ಚಿಗುರಿದ ಕನಸು
ತವರು ಮನೆ ಉಡುಗೊರೆ ಭಾಗ.
ಚಿಗುರಿದ ಕನಸು
ಬರೆಯಲು ಶಕ್ತಿ ಕೊಟ್ಟ ಅಲ್ಲಾಹನಿಗಷ್ಟೇ ಸರ್ವ ಸ್ತುತಿ ಅರ್ಪಿಸುತ್ತಾ ಅವನ ನಾಮದೊಂದಿಗೆ ಈ ಬರಹವನ್ನು ಬರೆಯುತ್ತಾ ಇದ್ದೇನೆ
ಮದುವೆಯೆಂಬ ಪದವು ತಾಹಿರಾಳ ಜೀವನದಲ್ಲಿ ಕಮರಿಹೋದಾಗ ತಾನು ಕುರೂಪಿ ಎಂದು ಕಡೆಗನಿಸಿ ಇವಳನ್ನು ವರನ ಕಡೆಯವರು ನೋಡಿ ಬಿಟ್ಟು ಹೋದಾಗ ಕೊನೆಯಲ್ಲಿ ದೂರದ ಅರಸಿಕೆರೆಯೆಂಬ ಊರಿನಿಂದ ಬಂದ ಒಂದು ಹುಡುಗನಿಗೆ ತಾಹಿರಾಳ ತಂದೆ ಮತ್ತು ಚಿಕ್ಕಮ್ಮ ಮದುವೆ ಮಾಡಲು ಮುಂದೆ ಬರುತ್ತಾರೆ.
ಆದರೆ ತಾಹಿರಾ ಇವರ ಹಿನ್ನಲೆ ಏನು ಎಂದು ತಿಳಿಯದೆ ತನ್ನ ತಂದೆಯ ಮಾತಿಗೆ ಒಲ್ಲದ ಮನಸ್ಸಿನಿಂದ ಒಪ್ಪಿಗೆ ಕೊಡುತ್ತಾಳೆ.
ತಾಹಿರಾ ಹಾಗೂ ಶಬೀರ್ ಖಾನ್ ಮದುವೆಯು ಯಾವುದೇ ಅಡಂಬರವಿಲ್ಲದೆ ಕರೀಮಾಕ ಅಲ್ಪವೆಚ್ಚದಲ್ಲಿ ಮದುವೆ ಕಾರ್ಯ ಮಾಡಿ ಮುಗಿಸುತ್ತಾರೆ. ಕೊನೆಯಲ್ಲಿ ತಾಹಿರಾ ಗಂಡನ ಮನೆಗೆ ಹೋಗುವಾಗ ತನ್ನ ಪ್ರೀತಿಯ ತಮ್ಮನಾದ ಅಶಿಕ್'ನನ್ನು ತನ್ನ ಜೊತೆಯಲ್ಲಿ ತವರುಮನೆ ಉಡುಗೊರೆಯಾಗಿ ತಾಹಿರಾಳ ತಂದೆ ಕರಿಮಾಕ ಜೊತೆಯಲ್ಲಿ ಕಳಿಸಿಕೊಡುತ್ತಾರೆ....
ತಾಹಿರಾ ತನ್ನ ಇನಿಯನ ಜೊತೆಯಲ್ಲಿ ಹೊರಟು ನಿಂತಾಗ ಬ್ರೋಕರ್ ಮತ್ತು ಕರೀಮಾಕ ಒಬ್ಬರನೊಬ್ಬರು ಅತಂಕದಿಂದ ಮುಖ ಮುಖ ನೋಡುತ್ತಾ ಇದ್ದರು. ಅಂತು ನಮ್ಮ ಕಥಾ ನಾಯಕಿ ತಾಹಿರಾ ತನ್ನ ತಮ್ಮ ಅಶಿಕ್' ನೊಂದಿಗೆ ಮನೆಮಂದಿಗೆಲ್ಲಾ ಸಲಾಮ್ ಹೇಳಿ ಗಂಡನ ಮನೆಗೆ ಹೊರಟೇ ಬಿಟ್ಟಳು...
ಮುಂದೆ ಓದಿ.......
ತಾಹಿರಾಳ ಗಂಡನ ಮನೆಯ ಯಾತ್ರೆಯೂ ಮುಂದುವರೆಯಿತು ಕಾರಿನ ಒಂದು ಕಡೆ ತನ್ನ ಕೈ ಹಿಡಿದ ಗಂಡ ಮತ್ತೊಂದು ಕಡೆ ತಾನು ತವರು ಮನೆ ಉಡುಗೊರೆಯಾಗಿ ಕರೆ ತಂದ ತನ್ನ ಒಡಹುಟ್ಟಿದ ತಮ್ಮ ಆಶಿಕ್.
ಕಾರು ಅದೆಷ್ಟೋ ದೂರ ಚಲಿಸುತ್ತಾ ಇದ್ದ ಹಾಗೇ ಹೊರಗಡೆಯಿಂದ ತಂಪಗಿನ ಗಾಳಿ ಬೀಸುತ್ತಾ ಇತ್ತು.
ತಾಹಿರಾಳ ಕಣ್ಣು ಹೊರಗಡೆ ಕಾಣುತ್ತಿದ್ದ ಗಿಡ ಮರಗಳ ನೋಡುತ್ತಾ ಇತ್ತು.
ಅಲ್ಲಿ ಅವಳಿಗೆ ಕಂಡ ಹೊಸತೊಂದು ಕೃಷಿ ಜೋಳದ ಗಿಡಗಳು.
ರಸ್ತೆಯ ಬದಿಗೆ ಕಾಣುತ್ತಾ ಇದ್ದ ಜೋಳದ ಗಿಡವನ್ನು ನೋಡುತ್ತಾ ಇದ್ದಳು.
ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ತಾಹಿರಾಳ ಅತ್ತೆ ಮತ್ತು ನಾದಿನಿ (ಫಾತಿಮಾ ಬೇಗಮ್) ಒಬ್ಬರಿಗೊಬ್ಬರು ಅಶಿಕ್'ನ ಬಗ್ಗೆ ಗುಣು ಗುಣು ಮಾತಾನಾಡುತ್ತಿದ್ದರು.
ಅಷ್ಪೋತ್ತಿಗಾಗಲೇ ಯಾರೋ ಹೇಳಿದರು "ಹೋ ಆಯಿತು ಆಯಿತು ಇನ್ನು ಸ್ವಲ್ಪ ಇರೂದು ಮನೆಗೆ."
ಆ ಮಾತಿಗೆ ತಾಹಿರ ಸ್ವಲ್ಪ ನಿಟ್ಟುಸಿರು ಬಿಟ್ಟಳು.
ಅಲ್ ಹಂದುಲಿಲ್ಲಾಹ್ ತಾಹಿರಾಳ ಗಂಡನ ಮನೆಯ ಅಂಗಳದ ಎದುರು ಕಾರು ಬಂದು ತಲುಪಿತು.
ಶಬೀರ್ ಖಾನ್ ಕಾರಿನಿಂದ ಇಳಿದ ಆಶಿಕ್ ಕೂಡ ಇಳಿದನು.
ಇನ್ನೇನು ತಾಹಿರ ಇಳಿಯಬೇಕು ಎನ್ನುವಾಗ ಶಬೀರ್ ಖಾನ್ ನ ತಾಯಿ ಹೇಳಿದರು "ಹೇಯ್ ಬೈಟೋ ಬೈಟೋ"
ಅತ್ತೆಯ ಮಾತು ಏನೆಂದು ಅರ್ಥವಾಗದ ತಾಹಿರ ಹಿಂದೆ ಮುಂದೆ ನೋಡಿದಳು.
ಆಗಲೇ ಶಬೀರ್ ಖಾನ್ ತಾಹಿರಾಳ ಹತ್ತಿರ ಬಂದು ಅವಳ ಕಿವಿಯ ಹತ್ತಿರ ಪಿಸುಮಾತಿನಿಂದ ಹೇಳಿದ "ಹೇಯ್ ಅಮ್ಮ ಏನು ಹೇಳಿದರೆಂದು ಅಲೋಚಿಸುತ್ತಾ ಇದ್ದೀಯಾ ಅವರು ಹೇಳಿದ್ದು ನೀನು ಕಾರಿಂದ ಇಳಿಯಬೇಡ ಇಲ್ಲಿ ಒಂದು ಸಂಪ್ರದಾಯ ಇದೆ ಗಂಡನಾದ ನಾನು ನಿನ್ನನ್ನು ನಿನ್ನ ಮುಖ ಯಾರಿಗೂ ಕಾಣದಂತೆ ಎತ್ತಿಕೊಂಡು ಮನೆಯ ಒಳಗಡೆ ಹೋಗಬೇಕು ಅದಕ್ಕೆ ತಾಯಿ ಕುಳಿತು ಕೋ ಕುಳಿತುಕೋ ಎಂದರು ಎಂದ.
ಈ ಮಾತು ಕೇಳಿದ ತಾಹಿರಾಳಿಗೆ ಸಂಕೋಚವೂ ಆಯಿತು ಹಾಗೇ ಹೆದರಿಕೆಯೂ ಆಯಿತು.
ಆಗಲೇ ಮನೆಯಿಂದ ಯಾರೋ ಹೇಳಿದರು "ಓಯ್ ಶಬೀರ್ ಆವೋ ಆವೋ" (ಓಯ್ ಶಬೀರ್ ಬಾ ಬಾ)
ಒಳಗಡೆಯಿಂದ ಕರೆಯುತ್ತಿದ್ದಂತೆ ಶಬೀರ್ ಖಾನ್ ತಾಹಿರಾಳನ್ನು ಎತ್ತಿಕೊಂಡು ಮನೆಯ ಒಳಗಡೆ ಹೊರಟ.
ಇದನ್ನು ನೋಡುತ್ತಾ ಇದ್ದ ಆಶಿಕ್ ನಿಗೆ ತುಂಬಾ ಹೆದರಿಕೆ ಆಯಿತು.
ತಾಹಿರಾಳನ್ನು ಕೋಣೆಯ ಒಳಗಡೆ ಕರೆದುಕೊಂಡು ಹೋದ ಶಬೀರ್.
ಅದು ಯಾರೋ ಆಶಿಕ್ ನ ಕೈ ಹಿಡಿದು ಒಳಗಡೆ ಕರೆ ತಂದು ಒಂದು ಕುರ್ಚಿಯಲ್ಲಿ ಕುಳ್ಳಿರಿಸಿದರು.
ತುಂಬಾ ಹೊತ್ತು ಕಳೆಯಿತು ತಾಹಿರ ಕೋಣೆಯ ಒಳಗಡೆಯೇ ಇದ್ದಳು.
ಅಷ್ಟೊತ್ತಿಗಾಗಳೇ ಒಬ್ಬನೇ ಕುಳಿತ ಆಶಿಕ್ ಒಂದೇ ಸಮನೆ ಅಳಲು ಸುರು ಮಾಡಿದ.
ಆಶಿಕ್ ನ ಅಳು ಕೇಳಿ ಎಲ್ಲರೂ ಸುತ್ತಲೂ ಬಂದು ನಿಂತರು ಒಬ್ಬೊಬ್ಬರೇ ಕೇಳಿದರೆ "ಕ್ಯಾ ಬೇಟ ಕ್ಯಾ ಬೇಟ"
ಇವರ ಮಾತು ಅರ್ಥವಾಗದ ಆಶಿಕ್ ಇನ್ನಷ್ಟು ಜೋರಾಗಿ ಅಳತೊಡಗಿದೆ.
ಆಗಲೇ ಶಬೀರ್ ಖಾನ್ ಬಂದು ಆಶಿಕ್ ನ ಕೈ ಹಿಡಿದು ತಾಹಿರ ಇರುವ ಕೋಣೆಗೆ ಕರೆದುಕೊಂಡು ಹೋದ.
ಆಶಿಕ್ ಆಳುತ್ತಿರುದನ್ನು ಕಂಡು ತಾಹಿರ ಮಂಚದಿಂದ ಎದ್ದು ಆಶಿಕ್ ನ ಹತ್ತಿರ ಓಡಿ ಬಂದಳು.
"ಆಶಿಕ್ ಏನಾಯಿತು ಆಶಿಕ್ ಏನಾಯಿತು ಹೇಳು ಯಾಕೆ ಅಳುತ್ತಾ ಇದ್ದೀಯಾ.? ಹೇಳು."
ಆಶಿಕ್ ಅಳುತ್ತಾ ಹೇಳಿದ "ಅಕ್ಕಾ ಅಕ್ಕಾ ನನಗೆ ಇಲ್ಲಿ ಹೆದರಿಕೆಯಾಗುತ್ತಾ ಇದೆ ನಾವು ನಮ್ಮ ಮನೆಗೆ ಹೋಗೋಣ."
ಆಶಿಕ್ ನ ಮಾತು ಕೇಳಿ ತಾಹಿರಾಳಿಗೆ ತುಂಬಾ ಬೇಸರ ಆಯಿತು ತಾಹಿರಾ ಆಶಿಕ್ ನ ಕೈ ಹಿಡಿಯುತ್ತಾ ಹೇಳಿದಳು "ಆಚೀ.. ಯಾಕೆ ಹೆದರುತ್ತಾ ಇದ್ದೀಯಾ ಏನಾಯಿತು.?
ನಾನು ಇಲ್ವಾ. ನಿನ್ನ ಜೊತೆ.
ಅಕ್ಕ ತಮ್ಮನ ಮಾತು ಕೇಳುತ್ತಾ ಇದ್ದ ಶಬೀರ್ ಖಾನ್ ನಗುತ್ತಾ ಹೇಳಿದ "ತಾಹಿರಾ ನೀವು ಏನು ಮಾತಾಡುತ್ತಾ ಇದ್ದೀರಾ ಒಂದೂ ಅರ್ಥ ಆಗುತ್ತಾ ಇಲ್ಲ (ತಾಹಿರ ಮತ್ತು ಆಶಿಕ್ ನ ಮಾತು ಮಲಾಮೆ ಭಾಷೆ ಆಗಿದ್ದರಿಂದ ಶಬೀರಿಗೆ ಅವರ ಮಾತು ಅರ್ಥ ಆಗುತ್ತಾ ಇರಲಿಲ್ಲ)
ತಾಹಿರ ಮುಗುಳ್ನಗೆ ಬೀರುತ್ತಾ ಆಶಿಕ್ ನ ಕೈ ಹಿಡಿದು ಮಂಚದ ಹತ್ತಿರ ಹೊರಟಳು.
ಹಾಗೇ ರಾತ್ರಿಯಾಗುತ್ತಾ ಬಂತು ತಾಹಿರಾಳಿಗೆ ಹೊಸ ರಾತ್ರಿ ಮನೆ ಮಂದಿಯೆಲ್ಲಾ ಮಲಗಳು ಸಜ್ಜಾದರು. ಅದೇನೋ ಗೊತ್ತಿಲ್ಲ ಯಾತ್ರೆಯ ಕ್ಷೀನದಿಂದ ಸುಸ್ತಾಗಿದ್ದ ಅಶಿಕ್ ತಾಹಿರಾಳ ಕೊಠಡಿಯಲ್ಲಿ ನಿದ್ರೆಗೆ ಜಾರಿದನು.
ಯಾರೋ ಆಶಿಕ್ ನ ಎತ್ತಿ ಹೊರಗಡೆ ಮಲಗಿಸಿದರು.
ಹನಫಿ ಮಝ್ ಹಬೀಬ್ ರೂಪದಂತೆ ತಾಹಿರಾಳ ಮೊದಲ ರಾತ್ರಿಯೂ ಕಳೆಯಿತು.
ಅಸ್ವಲಾತು ಕೈರುಮ್ ಮಿನನ್ನವೂಮ್....
ಎಂಬ ಬಾಂಗಿನ ಮಧುರ ಧ್ವನಿ ಕೇಳಿದಾಗ ತಾಹಿರಾಳು ನಿದ್ರೆಗೆ ವಿರಾಮ ಹಾಕಿ ಎಲ್ಲಾ ಕಾರ್ಯ ಮುಗಿಸಿ ನಿತ್ಯ ಕರ್ಮವೂ ಮುಗಿಸಿ.
ಅಲ್ಲಾಹನ ಮುಂದೆ ತನ್ನ ಹಸ್ತವನ್ನು ಮುಂದಿಟ್ಟು ಪ್ರಾರ್ಥನೆಯ ಮಾಡಿದಳು.
ಕಣ್ಣೀರ ಹನಿಗಳಿಂದ ಕೂಡಿದ ಪ್ರಾರ್ಥನೆಯ ನಂತರ ಹೊರಗಡೆ ಮಲಗಿದ್ದ ತಮ್ಮನನ್ನು ಎಬ್ಬಿಸಿದಳು.
ಸೂರ್ಯನೂ ಅಲ್ಲಾಹನ ಅಜ್ಙೆಯಂತೆ ಏಳು ಕಡಲುಗಳನ್ನು ದಾಟಿ ತನ್ನ ನಿತ್ಯ ಕೆಲಸವ ಪ್ರಾರಂಭ ಮಾಡಿದನು.
ಬಂದ ಜನರೆಲ್ಲರೂ ತಾಹಿರಾಳ ಮುಖ ನೋಡುತ್ತಾ (ಆರಸ್, ನಯಾ ಲಡ್ಕಿ,ನಯಾ ಚೊಕ್ರಿ) (ಮದುಮಗಳು)
ಹೀಗೆಲ್ಲಾ ಹೇಳುತ್ತಾ ಇದ್ದರು.
ಅವರ ಒಂದೊಂದು ಮಾತು ಕೇಳುವಾಗ ತಾಹಿರಾಳಿಗೆ ತನ್ನ ತಮಾಷೆ ಮಾಡುತ್ತಾ ಇದ್ದಾರೆ ಎಂದೆನಿಸುತ್ತಾ ಇತ್ತು.
ಅಂತೂ (ಶಾದಿ ಖತಮ್ ಓಗಯಾ)
ಅಂತೂ ಮದುವೆ ಎಂಬ ಮಹಾ ಕಾರ್ಯವೂ ಮುಗಿಯಿತು.
ಒಂದೆರಡು ದಿನ ಕಳೆಯಿತು ತಾಹಿರ ಮನೆಯ ಸುತ್ತಲೂ ನೋಡಳು ಪ್ರಾರಂಭ ಮಾಡಿದಳು.
ಎರಡು ಅಂತಸ್ತಿನ ಮನೆಯಾಗಿತ್ತು.
ಮನೆಯಲ್ಲಿ ತಾಹಿರಾಳ ಅತ್ತೆ ಮಾವ ನಾದಿನಿ ಮತ್ತು ಅವಳಿಗೆ ಎರಡು ಮಕ್ಕಳು.
ತಾಹಿರ ಅತ್ತೆಯ ಜೊತೆಯಲ್ಲಿ ಚಿಕ್ಕ ಚಿಕ್ಕ ಮನೆಯ ಕೆಲಸ ಮಾಡತ್ತಾ ಮನೆಯರೊಡನೆ ಬೆರೆತು ಹೋದಳು.
ಆಶಿಕ್ ಕೂಡ ಮನೆ ಮಂದಿಯೊಂದಿಗೆ ಅವನಿಗರಿತ ಭಾಷೆಯಲ್ಲಿ ಮಾತನಾಡತೊಡಗಿದ.
ಎರಡು ಮಾಲಿಗೆ ಇರುವ ಆ ಮನೆಯ ಮೇಲಿನ ಮಾಲಿಗೆಯಲ್ಲಿ ಒಟ್ಟು ನಾಲ್ಕು ಕೋಣೆ ಇದ್ದವು ಎಲ್ಲಾ ಕೋಣೆಯಿಂದ ಸರಿಯಾಗಿತ್ತು.
ಆದರೆ ಒಂದು ಕೋಣೆ ಮಾತ್ರ ಯಾವಾಗ ನೋಡದರು ಬಾಗಿಲು ಹಾಕಿಯೇ ಇತ್ತು.
ಆ ಕೋಣೆಗೆ ಯಾರೂ ಹೋಗುತ್ತಲೇ ಇರಲಿಲ್ಲ.
ಯಾರಾದರೊಬ್ಬರು ಮಾತ್ರ ಊಟದ ಸಮಯದಲ್ಲಿ ಹೀಗೇ ಒಂದೊಂದು ಸಲ ಹೋಗುತ್ತಾ ಇದ್ದರು.
ತಾಹಿರಾಳು ಆ ಕೋಣೆಯ ಅಲೋಚನೆಯಲ್ಲಿಯೇ ಇದ್ದಳು ಅವತ್ತು ರಾತ್ರಿ ಎಲ್ಲರೂ ಮಲಗಿದರು.
ತಾಹಿರ ಕೂಡ ತನ್ನ ಕೋಣೆಗೆ ಮಲಗಲು ಬಂದಳು.
ಶಬೀರ್ ಖಾನ್ ಕೂಡ ಮಲಗಲು ಬಂದ.
ತಾಹಿರ ಅಲೋಚನೆ ಮಾಡುತ್ತಲೇ ಇದ್ದಳು.
ಶಬೀರ್ ಖಾನ್ ಮಂಚದಲ್ಲಿ ಕುಳಿತು ತಾಹಿರಾಳ ಮುಖ ನೋಡುತ್ತಾ ಕೇಳಿದ ತಾಹಿರಾ ಏನಾಯಿತು.? ಯಾಕೆ ಒಂಥರಾ ಇದ್ದೀಯಾ.?
ತಾಹಿರ ಅಲೋಚನೆ ಮಾಡುತ್ತಾ ಇದ್ದ ಆ ವಿಷಯವನ್ನು ಶಬೀರ್ ಖಾನ್ ಮುಂದೆ ಹೇಳಲು ಮುಂದಾದಳು.
"ರೀ ನಾನು ಈ ಮನೆಗೆ ಬಂದು ಎರಡು ದಿನ ಆಯಿತು ನನಗೆ ಈ ಮನೆ ತುಂಬಾ ಹಿಡಿಸಿದೆ ಆದರೆ ಒಂದೇ ಒಂದು ವಿಷಯ ಈ ಮನೆಯ ಮೇಲೆ ನಾಲ್ಕು ಕೋಣೆಗಳು ಇದೆ ಆದರೆ ಓಂದು ಕೋಣೆ ಮಾತ್ರ ಯಾಕೆ ಯಾವಾಗಳೂ ಬಾಗಿಲು ಹಾಕಿಯೇ ಇರುತ್ತೆ ಹೇಳಿ ಆ ಕೋಣೆಯಲ್ಲಿ ಏನಿದೆ.?
ಅಷ್ಟೇ ಅಲ್ಲ ಆ ಕೋಣೆಗೆ ಯಾರು ಕೂಡ ಹೋಗಲ್ಲ ಯಾಕೆ? ಆ ಕೋಣೆಯ ಒಳಗಡೆ ಏನಿದೆ.
ತಾಹಿರಾಳ ಮಾತು ಕೇಳಿದ ಶಬೀರ್ ಖಾನ್ ಮುಖ ಕೆಂಪಡರಿತು ಅದೇಕೋ ಮುಖ ಹೆದರಿದಂತೆ ಭಾಸವಾಯಿತು.
ಶಬೀರ್ ಹೆದರುತ್ತಲೇ ಹೇಳಿದ "ತಾಹಿರ ಅದೂ ಅದೂ
ಅತೀ ಶೀಘ್ರದಲ್ಲಿ ಈ ಕಾದಂಬರಿಯನ್ನು ಪೂರ್ತಿಗೊಳಿಸಲಿದ್ದೇವೆ
ಲೇಖಕರು:
ಶಮ್ಮಿ ಪಾನೇಲ
NOOR-UL-FALAH ISLAMIC STORE

Comments
Post a Comment