ಖಾದಿಸಿಯ್ಯಾ ಯುದ್ಧ
بِسْمِ اللهِ الرَّحْمَٰنِ الرَّحِيمْ
السَّـــــــلاَمُ عَلَيــْــكُم وَرَحْمَةُ اللهِ وَبَرَكـَـاتُه
ಖಾದಿಸಿಯ್ಯಾ ಯುದ್ದ
ಬಿಸ್ಮಿಲ್ಲಾಹ್ ವಲ್ ಹಂದುಲಿಲ್ಲಾಹ್ ವಸ್ಸಲಾತು ವಸ್ಸಲಾಮು ಅಲಾ ಸಯ್ಯಿದಿನಾ ಮುಹಮ್ಮದಿನ್ ವ ಅಲಾ ಆಲಿಹೀ ವಸಹ್ ಬಿಹೀ ವಸಲ್ಲಿಮ್
ﺍَﻟﺼَّﻠَﺎﺓُ ﻭَﺍﻟﺴَّﻠَﺎﻡُ ﻋَﻠَﻴْﻚَ ﻳَﺎ ﺭَﺳُﻮﻝَ ﺭَﺏِّ ﺍﻟْﻌَﺎﻟَﻴن
ﺻَﻠَﺎﻭَﺍﺕُ ﺍﻟﻠّٰﻪِ ﻭَﻣَﻼَﺋِﻜَﺘِﻪِ ﻭَﺍَﻧْﺒِﻴَﺎﺋِﻪِ ﻭَﺭُﺳُﻠِﻪِ ﻭَﺣَﻤَﻠَﺔِ ﻋَﺮْﺷِﻪِ ﻭَﺟَﻤﻴﻊِ ﺧَﻠْﻘِﻪِ
ﻋَﻠٰﻰ ﺳَﻴِّﺪِﻧَﺎ ﻣُﺤَﻤَّﺪٍ ﻭَﻋَﻠٰﻰ ﺍٰﻟِﻪِ ﻭَﺻَﺤْﺒِﻪِ ﺍَﺟْﻤَﻌﻴﻦَ
ಬರೆಯಲು ಶಕ್ತಿಕೊಟ್ಟ ಅಲ್ಲಾಹನಿಗಷ್ಟೇ ಸರ್ವ ಸ್ತುತಿ ಅರ್ಪಿಸುತ್ತಾ ಬಿಸ್ಮಿ ಹಮ್ದು ಸ್ವಲಾತ್ ಮೊಳಗಿಸಿ ಈ ಚರಿತ್ರೆಯನ್ನು ಬರೆಯುತ್ತಾ ಇದ್ದೇನೆ. ಅಲ್ಲಾಹು ಸ್ವೀಕರಿಸಲಿ ಆಮೀನ್
•ಲೇಖಕರ ಮಾತು :
ಅಸ್ಸೀರಿಯಾ ನಾಗರಿಕತೆಯನ್ನು ಪಲ್ಲಟಗೊಳಿಸಿ ಮುಖ್ಯವಾಹಿಣಿಗೆ ಬಂದ ಸಾಮ್ರಾಜ್ಯವಾಗಿತ್ತು ಪರ್ಷಿಯಾ ಸಾಮ್ರಾಜ್ಯ. ಅಸ್ಸೀರಿಯನ್ - ಕಲ್ ದಾಯ ಸಾಮ್ರಾಜ್ಯಗಳ ಪತನದಿಂದ ಇಸ್ಲಾಮೀ ಸಾಮ್ರಾಜ್ಯೋದಯದವರೆಗೆ (ಕ್ರಿ. ಪೂರ್ವ 550 - ಕ್ರಿ.ಶ 641 ) ಪರ್ಷಿಯನ್ ಸಾಮ್ರಾಜ್ಯವು ನಿರಂಕುಶ ಪ್ರಭುತ್ವದ ಮೂಲಕ ಇಡೀ ಜಗತ್ತಿನ ಮೇಲೆಯೇ ದಬ್ಬಾಳಿಕೆಯ ಅಸ್ತಿತ್ವವನ್ನು ಹೊಂದಿತ್ತು.
ಕ್ರಿಸ್ತಪೂರ್ವ ಎರಡನೇ ಶತಮಾನದಲ್ಲಿ ಮಧ್ಯ ಏಷ್ಯಾದಿಂದ ಮೆಸಪೊಟೋಮಿಯಾಗೆ ವಲಸೆ ಬಂದ ಆರ್ಯನ್ನರ ತಲೆಮಾರುಗಳಾಗಿದ್ದರು ಪೇರ್ಷ್ಯನ್ನರು. ಇಂದಿನ ಇರಾನ್ ರಾಷ್ಟ್ರದ ಭೂಮಿ ಸೀಮೆಗೆ ಸೇರಿದ ರಾಜ್ಯವಾಗಿತ್ತು ಪೇರ್ಶ್ಯಾ. ಪೇರ್ಶ್ಯನ್ ಭಾಷೆಯಲ್ಲಿ "ಆರ್ಯಾನ" ಎಂದರೆ ಭೂಮಿಯೆಂದರ್ಥ. ಕ್ರಿಸ್ತಪೂರ್ವ 1500 ರ ಕಾಲಘಟ್ಟದಲ್ಲಿ ಮಧ್ಯ ಏಷ್ಯಾದಿಂದ ಮೆಸಪೊಟೊಮಿಯಾದ ಉತ್ತರಕ್ಕಿರುವ ಪೇರ್ಶ್ಯನ್ ಪೀಎಧ ಭೂಮಿಯ ಮೂಲಕ ಹಾದುಹೋದ ಆರ್ಯ ಗೋತ್ರಗಳ ಹೆಸರನ್ನು ಆಧಾರವಾಗಿರಿಸಿ ಅಲ್ಲಿನ ಸ್ಥಳಗಳಿಗೆ ಆಧುನಿಕ ಭೂ ಶಾಸ್ತ್ರಜ್ಞರು "ಇರಾನ್" ಎಂದು ನಾಮಕರಣ ಮಾಡಿದರು.
ಕ್ರಿಸ್ತಪೂರ್ವ ಒಂಬತ್ತನೇ ಶತಮಾನದ ಆರಂಭದಲ್ಲಿ ಆರ್ಯ ಗೋತ್ರಗಳು ಎರಡು ವಿಭಾಗಗಳಾಗಿ ವಿಂಗಡಣೆಯಾಯಿತು. ಮೊದಲು ಮೇದ್ಯ (ಮೆಡೋ) ಎಂಬ ನಾಗರಿಕತೆಯು ಉದಯವಾಯಿತು. ನಂತರ ಕೆಲವೇ ವರ್ಷಗಳಲ್ಲಿ ಪರ್ಷಿಯಾ ನಾಗರಿಕತೆಯು ಜನ್ಮ ತಾಳಿತು. ಮೇದ್ಯ ನಾಗರಿಕತೆಗಿಂತಲೂ ವ್ಯತಿರಿಕ್ತವಾದ ಕೆಲವು ಸಿದ್ದಾಂತಗಳನ್ನಾಗಿತ್ತು ಪರ್ಷಿಯಾ ನಾಗರಿಕತೆಯು ತಾಳಿದ್ದು. ಏಳನೇ ಶತಮಾನದ ಕೊನೆಯ ಸಮಯದಲ್ಲಿ ಮೇಡ್ಯನ್ ಸಾಮ್ರಾಜ್ಯವು ಇರಾನಿಯನ್ ಪೀಢ ಭೂಮಿಯ ಉತ್ತರಕ್ಕಿರುವ ಪ್ರಬಲ ರಾಷ್ಟ್ರವಾಗಿ ಮಾರ್ಪಟ್ಟಿತ್ತು. ಮೇದ್ಯರು ಅತ್ಯಂತ ಕ್ರರೋರಿಗಳೂ, ದುರುಳರೂ ಆಗಿದ್ದರು. ಹಲವಾರು ರಕ್ತತಾಂಡವವನ್ನೇ ನಡೆಸಿದ ಮೇದ್ಯರು ಚರಿತ್ರೆಯ ಪುಟಗಳಲ್ಲಿ ಕಿರಾತಕರಾಗಿ ಉಳಿದರು. ಹಖ್ ಮನೀಷಿನ ಕಾಲದಿಂದ (ಕ್ರಿಸ್ತಪೂರ್ವ 700 - ಕ್ರಿಸ್ತಪೂರ್ವ 675 ) ಪೇರ್ಶ್ಯದ ನಾಗರಿಕತೆಯ ಪಿತಾಮಹನಾದ್ದರಿಂದ ಪೇರ್ಶ್ಯ ಸಾಮ್ರಾಜ್ಯಕ್ಕೆ ಹಖ್ ಮನೀಷಿ ಎಂಬ ಹೆಸರೂ ಬಂದಿತ್ತು. ಪೇರ್ಶ್ಯಾದ ರಾಜರನ್ನು ಕಿಸ್ರಾಗಳೆಂದು ಕರೆಯಲಾಗುತ್ತದೆ. ಆದ್ದರಿಂದ ಮೊದಲನೆಯ ಕಿಸ್ರಾ ಹಖ್ ಮನೀಷಿಯಾದ್ದರಿಂದ ಆತನನ್ನು ಕಿಸ್ರಾ ನಾಗರಿಕತೆಯಲ್ಲಿ ದೇವ ಸಂಭೂತನನ್ನಾಗಿ ಕಾಣುತ್ತಿದ್ದರು.
ಪೇರ್ಶ್ಯ ನಾಗರಿಕತೆಯೆಂಬುದು ಸಿಂಧೂ ನಾಗರಿಕತೆಯಂತೆ ಮೌಢ್ಯದ ಗರ್ಭದಲ್ಲೇ ಜನ್ಮ ಪಡೆದದ್ದಾಗಿತ್ತು. ಮೊದಲನೆಯದಾಗಿ ವಿಗ್ರಾಹಾರಾಧನೆಗೆ ಹೊಸ ಆಯಾಮವನ್ನು ನೀಡಿದ್ದೂ ಪರ್ಶಿಯನ್ನರಾಗಿದ್ದರು. ಬಹುದೇವಾರಾಧನೆಯನ್ನು ಜಗತ್ತಿನಲ್ಲಿ ಬಿತ್ತಿದ ಹವನೀಯ ಪರ್ಶಿಯನ್ನರು ಭಾರತದ ಹಿಂದೂಗಳಿಗಿಂತಲೂ ಮೌಢ್ಯರೂ, ಪೌರಾಣಿಕತೆಗೆ ವಿಶ್ವಾಸದ ಬಣ್ಣವನ್ನು ಬಳಿದು ಧರ್ಮವನ್ನಾಗಿ ಸ್ವೀಕರಿಸುವವರೂ ಆಗಿದ್ದರು.
ಭಾರತದ ಹಿಂದೂಗಳು ದುರ್ಬಲವಾಗಿದ್ದರಿಂದ ಹಿಂಸೆಯ ಮೂಲಕ ಇನ್ನಿತರ ಧರ್ಮದ ಮೇಲೆ ಬಂಡಾಯವೇಳುವ ಶಕ್ತಿಯಿರಲಿಲ್ಲ. ಆದರೆ ಪರ್ಶಿಯಾ ನಾಗರಿಕತೆಯು ಪ್ರತಿಷ್ಠೆಯ ಪರ್ಯಾಯವಾಗಿತ್ತು. ತರಹೇವಾರಿ ಖನಿಜ, ವಜ್ರ ವೈಡೂರ್ಯಗಳಿಂದ ಪೆರ್ಶ್ಯಾವು ಸಂಪದ್ಭರಿತವಾಗಿತ್ತು. ಆದ್ದರಿಂದಲೇ ಪ್ರತಾಪಿಗಳಾದ ಪೇರ್ಷ್ಯನ್ನರನ್ನು ಇಡೀ ಜಗತ್ತೇ ಹೆದರತೊಡಗಿತು. ಆದ್ದರಿಂದ ಇಡೀ ಜಗತ್ತಿನಲ್ಲೇ ಪೇರ್ಷ್ಯನ್ನರು ಅಸ್ತಿತ್ವವನ್ನು ಹೊಂದಿದ್ದರು. ಪೇರ್ಷ್ಯನ್ನರನ್ನು ಅಂಹತಿಗೊಳಿಸಲು ಹಲವಾರು ಸಾಮ್ರಾಜ್ಯ ಶಕ್ತಿಗಳು ಪ್ರಯತ್ನಿಸಿದರೂ ಅದೆಲ್ಲವೂ ವಿಫಲಗೊಂಡಿತ್ತು. ಅದರಲ್ಲೂ ರೋಮನ್ನರಿಗೂ - ಪರ್ಶ್ಯನ್ನರಿಗೂ ನಡೆದ ಸಂಘರ್ಷ - ಸಮರಕ್ಕೆ ಲೆಕ್ಕವೇ ಇರಲಿಲ್ಲ. ಆ ಎಲ್ಲಾ ಸಂಘರ್ಷಗಳಲ್ಲಿ ರೋಮನ್ನರಿಗೆ ಎದ್ದು ನಿಲ್ಲಲು ಒಮ್ಮೆಯೂ ಸಾಧ್ಯವಾಗಲಿಲ್ಲ. ಸುಮಾರು ಮೂರು ಸಾವಿರ ವರ್ಷಗಳ ಕಾಲ ನಡೆದ ಸಂಘರ್ಷ. ಈ ಸಮರಗಳಲ್ಲೆಲ್ಲಾ ಪೇರ್ಷ್ಯನ್ನರು ತಮಮ್ ಪ್ರತಿಷ್ಠೆಯನ್ನೂ, ಪ್ರತಾಪವನ್ನೂ, ತೋರ್ಪಡಿಸುವ ಕೇವಲ ಹತಾರಗಳು ಮಾತ್ರವಾಗಿತ್ತು. ಅಷ್ಟರಲ್ಲಿ ಅರೇಬಿಯಾ ಸಾಮ್ರಾಜ್ಯದಲ್ಲಿ ಇಸ್ಲಾಮಿನ ಅರುಣೋದಯವಾಯಿತು. ಜಗತ್ತಿನ ಎಲ್ಲಾ ಚಕ್ರವರ್ತಿಗಳಿಗೂ ಪ್ರವಾದಿ ಮುಹಮ್ಮದ್ ಮುಸ್ತಫಾ (ﷺ) ನಬಿಯವರು ಇಸ್ಲಾಮ್ ಧಾರ್ಮ ಸ್ವೀಕರಿಸುವಂತೆ ಆಹ್ವಾನವನ್ನು ನೀಡಿದ್ದರು. ಆ ಪೈಕಿ ಪೇರ್ಶ್ಯಾದ ಚಕ್ರವರ್ತಿ ಧರ್ವೀಶ್ ಕಿಸ್ರಾನೂ ಒಬ್ಬನಾಗಿದ್ದ. ಆ ಆಹ್ವಾನವೇ ಪೇರ್ಶ್ಯಾದ ಪತನಕ್ಕೆ ಹೇತುವಾಯಿತು. ಆ ಒಂದು ಪತ್ರದ ಕಥೆಯೇ ಖಾದಿಸಿಯ್ಯ ಯುದ್ಧ..!
ಅದಿರಲಿ. ಜಗತ್ತಿನ ಪಾರ್ಶ್ವ ಭಾಗಕ್ಕೆ ಇಸ್ಲಾಮ್ ತಲುಪಲು ಪೇರ್ಶ್ಯ ವಿಜಯದಿಂದ ಸಾಧ್ಯವಾಯಿತು. ಖಾದಿಸಿಯ್ಯ ಯುದ್ಧವು ಇಸ್ಲಾಮಿನ ಪಾಲಿಗೆ ಅನಿವಾರ್ಯವಾಗಿತ್ತು. ಯಾಕೆಂದರೆ ಇನ್ನಿತರ ರಾಜ್ಯಗಳನ್ನು ಸಂಘರ್ಷಕ್ಕೆ ಎಳೆಯುವಂತೆ ಪೇರ್ಷ್ಯನ್ನರು ಇಸ್ಲಾಮಿನ ಬಗ್ಗೆ ವಿರೋಧ ಮನೋಭಾವವನ್ನು ಹೊಂದಿದ್ದರು. ಅಲ್ಲದೆ ಇಸ್ಲಾಮ್ ಮುಂದೊಂದು ದಿನ ಉಛ್ರಾಯಗೊಂಡರೆ ತಮ್ಮ ಜಾಢ್ಯವೂ ಬಯಲಾಗಬಹುದೆಂಬ ಅಶಾಬ್ದಿಕ ಭಯವೂ ಪೆರ್ಷ್ಯನ್ನರಲ್ಲಿತ್ತು. ಆದ್ದರಿಂದಲೇ ಮುಸ್ಲಿಮರನ್ನು ಕೆದಕುವ ಕೃತ್ಯಕ್ಕೆ ಆ ಮೊದಲೇ ಪೇರ್ಷ್ಯನ್ನರು ಕೈ ಹಾಕಿದ್ದರು. ಅಲ್ಲದೆ ಪ್ರವಾದಿ ಮುಹಮ್ಮದ್ ಮುಸ್ತಫಾ (ﷺ) ನಬಿಯವರು ಇಸ್ಲಾಮಿಗಾಗಿ ಆಹ್ವಾನ ನಡೆಸಿರುವುದರಿಂದ ಆತ ಪ್ರವಾದಿಯವರನ್ನು (ﷺ) ಕೊಲ್ಲಲು ಮತ್ತು ಮುಸ್ಲಿಮರನ್ನು ಸಂಪೂರ್ಣ ಮಾರಣಹೋಮ ನಡೆಸಲು ತನ್ನ ಕಿಂಕರರನ್ನು ಕಳುಹಿಸಿದ್ದ. ಅಲ್ಲದೆ ಪೆರ್ಶ್ಯನ್ನರಿಗೆ ಇಸ್ಲಾಮಿನೊಂದಿಗಿರುವ ಆಜನ್ಮ ವೈರತ್ವವನ್ನು ಕುರ್ ಆನ್ ಕೂಡಾ ಪ್ರಸ್ತಾಪಿಸಿರುವುದನ್ನು ಕಾಣಬಹುದು. ಹೀಗೆ ಭವಿಷ್ಯದಲ್ಲಿ ಇಸ್ಲಾಮಿಗೆ ಬಲುದೊಡ್ಡ ಶತ್ರುವಾಗಿ ಪೆರ್ಶ್ಯಾವು ಬೆಳೆಯುತ್ತಿತ್ತೆಂಬುದನ್ನು ಚರಿತ್ರೆಯ ಯಾವ ವ್ಯೂಹವನ್ನು ಅವಲೋಕಿಸಿದರೂ ಅರಿಯಲು ಸಾಧ್ಯವಿದೆ. ಉಮರ್ (ರ) ರ ಖಿಲಾಫತ್ತಿನ ಸಂದರ್ಭದಲ್ಲಿ ಪೇರ್ಷ್ಯನ್ನರ ಉಪಟಳವು ತಾರಕ್ಕೇರತೊಡಗಿತು. ಆದ್ದರಿಂದಲೇ ಉಮರ್ (ರ) ರವರು ಖಿಲಾಫತ್ ಗದ್ದುಗೆಗೇರಿದಾಗ ಮೊದಲನೆಯದಾಗಿ ಚಿಂತಿಸಿದ್ದೇ ಪೇರ್ಷ್ಯನ್ನರನ್ನು ಮಟ್ಟ ಹಾಕುವ ವಿಚಾರ.
ಇದು ಕ್ರಮೇಣ ಖಾದಿಸಿಯ್ಯಾಯುದ್ಧವಾಗಿ ಮಾರ್ಪಟ್ಟಿತು. ಇದು ಕೇವಲ ಸೀಮೆಯ ವಿಸ್ತ್ರತಕ್ಕೆ ಸೀಮಿತವಾದ ಯುದ್ಧವಲ್ಲ. ಇಸ್ಲಾಮಿನ ಆಜನ್ಮ ಶತ್ರುವನ್ನು ಎದುರಿಸಲು ಇಸ್ಲಾಮ್ ಪ್ರಯೋಗಿಸಿದ ಅಸ್ತ್ರ ಮಾತ್ರವಾಗಿತ್ತು ಈ ಸಮಾರಾ. ಅತ್ಯಂತ ಪ್ರತಾಪಿಗಳಾಗಿದ್ದ ಪೇರ್ಶ್ಯ ಅಧೀಶರನ್ನು ಕೇವಲ ವಿರೋಧದ ಶಕ್ತಿಯ ದೃಷ್ಟಿಯಲ್ಲಿ ಮಾತ್ರ ಮಟ್ಟ ಹಾಕಲು ಇಸ್ಲಾಮ್ ಪ್ರಯತ್ನಿಸಿದ್ದೆಂಬುದನ್ನು ನಾವು ಅರಿಯಬೇಕಿದೆ.
•ಚರಿತ್ರೆಯ ಆರಂಭ
ಹಾಗಾದರೆ ಆ ವ್ಯಕ್ತಿ ಯಾರು?
ಅತ್ಯಂತ ಹೀನಾಯವಾದ ಕೊಲೆಯೊಂದು ನಡೆದಿತ್ತು. ಇಡೀ ಸಾಮ್ರಾಜ್ಯವನ್ನೇ ತನ್ನ ಕರಾಳ, ನಿರಂಕುಶ ಪ್ರಭುತ್ವದಿಂದ ಆಳಿದ, ಹಲವಾರು ಮುಗ್ಧರ ಹತ್ಯಾಕಾಂಡಕ್ಕೆ ಕಾರಣಕರ್ತನಾದ ಪೇರ್ಶ್ಯಾ ಚಕ್ರವರ್ತಿ ಕೊಲೆಯಾಗಿ ಅಂಗಾತ ಮಲಗಿದ್ದ. ಚಕ್ರವರ್ತಿ ಸತ್ತ ವಿಚಾರ ಜಗತ್ತಿನ ನರಪಿಳ್ಳೆಯೂ ಕೂಡಾ ಅರಿಯಬಾರದೆಂದು ಮಂತ್ರಿಯೊಂದಿಗೆ ಪಾತಕಿ ತಾಕೀತು ಮಾಡಿದ್ದ. ಪಾತಕಿ ಚಕ್ರವರ್ತಿಯನ್ನು ಕೊಲ್ಲಲಿರುವ ಕಾರಣವೇನೆಂದು ಮಂತ್ರಿ ಚಿಂತಿಸತೊಡಗಿದ.
ಹಾಗಾದರೆ ಚಕ್ರವರ್ತಿಯ ಹಂತಕ ಯಾರಾಗಿರಬಹುದು? ಜಗತ್ತು ತಿಳಿಯಬಾರದೆಂದು ತಾಕೀತು ನೀಡಲ್ಪಟ್ಟ ಚಕ್ರವರ್ತಿಯ ದಾರುಣ ಕಥೆಯನ್ನೂ, ಕೊಂದ ಹಂತಕನ ಹೆಸರನ್ನೂ ಒಬ್ಬರು ಹೇಳಿ ಕೊಡುತ್ತಿದ್ದರು. ಆ ಹೇಳುತ್ತಿದ್ದ ವ್ಯಕ್ತಿ ಚಕ್ರವರ್ತಿ ಕೊಲ್ಲಲೆಂದು ಸೂಚಿಸಲ್ಪಟ್ಟ ವ್ಯಕ್ತಿಯಾಗಿದ್ದನು. ತನ್ನನ್ನು ಕೊಲ್ಲಲೆಂದು ಬಂದವರೊಂದಿಗೆ ತನ್ನನ್ನು ಕೊಲ್ಲಲು ಕಳುಹಿಸಿದ ವ್ಯಕ್ತಿಯ ದಾರುಣ ಕೊಲೆಯ ಕಥೆಯನ್ನು ಆ ವ್ಯಕ್ತಿ ಹೇಳುತ್ತಿದ್ದರು....
•ಪೇರ್ಶ್ಯಾಕ್ಕೊಂದು ಪತ್ರ:
ಮದೀನಾ ಮಸೀದಿಯ ಪ್ರಾಂಗಣ. ಪ್ರವಾದಿ ಮುಹಮ್ಮದ್ ಮುಸ್ತಫಾ (ﷺ) ನಬಿಯವರು ಮತ್ತು ಅನುಯಾಯಿಗಳು ನೆರೆದಿದ್ದಾರೆ. ಅನಿರೀಕ್ಷಿತವಾಗಿ ಪ್ರವಾದಿ ಮುಹಮ್ಮದ್ ಮುಸ್ತಫಾ (ﷺ) ನಬಿಯವರು ಒಂದು ಸಭೆಯನ್ನು ಕರೆದಿರುವುದರಿಂದ ಸ್ವಹಾಬಿಗಳು ಅತ್ಯಂತ ಕುತೂಹಲದಿಂದಿದ್ದರು. ಪ್ರವಾದಿ ಮುಹಮ್ಮದ್ ಮುಸ್ತಫಾ (ﷺ) ನಬಿಯವರು ಎಂದಿಗಿಂತಲೂ ಸ್ವಲ್ಪ ಗಂಭೀರವಾಗಿರುವುದನ್ನು ಗುರುತಿಸಿದ ಸ್ವಹಾಬಿಗಳು ಮತ್ತಷ್ಟು ಉತ್ಸುಕರಾದರು. ಕೊನೆಗೂ ಪ್ರವಾದಿ ಮುಹಮ್ಮದ್ ಮುಸ್ತಫಾ (ﷺ) ನಬಿಯವರು ಕಿರು ಭಾಷಣಕ್ಕಾಗಿ ಎದ್ದು ನಿಂತರು.
"ಪ್ರಿಯ ಅನುಯಾಯಿಗಳೇ, ನಾನು ಒಂದು ಪತ್ರವನ್ನು ಬರೆದಿರುವೆನು. ಅದು ಒಬ್ಬ ಸಾಮಾನ್ಯ ವ್ಯಕ್ತಿಗೆ ಬರೆದದ್ದಲ್ಲ. ಅತ್ಯಂತ ಕ್ರೂರಿಯೂ, ದುಷ್ಟನೂ ಆದ ಪೇರ್ಶ್ಯನ್ ಚಕ್ರವರ್ತಿ ಕಿಸ್ರಾ ರಾಜನಿಗೆ ಬರೆದ ಪತ್ರವಾಗಿದೆ. ಪೇರ್ಶ್ಯನ್ ರಾಜ್ಯದ ಮದಾರ್ ಎಂಬ ಸ್ಥಳದಲ್ಲಿರುವ ಬುಸುರುನ್ನದಾ ಎಂಬ ದೈತ್ಯ ಕೋಟೆಯ ಒಳಗೆ ರಾಜಪೀಠದಲ್ಲಿ ಕುಳಿತಿರುವ ಕಿಸ್ರಾ ಚಕ್ರವರ್ತಿಯ ಕೈಯ್ಯಲ್ಲಿ ಈ ಪತ್ರವನ್ನು ಕೊಟ್ಟು ಬರಲು ಛಾತಿಯಿರುವ ಯಾರಾದರೊಬ್ಬರು ನಿಮ್ಮ ಪೈಕಿಯಿದ್ದಾರೆಯೇ?"
ಪ್ರವಾದಿ ಮುಹಮ್ಮದ್ ಮುಸ್ತಫಾ (ﷺ) ನಬಿಯವರ ಮಾತು ಕೇಳಿದ ಸಭೆ ಒಮ್ಮೆಲೇ ಸ್ಥಂಬೀಭೂತವಾಯಿತು.ಯಾಕೆಂದರೆ ಪೇರ್ಶ್ಯನ್ ಅಂದ ಕೂಡಲೇ ಅಂದು ಅರಬ್ ಸಾಮ್ರಾಜ್ಯವೇ ನಡುಗುತ್ತಿತ್ತು. ಕಿಸ್ರಾ - ಕೈಸರರು (ಪೇರ್ಶ್ಯಾ ಆಳುವ ಚಕ್ರವರ್ತಿಗಳನ್ನು ಕಿಸ್ರಾ ಎಂದೂ, ರೋಮನ್ನು ಆಳುತ್ತಿದ್ದ ಚಕ್ರವರ್ತಿಗಳಿಗೆ ಕೈಸರ್ ಎಂದೂ ಕರೆಯಲಾಗುತ್ತದೆ) ಅಂದಿನ ಬಲುದೊಡ್ಡ ಚಕ್ರಾಧಿಪತಿಗಳು. ಅವರಿಬ್ಬರ ನಡುವೆ ಸಾವಿರ ವರ್ಷಕ್ಕೂ ಅಧಿಕ ಯುದ್ಧಗಳು ಮುಂದುವರೆದಿದ್ದವು. ಕೈಸರ್ ನ ಪರಾಭವ, ಕಿಸ್ರಾನ ಪತನ ಮತ್ತು ಅವರ ಪ್ರೌಢಿಮೆಗಳನ್ನು ಕುರ್ ಆನ್ ಪ್ರಸ್ತಾಪಿಸಿದೆ....
ಪೆರ್ಶ್ಯನ್ ಸಾಮ್ರಾಜ್ಯವನ್ನೇ ಚಕಿತಗೊಳಿಸಿದ ಪುರಾತನ ಕೋಟೆಯಾಗಿತ್ತು ಕಿಸ್ರಾ ಚಕ್ರವರ್ತಿಗಳ ಅಂತಃಪುರ. ಆ ಕೋಟೆಯನ್ನು ಸರ್ವನಾಶಗೊಳಿಸಲು ಕೈಸರ್ ಚಕ್ರವರ್ತಿಗಳು ಹಲವಾರು ಬಂಡಾಯವೆದ್ದರೂ ಅದೆಲ್ಲವೂ ವಿಫಲವಾಗಿತ್ತು. ಯಾಕೆಂದರೆ ಕಿಸ್ರಾ ಚಕ್ರವರ್ತಿಗಳು ಲಕ್ಷಾಂತರ ಸೈನಿಕರನ್ನೂ, ಸಾವಿರಾರು ಯುದ್ದಾಸ್ತ್ರಗಳನ್ನೂ ಹೊಂದಿದ್ದರು. ಅದ್ದರಿಂದ ಕಿಸ್ರಾನ ಕೋಟೆಯ ಪತನ ಸುಲಭದ ವಿಷಯವಾಗಿರಲಿಲ್ಲ. 3000 ಕ್ಕಿಂತಲೂ ಅಧಿಕ ಕಾಲ ಪೇರ್ಶ್ಯಾವನ್ನು ಆಳಿದ ಪ್ರತೀತಿಯು ಕಿಸ್ರಾ ದೊರೆಗಳಿಗಿತ್ತು. ಪುರಾತನ ಘಟನಾವಳಿಗಳಿಗೂ, ಕಾಲದ ಏರಿಳಿತಕ್ಕೂ ಎದೆಯೊಡ್ಡಿದ್ದ ಕಿಸ್ರಾ ದೊರೆಗಳು ಅತ್ಯಂತ ದೊಡ್ಡ ದುರಹಂಕಾರಿಗಳೂ, ಠಕ್ಕರೂ ಆಗಿದ್ದರು.
ಈ ಕಾಲದ (ಪ್ರಸ್ತುತ ಘಟನೆಯ) ಕಿಸ್ರಾನ ಹೆಸರು ಭವೀರ್ಶ್. ಮೊದಲಿನ ದೊರೆಗಳಿಗಿಂತಲೂ ಈತ ಅತ್ಯಂತ ಪೀವರನೂ, ಪ್ರತಾಪಿಯೂ ಆಗಿದ್ದ. ತಾನೇ ನಿರ್ಮಾತನೆಂದೂ, ತನ್ನ ನಿಯಂತ್ರಣದಲ್ಲೇ ಜಗತ್ತಿನ ಚಲನೆಯಿದೆಯೆಂದೂ ಈತ ಸಾರುತ್ತಿದ್ದ. ಆತನ ಆಜ್ಞೆಗೆ ಯಾರಾದರೂ ಸೊಲ್ಲೆತ್ತಿದ್ದರೆ ಅಂತ್ಯ ಕಾಣಿಸುತ್ತಿದ್ದ. ಈತನ ನಿರಂಕುಶ ಆಡಳಿತದ ವಿರುದ್ದ ಧ್ವನಿಯೆತ್ತುತ್ತಿದ್ದ ರಾಜ್ಯದ ಪ್ರಜೆಯನ್ನು ಸಂಹಾರ ನಡೆಸುತ್ತಿದ್ದ. ಆತನ ಆಡಳಿತದ ಅಧ್ಯಾಯದಲ್ಲಿ ಹಲವಾರು ನೆತ್ತರ ತೊರೆಗಳು ಪುಟಿದೆದ್ದಿದ್ದವು. ಹಲವಾರು ಸ್ಮಶಾನ ಭೂಮಿಗಳು ಜನ್ಮ ಪಡೆದಿದ್ದವು. ಕಿಸ್ರಾ ಚಕ್ರವರ್ತಿಯು ಅತ್ಯಂತ ಪ್ರತಿಷ್ಠೆಗಾರನೂ, ಸರ್ವಾಧಿಕಾರಿ ಮನೋಭಾವನೆಯನ್ನು ಹೊಂದಿದವನೂ ಆಗಿದ್ದನು. ರಾಜನು ವಿಹಾರಕ್ಕೆ ತೆರಳುವಾಗ ಸಾವಿರಾರು ಸೈನಿಕರು ಅವನ ಜೊತೆಗಿರುತ್ತಿದ್ದರು. ಆತನ ಸಂಕೇತದ ಧ್ವಜವಾಹಕರೂ ನೀರುಣಿಸುವವರೂ ಅವನ ಸುತ್ತ ಇರುತ್ತಿದ್ದರು.
ಇಂತಹಾ ದುಷ್ಟ ಸಾರ್ವಭೌಮನ ರಾಜ್ಯಕ್ಕೆ ಕಾಲಿಡುವುದೇ ಕನಸಿನ ಮಾತಾಗಿರುವಾಗ ಆತನ ಕೋಟೆಯೊಳಗೆ ಹೋಗಿ ಆತನ ಕೈಯ್ಯಲ್ಲಿ ಆ ಪತ್ರವನ್ನು ನೀಡುವುದೆಂದರೆ ಸಣ್ಣ ವಿಷಯವೇ?
ಪ್ರವಾದಿ ಮುಹಮ್ಮದ್ ಮುಸ್ತಫಾ (ﷺ) ನಬಿಯವರು ಒಬ್ಬ ಸಾಮಾನ್ಯ ವ್ಯಕ್ತಿಗೆ ಒಂದು ಪತ್ರವನ್ನು ಕಳುಹಿಸುತ್ತಿದ್ದರೆ "ತಮ್ಮಿಂದಾಗಬಹುದೇ" ಎಂದು ಕೇಳುತ್ತಿರಲಿಲ್ಲ. ಅದಕ್ಕಾಗಿ ತನ್ನ ಅನುಯಾಯಿಗಳನ್ನು ಒಗ್ಗೂಡಿಸುತ್ತಿರಲಿಲ್ಲ. ಹಾಗೆ ಪತ್ರವನ್ನು ಕೊಂಡುಹೋದ ವ್ಯಕ್ತಿಯು ತನ್ನ ಜೀವವನ್ನು ಪಣಕ್ಕಿಟ್ಟು ಹೋಗಲೇಬೇಕೆಂಬುದು ಪ್ರವಾದಿವರ್ಯರಿಗೂ (ﷺ) ಚೆನ್ನಾಗಿ ಗೊತ್ತಿತ್ತು. ಮೂಗಿನ ಮೇಲೆ ಚಕ್ರವರ್ತಿಗೆ ಕೋಪ. ಚಕ್ರವರ್ತಿ ಕನಲಿ ಪೂರ್ಣಿಸಿದರೆ ಮತ್ತೆ ಅಲ್ಲಿಂದ ಮೂಳೆಗಳನ್ನಷ್ಟೇ ತರಬೇಕು. ಯಾಕೆಂದರೆ ಕೋಟೆಯ ಸುತ್ತಲೂ ಸಾವಿರಾರು ಪಹರೆಗಾರರು. ಅದರಲ್ಲೂ ಇಸ್ಲಾಮ್ ಸ್ವೀಕರಿಸುವಂತೆ ಬಹಿರಂಗ ಆಹ್ವಾನವನ್ನು ಕೊಟ್ಟು ಬರುವುದೆಂದರೆ ಅಷ್ಟೊಂದು ಸಣ್ಣ ವಿಷಯವಲ್ಲ.
"ಯಾರದು ಅಲ್ಲಿ? ಕೊನೆಯಲ್ಲಿ?" ಸಭೆಯಲ್ಲಿದ್ದ ಸ್ವಹಾಬಿಗಳೆಲ್ಲರೂ ಪ್ರವಾದಿ ಮುಹಮ್ಮದ್ ಮುಸ್ತಫಾ (ﷺ) ನಬಿಯವರ ಮಾತು ಕೇಳಿ ತಿರುಗಿ ನೋಡಿದರು.
"ಪ್ರವಾದಿಯವರೇ, ನನ್ನ ಕೈಯ್ಯಲ್ಲಿ ಪತ್ರ ಕೊಡಿರಿ. ನಾನು ಕೊಂಡುಹೋಗಿ ಕೊಡುವೆನು" ಎಲ್ಲರಿಗೂ ಅಚ್ಚರಿ. ಅರೇಬಿಯಾ ಪ್ರಾಂತ್ಯವೇ ನಡುಗುವ ಪೆರ್ಶ್ಯನ್ ಚಕ್ರವರ್ತಿಯ ಕೈಯ್ಯಲ್ಲಿ ಪತ್ರ ನೀಡುವಷ್ಟು ಧೈರ್ಯವಿರುವವರು ಯಾರೆಂಬ ಕೌತುಕದಿಂದಾಗಿ ಸ್ವಹಾಬಿಗಳೆಲ್ಲರೂ ಕತ್ತು ಉದ್ದುದ್ದ ಮಾಡಿ ನೋಡತೊಡಗಿದರು.
"ಮರಳಿ ಬರುವ ಯಾವ ಖಾತರಿಯೂ ಇಲ್ಲ. ಯಾಕೆಂದರೆ ಚಕ್ರವರ್ತಿಯ ಮುಂದೆ ಸೊಲ್ಲೆತ್ತಿದವರು ಜೀವದೊಂದಿಗೆ ಮರಳಿಲ್ಲ. ಇದು ತಲೆ ದಂಡವಾಗುವ ಕಥೆ. ಮೂಳೆಯನ್ನು ಕೂಡ ತುಂಡರಿಸಿ ಏನೂ ಸಿಗದಂತೆ ಭಕ್ಷಿಸಿ ಬಿಡುವರು ಸೈನಿಕ ತೋಳಗಳು" ಪ್ರವಾದಿ ಮುಹಮ್ಮದ್ ಮುಸ್ತಫಾ (ﷺ) ನಬಿಯವರು ಎಚ್ಚರಿಕೆಯ ಮಾತನ್ನಾಗಿ ಮತ್ತಷ್ಟು ಗಂಭೀರತೆಯನ್ನು ಮುಂದುವರೆಸಿದರು.
"ಅಲ್ಲಾಹನ ದೂತರೇ, ನನಗೆ ಅದೇನೂ ದೊಡ್ಡ ವಿಷಯವೇ ಅಲ್ಲ. ನನಗೆ ತಮ್ಮ ಆಜ್ಞಾಪನೆಯೇನೋ ಅದುವೇ ದೊಡ್ಡದು. ನನಗೆ ಮರಣದ ಭಯವಿಲ್ಲ" ಆ ವೆಹಾಬಿ ಸಭೆಯಿಂದ ಎದ್ದು ಪ್ರವಾದಿ ಮುಹಮ್ಮದ್ ಮುಸ್ತಫಾ (ﷺ) ನಬಿಯವರ ಬಳಿಗೆ ಬಂದರು. ಎಲ್ಲರಿಗೂ ಯಾರಾಗಿರಬಹುದೆಂಬ ಕಾತರ. ಅವರೇ ಅಬ್ದುಲ್ಲಾಹಿಬ್ನು ಹುದಾಫ ತುಸ್ಸಅದೀ (ರ). ಹಲವಾರು ರಣಾಂಗಣದಲ್ಲಿ ಕದನ ಚಾತುರ್ಯತೆಯಿಂದಲೂ, ತನ್ನ ಧೀರತೆಯಿಂದಲೂ ವಿಸ್ಮಯ ಸೃಷ್ಟಿಸಿದ ಅತ್ಯಂತ ಶೌರ್ಯವಂತರಾಗಿದ್ದರು ಅವರು.
ನೆರೆದಿದ್ದ ಹಲವಾರು ಸ್ವಹಾಬಿಗಳ ಸಮಕ್ಷಮದಲ್ಲಿ ಪ್ರವಾದಿ ಮುಹಮ್ಮದ್ ಮುಸ್ತಫಾ (ﷺ) ನಬಿಯವರು ಆ ಆಹ್ವಾನ ಪತ್ರವನ್ನು ಅಬ್ದುಲ್ಲಾಹಿಬ್ನು ಹುದಾಫ ತುಸ್ಸಅದೀ (ರ) ಯವರ ಕೈಗಿತ್ತರು. ಅವರು ಪ್ರವಾದಿ ಮುಹಮ್ಮದ್ ಮುಸ್ತಫಾ (ﷺ) ನಬಿಯವರಲ್ಲೂ, ಸ್ವಹಾಬಿಗಳಲ್ಲೂ ಯಾತ್ರೆ ಹೇಳಿ ಸೀದಾ ತಮ್ಮ ಮನೆಗೆ ತೆರಳಿದರು.
•ಅಂತಃಪುರದಲ್ಲಿ ಅರಬಿ
ಅದು ಸುದೀರ್ಘವಾದ ಯಾತ್ರೆಯಾಗಿದ್ದರಿಂದ ಮನೆಗೆ ಹಿಂತಿರುಗಿದ ತುಸ್ಸಅದೀ (ರ) ಅದರ ಸಿದ್ಧತೆಯನ್ನೆಲ್ಲಾ ಮಾಡಿಕೊಂಡರು. ಯಾತ್ರೆಯ ವೇಳೆ ಸೊಂಟಪಟ್ಟಿ ಮತ್ತು ತಲೆಗೆ ಭಾರವಾದ ಪೀಠವನ್ನು, ಕಾಲಿಗೆ ಕುಫ್ದ ಧರಿಸುವುದು ಒಂದು ಖಡ್ಗವನ್ನು ಜೀವ ರಕ್ಷಣೆಗಾಗಿ ಜೊತೆಗಿದುವುದೆಲ್ಲ ಅರಬಿಗಳ ವಾಡಿಕೆಯಾಗಿತ್ತು. ತನ್ನ ಪತ್ನಿ, ಮಕ್ಕಳು, ತಂದೆ ತಾಯಿಯೊಂದಿಗೆ ಯಾತ್ರೆ ಹೇಳಿ ಅವರು ತನ್ನ ಕುದುರೆಯೇರಿ ಹೊರಟರು. ಅದು ಅತ್ಯಂತ ಕುಟಿಲ ಹಾದಿಯಲ್ಲಿನ ಜಟಿಲಕರವಾದ ಯಾತ್ರೆಯಾಗಿತ್ತು. ಇರಾಖ್ ನಲ್ಲಿನ ಮದಾರ್ ಎಂಬಲ್ಲಾಗಿತ್ತು ಕಿಸ್ರಾ ಚಕ್ರವರ್ತಿಯ ಕೋಟೆ. ಮದೀನಾದಿಂದ ಮದಾರ್ ಗೆ ತಲುಪಬೇಕಾದರೆ ಸಾವಿರಾರು ಕಿಲೋಮೀಟರನ್ನು ಕ್ರಮಿಸಬೇಕಿತ್ತು. ಅಲ್ಲದೆ ದುರ್ಗಮ ದಾರಿ. ಅಲ್ಲಲ್ಲಿ ನದಿ, ತೊರೆಗಳು. ಮತ್ತೆ ಕೆಲವು ಕಡೆ ಬಂಡೆಗಲ್ಲಿನ ರಾಶಿ, ಇದೆಲ್ಲವನ್ನೂ ಕ್ರಮಿಸುತ್ತಾ ಅವರು ಮದಾರ್ ಗೆ ಹೇಗೂ ತಲುಪಿದರು.
ಅದುವರೆಗೆ ಅರಬಿಗಳ ಕಾವ್ಯದಲ್ಲಿ ಕಲ್ಪನೆಯಾಗಿದ್ದ ಕಿಸ್ರಾ ಕೋಟೆಯನ್ನು ಅವರು ಕಣ್ಣಾರೆ ಕಂಡಿದ್ದು ಅದೇ ಮೊದಲಾಗಿತ್ತು. ಚಕಿತಗೊಳಿಸುವ ಶ್ವೇತ ಭವನ. (ಅಸ್ಸಖ್ರತುಲ್ ಅಬ್ಯಲ್ ) ಮುಗಿಲಿಗೆ ಮುತ್ತು ನೀಡುವ ಗೋಪುರ. ಗಾಂಭೀರ್ಯ ಸ್ಪರಿಸುವ ಕಲಾ ಚಿತ್ತಾರಗಳು, ಪ್ರಾಚೀನತೆಯ ಕುರುಹನ್ನು ವರ್ಣಿಸುವ ವಿಶಾಲ ಆಕೃತಿಗಳು, ಸುತ್ತಲೂ ಕಾವಲುಗಾರರು ಮತ್ತು ಬಂದೂಕುಧಾರಿಗಳು. ಕೋಟೆಯ ಒಳಗೆ ಚಕ್ರವರ್ತಿಯ ಅಂತಃಪುರ. ಕೋಟೆಯ ಬಾಗಿಲ ಬಳಿ ಗಜ ಗಾತ್ರದ ಭೀಮಾಂಡ ಆಕೃತಿಯ ಇಬ್ಬರು ಪಹರೇದಾರರು. ಅಬ್ದುಲ್ಲಾಹಿಬ್ನು ಹುದಾಫ ತುಸ್ಸಅದೀ (ರ) ಓಮ್ಮೆ ಆ ಕಾವಲುಗಾರರನ್ನು ನೋಡಿದಾಗಲೇ ಮನಸ್ಸಿನಲ್ಲಿ ಹೇಳಿಕೊಂಡರು "ಹೇಗೆ ಒಳಗೆ ಹೋಗಲಿ?" ಇದು ಪ್ರವಾದಿಯವರ (ﷺ) ಆಜ್ಞೆಯಾಗಿದೆ. ಪ್ರವಾದಿಯವರ (ﷺ) ಆಜ್ಞೆಯ ಮುಂದೆ ದೈತ್ಯ ಪರ್ವತವೇ ಎದುರಾದರೂ ರಟ್ಟಿಸಿ ಒಳನುಗ್ಗುವೆನೆಂದು ದೃಢಪಡಿಸಿಕೊಂಡರು.
ಮರಣಕ್ಕತೀತವಾದ ಯಾವುದೇ ಭಯವೂ ಅವರನ್ನು ಕಾಡಲಿಲ್ಲ. ಇಸ್ಲಾಮಿಗಾಗಿ ಮರಣ ಅಪ್ಪಲೂ ನಾನು ಸಿದ್ದನೆಂದು ಪ್ರತಿಜ್ಞೆಗೈದರು. ಅವರು ತನ್ನ ಲುಂಗಿಯನ್ನು ಬಿಗಿದು ಕಟ್ಟಿದರು. ತನ್ನ ಸೊಂಟಪಟ್ಟಿಯನ್ನು ಮತ್ತಷ್ಟು ಗಟ್ಟಿಗೊಳಿಸಿದರು. ಅವರ ಮುಖಭಾವವು ಗಾಂಭೀರ್ಯದಿಂದ ಹೊಳೆಯತೊಡಗಿತು. ಈಮಾನಿನ ಪಕಳೆಗಳು ಸೆಟೆದವು. ನಯನಗಳಲ್ಲಿ ಬೆಂಕಿಯ ರಶ್ಮಿಗಳು ಚೆಲ್ಲಿದವು. ಅವರು ತನ್ನ ಜೇಬಿನಿಂದ ಪತ್ರವನ್ನು ತೆಗೆದು ಕೈಯ್ಯಲ್ಲಿ ಹಿಡಿದು ಎದೆ ಸೆಟೆಸಿ ಗಾಂಭೀರ್ಯದಿಂದ ನಡೆದರು. ಬಾಗಿಲಿನಲ್ಲಿ ಕಾವಲು ನಿಂತಿದ್ದವರು ಅರೆಕ್ಷಣ ಸ್ತಂಭೀಭೂತರಾದರು. ಯಾಕೆಂದರೆ ಕೋಟೆಯ ಇತಿಹಾಸದಲ್ಲೇ ಇಷ್ಟೊಂದು ನರಂಧವಾಗಿ ನಡೆಯುವ ವ್ಯಕ್ತಿಯನ್ನು ಕಾಣುವುದು ಇದೇ ಮೊದಲ ಬಾರಿಯಾಗಿರಬೇಕು.
ಕೋಟೆಯ ಸನಿಹಕ್ಕೆ ಬರುತ್ತಿದ್ದ ತುಸ್ಸಅದೀ (ರ) ಯವರನ್ನು ಕಂಡ ಕಾವಲುಗಾರನೊಬ್ಬ ತನ್ನ ಜತೆಗಾರನೊಂದಿಗೆ ಹೇಳಿದ : "ನೋಡು, ಕಿಸ್ರಾ ಆಡಳಿತದ ಚರಿತ್ರೆಯಲ್ಲೇ ಪ್ರಪ್ರಥಮವಾಗಿ ಮುಠ್ಠಾಳನೊಬ್ಬ ಎದೆ ಸೆಟೆಸಿ ಅಹಂಕಾರದಿಂದ ನಡೆದುಕೊಂಡು ಬರುತ್ತಿದ್ದಾನೆ. ಅವನನ್ನು ಕಾಣುವಾಗಲೇ ಅಹಂಭಾವದಿಂದ ಬರುವಂತೆ ಕಾಣುತ್ತಿದೆ. ಅವನ ಮೊರೆಯಲ್ಲಿ ಅರಬಿಗಿರುವ ಎಲ್ಲಾ ಲಕ್ಷಣಗಳೂ ಇದೇ. ಹತ್ತಿರ ತಲುಪಲಿ. ಅವನಿಗೆ ನಾನು ತೋರಿಸಿಕೊಡುತ್ತೇನೆ."....
ಮತ್ತೊಬ್ಬ ಕಾವಲುಗಾರ ಹೇಳಿದ "ಹುಂ, ಅವನ ಅಹಣಕಾರವನ್ನು ಮಣ್ಣು ಮುಕ್ಕಿಸಬೇಕು.ಬರಲಿ ಹತ್ತಿರ"
ಮತ್ತೊಬ್ಬ ಪಹರೆಗಾರ ಧ್ವನಿ ಪೇರಿಸಿದ. ಕಾವಲುಗಾರರು ಜಾಗೃತರಾದರು. ಅಬ್ದುಲ್ಲಾಹ್ ರವರು ಅವರ ಬಳಿಗೆ ತಲುಪಿದರು. ಕಾವಲುಗಾರರು ತನ್ನನ್ನು ಅಟಕಾಯಿಸಲು ಸಿದ್ಧರಾಗುತ್ತಿರುವುದನ್ನು ಅರಿತ ಅಬ್ದುಲ್ಲಾರು ಅವರ ಕಣ್ಣಿಗೆ ತೀಕ್ಷ್ಣ ರೀತಿಯ ನೋಟವೊಂದನ್ನು ಬೀರಿದರು. ಈಮಾನಿನ ರಶ್ಮಿಯ ಜ್ವಲಿಸುವ ಭರ್ಸ್ತಿತ ನಯನಗಳು. ಕಾವಲುಗಾರನ ಮನದಲ್ಲಿ ಸಂಘರ್ಷವನ್ನು ಸೃಷ್ಟಿಸಿತು. ಅಲ್ಲಾಹನು ಅವರ ಹೃದಯದಲ್ಲಿ ಭೀತಿಯನ್ನುಂಟು ಮಾಡಿದ. ಅವರಿಬ್ಬರೂ ಗಡಗಡ ನಡುಗತೊಡಗಿದರು. ವಿಹ್ವಲದಿಂದಲೇ ಅವರು ಕೇಳಿದರು.....
"ನೀವು ಯಾರು? ಯಾಕೆ ಬಂದಿರಿ?"
"ನಾನು ಅಬ್ದುಲ್ಲಾ. ಮದೀನಾದಿಂದ ಬಂದಿರುವೆನು. ಚಕ್ರವರ್ತಿಗೆ ಪತ್ರವೊಂದನ್ನು ನೀಡಲು ನನ್ನ ನಾಯಕ ನನ್ನನ್ನು ಕಳುಹಿಸಿದ್ದಾರೆ. ಅದಕ್ಕಾಗಿ ಬಂದೆ" ಗಡುಸು ಧ್ವನಿಯಿಂದಲೇ ನುಡಿದರು ಹುದಾಫರು.
"ಆ ಪತ್ರವನ್ನು ನಮ್ಮಲ್ಲಿ ಕೊಡಿ. ಚಕ್ರವರ್ತಿಯ ಕೈಯ್ಯಲ್ಲಿ ನಾವು ಒಪ್ಪಿಸುತ್ತೇವೆ"
"ಅದಾಗದು, ಚಕ್ರವರ್ತಿಯ ಹಸ್ತಕ್ಕೆ ಒಪ್ಪಿಸಲು ಪ್ರವಾದಿಯವರು (ﷺ) ನನ್ನಲ್ಲಿ ಕಲ್ಪಿಸಿದ್ದಾರೆ. ಅದನ್ನು ನಾನೇ ಕೊಟ್ಟು ತೀರುವೆ' ನಕಾರತೆಯಿಂದ ಹೇಳಿದರು.
ಆ ವೇಳೆ ಒಬ್ಬ ಕಾವಲುಗಾರ ಮತ್ತೊಬ್ಬನಲ್ಲಿ ಹೇಳಿದ "ನಾನು ಚಕ್ರವರ್ತಿಯಲ್ಲಿ ಪತ್ರ ತಂದ ಬಗ್ಗೆ ಹೇಳಿ ಬರುತ್ತೇನೆ"
"ಹುಂ"
(ಹಾಗೆ ಕಾವಲುಗಾರನು ಚಕ್ರವರ್ತಿಯ ಬಳಿಗೆ ತೆರಳಿದ)
"ಪ್ರಭು, ತಮಗೊಂದು ಪತ್ರವನ್ನು ನೀಡಲು ಒಬ್ಬ ಅರಬಿ ಬಂದಿದ್ದಾನೆ"
"ಅವನಿಂದ ಆ ಪತ್ರವನ್ನು ಪಡೆದುಕೊಂಡು ಬಾ" ಚಕ್ರವರ್ತಿ ಆದೇಶಿಸಿದ.
"ಅವನು ನಮ್ಮಲ್ಲಿ ಕೊಡುವುದಿಲ್ಲ. ಚಕ್ರವರ್ತಿಯ ಕೈಯ್ಯಲ್ಲೇ ಕೊಡುವೆನೆಂದು ಹಠ ಹಿಡಿಯುತ್ತಿದ್ದಾನೆ"
"ಸರಿ, ಅವನು ಇತ್ತ ಬರಲಿ" ರಾಜಾಜ್ಞೆ ಬಂತು.
ಕಾವಲುಗಾರನು ಹೊರಬಂದು ಹೇಳಿದ ...."ತಮಗೆ ಒಳಹೋಗುವಂತೆ ರಾಜಾಜ್ಞೆ ಬಂದಿದೆ"
ಅಬ್ದುಲ್ಲಾ (ರ) ರವರು ಮನಸ್ಸಿನಲ್ಲೇ ಅಲ್ಲಾಹನಿಗೆ ಸ್ತುತಿಯರ್ಪಿಸಿದರು. ಅಬ್ದುಲ್ಲಾ ಎಂಬ ಧೀರನ ಮುಂದೆ ಕಿಸ್ರಾ ಶರ್ಧರರು ಅಂಜಕುಳಿಗಳಾಗಿ ನಿಂತುಬಿಟ್ಟರು. ಪ್ರವಾದಿಯವರ (ﷺ) ಅನುಯಾಯಿಗೆ ಜಗತ್ತಿನ ಪ್ರತಾಪದ ಕೋಟೆಯು ತೆರೆಯಲ್ಪಟ್ಟಿತು. ಅಬ್ದುಲ್ಲಾಹಿಬ್ನು ಹುದಾಫತುಸ್ಸಅದೀ (ರ) ಯವರು ತಕ್ಷಣ ಬಲಗಾಲಿಟ್ಟು ಕೋಟೆಯ ಒಳಗೆ ಹೋದರು. ಕೋಟೆಯೊಳಗಿದ್ದ ಆಳುಗಳು, ಸೈನಿಕರು ಅಬ್ದುಲ್ಲಾರವರನ್ನು ಕಂಡು ಚಕಿತಗೊಂಡರು. ಕಿಸ್ರಾ ಚರಿತ್ರೆಯಲ್ಲೇ ಒಬ್ಬಂಟಿಯಾಗಿ ಆರಭಿಯೊಬ್ಬ ಕೋಟೆಯೊಳಗೆ ಬರುತ್ತಿರುವುದನ್ನು ಕಂಡು ಅವರು ಇನ್ನೇನು ಸಂಭವಿಸುತ್ತೋ ಎಂದು ಚಿಂತಿಸಿದಾಗ ನಿಂತಲ್ಲೇ ಅರೆಕ್ಷಣ ಕಲ್ಲಾಗಿಬಿಟ್ಟರು.
ಪುರಾತನ ಕಾಲದ ಕೋಟೆಯ ಪ್ರಾಂತರ ದಾರಿಯಲ್ಲಿ ಹುದಾಫತುಸ್ಸಅದೀ (ರ) ಯವರು ನಡೆದರು. ವೈಭವಯುತ ಸಿಂಹಾಸನದಲ್ಲಿ ಆಸೀನನಾಗಿದ್ದ ಕಿಸ್ರಾ ಚಕ್ರವರ್ತಿ. ಹಾಗೆ ಅಬ್ದುಲ್ಲಾರು ಅಂತಃಪುರದೊಳಗೆ ಹೋಗಿ ಚಕ್ರವರ್ತಿಯ ಮುಂದೆ ನಿಂತಾಗ ತನಗೆ ಸಾಷ್ಟಾಂಗವೆರಗುವಂತೆ ಕಲ್ಪಿಸಿದ ಚಕ್ರವರ್ತಿ.
"ನಾನು ತಮಗೆ ಸುಜೂದ್ ಮಾಡಲಾರೆ. ನನ್ನ ನಾಯಕರಾದ ಮುಹಮ್ಮದ್ ನಬಿಯವರು (ﷺ) ತಮಗೆ ಸಾಷ್ಟಾಂಗವೆರಗಲು ಹೇಳಲಿಲ್ಲ" ಎಂದು ಖಡಾಖಂಡಿತವಾಗಿ ಹೇಳಿದರು.
ಹುದಾಫರ (ರ) ಮಸ್ಕರ ಮಾತು ಕೇಳಿ ಇದು ಸಾಧಾರಣ ಜವ್ವನನಲ್ಲವೆಂದೂ, ಈತ ಆಗಬೇಧಿಯೆಂದೂ ಚಕ್ರವರ್ತಿಗೆ ಅರ್ಥವಾಯಿತು. ಹುದಾಫರು ಚಕ್ರವರ್ತಿಯ ಮುಖವನ್ನೊಮ್ಮೆ ನೋಡಿದರು. ಗರ್ವಿಷ್ಟ ರಾಜನ ನೀಳ ಮೀಸೆಯೆಡೆಯಿಂದ ಸೊಕ್ಕು ಹೆಡೆಯೆಬ್ಬಿಸುತ್ತಿರುವುದು ಕಂಡಿತು ಅಬ್ದುಲ್ಲಾರಿಗೆ.
"ಹ್ಞೂ, ನೀನು ಬಂದ ವಿಷಯ ಪ್ರಸ್ತಾಪಿಸು" ಹ್ಞೂಕರಿಸಿದ ಚಕ್ರವರ್ತಿ.
ಅಬ್ದುಲ್ಲಾರವರು (ರ) ತಮ್ಮ ಕೈಯ್ಯಲ್ಲಿದ್ದ ಪತ್ರವನ್ನು ಚಕ್ರವರ್ತಿಯ ಕೈಗೆ ಹಸ್ತಾಂತರಿಸಿದರು. ಸಣ್ಣ ಲಕೋಟೆಯ ಒಳಗಿರುವ ಕಾಗದವನ್ನು ತಿರುವಿ ಮರುವಿ ನೋಡಿ ಚಕ್ರವರ್ತಿ ಕೇಳಿದ.... "ಈ ಪತ್ರವನ್ನು ನನ್ನ ಬಳಿ ಹೊತ್ತು ತಂದಿದ್ದೀಯ?" ಒಮ್ಮೆ ಕನಲಿದ. ಏಕೆಂದರೆ ಪ್ರವಾದಿಯವರು (ﷺ) ಬರೆದ ಅರಬಿ ಭಾಷೆಯು ಚಕ್ರವರ್ತಿಗೆ ಅಪರಿಚಿತವಾಗಿತ್ತು. ನಂತರ ಇದು ಅರಬಿ ಭಾಷೆಯೆಂದು ತಿಳಿದ ಕಿಸ್ರಾ ಹೇಳಿದ.
"ತಾವು ಒಮ್ಮೆ ಹೊರಹೋಗಿ. ನಾನು ಈ ಪತ್ರವನ್ನು ಓದುತ್ತೇನೆ" ಸಂತೋಷಗೊಂಡ ಅಬ್ದುಲ್ಲಾರು ಪತ್ರವನ್ನು ಒಪ್ಪಿಸಿ ಪದುಳ ಹೃದಯದೊಂದಿಗೆ ಹೊರಬಂದರು. ಯಾಕೆಂದರೆ ಪತ್ರವನ್ನು ಒಪ್ಪಿಸುವುದು ಮಾತ್ರವಾಗಿತ್ತು ಅವರ ಕೆಲಸ. ಅವರು ಹೊರಗೆ ಬಂದು ನಿಂತು ಮೆಲ್ಲನೆ ನೋಡುತ್ತಿದ್ದರು. ಚಕ್ರವರ್ತಿ ಆ ಪತ್ರವನ್ನು ನೋಡಿ ಅದರ ಸಾರವನ್ನು ಹೇಳುವ ತರ್ಜುಮೆಗಾರರನ್ನು ಕರೆಸಿದ. ಯಾರು ಪತ್ರವನ್ನು ಬರೆದರೂ, ಆ ಪತ್ರದಲ್ಲಿ ಚಕ್ರವರ್ತಿಯ ಬಗ್ಗೆ ತುಂಬು ಪ್ರಶಂಸೆಯಿರುತ್ತಿತ್ತು. ಅದು ಆ ರಾಜ್ಯದ ಪತ್ರ ಬರೆಯುವ ರಿವಾಜಾಗಿತ್ತು. ಹಾಗಾದರೆ ಚಕ್ರವರ್ತಿಯು ಪತ್ರ ಬರೆದವನಿಗೆ ಸ್ವರ್ಣ ನಾಣ್ಯಗಳನ್ನು ಕೊಟ್ಟು ಕಳುಹಿಸುತ್ತಿದ್ದ.
ಹಾಗೆ ತರ್ಜುಮೆಗಾರ ಬಂದು, ಆ ಪತ್ರವನ್ನು ಚಕ್ರವರ್ತಿಯ ಕೈಯಿಂದ ಪಡೆದು, ಓದಲು ಆರಂಭಿಸಿದ. ಆರಂಭದಲ್ಲೇ بِسْمِ اللهِ الرَّحْمَٰنِ الرَّحِيمْ ಎಂಬ ನಾಮದಿಂದ ಆರಂಭಗೊಂಡಿತ್ತು. ತರ್ಜುಮೆಗಾರ ಇಷ್ಟು ಓದಿದಾಗಲೇ ಚಕ್ರವರ್ತಿ ಬೆಚ್ಚಿದ. ಅವನ ನಾಸಿಕದಲ್ಲಿ ಕೋಪಾಗ್ನಿಯು ಕೊತಕೊತನೆ ಕುಡಿಯತೊಡಗಿತು. ಬೇರೇನೂ ಓದಲು ಬಿಡದೆ ತರ್ಜುಮೆಗಾರನ ಕೈಯಿಂದ ಪತ್ರವನ್ನು ಕಿತ್ತುಕೊಂಡು ಚಿಂದಿಮಾಡಿ ಕಸದ ಬುಟ್ಟಿಗೆ ಎಸೆದುಬಿಟ್ಟ. ಇದೆಲ್ಲವನ್ನೂ ಹುದಾಫರು(ರ) ನೋಡುತ್ತಲೇ ಇದ್ದರು. ಇನ್ನು ಇಲ್ಲಿ ನಿಲ್ಲುವುದು ಅಪಾಯವೆಂದರಿತ ಹುದಾಫರು(ರ) ತಕ್ಷಣ ಅಲ್ಲಿಂದ ಕಾಲ್ಕಿತ್ತರು. ಚಕ್ರವರ್ತಿ ಕೋಪದಿಂದ ಅಟ್ಟಹಾಸಗೈಯ್ಯುತ್ತಾ "ಅವನನ್ನು ಹಿಡಿದು ತನ್ನಿರಿ" ಎಂದು ಆಜ್ಞಾಪಿಸಿದ. ಕೂಡಲೇ ಕಾರ್ಯಪ್ರವೃತ್ತರಾದ ಸೈನಿಕರೆಲ್ಲರೂ ಕೋಟೆಯ ಒಳಗೂ, ಹೊರಗೂ ಹುದಾಫರನ್ನು (ರ) ಹುಡುಕಾಡತೊಡಗಿದರು.
•ಅಲ್ಲಾಹನು ಚಿಂದಿ ಮಾಡುವನು:
ಇತ್ತ ಮದೀನಾದಲ್ಲಿ ಕುತೂಹಲ ಹೆಪ್ಪುಗಟ್ಟಿತ್ತು. ಯಾಕೆಂದರೆ ಜಗತ್ತು ಕಂಡ ಬಲುದೊಡ್ಡ ಆಕ್ರಮಿ ಕಿಸ್ರಾನ ಬಳಿಗೆ ಇಸ್ಲಾಮಿನ ಆಹ್ವಾನ ಪತ್ರವನ್ನು ಕೊಂಡು ಹೋಗಿ ಕೊಟ್ಟ ಹುದಾಫತುಸ್ಸಅದೀ (ರ) ಯವರ ಬಗ್ಗೆ ಜನರು ಅಭಿಮಾನಪಟ್ಟರು.
ಇತ್ತ ಚಕ್ರವರ್ತಿಯ ಕೋಪಾಗ್ನಿಯನ್ನು ಕಣ್ಣಾರೆ ಕಂಡ ಹುದಾಫರು (ರ) ಓಡಿಬಂದು ತನ್ನ ಕುದುರೆಯನ್ನು ಹತ್ತಿ ಸೀದಾ ಮದೀನಾದ ಕಡೆ ಹೊರಟರು. ಕೋಟೆಯ ಸುತ್ತ ತಿರುಗಿ ಹುದಾಫರನ್ನು (ರ) ಹುಡುಕುತ್ತಿದ್ದ ಸೈನಿಕರಿಗಂತೂ ಸುಸ್ತೇ ಸುಸ್ತು.
ಇತ್ತ ಅರಮನೆಯೇ ಒಮ್ಮೆ ಸ್ಥಬ್ಶವಾಗಿತ್ತು. ಅಂತಃಪುರವನ್ನು ಆಂತರಿಕವಾಗಿ ಸರ್ವನಾಶಗೈಯ್ಯುವ ಸಂಚು ಇದು ಎಂಬುದು ಅವರಿಗೆ ಅರಿಯದೇ ಹೋಗಿತ್ತು. ಆದರೂ ಏನೋ ಷಡ್ಯಂತ್ರವಿದೆಯೆಂದು ಒಳ ಆತಂಕ ಚಕ್ರವರ್ತಿಯನ್ನು ಕಾಡದೆಯೂ ಇರಲಿಲ್ಲ.
ಸುದೀರ್ಘ ಯಾತ್ರೆಯ ನಂತರ ಹುದಾಫರು (ರ) ಮದೀನಾಕ್ಕೆ ತಲುಪಿದರು. ಕುತೂಹಲದಿಂದಿದ್ದ ಸ್ವಹಾಬಿಗಳಿಗೆ ಹುದಾಫರನ್ನು (ರ) ಕಂಡಾಗ ಸಮಾಧಾನವಾಯಿತು. ಹುದಾಫರು (ರ), ಪ್ರವಾದಿ ಮುಹಮ್ಮದ್ ಮುಸ್ತಫಾ (ﷺ) ನಬಿಯವರ ಸನ್ನಿಧಿಗೆ ತೆರಳಿ ನಡೆದ ಘಟನೆಯನ್ನು ವಿವರಿಸಿದರು. "ತಮ್ಮ ಪತ್ರವನ್ನು ದುಷ್ಟ ಚಕ್ರವರ್ತಿ ಚಿಂದಿಮಾಡಿ ಬುಟ್ಟಿಗೆಸೆದನೆಂದು" ಹೇಳಿದರು. ಇದನ್ನು ಕೇಳಿ ಅರೆಕ್ಷಣ ಮೌನವಾದ ಪ್ರವಾದಿ ಮುಹಮ್ಮದ್ ಮುಸ್ತಫಾ (ﷺ) ನಬಿಯವರ ಮುಖದಲ್ಲಿ ಅಲ್ಲಾಹುವಿನ ಸಂದೇಶವೊಂದರ ಕುರುಹು ಗೋಚರವಾಯಿತು. ಸ್ವಲ್ಪ ಹೊತ್ತು ಕಳೆದು ಪ್ರವಾದಿ ಮುಹಮ್ಮದ್ ಮುಸ್ತಫಾ (ﷺ) ನಬಿಯವರು ಹೇಳಿದರು : "ಅವನು ನನ್ನ ಪತ್ರವನ್ನು ಚಿಂದಿಮಾಡಿ ಎಸೆದಂತೆ ನಿಶ್ಚಯವಾಗಿಯೂ ಅಲ್ಲಾಹನು ಅವನನ್ನು ಚಿಂದಿ ಮಾಡಿಯೇ ತೀರುವನು"
ಮತ್ತೊಂದೆಡೆ ಕಿಸ್ರಾ ಚಕ್ರವರ್ತಿ ಇನ್ನೊಂದು ಕಾರ್ಯದಲ್ಲಿ ಶೀಘ್ರವಾಗಿ ಮುಂದುವರೆಯುತ್ತಲಿದ್ದ
•ಯೆಮನ್ ಚಕ್ರವರ್ತಿಗೆ ಆದೇಶ:
ಇತ್ತ ದಿನಕಳೆದರೂ ಕಿಸ್ರಾ ಚಕ್ರವರ್ತಿಯ ಕೋಪ ನೆತ್ತಿಯಿಂದ ಇಳಿದಿರಲಿಲ್ಲ. ಚಕ್ರವರ್ತಿ ಮಂತ್ರಿ ರುಷ್ತಮ್ ನನ್ನ ಕರೆದ. ಚಕ್ರವರ್ತಿಯ ಮುಖ ಕಂಡ ರುಷ್ತಮ್ ನಿಗೆ ಪರಿಸ್ಥಿತಿಯು ಅರ್ಥವಾಗಿತ್ತು. ರುಷ್ತಮ್ ನಿಗೆ ಚಕ್ರವರ್ತಿಯ ಬಳಿಗೆ ತೆರಳಲು ಭಯವಾಗಿತ್ತು. ಆದ್ದರಿಂದ ಅಂಜಿಕೆಯಿಂದಲೇ ರುಷ್ತಮ್ ದೂರ ನಿಂತು ಕೇಳಿದ...
"ಏನು ಪ್ರಭು?"
"ಮುಹಮ್ಮದ್ (ﷺ) ತನ್ನ ನವ ಧರ್ಮವನ್ನು ಸ್ವೀಕರಿಸುವಂತೆ ಆಹ್ವಾನಿಸಿ ಪಾತ್ರ ಬರೆಯುವ ಮೂಲಕ ನನಗೆ ಮತ್ತು ನನ್ನ ಸಾಮ್ರಾಜ್ಯಕ್ಕೆ ಅಪಮಾನವನ್ನು ಮಾಡಿದ್ದಾರೆ. ತನ್ನ ಅನುಯಾಯಿಯನ್ನು ಪತ್ರದೊಂದಿಗೆ ಇಲ್ಲಿಗೆ ಕಳುಹಿಸಿದ್ದು, ಆ ಸೋಗಲಾಡಿ ವ್ಯಕ್ತಿ ಅರಮನೆಯ ಘನತೆ - ಮರ್ಯಾದೆಯನ್ನು ಮರೆತು ನನ್ನನ್ನು ಅವಮಾನಿಸುವ ರೀತಿಯಲ್ಲಿ ನನ್ನಲ್ಲಿ ವರ್ತಿಸಿದ್ದಾನೆ. ಅನುಯಾಯಿಗೇ ಇಷ್ಟು ಸೊಕ್ಕಿದ್ದರೆ ಇನ್ನು ಮುಹಮ್ಮದ್ (ﷺ) ಎಷ್ಟು ದೊಡ್ಡ ಠಕ್ಕನಾಗಿರಲಾರ?"
(ತನ್ನ ನೀಳ ಮೀಸೆಯನ್ನು ತಿರುವುತ್ತಾ ಮುಂದುವರೆಸಿದ ಚಕ್ರವರ್ತಿ)
"ಮುಹಮ್ಮದ್ (ﷺ) ಹಮ್ಮನ್ನು ನಿಲ್ಲಿಸಬೇಕು. ಅವನನ್ನು ಕೊಂದು ಮಣ್ಣು ಮುಕ್ಕಬೇಕು"
(ಚಕ್ರವರ್ತಿಯ ಅನಲ ಉಕ್ಕುವ ಕಣ್ಣುಗಳನ್ನು ನೋಡುತ್ತಾ ಮಂತ್ರಿ ಕೇಳಿದ...)
"ಅದೇಗೆ ಸಾಧ್ಯ ಪ್ರಭು? ಮುಹಮ್ಮದ್ (ﷺ) ಈಗ ಮದೀನಾಕ್ಕೆ ಬಂದ ಮೇಲೆ ಜನಭಲ ವರ್ಧಿಸಿದೆ"
"ಅದು ನನಗೆ ಗೊತ್ತಿಲ್ಲ. ಮುಹಮ್ಮದ್ (ﷺ) ರವರ ರುಂಡ ನನ್ನ ಕಾಲಿನ ಕೆಳಗೆ ತಂದಿರಿಸಬೇಕು" (ಚಕ್ರವರ್ತಿ ಮತ್ತೊಮ್ಮೆ ಘರ್ಜಿಸಿದ)
"ಪತ್ರವನ್ನು ತಂದು ಕೊಟ್ಟವನನ್ನೇ ಹಿಡಿಯಲಾಗಲಿಲ್ಲ. ಇನ್ನು ಪತ್ರವನ್ನು ಕೊಟ್ಟು ಕಳುಹಿಸಿದವರನ್ನು ತಲಾಶೆಗೈದು ತರುವುದು ಸಾಧ್ಯವೇ?" ರುಷ್ತಮ್ ನ ಮನದಾಳದಲ್ಲಿ ನಗುವಿನೊಂದಿಗೆ ಹರಿದ ಸ್ವಗತಗಳಿದು. ರುಷ್ತಮ್ ಬಲು ಚಾಣಾಕ್ಷ. ಅವನು ಹೊಸದೊಂದು ಉಪಾಯವನ್ನು ಹೂಡಿದ. "ಮದೀನಾದ ಹತ್ತಿರದ ರಾಜ್ಯವಾದ ಯೆಮನನ್ನು ಈಗ ಆಳುತ್ತಿರುವುದು ನಮ್ಮ ಅಧೀನದಲ್ಲಿರುವ ಬಾದಾನ್ ಚಕ್ರವರ್ತಿ ತಾನೇ? ಬಾದಾನ್ ಗೆ ಒಂದು ಪತ್ರವನ್ನು ಬರೆಯೋಣ"
"ಆಗಲಿ, ಹೇಗಾದರೂ ಮುಹಮ್ಮದ್ (ﷺ) ರ ಶಿರ ನನ್ನ ಕಾಲುಗಳಿಗೆ ಚೆಂಡಾಡಲು ಸಿಗಬೇಕು" (ಚಕ್ರವರ್ತಿ ಮತ್ತೊಮ್ಮೆ ಹ್ಞೂಕರಿಸಿದ.)
ತಕ್ಷಣ ರುಷ್ತಮ್ ತನ್ನ ಬುದ್ದಿವಂತಿಕೆಯನ್ನು ಪ್ರಯೋಗಿಸಿ ಚಕ್ರವರ್ತಿ ಭರ್ವೀಶ್ ಬರೆದ ರೀತಿಯಲ್ಲಿ ಒಂದು ಪತ್ರವನ್ನು ಬರೆದ. ಪತ್ರ ಹೀಗಿತ್ತು......
"ಮುಹಮ್ಮದ್ (ﷺ) ರನ್ನು ಕೊಂದು ಅವರ ತಲೆಯನ್ನು ಆದಷ್ಟು ಬೇಗ ನಮ್ಮ ಅಂತಃಪುರಕ್ಕೆ ತರಬೇಕು. ಹೇಗಾದರೂ ಮುಹಮ್ಮದ್ (ﷺ) ರನ್ನು ಕೊಂದು ಆತನ ತಲೆ ಹಿಡಿದು ನಮಗೆ ವಿಜಯೋತ್ಸವವನ್ನು ಕೊಂಡಾಡಬೇಕು. ಆದ್ದರಿಂದ ನೀನು ಆದಷ್ಟು ಬೇಗ ಸಜ್ಜಾಗು. ಇಲ್ಲದಿದ್ದರೆ ನಿನ್ನ ಅಧಿಕಾರ ಪಲ್ಲಟಗೊಳ್ಳಬಹುದು. ಮುಹಮ್ಮದ್ (ﷺ) ರ ರುಂಡಕ್ಕೆ ಪರ್ಯಾಯವಾಗಿ ನಿನ್ನನ್ನು ಶಿರಚ್ಛೇದ ಮಾಡಲಾಗುವುದು. ಆದ್ದರಿಂದ ಆದಷ್ಟು ಬೇಗ ಕಾರ್ಯೋನ್ಮುಖನಾಗು.ಇತೀ ಕಿಸ್ರಾ ಭರ್ವೀಶ್"
ಸಂಚಿಕೆ ಹತ್ತರವರೆಗೆ ಪೂರ್ಣಗೊಂಡಿದೆ ಮುಂದಿನ ಭಾಗ ಆತೀ ಶೀಘ್ರದಲ್ಲೇ..
ಮೂಲ : ಟಿ.ಎಂ. ಅನ್ಸಾರ್ ತಂಬಿನಮಕ್ಕಿ
ಸಂಗ್ರಹ : ಜೆ. ಮುಹಮ್ಮದ್ ಫಾರೂಕ್ ಪಾಣೆಮಂಗಳೂರು
Copyright
NOOR-UL-FALAH

Comments
Post a Comment