ಪವಿತ್ರ ಕುರ್‍ಆನ್



يَٰٓأَيُّهَا ٱلَّذِينَ ءَامَنُوا۟ لَا يَسْخَرْ قَوْمٌۭ مِّن قَوْمٍ عَسَىٰٓ أَن يَكُونُوا۟ خَيْرًۭا مِّنْهُمْ وَلَا نِسَآءٌۭ مِّن نِّسَآءٍ عَسَىٰٓ أَن يَكُنَّ خَيْرًۭا مِّنْهُنَّ ۖ وَلَا تَلْمِزُوٓا۟ أَنفُسَكُمْ وَلَا تَنَابَزُوا۟ بِٱلْأَلْقَٰبِ ۖ بِئْسَ ٱلِٱسْمُ ٱلْفُسُوقُ بَعْدَ ٱلْإِيمَٰنِ ۚ وَمَن لَّمْ يَتُبْ فَأُو۟لَٰٓئِكَ هُمُ ٱلظَّٰلِمُونَ

ಓ ಸತ್ಯವಿಶ್ವಾಸಿಗಳೇ, ಒಂದು ವಿಭಾಗ ಇನ್ನೊಂದು ವಿಭಾಗವನ್ನು ಪರಿಹಾಸ್ಯ ಮಾಡದಿರಲಿ. ಅವರು (ಪರಿಹಾಸ್ಯಕ್ಕೊಳಗಾದವರು) ಇವರಿಗಿಂತ ಉತ್ತಮರಿರಲೂಬಹುದು. ಸ್ತ್ರೀಯರು ಇತರ ಸ್ತ್ರೀಯರನ್ನೂ ಪರಿಹಾಸ್ಯ ಮಾಡದಿರಲಿ. ಅವರು (ಪರಿಹಾಸ್ಯ ಕ್ಕೊಳಗಾದ ಸ್ತ್ರೀಯರು) ಇವರಿಗಿಂತ ಉತ್ತಮರಿರಲೂಬಹುದು. ನೀವು ನಿಮ್ಮನ್ನೇ ಹಳಿದುಕೊಳ್ಳಬೇಡಿರಿ. ಮತ್ತು ಪರಸ್ಪರ ಅಡ್ಡ ಹೆಸರಿನಿಂದ ಕರೆದುಕೊಳ್ಳದಿರಿ. ಸತ್ಯ ವಿಶ್ವಾಸ ಸ್ವೀಕರಿಸಿದ ಬಳಿಕ ಅಧಾರ್ಮಿಕ ಹೆಸರು ಎಷ್ಟೊಂದು ನಿಕೃಷ್ಟ. ಯಾರು ಇದರಿಂದ ಪಶ್ಚಾತ್ತಾಪಪಟ್ಟು ಮರಳುವುದಿಲ್ಲವೋ ಅವರೇ ಅಕ್ರಮಿಗಳು⁷.

(ಪವಿತ್ರ ಖುರಾನ್ ಅಧ್ಯಾಯ-49 ಆಯತ್-11)

ವಿವರಣೆ:
7. ಕುಟುಂಬಗಳು, ನೆರೆಹೊರೆಯವರು, ಸಹೋದ್ಯೋಗಿಗಳು, ಸಹಪಾಠಿಗಳು, ಸಹಯಾತ್ರಿಕರು ಮುಂತಾದ ಹಲವು ದೆಸೆಗಳಲ್ಲಿ ಮನುಷ್ಯರು ಒಟ್ಟಾಗಿ ಬಾಳುವ ಸಂಘಜೀವಿಗಳು. ಆದ್ದರಿಂದ ಪರಸ್ಪರ ಪಾಲಿಸಬೇಕಾದ ಉತ್ತಮ ಗುಣಗಳು ಇದ್ದರೆ ಮಾತ್ರ ಸಮಾಜದಲ್ಲಿ ಸ್ವಾಸ್ಥ್ಯ ನೆಲೆಸೀತು. ಮನುಷ್ಯನು ಸಂಸ್ಕಾರ ಸಂಫನ್ನನಾಗಿದ್ದರೆ ಮಾತ್ರ ಸಹಬಾಳ್ವೆ ಸಫಲ. ಅಸಂಸ್ಕøತನಾದರೆ ಸಹಬಾಳ್ವೆ ಗೋಳು, ಮೃಗಗಳ ಹಿಂಡಿನಂತೆ ಗೋಜಲು. ಆದ್ದರಿಂದ ಪರಸ್ಪರ ಪ್ರೀತಿ ವಿಶ್ವಾಸ ಸೌಹಾರ್ದ ನೆಲೆ ನಿಲ್ಲಲು ಅಗತ್ಯವಾದ ಕೆಲವು ಸಂಸ್ಕøತಿಗಳನ್ನು ಇಲ್ಲಿ ಕಲಿಸಲಾಗಿದೆ. “ನೀವು ನಿಮ್ಮನ್ನೇ ಹಳಿದು ಕೊಳ್ಳಬೇಡಿರಿ” ಅಂದರೆ ನೀವು ಇನ್ನೊಬ್ಬನನ್ನು ಹಳಿದು ಕೊಂಡರೆ ನಿಮ್ಮನ್ನೇ ಹಳಿದು ಕೊಂಡಂತಾಗುತ್ತದೆ ಎಂದರ್ಥ. ಎದುರಿನವನಿಗೆ ತೋರು ಬೆರಳು ಚಾಚಿದಾಗ ಮೂರು ಬೆರಳುಗಳು ತನ್ನತ್ತ ಚಾಚಿರುತ್ತವೆ ಎಂಬ ತತ್ವವಿದು. ನೀವು ಯಾರನ್ನು ಪರಿಹಾಸ್ಯ ಮಾಡುತ್ತೀರೋ ಅವರು ನಿಮಗಿಂತ ಶ್ರೇಷ್ಟರಾಗಿರಬಹುದು ಎಂಬ ಮಾತಿನಲ್ಲಿ ಮನುಷ್ಯನ ಬಾಹ್ಯರೂಪಕ್ಕೆ ಅಗೋಚರವಾದ ಉತ್ತಮ ಗುಣಗಳು ಮನುಷ್ಯರಲ್ಲಿ ಇರುತ್ತವೆ ಎಂಬುದಕ್ಕೆ ಸೂಚನೆಯಿದೆ. ಪರಸ್ಪರ ಅಡ್ಡ ಹೆಸರು ಹಾಕಿಕೊಳ್ಳಬೇಡಿ ಎಂಬ ಮಾತು ಗಮನಾರ್ಹ. ನಾವು ಮತ್ತೊಬ್ಬರಿಗೆ ಅಡ್ಡ ಹೆಸರು ಹಾಕಿದರೆ ನಮಗೆ ಅಡ್ಡ ಹೆಸರು ಹಾಕುವ ಇನ್ನೊಬ್ಬರಿರುತ್ತಾರೆ. ಈ ಕಾಲದಲ್ಲಿ ಅಡ್ಡ ಹೆಸರು ವ್ಯಾಪಕವಾಗಿದೆ. ಹೆಚ್ಚಿನ ಕಡೆ ವ್ಯಕ್ತಿಗಳ ನಿಜವಾದ ಹೆಸರೇ ಮಾಯವಾಗಿ ಅಡ್ಡ ಹೆಸರಲ್ಲೇ ಗುರುತಿಸಲ್ಪಡುತ್ತಿದ್ದಾರೆ. ಖುರ್‍ಆನಿನ ಈ ತಾಕೀತನ್ನು ಜನ ಅರಿತಿದ್ದರೆ!

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್