ಸಬಾಹಲ್ ಖೈರ್

ಸಬಾಹಲ್ ಖೈರ್

ಸ್ತ್ರೀಯರಿಗೆ ಅವರ ಪುರುಷರ ಕುರಿತು ಹೃದಯದಲ್ಲಿ ವಿಶಿಷ್ಟ ಸ್ಥಾನವಿರುತ್ತದೆ:

ಪ್ರವಾದಿﷺಮರವರು ಹಂನ ಬಿಂತೆ ಜಹಶ್ [ರ]ರನ್ನು ಸಂಧಿಸಿದರು. ಅವರಿಗೆ ಅವರ ಅಬ್ದುಲ್ಲ ಬಿನ್ ಜಹಶ್ [ರ] ಯುದ್ಧದಲ್ಲಿ ಹುತಾತ್ಮರಾದ ಸುದ್ಧಿ ನೀಡಲಾಯಿತು. ಅದನ್ನು ಆಲಿಸಿಕೊಂಡು  "ಇನ್ನಾಲಿಲ್ಲಾಹಿ.." ಪಠಿಸಿದರು ಮತ್ತು ತನ್ನ ಸಹೋದರನ ಸದ್ಗತಿಗಾಗಿ ಪಾರ್ಥಿಸಿದರು. 
ಬಳಿಕ ಅವರ ಮಾವ ಹಂಝ ಬಿನ್ ಅಬ್ದುಲ್ ಮುತ್ತಲಿಬ್ [ರ]ರವರು ಹುತಾತ್ಮರಾದ ಸುದ್ಧಿಯನ್ನು ಅವರಿಗೆ ತಿಳಿಸಲಾಯಿತು. ಅವರು ಅದನ್ನು ಆಲಿಸಿಕೊಂಡು ಮತ್ತೊಮ್ಮೆ "ಇನ್ನಲಿಲ್ಲಾಹ್.. " ಪಠಿಸಿದರು ಮತ್ತು ಅವರ ಸದ್ಗತಿಗಾಗಿ ಪ್ರಾರ್ಥಿಸಿದರು. 

ಅನಂತರ ಅವರ ಪತಿ ಮಿಸ್ ಅಬ್'ಬಿನ್ ಉಮೈರ್ [ರ]ರವರು ರಕ್ತಸಾಕ್ಷಿಯಾದ ವಿಷಯವನ್ನು ಅವರಿಗೆ ತಿಳಿಸಲಾಯಿತು. ಅದನ್ನು ಆಲಿಸಿಕೊಂಡು ಅವರ ತಾಳ್ಮೆಯ ಕಟ್ಟೆ ಒಡೆಯಿತು. ಅವರು ಆಘಾತವನ್ನು ತಡೆದುಕೊಳ್ಳಲಾರದೆ ಕುಸಿದು ಕುಳಿತು ರೋಧಿಸಲಾರಂಭಿಸಿದರು. 
ಅಲ್ಲಾಹನ ಸಂದೇಶವಾಹಕರುﷺಮರು ಹೇಳಿದರು:
"ಸ್ತ್ರೀಯರಿಗೆ ಅವರ ಪುರುಷರ ಕುರಿತು ಹೃದಯದಲ್ಲಿ ವಿಶಿಷ್ಟ ಸ್ಥಾನವಿರುತ್ತದೆ.."

[ಇಬ್ನ್ ಹಿಷಾಮ್, 2/98] 




Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್