಕಾರ್ ಕೋಪದಿಂದ ಧೀರಾವೇಶದಿಂದ ಅವನ ಹೊಟ್ಟೆಗೆ ತನ್ನ ಖಡ್ಗದಿಂದ ಇರಿದು ಅಲ್ಲೆ ಒಂದು ಸುತ್ತು ತಿರುಗಿಸಿ ಹೊರತೆಗೆದಾಗ ಅವನ ಕರುಳುಬಳ್ಳಿಗಳು ಖಡ್ಗದೊಂದಿಗೆ ಹೊರಬಿತ್ತು.
ಮರಕ್ಕಾರ್ ರವರ ಒಂದು ಕೈಯಿಂದ ರಕ್ತ ದಾರಾಕಾರವಾಗಿ ಸುರಿಯುತ್ತಿದೆ ಒಂದು ಕೈಯಲ್ಲಿ ಖಡ್ಗವನ್ನು ಹಿಡಿದುಹೋರಾಡುತ್ತಿದ್ದಾರೆ
ಧೀರಾವೇಶದಿಂದ ಹೋರಾಡುವ ಸಮಯದಲ್ಲಿ ಎಲ್ಲಿಂದಲೋ ಬಂದ ಒಂದು ಖಡ್ಗದ ಏಟು ಮಹಾನರಾದ ಕುಞಾಲಿ ಮರಕ್ಕಾರ್ ರವರ ಕುತ್ತಿಗೆಗೆ ಸಿಕ್ಕಿ ಮಹಾನವರು ನೆಲಕ್ಕಪ್ಪಳಿಸಿದರು.
(ಇನ್ನಾಲಿಲ್ಲಾಹಿ ವ ಇನ್ನಾ ಇಲೈಹಿ ರಾಜಿವೂನ್)
ಆದರೆ ಆಕ್ರೋಶ ಮುಗಿಯದ ಪಿರಂಗಿಗಳು ಮಹಾನರಾದ ಮರಕ್ಕಾರ್ ರವರ ಪುಣ್ಯ ಶರೀರವನ್ನು ತುಂಡು ತುಂಡಾಗಿ ಕತ್ತರಿಸಿ ಏಳು ಭಾಗಗಳನ್ನಾಗಿ ಮಾಡಿ ಕಡಲಿಗೆ ಎಸೆದರು.
ಇತ್ತ ಕಡೆ ಆಮಿನಾರವರು ತನ್ನ ಮಗ ನೀಡಿದ ತಲೆಕಟ್ಟನ್ನು (ಮುಂಡಾಸು) ತನ್ನ ತೊಡೆಯ ಮೇಲಿಟ್ಟು ಪ್ರಾರ್ಥಿಸುತ್ತಿಸುತ್ತಿದ್ದಂತೆಯೇ ಬಿಳಿಯಾಗಿದ್ದ ಆ ತಲೆಕಟ್ಟು ಕೆಂಪು ಬಣ್ಣವಾಗಿ ಮಾರ್ಪಟ್ಟಿತು.
(ಇದು ಮಹಾನರ ಕರಾಮತ್ತ್ ಆಗಿತ್ತು ಎಂದು ಚರಿತ್ರೆ ಪುಟಗಳಲ್ಲಿ ಹೇಳಲಾಗಿದೆ)
ತನ್ನ ಮಗ ಶಹೀದ್ ಆಗಿದ್ದಾನೆ ಎಂದು ಖಾತ್ರಿ ಪಡಿಸಿದ ಆಮಿನಾರವರು ಆ ತಲೆಕಟ್ಟನ್ನು ಕೈಯಲ್ಲಿ ಹಿಡಿದು ಆ ಮದ್ಯರಾತ್ರಿಯಲ್ಲಿ ಅಲ್ಲಾಹುವೇ ನನ್ನ ಮಗ ನನ್ನ ಹೃದಯವಿದ್ದಂತೆ ಆ ಹೃದಯವನ್ನು ನನಗೆ ನೀಡು ಎನ್ನುತ್ತಾ ವೆಲಿಯಂಗೋಡಿನ ಅರಬ್ಬಿ ಸಮುದ್ರದ ತೀರಕ್ಕೆ ಓಡತೋಡಗಿದರು.
ವಿಷಯ ಅರಿತು ಊರವರು ಆಮಿನಾರವರ ಹಿಂದೆಯೇ ಓಡತೊಡಗಿದರು.
ಅಲ್ಲಿ ತಲುಪುತ್ತಿದ್ದಂತೆಯೇ ಆಮಿನಾರವರ ಪ್ರಾರ್ಥನೆಯಂತೆ ಮರಕ್ಕಾರ್ ರವರ ಹೃದಯ ಭಾಗ ನೀರಿನಲ್ಲಿ ತೇಲುತ್ತಾ ಆಮಿನಾರವರ ಹತ್ತಿರಕ್ಕೆ ಬಂದು ನಿಂತಿತು.ಅದನ್ನು ಎತ್ತಿಕೊಂಡು ಅದೇ ತಲೆಕಟ್ಟಿನಲ್ಲಿ ಸುತ್ತಿ ಹುಚ್ಚಿಯಂತೆ ಇದು ನನ್ನ ಹೃದಯ ಎನ್ನುತ್ತಾ ಊರೂರು ಓಡತೊಡಗಿದರು.
ಊರವರೆಲ್ಲಾ ಸೇರಿ ಆಮಿನಾರವರ ಮನವೊಲಿಸಿ ಆ ಹೃದಯ ಭಾಗವನ್ನು ವೆಲಿಯಂಗೋಡಿನಲ್ಲಿ ದಫನ ಮಾಡಿದರು.
(ಯಾರಾದರೂ ವೆಲಿಯಂಗೊಡು ಉಮ್ಮರ್ ಖಾಝಿಯವರ ಮಖ್ಬರ ಝಿಯಾರತ್ ಮಾಡಲು ಹೋದರೆ ಸ್ವಲ್ಪ ದೂರದಲ್ಲೇ ಇರುವ ಮರಕ್ಕಾರ್ ರವರ ಹೃದಯ ಭಾಗ ಧಫನ ಮಾಡಿದ ಅವರ ಹಳೇಯ ಮನೆ ಅಲ್ಲಿಗೂ ತೆರಲಿ ಅವರನ್ನು ಝಿಯಾರತ್ ಮಾಡಿ ಬನ್ನಿ.)
ಆದರೆ ಇನ್ನುಳಿದ ಭಾಗಗಳು ಎಲ್ಲಿದೆ. ಅದಕ್ಕಿಂತ ಮುಂಚೆ ಅವರ ತಲೆಭಾಗವು ನೇರ ಬಂದು ತಲುಪಿದ್ದು ಕೋಝಿಕ್ಕೊಡಿನಲ್ಲಿ ಅಲ್ಲಿ ನಡೆಯಿತು ಒಂದು ದೊಡ್ಡ ಅದ್ಬುತ.
ಅದೇನೆಂದರೆ..
ಮಹನರಾದ ಮರಕ್ಕಾರ್ ರವರನ್ನು ಏಳು ಭಾಗಗಳಾಗಿ ಕತ್ತರಿಸಿ ಅರಬ್ಬಿ ಸಮುದ್ರಕ್ಕೆ ಎಸೆದಾಗ ಯಾವುದೇ ಒಂದು ಅಂಗವನ್ನು ಮೀನು ತಿನ್ನಲಿಲ್ಲ. ಅದು ಮರಕ್ಕಾರ್ ರವರ ಕರಾಮತ್ತ್ ಆಗಿತ್ತು
ಅವರ ತಲೆ ಭಾಗವು ಕಡಲಿನ ಅಲೆಯೊಂದಿಗೆ ತೇಲಿ ಬಂದು ಕೋಝಿಕ್ಕೋಡ್ ಸಮುದ್ರದ ಕಿನಾರೆಗೆ ತಲುಪಿತ್ತು. ಆ ತಲೆ ಭಾಗದ ಸ್ವಲ್ಪ ಮೇಲೆ ಒಂದು ಗಿಡುಗ ತನ್ನ ರೆಕ್ಕೆ ಬಿಚ್ಚಿ ಅದಕ್ಕೆ ನೆರಳು ನೀಡುತ್ತಿತ್ತು ಎಂದು ಚರಿತ್ರೆ ಪುಟಗಳಲ್ಲಿ ಕಾಣಬಹುದು.
ಅಂದು ಆ ಪ್ರದೇಶದಲ್ಲಿ ಅಧಿಕಾರ ನಡೆಸುತ್ತಿದ್ದದ್ದು ಕೂಲೋತ್ ನಂಬೋದರಿ ಎಂಬ ಒಬ್ಬರು ಅಮುಸ್ಲಿಂ ಸಹೋದರನಾಗಿದ್ದರು.
ಅವರಿಗೆ ಎಷ್ಟೇ ಚಿಕಿತ್ಸೆ ನೀಡಿದರು ಗುಣವಾಗದ ಒಂದು ರೋಗ ಭಾದಿಸಿತ್ತು.
ಒಂದು ದಿನ ತಾನು ನಿದ್ರೆ ಮಾಡುವ ಸಮಯದಲ್ಲಿ ಕನಸಿನಲ್ಲಿ ಮರಕ್ಕಾರ್ ಬಂದು ನನ್ನ ತಲೆ ನಿಮಗೆ ಸಮೀಪದ ಕಡಲ ಕಿನಾರೆಯಲ್ಲಿದೆ ಅದನ್ನು ತೆಗೆದು ದಫನ ಮಾಡಿದರೆ ನಿಮ್ಮ ರೋಗ ವಾಸಿಯಾಗುತ್ತದೆ ಎಂಬ ಅಶರೀರವಾಣಿಯೊಂದು ಕೇಳಿತು. ಇದನ್ನು ಕೇಳಿದ ರಾಜನು ಆ ತಲೆಯನ್ನು ತರಲೆಂದು ತನ್ನ ಪ್ರಜೆಗಳನ್ನು ಕಳುಹಿಸಿದನು.
ಪ್ರಜೆಗಳು ನೋಡಿ ನೇರ ನಂಬೋದರಿಯ ಹತ್ತಿರಕ್ಕೆ ಹೋಗಿ
ರಾಜರೆ.. ತಲೆ ಇದೆ ಆದರೆ ನಾವು ತೆಗೆಯಲು ಹೋದಾಗ ಅದು ದೂರ ದೂರ ಸರಿಯುತ್ತಿದೆ ಎಂದಾಗ ನಂಬೋದರಿ ಮತ್ತೆ ಆಲೋಚಿಸತೊಡಗಿದರು ಇನ್ನೇನು ಮಾಡುವುದು.
ಆ ದಿನ ಕಳೆಯಿತು. ಅಂದು ರಾತ್ರಿಯೂ ಮತ್ತೆ ಕನಸಿನಲ್ಲಿ ಅದೇ ಅಶರೀರವಾಣಿ ಕೇಳಿತು.
ಆಗ ನಂಬೋದರಿಯು
ಅಲ್ಲ ಮರಕ್ಕಾರ್ ನಾನು ನಿಮ್ಮ ತಲೆಯನ್ನು ತರಲು ನನ್ನ ಪ್ರಜೆಗಳನ್ನು ಕಳುಹಿಸಿದ್ದೆ ಆದರೆ ಅವರಿಗೆ ಅದು ಸಿಗುತ್ತಿಲ್ಲ ನಾನೇನು ಮಾಡಲಿ..
ಮತ್ತೆ ಅದೇ ಶಬ್ಧದಿಂದ ಇನ್ನೊಂದು ಅಶರೀರವಾಣಿ ಕೇಳಿಸಿತು.ನೀವು ಮುಸ್ಲಿಂರನ್ನು ಕಳುಹಿಸಿ ಅವರಿಂದ ಮಾತ್ರ ಸಾದ್ಯ ಎಂದು.
ಮರುದಿನ ನಂಬೋದರಿಯು ಕೆಲವು ಮುಸ್ಲಿಂರನ್ನು ಕರೆದು ಆ ತಲೆಯನ್ನು ತರುವಂತೆ ಆದೇಶಿಸಿದರು.
ಆ ಸಹೋದರರು ತಲೆಯನ್ನು ತಂದು ನಂಬೋದರಿಯ ಮುಂದೆ ಇಟ್ಟಾಗ ಅವರ ಕಣ್ಣಿನಿಂದ ಅವರಿಗೆ ಅರಿಯದೇ ಕಣ್ಣೀರು ಬರತೊಡಗಿತು.
ಹಾಗೆ ಅವರೆಲ್ಲಾ ಸೇರಿ ಆ ತಲೆಯನ್ನು ದಫನ ಮಾಡಿದರು.
ಅವರ ಕಾಲಿನ ಭಾಗವು ತಾನೂರು ಎಂಬ ಸ್ಥಳದಲ್ಲಿ ದಫನ ಮಾಡಲಾಯಿತು ಹೀಗೆ ಏಳು ಭಾಗಗಳನ್ನು ಏಳು ಸ್ಥಳಗಳಲ್ಲಿ ದಫನ ಮಾಡಲಾಯಿತು.
ಇತ್ತ ಕಡೆ ಮದುಮಗಳಾಗಿ ಕುಳಿತಿದ್ದ ಅಸ್ಮಾ ಈ ಸಂಭವ ತಿಳಿದು ಏನು ಮಾಡಬೇಕೆಂದು ತೋಚದೆ ನೇರ ವೆಲಿಯಂಗೋಡಿನಲ್ಲಿ ದಫನ ಮಾಡಿದ ಹೃದಯ ಭಾಗ ಕಬ್ರ್ ಸಮೀಪ ತೆರಳಿ.
...ಅಲ್ಲಾಹುವೇ ನೀನು ನನಗೆ ಮಹ್ಶರಾದಲ್ಲೂ ನನ್ನ ಗಂಡನಾಗಿ ಇವರನ್ನು ದಯಪಾಲಿಸು. ನಮ್ಮ ಮೊದಲ ರಾತ್ರಿ ಸ್ವರ್ಗದಲ್ಲಿ ನೆರವೇರುವಂತೆ ಮಾಡು ಎಂದು ಕಣ್ಣೀರು ಸುರಿಸುತ್ತಾ ಪ್ರಾರ್ಥಿಸತೊಡಗಿದರು.
ಇದಾದ ಮೂರು ತಿಂಗಳ ಬಳಿಕ ಆಮಿನಾರವರು ವಫಾತ್ ಆದರು. ಅವರನ್ನು ಮರಕ್ಕಾರ್ ರವರ ಕಬ್ರ್ ಸಮೀಪವೇ ದಫನ ಮಾಡಲಾಯಿತು.
ಅವರ ಈಗಿನ ತಲೆಮಾರು ಇಂದು ಪೊನ್ನಾನಿ ವೆಲಿಯಂಗೋಡು ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
(ಅಲ್ ಹಂದುಲಿಲ್ಲಾಹ್..ಮುಗಿಯಿತು..)
---------------###------
ಪ್ರಿಯ ಓದುಗರೇ..
ಅರಬ್ಬಿ ಸಮುದ್ರದಲ್ಲಿ ರಕ್ತಶಾಕ್ಷಿಯಾದ ಬಹುಮಾನರಾದ ಕುಂಞಿ ಮರಕ್ಕಾರ್ ರವರ ಜೀವನ ಶೈಲಿ ಅತ್ಯಂತ ಚುಟುಕಾಗಿ ನಿಮಗೆ ಅರ್ಥವಾಗುವಂತೆ ಬರೆದು ಮುಗಿಸಿರುವೆನು.
ಇದರಲ್ಲಿ ತಪ್ಪುಗಳಿರಬಹುದು. ಅದು ಮನುಷ್ಯ ಸಹಜ. ತಪ್ಪುಗಳಿದ್ದರೆ ಅಲ್ಲಾಹನು ಕ್ಷಮಿಸಲಿ..
ಪ್ರೀತಿಯ ಸಹೋದರಿಯರೇ..
ಒಂದು ಹೆಣ್ಣಿನ ಚಾರಿತ್ರ್ಯ ಕಾಪಡಲು ಹೊರಟು ಶಹೀದ್ ಆದ ಕುಂಞಾಲಿ ಮರಕ್ಕಾರ್ ರವರಂತಹ ಮಹಾತ್ಮರು ಕಷ್ಟ ತ್ಯಾಗ ನೋವುಗಳನ್ನು ಸಹಿಸಿ ಸುಂದರವಾದ ಒಂದು ಧರ್ಮವನ್ನು ರೂಪಿಸಿ ಕೊಟ್ಟಿರುವರು.
ಆ ಒಂದು ಧರ್ಮವನ್ನು ಅದರ ನೀತಿ ನಿಯಮಗಳನ್ನು ಬಿಟ್ಟು ನ್ಯೂ ಜನರೇಶನ್ ಎಂಬ ಹೆಸರಿನಲ್ಲಿ ಟಿಕ್-ಟಾಕ್ ಮ್ಯುಸಿಕಲೀ ಗಳಂತಹ ಸ್ವಾಪ್ಟವೇರ್ ಬಳಸಿಕೊಂಡು ತನ್ನ ಔರತ್ತನ್ನು ಅನ್ಯರ ಮುಂದೆ ಪ್ರದರ್ಶಿಸಿ ಏನೋ ಸಾದಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಹರಿಯಲು ಬಿಡುವಾಗ ನಮ್ಮಿಂದ ಕಳೆದು ಹೋದ ಮಹದೀಗಳು ಪ್ರವೇಶಿಸುವ ಸ್ವರ್ಗಕ್ಕೆ ನಮಗೂ ಅವಕಾಶ ಸಿಗಬೇಕೆಂಬುವುದನ್ನು ನೆನಪಿಸಿಕ್ಕೊಳ್ಳಿ.
ಅವರ ಬರಕತ್ತಿನಿಂದ ನಮ್ಮ ಇಹಪರ ವಿಜಯಗೊಳಿಸಲಿ
ಅವರೊಂದಿಗೆ ಸ್ವರ್ಗಲೋಕದಲ್ಲಿ ಒಗ್ಗೂಡಿಸಲಿ
ನಿಮ್ಮ ಪ್ರಾರ್ಥನೆಯಲ್ಲಿ ನನ್ನನ್ನು ನನ್ನ ಕುಟುಂಬವನ್ನು ಸೇರಿಸಲು ಮರೆಯದಿರಿ..
✒ಹನೀಫ್ ಕಟ್ಟತ್ತಾರು
Comments
Post a Comment