ಸಾಜೀದ

ಸಾಜೀದ

ಆತ್ಮೀಯ ಓದುಗರಲ್ಲಿ...

ಈ ಕಥೆ ನನ್ನ ಕಲ್ಪನೆಯಲ್ಲ ಒಂದು ಯತೀಂ ಸಹೋದರಿ ತನ್ನ ಜೀವನದಲ್ಲಿ ನಡೆದಂತಹ ಘಟನೆಯನ್ನು ನನ್ನೊಂದಿಗೆ ಹಂಚಿಕೊಂಡಿದ್ದನ್ನು ಅವರ ಅನುಮತಿಯಂತೆ ಕಾದಂಬರಿ ರೂಪದಲ್ಲಿ ನಿಮ್ಮ ಮುಂದೆ ತಂದಿದ್ದೇನೆ ಯತೀಂರ ಸಮಸ್ಯೆಗಳ ನಡುವೆ ಹುದುಗಿ ಹೋಗುವ ವಿಷಯಗಳು ಈ ಕಾದಂಬರಿಯ ನಾಯಕಿ ತೋಡಿಕೊಂಡ ನೈಜ ಕಥೆಯನ್ನು ಎಳೆ ಎಳೆಯಾಗಿ ಬಿಡಿಸಿ ನಿಮ್ಮ ಮುಂದೆ ಇಡುತ್ತಿದ್ದೇನೆ...
                   . . .     

ಬ್ಯಾರಿ ಇನ್ಸ್ಟಿಟ್ಯೂಟ್ ಕಾಲೇಜಿನ ಮಧ್ಯಾಹ್ನದ ತರಗತಿ ಮುಗಿದ ನಂತರ ಎಲ್ಲ ವಿದ್ಯಾರ್ಥಿನಿಯರು ಹೊರಂಗಣದಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದರು ಆದರೆ ಸಾಜೀದ ಮಾತ್ರ ಎಂದಿನಂತೆ ಯಾರೊಂದಿಗೂ ಬೆರೆಯದೆ ನೇರವಾಗಿ ಕಾಲೇಜಿನ ಎದುರು ಇದ್ದ ಪಾರ್ಕಿನತ್ತ ನಡೆದಳು..

ಹಸಿರು ಹುಲ್ಲು ಹಾಸಿನ ಮೇಲೆ ಕುಳಿತಿದ್ದ ಸಾಜೀದ ಎಂದಿನಂತಿರಲಿಲ್ಲ ಅವಳ ಪಕ್ಕದಲ್ಲಿಯೇ ಕುಳಿತಿದ್ದ ಹಕೀಂ ಸಾಜೀದ ಅನ್ಯಮನಸ್ಕಳಾಗಿರುವುದನ್ನು ಗಮನಿಸಿದ್ದ ಕಾರಣ ಕೇಳಬೇಕೆನಿಸಿದರೂ ಅವಳಾಗಿಯೇ ಹೇಳಲಿ ಎಂದು ಅವನು ಕೂಡ ಮೌನವಾಗಿದ್ದ_

"ಹಕೀ.. ಏನಾಯಿತು..? ಯಾಕೆ ಸುಮ್ಮನೆ ಕುಳಿತುಬಿಟ್ಟೆ.." ಸಾಜೀದಳೇ ಕೇಳಿದಳು
             "ನೀನೇ ಏನೋ ಯೋಚಿಸುತ್ತಾ ಕುಳಿತಿದ್ದೀಯಾ ನಾನೇಕೆ ತೊಂದರೆ ಕೊಡಲಿ ಎಂದು ಸುಮ್ಮನಾದೆ.."
"ಆ ಯೋಚನೆ ಇದ್ದದ್ದೇ ಬಿಡು.." ಮಾತನ್ನು ತೇಲಿಸಲು ಯತ್ನಿಸಿದಳು
         "ಸಾಜೀ.. ನನ್ನ ಹತ್ತಿರ ಹೇಳದಂತಹ ವಿಷಯವೇ ಅಥವಾ ಸಂಕೋಚನಾ..? ಅದೇನು ಎಂದು ಹೇಳಬಾರದೇ..

ಮನದಲ್ಲಿ ಮೂಡಿದ ಅನಿಸಿಕೆಗಳನ್ನು ವ್ಯಕ್ತಪಡಿಸಲು ಸಾಧ್ಯವೇ.. ಈ ವಿಷಯ ಹಕೀಂ ನಿಗೆ ತಿಳಿಸಲೇ ಬೇಕು ಆದರೆ ಈಗಲ್ಲ ಈ ಸಮಯದಲ್ಲಿ ಹೇಳಿ ಅವನ ಮನಸ್ಸನ್ನು ಕಲಕುವುದು ಅವಳಿಗೆ ಸರಿ ಕಾಣಲಿಲ್ಲ..

"ಮಾತನಾಡು ಸಾಜೀ.. ಯಾಕೆ ಮೌನವಾಗಿದ್ದೀಯಾ.."
             "ಏನಿಲ್ಲ ಹಕೀ.. ಏನೋ ಬೇಜಾರಾಗಿತ್ತು ಯೋಚನೆ ಮಾಡುತ್ತ ಕುಳಿತಿದ್ದೆ.."
           "ಯಾವಾಗ ಹೇಳುತ್ತೀಯಾ..? ನಾವಿಬ್ಬರೇ ಏಕಾಂತದಲ್ಲಿದ್ದಾಗಲಾ.." ಎಂದು ಅವಳ ಮೊಗವನ್ನೆ ದಿಟ್ಟಿಸುತ್ತಾ ಕೇಳಿದ

"ಹ್ಞೂಂ" ಎಂದಳು ಬೇರೇನೂ ಮಾತು ಹೊರಡಲಿಲ್ಲ ಇಬ್ಬರೂ ಒಂದಿಷ್ಟು ಹೊತ್ತು ಪಾರ್ಕಿನಲ್ಲಿ ಕಳೆದರು ಸಮಯ ಕಳೆದದ್ದೆ ತಿಳಿಯಲಿಲ್ಲ ಸಂಜೆಯಾಗುತ್ತ ಇದ್ದಂತೆ ಹಕೀಂ ಹೇಳಿದ

"ಎಷ್ಟು ಹೊತ್ತಾಗಿ ಹೋಯಿತು ಸಾಜೀ..!!" ಎಂದು ಉದ್ಗರಿಸಿದ

                  "ಆಗಲಿ ಪರವಾಗಿಲ್ಲ ಬಿಡು.."

"ಪ್ರತಿದಿನ ಮನೆಗೆ ಹೋಗಬೇಕು ಎಂದು ಹಾತೊರೆಯುತ್ತಿದ್ದವಳು ನೀನು ಇವತ್ತು ಲೇಟಾದರೂ ಪರವಾಗಿಲ್ಲ ಎನ್ನುತ್ತಿದ್ದೀಯಾ.."

           ಹಾಗೇನೂ ಇಲ್ಲ ಸುಮ್ಮನೆ ಹೇಳಿದೆ.. ಸರಿ ಹೋಗೋಣ.."

"ಬಾ ನಿಮ್ಮ ಮನೆಯ ಹತ್ತಿರ ಬಿಡುತ್ತೇನೆ.." ಎಂದು ಬೈಕ್'ನತ್ತ ನಡೆದ

ಅವಳ ಮನೆಯ ರಸ್ತೆಯ ಕೊನೆಯಲ್ಲಿ ಬೈಕ್ ನಿಲ್ಲಿಸಿ ಹೇಳಿದ
"ಸಾಜೀ.. ನಾಳೆ ಎಷ್ಟು ಹೊತ್ತಿಗೆ ಸಿಗುತ್ತೀಯಾ..?"

        "ನಾಳೆ ನಾಲ್ಕು ಗಂಟೆವರೆಗೂ ಕ್ಲಾಸಿದೆ.." ಎಂದಳು

ಸರಿ ಹಾಗಾದರೆ ನನ್ನ ಕೆಲಸ ಮುಗಿಸಿ ನಾಲ್ಕು ಗಂಟೆಗೆ ಕಾಲೇಜಿನ ಹತ್ತಿರ ಬರುತ್ತೇನೆ.." ಎಂದ ಅವಳು ಸಮ್ಮತಿ ಸೂಚಕವಾಗಿ ತಲೆಯಾಡಿಸಿದಳು..
ಹಕೀಂ ಬೈಕ್ ಸ್ಟಾರ್ಟ್ ಮಾಡಿದ ಅವಳು ಒಲ್ಲದ ಮನಸ್ಸಿನಿಂದ ಮನೆಯತ್ತ ಹೆಜ್ಜೆ ಹಾಕಿದಳು...

ಸಾಜೀದ ಮನೆಯೊಳಗೆ ಬರುತ್ತಲೇ ಮೈಮುನ ಮಗಳ ಬಳಿ ಬಂದರು

"ಸಾಜೀ.. ಬಂದೆಯಾ ನೀನು ಬರಲಿಲ್ಲ ಎಂದು ನನಗೆ ಎಷ್ಟು ಯೋಚನೆಯಾಗಿತ್ತು ಇಷ್ಟು ಹೊತ್ತು ಬಾಗಿಲಿನಲ್ಲಿಯೇ ನಿನಗಾಗಿ ಕಾಯುತ್ತಿದ್ದೆ ಈಗ ತಾನೇ ಒಳಗೆ ಬಂದೆ.."

"ನಾನೇನು ಎಳೆಯ ಮಗುನಾ ಕಾಯುವುದಕ್ಕೆ ಕಾಲೇಜಿಗೆ ಹೋದ ಮೇಲೆ ಒಂದೇ ಸಮ ಇರುತ್ತಾ..? ಹೆಚ್ಚು ಕಡಿಮೆ ಆಗಿಯೇ ಆಗುತ್ತದೆ.."

"ಹಾಗಲ್ಲಮ್ಮ ಹೆಣ್ಣು ಮಕ್ಕಳು ಹೊತ್ತು ಹೊತ್ತಿಗೆ ಮನೆಗೆ ಬರ ಬೇಕು ಕಾಲ ಒಂದೇ ಸಮ ಇರುವುದಿಲ್ಲ..

"ನನಗೆ ಇಷ್ಟೊಂದು ಹೇಳುತ್ತಿರಲ್ಲ ಆ ಸದ್ದಾಂ ಅವನೇನು ಹೆಚ್ಚು ಅವನು ಎಷ್ಟು ಹೊತ್ತಿಗೆ ಮನೆಗೆ ಬಂದರು ಕೇಳುವುದಿಲ್ಲ.."

ಸಾಜೀ.. ನೀನು ಅವನು ಒಂದೇನೇನೇ..? ಅವನು ಎಷ್ಟದರೂ ಗಂಡು ಹುಡುಗ ಅವನು ಎಷ್ಟು ಹೊತ್ತಿಗೆ ಬಂದರೂ ಪರವಾಗಿಲ್ಲ.."

"ಅವನು ನಿಮ್ಮ ಮುದ್ದಿನ ಮಗನಲ್ಲವಾ.. ಅದಕ್ಕೆ ಅವನು ಏನು ಮಾಡಿದರೂ ನಡೆಯುತ್ತದೆ.."

"ಸಾಜೀ ಯಾಕೆ ಹಾಗುನ್ನುತ್ತಿಯಾ..? ನಿನಗೆ ನಾನೇನೂ ಕಡಿಮೆ ಮಾಡಿದ್ದೇನೆ ಅವನಿಗಿಂತಾ ಚೆನ್ನಾಗಿಯೇ ನಿನ್ನನ್ನು ನೋಡಿಕೊಂಡಿಲ್ಲವೇ..!! ನೀನು ಈ ರೀತಿಯೆಲ್ಲ ಮಾತಡಬೇಡಮ್ಮಾ ನನಗೆ ಸಂಕಟವಾಗುತ್ತೆ.." ಕಣ್ಣೀರು ತುಂಬಿ ನುಡಿದರು ಮೈಮೂನ

"ಮಾತಿಗೆ ಮೊದಲು ಅಳುವುದೊಂದು ಗೊತ್ತು ನಾನು ಯಾಕೆ ಆ ರೀತಿ ಹೇಳಿದ್ದು ಎಂದು ನೀವು ಕೇಳಲಿಲ್ಲ ಸದ್ದಾಂನಿಗೇನೂ ಕೊಂಬು ಇದೆಯಾ..?"

"ಹಾಗಲ್ಲ ಸಾಜೀ.. ಹೆಣ್ಣು ಮಕ್ಕಳು ಹೆಣ್ಣಾಗಿ ಬೆಳೆದರೆ ಚಂದ ಸಂಜೆಯಾಗುವ ಮುನ್ನ ಮನೆಗೆ ಬರದಿದ್ದರೆ ನೋಡಿದವರು ಏನನ್ನುತ್ತಾರೆ ಹೇಳು.."

"ಆ ಕಾಲವೇಲ್ಲ ಈಗ ಹೋಯಿತು ಸುಮ್ಮನೆ ನೀವ್ಯಾಕೆ ಗಂಟಲು ಒಣಗಿಸಿಕೊಳ್ಳುತ್ತೀರಾ.."

"ಸಾಜೀ.. ನಿನಗೇನಾಗಿದೆ..? ನೀನು ಮೊದಲಿನ ಹಾಗಿಲ್ಲ ಎರಡು ದಿನಗಳಿಂದ ಒಂದು ರೀತಿ ಇದ್ದೀಯಾ ಮೈಗೆ ಹುಷಾರಿಲ್ಲವೇನೇ.."

"ನನಗೇನಾಗಿದೆ ಗುಂಡುಕಲ್ಲಿನ ಹಾಗಿದ್ದೀನಿ... ಸುಮ್ಮನೆ ಏನೇನೋ ರೋಗ ಕರಿಯಬೇಡಿ.."

"ಹಾಗಲ್ಲಮ್ಮ ನಾನೆಂದರೆ ಪ್ರಾಣ ಬಿಡುತ್ತಿದ್ದ ನೀನು ಇವತ್ತು ಏನೇನೋ ಮಾತಾಡುತ್ತಿದ್ದೀಯಾ.. ಯಾಕೆ ಏನಾಯಿತು ಸಾಜೀ.."

"ನನ್ನನ್ನೇನೂ ಕೇಳುತ್ತೀರಾ..? ನೀವೇ ಯೋಚನೆ ಮಾಡಿ ಯಾಕೆ ಏನು ಎಂದು ಗೊತ್ತಾಗುತ್ತೇ.."

ಸಾಜೀ.. ಒಗಟಿನ ಹಾಗೆ ಮಾತನಾಡಬೇಡ ಅದೇನೂಂತ ಹೇಳು ನೀನು ಯಾವಾಗಲೂ ನಗುನಗುತ್ತಾ ಇರಬೇಕುಂತಲೇ ನನಗಾಸೆ..

"ಏನು ತಾಯಿ ಮಗಳು ತುಂಬಾ ದೀರ್ಘವಾಗಿ ಚರ್ಚಿಸುತ್ತಿರುವಂತಿದೆಯಲ್ಲ..? ನನಗೂ ಸ್ವಲ್ಪ ಹೇಳಿ ಏನೆಂದೂ ನಾನು ಕೇಳುತ್ತೇನೆ.."

ತಂದೆಯ ಧ್ವನಿ ಕೇಳಿ ಬಾಗಿಲತ್ತ ತಿರುಗಿ ತಂದೆಯ ಮುಖ ಕಂಡ ಕೂಡಲೇ ಸಾಜೀದ ಸರಕ್ಕನೆ ಎದ್ದು ತನ್ನ ರೂಮಿಗೆ ಹೊರಟು ಹೋದಳು ಅವಳ ವರ್ತನೆಯಿಂದ ಹಮೀದಾಕ ಅವಾಕ್ಕಾದರು

ಸಾಮಾನ್ಯವಾಗಿ ತಾನು ಬಂದ ಕೂಡಲೇ ಓಡಿಬಂದು ಎಳೆಯ ಮಗುವಿನಂತೆ ತನ್ನ ಕೊರಳಿಗೆ ಜೋತುಬಿದ್ದು
               ಅಪ್ಪಾ.. ನನಗೆ ತುಂಬಾ ಬೇಜಾರು.. ಎಂದು ಮುದ್ದುಗರೆಯುತ್ತಿದ್ದಳು

ಏನೇ ಇದು ಸಾಜೀ..? ಎಂದು ಮೈಮೂನ ಗದರಿದರೆ
             ನೀವು ಹೋಗಿಯಮ್ಮ ನನಗೆ ಬೇಜಾರು ಅಂದರೆ ಅಡುಗೆ ಮನೆಯಲ್ಲಿ ನನಗೆ ಹೆಲ್ಪ್ ಮಾಡು ಅನ್ನುತ್ತೀರಾ ಆದರೆ ಅಪ್ಪನೊಂದಿಗೆ ಹೇಳಿದರೆ ಅವರಿಗೆ ನನ್ನ ಮನಸ್ಸು ಗೊತ್ತು.. ನನಗೆ ಬೇಕಾದ್ದನ್ನೇ ಹೇಳ್ತಾರೆ ಅಲ್ಲವಾ ಅಪ್ಪಾ..!! ಕೇರಂ ಆಡೋಣವಾ ಅಪ್ಪಾ.. ಎಂದು ಮೆಲ್ಲನೆ ಪುಸಲಾಯಿಸುತ್ತಿದ್ದಳು ಆಯಾಸವಾಗಿದ್ದರೂ ಮಗಳ ಮುದ್ದು ಮುಖ ನೋಡಿ ಇಲ್ಲವೆನ್ನಲಾಗದೆ ಒಂದೆರಡು ಆಟ ಆಡುತ್ತಿದ್ದರು..

ಆದರೆ ಇಂದು ಅವಳು ಎಂದಿನಂತೆ ಓಡಿ ಬಂದು ಜೋತುಬಿದ್ದು ಮುದ್ದುಗೆರೆಯಲಿಲ್ಲ ಬದಲಾಗಿ ತಮ್ಮ ಮುಖ ಕಂಡ ಕೂಡಲೇ ಹೊರಟು ಹೋದಳು ಇದಕ್ಕೆ ಕಾರಣವೇನೂ..? ಮುದ್ದು ಮಗಳ ವರ್ತನೆ ಕಂಡು ಅವರಿಗೆ ತುಂಬಾ ನೋವಾಯಿತು..

ನಗರದ ಪ್ರಖ್ಯಾತ ಉದ್ಯಮಿಯಾದ ಹಮೀದಾಕ ಊರಿಗೆ ಗಣ್ಯವ್ಯಕ್ತಿ ಎಲ್ಲರಿಗೂ ಒರಟು ಸ್ವಭಾವದವ ಮನುಷ್ಯನಾದ ಹಮೀದಾಕ ಮುದ್ದಿನ ಮಗಳ ಮುಂದೆ ಮಾತ್ರ ಮಗುವಾಗುತ್ತಿದ್ದರು ಅವಳ ಆತ್ಮೀಯ ಗೆಳಯರಾಗುತ್ತಿದ್ದರು ಅದನ್ನೆಲ್ಲಾ ತಿಳಿದ ಸಾಜೀದ ಇಂದು ಈ ರೀತಿ ಮಾಡಬಹುದೇ..

"ಸರಿ ಸರಿ ನೀವು ಬನ್ನಿ ಕುಳಿತುಕೊಳ್ಳಿ ನಾನು ಚಹಾ ಮಾಡಿ ತರುತ್ತೇನೆ.." ಎಂದು ಮೈಮೂನ ನುಡಿದರು

               ಮೈಮೂನ.. ಸಾಜೀದಳಿಗೆ ಏನಾಗಿದೆ ಇವತ್ತು..?

ಅದೇನಾಗಿದೆಯೋ ಗೊತ್ತಿಲ್ಲ ಇವತ್ತು ಮಾತ್ರವಲ್ಲ ಎರಡು ದಿನಗಳಿಂದ ಅವಳು ಸರಿಯಾಗಿಲ್ಲ ಮಾತು ಮಾತಿಗೂ ಸಿಡುಕುತ್ತಾಳೆ ಏನಾದರೂ ಹೇಳಿದರೆ ನನಗೆ ದಬಾಯಿಸುತ್ತಾಳೆ..

                 ಯಾಕೆ ಏನಾಯಿತು ಅವಳಿಗೆ.. ಕಾಲೇಜಿನಲ್ಲಿ ಏನಾದರೂ ಬೇಸರವಾಗಿರಬಹುದು

ಅದಕ್ಕೆ ನಮ್ಮ ಮೇಲೆ ಕೋಪ ತೋರಿಸಬೇಕೆ..? ಅವಳಿಗೆ ಬೇಜಾರಾಗಿದ್ದರೆ ಕಾರಣವೇನು ಎಂದು ಹೇಳಲಿ ಹೀಗೆ ಸುಮ್ಮನೆ ಸಿಡುಕುತ್ತಿದ್ದರೆ ಏನರ್ಧ..

"ಮೈಮೂನ.. ಈ ವಯಸ್ಸೆ ಹಾಗೆ ನೋಡು ಪ್ರತಿಯೊಬ್ಬರ ಬದುಕಿನಲ್ಲಿಯೂ ತಿರುವಿನ ಕಾಲ ಮನಸ್ಸು ಬಹಳ ಸೂಕ್ಷ್ಮವಾಗಿರುತ್ತೆ ಏನೋ ಸ್ವಲ್ಪ ಬೇಜಾರಾದರೂ ಎಲ್ಲರ ಮೇಲೆ ಕೋಪ ತೋರಿಸುವ ಹಾಗಾಗುತ್ತೆ ಅದಕ್ಕೆ ಮೊದಲ ಬಲಿಪಶು ತಂದೆ ತಾಯಿ.."

                ನನಗ್ಯಾಕೋ ಭಯವಾಗುತ್ತೇರಿ.. ಅವಳು ಏನೋ ಬದಲಾಗಿದ್ದಾಳೆ..

"ಇಲ್ಲದ್ದೆಲ್ಲ ಯೋಚಿಸಿ ಕೊರಗಬೇಡ ಮೈಮೂನ ಅವಳು ನಮ್ಮ ಮಗಳು ಎಂದಿಗೂ ದಾರಿ ತಪ್ಪುವುದಿಲ್ಲ.."

         ನಿಮಗೇನೋ ಆ ಧೈರ್ಯವಿದೆ ಆದರೆ ನನಗೆ..? ಅವಳು ಈಗ ಸ್ವಲ್ಪ ಹೊತ್ತಿನಲ್ಲಿ ಹೇಗೆ ಮಾತಾಡಿದಳು ಗೊತ್ತಾ..

ಏನೆಂದಳು..

        ಸ್ವಲ್ಪ ಲೇಟಾಗಿ ಮನೆಗೆ ಬಂದಳು ಅದಕ್ಕೆ ಕಾರಣ ಕೇಳಿದಕ್ಕೆ ಬಾಯಿಗೆ ಬಂದ ಹಾಗೆ ಮಾತಾಡಿದಳು ಸದ್ದಾಂ ಲೇಟಾಗಿ ಬಂದರೆ ಪರವಾಗಿಲ್ಲವಾ..!! ಅವನೇ ನಿಮ್ಮ ಮುದ್ದು ಮಗ ಎಂದೆಲ್ಲಾ ಹಾರಾಡಿದಳು ನಾನು ಅವಳಿಗೂ ಅವನಿಗೂ ತಾರತಮ್ಯ ಮಾಡುತ್ತಿದ್ದೀನಿ ಎನ್ನುವ ರೀತಿ ಆಕ್ಷೇಪಿಸಿದಳು ಅವಳು ಯಾವತ್ತೂ ಹಾಗೆಲ್ಲ ಮಾತಾಡಿದವಳಲ್ಲಾರೀ...

ಮೈಮೂನ ಇದು ನಿನ್ನದೇ ತಪ್ಪು ಯಾಕೆ ಅವಳನ್ನು ಲೇಟಾಗಿ ಬಂದದ್ದಕ್ಕೆ ಬೈಯ್ದೆ..

         ಮತ್ತೆ ಎಷ್ಟು ಹೊತ್ತಿಗೆ ಬಂದರೂ ಬಾಯಿ ಮುಚ್ಚಿಕೊಂಡಿರಬೇಕೇನು..? ಹೆಣ್ಣು ಮಕ್ಕಳನ್ನು ಹೋದ ದಾರಿಗೆ ಬಿಟ್ಟರೆ ನಾಳೆ ಏನಾದರೂ ಹೆಚ್ಚು ಕಡಿಮೆಯಾದರೆ ಯಾರು ಅನುಭವಿಸುವವರು ಅದಕ್ಕೆ ಕೇಳಿದೆ ಅದರಲ್ಲೇನು ತಪ್ಪು..?

"ನೀನು ವಿಚಾರಿಸುವುದು ತಪ್ಪಲ್ಲ ಆದರೆ ತನಿಖೆ ಮಾಡುವುದು ತಪ್ಪು ಯಾರಿಗೆ ಆಗಲಿ ದಣಿದು ಬಂದಿರುವಾಗ ತನಿಖೆ ಮಾಡಿದರೆ ಬೇಸವಾಗುವುದಿಲ್ಲವೇ..? ಸಮಯ ಸಂದರ್ಭ ನೋಡಿ ನಯವಾಗಿ ವಿಚಾರಿಸಿ ಬುದ್ದಿಮಾತು ಹೇಳು ಅವಳು ಆಗ ರೇಗುವುದಿಲ್ಲ.."

       ಏನೋಪ್ಪ ನನಗಂತೂ ಏನೂ ತೋಚುವುದಿಲ್ಲ..

"ನೋಡು ಮೈಮೂನ ವಯಸ್ಸಿಗೆ ಬಂದ ಮಕ್ಕಳನ್ನು ತಂದೆ ತಾಯಿಗಳು ಸ್ನೇಹಿತರಂತೆ ಕಾಣಬೇಕು ಎನ್ನುತ್ತಾರೆ ಅದರಲ್ಲಿಯೂ ಹೆಣ್ಣು ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮ ಅದರಿಂದ ನಾವು ಎಷ್ಟು ಎಚ್ಚರಿಕೆಯಿಂದ ವರ್ತಿಸಿದರೂ ಸಾಲದು.."

            ಈಗ ನಾನು ಏನು ಮಾಡು ಅಂತೀರಾ..!!

"ಏನು ಮಾಡಬೇಡ ಸುಮ್ಮನಿದ್ದುಬಿಡು ಅವಳಾಗಿಯೇ ಸರಿ ಹೋಗುತ್ತಾಳೆ.."

                   ಏನು ಸರಿಹೋಗುತ್ತಾಳೋ ಏನೋ ಆ ಹಿಲಾಹನಿಗೆ ಗೊತ್ತು..

"ನೋಡು ಮೈಮೂನ ಉತ್ತಮ ಸಂಸ್ಕಾರ ಪಡೆದು ಬೆಳೆದ ಮಕ್ಕಳು ಎಂದಿಗೂ ಹಾಳಾಗುವುದಿಲ್ಲ ಏನೋ ಮನಸ್ಸಿಗೆ ಬೇಜಾರಾಗಿರಬಹುದು ಅದರಿಂದ ಹಾಗಾಡಿದ್ದಾಳೆ ಅಷ್ಟೇ ನಾಳೆ ಬೆಳಗಾಗಲಿ ಅಮ್ಮಾ ಎಂದು ಓಡಿಬರುತ್ತಾಳೆ ಅವಳ ಕೋಪವೆಲ್ಲಾ ಬಿಸಿಲಿಗೆ ಮಂಜು ಕರಗುವ ಹಾಗೆ ಕರಗಿ ಹೋಗಿರುತ್ತೇ.." ಎಂದು ಹಮೀದಾಕ ಪತ್ನಿಯನ್ನು ಸಮಾಧಾನಿಸಿದರು

        ಏನೋ.. ಅಷ್ಟಾದರೆ ಸಾಕು ಬಿಡಿ ನನಗೆ ಅವಳದೇ ಯೋಚನೆ.. ಎಂದು ಅವಲತ್ತುಕೊಂಡರು ಮೈಮೂನ

ತಾಯಿಯೊಂದಿಗೆ ಜಗಳವಾಡಿ ಬಂದು ಮಲಗಿದ ಸಾಜೀದಳಿಗೆ ನಿದ್ದೆ ಹತ್ತಿರಲಿಲ್ಲ ತಾಯಿಯನ್ನು ದಬಾಯಿಸಿದ್ದಕ್ಕೆ ಏನೋ ಒಂದು ರೀತಿಯ ವಿಚಿತ್ರ ತೃಪ್ತಿಯಾಗಿತ್ತು.. ಸದ್ದಾಂನಿಗೇನು ಕೋಡು ಇದೆಯೇ..? ಅವನು ಏನು ಮಾಡಿದರೂ ತಪ್ಪಿಲ್ಲ ಆದರೆ ತಾನು ಮಾತ್ರ ಏನು ಮಾಡಿದರೂ ತಪ್ಪು ಎಲ್ಲದರಲ್ಲಿಯೂ ಹುಳುಕನ್ನೆ ಕಂಡು ಹಿಡಿಯುವ ತಾಯಿಯ ಬಗ್ಗೆ ರೋಷ ಸ್ಫೋಟಗೊಂಡಾಗ ಮನಸ್ಸಿಗೆ ಸ್ವಲ್ಪ ಹಿತವೆನಿಸತು..

ಮನಸ್ಸು ಅಲ್ಲಿಂದ ಜಾರಿ ಹಕೀಂನತ್ತ ಓಡಿತು ಓಹ್.. ನನ್ನ ಹಕೀಂ ನನ್ನನ್ನು ಎಷ್ಟು ಅಗಾಧವಾಗಿ ಪ್ರೀತಿಸುತ್ತಾನೆ..!! ತಾನು ಎಂದರೆ ಪ್ರಾಣ ಬಿಡುತ್ತಾನೆ...!! ಅಂತಹವನನ್ನು ಬಾಳಸಂಗಾತಿಯಾಗಿ ಪಡೆಯುವುದು ನನ್ನ ಅದೃಷ್ಟವೇ ಹಕೀಂನನ್ನು ಬಿಟ್ಟಿರಲು ಸಾಧ್ಯವೇ ಇಲ್ಲ ಆಗ ಅವಳಿಗೆ ಹಕೀಂನ ಪರಿಚಯವಾಗಿ ಪ್ರೀತಿಸಲು ಪ್ರಾರಂಭವಾದ ಘಳಿಗೆಯನ್ನು ಮೆಲುಕು ಹಾಕತೊಡಗಿದಳು..

ಬಟ್ಟೆ ಅಂಗಡಿ ಮಾಲೀಕನಾಗಿದ್ದ ಹಕೀಂ ವರ್ಷಗಳ ಹಿಂದೆ ಪರಿಚಯವಾಗಿತ್ತು ಹೀಗೆ ಅದು ಪ್ರೇಮಕ್ಕೆ ತಿರುಗಿತ್ತು ಪ್ರಣಯ ಅರಳಿತ್ತು ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಮನಸ್ಸು ಬೆಳೆದಿತ್ತು.. ಈ ಬಾರಿ ಸಾಜೀದಳ ಕಾಲೇಜು ಮುಗಿದ ನಂತರ ಮನೆಗೆ ಬಂದು ಹೆಣ್ಣು ಕೇಳುವುದಾಗಿ ಹೇಳಿದ್ದ ವಾರಕ್ಕೆ ಮೂರು ನಾಲ್ಕು ಬಾರಿ ಒಬ್ಬರನ್ನೊಬ್ಬರು ಭೇಟಿಯಾಗುತ್ತಿದ್ದರು ಇಬ್ಬರೂ ಸಂಯಮದಿಂದ ಎಲ್ಲೆ ಮೀರಿ ವರ್ತಿಸುತ್ತಿರಲಿಲ್ಲ ಅವನು ಒಮ್ಮೆಯೂ ಅವಳ ಮೈ ಕೈ ಮುಟ್ಟಿ ಮಾತಾಡಿಸುವುದು ಮಾಡಿರಲಿಲ್ಲ ಅವನ ಈ ಗುಣ ಅವಳಿಗೆ ಹೆಚ್ಚು ಇಷ್ಟವಾಗಿತ್ತು..

"ಹಕೀಂ ನನ್ನ ಮುದ್ದಿನ ಹಕೀಂ ನನಗೆ ನೀನಿದ್ದರೆ ಸಾಕು ಯಾವ ಕಷ್ಟ ಬಂದರೂ ಸಹಿಸುತ್ತೇನೆ.." ಎಂದು ಅವನ ಕನಸು ಕಾಣುತ್ತ ನಿದ್ದೆಗೆ ಜಾರಿದಳು..

ಬೆಳಿಗ್ಗೆ ಎದ್ದಾಗ ಏಳು ಘಂಟೆಯಾಗಿತ್ತು ಸಮಯ ನೋಡಿ ಪ್ರತಿದಿನದಂತೆ ಸುಬಾಹಿ ನಮಾಝಿಗೆ ತಾಯಿ ತನ್ನನ್ನು ಎಬ್ಬಿಸಲಿಲ್ಲ ಅವರಿಗೆ ನನ್ನ ನೆನಪಿದ್ದರೆ ತಾನೆ ಎಂದುಕೊಂಡಳು.. ತಂದೆಯ ಅಣತಿಯಂತೆ ತಾಯಿ ತನ್ನನ್ನು ಎಬ್ಬಿಸಿರಲಿಲ್ಲವೆಂದು ಅವಳಿಗೇನೂ ಗೊತ್ತು..? ಹೊಟ್ಟೆ ಚುರು ಗುಡುತ್ತಿದ್ದರಿಂದ ರಾತ್ರಿ ಊಟ ಮಾಡಿಲ್ಲವೆಂಬುದು ನೆನಪಾಯಿತು ತಾಯಿ ತನ್ನನ್ನು ಎಬ್ಬಿಸಿ ಊಟ ಮಾಡುವಂತೆ ಹೇಳಬಾರದಿತ್ತೇ..? ತನ್ನ ಬಗ್ಗೆ ಎಲ್ಲಿದೆ ಕಾಳಜಿ. ತಾನೂ ಸತ್ತರೂ ಬದುಕಿದರೂ ಈ ಮನೆಯಲ್ಲಿ ಕೇಳುವವರಿಲ್ಲ ಎನಿಸಿ ಕಂಗಳು ತುಂಬಿದವು..

ಮುಖ ತೊಳೆದುಕೊಂಡು ಬಾ ಸಾಜೀ.. ಕಾಫಿ ಕೋಡುತ್ತೇನೆ.. ಮಗಳೆಲ್ಲಿ ಸಿಡುಕುವಳೋ ಎಂದು ಭಯದಿಂದಲೇ ನುಡಿದರು ಮೈಮೂನ

"ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿದರೆ ನನಗೆ ಹೊಟ್ಟೆ ತೊಳೆಸುತ್ತೆ ಕಾಫಿ ಬೇಡ. "

ಸರಿ ಇಡ್ಲಿ ಮಾಡಿದ್ದೀನಿ ತಿನ್ನು ಬಾ..

ಬೇಡವೆಂದರೆ ತಾಯಿ ಕೊಡದೆ ಇದ್ದರೆ ಕಷ್ಟವೆಂದೂ ಸರಿ ಬಂದೇ ಎಂದಳು..

ಮೈಮೂನ ಇಡ್ಲಿಯನ್ನು ತಟ್ಟೆಗೆ ಹಾಕಿ ಕೊಟ್ಟರು ಸಾಜೀದ ಮಾತನಾಡದೆ ತಿಂದಳು ತಾಯಿ ಮಾಡಿಕೊಟ್ಟ ಕಾಫಿ ಕುಡಿದ ಮೇಲೆ ಹೊಟ್ಟೆ ಶಾಂತವಾಯಿತು..

ಎಷ್ಟು ಗಂಟೆಗೆ ಕಾಲೇಜಿಗೆ ಹೋಗೋದು..?

ಇವತ್ತು ಹತ್ತು ಗಂಟೆಗೆ..

ಸರಿ ಹೋಗಿ ಸ್ನಾನ ಮಾಡು..

ಅವಳಿಗೆ ಯಾವ ಕೆಲಸ ಹೇಳಲೂ ಭಯವಾಯಿತು ಮೈಮೂನರಿಗೆ ಏನಾದರೂ ಹೇಳಿದರೆ ಸಿಡುಕುತ್ತಾಳೆ ಎಂದು ಮೌನ ವಹಿಸಿದರು

"ಹಾ..!! ನನ್ನ ಮಗಳು ಆಗಲೇ ಎದ್ದು ತಿಂಡಿ ಮುಗಿಸಿ ಆಯಿತಾ ರಾತ್ರಿ ಚೆನ್ನಾಗಿ ನಿದ್ದೆ ಬಂತಾ.. ಮಗಳೇ.. " ಹಮೀದಾಕ ಮಗಳ ತಲೆ ಸವರುತ್ತ ಕೇಳಿದರು

ಬರದೇ ಏನಾಗುತ್ತೆ..? ಸುಳ್ಳು ಹೇಳುವವರಿಗೆ ತಪ್ಪು ಕೆಲಸ ಮಾಡುವವರಿಗೆ ಯಾವಾಗಲೂ ಭಯ ಇರುತ್ತೆ ನಿದ್ರೆ ಬರುವುದಿಲ್ಲ ನಾನೇನು ಅಂತಹವಳಲ್ಲ ಚೆನ್ನಾಗಿ ನಿದ್ರೆ ಬಂತು.. ಎಂದು ಸಾಜೀದ ಒರಟಾಗಿ ನುಡಿದಳು

"ಸಾಜೀ.. ಏನೂ ಮಾತೂಂತ ಆಡ್ತೀಯಾ.. ನಿಮ್ಮ ತಂದೆ ಅನ್ನುವ ಗೌರವ ಬೇಡವೇ..?"

ತಾಯಿಯ ಮಾತಿಗೆ ತಾಯಿಯನ್ನು ದುರುಗಟ್ಟಿ ನೋಡಿದಳು ಸಾಜೀದ

ಹೋಗಲಿ ಬಿಡು ಮೈಮೂನ ಮಗು ಅದು ಅದಕ್ಕೆ ಏನು ಗೊತ್ತಾಗುತ್ತೆ..

ಗೊತ್ತಾಗಿಯೇ ನುಡಿದದ್ದು ನನಗೆ ಬುದ್ಧಿ ಇದೆ.. ಖಾರವಾಗಿ ನುಡಿದಳು ಸಾಜೀದ

"ಸಾಜೀ... ಬಾಮ್ಮಾ ಇಲ್ಲಿ." ಎಂದು ಹಮೀದಾಕ ಗಂಭೀರವಾಗಿ ಕರೆದರು

ತಲೆ ತಗ್ಗಿಸಿ ಬಳಿ ಬಂದು ನಿಂತಳು ಸಾಜೀದ ಮಗಳನ್ನು ತನ್ನ ಪಕ್ಕದಲ್ಲಿ ಕೂರಿಸಿಕೊಂಡು ಹಮೀದಾಕ ಅವಳ ತಲೆ ಸವರುತ್ತಾ..

ಸಾಜೀ.. ಏನಮ್ಮಾ ಆಗಿದೆ ನಿನಗೆ..? ನಾವೇನಾದರೂ ನಿನ್ನನ್ನು ಬೈಯ್ದಿದ್ದರೆ ಅದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡ ದಯವಿಟ್ಟು ಅದನ್ನೆಲ್ಲಾ ಮರೆತು ಮೊದಲಿನಂತೆ ಇರು. "

ನನಗೇನಾಗಿದೆ ನಾನು ಸರಿಯಾಗಿಯೇ ಇದ್ದೀನಲ್ಲ..

ನೀನು ಮೂರು ದಿನಗಳಿಂದ ಸರಿಯಾಗಿಲ್ಲ ಎಂದು ನಿನ್ನಮ್ಮನ ದೂರು ಕಾಲೇಜಿನಲ್ಲಿ ಏನಾದರೂ ಬೇಸರವಾಗುವ ಘಟನೆ ನಡೆಯಿತೇ..

ಇಲ್ಲ

ಮತ್ತೇನಾಯಿತು ಹೇಳು ಮಗಳೇ

ಏನಿಲ್ಲ

ನೋಡಮ್ಮ ಸಾಜೀ.. ನೀನು ಹೀಗಿದ್ದರೆ ನಿನ್ನಮ್ಮನಿಗೆ ತುಂಬಾ ಬೇಜಾರಾಗುತ್ತೆ ನನಗೂ ಬೇಜಾರು ನೀನು ನಗುನಗುತ್ತಾ ಇರಬೇಕು ಎಂಬುವುದೇ ನಮ್ಮ ಆಸೆ..

ನಾನು ಹೇಗಿದ್ದರೆ ನಿಮಗೇನು..? ನೀವೇನೂ ನನ್ನ ಹೆತ್ತ ತಂದೆ ತಾಯಿಯಲ್ಲವಲ್ಲ..
ಸಾಜೀದ.. ಹಮೀದಾಕ ಮೈಮೂನ ಒಟ್ಟಿಗೆ ಕಿರುಚಿದರು

ಯಾಕೆ ಕಿರುಚಿಕೊಳ್ತೀರಿ..? ನನಗೆ ಎಲ್ಲ ವಿಚಾರನೂ ಗೊತ್ತಿದೆ..

ಮೈಮೂನ ಜೋರಾಗಿ ಅಳತೊಡಗಿದರು ಹಮೀದಾಕನ ಕಂಗಳಲ್ಲಿಯೂ ನೀರು

ಮಗಳೇ.. ಸಾಜೀ.. ಎಂದು ಮೈಮೂನ ಓಡಿ ಬಂದು ಮಗಳನ್ನು ತಬ್ಬಿಕೊಂಡರು ಯಾವುದು ಅವಳಿಗೆ ತಿಳಿಯಬಾರೆದೆಂದು ಇಷ್ಟು ವರ್ಷಗಳವರೆಗೂ ಮುಚ್ಚಿಟ್ಟಿದ್ದರೋ ಅದು ಅವಳಿಗೆ ತಿಳಿದುಹೋಗಿತ್ತು..

ಸಾಜೀ.. ನಾನು.. ನಾನು.. ನಿನ್ನ..?

ಧೈರ್ಯವಾಗಿ ಹೇಳಿ ಅಮ್ಮಾ.. ನಾನು ನಿನ್ನ ಸಾಕು ತಾಯಿ ಹೆತ್ತ ತಾಯಿ ಅಲ್ಲ ಎಂದು ನಿಜವಾಗಲೂ ನೀವೇ ನನ್ನ ಹೆತ್ತ ತಾಯಿಯಾಗಿದ್ದರೆ ಅಲ್ಲಾಹನ ಮೇಲೆ ಆಣೆ ಮಾಡಿ ಹೇಳಿ ನಾನೇ ನಿನ್ನ ಹೆತ್ತ ತಾಯಿಯೆಂದು..

ಮೈಮೂನ ಮುಖ ಮುಚ್ಚಿಕೊಂಡು ಅತ್ತರು

ಬೇಡ ಮಗಳೇ ಸಾಜೀ.. ಅಮ್ಮನನ್ನು ಅಷ್ಟು ನೋಯಿಸಬೇಡ

ನಿಜ ಹೇಳಿ ಅಪ್ಪಾ.. ನೀವಿಬ್ಬರೂ ನನ್ನ ಹೆತ್ತವರಲ್ಲವೇ..

ಮೈಮೂನ ಪತಿಯನ್ನೆ ದೀನರಾಗಿ ನೋಡುತ್ತಿದ್ದರು ಇನ್ನು ಸತ್ಯ ಮುಚ್ಚಿಟ್ಟು ಉಪಯೋಗವಿಲ್ಲವೆಂದು ಅರಿತ ಹಮೀದಾಕ

ಹೌದಮ್ಮ ಸಾಜೀ.. ನಾವು ನಿನ್ನ ಹೆತ್ತವರಲ್ಲ ಆದರೆ ನಿನ್ನನ್ನು ಹೆತ್ತವರಿಗಿಂತ ಹೆಚ್ಚಾಗಿ ಸಾಕಿದ್ದೇವೆ ಮೈಮೂನ ನಿನ್ನ ಕಣ್ಣಲ್ಲಿ ಕಣ್ಣಿಟ್ಟು ಬೆಳೆಸಿದ್ದಾಳೆ

ನನಗೆ ಬುದ್ಧಿ ತಿಳಿದಾಗಿನಿಂದ ನಿಮ್ಮಿಬ್ಬರನ್ನೇ ನನ್ನ ಹೆತ್ತವರೆಂದು ತಿಳಿದಿದ್ದೆ ಆದರೆ ಮೊನ್ನೆ ನಿಮ್ಮ ಗೆಳೆಯ ಹಸೈನಾರ್ ಬಂದಿದ್ದಾಗ ಅವರು ಕೇಳುತ್ತಿದ್ದ ವಿಚಾರದಿಂದ ನಾನು ನಿಮ್ಮ ಮಗಳಲ್ಲವೆಂದು ತಿಳಿಯಿತು ಆದರೂ ಅನುಮಾನವಿತ್ತು ಆದರೆ ಈಗ ಅದು ನಿಜವಾಯಿತು.. ಎಂದು ಸಾಜೀದ ಜೋರಾಗಿ ಅಳತೊಡಗಿದಳು

ಅಳಬೇಡ ಸಾಜೀ.. ನಾವಿಬ್ಬರೂ ಇರುವಾಗ ನೀನು ಕಣ್ಣೀರು ಹಾಕಬಾರದು

ಅಯ್ಯೋ.. ಹೆತ್ತವಳಿಗೆ ಬೇಡವಾದ ಮಗು ನಾನು ನಾನೇಕೆ ಬದುಕಿರಬೇಕು..

ಸಾಜೀ.. ಹಾಗನ್ನಬೇಡವೇ ನನ್ನ ಕರುಳು ಕಿತ್ತು ಬರುತ್ತೇ.. ಮೈಮೂನ ಮಗಳನ್ನು ತಬ್ಬಿಕೊಂಡರು ನುಡಿದರು

ಅಮ್ಮಾ.. ನೀವು ನನ್ನನ್ನು ಸಾಕಿದ್ದೀರಾ ಅದಕ್ಕೆ ನಾನು ನಿಮಗೆ ಚಿರಋಣಿ ಅದಕ್ಕೆ ನಿಮ್ಮನ್ನು ಅಪ್ಪಾ. ಅಮ್ಮಾ.. ಎಂದು ಕರೆಯುತ್ತೇನೆ ಆದರೆ ನೀವು ಒಂದು ಬಾರಿಯಾದರೂ ನೀನು ನನ್ನ ಸಾಕು ಮಗಳು ಅಂತ ಹೇಳಲಿಲ್ಲ..?

ನಾವು ಹಾಗೇ ತಿಳಿದುಕೊಂಡೇ ಇರಲಿಲ್ಲ ಸಾಜೀ.. ನೀನು ನನ್ನ ಮಗಳೇ ಕಣೇ.. ನನ್ನ ಹೊಟ್ಟೆಯಲ್ಲಿ ಹುಟ್ಟಿರುವವಳೇ ಕಣೇ..

ಅಮ್ಮಾ.. ನೀವು ಪ್ರೀತಿಯಿಂದ ಹಾಗೆ ಹೇಳಬಹುದು ಆದರೆ ಪ್ರಪಂಚ..!! ಮೊನ್ನೆ ಬಂದಿದ್ದ ಹಸೈನಾರ್ ಅಂಕಲ್ ಕೂಡ ಎಲ್ಲಪ್ಪ ನಿನ್ನ ಸಾಕು ಮಗಳು ಅಂದರು ಗೊತ್ತಾ..

ಯಾರು ಏನಾದರೂ ಹೇಳಲಿ ನಾವೇನೂ ಅನ್ನಲಿಲ್ಲವಲ್ಲ

ನಿಜ ತಿಳಿದ ಮೇಲೆ ಎಲ್ಲರಿಗೂ ತಿಳಿಯುತ್ತಲ್ಲ ನಾಳೆ ಸದ್ದಾಂನ ದೃಷ್ಟಿಯಲ್ಲು ನಾನು ಪರಕೀಯಳಾಗುತ್ತೀನಿ..

ಹಾಗೆಲ್ಲ ಹೇಳಬೇಡ ಸಾಜೀ.. ಅವನ್ಯಾರು ನಿನ್ನನ್ನು ಹಾಗೆನ್ನಲೂ..?

ಅವನು ನೀವು ಹೆತ್ತ ಮಗ ನಿಮ್ಮದೇ ಕರುಳಿನ ಕುಡಿ

ನೀನೂ ನಮ್ಮ ಮನೆಯ ಬೆಳಕು ನಾವು ಅಪೇಕ್ಷಿಸಿ ಪಡೆದ ಮಗು ನೀನು ಅದಕ್ಕೆ ಪ್ರೀತಿಯಿಂದ ಸಾಜೀದ ಎಂದು ಹೆಸರಿಟ್ಟು ಬೆಳೆಸಿದ್ದೀವಿ

ಇರಬಹುದು ಅಪ್ಪಾ.. ನಾನು ಪಡೆದ ಮಗಳೇ ಹೊರತು ನಿಮಗೆ ಹುಟ್ಟಿದ ಮಗಳಲ್ಲ ಅವನು ನಿಮ್ಮ ಒಡಲಿನಲ್ಲಿ ಅರಳಿದ ಹೂ ನಾನು ನಿಮ್ಮ ಮಡಿಲಿಗೆ ಬಿದ್ದ ಅನಾಥೆ..

"ಸಾಜೀ.. ಹಾಗೆಲ್ಲ ಹೇಳಬೇಡಮ್ಮ ನೀನು ನೊಂದುಕೊಂಡರೆ ನಮಗೆ ಒಳ್ಳೆಯದಾಗುವುದಿಲ್ಲ ನೀನು ಈ ಮನೆಯ ಮಗಳು ನೀನು ಕಣ್ಣೀರು ಹಾಕಿದರೆ ಈ ಮನೆಗೆ ಒಳ್ಳೆಯದಾಗುವುದಿಲ್ಲ.."

"ಇಲ್ಲ ಅಪ್ಪಾ ನಾನು ಅಳುವುದಿಲ್ಲ ಈ ಮನೆಗೆ ಕೇಡನ್ನೂ ಬಯಸುವುದಿಲ್ಲ ಆದರೆ ಒಂದೇ ಒಂದು ಬಾರಿ ನನ್ನ ಹೆತ್ತವರನ್ನು ನೋಡುವ ಆಸೆ ತೋರಿಸುತ್ತೀರಾ ಅಪ್ಪಾ..!!"

ಅವಳ ವಿಚಿತ್ರ ಬಯಕೆ ಕಂಡು ಹಮೀದಾಕ ಮೈಮೂನ ಗದ್ಗದಿತರಾದರು

"ಅಮ್ಮಾ.. ನೀವಾದರೂ ಹೇಳಿ ಯಾರು ನನ್ನ ಹೆತ್ತವರು..?"

"........"

"ನಿಜ ಹೇಳಿದರೆ ನಾನು ಹೊರಟು ಹೋಗುತ್ತೇನೆ ಎನ್ನುವ ಭಯಾನಾ ಅಪ್ಪಾ..!! ಖಂಡಿತಾ ಹೋಗುವುದಿಲ್ಲ ನೀವು ಸಾಕಿದ್ದಕ್ಕೆ ಜೀವಮಾನ ಪೂರ್ತಿ ಬೇಕಾದರೆ ನಿಮ್ಮ ಅಡಿಯಾಳಾಗಿ ಸೇವೆ ಮಾಡಿಕೊಂಡಿರುತ್ತೇನೆ ಆದರೆ ಒಂದೇ ಒಂದು ಬಾರಿ ನನ್ನ ಹೆತ್ತವರನ್ನು ನೋಡಬೇಕು.."

"ಸಾಜೀದ ಹಾಗೆಲ್ಲ ಹೇಳಬೇಡಮ್ಮ ನೀನು ನಮ್ಮ ಮಗಳಾಗಿದ್ದರೆ ಸಾಕು ಈ ಮನೆಗೆ ನೀನು ಬಂದಮೇಲೆ ನಮ್ಮಲ್ಲಿ ಅದೆಷ್ಟೋ ಬದಲಾವಣೆ ಆಗಿದೆ ಈ ಮನೆಗೂ ಒಳ್ಳೆಯದಾಗಿದೆ.."

"ಮತ್ತೆ ಹೇಳಿ ಎಲ್ಲಿ ನನ್ನ ಹೆತ್ತವರು..?"

"ಅದೂ ಗೊತ್ತಿಲ್ಲ ಸಾಜೀ.. ತಂದೆ ತಾಯಿ ಇದ್ದಿದ್ದರೆ ಯಾರಾದರೂ ಮಗಳನ್ನು ದತ್ತು ಕೊಡುತ್ತಿದ್ದರೆ..? ಎಷ್ಟೇ ಮಕ್ಕಳಿರಲಿ ಹೆತ್ತವರಿಗೆ ಭಾರವೇ.? ಆದರೆ... ನೀನು..!!"

"ಹೇಳಿ ಅಪ್ಪಾ..!!"

"ಅದೊಂದು ದೊಡ್ಡ ಕಥೆ ಕಥೆ ನಿಧಾನವಾಗಿ ಹೇಳ್ತೀನಿ ಬಾ.." ಎಂದು ಒಳ ನಡೆದರು

ಹಮೀದಾಕ ಮತ್ತು ಮೈಮೂನರಿಗೆ ಮದುವೆಯಾಗಿ ಹತ್ತಾರು ವರ್ಷಗಳಾದರೂ ಮಕ್ಕಳಿರಲಿಲ್ಲ ಸಂಬಂಧಕರೆದುರು ಆಕೆಗೆ ಇದು ನುಂಗಲಾರದ ತುತ್ತಾಗಿತ್ತು ಯಾರೇ ಮನೆಗೆ ಬರಲಿ ಅಥವಾ ಅವರೇ ಎಲ್ಲಿಗೆ ಹೋಗಲಿ ಎಲ್ಲರೂ "ನಿಮಗೆಷ್ಟು ಮಕ್ಕಳು..?" ಎಂದು ಕೇಳುತ್ತಿದ್ದರು ಉತ್ಸಾಹದಿಂದ ಹೊರಟುತ್ತಿದ್ದ ಮೈಮೂನ ಆ ಪ್ರಶ್ನೆಯಿಂದ ಕುಗ್ಗಿ ಹೋಗುತ್ತಿದ್ದರು ಪತ್ನಿಯ ಅಳಲನ್ನು ನೋಡಲಾರದೆ ಹಮೀದಾಕ ತಲೆಯ ಮೇಲೆ ಕೈ ಹೊತ್ತು ಕುಳಿತು ಬಿಡುತ್ತಿದ್ದರು

ಮಗು ಪಡೆಯಲು ಅವರು ಅಲ್ಲಾಹನಲ್ಲಿ ಪ್ರಾರ್ಥಿಸಿದ ದಿನವಿಲ್ಲ ನಿಮಿಷಯವಿಲ್ಲ ಅದೆಷ್ಟೋ ನೆರ್ಚೆಗಳನ್ನು ಇಟ್ಟಿದ್ದರು ಪರಿಸ್ಥಿತಿ ಹೀಗಿರುವಾಗ ಯಾರೋ ಹಮೀದಾಕನ ದೂರದ ಸಂಬಂಧಿಕರು ಹೇಳಿದರು

"ಒಂದು ಹಳ್ಳಿಯಲ್ಲಿ ಔಷಧಿ ನೀಡುತ್ತಾರೆ ನೀವು ಯಾಕೆ ಅದನ್ನು ಒಮ್ಮೆ ಪ್ರಯತ್ನಿಸಿ ನೋಡಬಾರದು..?" ಎಂದರು

ಮೈಮೂನ ಮಕ್ಕಳಿಗಾಗಿ ಯಾರು ಏನೇ ಹೇಳಿದರೂ ಮಾಡಲು ತಯಾರಿದ್ದರು ಹೀಗಿರುವಾಗ ಆಕೆ ಇದನ್ನು ಮಾಡದಿರುವರೇ..

ಗಂಡ ಹೆಂಡತಿ ಇಬ್ಬರೂ ಕೂಡಿ ಆ ಹಳ್ಳಿಗೆ ಧಾವಿಸಿ ಔಷಧಿ ಪಡೆದರು ಅವರ ಪ್ರಾರ್ಥನೆಯಿಂದ ಅಲ್ಲಾಹನ ದಯವೋ ಅಥವಾ ಹಳ್ಳಿ ಔಷಧಿಯ ಫಲವೋ ಮೈಮೂನ ಮುಂದಿನ ಆರು ತಿಂಗಳನಲ್ಲಿಯೇ ಗರ್ಭಿಣಿಯಾದರು ಮನೆಯಲ್ಲಿ ಸಂಭ್ರಮವೇ ಸಂಭ್ರಮ ಹಮೀದಾಕರವರಂತೂ ಪತ್ನಿ ನಡೆದರೆಲ್ಲಿ ಸವೆಯುತ್ತಾಳೋ ಎಂದು ಬಹಳ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದರು ಆಕೆಯ ಬಯಕೆ ಏನೇ ಇರಲಿ ಪೂರೈಸುತ್ತಿದ್ದರು..

ಆದರೆ ಅವರ ದುರಾದೃಷ್ಟವೆಂಬಂತೆ ಎರಡು ತಿಂಗಳಾದಾಗ ಗರ್ಭ ಇಳಿದು ಹೋಯಿತು ಅದೆಲ್ಲಾ ಯಾರ ಕೈಯಲ್ಲಿದೇ..!!

ಹಮೀದಾಕನವರೇ ಪತ್ನಿಯನ್ನು ಸಮಾಧಾನಿಸಬೇಕಾಯಿತು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವಲ್ಲ ಎಂದು ದಂಪತಿಗಳು ಪರಿತಪಿಸಿದರು ಆದರೆ ಮೈಮೂನ ಮಾತ್ರ ಆ ವಿಚಾರವನ್ನೇ ಮನಸ್ಸಿಗೆ ಹಚ್ಚಿಕೊಂಡರು..

"ಮೈಮೂನ ನೀನು ಹೀಗೆ ಕೊರಗಿದರೆ ಹೇಗೆ..? ಅಲ್ಲಾಹನು ನಮಗೆ ಮತ್ತೆ ಕರುಣಿಸುತ್ತಾನೆ ಸುಮ್ಮನಿರು.." ಎಂದು ಸಂತೈಸಿದರು..

ಅಲ್ಲಾಹನ ಕರುಣೆ ಎಂಬಂತೆ ಮೈಮೂನ ಮತ್ತೆ ಗರ್ಭಿಣಿಯಾದರು ಆದರೆ ಪುನಃ ಮೊದಲಿನಂತೆಯೇ ಆಯಿತು ಮೂರ್ನಾಲ್ಕು ಬಾರಿ ಇದೇ ಪುನರಾವರ್ತನೆಯಾದಾಗ ಆಕೆ ನಿರಾಸೆಯ ತುತ್ತ ತುದಿಗೇರಿದ್ದರು..

ನಾಲ್ಕನೇ ಬಾರಿ ಇದೇ ರೀತಿ ಅರಳುವ ಮೊದಲೇ ಕುಡಿ ಚಿವುಟಿ ಹೋದಾಗ ಆಕೆ ಬರಿಗೈಯಲ್ಲಿ ಮನೆಗೆ ಬಂದರು

"ರೀ.. ನನಗೆ ಇದನ್ನು ಸಹಿಸಲು ಸಾಧ್ಯವಿಲ್ಲ ಅಲ್ಲಾಹ್ ನಮಗ್ಯಾಕೆ ಈ ರೀತಿ ಮಾಡುತ್ತಿದ್ದಾನೆ.." ಎಂದು ಅಳತೊಡಗಿದರು

"ಸಮಾಧಾನ ಮಾಡಿಕೋ ಮೈಮೂನ.."

"ನೀವು ಬಾಯಿಯಲ್ಲಿ ಹೇಳುವಷ್ಟು ಸುಲಭವಲ್ಲರೀ ಅದು ನೀವು ಗಂಡಸರು ಹೊರಗೆ ತಿರುಗಾಡುವವರು ನಿಮ್ಮ ನೋವನ್ನೆಲ್ಲಾ ಮರೆತು ಬಿಡುತ್ತೀರಿ ಆದರೆ ನನ್ನ ಕರುಳ ಸಂಕಟ ನಿಮಗೆ ಹೇಗೆ ಅರ್ಥವಾಗಬೇಕು.."

"ಅರ್ಥವಾಗುತ್ತೆ ಮೈಮೂನ ಆದರೆ ನಾನೇನು ಮಾಡಲಿ ಹೇಳು ಆ ಹಿಲಾಹನು ಕರುಣೆ ತೋರಿಸಬೇಕಷ್ಟೆ.."

ಯಾರು ಎಷ್ಟು ಸಮಾಧಾನಿಸಿದರೂ ಆಕೆಗೆ ಅದೇ ಒಂದು ಕೊರಗಾಗಿ ಮನೋರೋಗ ಅಂಟಿಕೊಂಡಿತು ಮನೆಯಲ್ಲಿ ಸಾಕಿಕೊಂಡಿದ್ದ ಬೆಕ್ಕಿನ ಮರಿಯನ್ನೇ ಮಗುವೆಂದು ಮುದ್ದಿಸಲು ಹೋಗುತ್ತಿದ್ದರು ಕೈಯಲ್ಲಿ ಒಂದು ಬೊಂಬೆ ಹಿಡಿದು ಗಂಟೆಗಟ್ಟಲೆ ಕುಳಿತು ಬಿಡುತ್ತಿದ್ದರು ಇದನ್ನೆಲ್ಲಾ ಕಂಡ ಹಮೀದಾಕ

"ಮೈಮೂನ ಯಾಕೆ ಹೀಗೆ ಮಾಡುತ್ತೀಯಾ..? ಅಲ್ಲಾಹನು ನಮಗೆ ಕೊಡುವವರೆಗೂ ಕಾಯೋಣ.." ಎನ್ನುತ್ತಿದ್ದರು

"ನೋಡಿ ಅಲ್ಲಾಹನು ಕೊಟ್ಟಿದ್ದಾನೆ.." ಎಂದು ಬೊಂಬೆಯನ್ನೇ ತೋರಿಸುತ್ತಿದ್ದರು

ಆಕೆಯ ವರ್ತನೆ ವಿಚಿತ್ರವಾಗಿ ಕಾಣುತ್ತಿತ್ತು ಕೊನೆಗೆ ಹಮೀದಾಕ ಪತ್ನಿಯನ್ನು ವೈದ್ಯರ ಬಳಿ ತೋರಿಸಿದಾಗ

"ಹಮೀದಾಕ ನಿಮ್ಮ ಮನೆಯವರನ್ನು ಹೀಗೆಯೇ ಬಿಟ್ಟರೆ ಕೊನೆಗೆ ಮನೋರೋಗಿಯಾಗಿಬಿಡುತ್ತಾರೆ ಆದ್ದರಿಂದ ನೀವು ಈ ವಿಷಯದ ಬಗ್ಗೆ ಸ್ವಲ್ಪ ಗಂಭೀರವಾಗಿ ಯೋಚಿಸಬೇಕು.."

"ನಾನೇನು ಮಾಡಲಿ ನೀವೇ ಹೇಳಿ ಡಾಕ್ಟರ್.."

"ನೋಡಿ ಆಕೆಗೆ ಮಕ್ಕಳಿಲ್ಲದಿರುವುದು ಒಂದು ಕೊರಗು ತನ್ನ ಮಾತೃ ಹೃದಯದ ಮಮತೆಯನ್ನು ಯಾರಿಗಾದರೂ ಧಾರೆಯೆರೆಯಬೇಕು ಉಕ್ಕುಕ್ಕಿ ಬರುವ ಆ ವಾತ್ಸಲ್ಯ ಹರಿಯಬಿಡಲು ಬೊಂಬೆಯೇ ಸಾಕು.. ಅದನ್ನೇ ಮಗುವೆಂದುಕೊಂಡಿದ್ದಾರೆ ನಾಳೆ ಇದೇ ಹೆಚ್ಚಾಗಿ ಆ ಬೊಂಬೆಗೆ ತಿನ್ನಿಸುವುದು ಸ್ನಾನ ಮಾಡಿಸುವುದು ತೂಗುವುದು ಎಲ್ಲಾ ಪ್ರಾರಂಭವಾಗಬಹುದು ಅಥವಾ ಕೊರಗಿನಲ್ಲಿ ಅವರ ಆರೋಗ್ಯವೂ ಹಾಳಾಗಹುದು.."

"ಹಾಗಾದರೆ ನಾನು ಯಾವುದಾದರೂ ಮಗುವನ್ನು ಸಾಕಿಕೊಳ್ಳಬೇಕು ಅಂತೀರಾ ಡಾಕ್ಟರ್.."

"ಹೌದು ಈಗಿನ ಸಂದರ್ಭದಲ್ಲಿ ಇದೇ ಒಂದು ಉಪಾಯ ಇರುವುದು ಆಗ ನಿಮ್ಮಾಕೆಯ ಪ್ರೀತಿ ಆ ಮಗುವಿನ ಮೇಲೆ ಹರಿದು ಆಕೆ ಮೊದಲಿನಂತೆ ಆಗುತ್ತಾರೆ.."

"ಆದೇನೋ ಸರಿ ಡಾಕ್ಟರ್ ಆದರೆ ಯಾವ ಹೆತ್ತವರು ತಾನೇ ಮಗುವನ್ನು ದತ್ತು ಕೊಡುತ್ತಾರೆ ಹೇಳಿ.."

"ಹೆತ್ತವರು ಯಾರು ಕೊಡುವುದಿಲ್ಲ ಎಂದು ಹೇಳಬೇಡಿ ಹೆತ್ತು ಬೇಡದಿದ್ದವರು ಮಕ್ಕಳನ್ನು ದೂರ ಮಾಡಿ ಹೊರಟುಹೋಗುತ್ತಾರೆ ಅಂತಹ ಮಕ್ಕಳನ್ನು ಸಾಕ ಬಹುದು.."

"ನಮ್ಮ ಸಂಬಂಧಿಕರಲ್ಲಿ ದತ್ತು ಪಡೆದುಕೊಳ್ಳುವಂತಹ ಮಕ್ಕಳಿಲ್ಲ ಡಾಕ್ಟರ್ ಬೇರೆ ಯಾವುದಾದರೂ ಮಗುವಿದ್ದರೆ ನೀವೇ ಹೇಳಿ.."

"ಹಾಗಾದರೆ ನನ್ನ ಗೆಳೆಯನ ಒಂದು ಅನಾಥ ಮಕ್ಕಳ ಪಾಲನೆ ಮಾಡುವ ಅನಾಥ ಆಶ್ರಮ ಸಂಸ್ಥೆ ಇದೆ ಅವರ ಫೋನು ನಂಬರ್ ನೀಡುತ್ತೇನೆ ನೀವು ಅವರಿಗೆ ಕರೆ ಮಾಡಿ ನಿಮಗೆ ಸೂಕ್ತವಾಗುವಂತಹ ಮಗು ಇದ್ದರೆ ನೋಡಿ.."

ಸರಿ ಎಂದು ಅವರಿಂದ ನಂಬರ್ ಪಡೆದು ಅವರಿಗೆ ವಿಷಯ ತಿಳಿಸಿದಾಗ ಅವರು ಬರಲು ತಿಳಿಸುತ್ತಾರೆ..

ಹಮೀದಾಕ ಅಲ್ಲಿಗೆ ತೆರಳಿ ಅವರಿಗೆ ತನ್ನ ಪರಿಚಯ ಮಾಡಿಕೊಳ್ಳುತ್ತಾರೆ ನಂತರ ಅವರು ಹಮೀದಾಕನಿಗೆ ಅಲ್ಲಿರುವ ಮಕ್ಕಳನ್ನು ಎಲ್ಲಾ ತೋರಿಸುತ್ತಾರೆ..

"ನೋಡಿ ಇವೆಲ್ಲಾ ಅನಾಥ ಮಕ್ಕಳು ಆದರೆ ನಾವಿರುವವರೆಗೂ ಇವರು ಯಾರು ಅನಾಥರಲ್ಲ.." ಎಂದರು

ಎಲ್ಲರೂ ಸುಮಾರು ಎರಡರಿಂದ ಹತ್ತು ವರ್ಷದೊಳಗಿನ ಮಕ್ಕಳು ಎಲ್ಲರಿಗೂ ಬುದ್ದಿ ತಿಳಿದಿದೆ ಹಾಗೂ ಅವರೆಲ್ಲಾ ಇಲ್ಲಿಗೆ ಹೊಂದಿಕೊಂಡಿದ್ದಾರೆ ಈ ಪರಿಸ್ಥಿತಿಯಲ್ಲಿ ಅವರಲ್ಲಿ ಯಾರನ್ನಾದರೂ ಮನೆಗೆ ಕರೆದೊಯ್ದರೆ ಅವರಿಗೆ ಮನೆಯೇ ಪಂಜರವಾದೀತು ಜೊತೆಗೆ ತಮ್ಮನ್ನು ತಂದೆ ತಾಯಿ ಎಂದು ಒಪ್ಪಿಕೊಳ್ಳಲು ಸಾಧ್ಯವೇ..!!

ಹಮೀದಾಕ ಸ್ವಲ್ಪ ಹೊತ್ತು ಆಲೋಚಿಸಿ ನಂತರ

"ಸರ್.. ಯಾವುದಾದರೂ ವರ್ಷದೊಳಗಡೆ ಇರುವ ಮಕ್ಕಳಿದ್ದರೆ ತೋರಿಸಿ.."

"ವರ್ಷದೊಳಗಿನ ಮಗುವಾ..!!" ಎಂದು ಅಲ್ಲಿಯ ಆಶ್ರಮದ ನಿರ್ವಾಹಕರು ಕೊಂಚ ಆಲೋಚಿಸಿ

"ಸರಿ ಬನ್ನಿ ನನ್ನೊಂದಿಗೆ.." ಎಂದು ಹಮೀದಾಕರವರನ್ನು ಒಳಗಿನ ಇನ್ನೊಂದು ಕೋಣೆಗೆ ಕರೆದುಕೊಂಡು ಹೋಗುತ್ತಾರೆ..

"ನೋಡಿ ಈ ಮಗೂನಾ.." ಎಂದು ಒಂದು ತಿಂಗಳ ಹಸುಳೆಯೊಂದನ್ನು ತೋರಿಸಿ ಹೇಳಿದರು

"ಹೆಣ್ಣು ಮಗು ಹುಟ್ಟಿ ಎರಡೋ ಮೂರೋ ದಿನಗಳಿರಬಹುದು ಅಷ್ಟೇ ನಮ್ಮ ಆಶ್ರಮದ ಬಾಗಿಲಿನಲ್ಲಿ ಯಾರೋ ಮಲಗಿಸಿ ತೆರಳಿದ್ದರು ಬೆಳಿಗ್ಗೆ ಎದ್ದು ಹೊರಬಂದಾಗ ಮಗು ಅಳುತ್ತಿದ್ದುದು ಕೇಳಿಸಿತು ನಾನೇ ಹೋಗಿ ನೋಡಿ ಒಳಗೆ ಕರೆದುಕೊಂಡು ಬಂದೇ ಅಂದಿನಿಂದ ಇಂದಿಗೆ ಇದಕ್ಕೆ ಸರಿಯಾಗಿ ಒಂದು ತಿಂಗಳು ತುಂಬಿದೆ.."

ಹಮೀದಾಕ ಮಗುವಿನತ್ತ ದೃಷ್ಟಿ ಹಾಯಿಸಿದರು ತಲೆಯ ತುಂಬಾ ಗುಂಗುರು ಕೂದಲಿದ್ದ ದಂತವರ್ಣದ ಮುದ್ದು ಬೊಂಬೆ..!! ಆ ಪುಟ್ಟ ಹಸುಳೆಯ ಹೊಳಪು ಕಂಗಳು ತಮ್ಮನ್ನು ಕಂಡು ನಕ್ಕಂತೆ ಭಾಸವಾಯಿತು ಅವರಿಗೆ

"ನಮಗೆ ಇದೆ ಮಗು ಇರಲಿ ಸರ್.. ನಾಳೆ ಒಂದು ಸಾರಿ ನಮ್ಮಾಕೆಯನ್ನು ಕರೆದುಕೊಂಡು ಬಂದು ತೋರಿಸುತ್ತೇನೆ.." ಎಂದರು

"ಹಮೀದಾಕನವರೇ.. ಇಷ್ಟು ಎಳೆಯ ಮಗುವನ್ನು ನಾವು ಯಾರಿಗೂ ಕೊಡುವುದಿಲ್ಲ ನಿಮ್ಮ ಡಾಕ್ಟರ್ ನನ್ನ ಆತ್ಮೀಯ ಗೆಳೆಯ ಅವರು ಹೇಳಿದ್ದರಿಂದ ನಿಮಗೆ ಕೊಡಲು ಏರ್ಪಡು ಮಾಡುತ್ತೇನೆ ಎಲ್ಲಾ ವ್ಯವಹಾರಗಳು ಮುಗಿದು ಮಗು ನಿಮ್ಮ ಕೈ ಸೇರುವ ಹೊತ್ತಿಗೆ ಒಂದು ಎರಡು ತಿಂಗಳಾದರೂ ಆಗಬಹುದು.."

ಹಮೀದಾಕ ತಮ್ಮ ಹೆಂಡತಿಯ ಮನೋಸ್ಥತಿಯನ್ನು ಅವರಿಗೆ ವಿವರಿಸಿದರು ಅದನ್ನು ಕೇಳಿದ ಆಶ್ರಮದ ನಿರ್ವಾಹಕ ನೋವಿನಿಂದ

"ಏನು ಮಾಡುವುದು ಹೇಳಿ ಇದ್ದವರಿಗೆ ಮಗು ಬೇಡ ಇಲ್ಲದವರಿಗೆ ಬೇಕು ಅದಕ್ಕೆ ನಾವು ಈ ಸಂಸ್ಥೆ ಮಾಡಿರುವುದು ತಂದೆ ತಾಯಿಗಳಿಲ್ಲದ ಮಗುವಿಗೆ ತಂದೆ ತಾಯಿ ಸಿಕ್ಕ ಹಾಗೆ ಆಗುತ್ತದೆ ಮಗುವಿಲ್ಲದವರಿಗೆ ಸಂತಾನ ಭಾಗ್ಯ ಮನೆಗೊಂದು ಮಗುವಿಗೊಂದು ಮನೆ ಎರಡು ಏಕಕಾಲದಲ್ಲಿ ಲಭ್ಯವಾಗುತ್ತೇ.." ಎಂದರು

ಮರುದಿನವೇ.. ಹಮೀದಾಕ ಮೈಮೂನರನ್ನು ಆ ಆಶ್ರಮಕ್ಕೆ ಕರೆದೊಯ್ದರು ಅದುವರೆಗೂ ಇಲ್ಲಿಗೇ ಬಂದು ನೋಡಿದ ಯಾವುದೇ ವಿಷಯವನ್ನು ಅವರು ಪತ್ನಿಗೆ ತಿಳಿಸಿರಲಿಲ್ಲ

"ಮೈಮೂನ ನಮಗೆ ಮಗು ಬೇಕು ಅಂತಿದ್ದಿಯಲ್ಲ.."

"ಹೌದು" ಎಂದು ಆಕೆ ಅಚ್ಚರಿಯಿಂದ ನುಡಿದರು

"ಇಲ್ಲೊಂದು ಮಗುವಿದೆ ಅದನ್ನು ನಾವು ಸಾಕಿಕೊಳ್ಳೋಣವಾ..!!"

"ಆದರೆ ಆ ಮಗುವನ್ನೂ ನಮಗೆ ಕೊಡುತ್ತಾರಾ..?"

"ಕೊಡುತ್ತಾರೆ ಆದರೆ ಸ್ವಲ್ಪ ದಿನ ಕಾಯಬೇಕು ಅದಕ್ಕೆ ಕೆಲವು ಕಾನೂನಿನ ತೊಡಕುಗಳಿವೆ ಅದೆಲ್ಲ ಸರಿಹೋಗಬೇಕು.."

"ಬನ್ನಿ ಮೇಡಂ.." ಎಂದು ಅಲ್ಲಿಯ ಆಯಾ ಅವರನ್ನು ಮೈಮೂನರನ್ನು ಕರೆದೊಯ್ದು ಮಗುವನ್ನು ತೋರಿಸಿದರು

ಮಗುವನ್ನು ಕಂಡು ಮೈಮೂನರ ಕಂಗಳು ಅರಳಿದವು

"ಎಷ್ಟು ಮುದ್ದಾಗಿದೇರೀ.. ಮಗು ಯಾವ ತಾಯಿ ಹೆತ್ತದ್ದೋ ಅವಳು ನಿಜವಾಗಿಯೂ ನಮಗೆ ಕೊಡುತ್ತಾಳಾ..?"

"ಆ ಮಗುವಿನ ತಂದೆ ತಾಯಿ ಯಾರೋ ಗೊತ್ತಿಲ್ಲ ತಂದೆ ತಾಯಿ ಗೊತ್ತಿಲ್ಲದ ಅನಾಥ ಶಿಶು.." ಎಂದಳು ಅಲ್ಲಿನ ಆಯಾ

"ಯಾಕೆ ಹಾಗೆನ್ನುತ್ತೀರಾ..? ಅದರ ತಾಯಿ ನಾನು ಬದುಕಿಲ್ಲವಾ..!! ತಬ್ಬಲಿ ಹೇಗಾಗುತ್ತೇ.." ಎಂದು ಮಗುವನ್ನು ಅಪ್ಪಿ ಲೊಚಲೊಚನೆ ಮುತ್ತಿಟ್ಟರು ಮೈಮೂನ

ಮೈಮೂನರ ಮಾತಿನಿಂದ ಅದನ್ನು ನೋಡುತ್ತಿದ್ದ ಆಶ್ರಮದ ನಿರ್ವಾಹಕರ ಕಂಗಳು ಹನಿಗೂಡಿದವು ಈ ಮಗು ನಿಜಕ್ಕೂ ಇಂತಹ ತಾಯಿಯನ್ನು ಪಡೆಯಲು ಪುಣ್ಯ ಮಾಡಿದೆ ಎಂದುಕೊಂಡರು

"ನಿಜವಾಗಿಯೂ ಈ ಮಗೂನ ನಮಗೆ ಕೊಡುತ್ತೀರಾ..?"

"ಹೌದು ಮೇಡಂ ನಿಜವಾಗಿಯೂ ನಿಮಗೆ ಕೊಡುತ್ತೇವೆ.."

ತಾಯಿಯ ಮಡಿಲಿಗೆ ಬಿದ್ದ ಮಗು ತೃಪ್ತಿಯಿಂದ ನಕ್ಕಿತು

"ಮೈಮೂನ ನಾವಿನ್ನೂ ಹೋಗೋಣ ಮಗುವನ್ನು ಕೊಡು.." ಎಂದರು ಹಮೀದಾಕ

ಆಕೆ ಒಲ್ಲದ ಮನಸ್ಸಿನಿಂದ ಮಗುವನ್ನು ಕೊಟ್ಟರು

"ಏನು ಮಾಡುವುದು ಹೇಳಿ ಕಾನೂನಿನ ಪ್ರಕಾರ ಎಲ್ಲಾ ನಡೆಯಲೇ ಬೇಕು ಅದು ಮುಗಿದ ಮೇಲೆ ಮಗು ನಿಮ್ಮ ಕೈಗೆ ಕೊಡಲು ಸಾಧ್ಯ.." ಎಂದರು

ಅವರು ಹಾಗೆಂದರೂ ಹೆಚ್ಚು ದಿನ ತಡ ಮಾಡದೆ ಎಲ್ಲಾ ಕಾನೂನಿನ ವಿಧಾನಗಳು ಮುಗಿಯುವ ಮೊದಲೇ ಮಗುವನ್ನು ಕೊಟ್ಟರು

"ನಿಮಗೆ ಹೇಗೆ ಧನ್ಯವಾದಗಳನ್ನು ಅರ್ಪಿಸಬೇಕೋ ತಿಳಿಯದು.." ಎಂದು ಹಮೀದಾಕ ಅದರ ನಿರ್ವಾಹಕರೊಂದಿಗೆ ಕೃತಜ್ಞತೆಯಿಂದ ನುಡಿದರು ಮೈಮೂನ ಕಣ್ಣಿನಿಂದಲೇ ತಮ್ಮ ಕೃತಜ್ಞತೆಯನ್ನು ತಿಳಿಸಿದರು

"ನೋಡಿ ಇವತ್ತಿನಿಂದ ಇದು ನಿಮ್ಮ ಮಗು ನಿಮ್ಮ ಅಕ್ಕರೆಯ ಪುತ್ರಿ ಅಲ್ಲಾಹನು ನಿಮ್ಮನ್ನು ಮಗುವನ್ನು ಚೆನ್ನಾಗಿಟ್ಟಿರಲಿ.." ಎಂದು ಹಾರೈಸಿದರು

"ಈ ಮಗುವನ್ನು ನನ್ನ ಪ್ರಾಣಕ್ಕಿಂತ ಹೆಚ್ಚಾಗಿ ನೋಡಿಕೊಳ್ಳುತ್ತೇನೆ ನಾನು ಮಗುವನ್ನು ಹೆತ್ತಿಲ್ಲದಿದ್ದರೇನೂ ಹೆತ್ತ ತಾಯಿಯಾಗಿ ಏನೆಲ್ಲಾ ಪ್ರೀತಿ ತೋರಬಹುದೋ ಅದನ್ನು ಈ ಮಗುವಿಗೆ ಧಾರಾಳವಾಗಿ ನೀಡುತ್ತೇನೆ.. ನಾನೇ ಇದರ ಹೆತ್ತ ತಾಯಿ... ನಾನೇ ಹೆತ್ತ ಮಗು.." ಎಂದು ಮಗುವನ್ನು ತನ್ನ ಎದೆಗೆ ಅವುಚಿಕೊಂಡರು ಮೈಮೂನ

"ಆ ನಂಬಿಕೆ ನನಗಿದೆ ನೀವು ಈ ಮಗುವಿನ ತಾಯಿ ಅಷ್ಟು ಮಾತ್ರ ಆ ಮಗುವಿಗೆ ತಿಳಿಯಲಿ ಮತ್ತಾವ ವಿಚಾರ ಹೇಳಬೇಡಿ.." ಎಂದು ತಂದೆ ತಾಯಿ ಮಗುವನ್ನು ಬೀಳ್ಕೊಟ್ಟರು

ಒಂದು ಶಾಲಿನಲ್ಲಿ ಮಗುವನ್ನು ಸುತ್ತಿಕೊಂಡು ಹೆಮ್ಮೆಯಿಂದ ಮೈಮೂನ ಮನೆಗೆ ಬಂದಿದ್ದರು ಮನೆಗೆ ಬಂದ ಕೂಡಲೇ ಮಗುವಿಗೆ ಸ್ನಾನ ಮಾಡಿಸಿ ಹಾಲನ್ನು ಕುಡಿಸಿ ಮಲಗಿಸಿದರು

"ನೋಡಿ ಅವರು ಈ ಮಗುವಿಗೆ ಏನು ಹೆಸರಿಟ್ಟಿದ್ದರೋ ಏನೋ ಗೊತ್ತಿಲ್ಲ.."

"ಆಯಿಶಾ.. ಎಂದು ಕರೆಯುತ್ತಿದ್ದ ಹಾಗಿತ್ತು.."

"ಆ ಹೆಸರು ಬೇಡ ಬಹುದಿನಗಳು ಮಗು ಬೇಕು ಎಂಬ ಆಸೆ ಈ ಮಗುವಿನಿಂದ ನೇರವೇರಿದೆ ಅದಕ್ಕೆ ಇದಕ್ಕೆ ನಾವೇ ಒಂದು ಹೆಸರಿಡೋಣ.. ಏನೆನ್ನುತ್ತೀರಾ..?"

"ಹಾಗೆ ಮಾಡು ನಿನಗೆ ಇಷ್ಟವಾದ ಹೆಸರು ಇಡೋಣ."

"ಸಾಜೀದ..." "ಇನ್ನು ನಮ್ಮ ಮುದ್ದು ಮಗಳ ಹೆಸರು ಸಾಜೀದ"

" ತುಂಬಾ ಚೆನ್ನಾಗಿದೆ ಮುದ್ದಾಗಿದೆ.." ಎಂದು ತಮ್ಮ ಸಮ್ಮತಿ ಸೂಚಿಸಿದರು ಹಮೀದಾಕ

"ಸಾಜೀದ.. ನಮ್ಮ ಸಾಜೀ..ಬಂಗಾರ್.." ಎಂದು ಕರೆದು ಎತ್ತಿಕೊಂಡಾಗ ಮಗು ಆ ಹೆಸರು ತನಗೆ ಒಪ್ಪಿಗೆಯೆಂಬಂತೆ ಕಿಲಕಿಲನೆ ನಕ್ಕಿತು

"ನೋಡಿದಿರಾ.. ಹೇಗೆ ನಗುತ್ತೇ.. ನಾನು ಇಟ್ಟ ಹೆಸರು ಚೆನ್ನಾಗಿದೆ ಎಂದು"

" ಸದ್ಯ ನೀನು ನಕ್ಕೆಯಲ್ಲ ಅದರಿಂದ ನನಗೆ ಸಂತೋಷವಾಯಿತು.." ಹಮೀದಾಕನವರು ಪತ್ನಿಗೆ ತಮಾಷೆ ಮಾಡಿದರು

"ಸಾಕು ಸುಮ್ಮನಿರಿ.." ಎಂದು ಆಕೆ ಹುಸಿಕೋಪ ತೋರಿದಾಗ ಈ ತಮಾಷೆ ಈ ನಗು ಇಷ್ಟು ದಿನ ಎಲ್ಲಿ ಹೋಗಿತ್ತು ಎನಿಸದೆ ಇರಲಿಲ್ಲ ಅವರಿಗೆ
ಸಾಜೀದ ಮನೆಗೆ ಬಂದ ಮೇಲೆ ಮನೆಯ ವಾತಾವರಣವೇ ಬದಲಾಯಿತು ಮಗುವಿಗೆ ಹಾಲು ಕುಡಿಸುವುದು ಹೊಸ ಹೊಸ ಬಟ್ಟೆಗಳನ್ನು ತೊಡಿಸುವುದು ಮಗುವನ್ನು ಅಲಂಕರಿಸುವುದು ಇದರಲ್ಲಿಯೇ ತನ್ಮಯರಾಗಿರುತ್ತಿದ್ದರು ಮೈಮೂನ

ಸಂಜೆ ಗಂಡ ಮನೆಗೆ ಬಂದ ಕೂಡಲೇ ಮಗಳ ಆಟ ಪಾಠದ ವರ್ಣನೆ ನಡೆಯುತ್ತಿತ್ತು

ರೀ ಇವತ್ತು ಮಗು ಹಾಗೆ ಮಾಡಿದು ಹೀಗೆ ಮಾಡಿದು ಎಂದೆಲ್ಲಾ ಪುರಾಣ ಶುರುಮಾಡುತ್ತಿದ್ದರು "ಹೌದೇನೇ ನನ್ನ ಮುದ್ದು ಮಗಳೇ.." ಎಂದು ಹಮೀದಾಕ ಎತ್ತಿಕೊಂಡು ಕೇಳಿದರೆ ಮಗು ಕಿಲಕಿಲ ನಗುತ್ತಿತ್ತು

"ನೋಡಿದೆಯಾ ಕಳ್ಳಿ ಹೇಗೆ ನಗುತ್ತಾಳೆ ನನ್ನ ಬಂಗಾರ್.." ಎಂದು ಮಗುವನ್ನು ಅಪ್ಪಿ ಮುದ್ದಿಸುತ್ತಿದರು ಹಮೀದಾಕ ಆಗೆಲ್ಲಾ ಮನಸ್ಸಿಗೆ ಏನೋ ಒಂದು ರೀತಿಯ ತೃಪ್ತಿ ಸಿಗುತ್ತಿತ್ತು

"ಮೈಮೂನ ಸಾಜೀದ ಇಲ್ಲದೆ ಇದ್ದಾಗ ಮನೆ ಬಿಗೋ ಎನ್ನುತ್ತಿತ್ತು ಆದರೆ ಈಗ ನೋಡು ಎಷ್ಟು ಕಳೆಯಾಗಿದೆ.."

"ಹೌದು ರೀ.. ಅದಕ್ಕೆ ಹೇಳೋದು ಮನೆಗೊಂದು ಮಗು ಬೇಕು ಎಂದು ಮಕ್ಕಳಿದ್ದರೇ ಮನೆಗೆ ಶೋಭೆ.." ಎನ್ನುತ್ತಿದ್ದರು ಮೈಮೂನ

ಕಾನೂನಿನ ರೀತಿಯಲ್ಲಿ ಎಲ್ಲಾ ವಿಧಿಗಳನ್ನು ಮುಗಿದು ಈಗ ಸಾಜೀದ ಸಂಪೂರ್ಣವಾಗಿ ಅವರ ಮಗಳಾಗಿದ್ದಳು ಆದರೆ ಮೈಮೂನ ಮತ್ತು ಹಮೀದಾಕ ಅಷ್ಟಕ್ಕೆ ಸುಮ್ಮನಾಗದೆ ತಮ್ಮ ಮುಸ್ಲಿಂ ಸಂಪ್ರದಾಯದ ಪ್ರಕಾರ ವಿಧಿವತ್ತಾಗಿ ಅವಳನ್ನು ಸ್ವೀಕರಿಸಿದರು ಏನು ಅರಿಯದ ಆ ಮುಗ್ಧ ಕಂದಮ್ಮನಿಗೆ ಭದ್ರವಾದ ನೆಲೆ ದೊರಕಿತು..

ಸಣ್ಣಮಟ್ಟಿನ ಒಂದು ಸಮಾರಂಭವನ್ನು ಮಾಡಿ ಹತ್ತಿರದ ಬಂಧು ಬಳಗದವರಿಗೆಲ್ಲಾ ಭೋಜನ ಕೂಟ ಏರ್ಪಡಿಸಿದ್ದರು

ಕೆಲವು ಸಂಬಂಧಿಕರು ಅವರ ಈ ಕ್ರಿಯೆಯನ್ನು ಹೊಗಳಿದರೆ ಕೆಲವರು ಟೀಕಿಸಿದರು ಸ್ವತಃ ಹಮೀದಾಕನವರ ಸಹೋದರಿ ನಬೀಸರವರೇ ವ್ಯಂಗ್ಯವಾಗಿ ಹೇಳಿದರು

"ಅಲ್ಲ ಮೈಮೂನ ಮಕ್ಕಳಿಲ್ಲದಿದ್ದರೆ ಬೇಡ ಯಾವ ಜಾತಿ ಧರ್ಮ ಗೊತ್ತಿಲ್ಲದ ಈ ಮಗೂನ ಯಾಕೆ ತರೋದಕ್ಕೆ ಹೋದೆ..?"

"ನನಗಿಷ್ಟವಾಯಿತು ತಂದೆ ಅತ್ತಿಗೆ ಸಾಕುವವರು ನಾವು ತಾನೇ..?" ಅದರಿಂದ ನಿಮಗೇನು ಕಷ್ಟ ಎಂಬಂತಿತ್ತು ಮೈಮೂನರ ಮಾತಿನ ದಾಟಿ

"ಅಲ್ಲ ಕಣೋ.. ಹಮೀದ್ ನಿನಗಾದರೂ ಬುದ್ಧಿ ಬೇಡವೇ..? ಯಾರಿಗೆ ಹುಟ್ಟಿದ ಮಗುವೋ ಏನೋ..!! ಅವರ ರಕ್ತವೇ ಈ ಮಗುವಿನ ಮೈಯಲ್ಲಿ ಹರಿಯುತ್ತಿರೋದು ನಿನಗೆ ಅಸಹ್ಯವಾದರೂ ಆಗಿಲ್ಲವೇ.."

"ನಬೀಸ ಅದು ಮಗು ಹಾಗೆಲ್ಲಾ ಅನ್ನಬೇಡ ಹೆತ್ತವರ ಕರ್ಮಕ್ಕೆ ಈ ಅಸುಳೆ ಹೊಣೆಯೇ..? ಈ ಮಗುವೇನೂ ತಪ್ಪು ಮಾಡಿಲ್ಲವಲ್ಲ ಇಷ್ಟಕ್ಕೂ ಇದರ ತಂದೆ ತಾಯಿ ಚರಿತ್ರಹೀನರೋ ಇಲ್ಲವೋ ನಮಗೇನೂ ಗೊತ್ತು.."

"ಒಳ್ಳೆಯ ಮನೆತನದವರೂ ದೀನಿ ಜ್ಞಾನ ಉಳ್ಳವರು ಯಾರು ತಾನೇ ಮಗುವನ್ನು ಎಸೆಯುತ್ತಾರೆ..? ಯಾರ ಪಾಪದ ಫಲವೋ.."

"ಅತ್ತಿಗೆ ಹಾಗೆಲ್ಲಾ ಹೇಳಬೇಡಿ ಈಗ ಸಾಜೀದ ನಮ್ಮ ಮಗಳು"

"ಯಾರಯಾರದೋ ಮಗುನ ಪಡೆಯುವ ಬದಲು ನಮ್ಮ ನಿಸಾರನನ್ನೇ ಸಾಕಿಕೊಳ್ಳಬಹುದಿತ್ತಲ್ವಾ ಆಗ ನಮಗೂ ಒಂದು ತೃಪ್ತಿ ಇರುತ್ತಿತ್ತು ನಿನ್ನ ಆಸ್ತಿಯೂ ಕಂಡವರ ಪಾಲಾಗುವುದು ತಪ್ಪುತ್ತಿತ್ತು.."

ಹದಿನೈದರ ಪುಂಡ ಪೋಲಿ ಹುಡುಗ ನಿಸಾರನನ್ನು ಸಾಕಿಕೊಳ್ಳಲು ಸಾಧ್ಯವೇ..? ಮೈಮೂನರಿಗೆ ಆಕೆಯ ಮಾತಿನಿಂದ ಉರಿದು ಹೋಯಿತು

"ನೋಡಿ ಇಲ್ಲಿಗೆ ನಿಮ್ಮನ್ನು ಕರೆದದ್ದು ಮಗುವಿಗೆ ಹಾರೈಸಿ ಎಂದು ಅವಳ ಹುಟ್ಟಿನ ಬಗ್ಗೆ ಟೀಕಿಸಿ ಎಂದಲ್ಲ.." ಎಂದು ಸ್ವಲ್ಪ ಖಾರವಾಗಿ ನುಡಿದರು

"ನನಗೇನಮ್ಮ ಏನೋ ಒಳ್ಳೆಯದಕ್ಕೆ ಹೇಳಿದೆ ಇದರ ಮೇಲೆ ನಿಮ್ಮಿಷ್ಟ.." ಎಂದು ಸುಮ್ಮನಾದರು

ತಮ್ಮನ ಆಸ್ತಿಯನ್ನು ಹೇಗಾದರೂ ಹೊಡೆಯಬೇಕೇಂದು ಕೊಂಡಿದ್ದ ನಬೀಸರಿಗೆ ಅವರಿಬ್ಬರೂ ಮಗುವನ್ನು ದತ್ತು ಪಡೆದದ್ದು ಕಣ್ಣುರಿಯಾಗಿತ್ತು ಅದಕ್ಕೆ ತಮ್ಮ ಮನಸ್ಸಿನಲ್ಲಿದ್ದ ಕಹಿಯನ್ನು ಏನೇನೋ ಮಾತನಾಡಿ ತೀರಿಸಿಕೊಂಡರು

ಮತ್ತೆ ಕೆಲವು ಸಂಬಂಧಿಕರು "ಹೆಣ್ಣು ಮಗುವನ್ನು ಯಾಕೆ ಪಡೆದುಕೊಂಡಿರಿ..? ಗಂಡು ಮಗು ತೆಗೆದುಕೊಳ್ಳಬಹುದಿತ್ತು.." ಎಂದು ಟೀಕಿಸಿದರು ಅದಕ್ಕೂ ಮೈಮೂನರ ಉತ್ತರ ಸಿದ್ದವಾಗಿಯೇ ಇತ್ತು

"ನೋಡಿ ಹೆಣ್ಣು ಮಗುವನ್ನು ಸಾಕಿದರೆ ಕಡೆಗಾಲದಲ್ಲಿ ಅಯ್ಯೋ ಅಂತಲಾದರೂ ಎನ್ನುತ್ತದೆ ಆದರೆ ಗಂಡು ಹುಡುಗರು ಹೆಂಡತಿಯ ಸೆರಗು ಹಿಡಿದು ಓಡಿ ಬಿಡುತ್ತಾರೆ ಅದಕ್ಕೆ ನನಗೆ ಹೆಣ್ಣು ಮಗುವೇ ಇಷ್ಟ.." ಎಂದರು ಹಾಗೆ ಹೇಳಿದವರು ನಿರ್ವಾಹವಿಲ್ಲದೆ ಬಾಯಿ ಮುಚ್ಚಿಕೊಳ್ಳಬೇಕಾಯಿತು
ಇಷ್ಟೆಲ್ಲಾ ಜನರ ಟೀಕೆ ಟಿಪ್ಪಣಿಗಳ ನಡುವೆಯೂ ಅದಕ್ಕೆಲ್ಲಾ ಸೊಪ್ಪುಹಾಕದೆ ಮಗುವನ್ನು ಮಮತೆಯ ಮಹಾಪೂರದಲ್ಲಿ ಬೆಳೆಸಿದರು ಮುಗ್ಧ ಮಗು ಯಾವ ಕಷ್ಟವನ್ನು ಅರಿಯದೆ ಆ ತಾಯಿಯ ಮಡಿಲಲ್ಲಿ ಸೊಂಪಾಗಿ ಬೆಳೆಯಿತು..

ಸಾಜೀದಳಿಗೆ ಎರಡು ವರ್ಷ ತುಂಬುತ್ತಲೇ ಮೊದಲ ವರ್ಷದಂತೆ ಅದ್ದೂರಿಯಾಗಿ ಮಗುವಿನ ಹುಟ್ಟಿದ ಹಬ್ಬ ಮಾಡಿದರು ಮಗು ತೊದಲು ಮಾತನಾಡುತ್ತಾ ಮನೆಯಲ್ಲಿ ಓಡಾಡುತ್ತಿದ್ದರೆ ಎಲ್ಲರ ಕಂಗಳಿಗೂ ಹಬ್ಬ

"ಮೈಮೂನ ನಮ್ಮ ಸಾಜೀದಳಿಗೆ ದೃಷ್ಟಿಯಾಗುತ್ತೆ ನೋಡು ಅಷ್ಟು ಸುಂದರವಾಗಿದೆ ಮಗು.." ಎಂದು ಹಮೀದಾಕ ನುಡಿದರೆ

"ಹೌದು ರೀ.. ಎಷ್ಟು ಮುದ್ದಾಗಿದ್ದಾಳೆ ನಮ್ಮ ಕಣ್ಣೇ ಬಿದ್ದಿರುತ್ತೆ.." ಎಂದರು

ಹುಟ್ಟಿದ ಹಬ್ಬದ ಸಡಗರ ಎಲ್ಲಾ ಮುಗಿಯುವ ಹೊತ್ತಿಗೆ ರಾತ್ರಿ ಒಂಬತ್ತು ಗಂಟೆಯಾಗಿತ್ತು ಮೈಮೂನರಿಗೆ ಏಕೋ ತಲೆಸುತ್ತಿದಂತಾಗಿ ಹಾಗೆಯೇ ಸೋಫಾದಲ್ಲಿ ಕುಳಿತರು

"ಏನಾಗುತ್ತಿದೆ ಮೈಮೂನ.." ಎಂದು ಮಡದಿಯ ಬಳಿ ಕೇಳಿದರು ಹಮೀದಾಕ ಮೈಮೂನರ ಆಕೆಯ ಮುಖವೆಲ್ಲಾ ಬೆವತಿತ್ತು

"ಏಕೋ ತುಂಬಾ ಸಂಕಟ ಕೈಕಾಲೆಲ್ಲಾ ಸೋತು ಹೋದ ಹಾಗಾಗುತ್ತಿದೆ.."

"ಬೆಳಿಗ್ಗೆಯಿಂದ ಒಂದೇ ಸಮನೆ ಓಡಾಡಿದ್ದಿಯಲ್ಲ ಅದಕ್ಕೆ ಇರಬೇಕು ಸ್ವಲ್ಪ ವಿಶ್ರಾಂತಿ ತಗೋ.."

"ಇಲ್ಲಾ ರೀ.. ನನಗೇಕೋ ಅನುಮಾನ ತಿಂಗಳ ಮೇಲೆ ಇಪ್ಪತ್ತು ದಿನವಾಗಿದೆ ಇನ್ನು ಮುಂದೆ ಹೇಗೋ.."

"ಓಹ್.."

"ಬೆಳಿಗ್ಗೆ ಡಾಕ್ಟರಿಗೆ ತೋರಿಸುತ್ತೇನೆ ಬಿಡಿ ಈಗ ಮಲಗಿಬಿಡುತ್ತೇನೆ.." ಎಂದರು

ಮರುದಿನವೇ ಹಮೀದಾಕ ಪತ್ನಿಯನ್ನು ವೈದ್ಯರ ಬಳಿ ಕರೆದೊಯ್ದರು ವೈದ್ಯರು ಅವರ ಅನುಮಾನವನ್ನು ದೃಢವಾಗಿಸಿದರು

ಹಮೀದಾಕರಿಗೆ ಅಚ್ಚರಿ ಇಷ್ಟುದಿನದ ಮೇಲೆ ಪುನಃ ಆಕೆ ಗರ್ಭಿಣಿಯಾಗಬಹುದೆಂದು ಅವರು ನಿರೀಕ್ಷಿಸಿರಲಿಲ್ಲ

"ಇದೇನೂ ರೀ.. ಹೀಗಾಗಿದೆ..?" ಮನೆಗೆ ಬರುತ್ತಲೇ ನುಡಿದರು ಮೈಮೂನ

"ಏನೋ.. ಅಲ್ಲಾಹನಿಗೆ ನಮ್ಮ ಮೇಲೆ ಕರುಣೆ ಬಂದಿರಬೇಕು.."

"ಈ ಬಾರಿ ಏನಾಗುತ್ತೋ..? ನನಗಂತೂ ಅನುಭವಿಸಿ ಸಾಕಾಗಿ ಹೋಗಿದೆ.."

"ಯಾಕೆ ಹಾಗನ್ನುತ್ತಿ ಮೈಮೂನ ಎಲ್ಲಾ ಒಳ್ಳೆಯದೇ ಆಗುತ್ತದೆ ಸುಮ್ಮನಿರು ನಮ್ಮ ಸಾಜೀದ ಈ ಮನೆಗೆ ಬಂದ ಗಳಿಗೆ ಒಳ್ಳೆಯದು ಅದರಿಂದಲೇ ನಮಗೆ ಈಗ ಸಂತಾನ ಪ್ರಾಪ್ತಿಯಾಗುವ ಕಾಲ ಬಂದಿರುವ ಹಾಗೆ ಕಾಣುತ್ತದೆ.."

"ಇರಬಹುದು ನೋಡೋಣ ಎಲ್ಲಾ ಅಲ್ಲಾಹನ ದಯೆ.." ಎಂದು ಸುಮ್ಮನಾದರು

ಯಾವಾಗಲೂ ಆತಿಯಾಗಿ ನಿರೀಕ್ಷಿಸಿದ್ದು ಕೈಗೂಡುವುದಿಲ್ಲವೇನೋ..? ಸಾಜೀದಳನ್ನು ಆ ಮನೆಗೆ ಕರೆತಂದಿಲ್ಲದಿದ್ದಾಗ ಮಗುವಿಗಾಗಿ ಹಂಬಲಿಸಿದ್ದರು ದಂಪತಿಗಳು ಆಗ ಅರಳುವ ಮೊದಲೇ ಕುಡಿ ಚಿವೂಟಿಹೋಗುತ್ತಿತ್ತು ಆದರೆ ಈಗ ಅವರ ಪಾಲಿಗೆ ಸಾಜೀದ ಇದ್ದಾಳೆ ಹೀಗಾಗಿ ಸೋಲಾದರೂ ಅವರಿಗೆ ನಿರಾಶೆಯಿಲ್ಲ ಅಲ್ಲಾಹನ ಮೇಲೆ ಭಾರ ಹಾಕಿ ಸುಮ್ಮನಾದರು

ಆದರೆ ಯಾವ ಅನಾಹುತವೂ ನಡೆಯದೆ ಮೈಮೂನರಿಗೆ ಏಳು ತಿಂಗಳು ತುಂಬಿದವು ಈಗ ಆಕೆಗೆ ಮಗಳ ಮೇಲಿನ ಪ್ರೀತಿ ಅಧಿಕವಾಯಿತು ಮಗಳ ಕಾಲ್ಗುಣದಿಂದಲೇ ತಮಗೆ ಮಗುವನ್ನು ಹೆರುವ ಭಾಗ್ಯ ಲಭಿಸುತ್ತಿರುವುದು ಇಲ್ಲದಿದ್ದರೆ ಈ ಭಾಗ್ಯ ಎಲ್ಲಿರುತ್ತಿತ್ತು ಎಂಬ ನಿಲುವು ಆಕೆಯದು.. ಅವರ ನೆರೆಹೊರೆಯವರು ಯಾರಾದರೂ

"ಏನ್ರೀ.. ಮೈಮೂನ..? ನಿಮ್ಮದೇ ಸ್ವಂತ ಮಗುವಾದ ಮೇಲೆ ಈ ಮಗೂನ ಏನು ಮಾಡುತ್ತೀರಾ..?" ಎಂದು ಪ್ರಶ್ನಿಸುತ್ತಿದ್ದರು

"ನಮ್ಮ ಮಗಳೇ ಅಲ್ಲವೇ ಸಾಜೀದ ಇನ್ನು ಮಾಡುವುದೇನಿದೆ..? ಎನ್ನುತ್ತಿದ್ದರು

"ಹಾಗಲ್ಲಾರೀ.. ಎಷ್ಟಾದರೂ ಈಗ ಹುಟ್ಟುವುದು ನಿಮ್ಮ ರಕ್ತ ಮಾಂಸ ಹಂಚಿಕೊಳ್ಳುವ ಸ್ವಂತ ಮಗು.. ಆ ಮಗು ಯಾರದ್ದೋ.."

"ನಾನೆಂದೂ ಹಾಗೆ ಭಾವಿಸುವುದಿಲ್ಲ ಸಾಜೀದಳನ್ನು ನಾನು ಹೆರದಿದ್ದರೇನು ಅವಳು ನಾನು ಹೆತ್ತ ಮಗಳೇ.. ಒಂದು ಪಟ್ಟು ಪ್ರೀತಿ ಹೆ‌ಚ್ಚಾಗಿ ಅವಳ ಮೇಲೆಯೇ ತೋರಿಸುತ್ತೇನೆ.." ಎಂದು ಮರುತ್ತರ ನೀಡಿ ಅವರ ಬಾಯಿ ಮುಚ್ಚಿಸುತ್ತಿದ್ದರು

ಮುಗ್ಧೆ ಸಾಜೀದಳಿಗೆ ಇದಾವುದರ ಅರಿವು ಇಲ್ಲದೆ ಹಾಯಾಗಿದ್ದಳು

ನವಮಾಸಗಳು ತುಂಬಿದಾಗ ಮೈಮೂನ ಗಂಡು ಮಗುವಿಗೆ ಜನ್ಮವಿತ್ತರು ಮೈಮೂನ ಹಮೀದಾಕರ ಹರ್ಷ ಹೇಳತೀರದು ತುಂಬಾ ವರ್ಷಗಳ ನಂತರ ಗರ್ಭಿಣಿಯಾದುದ್ದರಿಂದ ಪ್ರಸವ ಕಷ್ಟವಾಗಿ ಆಪರೇಷನ್ ಮಾಡಿ ಮಗುವನ್ನು ಹೊರತೆಗೆಯಬೇಕಾಯಿತು..

ಜ್ಞಾನ ಬಂದ ಕೂಡಲೇ ಮೈಮೂನರತ್ತ ಬಂದ ಹಮೀದಾಕ

"ಗಂಡು ಮಗು ಮೈಮೂನ.." ಎಂದರು

"ಸಾಜೀ.. ಎಲ್ಲಿ..?" ಆಕೆಯ ಬಾಯಿಂದ ಮೊದಲ ಪ್ರಶ್ನೆ

"ಇಲ್ಲಿದ್ದಾಳೆ ನೋಡು.."

"ಅಮ್ಮಾನಿಗೆ ತುಂಬಾ ನೋವಾಗುತ್ತಾ ಅಮ್ಮ..?" ಮುದ್ದಾಗಿ ಕೇಳುತ್ತಾ ಹತ್ತಿರ ಬಂದಿತು ಮಗು

"ಇಲ್ಲಪ್ಪ ಚಿನ್ನಾ.. ನಿನ್ನ ತಮ್ಮನನ್ನು ನೋಡಿದೆಯಾ.."

"ಹ್ಞೂಂ.. ಯಾವಾಗಮ್ಮ ಅದು ನನ್ನ ಜೊತೆ ಆಟಕ್ಕೆ ಬರೋದು ನಾಳೆ ಬರುತ್ತಾ.." ಪುಟ್ಟ ಸಾಜೀದಳ ಪ್ರಶ್ನೆಗೆ ಎಲ್ಲರೂ ನಕ್ಕರು ಮೂರು ವರ್ಷದ ಮಕ್ಕಳ ಮುದ್ದು ಮಾತು ಕೇಳಲು ಚೆಂದ ಎಂದು ಅಷ್ಟಿಲ್ಲದೆ ಹೇಳುತ್ತಾರೆಯೇ ಎನಿಸಿತು

ಹತ್ತು ದಿನಗಳ ನಂತರ ಮನೆಗೆ ಬಂದರು ಮೈಮೂನ ಮಗುವಿಗೆ ಸದ್ದಾಂ ಎಂದು ಹೆಸರಿಟ್ಟರುಆತ್ಮೀಯ ಓದುಗರಲ್ಲಿ...

ಹತ್ತು ದಿನಗಳ ನಂತರ ಮನೆಗೆ ಬಂದರು ಮೈಮೂನ ಮಗುವಿಗೆ ಸದ್ದಾಂ ಎಂದು ಹೆಸರಿಟ್ಟರು

ಮೈಮೂನ ಮಗು ಹುಟ್ಟಿದ ಮೇಲೆಯೂ ಸ್ವಲ್ಪವೂ ಬದಲಾಯಿಸದೆ ಒಂದೇ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದರು ಸಾಜೀದಳ ಮನಸ್ಸಿಗೆ ಎಲ್ಲಿ ನೋವಾಗುತ್ತದೋ ಎಂದು ಹೆಚ್ಚಾಗಿ ಅವಳನ್ನೇ ಎತ್ತಿಕೊಳ್ಳುತ್ತಿದ್ದರು ಅವಳನ್ನೇ ಹೆಚ್ಚಾಗಿ ಮುದ್ದಿಸುತ್ತಿದ್ದರು ಸದ್ದಾಂ ಆದರೆ ಪುಟ್ಟ ಮಗು ಅದಕ್ಕೆ ಏನೆಂದೂ ಅರ್ಥವಾಗುವುದಿಲ್ಲ ಆದರೆ ಸಾಜೀದ ಬೆಳೆಯುತ್ತಿರುವ ಮಗು ಬುದ್ದಿ ತಿಳಿಯುತ್ತಿರುವ ಕಂದಮ್ಮ ಅದರ ಮನಸ್ಸಿಗೆ ಯಾವ ರೀತಿಯಲ್ಲಿಯೂ ನೋವಾಗಬಾರದು ಎಂಬುದೇ ಮೈಮೂನರ ಅಭಿಮತ

ಪತಿ ಪತ್ನಿ ಇಬ್ಬರೂ ಸಾಜೀದಳ ಮನದಲ್ಲಿ ತಮ್ಮನ ಬಗ್ಗೆ ಉತ್ತಮ ಭಾವನೆಗಳನ್ನು ಬಿತ್ತಿದ್ದರು ಹೀಗಾಗಿ ಸಾಜೀದ ತನ್ನ ಪುಟ್ಟ ತಮ್ಮನನ್ನು ಬಹುವಾಗಿ ಪ್ರೀತಿಸುತ್ತಿದ್ದಳು ಮಗು ಮಲಗಿದಾಗ ತೊಟ್ಟಿಲು ತೂಗುವುದು ಆಟವಾಡಿಸುವುದು ಎಲ್ಲ ಕೆಲಸಗಳನ್ನು ಆಸೆಯಿಂದ ಮಾಡುತ್ತಿದ್ದಳು ಮೈಮೂನ ಇಬ್ಬರೂ ಮಕ್ಕಳಿಗೂ ಕೈ ತುತ್ತು ಹಾಕಿ ಸಲಹಿದರು ಎಂದೂ ಭೇದ ಭಾವ ತೋರಲಿಲ್ಲ ಆದರೆ ಬೆಳೆಯುತ್ತಾ ಬರುತ್ತಿದ್ದಂತೆ ಲೋಕಾರೂಢಿಯಾಗಿ ಹೆಣ್ಣು ಮಗಳು ಅಂಕೆಯಲ್ಲಿದ್ದರೆ ಚೆನ್ನ ಎಂಬ ಭಾವನೆಯಿಂದ ಕೆಲವು ಬುದ್ದಿಮಾತು ಹೇಳುತ್ತಿದ್ದರು ಸಾಜೀದಳಿಗೆ ಅದನ್ನು ಸಾಜೀದ ನಗುತ್ತಲೇ ಸ್ವೀಕರಿಸುತ್ತಿದ್ದಳು ತಂದೆ ತಾಯಿ ತನ್ನನ್ನು ಎಷ್ಟರಮಟ್ಟಿಗೆ ಪ್ರೀತಿಸುತ್ತಾರೆ ತಮ್ಮನಿಗಿಂತ ಹೆಚ್ಚಾಗಿ ತನಗೆ ಪ್ರೀತಿ ನೀಡುತ್ತಾರೆ ಎಂಬುದನ್ನು ಬಲ್ಲಳು ಆದರೆ ಹಸೈನಾರ್'ರವರಿಂದ ವಿಷಯ ತಿಳಿಯುವುದೆಂದು ಯಾರಿಗೆ ಅರಿವಿತ್ತು..?? ಅಂದಿನಿಂದ ಸಾಜೀದಳ ಮನಸ್ಸು ಕಲ್ಲು ಹೊಡೆದ ಜೇನುಗೂಡಾಯಿತು ತಂದೆ ತಾಯಿಯ ಪ್ರತಿಯೊಂದು ವರ್ತನೆಯೂ ನಡೆನುಡಿಯಲ್ಲಿಯೂ ತಾರತಮ್ಯವೇ ಕಾಣತೊಡಗಿತ್ತು ತನ್ನ ಹಳದಿ ಕಣ್ಣುಗಳಿಂದಲೇ ನೋಡುವ ಅವಳಿಗೆ ಎಲ್ಲವೂ ಸಂಶಯಾಸ್ಪದವಾಗಿಯೇ ಕಂಡಿದ್ದರೆ ಅಚ್ಚರಿಯೇನು..?

"ನೋಡು ಸಾಜೀ... ಇದು ನಡೆದ ವಿಚಾರ ಈಗ ಹೇಳು ನಾವೇನು ಮಾಡಬೇಕು.." ಸಾಜೀದಳ ಬದುಕಿನ ಪ್ರತಿಯೊಂದು ವಿಷಯಗಳನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿದ ಹಮೀದಾಕ ಒಮ್ಮೆ ನಿಟ್ಟುಸಿರು ಬಿಟ್ಟರು

"ನನ್ನ ಹಿಂದೆ ಇಷ್ಟೆಲ್ಲಾ ನಡೆದಿದೆ ಎಂದು ನನಗೆ ಗೊತ್ತಿರಲಿಲ್ಲ ಅಪ್ಪಾ..!!"

"ನೋಡಮ್ಮಾ ಸಾಜೀ.. ನೀನು ವಿದ್ಯಾವಂತೆ ಮೇಲಾಗಿ ಬುದ್ದಿವಂತೆ ನಿನಗೆ ತಿಳಿಯದಿರುವುದು ಏನಿದೆ..? ನೀನೇ ವಿಚಾರ ಮಾಡು ನಿನ್ನ ತಂದೆ ತಾಯಿ ಯಾರು ಎಂದು ನಮಗೆ ಗೊತ್ತಿಲ್ಲ ನಾವು ನಿನ್ನನ್ನು ಸಾಕುವಾಗಲೂ ಆ ಬಗ್ಗೆ ಯೋಚಿಸಲಿಲ್ಲ ಕೇವಲ ನಮ್ಮ ಮಗು ಎಂದು ಮಾತ್ರ ತಿಳಿದು ಸಾಕಿದೆವು.."

"ಈಗಲೂ ಕಂಡುಹಿಡಿಯಲು ಸಾಧ್ಯವಿಲ್ಲವಾ ಅಪ್ಪಾ..!!"

"ಹೇಗಮ್ಮಾ ಸಾಧ್ಯ..? ಆ ಆಶ್ರಮದವರಿಗೆ ಸಾಧ್ಯವಾಗಲಿಲ್ಲ ನೋಡು ಸಾಜೀ.. ನಿನ್ನ ಕಣ್ಣೆದುರಿಗೆ ನಾವಿರುವಾಗ ಆ ಚಿಂತೆ ಯಾಕೆ ಹೇಳು.."

"ಹಾಗಲ್ಲ ಅಪ್ಪಾ ನಿಜ ವಿಷಯ ತಿಳಿದ ಮೇಲೆ ನಾನು ನಿಮಗೆ ತೊಂದರೆ ಕೊಡುವುದು ಸರಿಯಲ್ಲ.."

"ಯಾಕಮ್ಮಾ ಹೀಗೆಲ್ಲಾ ಮಾತನಾಡುತ್ತೀಯಾ ನಮ್ಮನ್ನು ಸ್ವಾರ್ಥಿ ಎಂದುಕೊಂಡರೂ ಸರಿ ನಮಗಾಗಿ ನೀನು ಇಲ್ಲಿರಬೇಕು ನೀನಿಲ್ಲದೆ ನಾವು ಇರಲಾರೆವು.." ಎಂದು ಹಮೀದಾಕ ದುಃಖ ತುಂಬಿದ ಮಾತಿನೊಂದಿಗೆ ನುಡಿದರು

"ಸಾಜೀ.. ನಿನ್ನನ್ನು ನೋಡದೆ ನಾನು ಬದುಕಲಾರೆ ಕಣೇ.. ನೀನೆ ನನ್ನ ಕಣ್ಮಣಿ ಏನೋ ಒಂದು ಮಾತು ಆಡಿದೆ ತಪ್ಪಾಗಿದ್ದರೆ ಕ್ಷಮಿಸಮ್ಮಾ.." ಮೈಮೂನ ಕಂಬನಿ ತುಂಬಿ ನುಡಿದರು

"ಅಮ್ಮಾ ನೀವು ಹಾಗೆಲ್ಲಾ ಹೇಳಬೇಡಿ ನಾನು ನಿಮ್ಮ ಮಗಳು ಸಾಕು ಮಗಳಾಗಿಯೇ ಇರುತ್ತೇನೆ.." ತಾಯಿಯ ಕಂಬನಿ ಒರೆಸಿದಳು

"ಸದ್ಯ ಅಷ್ಟು ಹೇಳಿದೆಯಲ್ಲ ಸಾಕು ಬಿಡು ನೀವು ಸ್ವಾರ್ಥಿಗಳು ನಿಮ್ಮ ಸ್ವಾರ್ಥಕ್ಕೆ ನನ್ನನ್ನು ಸಾಕಿಕೊಡಿದ್ದೀರಿ ಎಂದು ಬಿಡುತ್ತೀಯೇನೋ ಅಂದುಕೊಂಡಿದ್ದೆ.."

ಅಂದಿನಿಂದ ಸಂಪೂರ್ಣ ಬದಲಾದಳು ಸಾಜೀದ ಆದಷ್ಟೂ ಮನೆ ಕೆಲಸ ಮಾಡಿ ಆ ಮನೆಯ ಋಣ ತೀರಿಸಬೇಕೆಂದು ನಿಶ್ಚಯಿಸಿದಳು ಜೊತೆಗೆ ಎದುರು ವಾದಿಸುವುದನ್ನು ಕಡಿಮೆ ಮಾಡಿದಳು

ಹಮೀದಾಕ ಮತ್ತು ಮೈಮೂನ ಅವಳಲ್ಲಿನ ಬದಲಾವಣೆಯನ್ನು ಸೂಕ್ಷ್ಮವಾಗಿ ಗಮನಿಸಿದ್ದು ಬಕ್ರೀದ್ ಹಬ್ಬದಂದು ಮೊದಲಾದರೆ ತಂದೆಯ ಬಳಿ ಓಡಿ ಬಂದು

"ಅಪ್ಪಾ.. ಈ ಬಾರಿಯ ಪೆರ್ನಾಲಿಗೆ ನನಗೆ ಹೊಸ ಡ್ರೆಸ್ ಬೇಕು.." ಎಂದು ಪೀಡಿಸುತ್ತಿದ್ದಳು ಆಕಸ್ಮಾತ್ ಹಮೀದಾಕ ಉದಾಸೀನ ಮಾಡಿದರೆ

"ಸದ್ದಾಂಗೆ ಮಾತ್ರ ಕೊಡಿಸುತ್ತೀರಿ ನನಗೆ ಮಾತ್ರ ಹೀಗೆ.." ಎಂದು ಮುಖ ಉಬ್ಬಿಸುತ್ತಿದ್ದಳು

"ಸದ್ದಾಂ ನಿನ್ನ ತಮ್ಮ ಕಣೇ ಸಾಜೀ.."

"ಅವನಿಗೂ ಕೊಡಿಸಿ ನಾನು ಬೇಡ ಅನ್ನಲಿಲ್ಲ ಆದರೆ ನನಗೆ ಮೊದಲು.."

"ಸರಿ ನಿನಗೆ ಮೊದಲು ಕೊಡಿಸುತ್ತೇನೆ.." ಎಂದು ನಗುತ್ತಿದ್ದಳು ಹಮೀದಾಕ

ಆದರೆ ಇಂದು ಮಾತ್ರ ಅವಳು ಸುಮ್ಮನಿದ್ದಳು

"ಸಾಜೀ.. ಡ್ರೆಸ್ ಬೇಡವಾ..!!"

"ಬೇಡ ಅಪ್ಪಾ.. ಮೊನ್ನೆ ತಂದಿದ್ದೆ ಇದೆ.." ಎಂದು ಬಿಟ್ಟಳು

"ಸದ್ದಾಂಗೆ ಕೊಡಿಸುತ್ತಿದ್ದೀನಮ್ಮಾ.."

"ಕೊಡಿಸಿ ಅಪ್ಪಾ.. ಅವನು ನನ್ನ ತಮ್ಮ ತಾನೇ..?" ಎಂದು ಅವರಿಗೆ ನೋವಾಗಬಾರದೆಂದು ಹಾಗೆ ಹೇಳಿದರೂ ತಾನು ಪರಕೀಯಳು ಎಂಬ ಭಾವ ಸ್ಪಷ್ಟವಾಗಿತ್ತು

ಬಾಯಲ್ಲಿ ಹಾಗಂದರೂ ಮನಸ್ಸು ಸಹಜವಾಗಿಯೇ ಹೊಸ ಬಟ್ಟೆಯನ್ನು ಬಯಸಿತ್ತು

ಹಮೀದಾಕ ತಾವಾಗಿಯೇ ಹೊಸ ಡ್ರೆಸ್ ತಂದುಕೊಟ್ಟಾಗ ಒಂದೆಡೆ ಸಂತಸ ಒಂದೆಡೆ ನೋವು

"ಸಾಜೀ.. ನೀನು ಮೊದಲಿನ ಹಾಗೆ ಇರು ಎಂದು ಎಷ್ಟು ಸಾರಿ ಹೇಳಿಲ್ಲ ನಾವು ನೀನು ಎಳೆಯ ಮಗುವಿನ ತರಹ ಪೀಡಿಸಿದರೆ ಚೆಂದ.."

"ಹೋಗಿ ಅಪ್ಪಾ.. ನಾನು ದೊಡ್ಡವಳಾಗಿಲ್ಲವಾ.. ನಾನೇನು ಎಳೆಯ ಮಗುನಾ ನಿಮ್ಮನ್ನು ಪೀಡಿಸುವುದಕ್ಕೆ.." ಎಂದು ನಕ್ಕಳು

"ನೀನು ಎಂದೆಂದಿಗೂ ನಮ್ಮ ಪಾಲಿಗೆ ಪುಟ್ಟ ಮಗುವೇನಮ್ಮ.." ಹಮೀದಾಕ ಹಾಗೆನ್ನುವಾಗ ಕಣ್ಣಾಲಿಗಳು ತುಂಬಿದ್ದವು

"ಅಪ್ಪಾ..!! " ಎಂದು ಮುಖ ಮುಚ್ಚಿಕೊಂಡಳು

ಅವಳು ಎಷ್ಟೇ ಸಹಜವಾಗಿ ವರ್ತಿಸಬೇಕೆಂದುಕೊಂಡರೂ ಏನೋ ಗಂಟಲು ಒತ್ತಿದ ಅನುಭವ ತಾನು ಬೇರೆಯವಳು ಈ ಮನೆಯಲ್ಲಿ ತಾನು ಯಾವ ಹಕ್ಕು ಪಡೆದವಳಲ್ಲ ಎಂಬ ಭಾವ ಅವರಿಬ್ಬರ ಮನಸ್ಸಿಗೆ ನೋವಾಗಬಾರದೆಂದು ಎಷ್ಟು ಬಯಸಿದರೂ ಅವಳಿಗೆ ಅರಿವಿಲ್ಲದೆ ಒಮ್ಮೊಮ್ಮೆ ನೋವಾಗಿ ಬಿಡುತ್ತಿತ್ತು ಹಸೈನಾರ್ ರವರ ಮಾತಿನಿಂದ ತಾನು ಅವರ ಮಗಳಲ್ಲ ಎಂದು ತಿಳಿದಾಗ ಸಿಡುಕಿದಳು ಆದರೆ ಅನಾಥಳಾದ ತನ್ನನ್ನು ಕರೆತಂದು ಅವರು ಆಶ್ರಯವಿತ್ತು ಬೆಳೆಸಿದ್ದಾರೆ ಎಂಬುದು ತಿಳಿದಾಗ ಅವಳಲ್ಲಿ ಕೃತಜ್ಞತ ಭಾವ ಜಾಗೃತವಾಗಿತ್ತು ಕೃತಜ್ಞತೆಗಾಗಿ ಪ್ರೀತಿ ತೋರುತ್ತಿದ್ದಳು ಗೌರವಿಸುತ್ತಿದ್ದಳು

ಈ ರೀತಿಯ ಮನೋಭಾವ ಬೆಳೆಯಬಾರದೆಂದು ಹಮೀದಾಕ ಮೈಮೂನ ಇಬ್ಬರೂ ಹಗಲಿರುಳು ಶ್ರಮಿಸುತ್ತಿದ್ದರು ಆಗೆಲ್ಲಾ ಅವಳಿಗೆ ಸದ್ದಾಂನಿಗೆ ಹಕ್ಕಿನಿಂದ ಸಿಗಬೇಕಾದ ಸೌಲಭ್ಯವನ್ನು ತಾನು ಅನಾಯಾಸವಾಗಿ ಪಡೆಯುತ್ತಿರುವುದು ಸರಿಯೇ ಎಂಬ ಗೊಂದಲ ಸದ್ದಾಂನಿಗೆ ನಿಜ ವಿಷಯ ತಿಳಿದಿರಲಿಲ್ಲ ಆದರೆ ತಿಳಿದ ಮೇಲೆ ಅವನು ತನ್ನನ್ನು ಸ್ವಂತ ಅಕ್ಕನಂತೆ ಪ್ರೀತಿಸುತ್ತಾನೆಂದು ಯಾವ ಖಾತರೀ..? ರಾತ್ರಿಯೆಲ್ಲಾ ಈ ಬಗ್ಗೆ ಯೋಚಿಸಿ ತಲೆ ಕೆಡಿಸಿಕೊಳ್ಳುತ್ತಿದ್ದಳು ಬೆಳಗಾದ ಕೂಡಲೇ ಆ ವಿಚಾರಗಳು ಒಟ್ಟಾಗಿ ಒಂದು ಮೂಲೆಯಲ್ಲಿ ಕುಳಿತಿರುತ್ತಿತ್ತು..

ಆ ದಿನ ಆದದ್ದು ಹಾಗೆಯೇ ಮೈಮೂನ ಮಗಳಿಗೆ ಇಡ್ಲಿ ಕೊಟ್ಟರು.. ಮೊದಲಾದರೆ "ಯಾವಾಗಲೂ ಇಡ್ಲಿ ಯಾರು ತಿನ್ನುತ್ತಾರೆ ಅಮ್ಮಾ ನನಗೆ ಬೇರೆ ಏನಾದರೂ ತಿಂಡಿ ಮಾಡಿ ಕೊಡಿ.." ಎಂದು ಹಠ ಹಿಡಿಯುತ್ತಿದ್ದಳು

ಆದರೆ ಈಗ ಮೌನವಾಗಿ ತಿನ್ನತೊಡಗಿದಳು

"ಬೇರೆ ತಿಂಡಿ ಮಾಡಿಕೊಡಲಾ ಸಾಜೀ.. ಇಡ್ಲಿ ಸೇರುತ್ತೇನೇ"

"ಬೇಡ ಅಮ್ಮಾ.. ಇದೆ ಇರಲಿ ನಿಮಗ್ಯಾಕೆ ತೊಂದರೆ"

"ಇದೇನೇ ಬೇರೆಯವರಿಗೆ ಹೇಳುವ ಹಾಗೆ ಹೇಳುತ್ತಿದ್ದೀಯಾ.."

"ಹಾಗೇನಿಲ್ಲಮ್ಮ.."

"ನೋಡು ಸದ್ದಾಂ ಇಷ್ಟು ಹೊತ್ತು ಕೂಗಾಡಿ ಹೋದ ನೀನು ಹಾಗೆ ಇದ್ದರೆ ಚೆನ್ನಾಗಿರುತ್ತೆ.."

"........." ಅವಳು ಮೌನವಹಿಸಿದ್ದಳು ಮೈಮೂನರಿಗೆ ಅವಳ ಮನಸ್ಥಿತಿ ಅರ್ಥವಾಯಿತು

"ಸಾಜೀ.. ಇನ್ನು ನೀನು ಮರೆತಿಲ್ಲವಾ ಆ ವಿಚಾರವನ್ನು..!! ಆ ಹಸೈನಾರ್ ಒಬ್ಬ ಏನೇನೋ ಹೇಳಿದ್ದಾನೆ ನೀನು ತಲೆ ಕೆಡಿಸಿಕೊಂಡಿದ್ದೀಯಾ.."

"ಇಲ್ಲಮ್ಮ ನಿಜ ವಿಚಾರ ಗೊತ್ತಿಲ್ಲದೆ ಎಷ್ಟು ನೋಯಿಸಿದ್ದೇನೆ ನಿಮ್ಮನ್ನು ನನಗೆ ಇಷ್ಟರ ಮಟ್ಟಿಗೆ ಬಾಳು ಕೊಟ್ಟವರು ನೀವು ಇಲ್ಲದಿದ್ದರೆ ನಾನೆಲ್ಲಿ ಬಿದ್ದಿರುತ್ತಿದ್ದೆನೋ.."

"ಸಾಜೀ.. ಹಾಗೆಲ್ಲಾ ಹೇಳಬೇಡಮ್ಮ ನೀನು ಮಗಳಾಗಿ ಆಜ್ಞೆ ಮಾಡು ನನಗೆ ಅದೇ ಇಷ್ಟ ಈ ರೀತಿ ಕೃತಜ್ಞತೆ ಬೇಡ ನೀನು ನನ್ನ ಮೇಲೆ ಕೋಪ ಮಾಡಿಕೋ ಸಹಿಸುತ್ತೇನೆ ಆದರೆ ಈ ರೀತಿ ಒಳ್ಳೆಯತನ ಬೇಡಮ್ಮ.."

"ಅಯ್ತಮ್ಮ ಇನ್ನು ನಿಮಗೆ ಬೇಜಾರು ಮಾಡುವುದಿಲ್ಲಮ್ಮ"

"ಹಾಗಾದರೆ ಮೊದಲಿನಂತೆ ಇರು.."

"ಹ್ಞೂಂ ಸರಿನಮ್ಮ.."

ಎಷ್ಟೇ ಪ್ರಯತ್ನಿಸಿದರೂ ಅವಳಿಗೆ ಅರಿವಿಲ್ಲದಂತೆ ಈ ರೀತಿಯ ಕೃತಜ್ಞತಾ ಭಾವ ಹಲವು ಬಾರಿ ಪ್ರಕಟವಾಗಿ ಬಿಡುತ್ತಿತ್ತು ಆಗ ತಂದೆ ತಾಯಿ ನೊಂದುಕೊಂಡರೆ ತಾನು ಮಾಡಿದ್ದು ತಪ್ಪೇನೋ ಎನಿಸಿ ಕೊರಗುತ್ತಿದ್ದಳು

ಈ ರೀತಿಯ ಗೊಂದಲಕ್ಕೆ ಎಂದು ಕೊನೆ..?? ಇದಕ್ಕೆ ಪರಿಹಾರ ಹೇಗೆ..? ಯೋಚಿಸುತ್ತಾ ಹೋದಂತೆ ತಲೆ ಚಿಟ್ಟುಹಿಡಿಯುತ್ತಿತ್ತು ಸಾಜೀದಳಿಗೆ ತನ್ನ ಸಮಸ್ಯೆ ಯಾರಲ್ಲ ಹೇಳಲಿ ಇದಕ್ಕೆ ತಕ್ಕ ಪರಿಹಾರ ಯಾರಲ್ಲ ಕೇಳಲಿ ಎಂದುಕೊಂಡಾಗ ಅವಳಿಗೆ ನೆನಪಿಗೆ ಬಂದ ವ್ಯಕ್ತಿ ಹಕೀಂ..!! ಹೌದು ಹಕೀಂ ತನ್ನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾನೆ ಅವನಿಗೆ ಎಲ್ಲಾ ಹೇಳಿದರೆ ಹೇಗೆ ಅನಿಸಿತು..

ಹಮೀದಾಕನ ಮಗಳೆಂದು ತನ್ನನ್ನು ಪ್ರೀತಿಸುತ್ತಿದ್ದಾನೆ ಅಕಸ್ಮಾತ್ ತಾನು ಅವರ ಮಗಳಲ್ಲ ಅನಾಥೆ ಎಂದು ತಿಳಿದರೆ ಅವನೂ ನನ್ನನ್ನು ದೂರ ಮಾಡಿದರೇ..? ಯಾರು ಏನು ಒಂದು ಗೊತ್ತಿಲ್ಲದವಳನ್ನು ಯಾರು ಮದುವೆಯಾಗಲು ಬಯಸುತ್ತಾರೆ.. ತನ್ನ ಸ್ವಂತ ತಂದೆ ತಾಯಿಯ ಬಗ್ಗೆ ಏನೆಂದೂ ಗೊತ್ತಿಲ್ಲ ಸೋದರತ್ತೆ ಹೇಳಿದಂತೆ ಯಾರ ಪಾಪದ ಫಲವೋ ನಾನು..!! ಇದೇ ರೀತಿ ಹಕೀಂನೂ ಯೋಚಿಸಿದರೆ ಆಗ ಖಂಡಿತಾ ತನ್ನನ್ನು ಬಿಟ್ಟು ಹೋಗುತ್ತಾನೆ..?

ಅವನೂ ನನ್ನನ್ನು ಬಿಟ್ಟು ಹೋದರೆ ಇರುವ ಒಂದು ಆಸರೆಯೂ ಇಲ್ಲವಾಗುತ್ತದೆ ಆದ್ದರಿಂದ ಸುಮ್ಮನಿರುವುದೇ ಮೇಲು ಎನಿಸಿತು

ಅಕಸ್ಮಾತ್ ಮದುವೆಯಾದ ಮೇಲೆ ತಾನು ಸಾಕು ಮಗಳು ಎಂಬ ವಿಷಯ ತಿಳಿದರೆ ಆಗಲೂ ತನ್ನನ್ನು ದೂರ ಮಾಡಬಹುದು ಅದಕ್ಕೆ ತಾನೇ ಅವನಿಂದ ದೂರವಾಗಿ ತಂದೆ ಹೇಳಿದವರನ್ನು ಮದುವೆಯಾದರೆ ಹೇಗೆ ಎಂದು ಯೋಚಿಸಿದಳು

ಹಕೀಂನಿಂದ ದೂರವಾಗುವ ವಿಚಾರ ಯೋಚಿಸುತ್ತಲೇ ಅವಳ ಕಣ್ಣಾಲಿಗಳು ತುಂಬಿದವು ಯಾ ಅಲ್ಲಾಹ್..!! ನನಗೆಂತಹ ಪರೀಕ್ಷೆ ತಂದಿಟ್ಟೆ ಇಷ್ಟೆಲ್ಲಾ ಸಮಸ್ಯೆ ತನಗೆ ತಂದಿಡುವ ಬದಲು ಹೆತ್ತವಳು ನಾನು ಬೇಡವಾದ ಮೇಲೆ ಹುಟ್ಟಿದ ತಕ್ಷಣವೇ ನನ್ನನ್ನು ಕತ್ತು ಹಿಸುಕಿ ಸಾಯಿಸಿ ಬಿಡಬಾರದಾಗಿತ್ತೇ..? ಬದುಕಿಸಿ ಈ ರೀತಿಯ ಕಷ್ಟ ಅನುಭವಿಸುವಂತೆ ಮಾಡಿದೆಯಲ್ಲ ಎಂದು ಹೆತ್ತವಳನ್ನು ಬೈಯ್ದುಕೊಂಡಳು

ಇಷ್ಟೆಲ್ಲಾ ತಲೆ ತುಂಬಾ ಯೋಚನೆಗಳಿರುವಾಗ ಪಾಠದ ಕಡೆ ಗಮನ ಕೊಡಲು ಹೇಗೆ ಸಾಧ್ಯ ಕಾಲೇಜಿನಲ್ಲಿಯೂ ಅದೇ ಯೋಚನೆ ಸುಮ್ಮನೆ ಯೋಚಿಸುತ್ತಾ ಕುಳಿತಿರುವ ಬದಲು ಮನೆಗೆ ಹೋದರೆ ಹೇಗೆಂದು ಯೋಚಿಸಿದಳು ಏಕೋ ಮನೆಯೂ ಬೇಸರವಾಯಿತು..

ಹಕೀಂನೊಂದಿಗಾದರೂ ಮಾತನಾಡೋಣವೆಂದು ಅವನಿಗೆ ಕರೆ ಮಾಡಿದಳು

"ಯಾಕೆ ಸಾಜೀ.. ಏನಾಯಿತು ಹುಷಾರಾಗಿದ್ದೀಯಾ ತಾನೇ.."

"ಹ್ಞೂಂ ನೀನು ಈಗಲೇ ಬಾ ನನಗೆ ತುಂಬಾ ಬೋರಾಗುತ್ತಿದೆ.."

"ಸರಿ ಬರುತ್ತೇನೆ ನೀನು ಪಾರ್ಕಿಗೆ ಬಾ.." ಎಂದ ಹಕೀಂ

ಅವಳು ಒಪ್ಪಿಗೆ ನೀಡಿದಳು ತಾನು ಕರೆದರೆ ಓಡಿ ಬರುವ ಹಕೀಂ ನಿಜ ವಿಷಯ ತಿಳಿದರೆ ಹೇಗೆ ವರ್ತಿಸುತ್ತಾನೋ ಎಷ್ಟು ದಿನ ಹೀಗೆ ಮುಚ್ಚಿಸುವುದು ಈಗಾಗಲೇ ಎಲ್ಲವನ್ನೂ ಎದುರಿಸುತ್ತಿದ್ದೇನೆ ನನ್ನ ಹಣೆಯಲ್ಲಿ ಅವನಿಂದ ದೂರವಾಗಲೇ ಬೇಕೇಂದೂ ಇದ್ದರೆ ಅದೂ ಆಗಿಯೇ ಬಿಡಲಿ ಎಂದು ತಿರ್ಮಾನಿಸಿದಳು

ಈ ದಿನ ಹಕೀಂಗೆ ಎಲ್ಲವನ್ನು ಹೇಳಿ ಬಿಡುತ್ತೇನೆ ಮುಂದಿನ ನಿರ್ಧಾರ ಅವನದು ಎಂದುಕೊಂಡಾಗ ಮನ ಸ್ವಲ್ಪ ಹಗುರವಾಯಿತು

ಪಾರ್ಕಿನಲ್ಲಿ ಬಂದು ಕುಳಿತ ಸಾಜೀದ ಇದೆ ಯೋಚಿಸತೊಡಗಿದಳು

"ಸಾಜೀ.. ಏನು ಯೋಚನೆ ಮಾಡುತ್ತಿದ್ದೀಯಾ.." ಎಂದು ಅವಳ ಪಕ್ಕದಲ್ಲಿ ಬಂದು ಕುಳಿತ ಹಕೀಂ ಅವನ ಧ್ವನಿಗೆ ಎಚ್ಚೆದ್ದು

"ನೀನು ಬಂದದ್ದು ನಾನು ನೋಡಲೇ ಇಲ್ಲ ಬೈಕಿನ ಶಬ್ದವು ಕೇಳಿಸಲಿಲ್ಲ.."

"ಹೌದು ತಾವು ಯೋಚನಾ ಲೋಕದಲ್ಲಿ ಮುಳುಗಿದ್ದರೆ ಹೇಗೆ ತಾನೆ ಕೇಳಿಸುತ್ತದೆ.." ಎಂದ ತಮಾಷೆಯಾಗಿ

"ಹಕೀಂ.. ನಾನು ನಿನ್ನೊಂದಿಗೆ ತುಂಬಾ ಮಾತನಾಡಬೇಕು ಎಲ್ಲಾದರೂ ಯಾರು ಇಲ್ಲದ ಜಾಗದಲ್ಲಿ ಹೋಗಿ ಕುಳಿತುಕೊಳ್ಳೋಣ.."

"ಏನೂ ಮೇಡಂ ಇಂದು ಮಾತನಾಡುವ ಮೂಡಿನಲ್ಲಿರುವ ಹಾಗಿದೆ.." ಎಂದು ರೇಗಿಸಿದ

"ಹಕೀಂ.. ನಿನಗೆ ಯಾವಾಗಲೂ ತಮಾಷೆನೇ ಸರಿ ಸ್ವಲ್ಪ ದೂರ ಹೋಗಿ ಕುರೋಣ.."

ಇಬ್ಬರು ಸ್ವಲ್ಪ ದೂರದಲ್ಲಿ ಯಾರು ಇಲ್ಲದ ಸ್ಥಳದಲ್ಲಿ ಹೋಗಿ ಕುಳಿತರು

"ಏನಾದರೂ ತಿಂದೆಯಾ ಇಲ್ಲ ಏನಾದರೂ ತಿನ್ನಲು ತರಲಾ.."

"ಏನು ಬೇಡ ನನಗೆ ಹಸಿವಿಲ್ಲ.."

"ನೋಡು ನಿನ್ನ ಮುಖ ಎಷ್ಟು ಬಾಡಿಹೋಗಿದೆ ನಾನು ಹೋಗಿ ಏನಾದರೂ ತಿನ್ನಲು ತರುತ್ತೇನೆ ನೀನು ಇಲ್ಲೇ ಕುಳಿತಿರು.." ಎಂದು ಪಕ್ಕದಲ್ಲಿರುವ ಒಂದು ಹೋಟೆಲಿಗೆ ತೆರಳಿ ಸ್ವಲ್ಪ ತಿಂಡಿಗಳನ್ನು ಪ್ಯಾಕ್ ಮಾಡಿ ಹಿಂದಿರುಗಿದ

"ಸಾಜೀ.. ನಿನಗೆ ಇಷ್ಟವಾದ ತಿಂಡಿ ತಂದಿದ್ದೇನೆ ಮೊದಲು ತಿನ್ನು ನಿನಗೆ ಹಸಿವಾಗುತ್ತಿರಬಹುದು.." ಎಂದ ಅವಳು ಅವನ ವಿಶ್ವಾಸ ಕಂಡು ಮೂಕಳಾದಳು

"ನನಗೆ ಬೇಡ ಹಕೀಂ ನೀನೇ ತಿನ್ನು.." ಎಂದು ನುಡಿದಳು

"ನೀನು ಹಾಗೆಂದರೆ ಹೇಗೆ ನಿನ್ನ ಮುಖ ನೋಡು ಎಷ್ಟು ಬಳಲಿ ಹೋಗಿದೆ ನೀನು ತಿನ್ನಲೇ ಬೇಕು.."

"ನನಗೆ ಬೇಡ ಹಕೀ.. ನನ್ನ ಮನಸೇ ಸರಿ ಇಲ್ಲ ನನಗೆ ಹಸಿವಿಲ್ಲ.."

"ಮನಸ್ಸಿಗೂ ಹಸಿವಿಗೂ ಏನು ಸಂಬಂಧ..? ನೀನು ತಿನ್ನದಿದ್ದರೆ ಬೇಡ ನಾನೇ ತಿನ್ನಿಸುತ್ತೇನೆ.." ಎಂದು ತಾನೇ ಅವಳಿಗೆ ತಿನ್ನಿಸಲಾರಂಭಿಸಿದ

ಹಕೀಂನ ಪ್ರೀತಿ ಕಂಡು ಅವಳ ಕಂಗಳು ಒದ್ದೆಯಾದವು ಕಣ್ಣೀರ ಹನಿಗಳು ಜಾರಿ ಅವನ ಕೈ ಮೇಲೆ ಬಿದ್ದಾಗ ಹಕೀಂ ಗಾಬರಿಯಾದ

" ಸಾಜೀ..!! ಯಾಕೆ ಅಳುತ್ತಿದ್ದೀಯಾ.. ಏನಾಯಿತು.." ಎಂದು ಅವಳ ಕಣ್ಣೀರೊರೆಸಿದ

ಅವನ ಸ್ವಾಂತನದಿಂದ ಅವಳ ಕಂಬನಿ ಹೆಚ್ಚಾಯಿತು ಅವನ ಭುಜದ ಮೇಲೆ ತಲೆಯಿಟ್ಟು ಬಿಕ್ಕಿದಳು

"ಸಾಜೀ.. ಸಮಾಧಾನ ಮಾಡಿಕೋ ಏನಾಯಿತು ಹೇಳು ಮನೆಯಲ್ಲಿ ಏನಾದರೂ ಬೇಜಾರಾಗುವಂತಹ ಘಟನೆ ನಡೆಯಿತಾ..? ಅಥವಾ ಕಾಲೇಜಿನಲ್ಲಿ ಯಾರಾದರೂ ಏನಾದರೂ ಹೇಳಿದರ.."

"ಏನಿಲ್ಲ ಹಕೀ.. ನನ್ನನ್ನು ಯಾರು ಏನ್ನನ್ನುತ್ತಾರೆ.. ನಿನ್ನ ಪ್ರೀತಿ ಕಂಡು ಕಣ್ಣಿನಲ್ಲಿ ನೀರು ಬಂತ ಅಷ್ಟೇ.."

"ಮಾತು ಮರೆಸಬೇಡ ಸಾಜೀ.. ಇತ್ತೀಚೆಗೆ ಕೆಲವು ದಿನಗಳಿಂದ ನಾನು ನೋಡುತ್ತಿದ್ದೇನೆ ನೀನು ತುಂಬಾ ಬದಲಾಗಿದ್ದೀಯಾ ಏನೆಂದು ನನ್ನೊಂದಿಗೆ ಹೇಳಬಾರದೇ.."

"ಹಾಗೇನಿಲ್ಲ.. ನಾನು ಸರಿಯಾಗಿಯೇ ಇದ್ದೀನಿ.."

"ಮೊನ್ನೆಯೂ ಹೀಗೆಯೇ ಹೇಳಿದೆ ನಾನು ಅಷ್ಟು ಕೇಳಿದರು ನೀನು ಏನು ಹೇಳದೆ ಇನ್ನೊಂದು ದಿನ ಖಂಡಿತಾ ಹೇಳುತ್ತೇನೆ ಎಂದುಬಿಟ್ಟೆ ಆ ದಿನ ಬರಲೇ ಇಲ್ಲ.."

""ಏನಿದೆ ಹೇಳೋದಕ್ಕೆ..?"

"ಸರಿಬಿಡು ನೀನು ಹೇಳಲೇಬಾರದು ಎಂದು ತಿರ್ಮಾನಿಸಿದ್ದರೆ ನಾನು ಒತ್ತಾಯ ಮಾಡುವುದಿಲ್ಲ ನೀನು ಹೇಳುವುದು ಬೇಡ.."

"ಹಕೀ..."

"ಹೌದು ಸಾಜೀ.. ನೀನು ನನ್ನನ್ನು ಬೇರೆಯವನು ಎಂದು ತಿಳಿದಿದ್ದೀಯಾ ಅದಕ್ಕೆ ನಿನ್ನ ಸುಖ ದುಖಃ ನನ್ನ ಹತ್ತಿರ ಹೇಳಿಕೊಳ್ಳುತ್ತಿಲ್ಲ.."

"ಹಕೀಂ.. ನಾನು ಏನೆಂದು ಹೇಳಲಿ..? ದಯವಿಟ್ಟು ನನ್ನ ಮರೆತು ಬಿಡು ನನಗಿಂತ ಚೆನ್ನಾಗಿರುವ ಹುಡುಗಿಯನ್ನು ನೋಡಿ ಮದುವೆಯಾಗಿ ಸುಖವಾಗಿರು.."

"ಹ್ಞೂಂ.. ಸರಿ ಆಮೇಲೆ.."

"ತಮಾಷೆಯಲ್ಲ ಹಕೀ.. ನಾನು ಸಿರೀಯಸ್ ಆಗಿ ಹೇಳುತ್ತಿದ್ದೀನಿ.."

"ನಿನಗೇನಾದರೂ ತಲೆ ಕೆಟ್ಟಿದೆಯಾ ಸಾಜೀ.." ಎಂದ ಕೋಪದಿಂದ

"ಇದುವರೆಗೂ ಕೆಟ್ಟಿಲ್ಲ ಮುಂದೆ ಕೆಡಬಹುದು.."

"ನೋಡು ಸಾಜೀ.. ಹುಚ್ಚುಚ್ಚಾಗಿ ಮಾತಾಡಬೇಡ ಏನಾಯಿತು ಎಂದು ಸರಿ ಬಿಡಿಸಿ ಹೇಳು.."

"ಹಕೀ..ನಾನು ಎಂತಹವಳಾಗಿದ್ದರೂ ನೀನು ನನ್ನನ್ನು ಮದುವೆಯಾಗುತ್ತೀಯಾ.."

"ಅಂದರೆ ನಿನ್ನ ಮಾತಿನ ಅರ್ಥವೇನು..?"

"ನಾನು ಹಮೀದಾಕನ ಮಗಳಲ್ಲ.."

"ಅಂದರೇ...?" ಎಂದು ಅವಳತ್ತ ಅಚ್ಚರಿಯಿಂದ ನೋಡಿದ ಹಕೀಂ
"ಹೌದು ಹಕೀಂ.. ನಾನು ಅವರು ಹೆತ್ತ ಮಗಳಲ್ಲ ಸಾಕು ಮಗಳು.."

"ಹೌದ.."

"ನನ್ನ ಒಂದು ಆಶ್ರಮದಿಂದ ತಂದು ಸಾಕಿದ್ದಾರೆ ಅವರಿಗೆ ಮಕ್ಕಳಿರಲಿಲ್ಲವಂತೆ ಅದಕ್ಕೆ ನನ್ನನ್ನು ದತ್ತು ತೆಗೆದುಕೊಂಡಿರುವುದಂತೆ.." ತಂದೆ ಹೇಳಿದ ಕಥೆಯನ್ನು ವಿವರವಾಗಿ ಹೇಳಿದಳು

"ಸಾಜೀ.. ನೋಡು ನಾನು ಮೊದಲ ಬಾರಿ ನಿನ್ನನ್ನು ನೋಡಿದಾಗಲೇ ನಿನ್ನ ಇಷ್ಟಪಟ್ಟಿದ್ದೀನಿ ಮದುವೆ ಆಗುವುದಾದರೆ ನಿನ್ನನ್ನೇ ಎಂದು ಕೂಡ ತಿರ್ಮಾನಿಸಿಯಾಗಿದೆ ನಾನು ಪ್ರೀತಿ ಮಾಡಲು ಶುರುಮಾಡಿದಾಗ ನೀನು ಯಾರ ಮಗಳು ಎಂದು ನನಗೆ ಗೊತ್ತಿರಲಿಲ್ಲ ಈಗಲೂ ನಿನಗಾಗಿ ನಿನ್ನನ್ನು ಪ್ರೀತಿಸುತ್ತೇನೆಯೇ ಹೊರತು ಹಮೀದಾಕನ ಮಗಳೆಂದು ಅಲ್ಲ.."

"ನನ್ನನ್ನು ಮದುವೆಯಾಗುವುದರಿಂದ ನಿನಗೆ ಸುಖವಿಲ್ಲ ನಾನು ಅನಾಥೆ.."

"ಹಾಗೆಲ್ಲಾ ಹೇಳಬೇಡ ಸಾಜೀ.. ನಾನಿರುವಾಗ ನೀನು ಅನಾಥೆಯಲ್ಲ.."

"ಎಷ್ಟೇ ಬೇಡವೆಂದರೂ ನನ್ನಲ್ಲಿ ಅನಾಥೆ ಪ್ರಜ್ಞೆ ಬಂದುಬಿಟ್ಟಿದೆ ಹಕೀಂ.. ನಾನು ಆ ಮನೆಯಲ್ಲಿ ಮೊದಲಿನಂತೆ ಇರಲು ಸಾಧ್ಯವಿಲ್ಲ ತಂದೆ ತಾಯಿಯೊಂದಿಗೆ ಮೊದಲಿನಂತೆ ವರ್ತಿಸಲು ಆಗುತ್ತಿಲ್ಲ.."

"ಸಾಜೀ.. ಹಾಗೆಲ್ಲಾ ಮಾಡಬೇಡ ಎಷ್ಟದರೂ ಅವರು ನಿನ್ನನ್ನು ಸಾಕಿದವರು.."

"ಆ ಕೃತಜ್ಞತೆ ನನಗೂ ಇದೆ ಆದರೆ ಅವರು ನನ್ನಿಂದ ಪ್ರೀತಿಯನ್ನು ನಿರೀಕ್ಷಿಸುತ್ತಿದ್ದಾರೆ.."

"ಅದು ಸ್ವಾಭಾವಿಕ ನಿನ್ನ ಮನಸ್ಸು ಬದಲಾಗಿರಬಹುದು ಆದರೆ ನೀನು ಅವರ ಪಾಲಿಗೆ ಮೊದಲಿನಿಂದಲೂ ಮಗಳೇ ತಾನೇ.."

"ಹಕೀಂ.. ನಿನಗೆ ನನ್ನ ಕಷ್ಟ ಅರ್ಥವಾಗುವುದಿಲ್ಲ ಆ ಮನೆಯಲ್ಲಿ ನನಗೆ ಹಕ್ಕಿಲ್ಲ ಎಂಬ ಭಾವನೆ ಒಂದು ರೀತಿಯ ಪರಕೀಯ ಭಾವ ಬೇರೆಯವರ ವಸ್ತುಗಳನ್ನು ಉಪಯೋಗಿಸುವಾಗ ಉಂಟಾಗುವ ಅನ್ಯಭಾವ ನಾನೇನು ಮಾಡಲಿ ಹೇಳು.."

"ಹಾಗೆಲ್ಲಾ ಯಾಕೆ ಯೋಚಿಸುತ್ತಿಯಾ..?"

"ಏನು ಮಾಡಲಿ ನನಗೆ ಹಾಗನ್ನಿಸುತ್ತೆ.."

"ಹಾಗಾದರೆ ಒಂದು ಕೆಲಸ ಮಾಡೋಣ ನಾನು ನಿಮ್ಮ ಮನೆಗೆ ಬಂದು ನಿಮ್ಮ ತಂದೆಯೊಂದಿಗೆ ಮಾತನಾಡುತ್ತೇನೆ ಆದಷ್ಟೂ ಬೇಗ ಮದುವೆಯಾಗಿ ಬಿಡೋಣ.."

"ನನ್ನ ಕಾಲೇಜು.."

"ಅದು ನೋಡೋಣ ಇಷ್ಟವಿದ್ದರೆ ಮದುವೆಯ ನಂತರ ಮುಂದುವರಿಸಿದರು ಆಯಿತು.."

"ಅದಕ್ಕೆ ನಿಮ್ಮ ಮನೆಯವರು ಒಪ್ಪುತ್ತಾರಾ..? ಅದು ಅಲ್ಲದೇ ಅನಾಥೆಯನ್ನು ಸೊಸೆಯಾಗಿ ಸ್ವೀಕರಸುತ್ತಾರಾ..?"

"ಅದೆಲ್ಲಾ ನಾನು ಹೇಳುವುದಿಲ್ಲ ನೀನು ಹಮೀದಾಕನ ಮಗಳು ಅಷ್ಟು ಸಾಕು ಅದೆಲ್ಲವೂ ನಾನು ನೋಡಿಕೊಳ್ಳುತ್ತೇನೆ ಅದರ ಬಗ್ಗೆ ನೀನು ಚಿಂತೆ ಮಾಡಬೇಡ.."

"ನಮ್ಮ ಮನೆಯಲ್ಲಿ ಒಪ್ಪದಿದ್ದರೆ..?"

"ಏನು ಮಾಡುವುದು ನೀನೇ ಹೇಳು.."

"ನಾವಿಬ್ಬರೇ ಮದುವೆಯಾಗೋಣ ಅವರು ನನ್ನ ಹೆತ್ತವರಲ್ಲವಲ್ಲ ಅವಳ ಅಭಿಪ್ರಾಯ ನನಗೆ ಮುಖ್ಯವಲ್ಲ.."

"ಅವರೆದುರು ಹಾಗೆಲ್ಲಾ ಹೇಳಬೇಡ ಸಾಜೀ.. ಅವರು ಒಪ್ಪದೇ ಮದುವೆಯಾಗುವುದು ಸರಿಯಲ್ಲ.."

"ಅಂತಹ ಪರಿಸ್ಥಿತಿ ಬಂದರೆ ಏನು ಮಾಡುವುದು ಅಂತ ಹೇಳಿದೆ ಅಷ್ಟೇ.."

"ಅದು ನಾನು ಅವರನ್ನು ಒಪ್ಪಿಸುತ್ತೇನೆ ಯಾವಾಗ ನಿಮ್ಮನೆಗೆ ಬರಲಿ ಹೇಳು.."

"ನೀನು ಬರುವುದು ಬೇಡ ಮೊದಲು ನಾನೇ ಮಾತನಾಡುತ್ತೇನೆ.."

"ಸರಿ ಹಾಗೆ ಮಾಡು ಆದಷ್ಟು ಬೇಗ ಕೇಳಿ ನಿರ್ಧಾರ ತಿಳಿಸು.."

"ಆಯಿತು ಬೇಗ ಹೇಳುತ್ತೇನೆ.."

"ಆಯಿತು ಈಗ ಹೋಗೋಣವಾ ಇಲ್ಲ ಸ್ವಲ್ಪ ಹೊತ್ತು ಇಲ್ಲೆ ಇರೋಣವಾ..?"

"ಹೋಗೋಣ ಲೇಟಾಯಿತು ಇನ್ನು ಲೇಟಾದರೆ ಅಮ್ಮನ ಪುರಾಣ ಕೇಳಬೇಕು ಸರಿ ನಾನು ಹೋಗುತ್ತೇನೆ.."

"ಬಾ.. ಮನೆಯವರೆಗೂ ಬಿಡುತ್ತೇನೆ.." ಎಂದ ಇಬ್ಬರು ಬೈಕಿನಲ್ಲಿ ಹೊರಟರು

ಅವನು ರಸ್ತೆಯ ತುದಿಯಲ್ಲಿ ಬೈಕ್ ನಿಲ್ಲಿಸಿದ ಸಾಜೀದ ಇಳಿಯುವುದಕ್ಕೂ ಮೈಮೂನ ನೋಡುವುದಕ್ಕೂ ಸರಿಯಾಯಿತು ಅವರ ಮನೆ ಪಕ್ಕದಲ್ಲಿರುವ ಗೆಳತಿಯ ಮನೆಗೆ ಹೋಗಿ ಬರುತ್ತಿದ್ದಾಗ ಯುವಕನೊಬ್ಬನ ಬೈಕಿನಲ್ಲಿ ಬಂದಿಳಿದ ಮಗಳು ಕಣ್ಣಿಗೆ ಬಿದ್ದಳು..
ಇದನ್ನು ಕಂಡ ಅವರಿಗೆ ಒಂದು ಕ್ಷಣ ತಲೆ ತಿರುಗಿದಂತಾಯ್ತು "ಯಾರಿಗೆ ಹುಟ್ಟಿದವಳೋ ಇವಳ ಹೆತ್ತವಳು ಎಂತವಳೋ.. ಅವಳ ರಕ್ತವೇ ಇವಳ ಮೈಯಲ್ಲಿ ಹರಿಯುತ್ತಿದೆ.." ಎಂದ ತನ್ನ ಅತ್ತಿಗೆಯ ಮಾತು ನೆನಪಾಯಿತು ಮೈಮೂನರಿಗೆ ತಕ್ಷಣವೇ ಛೇ..!! ತನ್ನ ಮಗಳ ಬಗ್ಗೆ ತಾನು ಹೀಗೆ ಯೋಚಿಸುವುದೇ..? ಏನಾಗಿದೆ ನನಗೆ ಯಾರಾದರೂ ನಮ್ಮ ಸಂಬಂಧಿಕರೇ ಇರಬಹುದು ಯಾರೆಂದು ಅವಳು ಮನೆಗೆ ಬಂದಕ್ಷಣ ಅವಳಲ್ಲಿಯೇ ಕೇಳಿದರೆ ಆಯಿತು ಎಂದು ಸಮಾಧಾನ ಪಟ್ಟರು

ಸಾಜೀದ ತನ್ನನ್ನು ತಾಯಿ ನೋಡಿದನ್ನು ಗಮನಿಸಿದಳು

"ಹಕೀಂ.. ನನ್ನ ಅಮ್ಮಾ..!!"
"ಹೌದಾ..!!"
"ಈಗೇನು ಮಾಡಲಿ ಹಕೀ.."
"ಕೇಳಿದರೆ ಎಲ್ಲಾ ವಿಚಾರ ಹೇಳಿಬಿಡು ನಿನಗೂ ಗೊಂದಲ ತಪ್ಪುತ್ತದೆ.."
"ನನಗೇನೋ.. ಭಯವಾಗುತ್ತಿದೆ"
"ಸರಿ ಹಾಗಾದರೆ ನಾನು ನಿನ್ನ ಜೊತೆ ಬರುತ್ತೇನೆ.."
"ಬೇಡ.. ಬೇಡ ನಾನೇ ಹೇಳುತ್ತೇನೆ ನಾನು ಆಮೇಲೆ ಪೋನು ಮಾಡುತ್ತೇನೆ.." ಎಂದು ಮನೆಯ ಕಡೆ ಹೊರಟಳು

ಅವಳು ಮನೆಗೆ ಬರುವ ವೇಳೆಗೆ ಹಮೀದಾಕ ಬಾಗಿಲಿನಲ್ಲಿಯೇ ಕಾದು ನಿಂತಿದ್ದರು

"ಯಾಕಮ್ಮ ಸಾಜೀ.. ಇಷ್ಟು ಲೇಟು"
"ನನ್ನ ಫ್ರೆಂಡ್ ಜೊತೆ ಹೋಗಿದ್ದೆ ಅಪ್ಪಾ..!!"
"ಹ್ಞೂಂ ಸರಿನಮ್ಮ ಒಳಹೋಗು.." ಎಂದರು

ಸಾಜೀದ ಒಳಬಂದು ಕೈಕಾಲು ಮುಖ ತೊಳೆದು ಬಂದಾಗ ಮೈಮೂನ ಕಾಫಿ ಮಾಡಿ ಅದರೊಂದಿಗೆ ಒಂದಿಷ್ಟು ತಿನ್ನಲು ತಿಂಡಿ ತಂದು ಮೌನವಾಗಿ ಅವಳ ಕೈಗೆ ಕೊಟ್ಟರು

"ಸಾಜೀ.. ನೀನು ಬೈಕಿನಲ್ಲಿ ಬಂದೆಯಲ್ಲ ಅದು ಯಾರು..?"
"ಅಮ್ಮಾ.. ಅವರನ್ನು ನಾನು ಮದುವೆಯಾಗಬೇಕೆಂದಿದ್ದೇನೆ"
"ಸಾಜೀ.."
"ಹೌದಮ್ಮ.."
"ನಿನ್ನ ಅಪ್ಪನಿಗೆ ಈ ವಿಷಯ ಗೊತ್ತಾ.."
"ಇಲ್ಲ ನೀವೇ ಹೇಳಿ"
"ಕೇಳಿದಿರಾ ನಿಮ್ಮ ಮಗಳ ಮಾತುಗಳನ್ನು.." ಎಂದು ಮೈಮೂನ ಹಮೀದಾಕನ ಕಡೆ ತಿರುಗಿದರು

"ಏನಮ್ಮಾ.. ಸಾಜೀ.."
"ಅಪ್ಪಾ.. ನಾನು ಹಕೀಂ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದೇವೆ ಮದುವೆಯಾಗಬೇಕು ಎಂದು ತಿರ್ಮಾನಿಸಿದ್ದೇವೆ.."
"ಓಹ್..ನಮ್ಮ ಅಭಿಪ್ರಾಯ ಬೇಡವೇನಮ್ಮ ಅಥವಾ ನೀವು ಯಾರು ನನ್ನನ್ನು ಕೇಳೋದಕ್ಕೆ ಅಂತಾನೋ..?" ಎಂದು ಮೊದಲ ಬಾರಿಗೆ ನೋವಿನಿಂದ ನುಡಿದರು ಹಮೀದಾಕ

"ಅಪ್ಪಾ.. ನಾನೆಲ್ಲಿ ಹಾಗೆ ಹೇಳಿದೆ..? ನಿಮ್ಮನ್ನು ಕೇಳಿಯೇ ನಾನು ತಿರ್ಮಾನ ತೆಗೆದುಕೊಳ್ಳುವುದು"
"ಹಾಗಾದರೆ ನಾವು ಬೇಡವೆಂದರೆ ನೀನು ಅವನನ್ನು ಬಿಡಲು ತಯಾರಾಗಿದ್ದಿಯಾ.."
"ನೀವು ಬೇಡ ಎನ್ನುವುದಿಲ್ಲ ಎಂದು ನನಗೆ ನಂಬಿಕೆ ಇದೆ ಅಪ್ಪಾ.."
"ಅವನು ಯಾರು..? ಅವನ ತಂದೆ ತಾಯಿ ಮನೆ ಊರು ಏನು ಹೇಗೆ ಎಂದು ಒಂದು ಗೊತ್ತಿಲ್ಲದೆ ಮದುವೆಯಾಗುತ್ತಿಯಾ..?"

"ಅಪ್ಪಾ.. ನನ್ನನ್ನು ಈ ಮನೆಗೆ ದತ್ತು ತೆಗೆದುಕೊಳ್ಳುವಾಗ ನನ್ನ ತಂದೆ ತಾಯಿ ಧರ್ಮ ಹಣ ಅಂತಸ್ತು ಎಲ್ಲ ನೋಡಿದ್ದೀರಾ..?? ಈ ಸಾಕು ಮಗಳ ಮದುವೆಗೆ ಯಾಕೆ ಅದೆಲ್ಲಾ ನೋಡಬೇಕು..?"
"ಎಷ್ಟೊಂದು ಮಾತನಾಡುವುದನ್ನು ಕಲಿತು ಬಿಟ್ಟೆ ಸಾಜೀ.. ಈಗ ನೀನು ನನ್ನ ಮಗಳು ಅದ್ದರಿಂದ ಅದೆಲ್ಲಾ ವಿಚಾರಿಸಬೇಕು.."
"ಅವರು ಒಳ್ಳೆಯವರೇ ಅಪ್ಪಾ.. ಸ್ವಂತ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದಾರೆ ಒಳ್ಳೆಯ ಮನೆತನ.."
"ಸರಿನಮ್ಮ ನಾಳೆ ಯೋಚನೆ ಮಾಡಿ ನಿರ್ಧಾರ ಮಾಡುತ್ತೇನೆ.." ಎಂದರು ಹಮೀದಾಕ

ರಾತ್ರಿ ಪತ್ನಿಯೊಂದಿಗೆ ಸಮಾಲೋಚಿಸಿದರು ಅವಳು ತಾವು ಒಪ್ಪದಿದ್ದರೂ ಅವನನ್ನು ಮದುವೆಯಾಗಲು ತಯಾರಿದ್ದಾಳೆ ಪ್ರೀತಿಯ ಮುಂದೆ ತಂದೆ ತಾಯಿ ಇದೆಲ್ಲಾ ಕಾಣುವುದಿಲ್ಲ ಎಂದಕೊಂಡರು..

"ಅವಳ ಹಣೆಯಲ್ಲಿ ಬರೆದಂತಾಗುತ್ತದೆ ಮದುವೆ ಮಾಡಿಬಿಡೋಣ ಅವಳು ಈಗ ನಮ್ಮ ಮಾತು ಕೇಳುವ ಸ್ಥಿತಿಯಲಿಲ್ಲ ಕೊನೆಯ ಪಕ್ಷ ಮದುವೆ ಮಾಡಿಕೊಟ್ಟ ಮೇಲಾದರೂ ನಮ್ಮ ಮೇಲೆ ಪ್ರೀತಿಬರಬಹುದೇನೋ..?" ಎಂದರು ಮೈಮೂನ ಹಮೀದಾಕನವರಿಗೂ ಅದೇ ಸರಿ ಅನಿಸಿತು

"ಮೈಮೂನ ನಾವು ದತ್ತು ತೆಗೆದುಕೊಂಡು ತಪ್ಪು ಮಾಡಿದೇವಾ..?"
"ಯಾಕೆ ಹಾಗನ್ನುತ್ತೀರಾ..!! ನಮ್ಮ ಸ್ವಂತ ಮಗಳಾಗಿದ್ದರೂ ನಾವು ಮದುವೆ ಮಾಡಿ ಕಳುಹಿಸಲೇಬೇಕು ಈಗ ಇವಳು ತಾನೇ.. ಗಂಡನನ್ನು ಹುಡುಕಿಕೊಂಡು ನಮಗೆ ಕಷ್ಟ ತಪ್ಪಿಸಿದ್ದಾಳೆ.." ಎಂದು ಮೈಮೂನ ದುಃಖದಿಂದ ನುಡಿದರು

"ನೀನು ಹೇಳುವ ಮಾತು ಸರಿ ಅನ್ನು ಆ ಹುಡುಗನನ್ನು ಭೇಟಿ ಮಾಡಿ ಮಾತನಾಡುತ್ತೇನೆ ಸರಿ ತಾನೇ..?"
"ಹಾಗೇ ಮಾಡಿ ಒಟ್ಟಿನಲ್ಲಿ ಅವಳು ನಗು ನಗುತ್ತಾ ಸಂತೋಷದಿಂದಿದ್ದರೆ ಸಾಕು ಬಳ್ಳಿ ಎಂದಿದ್ದರೂ ಮರಕ್ಕೆ ಹಬ್ಬಲೇಬೇಕು ತಾಯಿ ಬೇರೆ ಶಾಶ್ವತವಲ್ಲ.." ಎಂದರು

ಹಮೀದಾಕ ಹಕೀಂನೊಂದಿಗೆ ಮಾತನಾಡಿದಾಗ ಅವರಿಗೆ ಹುಡುಗ ಒಳ್ಳೆಯ ಸಂಭಾವಿತ ಎನಿಸಿತು ಅವನ ತಂದೆಗೆ ಕರೆ ಮಾಡಿದರು ಅವರು ಕೂಡ ಸಾಜೀದಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಮುಂದಿನ ಕೆಲವೇ ದಿನಗಳಲ್ಲಿ ಎರಡು ಕಡೆಯ ಗುರು ಹಿರಿಯರೆಲ್ಲ ಹಕೀಂನ ಮನೆಯಲ್ಲಿ ಸೇರಿ ಮದುವೆಯ ದಿನವನ್ನು ನಿಗದಿಪಡಿಸಿದರು

ಹಕೀಂ ಹಮೀದಾನಕರನ್ನು ಭೇಟಿಯಾಗಿ "ನನಗೆ ಅದ್ದೂರಿ ಆಡಂಭರ ಬೇಡ ಸರಳವಾಗಿ ಮದುವೆ ಮಾಡಿಕೊಟ್ಟರೆ ಸಾಕು.." ಎಂದ
"ಯಾಕಪ್ಪ ಇದನ್ನೆಲ್ಲಾ ನಿನಗೆ ಸಾಜೀದ ಹೇಳಿಕೊಟ್ಟಳಾ..?"
"ಹಾಗೇನಿಲ್ಲಾ ನಾನೇ ಹೇಳಿದ್ದು.."
"ನೀನು ಸುಮ್ಮನಿರು ನಮಗಿರುವುದು ಒಬ್ಬಳೇ ಮಗಳು ಅವಳ ಮದುವೆಯನ್ನು ಬಹಳ ಅದ್ದೂರಿಯಾಗಿ ಮಾಡುತ್ತೇನೆ.."

ಸಾಜೀದ ಎಷ್ಟೇ ಹೇಳಿದರೂ ಕೇಳದೆ ಹಮೀದಾಕ ಹಣವನ್ನು ನೀರಿನಂತೆ ಖರ್ಚು ಮಾಡತೊಡಗಿದರು ಅವಳಿಗೆ ಬಿಸಿ ತುಪ್ಪ ತಿಂದಂತಾಗಿತ್ತು ಆಡುವಂತಿಲ್ಲ ಅನುಭವಿಸುವಂತಿಲ್ಲ..

ತುಂಬಾ ಸಡಿಗರದಿಂದ ಅದ್ದೂರಿಯಾಗಿ ಮಗಳನ್ನು ಹಕೀಂನ ಜೊತೆ ಮದುವೆ ಮಾಡಿಕೊಟ್ಟರು ನಿಖಾಃಹ್ ನೇರವೇರಿದ ನಂತರ ಹಮೀದಾಕ ಮೈಮೂನ ಅವರಿಬ್ಬರ ಕಣ್ಣ ತುಂಬಾ ನೀರು ಕಟ್ಟೆಯೊಡೆದಿತ್ತು.. ಸಾಜೀದಳಿಗೂ ಏಕೋ ಆಳು ಬರುವಂತಾದರೂ ತಡೆದುಕೊಂಡಳು..

ಮೆಹಂದಿ ನಿಖಾಃಹ್ ಚಮ್ಮಙ್ಞ (ಸಂಬಂಧ ಊಟ) ಹೀಗೆ ಮೂರ್ನಾಲ್ಕು ದಿನ ಭರ್ಜರಿಯ ಮದುವೆ ಸಂಬಂಧಿಕರು ಗಣ್ಯರು ಬಂಧು ಮಿತ್ರರು ಆಗಮಿಸಿ ನೂತನ ನವ ಜೋಡಿಗಳಿಗೆ ಶುಭ ಕೋರಿ ವರಿಸಿದರು..

"ನೋಡಿ ಮಾವ ಇಷ್ಟು ಖರ್ಚು ಮಾಡಿದ್ದು ಸಾಕು ಮತ್ತಾವ ಆಡಂಭರವು ಬೇಡ.." ಎಂದು ಖಡಾಖಂಡಿತವಾಗಿ ನುಡಿದ ಹಕೀಂ
"ಹಾಗಲ್ಲಪ್ಪ ಹಕೀಂ.."
"ಏನು ಇಲ್ಲ ಇಲ್ಲಿಗೆ ಸಾಕು.."
"ಸರಿನಪ್ಪ.. ಹಾಗೆ ಆಗಲಿ.."

ಮದುವೆ ಮುಗಿದು ನಂತರ..

ಹಕೀಂನಿಗೆ ತನ್ನ ಬಟ್ಟೆ ಅಂಗಡಿಯಿಂದ ಮನೆಗೆ ಬಹಳ ದೂರವಾಗಿದ್ದರಿಂದ ಅಲ್ಲಿಯೇ ಒಂದು ಚಿಕ್ಕ ರೂಮ್ ಬಾಡಿಗೆಗೆ ಪಡೆದಿದ್ದ ಈಗ ಮದುವೆಯಾಗಿದೆ ಇರುವ ರೂಮ್ ಸರಿಹೊಂದುವುದಿಲ್ಲ ಪ್ಲಾಟ್ ಖರೀದಿಸಲು ಮುಂಗಡ ಹಣ ನೀಡಿ ಇಟ್ಟಿದ್ದರು ಅದರ ಕಾಮಗಾರಿ ಪೂರ್ಣಗೊಳ್ಳಲು ಇನ್ನು ಒಂದು ವರ್ಷದವರೆಗೆ ಕಾಯಬೇಕು ಅದರಿಂದ ಅಂಗಡಿ ಸಮೀಪವೇ ಒಂದು ಬಾಡಿಗೆ ಮನೆ ಹುಡುಕುತ್ತಿದ್ದ..

ಮನೆ ಸಿಗುವವರೆಗೂ ಇಲ್ಲಿಯೇ ಇದ್ದು ಮನೆ ಸಿಕ್ಕ ನಂತರ ಸಾಜೀದಳನ್ನು ಕರೆದುಕೊಂಡು ಹೋಗೆಂದೂ ಅಲ್ಲಿಯವರೆಗೆ ಇಬ್ಬರೂ ಇಲ್ಲಿಯೇ ಇರುವಂತೆ ಹಮೀದಾಕ ಅಗ್ರಹಪಡಿಸಿದರು ಹಕೀಂನಿಗೆ ಬೇರೆ ದಾರಿ ಇಲ್ಲದೇ ಒಪ್ಪಬೇಕಾಯಿತು ಈ ಮಧ್ಯೆ ಒಂದು ವಾರ ನವ ದಂಪತಿಗಳು ಇಬ್ಬರ ಸಂಬಂಧಿಕರ ಮನೆಗಳಿಗೂ ಹೋಗಿಬಂದರು

ಅದೃಷ್ಟಕ್ಕೆ ಹದಿನೈದು ದಿನಗಳಲ್ಲಿಯೇ ಅವರ ಅಭಿರುಚಿಗೆ ತಕ್ಕವಾದ ಮನೆ ಸಿಕ್ಕಿತು ಹಕೀಂ ಮಾವ ಹಮೀದಾಕನವರಿಗೆ ವಿಷಯ ತಿಳಿಸಿದ

ಹಮೀದಾಕ ಒಂದು ಮನೆಗೆ ಬೇಕಾಗುವ ಎಲ್ಲ ಸಾಮಗ್ರಿಗಳನ್ನು ಖರೀದಿಸಿ ಹೊಸ ಮನೆಗೆ ಗಂಡ ಹೆಂಡತಿಯನ್ನು ಕರೆತಂದು ಬಿಟ್ಟರು ಹಕೀಂ ಎಷ್ಟು ಹೇಳಿದರೂ ಕೇಳದೆ ಪ್ರತಿಯೊಂದು ವಸ್ತುಗಳನ್ನು ಹಮೀದಾಕ ಮೈಮೂನವರೇ ಖರೀದಿಸಿ ಮನೆಗೆ ತಂದು ಜೋಡಿಸಿದರು..

ಒಂದು ಕಾಂಪೌಂಡ್ ಒಳಗಡೆ ನಾಲ್ಕೈದು ಮನೆಗಳಲ್ಲಿ ಒಂದು ಮನೆ ಅವರದಾಗಿತ್ತು.. ನೀರು ಕರೆಂಟ್ ಎಲ್ಲ ಸೌಲಭ್ಯಗಳನ್ನು ಹೊಂದಿರುವ ಮನೆ ಅದರ ಪಕ್ಕದಲ್ಲಿ ಇರುವ ಮತ್ತೊಂದು ಮನೆಯಲ್ಲಿ ಗಂಡ ಹೆಂಡತಿ ಎರಡು ಮಕ್ಕಳ ಒಂದು ಸಂಸಾರ ಎದುರಿಗೆ ಇದರ ವಾರಸ್ಥಾರರ ಮನೆ ವಯಸ್ಸಾದ ದಂಪತಿಗಳು ಮದುವೆ ವಯಸ್ಸಿಗೆ ಬಂದಿರುವ ಒಬ್ಬ ಮಗ..

ಆ ಮನೆಗೆ ಬಂದ ಕೂಡಲೇ ಸಾಜೀದಳಿಗೆ ಇಷ್ಟವಾದದ್ದು ಆಕೆಯೇ.. ವಯಸ್ಸಾದ ಆಕೆಯನ್ನು ನೋಡಿದರೆ ತನ್ನ ತಾಯಿಯ ನೆನಪು ಬರುತ್ತಿತ್ತು ಸಾಜೀದಳಿಗೆ

"ಏನು ಮಗಳೇ.. ಹೊಸದಾಗಿ ಮದುವೆಯಾದ ದಂಪತಿಗಳಾ..?" ಎಂದು ಆ ಮಹಿಳೆಯೇ ಮಾತನಾಡಿಸಿದರು

"ಹೌದು ಆಂಟಿ.. ಮದುವೆಯಾಗಿ ಸಂಸಾರಕ್ಕೆ ಮೊದಲ ಬಾರಿ ಬರುತ್ತಿರುವುದು.."

"ನಿನ್ನನ್ನು ನೋಡಿದರೆ ಗೊತ್ತಾಗುತ್ತದೆ ನಿನ್ನ ಹೆಸರು.."
"ಸಾಜೀದ.."
"ನಿನ್ನೆ ನಿಮ್ಮ ಜೊತೆಯಲ್ಲಿ ಬಂದಿದ್ದು ನಿಮ್ಮ ತಾಯಿಯೇನೂ.."
"ಹೌದು ನಮ್ಮ ತಾಯಿಯೇ.. ಆಂಟಿ.."
"ಒಬ್ಬಳೇ ಮಗಳೇನೋ..?"
"ಇಲ್ಲ ಒಬ್ಬ ತಮ್ಮ ಇದ್ದಾನೆ.."
"ಹೌದ ಸರಿ ಬಾ ನಮ್ಮ ಮನೆಗೆ.."
"ಇನ್ನು ಮುಂದೆ ಇಲ್ಲೇ ಇರುತ್ತೀನಲ್ಲ ಆಂಟಿ ಯಾವಾಗಲಾದರೂ ಬರುತ್ತೀನಿ.."
"ಹಾಗೆ ಮಾಡು ನನಗೂ ಬೇಜಾರು.."
"ನಿಮ್ಮ ಹೆಸರೇನು ಆಂಟಿ..?"
"ದುಲೈಕ ಎಂದು ಕಣಮ್ಮ.."
"ಸರಿ ಆಂಟಿ ಬರ್ತೀನಿ ತುಂಬಾ ಕೆಲಸ ಇದೆ.." ಎಂದು ಮನೆಯ ಒಳಬಂದಳು

ಈಗ ಸಾಜೀದ ಸಂಪೂರ್ಣ ಬ್ಯುಸಿಯಾಗಿದ್ದಳು ಬೆಳಿಗ್ಗೆ ಎದ್ದು ತಿಂಡಿ ಮಾಡಿ ಹಕೀಂನನ್ನು ಅಂಗಡಿಗೆ ಕಳಿಸಿ ಉಳಿದ ಕೆಲಸಗಳನ್ನೆಲ್ಲಾ ಮುಗಿಸಿ ತಾನು ಕಾಲೇಜಿಗೆ ಹೋಗಬೇಕಾಗುತ್ತಿತ್ತು ಸಂಜೆ ಬಂದು ಸಣ್ಣ ಪುಟ್ಟ ಕೆಲಸ ಮಾಡಿ ರಾತ್ರಿ ಅಡುಗೆ ಮಾಡುತ್ತಿದ್ದಳು..

ಓದನ್ನು ಅರ್ಧಕ್ಕೆ ನಿಲ್ಲಿಸಲು ಸಾಜೀದಳಿಗೆ ಮನಸ್ಸಿರಲಿಲ್ಲ ಅದರಿಂದ ಈ ವರ್ಷ ಹೋಗಿ ಓದನ್ನು ಪೂರ್ತಿಗೊಳಿಸಲಿ ಎಂದು ಮದುವೆಯ ನಂತರವೂ ಕಾಲೇಜಿಗೆ ಹೋಗಲು ಅನುಮತಿ ನೀಡಿದ್ದರು ಹಮೀದಾಕ ಮತ್ತು ಹಕೀಂ

ಸಾಜೀದಳಿಗೆ ಕೆಲಸದ ನಡುವೆ ಓದುವುದಕ್ಕೆ ಸಮಯ ಸಾಲುತ್ತಿರಲಿಲ್ಲ ಯಾವಾಗಲೂ ಏನಾದರೊಂದು ಕೆಲಸ ಅದನ್ನು ಕಂಡ ಹಕೀಂ..

"ಸಾಜೀ.. ಹೀಗೆ ನೀನು ಓದದೆ ಸಮಯ ಕಳೆದರೆ ಈ ಬಾರಿ ಖಂಡಿತ ಫೇಲಾಗಿ ಬಿಡುತ್ತೀಯಾ..!!"
"ನಾನೇನು ಮಾಡಲಿ ಓದಲು ಟೈಮೇ ಸಿಗುವುದಿಲ್ಲವಲ್ಲ.."
"ಹಾಗಾದರೆ ಪರೀಕ್ಷೆ ಮುಗಿಯುವವರೆಗೂ ನೀನು ನಿಮ್ಮ ತಾಯಿಯ ಮನೆಯಲ್ಲಿರು.."
 "ಅದು ನನಗಿಷ್ಟವಿಲ್ಲ ಹಕೀ.. ಅಲ್ಲಿರುವುದು ಇಷ್ಟವಿಲ್ಲ ಎಂದು ತಾನೇ ಬೇಗ ಮದುವೆಯಾದದ್ದು ಅವರು ಇದುವರೆಗೂ ತೆಗೆದುಕೊಂಡಿರುವ ತೊಂದರೆಯೇ ಸಾಕು.."
"ಹಾಗಾದರೆ ಒಂದು ಕೆಲಸ ಮಾಡು ನೀನು ಕಾಲೇಜಿಗೆ ಹೋಗುವ ಮುನ್ನ ರಾತ್ರಿಗೂ ಆಗುವಷ್ಟು ಅಡುಗೆ ಮಾಡಿಬಿಡು ಆಗ ರಾತ್ರಿ ಓದಲು ಸಮಯ ಸಿಗುತ್ತೇ.."
"ಹೌದು ಇನ್ನು ಹಾಗೆಯೇ ಮಾಡುತ್ತೇನೆ.."

ಹಾಗೇ ಮಾಡಲು ತೊಡಗಿದ ಮೇಲೆ ಅವಳಿಗೆ ರಾತ್ರಿ ಓದಲು ಸಮಯ ಸಿಕ್ಕಿತು ಹಕೀಂ ಕೂಡ ಅವಳಿಗೆ ಹೇಳಿಕೊಡುತ್ತಿದ್ದ ಅದರಿಂದ ಅವಳಿಗೆ ಕಲಿಯಲು ಮತ್ತಷ್ಟು ಸುಲಭವಾಯಿತು..

ಆ ದಿನ ಶನಿವಾರವಾದ್ದರಿಂದ ಸಾಜೀದ ಕಾಲೇಜಿನಿಂದ ಬೇಗನೆ ಮನೆಗೆ ಬಂದಿದ್ದಳು ಮನೆಯ ಹೊರಗೆ ನಿಂತಿದ್ದ ಅವಳನ್ನು ಕಂಡು ಪಕ್ಕದ ಮನೆಯಾಕೆ ನಕ್ಕಳು..

ಅವರು ಆ ಮನೆಗೆ ಬಂದು ಒಂದು ವಾರದ ಮೇಲಾಗಿದ್ದರೂ ಅವರ ಪರಿಚಯವಾಗಿರಲಿಲ್ಲ ಬಹುಶಃ ಅವಳಿಗೆ ಯಾರ ಸ್ನೇಹವೂ ಬೇಡವೇನೋ ಎಂದುಕೊಂಡಿದ್ದಳು ಸಾಜೀದ.. ಆದರೆ ಆಕೆ ನಕ್ಕಿದ್ದರಿಂದ ಅವಳ ಅನುಮಾನ ಸುಳ್ಳಾಯಿತು ಸಾಜೀದ ಕೂಡ ನಕ್ಕಳು

"ನಿಮ್ಮ ಹೆಸರೇನು.." ಎಂದು ಸಾಜೀದ ತಾನಾಗಿಯೇ ಕೇಳಿದಳು
"ಜಮೀಲಾ ಎಂದು ನಿಮ್ಮ ಹೆಸರು..?"
"ಸಾಜೀದ ಎಂದು ಎಲ್ಲಿ ನೀವು ಕಾಣೋದೇ ಇಲ್ಲ ಹೆಚ್ಚಾಗಿ.."
"ಹೌದು ಎಲ್ಲಿ ಸಮಯ ಸಿಗುತ್ತೆ..? ಯಾವಾಗಲೂ ಏನಾದರೊಂದು ಕೆಲಸವಿರುತ್ತೆ ಅಲ್ಲದೆ ಎರಡು ಮಕ್ಕಳ ಉಪದ್ರ ಬೇರೆ.."

"ಹೌದ ಇಬ್ಬರೂ ಮಕ್ಕಳ..?"
"ಹೌದು ದೊಡ್ಡವಳಿಗೆ ಆರು ವರ್ಷ ಚಿಕ್ಕವಳಿಗೆ ಒಂದು ವರ್ಷ"
"ದೊಡ್ಡವಳು ಶಾಲೆಗೆ ಹೋಗುತ್ತಾಳಾ..?"
 "ಇಲ್ಲ ಈ ವರ್ಷ ಸೇರಿಸಬೇಕು ನಾನಿನ್ನು ಬರ್ತೀನಿ ಕೆಲಸ ಇದೆ..?" ಎಂದು ಜಮೀಲಾ ಒಳಗೆ ಹೊರಟುಹೋದಳು

ಆರು ವರ್ಷವಾದರೂ ಮಗುವನ್ನು ಸ್ಕೂಲಿಗೆ ಸೇರಿಸಿಲ್ಲವೆಂದರೆ..? ಮಗುವಿಗೆ ಏನಾದರೂ ತೊಂದರೆ ಇರಬಹುದೇ.. ಎಂದು ಯೋಚಿಸಿದಳು ನಂತರ ಕಂಡವರ ಮನೆಯ ವಿಚಾರ ನನಗೇಕೆ ಎಂದುಕೊಂಡು ಸುಮ್ಮನಾದಳು....

ಸಾಜೀದ ತನಗೆ ಪಕ್ಕದ ಮನೆಯವರು ಪರಿಚಯವಾದುದನ್ನು ಸಂಜೆ ಹಕೀಂನಿಗೆ ತಿಳಿಸಿದಳು

ಹೀಗೆ ಒಂದು ದಿನ ಬೆಳಿಗ್ಗೆ ತಿಂಡಿ ರೆಡಿ ಮಾಡುತ್ತಿದ್ದಾಗ ಪಕ್ಕದ ಮನೆಯಲ್ಲಿ ಗಲಾಟೆ ಕೇಳಿಸಿತು ಹುಡುಗಿಯೊಬ್ಬಳಿಗೆ ಹೊಡೆಯುತ್ತಿರುವ ಶಬ್ದ ಪಕ್ಕದ ಮನೆ ಜಮೀಲಾಳ ಧ್ವನಿ ಜೋರಾಗಿ ಕೇಳುತ್ತಿತ್ತು..

"ಈ ಮನೆಯ ಅನಿಷ್ಠ ನೀನು ಎಲ್ಲಾದರೂ ಹಾಳಾಗಿ ಹೋಗು ನನಗೆ ಮುಖ ತೋರಿಸಬೇಡ.." ಎಂದು ಬೈಯುತ್ತಿದ್ದಳು
ಮಗು ಜೋರಾಗಿ ಅಳುತ್ತಿತ್ತು ಸುಮಾರು ಹೊತ್ತು ಬೈಯ್ದ ಜಮೀಲಾ ನಂತರ ಸುಮ್ಮನಾದಳು

"ಸಾಜೀ.. ಏನದು ಅಷ್ಟೊಂದು ಗಲಾಟೆ ಹೀಗೆ ಆದರೆ ನೀನು ಓದುವುದು ಹೇಗೆ..?"
"ಮಗು ಏನೋ ಗಲಾಟೆ ಮಾಡಿದ್ದಾಳೆ ಇರಬೇಕು ಅದಕ್ಕೆ ಬೈಯುತ್ತಿದ್ದಾರೆ ಜಮೀಲಾ.."
"ಅದಕ್ಕೆ ಈ ರೀತಿ ಕೂಗಾಡುವುದೇ..? ಅಕ್ಕಪಕ್ಕದಲ್ಲಿರುವವರಿಗೆ ತೊಂದೆರೆಯಾಗುತ್ತೆ ಎನ್ನುವ ಪರಿಜ್ಞಾನ ಬೇಡವಾ..?"
"ಹೋಗಲಿ ಬಿಡಿ ಈಗ ನಾನೇನು ಓದುತ್ತಿಲ್ಲವಲ್ಲ.." ಎಂದಳು ಸಾಜೀದ

ಸಾಜೀದ ಆ ದಿನ ಸಂಜೆ ಹೊರಗೆ ಕುಳಿತಿದ್ದಾಗ ಜಮೀಲಾಳ ಮಗಳನ್ನು ಕಂಡಳು ಮನೆಯ ಬಾಗಿಲ ಬಳಿ ನಿಂತಿದ್ದ ಆ ಹುಡುಗಿಯನ್ನು ತನ್ನ ಮನೆಗೆ ಕರೆದಳು ಆ ಮಗು ತನ್ನ ಕಂಗಳಿಂದ ಸುತ್ತಲೂ ನೋಡಿತು ಬಾಚದ ತಲೆಕೂದಲು ತಲೆ ತುಂಬಾ ಹರಡಿತ್ತು ನೋಡಲು ಮುದ್ದುಬೊಂಬೆಯ ಹಾಗೆ ಇದ್ದಳು..

"ಮೋಳು ಬಾಯಿಲ್ಲಿ.."
"ನನ್ನ ಹೆಸರು ಮೋಳು ಅಲ್ಲ ಸಫಾ.. ಎಂದು.."
"ಹೌದಾ ತುಂಬಾ ಚೆನ್ನಾಗಿದೆ ನಿನ್ನ ಹೆಸರು ಬಾಯಿಲ್ಲಿ.."
ಮಗು ನಿಧಾನವಾಗಿ ಹತ್ತಿರ ಬಂದಿತು ಸಾಜೀದ ಆ ಮಗುವನ್ನು ಹತ್ತಿರಕ್ಕೆಳೆದುಕೊಂಡು ತಲೆಗೂದಲನ್ನು ಸರಿ ಮಾಡುತ್ತಾ..

"ತಲೆ ಬಾಚಿ ಕ್ಲಿಪ್ ಹಾಕಲಿಲ್ಲವಾ ನಿನ್ನ ಅಮ್ಮ.."
"ನನ್ನ ಅಮ್ಮನಿಗೆ ಟೈಮಿಲ್ಲ ಆಂಟಿ.."
"ಹೌದಾ ಹಾಗಾದರೆ ನಾನೇ ಬಾಚುತ್ತೇನೆ.." ಎಂದು ನೀಟಾಗಿ ತಲೆ ಬಾಚಿ ಕೂದಲು ಮುಖದ ಮೇಲೆ ಬರದಂತೆ ಕ್ಲಿಪ್ ಹಾಕಿದಳು

"ಸಫಾ.. ನೀನು ಜಾಣಮಗು ಅಲ್ಲವಾ..!!"
"ಅಲ್ಲ ಆಂಟಿ ನಾನು ಜಾಣ ಅಲ್ಲ."
"ಹಾಗಂತ ನಿನಗೆ ಯಾರು ಹೇಳಿದ್ದು.."
"ಅಮ್ಮ.."
"ಹೌದಾ ಅದಕ್ಕೆ ನಾನು ಕೇಳಿದ್ದು ಇವತ್ತು ಬೆಳಿಗ್ಗೆ ಅಮ್ಮ ನಿನ್ನನ್ನು ತುಂಬಾ ಬೈಯುತ್ತಿದ್ದ ಹಾಗಿತ್ತು.."
"ಹೌದು ಆಂಟಿ."
"ನೀನೇನು ಮಾಡಿದೆ.."
"ನಾನು ಹಾಲು ಚೆಲ್ಲಿಬಿಟ್ಟೆ ನಾನೇನೂ ಬೇಕೆಂದು ಚೆಲ್ಲಲಿಲ್ಲ ಆಂಟಿ ಅದಕ್ಕೆ ಅಮ್ಮ ಹೊಡೆದದ್ದು.."
"ಹೌದಾ.. ಹೋಗಲಿ ಬಿಡು ಇನ್ನುಮುಂದೆ ಅಡುಗೆ ಮನೆಗೆ ಹೋಗಬೇಡ.."
"ಏನಂಟಿ ನೀವು ಅಮ್ಮನ ಕೈಯಲ್ಲಿ ಎಲ್ಲಾ ಕೆಲಸ ಮಾಡೋದಿಕ್ಕೆ ಆಗೋದಿಲ್ಲ ನಾನು ಕೆಲಸ ಮಾಡುತ್ತೀನಿ.."
"ಅಬ್ಬಾ..!! ನನ್ನ ಮುದ್ದು ನಿನಗೆ ಎಷ್ಟು ಬುದ್ದಿ ಇದಯೇ..? ಅದೆಲ್ಲಾ ಸರಿ ನೀನು ಸ್ಕೂಲಿಗೆ ಯಾಕೆ ಸೇರಿಕೊಂಡಿಲ್ಲ.."
"ನನಗೂ ಸ್ಕೂಲಿಗೆ ಹೋಗಲು ಆಸೆಯಿದೆ ಆಂಟಿ ಆದರೆ ಅಮ್ಮ ಯಾಕೋ ಸೇರಿಸಿಲ್ಲ.."
"ಯಾಕೆ ಸೇರಿಸಿಲ್ಲ."
"ನನಗೆ ಗೊತ್ತಿಲ್ಲ ಆಂಟಿ.."
"ನಾನು ನಿನ್ನ ಅಮ್ಮನಿಗೆ ಹೇಳುತ್ತೀನಿ ಬಿಡು.." ಎಂದಳು ಸಾಜೀದ

" ಸಫಾ.." ಎಂದು ಜಮೀಲಾ ಕೂಗಿದಳು
"ನೋಡು ನಿನ್ನಮ್ಮ ಕರೆಯುತ್ತಿದ್ದಾರೆ ಹೋಗು.." ಎಂದಳು
ಸಫಾ ಮನೆಗೆ ಓಡಿದಳು ಸಾಜೀದ ಈ ವಿಷಯ ಜಮೀಲಾಳಿಗೆ ಹೇಳಿ ಸಫಾಳನ್ನು ಸ್ಕೂಲಿಗೆ ಸೇರಿಸಬೇಕೆಂದು ತಿರ್ಮಾನಿಸಿದಳು

ಸಾಜೀದ ಅಂದು ಸಂಜೆ ವೇಳೆಗೆ ಜಮೀಲಾಳ ಮನೆಗೆ ಬಂದಳು
"ಬನ್ನಿ... ಬನ್ನಿ.." ಎಂದು ಗಾಬರಿಯಿಂದ ಸಾಜೀದಳನ್ನು ಮನೆಯೊಳಗೆ ಕರೆದಳು ಜಮೀಲಾ ಮನೆಯಲ್ಲಿ ಅಲ್ಲಲ್ಲಿ ಹರಡಿದ್ದ ಸಾಮಾನು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಬಟ್ಟೆಬರೆಗಳು ಜಮೀಲಾ ಮನೆಯನ್ನು ಎಷ್ಟರಮಟ್ಟಿಗೆ ಸ್ವಚ್ಛತೆಯಿಂದ ಇಡುತ್ತಾಳೆ ಎಂಬುದನ್ನು ಸೂಚಿಸಿದವು

"ಬನ್ನಿ.. ಕುಳಿತುಕೊಳ್ಳಿ ಮನೆಯೆಲ್ಲಾ ಗಲೀಜಾಗಿದೆ ಏನು ತಿಳಿದುಕೊಳ್ಳಬೇಡಿ.."
"ಪರವಾಗಿಲ್ಲ ಬಿಡಿ.. ಅಂದ ಹಾಗೆ ನಾನೊಂದು ವಿಷಯವನ್ನು ಮಾತಾಡೋಣ ಎಂದು ಬಂದೆ..?"
"ಹೇಳಿ ಸಾಜೀದ ಏನು ವಿಷಯ.."
"ನಿಮ್ಮ ಮಗಳು ಸಫಾ.. ತುಂಬಾ ಬುದ್ದಿವಂತೆ ಅವಳನ್ನು ಸ್ಕೂಲಿಗೆ ಸೇರಿಸಿ."
"ಸೇರಿಸಬೇಕು ಏನೋ ಹೀಗೆ ತಾಪತ್ರಯ ಚಿಕ್ಕ ಮಗಳು ಮರ್ವಾಳ ಬಾಣಂತನಕ್ಕೆ ಅಮ್ಮನ ಮನೆಗೆ ಹೋಗಿದ್ದೆ ಆಗ ಇವಳನ್ನು ಕರೆದುಕೊಂಡು ಹೋಗಿದ್ದೆ ಹೀಗಾಗಿ ಹೋದ ವರ್ಷ ಸೇರಿಸಲಿಲ್ಲ.."
"ಈ ವರ್ಷವಾದರೂ ಸೇರಿಸಬಹುದಿತ್ತಲ್ಲ.."
"ಸೇರಿಸಬಹುದಿತ್ತು ಮರ್ವಾ ಕೈ ಮಗು ಹೀಗಿರುವಾಗ ಇವಳಿಗೂ ನಾನು ಹೇಗೆ ರೆಡಿ ಮಾಡಿ ಕಳುಹಿಸಲಿ ಹೇಳಿ.."
"ನಿಮಗೆ ಕಷ್ಟವೆಂದು ಮಗುವಿನ ಭವಿಷ್ಯ ಹಾಳು ಮಾಡಬಾರದಲ್ಲವೇ..?"
"ಅದು ನನಗೂ ಗೊತ್ತಿದೆ ಬಿಡಿ ಬೇರೆಯವರಿಂದ ಹೇಳಿಸಿಕೊಳ್ಳಬೇಕಾಗಿಲ್ಲ.." ವ್ಯಂಗ್ಯವಾಗಿ ನುಡಿದಳು

ನೀನು ನಮ್ಮ ಮನೆಯ ವಿಷಯಕ್ಕೆ ತಲೆ ಹಾಕಬೇಡ ಎಂದು ಪರೋಕ್ಷವಾಗಿ ನುಡಿದಿದ್ದಳು ಜಮೀಲಾ.. ಸಾಜೀದಳಿಗೆ ಮುಖಭಂಗವಾದಂತಾಗಿ ಎದ್ದು ನಿಂತಳು

"ಸರಿ ನಾನಿನ್ನು ಬರುತ್ತೇನೆ.." ಎಂದು ಅವಳ ಉತ್ತರಕ್ಕೂ ಕಾಯದೆ ಹೊರನಡೆದಳು ಜಮೀಲಾ ಏನು ಮಾತನಾಡದೆ ಸುಮ್ಮನೆ ಕುಳಿತೆ ಇದ್ದಳು

ರಾತ್ರಿ ಹಕೀಂನಿಗೆ ಈ ವಿಚಾರ ತಿಳಿಸಿದಾಗ.. "ಏನಾದರೂ ಮಾಡಲಿ ಏಲ್ಲಾದರೂ ಹಾಳಾಗಲಿ ಬಿಡು ಅವಳ ಹತ್ತಿರ ನೀನ್ಯಾಕೆ ಮಾತನಾಡುತ್ತೀಯಾ..?" ಎಂದು ಗದರಿದ
ಸ್ಕೂಲಿಗೆ ಹೋಗುವ ಮಹಾದಾಸೆ ಇಟ್ಟುಕೊಂಡಿರುವ ಸಫಾಳ ಮುಖ ಸಾಜೀದಳ ಕಣ್ಣೆದುರು ತೇಲಿ ಬಂತು.. "ನನ್ನನ್ನು ಕ್ಷಮಿಸು ಪುಟ್ಟ" ಮನದಲ್ಲಿಯೇ ಹೇಳಿಕೊಂಡಳು

ದೊಡ್ಡವರ ವಿಚಾರ ಮಗುವಿಗೆ ಹೇಗೆ ಅರ್ಥವಾಗಬೇಕು ಆಂಟಿ ಹೇಳಿರುವುದರಿಂದ ಅಮ್ಮ ಸ್ಕೂಲಿಗೆ ಸೇರಿಸುತ್ತಾಳೆ ಎಂದೇ ಅದು ನಂಬಿಕೊಂಡಿತ್ತು ಅಂದಿನಿಂದ ಅದಕ್ಕೆ ಸಾಜೀದಳನ್ನು ಕಂಡರೆ ಅಪಾರ ಪ್ರೀತಿ

ದಿನಕ್ಕೆ ಒಂದು ಬಾರಿಯಾದರೂ ಸಫಾ ಅವಳ ಮನೆಗೆ ಬರದೆ ಇರುತ್ತಿರಲಿಲ್ಲ ಆಗ ಸಾಜೀದ ತಿನ್ನಲು ಚಾಕೊಲೇಟು ಬಿಸ್ಕತ್ತು ಎನಾದರೂ ಕೊಡುತ್ತಿದ್ದಳು ಆದರೆ ಸಫಾ.. ಆ ಮಗು ಕೂಡಲೇ ತಿನ್ನುತ್ತಿರಲಿಲ್ಲ

"ಯಾಕೆ ಪುಟ್ಟ ತಿನ್ನೋದಿಲ್ಲ.."
"ಮರ್ವಾಳಿಗೂ ಕೊಡುತ್ತೀನಿ ಆಂಟಿ.."
"ಎಷ್ಟು ಜಾಣಮಗು ನೀನು..!! ನಾನು ಮರ್ವಾಳಿಗೆ ಬೇರೆ ಕೊಡುತ್ತೇನೆ ನೀನು ತಿನ್ನು.." ಎಂದಾಗಲೇ ಸಫಾ ತಿನ್ನುತ್ತಿದ್ದಳು

ಆ ದಿನ ಸಾಜೀದ ಸಫಾಳಿಗೆ ಎ ಬಿ ಸಿ ಡಿ ಬರೆಯುವುದನ್ನು ಕಲಿಸುತ್ತಿದ್ದಳು ಅಪರೂಪಕ್ಕೆ ದುಲೈಕ ಅವಳ ಮನೆಗೆ ಬಂದರು

"ಏನಮ್ಮ ಸಾಜೀ.. ಚೆನ್ನಾಗಿದ್ದಿಯಾ.."
"ಓಹೋ..ಆಂಟಿ ಬನ್ನಿ ಬನ್ನಿ.." ಎಂದು ಸ್ವಾಗತಿಸಿದಳು

"ಏನು ಮಾಡುತ್ತಿದ್ದಿಯಾ..?"
"ಕಾಲೇಜಿಗೆ ರಜೆ ಇದೆ ಪರೀಕ್ಷೆಗೆ ಓದುತ್ತಿದ್ದೆ ಆಂಟಿ.."
"ಹೌದಾ.. ಸರಿ ಸರಿ ಓದಿಕೋ ಈ ಕಾಲದಲ್ಲಿ ಶಿಕ್ಷಣ ಎಲ್ಲರಿಗೂ ಅತ್ಯಗತ್ಯ ಸ್ವಲ್ಪ ಎಣ್ಣೆ ತಿಂಡಿ ಮಾಡಿದ್ದೆ ನನಗೊಂದಿಷ್ಟು ಕೊಟ್ಟು ಹೋಗೋಣ ಎಂದು ಬಂದೆ.."
"ನೀವು ಯಾಕೆ ತೊಂದರೆ ತಗೊಂಡಿರಿ ಆಂಟಿ.."
"ತೊಂದರೆ ಏನಿಲ್ಲಾ ಮಾಡಿದ್ದೆ ತಂದೆ ಅಷ್ಟೇ.. ಅಂದ ಹಾಗೆ ನಿಮ್ಮ ತಾಯಿ ಮತ್ತೆ ಬರಲಿಲ್ಲವಾ..!!"
"ಇಲ್ಲ ನನಗೆ ಪರೀಕ್ಷೆ ಇದೆಯಲ್ಲ ತೊಂದರೆ ಆಗುತ್ತದೆ ಎಂದು ಬಂದಿಲ್ಲ ಮೊನ್ನೆ ನನ್ನ ತಮ್ಮ ಬಂದಿದ್ದ.."
"ಹೌದಾ.. ಈ ಹುಡುಗಿ ಜಮೀಲಾಳ ಮಗಳಲ್ಲವೇ..?" ಸಫಾಳನ್ನು ಕಂಡು ಕೇಳಿದರು

"ಹೌದು ಆಂಟಿ ಇನ್ನೂ ಸ್ಕೂಲಿಗೆ ಸೇರಿಸಿಲ್ಲ ಇಲ್ಲಿಗೆ ಬಂದು ಏನಾದರೂ ಬರೆಯುತ್ತಾ ಕುಳಿತಿರುತ್ತಾಳೆ.." ಎಂದಳು
"ಸಫಾ ನಿನಗೆ ತಿಂಡಿ ಕೊಡಲಾ..?" ಎಂದು ಸಫಾಳನ್ನು ಕೇಳಿದಳು ಸಾಜೀದ
"ಕೊಡಿ ಆಂಟಿ ತುಂಬಾ ಹಸಿವಾಗುತ್ತಾ ಇದೆ.." ಎಂದಳು ದುಲೈಕರವರು ತಂದ ತಿಂಡಿಯನ್ನು ಒಂದು ತಟ್ಟೆಯಲ್ಲಿ ಹಾಕಿಕೊಟ್ಟಳು

"ಆ ಹೆಂಗಸು ಒಂದರ ವಿಚಿತ್ರ ಅದಕ್ಕೆ ಹೇಳುವವರು ಯಾರು.." ದುಲೈಕ ಉದಾಸೀನವಾಗಿ ನುಡಿದರು
"ಯಾಕೆ ಆಂಟಿ ಹಾಗೆ ಎನ್ನುತ್ತಿರಾ..?"
"ನೀನು ಇನ್ನೂ ಹೊಸಬಳು ನಿನಗೆ ಮುಂದೆ ಗೊತ್ತಾಗುತ್ತದೆ."
"ಗೊತ್ತಾಗಿದೆ ಆಂಟಿ ಆಕೆ ಮೊನ್ನೆ ನನಗೂ ಮುಖ ಮುರಿಯುವ ಹಾಗೆ ಮಾತಾಡಿದಳು.."
"ಅವಳ ಸ್ವಭಾವವೇ ಹಾಗೆ ಬಿಡು ಯಾರೊಂದಿಗೂ ಬೆರೆಯೋದಿಲ್ಲ ಗೂಬೆ.."

ಮಗುವಿನ ಎದುರಿಗೆ ಬೈಯಬಾರದೆಂದು ಕೈಯಿಂದ ಸನ್ನೆ ಮಾಡಿದಳು ಸಾಜೀದ ದುಲೈಕರವರಿಗೆ ಅರ್ಥವಾಯಿತು

"ಆಂಟಿ ನಾನಿನ್ನು ಹೋಗುತ್ತೀನಿ ಅಮ್ಮ ಕೂಗುತ್ತಾರೆ ಈಗ ನಾಳೆ ಬರುತ್ತೇನೆ.." ಎಂದು ಸಫಾ ಮನೆಗೆ ಓಡಿದಳು

ಸಫಾ ಹೊರಟು ಹೋದಮೇಲೆ ಸಾಜೀದ ನಿಟ್ಟುಸಿರುಗೆರೆದಳು

"ನೋಡಿ ಆ ಮಗು ಎಷ್ಟು ಬುದ್ದಿವಂತೆ ಆದರೆ ಜಮೀಲಾ ಇನ್ನು ಸ್ಕೂಲಿಗೆ ಸೇರಿಸಿಲ್ಲ ಅದರ ತಂದೆಗಾದರೂ ಬುದ್ದಿ ಬೇಡವೇ..?"
"ಅಯ್ಯೋ ಬಿಡು ಸಾಜೀ.. ನಮಗ್ಯಾಕೆ ಕಂಡವರ ಉಸಾಬರಿ..? ಆಕೆಗೆ ಹೇಳುವವರ್ಯಾರು ಮೊದಲು ಈ ಮನೆಯಲ್ಲಿದ್ದವರು ಅವಳಿಗೆ ಹೇಳುವುದಕ್ಕೆ ಹೋಗಿ ಚೆನ್ನಾಗಿ ಛೀಮಾರಿ ಮಾಡಿಸಿಕೊಂಡರು ಅದನ್ನು ನೋಡಿ ನಾನು ಅವಳಿಗೆ ಏನನ್ನೂ ಹೇಳುವುದಿಲ್ಲ.."

ಹೀಗೆ ಸ್ವಲ್ಪ ಹೊತ್ತು ಮಾತನಾಡಿ ದುಲೈಕ ಹೊರಟುಹೋದರು
ಸಾಜೀದ ಪರೀಕ್ಷೆ ಇರುವುದರಿಂದ ಓದತೊಡಗಿದಳು ಮದುವೆಯಾಗಿ ಬಂದಾಗಿನಿಂದಲೂ ಅವಳು ತವರು ಮನೆಗೆ ಹೋಗಿರಲಿಲ್ಲ ಏಕೋ ಹೋಗಲು ಹಿಂಜರಿಕೆ ಆ ಮನೆ ತನ್ನದಲ್ಲ ಎಂಬ ಭಾವನೆ ಮೈಮೂನರನ್ನು ಬಾಯಿ ಮಾತಿಗೆ ಅಮ್ಮ ಎಂದು ಕರೆಯುತ್ತಿದ್ದರೂ ಹೃದಯದಲ್ಲಿ ಹೆತ್ತ ತಾಯಿಯಲ್ಲ ಎಂಬ ವೇದನೆ..

ಮೈಮೂನರವರು ಅವಳನ್ನು ನೋಡಲು ಬಂದಿರಲಿಲ್ಲ ಸಾಜೀದಳ ಮನಸ್ಸು ಸರಿಹೋಗಲಿ ಅಲ್ಲಿಯವರೆಗೂ ಸುಮ್ಮನಿರಿ ಸ್ವಲ್ಪ ದಿನ ನಿಮ್ಮಿಂದ ದೂರವಿದ್ದರೆ ಆಗ ಅವಳಾಗಿಯೇ ನಿಮ್ಮನ್ನು ನೋಡಬೇಕೆಂದು ಹಾತೊರೆಯುತ್ತಾಳೆ ಎಂದು ಹಮೀದಾಕ ಮೈಮೂನರಿಗೆ ಹಕೀಂ ಹೇಳಿದ್ದ ಅವನು ಆ ರೀತಿ ಹೇಳಿದ್ದನೆಂದು ಸಾಜೀದಳಿಗೇನು ಗೊತ್ತು ಪಾಪ

ಸಾಜೀದ ಗಂಡನೊಡನೆ ಆ ವಿಚಾರವನ್ನು ಮಾತನಾಡುತ್ತಿದ್ದಾಗ
"ನಮ್ಮ ತಂದೆ ತಾಯಿ ಒಂದು ಬಾರಿಯೂ ನನ್ನ ನೋಡಲು ಬರಲಿಲ್ಲ ಎಷ್ಟದರೂ ನಾನು ಅವರ ಸಾಕುಮಗಳು.." ಎಂದಳು

"ಸಾಜೀ.. ಹಾಗೆಲ್ಲಾ ಹೇಳಬೇಡ ನೀನೇ ಏನೇನೋ ಕಲ್ಪಿಸಿಕೊಳ್ಳುತ್ತೀಯಾ.."
"ಮತ್ತಿನ್ನೇನು ನಿಜವಾಗಿಯೂ ಪ್ರೀತಿಯಿದ್ದಿದ್ದರೆ ಒಂದು ಬಾರಿಯಾದರೂ ನೋಡಲು ಬರುತ್ತಿರಲಿಲ್ಲವೇ..?"

ಹಕೀಂ ತಾನು ಅವರಿಗೆ ಹೇಳಿರುವ ವಿಷಯ ಅವಳಿಂದ ಮುಚ್ಚಿಟ್ಟು ಹೀಗಂದ
"ಮೊನ್ನೆ ನಿಮ್ಮ ತಂದೆ ಸಿಕ್ಕಿದ್ದರು ಆಗ ನಾವು ನಿಮ್ಮನೆಗೆ ಬರುತ್ತೇವೆ ಎಂದರು ನಾನು ಅವಳಿಗೆ ಪರೀಕ್ಷೆ ಇದೆ ಓದುತ್ತ ಇರುತ್ತಾಳೆ ಎಂದೆ ಅದಕ್ಕೆ ಸರಿ ಹಾಗಾದರೆ ನೀವೇ ಬಿಡುವಿರುವಾಗ ಬನ್ನಿ ನಾವು ಬಂದರೆ ಅವಳು ಓದುವುದು ಇಲ್ಲ ಸುಮ್ಮನೆ ನಮ್ಮೊಂದಿಗೆ ಸಮಯ ಕಳೆಯುತ್ತಾಳೆ ಪರೀಕ್ಷೆ ಎಲ್ಲಾ ಮುಗಿದ ಮೇಲೆ ಬರುತ್ತೇವೆ ಎಂದರು.."
"ಹೌದಾ..? ಮತ್ತೆ ನೀವು ನನಗೆ ಹೇಳಲೇ ಇಲ್ಲ.."
"ಕೆಲಸದ ಗಡಿಬಿಡಿಯಲ್ಲಿ ಮರೆತುಹೋಗಿತ್ತು ಈಗ ಈ ಮಾತಿನಲ್ಲಿ ನೆನಪಿಗೆ ಬಂತು.."
"ಹ್ಞೂಂ ಸರಿ.."
"ಸಂಜೆ ಹೋಗಿ ಬರೋಣವಾ..?"
"ಈಗ ಬೇಡ.."
ಅವನು ಒತ್ತಾಯ ಮಾಡದೆ ಸುಮ್ಮನಾದ ಅವಳು ಅಡುಗೆ ಮಾಡಲು ಒಳ ನಡೆದಳು

ಹೀಗೆ ತಿಂಗಳುಗಳು ಕಳೆಯುತ್ತಾ ಇತ್ತು.. ಸಾಜೀದ ಗರ್ಭಿಣಿಯಾದಳು

"ಸಾಜೀ..!! ನನಗೆ ಇವತ್ತು ತುಂಬಾ ಖುಷಿಯಾಗುತ್ತಿದೆ.." ಎಂದು ಅವಳನ್ನು ತಬ್ಬಿಕೊಂಡರು ನುಡಿದ

"ಸಾಕು ಸುಮ್ಮನಿರಿ.. ನನಗೆ ನಾಚಿಕೆಯಾಗುತ್ತಿದೆ.."
"ನಾಚಿಕೆಯೇಕೆ ನಿನಗೆ ಸಂತೋಷವಾಗಿಲ್ಲವಾ..?"
"ಪ್ರಪಂಚದಲ್ಲಿ ಯಾರಿಗೂ ಆಗದೆ ಇರುವುದೇನು ನನಗೆ ಆಗಿಲ್ಲವಲ್ಲ.."
"ಇರಬಹುದು ಆದರೆ ನಿನ್ನನ್ನು ಅಮ್ಮ ಎನ್ನಲು ಒಂದು ಪುಟ್ಟ ಮಗು ಬರುತ್ತದೆ ಎಂದು ಒಂದು ತರಹದ ಸಂತೋಷವಲ್ಲವಾ.."
ಅವಳು ಅವನೆದೆಯಲ್ಲಿ ಮುಖವಿಟ್ಟು ತಬ್ಬಿಕೊಂಡಳು

"ಸರಿ ನಿಮ್ಮಮ್ಮನಿಗೆ ಪೋನು ಮಾಡಿ ತಿಳಿಸು.."
"ಈಗಲೇ ಬೇಡ ಸುಮ್ಮನಿರಿ.."
"ಈಗ ಹೇಳದೆ ಇನ್ನು ಯಾವಾಗ ಹೇಳುವುದು.."
"ಯಾವಾಗಲಾದರೂ ಹೇಳೋಣ ನನಗೆ ಮಗುವಾದರೆ ಅವರಿಗೇನು..? ನಾನು ಅವರ ಸ್ವಂತ ಮಗಳೇನೂ ಅಲ್ಲವಲ್ಲ.."
"ಸಾಜೀ..ನೀನಿನ್ನೂ ಆ ವಿಚಾರವನ್ನೆ ಯೋಚಿಸುತ್ತಿದ್ದೀಯಾ..? ಅದೆಲ್ಲಾ ಮರೆತು ಬಿಡು.."
"ಹೇಗೆ ಮರಯಲಿ ಹಕೀ.. ನೀವು ನನ್ನ ಸ್ಥಾನದಲ್ಲಿದ್ದರೆ ನನ್ನ ಕಷ್ಟ ನಿಮಗೆ ತಿಳಿಯುತ್ತಿತ್ತು.."
"ನಿನ್ನದು ಯಾಕೋ ಅತಿಯಾಯಿತು ಸಾಜೀ.."
"ಏನೋ ನಾನು ಇರುವುದೇ ಹಾಗೆ ನಿಮಗೇನು ಕಷ್ಟ.."
"ಸರಿ ಬಿಡು ನಾಳೆಯಿಂದ ಪರೀಕ್ಷೆ ತಾನೇ ಅದರ ಬಗ್ಗೆ ಗಮನ ಕೊಡು.." ಎಂದು ಹಕೀಂ ಸುಮ್ಮನಾದ

ಅವನು ಅಂಗಡಿಗೆ ಹೊರಟ ನಂತರವೇ ಸಾಜೀದ ಓದಲು ಕುಳಿತಳು

ಅಷ್ಟರಲ್ಲಿ ಪಕ್ಕದ ಮನೆಯಿಂದ ಗಲಾಟೆ ಕೇಳಿಸಿತು ರಪರಪನೆ ಹೊಡೆಯುವ ಸದ್ದು

"ಹಾಳಾದವಳು ಮನೆ ಹಾಳಿ ಹೋಗು ಹೊರಗೆ ಇರಬೇಡ ಮನೆಯಲ್ಲಿ.." ಎಂದು ಜಮೀಲಾ ಸಫಾಳನ್ನು ಹೊರಗೆ ದಬ್ಬಿ ಬಾಗಿಲು ಹಾಕಿದಳು

"ಬಾಗಿಲು ತೆಗಿ ಅಮ್ಮಾ.. ಇನ್ನು ಹಾಗೆ ಮಾಡೋದಿಲ್ಲ.."
"ನೀನು ಅಲ್ಲೆ ಹೊರಗೆ ಬಿದ್ದಿರು ಒಳಗೆ ಬರಬೇಡ ಒಳಗೆ ಬಂದರೆ ನನ್ನ ಮಗುವನ್ನು ಸಾಯಿಸಿಬಿಡುತ್ತಿಯಾ.."

ಏನೂ ಅರಿಯದ ಹಸುಳೆ ಅಳುತ್ತಾ ಕುಳಿತುಬಿಟ್ಟಳು..

ಸಾಜೀದ ಹೊರಗೆ ಹೋಗಬಾರದೆಂದು ಎಷ್ಟೇ ಮನಸ್ಸನ್ನು ಗಟ್ಟಿ ಮಾಡಿಕೊಂಡರೂ ಅವಳಿಂದ ತಡೆಯಲಾಗಲಿಲ್ಲ ಎದ್ದು ಹೊರಗೆ ಬಂದಳು

"ಏನಾಯಿತು ಸಫಾ..?"
"ಆಂಟಿ.." ಎಂದು ಓಡಿ ಬಂದ ಸಫಾ ಸಾಜೀದಳನ್ನು ತಬ್ಬಿಕೊಂಡಳು
"ಏನಾಯಿತು ಸಫಾ.. ಯಾಕೆ ಅಮ್ಮ ಹೊಡೆದದ್ದು.."
"ಮಗು ಬಿದ್ದು ಬಿಟ್ಟಿತು ಆಂಟಿ ಆದರೆ ಅಮ್ಮ ನಾನೇ ಬೀಳಿಸಿದೆ ಎಂದು ನನ್ನನ್ನು ಹೊಡೆದರು ನಿಜವಾಗಿಯೂ ನಾನು ಬೀಳಿಸಲಿಲ್ಲ ಆಂಟಿ.."
"ಹೌದಾ.. ಸರಿ ಅಳಬೇಡ ಹೋಗಲಿ ಬಿಡು ಬಾ ನಾನು ನಿನಗೆ ಹಾಲು ಕೊಡುತ್ತೇನೆ.." ಎಂದು ಸಫಾಳ ಕಣ್ಣೊರೆಸಿದಳು

"ಆಂಟಿ ನಮ್ಮಮ್ಮನಿಗೆ ನನ್ನ ಕಂಡರೆ ಆಗೋದಿಲ್ಲ ನನ್ನ ಫ್ರೆಂಡ್ ಸೈಮಾಳ ಅಮ್ಮ ಎಷ್ಟು ಒಳ್ಳೆಯವರು ಗೊತ್ತಾ.."
"ನೀನು ಜಾಣಮರಿ ಅಲ್ಲವಾ ಹಾಗೆಲ್ಲಾ ಹೇಳಬಾರದು ಆಯಿತಾ.. ನಿಮ್ಮ ತಾಯಿಯಲ್ಲವಾ ಅವರು.."
"ಅವರಿಗಿಂತ ನೀವೇ ಒಳ್ಳೆಯವರು ಆಂಟಿ ನೀವೇ ನನ್ನ ಅಮ್ಮನಾಗಬೇಕಿತ್ತು.. ಈಗಲೂ ನೀವೇ ನನ್ನ ಅಮ್ಮ ಆಗಿ ಆಂಟಿ.."

ಮಗು ಲೀಲಜಾಲವಾಗಿ ಆ ಮಾತು ಹೇಳಿದರೂ ಅವಳಿಗೆ ನೋವಾಯಿತು

"ನಿಮ್ಮ ಅಪ್ಪಾ.. ಒಳ್ಳೆಯವರಾ ಸಫಾ..?"
"ನಮ್ಮ ಅಪ್ಪ ಒಬ್ಬರು ನಮ್ಮಮ್ಮ ಏನೂ ಮಾಡಿದರೂ ಬೈಯುವುದಿಲ್ಲ ನನ್ನನ್ನೇ ಬೈಯುತ್ತಾರೆ ಅಮ್ಮನಿಗೆ ಕಷ್ಟ ಕೊಡಬೇಡ ಎಂದು.."
"ನಿನ್ನ ತಂಗಿ ಮರ್ವಾಳಿಗೆ.."
"ಅವಳನ್ನು ಬೈಯುವುದಿಲ್ಲ ಯಾಕೆ ಆಂಟಿ.."
"ಅವಳು ನಿನಗಿಂತ ಚಿಕ್ಕವಳು ನೋಡು ಅದಕ್ಕೆ.."
"ನಾನು ಅಮ್ಮನಿಗಿಂತ ಚಿಕ್ಕವಳು ಆದರೂ ಅಪ್ಪಾ.. ಯಾಕೆ ಬೈಯುತ್ತಾರೆ.."

ಮಗುವಿನ ಪ್ರಶ್ನೆಗೆ ನಿರಂತಳಾದಳು ಸಾಜೀದ

"ಹೇಳಿ ಆಂಟಿ..?"
"ನೀನು ಒಳ್ಳೆಯ ಬುದ್ಧಿ ಕಲಿತುಕೊಳ್ಳಲಿ ಎಂದು ಹೇಳುತ್ತಾರೆ.."
"ಹೋಗಿ ಆಂಟಿ ನನಗೇನೂ ಕೆಟ್ಟ ಬುದ್ಧಿಯಿಲ್ಲ.."
"ಸರಿನಮ್ಮ ನೀನು ಜಾಣೆ ಈಗ ಮನೆಗೆ ಹೋಗು ನಿಮ್ಮ ಅಮ್ಮ ಬೈಯಬಹುದು ನೀನು ಇಲ್ಲಿದ್ದರೆ.."
"ಅಮ್ಮ ಬಾಗಿಲು ತೆಗೆಯದಿದ್ದರೆ.."
"ಈಗ ತೆಗೆಯುತ್ತಾರೆ ಹೋಗು.." ಎಂದಳು

ಸಫಾ ಹೋಗಿ ಬಾಗಿಲು ತಟ್ಟಿದಾಗ ಬಾಗಿಲು ತೆರೆದ ಜಮೀಲಾ

"ಎಲ್ಲಿಗೆ ಹೋಗಿದ್ದೆಯೇ ಕತ್ತೆ.. ಅವಳ ಹತ್ತಿರ ಜಾಡಿ ಚುಚ್ಚುವುದಕ್ಕೆ ಹೋಗಿದ್ದೆ ತಾನೇ.. ಇನ್ನೊಂದು ಬಾರಿ ಅವಳ ಮನೆಗೆ ಹೋದರೆ ಕಾಲು ಮುರಿದು ಬಿಡುತ್ತೀನಿ.." ಎಂದು ಬೆನ್ನ ಮೇಲೆ ಗುದ್ದಿದಳು

ಸಫಾ "ಅಮ್ಮ" ಎಂದು ಜೋರಾಗಿ ಅಳತೊಡಗಿದಳು ಸಾಜೀದಳಿಗೆ ಎಲ್ಲಾ ಮಾತುಗಳು ಕೇಳುತ್ತಿದ್ದವು ಅವಳಿಗೆ ಕೇಳಿಸಲಿ ಎಂದೇ ಜೋರಾಗಿ ಬೈಯ್ದಿದ್ದಳು ಜಮೀಲಾ

ಇದೇಕೆ ಹೀಗೆ..? ಮಗು ಒಳ್ಳೆಯ ಬುದ್ಧಿ ಕಲಿಯಲೆಂದು ಹೊಡೆಯುತ್ತಾಳೋ ಅಥವಾ ಸಫಾ ಅವಳಿಗೆ ಬೇಡದ ಮಗುವೋ ಯಾರಿಗೆ ಗೊತ್ತು..? ತನ್ನನ್ನು ಒಮ್ಮೆಯೂ ತಾಯಿ ಹೊಡೆದದ್ದು ನೆನಪಿಲ್ಲ ಅಥವಾ ಈ ರೀತಿ ಬೈಯ್ದಿದ್ದು ಇಲ್ಲ ತಾನು ಏನೇ ತಪ್ಪು ಮಾಡಿದರೂ ಸಹನೆಯಿಂದ ತಿದ್ದುತ್ತಿದ್ದರು ಎನಿಸಿತು ಸಾಜೀದಳಿಗೆ

ಆದರೆ ನಿಜಕ್ಕೂ ಹೆತ್ತ ತಾಯಿಯಾಗಿದ್ದರೆ ಈ ರೀತಿ ಹೊಡೆಯುವ ಹಕ್ಕು ಇರುವುದೇನೋ ಯಾರಿಗೆ ಗೊತ್ತು..? ಹೊರಗಿನಿಂದ ತಂದ ಮಗು ನಾನು..? ಆ ಅಪರಾಧಿ ಮನೋಭಾವ ಸದಾ ಇದ್ದುದರಿಂದಲೇ ಹೊಡೆಯುತ್ತಿರಲಿಲ್ಲವೇನೋ ಅಲ್ಲಾಹನು ಶಿಕ್ಷಿಸುತ್ತಾನೆ ಎಂದೋ ಪಾಪ ಪ್ರಜ್ಞೆಯಿಂದ ತನ್ನನ್ನು ಪ್ರೀತಿಯಿಂದ ಬೆಳೆಸಿರಬಹುದೇನೋ ಎನಿಸಿತು ಸಾಜೀದಳಿಗೆ

ಮರುದಿನ ಪರೀಕ್ಷೆ ಇರುವುದರಿಂದ ಆ ವಿಚಾರವನ್ನು ಅಲ್ಲಿಗೆ ಮರೆತು ಓದಿನ ಕಡೆ ಗಮನ ಹರಿಸಿದಳು..

ಈಗ ಹಕೀಂನೇ ಮನೆಯ ಎಲ್ಲ ಕೆಲಸಗಳನ್ನು ವಹಿಸಿಕೊಂಡಿದ್ದ ಜೊತೆಗೆ ಸಾಜೀದ ಗರ್ಭಿಣಿ ಅವಳಿಗೆ ತೊಂದರೆಯಾಗಬಾರದು ಎಂದು ಎಲ್ಲ ಕೆಲಸಗಳನ್ನು ಅವನೇ ಮಾಡುತ್ತಿದ್ದ..

ಪ್ರತಿದಿನ ಪರೀಕ್ಷೆ ಬರೆಯಲು ಕಾಲೇಜಿಗೆ ತಾನೇ ಕರೆದುಕೊಂಡು ಹೋಗಿ ಪರೀಕ್ಷೆ ಮುಗಿದ ನಂತರ ಹೋಗಿ ಕರೆದುಕೊಂಡು ಬರುತ್ತಿದ್ದ..? ಹೆತ್ತವರು ಇಲ್ಲದಿದ್ದರೆ ಏನು ಅಲ್ಲಾಹನು ಒಳ್ಳೆಯ ಗಂಡನನ್ನು ಕರುಣಿಸಿದ್ದಾನಲ್ಲ ಎನ್ನುವ ನೆಮ್ಮದಿ ಸಾಜೀದಳಿಗೆ

ಆ ದಿನ ಕೊನೆಯ ಪರೀಕ್ಷೆ ಬರೆದು ಬಂದಾಗ ಹಕೀಂ ಖುಷಿಯಿಂದ

"ಸಾಜೀ.. ಇವತ್ತು ನೀನು ಗೆದ್ದು ಬಿಟ್ಟೆ.."
"ಸಾಕು ಇನ್ನು ಗೆದ್ದಿಲ್ಲ ಪರೀಕ್ಷೆ ಬರೆದಿರುವುದಷ್ಟೇ.. ಇನ್ನು ಅದರ ಫಲಿತಾಂಶ ಬಂದಿಲ್ಲ.."
"ಅದಕ್ಕೆನು ರಿಸಲ್ಟ್ ಯಾರಿಗೆ ಬೇಕು ನೀನು ಪರೀಕ್ಷೆ ಬರೆದೆಯಲ್ಲ ಅಷ್ಟೇ ಸಾಕು.."
"ಹ್ಞೂಂ.."
"ಸರಿ.. ಬಾ ಐಸ್‌ಕ್ರೀಂ ಪಾರ್ಲರಿಗೆ ಹೋಗೋಣ ನಿನಗಿಷ್ಟವಾದ ಐಸ್‌ಕ್ರೀಂ ಕೊಡಿಸುತ್ತೀನಿ.."
"ಬೇಡ ಹಕೀ.. ನನಗೆ ತುಂಬಾ ಸುಸ್ತಾಗಿದೆ ನಾನು ಸ್ವಲ್ಪ ಹೊತ್ತು ಮಲಗುತ್ತೀನಿ.."
"ಹೌದು ನೀನು ಹೇಳುವುದು ಸರಿ ನನ್ನ ಮಗನಿಗೂ ಸ್ವಲ್ಪ ರೆಸ್ಟ್ ಬೇಕಲ್ಲ.."
"ಮಗನಾ.. ಮಗ ಅನ್ನುತ್ತಿರಲ್ಲ ಅಕಸ್ಮಾತ್ ಮಗಳಾದರೆ..?"
"ಆಗಲಿ ಬಿಡು ಯಾವುದಾದರೇನು ಅದು ನಮ್ಮದೇ ತಾನೇ.."
"ನಮ್ಮದೇ ಮಗುವಾದರೆ ನಮಗೆ ಸಿಗುವ ಸಂತೋಷವೇ ಬೇರೆ ಅಲ್ಲವಾ.."
"ಸಾಜೀ.. ಏನೇನೋ ಯೋಚಿಸಬೇಡ ಹೋಗಿ ಮಲಗು" ಹಕೀಂ ಮಾತು ಬದಲಾಯಿಸಿದ

ಇತ್ತೀಚೆಗೆ ಸಫಾ ಮನೆಗೆ ಬರದಿರುವುದನ್ನು ಕಂಡ ಹಕೀಂ ಸಾಜೀದಳೊಡನೆ ಕೇಳಿದ

"ಎಲ್ಲಿ ಎರಡು ಮೂರು ದಿನಗಳಿಂದ ನಿನ್ನ ಫ್ರೆಂಡ್ ಬಂದೆ ಇಲ್ಲ.."
"ಯಾರು ಸಫಾನ.."
"ಹೌದು.."
"ಅವಳಮ್ಮ ಕಳಿಸುವುದಿಲ್ಲ ಅವಳಿಗೆ ನನ್ನ ಕಂಡರೆ ಆಗುವುದಿಲ್ಲ.."
"ಆದರೂ ಆ ಮಗು ಅವರಮ್ಮನ ಕಣ್ಣು ತಪ್ಪಿಸಿ ಬರಬೇಕಿತ್ತಲ್ಲವಾ.."
"ಏನೋ ಗೊತ್ತಿಲ್ಲ.."

ಹೀಗೆ ವಾರಗಳು ಕಳೆದರೂ ಸಫಾ ತನ್ನ ಮನೆಗೆ ಬರದಿದ್ದಾಗ ಸಾಜೀದಳಿಗೆ ಯೋಚನೆಯಾಯಿತು ಮನೆಯ ಹೊರಗೂ ಅವಳ ಸುಳಿವಿಲ್ಲ ಕೊನೆಗೆ ಜಮೀಲಾಳ ಗಂಡನನ್ನು ಕೇಳಿಯೇ ಬಿಟ್ಟಳು

"ಸಫಾ ಎಲ್ಲಿ ಕಾಣಿಸುತ್ತಿಲ್ಲ.."
"ಅವಳಿಗೆ ಹುಷಾರಿಲ್ಲ ಜ್ವರ ಬಂದಿದೆ.."
"ಹೌದಾ.." ಎಂದವಳೇ ನೋಡಲು ಅವರ ಮನೆಗೆ ಬಂದೆ ಬಿಟ್ಟಳು
ಜಮೀಲಾ ಮುಖ ಗಂಟು ಹಾಕಿಕೊಂಡೇ ಒಳಕರೆದಳು

"ಸಫಾ ಹೇಗಿದ್ದೀಯಾ.."
"ಆಂಟಿ.."
"ಏನಾಗುತ್ತಿದೆ ನನ್ನ ಜಾಣಮರಿಗೆ.."
"ಸ್ವಲ್ಪ ಜ್ವರ ಇದೆ ಅಷ್ಟೇ.." ಜಮೀಲಾ ನುಡಿದಳು

ಸಾಜೀದ ಸಫಾಳ ಹಣೆ ಮುಟ್ಟಿ ನೋಡಿದಳು ಕಾದ ಕಾವಲಿಯಂತೆ ಹಣೆ ಸುಡುತ್ತಿತ್ತು..

"ಅಯ್ಯೋ ಇಷ್ಟೊಂದು ಜ್ವರವಿದೆ ಡಾಕ್ಟರಿಗೆ ತೋರಿಸಿದಿರಾ..?"
"ಮಾತ್ರೆ ಕೊಟ್ಟಿದ್ದೇವೆ ಈಗ ಕಡಿಮೆಯಾಗಬಹುದು.."
"ಬೇಗ ಡಾಕ್ಟರಿಗೆ ತೋರಿಸಿ.."
"ಇವರಿಗೆ ತಿಂಗಳ ಕೊನೆಯಲ್ಲಿ ಹಣ ಸಿಗುವುದು ಇನ್ನು ಡಾಕ್ಟರಿಗೆ ಹಣ ಎಲ್ಲಿಂದ ಕೊಡುವುದು.."
"ಹಾಗಾದರೆ ನಾನು ಕರೆದುಕೊಂಡು ಹೋಗಿ ಡಾಕ್ಟರಿಗೆ ತೋರಿಸುತ್ತೇನೆ.."
"ನಿಮಗ್ಯಾಕೆ ತೊಂದರೆ.." ಎಂದು ದೂರದಲ್ಲಿ ನಿಂತಿದ್ದ ಜಮೀಲಾಳ ಗಂಡ ಸಂಕೋಚದಿಂದ ನುಡಿದರು
"ತೊಂದರೆ ಏನು..? ಈ ಸಮಯದಲ್ಲಿ ಅಕ್ಕಪಕ್ಕದವರು ಎಂದಮೇಲೆ ಸಹಾಯ ಮಾಡದೇ ಇರುವುದಕ್ಕೆ ಆಗುತ್ತದೆಯೇ.." ಎಂದು ಮಗುವನ್ನು ಎತ್ತಿಕೊಂಡಳು ಜಮೀಲಾಳು ಅವಳ ಜೊತೆ ಹೊರಟಳು

ಡಾಕ್ಟರ್ ಪರೀಕ್ಷಿಸಿ ಔಷಧಿ ಬರೆದುಕೊಟ್ಟರು ಜೊತೆಗೆ ಇಂಜೆಕ್ಷನ್ ಕೊಟ್ಟರು

ಸಫಾ ಎರಡು ದಿನಗಳಲ್ಲಿ ಹುಷಾರಾದಳು ಆಗ ಸಾಜೀದಳಿಗೆ ಸ್ವಲ್ಪ ನೆಮ್ಮದಿ ಆದರೂ ಸಫಾ ಇನ್ನು ಸಂಪೂರ್ಣ ಚೇತರಿಸಿಕೊಂಡಿರಲಿಲ್ಲ

ಸಾಜೀದ ಮಗುವನ್ನು ಡಾಕ್ಟರಿಗೆ ತೋರಿಸಿ ಅಷ್ಟೆಲ್ಲಾ ಸಹಾಯ ಮಾಡಿದರೂ ಜಮೀಲಾ ನಂತರ ಹಣ ಕೊಡುವುದಿರಲಿ ಒಂದು ಕೃತಜ್ಞತೆಯನ್ನು ಸೂಚಿಸಿರಲಿಲ್ಲ

"ಎಂತಹ ಹೆಂಗಸೋ.. ಸ್ವಲ್ಪವೂ ನಿಯತ್ತು ಇಲ್ಲ.." ಎಂದು ಗಂಡನ ಬಳಿ ಬೈಯ್ದಳು
"ಹೋಗಲಿ ಬಿಡು ಸಾಜೀ.. ನಿನ್ನ ಕರ್ತವ್ಯವನ್ನು ನೀನು ಯಾವುದೇ ಫಲಾಪೇಕ್ಷೆಯಿಲ್ಲದೆ ಮಾಡಿದ್ದೀಯಾ ಅವಳು ಕೃತಜ್ಞತೆ ಹೇಳದಿದ್ದರೇನು.. ಅಲ್ಲಾಹನು ಮೆಚ್ಚುತ್ತಾನೆ.." ಎಂದು ಸಮಾಧಾನಿಸಿದ್ದ

ಆದರೆ ಬಳಲಿಹೋಗಿದ್ದ ಸಫಾಳನ್ನು ನೋಡಿದಾಗ ತಾನು ಔಷಧಿ ಕೊಡಿಸಿ ಒಳ್ಳೆಯದನ್ನೇ ಮಾಡಿದೆ ಎನಿಸಿತು ಸಾಜೀದಳಿಗೆ

ಈಗ ಸಫಾ ಸಾಜೀದಳ ಮನೆಗೆ ಬರುವುದನ್ನು ಅಷ್ಟೊಂದು ತಡೆಯುತ್ತಿರಲಿಲ್ಲವಾದರೂ ಆಗಾಗ್ಗೆ ಬೈಯುತ್ತಿದ್ದಳು ಆದರೆ ಸಫಾ ತಾಯಿಯ ಮಾತಿಗೆ ಅಲಕ್ಷ್ಯ ತೋರುತ್ತಿದ್ದಳು

ಅಂದು ಊರಿನಿಂದ ಸಫಾಳ ಅಜ್ಜಿ ಬಂದಿದ್ದರು ಆದರೆ ಸಫಾಳ ಮುಖದಲ್ಲಿ ಅಜ್ಜಿಯನ್ನು ಕಂಡು ಸಂಭ್ರಮವಿರಲಿಲ್ಲ ಬದಲಾಗಿ ಭಯ ಆತಂಕ ನೆಲೆಸಿತ್ತು

"ಏನು ಸಫಾ ಅಜ್ಜಿ ಬಂದರೂ ಎಂದು ನನ್ನ ಮರೆತೆ ಬಿಟ್ಟೆಯಲ್ಲ.."
"ಇಲ್ಲ ಆಂಟಿ.."
"ಹಾಗಾದರೆ ಮನೆಗೆ ಬಾ.."
"ನಮ್ಮಜ್ಜಿ ಬೈಯುತ್ತಾರೆ ಆಂಟಿ ಮಗುವನ್ನು ನೋಡಿಕೋ ಬೀದಿ ಬೀದಿ ಸುತ್ತಬೇಡ ಎಂದು ಹೇಳಿದ್ದಾರೆ.."
"ಹೌದಾ ಹಾಗಾದರೆ ಸಂಜೆ ಬಾ.."
"ಹ್ಞೂಂ.. ಅಪ್ಪ ಬಂದಮೇಲೆ ಬರುತ್ತೀನಿ ಆಂಟಿ.." ಎಂದಳು ಸಫಾ

ಆದರೆ ಆ ದಿನ ಸಂಜೆ ಬರಲೇ ಇಲ್ಲ ಸಾಜೀದ ಅವಳಿಗಾಗಿ ಕೇಕ್ ಚಿಪ್ಸ್ ಎಲ್ಲಾ ತಂದಿಟ್ಟುಕೊಂಡು ಕಾಯುತ್ತಿದ್ದಳು ಆದರೆ ಗಂಟೆ ಎಂಟಾದರೂ ಸಫಾ ಬರಲಿಲ್ಲ ಈ ಸಮಯದಲ್ಲಿ ನಾನು ಅವರ ಮನೆಗೆ ಹೋಗುವುದು ಸರಿಯಲ್ಲವೆಂದು ಸುಮ್ಮನಾದಳು

ಮರುದಿನ ಸಫಾ ಬಂದಳು ಸಾಜೀದಳಿಗೆ ಖುಷಿ

"ಸಾಜೀ.. ನಿನ್ನ ಫ್ರೆಂಡ್ ಬಂದಿದ್ದಾಳೆ ನೋಡು.." ಎಂದು ಹಕೀಂ ಸಾಜೀದಳನ್ನು ಕರೆದ

"ಬಾ ಸಫಾ.. ನಿನಗೋಸ್ಕರ ನಿನ್ನೆ ತಿಂಡಿಯೆಲ್ಲ ತಂದಿಟ್ಟಿದ್ದೆ ನೀನು ಬರಲೇ ಇಲ್ಲ.."
"ಆಂಟಿ.." ಎಂದು ಮಗು ಬಿಕ್ಕಿತ್ತು
"ಯಾಕಮ್ಮ ಸಫಾ ಅಳುವುದು..? ಅಳಬೇಡ ಬಾ ಕೇಕ್ ಕೊಡುತ್ತೇನೆ ತಿನ್ನು ನೀನು ಜಾಣ ಮರಿಯಲ್ಲವಾ..¡¡" ಎಂದು ಮುದ್ದಿಸಿದಳು

ಸಫಾಳಿಗೆ ಹೊಟ್ಟೆ ಹಸಿದಿತ್ತೇನೋ ಅದನ್ನು ಗಬಗಬನೆ ತಿನ್ನತೊಡಗಿದಳು

"ಯಾಕೆ ಏನು ತಿನ್ನಲಿಲ್ಲವಾ.."
"ಇಲ್ಲ ಆಂಟಿ ಅಜ್ಜಿ ತಿಂಡಿ ಕೊಡಲಿಲ್ಲ.."
"ಯಾಕೆ..?"
"ನಿನ್ನೆ ಸಂಜೆ ನಾನು ನಿಮ್ಮನೆಗೆ ಬರುತ್ತೀನಿ ಎಂದು ಗಲಾಟೆ ಮಾಡಿದೆ ಅದಕ್ಕೆ ಅಜ್ಜಿ ಹೊಡೆದರು ರಾತ್ರಿ ಊಟ ಕೊಡಲಿಲ್ಲ ಬೆಳಿಗ್ಗೆ ತಿಂಡಿಯೂ ಕೊಡಲಿಲ್ಲ.."

ಸಾಜೀದ ಗಂಡನ ಮುಖ ನೋಡಿದಳು

"ಈಗ ಬಂದಿದ್ದೀಯಲ್ಲ ನಿಮ್ಮಜ್ಜಿ ಬೈಯುವುದಿಲ್ಲವಾ.."
"ಈಗ ಅಜ್ಜಿ ಮನೆಯಲ್ಲಿಲ್ಲ ಅಮ್ಮನನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗಿದ್ದಾರೆ.."
"ಹೌದಾ ಯಾಕೆ.."
"ನಮ್ಮನೆಗೆ ಇನ್ನೊಂದು ಪುಟ್ಟ ಮಗು ಬರುತ್ತಂತೆ ಅದಕ್ಕೆ ಹೋಗಿದ್ದಾರೆ.."
ಸಾಜೀದಳಿಗೆ ಅರ್ಥವಾಯಿತು ಮತ್ತೇನೂ ಪ್ರಶ್ನಿಸಲಿಲ್ಲ

"ನಿಮ್ಮಪ್ಪ ಮನೆಯಲ್ಲಿದ್ದಾರಾ..?" ಹಕೀಂ ಕೇಳಿದ
"ಇದ್ದಾರೆ ಆಂಕಲ್ ಕರೆಯಲಾ.."
"ಬೇಡಮ್ಮ.. ಸಾಜೀ ಮಗುವಿಗೆ ಊಟ ಮಾಡಿಸು.."
"ಅಜ್ಜಿ ಬರುವುದರಲ್ಲಿ ನಾನು ಮನೆಗೆ ಹೋಗಬೇಕು ಆಂಟಿ.."
"ಸರಿನಮ್ಮ ಬಾ ಊಟ ಮಾಡಿಸುತ್ತೇನೆ.." ಎಂದು ಒಂದು ತಟ್ಟೆಯಲ್ಲಿ ಹಾಕಿ ಕೊಟ್ಟಳು ಬೇಗನೆ ಅದನ್ನು ತಿಂದ ಸಫಾ ಹೆದರಿಕೆಯಿಂದ ಮನೆಗೆ ಓಡಿದಳು

"ಏನು ಮನುಷ್ಯರು ಇವರು ಸಾಜೀ..  ಆ ಪುಟ್ಟ ಮಗುವಿನ ಮನಸ್ಸು ಮೃದು ಅಂತಲಾದರೂ ಆಕೆಗೆ ತಿಳಿಯಬೇಡವೇ.."
"ಹೌದು ಹಕೀ.. ಸ್ವಂತ ಅಮ್ಮ ಅಜ್ಜಿಯೇ ಹಾಗೆ ಮಾಡಿದರು ಎಂದ ಮೇಲೆ ಹೇಳುವುದೇನಿದೆ.."
"ಅದೇಕೆ ಈ ಮಗುವನ್ನು ಕಂಡರೆ ಆಗಲ್ಲ ಅವರಿಗೆ..?"
"ಅವರಮ್ಮ ಒಂದು ರೀತಿ ವಿಚಿತ್ರ.. ಅವಳ ಸ್ವಭಾವವೇ ಸಿಡುಕು.."
"ಪಾಪ ಎಷ್ಟು ಮುದ್ದಾಗಿದ್ದಾಳೆ ಸಫಾ ಅಂತಹ ಮಗುವನ್ನು ಪಡೆಯಲು ಅದೃಷ್ಟ ಮಾಡಿರಬೇಕು.." ಎಂದು ನಿಟ್ಟುಸಿರುಗರೆದ
       
ಸಾಜೀದಳಿಗೆ ನಾಲ್ಕು ತಿಂಗಳು ತುಂಬಿತು ಸಾಜೀದ ಮದುವೆಯಾದಗಿನಿಂದ ತವರಿಗೆ ಹೋಗಿರಲೇ ಇಲ್ಲ ಮೈಮೂನರಿಗೆ ಮಗಳ ವರ್ತನೆಯಿಂದ ಮನಸ್ಸಿಗೆ ನೋವಾಗಿದ್ದರು ಸಹಿಸಿಕೊಂಡರು ಬಾಣಂತನಕ್ಕೂ ಬರುವಳೋ ಇಲ್ಲವೋ ಎನ್ನುವ ಚಿಂತೆ

ಇತ್ತ ಸಾಜೀದ ಗಂಡನ ಬಳಿ ಅದೇ ವಿಚಾರ ಮಾತನಾಡುತ್ತಿದ್ದಳು

"ಹಕೀ.. ನಾನು ಆಸ್ಪತ್ರೆಯಿಂದ ನೇರವಾಗಿ ಇಲ್ಲಿಗೆ ಬಂದುಬಿಡುತ್ತೇನೆ ಆ ಮನೆಗೆ ಹೋಗುವುದಿಲ್ಲ.."
"ಹಾಗೆಲ್ಲಾ ಹೇಳಬೇಡ ಸಾಜೀ.. ನಿಮ್ಮ ತಾಯಿ ನೊಂದುಕೊಳ್ಳುತ್ತಾರೆ.."
"ಇಷ್ಟು ದಿನ ಅವರು ಮಾಡಿದ್ದೆ ಸಾಕು ನಾನು ಮತ್ತೆ ಅವರಿಗೆ ಕಷ್ಟ ಕೊಡುವುದಿಲ್ಲ ನೀವೇ ಒಂದು ತಿಂಗಳು ಅಂಗಡಿಗೆ ಹೋಗುವುದು ಬೇಡ ಮನೆಯಲ್ಲಿದ್ದು ನನ್ನನ್ನು ನೋಡಿಕೊಂಡರೆ ಸಾಕು.."
"ನಾನು ಇರುವುದಕ್ಕೆನಿಲ್ಲ ಇರುತ್ತೇನೆ ಆದರೆ ನಿನ್ನ ಅಮ್ಮ.."
"ಹೇಳಿದನ್ನೆ ಮತ್ತೆ ಮತ್ತೆ ಹೇಳಬೇಡಿ.."
"ಅವರೇ ಇಲ್ಲಿಗೆ ಬರುತ್ತೇನೆ ಎಂದರೆ.."
"ಅವರೇ ಬಂದರೆ ಬರಲಿ ನಾನು ಹೋಗುವುದಿಲ್ಲ.."

ಹಕೀಂನಿಗೆ ಅವಳ ಹಠ ಅತಿಯಾಯಿತು ಎನಿಸಿತು ಆದರೂ ಗರ್ಭಿಣಿ ಹುಡುಗಿ ನಾನು ಏನಾದರೂ ಕಟುವಾಗಿ ಮಾತನಾಡಿದರೆ ನೊಂದುಕೊಳ್ಳಬಹುದು ಎಂದು ಸುಮ್ಮನಾದ

ಸಾಜೀದಳ ಪರೀಕ್ಷೆ ಫಲಿತಾಂಶ ಬಂತು ಅವಳು ಉತ್ತಮ ಅಂಕಗಳನ್ನು ಪಡೆದು ಪಾಸಾಗಿದ್ದಳು ಆ ವಿಷಯ ತಿಳಿಸಲು ಸಹ ಅವಳು ತವರು ಮನೆಗೆ ಹೋಗುವುದಲ್ಲ ಕರೆ ಸಹ ಮಾಡಿರಲಿಲ್ಲ ಹಕೀಂನೇ ಅವರಿಗೆ ಕರೆ ಮಾಡಿ ತಿಳಿಸಿದ್ದ

ಹೀಗೆ ದಿನಗಳು ಕಳೆಯುತ್ತಿರುವಾಗ ಒಂದು ದಿನ ಅವಳು ಆಸ್ಪತ್ರೆಗೆ ಹೋಗಿ ಬಂದಿದ್ದಳು ಹಕೀಂನೂ ಅಂದು ಅಂಗಡಿಗೆ ಹೋಗದೆ ಮನೆಯಲ್ಲಿಯೇ ಇದ್ದ ಇಬ್ಬರೂ ವಿಶ್ರಾಂತಿ ಪಡೆಯಲು ಮಲಗಿದ್ದರು

ಅಷ್ಟರಲ್ಲಿ ಪಕ್ಕದ ಮನೆಯಲ್ಲಿ ದೊಡ್ಡ ಗಲಾಟೆ ಕೇಳಿಸಿತು

"ಇನ್ನೊಂದು ಸಾರಿ ಮಾಡ್ತೀಯಾ.. ಸಾಯಿಸಿ ಬಿಡ್ತೀನಿ.." ಎಂದು ಜಮೀಲಾ ಬೆತ್ತದಿಂದ ಹೊಡೆಯುತ್ತಿದ್ದಳು ಸಫಾಳಿಗೆ
"ಅಮ್ಮ ಹೊಡಿಬೇಡಮ್ಮ.." ಎಂದು ಸಫಾ ಅಳುತ್ತಿದ್ದಳು
"ಒಂದು ಪಾತ್ರೆ ಹಾಲು ಅನ್ಯಾಯವಾಗಿ ಹೋಯಿತಲ್ಲ ನಿನಗೆ ಜ್ಞಾನ ಬೇಡವಾ.. ಹಾಲು ಕದ್ದು ಕುಡಿಯುತ್ತಿಯಾ.." ಎಂದು ಮತ್ತೆ ರಪರಪನೆ ಹೊಡೆಯತೊಡಗಿದಳು ಜಮೀಲಾ

"ಅವಳು ಇಷ್ಟಕ್ಕೆ ಬಗ್ಗುವುದಿಲ್ಲ ಜಮೀಲಾ ಚೆನ್ನಾಗಿ ಕಾಯಿಸಿ ಬರೆ ಹಾಕು ಆಗ ಇನ್ನೆಂದೂ ಕದಿಯಲ್ಲ.." ಅಜ್ಜಿ ಹೇಳುತ್ತಿದ್ದರು
"ನೀವು ಹೇಳೋದೆ ಸರಿ ಅಮ್ಮ ಹಾಗೆ ಮಾಡ್ತೀನಿ ಇವಳಿಗೆ.."
"ಅಯ್ಯೋ.. ಬೇಡ ಅಮ್ಮ ಬೇಡ ನಾನು ಕದಿಲಿಲ್ಲ ನೀರು ಕುಡಿಯೋಣ ಎಂದು ಲೋಟ ತೆಗೆಯುವಾಗ ಕೈತಗಿ ಹಾಲಿನ ಪಾತ್ರೆ ಚೆಲ್ಲಿತು ಹೊಡಿಬೇಡಮ್ಮ.."
"ಮಾಡೋದು ಮಾಡಿ ಸುಳ್ಳು ಬೇರೆ ಹೇಳ್ತಿಯಾ.. ನೋಡು ಇವತ್ತು ನಿನ್ನನ್ನು ಏನು ಮಾಡ್ತೀನಿ ಅಂತ.." ಎಂದು ಬೆನ್ನಿನ ಮೇಲೆ ಗುದ್ದಿದಳು

"ಹಕೀಂ ನನ್ನ ಕೈಯಲ್ಲಿ ಕೇಳೋದಕ್ಕೆ ಆಗಲ್ಲ ಬನ್ನಿ ಹೋಗಿ ನೋಡೋಣ.."
"ಬೇಡ ಸಾಜೀ.. ಕಂಡವರ ಮನೆ ವಿಷಯ ನಮಗ್ಯಾಕೆ.."
"ಹಕೀ.. ನಾನು ತಾಯಿಯಾಗುವವಳು ಪಾಪ ಆ ಮಗು.." ಎಂದು ತಾನಾಗಿಯೇ ಎದ್ದು ಅವರ ಮನೆಗೆ ಬಂದಳು

ಸಾಜೀದ ಬರುವುದು ಸ್ವಲ್ಪ ತಡವಾಗಿದ್ದರೂ ಜಮೀಲಾ ಮಗಳಿಗೆ ಬರೆ ಹಾಕಿ ಬಿಡುತ್ತಿದ್ದಳು ಅವಳ ಕೈಯಲ್ಲಿ ಚೆನ್ನಾಗಿ ಕಾದ ಸೌಟಿತ್ತು..

"ಆಂಟಿ.." ಎಂದು ಕೂಗುತ್ತಾ ಓಡಿ ಬಂದು ಸಾಜೀದಳನ್ನು ತಬ್ಬಿಕೊಂಡಳು ಸಫಾ

"ಜಮೀಲಾ ಏನಿದು ಪಾಪ ಮಗು ಎಷ್ಟು ಹೆದರಿದೆ ನಿಮಗೇನಾದರೂ ಬುದ್ದಿ ಇದೆಯಾ.."
"ಅವಳು ಏನು ಮಾಡಿದಳು ಕೇಳಿ ಚಿಕ್ಕ ವಯಸ್ಸಿನಿಂದಲೇ ಕದಿಯುವ ಬುದ್ಧಿ ಕಲಿತರೆ ನಾಳೆ ದೊಡ್ಡ ಕಳ್ಳಿಯಾಗುತ್ತಾಳೆ.."
"ಆಂಟಿ ನಾನು ಕದಿಯಲಿಲ್ಲ ಅಕಸ್ಮಾತ್ ಕೈತಾಗಿ ಹಾಲು ಚೆಲ್ಲಿ ಹೋಯಿತು.."
"ಮತ್ತೆ ಸುಳ್ಳು.. ಬಾರೇ ಇಲ್ಲಿ.."
"ಆಂಟಿ.." ಎಂದು ಸಾಜೀದಳನ್ನು ಗಟ್ಟಿಯಾಗಿ ಹಿಡಿದು ಅಳತೊಡಗಿದಳು ಸಫಾ

"ಮಕ್ಕಳು ಸುಳ್ಳು ಹೇಳುವುದಿಲ್ಲ ಜಮೀಲಾ.."
"ಅವಳು ಮಗೂನಾ.. ಕತ್ತೆಯ ವಯಸ್ಸಾಗಿದೆ.."
"ಆಗಿರಲಿ ಬಿಡಿ ಅಕಸ್ಮಾತ್ ತಪ್ಪೇ ಮಾಡಿದಳು ಎನ್ನಿ ಒಳ್ಳೆಯ ಮಾತಿನಿಂದ ಬುದ್ದಿ ಹೇಳಿ ಅದಕ್ಕೆ ಹೊಡೆದು ಬರೆ ಹಾಕಬೇಕೇ.."
"ಅವಳು ನಮ್ಮ ಮನೆಯ ಹುಡುಗಿ ನಾನು ಏನು ಬೇಕಾದರೂ ಮಾಡುತ್ತಿನಿ ನೀವ್ಯಾರೂ ಅದನ್ನು ಕೇಳುವುದಕ್ಕೆ.."
"ಜಮೀಲಾ.." ಸಾಜೀದ ಅರಚಿದಳು

ಜಮೀಲಾಳಿಗೆ ಒಂದು ರೀತಿಯ ಭಯವಾಯಿತು

"ನಿಮ್ಮ ಮಗು ಮೇಲೆ ನಿಮಗೆ ಕರುಣೆ ಇಲ್ಲದ ಮೇಲೆ ನೀವೆಂತಹ ತಾಯಿ..? ಮಗೂನಾ ನಮ್ಮನೆಗೆ ಕರೆದುಕೊಂಡು ಹೋಗುತ್ತೇನೆ ನಿಮ್ಮ ಮನೆಯವರು ಬರಲಿ ಆಗ ಕಳಿಸುತ್ತೇನೆ ಅದು ತುಂಬಾ ಹೆದರಿದೆ ನಾಳೆ ಹೆಚ್ಚು ಕಡಿಮೆಯಾದರೆ ಏನು ಗತಿ ಕೋಪದಲ್ಲಿ ಮೂಗು ಕುಯಿದಕೊಂಡರೆ ಕೋಪ ಇಳಿದ ಮೇಲೆ ಅದನ್ನು ಪಡೆಯಲು ಸಾಧ್ಯವೇ..?" ಎಂದು ಸಫಾಳನ್ನು ಕರೆದುಕೊಂಡು ಹೊರ ಬಂದಳು

ಜಮೀಲಾ ಕೈಯಲ್ಲಿದ್ದ ಸೌಟನ್ನು ನೆಲದ ಮೇಲೆ ಎಸೆದು ಅಲ್ಲೆ ಕುಳಿತು
"ನನ್ನ ಹೊಟ್ಟೆ ಉರಿಸೋದಕ್ಕೆ ಈ ಅನಿಷ್ಠ ಇರುವುದು ಸತ್ತಾದರೂ ಹೋಗಬಾರದೇ.." ಎಂದು ಬೊಬ್ಬೆ ಹಾಕುತ್ತ ಅಳತೊಡಗಿದಳು

ಸಾಜೀದ ಮಗುವನ್ನು ಕರೆದುಕೊಂಡು ಬರುತ್ತಿರಬೇಕಾದರೆ ದುಲೈಕ ಮನೆಯ ಎದುರು ನಿಂತು ಕೇಳಿದರು
"ಏನದು ಗಲಾಟೆ ಸಾಜೀದ.."
"ಆಂಟಿ.."
"ಬಾ ಒಳಗೆ.." ಎಂದು ಮನೆಯೊಳಗೆ ಕರೆದರು
ಸಫಾಳ ಕೈ ಹಿಡಿದುಕೊಂಡು ಅವರ ಮನೆಯೊಳಗೆ ಬಂದಳು ಸಾಜೀದ

"ನೋಡಿ ಆಂಟಿ ಮಗು ಪಾತ್ರೆಯಲ್ಲಿದ್ದ ಹಾಲು ಚೆಲ್ಲಿತು ಎಂದು ಯಾವ ರೀತಿ ಹೊಡೆದಿದ್ದಾಳೆ ಆಕೆ ಸ್ವಲ್ಪವಾದರೂ ಬುದ್ದಿ ಬೇಡವೇ ಅವಳಿಗೆ.."
"ಬುದ್ದಿ ಅವಳಿಗಲ್ಲ ಸಾಜೀದ ನಿನಗೆ ಬುದ್ದಿ ಇಲ್ಲ.."
"ಯಾಕೆ ಆಂಟಿ.."
"ಮತ್ತಿನ್ನೇನೂ ಕಂಡವರ ಮನೆ ಮಗುವನ್ನು ಕರೆದುಕೊಂಡು ಬಂದಿದ್ದೆಯಲ್ಲ ಅದಕ್ಕೆ ನೀನು ಆಶ್ರಯ ಕೊಡುತ್ತೀಯಾ.."
"ಕೋಪದಲ್ಲಿ ಅವಳು ಹಾಗೆ ಮಾಡಿದ್ದಾಳೆ ಆಂಟಿ ಕೋಪ ಇಳಿದ ಮೇಲೆ ಬಂದು ಮಗಳನ್ನು ಹುಡುಕಿಕೊಂಡು ತಾನಾಗಿಯೇ ಬರುತ್ತಾಳೆ ಎಷ್ಟದರೂ ಹೆತ್ತ ಕರುಳಲ್ಲವೇ.."

"ತಪ್ಪು ಸಾಜೀದ ತಪ್ಪು ನಿನಗೆ ನಿಜ ವಿಷಯ ಗೊತ್ತಿಲ್ಲ ಎಂದು ಕಾಣುತ್ತದೆ.."
"ಏನು ವಿಷಯ ಆಂಟಿ.."
"ಸಫಾ ಆ ರೂಮಿನಲ್ಲಿ ಆಟದ ಸಾಮಾನುಗಳಿವೆ ಹೋಗಿ ಆಡಿಕೋ ಹೋಗು.." ಎಂದು ಮಗುವನ್ನು ರೂಮಿಗೆ ಕಳಿಸಿ ಮುಂದುವರೆಸಿದರು

"ನೋಡು ಸಾಜೀದ ಆಕೆಗೆ ಆ ಮಗುವನ್ನು ಕಂಡರಾಗುವುದಿಲ್ಲ ಅದು ಅವಳಿಗೆ ಬೇಕಿಲ್ಲ ನೀನು ಆ ಮಗುವನ್ನು ಕರೆದು ತಂದರೆ ಅನಿಷ್ಠ ತೊಲಗಿತು ಅಂದುಕೊಳ್ಳುತ್ತಾಳೆಯೇ ವಿನಃ ಅದಕ್ಕಾಗಿ ಪರಿತಪಿಸುವುದಿಲ್ಲ.. ಯಾಕಂದರೆ ಸಫಾ ಅವಳು ಹೆತ್ತ ಮಗಳಲ್ಲ..¡¡ ಅದು ಅವಳ ಮಲಮಗು.."

"ಏನು ಹೇಳುತ್ತಿದ್ದೀರಾ ಆಂಟಿ.."
"ಹೌದು ಸಾಜೀದ.. ಈ ಮಾತು ಸುಳ್ಳಲ್ಲ ಎಲ್ಲರಿಗೂ ಗೊತ್ತಿರುವ ವಿಷಯ ಅದಕ್ಕೆ ಆಕೆ ಆ ಮಗುವನ್ನು ನಿಷ್ಕೃಷ್ಟವಾಗಿ ಕಾಣುವುದು ಹಾಗೆ ಹೊಡೆಯುವುದು.."
"ಅಂದರೆ ಜಮೀಲಾ ಅವರ ಎರಡನೇ ಹೆಂಡತಿನಾ..?"
"ಒಂದು ರೀತಿಯಲ್ಲಿ ಎರಡನೇ ಹೆಂಡತಿಯೇ ಜಮೀಲಾಳ ಗಂಡ ಒಬ್ಬ ಹುಡುಗಿಯನ್ನು ಪ್ರೀತಿಸಿನಂತೆ ಅವಳೊಂದಿಗೆ ಮದುವೆ ಆಗಿದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಆಕೆ ಬಸುರಿಯಾಗಿ ಈ ಮಗುವನ್ನು ಹೆತ್ತಳು ಅದನ್ನು ಇವನು ತಂದು ಸಾಕಿಕೊಂಡಿದ್ದ ಎಂದು ಜನರು ಮಾತನಾಡಿಕೊಳ್ಳುತ್ತಾರೆ ಆದರೆ ಇಷ್ಟು ಮಾತ್ರ ನಿಜ ಸಫಾ ಜಮೀಲಾ ಹೆತ್ತ ಮಗಳಲ್ಲ.."

"ಛೇ.. ಪಾಪ ಹೆತ್ತ ಮಗುವಲ್ಲದಿದ್ದರೇನು ಇವಳು ಸಾಕು ತಾಯಿಲ್ಲವೇ..? ಆ ಮಮತೆಯಾದರೂ ಬೇಡವೇ.."
"ಸಾಜೀದ ಅದಕ್ಕೂ ಪುಣ್ಯ ಮಾಡಿರಬೇಕು ಆ ಮಗು ತಾಯಿಯ ಪ್ರೀತಿಯ ಕಾಣುವ ಭಾಗ್ಯ ಪಡೆದು ಬರಲಿಲ್ಲ.."
"ಸಾಕಿದ ಮಾತ್ರಕ್ಕೆ ಆ ರೀತಿ ವರ್ತಿಸಬೇಕ ಆಂಟಿ..? ಎಷ್ಟು ಜನ ಸಾಕು ತಾಯಿಯರು ಒಳ್ಳೆಯವರಿರುವುದಿಲ್ಲ.."
"ನೋಡು ಸಾಜೀದ ಈ ಪ್ರಪಂಚವೇ ವಿಚಿತ್ರ ಒಳ್ಳೆಯ ಸಾಕು ತಾಯಿಯಂದಿರು ಇದ್ದಾರೆ ಆದರೆ ಅವರ ಮಮತೆಯಾಳ ತಿಳಿಯದ ಅವರನ್ನೆ ದೂರುವ ಅವರನ್ನೆ ದ್ವೇಷಿಸುವ ಸಾಕುಮಕ್ಕಳು ಕೂಡ ಇದ್ದಾರೆ.."

ದುಲೈಕರ ಆ ಮಾತು ಸಾಜೀದಳ ಮುಖಕ್ಕೆ ಹೊಡೆದಂತಾಯಿತು

"ಆಂಟಿ ನೀವು ಏನು ಹೇಳುತ್ತಿರುವುದು..?"
" ನಿಜವನ್ನೆ ಹೇಳುತ್ತಿದ್ದೇನೆ ಸಾಜೀದ ನೀನಿನ್ನೂ ಚಿಕ್ಕವಳು ನಿನಗೆ ಪ್ರಪಂಚದ ಅನುಭವಿಲ್ಲ.."

ಸಾಜೀದ ತಲೆ ತಗ್ಗಿಸಿದಳು ಅವಳ ಕಣ್ಣಾಲಿಗಳು ತುಂಬಿಬಂದವು

"ಛೇ.. ಏನಿದು ಸಾಜೀದ ಗರ್ಭಿಣಿ ಹೆಣ್ಣು ನೀನು ಕಣ್ಣೀರು ಹಾಕಬಾರದು.. ನೋಡು ನೀನು ಸಫಾಳನ್ನು ಹೆರಲಿಲ್ಲ ಹೊರಲಿಲ್ಲ ನಿನ್ನ ಮನೆಗೆ ಬಂದು ಸಲಿಗೆಯಿಂದ ಓಡಾಡಿತು ನೀನು ತಿಂಡಿ ಕೊಟ್ಟು ಪ್ರೀತಿ ನೀಡಿ ರಮಿಸಿದ್ದೀಯಾ ಅಷ್ಟಕ್ಕೆ ನಿನಗೆ ಕರುಳು ಚುರುಕ್ ಎನ್ನುತ್ತಿದೆ ಯಾಕೆ..? ಅದು ಕೆಲವರ ಸ್ವಭಾವ ತಾಯ್ತನದ ಹಿರಿಮೆ ತಿಳಿದವಳು ನೀನು.."
"ಆಂಟಿ.. ನೀವು ಹೇಳುವಷ್ಟು ದೊಡ್ಡವಳಲ್ಲ ನಾನು.."
"ಹಾಗಲ್ಲ ಸಾಜೀದ ನಿನ್ನಂತಹ ಉತ್ತಮರೂ ಇದ್ದಾರೆ ಎಂದು ಉದಾಹರಣೆ ಕೊಟ್ಟೆ ಅಷ್ಟೇ.."
"ಆಂಟಿ ನನಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ.."
"ಹೇಳೋದೇನು ಆ ಮಗುವನ್ನು ಹೆತ್ತ ತಾಯಿ ಎಲ್ಲಿದ್ದಾಳೋ..? ಆದರೆ ನಿನ್ನನ್ನು ಮಾತ್ರ ಹರಸುತ್ತಾಳೆ ಬಿಡು.."
"ಆಂಟಿ ಇವತ್ತು ನಿಮ್ಮಿಂದ ನಾನು ಬಹುದೊಡ್ಡ ವಿಷಯವೊಂದು ತಿಳಿದುಕೊಂಡೆ ನಾನಿನ್ನು ಬರ್ತೀನಿ ಆಂಟಿ.."
" ಊಟ ಮಾಡಿಕೊಂಡು ಹೋಗು ಸಾಜೀದ.."
"ಬೇಡ ಆಂಟಿ ಊಟ ಆಯಿತು ಇವರು ಇವತ್ತು ಮನೆಯಲ್ಲಿಯೇ ಇದ್ದಾರೆ ನಾನು ಬರ್ತೀನಿ ಸಫಾ ಬಾ ಹೋಗೋಣ.." ಎಂದು ಸಫಾಳನ್ನು ಕರೆದಳು

ಸಫಾ ಓಡಿಬಂದಳು ಸಾಜೀದ ಮನೆಯತ್ತ ಹೊರಟಳು

ಸಾಜೀದ ಸಫಾಳ ಕೈ ಹಿಡಿದು ಮನೆಯೊಳಗೆ ಬಂದಾಗ ಹಕೀಂ ಕೇಳಿದ

"ಇಷ್ಟು ಹೊತ್ತು ಎಲ್ಲಿಗೆ ಹೋಗಿದ್ದೆ ಸಾಜೀ..? ನಾನು ಗಾಬರಿಯಾಗಿದ್ದೆ.." ಎಂದ
"ಸಫಾಳನ್ನು ಅವರಮ್ಮ ಹೊಡೆಯುತ್ತಿದ್ದರಲ್ಲ ನಾನು ಬಿಡಿಸಿಕೊಂಡು ಬಂದೆ ಬರುವಾಗ ದುಲೈಕ ಆಂಟಿ ಕರೆದರು ಅವರ ಮನೆಗೆ ಹೋಗಿದ್ದೆ.."
"ಹೌದಾ ಯಾಕೆ ಸುಮ್ಮನೆನಾ.."
"ಅದೇ ಜಮೀಲಾಳ ವಿಷಯ ಅವಳ ಕಥೆಯನ್ನೆಲ್ಲಾ ಹೇಳಿದರು.." ಎಂದು ದುಲೈಕ ಹೇಳಿದನ್ನು ಎಲ್ಲವನ್ನೂ ಹಕೀಂನೊಂದಿಗೆ ಹೇಳಿದಳು ಅದನ್ನು ಕೇಳಿ ಹಕೀಂ ನಿಟ್ಟುಸಿರುಗೆರೆದ

" ಹಕೀ.. ನಾನು ಇವತ್ತು ಸಫಾಳ ತಂದೆಯೊಂದಿಗೆ ಮಾತನಾಡುತ್ತೇನೆ.."
"ನೋಡು ಅವನು ಹೆಂಡತಿಯ ಗುಲಾಮನ ಹಾಗೆ ಕಾಣುತ್ತಾನೆ ಅದಕ್ಕೆ ಈ ಮಗೂಗೆ ಇಷ್ಟೊಂದು ಕಷ್ಟ.."
"ಅಲ್ಲ ಹಕೀ.. ತಂದೆಯಾಗಿ ಸ್ವಲ್ಪವಾದರೂ ಮಮತೆ ಬೇಡವೇ.."
"ಬೇರೆಯವರು ಬುದ್ದಿ ಹೇಳಿದರೆ ಅವನು ಬೇಜಾರು ಮಾಡಿಕೊಳ್ಳಬಹುದು.."
"ಹಾಗಂತ ನಾವು ಇದನ್ನೆಲ್ಲಾ ನೋಡಿಯೂ ಸುಮ್ಮನಿರುವುದಕ್ಕೆ ಆಗುತ್ತಾ ನನ್ನ ಮನಸ್ಸು ಒಪ್ಪುವುದಿಲ್ಲ.."
"ಏನಾದರೂ ಮಾಡಿಕೋ ನಿನಗೆ ಹೇಳುವವರಾರು ಏನಾದರೂ ಹೆಚ್ಚು ಕಡಿಮೆಯಾದರೆ ನನ್ನ ಹತ್ತಿರ ಗೋಳಾಡಬೇಡ ನಿನಗೆ ಬಿಟ್ಟದ್ದು.." ಎಂದು ಹಕೀಂ ಸುಮ್ಮನಾದ

ಸಫಾಳಿಗೆ ಊಟ ಮಾಡಿಸಿ ಮಲಗಿಸಿದಳು ಜಮೀಲಾ ಮಗುವನ್ನು ಕರೆಯುವ ಗೋಜಿಗೆ ಹೋಗಲಿಲ್ಲ
"ಗಂಡ ಬಂದ ನಂತರ ಬೈಯುತ್ತಾನೆ ಎನ್ನುವ ಭಯವು ಈಕೆಗೆ ಇಲ್ಲವೇ ಹೋಗಲಿ ಸ್ವಲ್ಪವಾದರೂ ಮಾನವೀಯತೆಯಾದರೂ ಬೇಡವೇ.." ಎನಿಸಿತು ಸಾಜೀದಳಿಗೆ

ತಾನು ಆ ವಿಚಾರದಲ್ಲಿ ಎಷ್ಟು ಅದೃಷ್ಟ ಮಾಡಿದ್ದೇನೆ ಪಾಪ ಸಫಾ ಇನ್ನೂ ಚಿಕ್ಕವಳು ಮುಂದೆ ಹೇಗೆ ನಿಭಾಹಿಸುತ್ತಾಳೋ..? ನನ್ನಮ್ಮ ಎಂದೂ ನನ್ನನ್ನು ಹೊಡೆಯುವುದಿರಲಿ ಬೈದದ್ದು ಸಹ ಇಲ್ಲ ಹೆತ್ತವಳಾದರೂ ಹೊಡೆಯುತ್ತಿದ್ದಳೇನೋ..? ಆದರೆ ನನ್ನ ತಾಯಿ ನನಗೆ ಸ್ವಲ್ಪ ಹುಷಾರಿಲ್ಲವೆಂದರೂ ಊಟ ಬಿಟ್ಟು ಕೂರುತ್ತಿದ್ದರು ನಿದ್ರೆಯೇ ಮಾಡುತ್ತಿರಲಿಲ್ಲ.. ಇನ್ನು ಅಪ್ಪಾ ತಾನು ಬಯಸಿದ್ದನ್ನು ಇಲ್ಲವೆಂದವರಲ್ಲ ಕೊನೆಗೆ ನಾನು ಇಷ್ಟಪಟ್ಟ ಹಕೀಂನೊಂದಿಗೆ ಮದುವೆಯೂ ಮಾಡಿಸಿದರು..

ಅಂತಹ ಪುಣ್ಯಾತ್ಮರನ್ನು ತಂದೆತಾಯಿಯಾಗಿ ಪಡೆದ ನಾನು ಅವರಿಗೆ ಮಾಡಿದ್ದೇನು..? ನನ್ನಿಂದ ಪ್ರೀತಿ ಬಯಸಿದ ಅವರಿಗೆ ತಾನು ಹೊರೆಯೇನೋ ಎಂಬಂತೆ ಆಡಿದೆ ಮದುವೆಯಾದಾಗಿನಿಂದಲೂ ಆ ಕಡೆ ತಲೆಯನ್ನು ಹಾಕಿಲ್ಲ ಅವರು ಏನು ತಿಳಿದಕೊಂಡಿರಬಹುದು ಎಷ್ಟೊಂದು ನೊಂದಿರಬಹುದು ಆಂಟಿ ಎಲ್ಲವನ್ನೂ ಎಷ್ಟು ಮಾರ್ಮಿಕವಾಗಿ ಹೇಳಿಬಿಟ್ಟರು ತನಗೇಕೆ ಈ ಸತ್ಯ ಇದುವರೆಗೂ ಹೊಳೆದಿರಲಿಲ್ಲ.. ಯಾವತ್ತೂ ಎಂದೂ ನನಗೂ ಸದ್ದಾಂನಿಗೂ ತಾರತಮ್ಯ ಮಾಡಿದವರಲ್ಲ ಅಂತಹರವನ್ನು ತಾನು ತಪ್ಪಾಗಿ ಎಣಿಸಿದೆನಲ್ಲ ಕಲ್ಮಶವಾಗಿದ್ದ ಮನಸ್ಸಿಗೆ ಎಲ್ಲವೂ ತಪ್ಪಾಗಿಯೇ ಕಂಡಿತು ಅವರನ್ನು ನಾನೆಷ್ಟು ನೋಯಿಸಿದೆ ಮಕ್ಕಳೇ ಇಲ್ಲದಿರುವಾಗ ತನ್ನನ್ನು ತಂದು ಅವರು ಅದೆಷ್ಟು ಪ್ರೀತಿಯಿಂದ ಸಾಕಿ ಬೆಳೆಸಿದ್ದರೋ..? ಇಲ್ಲ ನಾನು ಅವರ ಕ್ಷಮೇ ಕೇಳಲೇ ಬೇಕು ಎಂದು ನಿರ್ಧರಿಸಿದಳು..

"ಸಾಜೀ.. ಯಾರೋ ಬಾಗಿಲು ತಟ್ಟಿದ ಹಾಗಾಯಿತು ಯಾರು ನೋಡು.." ಎಂದು ಹಕೀಂ ಹೇಳಿದಾಗ ಎಚ್ಚೆತ್ತಳು ಸಾಜೀದ

ಎದ್ದು ಬಂದು ಬಾಗಿಲು ತೆಗೆದಾಗ ಬಾಗಿಲಲ್ಲಿ ನಿಂತ ಸಫಾಳ ತಂದೆಯನ್ನು ಕಂಡು
"ಬನ್ನಿ ಬನ್ನಿ.. ನಾನೇ ಬಂದು ನಿಮ್ಮ ಹತ್ತಿರ ಮಾತಾಡಬೇಕೆಂದಿದ್ದೆ.." ಎಂದಳು
"ಸಫಾ ಎಲ್ಲಿದ್ದಾಳೆ.."
"ಮಲಗಿದ್ದಾಳೆ.." ಈಗ ಇವನಿಗೆ ಮಗಳ ನೆನಪಾಯಿತೇ ಎಂದು ರೇಗಿತು ಅವಳಿಗೆ
"ಕುಳಿತುಕೊಳ್ಳಿ.." ಆತ ಸಂಕೋಚಪಡುತ್ತಿರುವುದನ್ನು ಕಂಡು ಅವಳೇ ನುಡಿದಳು

ಆತ ಸಂಕೋಚದಿಂದಲೇ ಒಳಬಂದು ಕುಳಿತ

"ನೋಡಿ ನಿಮ್ಮ ವೈಯುಕ್ತಿಕ ವಿಚಾರ ಮಾತನಾಡುತ್ತೇನೆ ನಿಮಗೆ ಬೇಸರವಿಲ್ಲ ತಾನೇ.."
"ಇಲ್ಲ ಹೇಳಿ.."
"ನೋಡಿ ಸಫಾಳ ವಿಚಾರ ತಿಳಿಯಿತು ಬೇಡದವರ ಬಳಿ ಮಕ್ಕಳು ಬೆಳೆದರೆ ಮಕ್ಕಳಿಗೂ ಹಿಂಸೆ ಬೆಳೆಸುವವರಿಗೂ ತಲೆನೋವು.."

ಆತ ತಲೆ ತಗ್ಗಿಸಿದ ಸಾಜೀದಳೇ ಮಾತು ಮುಂದುವರೆಸಿದಳು..

"ನೋಡಿ ಇವತ್ತು ಮಧ್ಯಾಹ್ನ ನಿಮ್ಮಾಕೆ ಈ ಮಗುವಿಗೆ ಸಿಕ್ಕಾಪಟ್ಟೆ ಹೊಡೆದರು ಅವರಮ್ಮನ ಮಾತು ಕೇಳಿ ಬರೆ ಹಾಕಲು ತಯಾರಿದ್ದರು ನಾನೇ ಹೋಗಿ ಬಿಡಿಸಿ ಕರೆತಂದೆ ಇಲ್ಲದಿದ್ದರೆ ಏನು ಮಾಡಿಬಿಡುತ್ತಿದ್ದರೋ.."
"ನಾನೇನೂ ಮಾಡಲಿ ಅಕ್ಕ.."
"ಹಾಗೆಂದರೆ ಸಮಸ್ಯೆಗೆ ಪರಿಹಾರವಲ್ಲ ಈ ಮಗುವನ್ನು ಹೆತ್ತವಳ ನೆನಪಿಗಾಗಿ ನೀವು ಬೆಳೆಸುತ್ತಿರುವುದು ಒಪ್ಪುವಂತಹದೇ ಆದರೆ ನಿಮ್ಮಾಕೆಗೆ ಈ ಮಗುವಿನ ಮೇಲೆ ಪ್ರೀತಿಗಿಂತ ದ್ವೇಷವೇ ಹೆಚ್ಚಾಗಿದೆ ಸವತಿಯ ಮಗು ಎನ್ನುವ ಅನಿಸಿಕೆಯೂ ಇರಬಹುದು.."

"ಸಫಾ.." ಆತ ಮೆಲ್ಲಗೆ ನುಡಿದ
"ಸಫಾ ಬೆಳೆಯುತ್ತಿರುವ ಮಗು ಆ ಮಗುವಿನ ಮನಸ್ಸು ಹೂವಿನಂತೆ ಮೃದು ಇಂತಹ ವಾತಾವರಣದಲ್ಲಿ ಬೆಳೆದರೆ ಆ ಮಗು ಅನ್ಯಾಯವಾಗಿ ಹಾಳಾಗುತ್ತೆ ಸ್ಕೂಲಿಗೂ ಕಳುಹಿಸದೆ ಆ ಮಗುವಿನ ಭವಿಷ್ಯ ಹಾಳು ಮಾಡುತ್ತಿದ್ದೀರಲ್ಲಾ ಇದೆ ಏನು ಆ ಮಗುವಿನ ಹೆತ್ತಾಕೆಗೆ ನೀವು ಕೊಡುವ ಪ್ರತಿಫಲ.." ನೇರವಾಗಿ ನುಡಿದಳು ಸಾಜೀದಳ ಮಾತು ಆತನಿಗೆ ಚುಚ್ಚಿತ್ತು ಕೈಗಳಿಂದ ಮುಖ ಮುಚ್ಚಿಕೊಂಡ

ಆ ಸಮಯಕ್ಕೆ ಸಫಾ ಎದ್ದು ಬಂದಳು
"ಅಪ್ಪಾ.."
"ಬಾ ಪುಟ್ಟ ಮನೆಗೆ ಹೋಗೋಣ.."
"ನಾನು ಬರುವುದಿಲ್ಲ ಅಪ್ಪಾ ನಾನು ಆಂಟಿ ಮನೆಯಲ್ಲಿಯೇ ಇರುತ್ತೇನೆ ಅಲ್ಲಿಗೆ ಬಂದರೆ ಅಮ್ಮ ಬರೆ ಹಾಕುತ್ತಾಳೆ.. ಆಂಟಿ ಒಳ್ಳೆಯವರು ನನ್ನ ಪ್ರೀತಿ ಮಾಡುತ್ತಾರೆ ನನ್ನನ್ನು ಓದಿಸುತ್ತಾರೆ.." ಎಂದು ಸಾಜೀದಳಿಗೆ ಗಟ್ಟಿಯಾಗಿ ಆಂಟಿಕೊಂಡಳು ಸಫಾ

"ಕೇಳಿದೀರಾ ನಿಮ್ಮ ಮಗಳ ಮಾತನ್ನ ಮಕ್ಕಳು ಪ್ರೀತಿಗೆ ಬಾಗುವಷ್ಟು ಬೇಗ ಯಾವುದಕ್ಕೂ ಬಗ್ಗುವುದಿಲ್ಲ ಶಿಕ್ಷೆಯಿಂದ ಮೊಂಡರಾಗುತ್ತಾರೆ ಅಷ್ಟೇ.."
"ನೀವೇ ಹೇಳಿ ಅಕ್ಕ ನಾನೇನೂ ಮಾಡಲಿ.."
"ನಮ್ಮಲ್ಲಿ ಬೇಕಾದಷ್ಟು ಇಸ್ಲಾಮಿಕ್ ಸ್ಕೂಲ್'ಗಳಿವೆ ಸಫಾಳನ್ನು ಯಾವುದಾದರೂ ಬೋರ್ಡಿಂಗ್ ಸ್ಕೂಲಿಗೆ ಸೇರಿಸಿ ಅಲ್ಲಿ ಶಿಸ್ತು ನಿಯಮಗಳಿದ್ದರೂ ಮಗು ಪ್ರತಿಭಾವಂತೆಯಾಗುತ್ತದೆ ಅಲ್ಲಿ ನಿಮ್ಮಾಕೆಗಿಂತ ಎಷ್ಟೋ ಒಳ್ಳೆಯವರಿರುತ್ತಾರೆ ಹೀಗಂದೆ ಎಂದು ಬೇಜಾರು ಮಾಡಿಕೊಳ್ಳಬೇಡಿ.."
"ಆದರೂ ಅದೆಲ್ಲ ಖರ್ಚು.." ಎಂದು ಕೈ ಕೈ ಹಿಸುಕುತ್ತಾ ಆತ ನುಡಿದ
"ಆ ಮಗುವಿನ ಹೆತ್ತಾಕೆಯ ನೆನಪಿಗಾಗಿಯಾದರೂ ಅಷ್ಟು ಹಣ ಖರ್ಚು ಮಾಡಲಾರಿರಾ..?"
"ಖಂಡಿತವಾಗಿಯೂ ಮಾಡುತ್ತೇನೆ ಅಕ್ಕ ಎಷ್ಟೇ ತೊಂದರೆಯಾದರೂ ಸರಿ ಅವಳನ್ನು ಸೇರಿಸುತ್ತೇನೆ ಓದಿಸುತ್ತೇನೆ.." ಧ್ವನಿಯಲ್ಲಿ ನಿರ್ಧಾರವಿತ್ತು
"ಹೋಗಮ್ಮ ಸಫಾ.."
"ಆಂಟೀ.."
"ಹೋಗು ಕಂದಾ ನಿನ್ನ ಒಳ್ಳೆಯ ಕಾನ್ವೆಂಟಿಗೆ ಸೇರಿಸುತ್ತಾರೆ ಚೆನ್ನಾಗಿ ಓದು ಜಾಣೆಯಾಗು ನಿನಗೆ ಸ್ಕೂಲಿನಲ್ಲಿಯೇ ಇಟ್ಟುಕೊಳ್ಳುತ್ತಾರೆ ಊಟ ತಿಂಡಿ ಎಲ್ಲಾ ಕೊಡುತ್ತಾರೆ.."
"ಹೌದಾ ಆಂಟಿ ಹಾಗಾದರೆ ಹೋಗುತ್ತೀನಿ.." ಓಡಿ ಬಂದು ತಂದೆಯ ಕೈ ಹಿಡಿದುಕೊಂಡಳು ಸಫಾ

"ನಾನು ಆಗಾಗ್ಗೆ ನಿನ್ನ ನೋಡಿಕೊಂಡು ಹೋಗುವುದಕ್ಕೆ ಬರುತ್ತೀನಿ.." ಸಾಜೀದ ಸಫಾಳಿಗೆ ಮುತ್ತು ಕೊಟ್ಟು ಹೇಳಿದಳು

ಮಗು ಟಾಟಾ ಮಾಡಿ ತಂದೆಯೊಂದಿಗೆ ಹೆಜ್ಜೆ ಹಾಕಿತು ಸಾಜೀದಳಿಗೆ ತಾನು ಏನನ್ನೋ ಸಾಧಿಸಿದ ತೃಪ್ತಿ
ಅದುವರೆಗೂ ಮೌನ ಪ್ರೇಕ್ಷಕನಾಗಿ ಕುಳಿತಿದ್ದ ಹಕೀಂ
"ಸಾಜೀ.. ನೀನು ತುಂಬಾ ಜಾಣೆ ಆದರೆ ಸ್ವಲ್ಪ.."
"ಏನು ಸ್ವಲ್ಪ.."
"ಏನಿಲ್ಲ ಬಾಯಿಲ್ಲಿ.." ಎಂದು ಹತ್ತಿರಕ್ಕೆಳೆದಕೊಂಡು ಅವಳ ಹಣೆಗೆ ಮುತ್ತಿಟ್ಟ
"ಹಕೀಂ.. ಈಗ ನಾನೊಂದು ಮಾತು ಹೇಳುತ್ತೀನಿ ನೀವು ನಡೆಸಿಕೊಡಬೇಕು.."
"ಹೇಳು ನನ್ನ ಗಿಣಿಯ ಬಯಕೆಯೇನು..?"
"ಅಮ್ಮನ ನೋಡಬೇಕು ಮನೆಗೆ ಹೋಗೋಣ ಹಕೀ.."
"ಏನಂದೇ..? ಇನ್ನೊಂದು ಸಾರಿ ಹೇಳು.."
"ಸಾಕು ತಮಾಷೆ ಅಮ್ಮನ ಮನೆಗೆ ಹೋಗೋಣ ಅಂದೆ.."
"ಇದೇನಪ್ಪ ಇವತ್ತು ಇಂತಹ ಒಳ್ಳೆಯ ಬುದ್ದಿ ಬಂದುಬಿಟ್ಟಿದೆ.."
"ಹಕೀಂ.. ನನ್ನಮ್ಮನಿಗೆ ತುಂಬಾ ನೋವುಕೊಟ್ಟೆ ನನ್ನನ್ನು ಎಷ್ಟು ಚೆನ್ನಾಗಿ ಸಾಕಿ ಇಷ್ಟು ವರ್ಷ ಬೆಳೆಸಿದರು ಆದರೆ ನಾನು ಅವರನ್ನ ಅರ್ಥಮಾಡಿಕೊಳ್ಳಲಿಲ್ಲ ಹೆತ್ತ ತಾಯಿ ಯಾರು ಅಂತ ಹುಡುಕುತ್ತ ಅವರನ್ನು ನೋಯಿಸಿದೆ ಈಗಲೂ ನೋಯಿಸುತ್ತಿದ್ದೇನೆ ನನ್ನಮ್ಮನ ತ್ಯಾಗ ನಾನು ಮರೆತೆ ನಾನಿದ್ದರೆ ಅವರಿಗೆ ಭಾರವೇನೋ ಎಂದು ಚಿಂತಿಸಿದೆ ಪಾಪಿ ನಾನು ಬದುಕಿರಬಾರದು.." ಎಂದು ಅವನ ಮಡಿಲಿನಲ್ಲಿ ಮುಖವಿಟ್ಟು ಬಿಕ್ಕಿದಳು
"ಅಳಬೇಡ ಸಾಜೀ.. ಅಳುವುದಕ್ಕೆ ಏನೂ ಆಗಿಲ್ಲ ನಿನ್ನ ತಪ್ಪು ನಿನಗೆ ಈಗ ಅರ್ಥವಾಗಿದೆ.."
"ಹೌದು ಹಕೀ.. ನಾನು ಪಾಪಿ ನಾನು ಬದುಕಿರಬಾರದು.."
"ನೋಡು ಮತ್ತೆ ಅದೇ ಮಾತು ನೀನು ಸತ್ತರೆ ನಿನ್ನ ತಂದೆ ತಾಯಿಗೆ ಎಷ್ಟು ದುಃಖವಾಗುತ್ತದೆ..? ಅಥವಾ ಅವರು ನನ್ನ ಸಾಕಿದವರು ನಾನು ಸತ್ತರೆ ಅವರಿಗೆ ಏನು ದುಃಖ ಅನ್ನುತ್ತೀಯೋ.."
"ಇಲ್ಲ ಹಕೀ.. ಇಲ್ಲ ನನ್ನ ಚುಚ್ಚಿ ಚುಚ್ಚಿ ನೋಯಿಸಬೇಡಿ.."
"ಅಳಬೇಡ ಸುಮ್ಮನಿರು.."ಅವಳ ತಲೆ ಸವರಿ ನುಡಿದ
"ಈಗಲೇ ಹೋಗೋಣವಾ ಹಕೀ.."
"ನಾನು ಆ ದಿನವೇ ನಿಮ್ಮ ತಂದೆ ತಾಯಿಗೆ ಒಂದಲ್ಲ ಒಂದು ದಿನ ನೀನು ಬದಲಾಗುತ್ತೀಯಾ ಅಂತ ಹೇಳಿದ್ದೆ ನೀವು ಅಲ್ಲಿಯವರೆಗೂ ಅವಳಿಂದ ದೂರವಿರಿ ನಿಮ್ಮ ಗೈರು ಹಾಜರಿಯ ಬೆಲೆ ಅವಳಿಗೆ ಗೊತ್ತಾಗಲಿ ಎಂದು ಹೇಳಿದ್ದೆ ಅದಕ್ಕೆ ಅವರು ಹೆಚ್ಚು ಕರೆ ಮಾಡುತ್ತೀರಲಿಲ್ಲ ಬರುತ್ತಿರಲಿಲ್ಲ ಆದರೆ ನೀನು ಅದಕ್ಕೆ ಬೇರೊಂದು ಅರ್ಥಕೊಟ್ಟೆ.."
"ಹೌದಾ ನೀವು ನನಗೆ ಹೇಳಲೇ ಇಲ್ಲ.."
"ಸಮಯ ಬಂದಾಗ ಹೇಳುತ್ತಿದ್ದೀನಲ್ಲ.."

"ಈಗ ನನಗೆ ನನ್ನ ಅಮ್ಮ ಅಪ್ಪನ ಬೆಲೆ ಗೊತ್ತಾಯಿತು ಹಕೀಂ.. ದುಲೈಕರವರು ಹೇಳಿದರು ಅವರು ಹೇಳಿದ್ದು ನಿಜ ಜಮೀಲಾಳಂತಹ ತಾಯಿ ಇದ್ದಿದ್ದರೆ ನನ್ನ ಗತಿ ಏನಾಗುತ್ತಿತ್ತು ಆದರೆ ನನ್ನಮ್ಮ..? ಜಮೀಲಾ ತನ್ನ ಪತಿಯ ಮಗುವೆಂದು ತಿಳಿದಿದ್ದರೂ ನಿಕೃಷ್ಟ ಮಾಡಿದಳಲ್ಲ ನಮ್ಮಮ್ಮ ಯಾರಿಗೋ ಹುಟ್ಟಿದ ಹುಟ್ಟಿನ ಮೂಲವೇ ತಿಳಿಯದ ನನ್ನನ್ನು ಎಷ್ಟು ಅಕ್ಕರೆಯಿಂದ ಬೆಳೆಸಿದರು ನನಗೆ ಆಕೆ ಹೆತ್ತ ತಾಯಿಗಿಂತ ಹೆಚ್ಚು ಹಕೀಂ.. ನನ್ನಮ್ಮ ಕರುಣಾಮಯಿ ನಡಿರಿ ಹೋಗೋಣ ಆ ನನ್ನ ತಾಯಿಯ ಕ್ಷಮೆ ಕೇಳಬೇಕು.."
"ನಡೀ ಹೋಗೋಣ.." ಎಂದು ಹಕೀಂ ಹೊರಬಂದು ಕಾರನ್ನು ಹೊರತೆಗೆದ ಸಾಜೀದ ರೆಡಿಯಾಗಿ ಬಂದಳು ತಾಯಿ ತಂದೆ ತಮ್ಮನಿಗಾಗಿ ಒಂದಿಷ್ಟು ತಿಂಡಿ ತಿನಿಸುಗಳನ್ನು ಕೊಂಡಳು
"ಹಕೀಂ.. ನನ್ನ ಅಮ್ಮ ಅಪ್ಪಾ.. ನನ್ನನ್ನು ಕ್ಷಮಿಸುತ್ತಾರಾ.. ನನಗೆ ಭಯವಾಗುತ್ತೆ ಹಕೀ.."
"ಖಂಡಿತಾ ಕ್ಷಮಿಸುತ್ತಾರೆ ಸಾಜೀ.. ನೀನು ಎಂದರೆ ಅವರಿಗೆ ಪ್ರಾಣ ನಿನ್ನನ್ನು ನೋಡಲು ಅವರು ಕಾತುರರಾಗಿರುತ್ತಾರೆ.." ಎಂದು ಕಾರಿನ ವೇಗವನ್ನು ಹೆಚ್ಚಿಸಿದ

ಮನೆಯ ಮುಂದೆ ಕಾರು ಬಂದು ನಿಂತ ಶಬ್ದ ಕೇಳಿ ಮೈಮೂನರವರು ಹೊರಬಂದರು

"ಅಮ್ಮಾ.." ಓಡಿಬಂದು ತಾಯಿಯನ್ನು ತಬ್ಬಿಕೊಂಡಳು
"ಸಾಜೀ.. ಮಗಳೇ ಏನಾಯಿತಮ್ಮ..?" ಎಂದು ಮಗಳ ತಲೆ ಸವರಿದರು
"ಏನು ಆಗಿಲ್ಲ ಅತ್ತೆ ಅವಳಿಗೆ ನಿಮ್ಮನ್ನು ನೋಡಿ ಹಾಗಾಗಿದೆ.."
"ಅಯ್ಯೋ ನನ್ನ ಕಂದಾ.. ಬಾಮ್ಮ ಒಳಗೆ.." ಎಂದು ಕರೆದೊಯ್ದರು

"ಅಮ್ಮಾ.." ತಾಯಿಯ ಮಡಿಲಲ್ಲಿ ಮುಖವಿಟ್ಟು ಬಿಕ್ಕಿದಳು
"ನೋಡು ಸಾಜೀ.. ಬಸುರಿ ಹುಡುಗಿಯರು ಸಂಜೆ ಹೊತ್ತಿನಲ್ಲಿ ಹೀಗೆ ಅಳಬಾರದು ಎಳು.."
"ಅಮ್ಮ ನನ್ನ ಕ್ಷಮಿಸುತ್ತಾರಾ ಅಮ್ಮಾ.. ನಾನು ನಿಮಗೆ ತಕ್ಕ ಮಗಳಾಗಲಿಲ್ಲ.."

ಹಮೀದಾಕ ಸದ್ದಾಂ ಅವಳನ್ನೇ ಬೆಪ್ಪಾಗಿ ನೋಡುತ್ತಾ ನಿಂತಿದ್ದರು

"ನೀನೇನು ತಪ್ಪು ಮಾಡಿದ್ದೀಯಾ ಕ್ಷಮಿಸುವುದಕ್ಕೆ ನನ್ನ ಮಗಳು ಏನು ಮಾಡಿದರೂ ಅದು ನನಗೆ ಪ್ರೀತಿಯೇ.."
"ಅಮ್ಮಾ.. ನೀವು ಮನುಷ್ಯಳಲ್ಲ ನೀವು ನನ್ನ ಪಾಲಿಗೆ..?"
"ಸಾಕು ಸಾಕು ಹೊಗಳಿಕೆ ಏಳು ಎದ್ದು ಮುಖ ತೊಳೆದಕೋ ಬಾ ತಿಂಡಿ ಕೊಡ್ತೀನಿ.." ಎಂದು ಅವಳ ಮಾತನ್ನು ಅರ್ಧಕ್ಕೆ ನಿಲ್ಲಿಸಿದರು ಮೈಮೂನ
"ನೀವು ಕ್ಷಮಿಸಿದ್ದೀರಾ ಅಂತ ಹೇಳಿ.." ಎಂದು ಗೊಗೆರೆದಾಗ ಹಮೀದಾಕ ಹೇಳಿದರು
"ಅಲ್ಲವೇ ಸಾಜೀ.. ನೀನು ಪುಟ್ಟ ಮಗುವಾಗಿದ್ದಾಗಿನಿಂದ ಎಷ್ಟೋ ತಪ್ಪು ಮಾಡಿದ್ದೀಯಾ ಅದೆಲ್ಲಾ ನಿನಗೆ ಗೊತ್ತಾ..? ತಂದೆ ತಾಯಿಗೆ ಅದು ತಪ್ಪೇ ಅಲ್ಲ ಈಗ ನೀನು ದೊಡ್ಡವಳು ಎಂದು ನಾವು ನಿನ್ನನ್ನು ಕ್ಷಮಿಸುವುದೇ ನೀನು ಎಷ್ಟೇ ದೊಡ್ಡವಳಾದರೂ ನೀನು ನಮ್ಮ ಪಾಲಿಗೆ ಮಗುವೇ ಏನೇ ತಪ್ಪು ಮಾಡಿದರೂ ಅದಕ್ಕೆ ಬೆಲೆಯಿಲ್ಲ.."
"ಅಪ್ಪಾ.."
"ಸಮಾಧಾನ ಮಾಡಿಕೋ ಸಾಜೀ.. ಆಮೇಲೆ ನಿನ್ನ ಹೊಟ್ಟೆಯಲ್ಲಿರುವ ಮಗುವಿಗೆ ನೋವಾಗುತ್ತೆ.." ಎಂದರು ಹಮೀದಾಕ
"ಸಾಜೀ.. ನೀನು ನಮ್ಮ ಮಗಳೇ ಎಂದೆಂದಿಗೂ ಮಗಳಾಗಿ ಸಾಕಿದ್ದೇವೆಯೇ ಹೊರತು ಸಾಕು ಮಗಳು ಎಂದಲ್ಲ ಆದರೆ ನೀನೆ ಏನೇನೋ ಯೋಚಿಸಿ ತಲೆ ಕೊಡಿಸಿಕೊಂಡೆ ಈಗಲೂ ನೀನಾಗಿಯೇ ಬದಲಾಗಿದ್ದಿ.." ಎಂದು ಮೈಮೂನ ನುಡಿದರು

"ನಾನಾಗಿಯೇ ಬದಲಾಗಲಿಲ್ಲ ಅಮ್ಮ ಈಗ ನನಗೆ ಪ್ರಪಂಚ ಏನೆಂದು ತಿಳಿಯಿತು ಇನ್ನು ಮುಂದೆ ನೀವೇ ನನ್ನ ತಾಯಿ ಎದುರಿಗೆ ಇರುವ ನಿಮ್ಮನ್ನು ಮರೆತು ಕಾಣದವಳಿಗಾಗಿ ಒದ್ದಾಡಿದ ನಾನೆಷ್ಟು ಮೂರ್ಖಳು.."
"ಹೋಗಲಿ ಬಿಡಮ್ಮ ಈಗ ನಿನ್ನ ಮನಸ್ಸು ತಿಳಿಯಾಯಿತಲ್ಲ ಸಾಕು.." ಎಂದು ಹಮೀದಾಕ ನುಡಿದಾಗ
"ನಮಗೆ ನಿಜವಾಗಲೂ ನಿನ್ನ ಹೆತ್ತವರು ಗೊತ್ತಿಲ್ಲಮ್ಮ ಗೊತ್ತಿದ್ದಿದ್ದರೆ ಖಂಡಿತಾ ತಿಳಿಸುತ್ತಿದ್ದವು ಎಲ್ಲರಿಗೂ ಅವರ ಹೆತ್ತವರನ್ನು ನೋಡುವ ಆಸೆಯಿರುತ್ತೆ ಎಂದು ನನಗೆ ಗೊತ್ತು.." ಮೈಮೂನ ನುಡಿದರು
"ಖಂಡಿತಾ ನನಗೆ ಬೇಡ ಅವರು ನಿಮಗೆ ಗೊತ್ತಿದ್ದರೂ ನಾನು ನೋಡುವುದಿಲ್ಲ ಮಮತೆಯ ಧಾರೆಯೆರೆದ ನೀವೇ ನನ್ನ ಹೆತ್ತ ತಾಯಿ ನಾನು ನಿಮ್ಮ ಮಡಿಲ ಮೊಗ್ಗು.."
"ಹೌದು ಕಂದಾ.. ಹೌದು.." ಎಂದು ಮಗಳನ್ನು ತಬ್ಬಿಕೊಂಡರು

ನಿಜ ವಿಷಯವೆಲ್ಲವನ್ನು ತಿಳಿದಿದ್ದ ಸದ್ದಾಂ ವಾತಾವರಣ ತಿಳಿಯಾಗಿಸಲು ತಮಾಷೆ ಮಾಡತೊಡಗಿದ
"ಅಕ್ಕಾ ನಿನಗೆ ನನ್ನ ನೆನಪೆ ಇಲ್ಲವಲ್ಲ ಅಮ್ಮ ಹೆತ್ತ ಮಗ ನಾನು ನಿನ್ನ ಸ್ವಂತ ತಮ್ಮನಲ್ಲ ಎಂದು ನಾನು ಬೇಡವಾ.."
"ಸದ್ದಾ..ಹಾಗನ್ನ ಬೇಡ ನೀನು ನನ್ನ ಸ್ವಂತ ತಮ್ಮನೇ ಕಣೋ.." ಎಂದು ಕಣ್ಣೀರು ತುಂಬಿ ನುಡಿದಳು
"ಸುಮ್ಮನೆ ತಮಾಷೆ ಮಾಡಿದೆ ಅಕ್ಕಾ.. ನನಗೆ ಗೊತ್ತಿಲ್ಲವೇ.."
"ನಮ್ಮ ಸಾಜೀದಳ ಮನಸ್ಸು ಹೀಗೆ ಅಂತ ಹೇಳುವುದಕ್ಕಾಗುವುದಿಲ್ಲ ಯಾವಾಗ ಬೇಕಾದರೂ ಬದಲಾವಣೆಯಾಗುತ್ತಾಳೆ ಸರಿಯಾಗಿ ಕೇಳಿಬಿಡಿ ಸ್ವಂತ ಮಗಳೋ ಎಂದು.." ಹಕೀಂ ಹಾಸ್ಯ ಮಾಡಿದ
"ಸಾಕು ನಿಮ್ಮ ತಮಾಷೆ.." ಸಾಜೀದ ಕಣ್ಣಿನಲ್ಲಿಯೇ ಗಂಡನನ್ನು ಗದರಿದಳು ಹಕೀಂ ತುಂಟತನದಿಂದ ನಕ್ಕ

ಮೈಮೂನ ಎಲ್ಲರಿಗೂ ತಿಂಡಿ ತಂದುಕೊಟ್ಟರು
"ನೋಡು ಸಾಜೀ.. ಇನ್ನು ಯಾವುದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡ ಎಲ್ಲಾ ಮರೆತು ಹಾಯಾಗಿ ಇರು ನಿಧಾನವಾಗಿ ತಿನ್ನು.." ಎಂದು ಮಗಳನ್ನು ಉಪಚರಿಸದರು
"ಅಮ್ಮಾ.. ನಿಮ್ಮ ಮಗಳು ಸಿಕ್ಕಿದಳು ಎಂದು ನಿಮ್ಮ ಹೆತ್ತ ಮಗನ ನೆನಪೇ ಇಲ್ಲವಲ್ಲ ಈ ಬಡಪಾಯಿಯ ಗತಿ..? ಅಯ್ಯೋ ನಾನಾದರೂ ಅಮ್ಮನ ಸಾಕು ಮಗನಾಗಬಾರದಾಗಿತ್ತೆ.." ಸದ್ದಾಂ ಹಾಸ್ಯ ಮಾಡಿದ
"ಸಾಕು ಸುಮ್ಮನಿರೋ ಏನೇನೋ ಹೇಳಬೇಡ ಅಮ್ಮನಿಗೆ ನಾವಿಬ್ಬರೂ ಒಂದೇ ನಮ್ಮಿಬ್ಬರಲ್ಲಿ ಅಮ್ಮ ಎಂದು ಭೇದಭಾವ ಮಾಡಿಲ್ಲ.." ಎಂದು ರೇಗಿದಳು ಸಾಜೀದ
"ನೋಡಿದಿರಾ ಅಮ್ಮಾ ನಿಮ್ಮ ಮಗಳ ಮಾತು ನಾನೇ ನಿಮಗೆ ಹೆಚ್ಚು ಅಲ್ಲವೇನಮ್ಮ.." ಅವಳನ್ನು ರೇಗಿಸಿದ
"ಅಮ್ಮಾ ನಾನೇ ನಿಮಗೆ ಹೆಚ್ಚು ಅಲ್ಲವಾ ಅಮ್ಮಾ.." ತಾನೂ ಚಿಕ್ಕ ಹುಡುಗಿಯಂತೆ ನುಡಿದಳು ಸಾಜೀದ

ಬೆಳೆದ ಮಕ್ಕಳಿಬ್ಬರೂ ಹುಡುಗರಂತೆ ಆಡುತ್ತಿರುವುದನ್ನು ಕಂಡು ದಂಪತಿಗಳಿಬ್ಬರು ಸಂತೋಷಗೊಂಡರು ಮೈಮೂನ ನಿಧಾನವಾಗಿ ನುಡಿದರು
"ನೀವಿಬ್ಬರೂ ನನ್ನ ಎರಡು ಕಣ್ಣುಗಳ ಹಾಗೆ ಯಾವ ಕಣ್ಣಿಗೆ ನೋವಾದರೂ ದೇಹಕ್ಕೆ ನೋವು ಯಾವ ಕಣ್ಣು ಹೆಚ್ಚು ಯಾವ ಕಣ್ಣು ಕಡಿಮೆಯೆಂದು ಹೇಳುವುದು.."

"ಅಮ್ಮಾ.." ಎಂದು ಅಕ್ಕಾ ತಮ್ಮ ಇಬ್ಬರು ತಾಯಿಯನ್ನು ತಬ್ಬಿಕೊಂಡರು
"ನೋಡಿ ಈಗ ನಿಜ ವಿಚಾರ ಹೇಳಿಬಿಡುತ್ತೇನೆ ನನಗೆ ನೀವಿಬ್ಬರೂ ಹೆಚ್ಚಲ್ಲ ಈಗ ಹುಟ್ಟುವ ನನ್ನ ಮೊಮ್ಮಗುವೇ ನನಗೆ ಹೆಚ್ಚು.." ಮಗಳ ಹೊಟ್ಟೆಯಡೆಗೆ ನೋಡುತ್ತಾ ನುಡಿದರು ಮೈಮೂನ

ಅವರ ಮಾತಿಗೆ ಎಲ್ಲರೂ ನಕ್ಕರು ಸಾಜೀದ ನಾಚಿಕೆಯಿಂದ ತಲೆತಗ್ಗಿಸಿದರೆ ಹಕೀಂನ ಮುಖದಲ್ಲಿ ಹೆಮ್ಮೆ ನೆಲೆಸಿತ್ತು..
               
           ಮುಕ್ತಾಯವಾಯಿತು

ಸಾಜೀದ ಸಂಚಿಕೆಯಲ್ಲಿ ಮೂಡಿಬಂದ ಪಾತ್ರಗಳು ಇಂದು ನಮ್ಮ ಸುತ್ತಮುತ್ತಲೂ ನಮಗೆ ಕಾಣಸಿಗುತ್ತವೆ ಅದರಲ್ಲೂ ಸಾಜೀದ ಮತ್ತು ಜಮೀಲಾಳಂತವರು ಹೆಚ್ಚಾಗಿ ಕಾಣಸಿಗುತ್ತಾರೆ ಅಲ್ಲಾಹನು ಅಂತಹ ಎಲ್ಲಾ ಸಹೋದರಿಯರಿಗೂ ಸಧ್ಬುದ್ದಿ ನೀಡಿ ಅಲ್ಲಾಹು ಸುಬುಹಾನಹುತ್ತಾಲ ಎಲ್ಲ ತಂದೆತಾಯಂದಿರಿಗೂ ದೀರ್ಘಾಯುಷ್ಯ ಆಫಿಯತ್ ನೀಡಿ ಇಹಲೋಕದಲ್ಲಿ ಒಳಿತನ್ನು ನೀಡಿ ಮತ್ತು ಪರಲೋಕದಲ್ಲಿ ಒಳಿತನ್ನು ನೀಡಿ ಮತ್ತು ನಮ್ಮನ್ನು ನಮ್ಮ ತಂದೆತಾಯಂದಿರನ್ನು ನರಕ ಶಿಕ್ಷೆಯಿಂದ ರಕ್ಷಿಸಿ ಹಿಲಾಹನು ನೀಡಿದ ಅನುಗ್ರಹಗಳಿಗೆ ನಾವು ಅವನಿಗೆ ಅಭಾರಿಯಾಗಿ ಜೀವಿಸಿ ಸಜ್ಜನರಿಗಾಗಿ ಅಲ್ಲಾಹನು ಮೀಸಲಿರಿಸಿದ ಸ್ವರ್ಗತೋಟಗಳಲ್ಲಿ ನಮ್ನೆಲ್ಲರನ್ನು ಒಟ್ಟುಗೂಡಿಸುವಂತಾಗಲಿ..

     ​۞ ْآمِيـــــنْ يَارَبَّ الْعَالَمِين۞

ಬರೆಯಲು ಶಕ್ತಿ ನೀಡಿದ ಸರ್ವಶಕ್ತನಾದ ಅಲ್ಲಾಹನು ಅದೇ ರೀತಿ ನನಗೆ ಪ್ರೋತ್ಸಾಹ ನೀಡುತ್ತಿರುವ ನನ್ನ ಪ್ರೀತಿಯ ಸಹೋದರ ಸಹೋದರಿಯರಿಗೂ ಮತ್ತು ನನ್ನ ಎಲ್ಲ ಬರಹಗಳನ್ನು ಓದಿ ಶೇರ್ ಮಾಡುವ ನನ್ನೆಲ್ಲಾ ಗೆಳಯರ ಬಳಗಕ್ಕೂ ಕೃತಜ್ಞತೆ ಸಲ್ಲಿಸುತ್ತೇನೆ ಅದೇ ರೀತಿ ಮುಂದಿನ ಒಂದು ನೈಜ ಕಥಾವಸ್ತು ಕಾದಂಬರಿ ರೂಪದಲ್ಲಿ ನಿಮ್ಮ ಮುಂದೆ ತರುತ್ತೇನೆ ಅದಕ್ಕೂ ಇದೆ ರೀತಿ ಪ್ರೋತ್ಸಾಹ ನೀಡುವ ವಿಶ್ವಾಸದೊಂದಿಗೆ..

ಲೇಖಕರು: ಕೆಎಂ ಜಲೀಲ್ ಕುಂದಾಪುರ

NOOR-UL-FALAH ISLAMIC STORE 

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್