ಹುಲಿಮರಿಯ ಅಂತ್ಯ

ಹುಲಿಮರಿಯ ಅಂತ್ಯ - ಅಲೀ(ರ) ﷽ ಪ್ರವಾದಿ(ಸ)ರವರು ಹೇಳಿದರು ; ನಾನು ವಿಜ್ಞಾನದ ತೋಟವಾಗಿರುವೆನು ಅದರ ಹೆಬ್ಬಾಗಿಲು ಅಲೀ(ರ)ರವರಾಗಿರುವರು . ಪ್ರವಾದಿ(ಸ)ರವರು ಮದೀನಾಕ್ಕೆ ಹಿಜಿರಾ ಹೋಗುವಾಗ ತನ್ನ ವಸಿಯ್ಯತ್ ಗಳನ್ನೂ ಇತರರು ತೆಗೆದಿರಿಸಲು ಕೊಟ್ಟಂತಹಾ ವಸ್ತುಗಳನ್ನೂ ಅಲೀ(ರ)ರವರಿಗಾಗಿತ್ತು ವಹಿಸಿಕೊಟ್ಟದ್ದು. ಮದೀನಾದಲ್ಲಿ ತನ್ನೊಂದಿಗೆ ಖಲೀಫ಼ರಾಗಲೂ ಆಜ್ಞಾಪಿಸಿದ ನೆಬಿ(ಸ)ರವರೊಂದಿಗೆ ಮಕ್ಕಳಿಗೂ ಮಹಿಳೆಯರಿಗೂ ನನ್ನನ್ನು ಖಲೀಫ಼ರನ್ನಾಗಿ ಮಾಡುವುದೇ ಎಂದವರು ಕೇಳಿದರು. ಆಗ ಪ್ರವಾದಿ(ಸ)ರವರ ಪ್ರತ್ಯುತ್ತರ ಈ ರೀತಿಯಾಗಿತ್ತು. ಮೂಸಾ ನೆಬಿ(ಅ)ರವರಿಂದ ಹಾರೂನ್ ನೆಬಿ(ಅ)ರವರ ಸ್ಥಾನದಲ್ಲಿ ನನ್ನಿಂದ ನೀನು ಆಗುವುದನ್ನು ಇಷ್ಟಪಡುವುದಿಲ್ಲವೆ...? ಆದರೆ ನನ್ನ ನಂತರ ಪ್ರವಾದಿಗಳಿಲ್ಲ. ತುಂಬಿ ನಿಂತು ಆಕರ್ಷಣೀಯವಾಗಿ ಕಂಗೊಳಿಸುತ್ತಿರುವ ಗಡ್ಡದಲ್ಲಿ ಕೈಯ್ಯಾಡಿಸುತ್ತಾ ಅಲೀ(ರ)ರವರೊಂದಿಗೆ ನೆಬಿ (ಸ)ರವರ ಪ್ರಶ್ನೆ. ಉಲ್ಲಾಸಭರಿತರಾಗಿದ್ದ ಅಲೀ(ರ)ರವರು ತನ್ನ ಮುಖವನ್ನು ಪ್ರವಾದಿಯವರತ್ತ ತಿರುಗಿಸಿದರು. ಸುಂದರವಾದ ಮುಖದಲ್ಲಿರುವ ಅಲೀ(ರ)ರವರ ಗಡ್ಡದಲ್ಲಿ ಯಾವಾಗಲೂ ಪ್ರವಾದಿ(ಸ)ರವರ ಕೈಗಳು ಸ್ಪರ್ಶಿಸುತ್ತಿರುತ್ತದೆ . ಅಂತಹಾ ಒಂದು ಸಂದರ್ಭದಲ್ಲಾಗಿತ್ತು ನೆಬಿ(ಸ)ರವರಿಂದ ಒಂದು ಪ್ರಶ್ನೆಯೂ ಅಲೀ(ರ)ರವರತ್ತ ತೂರಿ ಬರುವುದು. "ಮಗನೇ ....ಅಲೀ..." ನೆಬಿ(ಸ)ರವರ ಕರೆಗೆ ಓಗೊಟ್ಟು ಅಲೀ(ರ)ರವರು ತನ್ನ ಕಣ್ಣನ್ನು ಮತ್ತೊಮ್ಮೆ ನೆಬಿ(ಸ)ರವರತ್ತ ತಿರುಗಿಸಿದರು. ಪೂರ್ವ ಸಮುದಾಯಗಳಲ್ಲಿರುವ ಅತೀ ದೊಡ್ದ ದುಷ್ಟನು ಯಾರೆಂದು ನಿಮಗೆ ಗೊತ್ತೇ.... "ಗೊತ್ತಿದೆ " ಅಲೀ(ರ)ರವರು ಹೇಳಿದರು. "ಹಾಗಾದರೆ ಹೇಳು" ಅಲೀ(ರ)ರವರ ತುಟಿಗಳು ಅಲುಗಾಡಿತು. "ಸ್ವಾಲಿಹ್ ನೆಬಿಯವರ ಒಂಟೆಯನ್ನು ಕೊಂದ ಖುದಾರ್ ಎಂಬ ಹೆಸರಿರುವ ವ್ಯಕ್ತಿಯಾಗಿರುವನು". ತಕ್ಷಣ ಮತ್ತೊಂದು ಪ್ರಶ್ನೆಯೂ ನೆಬಿ (ಸ)ರವರಿಂದ ಬಂದದ್ದು ಅನಿರೀಕ್ಷಿತ ವಾಗಿತ್ತು. "ಈ ಸಮುದಾಯದಲ್ಲಿ ಅತೀ ದೊಡ್ಡ ದುಷ್ಟನು ಯಾರೆಂದು ನಿಮಗೆ ಗೊತ್ತೆ...... ಅಲೀ(ರ)ರವರ ಉತ್ತರ "ಗೊತ್ತಿಲ್ಲ" ಎಂದಾಗಿತ್ತು. "ಮಗನೇ.... ಈ ಹಣೆಗೆ ಖಡ್ಗದಿಂದ ಕಡಿಯುವವನು" ಹರಿತವಾದ ಖಡ್ಗದ ಹೊಡೆತದಿಂದ ರಕ್ತವೂ ಧಾರಾಕಾರವಾಗಿ ಹರಿದು ಈ ಗಡ್ಡದ ರೋಮಗಳು ರಕ್ತದಲ್ಲಿ ಕೆಂಪಡರುವುದಾಗಿದೆ. ಪ್ರವಾದಿಯವರ ದೀರ್ಘ ವೀಕ್ಷಣೆ . ಸತ್ಯವಾಗುವಾಗುವ ಮಾತು ರಕ್ತ ಸಾಕ್ಷಿಗಳ ಪದವಿಗೆ ತಾನೂ ತಲುಪುವೆನೆಂಬ ಆಲೊಚನೆಯೂ ಅಲೀ(ರ)ರವರ ಮನಸ್ಸಲ್ಲಿ ಹರ್ಷವನ್ನುಂಟುಮಾಡಿತು ಮಕ್ಕಾದ ಬಂಡೆಕಲ್ಲುಗಳಿಂದಾವೃತವಾದ ಒಂದು ಸ್ಥಳದಲ್ಲಿ ಚೌಕಾಕಾರದಲ್ಲಿ ಕುಳಿತು ಕೆಲವರು ಚರ್ಚೆ ನಡೆಸುತ್ತಿದ್ದರು . ರಹಸ್ಯವಾಗಿ ತೀರ್ಮಾನವನ್ನು ಕೈಗೊಳ್ಳಬೇಕಾದ ಸಮಯ . ಅಲೀ(ರ)ರವರು ಖವಾರಿಜ್ ಗಳೊಂದಿಗೆ ಯುದ್ಧ ಮಾಡಿದ ಕೆಲವು ಸಂಘಟನೆಗಳೂ , ಅದರಲ್ಲಿ ವಧಿಸಲ್ಪಟ್ಟವರ ಬಂಧು ಮಿತ್ರಾದಿಗಳೂ ಚರ್ಚೆಯಲ್ಲಿ ಭಾಗವಹಿಸಿದ್ದರು . ತೀರ್ಮಾನಗಳು ಬಹಳ ರಹಸ್ಯವಾಗಿದ್ದವು . ನಾಲ್ಕು ಗೋಡೆಗಳ ಮಧ್ಯೆ ಚರ್ಚೆಯೂ ನಿಗೂಢವಾಗಿತ್ತು . ಪ್ರತಿಕಾರದ ಬಾಣಗಳನ್ನು ಹೊಟ್ಟೆಕಿಚ್ಚಿನ ಅಸ್ತ್ರಗಳನ್ನಾಗಿಸಿ ಬದಲಾಗಿಸುವುದಾಗಿತ್ತು ಅವರ ತಯಾರಿ . "ಅಲಿಯವರನ್ನು ಕೊಲೆ ಮಾಡಬೇಕು ಆ ಕಾರ್ಯವನ್ನು ನಾನು ವಹಿಸಿಕೊಳ್ಳುತ್ತೇನೆ" ಇಬ್ನು ಮುಲ್ಜಿಮನ ವಿಷಕಾರುವಂತಹ ಮಾತುಗಳು . "ಶಾಮಿನ ಗವರ್ನರ್ ಆಗಿರುವ ಮುಆವಿಯಾರವರನ್ನು ನಾನು ವಧಿಸುತ್ತೆನೆ" . ಬುರಾಕ್ ಬ್ನು ಅಬ್ದುಲ್ಲಾ ಎಂಬವ ಹೇಳಿದ . ಈಜಿಪ್ತಿಗೆ ಹೋಗಿ ಅಮ್ರುಬ್ನು ಆಸಿ(ರ)ರವರನ್ನು ವಧಿಸಲೂ ಮೂರನೆಯವನಾದ ಅಮ್ರುಬ್ನು ಮುರಯ್ದ್ ಎಂಬವ ತೀರ್ಮಾನಿಸಿದ . ವಧಶ್ರಮದಲ್ಲಿ ಮೂವರೂ ಏಕೀಕರಣವನ್ನುಂಟು ಮಾಡಿಕೊಂಡರು .ಒಂದೇ ಸಮಯದಲ್ಲಿ ಕೊಲೆ ನಡೆಯಬೇಕು . ಅದು ರಮಳಾನ್ ಹದಿನೇಳನೆ ದಿವಸವಾಗಿರಬೇಕು . ವಿಷ ದೊಂದಿಗೆ ಹರಿತಗೊಳಿಸಿದ ಖದ್ಗದಿಂದಾಗಿರಬೇಕು. ಶರೀರದ ರಕ್ತದಲ್ಲಿ ಖಡ್ಗವೂ ಸ್ಪರ್ಶಿಸಿದ ಕೂಡಲೆ ವಿಷದ ಅಂಶವು ಶರೀರದ ಒಳಗೆ ಪ್ರವೇಶಿಸುವಂತಾಗಬೇಕು ಈ ತೀರ್ಮಾನದೊಂದಿಗೆ ಮೂವರೂ ತಯ್ಯಾರಾದರು ಈಜಿಪ್ತಿಗೆ ಇಬ್ನು ಮುರಯ್ದ್ , ಇರಾಖಿನ ಕೂಫ಼ಾಕ್ಕೆ ಇಬ್ನು ಮುಲ್ಜಿಮ್ ಹಾಗೂ ಶಾಮಿಗೆ ಇಬ್ನು ಬುರಾಕ್ ಪ್ರಯಾಣ ಹೊರಟರು . ಆ ದಿವಸದ ಪ್ರಭಾತವೂ ಉದಯವಾಯಿತು . ತೀರ್ಮಾನವನ್ನು ನೆರವೇರಿಸಲೂ ನಿರ್ದಿಷ್ಟಪಡಿಸಿದ ಮಸೀದಿಗಳಲ್ಲಿ ಅವರು ಮೂವರೂ ತಲುಪಿದರು . ವಿಶ ಸೇರಿಸಿ ಹರಿತಗೊಳಿಸಿದಂತಹಾ ಖಡ್ಗದೊಂದಿಗೆ ಅವರು ಕಾದು ಕುಳಿತರು . ಸುಬುಹಿ ನಮಾಜ್ ಗೆ ಮುಆವಿಯಾ(ರ)ರವರು ಮಸೀದಿಗೆ ಬಂದರು . ಬಾಗಿಲ ಸಂಧಿಯಲ್ಲಿ ಹೊಂಚು ಹಾಕಿ ಕುಳಿತಿದ್ದ ಬುರಾಕ್ ತನ್ನ ಖಡ್ಗದಿಂದ ಮುಆವಿಯಾ(ರ)ರವರಿಗೆ ಕಡಿದ . ಆದರೆ ಖಡ್ಗ ತಾಗಿದ್ದು ಅವರ ಮಂಡಿಗಾಗಿತ್ತು . ನೋವಿನಿಂದ ಮುಆವಿಯಾ(ರ)ರವರು ಅಟ್ಟಹಾಸಗೈದರು . ಜನರು ಸೇರಿದರು . ಅವರು ಬುರಾಕ್ ನನ್ನು ಹಿಡಿದು ಕೊಲೆ ಮಾಡಿದರು . ಮುಆವಿಯಾ(ರ)ರವರ ಗಾಯದ ಭಾಗಕ್ಕೆ ಔಷಧಿ ಇಟ್ಟು ಕಟ್ಟಿದರು . ನಂತರ ಅದು ಗುಣವಾಯಿತು . ಅಮ್ರುಬ್ನು ಆಸಿ(ರ)ರವರನ್ನು ಕೊಲ್ಲಲು ಇಬ್ನು ಮುರೈದ್ ಕಾದು ಕುಳಿತಿದ್ದ . ಪ್ರಭಾತದಲ್ಲಿಯೇ ಅವನಿಂದ ಪ್ರಮಾದ ಉಂಟಾಯಿತು . ಹೊಟ್ಟೆ ನೋವಿನ ಕಾರನದಿಂದ ಅಮ್ರ್(ರ)ರವರಿಗೆ ಅಂದು ಮಸೀದಿಗೆ ಬರಲು ಸಾಧ್ಯವಾಗಲಿಲ್ಲ. ಬದಲಿಗೆ ಅಲ್ಲಿಯ ಸಂರಕ್ಷಣಾಧಿಕಾರಿ ಖಾರಿಜತ್ತ್ ರವರನ್ನಾಗಿತ್ತು ಕಳುಹಿಸಿದ್ದು . ಕತ್ತಲಿನಲ್ಲಿ ಹೊಂಚು ಹಾಕಿ ಕುಳಿತಿದ್ದ ಶತ್ರುವೂ ಆ ವ್ಯಕ್ತಿ ಯಾರೆಂದು ತಿಳಿಯದೆ ಖರಿಜತ್ತ್ ರವರನ್ನು ಖಡ್ಗದಿಂದ ಸೀಳಿ ಹಾಕಿದ ನಂತರ ಜನರು ಸೇರಿ ಅವನನ್ನು ಕೊಲೆ ಮಾಡಿದರು . ಇಬ್ನು ಮುಲ್ಜಿಮ್ ಕೂಫ಼ಾದ ಮಸೀದಿಗೆ ಅಲೀ(ರ)ರವರನ್ನು ಕೊಲ್ಲಲಿಕ್ಕಾಗಿ ಹೊರಟ . ದಾರಿಯಲ್ಲಿ ನೋಡಿದ ಸುಂದರಿಯಾದ ಖತಾಮಿ ಎಂಬ ಸ್ತ್ರೀಯಲ್ಲಿ ಅವನು ಆಕರ್ಷಿತನಾದ . ಅವನು ಅವಳೊಂದಿಗೆ ವಿವಾಹದ ಅಬ್ಯರ್ಥನೆಯನ್ನು ಮುಂದಿರಿಸಿದ . ಆದರೆ ವಿವಾಹವಾಗಲೂ ಒಂದು ನಿಭಂಧನೆಯನ್ನು ಇಬ್ನು ಮುಲ್ಜಿಮ್ ನ ಮುಂದಿರಿಸಿದಳು. ಅದೇನೆಂದರೆ ಅಲೀ(ರ)ರವರನ್ನು ಕೊಲೆ ಮಾಡಿ ಬರಬೇಕು ಆಗ್ರಹಿಸಿ ಬಂದದ್ದೆ ಇಬ್ನು ಮುಲ್ಜಿಮ್ನಿಗೆ ವಿಧಿಯಾಗಿ ಬಂತು . ತನ್ನ ಮುಂದಿನ ನಡೆಯ ಸರಿಯಾದ ಕಾರ್ಯ ನಿರ್ವಹಣೆಗಾಗಿ ಸಬೀಬ್ ಎಂಬ ಒಂದು ವ್ಯಕ್ತಿಯನ್ನೂ ತನ್ನೊಂದಿಗೆ ಸೇರಿಸಿಕೊಂಡ. ಒಮ್ಮೆ ಪರೀಕ್ಷಿಸಲಿಕ್ಕಾಗಿ ಇಬ್ನು ಮುಲ್ಜಿಮ್ ಸಬೀಬ್ ನೊಂದಿಗೆ ಕೇಳಿದ . "ನೀನು ಪ್ರಶಸ್ತಿಯನ್ನು ಆಗ್ರಹಿಸುವೆಯಾ" ..... "ಏನು ವಿಷಯ" .... "ಅಲೀಯವರನ್ನು ವಧಿಸಿದರೆ ನಿನಗೆ ಪ್ರಶಸ್ತನಾಗಬಹುದು". ಸಬೀಬ್ ಕೋಪದಿಂದ ಹೋಗು ಇಲ್ಲಿಂದ "ಆ ಮಹಾನುಭಾವರನ್ನು ಕೊಲ್ಲಲು ನಾನಿಲ್ಲ ! ಅವರ ಮಹತ್ವವೇನೆಂದು ತಿಳಿಯದ ಮನುಶ್ಯತ್ವವಿಲ್ಲದ ನೀಚ ನೀನು". ಆದರೂ ಇಬ್ನು ಮುಲ್ಜಿಮ್ ಆ ಕ್ರೂರ ಕೃತ್ಯಕ್ಕೆ ತಯ್ಯಾರಾದ ನಲ್ವತ್ತು ದಿವಸ ವಿಷದಲ್ಲಿ ಮುಳುಗಿಸಿಟ್ಟು ಬಿಸಿಮಾಡಿ ಹರಿತಗೊಳಿಸಿದ ಖಡ್ಗ ದೊಂದಿಗೆ ಕತ್ತಲೆಯ ಮೂಲೆಯಲ್ಲಿ ಅವಿತು ಕುಳಿತ ಹಿಜ್ರಾ ನಲ್ವತ್ತನೆ ವರ್ಷ ರಮಳಾನ್ ಹದಿನೇಳು ಶುಕ್ರವಾರ ಪ್ರಭಾತದ ಸಮಯ. ಸುಬುಹಿ ನಮಾಜ಼ಿಗಾಗಿ ಮಸೀದಿಗೆ ಹೊರಟ ಅಲೀ(ರ)ರವರ ಪವಿತ್ರವಾದ ಹಣೆಗೆ ಆ ದುಷ್ಟನ ಹರಿತವಾದ ಖಡ್ಗವೂ ಬಡಿಯಿತು . ಹಣೆಯೂ ಇಬ್ಬಾಗವಾಗಿ ರಕ್ತವೂ ಹರಿಯತೊಡಗಿತು . ನಿರಂತರವಾಗಿ ಹರಿಯುತ್ತಿರುವ ರಕ್ತದ ಹೊಳೆಯಿಂದ ಪ್ರವಾದಿ(ಸ)ರವರು ಪ್ರೀತಿಯಿಂದ ನೇವರಿಸುತ್ತಿದ್ದ ಆ ಗಡ್ಡವೂ ಕೆಂಬಣ್ಣವಾಯಿತು. ನಮಾಜ಼್ ಗಾಗಿ ಮಸೀದಿಗೆ ಜನರು ಒಬ್ಬೊಬ್ಬರಾಗಿ ಬರುತ್ತಿದ್ದಾರಷ್ಟೆ . ಶಬ್ದ ಕೇಳಿ ಜನರು ತರಾತುರಿಯಿಂದ ಗುಂಪು ಸೇರಿದರು .ಅಲೀ(ರ)ರವರ ಹಣೆಯಿಂದ ರಕ್ತವೂ ಧಾರಾಕಾರವಾಗಿ ಹರಿಯುತ್ತಿದೆ . ಅಲ್ಲಿಗೆ ಕೈ ಒತ್ತಿ ಹಿಡಿದರು . ಖಲೀಫ಼ರವರನ್ನು ಜನರು ಮನೆಗೆ ಎತ್ತಿಕೊಂಡು ಹೋದರು. ಅಲೀ(ರ)ರವರು ಮಗನಾದ ಹಸನ್(ರ)ರವರನ್ನು ಕರೆದು ಹೇಳಿದರು . ಮಗನೇ ..... ಈ ಕ್ರೂರತೆಯಿಂದ ತಂದೆಯೂ ಮರಣ ಹೊಂದುವುದಾದರೆ ಒಂದೇ ಏಟಿನಿಂದ ಅವನನ್ನು ಕೊಲೆ ಮಾಡಿರಿ ಬೇರೇನು ಮಾಡಬೇಡಿ ಸ್ವಲ್ಪ ಸಮಯದ ನಂತರ ತನ್ನ ಕುಟುಂಬಸ್ಥರನ್ನು ಬಳಿಗೆ ಕರೆದು ತಖ್ವಾ ಇರುವವರಾಗಬೇಕೆಂದು ವಸಿಯ್ಯತ್ ಮಾಡಿದರು . ಅಲ್ಲಾಹನನ್ನು ಭಯಪಟ್ಟು ಜೀವಿಸಬೇಕೆಂದು ಜನರನ್ನು , ರಾಷ್ಟ್ರವನ್ನೂ ಪ್ರೀತಿಸಿ ಯಾವಾಗಲೂ ಎಲ್ಲರಿಗೂ ಒಳಿತು ಮಾಡಬೆಕೆಂದು ಉಪದೇಶ ನೀಡಿದರು . ನೋವಿನಿಂದ ಚಡಪಡಿಸುತ್ತಿರುವ ಅಲೀ(ರ)ರವರು ತನ್ನ ಕೊನೆಯ ಕ್ಷಣದವರೆಗೆ ನಿರಂತರವಾಗಿ ಜ಼ಿಕ್ರ್ ಹೇಳುತ್ತಿದ್ದರು. ರಮಲಾನ್ ಹತ್ತೊಂಬತ್ತನೆ ಆದಿತ್ಯವಾರ ಅವರು ನಿಧನರಾದರು . ಹಸನ್, ಹುಸೈನ್(ರ) ಎಂಬೀ ಪುತ್ರರು ಮಯ್ಯಿತ್ ಸ್ನಾನ ಮಾಡಿಸಲೂ ನಾಯಕತ್ವ ನೀಡಿದರು .ಹಸನ್(ರ)ರವರು ಮಯ್ಯಿತ್ ನಮಾಝ್ ಗೆ ನೇತ್ರತ್ವ ನೀಡಿದರು . ನಂತರ ಅವರನ್ನು ಕೂಫ಼ಾದಲ್ಲಿ ದಫ಼ನ ಮಾಡಲಾಯಿತು . ಅಂದು ಅವರಿಗೆ ವಯಸ್ಸು 63 ಪ್ರಾಯವಾಗಿತ್ತು ತಸ್ಮಿಯಾ ಬಿನ್ತ್ ಅಬ್ದುಲ್ ರಹ್ಮಾನ್ NOOR-UL-FALAH ISLAMIC STORE

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್