ಸಬಾಹಲ್ ಖೈರ್

ಸಬಾಹಲ್ ಖೈರ್

ಸ್ನಾನ, ವಸ್ತ್ರ, ಮತ್ತು ಸುಗಂಧ:

•ಈದ್‌ಗಾಗಿ ಸ್ನಾನ ಮಾಡುವುದು ಪ್ರತ್ಯೇಕ ಸುನ್ನತ್ತಾಗಿದೆ. ಅಂದಿನ ಅರ್ಧ ರಾತ್ರಿಯಿಂದ ಈದ್ ನಮಾಝಿನ ನತಕವಾಗಿದೆ ಅತ್ಯುತ್ತಮ ಸಮಯ. ಆ ನಂತರ ಸೂರ್ಯಾಸ್ತಮಾನದವರೆಗೂ ಸ್ನಾನ ಮಾಡಬಹುದಾಗಿದೆ. ಸ್ನಾನ ಮಾಡದವರಿಗೂ ಇದು ಸುನ್ನತ್ತಿದೆ. ಆದರೆ
"ಪೆರ್ನಾಳಿನ ಸುನ್ನತ್ ಸ್ನಾನ ನಾನು ಮಾಡುತ್ತಿದ್ದೇನೆ.”
ಎಂಬ ನಿಯತ್ತ್ ಮಾಡಿದ್ದರೆ ಮಾತ್ರ ಪುಣ್ಯ ಲಭ್ಯ. ಅದೇ ರೀತಿ ಅಲ್ಲಾಹನು ನೀಡಿದ ಅನುಗ್ರಹಗಳನ್ನು ತೋರ್ಪಡಿಸುವಂತೆ ಕೃತಜ್ಞತಾ ಭಾವದಿಂದ ಹೊಸ ಉಡುಪುಗಳನ್ನು ಧರಿಸುವುದೂ, ಸುಗಂಧ ಹಚ್ಚುವುದೂ ಈದಾಚರಣೆಯ ಪೈಕಿ ವಿಶೇಷ ಸುನ್ನತ್ತಾಗಿದೆ.. 


ಪ್ರಕೃತಿಯ ಚಿಹ್ನೆಗಳ ಬಗ್ಗೆ ಕುರ್‍ಆನ್ ಏನು ಹೇಳುತ್ತದೆ:

ಖಂಡಿತವಾಗಿಯೂ ಆಕಾಶಗಳ ಹಾಗೂ ಭೂಮಿಯ ಸೃಷ್ಟಿಯಲ್ಲಿ ಮತ್ತು ಇರುಳು ಹಾಗೂ ಹಗಲಿನ ಪರಿವರ್ತನೆಯಲ್ಲಿ ಮತ್ತು ಜನರಿಗೆ ಲಾಭದಾಯಕವಾದ ವಸ್ತುಗಳನ್ನು ಹೊತ್ತು ಕಡಲಲ್ಲಿ ತೇಲುತ್ತಾ ಸಾಗುವ ಹಡಗುಗಳಲ್ಲಿ ಮತ್ತು ಅಲ್ಲಾಹನು ಆಕಾಶದಿಂದ ಇಳಿಸುವ ನೀರಿನಲ್ಲಿ ಮತ್ತು ಆ ಮೂಲಕ ಅವನು ಭೂಮಿಯನ್ನು ಅದರ ಮರಣಾ ನಂತರ ಮತ್ತೆ ಜೀವಂತಗೊಳಿಸುವುದರಲ್ಲಿ ಹಾಗೂ ಅದರಲ್ಲಿ ಎಲ್ಲ ಜೀವಿಗಳನ್ನು ಹರಡುವುದರಲ್ಲಿ ಹಾಗೂ ಗಾಳಿಯ ಚಲನೆಯಲ್ಲಿ ಮತ್ತು ಆಕಾಶ ಹಾಗೂ ಭೂಮಿಯ ನಡುವೆ ವಿಧೇಯ ಸ್ಥಿತಿಯಲ್ಲಿರುವ ಮೋಡಗಳಲ್ಲಿ ಬುದ್ಧಿಯುಳ್ಳವರಿಗಾಗಿ ಅನೇಕ ನಿದರ್ಶನಗಳಿವೆ. 

[ಕುರ್‍ಆನ್, 2: 164]



Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್