ಪರ್ವತವೇ ನಡುಗಿತು
ಪತ್ನಿಯ ಸುಳ್ಳಿಗೆ ಪರ್ವತವೇ ನಡುಗಿತು
ಅರಬ್ ರಾಜ್ಯದ ಒಂದು ಮನೆಯಲ್ಲಿ ದಂಪತಿಗಳಿಬ್ಬರು ವಾಸಿಸುತ್ತಿದ್ದರು
ಪತ್ನಿ ಸೌಂದರ್ಯವತಿಯಾಗಿದ್ದಳು
ಪತಿ ಕೆಲಸಕ್ಕೆ ಹೊರಗೆ ಹೋಗುವಾಗ ಮನೆಗೆ ಹೊರಗಿನಿಂದ ಬೀಗ ಜಡಿದರೆ ಪತ್ನಿ ಒಳಗಿಂದ ಭದ್ರವಾಗಿ ಚಿಲಕ ಹಾಕುತ್ತಿದ್ದಳು..
ಯಾರು ಬಂದರೂ ಕಿಟಕಿಯಿಂದಲೇ ಮಾತಾಡಿ ಬಿಟ್ಟು ಬಿಡಬೇಕೆಂದು ಪತಿಯ ಕಟ್ಟಾಜ್ಞೆಯಿತ್ತು..
ಪತ್ನಿಯು ಕೂಡ ಬಹಳ ಜಾಗರುಕತೆಯಿಂದ ಪತಿಯ ಮಾತಿಗೆ ಬೆಲೆ ಕೊಟ್ಟು ಜೀವನ ಕಳೆಯುತ್ತಿದ್ದಳು.. ಕಾರಣ ಅವಳು ಉತ್ತಮ ಹೇಣ್ಣಾಗಿದ್ದಳು.. (ನಮ್ಮ ಸಮುದಾಯದಲ್ಲು ಅದೆಷ್ಟೊ ಸ್ತ್ರೀಗಳಿದ್ದಾರೆ ಆದರೆ ಕೆಲವೊಮ್ಮೆ ಕೆಲವು ಕೆಟ್ಟ ನಿಮಿಷಗಳಲ್ಲಿ ಅವರು ಕೂಡ ದಾರಿ ತಪ್ಪುತ್ತಿರುತ್ತಾರೆ ಸಂಧರ್ಭ ಸಮಯ ಅವಕಾಶ ಇದಕ್ಕೆ ಕಾರಣ)
ಈ ಸ್ತ್ರೀ ವಾಶಿಸುವ ಮನೆಯ ದಾರಿಯಲ್ಲಿ ಒಬ್ಬ ಯುವಕ ನಡೆದು ಹೋಗುತ್ತಿದ್ದ.. ದಿನಾಲು ಅದೇ ದಾರಿಯಲ್ಲಿ ಕೆಲಸಕ್ಕೆಂದು ನಡೆದು ಹೋಗುವ ಅವನು ಒಮ್ಮೆ ಆ ಮನೆಯ ಕಿಟಕಿಗೆ ಕಣ್ಣಾಯಿಸಿದಾಗ ಅಲ್ಲೊಂದು ಸೌಂದರ್ಯವತಿಯಾದ ಹೆಣ್ಣನ್ನು ಕಂಡ.. ಮೊದಲ ಬಾರಿ ಅಕಸ್ಮಿಕವಾಗಿ ಕಂಡರೂ ಎರಡನೇ ಬಾರಿ ಅವನು ನೋಡಿದ್ದು ಅವಳ ಸೌಂದರ್ಯವನ್ನು..
ಮನೆಯಲ್ಲಿ ಒಬ್ಬಂಟಿಗಳಾಗಿ ಬೋರ್ ಹೊಡೆಯುತ್ತಿದ್ದ ಅವಳಿಗೆ ಅವನ ನೋಟವು ಬಿಲ್ಲಿನ ಬಾಣದಂತೆ ಮನಸ್ಸಿಗೆ ನಾಟಿ ಬಿಟ್ಟಿತು..!!
(ಒಂದು ಹೆಣ್ಣು ಮತ್ತು ಗಂಡು ಮಾತ್ರ ಇರುವಲ್ಲಿ ಮೂರನೆಯವನು ಶೈತಾನನೆಂದು ನಬಿವಚನವಿದೆ)
ಮೊದನೆ ದಿನ ಸವಿದ ಸೌಂದರ್ಯವನ್ನು ಎರಡನೇ ದಿನವು ಅವನು ಕಂಡ..
ಅವನ ನೋಟಕ್ಕಾಗಿ ಕಾದು ಕುಳಿತ ಅವಳು ಈ ಬಾರಿ ಅವನ ನೋಟವನ್ನು ಕಂಡು ನಾಚಿಕೆಯೊಂದಿಗೆ ಖುಷಿಪಟ್ಟಳು..
ಹೀಗೆ ದಿನ ಕಳೆಯಿತು ನೋಟ ನಗುವಿಗೆ ತಿರುಗಿ ಕಿಟಕಿಯ ಮಾತಾಗಿ ಬೆಳೆದು ಅವರ ಮದ್ಯೆ ಪ್ರೀತಿಯಂಕುರವಾಗಿತ್ತು..
ಹೇಗಾದರು ಮಾಡಿ ಮನೆಯೊಳಗೆ ಹೋಗಬೇಕೆಂಬ ಅವನ ಅಭಿಲಾಷೆಗೆ ಬೀಗ ಅಡ್ಡವಾಗಿತ್ತಾದರು ಅವಳ ತಂತ್ರಗಾರಿಕೆಯಿಂದ ಅವನಿಗೆ ಮನೆಯೊಳಗೆ ಪ್ರವೇಶ ಲಬಿಸಿತ್ತು.. ರಾತ್ರಿ ಬರುವ ಗಂಡನಿಗೆ ಬೀಗ ನೋಡಿ ಸಮಾದಾವಾಗುತ್ತಿತ್ತು.. ನನ್ನ ಪತ್ನಿ ಬಹಳ ಜಾಗರುಕತೆಯಿಂದ ಇದ್ದಾಳೆ ಎಂದು ಅವನು ಬಲವಾಗಿ ನಂಬಿದ್ದ.. ಆದರೆ ಪತ್ನಿಯ ಕಸರತ್ತೆ ಬೇರೆ ನಡೆಯುತ್ತಿತ್ತು...ದಿನಗಳು ಕಳೆಯಿತು ಇವರ ಕಣ್ಣೆ ಮುಚ್ಚಿ ಕಾಡೆ ಕೂಡೆ.. ಆಟ ಮುಂದುವರೆದಿತ್ತು.. ಆದರೆ ಕೆಲವೇ ದಿನಗಳಲ್ಲಿ ಈ ವಿಷಯ ಊರಲ್ಲಿ ಟಿಟ್ಟೀಬಿ ಹಕ್ಕಿಯ ಹಾಡಾಗಿ ಬಿಟ್ಟಿತು..!
ಎಲ್ಲರಿಗು ತಿಳಿದ ವಿಷಯ ಗಂಡನ ಕಿವಿಗೆ ಬಿತ್ತು.. ಅವನು ನಂಬಲಿಲ್ಲ.. ನನ್ನ ಪತ್ನಿ ಆ ರೀತಿಯವಳಲ್ಲ.. ಅವಳ ಸೌಂದರ್ಯ ನೋಡಿ ಹೊಟ್ಟೆ ಕಿಚ್ಚಲ್ಲಿ ಊರಿನ ಹೆಂಗಸರು ಮಾಡಿದ ಕುತಂತ್ರ ಇದೆಂದು ಅವನು ವಾದಿಸಿದ.. ಆದರು ಅವನು ಮನಸ್ಸು ತುಂಬಾನೆ ಸಂಶಯಗಳು ತೇಳಿ ಬಂದವು..& ಅವನು ನೇರ ಹೋಗಿ ಪ್ರೀತಿಯ ಪತ್ನಿಯಲ್ಲಿ ವಿಷಯ ತಿಳಿಸಿದ.. ಅದಾಗಲೇ ಪ್ಲಾನಿಂಗ್ ಮಾಡಿದ್ದ ಅವಳು ಎರಡು ಕಣ್ಣುಗಳು ತುಂಬಿ ಅತ್ತು ಬಿಟ್ಟಳು.. ಅವಳು ಮಾಡಿದ್ದು ತಪ್ಪೆಂದು ಅವಳಿಗೆಗೊತ್ತಿತ್ತು.. ಮಾಡಿದ ತಪ್ಪಿಗೆ ತುಂಬಾನೆ ಪ್ರಾಯಶ್ಚಿತ ಪಟ್ಟಳು.. ಹೇಗಾದರು ಮಾಡಿ ಗಂಡನ ಸಂಶಯ ನಿವಾರಿಸಿ ಕೊಡಲು ಅವಳು ತೀರ್ಮಾನಿಸಿದಳು.. ಇಂತಹಾ ವಿಷಯವೇ ನಡೆದಿಲ್ಲವೆಂಬಂತೆ ಅವಳು ಅತ್ತು ಗಂಡನನ್ನು ಸಮಾದಾನ ಪಡಿಸಲು ನೋಡಿದಳು.. ಆದರೆ ಅವನು ಮೌನವಾಗಿದ್ದ.. ಏನು ಮಾಡುವುದೆಂದು ತೋಚದ ಅವನು ಕೊನೆಗೆ ಒಂದು ವಿಷಯವನ್ನು ತನ್ನ ಪತ್ನಿಯಲ್ಲಿ ಹೇಳುತ್ತಾನೆ..
ಈ ಊರಿನ ಕೊನೆಯಲ್ಲಿ ಒಂದು ಪರ್ವತವಿದೆ ಅದರ ಮೇಲೆ ಹತ್ತಿ ಯಾರಾದರು ಆಣೆ ಹಾಕಿ ಒಂದು ವಿಷಯವನ್ನು ಹೇಳಿದರೆ ಸತ್ಯ ಹೇಳಿದವರು ವಾಪಾಸು ಬರುತ್ತಾರೆ
ಮತ್ತು ಸುಳ್ಳು ಹೇಳಿದವರು ಪರ್ವತ ನಡುಗಿ ಕೆಳಗೆ ಬಿದ್ದು ಸತ್ತು ಹೋಗುವರು ಎಂದು ಪುರಾತನ ಕಾಲದ ನಂಬಿಕೆಯೊಂದನ್ನು ಅವಳಲ್ಲಿ ತಿಳಿಸಿದ...
ಅದರಂತೆ ಈ ಪತ್ನಿ ಈಗ ಪರ್ವತದ ಮೇಲೆ ಹತ್ತಿ ಆಣೆ ಹಾಕಬೇಕಾಗಿತ್ತು.. ಇದನ್ನು ಕೇಳಿದ ಪತ್ನಿಯು ಒಮ್ಮೆಲೆ ನಡುಗಿ ಹೋದಳು.....
ಆದರೆ ತೋರ್ಪಡಿಸುವಂತಿಲ್ಲ.. "ನನ್ನನ್ನು ಇದುವರೆಗೂ ನೀವಲ್ಲದೆ ಯಾವ ಗಂಡು ಕೂಡ ಮುಟ್ಟಿಲ್ಲವೆಂದು ಅವಳು ಆಣೆ ಹಾಕಬೇಕಿತ್ತು..!!
ಸತ್ಯ ಹೇಳಿದರೆ ಗಂಡ ನಷ್ಟ.. ಸುಳ್ಳು ಹೇಳಿದರೆ ಪ್ರಾಣ ನಷ್ಟ..!!
ಅವಳು ಉಭಯ ಸಂಕಟದಲ್ಲಿ ಸಿಲುಕಿಕೊಂಡಳು.. ಆದರೂ ಇವಳು ಹೆಣ್ಣಳ್ವಾ! ತಂತ್ರ ಮತ್ತು ವಂಚನೆಗೆ ಹೆಣ್ಣು ಹೆಸರುವಾಸಿ-
(' ನಿಶ್ಚಯವಾಗಿಯು ಸ್ತ್ರೀಗಳ ವಂಚನೆ ಅತಿ ದೊಡ್ಡಾಗಿರುತ್ತದೆ ಕುರಾನ್ ಸೂರತ್ ಯೂಸುಫ್)
ಅವಳು ತಂತ್ರವೊಂದನ್ನು ಮಾಡಿದಳು ತಾನು ಆಣೆ ಹಾಕಲು ಪರ್ವತಕ್ಕೆ ಹೋಗುತ್ತಿದ್ದೇನೆ ನೀನು ಒಂದು ಕತ್ತೆಯನ್ನು ತಂದು ಪರ್ವತದ ಅರ್ಧದಲ್ಲಿ ನಿಲ್ಲಿಸಿ ಅಲ್ಲೆ ನಿಂತು ಕೊಳ್ಳಬೇಕೆಂದು ಇವಳು ತನ್ನ ಪ್ರಿಯಕರನಿಗೆ ಹೇಗೋ ಮಾಹಿತಿ ನೀಡಿದಳು.. ಮಾರನೆ ದಿನ ಪತಿ ಮತ್ತು ಪತ್ನಿ ಪರ್ವತದ ಕಡೆಗೆ ನಡೆದರು.. ಮೊದಲೇ ತಿಳಿಸಿದಂತೆ ಆ ಯುವಕ ಪರ್ವತದ ಅರ್ಧದಲ್ಲಿ ನಿಂತಿದ್ದ.. ಪತಿ ಇದುವರೆಗೂ ಅವನನ್ನು ನೋಡಿಯೆ ಇಲ್ಲದ ಕಾರಣ ಅವನು ಯಾರೆಂದು ಚಿಂತಿಸುವ ಗೋಜಿಗೆ ಹೋಗಲಿಲ್ಲ.. ಮುಂದೆ ಪತಿ ಪರ್ವತ ಹತ್ತುತ್ತಿದ್ದರೆ ಹಿಂದೆ ಪತ್ನಿಯು ಮೆಲ್ಲ ಮೆಲ್ಲನೆ ನಡೆದಳು.. ಅರ್ಧ ಪರ್ವತ ಹತ್ತುವಷ್ಟರಲ್ಲಿ ಪತ್ನಿಯು ನಡೆಯಲಾರದಂತೆ ನಟಿಸಿ ಬಿದ್ದು ಬಿಟ್ಟಳು ಕಾಲಿಗೆ ನೋವಾದಂತೆ ನಟಿಸಿದಳು.. ಓಡಿ ಬಂದ ಪತಿಯು ಅವಳನ್ನು ಎತ್ತಲು ಶ್ರಮಿಸುವಾಗ ಅವಳು ಅಳುತ್ತಾ ಹೇಳಿದಳು ನನ್ನಿಂದ ಹತ್ತಲು ಆಗುತ್ತಿಲ್ಲ ಕಾಲು ಉಳುಕಿದೆ ನೀವು ಬೇಗ ಹೋಗಿ ಬಾಡಿಗೆಗೆ ಕತ್ತೆಯನ್ನು ತನ್ನಿ..!! ಗಂಡನು ಓಡಿ ಕತ್ತೆಯವನನ್ನು ಬಾಡಿಗೆಗೆ ಕರೆದನು ಆ ಯುವಕ ಕತ್ತೆಯ ಸಮೇತ ಪತಿಯೊಂದಿಗೆ ಅವಳ ಹತ್ತಿರ ಬಂದನು ನಡೆಯಲಾಗದ ಅವಳನ್ನು ಗಂಡ ಮತ್ತು ಕತ್ತೆಯವನು ಸೇರಿ ಎತ್ತಿ ಕತ್ತೆಯ ಮೇಳಿಟ್ಟು ಪರ್ವತದ ತುತ್ತ ತುದಿಗೆ ತಳುಪಿದರು.. ಗಂಡ ಕತ್ತೆಯ ಬಾಡಿಗೆ ಕೊಟ್ಟು ಕಳುಹಿಸಿದನು.. ಈ ಇಬ್ಬರು ಮಾತ್ರ ಅಲ್ಲಿರುವುದು.. ಪತಿಯು ಹೇಳಿದನು ನಿಜ ಹೇಳಿ ಅಣೆ ಹಾಕಬೇಕು ಇಲ್ಲವಾದರೆ ಬಹಳ ಅಪಾಯವಿದೆ.. ಆಗ ಪತ್ನಿಯು ಆಣೆ ಹಾಕಿದಳು 'ಈ ಸತ್ಯದ ಪರ್ವದಾಣೆ.. ಗಂಡನಾದ ನೀವು ಮತ್ತು ಇದೀಗ ನನ್ನನ್ನು ಕತ್ತೆಯ ಮೇಲೆ ಕೂರಿಸಲು ಸಹಾಯ ಮಾಡಿದ ಈ ಯುವಕನಲ್ಲದೆ ಬೇರೆ ಯಾರೂ ನನ್ನನ್ನು ಮುಟ್ಟಲಿಲ್ಲ..!!!
ಪತಿಗೆ ಬಹಳ ಖುಷಿಯಾಯಿತು..!! ಪತ್ನಿಯು ವಿಜಯ ನಗೆ ಬೀರಿದಳು ಇದನ್ನೆಲ್ಲಾ ಗಮನಿಸುತ್ತಿದ್ದ ಆ ಪರ್ವತವು ಹೆಣ್ಣಿನ ವಂಚನೆ ಮತ್ತು ತಂತ್ರಕ್ಕೆ ಒಮ್ಮೆ ನಡುಗಿ ಹೋಯಿತು..!!! NOOR-UL-FALAH ISLAMIC STORE

Comments
Post a Comment