ಅಗ್ನಿ ಮಾಂದ್ಯ ನಿವಾರಣೆಗೆ. ಮತ್ತು ಅಜೀರ್ಣ, ಹುಳಿತೇಗು ನಿವಾರಣೆಗೆ..

ಉತ್ತಮ ಆರೋಗ್ಯಕ್ಕಾಗಿ ಮನೆಮದ್ದುಗಳು

ಅಗ್ನಿ ಮಾಂದ್ಯ ನಿವಾರಣೆಗೆ.

▪ಬೆಳ್ಳುಳ್ಳಿಯನ್ನು ಜಜ್ಜಿ ನೀರಿನಲ್ಲಿ ಕುದಿಸಿ ಸೋಸಿಕೊಂಡು ಜೇನು ಬೆರೆಸಿ ಕುಡಿಯಬೇಕು..
▪ಹಸಿಶುಂಠಿ ರಸ 4 ಚಮಚ, ಪುದಿನ ಸೊಪ್ಪಿನ ರಸ ಒಂದು ಚಮಚ ನಿಂಬೆರಸ, ಜೇನು ಒಂದು ಚಮಚ ಮಿಶ್ರ ಮಾಡಿ ಬೆಳಿಗ್ಗೆ ಸೇವಿಸಬೇಕು.

ಅಜೀರ್ಣ, ಹುಳಿತೇಗು ನಿವಾರಣೆಗೆ..

▪ಓಮಕಾಳಿನ ಪುಡಿ ಎರಡು ಚಮಚದಷ್ಟನ್ನು ಒಂದು ದೊಡ್ಡ ಲೋಟ ನೀರಿಗೆ ಬೆರೆಸಿ ಕುದಿಸಿ ಅರ್ಧಕ್ಕೆ ಇಳಿದಾಗ ಅದಕ್ಕೆ ಒಂದು ಚಮಚ ಕಲ್ಲು ಸಕ್ಕರೆ, ಇಲ್ಲವೆ ಸಕ್ಕರೆ ಬೆರೆಸಿ ಚೆನ್ನಾಗಿ ಕದಡಿ ಸ್ವಲ್ಪ ಸ್ವಲ್ಪವಾಗಿ ಕುಡಿದರೆ ಮೇಲಿನ ದೋಷಗಳೆಲ್ಲಾ ನಿವಾರಣೆಯಾಗುವುದು.
▪ಕೊತ್ತಂಬರಿ ಬೀಜ, ಜೀರಿಗೆ, ಬಡೆಸೋಪ್ಪು ಇವುಗಳ ಕಷಾಯಕ್ಕೆ ಒಂದಿಷ್ಟು ಏಲಕ್ಕಿ ಪುಡಿಯನ್ನು ಬೆರೆಸಿ ಪ್ರತಿದಿನ ಬೆಳಿಗ್ಗೆ ಕುಡಿಯಬೇಕು.
▪ಪುದಿನ ಸೊಪ್ಪಿನ ರಸ ಎರಡು ಚಮಚ, ಜೇನು ತುಪ್ಪ ಒಂದು ಚಮಚ ಬೆರೆಸಿ ಊಟಕ್ಕೆ ಮುಂಚೆ ಸೇವಿಸಬೇಕು..

NOOR-UL-FALAH 

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್