ನಸೀಹಾಳ ನಸೀಹತ್ ಲೇಖಕರ ಮಾತು.. ಬಿಸ್ಮಿ, ಹಂದ್, ಸ್ವಲಾತ್. ಸಲಾಂಗಳ ಬಳಿಕ.. ನಸೀಹಾಳ ನಸೀಹತ್"ಇದು, ಅಲ್ಲಾಹನ ಮಹತ್ತರವಾದ ಅನುಗ್ರಹದಿಂದ ವಿಧ್ಯಾರ್ಥಿ ಕಾಲದಲ್ಲಿ ಬರೆದ ಪುಸ್ತಕ. ದಕ್ಷಿಣ ಭಾರತದ ಶ್ರೇಷ್ಠ ವಿದ್ಯಾ ಸಂಸ್ಥೆಯಾದ ಮುಹಿಮ್ಮಾತ್ ದಅ್ವಾ ಕಾಲೇಜಿನಲ್ಲಿ ಅಧ್ಯಯನ ಮಾಡುವಾಗ ಮಹಿಳೆಯರ ರಕ್ತಸ್ರಾವ ಹಾಗೂ ಇತರ ವಿಷಯಗಳಲ್ಲಿನ ಕುತೂಹಲಕರ ವಿಷಯ ಕೇಳುತಿದ್ದಂತೆ ನಾನು ನಿಜಕ್ಕೂ ಚಕಿತನಾಗಿದ್ದೆ. ಜೊತೆಗೆ ಮನಸ್ಸಿನಲ್ಲಿ ಮೂಡಿಬಂದ ಪ್ರಶ್ನೆ “ಅರೆ!! ಸಣ್ಣ ಪ್ರಾಯದಲ್ಲಿ ಕೆಲವೊಂದು ತರಗತಿ ಮಾತ್ರ ಕಲಿತ ಹೆಣ್ಣು ಮಕ್ಕಳಿಗೆ ಇವೆಲ್ಲ ಹೇಗೆ ತಿಳಿಯಲು ಸಾಧ್ಯ?"ಈ ಒಂದು ಪ್ರಶ್ನೆ ಈ ಪುಸ್ತಕಕ್ಕೆ ರೂಪ ಕೊಟ್ಟಿತು. ಅವತ್ತು ಇದ್ದ ಪ್ರಾಯ, ಜ್ಞಾನ, ಅನುಭವ ಎಲ್ಲವುಗಳ ಕೊರತೆ ಈ ಕೃತಿಯ ಮೊದಲ ಆವೃತ್ತಿಯಲ್ಲಿ ಎದ್ದು ಕಾಣುತ್ತದೆ. ಹಾಗಿದ್ದರೂ ಪುಸ್ತಕದಲ್ಲಿ ಚರ್ಚೆ ಮಾಡಿದ ವಿಷಯ ಹಾಗೂ ಸರ್ವರಿಗೂ ಸುಲಭವಾಗಿ ಓದಿಸುವಂತಾಗಲು ಕಥಾ ಶೈಲಿಯಲ್ಲಿ ಮಾಡಿದ ವಿವರಣೆ ಹಲವರು ಈ ಪುಸ್ತಕವನ್ನು ಓಕೆ ಮಾಡಲು ಕಾರಣವಾಯಿತು. ಏನಿಲ್ಲದಿದ್ದರೂ ಎರಡು ಸಾವಿರ ಪ್ರತಿಗಳು ಕೆಲವೇ ತಿಂಗಳೊಳಗೆ ಖಾಲಿಯಾಗಿತ್ತು. ನಂತರವೂ ಹಲವರು ಕೇಳಿದ್ದರು. ಇದೀಗ ಸಾಧ್ಯವಾದಷ್ಟು ಅಕ್ಷರ ತಪ್ಪುಗಳನ್ನು ನಿವಾರಿಸುತ್ತ ಪುಸ್ತಕ ಮತ್ತೆ ಹೊರಬಂದಿದೆ. ಈ ಬಾರಿ ಪ್ರಕಾಶನದ ನಿರ್ವಹಣೆ ಕೃಷ್ಣಾಪುರದ ಇಸ್ಮಾಯಿಲ್ ಮುಸ್ಲಿಯಾರ್ (ಲುಕ್ಮಾನ್ ಉಸ್ತಾದ್) ವಹಿಸಿಕೊಂಡಿದ್ದಾರೆ. ಧಾರ್ಮಿಕವಾ...
Comments
Post a Comment