ಭಿಕ್ಷುಕ ಒಂದು ಮಹಾ ಅಧ್ಯಾಯ
ಭಿಕ್ಷುಕ ಒಂದು ಮಹಾ ಅಧ್ಯಾಯ
ಸರ್ವವೂ ಬಲ್ಲ ಸರ್ವಾಂತರ್ಯಾಮಿ ಸೃಷ್ಟಿಕರ್ತನಿಗೆ ಚಿರಋುಣಿ
ನಾನು ದಿನನಿತ್ಯ ಮಸೀದಿ ಮಂದಿರಗಳ ಹತ್ತಿರ ಹಾದು ಹೋಗುವಾಗ ಕಾಣ ಸಿಗುವ ಕೆಲವು ಪಾತ್ರಗಳು ಕೇಳುವ ಕೆಲವು ಜರ್ಜರಿತ ಧ್ವನಿಗಳು
ನನ್ನ ಹೃದಯದ ಕದ ತಟ್ಟಿ ಈ ಬರಹಕ್ಕೆ ಪ್ರೇರೇಪಣೆ ನೀಡಿದೆ
ಈ ಬರಹದಲ್ಲಿ ಯಾವುದೇ ಜಾತಿಯನ್ನಾಗಲಿ ವ್ಯಕ್ತಿಯನ್ನಾಗಲಿ ನಿಂದಿಸುವ ಉಧ್ದೇಶ ನನಗಿಲ್ಲ ಬಡವರ ಮರ್ಧಿತರ ಧ್ವನಿಯನ್ನು ನನ್ನ ಲೇಖನಿಯ ಮೂಲಕ ಚಿತ್ರಿಸಲು ಬಯಸಿರುವೆನು ಅಷ್ಟೆ ಈ ಬರಹದಿಂದ ಯಾರಿಗಾದರೂ ನೋವಾಗಿದ್ದಲ್ಲಿ ಕ್ಷಮೆಯಾಚಿಸುತ್ತಾ ನನ್ನ ಬರಹದ ಮೊದಲ ಹೆಜ್ಜೆಯನ್ನು ಇಡುತ್ತಿರುವೆನು ತಮ್ಮೆಲ್ಲರ ಸಹಕಾರ ಸದಾ ಇರಲಿ ಎಂದು ಆಶಿಸುವೆನು...
ಪ್ರಾರಂಭ.......
ಈ ಜಗತ್ತು ಒಂದು ವಿಸ್ಮಯ ಇಲ್ಲಿ ನಾನಾ ಭಾಷೆ ಹಲವು ವೇಶ ರೀತಿ ರಿವಾಜುಗಳನ್ನು ಪಾಲಿಸುತ್ತಾರೆ ಹಲವು ವರ್ಗಗಳು ಹಲವು ರೀತಿಯ ನಿಯಮಗಳನ್ನು ಪಾಲಿಸುತ್ತದೆ
ಶ್ರೀಮಂತ ವರ್ಗ ಒಂದು ರೀತಿಯಾದರೆ ಮಧ್ಯಮ ವರ್ಗ ಇನ್ನೊಂದು ರೀತಿ ಬಡ ವರ್ಗದಲ್ಲಿ ಬರುವ ಇನ್ನೊಂದು ವರ್ಗವೇ ಭಿಕ್ಷುಕರು ಅವರ ಜೀವನವೇ ನನ್ನ ಈ ಬರಹ.
ಭಿಕ್ಷುಕ ಎಂದ ಕೂಡಲೆ ನಮ್ಮ ಮುಂದೆ ಬರುವ ಚಿತ್ರಣ ಹರುಕು ಮುರುಕು ಬಟ್ಟೆ ಕೊಳಕು ತುಂಬಿದ ಮೈ ಹಾಗೂ ಸದಾ ಬಾಡಿ ದುಃಖದಿಂದ ಬೆಂದು ಹೋಗಿರುವ ಮುಖ ಕೈಯ್ಯಲ್ಲೊಂದು ತಟ್ಟೆ ಒಂದು ಉದ್ದಗಿನ ಕೋಲು ಸದಾ ಗದ್ಗದಿತ ಧ್ವನಿಯಲ್ಲಿ ಕೂಗುತ್ತಿರುವ ಆರ್ತನಾದ
ಅಮ್ಮಾ ತಾಯಿ ದಾನ ಮಾಡಿ ತಿಂದು ಮೂರು ದಿವಸವೆ ಕಳೆಯಿತು ಕೈಲಾದ ಸಹಾಯ ಮಾಡಿ ಎಂಬ ಕೂಗು.
ಕೆಲವೊಂದು ವ್ಯಕ್ತಿಗಳ ಹಿಂದೆ ದೊಡ್ಡ ದುಃಖ ಸಾಗರವೇ ಅಡಗಿದೆ.
ಕೆಲವು ಅಸಹಾಯಕರು ತನ್ನವರು ಎಂದು ನಂಬಿದವರು ಮೋಸದಿಂದ ಆಸ್ತಿಯನ್ನೆಲ್ಲಾ ಕಳೆದುಕೊಂಡು ಬೀದಿಗೆ ತಳ್ಳಲ್ಪಟ್ಟ ಅದೆಷ್ಟೋ ಮುದಿ ಜೀವಗಳು ದಿಕ್ಕು ತೋಚದೆ ಹೊಟ್ಟೆ ಪಾಡಿಗಾಗಿ ಭಿಕ್ಷುಕ ಎಂಬ ನಾಮವನ್ನು ತಮ್ಮ ಆಸ್ತಿಯನ್ನಾಗಿಸಿಕೊಂಡಿದ್ದಾರೆ.
ನಾನು ಮೊದಲು ಭೇಟಿ ಮಾಡಿದ ಒಬ್ಬರ ಕಥೆಯನ್ನು ಇಲ್ಲಿ ವಿವರಿಸಲು ಬಯಸುತ್ತೇನೆ
ನಾನು ಭೇಟಿ ಮಾಡಿದ ಮೊದಲ ವ್ಯಕ್ತಿಯ ಕಥೆ ಕೇಳಿ ನನ್ನ ಕಣ್ಣುಗಳು ನನಗರಿವಿಲ್ಲದೆಯೇ ತೇವಗೊಂಡಿತು
ಅಷ್ಟಕ್ಕೂ ಅವರು ಹೇಳಿದ ಕಥೆಯಾದರು ಏನು....
ಒಬ್ಬ ದುರ್ದೈವಿ ತಾತನ ನಿಜ ಜೀವನವನ್ನು ಇಲ್ಲಿ ನನ್ನ ಕಥೆಗನುಸಾರ ಬರೆದಿರುವೆನು ಅವರ ಹೆಸರು ಪ್ರಸ್ತಾಪಿಸಲು ನನಗೆ ಮನಸ್ಸಿಲ್ಲದ್ದರಿಂದ ಹೆಸರನ್ನು ಬದಲಾಯಿಸಿರುವೆನು...
ಕಥಾ ಪಾತ್ರ ಪರಿಚಯ
ಹಾಸನ ಎಂಬ ಪಟ್ಟಣದಲ್ಲಿ ಬರುವ ಒಂದು ಸುಂದರ ಗ್ರಾಮ ಹೇಳಲು ಗ್ರಾಮವೆಂದಾದರೂ ಅಲ್ಲಿಯ ಜನರ ಜೀವನ ಶೈಲಿ ಪೇಟೆಯವರನ್ನೂ ಮೀರಿಸುವಂತಿತ್ತು ಈ ಗ್ರಾಮದ ಹಲವು ಸಾಹುಕಾರರಲ್ಲಿ ಒಬ್ಬರು ನನ್ನ ಕಥಾ ನಾಯಕ ಹಸನ್ ಖಾನ್ ಸಾಬ್(ಹೆಸರು ಬದಲಾಯಿಸಲಾಗಿದೆ) ಇಡೀ ಹಳ್ಳಿ ಹಳ್ಳಿಗೂ ಹಸನಾಕ ಎಂದರೆ ಅಚ್ಚು ಮೆಚ್ಚು ಅವರ ಮಾತು ಅವರ ನಡೆ ನುಡಿ ಎಲ್ಲವೂ ಪ್ರಶಾಂತಮಯವಾಗಿತ್ತು....!
ಈ ಹಸನಾಕ ಮೂಲತಃ ಕಾರವಾರದವರು
ವ್ಯಾಪರದ ನಿಮಿತ್ತ ಹಾಸನಕ್ಕೆ ಬಂದವರು ಅಲ್ಲೆ ಸ್ವಂತ ಜಮೀನು ಖರೀದಿಸಿ ತನ್ನ ಮಡದಿ ಮಕ್ಕಳೊಂದಿಗೆ ಸಂಸಾರ ಕಟ್ಟಿಕೊಂಡರು ಮಡದಿಯ ಹೆಸರು ಫಾತಿಮಾ ಬೇಗಂ ಈ ದಂಪತಿಗೆ ಐದು ಮಕ್ಕಳು ಮೂರು ಗಂಡು ಎರಡು ಹೆಣ್ಣು ಮೊದಲನೆಯ ಮಗನ ವಿಧ್ಯಾಭ್ಯಾಸ ಮುಗಿದು ಉದ್ಯೋಗ ಹರಸುತ್ತಿದ್ದನು
ಇನ್ನು ಎರಡನೆಯ ಮಗಳು ಮದುವೆಯ ಪ್ರಾಯಕ್ಕೆ ಬಂದಿದ್ದು ಹಸನಾಕ ಅವಳಿಗಾಗಿ ವರಾಣ್ವೇಷಣೆಯಲ್ಲಿದ್ದರು ಮೂರನೇಯ ಮಗ ಅಂತಿಮ ವರ್ಷದ ಪದವೀಧರನಾಗಿದ್ದ
ಇನ್ನಿಬ್ಬರು ಮಕ್ಕಳು ಒಂದೇ ವಯಸ್ಸಿನವರಾಗಿದ್ದು ಶಾಲೆ ಕಲಿಯುತ್ತಿದ್ದರು ಮಕ್ಕಳೆಲ್ಲರೂ ಸ್ಫುರದ್ರೂಪಿಗಳು ಅಷ್ಟೇ ನಯ ನಾಜೂಕು ಉಳ್ಳವರೂ ಆಗಿದ್ದರು
ಅರೆ ಇಷ್ಟೆಲ್ಲ ಇದ್ದು ಹಸನಾಕ ಯಾಕೆ ಬೀದಿಗೆ ಬಂದರು ಎಂಬ ಪ್ರಶ್ನೆ ನಿಮ್ಮ ಮನಸ್ಸನ್ನು ಕೊರೆಯುತ್ತಿರಬಹುದು ಅದೇ ಈ ಕಥಾವಸ್ತು.....
ಬೇಟಾ.... ಇರ್ಫಾನ್ ಎಲ್ಲಿದ್ದೀಯಪ್ಪ ಇಲ್ಲಿ ಬಾ ಯಾರೋ ನಿನ್ನ ಹುಡುಕಿಕೊಂಡು ಬಂದಿದ್ದಾರೆ ಎಂದು ಫಾತಿಮಾದ ಮಗನನ್ನು ಪ್ರೀತಿಯಿಂದ ಕರೆದರು
ಹಾ.... ಬಂದೆ ಅಮ್ಮಾ...
ಎಂದು ಒಳಗಿನಿಂದ ಇರ್ಫಾನ್ ಉತ್ತರಿಸಿದ ಅಮ್ಮ ಯಾತಕ್ಕಾಗಿ ಕರೆದಿರಬಹುದು ನನ್ನ ಹಳೆಯ ಮಿತ್ರರು ಯಾರಾದರೂ ಬಂದಿರಬಹುದೆ ಅಥವಾ...
ತಂಗಿ ಸಮೀನಾಳನ್ನು ಕಾಣಲು ವರನ ಕಡೆಯವರು ಬಂದಿರಬಹುದೆ ಛೆ... ಇರಲಿಕ್ಕಿಲ್ಲ ವರನ ಕಡೆಯವರು ಬಂದಿದ್ದರೆ ಅಮ್ಮ ಮೊದಲು ಅಪ್ಪನನ್ನು ಕರೆಯುತ್ತಿದ್ದರು
ಯಾರೊ ನನ್ನ ಗೆಳೆಯರಿರಬಹುದು ಎಂದು ಮನಸ್ಸಿನಲ್ಲೆ ಗೊಣಗುತ್ತಾ ಹೊರ ಬಂದ
ಅಲ್ಲಿ ಕಂಡ ದೃಶ್ಯ ನೋಡಿ ಇರ್ಫಾನ್'ನ ಮುಖದಲ್ಲಿ ಸಂತೋಷದ ಕಟ್ಟೆಯೊಡೆಯಿತು
ಮಂದಹಾಸವನ್ನು ಬೀರಿ
ಯಾ ಅಲ್ಲಾಹ್....ನನ್ನ ಪರಿಶ್ರಮಕ್ಕೆ ನನ್ನ ಪ್ರಾರ್ಥನೆಗೆ ನೀನು ಉತ್ತರ ನೀಡಿದೆಯಲ್ಲ ಎಂದು ತನ್ನೊಳಗೊಳಗೇ
ಖುಷಿಯ ಪಟಾಕಿಯನ್ನು ಸಿಡಿಸುತ್ತಿದ್ದನು..!!!
ಲೇಖಕರು:
ಅಶ್ಫಾಖ್ ಅಶ್ಶು ಆಲಾಡಿ
NOOR-UL-FALAH ISLAMIC STORE

Comments
Post a Comment