ನಮಾಝ್
ನಮಾಝ್
ನಾನು ಓದಿದರಲ್ಲಿ ನನಗೆ ತುಂಬಾ ಇಷ್ಟಪಟ್ಟ ಲೇಖನ ಇದು...
ಮೂಲ: ಮಳಯಾಲಮ್
ಸಾಧ್ಯವಾದರೆ ಇದನ್ನು ಕೋಪಿ ಮಾಡಿ ಸೇವ್ ಮಾಡಿ ಇಡಿ...ಆಗಾಗ ಓದುತ್ತಾ ಇರಿ.
ಅಷ್ಟೂ ಹೃದಯ ಮಿಡಿಯುವ ಲೇಖನವಾಗಿದೆ.
ಮದುವೆ ನಿಶ್ಚಿತಾರ್ಥ ವಾದ ಎಲ್ಲಾ ಹೆಣ್ಣು ಮಕ್ಕಳು ಇದನ್ನು ಓದಲೇಬೇಕು, ಅಥವಾ ಓದಿಸಲೇಬೇಕು...
ಬರೆದದ್ದು ಯಾರು ಅಂತ ಗೊತ್ತಿಲ್ಲ...ಆದರೆ ಮನಮುಟ್ಟುವ ರಚನೆಯಾಗಿದೆ.
ಅದು ಅವಳ ಮದುವೆ ಸುದಿನವಾಗಿತ್ತು.
ರಾತ್ರಿ ೯ ಗಂಟೆಗೆ ಮನಯಿಂದ ಸ್ಪಲ್ಪ ದೂರದಲ್ಲಿರುವ ಹಾಲಿನಲ್ಲಿ ನಡೆಯಬೇಕಿದ್ದ ಮದುವೆ ಸಮಾರಂಭಕ್ಕೆ ಬಂಧು ಬಳಗದವರೂ ನೆರೆಮನೆಯವರೂ ಮಧ್ಯಾಹ್ನದ ನಂತರ ಅವಳ ಮನೆಗೆ ಬರುತ್ತಲೇ ಇದ್ದರು.
ಮಗ್ರಿಬ್ ನಮಾಝಿನ ನಂತರ ಎಲ್ಲರೂ ಹಾಲಿಗೆ ಹೋಗುವುದಾಗಿ ತೀರ್ಮಾನಿಸಲಾಯಿತು.
ಗೆಳತಿಯರು ಹಾಗೂ ನೆರೆಮನೆಯ ಹೆಣ್ಣು ಮಕ್ಕಳು ಆಗಲೇ ಅವಳ ಕೋಣೆಗೆ ಪ್ರವೇಶಿಸಿಯಾಗಿತ್ತು.
ಮದುಮಗಳ ವಸ್ತ್ರದ ಮತ್ತು ಆಭರಣದ ಸೌಂದರ್ಯ ವನ್ನು ಅವರು ಕಣ್ತುಂಬಾ ಆಸ್ವದಿಸಿದರು
ಹಾಗೆಯೇ ಮಸೀದಿಯ ಮಿನಾರದಿಂದ ಅಸರ್ ಬಾಂಗ್ ಮೊಳಗಿತು. ಎಲ್ಲರೂ ನಮಾಝಿನಲ್ಲಿ ನಿರತರಾದರು.
ನಮಾಝಿನಿಂದ ವಿರಮಿಸಿದ
ನಂತರ ಪೇಟೆಯ ಪ್ರಮುಖ ಬ್ಯೂಟಿಶ್ಯನ್ ಹಾಗೂ ಅವಳ ಸಹಾಯಕಿಯರು ಆಗಮಿಸಿದರು.
ತುಂಬಿ ತುಳುಕಾಡುತ್ತಿರುವ ಕೋಣೆಯಿಂದ ಎಲ್ಲರನ್ನೂ ಅವರು ಹೊರಹೋಗುವಂತೆ ಸೂಚಿಸಿದರು.
ಅವರು ಅವಳನ್ನು ಇನ್ನಷ್ಟು ಸೌಂದರ್ಯವತಿಯಾಗಿ ಮಾಡಲು ಹೊರಟರು. ಹಿಜಾಬಿನ ಮಧ್ಯದಲ್ಲಿ ಕಂಗೊಳಿಸುವ ಅವಳ ಮುಖಕ್ಕೆ ಮೇಕಪ್ಪಿನ ಅಗತ್ಯವಿಲ್ಲದಿದ್ದರೂ ಅವರು ಕ್ರೀಮುಗಳನ್ನು ಉಪಯೋಗಿಸಿ ಅವಳನ್ನು ಇನ್ನಷ್ಟು ಸೌಂದರ್ಯವತಿಯನ್ನಾಗಿ ಮಾಡಿದರು. ಕೈಯಲ್ಲಿ ಮತ್ತು ಕಾಲಲ್ಲಿ ಮೈಲಾಂಜಿಯಿಂದ ಗೆರೆಗಳನ್ನು ಬಿಡಿಸಿದರು. ಮಗ್ರಿಬ್ ನಮಾಝಿಗೆ ಇನ್ನೇನು ಅರ್ಧ ಗಂಟೆ ಇರುವಾಗಲೇ ಅವಳ ಕೋಣೆಯ ಬಾಗಿಲು ತೆರೆಯಲ್ಪಟ್ಟಿತು.
ಅಣೆಕಟ್ಟನ್ನು ಕೆಡವಿದಾಗ ಹೇಗೆ ನೀರು ಒಮ್ಮೆಲೇ ರಭಸವಾಗಿ ಮುನ್ನುಗ್ಗುತ್ತದೋ ಹಾಗೆಯೇ ಅತಿಥಿಗಳು ಅವಳ ಕೋಣೆಗೆ ಬರತೊಡಗಿದರು, ಹಾಗೆಯೇ ಅವಳ ಸೌಂದರ್ಯವನ್ನು ಹೊಗಳಿದರು. ಅವರ ಮಾತಿಗೆ ಪ್ರತ್ಯುತ್ತರ ಎಂಬಂತೆ ಅವಳು ಸಣ್ಣಗೆ ಮುಗುಳ್ನಕ್ಕಳು. ಹತ್ತಿರದ ಮಸೀದಿಯಿಂದ ಮೊಳಗಿದ ಮಗ್ರಿಬ್ ಬಾಂಗಿನ ಧ್ವನಿಯು ಗದ್ಧಲದಿಂದ ಕೂಡಿದ ಆ ಕೋಣೆಯನ್ನು ಶಾಂತವಾಗಿಸಿತು.
ಕೋಣೆಯಲ್ಲಿದ್ದ ಹೆಚ್ಚಿನ ಜನರು ನಮಾಝಿಗೆ ನಿಲ್ಲುವಾಗ ಮದುಮಗಳ ವಸ್ತ್ರದಲ್ಲಿದ್ದ ಅವಳ ಮನಸ್ಸಿನ ಲ್ಲಿ ಸಣ್ಣ ಒಂದು ಸಂಶಯ..........
"ಅಸರ್ ನಮಾಝಿಗೆ ಮಾಡಿದ ಅಂಗಶುದ್ಧಿಗೆ ಈಗಲೂ ಜೀವವಿದೆಯೇ??? " ಸಂಶಯದ ಅಲೆಗಳು ಅವಳ ಮನಸ್ಸನ್ನು ಕಾಡುತ್ತಿತ್ತು.
"ವುಳೂ ಮಾಡಬೇಕಾ..? ಅಥವಾ ಸಂಶಯದ ಮೇಲೆ ನಮಾಝ್ ಮಾಡಬೇಕೋ??"
ಮನಸ್ಸಿನಲ್ಲಿರುವ ಸಂಶಯದ ಬೆಂಕಿಗೆ ಇನ್ನಷ್ಟು ತುಪ್ಪ ಸುರಿಯಲು ಅವಳು ಇಷ್ಟಪಡಲಿಲ್ಲ...
ಅವಳು ಚಿಂತಿಸಿದಳು...
ಒಂದು ಹಳೆಯ ವಸ್ತ್ರವನ್ನು ಅದರ ಅವಶ್ಯಕತೆ ಇಲ್ಲದೆ ನಾವು ಹೇಗೆ ಎಸೆಯುತ್ತೇವೆಯೋ....ಹಾಗೆಯೇ ನನ್ನ ಸೃಷ್ಟಿಕರ್ತ ನನ್ನ ನಮಾಝನ್ನು ನನ್ನ ಮುಖಕ್ಕೆ ಎಸೆದರೆ.......???"
ಅಲ್ಲಾಹ್.........!!!!!
ಅವಳು ಮತ್ತೇನನ್ನೂ ಯೋಚಿಸಲಿಲ್ಲ....ಅವಳು ನೇರ ವಾಶಿಂಗ್ ಬೆಸಿನ್ ಲಕ್ಶ್ಯವಾಗಿಟ್ಟು ಹೊರಟಳು.
ಆಗಲೇ ಅವಳ ಉಮ್ಮ ಮಧ್ಯ ಪ್ರವೇಶಿಸಿ ಕೇಳಿದರು...
"ಎಲ್ಲಿಗೆ ಮಗಳೇ????
ಅವಳು : "ವುಳೂ ಮಾಡಲು"
ಉಮ್ಮ: .....
"ಏನು ? ಹುಚ್ಚು ಹಿಡಿದಿದೆಯಾ ಮಗಳೇ ನಿನಗೆ..?"
"ಎಷ್ಟು ಸಾವಿರ ಕೊಟ್ಟು ಈ ಮೇಕಪ್ಪ್ ಮಾಡಿದ್ದೂಂತ ಗೊತ್ತಾ ನಿನಗೆ? ಅದೆಲ್ಲಾ ಈಗ ನೀರಿನಲ್ಲಿ ಕರಗಿ ಹೋಗುವುದಿಲ್ಲವೇ ?"
"ಅಷ್ಟೂ ಕಡ್ಡಾಯವೆನಿಸಿದರೆ ನಿನಗೆ ತಯಮ್ಮುಮ್ ಮಾಡಬಹುದಲ್ಲವೇ??"
ಅವಳು: "ನನ್ನ ಮುಂದೆ ನೀರು ಇರುವಾಗ ನಾನು ಯಾಕೆ ತಯಮ್ಮುಮ್ ಮಾಡಬೇಕು?
ಅಲ್ಲಾಹನ ಮುಂದೆ ಯಾಕೆ ಈ ನಾಟಕ ಮಾಡಬೇಕು? "
"ನನ್ಮ ಜೀವನದ ಅತ್ಯಂತ ಸಂತೋಷದ ದಿನವಾಗಿದೆ ಇಂದು.
ಇವತ್ತು ನಾನು ಅಲ್ಲಾಹನನ್ನು ಸ್ಮರಿಸದಿದ್ದರೆ ಇನ್ನು ಯಾವಾಗ ಸ್ಮರಿಸುವುದು..?"
ಉಮ್ಮ ತಲೆಕೆಳಗೆ ಹಾಗಿ ನಿಂತಾಗ ಅವಳು ವಾಶಿಂಗ್ ಬೆಸಿನ್ ನ ಹತ್ತಿರ ಹೋದಳು.
ಮದುವೆ ವಸ್ತ್ರವನ್ನು ಸ್ವಲ್ಪಮಟ್ಟಿಗೆ ಮೇಲೆ ಮಾಡಿ ಅವಳು ವುಳೂ ಮಾಡಿದಳು.
ಮುಸಲ್ಲ ಹಾಸಿ ನಿಧಾನವಾಗಿ ಅವಳು ಕೈಗಳನ್ನು ಬಳಸಿ ಕಟ್ಟುವಾಗ ಅವಳ ಕಂಠ ಮತ್ತು ಕಣ್ಣಿನ ಭಾಗವು ಕಣ್ಣೀರಿನಿಂದ ಒದ್ದೆಯಾಯಿತು....
ಕೋಣೆಯಲ್ಲಿದ್ದವರೆಲ್ಲರೂ ಶ್ವಾಸ ಬಿಗಿ ಹಿಡಿದು ಅವಳ ನಮಾಝನ್ನೇ ಗಮನಿಸುತ್ತಿದ್ದರು.
ಹೃದಯ ಸ್ಪರ್ಶಿಸುವ ಶಾಂತಿ ಅಲ್ಲಿ ನೆಲೆ ನಿಂತಿತು. ಒಂದನೇಯ ರಕಾತ್ತಿನಿಂದ ಅವಳು ಎದ್ದೇಳುವಾಗ ಅವಳ ಉಮ್ಮ ನ. ದೃಷ್ಟಿಯು ಗೋಡೆಯ ಮೇಲಿರುವ ಗಡಿಯಾರದಲ್ಲಾಗಿತ್ತು.
ಸಮಯ ತುಂಬಾ ಆಯಿತು.. ಅವರು ಪರಸ್ಪರ ಮಾತನಾಡುತ್ತಿದ್ದರು.
ನಿಶ್ಚಯ ಸಮಯಕ್ಕಿಂತ ಒಂದು ಗಂಟೆ ಮೊದಲೇ ಹಾಲಿಗೆ ಮುಟ್ಟಬೇಕಾದರೆ ಈಗಲೇ ಮನೆಯಿಂದ ಹೊರಡಬೇಕು..
ಅವಳು ಎರಡನೇ ರಕಾತ್ತಿನ ಸುಜೂದಿಗೆ ಹೋದಳು.
ಅಲುಗಾಡುವ ತುಟಿಗಳಲ್ಲಿ ಅವಳು ಏನನ್ನೋ ಮಂತ್ರಿಸುವಂತಿದ್ದಾಳೆ.
ಅ ತುಟಿಗಳ ಚಲನೆಯು ಬರುಬರುತ್ತಾ ಚಲಿಸದಿರುವುದನ್ನು ಅವರು ಕಂಡರು.
ಅವಳ ಸುಜೂದ್ ತುಂಬಾ ಧೀರ್ಘ ವಾಯಿತು.....
ಗಡಿಯಾರದ ಸಮಯವು ೭ ನ್ನು ಸೂಚಿಸುತ್ತಿತ್ತು. ಕಣ್ಣುಗಳನ್ನು ತೆರೆದು ಅವಳು ಸುಜೂದಿನಲ್ಲೇ ಇದ್ದಳು...
ಗಡಿಯಾರದ ಮುಳ್ಳು ೭.೦೫ ಕ್ಕೆ ಮುಖ ಮಾಡಿದಾಗ ಉಮ್ಮ ಅವಳ ಮಂಡಿಗೆ ಮೃದುವಾಗಿ ತಟ್ಟಿದರು.
ಪ್ರತಿಕ್ರಿಯೆ ಇಲ್ಲದಾಗ ಉಮ್ಮ ಅವಳ ಮಂಡಿಯನ್ನು ಹಿಡಿದು ಅಲುಗಾಡಿಸಿದರು.
ಕೋಣೆಯಲ್ಲಿ ಅಲ್ಲಲ್ಲಿ ನಿಂತವರೆಲ್ಲ ಪರಿಭ್ರಾಂತರಾಗಿ ಅವಳ ಹತ್ತಿರ ಬರತೊಡಗಿದರು.
ಉಮ್ಮನ ಇನ್ನಷ್ಟು ಶಕ್ತಿಯಿಂದ ಅಲುಗಾಡಿಸಿದರು.
ಅವಳು ತುಂಡುಮಾಡಿದ ಮರದ ತುಂಡಿನಂತೆ ನಿಶ್ಚಲವಾಗಿ ಒಂದು ಬದಿಗೆ ಬಿದ್ದಳು.
ಉಮ್ಮ ಅವಳ ಹಣೆ ಮತ್ತು ಮುಖದಲ್ಲಿ ಮುತ್ತಿಕ್ಕುತ್ತಾ ಅವಳನ್ನು ಕರೆಯುತ್ತಲೇ ಇದ್ದರು....
ಆಕಾಶದಿಂದ ಇಳಿದು ಬಂದ ಚಂದ್ರನ ಹಾಗೆ ಅವಳ ಮುಖವು ಪ್ರಕಾಶದಿಂದ ಕಂಗೊಳಿಸುತ್ತಿತ್ತು.
(ಮೇಕಪ್ಪ್ ಇಲ್ಲದ ಮುಖ , ವುಳೂವಿನಿಂದ ಕಂಗೊಳೊಸುತ್ತಿತ್ತು)
ಬಿಳಿ ವಸ್ತ್ರದಲ್ಲಿ ಹೊದ್ದುಕೊಂಡು ಆ ಮುಖವು ಕಣ್ಣಿನಿಂದ ಮರೆಯಾಗುವಾಗ ಸುತ್ತಿಕೊಂಡವರ ಮಾತುಗಳು ಮೌನವಾಗಿ ಕಣ್ಣೀರಿನ ಸಾಗರಕ್ಕೆ ಆ ಮನೆಯು ಸಾಕ್ಶಿಯಾಯಿತು.😭😭😭😭😭😭
ಯುದ್ಧ ಸಮಯದಲ್ಲಿ ಕೂಡ ನಮಾಝಿಗೆ ರಿಯಾಯಿತಿ ಇಲ್ಲ ಸಹೋದರಿಯರೇ.....‼
‼ಮರಣವು ನಮ್ಮನ್ನು ಕೊಂಡೊಯ್ದು ಕಣ್ಣು ಮುಚ್ಚಿದಾಗ ನಮ್ಮ ಜೊತೆಗಿರುವುದು...ನಮಾಝ್****‼
ಪುನರುತ್ಥಾನ ದಿನ ನಮ್ಮನ್ನು ಪ್ರಶ್ನೆಗೊಳಪಡಿಸುವ ಮೊದಲನೆಯದು ನಮಾಝ್....
ಅಲ್ಲಾಹನ್ನು ಮರೆತು ನಮಗೆ ಸಂತೋಷ ಸುಖ ಬೇಕೇ....???⁉
ಇವತ್ತೇ ನಿರ್ಧಾರ ಮಾಡಿರಿ ... ಇನ್ನೆಂದೂ ನಾನು ನಮಾಝ್ ಕಲಾ ಮಾಡುದಿಲ್ಲವೆಂದು...
ಇಷ್ಟವಾದರೆ ಶೇರ್ ಮಾಡಿ...
ನಿಮಗೂ ಒಳಿತು ಇದೆ....
ಯಾರಾದರೂ ಒಬ್ಬರು ಇದನ್ನು ಅನಿಸರಿಸಿದರೆ ಅದರ ಗುಣವು ನಮಗೂ ಸಿಗಬಹುದು..
ಇನ್ ಶಾ ಅಲ್ಲಾಹ್
ಅಲ್ಲಾಹುವೇ ......ಮರಣದ ವರೆಗೆ ನಮಾಝನ್ನು ನೆಲೆಗೊಳಿಸಲು ನೀನು ತೌಫೀಕ್ ನೀಡು ನಾಥಾ....
ಆಮೀನ್ ಸುಮ್ಮ ಆಮೀನ್...
Pray before u are prayed upon
ನಿಮ್ಮ ಮೇಲೆ ನಮಾಝ್ ನಿರ್ವಹಿಸಲ್ಪಡುವ(ಮಯ್ಯಿತ್ ನಮಾಝ್) ಮೊದಲು ನೀವು ನಮಾಝ್ ಮಾಡಿರಿ...
NOOR-UL-FALAH ISLAMIC STORE
Comments
Post a Comment