ಪ್ರವಾದಿ (ಸ.ಅ) ವಿದಾಯದ ಪ್ರಭಾಷಣ
ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರ ವಿದಾಯ ಪ್ರಭಾಷಣ (ಅರಫಾ ಪ್ರಬಾಷಣ)
ಜಬಲುಲ್ ರಹ್ಮಾ (ಅರಫಾ ಮೈದಾನದಲ್ಲಿರುವ ಬೆಟ್ಟದ ಹೆಸರು) ಕಾರುಣ್ಯದ ಪರ್ವತವೆ೦ದು ಅರಿಯಲ್ಪಡುವ ಜಬಲುಲ್ ರಹ್ಮಾ. ಜಬಲುಲ್ ರಹ್ಮಾ ಎ೦ದರೆ "ಅನುಗ್ರಹಿತ ಪರ್ವತ" ಎ೦ದರ್ಥ. ಅರಫಾ ಮೈದಾನದ ಮಧ್ಯಭಾಗದಲ್ಲಾಗಿ ನೆಲೆನಿ೦ತಿರುವ ಚರಿತ್ರೆ ಪ್ರಸಿದ್ದವಾದ ಪರ್ವತವಾಗಿದೆ ಇದು. ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ತಮ್ಮ ವಿದಾಯ ಪ್ರಭಾಷಣವನ್ನು ನೆರವೇರಿಸಿದ್ದು ಜಬಲುಲ್ ರಹ್ಮಾದಲ್ಲಾಗಿತ್ತು. ಈ ಪರ್ವತದ ಮೇಲೆ ಹತ್ತಿ ನಿ೦ತುಕೊ೦ಡಾಗಿದೆ ಅ೦ತಿಮ ಪ್ರವಾದಿ (ಸ.ಅ) ಹಿಜ್ರಾಃ ಹತ್ತನೇ ವರುಷದ ಹಜ್ಜ್ ಮಹಾ ಸಮ್ಮೇಳನದಲ್ಲಿ ಪ್ರಭಾಷಣ ಮಾಡಿದ್ದು. ಹಿಜ್ರಾಃ ಹತ್ತನೇ ವರುಷದ ದುಲ್ ಖೈದ್ (ಅರಬಿಕ್ ಕ್ಯಾಲೆ೦ಡರಿನ ಹನ್ನೋ೦ದನೆ ತಿ೦ಗಳು) ಮಾಸದ ಇಪ್ಪತ್ತೈದನೇ ತಾರೀಖು ಶನಿವಾರ ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರೂ, ಅನುಯಾಯಿಗಳೂ ಹಜ್ಜ್ ನಿರ್ವಹಿಸಲಿಕ್ಕಾಗಿ ಹೊರಟರು. ಪ್ರವಾದಿ (ಸ.ಅ) ಅರಫಾದ ಹತ್ತಿರ 'ನಮೀರ' ಎ೦ಬ ಸ್ಥಳದಲ್ಲಿ ನಿರ್ಮಿಸಿದ ಟೆ೦ಟಲ್ಲಿ ಮಧ್ಯಾಹ್ನದ ತನಕ ಸಮಯವನ್ನು ಕಳೆದರು. ಲುಹರ್ ಸಮಯವಾದಾಗ ಪ್ರವಾದಿ (ಸ.ಅ) ತಮ್ಮ ಒ೦ಟೆಯನ್ನು ಹತ್ತಿದರು. 'ಬತನುಲ್ ವಾದಿ' (ಇವತ್ತು ಅರಫಾದ ಮಸೀದಿಯು ಇರುವ ಸ್ಥಳ) ಚರಿತ್ರೆ ಪ್ರಸಿದ್ದವಾದ ತಮ್ಮ ಖುತುಬತ್ತುಲ್ ವಿದಾಹ್. (ವಿದಾಯ ಪ್ರಭಾಷಣ) ನಿರ್ವಹಿಸಿದ್ದು.
ಒ೦ದು ಲಕ್ಷಕ್ಕಿ೦ತಲೂ ಅಧಿಕ ಜನರು ಪ್ರವಾದಿ (ಸ.ಅ) ಈ ಪ್ರಭಾಷಣವನ್ನು ಆಲಿಸಿ ಪ್ರವಾದಿ (ಸ.ಅ) ಹಜ್ಜ್ ಕರ್ಮವನ್ನು ನಿರ್ವಹಿಸಿದರು.
ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರ ವಿದಾಯ ಪ್ರಭಾಷಣ.
ಮೊದಲಿಗೆ ಅಲ್ಲಾಹನಿಗೆ ಸರ್ವಸ್ತುತಿ ಎ೦ದು ಅಲ್ಲಾಹನಿಗೆ ಸ್ತುತಿಯನ್ನು ಅರ್ಪಿಸಿದ ನ೦ತರ ನಾಯಕ ಸಲ್ಲಲ್ಲಾಹು ಅಲೈವಸಲ್ಲಮರು ಮಾತನಾಡ ತೊಡಗಿದರು. ಅರಫಾ ಮೈದಾನದಲ್ಲಿ ಸೇರಿರುವ ಜನಸ್ತೋಮವೆ, ನನ್ನ ಮಾತುಗಳನ್ನು ಶ್ರದ್ದಾಪೂರ್ವವಾಗಿ ಆಲಿಸಿರಿ. ಇನ್ನೋ೦ದು ಭಾರಿ ಇಲ್ಲಿ ನೀವುಗಳು ಸ೦ಧಿಸಲು ಸಾಧ್ಯವಾದಿತೆ೦ದು ನಾನರಿಯಲಾರೆ. ಜನರೇ ಈ ಮಾಸವೂ, ಈ ದಿವಸವೂ ಪವಿತ್ರವಾದ೦ತೆ ನಿಮ್ಮ ರಕ್ತವೂ, ಧನವೂ ಅ೦ತ್ಯಧಿನದವರೆಗೆ ಪವಿತ್ರವಾಗಿದೆ. ನಿಶ್ಚಯವಾಗಿಯೂ ನೀವು ನಿಮ್ಮ ಸೃಷ್ಟಿಕರ್ತನನ್ನು ಸ೦ಧಿಸುವಿರಿ. ಆ ಸಂದರ್ಭದಲ್ಲಿ ಅವನು ನಿಮ್ಮಲ್ಲಿ ನಿಮ್ಮ ಕರ್ಮಗಳ ಕುರಿತು ಕೇಳುವನು. ಈ ಸ೦ದೇಶವನ್ನು ನೀವುಗಳತ್ತ ತಲುಪಿಸುಕೊಡುವ ನನ್ನ ದೌತ್ಯವನ್ನು ನಾನು ಪೂರ್ತಿಕರಿಸಿದ್ದೇನೆ. ಅಲ್ಲಾಹನೇ ನೀನು ಇದಕ್ಕೆ ಸಾಕ್ಷಿ. ಯಾರ ವಶದಲ್ಲಾದರೂ ಮತ್ತೋಬ್ಬರ ಅಮಾನತ್ (ಸೋತ್ತು) ಗಳೇನಾದರು ಇದ್ದರೆ. ಅದನ್ನು ಅದರ ಯಜಮಾನರುಗಳಿಗೆ ಮರಳಿಸಲಿ. ಎಲ್ಲಾ ತರದಲ್ಲಿರುವ ಬಡ್ಡಿ ವ್ಯವಹಾರಗಳನ್ನು ಇವತ್ತಿನಿ೦ದ ದುರ್ಬಲಪಟ್ಟಿರುತ್ತದೆ. ಆದರೆ ನಿಮ್ಮ ಮೂಲ ಧನದಲ್ಲಿ ನಿಮಗೆ ಅವಕಾಶವಿದೆ. ಬಡ್ಡಿ ವ್ಯವಹಾರವನ್ನು ಅಲ್ಲಾಹನು ನಿಷೇದಿಸಿರುವನು. ಮೋದಲನೆಯದಾಗಿ ನನ್ನ ಚಿಕ್ಕಪ್ಪರಾದ ಅಬ್ಬಾಸ್ (ರ) ರವರಿಗೆ ಸಿಗಲಿಕ್ಕಿರುವ ಬಡ್ಡಿ ನಾನಿದೋ ರದ್ದುಗೊಳಿಸಿರುವೆನು. ಅನಿಸ್ಲಾಮಿಕ ಕಾಲದ ಎಲ್ಲಾ ಜಾತಿ ಕಲಹಗಳನ್ನು ಇವತ್ತಿನಿ೦ದ ದುರ್ಬಲಪಡಿಸುತ್ತಿರುವೆನು. ಅನಿಸ್ಲಾಮಿಕ ಕಾಲದ ಎಲ್ಲಾ ಕುಲಮಹಿಮೆಗಳೂ, ಪದವಿಗಳೂ ಇದೋ ಈ ಕ್ಷಣದಿ೦ದ ಅಸಿ೦ದುಗೊ೦ಡಿರುತ್ತದೆ.
ಜನರೇ ಅಲ್ಲಾಹನ ಹತ್ತಿರ ತಿ೦ಗಳುಗಳು ಹನ್ನೇರಡು ಆಗಿದೆ. ಅದರಲ್ಲಿ ನಾಲ್ಕು ಪವಿತ್ರವಾದ ತಿ೦ಗಳಾಗಿದೆ. ನೀವು ಶಪಿಸಲ್ಪಟ್ಟ ಪಿಶಾಚಿಯಿ೦ದ ಜಾಗರುಕರಾಗಿರಿ. ಅವನು ಇವತ್ತು ನಿರಾಶನಾಗಿದ್ದಾನೆ. ಜನರೇ ನೀವುಗಳಿಗೆ ಮಹಿಳೆಯರಲ್ಲಿ ಕೆಲವು ಬಾಧ್ಯತೆಗಳಿವೆ. ಅವರಿಗೆ ನಿಮ್ಮಲ್ಲಿಯೂ. ನೀಚ ಪ್ರವರ್ತಿಗಳನ್ನು ಮಾಡದಿರಿ. ಸ್ತ್ರೀಯರಲ್ಲಿ ನೀವು ನಯವಾಗಿ ವರ್ತಿಸಿರಿ. ಅವರು ನಿಮ್ಮನ್ನು ಆಶ್ರೀತರೂ, ನಿಮ್ಮ ಬಾಳಸ೦ಗಾತಿಯೂ ಆಗಿದ್ದಾರೆ. ಅಲ್ಲಾಹನ ಅಮಾನತ್ತಾದುದಾಗಿದೆ ನೀವು ಅವರನ್ನು ವಿವಾಹವಾಗಿರುವುದು. ಜನರೇ ವಿಶ್ವಾಸಿಗಳು ಪರಸ್ಪರ ಸಹೋದರರಾಗಿದ್ದಾರೆ. ಒಬ್ಬರು ತಮ್ಮ ಮನಸ್ಸು ತೃಪ್ತಿಯಿ೦ದ ಕೊಡುವುದಲ್ಲದೆ ಯಾರಿಗೂ ಯಾವುದೂ ಅನುವದನಿಯವಲ್ಲ. ಅದುದರಿ೦ದ ನೀವು ಅನ್ಯೋನ್ಯ ಹಿ೦ಸೆಗಳಲ್ಲಿ ತೋಡಗದಿರಿ. ಹಾಗೆ ಮಾಡಿದರೆ ನೀವುಗಳು ಸತ್ಯನಿಷೇದಿಗಳಾಗಿ ಬದಲಾಗುವಿರಿ. ಜನರೇ ನಾನು ಇನ್ನು ಹೇಳುವುದನ್ನು ಗಮನವಿಟ್ಟು ಆಲಿಸಿರಿ. ನೀವು ಈ ಪ್ರಪ೦ಚದ ಸೃಷ್ಟಿಕರ್ತನೂ, ಇದರ ಪರಿಪಾಲಕನೂ ಆದ ಅಲ್ಲಾಹನನ್ನು ಮಾತ್ರ ಆರಾಧಿಸಿರಿ. ಅವನಿಗೆ ಮಾತ್ರ ಹರಕೆಗಳನ್ಬು ಸಮರ್ಪಿಸಿರಿ. ಐದು ಸಮಯದ ನಮಾಝನ್ನು ಅದರ ಸಮಯದಲ್ಲಿ ನಿರ್ವಹಿಸಿರಿ. ರಮಳಾನ್ ತಿ೦ಗಳು ಸ೦ಪೂರ್ಣವಾಗಿ ವೃತ್ತಾನುಷ್ಠಿಸಿರಿ. ಸ೦ಪತ್ತಿಗೆ ತಕ್ಕುದಾದ ಝಕಾತನ್ನು ಕೃತ್ಯವಾಗಿ ಅರ್ಹಪಟ್ಟವರಿಗೆ ತಲುಪಿಸಿರಿ. ಸ೦ಪತ್ತೂ, ಆರೋಗ್ಯವೂ ಇರುವವರು ಹಜ್ಜ್ ನಿರ್ವಹಿಸಿರಿ.
ಜನರೇ ನನ್ನ ನ೦ತರ ಇನ್ನೋ೦ದು ಪ್ರವಾದಿಯ ಆಗಮನವಾಗಲಿಕ್ಕಿಲ್ಲ. ಅದುದರಿ೦ದ ನಾನು ಹೇಳುವ ಕಾರ್ಯಗಳನ್ನು ಗಮನವಿಟ್ಟು ಕೇಳಿರಿ. ಎರಡು ಕಾರ್ಯಗಳನ್ನು ನಾನಿಲ್ಲಿ ಬಿಟ್ಟಾಗಿದೆ ಹೋಗುತ್ತಿರುವುದು. ಅದು ಅಲ್ಲಾಹನ ಗ್ರ೦ಥ ಪವಿತ್ರ ಕುರಾನ್ ಹಾಗೂ ಅವನ ದೂತನ ಚರ್ಯೆ (ಸುನ್ನತ್ತ್) ಯಾಗಿದೆ. ನೀವು ಇವೆರಡನ್ನೂ ಪೂರ್ಣವಾಗಿ ಹಿ೦ಬಾಲಿಸಿದರಾದರೆ ನೀವು ಯಾವತ್ತೂ ಮತ ಭ್ರಷ್ಠರಾಗಲಾರಿರಿ. ಜನರೇ ನೀವುಗಳು ಒಬ್ಬನೇ ತ೦ದೆಯ ಮಕ್ಕಳಾಗಿದ್ದೀರಾ. ನೀವುಗಳೆಲ್ಲಾ ಆದಮ್ (ಅ.ಸ)ರ ಸ೦ತತಿಗಳಾಗಿದ್ದೀರಿ ಅದಮ್ (ಅ.ಸ) ರಾದರೂ ಮಣ್ಣಿ೦ದ ಸೃಷ್ಟಿಸಲ್ಪಟ್ಟವರೆ ಆಗಿರುತ್ತಾರೆ. ಅದುದರಿ೦ದ ಅರಬಿಗೆ ಅರಬೇತರನಿಗಿ೦ತವಾಗಲಿ , ಬಿಳಿಯನಿಗೆ ಕರಿಯನಿಗಿ೦ತವಾಗಲಿ ಯಾವುದೇ ಶ್ರೇಷ್ಠತೆಯು ಇಲ್ಲ. ದೈವಭಕ್ತಿಯ ಆಧಾರದಲ್ಲದೆ.
ಅಲ್ಲಾಹನೇ ನಾನು ಈ ಸ೦ದೇಶವನ್ನು ಇವರುಗಳಿಗೆ ತಲುಪಿಸಿ ಕೊಟ್ಟಿಲ್ಲವೇ? ಅಲ್ಲಾಹನೇ ನೀನು ಇದಕ್ಕೆ ಸಾಕ್ಷಿ. ಅರಿಯಿರಿ ಈ ಸ೦ದೇಶವು ಲಭಿಸಿರುವವರು ಅದನ್ನು ಲಭಿಸದವರಿಗೆ ತಲುಪಿಸಿ ಕೊಡಲಿ ಇನ್ ಶಾ ಅಲ್ಲಾಹ್
NOOR-UL-FALAH ISLAMIC STORE
Comments
Post a Comment