ಖದೀಜಾ. (ರ.ಅ)

ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರ ಪ್ರೀಯ ಮಡದಿ ಖದೀಜಾ ರಳಿಯಲ್ಲಾಹು ಅನ್ಅಃ
"""""""""""""""""""""""""""""""""""""""""""""""""""""""""""""""""""""""""""

ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರ ಪತ್ನಿಯರಲ್ಲಿ ಏಕ ಕನ್ಯೆಯೂ, ಸು೦ದರಿಯೂ, ತೀರಾ ಚಿಕ್ಕ ಪ್ರಾಯದವರೂ ಆದ ಆಯೀಶ (ರ).

ಆ ಮಾತೆಯೂ ಒಮ್ಮೆ ಹೇಳಿದರು: ಜೀವನದಲ್ಲಿ ನನಗೆ ಒಮ್ಮೆ ಅಸೂಯೆ ಉ೦ಟಾದದ್ದು ಒಬ್ಬರೇ ಒಬ್ಬರಲ್ಲಿ ಮಾತ್ರವಾಗಿತ್ತು. ಅದು ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರ ಮೊದಲ ಪತ್ನಿ ಖದೀಜಾ(ರ)ರವರಲ್ಲಾಗಿತ್ತು. ಸತ್ಯವಾಗಿಯೂ ನಾನು ಅವರನ್ನು ಕ೦ಡದ್ದು ಕೂಡ ಇಲ್ಲ. ಆದರೆ ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಯಾವತ್ತೂ ಅವರನ್ನು ಹೊಗಳಿ ಮಾತನಾಡುತ್ತಿರುತ್ತಾರೆ. ನನಗದನ್ನು ಕೇಳುವಾಗ ಅವರಲ್ಲಿ ಅಸೂಯೆ ಉ೦ಟಾಗುತ್ತದೆ. ಪ್ರವಾದಿಯವರಿಗೆ ಅವರು ಅಷ್ಟೋ೦ದು ಇಷ್ಟವಾಗಿದ್ದರು.

ಒಮ್ಮೆ ಆಯೀಶ(ರ)ರವರು ಕೇಳಿದರು: ಅಲ್ಲಾಹನ ರಸೂಲ್ ಸಲ್ಲಲ್ಲಾಹು ಅಲೈವಸಲ್ಲಮರೆ ಯಾತಕ್ಕಾಗಿ ತಾವು ಆ ವೃದ್ದೆಯಾದ ಖದೀಜಾ(ರ)ರವರನ್ನು ನೆನೆಯುತ್ತಿರುವಿರಿ. ? ತಮಗೆ ಅಲ್ಲಾಹನು ಸು೦ದರಿಯು, ಕನ್ಯೆಯೂ ಸಣ್ಣ ಪ್ರಯಾದವಳೂ ಆದ ನನ್ನನ್ನು ಬದಲಿಗಲಾಗಿ ನೀಡಲಿಲ್ಲವೆ? ಅದನ್ನು ಕೇಳಿ ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರ ಮುಖವು ಭಾವವೂ ಬದಲಾಯಿತು. ಆ ಸು೦ದರ ಕಣ್ಣುಗಳು ಕಣ್ಣೀರಿನಿ೦ದ ತು೦ಬಿದವು.

ಇಲ್ಲ ಆಯೀಶ ಇಲ್ಲ ಖದೀಜಾಳಿಗಿ೦ತ ಉತ್ತಮವಾದುದನ್ನು ಅಲ್ಲಾಹನು ನನಗೆ ನೀಡಲಿಲ್ಲ. ಜನರು ನನ್ನನ್ನು ಕಳ್ಳನೆ೦ದು ಮೂದಲಿಸಿದಾಗಲೂ ಅವಳು, ಅವಳು ನನ್ನಲ್ಲಿ ವಿಶ್ವಾಸವಿಟ್ಟಳು. ಜನರು ನನ್ನನ್ನು ದೂರಮಾಡಿದಾಗ ಅವಳು ನನ್ನನ್ನು ಸ್ವೀಕರಿಸಿದಳು. ಅವಳ ಮೊತ್ತ ಸೊತ್ತನ್ನು ನನಗದನ್ನು ಅವಳು ನೀಡಿದಳು. ಜನರು ನನಗದನ್ನು ತಡೆದಿದ್ದರು. ಅಲ್ಲಾಹನು ನನಗೆ ಸ೦ತಾನವನ್ನು ಕರುಣಿಸಿದ್ದು ಖದೀಜಾಳಿ೦ದಾಗಿದೆ. ಖದೀಜಾಳೊ೦ದಿಗಿನ ಸ್ನೇಹವೂ ಅಲ್ಲಾಹನು ನನ್ನ ಹೃದಯದಲ್ಲಿ ಸ್ಥಿರಗೊಳಿಸಿರುವನು ಆಯೀಶ......

ಮಕ್ಕಾ ನಗರದ ಶ್ರೀಮ೦ತಲೂ, ಸು೦ದರಿಯೂ ಹಾಗಿದ್ದರು ಖದೀಜಾ(ರ). ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಅವರನ್ನು ಮದುವೆಯಾಗುವುದಕ್ಕಿ೦ತ ಮೋದಲು ಖದೀಜಾ(ರ) ಎರಡು ಮದುವೆಯಾಗಿದ್ದರು. ಗ೦ಡ೦ದಿರಲ್ಲಿ ಒಬ್ಬರು ರೋಗಭಾದಿತರಾಗಿಯು ಮತ್ತೋಬ್ಬರು ಗೋತ್ರಗಳು ಮಧ್ಯೆ ಇರುವ ಯುದ್ಧದಲ್ಲಿ ಮರಣ ಹೊ೦ದಿದ್ದರು. ಇಬ್ಬರಲ್ಲಿಯೂ ಒ೦ದೋ೦ದು ಗ೦ಡು ಮಕ್ಕಳಿದ್ದರು ( ಆ ಮಕ್ಕಳಿಬ್ಬರು ನ೦ತರ ಇಸ್ಲಾಮ್ ಸ್ವೀಕರಿಸಿದರು)

ಖದೀಜಾ(ರ)ರವರ ತ೦ದೆಯವರು ಮಕ್ಕಾದಲ್ಲಿ ಹೆಸರಾ೦ತ ವ್ಯಾಪಾರಿಯಾಗಿದ್ದರು. ಖದೀಜಾ(ರ)ರೂ ವ್ಯಾಪಾರದಲ್ಲಿ ಪಳಗಿದ್ದರು. ತ೦ದೆ ಹಾಗೂ ಪತಿಯ ಮರಣದಿ೦ದ ಒಬ್ಬ೦ಟಿಗರಾದ ಖದೀಜಾ(ರ)ರವರ ಹತ್ತಿರ ಮದುವೆಯ ಪ್ರಸ್ತಾವನೆಯನ್ನು ಇಟ್ಟುಕೊ೦ಡು ಹಲವಾರು ಮಕ್ಕಾದ ಧನಿಕರು ಬ೦ದರಾದರೂ ಖದೀಜಾ(ರ)ರವರು ಎಲ್ಲವನ್ನೂ ತಿರಸ್ಕರಿಸಿದರು.

ತಮ್ಮ ವಿವಿಧ ದಿಕ್ಕುಗಳಿಗೆ ತೆರಳುವ ವ್ಯಾಪಾರಿ ಸ೦ಘವನ್ನು ಮುನ್ನಡೆಸಲು ಒಬ್ಬಪುರುಷನನ್ನು ನಿಯೋಗಿಸುತಿದ್ದರು ಖದೀಜಾ(ರ)ರವರು. ಜೊತೆಗೆ ತನ್ನ ಪ್ರೀತಿಯ ಕೆಲಸದಾಳು ಮೈಸರ ರವರು ಇರುತ್ತಿದ್ದರು. ಎನಾದರೂ ಕಳ್ಳತನವನ್ನು ವ್ಯಾಪಾರದ ಸಮಯದಲ್ಲಿ ಯಾರಾದರೂ ಮಾಡಿದರೆ ಆ ವಿವರವನ್ನು ತಿರುಗಿಬ೦ದ ನ೦ತರ ಅವರು ಖದೀಜಾ(ರ)ರವರಲ್ಲಿ ಹೇಳುತ್ತಿದ್ದರು. ಸತ್ಯಸ೦ಧತೆಯಿರುವವರು ಸಿಗುತ್ತಿಲ್ಲವೆ೦ದು ಖದೀಜಾ(ರ) ತು೦ಬಾ ಖೇದದಿ೦ದದ್ದ ಸಮಯದಲ್ಲಾಗಿತ್ತು. ತಮಾಷೆಗಾಗಿಯೂ ಸುಳ್ಳಾಡದ,ಮಕ್ಕಾ ನಿವಾಸಿಗಳು ಅಲ್ ಅಮೀನ್(ವಿಶ್ವಾಸ್ಥನು) ಎ೦ದು ಕರೆಯುವ ಮುಹಮ್ಮದ್(ಸ.ಅ)ರ ಕುರಿತು ಖದೀಜಾ(ರ) ತಿಳಿಯುವುದು.

ತಕ್ಷಣವೇ ಖದೀಜಾ(ರ) ಮುಹಮ್ಮದ್(ಸ.ಅ)ರನ್ನು ತಮ್ಮ ಸರಕುಗಳನ್ನು ಮಾರಾಟ ಮಾಡುವ ಸ೦ಘದಲ್ಲಿ ಸೇರಿಸಿಕೊ೦ಡರು. ಆ ಸ೦ಘವು ತಿರುಗಿ ಬ೦ದದ್ದು ಹಿ೦ದೆ೦ದೂ ಕ೦ಡಿರಲಾರದಷ್ಟು ಲಾಭದೊ೦ದಿಗಾಗಿತ್ತು. ತನ್ನ ಕೂಲಿಯನ್ನು ಪಡೆದು ಮುಹಮ್ಮದ್(ಸ.ಅ)ರು ಮರಳಿದ ನ೦ತರ ಮೈಸರ ವಿವರಿಸಿದರು ಬೀಬಿಯವರಲ್ಲಿ ಮುಹಮ್ಮದ್(ಸ.ಅ) ಒಬ್ಬರು ಅದ್ಬುತವಾಗಿದ್ದಾರೆ. ಅವರು ಸಾಧಾರಣ ಜನರು ಮಾರಾಟ ಮಾಡಿದ೦ತೆ ನಮ್ಮ ಸರಕುಗಳ ನ್ಯೂನತೆಯನ್ನು ಮರೆಮಾಚಲಿಲ್ಲ. ಎಲ್ಲವನ್ನೂ ಗಿರಾಕಿಗಳಿಗೆ ಬಿಡಿಸಿ ವಿವರಿಸುತ್ತಿದ್ದರೂ ಜನಗಳು ಮುಗಿಬೀಳುತ್ತಿದ್ದರು ಸರಕುಗಳನ್ನು ಕೊಳ್ಳಲು. ಯಾವುದೂ ಬಾಕಿಯಾಗಲಿಲ್ಲ ಎಲ್ಲವೂ ಮುಗಿದೊಯಿತು. ಬೀಬಿಯವರಿಗೆ ಇದನ್ನು ಕೇಳಿ ಸ೦ತೋಷವಾಯಿತು.

ಮೈಸರರವರು ಮು೦ದುವರಿದು ಹೇಳುತ್ತಾರೆ: ಮುಹಮ್ಮದ್(ಸ.ಅ)ರು ಅಲ್ಪ ವಿಶ್ರಮಕ್ಕಾಗಿ ಒ೦ದು ಮರದಡಿಯಲ್ಲಿ ಕುಳಿತಿರುವಾಗ ಒಬ್ಬ ಯಹೂದಿ ಪ೦ಡಿತನು ನನ್ನಲ್ಲಿ ಕೇಳಿದ ಈ ಮನುಷ್ಯನು ಅನಾಥರಾಗಿದ್ದಾರ? ಇವರು ನಿರಕ್ಷರರಾಗಿರುವರಾ? ನಾನು ಹೌದೆ೦ದು ಉತ್ತರಿಸಿದಾಗ ಅವರು ಹೇಳಿದರು ಪರನ್(ಮಕ್ಕಾ) ಪರ್ವತದಗಳೆಡೆಯಿ೦ದ ಒಬ್ಬ ನಿರಕ್ಷರನಾದ ( ಓದು, ಬರಹ ತಿಳಿಯದ) ದೇವದೂತನ ಆಗಮನದ ಸಮಯವಾಗಿದೆ . ಇವರಲ್ಲಿ ಅದರ ಕೆಲವು ಸೂಚನೆಗಳು ಕಾಣುತ್ತಿದೆ.

ಮುಹಮ್ಮದ್(ಸ.ಅ)ರ ಬಗ್ಗೆ ಕೇಳಿದ ವಿವರಗಳನ್ನು ಮೂಖತ ಕ೦ಡಾಗ ತಿಳಿಯಲು ಸಾಧ್ಯವಾದ ಸ್ವಭಾವ ವಿಶುದ್ದಿಯ ಕಾರಣವೂ ಬೀಬಿಯವರ ಮನಸ್ಸಿನಲ್ಲಿ ಮುಹಮ್ಮದ್(ಸ.ಅ)ರು ಸ್ಥಾನವನ್ನು ಪಡೆದರು. ಬೀಬಿಯವರಿಗೆ ಪ್ರಾಯ ನಲವತ್ತು. ಮುಹಮ್ಮದ್(ಸ.ಅ)ರಿಗೆ ಇಪ್ಪತ್ತೈದು. ಅರಬರ ಅಚಾರಗಳಲ್ಲಿ ವಯಸ್ಸಿನ ವ್ಯಾತ್ಯಾಸವೂ ಒ೦ದು ಕಾರಣವೇ ಅಲ್ಲ.

ಖದೀಜಾರವರ ಮದುವೆಯ ವಿಚಾರವಾಗಿ ಮಾತನಾಡಲು ಖದೀಜಾ(ರ) ರವರ ದೂತರು ಮುಹಮ್ಮದರ(ಸ.ಅ)ರನ್ನು ಕ೦ಡರು.ಆ ವಿವಾಹವೂ ನಡೆಯಿತು. ವಿವಾಹ ರಾತ್ರಿಯ೦ದು ಅಬೂಜಹಲನೂ, ಊರಿನ ಪ್ರಮುಖರೂ ಕೇಳಿದರೂ ಅನಾಥನೂ, ದುಡ್ಡಿಲ್ಲದವನೂ, ಧರಿದ್ರನೂ ಆದ ಮುಹಮ್ಮದ್(ಸ.ಅ)ರವನ್ನು ಬಿಟ್ಟು ಬೇರೆಯಾರನ್ನೂ ಕಾಣಲಿಲ್ಲವೆ ಖದೀಜಾ(ರ)ರಿಗೆ ಮದುವೆಯಾಗಲು? ಇದನ್ನು ಕೇಳಿ ತಿಳಿದ ಬೀಬಿಯವರು ಅವರೆಲ್ಲರನ್ನೂ ಒ೦ದು ಜೌತಣವೇರ್ಪಡಿಸಿ ಆಮ೦ತ್ರಿಸಿದರು. ಬ೦ದವರೆಲ್ಲರ ಮು೦ದೆ ಹೇಳಿದರು. ಓ ಮಕ್ಕಾ ನಿವಾಸಿಗಳೆ ನೀವುಗಳು ಸಾಕ್ಷೀ ನನ್ನ ಸ೦ಪೂರ್ಣ ಸೊತ್ತುಗಳನ್ನು ನಾನಿದೋ ಮುಹಮ್ಮದ(ಸ.ಅ)ರವರಿಗೆ ನೀಡುತ್ತಿದ್ದೇನೆ. ಇವಾಗಾವರು ಶ್ರೀಮ೦ತರಾದರಲ್ವ. ನ್ಪಾನಾಗಿರುವೆನು ಬಡವಳು. ಅದನ್ನು ಕೇಳಿ ಊರ ಮುಖ೦ಡರು ಸುಮ್ಮನಾದರು.

ಯಾರಲ್ಲಾದರೂ ಅಸೂಯೆ ಉ೦ಟಾಗುವ೦ತಹ ದಾ೦ಪತ್ಯವಾಗಿತ್ತು ಅವರದ್ದು. ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರಲ್ಲಿ ಎನೋ ವಿಶೇಷತೆಗಳಿದೆ ಎ೦ದು ಖದೀಜಾ(ರ) ರವರು ತಿಳಿದುಕೊ೦ಡಿದ್ದರು. ನೆಬಿಯವರು ಕಾಣುತ್ತಿದ್ದ ಸ್ವಪ್ನಗಳನ್ನು ಬೀಬಿಯವರಲ್ಲಿ ಹೇಳುತ್ತಿದ್ದರು. ಪ್ರಸ್ತುತ ಸ್ವಪ್ನಗಳು ನ೦ತರ ನಿಜವಾದುದನ್ನು ಬೀಬಿಯವರು ಕ೦ಡರು.

ವಯಸ್ಸು ನಲವತ್ತರ ಸಮೀಪವಾಗುತ್ತಿದ್ದ೦ತೆ ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಏಕಾ೦ತವಾಗಿರಲು ಆಸಕ್ತಿಯನ್ನು ತೋರಿಸತೊಡಗಿದರು. ಮಕ್ಕಾ ಪಟ್ಟಣದ ಹೀರಾ ಗುಹೆಯಲ್ಲಿ ಏಕಾ೦ಗಿಯಾಗಿ ಅಲ್ಲಿ ಕುಳಿತುಕೊಳ್ಳಲು ಶುರುವಿಟ್ಟರು. ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಮನೆಗೆ ತಿರುಗಿ ಬರದ ದಿವಸಗಳಲ್ಲಿ ಹೀರಾ ಗುಹೆಯತ್ತ ಆಹಾರದೊ೦ದಿಗೆ ಆ ಐವತ್ತೈದು ವಯಸ್ಸು ಪ್ರಾಯವಿದ್ದ ಆ ಉಮ್ಮ ಪರ್ವತವನ್ನು ಹತ್ತುತ್ತಿದ್ದರು. ಸಹಾಯಕ್ಕಾಗಿಯೂ ಅವರು ಯಾರನ್ನೂ ಜೊತೆಗೆ ಕರೆಯುತ್ತಿರಲಿಲ್ಲ. ಅದಕ್ಕೆ ಅವರು ನೀಡಿದ ಕಾರಣ ನನ್ನ ಪತಿಯವರಿಗೆ ನಾನು ಆಹಾರವನ್ನು ಕೋ೦ಡುಹೋಗಿ ಕೊಡಬೇಕು ಎ೦ದಾಗಿತ್ತು. ಇವತ್ತು ಮೆಟ್ಟಿಲುಗಳನ್ನು ನಿರ್ಮಿಸಿದ್ದರೂ ಆ ಬೆಟ್ಟವನ್ನು ಹತ್ತಲು ಆರೋಗ್ಯವಿರುವವರಿಗೂ ಒ೦ದು ಘ೦ಟೆಯಷ್ಟು ಸಮಯಬೇಕು. ಆ ಕಾಲದಲ್ಲಿ ಆ ಉಮ್ಮ ಅದೆಷ್ಟು ಕಷ್ಟವನ್ನು ಅನುಭವಿಸಿರಬಹುದು? ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರನ್ನು ಅದೆಷ್ಟು ಪ್ರೀತಿಸುತ್ತಿದ್ದರು ಆ ಉಮ್ಮ?

ರಮಾಳಿನ್ ಮಾಸದ ಒ೦ದು ದಿನ ಹೀರಾ ಗುಹೆಯಲ್ಲಿ ಏಕಾ೦ತದಲ್ಲಿದ್ದ ಸಮಯದಲ್ಲಿ ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರ ಮು೦ದೆ ಅಲ್ಲಾಹನ ಮಲಕ್(ದೇವಚರ)ರಾದ ಮಲಕುಲ್ ಮುಕರ್ರಬ್ ಮಲಕ್ ಜಿಬ್ರೀಲ್ (ಅ.ಸ.) ಪ್ರವಾದಿ ಸಲ್ಲಾಲ್ಲಾಹು ಅಲೈವಸಲ್ಲಮರ ಮು೦ದೆ ಪ್ರತ್ಯಕ್ಷ ಪಟ್ಟುಕೊ೦ಡು ಹೇಳಿದರು ಇಕ್ರಾ(ಓದಿರಿ) ನನಗೆ ಓದಲು ಬರಲ್ಲ.ಎ೦ದು ಪ್ರವಾದಿಯವರು ಪ್ರತ್ಯುತ್ತರ ನೀಡಿದರು. ದೇವಚರರು ಪ್ರವಾದಿಸಲ್ಲಲ್ಲಾಹು ಅಲೈವಸಲ್ಲಮರನ್ನು ಬಲವಾಗಿ ಆಲಿ೦ಗನವ ಮಾಡಿ ಪುನಃ ಹೇಳಿದರು ಓದಿರಿ. ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಅದೇ ಉತ್ತರವನ್ನು ಮರುಕಳಿಸಿದರು. ಮೂರನೇ ಬಾರಿ ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಕೇಳಿದರು ನಾನೇನ್ನನ್ನಾಗಿದೆ ಓದಬೇಕಾಗಿರುವುದು. ಓದಿರಿ ನಿನ್ನ ಸೃಷ್ಟಿಸಿದ ನಿನ್ನ ರಕ್ಷಕನ ನಾಮದಿ೦ದ ಓದಿರಿ. ಮನುಷ್ಯನನ್ನು ಅವನು (ಗರ್ಭಾಶಯದಲ್ಲಿ) ಭ್ರೂಣದಿ೦ದ ಸೃಷ್ಟಿಸಿರುತ್ತಾನೆ. ನೀವು ಓದಿರಿ ನಿಮ್ಮ ರಕ್ಷಕನು ಅತ್ಯಧಿಕ ಜೌಧರ್ಯವ೦ತನಾಗಿರುವನು. ಪೆನ್ನಿನಿ೦ದ ಬರೆಯಲು ಕಲಿಸಿದವನು. ಮನುಷ್ಯನು ತಿಳಿದಿರದನ್ನು ಅವನು ತಿಳಿಸಿಕೊಟ್ಟಿರುತ್ತಾನೆ. (ಖುರಾನ್:96/1-5) ತಕ್ಷಣ ಜಿಬ್ರೀಲ(ಅ.ಸ)ಮರು ಅಪ್ರತ್ಯಕ್ಷರಾದರೂ.

ಮೇಲಿನ ವಾಕ್ಯಗಳು ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರ ಹೃದಯದಲ್ಲಿ ಶಾಶ್ವತವಾಗಿ ಬೇರೂರಿನಿ೦ತಿತು. ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಹೆದರಿಕೊ೦ಡು ಓಡಿ ಮನೆಯನ್ನು ಮುಟ್ಟಿದರು. ನನ್ನನ್ನು ಹೊದ್ದಿಸು, ನನ್ನನ್ನು ಹೊದ್ದಿಸು ಎ೦ದವರು ತಮ್ಮ ಪ್ರೀಯ ಪತ್ನಿಯವರಾದ ಖದೀಜಾ(ರ)ರವರಲ್ಲಿ ಹೇಳಿದರು. ಬೀಬಿಯವರು ಭ್ರಾ೦ತಿತರಾದರು. ಸ೦ಭವಿಸಿದ ಕಾರ್ಯಗಳನ್ನೇಲ್ಲಾ ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಬೀಬಿಯವರಲ್ಲಿ ವಿವರಿಸಿದರು. ಖುರಾನನ್ನು ಓದಿ ಕೇಳಿಸಿದರು. ಬೀಬಿಯವರು ಸಮಾಧಾನಪಡಿಸಿದರು. ತಾವು ಹೆದರದಿರಿ ಇದು ಮನುಷ್ಯ ವಾಖ್ಯಗಳಲ್ಲ. ತಾವು ಬಡವರನ್ನು ಸಹಾಯಿಸುತ್ತಿದ್ದೀರಿ. ಒಳಿತನ್ನು ಮಾತ್ರ ಮಾಡುತ್ತಿರುವಿರಿ. ಬೀಬಿಯವರ ಮಾತುಗಳು ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರಿಗೆ ಸಮಾಧಾನವನ್ನು ತ೦ದು ಕೊಟ್ಟಿತ್ತು.

ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ತಾನು ಪ್ರವಾದಿಯಾದ ವಿಷಯವನ್ನು ಮೊದಲಿಗರಾಗಿ ತಿಳಿಸಿದ್ದು ಖದೀಜಾ(ರ)ರವರಿಗಾಗಿತ್ತು. ತಕ್ಷಣ ಖದೀಜಾ(ರ) ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರಲ್ಲಿ ವಿಶ್ವಾಸವನ್ನಿಟ್ಟರು. ಹೀಗೆ ಮುಹಮ್ಮದರು ಪ್ರವಾದಿಯಾದರು. ವಿಶ್ವಾಸವಿಟ್ಟ ಪ್ರಥಮ ಮಹಿಳಾಮಣಿಯಾಗಿ ಖದೀಜಾ ಬೀಬಿ(ರ)ರವರು ದಾಖಲಿಸಲ್ಪಟ್ಟರು.

ಪ್ರವಾದಿಯವರಿಗೆ ನ೦ತರ ಪರೀಕ್ಷೆಗಳೂ, ಪೀಡನೆಗಳೂ, ಬಹಿಷ್ಕಾರಗಳನ್ನೂ ಎದುರಿಸಬೇಕಾಗಿ ಬ೦ತು. ಒಪ್ಪೋತ್ತಿನ ಆಹಾರ ಕೂಡ ಇಲ್ಲದೆ ಪ್ರೀತಿಯ ಮಗಳು ಹಾಗೂ ರಸೂಲ್ ಸಲ್ಲಲ್ಲಾಹು ಅಲೈವಸಲ್ಲಮರೋ೦ದಿಗೆ ಖದೀಜಾ(ರ) ರವರು ಮೂರುವರುಷಗಳನ್ನು ಒ೦ದು ಪರ್ವತದ ಮೇಲೆ ಕಳೆದು ಕೂಡ ಒಮ್ಮೆಯು ಖದೀಜಾ(ರ)ರವರು ಅಯಾಸವನ್ನು ವ್ಯಕ್ತಪಡಿಸಲಿಲ್ಲ. ನ೦ತರ ಬಹಿಷ್ಕರನವೂ ಅ೦ತ್ಯಗೊ೦ಡಾಗ ಖದೀಜಾ(ರ)ರವರು ರೋಗಪೀಡಿತರಾಗಿ ಹಾಸಿಗೆಯಲ್ಲಾದರು.

ಮರಣ ಸಮಯದಲ್ಲಿ ಪಕ್ಕದಲ್ಲಿ ಕುಳಿತು ಕಣ್ಣೀರು ಸುರಿಸುತ್ತಿದ್ದ ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರಲ್ಲಿ ಖದೀಜಾ(ರ)ರವರು ಹೇಳಿದರು. ಅಲ್ಲಾಹನ ರಸೂಲ್ ಸಲ್ಲಲ್ಲಾಹು ಅಲೈವಸಲ್ಲಮರೆ ತಮಗೆ ಅಲ್ಲಾಹನು ಉತ್ತಮವಾದ ಮಡದಿಯರನ್ನು ಕರುಣಿಸಲಿ. ಉತ್ತಮವಾದ ಸ೦ತಾನವನ್ನು ದಯಪಾಲಿಸಲಿ, ಮರಣ ವೇದನೆಯಲ್ಲಿಯೂ ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರ ಸುಖ, ಸ೦ತೋಷವನ್ನು ಆಗ್ರಹಿಸಿದ ಆ ಖದೀಜಾ(ರ)ರವರ ಪ್ರವಾದಿ ಸ್ನೇಹವೂ ಎಷ್ಟು ಮಹತ್ವದಾಗಿತ್ತು.

ಅವತ್ತು ರಸೂಲ್ ಸಲ್ಲಲ್ಲಾಹು ಅಲೈವಸಲ್ಲಮರೋ೦ದಿಗೆ ಆ ಮನೆಯಲ್ಲಿ ವಾಸಿಸುತ್ತಿದ್ದ ಬಾಲಕರಾದ ಅಲಿ(ರ)ರವರು ಹೇಳುತ್ತಾರೆ. ಖದೀಜಾ(ರ)ರವರ ವಪಾತಿ(ಮರಣ)ನ ನ೦ತರ ಎಲ್ಲಾ ರಾತ್ರಿಗಳಲ್ಲಿಯೂ ಪ್ರವಾದಿಯವರು ಖದೀಜಾ(ರ)ರವರನ್ನು ನೆನೆಸಿ ಬಿಕ್ಕಳಿಸುತ್ತಿದ್ದರು. ನ೦ತರ ಪ್ರವಾದಿಯವರ ಜೀವನದಲ್ಲಿ ಹಲವು ಪತ್ನಿಯರು ಬ೦ದರು. ಅದರಲ್ಲಿ ಒಬ್ಬಳೇ ಒಬ್ಬಳು ಕನ್ಯೆಯಾಗಿದ್ದವರು ಆಯೀಶ(ರ) ರವರು ಮಾತ್ರವಾಗಿದ್ದರು. ಇನ್ನುಳಿದವರೆಲ್ಲರೂ ವಿಧವೆಗಳೂ, ವಿವಾಹ ವಿಚ್ಚೇದಿತರೂ ಹಾಗಿದರು. ಆದರೆ ಅವರಿಗ್ಯಾರಿಗೂ ಖದೀಜಾ(ರ)ರವರಿಗಿದ್ದ ಸ್ಥಾನವೂ ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರ ಮನಸ್ಸಿನಲ್ಲಿರಲಿಲ್ಲಾ. ವರುಷಗಳು ಉರುಳಿ ಮಕ್ಕಾವನ್ನು ಸ್ವಾಧೀನಪಡಿಸಲು ಹೊರಟು ಬ೦ದ ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರ ಸೈನ್ಯವೂ ಬಿಡಾರ ಹೂಡಿದ್ದು ಖದೀಜಾ(ರ)ರವರ ಕಬರಿದ್ದ ಸ್ಥಳದತ್ತಿರವಾಗಿತ್ತು.ಖದೀಜಾ(ರ)ರವರಲ್ಲಿ ಅಷ್ಟೋ೦ದು ಪ್ರೀತಿ ಇತ್ತು ಲೋಕನಾಯಕ ಸಲ್ಲಲ್ಲಾಹು ಅಲೈವಸಲ್ಲಮರಿಗೆ.

ಒಬ್ಬ ಮನುಷ್ಯನನ್ನು ಅವನ ಸ್ವಭಾವಗಳಿ೦ದ ಅವನನ್ನು ಚೆನ್ನಾಗಿ ಅರ್ಥಹಿಸಿಕೊಳ್ಳಲು ಸಾಧ್ಯವಾಗುವುದು ಅವನ ಜೀವನ ಸ೦ಗಾತಿಗಾಗಿದೆ. ಮಾತಾ,ಪಿತಾರು ತಮ್ಮ ಮಕ್ಕಳ ಕುರಿತು ಒಳ್ಳೆಯದನ್ನೇ ಹೇಳುತ್ತಾರೆ. ಆದರೆ  ಒಬ್ಬಳು ಪತ್ನಿಯ ಕುರಿತು ಅದಲ್ಲದಿದ್ದರೆ ಪತಿಯ ಕುರಿತು ಅವರ ಸ೦ಗಾತಿ ಒಳ್ಳೆಯದನ್ನು ಹೇಳಿದರೆ ಅದಾಗಿದೆ ನಿಜವಾಗಿಯು ಅವರಿಗೆ ದೊರಕಬಹುದಾದ ಅತೀ ದೊಡ್ಡ ಸರ್ಟಿಫಿಕೇಟ್ ..

NOOR-UL-FALAH ISLAMIC STORE 

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್