ಆರು ಮತ್ತು ಐದು
✦ಅರಿವಿನ ವೃಕ್ಷ✦ السَّـــــــلاَمُ عَلَيــْــكُم وَرَحْمَةُ اللهِ وَبَرَكـَـاتُه ✒️ ಅಬೂರಿಫಾನ ಕೆಳಗಿನ ಕೆರೆ ▪️▪️▪️▪️▪️▪️▪️▪️▪️▪️▪️ ➤ವಿಷಯ: ಆರು ಮತ್ತು ಐದು: ಆರು ಪ್ರಮುಖ ವಿಶ್ವಾಸ ಕಾರ್ಯಗಳು ಮತ್ತು ಐದು ಪ್ರಮುಖ ಆಚಾರಗಳು ಇಸ್ಲಾಮಿನ ತಳಹದಿ. ಆರು ವಿಶ್ವಾಸ ಕಾರ್ಯಗಳಿಗೆ ಈಮಾನ್ ಕಾರ್ಯಗಳು ಎನ್ನಲಾಗುತ್ತದೆ. ಈ ಆರು ವಿಶ್ವಾಸಗಳು ಇದ್ದರೆ ಮಾತ್ರ ಮುಉಮಿನ್. ಇದರಿಂದ ಒಂದನ್ನು ಕೈಬಿಟ್ಟರೆ ಮತಭ್ರಷ್ಟನಾಗುತ್ತಾನೆ.. 1). ಅಲ್ಲಾಹನಲ್ಲಿ ವಿಶ್ವಾಸ. 2). ಅಲ್ಲಾಹನ ಮಲಕ್ಗಳಲ್ಲಿ ವಿಶ್ವಾಸ. 3). ಅಲ್ಲಾಹನ ವೇದ ಗ್ರಂಥಗಳಲ್ಲಿ ವಿಶ್ವಾಸ. 4). ಅಲ್ಲಾಹನ ಪ್ರವಾದಿಗಳಲ್ಲಿ ವಿಶ್ವಾಸ. 5). ಪರಲೋಕದಲ್ಲಿ ವಿಶ್ವಾಸ. 6).ವಿಧಿಯಲ್ಲಿ ವಿಶ್ವಾಸ. ಈ ಆರು ಕಾರ್ಯಗಳನ್ನು ವಿಸ್ತ್ರತವಾಗಿ ತಿಳಿದುಕೊಂಡಿರಬೇಕು. ಅಲ್ಲಾಹು ಇದ್ದಾನೆ ಎಂದು ಮಾತ್ರ ನಂಬಿದರೆ ಸಾಲದು, ದೇವನಾಗಿ ಅವನೊಬ್ಬನೇ, ದೈವಿಕ ಶಕ್ತಿ ಇರುವುದು ಅವನೊಬ್ಬನಿಗೇ, ಬೇರೆ ಯಾವ ವ್ಯಕ್ತಿಗೂ ಶಕ್ತಿಗೂ ದೈವಿಕ ಶಕ್ತಿ ಇರುವುದಿಲ್ಲ ಎಂದು ದೃಢ ವಿಶ್ವಾಸ ಹೊಂದಿರಬೇಕು. ಅಷ್ಟೇ ಅಲ್ಲ ಬೇರೆ ಶಕ್ತಿ ಕೂಡಾ ಅಲ್ಲಾಹನದ್ದೇ ಆಗಿದ್ದು ಎಲ್ಲಾ ವಿಧ ಶಕ್ತಿಗಳನ್ನು ಕೊಡುವುದೇ ಅವನು ಎಂದು ವಿಶ್ವಾಸವಿಡಬೇಕು. ಅವನ ಕುರಿತು ವಿಶ್ವಾಸವಿಡಬೇಕಾದ ಇನ್ನೂ ಕೆಲವು ಕಾರ್ಯಗಳು ಹೀಗಿವೆ: 1). ಅವನಿಗೆ ಆದಿಯಿಲ್ಲ...

Comments
Post a Comment