ಅವರು ﷺ ಮಗುವಿಗೂ ಮಧುರ

ಅವರು ﷺ ಮಗುವಿಗೂ ಮಧುರ

ಒಂದು ಮಗುವಿನ ಬೆಳವಣಿಗೆಯಲ್ಲಿ ಪೋಷಕರ ಪಾಲು ಅಪಾರ. ಕೇಳಿಸುವುದು, ಮಾತನಾಡಿಸುವುದು, ಓದಿಸುವುದು, ಬರೆಸುವುದು ಯಾವುದರ ಕುರಿತಾಗಿದೆ ಎಂಬುವೂದರಲ್ಲಿ ಮಗುವೊಂದರ ಭವಿಷ್ಯ ರೂಪುಗೊಳ್ಳುತ್ತದೆ. ಆ ಮಗುವಿನ ಚಿಂತೆಯು ಈ ಮೂಲಕ ಲಭಿಸಿದ ಜ್ಞಾನದಲ್ಲಿ ಸಂಚರಿಸುತ್ತದೆ. ಆ ಮಗುವಿನದ್ದು ನಿಶ್ಕಲ್ಮಶ ಹೃದಯ. ಯಾವುದನ್ನೂ ಸರಿ-ತಪ್ಪುಗಳೆಂಬ ಪರಿಕಲ್ಪನೆಗಳಿಲ್ಲದೆ ಸ್ವೀಕರಿಸಬಲ್ಲ ಅವರ ಮನಸ್ಸಾಗಿದೆ ಇದಕ್ಕೆ ಕಾರಣ.
    ಹೀಗಿರುವಾಗ ಪವಿತ್ರ ಇಸ್ಲಾo, ಪೋಷಕರ ಭಾದ್ಯತೆಯನ್ನು ಸ್ಪಷ್ಟಪಡಿಸಿದೆ. ''ನಮ್ಮ ನೆಬಿಯವರಾದ ಮುಹಮ್ಮದ್ ﷺ ರವರು ಜನಿಸಿದ್ದು ಮತ್ತು ಪ್ರವಾದಿತ್ವ ಪಡೆದದ್ದು ಮಕ್ಕಾದಲ್ಲೆಂದೂ, ಮರಣ ಹೊಂದಿದ್ದು ಹಾಗೂ ದಫನ ಹೊಂದಿದ್ದು ಮದೀನಾದಲ್ಲೆಂದೂ ಕಲಿಸುವುದು ಹತ್ತವರ ಮೊದಲ ಬಾಧ್ಯತೆಯಾಗಿದೆ.ಕರ್ಮಶಾಸ್ತ್ರಜ್ಞರು ಪ್ರಸ್ತಾಪಿಸಿದಂತೆ, ನಮಾಝ್ ಗೆ ಆದೇಶ ಕೊಡುವುದಕ್ಕೆ ಮೊದಲೇ ಇದನ್ನು ಕಲಿಸಬೇಕು''. (ಫತ್ಹುಲ್ ಮುಈನ್).
     ಇಂದಿನ ದಿನಗಳಲ್ಲಿ , ಮನೆಗಳ ಅಂತರ್ಯದಲ್ಲಿ ಅನುರಾಗ ಮತ್ತು ಆತ್ಮೀಯತೆಯ ಸಂಸ್ಕೃತಿಯು ಎದ್ದುಕಾಣುವುದರ ಬದಲು ಅಶ್ಲೀಲತೆಯ ಮತ್ತು ಅನೈತಿಕತೆಯ ವಿವಿಧ ರೂಪಗಳು ಪ್ರತ್ಯಕ್ಷಗೊಳ್ಳುತ್ತಿವೆ. ದುಃಖವೇನೆಂದರೆ, ಇಂದಿನ ಹಲವು ನ್ಯೂಜನ್ ಪುಟ್ಟ ಪುಟಾಣಿಗಳ ನಾಲಿಗೆಯಿಂದ ಹೊರಬರುವುದು ಸಿನಿಮಾ ಹಾಡುಗಳು ಮತ್ತು ಸಿನಿಮಾ ಡೈಲಾಗ್ ಗಳಾಗಿವೆ. ತಮ್ಮ ಮಕ್ಕಳು ಡ್ಯಾನ್ಸ್ ಮಾಡುವುದನ್ನು ಕಂಡು ಆನಂದಿಸಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು, ಒಂದಿಷ್ಟು ಲೈಕ್ ಗಳು, ಕಾಮೆಂಟ್ ಗಳಿಗಾಗಿ ಹಂಬಲಿಸುವ ತಂದೆ ತಾಯಂದಿರು ಎಷ್ಟು ದೊಡ್ಡ ಧಿಕ್ಕಾರಿಗಳವರು. ಒಂದು ಹನಿ ಕಣ್ಣೀರು ಸುರಿಸದೆ ಸೃಷ್ಟಿಕರ್ತನು ನೀಡಿದ ಮಗುವಿಗೆ ಅವರು ಕಲಿಸುವುದೇನು !!. ಹತ್ತು-ಹದಿನೈದು ವರ್ಷಗಳಾಗಿ ಮಕ್ಕಳಾಗದೆ , ಒಂದು ಮಗುವಿಗಾಗಿ ಅಳುತ್ತಿರುವ ಸಾವಿರಾರು ದಂಪತಿಗಳನ್ನು ಮರೆತು, ಇವರು ಅಲ್ಲಾಹನಿಗೆ ಧಿಕ್ಕರಿಸಿ ನಡೆಯುತ್ತಿದ್ದಾರೆ‌. ಈ ವಾತಾವರಣದಲ್ಲಿ ಬೆಳೆದ ಮಗು ತನ್ನ ತಾಯಿಯನ್ನು ಬಿಟ್ಟು ಅನ್ಯರೊಂದಿಗೆ ಓಡಿ ಹೋಗದಿದ್ದರೆಯೇ ಕೌತುಕ. ಹಿಂದಿನ ಕಾಲದಲ್ಲಿ ಮಕ್ಕಳು ಖುರ್ ಆನ್, ಸ್ವಲಾತ್ , ದ್ಸಿಕ್ರ್ ಗಳನ್ನು ಕಲಿಯುತ್ತಾ ತಾಯಂದಿರು ಕಲಿಸುವ ಮಾಲಪ್ಪಾಟ್ ಗಳನ್ನು, ಪ್ರತ್ಯೇಕವಾಗಿ ಹಸ್ಬೀ ರಬ್ಬೀಯಂತಹ ಬೈತ್ ಗಳನ್ನೂ ಕಂಠಪಾಠ ಮಾಡುತ್ತಿದ್ದರು.
     ತಾಯಿಯ ಮಹತ್ವ ಅಪಾರ. ತಾಯಂದಿರ ದುಆ ಕಾರಣದಿಂದ ಔನಿತ್ಯಕ್ಕೇರಿದ ಮಹಾತ್ಮರನೇಕರ ಚರಿತ್ರೆ ನಮಗೆಲ್ಲರಿಗೂ ಗೊತ್ತಿದೆ. ಕೇರಳ ಮೂಲದ ಉಸ್ತಾದರೊಬ್ಬರು, ತನ್ನ ಭಾಷಣದಲ್ಲಿ ಹೇಳಿದ ಮಾದರೀಯೋಗ್ಯ ತಾಯಿಯ ಕುರಿತು ತಿಳಿಸ ಬಯಸುತ್ತೇನೆ. ಆ ತಾಯಿಯ ಮಗನಿಗೆ ಈಗ 24 ವಷ೯ ವಯಸ್ಸು. ಆ ವ್ಯಕ್ತಿ ಹಲವಾರು ಬಾರಿ (50ಕ್ಕಿಂತಲೂ ಅಧಿಕ ಬಾರಿ) ಪುಣ್ಯ ಪ್ರವಾದಿ ﷺ ತಂಙಳ್ ರನ್ನು ಕನಸಿನಲ್ಲಿ ದಶಿ೯ಸಿದ್ದರು. ಈ ಉಸ್ತಾದರು ಆ ವ್ಯಕ್ತಿಯೊಂದಿಗೆ ಮೊದಲನೇ ಬಾರಿ ಪುಣ್ಯ ಪ್ರವಾದಿ ﷺ ತಂಙಳ್ ರನ್ನು ಕನಸಿನಲ್ಲಿ ದರ್ಶಿಸಿದ್ದು ಎಷ್ಟನೇ ವಯಸ್ಸಿನಲ್ಲಿ ? ಎಂದು ಕೇಳಿದಾಗ, 'ನನ್ನ ನೆನಪು ಸರಿಯಾಗಿದ್ದರೆ, ನನ್ನ 5, 6, 7 ನೆಯ ವಯಸ್ಸಿನಿಂದಲೇ ನಾನು ಪುಣ್ಯ ಪ್ರವಾದಿ ﷺ ತಂಙಳ್ ರನ್ನು ಕಾಣುತ್ತಿದ್ದೇನೆ' ಎಂದು ಆ ವ್ಯಕ್ತಿ ಉತ್ತರಿಸಿದರು. ಅದು ಹೇಗೆ ಸಾಧ್ಯವಾಯಿತು? ಎಂದು ಉಸ್ತಾದರು ಕೇಳಿದಾಗ, ಆ ವ್ಯಕ್ತಿ 'ನಾನು ಹೆಜ್ಜೆ ಇಟ್ಟು ನಡೆಯಲು ಪ್ರಾರಂಭಿಸುವ ಕಾಲದಿಂದಲೇ ನನಗಮ್ಮ ಹಬೀಬ್ﷺ ತಂಙಳ್ ರ ಮೇಲಿರುವ ಸ್ವಲಾತನ್ನು ಹೇಳಿಕೊಡುತ್ತಿದ್ದರು. ಆದ್ದರಿಂದ ನನಗೆ ಸ್ವಲಾತಿನೊಂದಿಗೆ ಬಹಳ ಇಷ್ಟವಾಗಿತ್ತು. ಬುದಾ೯ ದೊಂದಿಗಿರುವ ಅದಮ್ಯವಾದ ಪ್ರೀತಿ ಹಲವು ಬಾರಿ ಪ್ರವಾದಿ ﷺ ತಂಙಳ್ ರನ್ನು ದಶಿ೯ಸಲು ಸಹಾಯಕವಾಯಿತು' ಎಂದರು.
     ಮದೀನ(ﷺ) ದೊಂದಿಗೆ ಎಲ್ಲಾ ಮನೆಗಳಿಗೂ ಒಂದು ಬಂಧ ಅಗತ್ಯವಿದೆ. ಮನೆಯಲ್ಲಿರುವ ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರೆಲ್ಲರೂ ನಿಜವಾದ ಪ್ರವಾದಿ ಪ್ರೇಮಿಗಳಾಗಬೇಕು. ಪುಣ್ಯ ಪ್ರವಾದಿ ﷺ ತಂಙಳ್ ರ ಮೇಲಿರುವ ಸ್ವಲಾತ್ , ಸಲಾಂ, ಮೌಲಿದ್ ಮಜ್ಲಿಸ್ ಗಳು ಧಾರಾಳವಾಗಿ ನಡೆಯಬೇಕು. ತಂದೆ, ತಾಯಿ, ಮಗ, ಮಗಳು- ಎಲ್ಲರ ಮನಸ್ಸೂ ಮದೀನ (ﷺ) ಆಗಬೇಕು. ಆಗ ಪುಣ್ಯ ಪ್ರವಾದಿ ﷺ ರ ನಿಜವಾದ ಉಮ್ಮತ್ ಗಳಾಗಿ ಅದರಲ್ಲೂ ಅಹ್ಲುಸ್ಸುನ್ನತಿ ವಲ್ ಜಮಾಅತ್ತಿನ ಜನರಾಗಿ ಬಿಡುತ್ತೇವೆ.ಎಲ್ಲದ್ದಕ್ಕೂ ಅಲ್ಲಾಹನು ತೌಫೀಖ್ ನೀಡಲಿ, ಆಮೀನ್ ಬಿಜಾಹಿ ನ್ನಬಿಯ್ಯಿನಲ್ ಅಮೀನ್ﷺ.

ಲೇಖಕರು: ಜಮಾಲುದ್ದೀನ್


NOOR-UL-FALAH ISLAMIC STORE 

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್