ಜಿನ್ನ್‌ಗಳ ನಿಗೂಢ ಲೋಕ
ಜಿನ್ನ್‌ಗಳ ನಿಗೂಢ ಲೋಕ
ಅವರನ್ನು ನಾವು ಕಂಡಿಲ್ಲ..!
ಅವರಿಗೆ ನಮ್ಮನ್ನು ಕಾಣುವ ಸಾಮರ್ಥ್ಯವಿದೆ ಎಂದರೆ ನೀವು ನಂಬುತ್ತೀರಾ....?
ನಂಬಲೇ ಬೇಕು..!
ಅಗ್ನಿ ಸೃಷ್ಟಿಗಳಾದ ಜಿನ್ನ್ ವರ್ಗದವರು ಖುರ್ ಆನ್ ನಲ್ಲೂ ಹದೀಸ್ ಗಳಲ್ಲೂ ಅವರ ಪ್ರಸ್ತಾಪ ಬಂದ ಕಾರಣ ಅವರಲ್ಲಿ ವಿಶ್ವಾಸವನ್ನರ್ಪಿಸುವುದು ಸತ್ಯ ವಿಶ್ವಾಸಿಯೊಬ್ಬನ ಕಟ್ಟುನಿಟ್ಟಿನ ಕರ್ತವ್ಯ. ಅದ್ದರಿಂದಲೇ ಅವರ ನಿಗೂಢ ಕೋಟೆಯೊಳಗೆ ಒಂದು ಸುತ್ತು ಬಂದಿದ್ದೇವೆ ಆ ಪಯಣಕ್ಕಾಗಿ ಕೆಲವು ಅಗ್ರಗಣ್ಯ ವಿದ್ವಾಂಸರ ಗ್ರಂಥಗಳ ಪುಟಗಳನ್ನು ತಿರುವಿನ ಹಾಕಿದ್ದೇನೆ. ಒಂದಿಷ್ಟು ನನ್ನ ಅರಿವಿನಂತರಾಳದಿಂದ ಮೊಗೆದು ಗೀಚಿದ್ದೇನೆ..
#ಜಿನ್ನ್ ಗಳ ಹಿಂದೆ ನಡೆದಾಗ..
ಅಲ್ಲಾಹನ ಸೃಷ್ಟಿಗಳ ಪೈಕಿ ವಿಶಿಷ್ಟ ರೀತಿಯ ಸೃಷ್ಟಿಯಾಗಿದೆ ಜಿನ್ನ್ ವರ್ಗ. ಮನುಷ್ಯರಂತೆ ವಿವೇಕಿಗಳಾದ ಅವರ ಇರುವಿಕೆಯನ್ನು ಖುರ್ ಆನ್ ಹಾಗೂ ಹದೀಸ್ ಗಳು ದೃಢಪಡಿಸಿದೆ.
ಬಹುತೇಕ ಮಅ್'ತಝಿಲಿಗಳು, ಕೆಲವೇ ಕೆಲವು ಫಿಲೋಸಿಫಿಕರು, ಮತ್ತೆ ಕೆಲವು ಅಜ್ಞಾನಿಗಳ ಹೊರತಾಗಿ ಎಲ್ಲಾ ವಿದ್ವಾಂಸರೂ 'ಜಿನ್ನ್'ಎಂಬ ವರ್ಗವಿದೆಯೆಂಬುವುದನ್ನು ಅಂಗೀಕರಿಸುತ್ತಾರೆ.
ಅಲ್ಲಾಹನು ಹೇಳುತ್ತಾನೆ "ನಾನು ಜಿನ್ನ್ ಗಳನ್ನೂ ಮನುಷ್ಯರನ್ನೂ ನನ್ನ ಆರಾಧನೆಗಾಗಿಯೇ ಹೊರತು ಸೃಷ್ಟಿಸಲಿಲ್ಲ"
(ಅದ್ದಾರಿಯಾತ್:56).
ನಬಿ(ಸ)ರವರು ಹೇಳುತ್ತಾರೆ;
"ನೀವು ಎಲುಬಿನಿಂದ ಶುಚಿಗೊಳಿಸಬೇಡಿ. ಕಾರಣ,ಅದು ನಮ್ಮ ಸಹೋದರರಾದ ಜಿನ್ನ್'ಗಳ ಆಹಾರವಾಗಿದೆ"
(ಮುಸ್ಲಿಂ)
ಇದೇ ರೀತಿಯ ಧಾರಳ ಖುರ್ ಆನ್ ಸೂಕ್ತಗಳು,ಹದೀಸ್ ವಚನಗಳು ಜಿನ್ನ್'ಗಳ ಅಸ್ತಿತ್ವವನ್ನು ರುಜುಪಡಿಸಿದೆ. ಜಿನ್ನ್'ಗಳು ಅಗ್ನಿ ಜ್ವಾಲೆಯಿಂದ ಸೃಷ್ಟಿಸಲ್ಪಟ್ಟವರು. ಯಾವುದೇ ರೂಪಕ್ಕೂ ರೂಪಾಂತರಗೊಳ್ಳಲು ಅವರಿಗೆ ಸಾಧ್ಯವೆಂಬುವುದೇ ಜಿನ್ನ್'ಗಳ ಪ್ರತ್ಯೇಕತೆ..! ಅವರನ್ನು ಸಾಮಾನ್ಯ ಮನುಷ್ಯನ ನಗ್ನ ನೇತ್ರಗಳಿಗೆ ದರ್ಶಿಸಲು ಸಾಧ್ಯವಿಲ್ಲದಿದ್ದರೂ ಅವರು ಮನುಷ್ಯರೊಂದಿಗೆ ನಿಕಟರಾಗಿರುತ್ತಾರೆ. ನಿರಂತರ ಸಂಪರ್ಕದಲ್ಲಿರುತ್ತಾರೆ..
ಜಿನ್ನ್
ಜಿನ್ನ್, ಜಾನ್ನ್,ಜಿನ್ನಿಯಾ ಎಂದೂ ಈ ವಿಭಾಗಕ್ಕೆ ಹೆಸರು ಉಪಯೋಗಿಸಲ್ಪಡುತ್ತದೆ. ಜಿನ್ನ್ ಎಂಬ ಅರಬಿ ಪದಕ್ಕೆ 'ಮರೆಯಾಗಿ ನಿಂತ' 'ಮರೆಯಾದ' 'ಅದೃಶ್ಯವಾದ' ಎಂದೆಲ್ಲ ಅರ್ಥವಿದೆ. (ಅಲ್-ಮುಂಜಿದ್102) ಮನುಷ್ಯರ ದೃಷ್ಟಿಗೆ ಜಿನ್ನ್ ಅದೃಶ್ಯ ತಾನೇ..?
"ಅಲ್ಲಾಹನಲ್ಲಿ ವಿಶ್ವಾಸವಿರಿಸಿದ ವಿಭಾಗಕ್ಕೆ ಮಾತ್ರ ಜಿನ್ನ್ ಎಂಬ ಪದವನ್ನು ಉಪಯೋಗಿಸ್ಪಡುವುದು"(ಅಲ್-ಕೌಕಬುಲ್ ಅಜೂಜ್).
ಶೈತ್ವಾನ್
'ಶತ್ವನ ಎಂಬ ಧಾತುವಿನಿಂದ ಶೈತ್ವಾನ್ ಎಂಬ ಪ್ರಯೋಗವುಂಟಾಗಿದೆ."ಶತ್ವನ"ಕ್ಕೆ 'ದೂರವಾದ' 'ಅಗಲಿದ' ಎಂಬರ್ಥವಿದೆ. "ಅಲ್ಲಾಹನ ಆಜ್ಞೆಯನ್ನು ನಿಷೇಧಿಸಿದ ದುಷ್ಕೃತ್ಯ ಕಾರಣ ಅಲ್ಲಾಹನ ಅನುಗ್ರಹದಿಂದ ಅಗಲಿದವನು ಎಂದಾಗಿದೆ ಇದರರ್ಥ".(ಅಲ್-ಮುಂಜಿದ್ 338)
ಜಿನ್ನ್ ಶೈತ್ವಾನ್ ವರ್ಗ ಆಗಿದ್ದರೂ ಸತ್ಯ ವಿಶ್ವಾಸಿಗಳು ಶೈತ್ವಾನ್ ಎಂಬ ಪದವನ್ನು ಜಿನ್ನ್ ಗಳ ಪೈಕಿ ದುಷ್ಕೃತ್ಯಗಳನ್ನೆಸೆಯುವವರಿಗೆ ಉಪಯೋಗಿಸುತ್ತಾರೆ. ಕೆಲವೊಮ್ಮೆ ದುಷ್ಕೃತ್ಯಗಳನ್ನೆಸಗುವ ಮನುಷ್ಯರಿಗೆ, ಅನುಸರಣೆಯಿಲ್ಲದ ಪ್ರಾಣಿಗಳಿಗೆ 'ಶೈತ್ವಾನ್' ಎಂಬ ಪದ ಪ್ರಯೋಗಿಸುತ್ತಾರೆ. (ಅಲ್-ಮುಂಜಿದ್: 338)
ಇಫ್'ರೀತ್
'ಮಲ್ಲ' 'ದುಷ್ಟ' 'ಪಥಭ್ರಷ್ಟ' 'ಭೀಕರವಾದಿ' ಎಂಬೀ ಅರ್ಥಗಳು ಇದಕ್ಕಿದೆ. ಜಿನ್ನ್-ಶೈತ್ವಾನ್ ಗಳ ಪೈಕಿ ಶಕ್ತಿಶಾಲಿಯೂ,ಧೀರರೂ, ಯಾವುದೇ ಸಹಾಸಕ್ಕೂ ಸಾಮರ್ಥ್ಯವುಳ್ಳವರಾಗಿದ್ದಾರೆ. 'ಇಫ್'ರೀತ್' ಗಳು. ಖುರ್ ಆನ್ ಹೇಳುವ ಅಂಶವೊಂದರಿಂದ ಇದು ಸುವ್ಯಕ್ತ. "ಜಿನ್ನ್'ಗಳ ಪೈಕಿ ಒರ್ವ ಇಪ್ ರೀತ್(ಮಲ್ಲನು) ತಾವು ತಮ್ಮ (ತೀರ್ಪು ವಿಧಿಸುವ) ಈ ಸ್ಥಾನದಿಂದ ಎದ್ದೇಳುವುದಕ್ಕಿಂತ ಮುಂಚೆಯೇ ನಿಮಗೆ ನಾನು ಅದನ್ನು ತಂದುಕೊಡುವೆನು. ನಾನು ಅದಕ್ಕೆ ಶಕ್ತನೂ ಪ್ರಾಮಾಣಿಕ ಆಗಿದ್ದೇನೆ" ಎಂದನು. (ಅನ್ನಮ್ಲ್:39)
ಹದೀಸ್ ಗಳಲ್ಲಿಯೂ"ಇಫ್'ರೀತ್" ಎಂಬ ಪದವನ್ನು ಧಾರಾಳವಾಗಿ ಕಾಣಲು ಸಾಧ್ಯ. ನಬಿ(ಸ. ಅ)ರವರು ಹೇಳಿದರು; " ನಿನ್ನೆ ರಾತ್ರಿ ಜಿನ್ನ್'ಗಳಲ್ಲೊಳಪಟ್ಟ ಇಫ್ ರೀತ್ ಬಂದು ನನ್ನ ನಮಾಝ್'ನ್ನು ಹಾಳು ಮಾಡಲು ಪ್ರಯತ್ನಿಸಿದ. ಅಲ್ಲಾಹನು ನನ್ನನ್ನು ಅವನ ಪ್ರತ್ಯೇಕ ಅನುಗ್ರಹದಿಂದ ಅನುಗ್ರಹಿಸಿದ ಕಾರಣ ನಾನವನನ್ನು ಹಿಡಿದೆ...."(ಬುಖಾರಿ)
ಇಬ್'ಲೀಸ್
"ಅಬ್'ಲಸ್" ಎಂಬ ಧಾತುವಿನಿಂದ ಇಬ್'ಲೀಸ್ ಎಂಬ ಪದ ಉಂಟಾಗಿದೆ. "ಅಬ್'ಲಸ" ಎಂದರೆ ಅಲ್ಲಾಹನ ಅನುಗ್ರಹದಿಂದ ನಿರಾಶೆ ಹೊಂದಿದವನು ಎಂದರ್ಥ."ಸ್ವರ್ಗದಿಂದ ಬಹಿಷ್ಕೃತನಾದಂದಿನಿಂದ ಅಲ್ಲಾಹನ ಅನುಗ್ರಹದಿಂದ ನಿರಾಶೆ ಹೊಂದಿದವನಾಗಿದ್ದಾನೆ ಇಬ್ಲೀಸ್".(ಅಲ್ ಕೌಕಬುಲ್ ಅಜೂಜ್:173)
"ಇಬ್'ನ್ ಅಬ್ಬಾಸ್(ರ),ಇಬ್ನುಲ್ ಮುಸಯ್ಯಿಬ್(ರ), ಖತಾದಃ(ರ), ಇಬ್'ನ್ ಹಜರ್ (ರ)ರವಂತಹಾ ಮಹಾತ್ಮರು ಇಬ್'ಲೀಸ್ ಮಲಕ್ ವರ್ಗದಲ್ಲಿ ಒಳಪಟ್ಟವನೆಂದು ಹೇಳಿದ್ದಾರೆ" (ಅಲ್-ಕೌಕಬುಲ್ ಅಜೂಜ್ 173)
ಖುರ್ ಆನಿನ ಹನ್ನೊಂದು ಸ್ಥಳದಲ್ಲಿ"ಇಬ್'ಲೀಸ್ ಎಂದು,ಮತ್ತೆ ಕೆಲವೆಡೆ 'ಅಶ್ಶಯ್ ತ್ವಾನ್' ಎಂದು ಇಬ್ ಲೀಸ್ ನ ಬಗ್ಗೆ ಪರಾಮರ್ಶಿಸಿದ್ದನ್ನು ಕಾಣಬಹುದು. ಸುರಿಯಾನಿ ಭಾಷೆಯಲ್ಲಿ "ಅಝಾಝೀಲ್" ಅರಬಿಯಲ್ಲಿ "ಹರಸ್"ಎಂದು ಇಬ್'ಲೀಸ್ ನ ಹೆಸರು ಅಬೂಮುರ್ರತ್ 'ಇಬ್ ಲೀಸ್' ನ ಗೌರವ ನಾಮವೆಂದು ಇಮಾಮ್ ನವವೀ(ರ)ರವರು ಹೇಳಿದ್ದಾರೆ.
"ಅನೇಕ ವರ್ಷಗಳ ಕಾಲ ಅಲ್ಲಾಹನನ್ನು ಆರಾಧಿಸಿದ ಇಬ್ ಲೀಸ್ ಸ್ವರ್ಗದ ಕಾವಲುಗಾರನಾಗಿ, ಮಲಕುಗಳ ನೇತರವಾಗಿ,ಭೂಮಿಯ ಸರ್ವಾಧಿಕಾರಿಯಾಗಿ ಮೆರೆದಿದ್ದ. ಅವನಷ್ಟು ಜ್ಞಾನ ಹೊಂದಿದವರು, ಹೊಸಹೊಸ ವಿಷಯಗಳನ್ನು ಸಂಶೋಧನೆ ನಡೆಸುವವರು ಮಲಕುಗಳ ಪೈಕಿಯೇ ಇರಲಿಲ್ಲ. ಈ ಎಲ್ಲಾ ಅನುಗ್ರಹಗಳು,ಪದವಿಗಳು ಆತನನ್ನು ಅಹಮ್ಮಿನಲ್ಲಿ ಬೀಗಿಸಿ,ಬೆಳೆಸಿತು. ಅಲ್ಲಾಹನು ಆದಂ ನಬಿ ಅಲೈಸ್ಸಲಾಮರಿಗೆ ಸುಜೂದು ಗೈಯ್ಯಲು ಹೇಳಿದಾಗ ಆತ ಅಲ್ಲಾಹನನ್ನು ಧಿಕ್ಕರಿಸಿ ತನ್ನ ಅಹಮಿಕೆಯನ್ನು ಪ್ರಕಟಿಸಿದ.ಆವಾಗ ಅಲ್ಲಾಹನು ಮಲಕುಗಳ ಕೂಟದಲ್ಲಿದ ಇಬ್ ಲೀಸ್ ನ್ನು ಶಪಿತನೂ, ದುಷ್ಟನೂ ಆದ ಪಿಶಾಚಿಯಾಗಿ ಮಾರ್ಪಾಡಿಸಿದ. ಇದು ಇಬ್ ಲೀಸ್ ನ ಚರಿತ್ರೆ ಎಂದು ಕೆಲವರು ಅಭಿಪ್ರಾಯ ಹೊಂದಿದ್ದಾರೆ."
(ಅಲ್ ಕೌಕಬುಲ್ ಅಜೂಜ್:173)
"ಇಮಾಮ್ ನವವೀ(ರ), ಪ್ರಮುಖ ಅರಬಿ ಭಾಷಾ ತಜ್ಞರು, ಖುರ್ ಆನ್ ವ್ಯಾಖ್ಯಾನ ಗಾರರು, ಇನ್ನಿತರ ವಿದ್ವಾಂಸರು ಇಬ್'ಲೀಸ್ ಮಲಕಗಳಲ್ಲಿ ಒಳಪಟ್ಟರು ಎಂಬ ಅಭಿಪ್ರಾಯವನ್ನು ಪ್ರಬಲಗೊಳಿಸಿದ್ದಾರೆ".(ಆಲ್ ಕೌಕಬುಲ್ ಅಜೂಜ್:173,174)
ಇಬ್' ಲೀಸ್ ಜಿನ್ನ್ ವರ್ಗದಲ್ಲಿ ಒಳಪಟ್ಟವನು ಎಂದು ಅಭಿಪ್ರಾಯ ಹೊಂದಿದವರು ಖುರ್ ಆನ್ ನಿನಲ್ಲಿರುವ
"ಇಬ್ ಲೀಸ್ ಹೊರತು (ಸೂಜೂದ್ ಗೈದರು) ಆತ ಜಿನ್ನ್'ಗಳಲ್ಲಿ ಒಳಪಟ್ಟವನಾಗಿದ್ದ..." ಎಂಬ ಸೂಕ್ತವನ್ನಾಗಿದೆ ಪುರಾವೆ ನೀಡುವುದು. ಇಬ್'ನ್ ಅಬ್ಬಾಸ್(ರ)ರವರು ಇಬ್'ಲೀಸ್ ಮಲಕ್'ಗಳಲ್ಲಿರುವ ಜಿನ್ನ್ ಗೊತ್ರದಲ್ಲಿ ಒಳಪಟ್ಟವನು ಎಂದು ಮೇಲಿನ ಸೂಕ್ತದ ವ್ಯಾಖ್ಯಾನವಾಗಿ ಹದೀಸ್ ಉದ್ದರಿಸುತ್ತಾರೆ; ಖಂಡಿತವಾಗಿಯೂ ಮಲಕ್ ಗಳ ಕೂಟದಲ್ಲಿ "ಜಿನ್ನ್" ಎಂಬೊಂದು ಗೊತ್ರವಿದೆ.
ಇಬ್ ಲೀಸ್ ಜಿನ್ನ್ ಗೋತ್ರದವನು. ಆತ ಆಕಾಶ-ಭೂಮಿ ಮಧ್ಯೆಯಿರುವ ಎಲ್ಲದರಲ್ಲೂ ಅಂಕೆಯನ್ನು ಸೃಷ್ಟಿಸುವನು"(ಅಕಾಮುಲ್ ಮರ್ ಜಾನ್:150,151)
ಜಿನ್ನ್'ಗಳ ಸೃಷ್ಟಿ ಹೇಗೆ?
ಅಲ್ಲಾಹನು ಜಿನ್ನ್'ಗಳನ್ನು ಸೃಷ್ಟಿಸಿದ್ದು ಅಗ್ನಿಯಿಂದ. ಖುರ್ ಆನ್ ಹೇಳುವುದನ್ನು ನೋಡಿ...."ನಾವು ಮಾನವರನ್ನು ಕಪ್ಪಾದ ಹಾಗೂ ಬದಲಾದ ಒಣಗಲು ಕೊಜೆ ಮಣ್ಣಿನಿಂದ ಸೃಷ್ಟಿಸಿದೆವು. ಅದಕ್ಕಿಂತ ಮುಂಚೆ 'ಜಿನ್ನ್'ಅನ್ನು ಧೂಮರಹಿತ ಅಗ್ನಿಯ ಜ್ವಾಲೆಯಿಂದ ಸೃಷ್ಟಿಸಿದೆವು'"
(ಅಲ್ ಹಿಜ್'ರ್ 26,27)
ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರೂ ಹೇಳುತ್ತಾರೆ; "ಜಿನ್ನ್'ಗಳನ್ನು ಅಗ್ನಿಯಿಂದ,ಆದಂ ನಬಿ ಅಲೈಸ್ಸಲಾಮರನ್ನು ನಿಮಗೆ ನಾನು ವಿವರಿಸಿ ಕೊಟ್ಟ ಮಣ್ಣಿನಿಂದಾಗಿದೆ ಅಲ್ಲಾಹನು ಸೃಷ್ಟಿಸಿದ್ದು."(ಬುಖಾರಿ,ಮುಸ್ಲಿಂ)
ಜಿನ್ನ್'ಗಳನ್ನು ಅಗ್ನಿಯಿಂದ ಸೃಷ್ಟಿಸಿದ ಕಾರಣ ನರಕದ ಅಗ್ನಿ ಶಿಕ್ಷೆಯು ಅವರಿಗೆ ಶಿಕ್ಷೆಯಾಗುವುದು ಹೇಗೆ? ಅವರು ಕೂಡಾ ಅಗ್ನಿ ತಾನೇ?
ಇದೊಂದು ಪ್ರಸಕ್ತವಾದ ಪ್ರಶ್ನೆಯಾದರೂ ಉತ್ತರ ಸ್ಪಷ್ಟ. ಮಣ್ಣಿನಿಂದ ಸೃಷ್ಟಿಸಲ್ಪಟ್ಟ ಮನುಷ್ಯನಿಗೆ ಅದೇ ಮಣ್ಣಿನಿಂದ ಹೊಡೆದರೆ ನೋವುಂಟಾಗುವುದಿಲ್ಲವಾ... ಅದೇ ರೀತಿಯಾಗಿದೆ ಜಿನ್ನ್'ಗಳ ಅವಸ್ಥೆ.....!
ಜಿನ್ನ್'ಗಳ ರೂಪ ಯಾವುದು..?
ಜಿನ್ನ್'ಗಳು ವಿವಿಧ ರೂಪಗಳಿಗೆ ರೂಪಾಂತರಗೊಳ್ಳುವರು. ಪ್ರಮುಖವಾಗಿ ಹಾವು, ಕಪ್ಪೆ, ನಾಯಿ,ಗಾಳಿಯಂತೆ ಹಾರುವ ಮೂರು ರೂಪಗಳಲ್ಲಿ. ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರು ಹೇಳುತ್ತಾರೆ;
"ಅಲ್ಲಾಹನು ಜಿನ್ನ್'ಗಳನ್ನು ಮೂರು ರೂಪಗಳಲ್ಲಿ ಸೃಷ್ಟಿಸಿದ್ದಾನೆ.
1.ಹಾವಿನ ರೂಪದಲ್ಲಿ 2.ಪ್ರಾಣಿಗಳ ರೂಪದಲ್ಲಿ 3.ಅಂತರೀಕ್ಷದಲ್ಲಿರುವ ಗಾಳಿಯ ರೀತಿಯ ರೂಪದಲ್ಲಿ.
ಅವರಿಗೆ ಮನುಷ್ಯರಂತೆ ವಿಚಾರಣೆ ಹಾಗೂ ಶಿಕ್ಷೆಯಿದೆ!
(ಫತಾವಲ್ ಹದೀಸಿಯ್ಯಾ:65)
ಮನುಷ್ಯ ಹಾವು ಚೇಳು ಒಂಟೆ ದನ ಆಡು ಕುದುರೆ ಕತ್ತೆ ಹೇಸರಗತ್ತೆ ಪಕ್ಷಿ ಮೊದಲಾದ ಜೀವಗಳ ರೂಪವನ್ನು ತಾಳಲು ಜಿನ್ನ್'ಗಳಿಗೆ ಸಾಧ್ಯವೆಂದು ಇಮಾಮ್ ಬದ್ರುದ್ದಿನ್ ಶ್ಶಿಬ್'ಲೀ (ರ)ರವರು ಹೇಳಿದ್ದಾರೆ.(ಅಕಾಮುಲ್ ಮರ್'ಜಾನ್:21)
ಇಮಾಮ್ ಹಾಕಿಂ ಉದ್ಧರಿಸಿದ ಹದೀಸನಲ್ಲಿ ಈ ರೀತಿ ಕಾಣಬಹುದು.
"ಜಿನ್ನ್'ಗಳು ಮೂರು ರೀತಿಯಲ್ಲಿದ್ದಾರೆ
1.ರೆಕ್ಕೆ ಇರುವವರು. ಅವರು ಅಂತರಿಕ್ಷದಲ್ಲಿ ಹಾರುವರು.
2..ಹಾವು ಹಾಗೂ ನಾಯಿಯ ರೂಪವಿರುವವರು.
3.ಸಂಚಾರಿಗಳು. ಅವರು ಭೂಮಿಯಲ್ಲಿ ವಾಸಿಸುತ್ತಾರೆ."
ನಬಿ(ಸ್ವ.ಅ)ರವರು ಹೇಳುತ್ತಾರೆ. "ಮದೀನಾದಲ್ಲಿ ಒಂದು ವಿಭಾಗ ಜಿನ್ನ್'ಗಳಿದ್ದಾರೆ. ಅವರು ಮುಸ್ಲಿಮರು ಆದುದರಿಂದ ನೀವು' ಜಂತು'ಗಳನ್ನು ಕಂಡರೆ ತಕ್ಷಣವೇ ವಧಿಸಬೇಡಿ. ಮೂರು ಸಲ.... ಎಚ್ಚರಿಕೆ ನೀಡಿ. ನಂತರವೂ ಪ್ರತ್ಯಕ್ಷವಾದರೆ ವಧಿಸಿರಿ" ಖುರೈಶಿಗಳು ಬದ್ರ್ ಗೆ ಹೊರಡಲಣಿಯಾದಾಗ ಶೈತ್ವಾನ್ ಸುರಾಖತ್ ಬ್ ನು ಮಾಲಿಕನ ವೇಷಧರಿಸಿ ಬಂದು ಮಾತಾಡಿದ ಚರಿತ್ರೆಯ ಪ್ರಸಿದ್ಧ ಖುರ್ಆನಿನ ಸೂರತುಲ್ ಅಂಫಾಲ್ ನ 48ನೇ ಸೂಕ್ತದಲ್ಲಿ ಅದರ ವಿವರಣೆಯಿದೆ. (ಅಕಾಮುಲ್ ಮಕ್ ಜಾನ್:21)
ಜೀನ್'ಗಳ ವಾಸ ಸ್ಥಳವೆಲ್ಲಿ..?
"ಮಲ-ಮೂತ್ರ ವಿಸರ್ಜನೆ ಮಾಡುವ ಸ್ಥಳ,ಬಚ್ಚಲು ಕೋಣೆ, ದುರ್ಗಂಧ ಸೂಸುವ ಸ್ಥಳ ಸ್ಮಶಾನ, ಮೊದಲಾದ ಮಾಲಿನ್ಯ ಸ್ಥಳಗಳು ದುರ್ಜನರಾದ ಜಿನ್ನ್'ಗಳ ವಾಸ ಸ್ಥಳವಾಗಿದೆ." (ಅಕಾಮುಲ್ ಮರ್'ಜಾನ್:21)
ನಬಿ (ಸ್ವ.ಅ).ರವರು ಹೇಳುತ್ತಾರೆ. "ವಿಸರ್ಜನೆ ಮಾಡುವ ಸ್ಥಳಗಳು ಜಿನ್ನ್ ಪಿಶಾಚಿಗಳು ವಾಸಿಸುವ ಸ್ಥಳವಾಗಿದೆ. ಯಾರಾದರೂ ಅಲ್ಲಿಗೆ ಪ್ರವೇಶಿಸುವುದಾದರೆ 'ನಾನು ಅಲ್ಲಾಹನೊಂದಿಗೆ ಅಭಯಯಾಚಿಸುತ್ತೇನೆ' ಎಂದು ಪ್ರಾರ್ಥಿಸಲಿ. "
(ಅಬೂ ದಾವೂದ್)
ನಬಿ (ಸ್ವ.ಅ)ರವರು ಹೇಳಿದರು;" ಮುಸ್ಲಿಂ-ಅಮುಸ್ಲಿಂ ಜಿನ್ನ್ ಗಳೆಡೆಯಲ್ಲಿ ತರ್ಕವುಂಟಾಯಿತು. ಅವರಿಗೆ ವಾಸಿಸಲು ಸ್ಥಳವನ್ನು ನಿಶ್ಚೈಯಿಸಲು ನನ್ನಲ್ಲಿ ಬೇಡಿದರು. ವಿಶ್ವಾಸಿಗಳನ್ನು "ಜಲ್'ಸ್" ನಲ್ಲೂ ಅವಿಶ್ವಾಸಿಗಳನ್ನು "ಗವ್'ರ್" ನಲ್ಲೂ ವಾಸಿಸುವಂತೆ ನಿರ್ದೇಶಿಸಿದೆ. ಜಲ್'ಸ್ ಎಂದರೆ ಪರ್ವತ ಹಾಗೂ ಗ್ರಾಮೀಣ ಪ್ರದೇಶ. ಗವ್'ರ್ ಎಂದರೆ ಸಮುದ್ರ ಹಾಗೂ ಪರ್ವತದ ಮಧ್ಯೆಯಿರುವ ಸ್ಥಳವಾಗಿದೆ."(ಫತಾವಲ್ ಹದೀಸಿಯ್ಯಾ:69)
ಸತ್ಯ ವಿಶ್ವಾಸಗಳಾದ ಜಿನ್ನ್ ಗಳು ಮಾಲಿನ್ಯ ಸ್ಥಳಗಳಲ್ಲಿ ವಾಸಿಸಲಾರರು. ಹೊರತು ಮುಸ್ಲಿಮರ ಮನೆ, ಮಸೀದಿ ಮೊದಲಾದ ಅನುಗ್ರಹೀತ ಗೇಹಗಳಾಗಿದೆ ಅವರ ವಾಸಸ್ಥಳ. ಯಝೀದ್'ಬ್ ನು ಜಾಬೀರ್ (ರ)ರವರು ಉದ್ಧರಿಸುತ್ತಾರೆ "ಮುಸ್ಲಿಮರ ಮನೆಯ ಮೇಲಿನ ಅಟ್ಟದಲ್ಲಿ ಸತ್ಯ ವಿಶ್ವಾಸಗಳಾದ ಜಿನ್ನ್ ಗಳು ವಾಸಿಸುತ್ತಾರೆ. ಮನೆ ಮಂದಿಯವರು ಆಹಾರ ಸೇವಿಸುವಾಗ ಅವರು ಇಳಿದು ಬಂದು ಅವರೊಂದಿಗೆ ಸೇರಿ ಆಹಾರ ಸೇವಿಸುತ್ತಾರೆ. ಸಂಧ್ಯಾ ಸಮಯದಲ್ಲಿ ಕೂಡಾ ಮನೆಯ ನಿವಾಸಿಗಳೊಂದಿಗೆ ಸೇರಿ ಆಹಾರ ಸೇವಿಸುತ್ತಾರೆ. ಅವರಿಗೆ ಉಂಟಾಗುವ ವಿಪತ್ತುಗಳನ್ನು ಅಲ್ಲಾಹನು ಜಿನ್ನ್ ಗಳ ಮುಖಾಂತರ ತಡೆಯುತ್ತಾನೆ."
(ಅಕಾಮುಲ್ ಮಕ್ ಜಾನ್ :26)
ನೀರಿನ ಸೆರೆಯಲ್ಲಿ ಸತ್ಯ ವಿಶ್ವಾಸಗಳಾದ ಜಿನ್ನ್ ಗಳು ವಾಸಿಸುತ್ತಾರೆಂದು ಮುಗೀರ(ರ)ರವರು ಉದ್ಧರಿಸಿದ ಹದೀಸ್'ನಲ್ಲಿ ಕಾಣಬಹುದು. "ನೀರಿನ ಸಮೀಪದಲ್ಲಿ ನೀವು ಮೂತ್ರ ಶಂಕೆ ಮಾಡಬೇಡಿ ಅಲ್ಲಿ ನಿಮಗುಂಟಾಗುವ ವಿಪತ್ತಿಗೆ ಚಿಕಿತ್ಸೆ ದೊರೆಯಲು ತ್ರಾಸದಾಯಕವಾಗಬಹುದು."
(ಅಕಾಮುಲ್ ಮರ್ ಜಾನ್:26)
ಜಿನ್ನ್'ಗಳ ಆಹಾರವೇನು..?
ಇತರ ಜೀವಿಗಳಂತೆ ಜಿನ್ನ್'ಗಳು ಆಹಾರ ಸೇವಿಸುತ್ತಾರೆ. ಎಲ್ಲ ಜಿನ್ನ್ ಗಳು ಆಹಾರವನ್ನೇ ಸೇವಿಸುತ್ತಾರೆಯೇ? ಅಥವಾ ಆಹಾರದ ಗಂಧವನ್ನು ಆಘ್ರಾಣಿಸುವುದು ಅವರ ಆಹಾರದ ರೀತಿಯಾ? ಅವರು ಆಹಾರವನ್ನು ಮೆಲ್ಲುವುದು, ನುಂಗುವುದು ಇದೆಯಾ? ಈ ವಿಷಯವಾಗಿ ವಿದ್ವಾಂಸರೆಡೆಯಲ್ಲಿ ಭಿನ್ನಾಭಿಪ್ರಾಯಗಳಿವೆ. ನಬಿ ಸ.ಅ ರವರು ಹೇಳುತ್ತಾರೆ; "ನೀವು ಎಡ ಗೈಯಲ್ಲಿ ತಿನ್ನಬಾರದು, ಕುಡಿಯಬಾರದು;ಕಾರಣ ಪಿಶಾಚಿ ತಿನ್ನುವುದು ಹಾಗೂ ಕುಡಿಯುವುದು ಎಡಗೈಯ್ಯಲ್ಲಾಗಿದೆ."(ಮುಸ್ಲಿಂ)
ಎಲುಬು ಹಾಗೂ ಮಲದಿಂದ ಶುಚೀಕರಣ ಮಾಡಬೇಡಿ. ಕಾರಣ ಅದು ನಿಮ್ಮ ಸಹೋದರಾದ ಜಿನ್ನ್ ಗಳ ಆಹಾರವಾಗಿದೆ.(ತುರು ಮುದ್ಸಿ)
ಅಕ್ಕಿಯನ್ನು ಕೂಡ ಜಿನ್ನ್ ಗಳು ಆಹಾರವಾಗಿ ಉಪಯೋಗಿಸುತ್ತಾರೆ. ಅಲ್ ಮಶ್(ರ) ರವರು ಒಂದು ಜಿನ್ನ್ ನೊಂದಿಗೆ ಕೇಳಿದರು; "ನಿನ್ನ ಇಷ್ಟದ ಆಹಾರ ಯಾವುದು?" ಅಕ್ಕಿ ಎಂದಾಗಿತ್ತು ಆ ಜಿನ್ನ್ ಉತ್ತರ ನೀಡಿದ್ದು. ಅವಾಗ ಅವರು ಅಕ್ಕಿಯಿಂದ ತಯಾರಿಸಿದ ಅನ್ನವನ್ನು ಆ ಜಿನ್ನ್ ಗೆ ನೀಡಿದರು. "ಅನ್ನದ ಹಿಡಿಯು ಮೇಲೆ ಎತ್ತುವುದನ್ನು ನಾನು ಕಂಡೆ,ಆದರೆ ಜಿನ್ನ್ ಅದನ್ನು ಹೇಗೆ ಭಕ್ಷಿಸುವುದೆಂಬುದನ್ನು ನಾನು ಕಾಣಲಿಲ್ಲ" ಎನ್ನುತ್ತಾರೆ ಅಲ್ ಮಶ್(ರ)ರವರು. (ಫತಾವಾ ಹದೀಸಿಯ್ಯಾ:69)
ಇಮಾಮ್ ನವವೀ(ರ)ರವರು ಹೇಳುತ್ತಾರೆ;
"ಸಚ್ಚರಿತವಾದ ಪೂರ್ವಿಕ ಹದೀಸ್ ವರದಿಗಾರರು ಕರ್ಮಶಾತ್ತ್ರ ತಜ್ಞರು, ಜಿನ್ನ್-ಶೈತ್ವಾನ್ ಆಹಾರ ಸೇವಿಸುತ್ತದೆಂಬ ಅಭಿಪ್ರಾಯ ಹೊಂದಿದವರು ಇಸ್ಲಾಂ ಧರ್ಮವು ಅದನ್ನು ವಿರೋಧಿಸಿವುದಿಲ್ಲ. ಸಂಶಯಕ್ಕೆಡೆಯಿಲ್ಲದೆ ಶರಅ್ ಅಂಗೀಕರಿಸಿದ ಇಂತಹಾ ಕಾರ್ಯಗಳಲ್ಲಿ ವಿಶ್ವಾಸವಿಡುವುದು ಮುಸ್ಲಿಂಮರಿಗೆ ಕಡ್ಡಾಯವಾಗಿದೆ."
ಜಿನ್ನ್'ಗಳ ಭಾಷೆ ಯಾವುದು..?
ಮನುಷ್ಯ ಸೇರಿದಂತೆ ಎಲ್ಲಾ ಜೀವಿಗಳೂ ಪರಸ್ಪರ ಆಶಯ ವಿನಿಮಯ ನಡೆಸುತ್ತದೆ. ಜಿನ್ನ್ ಗಳು ಕೂಡಾ ಅವರದೇ ಆದ ಭಾಷೆಯಲ್ಲಿ ಸಂಭಾಷಣೆ ನಡೆಸುತ್ತಾರೆ. ಅಲ್ಲಾಹು ಹೇಳುತ್ತಾನೆ; "ಸಂದೇಶವಾಹಕರೇ ಹೇಳಿರಿ-ಜಿನ್ನ್ ಗಳ ಒಂದು ತಂಡವು ಖುರ್ ಆನನ್ನು ಶ್ರದ್ಧಾ ಪೂರ್ವಕ ಆಲಿಸಿತು ಎಂದು ನನಗೆ ದಿವ್ಯ ಸಂದೇಶ ದೊರೆತಿವೆ. ತರುವಾಯ ಅವರು (ತಮ್ಮ ಸಮೂಹದೊಡನೆ) 'ನಾವು ಒಂದು ಅತ್ಯದ್ಭುತ ಖುರ್ ಆನನ್ನು ಆಲಿಸಿದ್ದೇವೆ ಎಂದರು. ಅದು (ಖುರ್ ಆನ್) ಸನ್ಮಾರ್ಗದ ಕಡೆಗೆ ಮಾರ್ಗದರ್ಶನ ನೀಡುತ್ತದೆ. ಆದ್ದರಿಂದ ನಾವು ಅದರ ಮೇಲೆ ವಿಶ್ವಾಸವಿರಿಸಿದೆವು. ಇನ್ನು ಮೇಲೆ ನಮ್ಮ ಪ್ರಭುವಿನೊಂದಿಗೆ ಯಾರನ್ನು ನಾವು ಸಹಭಾಗಿಯಾಗಿ ಮಾಡಲಾರೆವು(ಸೂರತ್' ಲ್ ಜಿನ್ನ್:1'2)
ಜಿನ್ನ್ ಗಳು ಪರಸ್ಪರ ಸಂಭಾಷಣೆ ನಡೆಸುತ್ತಾರೆಂದು ಈ ಸೂಕ್ತದಿಂದ ತಿಳಿದು ಬರುತ್ತದೆ. (ಸೂರತುಲ್ ಜಿನ್ನ್ 1 ರಿಂದ ಸಂಜೆ 16 ರವರೆಗಿನ ಸೂಕ್ತಗಳು ಜಿನ್ನ್ ಗಳ ಪರಸ್ಪರ ಸಂಭಾಷಣೆ ನಡೆಸಿದ ಬಗ್ಗೆಯಾಗಿದೆ.) ಸೂರತುಲ್ ಅನ್ ಅಮೀನ "ಜಿನ್ನ್ ಗಳ ಪೈಕಿ ಒಂದು ಇಫ್ರೀತ್ ಸುಲೈಮಾನ್ ನಬಿ (ಅ) ರೊಂದಿಗೆ ಹೇಳಿತು". ಎಂಬ ಸೂಕ್ತವು ಜಿನ್ನ್ ಗಳು ಮನುಷ್ಯರೊಂದಿಗೆ ಸಂಭಾಷಣೆ ನಡೆಸುತ್ತೆ ಎಂದು ವ್ಯಕ್ತಪಡಿಸುತ್ತದೆ. ಸಾಮಾನ್ಯ ಮನುಷ್ಯನ ಪರಿಮಿತಿಯ ಅರಿವಿನಲ್ಲಿ ಅವರ ಭಾಷೆಯನ್ನು ಗ್ರಹಿಸಲು ಸಾಧ್ಯವಗಬೇಕೆಂದಿಲ್ಲ, ಸುಲೈಮಾನ್ ನಬಿ (ಅ) ರವರಿಗೆ ಪಕ್ಷಿಗಳ ಭಾಷೆಯನ್ನು ಕಲಿಸಿ ಕೊಟ್ಟಿದ್ದೇವೆಂದು ಇರುವೆಗಳು ಅವರೊಂದಿಗೆ ಮಾತಾಡಿತ್ತೆಂದು ಖುರ್ಆನ್ ಹೇಳುತ್ತದೆ. ನಮಗದು ಸಾಧ್ಯವೇ?.
ಜಿನ್ನ್ ಗಳೀಗೆ ಧರ್ಮವಿಧಿ ಬಾಧಕವೇ..?
ಶರಅ್ ನ ವಿಧಿಗಳು ಜಿನ್ನ್ ಗಳಿಗೂ ಬಧಕವೇ? ಗ್ರಾಹ್ಯ ಶಕ್ತಿ ಹಾಗೂ ವಿವೇಕವಿರುವ ಜಿನ್ನ್ ಗಳಿಗೆ ಮನುಷ್ಯರಿಗೆ ಧರ್ಮವಿಧಿ ಭಾದಕವಾದಂತೆ ಭಾದಕವೆಂಬುವುದನ್ನು ವಿದ್ವಾಂಸರು ಏಕಾಭಿಪ್ರಾಯ ತಾಳಿದ್ದಾರೆಂದು ಇಮಾಂ ರಾಝಿ(ರ) ಹೇಳಿದ್ದಾರೆ. (ಫತಾವುಲ್ ಹದೀಸಿಯ್ಯ:69) ಅಲ್ಲಾಹನು ಹೇಳುತ್ತಾನೆ; ನಾನು ಜಿನ್ನ್ ಗಳನ್ನೂ ಮನುಷ್ಯರನ್ನೂ ನನ್ನ ಆರಾಧನೆಗಾಗಿಯೇ ಹೊರತು ಸೃಷ್ಟಿಸಲಿಲ್ಲ" (ಸೂರತುದ್ದಾರಿಯತ್:56) "ಓ ಜಿನ್ನ್ ಮತ್ತು ಮಾನವ ವರ್ಗವೇ, ನಿಮಗೆ ನನ್ನ ಸಂದೇಶಗಳನ್ನು ವಿವರಿಸುತ್ತಾ ಇಂದಿನ ನಮ್ಮ ಭೇಟಿಯ ಕುರಿತು ನಿಮ್ಮನ್ನು ಎಚ್ಚರಿಸಲಿಕ್ಕಾಗಿ ನಿಮ್ಮ ಬಳಿಗೆ ನಿಮ್ಮಿಂದಲೆ ಪ್ರವಾದಿಗಳು ಬಂದಿರಲಿಲ್ಲವೇ? ಅವರು "ಹೌದು, ನಮ್ಮ ವಿರುದ್ಧವೇ ನಾವು ಸಾಕ್ಷಿ ಹೇಳುತ್ತೇವೆ" ಎನ್ನುವರು. ಇಹಲೋಕ ಜೀವನ ಅವರನ್ನು ವಂಚಿಸಿತು. ಅವರು ಸತ್ಯ ನಿಷೇಧಿಗಳಾಗಿದ್ದಾರೆಂದು ಸ್ವತಃ ಅವರ ವಿರುದ್ಧವೇ ಅವರು ಸಾಕ್ಷಿಗಳಾಗುತ್ತಾರೆ".
(ಸೂರತುಲ್ ಅನ್ ಆಮ್:130)
ಅಲ್ಲಾಹನು ಜಿನ್ನ್ ಗಳಿಗೆ ಅವದ ಪೈಕಿಯಿಂದಲೇ ನಬಿಯ್ಯ ಹಾಗೂ ಸಂದೇಶವಾಹಕರನ್ನು ನಿಯೋಗಿಸಿಲ್ಲವೆಂದು ಪೂರ್ವಿಕ ಮಹಾತ್ಮರು,ತದನಂತರದ ಇಮಾಮರು ವಿಕಾಭಿಪ್ರಾಯ ತಾಳಿದ್ದಾರೆಂದು ಇಬ್ ನ್ ಹಜರ್ (ರ) ರವರು ವ್ಯಕ್ತಪಡಿಸಿದ್ದಾರೆ(ಫತಾವಾ:69)
ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರೂ ಹೇಳುತ್ತಾರೆ ; "ನಾನು ಮನುಷ್ಯ-ಜಿನ್ನ್, ಅರಬಿ-ಅನರಬಿ ವರ್ಗಕ್ಕೆ ನಿಯಕ್ತನಾದ ಪ್ರವಾದಿಯಾಗಿದ್ದೇನೆ". ಜಿನ್ನ್ ಗಳು ಮುಕಲ್ಲಫ್'ಗಳೆಂದು, ಅವರದ್ದು ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಶರೀಅತ್ ಎಂದು,ಅವರದನ್ನು ಅನುಸರಿಸಬೇಕೆಂದು ಇಮಾಮ್ ಸುಬುರೇ(ರ), ಇಬ್ ನು ಹಜರ್ (ರ)ರವರು ವ್ಯಕ್ತಪಡಿಸಿದ್ದಾರೆ. (ಫತಾವಲ್ ಹದೀಸಿಯ್ಯಾ:70)
ಜಿನ್ನ್'ಗಳ ನಮಾಝ್..?
ಇಬ್'ನ್ ಹಜರಿಲ್ ಹೈತಮೀ(ರ)ರವರು ಹೇಳುತ್ತಾರೆ. "ಸತ್ಯ ವಿಶ್ವಾಸಿಗಳಾದ ಜಿನ್ನ್ ಗಳು ನಮಾಝ್ ನಿರ್ವಹಿಸುವವರೂ, ವ್ಯತಾನುಷ್ಠಿಸುವವರೂ ಖುರ್ ಆನ್ ಪಾರಾಯಣ ಗೈಯ್ಯುವವರೂ, ದೀನೀ ಜ್ಞಾನವನ್ನು ಕಲಿಯುವವರೂ ಆಗಿದ್ದಾರೆಂದು ಹದೀಸ್ ಗಳಲ್ಲಿ ವರದಿಯಾಗಿದೆ. ಮನುಷ್ಯನಿಗೆ ಅದರ ಬಗ್ಗೆ ತಿಳಿಯಲಾರದು" (ಫತಿವಾ:70)
ಜಿನ್ನ್ ಗಳನ್ನು ಇಮಾಮ್ ಆಗಿ ನಿಲ್ಲಿಸಿ, ಅನುಸರಿಸಿ ನಮಾಝ್ ನಿರ್ವಹಿಸಬಹುದೆಂದು ಶಾಫಿಈ ಮದ್ಸ್ ಹಬಿನ ಇಮಾಮರು ಪ್ರಸ್ಥಾಪಿಸಿದ್ದನ್ನು ಕಾಣಬಹುದು. ಇಮಾಮ್ ಖುಲ್ ಯೂಬಿ(ರ) ರವರು ಹೇಳುತ್ತಾರೆ; "ಮಲಕನ್ನು ಇಮಾಮ್ ಆಗಿ ನಿಲ್ಲಿಸಿ, ಅನುಸರಿಸಿ ನಮಾಝ್ ನಿರ್ವಹಿಸಿದರೆ ಪ್ರಸ್ತುತ ನಮಾಝ್ ಸಿಂಧುವಾಗುತ್ತಾದೆ.
ಜಿನ್ನ್ ಮನುಷ್ಯರ ರೂಪದಲ್ಲಿಲ್ಲದಿದ್ದರೂ ಅನುಸರಣೆ ಸಿಂಧುವೆಂದಾಗಿವೆ. ಅಲ್ಲಮಾ ಅಬ್ಬಾದಿ (ರ) ರವರ ಅಭಿಪ್ರಾಯ ಮನುಷ್ಯ ರೂಪದಲ್ಲಿಲ್ಲದಿದ್ದರೆ ಅನುಸರಿಸಿ ನಮಾಝ್ ನಿರ್ವಹಿಸಿದರೆ ನಮಾಝ್ ಸಿಂಧುವಾಗಲಾರದು ಎಂದಾಗಿದೆ. ಇಮಾಮ್ ರಂಲೀ(ರ)ರವರ ಅಭಿಪ್ರಾಯ"(ಖುಲ್ ಯೂಬಿ:1/184)
"ಜಿನ್ನ್ ಗಳು ಸಹಿತ 40 ಜನರನ್ನೊಳಗೊಂಡ ಜುಮುಅಃ ಸಿಂಧುವೆಂದು ಕೆಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.
ಜುಮುಅಃ ಸಿಂಧುವಾಗಲು ಬೇಕಾದ ನಿಬಂಧನೆಗಳು ಪೂರ್ಣಗೊಂಡರೆ ಪ್ರಸ್ತುತ ಜುಮುಅಃ ಸಿಂಧುವೆಂದು ಶಾಫಿ ಈ ಮದ್ಸ್ ಹಬ್'ನಲ್ಲಿ ಒಂದು ಅಭಿಪ್ರಾಯವಿದೆ." (ಮುಗ್ ನಿ1/283)
" ಮಯ್ಯಿತ್ ನಮಾಝ್'ನಂತಾಹ ಸಾಮೂಹಿಕ ಬಾಧ್ಯತೆಗಳನ್ನು ಜಿನ್ನ್ ಗಳು ನಿರ್ವಹಿಸುವ ಮೂಲಕ ಮನುಷ್ಯರು ಆ ಬಾಧ್ಯತೆಯಿಂದ ಮುಕ್ತರಾಗಲಾರರು ಎಂದಾಗಿದೆ ಪ್ರಬಲಾಭಿಪ್ರಾಯ".
(ಅಲ್ ಕವಾಕಿಬುಲ್ ಅಜ್ ಮಜ್:165)
"ಒಬ್ಬಾತನ ಮಯ್ಯಿತ್'ಗೆ ಜಿನ್ನ್' ಗಳು ಸ್ನಾನ ಮಾಡಿಸಿದರೆ ಸಾಮೂಹಿಕ ಬಾಧ್ಯತೆಯ ಪೂರೈಸಿದಂತಾಗುತ್ತದೆ ಎಂದು ಇಮಾಮ್ ರಂಲೀ(ರ), ಪೂರೈಸಿದಂತಾಗಲ್ಲವೆಂದು ಇಬ್'ನ್ ಹಜರ್ (ರ) ರವರು ಅಭಿಪ್ರಾಯ ಹ
ಹೊಂದಿದ್ದಾರೆ."(ಇಆನತ್:2/108)
ವುಲೂಅ್ ಭಂಗವಾಗುತ್ತದೆಯೇ..?
ಜಿನ್ನ್ ಗಳನ್ನು ಸ್ಪರ್ಶಿಸುವುದರಿಂದ ವುಲೂಅ್ ಕೆಡುತ್ತದೆಯೇ? ಈ ವಿಷಯದಲ್ಲೂ ವಿದ್ವಾಂಸರೆಡೆಯಲ್ಲಿ ಭಿನ್ನಾಭಿಪ್ರಾಯಗಳಿವೆ. "ಶಿಹಾಬುದ್ದೀನ್ ಇಬ್ ನು ಹಜರ್(ರ), ಶೈಖ್ ಝಿಯಾದ್ (ರ) ರವರು ವುಲೂಅ್ ಕೆಡಲ್ಲವೆಂದು, ಇಮಾಮ್ ರಂಲೀ(ರ) ರವರು ವುಲೂಅ್ ಕೆಡುತ್ತದೆಯೆಂದು ಅಭಿಪ್ರಾಯ ಹೊಂದಿದ್ದಾರೆ".
(ಅಲ್-ಕಾಕಬುಲ್ ಅಜೂಜ್:165)
ಇಮಾಮ್ ಖುಲ್ ಯೂಬಿ(ರ) ರವರ ಅಭಿಪ್ರಾಯ ಈ ರೀತಿಯಿದೆ:"ವುಲೂಅ್ ಕೆಡದಿರಬೇಕಾದರೆ ಜಿನ್ನ್ ಮನುಷ್ಯರಲ್ಲದ ರೂಪ ಹೊಂದಿರಬೇಕು. ಒಬ್ಬಾತ ಹೆಣ್ಣು ಜಿನ್ನನ್ನು ವಿವಾಹವಾದರೆ ಅವಳನ್ನು ಸಂಭೋಗಿಸುವುದು ಅನುವದನೀಯವಾಗಿದೆ. ಆಕೆ ಮನುಷ್ಯ ರೂಪದಲ್ಲಿಲ್ಲದ ಸಂದರ್ಭದಲ್ಲಿ ಸ್ಪರ್ಶಿಸುವುದರಿಂದ ಆತನ ವುಲೂಅ್ ಕೆಡುವುದಿಲ್ಲ".
(ಖುಲ್ ಯೂಬಿ:11/231)
ಜಿನ್ನ್'ಗಳು ವಿವಾಹವಾಗುತ್ತಾರೆಯೇ..?
ಎಲ್ಲ ಜೀವಿಗಳು ಸಂಗಾತಿಯನ್ನು ಬಯಸುತ್ತೆ. ಸಂಗಾತಿಯಿಲ್ಲದ ಜೀವ ಯಾವುದೇ ಜೀವಿಗೂ ಪ್ರಾಯೋಗಿಕವಲ್ಲ, ಪ್ರಕೃತಿ ವಿರುದ್ಧವಾಗಿದೆ. "ನಾವು ಪ್ರತಿಯೊಂದು ವಸ್ತುವಿಗೂ ಜೋಡಿಗಳನ್ನು ಸೃಷ್ಟಿಸಿರುತ್ತೇವೆ. ನೀವು ಚಿಂತಿಸುವವರಾಗಲು" ಎಂದು ಖುರ್ ಆನ್ ಹೇಳುತ್ತದೆ. ಮನುಷ್ಯರಂತೆಯೇ ಜಿನ್ನ್ ಗಳು ಕೂಡಾ ವಿವಾಹಿತರಾಗುವವರೂ, ಸಂತಾನೋತ್ಪತ್ತಿ ನಡೆಸುವವರ ಆಗಿದ್ದಾರೆ. "ಇವರಿಗೆ ಮುಂಚೆ ಯಾವನೇ ಮಾನವನಾಗಲಿ, ಜಿನ್ನ್ ಆಗಲಿ ಅವರನ್ನು (ಸ್ವರ್ಗದ ಅಪ್ಸರೆರನ್ನು) ಎಂದೂ ಸ್ಪರ್ಶಿಸಿಲ್ಲ(ಸಂಭೋಗ ನಡೆಸಿಲ್ಲ)."(ಸೂರತುರ್ರಹ್ಮಾನ್:50)
" ನೀವು ಆದಂರಿಗೆ ಸೂಜೂದ್ ಮಾಡಿರಿ" ಎಂದು ನಾವು ದೇವಚರರಿಗೆ ಹೇಳಿದಾಗ ಇಬ್ಲೀಸಿನ ಹೊರತು ಎಲ್ಲರೂ ಸುಜೂದ್ ಮಾಡಿದರು. ಅವನು ಖೇಚರ ವರ್ಗದವನಾಗಿದ್ದನು.
ತನ್ನಿಮಿತ್ತ ಅವನು ತನ್ನ ಪ್ರಭುವಿನ ಆಜ್ಞೆಯನ್ನು ದಿಕ್ಕರಿಸಿದನು. (ಓ ಜನರೇ)ಹೀಗಿರುವಾಗ ನನ್ನನ್ನು ಬಿಟ್ಟು ಅವನನ್ನು ಅವನ ಸಂತಾನವನ್ನು ನೀವು ಆಪ್ತರನ್ನಾಗಿ ಮಾಡುವುದು ಸರಿಯೇ? ನಿಜದಲ್ಲಿ ಅವರು ನಿಮ್ಮ ಶತ್ರುಗಳು, ಅಕ್ರಮಿಗಳಿಗೆ ಬದಲಿಯಾಗಿ ಅತ್ಯಂತ ಕೆಟ್ಟ ಫಲವೇ ದಕ್ಕಿದೆ."(ಸೂರತುಲ್ ಕಹ್'ಫ್:50)
ಮೊದಲಾದ ಸೂಕ್ತಗಳು ಜಿನ್ನ್ ಗಳು ವಿವಾಹಿತರಾಗುತ್ತಾರೆಂದೂ. ಸಂತಾನೋತ್ಪತ್ತಿ ನಡೆಸುತ್ತಾರೆಂದೂ ತಿಳಿಸುತ್ತದೆ ತಾನೇ? ಅಬ್ದುಲ್ಲಾ ಹಿಬ್ನ್... ಉಮರ್(ರ) ರವರು ಹೇಳುತ್ತಾರೆ, "ಮನುಷ್ಯರನ್ನು ಮತ್ತು ಜಿನ್ನ್ ಗಳನ್ನು ಹತ್ತಾಗಿ ವಿಂಗಡಿಸಿದರೆ ಹತ್ತರಲ್ಲೊಂದು ಭಾಗ ಮನುಷ್ಯನಿಗೆ ಒಂದು ಮಗು ಹುಟ್ಟುವಾಗ ಜಿನ್ನ್ ಗೆ ಒಂಭತ್ತು ಮಕ್ಕಳು ಹುಟ್ಟುತ್ತಾರೆ."!
(ಫತಾವುಲ್ ಹದೀಸಿಯ್ಯ:68)
ಜಿನ್ನ್-ಮನುಷ್ಯ ವಿವಾಹವಾಗಬಹುದೇ
ಜಿನ್ನ್ ಮತ್ತು ಮನುಷ್ಯ ಪರಸ್ಪರ ವಿವಾಹದಲ್ಲೇರ್ಪಡಬಹುದೇ? ಈ ಬಗ್ಗೆ ವಿದ್ವಾಂಸರನೇಕರು ಸುದೀರ್ಘವಾದ ಚರ್ಚೆ ನಡೆಸಿದ್ದಾರೆ. "ಮನುಷ್ಯ ವರ್ಗದ ಪುರುಷನು ಜಿನ್ನ್ ವರ್ಗದ ಹೆಣ್ಣನ್ನು, ಜಿನ್ನ್ ವರ್ಗದ ಪುರುಷನು ಮನುಷ್ಯ ವರ್ಗದ ಹೆಣ್ಣನ್ನು ವಿವಾಹವಾಗುವುದು ಸಂಭಾವ್ಯವೆಂದು ಇಮಾಮ್ ಬದ್ ರುದ್ದೀನ್ ಶ್ಶಿಬ್ ಲ್ (ರ) ರವರು ಉಲ್ಲೇಖಿಸಿದ್ದಾರೆ"(ಅಕಾಮುಲ್ ಮರ್ ಜಾನ್ :64)
"ಜಿನ್ನ್ ಮತ್ತು ಮನುಷ್ಯ ಪರಸ್ಪರ ವಿವಾಹವಾಗುತ್ತಾರೆ, ಸಂತಾನೋತ್ಪತ್ತಿ ನಡೆಸುತ್ತಾರೆಂದು ಕೆಲವು ವಿದ್ವಾಂಸರು ಅಭಿಪ್ರಾಯ ಪ್ರಕಟಿಸಿದ್ದನ್ನು ಇಮಾಮ್ ಸಅ್ ಲಬೀ(ರ) ರವರು ವಿವರಿಸಿದ್ದಾರೆ. ಮನುಷ್ಯ ಜಿನ್ನ್, ಸ್ತ್ರೀಯೊಂದಿಗೆ ಸಂಭೋಗ ನಡೆಸುವುದು ಸಂಭಾವ್ಯ. ವ್ಯಕ್ತಿಯೊಬ್ಬರು ಜಿನ್ನ್ ಹೆಣ್ಣಿನೊಂದಿಗೆ ವಿವಾಹವಾಗಿ ಮಗು ಜನಿಸಿದ ಕಥೆಯನ್ನು ಅಬೂ ಅಬ್ದುರ್ರಹ್ಮಾನುಲ್ ಹರ್ವೀ(ರ) ರವರು ವಿವರಿಸಿದ್ದಾರೆ.
ಮಾಲಿಕ್ ಇಮಾಮರು ಜಿನ್ನ್ ನೊಂದಿಗಿನ ವಿವಾಹವು ಕರಾಹತ್ ನೊಂದಿಗೆ ಅನುವದನೀಯವೆಂದು ಹೇಳಿದ್ದಾರೆ. ಕಾರಣ, ವ್ಯಭಿಚಾರದಿಂದ ಗರ್ಭದರಿಸಿದ ಮಹಿಳೆಯು 'ಇದು ಜಿನ್ನ್ ನಿಂದುಂಟಾದ ಗರ್ಭ' ವೆಂದು ಆಕೆ ಗುಲ್ಲೆಬ್ಬಿಸಲು ಸಾಧ್ಯತೆಯಿದೆ. ಇಬ್ ನುಲ್ ಯೂನುಸ್ (ರ) ರವರು ಶರಹುಲ್ ವಜೀಝ್ ನಲ್ಲಿ ಪ್ರಸ್ತುತ ವಿವಾಹವು ಅನುವದನೀಯವೆಂದು ಸಾರಿದ್ದಾರೆ. ಇಬ್ ನುಲ್ ಇಮಾದ್ ಅವರ ನಿಲುವಿಗೆ ಹಸಿರು ನಿಶಾನೆ ತೋರಿಸಿದ್ದಾರೆ." (ಫತಾವಾ:69)
ಖತಾದ(ರ)ರವರು ಜಿನ್ನ್-ಮನುಷ್ಯ ವಿವಾಹ ಸಂಬಂಧವು ಅನುವದನೀಯವೆಂದು ಅಭಿಪ್ರಾಯ ಹೊಂದಿದವರು; ಈ ಅಭಿಪ್ರಾಯವನ್ನು ಇಮಾಮ್ ರಂಲೀ(ರ)ರವರು ಪ್ರಬಲಗೊಳಿಸಿದ್ದಾರೆ. (ಇಆನತ್/3/285)
ಇಮಾಮ್ ಅಅ್ ಮಶ್(ರ) ರವರು ಜಿನ್ನ್ - ಮನುಷ್ಯ ವಿವಾಹವು ಅನುವದನೀಯವೆಂದು ಹೇಳಿದ ವಿಭಾದವರು ಅವರು 'ಕೂನೀ' ಎಂಬ ಪ್ರದೇಶದಲ್ಲಿ ಇಂತಹಾ ಒಂದು ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದಾಗಿ ಉಲ್ಲೇಖಿಸಿದ್ದಾರೆ. (ಅಕಾಮುಲ್ ಮರ್ ಜಾನ್: 72)
"ಅಲ್ಲಾಹವೇ ನನಗೆ ನೀನು ವಿವಾಹ ಗೈಯ್ಯಲು ಒಂದು ಜಿನ್ನ್ ಹೆಣ್ಣನ್ನು ನೀಡು....,"ಎಂದು ಸಯ್ ದುಲ್ ಅಮೀ(ರ) ರವರು ಪ್ರಾರ್ಥಿಸುತ್ತಿದ್ದರು, (ಅಕಾಮುಲ್ ಮರ್ ಜಾನ್ :72)
ಜಿನ್ನ್'ನೊಂದಿಗೆ ವಿವಾಹವು ಅನುವದನೀಯಲ್ಲವೆಂದಾಗಿದೆ ಶಾಫಿಈ ಮದ್ಸ್ ಹಬ್ ನಲ್ಲಿ ಪ್ರಬಲವಾದ ಅಭಿಪ್ರಾಯ ಅದಕ್ಕೆ ಅವರು ಪುರಾವೆಯಾಗಿ ಎತ್ತಿ ತೋರಿಸುವುದು...." ನೀವಿಷ್ಟಪಡುವ ಸ್ತ್ರೀಯರಿಂದ ಈರ್ವರನ್ನೋ, ಮೂವರನ್ನೋ, ನಾಲ್ವರನ್ನೋ ವಿವಾಹ ಮಾಡಿಕೊಳ್ಳಿರಿ......"ಎಂಬ ಸೂರತುನ್ನಿಸಾಅ್ ನ ಸೂಕ್ತವನ್ನಾಗಿದೆ. ಈ ಸೂಕ್ತದಲ್ಲಿರುವ 'ನಿಸಾಲ್' ಎಂಬ ಪದವು ಮನುಷ್ಯ ಸ್ತ್ರೀಯನ್ನಾಗಿದೆ ಸೂಚಿಸುವುದು. ಜಿನ್ನ್ ಸ್ತ್ರೀಗಳು ಇದರಲ್ಲಿ ಒಳಪಡುವುದಿಲ್ಲ. ಆದ್ದರಿಂದ ಮನುಷ್ಯನು ಜಿನ್ನ್ ನೊಂದಿಗೆ, ಜಿನ್ನ್ ಮನುಷ್ಯನೊಂದಿಗೆ ವಿವಾಹ ಸಂಬಂಧದದಲ್ಲೇರ್ಪಡುವುದು ಅನುವದನೀಯವಲ್ಲ(ಅಕಾಮುಲ್ ಮರ್ ಜಾನ್ :67)
ಜಿನ್ನ್ ನೊಂದಿಗೆ ವಿವಾಹ ಸಂಬಂಧವನ್ನು ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರು ವಿರೋಧಿಸಿದ್ದಾಗಿ ಜರೀರ್(ರ)ರಿಂದ ಇಮಾಮ್ ಅಹ್ಮದ್ (ರ) ರವರು ವರದಿ ಮಾಡಿದ ಹದೀಸಿನಲ್ಲಿ ಕಾಣಬಹುದು. ಹನಫೀ ಮದ್ಸ್ ಹಬ್ ಗಾರರು,ಶಾಫಿ ಈ ಮದ್ಸ್ ಬಿನ ಇಮಾಮ್ ಬಾರಿಸಿ(ರ) ರವರು ಜಿನ್ನ್ ನೊಂದಿಗಿನ ವಿವಾಹ ಸಂಬಂಧವು ಹಾರಮೆಂದು ಅಭಿಪ್ರಾಯ ಹೊಂದಿದವರಾಗಿದ್ದಾರೆ(ಫತಾಮ್ ಹದೀಸಿಯ್ಯಾ :69)
ಇಬ್ ನುಲ್ ಇಮಾದ್(ರ) ಶೈಖುಲ್ ಇಸ್ಲಾಮ್ ಅಬೂಝಕರಿಯ್ಯಲ್ ಅನ್ಸಾರಿ (ರ) ಅನುವದನೀಯವಲ್ಲವೆಂದು ಅಭಿಪ್ರಾಯ ಹೊಂದಿದ್ದಾರೆ. ಮಾತ್ರವಲ್ಲ ಇಬ್ ನು ಅಬ್ದುಸ್ಸಲಾಮ್ "ಅನುವದನೀಯವಲ್ಲವೆಂದು" ವೆಂದೇ ಫತ್ವಾ ನೀಡಿದ್ದಾರೆ. ಒಟ್ಟಿನಲ್ಲಿ ಜಿನ್ನ್ ನ್ನು ವಿವಾಹ ಮಾಡುವುದು ನಬಿ (ಸ್ವ. ಅ) ರವರು ವಿರೋಧಿಸಿದ ಫಿಖ್ ಹ್ ಶಾಸ್ತಙ್ಙರು ಅನುವದನೀಯವಲ್ಲವೆಂದು, ಕೆಲವು ತಾಬಿ ಅ್ ಗಳು ಕರಾಹತ್ತೆಂದು ಹೇಳಿದ ಕಾರ್ಯವಾಗಿದೆ. ಇವೆಲ್ಲವೂ ಮನುಷ್ಯ - ಜಿನ್ನ್ ವಿವಾಹ ನಡೆಯಲು ಸಾಧ್ಯತೆಯಿದೆ ಎಂಬುವುದಕ್ಕೆ ಪುರಾವೆಯಿಗಿದೆ. ಯಾಕೆಂದರೆ, ಸಾಧ್ಯತೆಯಿಲ್ಲದ ಕಾರ್ಯವೊಂದರ ಕುರಿತು ಙ್ಙಾನ ಕೇಸರಿಗಳಾದ ಉದ್ದಾಮ ವಿದ್ವಾಂಸರು 'ಅನುವದನೀಯವೋ? ಅಲ್ಲವೋ?' ಎಂದು ಸುದೀರ್ಘ ಚರ್ಚೆ ನಡೆಸಿ, ವಿಧಿ ಹೇಳಿ ಅಮೂಲ್ಯವಾದ ಸಮಯವನ್ನು ವ್ಯರ್ಥಮಾಡುತ್ತಿರಲಿಲ್ಲ. ಮತ್ತೊಂದು ವಿಷಯವೇನೆಂದರೆ ವಿವಾಹದ ನೈತಿಕ ಗುರಿಯ ತನ್ನ ಸಂಗಾತಿಯಿಂದ ಸಂತೃಪ್ತಿಯನ್ನು ಪಡೆಯುವುದಾಗಿದೆ. ಮನುಷ್ಯನು ಮನುಷ್ಯೇತರ ವರ್ಗದಿಂದ ಯಾವುದೇ ಜೀವಿಯನ್ನು ವಿವಾಹ ಗೈಯುವುದರಿಂದ ಖುರ್ ಆನ್ ವಿಶ್ಲೇಷಸಿದ ನೈಜ 'ಸಂತೃಪ್ತಿ'ಯನ್ನು ಪಡೆಯಲು ಸಾಧ್ಯವಿಲ್ಲ. "(ಅಕಾಮುಲ್ ಮರ್ ಜಾನ್ :67)
ಸ್ತನಾಪಾನ ಸಂಬಂಧ ಉಂಟಾಗಬಹುದೇ..?
ಇಂದು ಒಂದು ವೇಳೆ ವಿವಾಹ ಸಿಂದುತ್ವದ ನಿಬಂಧನೆಗಳೊಂದಿಗೆ ಜಿನ್ನೊಂದು ಮನುಷ್ಯ ವರ್ಗದ ಸ್ತ್ರೀಯನ್ನು ವಿವಾಹಗೈದರೆ ಮನುಷ್ಯ-ಮನುಷ್ಯ ವಿವಾಹವಾದರುಂಟಾಗುವ ಎಲ್ಲಾ ಧರ್ಮ ವಿಧಗಳು ಪ್ರಸ್ತುತ ಜಿನ್ನಿನ ಪತ್ನಿಯಾದ ಮನುಷ್ಯ ಸ್ತ್ರೀಗೆ ಬಾಧಕವಾಗುತ್ತದೆ. ಉದಾ:ಜಿನ್ನಿನ ಸಂಭೋಗದಿಂದ ಸ್ನಾನ ಕಡ್ಡಾಯವಾಗುವುದು ಸ್ತನಾಪಾನ ಸಂಬಂಧ ಉಂಟಾಗುವುದು...."ಜಿನ್ನ್'ನ ಸ್ತ್ರೀ - ಪುರುಷರಿಗೆ ಜನಾಬತ್ ಉಂಟಾದರೆ ಅವರು ಮನುಷ್ಯರಂತೆ ಸ್ನಾನ ಮಾಡುವುದು ಕಡ್ಡಾಯವಾಗಿದೆ. ಅವರು ಮನುಷ್ಯ ರೂಪದಲ್ಲಿಲ್ಲದಿದ್ದರೂ ಕೂಡ...."(ಖಲ್ ಯೂಬಿ :163)
ಮನುಷ್ಯ ಮಗು ಫಿಕ್ಹ್ ನಿಶ್ಚೈಯಿಸಿದ ನಿಬಂಧನೆಯೊಂದಿಗೆ ಜಿನ್ನ್ ಸ್ತ್ರೀಯ ಎದೆ ಹಾಲು ಬೇಪಿದರೆ ಸ್ತನಾಪಾನ ಸಂಬಂಧ ಉಂಟಾಗುತ್ತಿದೆಯೇ? ಈ ಪ್ರಶ್ನೆಗೆ ಸಯ್ಯಿದುಲ್ ಬಕ್'ರೀ(ರ)ರವರು ಈ ರೀತಿ ಉತ್ತರಿಸಿದ್ದಾರೆ, "ಜಿನ್ನ್ ಸ್ತ್ರೀಯು ಮನುಷ್ಯ ರೂಪದಲ್ಲಿದ್ದರೂ ಇಲ್ಲದಿದ್ದರೂ, ಅವಳ ಎದೆಯೂ ಮನುಷ್ಯ ಸ್ತ್ರೀಯ ಸಾಮಾನ್ಯ ಸ್ಥಳದಲ್ಲಿದ್ದರೂ, ಇಲ್ಲದಿದ್ದರೂ ಜಿನ್ನ್-ಮನುಷ್ಯ ವಿವಾಹವು ಅನುವದನೀಯವೆಂಬ ಅಭಿಪ್ರಾಯ ಪ್ರಕಾರ ಸ್ತನಪಾನ ಸಂಬಂಧ ಉಂಟಾಗುತ್ತದೆ. ಅನುವದನೀಯವಲ್ಲವೆಂಬ ಅಭಿಪ್ರಾಯ ಪ್ರಕಾರ ಸ್ತನಪಾನ ಸಂಬಂಧ ಉಂಟಾಗುವುದಿಲ್ಲ."(ಇಆನತ್:3/282)
'ಜಿನ್ನ್ ಭಾದೆ' ನಿಜನಾ.....?
'ಜಿನ್ನ್ ಗಳು ಮನುಷ್ಯ ಶರೀರಕ್ಕೆ ಪ್ರವೇಶಿಸುತ್ತಾರೆ' ಎಂದಾಗಿದೆ. ವಿದ್ವಾಂಸರ ಅಭಿಮತ ಮುಅ್ ತಝಿಲಿಗಳ ಒಂದು ವಿಭಾಗವು ಇದನ್ನು ನಿಷೇಧಿಸುತ್ತದೆ. "ಬಡ್ಡಿ ಭಕ್ಷಕರು(ತಮ್ಮ ಸಮಾಧಿಗಳಿಂದ)ಶೈತ್ವಾನನ ಸೋಂಕಿನಿಂದ ಮಾತಿಹೀನರಾದವರಂತಲ್ಲದೆ ಎದ್ದೇಳಲಾರರು".....(ಅಲ್ ಬಖರ:275)ಎಂಬ ಖುರ್ ಆನಿನ ಸೂಕ್ತವು 'ಜಿನ್ನ್' ಮನುಷ್ಯ ಶರೀರಕ್ಕೆ ಪ್ರವೇಶಿಸುತ್ತೆ ಎಂಬುದಕ್ಕೆ ಪುರಾವೆಯೆಂದು ಅಬುಲ್ ಹಸನುಲ್ ಅಶ್ ಅರೀ(ರ)ರವರು ಅಭಿಪ್ರಾಯ ಹೊಂದಿದ್ದಾರೆ. ಈ ಸೂಕ್ತವು ಮನುಷ್ಯನು ಪಿಶಾಚಿಯ ಭಾದೆಗೆತುತ್ತಾಗುವನು ಎಂಬುದಕ್ಕೆ ವ್ಯಕ್ತವಾದ ಪುರಾವೆಯಾಗಿದೆಯೆಂದು ಇಬ್ನುತೈಮಿಯ್ಯ ಕೂಡ ಹೇಳಿದ್ದಾರೆ. (ಫತಾವಾ ಇಬ್ನು ತೈಮಿಯ್ಯಾ:19/11)
ಅಹ್'ಮದ್'ಬ್ ನು ಹಂಬಲ್(ರ) ರೊಂದಿಗೆ ತನ್ನ ಪುತ್ರ ಅಬ್ದುಲ್ಲಾ(ರ)ರವರು ಕೇಳಿದರು;
"ನನ್ನ ಪ್ರೀತಿಯ ಪಿತಾಮಹರೇ ಜಿನ್ನ್ ಮನುಷ್ಯ ಶರೀರಕ್ಕೆ ಪ್ರವೇಶಿಸಲ್ಲವೆಂದು ಕೆಲವರು ವಾಧಿಸುತ್ತಾರಲ್ಲಾ? ಅದು ಸರಿಯಾ?"
ಅಹ್'ಮದ್'ಬ್ ನು ಹಂಬಲ್ (ರ): "ಸುಳ್ಳು, ಜಿನ್ನ್ ಮನುಷ್ಯ ಶರೀರಕ್ಕೆ ಪ್ರವೇಶಿಸಿ ಮನುಷ್ಯನ ನಾಲಗೆಯಿಂದ ಮಾತಾಡುತ್ತದೆ." (ಫತಾವಾ ಇಬ್ನು ತೈಮಿಯ್ಯಾ:19/10) ಜಿನ್ನ್ ಬಾಧೆ ತಗುಲಿದ ಮಗುವಿಗೆ ನಬಿ (ಸ. ಅ)ರವರು ಚಿಕಿತ್ಸೆ ನೀಡಿ ಗುಣಪಡಿಸಿದ ಘಟನೆಯನ್ನು ಇಮಾಮ್ ಅಹ್ಮದ್ (ರ), ಅಬೂದಾವೂದ್ (ರ), ಇಮಾಮ್ ಖುರುತ್ವುಬಿ(ರ)ಸೇರಿದಂತೆ ಹಲವಾರು ಮಹಾತ್ಮರು ಉದ್ದರಿಸಿದ್ದಾರೆ.
ಜಿನ್ನ್'ಗಳಿಗೆ ಅದೃಶ್ಯ ಜ್ಞಾನವಿದೆಯಾ?
ಜಿನ್ನ್'ಗಳು ಅದೃಶ್ಯ ಕಾರ್ಯಗಳನ್ನು ತಿಳಿಯುತ್ತಿದ್ದಂತೆ ತಿಳಿಯುತ್ತಾರೆಂದಾಗಿದೆ ಬಹುತೇಕ ಮಂದಿ ಭಾವಿಸಿರುವುದು. ಅದುಶುದ್ಧ ತಿಳಿಗೇಡಿತನ ಸಾಮಾನ್ಯ ಮನುಷ್ಯರು ಅದೃಶ್ಯ ಕಾರ್ಯಗಳನ್ನು ತಿಳಿಯದ ಹಾಗೆಯೇ ಜಿನ್ನ್ ಗಳು ಕೂಡಾ ಅದೃಶ್ಯ ಕಾರ್ಯಗಳನ್ನು ತಿಳಿಯುವುದಿಲ್ಲ. ಆದರೆ ಮನುಷ್ಯರಿಗೆ ಕ್ಷಣ ಮಾತ್ರದಲ್ಲಿ ತಿಳಿಯಲು ಸಾದ್ಯವಾಗದ ಕಾರ್ಯಗಳನ್ನು ಜಿನ್ನ್ ಗಳು ಕೆಲವೇ ನಿಮಿಷಗೊಳಗೆ ತಿಳಿಯುವುದುಂಟು. ತದನಂತರ ಮನುಷ್ಯನು ಅದನ್ನು ಕಣ್ಣಾರೆ ದರ್ಶಿಸುವಾಗ ಜಿನ್ನ್ ಗಳು ಹೇಳಿದ್ದು ಸತ್ಯವೆಂದು ವೇದ್ಯವಾಗಬಹುದು. ಇರಾಖಿನಲ್ಲಿ ಅಲೀ(ರ)ರವರನ್ನು ವಧಿಸಲ್ಪಟ್ಟ ವಿವರವನ್ನು ಅಂದು ರಾತ್ರಿಯೇ ಇರಾಖಿನಿಂದ ಹೊರಟ ಒಂದು ಜಿನ್ನಿನ ಮುಖಾಂತರ ಮುಆವಿಯಾ(ರ) ರವರು ಅರಿತರು ಅವರದನ್ನು ಕಾಗದವೊಂದರಲ್ಲಿ ಬರೆದಿಟ್ಟರು. ಕೆಲವು ದಿನಗಳ ಬಳಿಕ ಇರಾಖಿನಿಂದ ದೂತನೊಬ್ಬ ಮರಣ ವಾರ್ತೆಯೊಂದಿಗೆ ಮುಆವಿಯಾ(ರ) ರವರ ಸನ್ನಿಧಿಗೆ ಹಾಜರಾದಾಗ ಅವರು ಬರೆದಿಟ್ಟ ಕಾಗದವನ್ನು ತೆಗೆದು ನೋಡಿದರು. ಆವಾಗ ಜಿನ್ನ್ ಹೇಳಿದ ಮಾತು ಸತ್ಯವೆಂದು ಮುಅವಿಯಾ(ರ)ರವರಿಗೆ ವೇದ್ಯವಾಯಿತು. ಇದರಿಂದ ಜಿನ್ನ್ ಗಳು ಹೇಳುವ ಕೆಲವು ಕಾರ್ಯಗಳು ವಿಶ್ವಾಸ ಯೋಗ್ಯವಾಗಿದೆ, ಮನುಷ್ಯನಿಗೆ ಅದೃಶ್ಯವಾದ ಕೆಲವು ಕಾರ್ಯಗಳು ಜಿನ್ನ್ ಗಳಿಗೆ ದೃಶ್ಯವಾಗುತ್ತದೆ. ಮನುಷ್ಯನು ಎಷ್ಟೋ ದಿನಗಳ ಬಳಿಕ ತಿಳಿಯುವ ಕಾರ್ಯಗಳನ್ನು ಜಿನ್ನ್ ಗಳು ಕ್ಷಣ ಮಾತ್ರದಲ್ಲಿ ತಿಳಿದು ಇತರರಿಗೆ ಅದನ್ನು ತಲುಪಿಸುತ್ತದೆಯೆಂದು ಮನದಟ್ಟಾಗುತ್ತದೆ. ನಿಜದಲ್ಲಿ ಜಿನ್ನ್ ಗಳು ಅದೃಶ್ಯ ಕಾರ್ಯಗಳನ್ನು ತಿಳಿಯುವುದೇ ಇಲ್ಲ. ಖುರ್ ಆನ್ ಅದನ್ನು ವ್ಯಕ್ತವಾಗಿ ಹೇಳುವುದನ್ನು ನೋಡಿ.....
"ಅನಂತರ ನಾವು ಸುಲೈಮಾನರಿಗೆ ಮರಣವನ್ನು ವಿಧಿಸಿದಾಗ ಜಿನ್ನ್ ಗಳಿಗೆ ಅವರ ಮರಣದ ಬಗ್ಗೆ ತಿಳಿಸಿದ್ದು. ಅವರು ಊರುಗೋಳನ್ನು ತಿನ್ನುತ್ತಿದ್ದ ಗೆದ್ದಲಿನ ಹೊರತು ಬೇರೇನೂ ಅಲ್ಲ. ಹೀಗೆ ಸುಲೈಮಾನರು(ಮರಣದ ನಂತರ) ನೆಲಕ್ಕೆ ಬಿದ್ದಾಗ ನಮಗೆ ಅದೃಷ್ಟ ಙ್ಙಾನವಿರುತ್ತಿದ್ದರೆ ತಾವು ಇಂತಹ ಅಪಮಾನಕರ ಶಿಕ್ಷೆಯಲ್ಲಿ ಬೀಳುತ್ತಿರಲಿಲ್ಲವೆಂದು ಜಿನ್ನ್ ಗಳಿಗೆ ಸ್ಪಷ್ಟವಾಗಿ ತಿಳಿಯಿತು.
(ಸೂರತ್ ಸಬ ಅ್-14)
ಇದರ ವ್ಯಾಖ್ಯಾನದಲ್ಲಿ ಇಬ್ನು ಕಸೀರ್(ರ) ರವರು ಹೇಳುತ್ತಾರೆ. "ಸುಲೈಮಾನ್ ನಬಿ (ಅ) ರವರು ಎಂದಿನಂತೆ ತನ್ನ ಊರುಗೋಳನ್ನು ನೆಲಕ್ಕೆ ಊರಿ ಆರಾಧನೆಯಲ್ಲಿ ಮುಳುಗುತ್ತಿರುವಾಗ ಮರಣ ಹೊಂದಿ ಅದೇ ಸ್ಥಿತಿಯಲ್ಲಿ ನಿಂತಿದ್ದರು. ಆದುದರಿಂದ ಸುಲೈಮಾನ್ ನಬಿ (ಅ) ರವರ ಮರಣ ವಾರ್ತೆ ಯಾರಿಗೂ ತಿಳಿದಿರಲಿಲ್ಲ. ಕೆಲವು ದಿನದ ಬಳಿಕ ಅವರು ಊರಿದ್ದ ಕೋಲಿನ ತುದಿಯನ್ನು ಗೆದ್ದಲು ತಿಂದಾಗ ಅವರ ಪಾರ್ಥಿವ ಶರೀರವು ನೆಲಕ್ಕುರುಳಿತು. ಆವಾಗಲೇ ಜಿನ್ನ್ ಗಳಿಗೆ ಸುಲೈಮಾನ್ ನಬಿ (ಅ) ರವರ ಮರಣ ವಾರ್ತೆ ತಿಳಿದದ್ದು.ಅಷ್ಟರವರೆಗೆ ಅವರು ನಮಗೆ ಅದೃಶ್ಯ ಙ್ಞಾನಗೊತ್ತೆಂದು ವಾದಿಸುತ್ತಿದ್ದರು. ನಮ್ಮ ಇದುವರೆಗಿನ ವಾದವು ತಪ್ಪೆಂದೂ, ಅದೃಶ್ಯ ಙ್ಙಾನ ನಮಗಿರುತ್ತಿದ್ದರೆ ಸುಲೈಮಾನ್ ನಬಿ (ಅ) ರವರು ಮರಣ ಹೊಂದಿದಾಗಲೇ ನಮಗೆ ತಿಳಿಯಬೇಕಿತ್ತೆಂದೂ, ತಿಳಿದಿದ್ದರೆ ತಪ್ಪದಾಯಕ ಕೆಲಸಗಳಿಂದ ಅಂದಿನಿಂದಲೇ ಮುಕ್ತಿ ಸಿಗುತ್ತಿತ್ತೆಂದೂ ಜಿನ್ನ್ ಗಳಿಗೆ ಙ್ಙಾನೋದಯವಾಯಿತು. ಜಿನ್ನ್ ಗಳು ಸುಲೈಮಾನ್ ನಬಿ (ಅ) ರವರ ಆಜ್ಞೆಗೆ ಕಟಿ ಬದ್ದರಾಗಿ ನಿರ್ವಾಹವಿಲ್ಲದೆ ಕೆಲಸ ಮಾಡುತ್ತಿರಷ್ಟೋ"(ತಪ್ ಸೀರ್ ಇಬ್ ನು ಕಸೀರ್ 3/52)
ಆದರೆ, ರಸೂಲು, ನಬಿಯ್ಯ್, ವಲಿಯ್ಯ್ ಮೊದಲಾದವರಿಗೆ ಅಲ್ಲಾಹನು ಉದ್ದೇಶಿಸುವುದಾದರೆ ಅದೃಶ್ಯ ಕಾರ್ಯಗಳನ್ನು ತಿಳಿಸಿ ಕೊಡುತ್ತಾನೆಂದು ಖುರ್ ಆನ್, ಹದೀಸ್, ಇಜ್ ಮಾ ಅ್, ಖಿಯಾಸ್ ನಿಂದ ದೃಢಪಟ್ಟದೇ ಅದೇ ರೀತಿ ಅಲ್ಲಾಹನ ಇಷ್ಟದಾಸರಾದ ಜಿನ್ನ್ ಗಳನ್ನು ಅಲ್ಲಾಹನು ಅದೃಶ್ಯ ಕಾರ್ಯಗಳನ್ನು ತಿಳಿಸಿ ಕೊಡುತ್ತಾನೆಂದು ವಿಶ್ವಾಸವಿರಬಹುದು..
ಆ ಕೋಟೆಯೊಳಗಿನ ರಹಸ್ಯ ಇಂದಿಗೂ ನಿಗೂಢ!!
ಸ್ಪೈನ್ , ಉಮವೀ ಆಡಳಿತಗಾರರಲ್ಲೊಬ್ಬರಾದ ಅಬ್ದುಲ್ ಮಲಿಕ್ ನ ಕಾಲದಲ್ಲಿ ಹಿಜರಿ 94ರಲ್ಲಿ ಮೂಸಬ್ ನು ಸಯ್ರ್ ತಾರೀಖ್ ಬ್ನು ಝಿಯಾದ್ ಈ ರಾಜ್ಯವನ್ನು ವಶಪಡಿಸಿ ಇಸ್ಲಾಮಿನ ಸಾಮ್ರಾಜ್ಯಕ್ಕೆ ಅಧೀನಪಡಿಸಿದರು.. ಸರಿಸುಮಾರು 800 ವರ್ಷಗಳ ಕಾಲ ಅಲ್ಲಿ ಇಸ್ಲಾಮಿನ ಆಡಳಿತವು ನಡೆಯಿತು.. ತದನಂತರ ಅದನ್ನು ಕ್ರೈಸ್ತಾನಿಗಳು ವಶಪಡಿಸಿದಾಗ ಸ್ಪೇನ್ ವಿಭಜನೆಯಾಯಿತು . ಸ್ಪೇನಿನ ಒಂದು ಭಾಗ ಸ್ಪೇನ್ ಎಂದೂ ಮಗದೊಂದು ಭಾಗ ಪೋರ್ಚುಗೀಸ್ ' ಎಂದೂ ಅರಿಯಲ್ಪಟ್ಟಿತು . ಸ್ಪೇನಿನ ಪಶ್ಚಿಮ ಭಾಗದಲ್ಲಿ ಅಂಟ್ಲಾಟಿಕ್ ಸಮುದ್ರದ ಸನಿಹದಲ್ಲಿ ಸುಲೈಮಾನ್ ನಬಿ ( ಅ ) ರಿಗೆ ಜಿನ್ನ್ ಗಳು ನಿರ್ಮಿಸಿದ ಒಂದು ಪಟ್ಟಣವಿದೆ... "ಮದೀನತುನ್ನು ಹಾಸ್"' ಎಂಬ ಹೆಸರಿನಲ್ಲಿ ಆ ಪಟ್ಟಣವು ಪ್ರಸಿದ್ದಿ ಪಡೆದಿತ್ತು . ಅತ್ಯದ್ಭುತಕರವಾದ ಪಟ್ಟಣದ ಸುತ್ತಲೂ ಜಿನ್ನ್ ಗಳು ಎತ್ತರವಾದ ಗೋಡೆಯನ್ನೂ ನಿರ್ಮಿಸಿದ್ದರು ...
ವಲೀದುಬ್ನು ಅಬ್ದುಲ್ ಮಲಿಕ್ ಆಡಳಿತ ನಡೆಸುವ ಸಂದರ್ಭದಲ್ಲಿ ಈ ಪಟ್ಟಣದ ಕುರಿತು ಸಂಪೂರ್ಣ ಮಾಹಿತಿ ನೀಡಲು ಪಶ್ಚಿಮ ಭಾಗದ ಸೈನ್ಯಾ ನಾಯಕ ಮೂಸಬ್ ನು ಸಯ್ರ್‌ಗೆ ಸಂದೇಶ ರವಾನಿಸಿದರು . ಸಂದೇಶ ಹೊತ್ತ ಪತ್ರ ಕೈ ತಲುಪಿದ ಕೂಡಲೇ ಮೂಸಾಬ್‌ನು ಸಯ್ರ್ ಕಾರ್ಯಪ್ರವೃತ್ತರಾದರು .. ಹಲವಿಧ ತಜ್ಞರನ್ನೊಳಗೊಂಡ ಬೃಹತ್ತಾದ ಸೈನ್ಯದೊಂದಿಗೆ ಆ ಪಟ್ಟಣವನ್ನು ಗುರಿಯಾಗಿಸಿಕೊಂಡು ಯಾತ್ರೆ ಹೊರಟರು . ಹಲವಾರು ಗುಡ್ಡ ಕಾಡುಗಳನ್ನು ಕ್ರಮಿಸಿ 40 ದಿನಗಳ ಬಳಿಕ ಪ್ರಕೃತಿ ರಮಣೀಯವಾದ ಪ್ರಸ್ತುತ ಪಟ್ಟಣಕ್ಕೆ ತಲುಪಿದರು . ಸೇನಾನಾಯಕ ಮೂಸಾಬ್‌ನು ಸಯ್ರ್‌ರವರು ತನ್ನ ಸೈನಿಕರಲ್ಲಿ ಅಶ್ವದಂತೆ ಯಾವ ತ್ಯಾಗಕ್ಕೂ ಸಿದ್ಧರಿರುವ ಸಾವಿರ ಸೈನಿಕರನ್ನು ಆಯ್ಕೆ ಮಾಡಿ ಅವರಲ್ಲೊಬ್ಬರನ್ನು ಅವರಿಗೆ ನಾಯಕನನ್ನಾಗಿ ನೇಮಿಸಿದರು...
ನಾಯಕ ಹಾಗೂ 999 ಅನುಯಾಯಿಗಳು ಕೋಟೆಯ ಸನಿಹಕ್ಕೆ ತೆರಳಿದರು . ಆರು ದಿನಗಳ ಕಾಲ ಅದರ ಸುತ್ತಲೂ ನಡೆದು ಕೋಟೆಯ ಪ್ರವೇಶದ್ವಾರವನ್ನು ಕಂಡು ಹಿಡಿಯಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ . ಏಳನೇ ದಿನದಂದು ನಿರಾಸೆಯೊಂದಿಗೆ ಅಮೀರ್‌ನ ಸನ್ನಿಧಿಗೆ ಮರಳಿದರು . ಅಮೀರ್ ಮೂಸಾಬ್ನು ಸಯ್ಲ್‌ರವರು ಭೂಶಾಸ್ತ್ರಜ್ಞರನ್ನೆಲ್ಲಾ ಕರೆದು ಕೋಟೆಯೊಳಗೆ ಪ್ರವೇಶಿಸುವುದು ಹೇಗೆ ? ಎಂಬ ಬಗ್ಗೆ ಚರ್ಚೆ ನಡೆಸಿದರು . “ಕೋಟೆಯ ಸಮೀಪದಲ್ಲಿ ಭೂಮಿಯನ್ನು ಆಗೆದು ಅಡಿಭಾಗದಿಂದ ಸುರಂಗ ನಿರ್ಮಿಸಿ ಅದು ಮುಖಾಂತರ ಕೋಟೆಗೆ ಪ್ರವೇಶಿಸಿದರಾಯಿತು" ಎಂಬ ಒಕ್ಕೊರೊಳಿನ ಅಭಿಪ್ರಾಯಕ್ಕೆ ಎಲ್ಲರು ತಲೆಬಾಗಿಸಿದರು...
ಅದರಂತೆ ಅವರು ಪುನಃ ತೆರಳಿ ಭೂಮಿಯನ್ನು ಅಗೆಯಲು ಪ್ರಾರಂಭಿಸಿದರು . ಎಷ್ಟೇ ಅಗೆದರೂ ಗೋಡೆಯ ತಳಭಾಗ ಸಿಗಲಿಲ್ಲ . ಕಡೆಗೆ ನೀರೊರತೆ ಹರಿಯತೊಡಗಿತು . ಅವರ ಕೆಲಸಕ್ಕೆ ಅಡ್ಡಿಯಾಯಿತು . ಅಗೆಯುವುದನ್ನು ನಿಲ್ಲಿಸಿದರು . ತದನಂತರ ಕೋಟೆಯೊಳಗೆ ಪ್ರವೇಶಿಸುವುದರ ಕುರಿತು ಅಮೀರ್ ಅವರೊಂದಿಗೆ ಚರ್ಚೆ ನಡೆಸಿದಾಗ “ಗೋಡೆಗೆ ಹತ್ತಿ , ಮೇಲ್ಬಾಗದ ಮುಖಾಂತರ ಒಳಪ್ರವೇಶಿಸಬಹುದು” ಎಂಬ ಅಭಿಪ್ರಾಯವು ಕೆಲವರಿಂದ ಪ್ರಕಟವಾಯಿತು ಆದರೆ ಈ ಸಾಹಸಕ್ಕೆ ಅಲ್ಲಿದ್ದ ಯಾರೂ ದೈರ್ಯ ತೋರಿಸಲಿಲ್ಲ . ಆವಾಗ ಮೂಸಾಬ್‌ನು ಸಯ್ರ್‌ರವರು “ಸೈನಿಕರೇ , ಈ ಸಾಹಸಕ್ಕೆ ಮುಂದಾಗುವವರಿಗೆ ಏನಾದರೂ ಅನಾಹುತ ಸಂಭವಿಸಿದರೆ ಅವರ ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ನಾನು ವಹಿಸುತ್ತೇನೆ ” ಎಂದು ಘೋಷಿಸಿದಾಗ ಸೈನಿಕನೊಬ್ಬ ಸಿದ್ದನಾದ . ಆತ ಗೋಡೆಯ ತುದಿಗೆ ತಲುಪಿ ಒಳಗಡೆಗೆ ಇಣುಕಿದ . ಅಷ್ಟೇ ತಡ , ಎತ್ತಿದ ಧ್ವನಿಯಲ್ಲಿ ಗಹಗಹಿಸಿ ನಗುತ್ತಾ ಅದರೊಳಕ್ಕೆ ಹಾರಿದ . ಇದನ್ನು ಕಂಡು ಉಳಿದ ಸೈನಿಕರು ಭಯಭೀತರಾದರು , ಅಸಹಾಯಕರಾದ ಅವರಿಂದೇನೂ ಮಾಡಲು ಸಾಧ್ಯವಾಗಲಿಲ್ಲ , ಆತನ ಹೆಸರೆತ್ತಿ ಹಲವು ಬಾರಿ ಕರೆದರೂ ಯಾವುದೇ ಪ್ರತಿಕ್ರಿಯೆ ಅತ್ತ ಕಡೆಯಿಂದ ದೊರೆಯಲಿಲ್ಲ . ತದನಂತರ ಬೀಭತ್ಸಕರವಾದ ಭಯಾನಕವಾಗಿ ಪ್ರತ್ಯೇಕ ಶಬ್ದವೊಂದು ಆ ಕೋಟೆಯೊಳಗಿಂದ ಮೂರು ದಿನಗಳ ಕಾಲ ಕೇಳುತ್ತಾ ಇತ್ತು...
ಮೂಸಾಬ್‌ನು ಸಯ್ರ್ ದೃತಿಗೆಡಲಿಲ್ಲ.. "ಇನ್ನೂ ಈ ಸಾಹಸಕ್ಕೆ ಮುಂದಾಗುವವರು ಯಾರಾದರೂ ಇದ್ದರೆ ಮುಂದೆ ಬನ್ನಿ . ಅವರಿಗೆ ಒಂದು ಸಾವಿರ ದಿನಾರನ್ನು ನೀಡುತ್ತೇನೆ . . . ” ಎಂದು ಘೋಷಿಸಿದರು . ಆಗ ಧೀರನಾದ ಸೈನಿಕನೊಬ್ಬ ಮುಂದೆ ಬಂದು ಗೋಡೆಗೆ ಹತ್ತಿದ.. , ಅದರ ತುದಿಗೆ ತಲುಪಿ ಇಣುಕಿ ನೋಡಿದ್ದೆ ತಡ , ಆತ ಕೂಡ ಮೊದಲಿನವನಂತೆ ಗಹಗಹಿಸಿ ನಗತೊಡಗಿದ.. ಕೆಳಗಿದ್ದ ಸೈನಿಕರು ಆತನ ಹೆಸರೆತ್ತಿ ಎಷ್ಟು ಕರೆದರೂ ಪ್ರತಿಕ್ರಿಯಿಸಲೇ ಇಲ್ಲ , ಆತ ಕೂಡ ಅದರೊಳಕ್ಕೆ ಹಾರಿಬಿಟ್ಟ , ಮತ್ತೆ ಕೂಡಾ ಅದರೊಳಗಿನಿಂದ ಭೀಭತ್ಸಕರವಾದ ಶಬ್ಧ ಕೇಳಲು ಸಾಧ್ಯವಾಯಿತು...
ಮೂಸಾಬ್‌ನು ಸಯ್ರ್ ವಿಚಳಿತರಾಗಲಿಲ್ಲ . ತನ್ನ ಹೆಜ್ಜೆಯನ್ನು ಒಂದೆ ಸರಿಸಲಿಲ್ಲ “ಇನ್ನು ಯಾರಾದರೂ ಈ ಸಾಹಸಕ್ಕೆ ಮುಂದಾಗುವವರಿದ್ದರೆ ಮುಂದೆ ಬನ್ನಿ , ಅವರಿಗೆ ಎರಡು ಸಾವಿರ ದೀನಾರನ್ನು ನೀಡುತ್ತೇನೆ ” ಎಂದು ಘೋಷಿಸಿದರು . ಆವಾಗ ಒಬ್ಬ ಸೈನಿಕ ಮುಂದೆ ಬಂದು ಹೇಳಿದ ; " ನಾನದಕ್ಕೆ ಸಿದ್ಧ , ನಮಗೀಗ ಬೇಕಾಗಿರುವುದು ಇದರೊಳಗೆ ಏನಿದೆ ಎಂದಲ್ಲವೇ . . ಅದನ್ನು ನಾನು ಕಂಡು ಹಿಡಿಯುತ್ತೇನೆ . ಈಗಾಗಲೇ ನಮ್ಮಲ್ಲಿಬ್ಬರು ಅದರೊಳಕ್ಕೆ ಸೇರಿ ಬಿಟ್ಟಿದ್ದಾರೆ. ನಾನು ಹೋಗಿ ಮೂರನೇಯವನಾಗಕೂಡದು, ಆದ್ದರಿಂದ ನಾನು ಸೊಂಟಕ್ಕೆ ಹಗ್ಗವನ್ನು ಬಿಗಿಯಾಗಿ ಕಟ್ಟಿ ಅದರ ತುದಿಯನ್ನು ನಿಮ್ಮ ಕೈಯ್ಯಲ್ಲಿ ನೀಡಿ ಈ ಗೋಡೆಗೆ ಏರುತ್ತೇನೆ, ಗೋಡೆಯ ತುದಿಗೆ ತಲುಪಿ ಅದರೊಳಕ್ಕೆ ಇಣುಕಿ ನೋಡಿದ ನಂತರ ನಾನದರೊಳಕ್ಕೆ ಹಾರಲು ಯತ್ನಿಸಿದರೆ ನಿಮ್ಮ ಕೈಯ್ಯಲ್ಲಿದ್ದ ಹಗ್ಗದಿಂದ ನನ್ನನ್ನು ಎಳೆಯಬೇಕು” ಇದನ್ನು ಕೇಳಿದಾಗ ಎಲ್ಲರೂ ಆತನ ಬೆನ್ನು ತಟ್ಟಿ ಹುರಿದುಂಬಿಸಿದರು. ಅದರಂತೆಯೇ ಹಗ್ಗವೊಂದರಿಂದ ಆತನ ಸೊಂಟಕ್ಕೆ ತುಂಬಾ ಬಿಗಿಯಾಗಿ ಕಟ್ಟಿದರು. ಸೈನಿಕ ಗೋಡೆಗೆ ಹತ್ತಿ ಅದರ ತುದಿಗೆ ತಲುಪಿ ಇಣುಕಿದ್ದೇ ತಡ, ಮೊದಲಿಬ್ಬರಂತೆ ಗಹಗಹಿಸಿ ನಗತೊಡಗಿ ಅದರೊಳಗೆ ಹಾರಲು ಪ್ರಯತ್ನಿಸಿದ..
ಸೈನಿಕ ಗೋಡೆಗೆ ಹತ್ತಿ ಅದರ ತುದಿಗೆ ತಲುಪಿ ಇಣುಕಿದ್ದೇ ತಡ, ಮೊದಲಿಬ್ಬರಂತೆ ಗಹಗಹಿಸಿ ನಗತೊಡಗಿ ಅದರೊಳಗೆ ಹಾರುಲು ಪ್ರಯತ್ನಿಸಿದ..
ಆವಾಗ ಕೆಳಗಿದ್ದವರು ಗಟ್ಟಿಯಾಗಿ ಎಳೆದರು... ಆಶ್ಚರ್ಯವೆನ್ನಬೇಕು, ಆತನನ್ನು ಮಿಸುಕಾಡಿಸಲು ಅವರ್ಯಾರಿಗೂ ಸಾಧ್ಯವಾಗಲಿಲ್ಲ, ಆತ ಹಾರುವ ಪ್ರಯತ್ನದಿಂದ ಹಿಂದೆ ಸರಿಯುವುದೂ ಇಲ್ಲ. ಹಲವು ಸಮಯದವರೆಗೆ ಎಳೆದಾಡಿದಾಗ ಸೈನಿಕ ಎರಡು ತುಂಡಾಗಿ ಬಿಟ್ಟ!!
ಆತನ ಅರ್ಧ ದೇಹ ನೆಲಕ್ಕೂ ದೇಹದ ಮತ್ತೊಂದು ಭಾಗ ಕೋಟೆಯೊಳಗೂ ಬಿತ್ತು. ಅದರೊಂದಿಗೆ ಮೂಸಾಬ್‌ನು ಸಯ್ರ್ ನಿರಾಶೆಗೊಂಡರು. ನಂತರ ಯಾವುದೇ ಸಾಹಸಕ್ಕೂ ಮುಂದಾಗದೆ ಸೈನ್ಯ ಸಮೇತ ಅಲ್ಲಿಂದ ದುಃಖದೊಂದಿಗೆ ಮರಳಿದರು. ಹಾಗೇ ಗಹಗಹಿಸುವಂತೆ ನಗಿಸುವ, ಮೂರು ಜೀವವನ್ನು ಬಲಿತೆಗೆದು ಕೊಂಡ ಆ ಕೋಟೆಯೊಳಗಿನ ರಹಸ್ಯವಾದರೂ ಏನು..? ಅದರೊಳಗೆ ಬಿದ್ದವರು ಏನಾದರು..? ಅದು ಇಂದಿಗೂ ನಿಗೂಢವಾಗಿಯೇ ಉಳಿಯಿತು..!!!
(ತತ್ ಮೀರೆ ಆದಬ್ ಉರ್ದು ಕೃತಿ)
ವ್ಯಾಪಾರ ಮಾಡುವ ಜಿನ್ನ್!!!
ಶೈಖ್ ಮಯ್ನಾವಿ ಹೇಳಿದ ಕಥೆಯಿದು;
ಪುರಾತನ ಈಜಿಪ್ಟ್ ನಲ್ಲಿ ಹಲವಾರು ಕೃಷಿಕರು ವಾಸಿಸುತ್ತಿರುವ ಕುಗ್ರಾಮವಿತ್ತು. ಅದರ ಸುತ್ತಲೂ ಬೇರೆ ಬೇರೆ ಹಲವು ಗ್ರಾಮಗಳಿತ್ತು. ಕೃಷಿ ಉತ್ಪನ್ನಗಳ ಮಾರಾಟ ಖರೀದಿ ನಡೆಯುವ ಒಂದು ಸಂತೆಯೂ ಅಲ್ಲಿತ್ತು. ಸಂತೆಯಲ್ಲಿ ಜನರು ಮಾರಾಟ ಖರೀದಿಸುವಿಕೆಗಾಗಿ ಕಿಕ್ಕಿರಿದು ತುಂಬುತ್ತಿದ್ದರು. ಕೃಷಿಕರೊಬ್ಬರು ತನ್ನ ಗೋದಿಯನ್ನು ಖರ್ಜೂರದ ಮಡಲಿನಿಂದ ನಿರ್ಮಿಸಿದ ಚೀಲಗಳಲ್ಲಿ ತುಂಬಿಸಿ ಆ ಸಂತೆಗೆ ಮಾರಾಟ ಮಾಡಲು ತೆರಳಿದರು. ಅವರಿಗೆ ಹಿಂದಿನಿಂದಲೇ ಪರಿಚಯವಿದ್ದ ವ್ಯಾಪಾರಿಯೊಬ್ಬರು ಆ ಸಂತೆಯಲ್ಲಿದ್ದರು. ಅವರು ನ್ಯಾಯವಾದ ಬೆಲೆ ನೀಡಿ ಖರೀದಿಸುವವರಾಗಿದ್ದರಿಂದ ಆ ವ್ಯಾಪಾರಿಗೆ ಅವರು ಗೋದಿಗಳನ್ನೆಲ್ಲಾ ಮಾರಿದರು. ತುಂಬಾನೆ ಹೊತ್ತು ಸಂತೆಗಳಲ್ಲಿ ಕಳೆದ ಅವರು ಮರಳಿ ಮನೆ ತಲುಪುವಾಗ ಆಣತಿ ದೂರದಲ್ಲಿ ತನ್ನ ಮನೆಯ ಸುತ್ತಲೂ ನೆರೆಹೊರೆಯ ಹೆಂಗಸರೆಲ್ಲಾ ಜಮಾಯಿಸಿದ್ದನ್ನು ಕಂಡು ದಿಗಿಲುಗೊಂಡರು..
ಮನೆಯಲ್ಲಿ ಯಾರಿಗಾದರೂ ಅಪಘಾತವೇನಾದರೂ ಸಂಭವಿಸಿತಾ..? ಅಥವಾ ಮರಣ ಹೊಂದಿದರಾ..? ಅದಕ್ಕಾಗಿ ಈ ಮಹಿಳೆಯರು ಸೇರಿರಬಹುದಾ..?
ಎಂದೆಲ್ಲಾ ಚಿಂತಿಸಿ ಹೆಜ್ಜೆ ಹಾಕಿದರು.. ಮನೆಯಂಗಳಕ್ಕೆ ತಲುಪಿದಾಗ ಅಲ್ಲಿದ್ದವರೊಂದಿಗೆ ಕೇಳಿದರು, “ಇಲ್ಲೇನಾಯಿತು..?"
“ಏನೂ ಆಗಿಲ್ಲ, ನಿಮ್ಮ ಪತ್ನಿ ವಿಲಾಪಿಸುವುದನ್ನು ಕೇಳಿ ನಾವು ಇಲ್ಲಿ ಸೇರಿದ್ದೇವೆ"
“ಆವಳಿಗೇನಾಯಿತು..?"
“ನೀವು ಗೋದಿಯನ್ನು ತುಂಬಿ ಕೊಂಡು ಹೋದ ಚೀಲದಲ್ಲಿ ಆಕೆ ತನ್ನ ಚಿನ್ನಾಭರಣಗಳನ್ನು ಜೋಪಾನವಾಗಿಟ್ಟಿದ್ದಳಂತೆ. ನೀವದನ್ನು ಮಾರಾಟಕ್ಕೆ ಕೊಂಡು ಹೋಗುವಾಗ ನೋಡಿರಲಿಲ್ಲವಂತೆ”
ಇದನ್ನು ಕೇಳಿ ಕೃಷಿಕ ಪತ್ನಿಯ ಸನಿಹಕ್ಕೆ ತೆರಳಿ ಆಕೆಯನ್ನು ಸಮಾಧಾನ ಪಡಿಸತೊಡಗಿದ..
ಆಕೆಯೊಂದಿಗೆ ಹೇಳಿದ
“ನೀನೇನು ಬೇಸರಿಸಬೇಡ. ಅಲ್ಲಾಹನ ಅನುಗ್ರಹವಿದ್ದರೆ ನಿನ್ನ ಚಿನ್ನಾಭರಣಗಳೆಲ್ಲವೂ ಮರಳಿ ಸಿಗಬಹುದು. ನಾಳೆ ಮುಂಜಾನೆ ಸುಬಹ್ ನಮಾಜ್ ನಿರ್ವಹಿಸಿ ನಾನಲ್ಲಿಗೆ ತೆರಳಿ ವ್ಯಾಪಾರಿಯಲ್ಲಿ ವಿಷಯ ಹೇಳುತ್ತೇನೆ. ಅವರು ಪ್ರಾಮಾಣಿಕ..”
ಇದನ್ನು ಕೇಳಿದಾಗ ಪತ್ನಿ ಶಾಂತಳಾದಳು,
ಮರುದಿನ ಸುಬುಹಿ ನಮಾಝ್ ನಿರ್ವಹಿಸಿ ಅವರು ಸಂತೆಗೆ ಹೊರಟರು. ಗೋಧಿಯನ್ನು ಖರೀದಿಸಿದ ವ್ಯಕ್ತಿಯ ಸನಿಹಕ್ಕೆ ತೆರಳಿ ವಿಷಯ ತಿಳಿಸಿದರು. ಆವಾಗ ಆತ
“ನೀವೇನೂ ಹೆದರಬೇಡಿ. ನೀವು ನಿನ್ನೆ ತಂದ ಗೋದಿ ಚೀಲಗಳಲ್ಲಿ ಆಭರಣಗಳೇನಾದರೂ ಇದ್ದರೆ ಅದು ಸುರಕ್ಷಿತವಾಗಿಯೇ ಇದೆ.” ಎನ್ನುತ್ತಾ ಅವರನ್ನು ಸೇರಿಸಿ ತನ್ನ ಸರಕನ್ನು ಭದ್ರವಾಗಿಟ್ಟಿರುವ ಗೋಡೌನಿಗೆ ತೆರಲು ಸಿದ್ಧನಾದ. ಇಬ್ಬರೂ ನಡೆಯುತ್ತಾ ಸಮುದ್ರ ತೀರಕ್ಕೆ ತಲುಪಿದರು. ಅಷ್ಟರಲ್ಲಿ ಕೃಷಿಕನೊಂದಿಗೆ ವ್ಯಾಪಾರಿ ಹೇಳಿದ
“ನಿಮ್ಮ ಎರಡೂ ಕಣ್ಣುಗಳನ್ನು ಮುಚ್ಚಿರಿ. ನಮಗೆ ಸಮುದ್ರದ ಆಚೆಗೆ ದಾಟಬೇಕು”
ಕೃಷಿಕ ಕಣ್ಣು ಮುಚ್ಚಿದ ಕಣ್ಣು ತೆರೆಯುವಾಗ ಅವರಿಬ್ಬರೂ ತುಂಬಾನೆ ಜನರು ಸೇರಿರುವ ಸ್ಥಳವೊಂದರಲ್ಲಿದ್ದರು..!!!ಭೀತಿಗೊಳಿಸುವ ಪ್ರಕೃತಿಯಾಗಿತ್ತು ಅಲ್ಲಿದ್ದವರಿಗಿದ್ದದ್ದು, ಅವರನ್ನು ಕಂಡು ಕೃಷಿಕ ಗಡಗಡ ನಡುಗತೊಡಗಿದ..
ವ್ಯಾಪಾರಿ ಅವರ ಭಯ ತೊಲಗುವ ರೀತಿಯಲ್ಲಿ ಮಾತಿಗಿಳಿದ, ನಂತರವೂ ಅವರಿಬ್ಬರು ನಡೆದು ಬೃಹತ್ತಾದ ಗೋಡೌನಿನ ಸಮೀಪಕ್ಕೆ ತಲುಪಿದರು. ವ್ಯಾಪಾರಿ ಅದರ ಬಾಗಿಲು ತೆರೆದ, ಅದರೊಳಗೆ ಅನೇಕಾರು ಧಾನ್ಯ ಚೀಲಗಳಿದ್ದವು. ವ್ಯಾಪಾರಿಯು ಕೃಷಿಕ ನೀಡಿದ್ದ ಗೋದಿಯ ಚೀಲಗಳನ್ನೆಲ್ಲಾ ತೋರಿಸುತ್ತಾ “ನೀವು ನಿನ್ನೆ ಕೊಟ್ಟ ಚೀಲಗಳಾಗಿವೆ ಇದು. ನಿಮ್ಮದೇ ಹೌದೆಂದು ನಿಮಗೆ ಖಚಿತವಾದ ಬಳಿಕ ಅದರೊಳಗೆ ನಿಮ್ಮ ಆಭರಣಗಳಿವೆಯಾ ಎಂದು ಪರಿಶೋಧಿಸಿ ”
ಎಂದು ಹೇಳಿದ, ಕೃಷಿಕ ಅವನದ್ದೇ ಹೌದೆಂದು ಖಚಿತಪಡಿಸಿದ ಎಂಟು ಚೀಲಗಳನ್ನು ಸೂಕ್ಷ್ಮವಾಗಿ ಪರಿಶೋಧಿಸಿದ, ಆಭರಣವಿಟ್ಟಿದ್ದ ಬಲಕ್ಕೆ ಕೈ ಹಾಕಿದಾಗ ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ. ಪತ್ನಿಯ ಎಲ್ಲಾ ಆಭರಣಗಳು ಅದರೊಳಗಿತ್ತು. ಅದನ್ನು ತೆಗೆದು ಅವರಿಬ್ಬರು ಅಲ್ಲಿಂದ ಮರಳಿದರು. ಸಮುದ್ರ ತೀರಕ್ಕೆ ತಲುಪಿದಾಗ ವ್ಯಾಪಾರಿ ಪುನಃ ಕೃಷಿಕನೊಂದಿಗೆ ಕಣ್ಣು ಮುಚ್ಚಲು ಹೇಳಿದ. ಕಣ್ಣು ಮುಚ್ಚಿ ತೆರೆಯುವಾಗ ಇಬ್ಬರೂ ಈಜಿ ದಡಕ್ಕೆ ತಲುಪಿದ್ದರು. ಕೃಷಿಕ ವ್ಯಾಪಾರಿಗೆ ಕೃತಜ್ಞತೆ ಸಲ್ಲಿಸಿ ಹೊರಡಲನುವಾದಾಗ ಕೇಳಿದ.
“ನೀವು ಯಾರು..?”
“ನಾನು ಜಿನ್ನ್, ಈ ಸಂತೆಯಲ್ಲಿರುವ ಜಿನ್ನ್ ವ್ಯಾಪಾರಿಗಳ ಪೈಕಿಯೊಬ್ಬ, ವ್ಯಾಪಾರಿಗಳಾದ ನಾವು ಕೃಷಿ ಉತ್ಪನ್ನಗಳನ್ನು ಪಡೆದು ಗೋಡೌನಿನಲ್ಲಿ ಜೋಪಾನವಾಗಿಡುವೆವು, ಜನರಿಗೆ ಕ್ಷಾಮ ಬರುವಾಗ ಅದನ್ನು ಹೊರತೆಗೆದು ವಿತರಿಸುವೆವು. ಅದು ಕಾರಣ ಜನರಿಗೆ ಕ್ಷೇಮವುಂಟಾದರೆ ನಾವು ಸಂತೋಷಪಡುವೆವು”
(ಅಲ್ ಜಿನ್ನ್ ವಶ್ಯಯಾತೀನ್)
ಇದು ಜಿನ್ನ್ ಗಳ ಸೆರೆಮನೆ..!!
ಲೋಕವಿಡೀ ಸಂಚರಿಸಿ ಪ್ರಾಪಂಚಿಕ ರಹಸ್ಯಗಳನ್ನು, ಅದ್ಭುತಗಳನ್ನು ದರ್ಶಿಸಿದ ಮಹಾನುಭಾವರಾಗಿದ್ದಾರೆ ಶೈಖ್ ಮುಹಮ್ಮದುಲ್ ಹಾಜ್ (ರ). ಅವರೊಂದಿಗೆ ಸಂಚರಿಸಿದ ಶಿಷ್ಯ ಅಬುಲ್ ಹಸನ್ (ರ) ರವರು ಹೇಳುತ್ತಾರೆ..
“ನಾನು ನನ್ನ ಶೈಖ್‌ರೊಂದಿಗೆ ಯಾತ್ರೆಗೈದು 360 ವಿದ್ವಾಂಸರನ್ನು ಸಂದರ್ಶಿಸಿದ್ದೇನೆ. ಕಾಫ್ ಪರ್ವತವನ್ನು ನನ್ನ ಶೈಖ್ ನನಗೆ ತೋರಿಸಿದ್ದಾರೆ (ರಷ್ಯಾದ ಯುರೋಪ್ ಸರಹದ್ದಿನ ಭಾಗದಲ್ಲಿರುವ, 1208 ಕಿ.ಮೀ ಉದ್ದವಿರುವ ಪರ್ವತವಾಗಿದೆ ಕಾಫ್ ಪರ್ವತ) ನಾವೊಮ್ಮೆ ಡಮಸ್ಕಸ್‌ನಿಂದ ಸಂಚಾರ ಪ್ರಾರಂಭಿಸಿ "ತ್ವಬರಿಯ್ಯ" ಎಂಬಲ್ಲಿಗೆ ತಲುಪಿದಾಗ ಸುಲೈಮಾನ್ ನಬಿ (ಅ) ರವರ ಖಬರ್ ಸಂದರ್ಶಿಸಿದೆವು..
ನಾನು ಶೈಖ್‌ರೊಂದಿಗೆ ಕೇಳಿದೆ; “ಇದು ಸುಲೈಮಾನ್ ನಬಿ (ಅ) ರವರ ಖಬ್ ತಾನೇ..?”
“ಜನರು ಹಾಗೇ ಹೇಳುತ್ತಾರೆ . ವಿಶ್ವಾಸಯೋಗ್ಯವಾದ ರೀತಿಯಲ್ಲಿ ದೃಢಪಟ್ಟಿಲ್ಲ.."
ನಾವಲ್ಲಿಂದ ಸ್ವಲ್ಪ ಮುಂದೆ ಸಾಗಿದಾಗ ಯಾರೋ ನಮ್ಮನ್ನು ಎಳೆದುಕೊಂಡು ಹೋಗುವಂತೆ ಭಾಸವಾಯಿತು. ತದನಂತರ ನಾವು ತಲುಪಿದ್ದು ಒಂದು ಕಟ್ಟಡದ ಮೇಲ್ಬಾಗಕ್ಕೆ..!! ನಾನು ಪರಿಸರವನ್ನು ವೀಕ್ಷಿಸುವಾಗ ನಮ್ಮ ಸಮೀಪದಲ್ಲಿ ಅಪರಿಚಿತವಾದ ಒಂದು ಸಂಘವು ಪ್ರತ್ಯಕ್ಷವಾಯಿತು. ಅವರು ಶೈಖ್‌ರವರಿಗೆ ಸಲಾಮ್ ಹೇಳಿ ಆಶೀರ್ವಾದ ಪಡೆದರು. ತದನಂತರ ಶೈಖ್‌ರವರು ಮುಂಭಾಗದಲ್ಲೂ ನಾವೆಲ್ಲಾ ಶೈಖ್‌ರವರ ಹಿಂಭಾಗದಲ್ಲೂ ನಡೆಯಲು ಪ್ರಾರಂಭಿಸಿದೆವು. ನನ್ನೊಂದಿಗೆ ಹೆಜ್ಜೆ ಹಾಕುವವರ ಅಸಾಮಾನ್ಯ ಆಕೃತಿಯನ್ನು ಕಂಡು ನಾನು ಭಯಭೀತನಾದೆ. ನನ್ನ ಭಯವನ್ನರಿತ ಶೈಖ್‌ರವರು ನನ್ನೊಂದಿಗೆ ಹೇಳಿದರು; “ನೀನು ನನ್ನ ಹೆಜ್ಜೆಯನ್ನು ಅನುಕರಿಸು, ಜೊತೆಯಲ್ಲಿರುವವರನ್ನು ಗಮನಿಸಬೇಡ, ಅವರು ಜಿನ್ಸ್ಗಳು. ನಾವೆಲ್ಲಾ ಈಗ ಸುಲೈಮಾನ್ ನಬಿ (ಅ) ರವರ ಖಬ್ರ್ ಸಂದರ್ಶಿಸಲು ಹೊರಟಿದ್ದೇವೆ..
ಹಾಗೇ ಸಾಗುವಾಗ ಗಾಂಭೀರ್ಯತೆ ತುಂಬಿದ, ಮುಖದಲ್ಲಿ ಈಮಾನಿನ ಪ್ರಭೆ ಸೂಸುವ, ಕೈಯಲ್ಲೊಂದು ಬಡಿಗೆ ಹಿಡಿದ ವ್ಯಕ್ತಿಯೊಬ್ಬರನ್ನು ಕಂಡೆವು. ಶೈಖ್‌ರವರು ಹೇಳಿದರು; “ಇದು ಸುಲೈಮಾನ್ ನಬಿ (ಅ)!!!" ನಾನು ಸುಲೈಮಾನ್ ನಬಿ (ಅ) ರವರ ಕರ ಹಿಡಿದು ಚುಂಬಿಸಿದೆ..
ಸುಲೈಮಾನ್ ನಬಿ (ಅ) ರವರ ಕೈ ಬೆರಳಲ್ಲೊಂದು ಉಂಗುರವಿತ್ತು..
ಜಿನ್ನ್ ಗಳಿಂದ ಒಂದು ವಿಭಾಗ ಸೈನಿಕರು ಅವರ ಜೊತೆಯಲ್ಲಿದ್ದರು.. ನಮಗವರು "ಅತಿಥಿ ಸತ್ಕಾರ" ವನ್ನೇರ್ಪಡಿಸಿದರು.. ನಾವದನ್ನು ಬಹಳ ಸಂತೋಷದಿಂದಲೇ ಸ್ವೀಕರಿಸಿದವು..
ಸೈನಿಕರು ನಮಗೆ ಸುಲೈಮಾನ್ ನಬಿ (ಅ) ರವರ ಅಸಾಮಾನ್ಯ ಅದ್ಭುತಗಳನ್ನು, ಬಲ್ಕೀಸ್ ರಾಣಿಯ ಕೋಟೆಯನ್ನು ತೋರಿಸಿದರು.. ನನಗೆ ಅದರೊಳಗೆ ಗುಹೆಯೊಂದನ್ನು ಕಾಣಲು ಸಾಧ್ಯವಾಯಿತು.. ಗುಹೆಯೊಳಗಿನಿಂದ ದುರ್ಗಂಧದೊಂದಿಗೆ ಭೀಕರ ಶಬ್ದ ಮೊಳಗುವುದನ್ನು ಕೇಳಿ ನಾನು ಹೆದರಿಬಿಟ್ಟೆ.. ಆಗ ಅವರು ಹೇಳಿದರು "ನೀವು ಹೆದರಬೇಡಿ. ಇದು ಪಿಶಾಚಿಗಳನ್ನು ಬಂಧನದಲ್ಲಿರಿಸುವ ಸೆರೆಮನೆಯಾಗಿದೆ. ಸುಲೈಮಾನ್ ನಬಿ (ಅ) ರವರ ಕಾಲದಿಂದ ಅವರು ಇದರೊಳಗೆ ಬಂಧಿತರಾಗಿದ್ದಾರೆ" ತದನಂತರ ನಾವು ಅವರೊಂದಿಗೆ ಊರಿಗೆ ಮರಳಬೇಕೆಂದು ಹೇಳಿದಾಗ ಇಬ್ಬರಿಗೆ ಕುಳಿತುಕೊಳ್ಳಲು ಸಾಧ್ಯವಾಗುವಂತಹಾ ಮಂಚವನ್ನು ತಂದರು.. ನಾವಿಬ್ಬರೂ ಅದರ ಮೇಲೆ ಕುಳಿತೆವು... ನಮ್ಮನ್ನದು ಹೊತ್ತುಕೊಂಡು ಅಂತರೀಕ್ಷದಲ್ಲಿ ಹಾರಲು ಪ್ರಾರಂಭಿಸಿತು..
ಅತಿವೇಗದಲ್ಲಿದ್ದ ಅದರ ಸಂಚಾರವು ಹಲವಾರು ಸಮುದ್ರಗಳನ್ನು ದಾಟಿ ಅಪರಿಚತವಾದ ಯಾವುದೋ ಒಂದು ಸ್ಥಳದಲ್ಲಿ ಇಳಿಯಿತು.. ನಾವು ಅದರಿಂದ ಕೆಳಗಿಳಿದು ಎರಡು ಹೆಜ್ಜೆ ಮುಂದಡಿಯಿಟ್ಟಿದ್ದೇ ತಡ!!! ಅದ್ಭುತ!!! ಅದು ಡಮಸ್ಕಸ್ ಪಟ್ಟಣವಾಗಿತ್ತು !!! (ರವ್ಲುರ್ರಯಾಹೀನ್ 206)
"ಆಸಫ್ (ರ.ಅ) ರವರು ತಂದ ಖುಬ್ಬ!!!"
"ನೀವು ಸಮುದ್ರ ತೀರಕ್ಕೆ ತೆರಳಿರಿ. ಅಲ್ಲಿ ನಿಮಗೊಂದು ಅದ್ಭುತವನ್ನು ನಾನು ತೋರಿಸುತ್ತೇನೆ..” ಎಂದು ಅಲ್ಲಾಹನು ಸುಲೈಮಾನ್ ನಬಿ (ಅ) ರಿಗೆ ಸಂದೇಶ ರವಾನಿಸಿದ.. ಸುಲೈಮಾನ್ ನಬಿ (ಅ) ರವರು ತಕ್ಷಣವೇ ತನ್ನ ಮನುಷ್ಯ ಜಿನ್ನ್ ಪರಿವಾರಗಳೊಂದಿಗೆ ಸಮುದ್ರ ತೀರಕ್ಕೆ ಹೊರಟರು.. ಅಲ್ಲಿಗೆ ತಲುಪಿದ ಸುಲೈಮಾನ್ ನಬಿ (ಅ)ರವರು ಪರಿಸರವನ್ನೆಲ್ಲಾ ಸೂಕ್ಷ್ಮವಾಗಿ ವೀಕ್ಷಿಸಿದರು.. ಆದರೆ ಅವರಿಗೆ ಯಾವುದೇ ಅದ್ಭುತ ಗೋಚರಿಸಲಿಲ್ಲ. ಆವಾಗ ಅವರು ಸೈನಿಕರ ಪೈಕಿ ನೀರಿನಲ್ಲಿ ಮುಳುಗುವುದರಲ್ಲಿ ನಿಪುಣನಾದ ಇಫ್ರೀತ್ ನೊಂದಿಗೆ “ಸಮುದ್ರದ ಪಾತಾಳದವರೆಗೂ ಮುಳುಗಿ ಏನಾದರೂ ಅದ್ಭುತವಿದೆಯಾ ಎಂದು ನೋಡಿ ಬಾ” ಎಂದು ಹೇಳಿದರು...
ಇಫ್ರೀತ್ ಮುಳುಗಿ ಕ್ಷಣಮಾತ್ರದಲ್ಲಿ ಸಮುದ್ರದ ಪಾತಾಳವರೆಗೂ ಹೋಗಿ ಬಂದು ಹೇಳಿದ "ಅಲ್ಲಾಹನ ದೂತರೇ, ನನಗ್ಯಾವ ಅದ್ಭುತವೂ ಕಂಡಿಲ್ಲ.." ತದನಂತರ ಇಫ್ರೀತ್ನೊಂದಿಗೆ ಮೂರು ಸಲ ಮುಳುಗಿ ಸೂಕ್ಷ್ಮವಾಗಿ ಪರಿಶೋಧಿಸುವಂತೆ ಹೇಳಿದರು.. ಆದರೆ ಫಲ ಮಾತ್ರ ಶೂನ್ಯವಾಗಿತ್ತು... ಆನಂತರ ಖುರ್ ಆನ್ ಪರಿಚಯಿಸಿದ ಆಸಫ್ ಬ್ನು ಬರ್ಕಿಯರೊಂದಿಗೆ "ನೀವು ಮುಳುಗಿ ಅದ್ಭುತವನ್ನು ಕಂಡು ಹಿಡಿದು ಬನ್ನಿ..” ಎಂದು ಹೇಳಿದರು.. ಅಸಫ್ ಬ್ನು ಬರ್ಖಿಯಾರವರು ಸಮುದ್ರದಲ್ಲಿ ಮುಳುಗಿ ಕೆಲವೇ ನಿಮಿಷಗಳೊಳಗೆ ಒಂದು ಖುಬ್ಬವನ್ನು ಹೊತ್ತುಕೊಂಡು ಬಂದು ಅದನ್ನು ಸುಲೈಮಾನ್ ನಬಿ (ಅ) ರವರ ಮುಂದಿಟ್ಟರು...
ಬಿಳಿ ಕರ್ಪೂರದಿಂದ ನಿರ್ಮಿಸಲ್ಪಟ್ಟ ಆ ಖುಬ್ಬಕ್ಕೆ ಮುತ್ತು, ರತ್ನ, ಗೋಮೇದ, ಮಾಣಿಕ್ಯದಿಂದ ನಿರ್ಮಿಸಲ್ಪಟ್ಟ ನಾಲ್ಕು ಬಾಗಿಲುಗಳಿತ್ತು.. ನಾಲ್ಕು ಬಾಗಿಲುಗಳು ತನ್ನಿಂತಾನೇ ತೆರೆಯಿತು.. ಆಶ್ಚರ್ಯವೇನೆಂದರೆ ಸಮುದ್ರದ ಪಾತಾಳದಲ್ಲಿದ್ದ ಖುಬ್ಬದೊಳಕ್ಕೆ ಒಂದೇ ಒಂದು ನೀರಿನ ಹನಿ ಪ್ರವೇಶಿಸಿರಲಿಲ್ಲ!!! ಸುಲೈಮಾನ್ ನಬಿ (ಅ) ರವರು ಅದರೊಳಗೆ ಇಣುಕಿ ನೋಡಿದಾಗ ಚಂದದ ವಸ್ತ್ರ ಧರಿಸಿದ ಸುಂದರಾಂಗ ಯುವಕನೊಬ್ಬ ನಮಾಝ್ ನಿರ್ವಹಿಸುತ್ತಿದ್ದ...!!! ಯುವಕ ನಮಾಝ್ನಿಂದ ವಿರಮಿಸಿದಾಗ ಸುಲೈಮಾನ್ ನಬಿ (ಅ) ರವರು ಅದರೊಳಗೆ ಪ್ರವೇಶಿಸಿ ಯುವಕನಿಗೆ ಸಲಾಮ್ ಹೇಳಿದರು... ಅದಕ್ಕವರು ಉತ್ತರಿಸಿದರು.. ಸುಲೈಮಾನ್ ನಬಿ (ಅ) “ನೀನು ಈ ಸಮುದ್ರದ ಪಾತಾಳಕ್ಕೆ ತಲುಪಿದ್ದು ಹೇಗೆ..?"
ಯುವಕ
“ನನಗೆ ರೋಗಿಯಾದ ತಂದೆ, ಕುರುಡಿಯಾದ ತಾಯಿಯಿದ್ದರು, ಅವರಿಗೆ ನಾನು ಮಾತ್ರವೇ ಏಕೈಕ ಮಗ.. ಎಪ್ಪತ್ತು ವರ್ಷಗಳ ಕಾಲ ನಾನವರ ಸೇವೆಗೈದೆ.. ತಾಯಿಗೆ ಮರಣಾಸನ್ನವಾದಾಗ ತಾಯಿ ಈ ರೀತಿ ಪ್ರಾರ್ಥಿಸಿದರು"
ಅಲ್ಲಾಹನೇ ನಿನ್ನ ಆರಾಧನೆಯಲ್ಲೇ ನನ್ನ ಮಗನ ಆಯುಷ್ಯವನ್ನು ದೀರ್ಘಿಸು"
ತಂದೆ ಮರಣ ಹೊಂದುವಾಗ ಈ ರೀತಿ ಪ್ರಾರ್ಥಿಸಿದರು..
"ಅಲ್ಲಾಹನೇ ಪಿಶಾಚಿಗೆ ಪ್ರವೇಶವಿಲ್ಲದ ಒಂದು ಸ್ಥಳವನ್ನು ನೀಡಿ ನನ್ನ ಮಗನನ್ನು ನೀನು ಅನುಗ್ರಹಿಸು..”
ಅವರಿಬ್ಬರು ಮರಣ ಹೊಂದಿದ ಕೆಲವು ದಿನಗಳ ಬಳಿಕ ನಾನು ಈ ತೀರದಲ್ಲಿ ನಡೆಯುತ್ತಾ ಸಾಗುತ್ತಿದ್ದೆ.. ಆವಾಗ ನೀರಿನ ಮೇಲೆ ಈ ಖಬ್ಬವನ್ನು ಕಂಡೆ. ಕುತೂಹಲಭರಿತನಾಗಿ ತುಂಬಾನೆ ಹೊತ್ತು ನೋಡುತ್ತಾ ನಿಂತೆ.. ಇದರೊಳಗೆ ಏನಿರಬಹುದೆಂಬ ಜಿಜ್ಞಾಸೆಯೊಂದಿಗೆ ಪ್ರವೇಶಿಸಿದೆ.. ಆ ಸಂದರ್ಭದಲ್ಲಿ ಖುಬ್ಬದ ಬಾಗಿಲುಗಳು ಮುಚ್ಚಿದವು.. ಖುಬ್ಬವು ಮೆಲ್ಲನೆ ಚಲಿಸತೊಡಗಿತು.. ಚಲಿಸುತ್ತಾ ಕಡಲಿನ ಪಾತಾಳಕ್ಕೆ ತಲುಪಿತು.. ಯಾರೋ ಒಬ್ಬರು ಖುಬ್ಬವನ್ನು ಎಳೆಯುವುದಾಗಿ ನನಗೆ ಗೋಚರಿಸಿತು ”
ಸುಲೈಮಾನ್ ನಬಿ (ಅ) "ನೀನು ಯಾರ ಕಾಲದಲ್ಲಿ ಈ ತೀರದಲ್ಲಿ ನಡೆಯುತ್ತಾ ಹೋಗುತ್ತಿದ್ದದ್ದೆಂದು ನೆನಪಿದೆಯಾ..? ನೆನಪಿದ್ದರೆ ಹೇಳು "
ಯುವಕ:
ಇಬ್ರಾಹಿಮ್ ನಬಿ (ಅ) ರವರ ಕಾಲದಲ್ಲಿ..
ಸುಲೈಮಾನ್ ನಬಿ (ಅ) ರವರು ಇಬ್ರಾಹೀಂ ನಬಿ (ಅ) ರವರು ಕಾಲದಿಂದ ಅಂದಿನವರೆಗೆ ಎಷ್ಟು ವರ್ಷವಾಯಿತೆಂದು ಲೆಕ್ಕ ಹಾಕಲು ಪ್ರಾರಂಭಿಸಿದರು.. ಅದ್ಭುತ!!! ಸಾವಿರ ವರ್ಷ!!! 1000 ವರ್ಷಗಳ ಕಾಲ ಸಮುದ್ರದಾಳದಲ್ಲಿ ಜೀವಿಸಿದ್ದರೂ ಯುವಕನ ತಲೆಗೂದಲು ಬೆಳ್ಳಗಾಗಿರಲಿಲ್ಲ!!! ಚರ್ಮ ಸುಕ್ಕುಗಟ್ಟಿರಲಿಲ್ಲ !!! ಸುಲೈಮಾನ್ ನಬಿ (ಅ) ರವರು ಆಶ್ಚರ್ಯಚಕಿತರಾಗಿ ಯುವಕನ ಆಹಾರದ ಬಗ್ಗೆ ಕೇಳಿದರು.. ಯುವಕ
"ಪ್ರತೀ ದಿನ ನನ್ನ ಸನಿಹಕ್ಕೆ ಒಂದು ಪಕ್ಷಿ ಬರುತ್ತದೆ.. ಅದರ ಕೊಕ್ಕಿನ ತುದಿಯಲ್ಲಿ ಮನುಷ್ಯನ ತಲೆಯಷ್ಟು ದೊಡ್ಡ ಗಾತ್ರದ ಹಳದಿ ಬಣ್ಣದ ಒಂದು ಹಣ್ಣಿರುತ್ತದೆ.. ನಾನದನ್ನು ತೆಗೆದು ತಿನ್ನುತ್ತೇನೆ.
ಲೇಖಕರು:
ಮೂ.ಲೇ: ಐ.ಕೆ ಇಕ್ಬಾಲ್ ಮದನಿ
ಸಂಗ್ರಹ:
ಕೆಎಂ ಜಲೀಲ್ ಕುಂದಾಪುರ
NOOR-UL-FALAH ISLAMIC STORE

Comments
Post a Comment