ಪಶ್ಚಾತಾಪ ಮತ್ತು ಕ್ಷಮೆ)
ಪಶ್ಚಾತಾಪ ಮತ್ತು ಕ್ಷಮೆ..
ಯಾರಾದರೂ ನಮಗೆ ಕೆಡುಕನ್ನು ಮಾಡಿದಲ್ಲಿ ಅಥವಾ ತಪ್ಪು ರೀತಿಯಲ್ಲಿ ನಮ್ಮೊಂದಿಗೆ ವರ್ತಿಸಿದಲ್ಲಿ, ನಾವವರನ್ನು ಕ್ಷಮಿಸುವುದರಲ್ಲಿ ಒಳಿತಿದೆ. ಕಹಿ ಘಟನೆಯ ಕುರಿತು ಇಲ್ಲವೇ ಕೆಡುಕು ಬಯಸಿದ ವ್ಯಕ್ತಿಯ ಕುರಿತು ಪದೇ ಪದೇ ಯೋಚಿಸಿದರೆ ಸೇಡಿಗೆ ಸೇಡು ತೀರಿಸಿಕೊಳ್ಳಬೇಕೆಂಬ ಪ್ರತಿಕಾರದ ಮನೋಭಾವ ನಮ್ಮಲ್ಲಿ ಹುಟ್ಟುತ್ತದೆ. ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡುತ್ತದೆ, ನಮ್ಮ ಸುತ್ತೆಲ್ಲ ಸಂತಸದ ಹೊನಲಿದ್ದರೂ ಅದನ್ನು ನಾವು ಗುರುತಿಸುವುದೇ ಇಲ್ಲ. ಇದಕ್ಕೆಲ್ಲ ಒಂದೇ ಪರಿಹಾರ ಸ್ನೇಹಿತರೆ, ತಪ್ಪು ಮಾಡಿದವರ ಎದುರಲ್ಲಿಯೇ ಕುಳಿತು ಮಾತನಾಡಿ. “ನೀನೆಷ್ಟೇ ತಪ್ಪು ಮಾಡಿದರೂ, ನನಗೆ ಕೆಡುಕು ಬಯಸಿದರೂ, ನಾನು ನಿನ್ನನ್ನು ಕ್ಷಮಿಸಿರುವೆ” ಎಂದು ಮನದಲ್ಲಿ ಅಂದುಕೊಂಡು ಅವರತ್ತ ಹೂವಿನ ನಗೆಯನ್ನು ಬೀರಿ. ಹೀಗೆ ಮಾಡಿದಲ್ಲಿ ಸಂತಸ, ಸಮಾಧಾನ, ಶಾಂತಿ, ನೆಮ್ಮದಿ ಎಲ್ಲಿದ್ದರೂ ನಿಮ್ಮ ಜೋಳಿಗೆಯಲ್ಲಿ ಬಂದು ಬೀಳುತ್ತವೆ. ತಿಳಿದೋ ತಿಳಿಯದೆನೋ ಮಾಡಿದ ತಪ್ಪನ್ನು ಕ್ಷಮಿಸುವುದರಿಂದ ಕೆಡುಕು ಬಯಸುವವರು ಕೂಡ ಮನ ಪರಿವರ್ತನೆ ಹೊಂದಬಹುದು. ದ್ವೇಷ, ರೋಷ, ಕ್ಲೇಷ ಇವುಗಳಿಂದ ವೈರತ್ವ ಬೆಳೆಯುವುದೇ ಹೊರತು ಪ್ರೀತಿ ನೆಲೆಸಲಾರದು. ಅಲ್ಲದೇ, ಯಾರಲ್ಲಿಯೂ ಶಾಂತಿ ಉಳಿಯುದಿಲ್ಲ. ಉದಾಹರಣೆಗೆ ನಾನೊಂದು ನೈಜ ಘಟನೆಯನ್ನು ತಮ್ಮ ಮುಂದಿಡಲು ಇಷ್ಟ ಪಡುತ್ತೇನೆ.
ಮಂಗಳೂರು ಎಂಬ ಮಾಯಾನಗರಿಯ ಅಫ್ಸಾನ ಎನ್ನುವ ಹುಡುಗಿ, ಚಿಕ್ಕ ವಯಸ್ಸಿನಲ್ಲಿಯೇ ತಾಯಿಯ ಕಿರುಕುಳಕ್ಕೆ ಒಳಗಾಗಿದ್ದಳು. ಅಫ್ಸಾನ ಕಾಲೇಜಿನಿಂದ ಬರುವುದು ೫ ನಿಮಿಷ ತಡವಾದರೂ; ಅವಳೆಲ್ಲೋ ಯಾರೊಬ್ಬ ಹುಡುಗನ ಜೊತೆ ಲಲ್ಲೆ ಹೊಡೆಯುತ್ತಿದ್ದಳು ಎಂಬಂತೆ ಕೆಂಗಣ್ಣಿನಿಂದ ನೋಡುತ್ತ ಬಾಯಿಗೆ ಬಂದಂತೆ ಬೈದು, ಬಡಿದು, ಕೊರೆವ ಮಳೆ-ಚಳಿಯನ್ನು ಲೆಕ್ಕಿಸದೆ ಬೆಳೆಯುತ್ತಿರುವ ಹೆಣ್ಣು ಮಗುವನ್ನು ಬಾಗಿಲು ಹೊರಗಡೆಯೇ ನಿಲ್ಲಿಸಿ ದಢಾರ್ ಎಂದು ಮುಚ್ಚಿದ ಬಾಗಿಲು ರಾತ್ರಿ ೧೨ರವರೆಗೂ ಮುಚ್ಚಿಯೇ ಇರುತ್ತಿತ್ತು. ಮುಗ್ಧ ಅಫ್ಸಾನಳ ಆರ್ತನಾದ ನೆರೆಮನೆಯವರ ಮನ ತಲುಪಿತೆ ವಿನಃ ಹೆತ್ತ ತಾಯಿಗಲ್ಲ. ಅತೀವ ಸುಂದರವಿದ್ದ ಅಫ್ಸಾನ ಕೊಂಚ ಶೃಂಗಾರ ಮಾಡಿಕೊಂಡರೂ ಅವಳ ತಾಯಿ ಅಸಹನೆಯಿಂದ, "ಯಾರೊಡನೆ ಮೆರೆಯಲು ಹೊರಟಿರುವೆ", ಎಂದು ಮಾನಸಿಕವಾಗಿ ಚಿತ್ರಹಿಂಸೆ ನೀಡುತ್ತಿದ್ದಳು..
ಇತ್ತ ಮನೆಯಲ್ಲಿ ಅಮ್ಮನ ಮಮತೆ ಪ್ರೀತಿಯನ್ನ ಕಾಣದಿರುವ ಅಫ್ಸಾನ, ಹೊರಗಿನ ಜನರಿಂದ ಸಹಜವಾಗಿಯೇ ಆ ನಿರೀಕ್ಷೆಯಲ್ಲಿ ಇದ್ದಳು, ಹೀಗೆಯೇ ಪ್ರೀತಿಯ ಅರಸುತ್ತ, ತಾಯಿಯ ಹಿಂಸೆಯಲ್ಲಿ ಬಿದ್ದು ಒದ್ದಾಡುತ್ತಿರುವ ಅಫ್ಸಾನ ಹುಡುಗನೊಬ್ಬನ ಪ್ರೇಮ ಬಂಧನದಲ್ಲಿ ಸೆರೆಯಾದಳು. ತಾಯಿಯ ಚಿತ್ರಹಿಂಸೆಯಿಂದ ಬೇಸತ್ತ ಅಫ್ಸಾನ ಮನೆ ತೊರೆಯಲು ತುದಿಗಾಲಲ್ಲೇ ಇದ್ದಳು. ಮನಸನ್ನು ಕನ್ನಡಿಯಂತೆ ಅರಿವ ಹುಡುಗ ಸುಂದರ, ಸುಶೀಲ ಹಾಗೂ ಆಗರ್ಭ ಕುಟುಂಬದವನಾಗಿದ್ದ. ತಡಮಾಡದೆ, ಮಿಡಿದ ಮನಗಳೆರಡೂ ವಿವಾಹ ಮಹೋತ್ಸವಕ್ಕೆ ನಾಂದಿ ಹಾಡಿದವು. ಅಫ್ಸಾನ ಹೊಸದೊಂದು ಪ್ರಪಂಚಕ್ಕೆ ಕಾಲಿಟ್ಟಿದ್ದಳು. ಮದುವೆಯಾಗಿ ತವರು ಮನೆ ತೊರೆದ ಅಫ್ಸಾನ ೩ ವರುಷದವರೆಗೂ ಆ ಕಡೆ ತಲೆ ಕೂಡ ಹಾಕಲಿಲ್ಲ. ಮುತ್ತಿನಂತ ಗಂಡ, ಮುದ್ದಾದ ಗಂಡು ಮಗು, ತಂದೆ-ತಾಯಿಯ ಪ್ರೀತಿ ನೀಡುತ್ತಿದ್ದ ಅತ್ತೆ-ಮಾವ ಸಿಕ್ಕಿದ್ದು ಆಕೆಯ ಪಾಲಿಗೆ ಸ್ವರ್ಗವೇ ಈ ಪ್ರೀತಿಯ ಹೊನ್ನರಸಿಯನ್ನ ಅರಸಿ ಬಂದಂತಿತ್ತು.
ಬೇಕು-ಬೇಡಗಳ, ಇಷ್ಟ-ಕಷ್ಟಗಳ ಅರಿತು ನಡೆಯುವ ಗಂಡನ ಪ್ರೀತಿಯ ಮಹಲಿನಲ್ಲಿದ್ದರೂ ಅಫ್ಸಾನಳ ಮುಖದಲ್ಲಿ ಮಾತ್ರ ನಗುವೊಂದಿರಲಿಲ್ಲ. ಅವಳು ಮನಸ್ಸು ಅದೇನನ್ನೂ ಗಾಢವಾಗಿ ಚಿಂತಿಸುತ್ತಲೇ ಇರುತ್ತಿತ್ತು. ಕಾರಣವಿಲ್ಲದೇ ತನ್ನ ಹೆತ್ತ ತಾಯಿ ತನ್ನನ್ನು ಏಕೆ ಹಿಂಸೆಗೆ ಒಳಪಡಿಸುತ್ತಿದ್ದಳು..? ಆ ಕೆಂಗಣ್ಣಿಗೆ ಅದೇನು ಕಾರಣ..? ಎಂದು ತನ್ನಲ್ಲಿಯೇ ಉತ್ತರಗಳನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿದ್ದಳು. ಮಾನಸಿಕವಾಗಿ, ದೈಹಿಕವಾಗಿಯೂ ಶೋಷಣೆಗೆ ಒಳಗಾದ ಅಫ್ಸಾನಳ ಮನದಲ್ಲಿ ದ್ವೇಷದ ಜ್ವಾಲೆ ದಿನೇ ದಿನೇ ಹೆಚ್ಚುತ್ತಲೇ ಹೋಯಿತು. ಮನದ ನೆಮ್ಮದಿಯನ್ನೇ ಕಳೆದುಕೊಂಡು ಆ ನೋವಿನಲ್ಲಿ ಬಿದ್ದು ಒದ್ದಾಡುತಿರುವ ಸದ್ದು ಬಹುಶ ಯಾರಿಗೂ ಕೇಳದೇ ಹೋಯಿತೇನೋ. ಅಸಮಾಧಾನ ಅವಳ ಮನದ ಸ್ವಾಸ್ಥ್ಯವನ್ನು, ನೆಮ್ಮದಿಯನ್ನು ಕಸಿದು ಹಗಲಿರುಳು ತಾಯಿಯ ಉಗ್ರ ಕೋಪದ ಮುಖವನ್ನೇ ಅವಳ ಕಣ್ಣ ಮುಂದೆ ತಂದಿಟ್ಟು ಅವಳನ್ನು ಪ್ರತಿ ಕ್ಷಣ ಕೊಲ್ಲುತ್ತಲಿತ್ತು. ಈ ಸ್ಥಿತಿ, ನರಕ ಯಾತನೆಗೆ ಕಾರಣಳಾದ ಅಮ್ಮನನ್ನು ಜೀವಮಾನದಲ್ಲಿ ಕ್ಷಮಿಸುವುದಿಲ್ಲ, ಅಲ್ಲದೇ ಆಕೆ ಸತ್ತರೇ ಮುಖ ಕೂಡ ನೋಡುವುದೇ ಇಲ್ಲ ಎಂಬ ಮಟ್ಟಿಗೆ ಅಫ್ಸಾನಳನ್ನು ತಂದಿತ್ತು.
ಜೀವನದುದ್ದಕ್ಕೂ ನೆಮ್ಮದಿ, ಶಾಂತಿಯನ್ನು ಹುಡುಕುವುದೇ ಅವಳ ಕಾಯಕವಾಗಿ ಬಿಟ್ಟಿತ್ತು. ಬಲ್ಲವರೊಡನೆ ಆ ಬಗ್ಗೆ ಚರ್ಚಿಸಿ ಸಲಹೆ ಪಡೆಯ ಹೋಗಿ, ಮನಶಾಸ್ತ್ರಜ್ಞೆಯೊಬ್ಬಳ ಸಲಹೆ ಮೇರೆಗೆ, ತಾಯಿಯನ್ನು ಕಂಡು, "ಅಮ್ಮ, ನೀನೆಷ್ಟು ತಪ್ಪು ಮಾಡಿದ್ದರೂ ನಾನದೆಲ್ಲವನ್ನೂ ಮನ್ನಿಸಿ ಬಿಡುತ್ತೇನೆ” ಎಂದು ಹೇಳಲು ೪ ವರುಷಗಳ ನಂತರ ತವರು ಮನೆಗೆ ಹೊರಟಳು. ಮನೆಗೆ ಹೋಗಿ ಅಮ್ಮನ ಕೋಣೆಗೆ ಕಾಲಿಡುತ್ತಿದ್ದಂತೆ ಅಫ್ಸಾನಳ ಅಮ್ಮನ ಕಣ್ಣಲ್ಲಿ ಕಣ್ಣೀರ ಕೋಡಿ ಹರಿಯುತ್ತಿತ್ತು. ಮನೆಗೆ ಬಂದ ಮಗಳನ್ನು ತನ್ನೆರಡೂ ಬಾಹುಗಳನ್ನು ವಿಶಾಲವಾಗಿ ಚಾಚುತ್ತ, ಮಗಳನ್ನು ತಬ್ಬಿ ಬಿಕ್ಕಳಿಸಿ ಅಳುತ್ತ ನುಡಿದಳು, "ನನ್ನ ಮಗಳೆ, ನನ್ನನ್ನು ಕ್ಷಮಿಸಿಬಿಡು, ನಿನ್ನನ್ನು ಮಾನಸಿಕವಾಗಿ ತುಂಬ ಕಾಡಿದೆ. ನನ್ನಿಂದ ದೂರ ಹೋಗಬೇಡಮ್ಮ" ಎಂದಿತು ನೊಂದ ಜೀವ.
ಅಫ್ಸಾನಳಿಗೆ ಇದೆಲ್ಲವೂ ಅಚ್ಚರಿಯಾಗಿ ಕಂಡಿತು. ಬಿಟ್ಟ ಕಣ್ಣು ಬಿಟ್ಟಂತೆ, "ಇದೆಲ್ಲ ಏನಮ್ಮಾ, ಅಲ್ಲದೇ ನನ್ನನ್ನು ಗೋಳಾಡಿಸಿಕೊಂಡದ್ದು ಯಾಕೆ?" ಎಂದಾಗ ಆಕೆಯ ತಾಯಿ ಹೇಳಿದರು, "ನನಗೂ ಕೂಡ ಚಿಕ್ಕವಳಿದ್ದಾಗ, ಚೆನ್ನಾಗಿ ಓದಿ ಕ್ಲಾಸಿನಲ್ಲಿಯೇ ಮುಂಚೂಣಿಯಾಗಿರಬೇಕು, ಎಲ್ಲರೂ ನನ್ನನ್ನೇ ಪ್ರೀತಿಸಬೇಕು, ಎಲ್ಲದಕ್ಕೋ ನಾನೇ ಯೋಗ್ಯಳಾಗಿರಬೇಕು ಎಂದು ಅಂದುಕೊಂಡದ್ದೇನೂ ನೆರವೇರಲಿಲ್ಲ. ಅದೆಲ್ಲವೂ ನನಗೆ ಅಸಮಾಧಾನವನ್ನೇ ತಂದಿತ್ತು, ನನ್ನಲ್ಲಿರದ ಅದೆಲ್ಲ ಗುಣಗಳು ನಿನ್ನಲ್ಲಿ ಇರುವುದು ಕಂಡು ನನ್ನ ಬಾಲ್ಯ ನೀಡಿದ ಕಹಿ ತುತ್ತು ಪದೇ ಪದೇ ನಿನ್ನನ್ನು ಕಂಡಾಗ ಬರುತ್ತಿತ್ತು. ಆ ಅಶಾಂತಿಯ, ಅಸಹನೆಯ ಮೊತ್ತವೇ ನಾನು ನಿನಗೆ ನೀಡುತ್ತಿದ್ದ ಅಮಾನುಷ ಕಿರುಕುಳ ಮಗಳೆ; ನೀನು ಗಂಡನ ಮನೆಗೆ ಹೋದ ಮೇಲೆಯೇ ನನಗದರ ಅರಿವಾಗಿದ್ದು. ನಾನು ದೊಡ್ಡ ತಪ್ಪು ಮಾಡಿದ್ದೆನೆಂಬ ಅರಿವು ನನಗಿದೆ, ನನ್ನನ್ನು ಕ್ಷಮಿಸಿಬಿಡು ಮಗಳೆ” ಎಂದು ಮತ್ತೊಮ್ಮೆ ತಬ್ಬಿ ಕಣ್ಣೀರಿಟ್ಟಳು. ಆ ಪಶ್ಚಾಟಾಪದ ಕಣ್ಣೀರು ಮತ್ತು ಅಮ್ಮನ ಅಪ್ಪುಗೆ ಆಕೆ ನೀಡಿದ ಚಿತ್ರಹಿಂಸೆ ಕಣ್ಣೀರಿನ ಜೊತೆಗೆ ಅಫ್ಸಾನಳ ಮನಸ್ಸಿನಿಂದ ಜಾರಿ ಹೋಯಿತು.
ಚಿತ್ರಹಿಂಸೆಯೆಂಬ ಭಾರವಾದ ಮೂಟೆಯನ್ನು ಬೆನ್ನಿಗೆ ಕಟ್ಟಿಕೊಂಡು ನರಳುತ್ತಿದ್ದ ಅಫ್ಸಾನಳ ಹೃದಯ ಹಗುರಾಯಿತು. ನೆಮ್ಮದಿಯೆಂಬ ಹಕ್ಕಿ ನೀಲಾಗಸದಲಿ ಹಾರುತ್ತ ಅಫ್ಸಾನಳ ಮನದ ಗೂಡನ್ನು ಸೇರಿತ್ತು. ತಾಯಿ ಮಗಳ ಆ ಮುಖಾಮುಖಿ ಭೇಟಿ, ಆಲಿಂಗನ, ಪಶ್ಚಾತಾಪಪಟ್ಟು ಕ್ಷಮೆ ಕೇಳಿದ ಅಮ್ಮ, ಅಫ್ಸಾನಳ ಕ್ಷಮಿಸುವ ವಿಶಾಲ ಮನೋಭಾವ, ಇವುಗಳು ಮಾತ್ರ ಮನಸ್ತಾಪಗೊಂಡು ಬಿರುಕು ಬಿಟ್ಟ ಕರುಳ ಕೊಂಡಿಯನ್ನು ಮತ್ತೆ ಬೆಸೆಯುವಂತೆ ಮಾಡಿದವು.
ಘಟನೆ ಇಷ್ಟೇ ಇತ್ತು, ಈ ಬರಹದೊಂದಿಗೆ ನನ್ನ ಪುಟ್ಟ ಸಂದೇಶ,
"ತಪ್ಪು ದೊಡ್ಡದೆಂದು ಪರಿಗಣಿಸುತ್ತ ಹೋದರೆ, ಮನದ ನೆಮ್ಮದಿಯನ್ನು ನಾವು ದಿನೇ ದಿನೇ ಕಳೆದುಕೊಂಡಂತೆ; ಮಾಡಿದ ತಪ್ಪನ್ನು ತಪ್ಪು ಮಾಡಿದವರಿಗೆ ಮನವರಿಕೆ ಮಾಡಿಕೊಟ್ಟು ಕ್ಷಮಿಸುವ ವಿಶಾಲ ಮನೋಭಾವ ಹೊಂದಿದ್ದಲ್ಲಿ ಕಡಿದು ಹೋದ ಸಂಬಂಧಗಳು ಕೂಡ ಮಿಡಿದು ಬಂದು ನಿಮ್ಮ ಹೃದಯಗಳನ್ನು ಮತ್ತೆ ಬೆಸೆಯುದರಲ್ಲಿ ಸಂದೇಹವೇ ಇಲ್ಲ.."
NOOR-UL-FALAH ISLAMIC STORE

Comments
Post a Comment