ಸಬಾಹಲ್ ಖೈರ್
ಸಬಾಹಲ್ ಖೈರ್
ಪ್ರವಾದಿﷺಮರವರ ಶ್ರೇಷ್ಠತೆಗಳು:
ಜಾಬೀರ್ [ರ]ರವರು ಹೇಳುತ್ತಾರೆ:
ಪ್ರವಾದಿﷺಮರವರು ಹೇಳಿದರು:
"ನನಗೆ ಐದು ಕಾರ್ಯಗಳನ್ನು ನೀಡಲಾಗಿದೆ. ನನಗಿಂತ ಮುಂಚೆ ಅದನ್ನು ಇನ್ಯಾರಿಗೂ ನೀಡಲಾಗಿಲ್ಲ.."
1). ನನ್ನ ಮತ್ತು ಶತ್ರುಗಳ ಮಧ್ಯೆ ಒಂದು ತಿಂಗಳ ಸಮಾಚಾರ ದೂರವಿದ್ದರೂ ಶತ್ರುಗಳಿಗೆ ಭಯ ನೀಡಿ ಅಲ್ಲಾಹನು ನನಗೆ ಸಹಾಯ ಮಾಡಿದನು..
2). ಭೂಮಿಯನ್ನು ನನಗೆ ಮಸೀದಿಯನ್ನಾಗಿಯೂ, ಶುದ್ದೀಕರಿಸಲಿಕ್ಕಿರುವ ವಸ್ತುವಾಗಿಯೂ ಮಾಡಿ ಕೊಟ್ಟನು. ಆದುದರಿಂದ ನನ್ನ ಸಮುದಾಯದಲ್ಲಿ ಯಾರಿಗಾದರೂ ನಮಾಝಿನ ಸಮಯವಾದರೆ ಅವನು ನಮಾಝ್ ನಿರ್ವಹಿಸಲಿ..
3). ಯುದ್ದಾರ್ಜಿತ ಸೊತ್ತನ್ನು ಅಲ್ಲಾಹನು ನನಗೆ ಅಣುವಾದನೀಯ ಗೊಳಿಸಿದನು. ನನಗೆ ಮುಂಚೆ ಯಾರಿಗೂ ಅದನ್ನು ಅನ್ದುದನೀಯ ಗೊಳಿಸಲಿಲ್ಲ..
4). ಶಫಾಅತಿ (ಪರಲೋಕದ ಶಿಫಾರಸ್ಸಿ)ಗಿರುವ ಅಧಿಕಾರವನ್ನೂ ನೀಡಿದನು..
5). ಪ್ರತಿಯೊಂದು ಪ್ರವಾದಿಗಳನ್ನು ತಂತಮ್ಮ ಸಮುದಾಯದ ಕಡೆಗೆ ನಿಯೋಗಿಸಲಾಗಿದೆ. ಆದರೆ ನನ್ನನ್ನು ಸರ್ವ ಮನುಷ್ಯರಿಗಾಗಿ ನಿಯೋಗಿಸಲಾಗಿದೆ.
[ಬುಖಾರಿ]
Comments
Post a Comment