ಪ್ರೇಮಾನುಭವ
ಪ್ರೇಮಾನುಭವ
ಕೆಲವು ಪ್ರೇಮ ಸತ್ಯಗಳ ಅನಾವರಣ
ಅಬೂಸುಫ್ಯಾನರ ಮಗನಾದ ಮುಆವಿಯಾ ರಳಿಯಲ್ಲಾಹು ಅನ್ ಹು ರವರ ಆಡಳಿತ ಕಾಲವಾಗಿತ್ತದು. ಬಿಡುವಿಲ್ಲದ ತನ್ನ ದೈನಂದಿನ ಬದುಕಿನಲ್ಲಿ ವಿಶ್ರಾಂತಿಗಾಗಿ ಅವರು ಸಮಯವನ್ನು ಕಾಣುತ್ತಿದ್ದರು. ಹೀಗಿರಲು ಒಂದು ದಿನ ಆಡಳಿತ ಸಂಬಂಧವಾದ ಕಾರ್ಯಗಳಿಂದ ಹೊರಬಂದು ಡಮಸ್ಕಸ್ ನ ವೇದಿಕೆಯೊಂದರಲ್ಲಿ ಕುಳಿತಿದ್ದ ವೇಳೆ ತನ್ನ ಮುಂದೆ ಒಬ್ಬ ಅರಬಿ (ಗ್ರಾಮೀಣ)ಯಾದ ವ್ಯಕ್ತಿಯು ಚಪ್ಪಲು ಧರಿಸದೆ ಬಹಳ ದುಃಖ ದಿಂದ ಹೆಜ್ಜೆಯಿಡುತ್ತಿರುವುದನ್ನು ಕಂಡರು. ಇದರಿಂದ ಸಂಶಯಗೊಂಡ ಮುಆವಿಯಾ ರಳಿಯಲ್ಲಾಹು ಅನ್ ಹು ಆ ವ್ಯಕ್ತಿಯನ್ನು ತನ್ನ ಸನ್ನಿಧಿಗೆ ಹಾಜರುಪಡಿಸುವಂತೆ ಹತ್ತಿರವಿದ್ದ ವ್ಯಕ್ತಿಯೊಬ್ಬರಲ್ಲಿ ಆಜ್ಞಾಪಿಸಿದರು. ಅವರು ಕೂಡಲೇ ಆ ವ್ಯಕ್ತಿಯನ್ನು ಮುಆವಿಯಾರ ಸಮೀಪ ಹಾಜರುಪಡಿಸಿದರು.
'ಈ ಒಣ ಬಿಸಿಲಿನಲ್ಲಿ ಬೇಸರಯುಕ್ತ ಮುಖದೊಂದಿಗೆ ನೀನು ಎತ್ತ ಸಾಗುತ್ತಿರುವಿ?' ಮುಆವಿಯಾ ರಳಿಯಲ್ಲಾಹು ಅನ್ ಹು ಆ ವ್ಯಕ್ತಿಯಲ್ಲಿ ಪ್ರಶ್ನಿಸಿದರು. "ಓ ಅಮೀರುಲ್ ಮುಮಿನೀನ್ .... ನಾನು ನಿಮ್ಮ ಬಳಿ ನನಗುಂಟಾದ ಅನ್ಯಾಯದ ಕುರಿತು ಹೇಳಲು ಬಂದಿರುವೆನು. ನಿಮ್ಮ ಒಬ್ಬ ಗವರ್ನರ್ ರಿಂದಲೇ ನನಗೆ ಅನ್ಯಾಯವಾಗಿದೆ. ನಿಮ್ಮ ಚಿಕ್ಕಪ್ಪನ ಮಗನಾದ ಮರ್ ವಾನುಬ್ ನುಲ್ ಹಕಂ ಎಂಬವರಿಂದ ನಾನು ಅನ್ಯಾಯಕ್ಕೊಳಗಾಗಿದ್ದೇನೆ" ಎಂದು ಆ ವ್ಯಕ್ತಿ ಉತ್ತರಿಸಿದರು. ಇದನ್ನು ಕೇಳಿ ಆಶ್ಚರ್ಯಗೊಂಡ ಮುಆವಿಯಾ ರಳಿಯಲ್ಲಾಹು ಅನ್ ಹು ಘಟನೆಯನ್ನು ಪೂರ್ಣವಾಗಿ ವಿವರಿಸುವಂತೆ ಅವರಲ್ಲಿ ಹೇಳಿದರು. ಅಷ್ಟರಲ್ಲಿ ವ್ಯಕ್ತಿಯು ತನ್ನ ಕಥೆ ಬಿಚ್ಚತೊಡಗಿದರು. ನಾನು ನನ್ನ ಚಿಕ್ಕಪ್ಪನ ಮಗಳನ್ನು ಅತಿಯಾಗಿ ಪ್ರೀತಿಸುತ್ತಿದ್ದೆ. ಅವಳನ್ನು ನನಗೆ ವಿವಾಹ ಮಾಡಿಕೊಡಬೇಕೆಂದು ಅವಳ ತಂದೆಯೊಂದಿಗೆ ಹೇಳಿದಾಗ ಅವರು ಅದಕ್ಕೊಪ್ಪಿ ನನಗೆ ವಿವಾಹ ಮಾಡಿಕೊಟ್ಟಿದ್ದರು. ನನ್ನ ಆಸೆಯ ಈಡೇರಿಕೆಯಿಂದ ಅತೀವ ಸಂತುಷ್ಟನಾದ ನಾನು ನಂತರ ಅವಳೊಂದಿಗೆ ಸುಖೀ ಜೀವನ ನಡೆಸುತ್ತಿದ್ದೆ. ಕಾಲಚಕ್ರವು. ಹೀಗೆ ಉರುಳುತ್ತಿತ್ತು. ಸುಖಮಯ ಬದುಕಿನೆಡೆಯಲ್ಲಿ ಸಹಿಸಲಾಗದ ಆಪತ್ತೊಂದು ನನ್ನ ಮೇಲೆರಗಿತು. ನನ್ನ ಬಳಿಯಿದ್ದ ಎಲ್ಲಾ ಸಂಪತ್ತೂ ನಷ್ಟಗೊಂಡು ಅಂದಿನಿಂದ ನಾನು ಕಡು ಬಡವನಾಗಿ ಮಾರ್ಪಟ್ಟೆನು. ಇದನ್ನರಿತ ನನ್ನ ಹೆಂಡತಿ ಸಅದಾಳ ತಂದೆಯು ಅವಳನ್ನು ತವರು ಮನೆಗೆ ಕರೆದುಕೊಂಡು ಹೋದರು. ಹೆಂಡತಿಯಿಲ್ಲದೆ ಅಸಂತೃಪ್ತನಾದ ನನ್ನ ಬದುಕು ಡೋಲಾಯಮಾನವಾಯಿತು. ದಿನದಿಂದ ದಿನಕ್ಕೆ ನನ್ನ ದುಃಖವು ಹೆಚ್ಚುತ್ತಲೇ ಹೋಯಿತು. ಈ ವಿಷಯವನ್ನು ನಿಮ್ಮ ಗವರ್ನರಾದ ಮರ್ ವಾನ್ ರೊಂದಿಗೆ ಹೇಳಿ ಏನಾದರೊಂದು ಪರಿಹಾರವನ್ನು ಕಾಣುವ ಎಂದು ಬಗೆದು ನಾನು ಅವರ ಬಳಿ ಹೋಗಿ ವಿಷಯ ತಿಳಿಸಿದೆ.
ನನ್ನ ಸಂಕಷ್ಟವನ್ನು ಆಲಿಸಿದ ಮರ್ ವಾನ್ ಹೆಣ್ಣಿನ ತಂದೆಯನ್ನು ಹಾಜರು ಪಡಿಸಿ ವಿಷಯವನ್ನು ತಿಳಿಯಲು ಮುಂದಾದರು. ಅಷ್ಟರಲ್ಲಿ ಮಾವ ಹೇಳಿದ ಮಾತಿನಿಂದ ನಾನು ಕಂಗೆಟ್ಟು ಹೋದೆನು. ಇವನಿಗೆ ನನ್ನ ಮಗಳನ್ನು ನಾನು ವಿವಾಹ ಮಾಡಿ ಕೊಡಲೇ ಇಲ್ಲ. ಅವರ ಮಾತಿನಿಂದ ಕಂಗಾಲಾದ ನಾನು ಮರ್ ವಾನ್ ರೊಂದಿಗೆ ಹೇಳಿದೆ: "ಇವರು ಹೇಳುತ್ತಿರುವುದು ಸುಳ್ಳು , ಹೆಣ್ಣನ್ನೇ ಇಲ್ಲಿಗೆ ಹಾಜರು ಪಡಿಸಿ ನೀವು ವಿಷಯವನ್ನು ಮನದಟ್ಟು ಮಾಡಿರಿ" ಅಂತೆಯೇ ಅವಳನ್ನು ಮರ್ ವಾನ್ ರ ಮುಂದೆ ಹಾಜರು ಪಡಿಸಲಾಯಿತು. ಆದರೆ ಇದು ಮತ್ತಷ್ಟು ಆಘಾತಕ್ಕೆ ಕಾರಣವಾಯಿತು. ಅವಳನ್ನು ಕಂಡ ತಕ್ಷಣ ಅವಳೊಂದಿಗೆ ಏನೂ ಕೇಳದೆ ಅವಳ ಅತೀವ ಸೌಂದರ್ಯಕ್ಕೆ ಮಾರು ಹೋದ ಗವರ್ನರ್ ಮರ್ ವನ್ ನನ್ನನ್ನು ವಂಚಿಸಿದರು. ದುರುಗುಟ್ಟಿ ನೋಡುತ್ತಾ ಅವರು ನನ್ನನ್ನು ಆರೋಪಿಯೆಂದು ಹೇಳಿ ಜೈಲಿಗೆ ತಳ್ಳಿದರು. ನನಗೆ ಆಕಾಶವೇ ಕಳಚಿ ಮೈ ಮೇಲೆ ಬಿದ್ದಂತಾಯಿತು. ಬದುಕಿನಲ್ಲಿ ಅನುಭವಿಸುತ್ತಿರುವ ಅತೀ ದೊಡ್ಡದಾದ ಶಿಕ್ಷೆ. ಮನಸ್ಸು ಹೊತ್ತಿ ಉರಿಯುತ್ತಿದೆ. ನ್ಯಾಯಕ್ಕಾಗಿ ತಾನು ಎಲ್ಲಿಗೆ ಹೋದೆನೋ ಅಲ್ಲಿ ತನ್ನನ್ನೇ ಅನ್ಯಾಯದ ಆಳ ಕಂದಕಕ್ಕೆ ದೂಡಿ ಹಾಕಲಾಯಿತು.
ಮರ್ ವಾನ್ ಹೆಣ್ಣಿನ ತಂದೆಯೊಂದಿಗೆ ಹೇಳಿದರು: " ನಿಮ್ಮ ಮಗಳನ್ನು ನೀವು ನನಗೆ ವಿವಾಹ ಮಾಡಿ ಕೊಡುವಿರಾದರೆ ನೀವಿಚ್ಚಿದಷ್ಟು ಹಣ ನೀಡಲು ನಾನು ಸಿದ್ಧನಾಗಿರುವೆನು. ಆ ವ್ಯಕ್ತಿಯಿಂದ ಇವಳನ್ನು ವಿಚ್ಛೇಧಿಸುವ ಜವಾಬ್ದಾರಿ ನನ್ನದು." "ನೀವು ಉದ್ದೇಶಿಸಿದಂತೆ ಆಗಲಿ" ಎನ್ನುತ್ತಾ ಹೆಣ್ಣಿನ ತಂದೆಯು ಅಲ್ಲಿಂದ ಸಾಗಿದರು. ಮರ್ ವಾನ್ ನೇರವಾಗಿ ನನ್ನೆಡೆಗೆ ಘರ್ಜಿಸುವ ಸಿಂಹದಂತೆ ಹಾದು ಬಂದರು. " ನೀನು ಸುಅದಾಳನ್ನು ತಲಾಖ್ ಹೇಳಬೇಕು. ಇಲ್ಲದಿದ್ದರೆ ನಿನ್ನನ್ನು ನಾನು ಹಿಂಸಿಸುವೆನು" ಎಂದು ಹೇಳಿ ನನ್ನಲ್ಲಿ ಭೀತಿ ಹುಟ್ಟಿಸಿದರು. ನಾನು ಸುಅದಾಳಿಗೆ ತಲಾಖ್ ಹೇಳುವುದಿಲ್ಲವೆಂದು ತಿಳಿಸಿದೆ. ಹೀಗೆ ಮೂರು ದಿನಗಳ ಕಾಲ ಮರ್ ವಾನ್ ಸರ್ವ ರೀತಿಯಲ್ಲಿ ಪೀಡಿಸಿದ. ಮೂರನೇ ದಿನ ಕಟ್ಟಪ್ಪಣೆಯೆಂಬಂತೆ ಮರ್ ವಾನ್ ಹೀಗೆ ಹೇಳಿದರು. "ಒಂದೋ ನೀನು ಸುಅದಾಳನ್ನು ತಲಾಖ್ ಹೇಳಬೇಕು. ಇಲ್ಲದಿದ್ದರೆ ನಿನ್ನನ್ನು ನಾನು ತುಂಡರಿಸುವೆನು. ನಿನ್ನ ನಾಲಗೆ ಕತ್ತರಿಸುವೆನು". ನನ್ನ ಪ್ರಾಣಾಪಾಯದಲ್ಲಿರುವುದನ್ನು ಮನಗಂಡ ನಾನು ಜೀವ ಭಯದಿಂದ ಸಅದಾಳಿಗೆ ಒಂದು ತಲಾಖ್ ನೀಡಿದೆ. ತಲಾಖ್ ಹೇಳಿದ ಕೂಡಲೇ ಮರ್ ವಾನ್ ನನ್ನನ್ನು ಪುನಃ ಜೈಲಿಗೆ ತಳ್ಳಿದರು. ನಂತರ ಸುಅದಳ "ಇದ್ದ" ಮುಗಿದ ಬಳಿಕ ಮರ್ ವಾನ್ ಅವಳನ್ನು ವಿವಾಹ ಗೈದರು. ಅಮೀರುಲ್ ಮುಮಿನೀನ್.... ಈ ಘಟನೆಯು ನನ್ನನ್ನು ಹುಚ್ಚನಂತಾಗಿಸಿದೆ..
ಸುಅದಾಳು ನನ್ನಿಂದ ಬೇರ್ಪಟ್ಟಂದಿನಿಂದ ನನಗೆ ಊಟವಿಲ್ಲ , ನಿದ್ದೆಯಿಲ್ಲ. ನನ್ನ ಬದುಕು ಮಸಣವಾಗಿದೆ. ನನ್ನನ್ನು ಈ ದಯನೀಯಾ ವಸ್ಥೆಯಿಂದ ಪಾರು ಮಾಡಿ ತಾವು ನನಗೊಂದು ನೆಮ್ಮದಿಯ ಬದುಕನ್ನು ಕರುಣಿಸಬೇಕು. ಸುಅದಾಳ ಕಾರ್ಯದಲ್ಲಿ ನನಗೆ ತಾವು ನೀತಿಯುಕ್ತವಾದ ತೀರ್ಮಾಣವನ್ನು ನೀಡಬೇಕು. ಮರ್ ವಾನನ ಅನ್ಯಾಯದಿಂದ ನನ್ನನ್ನು ರಕ್ಷಿಸಬೇಕು. ತನ್ನ ಕಥೆಯನ್ನು ಬಿಚ್ಚಿದ ಗ್ರಾಮೀಣನ ನೊಂದ ಮನಸ್ಸನ್ನು ಅರ್ಥ ಮಾಡಿದ ಮುಆವಿಯಾ ರಳಿಯಲ್ಲಾಹು ಅನ್ ಹು ಮರ್ ವಾನ್ ರ ಈ ಅಕ್ರಮದಿಂದ ತುಂಬಾ ಬೇಸರಗೊಂಡರು. ನಂತರ ಗ್ರಾಮೀಣನ ವ್ಯಕ್ತಿಯ ವಿಷಯವನ್ನೂ ಮರ್ ವಾನ್ ಮಾಡಿದ ಅನ್ಯಾಯವನ್ನೂ ವಿವರಿಸುತ್ತಾ ಮುಆವಿಯಾ ಮರ್ ವಾನ್ ಗೆ ಪತ್ರ ಬರೆದರು. ಪತ್ರ ಕೈ ತಲುಪಿದಾಗ ಹೆದರಿದ ಮರ್ ವಾನ್ ಸಅದಾಳ ಬಳಿ ಸಾಗಿ ತನ್ನ ಸಂಕಟವನ್ನು ತಿಳಿಸಿದರು. " ಸುಅದಾಳ ನಿನ್ನನ್ನು ನಾನು ತಲಾಖ್ ಹೇಳಬೇಕೆಂದು ಮುಆವಿಯಾರಿಂದ ಆಜ್ಞೆಯಾಗಿದೆ. ನಿನ್ನ ಜೊತೆ ಇನ್ನೂ ಎರಡು ವರ್ಷಗಳ ಕಾಲ ಜೊತೆಯಾಗಿ ಬದುಕಿ ಬಳಿಕ ಯಾರಾದರೂ ನನ್ನನ್ನು ಕೊಲ್ಲುವಂತಿದ್ದರೆ ಎಷ್ಟು ಒಳ್ಳೆಯದಿತ್ತು" ಎಂದು ಹೇಳುತ್ತಾ ಮನಸ್ಸಿಲ್ಲ ಮನಸ್ಸಿನಿಂದ ಮರ್ ವಾನ್ ಸುಅದಳಿಗೆ ತಲಾಖ್ ನೀಡಿದರು. ನಂತರ ಮುಆವಿಯಾರಿಗೆ ತನ್ನ ಘಟನೆಯನ್ನು ವಿವರಿಸುತ್ತಾ ಪತ್ರ ಮೂಲಕ ಉತ್ತರಿಸಿದರು.
ಅಮೀರುಲ್ ಮುಮಿನೀನ್ , ನಾನು ಯಾವುದೇ ಹರಾಮನ್ನು ನಿಷಿದ್ಧ ಕಾರ್ಯ ಮಾಡಲಿಲ್ಲ. ನಾನೊಬ್ಬ ವ್ಯಭಿಚಾರಿಯಲ್ಲ. ನಿಮ್ಮ ಪತ್ರದಲ್ಲಿ ನನ್ನ ಕುರಿತು ವ್ಯಭಿಚಾರಿಯೆಂಬ ಪರಾಮರ್ಶೆಯಿದೆ ಕಾರಣ ನಾನು ಅವಳನ್ನು ಅನುವದನೀಯವಾದ ದಾರಿಯಲ್ಲೇ ಪಡೆದಿದ್ದೇನೆ. ಸುಅದಾಳಿಗೆ ತಲಾಖ್ ನೀಡಬೇಕೆಂಬ ನಿಮ್ಮ ಆಜ್ಞೆಯಿಲ್ಲದಿದ್ದರೆ ಖಂಡಿತವಾಗಿಯೂ ಒಮ್ಮೆಯೂ ನಾನು ಅವಳಿಗೆ ತಲಾಖ್ ನೀಡುತ್ತಿರಲಿಲ್ಲ.
ಮರ್ ವಾನ್ ರ ಪತ್ರವನ್ನು ಓದಿ ಮುಗಿಸಿದ ಬಳಿಕ ಮುಆವಿಯಾ ರಳಿಯಲ್ಲಾಹು ಅನ್ ಹು ರವರು ಸುಅದಾಳನ್ನು ಮತ್ತು ಗ್ರಾಮೀಣ ವ್ಯಕ್ತಿಯನ್ನು ತನ್ನ ಬಳಿ ಹಾಜರು ಪಡಿಸಿದರು. ಸುಅದಾಳ ಸೌಂದರ್ಯವನ್ನು ಕಂಡು ಅದ್ಭುತಗೊಂಡ ಮುಆವಿಯಾರು ಈ ಹೆಣ್ಣಿನ ವಿವಾಹವಾಗುವವ ಎಷ್ಟು ಭಾಗ್ಯವಂತ ಎಂಬ ದಾಟಿಯಲ್ಲಿ ಮಾತನಾಡಿದರು. ನಂತರ ಅವರು ಗ್ರಾಮೀಣ ವ್ಯಕ್ತಿಯಲ್ಲಿ ಹೇಳಿದರು. " ಸುಅದಾಳ ಬದಲಾಗಿ ಮೂರು ಸುಂದರಿಯಾ ಯುವತಿಗಳನ್ನು ನಾನು ನಿನಗೆ ನೀಡುವೆನು. ಅವರೊಂದಿಗೆ ಬೇಕಾದಷ್ಟು ಹಣವಿದೆ ಫೌಢಿಯಿದೆ. ಸರ್ವ ಸವಲತ್ತುಗಳೂ ಇವೆ. ಇದು ನಿನಗೆ ತೃಪ್ತಿಯಾ ?"
ಇದನ್ನು ಆಲಿಸಿದ ಗ್ರಾಮೀಣ ವ್ಯಕ್ತಿಗೆ ನಿಂತ ನೆಲವೇ ಕುಸಿದಂತಾಯಿತು. ಅವರು ಹೇಳಿದರು: "ಅಮೀರುಲ್ ಮುಮಿನೀನ್ , ನಾನು ನಿಮ್ಮಿಂದ ನ್ಯಾಯವನ್ನು ನಿರೀಕ್ಷಿ ಬಂದಿರುವೆನು. ನನ್ನನ್ನು ವಂಚಿಸದಿರಿ. ಮೂರು ಸೌಂದರ್ಯ ರಾಣಿಗಳನ್ನಲ್ಲ ,ನಿಮ್ಮ ಅಧಿಕಾರ ಪೂರ್ತಿ ನನಗೆ ನೀಡಿದರೂ ಸುಅದಾಳ ಮುಂದೆ ಅದೆಲ್ಲವೂ ಶೂನ್ಯ. ಆದ್ದರಿಂದ ನನಗೆ ಅವಳೇ ಬೇಕು." ಮುಆವಿಯಾ ಅವಳನ್ನು ತನ್ನದಾಗಿಸುವ ಶ್ರಮದಲ್ಲಿ ಹೇಳಿದರು. "ನೀನು ಆ ಹೆಣ್ಣಿಗೆ ತಲಾಖ್ ನೀಡಿರುವಿ. ಅದೇ ರೀತಿ ಮರ್ ವಾನ್ ಅವಳನ್ನು ವಿಚ್ಛೇದಿಸಿದ್ದಾರೆ. ಇನ್ನು ನಿನ್ನ ಅಭಿಪ್ರಾಯಕ್ಕೆ ಬೆಲೆಯಿಲ್ಲ. ಸುಅದಾಳು ಯಾರನ್ನು ಆರಿಸುತ್ತಾಳೋ ಅವರಿಗೆ ಅವಳನ್ನು ನೀಡಲಾಗುತ್ತದೆ." ನಂತರ ಮುಆವಿಯಾ ಸುಅದಾಳತ್ತ ತಿರುಗಿ ಕೇಳಿದರು: "ಓ ಹೆಣ್ಣೇ..... ನಮ್ಮ ಪೈಕಿ ನಿನಗೆ ಅತ್ಯಂತ ಇಷ್ಟವಿರುವವರನ್ನು ನೀನು ಆಯ್ಕೆ ಮಾಡು . ಅಮೀರುಲ್ ಮುಮಿನೀನ್ ಆದ ನಾನು ಒಂದೆಡೆ ನನಗೆ ಗೌರವವಿದೆ,ಸಂಪತ್ತಿದೆ, ಎಲ್ಲವೂ ಇದೆ. ಇನ್ನೊಂದೆಡೆ ಮರ್ ವಾನ್ ಎಂಬ ಭೀಕರ ವ್ಯಕ್ತಿ . ಇವರಿಬ್ಬರ ನಡುವೆ ಈ ಬಡವನಾದ ಗ್ರಾಮೀಣ. ನೀನು ಯಾರನ್ನು ಆಯ್ಕೆ ಮಾಡುವಿರಾ?"
ಮುಆವಿಯಾರ ಮಾತನ್ನು ಆಲಿಸಿದ ಆ ಹೆಣ್ಣು ಬುದ್ಧಿ ಪೂರ್ವಕವಾಗಿ ಉತ್ತರಿಸಿದಳು. "ಅಮೀರುಲ್ ಮುಮಿನೀನ್ ನಾನು ಯಾರನ್ನೂ ವಂಚಿಸಲಾರೆನು. ಸಂತಸ ವೇಳೆಯಲ್ಲೂ ದುಃಖ ಸಂದರ್ಭದಲ್ಲೂ ಈ ಗ್ರಾಮೀಣರೊಂದಿಗೆ ನಾನು ಬದುಕಿದ್ದೆನು. ಇನ್ನು ಮುಂದೆಯೂ ನಾನು ಅವರನ್ನೇ ಗಂಡನಾಗಿ ಆರಿಸುವೆನು. ಹೆಣ್ಣಿನ ತಂತ್ರಗಾರಿಕೆಯ ಮಾತಿನಿಂದ ಅಚ್ಚರಿಗೊಂಡ ಮುಆವಿಯಾ ರಳಿಯಲ್ಲಾಹು ಅನ್ ಹು ಗ್ರಾಮೀಣ ವ್ಯಕ್ತಿಗೆ ಆ ಹೆಣ್ಣಿನೊಂದಿಗೆ ಬದುಕಲು ಅನುವು ಮಾಡಿಕೊಟ್ಟರು. ಅದರೊಟ್ಟಿಗೆ ಅವಳಿಗೆ ಹತ್ತು ಸಾವಿರ ದಿರಹಮನ್ನು ನೀಡಿ ಸಹಾಯ ಮಾಡಿದರು. ಗ್ರಾಮೀಣ ವ್ಯಕ್ತಿ ಮತ್ತು ಸುಅದಾಳ ಸಮೃದ್ಧ ಮತ್ತು ಪ್ರೀತಿ ಸ್ನೇಹ ಸಮ್ಮಿಲನಗೊಂಡ ಬದುಕು ಪುನಃ ಬಿರಿಯ ತೊಡಗಿತು.
ಕತ್ತಲು ಮತ್ತು ಬೆಳಕು
ಕಳೆದು ಹೋದ ದಿನಗಳು.... ಸುಖವಾಗಿ ಕಳೆದ ನಿಮಿಷಗಳು..... ಸ್ನೇಹದಮನೋಹರ ತೀರದಲ್ಲಿ ಕಟ್ಟಿ ಬೆಳಸಿದ ದಾಂಪತ್ಯ ಸೌಧ...!
ಒಂದೂ ನೆನಪಿಸಲಾಗುತ್ತಿಲ್ಲ. ಇಸ್ ಹಾಖ್ ಬಿಕ್ಕಿ ಬಿಕ್ಕಿ ಅಳತೊಡಗಿದ . ಅವನು ಸಾಧುವಾಗಿದ್ದ. ಶುದ್ಧ ಮನಸ್ಕನಾಗಿದ್ದ. ಅವನು ಪತ್ನಿಯನ್ನು ಅತಿಯಾಗಿ ಪ್ರೀತಿಸಿದ್ದ ಅವಳಿಲ್ಲದ ನಿಮಿಷ ಎಷ್ಟೊಂದು ವಿರಸ....!
ಮರಣ; ಯಾರೊಂದಿಗೂ ಅದಕ್ಕೆ ಕರಣೆಯಿಲ್ಲ. ಯಾರ ಯಾತನೆಯ ಕುರಿತೂ ಅದಕ್ಕೆ ಚಿಂತೆಯಿಲ್ಲ. ತನ್ನ ಪ್ರಿಯತಮೆಯನ್ನು ಅದು ಎತ್ತಿಕೊಂಡು ಹೋಗಿದೆ. ಇಸ್ ಹಾಖ್ ಗೆ ಅಳುವುದಲ್ಲದೆ ಬೇರೆ ಮಾರ್ಗವಿಲ್ಲ. ಪತ್ನಿಯ ಮೃತ ಶರೀರದೊಂದಿಗೆ ಅವನು ದಫನಭೂಮಿಯತ್ತ ತಲುಪಿದ. ಅಂತ್ಯ ಸಂಸ್ಕಾರವೆಲ್ಲಾ ಮುಗಿಯಿತು.ಜೊತೆಗಿದ್ದವರೆಲ್ಲಾ ಮರಳಿ ಹೋದರು. ಆದರೆ ಇಸ್ ಹಾಖ್ ಮಾತ್ರ ಅಲ್ಲಿ ಸುತ್ತುತ್ತಿದ್ದಾನೆ. ಪತ್ನಿಯ ಖಬರ್ ನೋಡಿ ಅಳುತ್ತಿದ್ದಾನೆ. ಅವನ ಅಳುವಿನ ಶಬ್ದವು ಆಕಾಶದಲ್ಲಿ ಲೀನವಾಗುತ್ತಿತ್ತು.
ಆ ದಫನ ಭೂಮಿ ದಾರಿಯಾಗಿ ಈಸ್ ನೆಬಿ ಅಲೈಹಿಸ್ಸಲಾಮ್ ನಡೆದು ಸಾಗುತ್ತಿದ್ದಾರೆ. ಇಸ್ ಹಾಖ್ ನನ್ನು ಕಂಡಾಗ ಅವರು ಹತ್ತಿರ ಬಂದರು. "ಖಬರ್ ಬಳಿ ದುಃಖಿಸುತ್ತಿರುವುದು ಯಾತಕ್ಕಾಗಿ...? ಯಾರ ಖಬರದು....?" ಈಸಾ ನೆಬಿ ಅಲೈಹಿಸ್ಸಲಾಮ್ ಕೇಳಿದರು.
"ನನ್ನ ಪತ್ನಿಯ ಖಬರದು. ಅವಳು ನನ್ನ ಚಿಕ್ಕಪ್ಪನ ಮಗಳು . ಅವಳನ್ನು ನಾನು ಅತಿಯಾಗಿ ಪ್ರೀತಿಸಿದೆ. ಆದರೆ ಇಂದು ನಾನು ಏಕಾಂತ. ಅವಳ ಖಬರ್ ಅಗಲಿ ಹೋಗಲು ನನಗೆ ಮನಸ್ಸಿಲ."
"ಅಲ್ಲಾಹನ ಅನಮತಿಯೊಂದಿಗೆ ನಾನು ಅವಳನ್ನು ಪುನಃ ಜೀವಿಸುವೆನು. ನಿನ್ನ ಸಮ್ಮತವಿದೆಯಾ..." ಈಸಾ ನೆಬಿ ಅಲೈಹಿಸ್ಸಲಾಮ್ ಕೇಳಿದರು.
"ತಾವು ಅವಳನ್ನು ಮರಳಿಸಿದರೆ ಒಳ್ಳೆಯದಿತ್ತು". ಇಸ್ ಹಾಖ್ ನ ಮುಖದಲ್ಲಿ ಮಂದಹಾಸ ಬೀರಿತು.
"ಓ ಖಬರ್ ವಾಸಿಯೇ... ಅಲ್ಲಾಹನ ಅನುಮಾತಿಯೊಂದಿಗೆ ಎದ್ದು ಬಾ" ಈಸಾ ನೆಬಿ ಅಲೈಹಿಸ್ಸಲಾಮ್ ಕರೆದರು. ಅದ್ಭುತ! ಒಂದು ಖಬರ್ ಎರಡು ಹೋಳಾಯಿತು. ಒಬ್ಬ ಕಪ್ಪಗಿನ ಮನುಷ್ಯ "ಅಲ್ಲಾಹನಲ್ಲದೆ ಆರಾಧ್ಯನಿಲ್ಲ. ಈಸಾ ನೆಬಿ ಅಲೈಹಿಸ್ಸಲಾಮ್ ಅವನ ರಸೂಲಾಗಿದ್ದರೆ" ಎಂದು ಹೇಳುತ್ತಾ ಅದರಿಂದ ಹೊರಬಂದಿರು. ಅದು ಅಗ್ನಿಯಿಂದ ರಕ್ಷೆಗೊಂಡ ಮುಖ ವಾಗಿತ್ತು. "ಇದು ನನ್ನ ಪತ್ನಿಯಲ್ಲ" ಎಂದು ಇಸ್ ಹಾಖ್ ಕೈ ತೋರಿಸಿ ಹೇಳಿದರು
ಮೂಲ ಲೇಖಕರು:
ಮಾಚಾರ್ ಸಅದಿ
ಸಂಗ್ರಹ:
ಅಹ್ಮದ್ ಕೆಬೀರ್ ಉಳ್ಳಾಲ
NOOR-UL-FALAH ISLAMIC STORE

Comments
Post a Comment