ಜ್ಞಾನ ಧಾರೆ
ಜ್ಞಾನಧಾರೆ:15 ಕೊರೋನೋ ವೈರಸ್ ಗೆ ಇಲ್ಲಿದೆ ಪರಿಹಾರ...!!! ಜಗತ್ತು ಪೂರಾ ಕೊರೋನಾ ವೈರಸ್ ಜ್ವರ ಭಾಧೆಯಿಂದ ತತ್ತರಿಸಿರುವಾಗ, ಪ್ರತಿಯೊಬ್ಬರೂ ಭೀತಿಯಿಂದ ಜೀವಿಸುತ್ತಿರುವ ಈ ಸಂದಿಗ್ಧ ಸಮಯದಲ್ಲಿ ಪ್ರವಾದಿವರ್ಯರು ನಮ್ಮೊಂದಿಗೆ ಒಂದು ದ್ಸಿಕ್ರ್ ರೂಢಿ ಮಾಡಲು ಹೇಳುತ್ತಾರೆ. ಸಕಲ ತೊಂದರೆ, ರೋಗ, ನೋವುಗಳಿಂದ ಮುಕ್ತಿ ಸಿಗಲು ಪ್ರವಾದಿವರ್ಯರು ಹೇಳಿ ಕೊಟ್ಟ ಒಂದು ಆತ್ಮೀಯ ಪ್ರತಿರೋಧ ಆಯುಧವಾಗಿದೆ ಈ ಕೆಳಗಿನ ದ್ಸಿಕ್ರ್.. بسم الله الذي لا يضر مع اسمه شيء في الأرض ولا في السماء وهو السميع العليم (ಬಿಸ್ಮಿಲ್ಲಾ ಇಲ್ಲಝೀ ಲಾ ಯಲುರ್ರು ಮಹಸ್ಮಿಹೀ ಶಯಿಹುನ್ ಫಿಲ್ ಅರ್ಲಿ ವಲಾ ಫಿಸ್ಸಮಾಈ ವಹುವಸ್ಸಮೀಹುಲ್ ಅಲೀಮ್) ಇದರ ಜೊತೆ أعوذ بكلمات اللَّه التامات من شر ما خلق (ಅಹೂಝು ಬಿಕಲಿಮಾತಿಲ್ಲಾಹಿ ತಾಮ್ಮಾತಿನ್ ಮಿನ್ ಶರ್ರಿ ಮಾ ಖಲಖ್) 👆🏻ಎಲ್ಲಾ ದಿವಸವೂ ಬೆಳಿಗ್ಗೆ ಹಾಗೂ ಸಂಜೆ ಇದನ್ನು ಮೂರು ಬಾರಿ ಮರೆಯದೆ ಹೇಳಿರಿ. ವಿಶೇಷವಾಗಿ ಮನೆಯಿಂದ ಹೊರಗೆ ಹೋಗುವಾಗ, ಯಾತ್ರೆ ಮಾಡಿ ಎಲ್ಲಿ ತಲುಪಿದರೂ ಈ ದ್ಸಿಕ್ರ್ ಹೇಳಿ ರೂಢಿ ಮಾಡಿರಿ. ಇದು ರೂಢಿ ಮಾಡಿದರೆ ಯಾವುದೇ ನೋವುಂಟು ಮಾಡುವ ರೋಗವೂ ನಮ್ಮತ್ತ ಸುಳಿಯಲ್ಲ. ಅಲ್ಲಾಹು ನಮ್ಮನ್ನು ಸಕಲ ಮಾರಕ ರೋಗಗಳಿಂದಲೂ ಕಾಪಾಡಲಿ, ಆಮೀನ್.