ಝೈನಬ್ (ರ.ಅ)
ಮುರಿಯದ ದಾಂಪತ್ಯ ಸಂಬಂಧ ಪ್ರವಾದಿ ಪುತ್ರಿ ಝೈನಬ್(ರ) ರವರ ಚರಿತ್ರೆ ___________________________________ ಪ್ರವಾದಿ ﷺ ರವರ ಪ್ರಥಮ ಪುತ್ರಿಯ ಜನನ ಖದೀಜ... ಮಕ್ಕಾದ ಅಗ್ರಗಣ್ಯ ಶ್ರೀಮಂತಲ್ಲಿ ಒಬ್ಬರು... ವ್ಯಾಪಾರದಲ್ಲಿ ಎತ್ತಿದ ಕೈ.. ಬುದ್ಧಿಯಲ್ಲಿ ಚತುರೆ.. ಕೊಡುಗೈ ದಾನಿ.. ಒಬ್ಬರು ಏನಾದರೂ ಕೇಳಿದರೆ ಇಲ್ಲ ಎಂದು ಹೇಳುವ ಸ್ವಭಾವ ಅವರದಲ್ಲ.. ಆದ್ದರಿಂದ ಮಕ್ಕಾದ ಎಲ್ಲರಿಗೂ ಅವರಲ್ಲಿ ಒಂದಲ್ಲ ಒಂದು ರೀತಿಯ ಆತ್ಮೀಯತೆ ಇತ್ತು...ಅವರ ಮನೆಯಲ್ಲಿ ಸದಾ ಅತಿಥಿಗಳು ನೆರೆದಿರುತ್ತಿದ್ದರು... ಬಂದವರಿಗೆಲ್ಲ ಆತಿಥ್ಯ.... ಪ್ರಾಯ ಮೂವತ್ತೊಂಬತ್ತು ದಾಟಿ ನಲುವತ್ತಾಗಿತ್ತು.. ಅಷ್ಟರ ತನಕ ವ್ಯಾಪಾರದ ಎಲ್ಲಾ ಜವಾಬ್ದಾರಿಯನ್ನು ಅವರೇ ಹೊರುತ್ತಿದ್ದರು.. ಇದೀಗ ಅದರ ಹಿಂದೆ ಹೋಗಲು ಅವರಿಗೆ ಸಾಧ್ಯವಾಗುತ್ತಿಲ್ಲ...ಸೂಕ್ತರಾದ ಮೇಲ್ವಿಚಾರಕರನ್ನು ನೇಮಕ ಮಾಡಿ ಎಲ್ಲಾ ಕಾರ್ಯವನ್ನು ಅವರಿಗೆ ವಹಿಸಿಕೊಡುವುದು ಅವರ ಉದ್ದೇಶವಾಗಿತ್ತು...ಅವರು ಮೇಲ್ವಿಚಾರಕರ ಹುಡುಕಾಟದಲ್ಲಿದ್ದರು... ಒಂದು ದಿನ ಅಬೂತಾಲಿಬ್ ಖದೀಜರ ಮನೆಗೆ ಬಂದು ತಮ್ಮ ಸಹೋದರ ಅಬ್ದುಲ್ಲಾ ರ ಮಗನಾದ ಮುಹಮ್ಮದರನ್ನು ﷺ ಮೇಲ್ವಿಚಾರಕರಾಗಿ ನೇಮಿಸಲು ವಿನಂತಿಸಿಕೊಂಡರು ಖದೀಜರಿಗೆ ಹುಡುಕುವ ಬಳ್ಳಿ ಕಾಲಿಗೆ ಸುತ್ತಿದ ಅನುಭವ... ಸಂತೋಷದಿಂದ ಒಪ್ಪಿಕೊಂಡರು ಖದೀಜ ಕೂಡಲೇ ಮನೆಯ ಕೆಲಸದಾಳಾದ ಮೈಸರತ್ ಳನ್ನು ಕರೆದು ಹೇಳಿದರು... ಮೈಸರ..!!!ಈ ವರ್ಷ ನಮ್ಮ ವ್ಯಾಪಾರಕ್ಕೆ ನಾಯಕತ್ವವನ್...