ಬದ್ರ್ ಚರಿತ್ರೆ-02
ಬದ್‌ರ್ ಚರಿತ್ರೆ ಭಾಗ-02
ಅಧ್ಯಾಯ-4
ಚಿತ್ರಹಿಂಸೆ
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಬಹಿರಂಗ ಪ್ರಚಾರಕ್ಕೆ ಇಳಿದ ನಂತರದ ದಿನಗಳು ಚಿತ್ರಹಿಂಸೆಯ ದಿನಗಳಾಗಿದ್ದವು. ಈ ಹಿಂಸಾ ಕೃತ್ಯಗಳು ಕೇವಲ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹಾಗೂ ಅವರ ಅನುಯಾಯಿಗಳಿಗೆ ಸೀಮಿತವಾಗಿರಲಿಲ್ಲ. ಪ್ರವಾದಿಯನ್ನು ಬೆಂಬಲಿಸಿದ ಹಾಶಿಂ ಮುತ್ತಲಿಬ್ ವಂಶದ ಸರ್ವರ ಮೇಲೂ ಹಲ್ಲೆ, ದಾಳಿಗಳಾಗುತ್ತಿದ್ದವು. ಹಾಗೆ ನೋಡಿದರೆ, ಅದು ಕೇವಲ ವ್ಯಕ್ತಿ ಹಲ್ಲೆಗಳು ಮಾತ್ರವಾಗಿರಲಿಲ್ಲ. ಅದೊಂದು ಅಘೋಷಿತ ಯುದ್ಧವಾಗಿತ್ತು. ಚಿತ್ರಹಿಂಸೆ, ಪೀಡನೆ, ಕೊಲೆ, ಬಹಿಷ್ಕಾರ, ಮುತ್ತಿಗೆ, ವ್ಯಾಪಾರ ವಹಿವಾಟುಗಳಿಗೆ ತಡೆ, ಸಂಪತ್ತಿನ ಮೇಲೆ ದಾಳಿ, ತೋಟಗಳ ಮೇಲೆ ದಾಳಿ ಮೊದಲಾಗಿ ಯುದ್ಧ ಸರ್ವ ಲಕ್ಷಣಗಳೂ ಪ್ರಕಟವಾಗಿದ್ದವು.
ಅಬ್ದುಲ್ಲಾಹಿಬ್ ಮಸ್ ಊದ್ (ರ) ಹೇಳುತ್ತಾರೆ. ನಾವು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರೊಂದಿಗೆ ಮಸ್ಜಿದುಲ್ ಹರಮ್‌ನಲ್ಲಿದ್ದೆವು. ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ನಮಾಝ್ ಮಾಡುತ್ತಿದ್ದರು. ಕೆಲವು ದಿನಗಳ ಹಿಂದೆ ದ್ಸಬಹ್ ಮಾಡಲಾಗಿದ್ದ ಒಂಟೆಯ ಅವಶೇಷಗಳು ಪಕ್ಕದಲ್ಲಿದ್ದವು. ಅಲ್ಲಿದ್ದ ಅಬೂಜಹಲ್ ತನ್ನ ಜನರೊಂದಿಗೆ ಕೇಳಿದನು.. "ಆ ಕಾಣುವ ಒಂಟೆಯ ಅವಶೇಷಗಳನ್ನು ತಂದು ಮುಹಮ್ಮದನ ಮೇಲೆ ಎಸೆಯಬೇಕು. ಅದಕ್ಕೆ ಯಾರು ಸಿದ್ಧರಿದ್ದೀರಿ ?” ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಸಾಷ್ಟಾಂಗದಲ್ಲಿದ್ದರು. ಉಕ್ಬತುಬುನು ಅಬೀಮುಅಯ್ತ್ಯ ಮಾಲಿನ್ಯವನ್ನು ಎತ್ತಿ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಭುಜದ ಮೇಲಿಟ್ಟನು, ಸಾಷ್ಟಾಂಗದಲ್ಲಿದ್ದ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರಿಗೆ ತಲೆಯೆತ್ತುವುದು ಸಾಧ್ಯವಾಗಲಿಲ್ಲ, ಅದನ್ನು ತೆಗೆದು ಬಿಸಾಡಲು ನಮಗೆ ಹೆದರಿಕೆಯಾದವು.. ಅಷ್ಟರಲ್ಲಿ ಪಕ್ಕದಲ್ಲೇ ಇದ್ದ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಪ್ರಿಯ ಪುತ್ರಿ ಫಾತಿಮಾ ಓಡೋಡಿ ಬಂದು ತಂದೆಯ ಭುಜದ ಮೇಲಿದ್ದ ಮಾಲಿನ್ಯವನ್ನು ತೆಗೆದು ಪಕ್ಕಕ್ಕೆ ಎಸೆದರು..
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಸಾಷ್ಟಾಂಗದಿಂದ ಎದ್ದರು. ನಮಾಝ್ ನಲ್ಲಿ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೀಗೆ ಪ್ರಾರ್ಥಿಸುವುದನ್ನು ನಾನು ಕೇಳಿದೆ.. "ಅಲ್ಲಾಹನೇ, ಮುಳರ್ (ಗೋತ್ರ) ಗೆ ಕಠಿಣ ಶಿಕ್ಷೆಯನ್ನು ನೀಡು.. ಆ ಶಿಕ್ಷೆ ಯೂಸುಫ್ ನೆಬಿ ಅ.ಸ ರವರ ಚರಿತ್ರೆಯಂತೆ ಕ್ಷಾಮವಾಗಿರಲಿ. ಅಲ್ಲಾಹನೇ, ಹಿಶಾಮ್ ನ ಪುತ್ರ ಅಬೂಜಹಲ್, ರಬೀಅನ ಪುತ್ರರಾದ ಉತ್ಬ ,ಶೈಬ, ಉಮ್ಮ ಯತಬ್ನ ಖಲಫಿಗೂ ಶಿಕ್ಷಿಸು"
ಇಬ್ನು ಮಸ್‌ಉದ್ (ರ) ಹೇಳುತ್ತಾರೆ "ಮುಂದಿನ ವರ್ಷ ಆವರೆಲ್ಲಾ ಬದ್ರ್ ನ ಪಾಳು ಬಾವಿಯಲ್ಲಿ ಸತ್ತು ಬಿದ್ದಿರುವುದನ್ನು ನಾನು ಕಂಡೆ "
ಉಸ್ಮಾನ್ (ರ) ರವರು ಹೇಳುತ್ತಾರೆ. ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಕಅಬಾ ಪ್ರದಕ್ಷಿಣೆ ನಡೆಸುತ್ತಿದ್ದರು. ಅವರ ಒಂದು ಕೈಯನ್ನು ಅಬೂಬಕ್ಕರ್ (ರ) ಹಿಡಿದಿದ್ದರು. ಉಕ್ಬತುಬುನು ಅಬೀಮುಅಯ್ತ್ಯ , ಅಬೂಜಹಲ್, ಉಮಯ್ಯುತುಬುನು ಖಲಫ್ ಮೆದಲಾದವರು ಕಅಬಾದ ಸಮೀಪದಲ್ಲಿ ಕುಳಿತಿದ್ದರು. ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಅವರ ಸಮೀಪದಿಂದ ಹಾದು ಹೋದಾಗ ಅವರು ಅಶ್ಲೀಲಕರವಾದ ಏನೋ ಬೈಗುಳ ಬೈದರು. ಆ ಮಾತಿನಿಂದ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರಿಗೆ ನೋವಾಗಿತ್ತೆಂಬುದು ಅವರ ಮುಖಭಾವದಿಂದಲೇ ತಿಳಿಯುತಿತ್ತು. ನಾನು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಬಳಿಗೆ ಹೋದೆ. ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ನನ್ನ ಹಾಗೂ ಅಬೂಬಕ್ಕರ್ (ರ) ರವರ ಕೈಬೆರಳುಗಳನ್ನು ಹಿಡಿದು ಪ್ರದಕ್ಷಿಣೆ ಮುಂದುವರಿಸಿದರು. ಮತ್ತೆ ಅವರ ಪಕ್ಕದಲ್ಲಿ ಹಾದು ಹೋದಾಗ ಅಬೂಜಹಲ್ ಹೇಳಿದನು...
"ದೇವರ ಮೇಲೆ ಸತ್ಯ. ಸಮುದ್ರದಲ್ಲಿ ಒಂದು ರೋಮ ಒದ್ದೆಯಾಗುವಷ್ಟು ನೀರಿರುವ ಕಾಲದವರೆಗೆ ನಿನ್ನೊಂದಿಗೆ ಸಂಧಾನವಿಲ್ಲ. ನಮ್ಮ ಪೂರ್ವಿಕರು ಆರಾಧಿಸುವುದನ್ನು ನೀನು ವಿರೋಧಿಸುತ್ತಿರುವೆಯಲ್ಲವೇ??" ಈ ವೇಳೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ತಮ್ಮಷ್ಟಕ್ಕೆ ಕೇಳಿದರು. "ಅದು ಯಾವ ದಿನ ಸಂಭವಿಸುತ್ತದೆ"
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಮುಂದೆ ನಡೆದರು. ಪ್ರದಕ್ಷಿಣೆಯ ಮೂರನೇ ಸುತ್ತಿನಲ್ಲೂ ಅವರು ಅಶ್ಲೀಲ ಬೈಗುಳ, ನಿಂದನೆಗಳನ್ನು ಮುಂದುವರಿಸಿದರು. ನಾಲ್ಕನೇ ಸುತ್ತಿನಲ್ಲಿ ಅವರು ಪ್ರವಾದಿಯ ಮೇಲೆ ಕೈ ಹಾಕುವ ಯತ್ನ ಮಾಡಿದರು. ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಕಾಲು ಹಿಡಿದು ಎಳೆಯಲು ಅಬೂಜಹಲ್ ಮುಂದಾದನು. ನಾನವನನ್ನು ಹಿಂದಕ್ಕೆ ತಳ್ಳಿ ಹಾಕಿದೆ. ಅಬೂಜಹಲ್ ನೆಲಕ್ಕಪ್ಪಳಿಸಿದನು. ಅಬೂಬಕ್ಕರ್ (ರ) ಉಮಯ್ಯುಬುನು ಖಲಫಿ ಹಾಗೂ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಉಕ್ಬತುಬುನು ಅಬೀಮುಅಯ್ತನನ್ನು ಹಿಂದಕ್ಕೆ ತಳ್ಳಿದರು. ನೆಲಕ್ಕೆ ಬಿದ್ದ ಮೂವರೂ ಜಾಗ ಖಾಲಿ ಮಾಡಿದರು. ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಸ್ವಲ್ಪ ಹೊತ್ತು ಅಲ್ಲಿಯೇ ನಿಂತರು..
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು.. " ತಿಳಿಯಿರಿ ಅಲ್ಲಾಹು ಸತ್ಯ.. ಶಿಕ್ಷೆ ನಿಮ್ಮ ಮೇಲೆ ಎರಗುವವರೆಗೆ ನೀವು ಹಿಂದೆ ಸರಿಯುವುದಿಲ್ಲ"
ಉಸ್ಮಾನ್ (ರ) ಮುಂದುವರಿಸುತ್ತಾರೆ.. "ನಡುಗದೇ ಇದ್ದ ಒಬ್ಬನೇ ಒಬ್ಬ ವ್ಯಕ್ತಿ ಅವರಲ್ಲಿರಲಿಲ್ಲ... ಅವರು ನಡುಗುತ್ತಲೇ ಇದ್ದರು. ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತಿದ್ದರು. ಪ್ರವಾದಿಗೆ ಸಂಬಂಧಿಸಿದಂತೆ ಅತ್ಯಂತ ಕೆಟ್ಟ ಜನರು ನೀವಾಗಿರುವಿರಿ"
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಮನೆಗೆ ಹೋದರು. ನಾವು ಅವರನ್ನು ಹಿಂಬಾಲಿಸಿದೆವು. ಮನೆಯ ಬಾಗಿಲು ಮುಟ್ಟಿದೆವು. ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಮೆಟ್ಟಿಲಲ್ಲಿ ನಿಂತರು. ನಂತರ ನಮ್ಮನ್ನು ಉದ್ದೇಶಿಸಿ ಹೇಳಿದರು.
" ನೀವು ಸಂತೋಷ ಪಡಿರಿ.. ಖಂಡಿತವಾಗಿಯೂ ಅಲ್ಲಾಹನು ಅವನ ಧರ್ಮವನ್ನು ವಿಜಯಗೊಳಿಸುವನು.. ಅವನ ವಚನವನ್ನು ಅವನು ಪೂರ್ಣಗೊಳಿಸುವನು. ಅವನ ದೂತನಿಗೆ ನೆರವಾಗುವನು. ನಿಶ್ಚಯವಾಗಿಯೂ, ಬಹುಬೇಗನೇ ಈ ದುಷ್ಟರನ್ನು ನಿಮ್ಮ ಕೈಯಲ್ಲೇ ಅವನು ವಧಿಸುವನು” ನಂತರ ನಾವು ಅಲ್ಲಿಂದ ಹೋದೆವು.
"ಅಲ್ಲಾಹನ ಮೇಲಾಣೆ , ಬದ್ರ್ ನಲ್ಲಿ ನಮ್ಮ ಮೇಲೆ ಎರಗಿ ಬಂದ ಅವರು ನಮ್ಮ ಕೈಯಲ್ಲೇ ವಧಿಸಲ್ಪಡುವುದನ್ನು ನಾನು ಕಣ್ಣಾರೆ ಕಂಡೆ"
-ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಪರಮ ಶತ್ರುಗಳಾಗಿದ್ದ ಅಬೂಲಹಬ್ ಹಾಗೂ ಉಮ್ಮು ಜಮೀಲರನ್ನು ವಿಮರ್ಶಿಸುವ ಖುರ್‌ಆನ್ ವಾಕ್ಯಗಳು ಅವತೀರ್ಣಗೊಂಡಾಗ ಕೋಲಾಹಲವೇ ಉಂಟಾದವು. ಉಮ್ಮು ಜಮೀಲ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಅಶ್ಲೀಲವಾಗಿ ನಿಂದಿಸಿದರು.. ಅವರು ನಡೆಯುತ್ತಿದ್ದ ದಾರಿಯಲ್ಲಿ ಕಲ್ಲು ಮುಳ್ಳು ಹಾಗೂ ಇನ್ನಿತರ ಮಾಲಿನ್ಯಗಳನ್ನು ಎಸೆದು ಹಿಂಸಿಸಿದರು.. ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಮೇಲೆ ಎಸೆಯಲು ಕಲ್ಲುಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದರು. ಆದರೆ, ಈ ಎಲ್ಲಾ ಸಂದರ್ಭಗಳಲ್ಲಿ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಸಹನೆ ಪಾಲಿಸಿದರು...
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಪುತ್ರಿಯರಾದ ರುಖಿಯಾ ಹಾಗೂ ಉಮ್ಮುಕುಲ್ಸುಂರನ್ನು ಅಬೂಲಹಬ್ರ ಪುತ್ರರಾದ ಉತ್ಬ ಹಾಗೂ ಉತೈಬ ವಿವಾಹವಾಗಿದ್ದರು. ಇದು ಮುಶ್ರಿಕ್ ಗಳೊಂದಿಗಿನ ವಿವಾಹವನ್ನು ನಿಷೇಧಿಸುವುದಕ್ಕೂ ಮೊದಲು ನಡೆದ ವಿವಾಹವಾಗಿತ್ತು. ಅವರು ಪರಸ್ಪರ ಲೈಂಗಿಕ ಬಂಧದಲ್ಲೇರ್ಪಟ್ಟಿರಲಿಲ್ಲ. ಅಬೂಲಹಬನ ವಿರುದ್ದ ಖುರ್‌ಆನ್ ವಚನಗಳು ಅವತೀರ್ಣಗೊಂಡ ಬಳಿಕ ಅಬೂಲಹಬ್ ತಮ್ಮ ಪುತ್ರರನ್ನು ಕರೆದು ಪತ್ನಿಯರನ್ನು ತ್ಯಜಿಸುವಂತೆ ಆಜ್ಞಾಪಿಸಿದನು.. ಮಕ್ಕಳಿಬ್ಬರೂ ತಂದೆಯ ಮಾತನ್ನು ಅನುಸರಿಸಿದರು. ಉತೈಬ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಭೇಟಿಯಾದನು. "ನಿನ್ನ ಧರ್ಮವನ್ನು ನಾನು ವಿರೋಧಿಸುತ್ತೇನೆ. ಆದ್ದರಿಂದ ನಿನ್ನ ಪುತ್ರಿಯನ್ನೂ ಉಪೇಕ್ಷಿಸುತ್ತಿರುವೆನು. ನಿನ್ನನ್ನು ನಾನು ಇಷ್ಟಪಡುವುದಿಲ್ಲ. ನೀನು ನನ್ನನ್ನು ಇಷ್ಟಪಡಬೇಡ" ಎಂದು ಹೇಳಿ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಬಟ್ಟೆಯನ್ನು ಎಳೆದು ಹರಿದದ್ದಲ್ಲದೆ, ಮುಖಕ್ಕೆ ಉಗುಳಿದನು.. ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರಿಗೆ ಅಪಾರ ಯಾತನೆಯನ್ನುಂಟು ಮಾಡಿದ ಅನುಭವವಾಗಿತ್ತು ಇದು. ಅವರು ಪ್ರಾರ್ಥಿಸಿದರು. "ಅಲ್ಲಾಹನೇ ನೀನು ಸಿಂಹಗಳಲ್ಲಿ ಒಂದು ಸಿಂಹದ ಮೂಲಕ ಇವನ ಮೇಲೆ ಅಧಿಕಾರ ಸ್ಥಾಪಿಸು"
ಈ ಘಟನೆ ನಡೆಯುವಾಗ ಅಬೂತಾಲಿಬ್ ಜೊತೆಗಿದ್ದರು. ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಪ್ರಾರ್ಥನೆಯ ಪರಿಣಾಮವನ್ನು ಅರಿತಿದ್ದ ಅವರು ಕೇಳಿದರು.. "ಸಹೋದರ ಪುತ್ರ , ಹೀಗೆ ಪ್ರಾರ್ಥಿಸುವ ಅಗತ್ಯವಿತ್ತೇ..?"
ಒಂದು ವರ್ತಕ ಸಂಘದೊಂದಿಗೆ ಅಬೂಲಹಬ್ ಹಾಗೂ ಉತೈಬ ಸಿರಿಯಾ ದೇಶಕ್ಕೆ ಹೊರಟರು. ರಾತ್ರಿ ತಂಗಲು ಒಂದು ಕಡೆ ಇಳಿದರು. ಉತೈಬ ಮಧ್ಯದಲ್ಲೂ ಸುತ್ತಲೂ ವರ್ತಕರು ಮಲಗಿದರು. ಅವರ ಜೊತೆಗೆ ಅವರ ಒಂಟೆ, ಕುದುರೆಗಳಿದ್ದವು. ತಡರಾತ್ರಿಯಾಗಿದ್ದವು. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಇದಕ್ಕಿದ್ದಂತೆ ಪ್ರತ್ಯಕ್ಷಕೊಂಡು ಸಿಂಹವೊಂದು ಉತೈಬರನ್ನು ಕೊಂದವು...
ಅಂತ್ಯಶ್ವಾಸ ಎಳೆಯುತ್ತಾ ಆತ ಹೇಳಿದನು. "ಮುಹಮ್ಮದನ ಮಾತುಗಳು ಸತ್ಯವಾಗುತ್ತದೆಂದು ನಾನು ನಿಮ್ಮೊಂದಿಗೆ ಹೇಳಿರಲಿಲ್ಲವೇ..?" "ಮುಹಮ್ಮದನ ಪ್ರಾರ್ಥನೆ ಫಲಿಸದಿರಲಾರದೆಂದು ನನಗೂ ಖಚಿತವಿತ್ತು" ಅಬೂಜಹಲ್ ಹೇಳಿದನು. ಅಬೂಲಹಬನ ಇನ್ನೋರ್ವ ಪುತ್ರ ಉತ್ಬ ಮಕ್ಕಾ ವಿಜಯದ ಸಂದರ್ಭದಲ್ಲಿ ಇಸ್ಲಾಮ್ ಸ್ವೀಕರಿಸಿದರು..
ತುಳಿತ, ಕುತ್ತಿಗೆಗೆ ಬಟ್ಟೆ ಸುತ್ತಿ ಎಳೆಯುವುದು, ಕೊಲೆಯತ್ನ, ಗಡ್ಡ, ತಲೆಕೂದಲನ್ನು ಎಳೆಯುವುದು ಮೊದಲಾದ ಪೀಡನೆಗಳನ್ನು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಅನುಭವಿಸಿದ್ದಾರೆ.. ಅಬೂಬಕ್ಕರ್ (ರ) ಸಂದರ್ಭೋಚಿತ ನಡೆಯುವ ಅನೇಕ ಸಂದರ್ಭಗಳಲ್ಲಿ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ರಕ್ಷಿಸಿದೆ...
"ತ್ವಾಇಫ್‌ನತ್ತ"
ಮಕ್ಕಾದಲ್ಲಿ ನಿರಂತರ ಚಿತ್ರಹಿಂಸೆಗಳನ್ನು ಎದುರಿಸಬೇಕಾದಾಗ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ತ್ವಾಇಫ್ ಗೆ ಹೋಗಲು ನಿರ್ಧರಿಸಿದರು. ಝೈದುಬುನು ಹಾರಿಸ್ ಅವರ ಜೊತೆಗಿದ್ದರು. ತ್ವಾಇಫ್ ನಲ್ಲಿ ತಮ್ಮ ದೌತ್ಯಕ್ಕೆ ಸ್ವೀಕೃತಿ ಹಾಗೂ ಪ್ರಚಾರ ಲಭಿಸಬಹುದೆಂಬ ಪ್ರತೀಕ್ಷೆ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರಿಗಿತ್ತು. ಆದರೆ, ಫಲ ನಿರಾಶೆಯಾಗಿತ್ತು. ತ್ವಾಇಫ್ ನ ಜನರು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರನ್ನು ಅವಗಣಿಸಿದ್ದಲ್ಲದೆ, ಅವಿವೇಕಿಗಳನ್ನು ಹಾಗೂ ಮಕ್ಕಳನ್ನು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಮೇಲೆ ಆಕ್ರಮಣ ಎಸಗುವಂತೆ ಪ್ರಚೋದಿಸಿದರು. ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ದಾರಿಯಲ್ಲಿ ನಡೆದು ಹೋಗುತ್ತಿರಬೇಕಾದರೆ ಅವರೆಲ್ಲರೂ ದಾರಿ ಎರಡೂ ಬದಿಗಳಲ್ಲಿ ನಿಂತು ಪ್ರತೀ ಹೆಜ್ಜೆಗೊಂದರಂತೆ ಕಲ್ಲೆಸೆಯಲಾರಂಭಿಸಿದರು. ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ದೇಹದಿಂದ ರಕ್ತ ಚಿಮ್ಮಿದವು. ಪಾದಗಳು ಕೆಂಪಾದವು. ನೋವು, ದಣಿವಿನಿಂದ ಮುಂದೆ ನಡೆಯಲಾಗದೆ ಒಂದೆಡೆ ಕೂತರು. ಆಗವರು ಭುಜ ಹಿಡಿದು ಅಲುಗಾಡಿಸಿ ಎದ್ದು ನಡೆಯುವಂತೆ ಒತ್ತಾಯಿಸಿದರು. ನಡೆದಾಗ ಮತ್ತೆ ಕಲ್ಲುಗಳನ್ನು ಎಸೆಯಲಾರಂಭಿಸಿದರು....
ಈ ದೃಶ್ಯವನ್ನು ಕಂಡ ತ್ವಾಇಫ್ ನ ಜನರು ಗಹಗಹಿಸಿ ನಕ್ಕರು.. ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ರಕ್ಷಿಸಲು ಶತಾಯಗತಾಯ ಪ್ರಯತ್ನಿಸುತ್ತಿದ್ದ ಝೈದುಬುನು ಹಾರಿಸ್ (ರ) ರ ತಲೆಯಿಂದ ರಕ್ತ ಚಿಮ್ಮಿದವು.. ರಕ್ತ ಸುರಿಯುತ್ತಿದ್ದ ಪಾದಗಳೊಂದಿಗೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ತ್ವಾಇಫ್ ನ ದ್ರಾಕ್ಷಿಯ ತೋಟವೊಂದರಲ್ಲಿ ಆಶ್ರಯ ಪಡೆದರು. ನಿರಾಶೆ ಹಾಗೂ ದುಃಖಭರಿತರಾಗಿದ್ದ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ತಮ್ಮ ಮನೋಕ್ಲೇಶವನ್ನು ಅಲ್ಲಾಹನೊಂದಿಗೆ ಹೇಳಿಕೊಂಡರು..
"ಅಲ್ಲಾಹನೇ, ನಿನಗೆ ನನ್ನ ಮೇಲೆ ಕೋಪವಿಲ್ಲದಿದ್ದರೆ ನನಗಿದೇನೂ ಸಮಸ್ಯೆಯಲ್ಲ"
ಆ ತೋಟ ರಬಿಅರ ಪುತ್ರರಾದ ಉತ್ಬ ಹಾಗೂ ಶೈಬತ್ ರ ಒಡೆತನದಲ್ಲಿದ್ದವು. ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಪಿತಾಮಹರಾಗಿರುವ ಅಬ್ದು ಮನಾಫರ ಪುತ್ರ ಅಬ್ದು ಶಂಸರ ಪುತ್ರ ನೇ ರಬಿಅ್ : ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ದಯನೀಯ ಸ್ಥಿತಿ ಕಂಡು ಉತ್ಬ ಹಾಗೂ ಶೈಬರ ಮನಸು ಕಲಕಿದವು. ಕುಟುಂಬ ಬಂಧ ಅವರ ಹೃದಯದಲ್ಲಿ ದಯೆಯನ್ನು ಉಕ್ಕಿಸಿದವು. ಒಂದು ಪಾತ್ರೆಯಲ್ಲಿ ಒಂದಿಷ್ಟು ದ್ರಾಕ್ಷೆಯನ್ನು ಸೇವಕ ಉದಾಸ್‌ನ ಮೂಲಕ ಕೊಟ್ಟು ಕಳುಹಿಸಿದರು.
ಪಾತ್ರೆಯತ್ತ ಕೈಚಾಚಿದ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಬಿಸ್ಮಿಲ್ಲಾಹಿ ರ್ರಹ್ಮಾನ್ ರ್ರಹೀಮ್ ಎಂದು ಹೇಳಿ ಸೇವಿಸಿದರು. "ಉದಾಸಿ ಗೆ ಆಶ್ಚರ್ಯವಾದವು.. ಈ ಊರಿನ ಯಾರೂ ಹೀಗೆ ಹೇಳುವುದಿಲ್ಲವಲ್ಲಾ..?”
"ನೀನು ಎಲ್ಲಿಯವನು..? ನಿನ್ನ ಧರ್ಮ ಯಾವುದು..?"
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಮರು ಪ್ರಶ್ನೆ ಹಾಕಿದರು.
" ನಾನು ಕ್ರಿಶ್ಚಿಯನ್.. ನಿನವದವನು.
"ಪ್ರವಾದಿ ಯೂನುಸ್ರ ನಾಡಿನವನಲ್ಲವೇ.. ? ?"
“ಯೂನಸ್‌ರ ಬಗ್ಗೆ ತಮಗೆ ಹೇಗೆ ತಿಳಿಯಿತು..? ”
“ಅವರು ನನ್ನ ಸಹೋದರರಾಗಿದ್ದಾರೆ.. ಅವರು ಪ್ರವಾದಿಯಾಗಿದ್ದರು. ನಾನು ಸಹ ಪ್ರವಾದಿಯಾಗಿರುವೆನು.."
ತಕ್ಷಣವೇ ಉದಾಸ್ ಬಾಗಿ, ಪ್ರವಾದಿಯ ಹಣೆ ಚುಂಬಿಸಿದನು..
ಉದಾಸ್ ಹಿಂದಿರುಗಿದಾಗ ಆತನ ಯಜಮಾನ ಕೇಳಿದನು. '" ನಿನಗೇನಾಯಿತು..?"ನೀನೇಕೆ ಆ ವ್ಯಕ್ತಿಯ ಹಣೆ, ಕೈಗಳನ್ನು ಚುಂಬಿಸಿದೆ.. ?”
"ಯಜಮಾನರೆ” ಉದಾಸ್ ಹೇಳತೊಡಗಿದನು.
“ಈ ಭೂ ಲೋಕದಲ್ಲಿ ಅವರಷ್ಟು ಉತ್ತಮರಾದ ಇನ್ನೋರ್ವ ವ್ಯಕ್ತಿಯಿಲ್ಲ. ಒಬ್ಬ ಪ್ರವಾದಿಯಾಗಿ ಇನ್ಯಾರಿಗೂ ತಿಳಿಯದ ಕೆಲವೊಂದು ವಿಷಯಗಳನ್ನು ಅವರು ನನಗೆ ತಿಳಿಸಿದರು..
ಉತ್ಬ ಹಾಗೂ ಶೈಬ ಉದಾಸನನ್ನು ಬೈದರು.
"ಇದಾಸ್ ನಿನಗ ನಾಶ, ನಿನ್ನನ್ನು ಆತ ನಿನ್ನ ಈ ಧರ್ಮದಿಂದ ಹಾದಿ ತಪ್ಪಿಸದಿರಲಿ, ಆತನ ಧರ್ಮಕ್ಕಿಂತ ನಿನ್ನ ಧರ್ಮವೇ ಎಷ್ಟೋ ಮೇಲು.."
ಪ್ರವಾದಿ ಸಲ್ಲಲ್ಲಾಹು ಅಲೈಹಿವಲ್ಲಭರ ತಾಇಫ್ ಯಾತ್ರೆ ಯಶಸ್ವಿಯಾಗಲಿಲ್ಲ. ಬಾಣಲೆಯಿಂದ ಬೆಂಕಿಗೆ ಬಿದ್ದ ಪ್ರತೀತಿಯನ್ನುಂಟು ಮಾಡಿದವು. ಅದಲ್ಲದೆ, ಮಕ್ಕಾಗೆ ಹಿಂದಿರುಗುವ ಹಾಗೂ ತಮ್ಮ ಗೋತ್ರದವರ ಸಂರಕ್ಷಣೆ ಲಭಿಸುವ ಅವಕಾಶವೂ ಇಲ್ಲದಾಯಿತು. ತ್ವಾಇಫ್ ನಲ್ಲಿ ತಮಗಾದ ಅನುಭವ ಶತ್ರುಗಳಿಗೆ ತಿಳಿದರೆ ಅದು ಚಿತ್ರಹಿಂಸೆಯ ಸರಣಿಗಳನ್ನು ಇನ್ನಷ್ಟು ಹೆಚ್ಚಿಸೀತೆಂಬ ಆತಂಕ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮಲಗಿದ್ದವು. ಆದ್ದರಿಂದ ಮಕ್ಕಾದಲ್ಲಿ ತನಗೆ ಸಂರಕ್ಷಣೆ ನೀಡಬೇಕೆಂದು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ತನ್ನೋರ್ವ ದೂತನ ಮೂಲಕ ಮುತ್ವ್ಇಮುಬುನು ಆದಿಯ್ಯ್ ರೋಂದಿಗೆ ಆಗ್ರಹಿಸಿದರು.. ಆತ ಅದಕ್ಕೆ ಒಪ್ಪಿಕೊಂಡ.. ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಮಕ್ಕಾಕೆ ಹಿಂದಿರುಗಿದರು.. (ಡಾ , ಮುಹಮ್ಮದ್ ಅಬ್ದು ಯಮಾನಿ - ಬದ್ಲುಲ್ ಕುಬ್ರ ಪುಟ : 62)..
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಅನುಯಾಯಿಗಳು ಸಾಧುಗಳಾಗಿದ್ದರು. ಇಸ್ಲಾಮ್ ಸ್ವೀಕರಿಸಿದ ಏಕೈಕ ಕಾರಣಕ್ಕೆ ಅವರು ನಾನಾತರದ ಹಿಂಸೆ, ಪೀಡನೆಗಳಿಗೆ ಎರವಾಗಬೇಕಾಯಿತು. ಯಾಸಿರ್, ಪತ್ನಿ ಸುಮಯ್ಯಾ, ಮಕ್ಕಳಾದ ಅಮ್ಮಾರ್ , ಅಬ್ದುಲ್ಲಾ ಮೊದಲಾದವರನ್ನು ಖುರೈಷಿಗಳು ಕ್ರೂರವಾಗಿ ಹಿಂಸಿಸಿದರು. ಖುರೈಷಿಗೆ ಹಿಂಸೆ ಸಹಿಸಲಾರದೆ ಯಾಸಿರ್ ಮರಣ ಹೊಂದಿದರು. ಸುಮಯಾರಿಗೆ ಅಬೂಜಹಲ್ ಚಿತ್ರಹಿಂಸೆ ನೀಡುತ್ತಿದನು. ಬೆಂಕಿಗೆ ಕಾದ ಮರಳ ಮೇಲೆ ವಿವಸ್ತರನ್ನಾಗಿ ಮಲಗಿಸಿ , ದಾಹದಿಂದ ಗಂಟಲು ಒಣಗಿ, ಒಡೆದು,ರಕ್ತ ಒಸರುತ್ತಿದ್ದರೂ, ನೀರು ನೀಡದೆ, ಹೊಟ್ಟೆ ಹಸಿವೆಯಿಂದ ನರಳುತ್ತಿದ್ದರೂ ಆಹಾರ ನೀಡದೆ, ಸುಡು ಬಿಸಿಲಿಗೆ ಕೆಂಡದಂತೆ ಸುಡುತ್ತಿದ್ದ ಲೋಹದ ವಸ್ತ್ರ ಧರಿಸುವಂತೆ ಬಲವಂತಪಡಿಸಿ ಅವರು ಅಮಾರ್ (ರ) ಗೆ ಚಿತ್ರಹಿಂಸೆ ನೀಡಿದರು.. ಮರಣ ಯಾತನೆಯಲ್ಲಿ ನರಳುತ್ತಿದ್ದ ಅಮಾರ್( ರ ) ರನ್ನು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಸಂತೈಸಿದರು.
"ಯಾಸಿರ್ ಕುಟುಂಬದ ಸದಸ್ಯರೇ ತಾಳೆ ವಹಿಸಿರಿ, ನಿಮಗೆ ಸ್ವರ್ಗವಿದೆ"
ಇಸ್ಲಾಮ್ ಸ್ವೀಕರಿಸಿದ ಕಾರಣಕ್ಕೆ ಉಮ್ಮು ಅಮ್ಮಾರ್‌ರ ಸೇವಕನಾಗಿದ್ದ ಖಬ್ಬಾಬುನುಲ್ ಅರತ್ವರನ್ನು ಕಾದ ಕಬ್ಬಿಣದ ಮೂಲಕ ಹಿಂಸಿಸಲಾಗಿತ್ತು. ನನ್ನ ಬೆನ್ನ ಮೇಲೆ ಅವರು ಬೆಂಕಿ ಕೆಂಡಗಳನ್ನಿಡುತ್ತಿದ್ದರು.. ಆದರ ಪರಿಣಾಮ ಬೆನ್ನಿನಿಂದ ಜಿನುಗುತ್ತಿದ್ದ ದ್ರವವೂ ಬೆಂಕಿಯನ್ನು ಆರಿಸುತ್ತಿದ್ದವು. ಎಂದು ಖಬ್ಬಾಬ್ ಹೇಳಿದ್ದಾರೆ.. ಶತ್ರುಗಳ ಹಿಂಸೆ ಅಸಹನೀಯವೀದಾಗ ಅವರೊಮ್ಮೆ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರೊಂದಿಗೆ ಹೇಳಿದರು.. ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಅವರಿಗೆ ತ್ಯಾಗ, ಸಹನೆಯೆಂಬ ಮಹೋನ್ನತ ಗುಣಗಳನ್ನು ಕಲಿಸಿಕೊಟ್ಟರು..
"ನಿಮ್ಮ ಪೂರ್ವಿಕರನ್ನು ಇದಕ್ಕಿಂತಲೂ ಕ್ರೂರವಾಗಿ ಹಿಂಸಿಸಲಾಗಿತ್ತು. ಆದರೆ, ಅವರೆಂದೂ ಧರ್ಮದಿಂದ ಹಿಂದಕ್ಕೆ ಸರಿಯಲಿಲ್ಲ. ನಿಶ್ಚಯವಾಗಿಯೂ, ಈ ಧರ್ಮವನ್ನು ಅಲ್ಲಾಹನು ವಿಜಯಿಯಾಗಿಸುವನು. ಹಳರ್ ಮೌತ್ ನಿಂದ ಸನ್‌ಆಗೆ ಒಬ್ಬ ಯಾತ್ರಿಕನು ಅಲ್ಲಾಹನನ್ನು, ತನ್ನ ಪ್ರಾಣಿಗಳಿಗೆ ಸಂಬಂಧಿಸಿದಂತೆ ಚೆನ್ನಾಯಿಗಳನ್ನು ಹೊರತುಪಡಿಸಿ ನಿರಾತಂಕವಾಗಿ ಯಾತ್ರೆ ಮಾಡುವುದು ಸಾಧ್ಯವಾಗುತ್ತದೆ ಎಂದು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು..
ಒಮ್ಮೆ ಖಬ್ಬಾಬ್ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರೊಂದಿಗೆ ಮಾತನಾಡುವುತ್ತಿರುವುದನ್ನು ಉಮ್ಮು ಅಮ್ಮಾರ್ ಕಂಡರು. ಅಷ್ಟಕ್ಕೇ ಆಕೆಯ ಸಿಟ್ಟು ನೆತ್ತಿಗೇರಿದವು. ಕಾದ ಕಬ್ಬಿಣವನ್ನು ತಂದು ಅವರ ತಲೆಗಿಟ್ಟರು ಯ. ತಲೆಯಿಂದ ಹೊಗೆಯೆದ್ದವು.. ಅಸಹನೀಯ ನೋವಿನಿಂದ ಚೀರಾಡುತ್ತಾ ಖಬ್ಬಾಬ್ ಪ್ರಜ್ಞಾಹೀನರಾಗಿ ಕುಸಿದು ಬಿದ್ದರು. ಪ್ರಾರ್ಥಿಸುವುದಲ್ಲದೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರಿಗೆ ಬೇರೇನೂ ಮಾಡುವುದು ಸಾಧ್ಯವಾಗಲಿಲ್ಲ.. “ಅಲ್ಲಾಹನೇ, ಖಬ್ಬಾಬ್‌ಗೆ ನೀನು ಶಿಫಾ ನೀಡು” ಎಂದು ಪ್ರಾರ್ಥಿಸಿದರು. ಆ ಪ್ರಾರ್ಥನೆಗೆ ಉತ್ತರ ಲಭಿಸಿದವು. ಉಮ್ಮು ಅಮ್ಮಾರ್ ಗೆ ತೀವ್ರ ತಲೆ ನೋವು ಕಾಣಿಸಿಕೊಂಡವು. ತಲೆಗೆ ಬಿಸಿ ಮುಟ್ಟಿಸುವುದೇ ಅದಕ್ಕೆ ಚಿಕಿತ್ಸೆಯಾಗಿತ್ತು.. ತಲೆನೋವು ಅಸಹನೀಯವಾದಾಗಲೆಲ್ಲಾ ಉಮ್ಮು ಅಮ್ಮಾರ್ ಖಬ್ಬಾಬ್ರನ್ನು ಕರೆದು ತಲೆಗೆ ಬಿಸಿ ಮುಟ್ಟಿಸುವಂತೆ ಹೇಳುತ್ತಿದ್ದರು. ಖಬ್ಬಾಬ್ ಆಕೆಯ ತಲೆಗೆ ಬಿಸಿ ಮುಟ್ಟಿಸುತ್ತಿದ್ದರು !!!
ತ್ವಲ್ಹತ್ ಬ್ನು ಉಬೈದಿಲ್ಲಾಹಿತೈಮಿ ವ್ಯಾಪಾರಿಯಾಗಿದ್ದರು. ಸ್ವದೇಶ ಹಾಗೂ ವಿದೇಶಗಳಲ್ಲಿ ಅವರಿಗೆ ವ್ಯಾಪಾರ ವಹಿವಾಟುಗಳಿದ್ದವು. ಅವರ ಬದುಕನ್ನೇ ಬದಲಾಯಿಸುವ ಒಂದು ಘಟನೆ ನಡೆದವು. ಅದೊಂದು ಚರಿತ್ರಾರ್ಹ ಘಟನೆಯಾಗಿತ್ತು. ತ್ವಲ್ಹತ್ ಹೇಳುತ್ತಾರೆ..
"ನಾವು ಬುಸ್ರಾ ಮಾರುಕಟ್ಟೆಯಲ್ಲಿದ್ದವು. ಆಗೊಬ್ಬ ಕ್ರೈಸ್ತ ಪುರೋಹಿತನೊಬ್ಬ ನಮ್ಮನ್ನು ಕರೆದು ಹೇಳಿದರು.
" ವ್ಯಾಪಾರಿ ಸಮೂಹವೇ ,ಈ ಸೀಝನ್ ನಲ್ಲಿ ವ್ಯಾಪಾರಕ್ಕೆ ಬಂದವರ ಕೂಟದಲ್ಲಿ ಹರಂ ನಿವಾಸಿಗಳಿದ್ದಾರೆಯೇ..?" ಈ ವೇಳೆ ನಾನು ಆ ಪುರೋಹಿತನ ಸಮೀಪದಲ್ಲೇ ಇದೆ. ಆದ್ದರಿಂದ ಕೂಡಲೇ ನಾನು ಪುರೋಹಿತನೊಂದಿಗೆ ಹೇಳಿದೆ..
“ಇದೋ ನಾನಿದ್ದೇನೆ. ನಾನು ಹರಂ ನಿವಾಸಿ "
" ನಿಮ್ಮಲ್ಲಿ ಅಹ್ಮದ್ ಪ್ರತ್ಯಕ್ಷರಾದರೋ..?" ಪುರೋಹಿತ ಕೇಳಿದನು.
"ಯಾವ ಅಹ್ಮದ್..? ”
"ಅಬ್ದುಲ್ ಮುತ್ತಲಿಬರ ಪುತ್ರ ಅಬ್ದುಲ್ಲಾ ಪುತ್ರ, ಇದು ಅವರು ಪ್ರವಾದಿಯಾಗಿ ನಿಯೋಜಿತಗೊಳ್ಳುವ ಮಾಸವಾಗಿದೆ. ಅವರು ಅಂತ್ಯ ಪ್ರವಾದಿಯಾಗಿದ್ದಾರೆ. ಅವರು ನಿಮ್ಮ ಭೂಮಿಯಲ್ಲಿ- ಹರಂನಲ್ಲಿ ಸತಕಗೊಳ್ಳುವರು. ಕಪ್ಪು ಶಿಲೆಗಳೂ ,ಖರ್ಜೂರದ ತೋಟಗಳಿರುವ ,ನೀರು ಹರಿಯುವ,ತಗ್ಗು ನೆಲವಿರುವ ಪ್ರದೇಶಕ್ಕೆ ಅವರು ಪಲಾಯನ ಮಾಡುವರು.. ಯುವಕರೆ!! ಅವರನ್ನು ಗುರುತಿಸುವಲ್ಲಿ ವಿಫಲವಾಗದಂತೆ ಎಚ್ಚರಿಕೆ ವಹಿಸಿರಿ ”
ತ್ವಲ್ಹತ್ ಹೇಳುತ್ತಾರೆ.. ಪುರೋಹಿತನ ಮಾತುಗಳು ನನ್ನ ಹೃದಯವನ್ನು ಸ್ಪರ್ಶಿಸಿದವು. ನಾನು ನೇರ ಒಂಟೆಯತ್ತ ಹೋದೆ. ಒಂಟೆಯನ್ನು ಯಾತ್ರೆಗೆ ಸಿದ್ಧಗೊಳಿಸಿ, ವರ್ತಕ ಸಂಘವನ್ನು ಹಿಂದೆಯೇ ಬಿಟ್ಟು, ಮಕ್ಕಾದತ್ತ ಧಾವಿಸಿದೆನು. ಮಕ್ಕಾ ಮುಟ್ಟಿದಾಗ ಮನೆಯವರೊಂದಿಗೆ ಕೇಳಿದೆ..
"ನಾನು ಹೋದ ನಂತರ ಮಕ್ಕಾದಲ್ಲಿ ಏನಾದರು ವಿಶೇಷವಾದುದು ನಡೆಯಿತೇ..??"
"ಹೌದು!! ಒಂದು ವಿಶೇಷ ಘಟನೆ ನಡೆಯಿತು.. ಅಬ್ದುಲ್ಲಾರ ಪುತ್ರ ಮುಹಮ್ಮದ್ ತನ್ನನ್ನು ತಾನು ಪ್ರವಾದಿ ಎಂದು ವಾದಿಸಿ ರಂಗ ಪ್ರವೇಶಿಸಿದ್ದಾನೆ. ಅಬೂ ಖುಹಾಫರ ಪುತ್ರ ಅಬೂಬಕ್ಕರ್ ಅವರ ಅನುಯಾಯಿಯಾಗಿದ್ದಾರೆ.."
ತ್ವಲ್ಹತ್ ನೆನಪಿಸಿಕೊಳ್ಳುತ್ತಾರೆ.. ಅಬೂಬಕ್ಕರ್ ಬಗ್ಗೆ ನನಗೆ ತಿಳಿದಿದೆ. ಮೃದುಲ ಮನಸಿನವನೂ, ವಿನಯಾನ್ವಿತರೂ ಆಗಿದ್ದಾರೆ. ಸತ್ ಸ್ವಭಾವ ಹಾಗೂ ಧರ್ಮನಿಷ್ಠೆಯಿರುವ ವ್ಯಾಪಾರಿ ಅವರು. ನಾನು ಅಬೂಬಕ್ಕರ್‌ರ ಬಳಿಗೆ ಹೋದೆ..
ಅಬ್ದುಲ್ಲಾರ ಪುತ್ರ ಮುಹಮ್ಮದ್ ಪ್ರವಾದಿತ್ವವನ್ನು ಬಹಿರಂಗಪಡಿಸಿದ್ದಾಗಿಯೂ, ತಾವು ಅವರನ್ನು ಅನುಸರಿಸಿದ್ದಾಗಿಯೂ ನಾನು ಕೇಳಿದೆ. ಇದು ನಿಜವೇ..?
"ಹೌದು ನಿಜ.. ಅಬೂಬಕ್ಕರ್ ಹೇಳಿದರು.
ಆನಂತರ ಅಬೂಬಕ್ಕರ್ ನನಗೆ ವಿಷಯಗಳನ್ನೆಲ್ಲಾ ಒಂದೊಂದಾಗಿ ಹೇಳಿಕೊಟ್ಟರು. ನಾನು ಕ್ರೈಸ್ತ ಪುರೋಹಿತನ ಮಾತುಗಳನ್ನು ಅಬೂಬಕ್ಕರ್ ಗೆ ಹೇಳಿದೆ. ಅವರು ಆಶ್ಚರ್ಯಪಟ್ಟರು.
"ನನ್ನ ಜೊತೆಗೆ ಬನ್ನಿರಿ. ನೀವು ಕೇಳಿದ ಸುದ್ದಿಯನ್ನು ಪ್ರವಾದಿಗೆ ತಿಳಿಸಿರಿ. ಅವರು ಏನು ಹೇಳುತ್ತಾರೋ ಅದನ್ನು ಗಮನವಿಟ್ಟು ಕೇಳಿ.. ಇಸ್ಲಾಮ್ ಪ್ರವೇಶಿಸಿ. ನಿಮಗೆ ಒಳ್ಳೆಯದಾಗುತ್ತದೆ.." ಎಂದು ಅಬೂಬಕ್ಕರ್ ಹೇಳಿದರು.
ತ್ವಲ್ಹತ್ ಮುಂದುವರಿಸುತ್ತಾರೆ.. "ಅಬೂಬಕ್ಕರ್‌ರೊಂದಿಗೆ ನಾನು ಮುಹಮ್ಮದರ ಬಳಿಗೆ ಹೋದೆ. ಮುಹಮ್ಮದ್ ನನ್ನೊಂದಿಗೆ ಇಸ್ಲಾಮ್ ಸ್ವೀಕರಿಸುವಂತೆ ಹೇಳಿದರು. ನಂತರ ಖುರ್‌ಆನ್ ವಚನಗಳನ್ನು ಓದಿ ಕೇಳಿಸಿ , ಇಹಪರ ಒಳಿತುಗಳ ಸುವಿಶೇಷಗಳನ್ನು ಹೇಳಿದರು.."
" ನನ್ನ ಹೃದಯ ಇಸ್ಲಾಮ್ ನೆಡೆಗೆ ಸೆಳೆಯಲ್ಪಟ್ಟವು. ಬಸ್ವಾರದಲ್ಲಿನ ಕ್ರೈಸ್ತ ಪುರೋಹಿತನ ಮಾತುಗಳನ್ನು ನಾನವರಿಗೆ ತಿಳಿಸಿದೆ. ಅವರಿಗದು ಸಂತೋಷವನ್ನುಂಟು ಮಾಡಿದವು. ಮುಖದಲ್ಲಿ ಆಹ್ಲಾದ ಪ್ರಕಟ ಗೊಂಡವು..
ಪ್ರವಾದಿ ಸಮ್ಮುಖದಲ್ಲಿ ನಾನು ಇಸ್ಲಾಮ್ ಸ್ವೀಕರಿಸಿದೆ. ಅಬೂಬಕ್ಕರ್‌ರ ಮೂಲಕ ಇಸ್ಲಾಮ್ ಸ್ವೀಕರಿಸಿದವರಲ್ಲಿ ನಾನು ನಾಲ್ಕನೇಯವನಾಗಿದ್ದೆ. ಮಸ್ ಊದುಬ್ನ್ ಖಿರಾಶ್ ಹೇಳುತ್ತಾರೆ..
"ಸಫಾ ಮರ್ವಾದ ನಡುವೆ ನಾನು ಸಅ್ ಯ್ ಮಾಡುತ್ತಿದ್ದಾಗ ತುಂಬಾ ಜನರು ಒಬ್ಬ ಯುವಕನನ್ನು ಹಿಂಬಾಲಿಸುತ್ತಿರುವುದು ನನ್ನ ಕಣ್ಣಿಗೆ ಬಿದ್ದವು. ಆವನ ಕೈಗಳನ್ನು ಹಿಂಭಾಗಕ್ಕೆ ಎಳೆದು ಕಟ್ಟಲಾಗಿತ್ತು. ಜನರು ಅವನನ್ನು ಬೈಯುತ್ತಿದ್ದರು.. ಹೊಡೆಯುತ್ತಿ ದ್ದರು. ಅವರ ಹಿಂದೆ ಒಬ್ಬ ಸ್ತ್ರೀಯೂ ಇದ್ದರು...
*" ಏನು ವಿಷಯ..?"* ನಾನು ಕೇಳಿದೆ.
ಅದು ತ್ವಲ್ಹತ್ ಬ್ನು ಉಬೈದುಲ್ಲಾ!! ಅವರು ಧರ್ಮ ಬದಲಾಯಿಸಿಕೊಂಡಿದ್ದರು. ಹಾಶಿಂ ವಂಶದ ವ್ಯಕ್ತಿಯೊಬ್ಬನನ್ನು ಅನುಸರಿಸಿದ್ದರು.
"ಆ ಸ್ತ್ರೀ ಯಾರು..??"
"ಅದು ಆ ಯುವಕನ ತಾಯಿ ಸ್ವಫಿಯ ಬಿಂತ್ ಹಳ್ ರಮಿ" ಅವರು ಉತ್ತರಿಸಿದರು...

"ಅದು ಆ ಯುವಕನ ತಾಯಿ ಸ್ವಫಿಯ ಬಿಂತ್ ಹಳ್ ರಮಿ" ಅವರು ಉತ್ತರಿಸಿದರು..
ನಂತರ ಅವರು ತ್ವಲ್ಹತ್ ಹಾಗೂ ಅಬೂಬಕ್ಕರ್‌ರನ್ನು ಒಂದು ಹಗ್ಗದಲ್ಲಿ ಬಂಧಿಸಿ , ಅವಿವೇಕಿಗಳ ಕೈಗೊಪ್ಪಿಸಿದರು. ಅವರು ಆ ಇಬ್ಬರಿಗೆ ಸಾಧ್ಯವಾದಷ್ಟು ಚಿತ್ರಹಿಂಸೆ ನೀಡಿದರು.. ( ಡಾ.ಅಬ್ದುರ್ರಹ್ಮಾನ್ ರಅ್ ಫತ್ ಬಾಷಾ - ಸುವನುಲ್ ಮಿನ್ ಹಯ್ಯಾತಿ ಸ್ವಹಾಬ: 472- 474 )
ಸಅದುಬ್ನು ಅಬೀ ವಖಾಸ್ ಕುಲೀನರೂ ,ಶ್ರೀಮಂತರೂ ಆಗಿದ್ದರು. ಅಲ್ಲದೆ ,ಅವರೊಬ್ಬ ಬಿಸಿ ರಕ್ತದ ತರುಣರೂ ಹೌದು, ತಾಯಿಯೆಂದರೆ ಅವರಿಗೆ ಪಂಚಪ್ರಾಣವಾಗಿತ್ತು. ಸದಾ ಸಮಯವೂ ತಾಯಿಯ ಶುಶ್ರೂಷೆ ಮಾಡುತ್ತಿದ್ದರು. ಸಅದ್ ಇಸ್ಲಾಮ್ ಸ್ವೀಕರಿಸಿದ ಸುದ್ದಿ ತಿಳಿಯುತ್ತಿದ್ದಂತೆ ತಾಯಿ ಕೋಪಾವಿಷ್ಠರಾದರು...
"ಸಅದ್ ನೀನೇಕೆ ನಿನ್ನ ತಂದೆತಾಯಿಯ ಧರ್ಮದಿಂದ ದೂರವಾದೆ..? ನೀನು ಮತ್ತೆ ನಮ್ಮ ಧರ್ಮಕ್ಕೆ ಮರಳಬೇಕು.. ಹೊಸಧರ್ಮವನ್ನು ತಿರಸ್ಕರಿಸಬೇಕು. ಇಲ್ಲದಿದ್ದರೆ ಮರಣ ಹೊಂದುವವರೆಗೆ ನಾನು ನಿರಾಹಾರ ಬಿದ್ದಿರುವೆನು. ಹಾಗೇನಾದರೂ ಸಂಭವಿಸಿದರೆ ಅದರಿಂದ ನೀನು ದುಃಖವನ್ನನುಭವಿಸುವೆ.. ತಾಯಿಗೆ ದ್ರೋಹ ಮಾಡಿದವನೆಂದು ಜನ ನಿನ್ನ ಬಗ್ಗೆ ಆಡಿಕೊಳ್ಳುವರು ” ತಾಯಿಯ ಮಾತನ್ನು ಕೇಳುತ್ತಿದ್ದಂತೆ ಸಅದ್ ಧರ್ಮ ಸಂಕಟಕ್ಕೆ ಬಿದ್ದರು.
"ಅಮ್ಮಾ ,ಆತುರಕ್ಕೆ ಬಿದ್ದು ಅಂತಹ ನಿರ್ಧಾರ ತೆಗೆದುಕೊಳ್ಳಬೇಡ.. ಈ ಧರ್ಮವನ್ನು ತ್ಯಜಿಸುವುದು ನನ್ನಿಂದ ಸಾಧ್ಯವಿಲ್ಲ.." ತಾಯಿ ತಮ್ಮ ಹಠ ಬಿಡಲಿಲ್ಲ. ಅನ್ನಪಾನೀಯಗಳನ್ನು ಉಪೇಕ್ಷಿಸಿ ,ನಿರಾಹಾರ ಸತ್ಯಾಗ್ರಹ ಆರಂಭಿಸಿಯೇ ಬಿಟ್ಟರು. ಹೀಗೆ ದಿನಗಳು ಕಳೆದವು.. ಅನ್ನಪಾನೀಯವಿಲ್ಲದೆ ತಾಯಿ ದೈಹಿಕವಾಗಿ ಕೃಶರಾದರು. ಶಕ್ತಿ ಹೀನರಾಗಿ ಹಾಸಿಗೆ ಹಿಡಿದರು. ಸಅದ್ ದುಃಖ ಹಾಗೂ ಪರಿಭ್ರಮ ತಾಳಲಾರದೆ ಅತ್ತು ಬಿಟ್ಟರು. ತಾಯಿಯೆಂದರೆ ಪ್ರಾಣ ನಿಜ. ಆದರೆ ,ಏನು ಮಾಡಲಿ..? ಆಗಾಗ್ಗೆ ಅವರು ತಾಯಿಯನ್ನು ಭೇಟಿಯಾಗಿ ಸಮಾಧಾನ ಹೇಳುತ್ತಿದ್ದರು. ನಿರಾಹಾರದಿಂದ ಹಿಂದಕ್ಕೆ ಸರಿಯುವಂತೆ ಬೇಡುತ್ತಿದ್ದರು. ಆದರೆ ,ತಾಯಿ ಮಗನ ಮಾತು ಕೇಳಲಿಲ್ಲ ಮಾತ್ರವಲ್ಲ , ತಮ್ಮ ನಿರಾಹಾರವನ್ನು ಮತ್ತಷ್ಟು ತೀವ್ರಗೊಳಿಸಿದರು. ಒಂದೋ ಮರಣ ಅಲ್ಲದಿದ್ದರೆ ಪುತ್ರ ಇಸ್ಲಾಮ್ ಉಪೇಕ್ಷಿಸಲೇಬೇಕು !!!
ಕೊನೆಗೆ ಈ ನಾಟಕೀಯತೆಗೆ ತೆರೆ ಎಳೆಯುವಂತೆ ಸಅದ್ ಘೋಷಿಸಿದರು...
“ಅಮ್ಮಾ , ನಿಮ್ಮನ್ನು ನಾನು ಅತೀವ ಪ್ರೀತಿಸುತ್ತೇನೆ. ಆದರೆ, ಅದಕ್ಕಿಂತಲೂ ಹೆಚ್ಚು ನಾನು ಅಲ್ಲಾ ಹನನ್ನು ಪ್ರೀತಿಸುತ್ತೇನೆ. ಸಾವಿರ ಆತ್ಮ ನಿಮಗಿದ್ದರೂ, ಒಂದರ ಹಿಂದೆ ಒಂದರಂತೆ ನೀವು ಆತ್ಮ ಗಳನ್ನು ತ್ಯಜಿಸುತ್ತಾ ಹೋದರೂ ನನ್ನ ಧರ್ಮವನ್ನು ನಾನು ತ್ಯಜಿಸಲಾರೆ.. ಇದು ಖಂಡಿತ..!!
ಆ ಸಂದರ್ಭದಲ್ಲಿ ಖುರ್‌ಆನ್ ವಚನ ಅವತೀರ್ಣಗೊಂಡವು..
"ತಮಗೆ ಅರಿವು ಲಭಿಸದ ಒಂದನ್ನು ಅವರಿಬ್ಬರು (ತಂದೆತಾಯಿಗಳು) ನನ್ನೊಂದಿಗೆ ಪಾಲುದಾರನನ್ನಾಗಿಸಲು ಪ್ರಯತ್ನಿಸಿದರೆ ಅವರನ್ನು ಅನುಸರಿಸಬಾರದು. ಇಹದಲ್ಲಿ ಅವರೊಂದಿಗೆ ಉತ್ತಮವಾಗಿ ನಡೆದುಕೊಳ್ಳಿರಿ.."
ಬಿಲಾಲ್, ತಾಯಿ ಹಮಾಮ, ಆಮಿರುಬ್ನು ಫುಹೈರ, ಅಬೂ ಫಾಕಿಹ, ಲಬೀಬ, ಸನೀರ, ನಹ್ ದಿಯ್ಯಾ, ಉಮ್ಮು ಉನೈಸ್, ಅವರ ಪುತ್ರಿ ಲತ್ವೀಫ ಗುಲಾಮರಾಗಿದ್ದರು.. ತಮಗೆ ಸಮಾನ ಅವಕಾಶ ತಂದುಕೊಟ್ಟ ಇಸ್ಲಾಮ್ ಧರ್ಮವನ್ನು ಸ್ವೀಕರಿಸಿದ ಕಾರಣಕ್ಕೆ ಇವರ ಯಜಮಾನರುಗಳು ಹಾಗೂ ಅವರ ಕಿಂಕರರು ಸೇರಿ ಅತಿ ಕ್ರೂರವಾಗಿ ಇವರನ್ನು ಪೀಡಿಸಿದರು... ಈ ಕಾರಣದಿಂದ ಸನೀರ ದೃಷ್ಟಿ ಕಳೆದುಕೊಂಡರು..ಅದು ಲಾತ-ಉಝ್ಝ ದೇವತೆಗಳ ಶಾಪದ ಪರಿಣಾಮ ಎಂದು ಅಂದು ಅಬೂಜಹಲ್ ಪ್ರತಿಕ್ರಿಯಿಸಿದ್ದನು. ಆದರೆ,ಆ ಪರಿಸ್ಥಿತಿಯಲ್ಲೂ ಸನೀರ ಅಬೂಜಹಲ್ ನ ಮಾತನ್ನು ವಿರೋಧಿಸಿದರು. ಲಾತ-ಉಝ್ಜರಿಗೆ ಯಾವ ಶಕ್ತಿ ಸಾಮರ್ಥ್ಯಗಳೂ ಇಲ್ಲ. ಅವರು ಕೇವಲ ನಿರ್ಜೀವ ವಿಗ್ರಹಗಳಷ್ಟೇ. ನನ್ನ ದೃಷ್ಟಿ ನಾಶಕ್ಕೆ ಅಲ್ಲಾಹನ ವಿಧಿಯೇ ಕಾರಣ. ಅವನು ಇಚ್ಚಿಸಿದರೆ ತನಗೆ ದೃಷ್ಟಿ ಮತ್ತೆ ಮರಳುತ್ತದೆಂದು ಅವರು ಘೋಷಿಸಿದರು.. ಮರುದಿನ ಬೆಳಗ್ಗೆಯಾಗುವಷ್ಟರಲ್ಲಿ ಸನೀರರ ದೃಷ್ಟಿ ಮರಳಿತ್ತು!!! ಅದು ಮುಹಮ್ಮದನ ಮಾಯಾಮಂತ್ರ ಎಂದಾಗಿತ್ತು ಖುರೈಷಿಗಳ ಪ್ರತಿಕ್ರಿಯೆ. ಈ ಗುಲಾಮರ ವೇದನೆ ಕಂಡು ಮರುಗಿದ ಅಬೂಬಕ್ಕರ್ (ರ) ಅವರೆಲ್ಲರನ್ನೂ ಅವರ ಯಜಮಾನರಿಂದ ಖರೀದಿಸಿ, ಸ್ವತಂತ್ರಗೊಳಿಸಿದರು. ಸ್ವಾತಂತ್ರದ ಶುದ್ಧ ವಾಯು ಹಾಗೂ ಆಶ್ವವಿಶ್ವಾಸದ ಆತ್ಮ ಚೈತನ್ಯವನ್ನು ಆವರಿಗೆ ಗಳಿಸಿಕೊಟ್ಟರು. (ಅಸ್ಸೀರತುಲ್ ಹಲಬಿಯ್ಯಾ-1:374)
ಉಮರ್ (ರ) ಹೇಳುತ್ತಾರೆ.. ಇಸ್ಲಾಮ್ ಸ್ವೀಕರಿಸಿದಾಗ ಮಕ್ಕಾದಲ್ಲಿ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರೊಂದಿಗೆ ಅತೀ ಹೆಚ್ಚು ಶತ್ರುತ್ವ ಇಟ್ಟುಕೊಂಡಿರುವವರು ಯಾರೆಂದು ನಾನು ಯೋಚಿಸಿದೆ. ಯಾಕೆಂದರೆ, ನಾನು ಇಸ್ಲಾಮ್ ಸ್ವೀಕರಿಸಿದ ವಿವರವನ್ನು ಶತ್ರುಗಳಲ್ಲಿ ಮೊದಲು ಅವನಿಗೇ ಮುಟ್ಟಿಸಬೇಕೆಂಬುದು ನನ್ನ ಉದ್ದೇಶವಾಗಿತ್ತು. ತಕ್ಷಣವೇ ನನಗೆ ಅಬೂಜಹಲ್‌ನ ನೆನಪಾದವು.. ನೇರ ಅವನ ಮನೆಗೆ ಹೋಗಿ ಬಾಗಿಲು ತಟ್ಟಿದೆ...
"ಯಾರು ?" ಅಬೂಜಹಲ್ ವಿಚಾರಿಸಿದ.
"ಉಮರುಬ್ ಖತ್ತಾಬ್" ನಾನು ಹೇಳಿದೆ..
"ಸ್ವಾಗತ ಸಹೋದರಿ ಪುತ್ರ ನಿನಗೆ ಸ್ವಾಗತ..ಏನು ವಿಷಯ..?" ಆತ ಅನ್ವೇಷಿಸಿದ.
"ನಾನೊಂದಿಗೆ ಸಂತೋಷ ವಾರ್ತೆ ತಿಳಿಸಬೇಕಿದೆ"
"ಏನದು ಸಹೋದರಿ ಪುತ್ರ ಹೇಳು.."
"ನಾನು ಅಲ್ಲಾಹನಲ್ಲಿ ಹಾಗೂ ಅವನ ದೂತರಾದ ಮುಹಮ್ಮದರಲ್ಲಿ ವಿಶ್ವಾಸ ತಾಳಿದೆ. ಮುಹಮ್ಮದ್ ಬೋಧಿಸುತ್ತಿರುವ ಧರ್ಮವನ್ನು ಅಂಗೀಕರಿಸಿದೆ.." ಎಂದು ನಾನು ಹೇಳಿದಾಗ ಅಬೂಜಹಲ್ ಸಿಟ್ಟಿನಲ್ಲಿ ಬಾಗಿಲು ಮುಚ್ಚಿದನು..
" ನಿನ್ನನ್ನೂ ನಿನ್ನ ಧರ್ಮವನ್ನು ದೇವರು ವಿಕೃತಗೊಳಿಸಲಿ.." ಎಂದು ಶಪಿಸಿದನು..
ನಾನು ಅಲ್ಲಿಂದ ಕಅಬಾಲಯದತ್ತ ಹೋದೆ. ಅಲ್ಲಿ ಜಮೀಲುಬ್ನ್ ಮಅ್ ಮರನ್ನು ಭೇಟಿಯಾದೆ. ಯಾವ ರಹಸ್ಯವನ್ನೂ ಇಟ್ಟುಕೊಳ್ಳದ ಸ್ವಭಾವದವನಾಗಿದ್ದ ಈ ಜಮೀಲ್.. ನಾನು ಇಸ್ಲಾಮ್ ಸ್ವೀಕರಿಸಿದ ವಿವರವನ್ನು ಅವನಿಗೆ ತಿಳಿಸಿ, ಯಾರೊಂದಿಗೆ ಹೇಳಬೇಡ ಎಂದು ಹೇಳಿದೆ.. ಆದರೆ, ಅವನು ಜೋರಾಗಿ ಕೂಗಿ ಹೇಳಿದನು.. ತಿಳಿಯಿರಿ..!! ಉಮರುಬ್ನು ಖತ್ತಾಬ್, ಧರ್ಮ ಬದಲಾಯಿಸಿದ್ದಾನೆ..!!
ಉಮರ್ ರ.ಅ ರವರು ಮುಂದುವರೆಸುತ್ತಾರೆ..
"ಜನರು ನನ್ನ ಮೇಲೆ ಹಲ್ಲೆಗೆ ಮುಂದಾದರು. ನಾನು ಅವರನ್ನು ಧೈರ್ಯದಿಂದಲೇ ಎದುರಿಸಿದೆ.. ನಮ್ಮ ನಡುವೆ ತಿಕ್ಕಾಟ ನಡೆಯುತ್ತಿರಬೇಕಾದರೆ ಅಲ್ಲಿಗೆ ನನ್ನ ಮಾವ ಅಬೂಜಹಲ್ ಆಗಮಿಸಿದ...

ಖತ್ತಾಬ್ ನ ಪುತ್ರ ತನ್ನ ಸಂರಕ್ಷಣೆಯಲ್ಲಿದ್ದಾನೆಂದು ಕೂಗಿ ಹೇಳಿದನು. ನಂತರ ಮುಸ್ಲಿಮರಲ್ಲೊಬ್ಬರು ಹಿಂಸಿಸಲ್ಪಡುವುದು , ನನ್ನನ್ನು ಬಿಟ್ಟು ಬಿಡುವುದನ್ನು ಕಂಡಾಗ ನನಗಿದು ಸರಿ ಕಾಣಲಿಲ್ಲ. ಇತರ ಮುಸ್ಲಿಮರು ಅನುಭವಿಸುತ್ತಿರುವ ಸಂಕಷ್ಟಗಳನ್ನು ನಾನು ಸಹ ಅನುಭವಿಸಬೇಕು ಎಂದು ನನಗನಿಸಿತು.. ಆದ್ದರಿಂದ ಅಬೂಜಹಲ್ ನೊಂದಿಗೆ ನಿನ್ನ ಸಂರಕ್ಷಣೆ ನನಗೆ ಅಗತ್ಯವಿಲ್ಲವೆಂದು ಹೇಳಿದೆ.. ಇತರ ಮುಸ್ಲಿಮನಂತೆ ನಾನು ಸಹ ತ್ಯಾಗಕ್ಕೆ ಸಿದ್ಧನಾದೆ..
"ಈ ಹಿಂಸೆ ,ಪೀಡನೆಗಳಿಗೆ ಗಮನಾರ್ಹವಾದ ಇನ್ನೊಂದು ಮಗ್ಗುಲಿದೆ. ಮದೀನಕ್ಕೆ ಪಲಾಯನ ಮಾಡುವವರೆಗೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ವಧಿಸಲು ಖಡ್ಗ ಝಳಘಳಿಸಿ ನಡೆದದ್ದಲ್ಲದೆ ,ಅದಕ್ಕಾಗಿ ಹಂತಕರ ತಂಡವೊಂದನ್ನು ಸಿದ್ದಪಡಿಸಿದರೂ ,ಅವರ ಅನುಯಾಯಿಗಳ ವಿರುದ್ದ ಅದೆಷ್ಟೇ ಹಿಂಸಿಸಿದರೂ ಸಹ ಖಡ್ಡ ಎತ್ತಿರಲಿಲ್ಲ.. ಕೊಲೆಗೆ ಮುಂದಾಗಿರಲಿಲ್ಲ. ಅದು ಅವರ ಮೇಲಿನ ಅನುಕಂಪದಿಂದೇನೂ ಆಗಿರಲಿಲ್ಲ. ಕೆಂಡದಂಡೆ ಸುಡುತ್ತಿದ್ದ ಮರಳ ಮೇಲೆ ನಗ್ನವಾಗಿ ಮಲಗಿಸಿ,ಎದೆಯ ಮೇಲೆ ಬಂಡೆಗಲ್ಲಿಟ್ಟು ಹಿಂಸಿಸಲ್ಪಟ್ಟ ಬಿಲಾಲ್ ದಾಹ ಸಹಿಸಲಾಗದೆ ನಾಲಗೆಯನ್ನು ಹೊರಚಾಚಿ ನೀರಿಗಾಗಿ ಆಗ್ರಹಿಸಿದಾಗಲೂ, ಖಬ್ಬಾಬ್ರ ಬೆಂದು ಹೋದ ದೇಹದಿಂದ ದ್ರವ ಸುರಿಯುತ್ತಿದ್ದಾಗಲೂ ಖುರೈಷಿಗಳಿಗೆ ಕನಿಕರವಾಗಿರಲಿಲ್ಲ. ಒಂದು ಪಸೆ ನೀರನ್ನು ಕೊಡುವ ಮನಸೂ ಅವರಿಗಿರಲಿಲ್ಲ. ಇಷ್ಟೇ ಅಲ್ಲದೆ ,ಅವರ ನರಳಾಟವನ್ನು ಕಂಡು ಗಹಗಹಿಸಿ ನಗುತ್ತಿದ್ದರು !!! ಅದರೊಂದಿಗೆ ಶೋಷಿತರ ಪ್ರಾಣ ಹೋಗದಂತೆಯೂ ಜಾಗೃತೆ ವಹಿಸಿದ್ದರು. ಕಾರಣ ,ಈ ಸೇವಕರು ಸಾವನ್ನಪ್ಪಿದರೆ ಅದು ತಮ್ಮ ಆರ್ಥಿಕ ನಷ್ಟವಾಗಬಹುದೆಂಬ ಹೆದರಿಕೆ ಖುರೈಷಿ ಮುಖಂಡರಿಗಿದ್ದವು. ಸೇವಕರಲ್ಲದ ಸ್ವತಂತ್ರ ವ್ಯಕ್ತಿಗಳನ್ನು ವಧಿಸಿದರೆ ಅದರ ಗೋತ್ರದ ಜನರು, ಕುಟುಂಬಸ್ಥರು ಸೇಡು ತೀರಿಸಿಕೊಳ್ಳಬಹುದೆಂಬ ಭಯವೂ ಅವರಿಗಿದ್ದವು. ಆದ್ದರಿಂದ ,ಇಂಚಿಂಚಾಗಿ ಹಿಂಸಿಸಿ ಅವರನ್ನು ಇಸ್ಲಾಮ್ನಿಂದ ಹಿಂದಕ್ಕೆ ಸರಿಯುವಂತೆ ಮಾಡುವುದಲ್ಲದೆ, ಕೊಲ್ಲುವುದು ಅವರ ಉದ್ದೇಶವಾಗಿರಲಿಲ್ಲ....
ಅಧ್ಯಾಯ-5
"ಮನಃಶಾಸ್ತ್ರೀಯ ಯುದ್ದ"
ದೌರ್ಜನ್ಯಗಳು ಹೆಚ್ಚಾದಂತೆ ಇಸ್ಲಾಮಿನ ಬೆಳವಣಿಗೆಯೂ ವೃದ್ಧಿಸಿದವು. ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಕೀರ್ತಿಯೂ ವ್ಯಾಪಕವಾದವು. ಯಸ್ರಿಬ್‌ಗೂ ಇಸ್ಲಾಮಿನ ಕಿರಣಗಳು ಪಸರಿಸಿದವು. ಮಕ್ಕಾದಲ್ಲಿ ಹೊಸ ಅಲೆಯೆಬ್ಬಿಸುತ್ತಿದ್ದ ಇಸ್ಲಾಮ್ನ ಬಗ್ಗೆ ಸುತ್ತಮುತ್ತಲ ಅರಬ್ ಗೋತ್ರಗಳು ಕುತೂಹಲದಿಂದ ವಿಚಾರಿಸಲಾರಂಭಿಸಿದರು. ಕೆಲವರಂತೂ ವಾಸ್ತವವೇನೆಂದು ತಿಳಿಯಲು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಹುಡುಕಿಕೊಂಡು ಮಕ್ಕಾಕೆ ಆಗಮಿಸುತ್ತಿದ್ದರು. ಇದು ಖುರೈಷಿಗಳ ಆತಂಕವನ್ನು ಇಮ್ಮಡಿಸಿದವು. ಇಸ್ಲಾಮ್ ಹಾಗೂ ಖುರ್ ಆನ್ ವಿದೇಶಿಯರಿಗೆ ಪರಿಚಯವಾದರೆ ಮತ್ತೆ ಮುಹಮ್ಮದನನ್ನು ಕಟ್ಟಿ ಹಾಕುವುದು ಸಾಧ್ಯವಿಲ್ಲ ಎಂಬುದು ಖರೈಷಿಗರ ಆತಂಕಕ್ಕೆ ಕಾರಣವಾಗಿತ್ತು...
ಹಜ್ ಕಾಲ ಹತ್ತಿರ ಬಂದವು. ಹಜ್ ನಿರ್ವಹಿಸಲು ಆಗಮಿಸುವ ಅನ್ಯದೇಶಿಯರು ಖಂಡಿತ ಮುಹಮ್ಮದರ ಕುರಿತು ವಿಚಾರಿಸುತ್ತಾರೆಂಬುದು ಖುರೈಷಿಗಳಿಗೆ ತಿಳಿದಿತ್ತು. ವಿದೇಶಿ ತೀರ್ಥಯಾತ್ರಿಕರನ್ನು ಮುಹಮ್ಮದನನ್ನು ಭೇಟಿಯಾಗಲು ಬಿಟ್ಟರೆ ಖಂಡಿತ ಅದು ಅಪಾಯಕಾರಿ. ಮುಹಮ್ಮದನ ವಾಗ್ಪಟುತ್ವ, ತಂತ್ರಗಾರಿಕೆ, ಮಧುರ ಭಾಷೆ, ಪ್ರಾಮಾಣಿಕತೆ, ಸಾಹಿತ್ಯಿಕ ವೈಭವ, ಹೇಳುವ ವಿಚಾರಗಳಲ್ಲಿನ ಉದ್ದೇಶ ಶುದ್ಧಿ ಮೊದಲಾದವುಗಳು ವಿದೇಶಿಯರನ್ನು ಆಕರ್ಷಿಸುವುದರಲ್ಲಿ ಎರಡು ಮಾತಿಲ್ಲ ಎಂದು ಯೋಚಿಸಿದ ಖುರೈಷಿಗರು ಪರಿಭ್ರಾಂತರಾದರು...
ಈ ವಿಷಯದಲ್ಲಿ ಅವರು ಸಮಾಲೋಚನೆ ನಡೆಸಿದರು. ಆಧುನಿಕ ಕಾಲಘಟ್ಟ ಮನಃಶಾಸ್ತ್ರೀಯ ಯುದ್ಧ ಎಂದು ಕರೆಯುವ ಯುದ್ಧ ತಂತ್ರವನ್ನೇ ಅವರು ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರ ವಿರುದ್ದ ಪ್ರಯೋಗಿಸಿದ್ದರು. ತೀರ್ಥಯಾತ್ರಿಕರ ನಡುವೆ ಪ್ರವಾದಿ ಯವರ ವಿರುದ್ಧ ಅಪಪ್ರಚಾರ ಮಾಡಲು, ನೇತ್ಯಾತ್ಮಕವಾಗಿ ಮಾತಾಡಲು ಆವರು ಒಂದು ಗುಂಪನ್ನೇ ನಿಯೋಜಿಸಿದ್ದರು...
ಮಹಾಸುಳ್ಳ,ಜೋತಿಷಿ,ಕವಿ , ಮಾಟಗಾರ ,ಮಾಯಾಜಾಲ ಮಾಡುವವನು,ಹೀಗೆ ಯಾವ ಹೆಸರು ಮುಹಮ್ಮದ್‌ಗೆ ಸೂಕ್ತ ಎಂದು ಅವರು ಪರಸ್ಪರ ಮಾತನಾಡಿಕೊಂಡರು.. ಕೊನೆಗೆ ಮಾಟಗಾರನೇ ಸೂಕ್ತ ಎಂದು ಅವರ ನಡುವೆ ಒಪ್ಪಿತವಾದವು.. ಕುಟುಂಬ ಬಂಧಗಳನ್ನು ಶಿಥಿಲಗೊಳಿಸುವ, ಪತಿಪತ್ನಿಯರನ್ನು ಅಗಲಿಸುವ, ಮಕ್ಕಳನ್ನು ತಂದೆತಾಯಿಗಳಿಂದ ಬೇರ್ಪಡಿಸುವ ಮಾಟಗಾರ..
ತೀರ್ಥಯಾತ್ರಿಕರು ಮಕ್ಕಾ ಪ್ರವೇಶಿಸುವ ದ್ವಾರಗಳಲ್ಲಿ, ಇಳಿಜಾರುಗಳಲ್ಲಿ, ಕಣಿವೆ ಪ್ರದೇಶಗಳಲ್ಲಿ ಹಾಗೂ ಇನ್ನಿತರ ಹಾದಿಗಳಲ್ಲಿ ಖುರೈಷಿಗರು ಪ್ರತ್ಯೇಕ ತಂಡಗಳಾಗಿ ನೆಲೆಯೂರಿದರು.. ತೀರ್ಥ ಯಾತ್ರಿಕರು ಆಗಮಿಸುತ್ತಿದ್ದಂತೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ದೂಷಿಸುವುದು, ಅವರ ಮಾತುಗಳು ಕೇಳದಂತೆ ಒತ್ತಾಯ ಹೇರುವುದು ಹಾಗೂ ಆತನೊಬ್ಬ ಮಾಟಗಾರನೆಂದೂ, ಆತನ ಬಗ್ಗೆ ಎಚ್ಚರಿಕೆಯಿಂದರಬೇಕೆಂದೂ ಕಿವಿಯೂದುತ್ತಿದರು, ಇಸ್ಲಾಮಿನ ಬಗ್ಗೆ ತಪ್ಪು ಕಲ್ಪನೆಗಳನ್ನು ಬಿತ್ತುತ್ತಿದ್ದರು. ಒಮ್ಮೆ ಆತನ ಖೆಡ್ಡಕ್ಕೆ ಬಿದ್ದ ಮೇಲೆ ಹಿಂದಿರುಗಿ ಬರುವುದು ಅಸಾಧ್ಯವೆಂದು ಹೆದರಿಸುತ್ತಿದ್ದರು...
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಕುರಿತು ಕೇಳಿ ಕುತೂಹಲಗೊಂಡಿದ್ದ ಕ್ರೈಸ್ತ ನಿಯೋಗವೊಂದು ನಜ್ರಾನಿಯಿಂದ ಮಕ್ಕಾಕೆ ಆಗಮಿಸಿದವು. ನಿಯೋಗದಲ್ಲಿ ಸುಮಾರು ಇಪ್ಪತ್ತು ಮಂದಿಯಿದ್ದರು.. ಮಸ್ಜಿದುಲ್ ಹರಮ್‌ನಲ್ಲಿ ಅವರು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಸಂಧಿಸಿದರು. ಆಶಯ ವಿನಿಮಯ ನಡೆಸಿದರು. ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಅವರನ್ನು ಇಸ್ಲಾಮ್‌ಗೆ ಆಹ್ವಾನಿಸಿದರು. ಖುರ್ ಆನ್ ವಚನಗಳನ್ನು ಕೇಳಿದಾಗ ಅವರ ಕಣ್ಣುಗಳಲ್ಲಿ ಬಾಷ್ಪಾಂಜಲಿ ಸುರಿದವು. ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಆಹ್ವಾನವನ್ನು ಮನ್ನಿಸಿ ಅವರು ಇಸ್ಲಾಮ್ ಸ್ವೀಕರಿಸಿದರು.. ತಮ್ಮ ವೇದಗಳು ಹೇಳುವ ಅಂತ್ಯಪ್ರವಾದಿಯನ್ನು ಭೇಟಿಯಾದ ರೋಮಾಂಚನ, ಆಧ್ಯಾತ್ಮಿಕ ಆನಂದ ಅವರದ್ದಾಗಿತ್ತು..
ಖುರೈಷಿಗಳ ಒಂದು ವಿಭಾಗದ ಜನರು ಇದೆಲ್ಲವನ್ನೂ ಕದ್ದು ಮುಚ್ಚಿ ವೀಕ್ಷಿಸುತ್ತಿದ್ದರು. ನಜ್ರಾನಿಯಿಂದ ಆಗಮಿಸಿದ ಕ್ರೈಸ್ತರ ಸಂಘವು ಹೊಸ ಉತ್ಸಾಹದೊಂದಿಗೆ ಎದ್ದು ನಿಲ್ಲುತ್ತಿದಂತೆ ಅಬೂಜಹಲ್ ಹಾಗೂ ಅವನ ಬೆಂಬಲಿಗರು ಅವರೊಂದಿಗೆ ಹೇಳಿದರು..
"ನೀವು ಯಾತ್ರಿಕರಾಗಿರುವಿರಿ. ದೇವರು ನಿರಾಶೆಗೊಳಿಸಲಿ. ಈ ಮನುಷ್ಯನ ವಿವರಗಳನ್ನು ತಿಳಿಯಲು ನಿಮ್ಮ ಧರ್ಮದ ಜನರು ನಿಮ್ಮನ್ನು ಕಳುಹಿಸಿದರು. ಆತನ ಜೊತೆ ಒಂದಿಷ್ಟು ಹೊತ್ತು ಸರಿಯಾಗಿ ಕೂತೂ ಇಲ್ಲ. ಅಷ್ಟಕ್ಕೆ ನೀವು ಅವನ ವಶರಾಗಿ, ನಿಮ್ಮ ಧರ್ಮವನ್ನು ತ್ಯಜಿಸಿಬಿಟ್ಟಿರಿ. ಇಷ್ಟೊಂದು ಮೂರ್ಖರಾದ ಯಾತ್ರಾ ಸಂಘವನ್ನು ನಾನಿದುವರೆಗೂ ಕಂಡಿಲ್ಲ.."
ನಜ್ರಾನಿಗಳು ಹೇಳಿದರು.." ನಮಸ್ತೇ, ನಿಮ್ಮೊಂದಿಗೆ ಮೂರ್ಖತನದ ಮಾತನ್ನಾಡಲು ನಾವಿಲ್ಲ.. ನಿಮ್ಮ ಆದರ್ಶ ನಿಮಗೆ, ನಮ್ಮದು ನಮಗೆ.."
“ ಪ್ರವಾದಿಯೆಡೆಗೆ ಅವತೀರ್ಣಗೊಂಡಿರುವುದನ್ನು ಅವರು ಕೇಳಿದಾಗ ಅವರ ಕಣ್ಣುಗಳಿಂದ ಬಾಷ್ಪಾಂಜಲಿ ಸುರಿಯುವುದನ್ನು ನಿಮಗೂ ಕಾಣಬಹುದು.. ಅವರು ಸತ್ಯವನ್ನು ಗ್ರಹಿಸಿದ್ದರು ”ಎಂಬ ಖುರ್‌ಆನ್ ಸೂಕ್ತ ಈ ಹಿನ್ನೆಲೆಯಲ್ಲಿ ಆವತೀರ್ಣಗೊಂಡಿತೆಂದು ಹೇಳಲಾಗುತ್ತದೆ.
ಳಮಾದುಲ್ ಆಸ್ದಿ ಮಂತ್ರ ಉಚ್ಚರಿಸಿ, ಚಿಕಿತ್ಸೆ ನಡೆಸುವ ವ್ಯಕ್ತಿಯಾಗಿದ್ದರು. ಅವರು ಮಕ್ಕಾಕೆ ಆಗಮಿಸಿದಾಗ ಮುಹಮ್ಮದ್ ಒಬ್ಬ ಹುಚ್ಚನೆಂದು ಕೆಲವು ಅವಿವೇಕಿಗಳು ಹೇಳುವುದು ಅವರ ಕಿವಿಗೆ ಬಿದ್ದವು. ಇದನ್ನು ನಿಜವೆಂದು ತಿಳಿದ ಆಸ್ದಿ, "ಆ ವ್ಯಕ್ತಿಯನ್ನು ನನಗೆ ಭೇಟಿಯಾಗಲು ಸಾಧ್ಯವಾಗಿದ್ದರೆ ನನ್ನ ಕೈಯಿಂದ ಆತನಿಗೆ ದೇವರು ಶಾಂತಿ ನೀಡುತ್ತಿದ್ದರು.." ಎಂದರು. ಅಂತೆಯೇ ಳಮಾದುಲ್ ಆಸ್ದಿ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಬಳಿ ಬಂದರು.. "ಮುಹಮ್ಮದೇ, ಪಿಶಾಚಿ ಬಾಧೆ, ಭ್ರಾಂತಿಗೆ ನಾನು ಚಿಕಿತ್ಸೆ ನೀಡುತ್ತೇನೆ. ದೇವರು ಇಚ್ಚಿಸಿದವರಿಗೆ ನನ್ನ ಕೈಯಿಂದ ಶಿಫಾ ಲಭಿಸುತ್ತದೆ " ಎಂದು ಆಸ್ ದಿ ಹೇಳಿದನು.
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಖುರ್‌ಆನ್ ವಚನಗಳನ್ನು ಓದಿದರು. "ಅಲ್ಹಂದುಲಿಲ್ಲಾಹು ವನಸ್ತಈನುಹು.." ಖುರ್ ಆನ್ ವಚನಗಳನ್ನು ಕೇಳುತ್ತಿದ್ದಂತೆ ಆಶ್ಚರ್ಯಚಕಿತನಾದ ಳಮಾದ್, " ಇನ್ನೊಮ್ಮೆ ಓದಿರಿ" ಎಂದನು..
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಮೂರು ಬಾರಿ ಪುನರಾವರ್ತಿಸಿದರು. ಮಂತ್ರ ಮುಗ್ದನಾದ ಳಮಾದ್ ಹೇಳಿದನು.
"ನಾನು ಜ್ಯೋತಿಷಿಗಳ, ಮಾಟಗಾರರ, ಮಾಯಾಜಾಲದವರ, ಕವಿಗಳ ಮಾತುಗಳನ್ನು ಕೇಳಿದ್ದೇನೆ. ಆದರೆ, ಇಂತಹ ಮಾತುಗಳನ್ನೆಂದೂ ಕೇಳಿಲ್ಲ. ತಮ್ಮ ಕೈಯನ್ನು ಇತ್ತ ಚಾಚಿರಿ.. ನಾನು ಇಸ್ಲಾಮ್ ಸ್ವೀಕರಿಸುವನು.."
ತುಫೈಲುಬ್ನು ಅಂರುದ್ದೌಸಿ ಪ್ರತಿಭಾವಂತ ಕವಿಯೂ, ಗೋತ್ರದ ಪ್ರಭಾವಿ ಹಾಗೂ ಗೌರವಾನ್ವಿತ ವ್ಯಕ್ತಿಯಾಗಿದ್ದರು.. ತುಫೈಲ್ ಮಕ್ಕಾಕೆ ಆಗಮಿಸಿದರು.. ಖುರೈಷಿಗಳು ಅವರನ್ನು ಭೇಟಿಯಾಗಿ ಹೇಳಿದರು.
"ಈ ಮನುಷ್ಯ ನಮ್ಮ ಸಮಸ್ಯೆಯನ್ನು ಸಂಕೀರ್ಣಗೊಳಿಸಿದ್ದಾನೆ.. ಸಮೂಹವನ್ನು ಶಿಥಿಲಗೊಳಿಸಿ, ಐಕ್ಯತೆಯನ್ನು ನಾಶಪಡಿಸಿ, ಮಾಟದ ಮೂಲಕ ಸಹೋದರರನ್ನು, ತಂದೆತಾಯಿಗಳನ್ನು, ಮಕ್ಕಳನ್ನು, ಪತಿಪತ್ನಿಯರನ್ನು ಪರಸ್ಪರ ಬೇರ್ಪಡಿಸಿದ್ದಾನೆ. ಆದ್ದರಿಂದ ಈ ಸಮಸ್ಯೆಗಳು ತಮಗೂ, ತಮ್ಮ ಜನತೆಯೆಡೆಗೂ ವಿಸ್ತರಿಸಬಹುದೆಂದು ನಾವು ಭಯಪಡುತ್ತೇವೆ.. ಆದ್ದರಿಂದ ತಾವು ಅವರೊಂದಿಗೆ ಮಾತನಾಡಬಾರದು.. ಆತ ಹೇಳುವುದನ್ನು ಗ್ರಹಿಸಿಕೊಳ್ಳಬಾರದು..
ತುಫೈಲ್ ಹೇಳುತ್ತಾರೆ.. "ಅಲ್ಲಾಹನ ಮೇಲೆ ಸತ್ಯ. ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರಿಂದ ನಾನೇನನ್ನೂ ಆಲಿಸುವುದಿಲ್ಲವೆಂದು ಶಪಥ ಮಾಡಿದೆ. ಕಅಬಾಲಯದ ಸಮೀಪ ಹೋದಾಗಲೆಲ್ಲಾ ಕಿವಿಗೆ ಹತ್ತಿ ಇಡುತ್ತಿದ್ದೆ. ಒಂದು ದಿನ ಕಿವಿಗೆ ಹತ್ತಿಯಿಟ್ಟು, ಕಅ್ ಬಾಲಯದ ಸಮೀಪ ಹೋದೆ. ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಅಲ್ಲಿ ನಮಾಝ್ ಮಾಡುತ್ತಿದ್ದರು. ಹತ್ತಿರ ಹೋದೆ. ಅವರೇನನ್ನೋ ಓದುತ್ತಿದ್ದರು. ಅದನ್ನು ಅಲ್ಪವಾದರೂ ಕೇಳಬೇಕೆಂಬ ಆಶೆಯಾದವು. ಬಹುಶಃ ಅದು ಅಲ್ಲಾಹನ ವಿಧಿಯಾಗಿರಬೇಕು. ನಾನು ನನ್ನ ಕಿವಿಯಿಂದ ಹತ್ತಿ ತೆಗೆಯುತ್ತಿದಂತೆ ಮನೋಹರವಾದ ವಚನಗಳು ನನ್ನ ಕಿವಿಗೆ ಬಿದ್ದವು. ನಾನದನ್ನು ಗ್ರಹಿಸಿದೆ. ಒಳಿತು ಕೆಡುಕುಗಳನ್ನು ವಿವೇಚಿಸಿ, ಬೇರ್ಪಡಿಸುವ ಸಾಮರ್ಥ್ಯ ನನಗಿದ್ದವು. ಆದ್ದರಿಂದ ಪ್ರವಾದಿಯ ಮಾತುಗಳನ್ನು ಕೇಳಲು ನಾನೇಕೆ ಹೆದರಬೇಕು?? ಇಷ್ಟವಾದರೆ ಅದನ್ನು ಸ್ವೀಕರಿಸುವುದು, ಇಲ್ಲವಾದರೂ ಬಿಟ್ಟು ಬಿಡುವುದು, ಅಷ್ಟೂ ನನ್ನಿಂದ ಮಾಡಲು ಸಾಧ್ಯವಿಲ್ಲವೇ?? ಎಂದು ಯೋಚಿಸುತ್ತಲೇ ಇಷ್ಟು ದಿನಗಳ ಕಾಲ ಕಿವಿಗೆ ಹತ್ತಿಟ್ಟು ನಡೆದದಕ್ಕೆ ನನ್ನ ಬಗ್ಗೆ ನನಗೇ ನಾಚಿಕೆಯಾದವು. ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ನಮಾಝ್ ಮುಗಿಸುವವರೆಗೆ ಕಾದು ನಿಂತೆ..
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ನಮಾಝ್ ಮುಗಿಸಿ ,ಮನೆಯತ್ತ ಹೊರಟರು.. ನಾನು ಅವರನ್ನೇ ಹಿಂಬಾಲಿಸಿದೆ.. ಮನೆಯಲ್ಲಿ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ನನಗೆ ಖುರ್‌ಆನ್ ಓದಿ ಕೇಳಿಸಿದರು... "ತುಫೈಳರ ಹೃದಯದಲ್ಲಿ ಸತ್ಯವಿಶ್ವಾಸಿ ಅಂಕುರಿಸಿದವು. ಪ್ರವಾದಿ ಸಮ್ಮುಖದಲ್ಲೇ ಅವರು ಇಸ್ಲಾಮ್ ಸ್ವೀಕರಿಸಿದರು. ಜೊತೆಗೆ ತಮ್ಮ ಗೋತ್ರವನ್ನು ಇಸ್ಲಾಮ್ ಗೆ ಆಹ್ವಾನಿಸುವ ಜವಾಬ್ದಾರಿಯನ್ನೂ ಸಹ ಹೊತ್ತುಕೊಂಡರು...
ತಾನು ಪ್ರವಾದಿಯ ಪ್ರತಿನಿಧಿ ಎಂಬುದಕ್ಕೆ ಏನಾದರು ಗುರುತು ಬೇಕೆಂದು ತುಫೈಲ್ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರೊಂದಿಗೆ ಆಗ್ರಹಿಸಿದರು. ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ತುಫೈಲ್ಗೆ ಪ್ರಕಾಶ ನೀಡುವಂತೆ ಪ್ರಾರ್ಥಿಸಿದರು. ತುಫೈಲ್ ರ ಎರಡು ಕಣ್ಣುಗಳ ನಡುವಿನ ಭಾಗ ಪ್ರಕಾಶಮಾನವಾಗಿ ಹೊಳೆಯತೊಡಗಿದವು. ತನ್ನ ಈ ಸ್ವರೂಪವನ್ನು ಜನರು ವಿರೂಪವಾಗಿ ಚಿತ್ರಿಸಬಹುದೆಂದು ತುಫೈಲ್ ಆತಂಕಪಟ್ಟರು. ಆಗ ಪ್ರಕಾಶವು ಒಂದು ಕೋಲಿನ ತಲೆಯ ಭಾಗಕ್ಕೆ ಚಲಿಸಿದವು.. ಇದು ಕಾರಿರುಳಲ್ಲಿ ತುಫೈಲ್ ರ ಕೋಲು ಪ್ರಕಾಶಭರಿತವಾಗಿ ಹೊಳೆಯುತ್ತಿದ್ದವು. ಈ ಕಾರಣದಿಂದ ದ್ಸುನ್ನೂರ್ (ಪ್ರಕಾಶದ ಒಡೆಯ) ಎಂಬ ವಿಶೇಷ ನಾಮ ಅವರಿಗೆ ದೊರೆತವು. ತುಫೈಲ್ ತಮ್ಮ ಜನರನ್ನು ಇಸ್ಲಾಮ್ ಗೆ ಆಹ್ವಾನಿಸಿದರು. ಅವರ ತಂದೆ, ಪತ್ನಿ ಹಾಗೂ ಇನ್ನು ಕೆಲವರು ಇಸ್ಲಾಮ್ ಸ್ವೀಕರಿಸಿದರು. ಗೋತ್ರದ ಇತರ ಜನರು ದೂರ ನಿಂತರು. ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಪ್ರಾರ್ಥನೆಯ ಫಲವಾಗಿ ಮುಂದೆ ಅವರೆಲ್ಲರೂ ಇಸ್ಲಾಮ್ ಸ್ವೀಕರಿಸಿದರು.. (ಡಾ.ಅಬ್ದುರ್ರಹ್ಮಾನ್ ರಅ್ಫತ್ ಭಾಷಾ ಸುವರುಲ್ ಮಿನ್ ಹಯಾತಿ ಸ್ವಹಾಬ - 15:19)
ಮುಸ್ಲಿ ಮರ ವಿರುದ್ಧ ಖುರೈಷಿಗಳ ಅಪಪ್ರಚಾರ, ಸುಳ್ಳು ಜಡ್ಜ್ ಮೆಂಟ್‌ಗಳು ಮಕ್ಕಾದಲ್ಲಿ ಮುಸ್ಲಿಮರ ಬದುಕನ್ನು ಅಸಹನೀಯಗೊಳಿಸಿದವು. ಕೆಲವರು ವಿದೇಶಕ್ಕೆ ಪಲಾಯನ ಮಾಡಿದರು. ಅಲ್ಲಿಗೂ ಹೋದ ಶತ್ರುಗಳು ಮುಸ್ಲಿಮರ ನೆಮ್ಮದಿಯನ್ನು ಕೆಡಿಸಿಬಿಟ್ಟರು. ಮುಸ್ಲಿಮರಿಗೆ ಆಶ್ರಯ ನೀಡಿದ ರಾಷ್ಟ್ರಗಳ ನಿಯಮಾನುಸ್ರತ ಸರಕಾರವನ್ನು ಬುಡಮೇಲುಗೊಳಿಸಲು ಸಹ ಖುರೈಷಿಗಳು ಪ್ರಯತ್ನ ಪಟ್ಟಿದ್ದರು...
ಪೇರ್ಷನ್ ಚಕ್ರವರ್ತಿಗೆ ಕಿಸ್ರಾ ಎಂದು, ರೋಮನ್ ಚಕ್ರವರ್ತಿಗೆ ಕೈಸರ್ ಎಂದೂ ವಿಶೇಷ ನಾಮಗಳಿದ್ದಂತೆ ಇಥಿಯೋಪಿಯಾದ ರಾಜನಾಗಿದ್ದ ಅಸ್ ಹಮತುಬುನು ಅಬ್ ಜರ್ಗೆ ನಜಾಶಿ ಎಂದು ಹೆಸರಿದ್ದವು.. ಅವರ ತಂದೆ ಅಬ್ ಜರ್ ಕೂಡ ಇಥಿಯೋಪಿಯಾದ ರಾಜನಾಗಿದ್ದರು..ಅಸ್ ಹಮತ್ ಏಕೈಕ ಪುತ್ರರಾಗಿದ್ದರು..ತಂದೆ ಆಳ್ವಿಕೆ ನಡೆಸುವಾಗ ಅವರಿಗೆ ಸಹಾಯಿಯಾಗಲು ಹಾಗೂ ಅವರ ಸಾವಿನ ನಂತರ ಆಳ್ವಿಕೆ ನಡೆಸಲು ಒಬ್ಬ ಪುತ್ರ ಸಾಕಾಗುವುದಿಲ್ಲವೆಂದೂ, ಆತನೇನಾದರು ಸತ್ತರೆ ನಂತರ ಸಿಂಹಾಸನವೇರಲು ಯಾರೂ ಇಲ್ಲವೆಂದೂ ಯೋಚಿಸಿ, ಇಥಿಯೋಪಿಯಾದ ಜನರು ತಂದೆ ಅಬ್ ಜರ್ ನನ್ನು ವಧಿಸಿ, ಅಸ್ ಹಮತ್ ನ ಪಿತೃ ಸಹೋದರನನ್ನು ರಾಜನಾಗಿ ಸ್ವೀಕರಿಸಿದರು.. ಆತನಿಗೆ ಹನ್ನೆರಡು ಮಕ್ಕಳಿದ್ದರು..
ಅಸ್ ಹಮತ್ ಪಿತೃ ಸಹೋದರನ ಸಂರಕ್ಷಣೆಯಲ್ಲಿ ಬೆಳೆದರು. ಹೀಗೆಯೇ ಮುಂದುವರಿದರೆ ಕ್ರಮೇಣ ಅಸ್ ಹಮತ್ನ ಕೈಗೆ ಅಧಿಕಾರ ಹೋಗಿ,ತಂದೆಯನ್ನು ಕೊಂದದಕ್ಕೆ ತಮ್ಮ ಮೇಲೆ ಸೇಡು ಇರಿಸಿಕೊಳ್ಳಬಹುದೆಂದು ಇಥಿಯೋಪಿಯಾದ ಜನರು ಭಯಪಟ್ಟರು. ಆದ್ದರಿಂದ ಅವರು ಅಸ್ ಹಮತ್ ನ ಪಿತೃ ಸಹೋದರನನ್ನು ಸಮೀಪಿಸಿ,ಅಸ್ ಹಮತ್ ನನ್ನು ಕೊಲ್ಲಬೇಕೆಂದು ಆಗ್ರಹಿಸಿದರು. ಆದರೆ, ಅವರದನ್ನು ನಿರಾಕರಿಸಿದರು. ಹಾಗಾದರೆ, ಗಡಿಪಾರು ಮಾಡಬೇಕೆಂದು ಜನರು ಆಗ್ರಹಿಸಿದರು.. ಅದು ಅಂಗೀಕರಿಸಲ್ಪಟ್ಟವು...
ಅಸ್ ಹಮತ್ ಗಡಿಪಾರುಗೊಳಗಾದರು. ಆದರೆ, ಕೆಲವೇ ದಿನಗಳಲ್ಲಿ ಕೆಲವೊಂದು ಅನಿರೀಕ್ಷಿತ ಘಟನೆಗಳು ನಡೆದವು. ಅಸ್ ಹಮತ್ ನ ವಿರಹದಿಂದ ದುಃಖಿತನಾಗಿದ್ದ ಪಿತೃ ಸಹೋದರ ಸಿಡಿಲು ಬಡಿದು ಸಾವನ್ನಪ್ಪಿದನು. ಅಸಮರ್ಥರಾಗಿದ್ದ ಮಕ್ಕಳಲ್ಲಿ ಯಾರೂ ಕೂಡ ಅಧಿಕಾರ ಸ್ವೀಕರಿಸಲು ಮುಂದಾಗಲಿಲ್ಲ.. ಗಡಿಪಾರು ಮಾಡಲಾಗಿದ್ದ ಅಸ್ ಹಮತ್ ನನ್ನು ಮತ್ತೆ ನಾಡಿಗೆ ಆಹ್ವಾನಿಸಿ, ಅಧಿಕಾರದ ಚುಕ್ಕಾಣಿ ಒಪ್ಪಿಸಬೇಕಾಯಿತು.. ಜನರು ರಾಜನನ್ನು ಅನುಸರಿಸುವುದಾಗಿ ಪ್ರತಿಜ್ಞೆ ಮಾಡಿದರು. ಅಸ್ ಹಮತ್ ಗೆ ನಜಾಶಿ ಎಂಬ ಅಪರ ನಾಮ ಲಭಿಸಿದವು...
ನಜಾಶಿ ಸಿಂಹಾಸನರೂಢರಾದ ಕೆಲವೇ ದಿನಗಳಲ್ಲಿ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಮಕ್ಕಾದಲ್ಲಿ ಪ್ರವಾದಿತ್ವ ಘೋಷಿಸಿಕೊಂಡರು. ಒಮ್ಮೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಅನುಯಾಯಿಗಳೊಂದಿಗೆ ಹೇಳಿದರು.
" ಇಥಿಯೋಪಿಯದಲ್ಲಿ ಓರ್ವ ರಾಜರಿದ್ದಾರೆ. ಅವರ ಬಳಿ ಯಾರೊಬ್ಬರೂ ದೌರ್ಜನ್ಯಕ್ಕೊಳಗಾಗುವುದಿಲ್ಲ. ನೀವು ಅಲ್ಲಿ ಅಭಯ ಪಡೆಯಿರಿ. ನಿಮ್ಮ ಈಗಿನ ಎಲ್ಲಾ ಈ ಸಂಕಷ್ಟಗಳಿಗೆ ಅಲ್ಲಾಹನು ಪರಿಹಾರ ತೋರುವವರೆಗೆ"
ಸ್ತ್ರೀ ಪುರುಷರನ್ನೊಳಗೊಂಡ ಎಂಬತ್ತು ಮಂದಿ ಮುಸ್ಲಿಮರು ಮೊದಲ ಬಾರಿಗೆ ಇಥಿಯೋಪಿಯಕ್ಕೆ ಹೋದರು. ಅಲ್ಲಿ ಅವರು ಸಮಾಧಾನದ ಜೀವನ ಸಾಗಿಸುತ್ತಿದ್ದರು.. ಆದರೆ, ಖುರೈಷಿಗಳಿಗೆ ಅದು ಸಹಿಸಲಾಗಲಿಲ್ಲ.. ಅಲ್ಲಿಗೂ ತಮ್ಮದೊಂದು ನಿಯೋಗ ಕಳುಹಿಸಿ, ಅಲ್ಲಿಯ ರಾಜನ ಮೂಲಕವೇ ಮುಸ್ಲಿಮರನ್ನು ಒದ್ದೋಡಿಸುವಂತೆ ಮಾಡಲು ತಮ್ಮದೊಂದು ನಿಯೋಗವನ್ನು ಕಳುಹಿಸಿದರು..
ಬುದ್ಧಿವಂತಿಕೆ ಮತ್ತು ತಂತ್ರಗಾರಿಕೆಯಲ್ಲಿ ನಿಪುಣನಾದ ಅಮ್ರ್ ಬಿನ್ ಅಸ್ವ್ ಹಾಗೂ ಅಬ್ದುಲ್ಲಾ ಹಿಬ್ನು ರಬೀಅ ನನ್ನು ಖುರೈಷಿಗಳು ನಜಾಶಿ ರಾಜನ ಬಳಿಗೆ ಕಳುಹಿಸಿದ್ದರು.. ಖುರೈಷಿಗಳು ತಮ್ಮ ಪ್ರತಿನಿಧಿಗಳ ಜೊತೆಗೆ ನಜಾಶಿ ಹಾಗೂ ಉನ್ನತ ರಾಜರುಗಳಿಗೆ ಬಗೆಬಗೆಯ ಪಾರಿತೋಷಕಗಳನ್ನು ಕಳುಹಿಸಿಕೊಟ್ಟಿದ್ದರು..
ರಾಜನ ಆಸ್ಥಾನಕ್ಕೆ ಹೋಗಿ ಏನೇನೆಲ್ಲಾ ಹೇಳಬೇಕೆಂದು ಖುರೈಷಿ ಮುಖಂಡರು ಆ ಇಬ್ಬರು ವ್ಯಕ್ತಿಗಳಿಗೆ ಕಳಿಸಿಕೊಟ್ಟರು.. ಪ್ರತಿಯೊಬ್ಬ ಸೇನಾ ಪ್ರಮುಖನನ್ನು ಪ್ರತ್ಯೇಕವಾಗಿ ಭೇಟಿಯಾಗಿ ಉಡುಗೊರೆಗಳನ್ನು ನೀಡಬೇಕೆಂಬ ನಿರ್ದೇಶನವೂ ಲಭಿಸಿದವು. ಬಳಿಕ ಅವರೊಂದಿಗೆ ಹೇಳಬೇಕು..
"ಬುದ್ದಿಯಿಲ್ಲದ ಕೆಲವು ಯುವಕರು, ಯುವತಿಯರು ನಮ್ಮ ದೇಶದಿಂದ ನಿಮ್ಮ ದೇಶಕ್ಕೆ ಬಂದು ನೆಲೆಸಿದ್ದಾರೆ.. ಅವರು ತಮ್ಮ ಸ್ವಂತ ಧರ್ಮವನ್ನು ಉಪೇಕ್ಷಿಸಿದವರು. ಅವರು ಇಲ್ಲಿಗೆ ಬಂದಿರುವುದು ನಿಮ್ಮ ಧರ್ಮವನ್ನು ಸೇರುವ ಉದ್ದೇಶದಿಂದಲ್ಲ... ಬದಲಾಗಿ, ಹೊಸದೊಂದು ಧರ್ಮವನ್ನು ಸೇರುವ ಉದ್ದೇಶದಿಂದ ಅವರು ಇಲ್ಲಿಗೆ ಬಂದಿದ್ದಾರೆ.. ನಮಗೂ ನಿಮಗೂ ಪರಿಚಿತವಲ್ಲದ ಹೊಸದೊಂದು ಧರ್ಮವನ್ನು ಅವರು ಕಂಡು ಹಿಡಿದಿದ್ದಾರೆ. ಆದ್ದರಿಂದ ಅವರ ಕುಲ ಮುಖ್ಯಸ್ಥರು ನಮ್ಮನ್ನು ಅವರಿಗಾಗಿ ನಿಮ್ಮ ರಾಜನ ಬಳಿಗೆ ಕಳುಹಿಸಿದ್ದಾರೆ. ಅವರನ್ನು ಹಿಂದಕ್ಕೆ ಕಳುಹಿಸಬೇಕು. ನಾವು ನಿಮ್ಮ ರಾಜನೊಂದಿಗೆ ಅವರ ಕುರಿತು ಮಾತನಾಡುವಾಗ, ನೀವು ಅವರನ್ನು ನಮಗೆ ಬಿಟ್ಟುಕೊಡುವಂತೆಯೂ ಅವರೊಂದಿಗೆ ಯಾವುದೇ ರೀತಿಯ ಮಾತುಕತೆ ನಡೆಸದಂತೆಯೂ ಹೇಳಬೇಕು. ಕಾರಣ, ಅವರ ಜನರಾದರೂ ತಿಳಿದುಕೊಳ್ಳಲಿ ಅವರೊಂದಿಗಿದ್ದರೆ ಏನು ಒಳಿತಿದೆಯೆಂದು..?"
ಸೈನಿಕ ಪ್ರಮುಖರು ಖುರೈಷಿಗಳ ಮಾತನ್ನು ಒಪ್ಪಿಕೊಂಡರು.. ಬಳಿಕ ಆ ಇಬ್ಬರು ಖುರೈಷಿ ಪ್ರತಿನಿಧಿಗಳು ರಾಜನಿಗೆ ಮೀಸಲಾದ ಉಡುಗೊರೆಗಳೊಂದಿಗೆ ಅರಮನೆಗೆ ಹೋದರು. ಮುಸ್ಲಿಮರನ್ನು ತಮ್ಮ ಜೊತೆಗೆ ಕಳುಹಿಸಬೇಕೆಂದು ಅವರು ರಾಜನ ಮುಂದೆ ಬೇಡಿಕೆ ಸಲ್ಲಿಸಿದರು. ಬಳಿಕ ಹೇಳಿದರು..
"ಅವರ ಗೋತ್ರದ ಮುಖಂಡರು-ಅವರು, ಅವರ ತಂದೆ, ಅವರ ಹಿರಿಯರು, ಕುಟುಂಬಸ್ಥರೂ ಆಗಿದ್ದಾರೆ- ತಮ್ಮೊಂದಿಗೆ ಬೇಡುತ್ತಿದ್ದಾರೆ.. ಅವರ ಮಕ್ಕಳು ಮರಿಗಳನ್ನು ಅವರಿಗೆ ಹಿಂದಿರುಗಿಸಬೇಕೆಂದು"
ಖುರೈಷಿಗಳನ್ನು ಮಾತನ್ನು ಸೇನಾ ಪ್ರಮುಖರು ಕೇಳಿಸಿಕೊಳ್ಳುತ್ತಿದ್ದರು. ಅವರು ತಮ್ಮ ರಾಜ ನೇಗಸ್ ನೊಂದಿಗೆ ಅತಿಥಿಗಳಿಬ್ಬರ ಬೇಡಿಕೆಯನ್ನು ಪರಿಗಣಿಸುವಂತೆ ಹೇಳಿದರು. ವಲಸೆಗಾರರನ್ನು ಅವರ ಕುಟುಂಬಕ್ಕೆ ಒಪ್ಪಿಸಬೇಕು.. ಅವರ ವಿಧಿ ನಿರ್ಣಯಿಸುವವರು ಅವರ ಬಂಧುಗಳೇ ಅಲ್ಲವೇ?? ಎಂಬ ರೀತಿಯಲ್ಲಿ ಸೇನಾ ಪ್ರಮುಖರು ತಮ್ಮ ಮಾತುಗಳನ್ನು ಸಮರ್ಥಿಸಿಕೊಂಡರು..
ಆದರೆ ನೇಗಸ್ ಅದನ್ನು ಒಪ್ಪಿಕೊಳ್ಳಲು ಸಿದ್ದನಿರಲಿಲ್ಲ.. ಅವನು ಹೇಳಿದ.. "ಅದು ಹೇಗೆ ಸಾಧ್ಯ?? ಅವರು ವಂಚನೆಗೊಳಗಾಗಬಾರದು.. ಅವರು ನನ್ನ ರಕ್ಷಣೆಯನ್ನು ಬೇಡಿ, ನನ್ನ ರಾಜ್ಯದಲ್ಲಿ ನಿರಾಶ್ರಿತರಾಗಿ ಬಂದವರು.. ಎಲ್ಲವನ್ನೂ ಬಿಟ್ಟು ಅವರು ರಕ್ಷಣೆಗಾಗಿ ನನ್ನನ್ನು ಆಯ್ಕೆ ಮಾಡಿ ಕೊಂಡರು. ಆದ್ದರಿಂದ ಅವರನ್ನು ಆಸ್ಥಾನಕ್ಕೆ ಕರೆದು ಮಾತುಕತೆ ನಡೆಸೋಣ.. ಎರಡೂ ಪಕ್ಷಗಳ ಮಾತುಗಳನ್ನು ಆಲಿಸಿದ ಬಳಿಕ ಒಂದು ನಿರ್ಧಾರಕ್ಕೆ ಬರೋಣ. ಇವರು ಹೇಳುತ್ತಿರುವುದೇ ನಿಜವಾದಲ್ಲಿ ಅವರನ್ನು ಇವರ ಕೈಗೆ ಒಪ್ಪಿಸೋಣ. ಒಂದು ವೇಳೆ ಅವರು ಹೇಳುತ್ತಿರುವುದು ಸುಳ್ಳಾದಲ್ಲಿ ಅವರು ನನ್ನ ರಕ್ಷಣೆ ಬಯಸುವ ಕಾಲದವರೆಗೆ ಅವರಿಗೆ ರಕ್ಷಣೆ ನೀಡುವುದು ನನ್ನ ಕರ್ತವ್ಯವಾಗಿದೆ...
ನೇಗಸ್ ಮುಸ್ಲಿಮರನ್ನು ಆಸ್ಥಾನಕ್ಕೆ ಕರೆ ತರುವಂತೆ ದೂತನೊಬ್ಬನನ್ನು ಕಳುಹಿಸಿದನು. ದೂತ ಮುಸ್ಲಿಮರ ನಿವಾಸದತ್ತ ಹೋಗುತ್ತಿದ್ದಂತೆ ಇತ್ತ ರಾಜ ಆಸ್ಥಾನ ಪುರೋಹಿತರನ್ನು ಅರಮನೆಗೆ ಕರೆಸಿದರು.. ಅವರೆಲ್ಲ ತಮ್ಮ ವೇದಗ್ರಂಥಗಳೊಂದಿಗೆ ಆಸ್ಥಾನಕ್ಕೆ ಆಗಮಿಸಿದರು. ಅಮ್ರ್ ಹಾಗೂ ಆತನ ಸಂಗಡಿಗರು ನೇಗಸ್ ನ ಮುಖಾಮುಖಿಯನ್ನು ತಡೆಯಲು ಪ್ರಯತ್ನಿಸಿದರು.
ಎಲ್ಲರೂ ಬಂದು ಸೇರಿದ ನಜ್ಜಾಶಿ ಮುಸ್ಲಿಮರ ಜೊತೆ ಮಾತನಾಡತೊಡಗಿದನು.
"ನಿಮ್ಮ ಜನತೆಯಿಂದ ನೀವು ಸ್ವಯಂ ಬೇರ್ಪಡುವಂತೆ ಮಾಡಿ, ನಿಮ್ಮನ್ನು ಇಲ್ಲಿಯ ತನಕ ಕರೆತಂದ ಧರ್ಮ ಯಾವುದು..?ನೀವಾದರೋ ನನ್ನ ಧರ್ಮಕ್ಕೆ ಆಗಮಿಸುವವರೂ ಅಲ್ಲ. ನಮ್ಮ ಸುತ್ತಮುತ್ತಲಿರುವ ಪ್ರಾಚೀನ ಧರ್ಮವನ್ನು ಅನುಸರಿಸುವವರೂ ಅಲ್ಲ.. ಹಾಗಾದರೆ ,ನೀವು ಅನುಸರಿಸುತ್ತಿರುವ ಧರ್ಮ ಯಾವುದು..?"
ರಾಜನ ಪ್ರಶ್ನೆಗೆ ಜಅಫರ್ ಉತ್ತರಿಸಿದರು." ಮಹಾರಾಜರೇ, ನಾವು ಅಜ್ಞಾನದ ಕತ್ತಲಲ್ಲಿದ್ದ ಒಂದು ಜನತೆಯಾಗಿದ್ದೆವು. ವಿಗ್ರಹಗಳನ್ನು ಆರಾಧಿಸುತ್ತಿದ್ದೆವು. ಶವಗಳನ್ನು ತಿನ್ನುತ್ತಿದ್ದ ನೀಚರಾಗಿದ್ದೆವು. ಎಲ್ಲರ ಮೇಲೆ ದೌರ್ಜನ್ಯ ಎಸಗುತ್ತಿದ್ದೆವು. ಹೀಗಿರಲು ನಮ್ಮ ಬಳಿಗೆ ನಮ್ಮ ನಡುವಿನಿಂದಲೇ ಸಂದೇಶವಾಹಕನನ್ನು ಅಲ್ಲಾಹನು ಕಳುಹಿಸಿಕೊಟ್ಟನು. ಅವರ ಕುಟುಂಬ ಪರಂಪರೆಯ ಮಹಿಮೆ ನಮಗೆ ತಿಳಿದಿದೆ. ಅವರ ಸತ್ಯಸಂಧತೆ, ಸಜ್ಜನಿಕೆ ನಮಗೆ ಪರಿಚಿತವಾಗಿದ್ದವು. ಅವರು ನಮ್ಮನ್ನು ಇಲಾಹನೆಡೆಗೆ ಆಹ್ವಾನಿಸಿದರು. ಅಲ್ಲಾಹನ ಏಕತ್ವವನ್ನು ಸಾಕ್ಷ್ಯವಹಿಸಿ, ಅವನನ್ನು ಮಾತ್ರ ಆರಾಧಿಸುವಂತೆ ಕರೆ ನೀಡಿದರು. ನಾವು ಹಾಗೂ ನಮ್ಮ ಪಿತಾಮಹರು ಕಲ್ಲು, ವಿಗ್ರಹಗಳ ರೂಪದಲ್ಲಿ ಆರಾಧಿಸುತ್ತಿದ್ದವುಗಳನ್ನೆಲ್ಲಾ ತ್ಯಜಿಸುವಂತೆ ಆ ಪ್ರವಾದಿ ನಮಗೆ ಬೋಧಿಸಿದರು. ಸತ್ಯವನ್ನೇ ಹೇಳಬೇಕೆಂದು ಅವರು ನಮಗೆ ಕಲಿಸಿಕೊಟ್ಟರು. ವಾಗ್ದಾನಗಳನ್ನು ಪೂರ್ಣಗೊಳಿಸಬೇಕೆಂದು, ಕುಟುಂಬ ಬಂಧದ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಬೇಕೆಂದು ನಮಗೆ ಕಲಿಸಿಕೊಟ್ಟವರೇ ಅವರು.. ನೆರೆಹೊರೆಯವರಿಗೆ ಹಕ್ಕುಗಳಿವೆ ಎಂದು ಅವರು ಹೇಳಿದರು. ರಕ್ತಪಾತ ಹಾಗೂ ಹಿಂಸಾತ್ಮಕ ಚಟುವಟಿಕೆಗಳನ್ನು ತ್ಯಜಿಸುವಂತೆ ಅವರು ನಮಗೆ ಆದೇಶಿಸಿದರು. ಹೀಗೆ ನಾವು ಅಲ್ಲಾಹನನ್ನು ಮಾತ್ರ ಆರಾಧಿಸಲು ಆರಂಭಿಸಿದೆವು.. ಆರಾಧನೆಗೆ ಅಲ್ಲಾಹನು ಮಾತ್ರ ಅರ್ಹ. ಅವನು ನಿಷೇಧಿಸಿದ್ದೆಲ್ಲವೂ ವರ್ಜ್ಯ. ಅವನು ಅನುಮತಿಸಿದ್ದೆಲ್ಲವೂ ನಮಗೆ ಸಮ್ಮತಾರ್ಹ. ಈ ಕಾರಣಗಳಿಂದ ನಮ್ಮ ಜನತೆ ನಮಗೆದುರಾಗಿ ನಿಂತವು. ನಮ್ಮ ಮೇಲೆ ದೌರ್ಜನ್ಯ ಎಸಗಿ, ನಾವು ಹೊಸ ಆದರ್ಶವನ್ನು ನಿರಾಕರಿಸಿ ಹಿಂದಿನಂತೆಯೇ ವಿಗ್ರಹಾರಾಧನೆ ಮಾಡುವಂತೆ ಮಾಡುವುದು ಅವರ ಇಚ್ಚೆಯಾಗಿತ್ತು.. ಆದರೆ, ನಾವದನ್ನು ನಿರಾಕರಿಸಿದಾಗ ಅವರು ನಮ್ಮ ಮೇಲೆ ಬಲಪ್ರಯೋಗಿಸಲು ಆರಂಭಿಸಿದರು.. ನಮ್ಮನ್ನೀಗ ಅವರು ಹಿಂದಕ್ಕೆ ಕರೆಸಿಕೊಳ್ಳುವುದರ ಕಾರಣವೂ ಇದೆ.. ನಮ್ಮ ಜನರ ದೌರ್ಜನ್ಯಗಳನ್ನು ಸಹಿಸಲಾಗದೆ ನಾವು ರಕ್ಷಣೆ ಬೇಡಿ ನಿಮ್ಮ ದೇಶಕ್ಕೆ ಬರಬೇಕಾಯಿತು.. ನಿಮ್ಮಲ್ಲಿ ನಮಗೆ ರಕ್ಷಣೆ ಸಿಕ್ಕೇ ಸಿಗುತ್ತದೆಂಬ ಭರವಸೆಯಿಂದ ಇತರೆಲ್ಲಾ ದೇಶಕ್ಕೆ ಬದಲಾಗಿ ನಿಮ್ಮ ದೇಶವನ್ನು ಆಯ್ಕೆ ಮಾಡಿಕೊಂಡೆವು. ತಮ್ಮ ರಕ್ಷಣೆಯಲ್ಲಿ ನಾವು ಸಂತುಷ್ಟರನ್ನಾಗಿದ್ದೇವೆ. ನಮ್ಮ ಬೇಡಿಕೆಯಿಷ್ಟೆ, ನಾವಿಲ್ಲ ಇರುವವರೆಗೂ ಅನಗತ್ಯವಾಗಿ ದುಃಖಿಸಬೇಕಾದ ಪ್ರಸಂಗ ಉದ್ಭವಿಸಲಾರದು. ಆದ್ದರಿಂದ ತಾವು ನಮ್ಮನ್ನು ಕಳುಹಿಸಿಕೊಡಬಾರದು.."
ಜಅಫರ್ ಹೇಳಿದ ವಿಚಾರಗಳಲ್ಲಿ ಒಂದು ಅಕ್ಷರವನ್ನೂ ಬಿಡದೇ ದ್ವಿಭಾಷಿ ರಾಜನಿಗೆ ಅನುವಾದಿಸಿ ಕೊಟ್ಟನು. ಈಗ ರಾಜ ಮತ್ತೊಂದು ಪ್ರಶ್ನೆಯನ್ನು ಮುಂದಿಟ್ಟನು. " ನಿಮ್ಮ ಜೊತೆ ನಿಮ್ಮ ಪ್ರವಾದಿಯ ದಿವ್ಯ ಸಂದೇಶಗಳಿವೆಯೇ..??"
" ಹೌದು.. ಇದೆ "ಜಅಫರ್ ಉತ್ತರಿಸಿದರು..
ರಾಜ ಅದನೊಮ್ಮೆ ತನ್ನ ಮುಂದೆ ಪಾರಾಯಣ ಮಾಡುವಂತೆ ಆಗ್ರಹಿಸಿದನು. ಅಬಿಸೀನಿಯಾ ಪಲಾಯನಕ್ಕೂ ಕೆಲವು ದಿನಗಳ ಹಿಂದೆ ಅವತೀರ್ಣಗೊಂಡ "ಮರ್ಯಮ್" ಅಧ್ಯಾಯದ ಕೆಲವು ಸೂಕ್ತಗಳನ್ನು ಜಅಫರ್ ಪಾರಾಯಣ ಮಾಡಿದರು.
"ದಿವ್ಯ ವಚನದಲ್ಲಿ ಮರ್ಯಮರನ್ನು ನೆನಪಿಸಿಕೊಳ್ಳಿರಿ. ಅವರು ತಮ್ಮ ಬಂಧುಗಳಿಂದ ದೂರ ಸರಿದು ಪೂರ್ವ ದಿಕ್ಕಿಗೆ ಹೋದ ಸಂದರ್ಭ. ಅವರಲ್ಲಿ ಏಕಾಂತವಾಸದಲ್ಲಿದ್ದರು. ಹಾಗೆ ನಾವು ಅವರ ಬಳಿಗೆ ನನ್ನ ಒಬ್ಬ ದೇವಚರನನ್ನು ಕಳುಹಿಸಿದೆವು. ಆ ದೇವಚರ ಮನುಷ್ಯ ರೂಪದಲ್ಲಿದ್ದನು. ಮರ್ಯಮ್ ತಟ್ಟನೆ ಹೇಳಿದರು..
"ನಿನ್ನಿಂದ ನಾನು ದಯಾಮಯನಾದ ಅಲ್ಲಾಹನಿಂದ ಅಭಯ ಯಾಚಿಸುತ್ತೇನೆ. ನೀನೊಬ್ಬ ದೇವಭಕ್ತನಾಗಿದ್ದರು ಇಲ್ಲಿಂದ ಹೋಗು ” ಆಗ ಅವನು ಹೇಳಿದನು..
" ನಾನು ನಿಮ್ಮ ಪ್ರಭುವಿನ ದೂತನಾಗಿದ್ದೇನೆ. ನಾನು ನಿನಗೆ ಪವಿತ್ರ ಪುತ್ರನನ್ನು ನೀಡಲು ಬಂದಿರುವೆನು" ಅವರು ಹೇಳಿದರು...
" ಪುರುಷ ಸ್ಪರ್ಶವಿಲ್ಲದೆ ನನಗೆ ಹೇಗೆ ಒಬ್ಬ ಪುತ್ರ ಜನಿಸಲು ಸಾಧ್ಯ..? ನಾನು ದುರಾಚಾರಿ ಸ್ತ್ರೀಯಲ್ಲ..
ಅವನು ಹೇಳಿದನು "ಏನೇ ಆದರೂ ಅದು ಸಂಭವಿಸಿಯೇ ತೀರುತ್ತದೆ. ನಿನ್ನ ಪ್ರಭುವಿನ ವಚನಗಳನ್ನು ಕೇಳು: ನನಗದು ಸುಲಭವಾಗಿದೆ. ನಾನವನನ್ನು ಸರ್ವ ಮನುಷ್ಯರಿಗೆ ನಿದರ್ಶನವನ್ನಾಗಿ ಮಾಡುವೆನು. ಅವನು ನಮ್ಮ ಕಡೆಯ ಒಂದು ಕಾರುಣ್ಯವಾಗಿದ್ದಾನೆ. ಅದು ಮೊದಲೇ ನಿರ್ಧರಿಸಲ್ಪಟ್ಟ ವಿಷಯವಾಗಿದೆ ”
ಜಅಫರ್ ಖುರ್‌ಆನ್ ಪಾರಾಯನ ಕೇಳಿ ನಜಾಶಿ ಹಾಗೂ ಅಲ್ಲಿದ್ದ ಪಾದ್ರಿಗಳ ಕಣ್ಣುಗಳಿಂದ ಆಶ್ರುಧಾರೆ ಹರಿದವು. ಅದನ್ನು ತರ್ಜುಮೆ ಮಾಡಿ ಕೇಳಿದ ಮೇಲೆ ಅವರು ಮತ್ತೊಮ್ಮೆ ಅತ್ತುಬಿಟ್ಟರು. ಅಷ್ಟು ಹೊತ್ತಿಗೆ ನಜಾಶಿ ರಾಜನಿಂದ ಅನಿರೀಕ್ಷಿತ ಪ್ರತಿಕ್ರಿಯೆಯೊಂದು ಹೊರಟು ಬಂದವು.
“ಯೇಸುವಿನ ದೇವರಿಂದಲೇ ಇದು ಕೂಡ ಅವತೀರ್ಣಗೊಂಡಿದೆ.." ಬಳಿಕ ಅವರು ಖುರೈಷಿಗಳ ಕಡೆ ತಿರುಗಿ ಹೇಳಿದರು.
"ನೀವಿನ್ನು ಹೋಗಬಹುದು. ದೇವರಾಣೆ ಸತ್ಯ, ಇವರನ್ನೆಂದೂ ನಾನು ನಿಮ್ಮ ಜೊತೆ ಕಳುಹಿಸಿಕೊಡಲಾರೆ. ಇವರು ವಂಚನೆಯ ಜಾಲಕ್ಕೆ ಬೀಳಲು ನಾನು ಅನುಮತಿ ನೀಡಲಾರೆ"
ರಾಜಸಭೆಯಿಂದ ಹಿಂದಿರುಗುವಾಗ ಅಮ್ರ್ ತನ್ನ ಸಂಗಡಿಗರೊಂದಿಗೆ ಒಂದು ವಿಷಯ ಹೇಳಿದನು..
"ನಾಳೆ ನಾನು ಒಂದು ವಿಚಾರವನ್ನು ರಾಜನ ಗಮನಕ್ಕೆ ತರಲಿದ್ದೇನೆ ..ಇವರನ್ನು ಇಲ್ಲಿಂದ ಬೇರು ಸಮೇತ ಕಿತ್ತೊಗೆಯಲು ಅದು ಸಾಕು. ಮೇರಿಯ ಪುತ್ರ ಯೇಸುವನ್ನು ಒಬ್ಬ ಗುಲಾಮನೆಂದು ಇವರು ಕರೆಯುತ್ತಾರೆ ಎಂಬುದನ್ನು ನಾನು ರಾಜನ ಗಮನಕ್ಕೆ ತರುತ್ತೇನೆ..."
ಮರುದಿನ ಬೆಳಿಗ್ಗೆ ರಾಜನ ಬಳಿ ಹೋಗಿ ಅಮ್ರ್ ಹೇಳಿದರು..
"ಮಹಾರಾಜರೇ.. ಮೇರಿಯ ಪುತ್ರ ಯೇಸುವಿನ ಕುರಿತು ಇವರು ಒಂದು ಅಪಪ್ರಚಾರ ನಡೆಸುತ್ತಿದ್ದಾರೆ. ಆದ್ದರಿಂದ ತಾವು ಒಬ್ಬರನ್ನು ಕಳುಹಿಸಿ ಯೇಸುವಿನ ಕುರಿತು ಅವರ ಅಭಿಪ್ರಾಯವೇನೆಂದು ಕೇಳಿ ತಿಳಿಯಬೇಕು.."
ಅದರಂತೆ ನಜಾಶ್ ರಾಜ ಮುಸ್ಲಿಮರತ್ತ ತನ್ನ ದೂತನನ್ನು ಕಳುಹಿಸಿ, ಯೇಸುವಿನ ಕುರಿತು ನಿಮ್ಮ ನಂಬಿಕೆಯೇನೆಂಬುದನ್ನು ಮತ್ತೊಮ್ಮೆ ರಾಜಸಭೆಗೆ ಬಂದು ವಿವರಿಸಬೇಕೆಂದು ಆದೇಶಿಸಿದನು. ಮುಸ್ಲಿಮರು ಅಪ್ರತಿಭರಾದರು. ಅನಿರೀಕ್ಷಿತವಾಗಿ ಮೊಳಗಿದ ರಾಜಾಜ್ಞೆ ಅವರನ್ನು ಅಸ್ವಸ್ಥರನ್ನಾಗಿಸಿದವು. ಅಲ್ಲಾಹನು ಖರ್‌ಆನಿನಲ್ಲಿ ಹೇಳಿದ ವಿಚಾರಗಳನ್ನು ಬದಲಾಯಿಸುವುದು ಅವರಿಂದ ಸಾಧ್ಯವಿರಲಿಲ್ಲ. ಖರ್‌ಆನಿನಲ್ಲಿರುವ ವಿಚಾರಗಳಾದರೆ ಕ್ರೈಸ್ತ ಮತಾನುಯಾಯಿಗಳ ನಂಬಿಕೆಗೆ ತದ್ವಿರುದ್ಧವಾಗಿದ್ದವು...
ಖರ್‌ಆನಿನಲ್ಲಿರುವ ವಿಚಾರಗಳಾದರೆ ಕ್ರೈಸ್ತ ಮತಾನುಯಾಯಿಗಳ ನಂಬಿಕೆಗೆ ತದ್ವಿರುದ್ಧವಾಗಿದ್ದವು..
ರಾಜನಿಗೆ ಸೂಕ್ತವಾದ ಉತ್ತರ ನೀಡುವ ಕುರಿತು ಅವರು ಪರಸ್ಪರ ಚರ್ಚಿಸತೊಡಗಿದರು. ರಾಜಸಭೆಗೆ ಆಗಮಿಸಿದ ಜಅಫರ್ ಹಾಗೂ ಸಂಗಡಿಗರೊಂದಿಗೆ ರಾಜ ಕೇಳಿದನು.
"ಮೇರಿಯ ಪುತ್ರ ಯೇಸುವಿನ ಕುರಿತು ನಿಮ್ಮ ನಂಬಿಕೆಯೇನು..? ”
ಜಅಫರ್ ಮಾತು ಆರಂಭಿಸಿದರು.
“ಈಸಾರ ಕುರಿತು ನಮ್ಮ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿಕೊಟ್ಟಿರುವುದನ್ನಷ್ಟೇ ನಾವು ಹೇಳುತ್ತಿದ್ದೇವೆ.. ಈಸಾ ಅಲ್ಲಾಹನ ದಾಸ ಹಾಗೂ ಪ್ರವಾದಿಯಾಗಿದ್ದಾರೆ. ಅವರ ಆತ್ಮ ಅಲ್ಲಾಹನ ವಚನವಾಗಿದೆ.. ಅದನ್ನು ಅಲ್ಲಾಹನಿಂದ ಅನುಗ್ರಹೀತರಾಗಿದ್ದ ಕನ್ಯೆ ಮರ್ಯಮರಲ್ಲಿ ಪ್ರತಿಷ್ಠಾಪಿಸಲಾಯಿತು.." ಇದನ್ನು ಕೇಳಿದ ನಜಾಶ್ ರಾಜ ಸಣ್ಣದೊಂದು ಮರದ ತುಂಡನ್ನು ಕೈಗೆತ್ತಿಕೊಂಡು ಹೇಳಿದನು.
“ಮರ್ಯಮ್ರ ಪುತ್ರ ಈಸಾರ ಬಗ್ಗೆ ನಿಮ್ಮ ವಚನಗಳು ಹೇಳಿರುವುದು ಈ ಮರದ ತುಂಡಿನಷ್ಟೇ ಸತ್ಯವಾಗಿದೆ " ಯೇಸುರ ಕುರಿತು ನಜಾಶ್ ರಾಜ ವ್ಯಕ್ತಪಡಿಸಿದ ಅಭಿಪ್ರಾಯವನ್ನು ಪುರೋಹಿತರು ಹಾಗೂ ರಾಜಕೀಯ ಪ್ರಮುಖರು ವಿರೋಧಿಸಿದರು. ಅವರತ್ತ ತಿರುಗಿದ ನಜಾಶ್..
"ನೀವು ಸುಮ್ಮನೆ ಗದ್ದಲ ಎಬ್ಬಿಸಬೇಕಿಲ್ಲ..” ಎಂದು ಬುದ್ಧಿವಾದ ಹೇಳಿದರು... ಬಳಿಕ ಮುಸ್ಲಿಮರತ್ತ ತಿರುಗಿ
“ನನಗೆ ಚಿನ್ನದ ಪರ್ವತವನ್ನು ನೀಡಿದರೂ ನಾನು ನಿಮಗೆ ತೊಂದರೆ ನೀಡಲಾರೆ. ನನ್ನ ದೇಶದಲ್ಲಿ ನೀವು ಸುರಕ್ಷಿತರಾಗಿರುವಿರಿ” ಎಂದರು. ಬಳಿಕ ತನ್ನ ಕಿಂಕರರನ್ನು ಕರೆದು ಖುರೈಷಿಗಳು ನೀಡಿದ ಉಡುಗೊರೆಗಳನ್ನು ಹಿಂದಿರುಗಿಸುವಂತೆ ಆಜ್ಞಾಪಿಸಿದರು..
“ದೇವರು ನನಗೆ ಅಧಿಕಾರ ಹಿಂದಿರುಗಿಸಿದಾಗ ನನ್ನಿಂದ ಅವನು ಯಾವುದೇ ಲಂಚವನ್ನು ಸ್ವೀಕರಿಸಿರಲಿಲ್ಲ. ಅಧಿಕಾರ ಚಲಾಯಿಸಲು ನಾನು ಸಹ ಲಂಚ ಸ್ವೀಕರಿಸಲಾರೆ ” ಎಂದು ತಮ್ಮ ನೀತಿಯನ್ನು ಘೋಷಿಸಿದರು...
ಖುರೈಷಿಗಳು ನಡೆಸಿದ ಇನ್ನೊಂದು ಘೋರವಾದ ಮನಃಶಾಸ್ತ್ರೀಯ ಯುದ್ಧವೆಂದರೆ ಕವಿತೆಗಳ ಮೂಲಕ ತೇಜೋವಧೆ ಮಾಡುವುದಾಗಿತ್ತು. ಆಧುನಿಕ ಕಾಲದಲ್ಲಿ ದೃಶ್ಯ,ಶ್ರಾವ್ಯ ಮಾಧ್ಯಮಗಳಿಗಿಂತಲೂ ಕವಿತೆಗಳು ಅಂದಿನ ಕಾಲದ ಜನರ ಮೇಲೆ ಪ್ರಭಾವ ಬೀರಿದ್ದವು. ಒಬ್ಬ ಕವಿಯ ನಾಲಗೆಗೆ ಮಾರಕಾಯುಧಗಳಿಗಿಂತಲೂ ಗಂಭೀರವಾದ ಗಾಯ ಮಾಡುವ ಸಾಮರ್ಥ್ಯವಿದ್ದವು. ಒಂದು ಗೋತ್ರದ ಪ್ರತಾಪಕ್ಕೆ ಕಿರೀಟವೇರಿಸಲು ಅಥವಾ ಅಪಮಾನದ ಪಾತಾಳಕ್ಕೆ ದೂಡಿ ಹಾಕಲು ಒಂದೇ ಒಂದು ಸಾಲು ಕವಿತೆ ಸಾಕಾಗಿತ್ತು.. ಸುಖ ದುಃಖಗಳನ್ನು ಹಂಚಿಕೊಳ್ಳಲು, ಸಂತೋಷ, ಸಂತಾಪವನ್ನು ಪ್ರಕಟಿಸಲು, ವಿಜಯ ಹಾಗೂ ಪರಾಜಯವನ್ನು ಘೋಷಿಸಲು, ಸುದ್ದಿಗಳನ್ನು ಪಸರಿಸಲು ಉಪಯೋಗಿಸಲಾಗುತ್ತಿದ್ದ ಏಕೈಕ ಹಾಗೂ ಶಕ್ತಿಶಾಲಿ ಮಾಧ್ಯಮವಾಗಿತ್ತು ಅಂದು ಕವಿತೆ!!..
ಆದ್ದರಿಂದ ಖುರೈಷಿಗಳು ಹಣ, ಹೆಣ್ಣು, ಸಂಪತ್ತುಗಳನ್ನು ನೀಡಿ ಕವಿಗಳನ್ನು ಖರೀದಿಸಿ, ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ವ್ಯಕ್ತಿತ್ವ ಮಸಿ ಬಳಿಯಲು ಉಪಯೋಗಿಸುತ್ತಿದ್ದರು. ಈ ಕವಿಗಳು ಸಿಕ್ಕ ಸಿಕ್ಕಲ್ಲಿ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಹಾಗೂ ಮುಸ್ಲಿಮರ ಬಗ್ಗೆ ಅಸಹ್ಯಕರವಾಗಿ, ಅಶ್ಲೀಲವಾಗಿ ಕವಿತೆಗಳನ್ನು ಬರೆದು ಜನರ ಮಧ್ಯೆ ಓದುತ್ತಿದ್ದರು...
"ಆಕ್ಷೇಪ, ಅಪಹಾಸ್ಯ ಸುಳ್ಳುಗಳಿಂದ ತುಂಬಿರುತ್ತಿದ್ದ ಇವರ ಕವಿತೆಗಳು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರಿಗೆ ಹಾಗೂ ಮುಸ್ಲಿಮರಿಗೆ ನೀಡಿದ ಮಾನಸಿಕ ಕಿರುಕುಳ ವಿವರಣಾತೀತವಾದುದು..."
ಅಧ್ಯಾಯ-6
"ಆರ್ಥಿಕ ಕಿರುಕುಳ"
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರಿಗೆ ಹಾಗೂ ಅನುಯಾಯಿಗಳಿಗೆ ಮಾನಸಿಕ, ದೈಹಿಕ ಕಿರುಕುಳ ನೀಡಿದ್ದಲ್ಲದೆ, ಯಾರಾದರು ಮುಸ್ಲಿಮರನ್ನು ಸಂಪರ್ಕಿಸುವುದರ ಸೂಚನೆ ಸಿಕ್ಕಿದರೆ ಸಾಕು ಅತ್ಯಂತ ಕ್ರೂರವಾಗಿ ಅದನ್ನು ತಡೆಯುತ್ತಿದ್ದ ಖುರೈಷಿಗಳು ಮುಸ್ಲಿಮರ ಆರ್ಥಿಕ ಭದ್ರತೆಯನ್ನು ಧ್ವಂಸಗೊಳಿಸುವ ಪ್ರಯತ್ನ ಮಾಡಿದರು. ಮುಸ್ಲಿಮರ ಜೀವನೋಪಾಯ ಮಾರ್ಗಗಳನ್ನು ತಡೆಯುವುದು, ಅವರು ಉಪವಾಸ ಬೀಳುವಂತೆ ಮಾಡುವುದು, ಆರ್ಥಿಕ ಮೂಲಗಳನ್ನು ಶಿಥಿಲಗೊಳಿಸುವುದು ಮೊದಲಾದವುಗಳು ಇವುಗಳಲ್ಲಿ ಮುಖ್ಯವಾಗಿದೆ..
ಮುಹಮ್ಮದ್‌ರನ್ನು ವಧಿಸಲು ನಮ್ಮ ಕೈಗೆ ಬಿಟ್ಟುಕೊಡಬೇಕೆಂಬ ಖುರೈಷಿಗಳ ಬೇಡಿಕೆಯನ್ನು ತಳ್ಳಿ ಹಾಕಿದ ಬನೂ ಹಾಶಿಂ ಹಾಗೂ ಬನೂ ಮುತ್ತಲಿಬ್ ಗೋತ್ರಗಳ ವಿರುದ್ದ ಸಾಮೂಹಿಕ ಬಹಿಷ್ಕಾರ ಹಾಕಲು ಶತ್ರುಗಳು ನಿರ್ಧರಿಸಿದರು. ಹಾಶಿಂ ಮುತ್ವಲಿಬ್ ವಂಶಸ್ಥರು ಶಿಅ್ಬ್ (ಪುರ) ಅಬೀತ್ವಾಲಿಬ್‌ನಲ್ಲಿ ಒಟ್ಟು ಸೇರಿದರು. ಮಕ್ಕಾದಲ್ಲಿ ಉಳಿದಿದ್ದ ಇತರೆಲ್ಲಾ ಮುಸ್ಲಿಮರೊಂದಿಗೆ ಇಥಿಯೋಪಿಯಕ್ಕೆ ಪಲಾಯನ ಮಾಡುವಂತೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ನಿರ್ದೇಶಿಸಿದರು.. ಏಕ ದೈವಾರಾಧಕರೆಲ್ಲಾ ಮಕ್ಕಾ ತ್ಯಜಿಸಿದರು. ಹಾಶಿಂ ಮುತ್ತಲಿಬ್ ವಂಶದ ಮುಸ್ಲಿಮರು ಧಾರ್ಮಿಕ ಕಾರಣಕ್ಕಾಗಿ ಮತ್ತು ಮುಸ್ಲಿಮೇತರರು ಗೋತ್ರ ಪಕ್ಷಪಾತದ ಹೆಸರಲ್ಲಿ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರೊಂದಿಗೆ ಶಿಅಬ್ ನಲ್ಲಿ ನೆಲೆಸಿದರು.
"ಪ್ರವಾದಿ ಕುಟುಂಬದ ಜೊತೆ ವ್ಯಾಪಾರ ವಹಿವಾಟುಗಳನ್ನು ಮಾಡಕೂಡದು. ಆಹಾರ ಸಾಧನಗಳನ್ನು ಅವರಿಗೆ ನೀಡಕೂಡದು. ಮಾರುಕಟ್ಟೆಯಲ್ಲಿ ಅವರನ್ನು ಬಹಿಷ್ಕರಿಸಬೇಕು..."
ಪ್ರವಾದಿ ಕುಟುಂಬದ ಜೊತೆ ವ್ಯಾಪಾರ ವಹಿವಾಟುಗಳನ್ನು ಮಾಡಕೂಡದು. ಆಹಾರ ಸಾಧನಗಳನ್ನು ಅವರಿಗೆ ನೀಡಕೂಡದು. ಮಾರುಕಟ್ಟೆಯಲ್ಲಿ ಅವರನ್ನು ಬಹಿಷ್ಕರಿಸಬೇಕು... ಅವರ ಜೊತೆ ವಿವಾಹ ಬಂಧ ಸ್ಥಾಪಿಸಕೂಡದು.. ಯಾವ ವಿಷಯದಲ್ಲೂ ಅವರ ಜೊತೆಗೆ ಸಂಧಾನ,ರಿಯಾಯಿತಿಗೆ ಅವಕಾಶ ನೀಡಬಾರದು.. ಪ್ರವಾದಿಯನ್ನು ವಧಿಸಲು ಬಿಟ್ಟುಕೊಡುವವರೆಗೂ ಆ ಕುಟುಂಬದ ಮೇಲೆ ಈ ಎಲ್ಲಾ ನಿಷೇಧಗಳು ಮುಂದುವರಿಯಬೇಕು. ಖರೈಷಿಗಳ ಬಹಿಷ್ಠಾರ ನಿರ್ಧಾರದಲ್ಲಿ ಇವುಗಳು ಮುಖ್ಯ ಅಂಶಗಳಾಗಿದ್ದವು...
ಬಹಿಷ್ಕಾರದ ನಿಯಮಗಳನ್ನು ಬರೆದು, ಪ್ರತಿಯೋರ್ವ ಮುಖಂಡನೂ ತನ್ನ ಜೊತೆಗಿರಿಸಿಕೊಂಡನು. ಒಂದು ಪ್ರತಿಯನ್ನು ಕಅ್ ಬಾಲಯದ ಮುಂಭಾಗದಲ್ಲಿ ತೂಗು ಹಾಕಲಾಯಿತು. ಪ್ರವಾದಿತ್ವ ಪ್ರಾಪ್ತಿಯಾದ ಏಳನೇ ವರ್ಷದಲ್ಲಿ ಆರಂಭಗೊಂಡ ಈ ಬಹಿಷ್ಕಾರ ಮೂರು ವರ್ಷಗಳ ಕಾಲ ಮುಂದುವರಿದವು. ಖುರೈಷಿಗಳು ತಮ್ಮ ನಿರ್ಧಾರದಲ್ಲಿ ಸಣ್ಣ ರಿಯಾಯ್ತಿಯನ್ನೂ ತೋರಿಸಲಿಲ್ಲ. ಮಾತ್ರವಲ್ಲ, ಅತ್ಯಂತ ಕಠಿಣವಾಗಿಯೇ ಕಾರ್ಯಗತಗೊಳಿಸಿಬಿಟ್ಟರು. ತಮ್ಮ ಬಹಿಷ್ಕಾರ ನಿಯಮಗಳನ್ನು ಯಾರಾದರು ಉಲಂಘಿಸುತ್ತಾರೆಯೇ ಎಂದು ಕಣ್ಣಿಡಲು ಗೂಢಾಚಾರರನ್ನು ನೇಮಿಸಿದ್ದರು. ಆಹಾರ ಸಾಧನಗಳು ಸಿಗದೆ ಹಾಶಿಂ ಮುತ್ತಲಿಬ್ ವಂಶಸ್ಥರು ಪಡಿಪಾಟಲು ಅನುಭವಿಸಬೇಕಾಗಿ ಬಂದವು. ಎಷ್ಟರ ಮಟ್ಟಿಗೆಂದರೆ, ಹೊಟ್ಟೆಗಿಲ್ಲದೆ ಅನೇಕರು ಹಸಿ ಎಲೆಗಳನ್ನು, ಹುಲ್ಲುಗಳು ತಿಂದು ಜೀವ ಉಳಿಸಿಕೊಂಡರು..!!
ಬಹಿಷ್ಕಾರಕ್ಕೆ ಮೂರು ವರ್ಷವಾಗುತ್ತಿದ್ದಂತೆ ಒಂದು ಘಟನೆ ನಡೆದವು. ಕಅಬಾದ ಮುಂದೆ ತೂಗು ಹಾಕಲಾಗಿದ್ದ ಬಹಿಷ್ಕಾರ ಪತ್ರ ಗೆದ್ದಲು ತಿದ್ದಿರುವುದಾಗಿ ಹಾಗೂ ಅದರಲ್ಲಿ ಅಲ್ಲಾಹು ಎಂಬೊಂದು ಪದ ಬಿಟ್ಟು ಉಳಿದುದೆಲ್ಲವೂ ಕಣ್ಮರೆಯಾಗಿರುವುದಾಗಿ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಕನಸು ಕಂಡರು. ಕನಸಿನ ವಿಷಯವನ್ನು ಅಬೂತಾಲಿಬ್‌ರೊಂದಿಗೆ ಹೇಳಿದರು. ಈ ಕನಸು ನಿಜವಾಗುತದೆಂದು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಭರವಸೆ ನೀಡಿದರು. ಅಬೂತಾಲಿಬ್ ಮುತ್ತಲಿಬ್ ವಂಶದ ಕೆಲವರನ್ನು ಕರೆದುಕೊಂಡು ಕಅಬಾಲಯದತ್ತ ಹೊರಟರು. ಅಬೂತಾಲಿಬ್ ಹಾಗೂ ಸಂಗಡಿಗರನ್ನು ಕಂಡಾದ ಖುರೈಷಿಗಳಿಗೆ ಆಶ್ಚರ್ಯವಾದವು. ಕೊನೆಗೂ ಮುಹಮ್ಮದನನ್ನು ತಮಗೊಪ್ಪಿಸಲು ಆಗಮಿಸಿದ್ದಾರೆ. ನಮ್ಮ ಬಹಿಷ್ಕಾರ ಫಲಪ್ರದವಾಯಿತು ಎಂದು ಖುರೈಷಿಗಳು ಪರಸ್ಪರ ಮಾತಾಡಿಕೊಂಡರು.. ಅಬೂತಾಲಿಬ್ ಅವರೊಂದಿಗೆ ಮಾತನಾಡಲು ಆರಂಭಿಸಿದರು. "ಖುರೈಷಿಗಳೇ, ನಮ್ಮ ಮತ್ತು ನಿಮ್ಮ ನಡುವೆ ಕೆಲವೊಂದು ಸಮಸ್ಯೆಗಳು ಉಂಟಾದವು. ಅದರ ಕುರಿತು ಮರು ಪರಿಶೀಲನೆ ನಡೆಸಬೇಕಾದ ಸಮಯ ಆಗತವಾಗಿದೆ..ಆದ್ದರಿಂದ ನಿಮ್ಮ ಕರಾರು ಪತ್ರವನ್ನು ತನ್ನಿ. ಅದರಲ್ಲಿ ರಾಜಿ ಸಂಧಾನಕ್ಕೆ ಬೇಕಾದ ನಿಯಮಗಳೇನಾದರು ಇದೆಯೇ ನೋಡೋಣ” ಖುರೈಷಿಗಳು ಕರಾರು ಪತ್ರವನ್ನು ತಂದು, ಸಭೆಯ ಮುಂದಿಟ್ಟರು. " ನನ್ನ ಸಹೋದರ ಪುತ್ರ ಸುಳ್ಳು ಹೇಳುವುದಿಲ್ಲ. ಅವನು ಹೇಳುತ್ತಾನೆ. ಈ ಕರಾರು ಪತ್ರದೆಡೆಗೆ ಅಲ್ಲಾಹನು ಗೆದ್ದಲು ಹುಳಗಳನ್ನು ಕಳುಹಿಸಿದನು. ಅಲ್ಲಾಹು ಎಂಬ ಪದವನ್ನು ಹೊರತುಪಡಿಸಿ ಉಳಿದುದೆಲ್ಲವನ್ನೂ ಗೆದ್ದಲು ಹುಳಗಳು ತಿಂದು ಮುಗಿಸಿದವು. ಇದು ನಿಜವಾಗಿದ್ದಲ್ಲಿ ನೀವು ಎಚ್ಚರಗೊಳ್ಳಬೇಕು, ಇಲ್ಲ, ಅಲ್ಲಾಹನ ಮೇಲಾಣೆ ಸತ್ಯ. ನಮ್ಮಲ್ಲಿ ಕಟ್ಟಕಡೆಯ ವ್ಯಕ್ತಿ ಮರಣ ಹೊಂದುವವರೆಗೆ ಮುಹಮ್ಮದನನ್ನು ನಿಮಗೆ ಬಿಟ್ಟು ಕೊಡುವುದಿಲ್ಲ.. ಮುಹಮ್ಮದ್ ಹೇಳಿದ್ದು ಸುಳ್ಳಾದರೆ ಅವನನ್ನು ನಿಮಗೆ ಬಿಟ್ಟುಕೊಡುತ್ತೇವೆ... ನೀವು ಅವನನ್ನು ಕೊಂದು ಬಿಡಿ ಅಥವಾ ಇನ್ನೇನಾದರು ಮಾಡಿ ”
"ಸರಿ, ನಮ್ಮ ಒಪ್ಪಿಗೆ” ಖುರೈಷಿಗಳು ಹೇಳಿದರು. ಕರಾರು ಪತ್ರವನ್ನು ತೆರೆದು ನೋಡಿದಾಗ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದಂತೆ ಸಂಭವಿಸಿತ್ತು !!! ಈ ಘಟನೆಯಲ್ಲದೆ, ಏಕಪಕ್ಷೀಯ ಹಾಗೂ ಅನ್ಯಾಯದಿಂದ ಕೂಡಿದ್ದ ಬಹಿಷ್ಕಾರದ ವಿರುದ್ಧ ಅನೇಕ ಸಹೃದಯ ವ್ಯಕ್ತಿಗಳು ಧ್ವನಿ ಎತ್ತಿದ್ದರು. ಹಾಶಿಂ ವಂಶಸ್ಥರೊಂದಿಗೆ ಕುಟುಂಬ ಬಂಧವಿದ್ದ ಖುಸಯ್ಯ್ ಗಳು ಇವರಲ್ಲೊಬ್ಬರು. ಕರಾರನ್ನು ಉಲ್ಲಂಘಿಸಲು ಖುಸಯ್ಯ್ ವಂಶಸ್ಥರು ಏಕಕಂಠದ ತೀರ್ಮಾನಕ್ಕೆ ಬಂದರು. ಕರಾರು ಪತ್ರಕ್ಕೆ ಸಂಬಂಧಿಸಿದ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮ ಕನಸು ನಿಜವಾಗುವುದರ ಜೊತೆಗೆ ಖುಸಯ್ಗಳು ಅದರ ವಿರುದ್ದ ಪ್ರಬಲ ವಿರೋಧಿಸಿದಾಗ ಖುರೈಷಿಗಳು ಕರಾರನ್ನು ಮರು ಪರಿಶೀಲಿಸಲೇಬೇಕಾದವು. ಅದರೊಂದಿಗೆ ಸತ್ಯವಿಶ್ವಾಸಿಗಳ ಜೀವನಾಧ್ಯಯದ ಕಪ್ಪು ಪುಟವೊಂದು ಅಂತ್ಯಕಂಡವು. ಹೊಸ ಪುಟಗಳು ತೆರೆದುಕೊಂಡವು...
ತಂತ್ರಪೂರ್ವಕವಾಗಿ ಮುಸ್ಲಿಮರ ಆಸ್ತಿಪಾಸ್ತಿಗಳನ್ನು ವಶಪಡಿಸಿಕೊಳ್ಳುವುದು ಖುರೈಷಿಗಳ ಇನ್ನೊಂದು ರೀತಿಯ ರಣತಂತ್ರವಾಗಿತ್ತು. ಹುಟ್ಟೂರಲ್ಲಿ ಸತ್ಯವಿಶ್ವಾಸಿಯಾಗಿ ಜೀವನ ನಡೆಸುವುದು ಅಸಾಧ್ಯವಾದಾಗ ಮುಸ್ಲಿಮರು ಇನ್ನೊಂದು ರಾಷ್ಟ್ರಕ್ಕೆ ಪಲಾಯನ ಮಾಡುತ್ತಿದ್ದರು. ಅವರ ಸ್ವತ್ತು ವಿತ್ತಗಳನ್ನು ವಶಪಡಿಸಿಕೊಳ್ಳುತ್ತಿದ್ದ ಖುರೈಷಿಗಳು, ತಮಗೆ ಬೇಕಾದಂತೆ ಉಪಯೋಗಿಸುತ್ತಿದ್ದರು. ಮುಸ್ಲಿಮನಿಗಂತೂ ತನ್ನ ಆಸ್ತಿಪಾಸ್ತಿಗಳನ್ನು ತನ್ನ ಜೊತೆಗೊಯ್ಯುವ ಅವಕಾಶವೇ ಇರಲಿಲ್ಲ. ಸಅದ್ ಬುನು ಅಬೀ ವಖಾಸ್‌ರ ಭವ್ಯ ಮನೆಯನ್ನು ಕಂಡಾಗಲೆಲ್ಲಾ ಆಮೀಜಹಲ್ಗೆ ಅಸೂಯೆಯಾಗುತ್ತಿದ್ದವು. ಸಅದ್ ಪಲಾಯನ ಮಾಡುತ್ತಿದ್ದಂತೆ, ಅಬೂಜಹಲ್ ಅದನ್ನು ವಶಪಡಿಸಿಕೊಂಡು, ಅಲ್ಲಿಯೇ ವಾಸ್ತವ್ಯ ಹೂಡಲಾರಂಭಿಸಿದನು.. (ಡಾ.ಮುಹಮ್ಮದ್ ಅಬ್ದು ಯಮಾನಿ, ಬದ್ರುಲ್ ಕುದ್ರ-ಪುಟ :75)
ಸುಹೈಬುರೂಮಿ ರೋಮನ್ನರಾಗಿ ಗುರುತಿಸಲ್ಪಟ್ಟಿದ್ದರು. ವಾಸ್ತವದಲ್ಲಿ ಅವರು ರೋಮನ್ನರಾಗಿರಲಿಲ್ಲ. ನುಮೈರಿ ಗೋತ್ರದ ತಂದೆ ಹಾಗೂ ತಮೀಂ ಗೋತ್ರದ ತಾಯಿಗೆ ಹುಟ್ಟಿರುವ ಸುಹೈಬ್ ಶುದ್ದ ಅರಬಿಯಾಗಿದ್ದರು. ಅವರು ರೋಮ್‌ನವರಾಗಿ ಗುರುತಿಸಲ್ಪಡುವುದರ ಹಿಂದೊಂದು ಕಥೆಯಿದೆ.
ಸುಹೈಬ್ರ ತಂದೆ ಸಿನಾನ್ ಬುನು ಮಾಲಿಕುನ್ನುಮೈರಿ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ನಿಯೋಗದ ಒಂದು ದಶಕದ ಮೊದಲು ಪೇರ್ಷ್ಯನ್ ಸಾಮ್ರಾಜ್ಯಕ್ಕೆ ಸೇರಿದ ಉಬುಲ್ಲ (ಮುಂದೆ ಇದು ಬಸ್ವರಾ ನಗರದ ಭಾಗವಾದವು) ನಗರದ ಆಡಳಿತಾಧಿಕಾರಿಯಾಗಿದ್ದರು. ಸುಹೈಬ್ ತಂದೆ ತಾಯಿಯ ಮುದ್ದಿನ ಮಗನಾಗಿದ್ದರು. ಸ್ಪುರದ್ರುಪಿ ವ್ಯಕ್ತಿತ್ವ ಅವರದ್ದಾಗಿತ್ತು. ಅವರ ತಲೆಗೂದಲು ಕೆಂಪು ಬಣ್ಣದಿಂದ ಹೊಳೆಯುತ್ತಿದ್ದವು. ಬುದ್ಧಿವಂತರಾಗಿದ್ದ ಅವರು ತಂತ್ರಗಾರಿಕೆಯಲ್ಲಿ ನಿಪುಣರಾಗಿದ್ದರು. ಈ ಎಲ್ಲಾ ಕಾರಣಗಳಿಂದ ಅವರು ತಮ್ಮ ಓರಗೆಯ ಹುಡುಗರಿಗಿಂತ ಭಿನ್ನರಾಗಿದ್ದವು...
"ಒಂದು ದಿನ ಅವರ ತಾಯಿ ಬಾಲಕ ಸುಹೈಬ್‌ರನ್ನು ಇರಾಖಿನ ಆಝ್ಝನಿಯಾ ಗ್ರಾಮಕ್ಕೆ ಪ್ರವಾಸಿ ಹೊರಟರು. ಅದೇ ಸಮಯಕ್ಕೆ ಸರಿಯಾಗಿ ರೋಮನ್ನರು ಆಝ್ಝನಿಯ ಗಾಮದ ಮೇಲೆ ದಾಳಿ ನಡೆಸಿದರು...
ಒಂದು ದಿನ ಅವರ ತಾಯಿ ಬಾಲಕ ಸುಹೈಬ್‌ರನ್ನು ಇರಾಖಿನ ಆಝ್ಝನಿಯಾ ಗ್ರಾಮಕ್ಕೆ ಪ್ರವಾಸಿ ಹೊರಟರು. ಅದೇ ಸಮಯಕ್ಕೆ ಸರಿಯಾಗಿ ರೋಮನ್ನರು ಆಝ್ಝನಿಯ ಗ್ರಾಮದ ಮೇಲೆ ದಾಳಿ ನಡೆಸಿದರು. ಅಲ್ಲಿದ್ದ ಜನರನ್ನು ವಧಿಸಿದರು. ಸಂಪತ್ತುಗಳನ್ನೆಲ್ಲಾ ದೋಚಿ ಕೊಂಡೊಯ್ದರು. ಮಕ್ಕಳನ್ನು ಬಂದಿಸಿ, ತಮ್ಮೂರಿಗೆ ಸಾಗಿಸಿದರು. ಮಕ್ಕಳ ನಡುವೆ ಸುಹೈಬ್ ಕೂಡ ಇದ್ದರು...
-ರೋಮ್‌ನ ಗುಲಾಮರ ಮಾರುಕಟ್ಟೆಯಲ್ಲಿ ಸುಹೈಬ್‌ರನ್ನು ಮಾರಾಟ ಮಾಡಲಾಯಿತು. ಯಾರೋ ಒಬ್ಬರು ಅವನನ್ನು ಖರೀದಿಸಿದರು. ಅವರು ಹೆಚ್ಚಿನ ಹಣಕ್ಕೆ ಇನ್ಯಾರಿಗೋ ಮಾರಾಟ ಮಾಡಿದರು. ಹೀಗೆ ಯಜಮಾನರುಗಳಿಂದ ಯಜಮಾನರುಗಳ ಕೈ ಸೇರುತ್ತಾ ಹೋದ ಸುಹೈಬ್, ರೋಮನ್ನರ ಏಳಿಗೆ,ಪತನಗಳನ್ನು ಕಾಣುತ್ತಾ ಬೆಳೆದರು. ರೋಮ್ ನಲ್ಲಿ ಬೆಳೆಯುತ್ತಾ, ಅರಬಿ ಭಾಷೆಯ ಜೊತೆಗಿನ ಬಂಧವನ್ನು ಸಂಪೂರ್ಣವಾಗಿ ಕಳೆದು ಕೊಂಡಿದ್ದರೂ, ತಾನೋರ್ವ ಅರಬಿ ಎಂಬ ಪ್ರಶ್ನೆಯನ್ನು ಸುಹೈಬ್ ಕಳೆದುಕೊಂಡಿರಲಿಲ್ಲ. ತಾಯಿ ನಾಡಿಗೆ ಹಿಂದಿರುಗಲು ಪ್ರತಿ ಕ್ಷಣವೂ ಅವರ ಮನ ತುಡಿಯುತ್ತಿದ್ದವು. ಅಂತಹ ಅವಕಾಶವನ್ನು ಅವರು ಕಾತರದಿಂದ ಎದುರು ನೋಡುತ್ತಿದ್ದರು. ಈ ನಡುವೆ ಅರೇಬಿಯಾದಲ್ಲಿ ಪ್ರವಾದಿಯೊಬ್ಬರ ಆಗಮನವಾಗಿರುವ ಸುದ್ದಿಯನ್ನು ಕ್ರೈಸ್ತ ಪುರೋಹಿತರೊಬ್ಬರ ಮೂಲಕ ತಿಳಿದ ಸುಹೈಬ್ರಿಗೆ ಆ ಪ್ರವಾದಿಯನ್ನು ಕಾಣಬೇಕೆಂಬ ಹೆಬ್ಬಯಕೆ ಹುಟ್ಟಿಕೊಂಡವು. ಆ ಬಯಕೆ ಅದೆಷ್ಟು ಪ್ರಬಲವಾಗಿತ್ತೆಂದರೆ,ಮೊದಲ ಬಾರಿಗೆ ಅವರು ಪಲಾಯನ ಮಾಡುವ ದಾರಿಗಳ ಕುರಿತು ಯೋಚಿಸಲಾರಂಭಿಸಿದರು. ಸೂಕ್ತ ಸಂದರ್ಭವೊಂದು ಸಿಕ್ಕೊಡನೇ ಅವರು ಪಲಾಯನ ಮಾಡಿಯೇ ಬಿಟ್ಟರು. ಅದು ತಾಯಿ ನಾಡಿಗಲ್ಲ!! ನೇರ ಮಕ್ಕಾದೆಡೆಗೆ..!!
ಸುಹೈಬ್ರ ಕೆಂಪು ಕೂದಲು ಹಾಗೂ ಉಗ್ಗು ಮಾತಿನ ಕಾರಣದಿಂದ ಮಕ್ಕಾದ ಜನರು ಅವರನ್ನು ರೋಮನ್ ಎಂದು ಕರೆಯಲಾರಂಭಿಸಿದರು. ಮಕ್ಕಾದ ಪ್ರಮುಖ ವ್ಯಕ್ತಿಯಾಗಿದ್ದ ಅಬ್ದುಲ್ಲಾಹಿಬ್ನು ಜುದ್ ಆನ್‌ರೊಂದಿಗೆ ಸಖ್ಯ ಸ್ಥಾಪಿಸಿ, ವ್ಯಾಪಾರದಲ್ಲಿ ತೊಡಗಿಕೊಂಡರು. ವ್ಯಾಪಾರದಲ್ಲಿ ಅವರಿಗೆ ಯಶಸ್ಸು ಲಭಿಸಿದವು. ಸಂಪತ್ತುಗಳು ಪ್ರವಾಹದಂತೆ ಹರಿದು ಬಂದವು. ಹಾಗಂತ ಈ ವ್ಯಾಪಾರ,ಸಂಪತ್ತುಗಳೆಲ್ಲಾ ಸುಹೈಬ್ರನ್ನು ತಮ್ಮ ಮೂಲ ಉದ್ದೇಶವಾದ ಪ್ರವಾದಿ ಕಾಣುವ ಹೆಬ್ಬಯಕೆಯನ್ನು ಮರೆತು ಬಿಡುವಂತೆ ಮಾಡಿರಲಿಲ್ಲ. ಕ್ರೈಸ್ತ ಸನ್ಯಾಸಿ ನುಡಿದಿದ್ದ ಭವಿಷ್ಯವೂ ಅವರ ಮನದಲ್ಲಿ ಹಸಿರಾಗಿದ್ದವು. ಅಂತೂ ಒಂದು ದಿನ ಅವರು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಭೇಟಿಯಾಗಿ,ಇಸ್ಲಾಮ್ ಸ್ವೀಕರಿಸಿದರು. ಈ ಕಾರಣಕ್ಕಾಗಿ ಇತರ ವಿಶ್ವಾಸಿಗಳಂತೆಯೇ ಸುಹೈಬ್ ಸಹ ಖುರೈಷಿಗಳಿಂದ ಕಿರುಕುಳ ಅನುಭವಿಸಬೇಕಾಯಿತು..
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಅನುಯಾಯಿಗಳಿಗೆ ಮದೀನಕ್ಕೆ ಪಲಾಯನ ಮಾಡಲು ಅನುಮತಿ ನೀಡಿದಾಗ, ಸುಹೈಬ್ ಸಹ ಪಲಾಯನ ಮಾಡಲು ನಿರ್ಧರಿಸಿದರು. ಆದರೆ, ಖುರೈಷಿಗಳಿಗೆ ಈ ವಿಷಯ ಹೇಗೋ ತಿಳಿದು ತಡೆದು ಬಿಟ್ಟರು. ವ್ಯಾಪಾರ ಮೂಲಕದ ಸುಹೈಬ್ ಗಳಿಸಿರುವ ಧನ ಕನಕಗಳೊಂದಿಗೆ ಪಲಾಯನ ಮಾಡದಂತೆ ನಿಗಾ ಇಡಲು ಖುರೈಷಿಗಳು ಕೆಲವು ಗೂಢಾಚಾರರನ್ನು ನೇಮಿಸಿದರು. ಹೇಗಾದರು ಮಾಡಿ ಶತ್ರುಗಳಿಂದ ಪಾರಾಗಬೇಕೆಂಬ ಹಂಚಿಕೆಯಲ್ಲಿದ್ದ ಸುಹೈಬ್ ಒಂದು ತಂತ್ರ ಪ್ರಯೋಗಿಸಿದರು. ಅಂದು ರಾತ್ರಿ ವಿಪರೀತ ಚಳಿಯಿದ್ದವು. ಸುಹೈಬ್ ಕಕ್ಕೂಸ್‌ಗೆ ಹೋಗುವವರಂತೆ ಆಗಾಗ್ಗೆ ಹೊರಗೆ ಹೋಗಿ ಬರುತ್ತಿದ್ದರು. ಗೂಢಾಚಾರರು ತನ್ನ ಹೊಟ್ಟೆ ಕೆಟ್ಟಿದೆ ಎಂದು ಭಾವಿಸಲಿ ಎಂಬುದು ಅವರ ಪ್ಲಾನ್ ಆಗಿತ್ತು....
ಸುಹೈಬ್ರ ಪ್ಲಾನ್ ಯಶಸ್ಸು ಕಂಡವು. "ಲಾತಾ, ಉಝ್ಝರ ಶಾಪದ ಫಲವಾಗಿ ಸಹಜ ಹೊಟ್ಟೆಕೆಟ್ಟಿದೆ. ಇನ್ನೂ ಎಲ್ಲಿಗೂ ಹೋಗಲಾರ, ಈ ರಾತ್ರಿ ಶಾಂತ ಚಿತ್ತರಾಗಿ ನಿದ್ರಿಸಬಹುದು.." ಎಂದು ಶತ್ರು ಗೂಢಾಚಾರರು ಪರಸ್ಪರ ಮಾತನಾಡಿಕೊಂಡರು. ಗೂಢಾಚಾರರು ಗಾಢ ನಿದ್ದೆಗೆ ಜಾರುತ್ತಿದ್ದಂತೆ ಸುಹೈಬ್ ಮದೀನದತ್ತ ಪಲಾಯನ ಮಾಡಿದರು.. ಸ್ವಲ್ಪ ಹೊತ್ತಿನಲ್ಲೇ ಗೂಢಾಚಾರರಿಗೆ ಎಚ್ಚರವಾದವು. ಸುಹೈಬ್ ಕಾಣದಿದ್ದಾಗ ಅವರು ಕುದುರೆ ಹತ್ತಿ ಹುಡುಕುತ್ತಾ ಹೊರಟರು...
ಸುಹೈಬ್ ದೂರದಲ್ಲಿ ನಡೆಯುತ್ತಿದ್ದರು. ಶತ್ರುಗಳು ಬೆನ್ನ ಹಿಂದಿದ್ದಾರೆಂಬ ಸುಳಿವು ಅವರಿಗೆ ಲಭಿಸಿದವು. ಇನ್ನು ಅವರಿಂದ ತಪ್ಪಿಸಿಕೊಳ್ಳುವುದು ಅಸಾಧ್ಯವೆಂದರಿತಾಗ ಸುಹೈಬ್ ಒಂದು ಪರ್ವತವನ್ನೇರಿ ಬಿಲ್ಲು ಬಾಣಗಳನ್ನು ಸಿದ್ಧಗೊಳಿಸಿ, "ಖುರೈಷಿಗಳೇ, ಅಲ್ಲಾಹನ ಮೇಲೆ ಸತ್ಯ, ಬಿಲ್ವಿದ್ಯೆಯಲ್ಲಿ ನಾನೆಷ್ಟು ನಿಪುಣನೆಂಬುದು ನಿಮಗೆ ತಿಳಿದಿದೆ. ನನ್ನ ಗುರಿ ಎಂದೂ ತಪ್ಪದೆಂಬುದೂ ನಿಮಗೆ ತಿಳಿದಿದೆ. ಅಲ್ಲಾಹು ಸತ್ಯ. ನನ್ನ ಕೈಯಲ್ಲಿರುವ ಬಾಣ ಮುಗಿಯುವವರೆಗೂ ನಿಮಗೆ ನನ್ನ ಹತ್ತಿರ ಸುಳಿಯಲೂ ಸಾಧ್ಯವಾಗದು. ನಂತರ ನನ್ನ ಖಡ್ಗ ನನ್ನ ಕೈಯಲ್ಲಿರುವವರೆಗೂ ನಿಮ್ಮನ್ನು ನಾನು ಕತ್ತರಿಸಿ ಹಾಕುವೆನು” ಕೂಗಿ ಹೇಳಿದರು...
" ಅದೇನೇ ಇರಲಿ ಸುಹೈಬ್, ನೀನು ನಿನ್ನ ಸಂಪತ್ತು, ಶರೀರದೊಂದಿಗೆ ಇಲ್ಲಿಂದ ಪಾರಾಗಲು ನಾವು ಅವಕಾಶ ನೀಡುವುದಿಲ್ಲ. ದಟ್ಟ ದರಿದ್ರ ಸ್ಥಿತಿಯಲ್ಲಿ ನೀನು ಇಲ್ಲಿಗೆ ಬಂದೆ. ಈಗಲೋ ಶ್ರೀಮಂತನಾಗಿರುವೆ" ಗೂಢಚಾರರು ಹೇಳಿದರು...
" ಸರಿ, ನನ್ನ ಸಂಪತ್ತನ್ನು ನಿಮಗೆ ಬಿಟ್ಟುಕೊಟ್ಟರೆ ನನ್ನನ್ನು ನನ್ನಷ್ಟಕ್ಕೇ ಬಿಟ್ಟು ಬಿಡುವಿರಾ..?" ಸುಹೈಬ್ ಕೇಳಿದರು.
" ಖಂಡಿತ "ಅವರು ಒಪ್ಪಿಕೊಂಡರು. ಅವರಿಗದು ಸಾಕಾಗಿತ್ತು. ಮಕ್ಕಾದಲ್ಲಿರುವ ತನ್ನ ಮನೆಯಲ್ಲಿ ತನ್ನ ಧನಕನಕಗಳನ್ನು ಅಡಗಿಸಿಟ್ಟ ಸ್ಥಳವನ್ನು ಸುಹೈಬ್ ಅವರಿಗೆ ಹೇಳಿಕೊಟ್ಟರು. ಅವರದನ್ನು ವಶಪಡಿಸಿಕೊಂಡು, ಸುಹೈಬ್ ರನ್ನು ಅವರ ಪಾಡಿಗೆ ಬಿಟ್ಟು ಬಿಟ್ಟರು..
ತಾನಿದುವರೆಗೂ ಸಂಪಾದಿಸಿದ ಸಂಪತ್ತನ್ನೆಲ್ಲಾ ಖುರೈಷಿಗಳಿಗೆ ಬಿಟ್ಟುಕೊಟ್ಟಿರುವುದರಲ್ಲಿ ಸುಹೈಬ್ ಗೆ ಯಾವುದೇ ರೀತಿಯ ಪಶ್ಚಾತಾಪವಿರಲಿಲ್ಲ. ಅವರು ಖುಬಾ ತಲುಪಿದಾಗ ಅಲ್ಲಿ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಕಾಣ ಸಿಕ್ಕರು.. ಸುಹೈಬ್‌ರನ್ನು ಕಂಡೊಡನೇ ಸಂತೋಷಗೊಂಡ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು..
"ಸುಹೈಬ್ ವ್ಯಾಪಾರ ಲಾಭಕರ, ಲಾಭಕರ, ಲಾಭಕರ!!! ” ಎಂದು ಉದ್ಘೋಪಿಸಿದರು. ಸುಹೈಬ್ ಬೆಕ್ಕಸ ಬೆರಗಾದರು. ತನಗಿಂತಲು ಮೊದಲು ಇತ್ತಕಡೆ ಯಾರೂ ಬಂದಿಲ್ಲ. ನನ್ನ ವಿಷಯವಂತೂ ಶತ್ರುಗಳಿಗಲ್ಲದೆ ಇನ್ಯಾರಿಗೂ ತಿಳಿದಿಲ್ಲ....
ಅಧ್ಯಾಯ-7
"ಮದೀನದ ವಿಶೇಷತೆಗಳು"
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಹಾಗೂ ಸ್ವಹಾಬಿಗಳ ಪವಿತ್ರ ಹಿಜ್ರಾ ಯಾತ್ರೆಗೆ ಮದೀನಾ (ಯಸ್ರಿಬ್) ವನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಅಲ್ಲಾಹನ ಆ ನಾಡನ್ನು ಗೌರವಿಸಿದನು. ಯಾಕೆ ಅಲ್ಲಾಹನು ಮದೀನಾವನ್ನೇ ಆಯ್ಕೆ ಮಾಡಿಕೊಂಡನು..? ಇದಕ್ಕೊಂದು ಕಾರಣ ನೀಡಬಹುದು. ಯುದ್ಧ ಹಾಗೂ ಭೂಮಿ ಶಾಸ್ತ್ರದ ಪ್ರಕಾರ ಮದೀನಾ ಒಂದು ಕೋಟೆಯ ಸ್ಥಾನವನ್ನು ನಿರ್ವಹಿಸುತ್ತದೆ. ಅರೇಬಿಯಾದ ಮತ್ಯಾವ ಪ್ರದೇಶಗಳಿಗೂ ಈ ವಿಶೇಷತೆಯಿಲ್ಲ. ಪಶ್ಚಿಮ ಭಾಗದಲ್ಲಿ ಹರ್ರತುಲ್ (ಕಡು ಕಪ್ಪಿನ ಕಲ್ಲುಗಳಿಂದ ತುಂಬಿರುವ ಪ್ರದೇಶಗಳನ್ನು ಹರ್ರತ್ ಎಂದು ಕರೆಯುತ್ತಾರೆ. ಈ ಪದೇಶಗಳು ಒಂಟೆ,ಕುದುರೆ,ಸೈನಿಕರ ಪ್ರಯಾಣಕ್ಕೆ ಅನುಕೂಲಕರವಾಗಿಲ್ಲ. ಮದೀನಾದ ಸುತ್ತಲೂ ಇಂತಹ ಹಲವು ಪ್ರದೇಶಗಳಿವೆ.) ವಬ್ರ, ಪೂರ್ವದಲ್ಲಿ ಹರ್ರತುಲ್ ರಾಖಿಮು ಮದೀನಕ್ಕೆ ಸಂರಕ್ಷಣೆ ನೀಡುತ್ತದೆ. ಮತ್ತಿತರ ಭಾಗಗಳಲ್ಲಿ ಖರ್ಜೂರದ ಮರಗಳು ಇಡಿಕಿರಿದಿರುವ ತೋಟಗಳು, ಮತ್ತಿತರ ಕೃಷಿ ಪ್ರದೇಶಗಳು ಆವೃತವಾಗಿವೆ. ಇವುಗಳನ್ನು ದಾಟಿ ಮದೀನಾ ಪ್ರವೇಶಿಸುವುದು ಅಷ್ಟು ಸುಲಭವಾಗಿರಲಿಲ್ಲ. ಒಂದು ವೇಳೆ ಯಾರಾದರು ಪ್ರಯತ್ನಿಸಿದ್ದಲ್ಲಿ ಮಧ್ಯೆ ದಾರಿ ತಪ್ಪಿ ಅಥವಾ ಇನ್ನೇನೋ ಆಗಿ ಬಂದ ಉದ್ದೇಶವೇ ಬೇರೆ ಆಗಿ ಬಿಡುತ್ತಿದ್ದವು...
ಮದೀನಾ ಪ್ರವೇಶಿಸಲು ಒಂದೇ ಒಂದು ತೆರೆದ ದಾರಿಯಿತ್ತು (ಹಿಜ್ರಾ ಐದನೇ ವರ್ಷ ನಡೆದ ಅಹ್ಸಾಬ್ ಯುದ್ದದ ವೇಳೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹಾಗೂ ಸ್ವಹಾಬಿಗಳು ಕಂದಕ ತೋಡಿದ್ದು ಅಲ್ಲಿಯೆ)
ಮದೀನಾದ ಆಯ್ಕೆಯ ಹಿಂದಿನ ಈ ಎಲ್ಲಾ ತಂತ್ರಗಾರಿಕೆಗಳು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರಿಗೆ ತಿಳಿದಿತ್ತು. ಹಿಜ್ರಾ ಹೊರಡುವುದಕ್ಕೂ ಮೊದಲೇ ಪ್ರವಾದಿ ಸಲ್ಲಲ್ಲಾಹು ಅಲೆಹಿವಸಲ್ಲಮರು ಸಹಾಬಿಗಳೊಂದಿಗೆ ಹೇಳಿದ್ದರು.. “ನೀವು ಹಿಜ್ರಾ ಹೋಗುವ ಪ್ರದೇಶವನ್ನು ಅಲ್ಲಾಹನು ನನಗೆ ತೋರಿಸಿ ಕೊಟ್ಟಿದ್ದಾನೆ. ಖರ್ಜೂರದ ತೋಟಗಳಿರುವ ಒಂದು ಪ್ರದೇಶವದು. ಬಂಡೆಗಲ್ಲುಗಳು ಅವ್ಯವಸ್ಥಿತವಾಗಿ ಹರಡಿಕೊಂಡಿರುವ ಎರಡು ಪ್ರದೇಶಗಳ ನಡುವಿನ ನಾಡು" (ಸ್ವಹೀಹ್ ಬುಖಾರಿ)..
ಮದೀನಾದ ಇಬ್ನು ನಜ್ಜಾರ್ ಗೋತ್ರದೊಂದಿಗೆ ಬನೂ ಹಾಶಿಂ ಕುಟುಂಬಕ್ಕೆ ವೈವಾಹಿಕ ಸಂಬಂಧವಿತ್ತು. ಇಬ್ನು ನಜ್ಜಾರ್ ಗೋತ್ರದ ಸಲ್ಮಾ ಎಂಬ ಸ್ತ್ರೀಯನ್ನು ಹಾಶಿಂ ಮದುವೆಯಾದರು. ಅವರಿಗೆ ಅಬ್ದುಲ್ ಮುತ್ತಲಿಬ್ ಎಂಬ ಶಿಶುವಿನ ಜನನವಾಯಿತು. ಹಾಶಿಂ ಅಮ್ಮನ ಜೊತೆಗೆ ವಾಸಿಸುತ್ತಿದರು. ಮಗು ಬೆಳೆದಂತೆ ಅವರು ಮಕ್ಕಾದತ್ತ ವಲಸೆ ಹೋದರು. ಅರೇಬಿಯಾದ ಸಾಮಾಜಿಕ ಬದುಕಿನಲ್ಲಿ ಕುಟುಂಬ ಬಂಧಕ್ಕೆ ವಿಶೇಷ ಮನ್ನಣೆಯಿದೆ. ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಮದೀನಾ ತಲುಪಿದಾಗ ಅವರ ಅತಿಥೇಯನಾಗಲು ಸೌಭಾಗ್ಯ ಪಡೆದ ಅಬೂ ಅಯ್ಯೂಬುಲ್ ಅನ್ಸಾರಿ (ರ) ಇಬ್ನು ನಜ್ಜಾರ್ ಗೋತ್ರಕ್ಕೆ ಸೇರಿದವರು. ಮುಹಾಜಿರ್‌ಗಳು, ಮಕ್ಕಾ ಪರಿಸರದಲ್ಲಿ ಇಸ್ಲಾಮ್ ಸ್ವೀಕರಿಸಿದವರು ಅದ್ನಾನ್ ವಂಶದವರಾಗಿದ್ದರು. ಔಸ್-ಖಝ್ರಜ್ ಗೋತ್ರಗಳು ಖಹ್ತಾನ್ ವಂಶಸ್ಥರಾಗಿದ್ದರು. ಮದೀನಾದಲ್ಲಿ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರಿಗೆ ಭವ್ಯ ಸ್ವಾಗತ ನೀಡಲು ಅನ್ಸಾರಿಗಳು ತೀರ್ಮಾನಿಸುವುದರೊಂದಿಗೆ ಈ ಎರಡೂ ವಂಶಗಳು ಒಂದಾದವು.. ಜಾಹಿಲಿಯ್ಯಾ ಕಾಲದಲ್ಲಿ ಈ ಎರಡು ವಂಶಗಳ ನಡುವೆ ಹೇಳ ತೀರದ ಹಗೆಯಿದ್ದವು. ಆದರೆ, ಈ ಎರಡು ವಂಶಸ್ಥರು ಇಸ್ಲಾಮಿನ ಪತಾಕೆಯಡಿಯಲ್ಲಿ ಸಂಗಮಿಸಲು ತೀರ್ಮಾನಿಸುವುದರೊಂದಿಗೆ ಲಾಗಾಯ್ತಿನ ಹಗೆಗಳು ಇಲ್ಲದಾದವು...
ಈ ಎಲ್ಲಾ ಕಾರಣಗಳಿಂದ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಹಾಗೂ ಸ್ವಹಾಬಿಗಳ ಹಿಜ್ರಾ ಯಾತ್ರೆಗೆ ಮದೀನಾ ಅತ್ಯಂತ ಸೂಕ್ತ ಸ್ಥಳವಾಗಿತ್ತು. ಇಸ್ಲಾಮೀ ದಅ್ ವತ್ತಿನ ಕೇಂದ್ರವಾಗಿ ಅಲ್ಲಾಹನು ಮದೀನಾವನ್ನು ಆಯ್ಕೆ ಮಾಡಿದನು.. ಮದೀನಾದ ಜನರ ಬೆಂಬಲದಿಂದ ಇಸ್ಲಾಮ್ ಪ್ರಪಂಚದಾದ್ಯಂತ ಫಲ ಪುಷ್ಟವಾಗಿ ಬೆಳೆದವು...
ಹಜ್ ಕಾಲದಲ್ಲಿ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಇಸ್ಲಾಮಿನ ಪ್ರಬೋಧನೆಯನ್ನು ತೀವ್ರಗೊಳಿಸಿದರು. ಒಮ್ಮೆ "ಅಖಬ"(ಇದು ಜಂರತುಲ್ ಕುಬ್ರಾಕೆ ಸಮೀಪದಲ್ಲಿದೆ. ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಮೊದಲ ಬಾರಿಗೆ ಅನ್ಸಾರಿಗಳನ್ನು ಇಲ್ಲಿ ಎದುರುಗೊಂಡರು. ಆ ನೆನಪಿಗಾಗಿ ಇಲ್ಲಿ ಒಂದು ಮಸೀದಿಯಿದೆ.) ಸಮೀಪದಲ್ಲಿ ಅನ್ಸಾರಿಗಳಾದ ಖಝ್ರಜ್ ಗೋತ್ರದ ಕೆಲವರು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರನ್ನು ಭೇಟಿಯಾದರು. ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಅವರಿಗೆ ಇಸ್ಲಾಮನ್ನು ಪರಿಚಯಿಸಿದರು. ಖುರ್ ಆನ್ ಓದಿ ಕೇಳಿಸಿದರು. ಮದೀನಾದಲ್ಲಿ ಯಹೂದಿಗಳು ಒಬ್ಬ ಪ್ರವಾದಿಯ ಆಗಮನದ ಕುರಿತು ಹೇಳುತ್ತಿರುವುದನ್ನು ಇವರು ಕೇಳಿಸಿಕೊಂಡಿದ್ದರು. ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಮಾತು ಕೇಳಿ ಅವರು ಪರಸ್ಪರ ಹೀಗೆ ಮಾತನಾಡಿಕೊಂಡರು...
ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಮಾತು ಕೇಳಿ ಅವರು ಪರಸ್ಪರ ಹೀಗೆ ಮಾತನಾಡಿಕೊಂಡರು..
"ಯಹೂದಿಗಳು ಹೇಳುತ್ತಿರುವ ಪ್ರವಾದಿ ಇವರೇ ಆಗಿರಬೇಕು. ಬೇರೆಯವರಿಗೂ ಮೊದಲು ನಾವಿವರನ್ನು ಸ್ವೀಕರಿಸೋನ” ಹೀಗೆ ಅವರು ಅಲ್ಲಿಯೇ ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರನ್ನು ಒಪ್ಪಿಕೊಂಡು,ಇಸ್ಲಾಮ್ ಸ್ವೀಕರಿಸಿದರು. ಬಳಿಕ ಅವರು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರೊಂದಿಗೆ ಹೇಳಿದರು...
“ನಮ್ಮ ಸಮುದಾಯದಲ್ಲಿ ಉಂಟಾಗುತ್ತಿರುವ ನಾಶನಷ್ಟಗಳು, ವೈರುಧ್ಯಗಳು ಇನ್ಯಾವ ಸಮುದಾಯದಲ್ಲೂ ಕಾಣಲು ಸಾಧ್ಯವಿಲ್ಲ.. ಅಲ್ಲಾಹನು ತಮ್ಮ ಮೂಲಕ ನಮ್ಮನ್ನು ಒಂದುಗೂಡಿಸಿದರೆ, ತಮ್ಮಷ್ಟು ಗೌರವಾದರಗಳನ್ನು ಪಡೆಯುವ ಮತ್ತೊಬ್ಬ ವ್ಯಕ್ತಿ ಇರಲಾರನು...
ಇಸ್ಲಾಮ್ ಸ್ವೀಕರಿಸಿದ ಬಳಿಕ ಅವರು ಮದೀನಾಕೆ ಮರಳಿದರು. ಅಲ್ಲಿ ತಮ್ಮ ಸಹೋದರರೊಂದಿಗೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಬಗ್ಗೆ ಹೇಳಿದರು. ಅವರನ್ನು ಇಸ್ಲಾಮಿಗೆ ಆಹ್ವಾನಿಸಿದರು. ಹಿಗೆ ಆ ಸಮುದಾಯದಲ್ಲಿ ಇಸ್ಲಾಮ್ ವ್ಯಾಪಕ ಪ್ರಚಾರ ಪಡೆದವು. ಅನ್ಸಾರಿಗಳ ಎಲ್ಲಾ ಮನೆಗಳಲ್ಲೂ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರೇ ಪ್ರಮುಖ ಚರ್ಚಾ ವಿಷಯವಾದರು...
ಮದೀನಾದ ಎರಡು ಪ್ರಮುಖ ಗೋತ್ರಗಳಾದ ಔಸ್ ಮತ್ತು ಖಝ್ರಜ್ ಗೋತ್ರಗಳು ಅತ್ಯಂತ ನಿರ್ಣಾಯಕ ಸಂದರ್ಭದಲ್ಲಿ ಮುಸ್ಲಿಮರಿಗೆ ನೆರವಾದರು. ಮುಸ್ಲಿಮರಿಗೆ ಮಟ್ಟಿಗೆ ಇದೊಂದು ಮಹಾ ಅನುಗ್ರಹವಾಗಿತ್ತು.
" ಅಲ್ಲಾಹನು ಅವನು ಉದ್ದೇಶಿಸುವವರನ್ನು ಉದ್ದೇಶಿಸುವ ರೀತಿಯಲ್ಲಿ ಸನ್ಮಾರ್ಗ ಸೇರುವಂತೆ ಮಾಡುವನು ” ಔಸ್ ಮತ್ತು ಖಝ್ರಜ್ ಗೋತ್ರಗಳು ಮುಸ್ಲಿಮರಿಗೆ ನೆರವಾಗಲು ಎರಡು ಐತಿಹಾಸಿಕ ಕಾರಣಗಳಿವೆ. ಒಂದು, ಈ ಎರಡೂ ಗೋತ್ರಗಳ ಜನರು ಸರಳ ಮನಸಿನವರು ಮತ್ತು ಪ್ರಾಮಾಣಿಕರಾಗಿದ್ದರು. ಮಕ್ಕಾ ನಿವಾಸಿಗಳಂತೆ ದುರಹಂಕಾರ, ಹಠಮಾರಿತನ, ಸತ್ಯನಿಷೇಧ, ತೀವ್ರಗಾಮಿತ್ವ ಮೊದಲಾದ ದುರ್ಗುಣಗಳು ಇವರಲ್ಲಿರಲಿಲ್ಲ. ಔಸ್ ಮತ್ತು ಖಝ್ರಜ್ ಗೋತ್ರಗಳ ಮೂಲ ಬೇರು ಯಮನ್‌ನಲ್ಲಿದೆ. ಯಮನ್ ದೇಶದವರು ವಿಶಾಲ ಹೃದಯವುಳ್ಳವರು ಎಂದು ಸ್ವತಃ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರೇ ಹೇಳಿದ್ದಾರೆ....
ಅನ್ಸಾರಿಗಳ ಕುರಿತು ಪವಿತ್ರ ಖುರ್ ಆನ್ ಹೀಗೆ ಹೇಳಿದೆ. "ತಮ್ಮತ್ತ ಆಶ್ರಯ ಬೇಡಿ ಬಂದವರನ್ನು ಅವರು ಪ್ರೀತಿಸುತ್ತಾರೆ. ಮುಹಾಜರ್‌ಗಳಿಗೆ ಕೊಟ್ಟ ಸಂಪತ್ತುಗಳ ಮೇಲೆ ಅವರಿಗೆ ಯಾವುದೇ ರೀತಿಯ ಆಸೆಗಳಿಲ್ಲ. ಸ್ವತಃ ತಮಗೆ ಅಗತ್ಯವಿದ್ದರೂ, ಅವರು ಇತರರಿಗೆ ಪ್ರಾಶಸ್ಸು ನೀಡುತ್ತಾರೆ"
ಇನ್ನೊಂದು ಕಾರಣ ಹೀಗಿದೆ. ಆಂತರಿಕ ಯುದ್ದಗಳಿಂದ ಈ ಎರಡೂ ಗೋತ್ರಗಳು ಬೇಸತ್ತು ಹೋಗಿದ್ದವು. ತಮ್ಮೊಳಗಿನ ಸಂಘರ್ಷಗಳಿಗೆ ಕೊನೆಯೇ ಇಲ್ಲವೇ? ಎಂಬ ಚಿಂತೆಯಲ್ಲಿ ಎರಡೂ ಗೋತ್ರಗಳು ದಿನದೂಡುತ್ತಿದ್ದವು. ಮುಸ್ಲಿಮರ ಆಗಮನಕ್ಕೂ ಐದು ವರ್ಷ ಮೊದಲಷ್ಟೇ ಅವರ ನಡುವೆ " ವಿಶಿಷ್ಯಾ, ಬುಅಸ್" ಎಂಬ ಎರಡು ಭೀಕರ ಯುದ್ಧಗಳು ನಡೆದಿದ್ದವು. ಈ ಯುದ್ದಗಳಿಳುಂಟಾದ ನಾಶ ನಷ್ಟಗಳ ಪರಿಣಾಮ ಉಂಟಾದ ಭಾದೆ ಅವರ ಮನಸ್ಸಿನಲ್ಲಿನ್ನೂ ಉಳಿದಿದ್ದವು. ಆದ್ದರಿಂದ ಅವರ ಮನಸ್ಸಿನಲ್ಲಿ ಸಂಧಾನದ ಆಸೆಗಳು ಮೊಳಕೆಯೊಡೆದಿದ್ದವು. ತಮ್ಮೆರಡೂ ಗೋತ್ರಗಳನ್ನು ಸ್ನೇಹ ಪೂರ್ವಕವಾಗಿ ಬೆಸೆಯುವ ಒಂದು ಅದ್ಭುತ ಬಳ್ಳಿಗಾಗಿ ಅವರು ಕಾಯುತ್ತಿದ್ದರು. ಅದು ಇಸ್ಲಾಮಿನ ಅವರ ಮುಂದೆ ಬಂದು ನಿಂತಾಗ ಬುದ್ಧಿವಂತರಾದ ಅವರದನ್ನು ನಿರಾಕರಿಸದೆ ಪ್ರೀತಿ ಪೂರ್ವಕ ಒಪ್ಪಿಕೊಂಡರು..
ಅನ್ಸಾರಿಗಳ ಇಸ್ಲಾಮ್ ಸ್ವೀಕಾರದ ಹಿಂದೆ ಇನ್ನೊಂದು ಕಾರಣವೂ ಇದೆ.. ಖುರೈಷಿಗಳಿಗೂ ಮತ್ತಿತರೆಲ್ಲಾ ಅರಬಿಗಳಿಗೂ ನುಬವ್ವತ್, ಹಾಗೂ ಪ್ರವಾದಿಗಳೊಂದಿಗಿನ ಸಂಬಂಧ ದೀರ್ಘ ಕಾಲದಿಂದ ಮುರಿದು ಬಿದ್ದಿತ್ತು. ಅವುಗಳ ಅರ್ಥ,ಆಶಯಗಳನ್ನೆಲ್ಲಾ ಅವರು ಮರೆತು ಬಿಟ್ಟಿದ್ದರು. ಇದರಿಂದ ಅವರಲ್ಲಿ ಅನಕ್ಷರತೆ, ಅಜ್ಞಾನ ಪಾರಮ್ಯ ಮೆರೆದಿದ್ದವು.. ವಿಗ್ರಹಾರಾಧನೆ ಅವರಲ್ಲಿ ರಕ್ತಗತಗೊಂಡಿತ್ತು. ತಿದ್ದುಪಡಿ ಮಾಡಲಾಗಿದ್ದರೂ ವೇದಗ್ರಂಥಗಳ ಜೊತೆ, ಪ್ರವಾದಿಗಳ ಜೊತೆ ಭಾಗಶಃ ಸಂಬಂಧವಿಟ್ಟು ಕೊಂಡಿದ್ದ ಯಹೂದಿ, ಕ್ರೈಸ್ತರಿಂದಲೂ ಅವರು ದೂರವಿದ್ದರು. ಖರ್‌ಆನಿನ ಪ್ರಕಾರ ಖುರೈಷಿಗಳೆಂದರೆ..
“ಪ್ರಜ್ಞಾಶೂನ್ಯರಾಗಿದ್ದ, ಅಜಾಗರೂಕತೆಯ ಜೀವನ ನಡೆಸುತ್ತಿದ್ದ ಒಂದು ಜನಾಂಗವಾಗಿತ್ತು." (ಯಾಸೀನ್-6) ಆದರೆ, ಔಸ್ ಖಝ್ರಜ್ ಗೋತ್ರಗಳ ಸ್ಥಿತಿ ಹೀಗಿರಲಿಲ್ಲ. ಪ್ರವಾದಿತ್ವ, ಪ್ರವಾದಿಗಳ ಕುರಿತು ಅವರು ಯಹೂದಿಗಳ ಬಾಯಲ್ಲಿ ದಿನವೂ ಕೇಳುತ್ತಿದರು. ಯಹೂದಿಗಳ ತೌರಾತ್ ಪಾರಾಯಣ ಈ ಎರಡು ಗೋತ್ರಗಳ ಜನರ ಕಿವಿಗೆ ಬೀಳುತ್ತಿದ್ದವು.
“ಅವಸಾನ ಕಾಲಘಟ್ಟದಲ್ಲಿ ಓರ್ವ ಪ್ರವಾದಿಯ ಆಗಮನವಾಗುವುದು. ನಾವು ಅವರ ಜೊತೆ ಸೇರಿ ಆದ್ ಇರಂ ಗೋತ್ರಗಳ ಜನರನ್ನು ವಧಿಸಿದಂತೆ ನಿಮ್ಮನ್ನು ವಧಿಸಲಾಗುವುದು ಎಂದು ಯಹೂದಿಗಳು ಆಗಾಗ್ಗೆ ಅವರಿಗೆ ಮುನ್ನೆಚ್ಚರಿಕೆ ನೀಡುತ್ತಿದ್ದರು. ಇದನ್ನು ಸೂಚಿಸಿ ಖುರ್ ಆನಿನಲ್ಲಿ ಅಲ್ಲಾಹನು ಹೇಳುತ್ತಾನೆ.. ಅವರ ಬಳಿಯಿದ್ದ ವೇದಗ್ರಂಥವನ್ನು ದೃಢೀಕರಿಸುವ ಒಂದು ಗ್ರಂಥ ಅವರ ಬಳಿಗೆ ಬಂದಾಗ ಅವರ ನಿಲುವು ಏನು..? ಸತ್ಯನಿಷೇಧಿಗಳ ಎದುರು ವಿಜಯಕ್ಕಾಗಿ ಅವರೇ ಪ್ರಾರ್ಥಿಸುತ್ತಿದ್ದರು. ಅವರಿಗೆ ಸುಪರಿಚಿತವಾದ ಆ ಸಂದೇಶ ಅವರ ಬಳಿಗೆ ಬಂದಾಗ ಅವರದನ್ನು ನಿಷೇಧಿಸಿದರು. ಆದ್ದರಿಂದ ಆ ಸತ್ಯನಿಷೇಧಿಗಳಿಗೆ ಅಲ್ಲಾಹನ ಶಾಪವಿದೆ "
(ಅಲ್-ಬಖರ 89)..
ಈ ಎಲ್ಲಾ ಕಾರಣಗಳಿಂದ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಬೋಧನೆಗಳನ್ನು ಔಸ್ ಖಝ್ರಜ್ ಗೋತ್ರದವರು ತಿಳಿಯುವಂತಾಯಿತು. ಹಜ್ ಸಂದರ್ಭದಲ್ಲಿ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಅವರನ್ನು ಸತ್ಯ ಧರ್ಮಕ್ಕೆ ಆಹ್ವಾನಿಸಿದರು. ಈ ಆಹ್ವಾನವನ್ನು ಸ್ವೀಕರಿಸಲು ಮೊದಲೇ ಸಜ್ಜಾದವರಂತೆ ಅವರದನ್ನು ಎರಡೂ ಕೈಗಳಿಂದಲೂ ಬರಮಾಡಿಕೊಂಡರು.. ಆರ್ಥಾಥ್ ಇಸ್ಲಾಮ್ ಸ್ವೀಕರಿಸಿದರು...
ಅಧ್ಯಾಯ-8
"ಮದೀನದ ನವ ಸಮೂಹ"
ಖುರೈಷಿಗಳ ಆಕ್ರಮಣ ಅತಿರೇಕಕ್ಕೆ ಹೋದವು. ಆದರೂ,ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಪ್ರಬೋಧನೆಯಿಂದ ಹಿಂದಕ್ಕೆ ಸರಿದಿರಲಿಲ್ಲ.. ಬದಲಾಗಿ,ಪ್ರಭೋಧನಾ ಕ್ಷೇತ್ರವನ್ನು ಇನ್ನಷ್ಟು ವಿಪುಲಗೊಳಿಸುತ್ತಾ ಹೋದರು. ಯಸ್ರಿಬ್ ನಿಂದ ಹಜ್‌ಗೆ ಆಗಮಿಸಿದ್ದ ಸಂಘದೊಂದಿಗೆ ಎರಡು ಬಾರಿ ಮಾತುಕತೆ ನಡೆಸಿದರು. ಈ ಮಾತುಕತೆ ಫಲಪ್ರದವಾದವು. ಇಸ್ಲಾಮ್ ಹಾಗೂ ಮುಸ್ಲಿಮರನ್ನು ಸಂರಕ್ಷಿಸುವ, ಶತ್ರುಗಳನ್ನು ಪ್ರತಿರೋಧಿಸುವ ಅಂಶಗಳನ್ನೊಳಗೊಂಡ ಒಪ್ಪಂದವೊಂದಕ್ಕೆ (ಇದನ್ನು ಅಖಭ ಒಪ್ಪಂದವೆಂದು ಕರೆಯುತ್ತಾರೆ) ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರೊಂದಿಗೆ ಯಸ್ರಿಬ್ನ ಜನರು ಸಹಿ ಹಾಕಿದರು...
ಮಕ್ಕಾದ ಉಸಿರುಗಟ್ಟಿಸುವ ವಾತಾವರಣದಲ್ಲಿದ್ದ ಮುಸ್ಲಿಮರಿಗೆ ಈ ಒಪ್ಪಂದ ಭರವಸೆಯ ಬೆಳಕಾಗಿದ್ದವು. ಅವರ ಆತ್ಮವಿಶ್ವಾಸ ಇನ್ನಷ್ಟು ಹೆಚ್ಚಿದವು. ಧರ್ಮದ ಮೌಲ್ಯಗಳೊಂದಿಗೆ ಅನ್ಯದೇಶದಲ್ಲಾದರೂ ನೆಮ್ಮದಿಯಿಂದ ಜೀವನ ಸಾಗಿಸಬಹುದಲ್ಲವೇ ಎಂಬ ಯೋಚನೆ ಅವರದ್ದಾಗಿತ್ತು.. ಆದರ್ಶ,ಜೀವ,ಮಾನ, ಅಭಿಮಾನ, ಸಂಪತ್ತು ಇತ್ಯಾದಿಗಳಿಗೆ ಸಂರಕ್ಷಣೆ ಲಭಿಸುವ ವಾತಾವರಣವೊಂದು ಅವರ ಕಣ್ಣ ಮುಂದೆ ಸುಳಿದವು...
ಯಸ್ರಿಬ್‌ನ ನವ ಮುಸ್ಲಿಮ್ ಸಮೂಹದ ಸಂರಕ್ಷಣೆಗೆ ಬೇಕಾದ ಯೋಜನೆಗಳ ಸಿದ್ಧತೆಗೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಮುಂದಡಿಯಿಟ್ಟರು. ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದ ಯಸ್ರಿಬ್‌ನ ಜನರೊಂದಿಗೆ ಮಿಸ್ ಅಬ್ಬ್ನ್ ಉಮೈರ್‌ರನ್ನು ಕಳುಹಿಸಿದರು. ಮದೀನದ ಜನರಿಗೆ ಖುರ್ಆನ್, ಕರ್ಮಶಾಸ್ತ್ರವನ್ನು ಕಲಿಸಿಕೊಡುವುದು, ಏಕದೈವ ವಿಶ್ವಾಸವನ್ನು ಪ್ರಚಾರ ಮಾಡುವುದು.. ಇಸ್ಲಾಮನ್ನು ಇನ್ನಿತರ ಮೂಲಭೂತ ಪ್ರಮಾಣಗಳ ಮೂಲಕ ಬೋಧನೆ ಮಾಡುವುದು ಮೊದಲಾದವುಗಳು ಮಿಸ್ಅಬ್ರ ದೌತ್ಯವಾಗಿತ್ತು...
ಮದೀನದಲ್ಲಿ ಮಿಸ್ ಅಬ್ರ ಮೂಲಕ ಬಹುದೊಡ್ಡ ಜನಸಮುದಾಯವೊಂದು ಇಸ್ಲಾಮ್ ಪ್ರವೇಶಿಸಿದವು.. ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಹಾಗೂ ಅನುಯಾಯಿಗಳನ್ನು ಹೃದಯಾಂತರಾಳದಿಂದ ಸ್ವಾಗತಿಸಲು ಯಸ್ರಿಬ್‌ನ ಜನರು ಸಿದ್ದರಾದರು, ಎರಡು ಬಾರಿ ಇಥಿಯೋಪಿಯಕ್ಕೆ ಪಲಾಯನ ಮಾಡುವಂತೆ ಅನುಯಾಯಿಗಳಿಗೆ ನಿರ್ದೇಶನ ನೀಡಿದ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಮೂರನೇ ಬಾರಿ ಯಸ್ರಿಬ್ ಗೆ ಹಿಜ್ರಾ ಹೋಗಲು ಅನುಮತಿ ನೀಡಿದರು.. ಯಸ್ರಿಬ್ ಪಲಾಯನಕ್ಕೆ ಕೆಲವೊಂದು ವಿಶೇಷತೆಗಳಿದ್ದವು..
ಮುಖ್ಯವಾಗಿ ಯಸ್ರಿಬ್ ಅರಬ್ ಉಪದ್ವೀಪದೊಳಗಿದ್ದು, ಮಕ್ಕಾ ನಗರಕ್ಕೆ ತೀರ ಸಮೀಪದಲ್ಲಿದ್ದವು.. ಅದು ವರ್ತಕ ಸಂಘಗಳ ಸಂಚಾರ ಪಥದಲ್ಲಿದ್ದವು. ಹಾಗೆ ನೋಡಿದರೆ, ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಸುತ್ತಲೂ ವಿಶ್ವಾಸಿಗಳನ್ನು ಒಟ್ಟುಗೂಡಿಸುವ ಸಮಗ್ರವಾದ ಯೋಜನೆಯ ಭಾಗವಾಗಿತ್ತು ಈ ಪಲಾಯನ, ಏಕದೈವ ವಿಶ್ವಾಸ, ಭಕ್ತಿ, ಸಮಸಮಾಜ, ಔದಾರ್ಯ, ಸಹೋದರತೆ, ನಿಸ್ವಾರ್ಥತೆ ಮೊದಲಾದ ಸನಾತನ ಧಾರ್ಮಿಕ ಗುಣಗಳನ್ನು ಆಧಾರ ಸ್ತಂಭಗಳಾಗಿ, ಖುರ್‌ಆನ್ ಹಾಗೂ ಪ್ರವಾದಿ ಚರ್ಯೆಯನ್ನು ಆಡಳಿತಾತ್ಮಕ ಸಂವಿಧಾನವನ್ನಾಗಿ ಅಂಗೀಕರಿಸುವ ಏಕೀಕೃತ ಮುಸ್ಲಿಮ್ ಸಮೂಹವನ್ನು ಸ್ಥಾಪಿಸುವ ಆರಂಭಿಕ ಪ್ರಯತ್ನವಾಗಿತ್ತು ಯಸ್ರಿಬ್ ಪಲಾಯನ..!!
ಮುಸ್ಲಿಮರು ವಿವಿಧ ಸಂಘಗಳಾಗಿ ಯಸ್ರಿಬ್ ತಲುಪಿದರು. ಅಲ್ಲಿಯ ಜನರು ಅವರನ್ನು ವಿಶಿಷ್ಟ ಅತಿಥಿಗಳಂತೆ ಸ್ವಾಗತಿಸಿದರು. ಅವರಿಗೆ ಬಡತನವಿದ್ದರೂ, ಸ್ವಂತವನ್ನು ಲೆಕ್ಕಿಸದೆ ಅವರು (ಮುಹಾಜರುಗಳನ್ನು) ಆಯ್ಕೆ ಮಾಡುವರು.. "ಮೋಹವನ್ನು ಯಾರು ಉಪೇಕ್ಷಿಸುವರೋ ಅವರೇ ವಿಜಯಿಗಳು" ಎಂದು ಖುರ್ ಆನ್ ಬಣ್ಣಿಸಿದ ಅನ್ಸಾರಿಗಳು ನಿಜವಾದ ಅರ್ಥದಲ್ಲಿ "ಸಹಾಯಿ" ಗಳಾಗಿದ್ದರು...
ಅನುಯಾಯಿಗಳೆಲ್ಲರೂ ಹೋದ ಬಳಿಕ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಸನ್ಮಿತ್ರ ಅಬೂಬಕ್ಕರ್ (ರ) ರವರನ್ನು ಜೊತೆಗೂಡಿಸಿಕೊಂಡು ಹಿಜ್ರ ಹೊರಟರು. ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಪ್ರವೇಶದೊಂದಿಗೆ ಯಸ್ರಿಬ್ ಮದೀನವಾದವು. ಈ ಹಿಜ್ರಾ ಮಾನವ ಚರಿತ್ರೆಯಲ್ಲೇ ಹೊಸ ತಿರುವಿಗೆ ಕಾರಣವಾದವು. ಮುಸ್ಲಿಮರು ಆಹ್ಲಾದಭರಿತರಾದರು. ಅನಿವಾರ್ಯವಾಗಿ ಉಳಿದ ಕೆಲವರನ್ನು ಬಿಟ್ಟರೆ ಉಳಿದೆಲ್ಲಾ ಮುಸ್ಲಿಮರು ಮದೀನಕ್ಕೆ ಆಗಮಿಸಿದ್ದರು...
ಜನ್ಮನಾಡನ್ನು ಹಾಗೂ ಆಯುಷ್ಕಾಲದ ಸಂಪಾದನೆಯನ್ನು ಬಿಟ್ಟು ಬರುವುದರ ಮನೋವ್ಯಥೆಯನ್ನು ವರ್ಣಿಸುವುದು ಸಾಧ್ಯವಿಲ್ಲ. ವಿಶೇಷವಾಗಿ ಮಕ್ಕಾ ಭೂಮಿಯ ಮೇಲೆಯೇ ಅಲ್ಲಾಹನಿಗೆ ಅತ್ಯಂತ ಪ್ರಿಯವಾದ ದೇಶವಾಗಿರುವುದು ಸಹ ಅದನ್ನು ತೊರೆದು ಬಂದ ಮುಸ್ಲಿಮರ ನೋವು ಇಮ್ಮಡಿಗೊಳ್ಳಲು ಕಾರಣವಾಗಿದ್ದವು...
ಮದೀನಕ್ಕೆ ಮುಟ್ಟಿದೊಡನೇ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಮೊದಲು ಕೈಗೆತ್ತಿಕೊಂಡ ಕೆಲಸ ಅಲ್ಲಾಹನಿಗೆ ಭವನ ನಿರ್ಮಿಸುವುದಾಗಿದೆ..
ಮಸೀದಿಯ ಜಾಗವನ್ನು ಉಚಿತವಾಗಿ ಪಡೆಯದೆ ಅದನ್ನು ಸೂಕ್ತ ಬೆಲೆ ನೀಡಿ ಖರೀದಿಸಿದ್ದಲ್ಲದೆ, ನಿರ್ಮಾಣ ಪ್ರಕ್ರಿಯೆಯಲ್ಲಿ ಸ್ವತಃ ಸಕ್ರಿಯರಾಗಿ ಭಾಗವಹಿಸಿದರು. ಇಲ್ಲಿ ಜನನಾಯಕನೊಬ್ಬ ಹೇಗಿರಬೇಕೆಂಬುದನ್ನು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ತೋರಿಸಿಕೊಟ್ಟಿದ್ದರು. ಈ ಮಸೀದಿಯು ಅಲ್ಲಾಹನ ವಚನಗಳ ಬೆಳಕಲ್ಲಿ ವಿಧಿ ನಿರ್ಣಯಿಸುವ ಹಾಗೂ ತರ್ಕಗಳಿಗೆ ತೀರ್ಪು ನೀಡುವ ನ್ಯಾಯಾಲಯವೂ ಹೌದು. ಹಾಗೆಯೇ, ದೂತರನ್ನು, ಪ್ರತಿನಿಧಿ ಸಂಘಗಳನ್ನು ನಿಯೋಜಿಸುವ, ಇಸ್ಲಾಮ್‌ಗೆ ಆಗಮಿಸುವವರನ್ನು ಸ್ವಾಗತಿಸುವ, ವಿದೇಶಿ ರಾಷ್ಟ್ರ ನೇತಾರರಿಗೆ ಸಂದೇಶಗಳನ್ನು ಸಿದ್ದಪಡಿಸುವ, ಕರಾರುಗಳಿಗೆ ಸಹಿ ಹಾಕುವ ಆಡಳಿತ ಕೇಂದ್ರವೂ ಹೌದು. ಖುರ್ ಆನ್ ವಾಕ್ಯಗಳನ್ನು ಅನುಯಾಯಿಗಳಿಗೆ ಕಲಿಸಿಕೊಡುವ, ಅವರಿಂದ ಅದನ್ನು ಬರೆಸುವ ಕೆಲಸಗಳೆಲ್ಲವೂ ಮಸೀದಿಯಲ್ಲೇ ನಡೆಯುತ್ತಿದ್ದವು..
ಮುಂದಿನೆಲ್ಲಾ ಯುದ್ದಗಳಿಗೆ ಸೇನೆಯ ಸಜೀಕರಣ, ತರಬೇತಿ, ಸೈನಿಕರ ನಿಯೋಜನೆ, ನಿಯಂತ್ರಣಗಳೆಲ್ಲವೂ ಈ ಮಸೀದಿಯಲ್ಲೇ ನಡೆಯುತ್ತಿದ್ದವು. ಮುಸ್ಲಿಮ್ ಸಮೂಹವನ್ನು ಬಾಧಿಸುವ ಎಲ್ಲಾ ವಿಷಯಗಳನ್ನು ಮಸೀದಿಯಲ್ಲೇ ನಿರ್ವಹಿಸಲಾಗುತಿತ್ತು. ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿ ಮದೀನ ಮಸೀದಿ ಆಧುನಿಕ ಒಳನೋಟಗಳಿದ್ದ ನಿಯಮ ನಿರ್ಮಾಣ (ಖುರ್ಆನ್ ಸಂದೇಶಗಳ ಮೂಲಕ) ನೀತಿ ನ್ಯಾಯ, ನಿರ್ವಾಹಕ ಸಮಿತಿ ಎಂಬಿ ಅಧಿಕಾರ ವಲಯಗಳ ಕಾರ್ಯಾಲಯವಾಗಿದ್ದವು. ಝಕಾತ್ ಶೇಖರಣೆ, ವಿತರಣೆ ಮೊದಲಾದ ಆರ್ಥಿಕ ಚಟುವಟಿಕೆಗಳಿಗೂ ಮದೀನ ಮಸೀದಿಯೇ ಕೇಂದ್ರ ಸ್ಥಾನವಾಗಿದ್ದವು. ಮದೀನದಲ್ಲಿ ಸ್ಥಾಪನೆ ಗೊಂಡ ಪ್ರಥಮ ಮುಸ್ಲಿಮ್ ರಾಷ್ಟ್ರದಲ್ಲಿ ಪರಮೋನ್ನತ ಸ್ಥಾನ ಮಸೀದಿಗಾಗಿತ್ತು...
ಮದೀನದ ಮುಸ್ಲಿಮರ ನಡುವೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಸ್ಥಾಪಿಸಿದ ಮಾನವ ಸಾಹೋದರತೆಯ ಬಂಧವು ಚರಿತ್ರೆಯಲ್ಲೇ ಹೊಸದೊಂದು ಅಧ್ಯಾಯವಾಗಿದ್ದವು. ಅಲ್ಲಾಹನು ಹೇಳುತ್ತಾನೆ..
" ನಿಶ್ಚಯವಾಗಿಯೂ ವಿಶ್ವಾಸ ತಾಳಿ, ಪಲಾಯನ ನಡೆಸಿ, ಸಂಪತ್ತು, ಶರೀರದ ಮೂಲಕ ದೈವಿಕ ಮಾರ್ಗದಲ್ಲಿ ಸಮರ ಮಾಡಿದವರು, ಆ ವಿಭಾಗದ ಕೆಲವರು ಇನ್ನು ಕೆಲವರ ಮಿತ್ರರಾಗಿದ್ದಾರೆ ”(ಪವಿತ್ರ ಖುರ್‌ಆನ್-8:72)..
ಅನ್ಸಾರಿಗಳ ನಡುವೆ ಹಾಗೂ ಅನ್ಸಾರಿ ಹಾಗೂ ಮುಹಾಜಿರುಗಳು ನಡುವೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಸಾಹೋದರ ಬಂಧವನ್ನು ಸ್ಥಾಪಿಸಿದರು. ಶ್ರೀಮಂತ, ಬಡವ, ಧಣಿ, ಸೇವಕನೆಂಬ ವ್ಯತ್ಯಾಸವಿಲ್ಲದ ಇಸ್ಲಾಮಿಕ್ ರಾಷ್ಟ್ರದಲ್ಲಿ ಎಲ್ಲರೂ ಸಮಾನರಾಗಿದ್ದರು. ಜಾಹಿಲಿಯ್ಯಾ ಕಾಲದ ಪರಸ್ಪರ ಸಹಾಯ ಸಖ್ಯದ ಸ್ಥಾನದಲ್ಲಿ ಇಸ್ಲಾಮಿನ ಸಾಹೋದರತೆ ಅಸ್ತಿತ್ವಕ್ಕೆ ಬಂದವು. ಸಾಮೂಹಿಕ ಹಾಗೂ ಗೋತ್ರ ಸಂಬಂಧಿ ತಾರತಮ್ಯಗಳು ಕೊನೆಗೊಂಡವು. ಕರ್ತವ್ಯ ಹಾಗೂ ಹಕ್ಕುಗಳಲ್ಲಿ ಸಮಾನತೆಯನ್ನು ಹೊಂದಿರುವ ಸಾಹೋದರತೆ ಹಾಗೂ ಸೌಹಾರ್ದತೆಯು ಹುಟ್ಟಿಕೊಂಡವು. ವಿಶ್ವಾಸ, ಯೋಚನೆ ಹಾಗೂ ಗುರಿಯಲ್ಲಿ ಏಕತೆಯನ್ನು ಪ್ರದರ್ಶಿಸುವ ಸಮೂಹವಾಗಿ ಅವರು ಬದಲಾದರು..
ಈ ಪರಸ್ಪರ ಸಾಹೋದರ್ಯತೆಯ ಫಲವಾಗಿ ಮಾನವ ಚರಿತ್ರೆಯಲ್ಲಿನ ಅನೂಹ್ಯವಾದ ಕೆಲವು ಉದಾತ್ತ ಮಾದರಿಗಳಿಗೆ ಆರಂಭಿಕ ಕಾಲಘಟ್ಟದ ಮುಸ್ಲಿಂ ಸಮೂಹ ಸಾಕ್ಷಿಯಾದವು..
ಅನ್ಸಾರಿಗಳು ತಮ್ಮ ಸ್ವತ್ತು ವಿತ್ತಗಳನ್ನು ಮುಹಾಜಿರ್‌ಗಳೊಂದಿಗೆ ಹಂಚಿಕೊಳ್ಳಲು ಪೂರ್ಣ ಮನಸಿನ ಆಗ್ರಹವನ್ನು ವ್ಯಕ್ತಪಡಿಸಿದರು..
ಭೂಮಿ ಹಾಗೂ ಕೃಷಿಯ ಅರ್ಧದಷ್ಟನ್ನು ಮುಹಾಜಿರ್‌ಗಳಿಗೆ ಬಿಟ್ಟು ಕೊಡುವ ತಮ್ಮ ಮನಸಿನ ಆಗ್ರಹವನ್ನು ಅನ್ಸಾರಿಗಳು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರಿಗೆ ತಿಳಿಸಿದರು..
ಖುರ್ ಆನ್ ಅನ್ಸಾರಿಗಳ ತ್ಯಾಗೋಜ್ವಲ ಮನಸ್ಸನ್ನು ಕೊಂಡಾಡುತ್ತಾ ಹೀಗೆ ಹೇಳಿದೆ..
"(ಮತ್ತು ಆ ಸೊತ್ತು)ಈ ಮುಹಾಜಿರ್‌ಗಳ ಆಗಮನಕ್ಕೆ ಮುಂಚೆಯೇ ಸತ್ಯ ವಿಶ್ವಾಸ ಸ್ವೀಕಾರ ಮಾಡಿ ಮದೀನಾದಲ್ಲಿ ವಾಸವಾಗಿದ್ದವರಿಗೆ (ಸಹ ಇದೆ) ಇವರು ಹಿಜ್ರತ್ ಮಾಡಿ ತಮ್ಮ ಬಳಿಗೆ ಬಂದವರನ್ನು ಪ್ರೀತಿಸುತ್ತಾರೆ.. ಅವರಿಗೆ (ಮುಹಾಜಿರುಗಳಿಗೆ) ನೀಡಲ್ಪಡುವುದರ ಕುರಿತು ಇವರು ಯಾವುದೇ ಅಸೂಯಗಳಿಲ್ಲ.. ಸ್ವತಃ ತಮಗೆ ಅಗತ್ಯವಿದ್ದರೂ ಇತರರಿಗೆ ತಮ್ಮ ಮೇಲೆ ಪ್ರಾಶಸ್ತ್ಯ ನೀಡುತ್ತಾರೆ.. ವಾಸ್ತವದಲ್ಲಿ ಯಾರು ತಮ್ಮ ಮನಸ್ಸಿನ ಸಂಕುಚನೆಯಿಂದ ರಕ್ಷಿಸಲ್ಪಟ್ಟರೋ ಅವರೇ ವಿಜಯಿಗಳು..” (ಖುರ್‌ಆನ್ 59:9)
ಆಯುಷ್ಕಾಲದ ಸಂಪಾದನೆಯನ್ನೆಲ್ಲಾ ಮಕ್ಕಾದಲ್ಲಿ ಉಪೇಕ್ಷಿಸಿ, ಬರಿಗೈಯೊಂದಿಗೆ ಮದೀನಾ ಪ್ರವೇಶಿಸಿದ ಮುಹಾಜಿರುಗಳಲ್ಲಿ ಹೆಚ್ಚಿನವರು ಸಹೋದರ್ಯ ಬಂಧದ ಆಧಾರದಲ್ಲಿ ಸೌಜನ್ಯವಾಗಿ ದೊರೆಯುವ ಸ್ವತ್ತು ವಿತ್ತಗಳಿಗೆ ಆಸೆಪಡಲಿಲ್ಲ, ಅವರು ಅವುಗಳನ್ನೆಲ್ಲಾ ನಿರಾಕರಿಸಿ, ವ್ಯಕ್ತಿತ್ವದ ವಿಶುದ್ದಿಯನ್ನು ಎತ್ತಿ ಹಿಡಿದರು. ಅನ್ಸಾರಿಗಳಿಂದ ಅವರು ಏನನ್ನೂ ಸ್ವೀಕರಿಸಲಿಲ್ಲ. ಸ್ವಂತ ಶ್ರಮದಿಂದ ಗಳಿಸಿದ ಸಂಪಾದನೆ ಅದೆಷ್ಟು ತುಚ್ಛವಾಗಿದ್ದರೂ ಸಹ-ಯನ್ನಷ್ಟೇ ಬಳಸಿಕೊಳ್ಳಲು ಆತ್ಮಾಭಿಮಾನಿಗಳಾಗಿದ್ದ ಮುಹಾಜಿರುಗಳು ನಿರ್ಧರಿಸಿದರು. ಸ್ವತಃ ಮೈಮುರಿದು ದುಡಿದ ಸಂಪಾದನೆಯಲ್ಲೇ ಅವರು ಆಧ್ಯಾತ್ಮಿಕ ಕೃತಾರ್ಥತೆಯನ್ನು ಅನುಭವಿಸತೊಡಗಿದರು. ಅಬ್ದುರ್ರಹ್ಮಾನ್ ಬಿನು ಔಫ್ ತನ್ನ ಮುಸ್ಲಿಮ್ ಸಹೋದರನೊಂದಿಗೆ ಮಾರುಕಟ್ಟೆ ಎಲ್ಲಿ ಎಂದು ಅನ್ವೇಷಿಸಿದರು. ಅಲ್ಲಿ ಅವರು ತಮ್ಮದೇ ಆದ ವ್ಯಾಪಾರವನ್ನು ಆರಂಭಿಸಿದರು. ಕೆಲವೇ ದಿನಗಳಲ್ಲಿ ಅವರ ವ್ಯಾಪಾರವು ಲಾಭದಾಯಕವಾದವು. ಇಬ್ನು ಔಫ್ ಶ್ರೀಮಂತರಾದರು...
ಮದೀನದಲ್ಲಿ ಮುಸ್ಲಿಮರ ನಡುವೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಸ್ಥಾಪಿಸಿದ ಸಾಹೋದರತೆಯ ಭಾವವು ಆಗಾಧವಾದುದಾಗಿತ್ತು. ಎಷ್ಟೆಂದರೆ ಬಂದುಬಳಗದವರಲ್ಲದಿದ್ದರೂ ಸಹ ಕೇವಲ ಸಾಯೋದರತೆಯ ಹೆಸರಲ್ಲಿ ಅನೇಕರು ವಾರೀಸು ಸೊತ್ತಿನ ಅರ್ಹತೆಯನ್ನು ಪಡೆದಿದ್ದರು. ಆದರೆ, "ಅನಂತರ ವಿಶ್ವಾಸವಿಟ್ಟವರು, " ವಲಸೆ" ಮಾಡಿ ಬಂದವರು ಮತ್ತು ನಿಮ್ಮ ಜೊತೆಗೂಡಿ ಹೋರಾಡಿದವರು ಸಹ ನಿಮ್ಮೊಂದಿಗೆ ಸೇರಿದ್ದಾರೆ. ಆದರೆ ಅಲ್ಲಾಹನ ಗ್ರಂಥದಲ್ಲಿ ರಕ್ತ ಸಂಬಂಧಿಕರು ಪರಸ್ಪರ ಹೆಚ್ಚು ಹಕ್ಕುದಾರರು.. ನಿಶ್ಚಯವಾಗಿಯೂ ಅಲ್ಲಾಹ್ ಸಕಲ ವಸ್ತುಗಳ ಜ್ಞಾನಿಯಾಗಿರುತ್ತಾನೆ.."(ಖುರ್‌ಆನ್ 8:75) ಎಂಬ ಖುರ್‌ಆನ್ ಸೂಕ್ತ ಆವತೀರ್ಣವಾಗುವುದರೊಂದಿಗೆ ಈ ನಿಯಮವೂ ದುರ್ಬಲ ಆದವು..
- ಇಸ್ಲಾಮಿಕ್ ಸಹೋದರತೆಯ ಮಂಟಪದಡಿಯಲ್ಲಿ ಒಂದು ಸೇರಿದ ಮುಸ್ಲಿಮ್ ಸಮೂಹವು ಗೋತ್ರ-ವರ್ಗ-ಪ್ರಾದೇಶಿಕ ತಾರತಮ್ಯಗಳನ್ನು ಮೀರಿ ಒಂದೇ ದೇಹದಂತಾದವು. ಯಾವುದಾದರು ಒಂದು ಅಂಗಕ್ಕೆ ಕಾಯಿಲೆಯಾದರೆ ಇತರ ಅಂಗಗಳಿಗೆ ಜ್ವರ ಬಾಧಿಸುತ್ತಿದವು. ನೋವಿನ ಅನುಭವವಾಗುತ್ತಿದ್ದವು..
ಮುಹಾಜಿರುಗಳು, ಅನ್ಸಾರಿಗಳನ್ನೊಳಗೊಂಡ ಮುಸ್ಲಿಮರಲ್ಲದೆ, ಮುಶ್ರಿಕ್ಗಳು, ಯಹೂದಿಗಳು ಮೊದಲಾದವರನ್ನೊಳಗೊಂಡ ಒಂದು ಸಮೂಹ ಮದೀನದಲ್ಲಿದ್ದವು.. ಅಂತ್ಯ ಪ್ರವಾದಿ ಮದೀನದಲ್ಲಿ ಪ್ರತ್ಯಕ್ಷಗೊಳ್ಳಲಿದ್ದಾರೆಂಬ ತಮ್ಮ ವೇದಗಳ ಭವಿಷ್ಯ ಸೂಚನೆಯನ್ನು ನಂಬಿ, ಪ್ರವಾದಿಯ ಪ್ರತೀಕ್ಷೆಯೊಂದಿಗೆ ಮದೀನಕ್ಕೆ ವಲಸೆ ಬಂದು ವಾಸ್ತವ್ಯ ಹೂಡಿದವರೇ ಯಹೂದಿಗಳು. ಆದರೆ, ಆ ಅಂತ್ಯ ಪ್ರವಾದಿ ಯಹೂದಿಗಳ ನಡುವಿನಿಂದಲೇ ಪ್ರತ್ಯಕ್ಷಗೊಳ್ಳುವನೆಂಬ ಪ್ರತೀಕ್ಷೆಯೂ ಅವರಿಗಿತ್ತು. ಆ ಪ್ರವಾದಿಯ ಆಗಮನದ ಬಳಿಕ ಅವರ ನೇತೃತ್ವದಲ್ಲಿ ಒಂದುಗೂಡಿ, ಔಸ್ ಖಝ್ರಜ್ ಗೋತ್ರಗಳನ್ನು ನಿರ್ಮೂಲನೆ ಮಾಡುವುದಾಗಿ ಯಹೂದಿಗಳು ಬೆದರಿಕೆ ಹಾಕುತ್ತಿದ್ದರು. ಆದರೆ, ಅಂತ್ಯ ಪ್ರವಾದಿ ಅರಬಿಗಳ ನಡುವೆ ಪ್ರತ್ಯಕ್ಷಗೊಂಡಾಗ ಯಹೂದಿಗಳ ವರಸೆಯೇ ಬದಲಾದವು...
ಪ್ರತಿಯೊಬ್ಬರಿಗೂ ಅವರವರ ಧರ್ಮ, ಧರ್ಮದಲ್ಲಿ ಬಲತ್ಕಾರವಿಲ್ಲ ಎಂಬ ಖುರ್‌ಆನ್‌ನ ತತ್ವವನ್ನು ಅಂಗೀಕರಿಸುತ್ತಲೇ ವಿವಿಧ ಜನ ವಿಭಾಗಗಳ ನಡುವೆ ಪರಸ್ಪರ ಬಂಧ, ಐಕ್ಯತೆಗೆ ಇನ್ನಷ್ಟು ಬಲ ತುಂಬಲೇಬೇಕಿತ್ತು. ಹಾಗಾದಲ್ಲಿ ಮಾತ್ರ ಅಲ್ಲಾಹನಿಗೆ ಅತ್ಯಂತ ಪ್ರಿಯವಾದ ಮಕ್ಕಾ ಎಂಬ ತಾಯಿ ನಾಡನ್ನು ತೊರೆದು ಬಂದ ತ್ಯಾಗವು ಫಲಪ್ರದವಾಗುತ್ತದೆ. ಇಸ್ಲಾಮಿಕ್ ಸಂದೇಶಗಳ ಪ್ರಬೋಧನೆ ನಡೆಸುವ ಸುರಕ್ಷಿತ ವಾತಾವರಣವೊಂದನ್ನು ಸೃಷ್ಟಿಸಬೇಕಿದೆ. ಮಕ್ಕಾದಲ್ಲಿ ಇಸ್ಲಾಮಿಕ್ ಪ್ರಬೋಧನೆಗೆ ಅಡ್ಡಿ ಆತಂಕಗಳಿದ್ದಂತೆ ಇಲ್ಲಿರಬಾರದು. ಇಸ್ಲಾಮ್ ಧರ್ಮವನ್ನು ಕಲಿಯಬೇಕೆನಿಸಿದವರಿಗೆ ಕಲಿಯುವ, ಪೂರ್ಣ ಮನಸಿನೊಂದಿಗೆ ಸ್ವೀಕರಿಸಬೇಕೆನಿಸಿದವರಿಗೆ ಸ್ವೀಕರಿಸುವ ಸ್ವಾತಂತ್ರ ಇಲ್ಲಿರಬೇಕು.. ಮುಸ್ಲಿಮರಾದ ಕಾರಣಕ್ಕೆ ಭಯದಿಂದ ಬದುಕುವ ಸಂದರ್ಭ ಇಲ್ಲಿ ಸಂಜಾತವಾಗಬಾರದು.. ಈ ಎಲ್ಲಾ ಕಾರಣಕ್ಕಾಗಿ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಯಹೂದಿಗಳೊಂದಿಗೆ ಸೌಹಾರ್ಧ ಒಪ್ಪಂದವೊಂದನ್ನು ಮಾಡಿಕೊಂಡರು.. ಅದು ನಲ್ಪತ್ತೇಳು ಖಂಡಿಗೆಗಳಿದ್ದ ಬೃಹತ್ ಕರಾರಾಗಿತ್ತು. ಕರಾರು ಪತ್ರದಲ್ಲಿದ್ದ ಕೆಲವೊಂದು ಅಂಶಗಳು..
ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಮರು ಮದೀನದ ಪ್ರಥಮ ಇಸ್ಲಾಮಿಕ್ ರಾಷ್ಟ್ರದ ಮುಖ್ಯಸ್ಥರು. ಅಲ್ಲಾಹನ ವಚನಗಳನುಸಾರ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಆಡಳಿತ ನಡೆಸುತ್ತಾರೆ. ಬೆಳೆಯುತ್ತಿರುವ ಮುಸ್ಲಿಮ್ ಸಮೂಹದ ಹಿತಾಸಕ್ತಿಯನ್ನು ರಕ್ಷಿಸುವ ತೀರ್ಮಾನಗಳನ್ನು ಕೈಗೊಳ್ಳಲಾಗುತ್ತದೆ. ರಾಷ್ಟ್ರದ ಸಂಪೂರ್ಣ ಅಧಿಕಾರ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರನ್ನು ಕೇಂದ್ರೀಕರಿಸಿರುತ್ತದೆ..
ಮಕ್ಕಾ ಪರಿಶುದ್ಧ ದೇಶವಾಗಿ ಘೋಷಿಸಲ್ಪಟ್ಟಂತೆ ಮದೀನವೂ ಪರಿಶುದ್ಧ ರಾಷ್ಟ್ರವಾಗಿರುತ್ತದೆ. ಅದಕ್ಕೆ ನಿಶ್ಚಿತ ಗಡಿರೇಖೆಗಳಿರುತ್ತದೆ. ಎಲ್ಲಾ ಮುಸ್ಲಿಮರು-ಮುಹಾಜಿರುಗಳು, ಅನ್ಸಾರಿಗಳು, ಅರಬಿಗಳು, ಅರಬಿಯೇತರರು, ಸ್ವತಂತ್ರರು, ಗುಲಾಮರು, ಬಡವರು, ಶ್ರೀಮಂತರು, ವರ್ಗ, ವರ್ಣ, ಗೋತ್ರಗಳು ಏಕ ಸಮೂಹವಾಗಿರುವರು. ಗೋತ್ರ ಹಾಗೂ ಪ್ರಾದೇಶಿಕ ತಾರತಮ್ಯದ ಜಾಗದಲ್ಲಿ ಇಸ್ಲಾಮಿಕ್ ಸಾಹೋದರತೆಯಿದೆ...
ವ್ಯಕ್ತಿಗಳು, ಗೋತ್ರಗಳು ಪರಸ್ಪರ ಹಗೆ ತೀರಿಸುವ ಬದಲು ಅಪರಾಧಿಗಳಿಗೆ ಆಡಳಿತಾಂಗವು ಅಲ್ಲಾಹನ ನಿಯಮಗಳನುಸಾರ ಶಿಕ್ಷೆ ವಿಧಿಸುತ್ತದೆ.. ಹೀಗೆ ವ್ಯಕ್ತಿ ವ್ಯಕ್ತಿಗಳ ನಡುವೆ ಜಗಳ, ಗೋತ್ರಗಳ ನಡುವಿನ ಸಂಘರ್ಷ, ಆಂತರಿಕ ಕಲಹಗಳನ್ನು ನಿವಾರಿಸಲಾಗುತ್ತದೆ...
ಮದೀನ ನಿವಾಸಿಗಳಿಗೆಲ್ಲರಿಗೂ-ಮುಸ್ಲಿಮರಿಗೂ-ಮುಸ್ಲಿಮೇತರರಿಗೂ- ತಮ್ಮ ಧರ್ಮದ ಆಚಾರ ವಿಚಾರಗಳನ್ನು ಅನುಸರಿಸುವ ಸ್ವಾತಂತ್ರದ ಭರವಸೆ ನೀಡಲಾಗುವುದು. ಸ್ವಇಚ್ಚೆಯಿಂದ ಇಸ್ಲಾಮ್ ಸ್ವೀಕರಿಸಲು ಮುಂದಾಗುವವರನ್ನು ತಡೆಯಬಾರದು. ಎಲ್ಲಾ ಧರ್ಮಗಳ ಜನರು ಒಂದೇ ಜನತೆ ಸಮೂಹವಾಗಿ ಪರಸ್ಪರ ಸಹಾಯ, ಸಹಕಾರ, ಸಹಿಷ್ಣುತೆ, ಕೆಲವು ಮಮತೆಯೊಂದಿಗೆ ಜೀವಿಸುತ್ತದೆ. ಪ್ರತಿಯೊಬ್ಬರೂ ತಮ್ಮ ವಿಶ್ವಾಸಾದರ್ಶಗಳನ್ನು ಸಂರಕ್ಷಿಸುತ್ತಲ , ಇನ್ನೊಬ್ಬರ ವಿಶ್ವಾಸಾದರ್ಶಗಳಲ್ಲಿ ಹಸ್ತಕ್ಷೇಪ ಮಾಡದಿರುತ್ತಾರೆ. ರಾಷ್ಟ್ರದ ಮೇಲೆ ಬಾಹ್ಯ ಶತ್ರುಗಳು ಆಕ್ರಮಣ ಮಾಡಿದಾಗ ಅದನ್ನು ಒಂದಾಗಿ ಎದುರಿಸುತ್ತೇವೆ. ನಾವು ಪರಸ್ಪರ ರಕ್ತ ಹರಿಸುವುದಿಲ್ಲ. ಅಕ್ರಮ, ಅನ್ಯಾಯಗಳನ್ನು ಯಾರೇ ಮಾಡಿದರೂ ಅವರನ್ನು ಶಿಕ್ಷಿಸಲಾಗುವುದು. ಎಲ್ಲರ ವ್ಯಕ್ತಿ ಸ್ವಾತಂತ್ರವನ್ನು ರಕ್ಷಿಸಲಾಗುವುದು. ಸಮೂಹದ, ರಾಷ್ಟ್ರದ ಭದ್ರತೆ, ಗಡಿ ಭದ್ರತೆ ಎಲ್ಲರ ಕರ್ತವ್ಯವಾಗಿದೆ...
ಅರಬಿಗಳ ನಡುವೆ ಚಾಲ್ತಿಯಲ್ಲಿದ್ದ ಕೆಲವೊಂದು ಸಂಪ್ರದಾಯಗಳು, ಮುಸ್ಲಿಮ್ ಸಮೂಹಕ್ಕೆ ಮಾತ್ರ ಅನುಕೂಲಕರವಾಗಿರುವುದರಿದ ಅವುಗಳನ್ನು ಹಾಗೆಯೇ ಕರಾರು ಪತ್ರದಲ್ಲಿ ಸೇರಿಸಲಾಗಿತ್ತು. ವ್ಯಕ್ತಿಗಳ ಕೊಂದ ನಡುವಿನ ತುಣ ಬಾಧ್ಯತೆ, ರಕ್ತದ ಮೌಲ್ಯ ಮೊದಲಾದವುಗಳನ್ನು ಗೋತ್ರಗಳು ಕೈಗೆತ್ತಿಕೊಳ್ಳುತ್ತದೆ. ಸಂತೋಷದಲ್ಲೂ, ಸಂತಾಪದಲ್ಲೂ ಪರಸ್ಪರ ಜೊತೆಯಾಗುವುದು, ಪರಿಚಯಸ್ತರಿಗೆ ಅಭಯ ನೀಡುವುದು ಮೊದಲಾದವುಗಳಲ್ಲಿ ಅವುಗಳಲ್ಲಿ ಸೇರುತ್ತದೆ. ಬದ್ಧ ವೈರಿಗಳಾದ ಖುರೈಷಿಗಳೊ, ಅವರ ಮಿತ್ರಪಕ್ಷಗಳಲ್ಲಿ ಗುರುತಿಸಲ್ಪಡದ ಯಾರಿಗೆ ಬೇಕಾದರೂ ಅಭಯ ನೀಡುವ ಅವಕಾಶ ಮದೀನದ ಪ್ರತಿಯೊಬ್ಬ ಪೌರನಿಗಿದ್ದವು. (ಡಾ ಮುಹಮ್ಮದ್ ಅಬ್ದು ಯಮಾನಿ, ಬದ್ರುಲ್ ಕುಬ್ರಾ ಪುಟ:83-97)
ಮಕ್ಕಾದಲ್ಲಿದ್ದಾಗ ಮುಸ್ಲಿಮರು ಕಅಬಾಲಯ ಹಾಗೂ ಬೈತುಲ್ ಮುಖದ್ವಿಸ್ ನತ್ತ ತಿರುಗಿ ನಮಾಝ್ ಮಾಡುತ್ತಿದ್ದರು. ಹೆಚ್ಚಾಗಿ ಬೈತುಲ್ ಮುಖದ್ವಿಸ್‌ಗೆ ತಿರುಗಿಯೇ ನಮಾಝ್ ಮಾಡಲಾಗುತಿತ್ತು. ಮದೀನಕ್ಕೆ ಆಗಮಿಸಿದ ನಂತರದ ಹದಿನಾರು ತಿಂಗಳು ಕಾಲ ಬೈತುಲ್ ಮುಖದ್ವಿಸ್‌ನತ್ತ ತಿರುಗಿಯೇ ನಮಾಝ್ ಮಾಡಲಾಗುತಿತ್ತು. ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರಿಗೆ ಕಅಬಾಲಯದತ್ತ ತಿರುಗಿ ನಮಾಝ್ ಮಾಡುವುದು ಇಷ್ಟವಾಗಿತ್ತು. ಕಾರಣ ಅತಿ ಪುರಾತನವೂ, ಪ್ರವಾದಿ ಇಬ್ರಾಹಿಂ ಅ.ಸ ರವರ ಖಿಬ್ಲಾ ಕಅಬಾಲಯವಾಗಿತ್ತು..
ಹಿಜ್ರಾದ ಹದಿನೆಂಟನೇ ಮಾಸ (ಕ್ರಿಸ್ತ ಶಕ 623 ನವಂಬರ್) ದಲ್ಲಿ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಇಷ್ಟ ಪಟ್ಟಿದ್ದ ಕಅಬವನ್ನು ಖಿಬ್ಲಾ ಆಗಿ ಅಲ್ಲಾಹನು ನಿಶಯಿಸಿ, ಆಜ್ಞಾಪಿಸಿದನು. ಆದರೊಂದಿಗೆ ಕ್ರೈಸ್ತರ, ಯಹೂದಿಗಳ ಆರೋಪದ ಮೊಣಚು ಕಳೆದು ಕೊಂಡವು. ಮುಹಮ್ಮದ್ ನಮ್ಮ ಧರ್ಮವನ್ನು ವಿರೋಧಿಸುತ್ತಾರೆ. ಆದರೆ, ನನ್ನ ಖಿಬ್ಲಾ ವನ್ನೇ ಅನುಸರಿಸುತ್ತಾರೆ ಎಂದು ಕ್ರೈಸ್ತರೂ, ಮುಹಮ್ಮದ್ ನಮ್ಮದು ಇಬ್ರಾಹಿಂ ಪರಂಪರೆ ಎಂದು ಹೇಳುತ್ತಾರೆ. ಆದರೆ, ಇಬ್ರಾಹೀಮರ ಖಿಬ್ಲಾ ವನ್ನು ತಿರಸ್ಕರಿಸುತ್ತಾರೆ ಎಂದು ಖುರೈಷಿಗಳು ಆರೋಪಿಸುತ್ತಿದ್ದರು. ಕಅಬಾಲಯವನ್ನು ಖಿಬ್ಲ ಆಗಿ ಅಂಗೀಕರಿಸಿದ ಬಳಿಕ ಈ ಎರಡೂ ಆರೋಪಗಳು ಆಧಾರ ಕಳೆದುಕೊಂಡವು..
ಅಲ್ಲಾಹನ ಹಾಗೂ ಅವನ ದೂತನೊಂದಿಗಿನ ಪ್ರಾಮಾಣಿಕ ಅನುಸರಣೆ, ವಿಶ್ವಾಸ ಧಾರ್ಢತೆಯನ್ನು ಪರೀಕ್ಷಿಸಲು, ನೈಜ ವಿಶ್ವಾಸದಿಂದ ಕಪಟ ವಿಶ್ವಾಸವನ್ನು ಬೇರ್ಪಡಿಸಲು ಖಿಬ್ಲ ಬದಲಾವಣೆ ಒಂದು ಮಾನದಂಡವಾಗಿತ್ತು. ಮುಸ್ಲಿಮರ ಜೊತೆಗಿದ್ದು, ರಹಸ್ಯವಾಗಿ ಶತ್ರುಗಳಿಗೆ ಸಹಾಯ ಮಾಡುತ್ತಿದ್ದ ಕೆಲವು ಕಪಟ ವಿಶ್ವಾಸಿಗಳು ಖಿಬ್ಲಾ ಬದಲಾವಣೆಯಾಗುತ್ತಿದ್ದಂತೆ ಮುಸ್ಲಿಮರಿಂದ ದೂರ ಸರಿದರು...
ಮುಸ್ಲಿಮ್ ಸಮೂಹವು ತಮ್ಮ ಹೊಸ ಸಂಕೇತದಡಿಯಲ್ಲಿ ಶಾಂತಿ, ಸಮಾಧಾನ ಬಾಳಿ ಬದುಕುವುದನ್ನು ಮತ್ತು ಶತ್ರುಗಳು, ಕಪಟ ವಿಶ್ವಾಸಿಗಳ ರೂಪದಲ್ಲಿ ಒಳ ಬರುವ ಎಲ್ಲಾ ಬಾಗಿಲುಗಳನ್ನು ಮುಚ್ಚಿ ರಾಷ್ಟ್ರದ ಆಂತರಿಕ ಭದ್ರತೆಯನ್ನು ಖಚಿತಪಡಿಸುವುದು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಲಕ್ಷ್ಯವಾಗಿತ್ತು...
ಮುಸ್ಲಿಮರು ಹುಟ್ಟೂರನ್ನು ತೊರೆದು, ಪರ ಊರಲ್ಲಿ ನೆಲೆ ಕಂಡುಕೊಂಡಿದ್ದರೂ, ಖುರೈಷಿಗಳಿಗೆ ಮಾತ್ರ ನೆಮ್ಮದಿಯಿರಲಿಲ್ಲ.. ಅವರ ಮನಸಿಡೀ ಮುಸ್ಲಿಮರ ಮೇಲಿನ ಸೇಡು, ವಿದ್ವೇಷಗಳಿಂದ ತುಂಬಿ ಕೊಂಡಿದ್ದವು. ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಹಾಗೂ ಇಸ್ಲಾಮನ್ನು ನಿರ್ಮೂಲನೆ ಮಾಡುವ ಅವರ ಪ್ರಯತ್ನಗಳೆಲ್ಲವೂ ನಿಷ್ಪಲವಾಗುತ್ತಿದ್ದವು.. ಇಸ್ಲಾಮ್ ಪ್ರತಿದಿನವೂ ಬೆಳೆಯುತ್ತಿದ್ದವು. ಮದೀನದಲ್ಲಿ ಮುಸ್ಲಿಮರು ಯಾರಿಗೂ ಭಯಪಡದೆ ತಮ್ಮ ಮತಾಚಾರಗಳನ್ನು ಮುಕ್ತವಾಗಿ ಅನುಸರಿಸಿಕೊಳ್ಳುತ್ತಿರುವುದು ಕಂಡು ಖುರೈಷಿಗಳಿಗೆ ಸಹಿಸಲಾಗುತ್ತಿರಲಿಲ್ಲ. ಆದ್ದರಿಂದ ಅನಿವಾರ್ಯ ಕಾರಣಕ್ಕೆ ಮಕ್ಕಾದಲ್ಲಿ ಉಳಿದಿದ್ದ ಬಡಪಾಯಿಗಳಾಗಿದ್ದ ಮುಸ್ಲಿಮರ ಮೇಲಿನ ದೌರ್ಜನ್ಯವನ್ನು ಖುರೈಷಿಗಳು ಇನ್ನಷ್ಟು ಹೆಚ್ಚಿಸಿದರು. ಕೆಲವರಂತೂ ಗಡಿ ನಿಯಮಗಳನ್ನು ಲಂಘಿಸಿ, ಮದೀನದಲ್ಲಿದ್ದ ಮುಸ್ಲಿಮರಿಗೆ ಸೇರಿದ ಕೃಷಿಗಳನ್ನು ಹಾಳು ಗೆಡವುತ್ತಿದ್ದರು. ಅವರ ಸಾಕು ಪ್ರಾಣಿಗಳನ್ನು ಕದ್ದೊಯ್ಯುತ್ತಿದ್ದರು. ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಭೇಟಿಯಾಗಲೋ, ಇಸ್ಲಾಮ್ ಸ್ವೀಕರಿಸಿ ಮುಂದಾಗುವವರನ್ನು ರಹಸ್ಯವಾಗಿ ಕಂಡು ಹಿಡಿದು, ಅವರು ಹಿಂದಿರುಗಿ ಬರುವವರೆಗೂ ಕಿರುಕುಳ ನೀಡಲಾಗುತಿತ್ತು. ಮುಸ್ಲಿಮರು ಕಅಬಾ ಪ್ರವೇಶಿಸದಂತೆ, ಹಜ್ ಉಮ್ರಾ ನಿರ್ವಹಿಸದಂತೆ ನಿರ್ಬಂಧ ವಿಧಿಸಲಾಯಿತು....
ಹದಿಮೂರು ವರ್ಷಗಳ ಕಾಲ ಪ್ರವಾದಿ ಮುಹಮ್ಮದರು ಅತ್ಯಂತ ಶಾಂತಿಯುತವಾಗಿ ಇಸ್ಲಾಮಿಕ್ ಪ್ರಬೋಧನೆ ನಡೆಸಿದರು. ಅಹಿಂಸೆ, ಸಹಿಷ್ಣುತೆಗಳ ಗಡಿರೇಖೆಗಳನ್ನು ಮೀರದೆ, ಆಯುಧಗಳನ್ನು ಕೈಗೆತ್ತಿಕೊಳ್ಳದೆ, ಸಂಘರ್ಷಕ್ಕಿಳಿಯದೆ ಕೆಡುಕನ್ನು ಒಳಿತಿನ ಮೂಲಕ ಎದುರಿಸಿದ್ದರು. ದೌರ್ಜನ್ಯಕ್ಕೊಳಗಾದವರು, ಶೋಷಿತರು, ಖುರೈಷಿಗಳ ಚಿತ್ರಹಿಂಸೆಗೆ ಗುರಿಯಾಗುತ್ತಿದ್ದವರು ಸಂಘಟಿತ ಪ್ರತಿ ಹೊಡೆತದ ಬೇಡಿಕೆಯಿಟ್ಟಾಗಲೆಲ್ಲಾ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು “ಸಹನೆ ಪಾಲಿಸಿರಿ, ನಮಗೆ ಯುದ್ಧಾನುಮತಿ ಲಭಿಸಿಲ್ಲ" ಎನ್ನುತ್ತಿದ್ದರು...
ಆದರೆ, ಈ ಸಹನೆ, ಮೌನವನ್ನು ಇನ್ನಷ್ಟು ದೀರ್ಘಕಾಲ ಮುಂದುವರಿಸಿಕೊಂಡು ಹೋಗುವುದು ಸಾಧ್ಯವಿರಲಿಲ್ಲ. ಅಸ್ತಿತ್ವವನ್ನು ಉಳಿಸಿಕೊಳ್ಳಲು ಆಯುಧ ಕೈಗೆತ್ತಿಕೊಳ್ಳುವ ಅನಿವಾರ್ಯತೆ ಸಂಜಾತವಾಗುತ್ತಿರುವುದರ ಬಗ್ಗೆ ಮುಸ್ಲಿಮರಿಗೆ ತಿಳಿದಿದ್ದವು. ಎರಡರಲ್ಲಿ ಒಂದು ನಡೆಯಲೇಬೇಕು. ಒಂದೋ ಮಹಾ ಯಶಸ್ಸು, ಅಥವಾ ಇಸ್ಲಾಮ್ ಈ ಭೂಮಿಯ ಮೇಲಿಂದಲೇ ಅಳಿಸಲ್ಪಡುವ ಮಹಾ ಸೋಲು, ಮದೀನದ ಮೇಲೆ ಖುರೈಷಿಗಳು ದಾಳಿ ನಡೆಸಲು ಸಿದ್ಧತೆ ಮಾಡುತ್ತಿರುವುದು ಮುಸ್ಲಿಮರಿಗೆ ತಿಳಿದಿದ್ದವು. ಆ ದಾಳಿಯೇನಾದರು ಸಫಲಗೊಂಡರೆ, ಅದರ ದುರಂತವನ್ನು ಮಾತಿನಲ್ಲಿ ವಿವರಿಸುವುದು ಸಾಧ್ಯವಿರಲಿಲ್ಲ.. ರೋಮ್ ಸಾಮ್ರಾಜ್ಯದ ನೇತೃತ್ವದಲ್ಲಿ ಕ್ರೈಸ್ತರು ಪೇರ್ಷ್ಯನ್ನರ ವಿರುದ್ಧ ಹೋರಾಡಿ, ವಿಜಯ ಸಾಧಿಸಿದ ಸಂದರ್ಭವಾಗಿತ್ತು ಅದು...
ಸತ್ಯಧರ್ಮದ ಉಳಿವಿಗೆ, ಅಧರ್ಮಿಗಳ ಅಟ್ಟಹಾಸದ ಅಂತ್ಯಕ್ಕೆ, ಶೋಷಿತರ, ದಮನಿತರ ವಿಮೋಚನೆಗೆ ಹೋರಾಟವೊಂದು ಅನಿವಾರ್ಯವೆಂಬುದನ್ನು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಮನಗಂಡಿದ್ದರು. ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅವರು ಅನುಯಾಯಿಗಳೊಂದಿಗೆ ಆಜ್ಞಾಪಿಸಿದರು.. ಕುದುರೆ, ಒಂಟೆ, ಆಯುಧಗಳನ್ನು ಸಂಗ್ರಹಿಸುವಂತೆ, ಬಿಲ್ವಿದ್ಯೆ, ಭರ್ಜಿ ಎಸೆತಗಳ ತರಬೇತಿ ಪಡೆದುಕೊಳ್ಳುವಂತೆ ನಿರ್ದೇಶಿಸಿದರು. ಮದೀನದ ಸುತ್ತಮುತ್ತಲಿನ ಪ್ರದೇಶಗಳಲ್ಲಿ, ಪರ್ವತ ಗಳಲ್ಲಿ, ಕಣಿವೆಗಳಲ್ಲಿ, ರಸ್ತೆಗಳಲ್ಲಿ ನಿರೀಕ್ಷಕರನ್ನು ನಿಯೋಜಿಸಿ, ನಿಗಾ ವಹಿಸುವಂತೆ ಹಾಗೂ ಅಲ್ಲಿಗೆ ಬಂದು ಹೋಗುವ ಗೋತ್ರಗಳ ಕುರಿತು ವಿವರಗಳನ್ನು ಸಂಗ್ರಹಿಸುವಂತೆಯೂ ಅನುಯಾಯಿಗಳಿಗೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಆಜ್ಞಾಪಿಸಿದರು. ಮುಸ್ಲಿಮ್ ಸಮೂಹವನ್ನು ಸಾಂಸ್ಕತಿವಾಗಿ ಶ್ರೀಮಂತರನ್ನಾಗಿಸಿದ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಅವರು ಯಾವುದೇ ತುರ್ತು ಸಂದರ್ಭದಲ್ಲೂ ಧೀರರಂತೆ ಹೋರಾಡುವ ಸಮೂಹವನ್ನಾಗಿ ರೂಪಿಸುವ ಗುರಿಯನ್ನು ಹೊಂದಿದ್ದರು. ಅನಿವಾರ್ಯ ಸಂದರ್ಭದಲ್ಲಿ ಅಲ್ಲಾಹನ ಮಾರ್ಗದಲ್ಲಿ ಆತ್ಮ, ಸಂಪತ್ತನ್ನು ದಾನ ನೀಡುವುದರ ಮೂಲಕ ಆತ್ಮ ಸಂತೃಪ್ತಿ ಕಂಡುಕೊಳ್ಳುವ ಸಂಘಟತ ಸಮೂಹವನ್ನು ಸೃಷ್ಟಿಸುವುದು ಅವರ ಉದ್ದೇಶವಾಗಿತ್ತು...
ಮದೀನಕ್ಕೆ ಹಿಜ್ರ ಹೊರಟು ಸುಮಾರು ಹದಿನೈದು ತಿಂಗಳೊಳಗಾಗಿ ಸುಭದ್ರವಾದ ರಾಷ್ಟ್ರವೊಂದಕ್ಕೆ ಅಡಿಗಲ್ಲು ಹಾಕಿದ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಆಂತರಿಕ ಭದ್ರತೆಯನ್ನು ಖಚಿತಪಡಿಸಿದ ಬಳಿಕ ಬಾಹ್ಯಾಕ್ರಮಣವನ್ನು ಎದುರಿಸುವ ಸೈನಿಕ ಸಜ್ಜೀಕರಣ ನಡೆಸಿದರು. ಮದೀನದ ಸುತ್ತಮುತ್ತಲಿನ ಗೋತ್ರಗಳು ಒಂದೋ ಇಸ್ಲಾಮ್ ಸ್ವೀಕರಿಸುತ್ತಿದ್ದರು.. ಇಲ್ಲದಿದ್ದರೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿದ್ದರು. ಸಿರಿಯಾದೆಡೆಗಿನ ವ್ಯಾಪಾರ ಮಾರ್ಗ ಖುರೈಷಿಗಳ ಪ್ರಮುಖ ವ್ಯಾಪಾರಿ ಪಥವಲ್ಲದೆ, ಮುಸ್ಲಿಮರ ವಿರುದ್ದದ ಸೈನಿಕ ಕಾರ್ಯಾಚರಣೆ ನಡೆಸುವ ಮಾರ್ಗವೂ ಕೂಡ ಆಗಿತ್ತು. ಆದ್ದರಿಂದ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಈ ವ್ಯಾಪಾರ ಮಾರ್ಗದ ಮೇಲೆ ಗಮನ ಕೇಂದ್ರೀಕರಿಸಿದ್ದರು..
ಸಂಭಾವ್ಯ ದಾಳಿಯನ್ನು ತಡೆಯಬೇಕಾದರೆ ಖುರೈಷಿ ವರ್ತಕ ಸಂಘಗಳ ವಿರುದ್ಧ ಕ್ರಮಗಳನ್ನು ಕೈಗೊಳ್ಳುವುದು ಮುಸ್ಲಿಮರಿಗೆ ಅನಿವಾರ್ಯವಾಗಿದ್ದವು. ವರ್ತಕ ಸಂಘಗಳ ಮೇಲೆ ದಾಳಿ ನಡೆಸಿ, ಖುರೈಷಿಗಳನ್ನು ಆರ್ಥಿಕವಾಗಿ ಕಂಗೆಡಿಸುವುದು ಉಪಾಯವಾಗಿತ್ತು. ಮುಸ್ಲಿಮರ ಸಣ್ಣ ಪುಟ್ಟ ಸೇನೆಗಳು ಈ ದಾಳಿ ನಡೆಸುತ್ತಿದ್ದವು. ಈ ಸೈನಿಕ ಕಾರ್ಯಾಚರಣೆಗಳಲ್ಲಿ ಸ್ವತಃ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರೂ ಸಹ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಇದು ಯುದ್ದವಾಗಿರಲಿಲ್ಲ. ಬದಲಾಗಿ ಖುರೈಷಿಗಳಿಗೆ ನೀಡುತ್ತಿದ್ದ ಮುನ್ನೆಚ್ಚರಿಕೆಯಾಗಿತ್ತು. ಮುಸ್ಲಿಮರು ಪ್ರತಿದಾಳಿ ಆರಂಭಿಸಿದ್ದಾರೆ ಎಂಬುದು ಬದ್ರ್ ಗೂ ಮೊದಲಿನ ನಾಲ್ಕು ಸರಿಯ್ಯತುಗಳು (ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಭಾಗವಹಿಸಿದ ಸೈನಿಕ ಕಾರ್ಯಾಚರಣೆ) ನಡೆದವು. ಒಂದು ರೀತಿಯಲ್ಲಿ ಇದು ನಿರ್ಣಾಯಕವಾದ ಬದ್ರ್, ಯುದ್ಧಕ್ಕೆ ನಡೆದ ಸೇನಾ ತರಬೇತಿಯಾಗಿತ್ತು ಎಂದು ಚರಿತ್ರೆಗಾರರು ಅಭಿಪ್ರಾಯಪಡುತ್ತಾರೆ. ಹತ್ತಿರ ಪ್ರದೇಶಗಳ ಗೋತ್ರಗಳ ನಿಲುವುಗಳನ್ನು ಸ್ಪಷ್ಟಪಡಿಸಿಕೊಳ್ಳಲು ಈ ಕಾರ್ಯಾಚರಣೆ ಸಹಾಯಕವಾದವು. ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಅನುಯಾಯಿಗಳು ಮದೀನದ ಸುತ್ತಮುತ್ತಲು ಮುಸ್ಲಿಮ್ ಉಮ್ಮತಿನ ಸಾನಿಧ್ಯವನ್ನು ಸಾರುತ್ತಾ ತಿರುಗಾಡುತ್ತಿದ್ದರು...
ಅಧ್ಯಾಯ-9
"ಸೇನಾ ಚಟುವಟಿಕೆಗಳು"
ಸರಿಯ್ಯತು ಹಂಝ(ರ.ಅ)
ಹಿಜರಿ ಒಂದನೇ ವರ್ಷದ ರಮಳಾನ್ ನಲ್ಲಿ (ಕ್ರಿಸ್ತ ಶಖ 623 ಮಾರ್ಚ್) ಹಂಝತುಬ್ನು ಅಬ್ದುಲ್ ಮುತ್ತಲಿಬ್ (ರ) ರ ನೇತೃತ್ವದಲ್ಲಿ ಮೂವತ್ತು ಮಂದಿಯ ತಂಡವೊಂದನ್ನು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ರಚಿಸಿದರು. ಅವರು ವಾಹನಗಳ ಮೇಲೆ ಯಾತ್ರೆ ಹೊರಟರು.. ತಂಡದಲ್ಲಿದ್ದ ಅರ್ಧದಷ್ಟು ಮಂದಿ ಮುಹಾಜರುಗಳೆಂದೂ, ಇನ್ನರ್ಧದಷ್ಟು ಮಂದಿ ಅನ್ಸಾರಿಗಳೆಂದೂ ಕೆಲವು ವಿದ್ವಾಂಸರ ಅಭಿಪ್ರಾಯ. ಆದರೆ, ಎಲ್ಲರೂ ಮುಹಾಜರುಗಳಾಗಿದ್ದರೆಂಬುದು ಪ್ರಬಲ ಅಭಿಪ್ರಾಯ, ಕಾರಣ, ಪ್ರವಾದಿಯೊಂದಿಗೆ ಅನ್ಸಾರಿಗಳು ಮಾಡಿದ ಒಪ್ಪಂದವು, ಮದೀನದೊಳಗಿನ ಸಂರಕ್ಷಣೆಗೆ ಸೀಮಿತವಾಗಿತ್ತು.. ಅಂದರೆ, ಮದೀನದೊಳಗಿದ್ದಾಗ ಮಾತ್ರ ಅವರಿಗೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಸಂರಕ್ಷಿಸುವ ಹಾಗೂ ಶತ್ರುಗಳನ್ನು ಎದುರಿಸುವ ಬಾಧ್ಯತೆಯಿದ್ದವು. ಆದ್ದರಿಂದ, ಬದ್ರ್ ಯುದ್ದಕ್ಕೂ ಮುನ್ನ ನಡೆದ ಸೇನಾ ಕಾರ್ಯಾಚರಣೆಗೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಅನ್ಸಾರಿಗಳನ್ನು ಆಹ್ವಾನಿಸಿರಲಿಲ್ಲ...
ಶಾಮ್‌ನಿಂದ ಮಕ್ಕಾದೆಡೆಗೆ ಹೊರಟಿದ್ದ ಅಬೂಜಹಲ್ ನೇತೃತ್ವದ ಮುನ್ನೂರು ಮಂದಿ ವ್ಯಾಪಾರಿಗಳ ತಂಡವನ್ನು ತಡೆಯಲು ಹಂಝ (ರ) ಸರಿಯ್ಯತ್ ಹೊರಟಿತ್ತು.. ಈ ಎರಡೂ ಸಂಘಗಳು ಸಮುದ್ರ ತೀರವೊಂದರಲ್ಲಿ ಮುಖಾಮುಖಿಯಾದವು. ಇನ್ನೇನೂ ಯುದ್ದ ಎರಡೂ ಸಂಘಗಳು ಯುದ್ದದಲ್ಲೇರ್ಪಡುತ್ತದೆಂಬಷ್ಟರಲ್ಲಿ, ಎರಡೂ ಕಡೆಯ ಜನರಿಗೂ ಆತ್ಮೀಯರಾಗಿದ್ದ ಮಜ್ ದಿಬ್ನ್ ಅಂರಿಲ್ ಜುಹನಿ ಹಾಗೂ ಸಂಗಡಿಗರ ಮಧ್ಯಪ್ರವೇಶದೊಂದಿಗೆ ಎರಡೂ ವಿಭಾಗಗಳು ಹಿಂದಕ್ಕೆ ಸರಿದವು.. ಮುಸ್ಲಿಮರ ಪತಾಕೆ ಅಬೂ ಮರ್ಸಾದ್ ಕನ್ನಾ ಸಬ್ ನುಲ್ ಹುಸೈನಿಲ್ ಗನವಿಯಾರ ಕೈಯಲ್ಲಿದ್ದವು. ಮೊದಲ ಬಾರಿಗೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಎತ್ತಿ ಹಿಡಿದ ಪತಾಕೆಯು ಶುಭ್ರ ವರ್ಣದಿಂದ ಕೂಡಿತ್ತು...
ಮಜ್ದಿಯವರ ಮಧ್ಯಪ್ರವೇಶದ ಬಗ್ಗೆ, ನ್ಯಾಯಯುತವಾದ ನಿರ್ಧಾರಗಳ ಕುರಿತು ಹಂಝ ರ.ಅ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರೊಂದಿಗೆ ಹೇಳಿದರು. ಮುಂದೆ ಮಜ್ ದಿಯವರ ಗೋತ್ರದ ಜನರು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಭೇಟಿ ಮಾಡಿದಾಗ ಅವರನ್ನು ವಿಶೇಷವಾಗಿ ಗೌರವಿಸಿ, ಅಭಿನಂದಿಸಲಾಯತು...
"ಸರಿಯ್ಯತು ಉಬೈದತುಬ್ ನುಲ್ ಹಾರಿಸ್ (ರ)"
ಹಿಜರಿ ಒಂದನೇ ವರ್ಷ ಶವ್ವಾಲ್ ಮಾಸದಲ್ಲಿ (ಕ್ರಿಸ್ತ ಶಕ 623 ಎಪ್ರಿಲ್ ತಿಂಗಳಲ್ಲಿ) ಉಬೈದತುಬ್ ನುಲ್ ಹಾರಿಸ್ (ರ) ರವರ ನೇತೃತ್ವದಲ್ಲಿ 60 ಮಂದಿ ಸ್ವಹಾಬಿಗಳನ್ನೊಳಗೊಂಡ ಸೇನೆಯನ್ನು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಜುಹ್ಪದಿಂದ ಹತ್ತು ಮೈಲಿ ದೂರದಲ್ಲಿರುವ ರಾಬಿಇ ಎಂಬಲ್ಲಿಗೆ ಕಳುಹಿಸಿಕೊಟ್ಟರು.. ಅಹ್ ಯಾಅ್ ಜಲಾಶಯದ ಸಮೀಪದಲ್ಲಿ ಅವರು ಅಬೂಸುಫಿಯಾನರನ್ನು ಎದುರುಗೊಂಡರು. ಇನ್ನೂರು ಮಂದಿಯಿದ್ದ ಖುರೈಷಿಗಳ ನೇತೃತ್ವ ಸ್ಥಾನವನ್ನು ಅಬೂಸುಫಿಯಾನ್ ವಹಿಸಿಕೊಂಡಿದ್ದರು. ಮುಸ್ಲಿಮರ ಪತಾಕೆ ಮಿಸ್ ತ್ವಹ್ ಬ್ನು ಆಸಾಸಃರ ಕೈಯಲ್ಲಿದ್ದವು. ಸರಿಯ್ಯತ್‌ನಲ್ಲಿ ಸಈದ್ ಬಿನ್ ಅಬೀವಖಾಸ್ ಮುನ್ನುಗ್ಗಿ ಶತ್ರು ತಂಡದ ಮೇಲೆ ಬಾಣ ಪ್ರಯೋಗಿಸಲಾರಂಭಿಸಿದರು. ತಮ್ಮ ಬತ್ತಳಿಕೆಯಲ್ಲಿದ್ದ ಬಾಣ ಮುಗಿಯುವವರೆಗೂ ಅವರು ಬಾಣ ಪ್ರಯೋಗಿಸುತ್ತಲೇ ಇದ್ದರು. ಇದರೊಂದಿಗೆ ಇಸ್ಲಾಮಿಕ್ ಚರಿತ್ರೆಯಲ್ಲಿ ಮೊತ್ತ ಮೊದಲು ಅಸ್ತ್ರ ಪ್ರಯೋಗಿಸಿದವರೆಂಬ ಖ್ಯಾತಿಗೆ ಸಅ್‌ದ್ ಪಾತ್ರರಾದರು... ಬತ್ತಳಿಕೆಯಲ್ಲಿದ್ದ ಇಪ್ಪತ್ತು ಅಸ್ತ್ರಗಳಲ್ಲಿ ಪ್ರತಿಯೊಂದೂ ಶತ್ರುವನ್ನೋ ಅಥವಾ ಅವನ ಮೃಗವನ್ನೋ ಗಾಯಗೊಳಿಸಿ, ಬದಿಗೆ ಸರಿಯುತ್ತಿದ್ದವು. ಅಲ್ಲಿ ಈ ಬಾಣ ಪ್ರಯೋಗವಲ್ಲದೆ ಇನ್ನೇನೂ ನಡೆಯಲಿಲ್ಲ. ನೇರಾನೇರ ಖಡ್ಡ ಬೀಸಿ, ರಕ್ತ ಹರಿಸುವ ಯುದ್ಧ ನಡೆಯಲಿಲ್ಲ. ಅಸ್ತ್ರಗಳು ಮುಗಿದ ಮೇಲೆ ಎರಡೂ ವಿಭಾಗಗಳು ತಮ್ಮ ತಮ್ಮ ಹಾದಿ ಹಿಡಿದವು. ಖುರೈಷಿ ಸಂಘದಿಂದ ಮಖ್ ದಾದುಬ್ನು ಅಂರಿಲ್ ಬಹ್ರಾನ್ ಹಾಗೂ ಉತ್ಬತ್‌ಬ್ನ್ ಗಸ್ವಾನ್ (ಇವರು ಮೊದಲೇ ಮುಸ್ಲಿಮರಾಗಿದ್ದರು) ಎಂಬಿಬ್ಬರು ಮುಸ್ಲಿಮರ ಜೊತೆ ಸೇರಿ ಮದೀನಕ್ಕೆ ತೆರಳಿದರು...
ಸರಿಯ್ಯತು ಸಅದ್ ಬುನು ಅಬೀವಖಾಸ್ (ರ)
ಹಿಜರಿ ಒಂದನೇ ವರ್ಷದ ದುಲ್ಖಅದ್ ಮಾಸ (623 ಮೇ ಮಾಸದಲ್ಲಿ) ಸಅದ್ ಬಿನ್ ಅಬೀ ವಖಾಸ್‌ರ ನೇತೃತ್ವದಲ್ಲಿ ಇಪ್ಪತ್ತು ಮಂದಿಯಿದ್ದ ಸೇನೆಯೊಂದನ್ನು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಖರ್ರಾರ್ ಕಣಿವೆಗೆ ನಿಯೋಜಿಸಿದರು. ಆ ಕಣಿವೆಯ ಮೂಲಕ ಹಾದು ಹೋಗುವ ಖುರೈಷಿ ವರ್ತಕರ ಸಂಘವನ್ನು ತಡೆಯುವುದು ಉದ್ದೇಶವಾಗಿತ್ತು. ಕಾಲ್ನಡಿಗೆಯ ಮೂಲಕ ಹೊರಟ ಮುಸ್ಲಿಮ್ ಸೈನಿಕರು ಹಗಲು ಹೊತ್ತಿನಲ್ಲಿ ಅಡಗಿ ಕೂತು, ರಾತ್ರಿ ಹೊತ್ತು ಸಂಚರಿಸುತ್ತಿದ್ದರು. ಆದರೆ, ಮುಸ್ಲಿಮರು ಖರ್ರಾರ್ ಕಣಿವೆಗೆ ಮುಟ್ಟುವಷ್ಟರಲ್ಲಿ ಖುರೈಷಿಗಳು ಹಿಂದಿನ ದಿನವೇ ಅಲ್ಲಿಂದ ಹೊರಟು ಹೋಗಿರುವ ಸುದ್ದಿ ತಿಳಿದವು.. ಶತ್ರುಗಳನ್ನು ಬೆನ್ನಟ್ಟಿದರೆ ಹಿಡಿಯಬಹುದೆಂಬ ಪ್ರತೀಕ್ಷೆ ಸಅದ್ ಬುನು ಅಭೀ ವಖಾಸ್ (ರ.ಅ) ರಿಗಿದ್ದರೂ, ಖರ್ರಾರ್ ಕಣಿವೆಯಾಚೆಗೆ ಹೋಗಬಾರದೆಂಬ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ನಿರ್ದೇಶನವಿದ್ದುದರಿಂದ ಅವರು ಮದೀನಕ್ಕೆ ಹಿಂದಿರುಗಿದರು...
ಗಸ್ ವತ್ತುವದ್ದಾನ್ (ಗಸ್ವತುಲ್ ಅಬವಾಅ್)
ಹಿಜರಿ ಎರಡನೇ ವರ್ಷ ಸಫರ್ ಮಾಸ (ಕ್ರಿಸ್ತ ಶಕ 623 ಆಗಸ್ಟ್) ರಲ್ಲಿ ಸೈನಿಕರ ಒಂದು ತುಕಡಿಯೊಂದಿಗೆ ಹೊರಟ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ವದ್ದಾನ್ ಕಣಿವೆಯನ್ನು ಗುರಿಯಾಗಿಸಿಕೊಂಡಿದ್ದರು.. ವದ್ದಾನ್ ಎಂಬುದು ಮಕ್ಕಾ ಮದೀನದ ನಡುವಿನ ಒಂದು ಪರ್ವತದ ಹೆಸರು. ಪರ್ವತದ ಹೆಸರಲ್ಲಿ ಅಲ್ಲಿಯ ಕಣಿವೆ ಪ್ರದೇಶವೂ ಗುರುತಿಸಲ್ಪಟ್ಟಿದೆ. ವದ್ದಾನ್ನ ಆರೋ ಏಳೋ ಮೈಲಿ ದೂರದಲ್ಲಿ ಅಬವಾಅ್ ಪರ್ವತವಿದೆ, ಎರಡೂ ತೀರಾ ಸಮೀಪದಲ್ಲಿರುವುದರಿಂದ ಎರಡನ್ನೂ ಒಟ್ಟಿಗೆ ಗಸವತುಲ್ ಅಬವಾಅ್ ಎಂದು ಕರೆಯಲಾಗುತ್ತದೆ. ವದ್ದಾನ್ ಕಣಿವೆಗೆ ಮುಟ್ಟಿದ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಜೊತೆಗೆ ಎಪ್ಪತ್ತು ಮಂದಿ ಮುಹಾಜರುಗಳಿದ್ದರು. ಖುರೈಷಿಗಳ ವರ್ತಕ ಸಂಘವನ್ನು ತಡೆಯುವುದು ಅವರ ಉದ್ದೇಶವಾಗಿತ್ತು. ಅಬವಾಅ್ ಮುಟ್ಟಿದಾಗ ಉಂರಾ ವಂಶದ ಮುಖ್ಯಸ್ಥ ಮಖ್ ಶಿಯ್ಯುಬ್ನು ಅಂರ್ ಎದುರುಗೊಂಡರು. ಮುಸ್ಲಿಮರನ್ನು ಕಂಡು ಆತ ವಿಚಲಿತನಾಗಿದ್ದನು. ಮುಸ್ಲಿಮರೊಂದಿಗೆ ಯುದ್ಧ ಮಾಡುವುದಾಗಲೀ, ಅವರ ಶತ್ರುಗಳಿಗೆ ಸಹಾಯ ಮಾಡುವುದಾಗಲೀ ಮಾಡಲಾರೆವು ಎಂದು ಮಖ್ ಶಿಯ್ಯುಬ್ನು ಅಂರ್ ಕರಾರೊಂದಕ್ಕೆ ಸಹಿ ಹಾಕಿದ ಮೇಲೆ ಅವನನ್ನು ಹಾಗೂ ಅವನ ತಂಡವನ್ನು ಸುಮ್ಮನೆ ಬಿಟ್ಟು ಬಿಡಲಾಯಿತು.
ಕರಾರಿನ ಪೂರ್ಣ ರೂಪ: ಕರುಣಾನಿಧಿಯೂ, ದಯಾಳುವೂ ಆದ ಅಲ್ಲಾಹನ ನಾಮದಲ್ಲಿ ದೇವರ ದೂತನಾದ ಮುಹಮ್ಮದರು ಬನೂಉಂರ ವಂಶಜರೊಂದಿಗೆ ಮಾಡುವ ಕರಾರು. ತಮ್ಮ ಸಂಪತ್ತು ಹಾಗೂ ಆತ್ಮದ ವಿಷಯದಲ್ಲಿ ನಿರ್ಭಯರಾಗಿರಿ. ದೇವರ ಧರ್ಮದ ವಿರುದ್ದ ಅವರು ಯುದ್ಧ ಮಾಡದಿರುವವರೆಗೆ ಅವರ ಮೇಲೆ ಆಕ್ರಮಣವೆಸಗಲು ಉದ್ದೇಶಿಸುವವರ ವಿರುದ್ದ ಅವರಿಗೆ ಸಹಾಯ ದೊರೆಯುವುದು. ಸಮುದ್ರದಲ್ಲಿ ಒಂದು ಒದ್ದೆಯಾಗುವಷ್ಟು ನೀರಿರುವವರೆಗೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಅವರನ್ನು ಸಹಾಯಕ್ಕೆ ಕರೆದರೆ ಅವರು ಉತ್ತರಿಸಬೇಕು. ಈ ಮೂಲಕ ಅವರಿಗೆ ಅಲ್ಲಾಹನ ಹಾಗೂ ಅವನ ದೂತನ ಸಂರಕ್ಷಣೆ ದೊರಕಲಿದೆ...
ಈ ಸೇನಾ ಕಾರ್ಯಾಚರಣೆಗಾಗಿ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹದಿನೈದು ದಿನಗಳ ಕಾಲವನ್ನು ಮದೀನದ ಹೊರಗೆ ಕಳೆದಿದ್ದರು. ತಮ್ಮ ಗೈರು ಹಾಜರಾತಿಯಲ್ಲಿ ಮದೀನದ ಮೇಲ್ನೋಟ ನೋಡಿಕೊಳ್ಳಲು ಸಅದ್ ಬುನು ಅಬೀವವಾಸ್‌ರನ್ನು ನೇಮಿಸಿದರು. ಇದು ಪ್ರವಾದಿ ಸಲ್ಲಲ್ಲಾಹು ಅಲೈಹ ವಸಲ್ಲಮರು ಭಾಗವಹಿಸಿದ ಮೊದಲ ಸೇನಾ ಕಾರ್ಯಾಚರಣೆಯಾಗಿತ್ತು...
ಗಸ್ವತುಲ್ ಬವಾತ್ವ್
ಹಿಜರಿ ಎರಡನೇ ವರ್ಷ ರಬಿವುಲ್ ಅವ್ವಲ್ (ಕ್ರಿಸ್ತ ಶಕ 623 ಜುಲೈನಲ್ಲಿ) ಮದೀನದಿಂದ ಮೂವತ್ತಾರು ಮೈಲಿ ದೂರದಲ್ಲಿರುವ ಬುವಾತ್ವ್ ಪರ್ವತಕ್ಕೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೊರಟರು. ಅವರ ಇನ್ನೂರು ಮಂದಿ ಮುಹಾಜರುಗಳಿದ್ದರು. ಉಮಯ್ಯತುಬ್ನ್ ಖಲಫ್ ರ ನೇತೃತ್ವದ ನೂರು ಮಂದಿ ಖುರೈಷಿಗಳು ಹಾಗೂ ಎರಡು ಸಾವಿರದ ಐನೂರು ಒಂಟೆಗಳನ್ನೊಳಗೊಂಡ ವರ್ತಕ ಸಂಘವನ್ನು ತಡೆಯಲು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಬುವಾತ್ಗೆ ಹೊರಟಿದ್ದರು. ಸಅ್‌ದ್ ಬಿನ್ ಆಜೀವಕಾಸ್ ಪತಾಕೆ ಹಿಡಿದಿದ್ದರು. ಮದೀನದಲ್ಲಿ ಸಅದ್ ಬುನು ಮುಆದ್ (ರ) ರನ್ನು ನಿಯೋಜಿಸಿದ್ದರು. ಸಾಇಬುನು ಮಳ್ ಉನ್ ರನ್ನು ನಿಯೋಜಿಸಲಾಗಿತ್ತು ಎಂದೂ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಸೇನಾ ಕಾರ್ಯಾಚರಣೆಯಲ್ಲಿ ಸಂಘರ್ಷಗಳೇನೂ ಉಂಟಾಗಲಿಲ್ಲ. ರಬಿವುಲ್ ಅವ್ವಲ್ ಮುಗಿದು, ಜಮಾದುಲ್ ಅವ್ವಲ್‌ನ ಆರಂಭದ ಕೆಲವು ದಿನಗಳ ಕಾಲ ಬುವಾತ್‌ನಲ್ಲಿ ತಂಗಿದ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ನಂತರ ಮದೀನಕ್ಕೆ ಹಿಂದಿರುಗಿದರು..
ಗಸ್ವತುಲ್ ಉಸೈರ:
ಹಿಜ್ರ ಎರಡನೇ ವರ್ಷ ಜಮಾದುಲ್ ಅವ್ವಲ್ (ಕ್ರಿ. 623 ಅಕ್ಟೋಬರ್ 12 , 27 ಎಂದೂ ಅಭಿಪ್ರಾಯವಿದೆ) ನಲ್ಲಿ ಶಾಮ್‌ಗೆ ಹೋಗುತ್ತಿದ್ದ ಖುರೈಷಿ ವ್ಯಾಪಾರಿ ಸಂಘವನ್ನು ಗುರಿಯಾಗಿಸಿ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೊರಟರು. ಖುರೈಷಿಗಳು ತಮ್ಮ ಸಂಪೂರ್ಣ ಸಂಪಾದನೆಯನ್ನು ಸಂಗ್ರಹಿಸಿ, ಮಕ್ಕಾದಲ್ಲಿ ಖುರೈಷಿ ಗೋತ್ರದ ಸ್ತ್ರೀ ಪುರುಷರೆಲ್ಲರೂ (ಹುವೈತಿಬ್ನು ಅಬ್ದಿಲ್ ಇಝ್ಝರನ್ನು ಹೊರತುಪಡಿಸಿ) ಒಂದು ನಾಣ್ಯದಿಂದ ಮೊದಲ್ಗೊಂಡು ಸಂಪೂರ್ಣ ಸಂಪಾದನೆಯನ್ನು ತೊಡಗಿಸಿಕೊಂಡಿದ್ದರು. ಒಂದು ಲೆಕ್ಕಾಚಾರದ ಪ್ರಕಾರ, ವ್ಯಾಪಾರಿ ಸಂಘದ ಜೊತೆಗೆ ಐವತ್ತು ಸಾವಿರ ದೀನಾರ್, ಸಾವಿರ ಒಂಟೆಗಳಿದ್ದವು. ಸಂಘದ ನೇತೃತ್ವವನ್ನು ಅಬೂಸುಫಿಯಾನ್ ವಹಿಸಿಕೊಂಡಿದರು. ಮಖ್ಮರತುಬ್ನು ನೌಫಲ್, ಅಂರುಬ್ ನುಲ್ ಆಸ್ವ್ ಮೊದಲಾದವರನ್ನೊಳಗೊಂಡ ಮೂವತ್ತೊಂಬತ್ತು (ಇಪ್ಪತ್ತೇಳು ಎಂದೂ ಅಭಿಪ್ರಾಯವಿದೆ) ಮಂದಿ ಜೊತೆಗಿದ್ದರು. ಈ ವರ್ತಕ ಸಂಘ ಶಾಮ್ನಿಂದ ಹಿಂದಿರುಗುವಾಗ ಬದ್ರ್ ಯುದ್ಧಕ್ಕೆ ತಕ್ಷಣದ ಕಾರಣವಾದ ಘಟನಾವಳಿಗಳು ಜರಗಿದವು...
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ನೂರ ಐವತ್ತು ಮಂದಿ (ಇನ್ನೂರು ಎಂದೂ ಅಭಿಪ್ರಾಯವಿದೆ) ಮುಹಾಜರುಗಳೊಂದಿಗೆ ಹೊರಟರು. ಹಂಝತುಬ್‌ನುಲ್ ಅಬುದಿಲ್ ಮುತ್ತಲಿಬ್ ಮುಸ್ಲಿಮರ ಪತಾಕೆ ಹಿಡಿದಿದ್ದರು. ಮುಸ್ಲಿಮರ ಜೊತೆಗೆ ಮೂವತ್ತು ಒಂಟೆಗಳಿದ್ದವು. ಸರದಿ ಪ್ರಕಾರ, ಒಬ್ಬರ ಬಳಿಕ ಒಬ್ಬರಂತೆ ಒಂಟೆಗಳ ಮೇಲೆ ಕೂತು ಅವರು ಪ್ರಯಾಣಿಸುತ್ತಿದ್ದರು, ಆದರೆ, ಅವರು ನಿಶ್ಚಿತ ಸ್ಥಳಕ್ಕೆ ತಲುಪುವ ಒಂದು ದಿನ ಮೊದಲೇ ಖುರೈಷಿ ವ್ಯಾಪಾರಿ ಸಂಘ ದಾಟಿ ಹೋಗಿದ್ದವು.. ಅಬೂ ಸಲಮತ್ ಬ್ನು ಅಬ್ದಿಲ್ ಅಸದ್ರನ್ನು ಮದೀನದಲ್ಲಿ ತಮ್ಮ ಪ್ರತಿನಿಧಿಯಾಗಿ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ನೇಮಿಸಿದರು. ಕೆಲವು ದಿನಗಳ ಕಾಲ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಉಸೈರರದಲ್ಲಿ ತಂಗಿದರು...
ಅಲ್ಲಿ ಬನೂ ಮಿದ್ ಲಜ್ ವಂಶಜರು ಹಾಗೂ ಅವರ ಮಿತ್ರ ಪಕ್ಷಗಳೊಂದಿಗೆ ಸೌಹಾರ್ಧ ಕರಾರು ಮಾಡಿಕೊಂಡರು. ಈ ಸಂದರ್ಭದಲ್ಲಿ ಅವರು ಅಲೀ (ರ) ರನ್ನು ಅಬೂ ತುರಾಬ್ (ಮಣ್ಣಿನ ತಂದೆ ) ಎಂದು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಕರೆದಿರುವುದು ಕೆಲವರು ಅಭಿಪ್ರಾಯ ಪಡುತ್ತಾರೆ. ಅಲೀ ಹಾಗೂ ಅಮ್ಮಾರುಬುನು ಯಾಸರ್ ಮಲಗಿದ್ದರು.. ಅಲಿ (ರ) ರವರ ದೇಹದ ಮೇಲೆ ಮಣ್ಣು ಮೆತ್ತಿಕೊಂಡಿದ್ದವು. ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಅವರನ್ನು ಕಾಲಿನಿಂದ ತಟ್ಟಿ ಎಬ್ಬಿಸಿ ಖುಂ ಯಾ ಅಬಾತುರಾಬ್" (ಮಣ್ಣಿನ ತಂದೆಯೇ ಎದ್ದೇಳು) ಎಂದಿದ್ದರು. ಮುಸ್ಲಿಮರಿಗಿಂತ ಮೊದಲೇ ಖುರೈಷಿ ವ್ಯಾಪಾರಿಗಳು ದಾಟಿ ಹೋಗಿದ್ದರಿಂದ ಸಂಘರ್ಷಗಳಿಲ್ಲದೆ ಅವರು ಮದೀನಕ್ಕೆ ಮರಳಿದರು..
"ಗಸ್ವತು ಸಫ್ವಾನ್(ಬದ್ರುಲ್ ಊಲಾ)"
ಗಸ್ವತುಲ್ ಉಸೈರದಿಂದ ಮರಳಿದ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಮದೀನಕ್ಕೆ ಮುಟ್ಟಿದ ಕೆಲವೇ ದಿನಗಳು ಕಳೆದಿದ್ದವು. ಆಗ ಒಂದು ಘಟನೆ ನಡೆದವು. ಖುರೈಷಿ ಪ್ರಮುಖನಾದ ಖುರ್ ಸುಬ್ ನುಜಾಬಿರಿಲ್ ಫಿಹ್ ರಿಯ ನೇತೃತ್ವದ ಒಂದು ಸಂಘ ಮದೀನ ಮುಸ್ಲಿಮರ ನೆಲೆಯ ಮೇಲೆ ದಾಳಿ ನಡೆಸಿದರು. ಒಂಟೆ ಹಾಗೂ ಇತರ ಸಾಕು ಪ್ರಾಣಿಗಳನ್ನು ಕೊಳ್ಳೆ ಹೊಡೆದರು. ಮುಸ್ಲಿಮರ ಆರ್ಥಿಕ ಮೂಲಗಳನ್ನು ಧ್ವಂಸಗೊಳಿಸುವುದು ಅವರ ಪಿತೂರಿಯಾಗಿತ್ತು. ಈ ದಾಳಿಕೋರರನ್ನು ಬೆನ್ನಟ್ಟಿ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹಾಗೂ ಸಹಚರರು ಬದ್ರ್ ಗೆ ಸಮೀಪದ ಸಪ್ ವಾನ್ ಕಣಿವೆಯವರೆಗೂ ಹೋದರೂ, ಕುರ್ ಸ್ ಪರಾರಿಯಾಗುವಲ್ಲಿ ಯಶಸ್ವಿಯಾದನು. ಈ ವೇಳೆ ಅಲಿ ರ.ಅ ರವರು ಅವರ ಪತಾಕೆ ಹಿಡಿದಿದ್ದರು. ಝೈದುಬುನು ಹಾರಿಸ್ ರನ್ನು ಮದೀನದ ಪ್ರತಿನಿಧಿಯಾಗಿ ನೇಮಿಸಿದ್ದರು. ಬದ್ರ್ ನ ಸಮೀಪದವರೆಗೂ ಹೋಗಿ ಹಿಂದಿರುಗಿ ಬಂದಿದ್ದರಿಂದ ಈ ಗಸ್ ವತ್ ಗೆ ಬದ್ರುಲ್ ಊಲಾ (ಪ್ರಥಮ ಬದ್ ರ್) ಎಂಬ ಹೆಸರು ಬಂತು..
"ಸರಿಯ್ಯತುನ್ನಖ್ ಲ (ಸರಿಯ್ಯತು ಅಬ್ದುಲ್ಲಾ ಹಿಬ್ನು ಜಹ್ ಶ್ ರ.ಅ)"
ಹಿಜರಿ ಎರಡನೇ ವರ್ಷದ ಜಮಾದುಲ್ ಆಖರ್ ಹಾಗೂ ಶಅ್ ಬಾನ್ ನ ನಡುವಿನ ಒಂದು ಸಂದರ್ಭ. ಸಅದ್ ಬುನು ಅಬೀವಖಾಸ್ ಹೇಳುತ್ತಾರೆ. "ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಒಂದು ಸೈನಿಕ ಕಾರ್ಯಾಚರಣೆಗೆ ನಮ್ಮನ್ನು ನಿಯೋಜಿಸಿದ್ದರು. ಈ ವೇಳೆ ಅವರು, ನಿಮ್ಮ ನಡುವೆ ಹಸಿವು, ದಾಹವನ್ನು ಅತ್ಯಧಿಕವಾಗಿ ಸಹಿಸಿಕೊಳ್ಳುವ ಸಾಮರ್ಥ್ಯವಿರುವ ಒಬ್ಬನನ್ನು ನಿಮ್ಮ ನಾಯಕನನ್ನಾಗಿ ನಿಯೋಜಿಸಿದ್ದೇನೆ.."ಎಂದಿದ್ದರು. ಹೀಗೆ ಅಬ್ದುಲ್ಲಾ ಹಿಬ್ನು ಜಹ್ ಶ್ ರ.ಅ ರನ್ನು ನಮ್ಮ ನಾಯಕನಾಗಿ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ನಿಯೋಜಿಸಿದರು.. " ಅಮೀರುಲ್ ಮುಅ್ ಮಿನೀನ್.. ಸತ್ಯ ವಿಶ್ವಾಸಿಗಳ ನಾಯಕ" ಎಂದು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಅಬ್ದುಲ್ಲಾ ರನ್ನು ಕರೆದರು. ಇಸ್ಲಾಮಿಕ್ ಚರಿತ್ರೆಯಲ್ಲಿ ಮೊಟ್ಟ ಮೊದಲ ಬಾರಿಗೆ ಅಮೀರುಲ್ ಮುಅ್ ಮಿನೀನ್ ಎಂಬ ಪದವಿ ನಾಮ ಲಬಿಸಿರುವುದು ಅಬ್ದುಲ್ಲಾ ಹಿಬ್ನು ಜಹ್ ಶ್ ರ.ಅ ರವರಿಗಾಗಿತ್ತು..
ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಪ್ರತಿನಿಧಿ (ಖಲೀಫರಲ್ಲಿ) ಮೊತ್ತ ಮೊದಲು ಅಮೀರುಲ್ ಮುಅ್ ಮಿನೀನ್ ಎಂದು ಕರೆಯಲ್ಪಟ್ಟವರು ಉಮರುಬ್ನುಲ್ ಖತ್ತಾಬ್ ರವರಾಗಿದ್ದರು.
ಅಬ್ದುಲ್ಲಾ ಹಿಬ್ನು ಜಹ್ ಶ್ ರ.ಅ ಹೇಳುತ್ತಾರೆ.. ಒಂದು ರಾತ್ರಿ ಇಶಾ ನಮಾಝ್ ಮುಗಿದ ಮೇಲೆ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ನನ್ನನ್ನು ಕಳೆದರು.. "ಪ್ರಭಾತವಾಗುತ್ತಿದ್ದಂತೆ ನೀನು ಬರಬೇಕು. ಜೊತೆಗೆ ಆಯುಧವೂ ಇರಲಿ.. ಇನ್ ಷಾ ಅಲ್ಲಾಹ್ ! ನಿನ್ನದೊಂದು ದೌತ್ಯಕ್ಕೆ ನಾನು ನಿಯೋಜಿಸಿರುವೆನು.." ಎಂದು ನನ್ನೊಂದಿಗೆ ಹೇಳಿದರು..
ಪ್ರಭಾವವಾಗುತ್ತಿದ್ದಂತೆ ನಾನು ಎದ್ದು ಹೋದೆ..ಜೊತೆಗೆ ಖಡ್ಗ ಬಿಲ್ಲು ಬಾಣಂಗಳಿದ್ದವು.. ಪ್ರವಾದಿ (ಸ)ರು ಪ್ರಭಾತ ನಮಾಝ್ ನಿರ್ವಹಿಸಿ ಹೊರಟು ಹೋಗುವಾಗ ನಾನು ಬಾಗಿಲ ಬಳಿ ಅವರಿಗಾಗಿ ಕಾಯುತ್ತಾ ನಿಂತಿದ್ದೆ. ಸ್ವಹಾಬಿಗಳಲ್ಲಿ ಹಲವರು ಅಲ್ಲಿದ್ದರು. ಪ್ರವಾದಿ (ಸ) ರು ಉಬಯ್ಯುಬ್ನು ಕಅಬ್ (ರ.ಅ) ರನ್ನು ಕರೆದರು.. ಉಬಯ್ಯ ಅತ್ತ ಹೋದರು.. ಪತ್ರವೊಂದನ್ನು ಬರೆಯುವಂತೆ ಪ್ರವಾದಿ (ಸ) ರು ಅವರೊಂದಿಗೆ ಹೇಳಿದರು.. ನಂತರ ನನ್ನನ್ನು ಕರೆದರು. ನನ್ನ ಕೈಗೆ ಪತ್ರವನ್ನಿಟ್ಟು, "ಈ ಸಂಘದ ನಾಯಕನಾಗಿ ನಾನು ನಿನ್ನನ್ನು ನಿಶ್ಚಯಿಸಿರುವೆನು, ನೀನು ಹೊರಡು. ಎರಡು ರಾತ್ರಿಗಳನ್ನು ದಾಟಿದ ಬಳಿಕ ನೀನು ಈ ಪತ್ರವನ್ನು ತೆರೆದು ಓದಬೇಕು. ಬಳಿಕ ಅದರಲ್ಲಿರುವಂತೆ ಮುನ್ನಡೆ" ಎಂದರು...
ಯಾವ ಕಡೆಗೆ ಹೋಗಲಿ ಅಲ್ಲಾಹನ ದೂತರೇ..? ಅಬ್ದುಲ್ಲಾ ಕೇಳಿದರು.
"ರಕಿಯವನ್ನು ಗುರಿಯಾಗಿಸಿ ನಜ್ ದಿಯದತ್ತ ಹೋಗಿರಿ" ಪ್ರವಾದಿ (ಸ) ರು ಹೇಳಿದರು.
ಅಬ್ದುಲ್ಲಾ ಎರಡು ರಾತ್ರಿ ಸಂಚರಿಸಿದರು. ಇಬ್ನು ಳುಮೈರರ ಬಾವಿಯ ಬಳಿ ಮುಟ್ಟಿದಾಗ ಪತ್ರವನ್ನು ತೆರೆದು ಓದಿದರು.ಅದರ ಒಕ್ಕಣೆ ಹೀಗಿತ್ತು...
" ಅಲ್ಲಾಹನ ನಾಮದಲ್ಲಿ ಅವನ ಅನುಗ್ರಹದೊಂದಿಗೆ ಮುನ್ನಡೆ, ಸಹಚರರಲ್ಲಿ ಯಾರನ್ನೂ ನಿನ್ನನ್ನು ಅನುಸವರಿಸುವಂತೆ ಒತ್ತಾಯಿಸಬಾರದು.. ಸ್ವಇಚ್ಚೆಯಿಂದ ನಿನ್ನನ್ನು ಯಾರು ಹಿಂಬಾಲಿಸುತ್ತಾರೋ ಅವರೊಂದಿಗೆ ನನ್ನ ಆಜ್ಞಾನುಸಾರ ಮುನ್ನಡೆ, ಬತ್ವ್ ನ್ ನಖ್ಲಕ್ಕೆ ಹೋಗಿ ಅಲ್ಲಿರುವ ಖುರೈಷಿ ವರ್ತಕ ಸಂಘದ ಮೇಲೆ ಕಣ್ಣಿಡು.."
ಪತ್ರ ಓದಿ ಕೇಳಿಸಿದ ನಂತರ ಅಬ್ದುಲ್ಲಾಹಿಬ್ ನ್ ಜಹ್ ಶ್ ಸಹಯಾತ್ರಿಕರೊಂದಿಗೆ ಹೇಳಿದರು.
" ನಿಮ್ಮಲ್ಲಿ ಯಾರನ್ನೂ ನಾನು ಒತ್ತಾಯಿಸುವುದಿಲ್ಲ. ಹುತಾತ್ಮರಾಗಲು ಇಚ್ಚಿಸುವವರು ಅಲ್ಲಾಹನ ದೂತರ ಆಜ್ಞೆಯನುಸಾರ, ಯಾತ್ರೆಯನ್ನು ಮುಂದುವರಿಸಿ, ಹಿಂದಿರುಗಿ ಹೋಗಲು ಇಚ್ಚಿಸುವವರು ಈಗಲೇ ಹೊರಟು ಹೋಗಬಹುದು.."
ನಾವು ಅಲ್ಲಾಹನನ್ನು, ಅವನ ದೂತರನ್ನೂ, ತಮ್ಮನ್ನೂ ಅನುಸರಿಸುವವರಾಗಿದ್ದೇವೆ. ಅಲ್ಲಾಹನ ಅನುಗ್ರಹದೊಂದಿಗೆ ಅವನ ದೂತರು ಆಜ್ಞಾಪಿಸಿದ ಕಡೆಗೆ ಯಾತ್ರೆ ಮುಂದುವರಿಸಿ, ನಾವು ನಿಮ್ಮೊಂದಿಗಿರುತ್ತೇವೆ ಸಹ ಯಾತ್ರಿಕರಾದ ಸ್ವಹಾಬಿಗಳು ಹೇಳಿದರು...
ಆವರು ಬತ್ವ್ ನ್ ನಕ್ಲ ಮುಟ್ಟಿದರು.. ಖುರೈಷಿಗಳ ವರ್ತಕ ಸಂಘ ಅವರ ಕಣ್ಣಳತೆಯ ದೂರದಲ್ಲಿದ್ದವು. ಅಮ್ರಬು ನುಲ್ ಹಳ್ರಮಿ, ಹಕಮುಬ್ನು ಕೈಸಾನ್, ಉಸ್ಮಾನುಬುನು ಅಬ್ದಿಲ್ಲಾಹಿಲ್ ಮಕ್ ಸೂಮಿ ಮೊದಲಾದವರು ಖುರೈಷಿಗಳ ಸಂಘದಲ್ಲಿದ್ದರು..
ಮುಸ್ಲಿಮರನ್ನು ಕಂಡಾಗ ಖುರೈಷಿಗಳಿಗೆ ಭಯವಾದವು. ಅವರ ಭಯವನ್ನು ನೀಗಿಸಲು ಅಬ್ದುಲ್ಲಾ ಹಿಬ್ನು ಜಹ್ ಶ್ ಒಂದು ತಂತ್ರ ಪ್ರಯೋಗಿಸಿದರು. ತಮ್ಮ ಸಹಯಾತ್ರಿತರಲ್ಲೊಬ್ಬರಾದ ಉಕಾಸರನ್ನು ತಲೆ ಕೂದಲು ಬೋಳಿಸಿ, ಅವರ ಮುಂದೆ ಪ್ರತ್ಯಕ್ಷಗೊಳ್ಳುವಂತೆ ಹೇಳಿದರು..
" ಓಹೋ.. ಇವರು ಉಮ್ರಾ ಯಾತ್ರೆಗೆ ಹೊರಟಿರಬೇಕು. ಭಯಪಡಬೇಕಾದ ಅಗತ್ಯವಿಲ್ಲ" ಎಂದು ಕೂದಲು ಬೋಳಿಸಿದ ರೀತಿಯಲ್ಲಿ ಉಕಾಸರನ್ನು ಕಂಡಾಗ ಅವರು ಪರಸ್ಪರ ಮಾತಾಡಿಕೊಂಡರು. ತಮ್ಮ ಮೃಗಗಳನ್ನು ಮೇಯಲು ಬಿಟ್ಟರು. ಅಡುಗೆ ಸಿದ್ಧತೆಗಳಲ್ಲಿ ಮಗ್ನರಾದರು...
ಮುಂದೇನು ಮಾಡಬೇಕೆಂದರ ಕುರಿತು ಮುಸ್ಲಿಮರು ಸಮಾಲೋಚನೆಯಲ್ಲಿ ತೊಡಗಿಕೊಂಡರು. ಅಂದು ರಜಬ್ ಕೊನೆಯ ದಿನವಾಗಿತ್ತು. ಶಅಬಾನಿನ ಆರಂಭದ ದಿನವಾಗಿತ್ತು ಎಂಬ ಅಭಿಪ್ರಾಯವೂ ಇದೆ.. ರಜಬ್ ಯುದ್ದ ನಿಷಿದ್ಧ ಮಾಸವಾಗಿದೆ..
ಹೀಗೆಯೇ ಆಲೋಚಿಸುತ್ತಾ ಕೂತರೆ ಅವರು ಪವಿತ್ರ ಹರಮ್ (ಮಕ್ಕಾ) ಪ್ರವೇಶಿಸುತ್ತಾರೆ.. ಆ ಬಳಕ ನಮಗೇನೂ ಮಾಡಲಾಗುವುದಿಲ್ಲ. ಈಗ ಅವರನ್ನು ಎದುರಿಸುವಂತೆಯೂ ಇಲ್ಲ. ಇದು ಯುದ್ದ ನಿಷಿದ್ಧ ಮಾಸವಾಗಿದೆ. ಮುಸ್ಲಿಮ್ ಸಂಘದ ಒಬ್ಬರು ಅಭಿಪ್ರಾಯಪಟ್ಟರು.
"ಈ ದಿನ ಯುದ್ದ ಮಾಸದಲ್ಲೋ ಅಲ್ಲವೋ ಎಂದು ಖಚಿತವಲ್ಲ" ಇನ್ನೊಬ್ಬರು ಹೇಳಿದರು.
“ ಈ ದಿನ ಯುದ್ದ ನಿಷಿದ್ದ ಮಾಸದಲ್ಲೇ ಇದೆ ಎಂದು ಎಲ್ಲರಿಗೂ ತಿಳಿದಿದೆ, ನಿಮ್ಮ ಇಚ್ಚೆಯ ಪೂರೈಕೆಗಾಗಿ ಈ ದಿನದಲ್ಲಿ ನೀವು ಯುದ್ಧವನ್ನು ಅನುವದನೀಯಗೊಳಿಸಬಾರದು"ಮತ್ತೊಬ್ಬರು ಹೇಳಿದರು...
ಕೊನೆಗೆ ಖುರೈಷಿಗಳನ್ನು ಎದುರಿಸಲು ಅವರು ನಿರ್ಧರಿಸಿದರು. ವಾಖಿದುಬ್ನ್ ಅಬ್ದುಲ್ಲಾ ಗುರಿ ತಪ್ಪದ ಅಸ್ತ್ರ ವಿದ್ಯಾ ಪಾರಂಗತರು, ಅವರು ಮುಸ್ಲಿಮ್ ಸಂಘದಲ್ಲಿದ್ದರು. ಬಾಣ ಕೈಗೆತ್ತಿ, ಬಿಲ್ಲು ಸರಿ ಪಡಿಸಿ, ಅವರು ಅಮ್ರು ಬ್ನು ಹಳ್ರಮಿಯತ್ತ ಗುರಿಯಿಟ್ಟರು. ಅಮ್ರ್ ತಕ್ಷಣವೇ ನೆಲಕ್ಕೆ ಕುಸಿದು ಬಿದ್ದರು, ನಂತರ ಇತರ ಖುರೈಷಿಗಳ ಮೇಲೆ ಮುಸ್ಲಿಮರು ದಾಳಿ ನಡೆಸಿದರು. ಉಸ್ಮಾನುಬುನು ಅಬ್ದಿಲ್ಲಾ ಹಾಗೂ ಹಕಮುಬ್ನು ಕೈಸಾನ್ ಬಂಧನಕ್ಕೊಳಗಾದರು. ನೌಫಲ್ ತಪ್ಪಿಸಿಕೊಂಡರು...
ಖುರೈಷಿಗಳ ಒಂಟೆಗಳ ಗುಂಪನ್ನು ಮುಸ್ಲಿಮರು ವಶಪಡಿಸಿಕೊಂಡರು. ದ್ರಾಕ್ಷೆ, ಬಟ್ಟೆಬರೆಗಳು ಹಾಗೂ ಮದ್ಯ ಅವರ ಜೊತೆಗಿದ್ದ ಸರಕುಗಳಾಗಿದ್ದವು. ಖುರೈಷಿಗಳು ಅವುಗಳನ್ನು ತ್ವಾಇಫ್ ನಿಂದ ತಂದಿದ್ದರು.. ಅವರು ಪ್ರವಾದಿ (ಸ) ರ ಸಮಕ್ಷಮಕ್ಕೆ ತಲುಪಿದರು. ಪ್ರವಾದಿ (ಸ) ರು ಒಂಟೆಗಳನ್ನು ದೂರ ನಿಲ್ಲಿಸಿದರು. ಅವರ ಕೈಯಿಂದ ಏನನ್ನೂ ಅವರು ಸ್ವೀಕರಿಸಲಿಲ್ಲ. ಇಬ್ಬರು ಖೈದಿಗಳನ್ನು ಇತರ ಸುಪರ್ದಿಗೊಪ್ಪಿಸಿದರು..
"ಈ ಪವಿತ್ರ ಮಾಸದಲ್ಲಿ ನಾನು ನಿಮ್ಮೊಂದಿಗೆ ಯುದ್ಧ ಮಾಡುವಂತೆ ಆಜ್ಞಾಪಿಸಿದ್ದೇನೆಯೇ ಪ್ರವಾದಿ (ಸ) ರು ಪ್ರಶ್ನಿಸಿದರು. ಸ್ವಹಾಬಿಗಳು ಮಾತನಾಡಲಿಲ್ಲ. ಖುರೈಷಿ ವರ್ತಕ ಸಂಘದ ಮೇಲೆ ಕಣ್ಣಿಡುವಂತೆ ಪ್ರವಾದಿ (ಸ) ರು ಆಜ್ಞಾಪಿಸಿದ್ದರಷ್ಟೆ..
ಸ್ವಹಾಬಿಗಳಿಗೆ ನಿರಾಶೆಯಾದವು.. ಅವರು ಪಶ್ಚಾತಾಪದಿಂದ ಬೆಂದು ಹೋದರು. ಅವರನ್ನು ಇತರ ಮುಸ್ಲಿಮರು ಆಕ್ಷೇಪಿಸಿದರು. ಪ್ರವಾದಿ ಸ.ಅ ರ ಆಜ್ಞೆಯನ್ನು ಲಂಘಿಸಿದ್ದಕ್ಕೆ ಬೈದರು..
ಖುರೈಷಿಗಳು ಪ್ರವಾದಿ (ಸ) ರ ವಿರುದ್ಧ ಅಪಪ್ರಚಾರ ನಡೆಸತೊಡಗಿದರು.. ಮುಹಮ್ಮದ್ ಹಾಗೂ ಅನುಯಾಯಿಗಳು ಪವಿತ್ರ ಮಾಸದಲ್ಲಿ ಯುದ್ಧ ಮಾಡಿದ್ದಾರೆ.. ರಕ್ತ ಹರಿಸಿದ್ದಾರೆ.. ಸಂಪತ್ತುಗಳನ್ನು ಕೊಳ್ಳೆ ಹೊಡೆದಿದ್ದಾರೆ. ಎದುರಾಳಿಗಳನ್ನು ಬಂಧಿಸಿದ್ದಾರೆ.. ಮೊದಲಾದ ರೀತಿಯಲ್ಲಿ ಅವರು ಅಪಪ್ರಚಾರ ನಡೆಸಿದರು. ಈ ಘಟನೆ ಶಅಬಾನ್ ಮಾಸದಲ್ಲಿ ನಡೆದಿತ್ತಲ್ಲವೇ..? ಎಂದು ಮಕ್ಕಾದಲ್ಲಿದ್ದ ಮುಸ್ಲಿಮರು ಪ್ರಶ್ನಿಸಲಾರಂಭಿಸಿದರು. ರಜಬ್ ಮಾಸದಲ್ಲಿ ಮಾತ್ರ ಯುದ್ದ ನಿಷಿದ್ದ ಶಅ ಬಾನಿನಲ್ಲಲ್ಲ ಎಂಬುದು ಅವರ ವಾದವಾಗಿತ್ತು. ಈ ಸಮಸ್ಯೆಯಲ್ಲಿ ಯಹೂದಿಗಳು ಸಹ ಮಧ್ಯಪ್ರವೇಶಿಸಿದರು. ಹತ್ಯೆಯಾದ ಅಮ್ರ್ ಬಿನ್ನು ಲ್ ಹಳ್ರಮಿ, ಆತನತ್ತ ಬಾಣಬಿಟ್ಟ ವಾಖಿದಿಯವರ ಹೆಸರುಗಳನ್ನು ಮುಂದಿಟ್ಟು ಅವರು ಲಕ್ಷಣ ಹೇಳಲು ಆರಂಭಿಸಿದರು. ' "ಅಮ್ರ್; ಅಮರ್ ತ್ತಹ್ರಬ" (ಯುದ್ದವನ್ನು ಸೃಷ್ಟಿಸಿದರು)' "ಹಳ್ರಮಿ ಹಳರ್ತ್ತಲ್ ಹರ್‌ಬ" (ಯುದ್ಧದಲ್ಲಿ ಭಾಗವಹಿಸಿದರು), "ವಾಲಿದ್: ವಖದತ್ಲ್ ಹರ್ ಬ (ಯುದ್ದ ಜ್ವಲಿಸುವಂತೆ ಮಾಡಿದರು)" ಎಂಬಿತ್ಯಾದಿಯಾಗಿ ಯಹೂದಿಗಳು ಪ್ರವಚನಗಳನ್ನು ನಡೆಸಲಾರಂಭಿಸಿದರು...
ಜನರ ಆಕ್ಷೇಪಗಳು ಹೆಚ್ಚುತ್ತಿದ್ದಂತೆ ಮುಸ್ಲಿಮ್ ಸಂಘ ದುಃಖದಲ್ಲಿ ಮುಳುಗಿದವು. ಈ ಸಂದರ್ಭದಲ್ಲಿ ದಿವ್ಯವಚನವೊಂದು ಅವತೀರ್ಣಗೊಂಡವು...
“ಗೌರವಾನ್ವಿತ ಮಾಸದಲ್ಲಿ ಯುದ್ಧ ಮಾಡುವುದರ ಬಗ್ಗೆ ಜನರು ನಿಮ್ಮೊಡನೆ ಕೇಳುತ್ತಾರೆ. ಹೇಳಿರಿ: ಅದರಲ್ಲಿ ಯುದ್ಧ ಮಾಡುವುದು ಮಹಾಪರಾಧವಾಗಿದೆ, ಆದರೆ ಜನರನ್ನು ಅಲ್ಲಾಹನ ಮಾರ್ಗದಿಂದ ತಡೆಯುವುದೂ, ಅಲ್ಲಾಹನನ್ನು ನಿಷೇಧಿಸುವುದೂ, "ಮಸ್ಜಿದುಲ್ ಹರಾಮ್" ನ ಹಕ್ಕುದಾರರನ್ನು ಅದರೊಳಗೆ ಪ್ರವೇಶಿಸದಂತೆ ತಡೆಯುವುದು, ಹರಮ್ (ಕಅಬಾದ ಪರಿಸರ) ನೊಳಗಿರುವವರನ್ನು ಅಲ್ಲಿಂದ ಹೊರಕ್ಕೆ ಅಟ್ಟುವುದೂ ಅಲ್ಲಾಹನ ದೃಷ್ಟಿಯಲ್ಲಿ ಅದಕ್ಕಿಂತಲೂ ಘೋರ ಅಪರಾಧವಾಗಿರುತ್ತದೆ. ಮತ್ತು ಕ್ಷೋಭೆ ರಕ್ತಪಾತಕ್ಕಿಂತಲೂ ಮಹಾಪರಾಧವಾಗಿರುತ್ತದೆ. ಅವರಂತು ನಿಮ್ಮೊಂದಿಗೆ ಯುದ್ಧ ಮಾಡುತ್ತಲೇ ಇರುವರು. ಅವರು ಸಾಧ್ಯವಾದರೆ ನಿಮ್ಮನ್ನು ನಿಮ್ಮ ಧರ್ಮದಿಂದ ಮರಳಿಸಿ ಕೊಂಡೊಯ್ಯುವರು. ನಿಮ್ಮಲ್ಲಿ ಯಾವನಾದರೂ ಧರ್ಮದಿಂದ ವಿಮುಖನಾದರೆ ಅವಿಶ್ವಾಸಾವಸ್ಥೆಯಲ್ಲಿ ಪ್ರಾಣ ಬಿಟ್ಟರೆ, ಅವನ ಕರ್ಮಗಳು ಇಹಪರಗಳೆರಡರಲ್ಲೂ ವ್ಯರ್ಥವಾಗಿ ಹೋಗುವವು. ಇಂತಹವರೆಲ್ಲರೂ ನರಕವಾಸಿಗಳು ಮತ್ತು ಅವರು ಚಿರಕಾಲ ನರಕದಲ್ಲೇ ಉಳಿಯುವರು.. (ಖುರ್‌ಆನ್-2:217)
ಈ ಖುರ್‌ಆನ್ ವಾಕ್ಯಗಳು ದುಃಖಿತ ಮುಸ್ಲಿಮರಿಗೆ ಸಾಂತ್ವನ ಹೇಳಿದವು. ಖೈದಿಗಳನ್ನು ಹಾಗೂ ಒಂಟೆಗಳನ್ನು ಪ್ರವಾದಿ ಸ.ಅ ರು ಸ್ವೀಕರಿಸಿದರು. ಖೈದಿಗಳ ಬಿಡುಗಡೆಯನ್ನು ಆಗ್ರಹಿಸಿ ಖುರೈಷಿಗಳು ತಮ್ಮ ಪ್ರತಿನಿಧಿಗಳನ್ನು ಕಳುಹಿಸಿದರು. ಆದರೆ, ಮುಸ್ಲಿಮ್ ಸಂಘದಲ್ಲಿದ್ದ ಸಅದ್ ಬುನು ಅಬೀವಖಾಸ್ ಹಾಗೂ ಉತ್ಬತುಬ್ನು ಗಝ್ವಾನ್ ಇನ್ನೂ ತಲುಪಿರಲಿಲ್ಲ. ಅವರು ಸರದಿ ಪ್ರಕಾರ ಸವಾರಿ ಮಾಡುತ್ತಿದ್ದ ಒಂಟೆ ಮದೀನಕ್ಕೆ ಮರಳುವ ಹಾದಿಯಲ್ಲಿ ಕಾಣೆಯಾಗಿತ್ತು. ಅದನ್ನು ಹುಡುಕಿಕೊಂಡು ಅವರು ಹೋಗಿದ್ದ ಅವರು ಹಿಂದಿರುಗಲು ತಡವಾಗಿತ್ತು....
ಪ್ರವಾದಿ ಸ.ಅ ರು ಖುರೈಷಿ ಪ್ರತಿನಿಧಿಗಳೊಂದಿಗೆ ಹೇಳಿದರು. "ನಮ್ಮ ಇಬ್ಬರು ಪ್ರತಿನಿಧಿಗಳು ಹಿಂದಿರುಗುವವರೆಗೂ ಖೈದಿಗಳನ್ನು ಬಿಡುಗಡೆಗೊಳಿಸುವುದಿಲ್ಲ. ನೀವು ನಮ್ಮವರಿಗೆ ತೊಂದರೆಯುಂಟು ಮಾಡುವರೆಂದು ನಾವು ಭಯಪಡುತ್ತೇವೆ.. ಅವರನ್ನು ನೀವು ಕೊಂದರೆ ಇವರನ್ನು ಸಹ ನಾವು ಕೊಲ್ಲುವೆವು...
ಸಆದ್ ಹಾಗೂ ಉತ್ಬ ಹಿಂದಿರುಗಿದರು. ಪ್ರವಾದಿ (ಸ)ಖೈದಿಗಳನ್ನು ಬಿಡುಗಡೆಗೊಳಿಸಿದರು. ಅವರಲ್ಲಿ ಹಕಮುಬ್ನು ಕೈಸಾನ್ ಇಸ್ಲಾಮ್ ಸ್ವೀಕರಿಸಿದರು. ಪ್ರವಾದಿ (ಸ) ಯ ಜೊತೆಗೆ ವಾಸಿಸಲು ನಿರ್ಧರಿಸಿದರು. ಉತ್ತಮ ಜೀವನವನ್ನು ನಡೆಸಿದರು. ನಂತರ ಬಿಅ್ ರ ಮಊನ ಘಟನೆಯಲ್ಲಿ ಅವರು ಹುತಾತ್ಮರಾದರು. ಉಸ್ಮಾನುಬುನು ಅಬ್ದುಲ್ಲಾ ಮಕ್ಕಾಕೆ ಹಿಂದಿರುಗಿದರು.. ಅವಿಶ್ವಾಸಿಯಾಗಿಯೇ ಮರಣ ಹೊಂದಿದರು. ಖುರ್ ಆನ್ ವಾಕ್ಯದ (2:217) ಪ್ರಕಾರ, ಯುದ್ದದಲ್ಲಿ ಏರ್ಪಟ್ಟ ಮುಸ್ಲಿಮು ಸಂಘಗಳು ನಿರಪರಾಧಿಗಳಾದರೂ, ಅದನ್ನು ಪ್ರತಿಫಲಕ್ಕೆ ಅರ್ಹರೋ ಎಂಬ ಶಂಕೆ ಉಳಿದವು. ತಮ್ಮ ಸಂಶಯವನ್ನು ಅವರು ಪ್ರವಾದಿ (ಸ) ಯೊಂದಿಗೆ ಕೇಳಿದರು. ಧರ್ಮ ಯುದ್ದದಲ್ಲಿ ಭಾಗವಹಿಸಿಧವರಿಗೆ ಲಭಿಸುವ ಪ್ರತಿಫಲ ನಮಗೆ ಲಭಿಸುತ್ತದೆಯೇ..? ಆಗ ಖುರ್‌ಆನ್ ವಚನ ಅವತೀರ್ಣಗೊಂಡವು..
ನಿಶ್ಚಯವಾಗಿಯೂ ಸತ್ಯವಿಶ್ವಾಸವನ್ನು ಒಳಗೊಂಡು, ಪಲಾಯನಕ್ಕೆ ವಿಧೇಯರಾಗಿ, ಅಲ್ಲಾಹನ ಮಾರ್ಗದಲ್ಲಿ ಜಿಹಾದ್ ನಡೆಸಿದವರು. ಆ ವಿಭಾಗವು ಅಲ್ಲಾಹನ ಕರುಣೆಯನ್ನು ನಿರೀಕ್ಷಿಸುವವರಾಗಿರುತ್ತಾರೆ.. ಅಲ್ಲಾಹನು ಕ್ಷಮಿಸುವವನೂ, ತನ್ನ ಕರುಣೆಯಿಂದ ಅವರನ್ನು ಅನುಗ್ರಹಿಸುವವನೂ ಆಗಿರುತ್ತಾನೆ..(ಖುರ್‌ಆನ್- 2:218)
ಮುಸ್ಲಿಮರು ಹಾಗೂ ಮುಶ್ರಿಕರ ನಡುವಿನ ಸಂಘರ್ಷದಲ್ಲಿ ಮುಸ್ಲಿಮರ ಕೈಯಿಂದ ಮೊತ್ತ ಮೊದಲು ವಧಿಸಲ್ಪಟ್ಟವನೇ ಅಮ್ರಬು ನುಲ್ ಹಳ್ರಮಿ, ಹಕಮು ಹಾಗೂ ಉಸ್ಮಾನ್ ಪ್ರಪ್ರಥಮ ಖೈದಿಗಳು. ಈ ಸರಿಯ್ಯತುನಲ್ಲಿ ಗಳಿಸಿದ ಸಂಪತ್ತುಗಳೇ ಇಸ್ಲಾಮಿಕ್ ಇತಿಹಾಸದ ಮೊತ್ತ ಮೊದಲ ಗನೀಮತ್ (ಯುದ್ಧ ಸಂಪತ್ತು)..
ಪವಿತ್ರ ಭೂಮಿಯಲ್ಲಿರುವ ಎರಡು ಶಕ್ತಿಗಳ ನಡುವಿನ ಸೈನಿಕ ಕಾರ್ಯಾಚರಣೆಗಳು ರೂಕ್ಷವಾದ ಒಂದು ಹೋರಾಟದೆಡೆಗೆ ಅವರನ್ನು ಮುನ್ನಡೆಸುತ್ತಿದ್ದವು.. ಸಂಘರ್ಷಗಳಿಂದ ಹೊರಹೊಮ್ಮುತ್ತಿದ್ದ ಅಗ್ನಿ ಜ್ವಾಲೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದವು. ಇಸ್ಲಾಮಿನ ಬೆಳಕು ಹಾಗೂ ಕುಫ್ ರನ ಕತ್ತಲು ಮುಖಾಮುಖಿಗೊಳ್ಳುವ ಸಾಧ್ಯತೆ ನಿಚ್ಚಳಗೊಳ್ಳುತ್ತಿದೆ. ಶಿಕ್೯ಗಳನ್ನು ಮೂಲೋತ್ಪಾಟನೆ ಮಾಡಿ, ಅರೇಬಿಯಾವನ್ನು ಶುದ್ದೀಕರಿಸುವುದು ಕಾಲದ ತುರ್ತಾಗಿತ್ತು. ಮದೀನದಲ್ಲಿರುವ ಇಸ್ಲಾಮಿಕ್ ಸಮೂಹದ ಭದ್ರತೆ ಯಾವ ಸಂದರ್ಭದಲ್ಲಿ ಬೇಕಾದರೂ ಅಪಾಯಕ್ಕೀಡಾಗಬಹುದು. ಆದ್ದರಿಂದ ಅದನ್ನು ತಡೆಯುವುದು ಅಗತ್ಯವಾಗಿದೆ. ಮಕ್ಕಾದಲ್ಲಿ ಉಳಿದಿರುವ ಮುಸ್ಲಿಮರು ಈಗಲೂ ಕಿರುಕುಳವನ್ನು ಅನುಭವಿಸುತ್ತಿದ್ದಾರೆ. ಮುಸ್ಲಿಮರು ಅನಿವಾರ್ಯ ಕಾರಣಗಳಿಂದ ಬಿಟ್ಟು ಬಂದ ಸಂಪತ್ತುಗಳನ್ನು ವಶಪಡಿಸಿಕೊಂಡಿರುವ ಖುರೈಷಿಗಳು ಅದನ್ನು ತಮ್ಮ ಶಕ್ತಿ ವರ್ಧನೆಗೆ ಬಳಸಿಕೊಳ್ಳುತ್ತಿದ್ದಾರೆ. ಅದನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಹಿಂದಕ್ಕೆ ಪಡೆಯುವ ಉದ್ದೇಶದಿಂದ ಮುಸ್ಲಿಮರು ಖರೈಷಿ ವ್ಯಾಪಾರಿಗಳನ್ನು ಗುರಿಯಾಗಿ ಕಾರ್ಯಾಚರಣೆ ಮಾಡುತ್ತಿದ್ದಾರೆ.
ಅಧ್ಯಾಯ-10
"ಬದ್ರನತ್ತ ಮುಸ್ಲಿಮರು"
ಶಾಮ್ ನತ್ತ ಹೊರಟಿದ್ದ ಖುರೈಷಿ ಖಾಫಿಲವನ್ನು ತಡೆಯುವ ಉದ್ದೇಶದೊಂದಿಗೆ ಪ್ರವಾದಿ (ಸ) ರು ಹಾಗೂ ಸ್ವಹಾಬಿಗಳು ಉಸೈರದತ್ತ ಹೋಗಿದ್ದರೂ, ಮುಸ್ಲಿಮರು ಹೋಗಿ ಮುಟ್ಟುವ ಮೊದಲೇ ಖಾಫಿಲ ಆ ಪ್ರದೇಶವನ್ನು ದಾಟಿ ಹೋಗಿತ್ತು ಎಂದು ಹಿಂದಿನ ಅಧ್ಯಾಯದಲ್ಲಿ ಹೇಳಿದ್ದೆ. ಖುರೈಷಿ ವ್ಯಾಪಾರಿಗಳು ಮರಳಿ ಬರುವುದನ್ನೇ ಪ್ರವಾದಿ (ಸ) ರು ನಿತಾಂತ ಎಚ್ಚರಿಕೆಯೊಂದಿಗೆ ಕಾಯುತ್ತಿದ್ದರು.. ರಹಸ್ಯ ಗೂಢಾಚಾರಿಕೆಯ ಮೂಲಕ ಖುರೈಷಿ ವ್ಯಾಪಾರಿಗಳ ಮಾಹಿತಿಯನ್ನು ಕಲೆಹಾಕುವಂತೆ ಆಜ್ಞಾಪಿಸಿ ಬಸ್ ಬಸ್ಬ್ ನು ಅಂರಿಲ್ ಜುಹೈನಿ, ಅದಿಯ್ಯುಬ್ನು ಅಬುಸ್ಸಅ್ ಬಾಅ್ ಮೊದಲಾದವರನ್ನು ನೇಮಿಸಿದ್ದರು. ವ್ಯಾಪಾರಿ ಸರಕುಗಳೊಂದಿಗೆ ಸರಿಸುಮಾರು ಸಾವಿರ ಒಂಟೆಗಳನ್ನೊಳಗೊಂಡ ಬೃಹತ್ ಖಾಫಿಲವೊಂದು ಹೊರಟಿದ್ದು, ಮೂವತ್ತೋ ನಲ್ವತ್ತೋ ಅಥವಾ ಎಪ್ಪತ್ತೊ ಮಂದಿಯನ್ನು ಖಾಫಿಲದ ಕಾವಲಿಗೆ ನೇಮಿಸಲಾಗಿದೆ ಎಂಬ ಮಹತ್ವದ ಸುದ್ದಿ ಲಭ್ಯವಾದವು... ಅಬೂಸುಫಿಯಾನ್‌ರ ನೇತೃತ್ವದ ಖಾಫಿಲದಲ್ಲಿ ಮಖ್ ರೂಮತ್ ಬಿನ್ ನೌಫಲ್, ಆಮ್ರ್ ಬುನುಲ್ ಆಸ್ ಮೊದಲಾದ ಘಟಾನುಘಟಿಗಳಿದ್ದಾರೆಂಬ ಸುದ್ದಿಯನ್ನು ಗೂಢಾಚಾರರು ತಿಳಿಸಿದರು...
ಮುಸ್ಲಿಮರು ಬಹಳ ನಿರೀಕ್ಷೆಯೊಂದಿಗೆ ಕಾಯುತ್ತಿದ್ದ ಕ್ಷಣಗಳದು. ತಮ್ಮನ್ನು ತಮ್ಮ ಹುಟ್ಟೂರು ತೊರೆಯುವಂತೆ ಮಾಡಿದ, ತಮ್ಮ ಮನೆ, ತೋಟ, ವ್ಯಾಪಾರ ಹಾಗೂ ಸಂಪತ್ತುಗಳನ್ನೆಲ್ಲಾ ವಶಪಡಿಸಿಕೊಂಡು, ಆ ಮೂಲಕ ತಮ್ಮ ಶಕ್ತಿ ಹೆಚ್ಚಿಸಿಕೊಳ್ಳುತ್ತಿರುವ ಖುರೈಷಿಗಳನ್ನು ತಡೆಯದಿರುವುದು ಸಾಧ್ಯವಿಲ್ಲ. ಅದು ನಮ್ಮ ಅಸ್ತಿತ್ವಕ್ಕೆ ಧಕ್ಕೆಯಾಗಬಹುದು. ಅದೊಂದು ಕೇವಲ ಸಂಪತ್ತು ಲೂಟಿ ಹೊಡೆಯುವ ಯೋಜನೆಯಾಗಿರಲಿಲ್ಲ. ಬದಲಾಗಿ ಎಲ್ಲಾ ದೈವಿಕ ನೀತಿ ನಿಯಮಗಳು, ರಾಷ್ಟ್ರ ರಾಜಕೀಯ ನಿಯಮಗಳು, ಸಂಪ್ರದಾಯಗಳು ಅನುಮತಿ ನೀಡುವ ಒಂದು ಸೈನಿಕ ತಂತ್ರವಷ್ಟೆ. ಅನ್ಯಾಯವಾಗಿ ತಮ್ಮ ಮೇಲೆ ದಾಳಿ ನಡೆಸುವ ಶತ್ರುವಿನ ಸಾಂಪತಿಕ ಶಕ್ತಿ ಕ್ಷಯಿಸುವಂತೆ ಮಾಡುವುದು, ಆತನ ಶಕ್ತಿಮೂಲಗಳನ್ನು ತಡೆಯುವುದು ಆಧುನಿಕ ಕಾಲದಲ್ಲಿ ಸಹಜವಾಗಿದೆ. ಮುಸ್ಲಿಮರ ಈ ಕಾರ್ಯಾಚರಣೆ ಅದನ್ನು ಸಹ ಮಾಡಿರಲಿಲ್ಲ. ಖುರೈಷಿಗಳು ವಶಪಡಿಸಿಕೊಂಡಿರುವ ತಮ್ಮ ಸಂಪತ್ತುಗಳಿಗೆ ನಷ್ಟಪರಿಹಾರವು ಪಡೆಯುವ ಪ್ರಯತ್ನವನ್ನಷ್ಟೇ ಅವರು ಮಾಡಿದರು.. ಪ್ರವಾದಿ (ಸ) ರು ಅನುಯಾಯಿಗಳನ್ನು ಕರೆದರು. ಖಾಫಿಲ ಹಿಂದಿರುಗಿ ಬರುತ್ತಿರುವ ಸುದ್ದಿ ಮುಟ್ಟಿಸಿದರು. '
"ಖುರೈಷಿಗಳ ಖಾಫಿಲ ಹಿಂದಿರುಗಿ ಬರುತ್ತಿದೆ. ಅದರಲ್ಲಿ ಅವರ ಸಂಪತ್ತುಗಳಿವೆ. ನೀವು ಹೊರಡಿರಿ. ಅಲ್ಲಾಹನು ಅವುಗಳನ್ನು ನಿಮಗೆ ಗನೀಮತ್ತಾಗಿ ನೀಡಬಹುದು.." ಪ್ರವಾದಿ ಸ.ಅ ರು ಘೋಷಿಸಿದರು. ಮುಸ್ಲಿಮರು ಪ್ರವಾದಿ ಸ.ಅ ರ ಮಾತನ್ನು ಶಿರಸಾವಹಿಸಿ ಪಾಲಿಸಿದರು. ಕೆಲವರು ದೂರ ನಿಂತರು. ಕಾರಣ, ಖಾಫಿಲವನ್ನು ತಡೆಯುವುದು ಮಾತ್ರ ಉದ್ದೇಶ. ಯುದ್ಧ ಅವರ ಉದ್ದೇಶವಾಗಿರಲಿಲ್ಲ.. ಯುದ್ಧಕ್ಕೆ ಬೇಕಾದ ಸಿದ್ಧತೆಗಳನ್ನೂ ಸಹ ಪ್ರವಾದಿ ಸ.ಅ ನಡೆಸಿರಲಿಲ್ಲ. ವಾಹನ ಸಿದ್ದಗೊಂಡವರೊಂದಿಗೆ ಹೊರಡುವಂತೆ ಸೂಚಿಸಿದರು. ಮದೀನದ ಹೊರಗೆ ವಾಹನಗಳಿರುವವರು ಅದು ತಲುಪುವವರೆಗೆ ಸಮಯಾವಕಾಶ ನೀಡುವಂತೆ ಕೇಳಿಕೊಂಡರು. ವಾಹನ ಸಿದ್ದಗೊಂಡಿರುವವರು ಮಾತ್ರ ಬಂದರೆ ಸಾಕೆಂದು ಪ್ರವಾದಿ (ಸ) ರು ಅವರೊಂದಿಗೆ ಹೇಳಿದರು. ಉಸೈರಿ: ಕಾರ್ಯಾಚರಣೆಯ ವೇಳೆ ಖಾಫೀಲ ತಾವು ತಲುಪುವುದಕ್ಕೂ ಮೊದಲೇ ದಾಟಿ ಹೋದಂತೆ ಈ ಬಾರಿಯೂ ಅದು ಮರುಕಳಿಸಲು ಅವಕಾಶ ನೀಡಬಾರದು ಎಂದು ಪ್ರವಾದಿ (ಸ) ಅವರನ್ನು ಎಚ್ಚರಿಸಿದರು. ಹೆಚ್ಚೆಂದರೆ ಎಪ್ಪತ್ತು ಮಂದಿ ಕಾವಲುಗಾರರನ್ನೊಳಗೊಂಡ ಒಂದು ಖಾಫಿಲವನ್ನು ಎದುರಿಸಲು ಹೋಗುತ್ತಿದ್ದುದರಿಂದ ಈ ಕಾರ್ಯಾಚರಣೆಯಿಂದ ಅನಿವಾರ್ಯವಾಗಿ ದೂರ ನಿಂತವರಿಗೆ ರಿಯಾಯಿತಿಯಿದ್ದವು...
ಹಿಜ್ರ ಎರಡನೇ ವರ್ಷ ರಮಳಾನ್ ಮಾಸ (24 ಜನವರಿ) ಎಂಟು ಮತ್ತು ಹನ್ನೆರಡರ ನಡುವಿನ ಒಂದು ದಿನ ಮುಸ್ಲಿಮರು ಮದೀನದಿಂದ ಹೊರಟರು. ಮದೀನದ ಹೊರಗಡೆ ಒಂದು ಮೈಲಿ ದೂರದಲ್ಲಿದ್ದ ಬಿಅ್ ರು ಅಬೀಅತಬ ಎಂಬ ಬಾವಿಯ ಸಮೀಪದಲ್ಲಿ ಮುಸ್ಲಿಮರು ಕ್ಯಾಂಪ್ ಮಾಡಿದರು. ಪ್ರವಾದಿ (ಸ) ರು ಅನುಯಾಯಿಗಳನ್ನು ಸಂಶೋಧಿಸಿದರು. ಸಂಸ್ಥೆ ಸರಿಯಾಗಿತ್ತು. ಯಾರೂ ಮಿಸ್ ಆಗಿಲ್ಲವೆಂದು ಖಚಿತಪಡಿಸಿಕೊಂಡರು. ಸೈನಿಕ ಕಾರ್ಯಾಚರಣೆಗೆ ಯೋಗ್ಯರಲ್ಲದ ಅಪ್ರಾಪ್ತರನ್ನು ಹಾಗೂ ದೀರ್ಘಯಾತ್ರೆ ಮಾಡಲು ಸಾಧ್ಯವಿಲ್ಲದ ರೋಗಿಗಳನ್ನು ಹಿಂದಕ್ಕೆ ಕಳುಹಿಸಿದರು. ಅಬ್ದುಲ್ಲಾಹಿ ಬಿನ್ ಉಸಾಮತುಬುನು ಝೈದ್,ರಾಫಿಉಬುನು ಖದೀಜ್, ಜರಾಉಬುನು ಆಸಿಬ್, ಉಸೈದುಬುನು ಹುಳೈರ್, ಝೈದುಬುನು ಅರ್ಕಮ್, ಝೈದುಬುನು ಸಾಬಿತ್ಕೊ ಮೊದಲಾದವರನ್ನು ಪ್ರವಾದಿ (ಸ) ರು ಹಿಂದಕ್ಕೆ ಕಳುಹಿಸಿದ್ದರು. ಹದಿನೈದೋ ಹದಿನಾರೂ ಪ್ರಾಯದ ಉಮರುಬ್ನು ಅಬಿವಖಾಶ್ ರೊಂದಿಗೆ ಪ್ರವಾದಿ (ಸ) ಹಿಂದಿರುಗಿ ಹೋಗುವಂತೆ ಹೇಳಿದಾಗ ಆ ಬಾಲಕ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದರು. ಸೈನಿಕ ಕಾರ್ಯಾಚರಣೆಯಲ್ಲಿ ಭಾಗವಹಿಸಲು ಉಮೈರ್ ಗೆ ಅಷ್ಟರಮಟ್ಟಿಗೆ ಆಸಕ್ತಿ ಹಾಗೂ ಆಸೆಯಿದ್ದವು. ಪ್ರವಾದಿ (ಸ) ಒಪ್ಪಿಗೆ ನೀಡಿದರು.
ಬದ್ರ್ ಗೆ ಪ್ರವಾದಿ (ಸ) ಹೊರಡುವಾಗ ನೌಫಲ್ರ ಪುತ್ರಿ ಉಮ್ಮು ವರಖತ್ ಪ್ರವಾದಿ (ಸ) ಯನ್ನು ಭೇಟಿಯಾಗಿ ಹೇಳಿದರು.. ಅಲ್ಲಾಹನ ದೂತರೇ , ತಮ್ಮೊಂದಿಗೆ ಬರಲು ನನಗೆ ಅನುಮತಿ ನೀಡಿರಿ. ನಾನು ರೋಗಿಗಳ ಶುಶ್ರೂಷೆ ಮಾಡುತ್ತೇನೆ, ಅಲ್ಲಾಹನು ನನಗೂ ಹುತಾತ್ಮಳಾಗುವ ಭಾಗ್ಯ ಕರುಣಿಸಲಿ ”..
ಪ್ರವಾದಿ (ಸ) ಹೇಳಿದರು.. "ನೀನು ನಿನ್ನ ಮನೆಯಲ್ಲೇ ಇರು, ಖಂಡಿತ ಅಲ್ಲಾಹನು ನಿನಗೂ ಹುತಾತ್ಮ ಪ್ರತಿಫಲ ನೀಡುವನು" ಉಮ್ಮುವಖತ್ ಖುರ್ ಆನ್ ಪಾರಾಯಣ ಮಾಡುತ್ತಾ ಮನೆಯಲ್ಲೇ ಉಳಿದರು. ಪ್ರವಾದಿ (ಸ) ಅವರನ್ನು ಭೇಟಿಯಾಗಿ, ಹುತಾತ್ಮಳೆಂದು ಹೇಳಿದರು. ಜನರು ಸಹ ಅವರನ್ನು ಹುತಾತ್ಮರೆಂದು ಕರೆಯುತ್ತಿದ್ದರು.. ಉಮರ್ (ರ) ರ ಆಡಳಿತಾವಧಿಯಲ್ಲಿ ಸೇವಕ ಸೇವಕಿಯವರಿಬ್ಬರು ಸೇರಿ ಆವರನ್ನು ಕೊಲೆ ಮಾಡಿದರು. ಕೊಲೆಗಾರರಿಗೆ ಉಮರ್ (ರ) ಮರಣ ದಂಡನೆ ವಿಧಿಸಿದರು.. (ಅಸ್ಸಿರತುಲ್ ಹಲಬಿಯ್ಯ: 2: 152 ,153)
"ಒಂದು ಕನಸು ಸೃಷ್ಟಿಸಿದ ಕೋಲಾಹಲ"
ಈ ವೇಳೆ ಮಕ್ಕಾದಲ್ಲಿ ಒಂದು ಘಟನೆ ನಡೆಯಿತು. ಪ್ರವಾದಿ (ಸ) ರ ಚಿಕ್ಕಮ್ಮ ಆತ್ವಿಕ ಬಿಂತು ಅಬ್ದುಲ್ ಮುತ್ತಲಿಬರು ದುಸ್ವಪ್ನವೊಂದನ್ನು ಕಂಡರು. ಬೆಳಕು ಹರಿಯುತ್ತಿದ್ದಂತೆ ಅವರು ಸಹೋದರ ಅಬ್ಬಾಸ್ ರನ್ನು ಕರೆದು ವಿಷಯ ತಿಳಿಸಿದರು.
“ನಿನ್ನೆ ರಾತ್ರಿ ನಾನೊಂದು ಕೆಟ್ಟ ಕನಸು ಕಂಡೆ, ಅದು ನನ್ನನ್ನು ತೀವ್ರ ದುಃಖಕ್ಕೀಡು ಮಾಡಿದೆ. ಆ ಆಪತ್ತು ನಿನ್ನ ಕುಟುಂಬಕ್ಕೂ ಎರಗಬಹುದೋ ಎಂಬ ಭಯ ನನ್ನದು. ಈ ಬಗ್ಗೆ ಯಾರೊಂದಿಗೂ ಹೇಳುವುದಿಲ್ಲವೆಂದು ನೀನು ಆಣೆ ಹಾಕಿ ಹೇಳಬೇಕು. ಖುರೈಷಿಗಳಿಗೆ ಈ ವಿಷಯ ತಿಳಿದರೆ ಅವರು ನಮ್ಮನ್ನು ಅಪಹಾಸ್ಯಕ್ಕೀಡು ಮಾಡಿ, ಕಿರುಕುಳ ನೀಡುವುದರಲ್ಲಿ ಅನುಮಾನವಿಲ್ಲ"
ಅಬ್ಬಾಸ್ ಆಣೆ ಹಾಕಿದರು.. ಆತ್ವಿಕ ತಮಗೆ ಬಿದ್ದ ದುಃಸ್ವಪ್ನವನ್ನು ವಿವರಿಸ ತೊಡಗಿದರು. ಅಬ್ ತ್ವ (ಮಕ್ಕಾದ ಸಮೀಪದ ಒಂದು ಸ್ಥಳ) ದಲ್ಲಿ ಪ್ರತ್ಯಕ್ಷಗೊಂಡ ಸಂಚಾರಿಯೊಬ್ಬ ದೊಡ್ಡ ಶಬ್ಬದಲ್ಲಿ ಕೂಗ ತೊಡಗಿದನು. " ಓ . . ವಂಚಕರೇ, ಮೂರು ದಿವಸಗಳ ನಂತರ ನಿಮ್ಮ ಮೇಲೆ ನಿಮ್ಮ ಮೃತದೇಹಗಳನ್ನು ಭೂಮಿ ನುಂಗಲಿದೆ ” ಅಷ್ಟು ಕೇಳುತ್ತಿದ್ದಂತೆ ಆತನ ಸುತ್ತಲೂ ಜನರು ನೆರೆಯ ತೊಡಗಿದರು. ಆತ ಮಾತುಗಳನ್ನು ಪುನರುಚ್ಚರಿಸುತ್ತಾ ಮಸೀದಿಯತ್ತ ನಡೆದನು. ಜನರು ಅವನನ್ನು ಹಿಂಬಾಲಿಸಿದರು, ಜನರು ಆತನನ್ನು ಸುತ್ತುವರಿಯುತ್ತಿದ್ದಂತೆ ಆತ ತನ್ನ ಒಂಟೆಯ ಬೆನ್ನ ಮೇಲೆ ನಿಂತು, ಕಅಬಾಲಯದ ಗೋಪುರ ಏರಿದನು.. ಅಲ್ಲಿ ಆತ ಮೊದಲು ಹೇಳಿದ ಅದೇ ಮಾತುಗಳನ್ನು ಮತ್ತೆ ಮತ್ತೆ ಪುನರುಚ್ಚರಿಸಿದನು.. ನಂತರ ಅವನು ಅಬೂಖುಬೈಸ್ ಪರ್ವತವನ್ನು ಏರಿ ಆದೇ ಮಾತುಗಳನ್ನು ಕೂಗಿ ಹೇಳಿದನು; ಬಳಿಕ ಆತ ಪರ್ವತದ ಮೇಲಿನಿಂದ ಬಂಡೆಗಲೊಂದನ್ನು ಕೆಳಕ್ಕೆ ತಳ್ಳಿ ಬಿಟ್ಟನು. ಅದು ಉರುಳಿ ಕಣಿವೆ ಸೇರಿ, ಸ್ಪೋಟಿಸಿದವು. ಅದರ ಚೂರುಗಳು ಮುಟ್ಟದ ಒಂದೇ ಒಂದು ಮನೆಗಳು ಮಕ್ಕಾದಲ್ಲಿಲ್ಲ.. ' ಕನಸಿನ ಅರ್ಥವನ್ನು ಗ್ರಹಿಸಿದ ಅಬ್ಬಾಸ್ ಚಿಂತಿತರಾದರು.
ಅಲಾಹನ ಮೇಲಾಣೆ ಇದೊಂದು ಭಯಂಕರ ಕನಸು, ನೀನಿದನ್ನು ಯಾರೋಂದಿಗು ಹೇಳಲು ಹೋಗಬೇಡ. ರಹಸ್ಯವಾಗಿರಲಿ ಅವರು ಸಹೋದರಿ ಆತಿಖರೊಂದಿಗೆ ಹೇಳಿದರು...
ಆದರೆ, ಅಬ್ಬಾಸ್ ತಮ್ಮ ಮಿತ್ರರಾದ ವಲೀದ್ ಬುನು ಉತ್ಬರನ್ನು ಕಂಡಾಗ ಯಾರೊಂದಿಗೂ ಹೇಳಬಾರದೆಂದು ಹೇಳಿ ಸಹೋದರಿಗೆ ಬಿದ್ದ ಕನಸಿನ ವಿಷಯವನ್ನು ಹೇಳಿಬಿಟ್ಟರು. ವಲೀದ್ ತನ್ನ ಪುತ್ರ ಉತ್ಬರೊಂದಿಗೆ ಹೇಳಿದರು. ಹೀಗೆ ಆ ರಹಸ್ಯ ಕಿವಿ ಕಿವಿಗೆ ಸಾಗಿ ಬಹಿರಂಗವಾದವು. ಮಕ್ಕಾದಾದ್ಯಂತ ಆತೀಕರಿಗೆ ಬಿದ್ದ ದುಸ್ವಪ್ನವೇ ಚರ್ಚಾ ವಿಷಯವಾದವು.
ಅಬ್ಬಾಸ್ ಹೇಳುತ್ತಾರೆ. "ಪ್ರಭಾತದಲ್ಲಿ ಎದ್ದು ನಾನು ಕಅಬಾ ಪ್ರದಕ್ಷಿಣೆಗೆ ಹೋಗಿದ್ದೆ. ಅಲ್ಲಿ ಕೆಲವು ಖುರೈಷಿಗಳು ಗುಂಪುಗೂಡಿ ಆತಿಖರ ಕನಸಿನ ಕುರಿತು ಮಾತನಾಡುತ್ತಿದ್ದರು.. ಅವರ ನಡುವೆ ಅಬೂಜಹಲನೂ ಇದ್ದನು. ನನ್ನನ್ನು ಕಂಡೊಡನೇ ಆತ, ಪ್ರದಕ್ಷಿಣೆ ಮುಗಿದರೆ ಒಮ್ಮೆ ಇಲ್ಲಿಗೆ ಬಂದು ಹೋಗು" ಎಂದನು..
ಪ್ರದಕ್ಷಿಣೆ ಮುಗಿದ ಮೇಲೆ ನಾನು ಖುರೈಷಿಗಳ ಗುಂಪಿನತ್ತ ನಡೆದೆ. ಅಬ್ದುಲ್ ಮುತ್ತಲಿಬರ ಸಂತತಿಗಳೇ, ನಿಮ್ಮಲ್ಲಿ ಯಾವಾಗಿನಿಂದ ಮಹಿಳಾ ಪ್ರವಾದಿಯೊಬ್ಬರು ಪ್ರತ್ಯಕ್ಷಗೊಂಡರು..? ಅಬೂಜಹಲ್ ಮೂದಲಿಸುವಂತೆ ಕೇಳಿದನು.
“ ಏನು ವಿಷಯ ?" ನಾನು ಕೇಳಿದೆ..
"ಆತಿಖ ಏನೋ ಕನಸು ಕಂಡಿದ್ದಾಳಂತೆ" ಅಬೂಜಹಲ್ ಉತ್ತರಿಸಿದನು.
" ಇಲ್ಲ. ಅವಳು ಹಾಗೇನೂ ಕಂಡಿಲ್ಲ"ನಾನು ಅದನ್ನು ನಿರಾಕರಿಸಿದೆ.
" ನಿಮ್ಮ ಪುರುಷರು ಪ್ರವಾದಿತ್ವವನ್ನು ಘೋಷಿಸಿಕೊಂಡದ್ದು ಸಾಕಾಗದೆ..? ಹೆಣ್ಣು ಮಕ್ಕಳನ್ನು ಸಹ ಪ್ರವಾದಿಗಳನ್ನಾಗಿಸಿ ಅಭಿನಯ ಮಾಡಬೇಕೇ..? ಮೂರು ದಿನಗಳ ಬಳಿಕ ನಿಮ್ಮ ಮೃತದೇಹಗಳನ್ನು ಭೂಮಿ ನುಂಗಲಿದೆ ಎಂದು ಆತಿಖ ಕನಸು ಕಂಡಿದ್ದಾಳಲ್ಲವೇ..? ನಾವು ಮೂರು ದಿವಸ ಕಾಯುತ್ತೇವೆ. ಅವಳು ಹೇಳಿದ್ದು ನಿಜವಾಗಿದ್ದರೆ ಅದು ಸಂಭವಿಸಲೇಬೇಕಲ್ಲವೇ..? ಇಲ್ಲದಿದ್ದರೆ ಅರೇಬಿಯಾದ ಅತಿ ದೊಡ್ಡ ಸುಳ್ಳುಗಾರರು ನೀವು ಎಂದು ನಾನೇ ಪ್ರಚಾರ ಮಾಡುತ್ತೇನೆ ನೋಡಿ.. ನಿಮ್ಮ ಪುರುಷರು ಈಗಾಗಲೇ ಸುಳ್ಳುಗಳೊಂದಿಗೆ ರಂಗ ಪ್ರವೇಶಿಸಿದ್ದಾರೆ. ಇನ್ನು ಸ್ತ್ರೀಯರೂ ಆರಂಭಿಸಿಬಿಟ್ಟರೇ..? ನಾವು ಸಹ ಪ್ರತಾಪಗಳಲ್ಲಿ ನಿಮ್ಮಷ್ಟೇ ಶಕ್ತಿವಂತರು, ಹಾಗಿರುವಾಗ ನೀವು ಹೇಳಿದಿರಿ: ಸಿಖಾಯತ್ (ತೀರ್ಥ ಯಾತ್ರಿಕರಿಗೆ ನೀರು ವಿತರಣೆ ಮಾಡುವ ಹಕ್ಕು) ನಮಗೆ ಸೇರಿದೆಂದು.. ಪರವಾಗಿಲ್ಲ, ಹಾಜಿಗಳಿಗೆ ನೀವೇ ಜಲ ವಿತರಣೆ ಮಾಡಿ ಎಂದು ನಾವೇ ಮುಂದಾಗಿ ನಿಮಗೆ ವಹಿಸಿಕೊಟ್ಟೆವು. ನಂತರ ನೀವು ಹೇಳಿದಿರಿ: ಹಿಜಾಬತ್ತ್ (ಕಅಬಾ ಪರಿಪಾಲನೆ) ನಮ್ಮದೆಂದು, ಅದನ್ನೂ ನಾವು ನಿಮ್ಮ ಕೈಗೊಪ್ಪಿಸಿದೆವು. ನದ್ ವತ್ (ಸಂಭಾವನೆ ಸಂಗ್ರಹ) ನ ಹಕ್ಕು ಸಹ ನಿಮ್ಮದೆಂದು ನೀವು ಸಮರ್ಥಿಸಿಕೊಂಡಿರಿ.. ಆಗಲೂ ನಾವು ನಿಮ್ಮ ವಿರುದ್ಧ ಧ್ವನಿಯೆತ್ತಲಿಲ್ಲ. ಜನರಿಗೆ ಆಹಾರ ನೀಡಿ, ಅವರ ಹಸಿವನ್ನು ನೀಗಿಸಿ ಎಂದು ನಾವು ಸುಮ್ಮನಾದೆವು. ನಂತರ ನೀವು ರಿಫಾದತ್ (ಸಮಾಲೋಚನೆಯ ನೇತೃತ್ವ) ನಿಮ್ಮ ಹಕ್ಕನ್ನು ಪ್ರತಿಪಾದಿಸಲು ಆರಂಭಿಸಿದಿರಿ.. ನಾವು ನಿಮಗೆ ಒಪ್ಪಿಗೆ ನೀಡಿದೆವು. ಅತಿಥಿಗಳನ್ನು ಸತ್ಕರಿಸಲು ಹಾಗೆ ನೆರವಾಗಲು ಬೇಕಾದುದನ್ನೆಲ್ಲಾ ನೀವು ಸಂಗ್ರಹಿಸಿಕೊಳ್ಳಿರಿ ಎಂದೇ ನಾವು ಹೇಳಿದೆವು. ನೀವು ಆಹಾರ ನೀಡಿದಿರಿ. ನಾವೂ ನೀಡಿದೆವು. ನಾವು ನೀವು ಎರಡು ಕುದುರೆಗಳಂತೆ ಸಮಾನವಾಗಿರಬೇಕಾದರೆ ನೀವು ನಿಮ್ಮ ನಡುವೆ ಒಬ್ಬ ಪ್ರವಾದಿಯಿದ್ದಾನೆಂದು ವಾದಿಸಲಾರಂಭಿಸಿದಿರಿ. ಇನ್ನು ನಿಮಗೆ ಉಳಿದಿರುವುದು ನಮ್ಮ ನಡುವೆ ಒಬ್ಬ ಹೆಣ್ಣು ಪ್ರವಾದಿಯೂ ಇದ್ದಾರೆಂದು ಅಷ್ಟೇ. ನಿಮ್ಮಂತೆ ಗಂಡು ಹೆಣ್ಣುಗಳು ಸೇರಿ ಸುಳ್ಳು ಹೇಳುವ ಒಂದು ಕುಟುಂಬವನ್ನು ನಾನು ಕಂಡಿಲ್ಲ.. ಅಬೂಜಹಲ್‌ನ ಭಾಷಣವನ್ನು ಅಬ್ಬಾಸ್ ತಾಳ್ಮೆಯಿಂದ ಕೇಳಿಸಿಕೊಂಡರು. "ಅಂದು ನಾನು ಅಬೂಜಹಲ್‌ಗೆ ಆತಿಖರ ಕನಸನ್ನು ನಿರಾಕರಿಸಿದ್ದು ಬಿಟ್ಟರೆ ಇನ್ನೊಂದು ಮಾತು ಆಡಲು ಹೋಗಿರಲಿಲ್ಲ" ಎಂದು ಅಬ್ಬಾಸ್ ನೆನಪಿಸಿಕೊಳ್ಳುತ್ತಾರೆ.
ಇನ್ನೊಂದು ವರದಿಯಲ್ಲಿ ಹೀಗಿದೆ.. "ಒಮ್ಮೆ ನಿಲ್ಲಿಸುತ್ತಿಯಾ ನಿನ್ನ ಪುರಾಣವನ್ನು ಹೇಡಿ, ನೀನೂ, ನಿನ್ನ ಕುಟುಂಬವೇ ಸುಳ್ಳುಗಾರರು "'
ಜೊತೆಗಿದ್ದವರು ಅವರನ್ನು ಅಬುಲ್ ಫಳ್ ಲ್ !!! ತಾವು ಜ್ಞಾನಿಯೂ, ವಿವೇಕಿಯೂ ಆಗಿರುವಿರಿ!! ಎಂದು ಸಮಾಧಾನಿಸಿದ್ದರು.
ಅಬೂಜಹಲ್‌ಗೆ ಸರಿಯಾದ ಉತ್ತರ ನೀಡದೆ ಬಂದದಕ್ಕೆ ಆತಿಖ ಅಬ್ಬಾಸ್‌ರೊಂದಿಗೆ ಅಸಮಾಧಾನ ವ್ಯಕ್ತಪಡಿಸಿದರು. ಅಬ್ಬಾಸ್ ಹೇಳುತ್ತಾರೆ. ಅಂದು ಕುಟುಂಬದ ಸ್ತ್ರೀಯರು ಒಟ್ಟಾಗಿ ನನ್ನ ಬಳಿಗೆ ಬಂದರು. "ಆ ದುಷ್ಟ ನಮ್ಮ ಕುಟುಂಬದ ಗಂಡಸರು, ಹೆಂಗಸರನ್ನು ಬಾಯಿಗೆ ಬಂದಂತೆ ನಿಂದಿಸಿದಾಗ ನೀವು ಸುಮ್ಮನೆ ನೋಡುತ್ತಾ ನಿಂತಿರಲ್ಲಾ" ಎಂದು ಅವರೆಲ್ಲಾ ನನ್ನನ್ನು ತರಾಟೆಗೆ ತೆಗೆದುಕೊಂಡರು. ನಾನು ಹೇಳಿದೆ,
"ದೇವರ ಮೇಲಾಣೆ , ಅವನನ್ನು ನಾನು ನೋಡಿಕೊಳ್ಳುತ್ತೇನೆ. ಇನ್ನು ಮುಂದೆ ಅವನು ಮನರಾವರ್ತಿಸಿದರೆ ಅವನನ್ನು ನಾನು ಕೊಂದು ಬಿಡುತ್ತೇನೆ " ಅಬೂಜಹಲ್‌ಗೆ ಸೂಕ್ತ ಉತ್ತರ ನೀಡಲಿಲ್ಲವೆಂದು ಅಬ್ಬಾಸ್ ಖಿನ್ನರಾದರು. ಆತಿಖರಿಗೆ ದುಃಸ್ವಪ್ನ ಬಿದ್ದ ಮೂರನೇ ದಿನಕ್ಕೆ ಅವರು ಪ್ರಭಾತದಲ್ಲಿದ್ದು ಅಬೂಜಹಲ್ ನನ್ನು ಎದುರಿಸಲು ನಿರ್ಧರಿಸಿ, ಅತ್ತ ಹೊರಟರು. ಅಬ್ಬಾಸ್ ಹೇಳುತ್ತಾರೆ.. ನಾನು ಸೇಡು ತೀರಿಸಿಕೊಳ್ಳಲು ಅಬೂಜಹಲ್‌ನನ್ನು ಹುಡುಕುತ್ತಾ ಹೊರಟೆ. ಕಅಬಾಲಯವನ್ನು ಸಮೀಪಿಸಿದಾಗ ಅವನು ಮಸೀದಿಯ ಬಾಗಿಲ ಮೂಲಕ ಓಡಿ ಹೋಗುವುದನ್ನು ಕಂಡೆ. ನನಗೆ ಆಶ್ಚರ್ಯವಾಯಿತು. ಇವನೇಕೆ ಹೀಗೆ ಓಡುತ್ತಿದ್ದಾನೆ, ನನಗೆ ಹೆದರಿಯೇ..? ಎಂದೆಲ್ಲಾ ನಾನು ಯೋಚಿಸುತ್ತಿರಬೇಕಾದರೆ, ಳಂರಮುಬ್ನ್ ಆಮ್ರಲ್ ಗಿಫಾರಿಯ ಶಬ್ದ ಕೇಳಿಸಿತು!!
"ಬೆಚ್ಚಿ ಬೀಳಿಸಿದ ಅಟ್ಟಹಾಸ"
ಆ ದೃಶ್ಯವನ್ನು ಎಲ್ಲರೂ ಬೆಕ್ಕಸ ಬೆರಗಾಗಿ ನೋಡುತ್ತಿದ್ದರು. ಳಂಳಂ ಅಬ್‌ತ್ವ ಪರ್ವತದಲ್ಲಿ ಒಂಟೆಯ ಮೇಲೆ ನಿಂತಿದ್ದಾನೆ. ಆತ ಅತ್ತಿತ್ತ ನಡೆಯುತ್ತಾ, ತನ್ನ ಬಟ್ಟೆಗಳನ್ನು ಹರಿದು ಚಿಂದಿ ಮಾಡುತ್ತಾ, ಒಂಟೆಯಿಂದ ಕೆಳಗಿಳಿದು, ಅದರ ಮೂಗು, ಕಿವಿಗಳನ್ನು ಭೇಧಿಸಿದ್ದಾನೆ. ತನ್ನ ಅಗಲ ಬಾಯಲ್ಲಿ ಆತ ಅಟ್ಟಹಾಸಗೈಯ್ಯುತ್ತಿದ್ದಾನೆ.. ಓ ಖುರೈಷಿ ಸಮೂಹವೇ, ಅಬೂಸುಫಿಯಾನರ ಜೊತೆಗಿರುವ ನಿಮ್ಮ ಖಾಫಿಲವನ್ನು ಮರು ವಶಪಡಿಸಿಕೊಳ್ಳಿರಿ. ನಿಮ್ಮ ವ್ಯಾಪಾರ ಸರಕುಗಳನ್ನು, ಸಂಪತ್ತುಗಳನ್ನು ಮುಹಮ್ಮದ್ ಹಾಗೂ ಅನುಯಾಯಿಗಳು ತಡೆದು ನಿಲ್ಲಿಸಿದ್ದಾರೆ. ಅದನ್ನು ಮರು ವಶಪಡಿಸಿಕೊಳ್ಳುವುದು ನಿಮ್ಮಿಂದ ಸಾಧ್ಯವೆಂದು ನನಗೆ ಅನಿಸುವುದಿಲ್ಲ. ಹಾಗಾದಲ್ಲಿ ನೀವೆಂದೂ ಗೆಲ್ಲಲಾರಿರಿ, ಸಹಾಯ ಸಹಾಯ ಮಾಡಿರಿ...
" ಸುದ್ದಿ ಮಕ್ಕಾದಲ್ಲಿ ವಿಬ್ರಾಂತಿಯನ್ನು ಸೃಷ್ಟಿಸಿದವು. ಖುರೈಷಿಗಳು ಸಭೆ ಸೇರಿದರು. ಅಬೂಜಹಲ್‌ನಂತಹ ಖುರೈಷಿ ಮುಖಂಡರೆಲ್ಲಾ ಖಾಫಿಲವನ್ನು ಮುಸ್ಲಿಮರಿಂದ ಬಿಡಿಸಿಕೊಳ್ಳುವ ಸನ್ನಾಹದಲ್ಲಿ ನಿರತರಾದರು..
ಉಸೈರಕ್ಕೆ ಮುಸ್ಲಿಮರು ತಲುಪುವ ಮೊದಲೇ ಅಲ್ಲಿಂದ ಹೊರಟು ಹೋಗಿದ್ದ ಅಬೂಸುಪಿಯಾನ್ ಖಾಫಿಲದೊಂದಿಗೆ ಶಾಮ್ ತಲುಪಿದ್ದರು. ಅಲ್ಲಿಯ ಮಾರುಕಟ್ಟೆಯಲ್ಲಿ ವ್ಯಾಪಾರಿ ನಡೆಸಿ ರೇಷ್ಮೆ ಸುಗಂಧ ಹಾಗೂ ಇನ್ನಿತರ ಧಾರಾಳ ವಿಶೇಷ ವಸ್ತುಗಳನ್ನು ಖರೀದಿಸಿ, ಸ್ವದೇಶಕ್ಕೆ ಹಿಂದಿರುಗಲು ಸಿದ್ದರಾದರು. ಮುಸ್ಲಿಮರ ದಾಳಿಯ ಭಯದಿಂದ ಕಳೆದ ವರ್ಷದಿಂದ ಖುರೈಷಿಗಳು ಇಷ್ಟು ದೊಡ್ಡ ಖಾಫಿಲವನ್ನು ಕಳುಹಿಸುತ್ತಿರಲಿಲ್ಲ. ಶಾಮ್‌ನಿಂದ ಹಿಂದಿರುಗುತ್ತಿದ್ದ ಖುರೈಷಿ ವ್ಯಾಪಾರಿಗಳ ಒಂಟೆಗಳು ಐವತ್ತು ಸಾವಿರ ಚಿನ್ನದ ನಾಣ್ಯಗಳಷ್ಟು ಬೆಲೆಬಾಳುವ ವಸ್ತುಗಳನ್ನು ಹೊತ್ತುಕೊಂಡಿದ್ದವು. ದಾರಿಯಲ್ಲಿ ಅಬೂಸುಫಿಯಾನ್ ಜೂದಾಮ್ ಗೋತ್ರದ ಒಬ್ಬರನ್ನು ಭೇಟಿಯಾದರು. ಶಾಮ್ ಗೆ ಹೋಗುವಾಗ ಮುಸ್ಲಿಮರು ತನ್ನ ಖಾಫಿಲವನ್ನು ತಡೆಯಲು ಸೈನ್ಯ ಸಮೇತ ಆಗಮಿಸಿರುವುದು, ತಾವು ಸ್ವಲ್ಪದರಲ್ಲೇ ಪಾರಾದದ್ದು, ಸದ್ಯ ಮುಸ್ಲಿಮರು ತಾವು ಹಿಂದಿರುಗಿ ಬರುವುದನ್ನು ಕಾಯುತ್ತಾ ಕೂತಿರುವುದು ಜೂದಾಮ್ ಗೋತ್ರದ ವ್ಯಕ್ತಿಯಿಂದ ಅಬೂಸುಫಿಯಾನರಿಗೆ ತಿಳಿದವು...
ಅವರು ಎಚ್ಚರಿಕೆಯಿಂದ ಮುಂದುವರಿದರು. ಶಾಮ್‌ಗೆ ಹೋಗುವಾಗ ಸರಕುಗಳ ಭಾರವಿರಲಿಲ್ಲ. ಆದ್ದರಿಂದ ವೇಗವಾಗಿ ಹೋಗುವುದು ಸಾಧ್ಯವಾಗಿತ್ತು. ಆದರೆ, ಈಗ ಒಂಟೆಗಳ ಬೆನ್ನ ಮೇಲೆ ಸರಕುಗಳ ಗೋಪುರವೇ ಎದ್ದು ನಿಂತಿದೆ. ಒಂಟೆಗಳು ಬಹಳ ನಿಧಾನವಾಗಿ ಹೆಜ್ಜೆ ಹಾಕುತ್ತಿವೆ. ಆದ್ದರಿಂದ ಮುಸ್ಲಿಮರಿಗೆ ನಮ್ಮ ಮೇಲೆರಗುವುದು ಬಹಳ ಸುಲಭ ಎಂದು ಯೋಚಿಸಿದ ಅಬೂಸುಫಿಯಾನ್ ಆ ದಾರಿಮಧ್ಯೆ ಸಿಕ್ಕ ಯಾತ್ರಿಕರ, ಸ್ಥಳೀಯ ನಿವಾಸಿಗಳ ಮೂಲಕ ಮುಸ್ಲಿಮರ ಇರವನ್ನು ಅರಿಯುತ್ತ ದಾರಿಯ ಸುರಕ್ಷತೆಯ ಬಗ್ಗೆ ಮಾಹಿತಿ ಕಲೆ ಹಾಕುತ್ತಾ, ಪ್ರತೀ ಹೆಜ್ಜೆಯನ್ನೂ ಎಚ್ಚರಿಕೆಯಿಂದಿಡುತ್ತಿದ್ದರು.. ಹಿಜಾಸ್ ಹತ್ತಿರವಾಗುತ್ತಿದ್ದಂತೆ ಅಬೂಸುಫಿಯಾನರ ಹೃದಯ ಬಡಿತ ದ್ವಿಗುಣಗೊಂಡವು. ಖಾಫಿಲವ ತಡೆಯಲು ಪ್ರವಾದಿ (ಸ) ಹಾಗೂ ಸ್ವಹಾಬಿಗಳು ಕಾಯುತ್ತಿದ್ದಾರೆಂದೂ, ಎಚ್ಚರಿಕೆ ವಹಿಸಬೇಕೆಂದು ಕೆಲವು ಯಾತ್ರಿಕರ ಮೂಲಕ ಅಬೂಸುಫಿಯಾನರಿಗೆ ಖಚಿತ ಮಾಹಿತಿ ದೊರೆತಿದ್ದವು.
ಶಾಮ್‌ಗೆ ಹೋಗುವಾಗ ದಾರಿ ತೋರಲು ಇಪ್ಪತ್ತು ಮಿಸ್ ಖಾಲ್ ಕೂಲಿಗೆ ಗಿಫಾರಿ ಗೋತ್ರದ ಳಂಳಮನನ್ನು ಜೊತೆಗೆ ಕರೆದೊಯ್ದಿದ್ದರು.. ಹಿಂದಿರುಗಿ ಬರುವಾಗ ಮುಸ್ಲಿಮರು ಖಾಫಿಲವನ್ನು ತಡೆಯುತ್ತಿರುವ ಸಂಗತಿ ಅರಿತ ಅಬೂಸುಫಿಯಾನ್ ಆತನಿಗೆ ಅತಿ ಪ್ರಮುಖವಾದ ದೌತ್ಯವೊಂದನ್ನು ವಹಿಸಿಕೊಟ್ಟರು. ಆದಷ್ಟು ಬೇಗ ಮಕ್ಕಾಕೆ ಹೋಗಿ ಮುಹಮ್ಮದ್ ಹಾಗೂ ಅನುಯಾಯಿಗಳು ಖಾಫಿಲವನ್ನು ತಡೆಯಲು ಸಜ್ಜಾಗಿ ನಿಂತಿರುವ ವಿವರವನ್ನು ಮುಟ್ಟಿಸಬೇಕು. ಅರಬಿಗಳನ್ನು ಸಿಟ್ಟಿಗೆಬ್ಬಿಸಲು ಏನೇನು ತಂತ್ರಗಳನ್ನು ಮಾಡಬೇಕೋ ಅದನ್ನೆಲ್ಲವನ್ನು ಪ್ರಯೋಗಿಸಬೇಕು. ತಮ್ಮ ಸಂಪಾದನೆಗಳನ್ನು ಬಿಡುಗಡೆಗೊಳಿಸಲು ಅಣಿಯಾಗುವಂತೆ ಖುರೈಷಿಗರನ್ನು ಪ್ರಚೋದಿಸಬೇಕು. ಮಕ್ಕಾದತ್ತ ಧಾವಿಸಿದ ಳಂಳಂ ತನ್ನ ಕೆಲಸವನ್ನು ಚೆನ್ನಾಗಿಯೇ ಮಾಡಿ ಮುಗಿಸಿದನು...
ಳಂಳಂ ತಂದ ಸುದ್ದಿ ಕೇಳಿ ಖುರೈಷಿಗಳು ಸಿಟ್ಟಿಗೆದ್ದರು. ಕಾರಣ, ಖಾಫಿಲದಲ್ಲಿ ಸಹಭಾಗಿತ್ವವಿಲ್ಲದ ಒಂದೇ ಒಂದು ಕುಟುಂಬವೂ ಮಕ್ಕಾದಲ್ಲಿರಲಿಲ್ಲ. ಅಬೂಸುಫಿಯಾನ್ ತಮ್ಮ ಖಾಫಿಲದೊಂದಿಗೆ ಎಚ್ಚರಿಕೆಯಿಂದ ಮುನ್ನಡೆದರು. ಬದ್ರ್ ನ ಜಲ ಸಮೃದ್ದ ಪ್ರದೇಶವನ್ನು ತಲುಪಿದರು, ದಾರಿಯಲ್ಲಿ ಹೌರಾನ್‌ನ ಸಮೀಪ ಜುಹೈನ ಗೋತ್ರದ ಕಶದ್ ಎಂಬ ವೃದ್ದನನ್ನು ಕಂಡರು. ಅಬೂಸುಫಿಯಾನ್ ಅವರೊಂದಿಗೆ ಕೇಳಿದರು. "ಮುಹಮ್ಮದರ ಗೂಢಾಚಾರರಲ್ಲಿ ಯಾರನ್ನಾದರೂ ಕಂಡಿರಾ..?"
"ಇಲ್ಲ. ಯಾರನ್ನೂ ಕಂಡಿಲ್ಲ" ಆ ವೃದ್ಧ ಉತ್ತರಿಸಿದನು.
ಹೌರಾನ್ ಮತ್ತು ಮದೀನದ ನಡುವೆ ಬಹಳಷ್ಟು ದೂರವಿದೆ. ಹಾಗಿದ್ದರೂ ಹೀಗೆ ಕೇಳಿದ್ದರ ಬಗ್ಗೆ ಆತ ಆಶ್ಚರ್ಯ ವ್ಯಕ್ತಪಡಿಸಿದನು. ವಾಸ್ತವದಲ್ಲಿ ಪ್ರವಾದಿ (ಸ) ರ ಗೂಢಾಚಾರರು ಆತನ ಅತಿಥಿಗಳಾಗಿ, ತಂಗಿದ್ದರು...
ಬದ್ರ್ ನ ಸಮೀಪದಲ್ಲಿ ಮಿತ್ರಪಕ್ಷಗಳಿಗೆ ಸೇರಿದ ಮಜ್ದಿಬ್ನು ಅಮ್ರನ್ನು ಅಬೂಸುಫಿಯಾನ್ ಎದುರುಗೊಂಡರು. ಮಜ್ದಿ ಮುಸ್ಲಿಮರ ಜೊತೆಯೂ ಸಖ್ಯ ಬೆಳೆಸಿಕೊಂಡಿದ್ದರು.
"ತಾವು ಯಾರನ್ನಾದರೂ ಕಂಡಿರಾ..?” ಅಬೂಸುಫಿಯಾನ್ ಅವರೊಂದಿಗೆ ಕೇಳಿದರು...
"ಅಸಹಜವಾಗಿ ನಾನು ಯಾರನ್ನೂ ಕಂಡಿಲ್ಲ. ತಮ್ಮ ಮತ್ತು ಮದೀನದ ನಡುವೆ ಶತ್ರುಗಳು ಯಾರೂ ಇಲ್ಲ. ಇದ್ದಿದ್ದರೆ ಖಂಡಿತ ನಿಮಗೆ ತಿಳಿಯುತಿತ್ತು. ತಮ್ಮಿಂದ ಯಾವುದನ್ನಾದರು ರಹಸ್ಯವಾಗಿಡಬೇಕಾದ ಅಗತ್ಯ ನಮಗಿಲ್ಲ. ಆದರೆ, ಇಬ್ಬರು ಒಂಟೆ ಸವಾರರನ್ನು ನಾನು ಕಂಡೆ. ಆ ಬಾವಿಯ ಹಿಂದೆ ಅವರು ಒಂಟೆ ನಿಲ್ಲಿಸಿದ್ದರು. ಚರ್ಮದ ಪಾತ್ರೆಯಲ್ಲಿ ನೀರು ಸಂಗ್ರಹಿಸಿ, ಹೊರಟು ಹೋದರು " ಅವರು ಪ್ರವಾದಿ (ಸ) ರ ಗೂಢಾಚಾರರಾಗಿದ್ದರು. ಅವರಿಬ್ಬರು ಒಂಟೆ ನಿಲ್ಲಿಸಿದ್ದ ಸ್ಥಳವನ್ನು ಮಜ್ದಿ ತೋರಿಸಿ ಕೊಟ್ಟರು...
ಖಾಫಿಲದ ವಿವರಗಳನ್ನು ಸಂಗ್ರಹಿಸುವಂತೆ ಪ್ರವಾದಿ (ಸ) ರು ಅದಿಯ್ಯುಬ್ನು ಅಬೀಸ್ಸಅ್ ಬಾಉ, ಬಸ್‌ಬಸ್‌ಬ್ನ್ ಅಮ್ರ್ ರವರನ್ನು ಕಳುಹಿಸಿದ್ದರು. ಅವರು ಬದ್ರ್ ಗೆ ಬಂದಿಳಿದು, ಪರಿಶೋಧಿಸುತ್ತಿರಬೇಕಾದರೆ ಪಕ್ಕದ ಬಾವಿಯ ಬಳಿ ಇಬ್ಬರು ಸ್ತ್ರೀಯರು ಮಾತನಾಡುವುದನ್ನು ಕೇಳಿಸಿಕೊಂಡರು. ಒಬ್ಬಾಕೆ ಇನ್ನೊಬ್ಬಾಕೆಯೊಂದಿಗೆ ತನಗೆ ಕೊಡಲಿರುವ ಸಾಲದ ಹಣವನ್ನು ಕೇಳುತ್ತಾಳೆ.
" ಇನ್ನೊಬ್ಬಾಕೆ ನಾಳೆಯೋ ನಾಳಿದ್ದೂ ಇಲ್ಲಿಗೆ ಮಕ್ಕಾದ ಖಾಫಿಲ ಬರುತ್ತದೆ. ಅವರ ಸೇವೆ ಮಾಡಿ ನಿನ್ನ ಸಾಲ ತೀರಿಸುತ್ತೇನೆ ಎನ್ನುತ್ತಾಳೆ..
ಈ ಸುದ್ದಿಯೊಂದಿಗೆ ಅವರಿಬ್ಬರು ಪ್ರವಾದಿ (ಸ) ಯತ್ತ ಹಿಂದಿರುಗಿದರು. ಆ ನಂತರ ಅಬೂಸುಫಿಯಾನ್ ಅಲ್ಲಿಗೆ ಆಗಮಿಸುತ್ತಾರೆ, ಪ್ರವಾದಿ (ಸ) ರ ಗೂಢಾಚಾರರಿಬ್ಬರು ಒಂಟೆ ನಿಲ್ಲಿಸಿದ್ದ ಸ್ಥಳವನ್ನು ಅಬೂಸುಫಿಯಾನ್ ಪರಿಶೋದಿಸಲಾರಂಭಿಸಿದರು. ಅಲ್ಲಿ ಬಿದ್ದಿದ್ದ ಒಂಟೆಯ ಮಲಮೂತ್ರವನ್ನು ಅವರು ಸೂಕ್ಷ್ಮವಾಗಿ ಪರಿಶೀಲಿಸಿದರು. ಅದರಲ್ಲಿ ಖರ್ಜೂರದ ಬೀಜಗಳು ಕಂಡು ಬಂದವು. "ಇದು ಮದೀನದ ಒಂಟೆಗಳು ಎಂಬುದರಲ್ಲಿ ಸಂಶಯವೇ ಇಲ್ಲ" ಎಂದು ಅಬೂಸುಫಿಯಾನ್ ತಮ್ಮಷ್ಟಕ್ಕೇ ಹೇಳಿಕೊಂಡರು. ಆದ್ದರಿಂದ ಅವರು ಎಂದಿನ ಹಾದಿಯನ್ನು ತೊರೆದು, ಕೆಂಪು ಸಮುದ್ರ ತೀರದ ಹಾದಿಯನ್ನು ಹಿಡಿದರು. ನಂತರ ಎಲ್ಲಿಯೂ ವಿಶ್ರಾಂತಿ ಪಡೆಯದೆ ನೇರ ಮಕ್ಕಾದತ್ತ ಪ್ರಯಾಣಿಸಿದರು..
ಬಿಅ್ ರ್ ಅಬೀಉತ್ಬದಿಂದ ನೀರು ಸಂಗ್ರಹಿಸಲು ಪ್ರವಾದಿ ( ಯಸ) ರು ಅನುಯಾಯಿಗಳೊಂದಿಗೆ ಹೇಳಿದರು.. ಅನುಯಾಯಿಗಳು ನೀರು ತಂದುಕೊಟ್ಟಾಗ ಪ್ರವಾದಿ (ಸ) ರು ಅದರಿಂದ ಸ್ವಲ್ಪ ನೀರು ತೆಗೆದು, ಕುಡಿದರು, ಸ್ನಾನ ಮಾಡಿದರು. ನಂತರ ತಮ್ಮ ಮುನ್ನೂರ ಹತ್ತಕ್ಕೂ ಹೆಚ್ಚಿದ್ದ ಆನುಚರರೊಂದಿಗೆ ಯಾತ್ರೆ ಮುಂದುವರಿಸಿದರು. ಬದ್ರ್ ಯುದ್ಧದಲ್ಲಿ ಭಾಗವಹಿಸಿದ ಸ್ವಹಾಬಿಗಳ ಸಂಖ್ಯೆ ಎಷ್ಟೆಂಬುದರಲ್ಲಿ ಚರಿತ್ರೆಗಾರರ ಮಧ್ಯೆ ಭಿನ್ನಾಭಿಪ್ರಾಯವಿದೆ. ಕೆಲವರು ಅನಿವಾರ್ಯ ಕಾರಣಗಳಿಂದ ಯುದ್ಧದಿಂದ ದೂರ ನಿಂತೂ, ಯುದ್ಧ ಸಂಪತ್ತಿನಲ್ಲಿ ಪಾಲು ಪಡೆದವರನ್ನೂ ಲೆಕ್ಕ ಹಾಕಿದರೆ, ಇನ್ನು ಕೆಲವರು ಯುದ್ಧದಲ್ಲಿ ಭಾಗವಹಿಸಿದವರ ಸಂಖ್ಯೆಯನ್ನು ಮಾತ್ರ ಪರಿಗಣಿಸಿದರು. ಪ್ರಬಲ ಅಭಿಪ್ರಾಯದ ಪ್ರಕಾರ ಅವರು ಹದಿಮೂರು ಮಂದಿಯಿದ್ದರು. ರೌಹಾಇಲ ತಲುಪಿದಾಗ ಪ್ರವಾದಿ (ಸ) ರು ಸ್ವಹಾಬಿಗಳ ಲೆಕ್ಕ ಹಾಕಿದರೆಂದೂ, ಮುನ್ನೂರ ಹದಿಮೂರು ಮಂದಿಯಿದ್ದಾರೆಂದು ತಿಳಿದಾಗ ಖುರ್‌ಆನ್‌ನಲ್ಲಿ ಎಲ್ಲ ಪರಾಮರ್ಶಿಸಲ್ಪಟ್ಟ ತ್ವಾಲೂತದೊಂದಿಗೆ ನದಿ ದಾಟಿದ ಅದೇ ಸಂಖ್ಯೆ ಎಂದು ಸಂತೋಷ ವ್ಯಕ್ತಪಡಿಸಿದರುವುದಾಗಿ ವರದಿಯಾಗಿದೆ. ತ್ವಾಲೂತರೊಂದಿಗೆ ನದಿ ದಾಟಿದವರೆಲ್ಲಾ ನೈಜ ವಿಶ್ವಾಸಿಗಳಾಗಿದ್ದರು. (ಅಝರತ್ತುಲ್ ಹಲಬಿಯ್ಯಾ 2: 158)
.ಉಸ್ಮಾನುಬುನು ಅಫ್ಫಾನ್ ಬದ್ರ್ ಯುದ್ಧದಲ್ಲಿ ಭಾಗವಹಿಸಿಲ್ಲ. ಆ ಹೊತ್ತಿಗೆ ಅವರ ಪತ್ನಿ ಹಾಗೂ ಪ್ರವಾದಿ (ಸ) ಪುತ್ರಿ ರುಖಿಯ್ಯ ರೋಗಶಯ್ಯೆಯಲ್ಲಿದ್ದರು. ಆದ್ದರಿಂದ ಪತ್ನಿಯನ್ನು ನೋಡಿ ಮದೀನದಲ್ಲೇ ಉಳಿದುಕೊಳ್ಳುವಂತೆ ಪ್ರವಾದಿ (ಸ) ರು ಅವರಿಗೆ ಹೇಳಿದ್ದರು. ಆ ರೋಗ ಶಯ್ಯೆಯಲ್ಲೇ ರುಖಿಯ್ಯ ಮರಣ ಹೊಂದಿದರು. ಬದ್ರ್ ಯುದ್ಧದ ಸಂದರ್ಭದಲ್ಲಿ ಉಸ್ಮಾನ್ ವಸೂರಿ ರೋಗಿಯಾಗಿದ್ದರು ಎಂದು ಹೇಳಲಾಗುತ್ತದೆ.. ಬದ್ರ್ ಯುದದಲ್ಲಿ ಭಾಗವಹಿಸಿದ ಪ್ರತಿಫಲ ನಿನಗೆ ಲಭ್ಯ ಎಂದು ಪ್ರವಾದಿ (ಸ) ಉಸ್ಮಾನ್ (ರ) ರೊಂದಿಗೆ ಹೇಳಿದ್ದರು..
ತ್ವಲ್ಹತ್ ಬ್ನು ಅಬ್ದಿಲ್ಲಾ, ಸಈದುಬ್ನ್ ಝೈದ್ ಎಂಬಿಬ್ಬರನ್ನು ಅಬೂಸುಫಿಯಾನರ ಖಾಫಿಲದ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಕಳುಹಿಸಿಕೊಡಲಾಗಿತ್ತು. ಆದ್ದರಿಂದ ಅವರಿಗೆ ಬದ್ರ್ ಯುದ್ಧದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಯುದ್ಧ ಮುಗಿದು ಹಿಂದಿರುಗುತ್ತಿದ್ದ ಪ್ರವಾದಿ (ಸ) ರನ್ನು ಅವರು ದಾರಿ ಮಧ್ಯೆ ಎದುರುಗೊಂಡಿದ್ದರು. ಪ್ರವಾದಿ (ಸ) ರು ಅವರಿಗೆ ಯುದ್ದ ಸಂಪತ್ತುಗಳಲ್ಲಿ ಪಾಲು ನೀಡಿ ದರು. ತಮಗೆ ಯುದ್ಧದಲ್ಲಿ ಭಾಗವಹಿಸಿದ ಪ್ರತಿಫಲವಿದೆಯೇ..? ಎಂದು ಇಬ್ಬರೂ ಅನ್ವೇಷಿಸಿದರು. ಇದೆ ಎಂದರು ಪ್ರವಾದಿ (ಸ) ರು...
ಅನ್ಸಾರಿಗಳಲ್ಲೊಬ್ಬರಾದ ಅಬೂ ಉಮಾಮತ್ ಬ್ನು ಸಅ್ ಲಬ ಯುದ್ಧಕ್ಕೆ ಹೊರಡಲು ನಿರ್ಧರಿಸಿದ್ದರು. ಆದರೆ, ಅವರ ತಾಯಿ ರೋಗಾವಸ್ಥೆಯಲ್ಲಿದ್ದುದರಿಂದ, ತಾಯಿಯನ್ನು ನೋಡಿಕೊಳ್ಳುವಂತೆ ಹೇಳಿ ಪ್ರವಾದಿ (ಸ) ರು ಅವರನ್ನು ಬಿಟ್ಟು ಹೋಗಿದ್ದರು. ಬದ್ರ್ ನಿಂದ ಹಿಂದಿರುಗುವಷ್ಟರಲ್ಲಿ ಆ ತಾಯಿ ಮರಣ ಹೊಂದಿದ್ದರು. ಅವರ ಖಬ್ರಿನ ಸಮೀಪದಲ್ಲಿ ಪ್ರವಾದಿ (ಸ) ರು ಜನರು ನಮಾಝ್ ನಿರ್ವಹಿಸಿದರು...
ಅಬೂ ಲುಬಾಬ ಬ್ನು ಅಬ್ ದಿಲ್ ಮುಂದಿರ್‌ರನ್ನು ರೌಹಾಇ (ಮದೀನದಿಂದ ಎರಡು ರಾತ್ರಿ ಯಾತ್ರಾ ದೂರವಿರುವ ಒಂದು ಸ್ಥಳದಿಂದ ಹಿಂದಕ್ಕೆ ಕಳುಹಿಸಿದರು. ಮದೀನದಲ್ಲಿ ಅವರನ್ನು ಪ್ರವಾದಿ (ಸ) ರ ಪ್ರತಿನಿಧಿಯಾಗಿ ನಿಶ್ಚಯಿಸಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿತ್ತು. ಜಮಾತ್ ನಮಾಝ್ಗೆ ನೇತೃತ್ವ ನೀಡಲು ಅಬ್ದುಲ್ಲಾಹಿಬ್ನು ಉಮ್ಮು ಮಕ್ದೂಮರನ್ನು ಮದೀನದಿಂದ ಹೊರಡುವ ಸಂದರ್ಭದಲ್ಲೇ ನೇಮಿಸಲಾಗಿತ್ತು...
ಆಸ್ವಿಮುಬ್ನು ಅದಿಯ್ಯ್ ರನ್ನು ಸಹ ರೌಹಾಇಯಿಂದಲೇ ಹಿಂದಕ್ಕೆ ಕಳುಹಿಸಲಾಯಿತು. ಬುಖಾರಿಯ ಇದರ ಹಾಗೂ ಪ್ರಾಂತ ಪ್ರದೇಶಗಳ ಪ್ರತಿನಿಧಿಯಾಗಿ ಅವರನ್ನು ನೇಮಿಸಲಾಗಿತ್ತು. ಹಾರಿಸ್ ಬುನುಲ್ ಅಮ್ರರನ್ನು ಸಹ ರೌಹಾಇಯಿಂದಲೇ ಹಿಂದಕ್ಕೆ ಕಳುಹಿಸಿದರು. ಅಮ್ರ್ ಬಿನ್ ಔಫ್ ಸಂತತಿಗಳ ಕುರಿತು ಪ್ರವಾದಿ (ಸ) ರಿಗೆ ದೊರೆತ ವಿವರಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಅವರ ದೌತ್ಯವಾಗಿತ್ತು...
ಹಾರಿಸುಬ್ನು ಝ್ಝಮ್ಮ ಹಾಗೂ ಖವ್ವಾತು ಬ್ನು ಜುಬೈರ್ ಗಾಯಗೊಂಡ ಕಾರಣ ರೌಹಾಿಯಿಂದಲೆ ಹಿಂದಿರುಗಬೇಕಾಯಿತು. ಈ ಎಲ್ಲರಿಗೂ ಪ್ರವಾದಿ (ಸ) ರು ಯುದ್ಧ ಸಂಪತ್ತಿನಲ್ಲಿ ಪಾಲು ನೀಡಿದರು. ಅನಸ್ ಬ್ನು ಮಾಲಿಕ್ ಬದ್ರ್ ಯುದ್ಧದಲ್ಲಿ ಭಾಗವಹಿಸಿ, ಯುದ್ಧ ಸಂಪತ್ತಿನಲ್ಲಿ ಪಾಲು ಪಡೆದಿದ್ದಾರೆ ಎಂಬೊಂದು ಅಭಿಪ್ರಾಯವಿದೆ. ಇವರನ್ನೆಲ್ಲಾ ಬದ್ರ್ ಯೋಧರ ಸಾಲಿನಲ್ಲಿ ಲೆಕ್ಕ ಹಾಕುವ ಹಾಗೂ ಲೆಕ್ಕ ಹಾಕದ ಚರಿತ್ರಗಾರರಿದ್ದಾರೆ. ಹೀಗೆ ಬದ್ರ್ ಯೋಧರ ಲೆಕ್ಕದ ಹೆಸರಲ್ಲಿ ಭಿನ್ನಾಭಿಪ್ರಾಯವಿದ್ದವು..
ಹಬೀಬ್ನು ಯಶಾಫ್ ಬಹುದೈವ ವಿಶ್ವಾಸಿ ಹಾಗೂ ಪ್ರಭಾವಿ ನಾಯಕರೂ, ಧೀರ ಯೋಧರೂ ಆಗಿದ್ದರು. ಮುಸ್ಲಿಮರಾಗಿದ್ದ ತಮ್ಮ ಚಿಕ್ಕಪ್ಪಂದಿರ ಪುತ್ರರ ಜೊತೆಗೂಡಿ, ಅವರು ಯುದ್ಧದಲ್ಲಿ ಭಾಗವಹಿಸುವ ಉದ್ದೇಶದಿಂದ ಆಗಮಿಸಿದ್ದರು.. ಅವರೊಂದಿಗೆ ಪ್ರವಾದಿ (ಸ) ರು ಕೇಳಿದರು.
"ಅಲ್ಲಾಹನಲ್ಲೂ, ಅವನ ದೂತರಲ್ಲೂ ನೀನು ವಿಶ್ವಾಸ ತಾಳಿರುವೆಯಾ..?”
'" ಇಲ್ಲ" ಎಂದು ಹಬೀಬ್ ನು ಯಸಾಫ್ ಉತ್ತರಿಸಿದರು. ಪ್ರವಾದಿ (ಸ) ರು ಅವರನ್ನು ಹಿಂದಕ್ಕೆ ಕಳುಹಿಸಿದರು. ಶಿರ್ಕ್ ಜನರ ವಿರುದ್ಧ ಯುದ್ದ ಮಾಡಲು ಶಿರ್ಕ್ ನ ಜನರೊಂದಿಗೆ ನಾವು ಸಹಾಯ ಬೇಡಲಾರೆವು ' ಎಂದು ಸ್ಪಷ್ಟಪಡಿಸಿದರು..

ಈ ಸುದ್ದಿಯೊಂದಿಗೆ ಅವರಿಬ್ಬರು ಪ್ರವಾದಿ (ಸ) ಯತ್ತ ಹಿಂದಿರುಗಿದರು. ಆ ನಂತರ ಅಬೂಸುಫಿಯಾನ್ ಅಲ್ಲಿಗೆ ಆಗಮಿಸುತ್ತಾರೆ, ಪ್ರವಾದಿ (ಸ) ರ ಗೂಢಾಚಾರರಿಬ್ಬರು ಒಂಟೆ ನಿಲ್ಲಿಸಿದ್ದ ಸ್ಥಳವನ್ನು ಅಬೂಸುಫಿಯಾನ್ ಪರಿಶೋದಿಸಲಾರಂಭಿಸಿದರು. ಅಲ್ಲಿ ಬಿದ್ದಿದ್ದ ಒಂಟೆಯ ಮಲಮೂತ್ರವನ್ನು ಅವರು ಸೂಕ್ಷ್ಮವಾಗಿ ಪರಿಶೀಲಿಸಿದರು. ಅದರಲ್ಲಿ ಖರ್ಜೂರದ ಬೀಜಗಳು ಕಂಡು ಬಂದವು. "ಇದು ಮದೀನದ ಒಂಟೆಗಳು ಎಂಬುದರಲ್ಲಿ ಸಂಶಯವೇ ಇಲ್ಲ" ಎಂದು ಅಬೂಸುಫಿಯಾನ್ ತಮ್ಮಷ್ಟಕ್ಕೇ ಹೇಳಿಕೊಂಡರು. ಆದ್ದರಿಂದ ಅವರು ಎಂದಿನ ಹಾದಿಯನ್ನು ತೊರೆದು, ಕೆಂಪು ಸಮುದ್ರ ತೀರದ ಹಾದಿಯನ್ನು ಹಿಡಿದರು. ನಂತರ ಎಲ್ಲಿಯೂ ವಿಶ್ರಾಂತಿ ಪಡೆಯದೆ ನೇರ ಮಕ್ಕಾದತ್ತ ಪ್ರಯಾಣಿಸಿದರು...
ಬಿಅ್‌ರ್ ಅಬೀಉತ್‌ಬದಿಂದ ನೀರು ಸಂಗ್ರಹಿಸಲು ಪ್ರವಾದಿ (ಸ.ಅ) ರು ಅನುಯಾಯಿಗಳೊಂದಿಗೆ ಹೇಳಿದರು.. ಅನುಯಾಯಿಗಳು ನೀರು ತಂದುಕೊಟ್ಟಾಗ ಪ್ರವಾದಿ (ಸ.ಅ) ರು ಅದರಿಂದ ಸ್ವಲ್ಪ ನೀರು ತೆಗೆದು ಕುಡಿದರು, ಸ್ನಾನ ಮಾಡಿದರು. ನಂತರ ತಮ್ಮ ಮುನ್ನೂರ ಹತ್ತಕ್ಕೂ ಹೆಚ್ಚಿದ್ದ ಅನುಚರರೊಂದಿಗೆ ಯಾತ್ರೆ ಮುಂದುವರಿಸಿದರು. ಬದ್ರ್ ಯುದ್ಧದಲ್ಲಿ ಭಾಗವಹಿಸಿದ ಸ್ವಹಾಬಿಗಳ ಸಂಖ್ಯೆ ಎಷ್ಟೆಂಬುದರಲ್ಲಿ ಚರಿತ್ರೆಗಾರರ ಮಧ್ಯೆ ಭಿನ್ನಾಭಿಪ್ರಾಯವಿದೆ. ಕೆಲವರು ಅನಿವಾರ್ಯ ಕಾರಣಗಳಿಂದ ಯುದ್ಧದಿಂದ ದೂರ ನಿಂತೂ, ಯುದ್ದ ಸಂಪತ್ತಿನಲ್ಲಿ ಪಾಲು ಪಡೆದವರನ್ನೂ ಲೆಕ್ಕ ಹಾಕಿದರೆ, ಇನ್ನು ಕೆಲವರು ಯುದ್ಧದಲ್ಲಿ ಭಾಗವಹಿಸಿದವರ ಸಂಖ್ಯೆಯನ್ನು ಮಾತ್ರ ಪರಿಗಣಿಸಿದರು. ಪ್ರಬಲ ಅಭಿಪ್ರಾಯದ ಪ್ರಕಾರ ಅವರು ಹದಿಮೂರು ಮಂದಿಯಿದರು. ರೌಹಾಇಲ ತಲುಪಿದಾಗ ಪ್ರವಾದಿ (ಸ.ಅ) ರು ಸ್ವಹಾಬಿಗಳ ಲೆಕ್ಕ ಹಾಕಿದರೆಂದೂ, ಮುನ್ನೂರ ಹದಿಮೂರು ಮಂದಿಯಿದ್ದಾರೆಂದು ತಿಳಿದಾಗ ಖುರ್‌ಆನ್‌ನಲ್ಲಿ ಪರಾಮರ್ಶಿಸಲ್ಪಟ್ಟ ತ್ವಾಲೂತರೊಂದಿಗೆ ನದಿ ದಾಟಿದ ಅದೇ ಸಂಖ್ಯೆ ಎಂದು ಸಂತೋಷ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ. ತ್ವಾಲೂತರೊಂದಿಗೆ ನದಿ ದಾಟಿದವರೆಲ್ಲಾ ನೈಜ ವಿಶ್ವಾಸಿಗಳಾಗಿದ್ದರು.
(ಅಝ್ಝಿರತ್ತುಲ್ ಹಲಬಿಯ್ಯಾ 2:158),
ಉಸ್ಮಾನುಬ್ ಅಪ್ಫಾನ್ ಬದ್ರ ಯುದ್ಧದಲ್ಲಿ ಭಾಗವಹಿಸಿಲ್ಲ. ಆ ಹೊತ್ತಿಗೆ ಅವರ ಪತ್ನಿ ಹಾಗೂ ಪ್ರವಾದಿ (ಸ.ಅ) ಪುತ್ರಿ ರುಖಿಯ್ಯ: ರೋಗಶಯ್ಶೆಯಲ್ಲಿದ್ದರು. ಆದ್ದರಿಂದ ಪತ್ನಿಯನ್ನು ನೋಡಿಕೊಳುತ್ತಾ ಮದೀನದಲ್ಲೇ ಉಳಿದುಕೊಳ್ಳುವಂತೆ ಪ್ರವಾದಿ (ಸ.ಅ) ರು ಅವರಿಗೆ ಹೇಳಿದ್ದರು.
ಆ ರೋಗ ಶಯ್ಶೆಯಲ್ಲೇ ರುಖಿಯ್ಯ: ಮರಣ ಹೊಂದಿದರು, ಬದ್ರ್ ಯುದ್ಧದ ಸಂದರ್ಭದಲ್ಲಿ ಉಸ್ಮಾನ್ ವಸೂರಿ ರೋಗಿಯಾಗಿದ್ದರು ಎಂದು ಹೇಳಲಾಗುತ್ತದೆ. ಬದ್ರ್ ಯುದ್ಧದಲ್ಲಿ ಭಾಗವಹಿಸಿದ ಪ್ರತಿಫಲ ನಿನಗೆ ಲಭ್ಯವಾಗುತ್ತದೆ ಎಂದು ಪ್ರವಾದಿ (ಸ.ಅ) ಉಸ್ಮಾನ್(ರ) ರೊಂದಿಗೆ ಹೇಳಿದ್ದರು.
ತ್ವಲ್ಹತ್‌ಬ್ನ್ ಆಬ್‌ದಿಲ್ಲಾ, ಸ ಈದುಬ್‌ನ್ ಝ್ಶೆದ್ ಎಂಬಿಬ್ಬರನ್ನು ಅಬೂಸುಫಿಯಾನರ ಖಾಫಿಲದ
ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಕಳುಹಿಸಿಕೊಡಲಾಗಿತ್ತು. ಆದ್ದರಿಂದ ಅವರಿಗೆ ಬದ್ರ್ ಯುದ್ಧದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಯುದ್ಧ ಮುಗಿದು ಹಿಂದಿರುಗುತ್ತಿದ್ದ ಪ್ರವಾದಿ(ಸ.ಅ)ರನ್ನು ಅವರು ದಾರಿ ಮಧ್ಯೆ ಎದುರುಗೊಂಡಿದ್ದರು. ಪ್ರವಾದಿ(ಸ.ಅ)ರು ಅವರಿಗೆ ಯುದ್ಧ ಸಂಪತ್ತುಗಳಲ್ಲಿ ಪಾಲು ನೀಡಿದರು. ತಮಗೆ ಯುದ್ಧದಲ್ಲಿ ಭಾಗವಹಿಸಿದ ಪ್ರತಿಫಲವಿದೆಯೇ..? ಎಂದು ಇಬ್ಬರೂ ಅನ್ವೇಷಿಸಿದರು.
ಇದೆ ಎಂದರು ಪ್ರವಾದಿ(ಸ.ಅ)ರು.
ಆನ್ಸಾರಿಗಳಲ್ಲೊಬ್ಬರಾದ ಅಬೂಉಮಾಮತ್‌ಬ್ನ್ ಸಅ್‌ಲಬ ಯುದ್ಧಕ್ಕೆ ಹೊರಡಲು ನಿರ್ಧರಿಸಿದ್ದರು. ಆದರೆ, ಅವರ ತಾಯಿ ರೋಗಾವಸ್ಥೆಯಲ್ಲಿದ್ದುದರಿಂದ, ತಾಯಿಯನ್ನು ನೋಡಿಕೊಳ್ಳುವಂತೆ ಹೇಳಿ ಪ್ರವಾದಿ(ಸ.ಅ)ರು ಅವರನ್ನು ಬಿಟ್ಟು ಹೋಗಿದ್ದರು. ಬದ್ರ್‌ನಿಂದ ಹಿಂದಿರುಗುವಷ್ಟರಲ್ಲಿ ಆ ತಾಯಿ ಮರಣ ಹೊಂದಿದ್ದರು. ಅವರ ಖಬ್ರಿನ ಸಮೀಪದಲ್ಲಿ ಪ್ರವಾದಿ(ಸ.ಅ)ರು ಜನಾಝ ನಮಾಝ್ ನಿರ್ವಹಿಸಿದರು.
ಅಬೂಲುಬಾಬಃಬ್‌ನು ಅಬ್‌ದಿಲ್ ಮುಂದಿರ್‌ರನ್ನು ರೌಹಾಇ (ಮದೀನದಿಂದ ಎರಡು ರಾತ್ರಿ ಯಾತ್ರಾ ದೂರವಿರುವ ಒಂದು ಸ್ಥಳ)ದಿಂದ ಹಿಂದಕ್ಕೆ ಕಳುಹಿಸಿದರು. ಮದೀನದಲ್ಲಿ ಅವರನ್ನು ಪ್ರವಾದಿ(ಸ.ಅ)ರ ಪ್ರತಿನಿಧಿಯಾಗಿ ನಿಶ್ಚಯಿಸಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿತ್ತು. ಜಮಾಅತ್ ನಮಾಝ್‌ಗೆ ನೇತೃತ್ವ ನೀಡಲು ಅಬ್ದುಲ್ಲಾಹಿಬ್ನ್ ಉಮ್ಮುಮಕ್ದೂಮ್‌ರನ್ನು ಮದೀನದಿಂದ ಹೊರಡುವ ಸಂದರ್ಭದಲ್ಲೇ ನೇಮಿಸಲಾಗಿತ್ತು..
ಆಸ್ವಿಮುಬ್‌ನು ಅದಿಯ್ಯ್‌ರನ್ನು ಸಹ ರೌಹಾಇಯಿಂದಲೇ ಹಿಂದಕ್ಕೆ ಕಳುಹಿಸಲಾಯಿತು. ಬುಖಾರಿಯ ಹಾಗೂ ಪ್ರಾಂತ ಪ್ರದೇಶಗಳ ಪ್ರತಿನಿಧಿಯಾಗಿ ಅವರನ್ನು ನೇಮಿಸಲಾಗಿತ್ತು, ಹಾರಿಸ್‌ಬ್‌ನುಲ್ ಅಮ್ರ್‌ರನ್ನು ಸಹ ರೌಹಾಇಯಿಂದಲೇ ಹಿಂದಕ್ಕೆ ಕಳುಹಿಸಿದರು. ಅಮ್ರ್‌ಬ್ನ್ ಔಫ್ ಸಂತತಿಗಳ ಕುರಿತು ಪ್ರವಾದಿ(ಸ.ಅ)ರಿಗೆ ದೊರೆತ ವಿವರಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಅವರ ದೌತ್ಯವಾಗಿತ್ತು.
ಹಾರಿಸುಬ್‌ನುಝ್ಝಮ್ಮ ಹಾಗೂ ಖವ್ವಾತ್‌ಬ್ನ್ ಜುಬೈರ್ ಗಾಯಗೊಂಡ ಕಾರಣ ರೌಹಾಇಯಿಂದಲೇ ಹಿಂದಿರುಗಬೇಕಾಯಿತು. ಈ ಎಲ್ಲರಿಗೂ ಪ್ರವಾದಿ(ಸ.ಅ)ರು ಯುದ್ದ ಸಂಪತ್ತಿನಲ್ಲಿ ಪಾಲು ನೀಡಿದ್ದರು. ಆನಸ್‌ಬ್ನ್ ಮಾಲಿಕ್ ಬದ್‌ರ್ ಯುದ್ದದಲ್ಲಿ ಭಾಗವಹಿಸಿ, ಯುದ್ದ ಸಂಪತ್ತಿನಲ್ಲಿ ಪಾಲು ಪಡೆದಿದ್ದಾರೆ ಎಂಬೊಂದು ಅಭಿಪ್ರಾಯವಿದೆ. ಇವರನ್ನೆಲ್ಲಾ ಬದ್ರ್ ಯೋಧರ ಸಾಲಿನಲ್ಲಿ ಲೆಕ್ಕ ಹಾಕುವ ಹಾಗೂ ಲೆಕ್ಕ ಹಾಕದ ಚರಿತ್ರೆಗಾರರಿದ್ದಾರೆ..
ಹೀಗೆ ಬದ್ರ್ ಯೋಧರ ಲೆಕ್ಕದ ಹೆಸರಲ್ಲಿ ಭಿನ್ನಾಭಿಪ್ರಾಯವಿದ್ದವು..
ಹಬೀಬ್‌ನು ಯಸಾಫ್ ಬಹುದೈವ ವಿಶ್ವಾಸಿ ಹಾಗೂ ಪ್ರಭಾವೀ ನಾಯಕರೂ, ಧೀರ ಯೋಧರೂ ಆಗಿದ್ದರು. ಮುಸ್ಲಿಮರಾಗಿದ್ದ ತಮ್ಮ ಚಿಕ್ಕಪ್ಪಂದಿರ ಪುತ್ರರ ಜೊತೆಗೂಡಿ, ಅವರು ಯುದ್ಧದಲ್ಲಿ ಭಾಗವಹಿಸುವ ಉದ್ದೇಶದಿಂದ ಆಗಮಿಸಿದರು
ಅವರೊಂದಿಗೆ ಪ್ರವಾದಿ(ಸ.ಅ)ರು ಕೇಳಿದರು.
"ಅಲ್ಲಾಹನಲ್ಲೂ, ಅವನ ದೂರಲ್ಲೂ ನೀನು ವಿಶ್ವಾಸ ತಾಳಿರುವೆಯಾ..?"
”ಇಲ್ಲ.." ಎಂದು ಹಬೀಬ್‌ನು ಯಸಾಫ್ ಉತ್ತರಿಸಿದರು..
ಪ್ರವಾದಿ(ಸ.ಅ)ರು ಅವರನ್ನು ಹಿಂದಕ್ಕೆ ಕಳುಹಿಸಿದರು.
"ಶಿರ್ಕ್‌ನ ಜನರ ವಿರುದ್ಧ ಯುದ್ಧ ಮಾಡಲು ಶಿರ್ಕ್‌ನ ಜನರೊಂದಿಗೆ ನಾವು ಸಹಾಯ ಬೇಡಲಾರೆವು.."
ಎಂದು ಆ ಬಳಿಕ ಪ್ರವಾದಿ(ಸ.ಅ)ರು ಸ್ಪಷ್ಟಪಡಿಸಿದರು..
ಆ ನಂತರವೂ ಅವರು ಮುಸ್ಲಿಮರ ಜೊತೆಗೆಯೇ ಇದ್ದರು. ಪ್ರವಾದಿ(ಸ.ಅ)ರು ಪುನಃ ಅವರೊಂದಿಗೆ ಅದೇ ಪ್ರಶ್ನೆ ಕೇಳಿದರು. ಅವರು ಸಹ ಹಳೆಯ ಉತ್ತರವನ್ನೇ ನೀಡಿದ್ದರು. ಎರಡನೇ ಬಾರಿಯೂ ಸಹ ಪ್ರವಾದಿ(ಸ.ಅ)ರು ಅವರನ್ನು ಹಿಂದಕ್ಕೆ ಕಳುಹಿಸಿದರು. ಮೂರನೇ ಬಾರಿಯೂ ಅವರು ಬಂದಾಗ ಪ್ರವಾದಿ(ಸ.ಅ)ರು ಕೇಳಿದರು.
“ಅಲ್ಲಾಹನಲ್ಲೂ, ಅವನ ದೂತರಲ್ಲೂ ನೀನು ವಿಶ್ವಾಸ ತಾಳಿರುವೆಯಾ..?”
“ಹೌದು..” ಅಲ್ಲಿಯೇ ಸತ್ಯಸಾಕ್ಷ್ಯವಚನವನ್ನು ಉಚ್ಚರಿಸಿದರು ಕೂಡ.
ಪ್ರವಾದಿ(ಸ.ಅ)ರು ಅವರನ್ನು ಸ್ವೀಕರಿಸಿದರು. ಯುದ್ಧದಲ್ಲಿ ಭಾಗವಹಿಸಿ, ವೀರಾವೇಶದಿಂದ ಹೋರಾಡಿದರು. ಸತ್ಯ ಸಂಸ್ಥಾಪನೆ ಹಾಗೂ ಅಧರ್ಮದ ಮೂಲೋತ್ಪಾಟನೆಗಾಗಿ ನಡೆಸುವ ಧರ್ಮ ಸಮರದಲ್ಲಿ ಅವಿಶ್ವಾಸಿಯೊಬ್ಬನ ಸಹಾಯವನ್ನು ತಳ್ಳಿಹಾಕುವ ಮೂಲಕ ಎಲ್ಲಾ ಕಾಲದ ಮುಸ್ಲಿಮರಿಗೆ ಪ್ರವಾದಿ(ಸ.ಅ)ರು ಮಹತ್ತರವಾದ ಸಂದೇಶವನ್ನು ರವಾನಿಸಿದ್ದಾರೆ..
ಸೋಲು ಗೆಲುವನ್ನು ನೀಡುವವನು ಅಲ್ಲಾಹನಾಗಿದ್ದಾನೆ. ಅವನ ಮೇಲಿನ ದೃಢ ವಿಶ್ವಾಸ ಹಾಗೂ ಪ್ರಾಮಾಣಿಕತೆಯೇ ವಿಶ್ವಾಸಿಗಳ ಪಥವಾಗಿರಬೇಕು. ಆಗ ಬಹುದೈವ ವಿಶ್ವಾಸಿಯ ಸಹಾಯದ ಅಗತ್ಯವಿರುವುದಿಲ್ಲ..
ರೌಹಾಇಯಲ್ಲಿ ಹಬೀಬ್‌ನು ಯಸಾಫ್ ಮುಸ್ಲಿಮರ ಜೊತೆಗೂಡಿದ್ದೇ ಇಸ್ಲಾಮ್ ಸ್ವೀಕರಿಸಿದ ನಂತರವಾಗಿತ್ತು ಎಂಬ ಇನ್ನೊಂದು ಅಭಿಪ್ರಾಯವೂ ಇದೆ. ಇದುವೆ ಯುಕ್ತಿಪರವಾಗಿಯೂ, ತಾತ್ವಿಕವಾಗಿಯೂ ಸ್ವೀಕಾರಾರ್ಹವಾದ ಅಭಿಪ್ರಾಯ..
(ಡಾ. ಮುಹಮ್ಮದ್ ಅಬ್ದು ಯಮಾನಿ-ಬದ್‌ರಿಲ್ ಕುಬ್‌ರ-118),
ಬದ್‌ರ್ ಕಾರ್ಯಾಚರಣೆಗೆ ಹೋಗುವಾಗ ಮುಸ್ಲಿಮರು ಮೂರು ಪತಾಕೆಗಳನ್ನು ಎತ್ತಿ ಹಿಡಿದಿದ್ದರು.. ಒಂದು ಬಿಳಿ ಬಣದ ಹಾಗೂ ಎರಡು ಕಪ್ಪು ಬಣ್ಣದ ಪತಾಕೆಗಳು, ಮಿಅಸ್‌ಅಬ್‌ಬ್‌ನು ಉಮೈರ್ ಬಿಳಿ ಪತಾಕೆಯನ್ನು ಹಿಡಿದಿದ್ದರು. ಕಪ್ಪು ಪತಾಕೆಗಳಲ್ಲಿ ಒಂದು ಅಲಿಯ್ಯ್‌ಬ್ನ್ ಅಬಿತ್ವಾಲಿಬ್‌ರ ಕೈಯಲ್ಲಿದ್ದರೆ, ಇನ್ನೊಂದು ಅನ್ಸಾರಿಗಳಲ್ಲೊಬ್ಬರಾದ ಸಅ್‌ದ್‌ಬ್ನ್ ಮುಆದ್‌ರ ಕೈಯಲ್ಲಿದ್ದವು.
ಹುಬಾಬ್‌ನುಲ್ ಮುಂದಿರ್‌ರ ಕೈಯಲ್ಲಿತ್ತು ಎಂಬ ಅಭಿಪ್ರಾಯವೂ ಇದೆ..
(ಅಝ್ಝೀರತುಲ್ ಹಲಬಿಯ್ಯಾ- 2:157, ಅಲ್ ಬಿದಾಯತುವನ್ನಿಹಾಯ, ಇಬ್ನು ಕಸೀರ್ 3:296),
*ಪ್ರಯಾಣಕ್ಕೆ* ಮುಸ್ಲಿಮರ ಜೊತೆಗಿದ್ದ ಒಂಟೆಗಳು ಕೇವಲ ಎಪ್ಪತ್ತು. ಸರದಿ ಪ್ರಕಾರ ಮೂರು ನಾಲ್ಕು ಮಂದಿ ಒಂಟೆಯ ಮೇಲೆ ಕೂತು ಪ್ರಯಾಣಿಸಿದ್ದರು. ಒಬ್ಬರು ಒಂಟೆಯ ಮೇಲೆ ಕೂತಾಗ ಉಳಿದ ಮೂವರು ನಡೆಯುತ್ತಿದ್ದರು..
ಪ್ರವಾದಿ(ಸ.ಅ)ರು, ಅಲಿ(ರ), ಮರ್ಸದ್ ಅಬೀ ಮರ್ಸದ್ ಒಂದೇ ಒಂಟೆಯ ಮೇಲೆ ಸರದಿಯಂತೆ ಕೂತು ಪ್ರಯಾಣಿಸಿದ್ದರು. ತಮ್ಮ ಸರದಿಯಲ್ಲಿ ತಾವೇ ಪ್ರಯಾಣಿಸಬೇಕೆಂದೂ, ನಾವು ನಡೆದೇ ಬರುತ್ತೇವೆಂದು ಅಲಿ ಹಾಗೂ ಮರ್ಸದ್ ಹೇಳಿದ್ದರೂ ಪ್ರವಾದಿ(ಸ.ಅ)ರು ಒಪ್ಪಿಕೊಂಡಿರಲಿಲ್ಲ.
"ನೀವಿಬ್ಬರೂ ನಡೆಯುವುದರಲ್ಲಿ ನನಗಿಂತ ಶಕ್ತಿವಂತರೇನೂ ಅಲ್ಲ. ನಿಮ್ಮಂತೆಯೇ ನನಗೂ ಅಲ್ಲಾಹನ ಪ್ರತಿಫಲದ ಅಗತ್ಯವಿದೆ.."
ಎಂದು ಪ್ರವಾದಿ(ಸ.ಅ)ರು ಅವರಿಗೆ ಉತ್ತರಿಸಿದರು..
ಅದು ಪ್ರವಾದಿ(ಸ.ಅ)ರ ಸ್ವಭಾವವಾಗಿತ್ತು, ಅನುಯಾಯಿಗಳಿಗಿಲ್ಲದ ಯಾವ ಸುಖ ಸೌಲಭ್ಯವನ್ನು. ಅವರು ಬಯಸುತ್ತಿರಲಿಲ್ಲ. ಕಷ್ಟವಾದರೂ, ಸುಖವಾದರೂ ಅನುಯಾಯಿಗಳ ಜೊತೆ ಹಂಚಿಕೊಳ್ಳುವ ಮಹೋನ್ನತ ಸ್ವಭಾವ ಅವರದ್ದಾಗಿತ್ತು..
ಈ ಕೆಳಗೆ ಹೇಳಲಾಗುವ ಕ್ರಮದಲ್ಲಿ ಸೈನಿಕ ಟ್ರೂಪ್‌ಗಳಾಗಿ ವಿಭಜನೆಗೊಂಡು, ಒಂದೊಂದು ಟ್ರೂಪ್ ಒಂದೊಂದು ಒಂಟೆಯಲ್ಲಿ ಪ್ರಯಾಣಿಸಿದರು.
*1),* ಹಂಝ, ಝೈದ್‌ಬ್ನ್‌ಹಾರಿಸ, ಅಬೂಕಬ್‌ಶ, ಅನಸತ್ (ಪ್ರವಾದಿ(ಸ.ಅ)ರ ವಿಮೋಚನೆಗೊಂಡ ಸೇವಕ)
*2).* ಉಬೈದತುಬ್‌ನುಲ್ ಹಾರಿಸ್, ಮಿಸ್‌ತ್ವಹ್‌ಬ್‌ನು ಆಸಾನಃ ಅಲ್ ಹಾರಿಸ್‌ರ ಇಬ್ಬರು ಪುತ್ರರಾದ ತ್ವುಫಲ್, ಹುಸನ್
*3),* ಅಫ್‌ರಾಇಯವರ ಮಕ್ಕಳಾದ ಮುಆದ್, ಔಫ್, ಮುಅವ್ವಿದ್ ಹಾಗೂ ಅಲ್ ಹಂರಾಅ್,
*4),* ಉಬಯ್ಯ್‌ಬ್‌ನ್ ಕಅ್‌ಬ್, ಉಮಾರತುಬ್ನ್ ಹಾಸ್‌ಮ್, ಹಾರಿಸತ್‌ಬ್ನ್ ನುಅ್‌ಮಾನ್
*5),* ಖಿರಾಸುಬ್‌ನುಸ್ಸ್ವಮ್ಮ, ಖತ್ವ್‌ಬತುಬ್ನ್ ಆಮಿರ್‌ಬ್‌ನ್ ಹದೀದ, ಉತ್‌ಬತ್‌ಬ್‌ನು ಗಝ್‌ವಾನ್, ತ್ವುಲೈಬ್‌ನ್ ಉಮೈರ್
*6),* ಮಿಸ್ವಾಬುಬ್‌ನು ಉಮೈರ್, ಸುವ್ಶೆಬತ್ತುಬ್‌ನು ಹರ್ಮಲ, ಮಸ್‌ಊದುಬ್ನ್ ರಬೀಲ್, ಮಸ್‌ಊದ್‌ಬ್ನ್ ರಜೀಅ್,
*7).* ಆಮ್ಮಾರುಬ್‌ನ್ ಯಾಸಿರ್, ಅಬ್ದುಲ್ಲಾಹಿಬ್ನ್ ಮಸ್‌ಊದ್
*8).* ಅಬ್ದುಲ್ಲಾಹಿಬ್ನ್ ಕಅ್‌ಬ್, ಅಬೂದಾವೂದುಲ್ ಮಾಸಿನಿ, ಸುಲ್ಶೆತ್ವ್‌ಬ್ನ್ ಖೈಸ್
*9),* ಉಸ್ಮಾನುಬ್ನ್ ಮಳ್‌ಊನ್ ಖದಾಮಃ, ಅಬ್ದುಲ್ಲಾಹಿಬ್ನ್ ಮಳ್‌ಊನ್, ಸಈಅದುಬ್‌ನ್ ಉಸ್ಮಾನ್
*10).* ಅಬೂಬಕ್ಕರ್, ಉಮರ್, ಅಬ್ದುರ್ರಹ್ಮಾನ್‌ಬ್ನ್ ಔಫ್
*11),* ಸಅದ್‌ಬ್‌ನ್ ಮುಅದ್, ಹಾರಿಸ್‌ಬ್ನ್ ಅನಸ್, ಹಾರಿಸ್‌ಬ್ನ್ ಔಸ್
*12),* ಸಅದ್‌ಬ್ನ್ ಝೈದ್, ಸಲಮತುಬ್‌ನು ಸಲಾಮ, ಉಬಯ್ಯ್‌ದುಬ್‌ನು ಬಿಶ್‌ರ್, ರಾಫಿಯಬ್‌ನು ಯಝೀದ್‌ಸ, ಹಾರಿಸ್‌ಬ್ನ್ ಖಸ್‌ಮ
*13),* ರಿಫಾಅಃ, ಖಲ್ಲಾದ್ (ಇಬ್ಬರೂ ರಾಫಿಇರ ಪುತ್ರರು), ಉಬೈದ್‌ಬ್ನ್‌ನು ಝೈದಿಲ್ ಅನ್ಸಾರಿ
ರಿಫಾಅ: ಹಾಗೂ ಜೊತೆಗಾರರ ಒಂಟೆ ರೌಹಾಇ ತಲುಪುತ್ತಿದ್ದಂತೆ ಕುಸಿದು ಬಿದ್ದವು.
ರಿಫಾಅ: ಹಾಗೂ ಜೊತೆಗಾರರ ಒಂಟೆ ರೌಹಾಇ ತಲುಪುತ್ತಿದ್ದಂತೆ ಕುಸಿದು ಬಿದ್ದವು. ಪ್ರವಾದಿ(ಸ,ಅ)ರು ಅವರ ಬಳಿಗೆ ಬಂದಾಗ ಅವರು ತಮ್ಮ ಸಂಕಷ್ಟವನ್ನು ಹೇಳಿಕೊಂಡರು. ಪ್ರವಾದಿ(ಸ.ಅ)ರು ಸ್ವಲ್ಪ ನೀರು ತರುವಂತೆ ಹೇಳಿದರು. ಅವರು ನೀರು ತಂದುಕೊಟ್ಟರು. ಪ್ರವಾದಿ(ಸ.ಅ)ರು ಆ ನೀರಿನಿಂದ ಅಂಗ ಶುದ್ಧಿ ಮಾಡಿದರು, ಅಂಗಶುದ್ದಿ ಮಾಡಿದ ನೀರು ಒಂದು ಪಾತ್ರೆಗೆ ಬೀಳುವಂತೆ ವ್ಯವಸ್ಥೆ ಮಾಡಿದ್ದರು. ಅದರಿಂದ ಸ್ವಲ್ಪ ನೀರು ತೆಗೆದು ಒಂಟೆಯ ಬಾಯಿಗೆ ಸುರಿದರು. ಉಳಿದ ನೀರನ್ನು ಅದರ ಶರೀರದ ಮೇಲೆ ಚಿಮುಕಿಸಿದರು. ನಂತರ ಅವರೊಂದಿಗೆ ಪ್ರಯಾಣ ಮುಂದುವರಿಸುವಂತೆ ಹೇಳಿದರು..
ಅವರನ್ನು ಹೊತ್ತುಕೊಂಡು ಆ ಒಂಟೆ ಧಾವಿಸಿ ನಡೆದವು..
(ಡಾ. ಮುಹಮ್ಮದ್ ಅಬ್ದು ಯಾಮನಿ. ಬದ್‌ರೀಲ್ ಕುಬ್‌ರ-120 ಅಸ್ಸೀರತುಲ್ ಹಲಬಿಯ್ಯ-2:158)
ಮುಸ್ಲಿಮರ ಜೊತೆಗೆ ಐದು ಕುದುರುಗಳಷ್ಟೇ ಇದ್ದವು. ಪ್ರವಾದಿ(ಸ.ಅ)ರ ಜೊತೆಗೆ ಎರಡು ಮರ್ಸದ್‌ರ ಜೊತೆ ಒಂದು, ಮಿಖ್‌ದಾದ್‌ರ ಜೊತೆ ಒಂದು, ಝುಬೈರ್‌ರ ಜೊತೆ ಒಂದು ಝುಬೈದ ಎರಡಿತ್ತೆಂಬ ಅಭಿಪ್ರಾಯವೂ ಇದೆ.
(ಅಸ್ಸೀರತುಲ್ಹಬಿಯಯ್ಯಾ).
ಬುಯೂತ್ತುಸ್ಸುಖ್‌ಯಾ (ಬಿಅ್‌ರು ಅಬೀ ಉತ್‌ಬ) ದಿಂದ ಯಾತ್ರೆ ಮುಂದುವಸಿರುವ ಪ್ರವಾದಿ(ಸ.ಅ)ರು ಯುದ್ದ ವಸ್ತ್ರಧರಿಸಿ, ಖಡ್ಗ ಅಣಿಗೊಳಿಸಿದರು. ನಂತರ ಅನುಯಾಯಿಗಳಿಗಾಗಿ ಅಲ್ಲಾಹನೊಂದಿಗೆ ಪ್ರಾರ್ಥಿಸಿದರು.
"ಅಲ್ಲಾಹನೇ, ಇವರು ನಗ್ನ ಪಾದದವರಾಗಿದ್ದಾರೆ. ನೀನು ಇವರನ್ನು ವಾಹನ ಏರುವಂತೆ ಮಾಡು. ಇವರು ನಗ್ನರಾಗಿದ್ದಾರೆ, ನೀನು ಇವರಿಗೆ ಬಟ್ಟೆಬರೆಗಳನ್ನು ಧರಿಸುವಂತೆ ಮಾಡು. ಹಸಿದವರಾಗಿದ್ದಾರೆ. ನೀನಿವರಿಗೆ ಆಹಾರ ನೀಡು. ನಿನ್ನ ಔದಾರ್ಯದ ಮೂಲಕ ಇವರನ್ನು ನೀನು ಶ್ರೀಮಂತರನ್ನಾಗಿಸು.."
ಈ ಪ್ರಾರ್ಥನೆಗೆ ಅಲ್ಲಾಹನು ಉತ್ತರ ನೀಡಿದನು. ಬದ್‌ರ್‌ನಿಂದ ಹಿಂದಿರುಗಿ ಬರುವಾಗ ವಾಹನ ಬೇಕಾದವರಿಗೆ ವಾಹನ, ಉಡುಪಿಲ್ಲದವರಿಗೆ ಉಡುಪು, ಹಸಿದವರಿಗೆ ಆಹಾರ ಎಲ್ಲವೂಲಭ್ಯವಾಗಿದ್ದವು. ಖೈದಿಗಳನ್ನು ಬಿಡುಗಡೆಗೊಳಿಸಲು ಖುರೈಷಿಗಳು ನೀಡಿದ ದಂಡದ ಮೊತ್ತವು ಪ್ರತೀ ಕುಟುಂಬವನ್ನೂ ಆರ್ಥಿಕ ಅಡಚಣೆಗಳಿಂದ ಮೇಲೇಳುವಂತೆ ಮಾಡಿದವು. ಮದೀನದವರಿಗಾಗಿ ಪ್ರವಾದಿ(ಸ.ಅ)ರು ವಿಶೇಷ ಪ್ರಾರ್ಥನೆ ಮಾಡಿದರು.
“ಅಲ್ಲಾಹನೇ, ನಿಶ್ಚಯವಾಗಿಯೂ ಇಬ್ರಾಹೀಂ ನಿನ್ನ ದಾಸರೂ, ಮಿತ್ರರೂ, ಪ್ರವಾದಿಯೂ ಆಗಿದ್ದಾರೆ. ಮಕ್ಕಾದ ಜನತೆಗಾಗಿ ಅವರು ಪ್ರಾರ್ಥಿಸಿದರು. ನಾನು ಮುಹಮ್ಮದ್, ನಿನ್ನ ದಾಸನೂ, ಪ್ರವಾದಿಯೂ ಆಗಿದ್ದೇನೆ. ಮದೀನದವರಿಗಾಗಿ ಅವರ ಸ್ವಾಅ್, ಮುದ್ದ್(ಅಳತೆ ಪಾತ್ರೆಗಳು)ಗಳಲ್ಲಿ ಹಾಗೂ ಹಣ್ಣು ಹಂಪಲುಗಳಲ್ಲಿ ಸಮೃದ್ಧಿಯನ್ನು ಸುರಿಯುವಂತೆ ನಿನ್ನೊಂದಿಗೆ ನಾನು ಪ್ರಾರ್ಥಿಸುವೆನು. ಅಲ್ಲಾಹನೇ, ಮದೀನವನ್ನು ನಮಗೆ ಪ್ರಿಯಗೊಳಿಸು. ಅಲ್ಲಿಯ ಸಾಂಕ್ರಾಮಿಕ ವ್ಯಾಧಿಗಳನ್ನು ನೀನು ವಿದೂರಕ್ಕೆ ಸಾಗಿಸು, ಮದೀನದಲ್ಲಿ ಎರಡು ಕಪ್ಪು ಶಿಲೆಗಳು ಆವರಿಸಿಕೊಂಡಿರುವ ಸ್ಥಳವನ್ನು ನಾನು ಹರಮಾಗಿ (ಪವಿತ್ರ ಪ್ರದೇಶವಾಗಿ) ಘೋಷಿಸುವೆನು. ನಿನ್ನ ಮಿತ್ರರಾದ ಇಬ್ರಾಹೀಂ ಮಕ್ಕಾವನ್ನು ಹರಮಾಗಿ ಘೋಷಿಸಿದಂತೆ..!"
ಮುಸ್ಲಿಮರು ಯಾತ್ರೆ ಮಾಡುತ್ತಾ ಅರ್‌ಖ್‌ಳ್ಳಬ್‌ಯ್ ಎಂಬ ಸ್ಥಳವನ್ನು ತಲುಪಿದರು. ಅಲ್ಲಿ ವೃದ್ಧರಾದ ಒಬ್ಬ ಬದವಿಯನ್ನು ಎದುರುಗೊಂಡರು. ಖುರೈಷಿ ಖಾಫಿಲದ ಕುರಿತು ಆತನೊಂದಿಗೆ ವಿಚಾರಿಸಿದರು. ಆ ವೃದ್ಧನ ಬಳಿ ಯಾವುದೇ ವಿವರಗಳಿರಲಿಲ್ಲ. ಅದೇ ದಾರಿಯಲ್ಲಿ ಇನ್ನೊಬ್ಬರನ್ನು ಎದುರುಗೊಂಡರು ಅವರೊಂದಿಗೂ ಖಾಫಿಲದ ಕುರಿತು ವಿಚಾರಿಸಿದರು. ಪ್ರವಾದಿ(ಸ.ಅ)ರೊಂದಿಗೆಮಾತನನಾಡುವಂತೆ ಮುಸ್ಲಿಮರು ಆತನೊಂದಿಗೆ ಹೇಳಿದರು..
“ತಾವು ಅಲ್ಲಾಹನ ಪ್ರವಾದಿಯೇ..?" ಆ ವ್ಯಕ್ತಿ ಪ್ರವಾದಿ(ಸ.ಅ)ರೊಂದಿಗೆ ಕೇಳಿದರು.
"ಹೌದು.."
"ತಾವು ಅಲ್ಲಾಹನ ದೂತರು ಹೌದೆಂದಾದರೆ ನನ್ನ ಈ ಒಂಟೆಯ ಹೊಟ್ಟೆಯಲ್ಲೇನಿದೆ ಎಂದು ಹೇಳುವಿರಾ..?”
ಆ ವ್ಯಕ್ತಿಯ ಪ್ರಶ್ನೆ ಕೇಳಿ ಸಲಾಮತ್‌ಬ್ನ್ ಸಲಾಮಃರಿಗೆ ಸಿಟ್ಟು ಬಂದವು..
"ಪ್ರವಾದಿಯವರೊಂದಿಗೆ ನೀನು ಕೇಳಬೇಡ, ನನ್ನೊಂದಿಗೆ ಕೇಳು ನಾನು ಹೇಳಿಕೊಡುತ್ತೇನೆ. ನೀನು ಒಂಟೆಯ ಜೊತೆ ಸಂಸರ್ಗ ನಡೆಸಿದೆ. ಹೀಗೆ ನಿನ್ನಿಂದ ಉಂಟಾದ ಮಗು ಈ ಒಂಟೆಯ ಹೊಟ್ಟೆಯಲ್ಲಿದೆ.."
ಆದರೆ, ಸಲಾಮಃರ ಮಾತು ಪ್ರವಾದಿ(ಸ.ಅ)ರಿಗೆ ಇಷ್ಟವಾಗಲಿಲ್ಲ..
"ನಿಲ್ಲಿಸು, ನೀನು ಆತನೊಂದಿಗೆ ಅಶ್ಲೀಲವಾಗಿ ಮಾತನಾಡುತ್ತಿರುವೆಯಾ..?"
ಎಂದು ಸಿಟ್ಟಿನಿಂದ ಮುಖ ತಿರುಗಿಸಿದರು.
ಮುಸ್ಲಿಮರು ಯಾತ್ರೆ ಮುಂದುವರಿಸಿದರು..
ವಾದಿದಫಿರಾನ್ ಎಂಬ ಸ್ಥಳಕ್ಕೆ ಮುಟ್ಟಿದರು. ಸ್ವಫ್‌ರಾಇಯ ಸಮೀಪದ ಕಣಿವೆ ಪ್ರದೇಶವದು. ಮಕ್ಕಾದಿಂದ ಖುರೈಷಿಗಳು ಯುದ್ಧಕ್ಕೆ ಹೊರಟಿದ್ದಾರೆಂಬ ಸುದ್ದಿ ಅಲ್ಲಿ ಲಭಿಸಿದವು. ತಕ್ಷಣವೇ ರಂಗ ಬದಲಾದವು. ಎಪ್ಪತ್ತು ಮಂದಿಯ ವರ್ತಕ ಸಂಘವನ್ನು ತಡೆಯುವ ಉದ್ದೇಶದಿಂದ ಮುಸ್ಲಿಮರು ಹೊರಟಿದ್ದರ. ಆದರೆ, ಈಗ ಆಯುಧ ಬಲ ಹಾಗೂ ಸಂಖ್ಯೆಯ ದೃಷ್ಟಿಯಿಂದ ಶಕ್ತಿ ಯುತವಾಗಿರುವ ದೈತ್ಯ ಸೇನೆಯೊಂದಿಗೆ ಯುದ್ಧ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಅದೋ ಖುರೈಷಿಗಳು ತಮ್ಮ ಸಂಪತ್ತನ್ನು ರಕ್ಷಿಸಲು ಬೇಟೆ ಹಕ್ಕಿಗಳಂತೆ ಮದೋನ್ಮತ್ತರಾಗಿ ಹೊರಟಿದ್ದಾರೆ.
ಶಾಮ್‌ನ ವ್ಯಾಪಾರ ಹಾಗೂ ಅತ್ತ ಹೋಗುವ ವಾಣಿಜ್ಯ ಮಾರ್ಗವು ಖುರೈಷಿಗಳಿಗೆ ಇನ್ಯಾವುದಕ್ಕಿಂತಲೂ ಮುಖ್ಯವಾಗಿದ್ದವು..

ಪ್ರವಾದಿ (ಸ) ರಿಗೆ ಸಂಬಂಧಿಸಿದಂತೆ ಈ ಸಾಧ್ಯತೆ ಯಾದೃಚ್ಛಿಕವಾಗಿರಲಿಲ್ಲ. ಎರಡರಲ್ಲಿ ಒಂದು ಸಂಘವನ್ನು ಅಬೂಸುಫಿಯಾನ್ ನೇತೃತ್ವದ ವರ್ತಕ ಸಂಘ ಅಥವಾ ಖುರೈಷಿಗಳ ಸೈನಿಕ ಸಂಘವನ್ನು ಅಲ್ಲಾಹನು ವಾಗ್ದಾನ ಮಾಡಿದ್ದನು. ಆದ್ದರಿಂದ ಯುದ್ಧದ ಸಾಧ್ಯತೆಯ ಬಗ್ಗೆ ಪ್ರವಾದಿ (ಸ) ರಿಗೆ ತಿಳಿದಿದ್ದವು. ಅಲ್ಲಾಹನ ಸಹಾಯ ಹಾಗೂ ವಿಜಯ ಲಭಿಸುತ್ತದೆಂಬುದರಲ್ಲಿ ಪ್ರವಾದಿ (ಸ) ರಿಗೆ ದೃಢ ವಿಶ್ವಾಸವಿದ್ದವು...
ಮುಸ್ಲಿಮರಿಗೆ ಹಾಗೂ ಅವರ ಮುಖಂಡರಿಗೆ ಹಾಗೂ ಆಡಳಿತಾಧಿಕಾರಿಗಳಿಗೆ ಎಲ್ಲಾ ರಂಗಗಳಲ್ಲೂ ಉತ್ತಮ ಮಾದರಿಯೊಂದನ್ನು ತೋರಿಸಿಕೊಡಬೇಕಿತ್ತು. ತಮ್ಮ ನಿಲುವುಗಳ ಸಫಲತೆಯನ್ನು ಅನುಯಾಯಿಗಳಿಗೆ ತಿಳಿಸಿಕೊಡಬೇಕಿತ್ತು. ಯುದ್ದ ಭಿನ್ನವಾದ ಜಾಗ, ಜನರು ಅಲ್ಲಿಗೆ ಸಂಪೂರ್ಣ ತೃಪ್ತಿ ಹಾಗೂ ಅಲ್ಲಾಹನ ಸಹಾಯ ಲಭಿಸುವ ದೃಢ ವಿಶ್ವಾಸದೊಂದಿಗೆ ಹೋಗಬೇಕು. ಅವರು ಪ್ರಾಮಾಣಿಕ ಸಿದ್ಧತೆಗಳನ್ನು ಮಾಡಿಕೊಂಡಿರಬೇಕು. ದೈವಿಕ ಧರ್ಮಕ್ಕೆ ನೆರವಾಗಲು ಹಾಗೂ ಅಲ್ಲಾಹನ ವಚನವನ್ನು ಎತ್ತಿ ಹಿಡಿಯಲು ಶರೀರ ಹಾಗೂ ಸಮರ್ಪಿಸಬೇಕಾದ ರಂಗವೇ ಧರ್ಮಯುದ್ದ...
ಪ್ರವಾದಿ (ಸ) ರು ಅನುಯಾಯಿಗಳನ್ನು ಒಂದುಗೂಡಿಸಿ ಹೊಸ ಸಂದರ್ಭದ ಕುರಿತು ವಿವರಿಸಿದರು. ನಂತರ ಮುಕ್ತವಾಗಿ ಅಭಿಪ್ರಾಯಗಳನ್ನು ಹಂಚಿಕೊಳ್ಳುವಂತೆ ಹೇಳಿದರು. ಅರಬ್ ಉಪದ್ವೀಪದ ಮಾತ್ರವಲ್ಲ; ಲೋಕದ ಚರಿತ್ರೆಯ ಗತಿಯನ್ನು ಬದಲಾಯಿಸುವ, ಮುಸ್ಲಿಮರ ಬಗ್ಗೆ ಖುರೈಷಿಗಳಿಗೆ, ಮುಶ್ರಿಕರಿಗೆ ಹಾಗೂ ಮಕ್ಕಾ ಮದೀನದ ಸುತ್ತಮುತ್ತಲಿನ ಗೋತ್ರಗಳಿಗಿರುವ ಅಭಿಪ್ರಾಯಗಳನ್ನು ಬದಲಾಯಿಸುವ ಘೋರ ಯುದ್ದವೊಂದು ಆಸನ್ನವಾಗಿದೆ. ತಮ್ಮ ಅನುಯಾಯಿಗಳ ಸಿದ್ಧತೆ ಹಾಗೂ ಆತ್ಮ ಧೈರ್ಯ ಎಷ್ಟರಮಟ್ಟಿಗೆ ಶಶಕ್ತವಾಗಿದೆ ಎಂದು ತಿಳಿಯಲು ಪ್ರವಾದಿ (ಸ) ರು ಬಯಸಿದರು...
ಖುರೈಷಿಗಳು ತಮ್ಮ ಆಯುಧಗಳೊಂದಿಗೆ ದೊಡ್ಡ ಸಂಖ್ಯೆಯಲ್ಲಿ ಯುದ್ಧಕ್ಕೆ ಹೊರಟಿರುವ ವಿಷಯವನ್ನು ಅನುಯಾಯಿಗಳಿಗೆ ತಿಳಿಸಿದರು. ಯುದ್ಧ ನಡೆಯುವ ಸಾಧ್ಯತೆಯನ್ನು ಎತ್ತಿ ಹೇಳಿದರು. ಕೊನೆಗೆ “ನೀವೇನು ಹೇಳುತ್ತೀರಿ..?"
ಎಂದು ಪ್ರಶ್ನಿಸಿದರು.
"ಈರೋ ?” “ನಫೀರೋ?" ಯಾವುದು ನಿಮಗಿಷ್ಟ.. ?
ಕೆಲವರು "ಈರ" ಇಷ್ಟವೆಂದು ಹೇಳಿದರು. ಯುದ್ಧದ ವಿಷಯವನ್ನು ಯಾಕೆ ನಮ್ಮೊಂದಿಗೆ ಮೊದಲೇ ಹೇಳಲಿಲ್ಲ..? ನಾವು ಸಿದ್ದರಾಗಿ ಬರುತ್ತಿದ್ದೆವಲ್ಲವೇ..? ಎಂದು ಇನ್ನು ಕೆಲವರು ಆತಂಕ ವ್ಯಕ್ತಪಡಿಸಿದರು.
ಮತ್ತೊಂದು ವರದಿಯ ಪ್ರಕಾರ ಅಲ್ಲಾಹನ ದೂತರೇ, "ಈರ" ನ್ನು ಹಿಡಿಯಿರಿ. ಶತ್ರುಗಳನ್ನು ಬಿಟ್ಟು ಬಿಡಿರಿ..
ಕೆಲವು ಅನುಯಾಯಿಗಳ ಈ ರೀತಿಯ ಪ್ರತಿಕ್ರಿಯೆ ಕೇಳಿ ಪ್ರವಾದಿ (ಸ) ರ ಮುಖ ವಿವರ್ಣವಾದವು.
“ತಮ್ಮ ನಾಥನು ಸತ್ಯಸಂದೇಶದೊಂದಿಗೆ ಭವನದಿಂದ ತಮ್ಮನ್ನು ಹೊರಡಿಸಿದಂತೆ, ಸತ್ಯವಿಶ್ವಾಸಿಗಳಲ್ಲಿ ಒಂದು ವಿಭಾಗವು (ಅದನ್ನು ದ್ವೇಷಿಸುವವರಾಗಿದ್ದರು') ಎಂಬ ಖುರ್‌ಆನ್ ವಾಕ್ಯ ಅವತೀರ್ಣಗೊಂಡ ಹಿನ್ನೆಲೆಯಿದಾಗಿತ್ತು..
“ಜನರೇ , ನಿಮ್ಮ ಅಭಿಪ್ರಾಯ ಹೇಳಿರಿ ಪ್ರವಾದಿ (ಸ) ಮತ್ತೆ ಕೇಳಿದರು. ಆಗ ಅಬೂಬಕ್ಕರ್ (ರ) ಎದ್ದು ನಿಂತು ಮಾತನಾಡಿದರು. ಮುಸ್ಲಿಮರು ಆತ್ಮತ್ಯಾಗಕ್ಕೆ ಸಿದ್ದರಾಗುವಂತೆ ಕರೆ ನೀಡಿದರು. ನಂತರ ಉಮರ್ (ರ) ಮಾತನಾಡಿದರು. ಮುಹಾಜರುಗಳ ಶಕ್ತಿ, ಧೈರ್ಯ ಹಾಗೂ ಸ್ತೈರ್ಯ ಸ್ವಲ್ಪವೂ ಕಡಿಮೆಯಾಗಿಲ್ಲವೆಂದೂ, ಯುದ್ಧಕ್ಕೆ ಸಿದ್ದತೆ ನಡೆಸಬೇಕಾಗಿದೆ ಎಂದು ಹೇಳಿದರು.
“ಜನರೇ, ನಿಮ್ಮ ಅಭಿಪ್ರಾಯ ತಿಳಿಸಿರಿ" ಪ್ರವಾದಿ (ಸ) ರು ಮತ್ತೆ ಪುನರಾವರ್ತಿಸಿದರು. ಆಗ ಮಿಖ್ ದಾದುಬ್ನು ಅಮ್ರ್ ಹೇಳಿದರು. ಅಲ್ಲಾಹನ ದೂತರೇ, ಅಲ್ಲಾಹನು ತಮ್ಮೊಂದಿಗೆ ಹೇಳಿದ ವಿಷಯವನ್ನು ಕಾರ್ಯಗತಗೊಳಿಸಿರಿ. ಪ್ರವಾದಿ ಮೂಸಾರೊಂದಿಗೆ ಅವರ ಜನತೆ ಹೇಳಿದಂತೆ - ನೀನು ನಿನ್ನ ಸೃಷ್ಟಿ ಕರ್ತ ಸೇರಿ ಹೋಗಿ ಯುದ್ದ ಮಾಡಿ - ಎಂದು ನಾವು ಹೇಳುವುದಿಲ್ಲ. ಬದಲಾಗಿ ನಾವು ಹೇಳುತ್ತೇವೆ ಹಾಗೂ ತಮ್ಮ ನಾಥನು ಯುದ್ಧ ಮಾಡಲಿ. ನಾವೂ ಸಹ ನಿಮ್ಮೊಂದಿಗೆ ಯುದ್ಧ ಮಾಡುವೆವು. ನಮ್ಮಲ್ಲಿ ಚಲಿಸುವ ಕಣ್ಣುಗಳಿರುವ ಕಾಲದವರೆಗೆ ತಮ್ಮ ಸತ್ಯದೊಂದಿಗೆ ನಿಯೋಜಿಸಿದವನ ಮೇಲೆ ಸತ್ಯ!!
ಬರ್ಕುಲ್ ಗಿಮಾದಿಗೆ (ಅರಬ್ ದ್ವೀಪದಿಂದ ಬಹುದೂರದ ಯಮನ್‌ನಲ್ಲಿರುವ ಒಂದು ಸ್ಥಳ) ತಾವು ನಮ್ಮನ್ನು ಕರೆದು ಕೊಂಡು ಹೋಗುವುದಿದ್ದರೂ ನಾವು ಅಲ್ಲಿಗೆ ಬಂದು ತಮ್ಮ ಜೊತೆಗೆ ನಿಂತು ಯುದ್ಧ ಮಾಡುವೆವು...
ಪ್ರವಾದಿ (ಸ) ರು ಮಿಕ್ದಾದ್‌ರ ಒಳಿತಿಗಾಗಿ ಪ್ರಾರ್ಥಿಸಿದರು. ಅವರ ಮಾತುಗಳು ಪ್ರವಾದಿ ಸ.ಅ ರ ಸಂತೋಷಕ್ಕೆ ಕಾರಣವಾಗಿದ್ದವು. ಆ ಪಾವನ ಮುಖವು ಪ್ರಕಾಶದಂತೆ ಹೊಳೆದವು. ತುಟಿಗಳಲ್ಲಿ ಮಂದಸ್ಮಿತ ಅರಳಿದವು...
ಜನರೇ.. ನನ್ನೊಂದಿಗೆ ನಿಮ್ಮ ಅಭಿಪ್ರಾಯ ಹೇಳಿರಿ.. ಪ್ರವಾದಿ (ಸ) ರು ಮತ್ತೆ ಹೇಳಿದರು. ಇದು ಅನ್ಸಾರಿಗಳನ್ನು ಉದ್ದೇಶಿಸಿ ಹೇಳಿದ ಮಾತಾಗಿತ್ತು. ಅದಕ್ಕೆ ವಿಶೇಷ ಕಾರಣವಿದ್ದವು. ಮದೀನದಲ್ಲಿದ್ದಾಗ ಮಾತ್ರ ಪ್ರವಾದಿ (ಸ) ಯನ್ನು ಸಂರಕ್ಷಿಸುತ್ತೇವೆ ಎಂಬುದು ಅವರು ಮಾಡಿಕೊಂಡಿದ್ದ ಕರಾರಾಗಿತ್ತು. ಅಖಃಬ ಒಪ್ಪಂದದ ವೇಳೆ ಅನ್ಸಾರಿಗಳು
“ಅಲ್ಲಾಹನ ದೂತರೇ, ನಮ್ಮ ನಾಡಿಗೆ ತಾವು ತಲುಪುವವರಿಗಿನ ತಮ್ಮ ಸಂರಕ್ಷಣೆಯ ಬಾಧ್ಯತೆ ನಮ್ಮದಲ್ಲ. ನಮ್ಮ ನಾಡಿಗೆ ಆಗಮಿಸಿದ ಬಳಿಕ ತಮ್ಮ ಸಂರಕ್ಷಣೆಯ ಹೊಣೆ ನಮ್ಮದಾಗಿದೆ. ನಮ್ಮ ಮಕ್ಕಳು, ಸ್ತ್ರೀಯರಿಗೆ ಯಾವುದರಿಂದೆಲ್ಲಾ ನಾವು ಸಂರಕ್ಷಣೆ ನೀಡುತ್ತೇವೆಯೋ ಅವುಗಳಿಗೆಲ್ಲಾ ನಾವು ನಿಮಗೆ ಸಂರಕ್ಷಣೆ ನೀಡುತ್ತೇವೆ" ಎಂದು ಹೇಳಿದ್ದರು...
ಇನ್ನು ಮುಹಾಜರುಗಳಾದ ಸ್ವಹಾಬಿಗಳು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದರು. ಪ್ರವಾದಿ (ಸ)ರು ಆಜ್ಞಾಪಿಸುವುದನ್ನೆಲ್ಲಾ ಅನುಸರಿಸುವುದಾಗಿ ಅವರು ಖಚಿತಪಡಿಸಿದ್ದರು. ಷರತ್ತುರಹಿತ ಬೆಂಬಲವನ್ನು ಅವರು ಘೋಷಿಸಿದ್ದರು. ಆದರೆ, ಪ್ರವಾದಿ (ಸ)ರು ಮತ್ತೆ ಮತ್ತೆ ಜನರೇ, ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಕೇಳುತ್ತಿದ್ದಾರೆ. ಖಂಡಿತ ಪ್ರವಾದಿ (ಸ) ರು ನಮ್ಮನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ ಎಂದು ಅನ್ಸಾರಿಗಳು ಅರ್ಥಮಾಡಿಕೊಂಡರು. ಸಅದ್ ಬ್ನು ಮುಆದ್ (ರ) ಹೇಳಿದರು.
"ಅಲ್ಲಾಹನ ದೂತರೇ, ತಾವು ನಮ್ಮನ್ನು ಉದ್ದೇಶಿಸಿ ಮಾತನಾಡುತ್ತಿರುವಿರಿ ಅಲ್ಲವೇ..?”
" ಹೌದು "' ಪ್ರವಾದಿ (ಸ) ರು ಹೇಳಿದರು.
" ನಾವು ತಮ್ಮಲ್ಲಿ ವಿಶ್ವಾಸ ತಾಳಿರುವೆವು. ತಾವು ಸತ್ಯ ಪ್ರವಾದಿ ಎಂದು ಅಂಗೀಕರಿಸಿರುವೆವು. ತಾವು ತಂದಿರುವುದನ್ನು (ಧರ್ಮ) ಸತ್ಯವೆಂದು ನಾವು ಸಾಕ್ಷ್ಯ ವಹಿಸಿದೆವು. ತಾವು ಹೇಳಿರುವುದನ್ನೆಲ್ಲಾ ಅನುಸರಿಸಿದೆವು. ಅಲ್ಲಾಹನ ದೂತರೇ, ತಾವು ಮುಂದೆ ನಡೆಯಿರಿ, ತಮ್ಮ ಜೊತೆಗೆ ನಾವಿದ್ದೇವೆ. ತಮ್ಮನ್ನು ಸತ್ಯ ಧರ್ಮದೊಂದಿಗೆ ನಿಯೋಜಿಸಿದವನ ಮೇಲಾಣೆ ಸತ್ಯ, ಸಮುದ್ರವನ್ನು ತೋರಿಸಿ, ತಾವು ಅದಕ್ಕೆ ಹಾರುವಂತೆ ಆಜ್ಞಾಪಿಸಿದರೂ ನಾವು ಹಾರಿಬಿಡುವೆವು. ನಮ್ಮಿಂದ ಒಬ್ಬನೇ ಒಬ್ಬನು ಸಹ ನಿಮ್ಮ ಆಜ್ಞೆಯನ್ನು ಉಲ್ಲಂಘಿಸುವುದಿಲ್ಲ. ತಮ್ಮ ಶತ್ರುವನ್ನು ತಮ್ಮೊಂದಿಗೆ ನಿಂತು ಎದುರಿಸಲು ನಮಗೆ ಯಾವ ಭಯವೂ ಇಲ್ಲ. ನಾವು ಯುದ್ಧದಲ್ಲಿ ಸಹನೆ ಪಾಲಿಸುವವರೂ, ಹೋರಾಟದಲ್ಲಿ ಪ್ರಾಮಾಣಿಕ ಬದ್ದತೆ ತೋರುವವರೂ ಆಗಿದ್ದೇವೆ. ತಮ್ಮನ್ನು ಸಂತೋಷಗೊಳಿಸುವ ದೃಶ್ಯವನ್ನು ಅಲ್ಲಾಹನು ನಮ್ಮಿಂದ ನಿಮಗೆ ತೋರಿಸಿಕೊಡುವನು. ಅಲ್ಲಾಹನ ಅನುಗ್ರಹದೊಂದಿಗೆ ಮುನ್ನಡೆಯಿರಿ..
ಇನ್ನೊಂದು ವರದಿಯ ಪ್ರಕಾರ ಸಅದ್ ಆರಂಭದಲ್ಲಿ ಹೀಗೆ ಹೇಳಿದರು. "ತಾವು ಮದೀನದಿಂದ ಹೊರಗಿರುವಾಗ ಅನ್ಸಾರಿಗಳು ತಮ್ಮನ್ನು ಸಂರಕ್ಷಿಸಲು ಮುಂದಾಗಲಾರರೆಂಬ ಅನುಮಾನ ನಿಮ್ಮದಾಗಿರಬಹುದು. ನಾನು ಅವರ ಪ್ರತಿನಿಧಿಯಾಗಿ ನಿಮ್ಮ ಮುಂದೆ ನಿಂತು ಹೇಳುತ್ತಿದ್ದೇನೆ.. ತಾವು ಇಷ್ಟ ಬಂದ ಕಡೆ ನಡೆಯಿರಿ. ಇಚ್ಚಿಸುವವರೊಂದಿಗೆ ಬಂದ ಸ್ಥಾಪಿಸಿ, ಇಚ್ಚಿಸುವವರೊಂದಿಗಿನ ಬಂಧವನ್ನು ವಿಛ್ಛೇದಿಸಿರಿ.. ಇಚ್ಚಿಸುವವರೊಂದಿಗೆ ಶಾಂತಿ ಒಪ್ಪಂದ ಮಾಡಿಕೊಳ್ಳಿ ಇಚ್ಚಿಸುವವರೊಂದಿಗೆ ಯುದ್ಧ ಮಾಡಿರಿ.. ನಮ್ಮ ಸಂಪತ್ತಿನಲ್ಲಿ ತಮಗೆಷ್ಟು ಬೇಕೋ ಅಷ್ಟನ್ನು ತೆಗೆದುಕೊಳ್ಳಿರಿ. ತಾವು ಬಾಕಿ ಉಳಿಸಿದುದಕ್ಕಿಂತಲೂ ನಮಗೆ ಹೆಚ್ಚು ತಾವು ನಮ್ಮಿಂದ ತೆಗೆದುಕೊಂಡಿರುವುದರ ಮೇಲಾಗಿದೆ..
ತಾವು ಏನು ಆಜ್ಞಾಪಿಸಿದರೂ ನಾವದನ್ನು ಶಿರಸಾ ವಹಿಸಿ ಪಾಲಿಸುವೆವು.. ತಮ್ಮ ಎಡಬಲದಲ್ಲಿ , ಹಿಂದೆ ಮುಂದೆ ನಾವಿರುತ್ತೇವೆ ಎಂದು ಸಅದ್ ಹೇಳಿದಾಗ ಪ್ರವಾದಿ (ಸ) ರ ಚಂದ್ರನಂತೆ ಅರಳಿದವು. ಆ ವದನವು ಆವೇಶ ಹಾಗೂ ಆಹ್ಲಾದದ ಪ್ರಕಾಶದಿಂದ ತುಂಬಿ ನಿಂತವು. ಆಗ ಪ್ರವಾದಿ (ಸ) ರು ಹೇಳಿದರು:
"ನೀವು ಮುನ್ನಡೆಯಿರಿ. ಸಂತೋಷಗೊಳ್ಳಿರಿ. ಎರಡರಲ್ಲೊಂದು ಸಂಘ- ಈರ್, ನಫೀರ್ ವನ್ನು ಅವನು ನನಗೆ ವಾಗ್ದಾನ ಮಾಡಿರುವನು. ಅಲ್ಲಾಹು ಸತ್ಯ!!! ಶತ್ರು ವಿಭಾಗ ನೆಲಕ್ಕಪ್ಪಳಿಸುವುದನ್ನು ನಾನು ಕಣ್ಣಾರೆ ಕಾಣುತ್ತಿದ್ದೇನೆ ”
ಎರಡರಲ್ಲೊಂದು ಸಂಘವನ್ನು ಅಲ್ಲಾಹನು ವಾಗ್ದಾನ ಮಾಡಿರುವುದು ನಿಜವಾದರೂ, ಸೈನಿಕ ಸಂಘದೊಂದಿಗೆ ಸಂಘರ್ಷವೇರ್ಪಡುವುದೆಂದೂ, ಅದರಲ್ಲಿ ವಿಜಯ ಕೈವಶವಾಗಿ, ಖುರೈಷಿ ಮುಖಂಡರು ಮರಣ ಹೊಂದುವರೆಂದೂ, ವರ್ತಕ ಸಂಘವನ್ನು ಎದುರುಗೊಳ್ಳುವುದಿಲ್ಲವೆಂದು ಪ್ರವಾದಿ (ಸ) ರ ಮಾತುಗಳು ಸೂಚಿಸುತ್ತವೆ. ಅವರ ಅನುಯಾಯಿಗಳು ಸಹ ಅದನ್ನು ಅರ್ಥ ಮಾಡಿಕೊಂಡಿದ್ದರು. (ಅಸ್ಸಿರತುಲ್ ಹಲಬಿಯಾ- 2: 160)
ಅಂದು ಪ್ರವಾದಿ (ಸ) ರು ಮೂರು ಪತಾಕೆಗಳನ್ನು ಎತ್ತರಿಸಿ ಕಟ್ಟಿ, ಆಯುಧವನ್ನು ಹೊರತೆಗೆದದ್ದು ಅಂದೇ. ಮದೀನದಿಂದ ಹೊರಡುವಾಗ ಪತಾಕೆಗಳನ್ನು ಹಾರಿಸಿರಲಿಲ್ಲ ಎಂದು ಇಮಾಮ್ ವಾಖದಿ ಅಭಿಪ್ರಾಯ ಪಡುತ್ತಾರೆ (ಡಾ . ಮುಹಮ್ಮದ್ ಅಬ್ದು ಯಮಾನಿ, ಬದ್ರುಲ್ ಕುಬ್ರ–123)
ಬದ್ರ್ ದಿನದಂದು ಒಂಟೆಗಳ ಕುತ್ತಿಗೆಯಲ್ಲಿ ನೇತಾಡುತ್ತಿದ್ದ ಗಂಟೆಗಳನ್ನು ಕಳಚುವಂತೆ ಪ್ರವಾದಿ (ಸ) ರು ಆಜ್ಞಾಪಿಸಿರುವುದಾಗಿ ಆಯಿಶಾ (ರ) ರವರು ವರದಿ ಮಾಡುತ್ತಾರೆ. (ಅಲ್ಬಿದಾಯತುವನ್ನಿಹಾಯ- 3:297) ತಮ್ಮ ಚಲನವಲನಗಳನ್ನು ಶತ್ರುಗಳು ತಿಳಿಯದಿರಲೆಂಬ ಉದ್ದೇಶದಿಂದ ಬಹುಷಃ ಪ್ರವಾದಿ (ಸ) ಇಂತಹದ್ದೊಂದು ಆಜ್ಞೆಯನ್ನು ಹೊರಡಿಸಿರಬಹುದು..
ಅಧ್ಯಾಯ 11
ಖುರೈಷಿಗಳ ಯುದ್ಧ ಯಾತ್ರೆ
ಮಕ್ಕಾದಲ್ಲಿ ಆತ್ವಿಖಃರಿಗೆ ಬಿದ್ದ ಕನಸು ಹಾಗೂ ಳಂಳಂನ ಘೋಷಣೆ ಖುರೈಷಿಗಳಲ್ಲಿ ನಡುಕ ಹುಟ್ಟಿಸಿದ್ದವು. ಮುಸ್ಲಿಮರನ್ನು ಎದುರಿಸಲು ಹಾಗೂ ಖಾಫಿಲವನ್ನು ರಕ್ಷಿಸಲು ಅವರು ಸಿದ್ದತೆಗಳಲ್ಲಿ ತೊಡಗಿಕೊಂಡರು.
"ಮುಹಮ್ಮದ್ ಹಾಗೂ ಆತನ ಅನುಯಾಯಿಗಳು ಇದು ಸಹ ಇಬ್ನು ಹಳ್ರಮಿಯ ವರ್ತಕ ಸಂಘದಂತೆ ಎಂದು ಭಾವಿಸಿರಬೇಕು. ಅದು ಅವರ ತಪ್ಪು ಕಲ್ಪನೆ.. ಈ ಬಾರಿ ಅವರು ತಕ್ಕ ಪಾಠ ಕಲಿಯಲಿದ್ದಾರೆ" ಎಂದು ಖುರೈಷಿಗಳು ಜಂಭ ಕೊಚ್ಚಿಕೊಳ್ಳುತ್ತಿದ್ದರು...
ಖುರೈಷಿಗಳು ಯುದ್ಧಕ್ಕೆ ಸಿದ್ಧರಾದರು. ಯುದ್ಧದಲ್ಲಿ ಭಾಗವಹಿಸಲು ಸಾಧ್ಯವಾಗದವರು ತಮ್ಮ ಬದಲಿಗೆ ಇತರರನ್ನು ಕಳುಹಿಸಿಕೊಟ್ಟರು. ಅಬೂಲಹಬ್ ಯುದ್ದದಿಂದ ದೂರ ನಿಲ್ಲಲು ನಿರ್ಧರಿಸಿದನು. ಆತ್ವಿಖರ ಕನಸು ನನಸಾಗಲಿದೆ ಎಂಬ ಭೀತಿ ಅಬೂಲಹಬ್ ಗೂ ಇದ್ದವು. ಆದ್ದರಿಂದ ಆತ ಉಪಾಯ ಪೂರ್ವಕವಾಗಿ ಯುದ್ಧದಿಂದ ದೂರ ಉಳಿಯಲು ತೀರ್ಮಾನಿಸಿದ್ದನು. ಆದರೆ, ತನ್ನ ಬದಲಿಗೆ ಆಸ್ವ್ ಬ್ನು ಹಿಶಾಮ್ (ಈತ ಬದ್ರ್ ಯುದ್ದದಲ್ಲಿ ಉಮರ್ (ರ) ರ ಖಡ್ಗಕ್ಕೆ ಬಲಿಯಾದನು) ನನ್ನು ಕಳುಹಿಸಿ ಕೊಟ್ಟನು. ಅದಕ್ಕೆ ಪ್ರತಿಫಲವಾಗಿ ಆಸ್ವ್ ಕೊಡಬೇಕಾಗಿದ್ದ ನಾಲ್ಕು ಸಾವಿರ ದಿರ್ಹಮನ್ನು ಚುಕ್ತ ಮಾಡಿದನು.. ಅಸ್ಸಿರತುಲ್ ಹಲಬಿಯ್ಯಾ-2:154)
ಸಾಧ್ಯವಾದಷ್ಟು ವಿವಿಧ ಮೂಲಗಳಿಂದ ಶಕ್ತಿ ಸಂಗ್ರಹಿಸಲು ಖುರೈಷಿಸಲು ಪ್ರಯತ್ನಿಸಿದರು. ಜನರ ಹೃದಯದಲ್ಲಿ ಯುದ್ದದ ಆವೇಶ ಜ್ವಾಲೆ ಹೊತ್ತಿಕೊಳ್ಳಲು ಬೇಕಾದುದನ್ನೆಲ್ಲಾ ಮಾಡಿದರು. ನಿಮ್ಮ ಸಂಪತ್ತು,ಜೀವಗಳಿಗೆ ಬೆದರಿಕೆಯಿದೆ ಎಂದು ಜನರನ್ನು ನಂಬಿಸಲಾಯಿತು. ಯುದ್ದ ವಸ್ತುಗಳು, ಆಯುಧಗಳು ಹಾಗೂ ಯುದ್ಧಕ್ಕೆ ಸಂಬಂಧಿಸಿದ ಇನ್ನಿತರ ವಸುಗಳನ್ನು ವಿತರಣೆ ಮಾಡಲಾಯಿತು.. ಮುಖಂಡರುಗಳು ಹಾಗೂ ಪ್ರಮುಖ ವ್ಯಕ್ತಿಗಳು ಜನ ಸಾಮಾನ್ಯರ ನಡುವೆ ಸುತ್ತಾಡಿ ಅವರಲ್ಲಿ ಯುದ್ಧೋತ್ಸಾಹವನ್ನು ತುಂಬಿದರು. ಸಂಬಾವನೆಗಳನ್ನು ನೀಡಿದರು. ಐನೂರು, ಇನ್ನೂರು ದಿರ್ಹಮ್‌ಗಳನ್ನು ದಾನ ಮಾಡಿದವರಿಂದ ಹಿಡಿದು ಇಪ್ಪತ್ತು ಯೋಧರಿಗೆ ಇಪ್ಪತ್ತು ಒಂಟೆಗಳನ್ನು ಹಾಗೂ ಅವರ ಇನ್ನಿತರ ವಹಿಸಿಕೊಂಡವರವರೆಗೆ ಅನೇಕರು ಸಂಭಾವನೆ ನೀಡಿದವರ ನಡುವೆಯಿದ್ದರು.. ಸುಹೈಲುಬ್ನು ಅಮ್ರ್ ಖುರೈಷಿಗಳನ್ನು ಕರೆದು
"ಮುಹಮ್ಮದ್ ಹಾಗೂ ಆತನಿಗೆ ಆಶ್ರಯ ನೀಡಿರುವ ಯಸ್ರಿಬ್ ನ ಜನತೆ ನಿಮ್ಮ ಸಂಪತ್ತುಗಳನ್ನು ವಶಪಡಿಸಿಕೊಳ್ಳಲು ನೀವು ಅವಕಾಶ ಮಾಡಿಕೊಡುವಿರಾ..? ಹಣ ಬೇಕೋ ಅದೋ ನನ್ನ ಸಂಪತ್ತು, ಆಹಾರ ಬೇಕೋ ಇದೋ ನನ್ನ ದಾಸ್ತಾನು ಕೋಣೆ" ಎಂದು ಘೋಷಿಸಿದರು..
ಸಂಅತುಬ್ ನುಲ್ ಅಸ್ ವದರ ಮಾತುಗಳು,ಲಾತ,ಉಝ್ಝಾ ದೇವತೆಗಳ ಮೇಲಾಣೆ ನನ್ನ ಇದಕ್ಕಿಂತ ದೊಡ್ಡ ವಿಪತ್ತೊಂದು ನಿಮ್ಮ ಮೇಲೆರಗಲಾರದು. ಮುಹಮ್ಮದ್ ಹಾಗೂ ಮದೀನದ ಜನರು ನಿಮ್ಮ ಸಂಪತ್ತುಗಳನ್ನೊಳಗೊಂಡ ವರ್ತಕ ಸಂಘವನ್ನು ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅವರನ್ನು ತಡೆಯಬೇಕಿದೆ. ಅದಕ್ಕೆ ನೀವು ಸಿದ್ದರಾಗಬೇಕು. ಒಬ್ಬರೇ ಒಬ್ಬರು ದೂರ ನಿಲ್ಲಬಾರದು. ಅವರು ಈ ಆಯುಧ ಶಕ್ತಿಯಿಲ್ಲದವರು ಅದನ್ನು ಗಳಿಸಿಕೊಳ್ಳಲಿ.. ದೇವರ ಮೇಲಾಣೆ ಸತ್ಯ, ಮುಹಮ್ಮದೇನಾದರು ನಿಮ್ಮ ಖಾಫಿಲವನ್ನು ವಶಪಡಿಸಿಕೊಂಡರೆ ಅದು ಕೇವಲ ನಿಮ್ಮ ಸಂಪತ್ತಿಗೆ ಮಾತ್ರ ಬೆದರಿಕೆಯಲ್ಲ,ಅದು ನಿಮ್ಮ ಜೀವಕ್ಕೂ ಬೆದರಿಕೆಯಾಗಿದೆ ”
ಪ್ರವಾದಿ (ಸ) ರ ಹಾಗೂ ಅನುಯಾಯಿಗಳ ಜೊತೆ ಯುದ್ಧ ಮಾಡಲು ಅತೀ ಹೆಚ್ಚು ಉತ್ಸಾಹ ತೋರದ ಖುರೈಷಿ ಪ್ರಮುಖನೆಂದರೆ ಅದು ಅಬೂಜಹಲ್!!! ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಜನರ ನಡುವೆ ಓಡಾಡಿ ಆತ ಜನರನ್ನು ಸಂಘಟಿಸಿದನು. ಜನರಲ್ಲಿ ಉತ್ಸಾಹ,ಆವೇಶ ತುಂಬಿದನು. ತನ್ನ ಸರ್ವ ಸಂಪತ್ತು ಹಾಗೂ ಶಕ್ತಿಯನ್ನು ವ್ಯಯಿಸಿ,ಮುಸ್ಲಿಮರನ್ನು ಸೋಲಿಸಿ,ಪ್ರವಾದಿ (ಸ) ಯ ವಿರುದ್ಧ ಸೇಡು ತೀರಿಸಿಕೊಳ್ಳುವಂತೆ ಖುರೈಷಿಗಳನ್ನು ಪ್ರಚೋದಿಸಿದನು...
ಉಮಯ್ಯತುಬ್‌ನು ಖಲಫ್ ಯುದ್ಧಕ್ಕೆ ಹೋಗದಿರಲು ನಿರ್ಧರಿಸಿದ್ದರು. ಪ್ರವಾದಿ (ಸ) ತನ್ನನ್ನು ವಧಿಸಬಹುದೆಂಬ ಭೀತಿ ಉಮಯ್ಯತ್‌ನನ್ನು ಒಳಗೊಳಗೆ ಬೇಟೆಯಾಡುತ್ತಿದ್ದವು. ಅದಕ್ಕೆ ಒಂದು ಕಾರಣವಿತ್ತು. ಅನ್ಸಾರಿ ಪ್ರಮುಖರಾದ ಸಅದ್ ಬ್ನು ಮುಆದ್ ಮಕ್ಕಾಗೆ ಹೋದಾಗ ಹಳೆಯ ಕಾಲದ ಸ್ನೇಹಿತ ಉಮಯ್ಯತ್‌ನ ಬಳಿ ನೆಲೆಸಿದ್ದರು. ಅವರು ಶಾಮ್‌ಗೆ ಹೋಗುವಾಗಲೆಲ್ಲಾ ಮದೀನದಲ್ಲಿ ತಂಗಿ, ಸಅದ್ ರ ಆತಿಥ್ಯವನ್ನು ಸ್ವೀಕರಿಸುತ್ತಿದರು. ಒಬ್ಬ ಮುಸ್ಲಿಮ್ ಇನ್ನೊಬ್ಬ ಮುಸ್ಲಿಮೇತರನಾಗಿದ್ದರೂ ಸಹ ಅದು ಅವರಿಬ್ಬರ ನಡುವಿನ ವ್ಯಕ್ತಿಗತ ಸ್ನೇಹಕ್ಕೆ ಕುಂದುಂಟು ಮಾಡಿರಲಿಲ್ಲ. ಈ ಮಕ್ಕಾ ಮುಟ್ಟಿದ ಸಅದ್ ತಮಗೆ ಉಮ್ರಾ ನಿರ್ವಹಿಸಲು ಕಅಬಾಲಯ ಪ್ರದಕ್ಷಿಣೆಗೆ ಅವಕಾಶ ಮಾಡಿಕೊಡುವಂತೆ ಉಮಯತ್‌ನೊಂದಿಗೆ ಆಗ್ರಹಿಸಿದ್ದರು. ಒಂದು ಮಧ್ಯಾಹ್ನ ಜನರಾರು ಇಲ್ಲದ ಸಂದರ್ಭ ನೋಡಿ ಸಅದ್ ಹಾಗೂ ಉಮಯ್ಯತ್ ಕಅಬಾಲಯದತ್ತ ಹೊರಟರು..ಸಅದ್ ಪ್ರದಕ್ಷಿಣೆ ಹಾಕುತ್ತಿರಬೇಕಾದರೆ ಅನಿರೀಕ್ಷಿತ ಎಂಬಂತೆ ಅಬೂಜಹಲ್ ಅಲ್ಲಿಗೆ ಬಂದನು..
ಯಾರದು ಪ್ರದಕ್ಷಿಣೆ ಹಾಕುತ್ತಿರುವುದು..?
ಅಬೂಜಹಲ್ ಪ್ರಶ್ನಿಸಿದನು.
"ಸಅದ್ ಬ್ನು ಮುಆದ್"
“ನೀವು ಇಲ್ಲಿ ಬಂದು ನಿರ್ಭೀತಿಯಿಂದ ಪ್ರದಕ್ಷಿಣೆ ನಡೆಸುತ್ತಿರುವಿರಾ..? ನೀವು ಮುಸ್ಲಿಮರಿಗೆ ಆಶ್ರಯ ನೀಡಿ, ಅವರನ್ನು ರಕ್ಷಿಸಿದವರಲ್ಲವೇ..? ನೀನು (ಉಮಯ್ಯಗೆ) ಅಬೂಸುಫಿಯಾನ್‌ನ ಜೊತೆಗಿಲ್ಲದಿರುತ್ತಿದ್ದರೆ ನಿನಗೆ ಸರಿಯಾದ ಪಾಠ ಕಲಿಸುತ್ತಿದ್ದೆ ನಾನು. ನಿನ್ನ ಕುಟುಂಬಕ್ಕೆ ಸುರಕ್ಷಿತನಾಗಿ ನೀನು ಹಿಂದಿರುಗಿತ್ತಿರಲಿಲ್ಲ.. ಎಂದು ಅಬೂಜಹಲ್ ಹೂಂಕರಿಸಿದನು.
ಸಅದ್ ಆತನಿಗೆ ಮರುತ್ತರ ನೀಡಿದರು."ಅಲ್ಲಾಹನಾಣೆ ಸತ್ಯ, ನಿಮಗೆ ಈ ಪ್ರದಕ್ಷಿಣೆಗಿಂತಲೂ ಇಲ್ಲಿ ಬಹಳ ಮುಖ್ಯವಾದುದೊಂದಿದೆ. ಈಗ ನೀವು ನನ್ನ ಪ್ರದಕ್ಷಿಣೆಯನ್ನು ತಡೆದಂತೆ ನಾವು ನಿಮ್ಮ ವಾಣಿಜ್ಯ ಸಂಘವನ್ನು ತಡೆಯುವೆವು.."
ಅಬೂಜಹಲನೊಂದಿಗೆ ಏರಿದ ಧ್ವನಿಯಲ್ಲಿ ಸಅದ್ ಮಾತನಾಡುತ್ತಿರಬೇಕಾದರೆ ಉಮಯ್ಯತ್ ಮಧ್ಯೆ ಪ್ರವೇಶಿಸಿದರು. "ಅಬುಲ್ ಹಕಮ್ ನೊಂದಿಗೆ ನೀವು ಏರಿದ ಧ್ವನಿಯಲ್ಲಿ ಮಾತನಾಡಬಾರದು. ಅವರು ಈ ಮಕ್ಕಾ ಕಣಿವೆಯ ದೊಡ್ಡ ನಾಯಕರಲ್ಲೊಬ್ಬರಾಗಿದ್ದಾರೆ "
ಸಅದ್ ರ ಬಾಯಿ ಮುಚ್ಚಿಸಲು ಉಮಯ್ಯತ್ ಹೀಗೆ ಹೇಳಿದ್ದರೂ, ಸಅದ್ ಉಮಯ್ಯತ್‌ನತ್ತ ತಿರುಗಿ ಹೇಳಿದರು.
"ಉಮಯ್ಯತ್, ಈಗ ನೀನು ಸಹ ಅವರ ಪಾರ್ಟಿ ಸೇರಿಕೊಂಡೆಯಾ..? ನಾನು ಕೇಳಿದ್ದೇನೆ.. ನಿನ್ನನ್ನು ಹತ್ಯೆ ಮಾಡುವುದಾಗಿ ಪ್ರವಾದಿ (ಸ) ರು ಹೇಳುತ್ತಿದ್ದುದನ್ನು (ಉಮಯ್ಯತ್‌ನ ವಧೆಗೆ ಪ್ರವಾದಿ (ಸ) ರು ಕಾರಣರಾಗಬಹುದೆಂಬುದು ಇಲ್ಲಿಯ ಸಾರವಾಗಿರಬಹುದು. ಪ್ರವಾದಿ (ಸ) ರು ತಮ್ಮ ಕೈಯಾರೆ ಉಬಯ್ಯ್ ಬುನು ಖಿಲಫಿಯನ್ನು ಮಾತ್ರ ವಧಿಸಿದ್ದಾರೆ. ಆತ ಉಮಯ್ಯತ್‌ನ ಸಹೋದರ, ಅಥವಾ ಉಬಯ್ಯ್ ಬುನು ಖಲಫಿಯನ್ನು ವಧಿಸುತ್ತೇನೆ ಎಂಬುದನ್ನು ಸಅದ್ ತಪ್ಪಾಗಿ ಕೇಳಿಸಿಕೊಂಡಿರಬಹುದು..
( ಅಸ್ಸಿರತುಲ್ ಹಲಬಿಯ್ಯಾ-2: 155)
ಸಅದ್ ಇದನ್ನು ಹೇಳಿದಾಗ ಉಮಯ್ಯತ್ ಬಾಯಿ ಬಿಟ್ಟು ನಿಂತನು.
"ನನ್ನನ್ನೇ ?" ಉಮಯ್ಯತ್ ಸ್ಪಷ್ಟಪಡಿಸಿಕೊಳ್ಳಲು ಕೇಳಿದನು.
"ಹೌದು.. ನಿನ್ನನ್ನೇ ”
" ಮಕ್ಕಾದಲ್ಲಾಗಿರಬಹುದೇ..?" ಉಮಯ್ಯತ್ ಅನುಮಾನ ವ್ಯಕ್ತಪಡಿಸಿದನು.
" ಅದು ನನಗೆ ತಿಳಿದಿಲ್ಲ "
" ದೇವರ ಮೇಲಾಣೆ ಸತ್ಯ, ಮುಹಮ್ಮದ್ ಸುಳ್ಳು ಹೇಳಲಾರ" ಎಂದು ಗೊಣಗುತ್ತಾ ಉಮಯ್ಯತ್ ಅಲ್ಲಿಂದ ತೆರಳಿದನು.. ಪ್ರವಾದಿ (ಸ) ಯ ಭವಿಷ್ಯ ನಿಜವಾಗುತ್ತದೆಂದು ಆತ ದೃಢವಾಗಿ ನಂಬಿದನು. ಭಯದಿಂದ ತತ್ತರಿಸಿ ಹೋದ ಉಮಯ್ಯತ್, ಮೂತ್ರ ಬರುವಂತಾದವು. ನೇರ ಮನೆಗೆ ಹೋದವನೇ ಪತ್ನಿಯೊಂದಿಗೆ ವಿಷಯ ತಿಳಿಸಿದನು. ಅಂದು ಆತ ತನಗೆ ತಾನೇ ಒಂದು ಪ್ರತಿಜ್ಞೆ ಮಾಡಿಕೊಂಡಿದ್ದ.. ಇನ್ನು ಮುಂದೆ ಮಕ್ಕಾ ಬಿಟ್ಟು ಹೊರಗೆ ಹೋಗುವುದಿಲ್ಲ ಎಂದು. ಮುಹಮ್ಮದನನ್ನು ಎದುರಿಸಲು ಹಾಗೂ ಅಪಾಯದಲ್ಲಿರುವ ತಮ್ಮ ಖಾಫಿಲವನ್ನು ರಕ್ಷಿಸಲು ಸಿದ್ಧರಾಗಬೇಕೆಂಬ ಕರೆಗೆ ಓಗೊಟ್ಟು ಉಮಯ್ಯತ್ ಹೊರಡಲು ಸಿದ್ದನಾದನು. ಸಅದ್ ಹೇಳಿದ ವಿಷಯವನ್ನು ಆತನ ಪತ್ನಿ ನೆನಪಿಸಿಕೊಟ್ಟರು ಅಂದು ನಿರ್ಧರಿಸಿದನು. ರ ಬದಲಿಸಿದ ಆತ ಸೈನಿಕರ ಜೊತೆ ಹೋಗುವುದಿಲ್ಲವೆಂದು ನಿರ್ಧರಿಸಿದ್ದನು..
ಪ್ರಚೋದನೆ ಹಾಗೂ ಪ್ರಲೋಭನೆಗಳ ಮೂಲಕ ಉಮಯ್ಯತ್ ತನ್ನ ನಿರ್ಧಾರ ಬದಲಿಸಿಕೊಳ್ಳುವಂತೆ ಖುರೈಷಿ ಮುಖಂಡರು ಶತ ಪ್ರಯತ್ನ ಮಾಡಿದರು. ಉಕ್ಬತುಬ್ನು ಅಭಿ ಮುಅಯ್ಯತ್ ಸಾಂಬ್ರಾಣಿ ತಂದು ಉಮಯ್ಯತ್‌ನೊಂದಿಗೆ ಹೇಳಿದನು.. ನೀನು ಇದರ ಹೊಗೆ ಹಾಕಿ ಇಲ್ಲಿ ಕುಳಿತುಕೋ.. ಹೆಂಗಸರ ಸಾಲಿಗೆ ಸೇರಿದವನಲ್ಲವೇ ನೀನು ” ಇದನ್ನು ಕೇಳಿ ಉಮಯ್ಯತ್‌ಗೆ ಸಿಟ್ಟು ಬಂದವು. "ದೇವರು ನಿನ್ನನ್ನು ಶಪಿಸಲಿ. ನೀನು ತಂದಿರುವುದಕ್ಕೂ ಶಪಿಸಲಿ" ಎಂದು ತನ್ನ ಡೊಳ್ಳು ಹೊಟ್ಟೆ ಸವರುತ್ತಾ ಎದ್ದು ನಿಂತನು.
ಆಗ ಅಬೂಜಹಲ್ ನಡುವೆ ಪ್ರವೇಶಿಸಿ ಅಬೂಸಫ್ಘಾನ್ , ಈ ಮಕ್ಕಾ ಕಣಿವೆಯ ಮುಖಂಡರಾದ ತಾವು ಯುದ್ದದಿಂದ ದೂರ ಉಳಿಯುವುದನ್ನು ಜನರು ಕಂಡರೆ ಅವರು ಸಹ ದೂರ ಉಳಿಯುವರು ಎಂದನು.
ಒಂದು ವರದಿಯ ಪ್ರಕಾರ, ಉಮಯ್ಯತ್, ಸಂಅತುಬ್‌ನುಲ್ ಅಸ್ವದ್, ರಬಿಅರ ಪುತ್ರರಾದ ಉತ್ಬ , ಶೈಬ ಮೊದಲಾದವರು ಶಾಕ್ರೋಕ್ತವಾದ ಭವಿಷ್ಯ ನೋಡಿದಾಗ ಅಪಶಕುನದ ಲಕ್ಷಣ ಕಂಡು ಬಂದಿತ್ತು. ಯುದ್ಧಕ್ಕೆ ಹೋಗಬೇಡಿ ಎಂಬ ಸೂಚನೆ ಅವರಿಗೆ ಲಭಿಸಿತ್ತು. ಅದು ಅವರ ಭಯವನ್ನು ಹೆಚ್ಚಿಸಿದ್ದವು. ಆದ್ದರಿಂದ ಯುದ್ಧಕ್ಕೆ ಹೊರಡುವುದಿಲ್ಲವೆಂದು ಅವರು ನಿರ್ಧರಿಸಿದ್ದರು.
ಆದರೆ ಅಬೂಜಹಲ್,ನಳ್ರುಬು ನುಲ್ ಹಾರಿಸ್ ಮೊದಲಾದವರ ಪ್ರಚೋದನೆ, ಒತ್ತಡಗಳಿಗೆ ನಮ್ಮನೆ ಕಟ್ಟು ಬಿದ್ದು, ಕೊನೆಗೆ ಮನಸಿಲ್ಲದ ಮನಸ್ಸಿನಲ್ಲಿ ಅವರು ಯುದ್ಧಕ್ಕೆ ಹೊರಡಲು ಸಿದ್ದರಾದರು.. ಮಕ್ಕಾದಲ್ಲಿ ಸಿಗಬಹುದಾಗಿದ್ದ ಅತ್ಯುತ್ತಮ ಒಂಟೆಯನ್ನು ಖರೀದಿಸಿದರು. ಏನಾದರೂ ನೆಪ ಹೇಳಿ ದಾರಿ ಮಧ್ಯದಿಂದಲೇ ಹಿಂದಿರುಗಬಹುದೆಂಬ ಆಸೆ ಇದ್ದವು. ಆದರೆ, ದುರಾದೃಷ್ಟವಶಾತ್ ಅವರಿಗೆ ಅಂತಹ ಯಾವುದೇ ಅವಕಾಶ ದೊರೆಯದೆ, ಆ ಯಾತ್ರೆಯು ಬದ್ರ್ ವರೆಗೂ ಮುಂದುವರಿದವು..
ಉಬ್ಬತುಬ್ನು ಅಬೀಮುಅಯ್ತು ಸಹ ಹೊರಡಲು ಅನುಮಾನಿಸಿದನು. ಕಾರಣ, ಹಳೆಯ ನೆನಪೊಂದು ಆತನನ್ನು ಅಲುಗಾಡಿಸಿಬಿಟ್ಟಿತ್ತು. ಹಿಜ್ರಕ್ಕೂ ಮೊದಲು ಅವರು ಪ್ರವಾದಿ (ಸ) ರನ್ನು ಇಟ್ಟು ಒಂದು ಸತ್ಕಾರಕ್ಕೆ ಆಹ್ವಾನಿಸಿದ್ದನು. ಅಲ್ಲಾಹನಲ್ಲದೆ ಆರಾಧನೆ ಅರ್ಹರು ಯಾರೂ ಇಲ್ಲ. ಮುಹಮ್ಮದ್ ಆತನ ದೂತರಾಗಿದ್ದಾರೆ ಎಂದು ಸಾಕ್ಷ್ಯ ನುಡಿದಲ್ಲಿ ಮಾತ್ರ ನಿನ್ನ ಆಹಾರವನ್ನು ನಾನು ಸೇವಿಸುತ್ತೇನೆ... ಎಂದು ಪ್ರವಾದಿ (ಸ) ಅವರೊಂದಿಗೆ ಹೇಳಿದರು. ಅದರಂತೆಯೇ ಆತ ಸತ್ಯ ಸಾಕ್ಷ್ಯ ಉಚ್ಚರಿಸಿದನು. ಪ್ರವಾದಿ (ಸ) ರು ಆತನ ಅಹ್ವಾನವನ್ನು ಸ್ವೀಕರಿಸಿದರು...
ಆದರೆ ಖುರೈಷಿಗಳಿಗೆ ಇದರಿಂದ ಸಿಟ್ಟು ಬಂದವು. ಅವರು ಉಖ್ಬನನ್ನು ಗೇಲಿ ಮಾಡಲಾರಂಬಿಸಿದರು.. ಉಖ್ಬನಿಗೂ ಪಶ್ಚಾತಾಪವಾದವು. ತನ್ನ ಆತಿಥ್ಯವನ್ನು ಸ್ವೀಕರಿಸುವಂತೆ ಮಾಡಲು ಇಷ್ಟು ಮುಂದುವರಿಯುವ ಅಗತ್ಯವಿರಲಿಲ್ಲ ಎಂದುಕೊಂಡನು. ನಾನೇನು ಮಾಡಬೇಕು..? ನೀವೇ ಪರಿಹಾರ ಸೂಚಿಸಿ.. ಮುಶ್ರಿಕರೊಂದಿಗೆ ಆತ ಕೇಳಿದನು.
ಆದರೆ, ಖುರೈಷಿಗಳಿಗೆ ಇದರಿಂದ ಸಿಟ್ಟು ಬಂದವು. ಅವರು ಉಖ್ಬನನ್ನು ಗೇಲಿ ಮಾಡಲಾರಂಭಿಸಿದರು. ಉಖ್‌ಬನಿಗೂ ಪಶ್ಚಾತಾಪವಾದವು, ತನ್ನ ಆತಿಥ್ಯವನ್ನು, ಮುಹಮ್ಮದ್ ಸ್ವೀಕರಿಸುವಂತೆ ಮಾಡಲು
ಇಷ್ಟು ಮುಂದುವರಿಯುವ ಅಗತ್ಯವಿರಲಿಲ್ಲ ಎಂದುಕೊಂಡನು.
"ನಾನೇನು ಮಾಡಬೇಕು..? ನೀವೇ ಪರಿಹಾರ ಸೂಚಿಸಿ.." ಮುಶ್ರಿಕರೊಂದಿಗೆ ಆತ ಕೇಳಿದನು..
"ನೀನು ಹೋಗಿ ಮುಹಮ್ಮದನ ಮುಖಕ್ಕೆ ಉಗುಳಬೇಕು. ಅವನನ್ನು ಎಷ್ಟು ಸಾಧ್ಯವೋ ಅಷ್ಟು ನಿಂದಿಸಬೇಕು" ಎಂದು ಖುರೈಷಿಗರು ಹೇಳಿದರು. ಖುರೈಷಿಗರ ಪ್ರಚೋದನೆಗೆ ವಶವಾದ ಉಖ್ ಬ ಪ್ರವಾದಿ (ಸ) ರ ಮುಖಕ್ಕೆ ಉಗುಳಿದನು. ಅಂದು ವಾದಿ ( ಸ ) ರು ಅವನೊಂದಿಗೆ ಹೇಳಿದ್ದರು..
"ಮಕ್ಕಾದ ಹೊರಗಡೆ ಏನಾದರು ನೀನು ಕಾಣ ಸಿಕ್ಕರೆ ನಿನ್ನ ಅಂತ್ಯ ಖಂಡಿತ" ಎಂದು. ಆದ್ದರಿಂದ ಉಖ್ಬ ಯುದ್ಧಕ್ಕೆ ಹೊರಡಲು ಭಯ.. ಖುರೈಷಿ ಮುಖಂಡರು ಆತನ ಮೇಲೆ ಇನ್ನಿಲ್ಲದ ಒತ್ತಡ ಹೇರಿದರು. ಕೆಂಪು ಒಂಟೆಯೊಂದನ್ನು ಉಖ್ಬನಿಗೆ ನೀಡಿದರು. ಅದನ್ನೇರಿ ಹೊರಟ ಉಖ್ಬ, ಬದ್ರ್ ಯುದ್ದದಲ್ಲಿ ಮುಸ್ಲಿಮರ ವಶವಾಗಿ, ನಂತರ ಕೊಲೆಯಾಗುವುದರೊಂದಿಗೆ ತನ್ನ ಪ್ರಯಾಣವನ್ನು ಕೊನೆಗೊಳಿಸಿದನು...
ಉತ್ ಬತ್‌ಬ್‌ನು ರಬೀಅ ಸಹ ಯುದ್ದದಿಂದ ದೂರ ಉಳಿಯಲು ಬಯಸಿದನು. ಆದರೆ, ಆತನ ಸಹೋದರ ಶೈಬ ಮಧ್ಯಪ್ರವೇಶಿಸಿ, ಆತ ತನ್ನ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡಿದನು. ಇನ್ನೊಂದು ವರದಿಯ ಪ್ರಕಾರ, ಉತ್ಬ ಹಾಗೂ ಶೈಬಃ ಹೊರಡಲನುವಾಗುವಾಗ ಅವರ ಕೈಸ್ತ ಸೇವಕ ಉದಾಸ್ ಅಲ್ಲಿದ್ದನು. ಉದಾಸ್‌ನ ನೆನಪಲ್ಲಿ ಬಹುಷಃ ಆ ಹಳೆಯ ನೆನಪುಗಳು ಮೂಡಿ ಬಂದಿರಬೇಕು. ಸತ್ಯ ಧರ್ಮದ ಪ್ರಬೋಧನೆಗೆ ಪ್ರವಾದಿ (ಸ) ರು ತಾಇಫ್‌ಗೆ ಹೋದ ಸಂದರ್ಭ. ತಾಇಫ್‌ನ ಜನರ ಚಿತ್ರಹಿಂಸೆ ತಡೆಯಲಾರದೆ ಪ್ರವಾದಿ (ಸ) ರು ದ್ರಾಕ್ಷೆಯ ತೋಟದಲ್ಲಿ ರಕ್ಷಣೆ ಪಡೆದಿದ್ದರು. ಅಲ್ಲಿ ಉತ್ಬಃ ಹಾಗೂ ಶೈಬಃ ಇದ್ದರು. ಉದಾಸ್ ಪ್ರವಾದಿ (ಸ) ರಿಗೆ ದ್ರಾಕ್ಷೆಯ ಗೊಂಚಲು ನೀಡಿದ್ದನು...
ಇದನ್ನು ನೆನಪಿಸಿಕೊಂಡ ಉದಾಸ್ ತನ್ನ ಯಜಮಾನನೊಂದಿಗೆ ಯುದ್ಧಕ್ಕೆ ಹೋಗದಂತೆ ಹೇಳಿದನು.
"ನನ್ನ ತಂದೆತಾಯಿಗಳ ಮೇಲಾಣೆ, ನೀವೀಗ ಹೊರಡುತ್ತಿರುವುದು ಕೊಲೆಯಾಗಲು" ಇದನ್ನು ಕೇಳಿ ಇಬ್ಬರೂ ತಮ್ಮ ತೀರ್ಮಾನದಿಂದ ಹಿಂದಕ್ಕೆ ಸರಿದರು. ಆದರೆ,ಅಲ್ಲಾಹನ ತೀರ್ಮಾನ ಇನ್ನೊಂದಾಗಿತ್ತು. ಅಬೂಜಹಲ್ ಅವರಿಬ್ಬರ ಮೇಲೆ ಇನ್ನಿಲ್ಲದ ಒತ್ತಡ ಹೇರಿದನು. ಈಗ ಹೊರಡದಿದ್ದರೆ ತಮ್ಮ ಜನರ ನಡುವೆ ತಮಾಷೆಯ ವಸ್ತುವಾಗಬಹುದೆಂದು ಹೆದರಿ ಅವರು ತಮ್ಮ ನಿರ್ಧಾರವನ್ನು ಮತ್ತೆ ಬದಲಾಯಿಸಿಕೊಂಡರು. ಆದರೆ, ಅವಕಾಶ ಸಿಕ್ಕಿದರೆ ಅರ್ಧದಾರಿಯಿಂದಲೇ ಹಿಂದಿರುಗಬೇಕೆಂದು ಅವರಿಬರೂ ಬಯಸಿದ್ದರು. ದುರಾದೃಷ್ಟವಶಾತ್ ಇಬ್ಬರಿಗೂ ಅಂತಹ ಅವಕಾಶ ಸಿಗಲಿಲ್ಲ. ಆ ಯಾತ್ರೆ ಅವರ ಮರಣ ದೊಂದಿಗೆ ಕೊನೆಗೊಂಡವು...
ಮಕ್ಕಾದಿಂದ ಬದ್ರ್ ನ ಕಡೆಗೆ ಯಾತ್ರೆ ಹೊರಟ ಖುರೈಷಿಗಳು ಜುಹ್ಫದಲ್ಲಿ ತಂಗಿದರು. ಅಲ್ಲಿ ಮುತ್ತಲಿಬ್ ವಂಶದ ಜುಹೈಮುಬ್ನು ಸ್ವಲತ್‌ಗೆ ಒಂದು ಕನಸು ಬಿದ್ದವು. ಒಬ್ಬ ಕುದುರೆಯ ಮೇಲೆ ಆಗಮಿಸುತ್ತಾನೆ. ಆತನ ಜೊತೆಗೆ ಒಂದು ಒಂಟೆಯಿದೆ. ಆತ ಹೇಳುತ್ತಾನೆ. ಉತ್ಬತುಬ್ನು ರಬೀಅ ವಧಿಸಲ್ಪಟ್ಟಿದ್ದಾನೆ.. ಶೈಬತುಬ್ನು ರಬಿಅ ವಧಿಸಲ್ಪಟ್ಟಿದ್ದಾನೆ. ಅಬುಲ್ ಹಕಮುಬ್ನು ಹಿಶಾಮ್ ವಧಿಸಲ್ಪಟ್ಟಿದ್ದಾನೆ.. ಹೀಗೆ ಬದ್ರ್ ನಲ್ಲಿ ಮುಂದೆ ವಧಿಸಲ್ಪಡುವ ಖುರೈಷಿ ಪ್ರಮುಖರ ಹೆಸರುಗಳನ್ನೆಲ್ಲ ಹೇಳಿದನು. ನಂತರ ತನ್ನ ಒಂಟೆ ಕತ್ತು ಕೊಯ್ದು , ಖುರೈಷಿ ಕ್ಯಾಂಪುಗಳತ್ತ ಅದನ್ನು ಅಟ್ಟಿದನು.. ಅದರ ರಕ್ತ ಬೀಳದ ಒಂದೇ ಒಂದು ಟೆಂಟ್ ಅಲ್ಲಿರಲಿಲ್ಲ.."
ಈ ಕನಸಿನ ಬಗ್ಗೆ ಕೇಳಿದಾಗ ಅಬೂಜಹಲ್ ಗಹಗಹಿಸಿ ನಕ್ಕನು."ಅದೋ ಅಬ್ದುಲ್ ಮುತ್ತಲಿಬ್ ವಂಶಜರಿಂದ ಇನ್ನೋರ್ವ ಪ್ರವಾದಿಯ ಆಗಮನವಾಗಿದೆ. ನಮ್ಮೊಂದಿಗೆ ಯುದ್ಧ ಮಾಡಿದರೆ ಯಾರು ಸಾಯುತ್ತಾರೆ ಎಂಬುದು ನಾಳೆ ಅವನಿಗೆ ತಿಳಿಯುತ್ತದೆ" ಎಂದನು. ಪಿಶಾಚಿ ನಿನ್ನನ್ನು ಈ ರೀತಿ ಆಟ ಆಡಿಸುತ್ತಿದೆ ಎಂದು ಅಬೂಜಹಲ್‌ನ ಮಾತಿಗೆ ಜುಹೈಮ್‌ರ ಸಂಗಡಿಗರು ಪ್ರತಿಕ್ರಿಯಿಸಿದರು. (ಅಸ್ಸಿರತುಲ್ ಹಲಬಿಯ್ಯಾ-2:162)
ಒಂಬೈನೂರ ಐವತ್ತು ಹಾಗೂ ಸಾವಿರದ ನಡುವಿನ ಸಂಖ್ಯೆಯ ಖುರೈಷಿ ಸೈನಿಕರಿಗೆ ನೂರು ಕುದುರೆಗಳು ಹಾಗೂ ಎಂಟುನೂರ ಐವತ್ತು ಒಂಟೆಗಳಿದ್ದವು. ಎಲ್ಲಾ ಯೋಧರಿಗೂ ಯುದ್ಧ ವಸ್ತ್ರಗಳಿದ್ದವು... (ಅಸ್ಸಿರತುಲ್ ಹಲಬಿಯ್ಯಾ-2:155)
ಯುದ್ದ ಸಿದ್ಧತೆಗಾಗಿ ಖುರೈಷಿಗಳು ಭಾರೀ ಮೊತ್ತವನ್ನು ವ್ಯಯಿಸಿದ್ದರು. ಹಲವು ಆಯುಧಗಳನ್ನು ಸಿದ್ದಗೊಳಿಸಿದ್ದರು. ಸಿದ್ದತೆಗಳು ಪೂರ್ಣಗೊಂಡಾಗ ಅತ್ಯಂತ ಶಕ್ತಿಶಾಲಿ ಸೈನ್ಯವೊಂದು ಸಿದ್ದಗೊಂಡವು. ಅದೊಂದು ರೀತಿಯಲ್ಲಿ ಆಡಂಬರ ಹಾಗೂ ಧೂರ್ತತೆಯ ಬಹಿರಂಗ ಪ್ರದರ್ಶನವಾಗಿತ್ತು. ಹಾಡು, ನೃತ್ಯ ಹಾಗೂ ಮದ್ಯದ ಲಹರಿಯಿಂದ ಅವರು ಪರಿಸರವನ್ನೇ ಮರೆಯುತ್ತಿದ್ದರು. ಅವರ ಜೊತೆಗೆ ಪ್ರತಿದಿನವೂ ಸತ್ಕಾರ ಕೂಟ ಏರ್ಪಡಿಸುವಷ್ಟರ ಮಟ್ಟಿಗಿನ ಆಹಾರ ವಸ್ತುಗಳ ದಾಸ್ತಾನಿದ್ದವು. ಮೃಗ ಬಲಿಯಂತೂ ಯಥೇಚ್ಚ ನಡೆದವು. ಕೆಲವರು ಇನ್ನಿತರರ ಒತ್ತಡಕ್ಕೆ ಮಣಿದು ಮನಸಿಲ್ಲದ ಮನಸಿನಿಂದ ಹೊರಟಿದ್ದರೆ, ಇನ್ನು ಕೆಲವರು ಹೆಸರು, ಪ್ರಶಸ್ತಿ ಹಾಗೂ ಸಂಪತ್ತಿನ ಮೇಲಿನ ಆಸೆಯಿಂದ ಹೊರಟಿದ್ದರು.
ಆತಿಖ ಹಾಗೂ ಜುಹೈಮ್ರ ಕನಸಿನಿಂದ ಒಂದಂತು ಸ್ಪಷ್ಟವಾಗುತ್ತದೆ. ಮಕ್ಕಾದಲ್ಲಿದ್ದ ಪ್ರವಾದಿ ಕುಟುಂಬಕ್ಕೆ ಈ ಯುದ್ಧ ಇಷ್ಟವಿರಲಿಲ್ಲ. ಅವರು ಖುರೈಷಿ ಪ್ರಮುಖರ ಒತ್ತಾಯ, ಒತ್ತಡಗಳಿಗೆ ಒಳಗಾಗಿ ವಿಧಿಯಿಲ್ಲದೆ ಹೊರಟಿದ್ದರೆ ವಿನಾ ಮುಹಮ್ಮದರ ಜೊತೆ ಯುದ್ಧ ಮಾಡಲು ಅವರಿಗೆ ಮನಸಿರಲಿಲ್ಲ... ಖುರೈಷಿ ನಾಯಕರ ಒತ್ತಡಕ್ಕೆ ಮಣಿದು, ಮುಸ್ಲಿಮರ ವಿರುದ್ಧ ಯುದ್ಧಕ್ಕೆ ಹೊರಟಿದ್ದರೂ, ಪ್ರವಾದಿ (ಸ) ಯ ಮೇಲಿನ ಅವರ ಪ್ರೇಮಕ್ಕೆ ಕುಂದುಂಟಾಗಿರಲಿಲ್ಲ.
ಮಕ್ಕಾದಿಂದ ಹೊರಡುವಾಗ ಕಅಬಾದ ಕರ್ಟನ್ ಹಿಡಿದು ಖುರೈಷಿಗಳು ಪ್ರಾರ್ಥನೆ ನಡೆಸಿದ್ದರು. ಅವರ ಪ್ರಾರ್ಥನೆ ಮಾರ್ಮಿಕವಾಗಿತ್ತು. "ದೇವರೇ!! ಎರಡು ಸೈನ್ಯಗಳಲ್ಲಿ ಯಾರು ಹೆಚ್ಚು ಪ್ರತಾಪಿಗಳೋ, ಎರಡು ಪಕ್ಷಗಳಲ್ಲಿ ಯಾರು ಹೆಚ್ಚು ಗೌರವಾನ್ವಿತರೋ ಎರಡು ಗೋತ್ರಗಳಲ್ಲಿ ಯಾರು ಹೆಚ್ಚು ಶ್ರೇಷ್ಠರೋ ಅವರಿಗೆ ನೀನು ನೆರವಾಗು" ಈ ಹಿನ್ನೆಲೆಯಲ್ಲಿ ಅವತೀರ್ಣಗೊಂಡ ಖುರ್‌ಆನ್ ವಚನವು “ನೀವು ವಿಜಯ ಪ್ರಾರ್ಥನೆ ನಡೆಸಿದ್ದರೆ ಖಂಡಿತವಾಗಿಯೂ ವಿಜಯವು ಈಗಾಗಲೇ ತಲುಪಿದೆ. ನೀವು ಈಗಲೇ ಕೊನೆಗೊಳಿಸಿದರೆ ಅದುವೇ ನಿಮಗೆ ಉತ್ತಮವಾಗಿರುತ್ತದೆ. ನೀವು ಯುದ್ಧಕ್ಕೆ ಹೊರಟರೆ ನಾವೂ ಸಹ ಹೊರಡುವೆವು. ನಿಮ್ಮ ಸಂಖ್ಯೆ ಹೆಚ್ಚಿದ್ದರೂ ಅದರಿಂದ ನಿಮಗೆ ಯಾವ ಪ್ರಯೋಜನವೂ ಆಗದು. ಅಲ್ಲಾಹನು ಸತ್ಯವಿಶ್ವಾಸಿಯ ಜೊತೆಗಿರುವನು"(ಪವಿತ್ರ ಖುರ್‌ಆನ್- 8:9).
ಸಿದ್ಧತೆ ಪೂರ್ಣಗೊಂಡಾಗ ಒಂದು ಸಮಸ್ಯೆ ಖುರೈಷಿಗಳ ಗಮನಕ್ಕೆ ಬಂದವು. ಕಿನಾನಃ ಗೋತ್ರದವರ ಜೊತೆಗಿನ ಒಂದು ಪ್ರತೀಕಾರದ ಕಥೆಯದು. ಕಿನಾನ: ಗೋತ್ರಕ್ಕೆ ಸೇರಿದ ಒಬ್ಬ ವ್ಯಕ್ತಿಯನ್ನು ಖುರೈಷಿಗಳು ಕೊಂದರು..
ಸಿದ್ಧತೆ ಪೂರ್ಣಗೊಂಡಾಗ ಒಂದು ಸಮಸ್ಯೆ ಖುರೈಷಿಗಳ ಗಮನಕ್ಕೆ ಬಂದವು. ಕಿನಾನಃ ಗೋತ್ರದವರ ಜೊತೆಗಿನ ಒಂದು ಪ್ರತೀಕಾರದ ಕಥೆಯದು. ಕಿನಾನ: ಗೋತ್ರಕ್ಕೆ ಸೇರಿದ ಒಬ್ಬ ವ್ಯಕ್ತಿಯನ್ನು ಖುರೈಷಿಗಳು ಕೊಂದರು.. ನಂತರ ಸುಂದರನೂ, ಸುಮುಖನೂ ಆದ ಒಬ್ಬ ಖುರೈಷಿ ಯುವಕ ಕಾಣೆಯಾದ ತನ್ನ ಮೃಗವನ್ನು ಹುಡುಕಿ ಕಿನಾನಃ ಗೋತ್ರದವರ ಬಳಿಗೆ ಹೋದನು. ಕಿನಾನಃ ಮುಖ್ಯಸ್ಥ ಆಮಿರುಬ್ನಲ್ ಖಲೂಜ್ ತನ್ನಲ್ಲಿ ಆಸೂಯೆ ಹುಟ್ಟಿಸಿದ ಆ ಸುಂದರ ಯುವಕನತ್ತ ತನ್ನ ಜನರನ್ನು ಕಳುಹಿಸಿದನು. ಅವರು ಆ ಯುವಕನನ್ನು ವಧಿಸಿದರು. ನಮ್ಮ ಒಬ್ಬನನ್ನು ವಧಿಸಿದಕ್ಕೆ ಇದು ಪ್ರತೀಕಾರ ಎಂದು ಖುರೈಷಿಗರಿಗೆ ಹೇಳಿ ಕಳುಹಿಸಿದರು. ಖುರೈಷಿಗಳು ಅದನ್ನು ಒಪ್ಪಿಕೊಂಡರು. ಇಂತಹ ಸಂದರ್ಭದಲ್ಲಿ ವಧಿಸಲಟ್ಟ ಸುಕೋಮಲ ಯುವಕನ ಸಹೋದರ ಮುರ್ರುಳ್ಳಹ್ರಾನ್‌ನಲ್ಲಿ ಕಿನಾನ ಗೋತ್ರದ ಮುಖಂಡ ಆಮಿರ್‌ನ ಮೇಲೆ ತನ್ನ ಖಡ್ಗದಿಂದ ದಾಳಿ ನಡೆಸಿ, ಕೊಲೆ ಮಾಡಿದನು. ಮಾತ್ರವಲ್ಲದೆ, ಆಮಿರ್‌ನ ಹೊಟ್ಟೆಗೆ ಖಡ್ಗ ತೂರಿ, ಶವವನ್ನು ಹೊತ್ತುಕೊಂಡು ಬಂದು ರಾತ್ರೋರಾತ್ರಿ ಕಅಬಾಲಯದ ಮುಂಭಾಗದಲ್ಲಿ ತೂಗು ಹಾಕಿದನು. ಬೆಳಕು ಹರಿಯುತ್ತಿದ್ದಂತೆ ಖುರೈಷಿಗಳ ಆ ದೃಶ್ಯಗಳು ಬೆಚ್ಚಿ ಬಿದ್ದರು. ಖಡ್ಡ ನೋಡಿದೊಡನೇ ಅದು ಆಮಿರ್್ರ ಎಂದು ಅವರಿಗೆ ತಿಳಿದವು. ಈ ಸಮಸ್ಯೆ ಹೀಗೆ ಉಲ್ಬಣಗೊಳ್ಳುತ್ತಿರುವಾಗಲೇ ಅವರು ಪ್ರವಾದಿ (ಸ) ಯ ಜೊತೆಗಿನ ಈ ಯುದ್ಧಕ್ಕೆ ಹೊರಟಿದ್ದರು. ತಾವು ಮಕ್ಕಾ ಬಿಟ್ಟು ಹೋದರೆ, ಕಿನಾನ ಗೋತ್ರದ ಜನರು ತಮ್ಮ ಮನೆಮಠಗಳ ಮೇಲೆ ದಾಳಿ ಮಾಡಿ, ಸ್ತ್ರೀಯರು ಹಾಗೂ ಮಕ್ಕಳನ್ನು ಹತ್ಯೆ ಮಾಡುವರೇ..? ಎಂಬ ಭೀತಿ ಖುರೈಷಿಗಳಿಗಿದ್ದವು. ಅಥವಾ ಯುದ್ಧಭೂಮಿಗೆ ಆಗಮಿಸಿ ಹಿಂದಿನಿಂದ ಮಿಂಚಿನ ಆಕ್ರಮಣ ನಡೆಸಿ, ಪ್ರತೀಕಾರ ತೀರಿಸಿಕೊಳ್ಳುವರೇ..? ಎಂದು ಅನುಮಾನವಾದವು. ಅಂತಹ ಸಂದರ್ಭದಲ್ಲಿ ಸುರಾಖತ್‌ಬ್‌ನು ಮಾಲಿಕ್ ಅವರ ಮುಂದೆ ಬರುತ್ತಾರೆ. ಕಿನಾನಃ ಗೋತ್ರದ ಪ್ರಮುಖ ವ್ಯಕ್ತಿಯಾದ ಸುರಾಖ ಖುರೈಷಿಗಳೊಂದಿಗೆ ಹೇಳಿದನು.
"ಅನಿಷ್ಟಕರವಾದ ಏನಾದರೂ ನಮ್ಮಿಂದ ನಡೆಯಬಹುದೇ..? ಎಂಬ ಭಯ ನಿಮಗಿರುವುದು ನನಗೆ ತಿಳಿದಿದೆ. ಅಂತಹ ಭಯದ ಅಗತ್ಯವಿಲ್ಲ. ನಿಮಗೆ ನಾನು ಅಭಯ ನೀಡುವೆನು.." ಮಾತ್ರವಲ್ಲದೆ, ನನ್ನ ಜೊತೆಗಿರುವವರು ನಿಮ್ಮ ಬೆಂಬಲಕ್ಕೆ ನಿಂತಿದ್ದು, ಅವರು ನಿಮಗೆ ನೆರವಾಗಲು ಉದ್ದೇಶಿಸಿದ್ದಾರೆ. ಆದ್ದರಿಂದ ನಿಮ್ಮನ್ನು ಯಾರಿಂದಲೂ ಸೋಲಿಸಲು ಸಾಧ್ಯವಿಲ್ಲ ಎಂದು ಸಹ ಹೇಳಿದನು. ಖುರೈಷಿಗಳಿಗೆ ಸಂತೋಷವಾದವು...
ಈ ಸುರಖಃ ವೇಷ ಬದಲಾಯಿಸಿ ಬಂದ ಪಿಶಾಚಿಯಾಗಿದ್ದನೆಂದು ಖುರೈಷಿಗಳಿಗೆ ಅರ್ಥವಾಗುವಾಗ ಕಾಲ ಮಿಂಚಿ ಹೋಗಿತ್ತು. ಬದ್ರ್ ಯುದ್ದದ ವೇಳೆ ದೇವಚರರು ಇಳಿದು ಬರುವಾಗಲೇ ಸುರಾಖನ ವೇಷದಲ್ಲಿ ಪಿಶಾಚಿ ಆಗಮಿಸಿ, ತಮ್ಮನ್ನೆಲ್ಲಾ ವಂಚಿಸಿದ್ದೆಂಬ ತಿಳುವಳಿಕೆ ಮೂಡಿದ್ದವು.. (ಡಾ. ಮುಹಮ್ಮದ್ ಅಬ್ದು ಯಮಾನಿ, ಬದ್ರುಲ್ ಕುಬ್ರಾ-148)
ಖುರೈಷಿಗಳ ಯುದ್ಧ ಯಾತ್ರೆ ಒಂದು ಜಾತ್ರೆಯಂತಿದ್ದವು. ಇನ್ನೊಂದು ರೀತಿಯಲ್ಲಿ ಅದನ್ನೊಂದು ವಿನೋದ ಯಾತ್ರೆ ಎಂದೂ ಕರೆಯಬಹುದು. ನಿತ್ಯವೂ ಒಂಭತ್ತು ಹತ್ತು ಒಂಟೆಗಳನ್ನು ಬಲಿಕೊಡಲಾಗುತ್ತಿತ್ತು.. ವಾದ್ಯ ಸೇರಿದಂತೆ ಅನೇಕ ಸಂಗೀತೋಪಕರಣಗಳು ಅವರ ಜೊತೆಗಿದ್ದವು. ಅರೆನಗ್ನ ಸ್ತ್ರೀಯರು ನೃತ್ಯವಾಡಿ, ಮದ್ಯ ಸುರಿದುಕೊಟ್ಟು, ಸೈನಿಕರ ನಡುರಾತ್ರಿಯ ತೃಷೆಗಳನ್ನು ತೀರಿಸಿಕೊಳ್ಳುತ್ತಿದ್ದರು.. ಬಗೆ ಬಗೆಯ ಭಕ್ಷ್ಯ ಭೋಜನಗಳನ್ನು ಸೇವಿಸಿ,ನರ್ತಕಿಯರ ಜೊತೆ ನೃತ್ಯ ಸಂಗೀತಗಳಲ್ಲಿ ಪಾಲ್ಗೊಳ್ಳುತ್ತಿದ್ದರು..
ಖುರೈಷಿಗಳು ಬಲಿಕೊಟ್ಟ ಒಂಟೆಗಳ ಲೆಕ್ಕ ಹಾಗೂ ಬಲಿಕೊಟ್ಟವರ ಹೆಸರು ಹೀಗಿದೆ, 1. ಮಕ್ಕಾದಿಂದ ಹೊರಟು ಮುರ್ರುಳ್ಳಹ್ರಾನ್‌ನಲ್ಲಿ ಅಬೂಜಹಲ್ ಹತ್ತು ಒಂಟೆಗಳನ್ನು ಬಲಿಕೊಟ್ಟನು. ಅದರಲ್ಲಿ ಒಂದು ಒಂಟೆ ಖುರೈಷಿಗಳ ಟೆಂಟುಗಳ ನಡುವೆ ಮರಣ ವೇದನೆಯಿಂದ ಓಡಿದ ಅದರ ರಕ್ತ ಸುರಿಯದ ಒಂದೇ ಒಂದು ಟೆಂಟುಗಳು ಅಲ್ಲಿ ಬಾಕಿ ಉಳಿಯಲಿಲ್ಲ. ಅದನ್ನೊಂದು ಅವಲಕ್ಷಣವಾಗಿ ಕಂಡ ಬನೂಅದಿಯ್ಯ್ ಗೋತ್ರದ ಜನರು ಅಲ್ಲಿಂದಲೇ ಹಿಂದಿರುಗಿದರು. (ಮಖೀಸುಬ್ನ್ ಉಮರ್, ಬದ್‌ರ್ ನಲ್ಲಿ ಈ ಬಲಿ ನಡೆಯಿತೆಂಬ ಅಭಿಪ್ರಾಯವೂ ಇದೆ..
(ಅಸ್ಸಿರತುಲ್ ಹಲಬಿಯ್ಯಾ2: 163)
2. ಉಸ್ಪಾನ್‌ನಲ್ಲಿ ಉಮಯ್ಯತ್ ಬ್ನು ಖಲಫ್ ಒಂಬತ್ತು ಒಂಟೆಗಳನ್ನು ಬಲಿಕೊಟ್ಟನು. 3 . ಖದೀದ್‌ನಲ್ಲಿ ಸುಹೈಲ್‌ಬ್ನ್ ಅಮ್ರ್ ಹತ್ತು ಒಂಟೆಗಳನ್ನು ಬಲಿಕೊಟ್ಟರು.
4. ಶೈಬತುಬ್‌ನು ರಬೀಅ ಮನಾತ್‌ನಲ್ಲಿ (ಅಲ್ಲಿ ಅವರು ಒಂದು ದಿನ ತಂಗಿದರು) ಒಂಭತ್ತು ಒಂಟೆಗಳನ್ನು ಬಲಿಕೊಟ್ಟನು.
5. ಉತ್ಬತುಬ್ನು ರಬೀಅ ಜುಹ್ಪದಲ್ಲಿ ಹತ್ತು ಒಂಟೆಗಳನ್ನು ಬಲಿಕೊಟ್ಟನು.
6. ಅಬವಾಇಲ್‌ನಲ್ಲಿ ಮಖೀಸುಬ್ನು ಉಮರ್ ಒಂಭತ್ತು ಒಂಟೆಗಳನ್ನು ಬಲಿಕೊಟ್ಟನು.
7. ಹಜ್ಜಾಜ್ರ ಪುತ್ರರಾದ ರಬೀಅ ಹಾಗೂ ಮುನಬ್ಬಿಹು ಸೇರಿ ಹತ್ತು ಒಂಟೆಗಳನ್ನು ಬಲಿಕೊಟ್ಟರು.
8. ಅಬ್ಬಾಸುಬ್ನು ಅಬ್ದುಲ್ ಮುತ್ತಲಿಬ್ ಹತ್ತು ಒಂಟೆಗಳನ್ನು ಬಲಿಕೊಟ್ಟರು.
9. ಹಾರಿಸ್ ಬ್ನು ಅಮ್ರ್ ಬ್ನು ನೌಫಲ್ ಒಂಭತ್ತು ಒಂಟೆಗಳನ್ನು ಬಲಿಕೊಟ್ಟರು.
10.ಬದ್ರ್ ನಲ್ಲಿ ಅಬುಲ್ ಬುಖ್ತರಿ ಹತ್ತು ಒಂಟೆಗಳನ್ನು ಬಲಿಕೊಟ್ಟನು.
(ಅಸ್ಸಿರತುಲ್ ಹಲಬಿಯ್ಯಾ)
ಮಕ್ಕಾದಿಂದ ಬದ್ರ್ ನೆಡೆಗೆ ಖುರೈಷಿಗಳ ಯಾತ್ರೆ ಕೊನೆಗೊಳ್ಳಲು ಹತ್ತು ದಿನಗಳು ಬೇಕಾದವು. ಜುಹ್ಫಾದಲ್ಲಿ ಅವರು ಅಬೂಸುಫಿಯಾನ್ ಕಳುಹಿಸಿದ್ದ ದೂತನನ್ನು ಸಂಧಿಸಿದ್ದರು. ಖಾಫಿಲ ಸುರಕ್ಷಿತವಾಗಿದೆ, ನೀವಿನ್ನು ಹಿಂದಿರುಗಿ ಹೋಗಬಹುದು ಎಂಬ ಸಂದೇಶವನ್ನು ಅಬೂಸುಫಿಯಾನ್ ಕಳುಹಿಸಿದ್ದರು.
ಆದರೆ, ಅಹಂಕಾರಕ್ಕೆ ಕೈಕಾಲು ಮೊಳೆತರೆ ಹೇಗಿರುತ್ತದೋ ಹಾಗಿದ್ದ ಅಬೂಜಹಲ್ ಸೈನಿಕರು ಹಿಂದಿರುಗುವುದನ್ನು ನಖಶಿಖಾಂತ ವಿರೋಧಿಸಿದನು. ಸೈನಿಕರನ್ನುದ್ದೇಶಿಸಿ ಅಬೂಜಹಲ್ ಮಾತನಾಡಲಾರಂಭಿಸಿದನು. "ದೇವರ ಮೇಲಾಣೆ, ನಾವು ಹಿಂದಿರುಗುವ ಪ್ರಶ್ನೆಯೇ ಇಲ್ಲ. ಬದ್ರ್ ಗೆ ಹೋಗಿ ಮೂರು ದಿನ ನಾವು ತಂಗುತ್ತೇವೆ. ಆ ಮೂರು ದಿನಗಳಲ್ಲಿ ಒಂಟೆಗಳನ್ನು ಬಲಿಕೊಟ್ಟ ಭರ್ಜರಿ ಔತನ ಕೂಟವನ್ನೇ ಏರ್ಪಡಿಸುತ್ತೇವೆ. ಅಲ್ಲಿ ಮದ್ಯದ ಹೊಳೆಯೇ ಹರಿಯಲಿದೆ. ನರ್ತನ, ಸಂಗೀತಗೋಷ್ಠಿ ನಡೆಸುತ್ತೇವೆ. ನಮ್ಮ ಕುರಿತು,ನಮ್ಮ ಸೈನಿಕ ಶಕ್ತಿಯ ಕುರಿತು ಅರಬಿಗಳು ತಿಳಿಯಬೇಕು. ನಮ್ಮನ್ನು ಕಂಡರೆ ಇಡೀ ಅರೇಬಿಯಾದ ಜನತೆ ಭಯದಿಂದ ದೂರ ಸರಿಯಬೇಕು.. " ಅಬೂಜಹಲ್‌ನ ಮಾತುಗಳಿಂದ ಒಂದು ವಿಷಯವನ್ನು ಸ್ಪಷ್ಟಪಡಿಸಿಕೊಳ್ಳಬಹುದು. ಒಂದು ಯುದ್ಧವನ್ನೋ, ಸಂಘರ್ಷವನ್ನೊ ಅವನು ನಿರೀಕ್ಷಿಸಿರಲಿಲ್ಲ. ಮುಸ್ಲಿಮರು ದುರ್ಬಲರೂ, ಹೇಡಿಗಳೂ ಎಂದು ಅವನು ಭಾವಿಸಿದ್ದನು..
ಯುದ್ದದ ಆರಂಭ
ಯುದ್ಧ ಆಸನ್ನವಾಗುತ್ತಿದ್ದಂತೆ ಪ್ರವಾದಿ (ಸ) ರು ಅನುಯಾಯಿಗಳಿಗೆ ನಿರ್ದೇಶನಗಳನ್ನು ನೀಡ ತೊಡಗಿದರು.
“ಶತ್ರುಗಳ ವಿರುದ್ಧ ಅಸ್ತ್ರಗಳನ್ನು ಪ್ರಯೋಗಿಸಿರಿ. ಬಾಣಗಳು ಹಾಳಾಗದಂತೆ ಪರಮಾವಧಿ ಕಾಯ್ದುಕೊಳ್ಳಿ, ಗುರಿ ಮುಟ್ಟುವ ಖಚಿತತೆಯೊಂದಿಗೆ, ಸಾಧ್ಯವಾದಷ್ಟು ಹತ್ತಿರದಿಂದಲ್ಲದೆ ಬಾಣ ಪ್ರಯೋಗಿಸಬಾರದು. ಶತ್ರುಗಳು ಹತ್ತಿರ ಬರುವವರೆಗೂ ಖಡ್ಡ ಹೊರತೆಗೆಯಬಾರದು..
ಯುದ್ಧವನ್ನು ವೀಕ್ಷಿಸಲು, ಯಾರು ಸೋಲುತ್ತಾರೆ ಎಂದು ನೋಡಲು, ಸುಲಿಗೆ ಮಾಡಲು, ಯುದ್ದ ಸಂಪತ್ತನ್ನು ಲೂಟಿ ಹೊಡೆಯಲು ಗಿಫಾರಿ ಗೋತ್ರದ ಜನರು ಅಲ್ಲಿಗೆ ಬಂದಿದ್ದರು. ತಮಗೆ ಅಪರಿಚಿತವಾದ ಮುಸ್ಲಿಮರ ಈ ಯುದ್ಧ ತಂತ್ರ ಕಂಡು ಅವರು ಚಕಿತರಾದರು. ಇನ್ನಿತರ ಅರಬಿಗಳಂತೆ ಓಡುವುದು, ಜಿಗಿಯುವುದು ಮೊದಲಾದ ಹೋರಾಟಗಳನ್ನು ಅವರು ನಿರೀಕ್ಷಿಸಿದ್ದರು. ಒಬ್ಬರಿಗೆ ಇನ್ನೊಬ್ಬರು ಪರಸ್ಪರ ಅಂಟಿಕೊಂಡು, ಸಾಲಾಗಿ ನಿಂತು ಯುದ್ಧ ಮಾಡುವ ರೀತಿಯನ್ನು ಅವರ ಇದೇ ಮೊದಲ ಬಾರಿ ನೋಡುತ್ತಿದ್ದರು.
ಪ್ರವಾದಿ (ಸ) ನೀಡಿದ ಪತಾಕೆಯೊಂದಿಗೆ ಮುನ್ನಡೆದ ಮಿಸ್ ಅಬ್ಬ್ನ್ ಉಮೈರ್, ಪ್ರವಾದಿ (ಸ) ನಿರ್ದೇಶಿಸಿದ ಸ್ಥಳದಲ್ಲಿ ಅದನ್ನು ನೆಟ್ಟರು. ಪ್ರವಾದಿ (ಸ) ರು ಪಂಕ್ತಿಗಳನ್ನು ಪರಿಶೋಧಿಸಿದರು. ಸೂರ್ಯ ಬೆನ್ನ ಹಿಂದೆ ಬೀಳುವಂತೆ ಪಂಕ್ತಿಯನ್ನು ಪಶ್ಚಿಮಕ್ಕೆ ತಿರುಗಿಸಿ, ನಿಲ್ಲಿಸಿದರು.
ಪ್ರಭಾತವಾಗುತ್ತಿದ್ದಂತೆ ಅಖನ್ ಖಲ್ ಪರ್ವತದ ಹಿಂಭಾಗದಿಂದ ಮುಶ್ರಿಕರು ಕಣಿವೆ ಪ್ರವೇಶಿಸಿದರು. ಯುದ್ಧ ಬೇಕೋ ಬೇಡವೋ ಎಂಬ ಗೊಂದಲ, ಭೀತಿ, ಅಹಂಕಾರ, ಜಂಭ ಮೊದಲಾದ ಮಾನಸಿಕ ಅವಸ್ಥೆಯಲ್ಲಿ ಅವರಿದ್ದರು. ಭಿನ್ನಾಭಿಪ್ರಾಯ, ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದು ಅವರು ಸತ್ತ ಮನಸಿನೊಂದಿಗೆ ಯುದ್ಧಭೂಮಿಗೆ ಆಗಮಿಸಿದ್ದರು. ಆ ಪರಿಸರದ ಜಲಮೂಲಗಳೆಲ್ಲ ಮುಸ್ಲಿಮರ ನಿಯಂತ್ರಣದಲ್ಲಿದೆ ಎಂಬ ಸುದ್ದಿ ಕೇಳಿದ ಮೇಲಂತೂ ಅವರ ಭೀತಿ ಇಮ್ಮಡಿಸಿದ್ದವು. ಯುದ್ಧಭೂಮಿಯಲ್ಲಿ ಸೂರ್ಯನಿಗೆ ಅಭಿಮುಖವಾಗಿ ನಿಂತು ಖುರೈಷಿಗಳು ತಮ್ಮ ನೆಲೆ ಖಚಿತಪಡಿಸಿಕೊಂಡರು.
ಆಗ ಮುಸ್ಲಿಮರ ನಡುವಿನ ಒಬ್ಬರು ಪ್ರವಾದಿ (ಸ) ಯೊಂದಿಗೆ ಹೇಳಿದರು. ಅಲ್ಲಾಹನ ದೂತರೇ, ಈ ಕ್ರಮ ತಮಗೆ ಅವತೀರ್ಣಗೊಂಡಿರುವ ದೈವಿಕ ಆಜ್ಜೆಯಾಗಿದ್ದರಿಂದ ಅದನ್ನು ಪೂರ್ಣಗೊಳಿಸಿ, ಅದಲ್ಲದಿದ್ದರೆ, ತಾವು ಕಣಿವೆಯ ಮೇಲ್ಬಾಗಕ್ಕೆ ಹತ್ತಬೇಕೆಂಬುದು ನನ್ನ ಅಭಿಪ್ರಾಯ. ಕಾರಣ, ಗಾಳಿಯೊಂದು ಕಣಿವೆಯ ಮೇಲ್ಬಾಗದಿಂದ ಬೀಸಿ ಬಂದು ತಮಗೆ ನೆರವಾಗಲಿದೆ ಎಂದು ನಾನು ಭಾವಿಸುತ್ತೇನೆ ''
'' ಅಲ್ಲಾಹನಿಗಾಗಿ ನಾನು ನನ್ನ ಪಂಕ್ತಿಯನ್ನು ಸರಿಪಡಿಸಿದೆ. ಪತಾಕೆಯನ್ನು ನೆಟ್ಟೆ, ಇನ್ನು ನಾನದನ್ನು ಬದಲಾಯಿಸುವುದಿಲ್ಲ ” ಪ್ರವಾದಿ (ಸ) ರು ಹೇಳಿದರು.
ಇಲ್ಲಿ ಅನುಯಾಯಿಯ ಅಭಿಪ್ರಾಯವನ್ನು ಪ್ರವಾದಿ (ಸ) ರು ಆಲಿಸಿದರು. ಆದರೆ, ಅದನ್ನು ಪರಿಗಣಿಸಲಿಲ್ಲ. ಕಾರಣ, ಪ್ರವಾದಿ (ಸ) ರು ಅದನ್ನು ತೀರ್ಮಾನಿಸಿಬಿಟ್ಟಿದ್ದರು. ಅಲ್ಲಾಹನ ಮೇಲೆ ಭಾರವನ್ನರ್ಪಿಸಿದ್ದರು. ಅದೇ ಸಮಯದಲ್ಲಿ ನೀರಿನ ವಿಚಾರದಲ್ಲಿ ಅವರು ಹುಬಾಬ್‌ರ ಅಭಿಪ್ರಾಯವನ್ನು ಸ್ವೀಕರಿಸಿದ್ದರು. ಪ್ರವಾದಿ (ಸ) ರು ಪ್ರಾರ್ಥನೆ ಹಾಗೂ ಸಹಾಯ ಅಭ್ಯರ್ಥನೆಯಲ್ಲಿ ಮುಳುಗಿದರು.
“ಅಲ್ಲಾಹನೇ, ಈ ಪುಟ್ಟ ಸಮೂಹ ಪರಾಜಿತರಾದರೆ ಮತ್ತೆ ಈ ಭೂಮಿಯಲ್ಲಿ ನಿನ್ನನ್ನು ಆರಾಧಿಸುವ ಸಮೂಹವೊಂದಿರಲಾರದು” ಗದ್ಗದಿತ ಕಂಠದೊಂದಿಗೆ ಪ್ರವಾದಿ (ಸ) ರು ಮುಂದುವರಿಸಿದರು.
“ಅಲ್ಲಾಹನೇ, ನೀನು ನನ್ನೊಂದಿಗೆ ಮಾಡಿರುವ ವಾಗ್ದಾನವನ್ನು ನೆರವೇರಿಸಿಕೊಡು. ನಿನ್ನ ಸಹಾಯ ನಮ್ಮ ಮೇಲಿರಲಿ " ಕೈಗಳನ್ನು ಆಕಾಶಕ್ಕೆ ಎತ್ತಿದಾಗ ಪ್ರವಾದಿ (ಸ) ಭುಜದಲ್ಲಿದ್ದ ಉತ್ತರೀಯ ಕೆಳಗೆ ಬಿದ್ದವು. ಪ್ರವಾದಿ ಸ ರು ಅಳುತ್ತಾ ಪ್ರಾರ್ಥಿಸುತ್ತಿರುವುದು ಕಂಡು, ಅಬೂಬಕ್ಕರ್ (ರ) ರ ಮನಸ್ಸಿಗೆ ನೊಂದವು. ಪ್ರವಾದಿ (ಸ) ಯ ಹತ್ತಿರ ಬಂದು ಕೆಳಗೆ ಬಿದ್ದಿದ್ದ ಅವರ ಉತ್ತರೀಯವನ್ನು ಮತ್ತೆ ಭುಜದ ಮೇಲಿಟ್ಟು, ಅವರು ಪ್ರವಾದಿ (ಸ) ಯನ್ನು ಸಂತೈಸಿದರು.
"ಅಲ್ಲಾಹನ ದೂತ, ಅಲ್ಲಾಹನೊಂದಿಗೆ ಅಳುತ್ತಾ ಪ್ರಾರ್ಥಿಸುವುದನ್ನು ಕಡಿಮೆ ಮಾಡಿ, ನಿಶ್ಚಯವಾಗಿಯೂ ನಿಮ್ಮ ನಾಥನೂ ಮಾಡಿದ ವಾಗ್ದಾನವನ್ನು ಪೂರೈಸುವನು"
(ಅಲ್ ಬಿದಾಯತುವನ್ನಿಹಾಯ- 3: 300. ಡಾ. ಯಮನಿ, ಬದ್ರುಲ್ ಕುಬ್ರ: 170)
"ಈ ಸಂದರ್ಭದಲ್ಲಿ ನಿಮ್ಮ ಪ್ರಭುವಿನೊಂದಿಗೆ ನೀವು ಸಹಾಯ ಯಾಚಿಸುವ ಸಂದರ್ಭ. ಸಾವಿರ ದೇವಚರರ ಮೂಲಕ ನಿಮಗೆ ನೆರವಾಗುವುದಾಗಿ ಅವನು ಉತ್ತರ ನೀಡಿದನು '' ಎಂಬ ಖುರ್‌ಆನ್ ವಚನ ಅವತೀರ್ಣಗೊಂಡವು.
(ಖುರ್‍ಆನ್ 8: 9).
ಪ್ರವಾದಿ (ಸ) ರಿಗೆ ಮಂಪರು ಕವಿದವು. ತೂಕಡಿಸುತ್ತಾ ಮಲಗುತ್ತಿದ್ದಂತೆ ! ಪ್ರವಾದಿ ಸ ಯ ಶಿರ ಬಾಗಿದವು. ತಕ್ಷಣವೇ ಎಚ್ಚೆತ್ತರು. ಆಗವರ ಮುಖ ಅರಳಿಕೊಂಡಿತ್ತು.
"ಅಬೂಬಕ್ಕರ್ ಸಂತೋಷ ಪಡು. ಅಲ್ಲಾಹನ ಸಹಾಯ ತಮಗೆ ತಲುಪಿದೆ '' ಎಂದರು. (ಅಸ್ಸಿರತುಲ್ ಹಲಬಿಯ್ಯ- 2: 176)
ಅಲ್ಲಾಹನೊಂದಿಗಿನ ಪ್ರಾರ್ಥನೆ ಹಾಗೂ ಸಹಾಯ ಅಭ್ಯರ್ಥನೆಗಳ ಮೂಲಕ ಪ್ರವಾದಿ (ಸ) ರು ನಿರತನಾದುದರ ಬಗ್ಗೆ ಅನೇಕ ವರದಿಗಳಿವೆ. ಅದು ನೀಡುವ ಪಾಠಗಳು ಹಲವು. ಸೇನೆಯನ್ನು ಸಜ್ಜುಗೊಳಿಸಿ, ಯುದ್ಧತಂತ್ರಗಳನ್ನು ಕಾರ್ಯಗತಗೊಳಿಸಿ, ಪಂಕ್ತಿಗಳನ್ನು ಕ್ರಮಾನುಗತಗೊಳಿಸಿ, ಆಜ್ಞೆ ಆದೇಶ, ನಿರ್ದೇಶನಗಳನ್ನು ಹೊರಡಿಸಿ, ವಿಶ್ವಾಸ, ಆದರ್ಶ ಹಾಗೂ ಆಧ್ಯಾತ್ಮಿಕ ಊರ್ಜಿತ್ವ ಶಕ್ತಿಯನ್ನು ಅವರಿಗೆ ಹಂಚಿದ ಬಳಿಕ ಅಲ್ಲಾಹನೊಂದಿಗೆ ಅಭಯಯಾಚಿಸಬೇಕು. ಒಂದು ರೀತಿಯಲ್ಲಿ ದಾಸರು ಅವರ ಕರ್ತವ್ಯಗಳನ್ನು ಮಾಡಿ ಮುಗಿಸಿದ ಮೇಲೆ, ಉಳಿದದ್ದು ಸೃಷ್ಟಿಕರ್ತನ ಸಹಾಯ ಮಾತ್ರ ಅದನ್ನು ಅವನೊಂದಿಗೆ ಯಾಚಿಸಬೇಕು. ಅವನು ಅದನ್ನು ತನಗಿಷ್ಟವಾದವರಿಗೆ ನೀಡುತ್ತಾನೆ.
ಯುದ್ಧ ಘೋಷಣೆಗಳು ಮೊಳಗಿದವು. ಖುರೈಷಿಗಳ ನಡುವೆಯಿದ್ದ ಅಸ್ವದುಲ್ ಮಕ್ಸೂಮಿ ಎಂಬಾತ ಭೀಕರ ಹಾಗೂ ಭೀಭತ್ಸಕರವಾದ ಆಕಾರವನ್ನು ಹೊಂದಿದ್ದನು. ಆಕೃತಿಯಂತೆಯೇ ಆತನ ಸ್ವಭಾವವೂ ಭೀಭತ್ಸವೇ !! ಪ್ರವಾದಿ ಪರಮ ಶತ್ರು ಬೇರೆ.
'' ಮುಹಮ್ಮದನ ಹೌಲಿನಿಂದ ನಾನು ನೀರು ತೆಗೆದು ಕುಡಿಯುವೆನು, ಅಥವಾ ಅದನ್ನು ನಾನು ಧ್ವಂಸ ಗೊಳಿಸುವೆನು, ಅಥವಾ ಅದಕ್ಕಾಗಿ ನಾನು ಮರಣ ಹೊಂದುವೆನು '' ಅಸ್ವದ್ ಉಗ್ರ ಪ್ರತಾಪಿಯಂತೆ ಅಟ್ಟಹಾಸಗೈದನು. ಅವನನ್ನು ತಡೆಯಲು ಹಂಝ (ರ) ಮುಂದಾದರು. ತಮ್ಮ ಖಡ್ಡ ತಿರುಗಿಸುತ್ತಾ ಅಸ್ವದ್ ಮುಂಗಾಲಿಗೆ ಬೀಸಿದರು. ಕಾಲು ಮುರಿದು, ಹಾರಿ, ನೆಲಕ್ಕೆ ಬಿದ್ದಿದ್ದ ಅವನ ಬೆನ್ನ ಮೇಲೆ ಬಿದ್ದವು. ಅವನ ಕಾಲಿನಿಂದ ರಕ್ತ ಹರಿಯುತ್ತಲೇ ಇದ್ದವು. ತನ್ನ ಶಪಥವನ್ನು ನೆರವೇರಿಸಲು ಅವನ ನೆಲದ ಮೇಲೆ ಉರುಳುತ್ತಾ ಹೌಳಿನತ್ತ ಸಾಗಿದನು. ಗಾಯಗೊಳ್ಳದ ಕಾಲಿನಿಂದ ಒದ್ದು ಹೌಳಿನ ಒಂದು ಭಾಗವನ್ನು ನಾಶ ಗೊಳಿಸಿದ ಅವನು, ಅದರಿಂದ ಅಲ್ಪ ನೀರು ತೆಗೆದು ಕುಡಿದನು, ಅಷ್ಟರಲ್ಲಾಗಲೇ ಹಂಝ ಆತನನ್ನು ಹಿಂಬಾಲಿಸಿ, ಬಂದು ಕಥೆ ಮುಗಿಸಿದರು (ಅಸ್ಸಿರತುಲ್ ಹಲಬಿಯ್ಯಾ -2: 176)
ಇದಕ್ಕೂ ಮೊದಲು ಖುರೈಷಿಗಳ ಒಂದು ವಿಭಾಗ ನೀರು ಕುಡಿಯಲು ಬಂದಾಗ ಅವರನ್ನು ತಡೆಯಬೇಕೆಂದು ಪ್ರವಾದಿ (ಸ) ರು ಅನುಯಾಯಿಗಳಿಗೆ ಸೂಚಿಸಿದರು. ಕಾರಣ, ಅವರು ದಾಹ ನೀಗಿಸಲು ಬಂದಿದ್ದರು. ಅವರು ತಮ್ಮೊಂದಿಗೆ ಯುದ್ಧ ಮಾಡಲು ಬಂದ ಶತ್ರುಗಳಾಗಿದ್ದರೂ ಸಹ ಮಾನವೀಯತೆಯ ದೃಷ್ಟಿಯಿಂದ ನೀರು ಕುಡಿಯಲು ಪ್ರವಾದಿ (ಸ) ರು ಅವರಿಗೆ ಅನುಮತಿ ನೀಡಿದ್ದು ಆದರೆ, ಅತ್ಯಂತ ಅಸಹ್ಯಕರವಾಗಿ ರಂಗ ಪ್ರವೇಶ ಮಾಡಿದ್ದ. ಆತನ ಉದ್ದೇಶ ದಾಹ ನೀಗಿಸುವುದಾಗಿರಲಿಲ್ಲ. ನೀರಿನ ಕಟ್ಟೆಯನ್ನು ಒಡೆಯುವುದು ಆತನ ಉದ್ದೇಶವಾಗಿತ್ತು, ಮುಸ್ಲಿಮರಿಗೆ ಸವಾಲೆಸೆಯುತ್ತಾ ಎದುರು ಬಂದವರನ್ನು ತರಿದು ಹಾಕುವ ಬೆದರಿಕೆ ಒಡ್ಡುತ್ತಾ, ಶಕ್ತಿ ಪ್ರದರ್ಶನದೊಂದಿಗೆ ಆತ ಹೌಳಿನತ್ತ ಬಂದಿದ್ದ. ಆದ್ದರಿಂದ ಅವನನ್ನು ತಡೆಯುವುದು ಅನಿವಾರ್ಯವಾಗಿತ್ತು. ಅದು ಇತರರಿಗೆ ಒಂದು ಪಾಠವಾಗಬೇಕಿತ್ತು. ಆದ್ದರಿಂದ ಅವನನ್ನು ವಧಿಸಲಾಯಿತು. ಯುದ್ಧಭೂಮಿಯಲ್ಲಿ ಮುಖಾ ಮುಖಿಯಾಗುವ ಶತ್ರುವೇ ಆಗಿದ್ದರೂ, ಕರುಣೆಗೆ ಅರ್ಹರಾಗಿದ್ದರೆ ಅವರೊಂದಿಗೆ ಕರುಣೆ ತೋರಬೇಕು ಮತ್ತು ಅಹಂಕಾರಿಗಳಿಗೆ ತಕ್ಕ ಪಾಠ ಕಲಿಸಬೇಕೆಂಬುದನ್ನು ತಮ್ಮ ನಿಲುವಿನ ಮೂಲಕ ಪ್ರವಾದಿ (ಸ) ರು ಸ್ಪಷ್ಟಪಡಿಸುತ್ತಾರೆ..
ಅರಬಿಗಳ ರೂಢಿಯಂತೆ ಯೋಧರು ತಮ್ಮ ಶತ್ರು ವಿಭಾಗದವರನ್ನು ದ್ವಂದ್ವ ಯುದ್ದಕ್ಕೆ ಆಹ್ವಾನಿಸುವುದಿದೆ. ದ್ವಂದ್ವ ಯುದ್ಧ ಆರಂಭವಾಯಿತೆಂದರೆ, ಯುದ್ದ ಅಧಿಕೃತವಾಗಿ ಆರಂಭವಾಯಿತೆಂದೇ ಅರ್ಥ. ಆ ಪ್ರಕಾರ, ಖುರೈಷಿಗಳಿಂದ ಉತ್ಬತುಬ್‌ನು ರಬೀಅ ತನ್ನ ಪುತ್ರರಾದ ವಲೀದ್ ಹಾಗೂ ಶೈಬರ ಜೊತೆಗೆ ಮುಂದೆ ಬಂದು ಮುಸ್ಲಿಮರನ್ನು ದ್ವಂದ್ವ ಯುದ್ಧಕ್ಕೆ ಆಹ್ವಾನಿಸಿದನು.
ಯುದ್ಧದ ಯೋಚನೆಯನ್ನು ಬಿಟ್ಟು, ಹಿಂದಿರುಗಿ ಹೋಗೋಣ ಎಂದು ಖುರೈಷಿಗಳೊಂದಿಗೆ ಆಗ್ರಹಿಸಿದ ವ್ಯಕ್ತಿ ಉತ್ಬ, ಯುದ್ಧ ಬೇಡವೆಂದಿದ್ದ ವ್ಯಕ್ತಿಯೇ ಯುದ್ದಕ್ಕೆ ಆರಂಭ ಹಾಡುತ್ತಿದ್ದಾನೆ !! ಬೇಡ ಎಂದು ನೀನೇ ಹೇಳಿದ ಯುದ್ಧವನ್ನು ನೀನೇ ಆರಂಭಿಸುತ್ತಿದ್ದಿಯಾ ? ಎಂದು ಖುರೈಷಿಗಳಲ್ಲಿ ಕೆಲವರು ಅವನೊಂದಿಗೆ ಕೇಳಿದರು. ಆದರೆ, ಉತ್ಬ ಅತ್ತ ಕಿವಿಗೊಡಲಿಲ್ಲ. ಅಬೂಜಹಲ್ ಆರೋಪಿಸುವಂತೆ ತಾನು ಹೇಡಿತನದಿಂದ ಯುದ್ಧ ಬೇಡವೆಂದು ಹೇಳಿಲ್ಲ. ನಿಮ್ಮೆಲ್ಲರಿಗಿಂತಲೂ ಹೆಚ್ಚಿನ ವೀರತ್ವ, ಧೈರ್ಯ ನನ್ನಲ್ಲಿದೆ ಎಂಬುದನ್ನು ಆತ ಸಾಬೀತುಪಡಿಸುವ ಯತ್ನದಲ್ಲಿದ್ದನು. ಶಿರಸ್ತಾಣ ನುಗ್ಗದ ತಲೆಗೆ ಹೊದಿಕೆಯನ್ನು ಸುತ್ತಿ ಆತ ದ್ವಂದ್ವ ಯುದ್ಧಕ್ಕೆ ಆಗಮಿಸಿದ್ದ.
ದ್ವಂದ್ವ ಯುದ್ಧಕ್ಕೆ ಆಹ್ವಾನಿಸಿದ ಖುರೈಷಿಗಳನ್ನು ಎದುರಿಸಲು ಮೂವರು ಅನ್ಸಾರಿಗಳು ಮುಂದೆ ಬಂದರು. ಹಾರಿಸ್‌ರ ಪುತ್ರರಾದ ಔಫ್, ಮುಅವ್ವಿದ್ ಮತ್ತು ಅಬ್ದುಲ್ಲಾಹಿಬ್ನು ರವಾಹ !! (ಹಾರಿಸ್ ಇನ್ನೋರ್ವ ಪುತ್ರ ಮುಆದ್ ಮೂರನೇಯ ವ್ಯಕ್ತಿಯಾಗಿದ್ದರು ಎಂಬ ಅಭಿಪ್ರಾಯವೂ ಇದೆ) (ಅಸ್ಸಿರತುಲ್ ಹಲಬಿಯ್ಯಾ- 2: 170, ಡಾ.ಯಮಾನಿ, ಬದ್ರುಲ್ ಕುಬ್ರಾ-173)
"ಯಾರು ನೀವು ?” ಉತ್ಬ ಪ್ರಶ್ನಿಸಿದನು.
'' ನಾವು ಅನ್ಸಾರಿಗಳು '' ನಿಮ್ಮೊಂದಿಗೆ ಯುದ್ಧ ಮಾಡುವ ಅಗತ್ಯವೋ, ಕಾರಣವೋ ನಮಗಿಲ್ಲ. ನೀವು ಹಿಂದಿರುಗಿ. ಆದರೆ, ನಮ್ಮ ಪಿತೃವ್ಯ ಪುತ್ರರನ್ನು ಇತ್ತ ಕಳುಹಿಸಿ ''
ಉತ್ಬ: ಹಾಗೂ ಸಂಗಡಿಗರು ಹೇಳಿದರು.
'' ಮುಹಮ್ಮದ್, ನಮ್ಮ ಜನರನ್ನು ಇತ್ತ ಕಳುಹಿಸು '' ಖುರೈಷಿಗಳು ಕೂಗು ಹಾಕಿದರು.
ಅನ್ಸಾರಿ ಯುವಕರೊಂದಿಗೆ ಹಿಂದಿರುಗುವಂತೆ ಪ್ರವಾದಿ (ಸ) ಸೂಚಿಸಿದರು. ಯುದ್ಧದ ಆರಂಭದಿಂದಲೇ ಸ್ವಂತ ಕುಟುಂಬದವರನ್ನಲ್ಲದೆ ಇನ್ಯಾರನ್ನೂ ಅಪಾಯಕ್ಕೀಡು ಮಾಡುವುದು ಅವರಿಗೆ ಇಷ್ಟವಿರಲಿಲ್ಲ. ಆದ್ದರಿಂದ ಅನ್ಸಾರಿಗಳನ್ನು ಹಿಂದಿರುಗುವಂತೆ ಸೂಚಿಸಿದ್ದರು ಎಂಬ ಅಭಿಪ್ರಾಯವೂ ಇದೆ. ಅನ್ಸಾರಿಗಳು ಹಿಂದಿರುಗಿದ ಮೇಲೆ ತಮ್ಮ ವಂಶಜರಾದ ಹಾಶಿಮ್ ಕುಟುಂಬದ ಸದಸ್ಯರನ್ನು ಒಬ್ಬೊಬ್ಬರಂತೆ ಕರೆದರು..
ಯುದ್ಧ ಆರಂಭ:
ಅನ್ಸಾರಿ ಯುವಕರೊಂದಿಗೆ ಹಿಂದಿರುಗುವಂತೆ ಪ್ರವಾದಿ (ಸ.ಅ) ಸೂಚಿಸಿದರು. ಯುದ್ಧದ ಆರಂಭದಿಂದಲೇ ಸ್ವಂತ ಕುಟುಂಬದವರನ್ನಲ್ಲದೆ ಇನ್ಯಾರನ್ನೂ ಅಪಾಯಕ್ಕೀಡು ಮಾಡುವುದು ಅವರಿಗೆ ಇಷ್ಟವಿರಲಿಲ್ಲ. ಆದ್ದರಿಂದ ಅನ್ಸಾರಿಗಳನ್ನು ಹಿಂದಿರುಗುವಂತೆ ಸೂಚಿಸಿದ್ದರು ಎಂಬ ಅಭಿಪ್ರಾಯವೂ ಇದೆ. ಅನ್ಸಾರಿಗಳು ಹಿಂದಿರುಗಿದ ಮೇಲೆ ತಮ್ಮ ವಂಶಜರಾದ ಹಾಶಿಮ್ ಕುಟುಂಬದ ಸದಸ್ಯರನ್ನು ಒಬ್ಬೊಬ್ಬರಂತೆ ಕರೆದರು..
"ಉಬೈದತುಬ್‌ನುಲ್ ಹಾರಿಸ..! ಎದ್ದೇಳು.."
"ಹಂಝ ಎದ್ದೇಳು..“
"ಅಲಿ..! ಎದ್ದೇಳು.."
ಮೂವರೂ ಪ್ರವಾದಿ (ಸ.ಅ)ರವರ ಮುಂದೆ ಬಂದು ನಿಂತರು. ಅಲ್ಲಾಹನ ಪ್ರಕಾಶವನ್ನು ಕೆಡಿಸಿ ಅಧರ್ಮದ ಉಪಾಸಕರನ್ನು ಎದುರಿಸುವಂತೆ ಮೂವರು ಯುದ್ಧ ಕಲೆಗಳಿಗೆ ಆಜ್ಞಾಪಿಸಿದರು..
ಮೂವರೂ ಖುರೈಷಿಗಳತ್ತ ನಡೆದರು.
'' ಯಾರು ನೀವು ? ” ಖುರೈಶಿಷಿಗಳು ಕೇಳಿದರು. ಸೈನಿಕ ವೇಷದಲ್ಲಿ ಆಯುಧದಾರಿಗಳಾಗಿದ್ದ ಮೂವರನ್ನು ಗುರುತಿಸುವುದು ಖುರೈಷಿಗಳಿಗೆ ಸಾಧ್ಯವಾಗಿರಲಿಲ್ಲ.
ಉಬೈದತ್
ಹಂಝ
ಅಲಿ
ಮೂವರು ತಮ್ಮ ಹೆಸರುಗಳನ್ನು ಹೇಳಿದರು. "ಓ . . . ಹೋ . . . ಗೌರವಾನ್ವಿತ ಎದುರಾಳಿಗಳು ಅಲ್ಲವೇ ?" ಖುರೈಷಿಗಳು ಪ್ರತಿಕ್ರಿಯಿಸಿದರು.
ಇನ್ನೊಂದು ವರದಿಯಲ್ಲಿ ಹೀಗಿದೆ. ಉತ್ಬ ಹಾಗೂ ಆತನ ಸಂಗಡಿಗರು, “ನೀವು ಮಾತನಾಡಿ ನಾವೊಮ್ಮೆ ನಿಮ್ಮನ್ನು ಪರಿಚಯ ಮಾಡಿಕೊಳ್ಳುತ್ತೇವೆ '' ಎಂದರು.
ಆಗ ಹಂಝ (ರ); "ನಾನು ಅಲ್ಲಾಹನ ಸಿಂಹ, ಅಬ್ದುಲ್ ಮುತ್ತಲಿಬರ ಪುತ್ರ ಹಂಝ '' ಎಂದರು.
“ಗೌರವಾನ್ವಿತ ಎದುರಾಳಿ '' ಉತ್ಬ ಪ್ರತಿಕ್ರಿಯಿಸಿದರು.
ಅಲಿ (ರ): ನಾನು ಅಲ್ಲಾಹನ ದಾಸ, ಅಲ್ಲಾಹನ ದೂತನ ಸಹೋದರ..
ಉಬೈದತ್: ನಾನು ಮಿತ್ರಪಕ್ಷಕ್ಕೆ ಸೇರಿದವನು.
ಹಂಝ (ರ) ಶೈಬನೊಂದಿಗೆ ದ್ವಂದ್ವ ಯುದ್ಧಕ್ಕಿಳಿದರು. ಶೈಬನನ್ನು ನೆಲಕ್ಕೆ ಕೆಡವಿ, ವಧಿಸಿದರು. ಅಲಿ (ರ) ವಲೀದ್‌ನನ್ನು ಎದುರಿಸಿ, ಉಸಿರೆತ್ತದಂತೆ ಮಾಡಿದರು. ಅಲಿ (ರ) ಹಾಗೂ ಹಂಝ (ರ) ರಿಗೆ ಹೋಲಿಸಿದರೆ ಉಬೈದತ್ (ರ) ರಿಗೆ ಹೆಚ್ಚು ಪ್ರಾಯವಾಗಿತ್ತು (ಪ್ರವಾದಿ (ಸ) ಗಿಂತ ಹತ್ತು ವರ್ಷ ಹಿರಿಯರು). ಅವರು ಉತ್ಬನೊಂದಿಗೆ ಹೋರಾಟಕ್ಕಿಳಿದರು. ಮೂವರೂ ತಮ್ಮ ವಿರೋಧಿಗಳಿಗಿಂತ ಹೆಚ್ಚಿನ ಧೀರೋದಾತ್ತ ಹೋರಾಟವನ್ನು ಪ್ರದರ್ಶಿಸಿದ್ದರು. ನಡುವೆ ಉಬೈದತ್‌ರ ಕಾಲಿಗೆ ಉತ್ಬನ ಏಟು ಬಿದ್ದವು. ಕಾಲು ಮುರಿದು ಮಾಂಸ ಹೊರಬಿದ್ದವು. ತಕ್ಷಣವೇ ಅಲಿ ಹಾಗೂ ಹಂಝ ಮಧ್ಯಪ್ರವೇಶಿಸಿದರು. ಉತ್ಬನ ಕಥೆ ಮುಗಿಸಿದರು.
ಗಾಯಗೊಂಡ ಉಬೈದತ್‌ರನ್ನು ಸೈನಿಕ ನೆಲೆಗೆ ಹೊತ್ತೊಯ್ಯಲಾಯಿತು. ಪ್ರವಾದಿ (ಸ) ರು ತಮ್ಮ ಪಾದವನ್ನು ಉಬೈದತ್ರಿಗೆ ತಲೆದಿಂಬಿನಂತೆ ಉಪಯೋಗಿಸಲು ಅನುವು ಮಾಡಿಕೊಟ್ಟರು. ತಮ್ಮ ಕಪಾಲವನ್ನು ಆ ಪುಣ್ಯ ಪಾದದ ಮೇಲಿಟ್ಟು ಉಬೈದತ್ ಮಲಗಿದರು. ಅಸಾಧ್ಯ ನೋವಿನ ನಡುವೆಯೂ ಉಬೈದತ್ ಪ್ರವಾದಿ (ಸ) ಯೊಂದಿಗೆ ಕೇಳಿದರು. ನಾನು ಹುತಾತ್ಮನಲ್ಲವೇ..?
"ತಾವು ಹುತಾತ್ಮರೆಂಬುದನ್ನು ನಾನು ಸಾಕ್ಷ್ಯ ವಹಿಸುತ್ತೇನೆ '' ಎಂದು ಪ್ರವಾದಿ (ಸ) ರು ಉತ್ತರಿಸಿದರು.
ಉಬೈದತ್ ಹೇಳಿದರು;
"ಅಲ್ಲಾಹನ ದೂತರೇ, ಅಬೂತಾಲಿಬ್ ನನ್ನನ್ನು ಕಂಡಾಗಲೆಲ್ಲಾ “ ನಾವು ಅವನನ್ನು ಕಾಯುವೆವು ಅವನ ಕೆಳಗೆ ಮರಣ ಹೊಂದಿ ಬೀಳುವವರೆಗೆ ಮಕ್ಕಳು, ಪತ್ನಿಯರನ್ನು ನಾವು ಮರೆಯುವವರೆಗೆ '' ಎಂದು ಹಾಡುತ್ತಿದರು. ತಮ್ಮ ಈ ಮಾತಿಗೆ ಅತ್ಯಂತ ಅರ್ಹ ವ್ಯಕ್ತಿ ತಾವು ಎಂಬುದು ಅವರಿಗೆ ತಿಳಿದಿತ್ತು (ಡಾ.ಯಮಾನಿ, ಬದ್ರುಲ್ ಕುಬ್ರಾ 3: 312).
ಯುದ್ಧ ಮುಗಿದು ಹಿಂದಿರುಗುವಾಗ ಸ್ವಫ್ ರಾಅ್ ಎಂಬ ಸ್ಥಳದಲ್ಲಿ ಉಬೈದತ್ (ರ) ಮರಣ ಹೊಂದಿದರು. ಅಲ್ಲಿಯೇ ಅವರನ್ನು ದಫನ ಮಾಡಲಾಯಿತು.
ಅಲಿ (ರ) ಹೇಳುತ್ತಾರೆ. ಅಂತ್ಯದಿನದಲ್ಲಿ ಕರುಣಾ ನಿಧಿಯಾದ ನಾಥನ ಮುಂದೆ ತರ್ಕ ಪರಿಹಾರಕ್ಕಾಗಿ ಮೊತ್ತ ಮೊದಲು ಮೊಣಗಾಲೂರಿ ನಿಲ್ಲುವವನು ನಾನು. ನನ್ನ ವಿಷಯದಲ್ಲಿ: “ಇದೋ ಎರಡು ಪಕ್ಷಗಳು ತಮ್ಮ ನಾಥನ ವಿಷಯದಲ್ಲಿ ತರ್ಕಕ್ಕೆ ಬಿದ್ದಿದ್ದಾರೆ'' ಎಂಬ ಖುರ್‌ಆನ್ ವಚನ ಅವತೀರ್ಣಗೊಂಡವು (ಡಾ.ಯಮಾನಿ ಬದ್ರುಲ್ ಕುಬ್ರ- 175).
ಮತ್ತೆ ಪ್ರವಾದಿ (ಸ) ರು ಸೈನಿಕ ಪಂಕ್ತಿಯನ್ನು ಸರಿಪಡಿಸಿದರು.
“ ಶತ್ರುಗಳು ನಿಮ್ಮತ್ತ ಬಂದರೆ ಮಾತ್ರ ಅವರತ್ತ ಬಾಣ ಪ್ರಯೋಗಿಸಿ. ದೂರದಲ್ಲಿರುವ ವೇಳೆ ಬಾಣ ಪ್ರಯೋಗಿಸಬೇಡಿ. ಅವರು ನಿಮ್ಮನ್ನು ಸುತ್ತುವರಿಯುವವರೆಗೂ ಖಡ್ಗವನ್ನು ಒರೆಯಿಂದ ತೆಗೆಯಬೇಡಿ '' ಅನುಯಾಯಿಗಳಲ್ಲಿ ಆವೇಶ ತುಂಬುತ್ತಾ ಪ್ರವಾದಿ (ಸ) ರು ನಿರ್ದೇಶಿಸಿದರು. ಬಳಿಕ ಅವರು ತಮ್ಮ ಗುಡಾರಕ್ಕೆ ಮರಳಿದರು.
ಖಫಾಫುಬ್ನು ಈಮಾಅ್ ಹೇಳುತ್ತಾರೆ. ಬದ್ರ್ ದಿನದಂದು ಜನರು ಅಣಿಗೊಂಡು ನಿಂತಾಗ ಪ್ರವಾದಿ (ಸ) ರ ಅನುಯಾಯಿಗಳು ಖಡ್ಗ ಹೊರತೆಗೆದಿರಲಿಲ್ಲ. ಬಿಲ್ಲಿನ ತಂತಿಯನ್ನು ಹಿಡಿದುಕೊಂಡಿದ್ದರು. ಒಬ್ಬರು ಮತ್ತೊಬ್ಬರಿಗೆ ಪರಿಚಯವಾಗುವಷ್ಟು ಒತ್ತಿಕೊಂಡು ನಿಂತಿದ್ದರು. ವಿರೋಧಿಗಳೊ, ಯುದ್ಧರಂಗಕ್ಕಿಳಿಯುವಾಗಲೇ ಖಡ್ಗ ಝಳಫಳಿಸುತ್ತಾ ಆಗಮಿಸಿದ್ದರು. ಈ ಎರಡು ದೃಶ್ಯಗಳನ್ನು ಕಂಡು ನನಗೆ ಅದ್ಭುತವಾದವು. ನಾನು ಮುಸ್ಲಿಮರೊಂದಿಗೆ ವಿಚಾರಿಸಿದಾಗ, ಶತ್ರುಗಳು ಮುತ್ತಿಕೊಳ್ಳುವವರೆಗೆ ಒರೆಯಿಂದ ಖಡ್ಗ ತೆಗೆಯಬಾರದೆಂದು ಪ್ರವಾದಿ ಆಜ್ಞಾಪಿಸಿರುವುದಾಗಿ ಅವರು ಹೇಳಿದರು.
ಉತ್ ಬಃ, ಶೈಬ ಹಾಗೂ ವಲೀದ್ ಹತರಾದಾಗ "ನಮಗೆ ಲಾತಯಿದ್ದಾರೆ, ನಿಮಗೆ ಲಾತ ಇಲ್ಲ '' ಎಂದು ಹೇಳುತ್ತಾ ಖುರೈಷಿಗಳು ತಮ್ಮನ್ನು ತಾವೇ ಸಂತೈಸಿಕೊಂಡರು. ಆಗ ಪ್ರವಾದಿ ಅನುಯಾಯಿಯೊಬ್ಬರು ಹೇಳಿದರು.
" ನಮ್ಮ ರಕ್ಷಕ ಅಲ್ಲಾಹನಾಗಿದ್ದಾನೆ. ನಿಮಗೋ ರಕ್ಷಕನಿಲ್ಲ. ನಮ್ಮಿಂದ ವಧಿಸಲ್ಪಟ್ಟವನಿಗೆ ಸ್ವರ್ಗವಿದೆ. ನಿಮಗೆ ಸ್ವರ್ಗವಿಲ್ಲ '' (ಅಸ್ಸಿರತುಲ್ ಹಲಬಿಯ್ಯ-2: 1)
ಯುದ್ದದ ಆರಂಭ:
ಪ್ರವಾದಿﷺ ಅಬೂಬಕ್ಕರ್ (ರ) ರೊಂದಿಗೆ ಗುಡಾರಕ್ಕೆ ಮರಳಿದರು. ಅಲ್ಲಿ ಅವರು ಅಲ್ಲಾಹನ ಸಹಾಯ, ಬಾಗ್ದಾನ ವೇಗದಲ್ಲಿ ಪೂರೈಸಲ್ಪಡಲು ಪ್ರಾರ್ಥಿಸಿದರು. ಆಕಾಶದಿಂದ ಮಲಕುಗಳು ಇಳಿದು ಬರುವರೆಂಬ ಸಂತೋಷ ವಾರ್ತೆ ಪ್ರವಾದಿ (ಸ) ಗೆ ಲಭಿಸಿದವು. ಜಿಬ್ರೀಲ್ ಕುದುರೆಯ ಕಡಿವಾಣ ಹಿಡಿದು ಆಗಮಿಸಿದರು. ಕುದುರೆಯ ಮುಂಭಾಗದ ಹಲ್ಲುಗಳಲ್ಲಿ ಹುಡಿ ಮಣ್ಣುಗಳಿದ್ದವು.
ಇಬ್ನು ಅಬ್ಬಾಸ್ ದಾಖಲಿಸುತ್ತಾರೆ. '' ಇದೂ ಜಿಬ್ರೀಲ್ ಕುದುರೆಯ ಕಡಿವಾಣ ಹಿಡಿದಿದ್ದಾರೆ. ಅವರ ಜೊತೆಗೆ ಯುದ್ಧಾಯುಧವಿದೆ '' ಎಂದು ಬದ್ರ್ ದಿನ ಪ್ರವಾದಿ (ಸ) ಹೇಳುತ್ತಿದರು. (ಬುಖಾರಿ)
ಕಿನಾನ ಗೋತ್ರದ ಸುರಾಖತುಬ್ನು ಮಾಲಿಕ್ ರ ರೂಪದಲ್ಲಿ ಇಬ್ಲೀಸ್ ಬದ್ರ್ ನಲ್ಲಿ ಖುರೈಷಿಗಳ ಪಕ್ಷದಲ್ಲಿ ಭಾಗವಹಿಸಿದ್ದನು. ಕಿನಾನ ಗೋತ್ರದ ಪುರುಷರ ರೂಪದಲ್ಲಿ ಅವಿಶ್ವಾಸಿಗಳಾದ ಒಂದು ವಿಭಾಗದ ಜಿನ್ನುಗಳು ಅವನ ಜೊತೆಗಿದ್ದರು. ಇಬ್ ಲೀಸ್‌ಗೆ ತನ್ನದೇ ಆದ ಪತಾಕೆಯಿದ್ದವು. ಅಬೂ ಜಹಲ್‌ನ ಸಹೋದರ ಹಾರಿಸ್ ಬ್ನು ಹಿಷಾಮ್ನ ಕೈ ಹಿಡಿದು ನಿಂತಿದ್ದ ವೇಳೆಯಲ್ಲಿ ಜಿಬ್ರೀಲ್ ಹಾಗೂ ಇತರ ಮಲಕುಗಳು ಯುದ್ಧಭೂಮಿಗೆ ಇಳಿಯುವುದನ್ನು ಇಬ್ಲೀಸ್ ಕಾಣುತ್ತಾನೆ. ತಕ್ಷಣವೇ ಅವನು ಅಲ್ಲಿಂದ ಜಾಗ ಖಾಲಿ ಮಾಡಿದನು. ಅವನ ಸೈನ್ಯವೂ ಸಹ ಅವನನ್ನು ಹಿಂಬಾಲಿಸಿದವು. ಆಗ ಹಾರಿಸ್ ಕೇಳಿದರು;
“ಸುರಾಖಾ ! ನೀನು ನಮ್ಮ ಜೊತೆಗಾರನೆಂದು ಹೇಳಿದ್ದೆಯಲ್ಲವೇ ? ''
'' ನಾನು ನಿಮ್ಮನ್ನು ಬಿಟ್ಟು ಹೋಗುತ್ತಿದ್ದೇನೆ. ನೀವು ಕಾಣದಿರುವುದನ್ನು ನಾನು ಕಾಣುತ್ತಿದ್ದೇನೆ. ನಿಶ್ಚಯವಾಗಿಯೂ, ಲೋಕ ಪರಿಪಾಲಕನಾದ ಅಲ್ಲಾಹನನ್ನು ನಾನು ಭಯಪಡುತ್ತೇನೆ. ಅಲ್ಲಾಹು ಕಠಿಣ ಶಿಕ್ಷೆ ನೀಡುವವನಾಗಿದ್ದಾನೆ '' ಎಂದು ಸುರಾಖಾನ ರೂಪದಲ್ಲಿದ್ದ ಇಬ್ಲೀಸ್ ಹೇಳಿದನು.
ಹಾರಿಸ್ ಅವನನ್ನು ಹೋಗಲೊಪ್ಪಲಿಲ್ಲ. ಗಟ್ಟಿಯಾಗಿ ಹಿಡಿದರು. ಇಬ್ಲೀಸ್ ಆತನ ಎದೆಗೆ ಒದ್ದನು. ಹಾರಿಸ್ ನೆಲಕ್ಕೆ ಕುಸಿದರು. ಇಬ್ಲೀಸ್ ಪರಾರಿಯಾದನು. ಪುನರುತ್ಥಾನ ದಿನದವರೆಗೂ ತನ್ನ ಆಯುಷ್ಯವನ್ನು ದೀರ್ಘಗೊಳಿಸಬೇಕೆಂದು ಇಬ್ಲೀಸ್ ಅಲ್ಲಾಹನೊಂದಿಗೆ ಆಗ್ರಹಿಸಿದಾಗ "ನಿಶ್ಚಿತ ಸಮಯದವರೆಗೆ ನಿನ್ನ ಆಯುಷ್ಯವನ್ನು ದೀರ್ಘಗೊಳಿಸಲಾಗುವುದು ಎಂದು ಅಲ್ಲಾಹನು ಉತ್ತರಿಸಿದನು. ಆ ನಿಶ್ಚಿತ ಸಮಯ ಹತ್ತಿರವಾಯಿತೇ ? ತನ್ನನ್ನು ಮರಣ ತನ್ನ ಬಲೆಗೆ ಕೆಡವಬಹುದೇ ? ಎಂದು ಅವನಿಗೆ ಭಯವಾದವು."
" ಅವರು ಮಲಕುಗಳನ್ನು ನೋಡುವ ದಿನ ಅಪರಾಧಿಗಳಿಗೆ ಸಂತೋಷವಿಲ್ಲ '' (ಪವಿತ್ರ ಖರ್ ಆನ್– 8: 9)
ಆ ದಿನ ಇದಾಗಿರಬಹುದೇ ? ಎಂದು ಹೆದರಿ ಇಬ್ಲೀಸ್ ಯುದ್ಧ ರಂಗದಿಂದ ಪರಾರಿಯಾಗಿದ್ದ ಎಂಬ ಅಭಿಪ್ರಾಯವೂ ಇದೆ. (ಅಸ್ಪೀರತುಲ್ ಹಲಬಿಯ್ಯಾ- 2174, 175).
ಬದ್ರ್ ನಿಂದ ಪರಾರಿಯಾಗಿ ಮಕ್ಕಾ ಸೇರಿದ ಕೆಲವು ಖುರೈಷಿಗಳು ನಿಜವಾದ ಸುರಾಖುತುಬ್ನ್ ಮಾಲಿಕ್‌ನನ್ನು ಕಂಡಾಗ ಕೇಳಿದರು;
'' ಸುರಾಖಾ ! ನೀನು ವ್ಯೂಹವನ್ನು ಬೇಧಿಸಿ ಓಡಿ, ನಮ್ಮನ್ನು ಸೋಲಿಗೆ ನೂಕಿದೆಯಲ್ಲವೇ ? ”
ಸುರಾಖಾ: “ ಅಲ್ಲಾಹನ ಮೇಲಾಣೆ ಸತ್ಯ ! ನಿಮ್ಮ ಯಾವ ವಿಚಾರವೂ ನನಗೆ ತಿಳಿದಿಲ್ಲ. ಯುದ್ಧದಲ್ಲಿ ನಾನು ಭಾಗವಹಿಸಿಯೇ ಇಲ್ಲ '' ಆಗ ಸುರಾಖಾರ ಮಾತಿನಲ್ಲಿ ಖುರೈಷಿಗಳಿಗೆ ವಿಶ್ವಾಸ ಮೂಡಲಿಲ್ಲ. ಮುಂದೆ ಅವರಲ್ಲಿ ಕೆಲವರು ಇಸ್ಲಾಮ್ ಸ್ವೀಕರಿಸಿದರು. ಬದ್‌ರ್ ನಲ್ಲಿ ಸುರಾಖಾರ ರೂಪದಲ್ಲಿ ಇಬ್ಲೀಸ್ ಭಾಗವಹಿಸಿದ್ದ ಎಂದು ಖುರ್‍ಆನ್ ನ ಮೂಲಕ ತಿಳಿದಾಗಲೇ ಅವರಿಗೆ ಸುರಾಖಾ ಹೇಳಿದ್ದು ನಿಜವೆಂದು ತಿಳಿದದ್ದು. ಅಬೂ ಜಹಲ್ ನ ಸಹೋದರ ಹಾರಿಸ್ ಸಹ ಇಸ್ಲಾಮ್ ಸ್ವೀಕರಿಸಿದ್ದರು.
ಖುರೈಷಿಗಳಿಗೆ ಆವೇಶ ತುಂಬುತ್ತಾ ಅಬೂಜಹಲ್ ಭಾಷಣ ಮಾಡಿದನು.
ಸುರಾಖಾ; ನಿಮ್ಮನ್ನು ಕೈಬಿಟ್ಟು ಹೋದದ್ದು ನಿಮ್ಮ ಸೋಲಿಗೆ ಕಾರಣವಾಗಬಾರದು, ಅವರು ಮುಹಮ್ಮದ್ ಹಾಗೂ ಆತನ ಅನುಯಾಯಿಗಳ ಜೊತೆ ಒಳಒಪ್ಪಂದ ಮಾಡಿಕೊಂಡಿದ್ದರು. ನಾವು ಹಿಂತಿರುಗಿದ ಬಳಿಕ ಅವನ ಜನರಿಗೆ ಒಂದು ಗತಿ ಕಾಣಿಸಿದರೆ ಅವನು ಪಾಠ ಕಲಿಯುತ್ತಾನೆ. ಉತ್ಬ, ಶೈಬ,ವಲೀದ್ನ ವಧೆಯು ನಿಮ್ಮನ್ನು ಭಯಭೀತರನ್ನಾಗಿಸದಿರಲಿ.. ಅವರು ಅವಸರ ತೋರಿದರು. ಯುದ್ದ ಮಾಡುವಾಗ ಅಹಂಕಾರವನ್ನು ನಟಿಸಿದರು. ದೇವರ ಮೇಲಾಣೆ, ಮುಹಮ್ಮದ್ ಹಾಗೂ ಸಂಗಡಿಗರನ್ನು ಬಂಧಿಸುವವರೆಗೂ ನಾವು ಮರಳುವುದಿಲ್ಲ. ನಿಮ್ಮಲ್ಲಿ ಯಾರೂ ಸಹ ಅದರನ್ನು ವದಿಸುವುದನ್ನು ನಾನು ಕಾಣಬಾರದು, ಅವರನ್ನು ಜೀವಂತ ಹಿಡಿಯಬೇಕು. ನಿಮ್ಮ ಧರ್ಮವನ್ನು ತ್ಯಜಿಸಿ, ಪೂರ್ವಿಕರು ಸೂಚಿಸಿರುವುದನ್ನು ಅವರು ತಿರಸ್ಕರಿಸಿರುವುದು ತಪ್ಪೆಂದು ನಾವು ಅವರಿಗೆ ಅರ್ಥ ಮಾಡಿಕೊಡುತ್ತೇವೆ.
'(ಶತ್ರು) ಸಂಘವು ಸೋಲಿಸಲ್ಪಡುವುದು, ಅವರು ಹಿಂದಿರುಗುವರು ' ಎಂಬ ಖುರ್‌ಆನ್ ವಾಕ್ಯವನ್ನು ಪಾರಾಯಣ ಮಾಡುತ್ತಾ ಪ್ರವಾದಿ (ಸ) ರು ಗುಡಾರದಿಂದ ಹೊರ ಬಂದರು. ಎರಡೂ ವಿಭಾಗಗಳ ನಡುವೆ ತೀವ ಕಾದಾಟ ಆರಂಭಗೊಂಡವು. ಆಗ ನೌಫಲ್ ಬ್ನು ಖುವೈಲಿದ್ ಕೂಗಿ ಹೇಳಿದನು.
“ಖುರೈಷಿ ಸಮೂಹವೇ, ಇಂದು ಏಳಿಗೆಯ ಹಾಗೂ ಔನ್ನತ್ಯದ ದಿನವಾಗಿದೆ. ಖುರೈಷಿ ಸಮೂಹವೇ, ನಿಶ್ಚಯವಾಗಿಯೂ ಸುರಾಖಾ ಅವನ ಜನರೊಂದಿಗೆ ನಿಮ್ಮ ಕೈಬಿಟ್ಟು ಹೋದದ್ದು ನಿಮಗೆ ತಿಳಿದಿದೆ. ಆದ್ದರಿಂದ ಶತ್ರು ಜನತೆಯನ್ನು ಒಬ್ಬರನ್ನೂ ಬಿಡದಂತೆ ಕೊಂದು ಹಾಕಿರಿ. ರಬಿಅನ ಇಬ್ಬರು ಪುತ್ರರು ಅವರು ದ್ವಂದ್ವ ಯುದ್ದದಲ್ಲಿ ಅವಸರ ತೋರಿದರೆಂದು ನಾನು ನಂಬುತ್ತೇನೆ ” ನೌಫಲ್‌ನ ಶಬ್ದ ಕೇಳಿದಾಗ ಪ್ರವಾದಿ (ಸ) ಪ್ರಾರ್ಥಿಸಿದರು.
ಅಲ್ಲಾಹನೇ, ನೌಫಲುಬ್ನು ಖುವೈಲಿದ್ನ ನನ್ನು ನೀನು ಸೋಲಿಸಿಬಿಡು ” ಯುದ್ಧ ಮುಗಿದಾಗ ಪ್ರವಾದಿ (ಸ) ನೌಫಲ್‌ನ ಬಗ್ಗೆ ವಿಚಾರಿಸಿದರು. *ನಾನು ಅವನನ್ನು ವಧಿಸಿರುವೆನು* ಎಂದು ಅಲಿ (ರ) ಹೇಳಿದರು.
"ಅವನ ವಿಷಯದಲ್ಲಿ ನನ್ನ ಪ್ರಾರ್ಥನೆಯನ್ನು ಸ್ವೀಕರಿಸಿದ ಅಲ್ಲಾಹನಿಗೆ ಸರ್ವಸ್ತುತಿ '' ಎಂದು ಪ್ರವಾದಿ (ಸ) ಪ್ರತಿಕ್ರಿಯಿಸಿದರು.
ಯುದ್ದ ರೂಕ್ಷವಾಗುತ್ತಾ ಹೋದಂತೆ ಪ್ರವಾದಿ (ಸ) ಅಲಿ (ರ) ಯನ್ನು ಕರೆದರು. " ಭೂಮಿಯಿಂದ ಒಂದಿಷ್ಟು ಮಣ್ಣನ್ನು ನನಗೆ ತೆಗೆದು ಕೊಡು '' ಪ್ರವಾದಿ (ಸ) ಆಜ್ಞಾಪಿಸಿದರು. ಅಲಿ (ರ) ಮಣ್ಣು ತೆಗೆದು ಪ್ರವಾದಿ (ಸ) ಗೆ ನೀಡಿದರು. ಅವರದನ್ನು ಶತ್ರುಗಳ ಮುಖದ ಮೇಲೆ ಎಸೆದು.. '' ಮುಖಗಳು ವಿಕೃತಗೊಳ್ಳಲಿ. ಅಲ್ಲಾಹನೇ ಅವರ ಹೃದಯಗಳಲ್ಲಿ ಭಯವನ್ನುಂಟು ಮಾಡು. ಪಾದಗಳು ನಡುಗುವಂತೆ ಮಾಡು '' ಎಂದು ಪ್ರಾರ್ಥಿಸಿದರು. ನಂತರ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವಂತೆ ಅನುಯಾಯಿಗಳಿಗೆ ಆಜ್ಞಾಪಿಸಿದರು..
ಆ ಮಣ್ಣಿನಿಂದ ಅಲ್ಪವಾದರೂ ಕಣ್ಣಿಗೆ ಬೀಳದ ಒಬ್ಬನೇ ಒಬ್ಬ ಮುಶ್ರಿಕಂ ಅಲ್ಲಿರಲಿಲ್ಲ. ಎಲ್ಲರೂ ಸಾಯುವ ಭಯದಿಂದ ಯುದ್ಧರಂಗ ಬಿಟ್ಟು ಓಡಿದರು. ಮುಸ್ಲಿಮರು ಅವರನ್ನು ಬೆನ್ನಟ್ಟಿದರು. ಕೆಲವರನ್ನು ವಧಿಸಿದರು. ಕೆಲವರನ್ನು ಬಂಧಿಸಿದರು. ಆ ಮಣ್ಣಿನ ಕಾರಣದಿಂದ ಅವರ ಕಣ್ಣುಗಳ ದೃಷ್ಟಿ ಮಂದವಾಗಿ, ಅಂಧತ್ವ ಬಾಧಿಸಿದಂತಾದವು.
ಬದ್ರ್ ಯುದ್ಧದಲ್ಲಿ ಭಾಗವಹಿಸಿದ ಮುಶ್ರಿಕ್‌ಗಳಲ್ಲಿ ಮುಂದೆ ಮುಸ್ಲಿಮರಾದ ಹಕೀಮ್‌ಬ್ನು ಹಿಶಾಮ್‌ರೊಂದಿಗೆ ಬದ್ರ್ ದಿನದ ಕುರಿತು ಕೇಳಿದಾಗಲೆಲ್ಲಾ ವಾರ್ಧಕ್ಯದ ವಿಹ್ವಲತೆಯಲ್ಲಿ ಹಕೀಮ್ ಆ ಕುರಿತು ಏನನ್ನೂ ಹೇಳಲು ಇಷ್ಟಪಡುತ್ತಿರಲಿಲ್ಲ. ಒಮ್ಮೆ ಒತ್ತಾಯಿಸಿದಾಗ ಅವರು,
"ನಾವು ಪರಸ್ಪರ ಮುಖಾಮುಖಿಯಾದೆವು. ಹೋರಾಡಿದೆವು. ಅಷ್ಟರಲ್ಲಿ ಪಾತ್ರೆಗಳಲ್ಲಿ ಯಾರೋ ಆಕಾಶದಿಂದ ಮಣ್ಣು ಸುರಿದಂತೆ ಶಬ್ದ ಕೇಳಿ ಬಂದವು. ಪ್ರವಾದಿ (ಸ) ರು ಮಣ್ಣು ಎಸೆದಿದ್ದರು. ನಾವು ಪರಾಜಿತರಾದೆವು ''
ನೌಫಲುಬ್ನ್ ಮುಆವಿಯಾದೌಲಿ ಹೇಳುತ್ತಾರೆ." ಮಣ್ಣು ಪಾತ್ರೆಯಿಂದ ಸುರಿದಂತೆ ನಮ್ಮ ಹೃದಯಗಳಲ್ಲೂ, ಬೆನ್ನ ಹಿಂದೆಯೂ ಒಂದು ಶಬ್ದ ಕೇಳಿದಾಗಲೇ ನಾವು ಪರಾಜಿತರಾಗಿ ಓಡಿದೆವು. ಅದು ನಮ್ಮಲ್ಲಿ ಭಯವನ್ನು ಹುಟ್ಟಿಸಿದ್ದವು" (ಅಲ್ಬಿದಾಯತುವನ್ನಿಹಾಯ- 3: 323).
ಕೇವಲ ಒಂದು ಹಿಡಿ ಮಣ್ಣು, ಅದನ್ನು ಪ್ರವಾದಿ (ಸ) ರು ಎಸೆದಾಗ ಶತ್ರುಗಳಲ್ಲಿನ ಪ್ರತಿಯೊಬ್ಬರ ಕಣ್ಣಿಗೂ ಬಿದ್ದವು. ಹತ್ತಿರವಿದ್ದವನು, ದೂರವಿದ್ದವನು ಎಂಬ ವ್ಯತ್ಯಾಸವಿಲ್ಲದೆ ಇದೊಂದು ಅದ್ಭುತ ಘಟನೆ. ಅಲ್ಲಾಹನ ಅಪಾರವಾದ ಶಕ್ತಿ ಅದರ ಹಿಂದಿದ್ದವು. ಆದ್ದರಿಂದಲೇ ಮಣ್ಣು ಎಲ್ಲರ ಕಣ್ಣಿಗೂ ಬಿದ್ದವು. ಈ ಪ್ರತಿಭಾಸವನ್ನು ಖುರ್‌ಆನ್ ಹೀಗೆ ವಿಶ್ಲೇಷಿಸುತ್ತದೆ.
"ತಾವು ಎಸೆದಿಲ್ಲ. ತಾವು ಎಸೆದಾಗ ಅದನ್ನು ಅಲ್ಲಾಹನು ಎಸೆದನು '' (ಖುರ್‌ಆನ್ 8: 17).
ಗೆಲುವಿಗಿಂತಲೂ ಹುತಾತ್ಮತೆಯನ್ನು ಮೋಹಿಸಿ, ಆತ್ಮದೈರ್ಯ ಹಾಗೂ ವಿಶ್ವಾಸದ ಆವೇಶದೊಂದಿಗೆ ಮುಸ್ಲಿಮರು ಹೋರಾಡಿದರು. ಶಂಕೆ, ಭಿನ್ನಮತವಿಲ್ಲದೆ, ಪರಾಜಯದ ಭಯವಿಲ್ಲದೆ ಮುನ್ನಡೆದರು. ಸೈನಿಕ ಸಂಖ್ಯೆಯ ಬದಲಾಗಿ, ಅಲ್ಲಾಹನ ಮೇಲೆ ವಿಶ್ವಾಸ ತಾಳಿದರು. ತಮ್ಮ ಜೊತೆಗೆ ಅಲ್ಲಾಹನಿದಾನೆ. ಅವನ ಸಹಾಯ ನಮಗಿದೆ ಎಂಬ ಅಚಂಚಲ ವಿಶ್ವಾಸವು ಅವರನ್ನು ಗೆಲುವಿನ ದಡ ಸೇರಿಸಿದವು. ನೇತ್ಯಾತ್ಮಕ ಚಿಂತನೆಗಳಲ್ಲಿ ಮನಸನ್ನು ಕೆಡಿಸಿಕೊಳ್ಳದೆ, ಅಲ್ಲಾಹನ ಆರಾಧನೆ, ದಿಕ್ರ್, ದುಆಗಳ ಮೂಲಕ ಮನಸಿನ ಶಕ್ತಿಯನ್ನು ಕಾಪಾಡಿಕೊಂಡರು. ಅದುವೇ ಅವರನ್ನು ವಿಜಯದ ದಡ ದಾಟಿಸಿದವು..
ಇತಿಹಾಸ ಸೃಷ್ಟಿಸಿದ ಹೋರಾಟಗಳು:
ಹುತಾತ್ಮರಾಗುವ ಉತ್ಕಂಠ ಮೋಹ. ಆ ಮೂಲಕ ಔನ್ನತ್ಯದ ಅನಂತ ಪರ್ವದಲ್ಲಿ ಸಚ್ಚಂದತೆಯಿಂದ ವಿಹರಿಸುವ ತೀಕ್ಷವಾದ ಬಯಕೆ, ಬದ್ರ್ ಯುದ್ದದಲ್ಲಿ ಹೋರಾಡಿದ ಮುಸ್ಲಿಮರ ಮನಸಿನಲ್ಲಿದ್ದುದು ಅಷ್ಟೆ. ''ಮುಹಮ್ಮದನ ಆತ್ಮ ಯಾರ ನಿಯಂತ್ರಣದಲ್ಲಿದೆಯೋ ಅವನ ಮೇಲಾಣೆ ಸತ್ಯ ! ಸಹನೆ ವಹಿಸುವವನು, ಪ್ರತಿಫಲವನ್ನು ಆಗ್ರಹಿಸುವವನು, ಹಿಮ್ಮೆಟ್ಟದೆ ಮುನ್ನಡೆಯುವವನು ಸ್ವರ್ಗ ಪ್ರವೇಶಿಸಿಯಲ್ಲದೆ ಇಂದು ಶತ್ರುಗಳ ಜೊತೆಗಿನ ಹೋರಾಟದಲ್ಲಿ ಮಡಿಯಲಾರ '' ಅನುಯಾಯಿಗಳಿಗೆ ಆವೇಶ ತುಂಬುವ ಭಾಷಣದಲ್ಲಿ ಪ್ರವಾದಿ (ಸ) ರು ಹೀಗೆ ಹೇಳಿದಾಗ ಉಮರುಬ್ನುಲ್ ಹಿಮಾಮ್ ಹೇಳಿದರು;
"ಭೇಷ್ ! ಭೇಷ್ ! ಶತ್ರುಗಳು ನನ್ನನ್ನು ವಧಿಸುವುದೊಂದು ಬಿಟ್ಟರೆ, ನನ್ನ ಹಾಗೂ ಸ್ವರ್ಗ ಪ್ರವೇಶದ ನಡುವೆ ಯಾವುದೇ ತಡೆಯೂ ಇಲ್ಲ''
ನಂತರ ತಮ್ಮ ಕೈಯಲ್ಲಿದ್ದ ಒಣ ಖರ್ಜೂರವನ್ನು ಅತ್ತ ಎಸೆದು, ಯುದ್ಧ ರಂಗಕ್ಕೆ ಧುಮಿಕಿದ ಉಮೈರ್ ಹೋರಾಡುತ್ತಲೇ ವೀರ ಮರಣವನ್ನಪ್ಪಿದರು..
ಇನ್ನೊಂದು ವರದಿಯಲ್ಲಿ, " ನೀವು ಸ್ವರ್ಗ ಪ್ರವೇಶಿಸಲು ಏಳಿರಿ, ಅದರ ವಿಸ್ತಾರ ಆಕಾಶ ಭೂಮಿಯಷ್ಟಿದೆ. ಭಯಭಕ್ತಿಯುಳ್ಳವರಿಗೆ ಅದು ಸಜೀಕರಿಸಲ್ಪಟ್ಟಿದೆ” ಎಂದು ಪ್ರವಾದಿ (ಸ) ರು ಹೇಳಿದಾಗ
ಉಮೈರ್, '' ಭೇಷ್ ! ಭೇಷ್ ! '' ಎಂದರು.
'' ಯಾಕೆ ನೀನು ಸಂತೋಷ ಪ್ರಕಟಿಸುತ್ತಿರುವೆ ? '' ಪ್ರವಾದಿ (ಸ) ಕೇಳಿದರು.
'' ನಾನು ಸ್ವರ್ಗ ಪ್ರವೇಶಿಸಲು ಆಗ್ರಹಿಸುತ್ತಿರುವುದರಿಂದ '' ಉಮ್ಮರ್ ಹೇಳಿದರು.
ಬಳಿಕ ಅಲ್ಪ ಒಣ ಖರ್ಜೂರ ಬಾಯಿಗೆ ಹಾಕಿ ಉಮೈರ್ ಜಗಿಯಲಾರಂಭಿಸಿದರು..
ಈ ವೇಳೆ ಅವರು; "ಅಲ್ಲಾಹು ಸತ್ಯ, ಈ ಒಣ ಖರ್ಜೂರ ತಿಂದು ಮುಗಿಸುವವರೆಗೆ ನಾನು ಜೀವಿಸಿದರೆ ನನ್ನ ಪಾಲಿಗೆ ಅದೊಂದು ದೀರ್ಘವಾದ ಜೀವನವಾಗಿದೆ '' ಆದ್ದರಿಂದ ಅವರು ಓಣ ಖರ್ಜೂರವನ್ನು ಬಿಸಾಡಿ, ಯುದ್ದ ಧುಮುಕಿ, ಹುತಾತ್ಮರಾದರು. ಉಮೈರ್ ಹಾಡುತ್ತಿದರು:
ಅಲ್ಲಾಹನೆಡೆಗೆ ಧುಮುತಕಿದೆ
ಒಂದು ಮಾರ್ಗವೂ ಇಲ್ಲದೆ
ಭಕ್ತಿ, ಪರಲೋಕ ಕರ್ಮ ಅಲ್ಲಾಹನಿಗಾಗಿ
ಧರ್ಮ ಸಮರದ ಸಹನೆಯನ್ನು ಹೊರತುಪಡಿಸಿ.
ಎಲ್ಲಾ ಮಾರ್ಗಗಳಿಗೂ ಕೊನೆಯಿದೆ;
ಭಕ್ತಿ, ಸತ್ಕರ್ಮ, ಧರ್ಮವನ್ನು ಹೊರತುಪಡಿಸಿ
ಹಾರಿಸ್ ಬ್ನು ಸುರಾಖಾ ಜೊತೆ ಮುಖಾಮುಖಿಯಾಗಿ ಪ್ರವಾದಿ (ಸ) ಕೇಳಿದರು. "ಹಾರಿಸ್ ಈ ಪ್ರಭಾತದಲ್ಲಿ ನೀನು ಹೇಗಿರುವೆ ''
'' ನಿಜವಾಗಿಯೂ, ನಾನು ಅಲ್ಲಾಹನಲ್ಲಿ ವಿಶ್ವಾಸವಿರುವವನಾಗಿರುವೆನು '' ಹಾರಿಸ್ ಉತ್ತರಿಸಿದರು.
'' ನೀನು ಏನು ಹೇಳುತ್ತಿರುವೆ ಎಂದು ಚೆನ್ನಾಗಿ ಯೋಚಿಸು. ಪ್ರತೀ ಮಾತಿಗೂ ಒಂದು ಒಳಾರ್ಥವಿರುತ್ತದೆ. ನಿನ್ನ ವಿಶ್ವಾಸದ ಅಂತಸತ್ವವೇನು ?" (ತಪ್ಸಿಲ್ ಇಬ್ನುಕಸೀರ್ - 3: 307)
ಹಾರಿಸ್: ಪ್ರವಾದಿಯವರೇ, ಈ ಲೋಕದೊಂದಿಗೆ ನನ್ನ ಮನಸು ವಿರಕ್ತಿ ತಾಳಿದೆ. ನನ್ನ ರಾತ್ರಿಗಳನ್ನು, ನಾನು ನಿದ್ರಾಹೀನಗೊಳಿಸಿದ್ದೇನೆ, ಹಗಲನ್ನು ದಾಹದಲ್ಲಿ ಕಳೆಯುತ್ತಿದ್ದೇನೆ. ಅಲ್ಲಾಹನ ಸಿಂಹಾಸನದಲ್ಲಿ ನಾನು ಪ್ರತ್ಯಕ್ಷಗೊಂಡಂತೆ ಅನಿಸುತ್ತಿದೆ. ಸ್ವರ್ಗವಾಸಿ ಪರಸ್ಪರ ಭೇಟಿಯಾಗುವುದನ್ನು ನಾನು ಕಾಣುತ್ತಿರುವಂತೆ ಅನಿಸುತ್ತದೆ. ನರಕವಾಸಿಗಳು ಅಲ್ಲಿ ಅಟ್ಟಹಾಸಗೈಯುವುದನ್ನು ನಾನು ನೋಡುತ್ತಾ ನಿಂತಿರುವಂತೆ ತೋರುತ್ತದೆ.
ಪ್ರವಾದಿ (ಸ): ನೀನು ಕಂಡಿರುವುದು ನಿಜ. ಹೃದಯದಲ್ಲಿ ಅಲ್ಲಾಹನ ಮೇಲಿನ ವಿಶ್ವಾಸವನ್ನು ಅಂಕುರಿಸಲ್ಪಟ್ಟ ದಾಸ ನೀನು.."
ಹಾರಿಸ್: ಅಲ್ಲಾಹನ ದೂತರೇ, ನನಗೆ ಹುತಾತ್ಮ ಪದವಿ ದೊರೆಯಲು ತಾವು ಅಲ್ಲಾಹನೊಂದಿಗೆ ಪ್ರಾರ್ಥನೆ ನಡೆಸಬೇಕು.
ಪ್ರವಾದಿ (ಸ) ರು ಅವರಿಗಾಗಿ ಪ್ರಾರ್ಥಿಸಿದರು. ಅನ್ಯಾರಿಗಳಲ್ಲಿ ಮೊದಲು ಹುತಾತ್ಮರಾದವರು ಹಾರಿಸಾಗಿದ್ದರು. ಅವರು ಹೌಳಿನಿಂದ ನೀರು ಕುಡಿಯುತಿರಬೇಕಾದರೆ ಅಜ್ಞಾತವಾದ ಅಸ್ತ್ರವೊಂದು ಅವರ ಮೇಲೆ ಗುರಿಯಿಟ್ಟವು. ಅಲ್ಲಿಗೆ ಆ ಧೀರ ಯುವಕ ಹುತಾತ್ಮರಾದರು..
(ಅನ್ಸಾರಿಗಳಲ್ಲಿ ಮೊದಲು ಹುತಾತ್ಮರಾದವರು ಉಮೈರ್ರ್ ಬ್‌ನುಲ್ ಹುಮಾಮರಾಗಿದ್ದರು ಎಂಬ ಅಭಿಪ್ರಾಯವೂ ಇದೆ. ಮುಹಾಜರುಗಳಲ್ಲಿ ಮೊದಲು ಹುತಾತ್ಮರಾದವರು ಉಮರುಬ್ನುಲ್ ಖತ್ತಾಬ್ (ರ) ರ ಸ್ವತಂತ್ರ ಸೇವಕರಾದ ಮಿಹ್ಜಹ್ ರವರಾಗಿದ್ದಾರೆ)
ಅನಸ್‌ಬ್ ಮಾಲಿಕ್ (ರ) ರ ಅತ್ತೆ ರುಬಯ್ಯ್ ಅ್ ಬಿಂತು ನ್ನಳ್ರಾನ್ ಹಾರಿಸರ ತಾಯಿ. ಹಾರಿಸ್ ಹುತಾತ್ಮರಾದ ಸುದ್ದಿ ಅವರ ತಾಯಿ ಹಾಗೂ ಸಹೋದರಿಗೆ ತಿಳಿದವು. ಆ ತಾಯಿ ಹೇಳಿದರು:
'' ನನ್ನ ಮಗನ ಕುರಿತು ಯೋಚಿಸಿ ನಾನು ಅಳುವುದಿಲ್ಲ. ಪ್ರವಾದಿ (ಸ) ರು ಹಿಂದಿರುಗಿದ ಮೇಲೆ ಅವನು ಸ್ವರ್ಗಗಲ್ಲಿದ್ದಾನೋ, ನರಕದಲ್ಲಿದ್ದಾನೋ ಎಂದು ಕೇಳುವವರೆಗೆ. ಸ್ವರ್ಗದಲ್ಲಿದ್ದರೆ ನಾನು ಅಳುವುದಿಲ್ಲ. ಅಲ್ಲಾಹನ ಪ್ರತಿಫಲವನ್ನು ಆಗ್ರಹಿಸಿ, ತಾಳ್ಮೆ ವಹಿಸುವೆನು. ನರಕದಲ್ಲಿದ್ದರೆ ಈ ಇಹಲೋಕದಲ್ಲಿ ಜೀವಿಸಿರುವಷ್ಟು ದಿನವೂ ನಾನು ಅಳುತ್ತಾ ದಿನ ಕಳೆಯುವೆನು..
ಪ್ರವಾದಿ (ಸ) ಮದೀನಕ್ಕೆ ಹಿಂದಿರುಗಿದಾಗ ಹಾರಿಸರ ತಾಯಿ ಅವರನ್ನು ಭೇಟಿಯಾಗಿ, ವಿಚಾರಿಸಿದರು.
ಅಲ್ಲಾಹನ ದೂತರೇ, ನನ್ನ ಹೃದಯದಲ್ಲಿ ಹಾರಿಸನಿಗಿರುವ ಸ್ಥಾನ ನಿಮಗೆ ತಿಳಿದಿದೆಯಲ್ಲವೇ ? ಅವನನ್ನು ಕುರಿತು ಯೋಚಿಸುವಾಗ ನನಗೆ ಅಳು ಬರುತಿತ್ತು. ಆದರೆ, ನನ್ನ ಪ್ರಶ್ನೆಗೆ ತಮ್ಮಿಂದ ಉತ್ತರ ಲಭಿಸುವವರೆಗೂ ಅಳುವುದಿಲ್ಲವೆಂದು ನಾನು ಆಮೇಲೆ ತೀರ್ಮಾನಿಸಿದೆ. ಅವನು ಸ್ವರ್ಗದಲ್ಲೋ, ನರಕದಲ್ಲೋ ? ಸ್ವರ್ಗದಲ್ಲಾದರೆ ನಾನು ಅಳಲಾರೆ. ನರಕದಲ್ಲಾದರೆ ನಾನು ಅಳುತ್ತೇನೆ '' (ಮರಣ ಹೊಂದಿದವರನ್ನು ನೆನೆಸಿ ವಿಕೃತವಾಗಿ ಅಳುವುದು ನಿಷಿದ್ಧವಾಗುವುದಕ್ಕೂ ಮೊದಲು ಇದು).
"ಹಾರಿಸಗೆ ಒಂದು ಸ್ವರ್ಗವಲ್ಲ. ಅನೇಕ ಸ್ವರ್ಗಗಳಿವೆ. ಸ್ವರ್ಗಗಳಲ್ಲೇ ಅತ್ಯುತ್ತಮವಾದ ಫಿರ್ದೌಸ್ ಎಂಬ ಸ್ವರ್ಗ ಅವನ ಪಾಲಾಗಿದೆ ” ಎಂದು ಪ್ರವಾದಿ (ಸ) ರು ಪ್ರತಿಕ್ರಿಯಿಸಿದರು.
“ ಬೇಷ್, ಭೇಷ್ '' ಎಂದು ಆ ತಾಯಿ ಸಂತೋಷ ಪ್ರಕಟಿಸಿದರು.
ಪ್ರವಾದಿ (ಸ) ಒಂದು ಪಾತ್ರೆಯಲ್ಲಿ ನೀರು ತರುವಂತೆ ಅನುಯಾಯಿಗಳಿಗೆ ಆಜ್ಞಾಪಿಸಿದರು. ಅನುಯಾಯಿಗಳು ನೀರು ತಂದುಕೊಟ್ಟರು. ಆ ನೀರಿಗೆ ತಮ್ಮ ಪುಣ್ಯ ಹಸ್ತವನ್ನು ಮುಳುಗಿಸಿದರು. ಬಾಯಿಗೆ ಹಾಕಿ, ಮುಕ್ಕಳಿಸಿದರು. ಬಳಿಕ ಆ ನೀರನ್ನು ಹಾರಿಸರ ತಾಯಿಗೆ ಕುಡಿಯಲು ಕೊಟ್ಟರು. ಅವರು ಆ ನೀರನ್ನು ಕುಡಿದರು. ನಂತರ ಇಬ್ಬರೊಂದಿಗೂ ಆ ನೀರನ್ನು ವಸ್ತ್ರದ ಮೇಲೆ ಚಿಮುಕಿಸುವಂತೆ ಹೇಳಿದರು. ಅವರು ಹಾಗೆಯೇ ಮಾಡಿದರು. ಪ್ರವಾದಿ ಸನ್ನಿಧಿಯಿಂದ ತೆರಳುವಾಗ ಅವರು ತಮ್ಮೆಲ್ಲಾ ಮನೋಕ್ಲೇಶಗಳನ್ನು ಕಳೆದುಕೊಂಡು, ಮನಸಿನ ಶಾಂತಿಯನ್ನು ಮರಳಿ ಗಳಿಸಿದ್ದರು. (ಅಸ್ಸಿರತುಲ್ ಹಲಬಿಯ್ಯ- 2: 172)
ಅಫ್ರ ಹಾಗೂ ಹಾರಿಸ್ ರ ಪುತ್ರ ಔಫ್ ಪ್ರವಾದಿ (ಸ) ಯೊಂದಿಗೆ ಕೇಳಿದರು;
'' ತನ್ನ ದಾಸನ ಕುರಿತು ಯೋಚಿಸುವಾಗ ಅಲ್ಲಾಹನನ್ನು ನಗಿಸುವ (ಸಂತೋಷಗೊಳಿಸುವ) ಸಂಗತಿ ಯಾವುದು ? ''
"ಯುದ್ಧ ವಸ್ತವಿಲ್ಲದೆ, ಶಿರಸ್ತ್ರಾಣವಿಲ್ಲದೆ ಶತ್ರುವನ್ನು ಎದುರಿಸುವುದು '' ಎಂದು ಪ್ರವಾದಿ (ಸ) ರು ಉತ್ತರಿಸಿದರು.
ಔಫ್ ತಮ್ಮ ಯುದ್ಧವಸ್ತ್ರಗಳನ್ನು ಕಳಚಿ, ಯುದ್ಧ ರಂಗಕ್ಕೆ ಧುಮುಕಿದರು. ಅಲ್ಲಿ ಕೆಲವು ತಾಸುಗಳ ಕಾಲ ವೀರಾವೇಶದಿಂದ ಹೋರಾಡಿ, ಹುತಾತ್ಮರಾದರು.
ಬದ್‌ರ್ ನಲ್ಲಿ ವಿರೋಚಿತವಾದ ಹೋರಾಟವನ್ನು ಪ್ರದರ್ಶಿಸಿದ ಸ್ವಹಾಬಿಗಳಲ್ಲಿ ಅಲಿ (ರ) ಪ್ರಮುಖರು. ಆ ದಿನ ನಾನೊಬ್ಬನೇ ಇಪ್ಪತ್ತೆರಡು ಮಂದಿ ಶತ್ರುಗಳ ಕಥೆ ಮುಗಿಸಿದೆ ಎಂದು ಅವರು ಹೇಳಿದ್ದಾರೆ..
ಇತಿಹಾಸ ಸೃಷ್ಟಿಸಿದ ಹೋರಾಟಗಳು:
*ಬದ್‌ರ್'ನಲ್ಲಿ* ವಿರೋಚಿತವಾದ ಹೋರಾಟವನ್ನು ಪ್ರದರ್ಶಿಸಿದ ಸ್ವಹಾಬಿಗಳಲ್ಲಿ ಅಲಿ (ರ) ಪ್ರಮುಖರು..
ಆ ದಿನ ನಾನೊಬ್ಬನೇ ಇಪ್ಪತ್ತೆರಡು ಮಂದಿ ಶತ್ರುಗಳ ಕಥೆ ಮುಗಿಸಿದೆ ಎಂದು ಅವರು ಹೇಳಿದ್ದಾರೆ..
ಬದ್‌ರ್'ನಲ್ಲಿ ಬೆಳಗಿದ ಇನ್ನೋರ್ವ ಧೀರ ಕೇಸರಿ ಹಂಝತುಬ್‌ನುಲ್ ಅಬ್ದುಲ್ ಮುತ್ತಲಿಬ್. ಅಬ್ದುರಹ್ಮಾನಿಬ್ನು ಔಫ್ ಉಲ್ಲೇಖಿಸುವುದು ನೋಡಿ. ಉಮಯ್ಯತ್ ಬ್ನು ಖಲಫ್‌ನನ್ನು ಬಂಧಿಸಿದಾಗ ಆತ ಕೇಳಿದ. ಎದೆಯ ಮೇಲೆ ಉಷ್ಟ್ರ ಪಕ್ಷಿಯ ರೆಕ್ಕೆಗಳ ಚಿಹ್ನೆಯನ್ನು ಹೊಂದಿರುವ ಒಬ್ಬನನ್ನು ನಿಮ್ಮ ನಡುವೆ ಕಂಡೆ. ಯಾರು ಆ ವ್ಯಕ್ತಿ ? ”
''ಹಂಝತುಬ್‌ನುಲ್ ಅಬ್ದುಲ್ ಮುತ್ತಲಿಬ್ '' ಎಂದು ನಾನು ಉತ್ತರಿಸಿದೆ.
'' ನಮ್ಮ ಈ ಸ್ಥಿತಿಗೆ ಅವರೇ ಕಾರಣ '' ಎಂದು ಉಮಯ್ಯತ್ ಹೇಳಿದನು.
ಅಲಿ (ರ) ನೆನಪಿಸಿಕೊಳ್ಳುವುದು ಹೀಗೆ: '' ಅಂದು ಮಧ್ಯಾಹ್ನದ ನಂತರ ಸೈನಿಕ ನೆಲೆಗಳು ಬೆರೆತು ಹೋಗಿದ್ದವು. ನಾನು ಅವರ ನಡುವಿನ ಒಬ್ಬರನ್ನು ಹಿಂಬಾಲಿಸಿದೆ. ಆಗ ಒಬ್ಬ ಮುಶ್ರಿಕ್ ಹಾಗೂ ಸಅದ್ ಬುನು ಖೈಸಮಃ ಮರಳ ಪರ್ವತದ ಮೇಲೆ ನಿಂತು ಹೋರಾಡುತ್ತಿದ್ದರು. ಆ ಮುಶ್ರಿಕ್ ಸಅದ್ ರನ್ನು ಹತ್ಯೆಗೈದರು. ಆತ ಉಕ್ಕಿನ ಕವಛ ತೊಟ್ಟಿದ್ದ. ಅಶ್ವರೂಢನಾಗಿದ್ದ. ಕುದುರೆಯ ಮೇಲಿನಿಂದ ಚಂಗನೆ ಹಾರಿದನು. ಅವನಿಗೆ ನನ್ನ ಗುರುತು ಸಿಕ್ಕಿದವು. ಆದರೆ, ನನಗೆ ಅವನ ಪರಿಚಯವಾಗಲಿಲ್ಲ..
"ಅಬ್ದುಲ್ ಮುತ್ತಲಿಬರ ಪುತ್ರ, ದ್ವಂದ್ವ ಯುದ್ಧಕ್ಕೆ ಬಾ.. ನನ್ನನ್ನು ಕರೆದನು. ನಾನು ಅವನತ್ತ ತಿರುಗಿದೆ. ಅವನು ನನ್ನತ್ತ ನೆಗೆದನು. ನಾನು ಗಿಡ್ಡ ಮನುಷ್ಯನಾಗಿದ್ದೆ. ಅವನು ನನ್ನ ಕಡೆಗೆ ಇಳಿದು ಬರಲೆಂದು ನಾನು ಎರಡು ಹೆಜ್ಜೆ ಹಿಂದಕ್ಕೆ ಇಟ್ಟೆ. ಅವನು ತನ್ನ ಖಡ್ಗದೊಂದಿಗೆ ನನಗಿಂತಲೂ ಎತ್ತರದಲ್ಲಿರುವುದನ್ನು ನಾನು ಇಷ್ಟಪಟ್ಟಿರಲಿಲ್ಲ.
'"ಅಬೂತಾಲಿಬರ ಪುತ್ರ ಓಡುತ್ತಿದ್ದಿಯಾ ? '' ಆತ ಅಪಹಾಸ್ಯ ಮಾಡಿದನು.
'' ಓಡುತ್ತಿಲ್ಲ, ನಿನ್ನನ್ನು ಎದುರಿಸುವ ಸೂಕ್ತ ಸ್ಥಳವನ್ನು ಹುಡುಕುತ್ತಿದ್ದೇನೆ. ಕೆಳದುಟಿ ಹರಿದವಳ ಪುತ್ತನೇ '' ನಾನು ಮಾರುತ್ತರ ನೀಡಿದೆ.
ನನ್ನ ಪಾದಗಳು ತನ್ನ ಸ್ಥಾನವನ್ನು ನಿಶ್ಚಯಿಸಿದವು. ಅವನು ನನ್ನೆಡೆಗೆ ನುಗ್ಗುತ್ತಿದ್ದ. ಹತ್ತಿರವಾದಾಗ ನನ್ನೆಡೆಗೆ ಖಡ್ಗ ಬೀಸಿದನು. ನಾನು ಗುರಾಣಿಯಿಂದ ತಡೆದೆ. ಅವನ ಖಡ್ಗ ಕೆಳಗೆ ಬಿದ್ದವು. ನಾನು ಅವನ ಭುಜಕ್ಕೆ ಖಡ್ಗ ಬೀಸಿದೆ. ಯುದ್ಧವಸ್ತ್ರ ಧರಿಸಿದ್ದ ಅವನು ನನ್ನ ಏಟಿಗೆ ನಡುಗಿ ಹೋದನು. ಅವನ ಉಕ್ಕಿನ ಅಂಗಿಗೆ ತಾಗಿ, ನನ್ನ ಖಡ್ಗ ತುಂಡಾದವು. ನನ್ನ ಖಡ್ಗ ಪ್ರಯೋಗ ಅವನ ಕಥೆಯನ್ನು ಮುಗಿಸುತ್ತದೆ ಎಂದು ನಾನು ಭಾವಿಸಿದ್ದೆ. ಆದರೆ, ಹಾಗಾಗಲಿಲ್ಲ. ಇನ್ನೇನು ಆತ ನನ್ನ ಮೇಲೆ ದಾಳಿ ಮಾಡಬೇಕೆನ್ನುವಷ್ಟರಲ್ಲಿ ಹಿಂದಿನಿಂದ ಮಿಂಚಿನಂತೆ ಯಾರೋ ಖಡ್ಗ ಬೀಸಿದರು. ನಾನು ತಲೆತಗ್ಗಿಸಿ ನನ್ನ ತಲೆಯ ಮೇಲಿನಿಂದ ಮಿಂಚಿನಂತೆ ಸಂಚರಿಸಿದ ಖಡ್ಗವು ಆತನ ಶಿರಸ್ತ್ರಾಣದೊಂದಿಗೆ ತಲೆಯನ್ನು ನೆಲಕ್ಕುರುಳಿಸಿದ್ದವು.
"ಇದನ್ನು ಹಿಡಿದುಕೋ ! ನಾನು ಅಬ್ದುಲ್ ಮುತ್ತಲಿಬರ ಪುತ್ರ '' ಹಿಂದಿನಿಂದ ಖಡ್ಗ ಬೀಸಿದ ವ್ಯಕ್ತಿ ಹೇಳಿದರು. ನಾನು ತಿರುಗಿ ನೋಡಿದಾಗ ಅಲ್ಲಿ ಹಂಝತುಲ್ ಅಬ್ದುಲ್ ಮುತ್ತಲಿಬರಿದ್ದರು.
ಬದ್ರ್ ಯುದ್ಧದಲ್ಲಿ ಐತಿಹಾಸಿಕವೆನಿಸುವಂತಹ ಹೋರಾಟ ನಡೆಸಿದ ಇನ್ನೋರ್ವ ವ್ಯಕ್ತಿ ಅನ್ಸಾರಿಗಳ ಕೂಟಕ್ಕೆ ಸೇರಿದ ಆಬೂದುಜಾನ (ರ) ಸಮಾಕ್‌ಬ್ನು ಖಶಃ ಎಂಬುದು ಅವರ ಹೆಸರು. ಅಬ್ದುರ್ರಹ್ಮಾನ್'ಬ್ನ್ ಔಫ್(ರ) ಹೇಳುತ್ತಾರೆ..
ಉಮಯ್ಯತ್ ಬ್ನ್ ಖಲಫ್ ನನ್ನೊಂದಿಗೆ ಕೇಳಿದರು.
''ದಪ್ಪ ದೇಹದ ಕುಳ್ಳನಾದ, ಕೆಂಪು ವಸ್ತ್ರವನ್ನು ತಲೆಗೆ ಕಟ್ಟಿಕೊಂಡಿರುವ ಆ ವ್ಯಕ್ತಿ ಯಾರು ?''
"ಅದು ಅನ್ಸಾರಿಗಳಲ್ಲೊಬ್ಬರು. ಸಮಾಕ್ ಬ್ನು ಖಶಃ ಎಂಬುದು ಅವರ ಹೆಸರು ” ಎಂದು ನಾನು ಉತ್ತರಿಸಿದೆ.
" ನಾವಿಂದು ನಿಮ್ಮ ಬಳಿ ಮೃಗಗಳಂತಾಗಲು ಇವರೂ ಕೂಡ ಕಾರಣ '' ಎಂದು ಉಮಯ್ಯತ್ ಹೇಳಿದನು. ಎಂಟು ಮಂದಿ ಶತ್ರುಗಳನ್ನು ಅಬೂದುಜಾನ್ ಅಂದು ವಧಿಸಿದರು.
(ಬದುಲ್ ಕುಬ್ರ, ಡಾ. ಯಮಾನಿ- 181)
ಎರಡೂ ಪಾಳಯಗಳು ಬೆರೆತು, ಹೋರಾಟ ಉಚ್ಛಾಯ ಸ್ಥಿತಿ ತಲುಪಿದ್ದವು. ಆಗ ಅಸ್ವಿಮ್ ಬುನು ಅಬೀ ಔಫುಸ್ಸಹಮಿ ಒಂದು ಬೇಟೆ ನಾಯಿಯಂತೆ ಮುಂದೆ ಬಂದನು. ಅವನು ಹೇಳುತ್ತಿದ್ದನು.
"ಖುರೈಷಿ ಸಮೂಹವೇ, ಹೊಸ ಧರ್ಮದೊಂದಿಗೆ ಆಗಮಿಸಿ, ಸಮುದಾಯವನ್ನು ಇಬ್ಬಾಗಿಸಿದ ಮುಹಮ್ಮದನನ್ನು ಹಿಡಿಯಿರಿ, ಅವನು ರಕ್ಷಣೆ ಹೊಂದಲು ನಾನು ಬಿಡುವುದಿಲ್ಲ ”
ಅಬೂದುಜಾನ ಆಸ್ವಿಮನನ್ನು ಎದುರಿಸಿದರು. ಇಬ್ಬರ ನಡುವೆ ತೀವ್ರ ಕಾದಾಟ ನಡೆದವು. ಕೊನೆಗೆ ಆಸ್ವಿಮ್ ವಧಿಸಲ್ಪಟ್ಟನು. ಅವನ ಸಲಬವನ್ನು ತೆಗೆಯಲು ಯತ್ನಿಸುವಾಗ ಉಮರುಬ್ನು ಖತ್ತಾಬ್ ಅಲ್ಲಿ ನಡೆದು ಹೋದರು.
"ಆ ಸಲಬವನ್ನು ಬಿಟ್ಟು ಬಿಡು, ಶತ್ರುಗಳು ಸಂಪೂರ್ಣರಾಗಿ ಶರಣಾಗತರಾಗಲಿ. ಆ ಸಲಬ ನಿನ್ನದೆಂದು ನಾನು ಸಾಕ್ಷ್ಯ ವಹಿಸುತ್ತೇನೆ '' ಎಂದು ಉಮರ್ (ರ) ಹೇಳಿದರು.
ಅಷ್ಟು ಹೊತ್ತಿಗೆ ಮಅಬದ್ ಬ್ನು ವಹಾಬ್ ಆಗಮಿಸುತ್ತಾನೆ. ಆತ ಅಬೂದುಜಾನದತ್ತ ಖಡ್ಗ ಬೀಸಿದನು. ಒಂಟೆ ಮೊಣಗಾಲೂರುವಂತೆ ಅಬೂದುಚಾನ ಮೊಣಗಾಲೂರಿ ಬಿಟ್ಟರು. ತಕ್ಷಣವೇ ಎದ್ದು ನಿಂತು ಶತ್ರುವಿನತ್ತ ತಿರುಗಿ ಬಿದ್ದರು. ಆತನ ರುಂಡದತ್ತ ಖಡ್ಗ ಬೀಸಿದರು. ಗುರಿ ತಪ್ಪಲಿಲ್ಲ. ಶತ್ರು ನೆಲಕ್ಕೆ ಕುಸಿದು ಬಿಟ್ಟನು. ಆತನ ಸಲಬ ಅಬೂದುಜಾನರ ವಶವಾದವು.
ಅವಿಸ್ಮರಣೀಯವಾದ ಹೋರಾಟ ಮಾಡಿದ ಇನ್ನೋರ್ವ ಧೀರ ಸೇನಾನಿ ಝುಬೈರ್‌ಬ್ನ್ ಆವಾಂ!! ಅವರ ಕುತ್ತಿಗೆ ಹಾಗೂ ಬೆನ್ನಿನ ಮೇಲೆ ಕೈಯನ್ನು ಒಳತೂರುವಷ್ಟು ದೊಡ್ಡ ಗಾಯಗಳಿದ್ದವು. ಅವರು ಹೇಳುತ್ತಾರೆ. ಆ ದಿನ ಉಬೈದತುಬ್ನು ಸಈದುಲ್ ಆಸ್ವಿ ಯನ್ನು ನಾನು ಎದುರುಗೊಂಡೆ. ಕಣ್ಣನ್ನು ಹೊರತು ಉಳಿದ ಯಾವುದೇ ಅಂಗ ಹೊರಗೆ ಕಾಣದ ರೀತಿಯಲ್ಲಿ ಆತ ಯುದ್ಧ ವಸ್ತ್ರ ಧರಿಸಿದ್ದ. "ನಾನು ದಾತುಲ್ ಕಿರ್ಶಿನ ತಂದೆ '' ಎಂದು ಆತ ಬೊಬ್ಬಿರಿಯುತ್ತಿದನು. ಸಣ್ಣದೊಂದು ಹೆಣ್ಣು ಮಗುವನ್ನು ಆತ ಹೊತ್ತುಕೊಂಡಿದ್ದ. ದೊಡ್ಡ ಹೊಟ್ಟೆಯ ಆ ಮಗು ಖಾಯಿಲೆ ಬಿದ್ದಿತ್ತು.. (ಆಮಾಶಯ ರೋಗವಿರು ಮಗು ಎಂದು ದಾತುಲ್ ಕಿರ್ಶ್ ನ ಅರ್ಥ)
ನನ್ನ ಕೈಯಲ್ಲಿದ್ದ ಕಬ್ಬಿಣದ ಚೂಪು ತುದಿಯನ್ನು ಹೊಂದಿದ್ದ ಬೆತ್ತದ ಮೂಲಕ ಆತನ ಕಣ್ಣಿಗೆ ಚುಚ್ಚಿದೆ. ಅವನು ಕೆಳಗೆ ಬಿದ್ದನು. ಅವನ ಕಪಾಲಕ್ಕೆ ಮೆಟ್ಟಿ, ಆ ಬೆತ್ತವನ್ನು ನಾನು ಹೊರಗೆಳೆದೆ. ಕೃಷ್ಣಾ ಮಣಿ ಹೊರಗೆ ಬಂದವು. ಆ ಬೆತ್ತವನ್ನು ಹೊರ ತೆಗೆಯುವುದೇ ನನಗೆ ಪ್ರಯಾಸವಾಗಿತ್ತು.
ಉರ್ವ ಹೇಳುತ್ತಾರೆ; ಆ ಬೆತ್ತವನ್ನು ಪ್ರವಾದಿ (ಸ) ರು ಕೇಳಿದರು. ಪ್ರವಾದಿ (ಸ) ರಿಗೆ ನೀಡಲಾಯಿತು. ಪ್ರವಾದಿಯ ವಿಯೋಗದ ನಂತರ ಅದು ಅಬೂಬಕ್ಕರ್, ಉಮರ್, ಉಸ್ಮಾನ್, ಅಲೀ.. ಉಪಯೋಗಿಸಿದರು. ಅಲಿ (ರ) ರವರ ಕಾಲದ ಬಳಿಕ ಅಬ್ದುಲ್ಲಾಹಿಬ್ ನು ಝುಬೈರ್ (ರ) ಅದನ್ನು ಕೇಳಿ ಪಡೆದರು. ಮರಣದವರೆಗೂ ಅದು ಅವರ ಜೊತೆಗಿದ್ದವು. (ಅಸ್ವೀರತುಲ್ ಹಲಬಿಯ್ಯಾ- 182).
ಹುಬಾಬ್ ಬ್ನು ಮುಂದ್ಸಿರುಬುನುಲ್ ಜಮೂಅ್, ಸಾಬಿತ್ ಬ್ ನುಲ್ ಜದ್ ಹ್, ಮುಜದ್ದರುಬುನು ಝಿಯಾದ್, ಮುಆದ್ ಬುನು ಅಮ್ರಬು ನುಲ್ ಜಮೂಹ್, ಸಅದ್ ಬುನು ರಬೀಅ, ಅಬೂರಿಫಾಅರ ಪುತ್ರರು ರಿಫಾಅ, ಅಬ್ದುಲ್ಲಾ, ಝುಹೈರ್ ಸಾಹಿಬ್, ಅಬೂಬುರ್‌ದಃ ಮೊದಲಾದವರು ತಮ್ಮ ವೀರೋಚಿತ ಹೋರಾಟದ ಮೂಲಕ ಬದ್ರ್ ನಲ್ಲಿ ಇತಿಹಾಸ ರಚಿಸಿದ್ದಾರೆ.
ಅಬೂಬರ್‌ದ ಹೇಳುತ್ತಾರೆ. ಬದ್ರ್ ದಿನದಂದು ಮೂರು ಶಿರಸ್ಸುಗಳೊಂದಿಗೆ ನಾನು ಪ್ರವಾದಿ (ಸ) ರ ಬಳಿಗೆ ಹೋದೆ. ಅಲ್ಲಾಹನ ದೂತರೇ, ಇದರಲ್ಲಿ ಎರಡು ಶಿರಸ್ಸುಗಳನ್ನು ನಾನು ವಧಿಸಿದೆ. ಮೂರನೇಯ ಶಿರಸ್ಸು ಬಿಳಿಯ ದೀರ್ಘ ಕಾಯನಾದ ಒಬ್ಬ ವ್ಯಕ್ತಿ ಅದನ್ನು ಉರುಳಿಸುವುದನ್ನು ನಾನು ಕಂಡೆ. ಆದನ್ನೂ ಎತ್ತಿಕೊಂಡು ನಾನು ಬಂದ್ದಿದ್ದೇನೆ .. ಎಂದೆ.
" ಅದು ಮಲಕುಗಳಲ್ಲಿ ಒಬ್ಬರಾಗಿದ್ದರು '' ಎಂದು ಪ್ರವಾದಿ (ಸ) ರು ಹೇಳಿದರು.
" ಸ್ವಹಾಬಿಗಳಲ್ಲಿ ಅತೀ ಹೆಚ್ಚು ಧೈರ್ಯಶಾಲಿ ವ್ಯಕ್ತಿ ಅಬೂಬಕ್ಕರ್ (ರ) ರವರಾಗಿದ್ದರು. ಅಲಿ (ರ) ಒಮ್ಮೆ ಭಾಷಣ ಮಾಡುತ್ತಾ, ಜನರೊಂದಿಗೆ ಹೇಳಿದರು.
'' ಜನರೇ, ಜನರ ನಡುವೆ ಅತೀ ದೊಡ್ಡ ಧೀರ ವ್ಯಕ್ತಿ ಯಾರು ?”
'' ತಾವು ಅಮೀರುಲ್ ಮುಅ್ ಮಿನೀನ್ '' ಜನರು ಒಕ್ಕೊರಲಿನಿಂದ ಹೇಳಿದರು.
ಆಗ ಅಲಿ (ರ) ಹೇಳಿದರು.
'' ತಿಳಿಯಿರಿ. ನಿಶ್ಚಯವಾಗಿಯೂ ನನ್ನನ್ನು ಯಾರೊಬ್ಬರೂ ದ್ವಂದ್ವ ಯುದ್ಧಕ್ಕೆ ಆಹ್ವಾನಿಸಿಲ್ಲ. ನಾನು ಅವನೊಂದಿಗೆ ಪ್ರತೀಕಾರ ಮಾಡದ ಹೊರತು. ಆದರೆ, ಅತೀ ದೊಡ್ಡ ಧೀರ ವ್ಯಕ್ತಿ ಅಬೂಬಕ್ಕರ್ ರವರಾಗಿದ್ದಾರೆ. ನಾವು ಪ್ರವಾದಿ (ಸ) ಗೆ ಗುಡಾರ ನಿರ್ಮಿಸಿಕೊಟ್ಟೆವು. ನಂತರ ನಾವು "ಯಾರು ಪ್ರವಾದಿ (ಸ) ಯ ಜೊತೆಗೆ ನಿಲ್ಲುವವರು ?”
" ಮುಶ್ರಿಕರಲ್ಲಿ ಯಾರೊಬ್ಬರೂ ಅವರ ಮೇಲೆ ಗುರಿಯಿಡದಂತೆ ಕಾಪಾಡಲು ''
"ಅಲ್ಲಾಹು ಸತ್ಯ ! ನಾವ್ಯಾರೂ ಮಾತನಾಡಲಿಲ್ಲ. ಆದರೆ, ಅಬೂಬಕ್ಕರ್ (ರ) ತಮ್ಮ ಖಡ್ಡ ಕೈಗೆತ್ತಿಕೊಂಡು, ಪ್ರವಾದಿ (ಸ) ಯ ಜೊತೆಗೆ ನಿಂತರು. ಅವರೇ ಜನರ ನಡುವೆ ಅತೀ ದೊಡ್ಡ ಧೀರ"
ಅಲಿ (ರ) ಮುಂದುವರಿಸಿದರು, ನಾನು ಒಂದು ಘಟನೆಗೆ ಸಾಕ್ಷಿಯಾಗಿದ್ದೇನೆ. ಮಕ್ಕಾದಲ್ಲಿದ್ದ ವೇಳೆ ಒಮ್ಮೆ ಖುರೈಷಿಗಳು ಪ್ರವಾದಿ (ಸ) ಯನ್ನು ಹಿಡಿದುಬಿಟ್ಟರು. ಒಬ್ಬರು ಪ್ರವಾದಿ (ಸ) ಯನ್ನು ಎಳೆಯುತ್ತಿದ್ದರು. ಇನ್ನೊಬ್ಬರು ದೂಡುತ್ತಿದ್ದರು.
'' ಅಷ್ಟೂ ದೇವರುಗಳನ್ನು ಸೇರಿಸಿ ನೀನು ಒಂದೇ ದೇವರನ್ನಾಗಿಸಿದೆಯಲ್ಲ ಎಂದು ಅವರು ಹೇಳುತ್ತಿದ್ದರು.
"ಅಲ್ಲಾಹು ಸತ್ಯ. ನಮ್ಮಲ್ಲಿ ಯಾರೂ ಅವರನ್ನು ಬಿಡಿಸಿಕೊಳ್ಳುವ ಧೈರ್ಯ ತೋರಲಿಲ್ಲ. ಆದರೆ, ಅಬೂಬಕ್ಕರ್ ಆ ಧೈರ್ಯ ತೋರಿದರು."
'' ನಿಮಗೆ ನಾಶ, ನನ್ನ ಅಲ್ಲಾಹು ಒಬ್ಬನೇ ಎಂದು ಹೇಳಿದ್ದಕ್ಕೆ ನೀವು ಒಬ್ಬರನ್ನು ಕೊಲ್ಲುತ್ತಿದ್ದೀರಾ ? '' ಎಂದು ಹೇಳುತ್ತಾ ಅವರು ಅಲ್ಲಿದ್ದವರಿಂದ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರನ್ನು ರಕ್ಷಿಸಿದರು..
ಇತಿಹಾಸ ಸೃಷ್ಟಿಸಿದ ಹೋರಾಟಗಳು:
*ಅಲಿ*(ರ) ಮುಂದುವರಿಸಿದರು, ನಾನು ಒಂದು ಘಟನೆಗೆ ಸಾಕ್ಷಿಯಾಗಿದ್ದೇನೆ. ಮಕ್ಕಾದಲ್ಲಿದ್ದ ವೇಳೆ ಒಮ್ಮೆ ಖುರೈಷಿಗಳು ಪ್ರವಾದಿ (ಸ) ಯನ್ನು ಹಿಡಿದುಬಿಟ್ಟರು. ಒಬ್ಬರು ಪ್ರವಾದಿ (ಸ) ಯನ್ನು ಎಳೆಯುತ್ತಿದ್ದರು. ಇನ್ನೊಬ್ಬರು ದೂಡುತ್ತಿದ್ದರು.
'' ಅಷ್ಟೂ ದೇವರುಗಳನ್ನು ಸೇರಿಸಿ ನೀನು ಒಂದೇ ದೇವರನ್ನಾಗಿಸಿದೆಯಲ್ಲ ಎಂದು ಅವರು ಹೇಳುತ್ತಿದ್ದರು."
" ಅಲ್ಲಾಹು ಸತ್ಯ. ನಮ್ಮಲ್ಲಿ ಯಾರೂ ಅವರನ್ನು ಬಿಡಿಸಿಕೊಳ್ಳುವ ಧೈರ್ಯ ತೋರಲಿಲ್ಲ. ಆದರೆ, ಅಬೂಬಕ್ಕರ್ ಆ ಧೈರ್ಯ ತೋರಿದರು."
'' ನಿಮಗೆ ನಾಶ, ನನ್ನ ಅಲ್ಲಾಹು ಒಬ್ಬನೇ ಎಂದು ಹೇಳಿದ್ದಕ್ಕೆ ನೀವು ಒಬ್ಬರನ್ನು ಕೊಲ್ಲುತ್ತಿದ್ದೀರಾ ? '' ಎಂದು ಹೇಳುತ್ತಾ ಅವರು ಅಲ್ಲಿದ್ದವರಿಂದ ಪ್ರವಾದಿ (ಸ) ಯನ್ನು ರಕ್ಷಿಸಿದರು.
ನಂತರ ಅಲಿ (ರ) ತಮ್ಮ ಮೇಲಿದ್ದ ಹೊದಿಕೆಯನ್ನು ಎತ್ತಿ, ಕಣ್ಣೀರುಗರೆದರು. ತಮ್ಮ ಗಡ್ಡ ಒದ್ದೆಯಾಗುವವರೆಗೂ ಅವರು ಅತ್ತಿದ್ದರು.
ಅಲಿ (ರ): '' ಅಲ್ಲಾಹನನ್ನು ಮುಂದೆ ನಿಲ್ಲಿಸಿ ನಾನು ಕೇಳುತ್ತಿದ್ದೇನೆ. ಫಿರ್ ಔನ್ ಕುಟುಂಬದ ವಿಶ್ವಾಸಿಯೋ ಅಬೂಬಕ್ಕರ್ ರವರೋ ಯಾರು ಉತ್ತಮರು ?”
ಜನರು ಮಾತನಾಡಲಿಲ್ಲ. "ನೀವು ಉತ್ತರಿಸುವುದಿಲ್ಲವೇ ?"
'' ಅಲಿ (ರ) ಮತ್ತೆ ಕೇಳಿದರು."
"ಅಲ್ಲಾಹು ಸತ್ಯ ! ಅಬೂಬಕ್ಕರ್ (ರ) ಅಲ್ಪ ಸಮಯವು ಫಿರ್ ಔನ್ ಕುಟುಂಬದ ವಿಶ್ವಾಸಿಯ ಭೂಮಿ ತುಂಬುವಷ್ಟು ಕರ್ಮಕ್ಕಿಂತ ಉತ್ತಮವಾಗಿದೆ. ಫಿರ್ ಔನ್ ಕುಟುಂಬ ವಿಶ್ವಾಸಿ ತನ್ನ ವಿಶ್ವಾಸವನ್ನು ರಹಸ್ಯವಾಗಿಡುತ್ತಾರೆ. ಅಬೂಬಕ್ಕರ್ ವಿಶ್ವಾಸವನ್ನು ಬಹಿರಂಗಗೊಳಿಸುವ ಮನುಷ್ಯ. (ಅರಿಯಾಳುನ್ನಳ್ರ: ಫೀಮನಾಖಿಬಿಲ್ ಅಶ್ರ, ಅಬುಜಅಫರುಮುಹಿಬ್ಬುತ್ತಿಬರಿ- 92)
ಧೀರ ವ್ಯಕ್ತಿತ್ವಕ್ಕೆ ಪ್ರವಾದಿ (ಸ) ರು ಅತುಲ್ಯ ಮಾದರಿಯಾಗಿದ್ದರು. ಅಲಿ (ರ) ರವರು ಹೇಳುತ್ತಾರೆ. ಯುದ್ಧರಂಗವು ಬಿಸಿಯೇರಿದಾಗ, ಹೋರಾಟ ತೀಕ್ಷ್ಣಗೊಂಡಾಗ, ಕಣ್ಣುಗಳು ಕೆಂಪಾದಾಗ ನಾವು ಪ್ರವಾದಿ (ಸ) ರನ್ನು ಮುಂದೆ ನಿಲ್ಲಿಸಿ, ಶತ್ರುಗಳಿಂದ ಸಂರಕ್ಷಣೆ ಪಡೆಯುತ್ತಿದ್ದೆವು. ಅಂತಹ ಸಂದರ್ಭದಲ್ಲಿ ಪ್ರವಾದಿ (ಸ) ಗಿಂತಲೂ ಶತ್ರುವನ್ನು ಎದುರಿಸುವ ಧೈರ್ಯವಿರುವವರು ಯಾರೂ ಇಲ್ಲ, ಬದ್ರ್ ದಿನದಂದು ಶತ್ರುಗಳೊಂದಿಗೆ ಅತ್ಯಂತ ಹತ್ತಿರದಲ್ಲಿ ನಿಂತು ಯುದ್ಧ ಮಾಡಿದವರು ಪ್ರವಾದಿ (ಸ) ರವರಾಗಿದ್ದರು. ಕವಿಯ ಭಾಷೆಯಲ್ಲಿ ಹೇಳುವುದಾದರೆ,
''ಮಾಸಾರ್ಧದಲ್ಲಿ ಚಂದ್ರಿಕೆಯಂತಹ ಒಂದು ವದನ ಪ್ರವಾದಿಗಿದೆ. ಪಕ್ಕದಲ್ಲಿ ಕಾಡಿಗೆಯಿಂದ ಅಲಂಕೃತಗೊಂಡ ಕಣ್ಣ ರೆಪ್ಪೆಗಳು.
ಮಂದಸ್ಮಿತ ತೂಗುವಾಗ ಬದ್‌ರ್ (ಪೌರ್ಣಮಿ) ರಾತ್ರಿಯಂತೆ ಪ್ರತೀಕಾರ ಮಾಡುವಾಗ ಬದ್ರ್ ದಿನದಂತೆ ”
ಪ್ರವಾದಿ (ಸ) ರು ಹಾಗೂ ಅಬೂಬಕ್ಕರ್ (ರ) ರವರು ಸತ್ಯ ವಿಶ್ವಾಸಿಗಳ ವಜ್ರಾಯುಧವಾದ ಪ್ರಾರ್ಥನೆಯನ್ನು ಉಪಯೋಗಿಸಿ ಹೋರಾಡಿದಂತೆಯೇ ಸ್ವಶರೀರವನ್ನು ಮುಂದಿಟ್ಟು ಹೋರಾಡಿದರು. ಅವರು ಎರಡು ರೀತಿಯ ಶ್ರೇಷ್ಟತೆಗಳನ್ನು ತಮ್ಮದಾಗಿಸಿಕೊಂಡರು. (ಅಲ್ಬಿದಾಯತುವನ್ನಿಹಾಯ - 3: 318).
ಮುಶ್ರಿಕ್ ಗಳು ಯುದ್ಧರಂಗ ಬಿಟ್ಟು ಓಡುವಾಗ '(ಶತ್ರು) ಸಂಘವು ಸೋಲಿಸಲ್ಪಡುತ್ತದೆ. ಅವರು ಹಿಮ್ಮೆಟ್ಟುವರು.. ಎಂಬ ಖುರ್‌ಆನ್ ವಾಕ್ಯವನ್ನು ಪಠಿಸುತ್ತಾ ಪ್ರವಾದಿ (ಸ) ರು ಅವರನ್ನು ಹಿಂಬಾಲಿಸುತ್ತಿದ್ದರು.
ಅಬೂಬಕ್ಕರ್ (ರ) ರ ಪುತ್ರ ಅಬ್ದುರ್ರಹ್ಮಾನ್ ಬದ್ರ್ ನಲ್ಲಿ ಮುಶ್ರಿಕ್ ಗಳ ಜೊತೆಗಿದ್ದರು. ಇಸ್ಲಾಮ್ ಸ್ವೀಕರಿಸುವ ಮೊದಲು ಅವರ ಹೆಸರು ಅಬ್ದುಲ್ ಕಅಬ (ಅಬ್ದುಲ್ ಉಝ್ಜ ಎಂದಾಗಿತ್ತು ಎಂಬ ಅಭಿಪ್ರಾಯವೂ ಇದೆ) ಇಸ್ಲಾಮ್ ಸ್ವೀಕರಿಸಿದ ನಂತರ ಅವರ ಹೆಸರನ್ನು ಪ್ರವಾದಿ (ಸ) ರು ಅಬ್ದುರ್ರಹ್ಮಾನ್ ಎಂದು ಬದಲಾಯಿಸಿದರು..
ಅಬುರಹ್ಮಾನ್ ಖುರೈಷಿಗಳ ನಡುವಿನ ಧೀರ ಯೋಧರಾಗಿದ್ದರು. ನಿಪುಣ ಗುರಿಕಾರರಾಗಿ. ಮೇಲಾಗಿ ಅವರೊಬ್ಬ ಮಹಾ ಧರ್ಮನಿಷ್ಠರಾಗಿದ್ದರು. ಇಸ್ಲಾಮ್ ಸ್ವೀಕರಿಸಿದ ನಂತರ ಒಮ್ಮೆ ಅಬ್ದುರಹ್ಮಾನ್ ತಮ್ಮ ತಂದೆ ಅಬೂಬಕ್ಕರ್ (ರ) ಹೇಳಿದರು.
"ಬದ್ರ್ ದಿನದಂದು ತಾವು ನನ್ನ ಗುರಿಗೆ ಸಿಕ್ಕಿದಾಗಲೆಲ್ಲಾ ನಾನು ತಿರುಗಿ ಹೋಗುತ್ತಿದ್ದೆ...
ಆದರೆ, ಅಬೂಬಕ್ಕರ್ (ರ) ಇದಕ್ಕೆ ಉತ್ತರಿಸಿದ್ದು ಅವರ ಧರ್ಮ ಪ್ರೇಮವನ್ನು ಸೂಚಿಸುತ್ತದೆ “ ನೀನೇನಾದರು ನನ್ನ ಗುರಿಗೆ ಸಿಕ್ಕಿದ್ದರೆ ನಾನು ತಿರುಗಿ ಹೋಗುತ್ತಿರಲಿಲ್ಲ ” ಅಬ್ದುರಹ್ಮಾನ್ ತಂದೆಯನ್ನು ಹಾಗೂ ಕುಫ್‌ರನ್ನು ಹೋಲಿಸಿ ನೋಡಿದರು. ತಂದೆಗೆ ಸ್ಥಾನ ನೀಡಿದರು. ಅಬೂಬಕ್ಕರ್ ಪುತ್ರ ಹಾಗೂ ಇಸ್ಲಾಮ್‌ನನ್ನು ಹೋಲಿಸಿ ನೋಡಿದರು. ಇಸ್ಲಾಮ್‌ಗೆ ಆದ್ಯತೆ ನೀಡಿದರು. ಒಂದು ವರದಿಯ ಪ್ರಕಾರ, ಅಬ್ದುರಹ್ಮಾನ್ ದ್ವಂದ್ವ ಯುದ್ಧಕ್ಕೆ ಆಹ್ವಾನ ನೀಡಿದಾಗ ಅಬೂಬಕ್ಕರ್ ಆ ಆಹ್ವಾನವನ್ನು ಸ್ವೀಕರಿಸಿದ್ದರು. ಆದರೆ, ಪ್ರವಾದಿ (ಸ) ರು ಅವರನ್ನು ತಡೆದರು.
'' ಅಬೂಬಕ್ಕರ್, ನಿಮ್ಮ ಶರೀರದ ಮೂಲಕ ನಮ್ಮನ್ನು ಸಂತೋಷಪಡಿಸಿರಿ, ನನ್ನ ಸಂಬಂಧಿಸಿದಂತೆ ತಾವು ನನ್ನ ಕಣ್ಣು, ಕಿವಿಯಂತೆ ”
'' ಹೇ ದುಷ್ಟ ನನ್ನ ಸಂಪತ್ತು ಎಲ್ಲಿದೆ ? '' ಎಂದು ಅಬೂಬಕ್ಕರ್ ಪುತ್ರನೊಂದಿಗೆ ಕೇಳಿದರೆಂದೂ, ಆಗ ಅವರ ಪುತ್ರ ಯುದ್ಧೋಪಕರಣವಲ್ಲದೆ ಇನ್ನೇನೂ ಉಳಿದಿಲ್ಲವೆಂದು ಉತ್ತರಿಸಿದ್ದಾಗಿಯೂ ಅಭಿಪ್ರಾಯವಿದೆ. ಅಬೂಬಕ್ಕರ್ (ರ) ರ ಸಂಪತ್ತನ್ನು ಮುಶ್ರಿಕ್ಗಳು ವಶಪಡಿಸಿಕೊಂಡಿದ್ದಾರೆ ಎಂಬುದು ಇದರ ಅರ್ಥವಾಗಿತ್ತು.
ಶತ್ರುಗಳ ಮಿಂಚಿನ ಆಕ್ರಮಣವನ್ನು ಹೆದರಿ ಅಬೂಬಕ್ಕರ್ (ರ) ರಲ್ಲದೆ , ಒಂದು ಗುಂಪು ಅನ್ಸಾರಿರಿಗಳೊರಂದಿಗೆ ಸಅದ್ ಬುನು ಮುಆದ್ ಪ್ರವಾದಿ (ಸ) ಗೆ ಕಾವಲು ನಿಂತಿದ್ದರು. ಶತ್ರುಗಳಲ್ಲಿ ಒಬ್ಬನನ್ನು ವಧಿಸಿದರೆ, ವಧಿಸಲ್ಪಟ್ಟವನಲ್ಲಿರುವುದೆಲ್ಲಾ ವಧಿಸಿದವನದ್ದಾಗುತ್ತದೆ ಅಥವಾ ಬಂದಿಸಲ್ಪಟ್ಟರೆ ಬಂಧಿಸಲ್ಪಟ್ಟವ ಹೊಣೆ ಬಂಧಿಸಿದವನದ್ದಾಗುತ್ತದೆ. ಎಂದು ಪ್ರವಾದಿ (ಸ) ರು ಹೇಳಿದರು. ಮುಶ್ರಿಕ್ ಗಳನ್ನು ಬಂಧಿಸಲು ಮುಸ್ಲಿಮರು ಆಸಕ್ತಿ ತೋರಿದಾಗ ಸಅದ್ ಭಾವ ಬದಲಾದವು. ಮುಖ ವಿವರ್ಣವಾದವು.
'' ಸಅದ್, ಜನರು ಮಾಡುವುದನ್ನು ತಾವು ಇಷ್ಟಪಡುತ್ತಿಲ್ಲವೇ ? '' ಪ್ರವಾದಿ (ಸ) ರು ಕೇಳಿದರು.
'' ಹೌದು ಅಲ್ಲಾಹನ ದೂತರೇ, ಅಲ್ಲಾಹು ಶಿರ್ಕ್ನ ಜನರಿಗೆ ನೀಡಿದ ಮೊದಲ ದುರಂತವಿದು. ಆದ್ದರಿಂದ ಶತ್ರುಗಳನ್ನು ಉಳಿಸುವುದಕ್ಕಿಂತ ಅವರನ್ನು ವಧಿಸುವುದೇ ಒಳ್ಳೆಯದೆಂದು ನನ್ನ ಅನಿಸಿಕೆ ಸಅದ್ ಪ್ರತಿಕ್ರಿಯಿಸಿದರು.
ಹಾಶಿಂ ವಂಶಜರು ಹಾಗೂ ಇನ್ನಿತರ ಕೆಲವರು ಮನಸಿಲ್ಲದ ಮನಸಿನಲ್ಲಿ ಮುಸ್ಲಿಮರ ವಿರುದ್ಧ ಯುದ್ಧಕ್ಕೆ ಹೊರಟಿದ್ದರು. ಅಂತಹವರನ್ನು ವಧಿಸಬಾರದೆಂದು ಪ್ರವಾದಿ (ಸ) ರು ಅನುಯಾಯಿಗಳೊಂದಿಗೆ ಹೇಳಿದ್ದರು. ಹಾಗೆಯೇ, ಪ್ರವಾದಿ (ಸ) ಯ ಚಿಕ್ಕಪ್ಪ ಅಬ್ಬಾಸ್ ಹಾಗೂ ಅಬುಲ್ ಬುಖ್ತರಿಯವರನ್ನು ವಧಿಸಬೇಡಿರೆಂದು ಪ್ರವಾದಿ (ಸ) ರು ವಿಶೇಷವಾಗಿ ಎಚ್ಚರಿಸಿದ್ದರು.
ಅಬೂರಾಫಿಅ್ (ರ) ಹೇಳುತ್ತಾರೆ. '' ನಾನು ಅಭ್ಬಾಸುಬುನು ಅಬ್ದುಲ್ ಮುತ್ತಲಿಬರ ಸೇವಕ, ಅವರು ನನ್ನನ್ನು ಪ್ರವಾದಿ (ಸ) ಗೆ ದಾನ ಮಾಡಿದರು. ಅಬ್ಬಾಸ್ (ರ) ಮೊದಲೇ ಇಸ್ಲಾಮ್ ಸ್ವೀಕರಿಸಿದರು. ಅವರ ಪತ್ನಿ ಉಮ್ಮು ಫದ್ಲ್ ಸಹ ಇಸ್ಲಾಮ್ ಸ್ವೀಕರಿಸಿದರು (ಖದೀಜ ಬೀವಿಯ ಬಳಿಕ ಮೊದಲು ಇಸ್ಲಾಮ್ ಸ್ವೀಕರಿಸಿದ ವನಿತೆ ಉಮ್ಮುಲ್ ಪಲ್ ಲ್ಎಂಬ ಅಭಿಪ್ರಾಯವಿದೆ). ಇಸ್ಲಾಮ್ ಸ್ವೀಕರಿಸಿದನ್ನು ನಾವು ರಹಸ್ಯವಾಗಿರಿಸಿದೆವು. ಸ್ವಂತ ಜನರನ್ನು ಬಹಿರಂಗವಾಗಿ ವಿರೋಧಿಸುವುದನ್ನು ಅವರು ಇಷ್ಟ ಪಟ್ಟಿರಲಿಲ್ಲ. ಕಾರಣ, ಅವರ ಬಳಿ ಧಾರಾಳ ಸಂಪತ್ತಿದ್ದವು. ಅದರಲ್ಲಿ ಹೆಚ್ಚಿನ ಭಾಗ ಖುರೈಷಿಗಳ ಕೈಯಲ್ಲಿದ್ದವು. ಮುಂದೆ ಮಕ್ಕಾ ವಿಜಯ ಸಾಧಿಸಿದಾಗ ಅಬ್ಬಾಸ್ ತಮ್ಮ ಇಸ್ಲಾಮ್ ಸ್ವೀಕಾರವನ್ನು ಬಹಿರಂಗಪಡಿಸಿದ್ದರು.
ಈ ಕಾರಣದಿಂದ ಪ್ರವಾದಿ (ಸ) ರು ಅಬ್ಬಾಸ್‌ರನ್ನು ವಧಿಸುವುದನ್ನು ನಿಷೇಧಿಸಿರಬಹುದು. ಪ್ರವಾದಿ (ಸ) ಯ ಈ ನಿರ್ಧಾರ ಅಬೂಹುದೈಫ (ರ) ರಿಗೆ ಇಷ್ಟವಿರಲಿಲ್ಲ. ಕಾರಣ, ಅವರ ತಂದೆ ಉತ್ಬಃ, ಚಿಕ್ಕಪ್ಪ ಶೈಬಃ ಹಾಗೂ ಸಹೋದರ ವಲೀದ್ ಬದ್ರ್ ನಲ್ಲಿ ವಧಿಸಲ್ಪಟ್ಟಿದರು.
'' ನಮ್ಮ ಪುತ್ರರು, ತಂದೆ, ಸಹೋದರರು ವಧಿಸಲ್ಪಡುವಾಗ ಅಬ್ಬಾಸ್ ರನ್ನು ಸುಮ್ಮನೆ ಬಿಡುವುದೇ ?” ಅಬೂಹುದೈಫ ಕೇಳಿದರು. ಅಬ್ದುಶ್ಯಂಸ್ ವಂಶದ ಅಬೂಹುದೈಫರ ಕುಟುಂಬದಿಂದ ಅನೇಕ ಮಂದಿ ವಧಿಸಲ್ಪಟ್ಟಿದ್ದರು. ನಾನು ಅಬ್ಬಾಸ್‌ರನ್ನು ಕಂಡರೆ ಅವರ ಮೇಲೆ ಖಡ್ಗ ಪ್ರಯೋಗಿಸುವೆನು" ಎಂದು ಅಬೂಹುದೈಫ ಹೇಳಿದರು.
ಅಬೂಹುದೈಫರ ಮಾತುಗಳು ಪ್ರವಾದಿ (ಸ) ಯ ಕಿವಿಗೆ ಬಿದ್ದವು. ಉಮರ್ (ರ) ರನ್ನು ಕರೆದು ಕೇಳಿದರು.
'' ಅಬೂಹಪ್ಸಾ (ರ) , ಅಲ್ಲಾಹನ ದೂತನ ಚಿಕ್ಕಪ್ಪನ ಮೇಲೆ ದಾಳಿ ಮಾಡುವೆಯಾ ?”
" ಅಲ್ಲಾಹು ಸತ್ಯ ! ನನ್ನನ್ನು ಮೊದಲ ಬಾರಿ ಅಬೂಹಫ್ಸಾ ಎಂಬ ಹೆಸರು ಹಿಡಿದು ಕರೆದ ದಿನವದು"
''ಅಲ್ಲಾಹನ ದೂತರೇ, ನನಗೆ ಅನುಮತಿ ಕೊಟ್ಟರೆ ನಾನು ಅವನ (ಅಬೂಹುದೈಫರ) ತಲೆ ಕತ್ತರಿಸುತ್ತೇನೆ '' ಉಮರ್ (ರ) ಪ್ರವಾದಿ (ಸ) ಯೊಂದಿಗೆ ಕೇಳಿದರು.
ಆದರೆ, ಪ್ರವಾದಿ (ಸ) ರು ಉಮರ್ (ರ) ರನ್ನು ತಡೆದರು.
ಪ್ರವಾದಿಯ ಚಿಕ್ಕಪ್ಪನ ಬಗ್ಗೆ ಮಾತನಾಡಿದ್ದು ಅತಿಯಾಯಿತೇನೋ ? ಎಂದು ಅಬೂ ಹುದೈಫಾರಿಗೆ ಅನಿಸಿದವು. ಅದು ಅವರ ನೋವಿಗೆ ಕಾರಣವಾದವು. ಹೃದಯದಲ್ಲಿ ವಾಸಿಯಾಗದ ವೃಣವಾಗಿ ಬದಲಾದವು. ನಿಶ್ಚಿಂತೆಯಿಂದ ಬದುಕುವುದು ಅಬೂಹುದೈಫರಿಗೆ ಸಾಧ್ಯವಾಗಲಿಲ್ಲ. ದೈವಿಕ ಮಾರ್ಗದಲ್ಲಿ ತಾನು ಹುತಾತ್ಮನಾದರೆ ಅದು ಬಹುಷಃ ಆ ಮಾತುಗಳಿಗೆ ಪ್ರಾಯಶ್ಚಿತವಾಗಬಹುದು ಎಂದು ಅವರು ಭಾವಿಸಿದರು. ಯಮಾಮ ಯುದ್ಧದಲ್ಲಿ ಅವರು ಹುತಾತ್ಮರಾದರು.
ಅಬುಲ್‌ಬುಕ್ ತರಿ, ಮಕ್ಕಾದಲ್ಲಿ ಪ್ರವಾದಿ (ಸ) ರನ್ನು ಸಂರಕ್ಷಿಸುತ್ತಾ, ಶತ್ರುಗಳನ್ನು ಪ್ರತಿರೋಧಿಸುತ್ತಾ ಹಾಶಿಂ, ಮುತ್ತಲಿಬ್ ವಂಶಜರ ವಿರುದ್ಧದ ಬಹಿಷ್ಕಾರವನ್ನು ಕೊನೆಗೊಳಿಸಲು ಪ್ರಯತ್ನಿಸಿದ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಆ ಕಾರಣದಿಂದ ಅವರನ್ನು ವಧಿಸಬಾರದೆಂದು ಪ್ರವಾದಿ (ಸ) ರು ಹೇಳಿದರು. ಮುಜದ್ದ ರುಬ್ನು ಝಿಯಾದ್ ಅಬುಲ್ ಬುಕ್ ತರಿಯವರನ್ನು ಕಂಡಾಗ, ನಿನ್ನನ್ನು ವಧಿಸುವುದನ್ನು ಪ್ರವಾದಿ (ಸ) ರು ನಿಷೇಧಿಸಿರುವುದಾಗಿ ಹೇಳಿದ್ದರು.
'' ನನ್ನ ಮಿತ್ರರನ್ನು ಸಹ ವಧಿಸಬಾರದು '' ಎಂದು ಅಬುಲ್ ಬುಕ್ ತರಿ ಆಗ್ರಹಿಸಿದರು..
ಜನಾದತುಬ್'ನುಲ್ ಮಲೀಹ್ಃ ಎಂಬ ಮಿತ್ರರೊಬ್ಬರು ಅಬುಲ್ ಬುಕ್ ತರಿಯವರ ಜೊತೆ ಮಕ್ಕಾದಿಂದ ಆಗಮಿಸಿದ್ದರು.
"ಇಲ್ಲ. ಅಲ್ಲಾಹು ಸತ್ಯ ! ಪ್ರವಾದಿ (ಸ) ರು ನಮ್ಮಲ್ಲಿ ನಿನ್ನನ್ನು ಮಾತ್ರ ವಧಿಸಬಾರದೆಂದು ಹೇಳಿದ್ದಾರೆ. ಆದರಿಂದ ನಿನ್ನ ಮಿತ್ರನಿಗೆ ಆ ವಿನಾಯಿತಿ ನೀಡಲಾಗುವುದಿಲ್ಲ '' ಎಂದು ಮುಜದರ್ ಹೇಳಿದರು..
“ ಬೇಡ. ದೇವರು ಸತ್ಯ. ನಾನು ಮತ್ತು ನನ್ನ ಮಿತ್ರ ಇಬ್ಬರೂ ಒಟ್ಟಿಗೆ ಸಾಯುತ್ತೇವೆ. ಮಿತ್ರನನ್ನು, ಕೈಬಿಟ್ಟವನೆಂದು ನಾಳೆ ಮಕ್ಕಾದ ಸ್ತ್ರೀಯರು ಮಾತನಾಡಿಕೊಳ್ಳುವಂತಾಗಬಾರದು '' ಎಂದು ಅಬುಲ್ ಬುಖ್ತರಿ ಪ್ರತಿಕ್ರಿಯಿಸಿದರು.
ಮುಜದ್ದರ್ ಹಾಗೂ ಬುಕ್ತರಿ ನಡುವೆ ಕದನವೇರ್ಪಟ್ಟವು. ಇಬ್ಬರೂ ಬಹಳ ಹೊತ್ತು ಖಡ್ಗ ಬೀಸಿಕೊಂಡರು. ಗುರಾಣಿಯಿಂದ ತಡೆದರು. ಆದರೆ, ಮುಜದ್ದರ್ ಬೀಸಿದ ಏಟೊಂದು ಆಬುಲ್ ಬುಕ್ತರಿಗೆ ತಾಗಿ ಅವರು ನೆಲಕ್ಕಪ್ಪಳಿಸಿದರು. ಪ್ರವಾದಿ (ಸ) ರು ವಿವರಣೆ ಕೇಳಿದರು. ಮುಜದ್ದರ್ ನಡೆದ ವಿಷಯ ತಿಳಿಸಿದರು.
'' ಅವನನ್ನು ಬಂಧಿಸಿ, ತಮ್ಮ ಬಳಿಗೆ ಕರೆ ತರಲು ನಾನು ಸಾಕಷ್ಟು ಒದ್ದಾಡಿದೆ. ಆದರೆ, ಅವನು ಸಾಯಲು ಸಿದ್ದನಾಗಿಯೇ ಬಂದಂತಿದ್ದ ನನ್ನ ಮೇಲೆ ದಾಳಿ ಮಾಡಲು ಬಂದಾಗ ನಾನು ಪ್ರತಿದಾಳಿ ಮಾಡಿದೆ. ನನ್ನ ಖಡ್ಡದೇಟಿಗೆ ಅವನು ನೆಲಕ್ಕೆ ಕುಸಿದು ಬಿಟ್ಟ '' ಮುಜದ್ದರ್ ವಿವರಿಸಿದರು.
ಅಬೂಉಬೈದತುಬ್ ನುಲ್ ಜರ್ರಾಹ್ ಬದ್ರ್ ನಲ್ಲಿ ಘೋಷಣೆ ಕೂಗುತ್ತಾ ಮುನ್ನುಗ್ಗುತ್ತಿದ್ದಾಗ ಶತ್ರುಗಳು ದೂರ ಸರಿಯುತ್ತಿದ್ದರು. ಒಬ್ಬರು ಮಾತ್ರ ಅಬೂಉಬೈದರನ್ನು ಎದುರಿಸಲು ಯತ್ನಿಸುತ್ತಿದ್ದಾರೆ. ಅವರು ದೂರ ಸರಿಯಲಿ ಎಂದು ಭಾವಿಸಿ ಅಬೂಉಬೈದ ತಿರುಗಿ ಹೋಗುವಾಗಲೆಲ್ಲಾ ಅವರು ಅಬೂಉಬೈದರ ಮುಂದೆ ಬಂದು ನಿಂತು ಯುದ್ಧಕ್ಕೆ ಆಹ್ವಾನಿಸುತ್ತಿದ್ದರು. ಅವರು ಎಷ್ಟೇ ತಪ್ಪಿಸಿಕೊಂಡರೂ ಮತ್ತೆ ಮತ್ತೆ ಮುಂದೆ ಬಂದು ಕಾಟ ಕೊಡುತ್ತಿದ್ದರು. ಅಬೂಉಬೈದರಿಗೆ ಸಿಟ್ಟು ಬಂದವು. ಆದದ್ದಾಗಲಿ ಎಂದು ತಮ್ಮ ಖಡ್ಗ ಬೀಸಿದರು. ಒಂದೇ ಏಟಿಗೆ ಎದುರಿನ ವ್ಯಕ್ತಿಯ ಕಥೆ ಮುಗಿದವು. ಆ ವ್ಯಕ್ತಿ ಬೇರೆ ಯಾರೂ ಅಲ್ಲ; ಸ್ವತಃ ಅಬೂಉಬೈದರ ತಂದೆ ! ಬದ್ರ್ ನಲ್ಲಿ ಧರ್ಮಯೋಧರು ರಕ್ತ ಬಂಧಕ್ಕಿಂತಲೂ ಆದರ್ಶಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರು ಎಂಬುದಕ್ಕೆ ಇದೊಂದು ನಿದರ್ಶನವಾಗಿದೆ. ಈ ಸಂದರ್ಭದಲ್ಲಿ ಅವತೀರ್ಣಗೊಂಡ ಖುರ್‌ಆನ್ ವಚನ ಹೀಗಿದೆ..
“ಅಲ್ಲಾಹ್ ಮತ್ತು ಪರಲೋಕದ ಮೇಲೆ ವಿಶ್ವಾಸವಿರಿಸುವವರು ಅಲ್ಲಾಹ್ ಮತ್ತು ಅವನ ಸಂದೇಶವಾಹಕರನ್ನು ವಿರೋಧಿಸಿದವರನ್ನು ಪ್ರೀತಿಸುವುದನ್ನು ನೀವೆಂದೂ ಕಾಣಲಾರಿರಿ, ಅಂಥವರು, ಅವರ ತಂದೆ, ಪುತ್ರರು, ಸಹೋದರರು ಮತ್ತು ಆಪ್ತಬಂಧುಗಳೇ ಆಗಿದ್ದರೂ ಸರಿಯೇ. ಅವರ ಹೃದಯಗಳಲ್ಲಿ ಅಲ್ಲಾಹನು ಸತ್ಯ ವಿಶ್ವಾಸವನ್ನು ಅಚ್ಚೊತ್ತಿ ಬಿಟ್ಟಿರುತ್ತಾನೆ. ಮಾತ್ರವಲ್ಲದೆ, ತನ್ನ ಕಡೆಯಿಂದ ಒಂದು ಆತ್ಮವನ್ನು ಪ್ರದಾನ ಮಾಡಿ ಅವರಿಗೆ ಶಕ್ತಿಯನ್ನೊದಗಿಸಿದ್ದಾನೆ. ಅವನು ಅವರನ್ನು, ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಲ್ಲಿ ಪ್ರವೇಶಗೊಳಿಸುವನು. ಅವುಗಳಲ್ಲಿ ಅವರು ಸದಾಕಾಲ ವಾಸಿಸುವರು. ಅಲ್ಲಾಹನು ಅವರಿಂದ ಪ್ರಸನ್ನನಾದನು ಮತ್ತು ಅವರು ಅಲ್ಲಾಹನಿಂದ ಪ್ರಸನ್ನರಾದರು. ಅವರು ಅಲ್ಲಾಹನ ಪಕ್ಷದವರು. ತಿಳಿಯಿರಿ, ಅಲ್ಲಾಹನ ಪಕ್ಕದವರೇ ವಿಜಯಿಗಳಾಗುವರು" (ಖುರ್‌ಆನ್ 58: 22) (ಸುವರುನ್ ಮಿನ್ ಹಯಾತಿಸ್ವಹಾಬ, ಡಾ. ಅಬ್ದುರಹ್ಮಾನ್ ರಅ್ ಫತ್ ಬಾಷ- 91, 92)
ಉಮರುಬ್ನು ಖತ್ತಾಬ್ (ರ) ಬದ್ರ್ ನಲ್ಲಿ ತಮ್ಮ ಚಿಕ್ಕಪ್ಪ ಆಸ್ವ್ ಬಿನ್ ಹಿಶಾಮ್‌ನನ್ನು ವಧಿಸಿದರು. ಅವರು ಅದನ್ನು ಬಹಳ ಹೆಮ್ಮೆಯಿಂದಲೇ ಹೇಳಿಕೊಳ್ಳುತ್ತಿದರು. ಒಂದು ದಿನ ಸಈದ್ ಬುನುಲ್ ಆಸ್ವ್ ಪಕ್ಕದಲ್ಲಿ ಉಮರ್ (ರ) ನಡೆದು ಹೋಗುತ್ತಿದ್ದರು. ಉಮರ್ (ರ) ರನ್ನು ಕಂಡೊಡನೇ ಸಈದ್ ಮುಖ ತಿರುಗಿಸಿದರು. ಆಗ ಉಮರ್ (ರ) ಹೇಳಿದರು.
“ನಿನ್ನ ಮನಸಲ್ಲಿ ನನ್ನ ಬಗ್ಗೆ ಏನೋ ಸಿಟ್ಟಿರುವಂತಿದೆ. ಬದ್ರ್ ನಲ್ಲಿ ನಿನ್ನ ತಂದೆಯನ್ನು ನಾನು ವಧಿಸಿದ್ದೇನೆಂದು ನೀನು ಭಾವಿಸಿರಬಹುದು. ಹಾಗೆ ವಧಿಸಿದ್ದರೆ ನಾನೇನೂ ಪಶ್ಚಾತಾಪ ವ್ಯಕ್ತಪಡಿಸುವುದಿಲ್ಲ. ಆದರೆ, ನಾನು ವಧಿಸಿರುವುದು ನನ್ನ ಚಿಕ್ಕಪ್ಪ ಆಸ್ವ್ ಬುನು ಹಿಶಾಮ್‌ನನ್ನು!! ನಾನು ನಡೆದು ಹೋಗುವಾಗ ನಿನ್ನ ತಂದೆ ಕೋಣನಂತೆ ಕೂಗು ಹಾಕುತ್ತಿದ್ದರು. ನಾನು ಆತನಿಂದ ದೂರ ಹೋದೆ. ನಿನ್ನ ಚಿಕ್ಕಪ್ಪನ ಪುತ್ರ ಅಲಿ ಆತನ ಮೇಲೆ ಗುರಿ ಯಿಟ್ಟು , ವಧಿಸಿದನು...
ದುರಹಂಕಾರಿಯ ಪತನ
ಸೈನಿಕರು ಒಬ್ಬರ ಹಿಂದೆ ಒಬ್ಬರಂತೆ ನೆಲಕ್ಕುರುಳುತ್ತಿರುವುದನ್ನು ಕಂಡು ಅಬೂ ಜಹಲ್ ನ ಕುಟುಂಬ (ಮಖ್ ಝೂಮ್‌ಗಳು), ಜಹ್ಲ್‌ಗೆ ರಕ್ಷಣೆ ನೀಡಲು ನಿರ್ಧರಿಸಿದರು. ಉತ್ಬಃ, ಶೈಬಃ ಹಾಗೂ ವಲೀದ್ ಆರಂಭದಲ್ಲೇ ವಧಿಸಲ್ಪಟ್ಟಿರುವುದು ಮಖ್ ಝಮಿಗಳನ್ನು ಚಿಂತಾಕ್ರಾಂತರನ್ನಾಗಿಸಿದ್ದವು. ಉತ್ಬ ಹಾಗೂ ಸಂಗಡಿಗರು ಅವಸರ ತೋರಿದರು, ಕುಟುಂಬಗಳು ಅವರ ಸಂರಕ್ಷಣೆಗೆ ಧಾವಿಸಲಿಲ್ಲ, ಆದ್ದರಿಂದ ಅವರು ಸಾವನ್ನಪ್ಪಬೇಕಾಯಿತು ಎಂಬಿತ್ಯಾದಿಯಾಗಿ ಮಖ್ ಝೂಮಿಗಳು ಘಟನೆಯನ್ನು ಗ್ರಹಿಸಿಕೊಳ್ಳುತ್ತಿದ್ದರು.
ಅಬೂಜಹಲ್‌ನನ್ನು ರಕ್ಷಿಸಲು ಅವರು ಇನ್ನೊಂದು ತಂತ್ರವನ್ನು ಪ್ರಯೋಗಿಸಿದರು. ಆತನ ಯುದ್ಧವಸ್ತ್ರವನ್ನು ಅಬ್ದುಲ್ಲಾಹಿಬ್ನು ಮುಂದ್ಸಿರುಬ್ನು ಅಬೀರಿಫಾಅಃಗೆ ಕೊಟ್ಟರು. ಆತ ಅದನ್ನು ಧರಿಸಿಕೊಂಡನು. ಅಬೂಜಹಲ್‌ನನ್ನು ವಧಿಸಲು ಮುಸ್ಲಿಮರು ಖಡ್ಗ ಬೀಸುತ್ತಾ ನಡೆಯುತ್ತಿದ್ದರು. ಅಲಿ (ರ) ಅಬ್ದುಲ್ಲಾನನ್ನು ಕಂಡು ಅಬೂಜಹಲ್ ಎಂದು ಭಾವಿಸಿ,
"ಇದೋ ತೆಗೆದುಕೋ ! ನಾನು ಅಬ್ದುಲ್ ಮುತ್ವಲಿಬ್ರ ಮಗ '' ಎಂದು ಖಡ್ಗ ಬೀಸಿದರು. ಮತ್ತೆ ಆತ ಉಸಿರೆತ್ತಲಿಲ್ಲ. ನಂತರ ಮಖ್ ಝೂಮಿಗಳು ಆ ಯುದ್ದ ವಸ್ತ್ರವನ್ನು ಹಾಕಿಮುಬುನುಲ್ ಮುಗೀರನಿಗೆ ಧರಿಸಿದರು. ಅಬೂಜಹ್ಲ್ ಎಂದು ಭಾವಿಸಿ, ಹಂಝ ಅಬೂಖೈಸ್‌ಗೆ ಗುರಿಯಿಟ್ಟರು.
''ಇದೋ ಹಿಡಿದುಕೊ, ನಾನು ಅಬ್ದುಲ್ ಮುತ್ತಲಿಬನ ಪುತ್ರ '' ಎಂದು ಹೇಳಿ ಹೊಡೆದರು. ಅಲ್ಲಿಗೆ ಅಬೂಖೈಸ್ ಕೂಡ ವಧಿಸಲ್ಪಟ್ಟರು. ನಂತರ ಆ ಅಂಗಿ ಹರ್ಮಲತ್‌ಬ್‌ನು ಉಮರ್‌ಗೆ ಧರಿಸಿದರು. ಅಲಿ (ರ) ಆತ ನನ್ನೂ ಸಹ ವಧಿಸಿದರು. ಇಷ್ಟೆಲ್ಲಾ ಆಗುತ್ತಿದ್ದರೆ ಅಬೂಜಹಲ್ ಕುಟುಂಬದ ಸದಸ್ಯರ ರಕ್ಷಣಾ ವಲಯದೊಳಗೆ ಸುರಕ್ಷಿತವಾಗಿದ್ದನು. ನಂತರ ಮುಖ್ ಝೂಮಿಗಳು ಆ ಅಂಗಿಯನ್ನು ಖಾಲಿದ್ ಬುನುಲ್ ಅಹ್ಲಮ್‌ಗೆ ಧರಿಸಲು ನೋಡಿದರು. ಆದರೆ, ಆತ ನಿರಾಕರಿಸಿದನು.
ಮುಆದ್ ಬ್ನು ಅಮ್ರುಬು ನುಲ್ ಜಮೂಹ್ ಹೇಳುತ್ತಾರೆ. ವೃಕ್ಷ ಕೂಟದಂತಹ ವಲಯದೊಳಗೆ ನಾನು ಅಬೂಜಹಲ್ ನನ್ನು ಕಂಡೆ. ಅಬುಲ್ ಹಕಮ್ನ ಹತ್ತಿರಕ್ಕೆ ಯಾರಿಗೂ ಹೋಗಲು ಸಾಧ್ಯವಿಲ್ಲ ಎಂದು ಮಖ್ ಝೂಮಿಗಳು ಹೇಳುತ್ತಿದ್ದರು. ನಾನು ಹೇಳಿದೆ.
" ಅಲ್ಲಾಹು ಸತ್ಯ ! ಇ, ದು ನಾನು ಅವನ ಮುಂದೆ ಹೋಗುತ್ತೇನೆ. ಅವನ ಮುಂದೆಯೇ ಮರಣ ಹೊಂದುತ್ತೇನೆ ''
ಸುರಕ್ಷಾ ವಲಯದ ಗಮನ ಬೇರೆಡೆಗೆ ಹರಿದಾಗ ತಕ್ಷಣವೇ ನಾನು ಮಖ್ ಝೂಮಿಗಳ ಚಕ್ರವ್ಯೂಹವನ್ನು ಬೇಧಿಸಿದೆ. ಒಂದೇ ಒಂದು ಹೊಡೆತ ಕೊಟ್ಟೆ. ಅಷ್ಟಕ್ಕೇ ಅವನ ಮುಂಗಾಲು ಮುರಿದು, ದೂರಕ್ಕೆ ಚಿಮ್ಮಿದವು. ಅವನ ಪುತ್ರ ಇಕ್ರಿಮ ಮುಂದೆ ಬಂದು ನನ್ನ ಭುಜಕ್ಕೆ ಹೊಡೆದನು. ನನ್ನ ಕೈ ಮುರಿದವು. ಆದರೆ, ಅಲ್ಪ ಚರ್ಮ ಬಾಕಿ ಉಳಿದಿದ್ದವು. ಮಾರಕವಾದ ಗಾಯವನ್ನು ನಿರ್ಲಕ್ಷಿಸಿ, ನಾನು ಯುದ್ಧವನ್ನು ಮುಂದುವರಿಸಿದೆ. ತೂಗುತ್ತಿದ್ದ ಕೈ ತೊಂದರೆ ನೀಡಲು ಶುರು ಮಾಡಿದಾಗ ಅದನ್ನು ಕಾಲಿನಿಂದ ಬಲವಂತವಾಗಿ ಎಳೆದು, ದೂರಕ್ಕೆ ಎಸೆದೆ. ಮತ್ತೆ ಇಕ್ರಿಮನನ್ನು ಎದುರಿಸಲು ಮುಂದಾದಾಗ ಆತ ನನ್ನಿಂದ ದೂರ ಸರಿದು ಹೋದನು. ನನ್ನ ಕೈಯಿದ್ದಿದ್ದರೆ ಅವನ ಕಥೆ ಮುಗಿಸಬಹುದಿತ್ತು ಎಂದು ನಾನು ಯೋಚಿಸಿದ್ದೆ.
ಮುಆದ್ ಬುನು ಅಮ್ರ ಕೈಯನ್ನು ಪ್ರವಾದಿ (ಸ) ರು ತಮ್ಮ ಉಗುಳು ನೀರಿನೊಂದಿಗೆ ಯಥಾಸ್ಥಾನದಲ್ಲಿ ಅಂಟಿಸಿದ್ದರು ಎಂದು ಇನ್ನೊಂದು ವರದಿ ಹೇಳುತ್ತದೆ. (ಅಸ್ಪೀರತುಲ್ ಹಲಬಿಯ್ಯ -2:182)
ಅಬ್ದುಲ್ ರಹ್ಮಾನುನು ಔಫ್ರಿಂದ ಜಾಬಿರುಬ್ನು ಅಬ್ದುಲ್ಲಾ ಉಲ್ಲೇಖಿಸುತ್ತಾರೆ.
“ಅಬೂಜಹಲ್ ನ ಖಡ್ಗವನ್ನು ಪ್ರವಾದಿ (ಸ) ರು ಮುಆದ್ ಬುನುಲ್ ಅಮ್ರ್ ಜಮೂಹ್ರಿಗೆ ಕೊಟ್ಟರು ”
ಬದ್ರ್‌ನ ನಂತರ ಹಲವು ಯುದ್ಧಗಳಲ್ಲಿ ಭಾಗವಹಿಸಿದ ಮುಆದ್ ಬ್ನು ಅಮ್ರ್ ದೀರ್ಘಕಾಲ ಜೀವಿಸಿದರು. ಉಸ್ಮಾನ್ (ರ) ರ ಆಡಳಿತ ಕಾಲದಲ್ಲಿ ಮರಣ ಹೊಂದಿದರು.
ಅಬೂಜಹಲ್‌ನ ವಧೆಯ ಕುರಿತ ಇನ್ನೊಂದು ವರದಿ ಹೀಗಿದೆ; ಬದ್ರ್ ದಿನದಂದು ನಾನು ಸೈನಿಕರ ಸಾಲಿನಲ್ಲಿ ನಿಂತಿದ್ದೆ. ನನ್ನ ಎಡಬಲದಲ್ಲಿ ನೋಡಿದಾಗ ಅನ್ಸಾರಿಗಳಾದ ಇಬ್ಬರು ಬಾಲಕರು ನಿಂತಿದ್ದರು. ಬಹಳ ಸಣ್ಣ ವಯಸಿನವರಾಗಿದ್ದರಿಂದ ಖಡ್ಗದ ಒರೆಯನ್ನು ಅವರು ಕುತ್ತಿಗೆಗೆ ತೂಗು ಹಾಕಿದ್ದರು. ಅವರಿಗಿಂತಲೂ ಪ್ರಾಯವಿರುವವರು ನನ್ನ ಆಚೀಚೆ ಇದ್ದಿದ್ದರೆ ಎಂದು ನಾನು ಆಗ್ರಹಿಸಿದೆ. ಅವರ ನಡುವೆ ನಿಂತುಕೊಳ್ಳುವುದು ಸುರಕ್ಷಿತವಲ್ಲವೆಂದು ನನಗೆ ಅನಿಸಿತು. ಹೀಗಿರಲು ಅವರಲ್ಲೊಬ್ಬ ನನ್ನೊಂದಿಗೆ ಅತ್ಯಂತ ಗುಟ್ಟಾಗಿ ಕೇಳಿದನು; "ಚಿಕ್ಕಪ್ಪ ಅಬೂಜಹಲ್ ನ ಪರಿಚಯ ನಿಮಗಿದೆಯೇ ?"
" ಹೌದು ತಿಳಿದಿದೆ. ಯಾಕೆ ? ಅವನ ಜೊತೆಗೆ ನಿನಗೇನು ಕೆಲಸ ? '' ನಾನು ಕೇಳಿದೆ.
" ಅವನು ಅಲ್ಲಾಹನ ದೂತರನ್ನು ಆಕ್ಷೇಪಿಸುತ್ತಿದ್ದಾನೆಂದು ನಾನು ಕೇಳಿದ್ದೇನೆ. ನನ್ನ ಆತ್ಮ ಯಾರ ಕೈಯಲ್ಲಿದೆಯೋ ಅವನ ಮೇಲಾಣೆ ಸತ್ಯ ! ಅವನನ್ನು ನಾನು ಕಂಡರೆ ಇಬ್ಬರಲ್ಲಿ ಒಬ್ಬರು ಮರಣ ಹೊಂದುವುದು ಖಂಡಿತ. ಇದು ನಾನು ಅಲ್ಲಾಹನೊಂದಿಗೆ ಮಾಡಿದ ಪ್ರತಿಜ್ಞೆ ಒಂದೋ ಅವನನ್ನು ನಾನು ವಧಿಸುವೆನು. ಅಥವಾ ಅವನ ಮುಂದೆ ನಾನು ಮರಣ ಹೊಂದುವೆನು '' ಆ ಬಾಲಕ ಹೇಳಿದನು.
ಇಬ್ನ್ ಔಫ್ ಮುಂದುವರಿಸುತ್ತಾರೆ; ಆ ಬಾಲಕನ ಮಾತು ಕೇಳಿ ನಾನು ಚಕಿತನಾದೆ. ಇನ್ನೋರ್ವ ಬಾಲಕನೂ ಸಹ ಇದೇ ರೀತಿಯಲ್ಲಿ ಮಾತನಾಡಿದನು. ಅವರ ಮಾತು ಕೇಳಿದ ಮೇಲೆ ನಡುವೆ ನಾನು ನಿಂತುಕೊಳ್ಳುವುದು ಅಪಾಯಕಾರಿ ಎಂದೇನೂ ನನಗನಿಸಲಿಲ್ಲ. ನನಗದು ಸಂತೋಷ ನೀಡಿದವು ”
'' ಎರಡು ಪರ್ವತಗಳ ನಡುವೆ ನಿಂತಿರುವಷ್ಟು ಸುರಕ್ಷಿತ ಭಾವನೆ ನನಗುಂಟಾದವು '' ಎಂದು ಇಬ್ನು ಔಫ್ ನೆನಪಿಸಿಕೊಳ್ಳುತ್ತಾರೆ. ಅಬೂಜಹಲ್ ತನ್ನ ಜನರ ನಡುವೆ ಅತ್ತಿತ್ತ ನಡೆಯುತ್ತಿರುವುದನ್ನು ನಾನು ಕಂಡೆ.
“ ನೀವು ಕಾಣುತ್ತಿಲ್ಲವೇ ? ಅದೋ ಅಲ್ಲಿ ನೀವು ಹುಡುಕುತ್ತಿರುವ ವ್ಯಕ್ತಿ '' ಎಂದು ನಾನು ಆ ಬಾಲಕರಿಗೆ ತೋರಿಸಿದೆ.
ಅವರಿಬ್ಬರೂ ಎವೆಯಿಕ್ಕದೆ ಅಬೂಜಹಲ್‌ನನ್ನೇ ನೋಡುತ್ತಿದ್ದರು. ತಕ್ಕ ಸಂದರ್ಭ ಲಭಿಸಿದಾಗ ಪಕ್ಷಿಗಳಂತೆ ಅವನತ್ತ ನೆಗೆದ ಆ ಇಬ್ಬರು ಬಾಲಕರು, ತಮ್ಮ ಖಡ್ಗಗಳಿಂದ ಹೊಡೆದು, ಅವನಿಗೆ ಅಂತ್ಯ ಗಾಣಿಸಿ ಬಿಟ್ಟಿದ್ದರು. ಅಬೂಜಹಲ್‌ನ ಸ್ಥಿತಿಯನ್ನು ಬದರ ಎಂಬ ಅರಬಿ ಪದದ ಮೂಲಕ ವಿವರಿಸಲಾಗಿದೆ. ಅಂದರೆ, ಬಾಲಕರ ಖಡ್ಗದೇಟಿಗೆ ಆತ ಮರಣದ ಸ್ಥಿತಿಗೆ ಆತ ತಲುಪಿದ ಎಂದರ್ಥ. ಇನ್ನು ಕೆಲವು ವರದಿಗಳಲ್ಲಿ ಬರಕ ಎಂಬ ಪದವನ್ನು ಬಳಸಲಾಗಿದೆ. ಅಂದರೆ ಭೂಮಿಯನ್ನಪ್ಪಿಕೊಂಡನು ಎಂದು ಅರ್ಥ. ಆದರೆ, ಅವನ ಕೊನೆಯ ಶ್ವಾಸ ನಿಲ್ಲಿಸಿದ್ದು ಅಬ್ದುಲ್ಲಾಹಿಬ್ನು ಮಸ್ ಊದ್ರವರಾಗಿದ್ದರು ಎಂದು ಒಂದು ವರದಿ ಹೇಳುತ್ತದೆ.
ಅಂತ್ಯಶ್ವಾಸ ಎಳೆಯುತ್ತಿದ್ದ ಅಬೂಜಹಲ್‌ನನ್ನು ಅಬ್ದುಲ್ಲಾಹಿಬ್ನು ಮಸ್ ಊದ್ ಎದುರುಗೊಂಡ ಕ್ಷಣವನ್ನು ಚರಿತ್ರೆಗಾರರು ವಿವರಿಸುವುದು ಹೀಗೆ; ಯುದ್ದದ ತೀವ್ರತೆ ಇಳಿಮುಖವಾಗುತ್ತಾ ಬಂದವು. ಮುಶ್ರಿಕುಗಳ ಜಡದೇಹಗಳು ಅಲ್ಲಲ್ಲಿ ಬಿದ್ದು ಕೊಂಡಿದ್ದವು. ಪ್ರವಾದಿ (ಸ) ರು ಅದನ್ನು ನೋಡಿದರು. ಆದರೆ, ಅದರಲ್ಲಿ ಅಬೂಜಹಲ್‌ನ ಜಡದೇಹವಿರಲಿಲ್ಲ. ಅವರ ಮುಖದಲ್ಲಿ ನಿರಾಶೆ ಕವಿದವು. "ಅಲ್ಲಾಹನೇ, ಈ ಸಮುದಾಯದ ಫಿರ್‌ಔನ್‌ನ ವಿಷಯದಲ್ಲಿ ನೀನು ನನ್ನನ್ನು ನಿರಾಶೆಗೊಳಿಸದಿರು '' ಎಂದು ಪ್ರಾರ್ಥಿಸಿದರು. ವಧಿಸಲ್ಪಟ್ಟ ಮುಶ್ರಿಕ್‌ಗಳ ನಡುವೆ ಅಬೂಜಹಲ್‌ನ ಜಡ ದೇಹವನ್ನು ಹುಡುಕುವಂತೆ ಅವರು ಅಬ್ದುಲ್ಲಾಹಿಬ್ನು ಮಸ್‌ಊದ್ (ರ) ರನ್ನು ಕಳುಹಿಸಿದರು. ಇಬ್ನು ಮಸ್ಊದ್ (ರ) ಅಬೂಜಹಲ್‌ನನ್ನು ಪತ್ತೆ ಹಚ್ಚಿದರು.
ಅವರು ಹೇಳುತ್ತಾರೆ. “ಅಬೂಜಹಲ್‌ನನ್ನು ನಾನು ಅವನ ಅವಸಾನ ಶ್ವಾಸದಲ್ಲಿ ಪತ್ತೆ ಹಚ್ಚಿದೆ. ಅವನ ಕುತ್ತಿಗೆಯ ಮೇಲೆ ಕಾಲಿಟ್ಟು, ಕೇಳಿದೆ. "ಅಲ್ಲಾಹನ ಶತ್ರುವೇ, ನಿನ್ನನ್ನು ಅಲ್ಲಾಹನು ನಿಂದ್ಯನನ್ನಾಗಿ ಮಾಡಲಿಲ್ಲವೇ..?"
"ಯಾಕೆ ನನ್ನನ್ನು ನಿಂದ್ಯನನ್ನಾಗಿ ಮಾಡಬೇಕು ? ನೀವು ಒಬ್ಬರನ್ನು ಕೊಲ್ಲುವುದು ಕೊಲ್ಲಲ್ಪಡುವವನಿಗೆ ಅಪಮಾನವೇ ? ನಿಮ್ಮಿಂದ ಕೊಲ್ಲಲ್ಪಡುವ ನೇತಾರ ನಾನು ” ಅಂತಿಮ ಕ್ಷಣದಲ್ಲೂ ಅಬೂಜಹಲ್ ದುರಹಂಕಾರವನ್ನು ಬಿಡಲಿಲ್ಲ. ಆದರೆ, ತನ್ನನ್ನು ಇಬ್ಬರು ಬಾಲಕರು ಸಾವಿನ ದವಡೆಗೆ ದೂಡಿದ್ದು ಅವನನ್ನು ಬೇಸರಗೊಳಿಸಿದ್ದವು. ತನಗೆ ಸಮಾನರಾದ ವೀರರು ತನ್ನನ್ನು ಹತ್ಯೆ ಮಾಡಿದ್ದರೆ ಅದೊಂದು ರೀತಿಯಲ್ಲಿ ತನ್ನ ಹಿರಿಮೆಗೆ ಕಾರಣವಾಗುತ್ತಿತ್ತೆಂದು ಅವನು ಭಾವಿಸಿದ್ದನು. ಅದರಿಂದ ತನ್ನ ಮಾನಹಾನಿ ಸಂಭವಿಸುತ್ತಿರಲಿಲ್ಲ ಎಂದು ಅವನು ಇಬ್ನು ಮಸ್ ಊದ್ರ ಬಳಿ ಹೇಳಿಕೊಂಡನು.
“ನೀನು ಬಹಳ ಕ್ಲೇಶಕರವಾದ ಜಾಗದಲ್ಲಿ ಹಿಡಿದಿಟ್ಟಿರುವೆ" (ಇಬ್ನು ಮಸ್ ಊದ್ ಅಬೂಜಹಲ್‌ನ ಕುತ್ತಿಗೆಯ ಮೇಲೆ ಕಾಲಿಟ್ಟು, ಎದೆಯ ಮೇಲೆ ಕೂತು, ಗಡ್ಡ ಎಳೆಯುತ್ತಿದ್ದರು. ಹಿಂದೊಮ್ಮೆ ಅಬೂ ಜಹಲ್ ಇಬ್ನು ಮಸ್ಊದ್ರಿಗೆ ಚಿತ್ರಹಿಂಸೆ ನೀಡಿದಾಗ ಅವರು ನಿನ್ನ ಕುತ್ತಿಗೆಯನ್ನು ಮೆಟ್ಟಿ , ಆಡನ್ನು ಬಲಿಕೊಟ್ಟಂತೆ ಬಲಿಕೊಡುವೆನೆಂದು ಶಪಥ ಹಾಕಿದ್ದರು. (ಅಸ್ಸೀರತುಲ್ ಹಲಬಿಯ್ಯ- 2: 183, ಅಲ್ ಬಿದಾಯತುವನ್ನಿಹಾಯ- 3: 338) ಎಂದು ಹೇಳಿದ ಅಬೂಜಹಲ್, ಹೇ, ಕುರಿ ಕಾಯುವವನೇ, ಯಾರು ಜಯಿಸಿದರು ''
''ಅಲ್ಲಾಹನು ಹಾಗೂ ಅವನ ರಸೂಲರು '' ಎಂದು ಇಬ್ನು ಮಸ್ ಊದ್ ಉತ್ತರಿಸಿದರು. ಇನ್ನೊಂದು ವರದಿ ಪ್ರಕಾರ, ಅವರು ನಿನ್ನ ಕಥೆಯನ್ನೀಗ ಮುಗಿಸುವೆನು' ಎಂದು ಹೇಳಿದರು.
ಆಗ ಅಬೂಜಹಲ್, ' ಮಾಲಕನನ್ನು ಕೊಲ್ಲುವ ಮೊದಲ ಸೇವಕ ನೀನಲ್ಲ. ನಾನು ಅನುಭವಿಸುವ ಅತ್ಯಂತ ಕಠಿಣವಾದ ವ್ರತ ನೀನು ನನ್ನನ್ನು ಕೊಲ್ಲುವುದಾಗಿದೆ. ಮಿತ್ರಪಕ್ಷದಲ್ಲೋ, ಸೌಗಂಧಿಕ ಮಿತ್ರ (ಅಲ್‌ಮುತ್ತಯ್ಯುಬುನ್ ಎಂಬುದು ಅರಬಿ ಪದ, ಸುಗಂಧ ತುಂಬಿದ ಪಾತ್ರೆಯಲ್ಲಿ ಕೈ ಹಾಕಿ ಕಅಬಾಲಯದ ಖುರೈಷಿಗಳು ಮಾಡಿಕೊಂಡ ಸಖ್ಯ. ಅಸ್ಸಿರತುಲ್ ಹಲಬಿಯ್ಯ, ಇಬ್ನು ಹಿಶಾಮ್ 1:132) ರಲ್ಲೋ ಯಾರಾದರು ಬಲಾಡ್ಯರು ನನ್ನನ್ನು ಕೊಲ್ಲುತ್ತಿದ್ದರೆ... ಎಂದು ಅಬೂಜಹಲ್ ವ್ಯಥೆಪಟ್ಟನು.
ಇಬ್ನು ಮಸ್ ಊದ್ ಹೇಳುತ್ತಾರೆ: '' ನಾನು ಒಂದೇ ಒಂದು ಹೊಡೆತ ನೀಡಿದೆ. ಅವನ ಉಸಿರು ನಿಂತು ಹೋದವು. ಅವನ ಆಯುಧ, ಯುದ್ಧ ವಸ್ತ್ರಗಳನ್ನು ತೆಗೆದುಕೊಂಡು ನಾನು ಪ್ರವಾದಿ (ಸ) ಯ ಮುಂದೆ ಹೋದೆ.
“ ಅಲ್ಲಾಹನ ಪ್ರವಾದಿಯವರೇ, ಸಂತೋಷಗೊಳ್ಳಿರಿ. ಅಲ್ಲಾಹನ ಪರಮ ಶತ್ರು ಅಬೂಜಹಲ್ ವಧಿಸಲ್ಪಟ್ಟಿದ್ದಾನೆ '' ಎಂದು ಇಬ್ ಮಸ್ ಊದ್ ಹೇಳಿದರು.
“ಸತ್ಯವೇ ಅಬ್ದುಲ್ಲಾ ? ನನ್ನ ಆತ್ಮ ಯಾರ ಕೈಯಲ್ಲಿದೆಯೋ ಅವನ ಮೇಲಾಣೆ ಅಬೂಜಹಲ್‌ನ ವಧೆ ನನಗೆ ಕೆಂಪು ಒಂಟೆಗಿಂತಲೂ ಪ್ರಿಯವಾಗಿದೆ '' ಎಂದು ಪ್ರವಾದಿ (ಸ) ರು ಹೇಳಿದರು.
“ಈ ಸಮುದಾಯದ ಫರೋವ... ಅಬೂಜಹಲ್‌ನನ್ನು ಅಲ್ಲಾಹು ಕೊಂದಿದ್ದಾನೆ. ತನ್ನ ವಾಗ್ದಾನವನ್ನು ಪಾಲಿಸಿದ, ದಾಸನಾದ ಪ್ರವಾದಿಗೆ ಸಹಾಯ ಮಾಡಿದ ಅಲ್ಲಾಹನಿಗೆ ಸರ್ವಸ್ತುತಿ. ಅಲ್ಲಾಹನೇಮ ನನ್ನ ಮಾಡಿದ ವಾಗ್ದಾನವನ್ನು ನೀನು ಪಾಲಿಸಿರುವೆ. ನನ್ನ ಮೇಲಿನ ನಿನ್ನ ಅನುಗ್ರಹವನ್ನು ಪೂರ್ಣ ಗೊಳಿಸು ” ಎಂದು ಪ್ರಾರ್ಥಿಸಿದರು..
ದುರಹಂಕಾರಿಯ ಪತನ
“ಈ ಸಮುದಾಯದ ಫರೋವ.. ಅಬೂಜಹಲ್‌ನನ್ನು ಅಲ್ಲಾಹು ಕೊಂದಿದ್ದಾನೆ. ತನ್ನ ವಾಗ್ದಾನವನ್ನು ಪಾಲಿಸಿದ, ದಾಸನಾದ ಪ್ರವಾದಿಗೆ ಸಹಾಯ ಮಾಡಿದ ಅಲ್ಲಾಹನಿಗೆ ಸರ್ವಸ್ತುತಿ. ಅಲ್ಲಾಹನೇಮ ನನ್ನ ಮಾಡಿದ ವಾಗ್ದಾನವನ್ನು ನೀನು ಪಾಲಿಸಿರುವೆ. ನನ್ನ ಮೇಲಿನ ನಿನ್ನ ಅನುಗ್ರಹವನ್ನು ಪೂರ್ಣ ಗೊಳಿಸು..”ಎಂದು ಪ್ರಾರ್ಥಿಸಿದರು..
ಇಬ್ನ್ ಮಸ್ಊದ್ ಹೇಳುತ್ತಾರೆ. '' ಅಬೂಜಹಲ್ ವಧಿಸಲ್ಪಟ್ಟ ಸುದ್ದಿ ನಾನು ಹೇಳಿದಾಗ ಅಖೀಲುಬ್ನು ಅಬೀತಾಲಿಬ್ ಬಂಧಿಯಾಗಿ ಪ್ರವಾದಿ (ಸ) ಯ ಬಳಿಯಿದ್ದರು." ಸುದ್ದಿ ಕೇಳಿ ಅವನು ಹೇಳಿದ “ ನೀನು ಅಬೂಜಹಲ್‌ನನ್ನು ಕೊಂದಿಲ್ಲ. ನೀನು ಸುಳ್ಳು ಹೇಳುತ್ತಿರುವೆ"
“ಅಲ್ಲಾಹು ಸತ್ಯ ! ಸುಳ್ಳು ಹೇಳುತ್ತಿರುವವನು ನೀನು. ನೀನು ಪಾಪಿಯಾಗಿರುವೆ. ಅಲ್ಲಾಹು ಸತ್ಯ ! ನಾನು ಅವನನ್ನು ಕೊಂದಿರುವೆನು."
" ಅಖೀಲ್: ಏನು ಸಾಕ್ಷಿಯಿದೆ ನಿನ್ನ ಬಳಿ ? “
"ಅವನ ಕಾಲಿನ ಮೇಲೆ ಒಂಟೆಯ ಕಡಿವಾಣದಂತಹ ಒಂದು ಗುರುತಿದೆ '' ನಾನು ಹೇಳಿದೆ.
ಅಖೀಲ್: ಹಾಗಾದರೆ ನೀನು ಹೇಳುತ್ತಿರುವುದು ನಿಜ.
ಮುಶ್ರಿಕುಗಳ ಜಡದೇಹಗಳ ನಡುವೆ ಅಬೂಜಹಲ್‌ನನ್ನು ಹುಡುಕುವಂತೆ ಹೇಳಿದಾಗ ಅವರು ಹೀಗೆ ಹೇಳಿದ್ದರು;" ಅವನ ರುಂಡ ಮುಂಡಗಳು ಬೇರ್ಪಟ್ಟಿದ್ದರೆ ನಿಮಗೆ ಗುರುತು ಹಿಡಿಯುವುದು ಕಷ್ಟವಾಗಬಹುದು. ಆದ್ದರಿಂದ ಅವನ ಮಂಡಿಯಲ್ಲಿ ಒಂದು ಗಾಯದ ಗುರುತಿದೆ. ಅದನ್ನು ಗಮನಿಸಿದರೆ ಸಾಕು. ನಾನು ಮತ್ತು ಅವನು ಬಾಲ್ಯದಲ್ಲೊಮ್ಮೆ ಅಬ್ದುಲ್ಲಾಹಿಬ್ನು ಜದ್‌ಆರ ಆಹಾರ ಪಾತ್ರೆಗಾಗಿ ಜಗಳ ಆಡಿದ್ದೆವು. ನನಗೆ ಅವನಿಗಿಂತಲೂ ಅಲ್ಪ ಹೆಚ್ಚು ಪ್ರಾಯ. ಆ ಜಗಳದಲ್ಲಿ ಅವನ ಮಂಡಿಗೆ ಗಾಯವಾಗಿದ್ದವು. ಅದು ಹಾಗೆಯೇ ಉಳಿದಿತ್ತು "
ಇಬ್ನು ಮಸ್ ಊದ್ ಹೇಳಿದ ಗುರುತು ಹಾಗೂ ಪ್ರವಾದಿ (ಸ) ರು ಹೇಳಿದ ಗುರುತು ಒಂದೇ ಆಗಿರಬಹುದು. (ಅಸ್ಸಿರತುಲ್ ಹಲಬಿಯ್ಯಾ-2: 181)
ಅಬೂಜಹಲ್‌ನ ವಧೆಯ ವಿವರಣೆಗಳಲ್ಲಿ ಕೊಂಚ ವ್ಯತ್ಯಾಸಗಳಿವೆ. ಕೆಲವು ವಿಷಯಗಳಲ್ಲಂತೂ ಗಮನಾರ್ಹ ವೈರುಧ್ಯ ಕಾಣಿಸುತ್ತದೆ.
ಅಬ್ದುರಹ್ಮಾನಿಬ್ನು ಔಫ್ರ ವರದಿಯಲ್ಲಿ ಇಬ್ಬರು ಬಾಲಕರು ಆತನನ್ನು ವಧಿಸಿದರು ಎಂದಿದೆ. ಅವರು ಸುದ್ದಿಯನ್ನು ಪ್ರವಾದಿ (ಸ) ಗೆ ಮುಟ್ಟಿಸಿದರು.
“ನಿಮ್ಮಲ್ಲಿ ಯಾರು ವಧಿಸಿದ್ದು ?"
" ನಾನು, ನಾನು" ಎಂದು ಇಬ್ಬರೂ ಹೇಳಿದರು.
" ನಿಮ್ಮ ಖಡ್ಗಗಳನ್ನು ಒರೆಸಿದಿರೋ ? ”
“ಇಲ್ಲ" ಇಬ್ಬರೂ ಹೇಳಿದರು.
ಖಡ್ಗವನ್ನು ತೆಗೆದುಕೊಂಡು ಪ್ರವಾದಿ (ಸ) ರು ಪರಿಶೀಲಿಸಿದರು. ನಂತರ ಹೇಳಿದರು.
" ನೀವಿಬ್ಬರೂ ಸೇರಿ ವಧಿಸಿದ್ದೀರಿ"
ಅವನ ಸಲಬನ್ನು ಮುಅದ್ ಬ್ನು ಅಮ್ರ್ ಗೆ ನೀಡುವಂತೆ ಪ್ರವಾದಿ (ಸ) ರು ಆಜ್ಞಾಪಿಸಿದರು. ಇನ್ನೊಬ್ಬ ಮುಆದ್ಬ್ನು ಅಫ್ರಾಹ್ ಆಗಿದ್ದರು.
ಖಝ್ರಜ್ ವಂಶಜರೂ, ಅನ್ಸಾರಿಗಳೂ ಆದ ಹಾರಿಸ್‌ರ ಮೂವರು ಪುತ್ರರು- ಮುಅದ್, ಮುಅವ್ವಿದ್, ಔಫ್, ಬದ್ರ್ ನಲ್ಲಿ ಭಾಗವಹಿಸಿದ್ದರು. ತಮ್ಮ ಮಾತೃ ಸಂಬಂಧದನ್ವಯ ಇವರನ್ನು ಅಫ್'ರಾಹ್ ನ ಪುತ್ರರು ಎಂದೂ ಗುರುತಿಸಲಾಗುತ್ತದೆ.
ಔಫ್ ಹಾಗೂ ಮುಅವ್ವಿದ್ ಬದ್ರ್ ಯುದ್ದದಲ್ಲಿ ಹುತಾತ್ಮರಾದರು. ಮುಆದ್ ಉಸ್ಮಾನ್‌ರ ಆಡಳಿತ ಕಾಲದವರೆಗೂ ಜೀವಿಸಿದ್ದರು. ಮಾತ್ರವಲ್ಲದೆ, ಬದ್ರ್ ನ ನಂತರದ ಎಲ್ಲಾ ಯುದ್ದಗಳಲ್ಲೂ ಅವರು ಭಾಗವಹಿಸಿದ್ದರು. ಎಂದು ಒಂದು ವರದಿ ಹೇಳಿದರು. ಇನ್ನೊಂದು ವರದಿಯಲ್ಲಿ ಅವರು ಬದ್ರ್ ನಲ್ಲಿ ಗಾಯಗೊಂಡು ಮದೀನ ತಲುಪುತ್ತಿದ್ದಂತೆ ಮರಣ ಹೊಂದಿದರು ಎನ್ನುತ್ತದೆ.
ಅಬೂಜಹಲ್‌ನ ಮೇಲೆ ಮೊದಲು ದಾಳಿ ನಡೆಸಿದ್ದು ಅಮ್ರು ಬ್ ನು ಜಮೂಹನ ಪುತ್ರ ಮುಅದ್ ಎಂದೂ, ಅವರು ಉಸ್ಮಾನ್‌ರ ಆಡಳಿತ ಕಾಲದವರೆಗೂ ಬದುಕಿದ್ದರು ಎಂದೂ ಉಲ್ಲೇಖಿಸಲಾಗಿದೆ. ಇವರು ಉಹ್ದ್ ಯುದ್ಧದಲ್ಲಿ ಹುತಾತ್ಮರಾದರೆಂಬ ಅಭಿಪ್ರಾಯವೂ ಇದೆ. (ರಿಲಾಸತು ಸ್ಸಆದತಿಲ್ ಅಬದಿಯ್ಯಾ- 112)
ಡಾ.ಮುಹಮ್ಮದ್ ಅಬ್ದು ಯಮಾನಿ ದಾಖಲಿಸುತ್ತಾರೆ. ಹೆಚ್ಚಿನ ಹದೀಸ್ ವಿದ್ವಾಂಸರ ಅಭಿಪ್ರಾಯದ ಪ್ರಕಾರ, ಮುಅದ್ ಬ್ನು ಅಮ್ರ್ ಹಾಗೂ ಅಫ್ರಾಹ್ರ ಇಬ್ಬರು ಪುತ್ರರು ಅಬೂಜಹಲ್‌ನ ಮೇಲೆ ದಾಳಿ ನಡೆಸಿ, ನೆಲಕ್ಕುರುಳಿಸಿದ್ದರು. ಆದರೆ, ಆತ ಅಂತಿಮ ಶ್ವಾಸ ಎಳೆಯುತ್ತಾ ಇನ್ನೂ ಜೀವಂತವಾಗಿದ್ದ. ಇಬ್ನು ಮಸ್ ಊದ್ ಆತನ ಕಥೆ ಮುಗಿಸಿದರು. ಕಾರಣ, ಅಪರಾಹ್ರ ಪುತ್ರ ವಧಿಸಲ್ಪಟ್ಟಿರುವುದನ್ನು ಕಂಡಾಗ ಪ್ರವಾದಿ (ಸ) ರು ಹೇಳಿದರು;
“ಅಫ್ರಾಹಿನ ಈ ಎರಡು ಪುತ್ರರ ಮೇಲೆ ಅಲ್ಲಾಹನು ಕರುಣೆ ತೋರಲಿ. ಸಮುದಾಯದ ಫಿರ್ ಔನ್ ಹಾಗೂ ಕುಫ್‌ರ್ ನ ಮುಖ್ಯಸ್ಥರ ಮುಖ್ಯಸ್ಥನಾಗಿರುವ ಅಬೂಜಹಲನ ವಧೆಯಲ್ಲಿ ಅವರು ಭಾಗವಹಿಸಿದರು. (ಬದ್ರುಲ್ ಕುಬ್ರಾ, ಅಬ್ದು ಯಮಾನಿ 187) .
ಇಬ್ನು ಕಸೀರ್ ದಾಖಲಿಸುತ್ತಾರೆ. ವಾಖಿದಿ ಹೇಳಿದರು.ಅಫರಾಇನ ಇಬ್ಬರು ಪುತ್ರರು ವದಿಸಲ್ಪಟ್ಟಿರುವುದನ್ನು ಪ್ರವಾದಿ (ಸ) ರು ವೀಕ್ಷಿಸಿದರು. ನಂತರ ಅವರು ಹೇಳಿದರು. ಅಫರಾಇನ ಇಬ್ಬರು ಅಲ್ಲಾಹನು ಕರುಣೆ ತೋರಲಿ. ಕುಫ್ರಿನ ಇಮಾಮುಗಳ ಮುಖಂಡನನ್ನು ಹಾಗೂ ಈ ಸಮುದಾಯದ ಫರೋವನ ವಧೆಯಲ್ಲಿ ಅವರು ಭಾಗವಹಿಸಿದರು. ಆಗ ಒಂದು ಪ್ರಶ್ನೆ ಎದ್ದವು"
ಅಲ್ಲಾಹನ ದೂತರೇ, ಅವರೊಂದಿಗೆ ಅವನನ್ನು ವಧಿಸಿದ ಇತರರು ಯಾರು? '" ಮಲಕುಗಳು ಹಾಗೂ ಇಬ್ನು ಮಸ್ ಊದ್''
ಪ್ರವಾದಿ (ಸ) ರು ಉತ್ತರಿಸಿದರು.. (ಅಲ್ಬಿದಾಯತುವನ್ನಿಹಾಯ- 3: 330)
ಹಾಗೆಯೇ ಅಬೂಜಹಲ್ ನ ಸಲಬ್ ಪ್ರವಾದಿ (ಸ) ಮುಆದ್ ಬ್ನು ಅಮ್ರುಬ್ನು ಜಮೂಹ್ರವರಿಗೆ ನೀಡಿದರೆಂದು (ಅಲ್ಬಿದಾಯತುವನ್ನಿಹಾಯ - 3: 329) ಸಲಬ್‌ನಲ್ಲಿದ್ದ ಖಡ್ಗವನ್ನು ಇಬ್ ಮಸ್ ಊದ್ ಗೆ ಕೊಟ್ಟರೆಂದೂ (ಅಸ್ಸಿರತುಲ್ ಹಲಬಿಯ್ಯಾ- 2: 184), ಖಡ್ಗವನ್ನು ಮುಅದ್ ಬ್ನು ಅಮ್ರ್ ಗೆ ಕೊಟ್ಟರೆಂದೂ ದಾಖಲೆಗಳಿವೆ.
ನಂತರದ ಕಾಲಘಟ್ಟದಲ್ಲಿ ದಾಖಲಿಸಲಾದ ಇನ್ನೊಂದು ಘಟನೆ:ಇಬ್ನು ಕಸೀರ್‌ರ ದಾಖಲೆಯ ಪ್ರಕಾರ, ಒಬ್ಬರು ಪ್ರವಾದಿ (ಸ) ಯೊಂದಿಗೆ ಹೇಳಿದರು..
ಬದ್‌ರ್ ನಲ್ಲಿ ಒಬ್ಬರು ಕುಳಿತುಕೊಂಡಿರುವುದನ್ನು ನಾನು ಕಂಡೆ, ಇನ್ನೊಬ್ಬರು ಅವನ ಶಿರಸ್ಸಿನಲ್ಲಿ ದಂಡದಿಂದ ಕೂತವನ ತಲೆಗೆ ದಾಳಿ ಮಾಡಿದ. ಕುಳಿತವನು ನೆಲದ ಮೇಲೆ ಬಿದ್ದನು ”
ಪ್ರವಾದಿ (ಸ) ರು ಹೇಳಿದರು. ಅದು ಅಬೂಜಹಲ್, ಅವನು ಹೊರ ಬಂದಾಗಲೆಲ್ಲಾ ಹೀಗೆ ಮಾಡಲು ಅಲ್ಲಾಹನು ಮಲಕುಗಳನ್ನು ಏರ್ಪಡಿಸಿರುವನು. ಅಂತ್ಯದಿನದವರೆಗೂ ಹೀಗೆಯೇ ಮುಂದುವರಿಯುತ್ತದೆ. (ಅಲ್ಬಿದಾಯತುವನ್ನಿಹಾಯ- 3: 331)
ಅಬ್ದುಲ್ಲಾಹಿಬ್ನು ಉಮರ್ (ರ) ಹೇಳುತ್ತಾರೆ:
''ನಾನು ಬದ್ರ್‌ನಲ್ಲಿ ನಡೆಯುತ್ತಿದ್ದಾಗ ಒಬ್ಬ ಮನುಷ್ಯ ಶಿಕ್ಷಿಸಲ್ಪಡುತ್ತಿದ್ದ. ಆತ ಅಳುತ್ತಿದ್ದ. “ಅಬ್ದುಲ್ಲಾಹ್ ಆತ ನನ್ನನ್ನು ಕಂಡೊಡನೇ ಕರೆದನು. ನಾನು ಹಿಂದಿರುಗಿ ನೋಡಿದೆ. ನನಗೆ ನೀರು ಕೊಡು '' ಆತ ಕೇಳಿದ. ನಾನು ಆತನಿಗೆ ನೀರು ಕೊಡಲು ಯತ್ನಿಸಿದೆ. ಆಗ ಆತನನ್ನು ಶಿಕ್ಷಿಸುತ್ತಿದ್ದ ಕಪ್ಪು ಮನುಷ್ಯ ಹೇಳಿದ.
“ ಬೇಡ ಅಬ್ದುಲ್ಲಾ, ಈತ ಪ್ರವಾದಿಯಿಂದ ವಧಿಸಲ್ಪಟ್ಟ ಮುಶ್ರಿಕನಾಗಿದ್ದಾನೆ '' ನಾನು ಪ್ರವಾದಿ (ಸ) ಯೊಂದಿಗೆ ವಿಷಯ ತಿಳಿಸಿದೆ.
“ನೀನು ಅದನ್ನು ನೋಡಿದೆಯಾ ?” ಪ್ರವಾದಿ (ಸ) ಕೇಳಿದರು.
“ಹೌದು” ನಾನು ಹೇಳಿದೆ.
“ಅದು ಅಲ್ಲಾಹನ ಶತ್ರು ಅಬೂಜಹಲ್, ಅಂತ್ಯದಿನದವರೆಗೆ ಅವನು ಹೀಗೆಯೇ ಶಿಕ್ಷಿಸಲ್ಪಡುವನು” ಪ್ರವಾದಿ (ಸ) ಹೇಳಿದರು. (ಅಸ್ಪೀರತುಲ್ ಹಲಬಿಯ್ಯಾ- 2: 215 )
ದೌರ್ಜನ್ಯಕ್ಕೊಳಗಾದವರ ದಿನ:
ಬದ್ರ್ ಯುದ್ಧ ಕೊನೆಗೊಂಡವು. ಸೈನಿಕರು ಹಿಂದಿರುಗುವ ಸಿದ್ಧತೆಯಲ್ಲಿ ತೊಡಗಿಕೊಂಡರು. ಅಬ್ದುರಹ್ಮಾನ್‌ಬ್ನು ಔಫ್ ಸಲಬವಾಗಿ ಸಿಕ್ಕಿದ ಅಂಗಿಗಳನ್ನು ಒಟ್ಟುಗೂಡಿಸಿ, ಹೊತ್ತುಕೊಂಡು ಹೋಗುವ ಶ್ರಮದಲ್ಲಿದ್ದರು. ಅಷ್ಟು ಹೊತ್ತಿಗೆ ಉಮಯ್ಯತುಬ್‌ನ್ ಖಲಫ್ ಅವರ ಕಣ್ಣಿಗೆ ಬಿದ್ದನು.
ಅವರಿಬ್ಬರು ಮಕ್ಕಾದಲ್ಲಿ ಗೆಳೆಯರಾಗಿದ್ದವರು. ಇಬ್ನು ಔಫ್ ಮದೀನಕ್ಕೆ ವಲಸೆ ಬಂದ ನಂತರ ಅವರಿಬ್ಬರ ನಡುವೆ ಪತ್ರ ವ್ಯವಹಾರವಿದ್ದವು. ಮಕ್ಕಾದಲ್ಲಿರುವ ನನ್ನ ಬಂಧುಗಳಿಗೆ ನೀನು ಸಂರಕ್ಷಣೆ ನೀಡಿದರೆ, ಮದೀನದಲ್ಲಿರುವ ನಿನ್ನ ಜನರನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಇಬ್ನು ಔಫ್ ಬರೆದಿದ್ದರು. ಅದಕ್ಕೆ ಉಮಯ್ಯತ್ ಪೂರಕವಾಗಿ ಸ್ಪಂದಿಸಿದ್ದನು. (ಅಲ್ ಬಿದಾಯತುವನ್ನಿಹಾಯ- 3: 327).
ಇಬ್ನು ಔಫ್ ಹೇಳುತ್ತಾರೆ; ನನ್ನ ಹೆಸರು ಅಬ್ದು ಅಮ್ರ್ ಎಂದಾಗಿತ್ತು. ಇಸ್ಲಾಮ್ ಧರ್ಮ ಸ್ವೀಕರಿಸಿದ ಬಳಿಕ ಅಬ್ದುರಹ್ಮಾನ್ ಎಂದು ಬದಲಾಯಿಸಿದೆ. ಆ ನಂತರವೂ ನಾನು ಮಕ್ಕಾದಲ್ಲಿ ಉಮಯ್ಯತ್‌ನನ್ನು ಭೇಟಿಯಾಗುತ್ತಿದ್ದೆ. ಹೀಗಿರಲು ಒಂದು ದಿನ ಅವನು ನನ್ನೊಂದಿಗೆ ಕೇಳಿದ; "ಅಬ್ದು ಅಮ್ರ್ ನಿನ್ನ ತಂದೆ ನಿನಗಿಟ್ಟ ಹೆಸರನ್ನು ನೀನು ತಿರಸ್ಕರಿಸಿಬಿಟ್ಟೆಯಲ್ಲಾ ?”
'' ಹೌದು" ನಾನು ಹೇಳಿದೆ.
ಉಮಯ್ಯತ್: ನನಗೆ ಅಬ್ದುರ್ರಹ್ಮಾನ್ ನ ಪರಿಚಯವಿಲ್ಲ. ಯಮಾಮದ ಮುಸೈಲಿಮ (ಕಳ್ಳ ಪ್ರವಾದಿ) ಸಹ ಅರ್ರಹ್ಮಾನ್ ಎಂದೇ ಅಲ್ಲವೇ ತನ್ನ ಹೆಸರಿಟ್ಟುಕೊಂಡಿರುವುದು. ಅವನ ಹೆಸರಿನೊಂದಿಗೆ ಜೋಡಿಸಿ(ಅಬ್ದುರ್ರಹ್ಮಾನ್) ನಾನು ನಿನ್ನನ್ನು ಕರೆಯಲಾರೆ..
ಕರೆಯಲಾಗುವ ಒಂದು ಹೆಸರನ್ನು ನೀನೇ ನಿಶ್ಚಯಿಸಿ, ನನಗೆ ತಿಳಿಸು. ನಿನ್ನ ಆರಂಭದ ಹೆಸರಿನಲ್ಲಿ ಕರೆದರೆ ನೀನು ಕರೆ ಕೇಳುವುದಿಲ್ಲ. ನಾನಾದರೋ ನನಗೆ ಪರಿಚಯವಿಲ್ಲದ ಹೆಸರಿನಲ್ಲಿ ಕರೆಯಲಾರೆ "
ಇಬ್ನು ಔಫ್ ಹೇಳುತ್ತಾರೆ.
ಅಬ್ದು ಅಮ್ರ್ ಎಂದು ಕರೆದರೆ ನಾನು ಕರೆ ಕೇಳುತ್ತಿರಲಿಲ್ಲ. ಹಾಗಿರಲು ನಾನು ಹೇಳಿದರೆ ಅಬೂಅಲಿ ! (ಉಮಯ್ಯತ್) , ನಿನಗಿಷ್ಟವಾದ ಒಂದು ಹೆಸರನ್ನು ನೀನೇ ನಿಶ್ಚಯಿಸಿ ಕರೆ..
ಉಮಯ್ಯತ್: ಹಾಗಾದರೆ, ನಿನ್ನನ್ನು ನಾನು ಅಬ್ದುಲ್ ಇಲಾಹ್ (ದೇವರ ದಾಸ) ಎಂದು ಕರೆಯುತ್ತೇನೆ.
'' ಹಾಗೆಯೇ ಆಗಲಿ '' ಇಬ್ನು ಔಫ್ ಹೇಳಿದರು.
ಇಬ್ನು ಔಫ್ ಮುಂದುವರಿಸುತ್ತಾರೆ.
'' ಅವನು ನನ್ನನ್ನು ಕಂಡಾಗಲೆಲ್ಲಾ ಅಬ್ದುಲ್ ಇಲಾಹಿ ಎಂದು ಕರೆಯುತ್ತಿದ್ದನು. ನಾನು ಅವನ ಕರೆಗೆ ಓಗೊಡುತ್ತಿದ್ದೆನು. ಅವನೊಂದಿಗೆ ಮಾತನಾಡುತ್ತಿದ್ದೆನು.
ಬದ್ರ್ ದಿನದಂದು ನಾನು ನಡೆದು ಹೋಗುತ್ತಿರಬೇಕಾದರೆ ಅವನು ತನ್ನ ಪುತ್ರನ ಕೈ ಹಿಡಿದು ನಿಂತಿದ್ದ. (ಬಣ್ಣದ ಒಂಟೆಯ ಬೆನ್ನ ಮೇಲೆ ಕೂತಿದ್ದ ಎಂದೂ ಸಹ ಕೆಲವರು ವರದಿ ಮಾಡಿದ್ದಾರೆ) ನಾನು ಸಲಬವಾಗಿ ಸಿಕ್ಕಿದ್ದ ಆಂಗಿಗಳ ಮೂಟೆಯನ್ನು ಹೊತ್ತುಕೊಂಡಿದ್ದೆ. ನನ್ನನ್ನು ಕಂಡಾಗ ಅವನು ಅಬ್ದು ಅಮ್ರ್ ಎಂದು ಕರೆದ. ನಾನು ಕರೆ ಕೇಳಲಿಲ್ಲ. ಆಗ ಅವನು ಅಬ್ದುಲ್ ಇಲಾಹಿ ಎಂದು ಕರೆದನು. ಆಗ ನನಗೆ ಅವನ ಕರೆ ಕೇಳಿತು.
ಅವನು ನನ್ನೊಂದಿಗೆ ಕೇಳಿದನು.
"ನಿನಗೆ ನನ್ನೊಂದಿಗೆ ಸ್ನೇಹವಿದೆಯೇ ? ಆಗಿದ್ದಲ್ಲಿ ನಿನ್ನ ಜೊತೆಗಿರುವ ಈ ಅಂಗಿಗಳಿಗಿಂತಲೂ ನಾನು ನಿನಗೆ ಉತ್ತಮವಾಗಿರುವೆನು ”
'' ಇದೆ '' ಎನ್ನುತ್ತಾ ನಾನು ನನ್ನ ಹೆಗಲ ಮೇಲಿದ್ದ ಅಂಗಿಗಳ ಮೂಟೆಯನ್ನು ಕೆಳಗಿಟ್ಟೆ. ಇಬ್ಬರೊಂದಿಗೆ ನಡೆಯುವಂತೆ ಹೇಳಿದೆ. ಇಬ್ಬರೂ ನನ್ನ ಮುಂದಿನಿಂದ ನಡೆಯಲಾರಂಭಿಸಿದರು.
'' ಈ ದಿನದಂತಹ ದಿನವನ್ನು ಹಿಂದೆಂದೂ ನಾನು ಕಂಡಿರಲಿಲ್ಲ. ನಮಗೆ ಹಾಲಿನ ಅಗತ್ಯವಿದೆಯೇ ? '' ಎಂಬಿತ್ಯಾದಿಯಾಗಿ ಅವನು ಮಾತನಾಡುತ್ತಿದ್ದನು.
ಉಮಯ್ಯತ್‌ನ ಭಯ ಇಲ್ಲವಾದವು. ತಾನು ಸುರಕ್ಷಿತವಾಗಿದ್ದೇನೆ ಎಂದು ಅವನು ಅಂದುಕೊಂಡಿದ್ದನು. ಇಬ್ನು ಔಫ್ರ ಮುಂದೆ ಅವನು ಹಾಗೂ ಅವನ ಪುತ್ರ ನಡೆಯುತ್ತಿರಬೇಕಾದರೆ, ಬಿಲಾಲ್ ಬ್ನು ರಬಾಹ್ ಅವನನ್ನು ಕಾಣುತ್ತಾರೆ. ಆಗ ಬಿಲಾಲ್‌ರ ಮನಸಿನಲ್ಲಿ ಹಿಂದೆ ನಡೆದಿದ್ದ ಆ ಭೀಕರ ಅನುಭವ ತೇಲಿ ಬಂದವು. ಬಿಲಾಲ್ ಇಸ್ಲಾಮ್ ಧರ್ಮ ಸ್ವೀಕರಿಸಿದ ವಿಷಯ ತಿಳಿಯುತ್ತಿದ್ದ ಅವರ ಮಾಲಕನಾಗಿದ್ದ ಉಮಯ್ಯತ್ ಕೆಂಡಾಮಂಡಲನಾದನು. ಇಸ್ಲಾಮ್ ತಿರಸ್ಕರಿಸುವಂತೆ ಹೇಳಿ ಆತ ಬಿಲಾಲ್ ರಿಗೆ ಚಿತ್ರಹಿಂಸೆ ನೀಡಲಾರಂಭಿಸಿದನು. ಕೆಂಡದಂತೆ ಸುಡುತಿದ್ದ ಮರಳ ಮೇಲೆ ಅವರನ್ನು ನಗ್ನನಾಗಿ ಮಲಗಿಸಿ, ಚಿತ್ರಹಿಂಸೆ ನೀಡಿದನು. ಅವರ ಎದೆಯ ಮೇಲೆ ಬಂಡೆಯಗಲ್ಲನ್ನಿಟ್ಟು, ಉಸಿರುಗಟ್ಟುವಂತೆ ಮಾಡಿದನು. ಕೆಂಡದಂತೆ ಸುಡುತ್ತಿದ್ದ ಮರಳಿಗೆ ಬಿಲಾಲ್‌ರ ಬೆನ್ನ ಮೇಲಿನ ಚರ್ಮ ಸುಟ್ಟು ಹೋದವು..
ಗಂಟಲು ಒಣಗಿ ಬಿರುಕು ಬಿಟ್ಟವು. ದಾಹ ಸಹಿಸಲಾಗದೆ ಅವರು ನೀರಿಗಾಗಿ ಆಗ್ರಹಿಸಿದಾಗ ಉಮಯ್ಯತ್ ಹಾಗೂ ಆತನ ಸಂಗಡಿಗರು ಬಿಲಾಲ್ ರ ಯಾತನೆಯನ್ನು ಸಂಭ್ರಮಿಸಿ, ಅಟ್ಟಹಾಸಗೈಯುತ್ತಾ ನಿಂತಿದ್ದರು...
ಬಿಲಾಲ್ ಹಿಟ್ಟು ಕಲಸುತ್ತಿದ್ದರು. ಉಮಯ್ಯತ್ ನನ್ನು ಕಂಡಾಗ ಅದನ್ನು ನಿಲ್ಲಿಸಿ, ಕೈಗೆ ಅಂಟಿಕೊಂಡಿದ್ದ ಹಿಟ್ಟನ್ನು ತೊಳೆದುಕೊಂಡರು.
'' ಕುಫ್ರ್ ನ ಶಿರಸ್ಸಾದ ಉಮಯ್ಯತ್ ಬ್ನು ಖಲಫ್ ! ಆದನು ರಕ್ಷಣೆ ಹೊಂದಿದರೆ ನಾನು ರಕ್ಷಣೆ ಹೊಂದಲಾರೆ '' ಎಂದು ಹೇಳುತ್ತಾ ಬಿಲಾಲ್ ಉಮಯ್ಯತ್‌ನ ಹತ್ತಿರ ಚಿಮ್ಮಿದರು..
ಉಮಯ್ಯತ್ ಹಾಗೂ ಆತನ ಪುತ್ರ ನನ್ನ ಸಂರಕ್ಷಣೆಯಲ್ಲಿದ್ದಾರೆ. ಆದ್ದರಿಂದ ಅವರನ್ನು ಏನೂ ಮಡಬಾರದು.. ಇಬ್ನು ಔಫ್ ಹೇಳಿದರು.
"ಅಲ್ಲಾಹನ ಸಹಾಯಿಗಳೇ, ಕುಫ್‌ರ್‌ನ ಶಿರಸ್ಸಾದ ಉಮಯ್ಯತ್ ಬ್ನು ಖಲಫ್ ! ಅವನು ರಕ್ಷಣೆ ಹೊಂದಿದರೆ ನಾನು ವಿಜಯ ಹೊಂದಲಾರೆ '' ಎಂದು ಬಿಲಾಲ್ ಮತ್ತೆ ಜೋರಾಗಿ ಹೇಳಿದರು..
ಬಿಲಾಲ್‌ರ ಧ್ವನಿ ಕೇಳಿ ಜನರೆಲ್ಲರೂ ಅತ್ತ ಧಾವಿಸಿದರು. ಉಮಯ್ಯತ್ ಹಾಗೂ ಮಗನನ್ನು ಸುತ್ತು ಬಿಟ್ಟಿದ್ದರು.. ಇಬ್ನು ಔಫ್ ಹೇಳುತ್ತಾರೆ.
'' ನಾನು ಜನರನ್ನು ತಡೆಯುತ್ತಿದ್ದೆ. ಜನರನ್ನು ತಡೆಯುವುದು ಅಸಾಧ್ಯವೆಂದಾದಾಗ ಉಮಯ್ಯತ್ ನ ಪುತ್ರನನ್ನು ಅವರಿಗೆ ಬಿಟ್ಟುಕೊಟ್ಟೆ. ಅವರು ಅವನನ್ನು ವಧಿಸಿದರು. ಆಗ ಉಮಯ್ಯತ್ ಅಟ್ಟಹಾಸಗೈದನು. ಹಿಂದೆಂದೂ ಅಂತಹದೊಂದು ಅಟ್ಟಹಾಸವನ್ನು ನಾನು ಕೇಳಿರಲಿಲ್ಲ. ಇನ್ನು ಜೀವ ಸಹಿತ ಉಳಿಯುವುದು ಕಷ್ಟ, ನಿನ್ನ ರಕ್ಷಣೆ ಮಾಡುವುದು ನನ್ನಿಂದಂತೂ ಅಸಾಧ್ಯ. ನಿನಗೇನು ಸಾಧ್ಯವೋ ಅದನ್ನು ಮಾಡು '' ಎಂದು ನಾನು ಹೇಳುವಷ್ಟರಲ್ಲಿ ಜನರು ಅವನನ್ನು ವಧಿಸಿಬಿಟ್ಟಿದ್ದರು..
ಇನ್ನೊಂದು ವರದಿಯಲ್ಲಿ ಇಬ್ನು ಔಫ್ ಹೇಳುತ್ತಾರೆ.. ಬದ್ರ್ ಯುದ್ಧದಲ್ಲಿ ಜನರು ನಮ್ಮೆಡೆಗೆ ಬರಲಾರಂಭಿಸಿದಾಗ ನಾನು ಉಮಯ್ಯತ್ನೊಂದಿಗೆ ಪರ್ವತದತ್ತ ಹೋದೆನು. ಅಲ್ಲಿ ಅವನನ್ನು ಅಡಗಿಸುವುದು ನನ್ನ ಉದ್ದೇಶವಾಗಿತ್ತು. ಆದರೆ, ಅಷ್ಟರಲ್ಲಾಗಲೇ ಬಿಲಾಲ್ ಅವನನ್ನು ಕಂಡಿದ್ದರು. ಬಿಲಾಲ್ ಅನ್ಸಾರಿಗಳ ಒಂದು ಸಂಘದ ಬಳಿ ಬಂದು ಹೇಳಿದರು.. "ಉಮಯ್ಯತ್ ಬಿನ್ ಖಲಫ್ ! ಅವನು ರಕ್ಷಣೆ ಹೊಂದಿದರೆ ನನಗೆ ವಿಜಯವಿಲ್ಲ '' ಬಿಲಾಲ್ ಹಾಗೂ ಅನ್ಸಾರಿಗಳ ಸಂಘ ನಮ್ಮನ್ನು ಹಿಂಬಾಲಿಸಿದವು. ಹೆತ್ತ ಮಗುವನ್ನು ಹುಡುಕುವ ತಾಯಿ ಪ್ರಾಣಿಯಂತೆ ಅವರು ನಮ್ಮನ್ನು ಹಿಂಬಾಲಿಸುತ್ತಿದ್ದರು. ಅವರು ಇನ್ನೇನು ನಮ್ಮನ್ನು ಹಿಡಿದು ಬಿಡುತ್ತಾರೆ ಎಂದು ನನಗೆ ಅನಿಸಿ, ಭಯವಾದವು. ಆಗ ನಾನು ಉಮಯತ್ನ ಮಗನನ್ನು ಅವರಿಗೆ ಬಿಟ್ಟು ಕೊಟ್ಟೆ. ಜನರು ಅವನನ್ನು ವಿಚಾರಿಸುತ್ತಿರಬೇಕಾದರೆ ನಮಗೆ ತಪ್ಪಿಸಿಕೊಳ್ಳಬಹುದಲ್ಲವೇ ? ಎಂಬುದು ನನ್ನ ಆಲೋಚನೆಯಾಗಿತ್ತು. ಜನರು ಅವನನ್ನು ಕೊಂದರು. ನಂತರ ಅವರು ನಮ್ಮನ್ನು ಹಿಂಬಾಲಿಸಿದರು. ಉಮಯ್ಯತ್ ದಪ್ಪ ದೇಹದವರಾಗಿದ್ದರು. ಜನರು ಅವನನ್ನು ” ಇನ್ನೇನು ಹಿಡಿದೇ ಬಿಡುತ್ತಾರೆ ಎನ್ನುವ ಸ್ಥಿತಿ ಸಂಜಾತವಾದಾಗ ನಾನು ಅವನೊಂದಿಗೆ ನೆಲದ ಮೇಲೆ ಮಲಗುವಂತೆ ಹೇಳಿದೆ. ಅವನು ಮಲಗಿದ. ಅವನನ್ನು ಹೇಗಾದರು ಕಾಪಾಡಬೇಕೆಂದು ನಾನು ಅವನ ಮೇಲೆ ಮಲಗಿದೆ. ಆದರೆ, ನನ್ನ ಅಡಿಭಾಗದಿಂದ ಖಡ್ಗ ತುರುಕಿ ಕೊಂದು ಬಿಟ್ಟರು. ನನ್ನ ಕಾಲಿಗೂ ಗಾಯವಾದವು. (ಇಬ್ನು ಔಫ್ ತಮಗಾದ ಗಾಯವನ್ನು ತೋರಿಸುತ್ತಿದ್ದರು)
ಖೈದಿಯ ಕುರಿತು ನಿರ್ಧಾರ ಕೈಗೊಳ್ಳಬೇಕಾದುದು ಆಡಳಿತ ನೋಡಿಕೊಳ್ಳುವವನು. ವದಿಸುವುದು, ವಿಮೋಚನಾ ದಂಡವನ್ನು ಸ್ವೀಕರಿಸುವುದು, ಕ್ಷಮಿಸುವುದು, ಸೇವಕನನ್ನಾಗಿಸುವುದು. ಮೊದಲಾದ ಯಾವುದೇ ತೀರ್ಮಾನವನ್ನು ಮುಸ್ಲಿಮ್ ಸಮುದಾಯದ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಕೈಗೊಳ್ಳಬಹುದು. ಆದರೆ, ಬಿಲಾಲ್ ಉಮಯ್ಯತ್‌ನನ್ನು ಕೊಂದದ್ದು ಅವರದ್ದೇ ಆದ ವೈಯಕ್ತಿಕ ತೀರ್ಮಾನವಾಗಿತ್ತು. ಉಮಯ್ಯತ್‌ನ ವರ್ತಮಾನ ಹಾಗೂ ಭೂತದ ದಿನಗಳು ಇಸ್ಲಾಮ್ ಹಾಗೂ ಮುಸ್ಲಿಮ್ ವಿರೋಧದಿಂದ ಕೂಡಿದ್ದವು. ಅದು ಬರಿಯೇ ಮಾತುಗಳಿಗೆ ಸೀಮಿತವಾದ ವಿರೋಧವಾಗಿರಲಿಲ್ಲ. ಅದು ದೈಹಿಕ ಮಾನಸಿಕ ಕ್ರೌರ್ಯಗಳನ್ನೊಳಗೊಂಡ ವಿರೋಧವಾಗಿತ್ತು. ಬಿಲಾಲ್‌ರನ್ನು ಆತ ಅದೆಷ್ಟು ಕ್ರೂರವಾಗಿ ಹಿಂಸಿಸಿದ ಎಂಬುದಕ್ಕೆ ಚರಿತ್ರೆಯೇ ಸಾಕ್ಷಿಯಾಗಿದೆ. ಆದ್ದರಿಂದ ಬಿಲಾಲ್ ಆತನನ್ನು ಖೈದಿಯನ್ನಾಗಿ ಕಂಡಿರಲಿಲ್ಲ. ಅವರು ಆತನನ್ನು ವಧಿಸಲ್ಪಡಬೇಕಾದ ಯುದ್ಧಾಪರಾಧಿಯಂತೆ ಕಂಡಿದ್ದರು.
ಮುಶ್ರಿಕ್ಗಳಿಂದ; ಉಬೈದತುಬ್ನ್ ಸಈದುಬುನುಲ್ ಆಸ್ವ್, ಆಮಿರುಬುನುಲ್ ಹಳ್ರಮಿ, ರಬೀಅತ್‌ಬ್ನು ಅಸ್ವದ್, ಹಾರಿಸ್‌ಬ್ನು ರಬೀಅ, ಅಖೀಲುಬ್ನು ಅಸ್ವದ್ ಬ್ನು ಅಬ್ದಿಲ್ ಮುತ್ತಲಿಬ್, ಉಮರುಬ್ನು ಉಸ್ಮಾನುಬುನು ಅಮ್ರ್ ಬಿನ್ ಕಅಬ್, ಮಸ್ ಊದುಬ್ನ್ ಉಮಯ್ಯ, ರಬೀಹ್ ಬುನುಲ್ ಹಜ್ಜಾಜ್, ಮುನಬ್ಬಿಹುಬು ನುಲ್ ಹಜ್ಜಾದ್, ಆಸ್ಟ್ ಬಿನ್ ಮುನಬ್ಬಿಹ್ ಮೊದಲಾದ ಮುಖಂಡರು ವಧಿಸಲ್ಪಟ್ಟರು. (ಬದ್ರುಲ್ ಕುಬ್ರ- ಡಾ. ಯಮಾನಿ- 191, 192)
ಇನ್ನಿತರ ಅನೇಕ ಪ್ರಭಾವಿ ನಾಯಕರು ವಧಿಸಲ್ಪಟ್ಟಾಗ ಯುದ್ಧರಂಗದಿಂದ ಮುಶ್ರಿಕರು ಪರಾರಿಯಾಗುವ ಪ್ರಯತ್ನ ಮಾಡಿದರು. ಕೆಲವರು ನಿರ್ವಾಹವಿಲ್ಲದಾದಾಗ ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು ಬಂಧಿಗಳಾದರು.
ಅಲ್ಲಾಹನು ತನ್ನ ವಾಗ್ದಾನವನ್ನು ಪಾಲಿಸಿದನು. ತನ್ನ ದಾಸರಾದ ಪ್ರವಾದಿ (ಸ) ಗೆ ಸಹಾಯ ಮಾಡಿದನು. ಶಿರ್ಕ್ ನ ಉಪಾಸಕರನ್ನು ಪರಾಜಿತನನ್ನಾಗಿಸಿದನು. ಯುದ್ಧ ಭೂಮಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಕೊಂಡಿದ್ದ ಗನೀಮತ್ (ಯುದ್ದ ಸಂಪತ್ತು) ಧಾರಾಳವಿದ್ದವು. ಮುಸಿಮರಲ್ಲಿ ಒಂದು ವಿಭಾಗ ಸಂಗ್ರಹಿಸುವುದರಲ್ಲಿ ಮಗ್ನರಾದರು. ಇನ್ನು ಕೆಲವರು ಪರಾರಿಯಾಗುತ್ತಿದ್ದ ಮುಶ್ರಿಕರನ್ನು ಬೆನ್ನಟ್ಟಿದರು. ಅವರು ಹಿಂದಿರುಗಿ ಬಂದು ಮಿಂಚಿನ ಆಕ್ರಮಣ ನಡೆಸದಂತೆ ಬಹುದೂರಕ್ಕೆ ಒಡಿಸಿ ಕೆಲವರನ್ನು ಬಂಧಿಸಿದರು..
ದೌರ್ಜನ್ಯಕ್ಕೊಳಗಾದವರ ದಿನ:
ಗುಡಾರದಲ್ಲಿ ವಿಶ್ರಾಂತಿ ಪಡೆಯುತ್ತಾ ಯುದ್ದ ರಂಗವನ್ನು ವೀಕಿಸುತ್ತಿದ್ದ ಪ್ರವಾದಿ (ಸ.ಅ)ರಿಗೆ ಕಾವಲು ನಿಂತಿದ್ದ ಸಅದ್'ಬ್ನ್ ಮುಆದ್ ಮುಶ್ರಿಕರನ್ನು ವಧಿಸದೆ ಬಂದಿಗಳಾಗಿಸುತ್ತಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು ಈ ಸಂದರ್ಭದಲ್ಲಾಗಿತ್ತು. ಗನೀಮತ್ ಸಂಗಹಿಸುವುದರಲ್ಲಿ ಹಾಗೂ ಮುಶ್'ರಿಕ್'ಗಳನ್ನು ಬಂಧಿಗಳನ್ನಾಗಿಸುವುದರಲ್ಲಿ ನಿರತರಾಗಿರುವ ಮುಸ್ಲಿಮರ ಅನುಪಸ್ಥಿತಿಯಲ್ಲಿ ಶತ್ರುಗಳು ಪ್ರವಾದಿ (ಸ) ಯ ಮೇಲೆ ದಾಳಿ ಮಾಡುವ ಸಾಧ್ಯತೆಯಿದ್ದವು. ಇದನ್ನು ಊಹಿಸಿ, ಸಅದ್ ಬುನು ಮುಆದ್ ಪ್ರವಾದಿ (ಸ) ಗೆ ಕಾವಲು ನಿಂತಿದ್ದರು.
ಬದ್ರ್ ನಲ್ಲಿ ಮುಸ್ಲಿಮರ ಆತ್ಮ ಧೈರ್ಯವನ್ನು ವರ್ಧಿಸಿದ ಕೆಲವೊಂದು ಅದ್ಭುತ ಘಟನೆಗಳು ಪ್ರವಾದಿ (ಸ) ರಿಂದ ಪ್ರಕಟಗೊಂಡಿದ್ದವು. ಉಕಾಶತ್ ಬ್ನು ಮಿಹ್ ಸ್ಟನ್ ಮಿಕವನ್ನು ನೋಡಿದ ಸಿಂಹದಂತೆ ಶತ್ರುಗಳನ್ನು ಎದುರಿಸಿದರು. ಧೀರೋದಾತ್ತವಾದ ಹೋರಾಟವನ್ನು ಪ್ರದರ್ಶಿಸಿದರು. ಮುಶ್ರಿಕರನ್ನು ಅಟ್ಟಾಡಿಸಿ ಹೊಡೆದರು. ಈ ನಡುವೆ ಅವರ ಖಡ್ಗ ತುಂಡಾದವು. ಯುದ್ಧದಿಂದ ಹಿಂದೆ ಸರಿಯುವ ಅವಕಾಶ ಅವರಿಗಿರಲಿಲ್ಲ. ಅದು ಸಾಧ್ಯವೂ ಇರಲಿಲ್ಲ. ಉಕಾಶ ಪ್ರವಾದಿ (ಸ) ಯೊಂದಿಗೆ ವಿಷಯ ತಿಳಿಸಿದರು. ಪ್ರವಾದಿ (ಸ) ರು ಕೋಲಿನ ತುಂಡೊಂದನ್ನು ಅವರ ಕೈಗೆ ನೀಡಿ ಹೇಳಿದರು..
"ಉಕಾಶ, ಇದರ ಮೂಲಕ ಶತ್ರುಗಳನ್ನು ಎದುರಿಸು ''
ಉಕಾಶ ತಮ್ಮ ಕೈಯಲ್ಲಿದ್ದ ಕೋಲನ್ನೊಮ್ಮೆ ಖಡ್ಗದಂತೆ ಬೀಸಿದರು. ಅದು ಪ್ರಖರ ಬೆಳಕನ್ನು ಹೊರಡಿಸುತ್ತಾ, ನೀಳವಾಗಿ ಖಡ್ಗದಂತೆ ಭಾಸವಾದವು. ಮತ್ತೆ ಯೋಚಿಸಲಿಲ್ಲ. ಉಕಾಶ ಯುದ್ಧ ಮುಂದುವರಿಸಿದರು. ಯುದ್ಧ ಕೊನೆಗೊಳ್ಳುವವರೆಗೂ ಆ ವಿಶಿಷ್ಟ ಖಡ್ಗ ಉಕಾಶರ ಕೈಯಲ್ಲಿದ್ದವು. ನಂತರವೂ ಅನೇಕ ಶತ್ರುಗಳ ರುಂಡಗಳನ್ನು ಆ ಖಡ್ಗದಿಂದಲೇ ಅವರು ಚೆಂಡಾಡಿದರು. ಧರ್ಮಭ್ರಷ್ಟ ರೊಂದಿಗಿನ ಯುದ್ದದಲ್ಲಿ ಅವರು ಹುತಾತ್ಮರಾಗುವವರೆಗೂ ಅವರ ಕೈಯಲ್ಲಿ ಆ ಖಡ್ಡವಿದ್ದವು. (ಅಲ್ ಬಿದಾಯತುವನ್ನಿಹಾಯ - 3: 331, 332)
ಉಕಾಶ ಅಪೂರ್ವವಾದ ಸೌಭಾಗ್ಯದ ಒಡೆಯರಾಗಿದ್ದರು. ಒಮ್ಮೆ ಪ್ರವಾದಿ (ಸ) ರು ಹೇಳಿದರು;
"ನನ್ನ ಸಮುದಾಯದಿಂದ ಎಪ್ಪತ್ತು ಸಾವಿರ ಮಂದಿ ವಿಚಾರಣೆ ಇಲ್ಲದೆಯೇ ಪೂರ್ಣ ಚಂದಿರನ ರೂಪದಲ್ಲಿ ಸ್ವರ್ಗ ಪ್ರವೇಶಿಸುವರು '' ಇದನ್ನು ಕೇಳುತ್ತಿದ್ದಂತೆ ಉಕಾಶ (ರ):
'' ಅಲ್ಲಾಹನ ದೂತರೇ, ನನ್ನನ್ನು ಆ ಕೂಟದಲ್ಲಿ ಸೇರಿಸಲು ಅಲ್ಲಾಹನೊಂದಿಗೆ ಪ್ರಾರ್ಥಿಸಿರಿ '' ಎಂದು ಆಗ್ರಹಿಸಿದರು.
"ನೀನು ಆ ಕೂಟದಲ್ಲಿರುವೆ '' ಎಂದು ಪ್ರವಾದಿ (ಸ) ಹೇಳಿದರು. ಇನ್ನೊಂದು ವರದಿಯ ಪ್ರಕಾರ, ಪ್ರವಾದಿ (ಸ) ರು ಹೀಗೆ ಪ್ರಾರ್ಥಿಸಿದರು.
'' ಅಲ್ಲಾಹನೇ, ಉಕಾಶನನ್ನು ನೀನು ಅವರ ಕೂಟದಲ್ಲಿ ಸೇರಿಸು '' ಆಗ ಇನ್ನೋರ್ವ ಅದೇ ಬೇಡಿಕೆಯನ್ನು ಮುಂದಿಟ್ಟರು.
''ಅಲ್ಲಾಹನ ದೂತರೇ, ನನ್ನನ್ನು ಸಹ ಅವರ ಕೂಟದಲ್ಲಿ ಸೇರಿಸುವಂತೆ ಪ್ರಾರ್ಥಿಸಿರಿ '' ಆಗ ಪ್ರವಾದಿ (ಸ) ಹೇಳಿದರು.
“ನಿನಗಿಂತಲೂ ಉಕಾಶ ಮುಂದಿದ್ದಾನೆ.. “ಸಬಖಕ ಬಿಹಾ ಉಕಾಶ '' ಎಂಬ ಪ್ರವಾದಿ ವಚನವು ಮುಂದೆ ಒಂದು ನಾಣ್ಣುಡಿಯಾಗಿ ಬದಲಾದವು.
ಸಲಮತಬ್ನ್ನು ಅಸ್ಲಮ್‌ರ ಖಡ್ಗವೂ ತುಂಡಾದವು. ಪ್ರವಾದಿ (ಸ) ಯನ್ನು ಭೇಟಿಯಾಗಿ ಅವರು ದುಃಖ ತೋಡಿಕೊಂಡರು. ಕೈಯಲ್ಲಿದ್ದ ಬೆತ್ತವೊಂದನ್ನು (ಖರ್ಜೂರ ಮರದ ಬೆತ್ತ) ಸಲಮರಿಗೆ ಕೊಟ್ಟು ಪ್ರವಾದಿ (ಸ) ರು ಹೇಳಿದರು..
'' ಇದರಿಂದ ಯುದ್ಧ ಮಾಡು '' ಅದು ಅತ್ಯುತ್ತಮ ಖಡ್ಗವಾಗಿ ಬದಲಾದವು. ಪ್ರವಾದಿ (ಸ) ರ ಪಕ್ಕದಲ್ಲಿ ನಿಂತು ಸಲಮ ಆ ಬೆತ್ತದಿಂದ ಶತ್ರುಗಳನ್ನು ಎದುರಿಸತೊಡಗಿದರು. (ಅಲ್ಬಿದಾಯತುವನ್ನಿಹಾಯ- 3: 332, ಬದ್ರುಲ್ ಕುಬ್ರಾ, ಡಾ. ಯಮಾನಿ -193)
ಖುಬೈಬ್ ಬ್ನು ಅಬ್ದುರಹ್ಮಾನ್ ಹೇಳುತ್ತಾರೆ. ನನ್ನ ಪಿತಾಮಹರಾದ ಖುಬೈಬ್ರಿಗೆ ಬದ್ರ್ ನಲ್ಲಿ ಗಾಯವಾದವು. ಒಂದು ಭಾಗ ಮುರಿದು ಹೋದವು. ಪ್ರವಾದಿ (ಸ) ರು ಅವರ ಗಾಯಕ್ಕೆ ತಮ್ಮ ಪವಿತ್ರವಾದ ಉಗುಳು ನೀರನ್ನು ತಾಗಿಸಿ, ಮುರಿದು ಬಿದ್ದ ಭಾಗವನ್ನು ಜೋಡಿಸಿದರು. ಅದು ಮೊದಲಿದ್ದಂತೆಯೇ ಕೂಡಿಕೊಂಡವು. (ಅಸ್ಸಿರತುಲ್ ಹಲಬಿಯ್ಯ- 2: 189, ಬದ್ರುಲ್ ಕುಬ್ರ, ಡಾ. ಯಮಾನಿ 194)
ರಿಫಾಅತ್ ಬ್ನು ಮಾಲಿಕ್ (ರ) ಹೇಳುತ್ತಾರೆ. ಬದ್ರ್ ದಿನದಂದು ಬಾಣ ತಾಗಿ ನನ್ನ ಕಣ್ಣಿಗೆ ಗಾಯವಾದವು. ನಾನು ಪ್ರವಾದಿ (ಸ) ರಿಗೆ ವಿಷಯ ತಿಳಿಸಿದೆ. ಅವರು ತಮ್ಮ ಉಗುಳು ನೀರನು ಕಣ್ಣಿಗೆ ಸವರಿದರು. ನನಗಾಗಿ ಪ್ರಾರ್ಥಿಸಿದರು. ಅದರ ನಂತರ ನನ್ನ ಕಣ್ಣಿನಲ್ಲಿ ಯಾವ ತೊಂದರೆಯ ಕಾಣಿಸಿಕೊಳ್ಳಿಲ್ಲ. (ಅಸ್ಪೀರತುಲ್ ಹಲಬಿಯ್ಯಾ- 2: 189)
ಖತಾದತ್‌ಬುನು ನುಅ್ ಮಾನ್‌ರ ಕಣ್ಣಿಗೆ ಗಾಯವಾದವು. ಕಣ್ಣಿನ ಕೃಷ್ಣಾಮಣಿಯು ಹೊರಗೆ ಬಂದು, ಕೆನ್ನೆಯ ಮೇಲೆ ತೂಗು ಬಿದ್ದವು. ಅದನ್ನು ಕತ್ತರಿಸಿ ತೆಗೆಯಲು ಬಯಸಿ, ಅವರು ಪ್ರವಾದಿ (ಸ) ಯೊಂದಿಗೆ ಅಭಿಪ್ರಾಯ ಕೇಳಿದರು. ಆದರೆ, ಪ್ರವಾದಿ (ಸ) ರು ಅದನ್ನು ಬೇಡವೆಂದು ಹೇಳಿದರು. ಖತಾದರನ್ನು ಕರೆದು, ಕೃಷ್ಣಾ ಮಣಿಯನ್ನು ಯಥಾಸ್ಥಾನದಲ್ಲಿಟ್ಟು, ಪ್ರಾರ್ಥಿಸಿದರು. ಕಣ್ಣು ಸಹಜ ಸ್ಥಿತಿಗೆ ಬಂದವು. ಖತಾದರ ಯಾವ ಕಣ್ಣಿಗೆ ಗಾಯವಾಗಿದೆ ಎಂಬುದು ಆ ನಂತರ ಯಾರಿಗೂ ತಿಳಿಯಲಿಲ್ಲ. ಮಾತ್ರವಲ್ಲದೆ, ಪ್ರವಾದಿ (ಸ) ರು ಯಥಾಸ್ಥಾನಕ್ಕಿಟ್ಟಿದ್ದ ಕಣ್ಣು ಖತಾದರ ಕಣ್ಣುಗಳಲ್ಲಿ ಅತ್ಯಂತ ಸುಂದರವಾಗಿ ಕಾಣಿಸಲಾರಂಭಿಸಿದವು. (ಅಲ್ಬಿದಾಯತುವನ್ನಿಹಾಯ- 3: 332)
ಬದ್ರ್ ದಿನ ಮಧ್ಯಾಹ್ನವಾಗುತ್ತಿದ್ದಂತೆ ಮುಶ್ರಿಕುಗಳು ಪರಾಜಿತರಾಗಿದ್ದರು. ಪ್ರವಾದಿ (ಸ) ರು ಬದ್ರ್ ನಲ್ಲೇ ತಂಗಿದರು. ಅಬ್ದುಲ್ಲಾಹಿಬ್ನು ಕಅಬ ರೊಂದಿಗೆ ಗನೀಮತ್ ಸ್ವತ್ತುಗಳನ್ನು ಒಟ್ಟುಗೂಡಿಸಿ ತರುವಂತೆ ಆಜ್ಞಾಪಿಸಿದರು. ಅಸರ್ ನಮಾಝನ್ನು ಬದ್‌ರ್‌ನಲ್ಲೇ ನಿರ್ವಹಿಸಿದರು. ನಂತರ ಅವರು ಹೊರಟರು. ವಾದಿಲ್ ಅಸೀಲ್‌ನ ಮೂಲಕ ಸಂಚರಿಸಿ, ಬದ್‌ರ್ ನಿಂದ ಸ್ವಲ್ಪ ದೂರದಲ್ಲಿ ಇಳಿದರು. ಸೂರ್ಯಾಸ್ತಮಕ್ಕೂ ಮೊದಲು ಅಲ್ಲಿ ಮುಟ್ಟಿದ್ದರು. ಹಲವರಿಗೆ ಗಾಯವಾಗಿದ್ದವು. ಅನುಯಾಯಿಗಳೊಂದಿಗೆ ಪ್ರವಾದಿ (ಸ) ರು ಕೇಳಿದರು:
'"ಈ ರಾತ್ರಿ ನಮಗೆ ಯಾರು ಕಾವಲು ನಿಲ್ಲುತ್ತಾರೆ ? ”
ಜನರು ನಿಶ್ಯಬ್ಧರಾಗಿದ್ದರು. ಒಬ್ಬರು ಮಾತ್ರ ಎದ್ದು ನಿಂತರು. ರಾತ್ರಿ ಹೊತ್ತಾಗಿರುವುದರಿಂದ ಬೆಳಕೇನೂ ಅಷ್ಟು ಚೆನ್ನಾಗಿರಲಿಲ್ಲ..
''ಯಾರು ನೀನು ? '' ಪ್ರವಾದಿ (ಸ) ಕೇಳಿದರು.
" ದಕ್ವಾನುಬ್ನು ಅಬ್ದು ಖೈಸ್''
" ನೀನು ಕುಳಿತುಕೋ ''
ಪ್ರವಾದಿ (ಸ) ರು ಮತ್ತೆ ತಮ್ಮ ಪ್ರಶ್ನೆಯನ್ನು ಪುನರಾವರ್ತಿಸಿದರು. ಆಗ ಒಬ್ಬರು ಎದ್ದು ನಿಂತರು.
"ಯಾರು ನೀನು ? ”
" ಇಬ್ನು ಅಬ್ದು ಖೈಸ್ ''
“ ನೀನು ಕುಳಿತುಕೋ ? ”
ಸ್ವಲ್ಪ ಸಮಯದ ನಂತರ ಒಬ್ಬರು ಎದ್ದು ನಿಂತರು.
"ಯಾರು ನೀನು ? '' ಪ್ರವಾದಿ (ಸ) ಕೇಳಿದರು.
“ ಅಬೂಸಬ್ ಹ್''
ಸ್ವಲ್ಪ ಸಮಯದ ಬಳಿಕ ಪ್ರವಾದಿ (ಸ) ರು ಹೇಳಿದರು..
'' ನೀವು ಮೂವರು ಎದ್ದು ನಿಂತುಕೊಳ್ಳಿರಿ '' ಆಗ ಒಬ್ಬರು ಮಾತ್ರ ಎದ್ದು ನಿಂತರು. ಅವರು ದಕ್ ವಾನ್ !!!
ಪ್ರವಾದಿ (ಸ) ರು ಕೇಳಿದರು; ನಿನ್ನ ಇನ್ನಿಬ್ಬರು ಸಂಗಡಿಗರು (ಎದ್ದು ನಿಂತ ಇನ್ನಿಬ್ಬರು) ಎಲ್ಲಿ ? '' ತಾವು ಮೂರು ಬಾರಿ ಕೇಳಿದಾಗಲೂ ಎದ್ದು ನಿಂತವನು ನಾನೊಬ್ಬನೇ!!! ದಕ್ವಾನ್ ಹೇಳಿದರು.
''ಅಲ್ಲಾಹನು ನಿನ್ನನ್ನು ರಕ್ಷಿಸಲಿ '' ಪ್ರವಾದಿ (ಸ) ರು ಪ್ರಾರ್ಥಿಸಿದರು.
ಆ ಇಡೀ ರಾತ್ರಿ ದಕ್ವಾನ್ ಮುಸ್ಲಿಮರಿಗೆ ಕಾವಲು ನಿಂತರು.. (ಬದ್ರುಲ್ ಕುಬ್ರಾ , ಡಾ. ಯಮಾನಿ 195).
[
ಖೈದಿಗಳ ಬಿಡುಗಡೆ:
*ಬದ್‌ರ್'ನಲ್ಲಿ* ಎಪ್ಪತ್ತು ಮಂದಿ ಖುರೈಷಿಗಳು ವಧಿಸಲ್ಪಟ್ಟಿದ್ದರು. ಅಷ್ಟೇ ಸಂಖ್ಯೆಯ ಜನರು ಬಂಧಿತರಾಗಿದ್ದರು. ಖೈದಿಗಳನ್ನು ಏನು ಮಾಡಬೇಕೆಂಬ ಪ್ರಶ್ನೆಯನ್ನು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಇದೇ ಮೊದಲ ಬಾರಿ ಎದುರಿಸಿದ್ದರು. ಖುರ್‌ಆನ್ ಸ್ಪಷ್ಟವಾಗಿ ಹೇಳದ ಸಂಶೋಧನೆ ಅಗತ್ಯವಿರುವ ವಿಷಯಗಳಲ್ಲಿ ಪ್ರವಾದಿ (ಸ) ರು ಸಮಾಲೋಚನೆಯ ಮಾರ್ಗವನ್ನು ಸ್ವೀಕರಿಸುತ್ತಿದ್ದರು.
ಅಂತೆಯೇ, ತಮ್ಮ ಅನುಯಾಯಿಗಳಲ್ಲಿ ಕರ್ತವ್ಯ ಪ್ರಜ್ಞೆ ಬಾಹ್ಯ ಜ್ಞಾನ ಹಾಗೂ ಸುಸ್ಪಷ್ಟ ಅಭಿಪ್ರಾಯ ಹೇಳುವ ಸಾಮರ್ಥ್ಯವಿರುವ ಪ್ರಮುಖರನ್ನು ಕರೆದರು. ಚರ್ಚೆ, ಸಮಾಲೋಚನೆಯಲ್ಲಿ ಭಾಗವಹಿಸಿ, ಅಭಿಪ್ರಾಯ ಹೇಳುವಂತೆ ಆಗ್ರಹಿಸಿದರು.
ಪ್ರವಾದಿ (ಸ) ಶಿಷ್ಯರಲ್ಲಿ ಒಬ್ಬೊಬ್ಬರಿಗೆ ಒಂದೊಂದು ವೈಶಿಷ್ಟತೆಯಿದ್ದವು. ಒಬ್ಬೊಬ್ಬರು ಒಂದೊಂದು ರೀತಿಯ ಸ್ವಭಾವದಲ್ಲಿ ಪ್ರವೀಣರಾಗಿದ್ದರು. ವಿನಯ, ಸಹನೆ, ಕರುಣೆ, ಕ್ಷಮಿಸುವುದು ಕೆಲವರ ಮೂಲ ಸ್ವಭಾವವಾಗಿದ್ದವು. ಇನ್ನು ಕೆಲವರ ಸ್ವಭಾವ ನಿಷ್ಟುರವಾಗಿದ್ದವು. ಕಾಠಿಣ್ಯತೆ ಅವರ ಮೂಲಸ್ವಭಾವವಾಗಿದ್ದವು.
ಪ್ರತಿಯೊಬ್ಬರಿಗೂ ತಮ್ಮ ತಮ್ಮ ನಿಲುವುಗಳನ್ನು ಸಮರ್ಥಿಸಲು ಬೇಕಾದ ಕಾರಣಗಳು, ಆಧಾರ, ಪುರಾವೆಗಳಿದ್ದವು. ಖೈದಿಗಳ ಕುರಿತು ವಿಭಿನ್ನವಾದ ಮೂರು ನಿಲುವುಗಳು ಸ್ವಹಾಬಿಗಳ ಸಮಾಲೋಚನೆಯಲ್ಲಿ ಒಡಮೂಡಿದವು. ಅಬೂಬಕ್ಕರ್ (ರ) ಅಭಿಪ್ರಾಯ:
'' ಅಲ್ಲಾಹನ ದೂತರೇ, ಬಂಧಿಗಳು ಬೇರೆ ಯಾರೂ ಅಲ್ಲ. ಅವರು ತಮ್ಮದೇ ಜನತೆ, ಅವರು ಚಿಕ್ಕಪ್ಪ, ದೊಡ್ಡಪ್ಪನ ಮಕ್ಕಳು, ಕುಟುಂಬದ ಸದಸ್ಯರು ಆಗಿದ್ದಾರೆ. ಅವರ ಮೇಲಿನ ವಿಜಯ ಹಾಗೂ ಸಹಾಯವನ್ನು ಅಲ್ಲಾಹನು ತಮಗೆ ನೀಡಿದ್ದಾನೆ. ಅವರನ್ನು ಜೀವಂತವಾಗಿ ಬಿಟ್ಟುಬಿಡಬೇಕೆಂಬುದು ನನ್ನ ಅಭಿಪ್ರಾಯ. ಅವರಿಂದ ನಾವು ಸ್ವೀಕರಿಸಿದ ದಂಡದ ಮೊತ್ತವನ್ನು ನಮ್ಮ ಸಂರಕ್ಷಣೆಗೆ ಬಳಸಿಕೊಳ್ಳಬಹುದು. ಈ ಕಾರಣದಿಂದ ಅವರಲ್ಲಿ ಯಾರಾದರೊಬ್ಬರನ್ನು ಅಲ್ಲಾಹನು ಸನ್ಮಾರ್ಗ ಸ್ವೀಕರಿಸಿ, ತಮ್ಮ ಅನುಯಾಯಿಯನ್ನಾಗಿ ಮಾಡಬಹುದು '' ಅಬೂಬಕ್ಕರ್‌ರ ಅಭಿಪ್ರಾಯವನ್ನು ಪ್ರವಾದಿ (ಸ) ರು ತಾಳ್ಮೆಯಿಂದ ಆಲಿಸಿದರು. ಆದರೆ, ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಲಿಲ್ಲ.
ಉಮರ್ (ರ) ಹೇಳಿದರು:
'' ಅಲ್ಲಾಹನ ದೂತರೇ, ಅವರು ತಮ್ಮನ್ನು ಸುಳ್ಳನೆಂದು ಹೇಳಿ, ಜನವಾಡಿ, ಹೊರದಬ್ಬಿದರು. ತಮ್ಮ ವಧೆಗೆ ಶ್ರಮಿಸಿದರು. ತಮ್ಮೊಂದಿಗೆ ಯುದ್ಧ ಮಾಡಿದರು. ಆದ್ದರಿಂದ ಅಬೂಬಕ್ಕರ್ ರ ಅಭಿಪ್ರಾಯ ನನಗಿಲ್ಲ. ನನ್ನ ಅಭಿಪ್ರಾಯ ಇಷ್ಟೆ. ನನ್ನ ಬಂಧುವನ್ನು ನನ್ನ ಕೈಗೆ ಬಿಟ್ಟು ಕೊಡಿ. ಅವನನ್ನು ನಾನು ವಧಿಸುತ್ತೇನೆ. ಅಲಿಗೆ ಸಹೋದರ ಅಖಿಲ್‌ನನ್ನು ಬಿಟ್ಟು ಕೊಡಿ. ಅವನನ್ನು ಅಲಿ ವಧಿಸಲಿ. ಹಂಝರಿಗೆ ಅಬ್ಬಾಸ್‌ನನ್ನು ಬಿಟ್ಟು ಕೊಡಿರಿ. ಅವನ ಕಥೆ ಹಂಝ ಮುಗಿಸಲಿ. ಹಾಗೆ ನಮ್ಮ ಮನಸ್ಸಲ್ಲಿ ಮುಶ್ರಿಕರೊಂದಿಗೆ ಸ್ನೇಹವಿಲ್ಲವೆಂಬುದನ್ನು ಖಚಿತಪಡಿಸೋಣ. ತಮಗೆ ಖೈದಿಗಳಿರಬೇಕೆಂದು ನಾನು ಅಭಿಪ್ರಾಯ ವ್ಯಕ್ತಪಡಿಸಲಾರೆ. ಯಾರನ್ನೂ ಬಿಡಬೇಡಿ. ನಮ್ಮ ಜೊತೆಗೆ ಯುದ್ಧ ಮಾಡುವ ಮೂಲಕ ನಮ್ಮನ್ನು ವಧಿಸಲು ನೋಡಿದವರನ್ನು ವಧಿಸಿ ಬಿಡುವುದೇ ನ್ಯಾಯಯುತವಾದ ಮಾರ್ಗ. ಬಂಧಿಗಳನ್ನು ವಧಿಸಿರಿ. ಅವರು ಮುಶ್ರಿಕರ ಮುಖಂಡರಾಗಿದ್ದಾರೆ"
ಅಬ್ದುಲ್ಲಾಹಿಬ್ನು ರವಾಹರ ಅಭಿಪ್ರಾಯ ಉಮರ್ (ರ) ಗಿಂತಲೂ ನಿಷ್ಟುರವಾಗಿದ್ದವು;" ಧಾರಾಳ ತರಗೆಲೆಗಳಿರುವ ಒಂದು ಕಣಿವೆಯನ್ನು ಹುಡುಕಿ, ಅಲ್ಲಿ ಬೆಂಕಿ ಹಚ್ಚಬೇಕು. ಆ ಬೆಂಕಿಗೆ ಇವರನ್ನೆಲ್ಲಾ ಎಸೆಯಬೇಕು '' ಇದನ್ನು ಕೇಳಿದಾಗ ಅಬ್ಬಾಸ್ ಪ್ರತಿಕ್ರಿಯಿಸಿದರು. ನಿನಗೆ ನಿನ್ನ ಬಂಧುಗಳು ಇಲ್ಲದಾಗಿ ನೀನು ದುಃಖ ಅನುಭವಿಸುವಂತಾಗಲಿ.
ಸ್ವಹಾಬಿಗಳ ನಡುವೆ ಅಬೂಬಕ್ಕರ್‌ರ ಅಭಿಪ್ರಾಯವನ್ನು ಮಾನ್ಯ ಮಾಡಿದವರೂ, ಉಮರ್ರ ಅಭಿಪ್ರಾಯವನ್ನು ಮಾನ್ಯ ಮಾಡಿದವರೂ ಇದ್ದರು. ಉಮರ್‌ಗೆ ಸಿಕ್ಕ ಬೆಂಬಲ ಕಡಿಮೆಯಾಗಿತ್ತು. ಇಬ್ನು ರವಾಹರ ಅಭಿಪ್ರಾಯವನ್ನು ಕೆಲವರು ಅನುಮೋದಿಸಿದ್ದರು.
ಪ್ರವಾದಿ (ಸ) ರು ಎಲ್ಲರ ಅಭಿಪ್ರಾಯಗಳನ್ನು ಕೇಳಿ, ಏನನ್ನೂ ಪ್ರತಿಯಾಗಿ ಹೇಳದೆ ತಮ್ಮ ಗುಡಾರಕ್ಕೆ ಹಿಂದಿರುಗಿದರು. ಸ್ವಲ್ಪ ಸಮಯದ ಬಳಿಕ ಗುಡಾರದಿಂದ ಹೊರ ಬಂದರು. ಪ್ರವಾದಿ (ಸ) ಗೆ ಅಬೂಬಕ್ಕರ್ (ರ) ರ ಅಭಿಪ್ರಾಯದ ಜೊತೆಗೆ ಸಹಮತವಿದ್ದವು.
ಅಬೂಹಫ್ಸ್ ! ಅಬ್ಬಾಸ್ ರನ್ನು ನಾನು ವಧಿಸಬೇಕೆಂದೇ ತಾವು ಹೇಳುತ್ತಿರುವುದು ? ಎಂದು ಉಮರ್ (ರ) ರೊಂದಿಗೆ ಅವರು ಪ್ರಶ್ನಿಸಿದರು..
"ಉಮರ್ (ರ) ಗೆ ನಾಶ ತಾಯಿಯನ್ನು ಕಳೆದುಕೊಂಡು ಉಮರ್ ಸ್ವಯಂ ದುಃಖವನ್ನು ಅನುಭವಿಸಲಿ '' ಎಂದು ಸ್ವತಃ ಉಮರ್ ತಮ್ಮನ್ನು ಶಪಿಸಿಕೊಂಡರೆಂದೂ ಒಂದು ವರದಿಯಲ್ಲಿದೆ. (ತಪ್ಸೀರ್ ರಾಝಿ 5- 197)
ನಂತರ ಪ್ರವಾದಿ (ಸ) ರು ಹೇಳಿದರು. ಅಲ್ಲಾಹನು ಕೆಲವು ವ್ಯಕ್ತಿಗಳ ಹೃದಯಗಳನ್ನು ಮೆದುಗೊಳಿಸುವನು. ಅದು ಹಾಲಿಗಿಂತಲೂ ನುಣುಪಾಗಿರುತ್ತವೆ. ಇನ್ನು ಕೆಲವರ ಹೃದಯಗಳನ್ನು ಕಠಿಣಗೊಳಿಸುತ್ತಾನೆ. ಅದು ಶಿಲೆಗಿಂತಲೂ ಕಠಿಣವಾಗಿರುತ್ತವೆ..
"ಅಬೂಬಕರ್ ! ಮಲಕುಗಳ ನಡುವೆ ತಾವು ಕರುಣೆಯೊಂದಿಗೆ ಪ್ರತ್ಯೇಕಗೊಳ ಹೋಲುತ್ತೀರಿ '' ಪ್ರವಾದಿಗಳ ನಡುವೆ ತಾವು ಇಬ್ರಾಹೀಮರನ್ನು ಹೋಲುತ್ತೀರಿ. ತಮ್ಮ ಜನತೆಯ ಕುರಿತು ಅವರು
" ಯಾರು ನನ್ನನ್ನು ಅನುಸರಿಸುತ್ತಾರೋ ಅವರು ನನಗೆ ಸೇರಿದವರು. ಯಾರು ನನ್ನನ್ನು ದಿಕ್ಕರಿಸುತ್ತಾರೋ (ಅಲ್ಲಾಹನೇ) ನೀನು ಕ್ಷಮಿಸುವವನೂ , ಕರುಣಾಮಯಿಯೂ ಆಗಿರುವೆ. ಎಂದಲ್ಲವೇ??
ಅಬೂಬಕರ್ ! ತಮ್ಮ ನಿಲುವು ಈಸಾ (ಅ) ರ ನಿಲುವಿನಂತಿದೆ. ಈಸಾ ತಮ್ಮ ಜನತೆಯ ಕುರಿತು ಅಲ್ಲಾಹನೊಂದಿಗೆ,
'' ನೀನು ಅವರನ್ನು ಶಿಕ್ಷಿಸುವುದಾದರೆ ಅವರು ನಿನ್ನ ದಾಸರಾಗಿದ್ದಾರೆ. ಅವರಿಗೆ ಕ್ಷಮೆ ನೀಡುವೆಯಾದರೆ ನಿಶ್ಚಯ, ನೀನು ಪ್ರತಾಪಶಾಲಿಯೂ, ತಂತ್ರಶಾಲಿಯೂ ಆಗಿರುವೆ.." ಎಂದು ಖುರ್‌ಆನ್ ಹೇಳಿದೆ.
“ಉಮರ್, ಪ್ರವಾದಿಗಳಲ್ಲಿ ತಾವು ನೂಹ್ ರನ್ನು ಹೋಲುತ್ತೀರಿ. ಅವರು ಹೇಳುತ್ತಾರೆ: ನಾಥಾ.. ಸತ್ಯ ನಿಷೇಧಿಗಳಲ್ಲಿ ಒಬ್ಬನನ್ನೂ ನೀನು ಭೂಮಿಯ ಮೇಲೆ ಉಳಿಸಬಾರದು. ನೀನು ಅವರನ್ನು ಉಳಿಸಿದರೆ ನಿನ್ನ ದಾಸರನ್ನು ಅವರು ದಾರಿ ತಪ್ಪಿಸುವರು. ಕೃತಘ್ನರನ್ನಲ್ಲದೆ ಅವರು ಇನ್ನೊಬ್ಬರನ್ನು ಹುಟ್ಟಿಸಲಾರರು '' (ಪವಿತ್ರ ಖುರ್ ಆನ್-10: 88)
"ಉಮರ್ ! ಪ್ರವಾದಿಗಳಲ್ಲಿ ತಾವು ಮೂಸಾರನ್ನು ಹೋಲುತ್ತೀರಿ. ಅವರು ಹೇಳುತ್ತಾರೆ; ನಮ್ಮ ನಾಥಾ ! ಅವರ ಸಂಪತ್ತನ್ನು ನೀನು ನಾಶ ಮಾಡು. ಅವರ ಹೃದಯಗಳಲ್ಲಿ ಮುದ್ರೆ ಹಾಕು, ನೋಯಿಸುವ ಶಿಕ್ಷೆಯನ್ನು ಕಾಣುವವರೆಗೂ ಅವರು ವಿಶ್ವಾಸ ತಾಳುವುದಿಲ್ಲ.." (ಖುರ್‌ಆನ್: 10:88)
ನಂತರ ಅಬೂಬಕರ್ ಹಾಗೂ ಉಮರ್ (ರ) ರೊಂದಿಗೆ ಪ್ರವಾದಿ (ಸ) ಹೇಳಿದರು:
'' ನೀವಿಬ್ಬರೂ ಪರಸ್ಪರ ಒಮ್ಮತ ಅಭಿಪ್ರಾಯ ಹೊಂದಿದ್ದರೆ, ನಾನು ನಿಮ್ಮೊಂದಿಗೆ ಭಿನ್ನಾಭಿಪ್ರಾಯ ತಾಳುತ್ತಿರಲಿಲ್ಲ ! ಒಂದು ವರದಿಯಲ್ಲಿ ಪ್ರವಾದಿ (ಸ) ರು ಹೀಗೆ ಹೇಳಿರುವುದಾಗಿ ಕಾಣಬಹುದು. ನಿಮ್ಮಿಚ್ಚೆಯಂತೆ ಅವರನ್ನು ವಧಿಸಬಹುದು. ನಿಮ್ಮ ಇಷ್ಟದಂತೆ ಅವರಿಂದ ಬಿಡುಗಡೆ ಮೊತ್ತವನ್ನು ಸ್ವೀಕರಿಸಬಹುದು: ಬಿಡುಗಡೆ ಮೊತ್ತವನ್ನು ಪಡೆದು, ಖೈದಿಗಳನ್ನು ಬಿಡುಗಡೆ ಮಾಡಲು ಸ್ವಹಾಬಿಗಳು ತೀರ್ಮಾನಿಸಿದರು. ಮುಂದಿನ ವರ್ಷ ಉಹ್ದ್ ಯುದ್ಧದಲ್ಲಿ ಎಪ್ಪತ್ತು ಮಂದಿ ಸ್ವಹಾಬಿಗಳು ಹುತಾತ್ಮರಾದರು (ಅಸ್ಸಿರತುಲ್ ಹಲಬಿಯ್ಯಾ)
ಖೈದಿಗಳನ್ನು ಸ್ವಹಾಬಿಗಳು ತಮಗೆ ಇಷ್ಟ ಬಂದಂತೆ ನಡೆಸಿಕೊಳ್ಳಬಹುದು. ಬಿಡುಗಡೆ ಮೊತ್ತು ಪಡೆದು ಅವರನ್ನು ಬಿಟ್ಟು ಬಿಡಬಹುದು ಅಥವಾ ಅವರಿಗೆ ಮರಣ ದಂಡನೆಯನ್ನು ನೀಡಬಹುದು ಎಂಬ ನಿರ್ದೇಶನವನ್ನು ಮುಂದಿಟ್ಟವರು ಜಿಬ್ರೀಲರಾಗಿದ್ದರು ಎಂಬ ಅಭಿಪ್ರಾಯವೂ ಇದೆ.(ಅಲ್ ಬಿದಾಯತುವನ್ನಿಹಾಯ- 3: 340, 341)
ಖೈದಿಗಳ ಕುರಿತು ನಿರ್ಧಾರದಿಂದ ಸುಹೈಲ್‌ಬ್‌ನು ಬೈಳಾಇಯವರಿಗೆ ರಿಯಾಯಿತಿ ಅಬ್ದುಲ್ಲಾಹಿಬ್ನು ಮಸ್ ಊದ್ (ರ) ಪ್ರವಾದಿ (ಸ) ಯೊಂದಿಗೆ ಆಗ್ರಹಿಸಿದರು. ಸುಹೈಲ್ ಇಸ್ಲಾಮ್‌ನ ಕುರಿತು ಮಾತನಾಡಿಸುತ್ತಿರುವುದನ್ನು ನಾನು ಕೇಳಿದ್ದೇನೆ ಎಂಬುದು ಅವರು ನೀಡಿದ ಕಾರಣವಾಗಿತ್ತು.. ಆದರೆ, ಪ್ರವಾದಿ (ಸ) ರು ಮೌನ ಪಾಲಿಸಿದರು. ಆಕಾಶದಿಂದ ದೊಡ್ಡದೊಂದು ಕಲ್ಲು ತಲೆಯ ಮೇಲೆ ಬೀಳುವುದಕ್ಕಿಂತಲೂ ಹೆಚ್ಚು ಭಯ ಆ ಸಂದರ್ಭದಲ್ಲಿ ನನಗಿತ್ತು ಎಂದು ಇಬ್ನು ಮಸ್ ಊದ್ ನೆನಪಿಸಿಕೊಳ್ಳುತ್ತಾರೆ.. ಅಲ್ಪ ಸಮಯದ ಮೌನದ ನಂತರ ಪ್ರವಾದಿ (ಸ) ರು ಹೇಳಿದರು: ಸುಹೈಲ್ ಬ್ನು ಬೈಳಾಇ ಹೊರತುಪಡಿಸಿ..
ಪ್ರವಾದಿ (ಸ) ರು ಖೈದಿಗಳ ಪದವಿ, ಸಾಮಾಜಿಕ ಸ್ಥಾನಮಾನ, ಆರ್ಥಿಕ ಸ್ಥಿತಿಗತಿಗಳನ್ನು ಪರಿಗಣಿಸಿ, ದಂಡದ ಮೊತ್ತವನ್ನು ನಿಗದಿಪಡಿಸಿದರು. ನಾಲ್ಕು ಸಾವಿರ ದಿರ್ಹಮ್, ಮೂರು ಸಾವಿರ ದಿರ್ಹಮ್, ಎರಡು ಸಾವಿರ ದಿರ್ಹಮ್, ಸಾವಿರ ದಿರ್ಹಮ್ ಎಂಬ ಕ್ರಮದಲ್ಲಿ ಮೊತ್ತವನ್ನು ಸ್ವೀಕರಿಸುವಂತೆ ಆಜ್ಞಾಪಿಸಿದರು.. ಹತ್ತು ಮುಸ್ಲಿಮ್ ಮಕ್ಕಳಿಗೆ ಓದು ಹಾಗೂ ಬರವಣಿಗೆ ಕಲಿಸುವುದಕ್ಕೆ ಕೆಲವರಿಗೆ ಬಿಡುಗಡೆಯ ಮೊತ್ತವಾಗಿ ನಿಶ್ಚಯಿಸಲಾಯಿತು. ಇಂತಹದೊಂದು ಬಿಡುಗಡೆ ಮೊತ್ತವನ್ನು ನಿಶ್ಚಯಿಸಿರುವುದು ಬಹುಷಃ ಚರಿತ್ರೆಯಲ್ಲೇ ಇದೇ ಮೊತ್ತ ಮೊದಲ ಬಾರಿಯಾಗಿರಬೇಕು. ಕೆಲವರಿಂದ ಏನನ್ನೂ ಪಡೆಯದೆ ಬಿಡುಗಡೆ ಮಾಡಲಾಯಿತು. ಈ ವೇಳೆ ಒಂದು ಖುರ್ ಆನ್ ವಚನ ಅವತೀರ್ಣಗೊಲಡವು.
“ಭೂಮಿಯಲ್ಲಿ ಶತ್ರುಗಳನ್ನು ಚೆನ್ನಾಗಿ ಸದೆಬಡಿಯುವವರೆಗೂ ತನ್ನ ಬಳಿ ಸೆರೆಯಾಳುಗಳಿರುವುದು ಓರ್ವ ಪ್ರವಾದಿಗೆ ಶೋಭಿಸುವುದಿಲ್ಲ. ನೀವು ಲೌಕಿಕ ಲಾಭಗಳನ್ನು ಬಯಸುತ್ತೀರಿ, ವಸ್ತುತಃ ಅಲ್ಲಾಹನ ದೃಷ್ಟಿಯಲ್ಲಿ ಪರಲೋಕವಿದೆ. ಅಲ್ಲಾಹ್ ಮಹಾಪ್ರತಾಪಿಯೂ ಧೀಮಂತನೂ ಆಗಿರುತ್ತಾನೆ. ಅಲ್ಲಾಹನ ವಿಧಿಯು ಮೊದಲೇ ಲಿಖಿತಗೊಂಡಿಲ್ಲದಿರುತ್ತಿದ್ದರೆ, ನೀವು ಪಡೆದುದರ ಫಲವಾಗಿ ನಿಮಗೆ ಘೋರ ಶಿಕ್ಷೆ ಸಿಗುತ್ತಿತ್ತು. ಆದುದರಿಂದ ನೀವು ಪಡೆದಿರುವ ಧರ್ಮಬದ್ದವೂ ಶುದ್ಧವೂ ಆಗಿರುವ ಸೊತ್ತನ್ನು ಅನುಭೋಗಿಸಿಕೊಳ್ಳಿರಿ ಮತ್ತು ಅಲ್ಲಾಹನನ್ನು ಭಯಪಡುತ್ತಲಿರಿ. ನಿಶ್ಚಯವಾಗಿಯೂ ಅಲ್ಲಾಹ್ ಕ್ಷಮಾ ಶೀಲನೂ ಕರುಣಾನಿಧಿಯೂ ಆಗಿರುತ್ತಾನೆ" (ಖುರ್ ಆನ್- 8: 67- 69)
ದಂಡದ ಮೊತ್ತವನ್ನು ಪಡೆದು ಬಂಧಿಗಳನ್ನು ಬಿಡುಗಡೆ ಮಾಡುವ ನಿಲುವಿಗೆ ಅನುಕೂಲಕರವಾಗಿ ಪ್ರತಿಕ್ರಿಯಿಸಿದರಲ್ಲಿ ಪ್ರವಾದಿ (ಸ) ಗೆ ತೀವ ದುಃಖವಾಗಿದ್ದವು. ಪ್ರವಾದಿ (ಸ) ಯ ದುಃಖ ಕಂಡು ಅಂತಹದೊಂದು ನಿಲುವು ಪ್ರಕಟಿಸಿದ್ದಕ್ಕೆ ಅಬೂಬಕ್ಕರ್ (ರ) ಸಹ ದುಃಖ ವ್ಯಕ್ತಪಡಿಸಿದರು. ಖುರ್ ಆನ್ ವಾಕ್ಯಗಳಲ್ಲಿ ಬಂಧಿಗಳನ್ನು ಬಿಡುಗಡೆ ಮಾಡಿರುವುದನ್ನು ವಿಮರ್ಶಿಸುವುದರ ಜೊತೆಗೆ ಕ್ಷಮೆಯ ವಿಷಯವನ್ನೂ ಸಹ ಸೂಚಿಸಲಾಗಿದೆ.. ಆದರೂ, ಪ್ರವಾದಿ (ಸ) ಗೆ ದುಃಖವಾಗಿದ್ದವು.
" ಈ ವಿಷಯದಲ್ಲಿ ನಾವೆಲ್ಲರೂ ಶಿಕ್ಷಿಸಲ್ಪಡುವುದಾದರೆ, ತಮ್ಮನ್ನು ಹೊರತುಪಡಿಸಿ ಇನ್ಯಾರೂ ರಕ್ಷಣೆ ಹೊಂದಲಾರರು ಉಮರ್" ಎಂದು ಅವರು ಹೇಳಿದ್ದರು.
ಮುಶ್ರಿಕರನ್ನು ವಧಿಸದೆ ಬಂಧಿಸುವ ನಿರ್ಧಾರವನ್ನು ಸಅದ್ ಬುನು ಮುಆದ್ ಪ್ರಶ್ನಿಸಿದ ಘಟನೆ ಪ್ರಸಿದ್ಧವಾಗಿದೆ. ಇಂತಹ ಸಂದರ್ಭದಲ್ಲಿ ಯುದ್ಧ ಸಂಪತ್ತನ್ನು ಸ್ವೀಕರಿಸಲು ಮುಸ್ಲಿಮರು ಒಪ್ಪಿಕೊಳ್ಳಲಿಲ್ಲ. ಆಗ ಸಮ್ಮತಾರ್ಹ - ರುಚಿಕರವಾದ ರೀತಿಯಲ್ಲಿ ಸೇವಿಸಿರಿ ಎಂಬ ಆಜ್ಞೆ ಅವತೀರ್ಣಗೊಂಡವು. ಎಂದು ಖುರ್‌ಆನ್ ವ್ಯಾಖ್ಯಾನಕಾರರು ಹೇಳುತ್ತಾರೆ.
ಖೈದಿಗಳನ್ನು ಬಿಡುಗಡೆ ಮಾಡಿ, ಕರೆ ತರುವ ವಿಷಯದಲ್ಲಿ ಖುರೈಷಿಗಳು ಮೊದ ಮೊದಲು ನಿರ್ಲಕ್ಷ್ಯ ತೋರಿದ್ದರು. ತಮ್ಮ ದಯನೀಯತೆಯನ್ನು ಮುಸ್ಲಿಮರು ಸಂಭ್ರಮಿಸಲು ಹಾಗೂ ದಂಡದ ಮೊತ್ತವನ್ನು ವರ್ಧಿಸಲು ತಮ್ಮ ಅವಸರವು ಕಾರಣವಾಗಬಹುದೆಂದು ಅವರು ಹೆದರಿದ್ದರು..
ಮುತ್ತಲಿಬ್ ನು ಅಬೂವಿದಾಅಃ ಬಿಡುಗಡೆಯನ್ನು ಆಗ್ರಹಿಸಿ ಮದೀನಕ್ಕೆ ಆಗಮಿಸಿದ ಮೊದಲ ಖುರೈಷಿಯಾಗಿದ್ದರು. ಖುರೈಷಿಗಳು ತಡೆಯದಿರಲು ಅವರು ರಹಸ್ಯವಾಗಿ ಮದೀನಕ್ಕೆ ಹೋಗಿದ್ದರು. ನಾಲ್ಕು ಸಾವಿರ ದಿರ್ಹಮ್ ಬಿಡುಗಡೆ ಮೊತ್ತವಾಗಿ ನೀಡಿ, ತಮ್ಮ ತಂದೆಯನ್ನು ಬಂದ ಮುಕ್ತ ಗೊಳಿಸಿ ಕರೆದೊಯ್ದರು.
ಆ ನಂತರ ಬಂಧಿಗಳ ಬಂಧುಗಳು ಮಕ್ಕಾದಿಂದ ನಿರಂತರವಾಗಿ ಆಗಮಿಸುತ್ತಿದರು. ಖೈದಿಗಳ ವಿಷಯದಲ್ಲಿ ಮಾತನಾಡಲು ಜುಬೈರ್‌ಬ್ನು ಮುತ್ ಇಂ ಮದೀನಕ್ಕೆ ಆಗಮಿಸಿದರು. ಅವರೊಂದಿಗೆ ಪ್ರವಾದಿ (ಸ) ಯವರು ಹೇಳಿದರು.
'' ವೃದ್ಧನಾದ ನಿನ್ನ ತಂದೆ ಈಗ ಜೀವಿಸಿದ್ದು, ಖೈದಿಗಳ ವಿಷಯ ಮಾತನಾಡಲು ನಮ್ಮನ್ನು ಭೇಟಿಯಾಗಿದ್ದಿದ್ದರೆ ನಾವು ಅವರ ಶಿಫಾರಸ್ಸನ್ನು ಅಂಗೀಕರಿಸುತ್ತಿದ್ದೆವು. ಖೈದಿಗಳನ್ನು ಬಂಧಮುಕ್ತಗೊಳಿಸುತ್ತಿದ್ದೆವು.."
ತಾಇಫ್‌ನಿಂದ ಮರಳುವಾಗ ಪ್ರವಾದಿ (ಸ) ಗೆ ಅಭಯ ನೀಡಿದವರೂ, ಪ್ರವಾದಿ (ಸ) ಹಾಗೂ ಕುಟುಂಬದ ಮೇಲಿನ ಅನ್ಯಾಯದ ಬಹಿಷ್ಕಾರವನ್ನು ರದ್ದುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲಿ ಒಬ್ಬರಾಗಿದ್ದರು ಜುಬೈರ್‌ರ ತಂದೆ ಮುತ್ ಇಂ. ತಮಗೆ ಸಹಾಯ ಮಾಡಿದವರನ್ನು ಪ್ರವಾದಿ (ಸ) ರು ಎಂದೂ ಮರೆಯುತ್ತಿರಲಿಲ್ಲ.
ಅಬೂಸುಫಿಯಾನ್ರ ಪುತ್ರ ಅಮ್ರ್ ಬಿನ್ ಅಬೀಸುಫಿಯಾನ್‌ರನ್ನು ಅಲಿ (ರ) ಬಂಧಿಸಿದ್ದರು. ಬಿಡುಗಡೆ ಮೊತ್ತವನ್ನು ನೀಡಿ, ಪುತ್ರನನ್ನು ಕರೆದುಕೊಂಡು ಬರಲು ಅಬೂಸುಫಿಯಾನ್ ನಿರಾಕರಿಸಿದರು. ರಕ್ತ ಮತ್ತು ಹಣವನ್ನು ನನ್ನ ಒಮ್ಮೆಲೆ ಹೇರುವ ಪ್ರಯತ್ನವೇ ? ಅವರು ಹನ್‌ಳಲನ್ನು (ಇನ್ನೊರ್ವ ಪುತ್ರ) ಕೊಂದರು. ಈಗ ಅಮ್ರ್ ನ ಬಿಡುಗಡೆಗೆ ನಾನು ಹಣ ನೀಡಬೇಕೆ ? ಅವನು ಅವರ ಬಂಧನದಲ್ಲಿ ಇರಲಿ. ಅವರಿಗೆ ಇಷ್ಟವಿದ್ದಷ್ಟು ದಿನ ಅವರು ಅವನನ್ನು ಬಂಧನದಲ್ಲಿರಿಸಲಿ '' ಅಬೂಸುಫಿಯಾನ್ ಹಠ ಹಿಡಿದಿದ್ದರು..
ಈ ನಡುವೆ ಅಬೂಸುಫಿಯಾನ್‌ರಿಗೆ ಪ್ರತೀಕಾರಕ್ಕೆ ಅವಕಾಶ ಲಭಿಸಿದವು. ಅವರ ಪುತ್ರ ಮದೀನದಲ್ಲಿ ಬಂಧನದಲ್ಲಿರಬೇಕಾದರೆ, ಸಅದ್ ಬುನು ನುಅ್ ಮಾನ್ ಉಮ್ರಾ ನಿರ್ವಹಿಸಲು ಮಕ್ಕಾಕೆ ಆಗಮಿಸಿದರು.. ನಖೀಅ್ ನಲ್‌ನಲ್ಲಿದ್ದ ತಮ್ಮ ಆಡಿನ ಹಿಂಡುಗಳ ಬಳಿಯಿಂದ ವೃದ್ಧರಾದ ಸಅದ್ ನೇರವಾಗಿ ಉಮ್ರಾ ನಿರ್ವಹಿಸಲೆಂದು ಮಕ್ಕಾಕ್ಕೆ ತೆರಳಿದ್ದರು. ತೀರ್ಥಯಾತ್ರಿಕರಾಗಿ ಮಕ್ಕಾಕೆ ಆಗಮಿಸುವವರೊಂದಿಗೆ ಖುರೈಷಿಗಳು ಕೆಟ್ಟದಾಗಿ ವರ್ತಿಸಲಾರರು ಎಂಬ ಭರವಸೆಯಿಂದ ಅವರು ಅಲ್ಲಿಗೆ ತೆರಳಿದ್ದರು. ಅಬೂಸುಫಿಯಾನ್ ಕಅಬಾಲಯದ ಸಮೀಪದಲ್ಲಿ ಸಅದ್ ರ ಮೇಲೆ ಮುಗಿಬಿದ್ದನು. ಪುತ್ರನಿಗೆ ಬದಲಾಗಿ ಸಅದ್ ರನ್ನು ಬಂಧನದಲ್ಲಿರಿಸಿದರು. ಸಅದ್ರ ಕುಟುಂಬಸ್ಥರು ಪ್ರವಾದಿ (ಸ)ರನ್ನು ಭೇಟಿಯಾಗಿ
ಅಮ್ರ್'ಬ್'ನ್ ಅಬೀಸುಫಿಯಾನ್ ರನ್ನು ಬಿಟ್ಟು, ತನ್ನ ತಂದೆಯನ್ನು ರಕ್ಷಿಸಬೇಕೆಂದು ಮೊರೆಯಿಟ್ಟರು. ಪ್ರವಾದಿ (ಸ) ರು ಅವರ ಮೊರೆಗೆ ಸ್ಪಂದಿಸಿ, ಅಬೂಸುಫಿಯಾನ್ರ ಪುತ್ರನನ್ನು ಬಿಡುಗಡೆಗೊಳಿಸಿದರು.
ಪ್ರವಾದಿ (ಸ) ರ ಅಳಿಯ ಅಬುಲ್ ಅಸ್ ಬ್ನು ರಬೀಅ ಬದ್ರ್ ಯುದ್ದದ ವೇಳೆ ಶತ್ರು ಪಾಳಯದಲ್ಲಿದ್ದರು (ಮುಂದೆ ಅವರು ಇಸ್ಲಾಂ ಸ್ವೀಕರಿಸುತ್ತಾರೆ). ಅವರು ಝೈನಬರ ಪತಿ, ಗಂಡನ ಬಿಡುಗಡೆಗಾಗಿ ಝೈನಬ (ರ) ತಮ್ಮ ಮೈದುನನೊಂದಿಗೆ ಸರವೊಂದನ್ನು ಕಳುಹಿಸಿಕೊಟ್ಟಿದ್ದರು. ಬಿಳಿ ಕಲ್ಲು ಪೋಣಿಸಿದ್ದ ಬೆಳ್ಳಿಯ ಸರ ಅದು. ಆ ಸರವನ್ನು ರೈುನಬ್ರ ಮದುವೆಯ ದಿನದಂದು ಅವರ ತಾಯಿ ಖದೀಜಾ (ರ) ಉಡುಗೊರೆಯಾಗಿ ನೀಡಿದ್ದರು. ಒಂದು ಕಾಲದಲ್ಲಿ ಖದೀಜರ ಕತ್ತಿನಲ್ಲಿ ತೂಗುತ್ತಿದ್ದ ಆ ಸರವನ್ನು ಕಂಡಾಗ ಪ್ರವಾದಿ (ಸ) ಯ ಮುಖದಲ್ಲಿ ದುಃಖ ಮಳೆಗರೆದವು.
ಸಂಕಟ ತಡೆಯಲಾರದೆ ಅವರ ಕಣ್ಣಲ್ಲಿ ಆಶ್ರುಧಾರೆ ಸುರಿದವು.
"ನಿಮ್ಮ ವಿರೋಧವಿಲ್ಲದಿದ್ದರೆ ಖೈದಿಯನ್ನು ಬಿಡುಗಡೆಗೊಳಿಸಿ, ಮಕ್ಕಳಿಗೆ ಸರವನ್ನು ಹಿಂದಿರುಗಿಸಬಹುದಿತ್ತು” ಎಂದು ಅನುಯಾಯಿಗಳೊಂದಿಗೆ ಹೇಳಿದರು. ಅನುಯಾಯಿಗಳು ಆ ಸರವನ್ನು ಹಿಂದಿರುಗಿಸಿದರು.
ಪ್ರವಾದಿ (ಸ) ಯ ಪುತ್ರಿಯರಲ್ಲಿ ರುಖಿಯ್ಯ, ಉಮ್ಮುಕುಲ್ಸುಂ,ಝೈನಬಾ ಮೊದಲಾದವರು ಪ್ರವಾದಿತ್ವ ಪ್ರಾಪ್ತವಾಗುವುದಕ್ಕೂ ಮೊದಲೇ ವಿವಾಹಿತರಾಗಿದ್ದರು. ದೈವಿಕ ಸಂದೇಶ ಲಭಿಸಿ, ಅದನ್ನು ಪ್ರಚಾರ ಮಾಡುತ್ತಿರಬೇಕಾದರೆ ಪ್ರವಾದಿ (ಸ) ಯನ್ನು ಮಾನಸಿಕವಾಗಿ ಹಣಿಯುವ ಉದ್ದೇಶದಿಂದ ರುಖಿಯ್ಯ, ಹಾಗೂ ಉಮ್ಮುಕುಲ್ಸುಮ್‌ರಿಗೆ ಅವರ ಗಂಡಂದಿರುವ ವಿವಾಹ ವಿಚ್ಛೇಧನೆ ನೀಡಿದ್ದರು. ಝೈನಬರಿಗೆ ವಿವಾಹ ವಿಚ್ಚೇದನೆ ನೀಡುವಂತೆ ಅಬುಲ್ ಆಸ್ ಮೇಲೆ ಖುರೈಷಿಗಳು ಒತ್ತಡ ಹೇರಿದ್ದರು. ಅದರ ಬದಲಿಗೆ ಖುರೈಷಿಗಳಲ್ಲಿ ನೀನು ಯಾವ ಸುಂದರಿಯನ್ನು ಬಯಸುತ್ತಿಯೋ ಆಕೆಯನ್ನು ನಿನಗೆ ವಿವಾಹ ಮಾಡಿಕೊಡುವುದಾಗಿ ಅವರು ಪ್ರಭೋಧನೆ ಒಡ್ಡಿದ್ದರು. ಆದರೆ, ಅಬುಲ್ ಆಸ್ ಖುರೈಷಿಗಳ ಒತ್ತಡಕ್ಕೆ ಮಣಿದಿರಲಿಲ್ಲ.
"ಈ ಲೋಕದ ಸರ್ವ ಸುಂದರಿಯರನ್ನು ನೀವು ನನಗೆ ಕೊಟ್ಟರೆ ಅದು ಅವಳಿಗೆ ಸಮಾನವಾಗಲಾರದು" ಎಂದು ಅಬುಲ್ ಆಸ್ ಖುರೈಷಿಗಳೊಂದಿಗೆ ಹೇಳಿದ್ದರು.
ಆದರೆ, ಬಂಧಮುಕ್ತಗೊಳಿಸಬೇಕಾದರೆ ಪ್ರವಾದಿ (ಸ) ರು ಅಬುಲ್ ಆಸ್ ರ ಮುಂದೆ ಷರತ್ತೊಂದು ಇಟ್ಟರು.
'' ಅಬುಲ್ ಆಸ್, ಈಗ ನಿನ್ನನ್ನು ನಾವು ಬಂಧಮುಕ್ತಗೊಳಿಸುತ್ತೇವೆ. ಆದರೆ ಅದಕ್ಕೆ ಬದಲಾಗಿ ನೀನು ಝೈನಬಳನ್ನು ಮದೀನಕ್ಕೆ ಕಳುಹಿಸಿಕೊಡಬೇಕು. ಮಕ್ಕಾಕೆ ತಲುಪಿದೊಡನೇ ಈ ಕೆಲಸವನ್ನು ನೀನು ಮಾಡಬೇಕು"
ಅಬುಲ್ ಆಸ್ ಒಪ್ಪಿಕೊಂಡರು. ಅಬುಲ್ ಆಸ್ರ ಜೊತೆ ಝೈದ್ ಬ್ನು ಹಾರಿಸ್ ಹಾಗೂ ಓರ್ವ ಅನ್ಸಾರಿಯನ್ನು ಕಳುಹಿಸಿಕೊಟ್ಟರು.
ಅಬುಲ್ ಆಸ್ ಮಾತಿಗೆ ತಪ್ಪಲಿಲ್ಲ. ಪ್ರವಾದಿ (ಸ) ಯ ದೂತರಿಬ್ಬರು ಕಾದು ನಿಂತಿದ್ದ ಬತ್ವ್ ನ್ ಯಅ್ ಜಅ್ ಎಂಬ ಸ್ಥಳದವರೆಗೆ ತಮ್ಮ ಸಹೋದರನೊಂದಿಗೆ ಝೈನಬರನ್ನು ಕಳುಹಿಸಿದರು. ಖುರೈಷಿಗಳು ನೋಡುತ್ತಿದ್ದಂತೆ ಝೈನಬ್ ಪತಿಯ ಸಹೋದರ ಅಮ್ರ್ ನೊಂದಿಗೆ ಮದೀನದತ್ತ ಯಾತ್ರೆ ಹೊರಟರು. ಇದು ಖುರೈಷಿಗರನ್ನು ಕುಪಿತರನ್ನಾಗಿಸಿದವು. ಅವರು ಝೈನಬರನ್ನು ಬೆನ್ನಟ್ಟಿದರು. ಅವರನ್ನು ಬೆದರಿಸುವ ಪ್ರಯತ್ನ ಮಾಡಿದರು. ಹಬ್ಬಾರುಬ್ ನುಲ್ ಅಸ್ವದ್ ಎಂಬಾತ ಒಂಟೆಗೆ ಕೋಲಿನಿಂದ ಹೊಡೆದನು. ಗರ್ಭಿಣಿಯಾಗಿದ್ದ ಝೈನಬಾ ನೆಲಕ್ಕೆ ಬಿದ್ದರು. ಅವರಿಗೆ ರಕ್ತ ಸ್ರಾವವಾದವು...
ಅಮ್ರ್ ಬಿನ್ ರಬೀಅ ಧೈರ್ಯ ಪ್ರಕಟಿಸಿದರು. ಬಿಲ್ಲು ಬಾಣದೊಂದಿಗೆ ಖುರೈಷಿಗಳ ಮುಂದೆ ನಿಂತು.. '' ದೇವರ ಮೇಲಾಣೆ, ಯಾರಾದರು ಅವಳನ್ನು ಸಮೀಪಿಸುವ ಧೈರ್ಯ ತೋರಿದರೆ ಅವನ ಕತ್ತು ಸೀಳಿ ಬಿಡುತ್ತೇನೆ '' ಎಂದು ಅಬ್ಬರಿಸಿದರು.
ಆಗ ಆಬೂಸುಫಿಯಾನ್ ಮಧ್ಯಪ್ರವೇಶಿಸಿದರು. ಬಿಲ್ಲು ಬಾಣ ಕೆಳಗಿಡುವಂತೆ ಕೋರಿದರು. ಈಗ ನಾವು ನಿಮ್ಮನ್ನು ಬಿಟ್ಟು ಹಿಂದಿರಿಗಿದರೆ ನಮ್ಮ ಜನರು ನಮ್ಮನ್ನು ಹೇಡಿಗಳೆಂದು ಕರೆದು ಮೂದಲಿಸುತ್ತಾರೆ. ಮೊದಲೇ ನಾವು ಸೋಲಿನಿಂದ ಜರ್ಜರಿತರಾಗಿಬಿಟ್ಟಿದ್ದೇವೆ. ಇನ್ನು ಇದೂ ಸೇರಿಬಿಟ್ಟರೆ ಖಂಡಿತ ನಮ್ಮ ಜನರು ನಮ್ಮನ್ನು ದೂರ ಮಾಡುತ್ತಾರೆ. ಆದ್ದರಿಂದ ನೀವೀಗ ನಮ್ಮ ಜೊತೆಗೆ ಬರಬೇಕು. ಈ ಘಟನೆ ಜನರ ಮನಸ್ಸಿನಿಂದ ಕಣ್ಮರೆಯಾಗುತ್ತಿದ್ದಂತೆ ನೀವು ಯಾರಿಗೂ ತಿಳಿಯದಂತೆ ಮದೀನಕ್ಕೆ ಹೊರಟು ಹೋಗಬಹುದು.. ಎಂದು ಅಬೂಸುಫಿಯಾನ್ ಹೇಳಿದರು. ಅಮ್ರ್ ಅದಕ್ಕೆ ಒಪ್ಪಿಕೊಂಡರು.
ಅಂತೆಯೇ, ಕೆಲವು ದಿನಗಳ ಬಳಿಕ ಅಮ್ರ್ ಒಂದು ರಾತ್ರಿ ಝೈನಬರನ್ನು ಪ್ರವಾದಿ (ಸ) ಯ ದೂತರ ಬಳಿಗೆ ಕರೆದೊಯ್ದರು. ಅಷ್ಟರಲ್ಲಾಗಲೇ ಬದ್ರ್ ಯುದ್ಧ ಮುಗಿದು ಎರಡು ತಿಂಗಳು ಕಳೆದಿದ್ದವು.
ಸುಹೈಲ್‌ಬ್ನು ಅಮ್ರಿಲ್ ಆಮುರಿ ಅಜ್ಞಾನ ಕಾಲದ ಖುರೈಷಿಗಳ ನಡುವಿನ ಚತುರ ವಾಗ್ಮಿ ಹಾಗೂ ಜ್ಞಾನಿಯಾಗಿದ್ದರು. ಸುಹೈಲ್ ರನ್ನು ಕಂಡು ಉಮರ್ (ರ) ಪ್ರವಾದಿ (ಸ) ಯೊಂದಿಗೆ ಹೇಳಿದರು.
“ನನಗೆ ಅನುಮತಿ ನೀಡಿರಿ, ಅವನ ಹಲ್ಲು ಉದುರಿಸಿ ಬಿಡುತ್ತೇನೆ. ಇನ್ನು ಮುಂದೆ ನಿಮ್ಮ ಬಗ್ಗೆ ಅಸಹ್ಯಕರವಾಗಿ ಅವನು ಯಾವ ವೇದಿಕೆಯಲ್ಲೂ ಮಾತನಾಡಬಾರದು ''
ಆಗ ಪ್ರವಾದಿ (ಸ) ರು ಹೇಳಿದರು. '' ಅವನ ಮುಖ ಚಹರೆಯನ್ನು ವಿಕೃತಗೊಳಿಸಲಾರೆ. ನಾನು ಹಾಗೆ ಮಾಡಿದರೆ ಅಲ್ಲಾಹನು ನನ್ನನ್ನು ವಿಕೃತಗೊಳಿಸುವನು. ನಾನು ಪ್ರವಾದಿಯಾಗಿದ್ದರೂ ಸಹ, ಉಮರ್ ನಿನ್ನ ಆಕ್ಷೇಪಕ್ಕೆ ಗುರಿಯಾಗದ ಒಂದು ರಂಗದಲ್ಲಿ ಅವನು ಕಾಣಿಸಿಕೊಳ್ಳಬಹುದು ''
ಸುಹೈಲ್‌ರ ಬಿಡುಗಡೆಗೆ ಮುಕರ್ರಿಸ್‌ಬ್ನು ಹಫ್ಸ್ ಆಗಮಿಸಿದರು. ಅವರೊಂದಿಗೆ ಬಿಡುಗಡೆ ಮೊತ್ತವನ್ನು ಕೇಳಿದಾಗ, "ಅವನು ಹಣದೊಂದಿಗೆ ಮರಳುವವರೆಗೆ ಅವನ ಪಾದವಿರುವ ಜಾಗದಲ್ಲಿ ನನ್ನ ಪಾದವನ್ನಿಡಿ. (ಅವನನ್ನು ಬಿಟ್ಟು ನನ್ನ ಬಂಧಿಸಿರಿ ಎಂದರ್ಥ) ಮುಸ್ಲಿಮರು ಸುಹೈಲ್‌ರನ್ನು ಬಿಡುಗಡೆಗೊಳಿಸಿ ಮುಕರಿಸ್‌ರನ್ನು ಬಂಧಿಸಿದರು. (ಡಾ.ಅಬ್ದು ಯಮಾನಿ ಬದ್ರುಲ್ ಕುಬ್ರ- 344)
ಕಾಲ ಪ್ರವಾಹ ಹರಿದು ಹೋದವು. ಪ್ರವಾದಿ (ಸ) ಇಹಲೋಕ ತ್ಯಜಿಸಿದರು. ಪ್ರಕ್ಷುಬ್ಧವಾದ ಕಲುಷಿತ ವಾತಾವರಣವೊಂದು ಮುಸ್ಲಿಮ್ ಸಮಾಜವನ್ನು ಆವರಿಸಿಕೊಂಡವು. ಮಕ್ಕಾದಲ್ಲಿ ಸುಹೈಲ್ ಭಾಷಣ ಮಾಡಿದರು. ಅವರ ವಾಗ್ವಿಲಾಸದ ಮೋಡಿಗೆ ವಶರಾಗಿ ಇಸ್ಲಾಮ್ ತ್ಯಜಿಸಲು ಮುಂದಾಗಿದ್ದವರು ಮತ್ತೆ ಇಸ್ಲಾಮಿನಲ್ಲೇ ಗಟ್ಟಿಯಾಗಿ ನೆಲೆಯೂರಿದರು. ಪ್ರವಾದಿ (ಸ) ರ ಭವಿಷ್ಯ ನಿಜವಾ ರಸಿದರು . ಪ್ರಕ್ಷುಬ್ದವಾದ ನಿಜವಾದವು . (ಡಾ.ಅಬ್ದು ಯಮಾನಿ ಬದ್ರುಲ್ ಕುಬ್ರ- 344)
ಬಂಧಿತರಾಗಿದ್ದ ವಲೀದುಬ್ ನುಲ್ ವಲೀದ್‌ರನ್ನು ಅವರ ಸಹೋದರರಾದ ಹಿಶಾಮ್ ಹಾಗೂ ಖಾಲಿದ್ ದಂಡ ತೆತ್ತು ಬಿಡುಗಡೆಗೊಳಿಸಿದರು. ಆದರೆ, ಮಕ್ಕಾಕ್ಕೆ ಹೋಗಿ ಸೇರುತ್ತಿದ್ದಂತೆ ವಲೀದ್ ತಾವು ಇಸ್ಲಾಂ ಸ್ವೀಕರಿಸಿರುವುದಾಗಿ ಘೋಷಿಸಿದರು. ಸಹೋದರರು ಅವರನ್ನು ಆಕ್ಷೇಪಿಸಿದರು.
ಬಂಧಿತನಾಗಿರುವ ವೇಳೆ ಇಸ್ಲಾಮ್ ಸ್ವೀಕರಿಸಿದರೆ ಅದು ಭಯದಿಂದ ಇಸ್ಲಾಮ್ ಸ್ವೀಕರಿಸಿದ್ದಾನೆಂಬ ಆರೋಪಕ್ಕೆ ಕಾರಣವಾಗುವುದೆಂದು ವಲೀದ್ ಇಸ್ಲಾಮ್ ಸ್ವೀಕರಿಸಲು ಬಿಡುಗಡೆಗೊಳ್ಳುವವರೆಗೂ ಕಾದು ಕೂತಿದ್ದರು. ವಲೀದ್ ಮದೀನಕ್ಕೆ ಪಲಾಯನ ಮಾಡಲು ಯೋಚಿಸಿದರು. ಆದರೆ, ಮುಶ್ರಿಕರು ಅವರನ್ನು ತಡೆದರು. ನಮಾಝ್ '(ಕುನೂತ್) ನಲ್ಲಿ ಪ್ರವಾದಿ (ಸ) ರು ವಲೀದ್‌ಗಾಗಿ ಪ್ರಾರ್ಥಿಸುತ್ತಿದ್ದರು. ನಂತರ ಅದು ಹೇಗೋ ತಪ್ಪಿಸಿಕೊಂಡ ವಲೀದ್ (ರ) ಪ್ರವಾದಿ (ಸ) ಸಂಘವನ್ನು ಸೇರಿಕೊಂಡರು.
ಖುರೈಷಿಗಳ ಪತಾಕೆ ಹಿಡಿದಿದ್ದ ಸಾಇಬ್ (ಇಮಾಮ್ ಶಾಫಿಈಯವರ ಪಿತ್ವ ಪರಂಪರೆಯ ಐದನೇಯ ವ್ಯಕ್ತಿ) ಬಂಧಿತರಾಗಿದ್ದರು. ಅವರೂ ಸಹ ಬಿಡುಗಡೆಗೊಂಡರು. ವಹಬ್ ಬುನು ಉಮೈರ್ ಬಂಧಿತರಾಗಿದ್ದರು. ಪ್ರವಾದಿ (ಸ) ರು ಅವರಿಂದ ಬಿಡುಗಡೆ ಮೊತ್ತವನ್ನು ಸ್ವೀಕರಿಸದೆಯೇ ಅವರನ್ನು ಬಿಡುಗಡೆಗೊಳಿಸಿದರು. ಅದರ ಹಿಂದೆ ಒಂದು ಕಥೆಯಿದೆ.
ವಹಬ್ರ ತಂದೆ ಉಮೈರ್‌ಬ್ನು ವಹಬ್ ಓರ್ವ ದುಷ್ಟರಾಗಿದ್ದರು. ಪ್ರವಾದಿ (ಸ) ಹಾಗೂ ಅನುಯಾಯಿಗಳನ್ನು ಅಷ್ಟರಮಟ್ಟಿಗೆ ಆತ ಹಿಂಸಿಸಿದ್ದ. ಬದ್ರ್ ನ ನಂತರ ಕಅಬದ ಸಮೀಪ ಕೂತು ಉಮೈರ್ ಸ್ವಫ್ ವಾನುಬ್ನು ಉಮಯ್ಯ್ ನೊಂದಿಗೆ ಪರಾಜಯದ ದುಃಖವನ್ನು ತೋಡಿಕೊಳ್ಳುತ್ತಿದ್ದರು. ಹಾಳು ಬಾವಿ ಸೇರಿದ್ದ ಖುರೈಷಿ ಪ್ರಮುಖರಿಗೆ ಬಂದೊದಗಿದ ಅವಸ್ಥೆಯ ಕುರಿತು ಆತ ದುಃಖ ವ್ಯಕ್ತಪಡಿಸುತ್ತಿದ್ದನು.
ಆಗ ಸಫ್ವಾನ್ ಪ್ರತಿಕ್ರಿಯಿಸಿದರು. '' ದೇವರ ಮೇಲಾಣೆ, ಅವರ ಬಳಿಕ ಜೀವನದಲ್ಲಿ ಯಾವುದೇ ಒಳಿತುಗಳಿಲ್ಲದಾಗಿದೆ ''
ಉಮೈರ್ ಹೇಳಿದರು. '' ದೇವರ ಮೇಲಾಣೆ, ನೀನು ಹೇಳಿರುವುದು ಸತ್ಯ. ನನಗೆ ಸ್ವಲ್ಪ ಸಾಲವಿದೆ. ಅದನ್ನು ತೀರಿಸಲು ಯಾವುದೇ ದಾರಿ ಕಾಣುತ್ತಿಲ್ಲ. ಅಲ್ಲದೆ, ಕುಟುಂಬ, ಮಕ್ಕಳಿದ್ದಾರೆ. ನನ್ನ ನಂತರ ಅವರು ಬೀದಿಗೆ ಬೀಳುತ್ತಾರೋ ಎಂದು ಭಯವೊಂದು ಇಲ್ಲದಿರುತ್ತಿದ್ದರೆ ನಾನು ಮುಹಮ್ಮದನನ್ನು ವಧಿಸುತ್ತಿದ್ದೆ. ನನ್ನ ಪುತ್ರನೀಗ ಅವರ ಬಳಿ ಖೈದಿಯಾಗಿದ್ದಾನೆ ''
ಈ ಸಂದರ್ಭವನ್ನು ಸಫ್ವಾನ್ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ಪ್ರಯತ್ನ ಮಾಡಿದರು.
“ನಿನ್ನ ಸಾಲದ ಬಾಧ್ಯತೆಯನ್ನು ನಾನು ವಹಿಸಿಕೊಳ್ಳುತ್ತೇನೆ. ನಿನ್ನ ಮಕ್ಕಳನ್ನು ನನ್ನ ಮಕ್ಕಳಂತೆ ಕಂಡು ನಾನು ಸಾಕುತ್ತೇನೆ. ಅವರಿಗಾಗಿ ನನ್ನಿಂದ ಏನೇನು ಮಾಡಲು ಸಾಧ್ಯವೋ ಅದನ್ನೆಲ್ಲಾ ನಾನು ಮಾಡುತ್ತೇನೆ''
ಉಮೈರ್: ಹಾಗಾದರೆ ನಾವು ಇಲ್ಲಿ ಮಾತನಾಡಿರುವುದನ್ನು ರಹಸ್ಯವಾಗಿರಲಿ.
ಸಫ್ವಾನ್: ಹಾಗೆಯೇ ಆಗಲಿ..
ಉಮೈರ್ ತಮ್ಮ ಖಡ್ಡಕ್ಕೆ ವಿಷ ಮದ್ದು ಸವರಿದರು. ಯಾರ ಗಮನಕ್ಕೂ ಬಾರದಂತೆ ರಹಸ್ಯವಾಗಿ ಮದೀನದತ್ತ ಯಾತ್ರೆ ಹೊರಟರು.
ಉಮೈರ್ ಮದೀನ ತಲುಪಿದಾಗ ಪ್ರವಾದಿ (ಸ) ರು ಮಸೀದಿಯಲ್ಲಿ ಕುಳಿತಿದ್ದರು.. ಒರೆಯೊಳಗೆ ಖಡ್ಗವನ್ನು ಕಂಡ ಉಮರ್ (ರ) ಅವರನ್ನು ತಡೆದು ನಿಲ್ಲಿಸಿದರು. ಉಮರ್ ರ.ಅ ರವರಿಗೆ ಕೆಲವು ವಿಶೇಷ ಗುಣಗಳಿದ್ದವು. ಒಮ್ಮೆ ಪ್ರವಾದಿ (ಸ) ರು ಹೀಗೆ ಹೇಳಿದ್ದರು. "ನಿಮ್ಮ ಪೂರ್ವ ಕಾಲದ ಸಮುದಾಯದಲ್ಲಿ ದಿವ್ಯಜ್ಞಾನ ಲಭಿಸಿದವರಿದ್ದರು. ನನ್ನ ಸಮುದಾಯದಲ್ಲಿ ಅಂತಹ ಯಾರಾದರೂ ಇದ್ದರೆ ಅದು ಉಮರ್ '' (ಬುಖಾರಿ).
ಉಮರ್ (ರ) ರಿಗೆ ಒಬ್ಬ ವ್ಯಕ್ತಿಯ ಮುಖ ನೋಡಿ ಆತನನ್ನು ಅಳೆಯುವ ವಿಶೇಷ ಸಾಮರ್ಥ್ಯವಿದ್ದವು. ಉಮೈರ್‌ರ ಮುಖ ಕಂಡೊಡನೇ ಉಮರ್ (ರ) ಹೇಳಿದರು. '' ಅಲ್ಲಾಹನ ಶತ್ರು ಉಮೈರ್‌ಬ್ನು ವಹಬ್ ಒಳ್ಳೆಯ ಕೆಲಸಕ್ಕೆ ಇಲ್ಲಿಗೆ ಬಂದಿಲ್ಲ. ಇವನು ನಮ್ಮ ವಿರುದ್ಧ ಜನರನ್ನು ಪ್ರಚೋದಿಸಿದವನು. ಬದ್ರ್ ದಿನದಂದು ನಮ್ಮ ಸೈನಿಕ ಸಂಖ್ಯೆಯನ್ನು ಶತ್ರುಗಳಿಗೆ ಹೇಳಿ ಕೊಟ್ಟವನು ಸಹ ಇವನೇ '' ಉಮರ್ (ರ) ನೇರವಾಗಿ ಪ್ರವಾದಿ (ಸ) ಯ ಬಳಿಗೆ ಹೋಗಿ ವಿಷಯ ತಿಳಿಸಿದರು. ಅಲ್ಲಾಹನ ದೂತರೇ, ಅಲ್ಲಾಹನ ಶತ್ರು ಉಮೈರ್‌ಬ್ನು ವಹಬ್ ಖಡ್ಗ ಧಾರಿಯಾಗಿ ಆಗಮಿಸಿದ್ದಾನೆ ''
'' ಅವನು ಒಳಗೆ ಬರಲಿ '' ಪ್ರವಾದಿ (ಸ) ರು ಹೇಳಿದರು.
“ಸ್ವಲ್ಪ ಜಾಗೂರೂಕತೆಯಿಂದಿರಿ" ಎಂದು ಉಮರ್ (ರ) ತಮ್ಮ ಜೊತೆಗಿದ್ದ ಅನ್ಸಾರಿಗಳೊಂದಿಗೆ ಹೇಳಿದರು.
“ನೀವು ಪ್ರವಾದಿಯ ಪಕ್ಕದಲ್ಲೇ ಇರಬೇಕು. ಆ ಶತ್ರುವಿನ ಚಲನವಲನಗಳತ್ತ ಕಣ್ಣು ನೆಟ್ಟಿರಬೇಕು. ಅವನಿಂದ ಪ್ರವಾದಿಯನ್ನು ರಕ್ಷಿಸಬೇಕು. ನಂಬಲಾರ್ಹ ವ್ಯಕ್ತಿಯಲ್ಲ ಅವನು”
ಉಮೈರ್ ಪ್ರವಾದಿ (ಸ) ಹಾಗೂ ಸಂಗಡಿಗರಿಗೆ ತಮ್ಮ ಗೋತ್ರದ ಆಚಾರದ ಪ್ರಕಾರ ಶುಭಾಶಯ ಹೇಳಿದರು. ಉಮೈರ್‌ನ ಶುಭಾಶಯವನ್ನು ಕೇಳುತ್ತಾ ಮುಹಮ್ಮದ್ (ಸ) ರು ಹೇಳಿದರು. "ತಮ್ಮ ಈ ಶುಭಾಶಯಕ್ಕಿಂತಲೂ ಅತ್ಯುಮತ್ತವಾದ ಶುಭಾಶಯವನ್ನು ಅಲ್ಲಾಹನು ನಮಗೆ ನೀಡಿದ್ದಾನೆ.
ಹೇ, ಉಮೈರ್ ಅದು ಶಾಂತಿಯಾಗಿದೆ. ಸ್ವರ್ಗವಾಸಿಗಳ ಶುಭಾಶಯವಾಗಿದೆ ” ನಂತರ ಅವರು ಉಮೈರ್‌ನ ಆಗಮನದ ಉದ್ದೇಶವನ್ನು ಅನ್ವೇಷಿಸಿದರು. '' ಮಗನನ್ನು ಬಿಡುಗಡೆಗೊಳಿಸಲು ದಂಡದ ಮೊತ್ತದೊಂದಿಗೆ ಬಂದಿದ್ದೇನೆ '' ಎಂದು ಉಮೈರ್ ಉತ್ತರಿಸಿದರು.
“ಅದಕ್ಕೇಕೆ ಈ ಖಡ್ಗ ?”
ಮುಹಮ್ಮದ (ಸ) ರು ಮುಗುಲ್ನಗುತ್ತಾ ಕೇಳಿದರು.
“ ದೇವರು ಖಡ್ಗಗಳನ್ನು ಶಪಿಸಲಿ, ಅವುಗಳಿಂದ ನಮಗೇನಾದರೂ ಲಾಭವಿದೆಯೇ ? "
ಉಮೈರ್ ಮಾರುತ್ತರ ನೀಡಿದರು.
"ನನ್ನೊಂದಿಗೆ ಸತ್ಯ ಹೇಳಿ”
ಮುಹಮ್ಮದ್ (ಸ.ಅ) ಆಗ್ರಹಿಸಿದರು..
“ಏನು ನಿಮ್ಮ ನಿಜವಾದ ಉದ್ದೇಶ..?"
ಉಮೈರ್ ಮಗನ ಬಿಡುಗಡೆಯ ವಿಷಯವನ್ನು ಮತ್ತೊಮ್ಮೆ ಪುನರಾವರ್ತಿಸಿದರು.
ಮುಹಮ್ಮದ್ (ಸ) ರು, ಉಮೈರ್ ಹಾಗೂ ಸಫ್ವಾನ್ ಹಿಜ್ರ್ ಇಸ್ಮಾಈಲ್ ಪಕ್ಕದಲ್ಲಿ ಕೂತು ಸಂಭಾಷಣೆಯನ್ನು ಒಂದಕ್ಷರವೂ ತಪ್ಪದೆ ಹೇಳಿಬಿಟ್ಟರು. ಹೀಗೆ ಸಫ್ವಾನ್ ತಮ್ಮ ಹಾಗೂ ಇಡೀ ಕುಟುಂಬದ ಹೊಣೆಯನ್ನು ಹೊತ್ತುಕೊಂಡರು ” ಎಂದು ಅವರು ತಮ್ಮ ಮಾತನ್ನು ಕೊನೆಗೊಳಿಸಿದರು.
'' ನನ್ನ ವಧಿಸುವುದು ನಿಮ್ಮ ಉದ್ದೇಶವಾಗಿತ್ತು. ಆದರೆ, ನನ್ನ ಮತ್ತು ನಿಮ್ಮ ನಡುವೆ ಅಲ್ಲಾಹನಿದ್ದಾನೆಂಬ ಸತ್ಯವನ್ನು ನೀವು ಮರೆತು ಬಿಟ್ಟಿರಿ”
'' ನಿಮಗಿದನ್ನು ತಿಳಿಸಿಕೊಟ್ಟವರು ಯಾರು ?” ಉಮೈರ್ ಅಳುತ್ತಾ ಕೇಳಿದರು.
“ಕಾರಣ, ನಾವು ಮಾತನಾಡುತ್ತಿದ್ದುದನ್ನು ಮೂರನೇ ವ್ಯಕ್ತಿಯೊಬ್ಬ ಕೇಳಿಸಿಕೊಂಡಿರಲಿಲ್ಲ ”
“ದೇವಚರ ಜಿಬ್ರೀಲ್ ನನಗಿದನ್ನು ಹೇಳಿದ್ದಾರೆ ''
ಮುಹಮ್ಮದ (ಸ) ರು ಉತ್ತರಿಸಿದರು.
'' ತಾವು ದಿವ್ಯವಚನಗಳನ್ನು ಬೋಧಿಸುತ್ತಿದ್ದಾಗ ನಾವು ನಿಮ್ಮನ್ನು ಕಳ್ಳನೆಂದು ಕರೆದಿದ್ದೆವು” ಉಮೈರ್ ಸ್ವರ ಗದ್ಗದಿತವಾದವು.
“ ಆದರೆ, ಅಲ್ಲಾಹನಿಗೆ ಸರ್ವಸ್ತುತಿ. ಅವನು ನನ್ನನ್ನು ಸನ್ಮಾರ್ಗಕ್ಕೆ ಕರೆ ತಂದಿರುವನು. ಅಲ್ಲಾಹನಲ್ಲದೆ ಇನ್ನೋರ್ವ ದೇವರಿಲ್ಲವೆಂದು, ಮುಹಮ್ಮದ್ ಅಲ್ಲಾಹನ ಸಂದೇಶವಾಹಕರೆಂದು ನಾನು ಸಾಕ್ಷ್ಯ ವಹಿಸುತ್ತೇನೆ”
ನಂತರ ಉಮೈರ್ ಹೇಳಿದರು. "ಅಲ್ಲಾಹನ ದೂತರೇ, ಅಲ್ಲಾಹನ ಪ್ರಕಾಶವನ್ನು ಕೆಡಿಸಲು ಕಠಿಣ ಪರಿಶ್ರಮ ಪಟ್ಟವನು ನಾನು, ಆದ್ದರಿಂದ ನನಗೆ ಮಕ್ಕಾಕೆ ಹಿಂದಿರುಗಲು ಹಾಗೂ ಅಲ್ಲಿನ ಜನರನ್ನು ಇಸ್ಲಾಮ್ ಗೆ ಆಹ್ವಾನಿಸಲು ಅವಕಾಶ ನೀಡಬೇಕು. ಅಲ್ಲಾಹನು ಅವರಿಗೆ ಸನ್ಮಾರ್ಗ ತೋರುವನು. ಅಥವಾ ತಮ್ಮ ಅನುಯಾಯಿಗಳನ್ನು ನಾನು ಹಾಗೂ ನನ್ನ ಜನರು ಹಿಂಸಿಸಿರುವಂತೆ ನನ್ನನ್ನೂ ಅವರು ಹಿಂಸಿಸುವರು ''
ಪ್ರವಾದಿ (ಸ) ಅವರಿಗೆ ಅನುಮತಿ ನೀಡಿದರು. ಅವರ ಪುತ್ರ ವಹಬ್ ಸಹ ಇಸ್ಲಾಮ್ ಸ್ವೀಕರಿಸಿದರು. ಅಬೂ ಅಝೀಝುಬ್ನು ಉಮೈರ್ ಸ್ವಹಾಬಿಯಾಗಿದ್ದ ಮಿಸ್ ಅಬ್ ಬಿನ್ ಉಮೈರ್‌ರ ಪೂರ್ಣ ಸಹೋದರರಾಗಿದ್ದರು.
ಅಬೂ ಅಝೀಝ್ ಹೇಳುತ್ತಾರೆ. ನನ್ನನ್ನು ಅಬುಲ್ ಯಸ್ರ್ ಬಂಧಿಸಿದ್ದರು. ನನ್ನ ಸಹೋದರ ಮಿಸ್ ಅಬ್ ನನ್ನ ಬಳಿಗೆ ಬಂದರು. ಅಬುಲ್ ಯಸ್ರೊಂದಿಗೆ ಅವರು ಹೇಳಿದರು. ಅವನನ್ನು ಗಟ್ಟಿಯಾಗಿ ಹಿಡಿದುಕೋ. ಅವನ ತಾಯಿಯ ಬಳಿ ಬೇಕಾದಷ್ಟು ಹಣವಿದೆ. ಅವರು ಬಿಡುಗಡೆ ಮೊತ್ತವನ್ನು ನೀಡಿ, ಇವನನ್ನು ಬಿಡುಗಡೆಗೊಳಿಸುವರು ''
"ಇದುವೇ ನಿನ್ನ ಸಹೋದರನ ಬಗ್ಗೆ ನೀನು ನೀಡುವ ಉಪದೇಶ ? ” ಎಂದು ನಾನು ಪ್ರಶ್ನಿಸಿದೆ.
'' ನನ್ನ ಸಹೋದರ ಇವರು, ನೀನಲ್ಲ '' ಎಂದು ಮಿಸ್ ಅಬ್ ಹೇಳಿದರು. ರಕ್ತ ಬಂಧಕ್ಕಿಂತಲೂ ವಿಶ್ವಾಸ ಬಂಧವೇ ಪ್ರಧಾನ ಎಂಬುದನ್ನು ಮಿಸ್ ಅಬ್ ಸೂಚಿಸಿದ್ದರು. ಖುರೈಷಿಗಳು ನೀಡಿದ ಅತ್ಯಧಿಕ ಬಿಡುಗಡೆ ಮೊತ್ತ ಎಷ್ಟೆಂದು ಅಬೂ ಅಝೀಝ್ರ ತಾಯಿ ಕೇಳಿದರು. ನಾಲ್ಕು ಸಾವಿರ ದಿರಮ್ ಎಂದು ಅವರಿಗೆ ಉತ್ತರಿಸಲಾಯಿತು. ಅಷ್ಟೂ ಮೊತ್ತವನ್ನು ನೀಡಿ, ಅವರು ತಮ್ಮ ಪುತ್ರನನ್ನು ಬಿಡುಗಡೆಗೊಳಿಸಿದರು.
ಅಬೂ ಅಝೀಝ್ ನೆನಪಿಸಿಕೊಳ್ಳುತ್ತಾರೆ. "ಬದ್ರ್ ನಿಂದ ನನ್ನನ್ನು ಬಂಧಿಸಿ ಕೊಂಡೊಯ್ಯುವಾಗ ನಾನು ಅನ್ಸಾರಿಗಳ ಜೊತೆಗಿದ್ದೆ. ಆಹಾರ ಸೇವಿಸುವಾಗಲೆಲ್ಲಾ ಅವರು ರೊಟ್ಟಿಯನ್ನು ನನಗಾಗಿ ಪ್ರತ್ಯೇಕವಾಗಿ ತೆಗೆದಿರಿಸುತ್ತಿದ್ದರು. ನಮ್ಮನ್ನು ವಿಶೇಷವಾಗಿ ಗಮನಿಸಬೇಕೆಂದು ಪ್ರವಾದಿ (ಸ) ಹೇಳಿದ್ದರು.. ಅವರಲ್ಲಿ ಯಾರಾದರು ಒಬ್ಬರ ಕೈಗೆ ರೊಟ್ಟಿ ಸಿಕ್ಕರೆ ಅದನ್ನವರು ನನಗೆ ನೀಡುತ್ತಿದ್ದರು..ನಾನು ಸಂಕೋಚದಿಂದ ಅವರಿಗೆ ಹಿಂದಿರುಗಿಸುತ್ತಿದ್ದೆ. ಆದರೆ , ಅದನ್ನವರು ನನಗೇ ಹಿಂದಿರುಗಿಸುತ್ತಿದ್ದರು...
ಅಬ್ಬಾಸ್ ರ.ಅ ರವರ ಬಿಡುಗಡೆ
ಪ್ರವಾದಿ (ಸ) ರ ಚಿಕ್ಕಪ್ಪ ಅಬ್ಬಾಸ್ ರನ್ನು ಸ್ವಹಾಬಿಗಳು ಬಂಧಿಸಿದ್ದರು. ಅಬ್ಬಾಸ್ ಅಳುತ್ತಿದ್ದರು. ಆ ಇಡೀ ರಾತ್ರಿ ಪ್ರವಾದಿ (ಸ) ಗೆ ನಿದ್ರೆ ಬೀಳಲಿಲ್ಲ.
'' ಅಲ್ಲಾಹನ ದೂತರೇ, ತಾವೇಕೆ ನಿದ್ರೆ ಮಾಡುತ್ತಿಲ್ಲ ?” ಒಬ್ಬರು ಅದರೊಂದಿಗೆ ಕೇಳಿದರು.
ಅಬ್ಬಾಸ್ ರ ಅಳು ನನ್ನನ್ನು ನಿದ್ದೆ ಮಾಡಲು ಬಿಡುತ್ತಿಲ್ಲ. ಪ್ರವಾದಿ (ಸ) ರು ಹೇಳಿದರು. ಇದನ್ನು ಕೇಳುತ್ತಿದ್ದಂತೆ ಪ್ರವಾದಿ (ಸ) ಯ ಅನುಯಾಯಿಗಳಲ್ಲಿ ಒಬ್ಬರು ಎದ್ದು ಅಬ್ಬಾಸ್ ರನ್ನು ಬಂಧ ಮುಕ್ತಗೊಳಿಸಿದರು.
"ಅಬ್ಬಾಸ್ ರನ್ನು ನೀವು ಬಂಧಮುಕ್ತಗೊಳಿಸುವುದಾದರೆ ಎಲ್ಲರನ್ನೂ ಬಂಧಮುಕ್ತಗೊಳಿಸಬೇಕು.” ಎಂದು ಪ್ರವಾದಿ (ಸ) ಅನುಯಾಯಿಗಳಿಗೆ ನಿರ್ದೇಶಿಸಿದ್ದರು .ಆಬ್ಬಾಸ್‌ರ ಇಸ್ಲಾಮ್ ಸ್ವೀಕಾರದ ಬಗ್ಗೆ ವಿಭಿನ್ನ ವರದಿಗಳಿದ್ದರೂ, ಅವರು ಆರಂಭದಿಂದಲೇ ಇಸ್ಲಾಮ್ ಹಾಗೂ ಪ್ರವಾದಿ (ಸ) ಯನ್ನು ಪ್ರೀತಿಸುತ್ತಿದ್ದರು ಎಂಬುದಕ್ಕೆ ಅನೇಕ ಪುರಾವೆಗಳಿವೆ. ಮಕ್ಕಾ ಪ್ರಕ್ಷುಬ್ಧಗೊಂಡಿದ್ದ ಕಾಲದಲ್ಲಿ ಅಬ್ಬಾಸ್ ನೇರವಾಗಿ ಪ್ರವಾದಿ (ಸ) ಗೆ ಸಂರಕ್ಷಣೆ ನೀಡಿದ ಕುರಿತು ಯಾವುದೇ ಮಾಹಿತಿ ಇಲ್ಲ. ಆದರೆ, ಪ್ರವಾದಿ (ಸ) ಗೆ ಲಭಿಸಿದ ಪರೋಕ್ಷ ಸಂರಕ್ಷಣೆಯಲ್ಲಿ ಅಬ್ಬಾಸ್ ರ ಪಾಲೂ ಇದೆ ಎಂಬುದು ಎರಡನೇ ಅಖಬಃ ಒಪ್ಪಂದದ ವೇಳೆ ಅವರು ವಹಿಸಿದ ಪಾತ್ರದಿಂದ ಖಚಿತವಾಗುತ್ತದೆ.
ಮದೀನದಿಂದ ಪ್ರವಾದಿ (ಸ) ಯನ್ನು ಭೇಟಿಯಾಗಲು ಎಪ್ಪತ್ತಮೂರು ಪುರುಷರು ಹಾಗೂ ಇಬ್ಬರು ಸ್ತ್ರೀಯರು ಆಗಮಿಸಿದ್ದರು. ಅವರು ಅಖಬದಲ್ಲಿ ಸಂಗಮಿಸಿದ್ದರು. ಈ ಸಭೆಯನ್ನು ಅತೀವ ರಹಸ್ಯವಾಗಿ ಏರ್ಪಡಿಸಲಾಗಿತ್ತು. ಪ್ರವಾದಿ (ಸ) ಯೊಂದಿಗೆ ಅವರ ಚಿಕ್ಕಪ್ಪ ಅಬ್ಬಾಸ್ ಇದ್ದರು. ಆಗಿನ್ನೂ ಅಬ್ಬಾಸ್ ಇಸ್ಲಾಮ್ ಧರ್ಮ ಸ್ವೀಕರಿಸಿರಲಿಲ್ಲ ಎಂಬುದು ನೆನಪಿರಲಿ. ಅವರು ಅಂದು ಮದೀನದ ಜನರಿಗೆ ಹೇಳಿದ ಮಾತುಗಳು ಅವರಿಗೆ ಪ್ರವಾದಿ (ಸ) ಯೊಂದಿಗಿದ್ದ ಸ್ನೇಹವನ್ನು ಅನಾವರಣ ಮಾಡುತ್ತದೆ. ಆ ಸಭೆಯಲ್ಲಿದ್ದ ಒಬ್ಬರು ಹೇಳುತ್ತಾರೆ..
“ನಾವು ಅಖಬದ ಸಮೀಪದಲ್ಲಿದ್ದ ಗಲ್ಲಿಯೊಂದರಲ್ಲಿ ಒಟ್ಟು ಸೇರಿದೆವು. ಅಲ್ಲಿ ನಾವು ಮುಹಮ್ಮದ್ (ಸ) ರು ಬರುವವರೆಗೂ ಕಾಯುತ್ತಾ ಕೂತೆವು. ಮುಹಮ್ಮದ್ (ಸ) ರು ಆಗಮಿಸಿದರು. ಅವರ ಜೊತೆಗೆ ಅವರ ಪಿತೃ ಸಹೋದರ ಹಾಗೂ ಬಹುದೇವ ವಿಶ್ವಾಸಿಯಾಗಿರುವ ಅಬ್ಬಾಸ್ ಇದ್ದರು. ಅವರು ತಮ್ಮ ಸಹೋದರ ಪುತ್ರನ ಚಟುವಟಿಕೆಗಳು, ವಾಗ್ದಾನಗಳೆಲ್ಲವೂ ಎಷ್ಟು ಸರಿಯೆಂಬುದನ್ನು ತಿಳಿಯುವ ಉದ್ದೇಶದಿಂದ ಬಂದಿದ್ದರು.
ಮುಹಮ್ಮದ್ (ಸ) ರು ನಮ್ಮ ನಡುವೆ ಬಂದು ಕೂತಾಗ ಅಬ್ಬಾಸ್ ಮೊದಲು ಮಾತನಾಡಲಾರಂಭಿಸಿದರು.
“ಖಝ್ರಜ್ ಸಹೋದರರೇ.. ಅರಬಿಗಳು ಖಝ್ರಜ್, ಔಸ್ ಎಂಬ ಅಭಿಸಂಭೋಧನೆ ಮಾಡುವುದಿಲ್ಲ. ನಿಮಗೆ ತಿಳಿದಿರಬಹುದು ನಾವು ಮುಹಮ್ಮದರಿಗೆ ನೀಡುವ ಗೌರವದ ಬಗ್ಗೆ, ನಾವು ಅವನ ಜನತೆಯಿಂದ ಅವನನ್ನು ಸಂರಕ್ಷಿಸುತಿದ್ದೇವೆ. ಅವನು ಅವನ ಕುಟುಂಬದಿಂದ ಗೌರವಸಲ್ಪಡುವವನೂ, ಅವನ ಊರಿನಲ್ಲಿ ಸುರಕ್ಷಿತನೂ ಆಗಿದ್ದಾನೆ. ಆದರೆ, ಈಗವನು ನಿಮ್ಮೆಡೆಗೆ ಬರಲು, ನಿಮ್ಮೊಂದಿಗೆ ಇರಲು ಬಯಸಿದ್ದಾನೆ. ಅವನೊಂದಿಗೆ ವಾಗ್ದಾನ ಮಾಡಿರುವುದನ್ನು ಪೂರ್ಣಗೊಳಿಸಲು ಸಾಧ್ಯವೆಂದು ನೀವು ಭಾವಿಸುವುದಾದರೆ, ಅವನ ಶತ್ರುಗಳಿಂದ ನಿಮಗೆ ಅವನನ್ನು ರಕ್ಷಿಸಲು ಸಾಧ್ಯವಾಗುವುದಾದರೆ, ಅವನ ಭಾರವನ್ನು ನಿಮ್ಮ ಭಾರವೆಂದು ಭಾವಿಸುವುದು ನಿಮಗೆ ಸಾಧ್ಯವಾಗುವುದಾದರೆ ನೀವು ಅವನನ್ನು ಕರೆದೊಯ್ಯಬಹುದು. ಇನ್ನು ಅವನು ವಂಚಿಸಲ್ಪಡುವನು ಎಂದು ನೀವು ಭಾವಿಸುವುದಾದರೆ, ನಿಮ್ಮೊಂದಿಗೆ ಬಂದ ಬಳಿಕ ಅವನನ್ನು ನಿರಾಶೆಗೊಳಿಸುವುದು ನಿಮ್ಮ ಉದ್ದೇಶವಾಗಿದ್ದಲ್ಲಿ ಈಗಲೇ ಅವನನ್ನು ಬಿಟ್ಟು ನಿಮಗೆ ಹೋಗಬಹುದು "
"ತಾವು ಹೇಳಿದ್ದನ್ನು ನಾವು ಕೇಳಿಸಿಕೊಂಡಿರುವೆವು ” ಅವರು ಮಾತನಾಡಲು ಆರಂಭಿಸಿದರು.
“ಅಲ್ಲಾಹನ ರಸೂಲರೇ, ತಾವು ಮಾತನಾಡಬೇಕು. ಅಲ್ಲಾಹನಿಗಾಗಿ ತಮಗೆ ಇಷ್ಟವಾಗುವುದನ್ನು ತಾವು ಆಯ್ದುಕೊಳ್ಳಿರಿ”
ಅಬ್ಬಾಸ್‌ರ ಬಂಧಮುಕ್ತಕ್ಕೆ ಸಂಬಂಧಿಸಿದ ಇನ್ನೊಂದು ವರದಿಯಲ್ಲಿ ಪ್ರಸ್ತಾಪಿತವಾದ ಘಟನೆ ಹೀಗಿದೆ. ಅಬ್ಬಾಸ್ (ರ) ಅನ್ಸಾರಿಗಳ ವಶದಲ್ಲಿದ್ದರು. ಅನ್ಸಾರಿಗಳು ಅವರನ್ನು ಪ್ರವಾದಿ (ಸ) ಯ ಮುಂದೆ ಕರೆ ತಂದು ಹಾಜರುಪಡಿಸಿದರು.
ಅನ್ಸಾರಿಗಳು ಹೇಳಿದರು.
“ಅಲ್ಲಾಹನ ಪ್ರವಾದಿಯವರೇ, ತಮ್ಮ ಸಹೋದರಿಯ ಪುತ್ರನ ಮೇಲಿನ ದಂಡದ ಮೊತ್ತವನ್ನು ಬಿಟ್ಟುಕೊಡಲು ನಮಗೆ ಅನುಮತಿ ನೀಡಿರಿ ”
“ ಸಹೋದರಿ '' ಎಂದು ಅವರು ಅಬ್ಬಾಸ್‌ರ ಅಜ್ಜಿ ಸಲ್ಮಾರನ್ನು ಉದ್ದೇಶಿಸಿ ಹೇಳಿದ್ದರು. ಆದರೆ, ಪ್ರವಾದಿ (ಸ) ರು,
“ ಈ ವಿಷಯದಲ್ಲಿ ನೀವು ಒಂದೇ ಒಂದು ದಿರ್ಹಮ್‌ನ ರಿಯಾಯಿತಿಯನ್ನೂ ತೋರಿಸಬೇಕಾಗಿಲ್ಲ'' ಎಂದರು. ನಂತರ ತಮ್ಮ ಚಿಕ್ಕಪ್ಪ ಅಬ್ಬಾಸ್‌ರತ್ತ ತಿರುಗಿ ಹೇಳಿದರು.
'' ನಿಮ್ಮ ದಂಡದ ಹಣವನ್ನು ನಿಗದಿಪಡಿಸಿ, ಹಾಗೆಯೇ, ನಿಮ್ಮ ಸಹೋದರ ಪುತ್ರರಾದ ಆಖಿಲ್ ಹಾಗೂ ನೌಫಲ್ರ ದಂಡವನ್ನೂ, ನೀವೇ ತೆರಬೇಕು. ಕಾರಣ, ಉತ್ಬನ ಜೊತೆಗಾರರಾಗಿರುವ ತಾವು ಆಗರ್ಭ ಶ್ರೀಮಂತರಾಗಿರುವಿರಿ ”
ಆದರೆ, ಅಬ್ಬಾಸ್ ಇದನ್ನು ವಿರೋಧಿಸಿ ಹೇಳಿದರು. ನಾನು ಮೊದಲೇ ಮುಸ್ಲಿಮನಾಗಿದ್ದೆ. ಆದರೆ, ಜನರ ಒತ್ತಡಕ್ಕೆ ಸಿಲುಕಿ ನಾನು ಯುದ್ಧದಲ್ಲಿ ಭಾಗವಹಿಸಬೇಕಾಯಿತು"
"ಆಗಿರಬಹುದು. ಅಲ್ಲಾಹನಿಗೆ ಎಲ್ಲವೂ ತಿಳಿದಿದೆ. ತಮ್ಮ ಇಸ್ಲಾಮ್ ಸ್ವೀಕಾರದ ಬಗ್ಗೆ ಅವನಿಗೆ ಚೆನ್ನಾಗಿ ತಿಳಿದಿದೆ. ನೀವು ಹೇಳುತ್ತಿರುವುದು ಸತ್ಯವಾದರೆ ಅವನು ನಿಮಗೆ ಪ್ರತಿಫಲ ನೀಡುವನು. ಇಲ್ಲವಾದರೆ ಶಿಕ್ಷಿಸುವನು. ಆದರೂ, ಹೊರನೋಟಕ್ಕೆ ನೀವು ನಮ್ಮ ಎದುರಾಳಿಗಳ ಜೊತೆಗಿದ್ದವರು. ನಮ್ಮೊಂದಿಗೆ ಯುದ್ಧ ಮಾಡಿದವರು. ಆದ್ದರಿಂದ ತಾವು ದಂಡ ತೆರಲೇಬೇಕು” ಎಂದು ಪ್ರವಾದಿ (ಸ) ರು ಅಬ್ಬಾಸ್‌ರಿಗೆ ನಿರ್ದೇಶಿಸಿದರು.
“ನನ್ನ ಬಳಿ ಹಣವಿಲ್ಲ" ಅಬ್ಬಾಸ್ ದಂಡ ಕಟ್ಟುವುದರಿಂದ ತಪ್ಪಿಸಿಕೊಳ್ಳುವ ಕಡೆಯ ಪ್ರಯತ್ನ ಮಾಡಿದರು.
'' ಹಾಗಾದರೆ, ತಾವು ಉಮಯ್ಯತ್ ರಿಗೆ ವಹಿಸಿಕೊಟ್ಟ ಹಣವೆಲ್ಲಿ ಹೋದವು ? ನಾನು ಮರಣ ಹೊಂದಿದರೆ ಈ ಸಂಪತ್ತೆಲ್ಲವೂ ಫಬ್ಲ್, ಅಬ್ದುಲ್ಲಾ, ಖಿತಮ್ ಮತ್ತು ಉಬೈದ್‌ಗೆ ಸೇರುತ್ತವೆ ಎಂದು ನೀವು ಅವರ ಬಳಿ ಹೇಳಿಲ್ಲವೇ ? ಈ ಮಾತನ್ನು ನೀವು ಅವರ ಬಳಿ ಹೇಳುವಾಗ ಅಲ್ಲಿ ಮೂರನೇಯ ವ್ಯಕ್ತಿ ಇರಲಿಲ್ಲ ಅಲ್ಲವೇ ? " ಎಂದು ಮುಹಮ್ಮದ (ಸ) ರು ಹೇಳಿದಾಗ ಚಕಿತರಾಗುವ ಸರದಿ ಅಬ್ಬಾಸ್‌ರದ್ದಾಗಿತ್ತು. ತನಗೆ ಮತ್ತು ತನ್ನ ಪತ್ನಿಗೆ ಮಾತ್ರ ತಿಳಿದಿರುವ ರಹಸ್ಯವೊಂದು ಮುಹಮ್ಮದರಿಗೆ ಹೇಗೆ ತಿಳಿಯಿತು ? ಎಂಬುದು ಅವರ ಆಶ್ಚರ್ಯಕ್ಕೆ ಕಾರಣವಾಗಿತ್ತು. ಈ ಪ್ರಶ್ನೆ ಅವರ ವಿಶ್ವಾಸ ಇನ್ನಷ್ಟು ಗಟ್ಟಿಯಾಗಲು ಕಾರಣವಾದವು.
'' ತಮ್ಮನ್ನು ಯಾರು ಕಳುಹಿಸಿದ್ದಾನೋ ಅವನ ಮೇಲಾಣೆ ಸತ್ಯ" ಅಬ್ಬಾಸ್ ಹೇಳಿದರು.
“ನಾನು ಮತ್ತು ಅವಳು ಬಿಟ್ಟರೆ ಈ ವಿಷಯ ಇನ್ನೊಬ್ಬ ಮನುಷ್ಯನಿಗೆ ತಿಳಿಯುವುದು ಸಾಧ್ಯವೇ ಇಲ್ಲ. ಈಗ ನನಗೆ ಖಚಿತವಾಯಿತು. ತಾವು ಅಲ್ಲಾಹನ ಸಂದೇಶವಾಹಕರು. ನನಗದರಲ್ಲಿ ಸಂದೇಹವಿಲ್ಲ" ಅಬ್ಬಾಸ್ ಅಧಿಕೃತವಾಗಿ ಇಸ್ಲಾಮ್ ಪ್ರವೇಶಿಸುವುದರೊಂದಿಗೆ ತನ್ನ ಹಾಗೂ ಇನ್ನಿಬ್ಬರ ವಿಮೋಚನಾ ಶುಲ್ಕ ನೀಡಲು ಒಪ್ಪಿಕೊಂಡರು..
ಯುದ್ಧ ಮತ್ತು ಶಾಂತಿ:
ಹಿಜ್ರ್ ಎರಡನೇ ವರ್ಷ ಸಫರ್ ಮಾಸ ಹನ್ನೆರಡರಂದು ಪ್ರವಾದಿ (ಸ) ರಿಗೆ ಯುದ್ಧಾನುಮತಿ ನೀಡುವ ಖುರ್‌ಆನ್ ವಚನ ಅವತೀರ್ಣಗೊಂಡವು. ಅದಕ್ಕೂ ಮೊದಲು ಎಪ್ಪತ್ತಕ್ಕೂ ಹೆಚ್ಚು ಖುರ್‌ಆನ್ ವಾಕ್ಯಗಳು ಯುದ್ಧವನ್ನು ನಿಷೇಧಿಸಿದ್ದವು. (ಮುಹಮ್ಮದ್ ರಿಝಾ- ಮುಹಮ್ಮದು ರ್ರಸೂಲಲ್ಲಾಹ್- 196,197) ಅಷ್ಟೊಂದು ಪ್ರಚೋದನೆಗಳಿದ್ದರೂ, ಸತ್ಯ ಧರ್ಮ ಪ್ರಬೋಧನೆಯ ಹದಿಮೂರು ವರ್ಷಗಳ ಶಾಂತಿಗೆ ಭಂಗ ಬರದಂತೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಸಹನೆಯ ಪಥವನ್ನು ಅವಲಂಬಿಸಿದರು. ಕೊನೆಗೆ ಗತ್ಯಂತರವಿಲ್ಲದಿದ್ದಾಗ ಆಯುಧ ಕೈಗೆತ್ತಿಕೊಳ್ಳಬೇಕಾಯಿತೆಂಬುದನ್ನು ಬದ್ರ್ ನ ಹಿನ್ನೆಲೆಗಳು ಸ್ಪಷ್ಟಪಡಿಸುತ್ತದೆ.
ಇಸ್ಲಾಮಿನ ದೃಷ್ಟಿಕೋನದಲ್ಲಿ ಯುದ್ದದ ನೀತಿ ಶಾಸ್ತ್ರವೇನು? ಅದರ ಲಕ್ಷ ಏನಾಗಿರಬೇಕು? ಯುದ್ದವನ್ನು ಸಮರ್ಥಿಸಿಕೊಳ್ಳುವ ಅಥವಾ ಅನಿವಾರ್ಯವಾಗುವ ಸಂದರ್ಭ ಯಾವುದು? ಮೊದಲಾದ ಸಂಶಯಗಳಿಗೆ ಈ ವಿಷಯದಲ್ಲಿ ಆರಂಭದಲ್ಲಿ ಅವತೀರ್ಣಗೊಂಡಿರುವ ಖುರ್‌ಆನ್ ವಚನವೇ ಉತ್ತರಿಸುತ್ತವೆ.
" ಯಾರ ವಿರುದ್ಧ ಯುದ್ಧ ನಡೆಸಲಾಗುತ್ತಿದೆಯೋ ಅವರಿಗೆ ಅನುಮತಿ ನೀಡಲಾಗಿದೆ. ಏಕೆಂದರೆ ಅವರು ಮರ್ದಿತರು. ಮತ್ತು ನಿಶ್ಚಯವಾಗಿಯೂ ಅಲ್ಲಾಹನು ಅವರಿಗೆ ಸಹಾಯ ಮಾಡಲು ಸಮರ್ಥನು. ಇವರು " ನಮ್ಮ ಪ್ರಭು ಅಲ್ಲಾಹ್ ” ಎಂದಿಷ್ಟೇ ಹೇಳಿದ ತಪ್ಪಿಗಾಗಿ ತಮ್ಮ ಮನೆಗಳಿಂದ ಆನ್ಯಾಯವಾಗಿ ಹೊರ ಹಾಕಲ್ಪಟ್ಟವರು. ಅಲ್ಲಾಹನು ಜನರಲ್ಲಿ ಕೆಲವರನ್ನು ಬೇರೆ ಕೆಲವರ ಮೂಲಕ ನೀಗಿಸದಿರುತ್ತಿದ್ದರೆ ಅಲ್ಲಾಹನ ನಾಮವನ್ನು ಅತಿ ಹೆಚ್ಚಾಗಿ ಸ್ಮರಿಸಲಾಗುತ್ತಿರುವ ಆಶ್ರಮಗಳೂ ಇಗರ್ಜಿಗಳೂ ಯಹೂದಿಯರ ಆರಾಧನಾಲಯಗಳೂ ಮಸೀದಿಗಳೂ ಧ್ವಂಸಗೊಳ್ಳುತ್ತಿದ್ದುವು. ಯಾರು ಅಲ್ಲಾಹನಿಗೆ ಸಹಾಯ ಮಾಡುವರೋ ಅವರಿಗೆ ಅವನು ಖಂಡಿತ ಸಹಾಯ ಮಾಡುವನು. ಅಲ್ಲಾಹನು ಮಹಾಪ್ರಬಲನೂ ಆಗಿರುತ್ತಾನೆ. (ಖುರ್‌ಆನ್- 22: 39, 40)
“ಓ ನಮ್ಮ ಪ್ರಭೂ, ಅಕ್ರಮಿಗಳು ವಾಸಿಸುವ ಈ ನಾಡಿನಿಂದ ನಮ್ಮನ್ನು ಹೊರ ತೆಗೆ. ನೀನು ನಿನ್ನ ಕಡೆಯಿಂದ ನಮಗೊಬ್ಬ ಮೇಲ್ವಿಚಾರಕನನ್ನು ಮತ್ತು ಒಬ್ಬ ಸಹಾಯಕನನ್ನು ನಿಯೋಜಿಸು" ಎಂದು ಮೊರೆಯಿಡುತ್ತಿರುವ ಮದನಕ್ಕೊಳಗಾದ ಪುರುಷರು, ಸ್ತ್ರೀಯರು ಮತ್ತು ಮಕ್ಕಳಿಗಾಗಿ, ನೀವು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡದಿರಲು ಕಾರಣವೇನು? ಸತ್ಯವಿಶ್ವಾಸ ಕೈಗೊಂಡವರು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುತ್ತಾರೆ ಮತ್ತು ಸತ್ಯನಿಷೇಧವನ್ನು ಕೈಗೊಂಡವರು *ತಾಗೂತ್* (ಬಂಡು ಕೋರ) ಮಾರ್ಗದಲ್ಲಿ ಯುದ್ಧ ಮಾಡುತ್ತಾರೆ. ಆದುದರಿಂದ ನೀವು ಶೈತಾನನ ಸಂಗಡಿಗರೊಡನೆ ಹೋರಾಡಿರಿ. ಶೈತಾನನ ಕುತಂತ್ರಗಳು ವಾಸ್ತವದಲ್ಲಿ ಬಹಳ ದುರ್ಬಲವೆಂಬುದನ್ನು ಖಾತ್ರಿಯಾಗಿ ತಿಳಿದುಕೊಳ್ಳಿರಿ.. (ಖುರ್ ಆನ್-4:75,76).
“ನಿಮ್ಮೊಡನೆ ಯುದ್ಧ ಮಾಡುವವರೊಂದಿಗೆ ನೀವೂ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿರಿ. ಆದರೆ ಅತಿಕ್ರಮಿಸಬೇಡಿರಿ, ಅಲ್ಲಾಹ್ ಅತಿಕ್ರಮಿಸುವವರನ್ನು ಮೆಚ್ಚುವುದಿಲ್ಲ” (ಖುರ್‌ಆನ್ 2: 190).
“ಕ್ಷೋಭೆಯು ಸಂಪೂರ್ಣ ಅಳಿದು ಹೋಗುವವರೆಗೂ ಧರ್ಮವು ಪರಿಪೂರ್ಣವಾಗಿ ಅಲ್ಲಾಹನಿಗೇ ಆಗುವವರೆಗೂ ನೀವು ಅವರ ವಿರುದ್ದ ಹೋರಾಡಿರಿ. ಅನಂತರ ಅವರು ಹಿಮ್ಮೆಟ್ಟಿದರೆ ಅಕ್ರಮಿಗಳ ವಿನಾ ಇನ್ನಾರ ಮೇಲೂ ಕೈಯೆತ್ತಬಾರದೆಂಬುದನ್ನು ನೀವು ತಿಳಿದಿರಬೇಕು”(ಖುರ್ ಆನ್-2:193).
ಮರ್ದಿಸಲ್ಪಡುವುದು, ಆಕ್ರಮಣಕ್ಕೊಳಗಾಗುವುದು, ಅನ್ಯಾಯವಾಗಿ ತಾಯಿ ನಾಡಿನಿಂದ ಹೊರಗಟ್ಟಲ್ಪಡುವುದು ಮೊದಲಾದ ಸಂದರ್ಭಗಳಲ್ಲಿ ಅಗತ್ಯವಾಗಿದ್ದರೆ ಯುದ್ಧವು ಸಮ್ಮತಾರ್ಹವಾಗಿದೆ. ಮರ್ದಿತರ ವಿಮೋಚನೆ, ಆರಾಧನಾಲಯಗಳ ಸಂರಕ್ಷಣೆ, ವಿಶ್ವಾಸ ಸ್ವಾತಂತ್ರ್ಯದ ರಕ್ಷಣೆ, ಕಲಹ, ಕಲಾಪಗಳ ನಿಯಂತ್ರಣ, ಅಲ್ಲಾಹನ ಹಿತಮನುಸಾರ ಧರ್ಮಾಚಾರಗಳನ್ನು ಸ್ವತಂತ್ರವಾಗಿ ಆಚರಿಸುವ ಸಂದರ್ಭವನ್ನು ಸೃಷ್ಟಿಸುವುದು, ನಮಾಝ್ ನೆಲೆಗೊಳಿಸಲು, ಕಡ್ಡಾಯ ದಾನ ಧರ್ಮಗಳನ್ನು ಕೊಟ್ಟು, ಒಳಿತನ್ನು ಭೋದಿಸಿ, ಕೆಡುಕನ್ನು ವಿರೋಧಿಸುತ್ತಾ ಧಾರ್ಮಿಕ ಸನಾತನ ಮೌಲ್ಯಗಳ ಪುನರ್ ಸ್ಥಾಪನೆ ಮೊದಲಾದ ಲಕ್ಷ್ಯ ಸಾಧನೆಗಾಗಿ ಯುದ್ಧ ಮಾಡಬಹುದಾದರೂ, ಆಗಲೂ ಮಿತಿಯನ್ನು ಮೀರಬಾರದೆಂದು ಖುರ್ ಆನ್ ಹೇಳುತ್ತದೆ. ಲಕ್ಷ್ಯ ಸಾಧನೆಯಾಗಿ, ಆಕ್ರಮಣಕೋರರು ಹಿಂದಕ್ಕೆ ಸರಿದರೆ ಆ ನಂತರ ಯುದ್ಧ ಸಮ್ಮತಾರ್ಹವಲ್ಲ.
ಇಸ್ಲಾಮ್ ಮಾನವ ವಂಶವನ್ನು ಏಕ ಸಮೂಹವಾಗಿ ಕಾಣುತ್ತದೆ. ಲೋಕದಾದ್ಯಂತ ಇರುವ ಜನತೆಯ ಬಿಡುಗಡೆಯ ಸಿದ್ದಾಂತ. ಸಾರ್ವಕಾಲಿಕ ದೈವಿಕ ಸಂದೇಶವೇ ಇಸ್ಲಾಮ್, ಮನುಷ್ಯ ನಿರ್ಮಿತ ವ್ಯವಸ್ಥೆಯ ಇಕ್ಕಟ್ಟಿನಿಂದ ದೈವಿಕ ವ್ಯವಸ್ಥೆಯ ವಿಶಾಲದೆಡೆಗೆ, ಸೃಷ್ಟಿಗಳ ಗುಲಾಮತ್ವದಿಂದ ಸೃಷ್ಟಿಕರ್ತನ ಗುಲಾಮತ್ವದೆಡೆಗೆ ಮನುಷ್ಯನನ್ನು ವಿಮೋಚಿಸಬೇಕು. ಈ ಸಂದೇಶವನ್ನು ಎಲ್ಲರಿಗೂ ತಲುಪಿಸುವುದು ಶೋಷಣೆ ರಹಿತ ಸಮಾಜದ ಸೃಷ್ಟಿಗೆ ಅನಿವಾರ್ಯವಾಗಿದೆ. ಇಸ್ಲಾಮಿಕ್ ಪ್ರಬೋಧನೆ ವಿಶ್ವಾಸಿಯ ಕಡ್ಡಾಯ ಬಾಧ್ಯತೆಯಾಗುವುದು ಹೀಗೆ.
ಅರಬ್ ಉಪದ್ವೀಪಗಳಲ್ಲಿ ಇಸ್ಲಾಮಿಕ್ ಪ್ರಬೋಧನೆ ಪಾದ ಊರಿದ ಬಳಿಕ ವಿದೇಶಿ ರಾಜರುಗಳನ್ನು ಇಸ್ಲಾಮ್‌ಗೆ ಆಹ್ವಾನಿಸಿ, ಪ್ರವಾದಿ (ಸ) ಪತ್ರ ಬರೆದರು. ಏಷ್ಯಾ, ಆಫ್ರಿಕ, ಯುರೋಪ್ಗಳಲ್ಲಿ ಹರಡಿ ಹೋಗಿದ್ದ ರೋಮನ್ ಸಾಮ್ರಾಜ್ಯ ಅಂದು ಶಕ್ತಿಯ ಹಾಗೂ ಪ್ರತಾಪದ ಉತ್ತುಂಗತೆಯಲ್ಲಿದ್ದವು. ಭೂಗೋಳದ ಅರ್ಧಭಾಗವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಆಳುತ್ತಿದ್ದ ರೋಮ್‌ನ ಹಿರಕ್ಕಲ್ ಚಕ್ರವರ್ತಿಗೂ ಪ್ರವಾದಿ (ಸ) ಪತ್ರ ಬರೆದಿದ್ದರು. ಇನ್ನೊಂದು ದೈತ್ಯ ಶಕ್ತಿಯಾಗಿದ್ದ ಸಾಸಾನಿಯನ್ ಸಾಮ್ರಾಜ್ಯದ ದೊರೆ ಕಿಸ್ರ ಚಕ್ರವರ್ತಿಗೂ, ಅಲೆಕ್ಸಾಂಡ್ರಿಯದ ಮುಖೌಖಿಸ್, ಎಥಿಯೋಪಿಯದ ನಜಾಶ್ ರಾಜನಿಗೂ ಇದೇ ರೀತಿಯ ಪತ್ರಗಳನ್ನು ಬರೆದಿದ್ದರು. ದೈವಿಕ ಧರ್ಮದ ಸಂದೇಶಗಳನ್ನು ಎಲ್ಲಾ ಜನ ವಿಭಾಗಗಳಿಗೂ ತಲುಪಿಸುವ ಬಾಧ್ಯತೆಯ ನಿರ್ವಹಣೆಯಾಗಿತ್ತು ಈ ಸಂದೇಶ. ಈ ದೈತ್ಯ ಶಕ್ತಿಗಳ ಅಂದಿನ ಸ್ಥಿತಿಯನ್ನು ಪರಿಗಣಿಸುವುದಾದರೆ, ಒಬ್ಬ ಪ್ರವಾದಿಯಲ್ಲದೆ ಇನ್ಯಾರಿಗೂ ಇಂತಹ ಪತ್ರವನ್ನು ಬರೆಯುವ ಧೈರ್ಯವಾಗುತ್ತಿರಲಿಲ್ಲ.
ಇಸ್ಲಾಮಿಕ್ ಪ್ರಬೋಧನೆಯು ಸರಿಯಾದ ರೀತಿಯಲ್ಲಿ ನಿರ್ವಹಿಸಲ್ಪಟ್ಟಾಗ ಆಡಳಿತ ವರ್ಗಗಳು, ರಾಜರುಗಳು ಸಮಾನವಾಗಿ ಈ ಸಂದೇಶವನ್ನು ಸ್ವೀಕರಿಸಿರುವುದನ್ನು ಕಾಣಲು ಸಾಧ್ಯವಾಗುತ್ತದೆ. ಇಥಿಯೋಪಿಯದ ನಜಾಶ್ ರಾಜ ಅಲ್ಲಿಯ ಪ್ರಜೆಗಳಿಗೂ ಮೊದಲೇ ಇಸ್ಲಾಮ್‌ನತ್ತ ಆಕರ್ಷಿಸಲ್ಪಟ್ಟ ರಾಜನಾಗಿದ್ದನು. ಬಿಡುಗಡೆಯನ್ನು ಬಯಸುತ್ತಿದ್ದ ಸಾಮಾನ್ಯತೆ ಇಸ್ಲಾಮ್ ಸ್ವೀಕರಿಸಿ, ಆಡಳಿತ ವರ್ಗ ಅದನ್ನು ವಿರೋಧಿಸಿದ ಘಟನಾವಳಿಗಳನ್ನೂ ಸಹ ಕಾಣಬಹುದು. ಆಗ ಸ್ವಭಾವಿಕವಾಗಿಯೇ ಸಂಘರ್ಷ, ಯುದ್ದಗಳು ಹುಟ್ಟಿಕೊಂಡವು.
ಅಂತಹ ಒಂದು ಸಂದರ್ಭವನ್ನು ಹೀಗೆ ವಿವರಿಸಬಹುದು; ಪೇರ್ಷ್ಯನ್ ಸಾಮ್ರಾಜ್ಯಕ್ಕೆ ದಫನ ಭೂಮಿಯನ್ನು ತೋರಿಸಿದ ಖಾದಿಸಿಯ್ಯಾ ಯುದ್ಧಕ್ಕೆ ಸಿದ್ಧತೆಗಳು ನಡೆಯುತ್ತಿದ್ದವು. ಪೇರ್ಷ್ಯನ್ನರಿಗೆ ದೈವಿಕ ಸಂದೇಶವನ್ನು ತಲುಪಿಸಿಕೊಡಬೇಕು ಎಂದು ಖಲೀಫ ಉಮರ್ (ರ) ನಿರ್ದೇಶಿಸಿದರು. ನುಅ್ ಮಾನುಬ್ನು ಮುಖರಿನ್, ಮುಗೀರತುಬ್‌ನು ಶುಅ್ಬ ಮೊದಲಾದ ಪ್ರಮುಖರನ್ನೊಳಗೊಂಡ ದೌತ್ಯ ಸಂಘವನ್ನು ಮುಸ್ಲಿಮ್ ಸೇನಾ ನಾಯಕರಾದ ಸಅದ್ ಬುನು ಅಬೀವಖಾಸ್ (ರ) ನಿಯೋಜಿಸಿದರು.
ಅಂದಿನ ಕಿಸ್ರಾದ ಯಸ್ದಗಿರ್ದ್ ಚಕ್ರವರ್ತಿಯ ಅರಮನೆಗೆ ದೌತ್ಯ ಹೊರಟವು. ಒಂದು ಕುದುರೆ, ಕೈಯಲ್ಲೊಂದು ಚಾಟಿ, ಭುಜದ ಮೇಲೊಂದು ಹೊದಿಕೆಯೊಂದಿಗೆ ಅರಮನೆ ಪ್ರವೇಶಿಸಿದ ಮುಸ್ಲಿಮರನ್ನು ಕಂಡು ಅಲ್ಲಿನ ಜನರು ಕುತೂಹಲಗೊಂಡರು. ಏನು ವಿಷಯ? ಇಲ್ಲಿ ತನಕ ಯಾಕೆ ಬಂದಿರಿ? ಚಕ್ರವರ್ತಿ ಯಸ್‌ದಗಿರ್ದ್ ವಿಚಾರಿಸಿದನು. ಇತರರ ಅನುಮತಿ ಪಡೆದು ನುಅ್ ಮಾನುಬ್ನು ಮುಖರಿನ್ ಮಾತನಾಡಿದರು. ದ್ವಿಭಾಷಿ ಅವರ ನೆರವಿಗೆ ಬಂದನು. ಇಸ್ಲಾಮ್‌ಗೂ ಮೊದಲು ತಮ್ಮ ಸ್ಥಿತಿ ಹೇಗಿತ್ತು? ನಂತರ ಹೇಗೆ ಬದಲಾದೆವು ಎಂದು ವಿವರಿಸಿ, ಇಸ್ಲಾಮಿನ ಮಹತ್ವವನ್ನು ಹೇಳಿದರು. ನಂತರ ಈ ಧರ್ಮವನ್ನು ನೀವು ಸ್ವೀಕರಿಸುವುದಾದರೆ ದೈವಿಕ ಗ್ರಂಥದನುಸಾರ ನಿಮಗೆ ಆಡಳಿತ ನಡೆಸಲು ಅನುಮತಿ ನೀಡಿ , ನಿಮ್ಮನ್ನು ಹಾಗೂ ನಿಮ್ಮ ನಾಡನ್ನು ಬಿಟ್ಟು ಹೋಗುವೆವು . ನೀವು ಒಪ್ಪಿಕೊಳ್ಳದಿದ್ದರೆ ಜಿಯಾ ನೀಡಬೇಕು . ಅದನ್ನು ನಾವು ಪಡೆದುಕೊಳ್ಳುತ್ತೇವೆ . ಅದನ್ನೂ ನೀವು ತಿರಸ್ಕರಿಸುವುದಾದರೆ ನಿಮ್ಮೊಂದಿಗೆ ನಾವು ಯುದ್ದ ಮಾಡುವೆವು ' ನುಲ್ಮಾನ್ ಧೈರ್ಯದಿಂದ ಹೇಳಿದರು . ಆ ನಂತರ ಚಕ್ರವರ್ತಿ ತೋರಿದ ಅಹಂಭಾವವೇ ಯುದ್ಧಕ್ಕೆ ಕಾರಣವಾದವು . ( ಶಿಸ್ಖತ್ತಾಬ್ , ಅಲ್ಫಾರೂಕುಲ್ ಖಾಇದ್ - 139 ) , ಸಾಮ್ರಾಜ್ಯವನ್ನು ವಿಸ್ತರಿಸುವುದೋ , ಕಾಲನಿಗಳನ್ನು ಸ್ಥಾಪಿಸುವುದೋ ಇಸ್ಲಾಮಿನ ಉದ್ದೇಶವಾಗಿರಲಿಲ್ಲ . ಒಂದು ನಾಡಿನಲ್ಲಿ ಇಸ್ಲಾಂ ವಿಜಯ ಸಾಧಿಸಿದರೆ ಇವರು ವಿಜಯಿಗಳು , ಇವರು ಪರಾಜಿತರು ಎಂದು ಗುರುತಿಸುವ ಒಂದು ಸಮೂಹ ಅಲ್ಲಿರುವುದಿಲ್ಲ . ಅಲ್ಲಾಹನ ನಿಯಮಾನುಸಾರ ಅಲ್ಲಿ ಆಡಳಿತ ನಡೆಸಲು ಅಲ್ಲಿನ ಜನರಿಗೆ ಅನುಮತಿ ನೀಡಿ , ಆ ನಾಡನ್ನು ತೊರೆದು ಹೋಗುವ ಕೆಲಸವನ್ನು ಮುಸ್ಲಿಮ್ ನಾಯಕರು ಮಾಡುತ್ತಿದ್ದರು . ಇಸ್ಲಾಮಿಕ ಸಮೂಹದಲ್ಲಿ ಮುಸ್ಲಿಮೇತರ ಸಮೂಹಕ್ಕೆ ಸೈನಿಕ ಸೇವೆ ಕಡ್ಡಾಯವಲ್ಲ . ಝಕಾತ್ ಕೂಡ ಅವರಿಗೆ ಅನ್ವಯಿಸುವುದಿಲ್ಲ . ಮುಸ್ಲಿಮರಲ್ಲಿ ಅರ್ಹತೆಯಿರುವವರಿಗೆ ಇದು ಎರಡೂ ಕಡ್ಡಾಯ ವಾಗಿದೆ . ಇದರ ಬದಲಾಗಿ ನಾಡನ್ನು ಹಾಗೂ ತಮ್ಮ ಸಂರಕ್ಷಿಸುವ ಕಾರಣದಿಂದ ಮುಸ್ಲಿಮೇತರರು ನೀಡುವ ತೆರಿಗೆಯೇ ಜಿಝಿಯ , ಸೈನಿಕ ಸೇವೆ ಮಾಡುವವರು , ಇನ್ನಿತರ ವಿಧಗಳಲ್ಲಿ ರಾಷ್ಟ್ರದ ಸೇವೆ ಮಾಡುವವರು , ವೃದ್ಧರು , ಮಕ್ಕಳು , ಸ್ತ್ರೀಯರು , ರೋಗಿಗಳು , ದುರ್ಬಲರು , ದರಿದ್ರರು ಮೊದಲಾದವರು ಜಿಝಿಯಾ ಕೊಡಬೇಕಾಗಿಲ್ಲ . ಅವರಿಗೆ ರಿಯಾಯಿತಿ ಇದೆ . ಇಷ್ಟೇ ಅಲ್ಲದೆ , ಅವರಿಗೆ ಬೈತುಲ್ ಮಾಲ್‌ನಿಂದ ಸಹಾಯ ನೀಡಲಾಗುತ್ತದೆ . ಮುಸ್ಲಿಮೇತರರನ್ನು ಸಂರಕ್ಷಿಸಲು ಸಾಧ್ಯವಾಗದ ಸಂದರ್ಭ ದಲ್ಲಿ ಜಿಯಾವನ್ನು ಹಿಂದಿರುಗಿಸಿದ ಘಟನೆಗಳು ಇಸ್ಲಾಮಿಕ್ ಚರಿತ್ರೆಯಲ್ಲಿದೆ . ಪ್ರಾಯಪೂರ್ತಿಯಾದ ಒಬ್ಬನಿಗೆ ಒಂದು ದೀನಾರ್ ಎಂಬ ಕ್ರಮದಲ್ಲಿ ಪ್ರವಾದಿ ( ಸ ) ರು ಜಿಝಿಯಾ ನಿಶ್ಚಯಿಸಿದ್ದರು . ( ಮುಹಮ್ಮದ್ ಶಾಕಿರ್ , ಅಲ್ ಫಾರೂಖ್ ವಸ್ರತುಹು - 456 , 457 ) . ಒಂದು ದಿನ ಖಲೀಫ ಉಮರ್ ( ರ ) ನಡೆದು ಹೋಗುತ್ತಿದ್ದರು . ದಾರಿ ಬದಿಯಲ್ಲಿ ಅಂಧನೂ , ವೃದ್ಧನೂ ಆದ ಒಬ್ಬ ಬಿಕ್ಷೆ ಬೇಡುತ್ತಿರುವುದನ್ನು ಅವರು ಕಂಡರು . ಉಮರ್ ( ರ ) ಆ ವೃದ್ಧನ ಭುಜಕ್ಕೆ ಕೈ ಹಾಕಿ ಕೇಳಿದರು . ' ನೀನು ಯಾವ ಧರ್ಮದವನು ? ” ' ನಾನು ಯಹೂದಿ ' ಆ ವೃದ್ದ ಹೇಳಿದನು . ' ಜಿಝಿಯ ಕೊಡಲು ಹಾಗೂ ಜೀವನ ಸಾಗಿಸಲು ಈ ಬಿಕ್ಷಾಟನೆ ನಡೆಸುತ್ತಿದ್ದೇನೆ ' ಉಮರ್ ( ರ ) ಆ ವ್ಯಕ್ತಿಯನ್ನು ತಮ್ಮ ಮನೆಗೆ ಕರೆದೊಯ್ದು ಆಹಾರ ನೀಡಿದರು . ನಂತರ ಬೈತುಲ್ ಮಾಲ್‌ನ ಮೇಲ್ವಿಚಾರಕರಿಗೆ ಒಂದು ಪತ್ರ ಬರೆದರು . " . . .
ಹಿಜ್ರ್ ಎರಡನೇ ವರ್ಷ ಸಫರ್ ಮಾಸ ಹನ್ನೆರಡರಂದು ಪ್ರವಾದಿ (ಸ) ರಿಗೆ ಯುದ್ಧಾನುಮತಿ ನೀಡುವ ಖುರ್‌ಆನ್ ವಚನ ಅವತೀರ್ಣಗೊಂಡವು. ಅದಕ್ಕೂ ಮೊದಲು ಎಪ್ಪತ್ತಕ್ಕೂ ಹೆಚ್ಚು ಖುರ್‌ಆನ್ ವಾಕ್ಯಗಳು ಯುದ್ಧವನ್ನು ನಿಷೇಧಿಸಿದ್ದವು. (ಮುಹಮ್ಮದ್ ರಿಝಾ- ಮುಹಮ್ಮದು ರ್ರಸೂಲಲ್ಲಾಹ್- 196,197) ಅಷ್ಟೊಂದು ಪ್ರಚೋದನೆಗಳಿದ್ದರೂ, ಸತ್ಯ ಧರ್ಮ ಪ್ರಬೋಧನೆಯ ಹದಿಮೂರು ವರ್ಷಗಳ ಶಾಂತಿಗೆ ಭಂಗ ಬರದಂತೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಸಹನೆಯ ಪಥವನ್ನು ಅವಲಂಬಿಸಿದರು. ಕೊನೆಗೆ ಗತ್ಯಂತರವಿಲ್ಲದಿದ್ದಾಗ ಆಯುಧ ಕೈಗೆತ್ತಿಕೊಳ್ಳಬೇಕಾಯಿತೆಂಬುದನ್ನು ಬದ್ರ್ ನ ಹಿನ್ನೆಲೆಗಳು ಸ್ಪಷ್ಟಪಡಿಸುತ್ತದೆ.
ಇಸ್ಲಾಮಿನ ದೃಷ್ಟಿಕೋನದಲ್ಲಿ ಯುದ್ದದ ನೀತಿ ಶಾಸ್ತ್ರವೇನು? ಅದರ ಲಕ್ಷ ಏನಾಗಿರಬೇಕು? ಯುದ್ದವನ್ನು ಸಮರ್ಥಿಸಿಕೊಳ್ಳುವ ಅಥವಾ ಅನಿವಾರ್ಯವಾಗುವ ಸಂದರ್ಭ ಯಾವುದು? ಮೊದಲಾದ ಸಂಶಯಗಳಿಗೆ ಈ ವಿಷಯದಲ್ಲಿ ಆರಂಭದಲ್ಲಿ ಅವತೀರ್ಣಗೊಂಡಿರುವ ಖುರ್‌ಆನ್ ವಚನವೇ ಉತ್ತರಿಸುತ್ತವೆ.
" ಯಾರ ವಿರುದ್ಧ ಯುದ್ಧ ನಡೆಸಲಾಗುತ್ತಿದೆಯೋ ಅವರಿಗೆ ಅನುಮತಿ ನೀಡಲಾಗಿದೆ. ಏಕೆಂದರೆ ಅವರು ಮರ್ದಿತರು. ಮತ್ತು ನಿಶ್ಚಯವಾಗಿಯೂ ಅಲ್ಲಾಹನು ಅವರಿಗೆ ಸಹಾಯ ಮಾಡಲು ಸಮರ್ಥನು. ಇವರು " ನಮ್ಮ ಪ್ರಭು ಅಲ್ಲಾಹ್ ” ಎಂದಿಷ್ಟೇ ಹೇಳಿದ ತಪ್ಪಿಗಾಗಿ ತಮ್ಮ ಮನೆಗಳಿಂದ ಆನ್ಯಾಯವಾಗಿ ಹೊರ ಹಾಕಲ್ಪಟ್ಟವರು. ಅಲ್ಲಾಹನು ಜನರಲ್ಲಿ ಕೆಲವರನ್ನು ಬೇರೆ ಕೆಲವರ ಮೂಲಕ ನೀಗಿಸದಿರುತ್ತಿದ್ದರೆ ಅಲ್ಲಾಹನ ನಾಮವನ್ನು ಅತಿ ಹೆಚ್ಚಾಗಿ ಸ್ಮರಿಸಲಾಗುತ್ತಿರುವ ಆಶ್ರಮಗಳೂ ಇಗರ್ಜಿಗಳೂ ಯಹೂದಿಯರ ಆರಾಧನಾಲಯಗಳೂ ಮಸೀದಿಗಳೂ ಧ್ವಂಸಗೊಳ್ಳುತ್ತಿದ್ದುವು. ಯಾರು ಅಲ್ಲಾಹನಿಗೆ ಸಹಾಯ ಮಾಡುವರೋ ಅವರಿಗೆ ಅವನು ಖಂಡಿತ ಸಹಾಯ ಮಾಡುವನು. ಅಲ್ಲಾಹನು ಮಹಾಪ್ರಬಲನೂ ಆಗಿರುತ್ತಾನೆ. (ಖುರ್‌ಆನ್- 22: 39, 40)
“ಓ ನಮ್ಮ ಪ್ರಭೂ, ಅಕ್ರಮಿಗಳು ವಾಸಿಸುವ ಈ ನಾಡಿನಿಂದ ನಮ್ಮನ್ನು ಹೊರ ತೆಗೆ. ನೀನು ನಿನ್ನ ಕಡೆಯಿಂದ ನಮಗೊಬ್ಬ ಮೇಲ್ವಿಚಾರಕನನ್ನು ಮತ್ತು ಒಬ್ಬ ಸಹಾಯಕನನ್ನು ನಿಯೋಜಿಸು" ಎಂದು ಮೊರೆಯಿಡುತ್ತಿರುವ ಮದನಕ್ಕೊಳಗಾದ ಪುರುಷರು, ಸ್ತ್ರೀಯರು ಮತ್ತು ಮಕ್ಕಳಿಗಾಗಿ, ನೀವು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡದಿರಲು ಕಾರಣವೇನು? ಸತ್ಯವಿಶ್ವಾಸ ಕೈಗೊಂಡವರು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುತ್ತಾರೆ ಮತ್ತು ಸತ್ಯನಿಷೇಧವನ್ನು ಕೈಗೊಂಡವರು *ತಾಗೂತ್* (ಬಂಡು ಕೋರ) ಮಾರ್ಗದಲ್ಲಿ ಯುದ್ಧ ಮಾಡುತ್ತಾರೆ. ಆದುದರಿಂದ ನೀವು ಶೈತಾನನ ಸಂಗಡಿಗರೊಡನೆ ಹೋರಾಡಿರಿ. ಶೈತಾನನ ಕುತಂತ್ರಗಳು ವಾಸ್ತವದಲ್ಲಿ ಬಹಳ ದುರ್ಬಲವೆಂಬುದನ್ನು ಖಾತ್ರಿಯಾಗಿ ತಿಳಿದುಕೊಳ್ಳಿರಿ.. (ಖುರ್ ಆನ್-4:75,76).
“ನಿಮ್ಮೊಡನೆ ಯುದ್ಧ ಮಾಡುವವರೊಂದಿಗೆ ನೀವೂ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿರಿ. ಆದರೆ ಅತಿಕ್ರಮಿಸಬೇಡಿರಿ, ಅಲ್ಲಾಹ್ ಅತಿಕ್ರಮಿಸುವವರನ್ನು ಮೆಚ್ಚುವುದಿಲ್ಲ” (ಖುರ್‌ಆನ್ 2: 190).
“ಕ್ಷೋಭೆಯು ಸಂಪೂರ್ಣ ಅಳಿದು ಹೋಗುವವರೆಗೂ ಧರ್ಮವು ಪರಿಪೂರ್ಣವಾಗಿ ಅಲ್ಲಾಹನಿಗೇ ಆಗುವವರೆಗೂ ನೀವು ಅವರ ವಿರುದ್ದ ಹೋರಾಡಿರಿ. ಅನಂತರ ಅವರು ಹಿಮ್ಮೆಟ್ಟಿದರೆ ಅಕ್ರಮಿಗಳ ವಿನಾ ಇನ್ನಾರ ಮೇಲೂ ಕೈಯೆತ್ತಬಾರದೆಂಬುದನ್ನು ನೀವು ತಿಳಿದಿರಬೇಕು”(ಖುರ್ ಆನ್-2:193).
ಮರ್ದಿಸಲ್ಪಡುವುದು, ಆಕ್ರಮಣಕ್ಕೊಳಗಾಗುವುದು, ಅನ್ಯಾಯವಾಗಿ ತಾಯಿ ನಾಡಿನಿಂದ ಹೊರಗಟ್ಟಲ್ಪಡುವುದು ಮೊದಲಾದ ಸಂದರ್ಭಗಳಲ್ಲಿ ಅಗತ್ಯವಾಗಿದ್ದರೆ ಯುದ್ಧವು ಸಮ್ಮತಾರ್ಹವಾಗಿದೆ. ಮರ್ದಿತರ ವಿಮೋಚನೆ, ಆರಾಧನಾಲಯಗಳ ಸಂರಕ್ಷಣೆ, ವಿಶ್ವಾಸ ಸ್ವಾತಂತ್ರ್ಯದ ರಕ್ಷಣೆ, ಕಲಹ, ಕಲಾಪಗಳ ನಿಯಂತ್ರಣ, ಅಲ್ಲಾಹನ ಹಿತಮನುಸಾರ ಧರ್ಮಾಚಾರಗಳನ್ನು ಸ್ವತಂತ್ರವಾಗಿ ಆಚರಿಸುವ ಸಂದರ್ಭವನ್ನು ಸೃಷ್ಟಿಸುವುದು, ನಮಾಝ್ ನೆಲೆಗೊಳಿಸಲು, ಕಡ್ಡಾಯ ದಾನ ಧರ್ಮಗಳನ್ನು ಕೊಟ್ಟು, ಒಳಿತನ್ನು ಭೋದಿಸಿ, ಕೆಡುಕನ್ನು ವಿರೋಧಿಸುತ್ತಾ ಧಾರ್ಮಿಕ ಸನಾತನ ಮೌಲ್ಯಗಳ ಪುನರ್ ಸ್ಥಾಪನೆ ಮೊದಲಾದ ಲಕ್ಷ್ಯ ಸಾಧನೆಗಾಗಿ ಯುದ್ಧ ಮಾಡಬಹುದಾದರೂ, ಆಗಲೂ ಮಿತಿಯನ್ನು ಮೀರಬಾರದೆಂದು ಖುರ್ ಆನ್ ಹೇಳುತ್ತದೆ. ಲಕ್ಷ್ಯ ಸಾಧನೆಯಾಗಿ, ಆಕ್ರಮಣಕೋರರು ಹಿಂದಕ್ಕೆ ಸರಿದರೆ ಆ ನಂತರ ಯುದ್ಧ ಸಮ್ಮತಾರ್ಹವಲ್ಲ.
ಇಸ್ಲಾಮ್ ಮಾನವ ವಂಶವನ್ನು ಏಕ ಸಮೂಹವಾಗಿ ಕಾಣುತ್ತದೆ. ಲೋಕದಾದ್ಯಂತ ಇರುವ ಜನತೆಯ ಬಿಡುಗಡೆಯ ಸಿದ್ದಾಂತ. ಸಾರ್ವಕಾಲಿಕ ದೈವಿಕ ಸಂದೇಶವೇ ಇಸ್ಲಾಮ್, ಮನುಷ್ಯ ನಿರ್ಮಿತ ವ್ಯವಸ್ಥೆಯ ಇಕ್ಕಟ್ಟಿನಿಂದ ದೈವಿಕ ವ್ಯವಸ್ಥೆಯ ವಿಶಾಲದೆಡೆಗೆ, ಸೃಷ್ಟಿಗಳ ಗುಲಾಮತ್ವದಿಂದ ಸೃಷ್ಟಿಕರ್ತನ ಗುಲಾಮತ್ವದೆಡೆಗೆ ಮನುಷ್ಯನನ್ನು ವಿಮೋಚಿಸಬೇಕು. ಈ ಸಂದೇಶವನ್ನು ಎಲ್ಲರಿಗೂ ತಲುಪಿಸುವುದು ಶೋಷಣೆ ರಹಿತ ಸಮಾಜದ ಸೃಷ್ಟಿಗೆ ಅನಿವಾರ್ಯವಾಗಿದೆ. ಇಸ್ಲಾಮಿಕ್ ಪ್ರಬೋಧನೆ ವಿಶ್ವಾಸಿಯ ಕಡ್ಡಾಯ ಬಾಧ್ಯತೆಯಾಗುವುದು ಹೀಗೆ.
ಅರಬ್ ಉಪದ್ವೀಪಗಳಲ್ಲಿ ಇಸ್ಲಾಮಿಕ್ ಪ್ರಬೋಧನೆ ಪಾದ ಊರಿದ ಬಳಿಕ ವಿದೇಶಿ ರಾಜರುಗಳನ್ನು ಇಸ್ಲಾಮ್‌ಗೆ ಆಹ್ವಾನಿಸಿ, ಪ್ರವಾದಿ (ಸ) ಪತ್ರ ಬರೆದರು. ಏಷ್ಯಾ, ಆಫ್ರಿಕ, ಯುರೋಪ್ಗಳಲ್ಲಿ ಹರಡಿ ಹೋಗಿದ್ದ ರೋಮನ್ ಸಾಮ್ರಾಜ್ಯ ಅಂದು ಶಕ್ತಿಯ ಹಾಗೂ ಪ್ರತಾಪದ ಉತ್ತುಂಗತೆಯಲ್ಲಿದ್ದವು. ಭೂಗೋಳದ ಅರ್ಧಭಾಗವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಆಳುತ್ತಿದ್ದ ರೋಮ್‌ನ ಹಿರಕ್ಕಲ್ ಚಕ್ರವರ್ತಿಗೂ ಪ್ರವಾದಿ (ಸ) ಪತ್ರ ಬರೆದಿದ್ದರು. ಇನ್ನೊಂದು ದೈತ್ಯ ಶಕ್ತಿಯಾಗಿದ್ದ ಸಾಸಾನಿಯನ್ ಸಾಮ್ರಾಜ್ಯದ ದೊರೆ ಕಿಸ್ರ ಚಕ್ರವರ್ತಿಗೂ, ಅಲೆಕ್ಸಾಂಡ್ರಿಯದ ಮುಖೌಖಿಸ್, ಎಥಿಯೋಪಿಯದ ನಜಾಶ್ ರಾಜನಿಗೂ ಇದೇ ರೀತಿಯ ಪತ್ರಗಳನ್ನು ಬರೆದಿದ್ದರು. ದೈವಿಕ ಧರ್ಮದ ಸಂದೇಶಗಳನ್ನು ಎಲ್ಲಾ ಜನ ವಿಭಾಗಗಳಿಗೂ ತಲುಪಿಸುವ ಬಾಧ್ಯತೆಯ ನಿರ್ವಹಣೆಯಾಗಿತ್ತು ಈ ಸಂದೇಶ. ಈ ದೈತ್ಯ ಶಕ್ತಿಗಳ ಅಂದಿನ ಸ್ಥಿತಿಯನ್ನು ಪರಿಗಣಿಸುವುದಾದರೆ, ಒಬ್ಬ ಪ್ರವಾದಿಯಲ್ಲದೆ ಇನ್ಯಾರಿಗೂ ಇಂತಹ ಪತ್ರವನ್ನು ಬರೆಯುವ ಧೈರ್ಯವಾಗುತ್ತಿರಲಿಲ್ಲ.
ಇಸ್ಲಾಮಿಕ್ ಪ್ರಬೋಧನೆಯು ಸರಿಯಾದ ರೀತಿಯಲ್ಲಿ ನಿರ್ವಹಿಸಲ್ಪಟ್ಟಾಗ ಆಡಳಿತ ವರ್ಗಗಳು, ರಾಜರುಗಳು ಸಮಾನವಾಗಿ ಈ ಸಂದೇಶವನ್ನು ಸ್ವೀಕರಿಸಿರುವುದನ್ನು ಕಾಣಲು ಸಾಧ್ಯವಾಗುತ್ತದೆ. ಇಥಿಯೋಪಿಯದ ನಜಾಶ್ ರಾಜ ಅಲ್ಲಿಯ ಪ್ರಜೆಗಳಿಗೂ ಮೊದಲೇ ಇಸ್ಲಾಮ್‌ನತ್ತ ಆಕರ್ಷಿಸಲ್ಪಟ್ಟ ರಾಜನಾಗಿದ್ದನು. ಬಿಡುಗಡೆಯನ್ನು ಬಯಸುತ್ತಿದ್ದ ಸಾಮಾನ್ಯತೆ ಇಸ್ಲಾಮ್ ಸ್ವೀಕರಿಸಿ, ಆಡಳಿತ ವರ್ಗ ಅದನ್ನು ವಿರೋಧಿಸಿದ ಘಟನಾವಳಿಗಳನ್ನೂ ಸಹ ಕಾಣಬಹುದು. ಆಗ ಸ್ವಭಾವಿಕವಾಗಿಯೇ ಸಂಘರ್ಷ, ಯುದ್ದಗಳು ಹುಟ್ಟಿಕೊಂಡವು.
ಅಂತಹ ಒಂದು ಸಂದರ್ಭವನ್ನು ಹೀಗೆ ವಿವರಿಸಬಹುದು; ಪೇರ್ಷ್ಯನ್ ಸಾಮ್ರಾಜ್ಯಕ್ಕೆ ದಫನ ಭೂಮಿಯನ್ನು ತೋರಿಸಿದ ಖಾದಿಸಿಯ್ಯಾ ಯುದ್ಧಕ್ಕೆ ಸಿದ್ಧತೆಗಳು ನಡೆಯುತ್ತಿದ್ದವು. ಪೇರ್ಷ್ಯನ್ನರಿಗೆ ದೈವಿಕ ಸಂದೇಶವನ್ನು ತಲುಪಿಸಿಕೊಡಬೇಕು ಎಂದು ಖಲೀಫ ಉಮರ್ (ರ) ನಿರ್ದೇಶಿಸಿದರು. ನುಅ್ ಮಾನುಬ್ನು ಮುಖರಿನ್, ಮುಗೀರತುಬ್‌ನು ಶುಅ್ಬ ಮೊದಲಾದ ಪ್ರಮುಖರನ್ನೊಳಗೊಂಡ ದೌತ್ಯ ಸಂಘವನ್ನು ಮುಸ್ಲಿಮ್ ಸೇನಾ ನಾಯಕರಾದ ಸಅದ್ ಬುನು ಅಬೀವಖಾಸ್ (ರ) ನಿಯೋಜಿಸಿದರು.
ಅಂದಿನ ಕಿಸ್ರಾದ ಯಸ್ದಗಿರ್ದ್ ಚಕ್ರವರ್ತಿಯ ಅರಮನೆಗೆ ದೌತ್ಯ ಹೊರಟವು. ಒಂದು ಕುದುರೆ, ಕೈಯಲ್ಲೊಂದು ಚಾಟಿ, ಭುಜದ ಮೇಲೊಂದು ಹೊದಿಕೆಯೊಂದಿಗೆ ಅರಮನೆ ಪ್ರವೇಶಿಸಿದ ಮುಸ್ಲಿಮರನ್ನು ಕಂಡು ಅಲ್ಲಿನ ಜನರು ಕುತೂಹಲಗೊಂಡರು. ಏನು ವಿಷಯ? ಇಲ್ಲಿ ತನಕ ಯಾಕೆ ಬಂದಿರಿ? ಚಕ್ರವರ್ತಿ ಯಸ್‌ದಗಿರ್ದ್ ವಿಚಾರಿಸಿದನು. ಇತರರ ಅನುಮತಿ ಪಡೆದು ನುಅ್ ಮಾನುಬ್ನು ಮುಖರಿನ್ ಮಾತನಾಡಿದರು. ದ್ವಿಭಾಷಿ ಅವರ ನೆರವಿಗೆ ಬಂದನು. ಇಸ್ಲಾಮ್‌ಗೂ ಮೊದಲು ತಮ್ಮ ಸ್ಥಿತಿ ಹೇಗಿತ್ತು? ನಂತರ ಹೇಗೆ ಬದಲಾದೆವು ಎಂದು ವಿವರಿಸಿ, ಇಸ್ಲಾಮಿನ ಮಹತ್ವವನ್ನು ಹೇಳಿದರು. ನಂತರ ಈ ಧರ್ಮವನ್ನು ನೀವು ಸ್ವೀಕರಿಸುವುದಾದರೆ ದೈವಿಕ ಗ್ರಂಥದನುಸಾರ ನಿಮಗೆ ಆಡಳಿತ ನಡೆಸಲು ಅನುಮತಿ ನೀಡಿ, ನಿಮ್ಮನ್ನು ಹಾಗೂ ನಿಮ್ಮ ನಾಡನ್ನು ಬಿಟ್ಟು ಹೋಗುವೆವು. ನೀವು ಒಪ್ಪಿಕೊಳ್ಳದಿದ್ದರೆ ಜಿಝಿಯಾ ನೀಡಬೇಕು. ಅದನ್ನು ನಾವು ಪಡೆದುಕೊಳ್ಳುತ್ತೇವೆ. ಅದನ್ನೂ ನೀವು ತಿರಸ್ಕರಿಸುವುದಾದರೆ ನಿಮ್ಮೊಂದಿಗೆ ನಾವು ಯುದ್ದ ಮಾಡುವೆವು.. ನುಅ್ ಮಾನ್ ಧೈರ್ಯದಿಂದ ಹೇಳಿದರು.
ಆ ನಂತರ ಚಕ್ರವರ್ತಿ ತೋರಿದ ಅಹಂಭಾವವೇ ಯುದ್ಧಕ್ಕೆ ಕಾರಣವಾದವು. (ಶಿಸ್ಖತ್ತಾಬ್, ಅಲ್ಫಾರೂಕುಲ್ ಖಾಇದ್- 139)
ಸಾಮ್ರಾಜ್ಯವನ್ನು ವಿಸ್ತರಿಸುವುದೋ, ಕಾಲನಿಗಳನ್ನು ಸ್ಥಾಪಿಸುವುದೋ ಇಸ್ಲಾಮಿನ ಉದ್ದೇಶವಾಗಿರಲಿಲ್ಲ. ಒಂದು ನಾಡಿನಲ್ಲಿ ಇಸ್ಲಾಂ ವಿಜಯ ಸಾಧಿಸಿದರೆ ಇವರು ವಿಜಯಿಗಳು, ಇವರು ಪರಾಜಿತರು ಎಂದು ಗುರುತಿಸುವ ಒಂದು ಸಮೂಹ ಅಲ್ಲಿರುವುದಿಲ್ಲ. ಅಲ್ಲಾಹನ ನಿಯಮಾನುಸಾರ ಅಲ್ಲಿ ಆಡಳಿತ ನಡೆಸಲು ಅಲ್ಲಿನ ಜನರಿಗೆ ಅನುಮತಿ ನೀಡಿ, ಆ ನಾಡನ್ನು ತೊರೆದು ಹೋಗುವ ಕೆಲಸವನ್ನು ಮುಸ್ಲಿಮ್ ನಾಯಕರು ಮಾಡುತ್ತಿದ್ದರು.
ಇಸ್ಲಾಮಿಕ ಸಮೂಹದಲ್ಲಿ ಮುಸ್ಲಿಮೇತರ ಸಮೂಹಕ್ಕೆ ಸೈನಿಕ ಸೇವೆ ಕಡ್ಡಾಯವಲ್ಲ. ಝಕಾತ್ ಕೂಡ ಅವರಿಗೆ ಅನ್ವಯಿಸುವುದಿಲ್ಲ. ಮುಸ್ಲಿಮರಲ್ಲಿ ಅರ್ಹತೆಯಿರುವವರಿಗೆ ಇದು ಎರಡೂ ಕಡ್ಡಾಯವಾಗಿದೆ. ಇದರ ಬದಲಾಗಿ ನಾಡನ್ನು ಹಾಗೂ ತಮ್ಮ ಸಂರಕ್ಷಿಸುವ ಕಾರಣದಿಂದ ಮುಸ್ಲಿಮೇತರರು ನೀಡುವ ತೆರಿಗೆಯೇ ಜಿಝಿಯ, ಸೈನಿಕ ಸೇವೆ ಮಾಡುವವರು, ಇನ್ನಿತರ ವಿಧಗಳಲ್ಲಿ ರಾಷ್ಟ್ರದ ಸೇವೆ ಮಾಡುವವರು, ವೃದ್ಧರು, ಮಕ್ಕಳು, ಸ್ತ್ರೀಯರು, ರೋಗಿಗಳು, ದುರ್ಬಲರು, ದರಿದ್ರರು ಮೊದಲಾದವರು ಜಿಝಿಯಾ ಕೊಡಬೇಕಾಗಿಲ್ಲ. ಅವರಿಗೆ ರಿಯಾಯಿತಿ ಇದೆ. ಇಷ್ಟೇ ಅಲ್ಲದೆ, ಅವರಿಗೆ ಬೈತುಲ್ ಮಾಲ್‌ನಿಂದ ಸಹಾಯ ನೀಡಲಾಗುತ್ತದೆ. ಮುಸ್ಲಿಮೇತರರನ್ನು ಸಂರಕ್ಷಿಸಲು ಸಾಧ್ಯವಾಗದ ಸಂದರ್ಭದಲ್ಲಿ ಜಿಝಿಯಾವನ್ನು ಹಿಂದಿರುಗಿಸಿದ ಘಟನೆಗಳು ಇಸ್ಲಾಮಿಕ್ ಚರಿತ್ರೆಯಲ್ಲಿದೆ. ಪ್ರಾಯಪೂರ್ತಿಯಾದ ಒಬ್ಬನಿಗೆ ಒಂದು ದೀನಾರ್ ಎಂಬ ಕ್ರಮದಲ್ಲಿ ಪ್ರವಾದಿ (ಸ) ರು ಜಿಝಿಯಾ ನಿಶ್ಚಯಿಸಿದ್ದರು. (ಮುಹಮ್ಮದ್ ಶಾಕಿರ್, ಅಲ್ ಫಾರೂಖ್ ವಉಸ್ರತುಹು- 456, 457)
ಒಂದು ದಿನ ಖಲೀಫ ಉಮರ್ (ರ) ನಡೆದು ಹೋಗುತ್ತಿದ್ದರು. ದಾರಿ ಬದಿಯಲ್ಲಿ ಅಂಧನೂ, ವೃದ್ಧನೂ ಆದ ಒಬ್ಬ ಬಿಕ್ಷೆ ಬೇಡುತ್ತಿರುವುದನ್ನು ಅವರು ಕಂಡರು. ಉಮರ್ (ರ) ಆ ವೃದ್ಧನ ಭುಜಕ್ಕೆ ಕೈ ಹಾಕಿ ಕೇಳಿದರು.
"ನೀನು ಯಾವ ಧರ್ಮದವನು ?”
'' ನಾನು ಯಹೂದಿ '' ಆ ವೃದ್ದ ಹೇಳಿದನು.
''ಜಿಝಿಯ ಕೊಡಲು ಹಾಗೂ ಜೀವನ ಸಾಗಿಸಲು ಈ ಬಿಕ್ಷಾಟನೆ ನಡೆಸುತ್ತಿದ್ದೇನೆ '' ಉಮರ್ (ರ) ಆ ವ್ಯಕ್ತಿಯನ್ನು ತಮ್ಮ ಮನೆಗೆ ಕರೆದೊಯ್ದು ಆಹಾರ ನೀಡಿದರು. ನಂತರ ಬೈತುಲ್ ಮಾಲ್‌ನ ಮೇಲ್ವಿಚಾರಕರಿಗೆ ಒಂದು ಪತ್ರ ಬರೆದರು..
ಈ ವ್ಯಕ್ತಿ ಹಾಗೂ ಹೀಗೆ ಜೀವನ ಸಾಗಿಸುತ್ತಿರುವವರನ್ನು ಪತ್ತೆ ಹಚ್ಚಬೇಕು. ಇವರ ಯೌವನವನ್ನು ಬಳಸಿಕೊಂಡು, ವೃದ್ಧಾಪ್ಯದಲ್ಲಿ ನಿರ್ಲಕ್ಷಿಸಿದರೆ ಅದು ನ್ಯಾಯ ಪಾಲನೆಯಲ್ಲ. ಆದ್ದರಿಂದ ತಕ್ಷಣವೇ ಇವರಿಗೆ ಬೇಕಾದ ವ್ಯವಸ್ಥೆ ಮಾಡಿಕೊಡಬೇಕು '' ದುರ್ಬಲರಿಗೆ ಜಿಝಿಯಾದಲ್ಲಿ ರಿಯಾಯಿತಿ ನೀಡಿ ಉಮರ್ (ರ) ಪ್ರಕಟನೆ ಹೊರಡಿಸಿದರು. (ಮುಹಮ್ಮದ್ ಶಾಕಿರ್, ಅಲ್ ಫಾರೂಖ ವಉಸ್ರತುಹು- 370)
ಮುಸ್ಲಿಮರ ಸಂರಕ್ಷಣೆಯಲ್ಲಿರುವ ಮುಸ್ಲಿಮೇತರರೊಂದಿಗೆ ಯುದ್ಧ ಮಾಡಬಾರದು. "ಸಂರಕ್ಷಣೆಯ ಕರಾರು ಮಾಡಿಕೊಂಡಿರುವವರೊಂದಿಗೆ ಒಬ್ಬಾತ ಯುದ್ದ ಮಾಡಿದರೆ ಆತ ಸ್ವರ್ಗದ ಸೌಭಾಗ್ಯವನ್ನು ಅನುಭವಿಸಲಾರ. ನಿಶ್ಚಯವಾಗಿಯೂ, ಆ ಸೌಭಾಗ್ಯ ಅವನಿಂದ ನಲ್ವತ್ತು ವರ್ಷದಷ್ಟು ದೂರ ಸರಿಯುವವು '' ಎಂದು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದ್ದಾರೆ. (ಬುಖಾರಿ)
ಯುದ್ಧಭೂಮಿಯಲ್ಲಿ ಶತ್ರುವಿನೊಂದಿಗೆ ಹೋರಾಡುವಾಗ ಕಡ್ಡಾಯವಾಗಿ ಪಾಲಿಸಬೇಕಾದ ಶಿಷ್ಟಾಚಾರ ಗಳನ್ನು ಪ್ರವಾದಿ (ಸ) ರು ಅನುಯಾಯಿಗಳಿಗೆ ಕಲಿಸಿಕೊಟ್ಟಿದ್ದರು.
“ನೀವು ಅಲ್ಲಾಹನಿಗೆ ಭಯಪಡಬೇಕು. ಜೊತೆಗಿರುವ ಮುಸ್ಲಿಮರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸಬೇಕು. ಅಲ್ಲಾಹನ ನಾಮದಲ್ಲಿ ಅವನ ಮಾರ್ಗವನ್ನು ಅನುಸರಿಸಿ, ಸತ್ಯನಿಷೇಧಿಗಳೊಂದಿಗೆ ಯುದ್ಧ ಮಾಡಿರಿ. ವಂಚನೆ ಮಾಡಬಾರದು. ಪರಿಧಿ ಲಂಘಿಸಬಾರದು. ಗಾಯಗೊಂಡವನ ಮೇಲೆ ಆಕ್ರಮಣ ಮಾಡಬಾರದು. ಶಿಶುಗಳನ್ನು, ಸ್ತ್ರೀಯರನ್ನು, ವೃದ್ದರನ್ನು, ರೋಗಿಗಳನ್ನು ಮತ್ತು ಆಶ್ರಮದಲ್ಲಿ ಆರಾಧನಾ ನಿರತರಾದವರನ್ನು ವಧಿಸಬಾರದು. ಖರ್ಜೂರದ ಬಳಿ ಸುಳಿಯಬಾರದು. ಮರವನ್ನು ಕಡಿಯಬಾರದು, ಕಟ್ಟಡಗಳನ್ನು ಕೆಡವಬಾರದು. ದೇವಾಲಯಗಳನ್ನು ಸ್ಪರ್ಶಿಸಬಾರದು. ನೀರನ್ನು ಕೆಡಿಸಬಾರದು ” (ಅಲ್ ಫಾರೂಖುಲ್ ಖಾಇದ್ 138)
ಒಂದು ಘಟನೆ ಹೀಗಿದೆ. ಖಲೀಫ ಉಮರ್ (ರ) ರ ನಿರ್ದೇಶನದ ಪ್ರಕಾರ, ಈಜಿಪ್ಟ್ನ ಗವರ್ನರ್ ಅಮ್ರಬುನುಲ್ ಆಸ್ವ್ (ರ) ಕ್ರಿ. 643ರಲ್ಲಿ ನೈಲ್ ನದಿಯ ಪೂರ್ವ ತೀರದಲ್ಲಿ ನಿರ್ಮಿಸಿದ ನಗರವೇ ಫುಸ್ತ್ವಾತ್. ಗುಡಾರ ಎಂದು ಅರ್ಥ. ಆ ಹೆಸರು ಲಭಿಸಲು ಒಂದು ಕಾರಣವಿದ್ದವು. ರೋಮನ್ನರೊಂದಿಗೆ ಯುದ್ಧ ಮಾಡಲು ಅಲೆಕ್ಸಾಂಡ್ರಿಯಕ್ಕೆ ಹೋಗಲು ನಿರ್ಧರಿಸಿದ ಅಮ್ರ್ ತಮ್ಮ ಗುಡಾರವನ್ನು ಕೆಡವಲು ನಿರ್ದೇಶಿಸಿದರು. ಆದರೆ, ಅಷ್ಟರಲ್ಲಾಗಲೇ ಅದರಲ್ಲಿ ಪಾರಿವಾಳವೊಂದು ಗೂಡು ಕಟ್ಟಿ ಮೊಟ್ಟೆ ಹಾಕಿ, ಮರಿ ಮಾಡಿತ್ತು. ಅದಕ್ಕೆ ಉಪದ್ರವವಾಗಬಾರದೆಂದು ಅ ಆ ಗುಡಾರವನ್ನು ಕೆಡವದಂತೆ ನಿರ್ದೇಶಿಸಿದರು. ಅಲೆಕ್ಸಾಂಡ್ರಿಯ ಯುದ್ಧವನ್ನು ಗೆದ್ದು, ಹಿಂದಿರುಗುತ್ತಿದ್ದ ಮುಸ್ಲಿಮರು, ಎಲ್ಲಿ ವಿಶ್ರಾಂತಿ ಪಡೆಯುವುದು? ” ಎಂದು ಕೇಳಿದರು.
ಪುಸ್ತ್ವಾತ್ ನಲ್ಲಿ (ಗುಡಾರವಿರುವ ಸ್ಥಳದಲ್ಲಿ) ಎಂದು ಅಮ್ರ್ ಹೇಳಿದರು. ಇಲ್ಲಿ ಬೆಳೆದ ನಗರಕ್ಕೆ ಪುಸ್ತ್ವಾತ್ ಎಂಬ ಹೆಸರು ಲಭಿಸಿದವು.
ಇರುವೆಯನ್ನು ಕೊಲ್ಲಬಾರದೆಂದೂ, ಕಪ್ಪೆಯನ್ನು ಕೊಲ್ಲಬಾರದೆಂದೂ, ಅದರ ಕೂಗು ದೈವ ಕೀರ್ತನೆ ಎಂದು ಕಲಿಸಿದ ಪ್ರವಾದಿ (ಸ) ರ ಶಿಷ್ಯರಾಗಿದ್ದಾರೆ ಅಮ್ರಬುನುಲ್ ಅಸ್ (ರ)
ಯುದ್ಧ ರಂಗದ ಶಿಷ್ಟಾಚಾರಗಳಿಗೆ ಮುಸ್ಲಿಮರು ವಿಶೇಷ ಗಮನ ಹರಿಸುತ್ತಿದ್ದರು. ಅಹ್ವಾಸ್‌ನಲ್ಲಿ ಒಂದು ಪಟ್ಟಣಕ್ಕೆ ಮುತ್ತಿಗೆ ಹಾಕುತ್ತಿರಬೇಕಾದರೆ ಮುಸ್ಲಿಮರಲ್ಲಿ ಒಬ್ಬರು ಶತ್ರುಗಳಿಗೆ ಅಭಯದ ವಾಗ್ದಾನ ಮಾಡಿದರು.
ಇದನ್ನು ಕೇಳಿದ ತಕ್ಷಣವೇ ಶತ್ರುಗಳು ಕೋಟೆಯ ಬಾಗಿಲುಗಳು ನಿರ್ಭಯರಾಗಿ ಹೊರಗೆ ಬರಲಾರಂಭಿಸಿದರು. ಏನು ಸಂಭವಿಸುತ್ತಿದೆ ಎಂದು ತಿಳಿಯದ ಮುಸ್ಲಿಮ್ ಸೈನಿಕರು ಮುಖ ಮುಖ ನೋಡಿಕೊಂಡರು. ಆಗ ಶತ್ರುಗಳು ಹೇಳಿದರು.
“ನೀವು ನಮಗೆ ಅಭಯ ನೀಡಿರುವಿರಿ. ನಾವು ನಿಮಗೆ ಜಿಝಿಯ ನೀಡಲು ಒಪ್ಪಿಕೊಂಡಿದ್ದೇವೆ ''
ನಾವ್ಯಾರೂ ಶತ್ರುಗಳಿಗೆ ಅಭಯ ನೀಡಿಲ್ಲವೆಂದು ಮುಸ್ಲಿಮರು ಹೇಳಿದರು. ವಿಚಾರಣೆ ಮಾಡಿ ಮುಸ್ಲಿಮರ ನಡುವೆಯಿದ್ದ ಮಕ್ನಫ್ ಎಂಬ ಹೆಸರಿನ ಸೇವಕರೊಬ್ಬರು ಶತ್ರುಗಳಿಗೆ ಅಭಯ ನೀಡಿದ್ದರು. ಆತನೊಬ್ಬ ಸೇವಕನಲ್ಲವೇ? ಎಂದು ಮುಸ್ಲಿಮರು ಕೇಳಿದಾಗ, ಶತ್ರುಗಳು, '' ಸೇವಕನ ಹಾಗೂ ಒಡೆಯನ ವ್ಯತ್ಯಾಸ ನಮಗೆ ತಿಳಿಯುವುದಿಲ್ಲ. ನಾವು ಜಿಝಿಯ ಕೊಡಲು ಒಪ್ಪಿಕೊಂಡಿದ್ದೇವೆ. ನಮ್ಮ ತೀರ್ಮಾನದಲ್ಲಿ ಯಾವುದೇ ಬದಲಾವಣೆ ಇಲ್ಲ. ನೀವು ಬೇಕಾದರೆ ಒಪ್ಪಂದವನ್ನು ಉಲ್ಲಂಘಿಸಿರಿ '' ಎಂದರು.
ತಕ್ಷಣವೇ ಖಲೀಫ ಉಮರ್ (ರ) ರಿಗೆ ಪತ್ರ ಬರೆದ ಸೈನಿಕರು ಏನು ಮಾಡಬೇಕೆಂದು ಕೇಳಿದರು. ಉಮರ್ (ರ) ಸೇವಕನ ಅಭಯ ವಾಗ್ದಾನವನ್ನು ಅಂಗೀಕರಿಸಿದರು. ಶತ್ರುಗಳಿಗೆ ಅಭಯ ನೀಡಿದರು. ಮುಸ್ಲಿಮರು ಹಿಂದಿರುಗಿದರು. (ಅಲ್‌ಫಾರೂಖಿಲ್ ಖಾಇದ್ - 143)
ಯುದ್ಧದ ಸಂದರ್ಭವಾಗಿರಲಿ, ಶಾಂತಿಯ ಸಂದರ್ಭವಾಗಿರಲಿ ವಾಗ್ದಾನವನ್ನು ಪಾಲಿಸಲೇಬೇಕು. ಯಾರಿಗೆ ವಚನ ನೀಡಲಾಯಿತು ಎಂಬುದು ಮುಖ್ಯವಲ್ಲ; ಅದು ಪರಮ ಶತ್ರುವಿನೊಂದಿಗಾದರೂ ಸರಿಯೇ. ಪ್ರಮುಖ ಸ್ವಹಾಬಿವರ್ಯರಾದ ಹುದೈಫತ್‌ಬ್‌ನಲ್ ಯಮಾನಿ (ರ) ಯವರಿಗೆ ಸಂಬಂಧಿಸಿದ ಒಂದು ಘಟನೆಯನ್ನು ಇಲ್ಲಿ ಪರಿಶೀಲಿಸಬಹುದು. ಎಲ್ಲಾ ಯುದ್ಧಗಳಲ್ಲೂ ಪ್ರವಾದಿ (ಸ) ರ ಜೊತೆಗಿದ್ದ ಹುದೈಫ ಬದ್ರ್ ಯುದ್ಧಕ್ಕೂ ತೆರಳಿದ್ದರು. ಆದರೆ, ಯುದ್ಧದಲ್ಲಿ ಪಾಲ್ಗೊಳ್ಳಲು ಅವರಿಂದ ಸಾಧ್ಯವಾಗಲಿಲ್ಲ. ವಿಷಯವೇನೆಂದು ಸ್ವತಃ ಅಬೂ ಹುದೈಫರವರೇ ಹೇಳುತ್ತಾರೆ. ಕೇಳಿ.
ಬದ್ರ್ ಯುದ್ಧಕ್ಕೆ ಅಣಿಯಾಗುವಾಗ ನಾನು ಮತ್ತು ನನ್ನ ತಂದೆ ಮದೀನದಿಂದ ಹೊರಗಿದ್ದೆವು. ಮದೀನಕ್ಕೆ ಹಿಂದಿರುಗುವಾಗ ಬದ್ರ್ ಗೆ ಹೋಗುತ್ತಿದ್ದ ಖುರೈಷಿಗಳನ್ನು ನಾವು ಎದುರುಗೊಳ್ಳಬೇಕಾಯಿತು. ಖುರೈಷಿಗಳು ನಮ್ಮನ್ನು ತಡೆದು ನಿಲ್ಲಿಸಿ, ಪ್ರಶ್ನಿಸಲಾರಂಭಿಸಿದರು.
“ನೀವು ಎಲ್ಲಿಗೆ ? ''
"ಮದೀನಕ್ಕೆ''
ಖುರೈಷಿಗಳಿಗೆ ನಂಬಲಾಗಲಿಲ್ಲ. ನೀವು ಬದ್‌ರ್ ಗೆ ಹೊರಟಿದ್ದೀರಿ. ಮುಹಮ್ಮದನ ಜೊತೆ ಸೇರಿ ನಮ್ಮ ಜೊತೆ ಯುದ್ಧ ಮಾಡಲು ಹೊರಟಿದ್ದೀರಿ ಅಲ್ಲವೇ? ಎಂದು ಅವರು ನಮ್ಮ ಪ್ರಶ್ನಿಸಿದರು. ಕೊನೆಗೆ ಅವರ ಕೈಯಿಂದ ರಕ್ಷಣೆ ಹೊಂದಲು ಅವರ ಜೊತೆಗೆ ಒಪ್ಪಂದ ಮಾಡಿಕೊಳ್ಳಬೇಕಾಗಿ ಬಂದವು.
ಖುರೈಷಿಗಳ ವಿರುದ್ಧ ಮುಹಮ್ಮದ್ (ಸ) ರಿಗೆ ಸಹಾಯ ಮಾಡುವುದಿಲ್ಲವೆಂದೂ ಮುಹಮ್ಮದನ ಜೊತೆ ಸೇರಿ ಯುದ್ಧದಲ್ಲಿ ಭಾಗವಹಿಸುವುದಿಲ್ಲವೆಂದೂ ನಾವು ಕರಾರು ಮಾಡಿಕೊಂಡಿದ್ದೆವು. ಈ ಕಾರಣದಿಂದ ಖುರೈಷಿಗಳು ನಮ್ಮನ್ನು ಸುಮ್ಮನೆ ಬಿಟ್ಟಿದ್ದರು.
ನಾವು ನೇರವಾಗಿ ಪ್ರವಾದಿ (ಸ) ರ ಬಳಿಗೆ ಹೋದೆವು. ಅವಿಶ್ವಾಸಿಗಳೊಂದಿಗೆ ಅನಿರೀಕ್ಷಿತ ಸಂದರ್ಭವೊಂದರಲ್ಲಿ ಮಾಡಿದ ಕರಾರಲ್ಲವೇ? ಅಂತಹ ಸಂದರ್ಭದಲ್ಲಿ ಏನು ಮಾಡಬೇಕೆಂದು ಅಬೂ ಹುದೈಫ (ರ) ಪ್ರವಾದಿ (ಸ) ಯೊಂದಿಗೆ ಕೇಳಿದರು. ಪ್ರವಾದಿ (ಸ) ರ ಉತ್ತರ ಅವರಲ್ಲಿ ನಿರಾಶೆ ಮೂಡಿಸಿದವು.
“ಅವರೊಂದಿಗೆ ಮಾಡಿದ ಕರಾರನ್ನು ನಾವು ಪಾಲಿಸಬೇಕು. ಅವರ ವಿರುದ್ದ ನಾವು ಅಲ್ಲಾಹನೊಂದಿಗೆ ಸಹಾಯ ಬೇಡುವೆವು '' ಅಬೂಹುದೈಫ ಧೀರ ಯೋಧರಾಗಿದ್ದರು. ಬದ್ರ್ನ ಲ್ಲಿ ಮುಸ್ಲಿಮರ ಸಂಖ್ಯೆಗೆ ಹೋಲಿಸಿದರೆ, ಅಬೂ ಹುದೈಫ ಒಬ್ಬರೇ ಹತ್ತು ಮಂದಿಯ ಜಾಗ ತುಂಬುಬಲ್ಲವರಾಗಿದ್ದರು. ಅಂತಹ ವೀರ ಶೂರ ಪರಾಕ್ರಮಿಯವರು. ಚಿನ್ನದ ಗುಣದ ಸೈನಿಕ, ಯುದ್ಧದಲ್ಲಿ ಭಾಗವಹಿಸಬೇಕೆಂಬ ಅದಮ್ಯ ಇಚ್ಛೆಯೂ ಇತ್ತು. ಅಂತಹ ಒಬ್ಬ ಯೋಧನನ್ನು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಯುದ್ಧದಿಂದ ದೂರ ನಿಲ್ಲಿಸಲು ಕಾರಣ ಯುದ್ಧದ ವೇಳೆಯಾದರು ಒಪ್ಪಂದವನ್ನು ಉಲ್ಲಂಘಿಸಬಾರದೆಂಬ ಕಠಿಣ ನಿಲುವಿನಿಂದಾಗಿತ್ತು.
ಒಂದು ವರದಿಯ ಪ್ರಕಾರ, ಬದ್ರನಲ್ಲಿ ಯುದ್ಧ ಉಚ್ಛಾಯ ಸ್ಥಿತಿಗೆ ತಲುಪುತ್ತಿದ್ದಂತೆ ಅಬೂಹದೈಫ ಯಮಾನಿ ರಣರಂಗದ ಸಮೀಪದಲ್ಲಿದ್ದ ಗೋಡೆಯೊಂದರ ನೆರಳಲ್ಲಿ ತಪ್ತ ಹೃದಯಿಯಾಗಿ ಯುದ್ಧವನ್ನು ನೋಡುತ್ತಾ ನಿಂತಿದ್ದರು.
ಮಧ್ಯ ಏಷ್ಯಾದಲ್ಲಿ ಇಸ್ಲಾಮ್ ಜೈತ್ಯ ಯಾತ್ರೆಗೆ ನಾಯಕತ್ವ ವಹಿಸಿದ ಖತೈಲತುಬ್‌ನುಲ್ ಬಾಹಿಲಿ ಸಮರ್ ಖಂದ್ ನಗರವನ್ನು ವಶಪಡಿಸಿಕೊಳ್ಳುವಾಗ ಕೆಲವೊಂದು ವಾಗ್ದಾನಗಳನ್ನು ಉಲ್ಲಂಘಿಸಿದರು. ಅವರದನ್ನು ಮುಚ್ಚಿ ಹಾಕಲಿಲ್ಲ. ಜನರೊಂದಿಗೆ ಬಹಿರಂಗವಾಗಿಯೇ ಹೇಳಿಕೊಂಡರು. ಉಮರ್‌ಬ್ನು ಅಬ್ದುಲ್ ಅಝೀಝರ್‌ರವರ ಆಡಳಿತ ಆರಂಭಗೊಳ್ಳುತ್ತಿದ್ದಂತೆ ಸಮರ್‌ಖಂಡ್‌ನ ಜನರು ಮುಸ್ಲಿಮ್ ಸೈನ್ಯದ ವಿರುದ್ದ ಖಲೀಫರೊಂದಿಗೆ ದೂರು ಹೇಳಿದರು. ವಂಚನೆಯ ಮೂಲಕ ಮುಸ್ಲಿಮರು ನಮ್ಮ ನಾಡನ್ನು ವಶಪಡಿಸಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದರು.
ಈ ಸಮಸ್ಯೆಯನ್ನು ಪರಿಹರಿಸಲು ಉಮರುಬ್ನು ಅಬ್ದುಲ್ ಅಝೀಝ್ ಒಂದು ಪ್ರತ್ಯೇಕ ನ್ಯಾಯಾಲಯವನ್ನೇ ರೂಪಿಸಿದರು. ವಾದಿಗಳನ್ನು ಹಾಗೂ ಪ್ರತಿವಾದಿಗಳನ್ನು ಕರೆಸಿಕೊಂಡರು. ಅತ್ತಕಡೆ ಮುಸ್ಲಿಮ್ ಸೇನೆಯ ಚೀಫ್ ಕಮಾಂಡರ್ ಆರೋಪಿಯ ಸ್ಥಾನದಲ್ಲಿ ನಿಂತಿದ್ದರು. ನ್ಯಾಯಾಧೀಶರು ಎರಡೂ ವಿಭಾಗದ ವಾದ ವಿವಾದವನ್ನು ಆಲಿಸಿದರು. ನಂತರ ವಿಧಿ ಪ್ರಕಟಿಸಿದರು. ಇಸ್ಲಾಮ್ ನ್ಯಾಯಕ್ಕೆ ಎಷ್ಟೊಂದು ಮಹತ್ವ ಕಲಿಸುತ್ತದೆಂಬುದಕ್ಕೆ ಈ ತೀರ್ಪು ಒಂದು ಉದಾಹರಣೆಯಾಗಿದೆ.
ತೀರ್ಪು ಹೀಗಿದೆ. '"ಸಮರ್ ಖಂದ್ ವಿಜಯವು ಅಸಿಂಧುವಾದುದು. ಕಾರಣ, ಅಲ್ಲಿ ವಚನ ಭಂಗ ನಡೆದಿರುವುದು ಸಾಬೀತಾಗಿದೆ. ಮುಸ್ಲಿಮ್ ಸೇನೆ ಸಮರ್ ಖಂದ್‌ನಿಂದ ಹಿಂದಕ್ಕೆ ಸರಿಯಲು ನಿರ್ಧರಿಸಿದವು. ಆದರೆ ಅಲ್ಲಿಯ ಜನರು ಅದಕ್ಕೊಪ್ಪಲಿಲ್ಲ. ಇಸ್ಲಾಮಿನ ನ್ಯಾಯಪರಿಪಾಲನೆಯು ಅವರನ್ನು ಬೆಚ್ಚಿ ಬೀಳಿಸಿದ ವ್ಯವಸ್ಥೆಯಿಂದ ದೂರ ಸರಿಯುವುದನ್ನು ಅಲ್ಲಿಯ ಜನರು ಒಪ್ಪಿಕೊಳ್ಳಲಿಲ್ಲ.
ಮಾನವ ಚರಿತ್ರೆಯನ್ನು ತೆಗೆದು ನೋಡಿದರೆ ಇಸ್ಲಾಮಿನ ಮೊದಲು ಹಾಗೂ ನಂತರ ಅನೇಕ ಯುದ್ಧಗಳು ನಡೆದಿರುವುದು ಕಾಣಬಹುದು. ಅಝೀರಿಯನ್ನರು, ಬಾಬಿಲೋನಿಯನ್ನರು, ಫರೋವಗಳು,ಗ್ರೀಕರು, ಪೇರ್ಷ್ಟನ್ನರು, ರೋಮನ್ನರು ಮೊದಲಾದವರು ಮಾಡಿದ ಯುದ್ಧಗಳ ಕಡೆ ಚರಿತ್ರೆ ದಾಖಲಿಸಿದೆ. ಚೆಂಗೀಸ್ ಖಾನ್, ತೈಮೂರ್, ಲಂಗ್, ನೆಪೋಲಿಯನ್, ಅಲೆಕ್ಸಾಂಡರ್ ಮೊದಲಾದವರು ನಡೆಸಿದ ದಂಡಯಾತ್ರೆಗಳು, ಶತಮಾನಗಳಷ್ಟು ಕಾಲದವರೆಗೂ ಮುಂದುವರಿದ ಶಿಲುಬೆ ಯುದ್ದಗಳು, ಒಂದನೇ, ಎರಡನೇ ವಿಶ್ವ ಮಹಾ ಯುದ್ದಗಳು, ಪಾಶ್ಚಾತ್ಯ ಪೌರಾತ್ಯ ಸಾಮ್ರಾಜ್ಯ ಶಾಹಿ ಶಕ್ತಿಗಳು ನಡೆಸಿದ ಯುದ್ದಗಳು ಹೀಗೆ ಹಲವು ಯುದ್ದಗಳನ್ನು ಪಟ್ಟಿ ಮಾಡಬಹುದು. ಈ ಎಲ್ಲಾ ಯುದ್ದಗಳ ಲಕ್ಷ ಲೌಕಿಕವಾಗಿತ್ತು. ಕೆಲವರಂತೂ ರಣರಂಗದಲ್ಲಿ ತಮ್ಮ ಶೌರ್ಯ ಪ್ರದರ್ಶನ ಮಾಡುವ ಉದ್ದೇಶದಿಂದಷ್ಟೇ ಯುದ್ಧ ಮಾಡಿದ್ದರು ಎಂದರೆ ನಂಬಲೇಬೇಕು. ಭೂಲೋಕದಲ್ಲೆಲ್ಲಾ ರಕ್ತಪಾತಕ್ಕೆ ಕಾರಣವಾದ ಇಂತಹ ಯುದ್ದಗಳು ಲಕ್ಷಾಂತರ ಮನುಷ್ಯ ಜೀವಗಳ ಹರಣ, ಬಂಧನ, ನರಕ ಜೀವನಕ್ಕೆ ಕಾರಣವಾದವು. ಲೆಕ್ಕ ಹಾಕಲಾಗದಷ್ಟು ಮತ್ತು ರಿಪೇರಿ ಮಾಡಲಾಗದಷ್ಟು ನಾಶ ನಷ್ಟಗಳನ್ನು ಉಂಟು ಮಾಡಿದವು. ಈ ಯುದ್ಧಗಳಿಂದ ಮಾನವ ಸಮೂಹಕ್ಕೆ ಕನಿಷ್ಠ ಲಾಭವೂ ಆಗಲಿಲ್ಲ...
ಭಾರತದಲ್ಲಿ ಅಶೋಕ ಚಕ್ರವರ್ತಿ ನಡೆಸಿದ ಕಳಿಂಗ ಯುದ್ಧದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಹತ್ಯೆಯಾಗಿದ್ದರು. ಒಂದೂವರೆ ಲಕ್ಷ ಮಂದಿ ಬಂಧನಕ್ಕೊಳಗಾದರು. ಯುದ್ಧ ಮುಗಿದಾಗ ಅಶೋಕನಿಗೆ ಶರಣಾಗತರಾಗಲೂ ಯಾರೂ ಉಳಿದಿರಲಿಲ್ಲ. ಇಡೀ ಕಳಿಂಗವೇ ರುದ್ರಭೂಮಿಯಾಗಿ ಬದಲಾಗಿದ್ದವು. ಹೀಗೆ ಮನುಷ್ಯರ ತಲೆಬುರುಡೆಯಿಂದಲೇ ಪಿರಮಿಡ್ಡುಗಳನ್ನು ನಿರ್ಮಿಸಿದ ದಿಗ್ವಿಜಯಿಗಳ ಪಟ್ಟಿ ಇನ್ನೂ ಇದೆ. 1945 ಆಗಸ್ಟ್ 9ರಂದು ನಾಗಸಾಕಿಯ ಮೇಲೆ ಅಮೆರಿಕ ಅಣು ಬಾಂಬ್ ಸುರಿದವು. ಜಪಾನ್ ಯುದ್ದದಲ್ಲಿ ಸೋತು ಶರಣಾದ ಬಳಿಕ ಅಮೆರಿಕ ಈ ದಾರುಣ ಬಾಂಬ್ ದಾಳಿ ನಡೆಸಿತ್ತು ! ನಾಗ ಸಾಕಿ ನಗರ ಸಂಪೂರ್ಣ ನಾಶವಾದವು. ತಕ್ಷಣವೇ 39,000 ಮಂದಿ ದಾರುಣ ಮರಣ ಹೊಂದಿದ್ದರು. 25000ಕ್ಕೂ ಹೆಚ್ಚು ಮಂದಿ ಗಾಯಗೊಂಡರು. 1945 ಆಗಸ್ಟ್ 6ರ ಬೆಳಿಗ್ಗೆ 8:15ಕ್ಕೆ ಜನಸಾಂದ್ರತೆಯಿಂದ ಕೂಡಿದ್ದ, ಜಪಾನಿನ ಪ್ರಮುಖ ಬ್ಯುಝಿನೆಸ್ ಕೇಂದ್ರವಾಗಿದ್ದ ಹಿರೋಷಿಮದ ಮೇಲೆ ಅಮೆರಿಕ ಅಣು ಬಾಂಬ್ ಸುರಿದವು. ಈ ದಾಳಿಯಲ್ಲಿ ತಕ್ಷಣಕ್ಕೆ 71,000 ಮಂದಿ ಕೊಲ್ಲಲಟ್ಟರು. ಮರಣವನ್ನು ಗೆದ್ದವರು ದಾರುಣ ಬದುಕನ್ನು ಬದುಕಬೇಕಾಯಿತು. ಸಾವಿನ ಸಂಖ್ಯೆ ಏರುತ್ತಲೇ ಇದ್ದವು. ಅಮೆರಿಕ ಅಂದು ಸುರಿದ ಅಣುಬಾಂಬ್ನ ಪರಿಣಾಮವನ್ನು ಇಂದಿಗೂ ಅನುಭವಿಸುತ್ತಿದೆ.
ಒಂದನೇ ಮಹಾಯುದ್ಧದಲ್ಲಿ ಹತ್ಯೆಯಾದವರ ಸಂಖ್ಯೆ ಅರುವತ್ತ ನಾಲ್ಕು ಲಕ್ಷವೆಂದೂ, ಮಹಾ ಯುದ್ಧದಲ್ಲಿ ಹತ್ಯೆಯಾದವರ ಸಂಖ್ಯೆ ಮೂವತ್ತೈದು ದಶಲಕ್ಷದ ಹಾಗೂ ಅರವತ್ತು ದಶಲಕ್ಷದ ನಡುವಿನಲ್ಲಿದೆ ಎಂದೂ ಬ್ರಿಟಿಷ್ ಎನ್‌ಸೈಕ್ಲೋಪೀಡಿಯ ದಾಖಲಿಸುತ್ತದೆ. ಈ ಎರಡೂ ಯುದ್ದದಿಂದ ಮನುಷ್ಯ ಸಮೂಹಕ್ಕೆ ಸಣ್ಣ ಉಪಕಾರವೂ ಆಗಿಲ್ಲ. ಮಧ್ಯಕಾಲ ಯುಗದಲ್ಲಿ ಯುರೋಪ್‌ನಲ್ಲಿ ಕ್ರೈಸ್ತ ಮೇಧಾವಿಗಳ, ಧಾರ್ಮಿಕ ಅಪರಾಧಿ ವಿಚಾರಣಾ ಸಭೆಗಳ ಕ್ರೌರ್ಯಕ್ಕೆ ಬಲಿಯಾದವರ ಸಂಖ್ಯೆ ಹನ್ನೆರಡು ದಶಲಕ್ಷದಷ್ಟಿದೆ. (ಅಬುಲ್ ಹಸನ್ ನದ್ವಿ, ಅಸ್ಪೀರತುನ್ನಬವಿಯ್ಯಾ- 326, 327)
ಹಿಜ್ರದ ನಂತರ ಏಳು ವರ್ಷಗಳಲ್ಲಿ ಪ್ರವಾದಿ (ಸ) ರಿಗೆ ಇಪ್ಪತ್ತೇಳು ಯುದ್ಧಗಳಲ್ಲಿ ಭಾಗವಹಿಸಿದರು. ಅವರು ಭಾಗವಹಿಸದ ಅರುವತ್ತು ಯುದ್ಧಗಳು ನಡೆದಿವೆ. ಈ ಎಲ್ಲಾ ಯುದ್ದಗಳಲ್ಲಿ ಮುಸ್ಲಿಮರು ಹಾಗೂ ಮುಸ್ಲಿಮೇತರರು ಸೇರಿ ಸಾವಿರದ ಹದಿನೆಂಟು ಮಂದಿ ಮಾತ್ರ ಹತರಾಗಿದ್ದಾರೆ. ಮುಸ್ಲಿಮರಲ್ಲಿ ಇನ್ನೂರ ಐವತ್ತೊಂಬತ್ತು, ಶತ್ರುಗಳಲ್ಲಿ ಏಳು ನೂರ ಐವತ್ತೊಂಬತ್ತು. (ಅಬುಲ್ ಹಸನ್ ನದ್ವಿ, ಅಸ್ಪೀರತುನ್ನಬವಿಯ್ಯಾ- 326, 327)
ಆಧುನಿಕ ಯುಗದ ದೈತ್ಯ ಶಕ್ತಿಗಳ ವಾಯುಪಡೆಯ ಒಂದೇ ಒಂದು ದಾಳಿಯಲ್ಲಿ ಸಂಭವಿಸುವ ದುರಂತಕ್ಕೆ ಹೋಲಿಸಿದರೆ ಪ್ರವಾದಿ (ಸ) ರ ಜೀವಿತಾವಧಿಯಲ್ಲಿ ನಡೆದ ಅಷ್ಟೂ ಯುದ್ದಗಳ ಕಾರಣದಿಂದ ಸಂಭವಿಸಿದ ನಾಶನಷ್ಟಗಳು ಕ್ಷುಲ್ಲಕ ಎನಿಸುವಷ್ಟು ಕಡಿಮೆಯಾಗಿದ್ದವು.
ಇಸ್ಲಾಮಿಕ್ ಯುದ್ದಗಳು ತನ್ನ ಲಕ್ಷ್ಯಕ್ಕೆ ಸಂಬಂಧಿಸಿದಂತೆ ಪೂರ್ಣವಾಗಿ ವಿಜಯ ಸಾಧಿಸಿದ್ದವು. ಪ್ರವಾದಿ (ಸ) ರ ಹತ್ತು ವರ್ಷಗಳ ಮದೀನ ಜೀವನದ ನಡುವೆ ಇಸ್ಲಾಮಿಕ್ ವ್ಯವಸ್ಥೆಯಡಿಗೆ ಬಂದ ಭೂ ಪ್ರದೇಶಗಳ ವಿಸ್ತೀರ್ಣವೇ ಒಂದು ದಶಲಕ್ಷಕ್ಕೂ ಹೆಚ್ಚು ಚದರ ಮೈಲಿಯಿದ್ದವು. ಅಲ್ಲಿಯ ಜನರೆಲ್ಲರೂ ಯುದ್ಧದ ಉತ್ತಮ ಫಲಗಳನ್ನು ಅನುಭವಿಸಿದ್ದಾರೆ. ಇಂದಿಗೂ ಮನುಷ್ಯ ಸಮೂಹ ಆ ಫಲವನ್ನು ಅನುಭವಿಸುತ್ತಿದೆ. ಹೆಣ್ಣೊಬ್ಬಳು ಏಕಾಂಗಿಯಾಗಿ ಖಾದಿಸಯ್ಯದಿಂದ ತನ್ನ ಒಂಟೆಯ ಮೇಲೆ ಕೂತು ಮಕ್ಕಾಗೆ ಬಂದು ಕಅಬಾ ಪ್ರದಕ್ಷಿಣೆ ನಡೆಸಿ, ಹಿಂದಿರುಗಿ ಹೋಗುವಾಗ ಅಲ್ಲಾಹನನ್ನು ಹಾಗೂ ತನ್ನ ಒಂಟೆಗೆ ಸಂಬಂಧಿಸಿದಂತೆ ಕಾಡು ನಾಯಿಗಳನ್ನು ಬಿಟ್ಟರೆ ಇನ್ಯಾರನ್ನೂ ಹೆದರಬೇಕಾಗಿಲ್ಲದ ರೀತಿಯಲ್ಲಿ ಶಾಂತಿ, ಸುಭದ್ರತೆಯ ನಾಡಾಗಿ ಅರಬ್ ಉಪಖಂಡ ಪರಿವರ್ತನೆಗೊಂಡಿತ್ತು..
ಲೇ: ಯೂಸುಫ್ ಫೈಝಿ
ಸಂ.ಲೇ: ಕೆಎಂ ಜಲೀಲ್ ಕುಂದಾಪುರ
NOOR-UL-FALAH
ಸಂ.ಲೇ: ಕೆಎಂ ಜಲೀಲ್ ಕುಂದಾಪುರ
NOOR-UL-FALAH
Comments
Post a Comment