ಜ್ಞಾನ ಧಾರೆ

ಜ್ಞಾನಧಾರೆ: 12

ಹಜ್ಜ್ ನಿರ್ವಹಿಸದವನಿಗೆ ಹಜ್ಜಿನ ಪ್ರತಿಫಲ..!?



       ಹದೀಸುಗಳನ್ನು ವ್ಯಾಖ್ಯಾನಿಸುತ್ತಾ ಮಹಾನರು ಹೇಳುತ್ತಾರೆ. ನಿಶ್ಚಯವಾಗಿಯೂ ಪರಲೋಕದಲ್ಲಿ ವಿಚಾರಣೆ ಮಾಡುವ ದಿನ ಅಲ್ಲಾಹು ದಾಸನೋರ್ವನನ್ನು ಹಾಜರುಪಡಿಸುತ್ತಾನೆ. ನಂತರ ಆ ದಾಸನಿಗೆ ತನ್ನ ಜೀವನದ ರಿಪೋರ್ಟ್ ನೀಡಲಾಗುತ್ತದೆ. ಅದನ್ನು ಆ ವ್ಯಕ್ತಿ ಬಲಗೈಯಲ್ಲಿ ಸ್ವೀಕರಿಸುವನು. ಆ ವ್ಯಕ್ತಿ ಅದನ್ನು ತೆರೆದು ಓದಿ ನೋಡುವಾಗ ಅದರಲ್ಲಿ ಹಜ್ಜ್ ನಿರ್ವಹಿಸಿದ್ದಾಗಿ, ಧರ್ಮಯುದ್ಧ ಮಾಡಿದ್ದಾಗಿ, ದಾನಧರ್ಮ ಮುಂತಾದ ಒಳ್ಳೆಯ ಸತ್ಕರ್ಮಗಳು ಮಾಡಿದ್ದಾಗಿ ಅದರಲ್ಲಿ ಕಾಣಲು ಸಾಧ್ಯವಾಗುತ್ತದೆ. ಆ ದಾಸನಿಗೆ ಇದೆಲ್ಲಾ ಮಾಡಬೇಕೆಂಬ ಮನೋ-ವಾಂಛೆ ಇದ್ದರೂ ಆತನ ಭೌತಿಕ ಜೀವನದಲ್ಲಿ ಇದ್ಯಾವುದೂ ಮಾಡುವ ಅವಕಾಶ ಒದಗಿ ಬಂದಿರಲಿಲ್ಲ .ಆ ಕಾರಣ ಆ ದಾಸ ಅಲ್ಲಾಹನಲ್ಲಿ ಹೇಳುವನು, ' ಇದು ನನ್ನ ಕಿತಾಬ್ ಅಲ್ಲ ನಾನಿಷ್ಟು ಸತ್ಕರ್ಮಗಳು ಮಾಡಿರಲಿಲ್ಲ' ಆಗ ಅಲ್ಲಾಹು ಹೇಳುವನು " ಇದು ನಿನ್ನ ಕಿತಾಬೇ ಆಗಿದೆ, ನೀನು ಬಡವನಾಗಿ ಸುದೀರ್ಘ ವರ್ಷ ಜೀವಿಸಿದ್ದಾಗ ನಿನ್ನ ಮನ ಮಂತ್ರಿಸುತ್ತಿದ್ದದ್ದು ನನಗೆ ಸಂಪತ್ತು ಇದ್ದರೆ ಅದುಪಯೋಗಿಸಿ ನಾನು ಹಜ್ಜ್ ನಿರ್ವಹಿಸುತ್ತಿದ್ದೆ. ನನ್ನಲ್ಲಿ ಹಣ ಇದ್ದರೆ ನಾನು ಅದರಿಂದ ದಾನ-ಧರ್ಮ ಮಾಡುತ್ತಿದ್ದೆ" ಎಂಬ ನಿನ್ನ ಉದಾತ್ತ ಸತ್ಯ ಸಂಧವಾದ ನಿಯತ್ತಿನ ಫಲದಿಂದ ಅದು ನೀನು ಮಾಡದಿದ್ದರೂ ಅದರ ಪ್ರತಿಫಲವೆಲ್ಲಾ ನಾನು ನಿನಗೆ ನೀಡಿದ್ದೇನೆ.

 ಸತ್ಕರ್ಮಗಳು ಮಾಡಲು ಸಾಧ್ಯವಾಗದಿದ್ದರೂ ಅದನ್ನು ಮನದಲ್ಲಿ ಆಗ್ರಹಿಸುವುದು ಅಥವಾ ಅದು ಮಾಡುವ ನಿಯ್ಯತ್ತು ಇದ್ದಲ್ಲಿ ಅದರ ಪ್ರತಿಫಲ ಅಲ್ಲಾಹು ನೀಡುವನು ಎಂಬುವುದಕ್ಕೆ ಈ ಮೇಲಿನ ಉದ್ಧರಣಿಯೇ ಸಾಕ್ಷಿ. ಅಲ್ಲಾಹು ಈ‌‌ ಪೈಕಿ ನಮ್ಮನ್ನೂ ಸೇರ್ಪಡಿಸಲಿ, ಆಮೀನ್

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್