ಏಳು ಪ್ರವಾದಿ ಚರ್ಯೆಗಳು
ಮಗು ಜನಿಸಿದಾಗ ಅನುಸರಿಸಬೇಕಾದ 7 ಪ್ರವಾದಿ ಚರ್ಯೆಗಳು
ಮಕ್ಕಳ ಜನನವೆಂಬುದು ಇಡೀ ಕುಟುಂಬಕ್ಕೇ ಸಂತೋಷದ ವಿಚಾರವಾಗಿದೆ. ಮಗು ಜನಿಸುವುದರೊಂದಿಗೆ ತಂದೆ ತಾಯಿಗೆ ಸಂತೋಷದ ಮಹಾ ಸಾಗರವನ್ನೇ ಹೊತ್ತು ತರುತ್ತದೆ. ಮುಸ್ಲಿಮ್ ಕುಟುಂಬದಲ್ಲಿ ಒಂದು ಮಗು ಜನಿಸಿದರೆ ಅನುಸರಿಸಬೇಕಾದ ಕೆಲವು ಪ್ರವಾದಿ ಚರ್ಯೆಗಳಿವೆ. ಆದರೆ ಹೊಸ ತಲೆ ಮಾರಿನಲ್ಲಿ ಕೆಲವು ಕಡೆ ಈ ಪ್ರವಾದಿ ಚರ್ಯೆಗಳನ್ನು ಅವಗಣಿಸಲಾಗುತ್ತದೆ ಎಂಬುದು ಖೇದಕರ. ಈ ಒಂದು ಸಣ್ಣ ಲೇಖನದಲ್ಲಿ ಆ ಎಲ್ಲಾ ಪ್ರವಾದಿ ಚರ್ಯೆಗಳನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇನೆ.
1. ಅಲ್ಲಾಹನ ಅನುಗ್ರಹಕ್ಕೆ ಕೃತಜ್ಞತೆ ಸಲ್ಲಿಸುವುದು:
ಹೆಣ್ಣಾಗಲಿ ಗಂಡಾಗಲಿ ಮಕ್ಕಳು ಅಲ್ಲಾಹನ ಅನುಗ್ರಹವಾಗಿದ್ದಾರೆ. ಅದಕ್ಕಾಗಿ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುವುದು. ಕೆಲವು ಕುಟುಂಬಗಳಲ್ಲಿ ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳಿಗೆ ಹೆಚ್ಚಿನ ಪ್ರಾಧಾನ್ಯತೆ ಇರುತ್ತದೆ. ಅಂತಹ ತಂದೆ ತಾಯಿಗಳು ತಮಗೆ ಜನಿಸಿದ ಮಗು ಹೆಣ್ಣಾದರೆ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುವ ಬದಲು ನಮಗೆ ಹೆಣ್ಣು ಮಗು ಅಂತ ಪೆಚ್ಚು ಮೋರೆ ಹಾಕಿ ಅಲ್ಲಾಹನ ಅನುಗ್ರಹವನ್ನು ನಿರಾಕರಿಸುವ ಮನೋವೃತ್ತಿಯನ್ನು ನಾವು ಕಾಣುತ್ತಿದ್ದೇವೆ. ಮಗು ಹೆಣ್ಣಾಗಿರುವುದಕ್ಕೆ ಆಸ್ಪತ್ರೆಯಲ್ಲೇ ಬಿಟ್ಟು ಹೋದ ಎಷ್ಟೋ ಘಟನೆಗಳನ್ನು ನಾವು ನೋಡಿದ್ದೇವೆ. ಆದುದದರಿಂದ ಇಂತಹ ಪ್ರವೃತ್ತಿಗಳನ್ನು ತ್ಯಜಿಸಬೇಕಾಗಿದೆ. ಅಲ್‌ಹಂದುಲಿಲ್ಲಾಹ್ ಎಂದು ಹೇಳುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕಾಗಿದೆ.
2. ಹುಟ್ಟಿದ ಮಗುವಿನ ಕಿವಿಯಲ್ಲಿ ಆಝಾನ್ ಮತ್ತು ಇಖಾಮತ್ ಕೊಡುವುದು:
ಇದು ಪ್ರವಾದಿಯವರ ಚರ್ಯೆಯಾಗಿ ತಿರ್ಮುದಿ, ಅಬೂದಾವುದ್, ಅಹ್ಮದ್, ಬೈಹಕಿ ಹದೀಸ್‌ಗಳಲ್ಲಿ ವರದಿಯಾಗಿದೆ.
3. ತಹ್‌ನೀಖ್:
ತಹ್‌ನೀಖ್ ಅಂದರೆ ಮಗು ಜನಿಸಿದರೆ ಖರ್ಜೂರವನ್ನು ಜಗಿದು ಅದರ ಮಧುರವನ್ನು ಮಗುವಿನ ಬಾಯಲ್ಲಿ ಇಡುವುದು. ಇದು ಪ್ರವಾದಿ ಮುಹಮ್ಮದ್(ಸ)ರವರ ಚರ್ಯೆಯಾಗಿ ಮುಸ್ಲಿಮ್ ಮತ್ತು ಬುಖಾರಿ ಹದೀಸ್‌ಗಳಲ್ಲಿ ವರದಿಯಾಗಿದೆ.
4. ಮಗುವಿಗೆ ಹೆಸರಿಡುವುದು:
ಮಗು ಜನಿಸಿದ ನಂತರ ಆತನಿಗೆ/ಆಕೆಗೆ ಒಂದು ಉತ್ತಮ ಹೆಸರಿಡುವುದು ಆತನ ತಂದೆ ತಾಯಿಗಳ ಕರ್ತವ್ಯವಾಗಿದೆ. ಹೆಸರು ಉತ್ತಮ ಅರ್ಥ ಬರುವಂತಹದ್ದಾಗಿರಬೇಕು. ಈಗ ಫ್ಯಾಷನ್ ಏನಂದರೆ ತಂದೆ ತಾಯಿಯ ಹೆಸರಿಗೆ ಹೊಂದಾಣಿಕೆಯಾಗುವಂತಹ ಹೆಸರನ್ನು ಇಡುವುದು. ಇಲ್ಲಿ ಹೆಸರಿನ ಅರ್ಥವನ್ನು ಪರಿಗಣಿಸಲಾಗುವುದಿಲ್ಲ. ಕೇವಲ ಅಕ್ಷರವನ್ನು ಮಾತ್ರ ಪರಿಗಣಿಸುತ್ತಾರೆ. ಅಂತಹ ಹೆಸರಿಗೆ ಅರ್ಥವಿದೆಯೋ ಅಥವಾ ಯಾವುದೋ ಕೆಟ್ಟ ಅರ್ಥವಿರುತ್ತದೋ ಅಲ್ಲಾಹನೇ ಬಲ್ಲ. ನಮ್ಮ ಉತ್ತರ ಕರ್ನಾಟಕ ಭಾಗದಲ್ಲಿ ಮಗು ಜನಿಸಿ 2/3 ತಿಂಗಳ ವರೆಗೆ ಹೆಸರಿಡದೆ ಕೊನೆಗೆ ನಾಮಕರಣ ಅಂತ ಕಾರ್ಯಕ್ರಮ ಮಾಡಿ ಹೆಸರಿಡುವ ಪದ್ಧತಿ ಕಾಣುತ್ತಿದೆ. ಇದು ಪ್ರವಾದಿ ಚರ್ಯೆಗೆ ವಿರುದ್ಧವಾಗಿದೆ. ಪ್ರವಾದಿ ಚರ್ಯೆಯ ಪ್ರಕಾರ ಆದಷ್ಟು ಬೇಗ ಹೆಸರಿಡಬೇಕು.
5. ಗಂಡು ಮಗುವಿಗೆ ಸುನ್ನತಿ ಮಾಡಿಸುವುದು:
ಸುನ್ನತಿ ಒಂದು ಆರೋಗ್ಯಕರ ಕ್ರಿಯೆಯಾಗಿದೆ. ವೈದ್ಯರು ಕೂಡ ಇದನ್ನು ಪ್ರೋತ್ಸಾಹಿಸುತ್ತಿದ್ದಾರೆ. ಆದಷ್ಟು ಸಣ್ಣ ಪ್ರಾಯದಲ್ಲೇ ಈ ಸುನ್ನತಿಯನ್ನು ಮಾಡಿಸಬೇಕು.
6. ಕೂದಲು ತೆಗೆಯುವುದು:
ಜನನವಾಗಿ ಒಂದು ವಾರದಲ್ಲಿ ಮಗುವಿನ ಜನನದ ಸಮಯದಲ್ಲಿ ಇದ್ದಂತಹ ಆ ಕೂದಲನ್ನು ಸಂಪೂರ್ಣವಾಗಿ ಶೇವ್ ಮಾಡಿ ತೆಗೆಯುವುದು ಪ್ರವಾದಿ ಚರ್ಯೆಯಾಗಿದೆ. ಇದು ಹೆಣ್ಣು ಮತ್ತು ಗಂಡು ಮಕ್ಕಳಿಗೆ ಇಬ್ಬರಿಗೂ ಇದೆ.
7. ಅಕೀಕ:
ಇದು ಮಗುವಿನ ಕೂದಲು ತೆಗೆದ ನಂತರ ಗಂಡು ಮಗುವಾದರೆ ಎರಡು ಆಡು, ಹೆಣ್ಣು ಮಗುವಾದರೆ ಒಂದು ಆಡು ದಿಬ್‌ಹ ಮಾಡಿ ದಾನ ಕೊಡುವುದಾಗಿದೆ. ಇದು ಕೂಡ ಪ್ರವಾದಿ ಚರ್ಯೆಯಲ್ಲಿ ಒಳಪಟ್ಟ ಒಮ್ದು ಚರ್ಯೆಯಾಗಿದೆ.
ಲೇಖಕರು: ನೌಫಲ್, ದೇರಳಕಟ್ಟೆ
NOOR-UL-FALAH ISLAMIC STORE

Comments
Post a Comment