ತಮ್ಮ ﷺ ಕಾಲಿಗೆ ಒಂದು ಮುಳ್ಳು ಚುಚ್ಚಿದರೂ ಸಹಿಸದ ಸ್ವಹಾಬಿ ಶ್ರೇಷ್ಠರ ಪವಿತ್ರ ಪ್ರೀತಿಯ ಮುಂದೆ ನನ್ನ ಪ್ರೀತಿ ಏನೂ ಅಲ್ಲ.. ಯಾ ಅಲ್ಲಾಹ್ ಮುತ್ತು ಹಬೀಬ್ ﷺ ತಂಙಳ್ ರವರನ್ನು ನಿಷ್ಕಳಂಕ ಹೃದಯದಿಂದ ಪ್ರೀತಿಸಲು ತೌಫೀಖ್ ನೀಡು ಅಲ್ಲಾಹ್..
✦ಅರಿವಿನ ವೃಕ್ಷ✦ السَّـــــــلاَمُ عَلَيــْــكُم وَرَحْمَةُ اللهِ وَبَرَكـَـاتُه ✒️ ಅಬೂರಿಫಾನ ಕೆಳಗಿನ ಕೆರೆ ▪️▪️▪️▪️▪️▪️▪️▪️▪️▪️▪️ ➤ವಿಷಯ: ಆರು ಮತ್ತು ಐದು: ಆರು ಪ್ರಮುಖ ವಿಶ್ವಾಸ ಕಾರ್ಯಗಳು ಮತ್ತು ಐದು ಪ್ರಮುಖ ಆಚಾರಗಳು ಇಸ್ಲಾಮಿನ ತಳಹದಿ. ಆರು ವಿಶ್ವಾಸ ಕಾರ್ಯಗಳಿಗೆ ಈಮಾನ್ ಕಾರ್ಯಗಳು ಎನ್ನಲಾಗುತ್ತದೆ. ಈ ಆರು ವಿಶ್ವಾಸಗಳು ಇದ್ದರೆ ಮಾತ್ರ ಮುಉಮಿನ್. ಇದರಿಂದ ಒಂದನ್ನು ಕೈಬಿಟ್ಟರೆ ಮತಭ್ರಷ್ಟನಾಗುತ್ತಾನೆ.. 1). ಅಲ್ಲಾಹನಲ್ಲಿ ವಿಶ್ವಾಸ. 2). ಅಲ್ಲಾಹನ ಮಲಕ್ಗಳಲ್ಲಿ ವಿಶ್ವಾಸ. 3). ಅಲ್ಲಾಹನ ವೇದ ಗ್ರಂಥಗಳಲ್ಲಿ ವಿಶ್ವಾಸ. 4). ಅಲ್ಲಾಹನ ಪ್ರವಾದಿಗಳಲ್ಲಿ ವಿಶ್ವಾಸ. 5). ಪರಲೋಕದಲ್ಲಿ ವಿಶ್ವಾಸ. 6).ವಿಧಿಯಲ್ಲಿ ವಿಶ್ವಾಸ. ಈ ಆರು ಕಾರ್ಯಗಳನ್ನು ವಿಸ್ತ್ರತವಾಗಿ ತಿಳಿದುಕೊಂಡಿರಬೇಕು. ಅಲ್ಲಾಹು ಇದ್ದಾನೆ ಎಂದು ಮಾತ್ರ ನಂಬಿದರೆ ಸಾಲದು, ದೇವನಾಗಿ ಅವನೊಬ್ಬನೇ, ದೈವಿಕ ಶಕ್ತಿ ಇರುವುದು ಅವನೊಬ್ಬನಿಗೇ, ಬೇರೆ ಯಾವ ವ್ಯಕ್ತಿಗೂ ಶಕ್ತಿಗೂ ದೈವಿಕ ಶಕ್ತಿ ಇರುವುದಿಲ್ಲ ಎಂದು ದೃಢ ವಿಶ್ವಾಸ ಹೊಂದಿರಬೇಕು. ಅಷ್ಟೇ ಅಲ್ಲ ಬೇರೆ ಶಕ್ತಿ ಕೂಡಾ ಅಲ್ಲಾಹನದ್ದೇ ಆಗಿದ್ದು ಎಲ್ಲಾ ವಿಧ ಶಕ್ತಿಗಳನ್ನು ಕೊಡುವುದೇ ಅವನು ಎಂದು ವಿಶ್ವಾಸವಿಡಬೇಕು. ಅವನ ಕುರಿತು ವಿಶ್ವಾಸವಿಡಬೇಕಾದ ಇನ್ನೂ ಕೆಲವು ಕಾರ್ಯಗಳು ಹೀಗಿವೆ: 1). ಅವನಿಗೆ ಆದಿಯಿಲ್ಲ...
ಮೂಸಾ ನಬಿ(ಅ) ಮತ್ತು ಫಿರ್'ಔನ್ (ಪೆಟ್ಟಿಗೆಯಲ್ಲಿ ಅದ್ಭುತ ಶಿಶು) ಬಿಸ್ಮಿಲ್ಲಾಹಿ ರ್ರಹ್ಮಾನಿ ರ್ರಹೀಂ ಅಲ್ ಹಮ್ದುಲಿಲ್ಲಾಹಿ ರಬ್ಬಿಲ್ ಆಲಮೀನ್. ಅಸ್ಸಲಾತು ವಸ್ಸಲಾಮು ಅಲಾ ಸಯ್ಯುದುನಾ ಮುಹಮ್ಮದಿನ್ ವ'ಅಲಾ ಆಲಿಹಿ ವ'ಸಹ್'ಬಿಹಿ ವಸಲ್ಲಮ್* ಅದು ಈಜಿಪ್ಟಿನಲ್ಲಿರುವ ದೊಡ್ಡದಾದ ಅರಮನೆ ಅಲ್ಲಿ ಫರೋವ(ಫಿರ್'ಔನ್) ಎಂಬ ಅಕ್ರಮಿ ರಾಜನು ರಾಜಡಳಿತ ನಡೆಸುತ್ತಿದ್ದ. ಅವನ ಏಳು ಮಂದಿ ಹೆಣ್ಣು ಮಕ್ಕಳಿಗೆ ಪಾಂಡು ರೋಗವು ತಗುಲಿತ್ತು. ಇದರಿಂದ ಫರೋವ ತುಂಬಾ ಚಿಂತಿತನಾಗಿದ್ದ. ಅದೆಷ್ಟೋ ವೈದ್ಯರು ಬಂದು ಚಿಕಿತ್ಸೆ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಮುದ್ದಿನ ಮಕ್ಕಳ ಕಷ್ಟ ಸ್ಥಿತಿ ಕಂಡು ಫರೋವನಿಗೆ ಚಿಂತೆಯು ಜಾಸ್ತಿಯಾಗತೊಡಗಿತು. ಚಿಂತಾಕ್ರಾಂತನಾಗಿ ಆಸನದಲ್ಲಿ ತಲೆ ತಗ್ಗಿಸಿಕೊಂಡು ಕುಳಿತಿದ್ದಾಗ ಚಕ್ರವರ್ತಿಯ ಸನ್ನಿಧಿಗೆ ಮಂತ್ರಿ ಹಾಮಾನ್ ಹಾಜರಾದನು. "ಮಹಾ ಪ್ರಭುಗಳೇ! ತಾವು ಈ ರೀತಿ ಚಿಂತಾಕ್ರಾಂತರಾಗಿ ಕೂರಲು ಕಾರಣವೇನು?" "ನನ್ನ ಮುದ್ದಿನ ಮಕ್ಕಳಿಗೆ ಹಿಡಿದ ಮಾರಕ ರೋಗ ಇದುವರೆಗೂ ಗುಣವಾಗಲಿಲ್ಲ. ಎಷ್ಟೊಂದು ವೈದ್ಯರು ಔಷಧೋಪಚಾರ ಮಾಡಿದರು. ಹೀಗಿರುವಾಗ ಚಿಂತೆ ಹುಟ್ಡದೇ ಇರುತ್ತದೆಯೇ?" ಚಕ್ರವರ್ತಿ ಇದು ಹ...
ನಸೀಹಾಳ ನಸೀಹತ್ ಲೇಖಕರ ಮಾತು.. ಬಿಸ್ಮಿ, ಹಂದ್, ಸ್ವಲಾತ್. ಸಲಾಂಗಳ ಬಳಿಕ.. ನಸೀಹಾಳ ನಸೀಹತ್"ಇದು, ಅಲ್ಲಾಹನ ಮಹತ್ತರವಾದ ಅನುಗ್ರಹದಿಂದ ವಿಧ್ಯಾರ್ಥಿ ಕಾಲದಲ್ಲಿ ಬರೆದ ಪುಸ್ತಕ. ದಕ್ಷಿಣ ಭಾರತದ ಶ್ರೇಷ್ಠ ವಿದ್ಯಾ ಸಂಸ್ಥೆಯಾದ ಮುಹಿಮ್ಮಾತ್ ದಅ್ವಾ ಕಾಲೇಜಿನಲ್ಲಿ ಅಧ್ಯಯನ ಮಾಡುವಾಗ ಮಹಿಳೆಯರ ರಕ್ತಸ್ರಾವ ಹಾಗೂ ಇತರ ವಿಷಯಗಳಲ್ಲಿನ ಕುತೂಹಲಕರ ವಿಷಯ ಕೇಳುತಿದ್ದಂತೆ ನಾನು ನಿಜಕ್ಕೂ ಚಕಿತನಾಗಿದ್ದೆ. ಜೊತೆಗೆ ಮನಸ್ಸಿನಲ್ಲಿ ಮೂಡಿಬಂದ ಪ್ರಶ್ನೆ “ಅರೆ!! ಸಣ್ಣ ಪ್ರಾಯದಲ್ಲಿ ಕೆಲವೊಂದು ತರಗತಿ ಮಾತ್ರ ಕಲಿತ ಹೆಣ್ಣು ಮಕ್ಕಳಿಗೆ ಇವೆಲ್ಲ ಹೇಗೆ ತಿಳಿಯಲು ಸಾಧ್ಯ?"ಈ ಒಂದು ಪ್ರಶ್ನೆ ಈ ಪುಸ್ತಕಕ್ಕೆ ರೂಪ ಕೊಟ್ಟಿತು. ಅವತ್ತು ಇದ್ದ ಪ್ರಾಯ, ಜ್ಞಾನ, ಅನುಭವ ಎಲ್ಲವುಗಳ ಕೊರತೆ ಈ ಕೃತಿಯ ಮೊದಲ ಆವೃತ್ತಿಯಲ್ಲಿ ಎದ್ದು ಕಾಣುತ್ತದೆ. ಹಾಗಿದ್ದರೂ ಪುಸ್ತಕದಲ್ಲಿ ಚರ್ಚೆ ಮಾಡಿದ ವಿಷಯ ಹಾಗೂ ಸರ್ವರಿಗೂ ಸುಲಭವಾಗಿ ಓದಿಸುವಂತಾಗಲು ಕಥಾ ಶೈಲಿಯಲ್ಲಿ ಮಾಡಿದ ವಿವರಣೆ ಹಲವರು ಈ ಪುಸ್ತಕವನ್ನು ಓಕೆ ಮಾಡಲು ಕಾರಣವಾಯಿತು. ಏನಿಲ್ಲದಿದ್ದರೂ ಎರಡು ಸಾವಿರ ಪ್ರತಿಗಳು ಕೆಲವೇ ತಿಂಗಳೊಳಗೆ ಖಾಲಿಯಾಗಿತ್ತು. ನಂತರವೂ ಹಲವರು ಕೇಳಿದ್ದರು. ಇದೀಗ ಸಾಧ್ಯವಾದಷ್ಟು ಅಕ್ಷರ ತಪ್ಪುಗಳನ್ನು ನಿವಾರಿಸುತ್ತ ಪುಸ್ತಕ ಮತ್ತೆ ಹೊರಬಂದಿದೆ. ಈ ಬಾರಿ ಪ್ರಕಾಶನದ ನಿರ್ವಹಣೆ ಕೃಷ್ಣಾಪುರದ ಇಸ್ಮಾಯಿಲ್ ಮುಸ್ಲಿಯಾರ್ (ಲುಕ್ಮಾನ್ ಉಸ್ತಾದ್) ವಹಿಸಿಕೊಂಡಿದ್ದಾರೆ. ಧಾರ್ಮಿಕವಾ...
Comments
Post a Comment