ಪರದೆ


ಪರದೆ

ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ತಮ್ಮ ಮನೆಯ ಬಾಗಿಲಿಗೆ ಪರದೆಯನ್ನು ಉಪಯೋಗಿಸುತ್ತಿದರು, ಕಅಬ್‌ಬ್‌ನು ಮಾಲಿಕ್ (ರ) ಇಬ್ನು ಅಬೀ ಹದ್ರದಿಯವರೊಂದಿಗೆ ತಮಗೆ ಬರಬೇಕಾದ ಸಾಲವನ್ನು ಹಿಂದಿರುಗಿಸುವಂತೆ ಕೇಳಿದರು. (ಮಾತಿಗೆ ಮಾತು ಬೆಳೆದು ಅವರ ನಡುವೆ ವಾಕ್ಸಮರ ನಡೆದವು),
ಮಸೀದಿಯಲ್ಲಿ ಅವರಿಬ್ಬರು ಗಲಾಟೆಯೆಬ್ಬಿಸಿದರು. ಆಗ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಮನೆಯಲ್ಲಿದ್ದರು. ಗಲಾಟೆ ಕೇಳಿ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಮನೆಯ ಪರದೆ ಸರಿಸಿ, “ಯಾ..ಕಾಬ್" ಎಂದು ಕರೆದರು. ಕಅಬ್ ಅತ್ತ ನೋಡಿದಾಗ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಸಾಲದ ಅರ್ಧದಷ್ಟನ್ನು ಕಡಿಮೆ ಮಾಡುವಂತೆ ಸಂಜ್ಞೆಮಾಡಿದರು. ಕಅಬ್ (ರ) ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಆಜ್ಞೆಯನ್ನು ಅನುಸರಿಸಿದರು. ಬಳಿಕ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಇಬ್ನು ಅಬೀ ಹದ್ರದೀಯೊಂದಿಗೆ ಉಳಿದ ಮೊತ್ತವನ್ನು ಹಿಂದಿರುಗಿಸುವಂತೆ ಸೂಚಿಸಿದರು..
(ಬುಖಾರಿ ಕಿತಾಬುಸ್ಸಲಾಡ್, ಮುಸ್ಲಿಮ್ ಕಿತಾಬುಲ್ ಮುಸಾಫಾತ್)

NOOR-UL-FALAH

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್