ಕೊಬ್ಬು ಕರಗಿಸಲು

ಉತ್ತಮ ಆರೋಗ್ಯಕ್ಕಾಗಿ ಮನೆಮದ್ದುಗಳು


ಕೊಬ್ಬು ಕರಗಿಸಲು

•ಜೇನುತುಪ್ಪ ಎರಡು ಚಮಚ, ನಿಂಬೆ ಹಣ್ಣಿನ ರಸ ಎರಡು ಚಮಚ, ಕಾಯಿಸಿ ಆರಿಸಿದ ನೀರು ಇಲ್ಲವೆ ಬಿಸಿ ನೀರು ಒಂದು ಕಪ್ಪು ಈ ಮೂರನ್ನು ಚೆನ್ನಾಗಿ ಮಿಶ್ರಮಾಡಿ ಬೆಳಿಗ್ಗೆ ಎದ್ದ ಕೂಡಲೆ ಬರೀ ಹೊಟ್ಟೆಯಲ್ಲಿ ಸತತ ಮೂರು ತಿಂಗಳುಗಳ ಕಾಲ ಸೇವಿಸಿದರೆ ದೇಹದ ಕೊಬ್ಬು ಕರಗಿ ಸ್ಥೂಲ ಕಾಯ ನಿವಾರಣೆಯಾಗುವುದು ಹಾಗೂ ದೇಹದ ತೂಕವು ಕಮ್ಮಿಯಾಗಿ ದೇಹವು ಹಗುರವಾಗುವುದು.

•ಒಂದು ಪೂರ್ಣ ನಿಂಬೆ ಹಣ್ಣಿನ ರಸಕ್ಕೆ ಎರಡು ಚಮಚ ಜೇನು ಬೆರೆಸಿ ಒಂದು ಅರ್ಧ ಕಪ್ಪು ನೀರಿನಲ್ಲಿ ಮಿಶ್ರಮಾಡಿ ಪ್ರತಿನಿತ್ಯ ಬೆಳಿಗ್ಗೇನೇ ಕುಡಿಯುತ್ತಿರಬೇಕು..

•100 ಗ್ರಾಂ ಬೆಳ್ಳುಳ್ಳಿಯನ್ನು ಸಿಪ್ಪೆ ಸುಳಿದು ನುಣ್ಣಗೆ ಜಜ್ಜಿಕೊಳ್ಳಬೇಕು. ಅರ್ಧ ಲೀಟರ್ ಅಪ್ಪಟ ಹಾಲಿನಲ್ಲಿ ಬೆರೆಸಿ ಕುದಿಸಬೇಕು. ಕುದಿದು ಗಟ್ಟಿಯಾದಾಗ ಇಳಿಸಿಕೊಂಡು ಅವರೆ ಕಾಳಿನ ಗಾತ್ರದ ಮಾತ್ರೆಗಳನ್ನು ಮಾಡಿಟ್ಟುಕೊಳ್ಳಬೇಕು. ಪ್ರತಿದಿನ ಬೆಳಿಗ್ಗೆ ಒಂದು ಅಥವಾ ಎರಡು ಮಾತ್ರೆಗಳನ್ನು ಬಿಸಿ ನೀರಿನೊಂದಿಗೆ ಸೇವಿಸಬೇಕು. ಬಿಟ್ಟು ಬಿಡದೆ 48 ದಿನಗಳು ಸೇವಿಸಿದರೆ ದೇಹದ ಕೊಬ್ಬು ಕರಗುವುದು ದೇಹ ಹಗುರವಾಗುವುದು..

NOOR-UL-FALAH

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್