ಪರಿಶ್ರಮವಿಲ್ಲದೆ ಅಲ್ಲಾಹನಾಗಿ ಲಾಭದಾಯಕ ವ್ಯಾಪಾರ!
ಪರಿಶ್ರಮವಿಲ್ಲದೆ ಅಲ್ಲಾಹನಾಗಿ ಲಾಭದಾಯಕ ವ್ಯಾಪಾರ!
ವಿಶ್ವ ವಿಖ್ಯಾತ ಪಂಡಿತ ಇಮಾಮ್ ಅಸ್‌ಮಈ (ರ) ರವರು (ಹಿಜ್‌ರಾ 121 - 216) ಒಂದು ದಾರಿಯಾಗಿ ಹೋಗುತ್ತಿರುವಾಗ ಒಬ್ಬಳು ಕೆಲಸದಾಳು ಒಂದು ಬುಟ್ಟಿ ತುಂಬಾ ದಾಳಿಂಬೆ ಹಣ್ಣನ್ನು ತಲೆಯಲ್ಲಿ ಹೊತ್ತುಕೊಂಡು ಹೋಗುತ್ತಿದ್ದಳು.
ಆ ದಾರಿಯಾಗಿ ಹೋಗುತ್ತಿದ್ದ ಒಬ್ಬ ಯುವಕ ಆ ಬಡಪಾಯಿ ಮಹಿಳೆಯ ಹಿಂದಿನಿಂದ ಹೋಗಿ ದಾಳಿಂಬೆ ಬುಟ್ಟಿಯಿಂದ ಒಂದು ದಾಳಿಂಬೆಯನ್ನು ಕದ್ದು ತೆಗೆದನು. ಇಮಾಮ್ ಅಸ್‌ಮಈ (ರ) ರವರು ಈ ಕದ್ದ ದಾಳಿಂಬೆಯನ್ನು ಈತ ಏನು ಮಾಡುತ್ತಾನೆಂದು ನೋಡಲು ಅವನ ಹಿಂದಿನಿಂದ ಹೋದರು. ಸ್ವಲ್ಪ ಮುಂದೆ ಸಾಗಿದಾಗ ಯುವಕನು ಅದನ್ನು ಒಬ್ಬ ಭಿಕ್ಷುಕನಿಗೆ ಕೊಟ್ಟನು.
ಇಮಾಮ್‌ರವರು ಅವನಲ್ಲಿ ಕೇಳಿದರು. "ಏನಿದು ಅವಸ್ಥೆ..? ನಾನು ಭಾವಿಸಿದ್ದು ನಿನಗೆ ಹಸಿವಿಗೆ ತಿನ್ನಲಿಕ್ಕೆ ಆಗಿರಬಹುದು ಎಂದು. ಆದರೆ ನೀನು ಇದನ್ನು ಬೇರೊಬ್ಬರಿಗೆ ದಾನ ಮಾಡಿದಿ. ಇದು ಬಹಳ ಅದ್ಭುತವಾದ ಒಂದು ಸಂಗತಿ" ಆಗ ಆತ ಹೇಳಿದ. "ಇಮಾಮರೇ., ನೀವು ಯಾವ ಯುಗದಲ್ಲಿ ಇದ್ದೀರಿ..? ನಾನು ಯಾವುದೇ ಪರಿಶ್ರಮವಿಲ್ಲದೆ ಅಲ್ಲಾಹನಾಗಿ ಒಂದು ಲಾಭದಾಯಕ ವ್ಯಾಪಾರ ಮಾಡಿದ್ದು. ಕುಳಿತಲ್ಲಿಗೇ ಪ್ರತಿಫಲ."
ಇಮಾಮರು ಕೇಳಿದರು. "ಅದೇನು ಅಂತಹಾ ಲಾಭದಾಯಕ ವ್ಯಾಪಾರ..? ವಿವರಿಸಿ ಕೊಡುತ್ತಿಯಾ..?" ಆಗ ಆತ ಹೇಳಿದ. "ನಾನು ಒಂದು ದಾಳಿಂಬೆ ಕದ್ದು ತೆಗೆದ ಕಾರಣಕ್ಕೆ ನನ್ನ ಖಾತೆಯಲ್ಲಿ ಒಂದು ತಪ್ಪು ಅಥವಾ ದೋಷ ಸೇರ್ಪಡೆ ಆಯಿತು. ನಂತರ ನಾನು ಅದನ್ನು ದಾನ ಮಾಡಿದಾಗ ಒಂದು ದಾನಕ್ಕೆ ಹತ್ತು ಪ್ರತಿಫಲ ಇರುವುದರಿಂದ ನನ್ನ ಖಾತೆಗೆ ಹತ್ತು ಪ್ರತಿಫಲ (ಸವಾಬ್) ಬಂತು. ಆಗ ಮೊದಲಿನ ತಪ್ಪಿನ ಖಾತೆಯಲ್ಲಿದ್ದ ತಪ್ಪಿಗೆ ಬದಲಾಗಿ ಒಂದು ಪ್ರತಿಫಲ ಮಾಯ (ಡಿಲೀಟ್) ಆಗುವುದಾದರೂ ಒಂಬತ್ತು ಇದೆಯಲ್ವಾ..? ಹೇಗಿದೆ ವ್ಯಾಪಾರ..?"
ಯುವಕನ ವಿವರಣೆಯಿಂದ ಕೋಪಗೊಂಡ ಇಮಾಮರು "ಹೇ.. ಮೂರ್ಖ.. ನೀನು ಒಂದು ತಪ್ಪು ಮಾಡಿದಾಗ ಅದಕ್ಕೆ ಒಂದು ದೋಷ ಸೇರ್ಪಡೆಯಾಯಿತು. ಆದರೆ ನೀನು ಕದ್ದು ತೆಗೆದು ಕೊಟ್ಟದ್ದಕ್ಕೆ ಯಾವುದೇ ಪ್ರತಿಫಲ ಇಲ್ಲ. ನೀನೀಗ ಮಲಿನವಾದ ಮೂತ್ರದಲ್ಲಿ ಬಟ್ಟೆ ತೊಳೆಯುವಂತಹಾ ಕೆಲಸವನ್ನು ಮಾಡಿದಿಯಷ್ಟೆ." ಎಂದು ಹೇಳಿ ಅಲ್ಲಿಂದ ಹೋದರು.
ಸಂಗ್ರಹ; ಖಸಸ್ ವ ಇಬರ್ ಎಂಬ ಗ್ರಂಥದಿಂದ.
ಲೇಖಕರು :ಯೂಸುಫ್ ನಬ್ ಹಾನಿ ಕುಕ್ಕಾಜೆ
NOOR-UL-FALAH ISLAMIC STORE
Comments
Post a Comment