ಜಲೀಲ್ ಔಲಾದೇ ಚರಿತ್ರೆ
عِنْدَ ذِكْرِ الصَّالِحِينَ تَنْزِلُ الرَّحْمَةُ ಶೈಖುಲ್ ಜಲೀಲ್ ಔಲಾದೇ ಉಮ್ಮೇ ಬತೂಲ್ ಸಯ್ಯಿದುನಾ ಇಮಾಂ ಮುಹಮ್ಮದ್ ಬಿನ್ ಸುಲೈಮಾನುಲ್ ಜಝೂಲಿ رَضِىَ اللّٰەُ عَنْهُ
ಮುಹಮ್ಮದ್ ಹುಸೈನ್ ರಝಾ.
بسم اللّٰہ الرحمٰن الرحیم
اَلصَّلَاةُ وَالسَّلَامُ عَلَيْكَ يَا سَيَّدِ يَارَسُولُ اللّٰه ﷺ
ಮುಸ್ಲಿ ಉಮ್ಮತ್ ಗಳ ನಲ್ಮೆಗಾಗಿ ಬಹಳಷ್ಟು ಅಕಾಬಿರ್ ಉಲಮಾಗಳು ನಾನಾ ಜ್ಞಾನ ಶಾಖೆಗೆ ಒಳಪಟ್ಟ ಧಾರಾಳ ಲಕ್ಷಗಟ್ಟಲೆ ಗ್ರಂಥಗಳನ್ನು ರಚಿಸಿದ್ದಾರೆ ಅದರಲ್ಲಿ ನಬೀಯೇ ಕರೀಂ ರಊಫುರ್ರಹೀಮ್ صَلَّى اللهُ تَعَالٰى عَلَيْهِ وَاٰلِهٖ وَسَلَّم ರವರ ಪವಿತ್ರ ವಚನಗಳನ್ನು ಶೇಖರಿಸಿ ಬರೆಯಲಾದ ಹದೀಸ್, ತಫ್ಸೀರ್, ಫಿಖ್ಹ್, ತಾರೀಖ್, ಸೀರತ್, ಗ್ರಂಥಗಳ ಹೊರತು ಪಡಿಸಿದರೆ ಆಶೀಖೀನ್ ಗಳ ಮನಸ್ಸಿಗೆ ಅವರ್ಣನೀಯ ಸಂತೋಷ ಸಂತೃಪ್ತಿ ಆಹ್ಲಾದವನ್ನು ಉಂಟುಮಾಡುವ ಕೆಲವು ಗ್ರಂಥಗಳಂತೂ ಜಗತ್ತಿನ ಮೂಲೆ ಮೂಲೆಗಳಲ್ಲೂ ಸುಪ್ರಸಿದ್ಧ ಹಾಗೂ ಜನ ಸಾಮಾನ್ಯರೆಡೆಯಲ್ಲೂ ಕೂಡ ಅತ್ಯಂತ ಮೆಚ್ಚುಗೆಯನ್ನು ಹಾಗೂ ಬೇಡಿಕೆಯನ್ನು ಗಳಿಸಿದ್ದು ಅದ್ಭುತವೇ ಸರಿ! ಅದರಲ್ಲಿ ನಬೀಯೇ ರಹ್ಮತ್ ಶಫೀಯೇ ಉಮ್ಮತ್ صَلَّى اللهُ تَعَالٰى عَلَيْهِ وَاٰلِهٖ وَسَلَّم ರವರ ಜೀವನ ಚರಿತ್ರೆಯನ್ನು ಸಂಗ್ರಹಿಸಿ ಬರೆಯಲಾದ ಸೀರತ್ ಗ್ರಂಥಗಳೂ ಹಾಗೂ ನಬಿ صَلَّى اللهُ تَعَالٰى عَلَيْهِ وَاٰلِهٖ وَسَلَّم ರವರ ಶ್ರೇಷ್ಠತೆ ಹಾಗೂ ಸ್ವಲಾತ್ ಮತ್ತು ಖಸೀದಾ ಕವಿತೆಗಳು ಸೇರಿದೆ ಜನಮಾನಸದಲ್ಲಿ ಮನೆ ಮಾಡಿದ ಇಮಾಂ ಬೂಸೂರಿ رَضِىَ اللّٰەُ عَنْهُ ಯವರ ಖಸೀದತುಲ್ ಬುರ್ದಾ ಷರೀಫ್ ಅಂತೆಯೇ ಜನ ಸಾಮಾನ್ಯರಲ್ಲೂ ಕೂಡ ಪ್ರಸಿದ್ಧಿಯನ್ನು ಪಡೆದಂತಹಾ ಮತ್ತೊಂದು ಗ್ರಂಥವಿದ್ದರೆ ಬಹುಶಃ ಅದು ದಲಾಯಿಲುಲ್ ಖೈರಾತ್ ಮಾತ್ರವಾಗಿರಬಹುದು. ಈ ದಲಾಯಿಲುಲ್ ಖೈರಾತನ್ನು ತನ್ನ ಜೀವನದ ಒಂದು ಭಾಗವಾಗಿಸಿದ ಜನರಂತೂ ಮಹಾ ಭಾಗ್ಯವಂತರೇ ಸರಿ! ಅಂತಹಾ ಜನರು ಇಹ ಪರದಲ್ಲೂ ಕೂಡ ಮಹೋನ್ನತ ಪದವಿಯನ್ನು ಗಳಿಸುವರು ಎನ್ನುವುದರಲ್ಲಿ ಎರಡು ಮಾತಿಲ್ಲ ಅಷ್ಟೊಂದು ಮಹತ್ವವೇರಿದ ಏಕೈಕ ಸ್ವಲಾತ್ ಗ್ರಂಥವಾಗಿದೆ ಇದು. ಸಾಮಾನ್ಯ ಜನರು ಇದನ್ನು ಒಂದು ಸೋಮವಾರದಿಂದ ಇನ್ನೊಂದು ಸೋಮವಾರಕ್ಕೆ ಖತಂ ಮಾಡಿದರೆ ಅಲ್ಲಾಹನು ಅನುಗ್ರಹಿಸಿದ ಅವನ ವಿಶೇಷ ದಾಸರುಗಳು ಇದನ್ನು ಪ್ರತೀ ದಿನಕ್ಕೆ ಸಂಪೂರ್ಣ ಖತಂ ಮಾಡುತ್ತಾರೆ ಅದಕ್ಕಿಂತಲೂ ಹೆಚ್ಚು ಓದುವ ಅಲ್ಲಾಹನ ದಾಸರುಗಳೂ ಇದ್ದರೆ ಆಶ್ಚರ್ಯ ಪಡಬೇಕಾಗಿಲ್ಲ.! ಬನ್ನಿ ಆ ಅದ್ಭುತ ಗ್ರಂಥದ ಕರ್ತರಾದ ಇಮಾಂ ಜಝೂಲಿ رَضِىَ اللّٰەُ عَنْهُ ಯವರ ಬಗ್ಗೆ ಒಂದೆರಡು ವಿಷಯವನ್ನು ತಿಳಿಯೋಣ..
_ಶೈಖ್ ಅಲ್ ಜಲೀಲ್ ಔಲಾದೇ ಉಮ್ಮೇ ಬತೂಲ್ ಸಯ್ಯಿದುನಾ ಇಮಾಂ ಮುಹಮ್ಮದ್ ಬಿನ್ ಸುಲೈಮಾನ್ ಅಲ್ ಜಝೂಲಿ رَضِىَ اللّٰەُ عَنْهُ ರವರು ಅಕಾಬಿರ್ ಔಲಿಯಾಗಳಲ್ಲಿ ಒಬ್ಬರಾಗಿದ್ದಾರೆ. ಅವರ ಹೆಸರು ಮುಹಮ್ಮದ್ ತಂದೆಯ ಹೆಸರು ಅಬ್ದುರ್ರಹ್ಮಾನ್ ತಾತ ಅಬೂ ಬಕರ್ ಮತ್ತು ಮುತ್ತಾತರ ಹೆಸರು ಸುಲೈಮಾನ್ ಎಂದಾಗಿದೆ. ಇಮಾಮರನ್ನು ಅವರ ಮುತ್ತಾತರ ಹೆಸರಿನೊಂದಿಗೆ ಜೋಡಿಸಿ ಮುಹಮ್ಮದ್ ಬಿನ್ ಸುಲೈಮಾನ್ رَضِىَ اللّٰەُ عَنْهُ ಎಂದು ಕರೆಯಲಾಗುತ್ತದೆ. ಅರಬಿಗಳೆಡೆಯಲ್ಲಿ ಮಹಾನರು ಸಯ್ಯಿದೀ ಬಿನ್ ಸುಲೈಮಾನ್ ಎಂದು ಪ್ರಸಿದ್ಧರು. ಮಹಾತ್ಮರು ಹಿಜರಿ 807 ಈಸವೀ 1404 ಯಲ್ಲಿ ಸೂಸ್ ಪ್ರಾಂತ್ಯದ ಜಝೂಲಿನ ಒಂದು ಸಯ್ಯಿದ್ ಮನೆತನದಲ್ಲಿ ಜನಿಸಿದರು ಆ ಕಾರಣ ಅವರನ್ನು ಜಝೂಲಿ ಎಂದು ಕರೆಯಲಾಗುತ್ತದೆ. ಇಮಾಂ ಮುಹಮ್ಮದ್ ಬಿನ್ ಸುಲೈಮಾನುಲ್ ಜಝೂಲಿ رَضِىَ اللّٰەُ عَنْهُ ರವರು ಸಯ್ಯುದುನಾ ಹಸನ್ ಬಿನ್ ಅಲೀಯ್ಯ್ ಬಿನ್ ಅಬೀ ತ್ವಾಲಿಬ್ ضِىَ اللّٰەُ عَنْهُم ರವರ ಹತ್ತೊಂಬತ್ತನೇಯ ಪೌತ್ರರಾಗಿದ್ದಾರೆ. ಮೊದಲ ಶಿಕ್ಷಣವನ್ನು ತನ್ನ ಹುಟ್ಟೂರಲ್ಲಿ ಪಡೆದರು ಹಾಗೂ ಹೆಚ್ಚಿನ ವ್ಯಾಸಂಗಕ್ಕಾಗಿ ಫಾಶ್ ಗೆ ತೆರಳಿದರು ಮತ್ತು ಅಲ್ಲಿಯ ಪ್ರಸಿದ್ಧ ಜ್ಞಾನ ಕೇಂದ್ರವಾದ ಮದ್ರಸತುಸ್ಸ್ವಫ್ಫಾರೀನ್ ನಲ್ಲಿ ದಾಖಲಾತಿಯನ್ನು ಪಡೆದರು. ಆ ಮದ್ರಸಾದ ಒಂದು ಕೊಠಡಿಯಲ್ಲಿ ಇರತೊಡಗಿದರು ಮತ್ತು ಅದರೊಳಗೆ ಯಾರನ್ನೂ ಕೂಡ ಪ್ರವೇಶಿಸಲು ಬಿಡುತ್ತಿರಲಿಲ್ಲ. ಹಾಗಾಗಿ ಕೆಲವರು ಮಹಾನರ ಬಗ್ಗೆ ತಪ್ಪು ಕಲ್ಪನೆಗೊಳಗಾಗಿ ಮಹಾನರು ಆ ಕೊಠಡಿಯಲ್ಲಿ ಆಸ್ತಿ ಶೇಖರಿಸಿಟ್ಟಿದ್ದಾರೆ ಅದಕ್ಕಾಗಿಯೇ ಯಾರನ್ನೂ ಒಳಗೆ ಬಿಡುತ್ತಿಲ್ಲ ಎಂದು ಹೇಳ ತೊಡಗಿದರು. ಮಾತ್ರವಲ್ಲ ಇಮಾಮರ ತಂದೆಯವರಲ್ಲಿಯೂ ಈ ಬಗ್ಗೆ ದೂರಿದರು. ತರುವಾಯ ಇಮಾಮರ ತಂದೆಯವರು ಬಂದು ಕೊಠಡಿಯೊಳಗೆ ಹೋಗಿ ನೋಡಿದಾಗ ಒಮ್ಮೆಲೆ ದಂಗಾಗುತ್ತಾರೆ.! ಏಕೆಂದರೆ ಒಳಗೆ ಗೋಡೆಯ ಎಲ್ಲಾ ಕಡೆಯೂ ಅಲ್ ಮೌತ್.. ಅಲ್ ಮೌತ್.. ಎಂದು ಬರೆಯಲಾಗಿತ್ತು.! ಸುಬ್ಹಾನಲ್ಲಾಹ್.! ಮರಣ ಇದೆ ಮರಣವನ್ನು ಮರೆಯದಿರು ಎಂದು ತನ್ನನ್ನು ತಾನು ನೆನಪಿಸಲು ತನ್ನ ಗೋಡೆಯ ಎಲ್ಲಾ ಭಾಗದಲ್ಲೂ ಸಯ್ಯಿದುನಾ ಇಮಾಂ ಜಝೂಲಿ رَضِىَ اللّٰەُ عَنْهُ ರವರು ಬರೆದಿಟ್ಟಿದ್ದರು. ಇದನ್ನು ಕಂಡು ತಂದೆಯವರು ಜನರಲ್ಲಿ ಹೇಳಿದರು. ಇವನೆಂತಹಾ ಸ್ಥಾನದಲ್ಲಿದ್ದಾನೆ ಮತ್ತು ನಮ್ಮ ಅವಸ್ಥೆಯೇನೆಂದು ನೋಡಿರಿ. ಒಂದು ವರದಿ ಪ್ರಕಾರ ಇಮಾಮರು ಅದೇ ಕೊಠಡಿಯಲ್ಲಿಯೇ ದಲಾಯಿಲುಲ್ ಖೈರಾತ್ ಗ್ರಂಥವನ್ನು ಬರೆದರು. ಮತ್ತು ಇನ್ನೊಂದು ವರದಿ ಪ್ರಕಾರ ಫಾಶ್ ನ ಒಂದು ಗ್ರಂಥಾಲಯದ ಸಹಾಯವನ್ನು ಪಡೆದು ದಲಾಯಿಲುಲ್ ಖೈರಾತನ್ನು ಬರೆದರು ಎಂದೂ ಹೇಳಲಾಗುತ್ತದೆ. وَ اللهُ تَعَالٰى أعلم وَ رسوله أعلم عَزَّوَجَلَّ و صَلَّى اللهُ تَعَالٰى عَلَيْهِ وَاٰلِهٖ وَسَلَّم ಬಳಿಕ ಮಹಾನ್ ಸೂಫಿವರ್ಯರೂ ಔಲಿಯಾ ಶ್ರೇಷ್ಠರೂ ಆದ ಸಯ್ಯಿದುನಾ ಶೈಖ್ ಅಬೂ ಅಬ್ದುಲ್ಲಾಹ್ ಮುಹಮ್ಮದ್ ಬಿನ್ ಅಬ್ದುಲ್ಲಾಹ್ ಅಮ್'ಗಾರುಸ್ಸಗೀರ್ رَضِىَ اللّٰەُ عَنْهُ ರವರ ಕೈಯಲ್ಲಿ ಸಿಲ್ಸಿಲಾ ಶಾದುಲಿಯಾದಲ್ಲಿ ಬೈಅತ್ ಆದರು.
ಶೈಖ್ ಅಬೂ ಅಬ್ದುಲ್ಲಾಹ್ ಮುಹಮ್ಮದ್ ಬಿನ್ ಅಬ್ದುಲ್ಲಾಹ್ ಅಮ್'ಗಾರುಸ್ಸಗೀರ್ رَضِىَ اللّٰەُ عَنْهُ ರವರ ದಿವ್ಯ ಹಸ್ತದಿಂದ ಬೈಅತ್ ಆಗುವ ಮೂಲಕ ತ್ವರೀಖತ್ ಪ್ರವೇಶಿಸಿದರು ಇಲ್ಮ್ ಮಾರ್ಗದಲ್ಲಿ ಮಹೋನ್ನತ ಸ್ಥಾನಕ್ಕೇರಿದ್ದ ಅವರು ಬಳಿಕ ತಸವ್ವುಫ್ ಮಾರ್ಗದಲ್ಲಿ ಮತ್ತಷ್ಟು ಗಮ್ಯಸ್ಥಾನಗಳನ್ನು ಕ್ರಮಿಸುತ್ತಾ ಹದಿನಾಲ್ಕು ವರ್ಷ ಏಕಾಂತವನ್ನು ಸ್ವೀಕರಿಸಿ ಅಲ್ಲಾಹನ ಆರಾಧನೆ ಮತ್ತು ಧ್ಯಾನದಲ್ಲಿ ಮಗ್ನರಾದರು. ತದನಂತರದ ದಿನಗಳಲ್ಲಿ ಆಸಿಫೀ ನಗರಕ್ಕೆ ಹೋದ ಇಮಾಮರು ಅಲ್ಲಿಯ ಜನರಿಗೆ ಮಾರ್ಗದರ್ಶನ ಹಾಗೂ ಮುರೀದೀನ್ ಗಳ ತರಬೇತಿಯಲ್ಲಿ ಮಗ್ನರಾದರು. ಇಲ್ಮ್ ಅದಬ್ ಗಳಲ್ಲಿ ಮಹೋನ್ನತ ಸಾಧನೆ ಮಾಡುವುದರ ಜೊತೆಗೆ ವಿಲಾಯತ್ತಿನಲ್ಲೂ ಅಪಾರ ಸ್ಥಾನವನ್ನು ಹೊಂದಿದ್ದರು. ಮಾಲಿಕೀ ಮದ್ಹಬ್ ಗಾರರಾಗಿದ್ದ ಇಮಾಂ ಜಝೂಲಿ رَضِىَ اللّٰەُ عَنْهُ ರವರಿಂದ ಮಹತ್ತರವಾದ ಕರಾಮತ್ತುಗಳು ಪ್ರಕಟವಾಗಿತ್ತು. ಮತ್ತು ಅಸಂಖ್ಯಾತ ಜನರು ಅವರ ಸನ್ನಿಧಿಯಲ್ಲಿ ತೌಬಾ ಮಾಡಿ ಅವರ ಮುರೀದ್ ಗಳಾಗಿದ್ದರು. ಒಂದು ವರದಿ ಪ್ರಕಾರ ಇಮಾಂ ಜಝೂಲಿ رَضِىَ اللّٰەُ عَنْهُ ರವರ ಮುರೀದೀನ್ ಗಳ ಸಂಖ್ಯೆಯೂ 12,665. ಬದಲು ಅದಕ್ಕಿಂತಲೂ ಹೆಚ್ಚಾಗಿತ್ತು. ಅಲ್ಲಾಹನ ಆಜ್ಞಾಪಾಲನೆಯ ಜೊತೆಗೆ ನಬೀಯೇ ಕರೀಂ صَلَّى اللهُ تَعَالٰى عَلَيْهِ وَاٰلِهٖ وَسَلَّم ರವರ ಸುನ್ನತ್ ಗಳನ್ನು ಪ್ರವರ್ತಿಸುವಲ್ಲಿ ಶಕ್ತವಾಗಿ ಕಾರ್ಯಪ್ರವರ್ತರಾಗಿದ್ದರು. ಮಹಾನರು ದಿನಂಪ್ರತಿ ಅತೀ ಹೆಚ್ಚು ಝಿಕ್ರ್ ಅದ್ಕಾರ್ ಗಳನ್ನು ಪಠಿಸುವವರಾಗಿದ್ದರು. ಇಮಾಂ ಜಝೂಲಿ رَضِىَ اللّٰەُ عَنْهُ ರವರ ಪ್ರಸಿದ್ಧಿ ಸ್ಥಾನಮಾನ ಹಾಗೂ ಜನರೆಡೆಯಲ್ಲಿ ಅಪಾರವಾದ ಗೌರವ ಸ್ವೀಕಾರ್ಯವನ್ನು ಕಂಡು ಹಲವು ಅಸೂಯೆಗಾರರೂ ವಿರೋಧಿಗಳೂ ಹುಟ್ಟಿಕೊಂಡರು ಆಸಿಫೀಯ ಆಡಳಿತಾಧಿಕಾರಿಯೂ ಇಮಾಮಾರಿಗೆ ಊರು ಬಿಡುವಂತೆ ಒತ್ತಾಯ ಪಡಿಸಿದನು ತರುವಾಯ ಸಯ್ಯಿದುನಾ ಇಮಾಂ ಮುಹಮ್ಮದ್ ಬಿನ್ ಸುಲೈಮಾನುಲ್ ಜಝೂಲಿ رَضِىَ اللّٰەُ عَنْهُ ರವರು ಆಫುರ್ಗಾಲ್ ಎಂಬಲ್ಲಿಗೆ ಹೊರಟು ಹೋದರು ಅಲ್ಲಿಯೂ ತನ್ನ ಸೇವೆಯನ್ನು ಜಾರಿಯಲ್ಲಿಟ್ಟರು. ಆಸಿಫೀಯಾ ಆಡಳಿತಗಾರ ಊಹಿಸಿದನು ಇದು ಮುಸಲ್ಮಾನರಿಂದ ನಿರೀಕ್ಷಿಸಲಾಗುತ್ತಿರುವ ಅದೇ ಅಹ್ಲ್ ಬೈತಿನ ಕುಡಿ ಅಂದರೆ ಇಮಾಂ ಮಹದೀ ಎಂದು ಕೊಂಡು ಆತನು ಷಡ್ಯಂತ್ರ ರಚಿಸಿ ಇಮಾಮಾರ ಊಟದಲ್ಲಿ ವಿಷ ಬೆರೆಸಿದನು. ತರುವಾಯ ಆ ಊಟವನ್ನು ತಿಂದು 16 ರಬೀಉಲ್ ಅವ್ವಲ್ 870 ಹಿಜರಿ. 1465 ಈಸವೀಯಲ್ಲಿ ಆಫುರ್ಗಾಲ್ ನಲ್ಲಿ ಫಜರ್ ನಮಾಝಿನ ಮೊದಲ ರಕಾತಿನ ಎರಡನೇ ಸುಜೂದಿನಲ್ಲಿ ಅಥವಾ ಎರಡನೇ ರಕಾತಿನ ಮೊದಲ ಸುಜೂದಿನಲ್ಲಿ ವಫಾಅತ್ ಆದರು إِنَّا لِلَّهِ وَإِنَّا إِلَيْهِ رَاجِعُونَ ಹಾಗೂ ಅದೇ ದಿನ ಇಮಾಮರು ಸ್ವತಃ ನಿಮಿಸಿದ ಮಸೀದಿಯ ಒಂದು ಭಾಗದಲ್ಲಿ ಝುಹುರ್ ನಮಾಝ್ ಬಳಿಕ ದಫನ ಮಾಡಲಾಯಿತು. ಮಹಾನರ ಉರೂಸ್ 16 ರಬೀಉಲ್ ಅವ್ವಲಿನಂದಾಗಿದೆ.
ಸಯ್ಯಿದುನಾ ಇಮಾಂ ಜಝೂಲಿ رَضِىَ اللّٰەُ عَنْهُ ರವರ ವಫಾತಿನ 77 ವರ್ಷಗಳ ನಂತರ ಸುಲ್ತಾನ ಅಬುಲ್ ಅಬ್ಬಾಸ್ ಅಹ್ಮದ್ ಅಲ್ ಮಾರೂಫ್ ಬಿಲ್ ಅ'ರಜ್ ಮುರಾಕುಶ್ ಗೆ ಪ್ರವೇಶಿಸಿದಾಗ ಆತ ಇಮಾಂ ಜಝೂಲಿ رَضِىَ اللّٰەُ عَنْهُ ರವರ ಪವಿತ್ರ ದೇಹವನ್ನು ಮಝಾರಿನಿಂದ ತೆಗೆದು ಮುರಾಕುಶ್ ನ ರಿಯಾಳಿಲ್ ಅರೂಸ್ ಖಬರಿಸ್ತಾನದಲ್ಲಿ ದಫನ ಮಾಡಿಸಿ ಮೇಲೆ ಗುಂಬದನ್ನು ನಿರ್ಮಿಸಿದನು. ಮಹಾನುಭಾವರ ಪವಿತ್ರ ದೇಹವನ್ನು ಅಷ್ಟು ದೀರ್ಘಕಾಲದ ಬಳಿಕ ಖಬರ್ ನಿಂದ ಹೊರ ತೆಗೆದಾಗಳೂ ದೇಹಕ್ಕೆ ಯಾವುದೇ ರೀತಿಯ ನಷ್ಟ ವುಂಟಾಗಿರಲಿಲ್ಲ.! ಮಾತ್ರವಲ್ಲ ಮರಣಕ್ಕೆ ಮುನ್ನ ಅವರು ತನ್ನ ತಲೆಯ ಕೂದಲು ಮತ್ತು ಗಡ್ಡವನ್ನು ಕತ್ತರಿಸಿದ್ದರು ಅದೂ ಕೂಡ ಯಾವುದೇ ವ್ಯತ್ಯಾಸವಿಲ್ಲದೆ ಹಾಗೆ ಉಳಿದಿತ್ತು. ವ್ಯಕ್ತಿಯೊಬ್ಬರು ಮಹಾನರ ಕೆನ್ನೆಯನ್ನು ತನ್ನ ಬೆರಳಿನಿಂದ ಒತ್ತಿದಾಗ ರಕ್ತವೂ ಬೇರ್ಪಟ್ಟು ಹಿಂತೆಗೆದಾಗ ಮತ್ತೆ ರಕ್ತವೂ ಕೂಡಿಕೊಂಡಿತು ಜೀವಂತ ಮನುಷ್ಯರಲ್ಲಿ ರಕ್ತಚಲನೆ ಉಂಟಾಗುವಂತೆ.!! ಸುಬ್ಹಾನಲ್ಲಾಹ್..! ಅವರ ಖಬರ್ ಶರೀಫಿನಿಂದ ಕಸ್ತೂರಿಯ ಪರಿಮಳ ಬರುತ್ತಿತ್ತು. ಇಂದಿಗೂ ಅವರ ಖಬರ್ ಝಿಯಾರತ್ತಿಗೆ ಸಾವಿರಾರು ಜನರು ಬರುತ್ತಿದ್ದು ಅಲ್ಲಿ ದಲಾಯಿಲುಲ್ ಖೈರಾತ್ ಪಠಿಸುತ್ತಾರೆ ಹಾಗೂ ಮಹಾನರ ಖಬರ್ ಶರೀಫ್ ಬಳಿ ಖತ್ಮುಲ್ ದಲಾಯಿಲುಲ್ ಖೈರಾತ್ ಕೂಡ ನಡೆಸಲಾಗುತ್ತದೆ. ದೊಡ್ಡ ದೊಡ್ಡ ಔಲಿಯಾಗಳು ಎಡೆಬಿಡದೆ ಓದುತ್ತಿದ್ದ ಗ್ರಂಥವಾಗಿದೆ ದಲಾಯಿಲುಲ್ ಖೈರಾತ್ ಈ ಸ್ವಲಾತ್ ಗ್ರಂಥವನ್ನು ಜೀವನದಲ್ಲಿ ದಿನನಿತ್ಯ ಓದಲು ಭಾಗ್ಯ ಸಿಕ್ಕವರು ಕಂಡಿತವಾಗಿಯೂ ಅಲ್ಲಾಹನನ್ನು ಸ್ತುತಿಸುತ್ತಲೇ ಇರಬೇಕು. ಮತ್ತು ಮರಣದ ವರೆಗೂ ಅದು ನೆಲೆಗೊಳ್ಳಲು ದುಆ ಮಾಡುತ್ತಲೇ ಇರಬೇಕು. ಇನ್ನೂ ಆ ಶ್ರೇಷ್ಠ ಗ್ರಂಥವನ್ನು ಓದಲು ಆರಂಭಿಸದವರು ಅದರ ಭಾಗ್ಯ ಪ್ರಾಪ್ತಿಗಾಗಿ ದುಆ ಮಾಡಬೇಕಾಗಿದೆ. ಜೊತೆಗೆ ತಮ್ಮ ಹತ್ತಿರದ ಸಾದಾತ್ ಅಥವಾ ಉಲಮಾಗಳೊಂದಿಗೆ ಇದರ ಇಜಾಝತ್ ಪಡೆದು ಓದಲು ಆರಂಭಿಸುವುದು ಉತ್ತಮ ಇದರಿಂದ ಇಹಪರ ದುಖಃ ದುಮ್ಮಾನಗಳೆಲ್ಲವೂ ದೂರವಾಗುವುದರ ಜೊತೆಗೆ ಮನಸ್ಸಿಗೆ ನೆಮ್ಮದಿ ಹಾಗೂ ಜನರೆಡೆಯಲ್ಲಿ ಸ್ವೀಕಾರ್ಯವೂ ದೊರೆಯಲು ಕಾರಣವಾಗುವುದು. ಔಲಿಯಾ ಶ್ರೇಷ್ಠರುಗಳು ಈ ಗ್ರಂಥದ ಬಗ್ಗೆ ತುಂಬಾ ಒಳ್ಳೆಯ ವಿಮರ್ಶೆ ವ್ಯಕ್ತ ಪಡಿಸಿದ್ದಾರೆ. ಅಪಾರವಾದ ಇದರ ಶ್ರೇಷ್ಠತೆಯನ್ನು ಧಾರಾಳವಾಗಿ ವರದಿ ಮಾಡಿದ್ದಾರೆ. ಈ ಗ್ರಂಥದ ಪೂರ್ಣ ಹೆಸರು ದಲಾಯಿಲುಲ್ ಖೈರಾತ್ ವ ಶವಾರೀಖುಲ್ ಆನ್ವಾರಿ ಫೀ ದ್ಸಿಕ್ರಿಸ್ಸ್ವಲಾತಿ ಅಲನ್ನಬೀಯ್ಯಿಲ್ ಮುಖ್ತಾರ್ ಈ ಗ್ರಂಥವನ್ನು ಇಮಾಂ ಜಝೂಲಿ رَضِىَ اللّٰەُ عَنْهُ ರವರು ರಚಿಸಲು ಕಾರಣವೇನೆಂದು ಅಲ್ಲಾಮಾ ಯೂಸೂಫ್ ನಬ್ಹಾನಿ رَضِىَ اللّٰەُ عَنْهُ ಹೀಗೆ ವಿವರಿಸುತ್ತಾರೆ. ಇಮಾಂ ಜಝೂಲಿرَضِىَ اللّٰەُ عَنْهُ ರವರು ಒಂದು ಯಾತ್ರೆಯಲ್ಲಿ ನಮಾಝ್ ಸಮಯವಾದಾಗ ನೀರಿಗಾಗಿ ಶೋಧನೆ ಮಾಡುತ್ತಾರೆ ಆಗವರಿಗೊಂದು ಬಾವಿ ಕಾಣಸಿಗುತ್ತದೆ ಆದರೆ ಇಮಾಮರು ತುಂಬಾ ಚಿಂತೆಗೀಡಾಗುತ್ತಾರೆ. ಕಾರಣ ಬಾವಿ ಸಿಕ್ಕಿತು ನೀರೂ ಕೂಡ ಆದರೆ ಅದನ್ನು ಮೇಲೆತ್ತಲು ಯಾವುದೇ ಹಗ್ಗವೋ ಪಾತ್ರೆಯೂ ಇಲ್ಲ ಹೇಗೆ ನೀರನ್ನು ತೆಗೆಯಲಿ ಎಂದು ಹಾಗೆ ಯೋಚಿಸುತ್ತಿರುವಾಗ ಅಲ್ಲಿ ಪಕ್ಕದ ಒಂದು ಮನೆಯ ಮಹಡಿಯಲ್ಲಿ ನಿಂತು ಇದನ್ನು ನೋಡುತ್ತಿದ್ದ ಒಂದು ಪುಟ್ಟ ಹುಡುಗಿಯೂ ಇಮಾಮರ ಬಳಿ ಬಂದು ಕೇಳುತ್ತಾಳೆ ತಾವು ಯಾರು.? ಇಮಾಮರು ತನ್ನ ಹೆಸರು ಪರಿಚಯ ಪಡಿಸಿದಾಗ ಹೇಳುತ್ತಾಳೆ ನೀವೇನಾ ಶೈಖ್ ಮುಹಮ್ಮದ್ ಬಿನ್ ಸುಲೈಮಾನುಲ್ ಜಝೂಲಿ.!? رَضِىَ اللّٰەُ عَنْهُ ನಿಮ್ಮ ಪ್ರಸಿದ್ಧಿಯೂ ಎಲ್ಲೆಡೆ ವ್ಯಾಪಕವಾಗಿದೆ ಆದರೆ ತಾವು ಮಾತ್ರ ಈ ನೀರನ್ನು ಹೇಗೆ ಮೇಲೆತ್ತಲಿ ಎಂಬ ಚಿಂತೆಯಲ್ಲಿದ್ದೀರಿ. ಎಂದು ಹೇಳುತ್ತಾ ಬಾವಿಗೆ ಅಲ್ಪ ಉಗುಳಿದಳು ಅಷ್ಟರಲ್ಲಿ ಬಾವಿಯ ಅಡಿ ಭಾಗದಲ್ಲಿದ್ದ ನೀರು ತನ್ನಷ್ಟಕ್ಕೆ ಮೇಲೆ ಬರುತ್ತದೆ ಆಗ ಪರಮಾಶ್ಚರ್ಯಗೊಂಡ ಇಮಾಂ ಜಝೂಲಿ رَضِىَ اللّٰەُ عَنْهُ ರವರು ಉಝೂ ನಿರ್ವಹಿಸಿದ ಬಳಿಕ ಆ ಬಾಲಕಿಯೊಂದಿಗೆ ಹೇಳುತ್ತಾರೆ. ನಿನಗೆ ಇಷ್ಟೊಂದು ಸ್ಥಾನ ಹೇಗೆ ಸಿಕ್ಕಿತು ಅದಕ್ಕೆ ಕಾರಣವೇನು.? ಹುಡುಗಿ ಹೇಳುತ್ತಾಳೆ. ಕಾಡಿನಲ್ಲಿ ನಡೆದಾಗ ಕ್ರೂರ ಪ್ರಾಣಿಗಳು ಅವರ ಸುತ್ತ ವಿನಯಾನ್ವಿತರಾಗಿ ಸುತ್ತುವರಿಯುತ್ತವೆ ಅಂತಹಾ ಪವಿತ್ರ ಗೇಹದ ಮೇಲೆ (ನಬಿ صَلَّى اللهُ تَعَالٰى عَلَيْهِ وَاٰلِهٖ وَسَلَّم ರ ಮೇಲೆ) ನಾನು ನಿತ್ಯವೂ ಅಪಾರ ಸ್ವಲಾತ್ ಹೇಳುತ್ತೇನೆ. ಈ ಮಾತನ್ನು ಕೇಳಿದ ಇಮಾಮರು ನಬಿ صَلَّى اللهُ تَعَالٰى عَلَيْهِ وَاٰلِهٖ وَسَلَّم ರವರ ಸನ್ನಿಧಿಯಲ್ಲಿ ಸಮರ್ಪಿಸಲು ನಾನೊಂದು ಸ್ವಲಾತ್ ಗ್ರಂಥವನ್ನು ಕಂಡಿತಾ ಬರೆಯುತ್ತೇನೆಂದು ಶಕ್ತವಾದ ಸಂಕಲ್ಪವನ್ನು ಮಾಡುತ್ತಾರೆ. ನಂತರ ಈ ಮಹತ್ವವೇರಿದ ಗ್ರಂಥ ದಲಾಯಿಲುಲ್ ಖೈರಾತನ್ನು ರಚಿಸುತ್ತಾರೆ ಮತ್ತಿದೂ ನಬೀಯೇ ಕರೀಂ صَلَّى اللهُ تَعَالٰى عَلَيْهِ وَاٰلِهٖ وَسَلَّم ರಿಂದ ಸ್ವೀಕರಿಸಲ್ಪಟ್ಟು ಲೋಕವಿಡೀ ಅಪಾರವಾದ ಮಾನ್ಯತೆ ಹಾಗೂ ಮನ್ನಣೆಯನ್ನು ಪಡೆಯಿತು.
ಅಲ್ಲಾಮಾ ಅಬ್ದುಲ್ ಹಕೀಮ್ ಷರಫ್ ಖಾದ್ರಿ رَحْمَةُ اللّٰەِ عَلَيْه ಯವರು ಹೇಳುತ್ತಾರೆ. ಇಮಾಂ ಜಝೂಲಿ رَضِىَ اللّٰەُ عَنْهُ ರವರು ಆ ಹುಡುಗಿಯೊಂದಿಗೆ ಇಷ್ಟೊಂದು ಮಹೋನ್ನತ ಸ್ಥಾನ ನಿನಗೆ ಸಿಗಲು ಕಾರಣವೇನೆಂದು ಕೇಳಿದಾಗ ಹುಡುಗಿಯೂ ಈ ಕೆಳಗಿನ ಸ್ವಲಾತನ್ನು ಹೇಳುವುದಾಗಿ ತಿಳಿಸುತ್ತಾಳೆ.
اللهم صلى على سيد نا محمد و على آل سيدنا محمد صلاة دائمة مقبولة تؤدى بها عنا حقه العظيم
ಈ ಸ್ವಲಾತನ್ನು ಇಮಾಂ ಜಝೂಲಿ رَضِىَ اللّٰەُ عَنْهُ ರವರು ದಲಾಯಿಲುಲ್ ಖೈರಾತಿನ 7ನೇ ಹಿಝ್ಬ್ ನ ಕೊನೆಯಲ್ಲಿ ಬರೆದಿದ್ದಾರೆ. ಈ ಪರಮೋನ್ನತ ಸ್ವಲಾತ್ ಗ್ರಂಥದ ಬಗ್ಗೆ ಕೆಲವು ವರ್ಷಗಳ ಹಿಂದೆ ವಫಾತ್ ಆದ ಮಹಾನ್ ಸೂಫಿವರ್ಯಾರೂ ನಕ್ಷಬಂದಿ ತ್ವರೀಖತ್'ಗಾರರೂ ಆದ ಶೈಖ್ ನಾಝಿಮುಲ್ ಹಕ್ಖಾನಿ رَحْمَةُ اللّٰەِ عَلَيْه ( ಶೈಖ್ ಸಯ್ಯಿದ್ ಹಬೀಬ್ ಅಲೀ ಜೀಫ್ರೀ ಯವರು ಇವರಿಂದ ಇಜಾಝತ್ ಪಡೆದವರಾಗಿದ್ದಾರೆ.) ರವರು ವಫಾತ್ ಗೆ ಕೆಲವೇ ತಿಂಗಳಿಗೆ ಮೊದಲು ಹೇಳಿದ ಮಾತು. ಈ ಸ್ವಲಾತನ್ನು ( ದಲಾಯಿಲುಲ್ ಖೈರಾತ್) ನಾನು 70 ವರ್ಷಗಳಿಂದ ಓದುತ್ತ ಬಂದಿದ್ದೇನೆ.! ಇಮಾಂ ಜಝೂಲಿ رَضِىَ اللّٰەُ عَنْهُ ರವರು ಈ ಗ್ರಂಥವನ್ನು ಅಲ್ಲಾಹನ ಕಡೆಯಿಂದ ಇಲ್ಹಾಂ ಮೂಲಕ ಬರೆದಿದ್ದಾರೆ ಮತ್ತಿದೂ ಆಶ್ಚರ್ಯ ಪಡಿಸುವಂತಹ ಉಪಕಾರವನ್ನೊಳಗೊಂಡಿದೆ. ಯಾರು ಇದನ್ನು ಓದುತ್ತಾನೋ ಅವನಿಗೆ ನಬಿ صَلَّى اللهُ تَعَالٰى عَلَيْهِ وَاٰلِهٖ وَسَلَّم ರೊಂದಿಗೆ ಪರಿಪೂರ್ಣವಾದ ಪ್ರೀತಿ ಇದೆ ಎಂದರ್ಥ. ಅದೇ ಕಾರಣದಿಂದಾಗಿದೆ ಎಲ್ಲಾ ಸಿಲ್ಸಿಲಾಗಳ ಮಾಶಾಯಿಖ್ ಗಳು ಇದನ್ನು ಕಡ್ಡಾಯವಾಗಿ ಓದುತ್ತಾರೆ ಮತ್ತು ಓದಿಸುತ್ತಾ ಬಂದಿದ್ದಾರೆ. ಹಾಗೂ ಇದು ಪರಿಪೂರ್ಣ ಈಮಾನ್ ಹೊಂದಿರುವುದಕ್ಕೆ ಪುರಾವೆಯಾಗಿದೆ ಮತ್ತು ಇದನ್ನು ಓದದವನು ಒಣಗಿದ ಮಾಂಸದಂತಾಗಿದ್ದಾನೆ. ಎಲ್ಲಾ ಜನರೂ ಕೂಡ ದಲಾಯಿಲುಲ್ ಖೈರಾತ್ ಓದಬೇಕು ಏಕೆಂದರೆ ಯಾರು ಇದನ್ನು ಓದುತ್ತಾನೋ ಅವನು ಎಲ್ಲಾ ರೀತಿಯ ಸಂಕಷ್ಟಗಳಿಂದ ರಕ್ಷೆ ಹೊಂದುತ್ತಾನೆ. ನಾನು ವಿಶ್ವಾಸದಿಂದ ಹೇಳುತ್ತೇನೆ ಇದನ್ನು ಓದುವವರಿಗೆ ಎಂದೂ ಸಂಕಷ್ಟಗಳು ಬರದು. ಯಾರಿಗೆ ಓದಲು ಸಾಧ್ಯವೋ ಅವರು ಓದಲಿ. ಮತ್ತು ಓದಲು ಬರದವರು ಕಡೇಪಕ್ಷ (ಓದುವುದನ್ನು) ಆಲಿಸಲಿ. ಇಮಾಂ ಮುಹಮ್ಮದ್ ಬಿನ್ ಸುಲೈಮಾನ್ ಅಲ್ ಜಝೂಲಿ رَضِىَ اللّٰەُ عَنْهُ ರವರ ಮೇಲೆ ಅಲ್ಲಾಹನ ಅನಂತಾನಂತ ಕಾರುಣ್ಯವೂ ನಿರಂತರ ಉಂಟಾಗಲಿ ಮತ್ತು ಅವರ ಜಾಹ್ ಬರಕತ್ ನಿಂದ ನಮಗೆಲ್ಲರಿಗೂ ದಲಾಯಿಲುಲ್ ಖೈರಾತ್ ಸ್ವಲಾತನ್ನು ಜೀವನದಲ್ಲಿ ಅಳವಡಿಸಲು ತೌಫೀಖ್ ನೀಡಲಿ. ಮತ್ತು ನಮ್ಮ ಹಾಗೂ ನಮ್ಮ ಕುಟುಂಬ ಬಂಧು ಮಿತ್ರಾದಿಗಳೆಲ್ಲರನ್ನೂ ಇಹಪರ ಸಂಕಷ್ಟಗಳಿಂದ ರಕ್ಷಿಸಲಿ.. اٰمِيۡن بِجَاهِ النَّبِيِّ الۡاَمِيۡن الکریم صَلَّى اللهُ تَعَالٰى عَلَيْهِ وَاٰلِهٖ وَسَلَّم
صَلُّوا عَلَى الْحَبِيب ...
صَلَّى اللهُ تعالى عَلَى مُحَمَّدٍﷺ
NOOR-UL-FALAH ISLAMIC STORE
Comments
Post a Comment