ಸತ್ಯ ವಿಶ್ವಾಸಿಗಳ ಗಮನಕ್ಕೆ
ಸತ್ಯ ವಿಶ್ವಾಸಿಗಳ ಗಮನಕ್ಕೆ
ಇಬ್ನು ಅಬ್ಬಾಸ್ ರಲಿಯಲ್ಲಾಹು ಅನ್ಹು ರವರಿಂದ ವರದಿ:
ಅಂತ್ಯ ದಿನ ಸಮೀಪಿಸುವಾಗ ಒಂದು ವಿಭಾಗದ ಜನತೆ ಬರಲಿದ್ದಾರೆ. ಪಾರಿವಾಳಗಳ ಕುತ್ತಿಗೆಯ ಸುತ್ತ ಇರುವ ಬಣ್ಣದ ವೃತ್ತಾಕಾರದ ಗುರುತಿನಂತೆ ತಮ್ಮ ರೋಮಗಳಿಗೆ ಅವರು ಬಣ್ಣ ಬಳಿಯುವವರಾಗಿರುವರು. ಅಂತವರಿಗೆ ಸ್ವರ್ಗದ ಪರಿಮಳವೂ ದೊರೆಯದು. (ಅಬೂದಾವೂದ್)
ಕೂದಲಿಗೆ ಬಣ್ಣ ಕೊಡುವುದರಿಂದ ಉಂಟಾಗುವ ತೊಂದರೆಗಳು.
✳ಕಡ್ಡಾಯ ಸ್ಥಾನ ಸಿಂಧುವಾಗದು.
✳ಸ್ಥಾನ ಸಿಂಧುವಾಗದಿದ್ದಲ್ಲಿ. ಮಸೀದಿ ಪ್ರವೇಶ ಹರಾಂ ಆಗುತ್ತದೆ.
✳ಖುರ್ ಆನ್ ಪಾರಾಯಣ ಹರಾಂ ಆಗುತ್ತದೆ.
✳ವುಳೂ ಸಿಂಧುವಾಗದು.
✳ವುಳೂ ಅಸಿಂಧುವಾದರೆ ನಮಾಝ್ ಬಾತಿಲ್ ಆಗುತ್ತದೆ.
✳ಮುಸ್ಹಫನ್ನು ಮುಟ್ಟುವುದು ಹರಾಂ.
✳ತವಾಫ್ ಸಿಂಧುವಾಗದು.
✳ಕಡ್ಡಾಯ ತವಾಫ್ ಬಾತಿಲ್ ಆದರೆ ಹಜ್ಜ್ ಕರ್ಮವೇ ಅಸಿಂಧುವಾಗುತ್ತದೆ.
ಆದ್ದರಿಂದ ಕೂದಲಿಗೆ ಬಣ್ಣ ಕೊಡುವವರೇ ಜಾಗೃತೆ.
ಬಣ್ಣ ಕೊಡುವುದು ಸುಲಭ ಆದರೆ ಅದರ ಪರಿಣಾಮಗಳು ಅತೀ ಗಂಭೀರ. ಇಹದ ಸುಖಲೋಲುಪತೆಗೆ ಬೇಕಾಗಿ ಅತ್ಯಮೂಲ್ಯವಾದ ಪರಲೋಕವನ್ನು ಮಾರಟ ಮಾಡದಿರಿ. ಈ ಕೂದಲಿಗೆ ಬಣ್ಣ ಕೊಡುವುದರ ತೊಂದರೆಯನ್ನು ಅರಿಯದೆ ಹಲವಾರು ಜನರ ತಂದೆಯಂದಿರು ಬಿಳಿ ಕೂದಲಿಗೆ ಬಣ್ಣ ಕೊಡುವುದಾಗಿ ಕಾಣಬಹುದು. ಈ ಕೂದಲಿಗೆ ಬಣ್ಣ ಕೊಡುವುದರ ತೊಂದರೆ ಯನ್ನು ಅರಿತಿರುವ ನಾವು ಅವರಿಗೆ ಅದರ ಅರಿವನ್ನು ಮೂಡಿಸಬೇಕು. ಪತ್ನಿ ಪತಿಗೆ ತಿಳಿಸಿ ಕೊಡಬೇಕು. ಮಕ್ಕಳು ತಂದೆಗೆ ತಿಳಿಸಿ ಕೊಡಬೇಕು. ಹೀಗೆ ಯಾರು ಬಣ್ಣ ಕೊಡುವುದಾದರೆ ಅವರಿಗೆ ಅದರ ತೊಂದರೆಯನ್ನು ವಿವರಿಸಿ ಕೊಡುವವರು ನಾವಾಗಬೇಕು.
ಅಲ್ಲಾಹು ನಮ್ಮೆಲ್ಲರನ್ನು ಅವನ ಇಷ್ಟ ದಾಸರ ಕೂಟದಲ್ಲಿ ಒಂದು ಗೂಡಿಸಲಿ.
۞ْآمِيـــــنْ يَا رَبَّ الْعَالَمِين۞
ರಜಬ್ ನಾವುಂದ(ಜ್ಞಾನದಾಹಿ)
ಹೇಳಿರಿ ನಬಿ ﷺ ರವರ ಹೆಸರಿನಲ್ಲಿ ಮೂರು ಸ್ವಲಾತ್ ..
صَـلــُّوا عَـلَـى النَّبِيِّ ﷺ وَآلـِ اَللَّهُمَّ صَلِّ عَلَى سَيِّدِنَا مُحَمَّدٍ وَعَلَى آلِهِ وَصَحْبِهِ وَسَلِّمْ
NOOR-UL-FALAH ISLAMIC STORE
Comments
Post a Comment