ಫ್ರೈಡೇ ಸ್ಪೇಷಲ್

ಫ್ರೈಡೇ ಸ್ಪೇಷಲ್

ಅಬೂ ’ಉಬೈದ(ರ)ರ ಜುಹ್‌ದ್(ಅನಿಶ್ಚಿತತೆ) ಮತ್ತು ಉಮರ್(ರ)ರ ಕಣ್ಣೀರು,

ಅಬ್ದುಲ್ಲಾಹ್ ಬಿನ್ ’ಉಮರ್(ರ) ವರದಿ ಮಾಡಿದಂತೆ,
ಅಲ್-ಷಾಮ್‌ಗೆ”ಉಮರ್ ಬಿನ್ ಖತ್ತಾಬ್(ರ) ಬಂದಾಗ, ಅಬೂ ’ಉಬೈದ(ರ)ರಿಗೆ ಹೇಳಿದರು: “ನಮ್ಮನ್ನು ನಿಮ್ಮ ಮನೆಗೆ ಕರೆದೊಯ್ಯಿರಿ.” ಅಬೂ ’ಉಬೈದ(ರ)ರು ಕೇಳಿದರು, “ನನ್ನ ಮನೆಯಲ್ಲಿ ಏನು ಮಾಡುವಿರಿ?” ’ಉಮರ್(ರ) ಹೇಳಿದರು, “ಹಾಗೆಯೇ ಅಲ್ಲಿಗೆ ಕರೆದೊಯ್ಯಿರಿ” ಅಬೂ ’ಉಬೈದ(ರ) ಹೇಳಿದರು, “(ಕರೆದೊಯ್ದರೆ) ನೀವು ನಮ್ಮನ್ನು ನೋಡಿ ಕಣ್ಣೀರು ಹರಿಸುವಿರಷ್ಟೇ.” ಅವರು ಮನೆಯನ್ನು ಪ್ರವೇಶಿಸಿದಾಗ ಅದರಲ್ಲಿ ಏನನ್ನೂ(ಪೀಠೋಪಕರಣಗಳ ಸಜ್ಜುಗೊಳಿಸಿರುವಿಕೆಯನ್ನು) ಕಾಣಲಿಲ್ಲ.

’ಉಮರ್(ರ) ಕೇಳಿದರು, “ನಿಮ್ಮ ವಸ್ತುಗಳೆಲ್ಲಿ? ಚಿಂದಿ, ನೀರಿನ ಚೀಲ ಮತ್ತು ತಟ್ಟೆಯ (ಹರಿವಾಣವ)ನ್ನು ಹೊರತುಪಡಿಸಿದರೆ ನಾನು ಇನ್ನೇನನ್ನೂ ಕಾಣುತ್ತಿಲ್ಲ. ಮತ್ತು ನೀವೊಬ್ಬ ರಾಜ್ಯಪಾಲರಾಗಿದ್ದೀರಿ! ನಿಮ್ಮಲ್ಲಿ ಆಹಾರವಿದೆಯೇ?” ಆಗ ’ಉಬೈದ(ರ)ರು ಹಳೆಯ ಗಡಿಗೆಯ ಬಳಿಗೆ ಹೋಗಿ ಕೆಲ ತುಂಡು-ತುಣುಕುಗಳನ್ನು ಹೊರತೆಗೆದರು. ಅದನ್ನು ಕಂಡು ’ಉಮರ್(ರ)ರು ಕಣ್ಣೀರಿಡಲು ಆರಂಭಿಸಿದರು.
ಅಬೂ ’ಉಬೈದ(ರ) ಅವರಿಗೆ ಹೇಳಿದರು, ನಾನು ಮೊದಲೇ ತಿಳಿಸಿದ್ದೆ “ನೀವು ನನಗಾಗಿ ದುಃಖಿಸುವಿರಿ ಎಂದು. ಓ ಉಮ್ಮುಲ್ ಮುಅ’ಮಿನೀನ್(ಸತ್ಯವಿಶ್ವಾಸಿಗಳ ಸರದಾರರೇ), ವಿಶ್ರಾಂತಿಯ  ಸ್ಥಳದಲ್ಲಿ ಯಾವುದು ನಮಗೆ ನೆರವಾಗುವುದೋ ಅಷ್ಟು ಮಾತ್ರ ಈ ದುನ್ಯಾ(ಇಹಲೋಕ)ದಲ್ಲಿ ನಮಗೆ ಸಾಕಾಗಿರುತ್ತದೆ!” ’ಉಮರ್ ಹೇಳಿದರು, “ ಅಬೂ ’ಉಬೈದ(ರ), ನಿಮ್ಮನ್ನು ಹೊರತು ಪಡಿಸಿ ಈ ದುನ್ಯಾ ನಮ್ಮೆಲ್ಲರನ್ನು ಬದಲಿಸಿದೆ.”


NOOR-UL-FALAH ISLAMIC STORE 

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್