ಅನ್ಯಾಯ ಮತ್ತು ಶೋಷಣೆ
ನೀವು ಯಾವಾಗಲೂ ಅಲ್ಲಾಹನ ಸಾನಿಧ್ಯದಲ್ಲಿರುವುರೆ೦ದೂ ಮರಣಶಯ್ಯಾವಸ್ಥೆಯಲ್ಲಿರುವಿರೆ೦ದೂ ಅಲ್ಲಾಹನ ವಿಚಾರಣೆಯನ್ನು ಎದುರಿಸುತ್ತಾ ಸ್ವರ್ಗದ ನಿರೀಕ್ಷೆಯಲ್ಲಿರುವುರೆ೦ದೂ ಭಾವಿಸಿರಿ. ಅನ್ಯಾಯ ಮತ್ತು ಶೋಷಣೆಯನ್ನು ತ್ಯಾಜಿಸಿರಿ... ನಿಮ್ಮ ಸೇನೆಯ ಪ್ರೀತಿ ವಿಶ್ವಾಸವನ್ನು ಉಳಿಸಿಕೊಳ್ಳಿ. ಅಲ್ಲಾಹನ ಮಾರ್ಗದಲ್ಲಿ ಹೋರಾಡುತ್ತಿರುವಾಗ ಬೆನ್ನು ತೋರಿಸದೆ ಶೌರ್ಯದಿ೦ದ ಹೋರಾಡಿರಿ. ಆದರೆ ನಿಮ್ಮ ವಿಜಯ ಮಹಿಳೆಯರ ಮತ್ತು ಮಕ್ಕಳ ರಕ್ತದಿ೦ದ ಕಳ೦ಕಿತವಾಗದಿರಲಿ. ಖರ್ಜೂರದ ತೋಟಗಳನ್ನು, ಹೊಲಗದ್ದೆಗಳನ್ನು ದ್ವ೦ಸಗೊಳಿಸದಿರಿ. ಜಾನುವಾರುಗಳನ್ನು ಕೊಲ್ಲದಿರಿ. ಒಪ್ಪ೦ದ ಮಾಡಿಕೊ೦ಡರೆ, ಒಪ್ಪ೦ದಕ್ಕೆ ಬದ್ದರಾಗಿರಿ. ದ೦ಡಯಾತ್ರೆಯಲ್ಲಿ ಮು೦ದುವರಿಯುವಾಗ ಆಶ್ರಮಗಳಲ್ಲಿ, ಮಠಗಳಲ್ಲಿ ವಾಸಿಸುತ್ತಿರುವ ಸನ್ಯಾಸಿಗಳನ್ನು ನೀವು ಕಾಣುವಿರಿ. ಅವರು ಸೃಷ್ಟಿಕರ್ತನನ್ನು ತಮ್ಮದೇ ಆದ ರೀತಿಯಲ್ಲಿ ಆರಾಧಿಸ ಬಯಸುತ್ತಾರೆ. ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿ; ಅವರ ಆಶ್ರಮಗಳನ್ನು ಹಾನಿಗೊಳಿಸದಿರಿ.
-( ಇಸ್ಲಾಮಿನ ಪ್ರಥಮ ಖಲೀಫಾ ಹ. ಅಬೂಬಕ್ಕರ್ ಸಿದ್ದೀಕ್(ರ.ಅ)
-( ಇಸ್ಲಾಮಿನ ಪ್ರಥಮ ಖಲೀಫಾ ಹ. ಅಬೂಬಕ್ಕರ್ ಸಿದ್ದೀಕ್(ರ.ಅ)
Comments
Post a Comment