ನೀರು ಕುಡಿಯದ ಉಡ


ನೀರು ಕುಡಿಯದ ಉಡ

      ‌‌ಉಡ ಬಹಳ ಅಪರೂಪವಾಗಿ ಕಾಣಸಿಗುವ ಒಂದು ಪ್ರಾಣಿ. ಸಾಧಾರಣ ಹಲ್ಲಿ, ಹರಣೆಯ ವಿಭಾಗಕ್ಕೆ ಸೇರಿದ ಈ ಜೀವಿ ಸುಮಾರು 700 ರಿಂದ 800 ವರ್ಷಗಳ ತನಕ ಬದುಕ್ಕುತ್ತದೆ. ನೀರೆಂದರೆ ಈ ಉಡಕ್ಕೆ ಬಹಳ ಅಸಹ್ಯ. ಮಾತ್ರವಲ್ಲ ತನ್ನ ಇಷ್ಟೊಂದು ಉದ್ದದ ದೀರ್ಘ ಬದುಕಿನಲ್ಲಿ ಒಮ್ಮೆಯೂ ಒಂದು ಹನಿ ನೀರನ್ನು ಕೂಡ ಕುಡಿಯುವುದಿಲ್ಲ. ಮಾತ್ರವಲ್ಲ ಅಪರೂಪಕ್ಕೆ ಬಾಯಾರಿಕೆ ಆದರೆ ಒಳ್ಳೆ ತಂಪಾಗಿ ಬೀಸುವ ಗಾಳಿಯ ಉಸಿರೆಳೆದರೂ ಸಾಕಾಗುತ್ತದೆ. ಆದ್ದರಿಂದಲೇ ಇದು ಎರಡು ಮೂರು ತಿಂಗಳಿಗೊಮ್ಮೆ ಒಂದು ಹನಿ ಮೂತ್ರ ಮಾತ್ರ ವಿಸರ್ಜನೆ ಮಾಡುತ್ತದೆ.
     ಇದರ ಮತ್ತೊಂದು ವಿಶೇಷತೆ ಎಂದರೆ ಇದರ ಹಲ್ಲು ಸಾಯುವ ತನಕ ಉದುರದೆ ಹಾಗೆಯೇ ಇರುತ್ತದೆ. ಯಾಕೆಂದರೆ ಇದರ ಹಲ್ಲು ಎಲ್ಲಾ ಜೀವಿಗಳ ಹಲ್ಲಿನಂತೆ ಬಿಡಿ ಬಿಡಿಯಾಗಿ ಬೇರ್ಪಟ್ಟು ಇರುವುದಲ್ಲ. ಒಟ್ಟಾಗಿ ಹಲವಾರು ಹಲ್ಲುಗಳನ್ನೊಳಗೊಂಡ ಒಂದು ಸಮುಚ್ಚಯ. ಆದ್ದರಿಂದ ಒಂದು ಹಲ್ಲನ್ನು ಮಾತ್ರ ಬೇರ್ಪಡಿಸಲು ಸಾದ್ಯವಾಗುವುದಿಲ್ಲ. ಮೊಟ್ಟೆ ಹಾಕುವ ಈ ಜೀವಿ ತನ್ನ ಮೊಟ್ಟೆಗಳನ್ನು ಮಾನವನ ಉಪದ್ರವ ಇಲ್ಲದಿರಲು ಅಪಾಯಕಾರಿ ಪ್ರದೇಶವಾದ ತೇಳು, ಹಾವುಗಳ ಹುಂಚ ಇರುವ ಜಾಗದಲ್ಲಿ ಒಂದು ಸಣ್ಣ ಹೊಂಡ ಮಾಡಿ ಅದರಲ್ಲಿ ಇಡುತ್ತದೆ. ನಲುವತ್ತು ದಿನಗಳ ಕಾವು ಕೊಡುವಿಕೆಯ ನಂತರ ಮೊಟ್ಟೆಯೊಡೆದು ಬರುವ ಮರಿಗಳಿಗೆ ದೃಷ್ಟಿ ಮಾಂದ್ಯ ಇರುವುದರೊಂದಿಗೆ ಶರೀರಕ್ಕೆ ಬಲ ಕೂಡ ಇರುವುದಿಲ್ಲ. ಆಗ ತಾಯಿ ಉಡವು ತನ್ನ ಮರಿಗಳನ್ನು ಸೂರ್ಯ ಪ್ರಕಾಶ ಬೀಳುವ ಜಾಗಕ್ಕೆ ಕೊಂಡು ಹೋಗಿ ಮರಿಗಳಿಗೆ ಪೂರ್ಣ ದೃಷ್ಟಿ ಸಿಕ್ಕಿ ಚರ್ಮ, ಎಲುಬು, ಸ್ನಾಯು ಎಲ್ಲಾ ಗಟ್ಟಿ ಆಗುವ ತನಕ ಶುಶ್ರೂಷೆ ಮಾಡುತ್ತದೆ.ನಂತರ ಮರಿಗಳನ್ನು ಅದರ ದಾರಿಗೆ ಬಿಡುತ್ತದೆ.
     ಎರಡು ಜನನೇಂದ್ರಿಯ ಇರುವ ಈ ಅಪೂರ್ವ ಜೀವಿಯ ಚರ್ಮದ ಬಣ್ಣ ಸೂರ್ಯ ತಾಪಕ್ಕೆ ಅನುಗುಣವಾಗಿ ಗೋಸಂಬಿಯಂತೆ ಬದಲಾಗುತ್ತದೆ.
   ದೀರ್ಘಾಯುಷ್ಯ ಇರುವ ಈ ಉಡಕ್ಕೆ ನೆನಪು ಶಕ್ತಿ ಎಂಬುದು ಇಲ್ಲವೇ ಇಲ್ಲ. ಎಲ್ಲವೂ ಮರೆತು ಹೋಗುತ್ತದೆ. ಬೆಳಗ್ಗೆ ಆಹಾರ ಹುಡುಕಲು ಹೋಗಿ ಸಂಜೆ ಮರಳಿ ಬರುವಾಗ ತನ್ನ ವಾಸಗೂಡು ಕೂಡ ಎಲ್ಲೆಂದು ಗೊತ್ತಾಗದ ಅವಸ್ಥೆ ಕೂಡ ಆಗುವುದುಂಟು. ಅದಕ್ಕೋಸ್ಕರ ಇದು ಸಾಧಾರಣ ದೊಡ್ಡ ಮರ, ಬೆಟ್ಟ ಇರುವ ಸುಲಭವಾಗಿ ಲ್ಯಾಂಡ್ ಮಾರ್ಕ್ ಗೊತ್ತಾಗುವ ಜಾಗಗಳನ್ನು ಗೂಡು ಮಾಡಲು ಆಯ್ಕೆ ಮಾಡುತ್ತದೆ. ಅಲ್ಲದೆ ಮಳೆನೀರಿನ ಹರಿತ ಅಥವಾ ಇನ್ಯಾವುದೇ ನೈಸರ್ಗಿಕ ಅನಾಹುತಗಳಿಗೆ ಬಲಿಯಾಗದಿರಲು ಯಾವಾಗಲೂ ಇದು ಗೂಡುಗಳನ್ನು ಬಹಳ ಗಡುಸಾದ ಗಟ್ಟಿ ಮಣ್ಣಿರುವ ಜಾಗದಲ್ಲೇ ಮಾಡುತ್ತದೆ. ಆ ಕಾರಣದಿಂದ ಇದರ ಕೈಯ ಉಗುರುಗಳು ಸಂಪೂರ್ಣ ಸವೆದು ಹೋಗಿರುತ್ತದೆ. 
  ಇದರ ಮತ್ತೊಂದು ವಿಷೇಶತೆಯೆಂದರೆ ಅಸ್ತಮಾ ರೋಗ ಇರುವವನು ಇದರ ಹೃದಯವನ್ನು ಹಸಿಯಾಗಿಯೇ ಬಿಸಿ ರಕ್ತದೊಂದಿಗೆ ತಿಂದರೆ ಖಾಯಿಲೆ ಗುಣಮುಖ ಆಗುವುದಲ್ಲದೆ ಜೀವಪರ್ಯಂತ ಅವನ ಶರೀರದಲ್ಲಿ ಅಸ್ತಮಾ ರೋಗ ನಿರೋಧಕ ಶಕ್ತಿ ಕೂಡ (ಅ್ಯಂಟಿ ಬಯೋಟಿಕ್) ಇರುತ್ತದೆ. ಮಾತ್ರವಲ್ಲ ಮತ್ತೆ ಒಮ್ಮೆಯೂ ಆತನಿಗೆ ಅಸ್ತಮಾ ರೋಗ ಮರುಕಳಿಸಲಾರದು.
      ಒಬ್ಬನು ಉಡವನ್ನು ಕನಸು ಕಂಡರೆ ಅವನು ಯಾವುದೋ ಮಾರಕ ರೋಗಕ್ಕೆ ಬಲಿಯಾಗುವನು ಎಂಬುದರ ನಿಶಾನೆಯಾಗಿದೆ.
   ಪ್ರವಾದಿಯವರು ಈ ಜೀವಿಯನ್ನು ಒಮ್ಮೆಯೂ ತಿನ್ನಿಲ್ಲವಾದರೂ ಇಸ್ಲಾಮಿನಲ್ಲಿ ಇದನ್ನು ತಿನ್ನುವುದು ಹಲಾಲ್ ಆಗಿದೆ. ಪ್ರವಾದಿಯವರ ಸನ್ನಿಧಿಗೆ ಒಮ್ಮೆ ಒಬ್ಬರು ಒಂದು ಉಡವನ್ನು ಹಿಡಿದು ತಂದಾಗ "ನಾನಿದನ್ನು ತಿನ್ನುವುದಿಲ್ಲ. ನನಗೆ ಇದನ್ನು ಕಾಣುವಾಗ ಅಸಹ್ಯ ಆಗುತ್ತದೆ. ನನಗೆ ಬೇಡ. ಆದರೂ ನಿಮಗಿದನ್ನು ನಾನು ಹಲಾಲ್ ಮಾಡಿರುತ್ತೇನೆ" ಎಂಬ ಪ್ರವಾದಿಯವರ ಮಾತು ಇದನ್ನು ತಿನ್ನಬಹುದು ಎಂಬುದಕ್ಕೆ ಆಧಾರವಾಗಿದೆ.

   ಸಂಗ್ರಹ : ಇಮಾಂ ಕಮಾಲುದ್ದೀನ್ ದುಮೈರಿಯವರ ಹಯಾತುಲ್ ಹಯವಾನ್ ಮತ್ತು ಇಮಾಮ್ ಅಬ್‌ಷೀಹಿಯವರ ಮುಸ್‌ತತ್‌ರಫ್ಎಂಬ ಗ್ರಂಥ.

ಲೇಖಕರು :ಯೂಸುಫ್ ನಬ್ ಹಾನಿ ಕುಕ್ಕಾಜೆ

NOOR-UL-FALAH ISLAMIC STORE 

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್