ಬ್ಯಾರಿ ಸಾಹಿತಿಗಾರರು, ಹಾಡುಗಾರರು , ನಿಮ್ಮಲ್ಲೊಂದು ಬದಲಾವಣೆ ತರಬಾರದೇ..

ಹೆಣ್ಣಿನ ಮೇಲೆ ಸಾಹಿತ್ಯ ಬರೆಯುವ ಬ್ಯಾರಿ ಸಾಹಿತಿಗಾರರು, ಹಾಡುಗಾರರು , ನಿಮ್ಮಲ್ಲೊಂದು ಬದಲಾವಣೆ ತರಬಾರದೇ..??

✒ ರಜಬ್ ನಾವುಂದ (ಜ್ಞಾನದಾಹಿ)

ದೈನಂದಿನವಾಗಿ ಹೆಚ್ಚಾಗುತ್ತಿರುವ ಸಾಹಿತಿಗಾರರ ಪ್ರತಿಭೆಯನ್ನು ನೋಡುವಾಗ ಬಹಳ ಸಂತೋಷವಾಗುತ್ತಿದೆ. ನಮ್ಮೆಡೆಯಲ್ಲಿ ಒಳಿತನ್ನು ಭೋದಿಸುವ ಬರಹಗಾರರು ಬೆಳೆಯುತ್ತಿದ್ದಾರೆ. ಉತ್ತಮ ಸಾಹಿತ್ಯವನ್ನು ವಿಭಿನ್ನ ಶೈಲಿಯಲ್ಲಿ ಹುಟ್ಟು ಹಾಕುವ ಸಾಹಿತಿಗಾರರು ಬೆಳೆಯುತ್ತಿದ್ದಾರೆ. ತನ್ನ ಮಧುರವಾದ ಕಂಠದಿಂದ ಜನರ ಮನಸ್ಸನ್ನು ಗೆಲ್ಲುವ ಹಾಡುಗಾರರಿದ್ದಾರೆ. ಆದರೆ ದುಃಖದ ವಿಷಯವೇನೆಂದರೆ ಹಲವು ಮಂದಿಯ ಸಾಹಿತ್ಯ ಹಾಗೂ ಮಧುರ ಕಂಠದ ಇಂಪಾದ ಧ್ವನಿಯು ಅಲ್ಲಾಹನಿಗೆ ಇಷ್ಟವಿಲ್ಲದ ಕಾರ್ಯಗಳಲ್ಲಿ ಮುಳುಗಿಹೋಗಿರುತ್ತದೆ. ಅಂತಹಾ ಸಾಹಿತಿಗಾರರೇ, ಹಾಡುಗಾರರೇ ನಿಮ್ಮಲ್ಲಿಯೇ ನೀವೊಂದು ಬದಲಾವಣೆ ತರಬಾರದೇ..??

ಅಲ್ಲಾಹನು ನೀಡಿರುವ ಅನುಗ್ರಹವಾಗಿರುವ ಸಾಹಿತ್ಯ ರಚನೆಯೂ , ಮಧುರವಾದ ಧ್ವನಿಯ ಮೂಲಕ ಹಾಡಲು ನೀಡಿರುವ ಧ್ವನಿಯೂ ಇವೆಲ್ಲವೂ ಅಲ್ಲಾಹನ ಅನುಗ್ರಹವಲ್ಲವೆ.? ಆದರೆ ನೀವದನ್ನು ಉಪಯೋಗಿಸುತ್ತಿರುವುದು ಶೈತಾನಿನ ಹಾದಿಯಲ್ಲಲ್ಲವೇ , ನಿಮಗೆ ನೀಡಿರುವ ಎಲ್ಲಾ ಅನುಗ್ರಹದ ಕುರಿತು ಅಲ್ಲಾಹನಲ್ಲಿ ಉತ್ತರಿಸುವ ಒಂದು ದಿನವಿದೆ ಎಂಬುವುದನ್ನು ಮರೆತು ಹೋಗಿದ್ದೀರಾ.

ನೀವು ಬರೆಯುವ ಉತ್ತಮ ಸಾಹಿತ್ಯವನ್ನು ಯಾಕಾಗಿ ನೀವು ಯಾವುದೇ ಪ್ರಯೋಜನವಿಲ್ಲದ ಅನ್ಯ ಹೆಣ್ಣಿನ ಸೌಂದರ್ಯವನ್ನು ಅವಲಂಬಿಸಿ ಅವಳ ನಡೆ ನುಡಿಯ ಕುರಿತಾಗಿ ಬರೆಯುತ್ತಿದ್ದೀರಾ. ಇದರಿಂದ ನಿಮ್ಮೆಡೆಯಲ್ಲಿರುವ ಕೆಲವೊಂದು ಹುಡುಗ ಹುಡುಗಿಯರಿಗೆ ಇಷ್ಟವಾಗಬಹುದೇ ಹೊರತು, ಬೇರೇನೂ ಪ್ರಯೋಜನವಿಲ್ಲ. ಮತ್ತು ಅದಕ್ಕೆ ಯಾವುದೇ ರೀತಿಯ ಒಂದು ಪುಣ್ಯಫಲವಂತೂ ಇಲ್ಲವೇ ಇಲ್ಲ.

ನೀವು ಚಿಂತಿಸಿ ಬರೆಯುವ ಸಾಹಿತ್ಯವನ್ನು ಯಾವುದೋ ಅನ್ಯ ಹುಡುಗಿಯ ಮೇಲೆ ಬರೆಯುವುದಕ್ಕಿಂತ, ನಮ್ಮ ನೇತಾರರಾದ ಮುತ್ತು ಹಬೀಬ್ ಮುತ್ತು ಮುಸ್ತಫಾ ﷺِ ರವರ ಮೇಲೆ ಬರೆಯಿರಿ, ಅಲ್ಲಿನ ﷺِ ಪ್ರೇಮವನ್ನು ಬರೆಯಿರಿ, ಅಲ್ಲಿನ ﷺِ ಚರಿತ್ರೆಯ ಸಾಲನ್ನು ಸಾಹಿತ್ಯದ ಮೂಲಕ ಹೊರ ತನ್ನಿ. ಹಾಗೆ ನೀವು ಯೋಚಿಸುವ ಒಂದೊಂದು ಸಾಲಿಗೂ ಪುಣ್ಯ ನಬಿ ﷺِ ರವರ ಮೇಲಿರುವ ಇಷ್ಕನ್ನು ಹೆಚ್ಚಿಸುತ್ತದೆ. ನೀವು ಬರೆಯಲು ತೆಗೆಯುವ ಸಮಯವು ಪುಣ್ಯ ನಬಿ ﷺِ ರವರ ಮೇಲೆ ಇಷ್ಕನ್ನು ಬರೆಯಲು ವ್ಯಯಿಸಿದ ಸಮಯದ ಕೂಟದಲ್ಲಿ ಸೇರ್ಪಡೂದಿಲ್ಲವೇ. ನಿಮ್ಮ ಸಾಹಿತ್ಯವು ಬೇರೆಯವರ ಮನದಲ್ಲಿ ಇಷ್ಕನ್ನು ಹೆಚ್ಚಿಸಲು ಕಾರಣವಾಗುವುದಿಲ್ಲವೇ. ನೀವು ಬರೆಯುವ ಸಾಹಿತ್ಯದಿಂದ ಪುಣ್ಯ ನಬಿ ﷺِ ರವರ ಶಫಾಅತ್ ಲಭಿಸಲು ಕಾರಣವಾದರೆ ಅದಲ್ಲದೇ ಮತ್ತೊಂದು ವಿಜಯ ಬೇಕೇ..?

ಯಾವುದೋ ಮೂಲೆಯಲ್ಲಿರುವ ಅನ್ಯ ಹುಡುಗಿಯ ಮೇಲೆ ಬರೆದ ಸಾಹಿತ್ಯವನ್ನು ಅಲ್ಲಾಹನ ರಸೂಲ್ ﷺِ ರವರು ಇಷ್ಟಪಡದ ಮ್ಯೂಸಿಕನ್ನು ಹಾಕಿಕೊಂಡು ಹಾಡಲು ತಯಾರಾಗುವ ಹಾಡುಗಾರರೇ ನೀವು ನಿಮ್ಮ ಸುಂದರವಾದ ಮಧುರ ಕಂಠವನ್ನು  ಅವಳ ವೈಭವದ ಕುರಿತು ಹಾಡುವುದರಿಂದ ನಮ್ಮ ಪುಣ್ಯ ನಬಿ ﷺِ ರವರ ಮೇಲೆ ಹಾಡಲು ಮುಂದಾಗಬಾರದೇ.? ಅದರಿಂದ ತಮಗೂ ಅದನ್ನು ಕೇಳುವವರಿಗೂ ನಬಿ ﷺِ ಮೇಲಿರುವ ಇಷ್ಕನ್ನು ಹೆಚ್ಚಿಸಲು ಸಹಾಯವಾಗುವುದಿಲ್ಲವೇ. ಅದು ಎಲ್ಲಿಯವರೆಗೆ ಯಾರೆಲ್ಲಾ ಕೇಳುತ್ತಾರೋ ಅದರ ಒಂದಂಶ ಪುಣ್ಯ ನಿಮಗೂ ದೊರಕುವುದಿಲ್ಲವೇ. ನಿಮ್ಮ ಸಾಹಿತ್ಯದ ಮೂಲಕ ನೀವು ಹಾಡಿದ ಹಾಡಿನ ಮೂಲಕ ಇತರರ ಮನದಲ್ಲಿ ಪುಣ್ಯ ನಬಿ ﷺِ ರವರ ಮೇಲೆ ಇಷ್ಕ್ ವರ್ಧಿಸಲು ಕಾರಣವಾದರೆ ಅದಕ್ಕೆ ಮೊದಲು ಕಾರಣಕರ್ತರು ನೀವಲ್ಲವೇ ಯೋಚಿಸಿ ನೋಡಿ.

ನಿಮ್ಮ ಗಮನದಲ್ಲಿರಲಿ....
ನೀವು ಬರೆಯುವ ಸಾಹಿತ್ಯ, ನೀವು ಹಾಡುವ ಹಾಡು ಅನಿಸ್ಲಾಮಿಕವಾಗಿದ್ದಲ್ಲಿ ಅದು ಎಲ್ಲಿಯವರೆಗೆ ಯಾರೆಲ್ಲಾ ಕೇಳುತ್ತಾರೋ ಅದರ ದೋಷದ ಒಂದಂಶವೂ ಕಡಿಮೆಯಾಗದಂತೆ ನಿಮಗೆ ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ.
ನಿಮ್ಮ ಸಾಹಿತ್ಯವು ನಿಮ್ಮ ಹಾಡು ನಿಮ್ಮ ಬರಹ ಎಲ್ಲವೂ ಒಳಿತಿನ ಹಾದಿಯಲ್ಲಿರಲಿ. ಹಾಗಿದ್ದಲ್ಲಿ ಯಾರೆಲ್ಲಾ ಕೇಳುತ್ತಾರೂ ಅದರ ಪುಣ್ಯದ ಒಂದಂಶ ನಿಮಗೂ ದೊರಕುತ್ತದೆ. ಅಲ್ಲಾಹನ ಬಳಿ ಯಾವುದೇ ಬೆಲೆ ಇಲ್ಲದ ಅನ್ಯ ಹಣ್ಣಿನ ವರ್ಣನೆ ಮಾಡುವುದನ್ನು ಬಿಟ್ಟು ಬಿಡಿರಿ.

ಯಾವತ್ತೂ ಮುರಿಯಲ್ಪಡದ ಮುತ್ತು ಹಬೀಬ್  ﷺِ ರವರ ಪ್ರೇಮದ ಅಂಶವನ್ನು ಬರೆಯಲು ಶುರುಮಾಡಿರಿ. ಅಲ್ಲಾಹು ತೌಫಿಖ್ ನೀಡಲಿ.
۞ْآمِيـــــنْ  يَا رَبَّ الْعَالَمِين۞

✒ ರಜಬ್ ನಾವುಂದ (ಜ್ಞಾನದಾಹಿ)

ಹೇಳಿರಿ ನಬಿ ﷺ ರವರ ಹೆಸರಿನಲ್ಲಿ ಮೂರು  ಸ್ವಲಾತ್ ....

📿☪📿 *صَـلــُّوا عَـلَـى النَّبِيِّ ﷺ وَآلـِهِ * اللَّهُمَّ صَلِّ عَلَى سَيِّدِنَا مُحَمَّدٍ عَدَدَ مَا فِي عِلْمِ الله صَلاَةً دَائِمَةً بِدَوَامِ مُلْكِ الله* 📿☪📿


NOOR-UL-FALAH 

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್