ಗುಹಾ ರಹಸ್ಯ ಅದ್ಭುತ ಗೂಡು
"ಗುಹಾ"ರಹಸ್ಯ "ಅದ್ಭುತ ಗೂಡು....."
ಇಸ್ಲಾಂ ಧರ್ಮದ ಆಧುನಿಕ ಕಾಲಘಟ್ಟದಲ್ಲಿರುವ ನಾವು ಯುವ ಸಮೂಹಕ್ಕೆ ಕೆಲವೊಂದು ಪುರಾತನ ಕಥೆಗಳನ್ನು ಹೇಳಿ ಕೊಡಬೇಕು. ಇಂದಿನ ತಲೆಮಾರು ವ್ಯಾಮೋಹ ಗಳಿಗೆ ಬಲಿಯಾಗುತ್ತಾ ಇಸ್ಲಾಂ ಧರ್ಮದ ನೈಜ ಆದರ್ಶ ಪರಂಪರೆ ಮತ್ತು ಕೆಲವೊಂದು ಸತ್ಯಗಳು ಮರೆತು ಹೋಗಿದ್ದಾರೆ.
ಇಸ್ಲಾಂ ಧರ್ಮದ ಮತ್ತು ಆಶಯಗಳನ್ನು, ಆದರ್ಶಗಳನ್ನು ಬದಿಗೊತ್ತಿ ಆಧುನಿಕತೆಗೆ ಅನುಗುಣವಾಗಿ ಇಸ್ಲಾಮ್ ಧರ್ಮವನ್ನು ತಳ್ಳಿಹಾಕುವ ಯುವಕ ಮತ್ತು ಯುವತಿಯರಿಗೆ ಪ್ರತ್ಯೇಕವಾಗಿ ಈ ಚರಿತ್ರೆಯಲ್ಲಿ ಒಂದು ಸ್ಪಷ್ಟ ಸಂದೇಶ ಇದೆ.
ಇಸ್ಲಾಂ ಧರ್ಮಕ್ಕಾಗಿ ಯಾವ ರೀತಿಯ ತ್ಯಾಗಕ್ಕೂ ಸಿದ್ದರಿದ್ದ ಆ ದಿನಗಳ ಯುವಕರಿಂದ ನಾವು ಪಾಠಗಳನ್ನು ಕಲಿತುಕೊಳ್ಳಬೇಕಿದೆ.
ರಕ್ಷಣೆಗಾಗಿ ಅಲ್ಲಾಹನಲ್ಲಿ ನಯವಾಗಿ ಬೇಡಿಕೊಂಡರೆ ಖಂಡಿತ ಸತ್ಯದ ದಾರಿಯನ್ನು ಸುಗಮಗೊಳಿಸಿ ಕೊಡುತ್ತಾನೆ ಎಂಬುದಕ್ಕೆ ಇದು ಸಾಕ್ಷಿ.
ಅದ್, ಸಮುದ್, ಫಿರ್ಹವ್ನ್ ಚರಿತ್ರೆ ನಮಗರಿವಿಲ್ಲದೆ ಮರೆತುಬಿಡುತಿದ್ದೇವೆ. ಪುರಾತನ ಚರಿತ್ರೆಯ ಒಂದು ಭಾಗ ಅದುವೇ ಅಸ್ಹಾಬುಲ್ ಕಹ್ಫ್ ಗುಹೆ.
ಜೋರ್ಡಾನ್ ಅಮ್ಮಾನ್ ಪ್ರದೇಶದ ರಾಜಿಬ್ನಲ್ಲಿ ಇಂದಿಗೂ ಶಾಕ್ಷಿ ಪುರಾವೆಗಳು ಚರಿತ್ರೆ ಓದಿ ಹೇಳುತ್ತಿದೆ.
"ಯಾರವರು ಅಸ್ಹಾಬುಲ್ ಕಹ್ಫ್":-
ಪವಿತ್ರ ಖುರಾನಿನ ಹದಿನೆಂಟನೇ ಸೂಕ್ತಗಳಲ್ಲಿ ಸವಿಸ್ತಾರವಿಗಿ ತಿಳಿಸಲಾಗಿದೆ. ಅಧ್ಯಾಯ 9 ರಿಂದ ಅಧ್ಯಾಯ 26 ರವರೆಗೆ ಈ ಬಗ್ಗೆ ಉಲ್ಲೇಖಿಸಲಾಗಿದೆ.
ಕುರಾನ್ ತಿಳಿಸಿದ ಸೂಕ್ತಗಳು ಈ ಕೆಳಗಿನಂತಿದೆ
ಅಧ್ಯಾಯ 18: ಅಲ್ ಕಹಫ್ (ಗುಹೆ), ಸೂಕ್ತ 9
ನೀವೇನು, ಗುಹೆಯವರು ಮತ್ತು ರಕೀಮ್‌ನವರು ನಮ್ಮ ವಿಚಿತ್ರ ಪುರಾವೆಗಳ ಸಾಲಿಗೆ ಸೇರಿದ್ದರೆಂದು ಕೊಂಡಿರುವಿರಾ?
ಅಧ್ಯಾಯ 18: ಅಲ್ ಕಹಫ್ (ಗುಹೆ), ಸೂಕ್ತ 10
ಆ ಯುವಕರು ಒಂದು ಗುಹೆಯಲ್ಲಿ ಆಶ್ರಯ ಪಡೆದಿದ್ದರು ಮತ್ತು, ‘‘ನಮ್ಮೊಡೆಯಾ, ನಿನ್ನ ಬಳಿಯಿಂದ ನಮಗಾಗಿ ವಿಶೇಷ ಅನುಗ್ರಹವನ್ನು ಕರುಣಿಸು ಮತ್ತು ನಮ್ಮ ಸನ್ನಿವೇಶವನ್ನು ಸುಲಭಗೊಳಿಸು’’ ಎಂದು ಪ್ರಾರ್ಥಿಸಿದ್ದರು.
ಅಧ್ಯಾಯ 18: ಅಲ್ ಕಹಫ್ (ಗುಹೆ), ಸೂಕ್ತ 11
ನಾವು ಅವರ ಕಿವಿಗಳಿಗೆ ಹೊಡೆದು (ಮೂರ್ಛೆ ಬರಿಸಿ) ಅವರನ್ನು ಹಲವಾರು ವರ್ಷ ಗುಹೆಯಲ್ಲೇ ಉಳಿಸಿದೆವು.
ಅಧ್ಯಾಯ 18: ಅಲ್ ಕಹಫ್ (ಗುಹೆ), ಸೂಕ್ತ 12
ಮುಂದೆ, ಅವರು ಎಷ್ಟು ಕಾಲ ಹಾಗಿದ್ದರೆಂಬುದನ್ನು, ಎರಡು ಗುಂಪುಗಳ ಪೈಕಿ ಯಾರು ಹೆಚ್ಚು ಖಚಿತವಾಗಿ ಗ್ರಹಿಸುತ್ತಾರೆಂಬುದನ್ನು ಅರಿಯಲು – ನಾವು ಅವರನ್ನು ಎಬ್ಬಿಸಿದೆವು.
ಅಧ್ಯಾಯ 18: ಅಲ್ ಕಹಫ್ (ಗುಹೆ), ಸೂಕ್ತ 13
ನಾವಿದೋ ನಿಮಗೆ ಅವರ ನೈಜ ವೃತ್ತಾಂತವನ್ನು ತಿಳಿಸುತ್ತಿದ್ದೇವೆ; ಅವರು ನಿಜವಾಗಿ, ತಮ್ಮ ಒಡೆಯನಲ್ಲಿ ನಂಬಿಕೆ ಇಟ್ಟ ಕೆಲವು ಯುವಕರಾಗಿದ್ದರು. ನಾವು ಅವರಿಗೆ ಹೆಚ್ಚಿನ ಮಾರ್ಗದರ್ಶನ ನೀಡಿದ್ದೆವು.
ಅಧ್ಯಾಯ 18: ಅಲ್ ಕಹಫ್ (ಗುಹೆ), ಸೂಕ್ತ 14
ಅವರು ಎದ್ದು ನಿಂತಾಗ ನಾವು ಅವರ ಮನಸ್ಸುಗಳಿಗೆ ದೃಢತೆಯನ್ನೊದಗಿಸಿದೆವು ಮತ್ತು ಅವರು,‘‘ಆಕಾಶಗಳ ಹಾಗೂ ಭೂಮಿಯ ಒಡೆಯನೇ ನಮ್ಮ ಒಡೆಯ. ನಾವು ಅವನ ಹೊರತು ಬೇರಾವ ದೇವರನ್ನೂ ಪ್ರಾರ್ಥಿಸಲಾರೆವು. ಅನ್ಯಥಾ ನಾವು ಅರ್ಥಹೀನ ಮಾತನ್ನಾಡಿದಂತಾಗುವುದು’’ ಎಂದು ಘೋಷಿಸಿದರು.
ಅಧ್ಯಾಯ 18: ಅಲ್ ಕಹಫ್ (ಗುಹೆ), ಸೂಕ್ತ 15
‘‘ಈ ನಮ್ಮ ಜನಾಂಗದ ಜನರು ಅವನ ಹೊರತು ಅನ್ಯರನ್ನು ದೇವರಾಗಿಸಿಕೊಂಡಿದ್ದಾರೆ. ಆದರೆ ಅವರು ಅವರ (ಆ ದೇವರುಗಳ) ಪರವಾಗಿ ಯಾವುದೇ ಸ್ಪಷ್ಟ ಪುರಾವೆಯನ್ನೇಕೆ ತರುವುದಿಲ್ಲ? ಅಲ್ಲಾಹನ ಕುರಿತು ಸುಳ್ಳನ್ನು ರಚಿಸುವವನಿಗಿಂತ ದೊಡ್ಡ ಅಕ್ರಮಿ ಯಾರಿದ್ದಾನೆ?’’ (ಎಂದು ಅವರು ಹೇಳಿದರು).
ಅಧ್ಯಾಯ 18: ಅಲ್ ಕಹಫ್ (ಗುಹೆ), ಸೂಕ್ತ 16
‘‘ಇದೀಗ ನೀವು ಅವರನ್ನು ಮತ್ತು ಅವರು ಅಲ್ಲಾಹನನ್ನು ಬಿಟ್ಟು ಪೂಜಿಸುತ್ತಿದ್ದ ಎಲ್ಲವನ್ನೂ ತ್ಯಜಿಸಿ ಬಂದಿರುವುದರಿಂದ ಗುಹೆಯಲ್ಲಿ ಆಶ್ರಯ ಪಡೆಯಿರಿ. ನಿಮ್ಮ ಒಡೆಯನು ನಿಮಗಾಗಿ ತನ್ನ ಅನುಗ್ರಹವನ್ನು ವಿಸ್ತರಿಸುವನು ಮತ್ತು ನಿಮ್ಮ ಸನ್ನಿವೇಶದಲ್ಲಿ ನಿಮಗೆ ನೆರವನ್ನು ಒದಗಿಸುವನು’’ (ಎಂಬ ಶುಭವಾರ್ತೆಯನ್ನು ಅವರಿಗೆ ನೀಡಲಾಯಿತು).
ಅಧ್ಯಾಯ 18: ಅಲ್ ಕಹಫ್ (ಗುಹೆ), ಸೂಕ್ತ 17
ನೀವು ಕಾಣುವಿರಿ – ಸೂರ್ಯನು ಉದಯಿಸಿದಾಗ ಅದು (ಅದರ ಬೆಳಕು) ಅವರ ಗುಹೆಯ ಬಲಭಾಗದಿಂದ ಹಾದು ಹೋಗುತ್ತಿತ್ತು ಮತ್ತು ಅದು ಅಸ್ತಮಿಸುವಾಗ ಅವರನ್ನು ತಪ್ಪಿಸಿಕೊಂಡು ಅವರ ಎಡಭಾಗದಿಂದ ಹಾದು ಹೋಗುತ್ತಿತ್ತು. ಅವರು ಅದರ (ಗುಹೆಯ) ಒಂದು ವಿಶಾಲ ಭಾಗದಲ್ಲಿದ್ದರು. ಇವೆಲ್ಲಾ ಅಲ್ಲಾಹನ ಸೂಚನೆಗಳು. ಅಲ್ಲಾಹನು ಯಾರಿಗೆ ದಾರಿತೋರಿದನೋ ಅವನು ಸರಿದಾರಿಯನ್ನು ಪಡೆದನು. ಇನ್ನು ಅವನು ಯಾರನ್ನು ದಾರಿಗೆಡಿಸಿದನೋ ಅವನು ತನಗಾಗಿ ಯಾವುದೇ ರಕ್ಷಕ ಅಥವಾ ಮಾರ್ಗದರ್ಶಿಯನ್ನು ಕಾಣಲಾರನು.
ಅಧ್ಯಾಯ 18: ಅಲ್ ಕಹಫ್ (ಗುಹೆ), ಸೂಕ್ತ 18
ಅವರು ಎಚ್ಚರವಿದ್ದಾರೆಂದು ನೀವು ಗ್ರಹಿಸುತ್ತಿದ್ದಿರಿ. ಆದರೆ ಅವರು ನಿದ್ರಿಸುತ್ತಿದ್ದರು. ನಾವು ಅವರನ್ನು ಎಡಕ್ಕೂ ಬಲಕ್ಕೂ ಹೊರಳಿಸುತ್ತಿದ್ದೆವು. ಅವರ ನಾಯಿಯು ತನ್ನ ಮುಂದಿನ ಎರಡೂ ಕಾಲುಗಳನ್ನು ಊರಿ (ಗುಹೆಯ) ಬಾಗಿಲಲ್ಲೇ ಕುಳಿತಿರುತ್ತಿತ್ತು. ಒಂದು ವೇಳೆ ನೀವು ಅವರೆಡೆಗೆ ಇಣುಕಿ ನೋಡಿದ್ದರೆ ಅಲ್ಲಿಂದ ಓಡಿ ಬಿಡುತ್ತಿದ್ದಿರಿ ಮತ್ತು ಅವರ ಕುರಿತು ಅಂಜುತ್ತಿದ್ದಿರಿ.
ಅಧ್ಯಾಯ 18: ಅಲ್ ಕಹಫ್ (ಗುಹೆ), ಸೂಕ್ತ 19
ಹೀಗೆ, ಅವರು ಪರಸ್ಪರ ವಿಚಾರಿಸಲೆಂದು ನಾವು ಅವರನ್ನು ಎಬ್ಬಿಸಿದೆವು. ಅವರಲ್ಲೊಬ್ಬನು, ‘‘ನೀವು (ಇಲ್ಲಿ) ಎಷ್ಟುಕಾಲ ಇದ್ದಿರಿ?’’ ಎಂದು ವಿಚಾರಿಸಿದನು. ‘‘ಒಂದು ದಿನ ಅಥವಾ ಒಂದು ದಿನದ ಒಂದು ಭಾಗ’’ ಎಂದು ಅವರು ಹೇಳಿದರು. ತರುವಾಯ ಅವರು ಹೇಳಿದರು; ‘‘ನೀವೆಷ್ಟು ಕಾಲ (ಇಲ್ಲಿ) ಇದ್ದಿರೆಂಬುದನ್ನು ನಿಮ್ಮೊಡೆಯನೇ ಹೆಚ್ಚು ಬಲ್ಲನು. ನೀವೀಗ ಈ ನಿಮ್ಮ ಮೊತ್ತವನ್ನು ಕೊಟ್ಟು ನಿಮ್ಮಲ್ಲೊಬ್ಬನನ್ನು ನಗರಕ್ಕೆ ಕಳಿಸಿರಿ. ಅವನು (ಅಲ್ಲಿ) ಯಾವ ಆಹಾರ ಹೆಚ್ಚು ಶುದ್ಧವಾಗಿದೆ ಎಂದು ನೋಡಲಿ ಮತ್ತು ಅದರಿಂದ ನಿಮಗಾಗಿ ಆಹಾರವನ್ನು ತರಲಿ ಮತ್ತು ಯಾರಿಗೂ ನಿಮ್ಮ ಕುರಿತು ಮಾಹಿತಿ ದೊರೆಯದಂತೆ ಅವನು ಗೌಪ್ಯ ಕಾಪಾಡಲಿ’’.
ಅಧ್ಯಾಯ 18: ಅಲ್ ಕಹಫ್ (ಗುಹೆ), ಸೂಕ್ತ 20
‘‘ಒಂದು ವೇಳೆ ಅವರಿಗೆ ನಿಮ್ಮ ಕುರಿತು ತಿಳಿದರೆ, ಅವರು ನಿಮ್ಮನ್ನು ಕಲ್ಲೆಸೆದು ಕೊಲ್ಲುವರು ಅಥವಾ ನಿಮ್ಮನ್ನು ತಮ್ಮ ಸಮುದಾಯಕ್ಕೆ ಮರಳಿಸುವರು. ಹಾಗಾಗಿ ಬಿಟ್ಟಲ್ಲಿ ನೀವೆಂದೂ ವಿಜಯಿಗಳಾಗಲಾರಿರಿ.
ಅಧ್ಯಾಯ 18: ಅಲ್ ಕಹಫ್ (ಗುಹೆ), ಸೂಕ್ತ 21
ಹೀಗೆ, ಅಲ್ಲಾಹನ ವಾಗ್ದಾನವು ಸತ್ಯವೆಂಬುದನ್ನು ಮತ್ತು (ಲೋಕಾಂತ್ಯದ) ಆ ಘಳಿಗೆ ಬರುವುದರಲ್ಲಿ ಸಂಶಯವಿಲ್ಲ ಎಂಬುದನ್ನು ಅವರು (ಊರವರು) ಅರಿಯಬೇಕೆಂದು ನಾವು ಅವರಿಗೆ, ಅವರ (ಗುಹೆಯವರ) ಕುರಿತು ಮಾಹಿತಿ ನೀಡಿದೆವು. (ನಿಮಗೆ ತಿಳಿದಿರಲಿ;) ಅವರು (ಊರವರು) ಅವರ ಕುರಿತು ಜಗಳಾಡಿದಾಗ,ಕೆಲವರು ‘‘ಅವರ (ಗುಹೆಯ) ಮೇಲೆ ಒಂದು ಕಟ್ಟಡವನ್ನು ನಿರ್ಮಿಸಿರಿ’’ ಎಂದರು. ಅವರನ್ನು ಅವರ ಒಡೆಯನು ಚೆನ್ನಾಗಿಬಲ್ಲನು. ಕೊನೆಗೆ ಅವರ ಮೇಲೆ ಪ್ರಾಬಲ್ಯ ಹೊಂದಿದ್ದ ಕೆಲವರು ‘‘ನಾವು ಅವರ (ಗುಹೆಯ) ಮೇಲೆಒಂದು ಮಸೀದಿಯನ್ನು ಕಟ್ಟೋಣ’’ ಎಂದರು.
ಅಧ್ಯಾಯ 18: ಅಲ್ ಕಹಫ್ (ಗುಹೆ), ಸೂಕ್ತ 22
(ದೂತರೇ), ಇದೀಗ ಕೆಲವರು, ‘‘ಅವರು ಮೂವರಿದ್ದರು, ನಾಲ್ಕನೆಯದು ಅವರ ನಾಯಿ’’ ಎನ್ನುವರು. ಮತ್ತೆ ಕೆಲವರು, ‘‘ಅವರು ಐವರಿದ್ದರು, ಆರನೆಯದು ಅವರ ನಾಯಿ’’ ಎಂದೂ ಹೇಳುವರು. ಇದೆಲ್ಲಾ ಕೇವಲ ಊಹೆಮಾತ್ರ. ಇನ್ನು, ‘‘ಅವರು ಏಳುಮಂದಿ ಇದ್ದರು ಮತ್ತು ಎಂಟನೆಯದು ಅವರ ನಾಯಿ’’ ಎಂದು ಕೂಡಾ ಕೆಲವರು ಹೇಳುವರು. ನೀವು ಹೇಳಿರಿ; ಅವರ ನೈಜ ಸಂಖ್ಯೆಯನ್ನು ನನ್ನ ಒಡೆಯನು ಮಾತ್ರ ಬಲ್ಲನು. ಅವರ ಕುರಿತು (ವಾಸ್ತವವನ್ನು)ಕೇವಲ ಕೆಲವರು ಮಾತ್ರ ಬಲ್ಲರು. ನೀವು ಸ್ಪಷ್ಟ ಪುರಾವೆ ಇಲ್ಲದೆ ಅವರ ಕುರಿತು ವಾದಿಸಬೇಡಿ ಮತ್ತು ಅವರ ಕುರಿತು ಯಾರನ್ನೂ ಪ್ರಶ್ನಿಸಬೇಡಿ.
ಅಧ್ಯಾಯ 18: ಅಲ್ ಕಹಫ್ (ಗುಹೆ), ಸೂಕ್ತ 23
ಯಾವುದೇ ವಿಷಯದಲ್ಲಿ ‘‘ನಾಳೆ ನಾನು ಖಂಡಿತ ಅದನ್ನು ಮಾಡಿ ಬಿಡುತ್ತೇನೆ’’ ಎನ್ನಬೇಡಿ.
ಅಧ್ಯಾಯ 18: ಅಲ್ ಕಹಫ್ (ಗುಹೆ), ಸೂಕ್ತ 24
ಅಲ್ಲಾಹನು ಇಚ್ಛಿಸಿದರೆ ಮಾತ್ರ (ನೀವು ಏನನ್ನಾದರೂ ಮಾಡಬಲ್ಲಿರಿ). ಮತ್ತು ನೀವು (ಇದನ್ನು) ಮರೆತಾಗಲೆಲ್ಲಾ ನಿಮ್ಮ ಒಡೆಯನನ್ನು ನೆನಪಿಸಿಕೊಳ್ಳಿರಿ ಮತ್ತು ‘‘ನನ್ನ ಒಡೆಯನು ನನಗೆ ಅದಕ್ಕಿಂತಲೂ ಉತ್ತಮವಾದುದನ್ನು ತೋರಿಸಿ ಕೊಡಬಹುದು’’ ಎಂದು ಹೇಳಿರಿ.
ಅಧ್ಯಾಯ 18: ಅಲ್ ಕಹಫ್ (ಗುಹೆ), ಸೂಕ್ತ 25
ಅವರು ಮುನ್ನೂರು ವರ್ಷ ಹಾಗೂ ಇನ್ನೂ ಒಂಭತ್ತು ವರ್ಷಗಳ ಕಾಲ ಗುಹೆಯಲ್ಲಿದ್ದರು.
ಅಧ್ಯಾಯ 18: ಅಲ್ ಕಹಫ್ (ಗುಹೆ), ಸೂಕ್ತ 26
ಹೇಳಿರಿ; ಅವರು ಅದೆಷ್ಟು ಕಾಲ (ಅಲ್ಲಿ) ಇದ್ದರೆಂಬುದನ್ನು ಅಲ್ಲಾಹನೇ ಹೆಚ್ಚು ಬಲ್ಲನು. ಅವನು ಆಕಾಶಗಳ ಹಾಗೂ ಭೂಮಿಯ ಎಲ್ಲ ಗುಪ್ತ ಸಮಾಚಾರಗಳನ್ನೂ ಬಲ್ಲನು. ಅವನು ಇತರೆಲ್ಲರಿಗಿಂತ ಚೆನ್ನಾಗಿ ಅವುಗಳನ್ನು ನೋಡುತ್ತಾನೆ ಮತ್ತು ಕೇಳುತ್ತಾನೆ. ಅವುಗಳಿಗೆ (ಭೂಮ್ಯಾಕಾಶಗಳಿಗೆ) ಅವನ ಹೊರತು ಬೇರೆ ಪೋಷಕರಿಲ್ಲ. ಅವನು ತನ್ನ ಆಧಿಪತ್ಯದಲ್ಲಿ ಯಾರನ್ನೂ ಪಾಲುಗೊಳಿಸುವುದಿಲ್ಲ.
ಘಟನಾ ವಿವರಣೆ:
ಅಲ್ಲಾಹನ ಆಜ್ಞೆ ಮತ್ತು ಅವರು ನಡೆದುಕೊಂಡ ರೀತಿ ಮತ್ತು ಸಂದೇಶಗಳನ್ನು ಸ್ಪಷ್ಟವಾಗಿ ವಿವರಿಸಲಾಗಿದೆ. ಕಾಲಾಂತರದ ಪ್ರತಿಯೊಂದು ಮನುಷ್ಯರು ಈ ವಿಷಯವನ್ನು ಅರಿತುಕೊಳ್ಳಬೇಕು, ಮತ್ತು ಮುಂದಿನ ತಲೆಮಾರು ಅಲ್ಲಾಹನ ಬಗ್ಗೆ ಹೆಚ್ಚು ವಿಮರ್ಶೆ ಮಾಡದಿರಲಿ ಎಂಬುದಕ್ಕೆ ಇಂತಹ ಹಲವಾರು ಘಟನೆಗಳನ್ನು ಖಚಿತಪಡಿಸಿಡಲಾಗಿದೆ.
AD 98 ರಿಂದ AD 117 ರವರೆಗೆ ರೋಮ್ ಸಾಮ್ರಾಜ್ಯವನ್ನು ಆಳುತ್ತಿದ್ದ ರಾಜನ್ ಎಂಬ ಕ್ರೈಸ್ತ ಚಕ್ರವರ್ತಿ ಏಕದೇವ ಆರಾಧಕರನ್ನು ಬಹಿಷ್ಕರಿಸಿದ. ಅವರನ್ನು ಶಿಕ್ಷೆಗೆ ಒಳಪಡಿಸುತ್ತಿದ್ದ. ಯೇಸು ದೇವನನ್ನು ಮತ್ತು ಇತರೆ ಸೃಷ್ಟಿಗಳನ್ನು ಪೂಜಿಸುವಂತೆ ಒತ್ತಾಯಿಸಿದ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಏಕದೇವಾರಾಧಕರನ್ನು ಕೊಲ್ಲುವುದಾಗಿಯೂ ಆಜ್ಞೆ ಮಾಡಿದ. ಇಂತಹ ಪೀಡನೆ ಗಳನ್ನು ಸಹಿಸಿಕೊಳ್ಳುವುದಕ್ಕೊಸ್ಕರ
ಮತ್ತು ರಕ್ಷಣೆಗಾಗಿ ಏಕದೇವತಾರಾಧನೆ ಮತ್ತು ಅಲ್ಲಾಹನಲ್ಲಿ ವಿಶ್ವಾಸವಿಟ್ಟು ಆರು ಯುವಕರು ಅಲ್ಲಿಂದ ಕಾಲ್ಕಿತ್ತರು. ಹೋಗುವ ದಾರಿಯಲ್ಲಿ ಆಡು ಮೇಯಿಸುವ ಯುವಕನೊಬ್ಬ ಇವರ ಆಶಯ ಆದರ್ಶಕ್ಕೆ ಮಾರುಹೋಗಿ ಅವರೊಂದಿಗೆ ಸೇರಿಕೊಂಡ. ಏಳನೆಯದಾಗಿ ಅಂದರೆ ಹಾಡು ಮೇಯಿಸುವವನ ಜೊತೆಯಾಗಿದ್ದ ಒಂದು ನಾಯಿಯು ಇವರ ಜೊತೆ ಸೇರಿಕೊಂಡಿತ್ತು. ಜೋರ್ಡಾನ್ ಅಮ್ಮಾನ್ ಪ್ರದೇಶದ ರಾಜಿಬ್ನಲ್ಲಿ ಒಂದು ಬೆಟ್ಟದ ತಪ್ಪಲಿನ ಗುಹೆಯಲ್ಲಿ ವಿಶ್ರಾಂತಿ ಪಡೆದರು. ನಂತರ ಈ ರೀತಿ ಅಲ್ಲಾಹನಲ್ಲಿ ಪ್ರಾರ್ಥಿಸಿದರು..
"ಅಲ್ಲಾಹನೇ ನಿನ್ನ ಕಾರುಣ್ಯದ ನೋಟವನ್ನು ನಮ್ಮೆಡೆಗೆ ನೋಡಬೇಕು, ಮತ್ತು ನಿನ್ನ ಮೇಲಿನ ವಿಶ್ವಾಸ ಮತ್ತು ದೌತ್ಯವನ್ನು ಸರಿಯಾದ ರೀತಿಯಲ್ಲಿ ಪಾಲಿಸಲು ನಮಗೆ ಸತ್ಯದ ಮಾರ್ಗವನ್ನು ತೆರೆದುಕೊಡಬೇಕು"
ವಾಹನ ಪ್ರಾರ್ಥನೆಯನ್ನು ಸ್ವೀಕರಿಸಿದ ಅವರನ್ನು ರಕ್ಷಿಸಲು ತೀರ್ಮಾನಿಸಿದ.
ಅಲ್ಲಾಹನು ಅವರನ್ನು ಘಾಡ ನಿದ್ರೆಗೆ ಒಳಪಡಿಸಿದ.
ಬರೋಬ್ಬರಿ ಮುನ್ನೂರು ವರ್ಷ ಗಳು ಅವರನ್ನು ನಿದ್ರೆಗೆ ಒಳಪಡಿಸಿದ. ಯಾವುದೇ ಎಚ್ಚರ ಹೊರವಲಯದಲ್ಲಿ ಆಗುವ ಘಟನೆಗಳು ಏನು ಅರಿವಿಗೆ ಬಾರದಂತೆ ನಿದ್ರಿಸಿದ. ಸೂರ್ಯನ ಬೆಳಕು ಗಾಳಿಯು ಗುಹೆಯೊಳಗೆ ಹರಿಯುತ್ತಿದ್ದರೂ ಅದು ತಪ್ಪಿಸಿ ಯಾವುದೂ ಗಮನಕ್ಕೆ ಬಾರದಂತೆ ನಿದ್ರಿಸಿದ.
ಬರೋಬ್ಬರಿ ಮುನ್ನೂರು ವರ್ಷಗಳ ನಂತರ ನಿದ್ರೆಯಿಂದ ಎಬ್ಬಿಸಿದ.
ಅವರೆಲ್ಲರೂ ಚರ್ಚೆಗೊಳಪಟ್ಟರು. ನಾವು ಒಂದು ದಿನ ನಿದ್ರಿಸಿದೆವು ಅಥವಾ ದಿನದ ಅರ್ಧಭಾಗ ನಿದ್ರಿಸಿದೆವು ಎಂಬಂತೆ ಚರ್ಚೆಗಳು. ಯಾರಿಗೂ ಯಾವುದರ ಅರಿವೂ ಬಂದಿರಲಿಲ್ಲ.
300 ವರ್ಷಗಳ ಮೊದಲು ನಿದ್ರಿಸಿದ ಅದೇ ಯಥಾಸ್ಥಿತಿ ಅವರೆಡೆಯಲ್ಲಿರುವುದರಿಂದ ಯಾರಿಗೂ ಸಂದೇಹ ಇರಲಿಲ್ಲ.
ನಂತರ ಇವರಲ್ಲೊಬ್ಬ ಆಹಾರ ತರಲೆಂದು ಮಾರುಕಟ್ಟೆಗೆ ಹೊರಟ.
ಆಹಾರಕ್ಕಾಗಿ ತನ್ನಲ್ಲಿದ್ದ ನಾಣ್ಯಗಳನ್ನು ಅಂಗಡಿಯಾತನ ಕೈಯಲ್ಲಿ ಇಟ್ಟಾಗ ವ್ಯಾಪಾರಸ್ಥ ಹೌಹಾರಿದ. ಮುನ್ನೂರು ವರ್ಷಗಳ ಹಳೆಯ ಕಾಲದ ನಾಣ್ಯಗಳು ಯುವಕನ ಕೈಯಲ್ಲಿ ಕಂಡು ಸಂಶಯಪಟ್ಟ ವ್ಯಾಪಾರಸ್ಥ ಗವರ್ನರ್ ಹತ್ತಿರ ಹಾಜರುಪಡಿಸಿದ. ಗವರ್ನರ್ ವಿಷಯಗಳ ಗಂಭೀರತೆಯನ್ನು ಅರಿತು ನೇರವಾಗಿ ಅಂದಿನ ಬಯ್ಸಂಡೈನ್ ಪ್ರದೇಶದ ಚಕ್ರವರ್ತಿ ಎರಡನೇ ಕಿಯೋಡೋಶಿಯ ಮುಂದೆ ಹಾಜರು ಪಡಿಸಿದ.
ಚಕ್ರವರ್ತಿಗೆ ವಿಷಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನಂತರ ಗವರ್ನರ್, ಚಕ್ರವರ್ತಿ, ಆ ಯುವಕ ಮತ್ತು ಊರವರೊಂದಿಗೆ ಸೇರಿ ಗುಹೆಯ ಬಳಿ ಬಂದರು. ಯುವಕರನ್ನು ಸತ್ಕರಿಸಿದರು. ಅಲ್ಲಾಹನ ಆಜ್ಞೆಯಂತೆ ಗುಹಾ ವಾಸಿಗಳಾಗಿ ನಿದ್ರಿಸಿದ ಯುವಕರನ್ನು ಕಂಡು ಜನರು ಅಲ್ಲಾಹನ ಮೇಲೆ ನಂಬಿಕೆಯಿಟ್ಟರು.
ನಂತರ ಯುವಕರು ಮತ್ತೆ ನಿದ್ರಿಸಿದರು ಅದು ಚಿರನಿದ್ರೆ ಯಾಗಿತ್ತು. ಮರಣಹೊಂದಿದ ಯುವಕರ ಮೃತದೇಹವನ್ನು ಬೇರೆಬೇರೆ ಕಬರ್ ಸ್ಥಾನಗಳಲ್ಲಿ ದಫನ್ ಮಾಡಲಾದರೂ, ನಂತರ ಒಂದೇ ಕಬರಿಗೆ ಎಲ್ಲರ ಮೃತದೇಹವನ್ನು ಸ್ಥಳಾಂತರಿಸಲಾಯಿತು.
ಕುರ್‌ಆನಿನಲ್ಲಿ ಉಲ್ಲೇಖಿಸಲ್ಪಟ್ಟಂತೆ ಗುಹಾವಾಸಿಗಳನ್ನು (ಅಸ್ಹಾಬುಲ್ ಕಹ್‌ಫ್) ಹಿಂಬಾಲಿಸಿ ಹೋದ ನಾಯಿಯು ಸ್ವರ್ಗ ಪ್ರವೇಶದ ವಿಶೇಷ ಪರವಾನಿಗೆ ದೊರೆತ ಕೆಲವು ಪ್ರಾಣಿಗಳಲ್ಲಿ ಒಂದಾಗಿದೆ. ಪವಿತ್ರ ಕುರ್‌ಆನಿನ "ಅಲ್ ಕಹ್‌ಫ್" ಎಂಬ ಅಧ್ಯಾಯದಲ್ಲಿ ಈ ನಾಯಿಯ ಬಗ್ಗೆ ಧೀರ್ಘವಾದ ಒಂದು ಉಲ್ಲೇಖವಿರುದು ನಾವೆಲ್ಲರೂ ಅರಿತಿದ್ದೇವೆ.
ಪುನರುತ್ತಾನ ದಿನ ಸತ್ಯವೆಂದು ಈ ಜಗತ್ತಿಗೆ ಸಾರಿ ಹೇಳಿದ ಸಂದೇಶಗಳನ್ನು ಜನರು ಅರ್ಥಮಾಡಿಕೊಳ್ಳಬೇಕು. ಈ ಸತ್ಯ ಘಟನೆಗಳನ್ನು ಮತ್ತು ಕುರಾನ್ ಸಂದೇಶಗಳಿಗೆ ಪುರಾವೆಗಳಾಗಿವೆ ಅಲ್ಲಾಹನು ಇಂದು ನೆಲೆ ನಿಲ್ಲಿಸಿದ್ದಾನೆ. ಮರಣ ಹೊಂದಿದ ಏಳು ಯುವಕರು ಮತ್ತು ನಾಯಿಯ ಮೃತದೇಹದ ಎಲುಬುಗಳನ್ನು ಈಗಲೂ ಮ್ಯೂಸಿಯಂನಲ್ಲಿ ಶೇಖರಿಸಿಡಲಾಗಿದೆ. ಅವರು ನಿದ್ರಿಸಿದ ಸ್ಥಳವನ್ನು ಈಗಲೂ ಕಂಡುಕೊಳ್ಳಬಹುದು.
ಇಸ್ಲಾಮಿನ ಚರಿತ್ರೆಯ ಪ್ರತಿಯೊಂದು ಪುರಾವೆಗಳು ಈ ಭೂಮಿಯಲ್ಲಿ ನೆಲೆನಿಂತಿದೆ. ಅದು ಕ್ರೂರಿ ಫಿರ್ ಹೌನ್ ಆದರೂ, ಹಾದ್ ಸಮೂದ್ ಗೋತ್ರದವರದ್ದಾದರೂ ಪುರಾವೆಗಳು ಈಗಲೂ ನೆಲೆನಿಂತಿದೆ.
ಅಲ್ಲಾಹನು ಎಲ್ಲವನ್ನೂ ಅರಿತವನು ಮತ್ತು ಬಲ್ಲವನು ಆಗಿದ್ದಾನೆ. ಅವನ ಮೇಲೆ ವಿಶ್ವಾಸ ಇರಿಸಿದಲ್ಲಿ ಇರು ಲೋಕದ ವಿಜಯ ಖಂಡಿತಾ...
ಲೇಖಕರು: ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್
NOOR-UL-FALAH ISLAMIC STORE

Comments
Post a Comment