ಸಬಾಹಲ್ ಖೈರ್
ಸಬಾಹಲ್ ಖೈರ್
ಲೈಲತುಲ್ ಖದ್‌ರ್
ಸಹಸ್ರ ಮಾತುಗಳಿಗಿಂತ ಶ್ರೇಷ್ಠವಿದೆಯೆಂದು ಪವಿತ್ರ ಕುರ್‍ಆನ್ ಸ್ಪಷ್ಟ ವಾಕ್ಯಗಳಿಂದ ಸಾರಿ ಹೇಳಿದ ಒಂದು ರಾತ್ರಿಯಾಗಿದೆ ಲೈಲತುಲ್ ಖದ್‌ರ್, ಕೇವಲ ಈ ಒಂದು ರಾತ್ರಿಯ ಮಹತ್ವಗಳನ್ನು ಮಾತ್ರ ವರ್ಣಿಸಲು ಅಲ್ಲಾಹು ಪವಿತ್ರ ಕುರ್‍ಆನಿನಲ್ಲಿ ಒಂದು ಅಧ್ಯಾಯವನ್ನೇ ಅವತೀರ್ಣಗೊಳಿಸಿದ್ದಾನೆ. ಈ ರಾತ್ರಿಯಲ್ಲಿ ಮಾಡುವ ಪ್ರತಿಯೊಂದು ಪುಣ್ಯ ಕರ್ಮಕ್ಕೂ ಇದರ ರಾತ್ರಿಗಳಲ್ಲಿ ಸಾವಿರ ಮಾಸಗಳ ಕಾಲ ನಿರ್ವಹಿಸುವಷ್ಟೂ ಹೇರಳ ಪ್ರತಿಫಲ ಲಭ್ಯವಾಗುತ್ತದೆ. ಆಯುಷ್ಯವಿಡೀ ಸಂಪಾದಿಸಲು ಸಾಧ್ಯವಾಗದ ಪುಣ್ಯಗಳನ್ನು ಕೇವಲ ಒಂದು ರಾತ್ರಿಯಲ್ಲೇ ಸಂಪಾದಿಸಬಹುದು. ಇದು ಪೂರ್ವಿಕ ಜನಾಂಗಗಳಿಗೇನೂ ದೊರಕದಂತಹ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಸಮುದಾಯದ ಒಂದು ವಿಶೇಷತೆಯಾಗಿದೆ. ಈ ರಾತ್ರಿ ಯಾವಾಗವೆಂದು ಖಚಿತ ಪಡಿಸಲು ಸ್ವಷ್ಟ ಆಧಾರಗಳಿಲ್ಲ. ಆದರೂ ರಮಳಾನಿನ ಕೊನೆಯ ಹತ್ತರಲ್ಲಿ ಒಂಟಿಯಾಗಿ ಬರುವ ವಿಶೇಷ ರಾತ್ರಿಯೆಂದಾಗಿದೆ ಪ್ರಬಲಾಭಿಪ್ರಾಯ. ಅಥವಾ 21, 23, 24, 27, 29 ಇವುಗಳ ಪೈಕಿ ಯಾವುದೇ ಒಂದರಲ್ಲಾಗುವ ಸಂಭವ ಇದೆ. ಅದರಲ್ಲೂ 27ನೇ ರಾತ್ರಿ ಎಂಬ ಅಭಿಪ್ರಾಯಕ್ಕೆ ಹೆಚ್ಚಿನ ಪ್ರಾಬಲ್ಯವಿದೆ. ಪ್ರತೀ ವರ್ಷದಲ್ಲೂ ವ್ಯತ್ಯಸ್ಥ ರಾತ್ರಿಗಳಿಗೆ ಬದಲಾವಣೆಗೊಳ್ಳುವುದು ಎಂಬ ಅಭಿಪ್ರಾಯವೂ ಕೆಲವು ಪ್ರಮುಖ ಪಂಡಿತರುಗಳಿಗಿದೆ. ದಾನ ಧರ್ಮ, ಇಅತಿಕಾಫ್, ಕುರ್‌ಆನ್ ಪಾರಾಯಣ, ಪ್ರಾರ್ಥನೆ, ದಿಕ್ರ್ ಸ್ವಲಾತ್, ಬಂಧು-ನೆರೆಹೊರೆ ಆಪ್ತೇಷರು ಹಾಗೂ ಕುಟುಂಬಸ್ಥರೊಂದಿಗೆ ವಿಶಾಲತೆ ಮತ್ತು ಉದಾರತೆ ತೋರುವುದು ಇತ್ಯಾದಿ ಒಳಿತಿನ ಕಾರ್ಯಗಳಿಂದ ಈ ರಾತ್ರಿಯನ್ನು ಸಜೀವಗೊಳಿಸಿದರೆ ಅದೊಂದು ಮಹತ್ತರ ಸೌಭಾಗ್ಯವೇ ಸರಿ..
Comments
Post a Comment