ನಿದ್ದೆಯಿಂದ ಎದ್ದೇಳುವಾಗ ಹೇಳುವ ದಿಕ್ರ್‍ಗಳು

ನಿದ್ದೆಯಿಂದ ಎದ್ದೇಳುವಾಗ ಹೇಳುವ ದಿಕ್ರ್‍ಗಳು

إِنَّ فِي خَلْقِ السَّمَاوَاتِ وَالْأَرْضِ وَاخْتِلَافِ اللَّيْلِ وَالنَّهَارِ لَآيَاتٍ لِأُولِي الْأَلْبَابِ˓ الَّذِينَ يَذْكُرُونَ اللَّهَ قِيَامًا وَقُعُودًا وَعَلَى جُنُوبِهِمْ وَيَتَفَكَّرُونَ فِي خَلْقِ السَّمَاوَاتِ وَالْأَرْضِ رَبَّنَا مَا خَلَقْتَ هَذَا بَاطِلًا سُبْحَانَكَ فَقِنَا عَذَابَ النَّارِ˓ رَبَّنَا إِنَّكَ مَنْ تُدْخِلِ النَّارَ فَقَدْ أَخْزَيْتَهُ وَمَا لِلظَّالِمِينَ مِنْ أَنْصَارٍ˓ رَبَّنَا إِنَّنَا سَمِعْنَا مُنَادِيًا يُنَادِي لِلْإِيمَانِ أَنْ آمِنُوا بِرَبِّكُمْ فَآمَنَّا رَبَّنَا فَاغْفِرْ لَنَا ذُنُوبَنَا وَكَفِّرْ عَنَّا سَيِّئَاتِنَا وَتَوَفَّنَا مَعَ الْأَبْرَارِ˓ رَبَّنَا وَآتِنَا مَا وَعَدْتَنَا عَلَى رُسُلِكَ وَلَا تُخْزِنَا يَوْمَ الْقِيَامَةِ إِنَّكَ لَا تُخْلِفُ الْمِيعَادَ˓ فَاسْتَجَابَ لَهُمْ رَبُّهُمْ أَنِّي لَا أُضِيعُ عَمَلَ عَامِلٍ مِنْكُمْ مِنْ ذَكَرٍ أَوْ أُنْثَى بَعْضُكُمْ مِنْ بَعْضٍ فَالَّذِينَ هَاجَرُوا وَأُخْرِجُوا مِنْ دِيَارِهِمْ وَأُوذُوا فِي سَبِيلِي وَقَاتَلُوا وَقُتِلُوا لَأُكَفِّرَنَّ عَنْهُمْ سَيِّئَاتِهِمْ وَلَأُدْخِلَنَّهُمْ جَنَّاتٍ تَجْرِي مِنْ تَحْتِهَا الْأَنْهَارُ ثَوَابًا مِنْ عِنْدِ اللَّهِ وَاللَّهُ عِنْدَهُ حُسْنُ الثَّوَابِ˓ لَا يَغُرَّنَّكَ تَقَلُّبُ الَّذِينَ كَفَرُوا فِي الْبِلَادِ˓ مَتَاعٌ قَلِيلٌ ثُمَّ مَأْوَاهُمْ جَهَنَّمُ وَبِئْسَ الْمِهَادُ˓ لَٰكِنِ الَّذِينَ اتَّقَوْا رَبَّهُمْ لَهُمْ جَنَّاتٌ تَجْرِي مِنْ تَحْتِهَا الْأَنْهَارُ خَالِدِينَ فِيهَا نُزُلًا مِنْ عِنْدِ اللَّهِ وَمَا عِنْدَ اللَّهِ خَيْرٌ لِلْأَبْرَارِ˓ وَإِنَّ مِنْ أَهْلِ الْكِتَابِ لَمَنْ يُؤْمِنُ بِاللَّهِ وَمَا أُنْزِلَ إِلَيْكُمْ وَمَا أُنْزِلَ إِلَيْهِمْ خَاشِعِينَ لِلَّهِ لَا يَشْتَرُونَ بِآيَاتِ اللَّهِ ثَمَنًا قَلِيلًا أُولَئِكَ لَهُمْ أَجْرُهُمْ عِنْدَ رَبِّهِمْ إِنَّ اللَّهَ سَرِيعُ الْحِسَابِ˓ يَا أَيُّهَا الَّذِينَ آمَنُوا اصْبِرُوا وَصَابِرُوا وَرَابِطُوا وَاتَّقُوا اللَّهَ لَعَلَّكُمْ تُفۡلِحُونَ

“ಖಂಡಿತವಾಗಿಯೂ ಆಕಾಶಗಳ ಮತ್ತು ಭೂಮಿಯ ಸೃಷ್ಟಿಯಲ್ಲಿ, ರಾತ್ರಿ ಮತ್ತು ಹಗಲಿನ ಬದಲಾವಣೆಯಲ್ಲಿ ಬುದ್ಧಿವಂತ ಜನರಿಗೆ ದೃಷ್ಟಾಂತಗಳಿವೆ. ಅವರು ನಿಂತು, ಕುಳಿತು ಮತ್ತು ಪಾಶ್ರ್ವಕ್ಕೆ ಮಲಗಿ ಅಲ್ಲಾಹನನ್ನು ಸ್ಮರಿಸುವವರು ಮತ್ತು ಆಕಾಶಗಳ ಹಾಗೂ ಭೂಮಿಯ ಸೃಷ್ಟಿಯ ಬಗ್ಗೆ ಚಿಂತಿಸುವವರು. (ಅವರು ಹೇಳುವರು): ಓ ನಮ್ಮ ರಬ್ಬೇ, ನೀನು ಇದನ್ನು ಮಿಥ್ಯವಾಗಿ ಸೃಷ್ಟಿಸಿಲ್ಲ; ನೀನು ಪರಮಪಾವನನು! ಆದ್ದರಿಂದ ನರಕ ಶಿಕ್ಷೆಯಿಂದ ನಮ್ಮನ್ನು ರಕ್ಷಿಸು. ಓ ನಮ್ಮ ರಬ್ಬೇ, ನೀನು ಯಾರನ್ನಾದರೂ ನರಕಕ್ಕೆ ಪ್ರವೇಶ ಮಾಡಿಸಿದರೆ, ಖಂಡಿತವಾಗಿಯೂ ನೀನು ಅವನನ್ನು ಅಪಮಾನಗೊಳಿಸಿರುವೆ. ಅಕ್ರಮಿಗಳಿಗೆ ಯಾವುದೇ ಸಹಾಯಕರು ಇರಲಾರರು. ಓ ನಮ್ಮ ರಬ್ಬೇ, ನಿಮ್ಮ ರಬ್ಬ್ ನಲ್ಲಿ ವಿಶ್ವಾಸವಿಡಿರಿ ಎನ್ನುತ್ತಾ ವಿಶ್ವಾಸದೆಡೆಗೆ ಕರೆ ನೀಡುವ ಒಬ್ಬ ಕರೆಗಾರನನ್ನು ನಾವು ಆಲಿಸಿದ್ದೇವೆ. ಆದ್ದರಿಂದ ನಾವು ವಿಶ್ವಾಸವಿಟ್ಟಿದ್ದೇವೆ. ಆದ್ದರಿಂದ ನಮಗೆ ನಮ್ಮ ಪಾಪಗಳನ್ನು ಕ್ಷಮಿಸು ಮತ್ತು ನಮ್ಮ ಕೆಡುಕುಗಳನ್ನು ಅಳಿಸು ಮತ್ತು ಸಜ್ಜನರೊಂದಿಗೆ ನಮ್ಮನ್ನು ಮೃತಪಡಿಸು. ಓ ನಮ್ಮ ರಬ್ಬೇ, ನಿನ್ನ ರಸೂಲ್ ಗಳ ಮೂಲಕ ನೀನು ನಮಗೆ ವಾಗ್ದಾನ ಮಾಡಿರುವುದನ್ನು ನಮಗೆ ನೀಡು. ಪುನರುತ್ಥಾನ ದಿನದಂದು ನಮ್ಮನ್ನು ಅಪಮಾನಗೊಳಿಸದಿರು. ಖಂಡಿತವಾಗಿಯೂ ನೀನು ವಾಗ್ದಾನಗಳನ್ನು ಉಲ್ಲಂಘಿಸುವುದಿಲ್ಲ. ಆಗ ಅವರ ರಬ್ಬ್ ಅವರಿಗೆ ಉತ್ತರಿಸಿದನು: ‘ಪುರುಷನಾಗಿರಲಿ ಸ್ತ್ರೀಯಾಗಿರಲಿ ನಿಮ್ಮ ಪೈಕಿ ಕರ್ಮವೆಸಗುವ ಯಾರ ಕರ್ಮವನ್ನೂ ನಾನು ನಿಷ್ಫಲಗೊಳಿಸಲಾರೆನು. ನಿಮ್ಮಲ್ಲಿ ಪ್ರತಿಯೊಬ್ಬರೂ ಇನ್ನೊಬ್ಬರಿಂದ ಉದ್ಭವಿಸಿದವರಾಗಿರುವಿರಿ. ಆದ್ದರಿಂದ ತಮ್ಮ ಊರನ್ನು ತೊರೆದವರು, ಸ್ವಂತ ಮನೆಗಳಿಂದ ಹೊರದಬ್ಬಲಾದವರು, ನನ್ನ ಮಾರ್ಗದಲ್ಲಿ ಹಿಂಸೆಗೊಳಗಾದವರು, ಯುದ್ಧ ಮಾಡಿದವರು ಮತ್ತು ಹತರಾದವರು ಯಾರೋ ಅವರ ಪಾಪಗಳನ್ನು ನಾನು ಅಳಿಸುವೆನು ಮತ್ತು ತಳಭಾಗದಿಂದ ನದಿಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಲ್ಲಿ ಅವರನ್ನು ಪ್ರವೇಶ ಮಾಡಿಸುವೆನು. ಇದು ಅಲ್ಲಾಹನ ವತಿಯ ಪ್ರತಿಫಲವಾಗಿದೆ. ಅಲ್ಲಾಹನ ಬಳಿ ಅತ್ಯುತ್ತಮವಾದ ಪ್ರತಿಫಲವಿದೆ. ನಾಡುಗಳಲ್ಲಿ ಸತ್ಯನಿಷೇಧಿಗಳ ಸ್ವಚ್ಛಂದ ವಿಹಾರವು ತಮ್ಮನ್ನು ವಂಚಿಸದಿರಲಿ. ಅದು ಕ್ಷಣಿಕವಾದ ಒಂದು ಸುಖಾನುಭೂತಿಯಾಗಿದೆ. ತರುವಾಯ ಅವರಿಗಿರುವ ವಾಸಸ್ಥಳವು ನರಕಾಗ್ನಿಯಾಗಿದೆ. ಆ ವಾಸಸ್ಥಳ ಎಷ್ಟು ನಿಕೃಷ್ಟವಾದುದು! ಆದರೆ ತಮ್ಮ ರಬ್ಬನ್ನು ಭಯಪಟ್ಟು ಜೀವಿಸಿದವರು ಯಾರೋ ಅವರಿಗೆ ತಳಭಾಗದಿಂದ ನದಿಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಿವೆ. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅದು ಅಲ್ಲಾಹನ ವತಿಯ ಸತ್ಕಾರವಾಗಿದೆ. ಸಜ್ಜನರಿಗೆ ಅಲ್ಲಾಹನ ಬಳಿಯಿರುವುದೇ ಅತ್ಯುತ್ತಮವಾಗಿದೆ. ಖಂಡಿತವಾಗಿಯೂ ಗ್ರಂಥದವರ ಪೈಕಿ ಅಲ್ಲಾಹನಲ್ಲಿಯೂ, ನಿಮಗೆ ಅವತೀರ್ಣಗೊಂಡಿರುವುದರಲ್ಲಿಯೂ ಅವರಿಗೆ ಅವತೀರ್ಣಗೊಂಡಿರುವುದರಲ್ಲಿಯೂ ವಿಶ್ವಾಸವಿಡುವವರಿರು ವರು. (ಅವರು) ಅಲ್ಲಾಹನೊಂದಿಗೆ ವಿನಮ್ರತೆಯುಳ್ಳವರೂ, ಅಲ್ಲಾಹನ ವಚನಗಳನ್ನು ಮಾರಿ ತುಚ್ಛವಾದ ಬೆಲೆಯನ್ನು ಪಡೆಯದವರೂ ಆಗಿರುವರು. ಅಂತಹವರಿಗೆ ಅವರ ರಬ್ಬಿನ ಬಳಿ ಅರ್ಹ ಪ್ರತಿಫಲವಿದೆ. ಖಂಡಿತವಾಗಿಯೂ ಅಲ್ಲಾಹು ಅತಿಶೀಘ್ರವಾಗಿ ವಿಚಾರಣೆ ಮಾಡುವವನಾಗಿರುವನು. ಓ ಸತ್ಯವಿಶ್ವಾಸಿಗಳೇ! ತಾಳ್ಮೆ ವಹಿಸಿರಿ, ಸ್ಥೈರ್ಯವಂತರಾಗಿರಿ ಮತ್ತು ಪ್ರತಿರೋಧ ಸನ್ನದ್ಧರಾಗಿರಿ. ಅಲ್ಲಾಹನನ್ನು ಭಯಪಟ್ಟು ಜೀವಿಸಿರಿ. ನೀವು ಯಶಸ್ವಿಯಾಗಲೂ ಬಹುದು.”


ಕುರ್‍ಆನ್ 3:190-200; ಅಲ್‍ಬುಖಾರಿ (ನೋಡಿ: ಫತ್‍ಹುಲ್ ಬಾರಿ 8/237), ಮುಸ್ಲಿಮ್ 1/530

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್