ಸಬಾಹಲ್ ಖೈರ್
ಸಬಾಹಲ್ ಖೈರ್
ತಕ್ಬೀರ್
ಮುಸ್ಲಿಮರ ಸಂತೋಷ ಪ್ರಕಟಣೆಯ ಘೋಷಣಾ ವಾಕ್ಯವಾಗಿದೆ ತಕ್ಬೀರ್,
"ನಿಮ್ಮ ಶುಭ ದಿನಗಳನ್ನು ತಕ್ಬೀರ್‌ನಿಂದ ಅಲಂಕರಿಸಿರಿ."
ಎಂದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದ್ದಾರೆ.
ಈದುಲ್ ಫಿತ್ವ್‌ರ್‌ನಂದು ಚಂದ್ರೋದಯದಿಂದ ಹಿಡಿದು ಈದ್ ನಮಾಝಿನ ಆರಂಭ ತನಕ ತಕ್ಬೀರ್ ಪ್ರಬಲ ಸುನ್ನತ್ತಾಗಿದೆ.
ಈ ಅವಧಿಯಲ್ಲಿ ಮನೆ, ಮಸೀದಿ, ಮಾರ್ಗ ಮೊದಲಾದ ಎಲ್ಲಾ ಸ್ಥಳಗಳಲ್ಲೂ ಹಾಗೂ ನಮಾಝ್ ನಿರ್ವಹಿಸಿದ ಬಳಿಕವೂ ಇತರ ದಿಕ್ರ್‍ಗಳಿಗಿಂತಲೂ ಇದು ಅತ್ಯಂತ ಶ್ರೇಷ್ಠವಾಗಿದೆ.
اَللهُ اَكْبَرْ اللهُ اَكْبَرْ اللهُ اَكْبَرْ لاَ اِلَهَ اِلاَّ اللهُ وَاللهُ اَكْبَرْ اللهُ اَكْبَرْ وَللهِ الْحَمْدُ
ಎಂದಾಗಿದೆ ತಕ್ಬೀರಿನ ಸಾಮಾನ್ಯ ರೂಪ. ಪುರುಷರು ಧ್ವನಿಯೆತ್ತಿಯೂ ಸ್ತ್ರೀಯರು ಅನ್ಯ ಪುರುಷರು ಕೇಳದಂತೆ ಮೆಲುದನಿಯಲ್ಲೂ ನಿರಂತರ ತಕ್ಬೀರ್ ಹೇಳುತ್ತಿರಬೇಕು..
Comments
Post a Comment