ಬೀವಿ ಆತಿಕಾ(ರ)

ಬೀವಿ ಆತಿಕಾ (ರ) بِسْمِ اللهِ الرَّحْمَٰنِ الرَّحِيمْ السَّـــــــلاَمُ عَلَيــْــكُم وَرَحْمَةُ اللهِ وَبَرَكـَـاتُه ಮುನೀರ್ ಸಖಾಫಿ,ಸಾಲೆತ್ತೂರು. ಸ್ವಹಾಬೀ ವನಿತೆಯಾದ ಆತಿಕ ಬೀವಿ (ರ) ರನ್ನು ನಮಾಜಿಗಾಗಿ ಮಸೀದಿ ಹೋದ ಬಗ್ಗೆ ವಹ್ಹಾಬಿಯೊಬ್ಬ ಬರೆದುದನ್ನು ನೋಡಿ ಈ ಲೇಖನ ಬರೆಯಲು ಪ್ರಾಂಬಿಸಿದ್ದೇನೆ. ಆತಿಕ ಬೀವಿ ಯಾರು? ಅವರು ಮಸೀದಿಗೆ ಯಾವಾಗ ಹೋದದ್ದು? ನಂತರ ಅವರು ಮಸೀದಿಗೆ ಹೋಗದಿರಲು ಕಾರಣವೇನು? ನನ್ನನ್ನು ನೀವು ಮದುವೆಯಾದಲ್ಲಿ ಮಸೀದಿಗೆ ನಮಾಝಿಗೆ ಹೋಗಲು ಅನುಮತಿ ನೀಡಬೇಕೆಂದು ಹೇಳಿಯೂ ಉಮರ್ (ರ) ಅವರನ್ನು ವಿವಾಹವಾಗಲು ಕಾರಣವೇನು? ಸತ್ಯಕ್ಕೆ ಬೇಕಾಗಿ ಜೀವನವನ್ನೇ ಸಮರ್ಪಿಸಿದ ಉಮರ್ (ರ) ಅವರ ಮಸೀದಿಯ ನಮಾಜು ಅನುಮತಿಸಿದ್ದರೇ? ಮುಂತಾದ ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ಅತ್ಯಮೂಲ್ಯವಾದ ಲೇಖನವಾಗಿದೆ ಇದು. ಇದರ ಎಲ್ಲಾ ಭಾಗಗಳನ್ನು ಓದುಗರು ಗಮನದಲ್ಲಿಟ್ಟು ಓದಬೇಕಾಗಿ ವಿನಂತಿ. ಆತಿಕಾ (ರ) ತಂದೆ :ಅಂರು ಬಿನ್ ನುಫೈಲ್ ತಾಯಿ:ಉಮ್ಮು ಕುರ್ ಝ್. ಪತಿ: ಒಂದನೇ ಪತಿ ಅಬ್ದುಲ್ಲ (ರ). ಇವರು ಸಿದ್ದೀಖ್ (ರ) ರವರ ಪುತ್ರರು. ಆತಿಕ (ರ) ಅತೀ ಸುಂದರಿಯಾಗಿದ್ದರು.ಪತ್ನಿಯ ಸೌಂಧರ್ಯದಲ್ಲಿ ಆಕರ್ಷಿತನಾಗಿ ಪತಿ ಯಾದ ಅಬ್ದುಲ್ಲ (ರ) ಯುದ್ಧಕ್ಕೆ ಹೋಗುವುದು ಕೂಡಾ ಮರೆತು ಬಿಟ್ಟರು. ಈ ಕಾರಣದಿಂದ ಸಿದ್ದೀಖ್ (ರ) ರವರು ಮಗನಲ್ಲಿ ಆತಿಕ (ರ) ತಲಾಖ್ ಹೇಳುವಂತೆ ಆಞ್ಞಾಪಿಸಿದರು.ತಂದೆಯ ಮಾತಿಗೆ ಬೆಲೆ ಕೊಟ್ಟು ಅಬ್ದುಲ್ಲ(ರ)ರವರು ಆತಿಕ (ರ) ರನ್ನು ತಲಾಖ್ ಮಾಡಿದರು.ಆದರೆ ಮಗನಿಗೆ ತಲಾಖ್ ಹೇಳಲ್ಪಟ್ಟ ಆತಿಕ (ರ) ರದೇ ನೆನಪು ಎಂದು ತಂದೆಗೆ ಮನವರಿಕೆಯಾದಾಗ ಪುನಃ ಪತ್ನಿಯಾಗಿ ಸ್ವೀಕರಿಸುವಂತೆ ಸೂಚಿಸಿದರು. ತಾಯಿಫ್ ನಲ್ಲಿ ಒಂದು ಯುದ್ಧವುಂಟಾದಾಗ ಅಬ್ದುಲ್ಲ(ರ) ರವರು ಆ ಯುದ್ಧದಲ್ಲಿ ಮರಣಹೊಂದಿದರು. ನಂತರ ಆತಿಕ (ರ) ರವರನ್ನು ಝೈದ್ ಬಿನ್ ಖತ್ತಾಬ್ ವಿವಾಹವಾದರು. ಅವರು ಯಮಾಮ ಯುದ್ಧದಲ್ಲಿ ಶಹೀದ್ ಆದರು. ನಂತರ ಅವರನ್ನು ಉಮರ್ (ರ) ವಿವಾಹವಾದರು. ಉಮರ್(ರ) ರವರ ವಫಾತ್ ನಂತರ ಝುಬೈರ್ ಬಿನ್ ಅವ್ವಾಂ (ರ) ಅವರನ್ನು ವಿವಾಹವಾದರು. ಅವರು ಮಕ್ಕಾದಿಂದ ಮದೀನಾಗೆ ಯಾತ್ರೆ ಹೋಗುವಾಗ ಧಾರಿ ಮಧ್ಯೆ ಅವರನ್ನು ಕೊಲೆಗೆಯ್ಯಲಾಯಿತು. ಆತಿಕ (ರ)ರನ್ನು ವರಿಸಿದ ನಾಲ್ಕು ಮಹಾತ್ಮರೂ ಶಹೀದ್ ಆದರು. ಆದುದರಿಂದಲೇ ಆ ಕಾಲದಲ್ಲಿ ಒಂದು ಮಾತು ಪ್ರಚಲಿತದಲ್ಲಿತ್ತು. من أراد الشهادة فليتزوج بعاتكة بنت نفيل". ರಕ್ತ ಸಾಕ್ಷಿಯಾಗಲು ಆಸೆಯಿರುವವರು ಆತಿಕ ಬೀವಿಯನ್ನು ವರಿಸಿರಿ (ನೋಡಿರಿ ಇಮಾಂ ಇಬ್ನ್ ಹಜರ್ (ರ) ರವರ ಅಲ್ ಇಸ್ವಾಬ 2/107) ಝುಬೈರ್ ಬಿನ್ ಅವ್ವಾಮ್ (ರ) ರವರ ವಫಾತ್ ನ ನಂತರ ಅಲಿಯ್ಯ್ (ರ) ರವರು ಆತಿಕ ಬೀವಿಯನ್ನು ವಿವಾಹ ಪ್ರಸ್ತಾಪ ಮುಂದಿಟ್ಟಾಗ ನಾನು ಇನ್ನು ವಿವಾಹವಾಗಲಾರೆ ಎಂದು ಆತಿಕ ಬೀವಿ ಹೇಳಿದರು.ಆವಾಗ ಅಲಿಯ್ಯ್ (ರ) ನನಗೆ ಹುತಾತ್ಮನಾಗಲು ಭಯಕೆಯಿದೆ. ನಿಮ್ಮನ್ನು ವರಿಸಿದವರೆಲ್ಲಾ ಹುತಾತ್ಮರಾಗುತ್ತಾರೆ.ಅದಕ್ಕೋಸ್ಕರ ನಾನು ಈ ಪ್ರಸ್ತಾಪ ನಿಮ್ಮ ಮುಂದಿಟ್ಟೆ ಎಂದು ಅಲಿಯ್ಯ್ (ರ) ಹೇಳಿದ್ದಾಗಿ ಕೆಲವು ಗ್ರಂಥಗಳಲ್ಲಿ ಕಾಣಬಹುದಾಗಿದೆ. ಅಲಿಯ್ಯ್ (ರ) ಆತಿಕ ಬೀವಿಯನ್ನು ವಿವಾಹವಾಗಿಲ್ಲ. ಅಲಿಯ್ಯ್ (ರ) ರ ಪುತ್ರ ಹಸನ್ (ರ) ಆತಿಕ ಬೀವಿಯನ್ನು ವಿವಾಹವಾಗಿದ್ದಾಗಿ ಕೆಲವು ಇಮಾಮರುಗಳು ವಿವರಿಸಿದ್ದಾರೆ. ಆತಿಕ (ರ)ರವರನ್ನು ಉಮರ್ (ರ)ರವರು ವಿವಾಹವಾಗಬೇಕಾದರೆ 3 ನಿಬಂದನೆಗಳನ್ನು ಇಟ್ಟಿದ್ದರು. 1.ನನಗೆ ಹೊಡೆಯಬಾರದು. 2.ಧಾರ್ಮಿಕವಾದ ಯಾವುದೇ ಹಕ್ಕುಗಳಿಂದ ತಡೆಯಬಾರದು. 3.ನಮಾಜಿಗಾಗಿ ಮಸೀದಿಗೆ ಹೋಗುವುದಕ್ಕೆ ಅನುಮತಿ ನೀಡಬೇಕು. ಈ ಮೂರು ನಿಬಂಧನೆಗಳನ್ನು ಉಮರ್ (ರ) ಅಂಗೀಕರಿಸಿದರು. ಇಮಾಮ್ ಬುಖಾರಿ (ರ) ವರದಿ ಮಾಡಿದ ಹದೀಸಿನಲ್ಲಿ ಈ ರೀತಿ ಕಾಣಬಹುದು, عن ابن عمر قال : كانت امرأة لعمر تشهد صلاة الصبح والعشاء في الجماعة في المسجد ، فقيل لها : لِمَ تخرجين وقد تعلمين أن عمر يكره ذلك ويغار ؟ قالت : وما يمنعه أن ينهاني ؟ قال : يمنعه قول رسول الله صلى الله عليه وسلم : لا تمنعوا إماء الله مساجد الله ಇಬ್ನ್ ಉಮರ್ (ರ) ವರದಿ; ಉಮರ್ (ರ) ರವರ ಒಂದು ಪತ್ನಿ ಸುಬಹಿ ನಮಾಝಿಗೆ ಮತ್ತು ಇಶಾ ನಮಾಝಿಗೆ ಮಸೀದಿಯಲ್ಲಿ ನಡೆಯುವ ಜಮಾಅತ್ ಗೆ ಹಾಜರಾಗುತ್ತಿದ್ದರು.ಅದರ ಕುರಿತು ಆ ಪತ್ನಿಯೊಂದಿಗೆ ಕೇಳಲ್ಪಡಲಾಯಿತು.ನೀವು ಯಾಕೆ ಮಸೀದಿಗೆ ಹೋಗುತ್ತೀರಿ? ಉಮರ್ (ರ)ರಿಗೆ ಅದರಲ್ಲಿ ಇಷ್ಟವಿಲ್ಲವೆಂದು ನಿಮಗೆ ತಿಳಿದಿಲ್ಲವೇ? ಹಾಗಾದರೆ ಉಮರ್ (ರ)ರವರು ನನ್ನನ್ನು ಯಾಕೆ ಅದರಿಂದ ತಡೆಯುತ್ತಿಲ್ಲ ? ಎಂದು ಆ ಪತ್ನಿ ಮರುಪ್ರಶ್ನೆ ಹಾಕಿದರು. "ಅಲ್ಲಾಹನ ದಾಸಿಯರಾದ ಸ್ತ್ರೀಯರನ್ನು ಮಸೀದಿಗಳಿಂದ ನಿವು ತಡೆಯದಿರಿ" ಎಂಬ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ನಿರ್ದೇಶವಿರುವುದರಿಂದ ತಡೆದಿಲ್ಲವೆಂದು ಪ್ರತ್ಯುತ್ತರಿಸಲಾಯಿತು. (ಬುಖಾರಿ 1/416) ಇಲ್ಲಿ ಗಮನಿಸಬೇಕಾದ 3 ಕಾರ್ಯಗಳಿವೆ.... 1.ಉಮರ್ (ರ) ಆತಿಕ ಬೀವಿಯನ್ನು ವಿವಾಹವಾಗುವಾಗ "ನನ್ನ ಮಸೀದಿ ಪ್ರವೇಶವನ್ನು ತಡೆಯಬಾರದೆಂಬ" ನಿಬಂಧನೆಯನ್ನು ಯಾಕೆ ಅಂಗೀಕರಿಸಿದರು? 2.ಶರೀಅತ್ ನಿಯಮಗಳನ್ನು ಅಕ್ಷರಸ ಪಾಲಿಸಿದ್ದ ಉಮರ್ (ರ)ರಿಗೆ ಪತ್ನಿ ಮಸೀದಿಗೆ ಹೋಗುವುದರಲ್ಲಿ ಇಷ್ಟವಿಲ್ಲದಿದ್ದರೂ ಪತ್ನಿಯ ಮಸೀದಿ ಪ್ರವೇಶವನ್ನು ಯಾಕೆ ತಡೆದಿಲ್ಲ?. 3. "ಸ್ತ್ರೀಯರಿಗೆ ಅವರವರ ಮನೆಯೇ ನಮಾಝಿಗೆ ಉತ್ತಮ" ವೆಂಬ ಪ್ರವಾದಿ ವಚನ ಆತಿಕ (ರ)ಗೆ ತಿಳಿದಿಲ್ಲವೇ? ("ಸ್ತ್ರೀಯರನ್ನು ಮಸೀದಿಯಿಂದ ತಡೆಯದಿರಿ" ಎಂಬ ಹದೀಸಿನ ತಾತ್ಪರ್ಯ ಮುಂದಿನ ಭಾಗದಲ್ಲಿ ವಿವರಿಸಲಾಗುವುದು.ಇಂಶಾ ಅಲ್ಲಾಹ್.) ಒಂದನೇಯ ಪ್ರಶ್ನೆಯ ಉತ್ತರ ಉಮರ್(ರ) ಪ್ರಸ್ತುತ ನಿಬಂಧನೆ ಅಂಗೀಕರಿಸಲು 2 ಕಾರಣಗಳಿವೆ. 1. "ಅಲ್ಲಾಹನ ದಾಸಿಯರಾದ ಸ್ತ್ರೀಗಳನ್ನು ಮಸೀದಿಗಳಿಂದ ನೀವು ತಡೆಯದಿರಿ"ಎಂಬ ಪ್ರವಾದಿ ವಚನಕ್ಕೆ ಬಾಹ್ಯ ನೋಟದಲ್ಲಿ ವಿರುದ್ಧವಾಗಬಹುದೇ ಎಂಬ ಭಯದಿಂದ. ಕಾರಣ, "ನೀವು ತಡೆಯದಿರಿ"ಎಂದು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುವಾಗ "ನಾನು ತಡೆಯುವೆ" ಎಂದು ಉಮರ್ (ರ) ಹೇಳುವುದು ಪ್ರವಾದಿ ವಚನದ ಗೌರವಕ್ಕೆ ವಿರುದ್ಧವಾಗಿದೆ. ಅದಕ್ಕೊಂದು ಉದಾಹರಣೆ ನೋಡಿ, ಇಮಾಮ್ ಮುಸ್ಲಿಂ (ರ)ಅಬ್ದುಲ್ಲಾಹಿ ಬಿನ್ ಉಮರ್(ರ) ರವರ ಮಗನಾದ ಸಾಲಿಂ (ರ)ರಿಂದ ವರದಿ ಮಾಡುವ ಒಂದು ಹದೀಸಿನಲ್ಲಿ ಹೀಗಿದೆ; أن عبد الله بن عمر قال سمعت رسول الله صلى الله عليه وسلم يقول لا تمنعوا نساءكم المساجد إذا استأذنكم إليها قال فقال بلال بن عبد الله والله لنمنعهن قال فأقبل عليه عبد الله فسبه سبا سيئا ما سمعته سبه مثله قط وقال أخبرك عن رسول الله صلى الله عليه وسلم وتقول والله لنمنعهن(مسلم 667) ಅಬ್ದುಲ್ಲಾಹಿ ಬಿನ್ ಉಮರ್(ರ) ಒಮ್ಮೆ ಹೇಳಿದರು: ರಾತ್ರಿ ವೇಳೆ ಸ್ತ್ರೀಯರಿಗೆ ಮಸೀದಿಗೆ ಹೋಗುವುದಕ್ಕೆ ನೀವು ಅನುಮತಿ ನೀಡಿರಿ ಎಂದು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದ್ದಾರೆ. ಆಗ ಅವರ (ಅಬ್ದುಲ್ಲ(ರ)ರವರ) ಒಬ್ಬ ಪುತ್ರರು ಹೇಳಿದರು; ಅಲ್ಲಾಹನಾಣೆ ! ನಾವು ಸ್ತ್ರೀಯರಿಗೆ ಅನುಮತಿ ನೀಡಲಾರೆವು. ಸಾಲಿಂ (ರ)ಹೇಳುತ್ತಾರೆ ; ಆಗ ಅಬ್ದುಲ್ಲ(ರ) ರವರು ಆ ಮಗನನ್ನು ಗಧರಿಸಿದರು. "ಅನುಮತಿ ನೀಡಬೇಕೆಂದು" ಅಲ್ಲಾಹನ ಪ್ರವಾದಿವರ್ಯರು ಹೇಳಿದ್ದಾರೆಂದು ನಾನು ಹೇಳುವಾಗ ಅನುಮತಿ ನೀಡಲಾರೆ ಎಂದು ನೀನು ಹೇಳುತ್ತೀಯಾ ? ಎಂದು ಅವರು ಮಗನೊಂದಿಗೆ ಕೇಳಿದರು" (ಮುಸ್ಲಿಂ 668). ಸ್ತ್ರೀಯರಿಗೆ ಅನುಮತಿ ನೀಡಬೇಕೆಂಬ ಹದೀಸ್ ತಂದೆ ಹೇಳಿ ಕೊಡುವಾಗ ಹದೀಸ್ ವಚನದ ಗೌರವಕ್ಕೆ ಕುಂದು ಬರುವಂತೆ ನಾವು ಒಮ್ಮೆಯೂ ಅನುಮತಿ ನೀಡಲಾರೆವು ಎಂದು ಹೇಳಿದಕ್ಕಾಗಿ ಮಾತ್ರ ಇಬ್ನ್ ಉಮರ್ (ರ) ಮಗನನ್ನು ಗಧರಿಸಿದರು. ಇಮಾಮ್ ಇಬ್ನ್ ಹಜರ್ (ರ)ರವರ ಮಾತು ನೋಡಿ; وكأن السر في ذلك أن بلالا عارض الخبر برأيه ولم يذكر علة المخالفة (فتح الباري2/237) ಬಿಲಾಲ್ (ರ)(ಪ್ರಸ್ತುತ ಮಾತು ಹೇಳಿದ ಇಬ್ನ್ ಉಮರ್ (ರ)ರವರ ಪುತ್ರನ ಹೆಸರು: ಲೇ) ತಡೆಯಲಿಕ್ಕಿರುವ ಕಾರಣ ವಿವರಿಸದೆ ಹದೀಸನ್ನು ಕಡೆಗಣಿಸಿದರು ಎಂಬ ಏಕ ಕಾರಣಕ್ಕೆ ಗಧರಿಸಿದರು (ಫತ್ ಹುಲ್ ಬಾರಿ2/237) ಇಬ್ನ್ ಉಮರ್ (ರ) ರವರು ಮಗನನ್ನು ಗಧರಿಸಿದ ಆ ಪ್ರಯೋಗದಿಂದಲೇ ಇದು ಬಹಳ ಸ್ಪಷ್ಟವಾಗಿದೆ. ಇಬ್ನ್ ಹಜರ್ (ರ)ನಂತರ ಬರೆಯುತ್ತಾರೆ وإنما أنكر عليه ابن عمر لتصريحه بمخالفة الحديث وإلا فلو قال مثلا إن الزمان قد تغير وإن بعضهن ربما ظهر منه قصد المسجد وإضمار غيره لكان يظهر أن لا ينكر عليه(فتح الباري) ಹದೀಸಿನ ಬಾಹ್ಯ ನೋಟಕ್ಕೆ ವಿರುದ್ಧವಾಗಿ ತೋರುವಂತೆ ಮಾತಾಡಿದ್ದಕ್ಕೆ ಮಾತ್ರ ಇಬ್ನ್ ಉಮರ್ (ರ)ಮಗನನ್ನು ಗಧರಿಸಿದ್ದಾರೆ.ಹೊರತು ಕಾಲ ಬದಲಾಗಿಯೆಂದೂ ತಪ್ಪು ಕಲ್ಪನೆಗಳನ್ನು ಮನದಲ್ಲಿಟ್ಟು ಇಂದು ಸ್ತ್ರೀಯರು ಮಸೀದಿಗೆ ಹಾಜಾರಾಗುವರು ಎಂಬ ಕಾರಣವನ್ನು ವಿವರಿಸಿ ಹೇಳಿರುತ್ತಿದ್ದರೆ ಯಾವ ಕಾರಣಕ್ಕೂ ಇಬ್ನ್ ಉಮರ್ (ರ) ಮಗನನ್ನು ಗಧರಿಸುತ್ತಿರಲಿಲ್ಲ ಎಂಬುವುದು ಬಹಳ ಸ್ಪಷ್ಟ. (ಫತ್ ಹುಲ್ ಬಾರಿ 2/237) ಸ್ತ್ರೀಯರು ಮಸೀದಿಗೆ ಹಾಜರಾಗಬೇಕೆಂದಿಲ್ಲ ಎಂಬ ವಿಷಯದಲ್ಲಿ ಇಬ್ನ್ ಉಮರ್ (ರ)ಮತ್ತು ಬಿಲಾಲ್(ರ)ಒಮ್ಮತಾಭಿಪ್ರಾಯದವರಾಗಿದರೆಂದು ಇದರಿಂದ ಬಹಳ ಸ್ಪಷ್ಟ. ಆತಿಕ ಬೀವಿಯ ಮಸೀದಿ ಪ್ರವೇಶದ ಈ ಹದೀಸನ್ನು ಮತ್ತು ಸ್ತ್ರೀಯರಿಗೆ ಅವರವರ ಮನೆಯೇ ನಮಾಝಿಗೆ ಉತ್ತಮವೆಂಬ ಹದೀಸನ್ನೂ ವರದಿ ಮಾಡಿದ್ದು ಇಬ್ನ್ ಉಮರ್(ರ)ರವರೇ ಆಗಿದ್ದಾರೆಂಬುದನ್ನು ಮರೆಯಬಾರದು. ಬುಖಾರಿಯ ವ್ಯಾಖ್ಯಾನ ಗ್ರಂಥವಾದ ಲಾಮಿಉದ್ದರಾರಿಯಲ್ಲಿ ಈ ರೀತಿ ಕಾಣಬಹುದು. والأوجه هو التحاشي عن صورة المعارضت بقول سيد ولد آدم، والإشتراط أيض يكون لأجل ذلك (لامع الدراري: ١٣/٢ ಆದಂ ಸಂತತಿಗಳ ನಾಯಕರ ಮಾತಿಗೆ ವಿರುದ್ಧವಾಗುವುದನ್ನು ತಪ್ಪಿಸಲಿಕ್ಕಾಗಿ ಉಮರ್ (ರ) ಪತ್ನಿಯನ್ನು ತಡೆಯಲಿಲ್ಲ ಎಂಬುವುದಾಗಿದೆ ಅದರ ನ್ಯಾಯ.ಪ್ರಸ್ತುತ ನಿಬಂಧನೆ ಅಂಗೀಕರಿಸಲು ಇದುವೇ ಕಾರಣ.(ಲಾಮಿಉದ್ದರಾರಿ2/13) ಒಟ್ಟಿನಲ್ಲಿ ವಿವಾಹದ ಸಂದರ್ಭಉಮರ್(ರ) ಪ್ರಸ್ತುತ ನಿಬಂಧನೆ ಅಂಗೀಕರಿಸಲು ಕಾರಣ ಪ್ರವಾದಿ ವಚನದ ಮೇಲಿನ ಅತಿಯಾದ ಗೌರವದಿಂದ ಮಾತ್ರವಾಗಿತ್ತು.ಹೊರತು ಸ್ತ್ರೀಯರು ಮಸೀದಿ ಹೋಗುವ ವಿಷಯದಲ್ಲಿ ಉಮರ್ (ರ)ರಿಗೆ ಇಷ್ಟವಿರಲಿಲ್ಲ ಎಂಬುವುದು ಈ ವಿವರಣೆಯಿಂದ ತಿಳಿಯಿತು. ಉಮರ್ (ರ)ರವರಿಗೆ ಆತಿಕ ಬೀವಿಯನ್ನು ವಿವಾಹವಾದಲ್ಲಿ ತಂತ್ರ ಪೂರ್ವಕ ಮಸೀದಿ ಪ್ರವೇಶವನ್ನು ತಡೆಯಬಹುದೆಂಬ ದೃಢ ವಿಶ್ವಾಸವಿತ್ತು.ಅದರಲ್ಲಿ ಅವರು ಯಶಸ್ಸು ಕಂಡರು. ಇಮಾಮ್ ಉಂದುಲುಸೀ (ರ) ಬರೆಯುತ್ತಾರೆ; (ಲೇಖನ ಧೀರ್ಘವಾಗುವ ಭಯದಿಂದ ಅರಬಿ ಉದ್ಧರಣೆ ನೀಡುವುದಿಲ್ಲ.ಅಗತ್ಯವಿರುವವರಿಗೆ ಬೇಕಾದಲ್ಲಿ ಕಳುಹಿಸಿ ಕೊಡುವೆನು:ಲೇ) ಆತಿಕ ಬೀವಿ ಪತಿಯಾದ ಉಮರ್ (ರ)ರಲ್ಲಿ ಮಸೀದಿಗೆ ಹೋಗಲು ಅನುಮತಿ ಕೇಳುವಾಗಲೆಲ್ಲಾ ಉಮರ್ (ರ)ಮೌನವಾಗುತ್ತಿದ್ದರು.ಆಗ ಆತಿಕ ಬೀವಿ ಹೇಳುವರು;ನೀವು ತಡೆಯದಿದ್ದಲ್ಲಿ ನಾನು ಖಂಡಿತಾ ಹೋಗುವೆನು".ಅಲ್ಲಾಹನ ದಾಸಿಯರಾದ ಸ್ತ್ರೀಯರನ್ನು ಅಲ್ಲಾಹನ ಮಸೀದಿಗಳಿಂದ ನೀವು ತಡೆಯದಿರಿ" ಎಂಬ ಪ್ರವಾದಿ ವಚನಕ್ಕೆ ವಿರುದ್ಧವಾಗುದನ್ನು ತಪ್ಪಿಸಲು ಉಮರ್ (ರ)ಮಸೀದಿಯಿಂದ ಅವರನ್ನು ತಡೆಯುತ್ತಿರಲಿಲ್ಲ. ಒಂದು ದಿನ ಆತಿಕ ಬೀವಿ ಸುಬಹಿ ನಮಾಝಿಗೆ ಮಸೀದಿಗೆ ಹೂರಟರು.ಸ್ವಲ್ಪ ಮುಂಚೆಯೇ ಮಸೀದಿಗೆ ತೆರಳಿದ ಉಮರ್ (ರ) ದಾರಿ ಮಧ್ಯೆ ಇರುಳು ಕೂಡಿದ ಪ್ರದೇಶದಲ್ಲಿ ಅವಿತು ಕುಳಿತರು.ಆತಿಕ ಬೀವಿ ಸಮೀಪಿಸುತಿದ್ದಂತೆಯೇ ಉಮರ್ (ರ)ಅವರ ಮೇಲೆ ಎರಗಿ ಎದೆಯ ಭಾಗಕ್ಕೆ ಏಟು ಕೊಟ್ಟರು.ಏಟು ಕೊಟ್ಟವರು ಯಾರೆಂದು ತಿಳಿಯದಿರಲು ಉಮರ್(ರ) ಅವರಲ್ಲಿ ಒಂದೇ ಒಂದು ಮಾತನ್ನಾಡಿಲ್ಲ. ನಂತರ ಆತಿಕ ಬೀವಿ ಮಸೀದಿಗೆ ತೆರಳದೆ ಅರ್ಧದಿಂದಲೇ ಮನೆಗೆ ಮರಳಿದರು.ಅದರ ನಂತರ ಆತಿಕ ಬೀವಿ ಮಸೀದಿಗೆ ತೆರಳಿಲ್ಲ.ಮಸೀದಿಗೆ ತೆರಳದಿರುವುದನ್ನು ಕಂಡ ಉಮರ್ (ರ)ಪತ್ನಿಯೊಂದಿಗೆ ಕೇಳಿದರು;ಯಾಕೆ ನೀನು ಮಸೀದಿಗೆ ಹೋಗುತ್ತಿಲ್ಲ?.ಆವಾಗ ಆತಿಕ ಬೀವಿ ಹೇಳಿದರು;ಜನರು ಹಾಳಾಗಿದ್ದಾರೆ.ಮಸೀದಿಗೆ ತೆರಳದಿರಲು ಅವರು ಹೇಳಿದ ಕಾರಣ ಜನರು ಹಾಳಾಗಿದ್ದಾರೆ ಎಂಬುವುದಾಗಿದೆ. ಅನುಸರಿಸಬೇಕೆಂದು ಅಲ್ಲಾಹನು ನಮ್ಮಲ್ಲಿ ಆಜ್ಞಾಪಿಸಿದ ನಾಲ್ಕು ಖಲೀಫರುಗಳಲೊಬ್ಬರೂ ಎರಡು ಉಮರ್ ಗಳ ಪೈಕಿ ಒಬ್ಬರೂ ಆದ ಉಮರ್ (ರ) ಆತಿಕ ಬೀವಿಯ ಪ್ರಸ್ತುತ ಮಾತನ್ನು ಒಪ್ಪಿಕೊಂಡರು. (ಬಹ್ ಜತುನ್ನುಫೂಸ್ 1/212) ಉಮರ್(ರ)ಆತಿಕ ಬೀವಿಗೆ ಏಟು ಕೊಟ್ಟ ಪ್ರಸ್ತುತ ಘಟನೆಯನ್ನು ವಹ್ಹಾಬಿಗಳ ಅಂಗೀಕೃತ ನಾಯಕ ಇಬ್ನ್ ಕಸೀರ್ ರ ಅಲ್ ಬಿದಾಯತು ವನ್ನಿಹಾಯದ 6/353ರಲ್ಲೂ ವಿವರಿಸಿದ್ದಾರೆ. ತಂತ್ರಪೂರ್ವಕ ಆತಿಕ ಬೀವಿಯನ್ನು ಮಸೀದಿಯಿಂದ ತಡೆಯುವ ಉದ್ದೇಶವಾಗಿತ್ತು ಉಮರ್(ರ) ರವರದ್ದು ಎಂಬುವುದು ಇದರಿಂದ ಬಹಳ ಸ್ಪಷ್ಟ.ಈ ತಂತ್ರ ಪಾಯೋಗಿಕವಾಗಿ ಜಾರಿಗೆ ತರಬೇಕಾದರೆ ವಿವಾಹವಾಗಲೇ ಬೇಕು.ಕಾರಣ , ಅನ್ಯ ಸ್ತ್ರೀ ಗೆ ದಾರಿಯಲ್ಲಿ ಅವಿತು ಕುಳಿತು ಏಟು ಕೊಡುವಂತಿಲ್ಲ.ವಿವಾಹವಾದರೆ ತನ್ನ ಪತ್ನಿಗೆ ಏಟು ಕೊಟ್ಟಲ್ಲಿ ಅದರಿಂದ ತೊಂದರೆಯುಂಟಾಗಲಾರದು.ಇದು ಮನಗಂಡ ಉಮರ್ (ರ)ಆತಿಕ ಬೀವಿಯ ಪ್ರಸ್ತುತ ನಿಬಂಧನೆಗೆ ಒಪ್ಪಿಗೆ ಸೂಚಿಸಿದ್ದರು. ಫಸಾದ್ ಉಂಟಾಗುವ ವೇಳೆ ಸ್ತ್ರೀಯರು ಮಸೀದಿ ಹೋಗಬಾರದೆಂಬ ವಿಶ್ವಾಸವೇ ಆತಿಕ ಬೀವಿಗೆ ಇದ್ದದ್ದು ಎಂಬುವುದು ಇದರಿಂದ ಬಹಳ ವ್ಯಕ್ತ.ಅದರ ನಂತರ ಆತಿಕ ಬೀವಿ ಮಸೀದಿಗೆ ತೆರಳದಿರುವುದೇ ಅದಕ್ಕೆ ಆಧಾರ.ಫಸಾದ್ ಉಂಟಾಗುವ ಒಂದು ರೂಪವನ್ನು ಉಮರ್ (ರ) ಆತಿಕ ಬೀವಿಗೆ ಮನದಟ್ಟು ಮಾಡಿ ಕೊಡುವ ಉದ್ದೇಶದಿಂದ ಈ ರೀತಿ ಮಾಡಿದ್ದಾರೆ.ಅದರಲ್ಲಿ ಉಮರ್(ರ) ಯಶಸ್ವಿಯಾದರು ಎರಡನೇ ಪ್ರಶ್ನೆಯ ಉತ್ತರ ಶರೀಅತ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಉಮರ್ (ರ)ರವರು ಪತ್ನಿಯ ಮಸೀದಿ ಪ್ರವೇಶದಲ್ಲಿ ಇಷ್ಟವಿಲ್ಲದಿದ್ದರೂ ತಡೆಯದಿರಲು ಕಾರಣ ಈಗಾಗಲೇ ವಿವರಿಸಲಾಗಿದೆ.(ಭಾಗ 3ಮತ್ತು 4 ರಲ್ಲಿ). ಆದರೂ ಅದರ ಬಗ್ಗೆ ಬೇರೆ ಒಂದು ವಿವರಣೆಯನ್ನು ನೀಡುತ್ತಿದ್ದೇನೆ. ಬುಖಾರಿಯ ವ್ಯಾಖ್ಯಾನ ಗ್ರಂಥದಲ್ಲಿ ಅಲ್ಲಾಮ ಕಾಂದಹ್ಲವಿ ಹೇಳುತ್ತಾರೆ; وإنما كان عمر لا يقدم على النهي لأدب الحديث، وإلا فقد كان له أن ينهى عن ذلك، لما علم من إشارات النبي صلى الله عليه وسلم جواز النهي(لامع الدراري) ಹದೀಸಿನೊಂದಿಗೆ ಗೌರವವಿರುವ ಕಾರಣದಿಂದ ಉಮರ್ (ರ)ಪತ್ನಿಯನ್ನು ತಡೆದಿಲ್ಲ.ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಇತರ ಸೂಚನೆಯಿಂದ ತಿಳಿದು ಬಂದಂತೆ(ಸ್ತ್ರೀಯರಿಗೆ ಮನೆಯೇ ಉತ್ತಮವೆಂಬ ಹದೀಸ್ ಪ್ರಕಾರ)ಉಮರ್ (ರ)ರವರಿಗೆ ತಡೆಯಬಹುದಾಗಿತ್ತು.(ಅದಬ್ ಪಾಲನೆಗೆ ಮಾತ್ರ ತಡೆದಿಲ್ಲ: ಲೇ) (ಲಾಮಿಉದ್ದರಾರಿ ) ಇಮಾಮ್ ಮುಲ್ಲಾ ಅಲಿಯ್ಯುಲ್ ಖಾರಿ (ರ)ಅಬೂ ಯೂಸುಫ್ (ರ)ರಿಂದ ಈ ರೀತಿ ಉಲ್ಲೇಖಿಸಿಸುತ್ತಾರೆ; ونظيره ما وقع لأبي يوسف حين روي أنه عليه السلام كان يحب الدباء ، فقال رجل : أنا ما أحبه فسل السيف أبو يوسف وقال : جدد الإيمان وإلا لأقتلنك (مرقاة المفاتيح ،لامع الدراري) ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರಿಗೆ ಸೋರೆ ಇಷ್ಟವಾಗಿತ್ತು ಎಂದು ಅವರು ಹೇಳಿದಾಗ ಒಬ್ಬರು ಹೇಳಿದರು.ನಾನು ಅದನ್ನು ಇಷ್ಟಪಡುವುದಿಲ್ಲ.ಆಗ ಅಬೂ ಯೂಸುಫ್ (ರ)ಖಡ್ಗ ಹೊರ ತೆಗೆದು ಹೇಳಿದರು; ನಿನ್ನ ಈಮಾನ್ ನೀನು ನವೀಕರಿಸು.ಇಲ್ಲದಿದ್ದರೆ ನಿನ್ನನ್ನು ನಾನು ಈ ಖಡ್ಗದಿಂದ ಕೊಲ್ಲುವೆನು. (ಮಿರ್ಖಾತ್2/234) ಹಿರಿಯ ವ್ಯಕ್ತಿಗಳು ಒಂದು ಕಾರ್ಯವನ್ನು ನಮ್ಮಲ್ಲಿ ಆಜ್ಞಾಪಿಸುವಾಗ ಅವರ ಅದೇಶವನ್ನು ಪಾಲಿಸಲು ಪಾಲಿಸಬೇಕು.ಕಾರಣಾಂತರಗಳಿಂದ ಪಾಲಿಸಲಾಗದಿದ್ದಲ್ಲಿ ಅದಕ್ಕಿರುವ ಕಾರಣಗಳನ್ನು ಹೇಳಿ ಅದರಿಂದ ಹಿಂದೆ ಸರಿಯುವುದು ಅವರಿಗೆ ನೀಡುವ ಗೌರವವಾಗಿದೆ.ಅದುವೇ ಆಗಿದೆ ಉಮರ್ (ರ),ಇಬ್ನ್ ಉಮರ್ (ರ)ಹಾಗೂ ಅಬೂ ಯೂಸುಫ್ (ರ)ರವರ ಘಟನೆಗಳಲ್ಲಿ ನಮಗೆ ಕಾಣುವುದು. ಸೋರೆ ನನಗೆ ಇಷ್ಟವಿಲ್ಲ ಎಂದು ಒಂದೇ ಮಾತಿಗೆ ಹೇಳುವಾಗ ಪ್ರವಾದಿ ವಚನದ ಗೌರವಕ್ಕೆ ವಿರುದ್ಧವಾಗಿದೆ. ಅದೇ ರೀತಿ ಸ್ತ್ರೀಯರ ಮಸೀದಿ ಪ್ರವೇಶ ಫಸಾದ್ ಗೆ ಕಾರಣವಾಗುತ್ತದೆ ಎಂದು ಆತಿಕ ಬೀವಿಗೆ ಮನವರಿಕೆ ಮಾಡಿ ಕೊಟ್ಟು ಅದನ್ನು ಮೊಟಕುಗೊಳಿಸಿದಾಗ ಹದೀಸಿನ ಗೌರವಕ್ಕೆ ಕುಂದುಂಟಾದುದನ್ನು ಉಮರ್(ರ) ಕಂಡಿಲ್ಲ. ಆದುದರಿಂದಲೇ ಸ್ತ್ರೀಯರ ಮಸೀದಿ ಪ್ರವೇಶವು ಫಸಾದ್ ಗೆ ಕಾರಣವಾದಾಗ ಅವರನ್ನು ಮಸೀದಿಯಿಂದ ತಡೆಯುವಂತೆ ಫತ್ವ ನೀಡಿದ ಇಮಾಮರುಗಳ ಬಗ್ಗೆ ಅವರು ಹದೀಸಿನ ಗೌರವಕ್ಕೆ ವಿರುಧ್ಧವಾಗಿ ನಡೆಕೊಂಡವರು ಎಂದು ಹೇಳುವಂತಿಲ್ಲ ಮೂರನೇಯ ಪ್ರಶ್ನೆಗೆ ಉತ್ತರ. ಸ್ತ್ರೀಯರಿಗೆ ಅವರ ಮನೆಯೇ ಉತ್ತಮವೆಂಬ ಪ್ರವಾದಿ ವಚನ ಆತಿಕ ಬೀವಿಗೆ ತಲುಪದಿರುವುದರಿಂದ ಆತಿಕ ಬೀವಿ ಮಸೀದಿಗೆ ಹೋಗಲು ಅನುಮತಿ ಕೇಳಿರಬೇಕು.ಕಾರಣ,ಉಮರ್ (ರ)ತನ್ನನ್ನು ತಡೆಯದಿರಲು ಕಾರಣ ವಿವರಿಸುವಲ್ಲಿ ಪ್ರಸ್ತುತ ವಿಷಯವನ್ನು ಆತಿಕ ಬೀವಿ ಪರಾಮರ್ಶಿಸುತ್ತಿಲ್ಲ.ಆ ಪ್ರವಾದಿ ವಚನ ಆತಿಕ ಬೀವಿಗೆ ತಿಳಿದಿದ್ದರೆ ಒಮ್ಮೆಯೂ ಕೂಡಾ ಅವರು ಮಸೀದಿಗೆ ಹೋಗುತ್ತಿರಲಿಲ್ಲ ಅಥವಾ ಅಂತಹ ನಿಬಂಧನೆಯನ್ನು ವಿವಾಹದ ವೇಳೆ ಇಡುತ್ತಿರಲಿಲ್ಲ.ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲರೊಂದಿಗೆ ನಮಾಝು ಮಾಡಲು ಅನುಮತಿ ಕೇಳಿ ಬಂದ ಸ್ವಹಾಬೀ ವನಿತೆಯರೊಂದಿಗೆ "ನಿಮಗೆ ನಿಮ್ಮ ಮನೆಯೇ ನಮಾಜಿಗೆ ಉತ್ತಮ"ವೆಂಬ ಮಾತು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದಾಗ ಆ ಉಪದೇಶವನ್ನು ಚಾಚೂ ತಪ್ಪದೇ ಸ್ವಹಾಬೀ ವನಿತೆಯರು ಸ್ವೀಕರಿಸಿ ಅವರವರ ಮನೆಯಲ್ಲಿಯೇ ನಮಾಜು ನಿರ್ವಹಿಸಿದರು. ಅದರ ನಂತರ ಮಸೀದಿಗೆ ಹಾಜರಾದದ್ದು ಆ ವಿಷಯ ತಲುಪದ ಮಹಿಳೆಯರಾಗಿದ್ದರೆಂದು ನೂತನವಾದಿಗಳು ನಾಯಕನೆಂದು ಒಪ್ಪಿಕೊಳ್ಳುವ ಶೌಕಾನಿಯೇ ಹೇಳಿದ್ದಾರೆ. (ಶೌಕಾನಿ ನಮ್ಮ ಅನಿಷೇಧ್ಯ ನಾಯಕನೆಂದು ವಹ್ಹಾಬಿಗಳು "ಇಸ್ಲಾಹೀ ಪ್ರಸ್ಥಾನ ಚರಿತ್ರತ್ತಿನೊರು ಆಮುಗಂ " ಎಂಬ ಪುಸ್ತಕದ ಪುಟ 15 ರಲ್ಲಿ ಹೇಳಿದ್ದಾರೆ.) ಶೌಕಾನಿಯ ಮಾತು ನೋಡಿರಿ; ( وبيوتهن خير لهن ) أي صلاتهن في بيوتهن خير لهن من صلاتهن في المساجد لو علمن ذلك ، لكنهن لم يعلمن فيسألن الخروج إلى الجماعة يعتقدن أن أجرهن في المساجد أكثر . ووجه كون صلاتهن في البيوت أفضل : الأمن من الفتنة ، ويتأكد ذلك بعد وجود ما أحدث النساء من التبرج والزينة ಮಸೀದಿಯಲ್ಲಿ ಸ್ತ್ರೀಯರು ನಿರ್ವಹಿಸುವ ನಮಾಝಿಗಿಂತ ಮನೆಯಲ್ಲಿ ನಿರ್ವಹಿಸುವ ನಮಾಜು ಅವರಿಗೆ ಉತ್ತಮವಾಗಿದೆ.ಅದು ಸ್ತ್ರೀಯರಿಗೆ ತಿಳಿದಿರುತ್ತಿದ್ದರೆ ಎಷ್ಟು ಚೆನ್ನಾಗಿತ್ತು!. ಆದರೆ ಅದು ಅವರಿಗೆ ತಿಳಿದಿರಲಿಲ್ಲ.ಆದುದರಿಂದಲೇ ಅವರು ಮಸೀದಿಗೆ ನಮಾಜಿಗೆ ತೆರಳಲು ಅನುಮತಿ ಕೇಳಿದರು.ಮಸೀದಿಯಲ್ಲಿ ನಮಾಜು ಮಾಡಿದಲ್ಲಿ ಪುಣ್ಯ ಅಧಿಕ ಲಭಿಸುವವು ಎಂಬ ತಪ್ಪು ಕಲ್ಪನೆ ಅವರಲ್ಲಿತ್ತು.ಫಸಾದ್ ನಿಂದ ನಿರ್ಭಯವಿರುವುದರಿಂದ ಮನೆಯಲ್ಲಿ ನಿರ್ವಹಿಸುವ ನಮಾಜು ಅವರಿಗೆ ಉತ್ತಮವೆನಿಸಿತು. ಸ್ತ್ರೀಯರಿಂದುಟಾದ ಸೌಂಧರ್ಯ ಪ್ರದರ್ಶನ ಕಾರಣದಿಂದ ಪ್ರತ್ಯೇಕವಾಗಿಯೂ. (ನೈಲುಲ್ ಅವ್ ತಾರ್ 3/161) ಇದೇ ರೀತಿ ಔನುಲ್ ಮಅಬೂದ್ ನ 2/274 ರಲ್ಲೂ ಕಾಣಬಹುದಾಗಿದೆ. ಇಮಾಮ್ ಅಬ್ದುರ್ರಝಾಕ್ (ರ)ರವರ ಮುಸನ್ನಫ್ ನಲ್ಲಿ ವರದಿಯಾದ ಒಂದು ರಿಪೋರ್ಟ್ ಈ ರೀತಿ ಇದೆ. عن أبي عمرو الشيباني أنه رأى عبد الله بن مسعود يخرج النساء من المسجد ويقول : أخرجن إلى بيوتكن خير لكن. (مصنف 3/173) ಇಬ್ನ್ ಮಸ್ಊದ್ (ರ) ಸ್ತ್ರೀಯರನ್ನು ಮಸೀದಿಯಿಂದ ಹೊರ ಕಳುಹಿಸುವುದು ನಾನು ನೋಡಿದೆ. "ನಿಮಗೆ(ನಮಾಜು ನಿರ್ವಹಿಸಲು) ಉತ್ತಮವಾದ ಮನೆಗೆ ನೀವು ತೆರಳಿರಿ" ಎಂದು ಅವರು ಹೇಳುತ್ತಾ ಇದ್ದರು. ಮುಸನ್ನಫ್ 3/173). ಈ ಹದೀಸಿನ ಕುರಿತು ಹಾಫಿಲ್ ಅಲ್ ಹೈಸಮೀ(ರ)ಹೇಳುತ್ತಾರೆ; رواه الطبراني في الكبير ورجاله موثوقون (مجمع الزوائد 1/253) ಈ ಹದೀಸನ್ನು ಇಮಾಮ್ ತ್ವಬ್ ರಾನಿ(ರ)ತನ್ನ ಕಬೀರ್ ನಲ್ಲಿ ವರದಿ ಮಾಡಿದ್ದಾರೆ.ಅದರ ವರದಿಗಾರರು ವಿಶ್ವಾಸಯೋಗ್ಯರಾಗಿದ್ದಾರೆ. (ಮಜ್ ಮಉಝ್ಝವಾಇದ್ 1/253). "ಸ್ತ್ರೀಯರಿಗೆ ನಮಾಜಿಗೆ ಅವರ ಮನೆಯೇ ಉತ್ತಮ"ವೆಂಬ ಹದೀಸ್ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿರುವಾಗ ಸ್ವಹಾಬಿಗಳು ಅದನ್ನು ಕಲಿತಿದ್ದರು.ಸ್ವಹಾಬೀ ವನಿತೆಯರಲ್ಲಿ ಕೆಲವರಿಗೆ ಅದು ತಿಳಿದಿರಲಿಲ್ಲ.ಅವರು ನಮಾಜಿಗೆ ಮಸೀದಿಗೆ ಹಾಜರಾದಾಗ ಸ್ವಹಾಬಿಗಳು ಅವರನ್ನು ನೀವು ಮನೆಯಲ್ಲಿಯೇ ನಮಾಜು ನಿರ್ವಹಿಸಿರಿ ಎಂದು ಹೇಳಿ ಕಳುಹಿಸುತ್ತಿದ್ದರು. ಇದು ಮೇಲೆ ಹೇಳಿದ ಹದೀಸಿನಿಂದ ಬಹಳ ಸ್ಪಷ್ಟವಾಗಿ ತಿಳಿಯಬಹುದಾಗಿದೆ. ಉಮರ್ (ರ)ರವರ ವಫಾತ್ ನ ನಂತರ ಝುಬೈರ್ ಬಿನ್ ಅವ್ವಾಮ್ (ರ)ರವರು ಆತಿಕ ಬೀವಿಯನ್ನು ವಿವಾಹವಾಗಿದ್ದಾಗಿ ಒಂದನೇಯ ಭಾಗದಲ್ಲಿ ನೀವು ಓದಿದ್ದೀರಿ.ಅವರ ಪತ್ನಿಯಾಗಿದ್ದ ವೇಳೆ ಆತಿಕ ಬೀವಿ ಮಸೀದಿಗೆ ಹೋಗಿದ್ದಾಗಿಯೂ ಝುಬೈರ್ ಬಿಮ್ ಅವ್ವಾಮ್ (ರ) ದಾರಿ ಮಧ್ಯೆ ಅವಿತು ಕುಳಿತು ಆತಿಕ ಬೀವಿಗೆ ಹೊಡೆದದ್ದಾಗಿಯೂ ಆಗ ಅತಿಕ ಬೀವಿ "ಇನ್ನಾಲಿಲ್ಲಾಹಿ ವ ಇನ್ನಾ ಇಲೈಹಿ ರಾಜಿಊನ್" ಎಂದು ಹೇಳುತ್ತಾ "ಜನರು ಹಾಳಾಗಿದ್ದಾರೆ" ಎಂದು ಹೇಳಿ ಮನೆಗೆ ಬರಳಿ ಬಂದ ಘಟನೆಯನ್ನು ಇಮಾಮ್ ಇಬ್ನ್ ಹಜರ್ (ರ)ತನ್ನ ಅಲ್ ಇಸ್ವಾಬ ಫೀ ತಮೀಝಿಸ್ವಹಾಬ 4/357ರಲ್ಲಿ ವಿವರಿಸಿದ್ದಾರೆ. وكان الزّبير شرط ألا يمنعها من المسجد وكانت امرأة خليقَةً، فكانت إذا تهيأت إلى الخروج للصّلاة قال لها: والله إنك لتخرجين وإني لكارهٌ؛ فتقول: فامنعني فأجلس، فيقول: كيف وقد شرطت لك ألا أفعل، فاحتال فجلس لها على الطّريق في الغلس، فلَما مرت وضع يده على كفلها؛ فاسترجعت، ثم انصرفت إلى منزلها، فلما حان الوقت الذي كانت تخرج فيه إلى المسجد لم تخرج، فقال لها الزّبير: مالك لا تخرجين إلى الصّلاة؟ قالت:‏ فسد النّاس، والله لا أخرج من منزلي(الاصابة4/357) ಒಟ್ಟಿನಲ್ಲಿ ಹೊಡೆದದ್ದು ಉಮರ್(ರ)ಆದರೂ ಅಥವಾ ಝುಬೈರ್ ಬಿನ್ ಅವ್ವಾಮ್ (ರ)ಆದರೂ ಫಸಾದ್ ಉಂಟಾದಲ್ಲಿ ಸ್ತ್ರೀಯರುಮಸೀದಿಗೆ ಹೋಗ ಕೂಡದು ಎಂಬ ತತ್ವವನ್ನೇ ಆತಿಕ ಬೀವಿ ಅಂಗೀಕರಿಸಿದ್ದರು. ಕೊನೆಯದಾಗಿ ... ಆತಿಕ ಬೀವಿಯ ಘಟನೆಯನ್ನು ಆಧಾರವಾಗಿಸಿ ಸ್ತ್ರೀಯರನ್ನು ಮಸೀದಿಗೆ ಕರೆದು ಕೊಂಡು ಹೋಗಲು ವಹ್ಹಾಬಿಗಳಿಗೆ ಯಾವುದೇ ಪುರಾವೆಯಿಲ್ಲ.ಕಾರಣ, ಕೇರಳದ ಮುಸ್ಲಿಯಾರುಗಳು ದೀನಿನಲ್ಲಿ ಪ್ರಮಾಣಯೋಗ್ಯರಲ್ಲದಂತೆ ಸ್ವಹಾಬಿಗಳೂ ಕೂಡಾ ಪ್ರಮಾಣರಲ್ಲ ಎಂದು ವಹ್ಹಾಬಿಗಳು ಅವರ ಅಧಿಕೃತ ಪತ್ರಿಕೆಯಲ್ಲಿ ಬರೆದಿದ್ದಾರೆ. ವಹ್ಹಾಬಿಗಳಿಗೆ ಸ್ವಹಾಬಿಗಳೇ ಪುರಾವೆಯಾಗದೇ ಇರುವಾಗ ಆತಿಕ ಬೀವಿ ಎಂಬ ಸ್ವಹಾಬೀ ವನಿತೆಯೊಬ್ಬರ ಘಟನೆ ಹೇಗೆ ತಾನೇ ಪುರಾವೆಯಾದೀತು? "ಸ್ತ್ರೀಯರನ್ನು ನೀವು ಮಸೀದಿಯಿಂದ ತಡೆಯದಿರಿ" ಎಂಬ ಹದೀಸಿನ ತಾತ್ಪರ್ಯವೇನು? ಇಸ್ಲಾಮಿನ ಪ್ರಾರಂಭದಲ್ಲಿ ಪುರುಷರಂತೆ ಸ್ತ್ರಿಯರೂ ಕೂಡಾ ಮಸೀದಿಗೆ ಹಾಜರಾಗಿ ಮುಸ್ಲಿಮರ ಹೆಚ್ಚಿನ ಸಂಖ್ಯೆ ಯನ್ನು ಸತ್ಯ ನಿಷೇಧಿಗಳಿಗೆ ತೋರಿಸಿ ಕೊಡುತ್ತಿದ್ದರು.ಇಮಾಮ್ ಅಬೂಬಕರ್ ಅಲ್ ಕಾಸಾನೀ(ರ)ತನ್ನ ಬದಾಇಉಸ್ಸನಾಯಿಯ್ ಎಂಬ ಗ್ರಂಥದಲ್ಲಿ ಇದು ವಿವರಿಸಿದ್ದಾರೆ. ಇಮಾಮ್ ಇಬ್ನ್ ಹಜರ್ (ರ)ಹೇಳುತ್ತಾರೆ; ثم الوجه حمله علي زمن النبي صلي الله عليه وسلم (تحفة) ಅದು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಕಾಲಕ್ಕೆ ಮಾತ್ರ ಸೀಮಿತವಾಗಿತ್ತು. (ತುಹ್ಫ 2/252) ಕಾರಣ ,ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೆಚ್ಚು ಸಮಯವನ್ನು ಮಸೀದಿಯಲ್ಲೇ ಕಳೆಯುತ್ತಿದ್ದರು.ಮಸೀದಿಯಲ್ಲಿರುವ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಸ್ತ್ರೀ ಪುರುಷರೆಲ್ಲರೂ ವ್ಯತ್ಯಸ್ತ ವಿಷಯಗಳಿಗೆ ಸಮೀಪಿಸುತ್ತಿದ್ದರು.ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಎಲ್ಲರಿಗೂ ಪರಿಹಾರ ನೀಡುತ್ತಿದ್ದರು. ಸ್ತ್ರೀಯರನ್ನು ಮಸೀದಿಯಿಂದ ತಡೆದಲ್ಲಿ ಅವರ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಲು ಬಹಳ ಕಷ್ಟಕರಾವಾದೀತು ಎಂಬ ನೆಲೆಯಲ್ಲಿ ಸ್ತ್ರೀಯರನ್ನು ಮಸೀದಿಯಿಂದ ತಡೆಯದಿರಿ ಎಂಬ ಮಾತನ್ನು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದ್ದಾರೆ ವಿನಃ ಅನ್ಯ ಪುರುಷರೊಂದಿಗೆ ಸೇರಿ ಕೊಂಡು ಜುಮುಅ ಜಮಾಅತ್ ಗೆ ಹಾಜರಾಗಲು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಪ್ರಸ್ತುತ ಹದೀಸಿನಲ್ಲಿ ಹೇಳಿದ್ದಾಗಿ ಯಾವ ಇಮಾಮರುಗಳು ಕೂಡಾ ಹೇಳಿಲ್ಲ.ಅದನ್ನು ತೋರಿಸಲು ಯಾವ ವಹ್ಹಾಬಿಗಳಿಗೂ ಸಾಧ್ಯವಿಲ್ಲ. NOOR-UL-FALAH ISLAMIC STORE

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್