ಆಸೆ ದುರಾಸೆ

ಆಸೆ-ದುರಾಸೆ

ಆಸೆಗೆ ಮಿತಿಯಿದೆ,ಮಿತಿ ಮೀರಿದರೆ ಅದು ದುರಾಸೆಯಾಗುತ್ತದೆ...ದುರಾಸೆಯನ್ನು ಬಿಟ್ಟರೆ,ನಿಶ್ಚಿಂತತೆಯ ಜೀವನ ನಮ್ಮದು..

            ಒಮ್ಮೆ ನಾನು ಸೈಕಲ್ ನಲ್ಲಿ ಚಲಿಸುವಾಗ,ಬೈಕನ್ನು ನೋಡಿ ಚಿಂತಿಸತೊಡಗಿದೆ ನಾನು ಕೂಡಾ ಬೈಕ್ ನಲ್ಲಿ ಬರಬೇಕು ಎಂದು...ಅಂದಿನಿಂದ,ತುಂಬಾ ಕಷ್ಟಪಟ್ಟು ಬೈಕ್ ಖರೀದಿಸಿದೆ...ಹಾಗೆ ಒಮ್ಮೆ ಈ ಬೈಕಲ್ಲಿ ಚಲಿಸುವಾಗ,ಒಂದು ಕಡೆ ಸಿಗ್ನಲ್ ನಲ್ಲಿ ನಿಂತಿರುವಾಗ ಕಾರೊಂದು ಬದಿಯಲ್ಲಿ ಬಂದು ನಿಂತಾಗ,ಮತ್ತೆ ಚಿಂತೆಯಾಗತೊಡಗಿತು...ಕಾರ್ ಖರೀದಿಸುವ ಚಿಂತೆ!
ಹೀಗೆ ನನಗೆ ಯಾವತ್ತೂ ಒಂದಲ್ಲ,ಒಂದು ವಿಷಯದಲ್ಲಿ ಚಿಂತೆ...ಈ ಬಗ್ಗೆ ಉಸ್ತಾದರೊಬ್ಬರಲ್ಲಿ ಹೇಳಿದಾಗ,ಅವರು ನೀಡಿದ ಸಣ್ಣ ಉಪದೇಶವೊಂದು ಮನಸ್ಸಿಗೆ ದುರಾಸೆಯಿಂದಾಗುವ ಒತ್ತಡದಿಂದ ರಕ್ಷಿಸಿತು. "ಅಲ್ಲಾಹು ನೀಡಿದ ಅನುಗ್ರಹಕ್ಕೆ ಕೃತಜ್ಞತೆ ಸಲ್ಲಿಸು..ಅದನ್ನು ಬಿಟ್ಟು,ಇದಕ್ಕಿಂತಲೂ ದೊಡ್ಡದು ಬೇಕು,ಇನ್ನೂ ಹೆಚ್ಚು ಹೆಚ್ಚು ಎಂಬುದಾಗಿ ಚಿಂತೆಯಲ್ಲಿ ಮುಳುಗಿದರೆ,ಅಂತಹಾ ಚಿಂತೆಗೆ ಕೊನೆಯೇ ಇರಲ್ಲ...ಗುಡಿಸಲಿನಲ್ಲಿ ಇರುವಾಗ,ಅಂಚಿನ ಮನೆಯ ಚಿಂತೆ,ಅಂಚಿನ ಮನೆ ದೊರೆತಾಗ,ಟ್ಯಾರಸಿ ಮನೆಯ ಚಿಂತೆ...ಒಂದು ವೇಳೆ ಟ್ಯಾರಸಿ ಮನೆ ಕಟ್ಟಿದರೂ,ಬಳಿಕ ಅದಕ್ಕಿಂತಲೂ ದೊಡ್ಡ ಮನೆ ಕಾಣುತ್ತೆ..ದೊಡ್ಡ ವಾಹನ ಖರೀದಿಸಿದಾಗ,ಅದಕ್ಕಿಂತಲೂ ದೊಡ್ಡ ಗಾಡಿಯ ಮೇಲೆ ಕಣ್ಣು.. ಹೀಗೆ ಆಸೆಗೆ ಕೊನೆಯೇ ಇಲ್ಲ..."
       
          ನಂತರ ಈಗೀಗ ಸಂಪತ್ತಿನ ವಿಷಯದಲ್ಲಿ ನನ್ನಲ್ಲಿ ಇರುವುದಕ್ಕಿಂತಲೂ ಸಣ್ಣದರ ಮೇಲೆ ಕಣ್ಣಾಯಿಸುವೆ..ಆಗ ಮನಸ್ಸಿಗೆ ಒಂತರಾ ನೆಮ್ಮದಿ,ಅವರಿಗಿಂತ ನಾವೇ ಸ್ವಲ್ಪ ಉತ್ತಮ ಹಂತದಲ್ಲಿದ್ದೇವೆ ಎಂದು...

ಅಲ್ಲಾಹು ನೀಡಿದ ಅನುಗ್ರಹವನ್ನು ಸರಿಯಾದ ದಾರಿಯಲ್ಲಿ ಉಪಯೋಗಿಸಿ,ಇರುವುದರಲ್ಲಿ ಖುಷಿಪಡಿ ಹಾಗೂ ಕೃತಜ್ಞತೆ ಸಲ್ಲಿಸಿ...

ಲೇಖಕರು: ಮೋನು ಉಚ್ಚಿಲ


NOOR-UL-FALAH ISLAMIC STORE 

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್