ಜುಬೈದಾ
السَّـــــــلاَمُ عَلَيــْــكُم وَرَحْمَةُ اللهِ وَبَرَكـَـاتُه
ಜುಬೈದಾ
ವಿಧವೆಯ ವಿವಾಹ ಜೀವನ
ಆತ್ಮೀಯ ಓದುಗರಲ್ಲಿ
ಬದುಕು ಭಾವನೆಯೊಂದಿಗೆ ರಾಜಿಯಾದಷ್ಟು ವಿಚಾರದೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ.. ವ್ಯಕ್ತಿಗಳಲ್ಲಿನ ಬದಲಾವಣೆ ಮುಖ್ಯವಾಗಿ ಪರಿಸರ ಬದಲಾಗುವ ಸ್ಥಾನ-ಮಾನಗಳು. ಆಸೆ ಆಕಾಂಕ್ಷೆಗಳನ್ನು ಅವಲಂಬಿಸಿರುತ್ತದೆ ಇಂಥ ಆಕರ್ಷಣೆ ಭಾವನೆಗಳ ಜೊತೆ ನಿರಂತರ ಘರ್ಷಣೆಯಿಂದ ಸೋಲನ್ನು ಅನುಭವಿಸುತ್ತದೆ
ಇಂಥ ನೈಜ ಕಥಾವಸ್ತು ಕಾದಂಬರಿ ರೂಪದಲ್ಲಿ ನಿಮ್ಮ ಮುಂದೆ ತಂದಿದ್ದೇನೆ ಎಲ್ಲ ಧರ್ಮಗಳ ಅಪಾರ ಓದುಗರ ಬಳಗವಿರುವುದರಿಂದ ಧಾರ್ಮಿಕತೆಗೆ ಧಕ್ಕೆಯಾಗದಂತೆ ಅಕ್ಷರಗಳನ್ನು ಜೋಡಿಸಿರುತ್ತೇನೆ ಅದೇ ರೀತಿ ಈ ಕಾದಂಬರಿಯನ್ನು ಬಡ ಹೆಣ್ಣು ಮಕ್ಕಳ ಆಶಾಕಿರಣವಾದ ಡೌರಿ ಫ್ರೀ ನಿಖಾಃಹ್ ಗ್ರೂಪ್ ಸಹಯೋಗದೊಂದಿಗೆ ಬಿಡುಗಡೆ ಮಾಡುತ್ತಿದ್ದೇವೆ ಸದಾ ನಿಮ್ಮ ಪ್ರೀತಿ ವಿಶ್ವಾಸ ಸಿಕ್ಕುತ್ತದೆ ಎಂಬ ಭರವಸೆಯೊಂದಿಗೆ
ಪರಮದಯನಾದ ಅಲ್ಲಾಹನ ನಾಮದಿಂದ........
ಕೆಎಂ ಜಲೀಲ್ ಕುಂದಾಪುರ
ಆಗ ತಾನೇ ಆಫೀಸಿನಿಂದ ನೇರವಾಗಿ ಮಸೀದಿಗೆ ತೆರಳಿ ಲುಹರ್ ನಮಾಝ್ ಮುಗಿಸಿ ತನ್ನ ಮನೆಯ ಹೊರಾಂಗಣದಲ್ಲಿ ಅಂದಿನ ದಿನ ಪತ್ರಿಕೆ ಓದುತ್ತ ಕುಳಿತ ಇಲ್ಯಾಸ್ ಭಾಯ್ ತಮ್ಮ ಎದುರಿಗೆ ಬಂದು ನಿಂತ ಯುವಕನತ್ತ ದೃಷ್ಟಿ ಹಾಯಿಸಿದರು.
ಅವನಾದರೋ ಅವರು ತನ್ನನ್ನು ನೋಡಲೆಂದೇ ಕಾಯುತ್ತಿರುವಂತಿತ್ತು ಆರೆಕ್ಷಣವೂ ತಡಮಾಡದೇ....
"ಅಸ್ಸಲಾಮು ಅಲೈಕುಂ ಭಾಯ್" ಎಂದ ವಿನಮ್ರ ಧ್ವನಿಯಲ್ಲಿ
"ವಲೈಕುಂ ಸಲಾಂ" ತಾವು....??
ನಾನು ಜಮಾಲ್ ಎಂದು ನಾನು ನಿಮಗೆ ಮೊನ್ನೆ ಕರೆಮಾಡಿದ್ದೆ ನೆನಪಿರಬಹುದು
"ಓಹ್... ಜಮಾಲ್ ಎಂದರೆ ನೀವೇನು..? ನಿಮ್ಮ ನೆನಪಿದೆ ಇವತ್ತು ಬರುತ್ತೇನೆ ಎಂದು ಹೇಳಿದ್ರಿಯಲ್ವಾ"
ಹೌದು ಭಾಯ್ ನಾನು ಯಾವಾಗಲೂ ಹೇಳಿದ ಮೇಲೆ ಬಂದೇ ಬರುತ್ತೇನೆ ಮಾತಿಗೆ ತಪ್ಪೋಲ್ಲ
ಏನು ವಿಷಯ....??
ಅದೇ ಭಾಯ್ ಕರೆ ಮಾಡಿದಾಗ ನನ್ನ ಮನಸಿನ ಅಭಿಪ್ರಾಯನ ಸೂಕ್ಷ್ಮವಾಗಿ ತಿಳಿಸಿದ್ದೀನಿ ಅದರ ವಿಚಾರನೇ ಮಾತಾಡೋಣ ಎಂದು ಬಂದೆ...
ನಿಮ್ಮ ವಿಷಯ ಗೋತ್ತಾಯಿತು ನಾನು ಕೆಲವು ಪ್ರಶ್ನೆಗಳನ್ನ ಕೇಳಿದರೆ ನೀವು ತಪ್ಪು ತಿಳಿಯೋಲ್ಲ ತಾನೇ...?
ಕೇಳಿ ಭಾಯ್ ಅದರಲ್ಲಿ ತಪ್ಪು ತಿಳಿದುಕೊಳ್ಳುವಂತಹದೇನಿದೆ...!
ನೀವು ಯಾರಾದರೂ ವಿಧವೆ ಇದ್ದರೆ ತಿಳಿಸಿ ನಾನು ವಿಧೆವೆನಾ ಮದುವೆಯಾಗೋದಕ್ಕೆ ಇಷ್ಟಪಡ್ತಿನಿ ಅಂತ ಹೇಳಿದ್ದೀರ ಅದಕ್ಕೆ ಕಾರಣ ಕಾರಣ ಕೇಳಬಹುದ..?
ನೋಡಿ ಭಾಯ್ ಯಾವುದೇ ಹೆಂಗಸಗಲಿ ಗಂಡ ಮಡಿದ ಮೇಲೆ ಎಲ್ಲಾ ಸೌಭಾಗ್ಯವೂ ಮುಗಿದ ಹಾಗೆ ಅಂತ ತಿಳಿದುಕೊಂಡಿರುತ್ತಾರೆ ಕಳೆದುಕೊಂಡ ಅವರ ಸೌಭಾಗ್ಯವನ್ನು ನಾನು ಮರಳಿಕೊಟ್ಟರೆ ಅವರ ಸಂತಸಕ್ಕೆ ಕೊನೆಯುಂಟೆ.? ನಮ್ಮಿಂದ ಮತ್ತೊಬ್ಬರಿಗೆ ಈ ರೀತಿ ಕಿಂಚಿತ್ತೂ ಸಂತೋಷ. ಸುಖ. ನೆಮ್ಮದಿ. ಸೌಭಾಗ್ಯ ಸಿಗುವುದಾದರೆ ಅದಕ್ಕಿಂತ ಬೇರೆ ಭಾಗ್ಯ ಮತ್ತಾವುದಿದೆ ಹೇಳಿ...
"ಅಷ್ಟೇನಾ...? ಮತ್ತಾವ ಕಾರಣವೂ ಇಲ್ಲವಾ.. ಅಷ್ಟು ಉಪಕಾರ ಮಾಡುವ ಮನೋಭಾವವಿದ್ದರೆ ಯಾವುದಾದರೂ ಬಡ ಹೆಣ್ಣು ಹುಡುಗಿಯನ್ನು ವರದಕ್ಷಿಣೆ ಪಡೆಯದೆ ಮದುವೆಯಾಗಿ ಅವರಿಗೆ ನೇರವಾಗಬಹುದಲ್ಲವೇ...?
ಹಾಗೂ ಆಗಬಹುದಿತ್ತೇನೋ..? ಆದರೆ ನನ್ನ ದೂರದ ಸಂಬಂಧದ ಹುಡುಗಿಯೊಬ್ಬಳು ಬಾಲವಿಧವೆ ಅವಳ ಕಷ್ಟನೋಡಿ. ನಾನು ಮದುವೆಯಾದರೆ ಗಂಡ ಮರಣ ಹೊಂದಿ ಬವಣೆಪಡುತ್ತಿರುವ ಹೆಣ್ಣೊಬ್ಬಳನ್ನು ಮದುವೆಯಾಗಬೇಕು ಅಂದುಕೊಂಡೆ ಅವಳೂ ಈಗ ಮದುವೆಯಾಗಿ ಸುಖದಿಂದ ಇದ್ದಾಳೆ ಅದರಿಂದ ಮತ್ತೊಬ್ಬ ವಿಧವೆಯ ಬಾಳಿಗೆ ಬೆಳಕಾಗುವಾಸೆ
ಆಯಿತು ಜಮಾಲ್ ನಿಮ್ಮ ಅಭಿಪ್ರಾಯ ಸರಿ ನಾನು ಈ "ವರದಕ್ಷಿಣೆ ನಿಷೇಧ ಅಭಿಯಾನ" ಸ್ಥಾಪನೆಯಾದಾಗಿನಿಂದ ಹಲವಾರು ಯುವಕ ಯುವತಿಯರನ್ನು ನೋಡಿದ್ದೇನೆ ಸಂದರ್ಶಿಸಿ ಅವರವರ ಅಭಿರುಚಿಗೆ ತಕ್ಕಂತ ವಧು-ವರರನ್ನು ಹುಡುಕಿ ವಿವಾಹ ಮಾಡಿಸಿದ್ದೇನೆ ಯಾವುದೇ ಸಂಬಂಧ ಕುದುರಿಸುವ ಮೊದಲು ಅವರ ಅಭಿಪ್ರಾಯವನ್ನು ಕೂಲಂಕಷವಾಗಿ ತಿಳಿಯಬೇಕಾದದ್ದು ನನ್ನ ಕರ್ತವ್ಯ ಅದಕ್ಕೆ ವಿಚಾರಿಸಿದೆ ಅಷ್ಟೇ ತಪ್ಪು ತಿಳಿಯಾಬೇಡಿ
ಅದನ್ನು ತಿಳಿಯಬೇಕಾದದ್ದು ನಿಮ್ಮ ಕರ್ತವ್ಯ ತಿಳಿಸಬೇಕಾದ್ದು ನನ್ನ ಧರ್ಮ ತಾನೇ ಭಾಯ್ ಅದರಲ್ಲಿ ತಪ್ಪೇನಿದೆ...
ನೋಡಿ ನಿಮ್ಮ ಪೂರ್ಣ ವಿವರಗಳನ್ನು ನೀಡಿ ನಾನು ನಿಮಗೆ ಸೂಕ್ತವಾದ ವಧು ಇದ್ದರೆ ಖಂಡಿತ ತಿಳಿಸುತ್ತೇನೆ
ತನ್ನ ವಿವರಗಳನ್ನು ನೀಡಿ ಜಮಾಲ್
ಭಾಯ್ ನನ್ನ ಬಗ್ಗೆ ಪರ್ಸೆನಲ್ ಇಂಟ್ರಸ್ಟ್ ತಗೋಬೇಕು ಆದಷ್ಟು ಬೇಗ ಹುಡುಕಿಕೊಡಬೇಕು ಮತ್ತು ವಿಧವೇಯನ್ನೆ ನೋಡಿ....
ಇಲ್ಯಾಸ್ ಭಾಯ್ ಜಮಾಲ್ ನೀಡಿದ ವಿವರವನ್ನು ಪರಿಶೀಸಿದರು ವಯಸ್ಸು 35 ತಂದೆ ತಾಯಿ ಇಲ್ಲ ಖಾಸಗಿ ಕಂಪನಿಯಲ್ಲಿ ಕೆಲಸ ಉತ್ತಮ ವಿದ್ಯಾರ್ಹತೆ ಆಸ್ತಿಯಿಲ್ಲ
ಸರಿನಪ್ಪ ಇದು ನನ್ನ ಬಳಿ ಇರಲಿ ಯಾವಾಗಲೂ ನೆನಪಿರುತ್ತೆ ಸೂಕ್ತ ವಧುವಿದ್ದಲ್ಲಿ ಕರೆ ಮಾಡುತ್ತೇನೆ
ಅವನ ಆತುರಕ್ಕೆ ಮನದೊಳಗೆ ನಕ್ಕ ಇಲ್ಯಾಸ್ ಭಾಯ್
ಹಾಗೇ ಮಾಡಿ ಎಂದರು
ನಿಮಗ್ಯಾಕೆ ತೊಂದರೆ ಭಾಯ್...? ನಾನೇ ಎರಡು ದಿನಕ್ಕೊಮ್ಮೆ ನಾನೇ ಕರೆಮಾಡುತ್ತೇನೆ..
ಅವನ ಆತುರಕ್ಕೆ ಮನದೊಳಗೆ ನಕ್ಕ ಇಲ್ಯಾಸ್ ಭಾಯ್
ಹಾಗೇ ಮಾಡಿ ಎಂದರು
ಸರಿಯೆಂದು ಅವರಿಗೆ ಸಲಾಂ ಹೇಳಿ ಅಲ್ಲಿಂದ ಹೊರಟ ಜಮಾಲ್
ಇವರ ಎಲ್ಲ ಮಾತುಗಳನ್ನು ಬಾಗಿಲಿನ ಬಳಿ ನಿಂತು ಅಲಿಸುತ್ತಿದ್ದ ಇಲ್ಯಾಸ್ ಭಾಯಿಯ ಮಡದಿ ದುಲೈಕ ಜಮಾಲ್ ಹೋಗುವುದನ್ನೆ ನೋಡುತ್ತಾ ಇಲ್ಯಾಸ್'ರವರ ಬಳಿ ಬಂದರು
ರೀ... ಹುಡುಗ ನೋಡಲೂ ಸ್ಭುರದ್ರೂಪಿಯಲ್ಲದಿದ್ದರೂ. ಅವಲಕ್ಷಣವಾಗಂತು ಇಲ್ಲ ನೋಡಲು ದೀನಿಯಾದ ಯುವಕನಂತೆ ಕಾಣುತ್ತಾನೆ ನಮ್ಮ
Comments
Post a Comment