ರಾಜ ಸನ್ನಿಧಿಗೆ ಒಂದು ಸಾಹಸ ಯಾತ್ರೆ

ರಾಜ ಸನ್ನಿಧಿಗೆ ಒಂದು ಸಾಹಸ ಯಾತ್ರೆ

   ಅಬ್ದುಲ್ಲಾಹಿಬ್ನು  ಹುದಾಫ (ರ) ತನ್ನ  ಕುದುರೆಯನ್ನು ಸಾಧ್ಯವಾದಷ್ಟು ವೇಗದಲ್ಲಿ ಓಡಿಸುತ್ತಿದ್ದಾರೆ. ಕಾಡುಗಳು ಗುಡ್ಡೆಗಳು ನದಿಗಳು ತೊರೆಗಳು ಮರುಭೂಮಿಗಳು ಮುಂತಾದವುಗಳನ್ನು ಹಿಂದಿಕ್ಕುತ್ತಾ ಅಪರಿಚಿತರಾದ ಜನರು ಮನೆಗಳು  ಪ್ರದೇಶಗಳು ಯಾವುದೂ ಕೂಡಾ ಅವರ ಗಮನಕ್ಕೆ ಬರುವುದಿಲ್ಲ. ಅತೀ ವೇಗದ ಪ್ರಯಾಣ.

      ತನ್ನಲ್ಲಿ ಅರ್ಪಿಸಲ್ಪಟ್ಟ ದೌತ್ಯ ನಿರ್ವಹಣೆಯಾಗಿದೆ ಪ್ರಧಾನ ಉದ್ದೇಶ ವಿಶಾಲವಾದ ಪೇರ್ಶ್ಯಾ ಸಾಮ್ರಾಜ್ಯಕ್ಕೆ... ಪ್ರಪಂಚವನ್ನು ನಡುಗಿಸಿದ ಕಿಸ್ರಾ ಚಕ್ರವರ್ತಿಯ ಸನ್ನಿಧಿಗೆ ಪ್ರವಾದಿ(ಸ.ಅ)ರವರು ಕೊಟ್ಟ ಕಾಗದವನ್ನು ಕೊಡಲು ಹಾಗೂ ಅವರನ್ನು ಇಸ್ಲಾಮ್ ಧರ್ಮಕ್ಕೆ ಆತ್ಮೀಯವಾಗಿ ಆಹ್ವಾನಿಸಲು.

  ಅಲ್ಲಿ ತಲುಪಿದರೆ ಏನು ಘಟಿಸಬಹುದೆಂದು ಹೇಳುವುದು ಅಸಾಧ್ಯ.ಕ್ರೂರಿಯೂ ಅಹಂಕಾರಿಯೂ ಆದ ಚಕ್ರವರ್ತಿ ಕಿಸ್ರಾ ಕರುಣೆಯೆಂದರೆ ಏನೆಂದು ಕೂಡಾ ತಿಳಿಯದ ಕಪ್ಪಡರಿದ ಮನಸ್ಸಿನ ಒಡೆಯ ಅನಿಷ್ಠಕರವಾದ ಏನಾದರೂ ಸಂಭವಿಸಿದರೆ ಕೊಲೆ ಕೂಡಾ ಸಂಭವಿಸಬಹುದು ಅಷ್ಟೊಂದು ಬಾಲಾಢ್ಯ ಅಹಂಕಾರಿ !

  ಒಂದೊಮ್ಮೆ ಇದು ನನ್ನ ಕೊನೆಯ ಪ್ರಯಾಣವಾಗಿರಬಹುದು.ಆದರೆ ಅದನ್ನು ನಾನು ಗಣನೆಗೆ ತೆಗೆದುಕೊಳ್ಳಬೇಕೆಂದಿಲ್ಲ.ಪ್ರವಾದಿ  (ಸ.ಅ)ರವರ ಆಜ್ಞಾಪಣೆ ನಿರ್ವಹಿಸುವುದು ಮಾತ್ರ ನನ್ನ ಮುಖ್ಯ ಉದ್ದೇಶ. ಅದಕ್ಕಾಗಿ ತನ್ನ ಸ್ವತಃ ಜೀವವನ್ನು ಕೂಡಾ ನೀಡಲು ಹಿಂಜರಿಕೆಯಿಲ್ಲ... ಅತ್ಯಲ್ಪ ಸಮಯದ ಭೌತಿಕ ಸಂತುಪ್ಟತೆಗಾಗಿ ಇದರಿಂದ ಹಿಂದಡಿ ಇಡುವ ಆಲೋಚನೆಯೇ ಇಲ್ಲ.

    ಅನುಯಾಯಿಗಳೆಲ್ಲರೂ ಪ್ರವಾದಿ  (ಸ.ಅ)ರವರೊಂದಿಗೆ ಮದೀನಾ ಮಸೀದಿಯಲ್ಲಿ ಕುಳಿತುಕೊಂಡಿದ್ದಾರೆ.ಅಲ್ಲಿ ಆರಾಧನೆಗಳು ಹಾಗೂ ವಿದ್ಯಾರ್ಜನೆ ಮತ್ತು ದೀನೀ ಕಾರ್ಯಗಳ ಕುರಿತ ಚರ್ಚೆ ನಡೆಯುತ್ತಿರುವುದು.ಇಸ್ಲಾಮಿನ ಅಧಿಕೃತ ಕಾರ್ಯಕ್ರಮಗಳ ಅಭಿಮಾನ ಕೇಂದ್ರ ಮುಸ್ಲಿಂ ಸಮುದಾಯದ ಬದಲಾವಣೆಯಿಲ್ಲದ ರಾಜಧಾನಿ ಕೇಂದ್ರ ಮಾತುಕತೆಯ ಮಧ್ಯೆ ಪ್ರವಾದಿ  (ಸ.ಅ)ರವರು ಅನುಯಾಯಿಗಳಿಗೆ ಒಂದು ಪ್ರಶ್ನೆ ಹಾಕಿದರು.

    ''ಪ್ರಿಯ ಅನುಯಾಯಿಗಳೇ...ನಿಮ್ಮೊಂದಿಗೆ ನನಗೆ ಅತೀ ಪ್ರಾದಾನ್ಯತೆಯಿಂದ ಕೂಡಿದ ಒಂದು ವಿಷಯವನ್ನು ತಿಳಿಸಲಿಕ್ಕಿದೆ ನೀವು ಅದನ್ನು ಯಾವುದೇ ವಿರೋಧವಿಲ್ಲದೇ ನಿರ್ವಹಿಸಲು ತಯ್ಯಾರಿದ್ದೀರಿ ತಾನೇ?''

  ''ಹೌದು ಪ್ರವಾದಿವರ್ಯರೇ...  ತಾವು ಹೇಳುವ ಯಾವುದೇ ಕಾರ್ಯವನ್ನೂ ಮರು ಪ್ರಶ್ಶಿಸದೇ ನಿರ್ವಹಿಸಲು ನಾವು ತಯಾರಾಗಿದ್ದೇವೆ''

    ಎಲ್ಲರ ಗಮನವನ್ನು ಪ್ರವಾದಿ(ಸ.ಅ) ರವರತ್ತ ಕೇಂದ್ರೀಕರಿಸಿದರು.ಅವರ ಬಾಯಿಯಿಂದ ಹೊರ ಬೀಳುವ ಮಾತುಗಳಿಗಾಗಿ ಹಂಬಲಿಸಿದರು.

      ನಾನು ಕೆಲವೊಂದು ಪತ್ರಗಳನ್ನು ತಯಾರಿಸಿದ್ದೇನೆ.ಇಸ್ಲಾಮಿಗೆ ಆಮಂತ್ರಣ ನೀಡುವಂತಹ ಕಾಗದಗಳು ಕೆಲವು ಅರಬಿಯೇತರ  ರಾಜರುಗಳಿಗೆ ಅದನ್ನು ನೇರವಾಗಿ ತಲುಪಿಸಬೇಕು.ಅದಕ್ಕಾಗಿ ಅದಕ್ಕಾಗಿ ತಮ್ಮಲ್ಲಿ ಕೆಲವರು ತಯ್ಯಾರಾಗಬೇಕು!''

  ನಂತರ ಪ್ರವಾದಿ  (ಸ.ಅ) ರವರು ಸಭೆಯಿಂದ ಆರು ಸ್ವಹಾಬಿಗಳನ್ನು ಕರೆದರು.ಅವರಲ್ಲೊಬ್ಬ ನಾನಾಗಿದ್ದೆ ಅಬ್ದುಲ್ಲಾಹಿಬ್ನ್ ಹುದಾಫ ನೆನಪಿಸಿಕೊಂಡರು.ಪ್ರವಾದಿವರ್ಯರು ಕರೆದಾಗ ಕೂಡಲೇ ಅವರ ಸನ್ನಿಧಿಗೆ ಹೋದೆ ಪ್ರವಾದಿವರ್ಯರು ಒಂದು ಕಾಗದ ತೆಗೆದು ತನ್ನತ್ತ ನೀಡಿದರು.

  ''ಇದು ಕಿಸ್ರಾ ರಾಜರಿಗೆ ತಲುಪಿಸಬೇಕಾದದ್ದು ಪೇರ್ಶ್ಯಾ ರಾಜ್ಯಕ್ಕೆ ಹೋಗಿ ಈ ಕಾಗದವನ್ನು ಕಿಸ್ರಾ ರಾಜರಿಗೆ ನೀಡಬೇಕು  ತಯಾರಿದ್ದಿ ತಾನೇ?''

  ಪ್ರವಾದಿ  (ಸ.ಅ)ರವರ ಮಾತನ್ನು ಪಾಲಿಸುವುದಕ್ಕಿಂತ ದೊಡ್ಡ ಯಾವುದೇ ಕಾರ್ಯಗಳೂ ಮಾಡಲಿಕ್ಕಿಲ್ಲ.ದೌತ್ಯ ನಿರ್ವಹಣೆಯೇ ನನ್ನ ಪ್ರಧಾನ ಗುರಿ ಅದರಿಂದ ನನಗೇನು ನಷ್ಟ ಹೊಂದಲಿಕ್ಕಿಲ್ಲ.ಕಿಸ್ರಾ ರಾಜ ಸತ್ಯವನ್ನು ಗ್ರಹಿಸಿ ಮನಪರಿವರ್ತನೆಯಾದರೆ ಅದಕ್ಕಿರುವ ಪ್ರತಿಫಲವನ್ನು ವರ್ಣಿಸಲಸಾಧ್ಯ.ಇನ್ನು ವಧಿಸಲ್ಪಟ್ಟರೇ ರಕ್ತ ಸಾಕ್ಷಿಯ ಪ್ರತಿಫಲ ಮತ್ತೆ ಯಾಕೆ ಭಯಪಡಬೇಕು. ಒಂದೇ ಒಂದು ದುಃಖವೇ ಇರುವುದು ಅದೇನೆಂದರೆ ಹಲವಾರು ದಿವಸಗಳವರೆಗೆ ಪ್ರವಾದಿವರ್ಯರಿಗಿಂತ ದೂರ ನಿಲ್ಲಬೇಕೆಂಬ ಕೊರಗು. ಆ ಕಂಗೊಳಿಸುವ ಮುಖವನ್ನು ನೋಡಲು ಸಾಧ್ಯವಾಗದ ಅವರ ಸಾಮಿಪ್ಯವಿಲ್ಲದ ನಿಮಿಷಗಳನ್ನು ಕಳೆಯುವುದು ಬಹಳ ಪ್ರಯಾಸದ ಸಂಗತಿಯಾಗಿರಬಹುದು.

   ''ಪ್ರವಾದಿವರ್ಯರೇ.... ನಾನು ತಯಾರಿದ್ದೇನೆ ಕಿಸ್ರಾ ರಾಜ ಮಾತ್ರವಲ್ಲ ಯಾವುದೇ ಬಲಾಢ್ಯರ ಸಮೀಪಕ್ಕೆ ಪ್ರವಾದಿವರ್ಯರ ಹಾಗೂ ಇಸ್ಲಾಮಿನ ಅವಶ್ಯಕತೆಗಾಗಿ ಹೋಗಬೇಕಾಗಿ ಬಂದರೂ ನಾನು  ತಯಾರಿದ್ದೇನೆ ರಸೂಲರೇ....!''

  ಪ್ರವಾದಿ  (ಸ.ಅ)ರವರು ಅತೀವ ಸಂತುಷ್ಟರಾದರು.ಆ ಮುಖವೂ ಪೂರ್ಣಚಂದ್ರನಂತೆ ಆಕರ್ಷಕವಾದ ಪ್ರಭೆಗಳಿಂದ ಕಂಗೊಳಿಸತೊಡಗಿತು.ಪ್ರವಾದಿ ವರ್ಯರ ದಿವ್ಯ ಹಸ್ತದಿಂದ ಕಾಗದವನ್ನು  ಪಡೆದುಕೊಂಡು ಪ್ರವಾದಿ ವರ್ಯರಿಂದ ಬಿಳ್ಕೂಂಡು ಕುಟುಂಬಸ್ಥರಿಂದಲೂ ಬೀಳ್ಕೊಂಡು ತನ್ನ ದೌತ್ಯ ನಿರ್ವಹಿಸುವಾಸನೆಯನ್ನು ತರಾತುರಿಯೊಂದೆಗೆ ಪೇರ್ಶ್ಯಾ ಭೂಮಿಯತ್ತ ಪ್ರಯಾಣ ಬೆಳೆಸಿದರು.

    ನಾಗಲೋಟದಿಂದ ಬರುತ್ತಿರುವ  ಹುದಾಫರನ್ನು ಕಾವಲುಗಾರರಾದ ಭಟರು ತಡೆದು.ಅವರಲ್ಲೊಬ್ಬರು ಕೇಳಿದರು.
   ''ತಾವು ಯಾರು? ''
  "ನಾನು ಅಬ್ದುಲ್ಲಾಹಿಬ್ನು ಹುದಾಫ "

  "ಎಲ್ಲಿಂದ ಬರುತ್ತಿರುವುದು?"
  "ಅರೇಬಿಯಾದ ಮದೀನಾ ಪುಣ್ಯ ಭೂಮಿಯಿಂದ "

  "ಏನು ಬೇಕು? ಯಾತಕ್ಕಾಗಿ ಬಂದದ್ದು? "
  "ನಿಮ್ಮ ಮಹಾರಾಜರನ್ನು ನೋಡಬೇಕು "

  "ಯಾಕಾಗಿ? "
  "ಈ ಕಾಗದವನ್ನು ಕೊಡಲು"

  "ಕಾಗದವೇ ಯಾರ ಕಾಗದ? "
  "ನಮ್ಮ ನೇತಾರ ಹಾಗೂ ಮದೀನಾದ ಮಹಾರಾಜ ಮುಹಮ್ಮದ್  (ಸ.ಅ)ರವರದ್ದು ಕಿಸ್ರಾ ರಾಜರಿಗಾಗಿ ಕಳುಹಿಸಿದ್ದು ತಲುಪಿಸಲು ಬಂದಿದ್ದೇನೆ.
 
 ಅದನ್ನು ನಾನೇ ನೇರವಾಗಿ ನೀಡಬೇಕು ಅದಕ್ಕೆ ನನಗೆ ಅನುಮತಿ ನೀಡಬೇಕು?

  ರಾಜ ಅನುಮತಿ ನೀಡುತ್ತಾನಾ ???..
  ರಾಜನ ಪ್ರತಿಕ್ರಿಯೆ ಹೇಗಿರಬಹುದು????...

  ಧೀರತೆಯೊಂದಿಗಿನ ಮಾತು

  "ಇಲ್ಲಿ ನಿಲ್ಲಿ ನಮ್ಮ ಮಹಾರಾಜರಿಗೆ ವಿಷಯ ತಿಳಿಸಬೇಕು ಅವರು ಸಮ್ಮತಿ ನೀಡಿದರೆ ಮಾತ್ರ ಸಂದರ್ಶಕರನ್ನು  ಒಳಗೆ ಪ್ರವೇಶಿಸಲು ಅನುಮತಿ ನೀಡುವುದು ಇಲ್ಲಿ ಕಾಯುತ್ತೀರಿ... ನಾನೀಗ ಬರುತ್ತೇನೆ. "

  "ಕಾವಲುಗಾರನು ವಿವರದೊಂದಿಗೆ ಅರಮನೆಯತ್ತ ಧಾವಿಸಿದ ರಾಜ ಸನ್ನಿಧಿಗೆ ತಲುಪಿ ಸ್ವರ್ಣ ಸಿಂಹಾಸನದಲ್ಲಿ ಅಸೀನನಾಗಿದ್ದ ಕಿಸ್ರಾ ಚಕ್ರವರ್ತಿಯೊಂದಿಗೆ ನಮ್ರತೆಯೊಂದಿಗೆ ವಿಷಯವನ್ನು ತಿಳಿಸಿದ.

  "ಅರೇಬಿಯಾದ ಮದೀನಾ ಪ್ರದೇಶದ ಭರಣಾಧಿಕಾರಿಯ ಒಂದು ಪ್ರತಿನಿಧಿ ಇಲ್ಲಿಗೆ ಬಂದಿದ್ದಾರೆ.ಅಲ್ಲಿಯ ರಾಜರ ಪತ್ರದೊಂದಿಗೆ.ಅವರು ಇಲ್ಲಿಯ ಮಹಾ ಪ್ರಭುಗಳಾದ ತಮ್ಮನ್ನು ಕಾಣಬೇಕೆಂದು ಅಪೇಕ್ಷ ಪಡುತ್ತಿದ್ದಾರೆ."

  "ಒಳ ಬರಲು ಹೇಳು" ರಾಜರ ಅನುಮತಿ ಲಭಿಸಿತು ಹಿಂದಿರುಗಿದ ಕಾವಲುಗಾರನನ್ನು ರಾಜನು ಮತ್ತೊಮ್ಮೆ ಕರೆದು ಪ್ರಶ್ನಿಸಿದ.
  "ಅವನು ಯಾರೆಂದು ಹೇಳಿದ್ದು...?"
  "ಮದೀನಾ ಭರಣಾಧಿಕಾರಿಯ ಪ್ರತಿನಿಧಿ ಎಂದು ಹೇಳಿದ್ದಾರೆ"

  "ಓಹೋ...ಹಾಗಾದರೆ ಅವನನ್ನು ಇಲ್ಲಿಗೆ ಪ್ರವೇಶಕ್ಕೆ ಅನುಮತಿ ನೀಡುವುದಕ್ಕೆ ಮುಂಚೆ ಕೆಲವು ಕಾರ್ಯಗಳನ್ನು ಮಾಡಬೇಕಾಗಿದೆ. ಯಾರಲ್ಲಿ?"

  ಕಿಸ್ರಾ ರಾಜರ ಘರ್ಜನೆ! ರಾಜ ಭಟರು  ಓಡೋಡಿ ಬಂದರು.

  "ಏನು  ಪ್ರಭು.... ತಮ್ಮ  ಆಜ್ಞೆಯಾಗಲಿ...."

 "ಕೂಡಲೇ ನಮ್ಮ ದರ್ಬಾರನ್ನು ಅಲಂಕರಿಸಬೇಕು.ನಮ್ಮ ಅಧಿಕೃತ ಪಂಡಿತರನ್ನೂ ಪ್ರಮುಖರನ್ನು ಕರೆಸಿಕೊಳ್ಳಬೇಕು ಎಲ್ಲರೂ  ಅತೀ ದುಬಾರಿಯಾದ ವಸ್ತ್ರಗಳನ್ನು ಧರಿಸಬೇಕು.ನಮ್ಮ ಪ್ರೌಢಿಮೆಯನ್ನು ಐಶ್ವರ್ಯವನ್ನು ನೋಡಿ ಆ ಪ್ರತಿನಿಧಿ ಆಶ್ಚರ್ಯ ಚಕಿತನಾಗಬೇಕು."

   ಯಾವುದೇ ಕಾರ್ಯದಲ್ಲಿಯೂ ಕಡಿಮೆಯಾದದ್ದಾಗಿ ನನಗೆ ಗೋಚರಿಸಬಾರದು ಎಲ್ಲವನ್ನು ಬಹಳ ಬೇಗನೆ ಮಾಡಬೇಕು.

  ಕೆಲವು ನಿಮಿಷಗಳಲ್ಲಿಯೆ ರಾಜಾಜ್ಞೆಯಂತೆ ಎಲ್ಲವೂ ತಯ್ಯಾರಾಯಿತು.ರಾಜ ದರ್ಬಾರು ಮಾತ್ರವಲ್ಲ ಅರಮನೆಯೇ ಅಲಂಕಾರದಿಂದ ಕಂಗೊಳಿಸತೊಡಗಿತು. ತತ್ವಜ್ಞಾನಿಗಳು ಬಹುಭಾಷಾ ಪಂಡಿತರು ಪ್ರಮುಖ ವ್ಯಕ್ತಿತ್ವಗಳು ಪ್ರತ್ಯೇಕ ಆಸನಗಳಲ್ಲಿ ಆಸೀನರಾದರು.ಎಲ್ಲರೂ ಅತೀ ದುಬಾರಿಯಾದ ವಸ್ತ್ರಗಳನ್ನು ಧರಿಸಿ ಅವತ್ತಿಗೆ ತಕ್ಕಂತೆ ಆಧುನಿಕತೆಯ ಗುಂಗಿನಲ್ಲಿ ಮೈಮರೆಯುತ್ತಿದ್ದರು.

  ಇವುಗಳಿಂದ ಸಂತೃಪ್ತನಾದ ಕಿಸ್ರಾ ರಾಜ ಆ ಪ್ರತಿನಿಧಿಯನ್ನು ಒಳಗೆ ಬಿಡಲು ಅನುಮತಿ ನೀಡಿದ.

  ಮಹಾರಾಜರು ಮುಖ್ಯ ದ್ವಾರದತ್ತ ನೋಡುತ್ತಾ ಮದೀನಾ ಮಹಾರಾಜರ ಪ್ರತಿನಿಧಿಯ ನಿರೀಕ್ಷೆಯಲ್ಲಿ ಕಾಯುತ್ತಿದ್ದರು.

  ಆ ಪ್ರತಿನಿಧಿಯ ವೇಷ ವಿಧಾನಗಳು ನಮ್ಮಿಂದಲೂ ದುಬಾರಿಯಾದದ್ದಾಗಿರಬಹುದೇ? ಅವರ ಪ್ರೌಢಿಮೆ ಗಾಂಭೀರ್ಯತೆ ನಮ್ಮ  ಪ್ರೌಢತೆಯನ್ನೂ ಗಾಂಭೀರ್ಯತೆಯನ್ನು  ಮರೆ ಮಾಚುವಂತದ್ದಾಗಿರಬಹುದೇ? ನಮ್ಮ ಈ ಅಲಂಕಾರವನ್ನು ಅವರು ಗಣನೆಗೆ ತೆಗೆದುಕೊಳ್ಳದೇ ಇರಬಹುದೇ ? ಇಲ್ಲ ಇದೆಲ್ಲವನ್ನು ನೋಡಿ ಯಾರೇ ಆದರೂ ಆಶ್ಚರ್ಯವಾಗದಿರಲಿಕ್ಕಿಲ್ಲ.ಇದಕ್ಕಿಂತಲೂ ಜಾಸ್ತಿಯಾದ ಅಲಂಕಾರ ಬೇರೆ  ಯಾರಿಂದಲೂ  ಮಾಡಲು ಸಾಧ್ಯವಿಲ್ಲ.ಈ ಪ್ರೌಡಿಮೆ ಆ ಐಶ್ವರ್ಯ ನನಗಲ್ಲದೇ ಪ್ರಪಂಚದಲ್ಲಿ ಬೇರೆ ಯಾರಿಗೂ ಇರಲಾರದು ರಾಜನು ಅಹಂಕಾರದಿಂದ ಬೀಗ ತೊಡಗಿದ.

   ಅಬ್ದುಲ್ಲಾ ರಾಜ ದರ್ಬಾರಿಗೆ ಪ್ರವೇಶಿಸಿದರು.ಎಲ್ಲರೂ ಅವರನ್ನು ಗಮನವಿಟ್ಟು ನೋಡಿದರು.ಅತೀ ಕಡಿಮೆ ಬೆಲೆಯ ಅಲ್ಲಲ್ಲಿ ಬಿರುಕು ಬಿಟ್ಟಂತೆ ತೋರುವ ಹಳೆಯ ವಸ್ತ್ರ ಕಪ್ಪಾದ ಗಡ್ಡ ಮಣಿಗಂಟಿಗಿಂತ ಮೇಲೆಯಾದ ಲುಂಗಿ ಶರೀರಕ್ಕೆ ಹೊದ್ದಂತಹಾ ಒಂದು  ವಸ್ತ್ರ ಕಿಸ್ರಾ ರಾಜರಿಗೆ ಇದು ಬಹಳ ನಿಕೃಷ್ಟವಾಗಿ ಬಾಸವಾಯಿತು.

   "ನಮ್ಮ ವೇಷ ವಿಧಾನಗಳಿಗೆ ಹೋಲಿಸುವಾಗ ವಿಕೃತವಾದ ವೇಷ ಇವನೂ ಮದೀನಾ ರಾಜರ ಪ್ರತಿನಿಧಿ....? ಒಂದು ಭಿಕ್ಷುಕನಂತೆ  ಕಾಣುತ್ತಿದ್ದಾನೆ " ರಾಜರ ಪರಿಹಾಸ್ಯ ಭರಿತ ಮಾತುಗಳು.

  ಅರಮನೆ ದರ್ಭಾರಿನಲ್ಲಿ ಪರಿಹಾಸ್ಯದ ನಗೆಗಡಲು ಹರಿಯ ತೊಡಗಿತು.

     ಆದರೆ  ಅಬ್ದುಲ್ಲ  ಇದರಿಂದ ಭೀತಿಗೊಳ್ಳಲಿಲ್ಲ.ಧೀರತೆಯೊಂದಿಗೆ ತಲೆ  ಎತ್ತಿ ಧೀರತೆ ಹಾಗೂ  ಗಂಡೆದೆಯೊಂದಿಗೆ ಕಿಸ್ರಾ ಚಕ್ರವರ್ತಿಯ ಸಮೀಪಕ್ಕೆ ನಡೆದರು.

     ಅಬ್ದುಲ್ಲಾಹಿಬ್ನ್ ಹುದಾಫ (ರ)ರವರ ಆವೇಶಭರಿತರಾಗಿ ಕಿಸ್ರಾ ಚಕ್ರವರ್ತಿಯು ಗಾಂಭೀರ್ಯತೆಯೊಂದಿಗೆ ನಡೆದರು.ಆ ಮುಖದಲ್ಲಿ ಪ್ರಜ್ವಲಿಸುವ ಧೀರತೆಯನ್ನು ಗ್ರಹಿಸಿದ  ಚಕ್ರವರ್ತಿ ಹಾಗೂ  ಅನುಯಾಯಿಗಳು ಒಮ್ಮೆ ನಡುಗಿದರು.ಯಾವುದೇ ಆಡಂಭರವಿಲ್ಲದ ವೇಷ ವಿಧಾನವಾಗಿದರೂ ಗಾಂಭಿರ್ಯತೆಯೂ ಹೊರ ಸೂಸುವ ಮುಖ ಯಾರಿಗೂ ತಲೆಭಾಗಿಸಲಾರನೆಂಬ ಭಾವ ಮೈಂದಕ್ಕಿರಿಸಿದ ಪಾದಗಳನ್ನು ಹಿಂದಕ್ಕೆ ಸರಿಸಲಾರನೆಂಬ ದೃಢ ನಿರ್ಧಾರವಂತ.ಕಿಸ್ರಾದ ಚಕ್ರವರ್ತಿಗೆ ಇವುಗಳು ಸರಿ ಕಾಣಲಿಲ್ಲ.

   "ಛೇ....! ಯಾರಿವನು....! ನಮ್ಮ ದರ್ಬಾರಿಗೆ ಪ್ರವೇಶಿಸುವಾಗ ನಮಗೆ ತಲೆಭಾಗಿಸದೇ ವಿದೇಯತೆ ತೋರದೇ ಬರಬಾರದೆಂಬ ತಿಳುವಳಿಕೆ ಕೂಡ ಇಲ್ಲದವನ್ನು ನಮ್ಮೆದುರಿಗೆ ಧೀರತೆಯೊಂದಿಗೆ ಬರುತ್ತಿದ್ದಾನಲ್ಲಾ ? ಧಿಕ್ಕಾರಿ !" ಎಂದು ಆರ್ಭಟಿಸುತ್ತಾ ಆ ಪತ್ರವನ್ನು  ತೆಗೆದುಕೊಳ್ಳಲು  ತನ್ನ ಸೇವಕನೊಂದಿಗೆ ಆಜ್ಞಾಪಿಸಿದ ಆದರೆ ಅಬ್ದುಲ್ಲಾಹಿಬಿನ್ ಹುದಾಫ (ರ) ರವರು ಪತ್ರವನ್ನು ಆ ದಾಸನ ಕೈಯಲ್ಲಿ ಕೊಡಲು ತಯ್ಯಾರಾಗಲಿಲ್ಲ.ಅವರು ಹೇಳಿದರು. "ಈ ಪತ್ರವನ್ನು  ನಾನು  ನಿಮ್ಮೊಂದಿಗೆ ಕೊಡುವುದಿಲ್ಲ ತನ್ನ ನಾಯಕ ಇದನ್ನು ಇಲ್ಲಿಯ ರಾಜರಿಗೆ ನೀಡಬೇಕೆಂದಾಗಿದೆ ನನ್ನೊಂದಿಗೆ ಆಜ್ಞಾಪಿಸಿದ್ದು ಅದಕ್ಕೆ ವಿರುದ್ಧವಾಗಿ ಯಾವುದೇ ಕಾರಣದಿಂದಲೂ ನಾನು ಮುಂದುವರಿಯಲಾರೆ.ದಾರಿಬಿಡಿ ನಾನಿದನ್ನು ರಾಜರಿಗೆ ಕೊಡುತ್ತೇನೆ. "

  ರಾಜನು ಆಶ್ಚರ್ಯಚಕಿತನಾದ  ಹಲವಾರು ರಾಜರುಗಳ ಪ್ರತಿನಿಧಿಗಳನ್ನು ನಾನು ನೋಡಿದ್ದೇನೆ ಆದರೆ ತಮ್ಮ ನಾಯಕರನ್ನು ಇಷ್ಟೊಂದು ಆಗಾಧವಾಗಿ ಪ್ರೀತಿಸುವ ನಿಷ್ಠಾವಂತ ಅನುಯಾಯಿಯನ್ನು ಇದುವರೆಗೆ ನೋಡಲಿಲ್ಲ. ಇಷ್ಟೊಂದು ಪ್ರೀತಿಸುವ ಓರ್ವ ಅನುಯಾಯಿಯಾರದೂ ನನಗಿದೆಯೇ?

  ಚಕ್ರವರ್ತಿ ಒಂದು ನಿಮಿಷ ಚಿಂತಾಮಗ್ನನಾದ ರಾಜಭಟರೊಂದಿಗೆ ಅವರನ್ನು ತನ್ನ ಸಮೀಪಕ್ಕೆ ಬರಲು  ಅನುಮತಿ ನೀಡಿದರು. ರಾಜಭಟರು ದಾರಿ ಬಿಟ್ಟು ಕೊಟ್ಟರು ಅಬ್ದುಲ್ಲಾ ಕಿಸ್ರಾ ಚಕ್ರವರ್ತಿಯ ಸಮೀಪಕ್ಕೆ ನಡೆದರು.ಪ್ರವಾದಿವರ್ಯರ ಪತ್ರವನ್ನು ಗೌರವದೊಂದಿಗೆ ನೀಡಿದರು.ಮನಸ್ಸಿಗೆ ಸಮಾಧಾನ ಪ್ರವಾದಿವರ್ಯರು ವಹಿಸಿ ಕೊಟ್ಟಂತಹ ದೌತ್ಯವನ್ನು ನಿರ್ವಹಿಸಿದ್ದೇನಲ್ಲಾ ಅಲ್ಹಂದುಲಿಲ್ಲಾ...

   ಕಿಸ್ರಾ ಆ ಪತ್ರದ ಲಕೋಟೆಯನ್ನು ಒಡೆದ ಪತ್ರವನ್ನು ಹೊರತೆಗೆದ ಅತೀ ಉತ್ತಮವಾದ ಕೈ ಬರಹದಲ್ಲಿ ಯಾವುದೇ ಚಿತ್ತಿಲ್ಲದೇ ಸ್ವುಟವಾಗಿ ಬರೆದ ವಿವರಗಳು  ನೋಡಲು ಬಹಳ ಅಂದವಾಗಿದೆ.ರಾಜನು ಪತ್ರವನ್ನು ಆಚೀಚೆ ತಿರುಗಿಸಿ ನೋಡಿದ ಅರಬಿ ಭಾಷೆಯಲ್ಲಿ ಬರೆಯಲಾಗಿದೆ.ರಾಜರಿಗೆ ತಿಳಿಯದ ಭಾಷೆ

  ಕಿಸ್ರಾ ರಾಜದರ್ಬಾರಿನಿಂದ ಒಬ್ಬರನ್ನು ಕರೆದರು ಅರಬಿ ಭಾಷಾ ಜ್ಞಾನಿ ಪತ್ರವನ್ನು ಅವರ ಕೈಗೆ ನೀಡಿದ ಅವರು ಆ ಪತ್ರವನ್ನು ಪಡೆದು ಓದತೊಡಗಿದರು.ಅಲ್ಲಾಹನ ನಾಮದೊಂದಿಗೆ ಅಲ್ಲಾಹುವಿನ ದಾಸ ಅಬ್ದುಲ್ಲಾರ ಮಗು ಮುಹಮ್ಮದ್ ರಿಂದ ಪೇರ್ಷ್ಯಾ ಚಕ್ರವರ್ತಿಗೆ.ಸನ್ಮಾರ್ಗವನ್ನು ಸ್ವೀಕರಿಸಿದವರಿಗೆ ಸಲಾಂ.....

  ಇಷ್ಟು ಕೇಳುವುದರೊಂದಿಗೆ ಕಿಸ್ರಾ ಕೋಪಾಗ್ನಿಯಿಂದ ಕುದಿಯತೊಡಗಿದ ಬಾಕಿವಿವರವನ್ನು ಕೇಳಲು ಅವನು ತಯ್ಯಾರಾಗಲಿಲ್ಲ....

  ರಸೂಲುಲ್ಲಾಹೀ (ಸ.ಅ)ರವರ ಹೆಸರು ಪತ್ರದಲ್ಲಿ ಮೊದಲು ಬರೆದದ್ದು ಅವನನ್ನು ಆಕ್ರೋಶಗೊಳ್ಳುವಂತೆ ಮಾಡಿತ್ತು.ಅವನು ಆ ಪತ್ರವನ್ನು ತೆಗೆದು ಹರಿದು ಚಿಂದಿ ಮಾಡಿ ಪರಿಹಾಸ್ಯದಿಂದ ನಾಲ್ಕು ಭಾಗಗಳಿಗೆ ಬಿಸಾಡುತ್ತಾ ಕೋಪದಿಂದ ಅಬ್ಬರಿಸಿದ "ಇವನನ್ನು ಹಿಡಿದು ಹೋರದಬ್ಬಿರಿ" ಆಜ್ಞೆ ಹೊರಬೀಳುವುದೇ ತಡ ರಾಜಭಟರು ಓಡುತ್ತಾ ಬಂದರು ಅಬ್ದುಲ್ಲಾಹಿಬಿನ್ ಹುದಾಫ ರವರನ್ನು ಹಿಡಿದು ಅರಮನೆಯ ಹೊರಗೆ ಕಳುಹಿಸಿದರು ಅಬ್ದುಲ್ಲಾ ಆಲೋಚಿಸಿದರು ಕಿಸ್ರಾ ಕೋಪಿಸ್ಟನಾಗಿದ್ದಾನೆ ಈಗ ಏನು ಬೇಕಾದರೂ ಘಟಿಸಬಹುದು.

   ರೋಶದಲ್ಲಿ ನನ್ನನ್ನು ಕೊಲ್ಲಲಿಕ್ಕಾಗಿ ಆಜ್ಞಾಪಿಸಬಹುದು ಏನು ಮಾಡುವುದು? ನನ್ನ ದೌತ್ಯ ನಿರ್ವಹಣೆ ಮುಗಿದ ಕಾರಣ ಊರಿಗೆ ಹಿಂತಿರುಗಬಹುದೇ? ಅಥವಾ ಇಲ್ಲಿಯೇ ನಿಲ್ಲಬೇಕೇ? ಅವರನ್ನು ಮತ್ತೊಮ್ಮೆ ಭೇಟಿಯಾಗಿ ವಿವರವನ್ನು ತಿಳಿಸಬೇಕಾಗಿ ಬರಬಹುದೇ?

  ಬೇಡ ಇನ್ನೊಮ್ಮೆ ಬೇಟಿಯಾಗಬೇಕೆಂದಿಲ್ಲಾ ಅದಕ್ಕೆ ಅವಕಾಶವೂ ಸಿಗಲಿಕ್ಕಿಲ್ಲ.ಪ್ರವಾದಿ  (ಸ.ಅ)ರವರು ನನಗೆ ವಹಿಸಿದ್ದು ಪತ್ರವನ್ನು ಕಿಸ್ರಾ ಚಕ್ರವರ್ತಿಗೆ ನೀಡಲಿಕ್ಕಾಗಿದೆ. ಆ ಕೆಲಸವನ್ನು ಯಾವುದೇ ಹಿಂಜರಿಕೆಯಿಲ್ಲದೇ ನಾನು ನಿರ್ವಹಿಸಿದ್ದೇನೆ ಇನ್ನು ಇಲ್ಲಿಂದ ಪ್ರವಾದಿ  (ಸ.ಅ) ಸನ್ನಿಧಿಗೆ ಹಿಂತಿರುಗುವ ಅವರೊಂದಿಗೆ ನಡೆದ ಕಾರ್ಯಗಳನ್ನು ವಿವರವಾಗಿ ತಿಳಿಸುವ ಮತ್ತೆ ಆಲೋಚಿಸುತ್ತಾ ನಿಲ್ಲಲಿಲ್ಲ. ತನ್ನ ಕುದುರೆಯನ್ನು ಹತ್ತಿ ಕುಳಿತು ನಾಗಾಲೋಟದೊಂದಿಗೆ ಪ್ರವಾದಿವರ್ಯರ ಸನ್ನಿಧಿಗೆ ದೌಡಾಯಿಸಿದರು.

   ಕೋಪಾಗ್ನಿಯೂ ತಣಿದಾಗ ಕಿಸ್ರಾ ಚಕ್ರವರ್ತಿಗೆ ದುಃಖವಾಯಿತು ಪತ್ರವನ್ನು ಹರಿದು ಬಿಸಾಡಿದ್ದು ತಪ್ಪಾಯಿತೆಂಬ ಭಾವನೆ. ಅದು ಬರೇ ಒಂದು ಸಾಧಾರಣ  ಪತ್ರವಾಗಿರಲಿಲ್ಲ ಮದೀನಾ ಮಹಾರಾಜರ ಪತ್ರವಾಗಿದೆ ಅವರು ಇದು ತಿಳಿದರೆ.... ಇನ್ನು ಮುಂದೆ  ಏನು ಘಟಿಸಬಹುದು? ಅತೀ ಧೀರತೆಯವನಾಗಿದ್ದರೂ ಕಿಸ್ರಾ ಚಕ್ರವರ್ತಿಗೆ ಭೀತಿಯುಂಟಾಗತೊಡಗಿತು.ಪತ್ರದಲ್ಲಿ ಏನು ಬರೆದಿದೆ ಎಂದು ತಿಳಿಯಲಿಲ್ಲ ಏನಾಗಿರಬಹುದು ಅದರಲ್ಲಿ ಬರೆದದ್ದು? ಅದನ್ನು ತಿಳಿದುಕೊಳ್ಳಲು ಒಂದೇ ಒಂದು ದಾರಿಯಿರುವುದು ಆ ಪ್ರತಿನಿಧಿಯನ್ನು ಮತ್ತೊಮ್ಮೆ ಒಳಗೆ ಆಹ್ವಾನಿಸುವುದು ಅವರೊಂದಿಗೆ  ವಿಷಯ ಕುರಿತು ಕೇಳಿ ತಿಳಿದು ಕೊಳ್ಳುವುದು.

  ಕೂಡಲೇ ಹುದಾಫರನ್ನು ರಾಜಸನ್ನಿಧಿಗೆ ಹಾಜರುಗೊಳಿಸಲು ಆಜ್ಞಾಪಿಸಲಾಯಿತು.ಆದರೆ ಆಗಲೇ ಅಲ್ಲಿಂದ ಅವರು ಹೊರಟು ಬಂದಿದ್ದರು ಅರಮನೆ ನಾಲ್ಕು ಭಾಗಗಳಲ್ಲಿ ಹುಡುಕಿದರೂ ಅವರನ್ನು ಕಂಡುಹಿಡಿಯಲು ಸಾಧ್ಯವಾಗಲಿಲ್ಲ.

   ಅಬ್ದುಲ್ಲಾ ಮದೀನಕ್ಕೆ ತಲುಪಿದರು ಪ್ರವಾದಿ  (ಸ.ಅ)ರವರ ಪವಿತ್ರ ಸನ್ನಿಧಿಗೆ ತಲುಪಿ ಕಾರ್ಯಗಳನ್ನು ವಿವರಿಸಿದರು ಎಲ್ಲವನ್ನೂ ಆಲಿಸಿದ ಪ್ರವಾದಿ  (ಸ.ಅ)ರವರು ಹೇಳಿದರು. ಹಾಗಾದರೆ ಅವನ ದುರಹಂಕಾರವನ್ನು ಅಲ್ಲಾಹನು ಹರಿದು ಚಿಂದಿಮಾಡುವನು ಪ್ರವಾದಿವರ್ಯರ ಮಾತುಗಳು.ಎಲ್ಲರೂ ಅದನ್ನು ಆಲಿಸಿದರು ಅಲ್ಲಾಹನ ರಸೂಲರಾಗಿದೆ ಇದನ್ನು ಹೇಳುತ್ತಿರುವುದು ಖಂಡಿತವಾಗಿಯೂ ಅದು ಉಂಟಾಗುತ್ತದೆ ಸಂಶಯಕ್ಕೆ ಆಸ್ವದವೇ ಇಲ್ಲ

  ಮದೀನಾ ಪ್ರತಿನಿಧಿಯನ್ನು ಕಂಡುಹಿಡಿಯಲು ಸಾಧ್ಯವಾಗದೆ ರಾಜಭಟರು ಹಿಂತಿರುಗಿ ಬಂದಾಗ ಕಿಸ್ರಾ ಚಕ್ರವರ್ತಿಯ ಹಠ ಜಾಸ್ತಿಯಾಯಿತು ಅವನು ಕೂಡಲೇ ಒಂದು ಪತ್ರವನ್ನು ಬರೆದ ಯಮನಿನಲ್ಲಿ ಅಧಿಕಾರ ನಡೆಸುತ್ತಿರುವ ಬಾದಾನ್ ರಾಜರಿಗೆ.... ಅರೇಬ್ಯಾದ ಯಸ್ರಿಬ್ನಲ್ಲಿ  ಪ್ರತ್ಯಕ್ಷಗೊಂಡ ನಾಯಕ  (ಮುಹಮ್ಮದ್ ನೆಬಿ ಸ.ಅ)ರನ್ನು ಸಾಧ್ಯವಾದಷ್ಟು ಬೇಗ ನನ್ನ ಮುಂದೆ ಹಾಜರು ಪಡಿಸಬೇಕು.

  ಕಿಸ್ರಾ ಚಕ್ರವರ್ತಿಯ ಆಜ್ಞಾಪಿಸಿದ ಕೂಡಲೇ ಬದಾನ್ ತನ್ನ ಸಮರ್ಥರಾದ ಭಟರನ್ನು ಕರೆದು ಈ ರೀತಿ ಆಜ್ಞಾಪಿಸಿದ ನೀವು ಅರೇಬ್ಯಾದ ಯಸ್ರಿಬ್ಗೆ ಹೋಗಬೇಕು ಅಲ್ಲಿಯ ಆಗುಹೋಗುಗಳ ಕುರಿತು ಅವಲೋಕಿಸಬೇಕು.ಅಲ್ಲಿಯವರ ನಾಯಕರನ್ನು ಹೋಗಿ ಭೇಟಿಯಾಗಬೇಕು.ಕಿಸ್ರಾ ಚಕ್ರವರ್ತಿಯ ಮಹಾತ್ಮೆಗಳನ್ನು, ಪದವಿಗಳನ್ನು ಅವರಿಗೆ ವಿವರಿಸಿ ಹೇಳಬೇಕು. ನಂತರ ಅವರೊಂದಿಗೆ ಕಿಸ್ರಾ ಚಕ್ರವರ್ತಿಯ ಮುಂದೆ ಹಾಜರಾಗಬೇಕು.

  "ಹೂಂ ಬೇಗ...
   
   ಪ್ರವಾದಿವರ್ಯರಿಗೆ ಕೊಡಲಿಕ್ಕಾಗಿ ಅವನು ಒಂದು ಪತ್ರವನ್ನು ರಾಜಭಟರೊಂದಿಗೆ ನೀಡಿದ ಬದಾನಿನ ಭಟರು ಮದೀನಕ್ಕೆ ತಲುಪಿ ಪ್ರವಾದಿ  (ಸ.ಅ)ರವರ ಮುಂದೆ ಹಾಜರಾದರು ಮಾತುಕತೆಯ ಕೊನೆಯಲ್ಲಿ ಅವರು ಹೇಳಿದರು ನಿಮ್ಮನ್ನು ಕರೆದುಕೊಂಡು ಪೇರ್ಷ್ಯಾಕ್ಕೆ ಹೋಗಬೇಕಾಗಿ ಕಿಸ್ರಾ ರಾಜರೂ ಆಜ್ಞಾಪಿಸಿದ್ದಾರೆ. ನಾವು ಹೇಳುವುದನ್ನು ಅನುಸರಿಸುವುದಾದರೆ ನಿಮಗೆ ಉತ್ತಮ. ಅಲ್ಲದಿದ್ದರೆ ಕಿಸ್ರಾ ಚಕ್ರವರ್ತಿಯ ಶಕ್ತಿ ನಿಮಗೆ ಗೊತ್ತಾಗಬಹುದು. ಏನು ನಮ್ಮೊಂದಿಗೆ ಬರಲು ತಯಾರಿದ್ದೀರಾ....?

   ಬೆದರಿಕೆಯ ಮಾತುಗಳನ್ನು ಕೇಳಿ ಪ್ರವಾದಿ  (ಸ.ಅ)ರವರು ಕಿರುನಗೆ ಬೀರಿದರು. ಪ್ರಪಂಚದ ಅಧಿಪನಾದ ಅಲ್ಲಾಹನಿಗಿಂತ ದೊಡ್ಡವನು ಹಾಗೂ ಶಕ್ತಿವಂತನು ಬೇರೆ ಯಾರೂ ಇಲ್ಲ.  ಕಿಸ್ರಾ ಚಕ್ರವರ್ತಿ ಸಹಿತ ಎಲ್ಲರನ್ನೂ ಸಂರಕ್ಷಿಸುವವನು ಅವನಾಗಿದ್ದಾನೆ ಮತ್ತೆ ಯಾತಕ್ಕಾಗಿ ಅಲ್ಲಾಹನ ದಾಸನಾದ ಕಿಸ್ರಾ ಚಕ್ರವರ್ತಿಯನ್ನು ಅಲ್ಲಾಹನ ಪ್ರವಾದಿ ಭಯಪಡಬೇಕು? ಪ್ರವಾದಿವರ್ಯರು ಅವರತ್ತ ನೋಡುತ್ತಾ ಕಿರುನಗೆಯೊಂದಿಗೆ ಹೇಳಿದರು ನೀವು  ಈಗ ನಿಮ್ಮ ವಾಸಸ್ಥಳಕ್ಕೆ ಹೋಗಿ ನಾಳೆ ಇಲ್ಲಿಗೆ ಬರಬೇಕು.

  ಅವರು ವಿರುದ್ಧವಾಗಿ ಏನನ್ನೂ ಹೇಳದೆ ಬೇಗನೇ ತಮ್ಮ ವಾಸ ಸ್ಥಳದತ್ತ ನಡೆದರು.

    ಮರು ದಿವಸ ಬಹಳ ಬೇಗನೇ ಅವರು ಪ್ರವಾದಿವರ್ಯರ ಸನ್ನಿಧಿಗೆ ತಲುಪಿದರು ಎನು ನಮ್ಮೊಂದಿಗೆ ಕಿಸ್ರಾ ಚಕ್ರವರ್ತಿಯ ಹತ್ತಿರ ಬರಲು  ತಯ್ಯಾರಿದ್ದೀರಲ್ಲಾ....?ಅಹಂಕಾರದೊಂದಿಗೆ ಎದೆಯುಬ್ಬಿಸಿ ಅವರು ಕೇಳಿದರು ಪ್ರವಾದಿವರ್ಯರು ಯಾವುದೇ ಭಾವವ್ಯತ್ಯಾಸವಿಲ್ಲದೇ ಕಿರುನಗೆ ಬೀರುತ್ತಾ ಹೇಳಿದರು

  "ನಿಮಗಿನ್ನು  ಕಿಸ್ರಾ ಚಕ್ರವರ್ತಿಯನ್ನು ಕಾಣಲು ಸಾಧ್ಯವಿಲ್ಲ. "

  ಯಾಕೆ....ಅವರು ಆಶ್ಚರ್ಯದೊಂದಿಗೆ ಕೇಳಿದರು

  ಅಲ್ಲಾಹನು ಅವನನ್ನು ಸಾಯಿಸಿದ್ದಾನೆ ಈಗ ಅವನ ಮಗ ಸೀರವೈಹಿ ಅಧಿಕಾರ ನಡೆಸುತಿದ್ದಾರೆ.

  ತಾವು ಈ ಹೇಳುವುದೇನು? ನಮ್ಮನ್ನು ಪರಿಹಾಸ್ಯ ಮಾಡುತ್ತಿದ್ದೀರಾ? ಅವರು ನಡುಕದೊಂದಿಗೆ ಕೇಳಿದರು.

  ಸಹೋದರರೇ ನಾನು ಹೇಳುತ್ತಿರುವುದು ಸತ್ಯ ನಿಮಗೆ ಬೇಕಾದರೆ ವಿವರ ತಿಳಿದುಕೊಳ್ಳಬಹುದು ಕಿಸ್ರಾ ವಧಿಸಲ್ಪಡಲಿಲ್ಲದಿದ್ದರೆ ಯಾವುದೇ ವಿರೋಧವಿಲ್ಲದೇ ನಾನು ನಿಮ್ಮೊಂದಿಗೆ ಬರುತ್ತೇನೆ  ಪ್ರವಾದಿ  (ಸ.ಅ) ರವರು ಹೇಳಿದರು

  ನಾವು ಈ ವಿಷಯವನ್ನು ಬದಾನಿನೊಂದಿಗೆ ಕೇಳಿತಿಳಿದುಕೊಂಡು ಬರುತ್ತೇವೆ ಎಂದು ಹೇಳಿ ಅವರು ಹೊರಡಲು ತಯ್ಯಾರಾದರು ಆಗ ಪ್ರವಾದಿ  (ಸ.ಅ) ರವರು ಅವರೊಂದಿಗೆ ಹೇಳಿದರು ನನ್ನ ಧರ್ಮವೂ ಪೇರ್ಷ್ಯಾವನ್ನು ದಾಟಿಬರುತ್ತದೆ ಅವರು  ಇದರಲ್ಲಿ ವಿಶ್ವಾಸ ವಿವರಿಸಿದರೆ ಅವರಿಗೆ ರಕ್ಷೆ ಇಲ್ಲವೇ ಶಿಕ್ಷೆ ಅನುಭವಿಸಬೇಕಾದೀತು ಎಂದು ಬದಾನಿನೊಂದಿಗೆ ನೀವು ಹೇಳಬೇಕು.

  ಹಲವು ದಿವಸಗಳ ಪ್ರಯಾಣದ ನಂತರ ಅವರು ಯಮನಿಗೆ ತಲುಪಿದರು ತಮ್ಮ ನಾಯಕ ಬದಾನಿನೊಂದಿಗೆ ವಿವರ ತಿಳಿಸಿದರು.

  ಮುಹಮ್ಮದ್ ಹೇಳಿದ್ದು ಸತ್ಯವಾಗಿದ್ದರೆ ಅವರು ಪ್ರವಾದಿಯವರೇ ಆಗಿದ್ದಾರೆ ಕಾರಣ ಹಲವಾರು ದಿವಸಗಳು ಪ್ರಯಾಣ ಮಾಡುವಷ್ಟು ದೂರವಿರುವ ಪೇರ್ಷ್ಯಾದ ವಿವರಗಳು ಇಷ್ಟೊಂದು ಬೇಗ ತಿಳಿದುಕೊಳ್ಳಲು ಸಾಧಾರಣ ಜನರಿಂದ ಸಾಧ್ಯವಿಲ್ಲ ತಾನೇ...? ಎಂದು ಬದಾನ್ ಅಭಿಪ್ರಾಯ ಹೇಳಿದರು ಅವರು ಮಾತಾಡುತ್ತಿರುವಾಗ ಒಂದು ದೂತನು ಆ ಕಡೆ ಬಂದನು ಪೇರ್ಷ್ಯಾ ರಾಜ್ಯದಿಂದ ಬಂದದ್ದಾಗಿದೆ ಕೈಯಲ್ಲಿ  ಒಂದು  ಪತ್ರವಿದೆ ಅವನು ಆ ಪತ್ರವನ್ನು ಬದಾನಿಗೆ ನೀಡಿದನು.ಕಿಸ್ರಾ ಚಕ್ರವರ್ತಿಯ ಮಗ ಸೀರವೈಹಿಯ ಪತ್ರವಾಗಿತ್ತು ಬದಾನ್  ಪತ್ರವನ್ನು ತೆರೆದು ನೋಡಿದರು.  "ಕಿಸ್ರಾ ಚಕ್ರವರ್ತಿಯನ್ನು ಕೊಂದಿದ್ದೇನೆ ಅನಿವಾರ್ಯ ಕಾರಣಗಳಿಂದ ಈ ವಿಷಯವು ಜಾಸ್ತಿಯಾಗಿ ಯಾರಿಗೂ ಗೊತ್ತಿಲ್ಲ  ಆದ್ದರಿಂದ  ಈ ಪತ್ರ ಲಭಿಸಿದ ಕೂಡಲೇ ನನ್ನನ್ನು ಚಕ್ರವರ್ತಿಯಾಗಿ ಅಂಗೀಕರಿಸಬೇಕು ಎಂದು  ಸೀರವೈಹಿ."

  ಬದಾನ್ ಒಮ್ಮೆ ನಡುಗಿದರು ಈ ವಿವರವನ್ನು ಸ್ವೀಕರಿಸುವುದೇ ಕಷ್ಟ  ಮುಹಮ್ಮದ್ ರ ಮಾತು ಸತ್ಯವಾಗಿ ಬೆಳಕಿಗೆ ಬಂದಿದೆ ಅವರು ನಿಜವಾದ ಪ್ರವಾದಿಯಾಗಿದ್ದಾರೆ ಮತ್ತೆ ತಡಮಾಡಲಿಲ್ಲ.ಕೈಯಲ್ಲಿದ್ರವ ಸೀರವೈಹಿಯ ಪತ್ರವನ್ನು ದೂರಕ್ಕೆಸೆದು ಪ್ರವಾದಿ ವರ್ಯರ ಧರ್ಮವನ್ನು ಸ್ವೀಕರಿಸಿದರು ಯಮನಿನ ಮೊದಲ ಮುಸ್ಲಿಂ ಸದಸ್ಯರಾದರು.

  ನೂರಾರು ಮೈಲುಗಳು ದೂರದಿಂದ ಯಾವುದೇ ಸಂಪರ್ಕವಿಲ್ಲದೇ ಹೇಳಿದ ಪ್ರವಾದಿ  (ಸ.ಅ) ರವರ ಮಾತುಗಳು ಹಾಗೂ ಅದರಿಂದ ಆಕರ್ಷಿತನಾಗಿ ಇಸ್ಲಾಮ್ ಧರ್ಮ ಸ್ವೀಕರಿಸಿದ ಬದಾನಿನ ವಿಶ್ವಾಸವೂ ಯಮನಿನಲ್ಲಿ ಮನೆಮಾತಾಯಿತು ಆ ಕಾರಣದಿಂದ ಹಲವರು ಸತ್ಯದಾರಿಗೆ ಬರಲು ತಯ್ಯಾರಾದರು ಯಮನಿನ ಚರಿತ್ರೆಯಲ್ಲಿ ಸುವರ್ಣಕ್ಷರದಿಂದ ದಾಖಲಿಸಬೇಕಾದ ಘಟನೆಯಾಗಿದೆ ಇದು.
   

ಮುಗಿಯಿತು.



ಮುಸ್ತಫ ಪರಪ್ಪು ಮುಡಿಪು


NOOR-UL-FALAH ISLAMIC STORE 

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್