ಇಸ್ಲಾಮಿನಲ್ಲಿ ವಿವಾಹ
ಇಸ್ಲಾಮಿನಲ್ಲಿ ವಿವಾಹ
ಇಸ್ಲಾಮಿನಲ್ಲಿ ಮದುವೆಗೆ ಮಹತ್ತರವಾದ ಸ್ಥಾನವಿದೆ . ಮದುವೆಯೆಂಬುದು ಪವಿತ್ರ ಬಂಧವಾಗಿದೆ
ಲೋಕ ಗುರು ಜಗತ್ಪ್ರವಾದಿ ಮುಹಮ್ಮದ್ ರಸೂಲುಲ್ಲಾಹಿ ಸ.ಅ.ರವರು ತನ್ನ ಅನುಚರರಿಗೆ ಕಳುಹಿಸಿಕೊಟ್ಟ ಮಹತ್ವದ ಮಾರ್ಗವಾದ "ವಿವಾಹವು ನನ್ನ ಚರ್ಯೆಯಾಗಿದೆ ಯಾರು ನನ್ನ ಚರ್ಯೆಯನ್ನುಉಪೇಕ್ಷಿಸುತ್ತಾರೋ ಅವನು ನನ್ನವನಲ್ಲ"( ಪ್ರವಾದಿ ಸ.ಅ) ಎಂದು ಮದುವೆಯ ಮಹತ್ವವನ್ನು ಲೋಕಕ್ಕೆ ಸಾರಿದ್ದಾರೆ . ಮದುವೆಯು ಎರಡು ಕುಟುಂಬಗಳಲ್ಲಿ ಕೌಟುಂಬಿಕ ಬಂಧವನ್ನು ಸೇರಿಸುತ್ತದೆ . ಎರಡು ದೇಹ ಒಂದೇ ಜೀವವೆಂಬಂತೆ ಒಂದು ಗಂಡು ಒಂದು ಹೆಣ್ಣು ಸರೀಹತ್ತಿನ ನಿಯಮದ ಪ್ರಕಾರ ಒಪ್ಪಂದದ ಮೇರೆಗೆ ಸುಖ ದುಃಖಗಳಲ್ಲಿ ಸಮಾನರಾಗಿ ಪಾಲುದಾರರಾಗಿ ನೋವು ನಲಿವುಗಳನ್ನು ಹಂಚಿ ಬದುಕುವುದಾಗಿದೆ ಮದುವೆಯು ಸಾರುವ ಸಂದೇಶ.
ಈಗೀಗ ಮದುವೆಯು ಆಡಂಬರದ ಪ್ರತೀಕವಾಗಿರುವುದು ವಿಪರ್ಯಾಸ. ಉಲ್ಲವರಿಗೊಂದು ಕಾನೂನು ಬಡವನಿಗೊಂದು ಕಾನೂನು . ಸರಳ ವಿವಾಹಕ್ಕೆ ಒತ್ತು ನೀಡಬೇಕೆಂದು ಸಮಾಜದ ಮುಂದೆ ಕರೆನೀಡಿ ತನ್ನ ಮಗಳ/ಮಗನ ಮದುವೆಯನ್ನು ಐಷಾರಾಮಿ ಹಾಲ್'ಗಳಲ್ಲಿ ಮಾಡುತ್ತಾರೆ .
ಕೆಲವು ಯುವಕರಂತು ಬರೀ ವರದಕ್ಷಿಣೆಗಾಗಿ ಮದುವೆಯಾಗುವಂತೆ ಕಾಣುತ್ತಿದೆ . ಯಥೇಚ್ಛವಾಗಿ ವರದಕ್ಷಿಣೆ ವಸೂಲಿಮಾಡಿ ಬಡಪಾಯಿ ಹೆಣ್ಣುಮಗಳೊಬ್ಬಳ ತಂದೆಯ ಕಣ್ಣೀರಿನ ಹಣದಿಂದ ಇವನ ಮದುವೆ ಅದ್ದೂರಿಯಾಗಿ ಮಾಡಿಕೊಳ್ಳುತ್ತಾನೆ.
ಇಸ್ಲಾಂ ಎಲ್ಲಿಯೂ ವರದಕ್ಷಿಣೆಗೆ ಪ್ರೋತ್ಸಾಹಿಸಿಲ್ಲ ಎಂದು ಮಾತ್ರವಲ್ಲ ವರದಕ್ಷಿಣೆಯ ಕಲ್ಪನೆಯೆ ಇಸ್ಲಾಮಿನಲ್ಲಿಲ್ಲ . ಇಸ್ಲಾಂ ವಧುದಕ್ಷಿಣೆಗೆ ಪ್ರೋತ್ಸಾಹಿಸಿದೆ , ವರನಾಗುವವನು ವಧುವಿಗೆ ಯಾವದಾದರೊಂದು ರೂಪದಲ್ಲಿ ದಕ್ಷಿಣೆ ನೀಡಿ ವರಿಸಿಕೊಳ್ಳಬೇಕೆಂಬುವುದು ಪವಿತ್ರ ಇಸ್ಲಾಮಿನ ನಿಯಮ.
ಆಧುನಿಕ ಯುಗದಲ್ಲಿ ಪ್ರೀತಿ ಪ್ರೇಮಕ್ಕೆ ಬಲಿಯಾಗಿ ಜಾತಿ ಭೇದವಿಲ್ಲದೆ ಅನ್ಯಕೋಮಿನ ಯುವಕ/ಯುವತಿಯರ ಮೋಸದ ಪ್ರೇಮ ಬಳೆಗೆ ಬಿದ್ದು ಯುವತ್ವವನ್ನು ಹರಾಮಿನಲ್ಲಿ ವ್ಯಯಿಸಿ ಕೊನೆಗೆ ದಾರಿಕಾಣದೆ ಓಡಿ ಹೋಗಿ ಮದುವೆಯಾಗುತ್ತಿರುವ ಪ್ರಶಂಗಗಳೆ ಹೆಚ್ಚು ಕೇಳುತ್ತಿದೆ .
ಪವಿತ್ರ ಬಂಧವನ್ನು ಅಪವಿತ್ರಗೊಳಿಸಿ ಇಸ್ಲಾಮಿನ ನಿಯಮಗಳನ್ನು ಗಾಳಿಗೆತೂರಿ ನಡೆಯುವ ಮದುವೆಗಳು , ಆಡಂಬರದ ಮದುವೆಗಳೆಲ್ಲವು ಸಂಪೂರ್ಣವಾಗಿ ಕೊನೆಗೊಳ್ಳಬೇಕು . ಮದುವೆಗಳು ಬೆಸುಗೆಯಾಗಬೇಕೆ ಹೊರತು ಸಾಲದ ಹೊರೆಯಾಗಬಾರದು.
ಲೇಖಕರು: ನಾಸಿರ್ ಅಳಕ್ಕೆ
NOOR-UL-FALAH ISLAMIC STORE

Comments
Post a Comment